Servants of Knowledge
Karnataka Gazette · Government of Karnataka

Karnataka Gazette, Part Part-5, 05 April 2018

Published 05 April 2018

Part
Part-5
Identifier
in.gazette.karnataka_new.2018-04-05.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಏಪ್ರಿಲ್ ೫, ೨೦೧೮ (ಚೈತ್ರ ೧೫, ಶಕ ವರ್ಷ ೧೯೪೦)

Bengaluru, Thursday, April 5, 2018 (Chaithra 15, Shaka Varsha 1940)

ಸಂಚಿಕೆ ೧೪

Issue 14

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಮನಗರ.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ, ರಾಮನಗರ.

ಅಧಿಸೂಚನೆ

ಸಂಖ್ಯೆ: ರಾಜಿನಕೋ/ಎಂಯುಎನ್(2)/ಸಿಆರ್/222/2017-18 ದಿನಾಂಕ: 16/03/2018

ರಾಮನಗರ ಜಿಲ್ಲೆಯ ಬಿಡದಿ ಪುರಸಭೆಯಲ್ಲಿ ಖಾಲಿಯಿರುವ ಈ ಕೆಳಕಂಡ ಪೌರಕಾರ್ಮಿಕರ ಹುದ್ದೆಯನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಮನಗರ ಹಾಗೂ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರವಾಗಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಮುಖ್ಯಾಧಿಕಾರಿ, ಪುರಸಭೆ, ಬಿಡದಿ ಅಥವಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ರಾಮನಗರ ಇಲ್ಲಿಗೆ ದಿನಾಂಕ: 16/04/2018 ರಂದು ಸಂಜೆ: 5.00 ರೊಳಗೆ ನಿಗಧಿತ ಅರ್ಜಿ ನಮೂನೆಯಲ್ಲಿ ದೃಡೀಕೃತ ಅವಶ್ಯ ದಾಖಲಾತಿಗಳೊಂದಿಗೆ ಕಛೇರಿ ಕೆಲಸದ ವೇಳೆಯಲ್ಲಿ ಸಲ್ಲಿಸಬಹುದಾಗಿದೆ. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಕ್ರ. ಸ ಂ. ಹ ುದ್ದೆಯ ಹ ಸ ೆ ರು ಒಟ್ಟು ಹ ುದ್ದೆಗಳು ಕನಿಷ್ಠ ವಿದ್ಯಾರ್ಹತೆ ವ ೕತನ ೆ ಶ್ರೇಣಿ
1 ಪೌರಕಾರ್ಮಿಕ 46 1) ವಿದ್ಯಾರ್ಹತೆ ಅನ್ವಯಿಸುವುದಿಲ್ಲ. 2) ಕನ್ನಡ ಮಾತನಾಡಲು ಗೊತ್ತಿರಬೇಕು. 3) ಪೌರಕಾರ್ಮಿಕ ಹ ುದ್ದೆಯಲ್ಲಿ ಕೆಲಸ ವ iಾಡುತ್ತಿರುವ ಕ್ಷೇಮಾಭಿವೃದ್ಧಿ/ ದಿನಗೂಲಿ/ಗುತ್ತಿಗೆ/ಹೊರಗುತ್ತಿಗೆ/ಸಮಾನ ಕೆಲಸಕ್ಕೆ ಸ ವ iಾನ ವೇತನ ನೌಕರರಿಗೆ ವ ೂದಲ ಆದ್ಯತೆ. ೆ 4) ಗರಿಷ್ಠ ವಯೋಮಿತಿ 45 ವರ್ಷ 9600- 14550
ಕ್ರ.ಸಂ. ವ ರ್ಗೀಕರಣದ ವಿವರ ಸಾಮಾನ್ಯ ಅಭ್ಯರ್ಥಿ ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಅಂಗ ವಿಕಲರು ವ iಾಜಿ ಸ ೖನಿಕರು ೆ ಕನ್ನಡ ವ iಾಧ್ಯಮ ಯೋಜನಾ ನಿರಾಶ್ರಿತರು ಒಟ್ಟು
1 ಸಾಮಾನ್ಯ 5 7 6 1 2 1 1 23
2 ಪ ರಿಶಿಷ್ಟ ಜಾತಿ 2 2 2 1 0 0 0 7
3 ಪ ರಿಶಿಷ್ಟ ಪಂಗಡ 1 0 0 0 0 0 0 1
4 ಪ ವ ್ರ ರ್ಗ – 1 1 1 0 0 0 0 0 2
5 ಪ ವ ್ರ ರ್ಗ– 2ಎ 2 2 2 1 0 0 0 7

(೭೨೭)೭೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೫

ಕ್ರ.ಸಂ. ವ ರ್ಗೀಕರಣದ ವಿವರ ಸಾಮಾನ್ಯ ಅಭ್ಯರ್ಥಿ ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಅಂಗ ವಿಕಲರು ವ iಾಜಿ ಸ ೖನಿಕರು ೆ ಕನ್ನಡ ವ iಾಧ್ಯಮ ಯೋಜನಾ ನಿರಾಶ್ರಿತರು ಒಟ್ಟು
6 ಪ ವ ್ರ ರ್ಗ- 2ಬಿ 1 1 0 0 0 0 0 2
7 ಪ ವ ್ರ ರ್ಗ-3ಎ 1 1 0 0 0 0 0 2
8 ಪ ವ ್ರ ರ್ಗ-3ಬಿ 1 1 0 0 0 0 0 2
ಒಟ್ಟು 14 15 10 3 2 1 1 46

1. ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು ರವರು ಅರ್ಜಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಯಲ್ಲೇ ಅರ್ಜಿ ಸಲ್ಲಿಸತಕ್ಕದ್ದು. ಬೇರೆ ಯಾವುದೇ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿಯನ್ನು ಸಲ್ಲಿಸಿದಲ್ಲಿ ಪರಿಗಣಿಸುವುದಿಲ್ಲ.

2. ಹೆಚ್ಚಿನ ಮಾಹಿತಿ ಹಾಗೂ ವಿವರವಾದ ಅಧಿಸೂಚನೆಯನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆಯಬಹುದು. 3. ಈ ನೇಮಕಾತಿಯು ಸರ್ಕಾರ/ ಪೌರಾಳಿತ ನಿರ್ದೆಶನಾಲಯದಿಂದ ಕಾಲಕಾಲಕ್ಕೆ ಹೊರಡಿಸುವ ಆದೇಶ/ ಸುತ್ತೋಲೆಯ ಷರತ್ತಿಗೊಳಪಟ್ಟಿರುತ್ತದೆ.

4. ಅಂಗವಿಕಲರ ಹುದ್ದೆಯನ್ನು ಸರ್ಕಾರದ ಆದೇಶ ಸಂ: ಡಿ.ಪಿ.ಎ.ಆರ್. 52 ಎಸ್.ಆರ್.ಆರ್. 99 ದಿನಾಂಕ: 29.11.2002ರಲ್ಲಿ ಸೂಚಿಸಿರುವಂತೆ ಮೀಸಲಾತಿ ನಿಗಧಿಪಡಿಸಲಾಗುವುದು.

ಜಿಲ್ಲಾಧಿಕಾರಿಗಳು,

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ.

ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಮನಗರ.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ, ರಾಮನಗರ.

ಅಧಿಸೂಚನೆ

ಸಂಖ್ಯೆ: ರಾಜಿನಕೋ/ಎಂಯುಎನ್(2)/ಸಿಆರ್/222/2017-18, ದಿನಾಂಕ: 16/03/2018

ರಾಮನಗರ ಜಿಲ್ಲೆಯ ರಾಮನಗರ ನಗರಸಭೆಯಲ್ಲಿ ಖಾಲಿಯಿರುವ ಈ ಕೆಳಕಂಡ ಪೌರಕಾರ್ಮಿಕರ ಹುದ್ದೆಯನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಮನಗರ ಹಾಗೂ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರವಾಗಿ ಪಡೆಯಬಹುದಾಗಿದೆ.

ಭರ್ತಿ ಮಾಡಿದ ಅರ್ಜಿಯನ್ನು ಪೌರಾಯುಕ್ತರು, ನಗರಸಭೆ, ರಾಮನಗರ ಅಥವಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ರಾಮನಗರ ಇಲ್ಲಿಗೆ ದಿನಾಂಕ: 16/04/2018 ರಂದು ಸಂಜೆ: 5.00 ರೊಳಗೆ ನಿಗಧಿತ ಅರ್ಜಿ ನಮೂನೆಯಲ್ಲಿ ದೃಡೀಕೃತ ಅವಶ್ಯ ದಾಖಲಾತಿಗಳೊಂದಿಗೆ ಕಛೇರಿ ಕೆಲಸದ ವೇಳೆಯಲ್ಲಿ ಸಲ್ಲಿಸಬಹುದಾಗಿದೆ. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಕ್ರ.ಸಂ. ಹ ುದ್ದೆಯ ಹೆಸರು ಒಟ್ಟು ಹ ುದ್ದೆಗಳು ಕನಿಷ್ಠ ವಿದ್ಯಾರ್ಹತೆ ವ ೕತನ ಶ್ರೇಣಿ ೆ
1 ಪೌರಕಾರ್ಮಿಕ 36 1) ವಿದ್ಯಾರ್ಹತೆ ಅನ್ವಯಿಸುವುದಿಲ್ಲ. 2) ಕನ್ನಡ ಮಾತನಾಡಲು ಗೊತ್ತಿರಬೇಕು. 3) ಪೌರಕಾರ್ಮಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಕ್ಷೇಮಾಭಿವೃದ್ಧಿ/ದಿನಗೂಲಿ/ಗುತ್ತಿಗೆ/ಹೊರಗುತ್ತಿಗೆ/ಸಮಾನ ಕೆಲಸಕ್ಕೆ ಸಮಾನ ವ ೕತನ ನೌಕರರಿಗೆ ಮೊದಲ ಆದ್ಯತೆ. ೆ 4) ಗರಿಷ್ಠ ವಯೋಮಿತಿ 45 ವರ್ಷ 9600-14550
ಕ್ರ.ಸಂ. ವ ರ್ಗೀಕರಣದ ವಿವರ ಸಾಮಾನ್ಯ ಅಭ್ಯರ್ಥಿ ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಅಂಗ ವಿಕಲರು ವ iಾಜಿ ಸ ೖನಿಕರು ೆ ಕನ್ನಡ ವ iಾಧ್ಯಮ ಯೋಜನಾ ನಿರಾಶ್ರಿತರು ಒಟ್ಟು
1 ಸಾಮಾನ್ಯ 3 6 5 1 1 1 1 18
2 ಪ ರಿಶಿಷ್ಟ ಜಾತಿ 1 2 0 1 0 2 0 6
3 ಪ ರಿಶಿಷ್ಟ ಪಂಗಡ 1 0 0 0 0 0 0 1
4 ಪ ವ ್ರ ರ್ಗ – 1 1 0 0 0 0 0 0 1
5 ಪ ವ ್ರ ರ್ಗ– 2ಎ 1 2 2 1 0 0 0 6
6 ಪ ವ ್ರ ರ್ಗ- 2ಬಿ 1 0 0 0 0 0 0 1
7 ಪ ವ ್ರ ರ್ಗ-3ಎ 1 0 0 0 0 0 0 1
8 ಪ ವ ್ರ ರ್ಗ-3ಬಿ 1 1 0 0 0 0 0 2
ಒಟ್ಟು 10 11 7 3 1 3 1 36
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೭೨೯

1. ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು ರವರು ಅರ್ಜಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಯಲ್ಲೇ ಅರ್ಜಿ ಸಲ್ಲಿಸತಕ್ಕದ್ದು. ಬೇರೆ ಯಾವುದೇ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿಯನ್ನು ಸಲ್ಲಿಸಿದಲ್ಲಿ ಪರಿಗಣಿಸುವುದಿಲ್ಲ.

2. ಹೆಚ್ಚಿನ ಮಾಹಿತಿ ಹಾಗೂ ವಿವರವಾದ ಅಧಿಸೂಚನೆಯನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆಯಬಹುದು. 3. ಈ ನೇಮಕಾತಿಯು ಸರ್ಕಾರ/ ಪೌರಾಳಿತ ನಿರ್ದೆಶನಾಲಯದಿಂದ ಕಾಲಕಾಲಕ್ಕೆ ಹೊರಡಿಸುವ ಆದೇಶ/ ಸುತ್ತೋಲೆಯ ಷರತ್ತಿಗೊಳಪಟ್ಟಿರುತ್ತದೆ.

4. ಅಂಗವಿಕಲರ ಹುದ್ದೆಯನ್ನು ಸರ್ಕಾರದ ಆದೇಶ ಸಂ: ಡಿ.ಪಿ.ಎ.ಆರ್. 52 ಎಸ್.ಆರ್.ಆರ್. 99 ದಿನಾಂಕ: 29.11.2002ರಲ್ಲಿ ಸೂಚಿಸಿರುವಂತೆ ಮೀಸಲಾತಿ ನಿಗಧಿಪಡಿಸಲಾಗುವುದು.

ಜಿಲ್ಲಾಧಿಕಾರಿಗಳು,

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ.

ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಮನಗರ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ, ರಾಮನಗರ.

ಅಧಿಸೂಚನೆ

ಸಂಖ್ಯೆ: ರಾಜಿನಕೋ/ಎಂಯುಎನ್(2)/ಸಿಆರ್/222/2017-18 ದಿನಾಂಕ: 16/03/2018

ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರಸಭೆಯಲ್ಲಿ ಖಾಲಿಯಿರುವ ಈ ಕೆಳಕಂಡ ಪೌರಕಾರ್ಮಿಕರ ಹುದ್ದೆಯನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಮನಗರ ಹಾಗೂ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರವಾಗಿ ಪಡೆಯಬಹುದಾಗಿದೆ.

ಭರ್ತಿ ಮಾಡಿದ ಅರ್ಜಿಯನ್ನು ಪೌರಾಯುಕ್ತರು, ನಗರಸಭೆ, ಚನ್ನಪಟ್ಟಣ ಅಥವಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ರಾಮನಗರ ಇಲ್ಲಿಗೆ ದಿನಾಂಕ: 16/04/2018 ರಂದು ಸಂಜೆ: 5.00 ರೊಳಗೆ ನಿಗಧಿತ ಅರ್ಜಿ ನಮೂನೆಯಲ್ಲಿ ದೃಡೀಕೃತ ಅವಶ್ಯ ದಾಖಲಾತಿಗಳೊಂದಿಗೆ ಕಛೇರಿ ಕೆಲಸದ ವೇಳೆಯಲ್ಲಿ ಸಲ್ಲಿಸಬಹುದಾಗಿದೆ. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಕ್ರ.ಸಂ. ಹ ುದ್ದೆಯ ಹೆಸರು ಒಟ್ಟು ಹ ುದ್ದೆಗಳು ಕನಿಷ್ಠ ವಿದ್ಯಾರ್ಹತೆ ವ ೕತನ ಶ್ರೇಣಿ ೆ
1 ಪೌರಕಾರ್ಮಿಕ 16 1) ವಿದ್ಯಾರ್ಹತೆ ಅನ್ವಯಿಸುವುದಿಲ್ಲ. 2) ಕನ್ನಡ ಮಾತನಾಡಲು ಗೊತ್ತಿರಬೇಕು. 3) ಪೌರಕಾರ್ಮಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಕ್ಷೇಮಾಭಿವೃದ್ಧಿ/ದಿನಗೂಲಿ/ಗುತ್ತಿಗೆ/ಹೊರಗುತ್ತಿಗೆ/ಸಮಾನ ಕೆಲಸಕ್ಕೆ ಸಮಾನ ವ ೕತನ ನೌಕರರಿಗೆ ಮೊದಲ ಆದ್ಯತೆ. ೆ 4) ಗರಿಷ್ಠ ವಯೋಮಿತಿ 45 ವರ್ಷ 9600-14550
ಕ್ರ.ಸಂ. ವ ರ್ಗೀಕರಣದ ವಿವರ ಸಾಮಾನ್ಯ ಅಭ್ಯರ್ಥಿ ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಅಂಗ ವಿಕಲರು ವ iಾಜಿ ಸ ೖನಿಕರು ೆ ಕನ್ನಡ ವ iಾಧ್ಯಮ ಯೋಜನಾ ನಿರಾಶ್ರಿತರು ಒಟ್ಟು
1 ಸಾಮಾನ್ಯ 2 3 2 1 0 0 0 8
2 ಪ ರಿಶಿಷ್ಟ ಜಾತಿ 1 1 0 0 0 0 0 2
3 ಪ ರಿಶಿಷ್ಟ ಪಂಗಡ 1 0 0 0 0 0 0 1
4 ಪ ವ ್ರ ರ್ಗ – 1 1 0 0 0 0 0 0 1
5 ಪ ವ ್ರ ರ್ಗ– 2ಎ 1 1 0 0 0 0 0 2
6 ಪ ವ ್ರ ರ್ಗ- 2ಬಿ 1 0 0 0 0 0 0 1
7 ಪ ವ ್ರ ರ್ಗ-3ಎ 1 0 0 0 0 0 0 1
8 ಪ ವ ್ರ ರ್ಗ-3ಬಿ 0 0 0 0 0 0 0 0
ಒಟ್ಟು 8 5 2 1 0 0 0 16
೭೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೫

1. ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು ರವರು ಅರ್ಜಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಯಲ್ಲೇ ಅರ್ಜಿ ಸಲ್ಲಿಸತಕ್ಕದ್ದು. ಬೇರೆ ಯಾವುದೇ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿಯನ್ನು ಸಲ್ಲಿಸಿದಲ್ಲಿ ಪರಿಗಣಿಸುವುದಿಲ್ಲ.

