ಸಂಪುಟ ೧೫೩
Volume 153
ಬೆಂಗಳೂರು, ಗುರುವಾರ, ಜುಲೈ ೧೨, ೨೦೧೮ (ಆಷಾಡ ೨೧, ಶಕ ವರ್ಷ ೧೯೪೦)
Bengaluru, Thursday, July 12, 2018 (Ashadha 21, Shaka Varsha 1940)
ಸಂಚಿಕೆ ೨೮
Issue 28
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಸಮಾಜ ಕಲ್ಯಾಣ ಸಚಿವಾಲಯ
ವಿಷಯ : ಶ್ರೀ ರಾಜಶೇಖರ್ ಬಿ. ಅಳ್ಳಗಿ, ಇವರ ಸೇವೆಯನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ
ವಿಲೀನಗೊಳಿಸುವ ಕುರಿತು.
ಓದಲಾಗಿದೆ : 1. ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಇವರ ಏಕ ಕಡತ ಸಂಖ್ಯೆ: ಪವಕನಿ:
ಸಿಬ್ಬಂದಿ:1: ಸಿಆರ್:41/ 2017-18, ದಿ: 17-07-2017.
2. ಆಯುಕ್ತರು ಸಮಾಜ ಕಲ್ಯಾಣ ಇಲಾಖೆ ಇವರ ಪತ್ರ ಸಂಖ್ಯೆ: ಸಕನಿ/ಸಿಬ್ಬಂದಿ-3/ ಸಿಆರ್
05/2018-19, ದಿನಾಂಕ:24-05-2018.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ದಿನಾಂಕ: 17-07-2017ರ ಏಕ ಕಡತದಲ್ಲಿ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರು ಶ್ರೀ ರಾಜಶೇಖರ್ ಬಿ. ಅಳ್ಳಗಿ, ಪ್ರಥಮ ದರ್ಜೆ ಸಹಾಯಕರು (ನಿಯಮ 32) ಸಮಾಜ ಕಲ್ಯಾಣ ಇಲಾಖೆ ಇವರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲಾಖೆಯ ಕಾರ್ಯಕ್ರಮಗಳು/ಯೋಜನೆಗಳ ಬಗ್ಗೆ ಅರಿವಿರುತ್ತದೆ. ಇವರನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ವಿಲೀನಗೊಳಿಸಲು ಕೋರಿರುತ್ತಾರೆ.
ಮೇಲೆ ಕ್ರಮಾಂಕ (2)ರಲ್ಲಿ ಓದಲಾದ ದಿನಾಂಕ:24-05-2018 ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಇವರು ಶ್ರೀ ರಾಜಶೇಖರ್ ಬಿ. ಅಳ್ಳಗಿ, ಇವರು ಸಮಾಜ ಕಲ್ಯಾಣ ಇಲಾಖೆಗೆ ದಿನಾಂಕ: 17-08-1998 ರಲ್ಲಿ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ನೇಮಕ ಹೊಂದಿರುತ್ತಾರೆ. ಇವರು ಹೈದ್ರಾಬಾದ್ ಕರ್ನಾಟಕ ಸ್ಥಳೀಯ ವೃಂದಕ್ಕೆ ಸೇರಿರುತ್ತಾರೆ. ಸದರಿಯವರಿಗೆ ದಿನಾಂಕ: 16-08-2008 ರ ಆದೇಶದಲ್ಲಿ ಪ್ರಥಮ ದರ್ಜೆ ಸಹಾಯಕರ ಹುದ್ದೆಗೆ ನಿಯಮ 32 ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲಾಗಿರುತ್ತದೆ. ಪ್ರಸ್ತುತವು ಸ್ವತಂತ್ರ ಪ್ರಭಾರ ವ್ಯವಸ್ಥೆಯಲ್ಲಿಯೆ ಮುಂದುವರೆದಿರುತ್ತಾರೆ. ಇವರ ಸೇವೆಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಬಿಟ್ಟು ಕೊಡಲು ಸಮಾಜ ಕಲ್ಯಾಣ ಇಲಾಖೆಯ ಸಹಮತಿ ನೀಡಿರುತ್ತಾರೆ.
