Servants of Knowledge
Karnataka Gazette · Government of Karnataka

Karnataka Gazette, Part Part-1, 22 February 2018

Published 22 February 2018

Part
Part-1
Identifier
in.gazette.karnataka_new.2018-02-22.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಫೆಬ್ರವರಿ ೨೨, ೨೦೧೮ (ಫಾಲ್ಗುಣ ೩, ಶಕ ವರ್ಷ ೧೯೩೯)

Bengaluru, Thursday, February 22, 2018 (Phalguna 3, Shaka Varsha 1939)

ಸಂಚಿಕೆ ೮

Issue 8

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ : ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರಲ್ಲಿ ನಿಗಧಿಪಡಿಸಿರುವ ಸರ್ಕಾರಿ ನೌಕರರ ಅವಲಂಭಿತ ತಂದೆ-ತಾಯಿಯ ಆದಾಯದ ಮಿತಿಯನ್ನು ಪರಿಷ್ಕರಿಸುವ ಬಗ್ಗೆ.

ಓದಲಾಗಿದೆ : 1) ಅಧಿಸೂಚನೆ ಸಂಖ್ಯೆ : ಸಿಆಸುಇ 26 ಎಸ್ಎಂಆರ್ 2011, ದಿನಾಂಕ : 27-03-2012.

2) ಅಧಿಸೂಚನೆ ಸಂಖ್ಯೆ : ಸಿಆಸುಇ 2 ಎಸ್ಎಂಆರ್ 2015, ದಿನಾಂಕ : 29-08-2017.

3) ಸರ್ಕಾರಿ ಆದೇಶ ಸಂಖ್ಯೆ : ಆಇ (ವಿಶೇಷಾ) 81 ಪಿಇಎನ್ 2012, ದಿನಾಂಕ : 03-05-2012.

ಪ್ರಸ್ತಾವನೆ :

ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು, 1963ರ ನಿಯಮ 2(1) (ii)ರಲ್ಲಿ ನಿಗಧಿಪಡಿಸಿರುವ ಷರತ್ತುಗಳನ್ನು ಪೂರೈಸುವ ರಾಜ್ಯ ಸರ್ಕಾರಿ ನೌಕರರ ಅವಲಂಭಿತ ತಂದೆ-ತಾಯಿಯವರ ವೈದ್ಯಕೀಯ ವೆಚ್ಚ ಮರುಪಾವತಿಗೆ ಅವಕಾಶವನ್ನು ಕಲ್ಪಿಸಲಾಗಿದೆ. ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಅಧಿಸೂಚನೆಯಲ್ಲಿ, ರಾಜ್ಯ ಸರ್ಕಾರಿ ನೌಕರರ ಅವಲಂಭಿತ ತಂದೆ-ತಾಯಿಯವರ ವೈದ್ಯಕೀಯ ವೆಚ್ಚ ಮರುಪಾವತಿಗೆ ಸಂಬಂಧಿಸಿದಂತೆ ನಿಯಮ 2(1) (ii)ರಲ್ಲಿ ನಿಗಧಿಪಡಿಸಿರುವ ಮಾಸಿಕ ಆದಾಯದ ಮಿತಿಯನ್ನು ರೂ. 4000/-ಗಳಿಂದ ರೂ. 6000/- ಗಳಿಗೆ ಪರಿಷ್ಕರಿಸಿ ಆದೇಶಿಸಲಾಗಿದೆ.

