Servants of Knowledge
Karnataka Gazette · Government of Karnataka

Karnataka Gazette, Part Part-6, 29 March 2018

Published 29 March 2018

Part
Part-6
Identifier
in.gazette.karnataka_new.2018-03-29.Part-6
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಮಾರ್ಚ್ ೨೯, ೨೦೧೮ (ಚೈತ್ರ ೮, ಶಕ ವರ್ಷ ೧೯೪೦)

Bengaluru, Thursday, March 29, 2018 (Chaithra 8, Shaka Varsha 1940)

ಸಂಪುಟ ೧೫೩

Volume 153

ಸಂಚಿಕೆ ೧೩

Issue 13

ಭಾಗ ೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಗೌರಿಬಿದನೂರು ಯೋಜನಾ ಪ್ರಾಧಿಕಾರ, ಗೌರಿಬಿದನೂರು.

ಡಾ|| ಹೆಚ್.ಎನ್.ಕಲಾಭವನ ಹಿಂಭಾಗ, ವಿ.ವಿ.ಪುರಂ, ಗೌರಿಬಿದನೂರು-561 208.

ಪ್ರಕಟಣೆ

ಸಂ:ಗೌಯೋಪ್ರಾ/ಮ.ಯೋ.ತ/ಪ್ರಕಟಣೆ 01:2016-17, ದಿನಾಂಕ: 13-3-2018.

ಗೌರಿಬಿದನೂರು ಯೋಜನಾ ಪ್ರಾಧಿಕಾರವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರನ್ವಯ ಗೌರಿಬಿದನೂರು ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ತಯಾರಿಸಿ, ನಕ್ಷೆ ಮತ್ತು ವರದಿಗಳೊಂದಿಗೆ ಸರ್ಕಾರದ ತಾತ್ಕಾಲಿಕ ಅನುಮೋದನೆಗೆ ಸಲ್ಲಿಸಲಾದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂ:ನಅಇ 203 ಬೆಂರೂಪ್ರಾ 2017 ಬೆಂಗಳೂರು. ದಿನಾಂಕ:02.03.2018 ರಂದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ 13(1) ರನ್ವಯ ತಾತ್ಕಲಿಕವಾಗಿ ಅನುಮೋದನೆಯನ್ನು ನೀಡಲಾಗಿದೆ.

ಸದರಿ ತಾತ್ಕಲಿಕ ಅನುಮೋದಿತ ಮಹಾಯೋಜನೆಯ ನಕ್ಷೆ ಮತ್ತು ವರದಿಯನ್ನು ಗೌರಿಬಿದನೂರು ಯೋಜನಾ ಪ್ರಾಧಿಕಾರದ ಕಛೇರಿಯಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆ/ಆಕ್ಷೇಪಣೆಗಳು/ಸೂಚನೆಗಳು ಏನಾದರೂ ಇದ್ದಲ್ಲಿ ಕರ್ನಾಟಕ ಸರ್ಕಾರದ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ 60 ದಿನಗಳ ಒಳಗಾಗಿ ಖುದ್ದಾಗಿ ಅಥವಾ ನೋಂದಣಿ ಅಂಚೆಯ ಮೂಲಕ ಸದಸ್ಯ ಕಾರ್ಯದರ್ಶಿ, ಗೌರಿಬಿದನೂರು ಯೋಜನಾ ಪ್ರಾಧಿಕಾರ, ಡಾ||ಹೆಚ್.ಎನ್.ಕಲಾಭವನ ಹಿಂಭಾಗ, ವಿ.ವಿ.ಪುರಂ, ಗೌರಿಬಿದನೂರು-561 208 ಇವರಿಗೆ ಸಲ್ಲಿಸುವಂತೆ ಹಾಗೂ 60 ದಿನಗಳ ನಂತರ ಯಾವುದೇ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲವೆಂದು ತಿಳಿಪಡಿಸಲಾಗಿದೆ.

ಅಧ್ಯಕ್ಷರು

ಸದಸ್ಯ ಕಾರ್ಯದರ್ಶಿ

PD – 16

ಗೌರಿಬಿದನೂರು ಯೋಜನಾ ಪ್ರಾಧಿಕಾರ ಗೌರಿಬಿದನೂರು ಯೋಜನಾ ಪ್ರಾಧಿಕಾರ

SC - 25

ಗೌರಿಬಿದನೂರು.

ಗೌರಿಬಿದನೂರು.

ಸಾಲಿಗ್ರಾಮ ಪಟ್ಟಣ ಪಂಚಾಯತ್ ಕಾರ್ಯಾಲಯ

ಉಡುಪಿ ಜಿಲ್ಲೆ

ಕರಡು ಅಧಿಸೂಚನೆ

1. ಚಿಕ್ಕ ಹೆಸರು ಮತ್ತು ಪ್ರಾರಂಭ

(1) ಈ ನಿಯಮಗಳನ್ನು ಘನತ್ಯಾಜ್ಯ ವಸ್ತು ವ್ಯವಸ್ಥಾಪನೆ ಉಪನಿಯಮಗಳು 2016 ಎಂದು ಕರೆಯತಕ್ಕದ್ದು.

(2) ಈ ನಿಯಮಗಳಲ್ಲಿ ಅನ್ಯಥಾ ಉಪಬಂಧಿಸಿರುವುದನ್ನುಳಿದ, ಅವು ಸರಕಾರ ರಾಜ್ಯ ಪತ್ರದಲ್ಲಿ ಪ್ರಕಟಣೆಯಾದ ದಿನಾಂಕದಂದು ಜಾರಿಗೆ ಬರತಕ್ಕದ್ದು.

(೨೨೯)೨೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೯, ೨೦೧೮ ಭಾಗ ೬

2. ಅನ್ವಯ

ಈ ನಿಯಮಗಳು ಕೇಂದ್ರ ಸರಕಾರದ ಘನತ್ಯಾಜ್ಯ ವಸ್ತು ವ್ಯವಸ್ಥಾಪನೆ ನಿಯಮಗಳು 2016 ರಲ್ಲಿ ಸೂಚಿಸಿರುವ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಘನತ್ಯಾಜ್ಯ (ಕೈಗಾರಿಕಾ ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಅಪಾಯಕಾರಿ ರಾಸಾಯನಿಕ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ಎಲೆಕ್ಟಾನಿಕ್ ತ್ಯಾಜ್ಯ, ಲೆಡ್ ಅಸಿಡ್ ಬ್ಯಾಟರಿ ತ್ಯಾಜ್ಯ ಮತ್ತು ವಿಕಿರಣ ಉತ್ಪಾದನಾ ತ್ಯಾಜ್ಯಗಳನ್ನು ಹೊರತು ಪಡಿಸಿ) ಉತ್ಪಾದಕರಿಗೆ ಅನ್ವಯವಾಗತಕ್ಕದ್ದು.

3. ಪರಭಾಷೆಗಳು

ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು ಕೇಂದ್ರ ಸರಕಾರದ ಘನತ್ಯಾಜ್ಯ ವಸ್ತು ವ್ಯವಸ್ಥಾಪನೆ ನಿಯಮಗಳು 2016 ರಲ್ಲಿನ ವಿವರಣೆಯಂತೆ ತಿಳಿಯತಕ್ಕದ್ದು.

4. ತ್ಯಾಜ್ಯ ಉತ್ಪಾದಕನ ಕರ್ತವ್ಯಗಳು

ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕನು ಕೇಂದ್ರ ಸರಕಾರದ ಘನತ್ಯಾಜ್ಯ ವಸ್ತು ವ್ಯವಸ್ಥಾಪನೆ ನಿಯಮಗಳು 2016 ರಲ್ಲಿ ಸೂಚಿಸಿರುವಂತೆ ಹಾಗೂ ಈ ಕೆಳಕಂಡ ರೀತಿಯಲ್ಲಿ ಉತ್ಪಾದನೆಯಾಗುವ ಘನತ್ಯಾಜ್ಯವನ್ನು ಕೊಳೆಯುವ (ಜೈವಿಕವಾಗಿ ವಿಘಟನೆ ಹೊಂದುವ, ಅನುಬಂಧ-1) ತ್ಯಾಜ್ಯ, ಕೊಳೆಯದ (ಒಣ ಮತ್ತು ಮರುಬಳಕೆ ಮಾಡಬಹುದಾದ, ಅನುಬಂಧ-2) ತ್ಯಾಜ್ಯ ಮತ್ತು ಗೃಹೋಪಯೋಗಿ ಅಪಾಯಕಾರಿ (ಅನುಬಂಧ-3) ತ್ಯಾಜ್ಯ ಎಂಬ ಮೂರು ಭಾಗಗಳನ್ನಾಗಿ ವಿಂಗಡಿಸಿ ಸಂಗ್ರಹಿಸಿಟ್ಟುಕೊಂಡು ಪಟ್ಟಣ ಪಂಚಾಯತ್‌ಯು ಕಾಲಕಾಲಕ್ಕೆ ಸೂಚಿಸುವ ರೀತಿಯಲ್ಲಿ (ಅನುಬಂಧ-4) ತ್ಯಾಜ್ಯ ಸಂಗ್ರಹಕಾರರಿಗೆ ನೀಡತಕ್ಕದ್ದು.

ಸ್ಯಾನಿಟರಿ/ಗೃಹೋತ್ಪತ್ತಿ ವೈದ್ಯಕೀಯ ತ್ಯಾಜ್ಯಗಳಾದ ಡೈಪರ್, ಸಾನಿಟರಿ ಪ್ಯಾಡ್ ಮುಂತಾದ ತ್ಯಾಜ್ಯವನ್ನು ಅನುಬಂಧ-5 ರಂತೆ ವಿಲೇವಾರಿ ಮಾಡತಕ್ಕದ್ದು.

ಉದ್ಯಾನ ಮತ್ತು ತೋಟಗಾರಿಕೆಯ ತ್ಯಾಜ್ಯ : ಉದ್ಯಾನ ಮತ್ತು ತೋಟಗಾರಿಕೆಯ ತ್ಯಾಜ್ಯಗಳನ್ನು ಮೇಲೆ ತಿಳಿಸದ ತ್ಯಾಜ್ಯಗಳೊಡನೆ ಮಿಶ್ರಗೊಳಿಸದೆ ಮೂಲದಲ್ಲಿಯೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಷಯ ಪರಿಣಿತ ಸಮಾಲೋಚಕರ ಸಹಾಯ ಪಡೆದು ತರೆಗೆಲೆ ಗೊಬ್ಬರವನ್ನಾಗಿ ಪರಿವರ್ತಿಸಿ ಗಿಡ ಮರಗಳಿಗೆ ಬಳಸುವುದು ಅಥವಾ ಪಟ್ಟಣ ಪಂಚಾಯತ್‌ಯು ಕಾಲಕಾಲಕ್ಕೆ ಮರ ಸವರುವಿಕೆ ಮತ್ತು ಮರ ಸವರುವಿಕೆಯ ತ್ಯಾಜ್ಯಗಳನ್ನು ಸಂಗ್ರಹಿಸುವ ಮತ್ತು ವಿಲೇವಾರಿ ಮಾಡುವ, ಸಂಗ್ರಹಣೆ ಮಾಡಲು ನಿಗಧಿಪಡಿಸಲಾದ ಸಮಯವೂ ಸೇರಿದಂತೆ ಸೂಚನೆ/ಮಾರ್ಗದರ್ಶನಗಳ ರೀತ್ಯಾ ವಿಲೇಗೊಳಿಸುವುದು.

