ಬೆಂಗಳೂರು, ಗುರುವಾರ, ಮೇ ೧೦, ೨೦೧೮ (ವೈಶಾಖ ೨೦, ಶಕ ವರ್ಷ ೧೯೪೦)
Bengaluru, Thursday, May 10, 2018 (Vaishakha 20, Shaka Varsha 1940)
ಸಂಪುಟ ೧೫೩
Volume 153
ಸಂಚಿಕೆ ೧೯
Issue 19
ಭಾಗ ೬
ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,
ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ
ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು.
ಪ್ರಾಥಮಿಕ ಅಧಿಸೂಚನೆ
ಸಂಖ್ಯೆ ಕೆ.ಎಸ್.ಎ./ಸಿ.ಆರ್:32/2017-18 ದಿನಾಂಕ:15-02-2018.
ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್. ಪುರ ಹೋಬಳಿ, ಹೊರಮಾವು ಗ್ರಾಮದ ಸ.ನಂ. 109/2 ರಲ್ಲಿ 0-17 ಗುಂಟೆ, ಸ.ನಂ. 110ರಲ್ಲಿ 0-14 ಗುಂಟೆ ಒಟ್ಟು 0-31 ಗುಂಟೆ ವಿಸ್ತೀರ್ಣದಲ್ಲಿರುವ "ನಾಲ್ವಡಿ ಕೃಷ್ಣರಾಜ ಒಡೆಯರ್" ಕೊಳಚೆ ಪ್ರದೇಶದ ಈ ಕೆಳಕಂಡ ಷೆಡ್ಯೂಲ್ನಲ್ಲಿ ನಮೂದಿಸಿರುವ ಪ್ರದೇಶದಲ್ಲಿ 241 ಕುಟುಂಬಗಳ 800 ನಿವಾಸಿಗಳು ವಾಸವಿದ್ದು, ಸದರಿ ಪ್ರದೇಶವು ಮನುಷ್ಯ ವಾಸ ಮಾಡಲು ಯೋಗ್ಯವಲ್ಲದ ಹಾಗೂ ಅನಾರೋಗ್ಯಕರ ಪರಿಸ್ಥಿತಿಯಲ್ಲಿರುತ್ತದೆ. ಕುಡಿಯುವ ನೀರು- ಬೀದಿ ದೀಪ, ಶೌಚಾಲಯ ಮುಂತಾದ ಮೂಲಸೌಲಭ್ಯ ಹಾಗೂ ಪುನರ್-ವಸತಿ ಕಲ್ಪಿಸುವ ಅಗತ್ಯವಿರುವುದರಿಂದ ಮತ್ತು ಈ ಪ್ರದೇಶವು ಕೊಳಚೆ ಪ್ರದೇಶದ ಸ್ಥಿತಿಯಲ್ಲಿರುವುದರಿಂದ, ಈ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಸೆಕ್ಷನ್ 3 ರ ಅಡಿಯಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸಲು ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿರವರು ಪತ್ರ ಸಂಖ್ಯೆ: ಕಕೊಅಮ/ಕಂ-1/ಆರ್-3/32/16-17/556, ದಿನಾಂಕ:27.12.2017 ರಂತೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಈ ಸಂಬಂಧ ಸರ್ಕಾರದ ಅಧಿಸೂಚನೆ ಸಂಖ್ಯೆ: ವಇ/73.ಕೊಮಂಇ/2001, ದಿನಾಂಕ: 26.06.2002 ರಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರದತ್ತ ಮಾಡಲಾಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶದ ಘೋಷಣೆಗೆ ಕ್ರಮವಹಿಸಲು ಆದೇಶಿಸಲಾಗಿರುತ್ತದೆ.
ಆದ್ದರಿಂದ, ಈ ಕೆಳಕಂಡ ಷೆಡ್ಯೂಲ್ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಕಾಯ್ದೆ 1973ರ ಸೆಕ್ಷನ್ 3ರ ಅಡಿ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ "ಕೊಳಚೆ ಪ್ರದೇಶ" ಎಂದು ಘೋಷಿಸಲು ಉದ್ದೇಶಿಸಲಾಗಿದೆ.
