Servants of Knowledge
Karnataka Gazette · Government of Karnataka

Karnataka Gazette, Part Part-1, 10 May 2018

Published 10 May 2018

Part
Part-1
Identifier
in.gazette.karnataka_new.2018-05-10.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಮೇ ೧೦, ೨೦೧೮ (ವೈಶಾಖ ೨೦, ಶಕ ವರ್ಷ ೧೯೪೦)

Bengaluru, Thursday, May 10, 2018 (Vaishakha 20, Shaka Varsha 1940)

ಸಂಚಿಕೆ ೧೯

Issue 19

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಂದಾಯ ಸಚಿವಾಲಯ

ವಿಷಯ:- ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ:03.09.2015ರ ಆದೇಶದ ರೀತ್ಯ ಚಿಕ್ಕಮಗಳೂರು ಜಿಲ್ಲೆ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಐ.ಡಿ. [ಇನಾಂ ದತ್ತಾತ್ರೇಯ] ಪೀಠ ಇದಕ್ಕೆ ಸಂಬಂಧಿಸಿದಂತೆ ಧಾರ್ಮಿಕ ದತ್ತಿ ಆಯುಕ್ತರು ಸಲ್ಲಿಸಿರುವ ದಿನಾಂಕ: 10.03.2010ರ ವರದಿಯ ಬಗ್ಗೆ ಸರ್ಕಾರವು ತೀರ್ಮಾನ ಕೈಗೊಳ್ಳುವ ಕುರಿತು.

ಓದಲಾಗಿದೆ:- (1) ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ, ಬೆಂಗಳೂರು ಇವರು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ದಿನಾಂಕ;10.03.2010ರ ವರದಿ.

(2) ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:2686/2010 ಮತ್ತು 2686/2010ರಲ್ಲಿ ದಿನಾಂಕ:03.09.2015ರಂದು ನೀಡಿರುವ ತೀರ್ಪು.

(3) ಅಧಿಕೃತ ಜ್ಞಾಪನ ಸಂಖ್ಯೆ:ಸಸಂಶಾ/(ಸಿಎಸ್‌ಸಿ)/34/2013 ದಿನಾಂಕ:24.04.2017. (4) ಸರ್ಕಾರದ ಆದೇಶ ಸಂಖ್ಯೆ:ಕಂಇ 14 ಮುದಾಪ್ರ 2009 ದಿನಾಂಕ:11.08.2017. (5) ಸರ್ಕಾರವು ನೇಮಿಸಿದ ತಜ್ಞರ ಸಮಿತಿಯು ಸಲ್ಲಿಸಿರುವ ದಿನಾಂಕ:03.12.2017ರ ವರದಿ.

ಪ್ರಸ್ತಾವನೆ:-

ಚಿಕ್ಕಮಗಳೂರು ಜಿಲ್ಲೆ ಚಂದ್ರದ್ರೋಣ/ ಬಾಬಾಬುಡನ್‌ಗಿರಿ ಪರ್ವತದಲ್ಲಿರುವ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಯು ಹಿಂದೂ ಹಾಗೂ ಮುಸ್ಲಿಂ ಧರ್ಮದವರ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾಗಿರುತ್ತದೆ. 1954 ನೇ ಇಸವಿಯ ವಕ್ಫ್ ಕಾಯ್ದೆಯನ್ವಯ ಸದರಿ ಸಂಸ್ಥೆಯನ್ನು ವಕ್ಫ್ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲು ದಿನಾಂಕ:03.10.1964 ರಂದು ಸರ್ಕಾರಿ ಆದೇಶವಾಗಿರುತ್ತದೆ. ಸದರಿ ಆದೇಶವನ್ನು ಪ್ರಶ್ನಿಸಿ ಶ್ರೀ ಬಿ.ಸಿ.ನಾಗರಾಜರಾವ್ ಹಾಗೂ ಮತ್ತೊಬ್ಬರು ಚಿಕ್ಕಮಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲ್ಮಾಡಿದ ಮೂಲದಾವೆ ಸಂಖ್ಯೆ:25/1978 ರಲ್ಲಿ ವಿಚಾರಣೆ ನಡೆದು ದಿನಾಂಕ:29.02.1980ರಂದು ನೀಡಿರುವ ತೀರ್ಪಿನಲ್ಲಿ ಸರ್ಕಾರದ ಪ್ರಶ್ನಿತ ಆದೇಶವನ್ನು ರದ್ದುಪಡಿಸಿ, ಈ ಸಂಸ್ಥೆಯು ಹಿಂದೂ ಮತ್ತು ಮುಸ್ಲಿಂ ಜನಾಂಗದವರಿಬ್ಬರಿಗೂ ಸೇರಿದ ಪವಿತ್ರ ಸ್ಥಳವೆಂದು ಹೇಳಿ ಸದರಿ ಸಂಸ್ಥೆಯನ್ನು ಧಾರ್ಮಿಕ ದತ್ತಿ ಇಲಾಖೆಗೆ ವರ್ಗಾಯಿಸಲು ಆದೇಶಿಸಿದೆ.

ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ವಕ್ಫ್ ಮಂಡಳಿಯವರು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿದ್ದ ಪ್ರಕರಣ ಸಂಖ್ಯೆ:

ಆರ್ಎಫ್ಎ/119/1980 ರಲ್ಲಿ ವಿಚಾರಣೆ ನಡೆದು ಮಾನ್ಯ ಉಚ್ಚ ನ್ಯಾಯಾಲಯವು ದಿನಾಂಕ:07.01.1991 ರಂದು ನೀಡಿರುವ ತೀರ್ಪಿನಲ್ಲಿ, ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದ ಮೂಲದಾವೆ ಸಂಖ್ಯೆ:25/1978 ರ ಆದೇಶವನ್ನು ಎತ್ತಿ ಹಿಡಿದು ಸದರಿ ಸಂಸ್ಥೆಯು ಹಿಂದೂ ಮತ್ತು ಮುಸ್ಲಿಂ ಎರಡೂ ಧರ್ಮದ ಭಕ್ತರಿಗೆ ಸೇರಿದ್ದಾಗಿದ್ದು, ಮುಜರಾಯಿ ಇಲಾಖೆಯಿಂದ ಆಡಳಿತ ನಡೆಸುವುದು ಸೂಕ್ತ ಎಂದು ಆದೇಶಿಸಿರುತ್ತದೆ. ಮಾನ್ಯ ಉಚ್ಛ ನ್ಯಾಯಾಲಯದ ದಿನಾಂಕ:07.01.1991 ರ ಆದೇಶವನ್ನು ಪ್ರಶ್ನಿಸಿ ವಕ್ಫ್ ಮಂಡಳಿಯವರು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲ್ಮಾಡಿದ ಪ್ರಕರಣ ಸಂಖ್ಯೆ:ಎಸ್ಎಲ್ಎ/ 17040/1991 ಅನ್ನು ಮಾನ್ಯ ಸರ್ವೋಚ್ಛ ನ್ಯಾಯಾಲಯವು ದಿನಾಂಕ: 01.11.1991 ರಂದು ವಜಾಗೊಳಿಸಿರುತ್ತದೆ. ಇದರಿಂದಾಗಿ ಪ್ರಸ್ತಾಪಿತ ಸಂಸ್ಥೆಯು ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟ ಮುಜರಾಯಿ ಸಂಸ್ಥೆಯಾಗಿ ಮುಂದುವರೆದಿರುತ್ತದೆ.

ಈ ಮಧ್ಯೆ ದಿನಾಂಕ:22.03.1983ರಂದು ಕಂದಾಯ ಉಪ ವಿಭಾಗಾಧಿಕಾರಿಗಳು, ಚಿಕ್ಕಮಗಳೂರು ಉಪವಿಭಾಗ ಇವರು ದತ್ತಪೀಠದ ಆಸುಪಾಸಿನಲ್ಲಿರುವ ಅಂಗಡಿ ಮುಂಗಟ್ಟುಗಳಿಂದ ಬಾಡಿಗೆ ವಸೂಲು ಮಾಡುವಂತೆ ತಹಶೀಲ್ದಾರ್‌ರವರಿಗೆ ಸೂಚನೆ ನೀಡಿ ಆದೇಶ ಹೊರಡಿಸಿರುತ್ತಾರೆ. ಈ ಆದೇಶದ ವಿರುದ್ಧ ಶ್ರೀ ಸೈಯದ್ ಪೀರ್ ಮೊಹಮ್ಮದ್ ಶಾಖಾದ್ರಿಯವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ದಾಖಲಿಸಿದ್ದ ರಿಟ್ ಅರ್ಜಿ

(೫೨೧)೫೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧ ಸಂಖ್ಯೆ:2294/1984ರಲ್ಲಿ ದಿನಾಂಕ:01.03.1985ರಂದು ನೀಡಿರುವ ಆದೇಶದಲ್ಲಿ ಜೂನ್ 1975ಕ್ಕೂ ಹಿಂದೆ ಈ ಸಂಸ್ಥೆಯಲ್ಲಿದ್ದ ಪದ್ದತಿಗಳನ್ನು ಮುಜರಾಯಿ ಅಧಿಕಾರಿಗಳಿಂದ ವಿಚಾರಣೆ ನಡೆಸಿ ಆ ಪದ್ದತಿಗಳನ್ನು ಅನುಷ್ಠಾನಕ್ಕೆ ತರಲು ಧಾರ್ಮಿಕ ದತ್ತಿ ಆಯುಕ್ತರು ಆದೇಶ ಹೊರಡಿಸಬೇಕೆಂದು ನಿರ್ದೇಶನ ನೀಡಿರುತ್ತದೆ.

ಧಾರ್ಮಿಕ ದತ್ತಿ ಆಯುಕ್ತರ ಸೂಚನೆಯಂತೆ, ಉಪವಿಭಾಗಾಧಿಕಾರಿ, ಚಿಕ್ಕಮಗಳೂರು ಉಪವಿಭಾಗ ಇವರು ಪತ್ರ ಸಂಖ್ಯೆ:ಮುಜರಾಯಿ 153/1982-83 ದಿನಾಂಕ:28.01.1988 ರನ್ವಯ ಧಾರ್ಮಿಕ ದತ್ತಿ ಆಯುಕ್ತರವರಿಗೆ ಸಲ್ಲಿಸಿರುವ ವರದಿಯಲ್ಲಿ ಸಾರ್ವಜನಿಕ ಹಣ ಯಾವುದೇ ರೀತಿ ದುರುಪಯೋಗವಾಗದಂತೆ ನೋಡಿಕೊಳ್ಳಲು ಒಂದು ಸಮಿತಿಯ ಅವಶ್ಯಕತೆ ಇದೆ. ಸರ್ಕಾರದವರು ಎರಡೂ ಕೋಮಿನವರನ್ನೊಳಗೊಂಡ ಧರ್ಮದರ್ಶಿ ಸಮಿತಿಯನ್ನು ನೇಮಕ ಮಾಡುವುದಲ್ಲದೆ ಎರಡೂ ಕೋಮಿನವರು ಅವರವರ ಆಚರಣೆಗನುಸಾರವಾಗಿ ಪೂಜೆ ನಡೆಸಲು ಅನುಕೂಲವಾಗುವಂತೆ ಹಾಗೂ ಹಬ್ಬ ಹರಿದಿನ, ಜಾತ್ರೆ, ಉರುಸ್ ಇತ್ಯಾದಿ ನಡೆಸುವಂತೆ ಪ್ರತ್ಯೇಕವಾಗಿ ಎರಡೂ ಕೋಮಿನವರಿಗೆ ಬೇರೆ ಬೇರೆ ಅರ್ಚಕರನ್ನೂ ಸಹ ನೇಮಕ ಮಾಡಬಹುದಾಗಿರುತ್ತದೆಂದೂ, ಸಾರ್ವಜನಿಕರಿಂದ ಬರುವ ಕಾಣಿಕೆ, ಹಣ,ವಂತಿಕೆ ಇತ್ಯಾದಿಗಳನ್ನು ಅಪವ್ಯಯವಾಗದಂತೆ ನೋಡಿಕೊಳ್ಳಲು ಸರ್ಕಾರದಿಂದ ಒಬ್ಬ ಆಡಳಿತಾಧಿಕಾರಿಯನ್ನು ನೇಮಕ ಮಾಡುವುದು ಸೂಕ್ತವಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ.

ಧಾರ್ಮಿಕ ದತ್ತಿ ಆಯುಕ್ತರು ಈ ವಿಚಾರದ ಬಗ್ಗೆ ಜಿಲ್ಲಾಧಿಕಾರಿ, ಚಿಕ್ಕಮಗಳೂರು ಜಿಲ್ಲೆ ಇವರಿಂದ ವರದಿಯನ್ನು ಪಡೆಯಲಾಗಿದ್ದು, ಜಿಲ್ಲಾಧಿಕಾರಿಯವರು ಧಾರ್ಮಿಕ ದತ್ತಿ ಆಯುಕ್ತರವರಿಗೆ ಸಲ್ಲಿಸಿರುವ ವರದಿಯಲ್ಲಿ 1975ಕ್ಕಿಂತ ಹಿಂದಿನಿಂದಲೂ ಈ ಕೆಳಕಂಡ ವಿಧಿ-ವಿಧಾನಗಳು ಸದರಿ ಸಂಸ್ಥೆಯಲ್ಲಿ ಆಚರಣೆಯಲ್ಲಿರುತ್ತವೆಂದು ತಿಳಿಸಿರುತ್ತಾರೆ.

ದತ್ತ ಪೀಠದ ಪೂಜಾ ವಿಧಿ ವಿಧಾನಕ್ಕೆ ಸಂಬಂಧಪಟ್ಟ ಶಾಖಾದ್ರಿಯವರಿಂದ ನೇಮಿಸಲ್ಪಟ್ಟ ಮುಜಾವರ್ ಒಬ್ಬರೇ ಗುಹೆಯ ಗರ್ಭಗುಡಿಯೊಳಗೆ ಪ್ರವೇಶಿಸಿ ಹಿಂದೂ ಮತ್ತು ಮುಸ್ಲಿಂ ಎರಡೂ ಕೋಮಿನ ಭಕ್ತರಿಗೆ ತೀರ್ಥ ವಿತರಿಸಬೇಕು. 1. ಸದರಿ ಮುಜಾವರ್ ಮಾತ್ರ ಗರ್ಭಗುಡಿಯಲ್ಲಿ ಪಾದುಕೆಗೆ ಪುಷ್ಪ ಅರ್ಪಿಸಿ ನಂದಾದೀಪ ಹಚ್ಚಬೇಕು. 2. ಹಿಂದೂ ಧರ್ಮದ ಮಠಾಧಿಪತಿಗಳು/ಸಾದು ಸಂತರು ಕೂಡ ಗುಹೆಯ ಒಳಗೆ ಪ್ರವೇಶಿಸಿ ಪಾದುಕೆಗಳಿಗೆ ಗೌರವ ಸಲ್ಲಿಸಬಹುದಾಗಿದೆ. 3. ಲಂಗರಖಾನದಲ್ಲಿ ಪ್ರಸಾದ ಸ್ವೀಕರಿಸದ ಭಕ್ತಾದಿಗಳಿಗೆ ಅಕ್ಕಿ ಬೇಳೆ ಇತ್ಯಾದಿ ಪಡಿ ನೀಡುವ ಪದ್ದತಿ ಜಾರಿಯಲ್ಲಿರುತ್ತದೆ.

4. ಸದರಿ ಮುಜಾವರರು ಪ್ರತಿದಿನ ಸಂಜೆ 07-00 ಗಂಟೆಗೆ ಮತ್ತು ರಾತ್ರಿ 8-00 ಗಂಟೆಗೆ ಲೋಬಾನ ಹಾಕುವುದು ಮತ್ತು ಧಾರ್ಮಿಕ ಆಚರಣೆ ಮಾಡಬೇಕು.

5. ಮೇಲ್ಕಂಡ ದತ್ತಪೀಠದ ಗುಹೆಯೊಳಗೆ ಹಿಂದೂ ಪದ್ದತಿಯಂತೆ

 ಪಾದುಕೆಗಳಿಗೆ ಪುಷ್ಪ ಅರ್ಪಿಸುವುದು

 ನಂದಾದೀಪ ಬೆಳಗಿಸುವುದು

 ಭಕ್ತರಿಗೆ ತೀರ್ಥ ನೀಡುವುದು

 ಕಾಯಿ ಒಡೆಯುವುದು

 ಹಿಂದೂ ಗುರುಗಳನ್ನು ಮರ್ಯಾದೆಯಿಂದ ಗುಹೆಯೊಳಗೆ ಪ್ರವೇಶಿಸುವುದು

 ಯಾತ್ರಾರ್ಥಿಗಳಿಗೆ ಪಡಿ ನೀಡುವುದು.

ಧಾರ್ಮಿಕ ದತ್ತಿ ಆಯುಕ್ತರು ಮಾನ್ಯ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ವಿಚಾರಣೆ ನಡೆಸಿ ಹೊರಡಿಸಿರುವ ಆದೇಶ ಸಂಖ್ಯೆ:

ಆಡಳಿತ/7/ಪಿಟಿಎನ್/9/1984-85, ದಿನಾಂಕ:25/02/1989 ರಲ್ಲಿ ಸಂಪೂರ್ಣ ವಹಿವಾಟನ್ನು 1975ನೇ ಸಾಲಿಗೆ ಮುಂಚೆ ಇದ್ದಂತೆ ಶಾಖಾದ್ರಿಯ ಸುಪರ್ದಿಗೆ ನೀಡಿರುತ್ತಾರೆ ಹಾಗೂ ಸದರಿ ಸಂಸ್ಥೆಯಲ್ಲಿ 1975ಕ್ಕಿಂತಲೂ ಹಿಂದೆ ಇದ್ದ ಸ್ಥಿತಿಯನ್ನು ಪುನರ್ ಸ್ಥಾಪಿಸಿ ಆದೇಶಿಸಿರುತ್ತಾರೆ.

ತಹಶೀಲ್ದಾರ್, ಚಿಕ್ಕಮಗಳೂರು ತಾಲ್ಲೂಕು ಇವರು ಪತ್ರ ಸಂಖ್ಯೆ: ಡಿವಿಎಸ್ 146/1989-90 ದಿನಾಂಕ:12.03.1990ರ ಅನ್ವಯ ಉಪವಿಭಾಗಾಧಿಕಾರಿಯವರಿಗೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಈ ಸಂಸ್ಥೆಯಲ್ಲಿ ಸಜ್ಜದರವರು ಯಾವುದೇ ಲೆಕ್ಕಪತ್ರಗಳನ್ನು ನಿರ್ವಹಿಸಿಲ್ಲದ ಕಾರಣ ಸಂಸ್ಥೆಯ ಸರ್ವತೋಮುಖ ಅಭಿವೃದ್ದಿಗಾಗಿ ಹಿಂದೂ ಮತ್ತು ಮುಸ್ಲಿಂ ಧರ್ಮಗಳಿಂದ ಕೂಡಿದ ಆಡಳಿತ ಸಮಿತಿಯನ್ನು ರಚಿಸಿ ಆಡಳಿತವನ್ನು ಸಮಿತಿಯ ಮೂಲಕ ನಿರ್ವಹಿಸಲು ಶಿಫಾರಸ್ಸು ಮಾಡಿದ್ದರು.

ಅದರನ್ವಯ ದತ್ತಪೀಠದ ಆದಾಯ ಮತ್ತು ವೆಚ್ಚದ ವಿವರವನ್ನು ಸರ್ಕಾರಕ್ಕೆ ಸಲ್ಲಿಸಬೇಕಾಗಿರುವುದರಿಂದ ಶಾಖಾದ್ರಿಯವರಿಗೆ ದಿನಾಂಕ:14.05.1998ರಂದು ಹಾಗೂ ಅನೇಕ ಬಾರಿ ಜಿಲ್ಲಾಧಿಕಾರಿಗಳು ನೋಟಿಸ್‌ಗಳನ್ನು ನೀಡಿ ಆದಾಯ ಮತ್ತು ವೆಚ್ಚದ ವಿವರವನ್ನು ಸಲ್ಲಿಸುವಂತೆ ತಿಳಿಸಿದ್ದು, ಮೇಲ್ಕಂಡ ನೋಟಿಸ್‌ಗಳಿಗೆ ಶಾಖಾದ್ರಿಯು ಯಾವುದೇ ರೀತಿಯಲ್ಲಿ ಸ್ಪಂದಿಸಿರುವುದಿಲ್ಲ. ನಂತರ ಜಿಲ್ಲಾಧಿಕಾರಿಗಳು ಮೈಸೂರು ಮತೀಯ ಮತ್ತು ಧರ್ಮಾರ್ಥ ಸಂಸ್ಥೆಗಳ ಅಧಿನಿಯಮ 1927ರ ಕಲಂ 26 ಮತ್ತು 31 ರಡಿಯಲ್ಲಿ ಆಡಳಿತ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು.

ಆದರೆ ಸದರಿ ಸಂಸ್ಥೆಯ ಆದಾಯವನ್ನು ಸಂಸ್ಥೆಯ ಮುಖ್ಯಸ್ಥರಾದ ಶ್ರೀ ಶಾಖಾದ್ರಿಯವರು ದುರುಪಯೋಗಪಡಿಸಿಕೊಳ್ಳುತ್ತಿರುತ್ತಾರೆಂದು ಬಂದ ದೂರಿನ ಹಿನ್ನೆಲೆಯಲ್ಲಿ ಕರ್ನಾಟಕ ಹಿಂದೂ ಮತ್ತು ಧಾರ್ಮಿಕ ದತ್ತಿ ಕಾಯಿದೆ 1927 ಸೆಕ್ಷನ್ 26 & 31ರಂತೆ ದಿನಾಂಕ:05/06/1999 ರಂದು ಸರ್ಕಾರವು ಆದೇಶ ಸಂಖ್ಯೆ:ಆರ್‌ಡಿ/138/ಎಂಎಸ್‌ವಿ/1998ರಲ್ಲಿ 6 ಸದಸ್ಯರನ್ನೊಳಗೊಂಡ ವಿಚಾರಣಾ ಸಮಿತಿಯನ್ನು ಚಿಕ್ಕಮಗಳೂರು ಕಂದಾಯ ಉಪವಿಭಾಗಾಧಿಕಾರಿಯವರ ನೇತೃತ್ವದಲ್ಲಿ ರಚಿಸಿ ಆದೇಶಿಸಿತು.

ಸದರಿ ಸಮಿತಿಯು ನೀಡಿದ ವಿಚಾರಣಾ ವರದಿಯನ್ನು ಪರಿಶೀಲಿಸಿ ಸರ್ಕಾರವು ದಿನಾಂಕ:25.11.2000ರ ಆದೇಶದನ್ವಯ ಸಂಸ್ಥೆಯ ಆಡಳಿತವನ್ನು ನಿರ್ವಹಿಸಲು 19 ಜನರ ಸದಸ್ಯರುಗಳನ್ನೊಳಗೊಂಡ ಆಡಳಿತ ಸಮಿತಿಯನ್ನು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನೇಮಿಸಿರುತ್ತದೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಶ್ರೀ ಸೈಯ್ಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಇವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ:38148//2000 ಅನ್ನು ದಾಖಲಿಸಿದ್ದರು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೨೩

ಸರ್ಕಾರವು ಆದೇಶ ಆರ್‌ಡಿ/138/ಎಂಎಸ್‌ವಿ/98 ದಿನಾಂಕ: 25.11.2000ರನ್ವಯ ಸೈಯ್ಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ಇವರನ್ನು ಸಜ್ಜದನನ್ನಾಗಿ ನೇಮಕ ಮಾಡಿರುತ್ತದೆ. ಸರ್ಕಾರವು ಸೈಯ್ಯದ್ ಗೌಸ್ ಮೊಹಿಯುದ್ದೀನ್ ಶಾಖಾದ್ರಿ ರವರನ್ನು ನೇಮಿಸಿದ ದಿನಾಂಕ:25.11.2000 ಆದೇಶದ ವಿರುದ್ಧ ಶ್ರೀ ಬಂಡಗಿ ಹುಸೇನ್ ಶಾಖಾದ್ರಿ ಎಂಬುವರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ:4262/2002ನ್ನು ದಾಖಲಿಸಿ ತನ್ನನ್ನು ಸಂಸ್ಥೆಯ ಶಾಖಾದ್ರಿಯನ್ನಾಗಿ ನೇಮಿಸಲು ಕೋರಿದ್ದರು.

ಧಾರ್ಮಿಕ ದತ್ತಿ ಆಯುಕ್ತರು ಸದರಿ ಸಂಸ್ಥೆಯ ವಿಧಿ-ವಿಧಾನದ ಬಗ್ಗೆ ಹೊರಡಿಸಿರುವ ದಿನಾಂಕ:25.02.1989ರ ಆದೇಶವನ್ನು ಪುನರ್ ಪರಿಶೀಲಿಸಲು ಕೋರಿ ಶ್ರೀ ಬಿ.ಎಸ್. ವಿಠ್ಠಲರಾವ್ ಎಂಬುವರು ದಾಖಲಿಸಿದ ಅರ್ಜಿಯನ್ನು ಧಾರ್ಮಿಕ ದತ್ತಿ ಆಯುಕ್ತರು ದಿನಾಂಕ:07.07.2003ರ ಆದೇಶದಲ್ಲಿ ತಿರಸ್ಕರಿಸಿರುತ್ತಾರೆ. ಶ್ರೀ ಬಿ.ಎಸ್. ವಿಠ್ಠಲರಾವ್‌ರವರು ಧಾರ್ಮಿಕ ದತ್ತಿ ಆಯುಕ್ತರ ದಿನಾಂಕ:25.02.1989 ಹಾಗೂ ದಿನಾಂಕ:07.07.2003ರ ಆದೇಶಗಳನ್ನು ಪ್ರಶ್ನಿಸಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ:43621/2003ನ್ನು ದಾಖಲಿಸಿದ್ದರು. ಸದರಿ ಸಂಸ್ಥೆಯನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997 ರ ಕಾಯ್ದೆಯ ಸೆಕ್ಷನ್ 23 ಅನ್ವಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಿ ಪ್ರಕಟಿಸಲಾಗಿರುವುದನ್ನು ಶ್ರೀ ಮೊಹಮ್ಮದ್ ಸಿದ್ದಿಕ್ ಹಾಗೂ ಇತರರು ಪ್ರಶ್ನಿಸಿ ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಂಖ್ಯೆ:17351/2005 ಅನ್ನು ಮಾನ್ಯ ಉಚ್ಛ ನ್ಯಾಯಾಲಯವು ದಿನಾಂಕ:30.10.2006ರಂದು ವಜಾಗೊಳಿಸಿತು.

ಮಾನ್ಯ ಉಚ್ಛ ನ್ಯಾಯಾಲಯದ ಏಕ ಸದಸ್ಯ ಪೀಠವು ರಿಟ್ ಅರ್ಜಿ ಸಂಖ್ಯೆ:38148/2000, 4262/2002 ಹಾಗೂ 43621/2003ನ್ನು ಒಟ್ಟುಗೂಡಿಸಿ ದಿನಾಂಕ:14.02.2007ರಂದು ನೀಡಿರುವ ತೀರ್ಪಿನಲ್ಲಿ ಅರ್ಜಿದಾರರ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಕಾನೂನು ರೀತ್ಯಾ ಆದೇಶ ಹೊರಡಿಸಲು ಪ್ರಕರಣವನ್ನು ಧಾರ್ಮಿಕ ದತ್ತಿ ಆಯುಕ್ತರಿಗೆ ಹಿಂದಿರುಗಿಸಿತು.

ಮಾನ್ಯ ಉಚ್ಛ ನ್ಯಾಯಾಲಯದ ದಿನಾಂಕ:14.02.2007ರ ತೀರ್ಪಿನ ವಿರುದ್ಧ ಸರ್ಕಾರವು ದಾಖಲ್ಮಾಡಿದ ರಿಟ್ ಅಪೀಲು ಸಂಖ್ಯೆ; 886/2007 ಅನ್ನು ಹಾಗೂ ಇದೇ ತೀರ್ಪನ್ನು ಪ್ರಶ್ನಿಸಿ ಗೌಸ್ ಮೊಹಿಯುದ್ದೀನ್ ಶಾಖಾದ್ರಿಯವರು ದಾಖಲ್ಮಾಡಿದ ರಿಟ್ ಅಪೀಲು ಸಂಖ್ಯೆ:2302/2007 ಅನ್ನು ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ಅನುಕ್ರಮವಾಗಿ ದಿನಾಂಕ:04.08.2008 ಹಾಗೂ 05.11.2008 ರಂದು ವಜಾಗೊಳಿಸಿತು.

ಮಾನ್ಯ ಉಚ್ಛ ನ್ಯಾಯಾಲಯದ ದಿನಾಂಕ:05.11.2008ರ ಆದೇಶವನ್ನು ಪ್ರಶ್ನಿಸಿ ಗೌಸ್ ಮೊಹಿಯುದ್ದೀನ್ ಶಾಖಾದ್ರಿಯವರು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್.ಎಲ್.ಪಿ. ಸಂಖ್ಯೆ:27944/2008ನ್ನು ದಾಖಲಿಸಿರುತ್ತಾರೆ. ಸದರಿ ಎಸ್.ಎಲ್.ಪಿ. ಪ್ರಕರಣವು ನಂತರದಲ್ಲಿ ಸಿವಿಲ್ ಅಪೀಲು ಸಂಖ್ಯೆ:2685/2010 ಆಗಿ ಪರಿವರ್ತನೆಗೊಂಡಿತು.

ಮಾನ್ಯ ಉಚ್ಛ ನ್ಯಾಯಾಲಯದ ಮೇಲಿನ ದಿನಾಂಕ:04.08.2008ರ ತೀರ್ಪಿನ ವಿರುದ್ಧ ಸಿಟಿಜóೆನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ ಎಂಬುವರು ಸಲ್ಲಿಸಿರುವ ಎಸ್.ಎಲ್.ಪಿ. ಸಂಖ್ಯೆ;29429/2008ರಲ್ಲಿ ಧಾರ್ಮಿಕ ದತ್ತಿ ಆಯುಕ್ತರ ದಿನಾಂಕ:25.02.1989 ರ ಆದೇಶದಂತೆ ಯಥಾಸ್ಥಿತಿ ಕಾಪಾಡಲು ಹಾಗೂ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಧಾರ್ಮಿಕ ದತ್ತಿ ಆಯುಕ್ತರು ವಿಚಾರಣೆ ನಡೆಸಿ, ವಿಚಾರಣಾ ವರದಿಯನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಲು ಮಾನ್ಯ ಸರ್ವೋಚ್ಛ ನ್ಯಾಯಾಲಯವು ದಿನಾಂಕ:01.12.2008 ರಂದು ಮಧ್ಯಂತರ ಆದೇಶ ನೀಡಿದೆ. ಸದರಿ ಎಸ್.ಎಲ್.ಪಿ. ಪ್ರಕರಣವು ನಂತರದಲ್ಲಿ ಸಿವಿಲ್ ಅಪೀಲು ಸಂಖ್ಯೆ;2686/2010 ಆಗಿ ಪರಿವರ್ತನೆಗೊಂಡಿದೆ.

ಮಾನ್ಯ ಸರ್ವೋಚ್ಧ ನ್ಯಾಯಾಲಯದ ದಿನಾಂಕ;01.12.2008ರ ಮಧ್ಯಂತರ ಆದೇಶದಂತೆ ಧಾರ್ಮಿಕ ದತ್ತಿ ಆಯುಕ್ತರು ವಿಚಾರಣೆ ನಡೆಸಿ ವಿಚಾರಣಾ ವರದಿಯನ್ನು ದಿನಾಂಕ:10.03.2010ರಂದು ಮಾನ್ಯ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಘನ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ: 2685/2010 ಹಾಗೂ ಸಿವಿಲ್ ಅಪೀಲು ಸಂಖ್ಯೆ:2686/2010ನ್ನು ಇತ್ಯರ್ಥಪಡಿಸಿ ದಿನಾಂಕ:03/09/2015 ರಂದು ಸದರಿ ವಿವಾದದ ಬಗ್ಗೆ ಕರ್ನಾಟಕ ಸರ್ಕಾರವು ತೀರ್ಮಾನ ತೆಗೆದುಕೊಳ್ಳಬೇಕು ಮತ್ತು ಅಲ್ಲಿಯವರೆಗೆ ಯಥಾಸ್ಥಿತಿ ಕಾಪಾಡಬೇಕು ಎಂದು ನಿರ್ದೇಶನ ನೀಡಿ ಆದೇಶಿಸಿದ್ದು, ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪು ಈ ಕೆಳಕಂಡಂತೆ ಇರುತ್ತದೆ.

1. Pursuant to the Court's order dated 01.12.2008, the Commissioner for Hindu Religious Institutions & Charitable Endowments, Bangalore, Karnataka, had submitted a report way back in the year 2010. Copies of the said report were furnished to the contesting parties under the orders of the Court. The Commissioner in the said Report has held that the result/finding of the enquiry conducted by him is as follows:

1) Hindu Archak to be appointed by the Management Committee for the performing daily pooja (rites) inside the cave after lighting the Nandadeepa and offering flowers to the Peeta/Paduke of Sri Dattatreya. The mode of worship and other rituals to the Peeta/Paduka will be as may be prescribed by the Agama expert of the Department.

2) Giving Theertha to the devotees and breaking of coconuts offered by the devotees by Archak on the platform meant for the purpose.

3) The Peetadhipathis/Gurus of recognized Maths are to be taken by the Archak inside the cave to pay respect to the Paduke.

4) The lobana is taken by Mujavar on Mondays and Thursdays after namaz, to the Darga and fateha offered. Every evening lobana is taken to the Durga by Mujavar and fateha offered.

5) Tabaru to be given to the devotees by Mujavar.

6) The Celebration of Urus to be held every year for three days commencing from the next day of holy festival as already announced by Shahkhadri/Committee of Management, a year in advance as per Hindu Calendar. The celebration of Urus is such as decoration of tombs with sandal, flowers, scent (perfumes) and new cloths and all the rituals connected with the Urus will be performed under the guidance/ supervision of Shahkhadri.

7) Shahkhadri will guide the Mujavar for the performance of rituals only in the Darga everyday and at the time of the Urus.

೫೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧ 8) The padi/food to the devotees to be arranged by the Management Committee as the Sajjada is replaced by the

Committee.

2. Objections to the said Report have been raised by the appellant in C.A. No.2686 of 2010 who claim to be Sajjada Nashin and also by some of the contesting respondents in the present appeal i.e. C.A. No. 2685 of 2010.

3. Shri Basava Prabhu S.Patil, learned senior counsel appearing on behalf of the State has submitted that in view of the sensitive nature of the issues involved the Report of the Commissioner is required to be considered by the State Cabinet and a decision thereon will be taken after considering the various pros and cons of the matter. Having regard to the issues involved and the stand taken by Shri Patil on behalf of the State, we are of the view that, at this stage, the State should be left free to take its decision on the result of the Enquiry of the Commissioner as indicated in his Report. The State Government will naturally be duty bound to take into account all objections that may be raised against the said Report including the objections raised by the parties to the present appeals, as indicated above. Thereafter, the State Government will decide the matter. In case any of the contesting parties have any grievance against such decision that the State Government may take, it will be open for them to seek recourse to the legal remedies as may be available.

4. In view of the aforesaid directions, we do not consider it necessary to keep the civil appeals pending any longer. Both the civil appeals and the contempt petition shall stand disposed of in terms of the above.

5. Status quo granted by this Court on 1st December, 2008 will continue until the State Government decides the matter in accordance with the present directions.

ಮೇಲೆ ಓದಲಾದ (3)ರ ಸಚಿವ ಸಂಪುಟದ ಅಧಿಕೃತ ಜ್ಞಾಪನದಲ್ಲಿ, ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ:03.09.2015ರ ತೀರ್ಪಿನಂತೆ, ಧಾರ್ಮಿಕ ದತ್ತಿ ಆಯುಕ್ತರು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ದಿನಾಂಕ:10.03.2010ರ ವರದಿಯ ಮೇಲೆ ಸಚಿವ ಸಂಪುಟವು ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿಷಯದ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ:01.12.2008ರಂದು ಹೊರಡಿಸಿರುವ ಆದೇಶದನ್ವಯ ದಿನಾಂಕ:10.03.2010ರಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸರ್ವೋಚ್ಚ ನ್ಯಾಯಾಲಯದ ಮುಂದೆ ಸಲ್ಲಿಸಿರುವ ವಿಚಾರಣಾ ವರದಿಯನ್ನು ಮಾನ್ಯ ಸರ್ವೋಚ್ಚ ನ್ಯಾಯಾಲಯವು ಸಿವಿಲ್ ಅಪೀಲು ಸಂಖ್ಯೆ:2686/2010ರಲ್ಲಿ ದಾಖಲಿಸಲಾದ ಐ.ಎ. ಸಂಖ್ಯೆ:7/2017ರಲ್ಲಿ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಈ ಬಗ್ಗೆ ಪರಿಶೀಲಿಸಿ ಸೂಕ್ತ ಶಿಫಾರಸ್ಸುಗಳನ್ನು ಮಾಡಲು ಮಾನ್ಯ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವರ ಅಧ್ಯಕ್ಷತೆಯಲ್ಲಿ ಒಟ್ಟು 05 ಸದಸ್ಯರನ್ನೊಳಗೊಂಡಂತೆ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿರುತ್ತದೆ.

ಮೇಲೆ ಓದಲಾದ (4)ರ ಸರ್ಕಾರದ ಆದೇಶದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:2685/2010 ಮತ್ತು 2686/2010 ದಿನಾಂಕ:03.09.2015ರಲ್ಲಿ ನೀಡಿರುವ ನಿರ್ದೇಶನದಂತೆ ಧಾರ್ಮಿಕ ದತ್ತಿ ಆಯುಕ್ತರು ದಿನಾಂಕ:10.03.2010ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ವಿಚಾರಣಾ ವರದಿಯ ಮೇಲೆ ವಿವರವಾದ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸಚಿವ ಸಂಪುಟದ ದಿನಾಂಕ:30.05.2017ರ ನಿರ್ಣಯದಂತೆ ಈ

1. ಜಸ್ಟೀಸ್ ಹೆಚ್.ಎನ್. ನಾಗಮೋಹನ್‌ದಾಸ್ ವ iಾನ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ನಂ.687, 7ನೇ ಮುಖ್ಯ ರಸ್ತೆ, 3ನೇ ಹಂತ, ಜೆ.ಪಿ.ನಗರ, ಬೆಂಗಳೂರು - 560076 ಅಧ್ಯಕ್ಷರು
2. ಪ ೂ್ರ: ಎಸ್. ಶೆಟ್ಟರ್, ೆ ಪ್ಲಾಟ್ ನಂ.ಎ201, 2ನೇ ಮಹಡಿ, ಹೊಯ್ಸಳ ಶ್ರೀಕೃಷ್ಣ, 60 ಅಡಿ ರಸ್ತೆ, ಭೂಪಸಂದ್ರ, ಆರ್ಎಂವಿ ಬಡಾವಣೆ-2, ಬೆಂಗಳೂರು - 560094 ಸ ದ ಸ ್ಯರು
3. ಶಿ ೕ ರಹಮತ್ ತರೀಕೆರೆ ್ರ 'ಸುಫಿ' ಎಂ.ಪಿ. ಪ್ರಕಾಶ್ ನಗರ, ಹೊಸಪೇಟೆ, ಬಳ್ಳಾರಿ ಜಿಲ್ಲೆ - 583201 ಸ ದ ಸ ್ಯರು

ಸರ್ಕಾರವು ನೇಮಿಸಿದ ಮೇಲ್ಕಂಡ ಉನ್ನತ ಮಟ್ಟದ ಸಮಿತಿಯು ಧಾರ್ಮಿಕ ದತ್ತಿ ಆಯುಕ್ತರವರ ದಿನಾಂಕ:10.03.2010ರ ವರದಿಯ ಮೇಲೆ ಆಸಕ್ತ ಪಕ್ಷಕಾರರ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ದಿನಾಂಕ:03.12.2017ರಂದು ಸಚಿವ ಸಂಪುಟದ ಉಪ ಸಮಿತಿಗೆ ವರದಿಯನ್ನು ಸಲ್ಲಿಸಿರುತ್ತದೆ. ಉನ್ನತ ಮಟ್ಟದ ಸಮಿತಿಯು ಸಲ್ಲಿಸಿರುವ ವರದಿಯಲ್ಲಿನ ನಿರ್ಣಾಯಿಕ ಅಂಶಗಳು [concluded findings] ಈ ಕೆಳಕಂಡಂತಿದೆ:-

"...From the historical records and the legal proceedings some of the legal and factual aspects, relating to the institution in question are concluded and they are as under:

(1) The name of the institution involved in the legal proceedings and the Government records is called the 'Sri Gurudattatreya Baba Budan Swamy Dargah'

(2) This institution is not situated in any village but it is situated at Baba Budan giri Hills.

(3) Both Hindu and Muslims are the devotees of this institution.

(4) The management, administration and the rituals in the institution are administered and performed by a person called Shah Khadri who is Sajjada Nasheen and his position hereditary.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೨೫ (5) The practice of reading the Fateha, offering food items, placing flowers on the tomb and paduka, applying

sandalwood paste, burning of incense, lightening of Nandadeepa, rising of flags, beating of Nagara (Drums) and offering holy water to the devotees are performed by Shah Khadri who is Sajda Nasheen in the institution.

(6) This institution is declared not a wakf property, but one under the jurisdiction of the Muzrai Department. (7) Whenever the Sajjada Nasheen committed acts of mismanagement, misappropriation, etc., the Muzrai Department had taken action in accordance with law.

The above mentioned legal and factual conclusions had attained finality. Keeping this in mind, it is felt necessary to examine the report of Commissioner dated:10.03.2010. We have carefully gone through the enquiry report of the Commissioner and noticed several legal and factual errors in it.

ಸದರಿ ಉನ್ನತ ಮಟ್ಟದ ಸಮಿತಿಯು ನೀಡಿರುವ ವರದಿಯಲ್ಲಿನ ಅಂತಿಮ ಅಭಿಪ್ರಾಯವು [conclusion] ಕೆಳಕಂಡಂತಿದೆ:-

(1) The report of the Commissioner dated:10.03.2010 is liable to be rejected.

(2) In terms of Places of worship (Special Provisions) Act, 1991 the nature and character of religious practices which were prevailing as on 15th August, 1947 shall continue in the shrine 'Sri Guru Dattatreya Bababudan Swamy Darga'

(3) If Shakadri who is Sajjada Nasheen, mismanages, misappropriates and fails to administer the shrine properly the Muzrai Department is competent to take action against him in accordance with law.

ಸದರಿ ಉನ್ನತ ಮಟ್ಟದ ಸಮಿತಿಯು ನೀಡಿರುವ ವರದಿಯಲ್ಲಿನ ಅಂಶಗಳನ್ನು ಸಚಿವ ಸಂಪುಟದ ಉಪ ಸಮಿತಿಯು ಪರಿಶೀಲಿಸಿ ತನ್ನ ವರದಿಯನ್ನು ಸಚಿವ ಸಂಪುಟಕ್ಕೆ ಸಲ್ಲಿಸಿರುತ್ತದೆ. ಸಚಿವ ಸಂಪುಟದ ಉಪ ಸಮಿತಿಯು ಸಲ್ಲಿಸಿರುವ ವರದಿಯಲ್ಲಿನ ಶಿಫಾರಸ್ಸುಗಳು ಈ ಕೆಳಕಂಡಂತಿದೆ :-

Decision/ Recommendation

1. As per the recommendations of the High Level Committee, the report of Endowment Commissioner dated:10.03.2010 to be rejected.

