Servants of Knowledge
Karnataka Gazette · Government of Karnataka

Karnataka Gazette, Part Part-1, 18 January 2018

Published 18 January 2018

Part
Part-1
Identifier
in.gazette.karnataka_new.2018-01-18.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಜನವರಿ ೧೮, ೨೦೧೮ (ಪುಷ್ಯ ೨೮, ಶಕ ವರ್ಷ ೧೯೩೯)

Bengaluru, Thursday, January 18, 2018 (Pushya 28, Shaka Varsha 1939)

ಸಂಚಿಕೆ ೩

Issue 3

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಒಳಾಡಳಿತ ಸಚಿವಾಲಯ

ವಿಷಯ : ಪ್ರೈವೇಟ್ ಸೆಕ್ಯೂರಿಟಿ ಏಜನ್ಸಿ ಪರವಾನಗಿ ಶುಲ್ಕ, ನವೀಕರಣ ಶುಲ್ಕ, ಮೇಲ್ಮನವಿ ಶುಲ್ಕಗಳನ್ನು ಪರಿಷ್ಕರಿಸುವ ಕುರಿತು ಆದೇಶ.

ಓದಲಾಗಿದೆ : 1) ಸರ್ಕಾರದ ಅಧಿಸೂಚನೆ ಸಂಖ್ಯೆ: ಹೆಚ್‌ಡಿ 170 ಎಸ್ಎಸ್‌ಟಿ 2009(ಭಾಗ), ದಿನಾಂಕ: 23-07-2009. 2) ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 439 ಎಸ್ಎಸ್‌ಟಿ 2017 ದಿನಾಂಕ: 22-11-2017. 3) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ಇವರ ಅರೆ ಸರ್ಕಾರಿ ಪತ್ರ ಸಂಖ್ಯೆ ಆಇ 30 ಉಕಾ (ಆ&ಸಂ) 2017, ದಿನಾಂಕ: 11-08-2017.

4) ಡಿಜಿ ಮತ್ತು ಐಜಿಪಿರವರ ಪತ್ರ ಸಂಖ್ಯೆ: ಬಿಯುಡಿ-6/05/2017-18, ದಿನಾಂಕ: 06-10-2017.

ಪ್ರಸ್ತಾವನೆ:

ಮೇಲೆ ಓದಲಾದ (1) ರಲ್ಲಿ ಪೊಲೀಸ್ ಇಲಾಖೆಯ ಕರ್ನಾಟಕ ಪ್ರೈವೇಟ್ ಸೆಕ್ಯೂರಿಟಿ ಏಜನ್ಸೀಸ್ ರೂಲ್ಸ್-2008ನ್ನು ಜಾರಿಗೆ ತರಲಾಗಿದ್ದು,

Sl. No. Jurisdiction Amount Fresh License Amount Renewal License
1. Private Security Agency operating in one district of the State Rs. 5000/- (Five Thousand) Rs. 5000/- (Five Thousand)
2. More than one and up to five districts in the State Rs. 10000/- (Ten Thousand) Rs. 10000/- (Ten Thousand)
3. Operating in the whole State Rs. 25000/- (Twenty Five Thousand) Rs. 25000/- (Twenty Five Thousand)
4. Appeal Fee. Rs. 1000/- (One Thousand)

ಮೇಲೆ ಓದಲಾದ (2)ರಲ್ಲಿ ಪ್ರೈವೇಟ್ ಸೆಕ್ಯೂರಿಟಿ ಏಜನ್ಸಿ ಪರವಾನಗಿ ಶುಲ್ಕ, ನವೀಕರಣ ಶುಲ್ಕ, ಮೇಲ್ಮನವಿ ಶುಲ್ಕಗಳನ್ನು ಪರಿಷ್ಕರಿಸುವ ಕುರಿತು ದಿನಾಂಕ: 22-11-2017ರಂದು ಹೊರಡಿಸಲಾಗಿದ್ದ ಸರ್ಕಾರದ ಆದೇಶವನ್ನು ಹಿಂಪಡೆಯಲಾಗಿದೆ.

ಮೇಲೆ ಓದಲಾದ (3)ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ ರವರು ಯಾವ ಯಾವ ಕ್ಷೇತ್ರಗಳಲ್ಲಿ ತೆರಿಗೆಯೇತರ ಆದಾಯಗಳನ್ನು ಸಂಗ್ರಹಿಸಬಹುದು ಹಾಗೂ ತೆರಿಗೆಯೇತರ ಆದಾಯಗಳನ್ನು ಹಣದುಬ್ಬರ ಸೂಚ್ಯಂಕ (Cost Inflation Index) ಅರಣ್ಯ ಇಲಾಖೆಯು ಮಾಡಿರುವ ಅಭ್ಯಾಸಗಳನ್ನು ಉದಾಹರಣೆಗಾಗಿ ಸಲ್ಲಿಸುತ್ತಾ, ಸೂಕ್ತ ಪರಿಷ್ಕರಣೆ ಮಾಡುವಂತೆ ಕೋರಿರುತ್ತಾರೆ.

ಮೇಲೆ ಓದಲಾದ (4)ರಲ್ಲಿ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು ರವರು ಪೊಲೀಸ್ ಇಲಾಖೆಯ ತೆರಿಗೆಯೇತರ ಆದಾಯ ದರಗಳನ್ನು ಪರಿಷ್ಕರಿಸುವ ಕುರಿತು ಪತ್ರ ಸಲ್ಲಿಸಿರುತ್ತಾರೆ. ಪ್ರಸ್ತಾವನೆಯನ್ನು ಪರಿಶೀಲಿಸಿ, ಪೊಲೀಸ್ ಇಲಾಖೆಯ ತೆರಿಗೆಯೇತರ ಆದಾಯದ ದರಗಳನ್ನು ಹಣದುಬ್ಬರ ಸೂಚ್ಯಂಕ (Cost Inflation Index) ವೆಚ್ಚಗಳನ್ವಯ ಪ್ರೈವೇಟ್ ಸೆಕ್ಯೂರಿಟಿ ಏಜನ್ಸೀಸ್ ರೂಲ್ಸ್-2008ರಲ್ಲಿನ ಪರವಾನಗಿ ಶುಲ್ಕ, ನವೀಕರಣ ಶುಲ್ಕ, ಮೇಲ್ಮನವಿ ಶುಲ್ಕವನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಪರಿಷ್ಕರಣೆಗೊಂಡ ದರಗಳೊಂದಿಗೆ ಈ ಕೆಳಕಂಡಂತೆ ಆದೇಶಿಸಿದೆ.

(೨೧)೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೮, ೨೦೧೮ ಭಾಗ ೧

ಸರ್ಕಾರದ ಆದೇಶ ಸಂಖ್ಯೆ ಹೆಚ್‌ಡಿ 439 ಎಸ್ಎಸ್‌ಟಿ 2017, ಬೆಂಗಳೂರು, ದಿನಾಂಕ: 18-12-2017

ಪ್ರೈವೇಟ್ ಸೆಕ್ಯೂರಿಟಿ ಏಜನ್ಸೀಸ್ ರೂಲ್ಸ್-2008ರಲ್ಲಿನ ಪರವಾನಗಿ ಶುಲ್ಕ, ನವೀಕರಣ ಶುಲ್ಕ, ಮೇಲ್ಮನವಿ ಶುಲ್ಕವನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಈ ಕೆಳಗಿನಂತೆ ಹಣದುಬ್ಬರ ಸೂಚ್ಯಂಕ (Cost Inflation Index) ವೆಚ್ಚಗಳನ್ವಯ ಪರಿಷ್ಕರಿಸಿ ಸರ್ಕಾರವು ಮಂಜೂರಾತಿಯನ್ನು ನೀಡಿದೆ.

