ಸಂಪುಟ ೧೫೩
Volume 153
ಬೆಂಗಳೂರು, ಗುರುವಾರ, ಜೂನ್ ೧೪, ೨೦೧೮ (ಜ್ಯೇಷ್ಠ ೨೪, ಶಕ ವರ್ಷ ೧೯೪೦)
Bengaluru, Thursday, June 14, 2018 (Jyeishta 24, Shaka Varsha 1940)
ಸಂಚಿಕೆ ೨೪
Issue 24
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಕರ್ನಾಟಕ ವಿಧಾನಸಭೆ ಸಚಿವಾಲಯ
ಅಧಿಸೂಚನೆ
ಕ್ರಮ ಸಂಖ್ಯೆ: ಕವಿಸಸ/ಆ-1/88/ಎಫ್.ಪಿ.ಪಿ/2002(ಭಾಗ-2), ಬೆಂಗಳೂರು, ದಿನಾಂಕ: 16-05-2018.
2003ರ ಕರ್ನಾಟಕ ವಿಧಾನ ಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(i) ಹಾಗೂ 1977ರ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ, ಈ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ(ಪ್ರಭಾರ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಎಂ.ಎಸ್.ಕುಮಾರಸ್ವಾಮಿ, ಇವರಿಗೆ ದಿನಾಂಕ:31.10.2017ರಿಂದ ಅಂದರೆ ಸದರಿ ಅಧಿಕಾರಿಯವರಿಗೆ ಜಂಟಿ ಕಾರ್ಯದರ್ಶಿ ಹುದ್ದೆಗೆ ಸ್ವತಂತ್ರ ಪ್ರಭಾರದಲ್ಲಿರಿಸಿದ ದಿನಾಂಕದಿಂದಲೇ ಜಾರಿಗೆ ಬರುವಂತೆ ಪರಿಷ್ಕøತ ವೇತನ ಶ್ರೇಣಿ `. 90500-2200-97100-2500-112100-2800-123300ರಲ್ಲಿ ಜಂಟಿ ಕಾರ್ಯದರ್ಶಿ ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.
ವಿಶೇಷ ಮಂಡಳಿಯ ಆದೇಶಾನುಸಾರ, PR. 309
ಎಸ್. ಮೂರ್ತಿ
SC. 50
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ ಸಚಿವಾಲಯ.
ಕರ್ನಾಟಕ ವಿಧಾನಸಭೆ ಸಚಿವಾಲಂi
ಅಧಿಸೂಚನೆ
ಕ್ರಮ ಸಂಖ್ಯೆ: ಕವಿಸಸ/ಆ-1/20/ಸಿ.ಮ್ಯಾ.ಉ./2016, ಬೆಂಗಳೂರು, ದಿನಾಂಕ: 16-05-2018.
ಉಲ್ಲೇಖ: ಈ ಸಚಿವಾಲಯದ ಆದೇಶ ಸಂಖ್ಯೆ: ಕವಿಸಸ/ಆ-1/01/ಸಿ.ಮ್ಯಾ./ಉ/2016, ದಿನಾಂಕ: 16.05.2018.
ಉಲ್ಲೇಖಿತ ಆದೇಶದನ್ವಯ ಸಚಿವಾಲಯದ ಸಿಸ್ಟಂ ಮ್ಯಾನೇಜರ್ ಹುದ್ದೆಯನ್ನು 'ನಿರ್ದೇಶಕರು'(ಗಣಕ ವಿಭಾಗ) ಹುದ್ದೆಗೆ ಉನ್ನತೀಕರಿಸಲಾಗಿದ್ದು, ಕರ್ನಾಟಕ ವಿಧಾನ ಸಭೆ ಸಚಿವಾಲಯದ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಾವಳಿಗಳು, 2003 ನಿಯಮ 6(i) ರ ಪ್ರಕಾರ ಹಾಗೂ 1977ರ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳ ನಿಯಮ 19(3)(ಎ)ನ್ನು ಓದಿಕೊಂಡಂತೆ, ಈ ಸಚಿವಾಲಯದಲ್ಲಿ ಸಿಸ್ಟಂ ಮ್ಯಾನೇಜರ್(ಗಣಕ ವಿಭಾಗ) ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಜೆ.ಈ.ಶಶಿಧರ್, ಇವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಪರಷ್ಕøತ ವೇತನ ಶ್ರೇಣಿ ರೂ. 90500-2200-97100-2500-112100-2800-123300ರಲ್ಲಿ 'ನಿರ್ದೇಶಕರು' (ಗಣಕ ವಿಭಾಗ) ಹುದ್ದೆಗೆ ಸ್ಥಾನಪನ್ನ ಮುಂಬಡ್ತಿ ನೀಡಲಾಗಿದೆ.