ಮೇಲಿನ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ, ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಸಕಇ 256 ಪವಯೋ 2017, ಬೆಂಗಳೂರು, ದಿನಾಂಕ: 06-06-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ರಾಜಶೇಖರ್ ಬಿ. ಅಳ್ಳಗಿ, ಪ್ರಥಮ ದರ್ಜೆ ಸಹಾಯಕರು (ನಿಯಮ 32) ಸಮಾಜ ಕಲ್ಯಾಣ ಇಲಾಖೆ ಇವರ ಸೇವೆಯನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕರ್ನಾಟಕ ನಾಗರಿಕ, ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 16(ಎ)ರ ಮೇರೆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ (ವೇತನ ಶ್ರೇಣಿ `. 21,400-42,000/-) ಕೆಳಕಂಡ ಷರತ್ತುಗಳಿಗೊಳಪಟ್ಟು ಖಾಯಂ ವರ್ಗಾವಣೆ ಮೂಲಕ ನೇರ ನೇಮಕಾತಿಗೆ ಮೀಸಲಿರಿಸಿರುವ ಹುದ್ದೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿ ಆದೇಶಿಸಿದೆ.
ಮುಂದುವರೆದು, ಸದರಿಯವರನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯದ ಕೇಂದ್ರ ಕಛೇರಿಯಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ.
ಷರತ್ತುಗಳು :
1. ಸಂಬಂಧಪಟ್ಟ ನೌಕರರು ಸಕ್ರಮವಾಗಿ ನೇಮಕ ಮಾಡಿಕೊಂಡಿರಬೇಕು ಹಾಗೂ ಅವರು ತಮ್ಮ ಮಾತೃ ಇಲಾಖೆಯಲ್ಲಿ ಪರಿವೀಕ್ಷಣಾ ಅವಧಿ/ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರಬೇಕು.
(೬೫೧)೬೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೨, ೨೦೧೮ ಭಾಗ ೧ 2. ಸಂಬಂಧಪಟ್ಟ ನೌಕರರು ಮಾತೃ ಇಲಾಖೆಯ ಹುದ್ದೆಯಲ್ಲಿ ಹೊಂದಿರುವ ವೇತನ ಶ್ರೇಣಿ ಮತ್ತು ಖಾಯಂ ವರ್ಗಾವಣೆ ಮೂಲಕ ನೇಮಿಸಲು ಉದ್ದೇಶಿಸಿರುವ ಹುದ್ದೆಯ ವೇತನ ಶ್ರೇಣಿಗಳು ಸಮ ವೇತನ ಶ್ರೇಣಿಗಳಾಗಿರಬೇಕು.
3. ಸಂಬಂಧಪಟ್ಟ ನೌಕರರು ವರ್ಗಾವಣೆ ಮೂಲಕ ನೇಮಿಸಲು ಉದ್ದೇಶಿಸಿರುವ ಹುದ್ದೆಗೆ ನಿಗಧಿಪಡಿಸಿರಬಹುದಾದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು. ಒಂದು ವೇಳೆ ನಿರ್ದಿಷ್ಟ ಪಡಿಸಲಾದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗದಿದ್ದಲ್ಲಿ ಮುಂದಿನ 2 ವರ್ಷಗಳ ಒಳಗೆ ಉತ್ತೀರ್ಣರಾಗತಕ್ಕದ್ದು.
