Servants of Knowledge
Karnataka Gazette · Government of Karnataka

Karnataka Gazette, Part Part-1, 02 August 2018

Published 02 August 2018

Part
Part-1
Identifier
in.gazette.karnataka_new.2018-08-02.Part-1
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಆಗಸ್ಟ್ ೨, ೨೦೧೮ (ಶ್ರಾವಣ ೧೧, ಶಕ ವರ್ಷ ೧೯೪೦)

Bengaluru, Thursday, August 2, 2018 (Shravana 11, Shaka Varsha 1940)

ಸಂಚಿಕೆ ೩೧

Issue 31

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಂದಾಯ ಸಚಿವಾಲಯ

ವಿಷಯ : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿರುವ ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಚಲ್ಲಘಟ್ಟ ಗ್ರಾಮದ ಸ.ನಂ.16 ರಲ್ಲಿ 112-00 ಎಕರೆ ಮತ್ತು ಕೋಡಿಹಳ್ಳಿ ಗ್ರಾಮದ ಸ.ನಂ.145ರಲ್ಲಿ 12-00 ಎಕರೆ ಒಟ್ಟು 124-00 ಎಕರೆ ಜಮೀನಿನ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಬಗ್ಗೆ.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 38 ಟಿಟಿಟಿ 1980 ದಿನಾಂಕ: 17.05.1980.

2) ಸರ್ಕಾರದ ಆದೇಶ ಸಂಖ್ಯೆ: ಟಿಡಿ 68 ಟಿಟಿಸಿ 2009 ದಿನಾಂಕ: 24.10.2013.

3) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪ್ರವಾಸೋದ್ಯಮ ಇಲಾಖೆ ಇವರ ಪತ್ರ ಸಂಖ್ಯೆ: ಪ್ರಇ 25 ಪ್ರವಾನಿ 2014 ದಿನಾಂಕ: 19.04.2004.

4) ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ(ಪೂ)/ಸಿಆರ್/46/2011-12 ದಿನಾಂಕ: 26.02.2016.

5) ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಗಳು ದಿನಾಂಕ: 19-02-2016.

6) ಸರ್ಕಾರದ ಪ್ರಧಾನ ಕಾರ್ಯದರ್ಶಿ ಪ್ರವಾಸೋದ್ಯಮ ಇಲಾಖೆ ಇವರ ಅರೆ ಸರ್ಕಾರಿ ಪತ್ರ ಸಂಖ್ಯೆ: ಪ್ರಇ 110 ಪ್ರವಾನಿ 2013 ದಿನಾಂಕ: 21.06.2016.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಒಳಾಡಳಿತ ಇಲಾಖೆ ಸರ್ಕಾರಿ ಆದೇಶ ಸಂಖ್ಯೆ: 17-05-1980ರ ಆದೇಶದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಚಲ್ಲಘಟ್ಟ ಗ್ರಾಮದ ಸುಮಾರು 121-00 ಎಕರೆ ಕೆರೆ ಅಂಗಳದ ಜಮೀನನ್ನು ಸರ್ವೇ ಮಾಡುವ ಷರತ್ತಿಗೊಳಪಟ್ಟು ಹಾಗೂ ಸಾಂಕೇತಿಕ ಗುತ್ತಿಗೆ ಮೊತ್ತವನ್ನು ಮುಂದೆ ತೀರ್ಮಾನಿಸಲಾಗುವುದೆಂದು ನಮೂದಿಸಿ 30 ವರ್ಷಗಳ ಅವಧಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಗುತ್ತಿಗೆ ಮೇಲೆ ನೀಡಲಾಗಿದೆ. ಸದರಿ ಆದೇಶದ ಪ್ರಸ್ತಾವನೆಯ ಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಒಂದು ಗಾಲ್ಫ್ ಕೋರ್ಸ್‌ನ್ನು ಅಭಿವೃದ್ಧಿ ಪಡಿಸುವ ಸಲುವಾಗಿ ಸದರಿ ಕೆರೆ ಅಂಗಳದ ಜಮೀನನ್ನು ನೀಡಲಾಗಿದೆ. ಈ ಸಂಬಂಧ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಮತ್ತು ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ನಡುವೆ ಒಪ್ಪಂದಗಳಾಗಿದ್ದು, ಕರ್ನಾಟಕ ಗಾಲ್ಫ್ ಅಸೋಸಿಯೇಷನ್‌ಗೆ ಪ್ರಸ್ತಾಪಿತ ಜಮೀನಿಗೆ ಪ್ರತಿ ಎಕರೆಗೆ ರೂ.1.00 ರಂತೆ ಗುತ್ತಿಗೆ ದರ ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪ್ರವಾಸೋದ್ಯಮ ಇಲಾಖೆಯ ಆದೇಶ ದಿನಾಂಕ: 24.10.2013 ರಲ್ಲಿ ದಿನಾಂಕ: 13-06-2012ರ ಸಚಿವ ಸಂಪುಟದ ಸಭೆಯಲ್ಲಿ ನಿರ್ಣಯಿಸಿರುವಂತೆ, ಪ್ರಸ್ತಾಪಿತ ಜಮೀನಿನ ಗುತ್ತಿಗೆ ಅವಧಿಯನ್ನು ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಯು ಅದರ ವಾರ್ಷಿಕ ಆದಾಯದಲ್ಲಿ ಶೇಕಡ 2 ಪಾವತಿಸುವ ಷರತ್ತಿಗೊಳಪಟ್ಟು ದಿನಾಂಕ: 17.05.2010 ರಿಂದ ಜಾರಿಬರುವಂತೆ 30 ವರ್ಷಗಳ ಅವಧಿಗೆ ಹೊಸದಾಗಿ ಗುತ್ತಿಗೆ ಅವಧಿಯನ್ನು ನವೀಕರಿಸಿ ಆದೇಶಿಸಲಾಗಿದೆ. ಸದರಿ ಆದೇಶದಲ್ಲಿ ಕಂದಾಯ ಇಲಾಖೆಯು ಈ ಕೆಳಕಂಡ ಅಂಶಗಳಿಗೆ ಕ್ರಮವಹಿಸುವಂತೆ ತಿಳಿಸಲಾಗಿದೆ.

ಎ) ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮಕ್ಕೆ ದಿನಾಂಕ: 17.05.2010 ರಿಂದ ಜಾರಿ ಬರುವಂತೆ 30 ವರ್ಷಗಳ ಅವಧಿಗೆ ಈ ಹಿಂದಿನ ಆದೇಶದಲ್ಲಿ ವಿಧಿಸಲಾಗಿದ್ದ ಷರತ್ತುಗಳನ್ನು ಅನ್ವಯಿಸಿ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಕುರಿತು ಕಂದಾಯ ಇಲಾಖೆಯು ಕ್ರಮವಹಿಸುವುದು.

(೬೬೧)೬೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨, ೨೦೧೮ ಭಾಗ ೧ ಬಿ) ಕಂದಾಯ ಇಲಾಖೆ ಸದರಿ ಜಮೀನಿನ ಮರು ಸರ್ವೆ ಮಾಡಿದ ನಂತರ ಸದರಿ ಸರ್ವೆ ಅಳತೆಗಳಿಗನುಗುಣವಾಗಿ ಗುತ್ತಿಗೆ ಕರಾರನ್ನು ಆ ಪ್ರಕಾರ ಪರಿಷ್ಕರಿಸುವುದು.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಪತ್ರದಲ್ಲಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ ಇವರ ದಿನಾಂಕ:

19-04-2014ರ ಪತ್ರದಲ್ಲಿ ಪ್ರಸ್ತಾಪಿತ ಜಮೀನನ್ನು 30 ವರ್ಷಗಳ ಅವಧಿಗೆ ಮಾತ್ರ ಗುತ್ತಿಗೆಗೆ ನೀಡಲು ಆದೇಶವಾಗಿದ್ದು, ಸದರಿ ಕಾಲಾವಧಿಯು ದಿನಾಂಕ: 16-05-2010ಕ್ಕೆ ಮುಕ್ತಾಯಗೊಂಡಿರುತ್ತದೆ ಎಂದು ಹಾಗೂ ಸರ್ಕಾರದ ಆದೇಶದ ದಿನಾಂಕ: 24-10-2013 ರಲ್ಲಿ ಗುತ್ತಿಗೆ ಅವಧಿಯನ್ನು ದಿನಾಂಕ: 17-05-2010 ರಿಂದ ಮುಂದಿನ 30 ವರ್ಷಗಳ ಅವಧಿಯವರೆಗೆ ನವೀಕರಿಸಿ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಕಂದಾಯ ಇಲಾಖಾ ವತಿಯಿಂದ ಗುತ್ತಿಗೆ ಅವಧಿಯನ್ನು ನವೀಕರಿಸಿ ಆದೇಶ ಹೊರಡಿಸಿಲ್ಲವಾದ್ದರಿಂದ ದಿನಾಂಕ: 24-10-2013ರ ಆದೇಶದಲ್ಲಿನ ನಿಬಂಧನೆಯಂತೆ ಕಂದಾಯ ಇಲಾಖೆಯಿಂದ ಪ್ರಸ್ತಾಪಿತ ಜಮೀನನ್ನು ಗುತ್ತಿಗೆ ಮೇಲೆ ನೀಡುವುದು ಹಾಗೂ ಈ ಪ್ರದೇಶದ ರಿ.ಸರ್ವೆ ಮಾಡುವುದು ಅವಶ್ಯವಾಗಿರುತ್ತದೆಂದು ಈ ಬಗ್ಗೆ ಕ್ರಮ ವಹಿಸುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ, ಇವರ ದಿನಾಂಕ: 02-03-2016ರ ಹಾಗೂ ದಿನಾಂಕ:

12/17-05-2016 ಪತ್ರಗಳಲ್ಲಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಂತೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಗುತ್ತಿಗೆ ಆಧಾರದ ಮೇಲೆ ನೀಡಿರುವ ಕೆರೆ ಅಂಗಳದ ಜಮೀನನ್ನು ಭೂ ಮಾಪನ ಇಲಾಖೆಯ ಉಪ ನಿರ್ದೇಶಕರಿಂದ ಅಳತೆ ಮಾಡಿಸಿ ಕೆರೆ ಒತ್ತುವರಿ ಸದನ ಸಮಿತಿಗೆ ನೀಡಿರುವ ಮಾಹಿತಿ ಪ್ರಕಾರ ಈ ಕೆಳಗಿನಂತೆ ಮಾಹಿತಿ ನೀಡಿರುತ್ತಾರೆ :-

(1) ಚಲ್ಲಘಟ್ಟ ಸ.ನಂ.16 ರಲ್ಲಿನ 112-00 ಎಕರೆ ಪೈಕಿ ಖಾಸಗಿ ಒತ್ತುವರಿ 1-03 ಎಕರೆ ಮತ್ತು ಸರ್ಕಾರಿ ಒತ್ತುವರಿ 8-09

ಎಕರೆ ಆಗಿದ್ದು, ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ರವರ ಅನುಭವದಲ್ಲಿ 102-32.08 ಎಕರೆ ಜಮೀನು ಇದೆ;

ಹಾಗೂ

(2) ಕೋಡಿಹಳ್ಳಿ ಸ.ನಂ.145 ರಲ್ಲಿನ 12-03 ಎಕರೆ ಪೈಕಿ ಖಾಸಗಿ ಒತ್ತುವರಿ 1-18 ಎಕರೆ ಮತ್ತು ಸರ್ಕಾರಿ ಒತ್ತುವರಿ 1-18

ಎಕರೆ ಆಗಿದ್ದು, ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ರವರ ಅನುಭವದಲ್ಲಿ 9-07 ಎಕರೆ ಜಮೀನು ಇದೆ, ಅಂದರೆ,

ಒಟ್ಟು 124-00 ಎಕರೆ ಪೈಕಿ ಸದರಿ ಅಸೋಸಿಯೇಷನ್ ರವರ ಅನುಭವದಲ್ಲಿ 111-39.08 ಎಕರೆ ಜಮೀನಿದೆ ಎಂದು

ತಿಳಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ಸರ್ಕಾರದ ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 19-02-2016 ರಂದು ನಡೆದ ಸಭೆಯ ನಡವಳಿಯಲ್ಲಿ ಪ್ರಸ್ತಾಪಿತ ಜಮೀನಿನ ಸ್ವರೂಪ ಮತ್ತು ಜಿಲ್ಲಾಧಿಕಾರಿಯವರು ನೀಡುವ ವರದಿಯನ್ನು ಆಧರಿಸಿ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲು ತೀರ್ಮಾನಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪ್ರವಾಸೋದ್ಯಮ ಇಲಾಖೆ ಇವರ ದಿನಾಂಕ: 21-06-2016ರ ಪತ್ರದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಚಲ್ಲಘಟ್ಟ ಗ್ರಾಮದ ಸ.ನಂ.16 ರಲ್ಲಿ 112-00 ಎಕರೆ ಮತ್ತು ಕೋಡಿಹಳ್ಳಿ ಗ್ರಾಮದ ಸ.ನಂ.145 ರಲ್ಲಿ 12-00 ಎಕರೆ ಒಟ್ಟು 124-00 ಎಕರೆ ಜಮೀನನ್ನು ಕರ್ನಾಟಕ ಗಾಲ್ಫ್ ಅಸೋಷಿಯೇಷನ್ ಇವರಿಗೆ ನೀಡಿರುವ ಗುತ್ತಿಗೆ ಅವಧಿಯನ್ನು ವಿಸ್ತರಿಸುವುದಕ್ಕೆ ಸಂಬಂಧಿಸಿದಂತೆ ದಿನಾಂಕ: 15-06-2016 ರಂದು ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ಈ ವಿಷಯದ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಪಡೆಯುವುದು ಸೂಕ್ತವಾಗಿದೆ ಎಂದು ಈ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ. ಪ್ರಸ್ತಾಪಿತ ಪ್ರಸ್ತಾವನೆಗೆ ಕಾನೂನು ಇಲಾಖೆಯ ಅಭಿಪ್ರಾಯ ಪಡೆಯಲಾಗಿದೆ.

ಬೆಂಗಳೂರು ಪೂರ್ವ ತಾಲ್ಲೂಕು ವರ್ತೂರು ಹೋಬಳಿ ಚಲ್ಲಘಟ್ಟ ಗ್ರಾಮದ ಸ.ನಂ.16 ರಲ್ಲಿ 112-00 ಎಕರೆ ಮತ್ತು ಕೋಡಿಹಳ್ಳಿ ಗ್ರಾಮದ ಸ.ನಂ.145ರಲ್ಲಿ 12-00 ಎಕರೆ ಒಟ್ಟು 124-00 ಎಕರೆ ಜಮೀನಿನ ಪೈಕಿ ಸರ್ಕಾರಿ ಉಪಯೋಗದಲ್ಲಿರುವ 9-27 ಎಕರೆ ಮತ್ತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ 1-30 ಎಕರೆ ಜಮೀನುಗಳಿಗೆ ಸಂಬಂಧಿಸಿದಂತೆ ಸರ್ಕಾರ/ನ್ಯಾಯಾಲಯದ ಅಂತಿಮ ಆದೇಶಗಳ ತೀರ್ಪಿಗೆ ಒಳಪಟ್ಟು ದಿನಾಂಕ: 17-05-2010 ರಿಂದ ಜಾರಿಗೆ ಬರುವಂತೆ ಅನ್ವಯಿಸಿ 30 ವರ್ಷಗಳ ಅವಧಿಗೆ ಅಂತರರಾಷ್ಟ್ರೀಯ ಮಟ್ಟದ ಗಾಲ್ಫ್ ಕೋರ್ಸ್ ಅನ್ನು ಯಥಾಸ್ಥಿತಿಯಲ್ಲಿ ನಡೆಸಿಕೊಂಡು ಹೋಗುವ ಸಲುವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮಕ್ಕೆ ಗುತ್ತಿಗೆಯನ್ನು ನವೀಕರಿಸಿ ಸರ್ಕಾರಿ ಆದೇಶವನ್ನು ಹೊರಡಿಸಲು ಈಗ ಉದ್ದೇಶಿಸಲಾಗಿದೆ.

ಮುಂದುವರೆದು, ಸರ್ಕಾರಿ ಆದೇಶ ಸಂಖ್ಯೆ: ಟಿಡಿ 68 ಟಿಟಿಸಿ 2009, ದಿನಾಂಕ: 24-10-2013 ರನ್ವಯ ಈಗಾಗಲೇ ಗುತ್ತಿಗೆ ಅವಧಿಯನ್ನು ಕೆ.ಜಿ.ಎ. ಪರವಾಗಿ ನವೀಕರಿಸಲಾಗಿದೆ. ಮುಂದೆ ಪ್ರಸ್ತಾಪಿತ ಜಮೀನಿನಲ್ಲಿ ಯಾವುದೇ ಕಟ್ಟಡ ಹಾಗೂ ನಿರ್ಮಿತಿಗಳನ್ನು ನಿರ್ಮಾಣ ಮಾಡದಂತೆ ಪ್ರತಿಬಂಧಿಸಿ, ಯಥಾಸ್ಥಿತಿಯನ್ನು ಕಾಪಾಡುವಂತೆ ಷರತ್ತು ವಿಧಿಸಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ ಇವರಿಗೆ ಹಸ್ತಾಂತರಿಸುವ ಕುರಿತು ಈಗ ಪ್ರಸ್ತಾಪಿಸಲಾಗಿದೆ.