2. ಹೆಚ್ಚಿನ ಮಾಹಿತಿ ಹಾಗೂ ವಿವರವಾದ ಅಧಿಸೂಚನೆಯನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆಯಬಹುದು. 3. ಈ ನೇಮಕಾತಿಯು ಸರ್ಕಾರ/ ಪೌರಾಳಿತ ನಿರ್ದೆಶನಾಲಯದಿಂದ ಕಾಲಕಾಲಕ್ಕೆ ಹೊರಡಿಸುವ ಆದೇಶ/ ಸುತ್ತೋಲೆಯ ಷರತ್ತಿಗೊಳಪಟ್ಟಿರುತ್ತದೆ.

4. ಅಂಗವಿಕಲರ ಹುದ್ದೆಯನ್ನು ಸರ್ಕಾರದ ಆದೇಶ ಸಂ: ಡಿ.ಪಿ.ಎ.ಆರ್. 52 ಎಸ್.ಆರ್.ಆರ್. 99 ದಿನಾಂಕ: 29.11.2002ರಲ್ಲಿ ಸೂಚಿಸಿರುವಂತೆ ಮೀಸಲಾತಿ ನಿಗಧಿಪಡಿಸಲಾಗುವುದು.

ಜಿಲ್ಲಾಧಿಕಾರಿಗಳು,

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ.

ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಮನಗರ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ, ರಾಮನಗರ.

ಅಧಿಸೂಚನೆ

ಸಂಖ್ಯೆ: ರಾಜಿನಕೋ/ಎಂಯುಎನ್(2)/ಸಿಆರ್/222/2017-18, ದಿನಾಂಕ: 16/03/2018

ರಾಮನಗರ ಜಿಲ್ಲೆಯ ಕನಕಪುರ ನಗರಸಭೆಯಲ್ಲಿ ಖಾಲಿಯಿರುವ ಈ ಕೆಳಕಂಡ ಪೌರಕಾರ್ಮಿಕರ ಹುದ್ದೆಯನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಮನಗರ ಹಾಗೂ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರವಾಗಿ ಪಡೆಯಬಹುದಾಗಿದೆ.

ಭರ್ತಿ ಮಾಡಿದ ಅರ್ಜಿಯನ್ನು ಪೌರಾಯುಕ್ತರು, ನಗರಸಭೆ, ಕನಕಪುರ ಅಥವಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ರಾಮನಗರ ಇಲ್ಲಿಗೆ ದಿನಾಂಕ: 16/04/2018 ರಂದು ಸಂಜೆ: 5.00 ರೊಳಗೆ ನಿಗಧಿತ ಅರ್ಜಿ ನಮೂನೆಯಲ್ಲಿ ದೃಡೀಕೃತ ಅವಶ್ಯ ದಾಖಲಾತಿಗಳೊಂದಿಗೆ ಕಛೇರಿ ಕೆಲಸದ ವೇಳೆಯಲ್ಲಿ ಸಲ್ಲಿಸಬಹುದಾಗಿದೆ. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಕ್ರ.ಸಂ. ಹ ುದ್ದೆಯ ಹೆಸರು ಒಟ್ಟು ಹ ುದ್ದೆಗಳು ಕನಿಷ್ಠ ವಿದ್ಯಾರ್ಹತೆ ವ ೕತನ ಶ್ರೇಣಿ ೆ
1 ಪೌರಕಾರ್ಮಿಕ 4 1) ವಿದ್ಯಾರ್ಹತೆ ಅನ್ವಯಿಸುವುದಿಲ್ಲ. 2) ಕನ್ನಡ ಮಾತನಾಡಲು ಗೊತ್ತಿರಬೇಕು. 3) ಪೌರಕಾರ್ಮಿಕ ಹುದ್ದೆಯಲ್ಲಿ ಕೆಲಸ ವ iಾಡುತ್ತಿರುವ ಕ್ಷೇಮಾಭಿವೃದ್ಧಿ/ ದಿನಗೂಲಿ/ಗುತ್ತಿಗೆ/ಹೊರಗುತ್ತಿಗೆ/ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರಿಗೆ ವ ೂದಲ ಆದ್ಯತೆ. ೆ 4) ಗರಿಷ್ಠ ವಯೋಮಿತಿ 45 ವರ್ಷ 9600-14550
ಕ್ರ.ಸಂ. ವ ರ್ಗೀಕರಣದ ವಿವರ ಸಾಮಾನ್ಯ ಅಭ್ಯರ್ಥಿ ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಅಂಗ ವಿಕಲರು ವ iಾಜಿ ಸ ೖನಿಕರು ೆ ಕನ್ನಡ ವ iಾಧ್ಯಮ ಯೋಜನಾ ನಿರಾಶ್ರಿತರು ಒಟ್ಟು
1 ಸಾಮಾನ್ಯ 1 1 0 0 0 0 0 2
2 ಪ ರಿಶಿಷ್ಟ ಜಾತಿ 1 0 0 0 0 0 0 1
3 ಪ ರಿಶಿಷ್ಟ ಪಂಗಡ 1 0 0 0 0 0 0 1
4 ಪ ವ ್ರ ರ್ಗ – 1 0 0 0 0 0 0 0 0
5 ಪ ವ ್ರ ರ್ಗ– 2ಎ 0 0 0 0 0 0 0 0
6 ಪ ವ ್ರ ರ್ಗ- 2ಬಿ 0 0 0 0 0 0 0 0
7 ಪ ವ ್ರ ರ್ಗ-3ಎ 0 0 0 0 0 0 0 0
8 ಪ ವ ್ರ ರ್ಗ-3ಬಿ 0 0 0 0 0 0 0 0
ಒಟ್ಟು 3 1 0 0 0 0 0 4

1. ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು ರವರು ಅರ್ಜಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಯಲ್ಲೇ ಅರ್ಜಿ ಸಲ್ಲಿಸತಕ್ಕದ್ದು. ಬೇರೆ ಯಾವುದೇ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿಯನ್ನು ಸಲ್ಲಿಸಿದಲ್ಲಿ ಪರಿಗಣಿಸುವುದಿಲ್ಲ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೭೩೧

2. ಹೆಚ್ಚಿನ ಮಾಹಿತಿ ಹಾಗೂ ವಿವರವಾದ ಅಧಿಸೂಚನೆಯನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆಯಬಹುದು. 3. ಈ ನೇಮಕಾತಿಯು ಸರ್ಕಾರ/ ಪೌರಾಳಿತ ನಿರ್ದೆಶನಾಲಯದಿಂದ ಕಾಲಕಾಲಕ್ಕೆ ಹೊರಡಿಸುವ ಆದೇಶ/ ಸುತ್ತೋಲೆಯ ಷರತ್ತಿಗೊಳಪಟ್ಟಿರುತ್ತದೆ.

4. ಅಂಗವಿಕಲರ ಹುದ್ದೆಯನ್ನು ಸರ್ಕಾರದ ಆದೇಶ ಸಂ: ಡಿ.ಪಿ.ಎ.ಆರ್. 52 ಎಸ್.ಆರ್.ಆರ್. 99 ದಿನಾಂಕ: 29.11.2002ರಲ್ಲಿ ಸೂಚಿಸಿರುವಂತೆ ಮೀಸಲಾತಿ ನಿಗಧಿಪಡಿಸಲಾಗುವುದು.

ಜಿಲ್ಲಾಧಿಕಾರಿಗಳು,

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ.

ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಮನಗರ

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ, ರಾಮನಗರ.

ಅಧಿಸೂಚನೆ

ಸಂಖ್ಯೆ: ರಾಜಿನಕೋ/ಎಂಯುಎನ್(2)/ಸಿಆರ್/222/2017-18, ದಿನಾಂಕ: 16/03/2018

ರಾಮನಗರ ಜಿಲ್ಲೆಯ ಮಾಗಡಿ ಪುರಸಭೆಯಲ್ಲಿ ಖಾಲಿಯಿರುವ ಈ ಕೆಳಕಂಡ ಪೌರಕಾರ್ಮಿಕರ ಹುದ್ದೆಯನ್ನು ವಿಶೇಷ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ನಮೂನೆಗಳನ್ನು ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿ, ಜಿಲ್ಲಾ ನಗರಾಭಿವೃದ್ಧಿ ಕೋಶ, ರಾಮನಗರ ಹಾಗೂ ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರವಾಗಿ ಪಡೆಯಬಹುದಾಗಿದೆ. ಭರ್ತಿ ಮಾಡಿದ ಅರ್ಜಿಯನ್ನು ಮುಖ್ಯಾಧಿಕಾರಿ, ಪುರಸಭೆ, ಮಾಗಡಿ ಅಥವಾ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಛೇರಿ, ರಾಮನಗರ ಇಲ್ಲಿಗೆ ದಿನಾಂಕ: 16/04/2018ರಂದು ಸಂಜೆ: 5.00 ರೊಳಗೆ ನಿಗಧಿತ ಅರ್ಜಿ ನಮೂನೆಯಲ್ಲಿ ದೃಡೀಕೃತ ಅವಶ್ಯ ದಾಖಲಾತಿಗಳೊಂದಿಗೆ ಕಛೇರಿ ಕೆಲಸದ ವೇಳೆಯಲ್ಲಿ ಸಲ್ಲಿಸಬಹುದಾಗಿದೆ. ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

ಕ್ರ.ಸಂ. ಹ ುದ್ದೆಯ ಹೆಸರು ಒಟ್ಟು ಹ ುದ್ದೆಗಳು ಕನಿಷ್ಠ ವಿದ್ಯಾರ್ಹತೆ ವ ೕತನ ಶ್ರೇಣಿ ೆ
1 ಪೌರಕಾರ್ಮಿಕ 29 1) ವಿದ್ಯಾರ್ಹತೆ ಅನ್ವಯಿಸುವುದಿಲ್ಲ. 2) ಕನ್ನಡ ಮಾತನಾಡಲು ಗೊತ್ತಿರಬೇಕು. 3) ಪೌರಕಾರ್ಮಿಕ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಕ್ಷೇಮಾಭಿವೃದ್ಧಿ/ದಿನಗೂಲಿ/ಗುತ್ತಿಗೆ/ಹೊರಗುತ್ತಿಗೆ/ಸಮಾನ ಕೆಲಸಕ್ಕೆ ಸಮಾನ ವ ೕತನ ನೌಕರರಿಗೆ ಮೊದಲ ಆದ್ಯತೆ. ೆ 4) ಗರಿಷ್ಠ ವಯೋಮಿತಿ 45 ವರ್ಷ 9600-14550
ಕ್ರ.ಸಂ. ವ ರ್ಗೀಕರಣದ ವಿವರ ಸಾಮಾನ್ಯ ಅಭ್ಯರ್ಥಿ ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಅಂಗ ವಿಕಲರು ವ iಾಜಿ ಸ ೖನಿಕರು ೆ ಕನ್ನಡ ವ iಾಧ್ಯಮ ಯೋಜನಾ ನಿರಾಶ್ರಿತರು ಒಟ್ಟು
1 ಸಾಮಾನ್ಯ 3 5 4 1 1 1 0 15
2 ಪ ರಿಶಿಷ್ಟ ಜಾತಿ 1 1 1 1 0 0 0 4
3 ಪ ರಿಶಿಷ್ಟ ಪಂಗಡ 1 0 0 0 0 0 0 1
4 ಪ ವ ್ರ ರ್ಗ – 1 1 0 0 0 0 0 0 1
5 ಪ ವ ್ರ ರ್ಗ– 2ಎ 1 1 1 1 0 0 0 4
6 ಪ ವ ್ರ ರ್ಗ- 2ಬಿ 1 0 0 0 0 0 0 1
7 ಪ ವ ್ರ ರ್ಗ-3ಎ 1 0 0 0 0 0 0 1
8 ಪ ವ ್ರ ರ್ಗ-3ಬಿ 1 1 0 0 0 0 0 2
ಒಟ್ಟು 10 8 6 3 1 1 0 29

1. ಕ್ಷೇಮಾಭಿವೃದ್ಧಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ, ಸಮಾನ ಕೆಲಸಕ್ಕೆ ಸಮಾನ ವೇತನ ನೌಕರರು ರವರು ಅರ್ಜಿಯನ್ನು ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳೀಯ ಸಂಸ್ಥೆಯಲ್ಲೇ ಅರ್ಜಿ ಸಲ್ಲಿಸತಕ್ಕದ್ದು. ಬೇರೆ ಯಾವುದೇ ಸ್ಥಳೀಯ ಸಂಸ್ಥೆಗಳಿಗೆ ಅರ್ಜಿಯನ್ನು ಸಲ್ಲಿಸಿದಲ್ಲಿ ಪರಿಗಣಿಸುವುದಿಲ್ಲ.

2. ಹೆಚ್ಚಿನ ಮಾಹಿತಿ ಹಾಗೂ ವಿವರವಾದ ಅಧಿಸೂಚನೆಯನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಡೆಯಬಹುದು. 3. ಈ ನೇಮಕಾತಿಯು ಸರ್ಕಾರ/ ಪೌರಾಳಿತ ನಿರ್ದೆಶನಾಲಯದಿಂದ ಕಾಲಕಾಲಕ್ಕೆ ಹೊರಡಿಸುವ ಆದೇಶ/ ಸುತ್ತೋಲೆಯ ಷರತ್ತಿಗೊಳಪಟ್ಟಿರುತ್ತದೆ.

4. ಅಂಗವಿಕಲರ ಹುದ್ದೆಯನ್ನು ಸರ್ಕಾರದ ಆದೇಶ ಸಂ: ಡಿ.ಪಿ.ಎ.ಆರ್. 52 ಎಸ್.ಆರ್.ಆರ್. 99 ದಿನಾಂಕ: 29.11.2002ರಲ್ಲಿ ಸೂಚಿಸಿರುವಂತೆ ಮೀಸಲಾತಿ ನಿಗಧಿಪಡಿಸಲಾಗುವುದು.

PR-64

ಜಿಲ್ಲಾಧಿಕಾರಿಗಳು,

SC-05

ಜಿಲ್ಲಾಧಿಕಾರಿಗಳ ಕಾರ್ಯಾಲಯ, ರಾಮನಗರ ಜಿಲ್ಲೆ.