2. Having regard to the above it is decided to recommend that the same practices shall continue to be followed which would be in due compliance of the Hon'ble High court single Bench order dated:14.02.2007 in clubbing writ petition nos.38148/2000, 4262/2002 & 43621/2003 as noticed below:-

(1) "There is a Muzwar appointed by the Shah Khadri to perform daily rites (Pooja) inside the cave and he alone enters inside the sanctum-sanctorum of the institutions and distributes Tabaru/ Theertha to the devotees of both communities;

(2) He alone puts flowers to the Paduka/ Khadave/ lits the Nanda Deepa;

(3) The recognized Hindu Gurus of different mutts are also taken inside the cave gate to offer their respects to the Paduka/ Khadava;

(4) Persons who do not take food prepared in the Langarkhana are given ''padi' i.e., the provisions like Rice, Dhal etc., for preparing their food;

(5) the Muzawar takes Lobana (Sambrani) and perform religious rituals inside the main shrine between 7 pm and 8 pm daily;

(6) The above practices include certain practices which are found in Hindu temples also, such as;

i. offering of flowers to Padukas

ii. lighting of Nanda Deepa

iii. giving theerta to pilgrims

iv. breaking of coconuts

v. taking Hindu Gurus of religious mutts with respect'

vi. giving padi to the pilgrims"

ಸಚಿವ ಸಂಪುಟದ ಉಪ ಸಮಿತಿಯು ನೀಡಿರುವ ವರದಿಯಲ್ಲಿನ ಅಂಶಗಳ ಕುರಿತು ದಿನಾಂಕ:03.03.2018ರಂದು ನಡೆದ ಸಚಿವ ಸಂಪುಟದ ಸಭೆ ಮುಂದೆ ಮಂಡಿಸಲಾಗಿದ್ದು, ಈ ಬಗ್ಗೆ ಸಚಿವ ಸಂಪುಟದ ಸಭೆಯಲ್ಲಿ ಚರ್ಚಿಸಿ, ಉನ್ನತ ಮಟ್ಟದ ಸಮಿತಿಯು ಸಲ್ಲಿಸಿರುವ ವರದಿಯಲ್ಲಿನ ಅಂಶಗಳ ಕುರಿತು ಚರ್ಚಿಸಿ, ಅಂತಿಮ ನಿರ್ಣಯ ಕೈಗೊಂಡಿರುತ್ತದೆ.

ಅದರಂತೆ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 14 ಮುದಾಪ್ರ 2009, ಬೆಂಗಳೂರು; ದಿನಾಂಕ: 19ನೇ ಮಾರ್ಚ್, 2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಚಿಕ್ಕಮಗಳೂರು ಜಿಲ್ಲೆ, ಬಾಬಾ ಬುಡನ್ ಗಿರಿಯಲ್ಲಿರುವ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಈ ಸಂಸ್ಥೆಗೆ ಸಂಬಂಧಿಸಿದಂತೆ ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಇವರು ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ದಿನಾಂಕ:10.03.2010ರ ವಿಚಾರಣಾ ವರದಿಯನ್ನು ಸರ್ಕಾರವು ತಿರಸ್ಕರಿಸಿದೆ.

೫೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧

ಮುಂದುವರೆದು ಶ್ರೀ ಗುರು ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಈ ಕ್ಷೇತ್ರದಲ್ಲಿ ಚಾಲ್ತಿಯಲ್ಲಿದ್ದ ಪೂಜಾ ಸ್ಥಳಗಳ (ವಿಶೇಷ ನಿಬಂದನೆಗಳು) ಅಧಿನಿಯಮ 1991 (1991ರ ಕೇಂದ್ರ ಅಧಿನಿಯಮ 42)ರನ್ವಯ 15ನೇ ಆಗಸ್ಟ್ 1947ರಲ್ಲಿ ಆಚರಿಸಲಾಗುತ್ತಿದ್ದ ಧಾರ್ಮಿಕ ಪದ್ದತಿಗಳ ಸ್ವರೂಪ ಮತ್ತು ಗುಣಲಕ್ಷಣಗಳನ್ನು ಅಂದರೆ ಕೆಳಕಂಡ ವಿಧಿ-ವಿಧಾನಗಳನ್ನು ಮುಂದುವರೆಸತಕ್ಕದ್ದು.

1. ದತ್ತ ಪೀಠದ ಪೂಜಾ ವಿಧಿ ವಿಧಾನಕ್ಕೆ ಸಂಬಂಧಪಟ್ಟ ಶಾಖಾದ್ರಿಯವರಿಂದ ನೇಮಿಸಲ್ಪಟ್ಟ ಮುಜಾವರ್ ಒಬ್ಬರೇ ಗುಹೆಯ ಗರ್ಭಗುಡಿಯೊಳಗೆ ಪ್ರವೇಶಿಸಿ ಹಿಂದೂ ಮತ್ತು ಮುಸ್ಲಿಂ ಎರಡೂ ಕೋಮಿನ ಭಕ್ತರಿಗೆ ತೀರ್ಥ ವಿತರಿಸಬೇಕು.

2. ಸದರಿ ಮುಜಾವರ್ ಮಾತ್ರ ಗರ್ಭಗುಡಿಯಲ್ಲಿ ಪಾದುಕೆಗೆ ಪುಷ್ಪ ಅರ್ಪಿಸಿ ನಂದಾದೀಪ ಹಚ್ಚಬೇಕು.

3. ಹಿಂದೂ ಧರ್ಮದ ಮಠಾಧಿಪತಿಗಳು/ಸಾಧು ಸಂತರನ್ನು ಕೂಡಾ ಕರೆದೊಯ್ದು ಗುಹೆಯ ಒಳಗೆ ಪ್ರವೇಶಿಸಿ ಪಾದುಕೆಗಳಿಗೆ ಗೌರವ ಸಲ್ಲಿಸಲು ಅವಕಾಶ ಮಾಡಿಕೊಡುವುದು.

4. ಲಂಗರಖಾನದಲ್ಲಿ ಪ್ರಸಾದ ಸ್ವೀಕರಿಸದ ಭಕ್ತಾದಿಗಳಿಗೆ ಅಕ್ಕಿ ಬೇಳೆ ಇತ್ಯಾದಿ ಪಡಿ ನೀಡುವ ಪದ್ದತಿ ಜಾರಿಯಲ್ಲಿರುತ್ತದೆ.

5. ಸದರಿ ಮುಜಾವರರು ಧಾರ್ಮಿಕ ಸ್ಥಳದಲ್ಲಿ ಪ್ರತಿದಿನ ಸಂಜೆ 07-00 ರಿಂದ ರಾತ್ರಿ 8-00 ಗಂಟೆ ಒಳಗೆ ಲೋಬಾನ ಹಾಕುವುದು ಮತ್ತು ಧಾರ್ಮಿಕ ಆಚರಣೆ ಮಾಡಬೇಕು.

6. ಮೇಲ್ಕಂಡ ಧಾರ್ಮಿಕ ವಿಧಿ-ವಿಧಾನಗಳು ಸೇರಿದಂತೆ ಹಿಂದೂ ದೇವಾಲಯಗಳಲ್ಲಿ ಆಚರಣೆಯಲ್ಲಿರುವಂತಹ;

 ಪಾದುಕೆಗಳಿಗೆ ಪುಷ್ಪ ಅರ್ಪಿಸುವುದು

 ನಂದಾದೀಪ ಬೆಳಗಿಸುವುದು

 ಭಕ್ತರಿಗೆ ತೀರ್ಥ ನೀಡುವುದು

 ಕಾಯಿ ಹೊಡೆಯುವುದು

 ಹಿಂದೂ ಗುರುಗಳನ್ನು ಮರ್ಯಾದೆಯಿಂದ ಗುಹೆಯೊಳಗೆ ಪ್ರವೇಶಿಸುವುದಕ್ಕೆ ಅನುವು ಮಾಡುವುದು

 ಯಾತ್ರಾರ್ಥಿಗಳಿಗೆ ಪಡಿ ನೀಡುವುದು. - ಈ ಧಾರ್ಮಿಕ ವಿಧಿ-ವಿಧಾನಗಳೂ ಕೂಡ ಒಳಗೊಂಡಿರುತ್ತವೆ.

7. ಸದರಿ ಸಂಸ್ಥೆಯನ್ನು wakf ಆಸ್ತಿ ಅಲ್ಲವೆಂದು, ಮುಜರಾಯಿ ಇಲಾಖೆಯ ಒಂದು ಸಂಸ್ಥೆ ಎಂದು ಘೋಷಿಸಿದೆ.

8. ಒಂದು ವೇಳೆ, ಸಜ್ಜದಾ ನಶೀನ್ ಆಗಿದ್ದ ಶಾಖಾದ್ರಿಯವರು ದೇವಾಲಯದಲ್ಲಿ ಸರಿಯಾಗಿ ಮೇಲಿನ ಕರ್ತವ್ಯ ನಿರ್ವಹಿಸದೇ, ನಿರ್ಲಕ್ಷತೆ ತೋರಿದರೆ ಅಥವಾ ಸಂಸ್ಥೆಯ ಆದಾಯ ಅಥವಾ ಆಸ್ತಿಯ ದುರ್ಬಳಕೆ ಮಾಡಿದಲ್ಲಿ ಅಥವಾ ಆಡಳಿತ ನಿರ್ವಹಣೆಯಲ್ಲಿ ವಿಫಲರಾದಲ್ಲಿ ಇವರ ವಿರುದ್ದ ಧಾರ್ಮಿಕ ದತ್ತಿ ಇಲಾಖೆಯು ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಲು ಸಕ್ಷಮ ಪ್ರಾಧಿಕಾರವಾಗಿರುತ್ತದೆ.

PR. 247

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ಎಸ್. ನಾಗರತ್ನಮ್ಮ

SC.26

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಮುಜರಾಯಿ)

ಆರ್ಥಿಕ ಸಚಿವಾಲಯ

ಸೇರ್ಪಡೆ

ಸಂಖ್ಯೆ: ಆಇ 16 ರಾಲೆಪ 2018, ಬೆಂಗಳೂರು, ದಿನಾಂಕ: 16.3.2018.

ಸರ್ಕಾರದ ಅಧಿಸೂಚನೆ ಸಂಖ್ಯೆ. ಆಇ 369 ರಾಲೆಪ 2017, ದಿನಾಂಕ: 25.01.2018ರಲ್ಲಿನ ನೇಮಕಾತಿ ಷರತ್ತು ಮತ್ತು ನಿಬಂಧನೆಗಳ ಕ್ರಮ ಸಂಖ್ಯೆ. 12ರ ನಂತರ "ಕ್ರಮ ಸಂಖ್ಯೆ.13: ಕ್ರಮ ಸಂಖ್ಯೆ.33ರಲ್ಲಿನ ಶ್ರೀ ಗಂಗಾಧರ್ ಸಿ. ಸಹಾಯಕ ನಿಯಂತ್ರಕರು (ಪರೀಕ್ಷಾರ್ಥ) ಇವರ ಆಯ್ಕೆ ಮತ್ತು ನೇಮಕಾತಿಯು ಕೆ.ಎ.ಟಿ ಅರ್ಜಿ ಸಂಖ್ಯೆ.6895/2017ರ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ" ಎಂದು ದಿನಾಂಕ: 25.01.2018ರಿಂದಲೇ ಜಾರಿಗೆ ಬರುವಂತೆ ಸೇರ್ಪಡೆ ಮಾಡಿ ಓದಿಕೊಳ್ಳತಕ್ಕದ್ದು.

PR. 248

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ. ಶಶಿಧರ್

SC. 28

ಸರ್ಕಾರದ ಅದೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಆಡಳಿತ & ಮುಂಗಡ)

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ವಿಷಯ:- ದೊಡ್ಡಬಳ್ಳಾಪುರ ತಾಲ್ಲೂಕು, ಮಧುರೆ ಹೋಬಳಿ, ಕೋಡಿಹಳ್ಳಿ ಗ್ರಾಮದ ಸರ್ವೆ ನಂ. 101 ರ 45 ಎಕರೆ ವಿರ್ಸ್ತೀಣವುಳ್ಳ ಜಮೀನಿನ ಪೈಕಿ 10 ಎಕರೆ ಭೂಮಿಯನ್ನು ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್‌ರವರಿಗೆ ಭೋಗ್ಯ/ಗುತ್ತಿಗೆ ಆಧಾರದಲ್ಲಿ ಒದಗಿಸುವ ಬಗ್ಗೆ

ಓದಲಾಗಿದೆ:- 1). ಸರ್ಕಾರದ ಆದೇಶ ಸಂಖ್ಯೆ: ಎಎಫ್: 4240-45/ಎಹೆಚ್-188-48-49, ದಿನಾಂಕ: 25.01.1949


  1. . ಸರ್ಕಾರದ ಆದೇಶ ಸಂಖ್ಯೆ: ಎಎಫ್/21/ವಿಎಲ್ಎಸ್/71, ದಿನಾಂಕ: 28.01.1972 ↩
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೨೭

3). ಸರ್ಕಾರದ ಆದೇಶ ಸಂಖ್ಯೆ: ಡಿಡಿಪಿಇಆರ್ 73 ಎಆರ್‌ಯು 2003, ದಿನಾಂಕ: 13.11.2003

4). ಸರ್ಕಾರದ ಆದೇಶ ಸಂಖ್ಯೆ: ವಾಪ್ರಯು 104 ಪಿಐಎಫ್ 2003 (ಭಾ), ದಿನಾಂಕ: 13.01.2006

5). ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 05 ಅಮಭೂ 2005, ದಿನಾಂಕ: 22.04.2015

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಸರ್ಕಾರದ ಆದೇಶದನ್ವಯ ದೊಡ್ಡಬಳ್ಳಾಪುರ ತಾಲ್ಲೂಕು, ಮಧುರೆ ಹೋಬಳಿ, ಕೋಡಿಹಳ್ಳಿ ಗ್ರಾಮದ ಸರ್ವೆ ನಂ: 82,83,92,93,95,97,98,100 ಹಾಗೂ 101 ರ ಒಟ್ಟು 347.12 ಎಕರೆ ಗೋಮಾಳ ಜಮೀನನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಗೆ ಹುಲ್ಲುಗಾವಲು ಅಭಿವೃದ್ದಿ ಮಾಡಿ ಉಪಯೋಗಿಸುವಂತೆ ಆದೇಶ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ದಿ ನಿಗಮ [ಕೆಎಫ್ಐಡಿಸಿ] ಸಂಸ್ಥೆಗೆ 99 ವರ್ಷಗಳಿಗೆ ನಿಬಂಧನೆ ಮತ್ತು ಷರತ್ತಿಗೆ ಒಳಪಟ್ಟು [ಕರಾರು ಪತ್ರದ ದಿನಾಂಕ: 04.02.1972] ಭೋಗ್ಯಕ್ಕೆ ನೀಡಿದ್ದು ರಾಜ್ಯ ಚಲನಚಿತ್ರ ಉದ್ಯಮದ ಸ್ಥಾಪನೆ ಮತ್ತು ಅಭಿವೃದ್ದಿಗಾಗಿ ನೀಡಲಾಗಿತ್ತು. ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ದಿ ನಿಗಮವು ಭೋಗ್ಯ/ಗುತ್ತಿಗೆ ಕರಾರು ಒಪ್ಪಂದದ ನಿಬಂಧನೆ ಮತ್ತು ಷರತ್ತುಗಳನ್ನು ಮೀರಿ ತನ್ಮೂಲಕ 10 ಎಕರೆ ಭೂಮಿಯನ್ನು ಆದರ್ಶ ಚಲನಚಿತ್ರ ಮತ್ತು ದೂರದರ್ಶನ ತರಬೇತಿ ಕೇಂದ್ರಕ್ಕೆ ದಿನಾಂಕ: 17.11.1984 ರಂದು, 10 ಎಕರೆ ಭೂಮಿಯನ್ನು ಒಡ್ಡಿಸ್ಸಿ ನೃತ್ಯ ಕೇಂದ್ರದ ಟ್ರಸ್ಟ್‌ಗೆ ದಿನಾಂಕ: 19.11.1987 ರಂದು ಮತ್ತು 25 ಎಕರೆ ಭೂಮಿಯನ್ನು ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆರವರಿಗೆ ದಿನಾಂಕ: 09.04.1997 ರಂದು 30 ವರ್ಷಗಳ ಅವಧಿಗೆ ಉಪ ಭೋಗ್ಯ/ ಗುತ್ತಿಗೆ ಮೇಲೆ ನೀಡಿರುತ್ತದೆ.

ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ದಿ ನಿಗಮವನ್ನು ನಿರಂತರ ನಷ್ಟ ಮತ್ತು ಚಲನಚಿತ್ರ ಕೇಂದ್ರಗಳನ್ನು ಅಭಿವೃದ್ದಿ ಪಡಿಸುವ ಸಾಮರ್ಥ್ಯದ ಕೊರತೆಯಿಂದಾಗಿ ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ಆದೇಶದನ್ವಯ ಬರಕಾಸ್ತುಗೊಳಿಸಲಾಗಿರುತ್ತದೆ ಮತ್ತು ಸದರಿ ಭೂಮಿಯನ್ನು ಸರ್ಕಾರದ ಅಂತಿಮ ತೀರ್ಮಾನವನ್ನು ಕಾಯ್ದಿರಿಸಿ, ಕ್ರಮ ಸಂಖ್ಯೆ (4) ರ ಆದೇಶದನ್ವಯ ತಾತ್ಕಲಿಕವಾಗಿ ಕಂpೕರವ ಸ್ಟ್ಟುಡಿಯೋ ಆಡಳಿತದ ಸುಪರ್ದಿಗೆ ನೀಡಲಾಗಿರುತ್ತದೆ.

ಕಾರ್ಯದರ್ಶಿ, ಕನ್ನಡ ಸಂಸ್ಕøತಿ ಮತ್ತು ವಾರ್ತಾ ಇಲಾಖೆ, ರವರ ಅಧ್ಯಕ್ಷತೆಯ ಸಮಿತಿಯು ಈ ಪ್ರದೇಶವನ್ನು ರಾಮೋಜಿ ಫಿಲ್ಮ ಸಿಟಿ, ಹೈದರಾಬಾದ್ ಮಾದರಿಯಲ್ಲಿ ಘೋಷಿತ ಉದ್ಯಾನವನವನ್ನಾಗಿ ಅಭಿವೃದ್ದಿ ಪಡಿಸಲು ನಿರ್ಧರಿಸಿದ್ದು, ಈ ನಿರ್ಧಾರವನ್ನು ಪ್ರಶ್ನಿಸಿ ಆರ್ಕಾವತಿ, ಕುಮುದ್ವತಿ ಜಲಾನಯನ ಪ್ರದೇಶದ ಆರ್ಕಾವತಿ, ಕುಮುದ್ವತಿ ನದಿ ಪುನಶ್ಚೇತನ ಸಮಿತಿ ರಿಟ್ ಅರ್ಜಿ ಸಂಖ್ಯೆ: [ಪಿಐಎಲ್] 45759 / 2012, ದಿನಾಂಕ: 13.02.2012 ರಂದು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿರುತ್ತದೆ ಮತ್ತು ಸದರಿ ದಾವೆಯಲ್ಲಿ ಅಡಿಷನಲ್ ಅಡ್ವೋಕೇಟ್ ಜನರಲ್ ರವರ "ಕರ್ನಾಟಕ ಸರ್ಕಾರವು ಅಂತಿಮ ತೀರ್ಮಾನ ಕೈಗೊಳ್ಳುವವರೆಗೆ ಯಥಾಸ್ಥಿತಿ ಕಾಪಾಡಲಾಗುವುದು" ಎಂಬ ಹೇಳಿಕೆಯನ್ನು ಆಧರಿಸಿ ಗೌರವನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ: 05.01.2016 ರಂದು ರಿಟ್ ಅರ್ಜಿಯನ್ನು ವಜಾಗೊಳಿಸಿರುತ್ತದೆ.

ದಿನಾಂಕ: 27.03.2015 ರಂದು ಸಚಿವ ಸಂಪುಟವು ತೆಗೆದುಕೊಂಡ ನಿರ್ಣಯದಂತೆ ರಾಜ್ಯ ಸರ್ಕಾರವು ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ದಿ ನಿಗಮದ ಭೋಗ್ಯ ಕರಾರು ಒಪ್ಪಂದವನ್ನು ಕ್ರಮ ಸಂಖ್ಯೆ (5) ರ ಆದೇಶದನ್ವಯ ರದ್ದುಗೊಳಿಸಿದ್ದು, ಸಂಪೂರ್ಣ 347.12 ಎಕರೆ ಭೂಮಿಯನ್ನು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಹಿಂಪಡೆಯಲು ಆದೇಶಿಸಿರುತ್ತದೆ ಮತ್ತು ಸಂಪೂರ್ಣ ಭೂಮಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಿರಂತರ ಪಶುಸಂಗೋಪನಾ ಚಟುವಟಿಕೆಗಳಿಗಾಗಿ ಅಭಿವೃದ್ದಿ ಪಡಿಸಲು ಆದೇಶಿಸಿರುತ್ತದೆ ಹಾಗೂ ಒಡಿಸ್ಸಿ ನೃತ್ಯ ಕೇಂದ್ರ ಟ್ರಸ್ಟ್, ತಾಂತ್ರಿಕ ಶಿಕ್ಷಣ ಇಲಾಖೆ, ಉಪಭೋಗ್ಯ ಒಪ್ಪಂದ ರದ್ದುಗೊಳಿಸಿ ಮತ್ತು ಆದರ್ಶ ಚಲನಚಿತ್ರ ಕೇಂದ್ರವನ್ನು ತಕ್ಷಣದಿಂದ ತೆರವುಗೊಳಿಸಲು ಆದೇಶಿಸಿರುತ್ತದೆ.

ಅದರಂತೆ ಉಪ ನಿರ್ದೇಶಕರು, ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಹೆಸರಘಟ್ಟ ರವರು ಸಕ್ಷಮ ಅಧಿಕಾರಿಯಾಗಿ ಕಂpೕರವ ಸ್ಟುಡಿಯೋ ಇವರ ಸುಪರ್ದಿನಲ್ಲಿದ್ದ ಪೂರ್ಣ 347.12 ಎಕರೆ ಭೋಗ್ಯ/ಗುತ್ತಿಗೆ ಒಪ್ಪಂದದ ಭೂಮಿಯನ್ನು ಪಶುಪಾಲನಾ ಇಲಾಖೆಯ ಸುಪರ್ದಿಗೆ ತೆಗೆದುಕೊಂಡು, ಪಹಣಿ [ಆರ್.ಟಿ.ಸಿ] ಯನ್ನು ಇಲಾಖೆಯ ಹೆಸರಿಗೆ ಪಡೆದುಕೊಂಡಿರುತ್ತಾರೆ ಮತ್ತು ಒಡಿಸ್ಸಿ ನೃತ್ಯ ಕೇಂದ್ರದ ಭೋಗ್ಯ/ಗುತ್ತಿಗೆ ಕರಾರನ್ನು ದಿನಾಂಕ: 20.09.2016 ರಂದು ರದ್ದುಗೊಳಿಸಿರುತ್ತಾರೆ ಮತ್ತು ದಿನಾಂಕ: 04.10.2016 ರಂದು ತೆರವುಗೊಳಿಸಲು ನೋಟಿಸು ನೀಡಿರುತ್ತಾರೆ. ಉಪ ನಿರ್ದೇಶಕರ ತೆರವು ನೋಟಿಸಿಗೆ ಪ್ರತ್ಯುತರವಾಗಿ ಒಡಿಸ್ಸಿ ನೃತ್ಯ ಕೇಂದ್ರ ಟ್ರಸ್ಟ್ ರಿಟ್ ಅರ್ಜಿ ಸಂಖ್ಯೆ: 54708 / 2016 [ಜಿಎಂ- ಆರ್ಇಎಸ್] ನ್ನು ಉಚ್ಚ ನ್ಯಾಯಲಯದಲ್ಲಿ ದಾಖಲಿಸಿರುತ್ತದೆ ಮತ್ತು ಗೌರವನ್ವಿತ ಉಚ್ಚ ನ್ಯಾಯಲಯವು ದಿನಾಂಕ: 24.10.2016 ರಲ್ಲಿ ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 05 ಅಮಭೂ 2015, ದಿನಾಂಕ: 22.04.2015 ಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ನೀಡಿರುತ್ತದೆ. ಸದರಿ ರಿಟ್ ಅರ್ಜಿಯು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುತ್ತದೆ.

ಒಡಿಸ್ಸಿ ನೃತ್ಯ ಕೇಂದ್ರ ಟ್ರಸ್ಟ್, ಭೋಗ್ಯ ಕರಾರನ್ನು ಮುಂದುವರೆಸಲು ದಿನಾಂಕ: 20.10.2016 ರಂದು ಮನವಿ ಮಾಡಿದ್ದು, ಈ ಕುರಿತು ಆಡ್ವೋಕೇಟ್ ಜನರಲ್ ಅಭಿಪ್ರಾಯವನ್ನು ಕೋರಲಾಗಿ, ಆಡ್ವೋಕೇಟ್ ಜನರಲ್‌ರವರು ರಿಟ್ ಪಿಟಿಷನ್: 45759/2012 ಯು 302 ಎಕರೆ ಭೂಮಿಗೆ ಸಂಬಂಧಿಸಿದ್ದು, ಕೆಎಫ್ಐಡಿಸಿಯು ಉಪ ಭೋಗ್ಯ ನೀಡಿದ ಸ್ಥಳವನ್ನು ಹೊರತುಪಡಿಸಿರುವುದಾಗಿ ಅಭಿಪ್ರಾಯಿಸಿರುತ್ತಾರೆ ಮತ್ತು "ಭೂಮಿಯನ್ನು ಭೋಗ್ಯಕ್ಕೆ ಮಂಜೂರು ಮಾಡುವ ಕುರಿತು ರಾಜ್ಯ ಸರ್ಕಾರವೇ ನಿರ್ಧರಿಸಬೇಕಾಗಿರುತ್ತದೆ [ಆದರೆ ಇದು ಹೊಸ ಮಂಜೂರಾತಿಯಾಗಿರಬೇಕು], ಇದನ್ನು ಪರಿಗಣಿಸಿದ್ದಲ್ಲಿ, ಮುಂದುವರೆದ ನೀತಿ ರೂಪಿಸಲು, ಬೇರೆಯವರ ದೃಷ್ಟಿ ಕೋನಗಳನ್ನು ಗಮನದಲ್ಲಿರಿಸಿಕೊಂಡು ಆರ್ಕಾವತಿ ಮತ್ತು ಕುಮುದ್ವತಿ ನದಿಗಳ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯ ಸಂರಕ್ಷಣೆಯ ನೀತಿಯನ್ನು ರೂಪಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿರುತ್ತಾರೆ.

ಅದರನ್ವಯ ಭೂ ಉಪಯೋಗ ನೀತಿಯನ್ನು ರೂಪಿಸುವ ಕುರಿತು ಮತ್ತು ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್‌ರವರಿಗೆ 10 ಎಕರೆ ಭೂಮಿಯನ್ನು ಹೊಸದಾಗಿ ಗುತ್ತಿಗೆ ಆಧಾರದಲ್ಲಿ ನೀಡುವ ಕುರಿತಂತೆ ಸೂಕ್ತ ಆದೇಶಕ್ಕಾಗಿ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿದ್ದು, ಸಚಿವ ಸಂಪುಟವು ದಿನಾಂಕ: 22.03.2018 ರಂದು ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ (ನೃತ್ಯಗ್ರಾಮ) ಇವರಿಗೆ ಈಗಾಗಲೇ ಉಪಗುತ್ತಿಗೆ ಆಧಾರದ ಮೇಲೆ ನೀಡಲಾದ ಹತ್ತು ಎಕರೆ ಜಮೀನಿನ ಗುತ್ತಿಗೆ ಅವಧಿಯನ್ನು ಮೂವತ್ತು ವರ್ಷಗಳ ಅವಧಿಗೆ ವಾರ್ಷಿಕ ಪ್ರತಿ ಎಕರೆಗೆ ರೂ. 10,000/- ದಂತೆ ನಿಗದಿಪಡಿಸಿ ಮುಂದುವರೆಸಲು ನಿರ್ಧರಿಸಿರುತ್ತದೆ.

೫೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧

ಸಚಿವ ಸಂಪುಟದ ನಿರ್ಣಯದಂತೆ, ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ (ನೃತ್ಯಗ್ರಾಮ), ಹೆಸರಘಟ್ಟ ಇವರಿಗೆ ಈಗಾಗಲೇ ಉಪಗುತ್ತಿಗೆ ಆಧಾರದ ಮೇಲೆ ನೀಡಲಾದ ಹತ್ತು ಎಕರೆ ಜಮೀನಿನ ಗುತ್ತಿಗೆ ಅವಧಿಯನ್ನು ಮೂವತ್ತು ವರ್ಷಗಳ ಅವಧಿಗೆ ವಾರ್ಷಿಕ ಪ್ರತಿ ಎಕರೆಗೆ ರೂ. 10,000/- ದಂತೆ ನಿಗದಿಪಡಿಸಿ ಮುಂದುವರೆಸಲು ತೀರ್ಮಾನಿಸಲಾಗಿದೆ. ಅದರಂತೆ, ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಪಸಂಮೀ 05 ಅಮಭೂ 2005, ಬೆಂಗಳೂರು, ದಿನಾಂಕ: 26.03.2018

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸಚಿವ ಸಂಪುಟದ ನಿರ್ಣಯದಂತೆ ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ (ನೃತ್ಯಗ್ರಾಮ), ಹೆಸರಘಟ್ಟ ಇವರಿಗೆ ಈಗಾಗಲೇ ಉಪಗುತ್ತಿಗೆ ಆಧಾರದ ಮೇಲೆ ನೀಡಲಾದ ಹತ್ತು ಎಕರೆ ಜಮೀನಿನ ಗುತ್ತಿಗೆ ಅವಧಿಯನ್ನು ಮೂವತ್ತು ವರ್ಷಗಳ ಅವಧಿಗೆ ವಾರ್ಷಿಕ ಪ್ರತಿ ಎಕರೆಗೆ ರೂ. 10,000/- ದಂತೆ ನಿಗದಿಪಡಿಸಿ ಮುಂದುವರೆಸಿ ಆದೇಶಿಸಲಾಗಿದೆ ಮತ್ತು ಈ ಕುರಿತು ಷರತ್ತು ಮತ್ತು ನಿಬಂಧನೆಗಳನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು. ಸದರಿ ಆದೇಶವನ್ನು ಕರ್ನಾಟಕ ಸರ್ಕಾರದ (ಕಾರ್ಯ ಕಲಾಪಗಳ ನಿರ್ವಹಣೆ) ನಿಯಮಗಳು-1977ರ ಕಂಡಿಕೆ-16 ರ (ii) ರನ್ವಯ ಹೊರಡಿಸಲಾಗಿದೆ.

PR.249

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC.100

ಟಿ. ಹನುಮಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ,

(ಪಶುಸಂಗೋಪನೆ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಸಿಆಸುಇ 14 ಪಿಆರ್‌ಬಿ 2017, ಬೆಂಗಳೂರು, ದಿನಾಂಕ: 20.12.2017

PR. 250

ಕೆ.ಎಸ್ ರೋಹಿಣಿ

ಸರ್ಕಾರದ ಅದೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ)

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ವಿಷಯ: 2017-18 ನೇ ಸಾಲಿನ 'ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ' ನೀಡಲು ಆಯ್ಕೆ ಸಮಿತಿ ರಚಿಸುವ ಕುರಿತು

ಪ್ರಸ್ತಾವನೆ:

ಕರ್ನಾಟಕ ಸರ್ಕಾರವು ವಿಶ್ವ ಪರಿಸರ ದಿನಾಚರಣೆಯಂದು ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಜೀವಿಪರಿಸ್ಥಿತಿ ಮತ್ತು ಪರಿಸರ ವಿಭಾಗದಿಂದ ಪ್ರತಿ ವರ್ಷ ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ ಹಾಗೂ ಸಂಸ್ಥೆ (ಸರ್ಕಾರಿ/ಸರ್ಕಾರೇತರ, ಕಂಪನಿಗಳು, ಟ್ರಸ್ಟ್‌ಗಳು ಹಾಗೂ ಇತರೆ) ಗಳಿಗೆ ತಲಾ `. 1.00 ನಗದು ಹಾಗೂ ಪ್ರಶಸ್ತಿ ಪ್ರಮಾಣ ಪತ್ರವನ್ನೊಳಗೊಂಡ ರಾಜ್ಯ ಪರಿಸರ ಪ್ರಶಸ್ತಿ ನೀಡಲಾಗುತ್ತದೆ. ಅದೇ ರೀತಿಯಾಗಿ 2017-18 ನೇ ಸಾಲಿನ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿಗಾಗಿ ಅರ್ಹ ವ್ಯಕ್ತಿ ಹಾಗೂ ಸಂಸ್ಥೆಗಳಿಂದ ಅರ್ಜಿ/ನಾಮ ನಿರ್ದೇಶನಗಳನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಗಳನ್ನು ರಾಜ್ಯದ ಮಲೆನಾಡು/ಕರಾವಳಿ ವಲಯ (ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು. ಮೈಸೂರು, ಕೊಡಗು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳು), ದಕ್ಷಿಣ ವಲಯ (ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳು) ಮತ್ತು ಉತ್ತರ ವಲಯ (ದಾವಣಗೆರೆ, ಚಿತ್ರದುರ್ಗ, ಹಾವೇರಿ, ಧಾರವಾಡ, ಗದಗ, ಬಳ್ಳಾರಿ, ಬಾಗಲಕೋಟೆ, ವಿಜಯಪುರ ಬೀದರ್, ಕಲ್ಬುರ್ಗಿ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳು) ಎಂದು ಮೂರು ವಲಯಗಳಾಗಿ ವಿಂಗಡಿಸಲಾಗಿದ್ದು, ಈ ವಲಯಗಳಲ್ಲಿನ ತಲಾ ಒಬ್ಬ ವ್ಯಕ್ತಿ ಮತ್ತು ಒಂದು ಸಂಸ್ಥೆಯನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು.

ಸರ್ಕಾರದ ಪ್ರಕಟಣೆಯಂತೆ ಸ್ವೀಕೃತವಾಗುವ ಅರ್ಜಿ/ನಾಮನಿರ್ದೇಶನಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ, ಪರಿಸರ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೇಲ್ಕಂಡ ವಲಯಗಳ ಒಬ್ಬ ವ್ಯಕ್ತಿ ಮತ್ತು ಒಂದು ಸಂಸ್ಥೆಯನ್ನು ಗುರುತಿಸಿ, ಪ್ರಶಸ್ತಿಗಾಗಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಈ ಕೆಳಕಂಡ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ರಚಿಸಲು ಉದ್ದೇಶಿಸಲಾಗಿದೆ.

1) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ - ಅಧ್ಯಕ್ಷರು 2) ಸರ್ಕಾರದ ಕಾರ್ಯದರ್ಶಿ

ಜೀವಿ ಪರಿಸ್ಥಿತಿ ಮತ್ತು ಪರಿಸರ

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ) - ಸದಸ್ಯರುಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೨೯ 3) ಸರ್ಕಾರದ ಕಾರ್ಯದರ್ಶಿ (ಅರಣ್ಯ)

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ - ಸದಸ್ಯರು 4) ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ,

(ಮುಖ್ಯಸ್ಥರು ಅರಣ್ಯಪಡೆ), ಬೆಂಗಳೂರು - ಸದಸ್ಯರು 5) ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ,

(ವನ್ಯಜೀವಿ), ಬೆಂಗಳೂರು - ಸದಸ್ಯರು 6) ಅಧ್ಯಕ್ಷರು,

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ - ಸದಸ್ಯರು 7) ಸದಸ್ಯ ಕಾರ್ಯದರ್ಶಿ

ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಬೆಂಗಳೂರು - ಸದಸ್ಯರು 8) ಮಹಾ ನಿರ್ದೇಶಕರು, ಪರಿಸರ ನಿರ್ವಹಣೆ ಮತ್ತು

ನೀತಿ ಸಂಶೋಧನಾ ಸಂಸ್ಥೆ, ಬೆಂಗಳೂರು - ಸದಸ್ಯರು 9) ವಿಶೇಷ ನಿರ್ದೇಶಕರು (ತಾಂತ್ರಿಕ ಕೋಶ)

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ - ಸದಸ್ಯ ಕಾರ್ಯದರ್ಶಿ

ಅದರಂತೆ ಈ ಕೆಳಕಂಡ ಆದೇಶ

ಸರ್ಕಾರಿ ಆದೇಶ ಸಂಖ್ಯೆ: ಅಪಜೀ 03 ಇಎನ್‌ಜಿ 2018 ಬೆಂಗಳೂರು, ದಿನಾಂಕ: 26.03.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪರಿಸರ ಸಂರಕ್ಷಣೆ ಮತ್ತು ವ್ಯವಸ್ಥಾಪನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ವ್ಯಕ್ತಿ/ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರವು ವಿಶ್ವ ಪರಿಸರ ದಿನಾಚರಣೆಯಂದು ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ವತಿಯಿಂದ ನೀಡಲಾಗುವ 2017-18 ನೇ ಸಾಲಿನ ರಾಜ್ಯ ಪರಿಸರ ಪ್ರಶಸ್ತಿಗಳನ್ನು ನೀಡುವ ಸಲುವಾಗಿ ಅರ್ಹ ವ್ಯಕ್ತಿ/ಸಂಸ್ಥೆಗಳಿಂದ ಸ್ವೀಕರಿಸಲಾದ ಅರ್ಜಿ/ನಾಮ ನಿರ್ದೇಶನಗಳನ್ನು ನಿಯಮಾನುಸಾರ ಪರಿಶೀಲಿಸಿ ಪ್ರಶಸ್ತಿಗಾಗಿ ಸರ್ಕಾರಕ್ಕೆ ಸಂಭಾವ್ಯ ಪುರಸ್ಕøತರ ಹೆಸರನ್ನು ಶಿಫಾರಸ್ಸು ಮಾಡಲು ಈ ಕೆಳಕಂಡ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.

1) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ,

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ - ಅಧ್ಯಕ್ಷರು

2) ಸರ್ಕಾರದ ಕಾರ್ಯದರ್ಶಿ

(ಜೀವಿ ಪರಿಸ್ಥಿತಿ ಮತ್ತು ಪರಿಸರ)

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ - ಸದಸ್ಯರು

3) ಸರ್ಕಾರದ ಕಾರ್ಯದರ್ಶಿ (ಅರಣ್ಯ)

ಅರಣ್ಯ, ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆ - ಸದಸ್ಯರು

4) ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ,

(ಮುಖ್ಯಸ್ಥರು ಅರಣ್ಯ ಪಡೆ), ಬೆಂಗಳೂರು - ಸದಸ್ಯರು

5) ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ,

(ವನ್ಯಜೀವಿ), ಬೆಂಗಳೂರು - ಸದಸ್ಯರು

6) ಅಧ್ಯಕ್ಷರು,

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ - ಸದಸ್ಯರು

7) ಸದಸ್ಯ ಕಾರ್ಯದರ್ಶಿ

ಕರ್ನಾಟಕ ಜೀವ ವೈವಿಧ್ಯ ಮಂಡಳಿ, ಬೆಂಗಳೂರು - ಸದಸ್ಯರು

8) ಮಹಾ ನಿರ್ದೇಶಕರು, ಪರಿಸರ ನಿರ್ವಹಣೆ ಮತ್ತು

ನೀತಿ ಸಂಶೋಧನಾ ಸಂಸ್ಥೆ, ಬೆಂಗಳೂರು - ಸದಸ್ಯರು

9) ವಿಶೇಷ ನಿರ್ದೇಶಕರು (ತಾಂತ್ರಿಕ ಕೋಶ)

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ - ಸದಸ್ಯ ಕಾರ್ಯದರ್ಶಿ

ಈ ಸಮಿತಿಯು ಪ್ರಸಕ್ತ ಸಾಲಿಗೆ ಮಾತ್ರ ಅನ್ವಯವಾಗಿದ್ದು, ತನ್ನ ಶಿಫಾರಸ್ಸುಗಳನ್ನು ಮೇ 2018 ರ ಅಂತ್ಯದೊಳಗಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದು PR. 251

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಹೆಚ್.ವಿ. ರಾಜೇಂದ್ರ ಕುಮಾರ್

SC.100

ಸರ್ಕಾರ ಅಧೀನ ಕಾರ್ಯದರ್ಶಿ,

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

೫೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ವಿಷಯ : ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು, 1977 ರಡಿ Intergrated Development of Logistics Sector ವಿಷಯವನ್ನು ಷೆಡ್ಯೂಲ್ - IV ವಾಣಿಜ್ಯ ಮತ್ತು

ಕೈಗಾರಿಕೆ ಇಲಾಖೆಯಡಿ ಸೇರ್ಪಡೆ ಮಾಡುವ ಬಗ್ಗೆ.

ಓದಲಾಗಿದೆ : ಕಾರ್ಯದರ್ಶಿ, ಭಾರತ ಸರ್ಕಾರ, ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯ,

ವಾಣಿಜ್ಯ ಇಲಾಖೆ, ನವದೆಹಲಿ ಇವರ ಅ.ಸ. ಪತ್ರ ಸಂಖ್ಯೆ: 57/Logistics/Doc/2018,

ದಿನಾಂಕ: 04.01.2018.

ಪ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ ಕಾರ್ಯದರ್ಶಿ, ಭಾರತ ಸರ್ಕಾರ, ವಾಣಿಜ್ಯ ಮತ್ತು ಕೈಗಾರಿಕಾ ಮಂತ್ರಾಲಯ, ವಾಣಿಜ್ಯ ಇಲಾಖೆ, ನವದೆಹಲಿ ಇವರು ಲಾಜಿಸ್ಟಿಕ್ ವಲಯ (Logistics Sector)ವು ದೇಶದ ವ್ಯಾಪಾರ ಮತ್ತು ಆರ್ಥಿಕತೆಯ ಬೆಳವಣಿಗೆಯಲ್ಲಿ ಬಹು ಮುಖ್ಯವಾದ ಪಾತ್ರವನ್ನು ನಿರ್ವಹಿಸುವುದರಿಂದ, ಈ ವಲಯವನ್ನು ಭಾರತ ಸರ್ಕಾರದ ಕೆಲಸಗಳ ಹಂಚಿಕೆ ನಿಯಮದಡಿ ವಾಣಿಜ್ಯ ಇಲಾಖೆ, ಭಾರತ ಸಕಾರ ವಿಷಯದಡಿ ಸೇರ್ಪಡೆ ಮಾಡಲಾಗಿದೆ ಎಂದು ತಿಳಿಸಿ, ರಾಜ್ಯ ಸರ್ಕಾರಗಳು ಸಹ ಲಾಜಿಸ್ಟಿಕ್ ವಲಯವನ್ನು ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳ:ಡಿ ಸೇರಿಸುವಂತೆ ಕೋರಿರುತ್ತಾರೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಸಿಐ 31 ಎಸ್‌ಪಿಐ 2018, ಬೆಂಗಳೂರು, ದಿನಾಂಕ: 02.03.2018

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ Integrated Development of Logistics Sector ವಿಷಯವನ್ನು ಕರ್ನಾಟಕ ಸರ್ಕಾರದ (ಕೆಲಸಗಳ ಹಂಚಿಕೆ) ನಿಯಮಗಳು, 1977ರ ಷೆಡ್ಯೂಲ್-IV ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿ (ಬೃಹತ್ ಮತ್ತು ಮಧ್ಯಮ ಕೈಗಾರಿಕೆ) ಸೇರ್ಪಡೆ ಮಾಡಲು ಆದೇಶಿಸಿದೆ.

