Servants of Knowledge
Karnataka Gazette · Government of Karnataka

Karnataka Gazette, Part Part-1, 22 March 2018

Published 22 March 2018

Part
Part-1
Identifier
in.gazette.karnataka_new.2018-03-22.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೨

Volume 152

ಬೆಂಗಳೂರು, ಗುರುವಾರ, ಮಾರ್ಚ್ ೨೨, ೨೦೧೮ (ಚೈತ್ರ ೧, ಶಕ ವರ್ಷ ೧೯೪೦)

Bengaluru, Thursday, March 22, 2018 (Chaithra 1, Shaka Varsha 1940)

ಸಂಚಿಕೆ ೧೨

Issue 12

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಂದಾಯ ಸಚಿವಾಲಯ

ವಿಷಯ : ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ, ಜಿಲ್ಲಾ ನೋಂದಣಿ ಕಛೇರಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧದ ಲೋಕಾಯುಕ್ತ ವಿಚಾರಣೆ ಕುರಿತು-ಆದೇಶ.

ಓದಲಾಗಿದೆ : 1) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವರದಿ ಸಂಖ್ಯೆ: Compt/Uplok /Mys-2395/2012/ARE-7 ದಿನಾಂಕ: 12-12-2012.

2) ಸರ್ಕಾರದ ಆದೇಶ ಸಂಖ್ಯೆ: ಕಂಇ 87 ಮುನೋಸೇ(3) 2012 ದಿನಾಂಕ:09-01-2013.

3) ಅಪರ ನಿಬಂಧಕರು, ವಿಚಾರಣೆಗಳು-4, ಕರ್ನಾಟಕ ಲೋಕಾಯುಕ್ತ ಇವರ ವಿಚಾರಣಾ ವರದಿ:LOK/ARE- 4/ENQ/66/2013 ದಿನಾಂಕ: 19-05-2017.

4) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಶಿಫಾರಸ್ಸು: LOK/ARE 4/ENQ-66/2013/ARE-3 ದಿನಾಂಕ: 20-05-2017.

5) ಸರ್ಕಾರದ ಪತ್ರ ಸಂಖ್ಯೆ: ಕಂಇ 26 ಮುನೋಸೇ(3) 2017 ದಿನಾಂಕ: 30-06-2017.

6) ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಪತ್ರ ಸಂಖ್ಯೆ:LOK/ARE-4/Enq-66/2013 ದಿನಾಂಕ: 13-07-2017.

7) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಸ್ಪಷ್ಟೀಕರಣ ಪತ್ರ ಸಂಖ್ಯೆ:

LOK/ARE-4/Enq-66/2013 ದಿನಾಂಕ: 12-07-2017.

8) ಸರ್ಕಾರದ ಕಾರಣ ಕೇಳುವ ನೊಟೀಸ್ ಸಂಖ್ಯೆ: ಕಂಇ 26 ಮುನೋಸೇ (3) 2017, ದಿನಾಂಕ: 31-07-2017.

9) ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ ಇವರ ಮನವಿ ದಿನಾಂಕ: 19-08-2017.

10) ಸರ್ಕಾರದ ಪತ್ರ ಸಂಖ್ಯೆ: ಕಂಇ 26 ಮುನೋಸೇ(3) 2017 ದಿನಾಂಕ: 06-10-2017.

11) ಜಿಲ್ಲಾ ನೋಂದಣಾಧಿಕಾರಿಗಳು, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇವರ ಪತ್ರ ಸಂಖ್ಯೆ: ಸಿಬ್ಬಂದಿ- 66/2011-12 ದಿನಾಂಕ: 28-08-2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿ ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ದಿನಾಂಕ: 12-12-2012ರ ವರದಿಯಲ್ಲಿ, ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ, ಜಿಲ್ಲಾ ನೋಂದಣಿ ಕಛೇರಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ಶ್ರೀಮತಿ ರೂಪಾಶ್ರೀ ಬುಡಾಲೆ ಕೋಂ. ರಾಜಶೇಖರ ಬುಡಾಲೆ, ವಾಮಂಜೂರು ಇವರು ಮಳವೂರು ಗ್ರಾಮದ ಜಮೀನಿನ ಸಾಮಾನ್ಯ ಮೊಕ್ತ್ಯಾರು ನಾಮೆ ವಿಚಾರದಲ್ಲಿ ಸರ್ಕಾರದ ಪರಿಷ್ಕøತ ನಿಯಮದ ಪ್ರಕಾರ ಜಿಲ್ಲಾ ನೋಂದಣಿ ಕಛೇರಿಯಲ್ಲಿ ಶುಲ್ಕ ಪಾವತಿಸಿ ತರುವಂತೆ ಫಿರ್ಯಾದುದಾರರಿಗೆ ಅರ್ಜಿಯೊಂದನ್ನು ನೀಡಿದ್ದು, ಸದರಿ ಅರ್ಜಿಯನ್ನು ಮಂಗಳೂರು ಜಿಲ್ಲಾ ನೋಂದಣಿ ಕಛೇರಿಗೆ ಸಲ್ಲಿಸಿದ್ದು, ಅರ್ಜಿಯ ಬಗ್ಗೆ ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ ಇವರು ಫಿರ್ಯಾದುದಾರರಲ್ಲಿ ಆ ದಿನವೇ ಕೆಲಸ ಮಾಡಿಕೊಡಲು `.32,000/-ಗಳ ಬೇಡಿಕೆಯನ್ನು ನೀಡಿರುತ್ತಾರೆ. ಪುನಃ ಎರಡು ದಿನಗಳ ನಂತರ ಸದರಿ ನೌಕರರನ್ನು ಫಿರ್ಯಾದುದಾರರು ಭೇಟಿ ಮಾಡಿ ಕಡಿಮೆ ಮಾಡುವಂತೆ ಚೌಕಾಸಿ

(೨೨೫)೨೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೧ ಮಾಡಿದಾಗ `.8,000/- ನೀಡಿದಲ್ಲಿ, `.32,000/- ಕಟ್ಟುವ ಬದಲು ಅದನ್ನು `.18,600/-ಕ್ಕೆ ಕಡಿಮೆ ಮಾಡಿಸುವುದಾಗಿ ತಿಳಿಸಿದ್ದು, ತಪ್ಪಿದಲ್ಲಿ `.32,000/- ಗಳ ಹೆಚ್ಚುವರಿ ದಂಡವನ್ನು ತೆರಬೇಕಾಗಬಹುದೆಂದು ತಿಳಿಸಿರುವ ಬಗ್ಗೆ ದೂರುದಾರರು ನೀಡಿದ ದೂರಿನನ್ವಯ ಸದರಿ ನೌಕರರ ವಿರುದ್ಧ ವಿಚಾರಣೆಯನ್ನು ನಡೆಸಲಾಗಿ, ಆರೋಪಿತ ನೌಕರರು ಫಿರ್ಯಾದುದಾರರಿಗೆ ಸರ್ಕಾರಿ ಕೆಲಸಕ್ಕಾಗಿ ಲಂಚದ ಬೇಡಿಕೆ ಇಟ್ಟು, ಲಂಚವನ್ನು ಪಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 12(3)ರನ್ವಯ ವಿಚಾರಣೆಯನ್ನು ನಡೆಸಲು ಕರ್ನಾಟಕ ನಾಗರಿಕ ಸೇವಾ (ಸಿಸಿಎ) ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ: 09-01-2013ರ ಆದೇಶದಲ್ಲಿ ಸದರಿ ನೌಕರರ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ, ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಯಮಾವಳಿ 1957ರ ನಿಯಮ 14(ಎ)ರನ್ವಯ ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸಿ ಆದೇಶಿಸಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ಅಪರ ನಿಬಂಧಕರು, ವಿಚಾರಣೆಗಳು-4, ಮಾನ್ಯ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ:19-05-2017 ರಲ್ಲಿ ವಿಚಾರಣಾ ವರದಿಯನ್ನು ಮಾನ್ಯ ಉಪ ಲೋಕಾಯುಕ್ತರಿಗೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಆಪಾದಿತ ನೌಕರರಾದ ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ, ಜಿಲ್ಲಾ ನೋಂದಣಿ ಕಛೇರಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇವರ ವಿರುದ್ಧ ಆರೋಪಿಸಲಾದ ಲಂಚದ ಬೇಡಿಕೆ ಆರೋಪವು ರುಜುವಾತಾಗಿರುವುದಾಗಿ ಹಾಗೂ ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966ರ ನಿಯಮ 3(1)(i) ರಿಂದ (iii)ರಡಿ ದುರ್ನಡತೆ ಎಸಗಿರುವುದು ಸಾಬೀತಾಗಿರುವುದಾಗಿ, ವರದಿ ನೀಡಿದ್ದು, ಸದರಿ ವರದಿಯ ಆಧಾರದ ಮೇಲೆ ಆಪಾಧಿತರಿಗೆ ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1966ರ ನಿಯಮ 3(viii)ರ ಪ್ರಕಾರ ಸರ್ಕಾರಿ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ಶಿಫಾರಸ್ಸು ವರದಿಯಲ್ಲಿ, ಮಾನ್ಯ ಉಪಲೋಕಾಯುಕ್ತರವರು ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (5) ದಿನಾಂಕ: 30-06-2017ರ ಸರ್ಕಾರದ ಪತ್ರದಲ್ಲಿ, ಮಾನ್ಯ ಉಪ ಲೋಕಾಯುಕ್ತರ ದಿನಾಂಕ:20-05-2017ರ ಶಿಫಾರಸ್ಸಿನ ವರದಿಯ ಕಂಡಿಕೆ-7ರಲ್ಲಿ, ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ ಇವರ ವಿರುದ್ಧದ ಆರೋಪವು ಸಾಬೀತಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1966ರ ನಿಯಮ 3(viii)ರಡಿ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸುವಂತೆ ಶಿಫಾರಸ್ಸು ಮಾಡಿದ್ದು, ಸದರಿ ನಿಯಮದಲ್ಲಿ ಯಾವುದೇ ವಿಧದ ದಂಡನೆಯನ್ನು ವಿಧಿಸುವ ಬಗ್ಗೆ ಉಲ್ಲೇಖವಿರುವುದಿಲ್ಲವಾದ್ದರಿಂದ, ಸದರಿ ಶಿಫಾರಸ್ಸಿನ ವರದಿಯಲ್ಲಿನ, ಶಿಫಾರಸ್ಸಿಗೆ ಸಂಬಂಧಿಸಿದಂತೆ ಕಂಡಿಕೆ-7ರಲ್ಲಿನ ದಂಡನೆಯ ವಿಧ ಹಾಗೂ ದಂಡನೆಯ ನಿಯಮವನ್ನು ತಿಳಿಸುವಂತೆ ಮಾನ್ಯ ಉಪ ಲೋಕಾಯುಕ್ತರನ್ನು ಕೋರಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (6) ದಿನಾಂಕ: 13-07-2017ರಲ್ಲಿ ನಿಬಂಧಕರು, ಕರ್ನಾಟಕ ಲೋಕಾಯುಕ್ತ ಇವರ ಅರೆ ಸರ್ಕಾರಿ ಪತ್ರದೊಂದಿಗೆ ಸ್ವೀಕೃತವಾದ ಪತ್ರದಲ್ಲಿ, ಮಾನ್ಯ ಉಪ ಲೋಕಾಯುಕ್ತರು ಇವರು ವಿಚಾರಣಾಧಿಕಾರಿಗಳು, ವಿಚಾರಣಾ ಸಂದರ್ಭ ದಾಖಲೆಗಳನ್ನು ಪರಿಗಣಿಸಿ ನೀಡಿರುವ ವಿಚಾರಣೆ ವರದಿಯಂತೆ ಆರೋಪಿತ ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ, ಜಿಲ್ಲಾ ನೋಂದಣಿ ಕಛೇರಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇವರು ದುರ್ನಡತೆ ಎಸಗಿರುವುದು ಸಾಬೀತಾಗಿರುವುದರಿಂದ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ ನಿಯಂತ್ರಣ ಮೇಲ್ಮನವಿ) ನಿಯಮಾವಳಿಗಳು, 1957ರ ನಿಯಮ 8(viii) ರನ್ವಯ ಸರ್ಕಾರಿ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (7) ದಿನಾಂಕ: 12-07-2017ರ ಪತ್ರದಲ್ಲಿ ತಿಳಿಸಿರುತ್ತಾರೆ.

