Servants of Knowledge
Karnataka Gazette · Government of Karnataka

Karnataka Gazette, Part Part-1, 05 April 2018

Published 05 April 2018

Part
Part-1
Identifier
in.gazette.karnataka_new.2018-04-05.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಏಪ್ರಿಲ್ ೫, ೨೦೧೮ (ಚೈತ್ರ ೧೫, ಶಕ ವರ್ಷ ೧೯೪೦)

Bengaluru, Thursday, April 5, 2018 (Chaithra 15, Shaka Varsha 1940)

ಸಂಚಿಕೆ ೧೪

Issue 14

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಂದಾಯ ಸಚಿವಾಲಯ

ವಿಷಯ : ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕು, ಶಿರಸಿಯಲ್ಲಿರುವ ಶ್ರೀ ಗೌರೇಶ್ವರ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಕುರಿತು.

ಓದಲಾಗಿದೆ : 1) ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 87 ಮುಆಬಿ 2012, ದಿನಾಂಕ: 29-09-2012.

2) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ: ಎಡಿಎಂ 5 ಸಿಆರ್12/2017-18,

ದಿನಾಂಕ: 29-01-2018.

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ಸರ್ಕಾರದ ಅಧಿಸೂಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕು, ಶಿರಸಿಯಲ್ಲಿರುವ ಶ್ರೀ ಗೌರೇಶ್ವರ ದೇವಸ್ಥಾನವನ್ನು ಪುಟ ಸಂಖ್ಯೆ: (767)ರ ಕ್ರಮ ಸಂಖ್ಯೆ: (09)ರಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾಗಿರುತ್ತದೆ.

ಮೇಲೆ (2)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ, ಶಿರಸಿ ಶ್ರೀ ಗೌರೇಶ್ವರ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಕುರಿತು ಅಧ್ಯಕ್ಷರು, ಶ್ರೀ ಗೌರೇಶ್ವರ ದೇವಸ್ಥಾನ (ರಿ), ಶಿರಸಿ, ಉತ್ತರ ಕನ್ನಡ ಜಿಲ್ಲೆ ಇವರು ದಿನಾಂಕ: 31-05-2017ರಂದು ಮನವಿ ನೀಡಿದ್ದು, ಸದರಿ ಮನವಿಯ ಕುರಿತು ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ ಇವರಿಂದ ದಿನಾಂಕ: 16-06-2017ರ ಪತ್ರದಲ್ಲಿ ವರದಿ ಕೋರಲಾಗಿದ್ದು, ಈತನ್ಮಧ್ಯೆ ದಿನಾಂಕ: 28-06-2017ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಸದರಿ ವಿಷಯವನ್ನು ಮಂಡಿಸಲಾಗಿದ್ದು, ವಿಚಾರದ ಕುರಿತು ಚರ್ಚಿಸಲಾಗಿ ಸ್ವೀಕೃತವಾಗಿರುವ ಅರ್ಜಿಯ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಅಗತ್ಯ ದಾಖಲೆಗಳೊಂದಿಗೆ ವರದಿಯನ್ನು ಪಡೆದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿರುತ್ತದೆ. ಅದರಂತೆ ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ ಇವರು ತಮ್ಮ ವರದಿಯಲ್ಲಿ ಶ್ರೀ ಗೌರೇಶ್ವರ ದೇವಸ್ಥಾನವು ಮುಂಬೈ ಪಬ್ಲಿಕ್ ಟ್ರಸ್ಟ್ ಕಾಯ್ದೆ 1950ರನ್ವಯ ನೋಂದಣಿಯಾಗಿದ್ದು ಹಿಂದಿನ ಕಾಲದಿಂದಲೂ ಲಿಂಗಾಯತ ಜಾತಿಯವರಿಂದ ಸ್ಥಾಪಿತಗೊಂಡು ಈವರೆಗೂ ಲಿಂಗಾಯತ ಜಾತಿಯವರ ಆಡಳಿತದಲ್ಲಿಯೇ ಮುಂದುವರೆದುಕೊಂಡು ಬಂದಿರುತ್ತದೆ. ದೇವಸ್ಥಾನದ ಆಡಳಿತ, ಪೂಜೆ ಮುಂತಾದವುಗಳಿಗೆ ಸಂಬಧಿಸಿದ ಖರ್ಚು ವೆಚ್ಚವನ್ನು ದೇವಸ್ಥಾನದ ಸಂಪನ್ಮೂಲದಿಂದಲೇ ಭರಿಸಲಾಗುತ್ತಿದ್ದು, ಸರ್ಕಾರದಿಂದ ಯಾವುದೇ ಸಹಾಯಧನವನ್ನಾಗಲೀ ಅಥವಾ ತಸ್ಥೀಕ್ ಹಣವನ್ನಾಗಲೀ ಪಡೆದಿರುವುದಿಲ್ಲ. ಆದುದರಿಂದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಕಲಂ 1(4)(ii) ರಡಿಯಲ್ಲಿ ಈ ದೇವಸ್ಥಾನವನ್ನು ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿರುತ್ತಾರೆ.

ಜಿಲ್ಲಾಧಿಕಾರಿಯವರ ಪ್ರಸ್ತಾವನೆಯ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಿಕ ಸದಸ್ಯರ ಅಭಿಪ್ರಾಯವನ್ನು ಪಡೆಯಲಾಗಿದ್ದು, ಪ್ರಸ್ತಾಪಿತ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ ಸೂಕ್ತ ತೀರ್ಮಾನವನ್ನು ಕೈಗೊಳ್ಳುವ ಕುರಿತು ನ್ಯಾಯಾಧೀಕರಣಕ್ಕೆ ವಹಿಸುವಂತೆ ಅಭಿಪ್ರಾಯವನ್ನು ನೀಡಿರುತ್ತಾರೆ. ಸದರಿ ಅಭಿಪ್ರಾಯವನ್ನು ದಿ: 17-01-2018ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ಮುಂದೆ ಮಂಡಿಸಲಾಗಿರುತ್ತದೆ. ಆದುದರಿಂದ ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕು, ಶಿರಸಿಯಲ್ಲಿರುವ ಶ್ರೀ ಗೌರೇಶ್ವರ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಕುರಿತು ಸರ್ಕಾರದ ಆದೇಶ ಕೋರಿ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

(೩೦೭)೩೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

ಸರ್ಕಾರದ ಆದೇಶ ಸಂಖ್ಯೆ : ಕಂಇ 22 ಮುಆಬಿ 2018, ಬೆಂಗಳೂರು, ದಿನಾಂಕ : 17ನೇ ಫೆಬ್ರವರಿ, 2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕು, ಶಿರಸಿಯಲ್ಲಿರುವ ಶ್ರೀ ಗೌರೇಶ್ವರ ದೇವಸ್ಥಾನವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ, 1997ರ ಸೆಕ್ಷನ್ 1(4)(ii)ರನ್ವಯ ಸರ್ಕಾರದ ಅಧಿಸೂಚನೆಯಲ್ಲಿನ ಪುಟ ಸಂಖ್ಯೆ: (767)ರ ಕ್ರಮ ಸಂಖ್ಯೆ: (09) ರಲ್ಲಿನ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸಿದೆ.

PR – 120

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25

ಎಂ. ತಿಪ್ಪೀರಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)

ಕಂದಾಯ ಇಲಾಖೆ (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ : ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕು, ಶಿರಸಿ ಶ್ರೀ ವೀರಭದ್ರೇಶ್ವರ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಕುರಿತು.

ಓದಲಾಗಿದೆ : 1) ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 87 ಮುಆಬಿ 2012, ದಿನಾಂಕ: 29-09-2012.

2) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ: ಎಡಿಎಂ 5 ಸಿಆರ್11/2017-18, ದಿನಾಂಕ: 29-01-2018.

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ಸರ್ಕಾರದ ಅಧಿಸೂಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕು, ಶಿರಸಿ ಶ್ರೀ ವೀರಭದ್ರೇಶ್ವರ ದೇವಸ್ಥಾನವನ್ನು ಪುಟ ಸಂಖ್ಯೆ: (767)ರ ಕ್ರಮ ಸಂಖ್ಯೆ: (22)ರಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾಗಿರುತ್ತದೆ.

ಮೇಲೆ (2)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ, ಶಿರಸಿ ಶ್ರೀ ವೀರಭದ್ರೇಶ್ವರ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಕುರಿತು ಅಧ್ಯಕ್ಷರು, ಶ್ರೀ ವೀರಭದ್ರೇಶ್ವರ ದೇವಸ್ಥಾನ (ರಿ), ಶಿರಸಿ, ಉತ್ತರ ಕನ್ನಡ ಜಿಲ್ಲೆ ಇವರು ಮನವಿ ನೀಡಿದ್ದು, ಸದರಿ ಮನವಿಯ ಕುರಿತು ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ ಇವರಿಂದ ದಿನಾಂಕ: 16-06-2017ರಂದು ವರದಿ ಕೋರಲಾಗಿದ್ದು, ಈತನ್ಮಧ್ಯೆ ದಿನಾಂಕ: 28-06-2017ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಸದರಿ ವಿಷಯವನ್ನು ಮಂಡಿಸಿದ್ದು, ವಿಚಾರದ ಕುರಿತು ಚರ್ಚಿಸಲಾಗಿ ಸ್ವೀಕೃತವಾಗಿರುವ ಅರ್ಜಿಯ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಅಗತ್ಯ ದಾಖಲೆಗಳೊಂದಿಗೆ ವರದಿಯನ್ನು ಪಡೆದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿರುತ್ತದೆ.

ಅದರಂತೆ ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ ಇವರು ತಮ್ಮ ವರದಿಯಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶಿರಸಿ ಇದು ಮುಂಬೈ ಪಬ್ಲಿಕ್ ಟ್ರಸ್ಟ್ ಕಾಯ್ದೆ 1950ರನ್ವಯ ನೋಂದಣಿಯಾಗಿದ್ದು, ಹಿಂದಿನ ಕಾಲದಿಂದಲೂ ಲಿಂಗಾಯತ ಜಾತಿಯವರಿಂದ ಸ್ಥಾಪಿತಗೊಂಡು ಈವರೆಗೂ ಲಿಂಗಾಯತ ಜಾತಿಯವರ ಆಡಳಿತದಲ್ಲಿಯೇ ಮುಂದುವರೆದುಕೊಂಡು ಬಂದಿರುತ್ತದೆ. ದೇವಸ್ಥಾನದ ಆಡಳಿತ, ಪೂಜೆ, ಪುರಸ್ಕಾರ ಮುಂತಾದವುಗಳಿಗೆ ಸಂಬಂಧಿಸಿದ ಎಲ್ಲಾ ಖರ್ಚು ವೆಚ್ಚವನ್ನು ದೇವಸ್ಥಾನದ ಸಂಪನ್ಮೂಲದಿಂದಲೇ ಭರಿಸಲಾಗುತ್ತಿದ್ದು, ಸರ್ಕಾರದಿಂದ ಯಾವುದೇ ಸಹಾಯಧನವನ್ನಾಗಲೀ ಅಥವಾ ತಸ್ಥೀಕ್ ಹಣವನ್ನಾಗಲೀ ಪಡೆದಿರುವುದಿಲ್ಲ. ಆದುದರಿಂದ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಆಧಿನಿಯಮ 1997ರ ಕಲಂ 1(4)(ii)ರಡಿಯಲ್ಲಿ ಈ ದೇವಸ್ಥಾನವನ್ನು ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿರುತ್ತಾರೆ.

ಜಿಲ್ಲಾಧಿಕಾರಿಯವರ ಪ್ರಸ್ತಾವನೆಯ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಿಕ ಸದಸ್ಯರ ಅಭಿಪ್ರಾಯವನ್ನು ಪಡೆಯಲಾಗಿದ್ದು, ಪ್ರಸ್ತಾಪಿತ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ ಸೂಕ್ತ ತೀರ್ಮಾನವನ್ನು ಕೈಗೊಳ್ಳುವ ಕುರಿತು ನ್ಯಾಯಾಧೀಕರಣಕ್ಕೆ ವಹಿಸುವಂತೆ ಅಭಿಪ್ರಾಯವನ್ನು ನೀಡಿರುತ್ತಾರೆ. ಸದರಿ ಅಭಿಪ್ರಾಯವನ್ನು ದಿನಾಂಕ: 17-01-2018ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ಮಂಡಿಸಲಾಗಿರುತ್ತದೆ. ಆದುದರಿಂದ ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕು, ಶಿರಸಿ ಶ್ರೀ ವೀರಭದ್ರೇಶ್ವರ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಕುರಿತು ಸರ್ಕಾರದ ಆದೇಶ ಕೋರಿ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 24 ಮುಆಬಿ 2018, ಬೆಂಗಳೂರು, ದಿನಾಂಕ : 17ನೇ ಫೆಬ್ರವರಿ, 2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕು, ಶಿರಸಿ ಶ್ರೀ ವೀರಭದ್ರೇಶ್ವರ ದೇವಾಲಯವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ, 1997ರ ಸೆಕ್ಷನ್ 1(4)(ii)ರನ್ವಯ ಸರ್ಕಾರದ ಅಧಿಸೂಚನೆಯಲ್ಲಿನ ಪುಟ ಸಂಖ್ಯೆ: (767)ರ ಕ್ರಮ ಸಂಖ್ಯೆ: (22) ರಲ್ಲಿನ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸಿದೆ.

PR – 121

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25

ಎಂ. ತಿಪ್ಪೀರಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)

ಕಂದಾಯ ಇಲಾಖೆ (ಮುಜರಾಯಿ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೦೯

ಕಂದಾಯ ಸಚಿವಾಲಯ

ವಿಷಯ : ಉತ್ತರ ಕನ್ನಡ ಜಿಲ್ಲೆ, ಯಲ್ಲಾಪುರ ತಾಲ್ಲೂಕು, ಚಂದಗುಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಕುರಿತು.

ಓದಲಾಗಿದೆ : 1) ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 87 ಮುಆಬಿ 2012, ದಿನಾಂಕ: 29-09-2012.

2) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ: ಎಡಿಎಂ 5 ಸಿಆರ್102/2012-13, ದಿನಾಂಕ: 29-01-2018.

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ಸರ್ಕಾರದ ಅಧಿಸೂಚನೆಯಲ್ಲಿ ಉತ್ತರ ಕನ್ನಡ ಜಿಲ್ಲೆ, ಯಲ್ಲಾಪುರ ತಾಲ್ಲೂಕು, ಚಂದಗುಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನವನ್ನು ಪಟ ಸಂಖ್ಯೆ: (760)ರ ಕ್ರಮ ಸಂಖ್ಯೆ: (42)ರಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾಗಿರುತ್ತದೆ.

ಮೇಲೆ (2)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ, ಯಲ್ಲಾಪುರ ತಾಲ್ಲೂಕು, ಚಂದಗುಳಿ ಶ್ರೀ ಸಿದ್ದವಿನಾಯಕ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಕುರಿತು ಶ್ರೀ ವೆಂಕಟರಮಣ ಸುಬ್ರಾಯಭಟ್ ಶ್ರೀ ಸಿದ್ದಿವಿನಾಯಕ ದೇವಸ್ಥಾನ ಟ್ರಸ್ಟ್, ಚಂದಗುಳಿ, ಯಲ್ಲಾಪುರ ಇವರು ದಿನಾಂಕ: 20-03-2013ರಂದು ಮನವಿಯನ್ನು ಸಲ್ಲಿಸಿದ್ದು, ಸದರಿ ಮನವಿಯ ಕುರಿತು ಜಿಲ್ಲಾಧಿಕಾರಿಗಳು ಉತ್ತರ ಕನ್ನಡ ಜಿಲ್ಲೆ ಇವರಿಂದ ದಿ: 18-04-2013ರ ಪತ್ರದಲ್ಲಿ ವರದಿ ಕೋರಲಾಗಿತ್ತು.

ಜಿಲ್ಲಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆ ಇವರು ತಮ್ಮ ವರದಿಯಲ್ಲಿ ಉಪವಿಭಾಗಾಧಿಕಾರಿ, ಶಿರಸಿ ಉಪವಿಭಾಗ ಇವರು ಸಲ್ಲಿಸಿರುವ ವರದಿಯಲ್ಲಿ ಚಂದಗುಳಿ ಶ್ರೀ ಸಿದ್ದಿವಿನಾಯಕ ದೇವಾಲಯವು ಬಿ.ಪಿ.ಟಿ. ಕಾಯ್ದೆ 1950 ರಡಿಯಲ್ಲಿ ನೋಂದಣಿಯಾಗಿದ್ದು, ಸದರಿ ದೇವಸ್ಥಾನವನ್ನು ಹವ್ಯಕ ಬ್ರಾಹ್ಮಣ ಸಮಾಜದಿಂದಲೇ ಸ್ಥಾಪಿತಗೊಂಡು, ಅವರೇ ಅಭಿವೃದ್ಧಿಪಡಿಸಿಕೊಂಡು, ಆಡಳಿತ ನಡೆಸಿಕೊಂಡು ಬಂದಿರುವುದಾಗಿ ಹಾಗೂ ಈ ದೇವಾಲಯದ ಪೂಜಾ ವಿನಿಯೋಗವನ್ನು ನಿರಂತರವಾಗಿ ನಡೆಸಿಕೊಂಡು ಬರಲು ಸೋಂದ ಅರಸರು 10 ಎಕರೆ ಭೂಮಿಯನ್ನು ಉಂಬಳಿಯಾಗಿ ನೀಡಿದ್ದು, ಸದರಿ ದೇವಾಲಯವು ಶ್ರೀ ಸ್ವರ್ಣವಲ್ಲಿ ಸೋಂದಾ ಮಹಾಸಂಸ್ಥಾನದ ಐತಿಹಾಸಿಕ ದಾಖಲೆಯಲ್ಲಿ ನಮೂದಾಗಿರುತ್ತದೆ. ಸದರಿ ದೇವಸ್ಥಾನವನ್ನು ಮಠದ ಸೇವಾ ವ್ಯಾಪ್ತಿಯಲ್ಲಿ ನಡೆಸಿಕೊಂಡು ಬರುತ್ತಿರುವುದಾಗಿಯೂ, ಸದರಿ ದೇವಸ್ಥಾನವನ್ನು ಕಾಯ್ದೆಯ ಸೆಕ್ಷನ್ 1(4)(ii)ರನ್ವಯ ರಡಿಯಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಲು ಧಾರ್ಮಿಕ ದತ್ತಿ ಆಯುಕ್ತರು ಇವರ ಹಂತದಲ್ಲಿ ನಿರ್ಣಯಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಕೋರಿರುತ್ತಾರೆ.

ಈತನ್ಮಧ್ಯೆ ದಿನಾಂಕ: 28-06-2017ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯಲ್ಲಿ ವಿಷಯವು ಮಂಡಿಸಲಾಗಿದ್ದು, ವಿಚಾರದ ಕುರಿತು ಚರ್ಚಿಸಲಾಯಿತು. ಸದರಿ ಸಭೆಯಲ್ಲಿ ಸ್ವೀಕೃತವಾಗಿರುವ ಅರ್ಜಿಯ ಬಗ್ಗೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಅಗತ್ಯ ದಾಖಲೆಗಳೊಂದಿಗೆ ವರದಿಯನ್ನು ಪಡೆದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಗಿರುತ್ತದೆ. ಅದರಂತೆ ಜಿಲ್ಲಾಧಿಕಾರಿಗಳಿಗೆ ದಿ: 08-08-2017ರಂದು ಪತ್ರವನ್ನು ಬರೆಯಲಾಗಿದ್ದು, ಸದರಿಯವರು ಈಗಾಗಲೇ ವರದಿಯನ್ನು ಸಲ್ಲಿಸಲಾಗಿದ್ದು, ಅದರಂತೆ ಮುಂದಿನ ಸೂಕ್ತ ಕ್ರಮ ಕೈಗೊಳ್ಳಲು ಕೋರಿರುತ್ತಾರೆ.

ಜಿಲ್ಲಾಧಿಕಾರಿಯವರ ಪ್ರಸ್ತಾವನೆಯ ಬಗ್ಗೆ ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಿಕ ಸದಸ್ಯರ ಅಭಿಪ್ರಾಯವನ್ನು ಪಡೆಯಲಾಗಿದ್ದು, ಪ್ರಸ್ತಾಪಿತ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸುವ ಬಗ್ಗೆ ಸೂಕ್ತ ತೀರ್ಮಾನವನ್ನು ಕೈಗೊಳ್ಳುವ ಕುರಿತು ನ್ಯಾಯಾಧೀಕರಣಕ್ಕೆ ವಹಿಸುವಂತೆ ಅಭಿಪ್ರಾಯವನ್ನು ನೀಡಿರುತ್ತಾರೆ. ಸದರಿ ಅಭಿಪ್ರಾಯವನ್ನು ದಿ: 17-01-2018ರಂದು ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಸಭೆಯ ಮುಂದೆ ಮಂಡಿಸಲಾಗಿರುತ್ತದೆ. ಆದುದರಿಂದ ಉತ್ತರ ಕನ್ನಡ ಜಿಲ್ಲೆ, ಶಿರಸಿ ಶ್ರೀ ವೀರಭದ್ರೇಶ್ವರ ದೇವಸ್ಥಾನವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಕೈಬಿಡುವ ಕುರಿತು ಸರ್ಕಾರದ ಆದೇಶ ಕೋರಿ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಕಂಇ 21 ಮುಆಬಿ 2018, ಬೆಂಗಳೂರು, ದಿನಾಂಕ : 17ನೇ ಫೆಬ್ರವರಿ, 2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆ, ಯಲ್ಲಾಪುರ ತಾಲ್ಲೂಕು, ಚಂದಗುಳಿ ಶ್ರೀ ಸಿದ್ಧಿವಿನಾಯಕ ದೇವಾಲಯವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು ಕಾಯ್ದೆ, 1997ರ ಸೆಕ್ಷನ್ 1(4)(ii)ರನ್ವಯ ಸರ್ಕಾರದ ಅಧಿಸೂಚನೆಯಲ್ಲಿನ ಪುಟ ಸಂಖ್ಯೆ: (760)ರ ಕ್ರಮ ಸಂಖ್ಯೆ: (42) ರಲ್ಲಿನ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸಿದೆ.

PR – 122

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25

ಎಂ. ತಿಪ್ಪೀರಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)

ಕಂದಾಯ ಇಲಾಖೆ (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ : ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಕಸಬಾ ಹೋಬಳಿ, ಲಕ್ಕವ್ವನಹಳ್ಳಿ ಗ್ರಾಮದ ರಿ.ಸ.ನಂ.35 ರಲ್ಲಿನ 20- 09 ಎಕರೆ ಜಮೀನನ್ನು ಹಿರಿಯೂರು ನಗರದ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆಗಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತಕ್ಕೆ ಉಚಿತವಾಗಿ ಮಂಜೂರು ಮಾಡುವ ಕುರಿತು.

೩೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

ಓದಲಾಗಿದೆ : 1) ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ/ಸಿಆರ್/ 50/2016-17, ದಿನಾಂಕ: 22-07-2016.

2) ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ, ಚಿತ್ರದುರ್ಗ ಇವರ ಪತ್ರ ಸಂಖ್ಯೆ: ಆಶ್ರಯ, ಹೆಚ್‌ವೈಆರ್/ಸಿಆರ್-2/

2016-17, ದಿನಾಂಕ: 23-05-2016 ಮತ್ತು ದಿನಾಂಕ: 02-08-2017.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ: (1)ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಕಸಬಾ ಹೋಬಳಿ, ಲಕ್ಕವ್ವನಹಳ್ಳಿ ಗ್ರಾಮದ ರಿ.ಸ.ನಂ.35ರಲ್ಲಿ ಒಟ್ಟು 30-15 ಎಕರೆ ಜಮೀನಿದ್ದು, ಈ ಪೈಕಿ 2-00 ಎಕರೆ ಜಮೀನನ್ನು ಮುಸ್ಲಿಂ ಜನಾಂಗದ ಖಬರಸ್ಥಾನಕ್ಕಾಗಿ, 4-00 ಎಕರೆ ವೀರಶೈವ ರುದ್ರಭೂಮಿಗಾಗಿ ಹಾಗೂ 3-00 ಎಕರೆ ಜಮೀನನ್ನು ಹಿಂದೂ ರುದ್ರಭೂಮಿಗಾಗಿ ಕಾಯ್ದಿರಿಸಲಾಗಿದ್ದು, ಪ್ರಸ್ತುತ ಲಕ್ಕವ್ವನಹಳ್ಳಿ ಗ್ರಾಮದ ರಿ.ಸ.ನಂ.35ರಲ್ಲಿ ಲಭ್ಯವಿರುವ 20-15 ಎಕರೆ ಜಮೀನನ್ನು ಹಿರಿಯೂರು ನಗರದ ನಿವೇಶನ ರಹಿತ 2713 ಜನರಿಗೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ರಚಿಸಿ ಹಂಚಿಕೆಮಾಡುವ ಉದ್ದೇಶಕ್ಕಾಗಿ ಸದರಿ ಜಮೀನನ್ನು ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 68ರಡಿ ಕ್ರಮ ವಹಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನಯು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪತ್ರದಲ್ಲಿ ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ ಇವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಕಸಬಾ ಹೋಬಳಿ ಲಕ್ಕವ್ವನಹಳ್ಳಿ ಗ್ರಾಮದ ರಿ.ಸ.ನಂ.35ರಲ್ಲಿ ಒಟ್ಟು 30-15 ಎಕರೆ ಜಮೀನು "ಸರ್ಕಾರಿ ಹುಲ್ಲುಬನ್ನಿ" ಎಂದು ನಮೂದಾಗಿದ್ದು, ಆಕಾರ್‌ಬಂದ್ ಪ್ರಕಾರ 'ಬಿ' ಖರಾಬು ಜಮೀನೆಂದು ದಾಖಲಾಗಿರುತ್ತದೆಂದು, ಸದರಿ ಜಮೀನಿನ ಪೈಕಿ 9-00 ಎಕರೆ ಜಮೀನನ್ನು ಈಗಾಗಲೇ ವಿವಿಧ ಸಮುದಾಯದವರಿಗೆ ಸ್ಮಶಾನಕ್ಕಾಗಿ ಮಂಜೂರು ಮಾಡಲಾಗಿದ್ದು, 1-00 ಎಕರೆ ಜಮೀನನ್ನು ಕ್ರೈಸ್ತ ಸಮುದಾಯದ ಸ್ಮಶಾನಕ್ಕಾಗಿ ಮಂಜೂರು ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆಂದು ತಿಳಿಸಿರುತ್ತಾರೆ. ಪ್ರಸ್ತುತ ಪ್ರಸ್ತಾಪಿತ ಜಮೀನನ್ನು ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಗ್ರಾಮಸ್ಥರ ಸಹಮತಿ ಇರುವುದರಿಂದ, ಹಿರಿಯೂರು ನಗರದ ಒಟ್ಟು 2713 ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಲಕ್ಕವ್ವನಹಳ್ಳಿ ಗ್ರಾಮದ ರಿ.ಸ.ನಂ.35ರಲ್ಲಿ ಲಭ್ಯವಿರುವ 20-09 ಎಕರೆ ಜಮೀನನ್ನು ಮಂಜೂರು ಮಾಡಬಹುದೆಂದು ವರದಿ ಸಲ್ಲಿಸಿರುತ್ತಾರೆ.

ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಲಕ್ಕವ್ವನಹಳ್ಳಿ ಗ್ರಾಮದ ಸ.ನಂ.35ರಲ್ಲಿ ಲಭ್ಯವಿರುವ 20-15 ಎಕರೆ ಜಮೀನಿನ ಪೈಕಿ ತುಮಕೂರು, ಚಿತ್ರದುರ್ಗ, ದಾವಣಗೆರೆ ಹೊಸ ರೈಲು ಮಾರ್ಗಕ್ಕಾಗಿ ಭೂಸ್ವಾಧೀನವಾಗುತ್ತಿರುವ 0-06 ಗುಂಟೆ ಜಮೀನ್ನು ಹೊರತುಪಡಿಸಿ, ಪ್ರಸ್ತುತ ಲಕ್ಕವ್ವನಹಳ್ಳಿ ಗ್ರಾಮದ ರಿ.ಸ.ನಂ.35ರಲ್ಲಿ ಲಭ್ಯವಿರುವ 20-09 ಎಕರೆ ಜಮೀನನ್ನು, ಪ್ರಸ್ತಾಪಿತ ಉದ್ದೇಶಕ್ಕಾಗಿ ಮಂಜೂರು ಮಾಡಬಹುದೆಂದು ವರದಿ ಸಲ್ಲಿಸಿರುತ್ತಾರೆ.

ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗ, ಹಾಗೂ ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ ಇವರುಗಳ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 47 ಎಲ್‌ಜಿಸಿ 2016, ಬೆಂಗಳೂರು, ದಿನಾಂಕ : 09-02-2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಕಸಬಾ ಹೋಬಳಿ, ಲಕ್ಕವ್ವನಹಳ್ಳಿ ಗ್ರಾಮದ ರಿ.ಸ.ನಂ.35ರಲ್ಲಿ ಲಭ್ಯವಿರುವ 20-09 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)(i) ರಂತೆ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ(3)(iii) ರನ್ವಯ ಹಿರಿಯೂರು ನಗರದ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವ ಉದ್ದೇಶಕ್ಕಾಗಿ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಬೆಂಗಳೂರು ಇವರಿಗೆ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಉಚಿತವಾಗಿ ಮಂಜೂರು ಮಾಡಿ ಆದೇಶಿಸಿದೆ.

ಷರತ್ತುಗಳು:

1. ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

2. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ ಹಾಗೂ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

3. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.

4. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

5. ಜಿಲ್ಲಾಧಿಕಾರಿಯವರು ಮಂಜೂರಾದ ಜಮೀನನ್ನು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ, ಬೆಂಗಳೂರು ಇವರಿಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR – 123

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25

ಎಂ.ಇ. ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂ ಮಂಜೂರಾತಿ-3)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೧೧

ಕಂದಾಯ ಸಚಿವಾಲಯ

ವಿಷಯ : ಬಳ್ಳಾರಿ ಜಿಲ್ಲೆ, ಕೂಡ್ಲಗಿ ತಾಲ್ಲೂಕು, ಗುಡೇಕೋಟೆ ಹೋಬಳಿ, ಗುಡೇಕೋಟೆ ಗ್ರಾಮದ ಸ.ನಂ. 907ರ ವಿಸ್ತೀರ್ಣ 39.64 ಸ.ನಂ. 908ರ ವಿಸ್ತೀರ್ಣ 89.30 ಎಕರೆ ಅಪ್ಪಯ್ಯನಹಳ್ಳಿ ಗ್ರಾಮದ ಸ.ನಂ. 295 ವಿಸ್ತೀರ್ಣ 1115.01 ಮತ್ತು ಕಸಾಪುರ ಗ್ರಾಮದ ಸ.ನಂ. 432 ವಿಸ್ತೀರ್ಣ 56.14 ಎಕರೆ ಒಟ್ಟು ವಿಸ್ತೀರ್ಣ 1300.00 ಎಕರೆ (526.11 ಹೆಕ್ಟೇರ್) ಜಮೀನನ್ನು ಮೆ|| ಎನ್.ಎಂ.ಡಿ.ಸಿ. ಲಿ., ದೋಣಿಮಲೈ, ದೋಣಿಮಲೈ ಐರನ್ ಓರ್ ಮೈನ್ಸ್, ದೋಣಿಮಲೈ ಟೌನ್‌ಶಿಪ್, ಸಂಡೂರು ತಾಲ್ಲೂಕು ಇವರ ಪರವಾಗಿ ಪರಿಹಾರಾತ್ಮಕ ನೆಡುತೋಪು ಬೆಳೆಸಲು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ.

ಓದಲಾಗಿದೆ : ಜಿಲ್ಲಾಧಿಕಾರಿ, ಬಳ್ಳಾರಿ ಜಿಲ್ಲೆ ಇವರ ಪತ್ರ ಸಂಖ್ಯೆ: ಕಂ.ಭೂಮಿ/ಸಿ&ಡಿ/63/2016-17, ದಿನಾಂಕ: 26-05-2017.

ಪ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ, ಜಿಲ್ಲಾಧಿಕಾರಿಗಳು, ಬಳ್ಳಾರಿ ಜಿಲ್ಲೆ, ಬಳ್ಳಾರಿ ಇವರು ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ ಹೋಬಳಿ, ಗುಡೇಕೋಟೆ ಗ್ರಾಮದ ಸ.ನಂ. 907ರ ವಿಸ್ತೀರ್ಣ 39.64 ಎಕರೆ, ಸ.ನಂ. 908ರಲ್ಲಿ 89.30 ಎಕರೆ, ಅಪ್ಪಯ್ಯನಹಳ್ಳಿ ಗ್ರಾಮದ ಸ.ನಂ. 295ರಲ್ಲಿ 1115.01 ಎಕರೆ ಮತ್ತು ಕಸಾಪುರ ಗ್ರಾಮದ ಸ.ನಂ. 432ರಲ್ಲಿ 56.14 ಎಕರೆ ಒಟ್ಟು 1300.00 ಎಕರೆ (526.11 ಹೆಕ್ಟೇರ್) ಜಮೀನನ್ನು ಮೆ|| ಎನ್.ಎಂ.ಡಿ.ಸಿ. ಲಿ., ದೋಣಿಮಲೈ, ದೋಣಿಮಲೈ ಐರನ್ ಓರ್ ಮೈನ್ಸ್, ದೋಣಿಮಲೈ ಟೌನ್‌ಶಿಪ್, ಸಂಡೂರು ತಾಲ್ಲೂಕು ಇವರ ಪರವಾಗಿ ಪರಿಹಾರಾತ್ಮಕ ನೆಡುತೋಪು ಬೆಳೆಸಲು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕುರಿತು ಪ್ರಸ್ತಾಪಿಸಿದ್ದಾರೆ.

ಮೆ|| ಎನ್.ಎಂ.ಡಿ.ಸಿ. ಲಿ., ದೋಣಿಮಲೈ, ದೋಣಿಮಲೈ ಐರನ್ ಓರ್ ಮೈನ್ಸ್, ದೋಣಿಮಲೈ ಟೌನ್‌ಶಿಪ್, ಸಂಡೂರು ತಾಲ್ಲೂಕು ಇವರ ಪರವಾಗಿ ಪರಿಹಾರಾತ್ಮಕ ನೆಡುತೋಪು ಬೆಳೆಸಲು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಪ್ರಸ್ತಾಪಿಸಿರುವ ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲ್ಲೂಕಿನ ಗುಡೇಕೋಟೆ, ಅಪ್ಪಯ್ಯನಹಳ್ಳಿ ಗ್ರಾಮ ಮತ್ತು ಕಸಾಪುರ ಗ್ರಾಮದ ವಿವಿಧ ಸ.ನಂ.ಗಳಲ್ಲಿನ ಒಟ್ಟು 1300.00 ಎಕರೆ (526.11 ಹೆಕ್ಟೇರ್) ಜಮೀನು ಆರ್‌ಟಿಸಿಯ ಕಾಲಂ 9ರಲ್ಲಿ ಕ್ರಮವಾಗಿ ಕರ್ನಾಟಕ ಸರ್ಕಾರ, ರಾಳ್ಳಗುಟ್ಟ ಮತ್ತು ಸರ್ಕಾರಿ ಗುಡ್ಡ ಎಂದು ದಾಖಲಾಗಿರುತ್ತದೆ. ಈ ಜಮೀನಿನಲ್ಲಿ ನಮೂನೆ 50-53ರ ಅರ್ಜಿಗಳು ಬಾಕಿ ಇರುವುದಿಲ್ಲ. ಹೈಟೆನ್ಷನ್ ವಿದ್ಯುತ್ ತಂತಿ ಹಾದುಹೋಗಿರುವುದಿಲ್ಲ. ಬೆಲೆಬಾಳುವ ಗಿಡ ಮರಗಳು ಇರುವುದಿಲ್ಲ. ಅಲ್ಲದೆ ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 51 ಎಲ್‌ಜಿಪಿ 81, ದಿನಾಂಕ: 18-08-1981ರನ್ವಯ ಸದರಿ ಜಮೀನುಗಳು ಲ್ಯಾಂಡ್ ಬ್ಯಾಂಕ್‌ನಲ್ಲಿ ಸೇರಿಸಿರುವುದಿಲ್ಲವಾದ್ದರಿಂದ ಸದರಿ ಜಮೀನುಗಳನ್ನು ಲ್ಯಾಂಡ್ ಬ್ಯಾಂಕ್‌ನಲ್ಲಿ ಸೇರಿಸಿಕೊಂಡು ಮೆ|| ಎನ್.ಎಂ.ಡಿ.ಸಿ. ಲಿ., ದೋಣಿಮಲೈ, ದೋಣಿಮಲೈ ಐರನ್ ಓರ್ ಮೈನ್ಸ್, ದೋಣಿಮಲೈ ಟೌನ್‌ಶಿಪ್, ಸಂಡೂರು ತಾಲ್ಲೂಕು ಇವರ ಪರವಾಗಿ ಪರಿಹಾರಾತ್ಮಕ ನೆಡುತೋಪು ಬೆಳೆಸಲು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕುರಿತು ಪ್ರಸ್ತಾಪಿಸಿದ್ದಾರೆ.

ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 37 ಎಲ್‌ಜಿಇ 2017, ಬೆಂಗಳೂರು, ದಿನಾಂಕ : 09-02-2018.

ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲ್ಲೂಕು, ಗುಡೇಕೋಟೆ ಹೋಬಳಿ, ಗುಡೇಕೋಟೆ ಗ್ರಾಮದ ಸ.ನಂ. 907ರ ವಿಸ್ತೀರ್ಣ 39.64 ಎಕರೆ. ಸ.ನಂ. 908ರಲ್ಲಿ 89.30 ಎಕರೆ, ಅಪ್ಪಯ್ಯನಹಳ್ಳಿ ಗ್ರಾಮದ ಸ.ನಂ. 295ರಲ್ಲಿ 1115.01 ಎಕರೆ ಮತ್ತು ಕಸಾಪುರ ಗ್ರಾಮದ ಸ.ನಂ. 432ರಲ್ಲಿ 56.14 ಎಕರೆ ಒಟ್ಟು 1300.00 ಎಕರೆ (526.11 ಹೆಕ್ಟೇರ್) ಜಮೀನನ್ನು ಲ್ಯಾಂಡ್ ಬ್ಯಾಂಕ್‌ಗೆ ಸೇರಿಸಿಕೊಂಡು ಮೆ. ಎನ್.ಎಂ.ಡಿ.ಸಿ. ಲಿ., ದೋಣಿಮಲೈ, ದೋಣಿಮಲೈ ಐರನ್ ಓರ್ ಮೈನ್ಸ್, ದೋಣಿಮಲೈ ಟೌನ್‌ಶಿಪ್, ಸಂಡೂರು ತಾಲ್ಲೂಕು ಇವರ ಪರವಾಗಿ ಪರಿಹಾರಾತ್ಮಕ ನೆಡುತೋಪು ಬೆಳಸಲು ಈ ಕೆಳಕಂಡ ಷರತ್ತುಗಳೊಂದಿಗೆ ಅರಣ್ಯ ಇಲಾಖೆಗೆ ವರ್ಗಾಯಿಸಲು ಅನುಮತಿ ನೀಡಿ ಆದೇಶಿಸಿದೆ.

ಷರತ್ತುಗಳು:

1. ವರ್ಗಾವಣೆಯಾದ ಜಮೀನನ್ನು ಸರ್ಕಾರದ ಸುತ್ತೋಲೆ ಸಂಖ್ಯೆ: ಆರ್‌ಡಿ.27ಎಲ್‌ಜಿಪಿ.2011, ದಿನಾಂಕ: 06-04-2011ರ ಕಂಡಿಕೆ-6ರಂತೆ ಕ್ರಮವಹಿಸುವುದು.

2. ವರ್ಗಾವಣೆ ಪಡೆದ ಇಲಾಖೆಗೆ ವರ್ಗಾಯಿಸಿದ ಜಮೀನಿನ ಅವಶ್ಯಕತೆ ಇಲ್ಲದೇ ಇದ್ದಲ್ಲಿ ಮರಳಿ ಕಂದಾಯ ಇಲಾಖೆಗೆ ವಾಪಸ್ಸು ಮಾಡತಕ್ಕದ್ದು. 3. ವರ್ಗಾವಣೆಯಾದ ಜಮೀನನ್ನು ಅರಣ್ಯ ಇಲಾಖೆಯು ನೆಡುತೋಪು ಬೆಳೆಸುವ ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸತಕ್ಕದ್ದು. 4. ಪ್ರಸ್ತಾಪಿತ ಜಮೀನಿನಲ್ಲಿ ಜಾನುವಾರುಗಳು ಮೇಯುವಿಕೆಗೆ ಅವಕಾಶ ನೀಡತಕ್ಕದ್ದು.

5. ಪ್ರಸ್ತಾಪಿತ ಜಮೀನಿನಲ್ಲಿ ರಸ್ತೆಗಳು ಹಾಯ್ದು ಹೋಗಿದ್ದಲ್ಲಿ ಸದರಿ ರಸ್ತೆಗಳಿಗೆ ಅಡ್ಡಿ ಮಾಡತಕ್ಕದ್ದಲ್ಲ ಹಾಗೂ ಸದರಿ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಓಡಾಡಲು ಅವಕಾಶ ಮಾಡತಕ್ಕದ್ದು.

6. ಈ ಮೇಲ್ಕಂಡ ಷರತ್ತುಗಳೊಂದಿಗೆ ಸರ್ಕಾರದಿಂದ ಅನ್ವಯವಾಗುವ ಎಲ್ಲಾ ಕಾಯ್ದೆ ಕಾನೂನು ಹಾಗೂ ಷರತ್ತು ನಿಬಂಧನೆಗೊಳಪಟ್ಟಿರುತ್ತದೆ.

PR – 124

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25

ಎಂ.ಇ. ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂ ಮಂಜೂರಾತಿ-3)೩೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

WATER RESOURCES SECRETARIAT

ADDENDUM ORDER

No.WRD 29 DSP 2017, Bangalore, Dated:02-03-2018.

Government Order No:WRD 07 DSP 2009, Bengaluru, Dated:12/19-05-2011 was issued constituting the Empowered Committee for the Implementation of Dam Rehabilitation and Improvement Project (DRIP) with Loan Assistance from the World Bank as per the guidelines issued by the Finance Department vide circular No.FD 27 PMU 1997, dated 13th April 1999.

In addition to the powers vested by the above said Government Order, the Empowered Committee is authorized to accord approval to –

a) Variation in respect of contracts in case of variations with cumulative cost not exceeding 25% of accepted contract amount or not exceeding Rs.10.00 crores.

b) Extension of time contracts exceeding six months (with necessary procedures/approvals as applicable).

c) Decisions on implementation of adjudication/arbitration decisions with cost implications upto 25% of accepted contract amount and initiation of court proceedings.

The administrative Department and Project Authorities should ensure that for changes in the contract costs and project time, necessary approvals and assurance from the Competent Authorities viz., CWC/DEA/ World Bank are obtained as applicable.

This order is issued with the concurrence of the Finance Department vide Note No: FD 02 FC-1/18 Dated: 15-02-2018.

PR. 127

By Order and in the name of the Governor of Karnataka,

B HARINARAYAN,

Under Secretary to Government,

Water Resources Department(Tech-5).

ಕಂದಾಯ ಸಚಿವಾಲಯ

ವಿಷಯ: ಗದಗ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ

ಸ್ಥಾಪನೆಗೆ ಗದಗ ತಾಲ್ಲೂಕು ನಾಗಾವಿ ಗ್ರಾಮದ ರಿಸ.ನಂ.143/2ಬಿ/ಬ/1ಬಿ/2 ಕ್ಷೇತ್ರ 124-00

ಎಕರೆ ಜಮೀನಿನ ಪೈಕಿ 120-00 ಎಕರೆ ಜಮೀನನ್ನು ಮಂಜೂರಿಸುವ ಕುರಿತು.

ಓದಲಾಗಿದೆ: 1. ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರ ಸಂಖ್ಯೆ:

ಪ್ರಾಆಬೆ:ಭೂಮಿ-4:ಎಲ್‌ಜಿಎಲ್:ವಿವ:71/2017-18 ದಿನಾಂಕ:11-12-2017.

2. ಜಿಲ್ಲಾಧಿಕಾರಿ, ಗದಗ ಜಿಲ್ಲೆ, ಗದಗ ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ:ವಹಿ/

81/2015-16 ದಿನಾಂಕ:06-12-2017 ಮತ್ತು ದಿನಾಂಕ:30-01-2018.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ:(1)ರ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ದಿನಾಂಕ:11-12-2017ರ ಪತ್ರದಲ್ಲಿ ಗದಗ ಜಿಲ್ಲೆ, ಗದಗ ತಾಲ್ಲೂಕಿನ ನಾಗಾವಿ ಗ್ರಾಮದ ರಿ.ಸ.ನಂ. 143/2ಬ/ಬ/1ಬ/2 ರಲ್ಲಿ 124-00 ಎಕರೆ ಜಮೀನಿನ ಪೈಕಿ 120-00 ಎಕರೆ ಜಮೀನನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಗದಗ ಇವರಿಗೆ ಮಂಜೂರು ಮಾಡುವ ಕುರಿತು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ(2)ರ ಪತ್ರದಲ್ಲಿ ಜಿಲ್ಲಾಧಿಕಾರಿ, ಗದಗ ಜಿಲ್ಲೆ, ಗದಗ ಇವರು ಗದಗ ತಾಲ್ಲೂಕಿನ ನಾಗಾವಿ ಗ್ರಾಮದ ರಿ.ಸ.ನಂ. 143/2ಬ/ಬ/1ಬ/2 ಕ್ಷೇತ್ರ 124ಎ-0ಗುಂ ನೇದ್ದರ ಜಮೀನಿನ ಪಹಣಿಯಲ್ಲಿ ಸರಕಾರ ಅಂತಾ ನಮೂದು ಇರುತ್ತದೆ. ಮೂಲತಃ ಸದರಿ ಜಮೀನು ಸಂಪೂರ್ಣ ಕ್ಷೇತ್ರ 'ಬ' ಖರಾಬದಿಂದ ಕೂಡಿದ್ದು, ಕೃಷಿಗೆ ಯೋಗ್ಯವಿಲ್ಲದ ಜಮೀನಾಗಿರುತ್ತದೆ. ಸದರಿ ಜಮೀನಿನ ಕ್ಷೇತ್ರ 124ಎ-0ಗುಂ ಪೈಕಿ 120ಎ-00ಗು ಜಮೀನನ್ನು ಪ್ರಸ್ತಾಪಿತ ಕರ್ನಾಟಕ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕಾಯ್ದಿರಿಸಲು ಅತ್ಯಂತ ಸೂಕ್ತವಾಗಿರುತ್ತದೆ.

ಗ್ರಾಮೀಣಾಭಿವೃದ್ದಿ ಮತ್ತು ಪಂ.ರಾಜ್ ಇಲಾಖೆಯು ತನ್ನ ಆದೇಶ ಸಂಖ್ಯೆ: ಗ್ರಾಅಪ 44 ಜಿಪಸ 2015 (ಪಿ-2) ಬೆಂಗಳೂರು, ದಿನಾಂಕ:18-11-2015 ರನ್ವಯ ಗದಗ ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ಸ್ಥಾಪಿಸಲು ಒಟ್ಟು 353ಎ-12 ಗುಂಟೆ ಜಮೀನನ್ನು ಖರೀದಿಸಲು ಜಿಲ್ಲಾಧಿಕಾರಿಗಳು ಗದಗ ಇವರಿಗೆ ಅನುಮತಿಸಿ ಆದೇಶ ಮಾಡಿರುತ್ತದೆ. ಮುಂದುವರೆದು ಜಿಲ್ಲಾಧಿಕಾರಿಗಳು ದಿನಾಂಕ:30-01-2018ರಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ನಾಗಾವಿ ಗ್ರಾಮದ ರಿ.ಸ.ನಂ. 143/2ಬ/ಬ/1ಬ/2 ಕ್ಷೇತ್ರ 124-00 ಎಕರೆ ಸಂಪೂರ್ಣ ಜಮೀನು ಬ-ಖರಾಬಾಗಿದ್ದು, ಕೃಷಿಗೆ ಯೋಗ್ಯವಲ್ಲವಾಗಿದೆ. ಪ್ರಸ್ತಾವಿತ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯ ಸ್ಥಾಪನೆಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರ ನಿಯಮ 20(1)(ಸಿ) ರಡಿಯಲ್ಲಿ ಇತರ ಶಾಸನಬದ್ದ ಮಂಡಳಿಗಳಿಗೆ ಜಮೀನಿನ ಮಾರುಕಟ್ಟೆ ಮೌಲ್ಯದ ಶೇ.50ರಷ್ಟು ಭರಣ ಮಾಡಿಸಿಕೊಂಡು ಭೂ ಮಂಜೂರಾತಿ ಮಾಡಲು ಅವಕಾಶವಿದ್ದು, ಸದರಿ ನಿಯಮದಡಿ ಪ್ರಸ್ತಾವಿತ ಜಮೀನನ್ನು ಈ ಉದ್ದೇಶಕ್ಕೆ ಮಂಜೂರು ಮಾಡುವಂತೆ ವರದಿಸಿರುತ್ತಾರೆ.

ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಹಾಗೂ ಜಿಲ್ಲಾಧಿಕಾರಿ, ಗದಗ ಜಿಲ್ಲೆ ಇವರುಗಳ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೧೩

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 55 ಎಲ್‌ಜಿಡಿ 2017, ಬೆಂಗಳೂರು, ದಿನಾಂಕ:24-02-2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಗದಗ ಜಿಲ್ಲೆ, ಗದಗ ತಾಲ್ಲೂಕಿನ, ನಾಗಾವಿ ಗ್ರಾಮದ ರಿ.ಸ.ನಂ.143/2ಬ/ಬ/1ಬ/2 ರಲ್ಲಿನ 124-00 ಎಕರೆ ಜಮೀನಿನ ಪೈಕಿ 120-00 ಎಕರೆ 'ಬಿ ಖರಾಬು' ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 68(1) ಮತ್ತು 68(5)ರನ್ವಯ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಲು ಪ್ರಕ್ರಿಯೆ ನಡೆಸಿದ ನಂತರ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರಡಿ ಸರ್ಕಾರದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, "ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ" ಸ್ಥಾಪನೆ ಉದ್ದೇಶಕ್ಕಾಗಿ, ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಉಚಿತವಾಗಿ ಮಂಜೂರು ಮಾಡಿ ಆದೇಶಿಸಿದೆ.

ಷರತ್ತುಗಳು :

1. ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

2. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ ಹಾಗೂ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

3. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು. ಹಾಗೂ ಈ ಜಮೀನನ್ನು ವಾಣಿಜ್ಯ ಚಟುವಟಿಕೆಗಳಿಗೆ ಬಳಸಲು ಅವಕಾಶವಿಲ್ಲ.

4. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

5. ಜಿಲ್ಲಾಧಿಕಾರಿಯವರು ಮಂಜೂರಾದ ಜಮೀನನ್ನು ಗ್ರಾಮೀಣಾಭಿವೃದ್ದಿ ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸುವ ಸಂದರ್ಭದಲ್ಲಿ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR. 128

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC. 25

ಎಂ.ಇ.ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಮಂಜೂರಾತಿ-3).

ಕಂದಾಯ ಸಚಿವಾಲಯ

ವಿಷಯ: ಯಾದಗಿರಿ ಜಿಲ್ಲೆ, ಯಾದಗಿರಿ ತಾಲ್ಲೂಕಿನ ಯಾದಗಿರಿ(ಬಿ) ಗ್ರಾಮದ ಸ.ನಂ. 671ರಲ್ಲಿ 3-00 ಎಕರೆ ಸರ್ಕಾರಿ ಗಾಯರಾಣ ಜಮೀನನ್ನು ಜಿಲ್ಲಾ ಬಂಜಾರ ಭವನ ನಿರ್ಮಾಣ ಮಾಡುವ ಸಲುವಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮಕ್ಕೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ: 1) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು

ಇವರ ಪತ್ರ ದಿನಾಂಕ: 02.09.2015, 01.04.2016, 17.09.2016 ಮತ್ತು 13.12.2017.

2) ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಇವರ ಪತ್ರ ಸಂಖ್ಯೆ:ಕಂ/ಪ್ರಾಆಕ/ಭೂಮಿ-1

231/2015-16, ದಿನಾಂಕ: 04.07.2016 ಮತ್ತು 25.01.2017.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಇವರು ದಿನಾಂಕ: 02.09.2015 ಮತ್ತು 01.04.2016ರಂದು ಜಿಲ್ಲಾಧಿಕಾರಿ, ಯಾದಗಿರಿ ಇವರಿಗೆ ಪತ್ರ ಬರೆದು ಜಿಲ್ಲಾಡಳಿತದ ವತಿಯಿಂದ ಯಾದಗಿರಿ ಪಟ್ಟಣದ ಸ.ನಂ. 671ರಲ್ಲಿ 4-00 ಎಕರೆ ಜಮೀನನ್ನು ನೀಡಲಾಗುವುದು ಎಂದು ತಿಳಿಸಿದ್ದರಿಂದ 2015-16ನೇ ಸಾಲಿಗೆ ಯಾದಗಿರಿ ಪಟ್ಟಣದಲ್ಲಿ ನಿಗಮದ ವತಿಯಿಂದ ಜಿಲ್ಲಾ ಬಂಜಾರ ಭವನಗಳನ್ನು ನಿರ್ಮಾಣ ಮಾಡಲು 3.50 ಕೋಟಿ ರೂ.ಗಳ ಅನುದಾನ ಮಂಜೂರಾಗಿರುತ್ತದೆ. ತಾಂಡ ಅಭಿವೃದ್ಧಿ ನಿಗಮವು ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟಿದ್ದು, ಬಂಜಾರ ಜನಾಂಗದ ಸರ್ವತೋಮುಖ ಬೆಳವಣಿಗೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶ್ರಮಿಸುತ್ತಿದೆ.

ಪ್ರಸ್ತಾಪಿತ ಜಮೀನಿನಲ್ಲಿ ಶೇ. 90ರಷ್ಟನ್ನು ಗೋಶಾಲೆಗಾಗಿ ಉಪಯೋಗಿಸಿ ಉಳಿದ ಭಾಗವನ್ನು ಸಮುದಾಯದ ವಿವಿದೋದ್ದೇಶಗಳಿಗಾಗಿ ಬಳಸಿಕೊಳ್ಳಲಾಗುವುದೆಂದು ತಿಳಿಸುತ್ತಾ, ಸದರಿ ಜಮೀನನ್ನು ನಿಗದಿತ ಮಾರ್ಗಸೂಚಿ ಬೆಲೆಯನ್ನು ನಿಗಮವು ಪಾವತಿಸುವ ಷರತ್ತಿಗೊಳಪಡಿಸಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಹೆಸರಿಗೆ ಜಮೀನಿನ ಖಾತೆಯನ್ನು ವರ್ಗಾಯಿಸುವಂತೆ ಕೋರಿರುತ್ತಾರೆ.

ಮುಂದುವರೆದು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಇವರು ದಿನಾಂಕ: 13.12.2017ರಂದು ಸರ್ಕಾರಕ್ಕೆ ಪತ್ರ ಬರೆದು ಯಾದಗಿರಿ ಜಿಲ್ಲೆಯ ಕೆಲವು ತಾಂಡಗಳಲ್ಲಿ ಪ್ಲೋರೈಡ್ ಮಿಶ್ರಣವಿರುವ ನೀರನ್ನು ಕುಡಿಯುತ್ತಿರುವ ಪರಿಣಾಮದಿಂದಾಗಿ ಅಂಗವೈಕಲ್ಯತೆಯಿಂದ ಬಳಲುತ್ತಿರುವ ಹಾಗೂ ಅನಾರೋಗ್ಯ ಪೀಡಿತ ಮಕ್ಕಳ ಹಾಗೂ ವಯಸ್ಕರ ಪಾಲನೆ ಪೋಷಣೆಗಾಗಿ ನಿಗಮದಿಂದ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಜಿಲ್ಲಾ ಬಂಜಾರ ಭವನ ನಿರ್ಮಾಣ ಮಾಡಲು 3-00 ಎಕರೆ ಜಮೀನನ್ನು ನಿಗಮಕ್ಕೆ ಮಂಜೂರು ಮಾಡುವಂತೆ ಕೋರಿರುತ್ತಾರೆ.

೩೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

ಮೇಲೆ ಓದಲಾದ ಕ್ರಮ ಸಂಖ್ಯೆ(2)ರ ಪತ್ರಗಳಲ್ಲಿ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಯಾದಗಿರಿ ಜಿಲ್ಲೆ, ಯಾದಗಿರಿ ತಾಲ್ಲೂಕಿನ ಯಾದಗಿರಿ(ಬಿ) ಗ್ರಾಮದ ಸ.ನಂ. 671ರಲ್ಲಿನ 94-30 ಎಕರೆ/ಗುಂಟೆ ಸರ್ಕಾರಿ ಗಾಯರಾಣ ಜಮೀನಿನ ಪೈಕಿ 3-00 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4)ರಡಿಯಲ್ಲಿ ಗಾಯರಾಣ ಶೀರ್ಷಿಕೆಯಿಂದ ತಗ್ಗಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 20(ಸಿ)ರನ್ವಯ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ. 50ರಷ್ಟು ದರ ವಿಧಿಸಿ ಬಂಜಾರ ಭವನ ಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರಿಗೆ ಮಂಜೂರು ಮಾಡಲು ಸರ್ಕಾರದ ಪೂರ್ವಾನುಮೋದನೆಯನ್ನು ಕೋರಿರುತ್ತಾರೆ.

ಮುಂದುವರೆದು, ಯಾದಗಿರಿ(ಬಿ) ಗ್ರಾಮದ ಸ.ನಂ. 671ರಲ್ಲಿ ಒಟ್ಟು 96-10 ಎಕರೆ ಜಮೀನಿದ್ದು, ಈ ಪೈಕಿ 94-30 ಎಕರೆ/ಗುಂ ವಿಸ್ತೀರ್ಣದ ಜಮೀನು ಆರ್.ಟಿ.ಸಿಯ ಕಾಲಂ 9ರಲ್ಲಿ "ಸರ್ಕಾರಿ ಗಾಯರಾಣ" ಎಂದು ದಾಖಲಾಗಿರುತ್ತದೆ. ಗ್ರಾಮದಲ್ಲಿ ಒಟ್ಟು 10384 ಜಾನುವಾರುಗಳಿದ್ದು, ನಿಯಮಾನುಸಾರ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಒಟ್ಟು 2452 ಎಕರೆ ಜಮೀನನ್ನು ಜಾನುವಾರುಗಳ ಮೇವಿಗಾಗಿ ಮೀಸಲಿರಿಸಬೇಕಾಗುತ್ತದೆ.

ಆದರೆ ಗ್ರಾಮದಲ್ಲಿ ಒಟ್ಟು 667.18 ಎಕರೆ ಸರ್ಕಾರಿ ಜಮೀನಿರುತ್ತದೆ. ಹಾಗೂ ಯಾದಗಿರಿ(ಬಿ) ಗ್ರಾಮದ ಸ.ನಂ. 73ರಲ್ಲಿ 41 ಎಕರೆ ಹಾಗೂ ಸ.ನಂ. 115ರಲ್ಲಿ 406-16 ಎಕರೆ ಅರಣ್ಯ ಪ್ರದೇಶವಿರುತ್ತದೆ. ಪ್ರಸ್ತಾಪಿತ ಜಮೀನು ಯಾದಗಿರಿ ನಗರದ ನಗರಸಭೆಯಿಂದ ಬಾಲಾಜಿ ಮಂದಿರದ ಮುಖ್ಯ ರಸ್ತೆ ಮಾರ್ಗವಾಗಿ ಸುಮಾರು 6 ಕಿ.ಮೀ ಅಂತರದಲ್ಲಿರುತ್ತದೆ. ಪ್ರಸ್ತಾಪಿತ ಜಮೀನಿನಲ್ಲಿ ಯಾವುದೇ ಬೆಲೆಬಾಳುವ ಗಿಡಮರಗಳು ಇರುವುದಿಲ್ಲ ಎಂದು ಮಂಜೂರಾತಿಗೆ ಶಿಫಾರಸ್ಸು ಮಾಡಿರುತ್ತಾರೆ.

ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 22 ಎಲ್‌ಜಿಜಿ 2016, ಬೆಂಗಳೂರು, ದಿನಾಂಕ: 27.02.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಯಾದಗಿರಿ ಜಿಲ್ಲೆ, ಯಾದಗಿರಿ ತಾಲ್ಲೂಕಿನ ಯಾದಗಿರಿ(ಬಿ) ಗ್ರಾಮದ ಸ.ನಂ. 671ರಲ್ಲಿ 94-30 ಎಕರೆ/ಗುಂಟೆ ಸರ್ಕಾರಿ ಗಾಯರಾಣ ಜಮೀನಿನ ಪೈಕಿ 3-00 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1)ನ್ನು ಸಡಿಲಿಸಿ, ಸದರಿ ನಿಯಮ 97(4)ರಡಿಯಲ್ಲಿ ಗಾಯರಾಣ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 20(i)(ಸಿ)ರನ್ವಯ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ.50ರಷ್ಟು ದರ ಹಾಗೂ ನಿಯಮಾನುಸಾರ ಇನ್ನಿತರೆ ಶುಲ್ಕಗಳನ್ನು ವಿಧಿಸಿ ಬಂಜಾರ ಭವನ ಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಇವರಿಗೆ ಈ ಕೆಳಕಂಡ ಷರತ್ತುಗಳನ್ನು ವಿಧಿಸಿ ಸರ್ಕಾರವು ಮಂಜೂರಾತಿ ನೀಡಿದೆ.

ಷರತ್ತುಗಳು:-

1) ಜಮೀನು ಹಸ್ತಾಂತರ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿ, ಯಾದಗಿರಿ ಜಿಲ್ಲೆ ಇವರು ನಿಯಮಾನುಸಾರ ನಿರ್ವಹಿಸಲು ನಿರ್ದೇಶನ ನೀಡಿದೆ.

2) ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

3) ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ ಹಾಗೂ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

4) ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

5) ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ /ಉಪಗುತ್ತಿಗೆ ನೀಡುವುದಾಗಲಿ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.

6) ಮಂಜೂರಾದ ಜಮೀನಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

7) ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ

ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಯಾವುದೇ ಪರಿಹಾರವನ್ನು ನೀಡದೆ ಮಂಜೂರಾತಿಯನ್ನು ರದ್ದುಗೊಳಿಸಲಾಗುವುದು

ಹಾಗೂ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

8) ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಕರ್ನಾಟಕ ತಾಂಡ ಅಭಿವೃದ್ಧಿ ನಿಗಮಕ್ಕೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

ಈ ಆದೇಶವು ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ ನಿಯಮ 17ರ ಉಪ ನಿಯಮ(2)ರ ವ್ಯಾಪ್ತಿಯಡಿ ಬರುತ್ತಿದ್ದು, ಅದರನ್ವಯ ಹೊರಡಿಸಲಾಗಿದೆ.

PR. 129

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC. 25

ಎಂ.ಇ.ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಮಂಜೂರಾತಿ-3).

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೧೫

ಕಂದಾಯ ಸಚಿವಾಲಯ

ವಿಷಯ: ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ತಾಲ್ಲೂಕಿನ ಕದ್ರಿ ಗ್ರಾಮದ ಸ.ನಂ.36/3ಎ1ಪಿ1 ರಲ್ಲಿ 0-23 ಎಕರೆ/ಗುಂಟೆ ಜಮೀನನ್ನು ಕರಾವಳಿ ಕುರುಬರ ಸಂಘ (ರಿ), ಮಂಗಳೂರು ಇವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿದ್ದು, ಜಮೀನಿನ ಗುತ್ತಿಗೆ ದರ ಪರಿಷ್ಕರಿಸುವ ಬಗ್ಗೆ.

ಓದಲಾಗಿದೆ: 1. ಸರ್ಕಾರಿ ಆದೇಶ ಸಂಖ್ಯೆ:ಆರ್‌ಡಿ 211 ಎಲ್‌ಜಿಎ 2012, ದಿನಾಂಕ:28.12.2013.

2. ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಇವರ ಪತ್ರ ದಿನಾಂಕ:ಎಲ್ಎನ್‌ಡಿ(1)ಪಿಡಿಆರ್/200/2013-13 (ಬಿ2)ಸಿ.ನಂ.82785, ದಿನಾಂಕ:20.02.2014

ಪ್ರಸ್ತಾವನೆ:

ಮಂಗಳೂರು ತಾಲ್ಲೂಕಿನ ಕದ್ರಿ ಗ್ರಾಮದ ಸ.ನಂ.36/3ಎ1ಪಿ1 ರಲ್ಲಿ 0-23 ಎಕರೆ ಜಮೀನನ್ನು ಕರಾವಳಿ ಕುರುಬರ ಸಂಘ, ಮಂಗಳೂರು ಇವರಿಗೆ ಕನಕ ಭವನ ನಿರ್ಮಾಣ ಮಾಡಲು ಪ್ರಸಕ್ತ ಮಾರುಕಟ್ಟೆ ದರ ರೂ.1,10,000/- ಒಂದು ಸೆಂಟಿಗೆ ಇದ್ದು ಈ ಮೊತ್ತದ ಮೇಲೆ ಶೇಕಡ 10 ರಷ್ಟನ್ನು ಗುತ್ತಿಗೆ ದರ ನಿಗದಿಪಡಿಸಿ ನಂತರ ಪ್ರತಿ 2 ವರ್ಷಕ್ಕೊಮ್ಮೆ ಶೇಕಡ 10 ರಷ್ಟು ಹೆಚ್ಚಿಸುವ ಷರತ್ತುಗಳಿಗೊಳಪಟ್ಟು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1966ರ ನಿಯಮ 19(1) ರನ್ವಯ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲು ದಿನಾಂಕ:12.03.2013 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರಿ ಆದೇಶದಲ್ಲಿ ಮಂಗಳೂರು ತಾಲ್ಲೂಕಿನ ಕದ್ರಿ ಗ್ರಾಮದ ಸ.ನಂ.36/3ಎ1ಪಿ1 ರಲ್ಲಿ 0-23 ಎಕರೆ ಜಮೀನನ್ನು ಕುರುಬರ ಸಂಘ (ರಿ), ಮಂಗಳೂರು ಇವರಿಗೆ ಕನಕ ಭವನ ನಿರ್ಮಾಣ ಮಾಡಲು ಪ್ರಸಕ್ತ ಮಾರುಕಟ್ಟೆ ದರ `.1,10,000/- ಒಂದು ಸೆಂಟಿಗೆ ಇದ್ದು, ಇದರ ಮೇಲೆ ಪ್ರತಿ ಎರಡು ವರ್ಷಕ್ಕೊಮ್ಮೆ ಶೇಕಡ 10 ರಷ್ಟನ್ನು ಹೆಚ್ಚಿಸುವ ಷರತ್ತಿಗೊಳಪಟ್ಟು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ.

ಸಚಿವ ಸಂಪುಟದಲ್ಲಿ ಅನುಮೋದನೆಯಾಗಿರುವಂತೆ ಮಂಗಳೂರು ತಾಲ್ಲೂಕಿನ ಕದ್ರಿ ಗ್ರಾಮದ ಸ.ನಂ.36/3ಎ1ಪಿ ರಲ್ಲಿ 0.23 ಎಕರೆ ಜಮೀನನ್ನು ಕರಾವಳಿ ಕುರುಬರ ಸಂಘ (ರಿ), ಮಂಗಳೂರು ಇವರಿಗೆ ಕನಕಭವನ ನಿರ್ಮಾಣಕ್ಕಾಗಿ ಪ್ರಸಕ್ತ ಮಾರುಕಟ್ಟೆ ದರ ಸೆಂಟ್ ಒಂದಕ್ಕೆ `.1,10,000/- ಆಗಿದ್ದು, ಈ ಮೊತ್ತದ ಶೇಕಡ 10 ರಷ್ಟು ಗುತ್ತಿಗೆ ದರವನ್ನು ನಿಗದಿಪಡಿಸಿ, ತದನಂತರದ ಪ್ರತಿ 2 ವರ್ಷಕ್ಕೊಮ್ಮೆ ಗುತ್ತಿಗೆ ಮೊತ್ತವನ್ನು ಶೇಕಡ 10 ರಷ್ಟು ಹೆಚ್ಚಿಸುವ ಷರತ್ತನ್ನು ವಿಧಿಸಿ ಸರ್ಕಾರಿ ಆದೇಶವನ್ನು ಹೊರಡಿಸಬೇಕಾಗಿತ್ತು. ಆದರೆ, ಸಚಿವ ಸಂಪುಟದಲ್ಲಿ ಅನುಮೋದನೆಯಾಗಿರುವಂತೆ ಆದೇಶ ಹೊರಡಿಸುವಲ್ಲಿ ತಪ್ಪಾಗಿದ್ದು, ಸರ್ಕಾರಿ ಆದೇಶ ಸಂಖ್ಯೆ: ಆರ್‌ಡಿ 211 ಎಲ್‌ಜಿಎ 2012, ದಿನಾಂಕ:28.12.2013 ರಲ್ಲಿ ಶೇಕಡ 10 ರಷ್ಟು ಗುತ್ತಿಗೆ ದರವನ್ನು ನಿಗದಿಪಡಿಸಿ ಎಂಬ ವಾಕ್ಯವು ಬಿಟ್ಟು ಹೋಗಿದ್ದು, ಸೆಂಟ್ ಒಂದಕ್ಕೆ ರೂ.1,10,000 ರಷ್ಟು ಗುತ್ತಿಗೆ ದರವನ್ನು ವಿಧಿಸಿ ಆದೇಶ ಹೊರಡಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪತ್ರದಲ್ಲಿ ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ದಿನಾಂಕ:20.02.2014ರ ಪತ್ರದಲ್ಲಿ ಸರ್ಕಾರಿ ಆದೇಶ ಸಂಖ್ಯೆ:ಆರ್‌ಡಿ 211 ಎಲ್‌ಜಿಎ 2012, ದಿನಾಂಕ:28.12.2013 ರಲ್ಲಿ ಮಂಗಳೂರು ತಾಲ್ಲೂಕಿನ ಕದ್ರಿ ಗ್ರಾಮದ ಸ.ನಂ.36/3ಎ1ಪಿ1 ರಲ್ಲಿ 0-23 ಎಕರೆ ಜಮೀನನ್ನು ಕುರುಬರ ಸಂಘ (ರಿ), ಮಂಗಳೂರು ಇವರಿಗೆ ಕನಕ ಭವನ ನಿರ್ಮಾಣ ಮಾಡಲು ಪ್ರಸಕ್ತ ಮಾರುಕಟ್ಟೆ ದರ ಸೆಂಟ್ ಒಂದಕ್ಕೆ `.1,10,000/- ಹಾಗೂ ಪ್ರತಿ ಎರಡು ವರ್ಷಕ್ಕೊಮ್ಮೆ ಶೇಕಡ 10 ರಷ್ಟನ್ನು ಹೆಚ್ಚಿಸುವ ಷರತ್ತಿಗೊಳಪಟ್ಟು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿದೆ; ಆದರೆ ಮಂಜೂರಾತಿ ಆದೇಶದಲ್ಲಿ ಗೇಣಿಯಾಗಿ ಮೊದಲನೆ ವರ್ಷ ಮಾರುಕಟ್ಟೆ ದರದ ಎಷ್ಟು ಶೇಕಡವಾರು ವಸೂಲಿ ಮಾಡಬೇಕೆಂದಿರುವುದಿಲ್ಲ; ಪ್ರಸಕ್ತ ಆದೇಶದಂತೆ ಸೆಂಟ್ ಒಂದರ ದರ `.1,10,000/- ದಂತೆ 23 ಸೆಂಟ್‌ಗೆ ವಾರ್ಷಿಕ ಗೇಣಿ `.25,30,000/- ಅನ್ನು ವಸೂಲಿ ಮಾಡಿ, ತದನಂತರ ಎರಡು ವರ್ಷಗಳಿಗೊಮ್ಮೆ ಶೇಕಡ 10 ರಷ್ಟು ಹೆಚ್ಚಿಸಿ ವಸೂಲಿ ಮಾಡಬೇಕಾಗಿರುತ್ತದೆ. ಇದು ಮಾರುಕಟ್ಟೆ ದರವಾಗಿದ್ದು, ಜಮೀನನ್ನು ಸ್ವಂತ ನೆಲೆಯಲ್ಲಿ ಮಂಜೂರು ಮಾಡುವುದಿದ್ದಲ್ಲಿ ಮಾತ್ರ ಮಾರುಕಟ್ಟೆ ದರವನ್ನು ವಸೂಲಿ ಮಾಡಬಹುದಾಗಿರುತ್ತದೆ. ಇದೇ ಗ್ರಾಮದಲ್ಲಿ ಪ್ರಿಯದರ್ಶಿನಿ ಚಾರಿಟಬಲ್ ಟ್ರಸ್ಟ್‌ಗೆ ಗುತ್ತಿಗೆ ಆಧಾರದ ಮೇಲೆ ಜಮೀನನ್ನು ನೀಡಿರುವ ಆದೇಶದಲ್ಲಿ ಮಾರುಕಟ್ಟೆ ಬೆಲೆಯ ಶೇಕಡ 10 ರಷ್ಟನ್ನು ವಾರ್ಷಿಕ ಗೇಣಿಯಾಗಿ ವಸೂಲಿ ಮಾಡಿ ಪ್ರತಿ ಎರಡು ವರ್ಷಗಳಿಗೊಮ್ಮೆ ಮಾರುಕಟ್ಟೆ ಬೆಲೆಯ ಶೇಕಡ 10 ರಷ್ಟನ್ನು ಹೆಚ್ಚಿಸಿ ವಸೂಲಿ ಮಾಡಲು ತಿಳಿಸಲಾಗಿದೆ ಎಂದು ತಿಳಿಸಿರುತ್ತಾರೆ. ಮುಂದುವರಿದು, ಮಂಗಳೂರು ತಾಲ್ಲೂಕಿನ ಕುಂಜತ್ ಬೈಲ್ ನಲ್ಲಿ ಒಂದು ಎಕರೆ ರೂ.2.50 ಲಕ್ಷದಂತೆ ಬಿಲ್ಲವ ಸಮಾಜಕ್ಕೆ ಹಾಸ್ಟೆಲ್ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ. ಈ ಜಿಲ್ಲೆಯಲ್ಲಿ ಕುರುಬರು ರಾಜ್ಯದ ವಿವಿಧ ಜಿಲ್ಲೆಗಳಿಂದ, ನವಮಂಗಳೂರು ಮತ್ತು ಇತರೆ ಕಡೆಗೆ ಕೂಲಿ ಕೆಲಸದ ನಿಮಿತ್ತ ವಲಸೆ ಬಂದವರಾಗಿದ್ದು, ಈ ಸಮುದಾಯವು ಆರ್ಥಿಕವಾಗಿ ಬಹಳ ಹಿಂದುಳಿದಿರುತ್ತದೆ; ಆದ್ದರಿಂದ ಈ ಸಂಘವೂ ಕೂಡ ಆರ್ಥಿಕವಾಗಿ ಹಿಂದುಳಿದಿರುತ್ತದೆ ಎಂದು ತಿಳಿಸುತ್ತಾ, ಅಧ್ಯಕ್ಷರು, ಕರಾವಳಿ ಕುರುಬರ ಸಂಘ, ಮಂಗಳೂರು ಇವರು ಸೆಂಟ್ ಒಂದಕ್ಕೆ ಗುತ್ತಿಗೆ ದರ `.1,10,000 ನಿಗದಿಪಡಿಸಿರುವುದನ್ನು ಪರಿಷ್ಕರಿಸಿ, ಅತ್ಯಂತ ಕನಿಷ್ಟ ದರವನ್ನು ನಿಗದಿಪಡಿಸುವಂತೆ ಕೋರಿರುವುದರಿಂದ ಗುತ್ತಿಗೆ ದರವನ್ನು ಮಾರುಕಟ್ಟೆ ದರದ ಶೇಕಡ ಒಂದಕ್ಕೆ ನಿಗದಿಪಡಿಸಿ, ಪರಿಷ್ಕøತ ಆದೇಶ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಆರ್‌ಡಿ 41 ಎಲ್‌ಜಿಎ 2014, ಬೆಂಗಳೂರು, ದಿನಾಂಕ:28.02.2018