PR. 252

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.50

ನಾಗರತ್ನಮ್ಮ. ಬಿ

ಪೀಠಾಧಿಕಾರಿ (ತಾಂತ್ರಿಕ ಕೋಶ),

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

ಕಂದಾಯ ಸಚಿವಾಲಯ

ವಿಷಯ : ಹರಪನಹಳ್ಳಿ ತಾಲ್ಲೂಕಿಗೆ ಅನುಚ್ಛೇದ 371ಜೆ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಹರಪನಹಳ್ಳಿ ತಾಲ್ಲೂಕನ್ನು ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯಡಿ ತರುವ ಬಗ್ಗೆ.

ಓದಲಾಗಿದೆ : ಹೈದ್ರಾಬಾದ್-ಕರ್ನಾಟಕ ವಿಶೇಷ ಕೋಶದ ಕಡತ ಸಂಖ್ಯೆ: ಸಿಆಸುಇ 22 ಹೈಕಕೋ 2013.

ಪ್ರಸ್ತಾವನೆ:

ಭಾರತೀಯ ಸಂವಿಧಾನಕ್ಕೆ ತರಲಾದ ತಿದ್ದುಪಡಿಯನ್ವಯ ಅನಚ್ಛೇದ 371ಜೆ ಸೇರ್ಪಡೆಯೊಂದಿಗೆ ಹೈದರಾಬಾದ್-ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿ ಬರುವಂತಹ ಬೀದರ, ಕಲಬುರಗಿ, ರಾಯಚೂರು, ಬಳ್ಳಾರಿ, ಯಾದಗಿರಿ ಮತ್ತು ಕೊಪ್ಪಳ ಜಿಲ್ಲೆಗಳು ಅನುಚ್ಛೇದ 371ಜೆ ನಂತೆ ವಿಶೇಷ ಸ್ಥಾನಮಾನ ಹೊಂದಿದ್ದು ಈ ಜಿಲ್ಲೆಗಳ ಆಡಳಿತ ವ್ಯಾಪ್ತಿಯಲ್ಲಿ ಬರುವಂತಹ ತಾಲ್ಲೂಕು, ಹೋಬಳಿ ಮತ್ತು ಗ್ರಾಮಗಳು ಅನುಚ್ಛೇದ 371ಜೆ ಯ ಎಲ್ಲಾ ಸವಲತ್ತುಗಳಿಗೆ ಅರ್ಹತೆ ಹೊಂದಿರುತ್ತವೆ.

ಮುಂದುವರೆದು, ಈ ಹಿಂದೆ ಬಳ್ಳಾರಿ ಜಿಲ್ಲೆಯ ಕಂದಾಯ ವ್ಯಾಪ್ತಿಗೆ ಒಳಪಟ್ಟಿದ್ದ ಹರಪನಹಳ್ಳಿ ತಾಲ್ಲೂಕನ್ನು ಜಿಲ್ಲೆಗಳ ಪುನರ್ ವಿಂಗಡಣೆ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಕಂದಾಯ ವ್ಯಾಪ್ತಿಯಲ್ಲಿ ತರಲಾಗಿರುತ್ತದೆ. ಆದರೆ ಹರಪನಹಳ್ಳಿ ತಾಲ್ಲೂಕು ಬಹಳ ಹಿಂದುಳಿದ ತಾಲ್ಲೂಕು ಎಂದು ಸದರಿ ತಾಲ್ಲೂಕನ್ನು ಈ ಹಿಂದೆ ಇದ್ದಂತೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಸೇರಿಸಿ ಅನುಚ್ಛೇದ 371ಜೆ ಸೌಲಭ್ಯಗಳನ್ನು ಸದರಿ ತಾಲ್ಲೂಕಿಗೂ ವಿಸ್ತರಿಸುವಂತೆ ಹಲವು ಮನವಿಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲ್ಲೂಕನ್ನು ಈ ಹಿಂದೆ ಇದ್ದಂತೆ ಬಳ್ಳಾರಿ ಜಿಲ್ಲೆ ವ್ಯಾಪ್ತಿಯಡಿಯಲ್ಲಿ ತರಲು ಸರ್ಕಾರವು ತೀರ್ಮಾನಿಸಿದೆ.

ಪ್ರಸ್ತಾವನೆಯನ್ನು ಕೂಲಂಕಶವಾಗಿ ಪರಿಶೀಲಿಸಿ ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 139 ಭೂದಾಪು 2013, ಬೆಂಗಳೂರು, ದಿನಾಂಕ: 21.03.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತುತ ದಾವಣಗೆರೆ ಜಿಲ್ಲೆಯಲ್ಲಿರುವ ಹರಪನಹಳ್ಳಿ ತಾಲ್ಲೂಕನ್ನು ದಾವಣಗೆರೆ ಜಿಲ್ಲೆಯಿಂದ ತೆಗೆದು ಈ ಹಿಂದೆ ಇದ್ದಂತೆ ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ತರಲು ಸರ್ಕಾರವು ಆದೇಶಿಸಿದೆ.

PR – 264

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 100

ಸಿ. ಪುಟ್ಟನಂಜಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂಮಾಪನ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೩೧

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಟಿ. ನರಸೀಪುರ ಪಟ್ಟಣಕ್ಕೆ ಕಾವೇರಿ ನದಿ ಮೂಲದ 3ನೇ ಹಂತದ ನೀರು ಸರಬರಾಜು ಯೋಜನೆಯನ್ನು

ಅಂದಾಜು ಮೊತ್ತ ` 69.60 ಕೋಟಿಗಳಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಓದಲಾಗಿದೆ : 1. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಿಮಂ/ಮುಅ/ತಾಂತ್ರಿಕ/1555/2016-17, ದಿನಾಂಕ: 03-10-2016.

2. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಮಂ/ವ್ಯನಿ/ಮುಅ(ಮೈ)/ಟಿ.ನರಸೀಪುರ 3ನೇ ಹಂತ ನೀಸಯೋ/872/2017-18,

ದಿನಾಂಕ: 14-07-2017.

3. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಮಂ/ಮುಅ/ಆಶ್ರೇಕಾಅ(ಮೈ)/ಉಮುಅ-1/ತಾಸ-2/ಸಅ-4/1874/2017-18,

ದಿನಾಂಕ: 11-12-2017.

ಪ್ರಸ್ತಾವನೆ:

1) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು ಇವರ ಮೇಲೆ ಓದಲಾದ (1), (2) ಮತ್ತು (3)ರ ಪತ್ರಗಳಲ್ಲಿ ಟಿ. ನರಸೀಪುರ ಪಟ್ಟಣದ ಜನಸಂಖ್ಯೆಯು 2011ರ ಜನಗಣತಿ ಪ್ರಕಾರ 31498 ಇದ್ದು, ಹಾಲಿ ಜನಸಂಖ್ಯೆಯು ಸುಮಾರು 34200 ಇರುತ್ತದೆ. ಹಾಲಿ ಪಟ್ಟಣದ ನೀರು ಸರಬರಾಜು ವ್ಯವಸ್ಥೆಯು 2004ನೇ ಇಸವಿಯಲ್ಲಿ ಚಾಲನೆಗೊಳಿಸಲಾದ ಕಬಿನಿ ನದಿ ಮೂಲದ 4.50 ದಶಲಕ್ಷ ಲೀಟರ್ ಸಾಮರ್ಥ್ಯದ ಯೋಜನೆಯಿಂದ ಏರ್ಪಟ್ಟಿರುತ್ತದೆ. ಈ ಯೋಜನೆಯನ್ನು ಮೂಲ ವರ್ಷ 2001, ಮಧ್ಯಂತರ ವರ್ಷ 2016 ಹಾಗೂ ಅಂತಿಮ ವರ್ಷ 2026 ರಲ್ಲಿ ಕ್ರಮವಾಗಿ 37283, 41944 ಹಾಗೂ 52429 ತಲುಪಬಹುದಾದ ಜನಸಂಖ್ಯೆಗೆ ತಲಾವಾರು 70 ಲೀಟರ್‌ನಂತೆ ವಿನ್ಯಾಸಗೊಳಿಸಲಾಗಿರುತ್ತದೆ. ಹಾಲಿ ಪಟ್ಟಣದಲ್ಲಿ ನದಿ ಹಾಗೂ ಕೊಳವೆ ಬಾವಿಗಳಿಂದ ನೀರನ್ನು ಸರಬರಾಜು ಮಾಡಲಾಗುತ್ತಿದ್ದು, ಪುರಸಭೆ ಟಿ. ನರಸೀಪುರ ವತಿಯಿಂದ ನಿರ್ವಹಣೆಯನ್ನು ಮಾಡಲಾಗುತ್ತಿದೆ ಎಂದು ವರದಿ ಮಾಡಿರುತ್ತಾರೆ.

2) ಮುಂದುವರೆದು, ಟಿ. ನರಸೀಪುರ ಪಟ್ಟಣವನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದು, ಪಟ್ಟಣಕ್ಕೆ ಹೊಂದಿಕೊಂಡಿರುವ ಪ್ರದೇಶಗಳಾದ ಬೈರಾಪುರ, ಸಿದ್ದಯ್ಯನಹುಂಡಿ, ಯಳವರಹುಂಡಿ, ಮುದ್ದುಬೀರನಹುಂಡಿ, ಆಲಗೂಡು ಮತ್ತು ತಿರಮಕೂಡ್ಲು ಗ್ರಾಮಗಳು ಟಿ. ನರಸೀಪುರ ಪುರಸಭೆಯ ವ್ಯಾಪ್ತಿಗೆ ಒಳಪಟ್ಟಿರುತ್ತವೆ. ಹೊಸ ಪ್ರದೇಶಗಳಿಗೆ ಸಮರ್ಪಕವಾದ ನೀರು ಸರಬರಾಜು ವ್ಯವಸ್ಥೆ ಇಲ್ಲದೇ, ಹಾಲಿ ಕೊಳವೆ ಬಾವಿಗಳಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಹಾಲಿ ನೀರು ಸರಬರಾಜು ಯೋಜನೆಯನ್ನು ತಲಾವಾರು 70 ಲೀಟರ್‌ಗಳಿಗೆ ವಿನ್ಯಾಸಗೊಳಿಸಲಾಗಿದ್ದು, ಹೊಸ ಪ್ರದೇಶಗಳಿಗೆ ನೀರನ್ನು ಪೂರೈಸಲು ಸಾಧ್ಯವಾಗುತ್ತಿರುವುದಿಲ್ಲ. ಆದುದರಿಂದ, ಟಿ. ನರಸೀಪುರ ಪಟ್ಟಣದಲ್ಲಿ ನೀರಿನ ಅಭಾವವಿರುತ್ತದೆ.

3) ಹಾಲಿ ಇರುವ ನೀರು ಸರಬರಾಜು ಯೋಜನೆಯನ್ನು ತಲಾವಾರು 70 ಲೀಟರ್‌ಗಳಿಗೆ ವಿನ್ಯಾಸಗೊಳಿಸಲಾಗಿದ್ದು, ಹೊಸ ಪ್ರದೇಶಗಳಿಗೆ ನೀರನ್ನು ಪೂರೈಸಲು ಸಾಧ್ಯವಾಗುತ್ತಿರುವುದಿಲ್ಲ. ಆದುದರಿಂದ, ಟಿ. ನರಸೀಪುರ ಪಟ್ಟಣದಲ್ಲಿ ನೀರಿನ ಅಭಾವವಿರುತ್ತದೆ. ಹಾಲಿ ಟಿ. ನರಸೀಪುರ ಪಟ್ಟಣದಲ್ಲಿ 1ನೇ ಹಂತದ ಒಳಚರಂಡಿ ಯೋಜನೆಯ ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ: ನಇ 08 ಯುಡಿಎಸ್ 2016 ದಿನಾಂಕ: 05-10-2016 ರಲ್ಲಿ ಟಿ. ನರಸೀಪುರ ಪಟ್ಟಣ ಹಾಗೂ ಹೊಸ ಪ್ರದೇಶಗಳ 2ನೇ ಹಂತದ ಒಳಚರಂಡಿ ಯೋಜನೆಯು ಮಂಜೂರಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. ಆದುದ್ದರಿಂದ, ಹಾಲಿ ಇರುವ ತಲಾವಾರು ನೀರು ಸರಬರಾಜನ್ನು 135 ಲೀಟರ್‌ಗಳಿಗೆ ಹೆಚ್ಚಿಸುವುದು ಅವಶ್ಯವಾಗಿರುತ್ತದೆ.

ಸದರಿ ಕಾಮಗಾರಿಯನ್ನು ಮಂಡಳಿಯ 2017-18ನೇ ಸಾಲಿನ ಕ್ರಿಯಾ ಯೋಜನೆಯ 'ಡಿ' ವರ್ಗದಲ್ಲಿ ಸೇರ್ಪಡೆಯಾಗಿರುತ್ತದೆ. ಅದರಂತೆ, ಟಿ. ನರಸೀಪುರ ಪಟ್ಟಣಕ್ಕೆ 3ನೇ ಹಂತದ ಕಾವೇರಿ ನದಿ ಮೂಲದಿಂದ ನೀರು ಸರಬರಾಜು ಮಾಡುವ ಯೋಜನೆಯನ್ನು ರೂ.7620.00 ಲಕ್ಷ ಮೊತ್ತದ ಅಂದಾಜು ಪಟ್ಟಿಯನ್ನು ತಯಾರಿಸಲಾಗಿದ್ದು, ಸದರಿ ಯೋಜನೆಯಲ್ಲಿ ಕೆಳಗಿನ ಘಟಕಗಳಿಗೆ ಅವಕಾಶ ಕಲ್ಪಿಸಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಕ್ರಮ ಸ ಂಖ್ಯೆ ಕಾಮಗಾರಿ ವಿವರ ವ ೆ ೂತ್ತ (` ಲಕ್ಷಗಳಲ್ಲಿ)
1 ವ ುೂಲಸ್ಥಾವರದ ನಿರ್ಮಾಣ. 493.30
2 ವ ುೂಲಸ್ಥಾವರದಲ್ಲಿ 90 ಹೆಚ್.ಪಿ. (2 ಸಂಖ್ಯೆ) ಸಾಮರ್ಥ್ಯದ ಡೀಪ್ ವೆಲ್ ಟರ್ಬೈನ್ ಪಂಪುಗಳನ್ನು ಸ ರಬರಾಜು ಮತ್ತು ಅಳವಡಿಕೆ. 43.50
3 ವ ುೂಲ ಸ್ಥಾವರದಿಂದ ಜಲಶುದ್ಧೀಕರಣ ಘಟಕದವರೆಗೆ 457 ಮಿ.ಮೀ. ವ್ಯಾಸದ, 5.6 ಮಿ.ಮೀ. ದಪ್ಪದ 1.45 ಕಿ.ಮೀ. ಉದ್ದದ ಎಂ.ಎಸ್. ಏರು ಕೊಳವೆ ಮಾರ್ಗ ಅಳವಡಿಸುವುದು. 187.20
4 ಟ್ರೆಂಚ್‌ಲೆಸ್ ತಂತ್ರಜ್ಞಾನದ ಮೂಲಕ ರಾಷ್ಟ್ರೀಯ ಹೆದ್ದಾರಿ-212 ರಲ್ಲಿ ಕೊಳವೆ ಮಾರ್ಗ ಅಳವಡಿಸುವುದು. 62.60
5 ಕಬಿನಿ ನದಿಯ ಮುಖಾಂತರ ಕೊಳವೆ ಮಾರ್ಗ ಒದಗಿಸಿ, ಅಳವಡಿಸುವುದು. 370.00
6 6.20 ದಶಲಕ್ಷ ಲೀಟರ್ ಸಾಮರ್ಥ್ಯದ ಜಲಶುದ್ಧೀಕರಣ ಘಟಕದ ನಿರ್ಮಾಣ. 353.04
7 ಜಲಶುದ್ಧೀಕರಣ ಘಟಕದಲ್ಲಿ 130 ಹೆಚ್.ಪಿ. (2 ಸಂಖ್ಯೆ) ಸಾಮರ್ಥ್ಯದ ಸೆಂಟ್ರಿಫ್ಯೂಗಲ್ ಪಂಪುಗಳನ್ನು ಸ ರಬರಾಜು ಮತ್ತು ಅಳವಡಿಕೆ. 57.0
ಕ್ರಮ ಸ ಂಖ್ಯೆ ಕಾಮಗಾರಿ ವಿವರ ವ ೂತ್ತ ೆ (` ಲಕ್ಷಗಳಲ್ಲಿ)
8 ಜಲಶುದ್ಧೀಕರಣ ಘಟಕದಿಂದ ಪಟ್ಟಣದ ವಿವಿಧ ಜಲಸಂಗ್ರಹಾಗಾರಿಗಳಿಗೆ ಫೀಡರ್ ಕೊಳವೆ ಮಾರ್ಗಗಳನ್ನು ಒದಗಿಸಿ, ಅಳವಡಿಸುವುದು. 438.80
9 ವ ಲಯ 1 ಮತ್ತು 5 ರಲ್ಲಿ 7.5 ಮತ್ತು 5.0 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಾಗಾರಗಳ ನಿರ್ಮಾಣ. 204.12
10 ಪ ಟ ಣದಲ್ಲಿ ಮನೆಗಳಿಗೆ ಪ್ರತ್ಯೇಕ ನಳ ಸಂಪರ್ಕದೊಂದಿಗೆ ಪೂರ್ಣ ಪ್ರಮಾಣದ ವಿತರಣಾ ಜಾಲ ಅಳವಡಿಕೆ. ್ಟ 2382.0
11 11 ಕೆ.ವಿ. ಎಕ್ಸ್‌ಪ್ರೆಸ್ ಫೀಡರ್ ಮೇನ್. 51.00
12 ಹಾಲಿ ಇರುವ ಜಲಶುದ್ಧೀಕರಣ ಘ ಟಕ ವ ುತ್ತು ವ ುೕಲ್ಮಟ್ಟದ ೆ ಜಲಸಂಗ್ರಹಾಗಾರಗಳ ಪ ುನರುಜ್ಜೀವನಗೊಳಿಸುವುದು. 93.00
13 ತಿರುಮಕೂಡಲಿನಲ್ಲಿ 0.1 ದಶಲಕ್ಷ ಲೀಟರ್ ಸಾಮರ್ಥ್ಯದ ಫ್ರೆಶರ್ ಫಿಲ್ಟರ್ ಅಳವಡಿಕೆ 10.00
14 SCADA ವ್ಯವಸ್ಥೆ ಅಳವಡಿಕೆ 500.00
15 ಯೋಜನೆಯ ಪಾಲನೆ ಮತ್ತು ನಿರ್ವಹಣೆ 3 ವರ್ಷದವರೆಗೆ (ವಿದ್ಯುತ್ ವೆಚ್ಚ ಹೊರತುಪಡಿಸಿ) 257.00
ಒಟ್ಟು 5502.56
16 15% ಇ.ಟಿ.ಪಿ. ಚಾರ್ಚ್ 825.38
17 10% ಕಂಟಿನ್‌ಜೆನ್ಸಿಸ್ 550.26
18 ಪ ತಿ ವರ್ಷ ಶೇ.5 ರಂತೆ 2 ವರ್ಷಕ್ಕೆ ಪ್ರೈಸ್ ಅಡ್ಜ್‌ಸ್ಟಮೆಂಟ್ ್ರ 550.26
19 1% ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉಪ-ಕರ 55.03
20 ವ ುೂರನೇ ವ್ಯಕ್ತಿ ತಪಾಸಣೆ ವೆಚ ಮತ್ತು ಕ್ಯಾಪಾಸಿಟಿ ಬಿಲ್ಡಿಂಗ್ ್ಚ 82.54
21 ಬ ೂಸ್ವಾಧೀನ, ಲೋಕೋಪಯೋಗಿ ಇಲಾಖೆಗೆ ಠೇವಣಿ 50.00
22 ಇತರೆ 3.98
ಒಟ್ಟು 7620.00
೫೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧

4) ಸರ್ಕಾರವು ಪ್ರಸ್ತಾವನೆಯನ್ನು ಪರಿಶೀಲಿಸಿ, ಟಿ. ನರಸೀಪುರ ಪಟ್ಟಣಕ್ಕೆ ಕಾವೇರಿ ನದಿ ಮೂಲದ 3ನೇ ಹಂತದ ನೀರು ಸರಬರಾಜು ಮಾಡುವ ಯೋಜನೆಯ ` 76.20 ಕೋಟಿಗಳ ಅಂದಾಜು ಪಟ್ಟಿಯಲ್ಲಿ 12% ಇ.ಟಿ.ಪಿ. ಚಾರ್ಜ್, 3% ಕಂಟಿನ್‌ಜೆನ್ಸಿಸ್, ಮೂರನೇ ವ್ಯಕ್ತಿ ತಪಾಸಣೆ ವೆಚ್ಚ ಮತ್ತು ಕ್ಯಪಾಸಿಟಿ ಬಿಲ್ಡಿಂಗ್ @ 0.5%, ಇತರೆ ` 4.68 ಲಕ್ಷಗಳು ಹಾಗೂ 1% ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉಪ-ಕರವನ್ನು ತೆಗೆದು ಹಾಕಲಾಗಿದೆ.

ಅದರಂತೆ ` 69.60 ಕೋಟಿಗಳ ಅಂದಾಜು ಮೊತ್ತಕ್ಕೆ ಮಿತಿಗೊಳಿಸಿ, ಸದರಿ ಯೋಜನೆಯನ್ನು ಕೈಗೊಳ್ಳಲು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 19 ಯುಡಬ್ಲ್ಯೂಎಸ್ 2016, ಬೆಂಗಳೂರು, ದಿನಾಂಕ: 08ನೇ ಜನವರಿ 2018.

5) ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಟಿ. ನರಸೀಪುರ ಪಟ್ಟಣಕ್ಕೆ ಕಾವೇರಿ ನದಿ ಮೂಲದ 3ನೇ ಹಂತದ ನೀರು ಸರಬರಾಜು ಯೋಜನೆಯನ್ನು ಅಂದಾಜು ಮೊತ್ತ ` 69.60 ಕೋಟಿಗಳಲ್ಲಿ (ರೂಪಾಯಿ ಅರವತ್ತೊಂಬತ್ತು ಕೋಟಿ ಅರವತ್ತು ಲಕ್ಷಗಳು ಮಾತ್ರ) ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೆತ್ತಿಕೊಳ್ಳಲು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟು ಸರ್ಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.

1) ಈ ಕಾಮಗಾರಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ನಿಯಮಾನುಸಾರ ಕೈಗೊಳ್ಳುವುದು.

2) ಕಾಮಗಾರಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು.

3) ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ 1999, ಕರ್ನಾಟಕ ಸಾರ್ವಜನಿಕ ಸಂಗ್ರಣೆಗಳಲ್ಲಿ ಪಾರದರ್ಶಕತೆ ನಿಯಮಗಳು 2000 ಮತ್ತು ತತ್ಸಂಬಂಧ ಸರ್ಕಾರವು ಹೊರಡಿಸಿರುವ ಸುತ್ತೋಲೆ ಮತ್ತು ಆದೇಶಗಳಲ್ಲಿನ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.

4) ಕಾಮಗಾರಿಯನ್ನು ನಿಗಧಿತ ಕಾಲಾವಧಿಯೊಳಗೆ ಪೂರ್ಣಗೊಳಿಸಬೇಕು.

5) ಕಾಮಗಾರಿಯ ವೆಚ್ಚ ಅನುಮೋದಿತ ಅಂದಾಜು ಪಟ್ಟಿಯ ವೆಚ್ಚಕ್ಕಿಂತ ಹೆಚ್ಚಾಗುವಂತಿಲ್ಲ ಮತ್ತು ಪರಿಷ್ಕರಣೆಗೆ ಅವಕಾಶ ನೀಡುವಂತಿಲ್ಲ.

6) ನೀರಿನ ಕರ ಮತ್ತು ಇತರೆ ಶುಲ್ಕಗಳನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮಾದರಿಯಲ್ಲಿ ನಿಗಧಿ ಪಡಿಸತಕ್ಕದ್ದು.

6) ಸದರಿ ಯೋಜನೆಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಸರ್ಕಾರದ ಆದೇಶದ ಸಂಖ್ಯೆ: ಯುಡಿಡಿ 07 ಯುಡಬ್ಲ್ಯೂಎಸ್ 2011 ದಿನಾಂಕ:

20-07-2011 ರನ್ವಯ ಈ ಕೆಳಕಂಡಂತೆ ಇರುತ್ತದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೩೩
ಕರ್ನಾಟಕ ಸರ್ಕಾರದ ಅನುದಾನ (ಶೇ.75) 52.20
ಆರ್ಥಿಕ ಸಂಸ್ಥೆಯ ಸಾಲ (ಶೇ.20) 13.92
ಸ ್ಥಳೀಯ ಸಂಸ್ಥೆಯ ಪಾಲು (ಶೇ.5) 3.48
ಒಟ್ಟು ಮೊತ್ತ 69.60

PR – 265

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)

(ಎಂ.ಎ-2 & ಮಂಡಳಿ)

ನಗರಾಭಿವೃದ್ಧಿ ಇಲಾಖೆ

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ವಿಷಯ : 2017-18ನೇ ಸಾಲಿನಲ್ಲಿ ಪಶು ಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸುತ್ತಿರುವ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳಿಗೆ ಪಶುವೈದ್ಯಾಧಿಕಾರಿ ಹುದ್ದೆಗಳನ್ನು ಮಾತ್ರ ಸೃಜಿಸಿ ಆದೇಶ ಹೊರಡಿಸಿರುವ ಬಗ್ಗೆ.

ಓದಲಾಗಿದೆ : 1. ಪತ್ರ ಸಂಖ್ಯೆ: ಆಪಸಂ/ಡಿವಿಡಿ-3/ವಿವ-16/2016-17, ದಿನಾಂಕ: 16-09-2016.

2. ಪತ್ರ ಸಂಖ್ಯೆ: ಆಪಸಂ/ನೂತನ ಯೋಜನೆ/ಕಂಡಿಕೆ-43/2017-18, ದಿನಾಂಕ: 04-04-2017.

3. ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 278 ಪಸಸೇ 2016, ದಿನಾಂಕ: 09-10-2017.

4. ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 278 ಪಸಸೇ 2016 (ಭಾಗ-2), ದಿನಾಂಕ: 03-01-2018.

ಪ್ರಸ್ತಾವನೆ:-

2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಕಂಡಿಕೆ ಸಂಖ್ಯೆ 43ರ ಅನುಸಾರ, ರಾಜ್ಯದ ಎಲ್ಲಾ ಹಳ್ಳಿಗಳಿಗೆ ಪರಿಣಿತ ಹಾಗೂ ಸುಧಾರಿತ ಪಶುವೈದ್ಯಕೀಯ ಸೇವೆಗಳನ್ನು ವಿಸ್ತರಿಸುವ ಗುರಿಯೊಂದಿಗೆ ಹಂತ ಹಂತವಾಗಿ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದ್ದ್ತು. ಈ 2017-18ನೇ ಸಾಲಿನಲ್ಲಿ ಇಂತಹ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದೆಂದು ಘೋಷಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ಪತ್ರದಲ್ಲಿ ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ರಾಜ್ಯದಲ್ಲಿ ಪ್ರಸ್ತುತ 4215 ವಿವಿಧ ಹಂತದ ಪಶುವೈದ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 1512 ಅತ್ಯಂತ ಕೆಳಹಂತದ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಹಾಗೂ ಈ 1512 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳು ಜಿಲ್ಲಾ ಪಂಚಾಯತ್ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ, ಇವುಗಳ ಮುಖ್ಯಸ್ಥರಾಗಿ ಹಾಲಿ ಅರೆ-ಪಶುವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಪದವೀಧರ ಪಶುವೈದ್ಯರು ಇರುವುದಿಲ್ಲ. ಪ್ರಾಣಿಗಳಿಗೆ ಪಕ್ವ ಚಿಕಿತ್ಸೆ ನೀಡಲು ಪದವೀಧರ ಪಶುವೈದ್ಯರ ಸೇವೆ ಇಲ್ಲಿ ಅವಶ್ಯವಿದೆ. ಆದುದರಿಂದ, 1512 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳನ್ನು ಪದವೀಧರ ಪಶುವೈದ್ಯ, ಅಧಿಕಾರಿಯ ಹುದ್ದೆಯೊಂದಿಗೆ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೋರಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಪತ್ರದಲ್ಲಿ ಅಯುಕ್ತರು ರಾಷ್ಟ್ರೀಯ ಕೃಷಿ ಆಯೋಗದ Standard Pattern and Norms ಹಾಗೂ ಭಾರತೀಯ ಪಶುವೈದ್ಯಕೀಯ ಪರಿಷತ್ತಿನ ಶಿಫಾರಸ್ಸಿನನ್ವಯ ಪ್ರತಿಯೊಂದು ಪಶುಚಿಕಿತ್ಸಾ ಸಂಸ್ಥೆಯಲ್ಲಿ ಪದವೀಧರ ಪಶುವೈದ್ಯರು ಇರಬೇಕಾಗಿರುತ್ತದೆ.

ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರಸ್ತುತ ಹಾಲಿ ಇರುವ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರದ ಹುದ್ದೆಗಳ ವಿನ್ಯಾಸದ ಜೊತೆಗೆ ಮೇಲ್ದರ್ಜೆಗೇರಿಸಲಾಗುವ ಪಶುಚಿಕಿತ್ಸಾಲಯಗಳಿಗೆ ಹೆಚ್ಚುವರಿಯಾಗಿ ಅವಶ್ಯವಿರುವ 01 ಪಶುವೈದ್ಯಾಧಿಕಾರಿ ಹಾಗೂ 01 'ಡಿ' ದರ್ಜೆ ನೌಕರರ ಹುದ್ದೆಯನ್ನು ನೂತನವಾಗಿ ಸೃಜಿಸಬೇಕಾಗಿರುವುದಾಗಿ ಹಾಗೂ ಈ ಸಂಬಂಧ ಅವರ್ತಕ ವೆಚ್ಚ 302 ಸಂಸ್ಥೆಗಳಿಗೆ ` 30.68 ಕೋಟಿ ತಗಲುವುದಾಗಿ ಮತ್ತು ಅನಾವರ್ತಕ ವೆಚ್ಚ ` 6.04 ಕೋಟಿ ತಗಲುವುದಾಗಿ ಒಟ್ಟು ` 36.72 ಕೋಟಿ ವೆಚ್ಚವನ್ನು ಲೆಕ್ಕಶೀರ್ಷಿಕೆ: 2403-00-001-0-01 ನಿರ್ದೇಶನ ಮತ್ತು ಆಡಳಿತದಲ್ಲಿ ಭರಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಕೋರಿ ಆಯುಕ್ತರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ (3)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿನ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಹಂತ ಹಂತವಾಗಿ ` 182.72 ಕೋಟಿಗಳ ಅಂದಾಜು ವೆಚ್ಚದಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಪ್ರಸಕ್ತ ಸಾಲಿನಲ್ಲಿ (2017-18ರಲ್ಲಿ) 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ` 36.72 ಕೋಟಿಗಳ ಅಂದಾಜು ವೆಚ್ಚದಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಮೊದಲ ಹಂತದ ಪ್ರಸಕ್ತ ಸಾಲಿನಲ್ಲಿ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ತಗಲುವ ` 36.72 ಕೋಟಿಗಳ ಅಂದಾಜು ವೆಚ್ಚವನ್ನು "ಲೆಕ್ಕ ಶೀರ್ಷಿಕೆ 2403-00-001-0-01 ನಿರ್ದೇಶನ ಮತ್ತು ಆಡಳಿತ" ರಡಿಯಲ್ಲಿ ಒದಗಿಸಲಗಿರುವ ` 7092.00 ಲಕ್ಷಗಳ ಅನುದಾನದಲ್ಲಿ ಭರಿಸಲು ಮಂಜೂರಾತಿ ನೀಡಿ ಸದರಿ ಕಾರ್ಯಕ್ರಮವನ್ನು ಆಯುಕ್ತಾಲಯ, ಪಶುಪಾಲನಾ ಮತ್ತು ಪಶುವೈದ್ಯ್ಯ ಸೇವಾ ಇಲಾಖೆ ಇವರ ವತಿಯಿಂದ ಅನುಷ್ಠಾನಗೊಳಿಸಲು ಆದೇಶಿಸಲಾಗಿರುತ್ತದೆ.

೫೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧

ಮೇಲೆ ಕ್ರಮ ಸಂಖ್ಯೆ (4) ರಲ್ಲಿ ಓದಲಾದ ಆದೇಶದಲ್ಲಿ 2017-18ನೇ ಸಾಲಿನಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೇಗೇರಿಸಲಾಗುತ್ತಿರುವ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳ ಸ್ಥಳಗಳನ್ನು ಗುರುತಿಸಿ, ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೇಗೇರಿಸಲು ಮಂಜೂರಾತಿ ನೀಡಿ ಆದೇಶಿಸಲಾಗಿರುತ್ತದೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, 2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 278 ಪಸಸೇ 2016 ದಿನಾಂಕ: 09-10-2017 ರನ್ವಯ 2017-18 ಸಾಲಿನಲ್ಲಿ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಪಶುಕಿಚಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿರುತ್ತದೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 278 ಪಸಸೇ 2016 (ಭಾ-2) ದಿನಾಂಕ: 03-01-2018 ರನ್ವಯ 2017-18ನೇ ಸಾಲಿನಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿರುವ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳ ಸ್ಥಳಗಳನ್ನು ಗುರುತಿಸಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಿ ಆದೇಶಿಸಲಾಗಿರುತ್ತದೆ. ಅದರಂತೆ 2017-18 ಸಾಲಿನಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿರುವ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳಿಗೆ ಅವಶ್ಯವಿರುವ 302 ಪಶುವೈದ್ಯಾಧಿಕಾರಿ ಹುದ್ದೆ ಹಾಗೂ 302 ಗ್ರೂಪ್-ಡಿ ಹುದ್ದೆಗಳ ಪೈಕಿ ಆರ್ಥಿಕ ಇಲಾಖೆಯು 302 ಪಶುವೈದ್ಯಾಧಿಕಾರಿ ಹುದ್ದೆಗಳ ಸೃಜನೆಗೆ ಮಾತ್ರ ಅನುಮತಿ ನೀಡಿದ್ದು, ಅದರಂತೆ 2017-18ನೇ ಸಾಲಿನಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿರುವ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳಿಗೆ ಅವಶ್ಯವಿರುವ 302 ಪಶುವೈದ್ಯಾಧಿಕಾರಿ ಹುದ್ದೆಗಳನ್ನು ಮಾತ್ರ ಸೃಜಿಸಲು ತೀರ್ಮಾನಿಸಿ ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಪಸಂಮೀ 278 ಪಸಸೇ 2016, ಬೆಂಗಳೂರು, ದಿನಾಂಕ: 27-02-.2018.

ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರದ ಆದೇಶ ಸಂಖ್ಯೆ ಪಸಂಮೀ 278 ಪಸಸೇ 2016 ದಿನಾಂಕ: 09-10-2017 ರನ್ವಯ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿನ 1512 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ಹಂತ ಹಂತವಾಗಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಹಾಗೂ ಪ್ರಸಕ್ತ ಸಾಲಿನಲ್ಲಿ (2017-18ರಲ್ಲಿ) 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳನ್ನು ` 36.72 ಕೋಟಿಗಳ ಅಂದಾಜು ವೆಚ್ಚದಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿರುತ್ತದೆ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 278 ಪಸಸೇ 2016 (ಭಾ-2) ದಿನಾಂಕ: 03-01-2018 ರನ್ವಯ 2017-18ನೇ ಸಾಲಿನಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿರುವ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳ ಸ್ಥಳಗಳನ್ನು ಗುರುತಿಸಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲು ಮಂಜೂರಾತಿ ನೀಡಿ ಆದೇಶಿಸಲಾಗಿರುತ್ತದೆ. ಅದರಂತೆ, ಸದರಿ ಆದೇಶಗಳನ್ವಯ 2017-18 ಸಾಲಿನಲ್ಲಿ ಪಶುಚಿಕಿತ್ಸಾಲಯಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿರುವ 302 ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳಿಗೆ ಆರ್ಥಿಕ ಇಲಾಖೆಯು ಅನುಮೋದಿಸಿರುವಂತೆ ಈ ಕೆಳಗಿನಂತೆ ಒಟ್ಟು 302 ಪಶುವೈದ್ಯಾಧಿಕಾರಿ ಹುದ್ದೆಗಳನ್ನು ಮಾತ್ರ ಸೃಜಿಸಲು ಹಾಗೂ ಭರ್ತಿ ಮಾಡಲು ಮಂಜೂರಾತಿ ನೀಡಲಾಗಿದೆ.

ಕ್ರ.ಸಂ 2017-18ನೇ ಸಾಲಿನಲ್ಲಿ ವ ುೕಲ್ದರ್ಜೆಗೇರಿಸಲಾಗುತ್ತಿರುವ ೆ ಒಟ್ಟು ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳ ಸಂಖ್ಯೆ ಹ ುದ್ದೆಗಳ ವಿವರ ವ ೕತನ ಶ್ರೇಣಿ ೆ ಹ ುದ್ದೆಗಳ ಸಂಖ್ಯೆ ಪ್ರತಿ ಒಂದು ಸಂಸ್ಥೆಗೆ ಒಟ್ಟು ಹುದ್ದೆಗಳ ಸ ಂಖ್ಯೆ
1 302 ಪ ಶ ುವೈದ್ಯರು 28100-50100 01 302

ಈ ಮೇಲಿನಂತೆ ಸೃಜಿಸಲಾದ 302 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಪ್ರಸ್ತುತ 2017-18ನೇ ಸಾಲಿನ 03 ತಿಂಗಳ ಅವಧಿಗೆ ವೇತನ ಬಾಬ್ತಿಗಾಗಿ ಹಾಗೂ ಸಾಧನ ಸಾಮಾಗ್ರಿಗಳ ಸಂಗ್ರಹಣೆಗೆ ಅಗತ್ಯವಿರುವ ಅನುದಾನವನ್ನು "ಲೆಕ್ಕ ಶೀರ್ಷಿಕೆ 2403-00-001-0-01 ನಿರ್ದೇಶನ ಮತ್ತು ಆಡಳಿತ" ರಡಿಯಲ್ಲಿ ಒದಗಿಸಲಾಗಿರುವ ` 7092.00 ಲಕ್ಷಗಳ ಅನುದಾನದಲ್ಲಿ ಭರಿಸಲು ಮಂಜೂರಾತಿ ನೀಡಿ ಸದರಿ ಕಾರ್ಯಕ್ರಮವನ್ನು ಆಯುಕ್ತಾಲಯ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರ ವತಿಯಿಂದ ಅನುಷ್ಠಾನಗೊಳಿಸತಕ್ಕದ್ದು.

ಈ ಯೋಜನೆಯನ್ನು 2017-18ನೇ ಸಾಲಿಗೆ ಆಯವ್ಯಯದಲ್ಲಿ ನಿಗಧಿಪಡಿಸಿರುವ ಅನುಷ್ಠಾನದ ಮಿತಿಯೊಳಗೆ ಹಾಗೂ ಇಲಾಖೆಯ ಮಾರ್ಗಸೂಚಿಗಳನ್ವಯ ಪ್ರಾರಂಭಿಸಿ ಅನುಷ್ಠಾನಗೊಳಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 660 ವೆಚ್ಚ-4/2017, ದಿನಾಂಕ: 19-12-2017 ರಲ್ಲಿ ನೀಡಿರುವ ಸಹಮತಿಯೊಂದಿಗೆ ಹೊರಡಿಸಲಾಗಿದೆ.

PR – 267

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 100

ಧನಂಜಯ. ಎಂ.

ಪೀಠಾಧಿಕಾರಿ-2

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ

(ಪಶುಸಂಗೋಪನೆ-ಎ)

ANIMAL HUSBANDRY AND FISHERIES SECRETARIAT

Subject : Constitution of the State Project Screening and Review Committee (SPSRC) for implementation of Dairy processing and Infrastructure Development Fund (DIDF) Scheme.

Read : 1) D.O.. Letter No:CDB-177/12/24, dated:28.12.2017. from the Chairman, National Dairy Development Board, New Delhi.

2) Letter No:KMF/AH/DIDF/2017, from the Director (AH) Karnataka Co-operative milk producers federation Ltd. Bengaluru.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೩೫ Preamble :

In the D.O letter dated 28.12.2017 read at (1) above, the Chairman, National Dairy Development Board, New Delhi has requested to constitute the State Project Screening and Review Committee (SPSRC) for implementation of Dairy processing and Infrastructure Development Fund (DIDF) Scheme as per Annexure-1 of the operational guidelines of Central Sector Scheme 'Dairy processing and Infrastructure Development Fund' scheme which was approved on 21.12.2017, by the Govt of India, Department of Animal Husbandry Dairying and Fisheries, New Delhi.

In the letter dated 27.12.2017 read at (2) above Director (AH) Karnataka Co-operative milk producers federation Ltd. Bengaluru has proposed to constitute the above committee as per Annexure-1 of the operational guidelines of Central Sector Scheme 'Dairy processing and Infrastructure Development Fund.

The Chief Secretary, Government of Karnataka vide his note No:CS/283/18, dated 24.01.2018 has given his approval to constitute the said committee under the Chairmanship of the Additional Chief Secretary to Government and Development Commissioner, Government of Karnataka, Bengaluru.

Hence, the following Order.

NO. AHF 04 KDC 2018, BENGALURU, DATED: 22.02.2018.

In the circumstances explained in the preamble, Government of Karnataka is pleased to constitute the State Project Screening and Review Committee (SPSRC) for implementation of Dairy processing and Infrastructure Development Fund (DIDF) Scheme as per Annexure-1 of the operational guidelines of Central Sector Scheme 'Dairy processing and Infrastructure Department Fund which was

SL. No. Particulars Designation
1 Additional Chief Secretary to Government and Development Commissioner, Government of Karnataka Chair person
2 Principal Secretary, Animal Husbandry and Fisheries Department, Bengaluru Member
3 The CGM/Officer incharge of State Regional office of NABARD or his nominee. Member
4 Representative from Department of Finance, Government of Karnataka Member
5 Managing Director, Karnataka Milk Federation. Member
6 Representative from NDDB/NCDC Member Convener
7 Representative from DADF, Government of India. Member

i. SPSRC shall screen the proposals presented before itself by NDDB/NCDC and recommend to NDDB/NCDC for sanction. NDDB/NCDC shall apprise SPSRC of every project proposal which they have received along with the findings.

ii. If NDDB/NCDC in order to secure its loan recommends guarantee from state government on behalf of eligible end borrower, SPSRC shall arrange commitment letter from state government for providing the guarantee on behalf of eligible end borrower. SPSRC shall ensure that state government waives the guarantee fee, if any.

iii. If NDDB/NCDC recommends margin contribution by state government on behalf of eligible end borrowers who do not posses adequate capacity to contribute towards the margin, SPSRC shall ensure issuance of commitment letter from state government for offering necessary grant components to cover the eligible end borrowers contribution.

iv. SPSRC shall facilitate the statutory clearance from state government, if any.

v. SPSRC shall ensure that there is no duplication of activities, efforts and resources.

vi. SPSRC will review the progress of the DIDF supported projects at the state level and monitor as well as review repayment of loans, etc., taken by eligible end borrowers in a timely manner. Necessary guidance and directions shall also be issued by CPSC from time to time in this regard.

vii. SPSRC shall ensure that sufficient budgetary allocation is made under the State Plan Budget annually and at the time of formulation of sub-project proposals, in order to meet margin contribution and exigencies in case of default by eligible end borrower for repayment of outstanding loan amount to NDDB/NCDC.