ಕೆಲವು ಸಂದರ್ಭಗಳನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನ ನಿರ್ದಿಷ್ಟ ಕಡ್ಡಾಯ ಜವಾಬ್ದಾರಿಗಳನ್ನು ಆದೇಶಿಸಲಾಗಿದೆ.

4.1) ಕೋಳಿ, ಮೀನು ಮತ್ತು ಕಸಾಯಿಖಾನೆಯ ತ್ಯಾಜ್ಯ (ಸೂಚಿತ ಕಸಾಯಿಕಾನೆ ಮತ್ತು ಮಾರುಕಟ್ಟೆಗಳನ್ನು ಹೊರತುಪಡಿಸಿ, ಎಲ್ಲಾ ಪ್ರದೇಶಗಳಿಂದ)

4.1.1 ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಮಾಂಸ/ಮೀನು/ಇನ್ನಾವುದೇ ಪ್ರಾಣಿ /ಪಕ್ಷಿ ಜನ್ಯ ಉತ್ಪನ್ನಗಳನ್ನು ಮಾರುವವರು ಆವರಣಗಳನ್ನು ಸ್ವಚ್ಛವಾಗಿ ಇರಿಸಿಕೊಳ್ಳತಕ್ಕದ್ದು.

4.1.2 ಸೂಚಿತ ಕಸಾಯಿಖಾನೆ ಮತ್ತು ಮಾರುಕಟ್ಟೆಗಳನ್ನು ಹೊರತುಪಡಿಸಿ ಯಾವುದೇ ವಾಣಿಜ್ಯ ಚಟುವಟಿಕೆಯ ಪರಿಣಾಮವಾಗಿ ಕೋಳಿ, ಮೀನು ಮತ್ತು ಕಸಾಯಿಖಾನೆ ತ್ಯಾಜ್ಯ ಉತ್ಪಾದಿಸುವ ಯಾವುದೇ ಮಾಲೀಕ / ಅನುಭವದಾರರು ಆ ತ್ಯಾಜ್ಯವನ್ನು ಸಂಗ್ರಹಿಸಲು ಪಟ್ಟಣ ಪಂಚಾಯತ್‌ಯು ನಿಗಧಿಪಡಿಸಿರುವ ವಾಹನಕ್ಕೆ ನಿಗಧಿತ ಸಮಯದಲ್ಲಿ ನೀಡುವುದು. ಈ ರೀತಿಯ ತ್ಯಾಜ್ಯವನ್ನು ಯಾವುದೇ ಸಮುದಾಯ ತ್ಯಾಜ್ಯ ತೊಟ್ಟಿಗಳಲ್ಲಿ ಅಥವಾ ಸಾರ್ವಜನಿಕ/ಖಾಸಗಿ ಸ್ಥಳದಲ್ಲಿ ಸುರಿಯುವುದು/ಹಾಕುವುದು ನಿಷೇಧಿಸಲಾಗಿದೆ ಮತ್ತು ಹೀಗೆ ಮಾಡಿದ್ದಲ್ಲಿ ದಂಡದ ಅನುಬಂಧದಲ್ಲಿ ತೋರಿಸಿದಂತೆ ದಂಡ ವಿಧಿಸಲಾಗುವುದು.

4.2 ಎಲ್ಲಾ ಮಾರಾಟಗಾರರು/ತಿರುಗು ವ್ಯಾಪಾರಿಗಳು, ತಮ್ಮ ವ್ಯಾಪಾರದಿಂದ ಉತ್ಪತ್ತಿಯಾಗುವ ಯಾವುದೇ ಜೈವಿಕ ವಿಘಟನೀಯ ಇತರೆ ಮತ್ತು ತ್ಯಾಜ್ಯವನ್ನು ಬೆರೆಸದೆ ಅದೇ ಪ್ರದೇಶಗಳಲ್ಲಿ ನಗರ ಸ್ಥಳೀಯ ಸಂಸ್ಥೆಯು ಒದಗಿಸಿರುವ ಅಥವಾ ತಮ್ಮದೇ ಸಂಗ್ರಹಣಾ ಕಂಟೈನರ್ ತೊಟ್ಟಿಗಳಲ್ಲಿ ಇರಿಸಿಕೊಳ್ಳುವುದು. ಈ ರೀತಿ ಸರಿಯಾಗಿ ಪ್ರತ್ಯೇಕಿಸಲಾದ ತ್ಯಾಜ್ಯವನ್ನು ಪಟ್ಟಣ ಪಂಚಾಯತ್‌ನ ವಾಹನಕ್ಕೆ ನೀಡುವ ಜವಾಬ್ದಾರಿ ತ್ಯಾಜ್ಯ ಉತ್ಪಾದಕರ/ಮಾರಾಟದ್ದಾಗಿರುತ್ತದೆ. ಹೀಗೆ ಮಾಡಲು ವಿಫಲವಾದಲ್ಲಿ ಅಂತಹವರಿಗೆ ದಂಡದ ಅನುಬಂಧದಲ್ಲಿ ತೋರಿಸಿದಂತೆ ದಂಡ ವಿಧಿಸಲಾಗುವುದು. ಸ್ವಚ್ಛ ಅಂಗಳವನ್ನು ನಿರ್ವಹಿಸುವ ಜವಾಬ್ದಾರಿ ಪ್ರತಿಯೊಬ್ಬ ಮಾರಾಟಗಾರ/ತಿರುಗು ವ್ಯಾಪಾರಿಯ ಜವಾಬ್ದಾರಿಯಾಗಿರುತ್ತದೆ.

4.3 ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ದಿನಾಂಕ ರಂತೆ ನಿಷೇಧಿತ ಪ್ಲಾಸ್ಟಿಕ್ ಚೀಲ/ವಸ್ತುಗಳ ಮಾರಾಟ ಯಾ ಬಳಕೆ ಮಾಡುತ್ತಿದ್ದಲ್ಲಿ ಅನುಬಂಧದಲ್ಲಿ ತೋರಿಸಿದಂತೆ ದಂಡ ತೆರೆಬೇಕಾಗುವುದು.

5. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು ಮತ್ತು ಇತರ ತೊಂದರೆಗಳನ್ನು ನಿಷೇಧಿಸುವುದು

5.1) ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವುದು: ಯಾವುದೇ ವ್ಯಕ್ತಿ ನಿಗಧಿತ ಸಾರ್ವಜನಿಕ ಅಥವಾ ಖಾಸಗಿ ಕಸದ ಬುಟ್ಟಿ/ತೊಟ್ಟಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವಂತಿಲ್ಲ ಅಥವಾ ಎಸೆಯುವಂತಿಲ್ಲ.

5.2) ಯಾವುದೇ ಖಾಸಗಿ ಸ್ಥಳದಲ್ಲಿ/ಜಾಗದಲ್ಲಿ/ಪ್ರದೇಶಗಳಲ್ಲಿ ಮೇಲೆ ಕಸ ಹಾಕುವುದು:- ಯಾವುದೇ ವ್ಯಕ್ತಿ ನಿಗಧಿತ ಸಾರ್ವಜನಿಕ ಅಥವಾ ಖಾಸಗಿ ಕಸದ ಬುಟ್ಟಿ/ತೊಟ್ಟಿಗಳನ್ನು ಹೊರತುಪಡಿಸಿ ವಾಸವಿರುವ ಮುಕ್ತ ಅಥವಾ ಖಾಲಿ ಸಾರ್ವಜನಿಕ/ಖಾಸಗಿ ಸ್ವತ್ತಿನಲ್ಲಿ ಆ ವ್ಯಕ್ತಿ ವಾಸವಿರಲಿ ಅಥವಾ ವಾಸವಿಲ್ಲದಿರಲಿ ಕಸ ಹಾಕುವಂತಿಲ್ಲ ಅಥವಾ ಎಸೆಯುವಂತಿಲ್ಲ.

5.3) ವಾಹನಗಳಿಂದ ಕಸ ಎಸೆಯುವುದು:- ವಾಹನ ಚಾಲಕನಾಗಲಿ ಅಥವಾ ಪ್ರಯಾಣಿಕರಾಗಿ ಯಾವುದೇ ಬೀದಿ, ರಸ್ತೆ, ಪಾದಾಚಾರಿ ಹಾದಿ, ಆಟದ ಮೈದಾನ, ಉದ್ಯಾನ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವಂತಿಲ್ಲ ಅಥವಾ ಎಸೆಯುವಂತಿಲ್ಲ.

ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೯, ೨೦೧೮ ೨೩೧

5.4) ಸಾರ್ವಜನಿಕ ತೊಂದರೆ ಉಂಟುಮಾಡುವುದು:- ಯಾವುದೇ ವ್ಯಕ್ತಿ, ನಿರ್ದಿಷ್ಟವಾದ ಅನುಕೂಲಕ್ಕಾಗಿ ಒದಗಿಸಿದ ಸಾರ್ವಜನಿಕ ಸೌಲಭ್ಯಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಸ್ನಾನ ಮಾಡುವುದು. ಉಗಿಯುವುದು, ಮಲಮೂತ್ರ ವಿಸರ್ಜಿಸುವುದು, ಪ್ರಾಣಿ ಅಥವಾ ಪಕ್ಷಿಗಳಿಗೆ ಆಹಾರ/ನೀರುಣಿಸುವುದು. ವಾಹನ ಪಾತ್ರೆಗಳನ್ನು ತೊಳೆಯುವುದು/ದುರಸ್ಥಿ ಮುಂತಾದವುಗಳನ್ನು ಮಾಡುವಂತಿಲ್ಲ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ರೀತಿಯ ಶೇಖರಣೆ ಮಾಡುವಂತಿಲ್ಲ.

5.5) ಸಾಕಿದ/ಒಡೆತನದ ಪ್ರಾಣಿಗಳ ಕಸ ಅಥವಾ ಗಲೀಜು:- ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಸಾಕುಪ್ರಾಣಿಯ ಗಲೀಜು ಮಾಡಿದಲ್ಲಿ ಅದನ್ನು ತೆಗೆಯುವ /ಸ್ವಚ್ಛಗೊಳಿಸುವ ಜವಾಬ್ದಾರಿ ಅವುಗಳ ಮಾಲೀಕರದ್ದೆ ಆಗಿರುತ್ತದೆ. ಮತ್ತು ಅಂತಹ ತ್ಯಾಜ್ಯವನ್ನು ಸಾಧ್ಯವಾದಷ್ಟು ಮಟ್ಟಿಗೆ ತಮ್ಮದೇ ಒಳಚರಂಡಿ ವ್ಯವಸ್ಥೆಯ ಮೂಲಕ ಹೊರಹಾಕುವುದಕ್ಕೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು. ಹೀಗೆ ಮಾಡಲು ವಿಫಲವಾದಲ್ಲಿ ಅಂತಹವರಿಗೆ ದಂಡದ ಅನುಬಂಧದಲ್ಲಿ ತೋರಿಸಿದಂತೆ ದಂಡ ವಿಧಿಸಲಾಗುವುದು.