ಅಪರ ನಿಬಂಧಕರು, ವಿಚಾರಣೆಗಳು-4, ಮಾನ್ಯ ಕರ್ನಾಟಕ ಲೋಕಾಯುಕ್ತ ಇವರ ವರದಿ ಹಾಗೂ ಮಾನ್ಯ ಉಪಲೋಕಾಯುಕ್ತರ ಶಿಫಾರಸ್ಸಿನ ಹಿನ್ನೆಲೆಯಲ್ಲಿ, ಏಕೆ ಕ್ರಮ ಕೈಗೊಳ್ಳಬಾರದು ಎಂದು ಸಮಜಾಯಿಷಿ ಕೇಳಿ ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ ಇವರಿಗೆ ದಿನಾಂಕ:

31-07-2017 ರಲ್ಲಿ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಬೆಂಗಳೂರು ಇವರ ಮುಖಾಂತರ ಮೇಲೆ ಓದಲಾದ ಕ್ರಮ ಸಂಖ್ಯೆ (8)ರಲ್ಲಿ ಕಾರಣ ಕೇಳುವ ನೊಟೀಸ್‌ನ್ನು ಜಾರಿ ಮಾಡಲಾಗಿತ್ತು. ಆಪಾದಿತ ನೌಕರರಾದ ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ ಇವರು ಮೇಲೆ ಕ್ರಮ ಸಂಖ್ಯೆ (9)ರಲ್ಲಿ ಓದಲಾಗಿರುವ ದಿನಾಂಕ: 19-08-2017ರಲ್ಲಿ ಮನವಿ ಸಲ್ಲಿಸಿ, ಕಾರಣ ಕೇಳುವ ನೋಟೀಸಿಗೆ ಲಗತ್ತಿಸಿದ ಶಿಫಾರಸ್ಸಿನ 19ನೇ ಪುಟದಲಿ್ಲ ವಿವರಿಸಿದ LIST OF EXHIBITS MARKED ON BEHALE OF DISCIPLINARY AUTHORITY ರಡಿಯಲ್ಲಿರುವ Ex-P1 ರಿಂದ P-15 ರವರೆಗಿನ ಮತ್ತು ExD-1 ರ ದಾಖಲೆಗಳು ನನ್ನ ಬಳಿ ಇಲ್ಲದಿರುವ ಕಾರಣ ನಾನು ಸಮಜಾಯಿಷಿ ನೀಡಲು ಅನಾನುಕೂಲತೆ ಉಂಟಾಗಿದ್ದು, ಸದರಿ ದಾಖಲೆಗಳ ಪ್ರತಿಯನ್ನು ಒದಗಿಸುವಂತೆ ಕೋರಿರುತ್ತಾರೆ. ಅದರಂತೆ, ಮೇಲೆ ಓದಲಾದ ಕ್ರಮ ಸಂಖ್ಯೆ (10)ರ ದಿನಾಂಕ: 06-10-2017ರ ಪತ್ರದಲ್ಲಿ ಸದರಿ ಆರೋಪಿತರು ಕೋರಿರುವ ದಾಖಲೆಗಳನ್ನು ಒದಗಿಸಿ ಹದಿನೈದು (15) ದಿನಗಳ ಒಳಗಾಗಿ ಹೇಳಿಕೆಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (11)ರ ದಿನಾಂಕ: 28-08-2017ರ ಪತ್ರದಲ್ಲಿ ಜಿಲ್ಲಾ ನೋಂದಣಾಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಮಾನ್ಯ ಉಪ ಲೋಕಾಯುಕ್ತರವರ ವರದಿಗೆ ಕಾರಣ ಕೇಳುವ ನೋಟೀಸ್‌ನ್ನು ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕರು, ಉಪ ನೋಂದಣಿ ಕಛೇರಿ, ವಿಟ್ಲ ಇವರಿಗೆ ಕಳುಹಿಸಿ, ಲಿಖಿತ ಹೇಳಿಕೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ ಸದರಿಯವರಿಗೆ ಹೊರಡಿಸಲಾದ ಕಾರಣ ಕೇಳುವ ನೋಟೀಸಿಗೆ ಸಮಜಾಯಿಷಿ ನೀಡುವ ಕುರಿತು ಸದರಿ ವಿಷಯದಲ್ಲಿ ಆರೋಪಿತ ನೌಕರರು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದ್ದು, ಮಾನ್ಯ ಉಚ್ಚ ನ್ಯಾಯಾಲಯವು ತಡೆಯಾಜ್ಞೆಯನ್ನು ನೀಡಿರುತ್ತದೆ ಮತ್ತು ಮೇಲಿನ ಶಿಕ್ಷೆಯ ವಿರುದ್ಧವಾಗಿ ಮಾನ್ಯ ಉಚ್ಚ ನ್ಯಾಯಾಲಯ ಅಪೀಲು ಪುರಸ್ಕರಿಸಿ ತಡೆಯಾಜ್ಞೆ ನೀಡಿರುವುದಾಗಿ ಸದರಿ ನೌಕರರು ತಿಳಿಸಿರುತ್ತಾರೆ. ಆದರೆ, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಇದುವರೆಗೂ ಮಾನ್ಯ ಉಚ್ಚ ನ್ಯಾಯಾಲಯದಿಂದ ಯಾವುದೇ ಸ್ವೀಕೃತಿಗಳು ಸ್ವೀಕೃತವಾಗಿರುವುದಿಲ್ಲ, ಹಾಗೂ ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ, ಇವರಿಂದ ಯಾವುದೇ ಲಿಖಿತ ಹೇಳಿಕೆಯು ಸ್ವೀಕೃತವಾಗಿರುವುದಿಲ್ಲ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ೨೨೭

ಫಿರ್ಯಾದುದಾರರು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಈವರೆವಿಗೂ ಯಾವುದೇ ಹೇಳಿಕೆ/ ಮನವಿಯನ್ನು ಸಲ್ಲಿಸಿರುವುದು ಕಂಡುಬರುವುದಿಲ್ಲ.

ಆದುದರಿಂದ, ಸದರಿ ಆರೋಪಿತರ ಹೇಳಿಕೆಯು ಏನೂ ಇಲ್ಲವೆಂದು ಭಾವಿಸಿ, ದೂರುದಾರರು ಸಲ್ಲಿಸಿರುವ ದೂರಿನಲ್ಲಿನ ಅಂಶಗಳು, ಸಾಕ್ಷಿದಾರರ ಹೇಳಿಕೆ, ಫಿರ್ಯಾದಿ ಮತ್ತು ಆಪಾದಿತ ನೌಕರರ ನಡುವಣ ಸಂಭಾಷಣೆಯ ವಿವರಗಳು ಮತ್ತು ದಿನಾಂಕ: 20-01-2012 ರಂದು ದಾಳಿ ಮಾಡಿದ ಸಂದರ್ಭ ದೂರುದಾರರಿಗೆ ಲಂಚಕ್ಕಾಗಿ ಬೇಡಿಕೆ ಇಟ್ಟು ಸರ್ಕಾರಿ ಕೆಲಸಕ್ಕಾಗಿ ಅಕ್ರಮ ಹಣ ಪಡೆದಿರುವ ಆರೊಪವು ದೃಡಪಟ್ಟಿರುವುದರಿಂದ, ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಾಮಾವಳಿಗಳು 1966ರ ನಿಯಮ 3(1)(i) ರಿಂದ (iii)ನ್ನು ಉಲ್ಲಂಘಿಸಿ, ದುರ್ನಡತೆ ಎಸಗಿರುವುದು ವಿಚಾರಣಾ ವರದಿಯಿಂದ ಸಾಬೀತಾಗಿರುವುದರಿಂದ, ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸನ್ನು ಅಂಗೀಕರಿಸಿ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 26 ಮುನೋಸೇ(3) 2017, ಬೆಂಗಳೂರು, ದಿನಾಂಕ: 19-02-2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ಡೇವಿಡ್ ಅಂತೋಣಿ ಕ್ರೂಸ್, ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ವಿಟ್ಲ ಹಾಲಿ ದ್ವಿತೀಯ ದರ್ಜೆ ಸಹಾಯಕ, ಜಿಲ್ಲಾ ನೋಂದಣಿ ಕಛೇರಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಇವರು ಸರ್ಕಾರಿ ಕೆಲಸ ನಿರ್ವಹಿಸುವ ಸಲುವಾಗಿ ಲಂಚದ ಬೇಡಿಕೆ ಇಟ್ಟಿರುವುದು ಹಾಗೂ ಸ್ವೀಕರಿಸಿರುವುದು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಾಮಾವಳಿಗಳು 1966ರ ನಿಯಮ 3(1)(i) ರಿಂದ (iii)ನ್ನು ಉಲ್ಲಂಘಿಸಿ, ದುರ್ನಡತೆ ಎಸಗಿರುವುದು ಸಾಬೀತಾಗಿರುವುದರಿಂದ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 8(viii)ರ ಪ್ರಕಾರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸಿ ಆದೇಶಿಸಿದೆ.