ಮೇಲ್ಕಂಡ ಈ ಕ್ರಮದ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಶೇಷಾದ್ರಿಪುರ, ಬೆಂಗಳೂರು-560020 ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 (ಹದಿನೈದು) ದಿವಸಗಳ ಕಾಲಾವಕಾಶ ನೀಡಲಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
: : ಷೆಡ್ಯೂಲ್ : :
ಬೆಂಗಳೂರು ನಗರ, ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್.ಪುರ ಹೋಬಳಿ, ಹೊರಮಾವು ಗ್ರಾಮದ ಸ,ನಂ. 109/2 ರಲ್ಲಿ 0-17 ಗುಂಟೆ, ಸ.ನಂ. 110 ರಲ್ಲಿ 0-14 ಗುಂಟೆ ಒಟ್ಟು 0-31 ಗುಂಟೆ ವಿಸ್ತೀರ್ಣದಲ್ಲಿರುವ ನಾಲ್ವಡಿ ಕೃಷ್ಣರಾಜಒಡೆಯರ್ ಕೊಳಚೆ ಪ್ರದೇಶದ ಚಕ್ಕುಬಂದಿ ಹಾಗೂ ಹದ್ದುಬಸ್ತು ತಃಖ್ತೆ:
(೨೩೯)೨೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೬
| ಕ್ರಮ ಸ ಂಖ್ಯೆ | ಕೊಳಚೆ ಪ್ರದೇಶದ ಹ ಸ ೆ ರು ವ ುತ್ತು ಸ್ಥಳ | ಆರ್.ಟಿ.ಸಿ. ಯಂತೆ ಮಾಲೀಕರ ಹ ಸ ೆ ರು | ಸ ವ ರ್ ೆ ನಂ | ವಿಸ್ತೀರ್ಣ (ಎ./ಗು) | ಚ ಕ್ಕುಬಂದಿಗಳು | |||
| ಪ ೂರ್ವ | ಪ ಶ್ಚಿಮ | ಉತ್ತರ | ದ ಕ್ಷಿಣ | |||||
| 1 | ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಳಚೆ ಪ್ರದೇಶ | 1. ಜಯಮ್ಮ ಕೋಂ ಲೇಟ್ ಎಲ್ ಕೃಷ್ಣರೆಡ್ಡಿ 2. ಕೆ.ಮುನಿರೆಡ್ಡಿ 3. ಸಂಪತ್ಕುಮಾರ್ ಬಿನ್ ಲೇಟ್ ಎಲ್ ಕೃಷ್ಣರೆಡ್ಡಿ 4. ಲೋಕೇಶ್ ರೆಡ್ಡಿ ಬಿನ್ ಲೇಟ್ ಎಲ್. ಕೃಷ್ಣರೆಡ್ಡಿ 5. ಕೆ. ಜಗದೀಶ್ ರೆಡ್ಡಿ ಬಿನ್ ಲ ೕಟ್ ಎಲ್. ಕೃಷ್ಣರೆಡ್ಡಿ ೆ 6. ಪುರುಷೋತ್ತಮ್ ಎಂ. ಪ ಟೇಲ್ ಬಿನ್ ಲೇಟ್ ಎಂ. ಹೆಚ್. ಪಟೇಲ್ | 109/2 | 0-17 | ಹಳ್ಳ ಮತ್ತು ಸ .ನಂ. 110 ರ ಉಳಿಕೆ | ರೈಲ್ವೆ ಹಳಿ ವ ುತ್ತು ಸ .ನಂ. 109/2 ರ ಉಳಿಕೆ | ಸ .ನಂ.110 ವ ುತ್ತು ಸ .ನಂ. 109/ 2 ರ ಉಳಿಕೆ | ಹಳ್ಳ ವ ುತ್ತು ಸ .ನಂ. 110 ರ ಉಳಿಕೆ |
| 1. ಸ ರ್ಕಾರಿ ಮುಪತ್ತು ಕಾವಲು 2. ಕರ್ನಾಟಕ ರಾಜ್ಯ ಪೊಲೀಸ್ 3. ಪದ್ಮಿನಿ ರಾಮಚಂದ್ರನ್ ನಿರ್ದೇಶಕರು, ನಾಟ್ಯಪ್ರಿಯ ನೃತ್ಯ ಸ ಂಸ್ಥೆ, ಬೆಂಗಳೂರು -84 | 110 | 0-14 | ||||||
| ಒಟ್ಟು | 0-31 |
PR. 51
SC.05
ವಿ. ಶಂಕರ್ ಜಿಲ್ಲಾಧಿಕಾರಿಗಳು ಬೆಂಗಳೂರು ಜಿಲ್ಲೆ, ಬೆಂಗಳೂರು.