೭೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೫

ಕರ್ನಾಟಕ ಲೋಕಸೇವಾ ಆಯೋಗ, "ಉದ್ಯೋಗ ಸೌಧ", ಬೆಂಗಳೂರು-01.

ತಿದ್ದುಪಡಿ ಅಧಿಸೂಚನೆ

ಸಂಖ್ಯೆ : ಇಪ(1) 437/2017-18/ಪಿ.ಎಸ್.ಸಿ, ಬೆಂಗಳೂರು, ದಿನಾಂಕ : 21-11-2017.

ವಿಷಯ : 2017ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗೆ ಅನುಲೇಖನ ಸಹಾಯಕರನ್ನು ಪಡೆದು ಪರೀಕ್ಷೆ ಬರೆಯಲಾದ ಅಭ್ಯರ್ಥಿಗಳ ಫಲಿತಾಂಶ ಪ್ರಕಟಿಸುವ ಬಗ್ಗೆ.

ಉಲ್ಲೇಖ : 1) ಅಧಿಸೂಚನೆ ಸಂಖ್ಯೆ : ಇಪ(1)939/2016-17/ಪಿಎಸ್‌ಸಿ, ದಿನಾಂಕ : 31-12-2016.

2) ಫಲಿತಾಂಶದ ಅಧಿಸೂಚನೆ ಸಂಖ್ಯೆ : ಇಪ(1)288/2017-18/ಪಿಎಸ್‌ಸಿ, ದಿನಾಂಕ : 07-09-2017.

ಆಯೋಗವು ದಿನಾಂಕ: 15.04.2017 ರಿಂದ 07.05.2017ರವರೆಗೆ ನಡೆಸಿದ 2017ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗೆ ಸಂಬಂಧಿಸಿದಂತೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದ್ದ ಕೆಳಕಂಡ ಅಭ್ಯರ್ಥಿಗಳ ಫಲಿತಾಂಶವನ್ನು ಸಂಬಂಧಿತ ಅಭ್ಯರ್ಥಿಗಳ ಮಾಹಿತಿಗಾಗಿ ಈ ಮೂಲಕ

ಅಪೆಂಡಿಕ್ಸ್-ಎ ಬ ಂಗಳೂರು ಕೇಂದ್ರ ೆ
ಕ್ರಮ ಸ ಂಖ್ಯೆ ನೋಂದಣಿ ಸಂಖ್ಯೆ ವಿಷಯ ಪ ಲಿತಾಂಶ
01 402435 ಅಕೌಂಟ್ಸ್ ಹೈಯರ್ ಸಾಮಾನ್ಯ ದರ್ಜೆ
02 403213 ಜನರಲ್ ಲಾ ಭಾಗ-1 ಪ ಥ ್ರ ವ ು ದರ್ಜೆ
ಜನರಲ್ ಲಾ ಭಾಗ-2 ಸಾಮಾನ್ಯ ದರ್ಜೆ
ರಿಜಿಸ್ಟ್ರೇಷನ್ ಸಾಮಾನ್ಯ ದರ್ಜೆ
03 403956 ಜನರಲ್ ಲಾ ಭಾಗ-2 ಸಾಮಾನ್ಯ ದರ್ಜೆ
ಜನರಲ್ ಲಾ ಭಾಗ-1 ಪ ಥ ್ರ ವ ು ದರ್ಜೆ
ಅಪೆಂಡಿಕ್ಸ್-ಎ ಬ ಳಗಾವಿ ಕೇಂದ್ರ ೆ
04 406811 ರೆವಿನ್ಯೂ ಹೈಯರ್ ಭಾಗ-1 ಪ ಥ ್ರ ವ ು ದರ್ಜೆ
ಅಪೆಂಡಿಕ್ಸ್-ಎ ವಿಜಯಪುರ ಕೇಂದ್ರ
05 412607 ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗ-1 ಸಾಮಾನ್ಯ ದರ್ಜೆ
ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗ-2 ಸಾಮಾನ್ಯ ದರ್ಜೆ
ಅಪೆಂಡಿಕ್ಸ್-ಎ ಬಾಗಲಕೋಟೆ ಕೇಂದ್ರ
06 414639 ಅಕೌಂಟ್ಸ್ ಲೋಯರ್ ಸಾಮಾನ್ಯ ದರ್ಜೆ
ಅಪೆಂಡಿಕ್ಸ್-ಎ ದ ಾರವಾಡ ಕೇಂದ್ರ
07 419335 ಅಕೌಂಟ್ಸ್ ಹೈಯರ್ ಸಾಮಾನ್ಯ ದರ್ಜೆ
ಅಪೆಂಡಿಕ್ಸ್-ಎ ಹಾವೇರಿ ಕೇಂದ್ರ
08 426044 ಅಕೌಂಟ್ಸ್ ಲೋಯರ್ ಸಾಮಾನ್ಯ ದರ್ಜೆ
ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗ-1 ಪ ಥ ್ರ ವ ು ದರ್ಜೆ
ಕಮ್ಯುನಿಟಿ ಡೆವಲಪ್‌ಮೆಂಟ್ ಭಾಗ-2 ಪ ಥ ್ರ ವ ು ದರ್ಜೆ
ಅಕೌಂಟ್ಸ್ ಹೈಯರ್ ಸಾಮಾನ್ಯ ದರ್ಜೆ
ಜನರಲ್ ಲಾ ಭಾಗ-1 ಸಾಮಾನ್ಯ ದರ್ಜೆ
ಕ್ರಮ ಸ ಂಖ್ಯೆ ನೋಂದಣಿ ಸಂಖ್ಯೆ ವಿಷಯ ಪ ಲಿತಾಂಶ
ಅಪೆಂಡಿಕ್ಸ್-ಎ ರಾಮನಗರ ಕೇಂದ್ರ
09 437292 ಅಕೌಂಟ್ಸ್ ಹೈಯರ್ ಸಾಮಾನ್ಯ ದರ್ಜೆ
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೭೩೩

PR – 65

ಕೃಷ್ಣ ಬಾಜಪೇಯೀ

SC - 200

ಪರೀಕ್ಷಾ ನಿಯಂತ್ರಕರು

ಕರ್ನಾಟಕ ಲೋಕಸೇವಾ ಆಯೋಗ

ಬೆಂಗಳೂರು.

ಅರಣ್ಯ ಇಲಾಖೆ

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮುಖ್ಯಸ್ಥರು, ಅರಣ್ಯ ಪಡೆ) ಹಾಗೂ ಆಯ್ಕೆ ಪ್ರಾಧಿಕಾರ

ಇವರ ಕಛೇರಿ, ಅರಣ್ಯ ಭವನ, ಮಲ್ಲೇಶ್ವರಂ, ಬೆಂಗಳೂರು-560003.

ಅಧಿಸೂಚನೆ

ಅಧಿಸೂಚನೆ ಸಂಖ್ಯೆ : ಬಿ9-ನೇಮಕಾತಿ-ವಿವ-3/2017-18, ದಿನಾಂಕ : 24-03-2018.

ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ

68 ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಹಾಗೂ 5 ಬ್ಯಾಕ್‌ಲಾಗ್ ವಲಯ ಅರಣ್ಯಾಧಿಕಾರಿ ಹುದ್ದೆಗಳು, ಒಟ್ಟು 73 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲು ಅರ್ಹರಾದ ಬಿ.ಎಸ್ಸಿ. (ಅರಣ್ಯ ಶಾಸ್ತ್ರ) / ವಿಜ್ಞಾನ / ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 1. ಅರ್ಜಿ ಸಲ್ಲಿಸುವ ವಿಧಾನ:

On-line ಅರ್ಜಿ, ಅಧಿಸೂಚನೆ ಮತ್ತು ಪಠ್ಯಕ್ರಮ (Syllabus) ಇವುಗಳನ್ನು ಇಲಾಖಾ ವೆಬ್‌ಸೈಟ್: www.aranya.gov.in ನಲ್ಲಿ ಪ್ರಕಟಪಡಿಸಲಾಗುವುದು. ಅರ್ಜಿಯನ್ನು On-line ಮುಖಾಂತರ ಅಭ್ಯರ್ಥಿಗಳು ಸಲ್ಲಿಸತಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ ವಿಧದಲ್ಲಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುವುದಿಲ್ಲ. On-line ಅರ್ಜಿಯನ್ನು ತುಂಬಲು ಸಹಾಯಕವಾಗುವ ಸೂಚನೆಗಳನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ನೀಡಲಾಗುವುದು. ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಬಾರದು. ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭರ್ತಿ ಮಾಡಿದ ಆನ್‌ಲೈನ್ ಅರ್ಜಿಯ ಒಂದು ಪ್ರತಿಯನ್ನು ತೆಗೆದು ತಮ್ಮ ಬಳಿ ಇಟ್ಟುಕೊಳ್ಳತಕ್ಕದ್ದು. On-line ಅರ್ಜಿಯ ಪ್ರತಿಯನ್ನು ಅಂಚೆ ಮುಖಾಂತರ ಅಥವಾ ಮುದ್ದಾಂ ಆಗಿ ಇಲಾಖೆಗೆ ಸಲ್ಲಿಸಬೇಕಾದ ಅವಶ್ಯಕತೆ ಇರುವುದಿಲ್ಲ.

1.1. ಜನ್ಮ ದಿನಾಂಕ ದೃಡೀಕರಿಸುವ ಪ್ರಮಾಣ ಪತ್ರ, ಶೈಕ್ಷಣಿಕ ಪ್ರಮಾಣ ಪತ್ರಗಳು, ಜಾತಿ/ಪ್ರವರ್ಗ ದೃಡೀಕರಿಸುವ ಪ್ರಮಾಣ ಪತ್ರಗಳು, ಸೈನಿಕ ಸೇವೆ ದೃಡೀಕರಣ ಪ್ರಮಾಣ ಪತ್ರ (ಅರ್ಜಿಯಲ್ಲಿ ಕೋರಲಾದ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು) ಗಳನ್ನು ಸ್ಕ್ಯಾನ್ ಮಾಡಿ ಇಲಾಖಾ ವೆಬ್ ಸೈಟ್‌ಗೆ ಅರ್ಜಿ ಸಲ್ಲಿಸುವ ವೇಳೆಯಲ್ಲಿ ಅಪ್‌ಲೋಡ್ ಮಾಡತಕ್ಕದ್ದು, ಈ ಕುರಿತು ಪೂರ್ಣ ಮಾಹಿತಿಯನ್ನು ಅರ್ಜಿ ಸಲ್ಲಿಸುವ ವೇಳೆಯಲ್ಲಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗುವುದು. ಅಭ್ಯರ್ಥಿಯು ಯಾವ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸುವ ವೇಳೆ ಅಪ್‌ಲೋಡ್ ಮಾಡಿರುತ್ತಾರೆಯೋ ಅದೇ ಪ್ರಮಾಣ ಪತ್ರವನ್ನು ಎಲ್ಲಾ ಹಂತದಲ್ಲೂ ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಇದನ್ನು ಯಾವ ಹಂತದಲ್ಲಿಯೂ ಬದಲಾವಣೆ ಮಾಡಲು ಅವಕಾಶವಿರುವುದಿಲ್ಲ.

1.2. On-line ಮುಖಾಂತರ ಅರ್ಜಿಯನ್ನು ದಿನಾಂಕ: 09-04-2018ರಿಂದ 08-05-2018 ರಂದು ಅಪರಾಹ್ನ 4.30 ಗಂಟೆಯವರೆಗೆ ಸಲ್ಲಿಸಬಹುದಾಗಿರುತ್ತದೆ.

1.3. ಮೂಲ ದಾಖಲೆಗಳ ಪರಿಶೀಲನೆ, ಪೂರ್ವಭಾವಿ ಪರೀಕ್ಷೆ ದಿನಾಂಕ, ಪರೀಕ್ಷೆ ನಡೆಯುವ ಸ್ಥಳ ಮತ್ತು ವೇಳೆಯನ್ನು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಮೂಲ ದಾಖಲೆಗಳ ಪರೀಕ್ಷೆ ನಡೆಯುವ ದಿನಾಂಕ, ವೇಳಾಪಟ್ಟಿ, ಪರೀಕ್ಷಾ ಕೇಂದ್ರ ವಿವರಗಳುಳ್ಳ ಪ್ರವೇಶ ಪತ್ರವನ್ನು ಅರ್ಹ ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್ www.aranya.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳುವುದು. ಪ್ರವೇಶ ಪತ್ರವನ್ನು ಅಂಚೆ ಮುಖಾಂತರ ಕಳುಹಿಸಲಾಗುವುದಿಲ್ಲ.

2. ಅರ್ಜಿ ಶುಲ್ಕ:

ಸಾಮಾನ್ಯ ವರ್ಗ, IIA, IIB, IIIA, IIIB ಪ್ರವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.100.00+ಸೇವಾ ಶುಲ್ಕ ರೂ.15.00 ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಮತ್ತು ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.50.00 + ಸೇವಾ ಶುಲ್ಕ ರೂ.15.00. On-line ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಮುದ್ರಿತ ಅರ್ಜಿ ಪ್ರತಿಯನ್ನು ತೆಗೆದುಕೊಂಡು, ಇ-ಪಾವತಿ ಸೌಲಭ್ಯವಿರುವ ಅಂಚೆ ಕಛೇರಿಯಲ್ಲಿ ಮುದ್ರಿತ ಅರ್ಜಿ ಪ್ರತಿಯನ್ನು ತೋರಿಸಿ, ಈ ಮೇಲೆ ಹೇಳಿರುವ ಅರ್ಜಿ ಶುಲ್ಕ ಮತ್ತು ಸೇವಾ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸತಕ್ಕದ್ದು. ಅರ್ಜಿ ಶುಲ್ಕ ಪಾವತಿಸಲು ದಿನಾಂಕ: 09-04-2018ರಿಂದ 10-05-2018ರ ಮಧ್ಯಾಹ್ನ 2.30 ರ ವರೆಗೆ ಆಗಿರುತ್ತದೆ.

ಸೂಚನೆ : On-line ನಲ್ಲಿ ಅರ್ಜಿಯನ್ನು ಸಲ್ಲಿಸದೇ ನೇರವಾಗಿ ಕೊರಿಯರ್, ನೊಂದಾಯಿತ ಅಂಚೆ, ಸಾಧಾರಣ ಅಂಚೆ, ಮುದ್ದಾಂ ಇತ್ಯಾದಿ ವಿಧಾನಗಳ ಮುಖಾಂತರ ಕಳುಹಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

3. ಹುದ್ದೆಗಳ ವರ್ಗೀಕರಣ:

ವೇತನ ಶ್ರೇಣಿ: ರೂ.21600-600-24600-700-28800-800-33600-900-39000-1050-40050.

೭೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೫

ಈ ಕೆಳಕಂಡ ಹುದ್ದೆಗಳ ಸಂಖ್ಯೆಗಳು ತಾತ್ಕಾಲಿಕವಾಗಿದ್ದು, ನೇಮಕಾತಿ ಸಮಯದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಮಾರ್ಪಡಿಸಬಹುದಾಗಿರುತ್ತದೆ.