PR-117

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25

ಮುರಳೀಧರ ಎಸ್ ತಳ್ಳಿಕೇರಿ

ಪೀಠಾಧಿಕಾರಿ,

ಕಂದಾಯ ಇಲಾಖೆ. (ನೋಂದಣಿ ಮತ್ತು ಮುದ್ರಾಂಕ)

ಕಂದಾಯ ಸಚಿವಾಲಯ

ವಿಷಯ : ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕು, ರಕ್ಷಿ ಗ್ರಾಮದ ಮುಫತ್ ಗಾಯರಾಣ ರಿ.ಸ.ನಂ.165ರಲ್ಲಿ 122-09ಎಕರೆ ಜಮೀನಿನ ಪೈಕಿ 1-00ಎಕರೆ ಜಮೀನನ್ನು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ : 1. ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರ ಸಂಖ್ಯೆ:ಪ್ರಾಆಬೆ:ಭೂಮಿ- 4:ಎಲ್‌ಜಿಎಲ್:ವಿವ:02/2014-15 ದಿನಾಂಕ:19-12-2016.

2. ಜಿಲ್ಲಾಧಿಕಾರಿ,ಬೆಳಗಾವಿ ಜಿಲ್ಲೆ, ಬೆಳಗಾವಿ ಇವರ ಪತ್ರ ಸಂಖ್ಯೆ:ಕಂಶ/ಎಲ್‌ಜಿಎಲ್/ವಿವ/3/12-13, ದಿನಾಂಕ:01-10-2016.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ:(1)ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು ಬೆಳಗಾವಿ ವಿಭಾಗ ಇವರು, ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕು, ರಕ್ಷಿ ಗ್ರಾಮದ ರಿ.ಸ.ನಂ.165ರಲ್ಲಿನ 122-09 ಎಕರೆ ಜಮೀನಿನ ಪೈಕಿ 1-00 ಎಕರೆ ಜಿಲ್ಲಾಧಿಕಾರಿಗಳು, ಬೆಳಗಾವಿ ಜಿಲ್ಲೆ ಇವರ ಅಭಿಪ್ರಾಯದಂತೆ ಸದರಿ ಪ್ರಕರಣದಲ್ಲಿ ಗಾಯರಾಣ ಜಮೀನು ಕಡಿಮೆ ಬಿಳುತ್ತದೆಯಾದರೂ, ಗ್ರಾಮದಲ್ಲಿ ರೈತರು ನೀರಾವರಿ ಹಾಗೂ ಮಳೆಯಾಶ್ರಿತ ಬೆಳೆಗಳನ್ನು ಬೆಳೆಯುವ ಮೇವಿನಿಂದ ತಮ್ಮ ದನಕರುಗಳಿಗೆ ಮೇವಿನ ಪೂರೈಕೆಯನ್ನು ಮಾಡಿಕೊಳ್ಳುತ್ತಿರುವುದರಿಂದ, ಹಾಗೂ ಇದೊಂದು ಸಾರ್ವಜನಿಕ ಉದ್ದೇಶವನ್ನು ಒಳಗೊಂಡಿರುವುದರಿಂದ, ಪ್ರಸ್ತಾಪಿತ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರನ್ವಯ ಗಾಯರಾಣ ಶಿರ್ಷಿಕ್ಕೆಯಿಂದ ತಗ್ಗಿಸಿ, ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡಕ್ಕಾಗಿ ಮಂಜೂರು ಮಾಡಬಹುದೆಂದು ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ(2)ರ ಪತ್ರದಲ್ಲಿ ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ, ಬೆಳಗಾವಿ ಇವರು ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕು, ರಕ್ಷಿ ಗ್ರಾಮದ ರಿ.ಸ.ನಂ.165ರಲ್ಲಿ ಒಟ್ಟು 122-09 ಎಕರೆ ಜಮೀನು ಮುಫತ್ ಗಾಯರಾಣ ಜಮೀನೆಂದು ದಾಖಲಾಗಿದ್ದು, ಆಕಾರ್ ಬಂದ್‌ನಲ್ಲಿ 'ಬಿ ಖರಾಬು' ಜಮೀನೆಂದು ವರ್ಗೀಕೃತಗೊಂಡಿರುತ್ತದೆ. ಸದರಿ ಜಮೀನಿನ ಪೈಕಿ ಈಗಾಗಲೇ ವಿವಿಧ ಉದ್ದೇಶಗಳಿಗಾಗಿ ವಿವಿಧ ಇಲಾಖೆಗಳಿಗೆ 19-00 ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಕೊಟಬಾಗಿ ಗ್ರಾಮ ಪಂಚಾಯತಿಯು ದಿನಾಂಕ:24.06.2011ರಂದು ನಡೆದ ಸಭೆಯಲ್ಲಿ ಸದರಿ ಜಮೀನನ್ನು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡಕ್ಕಾಗಿ ಮಂಜೂರು ಮಾಡಲು ಸರ್ವಾನುಮತದಿಂದ ಒಪ್ಪಿಗೆಯನ್ನು ನೀಡಿರುವುದರಿಂದ, ಪ್ರಸ್ತಾಪಿತ ಜಮೀನನ್ನು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ಮಂಜೂರು ಮಾಡುವ ಕುರಿತು ವರದಿ ಸಲ್ಲಿಸಿರುತ್ತಾರೆ.

ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಹಾಗೂ ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ ಇವರುಗಳ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 3 ಎಲ್‌ಜಿಎಲ್ 2017, ಬೆಂಗಳೂರು, ದಿನಾಂಕ:09-02-2018,

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆ, ಹುಕ್ಕೇರಿ ತಾಲ್ಲೂಕು, ರಕ್ಷಿ ಗ್ರಾಮದ ರಿ.ಸ.ನಂ.165ರಲ್ಲಿನ ಒಟ್ಟು 122-09 ಎಕರೆ ಗಾಯರಾಣ ಜಮೀನಿನ ಪೈಕಿ 1-00 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರಂತೆ ಗೋಮಾಳ೨೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೧ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(3)(i) ರನ್ವಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡಕ್ಕಾಗಿ ಸಮಾಜ ಕಲ್ಯಾಣ ಇಲಾಖೆಗೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಉಚಿತವಾಗಿ ಮಂಜೂರು ಮಾಡಿ ಆದೇಶಿಸಿದೆ.

ಷರತ್ತುಗಳು :

1. ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

2. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ ಹಾಗೂ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

3. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.

4. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

5. ಜಿಲ್ಲಾಧಿಕಾರಿಯವರು ಮಂಜೂರಾದ ಜಮೀನನ್ನು ಸಮಾಜ ಕಲ್ಯಾಣ ಇಲಾಖೆಗೆೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR-118

SC-25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎಂ.ಇ ಚನ್ನಬಸವರಾಜ ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ. (ಭೂಮಂಜೂರಾತಿ-3)

ಕಂದಾಯ ಸಚಿವಾಲಯ

ವಿಷಯ : ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಹೋಬಳಿ, ಚಿನ್ನಿಗ ಗ್ರಾಮದ ಸ.ನಂ. 18 ರಲ್ಲಿ 13 ಗುಂಟೆ ಜಮೀನನ್ನು ಅಧ್ಯಕ್ಷರು ವರ್ತಕರ ಸಂಘ, ಜನ್ನಾಪುರ ರವರಿಗೆ ಮಂಜೂರು ಮಾಡುವ ಬಗ್ಗೆ. ಓದಲಾಗಿದೆ : 1. ಕಾರ್ಯದರ್ಶಿ, ವರ್ತಕರ ಸಂಘ (ರಿ), ಜನ್ನಾಪುರ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರ ಪತ್ರ ದಿನಾಂಕ: 24.02.2010.

2. ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ (2)

ಸಿಆರ್.07/10-11, ದಿನಾಂಕ: 04.01.2011.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ ಕಾರ್ಯದರ್ಶಿ, ವರ್ತಕರ ಸಂಘ (ರಿ), ಜನ್ನಾಪುರ, ಮೂಡಿಗೆರೆ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರು ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಹೋಬಳಿ, ಚಿನ್ನಿಗ ಗ್ರಾಮದ ಸ.ನಂ. 18 ರಲ್ಲಿ 13 ಗುಂಟೆ ಜಮೀನನ್ನು ಅಧ್ಯಕ್ಷರು ವರ್ತಕರ ಸಂಘ, ಜನ್ನಾಪುರ ರವರಿಗೆ ಮಂಜೂರು ಮಾಡುವ ಬಗ್ಗೆ ಸಂಘದ ಅಧ್ಯಕ್ಷರು ಮನವಿ ಸಲ್ಲಿಸಿದ್ದು ಚಿನ್ನಿಗ ಗ್ರಾಮದ ಸ.ನಂ. 18 ರಲ್ಲಿ 3 ಗುಂಟೆ ಜಮೀನು ಈ ಹಿಂದೆಯೇ ಜಿಲ್ಲಾಧಿಕಾರಿಗಳ ಆದೇಶ ಸಂಖ್ಯೆ: ಎಂ4. ಎಲ್ಎನ್‌ಡಿ.ಸಿಆರ್: 227/03-04 ದಿನಾಂಕ 12-08-2004 ರಂತೆ ಮಂಜೂರು ಮಾಡಿದ್ದು, ಆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದ್ದು, ಸಮುದಾಯಭವನದ ಪಕ್ಕದಲ್ಲಿರುವ ಪ್ರಸ್ತಾಪಿತ 13 ಗುಂಟೆ ಜಮೀನಿನಲ್ಲಿ ವರ್ತಕರ ಸಂಘದ ವತಿಯಿಂದ ಸಮುದಾಯ ಭವನದ ಹಾಲ್, ಶೌಚಾಲಯ, ಅಡುಗೆಮನೆ ಕಟ್ಟಡ ನಿರ್ಮಿಸಿಕೊಂಡು ಗ್ರಾಮ ಪಂಚಾಯತಿಗೆ ಕಂದಾಯ ಪಾವತಿ ಮಾಡುತ್ತಿದ್ದು ಪ್ರಸ್ತುತ ಸದರಿ ಜಾಗವನ್ನು ವರ್ತಕರ ಸಂಘಕ್ಕೆ ಮಂಜೂರು ಮಾಡುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರ ದಿನಾಂಕ 04-01-2011ರ ಪತ್ರದಲ್ಲಿ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಹೋಬಳಿ, ಚಿನ್ನಿಗ ಗ್ರಾಮದ ಸ.ನಂ. 18 ರಲ್ಲಿ 13 ಗುಂಟೆ ಜಮೀನನ್ನು ಅಧ್ಯಕ್ಷರು ವರ್ತಕರ ಸಂಘ, ಜನ್ನಾಪುರ ರವರಿಗೆ ಮಂಜೂರು ಮಾಡುವ ಬಗ್ಗೆ ಸಂಘದ ಅಧ್ಯಕ್ಷರು ಮನವಿ ಸಲ್ಲಿಸಿದ್ದು. ಚಿನ್ನಿಗ ಗ್ರಾಮದ ಸ.ನಂ. 18 ರಲ್ಲಿ 3 ಗುಂಟೆ ಜಮೀನು ಈ ಹಿಂದೆಯೇ ಜಿಲ್ಲಾಧಿಕಾರಿಗಳ ಆದೇಶ ಸಂ: ಎಂ4. ಎಲ್ಎನ್‌ಡಿ.ಸಿಆರ್:227/03-04 ದಿನಾಂಕ 12.08.2004 ರಂತೆ ಮಂಜೂರು ಮಾಡಿದ್ದು, ಆ ಜಾಗದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದ್ದು, ಸಮುದಾಯಭವನದ ಪಕ್ಕದಲ್ಲಿರುವ ಪ್ರಸ್ತಾಪಿತ 13 ಗುಂಟೆ ಜಮೀನಿನಲ್ಲಿ ವರ್ತಕರ ಸಂಘದ ವತಿಯಿಂದ ಈಗಾಗಲೇ ಅನಧಿಕೃತವಾಗಿ ಸಮುದಾಯಭವನದ ಹಾಲ್, ಶೌಚಾಲಯ, ಅಡುಗೆಮನೆ ಕಟ್ಟಡ ನಿರ್ಮಿಸಿಕೊಂಡು ಗ್ರಾಮ ಪಂಚಾಯತಿಗೆ ಕಂದಾಯ ಪಾವತಿ ಮಾಡುತ್ತಿದ್ದಾರೆ. ಈ ಜಮೀನಿನ ಮೇಲೆ ಇದುವರೆವಿಗೂ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದು ಕಂಡುಬಂದಿರುವುದಿಲ್ಲ. ಹಾಗೂ ಯಾವುದೇ ದಟ್ಟವಾದ ಮರಗಿಡಗಳು ಇರುವುದಿಲ್ಲವೆಂದು ಹಾಗೂ ಸದರಿ ಸಂಸ್ಥೆಯವರು ಸಾರ್ವಜನಿಕ ಉಪಯೋಗಕ್ಕೆ ಸಮುದಾಯ ಭವನ ಹಾಗೂ ಇತರೆ ಪೀಠೋಪಕರಣಗಳನ್ನು ಉಚಿತವಾಗಿ ನೀಡಲು ಬದ್ಧರಾಗಿರುವುದರಿಂದ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಜಮೀನು ಮಂಜೂರು ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆಂದು ಮತ್ತು ವರ್ತಕರ ಸಂಘ (ರಿ) ಜನ್ನಾಪುರ, ಮೂಡಿಗೆರೆ ತಾಲ್ಲೂಕು ಸಂಘವು ದಿನಾಂಕ : 22-11-1995 ರಲ್ಲಿ ನೋಂದಣಿ ಸಂಖ್ಯೆ 60/95-96 ರಂತೆ ನೊಂದಣಿಯಾದ ಸಂಸ್ಥೆಯಾಗಿರುತ್ತದೆ. ಸದರಿ ಜಾಗವನ್ನು ವರ್ತಕರ ಸಂಘ ಸಮುದಾಯ ಭವನಕ್ಕೆ ಕೊಡಲು ಪಂಚಾಯತಿ ಅಭ್ಯಂತರ ಇರುವುದಿಲ್ಲವೆಂದು ದೃಡೀಕರಣ ಪತ್ರ ನೀಡಿರುತ್ತಾರೆ ಎಂದು ವರದಿ ಮಾಡುತ್ತಾ,ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ೨೨೯ ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಹೋಬಳಿ, ಚಿನ್ನಿಗ ಗ್ರಾಮದ ಸ.ನಂ. 18 ರಲ್ಲಿ 13 ಗುಂಟೆ ಜಮೀನನ್ನು ವರ್ತಕರ ಸಂಘ(ರಿ) ಜನ್ನಾಪುರ ಮೂಡಿಗೆರೆ ಇವರಿಗೆ ವ್ಯವಸಾಯೇತರ ಉದ್ದೇಶಕ್ಕೆ ಮಂಜೂರು ಮಾಡುವಂತೆ ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 4 ಎಲ್‌ಜಿಯು 2011, ಬೆಂಗಳೂರು, ದಿನಾಂಕ : 26.02.2018.

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಹೋಬಳಿ, ಚಿನ್ನಿಗ ಗ್ರಾಮದ ಸ.ನಂ. 18 ರಲ್ಲಿ 13 ಗುಂಟೆ ಜಮೀನಿನಲ್ಲಿ ವರ್ತಕರ ಸಂಘ (ರಿ) ಜನ್ನಾಪುರ, ಮೂಡಿಗೆರೆ ತಾಲೂಕು ಇವರು ವರ್ತಕರ ಸಮುದಾಯ ಭವನದ ಅಡುಗೆ ಮನೆ ಕಟ್ಟಡ, ಊಟದ ಹಾಲ್ ಹಾಗೂ ಶೌಚಾಲಯವನ್ನು ಈಗಾಗಲೇ ನಿರ್ಮಿಸಿರುವುದರಿಂದ ಸದರಿ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4) ರನ್ವಯ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮ, 1969ರ ನಿಯಮ 27 ರನ್ವಯ ಪ್ರದತ್ತವಾದ ಅಧಿಕಾರದಂತೆ ಪ್ರಸಕ್ತ ಮಾರುಕಟ್ಟೆ ಬೆಲೆ, ಇನ್ನಿತರೆ ಶುಲ್ಕ ಹಾಗೂ ಕರ್ನಾಟಕ ಭೂ ಕಂದಾಯ ಕಾಯಿದೆ ಕಲಂ 94(1) ರಂತೆ 13 ಗುಂಟೆ ಜಮೀನಿಗೆ 12 ವರ್ಷಗಳಿಗೆ ದಂಡ ಹಾಗೂ ದ್ವಿಗುಣ ಭೂ ಕಂದಾಯ ವಿಧಿಸಿ, ಅಧ್ಯಕ್ಷರು, ವರ್ತಕರ ಸಂಘ (ರಿ) ಜನ್ನಾಪುರ, ಮೂಡಿಗೆರೆ ಇವರಿಗೆ ವ್ಯವಸಾಯೇತರ ಉದ್ದೇಶಕ್ಕೆ (ವರ್ತಕರ ಸಮುದಾಯ ಭವನದ ಅಡುಗೆ ಮನೆ ಕಟ್ಟಡ, ಊಟದ ಹಾಲ್ ಹಾಗೂ ಶೌಚಾಲಯಕ್ಕೆ) ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿದೆ.

ಷರತ್ತುಗಳು:- 1. ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿಯೇ ಉಪಯೋಗಿಸತಕ್ಕದ್ದು. 2. ಮಂಜೂರಾತಿ ಆದೇಶದಲ್ಲಿ ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. 3. ಮಂಜೂರಾದ ಜಮೀನನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 4. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

5. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡತಕ್ಕದ್ದಲ್ಲ.

6. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.

7. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

8. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶವನ್ನು ನಿಯಮಾನುಸಾರ ರದ್ದುಗೊಳಿಸಲಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

9. ಜಿಲ್ಲಾಧಿಕಾರಿಗಳು, ಮಂಜೂರಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR-119

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-20

ಉದಯ ಆರ್.ನಾಯಕ್

ಪೀಠಾಧಿಕಾರಿ, ಕಂದಾಯ ಇಲಾಖೆ. (ಭೂ ಮಂಜೂರಾತಿ-2).

ಕಂದಾಯ ಸಚಿವಾಲಯ

ವಿಷಯ :- ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ತಲಕಾಡು ಹೋಬಳಿಯ ಹೊಳೆಸಾಲು ಗ್ರಾಮದ ಸ.ನಂ. 807 ಮತ್ತು 808ರ ಪಕ್ಕದಲ್ಲಿರುವ 3-00 ಎಕರೆ ಕಾವೇರಿ ನದಿ ಪಾತ್ರದ ಪ್ರದೇಶವನ್ನು 6 ಮೆಗಾವ್ಯಾಟ್ ಕಿರು ವಿದ್ಯುತ್ ಯೋಜನೆಗಾಗಿ ಗುತ್ತಿಗೆ ಆಧಾರದ ಮೇಲೆ ನೀಡುವ ಬಗ್ಗೆ.