By the Order and in the name of the Governor of Karnataka, P.R.263

T. HANUMANTHEGOWDA

SC-100

Under Secretary to Government,

Animal Husbandry & Fisheries Department.

(Animal Husbandry).

೫೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಹೊಸಪೇಟೆ ನಗರದ ಜಂಬುನಾಥ ಹಳ್ಳಿಯಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ವತಿಯಿಂದ ಭೂಸ್ವಾಧೀನ ಪಡಿಸಿಕೊಂಡು ಉಪಯೋಗಿಸದೇ ಇರುವ 50.76 ಎಕರೆ ಜಮೀನನ್ನು ನಗರದ ಸಾರ್ವಜನಿಕ ಉದ್ದೇಶಕ್ಕಾಗಿ ಹಸ್ತಾಂತರಿಸುವ ಬಗ್ಗೆ.

ಓದಲಾಗಿದೆ : (1) ಪೌರಾಯುಕ್ತರು, ನಗರಸಭೆ, ಹೊಸಪೇಟೆ ಇವರ ಪತ್ರ ಸಂಖ್ಯೆ: ನಸಹೊ/ ನೀ.ಸ.ವಿ/ 90/982/2011-12, ದಿನಾಂಕ 08/08/2017.

(2) ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಪತ್ರ ಸಂಖ್ಯೆ: ಕಜಮ/ಹೆಚ್ಆರ್‌ಡಿ-1/1373/2017-18 ದಿನಾಂಕ 12/09/2017.

(3) ಸಚಿವ ಸಂಪುಟ ಸಭೆಯ ವಿಷಯ ಸಂಖ್ಯೆ:ಸಿ 239/2018 ದಿನಾಂಕ 03/03/2018.

ಪ್ರಸ್ತಾವನೆ :

ಪೌರಾಯುಕ್ತರು, ನಗರಸಭೆ, ಹೊಸಪೇಟೆ ಇವರ ಮೇಲೆ ಓದಲಾದ (1) ರ ಪತ್ರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಭೂಸ್ವಾಧೀನ ಪಡಿಸಿಕೊಂಡು ಉಪಯೋಗಿಸದೇ ಇರುವ ಜಮೀನನ್ನು ಸಾರ್ವಜನಿಕ ಬಸ್ಸು ನಿಲ್ದಾಣ, ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ ಮತ್ತು ಆಶ್ರಯ ಯೋಜನೆಯ ಉದ್ದೇಶಕ್ಕಾಗಿ ನಗರ ಸಭೆಗೆ ಹಸ್ತಾಂತರಿಸುವಂತೆ ಕೋರಿರುತ್ತಾರೆ. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಇವರ ಮೇಲೆ ಓದಲಾದ (2) ರ ಪತ್ರದಲ್ಲಿ ದಿನಾಂಕ 20/01/2017 ರಂದು ಜರುಗಿದ 278 ನೇ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಭೆಯಲಿ,್ಲ ಭೂಸ್ವಾಧೀನ ಪಡಿಸಿಕೊಂಡಿರುವ ಉಪಯೋಗಿಸದೇ ಇರುವ ಜಮೀನನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗಿರುವ ಯೋಜನೆಗಳಲ್ಲಿ ಬಳಸಿಕೊಳ್ಳಲು ನಿರ್ಣಯಿಸಲಾಯಿತು ಹಾಗೂ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ 50.76 ಎಕರೆ ಜಮೀನನ್ನು ಹಸ್ತಾಂತರಿಸುವ ಕೋರಿಕೆಯನ್ನು ತಿರಸ್ಕರಿಸಲಾಗಿರುತ್ತದೆ ಎಂದು ವರದಿ ಮಾಡಿರುತ್ತಾರೆ.

ಹೊಸಪೇಟೆ ನಗರಕ್ಕೆ 1ನೇ ಹಂತದ ಒಳಚರಂಡಿ ಯೋಜನೆಯ ಅಂದಾಜು ಮೊತ್ತ `. 75.70 ಲಕ್ಷಗಳಿಗೆ ಸರ್ಕಾರದ ಆದೇಶ ಸಂಖ್ಯೆ:

ಹೆಚ್.ಎಮ್.ಎ 58 ಎಮ್.ಎನ್.ಎಸ್ 1970 ದಿನಾಂಕ 21/10/1970 ರಲ್ಲಿ ಆಡಳಿತಾತ್ಮಕ ಅನುಮೋದನೆಗೊಂಡಿರುತ್ತದೆ. ಅನುಮೋದಿತ ಅಂದಾಜು ಪಟ್ಟಿಯಲ್ಲಿ ಸದರಿ ಭೂಸ್ವಾಧೀನಕ್ಕಾಗಿ `. 2,00,000/- ಗಳ ಅವಕಾಶ ಕಲ್ಪಿಸಲಾಗಿದೆ. ಸದರಿ ಯೋಜನೆಯಡಿಯಲ್ಲಿ ಹೊಸಪೇಟೆ ನಗರದ ಜಂಬುನಾಥಹಳ್ಳಿಯಲ್ಲಿ 10 ಎಮ್.ಎಲ್.ಡಿ ಸಾಮರ್ಥ್ಯದ ಗ್ರಾಮಸಾರ ಶುದ್ಧೀಕರಣ ಘಟಕ (ಆಕ್ಸಿಡೇಶನ್ ಪಾಂಡ್) ವನ್ನು ನಿರ್ಮಿಸಲು ಉದ್ದೇಶಿಸಿದಂತೆ, ಹೊಸಪೇಟೆ ನಗರದ ಸರ್ವೆ ನಂ.281/ಸಿ(2), 322 (ಎ), 322 (ಬಿ), 323, 325 (ಎಂ) 2, ಎ(2), ಐ(2) ಮತ್ತು ಜಂಬುನಾಥ ಹಳ್ಳಿ ಗ್ರಾಮದ ಸರ್ವೆ ನಂ. 36(ಎ), 36 (ಸಿ) ಗಳಲ್ಲಿ ಒಟ್ಟು ವಿಸ್ತೀರ್ಣ 50.76 ಎಕರೆ ಜಮೀನನ್ನು 1979 ರಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಹೆಸರಿನಲ್ಲಿ ಸಹಾಯಕ ಆಯುಕ್ತರು, ಹೊಸಪೇಟೆ ಇವರಿಗೆ ಭೂಸ್ವಾಧೀನ ಮೊತ್ತ `. 5,71,000/- ಗಳನ್ನು ಭರಣ ಮಾಡಿ ಭೂಸ್ವಾಧೀನ ಪಡಿಸಿಕೊಳ್ಳಲಾಗಿದೆ.

ಮುಂದುವರೆದು, ನ್ಯಾಯಾಲಯದ ಆದೇಶದಂತೆ, ಸದರಿ ಕಾಮಗಾರಿಗಾಗಿ ಭೂಸ್ವಾಧೀನ ಪಡಿಸಿಕೊಂಡ ಜಮೀನಿಗೆ, ಹೆಚ್ಚುವರಿ ಪರಿಹಾರವನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ರೂ.1,07,60,640/- ಹಾಗೂ ನಗರಸಭೆ, ಹೊಸಪೇಟೆ `. 1,13,48,925/- ಗಳು ಒಟ್ಟು ಮೊತ್ತ `. 2,21,09,565/- ಗಳನ್ನು ಪಾವತಿ ಮಾಡಲಾಗಿದೆ.

ಹೊಸಪೇಟೆ ನಗರದ 1ನೇ ಹಂತದ ಒಳಚರಂಡಿ ಯೋಜನೆಯ ಅನುಮೋದಿತ ಅಂದಾಜು ಪಟ್ಟಿ ಪ್ರಕಾರ ಹೊಸಪೇಟೆ ನಗರದ ಜಂಬುನಾಥಹಳ್ಳಿಯಲ್ಲಿ 10 ಎಮ್.ಎಲ್.ಡಿ ಸಾಮರ್ಥ್ಯದ ಗ್ರಾಮಸಾರ ಶುದ್ಧೀಕರಣ ಘಟಕ (ಆಕ್ಸಿಡೆಶನ್ ಪಾಂಡ್) ವನ್ನು ನಿರ್ಮಿಸಲು ಉದ್ದೇಶಿಸಿದಂತೆ, ಅನುಮೋದಿತ ಅಂದಾಜು ಪಟ್ಟಿ ಪ್ರಕಾರ ನಗರದ ರಾಣಿಪೇಟ ಪ್ರದೇಶದಲ್ಲಿ ವೆಟ್‌ವೆಲ್ ನಿರ್ಮಿಸಿ ಗ್ರಾಮಸಾರವನ್ನು ಜಂಬುನಾಥ ಪ್ರದೇಶದಲ್ಲಿ ನಿರ್ಮಿಸಿರುವ ಗ್ರಾಮಸಾರ ಶುದ್ಧೀಕರಣ ಘಟಕಕ್ಕೆ (ಎಸ್.ಟಿ.ಪಿ) ಪಂಪು ಮಾಡಿ ಶುದ್ಧೀಕರಣದ ನಂತರ ನೀರನ್ನು ನೀರಾವರಿಗೆ ಉಪಯೋಗಿಸಲು ಉದ್ದೇಶಿಸಲಾಗಿತ್ತು.

ಸದರಿ ಯೋಜನೆಯನ್ನು 1977 ರಲ್ಲಿ ಚಾಲನೆಗೊಳಿಸಲಾಗಿದೆ. ಕೆಲ ವರ್ಷಗಳ ನಂತರ ವೆಟ್‌ವೆಲ್‌ನಲ್ಲಿ ಪಂಪುಗಳು ಕೆಲಸ ನಿರ್ವಹಿಸದೇ ಇದ್ದುದರಿಂದ, ಸಿವೇಜ್‌ನ್ನು ಬೈಪಾಸ್ ಮಾಡಿ ಸ್ವಾಭಾವಿಕ ನಾಲಾ ಮೂಲಕ ಹೋಗುವಂತೆ ಮಾಡಲಾಗಿರುತ್ತದೆ. ಇದರಿಂದಾಗಿ ಜಂಬುನಾಥ ಪ್ರದೇಶದಲ್ಲಿ ನಿರ್ಮಿಸಿದ ಆಕ್ಸಿಡೇಶನ್ ಪೌಂಡ್ ಉಪಯೋಗವಾಗದೇ ಹಾಗೆಯೇ ಉಳಿದಿರುತ್ತದೆ.

ಪ್ರಸ್ತುತ ಹೊಸಪೇಟೆ ನಗರಕ್ಕೆ ವಿನ್ಯಾಸಗೊಳಿಸಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ, ವತಿಯಿಂದ ನೂತನ ಒಳಚರಂಡಿ ಯೋಜನೆಯನ್ನು ನಿರ್ವಹಿಸುತ್ತಿದ್ದಾರೆ. ಸದರಿ ಯೋಜನೆಯಡಿಯಲ್ಲಿ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ, ವತಿಯಿಂದ ಎಸ್.ಟಿ.ಪಿ ನಿರ್ಮಾಣಕ್ಕೆ ಪ್ರತ್ಯೇಕವಾದ ಭೂಮಿಯನ್ನು ಗುರುತಿಸಿರುತ್ತಾರೆ. ಇದರಿಂದಾಗಿ 1 ನೇ ಹಂತದ ಒಳಚರಂಡಿ ಯೋಜನೆಯಡಿಯಲ್ಲಿ ವಶಪಡಿಸಿಕೊಂಡಿರುವ ಭೂಮಿಯು ಉಪಯೋಗಿಸದೇ ಇರುತ್ತದೆ. ಪ್ರಸ್ತಾಪಿಸಿರುವ ಜಮೀನನ್ನು ನಗರಸಭೆಗೆ ಹಸ್ತಾಂತರಿಸಿದಲ್ಲಿ, ಈ ಕೆಳಕಂಡ ಉದ್ದೇಶಗಳಿಗೆ ಉಪಯೋಗಿಸಿಕೊಳ್ಳಲಾಗುವುದು ಎಂದು ಪೌರಾಯುಕ್ತರು, ನಗರಸಭೆ, ಹೊಸಪೇಟೆ ಇವರು ವರದಿ

ಕ್ರಮ ಸ ಂಖ್ಯೆ ವಿವರ ವಿವರ
1 ಆಶ್ರಯ ನಿವೇಶನ (ನಿಗಮದ ಮೂಲಕ) 25.00 ಎಕರೆ
2 ನಿವೇಶನ (ಮಧ್ಯಮ ವರ್ಗಕ್ಕೆ) ಹರಾಜು ಮೂಲಕ ಬರುವ ಹಣದಿಂದ ವಿನ್ಯಾಸ ಅಭಿವೃದ್ದಿ ಪಡಿಸುವದು). 15.00 ಎಕರೆ
3 ಬಸ್ಸು ನಿಲ್ದಾಣ ಹಾಗು ಡಿಪೊ 05.50 ಎಕರೆ
4 ಕುಡಿಯುವ ನೀರು ಸರಬರಾಜು ಪಂಪಿಂಗ್ ಮತ್ತು ನೆಲ ಮಟ್ಟದ ಮತ್ತು ಮೇಲ್ಮಟ್ಟದ ಸಂಪು 03.00ಎಕರೆ
5 ಶಾಲೆ (ಪ್ರಾಥಮಿಕ ಮತ್ತು ಪ್ರೌಡ) 02.00 ಎಕರೆ
6 ಪ ೂಲೀಸ್ ಸ್ಟೇಷನ್ ೆ 00.63 ಎಕರೆ
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೩೭

ಸರ್ಕಾರವು ಪ್ರಸ್ತಾವನೆಯನ್ನು ಪರಿಶೀಲಿಸಿ, ಹೊಸಪೇಟೆ ನಗರದ ಜಂಬುನಾಥಹಳ್ಳಿ ರಸ್ತೆಯಲ್ಲಿರುವ 50.76 ಎಕರೆ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಹೊಸಪೇಟೆ ನಗರಸಭೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಹಸ್ತಾಂತರಿಸಲು ಮೇಲೆ ಓದಲಾದ (3) ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿದಂತೆ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ನಅಇ 20 ಯುಡಿಎಸ್ 2017, ಬೆಂಗಳೂರು, ದಿನಾಂಕ 16ನೇ ಮಾರ್ಚ್ 2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಹೊಸಪೇಟೆ ನಗರದ ಜಂಬುನಾಥಹಳ್ಳಿ ರಸ್ತೆಯಲ್ಲಿರುವ 50.76 ಎಕರೆ ಜಮೀನನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಹೊಸಪೇಟೆ ನಗರಸಭೆಗೆ ಈ ಕೆಳಕಂಡ ಷರತ್ತಿಗೆ ಒಳಪಟ್ಟು ಹಸ್ತಾಂತರಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನಿರ್ದೇಶಿಸಿ ಆದೇಶಿಸಿದೆ.

➢ ಹೊಸಪೇಟೆ ನಗರದ 1ನೇ ಹಂತದ ಒಳಚರಂಡಿ ಯೋಜನೆಯಡಿಯಲ್ಲಿ ಭೂಸ್ವಾಧೀನ ಪಡಿಸಿಕೊಳ್ಳಲಾದ ಭೂಮಿಗೆ ಮಂಡಳಿಯಿಂದ ಸಮಪಾಲಾಗಿ ಹಣವನ್ನು ಖರ್ಚು ಮಾಡಲಾಗಿರುತ್ತದೆ. ಹೊಸಪೇಟೆ ನಗರಸಭೆಯು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ 25.37 ಎಕರೆಗೆ ಸಂಬಂಧಿಸಿದಂತೆ ಪ್ರಸ್ತುತ ಮಾರ್ಗಸೂಚಿ ಬೆಲೆಯನ್ನು ಪಾವತಿಸುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 55 ವೆಚ್ಚ-9/2018, ದಿನಾಂಕ 20/02/2018 ರಲ್ಲಿ ಸಹಮತಿ ನೀಡಿರುವ ಮೇರೆಗೆ ಹೊರಡಿಸಿದೆ.

P.R.266

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ನಾಗರಾಜ

SC-50

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ)

(ಎಂ.ಎ-2 & ಮಂಡಳಿ),

ನಗರಾಭಿವೃದ್ಧಿ ಇಲಾಖೆ.

ಕಂದಾಯ ಸಚಿವಾಲಯ

ವಿಷಯ : ವಿಜಯಪುರ ಜಿಲ್ಲೆ, ವಿಜಯಪುರ ನಗರದ ವಾರ್ಡ್ ನಂಬರ್ 5ರ ಸಿಟಿಎಸ್ ನಂಬರ್ 605ಎ/1ಎ/1ಎ2 ರಲ್ಲಿ 12584 ಚದರ ಯಾರ್ಡ್ ಜಮೀನನ್ನು ಬಿ.ಎಲ್.ಡಿ.ಇ ಸಂಸ್ಥೆಯ ವಿ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ನೀಡಿರುವ ಜಮೀನಿನ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಕುರಿತು.

ಓದಲಾಗಿದೆ : ಜಿಲ್ಲಾಧಿಕಾರಿ, ವಿಜಯಪುರ ಜಿಲ್ಲೆ, ವಿಜಯಪುರ ಇವರ ಪತ್ರ ಸಂಖ್ಯೆ:ಆರ್‌ಬಿ/ಸಿಟಿಎಸ್/ಸಿಆರ್-65/93-94, ದಿನಾಂಕ:02-02-2017. ಹಾಗೂ ದಿನಾಂಕ:30-12-2017.

ಪ್ರಸ್ತಾವನೆ :

ಮೇಲೆ ಓದಲಾದ ದಿನಾಂಕ:02-02-2017ರ ಪತ್ರದಲ್ಲಿ, ಜಿಲ್ಲಾಧಿಕಾರಿ, ವಿಜಯಪುರ ಜಿಲ್ಲೆ, ವಿಜಯಪುರ ಇವರು ವಿಜಯಪುರ ನಗರದ ವಾರ್ಡ್ ನಂಬರ್ 5ರ ಸಿಟಿಎಸ್ ನಂ. 605ಎ/1ಎ/1ಎ2 ರಲ್ಲಿ 12584 ಚದರ ಯಾರ್ಡ್ ಜಾಗವನ್ನು ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ.ಸಿಎನ್ಎ.59, ದಿನಾಂಕ :

19-03-1962 ರನ್ವಯ 15 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಿದ್ದು, ತದನಂತರ ಸದರಿ ಜಮೀನಿನ ಗುತ್ತಿಗೆ ಅವಧಿಯನ್ನು ಪ್ರತಿ 5 ವರ್ಷಗಳಿಗೊಮ್ಮೆ ನವೀಕರಿಸಲಾಗುತ್ತಿದ್ದು, ಈ ಅವಧಿಯು ದಿನಾಂಕ:25-02-2017 ಕ್ಕೆ ಮುಕ್ತಾಯವಾಗುವುದರಿಂದ, ಅರ್ಜಿದಾರ ಸಂಸ್ಥೆಯು ಸದರಿ ಜಮೀನನ್ನು ಖಾಯಂ ಮಂಜೂರು ಮಾಡುವಂತೆ ಕೋರಿರುವ ಬಗ್ಗೆ ಪ್ರಸ್ತಾಪಿಸಿರುತ್ತಾರೆ.

ಮುಂದುವರೆದು, ಬಿ.ಎಲ್.ಡಿ.ಇ. ಸಂಸ್ಥೆಯು ಒಂದು ಚ್ಯಾರಿಟೇಬಲ್ ಸಂಸ್ಥೆಯಾಗಿರುವುದರಿಂದ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಪ್ರಸ್ತಾಪಿತ ವಿಜಯಪುರ ನಗರದ ವಾರ್ಡ್ ನಂಬರ್ 5ರ ಸಿಟಿಎಸ್ ನಂ. 605ಎ/1ಎ/1ಎ2 ರಲ್ಲಿ 12584 ಚದರ ಯಾರ್ಡ್ ಜಮೀನಿನ ಗುತ್ತಿಗೆ ಅವಧಿಯನ್ನು ಸರ್ಕಾರದ ಪತ್ರ ಸಂಖ್ಯೆ:ಆರ್‌ಡಿ 55 ಎಲ್‌ಜಿಜೆ 2014, ದಿನಾಂಕ:10-3-2014ರನ್ವಯ ಪ್ರತಿ ವರ್ಷಕ್ಕೆ ರೂ.4000/- ಗಳಂತೆ ಗುತ್ತಿಗೆ ದರ ಹಾಗೂ ಪ್ರತಿ 2 ವರ್ಷಗಳಿಗೊಮ್ಮೆ ಶೇಕಡ 10 ರಷ್ಟು ಗುತ್ತಿಗೆ ದರವನ್ನು ಹೆಚ್ಚಿಸುವ ಷರತ್ತಿಗೊಳಪಟ್ಟು ಹಾಗೂ ಸದರಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದ ಯಾವುದೇ ಆದೇಶ ಅಡ್ಡಯಾಗದಿರುವುದನ್ನು ಖಾತರಿಪಡಿಸಿಕೊಂಡು, ದಿನಾಂಕ:26-02-2012 ರಿಂದ ದಿನಾಂಕ:25-02-2017 ರವರೆಗೆ ಗುತ್ತಿಗೆಯನ್ನು ಪುನ: 5 ವರ್ಷಗಳ ಅವಧಿಗೆ ವಿಸ್ತರಿಸಲಾಗಿರುತ್ತದೆಂದು ವರದಿ ಮಾಡಿರುತ್ತಾರೆ.

ತದನಂತರ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರು, ವಿಜಯಪುರ ತಾಲ್ಲೂಕು ಇವರು ದಿನಾಂಕ : 30-12-2017 ಮತ್ತು ದಿನಾಂಕ : 24-01-2018 ರಂದು ಅನುಕ್ರಮವಾಗಿ ಸಲ್ಲಿಸಿರುವ ವರದಿಗಳಲ್ಲಿ ಪ್ರಸ್ತಾಪಿತ ವಿಜಯಪುರ ನಗರದ ವಾರ್ಡ್ ನಂಬರ್ 5ರ ಸಿಟಿಎಸ್ ನಂ. 605ಎ/1ಎ/1ಎ2 ರಲ್ಲಿ 12584 ಚದರ ಯಾರ್ಡ್ ಜಮೀನಿಗೆ ಸಂಬಂಧಿಸಿದಂತೆ ವಕ್ಫ್ ಟ್ರಿಬ್ಯೂನಲ್/ಸಿವಿಲ್ ಕೋರ್ಟ್/ ಉಚ್ಚ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ ಅಥವಾ ಬಾಕಿ ಇರುವುದಿಲ್ಲ ಎಂದು ವರದಿಸಿರುತ್ತಾರೆ.

ಜಿಲ್ಲಾಧಿಕಾರಿ, ವಿಜಯಪುರ ಜಿಲ್ಲೆ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕಳೆಕಂಡಂತೆ ಆದೇಶಿಸಿದೆ.

೫೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 12 ಎಲ್‌ಜಿಜೆ 2017, ಬೆಂಗಳೂರು, ದಿನಾಂಕ : 21-03-2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ವಿಜಯಪುರ ಜಿಲ್ಲೆ, ವಿಜಯಪುರ ನಗರದ ವಾರ್ಡ್ ನಂಬರ್ 5ರ ಸಿಟಿಎಸ್ ನಂ. 605ಎ/1ಎ/1ಎ2 ರಲ್ಲಿ ಬಿ.ಎಲ್.ಡಿ.ಇ. ಸಂಸ್ಥೆ, ವಿಜಯಪುರ ಇವರ ಆಯುರ್ವೇದ ಮಹಾವಿದ್ಯಾಲಯಕ್ಕೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದ 12584 ಚದರ ಯಾರ್ಡ್ ಜಮೀನಿನ ಗುತ್ತಿಗೆ ಅವಧಿಯನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರದನ್ವಯ, ಮಾರ್ಗಸೂಚಿ ಬೆಲೆಯ ಶೇ.3ರಷ್ಟು ವಾರ್ಷಿಕ ದರ ಹಾಗೂ ಪ್ರತಿ 2 ವರ್ಷಗಳಿಗೊಮ್ಮೆ ಶೇಕಡ 10 ರಷ್ಟು ಗುತ್ತಿಗೆ ದರವನ್ನು ಹೆಚ್ಚಿಸುವ ಹಾಗೂ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ದಿನಾಂಕ:26-02-2017 ರಿಂದ ಅನ್ವಯವಾಗುವಂತೆ ಗುತ್ತಿಗೆ ಅವಧಿಯನ್ನು 60 ವರ್ಷಗಳಿಗೆೆ ವಿಸ್ತರಿಸಿ ಆದೇಶಿಸಿದೆ.

ಷರತ್ತುಗಳು :

1. ಗುತ್ತಿಗೆ ಆದೇಶದಲ್ಲಿ ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ ದರ/ ಮಾರ್ಗಸೂಚಿ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. 2. ಉದ್ದೇಶಿತ ಜಮೀನನ್ನು ಯಾವ ಉದ್ದೇಶಕ್ಕಾಗಿ ಗುತ್ತಿಗೆ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು. 3. ಪ್ರಸ್ತಾಪಿತ ಜಮೀನು ಸಂಸ್ಥೆಗೆ ಅವಶ್ಯವಿಲ್ಲದಿದ್ದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು. 4. ಗುತ್ತಿಗೆ ಭೂಮಿಯನ್ನು ವಿನಾಶಕಾರಿಯಾದ ಅಥವ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 5. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು.

6. ಗುತ್ತಿಗೆಗೆ ನೀಡಿರುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದ ದಾವೆಗಳು ದಾಖಲಾಗಿದ್ದಲ್ಲಿ, ಈ ಗುತ್ತಿಗೆಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

7. ಸದರಿ ಜಮೀನಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪಡೆದುಕೊಳ್ಳತಕ್ಕದ್ದು.

8. ಗುತ್ತಿಗೆಗೆ ನೀಡಲಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೆ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.

9. ಗುತ್ತಿಗೆ ಆಧಾರದ ಮೇಲೆ ನೀಡಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ ಇತರೆ ರೀತಿಯ ಪರಭಾರೆ ಮಾಡತಕ್ಕದ್ದಲ್ಲ.

10. ಸದರಿ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.

11. ಜಿಲ್ಲಾಧಿಕಾರಿಗಳು ಗುತ್ತಿಗೆಗೆ ನೀಡಲಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

P.R. 270

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಇ. ಚನ್ನಬಸವರಾಜ

SC-25

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಭೂಮಂಜೂರಾತಿ-3).

ಕಂದಾಯ ಸಚಿವಾಲಯ

ವಿಷಯ : ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು, ಗೌಡಗೆರೆ ಹೋಬಳಿ, ಉಜ್ಜನಕುಂಟೆ ಮತ್ತು ಮಾರನಗೆರೆ ಗ್ರಾಮಗಳಲ್ಲಿ 811-14 ಎಕರೆ ಜಮೀನನ್ನು ಕರ್ನಾಟಕ ಹೆರಿಟೇಜ್ ಹಬ್ ಉದ್ದೇಶಕ್ಕೆ ಕಾಯ್ದಿರಿಸುವ ಕುರಿತು.

ಓದಲಾಗಿದೆ : ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ, ಇವರ ಪತ್ರ ಸಂಖ್ಯೆ:ಎಲ್ಎನ್‌ಡಿ (ಶಿರಾ) ಸಿಆರ್ 88/2016-17, ದಿನಾಂಕ : 21-02-2017.

ಪ್ರಸ್ತಾವನೆ :

ಮೇಲೆ ಓದಲಾದ ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಇವರ ದಿನಾಂಕ : 21-02-2017ರ ಪತ್ರದಲ್ಲಿ ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು, ಗೌಡಗೆರೆ ಹೋಬಳಿ, 1) ಉಜ್ಜನಕುಂಟೆ ಗ್ರಾಮದ ಸ.ನಂ.28ರಲ್ಲಿ 143-24 ಎಕರೆ/ಗುಂಟೆ, ಸ.ನಂ.29 ರಲ್ಲಿ 141-13 ಎಕರೆ/ಗುಂಟೆ, ಸ.ನಂ. 30 ರಲ್ಲಿ 61.12 ಎಕರೆ/ಗುಂಟೆ, ಸ.ನಂ.31ರಲ್ಲಿ 37-01 ಎಕರೆ/ಗುಂಟೆ, 2)ಮಾರನಗೆರೆ ಗ್ರಾಮದ ಸ.ನಂ.70 ರಲ್ಲಿ 27-27 ಎಕರೆ/ಗುಂಟೆ, ಸ.ನಂ.71ರಲ್ಲಿ 256-11 ಎಕರೆ/ಗುಂಟೆ, ಸ.ನಂ.72 ರಲ್ಲಿ ವಿಸ್ತೀರ್ಣ 144-06 ಎಕರೆ/ಗುಂಟೆ ಒಟ್ಟು ವಿಸ್ತೀರ್ಣ 811-14 ಎಕರೆ/ಗುಂಟೆ ಜಮೀನನ್ನು ಕರ್ನಾಟಕ ಹೆರಿಟೇಜ್ ಹಬ್ ನಿರ್ಮಿಸುವ ಉದ್ದೇಶಕ್ಕಾಗಿ ಕಾಯ್ದಿರಿಸುವ ಕುರಿತು ಪ್ರಸ್ತಾಪಿಸಿರುತ್ತಾರೆ.

ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ ಇವರು ಅಪರ ಮುಖ್ಯ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ ಇವರಿಗೆ ದಿನಾಂಕ: 01-12-2016ರಂದು ಸಲ್ಲಿಸಿರುವ ಪತ್ರದಲ್ಲಿ ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು, ಗೌಡಗೆರೆ ಹೋಬಳಿ, ಮಾರನಗೆರೆ ಗ್ರಾಮ ಮತ್ತು ಉಜ್ಜನಕುಂಟೆ ಗ್ರಾಮಗಳಲ್ಲಿ ಒಟ್ಟು 811-14 ಎಕರೆ ಹಾಗೂ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಜವಗೊಂಡನಹಳ್ಳಿ ಹೋಬಳಿ, ಕರಿಯಾಲ ಗ್ರಾಮದ 108-06 ಎಕರೆ ಒಟ್ಟು 919-20 ಎಕರೆ ವಿಸ್ತೀರ್ಣದ ಜಮೀನನ್ನು ಕರ್ನಾಟಕ ಹೆರಿಟೇಜ್ ಹಬ್ ಉದ್ದೇಶಕ್ಕೆ ಕಾಯ್ದಿರಿಸುವ ಬಗ್ಗೆ ಪ್ರಸ್ತಾಪಿಸಿರುತ್ತಾರೆ. ಪ್ರಕರಣದಲ್ಲಿ ಸಾರ್ವಜನಿಕಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೩೯ ಉದ್ದೇಶವಾಗಿರುವುದರಿಂದ ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(1)ರಂತೆ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಕಡಿಮೆ ಗೋಮಾಳ ಇದ್ದಾಗ್ಯೂ ಹಾಗೂ ಪರ್ಯಾಯವಾಗಿ ಸಾಕಷ್ಟು ಗೋಮಾಳ ಲಭ್ಯವಿಲ್ಲದಿದರೂ ಸಹಾ ನಿಯಮ 97(4)ರಂತೆ ವಿನಾಯಿತಿ ನೀಡಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71 ರಡಿ ಮೀಸಲಿರಿಸಬಹುದಾಗಿರುತ್ತದೆ ಎಂದು ವರದಿಸಿರುತ್ತಾರೆ.

ಮುಂದುವರೆದು, ಮಂಗಳೂರಿನ "ಪಿಲಿಕುಳ" ದಲ್ಲಿ ನಿರ್ಮಿಸಲಾಗಿರುವ "ವಿಶ್ವಪಾರಂಪರಿಕತಾಣ" ಮಾದರಿಯಂತೆ ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನಲ್ಲಿ "ಕರ್ನಾಟಕ ಹೆರಿಟೇಜ್‌ಹಬ್" ನಿರ್ಮಾಣವು ಸದುದ್ದೇಶದಿಂದ ಕೂಡಿದ್ದು, ಒಂದು ಉತ್ತಮ ಕಾರ್ಯಯೋಜನೆಯಾಗಿದ್ದು, ಈ ಯೋಜನೆಯು ರಾಜ್ಯಕ್ಕೆ ಹಾಗೂ ರಾಷ್ಟ್ರಕ್ಕೆ ಮಾದರಿಯಾಗಲಿದೆ. ಮಂಜೂರಾತಿಗೆ ಕೋರಿರುವ ಜಮೀನುಗಳು ಸಾಗುವಳಿಗೆ ಯೋಗ್ಯವಾಗಿರುವುದಿಲ್ಲ ಹಾಗೂ ಪರಿಭಾವಿತ ಅರಣ್ಯ ಪ್ರದೇಶವಾಗಿರುವುದಿಲ್ಲ. ಸದರಿ ಗ್ರಾಮದಲ್ಲಿ ಜಾನುವಾರುಗಳಿಗನುಗುಣವಾಗಿ ಗೋಮಾಳ ಜಮೀನು ಲಭ್ಯವಿಲ್ಲದಿದ್ದರೂ ಸಹ, ಸದರಿ ಯೋಜನೆಯು ಉತ್ತಮ ಯೋಜನೆಯಾಗಿದೆ. ಸದರಿ ಯೋಜನೆಯನ್ನು ಪ್ರಾರಂಭಿಸಲು ಮಂಜೂರಾತಿಗೆ ಕೋರಿರುವ ಜಮೀನುಗಳ ಮಧ್ಯಭಾಗದಲ್ಲಿ ಈ ಹಿಂದೆ ಮಂಜೂರಾಗಿರುವ ಕೆಲವು ಜಮೀನುಗಳು ದುರಸ್ಥಿಯಾಗಿದ್ದು, ಕೆಲವು ಜಮೀನು ದುರಸ್ಥಾಗಿರುವುದಿಲ್ಲ. ರಾಷ್ಟ್ರೀಯ ಹೆದ್ದಾರಿ-4 ರಿಂದ ನೇರವಾಗಿ ಮಂಜೂರಾತಿ ಜಮೀನಿಗೆ ರಸ್ತೆ ಸಂಪರ್ಕ ಕಲ್ಪಿಸಲು ಹಾಗೂ ಮಂಜೂರಾತಿಗೆ ಪ್ರಸ್ತಾಪಿಸಿರುವ ಜಮೀನುಗಳನ್ನು ಒಂದೇ ಆವರಣದಲ್ಲಿ ತರುವ ಉದ್ದೇಶದಿಂದ ಕೆಲವು ಜಮೀನುಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದೆಂದು ವರದಿಸಿರುತ್ತಾರೆ.

ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 4 ಎಲ್‌ಜಿಟಿ 2017, ಬೆಂಗಳೂರು, ದಿನಾಂಕ : 23-03-2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನ, ಉಜ್ಜನಕುಂಟೆ, ಹಾಗೂ ಮಾರನಗೆರೆ ಗ್ರಾಮಗಳಲ್ಲಿನ ಒಟ್ಟು ವಿಸ್ತೀರ್ಣ 811-14 ಎಕರೆ/ಗುಂಟೆ ಜಮೀನನ್ನು, ಕರ್ನಾಟಕ ಸಾಂಸ್ಕøತಿಕ, ಪ್ರಾಚೀನ ಸಂಪ್ರದಾಯಗಳ ಪ್ರದರ್ಶನ ಹಾಗೂ ಇತರೆ ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97(4)ರಂತೆ ಗೋಮಾಳ ಶೀರ್ಷಿಕ್ಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71ರಡಿ " ಕರ್ನಾಟಕ ಸಾಂಸ್ಕøತಿಕ ಹಾಗೂ ಜ್ಞಾನ ಕೇಂದ್ರ" (Karnataka Cultural and Knowledge Hub) ಸ್ಥಾಪಿಸುವ ಉದ್ದೇಶಕ್ಕಾಗಿ ಕಾಯ್ದಿರಿಸಿ, ಆದೇಶಿಸಿದೆ.

ಷರತ್ತುಗಳು :

1. ಉದ್ದೇಶಿತ ಜಮೀನನ್ನು ಯಾವ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು. 2. ಪ್ರಸ್ತಾಪಿತ ಜಮೀನು ಅವಶ್ಯವಿಲ್ಲದಿದ್ದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು. 3. ಕಾಯ್ದಿರಿಸಿದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 4. ಕಾಯ್ದಿರಿಸಿದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು. 5. ಕಾಯ್ದಿರಿಸಿದ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

6. ಸದರಿ ಜಮೀನಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪಡೆಯತಕ್ಕದ್ದು.

7. ಕಾಯ್ದಿರಿಸಿದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೆ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.

8. ಕಾಯ್ದಿರಿಸಿದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ ಇಡುವುದಾಗಲೀ, ವರ್ಗಾವಣೆ ಅಥವಾ ಇತರೆ ಯಾವುದೇ ರೀತಿಯ ಪರಭಾರೆ ಮಾಡತಕ್ಕದ್ದಲ್ಲ.

9. ಸದರಿ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.

10. ಜಿಲ್ಲಾಧಿಕಾರಿಗಳು ಕಾಯ್ದಿರಿಸಿದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

P.R. 271

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಇ. ಚನ್ನಬಸವರಾಜ

SC-25

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಭೂಮಂಜೂರಾತಿ-3).

ಕಂದಾಯ ಸಚಿವಾಲಯ

ವಿಷಯ : ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಉಳಿ ಗ್ರಾಮದ ಸ.ನಂ.80/ಪಿ1ರಲ್ಲಿ 2.03 ಎಕರೆ ಜಮೀನನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ (ರಿ), ಕಕ್ಕಪದವು, ಉಳಿ ಗ್ರಾಮ ಇವರಿಗೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ : ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರ ಪತ್ರ ಸಂಖ್ಯೆ:ಆರ್‌ಸಿ.163/ಎಲ್ಎನ್‌ಡಿ (1)2014-15, ದಿನಾಂಕ:19.08.2016.

೫೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧

ಪ್ರಸ್ತಾವನೆ :

ಮೇಲೆ ಓದಲಾದ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಉಳಿ ಗ್ರಾಮದ ಸ.ನಂ.80/ಪಿ1ರಲ್ಲಿ 2.03 ಎಕರೆ ಜಮೀನನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ (ರಿ), ಕಕ್ಕಪದವು, ಉಳಿ ಗ್ರಾಮ ಇವರಿಗೆ ಮಂಜೂರು ಮಾಡುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ. ಪ್ರಸ್ತಾಪಿತ ಜಮೀನು ಸರ್ಕಾರಿ ಅನಾಧೀನ ಜಮೀನಾಗಿದ್ದು, ಕುಮ್ಕಿ, ಗೋಮಾಳ, ಅರಣ್ಯ ಜಮೀನಾಗಿರುವುದಿಲ್ಲ. ಈ ಜಮೀನು ಜಿಲ್ಲಾ ಪಂಚಾಯತ್ ರಸ್ತೆಯಿಂದ 25 ಕಿ.ಮೀ. ದೂರದಲ್ಲಿ ಹಾಗೂ ಜಿಲ್ಲಾ ಕೇಂದ್ರದಿಂದ 30 ಕಿ.ಮೀ.

ದೂರದಲ್ಲಿರುತ್ತದೆ. ಭೂ ಕೋರಿಕೆ ಸಂಸ್ಥೆಯು 03 ವರ್ಷಗಳ ಅಡಿಟ್ ವರದಿಯನ್ನು ಸಲ್ಲಿಸಿದ್ದು, ಸಹಕಾರ ಸಂಘಗಳ ನೋಂದಣಿ ಇಲಾಖೆಯಲ್ಲಿ ನೋಂದಣಿ ಆಗಿರುತ್ತದೆ. ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ (ರಿ), ಕಕ್ಕಪದವು, ಉಳಿ ಗ್ರಾಮ ಇದು ಸುತ್ತಲಿನ 6 ರಿಂದ 7 ಗ್ರಾಮಗಳ ಭಕ್ತಾದಿಗಳ ಆರಾಧನಾ ಕೇಂದ್ರವಾಗಿದ್ದು, ಸುಮಾರು 150 ವರ್ಷಗಳ ಇತಿಹಾಸವಿರುವ ಪುರಾತನ ದೇವಸ್ಥಾನವಾಗಿರುತ್ತದೆ. ಉದ್ದೇಶಿತ ಜಮೀನನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಆರ್‌ಡಿ 09 ಎಲ್‌ಜಿಪಿ 2015 ದಿನಾಂಕ:09.06.2015 ರಂತೆ ಮಾರ್ಗಸೂಚಿ ಬೆಲೆಯ ಶೇಕಡ 50 ರಷ್ಟನ್ನು ವಿಧಿಸಿ ಮಂಜೂರು ಮಾಡಬಹುದಾಗಿದ್ದು, ಅದರಂತೆ 2.03 ಎಕರೆಗೆ ರೂ.2,19,240-00 ಗಳಾಗುತ್ತದೆಂದು ವರದಿ ಮಾಡುತ್ತಾ, ಬಂಟ್ವಾಳ ತಾಲ್ಲೂಕು, ಉಳಿ ಗ್ರಾಮದ ಸ.ನಂ.80/ಪಿ1ರಲ್ಲಿ 2.03 ಎಕರೆ ಜಮೀನನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ (ರಿ), ಕಕ್ಕಪದವು, ಉಳಿ ಗ್ರಾಮ ಇವರಿಗೆ ಮಂಜೂರು ಮಾಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ದಿನಾಂಕ:27.12.2017ರ ಪತ್ರದಲ್ಲಿ ತಹಶೀಲ್ದಾರ್, ಬಂಟ್ವಾಳ ತಾಲ್ಲೂಕು ಇವರು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿಯು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೊಳಪಡುವುದಿಲ್ಲ. ಆದರೆ ಇದು ಪುರಾತನ ದೇವಸ್ಥಾನವಾಗಿದ್ದು, ಈ ಗ್ರಾಮವು ಹಿಂದುಳಿದ ಗ್ರಾಮವಾಗಿರುತ್ತದೆ. ಈ ಗ್ರಾಮಕ್ಕೆ ಈ ದೇವಸ್ಥಾನವೇ ಪ್ರಮುಖ ಧಾರ್ಮಿಕ ಕೇಂದ್ರವಾಗಿರುತ್ತದೆ. ಗ್ರಾಮದ ಹೆಚ್ಚಿನ ಗ್ರಾಮಸ್ಥರು ನಿತ್ಯವೂ ಆರಾಧಿಸಿಕೊಂಡು ಬರುತ್ತಿರುವ ದೇವಸ್ಥಾನವಾಗಿದ್ದು, ಇಲ್ಲಿ ನಿತ್ಯ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಸಾರ್ವಜನಿಕ ಧಾರ್ಮಿಕ ಸಂಸ್ಥೆಯಾಗಿರುತ್ತದೆ ಎಂದು ವರದಿ ಮಾಡಿರುತ್ತಾರೆ.

ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 78 ಎಲ್‌ಜಿಎ 2016, ಬೆಂಗಳೂರು, ದಿನಾಂಕ : 23.03.2018.

ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕು, ಉಳಿ ಗ್ರಾಮದ ಸ.ನಂ.80/ಪಿ1ರಲ್ಲಿ 2.03 ಎಕರೆ ಜಮೀನನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ (ರಿ), ಕಕ್ಕಪದವು, ಉಳಿ ಗ್ರಾಮ ಇವರಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27 ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 94(1)ರಂತೆ ದಂಡ ಮತ್ತು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ಎ(1)(i)(4)ರಂತೆ ಮಾರ್ಗಸೂಚಿ ಬೆಲೆಯ ಶೇಕಡ 50 ರಷ್ಟು ಮೌಲ್ಯ ಮತ್ತು ನಿಯಮಾನುಸಾರ ಇತರೆ ಶುಲ್ಕವನ್ನು ವಿಧಿಸಿ, ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿದೆ.