ನಂತರದಲ್ಲಿ, ರಾಜ್ಯ ಸರ್ಕಾರಿ ನೌಕರರ ಅವಲಂಭಿತ ತಂದೆ-ತಾಯಿಯವರ ವೈದ್ಯಕೀಯ ವೆಚ್ಚ ಮರುಪಾವತಿ ಸಂಬಂಧದಲ್ಲಿ ಕೇಂದ್ರ ಸರ್ಕಾರದ CGHS ಮಾನದಂಡದನುಸಾರ ಆದಾಯದ ಪರಿಮಿತಿಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿ, ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಅಧಿಸೂಚನೆಯಲ್ಲಿ, ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) ನಿಯಮಗಳು 1963ರ ನಿಯಮ 2(1) (ii)ರಲ್ಲಿರುವ "ಆರು ಸಾವಿರ ರೂಪಾಯಿಗಳು" ಎಂಬ ಪದಗಳ ಬದಲಿಗೆ "ರಾಜ್ಯ ಸರ್ಕಾರವು ನಿಗಧಿಪಡಿಸಿದ ಕನಿಷ್ಠ ಮೂಲ ಪಿಂಚಣಿ ಹಾಗೂ ವೈದ್ಯಕೀಯ ವೆಚ್ಚ ಮರುಪಾವತಿಯನ್ನು ಪರಿಗಣಿಸುವ ದಿನಾಂಕದಂದು ಕನಿಷ್ಠ ಮೂಲ ಪಿಂಚಣಿಗೆ ಲಭ್ಯವಾಗುವ ತುಟ್ಟಿಭತ್ಯೆಯನ್ನು ಒಳಗೊಂಡ ಮೊತ್ತ" ಎಂಬ ಪದಗಳನ್ನು ಪ್ರತಿಸ್ಥಾಪಿಸಿ ತಿದ್ದುಪಡಿ ಮಾಡಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಆದೇಶದಲ್ಲಿ, ರಾಜ್ಯದ ನಿವೃತ್ತ ಸರ್ಕಾರಿ ನೌಕರರುಗಳಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ಮತ್ತು ಕರ್ನಾಟಕ ನಾಗರಿಕ ಸೇವಾ (ಅಸಾಧಾರಣ ನಿವೃತ್ತಿ ವೇತನ) ನಿಯಮಾವಳಿಗಳು 2003 ರನ್ವಯ ಲಭ್ಯವಾಗುವ ವಿವಿಧ ಬಗೆಯ ನಿವೃತ್ತಿ ವೇತನಗಳಿಗೆ ಮಾಹೆಯಾನ ರೂ. 4800/-ಗಳ ಕನಿಷ್ಠ ಮೊತ್ತವನ್ನು ದಿನಾಂಕ : 01-04-2012 ರಿಂದ ಜಾರಿಗೆ ಬರುವಂತೆ ಆರ್ಥಿಕ ಇಲಾಖೆಯು ನಿಗಧಿಪಡಿಸಿರುತ್ತದೆ.

ಈ ಹಿನ್ನೆಲೆಯಲ್ಲಿ ಮತ್ತು ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) (ತಿದ್ದುಪಡಿ) ನಿಯಮಗಳು, 2017ರನ್ವಯ ಸರ್ಕಾರಿ ನೌಕರರ ಅವಲಂಭಿತ ತಂದೆ-ತಾಯಿಯ ವೈದ್ಯಕೀಯ ವೆಚ್ಚ ಮರುಪಾವತಿ ಪ್ರಕರಣಗಳ ಪರಿಶೀಲನೆ ಸಂದರ್ಭದಲ್ಲಿ ಆದಾಯದ ಮಿತಿಯ ಪರಿಗಣನೆಯನ್ನು ಸ್ಪಷ್ಟೀಕರಿಸುವ ಅಗತ್ಯತೆಯನ್ನು ಮನಗಂಡು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 02 ಎಸ್ಎಂಆರ್ 2015, ಬೆಂಗಳೂರು, ದಿನಾಂಕ : 27-09-2017.

(೧೩೭)೧೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೨, ೨೦೧೮ ಭಾಗ ೧ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಹಾಜರಾತಿ) (ತಿದ್ದುಪಡಿ) ನಿಯಮಗಳು, 2017ರನ್ವಯ ರಾಜ್ಯ ಸರ್ಕಾರಿ ನೌಕರರ ಅವಲಂಭಿತ ತಂದೆ-ತಾಯಿಯವರ ವೈದ್ಯಕೀಯ ವೆಚ್ಚ ಮರುಪಾವತಿಯ ಪ್ರಕರಣಗಳನ್ನು ಪರಿಶೀಲಿಸುವ ಸಂದರ್ಭದಲ್ಲಿ ಅವರ ಮಾಸಿಕ ಆದಾಯ ಮಿತಿಯನ್ನು, ರಾಜ್ಯ ಸರ್ಕಾರವು ನಿಗಧಿಪಡಿಸಿರುವ ಕನಿಷ್ಟ ಮೂಲ ಪಿಂಚಣಿ ರೂ. 4800/- (ನಾಲ್ಕು ಸಾವಿರದ ಎಂಟು ನೂರು ರೂಪಾಯಿ)ಗಳು ಹಾಗೂ ಅದಕ್ಕೆ ಆರ್ಥಿಕ ಇಲಾಖೆಯು ಕಾಲಕಾಲಕ್ಕೆ ನಿಗಧಿಪಡಿಸಿದಂತೆ ಲಭ್ಯವಾಗುವ ತುಟ್ಟಿಭತ್ಯೆಯ ದರಗಳನ್ನು ಸೇರಿಸಿ ಒಳಗೊಂಡ ಮೊತ್ತವನ್ನು ಮಾಸಿಕ ಆದಾಯವೆಂದು ಪರಿಗಣಿಸಿ ಲೆಕ್ಕಹಾಕುವಂತೆ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ವಿ. ಶೈಲಜ

PR – 37

ಸರ್ಕಾರದ ಅಧೀನ ಕಾರ್ಯದರ್ಶಿ

SC - 500

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.