ವಿಶೇಷ ಮಂಡಳಿಯ ಆದೇಶಾನುಸಾರ, PR. 310
ಎಸ್. ಮೂರ್ತಿ
SC. 50
ಕಾರ್ಯದರ್ಶಿ,
ಕರ್ನಾಟಕ ವಿಧಾನ ಸಭೆ ಸಚಿವಾಲಯ.
ತೋಟಗಾರಿಕೆ ಮತ್ತು ರೇಷ್ಮೆ ಸಚಿವಾಲಯ
ವಿಷಯ : ರೇಷ್ಮೆ ಇಲಾಖೆಯ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡುವ ಕುರಿತು. ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ತೋಇ 58 ರೇಕೃವಿ 2015, ದಿನಾಂಕ: 06-02-2016.
2) ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರ ಪತ್ರ ಸಂಖ್ಯೆ:ರೇನಿ/ಗೂಮಾ/ಮಾ.ಸಮಿತಿ/ 18/2017-18, ದಿನಾಂಕ: 17-10-2017.
(೬೨೩)೬೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧೪, ೨೦೧೮ ಭಾಗ ೧
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ: (1)ರ ದಿನಾಂಕ: 06-02-2016ರ ಆದೇಶದಲ್ಲಿ ಕರ್ನಾಟಕ ರೇಷ್ಮೆ ಹುಳು ಬಿತ್ತನೆ, ರೇಷ್ಮೆ ಗೂಡು ಮತ್ತು ರೇಷ್ಮೆ ನೂಲು (ಉತ್ಪಾದನೆ ಸರಬರಾಜು, ವಿತರಣೆ ಮತ್ತು ಮಾರಾಟ ನಿಯಂತ್ರಣ), ಕಾಯಿದೆ 1959 ರ ಸೆಕ್ಷನ್ 10 A (1)(b) ರನ್ವಯ ಮಾರುಕಟ್ಟೆ ಸಮಿತಿಗಳನ್ನು ರಚಿಸಿ ಹಾಗೂ ಸದರಿ ನಿಯಮಾವಳಿಯ ನಿಯಮ 16 ರನ್ವಯ ಮಾರುಕಟ್ಟೆ ಸಮಿತಿಗಳಿಗೆ ರೇಷ್ಮೆ ಬೆಳೆಗಾರರ ಪ್ರತಿನಿಧಿಗಳು ಮತ್ತು ರೇಷ್ಮೆ ನೂಲು ಬಿಚ್ಚುವವರ ಪ್ರತಿನಿಧಿಗಳನ್ನು ಮಾರುಕಟ್ಟೆ ಸಮಿತಿಯ ಸದಸ್ಯರುಗಳನ್ನಾಗಿ ಹಾಗೂ ಸದರಿ ನಿಯಮಾವಳಿಯ ನಿಯಮ 16(2)ರನ್ವಯ ಸದಸ್ಯತ್ವದ ಅವಧಿಯನ್ನು 03 ವರ್ಷಗಳ ಅವಧಿಗೆ ಇಲ್ಲವಾದರೆ ಸದಸ್ಯರ ಮರಣ/ವಜಾ/ರಾಜೀನಾಮೆಯಿಂದ ಸದಸ್ಯತ್ವ ರದ್ದಾಗುವವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಿ ಆದೇಶಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ: (2) ದಿನಾಂಕ: 17-10-2017ರ ಪತ್ರದಲ್ಲಿ ಸರ್ಕಾರದ ಆದೇಶ ಸಂಖ್ಯೆ: ತೋಇ 58 ರೇಕೃವಿ 2015, ದಿನಾಂಕ: 06-02-2016 ರನ್ವಯ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ, ರಾಮನಗರ ಇಲ್ಲಿನ ಮಾರುಕಟ್ಟೆ ಸಮಿತಿಗೆ ಶ್ರೀ ಕೆ.