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಂಇ 65 ಭೂಸ್ವಾತು 2017, ಬೆಂಗಳೂರು, ದಿನಾಂಕ : 19-03-2018.
ತುಮಕೂರು ಜಿಲ್ಲೆ, ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ, ತಟ್ಟಸಂದ್ರ, ಹೊಸೂರು, ಹಾಲುವಾಗಿಲು ಗ್ರಾಮಗಳ ಸ.ನಂ.9, 40/9, 36/13 ಇತ್ಯಾದಿಗಳಲ್ಲಿ ಒಟ್ಟು 7-09 1/2 ಗುಂಟೆ ಜಮೀನುಗಳನ್ನು ಹೇಮಾವತಿ ನಾಲಾ ಯೋಜನೆಯ ಶ್ರೀರಂಗ ಏತ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಗಾಗಿ ಭೂಸ್ವಾಧೀನಪಡಿಸಿಕೊಳ್ಳಲು ಹೊಸ ಭೂಸ್ವಾಧೀನ ಕಾಯ್ದೆ, 2013ರನ್ವಯ ಕಲಂ 11(1)ರಡಿಯಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಕ್ರಮಾಂಕ:ಎಲ್ಎಕ್ಯೂ/ಎಸ್ಆರ್/341/2016-17, ದಿನಾಂಕ: 21-11-2016ರಲ್ಲಿ ಜಿಲ್ಲಾಧಿಕಾರಿ, ತುಮಕೂರು ಜಿಲ್ಲೆ ಇವರು ಹೊರಡಿಸಿರುತ್ತಾರೆ. ಸದರಿ ಆದೇಶವು ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ: 01-12-2016 ರಂದು ಪ್ರಕಟವಾಗಿರುತ್ತದೆ. ಸ್ಥಳೀಯ ಪತ್ರಿಕೆಗಳಲ್ಲಿ ದಿನಾಂಕ: 13-12-2016 ರಂದು ಮತ್ತು 18-12-2016 ರಂದು ಪ್ರಕಟಗೊಂಡಿರುತ್ತದೆ. ಗ್ರಾಮ ಛಾವಡಿಯಲ್ಲಿ ದಿನಾಂಕ: 17-12-2016 ರಂದು ಪ್ರಚುರಪಡಿಸಲಾಗಿರುತ್ತದೆ. ಸದರಿ ದಿನಾಂಕದಿಂದ ಅಂದರೆ, ದಿನಾಂಕ: 16-11-2017, ರೊಳಗೆ ಭೂಸ್ವಾಧೀನ ಕಾಯ್ದೆ, ಕಲಂ 19(1) ಮತ್ತು 19(2)ರ ಅಧಿಸೂಚನೆಗೆ ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿತ್ತು. ಭೂಕೋರಿಕಾ ಸಂಸ್ಥೆಯಾದ ಕಾರ್ಯನಿರ್ವಾಹಕ ಅಭಿಯಂತರರು ಇವರಿಂದ ಪರಿಸರ ಪರಿಣಾಮ ನಿರ್ಧರಣಾ ವರದಿ (EIA) ಬಾರದ ಕಾರಣ, ದಿನಾಂಕ: 17-12-2016 ರಂದು ಪ್ರಕರಣವು ಅಸಿಂಧುಗೊಳ್ಳುವುದರಿಂದ, ಸದರಿ ದಿನಾಂಕದಿಂದ ಮುಂದಿನ 06 ತಿಂಗಳ ಕಾಲ ಕಲಂ (19)(1)ರ ಅಧಿಸೂಚನೆಯನ್ನು ಹೊರಡಿಸಲು ಕಾಲಾವಕಾಶ ವಿಸ್ತರಿಸಲು ವಿಶೇಷ ಭೂಸ್ವಾಧೀನಾಧಿಕಾರಿ, ಹೇಮಾವತಿ ನಾಲಾವಲಯ ಇವರ ಪತ್ರ ಸಂಖ್ಯೆ:
ಎಸ್ಎಲ್ಎಒ/ಎಸ್ಆರ್(ಹೆ)/10/2016-17, ದಿನಾಂಕ: 25-11-2017ರಲ್ಲಿ ಕೋರಿರುತ್ತಾರೆ. ಸದರಿ ಪ್ರಕರಣವು ಸಾರ್ವಜನಿಕ ಹಿತಾಸಕ್ತಿ ಉದ್ದೇಶದಿಂದ ಭೂಸ್ವಾಧೀನ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ, "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 25ರಡಿ ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಪ್ರಕರಣದಲ್ಲಿ 19(2)ರ ಅಧಿಸೂಚನೆಗೆ ಅನುಮೋದನೆ ಪಡೆಯಲು ದಿನಾಂಕ: 17-12-2017 ರಿಂದ 16-04-2018 ರವರೆಗೆ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ.
PR – 52
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC – 25
ಉದಯ ಆರ್. ನಾಯಕ್.
ಸರ್ಕಾರದ ಅಧೀನ ಕಾರ್ಯದರ್ಶಿ. (ಪ್ರ)
ಕಂದಾಯ ಇಲಾಖೆ (ಭೂಸ್ವಾಧೀನ-2)ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ೨೪೧
ಕಂದಾಯ ಇಲಾಖೆ
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು.
ಅಂತಿಮ ಅಧಿಸೂಚನೆ
ಸಂಖ್ಯೆ : ಕೆ.ಎಸ್.ಎ/ಸಿ.ಆರ್/28/16-17, ಬೆಂಗಳೂರು, ದಿನಾಂಕ : 08-02-2018.
ಪ್ರಾಥಮಿಕ ಅಧಿಸೂಚನೆ ಸಂಖ್ಯೆ:ಕೆಎಸ್ಎ/ಸಿಆರ್ 28/16-17, ದಿನಾಂಕ: 19-06-2017 ರಲ್ಲಿ ಈ ಕೆಳಕಂಡ ಷೆಡ್ಯೂಲ್ನಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕೆ.ಹೆಚ್.ರಸ್ತೆಯ ಖಾಸಗಿ ಜಮೀನಿನಲ್ಲಿ ಇರುವ ಕೊಳಚೆ ಪ್ರದೇಶದ ಒಟ್ಟು ವಿಸ್ತೀರ್ಣದ 2733.60 ಚ.ಮೀ. (0-27 ಗುಂಟೆ) ಪ್ರದೇಶವನ್ನು, ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ, 1973 ರ ಕಲಂ-3 ರ ಅಡಿಯಲ್ಲಿ ಪ್ರಾರಂಭಿಕವಾಗಿ ಕೊಳಚೆ ಪ್ರದೇಶವೆಂದು ಘೋಷಿಸಿದ್ದು, ಸದರಿ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ: 14-9-2017 ರ ಸಂಚಿಕೆಯಲ್ಲಿ ಪ್ರಕಟಿಸಿ ಅಂತೆಯೇ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿರುತ್ತದೆ.