ಕ್ರ. ಸ ಂ. ತ ರಿಗೆಯೇತರ ಶುಲ್ಕದ ೆ ಉದ್ದೇಶ ಪ ಸ ್ರ ು್ತತ ದರ ರೂ. ಯಾವ ಸಾಲಿನಲ್ಲಿ ದ ರ ನಿಗದಿ ಪ ಡಿಸಲಾಗಿ ದ ೆ ಡಿಜಿ&ಐಜಿಪಿ ರವರು 2017ನೇ ಸಾಲಿನಲ್ಲಿ ಪ ಸ್ತಾಪಿಸಿರುವ ್ರ ದ ರ ರೂ. ಹ ಣದುಬ್ಬರ ಸ ೂಚ್ಯಂಕ ರೀತ್ಯದ ದರ ರೂ. ಶೇಕಡ ವಾರು ಹ ಚ ೆ ್ಚಳ ಬ ರಿಸಬಹುದಾದ ಇಲಾಖೆಯ ಲೆಕ್ಕ ಶೀರ್ಷಿಕೆ
1 2 3 4 5 6 7 8
1. Private Security Agency operating in one district of the State Fresh Licence 5,000/- 2009 7,500/- 10,000/- 100% 0055-00-103-0-04
Renewal Licence 5,000/- 2009 7,500/- 10,000/- 100% 0055-00-103-0-04
2. More than one and up to five districts in the State Fresh Licence 10,000/- 2009 15,000/- 20,000/- 100% 0055-00-103-0-04
Renewal Licence 10,000/- 2009 15,000/- 20,000/- 100% 0055-00-103-0-04
3. Operating in the whole State Fresh Licence 25,000/- 2009 37,500/- 50,000/- 100% 0055-00-103-0-04
Renewal Licence 25,000/- 2009 37,500/- 50,000/- 100% 0055-00-103-0-04
4. Appeal Fee. 1,000/- 2009 ಒಳಾಡಳಿತ ಇಲಾಖೆ ನಿಗದಿಪಡಿಸಿದೆ. 2,000/- 100% 0055-00-103-0-04 & 0070-60-800-3-03

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣೀ ಸಂಖ್ಯೆ: ಆಇ 420 ವೆಚ್ಚ 11/17, ದಿನಾಂಕ: 14-12-2017ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR – 02

ಕೆ. ಪದ್ಮಿನಿದೇವಿ

SC - 25

ಸರ್ಕಾರದ ಅಧೀನ ಕಾರ್ಯದರ್ಶಿ

(ಕಾನೂನು ಮತ್ತು ಸುವ್ಯವಸ್ಥೆ), ಒಳಾಡಳಿತ ಇಲಾಖೆ

ಕಂದಾಯ ಸಚಿವಾಲಯ

ವಿಷಯ : ಸೇವೆಯಿಂದ ವಜಾಗೊಂಡ ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ, ದ್ವಿತೀಯ ದರ್ಜೆ ಸಹಾಯಕ, ನೋಂದಣಿ ಮತ್ತು ಮುದ್ರಾಂಕ ಇವರನ್ನು ಸೇವೆಗೆ ಪುನರ್ ಸ್ಥಾಪಿಸುವ ಬಗ್ಗೆ.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಕಂಇ 3 ಮುನೋಸೇ(3) 2012 ದಿನಾಂಕ: 21-03-2012.

2) ನಿಬಂಧಕರು, ಮಾನ್ಯ ಕರ್ನಾಟಕ ಲೋಕಾಯುಕ್ತ ಇವರ ಅರೆ ಸರ್ಕಾರಿ ಪತ್ರ ಸಂಖ್ಯೆ: Lok/ARE-1/Enq- 201/2012, ದಿನಾಂಕ: 02-11-2015.

3) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವಿಚಾರಣಾ

4) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಶಿಫಾರಸ್ಸು ವರದಿ:

ಉಪಲೋಕ್/ಬಿಜಿಎಮ್-761/2006/ಎಆರ್ಇ-8, ದಿನಾಂಕ: 02-08-2011.

5) ಕಾರಣ ಕೇಳುವ ನೋಟೀಸ್: ಕಂಇ 12 ಮುನೋಸೇ(3) 2012 ದಿನಾಂಕ: 05.07.2016. 6) ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ, ದ್ವಿತೀಯ ದರ್ಜೆ ಸಹಾಯಕ ಇವರ ಲಿಖಿತ ಸಮಜಾಯಿಷಿ ದಿನಾಂಕ:

26-07-2016.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೮, ೨೦೧೮ ೨೩

7) ಸರ್ಕಾರದ ಆದೇಶ ಸಂಖ್ಯೆ: ಕಂಇ 12 ಮುನೋಸೇ(3) 2012 ದಿನಾಂಕ: 07-11-2016. 8) ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ಅರ್ಜಿ ಸಂಖ್ಯೆ: 10818/2016, ದಿನಾಂಕ: 11-08-2017. 9) ಸರ್ಕಾರಿ ವಕೀಲರ ಅಭಿಪ್ರಾಯ ಪತ್ರ ಸಂಖ್ಯೆ: 4933/ಎಜಿ/ಕೆಎಸ್ಎಟಿ/17-18,