5.6) ಸ್ವಚ್ಛ ಆವರಣ ಖಾತ್ರಿಪಡಿಸುವುದು :- ಪ್ರತಿ ವ್ಯಕ್ತಿಯೂ ತನಗೆ ಸೇರಿದ ಅಥವಾ ವಾಸವಿರುವ ಯಾವುದೇ ಸ್ಥಳದ ಆವರಣದ ಮುಂದಿರುವ ಅಥವಾ ಹೊಂದಿಕೊಂಡಂತ್ತಿರುವ ಸಾರ್ವಜನಿಕ ಸ್ಥಳ, ಪಾದಚಾರಿ ರಸ್ತೆ ಮತ್ತು ತೆರೆದ ಚರಂಡಿ/ ಗಟಾರ ಇತ್ಯಾದಿ ಯಾವುದೇ ಘನ ಅಥವಾ ದ್ರವ ತ್ಯಾಜ್ಯವನ್ನು ಹಾಕುವಂತಿಲ್ಲ.

6. ಸಾರ್ವಜನಿಕ ಸಭೆ ಮತ್ತು ಇತರೆ ಕಾರ್ಯಕ್ರಮಗಳಿಂದ ಉತ್ಪಾದನೆಯಾಗುವ ತ್ಯಾಜ್ಯ:

6.1 ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಸಾರ್ವಜನಿಕ ಸಭೆ ಮತ್ತು ಕಾರ್ಯಕ್ರಮಗಳನ್ನು (ಮೆರವಣಿಗೆ ಪ್ರದರ್ಶನ, ಸರ್ಕಸ್, ಮೇಳ ರಾಜಕೀಯ, ಸಮಾವೇಶ ವಾಣಿಜ್ಯ, ಧಾರ್ಮಿಕ, ಸಾಮಾಜಿಕ-ಸಾಂಸ್ಕøತಿಕ ಕಾರ್ಯಕ್ರಮ, ಪ್ರತಿಭಟನೆ ಮತ್ತು ಪ್ರದರ್ಶನ ಇತ್ಯಾದಿಗಳು ಸೇರಿದಂತೆ) ನಡೆಸಲು ಪೋಲೀಸ್ ಮತ್ತು ಪಟ್ಟಣ ಪಂಚಾಯತ್‌ಯ ಅನುಮತಿಯ ಅಗತ್ಯವಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದವರು ಅಥವಾ ಸಭೆ ಸೇರಿದವರು ಆ ಸ್ಥಳ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದ ಶುಚಿತ್ವವನ್ನು ಕಾಪಾಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.

6.2 ಮರುಪಾವತಿಸಬಹುದಾದ ಶುಚಿತ್ವ ಠೇವಣಿ: ಪಟ್ಟಣ ಪಂಚಾಯತ್ ಕಾರ್ಯಕ್ರಮವನ್ನು ಆಯೋಜಿಸುವವರಿಂದ ಕಾರ್ಯಕ್ರಮದ ಅವಧಿಗೆ ಮರುಪಾವತಿಸಬಹುದಾದ ಶುಚಿತ್ವ ಠೇವಣಿಯನ್ನು ಕಟ್ಟಿಸಿಕೊಳ್ಳಲಾಗುವುದು. ಕಾರ್ಯಕ್ರಮ ಮುಗಿದ ನಂತರ ಕಾರ್ಯಕ್ರಮವನ್ನು ಆಯೋಜಿಸಲಾದ ಸಾರ್ವಜನಿಕ ಸ್ಥಳದ ಸ್ವಚ್ಛತೆಯನ್ನು ನೋಡಿ ಮತ್ತು ಆ ಕಾರ್ಯಕ್ರಮದಲ್ಲಿ ಉತ್ಪತ್ತಿಯಾದ ತ್ಯಾಜ್ಯವನ್ನು ಈ ಉಪನಿಯಮಗಳ ಕ್ರಮ ಸಂಖ್ಯೆ 4.0 ರಲ್ಲಿ ತಿಳಿಸಿದಂತೆ ವಿಂಗಡನೆಮಾಡಿ ಸಂಗ್ರಹಿಸಿ ವಿಲೇವಾರಿ ಶುಲ್ಕವನ್ನು ಪಟ್ಟಣ ಪಂಚಾಯತ್‌ಗೆ ಪಾವತಿಸಿ ನಿಗಧಿಪಡಿಸಲಾದ ಸ್ಥಳಕ್ಕೆ ಸಾಗಿಸಿರುವುದನ್ನು ಗಮನಿಸಿದ ನಂತರವಷ್ಟೆ ಈ ಠೇವಣಿಯನ್ನು ಮರುಪಾವತಿಸಲಾಗುವುದು (ಈ ಠೇವಣಿಯು ಸಾರ್ವಜನಿಕ ಸ್ಥಳದ ಶುಚಿತ್ವಕ್ಕಾಗಿ ಮಾತ್ರ ಇದು ಆಸ್ತಿಯ ಯಾವುದೇ ರೀತಿಯ ಹಾನಿಗಾಗಿ ಅಲ್ಲ).

7. ಘನತ್ಯಾಜ್ಯ ಸಂಗ್ರಹಣೆ: ಪಟ್ಟಣ ಪಂಚಾಯತ್ ವತಿಯಿಂದ ಮೇಲೆ ತಿಳಿಸಿದ ರೀತಿಯಲ್ಲಿ ವಿಂಗಡಿಸಿ ಸಂಗ್ರಹಿಸಿ ಶೇಕರಿಸಿಟ್ಟ ತ್ಯಾಜ್ಯ ಉತ್ಪಾದಕರೇ ಪಟ್ಟಣ ಪಂಚಾಯತ್‌ಯು ನಿಗಧಿಪಡಿಸಿದ ಸಾರ್ವಜನಿಕ ಅಥವಾ ಖಾಸಗಿ ಪಿಕ್ ಅಪ್ ಪಾಯಿಂಟ್ ವರೆಗೆ ತ್ಯಾಜ್ಯವನ್ನು ತಂದು ಪಟ್ಟಣ ಪಂಚಾಯತ್‌ಯು ಒದಗಿಸಿರುವ ನಿಗಧಿತ ಗಂಟೆ ಸದ್ದು ಮಾಡುವ ವಾಹನಗಳಿಗೆ ನೀಡುವುದು. ಮಾರ್ಗ ಯೋಜನೆಯನ್ನು ಆಧರಿಸಿ ಪಟ್ಟಣ ಪಂಚಾಯತ್‌ಯು ಪಾಯಿಂಟು ಟು ಪಾಯಿಂಟ್ ತ್ಯಾಜ್ಯ ಸಂಗ್ರಹಣೆಗಾಗಿ ವಾಹನಗಳ ಸೇವೆಯನ್ನು ಒದಗಿಸುತ್ತದೆ ಮತ್ತು ಈ ರೀತಿಯಾದ ಮಾರ್ಗ ಯೋಜನೆಗಳನ್ನು ಮುಂಚಿತವಾಗಿಯೇ ಸೂಚನೆಗಳ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುವುದು.

8. ಒಣ ತ್ಯಾಜ್ಯ ಸಂಗ್ರಹಿಸುವ/ಬೇರ್ಪಡಿಸುವ ಕೇಂದ್ರಗಳು:- ಪಟ್ಟಣ ಪಂಚಾಯತ್‌ಯು ಮರುಬಳಕೆ ಮಾಡಬಹುದಾದ ಮತ್ತು ಮರುಬಳಕೆ ಮಾಡಲಾದ ತ್ಯಾಜ್ಯಗಳನ್ನು ಬೇರ್ಪಡಿಸುವ ಪ್ರಕ್ರಿಯೆಯನ್ನು ಅನುಕೂಲ ಮಾಡುವ ಮತ್ತು ಸುಗುಮಗೊಳಿಸುವ ಸಲುವಾಗಿ ಅಗತ್ಯವಿರುವ ಸಂಖ್ಯೆಯಲ್ಲಿ ಒಣತ್ಯಾಜ್ಯವನ್ನು ಸಂಗ್ರಹಿಸಿ ಶೇಖರಿಸಿಡುವ ಮತ್ತು ಬೇರ್ಪಡಿಸುವ ಕೇಂದ್ರಗಳನ್ನು ಸ್ಥಾಪಿಸುವುದು. ಈ ಒಣ ತ್ಯಾಜ್ಯ ಕೇಂದ್ರಗಳನ್ನು ಪಟ್ಟಣ ಪಂಚಾಯತ್‌ಯು ಸ್ವತ್ತಿನಲ್ಲಿ/ಲಭ್ಯವಿರುವ ಸರ್ಕಾರ ಅಥವಾ ಇತರೆ ಸಂಸ್ಥೆಗಳಿಗೆ ಸೇರಿದ ಸ್ವತ್ತಿನಲ್ಲಿ ಅಥವಾ ಸೂಕ್ತ ಸಾರ್ವಜನಿಕ ಸ್ಥಳಗಳಲ್ಲಿ ಒದಗಿಸಿದ ಕಿಯಾಸ್ಕ್/ಶೆಡ್‌ಗಳಲ್ಲಿ ತೆರೆಯಲಾಗುವುದು ಮತ್ತು ನೋಂದಾಯಿತ ಚಿಂದಿ ಆಯುವವರು/ಸಹಕಾರಿ ಸಂಘಗಳು/ಪಟ್ಟಣ ಪಂಚಾಯತ್‌ಯು ನಿರ್ದೇಶಿಸಿರುವ/ನೇಮಿಸಿರುವ ಪರವಾನಗಿ ಪಡೆದ ಇತರೆ ಯಾವುದೇ ನಿಯೋಗಿಯು ಇವುಗಳನ್ನು ನಿರ್ವಹಿಸಲಿದ್ದಾರೆ. ತ್ಯಾಜ್ಯವನ್ನು ಬೇರ್ಪಡಿಸಿ ನಂತರ ಉಳಿದ ಮರುಬಳಕೆ ಮಾಡಲಾಗದ ತ್ಯಾಜ್ಯವನ್ನು ಮತ್ತಷ್ಟು ಸಂಸ್ಕರಣೆ ಮಾಡಲು ಅಥವಾ ನೆಲಭರ್ತಿ ಮಾಡಲು ಸಮಯದಿಂದ ಸಮಯಕ್ಕೆ ತ್ಯಾಜ್ಯ ವಿಲೇವಾರಿ ಸ್ಥಳಗಳಿಗೆ ರವಾನೆ ಮಾಡಲಾಗುವುದು. ವಿವಿಧ ರೀತಿಯ ತ್ಯಾಜ್ಯ ಖರೀದಿ ಮತ್ತು ಮಾರಾಟ ಸೌಲಭ್ಯಗಳನ್ನು ಒಣ ತ್ಯಾಜ್ಯ ಬೇರ್ಪಡಿಸುವ ಕೇಂದ್ರಗಳಲ್ಲಿ ಸೂಚಿತ ನಿಗಧಿತ ಬೆಲೆಯಲ್ಲಿ ಮಾರುವುದನ್ನು ಮುಖ್ಯಾಧಿಕಾರಿಯವರು ಪರಿಗಣಿಸಬಹುದಾಗಿರುತ್ತದೆ.