ಸರ್ಕಾರಿ ಆದೇಶ ಸಂಖ್ಯೆ:ಆರ್‌ಡಿ 211 ಎಲ್‌ಜಿಎ 2012, ದಿನಾಂಕ:28.12.2013 ರಲ್ಲಿ ಮಂಗಳೂರು ತಾಲ್ಲೂಕಿನ ಕದ್ರಿ ಗ್ರಾಮದ ಸ.ನಂ.36/3ಎ1ಪಿ1 ರಲ್ಲಿ 0-23 ಎಕರೆ ಜಮೀನನ್ನು ಕುರುಬರ ಸಂಘ (ರಿ), ಮಂಗಳೂರು ಇವರಿಗೆ ಕನಕ ಭವನ ನಿರ್ಮಾಣ ಮಾಡಲು ಪ್ರಸಕ್ತ ಮಾರುಕಟ್ಟೆ ದರ `.1,10,000/- ಒಂದು ಸೆಂಟಿಗೆ ಇದ್ದು, ಇದರ ಮೇಲೆ ಪ್ರತಿ ಎರಡು ವರ್ಷಕ್ಕೊಮ್ಮೆ ಶೇಕಡ 10 ರಷ್ಟನ್ನು ಹೆಚ್ಚಿಸುವ ಷರತ್ತಿಗೊಳಪಟ್ಟು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವುದನ್ನು ಪರಿಷ್ಕರಿಸಿ, 2012ನೇ ವರ್ಷದ ಸೆಂಟ್ ಒಂದರ ಮಾರುಕಟ್ಟೆ ದರ `.1,10,000/- ರ ಶೇಕಡ ಒಂದರಷ್ಟು ಗುತ್ತಿಗೆ ದರವನ್ನು ವಿಧಿಸಿ, ಈ ಗುತ್ತಿಗೆ ದರವನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ಶೇಕಡ 10 ರಷ್ಟನ್ನು ಹೆಚ್ಚಿಸುವ ಷರತ್ತಿಗೊಳಪಟ್ಟು ಮಂಗಳೂರು ತಾಲ್ಲೂಕಿನ ಕದ್ರಿ ಗ್ರಾಮದ ಸ.ನಂ.36/3ಎ1ಪಿ1 ರಲ್ಲಿ 0-23 ಎಕರೆ ಜಮೀನನ್ನು ಕುರುಬರ ಸಂಘ (ರಿ), ಮಂಗಳೂರು ಇವರಿಗೆ ಕನಕ ಭವನ ನಿರ್ಮಾಣ ಮಾಡಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಿದೆ.

೩೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

ಷರತ್ತುಗಳು:-

1. ಗುತ್ತಿಗೆ ನೀಡಿರುವ ಜಮೀನನ್ನು ಯಾವ ಉದ್ದೇಶಕ್ಕೆ ಗುತ್ತಿಗೆ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿಯೇ ಉಪಯೋಗಿಸತಕ್ಕದ್ದು.

2. ಆದೇಶದಲ್ಲಿ ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.

3. ಗುತ್ತಿಗೆ ನೀಡಿರುವ ಜಮೀನನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.

4. ಗುತ್ತಿಗೆ ನೀಡಿರುವ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು

5. ಗುತ್ತಿಗೆ ನೀಡಿರುವ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡತಕ್ಕದ್ದಲ್ಲ ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

6. ಗುತ್ತಿಗೆ ನೀಡಿರುವ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.

7. ಗುತ್ತಿಗೆ ನೀಡಿರುವ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

8. ಗುತ್ತಿಗೆ ನೀಡಿರುವ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಆದೇಶವನ್ನು ನಿಯಮಾನುಸಾರ ರದ್ದುಗೊಳಿಸಲಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

9. ಜಿಲ್ಲಾಧಿಕಾರಿಗಳು, ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಜಮೀನಿರುವ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR. 130

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC. 25

ಉದಯ ಆರ್. ನಾಯಕ್

ಪೀಠಾಧಿಕಾರಿ, ಕಂದಾಯ ಇಲಾಖೆ (ಭೂ ಮಂಜೂರಾತಿ-2).

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವಾಲಯ

ವಿಷಯ: ಪ್ರಾದೇಶಿಕ ನಿರ್ದೇಶಕರು (ಪರಿಸರ), ಬಳ್ಳಾರಿ, ಕಲಬುರಗಿ ಮತ್ತು ಬೆಳಗಾವಿ ಕಛೇರಿಗಳನ್ನು ಸ್ಥಳಾಂತರಿಸುವ ಬಗ್ಗೆ.

ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: ಅಪಜೀ 28 ಇಎನ್‌ಜಿ 2003, ಬೆಂಗಳೂರು, ದಿನಾಂಕ: 30.10.2003.

2. ಸರ್ಕಾರದ ಆದೇಶ ಸಂಖ್ಯೆ: ಅಪಜೀ 117 ಇಪಿಸಿ 2011, ಬೆಂಗಳೂರು, ದಿನಾಂಕ: 04.06.2013.

3. ಮಾನ್ಯ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 17.07.2017 ರಂದು ಜರುಗಿದ ಇಲಾಖಾ ಪರಿಶೀಲನಾ ಸಭೆಯಲ್ಲಿ ನೀಡಿರುವ ಸೂಚನೆಗಳು.

ಪ್ರಸ್ತಾವನೆ:

ಮೇಲೆ ಓದಲಾದ (1)ರ ಸರ್ಕಾರಿ ಆದೇಶದಲ್ಲಿ ಪರಿಸರ ಮತ್ತು ಜೀವಿಪರಿಸ್ಥಿತಿ ಇಲಾಖೆಯ ಬಲವರ್ಧನೆಗೆ ಸರ್ಕಾರವು ಗುಲ್ಬರ್ಗಾ, ಬೆಳಗಾಂ, ಬಳ್ಳಾರಿ, ಮಂಗಳೂರು, ಉಡುಪಿ ಮತ್ತು ಕಾರವಾರದಲ್ಲಿ ಪ್ರಾದೇಶಿಕ ನಿರ್ದೇಶಕರು (ಪರಿಸರ) ಕಛೇರಿಗಳ ಸ್ಥಾಪನೆ ಮತ್ತು ಕಾರ್ಯನಿರ್ವಹಣೆಗೆ ಜಿಲ್ಲೆಗಳ ಹಂಚಿಕೆಗೆ ಮಂಜೂರಾತಿಯನ್ನು ನೀಡಲಾಗಿದೆ.

ಮೇಲೆ ಓದಲಾದ (2)ರ ಸರ್ಕಾರಿ ಆದೇಶದಲ್ಲಿ ಪ್ರಾದೇಶಿಕ ನಿರ್ದೇಶಕರು (ಪರಿಸರ), ಬೆಳಗಾವಿ, ಬಳ್ಳಾರಿ, ಕಲಬುರಗಿ, ಮಂಗಳೂರು, ಉಡುಪಿ ಹಾಗೂ ಕಾರವಾರ ಕಛೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ 39 ಅಧಿಕಾರಿ/ಸಿಬ್ಬಂದಿಗಳ ಹುದ್ದೆಗಳಲ್ಲಿ, ಸೃಜಿಸಲಾಗಿರುವ ಒಟ್ಟು 18 ಅಧಿಕಾರಿ/ಸಿಬ್ಬಂದಿಗಳ ಹುದ್ದೆಗಳು ಖಾಯಂ ಹುದ್ದೆಗಳಾಗಿದ್ದು, ಈ ಹುದ್ದೆಗಳನ್ನು ವಿವಿಧ ಇಲಾಖೆಗಳಿಂದ ನಿಯೋಜನೆ ಮೇರೆಗೆ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅವುಗಳ

ಕ್ರ. ಸ ಂ. ಹ ುದ್ದೆಯ ಹ ಸ ೆ ರು ಕಛೇರಿಗಳು
ಉಡುಪಿ ವ ುಂಗಳೂರು ಕಾರವಾರ ಕಲಬುರಗಿ ಬಳ್ಳಾರಿ ಬ ಳಗಾಂ ೆ ಒಟ್ಟು
1 ಪ್ರಾದೇಶಿಕ ನಿರ್ದೇಶಕರು (ಪರಿಸರ) (ಉಪ ಅರಣ್ಯ ಸ ಂರಕ್ಷಣಾಧಿಕಾರಿ) 1 1 1 1 1 1 6
2 ಕಾರ್ಯಕಾರಿ ಸಹಾಯಕ (ಸಹಾಯಕ ಅರಣ್ಯ ಸ ಂರಕ್ಷಣಾಧಿಕಾರಿ 1 1 1 - - - 3
3 ಸ ಹಾಯಕ ನಿರ್ದೇಶಕರು (ಮೀನುಗಾರಿಕೆ ಸಹಾಯಕ ನಿರ್ದೇಶಕರು) 1 1 1 - - - 3
4 ಸ ಹಾಯಕ ನಿರ್ದೇಶಕರು (ಪರಿಸರ) - - - 1 1 1 3
5 ಕಾರ್ಯಕಾರಿ ಸಹಾಯಕರು (ಪ್ರ.ದ.ಸ.) - - - 1 1 1 3
ಒಟ್ಟು 3 3 3 3 3 3 18
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೧೭

ಉಳಿದಂತೆ, ಈ ಕೆಳಕಂಡಂತಹ ಸೃಜನೆಯಿಲ್ಲದ 21 ಹುದ್ದೆಗಳ ಸೇವೆಯನ್ನು ಬಾಹ್ಯ ಮೂಲದಿಂದ ಪಡೆಯುವಂತೆ ಪ್ರಾದೇಶಿಕ ನಿರ್ದೇಶಕರು

ಕ್ರ. ಸ ಂ. ಹ ುದ್ದೆಯ ಹ ಸ ೆ ರು ಕಛೇರಿಗಳು
ಉಡುಪಿ ವ ುಂಗಳೂರು ಕಾರವಾರ ಕಲಬುರಗಿ ಬಳ್ಳಾರಿ ಬ ಳಗಾಂ ೆ ಒಟ್ಟು
1 ಸ ವ ರ್ಯರ್ (ಗ್ರೇಡ್-1 ೆ 1 1 1 - - - 3
2 ಡ್ರಾಫ್ಟ್ ಮನ್ 1 1 1 - - - 3
3 ಪ ಥ ್ರ ವ ು ದರ್ಜೆ ಸಹಾಯಕರು 1 1 1 - - - 3
4 ದಿ ್ವತೀಯ ದರ್ಜೆ ಸಹಾಯಕರು 1 1 1 1 1 1 6
5 ಅಟೆಂಡರ್ 1 1 1 1 1 1 6
ಒಟ್ಟು 5 5 5 2 2 2 21

ಮೇಲೆ ಓದಲಾದ (3) ರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 17.07.2017 ರಂದು ಜರುಗಿದ ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಪರಿಶೀಲನಾ ಸಭೆಯಲ್ಲಿ ನಿರ್ಣಯಿಸಿದಂತೆ ಪ್ರಾದೇಶಿಕ ನಿರ್ದೇಶಕರು (ಪರಿಸರ), ಕಲಬುರಗಿ, ಬಳ್ಳಾರಿ ಮತ್ತು ಬೆಳಗಾವಿ ಕಛೇರಿಗಳ ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡುವ ಸಂಬಂಧ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವರಿಗೆ ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸುವಂತೆ ತಿಳಿಸಲಾಗಿತ್ತು. ಈ ಸಂಬಂಧ ಅರಣ್ಯ ಇಲಾಖೆಗೆ ಸಂಬಂಧಿಸಿದಂತೆ, ಸದರಿ ಕಛೇರಿಗಳ ಮೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡಿ ಅರಣ್ಯ ಇಲಾಖೆಯ ಈ ಕೆಳಕಂಡ ಕಛೇರಿಗಳಿಗೆ ಹುದ್ದೆಗಳ ಸಮೇತ ಸ್ಥಳಾಂತರಿಸಬಹುದಾಗಿರುತ್ತದೆಂದು ಪ್ರಧಾನ ಮುಖ್ಯ ಅರಣ್ಯ

ಕ್ರ. ಸ ಂ. ಪ ಸ ್ರ ು್ತತ ಹ ುದ್ದೆ ಸ ್ಥಳಾಂತರಿಸಲು ಪ್ರಸ್ತಾಪಿಸಿರುವ ಹುದ್ದೆ
1 ಉಪ ಅರಣ್ಯ ಸಂರಕ್ಷಣಾಧಿಕಾರಿ (ಪರಿಸರ), ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾರ್ಯಯೋಜನೆ ಘಟಕ, ಬೆಂಗಳೂರು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಕಾರ್ಯಯೋಜನೆ), ಬೆಂಗಳೂರು ಇವರ ಅಧೀನದಲ್ಲಿ ಕಾರ್ಯನಿರ್ವಹಿಸುವುದು.
2 ಉಪ ಅರಣ್ಯ ಸಂರಕ್ಷಣಾಧಿಕಾರಿ (ಪರಿಸರ), ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸರ್ವೆ ಮತ್ತು ಡಿರ್ಮಾಕೆಷನ್, ಸೆಕ್ಷನ್-4 ಇತ್ಯಾದಿ, ಬೆಂಗಳೂರು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಕಾರ್ಯಯೋಜನೆ), ಬೆಂಗಳೂರು ಇವರ ಅಧೀನದಲ್ಲಿ ಕಾರ್ಯನಿರ್ವಹಿಸುವುದು.
3 ಉಪ ಅರಣ್ಯ ಸಂರಕ್ಷಣಾಧಿಕಾರಿ (ಪರಿಸರ), ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಭೂ ದಾಖಲೆ ಘಟಕ, ಬೆಂಗಳೂರು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಭೂದಾಖಲೆ), ಬೆಂಗಳೂರು ಇವರ ಅಧೀನದಲ್ಲಿ ಕಾರ್ಯನಿರ್ವಹಿಸುವುದು.

ಪ್ರಾದೇಶಿಕ ನಿರ್ದೇಶಕರು (ಪರಿಸರ), ಕಲಬುರಗಿ, ಬಳ್ಳಾರಿ ಮತ್ತು ಬೆಳಗಾವಿ ಕಛೇರಿಗಳ ಹುದ್ದೆಗಳನ್ನು ಮರು ಹೊಂದಾಣಿಕೆ ಮಾಡುವ ಸಂಬಂಧ ಸರ್ಕಾರದ ಆದೇಶ ಸಂಖ್ಯೆ: ಅಪಜೀ 117 ಇಪಿಸಿ 2011, ದಿನಾಂಕ: 04.06.2013 ರ ಆದೇಶದಲ್ಲಿ ಸೃಜಿಸಲಾಗಿದ್ದ ಒಟ್ಟು 09 ವಿವಿಧ ವೃಂದದ ಖಾಯಂ ಹುದ್ದೆಗಳಲ್ಲಿ ಮೂರು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಹುದ್ದೆಗಳನ್ನು ಮರು ಹೊಂದಾಣಿಕೆಯಲ್ಲಿ ಮೇಲ್ಕಂಡ ಪಟ್ಟಿಯಲ್ಲಿನ ಕ್ರಮ ಸಂಖ್ಯೆ: 1, 2 ಮತ್ತು 06 ಖಾಯಂ ಹುದ್ದೆಗಳಲ್ಲಿ ಪ್ರಾದೇಶಿಕ ನಿರ್ದೇಶಕರು (ಪರಿಸರ), ಬೆಳಗಾವಿ, ಕಲಬುರ್ಗಿ ಹಾಗೂ ಬಳ್ಳಾರಿ ಕಛೇರಿಗಳಲ್ಲಿ ಅಸ್ತಿತ್ವದಲ್ಲಿದ್ದ ಸಹಾಯಕ ನಿರ್ದೇಶಕರು (ಪರಿಸರ) ಮೂರು ಹುದ್ದೆಗಳನ್ನು ರದ್ದುಪಡಿಸಬಹುದಾಗಿರುತ್ತದೆ.

೩೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

ಕಾರ್ಯಕಾರಿ ಸಹಾಯಕರು (ಪ್ರ.ದ.ಸ.) ವೃಂದದ ಮೂರು ಹುದ್ದೆಗಳನ್ನು ಸಂಬಂಧಿಸಿದ ಜಿಲ್ಲೆಯಲ್ಲಿರುವ ಕಲಬುರ್ಗಿ, ಬೆಳಗಾವಿ ಮತ್ತು ಬಳ್ಳಾರಿ ವೃತ್ತ ಕಛೇರಿಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರವರ ವಶಕ್ಕೆ ನೀಡಬಹುದಾಗಿದ್ದು, ಅವರು ಖಾಲಿ ಹುದ್ದೆಗಳ ಎದುರಾಗಿ ಈ ಸಿಬ್ಬಂದಿಗಳನ್ನು ಸ್ಥಳ ನಿಯುಕ್ತಿಗೊಳಿಸಬಹುದೆಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿರವರು ಅಭಿಪ್ರಾಯಿಸಿರುತ್ತಾರೆ.

ಬಾಹ್ಯ ಮೂಲದಿಂದ ಪಡೆಯುವ ಸೃಜನೆಯಿಲ್ಲದ 21 ಹುದ್ದೆಗಳ ಸೇವೆಗಳಲ್ಲಿ ಪ್ರಾದೇಶಿಕ ನಿರ್ದೇಶಕರು (ಪರಿಸರ), ಉಡುಪಿ, ಮಂಗಳೂರು ಹಾಗೂ ಕಾರವಾರ ಕಛೇರಿಗಳನ್ನು ಹೊರತುಪಡಿಸಿ ಉಳಿದ ಆರು ಹುದ್ದೆಗಳ ಸೇವೆಗಳನ್ನು ಸಹ ರದ್ದುಪಡಿಸಬೇಕಾಗಿರುತ್ತದೆ. ಅಲ್ಲದೇ, ಪ್ರಾದೇಶಿಕ ನಿರ್ದೇಶಕರು (ಪರಿಸರ), ಕಲಬುರಗಿ, ಬಳ್ಳಾರಿ ಮತ್ತು ಬೆಳಗಾವಿ ಕಛೇರಿಗಳನ್ನು ರದ್ದುಪಡಿಸುವುದರಿಂದ ಸದರಿ ಕಛೇರಿಗಳಲ್ಲಿನ ಪೀಠೋಪಕರಣಗಳನ್ನು ಆಯಾ ಕಛೇರಿ ವ್ಯಾಪ್ತಿಯ ಅರಣ್ಯ ಇಲಾಖೆಯ ವೃತ್ತ/ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಗಳಿಗೆ ಹಸ್ತಾಂತರಿಸಬಹುದಾಗಿರುತ್ತದೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಅಪಜೀ 175 ಇಎನ್‌ವಿ 2017, ಬೆಂಗಳೂರು, ದಿನಾಂಕ: 23.02.2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪ್ರಾದೇಶಿಕ ನಿರ್ದೇಶಕರು (ಪರಿಸರ), ಕಲಬುರಗಿ, ಬಳ್ಳಾರಿ ಮತ್ತು ಬೆಳಗಾವಿ ಕಛೇರಿಗಳ

ಕ್ರ. ಸಂ. ಪ ಸ ್ರ ು್ತತ ಹುದ್ದೆ ಸ ್ಥಳಾಂತರಿಸಲು ಪ್ರಸ್ತಾಪಿಸಿರುವ ಹುದ್ದೆ
1 ಉಪ ಅರಣ್ಯ ಸಂರಕ್ಷಣಾಧಿಕಾರಿ (ಪರಿಸರ), ಕಲಬುರಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕಾರ್ಯಯೋಜನೆ ಘಟಕ, ಬೆಂಗಳೂರು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಕಾರ್ಯಯೋಜನೆ), ಬೆಂಗಳೂರು ಇವರ ಅಧೀನದಲ್ಲಿ ಕಾರ್ಯನಿರ್ವಹಿಸುವುದು.
2 ಉಪ ಅರಣ್ಯ ಸಂರಕ್ಷಣಾಧಿಕಾರಿ (ಪರಿಸರ), ಬಳ್ಳಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಸರ್ವೆ ಮತ್ತು ಡಿರ್ಮಾಕೆಷನ್, ಸೆಕ್ಷನ್-4 ಇತ್ಯಾದಿ, ಬೆಂಗಳೂರು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಕಾರ್ಯಯೋಜನೆ), ಬೆಂಗಳೂರು ಇವರ ಅಧೀನದಲ್ಲಿ ಕಾರ್ಯನಿರ್ವಹಿಸುವುದು.
3 ಉಪ ಅರಣ್ಯ ಸಂರಕ್ಷಣಾಧಿಕಾರಿ (ಪರಿಸರ), ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಭೂ ದಾಖಲೆ ಘಟಕ, ಬೆಂಗಳೂರು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಭೂದಾಖಲೆ), ಬೆಂಗಳೂರು ಇವರ ಅಧೀನದಲ್ಲಿ ಕಾರ್ಯನಿರ್ವಹಿಸುವುದು.

ಪ್ರಾದೇಶಿಕ ನಿರ್ದೇಶಕರು (ಪರಿಸರ), ಬೆಳಗಾವಿ, ಕಲಬುರ್ಗಿ ಹಾಗೂ ಬಳ್ಳಾರಿ ಕಛೇರಿಗಳಲ್ಲಿ ಅಸ್ತಿತ್ವದಲ್ಲಿದ್ದ ಸಹಾಯಕ ನಿರ್ದೇಶಕರು (ಪರಿಸರ) ಹುದ್ದೆಗಳನ್ನು ರದ್ದುಪಡಿಸಲಾಗಿದೆ.