ದಿನಾಂಕ: 06/08-09-2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ದಿನಾಂಕ: 21-03-2012ರ ಆದೇಶದಲ್ಲಿ, ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ದಿನಾಂಕ: 02-08-2011ರ ವರದಿಯನ್ನು ಆಧರಿಸಿ, ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ, ದ್ವಿತೀಯ ದರ್ಜೆ ಸಹಾಯಕ, ಜಿಲ್ಲಾ ನೋಂದಣಿ ಕಛೇರಿ, ಬಾಗಲಕೋಟೆ ಇವರು ಫಿರ್ಯಾದುದಾರರಾದ ಶ್ರೀ ಮುತ್ತಪ್ಪ ದುಂಡಪ್ಪ ದಾಸರ (ಹೊಲೆದಾಸರ) ಚಿನ್ನದಾಸರ ಇವರು ಅಖಿಲ ಕರ್ನಾಟಕ ಚೆನ್ನದಾಸರ ಸಮಾಜ ಸೇವಾ ಸಂಘ ಎಂಬ ಹೊಸ ಸಂಘ ನೋಂದಣಿ ಕುರಿತು ದಿನಾಂಕ: 06-05-2005ರಂದು ಬಾಗಲಕೋಟೆ, ಜಿಲ್ಲಾ ನೋಂದಣಿ ಕಛೇರಿಯಲ್ಲಿ ಅರ್ಜಿ ಹಾಗೂ ಸಂಬಂಧಪಟ್ಟ ದಾಖಲೆಗಳೊಂದಿಗೆ ಸಲ್ಲಿಸಿದಾಗ ಅರ್ಜಿ ಕೊಟ್ಟರೆ ಸಾಲದು, ಜೊತೆಗೆ ರೂ.5,000/-ಗಳ ಹಣವನ್ನು ನೀಡುವಂತೆ ಒತ್ತಾಯಿಸಿದ್ದು ಹಾಗೂ ಪುನಃ ದಿನಾಂಕ: 08-05-2005 ರಂದು ಮತ್ತೊಮ್ಮೆ ನೋಂದಣಿ ಕಛೇರಿಗೆ ಹೋಗಿ ವಿಚಾರಿಸಿದಾಗ ಸದರಿ ಕೆಲಸವನ್ನು ಮಾಡಲು ರೂ.1,000/-ಗಳ ಲಂಚದ ಹಣವನ್ನು ನೀಡುವಂತೆ ಒತ್ತಾಯ ಮಾಡಿದ್ದರಿಂದ, ಫಿರ್ಯಾದುದಾರರು ಲಂಚ ನೀಡಲು ಇಷ್ಟವಿಲ್ಲದೇ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್, ಬಾಗಲಕೋಟೆ ಇವರಿಗೆ ದೂರನ್ನು ಸಲ್ಲಿಸಿದ್ದು, ಸದರಿ ದೂರಿನ ಆಧಾರದ ಮೇಲೆ ಮೊಕದ್ದಮೆ ಸಂಖ್ಯೆ: 6/2005ನ್ನು ದಾಖಲಿಸಿ, ಸದರಿ ನೌಕರರು ಅಪರಾಧ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ, ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 14(ಎ)ರಡಿ ಪ್ರಕರಣದ ಕುರಿತು ತನಿಖೆಗಾಗಿ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸಿ ಆದೇಶವನ್ನು ಹೊರಡಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರಲ್ಲಿ ನಿಬಂಧಕರು, ಮಾನ್ಯ ಕರ್ನಾಟಕ ಲೋಕಾಯುಕ್ತ ಇವರು ತಮ್ಮ ದಿನಾಂಕ: 02-11-2015ರ ಅರೆ ಸರ್ಕಾರಿ ಪತ್ರದೊಂದಿಗೆ ವಿಚಾರಣಾಧಿಕಾರಿಗಳ ವಿಚಾರಣಾ ವರದಿ ಹಾಗೂ ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸು ವರದಿಯನ್ನು ಸರ್ಕಾರಕ್ಕೆ ಕಳುಹಿಸಿರುತ್ತಾರೆ. ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಅಪರ ನಿಬಂಧಕರು, ವಿಚಾರಣೆಗಳು-1, ಕರ್ನಾಟಕ ಲೋಕಾಯುಕ್ತ ಇವರ ವಿಚಾರಣಾ ವರದಿಯಲ್ಲಿ ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ, ದ್ವಿತೀಯ ದರ್ಜೆ ಸಹಾಯಕ, ಜಿಲ್ಲಾ ನೋಂದಣಿ ಕಛೇರಿ, ಬಾಗಲಕೋಟೆ ಇವರ ವಿರುದ್ಧದ ಆರೋಪವು ವಿಚಾರಣೆಯ ಸಮಯ ಹಾಗೂ ವಿಚಾರಣಾ ಹಂತದಲ್ಲಿ ಪರಿಶೀಲಿಸಲಾದ ದಾಖಲೆ ಹಾಗೂ ಸಾಕ್ಷಿಗಳಿಂದ ಸಾಭೀತಾಗಿರುತ್ತದೆ ಎಂಬುದಾಗಿ ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರಿಗೆ ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4)ರಲ್ಲಿ ಮಾನ್ಯ ಉಪಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಆರೋಪಿತರಾದ ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ, ದ್ವಿತೀಯ ದರ್ಜೆ ಸಹಾಯಕ, ಜಿಲ್ಲಾ ನೋಂದಣಿ ಕಛೇರಿ, ಬಾಗಲಕೋಟೆ ಇವರ ವಿರುದ್ಧದ ಆರೋಪವು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 8(viii)ರ ಪ್ರಕಾರ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸುವಂತೆ ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (5)ರಲ್ಲಿ ಅಪರ ನಿಬಂಧಕರು, ವಿಚಾರಣೆಗಳು-1, ಮಾನ್ಯ ಕರ್ನಾಟಕ ಲೋಕಾಯುಕ್ತ ಇವರ ವರದಿ ಹಾಗೂ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನ ಹಿನ್ನೆಲೆಯಲ್ಲಿ, ಏಕೆ ಕ್ರಮ ಕೈಗೊಳ್ಳಬಾರದು ಎಂದು ಸಮಜಾಯಿಷಿ ಕೇಳಿ ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ, ದ್ವಿತೀಯ ದರ್ಜೆ ಸಹಾಯಕ ಇವರಿಗೆ ದಿನಾಂಕ: 05-07-2016ರಲ್ಲಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಇವರ ಮುಖಾಂತರ ಕಾರಣ ಕೇಳುವ ನೊಟೀಸ್‌ನ್ನು ಜಾರಿ ಮಾಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (6)ರಲ್ಲಿ ದಿನಾಂಕ: 26-07-2016ರ ಸಮಜಾಯಿಷಿಯಲ್ಲಿ ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ ರವರು ದಿನಾಂಕ: 09-04-2005ರಂದು ಶ್ರೀ ಮುತ್ತಪ್ಪ ದುಂಡಪ್ಪ ದಾಸರ ರವರು ಲೋಕಾಯುಕ್ತರು ಪೊಲೀಸ್ ಬಾಗಲಕೋಟೆ ರವರಿಗೆ ಸದರಿ ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ ಇವರಿಗೆ ರೂ.5,000/-ಗಳ ಲಂಚದ ಬೇಡಿಕೆ ಇಟ್ಟು ಇದನ್ನು ಪಡೆದಿರುತ್ತಾರೆಂದು ದೂರು ದಾಖಲಿಸಿದ್ದು, ಸದರಿ ಪ್ರಕರಣದಲ್ಲಿ ತಮ್ಮ ವಿರುದ್ಧದ ಟ್ರಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ನಡೆಸಿದ ಜಿಲ್ಲಾ ವಿಶೇಷ ನ್ಯಾಯಾಲಯ, ಬಾಗಲಕೋಟೆ ಪ್ರಕರಣ ಸಂಖ್ಯೆ: 54/2006 ದಿನಾಂಕ:19-04-2008 ಹಾಗೂ ಮಾನ್ಯ ಉಚ್ಛ ನ್ಯಾಯಾಲಯ, ಧಾರವಾಡ ಕೇಸ್ ನಂ.ಸಿಆರ್ ಎಲ್.ಎ.ನಂ.720/2008ರ ಪ್ರಕರಣಗಳಲ್ಲಿ ನೀಡಿರುವ ತೀರ್ಪುಗಳ ಹಿನ್ನೆಲೆಯಲ್ಲಿ, ಆರೋಪದಿಂದ ಮುಕ್ತಗೊಳಿಸುವಂತೆ ಕೋರುತ್ತಾ, ಮಾನ್ಯ ಉಪ ಲೋಕಾಯುಕ್ತರು ಸದರಿ ಪ್ರಕರಣದಲ್ಲಿ ನನ್ನ ವಿರುದ್ಧದ ಆರೋಪವು ಸಾಬೀತಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರೀಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 8(viii)ರ ಪ್ರಕಾರ ಸೇವೆಯಿಂದ ಅನರ್ಹಗೊಳಿಸುವ ದಂಡನೆಯನ್ನು ವಿಧಿಸುವಂತೆ ಶಿಫಾರಸ್ಸು ಮಾಡಿರುತ್ತಾರೆ. ಆದರೆ, ಸದರಿ ವರದಿಯಲ್ಲಿನ ನನ್ನ ವಿರುದ್ಧದ ಆರೋಪವು ನಿರಾಧಾರವಾಗಿದ್ದು, ಈ ಬಗ್ಗೆ ಪರಾಮರ್ಶಿಸಿ ಶಿಸ್ತು ಕ್ರಮವನ್ನು ಕೈಬಿಡುವಂತೆ ಮನವಿ ಸಲ್ಲಿಸಿರುತ್ತಾರೆ.