9. ತಪಾಸಣೆಗಳು:- ಈ ನಿಯಮಗಳನ್ನು ಪಾಲಿಸುವುದನ್ನು ಹಾಗೂ ಪ್ರೋತ್ಸಾಹಿಸುವ ದೃಷ್ಠಿಯಿಂದ ಮುಖ್ಯಾಧಿಕಾರಿಯವರು ಅಥವಾ ಅವರಿಂದ ಅಧಿಕಾರ ಪಡೆದವರು ತಮ್ಮ ಮುನ್ಸಿಪಾಲ್ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಅನಿರೀಕ್ಷಿತ ತಪಾಸಣೆಯನ್ನು ನಡೆಸುವರು, ಸದರಿ ಸಮಯದಲ್ಲಿ ಯಾವುದೇ ನಿಯಮಗಳನ್ನು ಸಾರ್ವಜನಿಕರು ಅನುಸರಿಸದಿದ್ದಲ್ಲಿ ದಂಡ ತೆರಬೇಕಾಗುತ್ತದೆ.

10. ಪ್ರತಿ ವಾರ್ಡಿನಲ್ಲಿ ಜಾರಿ ದಳಗಳು : ಪಟ್ಟಣ ಪಂಚಾಯತ್ ಸಮರ್ಪಕ ಘನತ್ಯಾಜ್ಯ ವಸ್ತು ನಿರ್ವಹಣೆಯನ್ನು ಖಾತ್ರಿ ಪಡಿಸಿಕೊಳ್ಳುವ ಸಲುವಾಗಿ 'ತ್ಯಾಜ್ಯ ನಿರ್ವಹಣೆ ಕಾವಲು ದಳವನ್ನು' ಸ್ಥಾಪಿಸಬಹುದು. ಸದರಿ ದಳವು ನಿಯಮಾವಳಿಗಳ ಉಲ್ಲಂಘನೆ ಮಾಡಿದ ತಪ್ಪಿತಸ್ಥರ ವಿರುದ್ಧ ನಿಯಮಾನುಸಾರ ಸ್ಥಳದಲ್ಲಿಯೇ ದಂಡವನ್ನು ವಿಧಿಸಬಹುದು/ ಅಥವಾ ಶಿಸ್ತು ಕ್ರಮ ತೆಗೆದುಕೊಳ್ಳಲು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಬಹುದು.

11. ಘನತ್ಯಾಜ್ಯ ಶುಲ್ಕ: ದಿನಾಂಕ 30.04.2015 ರಂದು ಪಟ್ಟಣ ಪಂಚಾಯತ್ ತನ್ನ ಸಾಮಾನ್ಯ ಸಭೆಯ ನಿರ್ಣಯ ನಂ: 07 ರಂತೆ ನಿಗಧಿಪಡಿಸಿದ ಘನತ್ಯಾಜ್ಯ ಶುಲ್ಕವನ್ನು ವಿಧಿಸಲಾಗುವುದು.

೨೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೯, ೨೦೧೮ ಭಾಗ ೬

12. ಈ ಉಪಕಾನೂನುಗಳನ್ನು ಉಲ್ಲಂಘಿಸಿದಲ್ಲಿ ವಿಧಿಸಲಾಗುವ ದಂಡ

(ಅ) ಈ ಉಪಕಾನೂನುಗಳು ಜಾರಿಗೆ ಬಂದ ದಿನಾಂಕದಿಂದ ನಂತರದ 60 ದಿನಗಳವರೆಗೆ ಎಚ್ಚರಿಕೆ ಅವಧಿಯಾಗಿರುತ್ತದೆ. ನಂತರ ಯಾವುದೇ ರೀತಿಯಲ್ಲಿ ಈ ಉಪಕಾನೂನುಗಳನ್ನು ಉಲ್ಲಂಘಿಸಿದಲ್ಲಿ ಪ್ರತಿ ಉಲ್ಲಂಘನೆಯ ನಿದರ್ಶನಕ್ಕಾಗಿ ದಂಡ ಪಟ್ಟಿಯ (ಅನುಬಂಧ 6) ರ ಪ್ರಕಾರ ದಂಡ ವಿಧಿಸುವುದರ ಜೊತೆಗೆ ಶಿಕ್ಷೆಗೊಳಗಾಗಬೇಕಾಗಬಹುದು. ತ್ಯಾಜ್ಯ ಉತ್ಪಾದಕ ಯಾವುದೇ ಉಪಕಾನೂನನ್ನು ಮತ್ತೊಮ್ಮೆ ಉಲ್ಲಂಘಿಸಿದ್ದು ಕಂಡುಬಂದಲ್ಲಿ ದಂಡದ ಪ್ರಮಾಣ ದ್ವಿಗುಣವಾಗುತ್ತದೆ.

(ಆ) ಯಾವುದೇ ವ್ಯಕ್ತಿ ಅಥವಾ ಉತ್ಪಾದಕ ಈ ಉಪಕಾನೂನುಗಳನ್ನು ಉಲ್ಲಂಘಿಸಿದ ನಂತರ ಅನುಬಂಧ 6ರಲ್ಲಿ ನಿಗಧಿಪಡಿಸಿರುವಂತೆ ದಂಡಶುಲ್ಕವನ್ನು ಪಾವತಿಸದಿದ್ದಲ್ಲಿ ಆ ದಂಡದ ಹಣವನ್ನು ಆಸ್ತಿ ತೆರಿಗೆಯ ಉಳಿಕೆಯಿಂದ ಸಂಗ್ರಹಿಸಲಾಗುವುದು.

ಮುಖ್ಯಾಧಿಕಾರಿ ಪಟ್ಟಣ ಪಂಚಾಯತ್, ಸಾಲಿಗ್ರಾಮ ಉಡುಪಿ ಜಿಲ್ಲೆ

ಅನುಬಂಧ-1

ಕೊಳೆಯುವ ಅಥವಾ ಜೈವಿಕವಾಗಿ ವಿಘಟನೆ ಹೊಂದುವ ತ್ಯಾಜಗಳು

ತರಕಾರಿ ಸಿಪ್ಪೆ, ಹಣ್ಣಿನ ಸಿಪ್ಪೆ, ಕೊಳೆತ ತರಕಾರಿ/ಕೊಳೆತ ಹಣ್ಣು, ಮಾವಿನ ಹಣ್ಣಿನ ಗೊರಟು, ಉಪಯೋಗಿಸಿದ ಚಹದ ಬ್ಯಾಗ್‌ಗಳು, ಕಾಫಿ ಪುಡಿ, ಮೊಟ್ಟೆಯ ಸಿಪ್ಪೆ, ಹೂ/ಎಲೆಗಳು, ಹಾಳಾದ ಸಾಂಬಾರ ಪದಾರ್ಥಗಳು, ಕಸಗುಡಿಸಿದ ನೆಲದ ಧೂಳು, ಕೂದಲು, ಮಾಂಸ ಮತ್ತು ಉಳಿದ ಮಾಂಸದ ತುಣುಕುಗಳು, ಕೊಳೆತ ಮೊಟ್ಟೆ, ಮೂಳೆ, ಅವಧಿ ಮುಗಿದ ಆಹಾರ ಪದಾರ್ಥಗಳು ( ಬ್ರೆಡ್ ಬಿಸ್ಕೇಟ್ಸ್, ಸಿದ್ಧ ಆಹಾರ), ಬೆರಳಿನ ಉಗುರುಗಳು, ಉಳಿದಿರುವ ಆಹಾರ ಪದಾರ್ಥ, ತೆಂಗಿನಕಾಯಿಯ ಕೆರಟ, ತೆಂಗಿನ ನಾರು, ಬೊಂಡ ಮುಂತಾದವುಗಳು.

ಅನುಬಂಧ-2

ಕೊಳೆಯದ ಅಥವಾ ಒಣ ಮತ್ತು ಮರುಬಳಕೆ ಮಾಡಬಹುದಾದ ತ್ಯಾಜ್ಯಗಳು

ಹಾಲು, ಮೊಸರಿನ ಪ್ಯಾಕ್‌ಗಳು, ಬೆಣ್ಣೆ ಕಟ್ಟಲು ಬಳಸಲಾಗುವ ಪೇಪರ್, ತುಪ್ಪ/ಎಣ್ಣೆ ಪ್ಯಾಕ್‌ಗಳು, ಎಣ್ಣೆ ಕ್ಯಾನುಗಳು, ಸುಂಗಧ ದ್ರವ್ಯದ ಹಾಗೂ ಶಾಂಪು ಬಾಟಲಿಗಳು, ಟೆಟ್ರಾ ಪ್ಯಾಕ್‌ಗಳು, ತುಪ್ಪ, ಜಾಮ್‌ಗಳ ಶೇಖರಿಸಿದ ಅಲ್ಯೂಮೀನಿಯಂ ಕವರ್‌ಗಳು, ಉಪಯೋಗಿಸಿದ ಟ್ಯೂಬ್, ಶೇವಿಂಗ್ ಕ್ರೀಮ್ ಕ್ಯಾನ್‌ಗಳು, ಲೇದರ್, ರೇಕ್ಸಿನ್, ರಬ್ಬರ್, ಪೀಠೋಪಕರಣಗಳು, ಥರ್ಮಕೋಲ್ ಒಡೆದ ಆಟಿಕೆಗಳು, ಹಳೆಯ ಪೊರಕೆಗಳು, ಟಿನ್ ಬಾಟಲಿಗಳು, ಪೆಪ್ಸಿ ಕ್ಯಾನ್‌ಗಳು, ಬಿಸ್ಲೇರಿ ಬಾಟಲಿಗಳು, ಶೂ ಗಳು, ಒಳಗೆ ಬೆಳ್ಳಿ ಲೈನಿಂಗ್ ಕವರ್ಸ್ ಲೇ ಪ್ಯಾಕೆಟ್ಸ್, ನೆಲವರೆಸುವ ಕೋಲು ಮತ್ತು ಬಟ್ಟೆ, ಜೀರ್ಣಾವಸ್ಥೆಗೆ ತಲುಪಿದ ಕಾಲು ವರೆಸುವ ಮ್ಯಾಟ್‌ಗಳು, ಪಾಯಿಕಾನೆ ತೊಳೆಯಲು ಉಯೋಗಿಸಿದ ಬ್ರಶ್‌ಗಳು, ಸ್ಕಬ್ಬರ್‌ಗಳು, ಹಲ್ಲಿನ ಬ್ರಶ್‌ಗಳು ಮುಂತಾದವುಗಳು.

