Servants of Knowledge
Karnataka Gazette · Government of Karnataka

Karnataka Gazette, Part Part-2, 09 August 2018

Published 09 August 2018

Part
Part-2
Identifier
in.gazette.karnataka_new.2018-08-09.Part-2
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ಆಗಸ್ಟ್ ೯, ೨೦೧೮ (ಶ್ರಾವಣ ೧೮, ಶಕ ವರ್ಷ ೧೯೪೦)

Bengaluru, Thursday, August 9, 2018 (Shravana 18, Shaka Varsha 1940)

ಸಂಚಿಕೆ ೩೨

Issue 32

ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಕಛೇರಿ ಆದೇಶ ಸಂಖ್ಯೆ: ಔನಿಇ/764/ಸಿಬ್ಬಂದಿ/2014-15, ದಿನಾಂಕ:15.03.2018.

ವಿಷಯ: ಶ್ರೀ ಸಿ.ಉಮಾಶಂಕರ, ಕಿರಿಯ ವೈಜ್ಞಾನಿಕ ಅಧಿಕಾರಿ ರವರ ಸ್ಥಳನಿಯುಕ್ತಿ ಕುರಿತು.

ಉಲ್ಲೇಖ: 1) ಕರ್ನಾಟಕ ನಾಗರಿಕ ಸೇವಾ ನಿಯಮ 20(ಎಫ್) ಟಿಪ್ಪಣಿ (4) ಹಾಗೂ ನಿಯಮ 416 ಟಿಪ್ಪಣಿ (2)

2) ಪ್ರಧಾನ ವೈಜ್ಞಾನಿಕ ಅಧಿಕಾರಿ, ಔಷಧ ಪರೀಕ್ಷಾ ಪ್ರಯೋಗಾಲಯ, ಬೆಂಗಳೂರು

ರವರ ಪತ್ರ ಸಂಖ್ಯೆ: ಔನಿಇ/ಔಪಪ್ರ/ಸಿಬ್ಬಂದಿ/04/2017-18, ದಿನಾಂಕ 15.03.2018

ಕೇಂದ್ರ ಲೋಕಸೇವಾ ಆಯೋಗದ ಮೂಲಕ ಭಾರತ ಸರ್ಕಾರದ ಔಷಧ ಪರಿವೀಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿದ್ದು, ಉಲ್ಲೇಖ (1) ರ ನಿಯಮಗಳನ್ವಯ ಹುದ್ದೆಯ ಲೀನ್‌ನ್ನು ಕಾಯ್ದಿರಿಸಿ, ದಿನಾಂಕ 07.10.2017ರ ಅಪರಾಹ್ನ ಕಿರಿಯ ವೈಜ್ಞಾನಿಕ ಅಧಿಕಾರಿ ಹುದ್ದೆಯ ಕರ್ತವ್ಯದಿಂದ ಬಿಡುಗಡೆ ಹೊಂದಿದ್ದ ಶ್ರೀ ಸಿ. ಉಮಾಶಂಕರ ರವರು ಭಾರತ ಸರ್ಕಾರದ ಸಿ.ಡಿ.ಎಸ್.ಸಿ.ಓ., ಕೇಂದ್ರ ಕಛೇರಿ, ನವದೆಹಲಿ ಔಷಧ ಪರಿವೀಕ್ಷಕರ ಹುದ್ದೆಯಿಂದ ದಿನಾಂಕ 12.03.2018ರ ಅಪರಾಹ್ನ ಬಿಡುಗಡೆ ಹೊಂದಿ ದಿನಾಂಕ 14.03.2018ರ ಪೂರ್ವಾಹ್ನ ಔಷಧ ನಿಯಂತ್ರಣ ಇಲಾಖೆಯಲ್ಲಿ ವರದಿ ಮಾಡಿಕೊಂಡಿರುತ್ತಾರೆ.

ಉಲ್ಲೇಖ(2) ರ ಪತ್ರದಲ್ಲಿ ವಿವರಿಸಲಾದ ಸಂದರ್ಭಗಳ ಮೇರೆಗೆ, ಶ್ರೀ ಸಿ.ಉಮಾಶಂಕರರವರನ್ನು ಬೆಂಗಳೂರು ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಖಾಲಿ ಇರುವ ಕಿರಿಯ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ.

PR. 676

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಕಛೇರಿ ಆದೇಶ ಸಂಖ್ಯೆ: ಔನಿಇ/16/ಸಿಬ್ಬಂದಿ/2018-19, ದಿನಾಂಕ:19.04.2018.

ವಿಷಯ: ಸಿವಿಲ್ ಅಪೀಲ್ ಸಂಖ್ಯೆ: 2368/2011-ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್

ಇಂಡಿಯ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ –ಮುಖ್ಯ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ಮುಂಬಡ್ತಿ/ಹಿಂಬಡ್ತಿ ನೀಡುವ ಕುರಿತು.