ಆಪಾದಿತ ನೌಕರರ ಸಮಜಾಯಿಷಿಯನ್ನು ಪರಿಶೀಲಿಸಲಾಗಿ, ಈಗಾಗಲೇ ವಿಚಾರಣೆಯ ವೇಳೆಯಲ್ಲಿ ಸಲ್ಲಿಸಿದ್ದ, ಹೇಳಿಕೆಯನ್ನೆ ಸಲ್ಲಿಸಿದ್ದುದರಿಂದ ಮೇಲೆ ಓದಲಾದ ಕ್ರಮ ಸಂಖ್ಯೆ (7)ರ ದಿನಾಂಕ: 07-11-2016ರ ಆದೇಶದಲ್ಲಿ ಫಿರ್ಯಾದುದಾರರು ಸಲ್ಲಿಸಿರುವ ದೂರಿನಲ್ಲಿನ ಅಂಶಗಳು, ಸಾಕ್ಷಿದಾರರ ಹೇಳಿಕೆ, ಫಿರ್ಯಾದಿ ಮತ್ತು ಆಪಾದಿತ ನೌಕರರ ನಡುವಣ ಸಂಭಾಷಣೆಯ ವಿವರಗಳು ಹಾಗೂ ಆಪಾದಿತ ನೌಕರರು ಸರ್ಕಾರಿ ಕೆಲಸ ನಿರ್ವಹಿಸುವ ಸಲುವಾಗಿ ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಹಾಗೂ ಸ್ವೀಕರಿಸಿರುವುದು ದೃಡಪಟ್ಟಿರುವುದರಿಂದ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಾಮಾವಳಿಗಳು 1966ರ ನಿಯಮ 3(1)ನ್ನು ಉಲ್ಲಂಘಿಸಿ, ದುರ್ನಡತೆ ಎಸಗಿರುವುದು ವಿಚಾರಣಾ ವರದಿಯಿಂದ ಸಾಬೀತಾಗಿರುವುದರಿಂದ, ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸನ್ನು ಅಂಗೀಕರಿಸಿದಂತೆ ಸರ್ಕಾರವು ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ, ಹಿಂದಿನ ದ್ವಿತೀಯ ದರ್ಜೆ ಸಹಾಯಕ, ಜಿಲ್ಲಾ ನೋಂದಣಿ ಕಛೇರಿ, ಬಾಗಲಕೋಟೆ ಹಾಲಿ ದ್ವಿತೀಯ ದರ್ಜೆ ಸಹಾಯಕ, ಉಪನೋಂದಣಿ ಕಛೇರಿ, ಇಳಕಲ್ ಇವರನ್ನು ಕರ್ನಾಟಕ ನಾಗರಿಕ ಸೇವಾ೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೮, ೨೦೧೮ ಭಾಗ ೧ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 8(viii)ರ ಪ್ರಕಾರ ಇವರಿಗೆ ಸರ್ಕಾರಿ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸಿ ಆದೇಶ ಹೊರಡಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (8)ರ ದಿನಾಂಕ: 11-08-2017ರ ಆದೇಶದಲ್ಲಿ ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ದಿನಾಂಕ: 07-11-2016ರ ಸರ್ಕಾರದ ಆದೇಶವನ್ನು ವಜಾಗೊಳಿಸಿ ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಪ್ರಕರಣ ಸಂಖ್ಯೆ: ಎ.ನಂ. 725/2014ರ ಶ್ರೀ ಹೆಚ್.ಎನ್.ನಿರಂಜನ್ ವಿರುದ್ಧ ಕರ್ನಾಟಕ ಸರ್ಕಾರ ಮತ್ತಿತರರು ಪ್ರಕರಣದಲ್ಲಿ ಕರ್ನಾಟಕ ಲೋಕಾಯಕ್ತ ಕಾಯ್ದೆಯ ಕಲಂ 12(3)ರ ವರದಿಯನ್ವಯ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 14(ಎ)ರಡಿ ಪ್ರಕರಣವನ್ನು ವಿಚಾರಣೆಗಾಗಿ ಲೋಕಾಯುಕ್ತ ಸಂಸ್ಥೆಗೆ ವಹಿಸಿದ ಸಂದರ್ಭ ಸುಮಾರು ಹತ್ತು ವರ್ಷಗಳವರೆಗೆ ವಿಚಾರಣೆ ನೆಡೆಸಿರುವ ಹಿನ್ನೆಲೆಯಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಪ್ರಕರಣದಲ್ಲಿ ನೀಡಿರುವ ತೀರ್ಪಿನ ಆಧಾರದ ಮೇಲೆ ಸರ್ಕಾರದ ದಿನಾಂಕ: 07-11-2016ರ ಆದೇಶವನ್ನು ವಜಾಗೊಳಿಸಿ ಸದರಿ ಪ್ರಕರಣದಲ್ಲಿ ಮೊದಲನೇ ಪ್ರತಿವಾದಿಯು, ಅರ್ಜಿದಾರರನ್ನು ಮೂರು ತಿಂಗಳೊಳಗಾಗಿ ಪುನರ್ ನೇಮಕ (Reinstate) ಗೊಳಿಸುವಂತೆ ಹಾಗೂ ಅರ್ಜಿದಾರರು ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ, ಹಿಂದಿನ ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಇಳಕಲ್ ಇವರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಿದ ದಿನಾಂಕದಿಂದ ಸದರಿ ಸೇವೆಗೆ ಪುನರ್ ನೇಮಕ ಮಾಡುವವರೆಗಿನ ಅವಧಿಗೆ ಯಾವುದೇ ವೇತನ ಮತ್ತು ಸೇವಾ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ ಎಂಬುದಾಗಿ ಆದೇಶಿಸಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (9)ರ ದಿನಾಂಕ: 06/08-09-2017ರ ಪತ್ರದಲ್ಲಿ, ಸರ್ಕಾರಿ ವಕೀಲರು ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ: 10818/2016ರಲ್ಲಿ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅರ್ಹ ಪ್ರಕರಣವಾಗಿರುವುದಿಲ್ಲ ಎಂಬುದಾಗಿ ಅಭಿಪ್ರಾಯವನ್ನು ನೀಡಿರುತ್ತಾರೆ ಹಾಗೂ ಕಂದಾಯ ಇಲಾಖೆಯ ಕಾನೂನು ಕೋಶ ಮತ್ತು ಕಾನೂನು ಇಲಾಖೆಯು ಸದರಿ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅರ್ಹ ಪ್ರಕರಣವಾಗಿರುವುದಿಲ್ಲ ಎಂಬ ಅಭಿಪ್ರಾಯವನ್ನು ನೀಡಿರುತ್ತವೆ.

ಮೇಲೆ ಪ್ರಸ್ತಾಪಿಸಿದ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ಈ ಪ್ರಕರಣದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 11 ಮುನೋನೋ 2017, ಬೆಂಗಳೂರು, ದಿನಾಂಕ: 20-12-2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ಚಂದ್ರಕಾಂತ ಸಿದ್ರಾಮ ಕಾಶೆ, ಹಿಂದಿನ ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಇಳಕಲ್ ಇವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಗೆ ಪುನರ್ ಸ್ಥಾಪಿಸಿ ಆದೇಶಿಸಿದೆ. ಸದರಿ ನೌಕರರು ಸೇವೆಯಿಂದ ವಜಾಗೊಂಡು ಸೇವೆಗೆ ಪುನರ್ ಸ್ಥಾಪಿಸಿದ ಅವಧಿಯವರೆಗೆ ಯಾವುದೇ ವೇತನ ಮತ್ತು ಮತ್ತಿತರೆ ಸೇವಾ ಸೌಲಭ್ಯಗಳನ್ನು ಪಡೆಯಲು ಅರ್ಹರಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಮುರಳೀಧರ ಎಸ್.ತಳ್ಳಿಕೇರಿ

PR – 09

ಪೀಠಾಧಿಕಾರಿ

ಕಂದಾಯ ಇಲಾಖೆ

ನೋಂದಣಿ ಮತ್ತು ಮುದ್ರಾಂಕ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಸಿಆಸುಇ 12 ಗಕಾಸ 2017 ಬೆಂಗಳೂರು, ದಿನಾಂಕ: 18-12-2017

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 07 ಗಕಾಸ 2012, ದಿನಾಂಕ: 20-01-2014ರಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಸ್ತಾಂತರಿಸಲಾಗಿರುವ ಅನುಬಂಧ-ಇ ಕ್ರಮ ಸಂಖ್ಯೆ: 17ರ "ಜಿಲ್ಲಾ ಗ್ರಂಥಾಲಯ ಸಮಿತಿ" ಯನ್ನು ಪುನಃ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿಯೇ ಮುಂದುವರೆಸಿ ಆದೇಶಿಸಿದೆ.

ಸುಜಾತ ಆರ್. ಪ್ರಸಾದ್

PR – 10

ಸರ್ಕಾರದ ಅಧೀನ ಕಾರ್ಯದರ್ಶಿ

SC - 25

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಆಸು-ಕಾರ್ಯಾಧ್ಯಯನ)

ಕಂದಾಯ ಸಚಿವಾಲಯ

ವಿಷಯ : ಬೆಂಗಳೂರು ನಗರ ಸಭಾ ವಲಯದಲ್ಲಿರುವ ಮುಜರಾಯಿ ದೇವಸ್ಥಾನಗಳ ಅಂಗಡಿ ಮಳಿಗೆಗಳನ್ನು

ಮೀಸಲಾತಿಯನ್ವಯ ಹಂಚಿಕೆ ಮಾಡುವ ಕುರಿತು.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಕಂಇ 20 ಮುಆಬಿ 2017, ದಿ: 03-08-2017

2) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ: ಎಡಿಎಂ 3 ಎಲ್ಎನ್‌ಡಿ 92/2012-13, ದಿನಾಂಕ: 04-10-2017ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೮, ೨೦೧೮ ೨೫

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಬೆಂಗಳೂರು ನಗರ ಸಭಾ ವಲಯ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಒಟ್ಟು 228 ಅಂಗಡಿ, 22 ನಿವೇಶನ ಮತ್ತು 34 ಮನೆಗಳು ಸೇರಿ ಒಟ್ಟು 284 ಸ್ವತ್ತುಗಳಲ್ಲಿ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಪ್ರಸಕ್ತ ಮಾರುಕಟ್ಟೆಯ ದರಕ್ಕನುಗುಣವಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮಗಳನ್ವಯ ಇ-ಟೆಂಡರ್ ಮೂಲಕ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲು ಕೆಲವು ಷರತ್ತುಗಳಿಗೊಳಪಟ್ಟು ಅನುಮೋದನೆ ನೀಡಿ ಆದೇಶಿಸಲಾಗಿತ್ತು.