ದೇವೇಗೌಡ ಬಿನ್ ಹನುಮಯ್ಯ ಇವರನ್ನು ನಾಮ ನಿರ್ದೇಶನ ಮಾಡಲಾಗಿದ್ದು, ಸದರಿಯವರು ದಿನಾಂಕ: 07-11-2017 ರಂದು ಮೃತಪಟ್ಟಿರುತ್ತಾರೆ. ಆದ್ದರಿಂದ, ಕರ್ನಾಟಕ ರೇಷ್ಮೆ, ಹುಳು ಬಿತ್ತನೆ, ರೇಷ್ಮೆ ಗೂಡು ಮತ್ತು ರೇಷ್ಮೆ ನೂಲು (ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ನಿಯಂತ್ರಣ) ಕಾಯಿದೆ 1959 ರ ಸೆಕ್ಷನ್ 16(4) ರನ್ವಯ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ ರಾಮನಗರ ಇಲ್ಲಿನ ಮಾರುಕಟ್ಟೆ ಸಮಿತಿಗೆ ಶ್ರೀ ಗೌತಮ್ ಬಿನ್. ಮೋಹನ್ದಾಸ್, ಚಿಕ್ಕಬೈರಮಂಗಲ ಪೋಸ್ಟ್, ರಾಮನಗರ ಇವರನ್ನು ರಾಮನಗರ ಮಾರುಕಟ್ಟೆ ಸಮಿತಿಯ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡುವಂತೆ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು ಕೋರಿರುತ್ತಾರೆ.
ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, ಸರ್ಕಾರದ ಆದೇಶ ಸಂಖ್ಯೆ: ತೋಇ 58 ರೇಕೃವಿ 2015, ದಿನಾಂಕ: 06.02.2016 ರನ್ವಯ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ, ರಾಮನಗರ ಇಲ್ಲಿನ ಮಾರುಕಟ್ಟೆ ಸಮಿತಿಗೆ ಶ್ರೀ ಕೆ.ದೇವೇಗೌಡ ಬಿನ್ ಹನುಮಯ್ಯ ಇವರನ್ನು ಸದಸ್ಯರನ್ನಾಗಿ ನೇಮಿಸಲಾಗಿದ್ದು, ಸದರಿಯವರು ದಿನಾಂಕ: 07-11-2017 ರಂದು ಮೃತಪಟ್ಟಿರುತ್ತಾರೆ. ಆದ್ದರಿಂದ, ಕರ್ನಾಟಕ ರೇಷ್ಮೆ ಹುಳು ಬಿತ್ತನೆ, ರೇಷ್ಮೆ ಗೂಡು ಮತ್ತು ರೇಷ್ಮೆ ನೂಲು (ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ನಿಯಂತ್ರಣ) ಕಾಯಿದೆ 1959 ರ ಸೆಕ್ಷನ್ 16(4) ರನ್ವಯ ಶ್ರೀ ಕೆ.ಧನರಾಜ್ ಬಿನ್ ಶ್ರೀ ಕಾಡಯ್ಯ, ಕವಣಾಪುರ ಗ್ರಾಮ, ಬನ್ನಿಕುಪ್ಪೆ ಅಂಚೆ, ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು ಇವರನ್ನು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ, ರಾಮನಗರ ಇಲ್ಲಿನ ಮಾರುಕಟ್ಟೆ ಸಮಿತಿಯ ಸದಸ್ಯರನ್ನಾಗಿ ನೇಮಿಸಲು ಸರ್ಕಾರವು ನಿರ್ಧರಿಸಿರುವ ಕಾರಣ, ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ತೋಇ 228 ರೇಕೃವಿ 2017, ಬೆಂಗಳೂರು, ದಿನಾಂಕ: 19-01-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ತೋಇ 58 ರೇಕೃವಿ 2015, ದಿನಾಂಕ:06-02-2016ರಲ್ಲಿ ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ, ರಾಮನಗರ ಇಲ್ಲಿನ ಮಾರುಕಟ್ಟೆ ಸಮಿತಿಗೆ ಶ್ರೀ ಕೆ.