ಮರುಬಳಕೆ ಮಾಡಬಹುದಾದ ತ್ಯಾಜ್ಯಗಳು

ಗೃಹೋಪಯೋಗಿ ಪ್ಲಾಸ್ಟಿಕ್ ವಸ್ತುಗಳು, ಹೊಸ ಪತ್ರಿಕೆ, ಹಳೆ ಪೋಸ್ಟ್‌ಗಳು, ಪತ್ರಿಕೆಯ ತುಂಡುಗಳು, ದಿನಸಿ ವಸ್ತುಗಳನ್ನು ಬಳಸಲು ಉಪಯೋಗಿಸುವ ಪ್ಲಾಸ್ಟಿಕ್ ಕವರ್‌ಗಳು, ಬಿಸ್ಲೇರಿ ಬಾಟಲಿಗಳು, ಒಡೆದ ಗ್ಲಾಸುಗಳು ಮುಂತಾದವುಗಳು.

ಅನುಬಂಧ-3

ಗೃಹೋಪಯೋಗಿ ಅಪಾಯಕಾರಿ ತ್ಯಾಜ್ಯ

ಕೀಟ ನಾಶಕ ಬಾಟಲಿಗಳು, ಸೋಪ್‌ಗಳ ಹೊರ ಕವಚಗಳು, ರೇಜರ್/ರೇಜರ್ ಬ್ಲೇಡ್, ಕ್ರೇಡಿಟ್/ಡೆಬಿಟ್/ಲೋಯಲ್ಟಿ ಕಾರ್ಡ್, ಮ್ಯಾಗ್ನೇಟಿಕ್ ಸ್ಟ್ರೀಪ್, ಯಾವುದೇ ವೈದ್ಯಕೀಯ ನೈರ್ಮಲ್ಯಗಳಿಗೆ ಬಳಸಲಾಗುವ ಟಿಶ್ಯೂ ಪೆಪರ್‌ಗಳು, ಸೊಳ್ಳೆ ನಿವಾರಕ ದ್ರವ ಬಾಟಲಿಗಳು, ಮ್ಯಾಟ್‌ಗಳು, ಓಡೋನಿಲ್‌ಗಳು, ತುಟಿಗಳಿಗೆ ಹಚ್ಚುವ ಬಣ್ಣಗಳು, ಉಗುರುಗಳಿಗೆ ಹಚ್ಚುವ ಬಣ್ಣಗಳು, ಸೌಂದರ್ಯವರ್ಧಕಗಳು ಅವಧಿ ಮುಗಿದ ಔಷಧಿಗಳು ಮುಂತಾದವುಗಳು.

ತಂತಿಗಳ ತುಣುಕುಗಳು, ಹಳೆಯ ಎಲೆಕ್ಟ್ರಾನಿಕ್ ಭಾಗಗಳು, ಹಳೆ ಪೋನ್‌ಗಳು, ಅಡಾಪ್ಟರ್ಸ್, ಬ್ಲೂ ಟೂತ್ ಪರಿವರ್ತಕಗಳು, ಬ್ಯಾಟರಿಗಳು, ಸಿಡಿಗಳು, ಸಿ.ಎಫ್.ಎಲ್. ಟ್ಯೂಬ್ ಲೈಟ್‌ಗಳು, ಮುದ್ರಕ ಕ್ಯಾಟ್ರೀಜ್‌ಗಳು, ಹಾಳಾದ ಗಡಿಯಾರ, ಕೈ ಗಡಿಯಾರ, ಇಲೆಕ್ಟ್ರಾನಿಕ್ ವಸ್ತುಗಳು, ಹಾಳಾದ ಉಷ್ಣ ಮಾಪಕಗಳು ಮುಂತಾದ ಇ-ತ್ಯಾಜ್ಯಗಳು.

ಅನುಬಂಧ-4

ತ್ಯಾಜ್ಯ ವಿಲೇವಾರಿ ವಿಧಾನಗಳು:

1. ಕೊಳೆಯುವ ಅಥವಾ ಜೈವಿಕವಾಗಿ ವಿಘಟನೆ ಹೊಂದುವ ತ್ಯಾಜಗಳು:

ಪ್ರತಿಯೊಬ್ಬ ತ್ಯಾಜ್ಯ ಉತ್ಪಾದಕನು ತಮ್ಮಲ್ಲಿ ಉತ್ಪಾದನೆಯಾಗುವ ಕೊಳೆಯುವ ಅಥವಾ ಜೈವಿಕವಾಗಿ ವಿಘಟನೆ ಹೊಂದುವ ತ್ಯಾಜ್ಯವನ್ನು ಉತ್ಪಾದನಾ ಪ್ರಮಾಣಕ್ಕನುಸಾರವಾಗಿ ಸ್ವಂತನೆಲೆಯಲ್ಲಿ ಈ ಕೆಳಕಂಡ ವಿಧಾನಗಳನ್ನು ಅಥವಾ ಪಟ್ಟಣ ಪಂಚಾಯತ್ ಕಾಲಕಾಲಕ್ಕೆ ಸೂಚಿಸುವ ವಿಧಾನಗಳನ್ನು ಅನುಸರಿಸಿ ಗೊಬ್ಬರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು.

ಅ. ಮನೆಗಳು:

ಸಣ್ಣ ಪಿಟ್ ಕಾಂಪೋಸ್ಟ್ ಮಾದರಿ:

ಎರಡು ಫೀಟ್ ಉದ್ದ, ಎರಡು ಫೀಟ್ ಅಗಲ ಮತ್ತು ಎರಡು ಫೀಟ್ ಆಳದ ಎರಡು ಗುಂಡಿಗಳನ್ನು ತೋಡಿ ದಿನಂಪ್ರತಿ ಉತ್ಪಾದನೆಯಾಗುವ ಕೊಳೆಯುವ ಅಥವಾ ಜೈವಿಕವಾಗಿ ವಿಘಟನೆ ಹೊಂದುವ ತ್ಯಾಜ್ಯವನ್ನು ಸಣ್ಣದಾಗಿ ಕೊಚ್ಚಿ ಹಾಕಬೇಕು ಮತ್ತು ಅದರ ಮೇಲೆ ತೆಳುವಾಗಿ (ತ್ಯಾಜ್ಯ ಮುಚ್ಚುವ ರೀತಿಯಲ್ಲಿ, ಸರಿಸುಮಾರು 1 ಅಥವಾ 2 ಸೆಂಟೀ ಮೀಟರ್‌ನಷ್ಟು) ಮಣ್ಣನ್ನು ಹಾಕಬೇಕು. ಇದೇರೀತಿ ಹೊಂಡ ತುಂಬುವವರವಿಗೂ ಮುಂದುವರಿಸಬೇಕು, ಒಂದು ಹೊಂಡ ತುಂಬಲು ಸರಿಸುಮಾರು ಒಂದರಿಂದ ಒಂದೂವರೆ ತಿಂಗಳುಗಳ ಕಾಲ ಬೇಕಾಗುತ್ತದೆ. ನಂತರ ಎರಡನೇ ಹೊಂಡ ಉಪಯೋಗಿಸಲು ಪ್ರಾರಂಭಿಸಬೇಕು. ಎರಡನೇ ಹೊಂಡ ತುಂಬುವ ಹೊತ್ತಿಗೆ ಮೊದಲನೇ ಹೊಂಡದಲ್ಲಿ ತ್ಯಾಜ್ಯವು ಜೈವಿಕ ವಿಘಟನೆ ಹೊಂದಿ ಗೊಬ್ಬರವಾಗಿ ಮಾರ್ಪಾಡಾಗಿರುತ್ತದೆ. ಸದರಿ ಗೊಬ್ಬರವನ್ನು ಹೊರತೆಗೆದು ಮತ್ತೆ ಮೊದಲನೆಯ ಹೊಂಡವನ್ನು ಉಪಯೋಗಿಸಲು ಪ್ರಾರಂಭಿಸಬಹುದು.

ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೯, ೨೦೧೮ ೨೩೩

ಪೈಪ್ ಕಾಪೋಸ್ಟ್ ಮಾದರಿ:

ಆರು ಅಥವಾ ಎಂಟು ಇಂಚು ಅಗಲದ ಆರು ಅಡಿ ಉದ್ದದ ಪಿ.ವಿ.ಸಿ ಅಥವಾ ಸೀಮೆಂಟ್ ಪೈಪನ್ನು ನೀರು ನಿಲ್ಲದ ಮಣ್ಣಿನಲ್ಲಿ ಒಂದು ಅಡಿಯಷ್ಟು ಹೊಂಡ ಮಾಡಿ ಲಂಬವಾಗಿ ಹೂಳುವುದು. ಭೂಮಿಯಿಂದ ನಾಲ್ಕು ಇಂಚುಗಳಷ್ಟು ಮೇಲೆ ತ್ಯಾಜ್ಯದಿಂದ ಉತ್ಪಾದನೆಯಾಗುವ ದ್ರವ ಹೊರಹೋಗಲು ಸಣ್ಣ ರಂದ್ರಗಳನ್ನು ಪೈಪಿನ ಸುತ್ತಲೂ ಕೊರೆಯುವುದು. ನಂತರ ಮೊದಲಿಗೆ ಕಾಲು ಕೆ.ಜಿ ಯಷ್ಟು ಬೆಲ್ಲ ಮತ್ತು ಒಂದೂವರೆ ಕೆ.ಜಿ ಯಷ್ಟು ಆಕಳ ಅಥವಾ ಎಮ್ಮೆಯ ಸಗಣಿ ಹಾಕಿ ದಿನಂಪ್ರತಿ ಉತ್ಪಾದನೆಯಾಗುವ ಕೊಳೆಯುವ ಅಥವಾ ಜೈವಿಕವಾಗಿ ವಿಘಟನೆ ಹೊಂದುವ ತ್ಯಾಜ್ಯವನ್ನು ಸಣ್ಣದಾಗಿ ಕೊಚ್ಚಿ ಹಾಕಬೇಕು ಮತ್ತು ಅದರ ಮೇಲೆ ತೆಳುವಾಗಿ (ತ್ಯಾಜ್ಯ ಮುಚ್ಚುವ ರೀತಿಯಲ್ಲಿ, ಸರಿಸುಮಾರು 1 ಅಥವಾ 2 ಸೆಂಟೀ ಮೀಟರ್‌ನಷ್ಟು) ಮಣ್ಣನ್ನು ಹಾಕಬೇಕು ಮತ್ತು ಪೈಪ್ ಮೇಲ್ಬಾಗವನ್ನು ಮುಚ್ಚಬೇಕು, ಒಂದು ಪೈಪ್ ತುಂಬಲು ಸರಿಸುಮಾರು ಒಂದರಿಂದ ಒಂದೂವರೆ ತಿಂಗಳುಗಳ ಕಾಲ ಬೇಕಾಗುತ್ತದೆ. ನಂತರ ಎರಡನೇ ಪೈಪ್ ಉಪಯೋಗಿಸಲು ಪ್ರಾರಂಭಿಸಬೇಕು. ಎರಡನೇ ಪೈಪ್ ತುಂಬುವ ಹೊತ್ತಿಗೆ ಮೊದಲನೇ ಪೈಪ್‌ನಲ್ಲಿ ತ್ಯಾಜ್ಯವು ಜೈವಿಕ ವಿಘಟನೆ ಹೊಂದಿ ಗೊಬ್ಬರವಾಗಿ ಮಾರ್ಪಾಡಾಗಿರುತ್ತದೆ. ಸದರಿ ಗೊಬ್ಬರವನ್ನು ಹೊರತೆಗೆದು ಮತ್ತೆ ಮೊದಲನೆಯ ಪೈಪನ್ನು ಉಪಯೋಗಿಸಲು ಪ್ರಾರಂಭಿಸಬಹುದು.