ಪ್ರಾದೇಶಿಕ ನಿರ್ದೇಶಕರು (ಪರಿಸರ), ಬೆಳಗಾವಿ, ಕಲಬುರ್ಗಿ ಹಾಗೂ ಬಳ್ಳಾರಿ ಕಛೇರಿಗಳಲ್ಲಿ ಅಸ್ತಿತ್ವದಲ್ಲಿದ್ದ ಮೂರು ಕಾರ್ಯಕಾರಿ ಸಹಾಯಕರು (ಪ್ರ.ದ.ಸ) ಹುದ್ದೆಗಳನ್ನು ಅನುಕ್ರಮವಾಗಿ ಬೆಳಗಾವಿ, ಕಲಬುರ್ಗಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿರುವ ಅರಣ್ಯ ಇಲಾಖೆಯ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ವಶಕ್ಕೆ ಸಿಬ್ಬಂದಿ ಸಮೇತ ನೀಡಲಾಗಿದೆ. ಅವರು ಈ ಸಿಬ್ಬಂದಿಗಳನ್ನು ತಮ್ಮ ವೃತ್ತಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಸ್ಥಳ ನಿಯುಕ್ತಿಗೊಳಿಸತಕ್ಕದ್ದು.

ಕ್ರ. ಸ ಂ. ಹ ುದ್ದೆಯ ಹ ಸ ೆ ರು ಕಛೇರಿಗಳು
ಕಲಬುರಗಿ ಬಳ್ಳಾರಿ ಬ ಳಗಾಂ ೆ ಒಟ್ಟು
1 ದಿ ್ವತೀಯ ದರ್ಜೆ ಸಹಾಯಕರು 1 1 1 3
2 ಅಟೆಂಡರ್ 1 1 1 3
ಒಟ್ಟು 2 2 2 6

ಅಲ್ಲದೇ, ಪ್ರಾದೇಶಿಕ ನಿರ್ದೇಶಕರು (ಪರಿಸರ), ಕಲಬುರಗಿ, ಬಳ್ಳಾರಿ ಮತ್ತು ಬೆಳಗಾವಿ ಕಛೇರಿಗಳನ್ನು ರದ್ದುಪಡಿಸುವುದರಿಂದ ಸದರಿ ಕಛೇರಿಗಳಲ್ಲಿನ ಪೀಠೋಪಕರಣಗಳನ್ನು ಆಯಾ ಕಛೇರಿ ವ್ಯಾಪ್ತಿಯ ಅರಣ್ಯ ಇಲಾಖೆಯ ವೃತ್ತ/ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿಗಳಿಗೆ ಹಸ್ತಾಂತರಿಸಲು ಆದೇಶಿಸಿದೆ.

ಮೇಲೆ ಪ್ರಸ್ತಾಪಿಸಿರುವ ಮೂರು ಪ್ರಾದೇಶಿಕ ನಿರ್ದೇಶಕರು (ಪರಿಸರ) ಕಛೇರಿಗಳಲ್ಲಿ ಸರ್ಕಾರದಿಂದ ಬಿಡುಗಡೆ ಮಾಡಲ್ಪಟ್ಟ ಅನುದಾನದಲ್ಲಿ ಪ್ರಾದೇಶಿಕ ನಿರ್ದೇಶಕರು (ಪರಿಸರ) ಕಛೇರಿಗಳ ಕಟ್ಟಡ ಬಾಡಿಗೆ, ವಿದ್ಯುತ್ ಬಿಲ್, ನೀರಿನ ಬಿಲ್ ಮತ್ತು ಹೊರಗುತ್ತಿಗೆ ನೌಕರರ ವೇತನ ಇತ್ಯಾದಿ ಬಿಲ್ಲುಗಳನ್ನು ಇತ್ಯರ್ಥ ಪಡಿಸಿ ಉಳಿತಾಯವಾಗಿರುವ ಹಣವನ್ನು ಸಂಬಂಧಪಟ್ಟ ಪ್ರಾದೇಶಿಕ ನಿರ್ದೇಶಕರು ತಮ್ಮ ಅಧಿಕಾರವನ್ನು ಹಸ್ತಾಂತರಿಸುವಾಗ ಸರ್ಕಾರಕ್ಕೆ ಅಧ್ಯರ್ಪಣೆ ಮಾಡುವುದು.

ದಿನಾಂಕ: 01.04.2018 ರ ನಂತರ ಪ್ರಾದೇಶಿಕ ನಿರ್ದೇಶಕರು (ಪರಿಸರ) ಕಲಬುರಗಿ, ಬಳ್ಳಾರಿ ಮತ್ತು ಬೆಳಗಾವಿ ಕಛೇರಿಗಳಿಗೆ ಯಾವುದೇ ಅನುದಾನವನ್ನು ನೀಡಲಾಗುವುದಿಲ್ಲ.

ಈ ಆದೇಶವನ್ನು, ಆದೇಶ ಸಂಖ್ಯೆ: ಆಇ 01 ಟಿಎಫ್‌ಪಿ 1996ರ ದಿನಾಂಕ: 10.07.1996ರಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ/ಸರ್ಕಾರದ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಹೆಚ್.ಸಿ. ರಾಜೇಂದ್ರಕುಮಾರ್

PR. 172

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ), SC. 100

(ಜೀವಿಪರಿಸ್ಥಿತಿ ಮತ್ತು ಪರಿಸರ) ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೧೯

ಆರ್ಥಿಕ ಸಚಿವಾಲಯ

ವಿಷಯ : 2018ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಹಾಗೂ ಇತರೆ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ಸಂಬಂಧಿತ ಜಿಲ್ಲಾಧಿಕಾರಿಗಳು ನಿಗಧಿಪಡಿಸುವ ಸಮಯಕ್ಕೆ ವಿತರಿಸಲು ನಿರ್ದೇಶಕರು, ಖಜಾನೆ ಇಲಾಖೆಗೆ ಅನುಮತಿ ನೀಡುವ ಬಗ್ಗೆ.

ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ: ಆಇ 194 ಆಖಇ 2015, ದಿ:22.10.2016. 2. ಸರ್ಕಾರಿ ಆದೇಶ ಸಂ: ಆಇ 194 ಆಖಇ 2015, ದಿ:07-03-2017. 3. ನಿರ್ದೇಶಕರು, ಖಜಾನೆ ಇಲಾಖೆ, ಬೆಂಗಳೂರು ಅವರ ಪತ್ರ ಸಂಖ್ಯೆ:ಖನಿ/ಪ್ರಕ್ರಿಯೆ/01/2016-17, ದಿ:24.02.2018.

ಪ್ರಸ್ತಾವನೆ:

ಮೇಲೆ ಓದಲಾದ (1)ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಖಜಾನೆ ಸಂಹಿತೆ 18(ಎ)ರಡಿಯ ಅಪವಾದದ ಸೂಚನೆಯಾನುಸಾರ ಖಜಾನೆಗಳಿಂದ ಒಂದು ಗಂಟೆ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಹಾಗೂ ಓ.ಎಂ.ಆರ್ ಶೀಟ್ಸ್ ವಿತರಿಸುವ ನಿಯಮವನ್ನು ಸಡಿಲಿಸಿ ಪರೀಕ್ಷಾ ಪ್ರಾಧಿಕಾರಿಗಳ ಅವಶ್ಯಕತೆ ಹಾಗೂ ಲಿಖಿತ ಕೋರಿಕೆಯನುಸಾರ ಪರಿಶೀಲಿಸಿ ನಿಗದಿತ ಅವಧಿಗಿಂತ ಮೂರು ಗಂಟೆಗಳ ಮುಂಚೆ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಸಂಬಂಧಿಸಿದ ಇತರೆ ಗೌಪ್ಯ ಸಾಮಗ್ರಿಗಳನ್ನು ವಿತರಿಸಲು ಖಜಾನಾಧಿಕಾರಿಗಳಿಗೆ ಸೂಚನೆಗಳನ್ನು ನೀಡುವ ಪ್ರಾಧಿಕಾರವನ್ನು ಖಜಾನೆ ನಿರ್ದೇಶಕರಿಗೆ ನೀಡಲಾಗಿರುತ್ತದೆ. ಮೇಲೆ ಓದಲಾದ (2) ರ ಆದೇಶದಲ್ಲಿ 2017ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಹಾಗೂ ಇತರೆ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ಸಂಬಂಧಿತ ಜಿಲ್ಲಾಧಿಕಾರಿಗಳು ನಿಗಧಿಪಡಿಸುವ ಸಮಯಕ್ಕೆ ವಿತರಿಸಲು ರಾಜ್ಯದ ಖಜಾನೆಗಳ ಅಭಿರಕ್ಷೆಯಲ್ಲಿ ಇಡಲಾಗುವ ಪ್ರಶ್ನೆ ಪತ್ರಿಕೆಗಳು ಹಾಗೂ ಸಂಬಂಧಿಸಿದ ಇತರೆ ಗೌಪ್ಯ ಸಾಮಾಗ್ರಿಗಳು, ಇತ್ಯಾದಿಗಳನ್ನು ಪರೀಕ್ಷೆ ಪ್ರಾರಂಭವಾಗುವ ಮೂರು ಗಂಟೆ ಮುಂಚಿತವಾಗಿ ಖಜಾನೆಯಿಂದ ವಿತರಿಸಬೇಕೆಂಬ ನಿಯಮವನ್ನು ಸಡಿಲಿಸಿ ಪರೀಕ್ಷಾ ಪ್ರಾಧಿಕಾರಿಗಳ ಅವಶ್ಯಕತೆ ಹಾಗೂ ಲಿಖಿತ ಕೋರಿಕೆಯನುಸಾರ ಪರಿಶೀಲಿಸಿ ನಿಗಧಿತ ಅವಧಿಗಿಂತ ನಾಲ್ಕು ಗಂಟೆ ಮುಂಚೆ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಸಂಬಂಧಿಸಿದ ಇತರೆ ಗೌಪ್ಯ ಸಾಮಾಗ್ರಿಗಳನ್ನು ವಿತರಿಸಲು ಖಜಾನಾಧಿಕಾರಿಗಳಿಗೆ ಸೂಚನೆಗಳನ್ನು ನೀಡುವ ಪ್ರಾಧಿಕಾರವನ್ನು ಖಜಾನೆ ನಿರ್ದೇಶಕರಿಗೆ ನೀಡಲಾಗಿತ್ತು.

2018 ಮಾರ್ಚ್ ದ್ವಿತೀಯ ಪಿ.ಯು.ಸಿ. ವಾರ್ಷಿಕ ಪರೀಕ್ಷೆಗಳು ಬೆಳಿಗ್ಗೆ 10.15ಕ್ಕೆ ಆರಂಭವಾಗುತ್ತಿರುವುದರಿಂದ ಬೆಳ್ಳಿಗೆ 6.00ಗಂಟೆಗೆ ಖಜಾನೆಯನ್ನು ತೆರೆದು ಪ್ರಶ್ನೆಪತ್ರಿಕೆಗಳನ್ನು ವಿತರಿಸಲು ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ರವರು ಕೋರಿರುವುದರಿಂದ, ನಿರ್ದೇಶಕರು, ಖಜಾನೆ ಇಲಾಖೆ ರವರು ಮೇಲೆ ಓದಲಾದ(3) ರ ಪತ್ರದಲ್ಲಿ ಪರೀಕ್ಷೆ ಪ್ರಾರಂಭವಾಗುವ ನಾಲ್ಕು ಗಂಟೆ ಮುಂಚಿತವಾಗಿ ಖಜಾನೆಯಿಂದ ವಿತರಿಸಬೇಕೆಂಬ ನಿಯಮವನ್ನು ಸಡಿಲಿಸಿ ಪರೀಕ್ಷಾ ಪ್ರಾಧಿಕಾರಿಗಳ ಅವಶ್ಯಕತೆ ಹಾಗೂ ಲಿಖಿತ ಕೋರಿಕೆಯನುಸಾರ ಪರಿಶೀಲಿಸಿ ನಿಗಧಿತ ಅವಧಿಗಿಂತ ನಾಲ್ಕು ಗಂಟೆ ಹದಿನೈದು ನಿಮಿಷ ಮುಂಚೆ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಸಂಬಂಧಿತ ಜಿಲ್ಲಾಧಿಕಾರಿಗಳು ನಿಗಧಿಪಡಿಸುವ ಸಮಯಕ್ಕೆ ವಿತರಿಸಲು ಪರೀಕ್ಷಾ ದಿನಗಳಂದು ಬೆಳಿಗ್ಗೆ 6.00 ಗಂಟೆಗೆ ಖಜಾನೆಯನ್ನು ತೆರೆದು ಜಿಲ್ಲಾ ಕೇಂದ್ರದಿಂದ ಪರೀಕ್ಷಾ ಕೇಂದ್ರಗಳಿಗಿರುವ ದೂರ ಹಾಗೂ ಕ್ರಮಿಸಬೇಕಾದ ರಸ್ತೆಯ ಗುಣಮಟ್ಟವನ್ನಾಧರಿಸಿ ಜಿಲ್ಲಾಧಿಕಾರಿಗಳು ನಿಗಧಿಪಡಿಸುವ ಸಮಯಕ್ಕೆ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ವಿತರಿಸಲು ಸರ್ಕಾರದ ಅನುಮೋದನೆ ನೀಡುವಂತೆ ಕೋರಿದ್ದಾರೆ.

ಖಜಾನೆ ನಿರ್ದೇಶಕರ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಮುಂದಿನಂತೆ ಆದೇಶಿಸುತ್ತದೆ.

ಸರ್ಕಾರದ ಆದೇಶ ಸಂಖ್ಯೆ:ಆಇ 43 ಆಖಇ 2018, ಬೆಂಗಳೂರು, ದಿನಾಂಕ: 27.02.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನಲೆಯಲ್ಲಿ, 2018ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಇತರೆ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ಸಂಬಂಧಿತ ಜಿಲ್ಲಾಧಿಕಾರಿಗಳು ನಿಗಧಿಪಡಿಸುವ ಸಮಯಕ್ಕೆ ವಿತರಿಸಲು ರಾಜ್ಯದ ಖಜಾನೆಗಳ ಅಭಿರಕ್ಷೆಯಲ್ಲಿ ಇಡಲಾಗುವ ಪ್ರಶ್ನೆ ಪತ್ರಿಕೆಗಳು ಹಾಗೂ ಸಂಬಂಧಿಸಿದ ಇತರೆ ಗೌಪ್ಯ ಸಾಮಾಗ್ರಿಗಳು, ಇತ್ಯಾದಿಗಳನ್ನು ಪರೀಕ್ಷೆ ಪ್ರಾರಂಭವಾಗುವ ನಾಲ್ಕು ಗಂಟೆ ಮುಂಚಿತವಾಗಿ ಖಜಾನೆಯಿಂದ ವಿತರಿಸಬೇಕೆಂಬ ನಿಯಮವನ್ನು ಸಡಿಲಿಸಿ ಪರೀಕ್ಷಾ ಪ್ರಾಧಿಕಾರಿಗಳ ಅವಶ್ಯಕತೆ ಹಾಗೂ ಲಿಖಿತ ಕೋರಿಕೆಯನುಸಾರ ಪರಿಶೀಲಿಸಿ ನಿಗಧಿತ ಅವಧಿಗಿಂತ ನಾಲ್ಕು ಗಂಟೆ ಹದಿನೈದು ನಿಮಿಷ ಮುಂಚೆ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಸಂಬಂಧಿಸಿದ ಇತರೆ ಗೌಪ್ಯ ಸಾಮಾಗ್ರಿಗಳನ್ನು ವಿತರಿಸಲು ಖಜಾನಾಧಿಕಾರಿಗಳಿಗೆ ಸೂಚನೆಗಳನ್ನು ನೀಡುವ ಪ್ರಾಧಿಕಾರವನ್ನು ಖಜಾನೆ ನಿರ್ದೇಶಕರಿಗೆ ನೀಡಲಾಗಿದೆ. ಹಾಗೆಯೇ ಪರೀಕ್ಷಾ ದಿನಗಳಂದು ಬೆಳ್ಳಿಗೆ 6.00 ಗಂಟೆಗೆ ಖಜಾನೆಯನ್ನು ತೆರೆದು ಜಿಲ್ಲಾ ಕೇಂದ್ರದಿಂದ ಪರೀಕ್ಷಾ ಕೇಂದ್ರಗಳಿಗಿರುವ ದೂರ ಹಾಗೂ ಕ್ರಮಿಸಬೇಕಾದ ರಸ್ತೆಯ ಗುಣಮಟ್ಟವನ್ನಾಧರಿಸಿ ಜಿಲ್ಲಾಧಿಕಾರಿಗಳು ನಿಗಧಿಪಡಿಸುವ ಸಮಯಕ್ಕೆ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ವಿತರಿಸಲು ಸರ್ಕಾರದ ಅನುಮೋದನೆಯನ್ನು ನೀಡಲಾಗಿದೆ.

PR-131

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಜಿ.ಶಶಿಧರ್ ಸರ್ಕಾರದ ಅದೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ.(ಆಡಳಿತ & ಮುಂಗಡ)

LAW SECRETARIAT

NOTIFICATION

NO. LAW 246 LAC 2017, BENGALURU, DATED: 06.03.2018.

Shri Mohana Chandra P., Civil Judge and J.M.F.C., T. Narasipura, Mysuru District is hereby discharged from service under Rule 6(1) of the Karnataka Civil Services (Probation) Rules, 1977 with immediate effect.

By Order and in the name of the Governor of Karnataka, PR-132

S. UMESHA

SC-25

Under Secretary to Government (Admn.-1),

Law Department.

೩೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಬಸವನಬಾಗೇವಾಡಿ ಪಟ್ಟಣದ ಹೊಸದಾಗಿ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆಯ `.709.00 ಲಕ್ಷಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ : 1. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಮ/ ಮುಅ(ಉ)/ತಾಂತ್ರಿಕ/ ಆಶ್ರೇಕಾಆ(ಬೆ)/ ಉಮುಅ-1/ ತಾಸ-2/ಸಅ-2/2015-16/1366 ದಿನಾಂಕ: 28/10/2015.

2. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಮ/ ಮುಅ(ಧಾ)/ತಾಂತ್ರಿಕ/ ಆಶ್ರೇಕಾಆ(ಬೆ)/ ಉಮುಅ-1/ ತಾಸ-2/ಸಅ-2/2016-17/1513, ದಿನಾಂಕ: 05/10/2016.

3. ಸರ್ಕಾರದ ಆದೇಶ ಸಂಖ್ಯೆ: ನಅಇ 07 ಯುಡಬ್ಲ್ಯೂಎಸ್ 2011, ದಿನಾಂಕ: 20/07/2011.

ಪ್ರಸ್ತಾವನೆ:

1) ಮೇಲೆ (1) ಮತ್ತು (2) ರಲ್ಲಿ ಓದಲಾದ ಪತ್ರಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಜನ ಸಂಖ್ಯೆಯು 2011 ರ ಜನಗಣತಿಯಂತೆ 33,224 ಇದ್ದು, ಹಾಲಿ ಜನ ಸಂಖ್ಯೆಯು ಸುಮಾರು 35,000 ಇರುತ್ತದೆ. ಪಟ್ಟಣದ ಆಲಮಟ್ಟಿ ಜಲಸಂಗ್ರಹಾಗಾರ ಮೂಲದ ಹಾಲಿ ನೀರು ಸರಬರಾಜು ಯೋಜನೆಯನ್ನು, ದಿನಂಪ್ರತಿ ತಲಾ 113 ಲೀಟರ್ ನೀರು ಸರಬರಾಜು ಪರಿಗಣಿಸಿ, 2003 ರಲ್ಲಿ ಚಾಲನೆಗೊಳಿಸಲಾಗಿದೆ. ಈ ಯೋಜನೆಯನ್ನು 2033 ನೇ ಇಸವಿಗೆ ಅಂದಾಜಿಸಲಾದ ಅಂತಿಮ ಹಂತದ ಜನಸಂಖ್ಯೆ 45000 ಗಳಿಗೆ ವಿನ್ಯಾಸಿಸಲಾಗಿದೆ. ಬಸವನಬಾಗೇವಾಡಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ 2010-11 ನೇ ಸಾಲಿನ ಎಸ್ಎಫ್‌ಸಿ ಅನುದಾನದಲ್ಲಿ 2033 ನೇ ವರ್ಷಕ್ಕೆ ಅಂದಾಜಿಸಲಾದ 45000 ಜನಸಂಖ್ಯೆಗೆ, ತಲಾ 135 ಲೀಟರ್ ನೀರು ಸರಬರಾಜು ಪರಿಗಣಿಸಿ `. 290.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ಯೋಜನೆ ಕೈಗೊಂಡು, ಜನವರಿ 2013 ರಲ್ಲಿ ಚಾಲನೆಗೊಳಿಸಲಾಗಿದೆ ಎಂದು ವರದಿ ಮಾಡಿರುತ್ತಾರೆ.

2) ಸಣ್ಣ ಮತ್ತು ಮಧ್ಯಮ ಪಟ್ಟಣಗಳ ನಗರ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ (UIDSSMT) ಬಸವನಬಾಗೇವಾಡಿ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಒದಗಿಸುವ ಕಾಮಗಾರಿಯನ್ನು `. 844.00 ಲಕ್ಷಗಳ ವೆಚ್ಚದಲ್ಲಿ ಕೈಗೊಂಡು, 2013 ರಲ್ಲಿ ಚಾಲನೆಗೊಳಿಸಲಾಗಿದೆ.

ಈ ಯೋಜನೆಯನ್ನು ತಾಂಡಾದ ಬೇಡಿಕೆಯನ್ನು ಒಳಗೊಂಡಂತೆ ಮಧ್ಯಂತರ ಹಂತ 2024 ಮತ್ತು ಅಂತಿಮ ಹಂತ 2039ಕ್ಕೆ ಕ್ರಮವಾಗಿ ಅಂದಾಜಿಸಲಾದ 43500 ಮತ್ತು 57000 ಜನಸಂಖ್ಯೆಗೆ ಒಳಚರಂಡಿ ವ್ಯವಸ್ಥೆ ಒದಗಿಸಲು ವಿನ್ಯಾಸಗೊಳಿಸಿದೆ. ತಾಂಡಾಗಳಲ್ಲಿ ಸೆಪ್ಟಿಕ್ ಟ್ಯಾಂಕ್‌ಗಳನ್ನು ಒದಗಿಸಲಾಗಿದೆ.

ಈ ತಾಂಡಾಗಳ ಮಧ್ಯಂತರ ಹಂತ 2024ರ ಜನಸಂಖ್ಯೆ 7000 ಮತ್ತು ಅಂತಿಮ ಹಂತ 2039ರ ಜನಸಂಖ್ಯೆ 13500 ಆಗಿರುತ್ತದೆ. ಯೋಜನೆಯಡಿ ಸಿವರ್, ಟ್ರಂಕ್ ಮತ್ತು ಔಟ್‌ಫಾಲ್ ಕೊಳವೆಗಳನ್ನು ಒದಗಿಸುವುದು ಮತ್ತು 4.02 ಎಂಎಲ್‌ಡಿ ಸಾಮರ್ಥ್ಯದ ಗ್ರಾಮಸಾರ ಶುದ್ಧೀಕರಣ ಘಟಕ ನಿರ್ಮಿಸುವ ಕಾಮಗಾರಿಗಳು ಒಳಗೊಂಡಿದೆ.

3) ಮಧ್ಯಂತರ ಹಂತ ಮತ್ತು ಅಂತಿಮ ಹಂತದ ಗ್ರಾಮಸಾರದ ಹರಿವು ಕ್ರಮವಾಗಿ 0.92 ದಶಲಕ್ಷ ಲೀಟರ್ ಮತ್ತು 1.26 ದಶಲಕ್ಷ ಲೀಟರ್ ಇರುತ್ತದೆ. ಇದರಿಂದ ಪಟ್ಟಣದ ಉಳಿದ ಶೆ.20% ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಒದಗಿಸಬಹುದಾಗಿದೆ. ಹಾಲಿ ಯೋಜನೆಯ ಅಡಿಯಲ್ಲಿ ನಿರ್ಮಿಸಿರುವ 4.02 ದಶ ಲಕ್ಷ ಲೀಟರ್ (3.10+0.92=4.02 ದಶ ಲಕ್ಷ ಲೀಟರ್) ಮಧ್ಯಂತರ ಹಂತ 2024ರ ಜನಸಂಖ್ಯೆ 43500 (28136 + 8364= 36500+7000 (ತಾಂಡಾ ಬೇಡಿಕೆ) = 43500)ಗಳಿಗೆ ವಿನ್ಯಾಸ ಮಾಡಲಾಗಿದೆ. ಇದರಲ್ಲಿ ಫೇಸ್ -1 ಮತ್ತು ಫೇಸ್-2 ಮಧ್ಯಂತರ ಹಂತದ ಗ್ರಾಮಸಾರದ ಹರಿವನ್ನು ಒಳಗೊಂಡಿರುತ್ತದೆ.