ದೇವೇಗೌಡ ಬಿನ್ ಹನುಮಯ್ಯ ಇವರನ್ನು ಸದಸ್ಯರನ್ನಾಗಿ ನೇಮಿಸಲಾಗಿದ್ದು, ಸದರಿಯವರು ದಿನಾಂಕ: 07-11-2017 ರಂದು ಮೃತಪಟ್ಟಿರುತ್ತಾರೆ. ಆದ್ದರಿಂದ, ಕರ್ನಾಟಕ ರೇಷ್ಮೆ ಹುಳು ಬಿತ್ತನೆ, ರೇಷ್ಮೆ ಗೂಡು ಮತ್ತು ರೇಷ್ಮೆ ನೂಲು (ಉತ್ಪಾದನೆ, ಸರಬರಾಜು, ವಿತರಣೆ ಮತ್ತು ಮಾರಾಟ ನಿಯಂತ್ರಣ) ಕಾಯಿದೆ 1959 ರ ಸೆಕ್ಷನ್ 16(4) ರನ್ವಯ ಶ್ರೀ ಕೆ.ಧನರಾಜ್ ಬಿನ್ ಶ್ರೀ ಕಾಡಯ್ಯ, ಕವಣಾಪುರ ಗ್ರಾಮ, ಬಿನ್ನಿಕುಪ್ಪೆ ಅಂಚೆ, ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು ಇವರನ್ನು ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆ, ರಾಮನಗರ ಇಲ್ಲಿನ ಮಾರುಕಟ್ಟೆ ಸಮಿತಿಯ ಸದಸ್ಯರನ್ನಾಗಿ ನೇಮಿಸಿ ಸರ್ಕಾರವು ಆದೇಶಿಸಿದೆ.
ಮುಂದುವರೆದು, ಸರ್ಕಾರದ ಆದೇಶ ಸಂಖ್ಯೆ: ತೋಇ 58 ರೇಕೃವಿ 2015, ದಿನಾಂಕ: 06-02-2016 ರಲ್ಲಿನ ಸೂಚನೆಗಳನ್ನು ಪಾಲಿಸುವುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR. 311
ಆರ್.ಎಲ್. ಚಿನ್ನಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ,(ರೇಷ್ಮೆ) ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ವಿಷಯ : ಬೆಳಗಾವಿಯಲ್ಲಿ ` 6.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಮಿನಿ 3ಡಿ ತಾರಾಲಯವನ್ನು ಸ್ಥಾಪಿಸುವ ಬಗ್ಗೆ.
ಓದಲಾಗಿದೆ : 1) 2018-19ನೇ ಸಾಲಿನ ಆಯವ್ಯಯ ಭಾಷಣದ ಖಂಡಿಕೆ-377.
2) ಸರ್ಕಾರಿ ಆದೇಶ ಸಂಖ್ಯೆ: ವಿಯಇ 94 ವಿತ್ರಮ 2018, ದಿನಾಂಕ: 10-04-2018.
3) ವ್ಯವಸ್ಥಾಪಕ ನಿರ್ದೇಶಕರು, ಕೈಸ್ಟೆಪ್ಸ್ ಇವರ ಪ್ರಸ್ತಾವನೆ ದಿನಾಂಕ: 12-04-2018.
4) ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ: ಯೋಇ/06/ಜಶಉ/2018, ದಿನಾಂಕ: 23-03-2018.
5) ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 64 ವೆಚ್ಚ 2/2018, ದಿನಾಂಕ: 03-04-2018.
6) ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 53 ವೆಚ್ಚ 2/2018, ದಿ: 02-04-2018.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿ 2018-19ನೇ ಸಾಲಿನ ಆಯವ್ಯಯ ಭಾಷಣದ ಖಂಡಿಕೆ-377ರಲ್ಲಿ ಬೆಳಗಾವಿಯಲ್ಲಿ ಮಿನಿ 3ಡಿ ತಾರಾಲಯವನ್ನು ಸ್ಥಾಪಿಸಲಾಗುವುದೆಂದು ಸನ್ಮಾನ್ಯ ಮುಖ್ಯ ಮಂತ್ರಿಗಳು ಘೋಷಿಸಿರುತ್ತಾರೆ. ಸದರಿ ಮಿನಿ 3ಡಿ ತಾರಾಲಯವು ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಸಂಶೋಧನೆಗೆ ಹಾಗೂ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಯ ಬಗ್ಗೆ ಆಸಕ್ತಿ, ಕ್ರಿಯಾಶೀಲತೆ, ಕುತೂಹಲ ಹಾಗೂ ವೈಜ್ಞಾನಿಕತೆಯ ಕುರಿತು ಅರಿವು ಮೂಡಿಸುವ ಒಂದು ಸ್ಫೂರ್ತಿದಾಯಕ ಕೇಂದ್ರವಾಗಿ ಹೊರಹೊಮ್ಮಲಿದೆ. ಉದ್ದೇಶಿತ ಈ ಹೊಸ ಯೋಜನೆಯನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಇವರ ಮುಖಾಂತರ ಆಯಾಯ ಜಿಲ್ಲಾಡಳಿತಗಳ ಸಹಯೋಗದೊಂದಿಗೆ "ಮಿನಿ 3ಡಿ ತಾರಾಲಯದ" ಸ್ಥಾಪನಾ ಕಾರ್ಯ ಕೈಗೊಳ್ಳಲಾಗುವುದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧೪, ೨೦೧೮ ೬೨೫ಮೇಲೆ ಓದಲಾದ ಕ್ರಮ ಸಂಖ್ಯೆ (2)ರಲ್ಲಿ 2018-19ನೇ ಸಾಲಿನ ಆಯವ್ಯಯದ ಲೆಕ್ಕಶೀರ್ಷಿಕೆ 3425-60-200-0-16-059 ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳು ಇದರಡಿಯಲ್ಲಿ ` 2800.00 ಲಕ್ಷಗಳನ್ನು ಒದಗಿಸಲಾಗಿದ್ದು, ಸದರಿ ಮೊತ್ತದಲ್ಲಿ ಬೆಳಗಾವಿಯಲ್ಲಿ ತಾರಾಲಯ ಸ್ಥಾಪನೆಗಾಗಿ ` 300.00 ಲಕ್ಷಗಳನ್ನು ಕಾಯ್ದಿರಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ವ್ಯವಸ್ಥಾಪಕ ನಿರ್ದೇಶಕರು, ಕೆಸ್ಟೆಪ್ಸ್ ಇವರು ಬೆಳಗಾವಿಯಲ್ಲಿ ಮಿನಿ 3ಡಿ ತಾರಾಲಯ ಸ್ಥಾಪನೆಯ ಪ್ರಸ್ತಾವನೆಗೆ ` 6.00 ಕೋಟಿ ವೆಚ್ಚವಾಗುವುದಾಗಿ ಪ್ರಸ್ತಾಪಿಸಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (4) ಮತ್ತು (5)ರ ಟಿಪ್ಪಣಿಗಳಲ್ಲಿ ಹಾಗೂ ಕ್ರಮ ಸಂಖ್ಯೆ (5)ರ ಅನಧಿಕೃತ ಟಿಪ್ಪಣಿಯಲ್ಲಿ 2018-19ನೇ ಸಾಲಿನ ಹೊಸ ಯೋಜನೆಯ ಅನುಷ್ಠಾನಕ್ಕಾಗಿ ಯೋಜನಾ ಇಲಾಖೆ ಹಾಗೂ ಆರ್ಥಿಕ ಇಲಾಖೆಗಳು ಸಹಮತಿ ನೀಡಿರುತ್ತವೆ. ಅದರಂತೆ, ಬೆಳಗಾವಿಯಲ್ಲಿ ` 6.00 ಕೋಟಿಗಳ ಅಂದಾಜು ವೆಚ್ಚದಲ್ಲಿ 3ಡಿ ಕಿರು ತಾರಾಲಯವನ್ನು ರಾಜ್ಯ ಸರ್ಕಾರದ ಸಂಪೂರ್ಣ ಅನುದಾನದೊಂದಿಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಇವರ ಮುಖಾಂತರ ಆಯಾಯ ಜಿಲ್ಲಾಡಳಿತಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ಧರಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ : ವಿಯಇ 73 ವಿತ್ರಮ 2018, ಬೆಂಗಳೂರು, ದಿನಾಂಕ : 16-05-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ "ಮಿನಿ 3ಡಿ ತಾರಾಲಯವನ್ನು" ಸ್ಥಾಪಿಸಲು ಒಟ್ಟು ` 6.00 ಕೋಟಿಗಳು ವೆಚ್ಚವಾಗಲಿದ್ದು 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿರುವಂತೆ, ` 3.00 ಕೋಟಿಗಳನ್ನು (ರೂಪಾಯಿ ಮೂರು ಕೋಟಿಗಳು ಮಾತ್ರ) "ಲೆಕ್ಕಶೀರ್ಷಿಕೆ 3425-60-200-0-16-059 ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳು" ಇದರಡಿಯಲ್ಲಿ ಈ ಹೊಸ ಯೋಜನೆಗೆ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿಯ ಮುಖಾಂತರ ಆಯಾಯ ಜಿಲ್ಲಾಡಳಿತಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಸರ್ಕಾರವು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 53 ವೆಚ್ಚ-2/2018, ದಿನಾಂಕ: 02-04-2018 ಮತ್ತು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ: ಯೋಇ/06/ಜಶಉ/2018, ದಿನಾಂಕ: 23-03-2018 ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 64 ವೆಚ್ಚ 2/2018, ದಿನಾಂಕ: 03-04-2018ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಶೇಷಣ್ಣ ಎಂ.ಎಲ್
PR – 312
ಸರ್ಕಾರದ ಅಧೀನ ಕಾರ್ಯದರ್ಶಿ
SC - 25
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ
ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
(ವಿಜ್ಞಾನ ಮತ್ತು ತಂತ್ರಜ್ಞಾನ)
ಒಳಾಡಳಿತ ಸಚಿವಾಲಯ
ತಿದ್ದುಪಡಿ
ಸಂಖ್ಯೆ : ಹೆಚ್ಡಿ 7 ಸಿಆರ್ಆರ್ 2015, ಬೆಂಗಳೂರು, ದಿನಾಂಕ : 04-05-2018.
ಸರ್ಕಾರಿ ಆದೇಶ ಸಂಖ್ಯೆ : ಹೆಚ್ಡಿ 7 ಸಿಆರ್ಆರ್ 2015, ದಿನಾಂಕ: 26-04-2018ರ ಆದೇಶ ಭಾಗದ ಮೊದಲ ಖಂಡಿಕೆಯ ಎರಡನೇ ಸಾಲಿನಲ್ಲಿ "ದಿನಾಂಕ 08-11-2015" ಎಂಬುದನ್ನು "ದಿನಾಂಕ: 10-11-2015" ಎಂದು ತಿದ್ದಿ ಓದಿಕೊಳ್ಳತಕ್ಕದ್ದು, ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR – 313
ಬಿ.ಎಸ್. ನಾಗರಾಜ್
SC - 50
ಸರ್ಕಾರದ ಉಪ ಕಾರ್ಯದರ್ಶಿ
ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ)
ಕಾರ್ಮಿಕ ಸಚಿವಾಲಯ
ವಿಷಯ : ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಬೆಂಗಳೂರು ಇಲ್ಲಿಗೆ ಸಂಬಂಧಿಸಿದಂತೆ ಟೆಂಡರ್ ಆಹ್ವಾನಿಸುವ, ಟೆಂಡರ್ ಸ್ವೀಕರಿಸುವ ಹಾಗೂ ಟೆಂಡರ್ ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಕ ಮಾಡುವ ಕುರಿತು.