(ಸೇವಾ ನಿಯಮಗಳು-2)

ವಸತಿ ಸಚಿವಾಲಯ

ವಿಷಯ: ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು ಬಿಡದಿ ಹೋಬಳಿಯ ಕಾಕರಾಮನ ಹಳ್ಳಿ, ಬೋರೆಹಳ್ಳಿ ಮತ್ತು ಮುದ್ದಾಪುರ ಕರೇನಹಳ್ಳಿ ಗ್ರಾಮಗಳಲ್ಲಿ ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗಾಗಿ ಭೂಸ್ವಾಧೀನಪಡಿಸಿಕೊಂಡ ಜಮೀನಿನ ಮಾಲೀಕರಿಗೆ ಸಾಂತ್ವನ ನಿವೇಶನ ನೀಡುವ ಕುರಿತು.

ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ: ವಇ 102 ಕಗೃಮಂ 2010, ದಿನಾಂಕ 18/5/2010.

2) ಆಯುಕ್ತರು, ಕರ್ನಾಟಕ ಗೃಹ ಮಂಡಳಿ ಇವರ ಪತ್ರ ಸಂಖ್ಯೆ: ಕಗೃಮಂ/ಗೃ.ಆ/

ಬಿಡದಿ.ವ.ಬ/ ಮಂಡಳಿ ನಿರ್ಣಯ/2016-17/ 947, ದಿನಾಂಕ: 8/11/2016.

3) ಆಯುಕ್ತರು, ಕರ್ನಾಟಕ ಗೃಹ ಮಂಡಳಿ ಇವರ ಪತ್ರ ಸಂಖ್ಯೆ:ಕಗೃಮಂ/ಭೂಸ್ವಾ/ ಬಿ-ರಾ/2016-17, ದಿನಾಂಕ 4/2/2017 ಮತ್ತು 16/8/2017.

ಪ್ರಸ್ತಾವನೆ:

ಮೇಲೆ (1) ರಲ್ಲಿ ಓದಲಾದ ದಿನಾಂಕ 18/5/2010ರ ಸರ್ಕಾರದ ಆದೇಶದ ಅನುಮೋದಿತ ವಸತಿ ಯೋಜನೆಗಳ ಪಟ್ಟಿಯ ಕ್ರಮ ಸಂಖ್ಯೆ 15ರಲ್ಲಿ ರಾಮನಗರ ಜಿಲ್ಲೆ, ಬಿಡದಿ ಹೋಬಳಿ, ಕಾಕರಾಮನಹಳ್ಳಿ ಜಮೀನಿನಲ್ಲಿ ವಸತಿ ಯೋಜನೆಯನ್ನು 499 ಎಕರೆ ಜಮೀನಿನಲ್ಲಿ `.731.03 ಕೋಟಿ ಮೊತ್ತದಲ್ಲಿ ಹಮ್ಮಿಕೊಳ್ಳಲು ಹಾಗೂ ವಿವಿಧ ವರ್ಗಗಳ 2246 ಮನೆಗಳನ್ನು ನಿರ್ಮಿಸಲು ಮತ್ತು 5240 ನಿವೇಶನಗಳನ್ನು ಅಭಿವೃದ್ಧಿ ಪಡಿಸಲು ಅನುಮೋದನೆ ನೀಡಲಾಗಿದೆ.

2) ಆಯುಕ್ತರು, ಕರ್ನಾಟಕ ಗೃಹ ಮಂಡಳಿ ಇವರು ಮೇಲೆ (2) ಮತ್ತು (3)ರ ಪತ್ರಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕಾಕರಾಮನಹಳ್ಳಿ, ಬಿಡದಿ ಹೋಬಳಿ, ರಾಮನಗರ ಇಲ್ಲಿ ಪ್ರಸ್ತಾಪಿಸಿರುವ ಕರ್ನಾಟಕ ಗೃಹ ಮಂಡಳಿಯ ಬಡಾವಣೆಗೆ ಸಂಬಂಧಿಸಿದಂತೆ ಈ ಕೆಳಕಂಡ ಅಂಶಗಳಿಗೆ ಸರ್ಕಾರದ ಅನುಮೋದನೆ ಕೋರಿರುತ್ತಾರೆ.