ಉಲ್ಲೇಖ: ಸರ್ಕಾರದ ಅಧಿಸೂಚನೆ ಸಂಖ್ಯೆ: ಆಕುಕ 47 ಐಎಂಎಂ 2018, ದಿನಾಂಕ: 17.04.2018.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದಲ್ಲಿನ ಸರ್ಕಾರದ ಅಧಿಸೂಚನೆಯನ್ನು ಈ ಮೂಲಕ ಜಾರಿಗೊಳಿಸಿದೆ.

(೨೯೯)

೩೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ಭಾಗ ೨
ಕ್ರ ಸ ಂ ಅಧಿಕಾರಿಯ ಹೆಸರು ಹಾಗೂ ಕಾರ್ಯ ನಿರ್ವಹಣಾ ಸ್ಥಳ ಶ್ರೀ / ಶ್ರೀಮತಿ ಮುಂಬಡ್ತಿ/ಹಿಂಬಡ್ತಿ ಸ್ಥಳನಿಯುಕ್ತಿಗೊಂಡ ಕಛೇರಿ ಹಾಗೂ ಪದನಾಮ ಪ ಭಾರ ವಹಿಸಿಕೊಡುವ ಹಾಗೂ ್ರ ವ ಹಿಸಿಕೊಳ್ಳುವ ಬಗ್ಗೆ.
1 2 3 4
1. ಶಿವಲಿಂಗಯ್ಯ ಮೋಹನ್, ಮುಖ್ಯ ವೈಜ್ಞಾನಿಕ ಅಧಿಕಾರಿ, ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯ, ಹುಬ್ಬಳ್ಳಿ. ವ ೖಜ್ಞಾನಿಕ ಅಧಿಕಾರಿ, ೆ ಪ್ರಾದೇಶಿಕ ಔಷಧ ಪರೀಕ್ಷಾ ಪ ಯೋಗಾಲಯ, ್ರ ಹ ುಬ್ಬಳ್ಳಿ. ಸದರಿ ಅಧಿಕಾರಿಯವರು ಅವರ ಹಾಲಿ ಹುದ್ದೆಯ ಪ್ರಭಾರವನ್ನು ಶ್ರೀ ಬಿ. ತುಕಾರಾಂ, ವೈಜ್ಞಾನಿಕ ಅಧಿಕಾರಿ ಇವರಿಗೆ ವಹಿಸಿಕೊಟ್ಟು, ತದನಂತರ ಶ್ರೀ ಅಲೀಂ ಪಾಷಾ ಇವರಿಂದ, ಸದರಿಯವರು ಅಧಿಕ ಪ್ರಭಾರವಾಗಿ ಹೊಂದಿರುವ ವ ೖಜ್ಞಾನಿಕ ೆ ಅಧಿಕಾರಿ ಹುದ್ದೆಯ ಪ್ರಭಾರವನ್ನು ವಹಿಸಿಕೊಳ್ಳುವುದು.

ಶ್ರೀ ಬಿ. ತುಕಾರಾಂ, ವೈಜ್ಞಾನಿಕ ಅಧಿಕಾರಿ, ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯ, ಹುಬ್ಬಳ್ಳಿ ರವರು ಶ್ರೀ ಶಿವಲಿಂಗಯ್ಯ ಮೋಹನ್ ರವರಿಂದ ಮುಖ್ಯ ವೈಜ್ಞಾನಿಕ ಅಧಿಕಾರಿ, ಪ್ರಾದೇಶಿಕ ಔಷಧ ಪರೀಕ್ಷಾ ಪ್ರಯೋಗಾಲಯ, ಹುಬ್ಬಳ್ಳಿ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡು, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಮ್ಮ ಹಾಲಿ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದಲ್ಲಿ ನಿರ್ವಹಿಸತಕ್ಕದ್ದು.

ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಹುದ್ದೆಯ ಪ್ರಭಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಹಿಸಿಕೊಡುವ ಹಾಗೂ ವಹಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಗಿಸಿ, ವರದಿಯನ್ನು ಕೇಂದ್ರ ಕಛೇರಿಗೆ ಸಲ್ಲಿಸುವಂತೆ ಆದೇಶಿಸಿದೆ.

PR. 677

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಕಛೇರಿ ಆದೇಶ ಸಂಖ್ಯೆ: ಔನಿಇ/16/ಸಿಬ್ಬಂದಿ/2018-19, ದಿನಾಂಕ:19.04.2018.

ವಿಷಯ: ಸಿವಿಲ್ ಅಪೀಲ್ ಸಂಖ್ಯೆ: 2368/2011-ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್

ಇಂಡಿಯ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ –ಮುಖ್ಯ ವೈಜ್ಞಾನಿಕ ಅಧಿಕಾರಿ ಹುದ್ದೆಗೆ ಮುಂಬಡ್ತಿ/ಹಿಂಬಡ್ತಿ ನೀಡುವ ಕುರಿತು.

ಉಲ್ಲೇಖ: ಸರ್ಕಾರದ ಅಧಿಸೂಚನೆ ಸಂಖ್ಯೆ: ಆಕುಕ 47 ಐಎಂಎಂ 2018, ದಿನಾಂಕ: 17.04.2018.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದಲ್ಲಿನ ಸರ್ಕಾರದ ಅಧಿಸೂಚನೆಯನ್ನು ಈ ಮೂಲಕ ಜಾರಿಗೊಳಿಸಿದೆ.