4. ಸದರಿ ನೌಕರರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ವಿಲೀನಗೊಳಿಸಿರುವುದರಿಂದ ಇವರಿಗೆ ಸೇವಾ ಜೇಷ್ಠತೆಯನ್ನು ಕರ್ನಾಟಕ ಸರ್ಕಾರಿ ನೌಕರರ ಜೇಷ್ಠತೆ ನಿಯಮಗಳು 1957ರ ನಿಯಮ 6 ರ 2ನೇ ಪರಂತುಕದನ್ವಯ ನಿಗಧಿಗೊಳಿಸತಕ್ಕದ್ದು.
5. ನೌಕರರ ಸೇವಾ ಅವಧಿಯಲ್ಲಿ ಒಮ್ಮೆ ಮಾತ್ರ ವರ್ಗಾವಣೆ ಮೂಲಕ ವಿಲೀನಗೊಳಿಸಿದ್ದರಿಂದ ಈ ಅವಕಾಶ ಇರತಕ್ಕದ್ದು. 6. ನೌಕರರು ವರ್ಗಾವಣೆ ಭತ್ಯೆ ಪಡೆಯಲು ಅರ್ಹರಿರುವುದಿಲ್ಲ.
ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಪೂರೈಸುವ ಮುಚ್ಚಳಿಕೆಯ ಪ್ರಮಾಣ ಪತ್ರವನ್ನು ನೌಕರರಿಂದ ಬಾಂಡ್ ಪೇಪರ್ನಲ್ಲಿ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ, ಇವರು ಪಡೆಯತಕ್ಕದ್ದು.
PR-321
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-50
ರಾಜಶ್ರೀ ಹೆಚ್. ಕುಲಕರ್ಣಿ
ಸರ್ಕಾರದ ಅಧೀನ ಕಾರ್ಯದರ್ಶಿ-2
ಸಮಾಜ ಕಲ್ಯಾಣ ಇಲಾಖೆ.
ಇಂಧನ ಸಚಿವಾಲಯ
ವಿಷಯ : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವತಿಯಿಂದ ಅನುಷ್ಠಾನಗೊಳಿಸುತ್ತಿರುವ
ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ ಯೋಜನೆ ಕುರಿತು.
ಓದಲಾಗಿದೆ :
1. ಸರ್ಕಾರದ ಆದೇಶ ಸಂಖ್ಯೆ: ಇಎನ್ 54 ವಿಎಸ್ಸಿ 2014 ದಿ:28.02.2015. 2. ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: ಇಎನ್ 54 ವಿಎಸ್ಸಿ 2014 ದಿ:12.08.2015. 3. ಸರ್ಕಾರದ ಪತ್ರ ಸಂಖ್ಯೆ: ಇಎನ್ 54 ವಿಎಸ್ಸಿ 2014 ದಿ:17.06.2015. 4. ಸರ್ಕಾರದ ಪತ್ರ ಸಂಖ್ಯೆ: ಇಎನ್ 48 ವಿಎಸ್ಸಿ 2016 ದಿ:01.09.2016. 5. ಸರ್ಕಾರದ ಆದೇಶ ಸಂಖ್ಯೆ: ಇಎನ್ 48 ವಿಎಸ್ಸಿ 2016 ದಿ:05.01.2017. 6. ಸರ್ಕಾರದ ಆದೇಶ ಸಂಖ್ಯೆ: ಇಎನ್ 17 ವಿಎಸ್ಸಿ 2017 ದಿ:29.11.2017. 7. ಸರ್ಕಾರದ ಆದೇಶ ಸಂಖ್ಯೆ: ಇಎನ್ 64 ವಿಎಸ್ಸಿ 2018 ದಿ:06.03.2018. 8. ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್ರವರ ಪತ್ರ ಸಂಖ್ಯೆ:ಕೆಆರ್ಇಡಿಎಲ್/07/ಸೋಲಾರ್-2/30-Vol-II-2018/4117
ದಿ:08.06.2018.