ಮೇಲೆ (2)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಸರ್ಕಾರದ ದಿನಾಂಕ: 03-08-2017ರ ಆದೇಶದಲ್ಲಿ ಮೀಸಲಾತಿ, ಗುತ್ತಿಗೆ ಮುಂದುವರಿಕೆ ಹಾಗೂ ಸಂಘ ಸಂಸ್ಥೆಗಳಿಗೆ ಮೀಸಲಾತಿ ಕಾಯ್ದಿರಿಸುವ ಷರತ್ತುಗಳಲ್ಲಿ ಕೆಲವೊಂದು ಸ್ಪಷ್ಠತೆ ಮತ್ತು ನಿಖರತೆ ಇಲ್ಲದಿರುವುದರಿಂದ ಸದರಿ ಆದೇಶವನ್ನು ಹಿಂಪಡೆದು ಈ ಕೆಳಕಂಡಂತೆ ಷರತ್ತುಗಳನ್ನು ವಿಧಿಸಿ ಪರಿಷ್ಕøತ ಆದೇಶ ಹೊರಡಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ಕೋರಿರುತ್ತಾರೆ.

ಷರತ್ತುಗಳು

1) ಬೆಂಗಳೂರು ನಗರ ಸಭಾ ವಲಯ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಒಟ್ಟು 228 ಅಂಗಡಿ, 22 ನಿವೇಶನ ಮತ್ತು 34 ಮನೆಗಳು ಸೇರಿ ಒಟ್ಟು 284 ಸ್ವತ್ತುಗಳ ಗುತ್ತಿಗೆಗಳನ್ನು ಬಹಿರಂಗ ಹರಾಜಿನಲ್ಲಿ ವಹಿಸತಕ್ಕದ್ದು.

2) ಬೆಂಗಳೂರು ನಗರ ಸಭಾ ವಲಯ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಒಟ್ಟು 228 ಅಂಗಡಿ, 22 ನಿವೇಶನ ಮತ್ತು 34 ಮನೆಗಳು ಸೇರಿ ಒಟ್ಟು 284 ಸ್ವತ್ತುಗಳ ಪೈಕಿ ಸರ್ಕಾರಿ ಆದೇಶ ಸಂಖ್ಯೆ: ಕಂಇ 14 ಮುಅಬಿ 2015 ದಿನಾಂಕ: 08-04-2015 ರಂತೆ ಪರಿಶಿಷ್ಟ ಜಾತಿಗೆ ಶೇ.20 / ಪರಿಶಿಷ್ಟ ಪಂಗಡದವರಿಗೆ ಶೇ.5 ರಷ್ಟು ಹಾಗೂ ವಿಕಲಚೇತನರಿಗೆ ಶೇ.3 ರಷ್ಟು ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಶೇ. 20 ರಷ್ಟು ಮೀಸಲಾತಿಯನ್ನು ಕಡ್ಡಾಯವಾಗಿ ಕಲ್ಪಿಸಿ ಉಳಿದಂತೆ ಸಾಮಾನ್ಯ ವರ್ಗದವರಿಗೆ ಗುತ್ತಿಗೆಯನ್ನು ನೀಡುವ ಬಗ್ಗೆ ಕ್ರಮ ವಹಿಸತಕ್ಕದ್ದು.

3) ಈ ಆಂಗಡಿಗಳ ಹರಾಜಿನಲ್ಲಿ ಭಾಗವಹಿಸುವ ವ್ಯಕ್ತಿಗಳಿಗೆ / ಸಾರ್ವಜನಿಕರಿಗೆ / ಸಂಘ ಸಂಸ್ಥೆಗಳಿಗೆ ಮುಕ್ತ ಅವಕಾಶವನ್ನು ಕಲ್ಪಿಸತಕ್ಕದ್ದು.

4) ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಸ್ವತ್ತುಗಳ ಗುತ್ತಿಗೆಯನ್ನು ಬಹಿರಂಗ ಹರಾಜು ಮೂಲಕ ನೀಡುವ ಕುರಿತು ಪ್ರಮುಖ ದಿನ ಪತ್ರಿಕೆಗಳಲ್ಲಿ ಸಂಬಂಧಪಟ್ಟ ಇಲಾಖಾ ಕಛೇರಿಯ ಪ್ರಕಟಣಾ ಫಲಕದಲ್ಲೂ ಮತ್ತು ದೇವಸ್ಥಾನದ ಕಛೇರಿಯಲ್ಲಿಯೂ ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಿ ವ್ಯಾಪಕ ಪ್ರಚಾರ ಮಾಡತಕ್ಕದ್ದು.

5) ಹರಾಜು ಪ್ರಕಟಣೆಯಲ್ಲಿ ಸ್ವತ್ತಿನ ವಿವರ ಮತ್ತು ವಿಳಾಸ, ಸ್ವತ್ತಿನ ವಿಸ್ತೀರ್ಣ, ಚೆಕ್ಕುಬಂದಿ, ಅಂಗಡಿಗಳ ಮೀಸಲಾತಿ ಬಗ್ಗೆ, ಸ್ಥಳೀಯ ಮಾರುಕಟ್ಟೆ ಬಾಡಿಗೆ ದರಕ್ಕೆ ಕಡಿಮೆ ಇಲ್ಲದಂತೆ ಕನಿಷ್ಠ ಮಾಸಿಕ ಬಾಡಿಗೆ ನಮೂದಿಸತಕ್ಕದ್ದು.

6) ಷರತ್ತುಗಳಲ್ಲಿ ಗುತ್ತಿಗೆದಾರನು ಪಾವತಿಸಬೇಕಾದ ಗುಡ್‌ವಿಲ್ ಮೊತ್ತ / ಗುತ್ತಿಗೆದಾರನು ಪಾವತಿಸಬೇಕಾದ 6 ತಿಂಗಳ ಮುಂಗಡ ಬಾಡಿಗೆ ಮೊತ್ತ / ಬಾಡಿಗೆ / ವಾರ್ಷಿಕ ಶೇ.10 ರಂತೆ ಹೆಚ್ಚುವರಿ ಬಾಡಿಗೆ ಪಾವತಿಸುವ ಬಗ್ಗೆ ಹಾಗೂ ಗುತ್ತಿಗೆಗೆ ನೀಡಲಾಗುವ ಕಟ್ಟಡದ ಜಾಗವು ದೇವಸ್ಥಾನದ ಅಭಿವೃದ್ಧಿಗೆ ಅವಶ್ಯಕತೆ ಬಂದಾಗ ತೆರವು ಮಾಡಿಸಬೇಕೆಂದಾದಲ್ಲಿ ಗುತ್ತಿಗೆದಾರರು ಜಾಗವನ್ನು ದೇವಸ್ಥಾನದ ಸುಪರ್ದಿಗೆ ವಹಿಸತಕ್ಕದ್ದು ಹಾಗೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ನಿಯಮ 31 ರಲ್ಲಿ ಸೂಚಿಸಿರುವ ಇತರೆ ಷರತ್ತುಗಳನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.

7) ಸಾರ್ವಜನಿಕರು / ವ್ಯಕ್ತಿಗಳು ಹರಾಜಿನಲ್ಲಿ ಭಾಗವಹಿಸಲು ಈ ಕೆಳಕಂಡ ದಾಖಲೆಗಳನ್ನು ಪಡೆಯತಕ್ಕದ್ದು.

i. ವ್ಯಕ್ತಿಯ ಗುರುತಿನ ಚೀಟಿ. (ಆಧಾರ್, ಪ್ಯಾನ್, ರೇಷನ್ ಕಾರ್ಡ್ ಮುಂತಾದವುಗಳು)

ii. ವಾಸ ಸ್ಥಳದ ಪ್ರಮಾಣ ಪತ್ರ.

iii. ಸಕ್ಷಮ ಪ್ರಾಧಿಕಾರಿಗಳಿಂದ ಪಡೆದ ಜಾತಿ ಪ್ರಮಾಣ ಪತ್ರ. (ಮೀಸಲಾತಿ ಆಯ್ಕೆ ಮಾಡಿದ್ದಲ್ಲಿ)

iv. ವಿಕಲಚೇತನರಾಗಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ (ಮೀಸಲಾತಿ ಆಯ್ಕೆ ಮಾಡಿದ್ದಲ್ಲಿ)

v. ಸಂಸ್ಥೆ ಗುತ್ತಿಗೆ ಪಡೆದ ಮಳಿಗೆಯಲ್ಲಿ ತಮ್ಮ ವಾಣಿಜ್ಯ ವ್ಯವಹರಣೆ ನಡೆಸಲು ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ಪಡೆದ GSTIN ಸಂಖ್ಯೆಯ ವಿವರವನ್ನು ಸಲ್ಲಿಸುವುದು.