ಓದಲಾಗಿದೆ :- 1) ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ, ಮೈಸೂರು ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ(1)ಸಿಆರ್:

438/2013-14, ದಿನಾಂಕ 18-10-2014.

2) ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ, ಮೈಸೂರು ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ (1)ಸಿಆರ್:

438/2016-17, ದಿನಾಂಕ 04-05-2017.

3) ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 113 ಎಲ್‌ಜಿಎಂ 2014, ದಿನಾಂಕ:17-08-2017.

ಪ್ರಸ್ತಾವನೆ :-

ಮೇಲೆ ಓದಲಾದ (1)ರ ಪತ್ರದಲ್ಲಿ ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು, ಹೊಳೆಸಾಲು ಗ್ರಾಮದ ಸ.ನಂ. 807 ಮತ್ತು 808ರ ಪಕ್ಕದಲ್ಲಿರುವ 3- 00 ಎಕರೆ ಕಾವೇರಿ ನದಿ ಪಾತ್ರದ ಪ್ರದೇಶವನ್ನು ಮೆ: ಕಾರ್ತಿಕ್ ಎನರ್ಜಿ ರಿಸೋರ್ಸಸ್ ಪ್ರೈ.ಲಿ. ಇವರಿಗೆ 6 ಮೆಗಾವ್ಯಾಟ್ ಕಿರುವಿದ್ಯುತ್ ಯೋಜನೆಗಾಗಿ ಮಂಜೂರು ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿದ್ದು, ಉದ್ದೇಶಿತ ಜಮೀನನ್ನು ಈ ಹಿಂದೆ ಸರ್ಕಾರಿ ಆದೇಶ ಸಂಖ್ಯೆ ಕಂಇ 53 ಎಲ್‌ಜಿಎಂ 2000, ದಿನಾಂಕ 27-06-2000 ರನ್ವಯ ಬಾಲಾಜಿ ಪವರ್ ಕಾರ್ಪೊರೇಷನ್ ಬೆಂಗಳೂರು ಇವರಿಗೆ ವಿದ್ಯುತ್ ಸ್ಥಾವರ ಸ್ಥಾಪಿಸಲು 30 ವರ್ಷಗಳ ಅವಧಿಗೆ೨೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೧ ಗುತ್ತಿಗೆಗೆ ನೀಡಲಾಗಿತ್ತು. ಆದರೆ ಮೆ: ಬಾಲಾಜಿ ಹೈಡಲ್ ಪವರ್ ಪ್ರೈ. ಇವರು ಸರ್ಕಾರದ ಆದೇಶದಂತೆ ಪ್ರಸ್ತಾಪಿತ ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಾಧಿಸದೇ ಇರುವುದರಿಂದ ಹಾಗೂ ಕಾಲಾವಕಾಶವನ್ನು ವಿಸ್ತರಣೆ ಮಾಡಿಕೊಳ್ಳದೇ ಇರುವುದರಿಂದ ಇಂಧನ ಇಲಾಖೆಯು ತನ್ನ ಆದೇಶ ಸಂಖ್ಯೆ: ಇಎನ್ 163 ಎನ್‌ಸಿಇ 2010, ದಿನಾಂಕ 19-06-2010 ರಂತೆ ನೀಡಿರುವ ಯೋಜನೆಯ ಹಂಚಿಕೆ ಆದೇಶವನ್ನು ರದ್ದುಪಡಿಸಿರುತ್ತದೆ. ಈಗ ಸದರಿ ಜಮೀನನ್ನು ಮೆ: ಕಾರ್ತಿಕ್ ಎನರ್ಜಿ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ರವರಿಗೆ ಟಿ.ನರಸೀಪುರ ತಾಲ್ಲೂಕಿನ ಬಣವೆ ಗ್ರಾಮದ ಸಮೀಪದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ 6 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆಯನ್ನು ಷರತ್ತಿಗೆ ಒಳಪಟ್ಟು ಇಂಧನ ಇಲಾಖೆಯ ಆದೇಶ ಸಂಖ್ಯೆ ಇಎನ್ 317 ಎನ್‌ಸಿಇ 2012, ದಿನಾಂಕ 01-07-2013 ರಲ್ಲಿ ಅನುಮೋದನೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ಮೆ: ಕಾರ್ತಿಕ್ ಎನರ್ಜಿ ರಿಸೋರ್ಸಸ್ ಪ್ರೈ.ಲಿ. ಇವರಿಗೆ ಮೇಲ್ಕಂಡ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡಲು ಕೋರಿರುತ್ತಾರೆ.

ಮೆ: ಬಾಲಾಜಿ ಹೈಡಲ್ ಪವರ್ ಪ್ರೈ. ಇವರು ಸರ್ಕಾರದ ಆದೇಶದಂತೆ ಪ್ರಸ್ತಾಪಿತ ಯೋಜನೆ ಅನುಷ್ಠಾನದ ನಿಟ್ಟಿನಲ್ಲಿ ಯಾವುದೇ ಪ್ರಗತಿ ಸಾಧಿಸದೇ ಇರುವುದರಿಂದ ಹಾಗೂ ಕಾಲಾವಕಾಶವನ್ನು ವಿಸ್ತರಣೆ ಮಾಡಿಕೊಳ್ಳದೇ ಇರುವುದರಿಂದ ಇಂಧನ ಇಲಾಖೆಯು ತನ್ನ ಆದೇಶ ಸಂಖ್ಯೆ: ಇಎನ್ 163 ಎನ್‌ಸಿಇ 2010, ದಿನಾಂಕ 19-06-2010 ರಂತೆ ನೀಡಿರುವ ಯೋಜನೆಯ ಹಂಚಿಕೆ ಆದೇಶವನ್ನು ರದ್ದುಪಡಿಸಿರುತ್ತದೆ. ಸದರಿ ಮಂಜೂರಾತಿಯನ್ನು ಇಂಧನ ಇಲಾಖೆಯು ರದ್ದುಪಡಿಸಿರುವುದರಿಂದ ಮತ್ತು ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ ಇವರು ಮೇಲೆ ಓದಲಾದ (2)ರ ಪತ್ರದಲ್ಲಿ ಕೋರಿರುವಂತೆ ಕಂದಾಯ ಇಲಾಖೆಯಿಂದ ಯೋಜನೆಯನ್ನು ಅನುಷ್ಠಾನಗೊಳಿಸಲು ಗುತ್ತಿಗೆ ಆಧಾರದ ಮೇಲೆ ಜಮೀನು ಮಂಜೂರು ಮಾಡಿದ್ದ ಸರ್ಕಾರದ ಆದೇಶ ಸಂ: ಕಂಇ 53 ಎಲ್‌ಜಿಎಂ 2000, ದಿನಾಂಕ 27-06-2000ರ ಆದೇಶವನ್ನು ಮೇಲೆ ಓದಲಾದ (3)ರ ಆದೇಶದಲ್ಲಿ ರದ್ದುಪಡಿಸಲಾಗಿದೆ.

ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 113 ಎಲ್‌ಜಿಎಂ 2014, ಬೆಂಗಳೂರು, ದಿನಾಂಕ : 06.02.2018

ಮೈಸೂರು ಜಿಲ್ಲೆ, ಟಿ.ನರಸೀಪುರ ತಾಲ್ಲೂಕು, ಹೊಳೆಸಾಲು ಗ್ರಾಮದ ಸ.ನಂ. 807 ಮತ್ತು 808ರ ಪಕ್ಕದಲ್ಲಿರುವ 3-00 ಎಕರೆ ಕಾವೇರಿ ನದಿ ಪಾತ್ರದ ಪ್ರದೇಶವನ್ನು 6 ಮೆಗಾವ್ಯಾಟ್ ಕಿರುವಿದ್ಯುತ್ ಯೋಜನೆಗಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 19 ಮತ್ತು 22ಎ(1)(i)(1) ರನ್ವಯ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇಕಡಾ 10 ರಷ್ಟು ವಾರ್ಷಿಕ ಗುತ್ತಿಗೆ ದರವನ್ನು ನಿಗದಿಪಡಿಸಿ, ಗುತ್ತಿಗೆ ದರವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಶೇಕಡಾ 10 ರಷ್ಟು ಹೆಚ್ಚಿಸುವ ಷರತ್ತಿಗೊಳಪಟ್ಟು ಮೆ: ಕಾರ್ತಿಕ್ ಎನರ್ಜಿ ರಿಸೋರ್ಸಸ್ ಪ್ರೈ.ಲಿ. ಬೆಂಗಳೂರು ಇವರಿಗೆ 30 ವರ್ಷಗಳ ಅವಧಿಗೆ ಕಾವೇರಿ ನೀರಾವರಿ ನಿಗಮ ನಿಯಮಿತದವರು ವಿಧಿಸಿರುವ ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿದೆ.

1. Scouring sluice, ನ ಬಲಭಾಗದ slide wall ನಿರ್ಮಿಸುವಾಗ ಹಾಲಿ ಇರುವ ಅಣೆಕಟ್ಟೆಯ ಭದ್ರತೆಗೆ ಯಾವುದೇ ಧಕ್ಕೆಯಾಗದಂತೆ ನಿರ್ಮಾಣ ಮಾಡತಕ್ಕದ್ದು.

2. ಖಾರೀಫ್ ಹಾಗೂ ರಬಿ ಋುತುವಿನಲ್ಲಿ ಡಿ.ಜೆ. ಕೆನಾಲ್‌ನ ಅಚ್ಚುಕಟ್ಟಿಗೆ ನೀರು ಸರಬರಾಜು ತೊಂದರೆಯಾಗದಂತೆ ನೀರಿನ ಮಟ್ಟವನ್ನು ಕಾಪಾಡತಕ್ಕದ್ದು.