(1) ಸರ್ಕಾರ ಆದೇಶ ಸಂಖ್ಯೆ: ವಇ 102 ಕಗೃಮಂ 2010, ದಿನಾಂಕ: 18/05/2010ರಲ್ಲಿ ಕ್ರಮ ಸಂಖ್ಯೆ: 15 ರಲ್ಲಿ ರಾಮನಗರ ಜಿಲ್ಲೆ, ಬಿಡದಿ ಹೋಬಳಿ, ಕಾಕರಾಮನಹಳ್ಳಿ ಜಮೀನಿನಲ್ಲಿ ವಸತಿ ಯೋಜನೆಯನ್ನು 499 ಎಕರೆ ಜಮೀನಿನಲ್ಲಿ ಒಟ್ಟು `.731.03 ಕೋಟಿ ಮೊತ್ತದಲ್ಲಿ ಹಮ್ಮಿಕೊಳ್ಳಲು ಹಾಗೂ ವಿವಿಧ ವರ್ಗಗಳ ಒಟ್ಟು 2246 ಮನೆಗಳನ್ನು ನಿರ್ಮಿಸಲು ಹಾಗೂ 5240 ನಿವೇಶನಗಳನ್ನು ಅಭಿವೃದ್ಧಿ ಪಡಿಸಲು ಅನುಮೋದನೆಯಾಗಿರುತ್ತದೆ. ಆದರೆ ಬೇಡಿಕೆ ಸಮೀಕ್ಷೆಯಲ್ಲಿ ಮನೆಗಳಿಗೆ ಬೇಡಿಕೆ ಬಾರದ ಕಾರಣ, ಮೂಲತ:

ಉದ್ದೇಶಿಸಿದ್ದ 2246 ಮನೆಗಳ ನಿರ್ಮಾಣವನ್ನು ಕೈಬಿಟ್ಟು 9 ಎಲ್.ಐ.ಜಿ ಮನೆಗಳನ್ನು ಹಾಗೂ ವಿವಿಧ ವರ್ಗದ 5296 (9 ಎಲ್.ಐ.ಜಿ ಮನೆಗಳ ನಿವೇಶನ ಸೇರಿ) ನಿವೇಶನಗಳನ್ನು ನಿರ್ಮಿಸಲು ಪರಿಷ್ಕøತ ಅನುಮೋದನೆ.

(2) ಸದರಿ ವಸತಿ ಬಡಾವಣೆಗೆ ಭೂಮಿ ನೀಡಿದ ಭೂಮಾಲೀಕರಿಗೆ ಸಾಂತ್ವನ ನಿವೇಶನಗಳನ್ನು ಈ ಕೆಳಕಂಡ ಕೋಷ್ಠಕದಂತೆ ಮಂಡಳಿ

ಕ್ರ.ಸಂ ನೀಡುವ ಜಮೀನಿನ ವಿಸ್ತೀರ್ಣ ಸಾಂತ್ವನ ನಿವೇಶನದ ಅಳತೆ
1 10 ಗುಂಟೆಗಿಂತ ಕಡಿಮೆ ಯಾವುದೇ ಅಳತೆಯ ನಿವೇಶನ ಇಲ್ಲ
2 10 ಗುಂಟೆಯಿಂದ 20 ಗುಂಟೆವರೆಗೆ 6x9 ಮೀಟರ್ ಅಳತೆಯ ಒಂದು ನಿವೇಶನ
3 20 ಗುಂಟೆಗಿಂತ ಹೆಚ್ಚು ಮತ್ತು 40 ಗುಂಟೆ (1 ಎಕರೆ) ವರೆಗೆ 9x12 ಮೀಟರ್ ಅಳತೆಯ ಒಂದು ನಿವೇಶನ
4 1 ಎಕರೆಗಿಂತ ಹೆಚ್ಚು ಹಾಗೂ 1 ಎಕರೆ 20 ಗುಂಟೆವರೆಗೆ 9 x 12 ಮೀಟರ್ ಅಳತೆಯ ಒಂದು ನಿವೇಶನ ಮತ್ತು 6 x 9 ಮೀಟರ್ ಅಳತೆಯ ಒಂದು ನಿವೇಶನ
5 1 ಎಕರೆ 20 ಗುಂಟೆಗಿಂತ ಹೆಚ್ಚು ಹಾಗೂ 2 ಎಕರೆಯವರೆಗೆ 9 x 12 ಮೀಟರ್ ಅಳತೆಯ ಎರಡು ನಿವೇಶನಗಳು
6 2 ಎಕರೆಗಿಂತ ಹೆಚ್ಚು ಕ್ರಮ ಸಂಖ್ಯೆ 3 ರಿಂದ 5 ರ ಮಾದರಿಯಲ್ಲಿ ನಿವೇಶನಗಳನ್ನು ಪ ರಿಗಣಿಸುವುದು
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೧೫, ೨೦೧೮ ೧೩೯