ಈ ಮೇಲ್ಕಂಡ ಹಿನ್ನೆಲೆಯಲ್ಲಿ ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ. ಆರ್‌ಡಿ 41 ಎಲ್‌ಜಿಬಿ 2014, ಬೆಂಗಳೂರು, ದಿನಾಂಕ: 05-03-2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪ್ರವಾಸೋದ್ಯಮ ಇಲಾಖೆಯು ಈಗಾಗಲೇ ಹೊರಡಿಸಿರುವ ಆದೇಶ ಸಂಖ್ಯೆ: ಟಿಡಿ 68 ಟಿಟಿಸಿ 2009 ದಿನಾಂಕ: 24-10-2013 ರನ್ವಯ ದಿನಾಂಕ: 17-05-2010 ರಿಂದ ಜಾರಿಗೆ ಬರುವಂತೆ ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಚಲ್ಲಘಟ್ಟ ಗ್ರಾಮದ ಸ.ನಂ.16 ರಲ್ಲಿ 112-00 ಎಕರೆ ಮತ್ತು ಕೋಡಿಹಳ್ಳಿ ಗ್ರಾಮದ ಸ.ನಂ.145 ರಲ್ಲಿ 12-00 ಎಕರೆ ಒಟ್ಟು 124-00 ಎಕರೆ ಜಮೀನಿನ ಗುತ್ತಿಗೆ ಅವಧಿಯನ್ನು ದಿನಾಂಕ: 17-05-2010 ರಿಂದ 30 ವರ್ಷಗಳವರೆಗೆ ವಿಸ್ತರಿಸಿ ಈ ಕೆಳಕಂಡ ಷರತ್ತಿಗೊಳಪಟ್ಟು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಬೆಂಗಳೂರು ಇವರಿಗೆ ಹಸ್ತಾಂತರಿಸಿ ಆದೇಶಿಸಿದೆ :-

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨, ೨೦೧೮ ೬೬೩

1. ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮ, 2014 ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ, ನವದೆಹಲಿ ಪೀಠವು ಮೂಲ ಅರ್ಜಿ ಸಂಖ್ಯೆ 222/2014ರಲ್ಲಿ ದಿನಾಂಕ: 07-05-2015 ರಂದು ನೀಡಿರುವ ತೀರ್ಪಿನಲ್ಲಿನ ಅಂಶಗಳನ್ನು ಉಲ್ಲಂಘಿಸಬಾರದು.

2. ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 34894-896/2013 ರಲ್ಲಿ ದಿನಾಂಕ:

02-08-2013ರಂದು ನೀಡಿರುವ ತೀರ್ಪು ಮತ್ತು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಸ್ತುತ ಬಾಕಿಯಿರುವ ರಿಟ್ ಮೇಲ್ಮನವಿ ಸಂಖ್ಯೆ 2522/2014 ರಲ್ಲಿ ಸರ್ಕಾರವು ತೆಗೆದುಕೊಳ್ಳಲಿರುವ ನಿಲುವಿಗೆ ವ್ಯತಿರಿಕ್ತವಾಗದಂತೆ ಅನುಸರಿಸುವುದು.

3. ಬೆಂಗಳೂರು ಪೂರ್ವ ತಾಲ್ಲೂಕು, ವರ್ತೂರು ಹೋಬಳಿ, ಚಲ್ಲಘಟ್ಟ ಗ್ರಾಮದ ಸ.ನಂ.16 ರಲ್ಲಿ 112-00 ಎಕರೆ ಮತ್ತು ಕೋಡಿಹಳ್ಳಿ ಗ್ರಾಮದ ಸ.ನಂ.145 ರಲ್ಲಿ 12-00 ಎಕರೆ ಒಟ್ಟು 124-00 ಎಕರೆ ಜಮೀನಿನ ಪೈಕಿ ಸರ್ಕಾರಿ ಉಪಯೋಗದಲ್ಲಿರುವ 9-27 ಎಕರೆ ಮತ್ತು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ 1-30 ಎಕರೆ ಜಮೀನುಗಳಿಗೆ ಸಂಬಂಧಿಸಿದಂತೆ ಸರ್ಕಾರ/ನ್ಯಾಯಾಲಯದ ಅಂತಿಮ ಆದೇಶಗಳ ತೀರ್ಪಿಗೆ ಒಳಪಟ್ಟಿರತಕ್ಕದ್ದು.

4. ಪ್ರಶ್ನಿತ ಜಮೀನಿನಲ್ಲಿ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಸಂಸ್ಥೆಯು ಇನ್ನು ಮುಂದೆ ಹೊಸದಾಗಿ ಯಾವುದೇ ಕಟ್ಟಡ ಅಥವಾ ನಿರ್ಮಿತಿಗಳನ್ನು ನಿರ್ಮಾಣ ಮಾಡದಂತೆ ಪ್ರತಿಬಂಧಿಸತಕ್ಕದ್ದು ಹಾಗೂ ಯಥಾಸ್ಥಿತಿಯನ್ನು ಕಾಪಾಡುವಂತೆ ಷರತ್ತನ್ನು ವಿಧಿಸಲು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ದಿ ನಿಗಮ, ಬೆಂಗಳೂರು ಇವರಿಗೆ ತಿಳಿಸಿದೆ.

PR – 328

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಎಸ್.ಎಲ್.ಮಹಾಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂಮಂಜೂರಾತಿ-1).

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವಾಲಯ

ವಿಷಯ : ರಾಜ್ಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಕನ್ನಡ ಪುಸ್ತಕಗಳ ಬೆಲೆ ನಿಗಧಿ ಪಡಿಸಿದಂತೆ ಆಂಗ್ಲ ಮತ್ತು ಭಾರತೀಯ ಇತರೆ ಭಾಷೆಯ ಪುಸ್ತಕಗಳಿಗೂ ಬೆಲೆ ನಿಧಿ ಪಡಿಸುವ ಬಗ್ಗೆ.

ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ: ಇಡಿ 170 ಎಲ್ಐಬಿ 2006, ದಿನಾಂಕ:27/11/2006.

2. ನಿರ್ದೇಶಕರ ಪತ್ರ ಸಂಖ್ಯೆ:ಸಾಗ್ರಂಇ/ನಿಕ/ಪೂಖವಿ/ಅಭಾಬೆನಿ/4/ 2017-18, ದಿನಾಂಕ:29/12/2017 ಮತ್ತು 17/01/2018.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ಸರ್ಕಾರಿ ಆದೇಶದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸರಬರಾಜು ಆಗುವ ಆಂಗ್ಲ ಮತ್ತು ಇತರೆ ಭಾಷೆಯ ಪುಸ್ತಕಗಳನ್ನು ಖರೀದಿಸುವಲ್ಲಿ ಈ ಕೆಳಕಂಡ ಬೆಲೆಯಲ್ಲಿ ನಿಗದಿಪಡಿಸಲಾಗಿತ್ತು.

1) ಭಾರತೀಯ ಇತರೆ ಭಾಷೆಯ ಪುಸ್ತಕಗಳಿಗೆ ಮುಖ ಪುಟದ ಬೆಲೆ ಶೇ.25ರ ಸೋಡಿ.

2) ಆಂಗ್ಲ ಭಾಷೆಯ ಪುಸ್ತಕಗಳಿಗೆ (ಪ್ರಚಲಿತ ವರ್ಷದಲ್ಲಿ ಪ್ರಕಟಗೊಂಡಿದ್ದು) ಮುಖ ಪುಟದ ಬೆಲೆ ಮೇಲೆ ಶೇ.20ರ ಸೋಡಿ.

ಮೇಲೆ ಓದಲಾದ ಕ್ರಮ ಸಂಖ್ಯೆ(2)ರ ನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ ಇಲಾಖೆ ಬೆಂಗಳೂರು ಇವರ ದಿನಾಂಕ:29.12.2017ರ ಪತ್ರದಲ್ಲಿ ಕನ್ನಡ ಭಾಷಾ ಪುಸ್ತಕಗಳಿಗೆ ಸರ್ಕಾರದ ಆದೇಶ ಸಂಖ್ಯೆ : ಇಡಿ 234 ಎಲ್ಐಬಿ 2015, ಬೆಂಗಳೂರು ದಿನಾಂಕ:22.12.2017 ಮತ್ತು ತಿದ್ದುಪಡಿ ಆದೇಶದನ್ವಯ ಕನ್ನಡ ಪುಸ್ತಕಗಳಿಗೆ ಪುಟವಾರು ಬೆಲೆ ನಿಗದಿಪಡಿಸಿರುವಂತೆ ಆಂಗ್ಲ ಮತ್ತು ಇತರೆ ಭಾಷೆಯ ಪುಸ್ತಕಗಳಿಗೂ ಅನ್ವಯಿಸುವಂತೆ ಬೆಲೆ ನಿಗದಿಪಡಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಈ ಕೆಳಕಂಡಂತೆ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ :ಇಡಿ 84 ಎಲ್ಐಬಿ 2017, ಬೆಂಗಳೂರು, ದಿನಾಂಕ:06.04.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರದ ಆದೇಶ ಸಂಖ್ಯೆ :ಇಡಿ 170 ಎಲ್ಐಬಿ 2006, ದಿನಾಂಕ:27.11.2006ರಲ್ಲಿ ರಾಜ್ಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾದ ಆಂಗ್ಲ ಮತು ಇತರೆ ಭಾಷೆ ಪುಸ್ತಕಗಳ ಮುಖ ಪುಟದ೬೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨, ೨೦೧೮ ಭಾಗ ೧ ಬೆಲೆ ಮೇಲೆ ಶೇ.20% ಸೋಡಿ ನಿಗದಿಪಡಿಸಿ ಖರೀದಿಸಲಾಗುತ್ತಿರುವ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಸರ್ಕಾರಿ ಆದೇಶ ಸಂಖ್ಯೆ :ಇಡಿ 234 ಎಲ್ಐಬಿ 2015, ದಿನಾಂಕ:22.12.2017 ಮತ್ತು ಸರ್ಕಾರಿ ಆದೇಶ ಸಂಖ್ಯೆ :ಇಡಿ 234 ಎಲ್ಐಬಿ 2015, ದಿನಾಂಕ:26.02.2018ರ ತಿದ್ದುಪಡಿ ಆದೇಶಗಳಂತೆ ರಾಜ್ಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯಿಂದ ಆಯ್ಕೆಯಾಗಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸರಬರಾಜು ಆಗುವ ಕನ್ನಡ ಪುಸ್ತಕಗಳಿಗೆ ನಿಗದಿ ಪಡಿಸಿರುವ ಪ್ರತಿ ಪುಟಕ್ಕೆ ದರಗಳನ್ನೇ ಅನುಸರಿಸಿ ಆಂಗ್ಲ ಮತ್ತು ಭಾರತೀಯ ಇತರ ಭಾಷೆ ಪುಸ್ತಕಗಳ ಖರೀದಿಗೆ ಅನುಸರಿಸಲು ಸರ್ಕಾರದ ಮಂಜೂರಾತಿ ನೀಡಿದೆ.