ಆಯುಕ್ತರು, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು ರವರು ಪತ್ರ ಸಂ.ಕಕೊಅಮಂ/ಕಂ-1/ಆರ್-1/02/15-16/591 ದಿನಾಂಕ: 11-1-2018 ರಂತೆ ವರದಿಯನ್ನು ಸಲ್ಲಿಸಿ ಪ್ರಾಥಮಿಕ ಅಧಿಸೂಚನೆಗೆ ಯಾವುದೇ ಆಕ್ಷೇಪಣೆ ಬಂದಿರುವುದಿಲ್ಲವೆಂದು ವರದಿ ಸಲ್ಲಿಸಿ, ಸದರಿ ಪ್ರದೇಶವನ್ನು ಅಂತಿಮವಾಗಿ ಕೊಳಚೆ ಪ್ರದೇಶವೆಂದು ಘೋಷಿಸಲು ಕೋರಿರುತ್ತಾರೆ.
ಪ್ರಶ್ನಿತ ಕೊಳಚೆ ಪ್ರದೇಶದಲ್ಲಿ ಕುಡಿಯುವ ನೀರು, ದೀಪ, ರಸ್ತೆ, ಚರಂಡಿ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಿ, ಅಭಿವೃದ್ಧಿ ಪಡಿಸುವುದು ಅತ್ಯಗತ್ಯವಾಗಿರುತ್ತದೆ. ಆದ್ದರಿಂದ, ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ, 1973 ರ ಕಲಂ-3 ರಡಿಯಲ್ಲಿ ದತ್ತವಾಗಿರುವ ಅಧಿಕಾರದಂತೆ ಈ ಕೆಳಕಂಡ ಷೆಡ್ಯೂಲ್ನಲ್ಲಿ ನಮೂದಿಸಿರುವ ಪ್ರದೇಶವನ್ನು ಅಂತಿಮವಾಗಿ ಕೊಳಚೆ ಪ್ರದೇಶವೆಂದು ಘೋಷಿಸಲಾಗಿದೆ.
ಷೆಡ್ಯೂಲ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕೆ.ಹೆಚ್.ರಸ್ತೆಯ ಖಾಸಗಿ ಜಮೀನಿನಲ್ಲಿ ಇರುವ ಕೊಳಚೆ
| ಕ್ರ. ಸ ಂ. | ಕೊಳಚೆ ಪ್ರದೇಶದ ಹ ಸ ೆ ರು ಮತ್ತು ಸ್ಥಳ | ಮಾಲೀಕರ ಹೆಸರು (ನಗರ ಮಾಪನ ದಾಖಲೆಯಂತೆ) | ಸಿ.ಟಿ. ಎಸ್.ನಂ. | ವಿಸ್ತೀರ್ಣ (ಚ.ಮೀ.) | ಚ ಕ್ಕುಬಂದಿಗಳು | |||
| ಪ ೂರ್ವ | ಪ ಶ್ಚಿಮ | ಉತ್ತರ | ದ ಕ್ಷಿಣ | |||||
| 1 | ಕೆ.ಹೆಚ್.ರಸ್ತೆಯ ಖಾಸಗಿ ಜಮೀನಿನಲ್ಲಿ ಇರುವ ನಿವಾಸಿಗಳ ಕೊಳಚೆ ಪ ದ ್ರ ೕಶ ೆ | ಎ.ಕುಕಲಿಂಗಮ್ಮ -- ಅಣ್ಣಯ್ಯಪ್ಪ ಬಿನ್ ಚಿಕ್ಕಣ್ಣ ಅಣ್ಣಯ್ಯಪ್ಪ ಬಿನ್ ಚಿಕ್ಕಣ್ಣ | 1106 1061 1060 1059 ಒಟ್ಟು | 400.00 629.30 810.00 894.30 2733.60 (0-27 ಗುಂಟೆ) | CTS ನಂ.1053 ರಿಂದ 1058 | CTS ನಂ.1102 ರಿಂದ 1105 ವ ುತ್ತು 1106ರ ಉಳಿಕೆ | CTS ನಂ.1107 ವ ುತ್ತು ವ ೂೕರಿ ೆ | CTS ನಂ.1062 ಗಲ್ಲಿ ರಸ್ತೆ ವ ುತ್ತು 1106ರ ಉಳಿಕೆ |
PR – 53
ವಿ. ಶಂಕರ್
ಜಿಲ್ಲಾಧಿಕಾರಿಗಳು
SC – 50
ಬೆಂಗಳೂರು ಜಿಲ್ಲೆ, ಬೆಂಗಳೂರು
ನಗರಸಭಾ ಕಾರ್ಯಾಲಯ, ಚನ್ನಪಟ್ಟಣ
ರಾಮನಗರ ಜಿಲ್ಲೆ - 562160
ಸಾರ್ವಜನಿಕ ಪ್ರಕಟಣೆ
ನಂ.ನಸಚ/ಸಿ.ಆರ್/79/2017-18, ದಿನಾಂಕ : 21-03-2018
ವಿಷಯ :- ಚನ್ನಪಟ್ಟಣ ನಗರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು, ಪ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸುವುದರ ಬಗ್ಗೆ.