3) ಕರ್ನಾಟಕ ಗೃಹ ಮಂಡಳಿಯ ಅಧಿನಿಯಮದ ಕಲಂ 33(1) ಮತ್ತು 33(2)ರನ್ವಯ ವಸತಿ ಯೋಜನೆಗಳಿಗಾಗಿ ಜಮೀನುಗಳನ್ನು ನೇರ ಖರೀದಿ / ಭೂ-ಸ್ವಾಧೀನ ಪ್ರಕ್ರಿಯೆ ಮೂಲಕ ರೈತರುಗಳಿಂದ ಜಮೀನುಗಳನ್ನು ಪಡೆದು ಅಭಿವೃದ್ಧಿಪಡಿಸಿ ಬಡಾವಣೆಗಳನ್ನು ನಿರ್ಮಿಸುತ್ತಿದೆ. ಭೂಖರೀದಿ ಮತ್ತು ಭೂಸ್ವಾಧೀನ ಸಮಯದಲ್ಲಿ ಪ್ರತಿ ಎಕರೆಗೆ ಜಿಲ್ಲಾ ಭೂ ಖರೀದಿ ಸಮಿತಿ ಸಭೆಯಲ್ಲಿ ನಿರ್ಧರಿಸಿದ ದರಗಳ ಆಧಾರದ ಮೇಲೆ ಭೂ ಪರಿಹಾರವನ್ನು ವಿತರಿಸಲಾಗುತ್ತಿದೆ. ಅದರ ಜೊತೆಗೆ ಸಾಂತ್ವನ ಪರಿಹಾರವೆಂದು ಮಂಡಳಿಯು ಆಗಿಂದಾಗ್ಗೆ, ಮಂಡಳಿಯ ನಿರ್ಣಯಗಳ ಆಧಾರದ ಮೇಲೆ ಕೆಲವು ಪ್ರಕರಣಗಳಲ್ಲಿ ದರ ಪಾವತಿಸಿಕೊಂಡು ಭೂ ಮಾಲೀಕರಿಗೆ ಸಾಂತ್ವನ ರೂಪದಲ್ಲಿ ನಿವೇಶನಗಳನ್ನು ಸಹ ಹಂಚಿಕೆ ಮಾಡುತ್ತಾ ಬಂದಿರುತ್ತದೆ.

4) ಕರ್ನಾಟಕ ಗೃಹ ಮಂಡಳಿಯಿಂದ ಸದರಿ ನೇತಾಜಿ ಸುಭಾಷ್ ಚಂದ್ರ ಬೋಸ್ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವ ಸಂಬಂಧ ಬೇಡಿಕೆ ಸಮೀಕ್ಷೆ ಕೈಗೊಳ್ಳಲು ದಿನಾಂಕ: 12/7/2006 ಮತ್ತು 18/4/2007 ರಂದು ದಿನಪತ್ರಿಕೆಗಳಲ್ಲಿ ಸಾರ್ವಜನಿಕರಿಂದ ನೋಂದಣಿ ಶುಲ್ಕದೊಂದಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಪ್ರಕಟಣೆಗಳಿಗೆ ಅರ್ಜಿ ಸಲ್ಲಿಸಿರುವ ಅರ್ಜಿದಾರರಿಂದ ಆರಂಭಿಕ ಠೇವಣಿ ಪಾವತಿಸುವಂತೆ ಸೂಚಿಸಿ ದಿನಾಂಕ 12/7/2013 ರಂದು ಹಾಗೂ ಆರ್ಥಿಕ ದುರ್ಬಲ ವರ್ಗದವರಿಗೆ ದಿನಾಂಕ: 3/6/2014 ರಂದು ಸಾರ್ವಜನಿಕ ಪ್ರಕಟಣೆ ನೀಡಲಾಗಿತ್ತು. ಸದರಿ ಪ್ರಕಟಣೆಗಳಿಗೆ ಸ್ಪಂದಿಸಿ ನಿವೇಶನಗಳಿಗೆ 10692 ಅರ್ಜಿಗಳನ್ನು ಮತ್ತು ಮನೆಗಳಿಗೆ 29 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