ಗಮನದಲ್ಲಿರಿಸಬೇಕಾದ ಅಂಶಗಳು: ನೀರು ನಿಲ್ಲುವ ಜಾಗದಲ್ಲಿ ಪೈಪ್ ಸ್ಥಾಪಿಸಬಾರದು, ಸಾರು, ಗಂಜಿ ಇತ್ಯಾದಿ ದ್ರವ ತ್ಯಾಜ್ಯವನ್ನು ಹಾಕಬಾರದು.

ಸದರಿ ದ್ರವ ತ್ಯಾಜ್ಯಗಳನ್ನು ನೇರವಾಗಿ ಮರದ ಬುಡಕ್ಕೆ ಹಾಕಬಹುದು. ಪೈಪ್‌ನಲ್ಲಿ ತೇವಾಂಶ ಹೆಚ್ಚಾದಲ್ಲಿ ಮರದ ಒಣ ಎಲೆ, ಬೂದಿಯನ್ನು ಹಾಕಬಹುದು ಮತ್ತು ಹೆಚ್ಚಿನ ಗುಣಮಟ್ಟದ ಗೊಬ್ಬರಕ್ಕಾಗಿ ವಾರಕೊಮ್ಮೆ ಒಂದು ಲೋಟ ಮಜ್ಜಿಗೆಯನ್ನು ಹಾಕಿದರೆ ಉತ್ತಮ.

ಅ. ಬಹು ಮಹಡಿ ಮನೆಗಳು/ ವಸತಿ ಸಮುಚ್ಚಯಗಳು/ಹಾಸ್ಟಲ್/ಪೇಯಿಂಗ್ ಗೆಸ್ಟ್ ವಸತಿಗಳು/ಶಾಲಾ ಕಾಲೇಜು ಕ್ಯಾಂಟೀನ್ ಮುಂತಾದ ಹೆಚ್ಚಿನ ಪ್ರಮಾಣದ

(ಕೊಳೆಯುವ ಅಥವಾ ಜೈವಿಕವಾಗಿ ವಿಘಟನೆ ಹೊಂದುವ) ತ್ಯಾಜ್ಯ ಉತ್ಪಾದಕರು:

ಅ. ದೊಡ್ಡ ಪಿಟ್ ಕಾಂಪೋಸ್ಟ್ ಮಾದರಿ:

ಆರು ಫೀಟ್ ಉದ್ದ, ಎರಡು ಫೀಟ್ ಅಗಲ ಮತ್ತು ಎರಡು ಫೀಟ್ ಆಳದ ಅಗತ್ಯ ಸಂಖ್ಯೆ ಗುಂಡಿಗಳನ್ನು ತೋಡಿ ದಿನಂಪ್ರತಿ ಉತ್ಪಾದನೆಯಾಗುವ ಕೊಳೆಯುವ ಅಥವಾ ಜೈವಿಕವಾಗಿ ವಿಘಟನೆ ಹೊಂದುವ ತ್ಯಾಜ್ಯವನ್ನು ಸಣ್ಣದಾಗಿ ಕೊಚ್ಚಿ ಹಾಕಬೇಕು ಮತ್ತು ಅದರ ಮೇಲೆ ತೆಳುವಾಗಿ (ತ್ಯಾಜ್ಯ ಮುಚ್ಚುವ ರೀತಿಯಲ್ಲಿ, ಸರಿಸುಮಾರು 1 ಅಥವಾ 2 ಸೆಂಟೀ ಮೀಟರ್‌ನಷ್ಟು) ಮಣ್ಣನ್ನು ಹಾಕಬೇಕು. ಇದೇರೀತಿ ಹೊಂಡ ತುಂಬುವವರವಿಗೂ ಮುಂದುವರಿಸಬೇಕು, ನಂತರ ಎರಡನೇ ಹೊಂಡ ಉಪಯೋಗಿಸಲು ಪ್ರಾರಂಭಿಸಬೇಕು. ಇದೇ ರೀತಿ ಮುಂದುವರೆಸಬೇಕು ಹಾಗೂ ಮೊದಲನೇ ಹೊಂಡದಲ್ಲಿ ತ್ಯಾಜ್ಯವು 90 ದಿವಸಗಳಲ್ಲಿ ತ್ಯಾಜ್ಯವು ಜೈವಿಕ ವಿಘಟನೆ ಹೊಂದಿ ಗೊಬ್ಬರವಾಗಿ ಮಾರ್ಪಾಡಾಗಿರುತ್ತದೆ. ಸದರಿ ಗೊಬ್ಬರವನ್ನು ಹೊರತೆಗೆದು ಮತ್ತೆ ಮೊದಲನೆಯ ಹೊಂಡವನ್ನು ಉಪಯೋಗಿಸಲು ಪ್ರಾರಂಭಿಸಬಹುದು.

ಆ. ಎರೆಹುಳು ಗೊಬ್ಬರ ಮಾದರಿ:

ಇ. ಬಯೋಮೆಥನೇಶನ್ ಘಟಕಗಳ ಮಾದರಿ:

ಉ. ವಿಂಡ್ ರೋ ಗೊಬ್ಬರ ಮಾದರಿ:

ಈ ಮೇಲಿನ ಮೂರು ವಿಧಾನಗಳಿಗೆ ದಿನಂಪ್ರತಿ ಉತ್ಪಾದನೆಯಾಗುವ ಕೊಳೆಯುವ ಅಥವಾ ಜೈವಿಕವಾಗಿ ವಿಘಟನೆ ಹೊಂದುವ ತ್ಯಾಜ್ಯ ಪ್ರಮಾಣಕ್ಕನುಗುಣವಾಗಿ ಘಟಕಗಳನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಷಯ ಪರಿಣಿತ ಸಮಾಲೋಚಕರ ಸಹಾಯ ಪಡೆದು ನಿರ್ಮಿಸಿಕೊಳ್ಳಬೇಕು. ಸದರಿ ವಿಷಯ ಪರಿಣಿತ ಸಮಾಲೋಚಕರ ವಿವರಗಳನ್ನು ಪಟ್ಟಣ ಪಂಚಾಯತ್‌ಯು ಸಹ ಪಡೆದುಕೊಳ್ಳಬಹುದು.

ಮೇಲಿನ ವಿಧಾನಗಳನ್ನು ಅನುಸರಿಸಿ ತ್ಯಾಜ್ಯ ಉತ್ಪಾದನಾ ಸ್ಥಳದಲ್ಲಿ ಗೊಬ್ಬರವನ್ನಾಗಿ ಪರಿವರ್ತಿಸುವ ಘಟಕಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಿಲ್ಲದಿದ್ದಲ್ಲಿ ವಿಂಗಡಿಸಿದ ಕೊಳೆಯುವ ತ್ಯಾಜ್ಯವನ್ನು ಇತರ ತ್ಯಾಜ್ಯಗಳೊಂದಿಗೆ ಮಿಶ್ರಣ ಮಾಡದೆ ಹಾಗೂ ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಲಕೋಟೆಯಲ್ಲಿ ಹಾಕಿ ಕಟ್ಟಿ ನೀಡದೆ, ಮುಚ್ಚುಳ ವಿರುವ ಪ್ಲಾಸ್ಟಿಕ್ ಬಕೆಟ್ ಯಾ ಇತರ ಲೋಹದ ಬಕೆಟ್‌ನಲ್ಲಿ ಶೇಖರಿಸಿಟ್ಟುಕೊಂಡು ಪಟ್ಟಣ ಪಂಚಾಯತ್‌ನ ತ್ಯಾಜ್ಯ ಸಂಗ್ರಹಣಾ ವಾಹನಕ್ಕೆ ನೀಡಬೇಕು.

2. ಕೊಳೆಯದ ಅಥವಾ ಒಣ ಮತ್ತು ಮರುಬಳಕೆ ಮಾಡಬಹುದಾದ ತ್ಯಾಜ್ಯಗಳು

ಹಾಲು, ಮೊಸರಿನ ಪ್ಯಾಕ್‌ಗಳು, ಬೆಣ್ಣೆ ಕಟ್ಟಲು ಬಳಸಲಾಗುವ ಪೇಪರ್, ತುಪ್ಪ/ಎಣ್ಣೆ ಪ್ಯಾಕ್‌ಗಳು, ಎಣ್ಣೆ ಕ್ಯಾನುಗಳು, ಸುಂಗಧ ದ್ರವ್ಯದ ಹಾಗೂ ಶಾಂಪು ಬಾಟಲಿಗಳು, ಟೆಟ್ರಾ ಪ್ಯಾಕ್‌ಗಳು, ತುಪ್ಪ, ಜಾಮ್‌ಗಳ ಶೇಖರಿಸಿದ ಅಲ್ಯೂಮೀನಿಯಂ ಕವರ್‌ಗಳು, ಆಹಾರ ಪದಾರ್ಥಗಳ ಪ್ಯಾಕಿಂಗ್ ಕವರ್/ಕಂಟೈನರ್ ಮುಂತಾದವುಗಳನ್ನು ಚೆನ್ನಾಗಿ ತೊಳೆದು ಒಣಗಿಸಿ ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪಟ್ಟಣ ಪಂಚಾಯತ್‌ನ ಕಸ ಸಂಗ್ರಹಕ ವಾಹನಕ್ಕೆ ವಾರಕ್ಕೆ ಒಂದು ಬಾರಿ ನೀಡಿ.

ನೆಲವರೆಸುವ ಕೋಲು ಮತ್ತು ಬಟ್ಟೆ, ಜೀರ್ಣಾವಸ್ಥೆಗೆ ತಲುಪಿದ ಕಾಲು ವರೆಸುವ ಮ್ಯಾಟ್‌ಗಳು, ಪಾಯಿಕಾನೆ ತೊಳೆಯಲು ಉಯೋಗಿಸಿದ ಬ್ರಶ್‌ಗಳು, ಸ್ಕಬ್ಬರ್‌ಗಳು, ಹಲ್ಲಿನ ಬ್ರಶ್‌ಗಳು ಮುಂತಾದವುಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪಟ್ಟಣ ಪಂಚಾಯತ್‌ನ ಕಸ ಸಂಗ್ರಹಕ ವಾಹನಕ್ಕೆ ವಾರಕ್ಕೆ ಒಂದು ಬಾರಿ ನೀಡಿ.