ಉಲ್ಲೇಖ :- 1. KARNATAKA MUNICIPALITIES (ADVERTISEMENTS) (MODEL) BYE LAWS 1966
2. KARNATAKA MUNICIPALITIES (PREVENTION OF DISFIGUREMENT) ACT 1981
3. ನಗರಸಭೆ, ಚನ್ನಪಟ್ಟಣ ಕೌನ್ಸಿಲ್ ಸಭೆಯ ದಿನಾಂಕ : 06.03.2018 ರ ವಿಷಯ ಸಂಖ್ಯೆ 18(06) ರ ನಿರ್ಣಯ.
4. ಕರ್ನಾಟಕ ಪುರಸಭೆ ಕಾಯ್ದೆ 1964 ರ ನಿಯಮ 94 (VII) mtftu 323 (ಇ)
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೨೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೧೦, ೨೦೧೮ ಭಾಗ ೬ಚನ್ನಪಟ್ಟಣ ನಗರಸಭಾ ವ್ಯಾಪ್ತಿಯಲ್ಲಿ ಜಾಹೀರಾತು ಫಲಕಗಳು, ಪ್ಲೆಕ್ಸ್, ಬ್ಯಾನರ್ಸ್, ಹೋರ್ಡಿಂಗ್ಸ್ ಇತ್ಯಾದಿಗಳನ್ನು ಅಳವಡಿಸಲು ಉಲ್ಲೇಖ (1), (2) ರ ವಿಧಿಗಳ ಅನುಸಾರ ಮತ್ತು ಉಲ್ಲೇಖ (3) ರ ಕೌನ್ಸಿಲ್ ಸಭೆಯ ನಿರ್ಣಯದ ನಿಭಂದನೆಗಳಿಗೆ ಅನುಸಾರವಾಗಿ ಮಾನದಂಡಗಳನ್ನು ಮತ್ತು ನಿಯಮಾನುಸಾರ ಪ್ರಚಲಿತವಿರುವ ಕಾನೂನು ಮಾರ್ಗಸೂಚಿ ಆದೇಶಗಳಿಗೆ ಅಂಶಗಳನ್ನು ನಿರ್ಧರಿಸಲು ಸಾರ್ವಜನಿಕ ಆಕ್ಷೇಪಣೆಗಳು ಹಾಗೂ ಸಲಹೆಗಳನ್ನು ಅಹ್ವಾನಿಸಲಾಗಿರುತ್ತದೆ.
