Servants of Knowledge
Karnataka Gazette · Government of Karnataka

Karnataka Gazette, Part Part-1, 07 June 2018

Published 07 June 2018

Part
Part-1
Identifier
in.gazette.karnataka_new.2018-06-07.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಜೂನ್ ೭, ೨೦೧೮ (ಜ್ಯೇಷ್ಠ ೧೭, ಶಕ ವರ್ಷ ೧೯೪೦)

Bengaluru, Thursday, June 7, 2018 (Jyeishta 17, Shaka Varsha 1940)

ಸಂಚಿಕೆ ೨೩

Issue 23

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಸಹಕಾರ ಸಚಿವಾಲಯ

ವಿಷಯ : ಕರ್ನಾಟಕ ರಾಜ್ಯ ಸವಿತಾ ಸಮಾಜ, ಬೆಂಗಳೂರು ಇದಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಬಗ್ಗೆ.

ಓದಲಾಗಿದೆ : 1. ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು,

2ನೇ ವಲಯ, ಬೆಂಗಳೂರು ನಗರ ಜಿಲ್ಲೆ, ಇವರ ಪತ್ರ ಸಂ: ಡಿಆರ್‌ಬಿ-2/ನೋಂ/ಕಲಂ25/

01/2016-17, ದಿನಾಂಕ 08.11.2017.

2. ಸರ್ಕಾರದ ನೋಟಿಸ್ ಸಂಖ್ಯೆ: ಸಇ 129 ಸಸಂನೋ 2016, ದಿನಾಂಕ: 12.12.2017

3. ಅಧ್ಯಕ್ಷರು, ಕರ್ನಾಟಕ ರಾಜ್ಯ ಸವಿತಾ ಸಮಾಜ, ಬೆಂಗಳೂರು, ಇವರ ಲಿಖಿತ ಹೇಳಿಕೆ ದಿನಾಂಕ : 01.01.2018

ಪ್ರಸ್ತಾವನೆ :

ಓದಲಾದ (1)ರಲ್ಲಿ ಸಂಘಗಳ ನೋಂದಣಾಧಿಕಾರಿಗಳು, 2ನೇ ವಲಯ, ಬೆಂಗಳೂರು ಇವರ ಪತ್ರದಲ್ಲಿ, ಕರ್ನಾಟಕ ರಾಜ್ಯ ಸವಿತಾ ಸಮಾಜ, ಬೆಂಗಳೂರು, ಇದರ ವಿರುದ್ಧದ ಆರೋಪಗಳ ಬಗ್ಗೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 25ರನ್ವಯ ವಿಚಾರಣೆ ನಡೆಸಿ ವಿಚಾರಣಾಧಿಕಾರಿಗಳು ಸಲ್ಲಿಸಿದ ವರದಿಯನ್ನು ಆಧರಿಸಿ ಈ ಕೆಳಕಂಡಂತೆ ವರದಿ ಸಲ್ಲಿಸಿರುತ್ತಾರೆ.

➢ ಆಡಳಿತ ಮಂಡಳಿಗೆ 18 ಕಾರ್ಯಕಾರಿ ಸಮಿತಿ ಸದಸ್ಯರ ಬದಲಾಗಿ 55 ಜನರನ್ನು ಆಯ್ಕೆ ಮಾಡಿರುವ ಆರೋಪ:

ಸಂಘದ ಉಪ ನಿಯಮ 6 ರನ್ವಯ 18 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ವಾರ್ಷಿಕ ಮಹಾ ಸಭೆಗೆ ಆಯ್ಕೆ ಮಾಡಲು ಅವಕಾಶವಿರುತ್ತದೆ, ಆದರೆ ದಿನಾಂಕ 14.06.2016ರಂದು ನಡೆದ ಚುನಾವಣೆಯಲ್ಲಿ 55 ಜನರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚುನಾಯಿಸಲಾಗಿರುತ್ತದೆ.

