ಬೆಂಗಳೂರು, ಗುರುವಾರ, ಜೂನ್ ೨೧, ೨೦೧೮ (ಜ್ಯೇಷ್ಠ ೩೧, ಶಕ ವರ್ಷ ೧೯೪೦)
Bengaluru, Thursday, June 21, 2018 (Jyeishta 31, Shaka Varsha 1940)
ಸಂಪುಟ ೧೫೩
Volume 153
ಸಂಚಿಕೆ ೨೫
Issue 25
ಭಾಗ ೬
ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,
ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ
ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು
ಪ್ರಾಥಮಿಕ ಅಧಿಸೂಚನೆ
ಸಂಖ್ಯೆ:ಕೆ.ಎಸ್.ಎ/ಸಿಆರ್:22/2015-16, ದಿನಾಂಕ: 18-05-2018
ಬೆಂಗಳೂರು ನಗರದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊರಗುಂಟೆಪಾಳ್ಯ, ಜ್ಯೋತಿಬಾಪುಲೆ ಕೊಳಚೆ ಪ್ರದೇಶದ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶದಲ್ಲಿ 75 ಕುಟುಂಬಗಳ 110 ನಿವಾಸಿಗಳು ವಾಸವಿದ್ದು, ಸದರಿ ಪ್ರದೇಶವು ಮನುಷ್ಯ ವಾಸ ಮಾಡಲು ಯೋಗ್ಯವಲ್ಲದ ಹಾಗೂ ಅನಾರೋಗ್ಯಕರ ಪರಿಸ್ಥಿತಿಯಲ್ಲಿರುತ್ತದೆ, ಕುಡಿಯುವ ನೀರು, ಬೀದಿ ದೀಪ, ಶೌಚಾಲಯ ಮುಂತಾದ ಮೂಲಸೌಲಭ್ಯ ಹಾಗೂ ಪುನರ್-ವಸತಿ ಕಲ್ಪಿಸುವ ಅಗತ್ಯವಿರುವುದರಿಂದ ಮತ್ತು ಈ ಪ್ರದೇಶವು ಕೊಳಚೆ ಪ್ರದೇಶದ ಸ್ಥಿತಿಯಲ್ಲಿರುವುದರಿಂದ, ಈ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಸೆಕ್ಷನ್ 3 ರ ಅಡಿಯಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸಲು ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ರವರು ಪತ್ರ ಸಂಖ್ಯೆ:ಕಕೊಅಮ/ಕಂ-2/ ಆರ್-8/38/14-15/229, ದಿನಾಂಕ: 25-6-2015 ರಂತೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ ಹಾಗೂ ತಹಶೀಲ್ದಾರ್, ಬೆಂಗಳೂರು ಉತ್ತರ (ಅಪರ) ತಾಲ್ಲೂಕು ರವರು ಪತ್ರ ಸಂ.ಎಲ್ಎನ್‌ಡಿ(ಎನ್ಎವೈ) ಸಿಆರ್ 223/15-16, ದಿನಾಂಕ: 26-3-2018ರ ವರದಿಯಲ್ಲಿ ಪ್ರಸ್ತಾಪಿತ ಪ್ರದೇಶವು ಕೊಳಚೆ ಪ್ರದೇಶವಾಗಿರುತ್ತದೆ ಎಂದು ವರದಿಸಿರುತ್ತಾರೆ.
ಸರ್ಕಾರದ ಅಧಿಸೂಚನೆ ಸಂಖ್ಯೆ:ವಇ/73/ಕೊಮಂಇ/2001, ದಿನಾಂಕ:26.06.2002 ರಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರದತ್ತ ಮಾಡಲಾಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಕೊಳಚೆ ಪ್ರದೇಶದ ಘೋಷಣೆಗೆ ಕ್ರಮವಹಿಸಲು ಆದೇಶಿಸಲಾಗಿರುತ್ತದೆ.
ಆದ್ದರಿಂದ, ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಕಾಯ್ದೆ 1973ರ ಸೆಕ್ಷನ್ 3ರ ಅಡಿ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ "ಕೊಳಚೆ ಪ್ರದೇಶ" ಎಂದು ಘೋಷಿಸಲು ಉದ್ದೇಶಿಸಲಾಗಿದೆ.
ಮೇಲ್ಕಂಡ ಈ ಕ್ರಮದ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಶೇಷಾದ್ರಿಪುರ, ಬೆಂಗಳೂರು-560020 ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 (ಹದಿನೈದು) ದಿವಸಗಳ ಕಾಲಾವಕಾಶ ನೀಡಲಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೧, ೨೦೧೮ ಭಾಗ ೬ : : ಷೆಡ್ಯೂಲ್ : :ಬೆಂಗಳೂರು ನಗರ, ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊರಗುಂಟೆಪಾಳ್ಯ, ಜ್ಯೋತಿ ಬಾಪುಲೆ ಕೊಳಚೆ ಪ್ರದೇಶದ ಚಕ್ಕುಬಂದಿ
| ಕ .ಸಂ. ್ರ | ಕ ೂಳಚೆ ೆ ಪ್ರದೇಶದ ಹ ಸ ೆ ರು ಮತ್ತು ಸ್ಥಳ | ಆರ್.ಟಿ.ಸಿ.ಯಂತೆ ಮಾಲೀಕರ ಹ ಸ ೆ ರು | ಗ್ರಾಮ | ಸ ರ್ವೆ ನ ಂ. | ವಿಸ್ತೀರ್ಣ [ಎ/ಗು] | ಚ ಕ ು್ಕಬಂದಿಗಳು | |||
| ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ | ||||||
| 1 | ಜ ೂ್ಯೕತಿ ೆ ಬಾಪುಲೆ | ಬಿ.ಡಿ.ಎ. | ಯಲಹಂಕ ಹೋಬಳಿ, ಜಾರಕಬಂಡೆ ಕಾವಲ್ ಗ್ರಾಮ | 10/4 | 0-11 | ಸರ್ವೆ ನಂ.104 & ಸ.ನಂ. 10/17 ರಲ್ಲಿನ ಕಾರ್ಖಾನೆಗಳ ಕಾಂಪೌಂಡ್ | ರ ಸ್ತೆ | ಸರ್ವೆ ನಂ.10/18 ರ ಖಾಲಿ ಜಾಗ | ಗಾರ್ಮೆಂಟ್ಸ್ ಕಾಂಪೌಂಡ್ |
| 1.ಸಿ.ಮಹದೇವಮ್ಮ ಬಿನ್ ವ ುುನಿಯಮ್ಮ 2.ಸಿ.ರಾಧಾಕೃಷ್ಣನ್ | 10/18 | 0-03.08 | |||||||
| 1.ಸಿ.ಮಹದೇವಮ್ಮ ಬಿನ್ ವ ುುನಿಯಮ್ಮ 2.ಸಿ.ರಾಧಾಕೃಷ್ಣನ್ | 10/17 | 0-01 | |||||||
| ಒಟ್ಟು | 0-15.08 |
PR.61
ಕೆ.ಎ. ದಯಾನಂದ
SC.50
ಜಿಲ್ಲಾಧಿಕಾರಿಗಳು,
ಬೆಂಗಳೂರು ಜಿಲ್ಲೆ, ಬೆಂಗಳೂರು.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.