ಪ್ರಸ್ತಾವನೆ :
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕ್ರೆಡಲ್) ಮುಖಾಂತರ ಮೇಲೆ ಓದಲಾದ (1) ರಿಂದ (7)ರಂತೆ5 ಹೆಚ್.ಪಿ ಸಾಮರ್ಥ್ಯದ ಸೌರಶಕ್ತಿಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸುವ ಯೋಜನೆಯಡಿ ಮೊದಲನೇ ಹಂತದಲ್ಲಿ 1009 ಸಂಖ್ಯೆಯ ಸೌರಶಕ್ತಿಆಧಾರಿತಜಾಲಮುಕ್ತ ನೀರಾವರಿ ಪಂಪ್ಸೆಟ್ಗಳ ಅನುಷ್ಠಾನ ಕಾರ್ಯಕ್ರಮವನ್ನು ರಾಜ್ಯದ ಆಯ್ದ 11 ತಾಲ್ಲೂಕುಗಳಲ್ಲಿ, ಎರಡನೇ ಹಂತದಲ್ಲಿ 1530 ಸಂಖ್ಯೆಯ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು 48 ತಾಲ್ಲೂಕುಗಳಲ್ಲಿ ಮತ್ತು ಮೂರನೇ ಹಂತದಲ್ಲಿ 901 ಸಂಖ್ಯೆಯ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು 32 ತಾಲ್ಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಮೇ-2018ರ ಅಂತ್ಯಕ್ಕೆ ಮೊದಲನೇ ಹಂತದಲ್ಲಿ 984 ಸಂಖ್ಯೆ, ಎರಡನೇ ಹಂತದಲ್ಲಿ 371 ಸಂಖ್ಯೆ ಮತ್ತು ಮೂರನೇ ಹಂತದಲ್ಲಿ 07 ಸಂಖ್ಯೆಯ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು ಮಾತ್ರ ಅಳವಡಿಸಿ ಕಾರ್ಯಾರಂಭ ಮಾಡಲಾಗಿದೆ. ಸದರಿ ಯೋಜನೆಯು ವರ್ಷ 2014-15ರಲ್ಲಿ ಪ್ರಾರಂಭಗೊಂಡಿದ್ದರೂ ಕೂಡ ಇದುವರೆವಿಗೂ ಫಲಾನುಭವಿಗಳ ಗುರುತಿಸುವಿಕೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಯೋಜನೆಯನ್ನು ನಿಗಧಿತ ಸಮಯದೊಳಗೆ ಕಾರ್ಯಗತಗೊಳಿಸಲು ಸಾಧ್ಯವಾಗದೇ, ಸದರಿ ಯೋಜನೆಗೆ ಹಂಚಿಕೆಯಾಗಿರುವ ಕೇಂದ್ರ/ರಾಜ್ಯ ಸರ್ಕಾರದ ಅನುದಾನವನ್ನು ಪೂರ್ಣಮಟ್ಟದಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಯೋಜನೆಯ ಅನುಷ್ಠಾನಕ್ಕಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಪಟ್ಟಿಯನ್ನು ಕ್ರೆಡಲ್ ಸಂಸ್ಥೆಗೆ ಸಲ್ಲಿಸುವುದು ವಿದ್ಯುತ್ ಸರಬರಾಜು ಕಂಪನಿಗಳ ಜವಾಬ್ದಾರಿಯಾಗಿದ್ದು, ಈ ಸಂಬಂಧ ಸರ್ಕಾರ/ಕ್ರೆಡಲ್ ಸಂಸ್ಥೆಯಿಂದ ಹಲವಾರುಪತ್ರ/ನೆನೆಪೋಲೆಗಳನ್ನು ಕಳುಹಿಸಿದ್ದರೂ ಕೂಡ ಫಲಾನುಭವಿಗಳನ್ನು ಗುರುತಿಸುವಲ್ಲಿ ನಿರೀಕ್ಷಿತ ಪ್ರಗತಿ ಕಂಡುಬಂದಿರುವುದಿಲ್ಲ.