ಷರತ್ತುಗಳು :-

1. ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

2. ಆದೇಶದಲ್ಲಿ ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ ದರವನ್ನು ಜಿಲ್ಲಾಧಿಕಾರಿಯವರು ಕಡ್ಡಾಯವಾಗಿ ನಮೂದಿಸತಕ್ಕದ್ದು. 3. ಮಂಜೂರಾದ ಜಮೀನನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 4. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು. 5. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡತಕ್ಕದ್ದಲ್ಲ.

6. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು. 7. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

8. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶವನ್ನು ನಿಯಮಾನುಸಾರ ರದ್ದುಗೊಳಿಸಲಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

9. ಜಿಲ್ಲಾಧಿಕಾರಿಗಳು, ಮಂಜೂರಾದ ಜಮೀನನ್ನು ಶ್ರೀ ಬ್ರಹ್ಮ ಬೈದರ್ಕಳ ಗರಡಿ ಜೀರ್ಣೋದ್ಧಾರ ಸಮಿತಿ (ರಿ), ಕಕ್ಕಪದವು, ಉಳಿ ಗ್ರಾಮ ಇವರಿಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

P.R. 269

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಉದಯ ಆರ್. ನಾಯಕ್

SC-25

ಪೀಠಾಧಿಕಾರಿ,

ಕಂದಾಯ ಇಲಾಖೆ. (ಭೂಮಂಜೂರಾತಿ-2).

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೪೧

ಕಂದಾಯ ಸಚಿವಾಲಯ

ವಿಷಯ : ವಿಜಯಪುರ ಜಿಲ್ಲೆ, ವಿಜಯಪುರ ನಗರದ ಸಿ.ಟಿ.ಎಸ್.ನಂ.1740/2ರಲ್ಲಿ 75x130 ಅಡಿ ವಿಸ್ತೀರ್ಣದ ಪ್ರದೇಶವನ್ನು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್, ವಿಜಯಪುರ ಇವರಿಗೆ ಗುತ್ತಿಗೆಗೆ ನೀಡುವ ಕುರಿತು.

ಓದಲಾಗಿದೆ : 1. ಜಿಲ್ಲಾಧಿಕಾರಿ, ವಿಜಯಪುರ ಜಿಲ್ಲೆ, ವಿಜಯಪುರ ಇವರ ಪತ್ರ ಸಂಖ್ಯೆ:ಆರ್‌ಬಿ/ಸಿಟಿಎಸ್/ಸಿಆರ್-101/02-03, ದಿನಾಂಕ:11-05-2016 ಹಾಗೂ ದಿನಾಂಕ:08-06-2017.

2. ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರಸಂಖ್ಯೆ:ಪ್ರಾಆಬೆ/ಭೂಮಿ-4/ಎಲ್ಎನ್‌ಡಿ/ ವಿವ/32/06-07, ದಿನಾಂಕ:25-06-2016.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ:(1)ರ ಜಿಲ್ಲಾಧಿಕಾರಿ, ವಿಜಯಪುರ ಜಿಲ್ಲೆ ಇವರ ದಿನಾಂಕ:11-05-2016ರ ಪತ್ರದಲ್ಲಿ, ವಿಜಯಪುರ ಬರಗಾಲ ನಿವಾರಣಾ ನಿಯಮಿತ ಸಹಕಾರಿ ಸಂಸ್ಥೆಗೆ ವಿಜಯಪುರ ಜಿಲ್ಲಾ ಕೃಷಿ ಮತ್ತು ಉದ್ಯೋಗ ಅಭಿವೃದ್ದಿ ಪಡಿಸಲು ಹಾಗೂ ಬರಗಾಲ ನಿವಾರಣೆ ಮಾಡಿ ಹಸಿರು ವಲಯ ಪ್ರದೇಶವಾಗಿಸುವ ಮತ್ತು ಗ್ರಾಮೀಣ ಭಾಗಗಳಲ್ಲಿ ಸಂಪನ್ಮೂಲ ಕ್ರೂಡೀಕರಿಸುವ ಉದ್ದೇಶಕ್ಕಾಗಿ ಸಿಟಿಎಸ್ ನಂ.1740ರಲ್ಲಿ 5576 ಚದರ ಯಾರ್ಡ್ ಜಮೀನನ್ನು ವಾರ್ಷಿಕ ಬಾಡಿಗೆ ರೂ.115/- ಗಳನ್ನು ವಿಧಿಸಿ, ಅಂದಿನ ದಕ್ಷಿಣ ವಲಯದ ವಿಭಾಗ ಆಯುಕ್ತರು ದಿನಾಂಕ:06-12-1927 ರಂದು ಮಂಜೂರು ಮಾಡಿರುತ್ತಾರೆ. ಸದರಿ ಸಂಸ್ಥೆಯು ಮಂಜೂರಾದ ಜಮೀನನ್ನು ಖಾಸಗಿಯವರಿಗೆ ವಾಣಿಜ್ಯ ಉದ್ದೇಶಕ್ಕಾಗಿ ಉಪಗುತ್ತಿಗೆಗೆ ನೀಡಿ, ಬಾಡಿಗೆ ಹಣ ಪಡೆದು ಸರ್ಕಾರ ವಿಧಿಸಿದ್ದ ಭೂ ಮಂಜರಾತಿ ಷರತ್ತನ್ನು ಉಲ್ಲಂಘನೆ ಮಾಡಿದ್ದರಿಂದ, ಜಿಲ್ಲಾಧಿಕಾರಿಗಳು ದಿನಾಂಕ:18-01-2011 ರಂದು ಸದರಿ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಪ್ರಸ್ತಾಪಿತ ಆಸ್ತಿಯನ್ನು ಸರ್ಕಾರದ ವಶಕ್ಕೆ ಪಡೆದಿರುತ್ತಾರೆ. ಪ್ರಸ್ತಾಪಿತ ಜಮೀನು ವಿಜಯಪುರ ನಗರದ ಹೃದಯ ಭಾಗದಲ್ಲಿದ್ದು, ಅಂದಾಜು ರೂ.75.27 ಕೋಟಿ ಬೆಲೆೆಬಾಳುವ ಪ್ರದೇಶವಾಗಿರುತ್ತದೆ ಹಾಗೂ ಕಂದಾಯ ಇಲಾಖೆ ಕಛೇರಿಗಳಿಗೆ ಸ್ಥಳಾವಕಾಶ ಕಡಿಮೆ ಇರುವುದರಿಂದ, ಪ್ರಶ್ನಿತ ಕಟ್ಟಡ/ಸ್ಥಳವನ್ನು ಕಂದಾಯ ಇಲಾಖೆಯ ಪ್ರಮುಖ ಕಛೇರಿಗಳನ್ನು ನಿರ್ಮಿಸಲು ಕಾಯ್ದಿರಿಸುವುದು ಸೂಕ್ತವೆಂಬ ಅಭಿಪ್ರಾಯದೊಂದಿಗೆ ಜಿಲ್ಲಾಧಿಕಾರಿಗಳು ವರದಿಯನ್ನು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ:(2)ರ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ ಇವರ ದಿನಾಂಕ:25-06-2016 ರ ಪತ್ರದಲ್ಲಿ, ವಿಜಯಪುರ ಬರಗಾಲ ನಿವಾರಣಾ ನಿಯಮಿತ ಸಹಕಾರಿ ಸಂಸ್ಥೆಗೆ ವಿಜಯಪುರ ನಗರದ ಸಿ.ಟಿ.ಎಸ್.ನಂ.1740/2ರಲ್ಲಿ ಮಂಜೂರು ಮಾಡಿರುವ ಜಮೀನಿನ ಷರತ್ತುಗಳನ್ನು ಸದರಿ ಸಂಸ್ಥೆಯು ಉಲ್ಲಂಘಿಸಿರುವುದರಿಂದ, ಸದರಿ ಜಮೀನು/ಚರಾಸ್ಥಿಗಳನ್ನು ಋುಣಬಾರರಾಹಿತ್ಯವಿಲ್ಲದೆ ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳು ದಿನಾಂಕ:18-01-2011ರಂದು ಆದೇಶ ಹೊರಡಿಸಿ, ಪ್ರಸ್ತಾಪಿತ ಜಮೀನನ್ನು ಸರ್ಕಾರದ ವಶಕ್ಕೆ ಪಡೆದಿರುತ್ತಾರೆ. ಈ ಪ್ರಕ್ರಿಯೆಯನ್ನು ಪ್ರಶ್ನಿಸಿ, ಅರ್ಜಿದಾರ ಸಂಸ್ಥೆಯು ನ್ಯಾಯಾಲಯದಲ್ಲಿ ರಿಟ್ ಅರ್ಜಿ, ರಿಟ್ ಅಪೀಲು ಇತ್ಯಾದಿಗಳನ್ನು ದಾಖಲಿಸಿದ್ದು, ಸದರಿ ಪ್ರಕರಣಗಳಲ್ಲಿ ಮಾನ್ಯ ನ್ಯಾಯಾಲಯವು ಸರ್ಕಾರದ ಪರವಾಗಿ ತೀರ್ಪು ನೀಡಿರುತ್ತದೆ. ಅಲ್ಲದೆ ಪ್ರಸ್ತಾಪಿತ ಜಮೀನು ವಿಜಯಪುರ ನಗರದ ಕೇಂದ್ರ ಭಾಗದಲ್ಲಿದ್ದು, ಸುಮಾರು ರೂ. 75 ಕೋಟಿ ಬೆಲೆಬಾಳುವ ಜಮೀನಾಗಿರುವುದರಿಂದ ಕಂದಾಯ ಇಲಾಖೆಯ ಪ್ರಮುಖ ಕಛೇರಿಗಳನ್ನು ನಿರ್ಮಿಸಲು ಸದರಿ ಜಮೀನನ್ನು ಕಾಯ್ದಿರಿಸುವುದು ಸೂಕ್ತವೆಂದು೫೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧ 4. ಗುತ್ತಿಗೆ ಭೂಮಿಯನ್ನು ವಿನಾಶಕಾರಿಯಾದ ಅಥವ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 5. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು.

6. ಸದರಿ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

7. ಸದರಿ ಜಮೀನಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪಡೆಯತಕ್ಕದ್ದು.

8. ಗುತ್ತಿಗೆಗೆ ನೀಡಲಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೆ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.

9. ಗುತ್ತಿಗೆ ಆಧಾರದ ಮೇಲೆ ನೀಡಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ ಇತರೆ ರೀತಿಯ ಪರಭಾರೆ ಮಾಡತಕ್ಕದ್ದಲ್ಲ.

10. ಸದರಿ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.

11. ಜಿಲ್ಲಾಧಿಕಾರಿಗಳು ಗುತ್ತಿಗೆಗೆ ನೀಡಲಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

P.R. 281

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಇ. ಚನ್ನಬಸವರಾಜ

SC-25

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಭೂಮಂಜೂರಾತಿ-3).

ಕಂದಾಯ ಸಚಿವಾಲಯ

ವಿಷಯ : ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಕೋಡಿಹಳ್ಳಿ ಗ್ರಾಮದ ರಿ.ಸ.ನಂ.4 ರಲ್ಲಿ 2-00 ಎಕರೆ ಗೋಮಾಳ ಜಮೀನನ್ನು ಕನಕಶ್ರೀ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ, ಕೋಡಿಹಳ್ಳಿ ಇವರಿಗೆ ಮಂಜೂರು ಮಾಡುವ ಕುರಿತು.

ಓದಲಾಗಿದೆ : 1. ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರ ಪತ್ರ ಸಂಖ್ಯೆ : ಎಲ್ಎನ್‌ಡಿ/ ಸಿಆರ್/ 87/2016-17 ದಿನಾಂಕ : 26-07-2017.

2. ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ, ಇವರ ಪತ್ರ ಸಂಖ್ಯೆ:ಎಲ್ಎನ್‌ಡಿ: ಹೆಚ್‌ವೈಆರ್/ಸಿಆರ್-62/2015-16 ದಿನಾಂಕ : 15-04-2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ:(1)ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಕೋಡಿಹಳ್ಳಿ ಗ್ರಾಮದ ರಿ.ಸ.ನಂ. 4 ರಲ್ಲಿ 2-00 ಎಕರೆ ಗೋಮಾಳ ಜಮೀನನ್ನು ಕನಕಶ್ರೀ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ, ಕೋಡಿಹಳ್ಳಿ ಇವರಿಗೆ ಆಧುನಿಕ ತಳಿಯ ಮೇವು ಬೆಳೆಸಲು ಹಾಗೂ ಸಾಮೂಹಿಕ ಉಣ್ಣೆ ನೇಕಾರರ ಸೇವಾ ಕೇಂದ್ರದ ಕಟ್ಟಡಕ್ಕಾಗಿ ಮಂಜೂರು ಮಾಡುವ ಕುರಿತು ಪ್ರಸ್ತಾಪಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ(2)ರ ಪತ್ರದಲ್ಲಿ ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ ಇವರು ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಕೋಡಿಹಳ್ಳಿ ಗ್ರಾಮದ ರಿ.ಸ.ನಂ.4 ರಲ್ಲಿನ 57-29 ಎಕರೆ ಜಮೀನು ಪಹಣಿ ಪತ್ರಿಕೆ ಮತ್ತು ಆಕಾರ್ ಬಂದ್ ಪ್ರಕಾರ, 'ಹುಲ್ಲುಬನ್ನಿ ಖರಾಬು' ಎಂದು ದಾಖಲಾಗಿದ್ದು, ಕಲ್ಲುಮಿಶ್ರಿತ ಜಮೀನಾಗಿದ್ದು, ರಸ್ತೆ ಸಂಪರ್ಕವನ್ನು ಹೊಂದಿರುತ್ತದೆ. ಈ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದಿಲ್ಲ, ಬಾಕಿ ಇರುವುದಿಲ್ಲ ಹಾಗೂ ಸದರಿ ಜಮೀನಿನಲ್ಲಿ ಸಾರ್ವಜನಿಕ ಉಪಯೋಗದಲ್ಲಿರುವ ಕಟ್ಟಡ, ದಾರಿ, ದೇವಸ್ಥಾನ, ಮಂಟಪ ಇತ್ಯಾದಿಗಳು ಇರುವುದಿಲ್ಲ ಮತ್ತು ವಿದ್ಯುತ್, ಟೆಲಿಪೋನ್ ತಂತಿ ಹಾದು ಹೋಗಿರುವುದಿಲ್ಲ. ಪ್ರಸ್ತಾಪಿತ ಜಮೀನು ಕೋಡಿಹಳ್ಳಿ ಗ್ರಾಮದ ಇಕ್ಕನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದು, ಇಕ್ಕನೂರ ಗ್ರಾಮ ಪಂಚಾಯಿತಿಯು ಭೂ ಕೋರಿಕಾ ಸಂಘಕ್ಕೆ ಪ್ರಸ್ತಾಪಿತ ಜಮೀನನ್ನು ಮಂಜೂರು ಮಾಡುವ ಬಗ್ಗೆ ನಿರಾಕ್ಷೇಪಣ ಪತ್ರ ನೀಡಿರುತ್ತದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾಪಿತ ಜಮೀನನ್ನು ಯೋಜಿತ ಉದ್ದೇಶಕ್ಕಾಗಿ ಕನಕಶ್ರೀ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಕ್ಕೆ ಮಂಜೂರು ಮಾಡಬಹುದೆಂಬ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸಿರುತ್ತಾರೆ.

ಮುಂದುವರೆದು, ಕನಕಶ್ರೀ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘವು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಕಲಂ 7(1) ರಡಿ ದಿನಾಂಕ:21-10-2015 ರಂದು ನೋಂದಣಿಯಾಗಿರುವ ಬಗ್ಗೆ ದೃಡೀಕೃತ ಪ್ರತಿ, ಬೈಲಾ, ಆಡಿಟ್ ವರದಿ, ಸದಸ್ಯರ ವಿವರ ಮತ್ತು ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ದೃಡೀಕೃತ ನಕಲುಗಳನ್ನು ಸಲ್ಲಿಸಿರುತ್ತಾರೆ. ಸದರಿ ಸಂಘವು ಖಾಸಗಿ ಸಂಘವಲ್ಲವೆಂದು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿತ್ರದುರ್ಗ ಇವರು ದಿನಾಂಕ:23/03/2016ರ ಪತ್ರದಲ್ಲಿ ತಿಳಿಸಿರುತ್ತಾರೆ.

ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಹಾಗೂ ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ ಇವರುಗಳ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೪೩

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 34 ಎಲ್‌ಜಿಸಿ 2017, ಬೆಂಗಳೂರು, ದಿನಾಂಕ : 26-03-2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕು, ಕೋಡಿಹಳ್ಳಿ ಗ್ರಾಮದ ರಿ.ಸ.ನಂ.4 ರಲ್ಲಿನ 57-29 ಎಕರೆ ಗೋಮಾಳ ಜಮೀನಿನ ಪೈಕಿ 2-00 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರನ್ವಯ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 20(1)(ಸಿ) ರನ್ವಯ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇಕಡ 50 ರಷ್ಟು ದರ ಹಾಗೂ ಇತರೆ ಶಾಸನಬದ್ಧ ಶುಲ್ಕಗಳನ್ನು ವಿಧಿಸಿ, ಕನಕಶ್ರೀ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘ ನಿಯಮಿತ, ಕೋಡಿಹಳ್ಳಿ ಇವರಿಗೆ ಆಧುನಿಕ ತಳಿಯ ಮೇವು ಬೆಳೆಸಲು ಹಾಗೂ ಸಾಮುಹಿಕ ಉಣ್ಣೆನೇಕಾರರ ಸೇವಾ ಕೇಂದ್ರದ ಕಟ್ಟಡಕ್ಕಾಗಿ, ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.

ಷರತ್ತುಗಳು :

1. ಮಂಜೂರಾತಿ ಆದೇಶದಲ್ಲಿ ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ ದರ/ ಮಾರ್ಗಸೂಚಿ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. 2. ಉದ್ದೇಶಿತ ಜಮೀನನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು. 3. ಪ್ರಸ್ತಾಪಿತ ಜಮೀನು ಸಂಸ್ಥೆಗೆ ಅವಶ್ಯವಿಲ್ಲದಿದ್ದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು. 4. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 5. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು.

6. ಮಂಜೂರಾದ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

7. ಸದರಿ ಜಮೀನಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪಡೆಯತಕ್ಕದ್ದು.

8. ಮಂಜೂರು ಮಾಡಲಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೆ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.

9. ಮಂಜೂರು ಮಾಡಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ ಇಡುವುದಾಗಲೀ, ವರ್ಗಾವಣೆ ಅಥವಾ ಇತರೆ ಯಾವುದೇ ರೀತಿಯ ಪರಭಾರೆ ಮಾಡತಕ್ಕದ್ದಲ್ಲ.

10. ಸದರಿ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.

11. ಜಿಲ್ಲಾಧಿಕಾರಿಗಳು ಮಂಜೂರು ಮಾಡಲಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

P.R. 282

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಇ. ಚನ್ನಬಸವರಾಜ

SC-25

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಭೂಮಂಜೂರಾತಿ-3).

ಕಂದಾಯ ಸಚಿವಾಲಯ

ವಿಷಯ : ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ಆದೂರು ಗ್ರಾಮದ ಸ.ನಂ. 74ರಲ್ಲಿ ಲಭ್ಯವಿರುವ ಸರ್ಕಾರಿ ಗೋಮಾಳ ಜಮೀನನ್ನು ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಹೊಸಕೆರೆಹಳ್ಳಿ ಗ್ರಾಮದ ಸ.ನಂ. 75/1ರಲ್ಲಿ ಲಭ್ಯವಿರುವ ಸರ್ಕಾರಿ ಖರಾಬು ಜಮೀನನ್ನು ವಿವಿಧ ಖಾಸಗಿ ಸಂಘ ಸಂಸ್ಥೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೀಡುವ ಕುರಿತು.

ಓದಲಾಗಿದೆ : ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ (ಪೂ) ಸಿಆರ್/287/2017-18, ದಿನಾಂಕ: 12-03-2018.

ಪ್ರಸ್ತಾವನೆ:

ಮೇಲೆ ಓದಲಾದಂತೆ, ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರು ಸಲ್ಲಿಸಿರುವ ದಿನಾಂಕ: 12-03-2018 ಮತ್ತು ಅದೇ ದಿನಾಂಕಗಳಂದು ಸಲ್ಲಿಸಿರುವ ಪ್ರತ್ಯೇಕ ಪ್ರಸ್ತಾವನೆಗಳಲ್ಲಿ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಪೂರ್ವ ತಾಲ್ಲೂಕು, ಬಿದರಹಳ್ಳಿ ಹೋಬಳಿ, ಆದೂರು ಗ್ರಾಮದ ಸ.ನಂ.74ರಲ್ಲಿ ಲಭ್ಯವಿರುವ ವಿವಿಧ ಬ್ಲಾಕ್‌ಗಳಲ್ಲಿನ ಒಟ್ಟು 203-09 ಎಕರೆ ಸರ್ಕಾರಿ ಗೋಮಾಳ ಜಮೀನಿನ ಪೈಕಿ ವಿವಿಧ ಖಾಸಗಿ ಸಂಘ ಸಂಸ್ಥೆಗಳಿಗೆ ಅವುಗಳ ಕೋರಿಕೆ ವಿಸ್ತೀರ್ಣವನ್ನು ಗುತ್ತಿಗೆ ಆಧಾರದ ಮೇಲೆ ನೀಡುವ ಕುರಿತು ಪ್ರಸ್ತಾಪಿಸಿದ್ದಾರೆ.

ಮುಂದುವರೆದು, ಆದೂರು ಗ್ರಾಮದ ಸ.ನಂ. 74ರಲ್ಲಿ ಆಕಾರ್‌ಬಂದ್‌ನ ವಿಸ್ತೀರ್ಣದಂತೆ ಒಟ್ಟು 203.09 ಎಕರೆ/ಗುಂಟೆ ಜಮೀನು ಇರುತ್ತದೆ.

ಸದರಿ ಜಮೀನು ಪಹಣಿ ಪತ್ರಿಕೆ ಪ್ರಕಾರ "ಸರ್ಕಾರಿ ಗೋಮಾಳ" ಜಮೀನೆಂದು ವರ್ಗೀಕರಣಗೊಂಡಿರುತ್ತದೆ. ಸದರಿ ಸರ್ವೆ ನಂಬರ್ 74ರ ಪೂರ್ಣ ವಿಸ್ತೀರ್ಣವನ್ನು ಮೋಜಿಣಿ ಮಾಡಿಸಿ ಲಭ್ಯವಿರುವ ಖುಲ್ಲಾ ಜಮೀನನ್ನು ಗುರುತಿಸಲಾಗಿದೆ ಹಾಗೂ ತಾಲ್ಲೂಕು ಭೂ ಮಾಪಕರು ತಯಾರಿಸಿದ ನಕ್ಷೆಗಳಲ್ಲಿಯೂ೫೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧ ಸಹ ವಿವಿಧ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಸ್ಥಳೀಯ ಉಪ ತಹಶೀಲ್ದಾರ್, ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಂದ ಜಂಟಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿರುತ್ತಾರೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತಾಪಿತ ಜಮೀನು ಗೋಮಾಳ ಜಮೀನಾಗಿರುತ್ತದೆ. ಪಶು ಸಂಗೋಪನಾ ಇಲಾಖೆಯು ಆದೂರು ಗ್ರಾಮದಲ್ಲಿ ಇರುವ ಜಾನುವಾರುಗಳು ಉತ್ತಮ ತಳೀಯ ಪಶುಗಳಾಗಿದ್ದು, ಇವುಗಳಿಗೆ ಸಾಕಾಣಿಕೆದಾರರು ಅವರ ಹಿಡುವಳಿ ಜಮೀನುಗಳಲ್ಲಿ ಬೆಳೆದ ಮೇವನ್ನು ಉಪಯೋಗಿಸುತ್ತಿದ್ದಾರೆಂದು ತಿಳಿಸಿರುತ್ತದೆ. ಸದರಿ ಜಮೀನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸರಹದ್ದಿನಿಂದ 4 ಕಿ.ಮೀ. ಅಂತರದಲ್ಲಿದ್ದು ರಸ್ತೆ ಸಂಪರ್ಕವನ್ನು ಹೊಂದಿದೆ ಎಂದು ತಿಳಿಸಲಾಗಿದೆ. ಸದರಿ ಜಮೀನು ಒತ್ತುವರಿಯಿಂದ ಮುಕ್ತವಾಗಿದ್ದು, ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ 97(4) ರಡಿಯಲ್ಲಿ ಗೋಮಾಳದ ಶೀರ್ಷಿಕೆಯಿಂದ ತಗ್ಗಿಸಿ, ಸದರಿ ಸಂಸ್ಥೆಗಳಿಗೆ ನಿಯಮಾನುಸಾರ ಅಗತ್ಯ ಶುಲ್ಕ ಪಾವತಿಸಿಕೊಂಡು, ಗುತ್ತಿಗೆ ನೀಡಬಹುದಾಗಿದೆ ಎಂದು ಹಾಗೂ ಸದರಿ ಜಮೀನನ್ನು ಗುತ್ತಿಗೆ ನೀಡಲು ಗ್ರಾಮಸ್ಥರ ತಂಟೆ ತಕರಾರು ಇರುವುದಿಲ್ಲವೆಂದು ಜಿಲ್ಲಾಧಿಕಾರಿಗಳು ವರದಿ ಮಾಡಿರುತ್ತಾರೆ.

ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪ್ರಸ್ತಾವನೆಯಂತೆ ಜಮೀನನ್ನು ಗುತ್ತಿಗೆಗೆ ನೀಡುವುದಕ್ಕೆ ಪ್ರಸ್ತಾಪಿಸಿರುವ ಬೆಂಗಳೂರು ಪೂರ್ವ ತಾಲ್ಲೂಕು ಬಿದರಹಳ್ಳಿ ಹೋಬಳಿ, ಆದೂರು ಗ್ರಾಮದ ಸ.ನಂ. 74ರಲ್ಲಿ ಲಭ್ಯವಿರುವ ವಿವಿಧ ಬ್ಲಾಕ್‌ಗಳಲ್ಲಿನ ಗೋಮಾಳ ಜಮೀನಿನ ವಿಸ್ತೀರ್ಣದ ವಿವರ ಹಾಗೂ ವಿವಿಧ ಖಾಸಗಿ ಸಂಘ ಸಂಸ್ಥೆಗಳ ವಿವರಗಳು ಈ ಕೆಳಗಿನಂತಿದೆ :-

ಕ್ರ. ಸ ಂ. ಖಾಸಗಿ ಸಂಘ ಸಂಸ್ಥೆಗಳ ಹೆಸರು ಮತ್ತು ವಿಳಾಸ ಸ .ನಂ. 74 ರಲ್ಲಿ ಬ್ಲಾಕ್ ನಂ. ವಿಸ್ತೀರ್ಣ ಎ/ಗುಂ
1 ವ ೆ ುೖಸೂರು ಪ್ರದೇಶದ ಬಲಿಜ ಸಂಘ (ರಿ), ಮೊದಲನೆಯ ಮುಖ್ಯರಸ್ತೆ, ಚಾಮರಾಜಪೇಟೆ, ಬ ಂಗಳೂರು. ೆ 38 2-00
2 ತ ೂಗಟವೀರ ಕ್ಷತ್ರಿಯ ಸಂಘಗಳ ಮಹಾ ಮಂಡಳಿ (ರಿ), ನಂ. 22/1, ಸಂಪಂಗಿರಾಮನಗರ, ೆ ಬ ಂಗಳೂರು-27. ೆ 52 0-35
3 ರಾಜು ಕ್ಷತ್ರಿಯ ಸಂಘ (ರಿ), ನಾಲ್ಕನೆಯ ಬ್ಲಾಕ್, ಜಯನಗರ, ಬೆಂಗಳೂರು-11. 26 1-20
4 ಶಿ ೕ ಮಹಾಕಾಟಿಕ್ ಸಮಾಜ (ರಿ), ನಂ. 71, ಬನಶಂಕರಿ 2ನೆಯ ಹಂತ, ಬೆಂಗಳೂರು. ್ರ 07 1-00
5 ಉಲ್ಲಾಳ ಜುಮ್ಮಾ ವ ುಸೀದಿ, ಪ ೂೕಸ್ಟ್ ೆ ಬಾಕ್ಸ್ ನಂ. 1201, ವ ುಂಗಳೂರು ದಕ್ಷಿಣ ಕನ್ನಡ ಜಿಲ್ಲೆ. ಉಲ್ಲಾಳ, 24 1-10
6 ಕರ್ನಾಟಕ ರಾಜ್ಯ ನದಾಫ್ / ಪಿಂಜಾರ ಸಂಘ (ರಿ), ಶಿವಮೊಗ್ಗ. 24 1-10
7 ಅಖಿಲ ಕರ್ನಾಟಕ ರಾಜ್ಯ ಸ್ವಕುಳಸಾಳಿ ಸಮಾಜ (ನೇಕಾರ) (ರಿ) 39 0-30
8 ಬ ಂಗಳೂರು ೆ ನಗರ ಹಂದಿ ಜೋಗಿ ಶ ಂಘ (ರಿ), ನ ಂ. 41, ಜೋಗಿ ಹೊಸೂರು ರಸ್ತೆ, ಬೆಂಗಳೂರು-95. ಕಾಲೋನಿ, 07 1-00
9 ಅಖಿಲ ಕರ್ನಾಟಕ ಹೆಳವ ಸಮಾಜ (ರಿ), ನಂ. 219, ರಾಜಾಜಿನಗರ, ಮಹಾಗಣಪತಿ ನಗರ, ಬ ಂಗಳೂರು-10. ೆ 21 1-00
10 ಅಖಿಲ ಭಾರತೀಯ ಭಾವಸಾರ ಕ್ಷತ್ರಿಯ ಮಹಾ ಸಭಾ (ರಿ), ಪ್ಲಾಟ್ ನಂ. ಟಿ-1, ರಾಜಾಜಿನಗರ, ಬ ಂಗಳೂರು. ೆ 52 0-35
11 ರಾಜಪುರ ಸಾರಸ್ವತ ಸಮಾಜ (ರಿ), ಬೆಂಗಳೂರು. 39 1-00
12 ಬ ಹ್ಮಶ್ರೀ ಏಜುಕೇಷನ್ ಸೋಷಿಯಲ್ ಟ್ರಸ್ಟ್ (ಬೆಸ್ಟ್ ಫೌಂಡೇಷನ್ ರಿ), 34, ಮಲ್ಲೇಶ್ವರಂ, ್ರ ಬ ಂಗಳೂರು-03. ೆ 25 3-00
13 ಸ ವ ುುದಾಯ ಕರ್ನಾಟಕ, ನಂ. 611, 20ನೇ ಮುಖ್ಯ ರಸ್ತೆ, ಪೂರ್ಣ ಪ್ರಜ್ಞಾ ನಗರ, ಉತ್ತರಹಳ್ಳಿ, ಬ ಂಗಳೂರು-61. ೆ 38 1-10
14 ಶಿ ೕ ಕೃಷ್ಣ ಹಳ್ಳಿಕಾರ ಮಹಾ ಸಂಸ್ಥಾನ ಟ್ರಸ್ಟ್ (ರಿ), ಬೆಟ್ಟನಪಾಳ್ಯ, ರಾಮೋಹಳ್ಳಿ ಅಂಚೆ, ್ರ ಕೆಂಗೇರಿ ಹೋಬಳಿ, ಬೆಂಗಳೂರು-74. 11 1-00
15 ನಾಡವರ ಸಮಾಜ ಬೆಂಗಳೂರು, ನಂ. 43-ಜಿ, ಪ್ರಶಾಂತನಗರ, ಬೆಂಗಳೂರು-79. 30 1-00
16 ಹಡಪದ ಅಪ್ಪಣ್ಣ ದ ೕವರ ೆ ವ ುಹಾಸಂಸ್ಥಾನ ವ ುಠ ಟ ಸ್ಟ್ ್ರ (ರಿ), ತ ವ ುುದ್ದೇಬಿಹಾಳ ತಾಲ್ಲೂಕು, ವಿಜಯಪುರ ಜಿಲ್ಲೆ. ಂಗಡಗಿ, 30 1-00
17 ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ (ರಿ), ನಂ. 16ಎ, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ವ ಸ ಂತನಗರ, ಬೆಂಗಳೂರು-52. 26 1-00
18 ಅಖಿಲ ಕರ್ನಾಟಕ ಪಟ್ಟ ಸಾಲೆ (ನೇಕಾರ) ಸಂಘ (ರಿ), ನಂ. 423, ಚಿಕ್ಕಮಾರನಹಳ್ಳಿ, ಬ ಂಗಳೂರು-74. ೆ 38 0-30
19 ಶಿ ೕ ಚೌಡೇಶ್ವರಿ ಚಾರಿಟಬಲ್ ಟ್ರಸ್ಟ್ (ರಿ), ನಂ. 73, ಲಕ್ಕಸಂದ್ರ, ಬೆಂಗಳೂರು-30. ್ರ 21 1-20
20 ಕರ್ನಾಟಕ ರಾಜ್ಯ ಹಟಗಾರ ಸಮಾಜ (ರಿ), ಚಂದಾಪುರ, ಬೆಂಗಳೂರು-81. 7 1-20
21 ಬ ೆ ಂಗಳೂರು ನಗರದ ಜಟ್ಟಿ ಜನಾಂಗದ ದೊಡ್ಡ ಗರಡಿ ಮತ್ತು ಶ್ರೀ ನಿಂಬಜಾದೇವಿ ದೇವಸ್ಥಾನದ ಟ ಸ್ಟ್ (ರಿ), ಬಿ.ವಿ.ಕೆ. ಐಯಂಗಾರ್ ರಸ್ತೆ, ಬೆಂಗಳೂರು-53. ್ರ 23 1-00
22 ಕರ್ನಾಟಕ ರಾಜ್ಯ ಶಿಳ್ಳೆಕ್ಯಾತ್ಯಾಸ್ ಜನಾಂಗಾಭಿವೃದ್ಧಿ ವ ೕದಿಕೆ ೆ (ರಿ), ಬಿಡದಿ ಹೋಬಳಿ, ರಾಮನಗರ. ಹನುಮಂತನಗರ, 21 1-00
ಒಟ್ಟು 26.20
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೪೫

ನಂತರ ಸರ್ಕಾರದ ಮಟ್ಟದಲ್ಲಿ ಅದೇ ಅದೂರು ಗ್ರಾಮದ ಸ.ನಂ.74 ರಲ್ಲಿನ ಲಭ್ಯವಿರುವ ವಿವಿಧ ಬ್ಲಾಕ್‌ಗಳಲ್ಲಿನ ಸರ್ಕಾರಿ ಗೋಮಾಳ ಜಮೀನಿನ ಪೈಕಿ ಈ ಕೆಳಕಂಡ ವಿವಿಧ ಖಾಸಗಿ ಸಂಘ ಸಂಸ್ಥೆಗಳಿಗೂ ಸಹ ಗುತ್ತಿಗೆಗೆ ನೀಡುವ ಕುರಿತು ಪ್ರಸ್ತಾಪಿಸಲಾಗಿದೆ.

ಕ್ರ. ಸ ಂ. ಖಾಸಗಿ ಸಂಘ ಸಂಸ್ಥೆಗಳ ಹೆಸರು ಮತ್ತು ವಿಳಾಸ ಸ .ನಂ. 74 ರಲ್ಲಿ ಬ್ಲಾಕ್ ನಂ. ವಿಸ್ತೀರ್ಣ ಎ/ಗುಂ
23 ಕರ್ನಾಟಕ ರಾಜ್ಯ ಕ ುಂಬಾರ ಸ ರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸ ಂಘ, ಕುಂಬಾರ ಸಂಘ ಸಂಕೀರ್ಣ, ಕಲಾಸಿಪಾಳ್ಯಂ ಹೊಸ ಬಡಾವಣೆ, ಬೆಂಗಳೂರು-02. ನಂ.313, 27 1-00
24 ಶಿವಯೋಗಿ ಸಿದ್ದಾರಾಮೇಶ್ವರ ವ ುಹಾಸಂಸ್ಥಾನ ವ ುಠ (ರಿ) (ಭೋವಿ ಸ ವ ಶಿ ೕ ಇಮ್ಮಡಿಗಿರಿ ನಗರ, ಚಿತ್ರದುರ್ಗ-577 502. ್ರ iಾಜ), 4 2-00
25 ಶಿವ ಶರಣರ ಮಾದರ ಚನ್ನಯ್ಯ ಗುರು ಪೀಠ, ಚಿತ್ರದುರ್ಗ. 30 1-20
26 ಹೇಮ ವೇಮ ಅಖಿಲ ಕರ್ನಾಟಕ ರೆಡ್ಡಿ ಮಹಾ ಸಮಾವೇಶ ಸಮಿತಿ, ನಂ.1, ಮಹಾಯೋಗಿ ವ ೕಮನ ರಸ್ತೆ, ಕೋರಮಂಗಲ, ಬೆಂಗಳೂರು. ೆ 28 2-00
27 ಶಿ ೕ ನಿಡುಮಾಮಿಡಿ ಜಗದ್ಗುರು ಮಠ, ಗೂಳೂರು ಮಹಾ ಸಂಸ್ಥಾನ, ಬಸವನಗುಡಿ, ಬೆಂಗಳೂರು. ್ರ 26 2-00
28 ಕರ್ನಾಟಕ ರಾಜ್ಯ ಅರಣ್ಯ ಕನಕ ನೌಕರರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು. - 1-00
29 ಅಖಿಲ ಭಾರತೀಯ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮಾಜ (ಪಟಗಾರ), 10/2 ಕಸ್ತೂರು ಬಾ ರಸ್ತೆ, ಬೆಂಗಳೂರು-01. - 1-20
30 ಶಿ ೕ ಹರಳಯ್ಯ ವಿದ್ಯಾ ಸಂಸ್ಥೆ (ರಿ), ಗಾಂಧಿನಗರ, ದಾವಣಗೆರೆ-577 001. ್ರ 31 1-00
31 ಬ ೆ ಂಗಳೂರು ತ ಮಿಳು ಸ ಂಘಂ, ನ ಂ.59, ಅಣ್ಣಸ್ವಾಮಿ ವ ೂದಲಿಯಾರ್ ೆ ರ ಸ ೆ ್ತ ಬ ಂಗಳೂರು-560 042. ೆ , 01 2-00
32 ಕೇರಳ ಸಮಾಜ (ರಿ) 5ನೇ ಮುಖ್ಯ ರಸ್ತೆ, ಇಂದಿರಾನಗರ 1ನೇ ಹಂತ, ಬೆಂಗಳೂರು-560 038. 02 2-00
ಒಟ್ಟು 16.00

ಮುಂದುವರೆದು, ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಹೊಸಕೆರೆಹಳ್ಳಿ ಗ್ರಾಮದ ಸ.ನಂ. 75/1ರಲ್ಲಿ 7.27 ಎಕರೆ/ಗುಂಟೆ "ಬಿ" ಖರಾಬು ಜಮೀನಿದ್ದು, ಸದರಿ ಜಮೀನಿನ ಪೈಕಿ ಈ ಕೆಳಕಂಡ ಸಂಘ ಸಂಸ್ಥೆಗಳಿಗೆ ಜಮೀನನ್ನು ಗುತ್ತಿಗೆ ನೀಡುವ ಬಗ್ಗೆ ಪ್ರಸ್ತಾಪಿಸಲಾಗಿದೆ.

ಕ್ರ. ಸ ಂ. ಖಾಸಗಿ ಸಂಘ ಸಂಸ್ಥೆಗಳ ಹೆಸರು ಮತ್ತು ವಿಳಾಸ ಬ ಂಗಳೂರು ದಕ್ಷಿಣ ತಾ. ಉತ್ತರ ೆ ಹ ಳ್ಳಿ ಹೋಬಳಿ, ಹೊಸಕೆರೆ ಹಳ್ಳಿ ಗ್ರಾಮದ ಸ.ನಂ. 75/1 ವಿಸ್ತೀರ್ಣ ಎ/ಗುಂ
33 ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು. - 0-20
34 ಪ ಸ್ ಕ್ಷಬ್ ಆಫ್ ಬೆಂಗಳೂರು (ರಿ), ಬೆಂಗಳೂರು. ್ರ - 1-00
ಒಟ್ಟು 1-20
ಒಟ್ಟಾರೆ: ಭಾಗ1 + ಭಾಗ2 + ಭಾಗ3 = 44.00

ಭಾಗ-1 ಮತ್ತು ಭಾಗ-2 ರಲ್ಲಿ ಪ್ರಸ್ತಾಪಿತ ಜಮೀನು `ಸರ್ಕಾರಿ ಗೋಮಾಳ' ಜಮೀನಾಗಿರುವುದರಿಂದ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4) ರಡಿಯಲ್ಲಿ ಗೋಮಾಳ ಶೀರ್ಷಿಕೆಯಿಂದ ತಗ್ಗಿಸುವುದು ಹಾಗೂ ಭಾಗ-3 ರಲ್ಲಿ ಪ್ರಸ್ತಾಪಿತ ಸರ್ಕಾರಿ ಬಿ-ಖರಾಬು ಜಮೀನಾಗಿರುವುದರಿಂದ, ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 68(1) ರಿಂದ 68(5) ರ ಪ್ರಕ್ರಿಯೆಯನ್ನು ನಡೆಸುವುದು ಅವಶ್ಯವಾಗಿರುತ್ತದೆಂದು ಜಿಲ್ಲಾಧಿಕಾರಿಗಳ ವರದಿಯಲ್ಲಿ ತಿಳಿಸಿರುತ್ತಾರೆ.