8) ಹರಾಜಿನಲ್ಲಿ ಸಂಘ ಸಂಸ್ಥೆಗಳು ಭಾಗವಹಿಸಲು ಈ ಕೆಳಕಂಡ ದಾಖಲೆಗಳನ್ನು ಪಡೆಯತಕ್ಕದ್ದು.

i ಸಂಘದ ನೋಂದಣಿ ಪತ್ರ;

ii ಸಂಘದ ಬೈಲಾ;

iii ಸಂಘವು ಬೈಲಾ ಪ್ರಕಾರ ಉದ್ದೇಶಗಳಿಗೆ ಪೂರಕವಾದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಸೂಕ್ತ ದಾಖಲೆಗಳು;

iv ಸಂಘವು ಸ್ಥಾಪನೆಯಾದಾಗಿನಿಂದ ನಿಗದಿತ ಸಮಯದಲ್ಲಿ ನವೀಕರಣಗೊಂಡಿರುವ ಬಗ್ಗೆ ಪ್ರಮಾಣ ಪತ್ರ;

v ಸಂಘದ ಐದು ವರ್ಷಗಳ ಲೆಕ್ಕತಪಾಸಣಾ ವರದಿಗಳು;

vi ಸಂಘದ ನೋಂದಾಯಿತ ಎಲ್ಲಾ ಸದಸ್ಯರ ಜಾತಿ ಮತ್ತು ವರಮಾನ ಪ್ರಮಾಣ ಪತ್ರ;

೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೮, ೨೦೧೮ ಭಾಗ ೧

vii ಸಂಘವು ಹರಾಜಿನಲ್ಲಿ ಭಾಗವಹಿಸಲು ಸದರಿ ಸಂಘದ ಎಲ್ಲಾ ಸದಸ್ಯರಿಂದ ಆಕ್ಷೇಪಣಾ ರಹಿತ ಪತ್ರ;

viii ಗುತ್ತಿಗೆಯಲ್ಲಿ ಆಯ್ಕೆಯಾದ ಸಂಘವು ಇಲಾಖೆ / ಸಂಸ್ಥೆಯೊಂದಿಗೆ ವ್ಯವಹರಣೆ ನಡೆಸಲು ಸದರಿ ಸಂಘದ ಒಬ್ಬ ಸದಸ್ಯರಿಗೆ ಅಧಿಕಾರ ನೀಡಿ ಈ ಬಗ್ಗೆ ಸಂಘದ ಸಭೆಯಲ್ಲಿ ನಡವಳಿ ನಡೆಸಿ ಸರ್ವಾನುಮತದ ನಿರ್ಣಯ ಕೈಗೊಂಡು ನಡವಳಿ ಪ್ರತಿ ನೀಡುವುದು;

ix ಸಂಘ ಯಾರ ಹೆಸರಿಗೆ ಅಂಗೀಕೃತ ಪತ್ರ ನೀಡಿರುತ್ತದೆಯೋ ಅವರು ಮಾತ್ರ ಇಲಾಖೆಯೊಂದಿಗೆ ವ್ಯವಹರಿಸತಕ್ಕದ್ದು;

x ಸಂಸ್ಥೆ ಗುತ್ತಿಗೆ ಪಡೆದ ಮಳಿಗೆಯಲ್ಲಿ ತಮ್ಮ ವಾಣಿಜ್ಯ ವ್ಯವಹರಣೆ ನಡೆಸಲು ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ಪಡೆದ GSTIN ಸಂಖ್ಯೆಯ ವಿವರವನ್ನು ಸಲ್ಲಿಸುವುದು;

9) ಅನಧಿಕೃತದಾರರನ್ನು ತೆರವುಗೊಳಿಸುವ ಬಗ್ಗೆ ಪಿ.ಪಿ.ಎ. ಪ್ರಾಧಿಕಾರದಲ್ಲಿ ಪ್ರಕರಣವನ್ನು ದಾಖಲಿಸಲು ಹಾಗೂ ಇವರು ಉಳಿಸಿಕೊಂಡಿರುವ ಬಾಕಿ ಬಾಡಿಗೆಗಳನ್ನು ಕಾಯ್ದೆ ಕಲಂ 34 (2) ಹಾಗೂ ನಿಯಮ 31 (18) ರಂತೆ ವಸೂಲಿಸಲು ಸಕ್ಷಮ ಅಧಿಕಾರಿಗಳು ಕ್ರಮವಹಿಸತಕ್ಕದ್ದು.

ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 20 ಮುಆಬಿ 2017, ಬೆಂಗಳೂರು, ದಿನಾಂಕ: 01ನೇ ಡಿಸೆಂಬರ್, 2017.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಸಭಾವಲಯ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಸ್ಥಾನಗಳ ಅಂಗಡಿ ಮಳಿಗೆಗಳನ್ನು ಗುತ್ತಿಗೆಗೆ ನೀಡಲು ಮೀಸಲಾತಿಯನ್ವಯ ಹಂಚಿಕೆ ಮಾಡಿರುವ ಸರ್ಕಾರದ ಆದೇಶ ಸಂಖ್ಯೆ: ಕಂಇ 20 ಮುಆಬಿ 2017 ದಿನಾಂಕ: 03-08-2017ರ ಆದೇಶವನ್ನು ಆಡಳಿತಾತ್ಮಕ ಕಾರಣಗಳಿಂದ ಹಿಂಪಡೆದು ಪರಿಷ್ಕರಿಸಿ, ಈ ಕೆಳಕಂಡಂತೆ ಪರಿಷ್ಕøತ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ಸಭಾವಲಯ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಒಟ್ಟು 228 ಅಂಗಡಿ, 22 ನಿವೇಶನ ಮತ್ತು 34 ಮನೆಗಳು ಸೇರಿ ಒಟ್ಟು 284 ಸ್ವತ್ತುಗಳನ್ನು ಪ್ರಸ್ತುತ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ವಯ ಪ್ರಸಕ್ತ ಮಾರುಕಟ್ಟೆಯ ದರಕ್ಕನುಗುಣವಾಗಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮಗಳನ್ವಯ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಅನುಮೋದನೆ ನೀಡಿ ಆದೇಶಿಸಿದೆ.

ಷರತ್ತುಗಳು

1) ಬೆಂಗಳೂರು ನಗರ ಸಭಾ ವಲಯ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಒಟ್ಟು 228 ಅಂಗಡಿ, 22 ನಿವೇಶನ ಮತ್ತು 34 ಮನೆಗಳು ಸೇರಿ ಒಟ್ಟು 284 ಸ್ವತ್ತುಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಅದರಡಿಯಲ್ಲಿ ರಚಿಸಲಾಗಿರುವ ನಿಯಮಗಳನ್ವಯ ಗುತ್ತಿಗೆ ನೀಡಲು ಕ್ರಮ ವಹಿಸತಕ್ಕದ್ದು;