1 ಬಿ.ಎಸ್ಸಿ.(ಅರಣ್ಯ ಶಾಸ್ತ್ರ) ಪದವೀಧರರಿಗೆ 51
2 ವಿಜ್ಞಾನ ಮತ್ತು ಇಂಜಿನಿಯರಿಂಗ್ ಪದವೀಧರರಿಗೆ 17
ಒಟ್ಟು: 68
1 ಬಿ.ಎಸ್ಸಿ. (ಅರಣ್ಯ ಶಾಸ್ತ್ರ) ಪದವೀಧರರಿಗೆ 5
ಒಟ್ಟು: 5
ಪ ವರ್ಗ ್ರ ಸಾಮಾನ್ಯ ವ iಾಜಿ ಸೈನಿಕ ವ ುಹಿಳೆ ಗ್ರಾಮೀಣ ಕನ್ನಡ ಮಾಧ್ಯಮ ಒಟ್ಟು
ಪ ರಿಶಿಷ್ಟ ಜಾತಿ 3 1 2 1 - 7
ಸಾಮಾನ್ಯ ಅರ್ಹತೆ 5 2 10 6 2 25
ಪ ರಿಶಿಷ್ಟ ಪಂಗಡ 1 - 1 - - 2
ಪ ವ ್ರ ರ್ಗ I - - 2 - - 2
ಪ ವ ್ರ ರ್ಗ II(ಎ) 3 1 2 1 1 8
ಪ ವ ್ರ ರ್ಗ II(ಬಿ) - 1 1 - - 2
ಪ ವ ್ರ ರ್ಗ III(ಎ) - 1 1 - - 2
ಪ ವ ್ರ ರ್ಗ III(ಬಿ) - - 1 1 1 3
ಒಟ್ಟು: 12 6 20 9 4 51
ಪ ರಿಶಿಷ್ಟ ಜಾತಿ 2 1 - - - 3
ಸಾಮಾನ್ಯ ಅರ್ಹತೆ 3 1 2 2 - 8
ಪ ರಿಶಿಷ್ಟ ಪಂಗಡ 1 - - - - 1
ಪ ವ ್ರ ರ್ಗ II(ಎ) 1 1 - - - 2
ಪ ವ ್ರ ರ್ಗ II(ಬಿ) - - 1 - - 1
ಪ ವ ್ರ ರ್ಗ III(ಎ) - - - 1 - 1
ಪ ವ ್ರ ರ್ಗ III(ಬಿ) 1 - - - - 1
ಒಟ್ಟು: 8 3 3 3 - 17
ಪ ರಿಶಿಷ್ಟ ಜಾತಿ 2 - - - - 2
ಪ ವ ್ರ ರ್ಗ I 1 - - - - 1
ಪ ವ ್ರ ರ್ಗ II(ಬಿ) 1 - - - - 1
ಪ ವ ್ರ ರ್ಗ III(ಎ) 1 - - - - 1
ಒಟ್ಟು: 5 - - - - 5

3.6. ಈ ಕಛೇರಿಯ ಅಧಿಸೂಚನೆ ಸಂಖ್ಯೆ: ಬಿ9-ವಅಅ-ವಿವ-5/2014-15, ದಿನಾಂಕ: 29-10-2014 ರಲ್ಲಿ ಒಟ್ಟು 110 ವಲಯ ಅರಣ್ಯಾಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿತ್ತು. ಈ 110 ಹುದ್ದೆಗಳ ಪೈಕಿ 22 ಹುದ್ದೆಗಳು ಹೈದರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯ ಬಿ.ಎಸ್‌ಸಿ (ಅರಣ್ಯ ಶಾಸ್ತ್ರ) ಇವರಿಗೆ ಲಭ್ಯವಾದ ಹುದ್ದೆಗಳಾಗಿರುತ್ತದೆ. ಈ 22 ಹುದ್ದೆಗಳಲ್ಲಿ ಈ ಕಚೇರಿಯ ಪ್ರಕಟಣೆ ದಿನಾಂಕ: 20-02-2016ರ ಪ್ರಕಾರ 10 ಹುದ್ದೆಗಳಿಗೆ ಮಾತ್ರ ಅರ್ಹ ಅಭ್ಯರ್ಥಿಗಳು ಲಭ್ಯವಾಗಿ ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಬಾಕಿ ಉಳಿದ 12 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿರುವುದಿಲ್ಲ. ಹೀಗಾಗಿ, ಈ ಕಛೇರಿಯ ಅಧಿಸೂಚನೆಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೭೩೫ ಸಂಖ್ಯೆ: ಬಿ9-ವಅಅ-ವಿವ-5/2015-16 ದಿನಾಂಕ: 22-03-2016 ರಂದು 12 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಈ 12 ಹುದ್ದೆಗಳ ಪೈಕಿ 7 ಹುದ್ದೆಗಳು ಮಾತ್ರ ಭರ್ತಿಯಾಗಿರುತ್ತದೆ. ಈ ಕುರಿತು ಈ ಕಛೇರಿಯ ಪ್ರಕಟಣೆ ದಿನಾಂಕ: 16.03.2017 ರಲ್ಲಿ ಮಾಹಿತಿ ಪ್ರಕಟಿಸಲಾಗಿರುತ್ತದೆ. ಒಟ್ಟು 5 ಬಿ.ಎಸ್ಸಿ. (ಅರಣ್ಯಶಾಸ್ತ್ರ) (ಹೈದರಾಬಾದ್ – ಕರ್ನಾಟಕ) ಹುದ್ದೆಗಳು ಭರ್ತಿಯಾಗಿರುವುದಿಲ್ಲ. ಒಟ್ಟು 2 ಬಾರಿ ಬಿ.ಎಸ್ಸಿ. (ಅರಣ್ಯ ಶಾಸ್ತ್ರ) (ಹೈದರಾಬಾದ್ – ಕರ್ನಾಟಕ) ಮೀಸಲಾತಿ ಅಡಿಯಲ್ಲಿ ಅಧಿಸೂಚನೆ ಹೊರಡಿಸಿ, ನೇಮಕಾತಿ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿರುತ್ತದೆ.

ಹೈದರಾಬಾದ್-ಕರ್ನಾಟಕದ ಅಧಿಸೂಚನೆ ಸಂಖ್ಯೆ: ಡಿಪಿಎಆರ್/06/ಪಿಎಲ್ಎಕ್ಸ್/2012, ದಿನಾಂಕ: 06-11-2013ರ ಅಧಿಸೂಚನೆಯ ನಿಯಮ 8(5) ರನ್ವಯ "ಯಾವುದೇ ಸಮಯದಲ್ಲಿ ಯಾವುದೇ ಹುದ್ದೆಗಾಗಿ ಲಭ್ಯ ಸ್ಥಳೀಯ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ, ಅಂಥ ಖಾಲಿ ಹುದ್ದೆಗಳನ್ನು ಬ್ಯಾಕ್‌ಲಾಗ್ ಎಂದು ತೆಗೆದುಕೊಳ್ಳತಕ್ಕದ್ದು ಮತ್ತು ಮುಂದಿನ ನೇಮಕಾತಿಯ ವರೆಗೆ ಅದನ್ನು ಮುಂದುವರೆಸತಕ್ಕದ್ದು ಮತ್ತು ನಂತರ ಅದನ್ನು ಮೀಸಲಾತಿಯಲ್ಲವೆಂದು ಭಾವಿಸಬಹುದು ಮತ್ತು ಅದಕ್ಕಾನುಸಾರವಾಗಿ ಭರ್ತಿ ಮಾಡತಕ್ಕದ್ದು" ಎಂದಿರುತ್ತದೆ. ಹೀಗಾಗಿ ತುಂಬಲು ಬಾಕಿ ಉಳಿದ 5 ಹುದ್ದೆಗಳನ್ನು ಬಿ.ಎಸ್ಸಿ. (ಅರಣ್ಯ ಶಾಸ್ತ್ರ) (ಸ್ಥಳಿಯೇತರ ವೃಂದದಡಿ) ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.

ವಿಶೇಷ ಸೂಚನೆ: ಈ ಮೇಲ್ಕಂಡ ಖಾಲಿ ಹುದ್ದೆಗಳ ವರ್ಗೀಕರಣದಲ್ಲಿ ಅವಶ್ಯಕತೆ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಯಾವುದೇ ಸಂದರ್ಭದಲ್ಲಿ ಬದಲಾವಣೆ ಮಾಡಿಕೊಳ್ಳಬಹುದಾಗಿರುತ್ತದೆ. ಈ ಮಾಹಿತಿಯನ್ನು ಕರ್ನಾಟಕ ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗುವುದು. 4. ಶೈಕ್ಷಣಿಕ ವಿದ್ಯಾರ್ಹತೆ:

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ (08.05.2018) ರೊಳಗೆ ಈ ಕೆಳಕಂಡ ವಿದ್ಯಾರ್ಹತೆಯನ್ನು ಅಭ್ಯರ್ಥಿಯು ಹೊಂದಿರಬೇಕು. 4.1. ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಅರಣ್ಯ ವಿಷಯದಲ್ಲಿ ಪದವೀಧರರಾಗಿರಬೇಕು;

ಅಥವಾ

4.2. ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ

ಅ) ಕೃಷಿ ಅಥವಾ

ಆ) ತೋಟಗಾರಿಕೆ ಅಥವಾ

ಇ) ಪಶುವಿಜ್ಞಾನ ವಿಷಯದಲ್ಲಿ ಪದವೀಧರರಾಗಿರಬೇಕು

ಅಥವಾ

ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಈ ಕೆಳಗಿನ ವಿಷಯಗಳಲ್ಲಿ ಯಾವುದಾದರು ಎರಡು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳನ್ನು ಒಳಗೊಂಡಂತೆ ಬಿ.ಎಸ್ಸಿ. ಪದವೀಧರರಾಗಿರಬೇಕು ಮತ್ತು ಎಲ್ಲಾ ವಾರ್ಷಿಕ ಸೆಮಿಸ್ಟರುಗಳಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಿಷಯಗಳನ್ನು ಒಳಗೊಂಡಂತೆ ಓದಿರತಕ್ಕದ್ದು.

ವಿಷಯಗಳು : ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಪ್ರಾಣಿಶಾಸ್ತ್ರ, ಸಸ್ಯಶಾಸ್ತ್ರ, ಬಯೋ-ಕೆಮೆಸ್ಟ್ರಿ, ಮೈಕ್ರೋ-ಬಯಾಲಜಿ, ಬಯೋ-ಟೆಕ್ನಾಲಜಿ

ಅಥವಾ

ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬ್ಯಾಚುಲರ್ಆಫ್ ಇಂಜಿನಿಯರಿಂಗ್ ಪದವಿ ಪಡೆದಿರಬೇಕು.

5. ಮೇಲಿನ ಪದವಿ ಪರೀಕ್ಷೆಗಳಲ್ಲಿ ನಿಗದಿಪಡಿಸಿದ ಗರಿಷ್ಠ ಅಂಕಗಳಿಗೆ ಶೇಕಡ 50 ಕ್ಕಿಂತ ಕಡಿಮೆ ಇಲ್ಲದ ಅಂಕ ಪಡೆದು ತೇರ್ಗಡೆಯಾಗಿರಬೇಕು (ಎಲ್ಲಾ

ವಾರ್ಷಿಕ/ಸೆಮಿಸ್ಟರ್ ಪರೀಕ್ಷೆಗಳು ಕೂಡಿ). ಇಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

6. ವಯೋಮಿತಿ: 6.1. ಅರ್ಜಿಯನ್ನು ಆಹ್ವಾನಿಸಿ ಜಾರಿ ಮಾಡಲಾಗಿರುವ ಈ ಅಧಿಸೂಚನೆಯ ದಿನಾಂಕಕ್ಕೆ ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಮತ್ತು ಈ

1. ಪ ರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ–1 32 ವರ್ಷ
2. ಪ ವ ್ರ ರ್ಗ 2ಎ, 2ಬಿ, 3ಎ, 3ಬಿ 30 ವರ್ಷ
3. ಇತರರು 27 ವರ್ಷ

6.2. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ವಯೋಮಿತಿ : ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿ ನಿಯಮಾನುಸಾರ ನಿವೃತ್ತಿ/ಡಿಮೊಬಿಲೈಸೇಷನ್ (Demobilisation) ಅಥವಾ ರಿಟ್ರೆಂಚ್‌ಮೆಂಟ್ (Retrenchment) ಹೊಂದಿದ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಯಾವ ಪ್ರವರ್ಗಕ್ಕೆ ಸೇರಿರುತ್ತಾರೆಯೊ ಆ ಪ್ರವರ್ಗಕ್ಕೆ ಮೇಲಿನ ಸಂಖ್ಯೆ: 6.1 ರಲ್ಲಿ ನಿಗದಿಪಡಿಸಿದ ಗರಿಷ್ಠ ವಯೋಮಿತಿಗೆ ಅವರು ಎಷ್ಟು ವರ್ಷ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿರುವರೋ ಅಷ್ಟು ವರ್ಷಗಳಿಗೆ ಮೂರು (3) ವರ್ಷ ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳ ಸಡಿಲಿಕೆಯನ್ನು ನೀಡಲಾಗುವುದು.

ವಿವರಣೆ: "ಮಾಜಿ ಸೈನಿಕ"ಎಂದರೆ ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರಲ್ಲಿ ಅರ್ಥೈಸಿರುವಂತಾಗಿದೆ. ಈ ಪದದ ಅರ್ಥ ವಿವರಣೆ ಈ ಕೆಳಕಂಡಂತಿದೆ:

2(1)(i) "Ex-serviceman" means a person, who has served in any rank (whether as a regular Army, Navy and combatant or as a non-combatant) in the regular Army, Navy and Air Force of the Union but does not include a person who has served in the Defence Security Corps, the General Reserved Engineering Force, the Lok Sahayak Sena and the Para Military Forces; and೭೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೫ (a) who has retired from such service after earning his pension; or

(b) who has been released from such service on medical grounds attributable to military service or circumstances beyond his control and awarded medical or other disability pension; or

(c) who has been released otherwise than on his own request from such service as a result of reduction in establishment; or

(d) who has been released from such service after completing the specific period of engagement otherwise than at his own request or by way of dismissal or discharge on account of mis-conduct or inefficiency and has been given a gratuity.

and includes personnel of the Territorial Army of the following categories namely:-

(i) pension holders for continuous embodied service;

(ii) persons with disability attributable to military service; and

(iii) gallantry award winners.

Explanation: The persons serving in the armed forces of the union, who on retirement from service, would come under the category of ex-serviceman may be permitted to apply for re-employment one year before the completion of the specified terms of agreement and avail themselves of all concessions available to ex- servicemen, but shall not be appointed to a State Civil Service or Post until they are permitted to leave the uniform.

7. ಸ್ವೀಕೃತ On-line ಅರ್ಜಿಗಳ ಪರಾಮರ್ಶೆ:

ಕರ್ನಾಟಕ ಅರಣ್ಯ ಇಲಾಖಾ ಸೇವೆಗಳು (ನೇಮಕಾತಿ)(ತಿದ್ದುಪಡಿ) ನಿಯಮಗಳು, 2012ರ ಅನ್ವಯ ವಲಯ ಅರಣ್ಯಾಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ನೇಮಕಾತಿ ಮೂಲಕ ತುಂಬಲು ಪ್ರಸ್ತುತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಾನುಸಾರ ಮೀಸಲಾತಿ ವರ್ಗೀಕರಣ ಮಾಡಲಾಗಿದೆ. ಅಭ್ಯರ್ಥಿಯು ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿ ಮತ್ತು ವಿವರಗಳು ಮತ್ತು ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಿರುವ ಎಲ್ಲಾ ದಾಖಲಾತಿಗಳ ಆಧಾರದ ಮೇಲೆ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಕ್ರಮಬದ್ಧವಲ್ಲದ, ಅಪೂರ್ಣ ಮಾಹಿತಿಗಳಿಂದ ಕೂಡಿದ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲೇ ತಿರಸ್ಕರಿಸಲಾಗುವುದು. ಇದಲ್ಲದೆ ಅಪ್‌ಲೋಡ್ ಮಾಡಬೇಕಾಗಿರುವ ದಾಖಲೆಗಳ ಪೈಕಿ ಯಾವುದಾದರೂ ದಾಖಲೆಗಳನ್ನು ಅಪ್‌ಲೋಡ್ ಮಾಡದೆ ಇದ್ದಲ್ಲಿ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸಲಾಗುವುದು.