೫೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧

ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪ್ರಸ್ತಾವನೆಗಳನ್ನು ಪರಿಶೀಲಸಿ ಈ ಕೆಳಕಂಡಂತೆ ಆದೇಶಿಸೆದೆ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 94 ಎಲ್‌ಜಿಬಿ 2018, ಬೆಂಗಳೂರು, ದಿನಾಂಕ: 26.03.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಪೂರ್ವ ತಾಲ್ಲೂಕು ಬಿದರಹಳ್ಳಿ ಹೋಬಳಿ, ಆದೂರು ಗ್ರಾಮದ ಸರ್ವೆ ನಂ. 74 ರಲ್ಲಿ ಲಭ್ಯವಿರುವ ವಿವಿಧ ಬ್ಲಾಕ್‌ಗಳಿಲ್ಲಿನ ಒಟ್ಟು 203-09 ಎಕರೆ ಗೋಮಾಳ ಜಮೀನಿನ ಪೈಕಿ 42.20 ಎಕರೆ / ಗುಂಟೆ ಜಮೀನನ್ನು ಭಾಗ-1 ಮತ್ತು ಭಾಗ-2ರಲ್ಲಿ ನಮೂದಿಸಿರುವಂತೆ ಒಟ್ಟು 32 ಖಾಸಗಿ ಸಂಘ ಸಂಸ್ಥೆಗಳಿಗೆ ಹಾಗೂ ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ, ಹೊಸಕೆರೆಹಳ್ಳಿ ಗ್ರಾಮದ ಸ.ನಂ. 75/1ರಲ್ಲಿ 7.27 ಎಕರೆ / ಗುಂಟೆ ಸರ್ಕಾರಿ ಖರಾಬು ಜಮೀನಿನ ಪೈಕಿ 1-20 ಎಕರೆ / ಗುಂಟೆ ಸೇರಿದಂತೆ ಒಟ್ಟಾರೆ 44.00 ಎಕರೆ (ನಲವತ್ನಾಲ್ಕು ಎಕರೆ) ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ನಿಯಮ 22ಎ(2) ಅನ್ನು ಸಡಿಲಿಸಿ, ಪ್ರಸ್ತಾವಿತ ಜಮೀನಿಗೆ ಪ್ರತಿ ವರ್ಷ ಎಕರೆ ಒಂದಕ್ಕೆ ರೂ.1.00 ಲಕ್ಷದಂತೆ (ರೂ.ಒಂದು ಲಕ್ಷ ಮಾತ್ರ) ಗುತ್ತಿಗೆ ದರವನ್ನು ವಿಧಿಸಿ, ಸದರಿ ನಿಯಮ 19(3)(ಬಿ) ರಡಿಯಲ್ಲಿ 30 ವರ್ಷಗಳ ಅವಧಿಗೆ ಈ ಕೆಳಕಂಡ ಷರತ್ತುಗಳೊಂದಿಗೆ ಗುತ್ತಿಗೆಗೆ ನೀಡಿ ಆದೇಶಿಸಿದೆ :

1 ಪ್ರಸ್ತಾಪಿತ ಭಾಗ-1 ಮತ್ತು ಭಾಗ-2ರಲ್ಲಿ ನಮೂದಿಸಿರುವಂತೆ 32 ಸಂಘ ಸಂಸ್ಥೆಗಳಿಗೆ 42.20 ಎಕರೆ / ಗುಂಟೆ ಸರ್ಕಾರಿ ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರಡಿಯಲ್ಲಿ ಗೋಮಾಳ ಲೆಕ್ಕಶೀರ್ಷಿಕೆಯಿಂದ ತಗ್ಗಿಸಲು ಕ್ರಮವಹಿಸುವಂತೆ ಹಾಗೂ ಭಾಗ-3 ರಲ್ಲಿ ತಿಳಿಸಿರುವ "ಸರ್ಕಾರಿ ಖರಾಬು" ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 68 ರಡಿಯಲ್ಲಿ ಪ್ರಕ್ರಿಯೆ ನಡೆಸಿದ ನಂತರ 1-20 ಎಕರೆ ಸರ್ಕಾರಿ ಖರಾಬು ಜಮೀನನ್ನು 02 ಖಾಸಗಿ ಸಂಘ ಸಂಸ್ಥೆಗಳಿಗೆ ಗುತ್ತಿಗೆಗೆ ನೀಡಿ ಹಸ್ತಾಂತರಿಸಲು ಜಿಲ್ಲಾಧಿಕಾರಿಗಳು ಕ್ರಮವಹಿಸುವುದು.

2 ಪ್ರಸ್ತಾವನೆಯಲ್ಲಿ ಪ್ರಸ್ತಾಪಿಸಲಾದ ಭಾಗ-2 ಮತ್ತು ಭಾಗ-3 ರಲ್ಲಿನ ಖಾಸಗಿ ಸಂಘ ಸಂಸ್ಥೆಗಳಿಗೆ ಭೂಮಿಯನ್ನು ಗುತ್ತಿಗೆಗೆ ನೀಡುವ ಮೊದಲು ನಿಯಮಾನುಸಾರ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸಿರುವ ಬಗ್ಗೆ ಖಾತ್ರಿಪಡಿಸಿಕೊಂಡು ಹಾಗೂ ನಿಗದಿತ ದಾಖಲೆಗಳನ್ನು ಪಡೆದುಕೊಂಡು ಗುತ್ತಿಗೆಗೆ ನೀಡಬೇಕೆಂದು ಜಿಲ್ಲಾಧಿಕಾರಿಯವರಿಗೆ ತಿಳಿಸಿದೆ.

3 ಅನುಭೋಗದಾರರು ಸದರಿ ಜಮೀನುಗಳ ಮೇಲೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅನುಕೂಲವಾಗುವಂತೆ ಸೂಕ್ತ ಉಪಬಂಧವನ್ನು ಕರಾರು ಪತ್ರ (Lease deed) ದಲ್ಲಿ ಸೇರಿಸಲು ಜಿಲ್ಲಾಧಿಕಾರಿಗಳು ಕ್ರಮವಹಿಸುವುದು.

4 ಸದರಿ ಜಮೀನನ್ನು ಯಾವ ಉದ್ದೇಶಕ್ಕೆ ಗುತ್ತಿಗೆ ನೀಡಲಾಗಿದೆಯೋ, ಅದೇ ಉದ್ದೇಶಕ್ಕಾಗಿ ಮಾತ್ರ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

5 ಗುತ್ತಿಗೆಗೆ ನೀಡಿರುವ ಜಮೀನಿನಲ್ಲಿ ಯಾವುದೇ ರೀತಿಯ ಅತಿ ಕ್ರಮಣವಾಗದಂತೆ ಕ್ರಮವಹಿಸುವುದು.

6 ಗುತ್ತಿಗೆಗೆ ನೀಡಲಾದ ಜಮೀನು ಸಂಸ್ಥೆಗಳಿಗೆ ಅವಶ್ಯವಿಲ್ಲದಿದ್ದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.

7 ಗುತ್ತಿಗೆಗೆ ನೀಡಲಾದ ಜಮೀನುಗಳನ್ನು ವಿನಾಶಕಾರಿಯಾಗಿ ಹಾಗೂ ಖಾಯಂ ಆಗಿ ಹಾನಿಕಾರಕ ಮಾಡುವ ರೀತಿಯಲ್ಲಿ ಬಳಸತಕ್ಕದ್ದಲ್ಲ.

8 ಈ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದ್ದಲ್ಲಿ ಅದು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.

9 ಗುತ್ತಿಗೆಗೆ ನೀಡಲಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸುವ ಪೂರ್ವದಲ್ಲಿ ಶಾಸನ ಬದ್ಧವಾಗಿ ಪಡೆಯಬೇಕಾದ ಪರವಾನಗಿಯನ್ನು ಸಂಬಂಧಿಸಿದ ಪ್ರಾಧಿಕಾರಗಳಿಂದ ಪಡೆಯುವುದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸುವುದು.

10 ಗುತ್ತಿಗೆಗೆ ನೀಡಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಉಪ ಗುತ್ತಿಗೆಗೆ ನೀಡುವುದಾಗಲಿ, ವರ್ಗಾವಣೆ ಅಥವಾ ಇತರೆ ಯಾವುದೇ ರೀತಿಯ ಪರಭಾರೆ ಮಾಡತಕ್ಕದ್ದಲ್ಲ.

11 ಗುತ್ತಿಗೆಗೆ ನೀಡಲಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಯಾವುದೇ ಪರಿಹಾರ ನೀಡದೇ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.

12 ಸದರಿ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ನಿಯಮಾನುಸಾರ ಆದೇಶವನ್ನು ರದ್ದುಪಡಿಸಿ, ಸದರಿ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.

13 ಜಿಲ್ಲಾಧಿಕಾರಿಗಳು ಪ್ರಸ್ತಾಪಿತ ಜಮೀನನ್ನು ಹಸ್ತಾಂತರಿಸುವಾಗ ಸ್ಥಳೀಯವಾಗಿ ಅನ್ವಯಿಸುವ ಪೂರಕ ನಿಬಂಧನೆಗಳನ್ನು ವಿಧಿಸುವುದು.

PR – 278

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಎಸ್.ಎಲ್. ಮಹಾಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಭೂ ಮಂಜೂರಾತಿ-1)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೪೭

ಕಂದಾಯ ಸಚಿವಾಲಯ

ವಿಷಯ : ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ಹೋಬಳಿ, ವೆಂಕಟಾಲ ಗ್ರಾಮದ ಸ.ನಂ.67/1 ರಲ್ಲಿ 0-10 ಗುಂಟೆ ಮತ್ತು ಸ.ನಂ. 68/1 ರಲ್ಲಿ 0-10 ಗುಂಟೆ ಒಟ್ಟು 0-20 ಗುಂಟೆ ಬಂಡಿದಾರಿ ಬಿ-ಖರಾಬು ಜಮೀನನ್ನು ಮೆ|| ವಿ.ಸಿ.ಎ ಬಿಲ್ಡ್‌ರ್ಸ್ ಮತ್ತು ಡೆವಲಪರ್ಸ್, ಬೆಂಗಳೂರು ರವರಿಗೆ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ : ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ (ಎನ್.ಎ.)ಸಿಆರ್/204/2011-12, ದಿನಾಂಕ: 11-08-2016.

ಪ್ರಸ್ತಾವನೆ:-

ಮೇಲೆ ಓದಲಾದ ದಿನಾಂಕ: 11-08-2016ರ ಪತ್ರದಲ್ಲಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇವರು ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ಹೋಬಳಿ, ವೆಂಕಟಾಲ ಗ್ರಾಮದ ಸರ್ವೆ ನಂ.67/1 ಮತ್ತು 68/1 ರಲ್ಲಿ ಒಟ್ಟು 4-24 ಎಕರೆ ಖಾಸಗಿ ಹಿಡುವಳಿ ಜಮೀನು ಇದ್ದು, ಈ ಜಮೀನಿನ ಮಧ್ಯ ಭಾಗದಲ್ಲಿ ಪಾಲನಹಳ್ಳಿ ಗ್ರಾಮಕ್ಕೆ ನಕಾಶೆಯಂತೆ ಬಂಡಿದಾರಿ ಹಾದುಹೋಗಿರುತ್ತದೆಂದು ಹಾಗೂ ಸದರಿ ವೆಂಕಟಾಲ ಗ್ರಾಮದ ಸರ್ವೆ ನಂ. 67/1 ಮತ್ತು 68/1 ರಲ್ಲಿನ 0-20 ಗುಂಟೆ ಬಿ-ಖರಾಬು ಬಂಡಿದಾರಿ ಜಮೀನು ಸಾರ್ವಜನಿಕ ಉಪಯೋಗದಲ್ಲಿ ಇಲ್ಲದೇ ಇರುವುದರಿಂದ, ಈ ಜಮೀನನ್ನು ಸಾರ್ವಜನಿಕ ಮತ್ತು ವ್ಯಕ್ತಿಗಳ ಹಕ್ಕಿನಿಂದ ವಿಹಿತಗೊಳಿಸಿ, ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 68(1) ರಿಂದ 68(5) ರಲ್ಲಿರುವ ಹಕ್ಕನ್ನು ಚಲಾಯಿಸಿ ಸರ್ಕಾರವು 13-09-2013 ರಂದು ಅಧಿಸೂಚನೆಯನ್ನು ಹೊರಡಿಸಿರುತ್ತದೆಯೆಂದು ತಿಳಿಸಿದ್ದು ಈ ಜಮೀನಿನ ಮೇಲಿನ ಸಾರ್ವಜನಿಕ ಮತ್ತು ವ್ಯಕ್ತಿಗಳ ಹಕ್ಕಿನಿಂದ ವಿಹಿತಗೊಳಿಸಿದ ನಂತರ, ಸದರಿ 0-20 ಗುಂಟೆ ಜಮೀನು ಸರ್ಕಾರದ ವಶದಲ್ಲಿರುತ್ತದೆ ಎಂದು ತಿಳಿಸಿರುತ್ತಾರೆ. ಸದರಿ ಜಮೀನನ್ನು ಪ್ರಚಲಿತ ಮಾರುಕಟ್ಟೆ ದರವನ್ನು ವಿಧಿಸಿ ಮಂಜೂರು ಮಾಡುವ ಬಗ್ಗೆ ಪ್ರಸ್ತಾಪಿಸಿರುತ್ತಾರೆ.

ಮುಂದುವರೆದು, ಜಿಲ್ಲಾದಿಕಾರಿ, ಬೆಂಗಳೂರು ನಗರ ಜಿಲ್ಲೆ, ಇವರು ದಿನಾಂಕ: 30-12-2016, 10-04-2017 ಮತ್ತು 29-05-2017ರ ಪತ್ರಗಳಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಅದರಲ್ಲಿ ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ಹೋಬಳಿ, ವೆಂಕಟಾಲ ಗ್ರಾಮದ ಸರ್ವೆ ನಂ. 67/1 ರಲ್ಲಿ 0-10 ಗುಂಟೆ ಮತ್ತು ಸರ್ವೆ ನಂ. 68/1 ರಲ್ಲಿ 0-10 ಗುಂಟೆ ಒಟ್ಟು 0-20 ಗುಂಟೆ ನಕಾಶೆಯಲ್ಲಿ ಕಂಡ ಬಿ-ಖರಾಬು ಬಂಡಿದಾರಿ ಜಮೀನನ್ನು ಮೆ|| ವಿ.ಸಿ.ಎ. ಬಿಲ್ಡ್‌ರ್ಸ್ ಮತ್ತು ಡೆವಲಪರ್ಸ್, ಬೆಂಗಳೂರು ಇವರು ತಮ್ಮ ಉದ್ದೇಶಿತ ಯೋಜನೆಗಾಗಿ ಮಂಜೂರು ಮಾಡಲು ಕೋರಿರುವುದಾಗಿ ತಿಳಿಸಿದ್ದಾರೆ.

ಪ್ರಸ್ತಾಪಿತ ವೆಂಕಟಾಲ ಗ್ರಾಮದ ಸರ್ವೆ ನಂ.67/1 ರಲ್ಲಿ 0-10 ಗುಂಟೆ ಹಾಗೂ ಸರ್ವೆ ನಂ.68/1 ರಲ್ಲಿ 0-10 ಗುಂಟೆ ಒಟ್ಟು 0-20 ಗುಂಟೆ ನಕಾಶೆ ಕಂಡ ಬಂಡಿದಾರಿಯು ಪಶ್ಚಿಮದಿಂದ ಪೂರ್ವದ ಕಡೆಗೆ ಪಾಲನಹಳ್ಳಿ ಎಂಬ ಗ್ರಾಮಕ್ಕೆ ಹಾದು ಹೋಗಿರುತ್ತದೆ. ಹಾಲಿ ಈ ಬಂಡಿದಾರಿಯು ಸಾರ್ವಜನಿಕರ ಉಪಯೋಗದಲ್ಲಿ ಇರುವುದಿಲ್ಲ. ಮುಂದುವರೆದು, ಇದೇ ಗ್ರಾಮದ ಸರ್ವೆ ನಂ. 67/1 ರಲ್ಲಿ 0-08 ಗುಂಟೆ, ಸರ್ವೆ ನಂ.67/2 ರಲ್ಲಿ 0-02 ಗುಂಟೆ ಮತ್ತು ಸರ್ವೆ ನಂ.68/2 ರಲ್ಲಿ 0-10 ಗುಂಟೆ ಪ್ರದೇಶಗಳಲ್ಲಿ ಹಾಲಿ ಒಂದು ರಸ್ತೆ ಇದ್ದು, ಇದು ಸಾರ್ವಜನಿಕರ ಉಪಯೋಗದಲ್ಲಿರುತ್ತದೆ ಎಂದು ವರದಿ ಮಾಡಿರುತ್ತಾರೆ.

ಪ್ರಸ್ತಾವಿತ 0-20 ಗುಂಟೆ ಜಮೀನನ್ನು ಈಗಾಗಲೇ ಕಾಯ್ದೆಯಡಿ ಪ್ರಕ್ರಿಯೆ ನಡೆಸಿ ಸಾರ್ವಜನಿಕ ಹಕ್ಕಿನಿಂದ ವಿಹಿತಗೊಳಿಸಿರುವುದರಿಂದ, ಸದರಿ ಜಮೀನಿಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969 ರ ನಿಯಮ 22-ಎ(1)(i)(7) ರಡಿಯಲ್ಲಿ ಪ್ರಚಲಿತ ಮಾರುಕಟ್ಟೆ ದರದ ಎರಡು ಪಟ್ಟು ದರ ವಿಧಿಸಿ, ಮಂಜೂರು ಮಾಡುವ ಕುರಿತು ಬೆಂಗಳೂರು ನಗರ ಜಿಲ್ಲಾಧಿಕಾರಿಯವರು ಪ್ರಸ್ತಾಪಿಸಿದ್ದಾರೆ ಮತ್ತು ಭೂ ಮಾಪನಾ ಇಲಾಖೆಯು ದಿನಾಂಕ: 09-06-2015ರ ಅಭಿಪ್ರಾಯದಲ್ಲಿ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 68(5) ರಡಿ ಸಾರ್ವಜನಿಕ ಹಾಗೂ ವ್ಯಕ್ತಿಗಳ ಎಲ್ಲಾ ಹಕ್ಕುಗಳಿಂದ ಮುಕ್ತಗೊಂಡ ಸದರಿ ಸರ್ವೆ ನಂಬರ್ 67/1 ಮತ್ತು 68/1 ರಲ್ಲಿನ ಒಟ್ಟು 0-20 ಗುಂಟೆ 'ಬಿ' ಖರಾಬು ಜಮೀನು ಸರ್ಕಾರದ ವಶದಲ್ಲಿದೆ.

ಆದುದರಿಂದ, ಈಗ ದಾಖಲೆಗಳ ಪ್ರಕಾರ ಬಂಡಿದಾರಿಯು ಇಲ್ಲದ ಕಾರಣ, ಈ ಹಂತದಲ್ಲಿ ಬಂಡಿದಾರಿಯನ್ನು ಪಥ ಬದಲಾವಣೆ ಮಾಡಲು ರಹಾ ಇರುವುದಿಲ್ಲವೆಂದು ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರು ವರದಿ ಮಾಡಿರುತ್ತಾರೆ.

ಮುಂದುವರೆದು, ಸದರಿ ಜಮೀನಿನ ಖುದ್ದು ಸ್ಥಳ ಪರಿಶೀಲನೆ ನಡೆಸಿ, ಪ್ರಸ್ತಾವಿತ ಜಮೀನನ್ನು ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22- ಎ(1)(i)(7) ರಡಿ Land-Locked Government Lands ಎಂಬ ವ್ಯಾಪ್ತಿಯಲ್ಲಿ ಈ ಜಮೀನು ಬರುವುದರ ಕುರಿತು ನಿರ್ದಿಷ್ಟ ಅಭಿಪ್ರಾಯದೊಂದಿಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ರವರಿಗೆ ಸರ್ಕಾರದ ಪತ್ರ ದಿನಾಂಕ: 10-11-2017ರಲ್ಲಿ ತಿಳಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ರವರು, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22-ಎ(1)(i)(7) ರ ಪ್ರಕಾರ ಈ ಜಮೀನು Land-Locked Government Lands ಆಗಿರುವುದಿಲ್ಲ ಎಂಬುದಾಗಿ ದಿನಾಂಕ: 02-03-2018 ರಂದು ತಿಳಿಸಿರುತ್ತಾರೆ.

ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ವರದಿಯ ಪ್ರಕಾರ, ಸದರಿ ಜಮೀನು Land-Locked Government Lands ಆಗಿರುವುದಿಲ್ಲ ಎಂದು ತಿಳಿಸಿರುವುದರಿಂದ ಸದರಿ ಜಮೀನನ್ನು ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಲು ಸರ್ಕಾರವು ತೀರ್ಮಾನಿಸಿರುತ್ತದೆ.

ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಆರ್‌ಡಿ 796 ಎಲ್‌ಜಿಬಿ 2012, ಬೆಂಗಳೂರು, ದಿನಾಂಕ: 24.03.2018.

೫೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೧

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಉತ್ತರ (ಅಪರ) ತಾಲ್ಲೂಕು, ಯಲಹಂಕ ಹೋಬಳಿ, ವೆಂಕಟಾಲ ಗ್ರಾಮದ ಸ.ನಂ.67/1 ರಲ್ಲಿನ 0-10 ಗುಂಟೆ ಮತ್ತು ಸ.ನಂ.68/1 ರಲ್ಲಿ 0-10 ಗುಂಟೆ ಸೇರಿದಂತೆ ಒಟ್ಟು 0-20 ಗುಂಟೆ ಬಿ-ಖರಾಬು ಜಮೀನಿನಿಂದ ವಿರಹಿತಗೊಳಿಸಿದ ಸರ್ಕಾರಿ ಜಮೀನನ್ನು "ಮಾರಾಟದ ಮೂಲ ಬೆಲೆಯು ವ್ಯವಸಾಯೇತರ ಜಮೀನುಗಳಿಗೆ ಅನ್ವಯವಾಗುವ ಪ್ರಚಲಿತ ಮಾರುಕಟ್ಟೆ ಬೆಲೆಯ (ಚದರಡಿ ಲೆಕ್ಕದಂತೆ) ಎರಡರಷ್ಟಕ್ಕಿಂತ ಕಡಿಮೆ ಇರತಕ್ಕದ್ದಲ್ಲ" ಎಂದು ನಿಗದಿಪಡಿಸಿ ಸಾರ್ವಜನಿಕ ಹರಾಜು ಮೂಲಕ ವಿಲೇ ಮಾಡಲು ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರಿಗೆ ಅಧಿಕಾರ ನೀಡಿ ಸರ್ಕಾರವು ಆದೇಶಿಸಿದೆ.

PR – 279

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಎಸ್.ಎಲ್. ಮಹಾಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಭೂ ಮಂಜೂರಾತಿ-1)

ಕಂದಾಯ ಸಚಿವಾಲಯ

ವಿಷಯ : ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿ, ಸೋಮತ್ತನಹಳ್ಳಿ ಗ್ರಾಮ ಮತ್ತು ದೇವನಾಯಕನಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿನ ಒಟ್ಟು 84.38 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ನೇವಲ್ ಬೇಸ್ ಸ್ಥಾಪನೆಗಾಗಿ ಭಾರತೀಯ ನೌಕಾಪಡೆಗೆ ಗುತ್ತಿಗೆಗೆ ನೀಡಿರುವುದನ್ನು ಮಾರ್ಪಡಿಸಿ ಉಚಿತವಾಗಿ ಮಂಜೂರು ಮಾಡುವ ಕುರಿತು.

ಓದಲಾಗಿದೆ : 1) ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ(ದೇ)ಸಿಆರ್/105/2011-12, ದಿನಾಂಕ: 27-11-2017.

2) ಬೇಸ್ ಕಮಾಂಡರ್, ನೇವಲ್ ಬೇಸ್, ಎಸ್.ಕೆ.ಗಾರ್ಡನ್, ಬೆನ್ಸನ್ ಟೌನ್ ಅಂಚೆ, ಬೆಂಗಳೂರು ಇವರ ಪತ್ರ ಸಂಖ್ಯೆ: 100ಸಿ & ಸಿ ಹಬ್, ದಿನಾಂಕ: 15-12-2017.

ಪ್ರಸ್ತಾವನೆ:-

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ದಿನಾಂಕ: 27-11-2017ರ ಪತ್ರದಲ್ಲಿ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹೋಬಳಿ, ಸೋಮತ್ತನಹಳ್ಳಿ ಗ್ರಾಮದ ಸ.ನಂ.43 ರಲ್ಲಿ 47.38 ಎಕರೆ ಜಮೀನಿನ ಪೈಕಿ 42.38 ಎಕರೆ ಜಮೀನನ್ನು ಹಾಗೂ ದೇವನಾಯಕನಹಳ್ಳಿ ಗ್ರಾಮದ ಸ.ನಂ.47 ರಲ್ಲಿ 47.00 ಎಕರೆ ಜಮೀನಿನ ಪೈಕಿ 42-00 ಎಕರೆ ಸೇರಿದಂತೆ ಒಟ್ಟು 84-38 ಎಕರೆ ಜಮೀನನ್ನು ಈಗಾಗಲೇ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದು, ಸದರಿ ಜಮೀನನ್ನು ಗುತ್ತಿಗೆ ಬದಲಿಗೆ ಖಾಯಂ ಮಂಜೂರಾತಿ ನೀಡುವಂತೆ ಭಾರತೀಯ ನೌಕಾಪಡೆಯು ಕೋರಿದೆಯೆಂದು ವರದಿ ಮಾಡಿರುತ್ತಾರೆ.

ವೈಸ್ ಅಡ್ಮಿರಲ್ ಅಂಡ್ ಚೀಫ್ ಆಫ್ ಸ್ಟಾಫ್, ವೆಸ್ಟೆರ್ನ್ ನಾವೆಲ್ ಕಮಾಂಡ್, ಕೇಂದ್ರ ಸ್ಥಾನ, ಭಾರತೀಯ ನೌಕಾಪಡೆ, ಮುಂಬೈ ಇವರು ದಿನಾಂಕ: 21-09-2011 ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ, ಕರ್ನಾಟಕ ಸರ್ಕಾರ ಇವರಿಗೆ ಸಲ್ಲಿಸಿರುವ ಪತ್ರದಲ್ಲಿ ಕರ್ನಾಟಕದಲ್ಲಿ ನೇವಲ್ ಬೇಸ್ ಮತ್ತು ಕಮಾಂಡ್ ಅಂಡ್ ಕಂಟ್ರೋಲ್ ಹಬ್ ಸ್ಥಾಪನೆಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ ಸುತ್ತಮುತ್ತ ಇವರು 100 ಎಕರೆ ಸರ್ಕಾರಿ ಜಮೀನು ಮಂಜೂರು ಮಾಡುವಂತೆ ಕೋರಿದ್ದಾರೆಂದು ವರದಿ ಮಾಡಿರುತ್ತಾರೆ. ಮುಂದುವರೆದು, ಕ್ಯಾಪ್ಟನ್ ವಿ.ಕೆ. ಜನಾರ್ಧನನ್, ಬೇಸ್ ಕಮಾಂಡರ್, ಇಂಡಿಯನ್ ನೇವಿ ಇವರು ತಿಳಿಸಿರುವಂತೆ ಹಾಗೂ ತಹಶೀಲ್ದಾರ್, ದೇವನಹಳ್ಳಿ ತಾಲ್ಲೂಕು ಇವರ ವರದಿಯಂತೆ, ಸೋಮತ್ತನಹಳ್ಳಿ ಗ್ರಾಮದ ಸ.ನಂ. 43 ರಲ್ಲಿ 51.39 ಎಕರೆ `ಹುಲ್ಲು ಬನ್ನಿ' ಜಮೀನು ಇದ್ದು, ಇದರಲ್ಲಿ ವಿವಿಧ ಉದ್ದೇಶಗಳಿಗೆ ವಿಲೇಯಾಗಿ ಉಳಿಕೆ 47.38 ಎಕರೆ ಜಮೀನು ಖುಲ್ಲಾ ಇರುವುದೆಂದು ತಿಳಿಸಿದ್ದಾರೆ. ಹಾಗೆಯೇ, ದೇವನಾಯಕನಹಳ್ಳಿ ಗ್ರಾಮದ ಸ.ನಂ.47 ರಲ್ಲಿ 63.34 ಎಕರೆ ಸರ್ಕಾರಿ ಗೋಮಾಳದ ಜಮೀನು ಇದ್ದು, ಅದರಲ್ಲಿ ವಿವಿಧ ಉದ್ದೇಶಗಳಿಗೆ ವಿಲೇಯಾಗಿ ಉಳಿಕೆ 47-00 ಎಕರೆ ಜಮೀನು ಖುಲ್ಲಾ ಇರುವುದಾಗಿ ತಿಳಿಸಿರುತ್ತಾರೆ.

ಭಾರತೀಯ ನೌಕಾಪಡೆಯ ಕೋರಿಕೆಯನ್ನು ಸರ್ಕಾರದ ಹಂತದಲ್ಲಿ ಪರಿಶೀಲಿಸಿ, ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 306 ಎಲ್‌ಜಿಬಿ 2013 ದಿನಾಂಕ: 28-11-2014 ರನ್ವಯ 84.38 ಎಕರೆ ಜಮೀನನ್ನು ಪ್ರಸ್ತಾವಿತ ಉದ್ದೇಶಕ್ಕೆ ನಿಯಮಾನುಸಾರ ಪ್ರಚಲಿತ ಮಾರುಕಟ್ಟೆ ದರದ ಶೇ.10 ರಷ್ಟು ವಿಧಿಸಿ ಗುತ್ತಿಗೆ-ದರವನ್ನು ಪ್ರತಿ ಎರಡು ವರ್ಷಗಳಿಗೊಮ್ಮೆ ಶೇ.10 ರಷ್ಟು ಹೆಚ್ಚಿಸುವ ಷರತ್ತಿನೊಂದಿಗೆ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿ ಆದೇಶಿಸಲಾಗಿತ್ತು.

ಮುಂದುವರೆದು, ಕ್ಯಾಪ್ಟನ್, ಆಫೀಸರ್ ಇನ್ ಚಾರ್ಜ್, ನೇವಲ್ ಡಿಟ್ಯಾಚ್‌ಮೆಂಟ್, ಬೆಂಗಳೂರು ಇವರು ದಿನಾಂಕ: 23-03-2016 ರಂದು ಸಲ್ಲಿಸಿರುವ ಮನವಿಯಲ್ಲಿ ಈಗಾಗಲೇ ಗುತ್ತಿಗೆ ನೀಡಿರುವ ಜಮೀನಿಗೆ ಗುತ್ತಿಗೆ ದರವನ್ನು ಕರ್ನಾಟಕ ಸರ್ಕಾರವು ಸರ್ಕಾರದ ಆದೇಶದಲ್ಲಿ ನಮೂದಿಸಿರುವ ಷರತ್ತಿನಂತೆ 2 ವರ್ಷದೊಳಗೆ ಪಾವತಿಸಲು ಭಾರತ ಸರ್ಕಾರವು ಅನುಮೋದನೆ ನೀಡುವುದು ವಿಳಂಬವಾಗುತ್ತಿರುವುದರಿಂದ ಕಾಲಾವಕಾಶ ವಿಸ್ತರಿಸುವಂತೆ ಕೋರಿದ್ದರ ಮೇರೆಗೆ ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 314 ಎಲ್‌ಜಿಬಿ 2016 ದಿನಾಂಕ: 16-11-2016 ರಲ್ಲಿ ಈ ಆದೇಶ ಹೊರಡಿಸಿದ ದಿನಾಂಕದಿಂದ 2 ವರ್ಷಗಳ ಅವಧಿಗೆ ಗುತ್ತಿಗೆ ಕಾಲಾವಧಿ ವಿಸ್ತರಿಸಲಾಗಿತ್ತು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೫೪೯

ನಂತರ ಕ್ಯಾಪ್ಟನ್ ವಿ.ಕೆ. ಜನಾರ್ಧನನ್, ಬೇಸ್ ಕಮಾಂಡರ್, ನೇವಲ್ ಬೇಸ್, ಎಸ್.ಕೆ. ಗಾರ್ಡ್‌ನ್, ಬೆಂಗಳೂರು ಇವರು ಮೇಲೆ ಓದಲಾದ ಕ್ರಮ ಸಂಖ್ಯೆ: (2)ರ ದಿನಾಂಕ: 15-12-2017ರ ಪತ್ರದಲ್ಲಿ ಭಾರತೀಯ ನೌಕಾ ಪಡೆಗೆ ಈಗಾಗಲೇ ಗುತ್ತಿಗೆಗೆ ನೀಡಿರುವ ಜಮೀನಿನಲ್ಲಿ ಭಾರತೀಯ ನೌಕಾ ಪಡೆಯ ನೇವಲ್ ಬೇಸ್ ಮತ್ತು ಕಮಾಂಡ್ ಅಂಡ್ ಕಂಟ್ರೋಲ್ ಹಬ್ ಸ್ಥಾಪಿಸಲು ಉದ್ದೇಶಿಸಿರುವುದರಿಂದ ಪ್ರಸ್ತಾಪಿತ ಜಮೀನನ್ನು ಖಾಯಂ ಆಗಿ ಉಚಿತವಾಗಿ ಮಂಜೂರು ಮಾಡುವಂತೆ ಕೋರಿರುತ್ತಾರೆ.

ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇವರು ಹಾಗೂ ಬೇಸ್ ಕಮಾಂಡರ್, ನೇವಲ್ ಬೇಸ್, ಬೆಂಗಳೂರು ಇವರ ಪ್ರಸ್ತಾವನೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ.

ಅದರಂತೆ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಆರ್‌ಡಿ 314 ಎಲ್‌ಜಿಬಿ 2016, ಬೆಂಗಳೂರು, ದಿನಾಂಕ: 24.03.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕು, ಚನ್ನರಾಯಪಟ್ಟಣ ಹೋಬಳಿ, ಸೋಮತ್ತನಹಳ್ಳಿ ಗ್ರಾಮದ ಸ.ನಂ.43 ರಲ್ಲಿ 42.38 ಎಕರೆ ಮತ್ತು ದೇವನಾಯಕನಹಳ್ಳಿ ಗ್ರಾಮದ ಸರ್ವೆ ನಂ.47 ರಲ್ಲಿ 42.00 ಎಕರೆ ಸೇರಿದಂತೆ ಒಟ್ಟು 84.38 ಎಕರೆ (ಎಂಬತ್ತನಾಲ್ಕು ಎಕರೆ ಮೂವತ್ತೆಂಟು ಗುಂಟೆ) ಸರ್ಕಾರಿ ಗೋಮಾಳ ಜಮೀನನ್ನು ಭಾರತೀಯ ನೌಕಾಪಡೆಗೆ "ನೇವಲ್ ಬೇಸ್" ಸ್ಥಾಪನೆಗಾಗಿ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಿರುವ ಆದೇಶ ಸಂಖ್ಯೆ: ಆರ್‌ಡಿ 306 ಎಲ್‌ಜಿಬಿ 2013, ದಿನಾಂಕ: 31-01-2015ನ್ನು ಮಾರ್ಪಡಿಸಿ, ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4) ರಡಿ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ನೇವಲ್ ಬೇಸ್ ಮತ್ತು ಕಮ್ಯಾಂಡ್ ಅಂಡ್ ಕಂಟ್ರೋಲ್ ಹಬ್ ಸ್ಥಾಪಿಸುವ ಉದ್ದೇಶಕ್ಕೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27 ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ನಿಯಮ 22ಎ(3)(iv) ರನ್ವಯ ಉಚಿತವಾಗಿ ಈ ಕೆಳಕಂಡ ಷರತ್ತುಗಳೊಂದಿಗೆ ಮಂಜೂರು ಮಾಡಿ ಆದೇಶಿಸಿದೆ.

1. ರಕ್ಷಣಾ ಇಲಾಖೆಯ ಮಾರ್ಗಸೂಚಿಗಳ ಅನುಸಾರ ರಾಜ್ಯ ಸರ್ಕಾರವು ಭವಿಷ್ಯತ್ತಿನಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ರಕ್ಷಣಾ ಇಲಾಖೆಯ ಭೂಮಿಯನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಪಡೆದಾಗ ಈಗ ಮಂಜೂರಾದ ಭೂಮಿಯ ಮೌಲ್ಯ ಮತ್ತು ವಿಸ್ತೀರ್ಣದ ಆಧಾರದ ಮೇಲೆ ಹೊಂದಾಣಿಕೆ ಮಾಡಲಾಗುವುದು.

2. ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಉಪಯೋಗಿಸತಕ್ಕದ್ದು.

3. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ ಹಾಗೂ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

4. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.

5. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ / ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.

6. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

7. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಯಾವುದೇ ಪರಿಹಾರ ನೀಡದೆ ಮಂಜೂರಾತಿಯನ್ನು ರದ್ದುಗೊಳಿಸಲಾಗುವುದು ಹಾಗೂ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.

8. ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಫಾಲಾನುಭವಿಗಳಿಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR – 280

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಎಸ್.ಎಲ್. ಮಹಾಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಭೂ ಮಂಜೂರಾತಿ-1) ೫೫೦

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

ಭಾಗ ೧

ವಸತಿ ಸಚಿವಾಲಯ

ವಿಷಯ : ಪ್ರಧಾನ ಮಂತ್ರಿ ಆವಾಸ್ ಯೋಜನೆ(ನಗರ) - ಹೌಸಿಂಗ್ ಫಾರ್ ಆಲ್ -2022 ಅಭಿಯಾನದ "ಬಿ.ಎಲ್.ಸಿ" ಉಫಘಟಕದ ಅಡಿ ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲ್ಲಿ 13 ವಸತಿ ಗೃಹಗಳನ್ನು ನಿರ್ಮಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಓದಲಾಗಿದೆ :

1. ಭಾರತ ಸರ್ಕಾರವು ಹೊರಡಿಸಿರುವ ಹೌಸಿಂಗ್ ಫಾರ್ ಆಲ್-2022 (ಪಿಎಂಎವೈ - ಹೆಚ್.ಎಫ್.ಎ) ಅಭಿಯಾನದ ಮಾರ್ಗಸೂಚಿಗಳು.

2. ಸರ್ಕಾರದ ಆದೇಶ ಸಂಖ್ಯೆ : ನಅಇ 145 ಸಿಎಸ್ಎಸ್ 2015, ದಿನಾಂಕ : 18/1/2016.

3. ಸರ್ಕಾರದ ಆದೇಶ ಸಂಖ್ಯೆ : ನಅಇ 81 ಸಿಎಸ್ಎಸ್ 2017, ದಿನಾಂಕ : 6/7/2017.

4. ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರ ಪತ್ರ ಸಂಖ್ಯೆ : ಆರ್‌ಜಿಆರ್‌ಹೆಚ್‌ಸಿಎಲ್ 56 ವಿಹೆಚ್‌ಕೆ 01 2017/18, ದಿನಾಂಕ : 8/12/2017.

5. ದಿನಾಂಕ : 26/5/2017 ರಂದು ಏರ್ಪಟ್ಟ 7ನೇ ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್ಎಲ್ಎಸ್ಎಂಸಿ) ಸಭೆಯ ನಡವಳಿ.

6. ದಿನಾಂಕ : 21/6/2017 ರಂದು ನಡೆದ 23ನೇ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣೆ ಸಮಿತಿ (ಸಿಎಸ್ಎಂಸಿ) ಸಭೆಯ ನಡವಳಿ.

ಪ್ರಸ್ತಾವನೆ :

ಮೇಲೆ ಓದಲಾದ (1)ರಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯವು "ಹೌಸಿಂಗ್ ಫಾರ್ ಆಲ್-2022" (ಪಿ.ಎಂ.ಎ.ವೈ.-ಹೆಚ್.ಎಫ್.ಎ.) ಯೋಜನೆಗಾಗಿ ಮಾರ್ಗಸೂಚಿಗಳನ್ನು ರಚಿಸಿರುತ್ತದೆ.

2) ಮೇಲೆ (2)ರಲ್ಲಿ ಓದಲಾದ ದಿನಾಂಕ : 18/1/2016ರ ಆದೇಶದಲ್ಲಿ ಕೇಂದ್ರ ಪುರಸ್ಕøತ "ಹೌಸಿಂಗ್ ಫಾರ್ ಆಲ್" ಯೋಜನೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ರಾಜ್ಯದಲ್ಲಿ ಜಾರಿಗೆ ತಂದು ರಾಜ್ಯದ 214 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲು ಹಾಗೂ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲು ಅನುಮೋದನೆ ನೀಡಲಾಗಿದೆ. ಇದೇ ಆದೇಶದಲ್ಲಿ ಸದರಿ ಯೋಜನೆಯ ಆಡಳಿತ ಮತ್ತು ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿಯನ್ನು (ಎಸ್.ಎಲ್.ಎಸ್.ಎಂ.ಸಿ.) ರಚಿಸಲಾಗಿದೆ. ಹಾಗೂ ನಗರ ಸ್ಥಳೀಯ ಸಂಸ್ಥೆಗಳು / ಅನುಷ್ಠಾನ ಸಂಸ್ಥೆಗಳು ಸಲ್ಲಿಸಿದ ಡಿ.ಪಿ.ಆರ್.ಗಳನ್ನು ಹಾಗೂ ಹೆಚ್.ಎಫ್.ಎ.- ಪಿ.ಓ.ಎ.ಗಳನ್ನು ತಾಂತ್ರಿಕವಾಗಿ / ಆರ್ಥಿಕವಾಗಿ ಅಪ್ರೈಸಲ್ ಮಾಡಲು "ರಾಜ್ಯ ಮಟ್ಟದ ಮೌಲ್ಯಮಾಪನ ಸಮಿತಿ"ಯನ್ನು (ಎಸ್.ಎಲ್.ಎ.ಸಿ) ರಚಿಸಲಾಗಿದೆ.

3) ಮೇಲೆ (3)ರಲ್ಲಿ ಓದಲಾದ ದಿನಾಂಕ : 6/7/2017ರ ಆದೇಶದಲ್ಲಿ ಕೇಂದ್ರ ಪುರಸ್ಕøತ ರಾಜೀವ್ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ ನಿರ್ವಹಣೆಯ ಜವಾಬ್ದಾರಿಯನ್ನು ತಕ್ಷಣ ಜಾರಿಗೆ ಬರುವಂತೆ, ನಗರಾಭಿವೃದ್ಧಿ ಇಲಾಖೆಯಿಂದ ವಸತಿ ಇಲಾಖೆಗೆ ವರ್ಗಾಯಿಸಿ ಆದೇಶಿಸಿದೆ. ಹಾಗೂ ಇದೇ ಆದೇಶದಲ್ಲಿ ರಾಜೀವ್ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವನ್ನು ರಾಜ್ಯ ಮಟ್ಟದ ಉಸ್ತುವಾರಿ ಸಂಸ್ಥೆಯಾಗಿ ನೇಮಿಸಲಾಗಿದೆ.

4) ಮೇಲೆ (4)ರಲ್ಲಿ ಓದಲಾದ ಪತ್ರಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಇವರು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ) - ಹೌಸಿಂಗ್ ಫಾರ್ ಆಲ್-2022ಯೋಜನೆಯಡಿ ಯಾದಗಿರಿ ಪಟ್ಟಣದಲ್ಲಿ ಬಿ.ಎಲ್.ಸಿ ಉಪಘಟಕದಡಿ ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ 13 ವಸತಿ ಘಟಕಗಳನ್ನು ನಿರ್ಮಿಸುವ ಯೋಜನಾ ಕಾಮಗಾರಿಯ `. 97.50 ಲಕ್ಷ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಬೇಕೆಂದು ಕೋರಿರುತ್ತಾರೆ. ವಿವರಗಳು ಈ ಕೆಳಕಂಡಂತೆ ಇರುತ್ತವೆ.

ಭಾಗ ೧

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

೫೫೧

ಯಾದಗಿರಿ ಪಟ್ಟಣದಲ್ಲಿ 13 ಮನೆಗಳನ್ನು ನಿರ್ಮಾಣ ಮಾಡುವ ಯೋಜನೆ
ಯೋಜನೆಗಳ ಸಂಖ್ಯೆ ವ ುನೆಗಳ ಸಂಖ್ಯೆ ಯೋಜನಾ ಮೊತ್ತ (`. ಲಕ್ಷಗಳಲ್ಲಿ ) ಹಣಕಾಸು ಜೋಡಣೆ (ರೂ.ಲಕ್ಷಗಳಲ್ಲಿ)
ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಪ ಲಾನುಭವಿ ವಂತಿಕೆ (0.30 ಲಕ್ಷ ಪ್ರತಿ ಮನೆಗೆ)
.ಜಾ / ಪ.ಪಂ ಪ ಇತರರು ಒಟ್ಟು ಟಕ ವೆಚ್ಚ ಘ ತಿ ಸ ವ ುೂಲಭೂತ ಸೌಕರ್ಯ ವ ಇತರೆ ಒಟ್ಟು ಪೌರ ಕಾರ್ಮಿಕ ಗೃಹಭಾಗ್ಯ ಇತರೆ ಒಟ್ಟು .ಜಾ / ಪ.ಪಂ ಪ ಇತರೆ ಒಟ್ಟು ನ.ಸ್ಥ.ಸಂ. ಪಾಲು (ವಸತಿ) ನ.ಸ್ಥ.ಸಂ. ಪಾಲು (ಮೂಲಭೂತ ಸೌಕರ್ಯಕ್ಕೆ) ಬ್ಯಾಂಕ್ ಸಾಲ ಒಟ್ಟು
1 13 00 13 7.50 97.50 0.00 0.00 97.50 19.50 78.00 0.00 0.00 0.00 0.00 0.00 0.00 0.00. 0.00 97.50

5) ಪ್ರಸ್ತಾವನೆಯಲ್ಲಿ ಮೇಲೆ (6) ರಲ್ಲಿ ಓದಲಾದ ದಿನಾಂಕ : 26/5/2017 ರಂದು ನಡೆದ ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್.ಎಲ್.ಎಸ್.ಎಂ.ಸಿ) 7ನೇ ಸಭೆಯ ನಡವಳಿಯ ವಿಷಯ ಸಂಖ್ಯೆ: 5ರಲ್ಲಿ "ಸರ್ವರಿಗೂ ಸೂರು (ಹೌಸಿಂಗ್ ಫಾರ್ ಆಲ್)" ಅಭಿಯಾನದ "ಬಿ.ಎಲ್.ಸಿ" ಉಪ ಘಟಕದ ಅಡಿ 13 ವಸತಿ ಘಟಕಗಳನ್ನು ನಿರ್ಮಿಸಲು ಮತ್ತು ರಾಜ್ಯದ ಪಾಲಿನ ಮೊತ್ತವನ್ನು ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಿಂದ ಭರಿಸಲು ಒಪ್ಪಿಗೆ ನೀಡಿರುತ್ತದೆಂದು ತಿಳಿಸಿರುತ್ತಾರೆ.

6) ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಮೇಲೆ (7) ರಲ್ಲಿ ಓದಲಾದ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯದ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣೆ ಸಮಿತಿ (ಸಿಎಸ್ಎಂಸಿ - ಹೆಚ್ಎಫ್ಎ) ದಿನಾಂಕ : 21/6/2017 ರಂದು ನಡೆದ 23ನೇ ಸಭೆಯ ನಡವಳಿಯಲ್ಲಿ ರಾಜ್ಯದ ಯೋಜನೆಗಳಿಗೆ ಸಂಬಂಧಿಸಿದಂತೆ ಅನುಮೋದನೆ ನೀಡಿದ್ದು, ನಡವಳಿಯ ವಿಷಯ ಸಂಖ್ಯೆ: 9-ಡಿ ರ ಅನುಬಂಧ-6ಎ ನಲ್ಲಿ "ಸರ್ವರಿಗೂ ಸೂರು (ಹೌಸಿಂಗ್ ಫಾರ್ ಆಲ್)" ಅಭಿಯಾನದ "ಬಿಎಲ್‌ಸಿ" ಉಪಘಟಕದ ಅಡಿ ಯಾದಗಿರಿ ನಗರ ಸಭೆ ವ್ಯಾಪ್ತಿಯಲ್ಲಿ 13 ವಸತಿ ಘಟಕಗಳನ್ನು ನಿರ್ಮಿಸಲು ಯೋಜನಾ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪಾಲಿನ ಮೊತ್ತ `. 19.50 ಲಕ್ಷ ಒದಗಿಸಲು ಹಾಗೂ ಈ ಪೈಕಿ ಕೇಂದ್ರ ಸರ್ಕಾರದ ಪಾಲಿನ 1ನೇ ಕಂತಿನ ಮೊತ್ತವಾದ `. 7.80 ಲಕ್ಷ ಬಿಡುಗಡೆ ಮಾಡಲು ಮಂಜೂರಾತಿ ನೀಡಿರುತ್ತದೆ.

7) ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಪ್ರಸ್ತಾಪಿತ ಯೋಜನೆಯನ್ನು ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ ಫಲಾನುಭವಿಗಳ ಸ್ವಂತ ನಿವೇಶನದಲ್ಲಿ ವಸತಿ ಘಟಕಗಳನ್ನು ನಿರ್ಮಿಸಲಾಗುವುದು.

8) ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ವಇ 60 ಹೆಚ್ಎಫ್ಎ 2017, ಬೆಂಗಳೂರು, ದಿನಾಂಕ : 26ನೇ ಮಾರ್ಚ್ 2018.

೫೫೨

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

ಭಾಗ ೧

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, "ಪ್ರಧಾನ ಮಂತ್ರಿ ಆವಾಸ್(ನಗರ) - ಹೌಸಿಂಗ್ ಫಾರ್ ಆಲ್-2022(ನಗರ)" ಅಭಿಯಾನದ "ಬಿ.ಎಲ್.ಸಿ" ಉಪಘಟಕದ ಅಡಿ ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ 13 ವಸತಿ ಗೃಹಗಳನ್ನು ಅಂದಾಜು ಮೊತ್ತ `. 97.50 ಲಕ್ಷ (ರೂಪಾಯಿ ತೊಂಬತ್ತೇಳು ಲಕ್ಷದ ಐವತ್ತು ಸಾವಿರಗಳು ಮಾತ್ರ) ಗಳಲ್ಲಿ ನಿರ್ಮಿಸಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ.

ಈ ಅನುಮೋದನೆಯು ಕೆಳಕಂಡ ಷರತ್ತುಗಳಿಗೊಳಪಟ್ಟಿರುತ್ತದೆ.

1) ಅನುಮೋದಿತ ವಿಸ್ತøತ ಯೋಜನಾ ವರದಿಯನ್ವಯ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆ "ಹೌಸಿಂಗ್ ಫಾರ್ ಆಲ್-2022 (ನಗರ)" ಮಾರ್ಗಸೂಚಿಗಳನುಸಾರ ಕಾಮಗಾರಿಯನ್ನು ಕಡ್ಡಾಯವಾಗಿ ಜಾರಿಗೊಳಿಸತಕ್ಕದ್ದು.

2) ಮೇಲ್ಕಂಡ ಕಾಮಗಾರಿಗಳಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು ಮತ್ತು ಜಮೀನಿನ ಮಾಲೀಕತ್ವವು ಫಲಾನುಭವಿಯ ಹೆಸರಿನಲ್ಲಿ ನೊಂದಣಿಯಾಗಿರಬೇಕು. 3) ಉಸ್ತುವಾರಿ ಸಂಸ್ಥೆಯಾದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳತಕ್ಕದ್ದು. 4) ಮೇಲಿನ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000 ಮತ್ತು ತತ್ಸಂಬಂಧ ಹೊರಡಿಸಲಾಗಿರುವ ಆದೇಶಗಳು / ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಇ-ಪ್ರಕ್ಯೂರ್‌ಮೆಂಟ್ ಮೂಲಕವೇ ನಡೆಸತಕ್ಕದ್ದು.

5) ಯೋಜನೆಯ ಉಸ್ತುವಾರಿ ಸಂಸ್ಥೆಯಾದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವು ಈ ಯೋಜನೆಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಕಾಲಕಾಲಕ್ಕೆ ಪ್ರಗತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

6) ರಾಜ್ಯದ ಆಯವ್ಯಯದಲ್ಲಿ ವಸತಿ ಇಲಾಖೆಯು ನಗರ ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್ ನಿವಾಸ್ ಯೋಜನೆಗಳಿಗೆ ಒದಗಿಸಿರುವ ಅನುದಾನವನ್ನು ಈಗ ಅನುಮೋದನೆ ನೀಡಲಾಗುತ್ತಿರುವ ಯೋಜನೆಗಳಿಗೆ ರಾಜ್ಯ ಸರ್ಕಾರದ ಪಾಲಿನ ಅನುದಾನ ಎಂದು ಪರಿಗಣಿಸಿ ಹೊಂದಾಣಿಕೆ ಮಾಡಿಕೊಳ್ಳುವುದು.

7) ಆಯ್ಕೆ ಮಾಡಲಾದ ಫಲಾನುಭವಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ಪಡೆದುಕೊಂಡು ತಂತ್ರಾಂಶದಲ್ಲಿ ಅಳವಡಿಸಿಕೊಂಡ ನಂತರವೇ ಕಾಮಗಾರಿ ಪ್ರಾರಂಭಿಸುವುದು. 8) ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಮಾರ್ಗಸೂಚಿಯಲ್ಲಿ ನಿರ್ದೇಶಿಸಿದಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆ "ಹೌಸಿಂಗ್ ಫಾರ್ ಆಲ್-ಪ್ಲಾನ್ ಆಫ್ ಆಕ್ಷನ್‌ನಲ್ಲಿ" ಸೇರ್ಪಡೆಗೊಂಡಿರತಕ್ಕದ್ದು. 9) ಯೋಜನಾ ವೆಚ್ಚದಲ್ಲಿ ಸೇರ್ಪಡೆಗೊಂಡಿರುವ ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚ, ವಿಸ್ತøತ ಯೋಜನಾ ವರದಿ ತಯಾರಿಕಾ ವೆಚ್ಚ, ಐ.ಇ.ಸಿ., ಪಿ.ಎಂ.ಸಿ, ಇತರೇ ವೆಚ್ಚಗಳ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನುಸಾರವಾಗಿ ರಾಜ್ಯ ಸರ್ಕಾರವು ಆರ್ಥಿಕ ಇಲಾಖೆಯ ಸಹಮತಿ ಪಡೆದು ಪ್ರತ್ಯೇಕವಾಗಿ ಆದೇಶ ಹೊರಡಿಸಲು ರಾಜ್ಯ ಮಟ್ಟದ ಉಸ್ತುವಾರಿ ಸಂಸ್ಥೆಯು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

10) ಮನೆಗಳ ನಿರ್ಮಾಣದ ಪ್ರಗತಿಯನ್ನು ಜಿ.ಪಿ.ಎಸ್ ಮೂಲಕ ಪ್ರತಿ ಹಂತದ ಪ್ರಗತಿಯನ್ನು ಪಡೆಯುವುದು. 11) ಫಲಾನುಭವಿಯು ನೀಡಬೇಕಾದ ವಂತಿಕೆಯ ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆ / ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ / ಅಥವಾ ಇತರೆ ಸರ್ಕಾರಿ ಸಂಸ್ಥೆಗಳು ಸಹಾಯಧನದ ರೂಪದಲ್ಲಿ ನೀಡಿದಲ್ಲಿ, ಸಂಬಂಧಪಟ್ಟ ಸಂಸ್ಥೆಯಿಂದ ತಾತ್ವಿಕ ಒಪ್ಪಿಗೆ ಪತ್ರವನ್ನು ಪಡೆದುಕೊಂಡ ನಂತರವೇ ಕಾಮಗಾರಿ ಪ್ರಾರಂಭಿಸುವುದು.

12) ಫಲಾನುಭವಿಗಳ ವಂತಿಕೆಯನ್ನು ಫಲಾನುಭವಿಗಳಿಂದ ಕಡ್ಡಾಯವಾಗಿ ಪಡೆದುಕೊಳ್ಳುವುದು. 13) ಕೇಂದ್ರದ ಸಿ.ಎಸ್.ಎಂ.ಸಿ ಹಾಗೂ ರಾಜ್ಯದ ಎಸ್.ಎಲ್.ಎಸ್.ಎಂ.ಸಿ ಸಮಿತಿಗಳು ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. 14) ಯೋಜನೆಯ ಅಂದಾಜು ಪಟ್ಟಿಗೆ ಸಕ್ಷಮ ತಾಂತ್ರಿಕ ಪ್ರಾಧಿಕಾರದಿಂದ ತಾಂತ್ರಿಕ ಮಂಜೂರಾತಿಯನ್ನು ಪಡೆದುಕೊಂಡು ಯೋಜನೆಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಅನುಷ್ಠಾನ ಸಂಸ್ಥೆಯು ನಿರ್ವಹಿಸುವುದನ್ನು ಧೃಡಪಡಿಸಿಕೊಳ್ಳತಕ್ಕದ್ದು.

3) ಈ ಆದೇಶವನ್ನು ಮೇಲ್ಕಂಡ ಯೋಜನೆಗೆ ಹೌಸಿಂಗ್ ಫಾರ್ ಆಲ್ ಯೋಜನೆಯ ಆಡಳಿತ ಅನುಷ್ಟಾನಕ್ಕಾಗಿ ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿಯು (ಎಸ್.ಎಲ್.ಎಸ್.ಎಂ.ಸಿ) ದಿನಾಂಕ 26/5/2017ರಂದು ನಡೆದ 7ನೇ ಸಭೆಯಲ್ಲಿ ನೀಡಿರುವ ಅನುಮೋದನೆ ಮೇರೆಗೆ ಹೊರಡಿಸಲಾಗಿದೆ.

P.R. 290

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100

ಶಿವಕುಮಾರಸ್ವಾಮಿ ಸಿ.ಎಸ್

ಸರ್ಕಾರದ ಅಧೀನ ಕಾರ್ಯದರ್ಶಿ-1 (ಪ್ರ),

ವಸತಿ ಇಲಾಖೆ.

ಭಾಗ ೧

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

೫೫೩

ವಸತಿ ಸಚಿವಾಲಯ

ವಿಷಯ : "ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) - ಹೌಸಿಂಗ್ ಫಾರ್ ಆಲ್-2022" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪ ಘಟಕದಲ್ಲಿ ಅನುಷ್ಟಾನ ಸಂಸ್ಥೆಗಳಿಂದ ಅನುಷ್ಟಾನಗೊಳ್ಳುತ್ತಿರುವ 6 ಯೋಜನೆಗಳಡಿ 9528 ಮನೆಗಳನ್ನು ನಿರ್ಮಿಸುವ ಯೋಜನೆಗೆ `. 53268.75 ಲಕ್ಷ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಓದಲಾಗಿದೆ :

ಕುರಿತು. 1) ಭಾರತ ಸರ್ಕಾರವು ಹೊರಡಿಸಿರುವ ಹೌಸಿಂಗ್ ಫಾರ್ ಆಲ್-2022 (ಪಿ.ಎಂ.ಎ.ವೈ.-ಹೆಚ್.ಎಫ್.ಎ.) ಅಭಿಯಾನದ ಮಾರ್ಗಸೂಚಿಗಳು. 2) ಸರ್ಕಾರದ ಆದೇಶ ಸಂಖ್ಯೆ: ನಅಇ 145 ಸಿಎಸ್ಎಸ್ 2015, ದಿನಾಂಕ : 18/1/2016 3) ಸರ್ಕಾರದ ಆದೇಶ ಸಂಖ್ಯೆ: ನಅಇ 81 ಸಿಎಸ್ಎಸ್ 2017, ದಿನಾಂಕ : 6/7/2017 4) ಸರ್ಕಾರದ ಆದೇಶ ಸಂಖ್ಯೆ: ವಇ 34 ಯುಹೆಚ್ಎಸ್ 2017, ದಿನಾಂಕ : 4/10/2017

5) ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರ ಪತ್ರ ಸಂಖ್ಯೆ: ಆರ್‌ಜಿಆರ್‌ಹೆಚ್‌ಸಿಎಲ್ 96 ವಿಹೆಚ್‌ಕೆ 01 2017-18, ದಿನಾಂಕ : 19/3/2018.

6) ರಾಜ್ಯ ಮಟ್ಟದ ಅಪ್ರೈಸಲ್ ಸಮಿತಿ (ಎಸ್.ಎಲ್.ಎ.ಸಿ) ಸಭೆಯ ದಿನಾಂಕ : 19/12/2017 ರಂದು ನಡೆದ 8ನೇ ಸಭೆಯ ನಡವಳಿ. 7) ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್.ಎಲ್.ಎಸ್.ಎಂ.ಸಿ.) ಸಭೆಯ ದಿನಾಂಕ : 21/12/2017 ರಂದು ನಡೆದ 9ನೇ ಸಭೆಯ ನಡವಳಿ. 8) ದಿನಾಂಕ : 27/12/2017ರಂದು ನಡೆದ 29ನೇ ಕೇಂದ್ರ ಸರ್ಕಾರದ ಅನುಮೋದನಾ ಮತ್ತು ಮೇಲ್ವಿಚಾರಣೆ ಸಮಿತಿ (ಸಿಎಸ್ಎಂಸಿ) ಎಚ್.ಎಫ್.ಎ ಸಭೆಯ ನಡವಳಿ.

ಪ್ರಸ್ತಾವನೆ :

ಮೇಲೆ ಓದಲಾದ (1)ರಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯವು "ಹೌಸಿಂಗ್ ಫಾರ್ ಆಲ್-2022" (ಪಿ.ಎಂ.ಎ.ವೈ.-ಹೆಚ್.ಎಫ್.ಎ.) ಯೋಜನೆಗಾಗಿ ಮಾರ್ಗಸೂಚಿಗಳನ್ನು ರಚಿಸಿರುತ್ತದೆ.

2) ಮೇಲೆ (2)ರಲ್ಲಿ ಓದಲಾದ ದಿನಾಂಕ : 18/1/2016ರ ಆದೇಶದಲ್ಲಿ ಕೇಂದ್ರ ಪುರಸ್ಕøತ "ಹೌಸಿಂಗ್ ಫಾರ್ ಆಲ್" ಯೋಜನೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ರಾಜ್ಯದಲ್ಲಿ ಜಾರಿಗೆ ತಂದು ರಾಜ್ಯದ 214 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲು ಹಾಗೂ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲು ಅನುಮೋದನೆ ನೀಡಲಾಗಿದೆ. ಇದೇ ಆದೇಶದಲ್ಲಿ ಸದರಿ ಯೋಜನೆಯ ಆಡಳಿತ ಮತ್ತು ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿಯನ್ನು (ಎಸ್.ಎಲ್.ಎಸ್.ಎಂ.ಸಿ.) ರಚಿಸಲಾಗಿದೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳು / ಅನುಷ್ಠಾನ ಸಂಸ್ಥೆಗಳು ಸಲ್ಲಿಸಿದ ಡಿ.ಪಿ.ಆರ್.ಗಳನ್ನು ಹಾಗೂ ಹೆಚ್.ಎಫ್.ಎ.-ಪಿ.ಓ.ಎ.ಗಳನ್ನು ತಾಂತ್ರಿಕವಾಗಿ / ಆರ್ಥಿಕವಾಗಿ ಅಪ್ರೈಸಲ್ ಮಾಡಲು "ರಾಜ್ಯ ಮಟ್ಟದ ಮೌಲ್ಯಮಾಪನ ಸಮಿತಿ"ಯನ್ನು (ಎಸ್.ಎಲ್.ಎ.ಸಿ) ರಚಿಸಲಾಗಿದೆ.

3) ಮೇಲೆ (3)ರಲ್ಲಿ ಓದಲಾದ ದಿನಾಂಕ : 6/7/2017ರ ಆದೇಶದಲ್ಲಿ ಕೇಂದ್ರ ಪುರಸ್ಕøತ ರಾಜೀವ್ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ ನಿರ್ವಹಣೆಯ ಜವಾಬ್ದಾರಿಯನ್ನು ತಕ್ಷಣ ಜಾರಿಗೆ ಬರುವಂತೆ, ನಗರಾಭಿವೃದ್ಧಿ ಇಲಾಖೆಯಿಂದ ವಸತಿ ಇಲಾಖೆಗೆ ವರ್ಗಾಯಿಸಿ ಆದೇಶಿಸಿದೆ ಹಾಗೂ ಇದೇ ಆದೇಶದಲ್ಲಿ ರಾಜೀವ್ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತವನ್ನು ರಾಜ್ಯ ಮಟ್ಟದ ಉಸ್ತುವಾರಿ ಸಂಸ್ಥೆಯಾಗಿ ನೇಮಿಸಲಾಗಿದೆ.

4) ಮೇಲೆ (4)ರಲ್ಲಿ ಓದಲಾದ ದಿನಾಂಕ : 4/10/2017ರ ಆದೇಶದಲ್ಲಿ ರಚನೆ ಮಾಡಲಾಗಿರುವ ರಾಜ್ಯ ಮಟ್ಟದ ಮಂಜೂರಾತಿ ಮತ್ತು ಮೇಲ್ವಿಚಾರಣೆ ಸಮಿತಿ, ರಾಜ್ಯ ಮಟ್ಟದ ಮೌಲ್ಯ ಮಾಪನಾ ಸಮಿತಿ ಮತ್ತು ಜಿಲ್ಲಾ ಮಟ್ಟದ ಉಸ್ತುವಾರಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಂಯೋಜನೆಯಲ್ಲಿ ಮಾರ್ಪಾಡು ಮಾಡಲಾಗಿದೆ.

೫೫೪

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

ಭಾಗ ೧

5) ಮೇಲೆ (5)ರಲ್ಲಿ ಓದಲಾದ ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರು ದಿನಾಂಕ : 19/3/2018ರಂದು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ "ಹೌಸಿಂಗ್ ಫಾರ್ ಆಲ್ – 2022 (ನಗರ)" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪ ಘಟಕದಲ್ಲಿ ಅನುಷ್ಟಾನ ಸಂಸ್ಥೆಗಳಿಂದ ಅನುಷ್ಟಾನಗೊಳಿಸುತ್ತಿರುವ 6 ಯೋಜನೆಗಳಡಿ 9528 ಮನೆಗಳನ್ನು `. 53268.75 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ಕೋರಿರುತ್ತಾರೆ. ಯೋಜನಾ ಮೊತ್ತದ ವಿವರಗಳು ಈ ಕೆಳಕಂಡಂತಿರುತ್ತವೆ.

ವಿವಿಧ ಅನುಷ್ಟಾನ ಸಂಸ್ಥೆಗಳಿಂದ ಅನುಷ್ಟಾನಗೊಳ್ಳುತ್ತಿರುವ 6 ಯೋಜನೆಗಳ ವಿವರ
ಯೋಜನೆಗಳ ಸಂಖ್ಯೆ ವ ುನೆಗಳ ಸಂಖ್ಯೆ ಯೋಜನಾ ಮೊತ್ತ (`. ಲಕ್ಷಗಳಲ್ಲಿ) ಹಣಕಾಸು ಜೋಡಣೆ (`. ಲಕ್ಷಗಳಲ್ಲಿ)
ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಪ ಲಾನುಭವಿ ವಂತಿಕೆ ಅನುಷ್ಟಾನ ಸಂಸ್ಥೆ ಪಾಲು ಒಟ್ಟು ಯೋಜನಾ ಮೊತ್ತ
.ಜಾ / ಪ.ಪಂ ಪ ಇತರರು ಒಟ್ಟು ತಿ ಸ ವ ುೂಲಭೂತ ಸೌಕರ್ಯ ವ ಇತರೆ ಒಟ್ಟು ವಾಜಪೇಯಿ ವಸತಿ ಯೋಜನೆ ಅಂಬೇಡ್ಕರ್ ನಿವಾಸ್ ಯೋಜನೆ ಇತರೆ ಒಟ್ಟು .ಜಾ / ಪ.ಪಂ ಲಾನುಭವಿಗಳು ಪ ಪ ಇತರೆ ಫಲಾನುಭವಿಗಳು ಒಟ್ಟು ತಿ ಘಟಕಕ್ಕೆ ಸ ವ ುೂಲಭೂತ ಸೌಕರ್ಯಕ್ಕೆ ವ ಒಟ್ಟು
6 5704 3824 9528 48978.44 4290.30 0.00 53268.75 14292.00 4588.80 10267.20 0.00 14856.00 7213.00 8348.865 15185.38 4645.07 4290.30 8935.37 53268.75

6) ಅನುಷ್ಟಾನ ಸಂಸ್ಥೆಗಳಿಂದ ಅನುಷ್ಟಾನಗೊಳ್ಳುತ್ತಿರುವ 6 ಯೋಜನೆಗಳ ವಿವರ ಈ ಕೆಳಕಂಡಂತೆ ಇದೆ.

(`. ಲಕ್ಷಗಳಲ್ಲಿ)

ಕ್ರ. ಸ ಂ ಜಿಲ್ಲೆಯ ಹೆಸರು ನಗರ ಅನುಷ್ಟಾನ ಸಂಸ್ಥೆ ವ ುನೆಗಳ ಸ ಂಖ್ಯೆ ಯೋಜನೆಯ ಮೊತ್ತ ಕೇಂದ್ರ ಸರ್ಕಾರದ ಪಾಲು ರಾಜ್ಯ ಸರ್ಕಾರದ ಪಾಲು ನ.ಸ.ಸಂ/ ಅನುಷ್ಟಾನ ಸ ಂಸ್ಥೆಯ ಪಾಲು ಪ ಲಾನುಭವಿಗಳ ಪಾಲು
1 ಶಿವಮೊಗ್ಗ ಶಿರಾಳಕೊಪ್ಪ ಕ.ಕೋ.ಅ.ಮ 250 1336.80 375.00 334.80 109.30 517.70
2 ವಿಜಯಪುರ ವಿಜಯಪುರ ಕ.ಕೋ.ಅ.ಮ 1800 9900.00 2700.00 3101.40 3140.85 957.75
3 ಬಾಗಲಕೋಟೆ ಬೀಳಗಿ ಕ.ಕೋ.ಅ.ಮ 500 2750.00 750.00 819.00 897.25 283.75
4 ಬ ಂಗಳೂರು (ನಗರ) ೆ ಬಿ.ಬಿ.ಎಂ.ಪಿ ಕ.ಕೋ.ಅ.ಮ 1155 6329.41 1732.50 1878.00 2060.30 658.61
5 ದಾವಣಗೆರೆ ಜಗಳೂರು ಕ.ಕೋ.ಅ.ಮ / ನ.ಸ್ಥ.ಸಂ 207 1118.54 310.50 298.80 377.67 131.57

ಭಾಗ ೧

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

೫೫೫

ಕ್ರ. ಸ ಂ ಜಿಲ್ಲೆಯ ಹೆಸರು ನಗರ ಅನುಷ್ಟಾನ ಸಂಸ್ಥೆ ವ ುನೆಗಳ ಸ ಂಖ್ಯೆ ಯೋಜನೆಯ ಮೊತ್ತ ಕೇಂದ್ರ ಸರ್ಕಾರದ ಪಾಲು ರಾಜ್ಯ ಸರ್ಕಾರದ ಪಾಲು ನ.ಸ.ಸಂ/ ಅನುಷ್ಟಾನ ಸ ಂಸ್ಥೆಯ ಪಾಲು ಪ ಲಾನುಭವಿಗಳ ಪಾಲು
6 ಬಳ್ಳಾರಿ ಬಳ್ಳಾರಿ ಡಿ.ಸಿ ಬಳ್ಳಾರಿ 5616 31834.00 8424.00 8424.00 2350.00 12636.00
9528 53268.75 14292.00 14856.00 8935.37 15185.38

7) ಅಂದಾಜು ಪಟ್ಟಿಯನ್ನು ಅನುಷ್ಟಾನ ಸಂಸ್ಥೆಗಳು ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯ (PWD) ದರಪಟ್ಟಿ ಅನ್ವಯ ಮತ್ತು ಸಂಬಂಧಿಸಿದ ಮಾರುಕಟ್ಟೆ ದರಪಟ್ಟಿಯನ್ವಯ ಸಿದ್ದಪಡಿಸಿರುತ್ತಾರೆಂದು ಪ್ರಸ್ತಾವನೆಯಲ್ಲಿ ತಿಳಿಸಿರುತ್ತಾರೆ.

8) ಮೇಲೆ (6)ರಲ್ಲಿ ಓದಲಾದ ದಿನಾಂಕ : 19/12/2017 ರಂದು ನಡೆದ 8ನೇ ರಾಜ್ಯ ಮಟ್ಟದ ಅಪ್ರೈಸಲ್ ಸಮಿತಿ ಸಭೆ (ಎಸ್.ಎಲ್.ಎ.ಸಿ) ನಡವಳಿಯ ವಿಷಯ ಸಂಖ್ಯೆ:5, 6, 7, 8, 9 ಮತ್ತು 14 ಅನುಬಂಧ-5.1, 6.1, 7.1, 8.1, 9.1 ಮತ್ತು 14.1 ರಲ್ಲಿ "ಸರ್ವರಿಗೂ ಸೂರು (ಹೌಸಿಂಗ್ ಫಾರ್ ಆಲ್)" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪಘಟಕದಲ್ಲಿ ಅನುಷ್ಟಾನ ಸಂಸ್ಥೆಗಳಿಂದ ಅನುಷ್ಟಾನಗೊಳ್ಳುತ್ತಿರುವ 6 ಯೋಜನೆಗಳಡಿ 9528 ವಸತಿ ಘಟಕಗಳನ್ನು ನಿರ್ಮಾಣ ಮಾಡುವ ಯೋಜನೆಗೆ ಸಂಬಂಧಿಸಿದಂತೆ ವಿಸ್ತøತ ಯೋಜನಾ ವರದಿಯನ್ನು ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ (ಎಸ್.ಎಲ್.ಎಸ್.ಎಂಸಿ) ಮುಂದೆ ಅನುಮೋದನೆಗೆ ಮಂಡಿಸಲು ಶಿಫಾರಸ್ಸು ಮಾಡಿರುತ್ತದೆ.

9) ಮೇಲೆ (7)ರಲ್ಲಿ ಓದಲಾದ ದಿನಾಂಕ : 21/12/2017ರಂದು ನಡೆದ 9ನೇ ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ (ಎಸ್.ಎಲ್.ಎಸ್.ಎಂಸಿ) ನಡವಳಿಯ ವಿಷಯ ಸಂಖ್ಯೆ:5, 6, 7, 8, 9, ಮತ್ತು 13 ಅನುಬಂಧ- 5.1, 6.1, 7.1, 8.1, 9.1 ಮತ್ತು 13.1 ರಲ್ಲಿ "ಸರ್ವರಿಗೂ ಸೂರು (ಹೌಸಿಂಗ್ ಫಾರ್ ಆಲ್)" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪಘಟಕದಲ್ಲಿ ಅನುಷ್ಟಾನ ಸಂಸ್ಥೆಗಳಿಂದ ಅನುಷ್ಟಾನಗೊಳ್ಳುತ್ತಿರುವ 6 ಯೋಜನೆಗಳಡಿ 9528 ವಸತಿ ಘಟಕಗಳನ್ನು ನಿರ್ಮಿಸಲು ಒಪ್ಪಿಗೆ ನೀಡಿರುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿರುತ್ತಾರೆ.

10) ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಮೇಲೆ (8)ರಲ್ಲಿ ಓದಲಾದ ಭಾರತ ಸರ್ಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯದ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿಯು (ಸಿಎಸ್ಎಂಸಿ- ಹೆಚ್ಎಫ್ಎ) ದಿನಾಂಕ : 27/12/2017ರಂದು ನಡೆದ 29ನೇ ಸಭೆಯ ನಡವಳಿಯಲ್ಲಿ ರಾಜ್ಯದ ಯೋಜನೆಗಳಿಗೆ ಸಂಬಂಧಿಸಿದಂತೆ ಅನುಮೋದನೆ ನೀಡಿದ್ದು, ನಡವಳಿಯ ವಿಷಯ ಸಂಖ್ಯೆ: 5ರ ಅನುಬಂಧ-5ಬಿ ಕ್ರ.ಸಂ 1 ರಿಂದ 6ರಲ್ಲಿ "ಸರ್ವರಿಗೂ ಸೂರು (ಹೌಸಿಂಗ್ ಫಾರ್ ಆಲ್)" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪಘಟಕದಲ್ಲಿ ಅನುಷ್ಟಾನ ಸಂಸ್ಥೆಗಳಿಂದ ಅನುಷ್ಟಾನಗೊಳ್ಳುತ್ತಿರುವ 6 ಯೋಜನೆಗಳಡಿ 9528 ಮನೆಗಳನ್ನು ನಿರ್ಮಿಸುವ ಯೋಜನೆಗೆ `. 53268.75 ಲಕ್ಷದ ಕೇಂದ್ರ ಸರ್ಕಾರದ ಪಾಲಿನ ಅನುದಾನ `. 14292.00 ಲಕ್ಷ ಒದಗಿಸಲು ತಾತ್ವಿಕ ಒಪ್ಪಿಗೆ ನೀಡಿರುತ್ತದೆ.

ಕ್ರ. ಸ ಂ. ನಗರದ ಹೆಸರು ಅನುಷ್ಠಾನ ಸಂಸ್ಥೆಯ ಹ ಸ ೆ ರು ವ ುನೆಗಳ ಸ ಂಖ್ಯೆ ಯೋಜನಾ ವ ೂತ್ತ ೆ (`. ಲಕ್ಷಗಳಲ್ಲಿ) ಯೋಜನಾ ಸ್ಥಳದ ಹೆಸರು ಸ ವ ರ್ ನಂ. ೆ ವಿಸ್ತೀರ್ಣ (ಎಕರೆ / ಗುಂಟೆ) ವ iಾಲಿಕತ್ವ
1 ಬಳ್ಳಾರಿ ಜಿಲ್ಲಾಧಿಕಾರಿಗಳು - ಬಳ್ಳಾರಿ 5616 31834.00 ವ ುುಂಡರಗಿ ಹಳಕುಂಡಿ ಸ ವ ರ್ ನಂ 47,62, 63, 64,72,73,75,76, ೆ 78,79,82,84 58.50 ನಗರ ಸ್ಥಳೀಯ ಸ ಂಸ್ಥೆ

೫೫೬

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

ಭಾಗ ೧

ಕ್ರ. ಸ ಂ. ನಗರದ ಹೆಸರು ಅನುಷ್ಠಾನ ಸಂಸ್ಥೆಯ ಹ ಸ ೆ ರು ವ ುನೆಗಳ ಸ ಂಖ್ಯೆ ಯೋಜನಾ ವ ೆ ೂತ್ತ (`. ಲಕ್ಷಗಳಲ್ಲಿ) ಯೋಜನಾ ಸ್ಥಳದ ಹೆಸರು ಸ ವ ರ್ ನಂ. ೆ ವಿಸ್ತೀರ್ಣ (ಎಕರೆ / ಗುಂಟೆ) ವ iಾಲಿಕತ್ವ
2 ಶಿರಾಳಕೊಪ್ಪ ಕೆಎಸ್‌ಡಿಬಿ 250 1336.80 ಗಾಂಧಿ ನಗರ 1.11 ನಗರ ಸ್ಥಳೀಯ ಸ ಂಸ್ಥೆ
ನೆಹರೂ ನಗರ 2.10
ದ ೕವರಾಜ ಅರಸು ಬಡಾವಣೆ/ದಾಸರಕೇರಿ ೆ ಶಿರಾಳಕೊಪ್ಪ ಗ್ರಾಮ, ಸರ್ವೆ ನಂ. 94/1 3.10
ಹಕ್ಕಳ ಕೇರಿ / ಪಂಪ್ ಹೌಸ್ ಬಡಾವಣೆ ಸ ವ ರ್ ನಂ. 54 ೆ 1=0-21,54/2=0-27,55/1=1-20, 54/2=0-27, 55/1=1-20, 55/2=1-19, 56/1=1-09 56/2=1-10, 57/1=2-02 57/2=2-02 1.30, 10.30
3 ವಿಜಯಪುರ ಕೆಎಸ್‌ಡಿಬಿ 1800 9900.00 ಬ ೂತನಾಳ ಸ್ಲಂ 27.00 ಸ ರ್ಕಾರದ ಜಾಗ
ಚ ಂದ್ರು ನಗರ / ಸೇವಾಳ ನಗರ 2.30
ಕಸಿಮಕೇರಿ ಸ್ಲಂ 2.20
ಶ ಕಿ ನಗರ ್ತ 7.20
ಖಾಂದರಸಿ ಕೌಜಲಗಿ ಸ್ಲಂ 3.20
ಬಾರಕೊಟ್ರ ಸ್ಲಂ 5.10
ಅಲ್ಲಾಪ್ಮರ ಸ್ಲಂ 6.10
4 ಬೀಳಗಿ ಕೆಎಸ್‌ಡಿಬಿ 500 2750.00 ಚ ಲವಾದಿ ಓಣಿ 5.00 ನಗರ ಸ್ಥಳೀಯ ಸ ಂಸ್ಥೆ
ಹರಿಜನ ಕೇರಿ 3.20
ಜನತಾ ಪ್ಲಾಟ್ 4.18
ಕಾಟಕರ ಓಣಿ 2.30
ವ iಾದರ ಓಣಿ 2.34

ಭಾಗ ೧

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

೫೫೭

ಕ್ರ. ಸ ಂ. ನಗರದ ಹೆಸರು ಅನುಷ್ಠಾನ ಸಂಸ್ಥೆಯ ಹ ಸ ೆ ರು ವ ುನೆಗಳ ಸ ಂಖ್ಯೆ ಯೋಜನಾ ವ ೆ ೂತ್ತ (`. ಲಕ್ಷಗಳಲ್ಲಿ) ಯೋಜನಾ ಸ್ಥಳದ ಹೆಸರು ಸ ವ ರ್ ನಂ. ೆ ವಿಸ್ತೀರ್ಣ (ಎಕರೆ / ಗುಂಟೆ) ವ iಾಲಿಕತ್ವ
5 ಬ ಂಗಳೂರು - ಬಿಬಿಎಂಪಿ ೆ ಕೆಎಸ್‌ಡಿಬಿ 1155 6329.41 ವಿನೋಭಾ ನಗರ 1ನೇ & 2ನೇ ಹಂತ PTS441 0.32 ಬಿಬಿಎಂಪಿ
ರಾವ್ಮಣ್ಣ ಡಿಸೋಜ ಶಂಕರಪ್ಪ ಗಾರ್ಡನ್ 1659,1660,1688, 1689,1690, 1691, 1692,1693, 1694, 1695 3.27 (17F) Pvt land acquired by KSDB
ದ ಯಾನಂದ ಗುಂಡಪ್ಪ ಸ್ಲಂ 16 16.04 Govt
ಖಾದರ್ ಶರೀಫ್ – 1ನೇ ಹಂತ 18A 2.20 Pvt (17F)
ಆನಂದಪುರಂ, ಗಿರಿಪುರಂ 3.04 BBMP & (17F) Private land acquired by KSDB
ವಾಲ್ಮಿಕಿ ನಗರ 13.12 ಬಿಬಿಎಂಪಿ
6 ಜಗಳೂರು ಕ.ಕೋ.ಅ.ಮ / ನ .ಸ್ಥ.ಸಂ 207 1118.54 ಅಶ್ವತ ನಗರ 7.6 ನಗರ ಸ್ಥಳೀಯ ಸ ಂಸ್ಥೆ
ವ ುಂಜುನಾಥ ನಗರ 4.3
ಇಮಾಮ್ ಸಾಬ್ ನಗರ 2.37
ಒಟ್ಟು 9528 53268.75 198.79

ಅನುಷ್ಟಾನ ಸಂಸ್ಥೆಗಳು ಒಟ್ಟು 198 ಎಕರೆ 79ಗುಂಟೆ ಜಮೀನಿನಲ್ಲಿ ಮೇಲಿನ 6 ಯೋಜನೆಗಳನ್ನು ಅನುಷ್ಟಾನಗೊಳಿಸಲು ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರು ಪ್ರಸ್ತಾಪಿಸಿರುತ್ತಾರೆ.

12) ಮೇಲ್ಕಂಡಂತೆ ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ವಇ 59 ಹೆಚ್ಎಫ್ಎ 2018, ಬೆಂಗಳೂರು, ದಿನಾಂಕ : 26ನೇ ಮಾರ್ಚ್, 2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, "ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)-ಹೌಸಿಂಗ್ ಫಾರ್ ಆಲ್-2022" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪ ಘಟಕದಲ್ಲಿ ಈ ಕೆಳಕಂಡ ಅನುಷ್ಟಾನ ಸಂಸ್ಥೆಗಳಿಂದ ಅನುಷ್ಟಾನಗೊಳ್ಳುತ್ತಿರುವ 6 ಯೋಜನೆಗಳಡಿ 9528 ವಸತಿ ಗೃಹಗಳನ್ನು `. 53268.75 ಲಕ್ಷ (ರೂಪಾಯಿ ಐವತ್ತ ಮೂರು ಸಾವಿರದ ಇನ್ನೂರ ಚಿರವತ್ತೆಂಟು ಲಕ್ಷ ಎಪ್ಪತೈದು ಸಾವಿರಗಳು ಮಾತ್ರ) ಅಂದಾಜು ವೆಚ್ಚದಲ್ಲಿ ನಿರ್ಮಿಸುವ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

೫೫೮

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

ಭಾಗ ೧

(`. ಲಕ್ಷಗಳಲ್ಲಿ)

ಕ್ರ. ಸ ಂ ಜಿಲ್ಲೆಯ ಹ ಸ ೆ ರು ನಗರ ಅನುಷ್ಟಾನ ಸಂಸ್ಥೆ ವ ುನೆಗಳ ಸ ಂಖ್ಯೆ ಯೋಜನೆಯ ಮೊತ್ತ ಕೇಂದ್ರ ಸರ್ಕಾರದ ಪಾಲು ರಾಜ್ಯ ಸರ್ಕಾರದ ಪಾಲು ನ.ಸ.ಸಂ/ ಅನುಷ್ಟಾನ ಸ ಂಸ್ಥೆಯ ಪಾಲು ಪ ಲಾನುಭವಿಗಳ ಪಾಲು
1 ಶಿವಮೊಗ್ಗ ಶಿರಾಳಕೊಪ್ಪ ಕ.ಕೋ.ಅ.ಮ 250 1336.80 375.00 334.80 109.30 517.70
2 ವಿಜಯಪುರ ವಿಜಯಪುರ ಕ.ಕೋ.ಅ.ಮ 1800 9900.00 2700.00 3101.40 3140.85 957.75
3 ಬಾಗಲಕೋಟೆ ಬೀಳಗಿ ಕ.ಕೋ.ಅ.ಮ 500 2750.00 750.00 819.00 897.25 283.75
4 ಬ ಂಗಳೂರು (ನಗರ) ೆ ಬಿ.ಬಿ.ಎಂ.ಪಿ ಕ.ಕೋ.ಅ.ಮ 1155 6329.41 1732.50 1878.00 2060.30 658.61
5 ದಾವಣಗೆರೆ ಜಗಳೂರು ಕ.ಕೋ.ಅ.ಮ / ನ.ಸ್ಥ.ಸಂ 207 1118.54 310.50 298.80 377.67 131.57
6 ಬಳ್ಳಾರಿ ಬಳ್ಳಾರಿ ಡಿ.ಸಿ ಬಳ್ಳಾರಿ 5616 31834.00 8424.00 8424.00 2350.00 12636.00
9528 53268.75 14292.00 14856.00 8935.37 15185.38

2) ಈ ಅನುಮೋದನೆಯು ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

1. ಅನುಮೋದಿತ ವಿಸ್ತøತ ಯೋಜನಾ ವರದಿಯನ್ವಯ ಹಾಗೂ ಹೌಸಿಂಗ್ ಫಾರ್ ಆಲ್-2022ರ (ಪಿ.ಎಂ.ಎ.ವೈ.-ಹೆಚ್.ಎಫ್.ಎ.) ಮಾರ್ಗಸೂಚಿಗಳನುಸಾರ ಕಾಮಗಾರಿಯನ್ನು ಕಡ್ಡಾಯವಾಗಿ ಜಾರಿಗೊಳಿಸತಕ್ಕದ್ದು.

2. ಮೇಲ್ಕಂಡ ಕಾಮಗಾರಿಗಳಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು ಮತ್ತು ಜಮೀನಿನ ಮಾಲೀಕತ್ವವು ಅನುಷ್ಟಾನ ಸಂಸ್ಥೆಯ ಹೆಸರಿನಲ್ಲಿ ನೊಂದಣಿಯಾಗಿರಬೇಕು.

3. ಉಸ್ತುವಾರಿ ಸಂಸ್ಥೆಯಾದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತವು ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳತಕ್ಕದ್ದು.

4. ಮೇಲಿನ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000 ಮತ್ತು ತತ್ಸಂಬಂಧ ಹೊರಡಿಸಲಾಗಿರುವ ಆದೇಶಗಳು / ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಇ-ಪ್ರಕ್ಯೂರ್‌ಮೆಂಟ್ ಮೂಲಕವೇ ನಡೆಸತಕ್ಕದ್ದು.