5) ಸದರಿ ಬಡಾವಣೆಗೆ ಕರ್ನಾಟಕ ಗೃಹ ಮಂಡಳಿಯು ರಾಮನಗರ ಜಿಲ್ಲೆ ಮತ್ತು ತಾಲ್ಲೂಕು ಕಾಕರಾಮನಹಳ್ಳಿ, ಬೋರೆಹಳ್ಳಿ ಮತ್ತು ಮುದ್ದಾಪುರ ಕರೇನಹಳ್ಳಿ ಗ್ರಾಮಗಳಲ್ಲಿ 499 ಎಕರೆ 21 ಗುಂಟೆ ಜಮೀನನ್ನು ಮಂಡಳಿಯು ಸ್ವಾಧೀನಪಡಿಸಿಕೊಂಡಿದೆ. ಹಾಗೂ ಭೂ ಮಾಲೀಕರಿಗೆ ಪ್ರತಿ ಎಕರೆಗೆ `.26 ಲಕ್ಷ ಭೂ ಪರಿಹಾರ ನೀಡಲಾಗಿದೆ. ಭೂ ಮಾಲೀಕರು ನಿಗಧಿಪಡಿಸಲಾದ ಭೂ ಪರಿಹಾರಕ್ಕೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತ ಒಂದು ಸಾಂತ್ವನ ನಿವೇಶನವನ್ನು ಹೆಚ್ಚುವರಿ ಪರಿಹಾರವಾಗಿ ನೀಡುವಂತೆ ಸರ್ಕಾರಕ್ಕೆ ಹಾಗೂ ಮಂಡಳಿಗೆ ಬೇಡಿಕೆ ಸಲ್ಲಿಸಿರುತ್ತಾರೆ ಹಾಗೂ ಕಾಮಗಾರಿ ನಡೆಸಲು ಅಡ್ಡಿಪಡಿಸಿರುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸಲು ಕರ್ನಾಟಕ ಗೃಹ ಮಂಡಳಿಯು ಜಮೀನುಗಳನ್ನು ನೀಡಿದ ಭೂಮಾಲೀಕರು ಸಾಂತ್ವನ ನಿವೇಶನ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತದೆ.

6) ವಸತಿ ಯೋಜನೆಗಳಿಗಾಗಿ ಕರ್ನಾಟಕ ಗೃಹ ಮಂಡಳಿಯು ಭೂ ಸ್ವಾಧೀನ ಪ್ರಕ್ರಿಯೆಯನ್ನು ನಡೆಸಲು ಅನುಸರಿಸಬೇಕಾದ ಹೊಸ ವಿಧಾನಕ್ಕೆ ಸಂಬಂಧಿಸಿದಂತೆ ಹೊರಡಿಸಲಾದ ಸರ್ಕಾರದ ಆದೇಶ ಸಂಖ್ಯೆ: ವಇ 313 ಕಗೃಮಂ 2012, ದಿನಾಂಕ 6/11/2012ರ ಕ್ರಮ ಸಂಖ್ಯೆ (3) ರಲ್ಲಿ ಈ ಕೆಳಕಂಡಂತೆ ಆದೇಶಿಸಲಾಗಿದೆ.

"To adopt an incentive scheme in every case giving site

measuring 30'x40' or 40x60 feet per acre as the case may be

to the land owners who part with land as per the Land

Acquisition Act and the revised procedure now approved."

7) ಪ್ರಸ್ತುತ ಈ ಪ್ರಕರಣದಲ್ಲಿ ಭೂಸ್ವಾಧೀನಕ್ಕಾಗಿ ಪ್ರಾಥಮಿಕ ಮತ್ತು ಅಂತಿಮ ಪ್ರಕಟಣೆಗಳನ್ನು ಮೇಲೆ ತಿಳಿಸಲಾಗಿರುವ ಸರ್ಕಾರದ ಆದೇಶದ ದಿನಾಂಕ:

6/11/2012ರ ಪೂರ್ವದಲ್ಲಿ ಕ್ರಮವಾಗಿ ದಿನಾಂಕ: 6/7/2006 ಹಾಗೂ ದಿನಾಂಕ: 15/1/2009 ರಂದು ಹೊರಡಿಸಲಾಗಿದೆ. ಜಮೀನಿನ ಸ್ವಾಧೀನವನ್ನು ದಿನಾಂಕ 31/01/2013 ರಂದು 374-26 ಎಕರೆ, ದಿನಾಂಕ: 27/2/2014 ರಂದು 63-10 ಎಕರೆ ಮತ್ತು ದಿನಾಂಕ: 27/11/2014 ರಂದು 61-25 ಎಕರೆ ಜಮೀನು ಸೇರಿದಂತೆ ಒಟ್ಟು 499 ಎಕರೆ 21 ಗುಂಟೆ ಜಮೀನನ್ನು ಸರ್ಕಾರದ ಆದೇಶ ಸಂಖ್ಯೆ: ವಇ 313 ಕಗೃಮಂ 2012, ದಿನಾಂಕ: 6/11/2012ರ ನಂತರ ಮಂಡಳಿ ಸ್ವಾಧೀನಕ್ಕೆ ಪಡೆದಿರುವುದರಿಂದ ಭೂ ಮಾಲೀಕರಿಗೆ ಸಾಂತ್ವನ ನಿವೇಶನ ನೀಡಲು ಪರಿಗಣಿಸಬಹುದಾಗಿದೆ ಎಂದು ಮಂಡಳಿಯು ಶಿಫಾರಸ್ಸು ಮಾಡಿರುತ್ತದೆ.

8) ಮೇಲ್ಕಂಡ ಪ್ರಸ್ತಾವನೆಯನ್ನು ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ.: ವಇ 346 ಕಗೃಮಂ 2012, ಬೆಂಗಳೂರು, ದಿನಾಂಕ 23ನೇ ಅಕ್ಟೋಬರ್ 2017.

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ವಇ 102 ಕಗೃಮಂ 2010, ದಿನಾಂಕ: 18/5/2010ರಲ್ಲಿ ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು, ಬಿಡದಿ ಹೋಬಳಿ, ಕಾಕರಾಮನಹಳ್ಳಿ, ಬೋರೆಹಳ್ಳಿ ಮತ್ತು ಮುದ್ದಾಪುರ ಕರೇನಹಳ್ಳಿ ಗ್ರಾಮಗಳಲ್ಲಿ ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಗಾಗಿ 499 ಎಕರೆ ಜಮೀನಿನಲ್ಲಿ ವಿವಿಧ ವರ್ಗಗಳ 5240 ನಿವೇಶನಗಳ ಅಭಿವೃದ್ಧಿ ಹಾಗೂ 2246 ಮನೆಗಳ ನಿರ್ಮಾಣ ಯೋಜನೆಗೆ ನೀಡಿರುವ ಅನುಮೋದನೆಯನ್ನು ಮಾರ್ಪಡಿಸಿ 9 ಎಲ್.ಐ.ಜಿ ಮನೆಗಳು ಹಾಗೂ ವಿವಿಧ ವರ್ಗದ 5296 ನಿವೇಶನಗಳನ್ನು ನಿರ್ಮಿಸಲು ಸರ್ಕಾರವು ಅನುಮೋದನೆ ನೀಡಿದೆ.

2) ಹಾಗೂ ಸದರಿ ವಸತಿ ಬಡಾವಣೆಗೆ ಭೂಮಿ ನೀಡಿದ ಭೂಮಾಲೀಕರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ಸಾಂತ್ವನ ನಿವೇಶನಗಳನ್ನು ನಿವೇಶನ ಬೆಲೆಯ ಶೇ.25ರಷ್ಟನ್ನು ವಿಧಿಸಿ ಈ ಕೆಳಕಂಡ ಕೋಷ್ಠಕದಂತೆ ಹಂಚಿಕೆ ಮಾಡಲು ಸರ್ಕಾರವು ಅನುಮೋದನೆ ನೀಡಿದೆ.