4) ಅದರಂತೆ, ಈ ಯೋಜನೆಯ ಅಂದಾಜು ಪಟ್ಟಿಯನ್ನು 2015-16 ಮುಂದುವರೆದು 2016-17 ನೇ ಸಾಲಿನ ಮಂಡಳಿಯ ಲೋಕೋಪಯೋಗಿ ಇಲಾಖೆಯ ದರಪಟ್ಟಿ ದರಗಳು ಹಾಗೂ ದರಪಟ್ಟಿಯಲ್ಲಿರದ ಐಟಂಗಳಿಗೆ ಮಾರುಕಟ್ಟೆ ದರಗಳನ್ನು ಪರಿಗಣಿಸಲಾಗಿದೆ. ಅಂದಾಜು ಪಟ್ಟಿಯ ಮೊತ್ತವು `. 709.00 ಲಕ್ಷಗಳು. ಅಂದಾಜಿನಲ್ಲಿ 15% ಇಟಿಪಿ, 10% ಎಸ್ಕಲೇಶನ್/ ಪ್ರೈಸ್ಸ್ ಅಡ್ಜೆಸ್ಟಮೆಂಟ್, 10% ಕಂಟಿನ್‌ಜೆನ್ಸಿ, 1% ಲೇಬರ್ ವೆಲ್‌ಫೇರ್ ಸೆಸ್, 1.5% ಕೆಪಾಸಿಟಿ ಬಿಲ್ಡಿಂಗ್, 0.5% ಮೂರನೇ ಸಂಸ್ಥೆ ತಪಾಸಣೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸದರಿ ಯೋಜನೆಯನ್ನು ಮಂಡಳಿಯ 2017-18 ನೇ ಸಾಲಿನ ಕ್ರಿಯಾ ಯೋಜನೆಯ 'ಡಿ' ವರ್ಗದಲ್ಲಿ ಅನುವು ಮಾಡಲಾಗಿದೆ.

5) ಮೇಲೆ (3) ರಲ್ಲಿ ಓದಲಾದ ದಿನಾಂಕ: 20/07/2011 ರ ಆದೇಶದಂತೆ ಯೋಜನೆಯ ಆರ್ಥಿಕ ಮಾದರಿಯು ಈ ಕೆಳಕಂಡಂತೆ ಇರುತ್ತದೆ.

ಸ ರ್ಕಾರದ ಅನುದಾನ (75%) 531.75
ಆರ್ಥಿಕ ಸಂಸ್ಥೆಗಳಿಂದ ಸಾಲ (20%) 141.80
ಸ ್ಥಳೀಯ ಸಂಸ್ಥೆಯ ಪಾಲು (5%) 35.45
ಒಟ್ಟು 709.00
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೨೧

6) ಸರ್ಕಾರವು ಪ್ರಸ್ತಾವನೆಯನ್ನು ಪರಿಶೀಲಿಸಿ, ಬಸವನ ಬಾಗೇವಾಡಿ ಪಟ್ಟಣದ ಹೊಸದಾಗಿ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆಯ `. 709.00 ಲಕ್ಷಗಳ ಅಂದಾಜು ಪಟ್ಟಿಯಲ್ಲಿ WCE & Contingency Charges @ ಶೇ.10, 3ನೇ Party inspection charges @ ಶೇ.0.5, Capacity building @ ಶೇ.1.5, ಈ ಅಂಶಗಳನ್ನು ಬಿಟ್ಟು ಉಳಿದ `. 647.27 ಲಕ್ಷ ಅಂದಾಜು ಮೊತ್ತದಲ್ಲಿ ಯೋಜನೆಯನ್ನು ಕೈಗೊಳ್ಳಲು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 39 ಯುಡಿಎಸ್ 2015, ಬೆಂಗಳೂರು, ದಿನಾಂಕ: 06ನೇ ಜನವರಿ 2018.

7) ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬಸವನಬಾಗೇವಾಡಿ ಪಟ್ಟಣದ ಹೊಸದಾಗಿ ಅಭಿವೃದ್ಧಿ ಹೊಂದಿದ ಪ್ರದೇಶಗಳಿಗೆ ಒಳಚರಂಡಿ ವ್ಯವಸ್ಥೆ ಒದಗಿಸುವ ಯೋಜನೆಯನ್ನು ಅಂದಾಜು ಮೊತ್ತ `. 647.27 ಲಕ್ಷ (ರೂಪಾಯಿ ಆರು ನೂರ ನಲವತ್ತೇಳು ಲಕ್ಷದ ಇಪ್ಪತ್ತೇಳು ಸಾವಿರ ಮಾತ್ರ) ವೆಚ್ಚದಲ್ಲಿ ಕೈಗೊಳ್ಳಲು, ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

1) ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿಯಮಾನುಸಾರ ಕೈಗೊಳ್ಳುವುದು.

2) ಕಾಮಗಾರಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು. 3) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000 ಮತ್ತು ತತ್ಸಂಬಂಧ ಸರ್ಕಾರವು ಹೊರಡಿಸಿರುವ ಸುತ್ತೋಲೆ ಮತ್ತು ಆದೇಶಗಳಲ್ಲಿನ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.

4) ಕಾಮಗಾರಿಯ ವೆಚ್ಚ ಅನುಮೋದಿತ ಅಂದಾಜು ಪಟ್ಟಿಯ ವೆಚ್ಚಕ್ಕಿಂತ ಹೆಚ್ಚಾಗುವಂತಿಲ್ಲ ಮತ್ತು ಪರಿಷ್ಕರಣೆಗೆ ಅವಕಾಶ ನೀಡುವಂತಿಲ್ಲ.

5) ಕಾಮಗಾರಿಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು.

8) ಸದರಿ ಯೋಜನೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಸರ್ಕಾರದ ಆದೇಶದ ಸಂಖ್ಯೆ: ಯುಡಿಡಿ 07 ಯುಡಬ್ಲ್ಯೂಎಸ್ 2011, ದಿನಾಂಕ: 20/07/2011 ರನ್ವಯ ಈ ಕೆಳಕಂಡಂತೆ ಇರುತ್ತದೆ.

(`. ಲಕ್ಷಗಳಲ್ಲಿ)

ಸ ರ್ಕಾರದ ಅನುದಾನ (75%) 485.45
ಆರ್ಥಿಕ ಸಂಸ್ಥೆಗಳಿಂದ ಸಾಲ (20%) 129.45
ಸ ್ಥಳೀಯ ಸಂಸ್ಥೆಯ ಪಾಲು (5%) 32.36
ಒಟ್ಟು 647.27

9) ಈ ಆದೇಶವನ್ನು ಆರ್ಥಿಕ ಇಲಾಖೆಯು ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 702 ವೆಚ್ಚ-9/16, ದಿನಾಂಕ: 23/10/2017 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ನಾಗರಾಜ

PR-133

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC-50

(ಎಂ.ಎ-2 & ಮಂಡಳಿ),

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಉಡುಪಿ ಜಿಲ್ಲೆಯ ಕಾಪು ಪಟ್ಟಣಕ್ಕೆ ಉದ್ಯಾವರ ನದಿಯನ್ನು ಮೂಲವಾಗಿಟ್ಟುಕೊಂಡು ನೀರು ಸರಬರಾಜು ಯೋಜನೆಯನ್ನು ಅಂದಾಜು ಮೊತ್ತ `. 5702.00 ಲಕ್ಷಗಳಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಓದಲಾಗಿದೆ : 1. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ:ಕಜಮಂ/ತಾಂತ್ರಿಕ/ನೀಸಯೋ-ಕಾಪು/603/2015-16 ದಿನಾಂಕ: 21/07/2015.

2. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಸನೀಇ 01 ಸನೀವಿ 2018, ದಿನಾಂಕ: 08/02/2018.

ಪ್ರಸ್ತಾವನೆ:

1) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಇವರ ಮೇಲೆ ಓದಲಾದ (1)ರ ಪತ್ರದಲ್ಲಿ ಕಾಪು ಪಟ್ಟಣವು ಕರ್ನಾಟಕ ರಾಜ್ಯದ ಕರಾವಳಿ ಪಟ್ಟಣವಾಗಿದ್ದು, ಉಡುಪಿಯಿಂದ ದಕ್ಷಿಣಕ್ಕೆ 13 ಕಿ.ಮೀ ಮತ್ತು ಮಂಗಳೂರಿನಿಂದ ಉತ್ತರಕ್ಕೆ 40ಕಿ.ಮೀ ದೂರದಲ್ಲಿದೆ. ಕಾಪು ಪಟ್ಟಣವು ಪಡು ಮತ್ತು ಮಲ್ಲೂರುನಂತಹ 2 ಗ್ರಾಮಗಳು ಸೇರಿದಂತೆ ಸುತ್ತಮುತ್ತಲಿನ ಉಳಿಯಾರಗೋಳಿ, ಮಲ್ಲಾರು ಮತ್ತು ಮಜೂರು ಎಂಬ ಹಳ್ಳಿಗಳಿಂದ ಕೂಡಿರುತ್ತದೆ. ಈ ಕಾಪು ಪಟ್ಟಣಕ್ಕೆ ಗ್ರಾಮಗಳನ್ನು ಒಟ್ಟುಗೂಡಿಸಿ ಪುರಸಭೆಯಾಗಿ ಮೇಲ್ದರ್ಜೆಗೇರಿಸಿದ್ದು,೩೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧ ದಿನಾಂಕ: 25/05/2015 ರಂದು ಕಾಪು ಪುರಸಭೆ ಪ್ರದೇಶವೆಂದು ಘೋಷಿಸಲಾಗಿದೆ. 2011 ರ ಜನಗಣತಿಯ ಪ್ರಕಾರ ಎಲ್ಲಾ ಗ್ರಾಮಗಳು ಸೇರಿದಂತೆ ಪಟ್ಟಣದ ಜನಸಂಖ್ಯೆ 23767 ಆಗಿದೆ. ಕಾಪು ಪಟ್ಟಣಕ್ಕೆ ಕೊಳವೆಬಾವಿ ಮತ್ತು ತೆರೆದ ಬಾವಿಗಳಿಂದ ಪಟ್ಟಣಕ್ಕೆ ಪ್ರಸ್ತುತ ನೀರು ಸರಬರಾಜು ಮಾಡಲಾಗುತ್ತಿದೆ.

ಹಾಗಾಗಿ ಉದ್ಯಾವರ ನದಿ ಮೂಲದಿಂದ ಕುಡಿಯುವ ನೀರಿನ ಸರಬರಾಜನ್ನು ಒದಗಿಸುವುದಕ್ಕಾಗಿ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ ಎಂದು ವರದಿ ಮಾಡಿರುತ್ತಾರೆ.

2) ಮುಂದುವರೆದು, ಪ್ರಸ್ತುತ ಕಾಪು ಪಟ್ಟಣ ಪುರಸಭೆ ವ್ಯಾಪ್ತಿಯಲ್ಲಿ ದಿನಪ್ರತಿ ತಲಾ 70 ಲೀಟರ್ ನೀರನ್ನು ತೆರೆದ ಬಾವಿ ಮತ್ತು ಕೊಳವೆಬಾವಿಗಳಿಂದ ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ 11 ಸಂಖ್ಯೆ ಸಣ್ಣ ಮೇಲ್ಮಟ್ಟದ ಜಲಸಂಗ್ರಹಗಾರಗಳಿದ್ದು, ಇವುಗಳಿಗೆ ತೆರೆದ ಬಾವಿ ಮತ್ತು ಕೊಳವೆಬಾವಿಗಳಿಂದ ನೀರನ್ನು ತುಂಬಿಸಿ, ಗುರುತ್ವಾಕರ್ಷಣೆ ಮೂಲಕ ಪಟ್ಟಣದ ಜನತೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಸದರಿ ಬಾವಿಗಳು ಬೇಸಿಗೆಕಾಲದಲ್ಲಿ ಬತ್ತಿಹೋಗುವುದರಿಂದ ಪಟ್ಟಣದಲ್ಲಿ ಬೇಸಿಗೆ ಕಾಲದಲ್ಲಿ ನೀರಿನ ತೀವ್ರ ಕೊರತೆ ಕಂಡು ಬರುತ್ತಿದೆ.

3) ಆದ್ದರಿಂದ, ಕಾಪು ಪಟ್ಟಣಕ್ಕೆ ಉದ್ಯಾವರ ನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಕೈಗೊಳ್ಳಲು ಪ್ರಸ್ತಾಪಿಸಲಾಗಿದೆ.

ಈ ಯೋಜನೆಯನ್ವಯ 2048ರ ಜನಸಂಖ್ಯೆ 38571 ಕ್ಕೆ ದಿನಂಪ್ರತಿ ತಲಾ 135 ಲೀಟರ್ ನೀರನ್ನು ಸರಬರಾಜು ಮಾಡಲು ಯೋಜನೆಯನ್ನು 2015-16 ರ ಸಾಲಿನ ಮಂಡಳಿ ಹಾಗೂ ಲೋಕೋಪಯೋಗಿ ಇಲಾಖೆ ದರಪಟ್ಟಿಗೆ ಅನುಗುಣವಾಗಿ ಹಾಗೂ ಮಾರುಕಟ್ಟೆ ದರಗಳಿಗನುಸಾರವಾಗಿ ತಯಾರಿಸಲಾಗಿದ್ದು, 15% ಇ.ಟಿ.ಪಿ, 10% ಕಂಟಿಂಜೆನ್ಸಿ, ಪ್ರತಿ ವರ್ಷಕ್ಕೆ 5% ನಂತೆ 2 ವರ್ಷಗಳಿಗೆ ಪ್ರೈಸ್ ಅಡ್ಜಸ್ಟ್‌ಮೆಂಟ್, 0.5% ಮೂರನೇ ಏಜೆನ್ಸಿ ಪರಿವೀಕ್ಷಣೆಗಾಗಿ, 1% ಲೇಬರ್ ವೆಲ್‌ಫೇರ್ ಸೆಸ್, ಭೂಸ್ವಾಧೀನ ವೆಚ್ಚ ಹಾಗೂ ನೀರು ಸರಬರಾಜು ನಿರ್ವಹಣೆಗೆ 187.50 ಲಕ್ಷ (3 ವರ್ಷಗಳಿಗೆ) ಅನುವು ಮಾಡಿದ್ದು, `. 6135 ಲಕ್ಷಗಳಲ್ಲಿ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದೆ. ಸದರಿ ಯೋಜನೆಯನ್ನು ಮಂಡಳಿಯ 2017-18ನೇ ಸಾಲಿನ ಕ್ರಿಯಾ ಯೋಜನೆಯ 'ಡಿ' ವರ್ಗದಲ್ಲಿ ಅನುವು

Sl. No. DESCREPTION OF WORK Amount in Lakhs
1 Head works
(i) Construction of coffer dam (115 Mtr) 12.90
(ii) Construction of intake well (3.0 Mtr Dia) 7.90
(iii) Providing and laying intake pipeline (600mm dia, 50 Mtr)(DI K-7) 18.00
(iv) Construction of inspection chamber along the connecting main pipeline 2.70
(v) Construction of Jack well ( 8.0 Mtr Dia,11.40 m deep RCC) in Udyavara river 143.00
(vi) Providing Yard lighting facilities to Jackwell and approach Road 2.00
2 Raw Water Pumping Machineries and Rising Main
(I) Supply, erection and commissioning of raw water pumping machineries (100 HP 2 No's) at Jack well and sub-station. 60.00
(ii) Providing & laying raw water transmission main from proposed jackwell at Kurkal Under WSS to Kapu 25.93
(iii) Providing and laying raw water transmission main from proposed Jack well to proposed water treatment plant at Uliyargoli (355.60 MM (OD),6.4 mm thick MS ,10000 M length ) 722.00
3 Construction of Water Treatment Plant (5.88 MLD) at Uliyarugoli with 10.00x6.00 mtr pump house and yard lighting. 273.90
(I) Supply, erection and commissioning of pure water pumping machineries (40 HP 2 No's) and (75 HP 2 No's) with all accessories to pump pure water sump to all zonal reservoirs 68.52
ii) Providing 11 KV express feeder main from Shankarapur to proposed WTP at Uliyargoli 72.79
4 Construction of Compound wall for water treatment plant (240Mtr) 17.85
5 Estimate for supplying, laying, jointing and commissioning of DI class K- 9 pure water rising main pipeline from WTP to all Zonal Reservoirs ranging from 300mm to 150mm dia 537.00
6 Construction of 5.00 Lakh Litres capacity OHT on 15.00 Mtr staging for Zone-1(Near Uliyarugoli) 82.00
7 Construction of 5.000 Lakh Litrres capacity OHT on15.00 Mtr staging for Zone-2 ( Near Padu) 82.00
8 Construction of 10.00 Lakh Litres capacity OHT on 9.00 Mtr staging for Zone-3 (Near Mallar) 108.00
9 Construction of 2.50 Lakh Litres capacity OHT on 15.00 Mtr staging for Zone-4 (Near Moolur) 61.40
10 Providing and laying distribution network of Zone - 1 ,2,3 & 4 756.00
11 Renovation of existing OHT's 10.00
12 Road Restoration 753.70
13 Providing House service connections (4500Domestic) Connections 306.00
Sub Total Rs. 4123.59
14 3 years O & M charges( Excluding Power charges) 187.50
15 ETP & Contingencies at 15% (12%+30%) 618.54
16 Tender Premium @ 10% 412.36
17 Price Adjustment at 10 (5% for 2 years ) 412.36
18 Building and Construction Worker's welfare cess at 1 % 41.24
19 Third party inspection charges @0.5% 20.62
20 Road cutting charges for PWD/NH roads 13.00
21 Land acquisition cost for construction of 4 No,s OHTs , WTP & Jackwell (private land) 3.05 Acres ( @ 1 Crore per acre of land) 305.00
22 Rounding off 0.79
Grand Total Rs. 6135.00
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೨೩

4) ಸರ್ಕಾರವು ಪ್ರಸ್ತಾವನೆಯನ್ನು ಪರಿಶೀಲಿಸಿ, ಕಾಪು ಪಟ್ಟಣಕ್ಕೆ ಉದ್ಯಾವರ ನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಯೋಜನೆಯ `. 6135.00 ಲಕ್ಷಗಳ ಅಂದಾಜು ಪಟ್ಟಿಯಲ್ಲಿ 12% ಇ.ಟಿ.ಪಿ. ಚಾರ್ಜ್, 3% ಕಂಟಿನ್‌ಜೆನ್ಸಿಸ್, 1% ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉಪ-ಕರ, ಎಕ್ಸ್‌ಲೇಷನ್, ಟೆಂಡರ್ ಪ್ರೀಮಿಯಂ & 5% ಪ್ರೈಸ್ ಅಡ್ಜ್‌ಸ್ಟ್‌ಮೆಂಟ್ 2 ವರ್ಷದವರೆಗೆ (10% ಮೂಲ ಬೇಸಿಕ್ ಕಾಸ್ಟ್) ಯೋಜನೆಯ ಅಂದಾಜು ಮೊತ್ತವನ್ನು `. 5702.00 ಲಕ್ಷಗಳ ಅಂದಾಜು ಮೊತ್ತಕ್ಕೆ ಮಿತಿಗೊಳಿಸಿದೆ. ಹಾಗೂ ಮೇಲೆ ಓದಲಾದ ಉಲ್ಲೇಖ(2) ರಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಕಾಪು ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಯೋಜನೆಗೆ ಕುರಕಲ್ ಮಣಿಪುರ ಬಳಿ ಇರುವ ಕಿಂಡಿ ಅಣೆಕಟ್ಟು ಯೋಜನೆಗೆ ಜಲನೀತಿಯಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕಾದ ಕಾರಣ "ಅಚ್ಚುಕಟ್ಟು ಪ್ರದೇಶಕ್ಕೆ" ಹಾನಿಯಾಗದಂತೆ ಕ್ರಮವಹಿಸುವ ಷರತ್ತಿಗೊಳಪಟ್ಟು ಉದ್ಯಾವರ ನದಿಯಿಂದ ಕಾಪು ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಅನುಮತಿ ನೀಡಲಾಗಿದೆ ಎಂದು ಅಭಿಪ್ರಾಯ ನೀಡಿರುವ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 34 ಯುಡಬ್ಲ್ಯೂಎಸ್ 2015, ಬೆಂಗಳೂರು, ದಿನಾಂಕ: 21 ನೇ ಫೆಬ್ರವರಿ: 2018.

5) ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಾಪು ಪಟ್ಟಣಕ್ಕೆ ಉದ್ಯಾವರ ನದಿಯನ್ನು ಮೂಲವಾಗಿಟ್ಟುಕೊಂಡು ನೀರು ಸರಬರಾಜು ಯೋಜನೆಯನ್ನು `. 5702.00 ಲಕ್ಷಗಳ (ರೂಪಾಯಿ ಐದು ಸಾವಿರದ ಏಳುನೂರ ಎರಡು ಲಕ್ಷಗಳು ಮಾತ್ರ) ಅಂದಾಜು ಮೊತ್ತದಲ್ಲಿ ಕೈಗೊಳ್ಳಲು, ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

1) ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿಯಮಾನುಸಾರ ಕೈಗೊಳ್ಳುವುದು.

2) ಕಾಮಗಾರಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು.

3) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000 ಮತ್ತು ತತ್ಸಂಬಂಧ ಸರ್ಕಾರವು ಹೊರಡಿಸಿರುವ ಸುತ್ತೋಲೆ ಮತ್ತು ಆದೇಶಗಳಲ್ಲಿನ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.

4) ಕಾಮಗಾರಿಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು. 5) ಕಾಮಗಾರಿಯ ವೆಚ್ಚ ಅನುಮೋದಿತ ಅಂದಾಜು ಪಟ್ಟಿಯ ವೆಚ್ಚಕ್ಕಿಂತ ಹೆಚ್ಚಾಗುವಂತಿಲ್ಲ ಮತ್ತು ಪರಿಷ್ಕರಣೆಗೆ ಅವಕಾಶ ನೀಡುವಂತಿಲ್ಲ.

6) ನೀರಿನ ಕರ ಮತ್ತು ಇತರೆ ಶುಲ್ಕಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾದರಿಯಲ್ಲಿ ನಿಗಧಿ ಪಡಿಸತಕ್ಕದ್ದು.

೩೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

7) ಈ ಯೋಜನೆಯನ್ನು ನಿರ್ವಹಿಸುವ ಸಂದರ್ಭದಲ್ಲಿ ಕಿಂಡಿ ಅಣೆಕಟ್ಟು "ಅಚ್ಚುಕಟ್ಟು ಪ್ರದೇಶಕ್ಕೆ" ಹಾನಿಯಾಗದಂತೆ ಕ್ರಮವಹಿಸುವ ಷರತ್ತಿಗೊಳಪಟ್ಟು ಉದ್ಯಾವರ ನದಿಯಿಂದ ಕಾಪು ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಅನುಮತಿ ನೀಡಲಾಗಿದೆ.

6) ಸದರಿ ಯೋಜನೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಸರ್ಕಾರದ ಆದೇಶದ ಸಂಖ್ಯೆ: ಯುಡಿಡಿ 07 ಯುಡಬ್ಲ್ಯೂಎಸ್ 2011, ದಿನಾಂಕ: 20/07/2011 ರನ್ವಯ ಈ ಕೆಳಕಂಡಂತೆ ಇರುತ್ತದೆ.