1. KARNATAKA MUNICIPALITIES (ADVERTISEMENTS) (MODEL) BYE LAWS 1966 ರ ವಿಧಿಗಳ ಅನುಸಾರ ಮಾನದಂಡಗಳು. 2. ಖಾಸಗಿ ಸ್ವತ್ತಿನ ಮೇಲಿನ ಹೋರ್ಡಿಂಗ್ಸ್ /ಜಾಹೀರಾತು ಫಲಕಗಳ ಅಳವಡಿಕೆ ದರ. 3. ತಾತ್ಕಾಲಿಕ ಪ್ಲೆಕ್ಸ್ನ ಅಳತೆ ಹಾಗೂ ದಿನವೊಂದರ ದರ. 4. ಪ್ಲೆಕ್ಸ್/ ಬ್ಯಾನರ್ಸ್ ಅಳವಡಿಸಬಹುದಾದ /ನಿರ್ಭಂದಿಸುವ ಸ್ಥಳಗಳು. 5. ಅರ್ಜಿ ಸಲ್ಲಿಕೆಯ ಕಾಲಾವಧಿ ದಂಡದ ಸ್ವರೂಪ. 6. ಅಫೀಲು ಸಲ್ಲಿಸುವ ಪ್ರಾಧಿಕಾರ ಇತ್ಯಾದಿ.
ವಿವರವಾದ ಷರತ್ತು, ನಿರ್ಬಂಧ, ಶುಲ್ಕದ ಸ್ವರೂಪ, ವಿವರಗಳನ್ನು, ಮಾರ್ಗಸೂಚಿಗಳನ್ನು, ಪ್ರಕಟಿಸಲಾಗಿದ್ದು, ಕಂದಾಯ ಶಾಖೆಯಲ್ಲಿ ಹೆಚ್ಚಿನ ವಿವರ ಪಡೆಯಬಹುದಾಗಿರುತ್ತದೆ.
| ಕ್ರ. ಸಂ. | ಜಾಹಿರಾತು ವಿವರ | ದ ರ | ಷರಾ |
| 1 | ತಾತ್ಕಾಲಿಕವಾಗಿ ಅಳವಡಿಸುವ ಬ್ಯಾನರ್/ಪ್ಲೆಕ್ಸ್ ದಿನವೊಂದಕ್ಕೆ | ರೂ.1.00 (ಪ್ರತಿ ಚ.ಅ.) | - |
| 2 | ವಾಹನಗಳಲ್ಲಿ ಜಾಹಿರಾತು ದಿನವೊಂದಕ್ಕೆ | ರೂ. 300.00 | - |
| 3 | ಬಂಟಿಂಗ್ಸ್ (ಪ್ರತಿ ಮೀಟರ್) | ರೂ. 5.00 | ಒಂದು ವಾರಕ್ಕೆ ಅಥವಾ ಕಛೇರಿಯಿಂದ ನೀಡುವ ಅವಧಿಗೆ |
| 4 | ಪ ೂೕಸ್ಟರ್ಸ್ ೆ | ರೂ. 1.00 | |
| 5 | ಬಾವುಟ (ದೊಡ್ಡದು) (ಒಂದಕ್ಕೆ) | ರೂ. 50.00 | |
| 6 | ಬಾವುಟ ಚಿಕ್ಕದು (ಒಂದಕ್ಕೆ) | ರೂ. 25.00 | |
| 7 | ಉದ್ಯಮ ಸ್ಥಳಗಳಲ್ಲಿ ಕಂಪನಿ ಉತ್ಪಾದನ/ಮಾರಾಟದ ಪ್ರಚಾರ (ಪ್ರತಿ ಚ.ಅಡಿಗೆ) | ರೂ. 20.00 (ಪ್ರತಿ ಚ .ಅಡಿಗೆ) | |
| 8 | ವಿದ್ಯುತ್/ ಟೆಲಿಪೋನ್ ಕಂಬಗಳಿಗೆ ಅಳವಡಿಸುವ ಜಾಹೀರಾತುಗಳು | ರೂ. 20.00 | |
| 9 | ಪಾಂಪ್ಲೆಂಟ್ಸ್ ಪ್ರತಿ ಸಾವಿರಕ್ಕೆ | ರೂ. 200.00 | |
| 10 | "ಹೋರ್ಡಿಂಗ್ಸ್" | ||