➢ ಸಂಘದ ಆಡಳಿತಾಧಿಕಾರಿ ಚುನಾವಣಾಧಿಕಾರಿಯನ್ನು ನೇಮಿಸದೆ ಬೈಲಾ ಉಲ್ಲಂಘಿಸಿರುವುದು:

ಆಡಳಿತಾಧಿಕಾರಿಯು ನಿಯಮಾನುಸಾರ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸದಿರುವುದು ಹಾಗೂ ಬೈಲಾ ಉಲ್ಲಂಘಿಸಿ ಚುನಾವಣೆ ನಡೆಸಿರುತ್ತಾರೆ.

➢ 2003-2016 ರವರೆಗೆ ಲೆಕ್ಕಪರಿಶೋಧನೆ ಮತ್ತು ವಾರ್ಷಿಕ ಸರ್ವ ಸದಸ್ಯರ ಸಭೆ ನಡೆಸದಿರುವ ಕುರಿತು;

ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 13ರನ್ವಯ 2003ರಿಂದ 2015ನೇ ಸಾಲಿನವರೆಗೆ ಲೆಕ್ಕಪರಿಶೋಧನಾ ವರದಿಯನ್ನು ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿರುವುದಿಲ್ಲ ಮತ್ತು ನೋಂದಣಾಧಿಕಾರಿಯವರಿಗೆ ಸಲ್ಲಿಸದಿರುವುದು ಸಾಬೀತಾಗಿರುತ್ತದೆ.

➢ ಆಡಳಿತಾಧಿಕಾರಿ ಅವಧಿ ದಿನಾಂಕ 09-06-2016ಕ್ಕೆ ಮುಕ್ತಾಯವಾಗಿದ್ದರೂ, ದಿನಾಂಕ 14-06-2016ರಲ್ಲಿ ಚುನಾವಣೆ ಜರುಗಿಸಿರುವ ಕುರಿತು:

ಸರ್ಕಾರದಿಂದ ಆಡಳಿತಾಧಿಕಾರಿ ಅವಧಿ ವಿಸ್ತರಣೆ ಆದೇಶ ಪಡೆದು ಚುನಾವಣೆ ನಡೆಸಬೇಕಾಗಿತ್ತಾದರೂ, ಆಡಳಿತಾಧಿಕಾರಿ ಅವಧಿ ವಿಸ್ತರಣೆ ಆದೇಶ ಪಡೆಯದೇ ಚುನಾವಣೆ ನಡೆಸಿರುವುದು ನಿಯಮ ಉಲ್ಲಂಘನೆಯಾಗಿರುತ್ತದೆ.

ಆಡಳಿತಾಧಿಕಾರಿಯವರು ಚುನಾವಣೆಗಾಗಿ ರೂ.17.95.000/-ಗಳನ್ನು ಹಾಗೂ ಅಧಿಕಾರವಧಿ ಮುಗಿದ ನಂತರ ದಿನಾಂಕ 21.06.2016ರಲ್ಲಿ

ರೂ.4.00.000/-ಗಳನ್ನು ಡ್ರಾ ಮಾಡಿ ವೆಚ್ಚ ಮಾಡಿರುವ ಕುರಿತು :

ಚುನಾವಣಾ ಖರ್ಚು ವೆಚ್ಚಗಳ ಕುರಿತು ಆಡಿಟ್ ಮಾಡಿಸಿ ಆಡಿಟ್ ವರದಿಯಲ್ಲಿ ದುರುಪಯೋಗವಾದ ಹಣವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಬೇಕಾಗುತ್ತದೆಂದು ವರದಿಸಿರುತ್ತಾರೆ. (೬೨೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೬೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೭, ೨೦೧೮ ಭಾಗ ೧ ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ಸವಿತಾ ಸಮಾಜ, ಬೆಂಗಳೂರು ಈ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಕಲಂ 27(ಸಿ) ರನ್ವಯ ಆಡಳಿತಾಧಿಕಾರಿಯನ್ನು ನೇಮಿಸಲು ಕೋರಿ ಪ್ರಸ್ತಾವೆ ಸಲ್ಲಿಸಿರುತ್ತಾರೆ.