3. ವಿದ್ಯುತ್ ಉತ್ಪಾದನಾ ಘಟಕ ನಿರ್ಮಾಣ ಮಾಡುವಾಗ ಹಾಲಿ ಇರುವ ಅಣೆಕಟ್ಟೆಗೆ ಧಕ್ಕೆಯಾಗದಂತೆ ಮುಂಜಾಗೃತಾ ಕ್ರಮ ವಹಿಸತಕ್ಕದ್ದು. 4. ಬೆಂಗಳೂರು ಹಾಗೂ ಇತರೆ ನಗರಗಳಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸತಕ್ಕದ್ದು.

PR.104

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಉದಯ ಆರ್. ನಾಯಕ್

SC.20

ಪೀಠಾಧಿಕಾರಿ,

ಕಂದಾಯ ಇಲಾಖೆ. (ಭೂ.ಮಂ-2).

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಆಕುಕ 89 ಐಎಂಎಂ 2017, ಬೆಂಗಳೂರು, ದಿನಾಂಕ: 12.01.2018.

ಔಷಧ ನಿಯಂತ್ರಣ ಇಲಾಖೆಯಲ್ಲಿ ಖಾಲಿ ಇರುವ ಗ್ರಂಥಪಾಲಕರ 01 ಹುದ್ದೆಯನ್ನು ಭರ್ತಿ ಮಾಡಲು ಅನುಮತಿ ನೀಡಿರುವ ಸರ್ಕಾರದ ಆದೇಶ ಸಂಖ್ಯೆ: ಆಕುಕ 83 ಐಎಂಎಂ 2017, ದಿನಾಂಕ: 3-01-2018ರ ಆದೇಶದಲ್ಲಿನ ಆದೇಶ ಸಂಖ್ಯೆಯನ್ನು 83ರ ಬದಲಾಗಿ 89 ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

PR.105

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC.25

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

(ಭಾರತೀಯ ವೈದ್ಯ ಪದ್ಧತಿ)

ಕಂದಾಯ ಸಚಿವಾಲಯ

ವಿಷಯ :- ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು, ಯಡ್ತರೆ ಗ್ರಾಮದ ಸ.ನಂ.264/1 ರಲ್ಲಿ 8.32 ಎಕರೆ ಜಮೀನನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ ಮತ್ತು ಬಸ್ ಘಟಕ ನಿರ್ಮಾಣಕ್ಕಾಗಿ ಮಂಜೂರು ಮಾಡುವ ಬಗ್ಗೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ೨೩೧

ಓದಲಾಗಿದೆ :- (1) ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರ ಪತ್ರ ಸಂಖ್ಯೆ:

ಎಲ್ಎನ್‌ಡಿ(1)ಸಾರ್. 24/2017-18, ದಿನಾಂಕ:16.10.2017.

(2) ವಿಭಾಗೀಯ ನಿಯಂತ್ರಣಾಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು

ವಿಭಾಗ, ಮಂಗಳೂರು ಇವರ ಪತ್ರ ಸಂಖ್ಯೆ:ಕರಾಸಾ/ಮಂವಿ/ ಸಕಾನಿಅ/496/16-17, ದಿನಾಂಕ 28.02.2017.

(3) ಅಧ್ಯಕ್ಷರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಇವರ ಪತ್ರ ದಿನಾಂಕ:04.12.2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರು ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು, ಯಡ್ತರೆ ಗ್ರಾಮದ ಸ.ನಂ.264/1 ರಲ್ಲಿ ಒಟ್ಟು 9.82 ಎಕರೆ ಜಮೀನಿದ್ದು, ಈ ಪೈಕಿ ಪರಿಶಿಷ್ಟ ಜಾತಿ ಕಾಲೋನಿಗೆ ಹೋಗುವ ರಸ್ತೆ ಮತ್ತು ನೀರು ಹರಿದು ಹೋಗುವ ತೋಡಿಗಾಗಿ 1.50 ಎಕರೆ ಜಮೀನನ್ನು ಹೊರತುಪಡಿಸಿ, 8.32 ಎಕರೆ ಜಮೀನು ಲಭ್ಯವಿರುತ್ತದೆ; ಈ ಜಮೀನು ಕುಮ್ಕಿ, ಗೋಮಾಳ, ಪೊರಂಬೋಕು ಅರಣ್ಯ ವ್ಯಾಪ್ತಿಯಲ್ಲಿರುವುದಿಲ್ಲ; ಸದರಿ ಜಮೀನನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮಂಜೂರು ಮಾಡಲು ಸ್ಥಳೀಯ ಗ್ರಾಮ ಪಂಚಾಯತ್ ಒಪ್ಪಿಗೆ ನೀಡಿರುತ್ತದೆ ಮತ್ತು ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇರುವುದಿಲ್ಲ; ಈ ಜಮೀನಿನ ಸುತ್ತಮುತ್ತಲಿನ ಜಮೀನು ಕದೀಂ ಭೂಮಿಯಾಗಿದ್ದರೂ ಯಾವುದೇ ಕೃಷಿ ಮಾಡಿರುವುದಿಲ್ಲ; ಪ್ರಸ್ತಾವಿತ ಜಮೀನಿನ ಮಂಜೂರಾತಿ ಕೋರಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94ಎ, 94ಬಿ ರಡಿ ಅರ್ಜಿಗಳು ಸ್ವೀಕೃತವಾಗಿರುವುದಿಲ್ಲ ಮತ್ತು ಯಾವುದೇ ಒತ್ತುವರಿ ಆಗಿರುವುದಿಲ್ಲ; ಸದರಿ ಜಮೀನಿನ ಕುರಿತು ನ್ಯಾಯಾಲಯಗಳಲ್ಲಿ ಯಾವುದೇ ಪ್ರಕರಣವು ಬಾಕಿ ಇರುವುದಿಲ್ಲ; ಸದರಿ ಜಮೀನು ಭೂ ಸ್ವಾಧೀನ ಪ್ರಕ್ರಿಯೆಗೆ ಒಳಪಟ್ಟಿರುವುದಿಲ್ಲ; ಸದರಿ ಜಮೀನಿನಲ್ಲಿ ದಟ್ಟವಾದ ಮರಗಿಡಗಳು ಇರುವುದಿಲ್ಲ; ಈ ಜಮೀನು ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದು, ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣ ಮತ್ತು ಬಸ್ ಡಿಪೋ ನಿರ್ಮಾಣಕ್ಕೆ ಯೋಗ್ಯವಾದ ಜಮೀನಾಗಿರುತ್ತದೆ; ಸದರಿ ಜಮೀನಿನ ಮಾರ್ಗಸೂಚಿ ದರ ಸೆಂಟ್ ಒಂದಕ್ಕೆ `.2,50,000/- ಗಳಾಗಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಸರ್ಕಾರಿ ಸೌಮ್ಯದ ಸಂಸ್ಥೆಯಾಗಿರುವುದರಿಂದ ಮಾರುಕಟ್ಟೆ ದರದ ಶೇಕಡ 50 ರಷ್ಟು ವಿಧಿಸಿ ಮಂಜೂರು ಮಾಡಲು ಅವಕಾಶವಿರುತ್ತದೆ. ಆದರೆ, ವಿಭಾಗೀಯ ನಿಯಂತ್ರಣಾಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ವಿಭಾಗ, ಮಂಗಳೂರು ಇವರು ಸದರಿ ಜಮೀನನ್ನು ಉಚಿತವಾಗಿ ಮಂಜೂರು ಮಾಡುವಂತೆ ಕೋರಿರುತ್ತಾರೆ ಎಂದು ತಿಳಿಸುತ್ತಾ ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ ಇವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಪ್ರಾದೇಶಿಕ ಆಯುಕ್ತರು ಸರ್ಕಾರದ ಅವಗಾಹನೆಗೆ ಹಾಗೂ ಮುಂದಿನ ಆದೇಶಕ್ಕಾಗಿ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪತ್ರದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಗಳೂರು ರವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಸಂಸ್ಥೆಯಾಗಿದ್ದು, ಕುಂದಾಪುರ ತಾಲ್ಲೂಕಿನ ಬೈಂದೂರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ನಿಲ್ದಾಣ ಹಾಗೂ ಘಟಕ ಇಲ್ಲದಿರುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಸ್ತಾಪಿತ ಜಮೀನನ್ನು ನಿಗಮಕ್ಕೆ ಉಚಿತವಾಗಿ ಮಂಜೂರು ಮಾಡುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಪತ್ರದಲ್ಲಿ ಅಧ್ಯಕ್ಷರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ ಇವರು ಬೈಂದೂರು ಹೊಸದಾಗಿ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು, ಅಲ್ಲಿನ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವತಿಯಿಂದ ಸುಸಜ್ಜಿತ ಬಸ್ ನಿಲ್ದಾಣ ಮತ್ತು ಬಸ್ ಘಟಕ ನಿರ್ಮಿಸುವ ಉದ್ದೇಶಕ್ಕಾಗಿ ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು, ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಡ್ತರೆ ಗ್ರಾಮದ ಸ.ನಂ.264/1 ರಲ್ಲಿ 9.00 ಎಕರೆ ಜಮೀನನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಉಚಿತವಾಗಿ ಮಂಜೂರು ಮಾಡುವಂತೆ ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 61 ಎಲ್‌ಜಿಎ 2017, ಬೆಂಗಳೂರು, ದಿನಾಂಕ : 01.02.2018

ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕು, ಯಡ್ತರೆ ಗ್ರಾಮದ ಸ.ನಂ.264/1 ರಲ್ಲಿ 8.32 ಎಕರೆ ಜಮೀನನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಬಸ್ ನಿಲ್ದಾಣ ಮತ್ತು ಘಟಕ ಸ್ಥಾಪನೆಗಾಗಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969 ನಿಯಮ 27 ರನ್ವಯ ವಿಶೇಷ ಪ್ರಕರಣವೆಂದು ಪರಿಗಣಿಸಿ, ನಿಯಮ 20(1)(ಸಿ) ಅನ್ನು ಸಡಿಲಿಸಿ ಉಚಿತವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿದೆ.

ಷರತ್ತುಗಳು :-

1. ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

2. ಮಂಜೂರಾದ ಜಮೀನನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 3. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

4. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡತಕ್ಕದ್ದಲ್ಲ.

5. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.

6. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

೨೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೧

7. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶವನ್ನು ನಿಯಮಾನುಸಾರ ರದ್ದುಗೊಳಿಸಲಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

8. ಜಿಲ್ಲಾಧಿಕಾರಿಗಳು, ಮಂಜೂರಾದ ಜಮೀನನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR.106

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಉದಯ ಆರ್.ನಾಯಕ್

SC.20

ಪೀಠಾಧಿಕಾರಿ,

ಕಂದಾಯ ಇಲಾಖೆ. (ಭೂ ಮಂಜೂರಾತಿ-2).

ವಸತಿ ಸಚಿವಾಲಯ

ವಿಷಯ :- ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಾಗಿ ಪಾರದರ್ಶಕತೆ ಅಧಿನಿಯಮ 1999 ರನ್ವಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಪ್ರಾಧಿಕಾರಗಳನ್ನು ನೇಮಿಸುವ ಬಗ್ಗೆ.

ಓದಲಾಗಿದೆ :- ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು ಇವರ ಪತ್ರ ಸಂಖ್ಯೆ:

ಕಕೊಅಮ/ಆಯುಕ್ತರು.ತಾಂ.ನಿ-2/ಕೆ.ಟಿ.ಪಿ.ಪಿ/2016-17, ದಿನಾಂಕ: 03.10.2017.

ಪ್ರಸ್ತಾವನೆ :-

ಮೇಲೆ ಓದಲಾದ ಪತ್ರದಲ್ಲಿ ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಇವರು ಪ್ರಸ್ತಾವನೆ ಸಲ್ಲಿಸಿ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಾಗಿ ಪಾರದರ್ಶಕತೆ ಅಧಿನಿಯಮ 1999 ರ ಸೆಕ್ಷನ್ 15 ರನ್ವಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕರೆಯಲಾಗುವ ಎಲ್ಲಾ ಟೆಂಡರ್‌ಗಳಿಗೆ ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿರವರು ಸಂಗ್ರಹಣಾ ಸಂಸ್ಥೆಯ ಮುಖ್ಯಸ್ಥರಾಗಿ ಹಾಗೂ ಸದರಿ ಅಧಿನಿಯಮ ಸೆಕ್ಷನ್ 9 ಮತ್ತು 10 ರನ್ವಯ ಟೆಂಡರ್ ಆಹ್ವಾನಿಸುವ ಪ್ರಾಧಿಕಾರ, ಟೆಂಡರ್ ಪರಿಶೀಲನಾ ಸಮಿತಿ ಹಾಗೂ ಟೆಂಡರ್ ಅಂಗೀಕರಿಸುವ ಪ್ರಾಧಿಕಾರಗಳನ್ನು ನೇಮಿಸಲು ಕೊರಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂ. ವಇ 22 ಕೊಮಂಲೆ 2017, ಬೆಂಗಳೂರು, ದಿನಾಂಕ : 29.11.2017

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಾಗಿ ಪಾರದರ್ಶಕತೆ ಅಧಿನಿಯಮ 1999ರ ಸೆಕ್ಷನ್ 15 ರನ್ವಯ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಕರೆಯಲಾಗುವ ಎಲ್ಲಾ ಟೆಂಡರ್‌ಗಳಿಗೆ ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಅವರನ್ನು ಸಂಗ್ರಹಣಾ ಸಂಸ್ಥೆಯ ಮುಖ್ಯಸ್ಥರನ್ನಾಗಿ ಹಾಗೂ ಸದರಿ ಅಧಿನಿಯಮದ ಸೆಕ್ಷನ್ 9 ಮತ್ತು 10 ರನ್ವಯ ಟೆಂಡರ್ ಆಹ್ವಾನಿಸುವ ಪ್ರಾಧಿಕಾರ, ಟೆಂಡರ್ ಪರಿಶೀಲನಾ ಸಮಿತಿ ಹಾಗೂ ಟೆಂಡರ್ ಅಂಗೀಕರಿಸುವ ಪ್ರಾಧಿಕಾರಗಳನ್ನು ಕೆಳಕಂಡಂತೆ ನೇಮಿಸಿ ಆದೇಶಿಸಿದೆ.

ಮಹಾನಗರ/ನಗರ/ಪಟ್ಟಣಗಳಿಗೆ ಸಂಬಂಧಿಸಿದ ಟೆಂಡರುಗಳಿಗೆ: i. `. 50.00 ಲಕ್ಷದವರೆಗಿನ ಟೆಂಡರ್‌ಗಳಿಗೆ : i. ಟೆಂಡರ್ ಆಹ್ವಾನಿಸುವ ಪ್ರಾಧಿಕಾರ - ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ

ಅಭಿಯಂತರರು, ಕ.ಕೊ.ಅ. ಮಂಡಳಿ.

2. ಟೆಂಡರ್ ಪರಿಶೀಲನಾ ಸಮಿತಿ:

ಎ. ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ ಅಭಿಯಂತರರು, - ಅಧ್ಯಕ್ಷರು

ಕ.ಕೊ.ಅ.ಮಂ

ಬಿ. ಸಂಬಂಧಪಟ್ಟ ಉಪವಿಭಾಗದ ಸಹಾಯಕ ಕಾರ್ಯಪಾಲಕ - ಸದಸ್ಯರು

ಅಭಿಯಂತರರು

ಸಿ. ಸಂಬಂಧಪಟ್ಟ ವಿಭಾಗದ ಲೆಕ್ಕಾಧೀಕ್ಷಕರು, ಕ.ಕೊ.ಅ. ಮಂಡಳಿ - ಸದಸ್ಯ ಕಾರ್ಯದರ್ಶಿ

3. ಟೆಂಡರ್ ಅಂಗೀಕರಿಸುವ ಪ್ರಾಧಿಕಾರ - ಆಯುಕ್ತರು, ಕ.ಕೊ.ಅ.ಮಂ. ii. `. 50.00 ಲಕ್ಷ ಮೀರಿದ 2.00 ಕೋಟಿವರೆಗಿನ ಟೆಂಡರ್‌ಗಳಿಗೆ :

1. ಟೆಂಡರ್ ಆಹ್ವಾನಿಸುವ ಪ್ರಾಧಿಕಾರ - ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ ಅಭಿಯಂತರರು,

ಕ.ಕೊ.ಅ. ಮಂಡಳಿ

2. ಟೆಂಡರ್ ಪರಿಶೀಲನಾ ಸಮಿತಿ:

ಎ. ಸಂಬಂಧಪಟ್ಟ ತಾಂತ್ರಿಕ ನಿರ್ದೇಶಕರು, ಕ.ಕೊ.ಅ. ಮಂಡಳಿ - ಅಧ್ಯಕ್ಷರು

ಬಿ. ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ - ಸದಸ್ಯರು

ಅಭಿಯಂತರರು, ಕೇಂದ್ರ ಕಛೇರಿ, ಬೆಂಗಳೂರುಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ೨೩೩ ಸಿ. ಮುಖ್ಯ ಲೆಕ್ಕಾಧಿಕಾರಿಗಳು, ಕೇಂದ್ರ ಕಛೇರಿ - ಸದಸ್ಯರು

ಡಿ. ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ ಅಭಿಯಂತರರು, - ಸದಸ್ಯರು

ಕ.ಕೊ.ಅ. ಮಂ

ಇ. ತಾಂತ್ರಿಕ ಸಹಾಯಕರು (ಸ.ಕಾ.ಇಂ), ಕ.ಕೊ.ಅ.ಮಂ, ಕೇಂದ್ರ - ಸದಸ್ಯ ಕಾರ್ಯದರ್ಶಿ

ಕಛೇರಿ

3. ಟೆಂಡರ್ ಅಂಗೀಕರಿಸುವ ಪ್ರಾಧಿಕಾರ - ಆಯುಕ್ರು, ಕ.ಕೊ.ಅ.ಮಂ. iii. `. 2.00 ಕೋಟಿ ಮೀರಿದ 3.00 ಕೋಟಿವರೆಗಿನ ಟೆಂಡರ್‌ಗಳಿಗೆ : 1. ಟೆಂಡರ್ ಆಹ್ವಾನಿಸುವ ಪ್ರಾಧಿಕಾರ - ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ

ಅಭಿಯಂತರರು, ಕ.ಕೊ.ಅ. ಮಂಡಳಿ.

2. ಟೆಂಡರ್ ಪರಿಶೀಲನಾ ಸಮಿತಿ :

ಎ. ಆಯುಕ್ತರು, ಕ.ಕೊ.ಅ. ಮಂಡಳಿ. - ಅಧ್ಯಕ್ಷರು

ಬಿ. ಮುಖ್ಯ ಲೆಕ್ಕಾಧಿಕಾರಿಗಳು, ಕೇಂದ್ರ ಕಛೇರಿ - ಸದಸ್ಯರು

ಸಿ. ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು, ಕ.ಕೊ.ಅ. ಮಂ - ಸದಸ್ಯರು

ಡಿ. ಕರ್ನಾಟಕ ಗೃಹ ಮಂಡಳಿಯ ಕಾರ್ಯಪಾಲಕ ಅಭಿಯಂತರರು - ಸದಸ್ಯರು

ಕೇಂದ್ರ ಕಛೇರಿ, ಬೆಂಗಳೂರು.