ಮುಂದುವರೆದು, ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್ರವರು ಮೇಲೆ ಓದಲಾದ (8) ರಲ್ಲಿ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಎಂ.ಎನ್.ಆರ್.ಇ.ರವರಿಂದ ಅನುಮೋದನೆಯಾಗಿರುವ ಸಹಾಯಧನವನ್ನು ದಿನಾಂಕ:30.09.2018ರೊಳಗೆ ಉಪಯೋಗಮಾಡಿಕೊಳ್ಳಬೇಕಾಗಿರುತ್ತದೆ ಎಂದು ತಿಳಿಸಿರುತ್ತಾರೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೨, ೨೦೧೮ ೬೫೩ಸದರಿ ಯೋಜನೆಯ ಅನುಷ್ಠಾನಕ್ಕೆ ತಾಲ್ಲೂಕುವಾರು ಹಂಚಿಕೆಯನ್ನು ಸರ್ಕಾರದಿಂದ ನೀಡಿರುವುದರಿಂದ, ಹಂಚಿಕೆ ನೀಡಿರುವ ಕೆಲವು ತಾಲ್ಲೂಕುಗಳಲ್ಲಿ ನೀರಿನ ಮಟ್ಟ ತೃಪ್ತಿಕರವಾಗಿರದೇ ಇರುವುದರಿಂದ ಹಾಗೂ ಕೆಲವು ತಾಲ್ಲೂಕುಗಳಲ್ಲಿ ಹಂಚಿಕೆ ನೀಡಿರುವ ಸಂಖ್ಯೆಗನುಗುಣವಾಗಿ ಫಲಾನುಭವಿಗಳು ದೊರೆಯದೇ ಇರುವುದರಿಂದ ಹಾಗೂ ಇನ್ನಿತರೇ ತಾಂತ್ರಿಕ ಕಾರಣಗಳಿಂದಾಗಿ ಫಲಾನುಭವಿಗಳನ್ನು ಗುರುತಿಸುವಿಕೆಯಲ್ಲಿ ಆಗುತ್ತಿರುವ ವಿಳಂಬವನ್ನು ಸರ್ಕಾರವು ಮನಗಂಡು, ತಾಲ್ಲೂಕುವಾರು ಹಂಚಿಕೆ ನೀಡುವ ಬದಲಾಗಿ ರಾಜ್ಯ ವ್ಯಾಪ್ತಿಯ ಯಾವ ಭಾಗದಲ್ಲಾದರೂ ಸದರಿ ಯೋಜನೆಯ ಅನುಷ್ಠಾನಕ್ಕಾಗಿ ಕಾರ್ಯಸಾಧ್ಯತೆ ಇದ್ದು, ಯೋಜನೆಯ ಷರತ್ತುಗಳಿಗನುಗುಣವಾಗಿ ಅನುಷ್ಠಾನಕ್ಕಾಗಿ ಆಸಕ್ತಿ ತೋರುವ ರೈತರಿಗೆ ನೇರವಾಗಿ ಜಾಲಮುಕ್ತ ಸೌರ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸಲು ನಿರ್ಧರಿಸಿ ಈ ಕೆಳಗಿನಂತೆ ಆದೇಶಿಸಿದೆ:
ಸರ್ಕಾರಿ ಆದೇಶ ಸಂಖ್ಯೆ : ಇಎನ್ 63 ವಿಎಸ್ಸಿ 2018, ಬೆಂಗಳೂರು, ದಿನಾಂಕ : 12.06.2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವತಿಯಿಂದ ಸೌರಶಕ್ತಿ ಆಧಾರಿತಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸುವ ಯೋಜನೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಫಲಾನುಭವಿಗಳನ್ನು ಹೊರತುಪಡಿಸಿ ಬಾಕಿ ಇರುವ ಸೌರ ಪಂಪ್ಸೆಟ್ಗಳನ್ನು ಮೊದಲು ಬಂದವರಿಗೆ ಮೊದಲ ಆಧ್ಯತೆ ಮೇರೆಗೆ ಕ್ರೆಡಲ್ ವತಿಯಿಂದ ನೇರವಾಗಿ ಹಂಚಿಕೆ ನೀಡಲು ಈ ಕೆಳಕಂಡ ಷರತ್ತಿಗೊಳಪಟ್ಟು ಆದೇಶಿಸಿದೆ.