| ಅ) 1 ರಿಂದ 10 ಚ.ಅ. ವರೆಗೆ | ರೂ. 750.00 | ಪ ತಿ ವರ್ಷಕ್ಕೆ ್ರ | |
| ಆ) 10 ರಿಂದ 20 ಚ.ಅ ವರೆಗೆ | ರೂ. 1400.00 | ||
| ಇ) 20 ರಿಂದ 30 ಚ.ಅ. ವರೆಗೆ | ರೂ. 2000.00 | ||
| ಈ) 30 ಚದರ ಅಡಿ ಮೇಲ್ಪಟ್ಟು | ರೂ. 50.00 (ಪ್ರತಿ ಚ .ಅಡಿಗೆ |
ಷರತ್ತುಗಳು :
1. ಉಲ್ಲೇಖದಲ್ಲಿನ ಕಾನೂನಿನ ವಿಧಿಗಳು ಹಾಗೂ ಮಾರ್ಗಸೂಚಿಗಳು ಯಥಾವತ್ತಾಗಿ ಅನ್ವಯವಾಗುತ್ತದೆ. 2. ಜಾಹೀರಾತು ಅಳವಡಿಕೆಯ ಅವಕಾಶವಿರುವ ಪ್ರದೇಶ, ನಿರ್ಬಂಧಿತ ಪ್ರದೇಶ, ಎತ್ತರ, ವಿಸ್ತೀರ್ಣ,
ಅನುಮತಿಯ ದಿನಗಳು, ದರ ದಂಡ ಇತ್ಯಾದಿಗಳು ಕಾಲಕಾಲಕ್ಕೆ ನಗರಸಭಾ ಕೌನ್ಸಿಲ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಒಳಪಟ್ಟಿರುತ್ತದೆ 3. ಯಾವುದೇ ಅನಧಿಕೃತ ಜಾಹೀರಾತು ಫಲಕಗಳು ಅಳವಡಿಸಿದ್ದಲ್ಲಿ KARANATAKA OPEN PLACES (PREVENTION OF DISFIGUREMENT) ACT 1981 ವಿಧಿಗಳ ಅನ್ವಯ ಕ್ರಮವಿಡಲಾಗುವುದು.
4. ಅರ್ಜಿದಾರರು ನಗರಸಭೆ ಹೊರಡಿಸುವ ನಿರ್ದಿಷ್ಟ ನಮೂನೆಗಳಲ್ಲಿ ಜಾಹೀರಾತಿನ ಸ್ಥಳ, ಸಂಖ್ಯೆ, ಅಳತೆ, ದಿನ ಇತ್ಯಾದಿ ವಿವರಗಳನ್ನು ಪಟ್ಟಿ ಮಾಡಿ ಕಾಲಕಾಲಕ್ಕೆ ನಗರಸಭೆ ಕಾರ್ಯಾಲಯ ಹೊರಡಿಸುವ ಷರತ್ತುಗಳ ಅನುಸಾರ ಅನುಮತಿ ಪಡೆಯುವುದು ಹಾಗೂ ನಿರ್ದಿಷ್ಟ ಅನುಮತಿಯ ಮಾಹಿತಿಯನ್ನು ಹಾಗೂ ಪ್ರಕಟಣೆದಾರರ ವಿವರವನ್ನು ಜಾಹೀರಾತು ಫಲಕದಲ್ಲಿ ಪ್ರಕಟಿಸುವುದು.
5. ಅನಧಿಕೃತ ಜಾಹೀರಾತು ಫಲಕಗಳ/ಪ್ಲೆಕ್ಸ್ಗಳ ತೆರವು, ದಂಡದ ಸ್ವರೂಪ, ಕಾನೂನು ಕ್ರಮ, ಅಫೀಲು ವಿಷಯಗಳಲ್ಲಿ ನಗರಸಭಾ ಕೌನ್ಸಿಲ್ ಹಾಗೂ ನಗರಸಭೆ ಕಾರ್ಯಾಲಯದ ನಿಯಮಾನುಸಾರ ತೀರ್ಮಾನ ಅಂತಿಮವಾಗಿರುತ್ತದೆ.
PD - 17
ಪೌರಾಯುಕ್ತರು,
SC - 05
ನಗರಸಭೆ, ಚನ್ನಪಟ್ಟಣ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59