ಸ ರ್ಕಾರದ ಅನುದಾನ(ಶೇ.75) 4276.50
ಆರ್ಥಿಕ ಸಂಸ್ಥೆಗಳಿಂದ ಸಾಲ(ಶೇ.20) 1140.40
ಸ ್ಥಳೀಯ ಸಂಸ್ಥೆಯ ವಂತಿಕೆ(ಶೇ.5) 285.10
ಒಟ್ಟು 5702.00

7) ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 98 ವೆಚ್ಚ-9/2016, ದಿನಾಂಕ: 30/08/2017 ರಲ್ಲಿ ಸಹಮತಿ ನೀಡಿರುವ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ನಾಗರಾಜ

PR-134

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC-50

(ಎಂ.ಎ-2 & ಮಂಡಳಿ),

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಇಂಡಿ ಪಟ್ಟಣಕ್ಕೆ ಟಾಕಳೆ-ಧೂಳಖೇಡ ಬ್ಯಾರೇಜಿನಿಂದ ನಿರಂತರ ಒತ್ತಡಯುಕ್ತ ನೀರು ಪೂರೈಕೆ ಮತ್ತು ನೀರಿನ ಮೂಲ ಸುಧಾರಣೆ ಮಾಡುವ ಯೋಜನೆ ಅಂದಾಜು ಮೊತ್ತ `. 9049 ಲಕ್ಷಗಳಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಓದಲಾಗಿದೆ : 1 ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ:ಕಜಮ/ಮುಅ(ಧಾ)/ತಾಂತ್ರಿಕ/ಆಶ್ರೇಕಾಅ(ಬೆ)/ಉಮುಅ-1/ತಾಸ-2/ಸಅ-2/172/2016-17, ದಿನಾಂಕ: 22/04/2016.

2 ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ:ಕಜಮ/ಮುಅ(ಧಾ)/ತಾಂತ್ರಿಕ/ಆಶ್ರೇಕಾಅ(ಬೆ)/ಉಮುಅ-1/ತಾಸ-2/ಸಅ-2/2016-17/1586, ದಿನಾಂಕ: 24/10/2016.

3. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ:ಕಜಮ/ಮುಅ(ಧಾ)/ತಾಂತ್ರಿಕ/ ಆಶ್ರೇಕಾಅ(ಬೆ)/ಉಮುಅ-1/ತಾಸ-2/ಸಅ-2/2016- 17/2148, ದಿನಾಂಕ: 03/01/2017.

ಪ್ರಸ್ತಾವನೆ:

1) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಇವರ ಮೇಲೆ ಓದಲಾದ (1) (2) ಮತ್ತು (3) ರ ಪತ್ರಗಳಲ್ಲಿ ಇಂಡಿ ಪಟ್ಟಣದ ಜನಸಂಖ್ಯೆಯು 2011 ರ ಜನಗಣತಿಯಂತೆ, 38,329 ಇರುತ್ತದೆ ಹಾಗೂ ಹಾಲಿ ಜನಸಂಖ್ಯೆಯು 40,000 ಆಗಿರುತ್ತದೆ. ಇಂಡಿ ಪಟ್ಟಣದ ಮುಖ್ಯ ನೀರಿನ ಮೂಲವು ಭೀಮಾ ನದಿಯಾಗಿದೆ ಮತ್ತು ಬರಗುಡಿ ಹಳ್ಳಿಯ ಹತ್ತಿರವಿದ್ದು, 18 ಕಿ.ಮೀ. ದೂರದಲ್ಲಿದೆ. ಇಂಡಿ ಪಟ್ಟಣದ ಮೊದಲ ಹಂತದ ನೀರು ಸರಬರಾಜು ಯೋಜನೆಯನ್ನು 1972 ರಲ್ಲಿ ಚಾಲನೆಗೊಳಿಸಲಾಗಿದೆ. 2ನೇ ಹಂತದ ನೀರು ಸರಬರಾಜು ಯೋಜನೆಯನ್ನು ಹಾಲಿ ಮೂಲದಿಂದ ದಿನಂಪ್ರತಿ ತಲಾ 113 ಲೀಟರ್ ನೀರು ಸರಬರಾಜು ಪರಿಗಣಿಸಿ, 2000 ರಲ್ಲಿ ಚಾಲನೆಗೊಳಿಸಲಾಗಿದೆ.

ಈ ಯೋಜನೆಯನ್ನು 2021 ನೇ ಇಸವಿಗೆ ಅಂದಾಜಿಸಿದ ಅಂತಿಮ ಹಂತದ ಜನಸಂಖ್ಯೆ 40,000 ಗಳಿಗೆ 5.45 ದಶಲಕ್ಷ ಲೀಟರ್ ನೀರು ಸರಬರಾಜು ಮಾಡಲು ವಿನ್ಯಾಸಿಸಲಾಗಿದೆ. ಇದಲ್ಲದೇ ಪಟ್ಟಣದ ಹಲವು ಪ್ರದೇಶಗಳಿಗೆ ಪರ್ಯಾಯ ನೀರಿನ ಮೂಲವಾಗಿ 75 ಸಂಖ್ಯೆಯ ವಿದ್ಯುತ್ ಪಂಪ್ ಅಳವಡಿಸಿರುವ ಕೊಳವೆ ಬಾವಿಗಳಿಂದ ನೀರನ್ನು ಪೂರೈಸಲಾಗುತ್ತಿದೆ ಎಂದು ವರದಿ ಮಾಡಿರುತ್ತಾರೆ.

2) ಪ್ರಸ್ತುತ ನೀರು ಸರಬರಾಜು ಮೂಲವಾದ ಭೀಮಾ ನದಿಯು ಪ್ರತಿ ವರ್ಷ ಬೇಸಿಗೆ ಸಮಯದಲ್ಲಿ ಬತ್ತಿ ಹೋಗುತ್ತದೆ. ಇನ್ನೊಂದು ನೀರಿನ ಮೂಲವಾದ ಇಂಡಿ ಶಾಖಾ ಕಾಲುವೆಯಲ್ಲಿ ನೀರು ಹರಿಯುವಿಕೆ ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಇರುವುದಿಲ್ಲ. ಆದ್ದರಿಂದ, ಬೇಸಿಗೆಯ ಸಮಯದಲ್ಲಿ ಪಟ್ಟಣವು ತೀವ್ರವಾದ ನೀರಿನ ಬರವನ್ನು ಎದುರಿಸುತ್ತದೆ. ಆದ್ದರಿಂದ, ಇಂಡಿ ಪಟ್ಟಣಕ್ಕೆ ನೀರು ಪೂರೈಸಲು ಲೋಣಿ ಕೆ.ಡಿ. ಕೆರೆಯಿಂದ ತಾತ್ಕಾಲಿಕ ವ್ಯವಸ್ಥೆಯನ್ನು ಸ್ಥಳೀಯ ಸಂಸ್ಥೆಯು ಕೈಗೊಂಡಿರುತ್ತದೆ. ಪಟ್ಟಣದ ಹಾಲಿ ವಿತರಣಾ ವ್ಯವಸ್ಥೆಯನ್ನು ಕಳೆದ ಮೂರು ದಶಕಗಳಲ್ಲಿ ಅಳವಡಿಸಿದ್ದು, 90 ಮಿಮೀ ಯಿಂದ 300 ಮಿಮೀ ವ್ಯಾಸದ ಪಿವ್ಹಿಸಿ ಮತ್ತು ಡಿಐ ಕೊಳವೆಗಳನ್ನು ಒಳಗೊಂಡಿರುತ್ತದೆ. ವಿತರಣಾ ಜಾಲದ ಒಟ್ಟು ಉದ್ದ 35 ಕಿಮೀ ಇರುತ್ತದೆ.

ಹಾಲಿ ವಿತರಣಾ ವ್ಯವಸ್ಥೆಯಲ್ಲಿ ಅನೇಕ ವಿಫಲತೆಗಳು ಹಾಗೂ ಗಣನೀಯ ಸೋರುವಿಕೆಗಳು ಇದ್ದು, ಬದಲಾವಣೆಯ ಅವಶ್ಯಕತೆ ಇದ್ದು, ಇಂಡಿ ಪಟ್ಟಣಕ್ಕೆಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೨೫ ಟಾಕಳೆ-ಧೂಳಖೇಡ ಬ್ಯಾರೇಜಿನಿಂದ ನಿರಂತರ ಒತ್ತಡಯುಕ್ತ ನೀರು ಪೂರೈಕೆ ಮತ್ತು ನೀರಿನ ಮೂಲ ಸುಧಾರಣೆ ಮಾಡುವ ಯೋಜನೆಯನ್ನು ರೂಪಿಸಲಾಗಿದೆ.

3) ಅದರಂತೆ, ಇಂಡಿ ಪಟ್ಟಣಕ್ಕೆ ಟಾಕಳೆ-ಧೂಳಖೇಡ ಬ್ಯಾರೇಜಿನಿಂದ ನಿರಂತರ ಒತ್ತಡಯುಕ್ತ ನೀರು ಪೂರೈಕೆ ಮತ್ತು ನೀರಿನ ಮೂಲ ಸುಧಾರಣೆ ಮಾಡುವ ಯೋಜನೆಯ `. 9789.00 ಲಕ್ಷ ಮೊತ್ತದ ಅಂದಾಜು ಪಟ್ಟಿಯನ್ನು ತಯಾರಿಸಿರುತ್ತಾರೆ. ಸದರಿ ಯೋಜನೆಗೆ ಮಂಡಳಿಯ 2017-18 ನೇ ಸಾಲಿನ ಕ್ರಿಯಾ ಯೋಜನೆಯ 'ಡಿ' ವರ್ಗದಲ್ಲಿ ಅನುವು ಮಾಡಲಾಗಿದ್ದು, ಉದ್ದೇಶಿತ ಯೋಜನೆಯಲ್ಲಿ ಕೆಳಕಂಡ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಕ್ರ.ಸಂ. ಕಾಮಗಾರಿ ವಿವರ ವ ೂತ್ತ ೆ (`. ಲಕ್ಷಗಳಲ್ಲಿ)
1 ಟಾಕಳಿ-ಧೂಳಖೇಡ ಬ್ಯಾರೇಜ್ ಹತ್ತಿರ ಮೂಲ ಸ್ಥಾವರ ನಿರ್ಮಾಣ. (ಇನ್‌ಟೇಕ್ ವೆಲ್, ಕನೆಕ್ಟಿಂಗ್ ಪೈಪ್‌ಲೈನ್ ವ ುತ್ತು ಜಾಕ್ ವೆಲ್ ಕಮ್ ಪಂಪ್ ಹೌಸ್, ಅಪ್ರೋಚ್ ಬ್ರಿಡ್ಜ್ ಮತ್ತು ಸ್ವಿಚ್ ಗೇರ್ ರೂಂ ನಿರ್ಮಾಣ) 493.90
2 ಹೆಚ್‌ಟಿ ವಿದ್ಯುತ್ ಮಾರ್ಗ ಜಾಕ್ ವೆಲ್‌ಗೆ ಒದಗಿಸುವುದು. 212.41
3 315 ಅಶ್ವಶಕ್ತಿಯ ಅಥವಾ ಸೂಕ್ತ ಸಾಮರ್ಥ್ಯದ ಡಿಡಬ್ಲ್ಯೂಟಿ ಪಂಪ್‌ಸೆಟ್ ಒದಗಿಸಿ, ಅಳವಡಿಸುವುದು 109.98
4 ಟಾಕಳಿ-ಧೂಳಖೇಡದಲ್ಲಿರುವ ಜಾಕ್‌ವೆಲ್‌ನಿಂದ ಇಂಡಿ ಪಟ್ಟಣದಲ್ಲಿನ ಜಲ ಶುದ್ಧೀಕರಣ ಘಟಕದವರೆಗೆ 559 ಮಿ.ಮೀ. ವ್ಯಾಸದ ಕಚ್ಚಾ ನೀರಿನ ಏರುಕೊಳವೆ ಮಾರ್ಗ ಒದಗಿಸಿ, ಅಳವಡಿಸುವುದು. 3280.36
5 ಹಾಲಿ ಜಲಶುದ್ಧೀಕರಣ ಘಟಕದ ಹತ್ತಿರ 5.00 ದಶಲಕ್ಷ ಲೀ. ಸಾಮರ್ಥ್ಯದ ಜಲ ಶುದ್ಧೀಕರಣ ಘಟಕ ನಿರ್ಮಿಸುವುದು. 186.01
6 ಇಂಡಿ ಪಟ್ಟಣಕ್ಕೆ ಡಿಐ ಮತ್ತು ಹೆಚ್‌ಡಿಪಿಇ ವಿತರಣಾ ಕೊಳವೆ ಮಾರ್ಗ ಒದಗಿಸುವುದು. 1903.76
7 ಹಾಲಿ ಇರುವ 9.08 ಲಕ್ಷ ಲೀ. ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರ ದುರಸ್ಥಿ. 50.00
8 ಸ್ಕಾಡಾ ಸಿಸ್ಟಮ್ ಒದಗಿಸುವುದು. 235.00
ಒಟ್ಟು 6471.42
15% ಇ.ಟಿ.ಪಿ. 971.00
10% ಕಂಟಿನ್‌ಜೆನ್ಸಿಸ್ 647.00
ಪ ೖಸ್ ಅಡ್ಜ್‌ಸ್ಟಮೆಂಟ್ / ಎಸ್ಕಲೇಶನ್ ಎರಡು ವರ್ಷಕ್ಕೆ ಶೇಕಡಾ 10% ರಷ್ಟು, ೆ ್ರ 647.00
1% ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉಪ-ಕರ 65.00
1.5% ಕೆಪಾಸಿಟಿ ಬಿಲ್ಡಿಂಗ್ ಮತ್ತು ಮೂರನೇ ಸಂಸ್ಥೆ ತಪಾಸಣೆ ಶುಲ್ಕ 97.00
5 ವರ್ಷ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿಗಳಿಗೆ 890.00
ಪ ೂರ್ಣಾಂಕ 0.58
ಒಟ್ಟು 9789.00

4) ಸರ್ಕಾರವು ಪ್ರಸ್ತಾವನೆಯನ್ನು ಪರಿಶೀಲಿಸಿ, ಇಂಡಿ ಪಟ್ಟಣಕ್ಕೆ ಟಾಕಳೆ-ಧೂಳಖೇಡ ಬ್ಯಾರೇಜಿನಿಂದ ನಿರಂತರ ಒತ್ತಡಯುಕ್ತ ನೀರು ಪೂರೈಕೆ ಮತ್ತು ನೀರಿನ ಮೂಲ ಸುಧಾರಣೆ ಮಾಡುವ ಯೋಜನೆಯ ಅಂದಾಜು ಪಟ್ಟಿಯಲ್ಲಿ contingencies @ ಶೇ.10, 3ನೇ Party inspection charges & capacity building charges @ ಶೇ.1.5 ಈ ಅಂಶಗಳನ್ನು ಹೊರತುಪಡಿಸಿ, `. 9049.00 ಲಕ್ಷ ಅಂದಾಜು ಮೊತ್ತದಲ್ಲಿ ಕೈಗೊಳ್ಳಲು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 07 ಯುಡಬ್ಲ್ಯೂಎಸ್ 2016, ಬೆಂಗಳೂರು, ದಿನಾಂಕ: 12ನೇ ಜನವರಿ, 2018.

5) ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಇಂಡಿ ಪಟ್ಟಣಕ್ಕೆ ಟಾಕಳೆ-ಧೂಳಖೇಡ ಬ್ಯಾರೇಜಿನಿಂದ ನಿರಂತರ ಒತ್ತಡಯುಕ್ತ ನೀರು ಪೂರೈಕೆ ಮತ್ತು ನೀರಿನ ಮೂಲ ಸುಧಾರಣೆ ಮಾಡುವ ಯೋಜನೆಯ `. 9049.00 ಲಕ್ಷಗಳ (ರೂಪಾಯಿ ಒಂಬತ್ತು ಸಾವಿರದ ನಲವತ್ತೊಂಬತ್ತು ಲಕ್ಷಗಳು ಮಾತ್ರ) ಅಂದಾಜು ಪಟ್ಟಿಗೆ, ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

1) ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿಯಮಾನುಸಾರ ಕೈಗೊಳ್ಳುವುದು.

2) ಕಾಮಗಾರಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು.

3) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000 ಮತ್ತು ತತ್ಸಂಬಂಧ ಸರ್ಕಾರವು ಹೊರಡಿಸಿರುವ ಸುತ್ತೋಲೆ ಮತ್ತು ಆದೇಶಗಳಲ್ಲಿನ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.

4) ಕಾಮಗಾರಿಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು.

೩೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

5) ಕಾಮಗಾರಿಯ ವೆಚ್ಚ ಅನುಮೋದಿತ ಅಂದಾಜು ಪಟ್ಟಿಯ ವೆಚ್ಚಕ್ಕಿಂತ ಹೆಚ್ಚಾಗುವಂತಿಲ್ಲ ಮತ್ತು ಪರಿಷ್ಕರಣೆಗೆ ಅವಕಾಶ ನೀಡುವಂತಿಲ್ಲ.

6) ನೀರಿನ ಕರ ಮತ್ತು ಇತರೆ ಶುಲ್ಕಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾದರಿಯಲ್ಲಿ ನಿಗಧಿ ಪಡಿಸತಕ್ಕದ್ದು.

6) ಸದರಿ ಯೋಜನೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಸರ್ಕಾರದ ಆದೇಶದ ಸಂಖ್ಯೆ: ಯುಡಿಡಿ 07 ಯುಡಬ್ಲ್ಯೂಎಸ್ 2011, ದಿನಾಂಕ: 20/07/2011 ರನ್ವಯ ಈ ಕೆಳಕಂಡಂತೆ ಇರುತ್ತದೆ.

(`.ಲಕ್ಷಗಳಲ್ಲಿ)

ಕರ್ನಾಟಕ ಸರ್ಕಾರ ಅನುದಾನ 75% 6786.75
ಆರ್ಥಿಕ ಸಂಸ್ಥೆಯ ಸಾಲ 20% 1809.80
ಸ ್ಥಳೀಯ ಸಂಸ್ಥೆಯ ಪಾಲು 5% 452.45
ಒಟ್ಟು 9049.00

7) ಈ ಆದೇಶವನ್ನು ಆರ್ಥಿಕ ಇಲಾಖೆಯು ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 657 ವೆಚ್ಚ-9/2017, ದಿನಾಂಕ: 23/10/2017 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ನಾಗರಾಜ

PR-135

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC-50

(ಎಂ.ಎ-2 & ಮಂಡಳಿ),

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಗೆ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 680 ಅಪ್ರಾ 2008, ದಿನಾಂಕ: 11.09.2009.

2. ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 34 ಬೆಂರೂಪ್ರಾ 2014, ದಿನಾಂಕ: 24.02.2014. 3. ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 120 ಬೆಂರೂಪ್ರಾ 2014, ದಿನಾಂಕ: 07.06.2014.

4. ಸದಸ್ಯ ಕಾರ್ಯದರ್ಶಿ, ಯೋಜನಾ ಪ್ರಾಧಿಕಾರ, ಗೌರಿಬಿದನೂರು ಇವರ ಪತ್ರಗಳ ಸಂಖ್ಯೆ:ಗೌಯೋಪ್ರಾ/

ಮ.ಯೋ.ತ/2016-17/201, ದಿನಾಂಕ: 23.02.2017, 27.10.2017 ಮತ್ತು 19.01.2018.

5. ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ, ಇವರ ಪ್ರಸ್ತಾವನೆಗಳ ಸಂಖ್ಯೆ: DTCP-2-MPP-2016-17, ದಿನಾಂಕ: 05.08.2017 ಮತ್ತು 03.02.2018.

ಪ್ರಸ್ತಾವನೆ:

ಮೇಲೆ ಓದಲಾದ (1)ರ ಸರ್ಕಾರದ ಅಧಿಸೂಚನೆಯಲ್ಲಿ ಗೌರಿಬಿದನೂರು ಪಟ್ಟಣಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯನ್ನು ವಿಸ್ತ್ತರಿಸಿ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಲಾಗಿರುತ್ತದೆ. ಮೇಲೆ ಓದಲಾದ (2)ರ ಅಧಿಸೂಚನೆಯಲ್ಲಿ ಪರಿಷ್ಕøತ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಲಾಗಿರುತ್ತದೆ. ಮೇಲೆ ಓದಲಾದ (3)ರ ಅಧಿಸೂಚನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರು ಪಟ್ಟಣಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರವನ್ನು ರಚಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ(4) ಪತ್ರಗಳಲ್ಲಿ, ಸದಸ್ಯ ಕಾರ್ಯದರ್ಶಿ, ಗೌರಿಬಿದನೂರು ಯೋಜನಾ ಪ್ರಾಧಿಕಾರ, ಗೌರಿಬಿದನೂರು ಇವರು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 9(1)ರನ್ವಯ ಗೌರಿಬಿದನೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು (ತಾತ್ಕಾಲಿಕ) ಸಿದ್ಧಪಡಿಸಿ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯ ಪ್ರಕರಣ 13(1) ರನ್ವಯ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ (5)ರ ಪ್ರಸ್ತಾವನೆಗಳಲ್ಲಿ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು, ಇವರು ಗೌರಿಬಿದನೂರು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯ ಜನಸಂಖ್ಯೆಯು 2031ರಲ್ಲಿ 1,65,000ಗಳಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಿ ಮಹಾಯೋಜನೆಯನ್ನು ತಯಾರಿಸಲಾಗಿದೆ.

ಗೌರಿಬಿದನೂರು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ 2548.82 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 1461.57 ಹೆಕ್ಟೇರ್ (ಶೇ.57.35), ವಾಣಿಜ್ಯಕ್ಕಾಗಿ 107.71 ಹೆಕ್ಟೇರ್ (ಶೇ.4.23), ಕೈಗಾರಿಕೆಗಾಗಿ 144.68 ಹೆಕ್ಟೇರ್ (ಶೇ.5.68), ಸಾರ್ವಜನಿಕ/ಅರೆ ಸಾರ್ವಜನಿಕ ಉಪಯೋಗಕ್ಕೆ 129.62 ಹೆಕ್ಟೇರ್ (ಶೇ.5.09), ಸಾರ್ವಜನಿಕ ಉಪಯುಕ್ತತೆಗಾಗಿ 14.29 ಹೆಕ್ಟೇರ್ (ಶೇ.0.56), ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 267.21 ಹೆಕ್ಟೇರ್ (ಶೇ.10.48) ಹಾಗೂ ಸಾರಿಗೆ/ಸಂಪರ್ಕ ವಲಯಕ್ಕೆ 423.64 ಹೆಕ್ಟೇರ್ (ಶೇ.16.61) ಪ್ರದೇಶವನ್ನು ನಿಗದಿಪಡಿಸಲಾಗಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೨೭

ಮಹಾಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1)ರನ್ವಯ ತಾತ್ಕಾಲಿಕ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ; ನಅಇ 203 ಬೆಂರೂಪ್ರಾ 2017, ಬೆಂಗಳೂರು, ದಿನಾಂಕ: 02.03.2018.

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಗೌರಿಬಿದನೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1)ರನ್ವಯ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ. ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-136

ನಾಗರಾಜ

SC-50

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ವಿಷಯ: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖಾಂತರ ಕೈಗೊಳ್ಳಲಾಗಿರುವ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳ ಪರಿಷ್ಕೃತ ಅಂದಾಜು ಪಟ್ಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು

ಓದಲಾಗಿದೆ: 4. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಮ/ ವ್ಯ.ನಿ/ ಮುಅ(ಡಿ&ಎಂ)/ 1878/2016-17, ದಿನಾಂಕ 26/10/2016.

5. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಮ/ ವ್ಯ.ನಿ/ ಮುಅ(ಡಿ&ಎಂ)/ ಎಫ್-40/3117/2016-17, ದಿನಾಂಕ 24/01/2017.

6. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಮ/ ಮುಅ(ವಿ ಮತ್ತು ಉ)/ ಉಮುಅ (ಎಂ) /ಪ.ಅಂ.ಪಟ್ಟಿ/ಕಡತ-47/677/2017-18, ದಿನಾಂಕ 20/06/2017.

ಪ್ರಸ್ತಾವನೆ:

1) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಇವರ ಮೇಲೆ ಓದಲಾದ (1) ರಿಂದ (3) ರ ಪತ್ರಗಳಲ್ಲಿ ರಾಜ್ಯ ಸರ್ಕಾರದ ಅನುದಾನ ಮತ್ತು ಸ್ಥಳೀಯ ಸಂಸ್ಥೆಯ ಅನುದಾನದೊಂದಿಗೆ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ `.26,766.41 ಲಕ್ಷ ಅನುಮೋದಿತ ಅಂದಾಜು ವೆಚ್ಚದಲ್ಲಿ ಕೈಗೊಂಡಿರುವ 13 ಕಾಮಗಾರಿಗಳ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಮುಂದುವರೆದು ಸದರಿ ಕಾಮಗಾರಿಗಳು ಮುಂದುವರೆದ ಕಾಮಗಾರಿಗಳಾಗಿದ್ದು, ಹಲವಾರು ಕಾರಣಗಳಿಂದಾಗಿ ಸದರಿ ಕಾಮಗಾರಿಗಳ ಅಂದಾಜು ವೆಚ್ಚದಲ್ಲಿ ಹೆಚ್ಚಳ ಕಂಡು ಬಂದಿರುತ್ತದೆಂದು ತಿಳಿಸಿ, ಹೆಚ್ಚುವರಿ ಮೊತ್ತ ಒಳಗೊಂಡಂತೆ ಒಟ್ಟಾರೆ ಎಲ್ಲಾ 13 ಕಾಮಗಾರಿಗಳಿಗೆ ಸೇರಿದಂತೆ `.39,828.50 ಲಕ್ಷ ಮೊತ್ತದ ಪರಿಷ್ಕøತ ಅಂದಾಜು ಪಟ್ಟಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕೆಂದು ಕೋರಿರುತ್ತಾರೆ.

2) ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನೀರು ಸರಬರಾಜು ಮತ್ತು ಉತ್ತಮ ಒಳಚರಂಡಿ ವ್ಯವಸ್ಥೆ ಒದಗಿಸುವ ಮೂಲ ಉದ್ದೇಶದಿಂದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖಾಂತರ ಹಲವಾರು ಕಾಮಗಾರಿಗಳನ್ನು ಜಾರಿಗೊಳಿಸಲಾಗುತ್ತಿದೆ. ಆ ಪೈಕಿ ಕೆಲವು ಮುಂದುವರೆದ ಕಾಮಗಾರಿಗಳ ವೆಚ್ಚದಲ್ಲಿ ಹೆಚ್ಚಳ ಕಂಡು ಬಂದಿರುವುದರಿಂದ ಪರಿಷ್ಕøತ ಅಂದಾಜು ಪಟ್ಟಿಗಳನ್ನು ತಯಾರಿಸಲಾಗಿದೆ.

3) ಕಾಮಗಾರಿಗಳು ಪ್ರಾರಂಭವಾದ ನಂತರ ಕಂಡು ಬರುವ ವಾಸ್ತವಿಕ ಅಂಶಗಳು, ಕಾಲಕಾಲಕ್ಕೆ ದರ ಪರಿಷ್ಕರಣೆ ಮತ್ತು ನಿರ್ವಹಣಾ ವೆಚ್ಚದಲ್ಲಿ ಏರಿಕೆ ಕಂಡು ಬರುವುದರಿಂದ ಒಟ್ಟಾರೆ ಕಾಮಗಾರಿಗಳ ವೆಚ್ಚದಲ್ಲಿ ಏರಿಕೆ ಕಂಡು ಬಂದಿರುತ್ತದೆ. ಕುಡಿಯುವ ನೀರು ಯೋಜನೆಗಳು ಮತ್ತು ಒಳಚರಂಡಿ ವ್ಯವಸ್ಥೆ ಯೋಜನೆಗಳು ಮೂಲಭೂತ ಸೌಕರ್ಯಗಳಾಗಿದ್ದು, ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಜನಸಾಮಾನ್ಯರಿಗೆ ಉತ್ತಮ ಹಾಗೂ ಆರೋಗ್ಯಕರ ಪರಿಸರ ಒದಗಿಸುವುದು ಅವಶ್ಯಕವಾಗಿದೆ.

4) ಕಾಮಗಾರಿಗಳಿಗೆ ಅನ್ವಯವಾಗುವ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಸಂಹಿತೆಯಲ್ಲಿನ ಸೂಚನೆಗಳಂತೆ ಯಾವುದೇ ಕಾಮಗಾರಿಯ ಹೆಚ್ಚುವರಿ ವೆಚ್ಚ ಮೂಲ ಅಂದಾಜು ಮೊತ್ತಕ್ಕಿಂತ 15% ಹೆಚ್ಚುವರಿ ಇದ್ದಲ್ಲಿ ಹೆಚ್ಚುವರಿ ವೆಚ್ಚಕ್ಕೆ ಮತ್ತು ಪರಿಷ್ಕøತ ಅಂದಾಜು ಮೊತ್ತಕ್ಕೆ ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಳ್ಳಬೇಕಾಗಿದೆ.

5) ಮುಂದುವರೆದು, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖಾಂತರ ಕೈಗೊಳ್ಳಲಾಗಿರುವ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳ ಪರಿಷ್ಕೃತ ಅಂದಾಜು ಪಟ್ಟಿಗಳಿಗೆ ಆಡಳಿತಾತ್ಮಕ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

6) ಸರ್ಕಾರವು ಪ್ರಸ್ತಾವನೆಯನ್ನು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 09 ಯುಡಿಎಸ್ 2016, ಬೆಂಗಳೂರು, ದಿನಾಂಕ 09 ನೇ ನವೆಂಬರ್-2017.

೩೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

7) ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖಾಂತರ ಕೈಗೊಳ್ಳಲಾಗಿರುವ ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿಗಳ `.130.63 ಕೋಟಿ (ರೂಪಾಯಿ ನೂರ ಮೂವತ್ತು ಕೋಟಿ ಅರವತ್ತಮೂರು ಲಕ್ಷ ಮಾತ್ರ)ಗಳ ಪರಿಷ್ಕೃತ ಅಂದಾಜು ಪಟ್ಟಿಗಳಿಗೆ ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಆಡಳಿತಾತ್ಮಕ

ಕ್ರ. ಸಂ. ಯೋಜನೆಯ ಹೆಸರು ವ ುೂಲ ಅನುಮೋದಿತ ಅಂದಾಜು ಮೊತ್ತ ಹ ಚ ೆ ು್ಚವರಿ ಅಂದಾಜು ವ ೂತ್ತ ೆ ಪ ರಿಷ್ಕೃತ ಅಂದಾಜು ವ ೂತ್ತ ೆ
1 ಸ ಂಡೂರು ಕುಡಿಯುವ ನೀರು ಸರಬರಾಜು ಯೋಜನೆ 18.92 5.53 24.45
2 ಹಡಗಲಿ ಒಳಚರಂಡಿ ಯೋಜನೆ 11.20 7.11 18.31
3 ವ iಾಲೂರು ಒಳಚರಂಡಿ ಯೋಜನೆ. 22.50 2.04 24.54
4 ರಾಮನಗರ ಮತ್ತು ಚನ್ನಪಟ್ಟಣ ಕುಡಿಯುವ ನೀರು ಸ ರಬರಾಜು ಯೋಜನೆ. 22.56 7.44 30.00
5 ಹಳಿಯಾಳ ಕುಡಿಯುವ ನೀರು ಸರಬರಾಜು ಯೋಜನೆ 4.98 1.49 6.47
6 ಬೀಳಗಿ ಒಳಚರಂಡಿ ಯೋಜನೆ 12.15 7.17 19.32
7 ನರಗುಂದ ಒಳಚರಂಡಿ ಯೋಜನೆ 7.20 6.13 13.33
8 ಶಿವಮೊಗ್ಗ 3 ನೇ ಹಂತದ ಒಳಚರಂಡಿ ಯೋಜನೆ 61.80 53.20 115.00
9 ಗುಂಡ್ಲುಪೇಟೆ ಒಳಚರಂಡಿ ಯೋಜನೆ 6.78 3.13 9.91
10 ಹೊನ್ನಾಳಿ ಕುಡಿಯುವ ನೀರು ಸರಬರಾಜು ಯೋಜನೆ 2.40 0.85 3.25
11 ವ ುುಧೋಳ ಒಳಚರಂಡಿ ಯೋಜನೆ 40.83 6.09 46.92
12 ಚಿತ್ತಾಪೂರ ಒಳಚರಂಡಿ ಯೋಜನೆ 18.00 23.66 41.66
13 ದ ೕವದುರ್ಗ ಕುಡಿಯುವ ನೀರು ಸರಬರಾಜು ಯೋಜನೆ ೆ 38.34 6.79 45.13
ಒಟ್ಟು 267.66 130.63 398.38

➢ ಅನುಮೋದನೆ ನೀಡಿರುವ ಪರಿಷ್ಕøತ ಅಂದಾಜಿನ ಮೊತ್ತದಲ್ಲಿಯೇ ಎಲ್ಲ ಕಾಮಗಾರಿಗಳನ್ನು 2018 ರ ಮಾರ್ಚ್ 31 ರೊಳಗಾಗಿ ಪೂರ್ಣಗೊಳಿಸಬೇಕು.

ಸರ್ಕಾರದ ಆದೇಶ ಸಂಖ್ಯೆ: ನಅಇ 07 ಯುಡಬ್ಲ್ಯೂಎಸ್ 2011 ದಿನಾಂಕ 20/07/2011 ರ ಆದೇಶದಂತೆ ಯೋಜನೆಯ ಆರ್ಥಿಕ ಮಾದರಿಯು ಈ ಕೆಳಕಂಡಂತೆ ಇರುತ್ತದೆ.

ವಿವರ ಅನುಮೋದಿತ ಅಂದಾಜು ಮೊತ್ತ ಹ ಚ ೆ ು್ಚವರಿ ಮೊತ್ತ ಪ ರಿಷ್ಕøತ ಅಂದಾಜು ಮೊತ್ತ
ರಾಜ್ಯ ಸರ್ಕಾರದ ಪಾಲು 110.94 47.12 158.06
ಸ ್ಥಳೀಯ ಸಂಸ್ಥೆಯ ಪಾಲು 41.91 24.50 66.41
ಹಣಕಾಸು ಸಂಸ್ಥೆಗಳಿಂದ ಸಾಲ 101.29 55.05 156.34
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪಾಲು 0.95 0.28 1.23
ಇತರೇ ಮೂಲಗಳು 12.58 3.68 16.26
ಒಟ್ಟು 267.67 130.63 398.30

8) ಈ ಆದೇಶವನ್ನು ಆರ್ಥಿಕ ಇಲಾಖೆಯು ಅನಧಿಕೃತ ಟಿಪ್ಪಣಿ ಸಂಖ್ಯೆ: FD 180 Exp-9/2017, ದಿನಾಂಕ 12/04/2017 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ನಾಗರಾಜ

PR-137

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ) SC-25

(ಎಂ.ಎ-2 & ಮಂಡಳಿ)

ನಗರಾಭಿವೃದ್ಧಿ ಇಲಾಖೆಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೩೨೯

ಶಿಕ್ಷಣ ಸಚಿವಾಲಯ

ವಿಷಯ: ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಶ್ರೇಣಿ ಮತ್ತು ಆಯ್ಕೆ ಶ್ರೇಣಿ ಉಪನ್ಯಾಸಕರ

ವರ್ಗೀಕರಣದ ಬಗ್ಗೆ.

ಓದಲಾಗಿದೆ:

(1) ಸರ್ಕಾರದ ಪತ್ರ ಸಂಖ್ಯೆ:ಇಡಿ 54 ಡಿಸಿಇ 2002, ದಿನಾಂಕ: 08/13-05-2002.

(2) ಸರ್ಕಾರಿ ಆದೇಶ ಸಂಖ್ಯೆ:ಇಡಿ 266 ಡಿಸಿಇ 2001, ದಿನಾಂಕ: 06-09-2002.

(3) ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ:358-367/2003 ಮತ್ತು

178-182/2009 ರಲ್ಲಿ ದಿನಾಂಕ: 23-07-2009 ರಂದು ನೀಡಿದ ತೀರ್ಪು.

(4) ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 28744/2010 ಮತ್ತಿತರೆ

ಪ್ರಕರಣಗಳಲ್ಲಿ ದಿನಾಂಕ:14-08-2014 ರಂದು ನೀಡಿದ ತೀರ್ಪು.

ಪ್ರಸ್ತಾವನೆ:

ಓದಲಾದ (1) ರ ಸರ್ಕಾರದ ಪತ್ರದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಶ್ರೇಣಿ ಹಾಗೂ ಆಯ್ಕೆ ವೇತನ ಶ್ರೇಣಿ ಉಪನ್ಯಾಸಕರನ್ನು ಗ್ರೂಪ್ 'ಬಿ' ಶ್ರೇಣಿಗೆ ಸೇರಿದ ಅಧಿಕಾರಿಗಳು ಎಂದು ಪರಿಗಣಿಸಲಾಗಿದೆ ಎಂದು ಕಾಲೇಜು ಶಿಕ್ಷಣ ಆಯುಕ್ತರಿಗೆ ತಿಳಿಸಲಾಗಿತ್ತು. ನಂತರ ಓದಲಾದ (2) ರ ಸರ್ಕಾರಿ ಆದೇಶದಲ್ಲಿ ಆದೇಶದ ದಿನಾಂಕದವರೆಗೆ ಪ್ರಾಂಶುಪಾಲರು ಗ್ರೇಡ್-1 ವೃಂದಕ್ಕೆ ನೀಡಲಾದ ಪದೋನ್ನತಿಗಳನ್ನು ಪ್ರಾಂಶುಪಾಲರು ಗ್ರೇಡ್-1 ವೃಂದದ ಬ್ಯಾಕ್- ಲಾಗ್ ಹುದ್ದೆಗಳನ್ನು ಗುರುತಿಸಿ ಕ್ರಮಬದ್ಧಗೊಳಿಸತಕ್ಕದ್ದೆಂದು ಹಾಗೂ ಈ ವೃಂದಕ್ಕೆ ಪದೋನ್ನತಿ ನೀಡುವಾಗ ಮೀಸಲಾತಿ ನೀತಿಯನ್ನು ಅನ್ವಯಿಸತಕ್ಕದ್ದೆಂದು ಆದೇಶಿಸಲಾಗಿತ್ತು.

ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ಪ್ರಶ್ನಿಸಲಾದ ಸರ್ಕಾರದ ದಿನಾಂಕ: 08/13-05-2002 ರ ಪತ್ರ ಮತ್ತು ದಿನಾಂಕ: 06-09-2002 ರ ಸರ್ಕಾರಿ ಆದೇಶವನ್ನು ಮಾನ್ಯ ನ್ಯಾಯಮಂಡಳಿಯು ಓದಲಾದ (3) ರಂತೆ ತೀರ್ಪನ್ನು ನೀಡಿ ತಳ್ಳಿ ಹಾಕಿದೆ. ಸದರಿ ತೀರ್ಪಿನಲ್ಲಿ ಮಾನ್ಯ ನ್ಯಾಯಮಂಡಳಿಯು ಕಾಲೇಜು ಶಿಕ್ಷಣ ಇಲಾಖೆಯ ಉಪನ್ಯಾಸಕರ ವರ್ಗೀಕರಣವನ್ನು ಕರ್ನಾಟಕ ನಾಗರೀಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ರ ಅಡಿಯಲ್ಲಿಯೆ ನಿರ್ಧರಿಸತಕ್ಕದ್ದೆಂದು ಪ್ರತಿಪಾದಿಸುತ್ತಾ, ಹಿರಿಯ ಶ್ರೇಣಿ ಮತ್ತು ಆಯ್ಕೆ ಶ್ರೇಣಿ ಉಪನ್ಯಾಸಕರ ಹುದ್ದೆಗಳು ಮುಂಬಡ್ತಿಯ ಹುದ್ದೆಗಳಾಗಿರುತ್ತವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

ಕರ್ನಾಟಕ ಆಡಳಿತ ನ್ಯಾಯಮಂಡಳಿಯ ತೀರ್ಪಿನ ವಿರುದ್ಧ ಸರ್ಕಾರ ದಾಖಲಿಸಿದ್ದ ರಿಟ್ ಅರ್ಜಿಗಳಲ್ಲಿ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ಓದಲಾದ (4) ರಂತೆ ತೀರ್ಪನ್ನು ನೀಡಿದ್ದು, ತೀರ್ಪಿನಲ್ಲಿ ಹಿರಿಯ ಶ್ರೇಣಿ ಮತ್ತು ಆಯ್ಕೆ ಶ್ರೇಣಿ ಹುದ್ದೆಗಳ ವರ್ಗೀಕರಣವನ್ನು ಕರ್ನಾಟಕ ನಾಗರೀಕ ಸೇವೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿ 1957 ರ ಅಡಿಯಲ್ಲಿಯೆ ನಿರ್ಧರಿಸತಕ್ಕದ್ದೆಂಬುದಾಗಿ ನ್ಯಾಯಮಂಡಳಿಯು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಮಾನ್ಯ ನ್ಯಾಯಾಲಯವು ಒಪ್ಪಿರುವುದಿಲ್ಲ. ಈ ಹುದ್ದೆಗಳು ಸ್ಥಾನೀಕರಣದ ಮೂಲಕ ತುಂಬುವ ಹುದ್ದೆಗಳಾಗಿದ್ದು, ಮುಂಬಡ್ತಿಯಿಂದ ತುಂಬುವ ಹುದ್ದೆಗಳಾಗಿರುವುದಿಲ್ಲವೆಂದು ಮಾನ್ಯ ನ್ಯಾಯಾಲಯವು ಅಭಿಪ್ರಾಯಿಸಿದ್ದಾಗ್ಯೂ ಸರ್ಕಾರದ ದಿನಾಂಕ:08/13-05-2002 ರ ಪತ್ರ ಮತ್ತು ದಿನಾಂಕ:

06-09-2002 ರ ಆದೇಶವನ್ನು ತಳ್ಳಿ ಹಾಕಿದ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ತೀರ್ಪಿಗೆ ಯಾವುದೇ ಹಸ್ತಕ್ಷೇಪ ಮಾಡಿರುವುದಿಲ್ಲ. ಮಾನ್ಯ ನ್ಯಾಯಮಂಡಳಿಯು ಮತ್ತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆಯಲಾಗಿ, ಆ ಇಲಾಖೆಯು ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ ವೃಂದದ ಸಹಾಯಕ ಪ್ರಾಧ್ಯಾಪಕರ ಹುದ್ದೆಯಿಂದ ಪ್ರಾಂಶುಪಾಲರು (ಗ್ರೇಡ್-2) ವೃಂದದವರೆಗಿನ ಎಲ್ಲಾ ಹುದ್ದೆಗಳನ್ನು ಯು.ಜಿ.ಸಿ. ವೇತನ ಶ್ರೇಣಿ ಆಧಾರದ ಮೇಲೆ ವರ್ಗೀಕರಣಗೊಳಿಸತಕ್ಕದ್ದು ಎಂಬುದು ಮಾನ್ಯ ಉಚ್ಚ ನ್ಯಾಯಾಲಯದ ತೀರ್ಪಿನಿಂದ ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಿಸಿದೆ.

ಹಾಗೆಯೇ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ತನ್ನ ಅಭಿಪ್ರಾಯದಲ್ಲಿ ಬೋಧಕ ವೃಂದದ ಹುದ್ದೆಗಳು ರಾಜ್ಯ ವೇತನ ಶ್ರೇಣಿಯಲ್ಲಿ ಹೊಂದಿದ್ದ ವರ್ಗೀಕರಣವನ್ನು 1986 ರಲ್ಲಿ ಯು.ಜಿ.ಸಿ. ವೇತನ ಶ್ರೇಣಿ ಜಾರಿಯಾದಾಗ ಮರುಪದನಾಮಗೊಳಿಸಲಾದ ತತ್ಸಮಾನ ದರ್ಜೆಯ ಬೋಧಕ ವೃಂದ ಹುದ್ದೆಗಳಿಗೆ ಅನ್ವಯಿಸಿಕೊಂಡು ಹುದ್ದೆಗಳನ್ನು ವರ್ಗೀಕರಿಸಬೇಕಾಗುತ್ತದೆ ಎಂದು ತಿಳಿಸಿರುತ್ತದೆ.

ಯು.ಜಿ.ಸಿ. ವೇತನ ಶ್ರೇಣಿಗಳು ಜಾರಿಗೆ ಬರುವ ಪೂರ್ವದಲ್ಲಿ ರಾಜ್ಯ ವೇತನ ಶ್ರೇಣಿಗಳ ಅನುಸಾರ ಉಪನ್ಯಾಸಕ ಹುದ್ದೆಯು 'ಬಿ' ದರ್ಜೆಯ ಹುದ್ದೆಯಾಗಿದ್ದು, ರೀಡರ್ ಮತ್ತು ಪ್ರಾಧ್ಯಾಪಕರ ಹುದ್ದೆಗಳು 'ಎ' ದರ್ಜೆಯ ಹುದ್ದೆಗಳಾಗಿದ್ದವು. ನಂತರ 1986 ರ ಯು.ಜಿ.ಸಿ. ವೇತನ ಶ್ರೇಣಿಗಳಲ್ಲಿ ಸದರಿ ಹುದ್ದೆಗಳನ್ನು ಕ್ರಮವಾಗಿ ಉಪನ್ಯಾಸಕರು, ಹಿರಿಯ ಶ್ರೇಣಿ ಉಪನ್ಯಾಸಕರು ಮತ್ತು ಆಯ್ಕೆ ಶ್ರೇಣಿ ಉಪನ್ಯಾಸಕರೆಂದು ಮರುಪದನಾಮೀಕರಿಸಲಾಗಿದೆ. ಇದೇ ಪದನಾಮೀಕರಣವನ್ನು 1996 ರ ಯು.ಜಿ.ಸಿ. ವೇತನ ಶ್ರೇಣಿಗಳಲ್ಲಿ ಮುಂದುವರೆಸಲಾಗಿರುತ್ತದೆ.

ಆದುದರಿಂದ, ಮಾನ್ಯ ನ್ಯಾಯಾಲಯಗಳ ಆದೇಶಗಳು ಮತ್ತು ಕಾನೂನು ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗಳ ಅಭಿಪ್ರಾಯಗಳನ್ನು ಪರಿಶೀಲಿಸಿದ ಸರ್ಕಾರವು ಯು.ಜಿ.ಸಿ. ವೇತನ ಶ್ರೇಣಿಗಳ ಪ್ರಕಾರ ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ವೃಂದದ ಹುದ್ದೆಗಳನ್ನು ಪುನರ್‌ವರ್ಗೀಕರಿಸುವವರೆಗೆ ಇಲಾಖೆಯ ಹಿರಿಯ ಶ್ರೇಣಿ ಉಪನ್ಯಾಸಕರು ಹಾಗೂ ಆಯ್ಕೆ ಶ್ರೇಣಿ ಉಪನ್ಯಾಸಕರ ಹುದ್ದೆಗಳನ್ನು ಗ್ರೂಪ್ 'ಎ' ಶ್ರೇಣಿಗೆ ಸೇರಿದ ಹುದ್ದೆಗಳೆಂದು ಪರಿಗಣಿಸಲು ತೀರ್ಮಾನಿಸಿದೆ. ಅದರಂತೆ ಈ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಇಡಿ 148 ಡಿಸಿಇ 2015, ಬೆಂಗಳೂರು, ದಿನಾಂಕ:01-02-2018.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೩೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೧

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಪತ್ರ ಸಂಖ್ಯೆ: ಇಡಿ 54 ಡಿಸಿಇ 2002, ದಿನಾಂಕ:08/13-05-2002 ಮತ್ತು ದಿನಾಂಕ:06-09-2002 ರ ಸರ್ಕಾರಿ ಆದೇಶ ಸಂಖ್ಯೆ:ಇಡಿ 266 ಡಿಸಿಇ 2001 ನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಹಾಗೂ ಯು.ಜಿ.ಸಿ. ವೇತನ ಶ್ರೇಣಿಗಳನ್ನು ಆಧಾರವಾಗಿಟ್ಟುಕೊಂಡು ಕಾಲೇಜು ಶಿಕ್ಷಣ ಇಲಾಖೆಯ ಬೋಧಕ ವೃಂದದ ಹುದ್ದೆಗಳನ್ನು ಪುನರ್‌ವರ್ಗೀಕರಿಸುವ ಬಗ್ಗೆ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳುವವರೆಗೆ ಕಾಲೇಜು ಶಿಕ್ಷಣ ಇಲಾಖೆಯ ಹಿರಿಯ ಶ್ರೇಣಿ ಮತ್ತು ಆಯ್ಕೆ ಶ್ರೇಣಿ ಉಪನ್ಯಾಸಕರ ಹುದ್ದೆಗಳನ್ನು ಗ್ರೂಪ್ 'ಎ' ಶ್ರೇಣಿಗೆ ಸೇರಿದ ಹುದ್ದೆಗಳೆಂದು ಪರಿಗಣಿಸಿದೆ.

ದಿನಾಂಕ:30-08-2016, ಕಾನೂನು ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ:LAW 151 OPN 2016, ದಿನಾಂಕ:28-05-2016 ಮತ್ತು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ:ಆಇ 707 ಸೇ-2/2016, ದಿನಾಂಕ:29-09-2016 ರಲ್ಲಿ ನೀಡಿರುವ ಅಭಿಪ್ರಾಯಗಳನ್ವಯ ಹೊರಡಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಶಿವಲಿಂಗಯ್ಯ

PR-138

SC-100

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ).

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 05 April 2018. Indian Gazettes, https://egazette.servantsofknowledge.in/details/in.gazette.karnataka_new.2018-04-05.Part-1/. Archive identifier in.gazette.karnataka_new.2018-04-05.Part-1.