ಓದಲಾಗಿದೆ : ನಿರ್ದೇಶಕರು, ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಇವರ ಟಿಪ್ಪಣಿ ಸಂಖ್ಯೆ: KSLU/EST- Procure/01/2018-19, ದಿನಾಂಕ: 2018-19, ದಿನಾಂಕ: 14-05-2018.
ಪ್ರಸ್ತಾವನೆ:
ಮೇಲೆ ಓದಲಾದ ನಿರ್ದೇಶಕರು, ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಇವರ ಟಿಪ್ಪಣಿಯಲ್ಲಿ ಅಧ್ಯಯನ ಸಂಸ್ಥೆಗೆ ಬೇಕಾಗುವ ಮೂಲ ಸೌಕರ್ಯಗಳಾದ ಪೀಟೋಪಕರಣ, ಸಲಕರಣೆ ಸರಂಜಾಮುಗಳು ಹಾಗೂ ವಿವಿಧ ಮಾನವ ಸಂಪನ್ಮೂಲಗಳ ಸೌಕರ್ಯವನ್ನು ಪಡೆಯಲು ಸಾಕಷ್ಟು ಖರ್ಚು ವೆಚ್ಚಗಳು ಒಳಗೊಂಡಿರುವುದರಿಂದ https://eproc.karnataka.gov.in/. ರ ಅಂತರ್ಜಾಲದ ಮೂಲಕ ಟೆಂಡರ್ನ್ನು ಆಹ್ವಾನಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಿರ್ದೇಶಕರು, ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಇವರನ್ನು ಟೆಂಡರ್ ಆಹ್ವಾನಿಸುವ ಪ್ರಾಧಿಕಾರಿಯನ್ನಾಗಿ ಮತ್ತು ಟೆಂಡರ್ ಸ್ವೀಕರಿಸುವ ಹಾಗೂ ಟೆಂಡರ್ ಮೇಲ್ಮನವಿ ಪ್ರಾಧಿಕಾರಿಗಳನ್ನು ಸರ್ಕಾರವು ಇಚ್ಛಿಸುವ ಅಧಿಕಾರಿಯನ್ನು ನೇಮಕ ಮಾಡುವ ಕುರಿತು ಸರ್ಕಾರದಿಂದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ. ಮುಂದುವರೆದು, ಡಿಜಿಟಲ್ ಸಹಿ ಪ್ರಮಾಣ ಪತ್ರ ಚಂದಾದಾರಿಕೆಯನ್ನು ನೋಂದಾಯಿಸಲು ಅರ್ಜಿಯನ್ನು ಸಲ್ಲಿಸುವ ಪ್ರಕ್ರಿಯೆಯ ಭಾಗವಾಗಿ ಈ ಮೇಲಿನ ಮೂರು ಜವಾಬ್ದಾರಿಗಳನ್ನು ನಿರ್ವಹಿಸಲು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕಾಗಿರುತ್ತದೆ ಎಂದು ತಿಳಿಸಿರುತ್ತಾರೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೬೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೧೪, ೨೦೧೮ ಭಾಗ ೧ನಿರ್ದೇಶಕರು, ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ, ಬೆಂಗಳೂರು ಇವರ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದೆ. ಆದುದರಿಂದ ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ : ಕಾಇ 304 ಎಲ್ಇಟಿ 2016, ಬೆಂಗಳೂರು, ದಿನಾಂಕ : 16-05-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ, ಬೆಂಗಳೂರು ಇಲ್ಲಿಗೆ ಸಂಬಂಧಿಸಿದ ಎಲ್ಲಾ ಟೆಂಡರ್ಗಳನ್ನು ಆಹ್ವಾನಿಸುವ ಪ್ರಾಧಿಕಾರಿಯನ್ನಾಗಿ (Tender Inviting) ನಿರ್ದೇಶಕರು, ಕರ್ನಾಟಕ ರಾಜ್ಯ ಕಾರ್ಮಿಕ ಅಧ್ಯಯನ ಸಂಸ್ಥೆ ಇವರನ್ನು ಮತ್ತು ಟೆಂಡರ್ನ್ನು ಅಂಗೀಕರಿಸುವ ಪ್ರಾಧಿಕಾರಿಯನ್ನಾಗಿ (Accepting Authority) ಕಾರ್ಮಿಕ ಆಯುಕ್ತರು, ಕಾರ್ಮಿಕ ಇಲಾಖೆ ಇವರನ್ನು ಹಾಗೂ ಟೆಂಡರ್ ಮೇಲ್ಮನವಿ ಪ್ರಾಧಿಕಾರಿಯನ್ನಾಗಿ (Appellate Authority) ಸರ್ಕಾರದ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ ಇವರನ್ನು ನೇಮಿಸಿ ಆದೇಶಿಸಿದೆ.