7.1. ಮೂಲ ದಾಖಲೆ/ಪ್ರಮಾಣ ಪತ್ರಗಳ ಪರಿಶೀಲನೆ:(ವಿಶೇಷ ಸೂಚನೆ)

ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಎಲ್ಲಾ ಮಾಹಿತಿ/ವಿವರಗಳಿಗೆ ಪೂರಕವಾಗಿ ವಯಸ್ಸು, (ಜನ್ಮ ದಿನಾಂಕ ತಿಳಿಯಲು ಎಸ್.ಎಸ್.ಎಲ್.ಸಿ. ಅಂಕಪಟ್ಟಿ, ಶಾಲಾ ದಾಖಲಾತಿ ಪ್ರಮಾಣ ಪತ್ರಗಳು) ಶೈಕ್ಷಣಿಕ ಅರ್ಹತೆ, ಮೀಸಲಾತಿ, ಇತ್ಯಾದಿಗಳನ್ನು ಅರ್ಜಿ ಸಲ್ಲಿಸುವ ವೇಳೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡತಕ್ಕದ್ದು, ಈ ರೀತಿ ಅಪ್‌ಲೋಡ್ ಮಾಡಿರುವ ದಾಖಲೆಗಳ ಪರಿಶೀಲನೆಯನ್ನು ಸೂಚಿತ ದಿನಾಂಕದಂದು ಆಯ್ಕೆ ಪ್ರಾಧಿಕಾರ ಅಥವಾ ಮುಖ್ಯ ಪರೀಕ್ಷಕರ ಅಥವಾ ಅವರು ನಿಯಮಿಸಿರುವ ಅಧಿಕಾರಿಗಳ ಎದುರು ಪರಿಶೀಲನೆಗೆ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಸದರಿ ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಹಾಜರುಪಡಿಸಲು ಯಾವುದೇ ಕಾರಣಕ್ಕೂ ಮತ್ತು ಯಾವುದೇ ಸನ್ನಿವೇಶದಲ್ಲಿಯೂ ಕಾಲ ವಿಸ್ತರಣೆ ನೀಡಲಾಗುವುದಿಲ್ಲ. ಒಂದು ವೇಳೆ, On-line ಅರ್ಜಿಯಲ್ಲಿ ನಮೂದಿಸಿರುವ ಮಾಹಿತಿ/ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಿರುವ ಮಾಹಿತಿ/ಮೂಲ ದಾಖಲೆಗಳ ಪರಿಶೀಲನಾ ವೇಳೆ ಹಾಜರುಪಡಿಸುವ ದಾಖಲೆಗಳಲ್ಲಿ ಯಾವುದೇ ರೀತಿಯಗೊಂದಲ/ವ್ಯತಿರಿಕ್ತ ದಾಖಲೆ/ಪ್ರಮಾಣ ಪತ್ರಗಳನ್ನು ಸಲ್ಲಿಸಿದಲ್ಲಿ ಅಂತಹ ದಾಖಲೆ/ಪ್ರಮಾಣ ಪತ್ರಗಳನ್ನು ಪರಿಗಣನೆಗೆ ತೆಗೆದುಕೊಂಡು ಅರ್ಜಿಯಲ್ಲಿನ ಮಾಹಿತಿಯನ್ನು ಬದಲಾವಣೆ ಮಾಡಲಾಗುವುದಿಲ್ಲ. ಅಭ್ಯರ್ಥಿಯು ಅರ್ಜಿ ಸಲ್ಲಿಸುವಾಗ ಎಲ್ಲಾ ದಾಖಲೆಗಳನ್ನು ಪಡೆದಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸತಕ್ಕದ್ದು. ಒಂದು ವೇಳೆ, ಅರ್ಜಿಯಲ್ಲಿ ನಮೂದಿಸಿರುವ ದಾಖಲೆಗಳನ್ನು ಸಲ್ಲಿಸಲು ವಿಫಲರಾದಲ್ಲಿ ಅಭ್ಯರ್ಥಿಯ ಅಭ್ಯರ್ಥಿತನವನ್ನುರದ್ದುಪಡಿಸಲಾಗುವುದು. ಮೂಲ ದಾಖಲೆ/ಪ್ರಮಾಣ ಪತ್ರಗಳನ್ನು ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸದ ಅಭ್ಯರ್ಥಿಗಳ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು ಹಾಗೂ ಅವರನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ಅಭ್ಯರ್ಥಿಯು ಎಲ್ಲಾ ಸಂಧರ್ಭದಲ್ಲಿ ಒಂದೇ ತರಹದ ದಾಖಲೆಗಳನ್ನು ಸಲ್ಲಿಸತಕ್ಕದ್ದು, ಈ ಬಗ್ಗೆ ಅಭ್ಯರ್ಥಿ ಬಹಳ ಎಚ್ಚರಿಕೆ ವಹಿಸಲು ಸೂಚಿಸಿದೆ. ವಿಭಿನ್ನ ಮಾಹಿತಿಗಳನ್ನು ಸಲ್ಲಿಸಿದ್ದಲ್ಲಿ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸಲಾಗುವುದು. ಮುಖ್ಯ ಪರೀಕ್ಷೆಯನ್ನು ನಡೆಸುವ ಮೊದಲು ಮೂಲ ದಾಖಲೆಗಳ ಪರಿಶೀಲನೆಯನ್ನು ನಡೆಸಿ, ಮೂಲ ದಾಖಲೆಯ ಪರಿಶೀಲನೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಹಾಗೂ ರೋಸ್ಟರ್ ಬಿಂದುಗಳನ್ವಯ 1:10 (ಹುದ್ದೆ:ಅಭ್ಯರ್ಥಿ) ಪಟ್ಟಿಯನ್ನು ಪ್ರಕಟಿಸಲಾಗುವುದು.

8. ಆಯ್ಕೆ ವಿಧಾನ:

ಅ) ಪೂರ್ವಭಾವಿ ಪರೀಕ್ಷೆ - 200 ಅಂಕಗಳು

ಆ) ಮುಖ್ಯ ಪರೀಕ್ಷೆ - 200 ಅಂಕಗಳು

ವಿಷಯಗಳು ಅಂಕಗಳು ವಿವರ
ಸಾಮಾನ್ಯ ಜ್ಞಾನ 100 ಅಂಕಗಳು As per Syllabus
ಆಪ್ಟಿಟ್ಯೂಡ್ ಪರೀಕ್ಷೆ 100 ಅಂಕಗಳು As per Syllabus
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೭೩೭

ಪೂರ್ವಭಾವಿ ಪರೀಕ್ಷಾ ಕೇಂದ್ರಗಳು:

(1) ಬೆಂಗಳೂರು (2) ಬೆಳಗಾವಿ (3) ಧಾರವಾಡ (4) ಕಲಬುರಗಿ

(5) ಮಂಗಳೂರು (6) ಮೈಸೂರು (7) ಶಿವಮೊಗ್ಗ(8) ಬಳ್ಳಾರಿ (9) ಶಿರಸಿ.

ಸೂಚನೆ: ಪೂರ್ವಭಾವಿ ಪರೀಕ್ಷಾ ಕೇಂದ್ರಗಳನ್ನು ಅವಶ್ಯಕತೆಗೆ ತಕ್ಕಂತೆ ಹೆಚ್ಚಿನ ಕೇಂದ್ರಗಳನ್ನು ರೂಪಿಸುವುದು ಅಥವಾ ಪರೀಕ್ಷಾ ಕೇಂದ್ರಗಳ ಮಾರ್ಪಾಡು ಮಾಡುವ ಹಕ್ಕನ್ನು ಇಲಾಖೆಯು ಕಾಯ್ದಿರಿಸಿರುತ್ತದೆ. ಹೀಗಾಗಿ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವೇಳೆ ಪರೀಕಾ ್ಷಕೇಂದ್ರವನ್ನು ಆಧ್ಯತೆ (1), ಆಧ್ಯತೆ (2) ಹಾಗೂ ಆಧ್ಯತೆ (3) ಎಂದು ಅರ್ಜಿಯಲ್ಲಿ ನಮೂದಿಸಲು ತಿಳಿಸಿದೆ.

ವಿಶೇಷ ಸೂಚನೆ: ಅಭ್ಯರ್ಥಿಗಳು ಆಯ್ಕೆ ಮಾಡಿರುವ ಪರೀಕ್ಷಾ ಕೇಂದ್ರಗಳಲ್ಲಿ ಆಧ್ಯತೆಯ ಮೇರೆಗೆ ಆಡಳಿತಾತ್ಮಕ ಹಿತದೃಷ್ಠಿಯಿಂದ ಯಾವುದಾದರೂ ಒಂದು ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು.

8.2. (ಆ) ಮುಖ್ಯ ಪರೀಕ್ಷೆ: ಪೂರ್ವಭಾವಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದಂತೆ ಪ್ರತಿ ಹುದ್ದೆಗೆ ಹತ್ತು ಅಭ್ಯರ್ಥಿಗಳಂತೆ 1:10 (ಹುದ್ದೆ:ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿ) ಅನುಪಾತದಲ್ಲಿ ಅಭ್ಯರ್ಥಿಗಳನ್ನು ಮುಖ್ಯ ಪರೀಕ್ಷೆಗೆ ಹಾಜರಾಗಲು ಪ್ರಚಲಿತಚಾಲ್ತಿಯಲ್ಲಿರುವ ಮೀಸಲಾತಿ ನಿಯಮಾನುಸಾರ ಆಯ್ಕೆ ಮಾಡಲಾಗುವುದು. ಮುಖ್ಯ ಪರೀಕ್ಷೆಯ ವಿಷಯಗಳ ಮತ್ತು ಅಂಕಗಳ ವಿವರ ಈ ಕೆಳಗಿನಂತಿದೆ:

ಕ್ರ.ಸಂ. ವಿಷಯಗಳು ಅಂಕಗಳು ವಿವರ
1 ಕನ್ನಡ (ಅರ್ಹತಾ ಪರೀಕ್ಷೆ) 100 ಅಂಕಗಳು (ಕನಿಷ್ಟ 35 ಅಂಕಗಳನ್ನು ಗಳಿಸಬೇಕು. ಈ ಅಂಕಗಳನ್ನು ಮೆರಿಟ್ ನಿಗದಿಪಡಿಸಲು ಗಣನೆಗೆ ತೆಗೆದುಕೊಳ್ಳುವುದಿಲ್ಲ) As per Syllabus
2 ಇಂಗ್ಲೀಷ್ (ಅರ್ಹತಾ ಪರೀಕ್ಷೆ) 100 ಅಂಕಗಳು (ಕನಿಷ್ಟ 35 ಅಂಕಗಳನ್ನು ಗಳಿಸಬೇಕು. ಈ ಅಂಕಗಳನ್ನು ಮೆರಿಟ್ ನಿಗದಿಪಡಿಸಲು ಗಣನೆಗೆ ತೆಗೆದುಕೊಳ್ಳುವುದಿಲ್ಲ) As per Syllabus
ಕ್ರ.ಸಂ. ವಿಷಯ ಅಂಕಗಳು ವಿವರ
1 ಅರಣ್ಯ ವಿಷಯ - ಪತ್ರಿಕೆ-1 100 ಅಂಕಗಳು As per Syllabus
2 ಅರಣ್ಯ ವಿಷಯ - ಪತ್ರಿಕೆ-2 100 ಅಂಕಗಳು As per Syllabus

ಸೂಚನೆ: ಅರಣ್ಯ ವಿಷಯ-ಪತ್ರಿಕೆ-1 ಮತ್ತು ಅರಣ್ಯ ವಿಷಯ-ಪತ್ರಿಕೆ-2, ಈ ವಿಷಯಗಳನ್ನು ಬಿ.ಎಸ್‌ಸಿ. (ಅರಣ್ಯಶಾಸ್ತ್ರ) ಪದವೀಧರರು ಮಾತ್ರ ಆಯ್ಕೆ ಮಾಡುವಂತೆ ನಿರ್ಬಂಧಿಸಲಾಗಿದೆ.

ಕ್ರ.ಸಂ. ವಿಷಯ ಅಂಕಗಳು ವಿವರ
1 ಸ ಸ ್ಯಶಾಸ್ತ್ರ (Botany) 100 ಅಂಕಗಳು As per Syllabus
2 ಪ್ರಾಣಿಶಾಸ್ತ್ರ (Zoology) 100 ಅಂಕಗಳು
3 ಗಣಿತಶಾಸ್ತ್ರ (Mathematics) 100 ಅಂಕಗಳು
4 ರಸಾಯನಶಾಸ್ತ್ರ (Chemistry) 100 ಅಂಕಗಳು
5 ಬ ೌತಶಾಸ್ತ್ರ (Physics) 100 ಅಂಕಗಳು
6 ಕೃಷಿ (Agriculture) 100 ಅಂಕಗಳು
7 ಸಿವಿಲ್ ಇಂಜಿನಿಯರಿಂಗ್ (Civil Engineering) 100 ಅಂಕಗಳು

ಮೇಲೆ ಹೇಳಿದ ಐಚ್ಚಿಕ ವಿಷಯಗಳ ಪೈಕಿ ಅಭ್ಯರ್ಥಿ ಬಯಸುವ ಯಾವುದಾದರೂ ಎರಡು ಐಚ್ಚಿಕ ವಿಷಯಗಳನ್ನು ಮುಖ್ಯ ಪರೀಕ್ಷೆಗೆ ಆಯ್ಕೆ ಮಾಡಿಕೊಳ್ಳಬಹುದು. ಮುಖ್ಯ ಪರೀಕ್ಷೆಗೆ ಆಯ್ದುಕೊಂಡ ಐಚ್ಚಿಕ ವಿಷಯಗಳನ್ನು ಅರ್ಜಿಯಲ್ಲಿ ನಮೂದಿಸಬೇಕು.

ಸೂಚನೆ :

1. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡಿರುವ ಎಲ್ಲಾ ಪರೀಕ್ಷೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು. ಯಾವುದೇ ಒಂದು ಪರೀಕ್ಷೆಗೆ ಗೈರು ಹಾಜರಾದರೂ ಸಹ ಉಳಿದ ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸಲಾಗುವುದಿಲ್ಲ ಹಾಗೂ ಉಳಿದ ಪತ್ರಿಕೆಗಳಲ್ಲಿ ಎಷ್ಟು ಅಂಕಗಳನ್ನು ಗಳಿಸಿದರೂ ಸಹ ಇಂತಹ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಉತ್ತರ ಪತ್ರಿಕೆಯಲ್ಲಿ ಪ್ರಶ್ನೆ ಪತ್ರಿಕೆಯ ಸಂಖ್ಯೆ ಅಥವಾ ಕೋಡ್ ಬರೆಯದಿದ್ದಲ್ಲಿ ಅಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲಾಗುವುದಿಲ್ಲ.

೭೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೫

2. ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ಯಾವುದೇ ಕಾರಣಕ್ಕೂ ಮರುಮೌಲ್ಯಮಾಪನ ಮಾಡಲಾಗುವುದಿಲ್ಲ.

3. ಕಡ್ಡಾಯ ಪತ್ರಿಕೆಗಳಾದ ಕನ್ನಡ ಮತ್ತು ಆಂಗ್ಲ ಭಾಷಾ ಪರೀಕ್ಷೆಗಳಲ್ಲಿ ಅನುತ್ತೀರ್ಣರಾಗುವ ಅಭ್ಯರ್ಥಿಗಳು ಉಳಿದ ಪತ್ರಿಕೆಗಳಲ್ಲಿ ಪಡೆದ ಅಂಕಗಳನ್ನು ಪ್ರಕಟಿಸಲಾಗುವುದಿಲ್ಲ.