ಇನ್ನುಳಿದ ಇತರ ನಿಬಂಧನೆಗಳು ಆದೇಶ ಸಂಖ್ಯೆ :ಇಡಿ 170 ಎಲ್ಐಬಿ 2006, ದಿನಾಂಕ:27.11.2006ರಲ್ಲಿರುವಂತೆ ಮುಂದುವರೆಸತಕ್ಕದ್ದು.

PR – 329

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 200

ಹೆಚ್.ಆರ್.ಅನಂತಪದ್ಮನಾಭ

ಸರ್ಕಾರದ ಅಧೀನ ಕಾರ್ಯದರ್ಶಿ, (ಪ್ರ)

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ (ಸಾಮಾನ್ಯ)

ಸಹಕಾರ ಸಚಿವಾಲಯ

ವಿಷಯ : ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ಮುಂದುವರೆಸುವ ಬಗ್ಗೆ.

ಸರ್ಕಾರದ ಆದೇಶ ಸಂಖ್ಯೆ : ಸಇ 11 ಸಸಂನೋ 2016 ಬೆಂಗಳೂರು, ದಿನಾಂಕ:28-6-2018

ಓದಲಾಗಿದೆ : 1) ಸರ್ಕಾರದ ಆದೇಶ ಸಂ: ಸಇ 11 ಸಸಂನೋ 2016, ದಿನಾಂಕ : 14.07.2016.

2) ಸರ್ಕಾರದ ಆದೇಶ ಸಂ: ಸಇ 11 ಸಸಂನೋ 2016, ದಿನಾಂಕ : 02.02.2017.

3) ಸರ್ಕಾರದ ಆದೇಶ ಸಂ: ಸಇ 11 ಸಸಂನೋ 2016, ದಿನಾಂಕ : 19.05.2017.

4) ಸರ್ಕಾರದ ಆದೇಶ ಸಂ: ಸಇ 11 ಸಸಂನೋ 2016, ದಿನಾಂಕ : 15.11.2017

5) ಸಹಕಾರ ಸಂಘಗಳ ಉಪ ನಿಬಂಧಕರು, 2ನೇ ವಲಯ, ಬೆಂಗಳೂರು, ಇವರ ಪತ್ರ ಸಂ:ಡಿಆರ್‌ಬಿ-2:

ಎಸ್ಒಆರ್.01:2016-17, ದಿನಾಂಕ: 05.04.2018

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ : (1)ರ ಆದೇಶದಲ್ಲಿ ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು ಈ ಸಂಘದಲ್ಲಿ ವಿವಾದ ಇರುವುದರಿಂದ ಆಡಳಿತ ಮಂಡಳಿಯ ಚುನಾವಣಾ ಪ್ರಕ್ರಿಯೆಯನ್ನು ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಸೂಚಿಸಿ ಸದರಿ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ)ರನ್ವಯ ಸಹಕಾರ ಸಂಘಗಳ ಉಪ ನಿಬಂಧಕರು, ಎರಡನೇ ವಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿತ್ತು.

ಮೇಲೆ ಕ್ರಮ ಸಂಖ್ಯೆ : (2)ರಲ್ಲಿ ಓದಲಾದ ಆದೇಶದಲ್ಲಿ ಸದರಿ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ : 14.01.2017ರಿಂದ ಮೂರು ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ (3) ರಲ್ಲಿ ಓದಲಾದ ಆದೇಶದಲ್ಲಿ ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ : 14.04.2017ರಿಂದ ಆರು ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರ.ಸಂ (4) ರಲ್ಲಿ ಓದಲಾದ ಆದೇಶದಲ್ಲಿ ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ : 14.10.2017ರಿಂದ ಆರು ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರ.ಸಂ.(5) ರಲ್ಲಿ ಓದಲಾದ ಪತ್ರದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರು, ಎರಡನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 20542/2017 ಹಾಗೂ ಸಂಖ್ಯೆ : 22487/17ನ್ನು ದಾಖಲಿಸಿದ್ದು, ಚುನಾವಣೆ ನಡೆಸುವ ಬಗ್ಗೆ ತಡೆಯಾಜ್ಞೆ ನೀಡಿರುವುದರಿಂದ ಹಾಗೂ ಈ ಎರಡು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಸಂಸ್ಥೆ ಆಡಳಿತಾಧಿಕಾರಿಯ ಅವಧಿಯು ದಿನಾಂಕ : 15.04.2018 ರಿಂದ ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಬೇಕಾಗಿ ಕೋರಿರುತ್ತಾರೆ.

ಮೇಲ್ಕಂಡ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆಡಳಿತಾಧಿಕಾರಿ, ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು, 2ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರ ಕೋರಿಕೆಯನ್ವಯ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ)ರನ್ವಯ ಪ್ರಜಾ ಸಂಸ್ಥೆ, ರಾಣಾಸಿಂಗ್ ಪೇಟೆ ಸಂಘಕ್ಕೆ ದಿನಾಂಕ : 15.04.2018 ರಿಂದ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿ ಅವಧಿಯನ್ನು ಮುಂದುವರೆಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨, ೨೦೧೮ ೬೬೫

ಆದೇಶ

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು, ಈ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ : 15.04.2018 ರಿಂದ ಆರು ತಿಂಗಳ ಅವಧಿಗೆ ಮುಂದುವರೆಸಲಾಗಿದೆ.

ಆಡಳಿತಾಧಿಕಾರಿಯ ಸದರಿ ಅವಧಿಯಲ್ಲಿ ಸಂಘಕ್ಕೆ ಚುನಾವಣೆಯನ್ನು ನಡೆಸಿ, ನೂತನ ಚುನಾಯಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಸೂಚಿಸಿದೆ.

PR – 330

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್. ಸೆಂತಾಮರೈ

ಸರ್ಕಾರದ ಅಧೀನ ಕಾರ್ಯದರ್ಶಿ-3

ಸಹಕಾರ ಇಲಾಖೆ

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ವಿಷಯ : ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ ಸಂಬಂಧಿಸಿದಂತೆ 2018-19ನೇ ಸಾಲಿನ ಅವಧಿಗೆ ಮುಂದುವರಿದ ಯೋಜನಾವಾರು ಕಾರ್ಯಕ್ರಮಗಳ ಅನುಷ್ಠಾನ ಕುರಿತಂತೆ ಆದೇಶ.

ಓದಲಾಗಿದೆ :

1. ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸರ್ಕಾರಿ ಆದೇಶ ಸಂಖ್ಯೆ:

ಪಿಡಿ 14 ಐಎಂಎಂ 2017, ದಿನಾಂಕ: 23.03.2017.

2. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು ಇವರ ಪತ್ರ ಸಂಖ್ಯೆ: ಕೆಸ್ಟೆಪ್ಸ್ / ಆಯವ್ಯಯ/2018-19/07 ದಿನಾಂಕ : 04.04.2018.