ಉಪಯೋಗಿಸಿದ ಟ್ಯೂಬ್, ಶೇವಿಂಗ್ ಕ್ರೀಮ್ ಕ್ಯಾನ್‌ಗಳು, ಲೇದರ್, ರೇಕ್ಸಿನ್, ರಬ್ಬರ್, ಪೀಠೋಪಕರಣಗಳು, ಥರ್ಮಕೋಲ್ ಒಡೆದ ಆಟಿಕೆಗಳು, ಹಳೆಯ ಪೊರಕೆಗಳು, ಟಿನ್ ಬಾಟಲಿಗಳು, ಪೆಪ್ಸಿ ಕ್ಯಾನ್‌ಗಳು, ಬಿಸ್ಲೇರಿ ಬಾಟಲಿಗಳು, ಶೂ ಗಳು, ಒಳಗೆ ಬೆಳ್ಳಿ ಲೈನಿಂಗ್ ಕವರ್ಸ್ ಲೇ ಪ್ಯಾಕೆಟ್ಸ್ ಮುಂತಾದವುಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪಟ್ಟಣ ಪಂಚಾಯತ್‌ನ ಕಸ ಸಂಗ್ರಹಕ ವಾಹನಕ್ಕೆ ವಾರಕ್ಕೆ ಒಂದು ಬಾರಿ ನೀಡಿ.

ಮರುಬಳಕೆ ಮಾಡಬಹುದಾದ ತ್ಯಾಜ್ಯಗಳು

ಗೃಹೋಪಯೋಗಿ ಪ್ಲಾಸ್ಟಿಕ್ ವಸ್ತುಗಳು, ಹೊಸ ಪತ್ರಿಕೆ, ಹಳೆ ಪೋಸ್ಟ್‌ಗಳು, ಪತ್ರಿಕೆಯ ತುಂಡುಗಳು, ದಿನಸಿ ವಸ್ತುಗಳನ್ನು ಬಳಸಲು ಉಪಯೋಗಿಸುವ ಪ್ಲಾಸ್ಟಿಕ್ ಕವರ್‌ಗಳು, ಬಿಸ್ಲೇರಿ ಬಾಟಲಿಗಳು, ಒಡೆದ ಗ್ಲಾಸುಗಳು ಮುಂತಾದವುಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪಟ್ಟಣ ಪಂಚಾಯತ್‌ನ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿಗೆ ಒಂದು ಬಾರಿ ನೀಡಿ ಅಥವಾ ನೇರವಾಗಿ ಗುಜುರಿ ಅಂಗಡಿಯವರಿಗೆ ನೀಡಿ.

೨೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೯, ೨೦೧೮ ಭಾಗ ೬

ಗೃಹೋಪಯೋಗಿ ಅಪಾಯಕಾರಿ ತ್ಯಾಜ್ಯ

ಕೀಟ ನಾಶಕ ಬಾಟಲಿಗಳು, ಸೋಪ್‌ಗಳ ಹೊರ ಕವಚಗಳು, ರೇಜರ್/ರೇಜರ್ ಬ್ಲೇಡ್, ಕ್ರೇಡಿಟ್/ಡೆಬಿಟ್/ಲೋಯಲ್ಟಿ ಕಾರ್ಡ್, ಮ್ಯಾಗ್ನೇಟಿಕ್ ಸ್ಟ್ರೀಪ್, ಯಾವುದೇ ವೈದ್ಯಕೀಯ ನೈರ್ಮಲ್ಯಗಳಿಗೆ ಬಳಸಲಾಗುವ ಟಿಶ್ಯೂ ಪೆಪರ್‌ಗಳು, ಸೊಳ್ಳೆ ನಿವಾರಕ ದ್ರವ ಬಾಟಲಿಗಳು, ಮ್ಯಾಟ್‌ಗಳು, ಓಡೋನಿಲ್‌ಗಳು, ತುಟಿಗಳಿಗೆ ಹಚ್ಚುವ ಬಣ್ಣಗಳು, ಉಗುರುಗಳಿಗೆ ಹಚ್ಚುವ ಬಣ್ಣಗಳು, ಸೌಂದರ್ಯವರ್ಧಕಗಳು ಅವಧಿ ಮುಗಿದ ಔಷಧಿಗಳು ಮುಂತಾದವುಗಳು.

ತಂತಿಗಳ ತುಣುಕುಗಳು, ಹಳೆಯ ಎಲೆಕ್ಟ್ರಾನಿಕ್ ಭಾಗಗಳು, ಹಳೆ ಪೋನ್‌ಗಳು, ಅಡಾಪ್ಟರ್ಸ್, ಬ್ಲೂ ಟೂತ್ ಪರಿವರ್ತಕಗಳು, ಬ್ಯಾಟರಿಗಳು, ಸಿಡಿಗಳು, ಸಿ.ಎಫ್.ಎಲ್. ಟ್ಯೂಬ್ ಲೈಟ್‌ಗಳು, ಮುದ್ರಕ ಕ್ಯಾಟ್ರೀಜ್‌ಗಳು, ಹಾಳಾದ ಗಡಿಯಾರ, ಕೈ ಗಡಿಯಾರ, ಇಲೆಕ್ಟ್ರಾನಿಕ್ ವಸ್ತುಗಳು, ಹಾಳಾದ ಉಷ್ಣ ಮಾಪಕಗಳು ಮುಂತಾದ ಇ-ತ್ಯಾಜ್ಯಗಳು ಮುಂತಾದವುಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿಟ್ಟುಕೊಂಡು ಪಟ್ಟಣ ಪಂಚಾಯತ್‌ನ ಕಸ ಸಂಗ್ರಹಕ ವಾಹನಕ್ಕೆ ತಿಂಗಳಿಗೆ ಒಂದು ಬಾರಿ ನೀಡಿ.

ಅನುಬಂಧ-5

ಮನೆಗಳಲ್ಲಿ ಉತ್ಪಾದನೆಯಾಗುವ ನೈರ್ಮಲ್ಯ/ವೈದ್ಯಕೀಯ ತ್ಯಾಜ್ಯ

1. ಮನೆಗಳು:

ಉಯೋಗಿಸಿದ ಸ್ಯಾನಿಟರಿ ನ್ಯಾಪ್‌ಕಿನ್‌ಗಳು (ಸದ್ರಿ ಸ್ಯಾನಿಟರಿ ವಸ್ತುಗಳ ತಯಾರಕರು ಯಾ ಸದ್ರಿ ಬ್ರಾಂಡ್ ಮಾಲೀಕರು ನೀಡುವಂತಹ ಪೌಚ್ ಯಾ ಹಳೆಯ ದಿನಪತ್ರಿಕೆಯಲ್ಲಿ ಸುತ್ತಿ), ಒಳ ಉಡುಪಿನ ಬಟ್ಟೆ ಮುಂತಾದವುಗಳು, ಉಪಯೋಗಿಸಿದ ಕಾಂಡೋಂಗಳು, ಉಪಯೋಗಿಸಿದ ಸಿರೇಂಜ್‌ಗಳು, ಉಪಯೋಗಿಸಿದ ಹತ್ತಿ ಬೈಂಡೇಜ್‌ಗಳು, ಯಾವುದೇ ತುಂಡು ಬಟ್ಟೆ, ರಕ್ತವಿರುವ ಕಾಗದ ಅಥವಾ ಯಾವುದೇ ಔಷಧಿಗಳು ಅಥವಾ ನೈರ್ಮಲ್ಯ ತ್ಯಾಜ್ಯಗಳು, ವೈದ್ಯಕೀಯ ನೈರ್ಮಲ್ಯಗಳಿಗೆ ಬಳಸಲಾಗುವ ಟಿಶ್ಯೂ ಪೆಪರ್‌ಗಳು ಮುಂತಾದವುಗಳನ್ನು ಪೇಪರ್‌ನಲ್ಲಿ ಸುತ್ತಿ ಮೇಲೆ ಕೆಂಪು ಶಾಯಿಂದ ದೊಡ್ಡದಾಗಿ (X) ಗುರುತು ಹಾಕಿ ಪ್ರತ್ಯೇಕವಾಗಿ ಪಟ್ಟಣ ಪಂಚಾಯತ್‌ನ ಕಸ ಸಂಗ್ರಹಕ ವಾಹನಕ್ಕೆ ನೀಡಿ.

2. ವಸತಿ ಸಂಕೀರ್ಣ/ಹಾಸ್ಟಲ್/ಶೈಕ್ಷಣಿಕ ಸಂಸ್ಥೆ ಮುಂತಾದವುಗಳು

ವಸತಿ ಸಂಕೀರ್ಣ/ಹಾಸ್ಟಲ್/ಶೈಕ್ಷಣಿಕ ಸಂಸ್ಥೆ ಮುಂತಾದ ಹೆಚ್ಚಿನ ಪ್ರಮಾಣದ ನೈರ್ಮಲ್ಯ ತ್ಯಾಜ್ಯ ಉತ್ಪಾದಕರು ತಮ್ಮಲ್ಲಿಯೇ ನ್ಯಾಪ್‌ಕಿನ್ ಇನ್‌ಸಿನರೇಟರ್/ ನ್ಯಾಪ್‌ಕಿನ್ ಡೆಸ್ಟ್ರಾಯರರ್‌ಗಳನ್ನು ಸ್ಥಾಪಿಸಿಕೊಂಡು ಅದರಿಂದ ಉತ್ಪಾದನೆಯಾಗುವ ಬೂದಿಯನ್ನು ಮಾತ್ರ ಪೇಪರ್‌ನಲ್ಲಿ ಸುತ್ತಿ ಮೇಲೆ ಕೆಂಪು ಶಾಯಿಂದ ದೊಡ್ಡದಾಗಿ (X) ಗುರುತು ಹಾಕಿ ಪ್ರತ್ಯೇಕವಾಗಿ ಪಟ್ಟಣ ಪಂಚಾಯತ್‌ನ ಕಸ ಸಂಗ್ರಹಕ ವಾಹನಕ್ಕೆ ನೀಡುವುದು.

ಅನುಬಂಧ -6 (ದಂಡಗಳ ಅನುಬಂಧ)