4. ಭಾಷಾ ವಿಷಯಗಳ ಪ್ರಶ್ನೆ ಪತ್ರಿಕೆಯನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆಗಳು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಇರುತ್ತವೆ. ಕನ್ನಡ ಭಾಷೆಯಲ್ಲಿರುವ ಪ್ರಶ್ನೆಗಳ ಭಾಷಾಂತರದಲ್ಲಿ ಏನಾದರೂ ಅಸ್ಪಷ್ಟತೆ ಇದ್ದಲ್ಲಿ ಇಂಗ್ಲೀಷ್ ಭಾಷೆಯಲ್ಲಿರುವ ಪ್ರಶ್ನೆಗಳನ್ನು ನೋಡುವುದು. ಅಭ್ಯರ್ಥಿಯು ತನ್ನ ಪ್ರಶ್ನೆ ಪತ್ರಿಕೆಗಳನ್ನು ಸಂಪೂರ್ಣವಾಗಿ ಕನ್ನಡ ಅಥವಾ ಇಂಗ್ಲೀಷ್ ಮಾಧ್ಯಮದಲ್ಲಿ ಉತ್ತರಿಸತಕ್ಕದ್ದು. ಅರ್ಧ ಕನ್ನಡ ಅಥವಾ ಅರ್ಧ ಇಂಗ್ಲೀಷ್ ಮಾಧ್ಯಮದಲ್ಲಿ ಉತ್ತರಿಸಿದಲ್ಲಿ ಅಂತಹ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಗೊಳಿಸುವುದಿಲ್ಲ.

8.3. ಪರೀಕ್ಷಾ ಪ್ರಶ್ನೆ ಪತ್ರಿಕೆಯನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ನೀಡಲಾಗುವುದು. ಅಭ್ಯರ್ಥಿಗಳು ಯಾವ ಮಾಧ್ಯಮದಲ್ಲಿ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸುತ್ತಾರೆಂಬುದನ್ನು ಅರ್ಜಿ ನಮೂನೆಯಲ್ಲಿ ಕಡ್ಡಾಯವಾಗಿ ನಮೂದಿಸಬೇಕು. ಒಮ್ಮೆ ಆಯ್ಕೆ ಮಾಡಿಕೊಂಡ ಮಾಧ್ಯಮವನ್ನು ಯಾವುದೇ ಕಾರಣಕ್ಕೆ ಬದಲಾಯಿಸಿಕೊಳ್ಳಲು ಅವಕಾಶವಿರುವುದಿಲ್ಲ.

8.4. ಪೂರ್ವಭಾವಿ ಪರೀಕ್ಷೆಗಳಾದ ಸಾಮಾನ್ಯ ಜ್ಞಾನ ಹಾಗೂ ಆಪ್ಟಿಟ್ಯೂಡ್ ಪರೀಕ್ಷೆಗಳಲ್ಲಿ ಪಡೆದ ಅಂಕಗಳು ಮತ್ತು ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯಗಳಲ್ಲಿ ಅಭ್ಯರ್ಥಿಯು ಗಳಿಸಿದ ಒಟ್ಟು ಅಂಕಗಳ ಮೆರಿಟ್ ಆಧಾರದ ಮೇಲೆ ಬಿ.ಎಸ್ಸಿ. (ಅರಣ್ಯ ಶಾಸ್ತ್ರ) ಪದವೀಧರ ಮತ್ತು ವಿಜ್ಞಾನ/ಇಂಜಿನಿಯರಿಂಗ್ ಪದವೀಧರ ಅಭ್ಯರ್ಥಿಗಳನ್ನು ಪ್ರಚಲಿತ ಮೀಸಲಾತಿ ನಿಯಮಾನುಸಾರ 1:2 (ಹುದ್ದೆ : ಅಭ್ಯರ್ಥಿ) ಅನುಪಾತದಲ್ಲಿ ಆಯ್ಕೆ ಮಾಡಿ ಪಟ್ಟಿಯನ್ನು ತಯಾರಿಸಲಾಗುವುದು. ಒಂದು ವೇಳೆ ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ಸಮಾನವಾದ ಅಂಕಗಳನ್ನು ಗಳಿಸಿದ ಸಂದರ್ಭದಲ್ಲಿ ವಯಸ್ಸಿನ ಆಧಾರದ ಮೇಲೆ ಅಂದರೆ ವಯಸ್ಸಿನಲ್ಲಿ ಹಿರಿಯರಾದ ಅಭ್ಯರ್ಥಿಗಳನ್ನು ಮೆರಿಟ್‌ನಲ್ಲಿ ಮೇಲೆ ತರಲಾಗುವುದು.

9. ಈ ರೀತಿ ಆಯ್ಕೆ ಮಾಡಿದ ಅಭ್ಯರ್ಥಿಗಳು ಇಲಾಖೆ ನಡೆಸುವ ದೇಹದಾಡರ್್ಯತೆ, ವೈದ್ಯಕೀಯ ಪರೀಕ್ಷೆ ಹಾಗೂ ದೈಹಿಕ ತಾಳ್ವಿಕೆ ಪರೀಕ್ಷೆಗಳಿಗೆ ಹಾಜರಾಗಬೇಕು.

10. ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆ:

ದೇಹದಾಡರ್್ಯತೆ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ Civil Surgeon/Chief Medical Officer/Medical Superintendent ರವರ ದರ್ಜೆಗಿಂತ ಕಡಿಮೆ ಇರದ ವೈದ್ಯಾಧಿಕಾರಿಗಳಿಂದ ಈ ಕೆಳಕಂಡ ಮಾನದಂಡಗಳಂತೆ ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಇಲಾಖಾ ಮುಖಾಂತರ ನಡೆಸಲಾಗುವುದು. ಸೂಚಿತ ದಿನಾಂಕದಂದು ನಡೆಸುವ ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳಿಗೆ ಗೈರು ಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಯಾವುದೇ ಸಂದರ್ಭದಲ್ಲಿಯೂ ಎರಡನೇ ಬಾರಿ ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಲಾಗುವುದಿಲ್ಲ. ಗೈರುಹಾಜರಾಗುವ ಅಭ್ಯರ್ಥಿಗಳನ್ನು ಅನರ್ಹ ಅಭ್ಯರ್ಥಿಗಳೆಂದು ಪರಿಗಣಿಸಲಾಗುವುದು. ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಅನರ್ಹಗೊಂಡ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳು ಈ ಕೆಳಕಂಡಂತಿರುತ್ತವೆ.

10.1. ದೇಹದಾಡರ್್ಯತೆ ಪರೀಕ್ಷೆ:

ಶಾರೀರಿಕ ಮಾನದಂಡ: ಅಭ್ಯರ್ಥಿಗಳು ಈ ಕೆಳಗಿನ ಕನಿಷ್ಠ ಶಾರೀರಿಕ ಮಾನದಂಡ ಹೊಂದಿರಬೇಕು.

1 ಎತ್ತರ : 163 ಸೆ.ಮೀ.
2 ಎದೆ ಸುತ್ತಳತೆ : ಸಾಮಾನ್ಯ ಸ್ಥಿತಿಯಲ್ಲಿ: 79 ಸೆ.ಮೀ. ಕನಿಷ್ಠ ಹಿಗ್ಗುವಿಕೆ: 5 ಸೆ.ಮೀ.
1 ಎತ್ತರ : 150 ಸೆ.ಮೀ.
2 ಎದೆ ಸುತ್ತಳತೆ : ಸಾಮಾನ್ಯ ಸ್ಥಿತಿಯಲ್ಲಿ:74 ಸೆ.ಮೀ. ಕನಿಷ್ಠ ಹಿಗ್ಗುವಿಕೆ: 5 ಸೆ.ಮೀ.

11. ವೈದ್ಯಕೀಯ ಪರೀಕ್ಷೆ: 11.1. ದೃಷ್ಟಿ ಸಾಮರ್ಥ್ಯ:

ದ ೂರದೃಷ್ಟಿ ಸ ಮೀಪ ದೃಷ್ಟಿ
ದ ೂೕಷರಹಿತಕಣ್ಣು ೆ ಆಥವಾ ದ ೂೕಷಪೂರಿತಕಣ್ಣು ೆ ದ ೂೕಷರಹಿತಕಣ್ಣು ೆ ಆಥವಾ ದ ೂೕಷಪೂರಿತಕಣ್ಣು ೆ
6/6 ಮೀಟರ್ 6/9 ಮೀಟರ್ 0/6 ಮೀಟರ್ 0/8 ಮೀಟರ್

ಪ್ರತಿಯೊಂದು ಕಣ್ಣು ಪೂರ್ಣ ದೃಶ್ಯವನ್ನು ನೋಡುವ ಸಾಮರ್ಥ್ಯವನ್ನು ಹೊಂದಿರಬೇಕು. ಬಣ್ಣಕುರುಡು, ಮೆಳ್ಳೆಗಣ್ಣು ಅಥವಾ ಯಾವುದೇ ರೀತಿಯ ಕಣ್ಣಿನ ಅಥವಾ ರೆಪ್ಪೆಯ ವಿಕೃತ ಸ್ಥಿತಿಯನ್ನು ಅನರ್ಹತೆ ಎಂದು ಪರಿಗಣಿಸಲಾಗುವುದು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೭೩೯

11.2. ಶ್ರವಣಶಕ್ತಿ:

ಅಭ್ಯರ್ಥಿಗಳ ಶ್ರವಣ ಶಕ್ತಿಯನ್ನು ಪರೀಕ್ಷಿಸಲು ಈ ಕೆಳಕಂಡ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು. 1. ರಿನ್ನರ್ಸ್ ಟೆಸ್ಟ್ 2. ವೆಬ್ಬರ್ಸ್ ಟೆಸ್ಟ್ 3. ಟೆಸ್ಟ್ ಫಾರ್ ವರ್ಟಿಗೋ

ಮೇಲಿನ ಪರೀಕ್ಷೆಗಳಲ್ಲಿ ಯಾವುದಾದರೂ ಶ್ರವಣದೋಷವಿದೆಯೆಂದು ಸಾಬೀತಾದಲ್ಲಿ ಅಂತಹ ಅಭ್ಯರ್ಥಿಗಳು ಆಯ್ಕೆಗೆ ಅರ್ಹರಲ್ಲ. 11.3. ಕೆಳಕಂಡ ಅಂಗವಿಕಲತೆಯಿರುವವರು ಆಯ್ಕೆಗೆ ಅರ್ಹರಲ್ಲ.

1. ತೊಡರುಗಾಲು (Knock knees) 2. ಬಾಗಿದ ಕಾಲು (Bow legs) 3. ಸಮತಟ್ಟಾದ ಪಾದ (Flat feet)

4. ನರ ಊತವಿರುವವರು (Varicose Veins)

ದೇಹದಾಡರ್್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳಲ್ಲಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದ ದೈಹಿಕ ತಾಳ್ವಿಕೆ ಪರೀಕ್ಷೆಗೆ ಹಾಜರಾಗಲು ಅರ್ಹತೆ ಪಡೆಯುತ್ತಾರೆ. 11.4. ದೈಹಿಕ ತಾಳ್ವಿಕೆ ಪರೀಕ್ಷೆ:

ಪ ುರುಷ ಅಭ್ಯರ್ಥಿಗಳಿಗೆ : 25 ಕಿ.ಮೀ. ಕಾಲು ನಡಿಗೆ ಗರಿಷ್ಠ 4 ಗಂಟೆಗಳ ಅವಧಿಯಲ್ಲಿ ಪೂರೈಸಬೇಕು.
ವ ುಹಿಳಾ ಅಭ್ಯರ್ಥಿಗಳಿಗೆ : 16 ಕಿ.ಮೀ. ಕಾಲು ನಡಿಗೆ ಗರಿಷ್ಠ 4 ಗಂಟೆಗಳ ಅವಧಿಯಲ್ಲಿ ಪೂರೈಸಬೇಕು.

ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳನ್ನು ಮುಂದಿನ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗುವುದು. ಯಾವುದೇ ಸಂಧರ್ಭದಲ್ಲಿ ದೈಹಿಕ ತಾಳ್ವಿಕೆ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳಿಗೆ ಎರಡನೇ ಭಾರಿ ದೈಹಿಕ ತಾಳ್ವಿಕೆ ಪರೀಕ್ಷೆಗೆ ಅವಕಾಶ ನೀಡಲಾಗುವುದಿಲ್ಲ.

ಸೂಚನೆ : ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು. 12.1. ದೇಹದಾಡರ್್ಯತೆ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಹಾಗೂ ದೈಹಿಕ ತಾಳ್ವಿಕೆ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರೈಸಿದ ಅಭ್ಯರ್ಥಿಗಳ ಪೈಕಿ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳಲ್ಲಿ ಗಳಿಸಿದ ಒಟ್ಟು ಅಂಕಗಳ ಮೆರಿಟ್ ಆಧಾರದ ಮೇಲೆ ಮತ್ತು ಪ್ರಚಲಿತ ಚಾಲ್ತಿಯಲ್ಲಿರುವ ಮೀಸಲಾತಿ ನಿಯಮಾನುಸಾರ ನೇರ ನೇಮಕಾತಿಗಾಗಿ ಹೊರಡಿಸಲಾದ ಅಧಿಸೂಚನೆಯಲ್ಲಿ ಸೂಚಿಸಿರುವ ಖಾಲಿ ಹುದ್ದೆಗಳಿಗೆ ಸಮನಾದ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ವಲಯ ಅರಣ್ಯಾಧಿಕಾರಿ ಹುದ್ದೆಗೆ ಆಯ್ಕೆ ಮಾಡಲಾಗುವುದು.

12.2. ಆಯ್ಕೆಯಾದ ಅಭ್ಯರ್ಥಿಗಳನ್ನು ಅರಣ್ಯ ಇಲಾಖೆಯಲ್ಲಿ ರೂ.21600-600-24600-700-28800-800-33600-900-39000-1050-40050ರ ವೇತನ ಶ್ರೇಣಿಯಲ್ಲಿ ಮೂರು ವರ್ಷಗಳ ಪರೀಕ್ಷಾರ್ಥ ಅವಧಿಯ ಮೇಲೆ ವಲಯ ಅರಣ್ಯಾಧಿಕಾರಿಗಳನ್ನಾಗಿ ನೇಮಕಾತಿ ಪ್ರಾಧಿಕಾರದಿಂದ ನೇಮಕ ಮಾಡಲಾಗುವುದು ಮತ್ತು ಅವರನ್ನು ಭಾರತ ಸರ್ಕಾರದ ನಿಯಂತ್ರಣದಲ್ಲಿರುವ ಯಾವುದಾದರೂ ವಲಯ ಅರಣ್ಯಾಧಿಕಾರಿ ಹುದ್ದೆಯ ತರಬೇತಿ ವಿದ್ಯಾಲಯದಲ್ಲಿ ತರಬೇತಿಗೆ ನಿಯೋಜಿಸಲಾಗುವುದು. ತರಬೇತಿಯು 18 ತಿಂಗಳ ಅವಧಿಯದ್ದಾಗಿದೆ.