ಪ್ರಸ್ತಾವನೆ :

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ 2018-19ನೇ ಸಾಲಿನ ಆಯವ್ಯಯದಲ್ಲಿ ಯೋಜನಾವಾರು ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಒಟ್ಟು ರೂ.7328.00 ಲಕ್ಷಗಳ (ಏಳು ಸಾವಿರದ ಮುನ್ನೂರ ಇಪ್ಪತ್ತೆಂಟು ಲಕ್ಷಗಳು ಮಾತ್ರ) ಅನುದಾನವನ್ನು ಒದಗಿಸಲಾಗಿದೆ. ಅದರನ್ವಯ ಮೇಲೆ ಓದಲಾದ ಕ್ರಮ ಸಂಖ್ಯೆ(1)ರಲ್ಲಿನ ಆದೇಶ ಹಾಗೂ ಕ್ರಮ ಸಂಖ್ಯೆ:(2)ರಲ್ಲಿನ ಕೋರಿಕೆಯಂತೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ವಿವಿಧ ಅಂಗಸಂಸ್ಥೆಗಳಿಗೆ ಆಯಾ ಸಂಸ್ಥೆಗಳ ಕಾರ್ಯಕ್ರಮಗಳ ಅವಶ್ಯಕತೆ, ಸಾಧನೆ ಮತ್ತು ಬೇಡಿಕೆಗಳು ಇತ್ಯಾದಿ ಅಂಶಗಳನ್ನು ಗಮನಿಸಿ, ರೂ.7328.00 ಲಕ್ಷಗಳ ಅನುದಾನವನ್ನು ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ತಿಳಿಸಿರುವಂತೆ ಆಯವ್ಯಯ ಹಂಚಿಕೆ ಮಾಡಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ವಿಯಇ 94 ವಿತ್ರಮ 2018, ಬೆಂಗಳೂರು, ದಿನಾಂಕ: 10.04.2018.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಕ್ಕೆ 2018-19ನೇ ಆರ್ಥಿಕ ಸಾಲಿನ ಆಯವ್ಯಯ ಅಂದಾಜು ವೆಚ್ಚದಲ್ಲಿ ನಿಗದಿಪಡಿಸಿರುವ ಯೋಜನಾ ವೆಚ್ಚ ರೂ.7328.00 ಲಕ್ಷಗಳನ್ನು (ರೂ.ಏಳು ಸಾವಿರದ ಮುನ್ನೂರ ಇಪ್ಪತ್ತೆಂಟು ಲಕ್ಷಗಳು ಮಾತ್ರ) ಇದರೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿ ತಿಳಿಸಿರುವಂತೆ ಆಯಾ ವೈಜ್ಞಾನಿಕ ಅಂಗಸಂಸ್ಥೆಗಳ ಮುಂದುವರೆದ ಯೋಜನಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ದಿನಾಂಕಃ 01.04.2018 ರಿಂದ ಜಾರಿಗೆ ಬರುವಂತೆ ಹಮ್ಮಿಕೊಳ್ಳಲು ಅನುಷ್ಠಾನ ಸಂಸ್ಥೆಯ ಮುಖ್ಯಸ್ಥರಾದ ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಬೆಂಗಳೂರು ಇವರಿಗೆ ಮಂಜೂರಾತಿ ನೀಡಿ ಆದೇಶಿಸಿದೆ. 2018-19ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವ ಹೊಸ ಯೋಜನಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಆರ್ಥಿಕ/ಯೋಜನಾ ಇಲಾಖೆಗಳ ಸಹಮತಿ/ಮಂಜೂರಾತಿ ಪಡೆದ ನಂತರ ಆಡಳಿತಾತ್ಮಕ ಆದೇಶವನ್ನು ಹೊರಡಿಸಲು ಕ್ರಮವಹಿಸಲಾಗುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಶೇಷಣ್ಣ ಎಂ.ಎಲ್

ಸರ್ಕಾರದ ಅಧೀನ ಕಾರ್ಯದರ್ಶಿ,

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ,

ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,

(ವಿಜ್ಞಾನ ಮತ್ತು ತಂತ್ರಜ್ಞಾನ)೬೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨, ೨೦೧೮ ಭಾಗ ೧

ಅನುಬಂಧ

ಸರ್ಕಾರಿ ಆದೇಶ ಸಂಖ್ಯೆ ವಿಯಇ 94 ವಿತ್ರಮ 2018, ದಿನಾಂಕ: 10-04-2018

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ

ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ 2018-19ನೇ ಸಾಲಿನ ಮುಂದುವರೆದ ಯೋಜನೆಗಳು

ಕ್ರ.ಸಂ. ಲೆಕ್ಕಶೀರ್ಷಿಕೆ 2018-19ನೇ ಸಾಲಿನ ಆಯವ್ಯಯ ಹಂಚಿಕೆ ಯೋಜನೆ/ವೈಜ್ಞಾನಿಕ ಸಂಸ್ಥೆ/ ಚಟುವಟಿಕೆಗಳಿಗೆ ಸಹಾಯಾನುದಾನದ ವಿವರ ಇಲಾಖೆಯ ಹಂಚಿಕೆ
1 ವೈ ಜ್ಞಾನಿಕ ಸಂಸ್ಥೆಗಳಿಗೆ ಸಹಾಯ 3425-60-200-0-01 ಇತರೆ ಖರ್ಚುಗಳು (059) 1698.00 ವ ುುಂದುವರಿದ ಯೋಜನೆಗಳು/ಆಡಳಿತಾತ್ಮಕ ವ ಚ್ಚಗಳು :- ೆ 1. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ 400.00
2. ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ 375.00
3. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ 375.00
4. ಜವಾಹರಲಾಲ್ ನೆಹರು ತಾರಾಲಯ 250.00
5. ಇತರೆ ವೈಜ್ಞಾನಿಕ ಸಂಸ್ಥೆಗಳಿಗೆ ಸ ಹಾಯಾನುದಾನ 298.00
ಮೊತ್ತ 1698.00
2 ವಿ ಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳು 3425-60-200-0-16 ಇತರೆ ಖರ್ಚುಗಳು (059) 2800.00 ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳ ಸ ಹಾಯಾನುದಾನ :-
1. ವಿಜ್ಞಾನ ಗ್ಯಾಲರಿ, ಬೆಂಗಳೂರು 750.00
2. ಅಕಾಡೆಮಿ ತರಬೇತುದಾರರ ತರಬೇತಿ ತ ರ ಬೇತಿ ಕಟ್ಟಡ 150.00
3. ವಿಜ್ಞಾನ ಮತ್ತು ತ ಂತ್ರಜ್ಞಾನ ಜ್ಞಾನ ಸ ಂಪನ್ಮೂಲ ಕೇಂದ್ರ 150.00
4. ಬಾಗಲಕೋಟೆಯಲ್ಲಿ ತಾರಾಲಯ ಸ್ಥಾಪನೆ 175.00
5. ಧಾರವಾಡದಲ್ಲಿ ತಾರಾಲಯ ಸ್ಥಾಪನೆ 200.00
6. ಗದಗ್‌ನಲ್ಲಿ ತಾರಾಲಯ ಸ್ಥಾಪನೆ 375.00
7. ಬೆಳಗಾವಿಯಲ್ಲಿ ತಾರಾಲಯ ಸ್ಥಾಪನೆ 300.00
8 ಶಿವಮೊಗ್ಗದಲ್ಲಿ ತಾರಾಲಯ ಸ್ಥಾಪನೆ 100.00
9. 2 ಹೊಸ ಸಂಚಾರಿ ತಾರಾಲಯ ವಾಹನಗಳ ಖರೀದಿ ಹಾಗೂ ಒಟ್ಟು 7 ಸ ಂಚಾರಿ ತಾರಾಲಯಗಳ ನಿರ್ವಹಣೆ 500.00
10.ವಿಜ್ಞಾನ ಮತ್ತು ಇಂಜಿನಿಯರಿಂಗ್ ಪಿಹೆಚ್.ಡಿ. ಸಂಶೋಧಕರಿಗೆ ಶಿಷ್ಯವೇತನ 100.00
ಮೊತ್ತ 2800.00
3 ನ್ಯಾನೋ ತಂತ್ರಜ್ಞಾನ ಬೆಂಬಲ 3425-60-200-0-19 ಇತರೆ ಖರ್ಚುಗಳು (059) 200.00 1. ನ್ಯಾನೋ ತಂತ್ರಜ್ಞಾನಕ್ಕೆ ಬೆಂಬಲ ಸಹಾಯಾನುದಾನ 125.00
2. ವಿಜ್ಞಾನ ಮತ್ತು ತಂತ್ರಜ್ಞಾನ ಸಮ್ಮೇಳನಕ್ಕೆ ಉತ್ತೇಜನ ಮತ್ತು ಭಾಗವಹಿಸುವಿಕೆ 075.00
ಮೊತ್ತ 200.00
4 ಜಿ ಲಾ ್ಲವಿಜ್ಞಾನ ಕೇಂದ್ರಗಳು 3425-60-200-0-20(059) 700.00 ಜಿಲ್ಲಾ ವಿಜ್ಞಾನ ಕೇಂದ್ರಗಳು ಸ ಹಾಯಾನುದಾನ:- 1. ಮಂಗಳೂರು ಪಿಲಿಕುಳ ತಾರಾಲಯ ಕ ೕಂದ್ರದ ನಿರ್ವಹಣೆ ೆ 150.00
2. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ವ ುಂಗಳೂರು 064.00
3. ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ, ಧಾರವಾಡ 064.00
A. ಇತರೆ ಖರ್ಚುಗಳು 4. ಕಾರವಾರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆ 040.00
5. ರಾಯಚೂರು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆ, ರಾಯಚೂರು 015.00
6. ಹೆಚ್. ಎನ್. ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, ಗೌರಿಬಿದನೂರು, ಚಿಕ್ಕಬಳ್ಳಾಪುರ 017.00
7. ಬಾಗಲಕೋಟೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆ 075.00
8. ದಾವಣಗೆರೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆ 075.00
9. ಚಿಕ್ಕೋಡಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆ 075.00
10. ಉಡುಪಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆ 075.00
11. ವಿಜಯಪುರ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆ 050.00
ವ ೂತ್ತ A ೆ 700.00
ಜಿಲ್ಲಾ ವಿಜ್ಞಾನ ಕೇಂದ್ರಗಳು 3425-60-200-0-20(115) B. ಗುತ್ತಿಗೆ/ಹೊರಗುತ್ತಿಗೆ (ವೇತನ) 122.00 ಜಿಲ್ಲಾ ವಿಜ್ಞಾನ ಕೇಂದ್ರಗಳು ಸಹಾಯಾನುದಾನ :- 1. ಮಂಗಳೂರು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ 61.00
2. ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ, ದ ಾರವಾಡ 61.00
ಮೊತ್ತ B 122.00
ಒಟ್ಟು ಮೊತ್ತ (A+B) 822.00
5 ವಿ ಜ್ಞಾನ ಮತ್ತು ತಂತ್ರಜ್ಞಾನ ಆಯೋಗ 3425-60-600-0-02 ಇತರೆ ಖರ್ಚುಗಳು (059) 808.00 ವಿಜ್ಞಾನ ಮತ್ತು ತಂತ್ರಜ್ಞಾನ ದಾರ್ಶನಿಕ ಸ ಮೂಹದ ಕಾರ್ಯಕ್ರಮಕ್ಕೆ:- 1. ವಿಜ್ಞಾನ, ಇಂಜಿನಿಯರಿಂಗ್ ಮತ್ತು ವ ೖದ್ಯಕೀಯದ ಶ್ರೇಷ್ಠ ಕೇಂದ್ರಗಳ ೆ ಸ್ಥಾಪನೆ (CESEM) 808.00
2. ವಿಜ್ಞಾನ ಮತ್ತು ಇಂಜಿನಿಯರಿಂಗ್ ಶಿಕ್ಷಣದ ಸೃಜನ ಶೀಲ ಕೇಂದ್ರಗಳ ಸ್ಥಾಪನೆ (CISEE)
3. ವಿಜ್ಞಾನ ಮತ್ತು ಇಂಜಿನಿಯರಿಂಗ್ ಕಾಲೇಜುಗಳ ಯುವ ವಿಜ್ಞಾನಿಗಳಿಗೆ ಸ ಂಶೋಧನೆಗಾಗಿ ಮೂಲಧನ (SMYSR) ಮತ್ತು ಪ್ರತಿಭಾವಂತ ಶಿಕ್ಷಕರ ಸ ಂಶೋಧನೆಗಾಗಿ ಅನುದಾನ (RFTT)
4. ಶ ೕಷ್ಠ ಸಂಶೋಧನಾ ಪ್ರಕಟಣೆಗೆ ಪ್ರಶಸ್ತಿ ೆ ್ರ
5. ಇಂಜಿನಿಯರಿಂಗ್ ಕಾಲೇಜುಗಳ ಬ ೂೕಧಕರಿಗೆ ಪುನಶ್ಚೇತನ ತರಬೇತಿ ೆ ಕಾರ್ಯಗಾರಗಳು (FDP-Engg.)
VGST Administrative 6. Expenses PEEC ವೆಚ್ಚಗಳನ್ನು ಒಳಗೊಂಡು
6 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ವ ುತ್ತು ತಂತ್ರಜ್ಞಾನದ ಸುಧಾರಣೆಗೆ ಕರ್ನಾಟಕ ನಿಧಿ (K-FIST) 3425-60-600-0-03 ಇತರೆ ಖರ್ಚುಗಳು (059) 1000.00 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿಜ್ಞಾನ ಮತ್ತು ತ ಂತ್ರಜ್ಞಾನದ ಸುಧಾರಣೆಗೆ ಕರ್ನಾಟಕ ನಿಧಿ-(K-FIST): Level 1 & 2 1000.00
ಒಟ್ಟು ಮೊತ್ತ 7328.00
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨, ೨೦೧೮ ೬೬೭ ೬೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨, ೨೦೧೮ ಭಾಗ ೧