2) ಬೆಂಗಳೂರು ನಗರ ಸಭಾ ವಲಯ ವ್ಯಾಪ್ತಿಯಲ್ಲಿರುವ ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಒಟ್ಟು 228 ಅಂಗಡಿ, 22 ನಿವೇಶನ ಮತ್ತು 34 ಮನೆಗಳು ಸೇರಿದ ಒಟ್ಟು 284 ಸ್ವತ್ತುಗಳನ್ನು ಸರ್ಕಾರದ ಆದೇಶ ಸಂಖ್ಯೆ: ಎಸ್‌ಡಬ್ಲ್ಯೂಡಿ 34 ಬಿಸಿಎ 2004 ದಿನಾಂಕ: 10-03-2005ರ ಆದೇಶದನ್ವಯ ಪರಿಶಿಷ್ಟ ಜಾತಿಗೆ ಶೇ.20, ಪರಿಶಿಷ್ಟ ಪಂಗಡದವರಿಗೆ ಶೇ.5 ರಷ್ಟು ಹಾಗೂ ಹಿಂದುಳಿದ ವರ್ಗದವರಿಗೆ ಶೇ.20 ರಷ್ಟು ಮೀಸಲಾತಿಯನ್ನು ಹಾಗೂ ಸರ್ಕಾರದ ಆದೇಶ ಸಂಖ್ಯೆ: ಕಂಇ 14 ಮುಆಬಿ 2015 ದಿನಾಂಕ: 08-04-2015ರನ್ವಯ ವಿಕಲಚೇತನರಿಗೆ ಶೇ.3 ರಷ್ಟು ಮೀಸಲಾತಿ ಕಲ್ಪಿಸಿ, ಉಳಿದಂತೆ ಸಾಮಾನ್ಯ ವರ್ಗದವರಿಗೆ ಗುತ್ತಿಗೆಯನ್ನು ನೀಡುವ ಬಗ್ಗೆ ಕ್ರಮವಹಿಸತಕ್ಕದ್ದು;

3) ಈ ಅಂಗಡಿಗಳ ಹರಾಜಿನಲ್ಲಿ ಭಾಗವಹಿಸುವ ವ್ಯಕ್ತಿಗಳಿಗೆ / ಸಾರ್ವಜನಿಕರಿಗೆ / ಸಂಘ ಸಂಸ್ಥೆಗಳಿಗೆ ಮುಕ್ತ ಅವಕಾಶವನ್ನು ಕಲ್ಪಿಸತಕ್ಕದ್ದು;

4) ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಸ್ವತ್ತುಗಳ ಗುತ್ತಿಗೆಯನ್ನು ನೀಡುವ ಕುರಿತು ಪ್ರಮುಖ ದಿನ ಪತ್ರಿಕೆಗಳಲ್ಲಿ, ಸಂಬಂಧಪಟ್ಟ ಇಲಾಖಾ ಕಛೇರಿಯ ಪ್ರಕಟಣಾ ಫಲಕದಲ್ಲೂ ಮತ್ತು ದೇವಸ್ಥಾನದ ಕಛೇರಿಯಲ್ಲಿಯೂ ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಿ ವ್ಯಾಪಕ ಪ್ರಚಾರ ಮಾಡತಕ್ಕದ್ದು;

5) ಗುತ್ತಿಗೆ ಪ್ರಕಟಣೆಯಲ್ಲಿ ಸ್ವತ್ತಿನ ವಿವರ ಮತ್ತು ವಿಳಾಸ, ಸ್ವತ್ತಿನ ವಿಸ್ತೀರ್ಣ, ಚೆಕ್ಕುಬಂದಿ, ಅಂಗಡಿಗಳ ಮೀಸಲಾತಿ ಬಗ್ಗೆ, ಸ್ಥಳೀಯ ಮಾರುಕಟ್ಟೆ ಬಾಡಿಗೆ ದರಕ್ಕೆ ಕಡಿಮೆ ಇಲ್ಲದಂತೆ ಕನಿಷ್ಠ ಮಾಸಿಕ ಬಾಡಿಗೆ ನಮೂದಿಸತಕ್ಕದ್ದು;

6) ಷರತ್ತುಗಳಲ್ಲಿ ಗುತ್ತಿಗೆದಾರನು ಪಾವತಿಸಬೇಕಾದ ಗುಡ್‌ವಿಲ್ ಮೊತ್ತ / ಗುತ್ತಿಗೆದಾರನು ಪಾವತಿಸಬೇಕಾದ 6 ತಿಂಗಳ ಮುಂಗಡ ಬಾಡಿಗೆ ಮೊತ್ತ / ಬಾಡಿಗೆ / ವಾರ್ಷಿಕ ಶೇ. 10 ರಂತೆ ಹೆಚ್ಚುವರಿ ಬಾಡಿಗೆ ಪಾವತಿಸುವ ಬಗ್ಗೆ ಹಾಗೂ ಗುತ್ತಿಗೆಗೆ ನೀಡಲಾಗುವ ಕಟ್ಟಡದ ಜಾಗವು ದೇವಸ್ಥಾನದ ಅಭಿವೃದ್ಧಿಗೆ ಅವಶ್ಯಕತೆ ಬಂದಾಗ ತೆರವು ಮಾಡಿಸಬೇಕೆಂದಾದಲ್ಲಿ ಗುತ್ತಿಗೆದಾರರು ಜಾಗವನ್ನು ದೇವಸ್ಥಾನದ ಸುಪರ್ದಿಗೆ ವಹಿಸತಕ್ಕದ್ದು ಹಾಗೂ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮಗಳು 2002ರ ನಿಯಮ 31 ರಲ್ಲಿ ಸೂಚಿಸಿರುವ ಇತರೆ ಷರತ್ತುಗಳನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು;

7) ವ್ಯಕ್ತಿಗಳು / ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಲು ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸತಕ್ಕದ್ದು;

i. ವ್ಯಕ್ತಿಯ ಗುರುತಿನ ಚೀಟಿ. (ಆಧಾರ್, ಪ್ಯಾನ್, ರೇಷನ್ ಕಾರ್ಡ್ ಮುಂತಾದವುಗಳು)

ii. ವಾಸ ಸ್ಥಳದ ಪ್ರಮಾಣ ಪತ್ರ;

iii. ಸಕ್ಷಮ ಪ್ರಾಧಿಕಾರಿಗಳಿಂದ ಪಡೆದ ಜಾತಿ ಪ್ರಮಾಣ ಪತ್ರ. (ಮೀಸಲಾತಿ ಆಯ್ಕೆ ಮಾಡಿದ್ದಲ್ಲಿ)

iv. ವಿಕಲಚೇತನರಾಗಿದ್ದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪ್ರಮಾಣ ಪತ್ರ. (ಮೀಸಲಾತಿ ಆಯ್ಕೆ ಮಾಡಿದ್ದಲ್ಲಿ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೮, ೨೦೧೮ ೨೭ v. ಗುತ್ತಿಗೆ ಪಡೆದ ನಂತರ ಮಳಿಗೆಯಲ್ಲಿ ತಮ್ಮ ವಾಣಿಜ್ಯ ವ್ಯವಹರಣೆ ನಡೆಸಲು ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ಪಡೆದ GSTIN ಸಂಖ್ಯೆಯ ವಿವರವನ್ನು ಸಲ್ಲಿಸುವುದು.

8) ಹರಾಜಿನಲ್ಲಿ ಸಂಘ ಸಂಸ್ಥೆಗಳು ಭಾಗವಹಿಸಲು ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸತಕ್ಕದ್ದು.

i. ಸಂಘದ ನೋಂದಣಿ ಪತ್ರ; ii. ಸಂಘದ ಬೈಲಾ; iii. ಸಂಘವು ಬೈಲಾ ಪ್ರಕಾರ ಉದ್ದೇಶಗಳಿಗೆ ಪೂರಕವಾದ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಸೂಕ್ತ ದಾಖಲೆಗಳು; iv. ಸಂಘವು ಸ್ಥಾಪನೆಯಾದಾಗಿನಿಂದ ನಿಗದಿತ ಸಮಯದಲ್ಲಿ ನವೀಕರಣಗೊಂಡಿರುವ ಬಗ್ಗೆ ಪ್ರಮಾಣ ಪತ್ರ; v. ಸಂಘದ ಐದು ವರ್ಷಗಳ ಲೆಕ್ಕತಪಾಸಣಾ ವರದಿಗಳು; vi. ಸಂಘದ ನೋಂದಾಯಿತ ಎಲ್ಲಾ ಸದಸ್ಯರ ಜಾತಿ ಮತ್ತು ವರಮಾನ ಪ್ರಮಾಣ ಪತ್ರ; vii. ಸಂಘವು ಹರಾಜಿನಲ್ಲಿ ಭಾಗವಹಿಸಲು ಸದರಿ ಸಂಘದ ಎಲ್ಲಾ ಸದಸ್ಯರಿಂದ ಆಕ್ಷೇಪಣಾ ರಹಿತ ಪತ್ರ;

viii. ಗುತ್ತಿಗೆಯಲ್ಲಿ ಆಯ್ಕೆಯಾದ ಸಂಘವು ಇಲಾಖೆ / ಸಂಸ್ಥೆಯೊಂದಿಗೆ ವ್ಯವಹರಣೆ ನಡೆಸಲು ಸದರಿ ಸಂಘದ ಒಬ್ಬ ಸದಸ್ಯರಿಗೆ ಅಧಿಕಾರ ನೀಡಿ ಈ ಬಗ್ಗೆ ಸಂಘದ ಸಭೆಯಲ್ಲಿ ನಡವಳಿ ನಡೆಸಿ ಸರ್ವಾನುಮತದ ನಿರ್ಣಯ ಕೈಗೊಂಡು ನಡವಳಿ ಪ್ರತಿ ನೀಡುವುದು.