ಸಂಘಗಳ ನೋಂದಣಾಧಿಕಾರಿಗಳ ವರದಿಯನ್ವಯ ಕರ್ನಾಟಕ ರಾಜ್ಯ ಸವಿತಾ ಸಮಾಜ, ಬೆಂಗಳೂರು ಈ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ ನೇಮಿಸಬಾರದೆಂಬ ಬಗ್ಗೆ, 15 ದಿನಗಳೊಳಗೆ ಲಿಖಿತ ಹೇಳಿಕೆಯನ್ನು ದಾಖಲೆಗಳೊಂದಿಗೆ ಸಲ್ಲಿಸುವಂತೆ, ಇಲ್ಲವಾದಲ್ಲಿ ನಿಯಮಾನುಸಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮೇಲೆ ಓದಲಾದ (2)ರಲ್ಲಿ ನೋಟಿಸನ್ನು ಜಾರಿಗೊಳಿಸಲಾಗಿತ್ತು.

ಓದಲಾದ (3)ರಲ್ಲಿ ಲಿಖಿತ ಸಮಜಾಯಿಷಿಯಲ್ಲಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ಸವಿತಾ ಸಮಾಜ, ಬೆಂಗಳೂರು ಇವರು ದಿನಾಂಕ:

10.04.2003ರ ಬೈಲಾ ತಿದ್ದುಪಡಿಯಂತೆ 18 ಕಾರ್ಯಕಾರಿ ಸಮಿತಿ ಸದಸ್ಯರ ಬದಲಾಗಿ 55 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ ಎಂದು, ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960 ರ ನಿಯಮ 27 ರಲ್ಲಿ ಆಡಳಿತಾಧಿಕಾರಿಯವರೇ ಚುನಾವಣೆ ನಡೆಸಬಹುದಾಗಿರುವುದರಿಂದ ಬೈಲಾ ಉಲ್ಲಂಘಿಸಿರುವುದಿಲ್ಲವೆಂದು, 2003-2016 ರವರೆಗೆ ಲೆಕ್ಕಪರಿಶೋಧನೆಯ ವರದಿಯನ್ನು ವಿಚಾರಣಾಧಿಕಾಯವರಿಗೆ ಸಲ್ಲಿಸಲಾಗಿರುತ್ತದೆಂದು, ಆಡಳಿತಾಧಿಕಾರಿಯ ಅವಧಿಯು ದಿನಾಂಕ: 09.06.2016ಕ್ಕೆ ಮುಕ್ತಾಯಗೊಂಡಿರುತ್ತದೆಂದು, ಆದರೆ ಸಂಘಕ್ಕೆ ಚುನಾವಣೆಯನ್ನು ನಡೆಸಲು ದಿನಾಂಕ:

14.05.2016 ರಂದು ಕ್ಯಾಲೆಂಡರ್ ಆಫ್ ಈವೆಂಟ್ಸ್‌ನ್ನು ಹೊರಡಿಸಲಾಗಿತ್ತೆಂದು ಹಾಗೂ ಸಂಘದ ಗಮನಕ್ಕೆ ಬರದೆ ಆಡಳಿತಾಧಿಕಾರಿಯವರು ರೂ.17,95,000/-ಗಳನ್ನು ಹಾಗೂ ರೂ.4,00,000/-ಗಳನ್ನು ಡ್ರಾ ಮಾಡಿ ವೆಚ್ಚ ಮಾಡಿರುವ, ವಿಚಾರವು ಇತ್ತೀಚೆಗೆ ಸಂಘದ ಗಮನಕ್ಕೆ ಬಂದಿದ್ದು, ಸದರಿಯವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ವಿನಂತಿಸುತ್ತಾ, ಉಪ ನಿಬಂಧಕರು ದಿನಾಂಕ:08-11-2017ರಂದು ಸಲ್ಲಿಸಿರುವ ಪ್ರಸ್ತಾವೆಯನ್ನು ತಿರಸ್ಕರಿಸಿ ಸಂಘದಿಂದ ಹೊಸದಾಗಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಸರ್ಕಾರವನ್ನು ಕೋರಿರುತ್ತಾರೆ.