ಇ. ಸಂಬಂಧಪಟ್ಟ ತಾಂತ್ರಿಕ ನಿರ್ದೇಶಕರು. ಕ.ಕೊ.ಅ. ಮಂ - ಸದಸ್ಯ ಕಾರ್ಯದರ್ಶಿ

3. ಟೆಂಡರ್ ಆಹ್ವಾನಿಸುವ ಪ್ರಾಧಿಕಾರ - ಮಂಡಳಿ

iv. `. 3.00 ಕೋಟಿಗಳಿಗೆ ಮೀರಿದ ಟೆಂಡರ್‌ಗಳಿಗೆ :

1. ಟೆಂಡರ್ ಆಹ್ವಾನಿಸುವ ಪ್ರಾಧಿಕಾರ - ತಾಂತ್ರಿಕ ನಿರ್ದೇಶಕರು, ಕೇಂದ್ರ ಕಛೇರಿ, ಬೆಂಗಳೂರು. 2. ಟೆಂಡರ್ ಪರಿಶೀಲನಾ ಸಮಿತಿ

ಎ. ಆಯುಕ್ತರು, ಕ.ಕೊ.ಅ. ಮಂಡಳಿ - ಅಧ್ಯಕ್ಷರು

ಬಿ. ಕರ್ನಾಟಕ ಗೃಹ ಮಂಡಳಿಯ ಅಧೀಕ್ಷಕ ಅಭಿಯಂತರರು - ಸದಸ್ಯರು

ಕೇಂದ್ರ ಕಛೇರಿ, ಬೆಂಗಳೂರು

ಸಿ. ಮುಖ್ಯ ಲೆಕ್ಕಾಧಿಕಾರಿಗಳು, ಕೇಂದ್ರ ಕಛೇರಿ - ಸದಸ್ಯರು

ಡಿ. ತಾಂತ್ರಿಕ ನಿರ್ದೇಶಕರು, ಕ.ಕೊ.ಅ. ಮಂ. ಕೇಂದ್ರ ಕಛೇರಿ,

ಬೆಂಗಳೂರು

- ಸದಸ್ಯ ಕಾರ್ಯದರ್ಶಿ

3. ಟೆಂಡರ್ ಅಂಗೀಕರಿಸುವ ಪ್ರಾಧಿಕಾರ. - ಸರ್ಕಾರ

V. ರಾಜ್ಯ ಸರ್ಕಾರವು ವಿವಿಧ ವಸತಿ ಯೋಜನೆಗಳಡಿ ಕೇಂದ್ರ ಸರ್ಕಾರದ ಅನುದಾನದ ನೆರವಿನೊಂದಿಗೆ ಮಂಡಳಿ ವತಿಯಿಂದ ಅನುಷ್ಠಾನಗೊಳಿಸುವ ಟೆಂಡರ್ ಕಾಮಗಾರಿಗಳು. 1. ಟೆಂಡರ್ ಆಹ್ವಾನಿಸುವ ಪ್ರಾಧಿಕಾರ - ತಾಂತ್ರಿಕ ನಿರ್ದೇಶಕರು, ಕೇಂದ್ರ ಕಛೇರಿ, ಬೆಂಗಳೂರು 2. ಟೆಂಡರ್ ಪರಿಶೀಲನಾ ಸಮಿತಿ:

ಎ. ಆಯುಕ್ತರು, ಕ.ಕೊ.ಅ. ಮಂಡಳಿ - ಅಧ್ಯಕ್ಷರು ಬಿ. ಉಪ ಕಾರ್ಯದರ್ಶಿಗಳು (IDS Cell) - ಸದಸ್ಯರು

ಲೋಕೋಪಯೋಗಿ ಇಲಾಖೆ, ಬೆಂಗಳೂರು ಸಿ. ಜನರಲ್ ಮ್ಯಾನೇಜರ್ (ತಾಂತ್ರಿಕ), RGRHCL., - ಸದಸ್ಯರು Bengaluru

ಡಿ. ಕರ್ನಾಟಕ ಗೃಹ ಮಂಡಳಿಯ ಅಧೀಕ್ಷಕ - ಸದಸ್ಯರು

ಅಭಿಯಂತರರು, ಕೇಂದ್ರ ಕಛೇರಿ, ಬೆಂಗಳೂರು.

ಇ. ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ - ಸದಸ್ಯರು

ಅಭಿಯಂತರರು, ಕ.ಕೊ.ಅ. ಮಂ.

ಎಫ್. ಮುಖ್ಯಲೆಕ್ಕಾಧಿಕಾರಿಗಳು, ಕೇಂದ್ರ ಕಛೇರಿ - ಸದಸ್ಯರು

ಜಿ. ತಾಂತ್ರಿಕ ನಿರ್ದೇಶಕರು, ಕ.ಕೊ.ಅ. ಮಂ. ಕೇಂದ್ರ ಕಛೇರಿ - ಸದಸ್ಯ ಕಾರ್ಯದರ್ಶಿ

ಬೆಂಗಳೂರು.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೨೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೨, ೨೦೧೮ ಭಾಗ ೧

3. ಟೆಂಡರ್ ಅಂಗೀಕರಿಸುವ ಪ್ರಾಧಿಕಾರ - ಸರ್ಕಾರವು ರಚಿಸಿರುವ ರಾಜ್ಯ ಮಟ್ಟದ ಮಂಜೂರಾತಿ ಮತ್ತು ಉಸ್ತುವಾರಿ

ಷರತ್ತುಗಳು/ ನಿಬಂಧನೆಗಳು : ಸಮಿತಿ (SL SMC).

1. ಟೆಂಡರ್ ಪ್ರಕ್ರಿಯೆಗಳನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಾಗಿ ಪಾರದರ್ಶಕತೆ ಅಧಿನಿಯಮ (ಕೆಟಿಟಿಪಿ), 1999 ಹಾಗೂ ನಿಯಮಗಳು ಪ್ರಕಾರ ಕೈಗೊಳ್ಳತಕ್ಕದ್ದು.

2. ಕೆ.ಟಿ.ಟಿ.ಪಿ. ಅಧಿನಿಯಮ 1999ರ ಸೆಕ್ಷನ್ 13 ರನ್ವಯ "ಟೆಂಡರ್ ಅಂಗೀಕಾರ ಟೆಂಡರ್ ಅಂಗೀಕರಿಸುವ ಪ್ರಾಧಿಕಾರವು, ನಿಯಮಿಸಬಹುದಾದ

ಅಂತಹ ಕಾರ್ಯ ವಿಧಾನವನ್ನು ಅನುಸರಿಸಿದ ತರುವಾಯ ಟೆಂಡರ್‌ನ್ನು ಅಂಗೀಕರಿಸಿದ ಬಗ್ಗೆ ಆದೇಶವನ್ನು ಹೊರಡಿಸತಕ್ಕದ್ದು ಮತ್ತು ಟೆಂಡರ್‌ನ್ನು

ಅಂಗೀಕರಿಸುವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ತುಲನಾತ್ಮಕ ವಿಶ್ಲೇಷಣೆಯೊಂದಿಗೆ ಹಾಗೂ ಟೆಂಡರ್ ಅಂಗೀಕರಿಸಿದ್ದಕ್ಕೆ ಕಾರಣಗಳನ್ನು

ಸಂಗ್ರಹಣಾ ಸಂಸ್ಥೆಗೆ ಮತ್ತು ಟೆಂಡರ್ ಬುಲೆಟಿನ್ ಅಧಿಕಾರಿಗಳಿಗೆ ತಿಳಿಸತಕ್ಕದ್ದು.".

3. ಆರ್.ಎಫ್.ಪಿ. /ಟೆಂಡರ್ ದಸ್ತಾವೇಜುಗಳನ್ನು ಅನುಮೋದಿಸಿದ ಅಧಿಕಾರ ತಾಂತ್ರಿಕ ನಿರ್ದೇಶಕರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಇವರದ್ದಾಗಿರುತ್ತದೆ. ಆದರೆ ಕೆಲವೊಂದು ಆರ್.ಎಫ್.ಪಿ./ ಟೆಂಡರ್ ದಸ್ತಾವೇಜುಗಳ ಅನುಮೋದನೆಗೆ ಸಂಬಂಧಿಸಿದಂತೆ ತಮ್ಮ ಅಧಿಕಾರವನ್ನು ಕೇಂದ್ರ ಕಛೇರಿಯ ತಾಂತ್ರಿಕ ನಿರ್ದೇಶಕರು ರವರು ಅಧೀನ ಅಧಿಕಾರಿಗಳಿಗೆ ಪ್ರತ್ಯಾಯೋಜಿಸಬಹುದು.

4. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ ಆಹ್ವಾನಿಸುವ ಎಲ್ಲಾ ಟೆಂಡರುಗಳನ್ನು ತೆರೆಯುವ ಅಧಿಕಾರವನ್ನು ಟೆಂಡರ್‌ಗೆ ಸಂಬಂಧಪಟ್ಟ ಟೆಂಡರ್ ಆಹ್ವಾನಿಸುವ ಪ್ರಾಧಿಕಾರದ್ದಾಗಿರುತ್ತದೆ.

5. ಮೇಲಿನಂತೆ ಟೆಂಡರ್ ಆಹ್ವಾನಿಸುವ ಪ್ರಾಧಿಕಾರವು ಟೆಂಡರ್ ಆಹ್ವಾನಿಸುವ ಮುನ್ನ ಯೋಜನೆಗೆ (1) ಆಡಳಿತಾತ್ಮಕ ಅನುಮೋದನೆ, (2) ತಾಂತ್ರಿಕ ಅನುಮೋದನೆ, (3) ಅನುದಾನದ ಲಭ್ಯತೆ ಹಾಗೂ (4) ಆರ್.ಎಫ್.ಪಿ./ ಟೆಂಡರ್ ದಸ್ತಾವೇಜುಗಳನ್ನು ಸಕ್ಷಮ ಪ್ರಾಧಿಕಾರದಿಂದ ಪಡೆಯತಕ್ಕದ್ದು. ಈ ಎಲ್ಲಾ ಚಟುವಟಿಕೆಗಳಿಗೆ ಮತ್ತು ಟೆಂಡರ್ ಪ್ರಕ್ರಿಯೆಗೆ ಯಾವುದೇ ಸಂಬಂಧ ಇರುವುದಿಲ್ಲ. ಆದರೆ ಇವುಗಳು ಟೆಂಡರ್ ಪ್ರಕ್ರಿಯೆಗೆ ಪೂರ್ವಾಪೇಕ್ಷಿತವಾಗಿರುತ್ತದೆ.

PR.107

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಶಿವಕುಮಾರಸ್ವಾಮಿ ಸಿ.ಎಸ್.

SC.50

ಸರ್ಕಾರದ ಅಧೀನ ಕಾರ್ಯದರ್ಶಿ-2,

ವಸತಿ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 22 March 2018. Indian Gazettes, https://egazette.servantsofknowledge.in/details/in.gazette.karnataka_new.2018-03-22.Part-1/. Archive identifier in.gazette.karnataka_new.2018-03-22.Part-1.