1. ಯೋಜನೆಯ ಹಂಚಿಕೆಗಾಗಿ ಅನ್ವಯವಾಗುವ ಶುಲ್ಕ ಪಾವತಿ, ಹಂಚಿಕೆಗಾಗಿ ವರ್ಗಾವಾರು ಬಾಕಿ ಇರುವ ಜಾಲಮುಕ್ತ ನೀರಾವರಿ ಸೌರ ಪಂಪ್ಸೆಟ್ಗಳ ಸಂಖ್ಯೆ, ಯೋಜನೆ ಹಂಚಿಕೆಗಾಗಿ ಸಲ್ಲಿಸಬೇಕಾದ ಪ್ರಮುಖ ವಿವರ/ದಾಖಲೆಗಳುವೆಬ್ಸೈಟ್ನಲ್ಲಿಯೇ ದೊರೆಯಲು ಕ್ರಮ ಕೈಗೊಂಡು ಹಂಚಿಕೆಯನ್ನು ಕ್ರೆಡಲ್ ಸಂಸ್ಥೆಯಿಂದ ಆನ್ಲೈನ್ ಮುಖಾಂತರ ಮಾಡುವುದು.
2. ಫಲಾನುಭವಿಗಳ ಗುರುತಿಸುವಿಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು.
3. ಯೋಜನೆಯ ಅನುಷ್ಠಾನವು ಈಗಾಗಲೇ ವಿಳಂಬವಾಗಿರುವುದರಿಂದ, ವಿದ್ಯುತ್ ಸರಬರಾಜು ಕಂಪನಿಗಳು ನಿರ್ವಹಿಸಬೇಕಾದ ಪಾತ್ರವನ್ನು ಸಂಬಂಧಿಸಿದ ಅಧಿಕಾರಿಗಳು ತ್ವರಿತವಾಗಿ ನಿರ್ವಹಿಸುವುದು.
ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ ಯೋಜನೆಯ ಮೇಲೆ ಓದಲಾದ (1) ರಿಂದ (7) ರ ಆದೇಶಗಳಲ್ಲಿನ ಅನುಷ್ಠಾನ ಕಾರ್ಯಚಟುವಟಿಕೆಗಳು, ಕ್ರೆಡಲ್ ಪಾತ್ರ, ವಿದ್ಯುತ್ ವಿತರಣಾ ಕಂಪನಿಗಳ ಪಾತ್ರ ಹಾಗೂ ಘಟಕದ ನಿರ್ವಹಣೆ ಕುರಿತಂತೆ ಯಾವುದೇ ಬದಲಾವಣೆ ಇರುವುದಿಲ್ಲ.
P.R. 323
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ S.C. 50
ಬಿ.ವಿ.ಶ್ರೀನಿವಾಸಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ,
INFORMATION TECHNOLOGY, BIO-TECHNOLOGY & SCIENCE &TECHNOLOGY SECRETARIAT
Subject : Appointment of Nodal Officer for Startup eco-system development in the State of
Karnataka -reg.
Reference : 1) Government Order No. ITD 27 PRM 2015 dated 27-11-2015
2) Government Order No. ITD 02 PRM 2016 dated 15-03-2016
3) Government Order No. ITD 01 PRM 2016 dated 29-03-2016
PREAMBLE :
In Government Order read at (1) above, Karnataka Startup Policy 2015-2020 has been announced The objective of the Policy is to promote innovation and to encourage the growth of Startups, particularly to stimulate the growth of technology based Startups and to build a robust Startup eco- system in the State.