ಶೇಷಣ್ಣ ಎಂ.ಎಲ್

PR – 331

ಸರ್ಕಾರದ ಅಧೀನ ಕಾರ್ಯದರ್ಶಿ,

SC - 25

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ,

ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,

(ವಿಜ್ಞಾನ ಮತ್ತು ತಂತ್ರಜ್ಞಾನ)

MINORITY WELFARE HAJ AND WAKF SECRETARIAT

ADDENDUM

No. MWD 90 WES 2016, Bengaluru, Dated: 05-07-2018.

In partial m odification of Government Orders bearing No.MWD 90 WES 2016, dt: 28-03-2018 after para-2 of the order portion, the following para shall be added and read as follow :

"Consequent upon Judgment of the Hon'ble High Court of Karnataka Circuit Bench Kalaburagi in

W.P.No.84085/2011 and 84135/2011 and W.A. No.50307/2012 A/W W.A.50308/2012 & 50347/2012

(Gm-Wakf), the appointment of Sri Ghousuddin Quazi S/o Usman Sab, Khazi Mohalla Kalburgi and Sri Mohammed Hussain Siddiqui, Sadar Khazi, Kalburgi made under government order No. MWD 51 WES

2010, dt: 13-05-2011 as Khazis of Afzalpur Tq. with 90 villages (Including 21Villages of Afzalpur Tq.)

is hereby withdrawn with immediate effect. They should not interfere in the functioning of the Khazis of

Afzalpur Tq. henceforth. "

The other contents of the Government order bearing No. MWD 90 WES 2016, dated: 28-03-2018 remain unchanged.

PR. 342

By Order and in the name of the Governor of Karnataka,

AKRAM BHASHA,

Under Secretary to Government

Minority Welfare Haj & Wakf Department.

ಸಹಕಾರ ಸಚಿವಾಲಯ

ಸರ್ಕಾರದ ಆದೇಶ ಸಂಖ್ಯೆ : ಸಇ 267 ಸಸಂನೋ 2017, ಬೆಂಗಳೂರು, ದಿನಾಂಕ : 30-06-2018.

ವಿಷಯ : ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘ(ರಿ), ಯಾದವ ಕಾಲೇಜು ರಸ್ತೆ, ಮಾಧವನಗರ,

ಬೆಂಗಳೂರು ಈ ಸಂಘದ ಆಡಳಿತಾಧಿಕಾರಿಯನ್ನು ಬದಲಾಯಿಸುವ ಬಗ್ಗೆ.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಸಇ 267 ಸಸಂನೋ 2017, ದಿನಾಂಕ: 23-11-2017.

2) ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ:ಆರ್‌ಸಿಎಸ್/ಸಿಬ್ಬಂದಿ/213/ಇಜಿಪಿ/2017/18,

ದಿನಾಂಕ: 20/22-03-2018.

ಪ್ರಸ್ತಾವನೆ:

ಮೇಲೆ ಕ್ರಮ ಸಂಖ್ಯೆ: (01)ರಲ್ಲಿ ಓದಲಾದ ಆದೇಶದಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ)ರನ್ವಯ ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘ(ರಿ), ಬೆಂಗಳೂರು, ಈ ಸಂಘಕ್ಕೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು, 4ನೇ ವಲಯ, ಬೆಂಗಳೂರು ನಗರ ಜಿಲ್ಲೆ, ಇವರನ್ನು ಸದರಿ ಸಂಘದ ಆಡಳಿತಾಧಿಕಾರಿಯಾಗಿ ದಿ: 23-11-2017 ರಿಂದ ಮುಂದಿನ ಆರು ತಿಂಗಳ ಅವಧಿಗೆ ನೇಮಿಸಲಾಗಿತ್ತು.

ಮೇಲೆ ಕ್ರಮ ಸಂಖ್ಯೆ (02)ರಲ್ಲಿ ಓದಲಾದ ಪತ್ರದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, 4ನೇ ವಲಯ, ಬೆಂಗಳೂರು ನಗರ ಜಿಲ್ಲೆ, ಈ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಾಗೂ ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘ(ರಿ), ಬೆಂಗಳೂರು, ಈ ಸಂಘದ ಆಡಳಿತಾಧಿಕಾರಿಯಾಗಿದ್ದ ಶ್ರೀ ಎಸ್.ವಿ. ಬಸವರಾಜಪ್ಪರವರು ಮಾರ್ಚ್-2018ಕ್ಕೆ ವಯೋನಿವೃತ್ತಿ ಹೊಂದಿರುವುದರಿಂದ ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಸಂಘ(ರಿ), ಬೆಂಗಳೂರು, ಈ ಸಂಘದ ಆಡಳಿತಾಧಿಕಾರಿಯಾಗಿ ಬದಲಿ ಅಧಿಕಾರಿಯನ್ನು ನೇಮಿಸಲು ಕೋರಿರುತ್ತಾರೆ.