12.3. ವಲಯ ಅರಣ್ಯಾಧಿಕಾರಿಯಾಗಿ ನೇಮಕಗೊಂಡ ನಂತರ ಸದರಿ ಅಭ್ಯರ್ಥಿಯು ತರಬೇತಿಗೆ ಹಾಜರಾಗುವ ಮೊದಲು ನೇಮಕಾತಿ ಪ್ರಾಧಿಕಾರದ ಸಮಕ್ಷಮ ರೂಪಾಯಿ 1,00,000-00 ಸಾಲ್ವೆಂಟ್ ಶೂರಿಟಿ ಹೊಂದಿರುವ ಇಬ್ಬರು ಅಥವಾ ರೂ. 14,550/- ಗಿಂತ ಹೆಚ್ಚು ಮಾಸಿಕ ವೇತನ ಪಡೆಯುತ್ತಿರುವ ಮತ್ತು ತರಬೇತಿ ಮುಗಿಯುವ ದಿನಾಂಕದಿಂದ ಕನಿಷ್ಠ 6 ವರ್ಷ ಸೇವಾವಧಿ ಉಳಿದಿರುವ ಇಬ್ಬರು ಸರ್ಕಾರಿ ನೌಕರರ ಜಾಮೀನು ಕೊಡಬೇಕು. ಇದು ಸಾಧ್ಯವಾಗದಿದ್ದ ಪಕ್ಷದಲ್ಲಿ ಅಭ್ಯರ್ಥಿಯು ರೂ.1,00,000-00 ಮೊತ್ತದ ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟನ್ನು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮುಖ್ಯಸ್ಥರು, ಅರಣ್ಯ ಪಡೆ), ಬೆಂಗಳೂರು ಇವರ ಹೆಸರಿಗೆ ಅಡವು ಇರಿಸಬಹುದು. ಅಭ್ಯರ್ಥಿಯು ಇಲಾಖೆಯಲ್ಲಿ ನೇಮಕಾತಿಯಾದ ದಿನಾಂಕದಿಂದ ಕನಿಷ್ಠ 5 ವರ್ಷ ಸೇವೆ ಸಲ್ಲಿಸುವುದಾಗಿ, ತಪ್ಪಿದಲ್ಲಿ ಸರ್ಕಾರವು ತರಬೇತಿಯ ಬಗ್ಗೆ ಭರಿಸಿದ ಸಂಪೂರ್ಣ ವೆಚ್ಚವನ್ನು ಮತ್ತು ತರಬೇತಿ ಅವಧಿಯಲ್ಲಿ ಪಡೆದ ವೇತನವನ್ನು ಶೇ.8 ರ ದಂಡನೆ ಬಡ್ಡಿಯೊಂದಿಗೆ ಸರ್ಕಾರಕ್ಕೆ ಪಾವತಿ ಮಾಡಲು ಮತ್ತು ಆಯ್ಕೆ ಪ್ರಾಧಿಕಾರ ನಿಗದಿಪಡಿಸುವ ಇತರೆ ಷರತ್ತುಗಳನ್ನು ಪೂರೈಸಲು ಸಿದ್ಧವಿರುವುದಾಗಿ ಛಾಪಾಕಾಗದದಲ್ಲಿ ನಿಗದಿತ ನಮೂನೆಯಲ್ಲಿ ಅಭ್ಯರ್ಥಿಯು ಕರಾರು ಪತ್ರವನ್ನು ಬರೆದು ಕೊಡತಕ್ಕದ್ದು.

12.4. ಒಂದು ವೇಳೆ ಅಭ್ಯರ್ಥಿಯು ಸೂಕ್ತ ಕಾರಣಗಳನ್ನು ಹೊರತುಪಡಿಸಿ (ಕಾರಣದ ಸೂಕ್ತತೆ ಬಗ್ಗೆ ಇಲಾಖೆಯ ನಿರ್ಣಯವೇ ಅಂತಿಮವಾಗುತ್ತದೆ) ಷರತ್ತುಗಳನ್ನು ಪೂರೈಸಲು ವಿಫಲವಾದಲ್ಲಿ ಅಥವಾ ತರಬೇತಿಯನ್ನು ಪೂರೈಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ವಿಫಲರಾದಲ್ಲಿ ಅಥವಾ ಯಾವುದೇ ಕಾರಣಕ್ಕಾಗಿ ತರಬೇತಿಯಿಂದ ತೆಗೆದು ಹಾಕಲ್ಪಟ್ಟರೆ ಅಥವಾ ಸ್ವಇಚ್ಚೆಯಿಂದ ತರಬೇತಿ ಮಧ್ಯದಲ್ಲಿ ಬಿಟ್ಟುಬಿಟ್ಟರೆ ಅಥವಾ ಪರೀಕ್ಷಾರ್ಥ ಅವಧಿಯನ್ನು ಯಶಸ್ವಿಯಾಗಿ ಪೂರೈಸದಿದ್ದರೆ ಸರ್ಕಾರವು ಅಭ್ಯರ್ಥಿಯ ತರಬೇತಿಗಾಗಿ ಭರಿಸಿದ ವೆಚ್ಚವನ್ನು ಮತ್ತು ತರಬೇತಿ ಅವಧಿಯಲ್ಲಿ ಪಡೆದ ವೇತನವನ್ನು ಮೇಲೆ ನಿಗದಿಪಡಿಸಿದ ದರದಲ್ಲಿ ಬಡ್ಡಿಯೊಂದಿಗೆ ಮರು ಪಾವತಿಸಲು ಅಭ್ಯರ್ಥಿ ಮತ್ತು ಜಾಮೀನುದಾರರು ಒಟ್ಟಾಗಿಯೂ ಮತ್ತು ಪ್ರತ್ಯೇಕವಾಗಿಯೂ ಭರಿಸಲು ಬದ್ಧರಾಗಿರತಕ್ಕದ್ದು. ಅಂತಹ ಹಣವನ್ನು ಕಂದಾಯ ಬಾಕಿಯಾಗಿ ಇವರೆಲ್ಲರಿಂದ ಒಟ್ಟಾರೆಯಾಗಿ ಅಥವಾ ಪ್ರತಿಯೊಬ್ಬರಿಂದ ಪ್ರತ್ಯೇಕವಾಗಿವಸೂಲು ಮಾಡುವ ಹಕ್ಕನ್ನು ಇಲಾಖೆಯು ಹೊಂದಿರುತ್ತದೆ.

12.5. ಅಭ್ಯರ್ಥಿಗಳ ತರಬೇತಿಯ ಸಂಪೂರ್ಣ ವೆಚ್ಚವನ್ನು ಕರ್ನಾಟಕ ರಾಜ್ಯ ಸರ್ಕಾರವು ಭರಿಸುವುದು. ಆದರೆ ಸಾಧನ ಸಾಮಗ್ರಿಗಳ ಭತ್ಯೆ ರೂ.50,000-00ದ ಶೇ.50 ಅಂದರೆ ರೂ.25,000-00ನ್ನು ಅಭ್ಯರ್ಥಿಗಳು ತರಬೇತಿ ಪೂರ್ಣಗೊಳಿಸಿ ಬಂದ ನಂತರ ಇಲಾಖೆಯಲ್ಲಿ೭೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೫ ನಿಯುಕ್ತಿಗೊಂಡ ದಿನಾಂಕದಿಂದ ಪಡೆಯುವ ವೇತನದಿಂದ ಆರಂಭಗೊಂಡು ಒಟ್ಟು 10 ಸಮಾನ ಮಾಸಿಕ ಕಂತುಗಳಲ್ಲಿ ವಸೂಲು ಮಾಡಲಾಗುವುದು. ಮೇಲಿನ ಸಾಧನ ಸಾಮಗ್ರಿ ಭತ್ಯೆಯು ತಾತ್ಕಾಲಿಕವಾಗಿದ್ದು ಪರಿಷ್ಕರಿಸಬಹುದು.

12.6. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ನಂತರ ಇವರುಗಳನ್ನು 6 ತಿಂಗಳ ಅವಧಿಗೆ ವೃತ್ತಿ ತರಬೇತಿಗಾಗಿ ನಿಯೋಜಿಸಲಾಗುವುದು. ಉಳಿದ 1 ವರ್ಷದ ಪರೀಕ್ಷಾರ್ಥ ಅವಧಿಯಲ್ಲಿ ಇವರುಗಳು ವಲಯ ಅರಣ್ಯಾಧಿಕಾರಿಗಳಾಗಿ ಸ್ವತಂತ್ರವಾಗಿ ಕೆಲಸ ನಿರ್ವಹಿಸತಕ್ಕದ್ದು.

12.7. ತರಬೇತಿಯ ಸಮಯದಲ್ಲಿ ಅಭ್ಯರ್ಥಿಗಳು ವಲಯ ಅರಣ್ಯಾಧಿಕಾರಿ ಹುದ್ದೆಯ ವೇತನವನ್ನು ಪಡೆಯಲು ಅರ್ಹರಾಗಿರುತ್ತಾರೆ.

13. ವಿವಿಧ ಪ್ರವರ್ಗಗಳ ಅಡಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಸಲ್ಲಿಸಬೇಕಾದ ದಾಖಲೆ/ಪ್ರಮಾಣ ಪತ್ರಗಳ ವಿವರ ಕೆಳಕಂಡಂತಿದೆ:

ಸರ್ಕಾರಿ ಅಧಿಸೂಚನೆ ಸಂಖ್ಯೆ: ಸಕಇ 132 ಎಸ್ಎಡಿ 97, ದಿನಾಂಕ: 8-2-2000 ರನ್ವಯ, ವಿವಿಧ ಪ್ರವರ್ಗಗಳ ಅಡಿ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವವರು ಜಾತಿ ಪ್ರಮಾಣ ಪತ್ರ ಹಾಗೂ ಆದಾಯ ಪ್ರಮಾಣ ಪತ್ರ, ಇತ್ಯಾದಿ ಮೀಸಲಾತಿ ಕುರಿತು ಪ್ರಮಾಣ ಪತ್ರಗಳನ್ನು ಈ ಕೆಳಕಂಡ ನಮೂನೆಗಳಲ್ಲಿ ಹೊಂದಿರಬೇಕು.

13.1 ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರ್‌ರವರಿಂದ ನೀಡಲಾದ ಜಾತಿ ಪ್ರಮಾಣ ಪತ್ರವನ್ನು "ನಮೂನೆ-ಡಿ" ರಲ್ಲಿ ಪಡೆದಿರಬೇಕು.

13.2 ಪ್ರವರ್ಗ-I ಕ್ಕೆ ಸೇರಿದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರ್‌ರವರಿಂದ ನೀಡಲಾದ ಜಾತಿ ಪ್ರಮಾಣ ಪತ್ರವನ್ನು "ನಮೂನೆ-ಇ" ರಲ್ಲಿ ಪಡೆದಿರಬೇಕು.

13.3 ಪ್ರವರ್ಗ-IIಎ, IIಬಿ, IIIಎ ಮತ್ತು IIIಬಿ. ಗೆ ಸೇರಿದ ಅಭ್ಯರ್ಥಿಗಳು ಸಂಬಂಧಪಟ್ಟ ತಹಶೀಲ್ದಾರ್ ರವರಿಂದ ನೀಡಲಾದ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು "ನಮೂನೆ–ಎಫ್" ರಲ್ಲಿ ಪಡೆದಿರಬೇಕು.

ವಿಶೇಷ ಸೂಚನೆ: "ನಮೂನೆ–ಎಫ್" ಪ್ರಮಾಣ ಪತ್ರವು ಅಧಿಸೂಚನೆಯ ದಿನಾಂಕಕ್ಕೆ ಐದು (5) ವರ್ಷಗಳಿಗಿಂತ ಹೆಚ್ಚು ಹಳೆಯ ಸಮಯದ್ದಾಗಿರಬಾರದು. ಅವಧಿ ಮೀರಿದ ಪ್ರಮಾಣ ಪತ್ರವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ.

13.4 ಮಾಜಿ ಸೈನಿಕ ಅಭ್ಯರ್ಥಿಗಳು ಸಂಬಂಧಪಟ್ಟ ಘಟಕದಿಂದ ಡಿಸ್‌ಚಾರ್ಜ್ ಹೊಂದಿದ ಬಗ್ಗೆ ಮೂಲ ಪ್ರಮಾಣ ಪತ್ರ ಮತ್ತು ಪೆನ್‌ಷನ್ ಪಡೆಯುತ್ತಿರುವ ಬಗ್ಗೆ ದಾಖಲೆ ಪತ್ರ ಪಡೆದಿರಬೇಕು ಹಾಗೂ ಮಾಜಿ ಸೈನಿಕ ಮೀಸಲಾತಿಗೆ ನಿಯಮಾನುಸಾರ ಅರ್ಹರೇ ಎಂಬ ಬಗ್ಗೆ ಪ್ರಮಾಣ ಪತ್ರವನ್ನು ಹತ್ತಿರದ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯಿಂದ ಪಡೆದಿರಬೇಕು.

13.5 (ಅ) ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-I, IIಎ, IIಬಿ, IIIಎ ಮತ್ತು IIIಬಿ, ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರಿಗೆ (ಎಲ್ಲಾ ವರ್ಷಗಳು) ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಬಗ್ಗೆ ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರಿಂದ ನೀಡಲಾದ "ನಮೂನೆ–2"ನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲುರುಜು ಮಾಡಿದ ಪ್ರಮಾಣ ಪತ್ರವನ್ನು ಪಡೆದಿರಬೇಕು.

(ಆ) ಗ್ರಾಮೀಣ ಮೀಸಲಾತಿ ಕೋರಿರುವ ಸಾಮಾನ್ಯ ಅರ್ಹತೆಯ (General Merit) ಅಭ್ಯರ್ಥಿಗಳು ಮೇಲೆ 13.5 (ಅ) ರಲ್ಲಿ ತಿಳಿಸಿರುವ "ನಮೂನೆ–2" ರ ಜೊತೆಗೆ ನಿಗದಿತ "ನಮೂನೆ–1" ರಲ್ಲಿ ಸಂಬಂಧಪಟ್ಟ ತಹಶೀಲ್ದಾರರಿಂದ ಅವರು ಮೇಲುಸ್ಥರ (Creamy Layer) ಪರಿಮಿತಿಯಲ್ಲಿ ಬರುವುದಿಲ್ಲವೆಂದು ದೃಡೀಕರಿಸಿರುವ ಪ್ರಮಾಣ ಪತ್ರ ಪಡೆದಿರಬೇಕು.

ವಿಶೇಷ ಸೂಚನೆ: ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-I, IIಎ, IIಬಿ, IIIಎ ಮತ್ತು IIIಬಿ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳು ತಿರಸ್ಕøತಗೊಂಡಲ್ಲಿ ಅವರು ಗ್ರಾಮೀಣ ಮೀಸಲಾತಿಗೂ ಅನರ್ಹರಾಗುತ್ತಾರೆ.

13.6 ಕನ್ನಡ ಮಾಧ್ಯಮ ವರ್ಗೀಕರಣದಲ್ಲಿ ಮೀಸಲಾತಿ ಕೋರಿರುವ ಅಭ್ಯರ್ಥಿಗಳು ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ಬಗ್ಗೆ ಶಾಲಾ ಮುಖ್ಯೋಪಾಧ್ಯಾಯರಿಂದ ಸಹಿ ಮಾಡಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಮೇಲುರುಜು ಮಾಡಿದ ಪ್ರಮಾಣ ಪತ್ರ ಪಡೆದಿರಬೇಕು.

14. ಗಮನಿಸಬೇಕಾದ ಮುಖ್ಯ ಅಂಶಗಳು:

14.1 ಅಭ್ಯರ್ಥಿಗಳು ಅರ್ಜಿಯನ್ನು On-lineನಲ್ಲಿ ಭರ್ತಿ ಮಾಡುವಾಗ ಅಧಿಸೂಚನೆಯಲ್ಲಿ ತಿಳಿಸಿರುವ ಎಲ್ಲಾ ಅಂಶಗಳನ್ನು ಸರಿಯಾಗಿ ಅರ್ಥೈಸಿಕೊಂಡು, ಅರ್ಜಿಯನ್ನು ಸರಿಯಾಗಿ ಮತ್ತು ಸಮರ್ಪಕವಾಗಿ ಭರ್ತಿ ಮಾಡತಕ್ಕದ್ದು.

14.2 ಅಭ್ಯರ್ಥಿಗಳು ಅರ್ಜಿ ಹಾಕುವ ಮೊದಲು ದೇಹದಾಡರ್್ಯತೆಯ ಕುರಿತು ಸದರಿ ಹುದ್ದೆಗೆ ನಿಗದಿಪಡಿಸಿರುವ ಮಾನದಂಡವು ತಮಗೆ ಇರುವ ಕುರಿತು ಖಚಿತಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಲು ತಿಳಿಸಿದೆ.

14.3 On-line ಮುಖಾಂತರ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಅಭ್ಯರ್ಥಿಯು ಆಯ್ಕೆಗೆ ಅರ್ಹತೆ ಪಡೆಯುವುದಿಲ್ಲ.

14.4 ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ On-lineನಲ್ಲಿ ಸಲ್ಲಿಸಿದ ಅರ್ಜಿಯ ಒಂದು ಪ್ರತಿಯನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಸೂಚಿಸಿದೆ.

14.5 ಮೂಲ ದಾಖಲೆಗಳ ಪರೀಕ್ಷೆ ನಡೆಯುವ ದಿನಾಂಕ, ವೇಳಾಪಟ್ಟಿ, ಪರೀಕ್ಷಾ ಕೇಂದ್ರ ವಿವರಗಳುಳ್ಳ ಪ್ರವೇಶ ಪತ್ರವನ್ನು ಅರ್ಹ ಅಭ್ಯರ್ಥಿಗಳು ಇಲಾಖಾ ವೆಬ್‌ಸೈಟ್ www.aranya.gov.in ನಿಂದ ಡೌನ್‌ಲೋಡ್ ಮಾಡಿಕೊಳ್ಳುವುದು. ನೇಮಕಾತಿ ಪ್ರಕ್ರಿಯೆಯಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ೭೪೧ ಎಲ್ಲಾ ಮಾಹಿತಿಗಳು ಕಾಲ-ಕಾಲಕ್ಕೆ ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಇದನ್ನು ಅಭ್ಯರ್ಥಿಗಳು ಖುದ್ದು ಎಚ್ಚರಿಗೆ ವಹಿಸಿ ವೆಬ್‌ಸೈಟ್‌ನಲ್ಲಿ ವಿವರ ಪಡೆಯತಕ್ಕದ್ದು.

14.6 ಯಾವುದೇ ಹಂತದಲ್ಲಿ ಅಭ್ಯರ್ಥಿಯು ತಾನು ಹೊಂದಿರುವ ಪ್ರವರ್ಗದ ಕುರಿತು ಮಾಹಿತಿಯನ್ನು ಹೊಸದಾಗಿ ಸೇರ್ಪಡೆ ಮಾಡಲು ಅಥವಾ ಬದಲಾವಣೆ ಮಾಡಲು ಅವಕಾಶ ನೀಡಲಾಗುವುದಿಲ್ಲ.

14.7 ಪ್ರಸ್ತುತ ಸರ್ಕಾರಿ (ಕೇಂದ್ರ ಸರ್ಕಾರ/ಕರ್ನಾಟಕ ರಾಜ್ಯ ಸರ್ಕಾರ/ಇತರೆ ರಾಜ್ಯಗಳು) ಹಾಗೂ ಸಂಸ್ಥೆಗಳಲ್ಲಿ ಅಥವಾ ಪ್ರಾಧಿಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಭ್ಯರ್ಥಿಗಳು ಸಂಬಂಧಿಸಿದ ನೇಮಕಾತಿ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪತ್ರವನ್ನು ಪಡೆದಿಟ್ಟುಕೊಂಡು ಅರಣ್ಯ ಇಲಾಖೆಯು ಆಪೇಕ್ಷಿಸಿದಾಗ ನೀಡತಕ್ಕದ್ದು.

14.8 ಯಾವುದೇ ಅಭ್ಯರ್ಥಿಯು ತನ್ನ ಆಯ್ಕೆಗೆ ಸಂಬಂಧಿಸಿದಂತೆ ಬಾಹ್ಯ ಒತ್ತಡ ತರಲು ಪ್ರಯತ್ನಿಸಿದಲ್ಲಿ ಅಂತಹ ಅಭ್ಯರ್ಥಿಯನ್ನು ಆಯ್ಕೆ ಪ್ರಕ್ರಿಯೆಯಿಂದ ಅನರ್ಹಗೊಳಿಸಲಾಗುವುದು.

14.9 ಕರ್ನಾಟಕ ರಾಜ್ಯದ ಯಾವುದೇ ಸರ್ಕಾರಿ ಇಲಾಖೆ, ಕೇಂದ್ರ ಸರ್ಕಾರಿ ಇಲಾಖೆ ಅಥವಾ ಅರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಸೇವೆಯಿಂದ ವಜಾಗೊಂಡಿರುವ ನೌಕರರು ನೇಮಕಾತಿಗೆ ಅರ್ಹರಲ್ಲ.

14.10 ಕಾನೂನು ಬಾಹಿರವೆಂದು ಘೋಷಿಸಲಾದ ಸಂಸ್ಥೆ/ಸಂಸ್ಥೆಗಳು ಅಥವಾ ಸಂಘದ/ಸಂಘಗಳ ಸದಸ್ಯರಾಗಿದ್ದರೆ ಅಥವಾ ಇನ್ನಾವುದೇ ರೀತಿಯಲ್ಲಿ ಅಂತಹ ಸಂಸ್ಥೆ/ಸಂಸ್ಥೆಗಳು ಅಥವಾ ಸಂಘದ/ಸಂಘಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರೆ ಅಂತಹ ವ್ಯಕ್ತಿ ನೇಮಕಾತಿಗೆ ಅರ್ಹರಾಗುವುದಿಲ್ಲ.

14.11 ಅಭ್ಯರ್ಥಿಯು ಸಮಾಜಘಾತುಕ ಕೃತ್ಯಗಳಲ್ಲಿ ತೊಡಗಿ ಅಪರಾಧಿಯಾಗಿದ್ದರೆ ಅಂತಹ ವ್ಯಕ್ತಿಗಳು ನೇಮಕಾತಿಗೆ/ತರಬೇತಿಗೆ ಅರ್ಹರಾಗುವುದಿಲ್ಲ.

14.12 ಒಬ್ಬರಿಗಿಂತ ಹೆಚ್ಚು ಜೀವಂತ ಪತ್ನಿಯರನ್ನು / ಪತಿಯರನ್ನು ಹೊಂದಿದ ಪುರುಷ / ಮಹಿಳೆ ಅಭ್ಯರ್ಥಿಗಳು ಸರ್ಕಾರದ ಪೂರ್ವಾನುಮತಿ ಇಲ್ಲದೇ ನೇಮಕಾತಿಗೆ/ತರಬೇತಿಗೆ ಅರ್ಹರಾಗಿರುವುದಿಲ್ಲ.

14.13 ಯಾವುದೇ ಅಭ್ಯರ್ಥಿಯು ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರ / ಸರ್ಕಾರಿ ಸಂಸ್ಥೆಗಳಿಗೆ ನಡೆಸುವ ಯಾವುದೇ ಪರೀಕ್ಷೆಗಳಿಗೆ ಅಥವಾ ಆಯ್ಕೆಗಳಿಗೆ ಹಾಜರಾಗಲು ತಾತ್ಕಾಲಿಕವಾಗಿ ಬಹಿಷ್ಕರಿಸಲ್ಪಟ್ಟಿದ್ದರೆ ಅಥವಾ ಖಾಯಂ ಆಗಿ ಅನರ್ಹಗೊಂಡಿದ್ದರೆ ಅಥವಾ ಬಹಿಷ್ಕರಿಸಲ್ಪಟ್ಟಿದ್ದರೆ, ಅಂತಹ ಅಭ್ಯರ್ಥಿಯು ನೇಮಕಾತಿಗೆ/ತರಬೇತಿಗೆ ಅರ್ಹರಾಗಿರುವುದಿಲ್ಲ.

14.14 ಅಭ್ಯರ್ಥಿಯು ನೇಮಕಾತಿ ಪರೀಕ್ಷೆಗೆ ಬೇರೊಬ್ಬ ವ್ಯಕ್ತಿಯನ್ನು ತನ್ನ ಪರವಾಗಿ ಕಳುಹಿಸಿದಲ್ಲಿ ಅಥವಾ ತಪ್ಪು ಮಾಹಿತಿಗಳನ್ನು ನಮೂದಿಸಿದಲ್ಲಿ ಅಥವಾ ಕೃತ್ರಿಮ ಅಥವಾ ತಿದ್ದಿದ ದಾಖಲಾತಿಗಳನ್ನು ಅಥವಾ ಅಸತ್ಯ ವಿವರಗಳನ್ನು ನೀಡಿದಲ್ಲಿ ಅಥವಾ ಸತ್ಯ ವಿಷಯಗಳನ್ನು ಮರೆಮಾಚಿದ ಅಥವಾ ಅನುಚಿತ ಮಾರ್ಗಗಳನ್ನು ಉಪಯೋಗಿಸಿದಲ್ಲಿ ಅಥವಾ ಪ್ರಯತ್ನಿಸಿದಲ್ಲಿ ಈ ನೇಮಕಾತಿಗೆ ಅವರನ್ನು ಅನರ್ಹರೆಂದು ಪರಿಗಣಿಸಲಾಗುವುದು ಮತ್ತು ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ಉಪ ನಿಯಮ 20 ರಂತೆ ಅಪರಾಧಿ ವ್ಯವಹರಣೆಗೆ ಒಳಪಡುವರು.

14.15 ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ-ಎಸ್‌ಪಿಎಲ್-04-ಪಿಇಟಿ-2005, ದಿನಾಂಕ: 31-3-2006 ರಂತೆ ಅಂಶದಾಯಿ ನಿವೃತ್ತಿ ಯೋಜನೆ (Contributory Pension Scheme)ಗೆ ಈ ನೇಮಕಾತಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಬದ್ಧರಾಗಿರತಕ್ಕದ್ದು.

14.16 ಅಧಿಸೂಚನೆಯಲ್ಲಿ ತಿಳಿಸಿರುವ ಅಂಶಗಳ ಕುರಿತು ಹಾಗೂ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಿ ಆಯ್ಕೆಗೆ ಪರಿಗಣಿಸಿರುವ ಅಂಶಗಳ ಬಗ್ಗೆ ವ್ಯತ್ಯಾಸ ಕಂಡು ಬಂದಲ್ಲಿ ಅಥವಾ ಆಕ್ಷೇಪಣೆ ಸಲ್ಲಿಕೆಯಾದಲ್ಲಿ, ಕೋರ್ಟು ತೀರ್ಪುಗಳು, ಸರಕಾರದ ಆದೇಶಗಳು, ನಿರ್ದೇಶನಗಳು, ಸುತ್ತೋಲೆಗಳು ಬಂದಲ್ಲಿ ಅಧಿಸೂಚನೆಯನ್ನು ಮಾರ್ಪಾಡು ಮಾಡುವ ಹಾಗೂ ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿ ಸೂಕ್ತ ಬದಲಾವಣೆ ಮಾಡಿ ಆಯ್ಕೆ ಪಟ್ಟಿ ಪರಿಷ್ಕರಿಸುವ ಅಧಿಕಾರವನ್ನು ಆಯ್ಕೆ ಪ್ರಾಧಿಕಾರವು ಹೊಂದಿರುತ್ತದೆ. ವಿಧಿಸಲಾಗಿರುವ ಯಾವುದೇ ಷರತ್ತನ್ನು ಸಡಿಲಗೊಳಿಸುವ ಅಥವಾ ಹೆಚ್ಚುವರಿ ಷರತ್ತನ್ನು ವಿಧಿಸುವ ಅಧಿಕಾರವನ್ನು ಆಯ್ಕೆ ಪ್ರಾಧಿಕಾರವು ಹೊಂದಿರುತ್ತದೆ.

14.17 ಒಂದು ವೇಳೆ ಅಧಿಸೂಚನೆಯಲ್ಲಿ ನಮೂದಿಸಿರುವ ಹುದ್ದೆಗಳ ಸಂಖ್ಯೆಯಲ್ಲಿ ಕಡಿತ ಅಥವಾ ಹೆಚ್ಚುವರಿ ಆದಲ್ಲಿ ಮತ್ತು ಮೀಸಲಾತಿ ವರ್ಗೀಕರಣದಲ್ಲಿ ಏನಾದರೂ ಬದಲಾವಣೆ ಮಾಡಬೇಕಾದ ಅವಶ್ಯಕತೆ ಕಂಡು ಬಂದಲ್ಲಿ ಯಾವುದೇ ಸಂದರ್ಭದಲ್ಲಿ ಬದಲಾವಣೆ ಮಾಡಲಾಗುವುದು ಮತ್ತು ಬದಲಾದ ವಿವರಗಳನ್ನು ಇಲಾಖಾ ವೆಬ್‌ಸೈಟ್: www.aranya.gov.in ನಲ್ಲಿ ಪ್ರಕಟಿಸಲಾಗುವುದು.

14.18 ಅಭ್ಯರ್ಥಿಯು ಹುದ್ದೆಗೆ ಅರ್ಜಿ ಸಲ್ಲಿಸಿದ ತಕ್ಷಣ ತಾನು ನಿಯಮ ಮತ್ತು ಅಧಿನಿಯಮಗಳಿಗೆ (Rules & Regulations) ಬದ್ಧನಾಗಿರುತ್ತಾನೆ ಎಂದು ಭಾವಿಸಲಾಗಿರುತ್ತದೆ. ಒಂದು ವೇಳೆ ತಾನು ಸದರಿ ಹುದ್ದೆಗೆ ಆಯ್ಕೆಯಾಗದ ಪಕ್ಷದಲ್ಲಿ ತದನಂತರ ಅದೇ ನಿಯಮಗಳನ್ನು ಪ್ರಶ್ನಿಸಲು ಬರುವುದಿಲ್ಲ.

14.19 ಅಭ್ಯರ್ಥಿಗಳು ನೇಮಕಾತಿ ಪರೀಕ್ಷೆಗಳಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬೇಕು.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೭೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಏಪ್ರಿಲ್ ೫, ೨೦೧೮ ಭಾಗ ೫

14.20 ಅಭ್ಯರ್ಥಿಗಳು ಉತ್ತರ ಪತ್ರಿಕೆಯ ಮಾಹಿತಿಯನ್ನು ಭರ್ತಿ ಮಾಡುವ ಸಲುವಾಗಿ ಪರೀಕ್ಷೆಗೆ ನಿಗದಿಪಡಿಸಿರುವ ಸಮಯಕ್ಕಿಂತ ಅರ್ಧಗಂಟೆ ಮುಂಚಿತವಾಗಿ ಪರೀಕ್ಷಾ ಕೊಠಡಿಗೆ ತಪ್ಪದೇ ಹಾಜರಾಗತಕ್ಕದ್ದು. ಆ ಸಮಯದಲ್ಲಿ ಪರೀಕ್ಷಾ ಮೇಲ್ವಿಚಾರಕರು ಕೆಲವು ಮಾರ್ಗಸೂಚನೆಗಳನ್ನು ನೀಡುತ್ತಾರೆ.

14.21 ಸರ್ಕಾರವು ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಿದ ನಂತರ ಅವರುಗಳನ್ನು ರಾಷ್ಟ್ರದ ಯಾವುದೇ ತರಬೇತಿ ಸಂಸ್ಥೆಯಲ್ಲಿ ತರಬೇತಿಗೆ ಕಳುಹಿಸುವ ಹಕ್ಕನ್ನು ಹೊಂದಿರುತ್ತದೆ.

14.22 ನೇರ ನೇಮಕಾತಿ ಪ್ರಕ್ರಿಯೆಯ ಯಾವುದೇ ವಿಷಯದಲ್ಲಿ ಯಾವುದೇ ಪತ್ರ ವ್ಯವಹಾರಕ್ಕೆ ಆಸ್ಪದವಿರುವುದಿಲ್ಲ.

14.23 ಅಭ್ಯರ್ಥಿಯ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟೀಕರಣಕ್ಕೆ ಆಯ್ಕೆ ಪ್ರಾಧಿಕಾರದ ತೀರ್ಮಾನವೇ ಅಂತಿಮವಾಗಿರುತ್ತದೆ. ಎಲ್ಲಾ ಕಾನೂನು ವಿವಾದಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ.

ಬೆಂಗಳೂರು,

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ದಿನಾಂಕ: 24-03-2018

(ಮುಖ್ಯಸ್ಥರು, ಅರಣ್ಯ ಪಡೆ)

ಹಾಗೂ ಆಯ್ಕೆ ಪ್ರಾಧಿಕಾರ.

PR - 66

SC - 100

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 05 April 2018. Indian Gazettes, https://egazette.servantsofknowledge.in/details/in.gazette.karnataka_new.2018-04-05.Part-5/. Archive identifier in.gazette.karnataka_new.2018-04-05.Part-5.