2. In Government Order read at (2) above a Startup Policy Monitoring and Review Committee under the Chairmanship of Chief Secretary has been constituted to review the implem entation of various strategies and programs enumerated in the Policy from time to time and make necessary suggestions for effective implementation. ACS and Development Commissioner and Principal Secretary - IT.BT and S&T are among the members of the Committee and MD-KBITS is the Convener.
3. In Government Order read at (3) above a Starup Council under the Chairmanship of Hon'ble Chief Minister has been constituted with Hon'ble Ministers for Large and Medium Industries. IT. BT and S&T Agriculture,Health & Family Welfare Food and Civil Supplies, Higher Education and Chief Secretary among the members of the Council. The Industry and academia representatives are also included in the 39 member Startup Council. The Director-IT & BT and MD-KBITS is the convener of the Startup Council.
4. Department of IT. BT and S&T is the nodal agency for Implementation of Karnataka Startup Policy 2015-2020 A startup Cell has been established in KBITS to act a one-stop-shop in Order to enable easy flow of information and to assist the needy Startups Whereas the above arrangem ent shall meet the day to day needs of Startups in the eco-system. there is a need for appointing Secretary level officer for coordinating any inter-department issues with secretaries of other Departments. Therefore Government has decided to make Principal Secretary, Department of IT. BT and S &T as the State Nodal Officer for develpoment of Startup eco-system in Karnataka. The State Nodal Officer for the Startup Policy will enable development. of a culture of innovation, Knowledge creation, technology-driven processes enterpreneurship etc., to further foster the Startup eco-system.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೬೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೨, ೨೦೧೮ ಭಾಗ ೧ Hence the OrderGOVERNMENT ORDER No. ITD 11 PRM 2018, BENGALURU, DATED 20th APRIL, 2018.
5. In the circumstances explained in the preamble Government is pleased to appoint Principal Secretary Department of IT. BT & S &T as the Nodal Officer for the Startup eco-system development in the state of karnataka.
By Order and in the Name of the Governor of Karnataka, PR. 317
Shidramappa H. Talawar
Under Secretary to Governm ent,
Department of IT. BT and S &T.
ನಗರಾಭಿವೃದ್ಧಿ ಸಚಿವಾಲಯ
ವಿಷಯ : ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಹುದ್ದೆಯನ್ನು ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಉಪ ನಿರ್ದೇಶಕರ ಹುದ್ದೆಗೆ ಉನ್ನತೀಕರಿಸುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ : ನಅಇ 320 ಬೆಂರೂಪ್ರ 2016, ದಿನಾಂಕ: 03.06.2017.
2. ಆಯುಕ್ತರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಇವರ ಪತ್ರ ಸಂಖ್ಯೆ: ಟಿಯುಡಿಎ/
ಎಡಿಎಂ/ಸಿಆರ್/2229/2017-18, ದಿನಾಂಕ: 29.11.2017.
ಪ್ರಸ್ತಾವನೆ :
ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಒಂದು ಹುದ್ದೆಯನ್ನು ದಿನಾಂಕ: 04.11.2016 ರಿಂದ ಒಂದು ವರ್ಷದ ಅವಧಿಗೆ ಅನ್ವಯವಾಗುವಂತೆ ಮುಂದುವರೆಸಿ ಆದೇಶಿಸಲಾಗಿರುತ್ತದೆ.
ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಪತ್ರದಲ್ಲಿ, ಆಯುಕ್ತರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ತುಮಕೂರು ರವರು ಪ್ರಾಧಿಕಾರದ ಸಭೆಯ ದಿನಾಂಕ: 29.11.2017ರ ವಿಷಯ ಸಂಖ್ಯೆ: 108ರಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ನಗರ ಮತ್ತು ಗ್ರಾಮಾಂತರ ಯೋಜನಾ ಸಹಾಯಕ ನಿರ್ದೇಶಕರ ಹುದ್ದೆಯನ್ನು ಮುಂದಿನ ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ಉಪ ನಿರ್ದೇಶಕರ ಶ್ರೇಣಿಯ ಹುದ್ದೆಗೆ ಉನ್ನತೀಕರಿಸಿ, ಸದರಿ ಶ್ರೀ ಕೆ.ಎನ್. ನಾಗರಾಜ್ ಇವರನ್ನು ಸ್ವಂತ ವೇತನ ಶ್ರೇಣಿಯ ಮೇಲೆ ಪದೋನ್ನತಿ ನೀಡಿ ಸ್ಥಳ ನಿಯುಕ್ತಿಗೊಳಿಸಿ, ಮುಂದುವರೆಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿರುವುದರಿಂದ ಅದರಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.
ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ನಅಇ 270 ಬೆಂರೂಪ್ರಾ 2017, ಬೆಂಗಳೂರು, ದಿನಾಂಕ; 01.12.2017.
ಪ್ರಸ್ರಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಹಾಲಿ ತಾತ್ಕಾಲಿಕವಾಗಿ ಮಂಜೂರಾಗಿರುವ ದಿನಾಂಕ: 03.06.2017 ರಲ್ಲಿ ದಿನಾಂಕ: 07.06.2017 ರಿಂದ ಒಂದು ವರ್ಷದ ಅವಧಿಗೆ ಮುಂದುವರೆಸಿರುವ ಸದರಿ ಸಹಾಯಕ ನಿರ್ದೇಶಕರ ಹುದ್ದೆಯನ್ನು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಉಪ ನಿರ್ದೇಶಕರ ಹುದ್ದೆಗೆ ತಾತ್ಕಾಲಿಕವಾಗಿ ಉನ್ನತೀಕರಿಸಿ ಹಾಗೂ ಮುಂದುವರೆಸಿ ಆದೇಶಿಸಿದೆ.
ಷರತ್ತುಗಳು :
1. ಪ್ರಾಧಿಕಾರದಲ್ಲಿ ಉಪ ನಿರ್ದೇಶಕರಾಗಿ ಉನ್ನತೀಕರಿಸುವ ಹುದ್ದೆಗೆ ತಗಲುವ ಎಲ್ಲಾ ವೆಚ್ಚಗಳನ್ನು ಪ್ರಾಧಿಕಾರದಿಂದಲೇ ಭರಿಸತಕ್ಕದ್ದು. ಹಾಗೂ ಸರ್ಕಾರದಿಂದ ಯಾವುದೇ ಅನುದಾನವನ್ನು ಕೋರತಕ್ಕದ್ದಲ್ಲ.
2. ಪ್ರಾಧಿಕಾರದಲ್ಲಿ ಉಪ ನಿರ್ದೇಶಕರಾಗಿ ಉನ್ನತೀಕರಿಸುವ ಹುದ್ದೆಯು ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ಅಥವಾ ಸ್ಮಾರ್ಟ್ಸಿಟಿ ಯೋಜನೆಯ ಕಾಮಗಾರಿಯ ಪ್ರಕಿಯೆ ಮುಗಿಯುವವರೆಗೆ ಈ ಎರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಮಾತ್ರ ಉನ್ನತೀಕರಿಸಿದೆ.
ಈ ಆದೇಶವನ್ನು ಆಂತರಿಕ ಆರ್ಥಿಕ ಸಲಹೆಗಾರರ ಹಿಂಬರಹ ಸಂಖ್ಯೆ: ವನಇ 320 ಆಂಆಸ 2017, ದಿನಾಂಕ: 30-11-2017 ರನ್ವಯ ಹೊರಡಿಸಲಾಗಿದೆ.
PR.-318
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50
ನಾಗರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.