5. ಅನುಷ್ಟಾನ ಸಂಸ್ಥೆಯವರು ಫಲಾನುಭವಿಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಹಾಯ ಮಾಡುವುದು.

6. ಯೋಜನಾ ವರದಿಯಲ್ಲಿ ನಮೂದಿಸಲಾಗಿರುವ ಕೊಳಚೆ ಪ್ರದೇಶದ ಫಲಾನುಭವಿಗಳು ವಂತಿಕೆ ಭರಿಸುವ, ಗುಡಿಸಲು ತೆರವುಗೊಳಿಸಿಕೊಡುವ, ಸ್ವಂತ ಖರ್ಚಿನಲ್ಲಿ ತಾತ್ಕಾಲಿಕ ವಸತಿ ಗೃಹಗಳನ್ನು ನಿರ್ಮಿಸಿಕೊಳ್ಳುವ ಇಚ್ಛೆ ಉಳ್ಳವರಾಗಿರತಕ್ಕದ್ದು.

7. ಯೋಜನೆಯ ಉಸ್ತುವಾರಿ ಸಂಸ್ಥೆಯಾದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತವು ಈ ಯೋಜನೆಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಕಾಲಕಾಲಕ್ಕೆ ಪ್ರಗತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

8. ರಾಜ್ಯದ ಆಯವ್ಯಯದಲ್ಲಿ ವಸತಿ ಇಲಾಖೆಯು ನಗರ ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್ ನಿವಾಸ್ ಯೋಜನೆಗಳಿಗೆ ಒದಗಿಸಿರುವ ಅನುದಾನವನ್ನು ಈಗ ಅನುಮೋದನೆ ನೀಡಲಾಗುತ್ತಿರುವ ಯೋಜನೆಗಳಿಗೆ ರಾಜ್ಯ ಸರ್ಕಾರದ ಪಾಲಿನ ಅನುದಾನ ಎಂದು ಪರಿಗಣಿಸಿ ಹೊಂದಾಣಿಕೆ ಮಾಡಿಕೊಳ್ಳುವುದು.

9. ಆಯ್ಕೆ ಮಾಡಲಾದ ಫಲಾನುಭವಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ಪಡೆದುಕೊಂಡು ತಂತ್ರಾಂಶದಲ್ಲಿ ಅಳವಡಿಸಿಕೊಂಡ ನಂತರವೇ ಕಾಮಗಾರಿ ಪ್ರಾರಂಭಿಸುವುದು.

ಭಾಗ ೧

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

೫೫೯

10. ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಮಾರ್ಗಸೂಚಿಯಲ್ಲಿ ನಿರ್ದೇಶಿಸಿದಂತೆ "ಹೌಸಿಂಗ್ ಫಾರ್ ಆಲ್ ಪ್ಲಾನ್ ಆಫ್ ಆಕ್ಷನ್" (ಪಿ.ಎಂ.ಎ.ವೈ.-ಹೆಚ್.ಎಫ್.ಎ.-ಪಿ.ಒ.ಎ.) ನಲ್ಲಿ ಸೇರ್ಪಡೆಗೊಂಡಿರತಕ್ಕದ್ದು.

11. ಯೋಜನಾ ವೆಚ್ಚದಲ್ಲಿ ಸೇರ್ಪಡೆಗೊಂಡಿರುವ ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚ, ವಿಸ್ತøತ ಯೋಜನಾ ವರದಿ ತಯಾರಿಕಾ ವೆಚ್ಚ, ಐ.ಇ.ಸಿ, ಪಿ.ಎಂ.ಸಿ, ಇತರೆ ವೆಚ್ಚಗಳ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನುಸಾರವಾಗಿ ರಾಜ್ಯ ಸರ್ಕಾರವು ಆರ್ಥಿಕ ಇಲಾಖೆಯ ಸಹಮತಿ ಪಡೆದು ಪ್ರತ್ಯೇಕವಾಗಿ ಆದೇಶ ಹೊರಡಿಸಲು ರಾಜ್ಯ ಮಟ್ಟದ ಉಸ್ತುವಾರಿ ಸಂಸ್ಥೆಯು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

12. ಈ ಯೋಜನೆಯ ಅನುಷ್ಟಾನದಿಂದ ನಿರ್ಮಿಸಲಾಗುತ್ತಿರುವ ಪಕ್ಕಾ ಮನೆಗಳಿಗೆ ಕೊಳಚೆ ಪ್ರದೇಶದ ನಿವಾಸಿಗಳು ವರ್ಗಾವಣೆ ಆಗುವುದರಿಂದ ಅಂತಹ ಕೊಳಚೆ ಪ್ರದೇಶಗಳನ್ನು ಕೊಳಚೆ ಪ್ರದೇಶಗಳ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕುವುದು.

13. ಮನೆಗಳ ನಿರ್ಮಾಣದ ಪ್ರಗತಿಯನ್ನು ಜಿ.ಪಿ.ಎಸ್ ಮೂಲಕ ಪ್ರತಿ ಹಂತದ ಪ್ರಗತಿಯನ್ನು ಪಡೆಯುವುದು.

14. ಫಲಾನುಭವಿಯು ನೀಡಬೇಕಾದ ವಂತಿಕೆಯು ಬ್ಯಾಂಕ್ ಸಾಲದ ರೂಪದಲ್ಲಿ ಇದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್ ನೀಡಿರುವ ಸಾಲ ಮಂಜೂರಾತಿ ಪತ್ರವನ್ನು ಪಡೆದುಕೊಂಡ ನಂತರವೇ ಕಾಮಗಾರಿ ಪ್ರಾರಂಭಿಸುವುದು.

15. ಫಲಾನುಭವಿಯು ನೀಡಬೇಕಾದ ವಂತಿಕೆಯ ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆ / ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ / ಅಥವಾ ಇತರೆ ಸರ್ಕಾರಿ ಸಂಸ್ಥೆಗಳು ಸಹಾಯಧನದ ರೂಪದಲ್ಲಿ ನೀಡಿದ್ದಲ್ಲಿ, ಸಂಬಂಧಪಟ್ಟ ಸಂಸ್ಥೆಯಿಂದ ತಾತ್ವಿಕ ಒಪ್ಪಿಗೆ ಪತ್ರವನ್ನು ಪಡೆದುಕೊಂಡ ನಂತರವೇ ಕಾಮಗಾರಿ ಪ್ರಾರಂಭಿಸುವುದು.

16. ಪ್ರಸ್ತಾಪಿತ ಯೋಜನೆಗೆ ಸಂಬಂಧಿಸಿದಂತೆ ದಿನಾಂಕ : 26/5/2017 ರಂದು ನಡೆದ 7ನೇ ಎಸ್ಎಲ್ಎಸ್ಎಂಸಿ ಸಭೆಯಲ್ಲಿ ನೀಡಲಾದ ಹೆಚ್ಚುವರಿ ಷರತ್ತುಗಳನ್ನು ಈಗಾಗಲೇ ಪೂರೈಸಿರುವುದನ್ನು ಖಚಿತ ಪಡಿಸಿಕೊಳ್ಳತಕ್ಕದ್ದು.

17. ಫಲಾನುಭವಿಗಳ ವಂತಿಕೆಯನ್ನು ಫಲಾನುಭವಿಗಳಿಂದ ಕಡ್ಡಾಯವಾಗಿ ಪಡೆದುಕೊಳ್ಳುವುದು.

18. ಕೇಂದ್ರದ ಸಿ.ಎಸ್.ಎಂ.ಸಿ ಹಾಗೂ ರಾಜ್ಯದ ಎಸ್.ಎಲ್.ಎಸ್.ಎಂ.ಸಿ ಸಮಿತಿಗಳು ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

19. ಯೋಜನೆಯ ಅಂದಾಜು ಪಟ್ಟಿಗೆ ಸಕ್ಷಮ ತಾಂತ್ರಿಕ ಪ್ರಾಧಿಕಾರದಿಂದ ತಾಂತ್ರಿಕ ಮಂಜೂರಾತಿಯನ್ನು ಪಡೆದುಕೊಂಡು ಯೋಜನೆಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಅನುಷ್ಠಾನ ಸಂಸ್ಥೆಯು ನಿರ್ವಹಿಸುವುದನ್ನು ಉಸ್ತುವಾರಿ ಸಂಸ್ಥೆಯು ಧೃಡಪಡಿಸಿಕೊಳ್ಳತಕ್ಕದ್ದು.

20. ಅನುಷ್ಟಾನ ಸಂಸ್ಥೆಗಳು ಯೋಜನೆಯ ಅನುಷ್ಟಾನಕ್ಕೆ ಅಗತ್ಯವಿರುವ ಜಮೀನು ವ್ಯಾಜ್ಯ ಮುಕ್ತವಾಗಿರುವುದನ್ನು ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ಖಾತರಿಪಡಿಸಿಕೊಂಡು ಕಾಮಗಾರಿ ಪ್ರಾರಂಭಿಸುವುದು.

3) ಈ ಆದೇಶವನ್ನು ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿಯು (ಎಸ್.ಎಲ್.ಎಸ್.ಎಂ.ಸಿ) ದಿನಾಂಕ : 21/12/2017ರಂದು ನಡೆದ 9ನೇ ಸಭೆಯಲ್ಲಿ ನೀಡಿರುವ ಅನುಮೋದನೆ ಮೇರೆಗೆ ಹೊರಡಿಸಲಾಗಿದೆ.

P.R. 291

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-100

ಕೆ. ಚಿರಂಜೀವಿ

ಸರ್ಕಾರದ ಉಪ ಕಾರ್ಯದರ್ಶಿ-2,

ವಸತಿ ಇಲಾಖೆ.

೫೬೦

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

ಭಾಗ ೧

ವಸತಿ ಸಚಿವಾಲಯ

"ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) - ಹೌಸಿಂಗ್ ಫಾರ್ ಆಲ್-2022" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪ ಘಟಕದ ಅಡಿ ವಿಷಯ :

ಬೆಂಗಳೂರು – ಕೆ.ಆರ್ ಪುರ ನಗರದಲ್ಲಿ 768 (ಜಿ.ಎಫ್) ಮನೆಗಳನ್ನು ನಿರ್ಮಿಸುವ ಯೋಜನೆಗೆ `. 4515.84 ಲಕ್ಷ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು.

ಓದಲಾಗಿದೆ : 1. ಭಾರತ ಸರ್ಕಾರವು ಹೊರಡಿಸಿರುವ ಹೌಸಿಂಗ್ ಫಾರ್ ಆಲ್-2022 (ಪಿ.ಎಂ.ಎ.ವೈ.-ಹೆಚ್.ಎಫ್.ಎ.) ಅಭಿಯಾನದ ಮಾರ್ಗಸೂಚಿಗಳು

2. ಸರ್ಕಾರದ ಆದೇಶ ಸಂಖ್ಯೆ: ನಅಇ 145 ಸಿಎಸ್ಎಸ್ 2015, ದಿನಾಂಕ : 18/1/2016

3. ಸರ್ಕಾರದ ಆದೇಶ ಸಂಖ್ಯೆ: ನಅಇ 81 ಸಿಎಸ್ಎಸ್ 2017, ದಿನಾಂಕ : 6/7/2017

4. ಸರ್ಕಾರದ ಆದೇಶ ಸಂಖ್ಯೆ: ವಇ 34 ಯುಹೆಚ್ಎಸ್ 2017, ದಿನಾಂಕ : 4/10/2017

5. ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರ ಪತ್ರ ಸಂಖ್ಯೆ: ಎಂಡಿ ಆರ್‌ಜಿಆರ್‌ಹೆಚ್‌ಸಿಎಲ್ 68 ವಿಹೆಚ್‌ಕೆ 01 2017-18, ದಿನಾಂಕ : 9/2/2018.

6. ರಾಜ್ಯ ಮಟ್ಟದ ಅಪ್ರೈಸಲ್ ಸಮಿತಿ (ಎಸ್.ಎಲ್.ಎ.ಸಿ) ಸಭೆಯ ದಿನಾಂಕ : 6/10/2017 ರಂದು ನಡೆದ 7ನೇ ಸಭೆಯ ನಡವಳಿ.

7. ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿ (ಎಸ್.ಎಲ್.ಎಸ್.ಎಂ.ಸಿ.) ಸಭೆಯ ದಿನಾಂಕ : 16/10/2017 ರಂದು ನಡೆದ 8ನೇ ಸಭೆಯ ನಡವಳಿ.

8. ದಿನಾಂಕ : 30/10/2017ರಂದು ನಡೆದ 27ನೇ ಕೇಂದ್ರ ಸರ್ಕಾರದ ಅನುಮೋದನಾ ಮತ್ತು ಮೇಲ್ವಿಚಾರಣೆ ಸಮಿತಿ (ಸಿಎಸ್ಎಂಸಿ) ಎಚ್.ಎಫ್.ಎ ಸಭೆಯ ನಡವಳಿ.

ಪ್ರಸ್ತಾವನೆ :

ಮೇಲೆ ಓದಲಾದ (1)ರಲ್ಲಿ ಕೇಂದ್ರ ಸರ್ಕಾರದ ವಸತಿ ಮತ್ತು ನಗರ ಬಡತನ ನಿರ್ಮೂಲನಾ ಮಂತ್ರಾಲಯವು "ಹೌಸಿಂಗ್ ಫಾರ್ ಆಲ್-2022" (ಪಿ.ಎಂ.ಎ.ವೈ.-ಹೆಚ್.ಎಫ್.ಎ.) ಯೋಜನೆಗಾಗಿ ಮಾರ್ಗಸೂಚಿಗಳನ್ನು ರಚಿಸಿರುತ್ತದೆ.

2) ಮೇಲೆ (2)ರಲ್ಲಿ ಓದಲಾದ ದಿನಾಂಕ : 18/1/2016ರ ಆದೇಶದಲ್ಲಿ ಕೇಂದ್ರ ಪುರಸ್ಕøತ "ಹೌಸಿಂಗ್ ಫಾರ್ ಆಲ್" ಯೋಜನೆಯನ್ನು ಕೇಂದ್ರ ಸರ್ಕಾರದ ಮಾರ್ಗಸೂಚಿಗಳಂತೆ ರಾಜ್ಯದಲ್ಲಿ ಜಾರಿಗೆ ತಂದು ರಾಜ್ಯದ 214 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅನುಷ್ಠಾನಗೊಳಿಸಲು ಹಾಗೂ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಲು ಅನುಮೋದನೆ ನೀಡಲಾಗಿದೆ. ಇದೇ ಆದೇಶದಲ್ಲಿ ಸದರಿ ಯೋಜನೆಯ ಆಡಳಿತ ಮತ್ತು ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿಯನ್ನು (ಎಸ್.ಎಲ್.ಎಸ್.ಎಂ.ಸಿ.) ರಚಿಸಲಾಗಿದೆ. ಹಾಗೂ ನಗರ ಸ್ಥಳೀಯ ಸಂಸ್ಥೆಗಳು / ಅನುಷ್ಠಾನ ಸಂಸ್ಥೆಗಳು ಸಲ್ಲಿಸಿದ ಡಿ.ಪಿ.ಆರ್.ಗಳನ್ನು ಹಾಗೂ ಹೆಚ್.ಎಫ್.ಎ.- ಪಿ.ಓ.ಎ.ಗಳನ್ನು ತಾಂತ್ರಿಕವಾಗಿ / ಆರ್ಥಿಕವಾಗಿ ಅಪ್ರೈಸಲ್ ಮಾಡಲು "ರಾಜ್ಯ ಮಟ್ಟದ ಮೌಲ್ಯಮಾಪನ ಸಮಿತಿ"ಯನ್ನು (ಎಸ್.ಎಲ್.ಎ.ಸಿ) ರಚಿಸಲಾಗಿದೆ.

3) ಮೇಲೆ (3)ರಲ್ಲಿ ಓದಲಾದ ದಿನಾಂಕ 6/7/2017ರ ಆದೇಶದಲ್ಲಿ ಕೇಂದ್ರ ಪುರಸ್ಕøತ ರಾಜೀವ್ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ ನಿರ್ವಹಣೆಯ ಜವಾಬ್ದಾರಿಯನ್ನು ತಕ್ಷಣ ಜಾರಿಗೆ ಬರುವಂತೆ, ನಗರಾಭಿವೃದ್ಧಿ ಇಲಾಖೆಯಿಂದ ವಸತಿ ಇಲಾಖೆಗೆ ವರ್ಗಾಯಿಸಿ ಆದೇಶಿಸಿದೆ. ಹಾಗೂ ಇದೇ ಆದೇಶದಲ್ಲಿ ರಾಜೀವ್ ಆವಾಸ್ ಯೋಜನೆ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮವನ್ನು ರಾಜ್ಯ ಮಟ್ಟದ ಉಸ್ತುವಾರಿ ಸಂಸ್ಥೆಯಾಗಿ ನೇಮಿಸಲಾಗಿದೆ.

4) ಮೇಲೆ (4)ರಲ್ಲಿ ಓದಲಾದ ದಿನಾಂಕ 4/10/2017ರ ಆದೇಶದಲ್ಲಿ ರಚನೆ ಮಾಡಲಾಗಿರುವ ರಾಜ್ಯ ಮಟ್ಟದ ಮಂಜೂರಾತಿ ಮತ್ತು ಮೇಲ್ವಿಚಾರಣೆ ಸಮಿತಿ, ರಾಜ್ಯ ಮಟ್ಟದ ಮೌಲ್ಯ ಮಾಪನಾ ಸಮಿತಿ ಮತ್ತು ಜಿಲ್ಲಾ ಮಟ್ಟದ ಉಸ್ತುವಾರಿ ಮತ್ತು ಮೇಲ್ವಿಚಾರಣಾ ಸಮಿತಿಗಳ ಸಂಯೋಜನೆಯಲ್ಲಿ ಮಾರ್ಪಾಡು ಮಾಡಲಾಗಿದೆ.

ಭಾಗ ೧

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

೫೬೧

5) ಮೇಲೆ (5)ರಲ್ಲಿ ಓದಲಾದ ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರು ದಿನಾಂಕ : 9/2/2018ರಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ "ಹೌಸಿಂಗ್ ಫಾರ್ ಆಲ್ – 2022 (ನಗರ)" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪ ಘಟಕದ ಅಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬೆಂಗಳೂರು – ಕೆ.ಆರ್ ಪುರ ನಗರದಲ್ಲಿ 768 (ಜಿ.ಎಫ್) ಮನೆಗಳನ್ನು ನಿರ್ಮಿಸಲು `. 4515.84 ಲಕ್ಷ ಯೋಜನಾ ಕಾಮಗಾರಿಯ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಬೇಕೆಂದು ಕೋರಿರುತ್ತಾರೆ. ವಿವರಗಳು ಈ ಕೆಳಕಂಡಂತೆ ಇರುತ್ತದೆ.

(ಮೊತ್ತ: ಲಕ್ಷ ರೂಪಾಯಿಗಳಲ್ಲಿ)

ಬೆಂಗಳೂರು-ಕೆ.ಆರ್ ಪುರ ನಗರ ದಲ್ಲಿ 768 (ಜಿ.ಎಫ್) ಮನೆಗಳನ್ನು ನಿರ್ಮಾಣ ಮಾಡುವ ಯೋಜನೆ

ಹಣಕಾಸು ಜೋಡಣೆ (`. ಲಕ್ಷಗಳಲ್ಲಿ)

ಮನೆಗಳ ಸಂಖ್ಯೆ ಯೋಜನಾ ಮೊತ್ತ (`. ಲಕ್ಷಗಳಲ್ಲಿ )

ಬ್ಯಾಂಕ್ ಸಾಲ

ರಾಜ್ಯ ಸರ್ಕಾರ ಫಲಾನುಭವಿ ವಂತಿಕೆ

ೆ)

ೆ)

) ಕ್ಕೆ ರ್ iು ಂ ಕ ೌ

ಸ

)

ನೆಗ ಮ

ನೆಗ ಮ

ೆ)

ೆ)

1 ಯೋಜನೆಗಳ ಸಂಖ್ಯೆ ೆ ಬ ಂಗಳೂರು-ಕೆ.ಆರ್ ಪುರ ನಗರ ದಲ್ಲಿ 768 (ಜಿ.ಎಫ್) ಮನೆಗಳನ್ನು ನಿರ್ಮಾಣ ಮಾಡುವ ಯೋಜನೆ
477 ಪ .ಜಾ / ಪ.ಪಂ ವ ುನೆಗಳ ಸಂಖ್ಯೆ
291 ಇತರರು
768 ಒಟ್ಟು
5.13 ಘ ಟಕ ವೆಚ್ಚ ಯೋಜನಾ ಮೊತ್ತ (`. ಲಕ್ಷಗಳಲ್ಲಿ )
3939.84 ವ ಸ ತಿ
576.00 ವ ುೂಲಭೂತ ಸೌಕರ್ಯ
0.00 ಇತರೆ
4515.84 ಒಟ್ಟು
1152.00 ಬ ಾರತ ಸರ್ಕಾರ ಹಣಕಾಸು ಜೋಡಣೆ (`. ಲಕ್ಷಗಳಲ್ಲಿ)
349.20 ವಾಜಪೇಯಿ ವಸತಿ ಯೋಜನೆ ರಾಜ್ಯ ಸರ್ಕಾರ
858.60 ಅಂಬೇಡ್ಕರ್ ನಿವಾಸ್ ಯೋಜನೆ
0.00 ಇತರೆ
1207.80 ಒಟ್ಟು
244.70 ಪ .ಜಾ / ಪ.ಪಂ (0.513 ಲಕ್ಷ ಪ್ರತಿ ಮನೆಗೆ) ಪ ಲಾನುಭವಿ ವಂತಿಕೆ
223.92 ಇತರೆ (0.77 ಲಕ್ಷ ಪ್ರತಿ ಮನೆಗೆ)
468.63 ಒಟ್ಟು
0.00 ನ .ಸ್ಥ.ಸಂ. ಪಾಲು (ವಸತಿ)
576.00 ಅನುಷ್ಟಾನ ಸಂಸ್ಥೆ ಪಾಲು (ಮೂಲಭೂತ ಸೌಕರ್ಯಕ್ಕೆ)
628.21 ಪ .ಜಾ / ಪ.ಪಂ ( 1.317 ಲಕ್ಷ ಪ್ರತಿ ಮನೆಗೆ) ಬ್ಯಾಂಕ್ ಸಾಲ
483.21 ಇತರೆ (1.661 ಲಕ್ಷ ಪ್ರತಿ ಮನೆಗೆ)
1111.41 ಒಟ್ಟು
4515.84 ಒಟ್ಟು ಯೋಜನಾ ಮೊತ್ತ

ತ ಭೂ

ವಸತಿ

ಪ್ರತಿ

ತ್ತ ಮೊ

(

ನೆಗ ಮ

ನೆಗ ಮ

ಾ

ು

್ಷ ಕ ಲ ಖ್ಯೆ ಸಂ ಳ ನೆಗ

ಪ್ರತಿ ಕ್ಷ ಲ

ಲ ೂ ಮ

ಲ

ನ ಜ

(

ಜ

ಾ

ೕ

ೆ

ಪಂ ಪ.

ೕ

್ಟ

್ಟ

್ಟ 7

ು

ು

ು

ಪ

/

ು

iೊ 1 3 iೊ

ತರ

3 1 5

.

.

ಪ್ರತಿ ಕ್ಷ ಲ

.

ಪ್ರತಿ ಕ್ಷ ಲ

ಲ

1 ಂ

ಾ

ಟ ಒ

ಟ ಒ

ಟ ಒ

ಇ

ಾ

ಂ ್ಟ 1

ು

0 (

ಸಂ

( .

ಪ

7 7

.

6 6 ಜ ಪ.

.

ಟ ಒ ಸ್ಥೆ

ಸ್ಥ ನ.

0 ( ೆ

1 ( ೆ ಪಂ ಪ.

ಪಂ ಪ.

ತರ

ತರ

/

ಇ

ಇ

/

ಸಂ ಾ್ಟನ

ಾ

ಾ

ಜ ಪ.

ಷ ನು ಅ

ಜ ಪ.

1

1

1 0 8

4 8

2

2

0 7

3 6

4

2 9

.

0 0

.

.

.

.

.

.

.

.

0 0

0 0

1

.

.

7 7 4

0

0

7 0 2

1 1 1 1

3 8 4

8 2 6

8 6 4

6 7 5

4 4 2

3 2 2

5 1 5 4

1

6) ಅಂದಾಜು ಪಟ್ಟಿಯನ್ನು ತಾಂತ್ರಿಕ ನಿರ್ದೇಶಕರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಯವರು 2016-17ರ ದರಪಟ್ಟಿ ಅನ್ವಯ ಸಿದ್ದಪಡಿಸಿರುತ್ತಾರೆಂದು ಪ್ರಸ್ತಾವನೆಯಲ್ಲಿ ತಿಳಿಸಿರುತ್ತಾರೆ.

೫೬೨

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

ಭಾಗ ೧

7) ಮೇಲೆ (6)ರಲ್ಲಿ ಓದಲಾದ ದಿನಾಂಕ : 6/10/2017 ರಂದು ನಡೆದ 7ನೇ ರಾಜ್ಯ ಮಟ್ಟದ ಅಪ್ರೈಸಲ್ ಸಮಿತಿ ಸಭೆ (ಎಸ್.ಎಲ್.ಎ.ಸಿ) ನಡವಳಿಯ ವಿಷಯ ಸಂಖ್ಯೆ:17.ಡಿ ಅನುಬಂಧ-17.ಡಿ ರಲ್ಲಿ "ಸರ್ವರಿಗೂ ಸೂರು (ಹೌಸಿಂಗ್ ಫಾರ್ ಆಲ್)" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪಘಟಕದ ಅಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬೆಂಗಳೂರು-ಕೆ.ಆರ್ ಪುರ ನಗರದಲ್ಲಿ 768 (ಜಿ.ಎಫ್) ವಸತಿ ಘಟಕಗಳನ್ನು ನಿರ್ಮಾಣ ಮಾಡುವ ಯೋಜನಾ ಕಾಮಗಾರಿಯ ವಿಸ್ತøತ ಯೋಜನಾ ವರದಿಯನ್ನು ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯ (ಎಸ್.ಎಲ್.ಎಸ್.ಎಂಸಿ) ಮುಂದೆ ಅನುಮೋದನೆಗೆ ಮಂಡಿಸಲು ಶಿಫಾರಸ್ಸು ಮಾಡಿರುತ್ತದೆ.

8) ಮೇಲೆ (7)ರಲ್ಲಿ ಓದಲಾದ ದಿನಾಂಕ : 16/10/2017 ರಂದು ನಡೆದ 8ನೇ ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿ ಸಭೆ (ಎಸ್.ಎಲ್.ಎಸ್.ಎಂಸಿ) ನಡವಳಿಯ ವಿಷಯ ಸಂಖ್ಯೆ:24 ಅನುಬಂಧ- 24.1ರಲ್ಲಿ "ಸರ್ವರಿಗೂ ಸೂರು (ಹೌಸಿಂಗ್ ಫಾರ್ ಆಲ್)" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪಘಟಕದ ಅಡಿ ಬೆಂಗಳೂರು-ಕೆ.ಆರ್ ಪುರ ನಗರದಲ್ಲಿ 768 (ಜಿ.ಎಫ್) ವಸತಿ ಘಟಕಗಳನ್ನು ನಿರ್ಮಿಸಲು ಒಪ್ಪಿಗೆ ನೀಡಿರುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಿರುತ್ತಾರೆ.

9) ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಮೇಲೆ (8)ರಲ್ಲಿ ಓದಲಾದ ಭಾರತ ಸರ್ಕಾರದ ವಸತಿ & ನಗರ ಬಡತನ ನಿರ್ಮೂಲನಾ ಮಂತ್ರಾಲಯದ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿಯ (ಸಿಎಸ್ಎಂಸಿ-ಹೆಚ್ಎಫ್ಎ) ದಿನಾಂಕ : 30/10/2017ರಂದು ನಡೆದ 27ನೇ ಸಭೆಯ ನಡವಳಿಯಲ್ಲಿ ರಾಜ್ಯದ ಯೋಜನೆಗಳಿಗೆ ಸಂಬಂಧಿಸಿದಂತೆ ಅನುಮೋದನೆ ನೀಡಿದ್ದು, ನಡವಳಿಯ ವಿಷಯ ಸಂಖ್ಯೆ: 17ರ ಅನುಬಂಧ-15ಬಿ ನಲ್ಲಿನ ಕ್ರಮ ಸಂಖ್ಯೆ: 8 ರಲ್ಲಿ "ಸರ್ವರಿಗೂ ಸೂರು (ಹೌಸಿಂಗ್ ಫಾರ್ ಆಲ್)" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪಘಟಕದ ಅಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಪ್ರಸ್ತಾಪಿತ ಬೆಂಗಳೂರು-ಕೆ.ಆರ್ ಪುರ 768 (ಜಿ.ಎಫ್) ವಸತಿ ಘಟಕಗಳನ್ನು ನಿರ್ಮಿಸಲು ಯೋಜನಾ ವೆಚ್ಚ `. 4515.84 ಲಕ್ಷಗಳಲ್ಲಿ ಕೇಂದ್ರ ಸರ್ಕಾರದ ಪಾಲಿನ ಅನುದಾನ `. 1152.00 ಲಕ್ಷ ಒದಗಿಸುವ ಮತ್ತು ಆ ಪೈಕಿ ಕೇಂದ್ರ ಸರ್ಕಾರದ ಪಾಲಿನ 1ನೇ ಕಂತಿನ ಅನುದಾನ `. 460.80 ಲಕ್ಷ ಬಿಡುಗಡೆ ಮಾಡಲು ತಾತ್ವಿಕ ಒಪ್ಪಿಗೆ ನೀಡಿರುತ್ತದೆ.

10) ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಪ್ರಸ್ತಾಪಿತ ಯೋಜನೆಯನ್ನು ಬೆಂಗಳೂರು-ಕೆ.ಆರ್ ಪುರ ಹೋಬಳಿ, ನಗರೇಶ್ವರ ನಾಗೇನಹಳ್ಳಿ ಗ್ರಾಮದ ಸರ್ವೆ ನಂ.13 ರಲ್ಲಿ 6 ಎಕರೆ 23 ಗುಂಟೆ ಜಮೀನಿನಲ್ಲಿ ಜಾರಿಗೊಳಿಸಲು ಪ್ರಸ್ತಾಪಿಸಲಾಗಿದೆ.

11) ಮೇಲ್ಕಂಡಂತೆ ವ್ಯವಸ್ಥಾಪಕ ನಿರ್ದೇಶಕರು, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ವಇ 17 ಹೆಚ್ಎಫ್ಎ 2018, ಬೆಂಗಳೂರು, ದಿನಾಂಕ : 21ನೇ ಫೆಬ್ರವರಿ, 2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, "ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)-ಹೌಸಿಂಗ್ ಫಾರ್ ಆಲ್-2022" ಅಭಿಯಾನದ "ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‌ನರ್‌ಶಿಫ್" ಉಪ ಘಟಕದ ಅಡಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ಬೆಂಗಳೂರು-ಕೆ.ಆರ್ ಪುರ ನಗರದಲ್ಲಿ 768 (ಜಿ.ಎಫ್) ವಸತಿ ಗೃಹಗಳನ್ನು ನಿರ್ಮಿಸುವ ಯೋಜನಾ ಕಾಮಗಾರಿಯ ಮೊತ್ತ `. 4515.84 ಲಕ್ಷ (ನಾಲ್ಕು ಸಾವಿರದ ಐದುನೂರ ಹದಿನೈದು ಲಕ್ಷದ ಎಂಬತ್ತನಾಲ್ಕು ಸಾವಿರ ರೂಪಾಯಿಗಳು ಮಾತ್ರ) ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಸರ್ಕಾರವು ಆದೇಶಿಸಿದೆ.

2) ಈ ಅನುಮೋದನೆಯು ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ.

1. ಅನುಮೋದಿತ ವಿಸ್ತøತ ಯೋಜನಾ ವರದಿಯನ್ವಯ ಹಾಗೂ ಹೌಸಿಂಗ್ ಫಾರ್ ಆಲ್ 2022ರ (ಪಿ.ಎಂ.ಎ.ವೈ.-ಹೆಚ್.ಎಫ್.ಎ.) ಮಾರ್ಗಸೂಚಿಗಳನುಸಾರ ಕಾಮಗಾರಿಯನ್ನು ಕಡ್ಡಾಯವಾಗಿ ಜಾರಿಗೊಳಿಸತಕ್ಕದ್ದು.

2. ಮೇಲ್ಕಂಡ ಕಾಮಗಾರಿಗಳಿಗೆ ಅಗತ್ಯವಿರುವ ಜಮೀನು ಲಭ್ಯವಿರಬೇಕು ಮತ್ತು ಜಮೀನಿನ ಮಾಲೀಕತ್ವವು ಅನುಷ್ಟಾನ ಸಂಸ್ಥೆಯ ಹೆಸರಿನಲ್ಲಿ ನೊಂದಣಿಯಾಗಿರಬೇಕು.

3. ಉಸ್ತುವಾರಿ ಸಂಸ್ಥೆಯಾದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತವು ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಕೈಗೊಳ್ಳತಕ್ಕದ್ದು.

4. ಮೇಲಿನ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು, 2000 ಮತ್ತು ತತ್ಸಂಬಂಧ ಹೊರಡಿಸಲಾಗಿರುವ ಆದೇಶಗಳು / ಸುತ್ತೋಲೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಇ-ಪ್ರಕ್ಯೂರ್‌ಮೆಂಟ್ ಮೂಲಕವೇ ನಡೆಸತಕ್ಕದ್ದು.

ಭಾಗ ೧

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

೫೬೩

5. ಅನುಷ್ಟಾನ ಸಂಸ್ಥೆಯವರು ಫಲಾನುಭವಿಗಳಿಗೆ ಬ್ಯಾಂಕ್‌ಗಳಿಂದ ಸಾಲ ಪಡೆಯಲು ಸಹಾಯ ಮಾಡುವುದು.

6. ಯೋಜನಾ ವರದಿಯಲ್ಲಿ ನಮೂದಿಸಲಾಗಿರುವ ಕೊಳಚೆ ಪ್ರದೇಶದ ಫಲಾನುಭವಿಗಳು ವಂತಿಕೆ ಭರಿಸುವ, ಗುಡಿಸಲು ತೆರವುಗೊಳಿಸಿಕೊಡುವ, ಸ್ವಂತ ಖರ್ಚಿನಲ್ಲಿ ತಾತ್ಕಾಲಿಕ ವಸತಿ ಗೃಹಗಳನ್ನು ನಿರ್ಮಿಸಿಕೊಳ್ಳುವ ಇಚ್ಛೆ ಉಳ್ಳವರಾಗಿರತಕ್ಕದ್ದು.

7. ಯೋಜನೆಯ ಉಸ್ತುವಾರಿ ಸಂಸ್ಥೆಯಾದ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತವು ಈ ಯೋಜನೆಗಳ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಮತ್ತು ಕಾಲಕಾಲಕ್ಕೆ ಪ್ರಗತಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದು.

8. ರಾಜ್ಯದ ಆಯವ್ಯಯದಲ್ಲಿ ವಸತಿ ಇಲಾಖೆಯು ನಗರ ವಾಜಪೇಯಿ ವಸತಿ ಯೋಜನೆ ಮತ್ತು ಅಂಬೇಡ್ಕರ್ ನಿವಾಸ್ ಯೋಜನೆಗಳಿಗೆ ಒದಗಿಸಿರುವ ಅನುದಾನವನ್ನು ಈಗ ಅನುಮೋದನೆ ನೀಡಲಾಗುತ್ತಿರುವ ಯೋಜನೆಗಳಿಗೆ ರಾಜ್ಯ ಸರ್ಕಾರದ ಪಾಲಿನ ಅನುದಾನ ಎಂದು ಪರಿಗಣಿಸಿ ಹೊಂದಾಣಿಕೆ ಮಾಡಿಕೊಳ್ಳುವುದು.

9. ಆಯ್ಕೆ ಮಾಡಲಾದ ಫಲಾನುಭವಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ಪಡೆದುಕೊಂಡು ತಂತ್ರಾಂಶದಲ್ಲಿ ಅಳವಡಿಸಿಕೊಂಡ ನಂತರವೇ ಕಾಮಗಾರಿ ಪ್ರಾರಂಭಿಸುವುದು.

10. ಈ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳು ಮಾರ್ಗಸೂಚಿಯಲ್ಲಿ ನಿರ್ದೇಶಿಸಿದಂತೆ "ಹೌಸಿಂಗ್ ಫಾರ್ ಆಲ್ ಪ್ಲಾನ್ ಆಫ್ ಆಕ್ಷನ್" (ಪಿ.ಎಂ.ಎ.ವೈ.-ಹೆಚ್.ಎಫ್.ಎ.-ಪಿ.ಒ.ಎ.) ನಲ್ಲಿ ಸೇರ್ಪಡೆಗೊಂಡಿರತಕ್ಕದ್ದು.

11. ಯೋಜನಾ ವೆಚ್ಚದಲ್ಲಿ ಸೇರ್ಪಡೆಗೊಂಡಿರುವ ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚ, ವಿಸ್ತøತ ಯೋಜನಾ ವರದಿ ತಯಾರಿಕಾ ವೆಚ್ಚ, ಐ.ಇ.ಸಿ, ಪಿ.ಎಂ.ಸಿ, ಇತರೆ ವೆಚ್ಚಗಳ ಬಗ್ಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನುಸಾರವಾಗಿ ರಾಜ್ಯ ಸರ್ಕಾರವು ಆರ್ಥಿಕ ಇಲಾಖೆಯ ಸಹಮತಿ ಪಡೆದು ಪ್ರತ್ಯೇಕವಾಗಿ ಆದೇಶ ಹೊರಡಿಸಲು ರಾಜ್ಯ ಮಟ್ಟದ ಉಸ್ತುವಾರಿ ಸಂಸ್ಥೆಯು ಸೂಕ್ತ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

12. ಈ ಯೋಜನೆಯ ಅನುಷ್ಟಾನದಿಂದ ನಿರ್ಮಿಸಲಾಗುತ್ತಿರುವ ಪಕ್ಕಾ ಮನೆಗಳಿಗೆ ಕೊಳಚೆ ಪ್ರದೇಶದ ನಿವಾಸಿಗಳು ವರ್ಗಾವಣೆ ಆಗುವುದರಿಂದ ಅಂತಹ ಕೊಳಚೆ ಪ್ರದೇಶಗಳನ್ನು ಕೊಳಚೆ ಪ್ರದೇಶಗಳ ಪಟ್ಟಿಯಿಂದ ಶಾಶ್ವತವಾಗಿ ತೆಗೆದುಹಾಕುವುದು

13. ಮನೆಗಳ ನಿರ್ಮಾಣದ ಪ್ರಗತಿಯನ್ನು ಜಿ.ಪಿ.ಎಸ್ ಮೂಲಕ ಪ್ರತಿ ಹಂತದ ಪ್ರಗತಿಯನ್ನು ಪಡೆಯುವುದು.

14. ಫಲಾನುಭವಿಯು ನೀಡಬೇಕಾದ ವಂತಿಕೆಯು ಬ್ಯಾಂಕ್ ಸಾಲದ ರೂಪದಲ್ಲಿ ಇದ್ದಲ್ಲಿ ಸಂಬಂಧಪಟ್ಟ ಬ್ಯಾಂಕ್ ನೀಡಿರುವ ಸಾಲ ಮಂಜೂರಾತಿ ಪತ್ರವನ್ನು ಪಡೆದುಕೊಂಡ ನಂತರವೇ ಕಾಮಗಾರಿ ಪ್ರಾರಂಭಿಸುವುದು.

15. ಫಲಾನುಭವಿಯು ನೀಡಬೇಕಾದ ವಂತಿಕೆಯ ಮೊತ್ತವನ್ನು ನಗರ ಸ್ಥಳೀಯ ಸಂಸ್ಥೆ / ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ / ಅಥವಾ ಇತರೆ ಸರ್ಕಾರಿ ಸಂಸ್ಥೆಗಳು ಸಹಾಯಧನದ ರೂಪದಲ್ಲಿ ನೀಡಿದ್ದಲ್ಲಿ, ಸಂಬಂಧಪಟ್ಟ ಸಂಸ್ಥೆಯಿಂದ ತಾತ್ವಿಕ ಒಪ್ಪಿಗೆ ಪತ್ರವನ್ನು ಪಡೆದುಕೊಂಡ ನಂತರವೇ ಕಾಮಗಾರಿ ಪ್ರಾರಂಭಿಸುವುದು.

16. ಪ್ರಸ್ತಾಪಿತ ಯೋಜನೆಗೆ ಸಂಬಂಧಿಸಿದಂತೆ ದಿನಾಂಕ : 26/5/2017 ರಂದು ನಡೆದ 7ನೇ ಎಸ್ಎಲ್ಎಸ್ಎಂಸಿ ಸಭೆಯಲ್ಲಿ ನೀಡಲಾದ ಹೆಚ್ಚುವರಿ ಷರತ್ತುಗಳನ್ನು ಈಗಾಗಲೇ ಪೂರೈಸಿರುವುದನ್ನು ಖಚಿತ ಪಡಿಸಿಕೊಳ್ಳತಕ್ಕದ್ದು.

17. ಫಲಾನುಭವಿಗಳ ವಂತಿಕೆಯನ್ನು ಫಲಾನುಭವಿಗಳಿಂದ ಕಡ್ಡಾಯವಾಗಿ ಪಡೆದುಕೊಳ್ಳುವುದು.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೫೬೪

ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮

ಭಾಗ ೧

18. ಕೇಂದ್ರದ ಸಿ.ಎಸ್.ಎಂ.ಸಿ ಹಾಗೂ ರಾಜ್ಯದ ಎಸ್.ಎಲ್.ಎಸ್.ಎಂ.ಸಿ ಸಮಿತಿಗಳು ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.

19. ಯೋಜನೆಯ ಅಂದಾಜು ಪಟ್ಟಿಗೆ ಸಕ್ಷಮ ತಾಂತ್ರಿಕ ಪ್ರಾಧಿಕಾರದಿಂದ ತಾಂತ್ರಿಕ ಮಂಜೂರಾತಿಯನ್ನು ಪಡೆದುಕೊಂಡು ಯೋಜನೆಯ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಉತ್ತಮ ಗುಣಮಟ್ಟದ ಕಾಮಗಾರಿಯನ್ನು ಅನುಷ್ಠಾನ ಸಂಸ್ಥೆಯು ನಿರ್ವಹಿಸುವುದನ್ನು ಉಸ್ತುವಾರಿ ಸಂಸ್ಥೆಯು ಧೃಡಪಡಿಸಿಕೊಳ್ಳತಕ್ಕದ್ದು.

3) ಈ ಆದೇಶವನ್ನು ರಾಜ್ಯ ಮಟ್ಟದ ಅನುಮೋದನಾ ಮತ್ತು ಮೇಲ್ವಿಚಾರಣಾ ಸಮಿತಿಯು (ಎಸ್.ಎಲ್.ಎಸ್.ಎಂ.ಸಿ) ದಿನಾಂಕ 16/10/2017ರಂದು ನಡೆದ 8ನೇ ಸಭೆಯಲ್ಲಿ ನೀಡಿರುವ ಅನುಮೋದನೆ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, P.R. 289

ಈ. ಶಿವರುದ್ರಪ್ಪ

SC-100

ಸರ್ಕಾರದ ಅಧೀನ ಕಾರ್ಯದರ್ಶಿ-1,

ವಸತಿ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 10 May 2018. Indian Gazettes, https://egazette.servantsofknowledge.in/details/in.gazette.karnataka_new.2018-05-10.Part-1/. Archive identifier in.gazette.karnataka_new.2018-05-10.Part-1.