ಪ್ರಸ್ತಾವೆಯಲ್ಲಿ ವಿವರಿಸಿರುವ ಅಂಶಗಳನ್ನು ಪರಿಶೀಲಿಸಲಾಗಿ, ಕರ್ನಾಟಕ ರಾಜ್ಯ ಸವಿತಾ ಸಮಾಜ, ಬೆಂಗಳೂರು ಈ ಸಂಘದಲ್ಲಿ ಬೈಲಾ ಪ್ರಕಾರ ಸಕಾಲದಲ್ಲಿ ಸಂಘಕ್ಕೆ ಚುನಾವಣೆ ನಡೆಸದಿರುವುದು, ಲೆಕ್ಕಪಶೋಧನೆವರದಿಯನ್ನು ಸಲ್ಲಿಸದಿರುವುದು ಹಾಗೂ ಸಂಘದ ಹಣ ದುರುಪಯೋಗವಾಗಿರುವುದು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960 ರ ಕಲಂ 25ರನ್ವಯ ನಡೆದ ವಿಚಾರಣೆಯಿಂದ ಸಾಬೀತಾಗಿರುವುದು ಸ್ಪಷ್ಟವಾಗಿರುವುದರಿಂದ ಸಂಘದ ಅಧ್ಯಕ್ಷರ ಲಿಖಿತ ಸಮಜಾಯಿಷಿಯನ್ನು ಒಪ್ಪದೆ ಸಂಘದ ಕಾರ್ಯಕಾರಿ ಸಮಿತಿಗೆ ಚುನಾವಣೆ ನಡೆಸಲು, ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತವೆಂದು ತೀರ್ಮಾನಿಸಿ, ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳು, 2ನೇ ವಲಯ ಬೆಂಗಳೂರು ನಗರ ಜಿಲೆ,್ಲ ಬೆಂಗಳೂರು, ಇವರನ್ನು ಕರ್ನಾಟಕ ರಾಜ್ಯ ಸವಿತಾ ಸಮಾಜ, ಬೆಂಗಳೂರು ಈ ಸಂಘಕ್ಕೆ ಆಡಳಿತಾಧಿಕಾರಿಯನ್ನಾಗಿ ನೇಮಿಸಲು ಸರ್ಕಾರವು ತೀರ್ಮಾನಿಸಿ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಇ 129 ಸಸಂನೋ 2016, ಬೆಂಗಳೂರು, ದಿನಾಂಕ: 14.05.2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳು, 2ನೇ ವಲಯ, ಬೆಂಗಳೂರು ನಗರ ಜಿಲೆ,್ಲ ಬೆಂಗಳೂರು, ಇವರನ್ನು ಕರ್ನಾಟಕ ರಾಜ್ಯ ಸವಿತಾ ಸಮಾಜ, ಬೆಂಗಳೂರು ಈ ಸಂಘಕ್ಕೆ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.

ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಸಂಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವೆಂಕಟಸ್ವಾಮಿ

PR-316

ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ SC-20

ಸರ್ಕಾರದ ಉಪ ಕಾರ್ಯದರ್ಶಿ,

ಸಹಕಾರ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 07 June 2018. Indian Gazettes, https://egazette.servantsofknowledge.in/details/in.gazette.karnataka_new.2018-06-07.Part-1/. Archive identifier in.gazette.karnataka_new.2018-06-07.Part-1.