ಕ್ರ. ಸಂ ಸ್ವಾಧೀನಪಡಿಸಿಕೊಂಡ ಜಮೀನಿನ ವಿಸ್ತೀರ್ಣ ಸಾಂತ್ವನ ನಿವೇಶನದ ಅಳತೆ
1 10 ಗುಂಟೆಗಿಂತ ಕಡಿಮೆ ಯಾವುದೇ ಅಳತೆಯ ನಿವೇಶನ ಇಲ್ಲ
2 10 ಗುಂಟೆಯಿಂದ 20 ಗುಂಟೆವರೆಗೆ 6 x 9 ಮೀಟರ್ ಅಳತೆಯ ಒಂದು ನಿವೇಶನ
3 20 ಗುಂಟೆಗಿಂತ ಹೆಚ್ಚು ಮತ್ತು 40 ಗುಂಟೆ (1 ಎಕರೆ) ವರೆಗೆ 9 x 12 ಮೀಟರ್ ಅಳತೆಯ ಒಂದು ನಿವೇಶನ
4 1 ಎಕರೆಗಿಂತ ಹೆಚ್ಚು ಹಾಗೂ 1ಎಕರೆ 20 ಗುಂಟೆವರೆಗೆ 9 x 12 ಮೀಟರ್ ಅಳತೆಯ ಒಂದು ನಿವೇಶನ ಮತ್ತು 6 x 9 ಮೀಟರ್ ಅಳತೆಯ ಒಂದು ನಿವೇಶನ
5 1 ಎಕರೆ 20 ಗುಂಟೆಗಿಂತ ಹೆಚ್ಚು ಹಾಗೂ 2 ಎಕರೆಯವರೆಗೆ 9 x 12 ಮೀಟರ್ ಅಳತೆಯ ಎರಡು ನಿವೇಶನಗಳು
6 2 ಎಕರೆಗಿಂತ ಹೆಚ್ಚು ಕ್ರಮ ಸ ಂಖ್ಯೆ 3 ರಿಂದ 5 ರ ಮಾದರಿಯಲ್ಲಿ ನಿವೇಶನಗಳನ್ನು ಪ ರಿಗಣಿಸುವುದು

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೨, ೨೦೧೮ ಭಾಗ ೧

3) ಮೇಲ್ಕಂಡ ಆದೇಶವನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಹೊರಡಿಸಿದೆ.

(1) ಈ ಆದೇಶದಲ್ಲಿ ನೀಡಿರುವ ಅನುಮೋದನೆಯನ್ನು ಇತರೆ ಪ್ರಕರಣಗಳಿಗೆ ಪೂರ್ವನಿದರ್ಶನವಾಗಿ ಪರಿಗಣಿಸುವಂತಿಲ್ಲ.

(2) ಸಾಂತ್ವನ ನಿವೇಶನವನ್ನು ಮೂಲ ಭೂಮಾಲೀಕರ ಹೆಸರಿನಲ್ಲಿಯೇ ಹಂಚಿಕೆ ಮಾಡತಕ್ಕದ್ದು.

(3) ಸಾಂತ್ವನ ನಿವೇಶನವನ್ನು ಭೂಮಾಲೀಕರು ಜಮೀನು ನೀಡಿರುವ ಬಡಾವಣೆಯಲ್ಲೇ ನೀಡತಕ್ಕದ್ದು. ಬೇರೆ ಬಡಾವಣೆಗಳಲ್ಲಿ ಸಾಂತ್ವನ ನಿವೇಶನವನ್ನು ನೀಡುವಂತಿಲ್ಲ.

(4) ಸಾಂತ್ವನ ನಿವೇಶನ ಹಂಚಿಕೆದಾರರ ಪಟ್ಟಿಗೆ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನ್ವಯವಾಗಿ ಅನುಮೋದನೆ ಪಡೆದುಕೊಳ್ಳಬೇಕು.

4) ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 62 ವೆಚ್ಚ-9/2017, ದಿನಾಂಕ: 23/2/2017ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.

PR.80

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಈ. ಶಿವರುದ್ರಪ್ಪ

SC.100

ಸರ್ಕಾರದ ಅಧೀನ ಕಾರ್ಯದರ್ಶಿ-1,

(ಕರ್ನಾಟಕ ಗೃಹ ಮಂಡಳಿ & ರೇರಾ)

ವಸತಿ ಇಲಾಖೆ.

WATER RESOURCES SECRETARIAT

CORRIGENDUM

No. WRD 27 DSP 2017, BENGALURU DATED-29-01-2018.

In the Government Order No: WRD 07 DSP 2009, Bengaluru, Dated: 12/19-05-2011 regarding "Approval for the implementation of Dam Rehabilitation and Improvement Project (DRIP) with Loan Assistance from the World Bank". the Empowered Committee for DRIP was constituted as per the guidelines issued by the Finance Department vide circular No. FD 27 PMU 1997, dated 13th April 1999.

The Secretary DPAR, who is a special invitee to the Committee is excluded from the above said Empowered Committee for DRIP with immediate effect and until further Orders.

PR. 98

By Order and in the name of the Governor of Karnataka, SC.150

B. HARINARAYAN

Under Secretary to Government,

Water Resources Department. (KBJN) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 22 February 2018. Indian Gazettes, https://egazette.servantsofknowledge.in/details/in.gazette.karnataka_new.2018-02-22.Part-1/. Archive identifier in.gazette.karnataka_new.2018-02-22.Part-1.