ಪ್ರಸ್ತಾವನೆಯಲ್ಲಿನ ಅಂಶಗಳನ್ನು ಪರಿಶೀಲಿಸಿ, ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘ(ರಿ), ಬೆಂಗಳೂರು, ಈ ಸಂಘದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದ ಶ್ರೀ ಎಸ್.ವಿ ಬಸವರಾಜಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, 4ನೇ ವಲಯ ಬೆಂಗಳೂರು ನಗರ ಜಿಲ್ಲೆ (ನಿವೃತ್ತ) ಇವರ ಬದಲಾಗಿ ಶ್ರೀ ಲಕ್ಷ್ಮೀಶ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಕೇಂದ್ರ ಸ್ಥಾನಿಕ ಸಹಾಯಕರು, ಸಹಕಾರ ಸಂಘಗಳ ಜಂಟಿ ನಿಬಂಧಕರ ಕಛೇರಿ, ಬೆಂಗಳೂರು ಇವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨, ೨೦೧೮ ೬೬೯

ಆದೇಶ

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯ ಗೊಲ್ಲ(ಯಾದವ) ಸಂಘ(ರಿ), ಬೆಂಗಳೂರು, ಈ ಸಂಘಕ್ಕೆ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದ ಶ್ರೀ ಎಸ್.ವಿ. ಬಸವರಾಜಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, 4ನೇ ವಲಯ ಬೆಂಗಳೂರು ನಗರ ಜಿಲ್ಲೆ (ನಿವೃತ್ತ) ಇವರ ಬದಲಾಗಿ ಶ್ರೀ ಲಕ್ಷ್ಮೀಶ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ಕೇಂದ್ರ ಸ್ಥಾನಿಕ ಸಹಾಯಕರು, ಸಹಕಾರ ಸಂಘಗಳ ಜಂಟಿ ನಿಬಂಧಕರ ಕಛೇರಿ, ಬೆಂಗಳೂರು ಇವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.

ಆಡಳಿತಾಧಿಕಾರಿಗಳು ಸಂಸ್ಥೆಯಲ್ಲಿನ ಅವ್ಯವಹಾರಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

PR – 354

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್. ಸೆಂತಾಮರೈ ಸರ್ಕಾರದ ಅಧೀನ ಕಾರ್ಯದರ್ಶಿ-3 ಸಹಕಾರ ಇಲಾಖೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ : ರಾಜ್ಯದ ವೈದ್ಯಕೀಯ & ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕ ವೈದ್ಯಕೀಯ & ದಂತ

ವೈದ್ಯಕೀಯ ಕೋರ್ಸುಗಳಲ್ಲಿ ವಿಶೇಷ ವರ್ಗಗಳ ಅಭ್ಯರ್ಥಿಗಳಿಗೆ ಸರ್ಕಾರಿ ಕೋಟಾದಡಿ ಸೀಟುಗಳನ್ನು ಮೀಸಲಿಡುವ ಕುರಿತು.

ಓದಲಾಗಿದೆ : ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರ ದಿ: 12-06-2018ರ ಪತ್ರ

ಸಂಖ್ಯೆ: ಡಿಎಂಇ/ಎಂಸಿಎಸ್/15/2018-19.

ಪ್ರಸ್ತಾವನೆ:

2017-18ನೇ ಸಾಲಿಗೆ ಭಾರತೀಯ ವೈದ್ಯಕೀಯ ಪರಿಷತ್ತಿನವರು ನಿಗದಿಪಡಿಸಿದಂತೆ ಸ್ನಾತಕ ವೈದ್ಯಕೀಯ & ದಂತ ವೈದ್ಯಕೀಯ ಒಟ್ಟು ಸೀಟುಗಳಲ್ಲಿ ಅಂಗವಿಕಲ ಮೀಸಲಾತಿಯನ್ನು ಶೇ.5 ರಂತೆ ಕಲ್ಪಿಸಲಾಗಿರುತ್ತದೆ. ಉಳಿದಂತೆ ಸ್ನಾತಕ ವೈದ್ಯಕೀಯ & ದಂತ ವೈದ್ಯಕೀಯ ಸೀಟುಗಳ ಕೌನ್ಸಿಲಿಂಗ್‌ನಲ್ಲಿ 2017-18ನೇ ಸಾಲಿನಲ್ಲಿ ವಿಶೇಷ ವರ್ಗಗಳಿಗೆ ನೀಡಲಾದ ಮೀಸಲಾತಿ ವಿವರ ಕೆಳಕಂಡಂತಿದೆ.

ಮೀಸಲಾತಿ 2017-18
MBBS BDS
ಸೈನಿಕ 05 02
ವ iಾಜಿ ಸೈನಿಕ 04 01
ಆಂಗ್ಲೋ ಇಂಡಿಯನ್ 01 03
ಎನ್‌ಸಿಸಿ 10 02
ಸ್ಕೌಟ್ಸ್ 05 01
ಕಿ ೕಡೆ ್ರ 07 04
ಕಾಶ್ಮೀರಿ ಮೈಗ್ರೆಂಟ್ಸ್ 18 03
ಸಿಎಪಿಎಫ್ 01 01

ಮೇಲಿನಂತೆ 2017-18ನೇ ಸಾಲಿನಲ್ಲಿ ವಿಶೇಷ ವರ್ಗಗಳಿಗೆ ನೀಡಲಾದ ಮೀಸಲಾತಿಯನ್ನು 2018-19ನೇ ಸಾಲಿನಲ್ಲಿಯೂ ಸಹ ಮುಂದುವರೆಸುವ ಬಗ್ಗೆ ಸೂಕ್ತ ಆದೇಶ ಹೊರಡಿಸುವಂತೆ ಮೇಲೆ ಓದಲಾದ ಪತ್ರದಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶಕರು ಕೋರುತ್ತಾ, ಸಂಬಂಧಪಟ್ಟ ದಾಖಲಾತಿಗಳನ್ನು ಕಳುಹಿಸಿರುತ್ತಾರೆ.

ಆದ್ದರಿಂದ ವಿಷಯವನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ, 2017-18ನೇ ಸಾಲಿನಲ್ಲಿ ಸ್ನಾತಕ ವೈದ್ಯಕೀಯ & ದಂತ ವೈದ್ಯಕೀಯ ಕೋರ್ಸುಗಳ ಕೌನ್ಸಿಲಿಂಗ್‌ನಲ್ಲಿ ಅಂಗವಿಕಲ ಮೀಸಲಾತಿಯನ್ನು ಶೇ.5 ರಂತೆ ಕಲ್ಪಿಸಲು ಹಾಗೂ ವಿಶೇಷ ವರ್ಗಗಳಿಗೆ ನೀಡಲಾದ ಮೀಸಲಾತಿಯನ್ನು 2018-19ನೇ ಸಾಲಿನಲ್ಲಿಯೂ ಸಹ ಮುಂದುವರೆಸಲು ಸರ್ಕಾರವು ತೀರ್ಮಾನಿಸಿ, ಈ ಕೆಳಗಿನಂತೆ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 176 ಆರ್‌ಜಿಯು 2018, ಬೆಂಗಳೂರು, ದಿ: 04-07-2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2018-19ನೇ ಸಾಲಿನ ಸ್ನಾತಕ ವೈದ್ಯಕೀಯ & ದಂತ ವೈದ್ಯಕೀಯ ಕೋರ್ಸುಗಳ ಕೌನ್ಸಿಲಿಂಗ್‌ನಲ್ಲಿ ಅಂಗವಿಕಲ ಮೀಸಲಾತಿಯನ್ನು ಶೇ.5 ರಂತೆ ಕಲ್ಪಿಸಲು ಹಾಗೂ ವಿಶೇಷ ವರ್ಗಗಳಿಗೆ ಈ ಕೆಳಕಂಡಂತೆ ಮೀಸಲಾತಿಯನ್ನು ನೀಡಿ ಆದೇಶಿಸಿದೆ.

ಮೀಸಲಾತಿ 2018-19
MBBS BDS
ಸೈನಿಕ 05 02
ವ iಾಜಿ ಸೈನಿಕ 04 01
ಆಂಗ್ಲೋ ಇಂಡಿಯನ್ 01 03
ಎನ್‌ಸಿಸಿ 10 02

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೬೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨, ೨೦೧೮ ಭಾಗ ೧
ಸ್ಕೌಟ್ಸ್ 05 01
ಕಿ ೕಡೆ ್ರ 07 04
ಕಾಶ್ಮೀರಿ ಮೈಗ್ರೆಂಟ್ಸ್ 18 03
ಸಿಎಪಿಎಫ್ 01 01

PR – 355

SC - 25

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆ. ಮುರಳಿ ಸರ್ಕಾರದ ಅಧೀನ ಕಾರ್ಯದರ್ಶಿ-2 ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ : ಕರ್ನಾಟಕ ಉಚ್ಛ ನ್ಯಾಯಾಲಯದ ಮೊಕದ್ದಮೆ ಸಂಖ್ಯೆ 41934-42007/2017 ರ ಮೇಲಿನ ದಿ. 18.12.2017 ರ ಮಧ್ಯಂತರ ಆದೇಶದ ಅನ್ವಯ ಮೋಜಿಣಿ ಆಪರೇಟರ್‌ಗಳ ವೇತನ ಮುಂದುವರೆಸುವ ಕುರಿತು ಓದಲಾಗಿದೆ : (1) ಆಯುಕ್ತರು, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಇವರ ಪತ್ರ ಸಂಖ್ಯೆ :

ಉಗ್ರಾಣ: ಸಕಾಲ. 36/2012-13, ದಿ.28.12.2012.