ix. ಸಂಘ ಯಾರ ಹೆಸರಿಗೆ ಅಂಗೀಕೃತ ಪತ್ರ ನೀಡಿರುತ್ತದೆಯೋ ಅವರು ಮಾತ್ರ ಇಲಾಖೆಯೊಂದಿಗೆ ವ್ಯವಹರಿಸತಕ್ಕದ್ದು;

x. ಸಂಸ್ಥೆ ಗುತ್ತಿಗೆ ಪಡೆದ ಮಳಿಗೆಯಲ್ಲಿ ತಮ್ಮ ವಾಣಿಜ್ಯ ವ್ಯವಹರಣೆ ನಡೆಸಲು ವಾಣಿಜ್ಯ ತೆರಿಗೆಗಳ ಇಲಾಖೆಯಿಂದ ಪಡೆದ GSTIN ಸಂಖ್ಯೆಯ ವಿವರವನ್ನು ಸಲ್ಲಿಸುವುದು.

9) ಅನಧಿಕೃತದಾರರನ್ನು ತೆರವುಗೊಳಿಸುವ ಬಗ್ಗೆ ಪಿ.ಪಿ.ಎ. ಪ್ರಾಧಿಕಾರದಲ್ಲಿ ಪ್ರಕರಣವನ್ನು ದಾಖಲಿಸಲು ಹಾಗೂ ಇವರು ಉಳಿಸಿಕೊಂಡಿರುವ ಬಾಕಿ ಬಾಡಿಗೆಗಳನ್ನು ಕಾಯ್ದೆ ಕಲಂ 34(2) ಹಾಗೂ ನಿಯಮ 31 (18) ರಂತೆ ವಸೂಲಿ ಮಾಡಲು ಸಕ್ಷಮ ಅಧಿಕಾರಿಗಳು ಕ್ರಮವಹಿಸತಕ್ಕದ್ದು.

10) ಒಟ್ಟಾರೆಯಾಗಿ ಮುಜರಾಯಿ ದೇವಸ್ಥಾನಗಳಿಗೆ ಸೇರಿದ ಒಟ್ಟು 228 ಅಂಗಡಿ, 22 ನಿವೇಶನ ಮತ್ತು 34 ಮನೆಗಳು ಸೇರಿ ಒಟ್ಟು 284 ಸ್ವತ್ತುಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ ಮತ್ತು ವಿಕಲಚೇತನರಿಗೆ ಷರತ್ತಿನ ಕ್ರಮ ಸಂಖ್ಯೆ:(2) ರಲ್ಲಿರುವ ಸರ್ಕಾರದ ಆದೇಶಗಳನ್ವಯ ಮೀಸಲಾತಿಯನ್ನು ಕಲ್ಪಿಸಿ ಸರ್ಕಾರದ ಅನುಮೋದನೆ ಪಡೆಯತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR – 13

ಬಿ.ಎಸ್. ನಾಗರತ್ನಮ್ಮ

SC - 25

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ: ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಯಿಂದ ಕೈಬಿಡುವ ಕುರಿತು.

ಓದಲಾಗಿದೆ : 1. ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 87 ಮುಆಬಿ 2012 ದಿನಾಂಕ : 29-09-2012.

2. ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ : ಎಡಿಎಂ/5/ಸಿಆರ್/65/2016-17 ದಿ:22-08-2017.

ಪ್ರಸ್ತಾವನೆ :

ಮೇಲೆ (1) ರಲ್ಲಿ ಓದಲಾದ ಸರ್ಕಾರದ ಅಧಿಸೂಚನೆಯಲ್ಲಿ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಪುಟ ಸಂಖ್ಯೆ : (263)ರ ಕ್ರಮ ಸಂಖ್ಯೆ: (09) ರಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾಗಿರುತ್ತದೆ.

ಮೇಲೆ (2) ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯಲ್ಲಿ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಶ್ರೀ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವರು ಹಾಗೂ ಹಾಲಿ ಶಾಸಕರು, ದಾವಣಗೆರೆ ಜಿಲ್ಲೆ ಇವರು ತಮ್ಮ ಸ್ವಂತ ಖರ್ಚಿನಿಂದ ಅಭಿವೃದ್ಧಿಪಡಿಸಲು ಹಾಗೂ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಇಚ್ಚಿಸಿರುವುದರಿಂದ ಸಾರ್ವಜನಿಕ / ಭಕ್ತಾಧಿಗಳ ಹಿತದೃಷ್ಟಿಯಿಂದ ಸದರಿ ದೇವಾಲಯವನ್ನು ಅಧಿಸೂಚಿತ ದೇವಸ್ಥಾನಗಳ ಪಟ್ಟಿಯಿಂದ ಕೈಬಿಟ್ಟು ಟ್ರಸ್ಟ್‌ಗೆ ವಹಿಸಿಕೊಡುವಂತೆ ಕೋರಿರುತ್ತಾರೆ. ಅಲ್ಲದೇ, ಮಾನ್ಯ ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವರು ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಸಹ ಸದರಿ ದೇವಾಲಯವನ್ನು ಮುಜರಾಯಿ ಇಲಾಖೆಯಿಂದ ಕೈಬಿಡುವಂತೆ ಕೋರಿರುತ್ತಾರೆ.

ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಕುರಿತು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಕಾಯ್ದೆಯ ಸೆಕ್ಷನ್ 20 (ಎ)(v) ರನ್ವಯ ಸೂಕ್ತ ನಿರ್ಣಯ ಕೈಗೊಳ್ಳುವ ಸಲುವಾಗಿ ದಿನಾಂಕ : 28-06-2017ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಗೆ ಪ್ರಸ್ತಾವನೆಯನ್ನು R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೮, ೨೦೧೮ ಭಾಗ ೧

ಮಂಡಿಸಲಾಗಿತ್ತು. ಸದರಿ ಸಭೆಯಲ್ಲಿ ಈ ವಿಷಯದ ಕುರಿತು ಸವಿವರವಾಗಿ ಚರ್ಚಿಸಿ ಸದರಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಲು ತೀರ್ಮಾನಿಸಲಾಗಿರುತ್ತದೆ.

ಆದುದರಿಂದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭಾ ನಿರ್ಣಯದಂತೆ, ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರಸ್ವಾಮಿ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ಕೋರಿರುತ್ತಾರೆ.

ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 38 ಮುಆಬಿ 2017. ಬೆಂಗಳೂರು, ದಿನಾಂಕ : 20ನೇ ಸೆಪ್ಟೆಂಬರ್, 2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ದಿನಾಂಕ : 28-06-2017 ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ನಿರ್ಣಯದಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ : ಕಂಇ 87 ಮುಆಬಿ 2012, ದಿನಾಂಕ : 29-09-2012 ರ ಪುಟ ಸಂಖ್ಯೆ : 263 ಕ್ರ.ಸಂ. 09 ರಲ್ಲಿನ ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ತಾಲ್ಲೂಕು, ಹಿರೇಎಮ್ಮಿಗನೂರು ಗ್ರಾಮದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-318

ಬಿ.ಎಸ್.ನಾಗರತ್ನಮ್ಮ

SC-25

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಮುಜರಾಯಿ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 18 January 2018. Indian Gazettes, https://egazette.servantsofknowledge.in/details/in.gazette.karnataka_new.2018-01-18.Part-1/. Archive identifier in.gazette.karnataka_new.2018-01-18.Part-1.