ಕ್ರ.ಸಂ ಉಪಕಾನೂನು ಸ ಂಖ್ಯೆ ಉಪಕಾನೂನಿನ ವಿವರಣೆ ಉಪಕಾನೂನನ್ನು ಉಲ್ಲಂಘಿಸಿದಲ್ಲಿ ಅನ್ವಯಿಸುವ ದಂಡದ ಪ ಮಾಣ ್ರ
1 4.0 ಘ ನ ತ್ಯಾಜ್ಯವನ್ನು ಈ ಉಪಕಾನೂನಿನಲ್ಲಿ ವಿವರಿಸಿದಂತೆ ವಿಂಗಡಣೆ ಮಾಡಿ ನೀಡದೆ ಮಿಶ್ರಣ ತ್ಯಾಜ್ಯವನ್ನು ಸ ಂಗ್ರಹಕಾರರಿಗೆ ನೀಡುವುದು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 10/- 2ನೇ ಬಾರಿ – ರೂ. 20/- 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 500 2ನೇ ಬಾರಿ – ರೂ. 1,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ
2 ಸ್ಯಾನಿಟರಿ/ವೈದ್ಯಕೀಯ ತ್ಯಾಜ್ಯ ವಿಲೇವಾರಿ ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100/- 2ನೇ ಬಾರಿ – ರೂ. 200/- 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ.1000 2ನೇ ಬಾರಿ – ರೂ. 2000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ
3 ಉದ್ಯಾನ ಮತ್ತು ತೋಟಗಾರಿಕೆಯ ತ್ಯಾಜ್ಯ ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100/- 2ನೇ ಬಾರಿ – ರೂ. 200/- 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
4 4.1.2 ಮೀನು ಕೋಳಿ ಮತ್ತು ಮಾಂಸದ ತ್ಯಾಜ್ಯವನ್ನು ನಿಗದಿಪಡಿಸಿದಂತೆ ಬೇರ್ಪಡಿಸದೆ ವಿಲೇವಾರಿ ವ iಾಡುವುದು (ಮನೆಯ ತ್ಯಾಜ್ಯ ಹೊರತುಪಡಿಸಿ) ಪ ತಿ ಅಪರಾಧಕ್ಕೆ ರೂ. 5000 ್ರ
5 4.2 ಎ) ಪ್ರತ್ಯೇಕ ತ್ಯಾಜ್ಯ ಸಂಗ್ರಹಗಳು ಇಲ್ಲದ ವ iಾರಾಟಗಾರರ/ತಿರುಗು ಮಾರಾಟಗಾರ ಬಿ) ನಿಗದಿಪಡಿಸಿದಂತೆ ತ್ಯಾಜ್ಯವನ್ನು ಬೇರ್ಪಡಿಸದೇ ವಿಲೇವಾರಿ ಮಾಡುವ ಮಾರಾಟಗಾರರ/ ತಿರುಗು ವ iಾರಾಟಗಾರ ರೂ. 1000
6 5.1 ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವುದು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
7 5.2 ಯಾವುದೇ ಖಾಸಗೀ ಸ್ಥಳದಲ್ಲಿ/ ಜಾಗದಲ್ಲಿ/ ಪ ದ ್ರ ೕಶಗಳಲ್ಲಿ ಮೇಲೆ ಕಸ ಹಾಕುವುದು ೆ ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
8 5.3 ವಾಹನಗಳಿಂದ ಕಸ ಎಸೆಯುವುದು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
9 5.4 ಸಾರ್ವಜನಿಕ ತೊಂದರೆ ಉಂಟುಮಾಡುವುದು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
10 5.5 ಸಾಕಿದ/ಒಡೆತನದ ಪ್ರಾಣಿಗಳ ಕಸ ಅಥವಾ ಗಲೀಜು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
11 5.6 ಸ ್ವಚ್ಛ ಆವರಣ ಖಾತ್ರಿಪಡಿಸುವುದು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
12 6.1 ಸಾರ್ವಜನಿಕ ಸಭೆ/ ಕಾರ್ಯಕ್ರಮಗಳು ನಡೆದ ಪ್ರದೇಶ ಸ ್ವಚ್ಛಗೊಳಿಸದಿದ್ದಲ್ಲಿ ಸ ್ವಚ್ಛತಾ ಠೇವಣಿಯನ್ನು ಮುಟ್ಟುಗೋಲು ಹಾಕುವುದು ಹಾಗೂ ರೂ. 10,000 ದಿಂದ 50,000 ವರೆಗೆ ದಂಡ
13 6.2 ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ದಿನಾಂಕ ರಂತೆ ನಿಷೇಧಿತ ಪ್ಲಾಸ್ಟಿಕ್ ಚೀಲ/ವಸ್ತುಗಳ ಮಾರಾಟ ಯಾ ಬಳಕೆ. 1ನೇ ಬಾರಿ – ರೂ.1000 2ನೇ ಬಾರಿ - ರೂ. 2000 3ನೇ ಬಾರಿ – ದ್ವಿಗುಣ ಮತ್ತು ಮುಂದುವರೆಯುತ್ತದೆ
ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೯, ೨೦೧೮ ೨೩೫ ೨೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೯, ೨೦೧೮ ಭಾಗ ೬

ಮುಖ್ಯಾಧಿಕಾರಿ

ಪಟ್ಟಣ ಪಂಚಾಯತ್, ಸಾಲಿಗ್ರಾಮ

ಉಡುಪಿ ಜಿಲ್ಲೆ

ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಸ್ತುಗಳ ಸಂಸ್ಕರಣಾ 2016 ರ ನಿಯಮಗಳನ್ನು ಅಳವಡಿಸಿಕೊಂಡು

ಅನುಷ್ಟಾನಗೊಳಿಸುವ ಕುರಿತು

ಕ್ರ.ಸಂ ಉಪಕಾನೂನು ಸ ಂಖ್ಯೆ ಉಪಕಾನೂನಿನ ವಿವರಣೆ ಉಪಕಾನೂನನ್ನು ಉಲ್ಲಂಘಿಸಿದಲ್ಲಿ ಅನ್ವಯಿಸುವ ದಂಡದ ಪ ಮಾಣ ್ರ
1 4.0 ಘ ನ ತ್ಯಾಜ್ಯವನ್ನು ಈ ಉಪಕಾನೂನಿನಲ್ಲಿ ವಿವರಿಸಿದಂತೆ ವಿಂಗಡಣೆ ಮಾಡಿ ನೀಡದೆ ಮಿಶ್ರಣ ತ್ಯಾಜ್ಯವನ್ನು ಸ ಂಗ್ರಹಕಾರರಿಗೆ ನೀಡುವುದು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 10/- 2ನೇ ಬಾರಿ – ರೂ. 20/- 3ನೇ ಬಾರಿ -ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 500 2ನೇ ಬಾರಿ – ರೂ. 1,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ
2 ಸ್ಯಾನಿಟರಿ/ವೈದ್ಯಕೀಯ ತ್ಯಾಜ್ಯ ವಿಲೇವಾರಿ ಎ) ಒಬ್ಬ ವ್ಯಕ್ತಿ/ ಒಂದು ಮನೆ 1ನೇ ಬಾರಿ – ರೂ. 100/- 2ನೇ ಬಾರಿ – ರೂ. 200/- 3ನೇ ಬಾರಿ -ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ.1000 2ನೇ ಬಾರಿ – ರೂ. 2000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ
3 ಉದ್ಯಾನ ಮತ್ತು ತೋಟಗಾರಿಕೆಯ ತ್ಯಾಜ್ಯ ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100/- 2ನೇ ಬಾರಿ – ರೂ. 200/- 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
4 4.1.2 ಮೀನು ಕೋಳಿ ಮತ್ತು ಮಾಂಸದ ತ್ಯಾಜ್ಯವನ್ನು ನಿಗದಿಪಡಿಸಿದಂತೆ ಬೇರ್ಪಡಿಸದೆ ವಿಲೇವಾರಿ ವ iಾಡುವುದು (ಮನೆಯ ತ್ಯಾಜ್ಯ ಹೊರತುಪಡಿಸಿ) ಪ ತಿ ಅಪರಾಧಕ್ಕೆ ರೂ. 5000 ್ರ
5 4.2 ಎ) ಪ್ರತ್ಯೇಕ ತ್ಯಾಜ್ಯ ಸಂಗ್ರಹಗಳು ಇಲ್ಲದ ವ iಾರಾಟಗಾರರ/ತಿರುಗು ಮಾರಾಟಗಾರ ಬಿ) ನಿಗದಿಪಡಿಸಿದಂತೆ ತ್ಯಾಜ್ಯವನ್ನು ಬೇರ್ಪಡಿಸದೇ ವಿಲೇವಾರಿ ಮಾಡುವ ಮಾರಾಟಗಾರರ/ ತಿರುಗು ವ iಾರಾಟಗಾರ ರೂ. 1000
6 5.1 ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವುದು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
7 5.2 ಯಾವುದೇ ಖಾಸಗೀ ಸ್ಥಳದಲ್ಲಿ/ ಜಾಗದಲ್ಲಿ/ ಪ ದ ್ರ ೕಶಗಳಲ್ಲಿ ಮೇಲೆ ಕಸ ಹಾಕುವುದು ೆ ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೯, ೨೦೧೮ ೨೩೭

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೨೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೯, ೨೦೧೮ ಭಾಗ ೬
ಕ್ರ.ಸಂ ಉಪಕಾನೂನು ಸ ಂಖ್ಯೆ ಉಪಕಾನೂನಿನ ವಿವರಣೆ ಉಪಕಾನೂನನ್ನು ಉಲ್ಲಂಘಿಸಿದಲ್ಲಿ ಅನ್ವಯಿಸುವ ದಂಡದ ಪ ಮಾಣ ್ರ
8 5.3 ವಾಹನಗಳಿಂದ ಕಸ ಎಸೆಯುವುದು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
9 5.4 ಸಾರ್ವಜನಿಕ ತೊಂದರೆ ಉಂಟುಮಾಡುವುದು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
10 5.5 ಸಾಕಿದ/ಒಡೆತನದ ಪ್ರಾಣಿಗಳ ಕಸ ಅಥವಾ ಗಲೀಜು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
11 5.6 ಸ ್ವಚ್ಛ ಆವರಣ ಖಾತ್ರಿಪಡಿಸುವುದು ಎ) ಒಬ್ಬ ವ್ಯಕ್ತಿ / ಒಂದು ಮನೆ 1ನೇ ಬಾರಿ – ರೂ. 100 2ನೇ ಬಾರಿ – ರೂ. 200 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ. ಬಿ ) ದೊಡ್ಡ ಪ್ರಮಾಣದ ತ್ಯಾಜ್ಯ ಉತ್ಪಾದಕರು 1ನೇ ಬಾರಿ – ರೂ. 5000 2ನೇ ಬಾರಿ – ರೂ. 10,000 3ನೇ ಬಾರಿ - ದ್ವಿಗುಣ ಮತ್ತು ಮುಂದುವರೆಯುತ್ತದೆ.
12 6.1 ಸಾರ್ವಜನಿಕ ಸಭೆ/ ಕಾರ್ಯಕ್ರಮಗಳು ನಡೆದ ಪ್ರದೇಶ ಸ ್ವಚ್ಛಗೊಳಿಸದಿದ್ದಲ್ಲಿ ಸ ್ವಚ್ಛತಾ ಠೇವಣಿಯನ್ನು ಮುಟ್ಟುಗೋಲು ಹಾಕುವುದು ಹಾಗೂ ರೂ. 10,000 ದಿಂದ 50,000 ವರೆಗೆ ದಂಡ
13 6.2 ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ದಿನಾಂಕ ರಂತೆ ನಿಷೇಧಿತ ಪ್ಲಾಸ್ಟಿಕ್ ಚೀಲ/ವಸ್ತುಗಳ ಮಾರಾಟ ಯಾ ಬಳಕೆ. 1ನೇ ಬಾರಿ – ರೂ.1000 2ನೇ ಬಾರಿ - ರೂ. 2000 3ನೇ ಬಾರಿ – ದ್ವಿಗುಣ ಮತ್ತು ಮುಂದುವರೆಯುತ್ತದೆ

PD - 14

ಮುಖ್ಯಾಧಿಕಾರಿ

SC - 05

ಪಟ್ಟಣ ಪಂಚಾಯತ್, ಸಾಲಿಗ್ರಾಮ

ಉಡುಪಿ ಜಿಲ್ಲೆ

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59

Cite this issue. Karnataka Gazette, Government of Karnataka, 29 March 2018. Indian Gazettes, https://egazette.servantsofknowledge.in/details/in.gazette.karnataka_new.2018-03-29.Part-6/. Archive identifier in.gazette.karnataka_new.2018-03-29.Part-6.