(2) ಸರ್ಕಾರದ ಆದೇಶ ಸಂಖ್ಯೆ : DPAR 188 NaSeKha 2012, ದಿ.21.06.2013. (3) ಪತ್ರ ಸಂಖ್ಯೆ : DPAR 117 NaSeKha 2017, ದಿ.11.08.2017. (4) ಸರ್ಕಾರದ ಆದೇಶ ಸಂಖ್ಯೆ : DPAR 117 NaSeKha 2016, ದಿ.26.09.2017. (5) ಕರ್ನಾಟಕ ಉಚ್ಛ ನ್ಯಾಯಾಲಯದ ದಿ.18.12.2017ರ ಮಧ್ಯಂತರ ಆದೇಶ

ಪ್ರಸ್ತಾವನೆ:

ಮೇಲೆ ಓದಲಾದ (1) ರ ಪತ್ರದಲ್ಲಿ, ಆಯುಕ್ತರು, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಇವರು ಮೋಜಿಣಿ ಆಪರೇಟರ್‌ಗಳ ವೇತನವನ್ನು ಸಕಾಲ ಮಿಷನ್ ಅಡಿ ಭರಿಸುವಂತೆ ಸಕಾಲ ಮಿಷನ್‌ನ್ನು ಕೋರಿದ್ದರು. ಅದರಂತೆ, ಮೇಲೆ ಓದಲಾದ (2) ರ ಸರ್ಕಾರದ ಆದೇಶದಲ್ಲಿ, ಕಂದಾಯ ಇಲಾಖೆಯು ನೇಮಿಸಿಕೊಳ್ಳುವ ಮೋಜಿಣಿ ಆಪರೇಟರ್‌ಗಳಿಗೆ ವೇತನ ನೀಡಲು ಸಕಾಲ ಮಿಷನ್ ಒಪ್ಪಿಕೊಂಡಿತ್ತು.

ಸದರಿ ಮೋಜಿಣಿ ಆಪರೇಟರ್‌ಗಳು ಭೂಮಾಪನ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುತ್ತಿರುವುದರಿಂದ ಅವರ ವೇತನವನ್ನು ಕಂದಾಯ ಇಲಾಖೆಯು ಪಾವತಿಸುವುದು ಸೂಕ್ತ. ಮೇಲೆ ಓದಲಾದ ಉಲ್ಲೇಖ (3) ರ ಪತ್ರದಲ್ಲಿ, ಸಕಾಲ ಮಿಷನ್ ಅಡಿ ನೀಡುತ್ತಿರುವ ಮೋಜಿಣಿ ಆಪರೇಟರ್‌ಗಳ ವೇತನವನ್ನು ಏಕೆ ನಿಲ್ಲಿಸಬಾರದು ಎಂಬುದರ ಬಗ್ಗೆ ಕಂದಾಯ ಇಲಾಖೆಯ ಅಭಿಪ್ರಾಯವನ್ನು ಕೋರಲಾಯಿತು. ಆಯುಕ್ತರು, ಭೂಮಾಪನ ಇಲಾಖೆ ಇವರು ಪತ್ರ ಸಂಖ್ಯೆ: SSLR/PMU/MOJ/MIS/9/13-14 ದಿ:14.08.2017 ರ ಪತ್ರದಲ್ಲಿ ಇಲಾಖೆಯ ಮೋಜಿಣಿ ಕೆಲಸಕ್ಕಾಗಿ ತನ್ನದೇ ಇಲಾಖೆಯ ಸಿಬ್ಬಂದಿಯನ್ನು ಬಳಸಲು ಉದ್ದೇಶಿಸಿದೆ ಎಂದು ತಿಳಿಸಿರುತ್ತಾರೆ. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಸಿಆಸುಇ, ಇ-ಆಡಳಿತ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಭೂಮಾಪನ ಇಲಾಖೆಯ ತೀರ್ಮಾನವನ್ನು ತಿಳಿಸಲಾಯಿತು. ಮೇಲೆ ಓದಲಾದ (4) ರ ಸರ್ಕಾರದ ಆದೇಶದಲ್ಲಿ, ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮೋಜಿಣಿ ಆಪರೇಟರ್‌ಗಳ ವೇತನವನ್ನು ದಿ. 01.10.2017 ರಿಂದ ಅನ್ವಯವಾಗುವಂತೆ ಸಕಾಲ ಮಿಷನ್ ವತಿಯಿಂದ ಭರಿಸಲಾಗುವುದಿಲ್ಲ ಎಂದು ತಿಳಿಸಲಾಯಿತು.

ಈ ನಡುವೆ, ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆ ಸಂಖ್ಯೆ 41934-42007/2017 ರ ಮೇಲೆ, ನ್ಯಾಯಾಲಯವು ದಿ. 18.12.2017 ರಂದು ನೀಡಿದ ಮಧ್ಯಂತರ ಆದೇಶದ ಅನ್ವಯ, ಸರ್ಕಾರವು ಮುಂದಿನ ವಿಚಾರಣೆಯ ದಿನಾಂಕದವರೆವಿಗೆ ಅರ್ಜಿದಾರರನ್ನು (ಮೋಜಿಣಿ ಆಪರೇಟರ್‌ಗಳನ್ನು) ಕೆಲಸದಿಂದ ತೆಗೆಯಬಾರದು ಎಂದು ನಿರ್ದೇಶನ ನೀಡಿದೆ.

ಮೋಜಿಣಿ ಆಪರೇಟರ್‌ಗಳ ವೇತನವನ್ನು ಸಕಾಲ ಮಿಷನ್ ಅಡಿ ಭರಿಸುವುದನ್ನು ನಿಲ್ಲಿಸಿದ್ದರೂ ಸಹ, ಅವರುಗಳ ಸೇವೆಯನ್ನು ಮುಂದುವರೆಸಿರುವುದು ಉಲ್ಲೇಖ (4)ರ ಸರ್ಕಾರದ ಆದೇಶದ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.

ಮಾನ್ಯ ಉಚ್ಛ ನ್ಯಾಯಾಲಯದ ದಿ.18.12.2017 ರಂದು ನೀಡಿದ ಮಧ್ಯಂತರ ಆದೇಶದ ಅನ್ವಯದಂತೆ, ಈ ವಿಷಯದಲ್ಲಿ ಮತ್ತೂ ಹೆಚ್ಚಿನ ವಿವರಗಳನ್ನು ನೀಡಲು ಮತ್ತು ಜಿಲ್ಲಾಧಿಕಾರಿಗಳು ಮೋಜಿಣಿ ಆಪರೇಟರ್‌ಗಳಿಗೆ ವೇತನವನ್ನು ನೀಡುವುದನ್ನು ಮುಂದುವರೆಸಲು ಉಲ್ಲೇಖ (4)ರ ಆದೇಶವನ್ನು ಹಿಂಪಡೆಯುವ ಅಗತ್ಯವಿದೆ. ಆದ್ದರಿಂದ ಈ ಕೆಳಗಿನ ಆದೇಶ :

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 180 ನಾಸೇಖಾ 2018, ಬೆಂಗಳೂರು, ದಿನಾಂಕ: 09-04-2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಎಲ್ಲಾ ಅಂಶಗಳ ಹಿನ್ನಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 117 ನಾಸೇಖಾ 2016 ದಿನಾಂಕ 26.09.2017ರಲ್ಲಿ ಹೊರಡಿಸಿದ್ದ ಸರ್ಕಾರದ ಆದೇಶವನ್ನು ತತ್‌ಕ್ಷಣದಿಂದಲೇ ಹಿಂಪಡೆಯಲಾಗಿದೆ. ಸರ್ಕಾರವು ಮೋಜಿಣಿ ಆಪರೇಟರ್‌ಗಳ ವೇತನವನ್ನು ಯಾವ ಇಲಾಖೆಯು ನೀಡಬೇಕು ಎಂದು ತೀರ್ಮಾನ ಕೈಗೊಳ್ಳುವವರೆವಿಗೂ ಅಥವಾ ಮೊಕದ್ದಮೆ ಸಂಖ್ಯೆ :41934-42007/2017ರ ಮೇಲೆ ಮಾನ್ಯ ಉಚ್ಛ ನ್ಯಾಯಾಲಯವು ನೀಡುವ ಮುಂದಿನ ನಿರ್ದೇಶನಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆವಿಗೆ, ಭೂ ಮಾಪನ ಇಲಾಖೆಯ ಮೋಜಿಣಿ ಆಪರೇಟರ್‌ಗಳ ವೇತನವನ್ನು ದಿ. 01.10.2017 ರಿಂದ ಸಕಾಲ ಮಿಷನ್ ವತಿಯಿಂದ ಭರಿಸಲು ಮುಂದುವರೆಸಲಾಗುವುದು.

PR – 356

SC - 100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆ. ಮಥಾಯಿ, ಕ.ಆ.ಸೇ ಆಡಳಿತಾಧಿಕಾರಿ ಸಕಾಲ ಮಿಷನ್ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸಕಾಲ)

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 02 August 2018. Indian Gazettes, https://egazette.servantsofknowledge.in/details/in.gazette.karnataka_new.2018-08-02.Part-1/. Archive identifier in.gazette.karnataka_new.2018-08-02.Part-1.