PR – 307
SC - 25
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಎಲ್.ಎಸ್. ಶ್ರೀಕಂಠಬಾಬು ಸರ್ಕಾರದ ಉಪ ಕಾರ್ಯದರ್ಶಿ ಕಾರ್ಮಿಕ ಇಲಾಖೆ
COMMERCE AND INDUSTRIES SECRETARIAT
Sub: Proposal of M/s Anamitra Warehousing Pvt. Ltd., to establish an "warehousing and Inland Container Depot" at Bengaluru North Taluk – reg.
Read : 1) Proceedings of the 19th State High Level Clearnace Committee (SHLCC) meeting
held on 31-08-2009.
2) Government Order No. CI 270 SPI 2009, dated: 29-10-2009.
3) Proceedings of the 25th Land Audit Committee (LAC) meeting held on 29-01-2016.
4) Proceedings of the 90th State Level Single Window Clearance Committee (SLSWCC) meeting held on 01-02-2016.
Preamble:
The project proposal of M/s Anamitra Warehousing Pvt. Ltd., to establish on "warehousing and Inland Container Depot" for modern and mechanized bulk handling inland container Depot having open stacking yard and enclosed warehouses catering to different export oriented sectors in 241 acres 27 guntas of land to be acquired and allotted by KIADB at Maralakunte Village, Jala Hobli, Bengaluru North Taluk was approved in 19th SHLCC meeting held on 31-08-2009. Accordingly Government Order was issued vide Government Order No. CI 270 SPI 2009, dated: 29-10-2009 read at (2) above.
Further, the representative of the company requested 25th Land Audit Committee Meeting held on 29-01-2016 for extension of time to implement the project up to 2026 with the following assistance.
• Land to be acquired and allotted with the right for alienation.
• Permission to deposit 20% of the fees to be paid to KIADB initially, 30% at the stage of final notification and the balance 50% at the time of handling over the land.
• Special Package of Incentives and Concessions under New Industrial Policy 2014-19.
The proposal of the company has been placed before the 25th LAC meeting held on 29-01-2016. The decision of the LAC is as follows.
The Committee noted the above and decided that.
• As per the prevailing land allotment policy of KIADB, land will be allotted only on 99 years lease, hence, their request for allotment of land with the right for alienation cannot be considered.
• The request for staggered payment to KIADB also cannot be considered and they have to pay the same as and when it is demanded.
• No incentives and concessions are available under any prevailing policies of State Government for Ware house and Inland container depot.
The committee after detailed discussion, resolved to recommend to SLSWCC for grant of extension of time for a period of three years.
Government has examined the recommendations made by the 90th State Level Single Window Clearance Committee (SLSWCC) meeting held on 01-02-2016, in all aspects.
Hence the following Order.
GOVERNMENT ORDER No. CI 127 SPI 2016, BENGALURU, DATED: 26.04.2016
Government is pleased to grant extension of time to M/s Anamitra Warehousing Pvt. Ltd., to implement the project approved vide CI 270 SPI 2009, dated: 29-10-2009 for further period of two years from the date of issue of this order.
All other terms and conditions indicated in the Government Order No. CI 270 SPI 2009, Dated: 29-10-2009 read at (2) above, remain unaltered.
By Order and in the name of the Governor of Karnataka P.R. 308
S. UMADEVI
SC. 10
Desk Officer (Technical Cell) (I/c),
Commerce & Industries Department. ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.