ಕ್ರ ಸ ಂ ಅಧಿಕಾರಿಯ ಹೆಸರು ಹಾಗೂ ಕಾರ್ಯ ನಿರ್ವಹಣಾ ಸ್ಥಳ ಶ್ರೀ / ಶ್ರೀಮತಿ ಮುಂಬಡ್ತಿ/ಹಿಂಬಡ್ತಿ ಸ್ಥಳನಿಯುಕ್ತಿಗೊಂಡ ಕಛೇರಿ ಹಾಗೂ ಪ ದನಾಮ ಪ ಭಾರ ವಹಿಸಿಕೊಡುವ ಹಾಗೂ ವಹಿಸಿಕೊಳ್ಳುವ ್ರ ಬಗ್ಗೆ.
1 2 3 4
1. ಎನ್.ಡಿ. ಪ್ರಮೀಳ, ವೈಜ್ಞಾನಿಕ ಅಧಿಕಾರಿ, ಔಷಧ ಪರೀಕ್ಷಾ ಪ್ರಯೋಗಾಲಯ, ಬೆಂಗಳೂರು. ವ ುುಖ್ಯ ವೈಜ್ಞಾನಿಕ ಅಧಿಕಾರಿ, ಔಷಧ ಪರೀಕ್ಷಾ ಪ್ರಯೋಗಾಲಯ, ಬ ಂಗಳೂರು. ೆ ಸ ದರಿ ಅಧಿಕಾರಿಯವರು ಅವರ ಹಾಲಿ ಹುದ್ದೆಯ ಪ ಬ ್ರ ಾರವನ್ನು ಶ್ರೀ ಗೋಪಾಲ್ ಎಸ್. ಮಗದುಮ್ಮ, ವ ೆ ೖಜ್ಞಾನಿಕ ಅಧಿಕಾರಿ, ಔಷಧ ಪ ರೀಕ್ಷಾ ಪ ಯೋಗಾಲಯ, ್ರ ಬ ಂಗಳೂರು ೆ ಇವರಿಗೆ ವ ಹಿಸಿಕೊಟ್ಟು, ತದನಂತರ ಶ್ರೀ ಗೋಪಾಲ್ ಎಸ್. ವ ುಗದುಮ್ಮ, ವೈಜ್ಞಾನಿಕ ಅಧಿಕಾರಿ ಇವರಿಂದ, ಸ ದರಿಯವರು ಅಧಿಕ ಪ್ರಭಾರವಾಗಿ ನಿರ್ವಹಿಸುತ್ತಿರುವ ಮುಖ್ಯ ವೈಜ್ಞಾನಿಕ ಅಧಿಕಾರಿ ಹುದ್ದೆಯ ಪ್ರಭಾರವನ್ನು ವಹಿಸಿಕೊಳ್ಳುವುದು.
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ೩೦೧

ಶ್ರೀ ಗೋಪಾಲ್ ಎಸ್. ಮಗದುಮ್ಮ, ವೈಜ್ಞಾನಿಕ ಅಧಿಕಾರಿ, ಔಷಧ ಪರೀಕ್ಷಾ ಪ್ರಯೋಗಾಲಯ, ಬೆಂಗಳೂರು ರವರು ಶ್ರೀಮತಿ ಎನ್.ಡಿ. ಪ್ರಮೀಳ ರವರಿಂದ ವೈಜ್ಞಾನಿಕ ಅಧಿಕಾರಿ, ಔಷಧ ಪರೀಕ್ಷಾ ಪ್ರಯೋಗಾಲಯ, ಬೆಂಗಳೂರು ಹುದ್ದೆಯ ಪ್ರಭಾರವನ್ನು ವಹಿಸಿಕೊಂಡು, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಮ್ಮ ಹಾಲಿ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದಲ್ಲಿ ನಿರ್ವಹಿಸತಕ್ಕದ್ದು.

ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಹುದ್ದೆಯ ಪ್ರಭಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಹಿಸಿಕೊಡುವ ಹಾಗೂ ವಹಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಗಿಸಿ, ವರದಿಯನ್ನು ಕೇಂದ್ರ ಕಛೇರಿಗೆ ಸಲ್ಲಿಸುವಂತೆ ಆದೇಶಿಸಿದೆ.

PR. 678

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಕಛೇರಿ ಆದೇಶ ಸಂಖ್ಯೆ: ಔನಿಇ/15/ಸಿಬ್ಬಂದಿ/2018-19, ದಿನಾಂಕ:19.04.2018.

ವಿಷಯ: ಸಿವಿಲ್ ಅಪೀಲ್ ಸಂಖ್ಯೆ: 2368/2011-ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್

ಇಂಡಿಯ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ – ಉಪ ಔಷಧ ನಿಯಂತ್ರಕರ ಹುದ್ದೆಗೆ ಮುಂಬಡ್ತಿ/ಹಿಂಬಡ್ತಿ ನೀಡುವ ಕುರಿತು.

ಉಲ್ಲೇಖ: ಸರ್ಕಾರದ ಅಧಿಸೂಚನೆ ಸಂಖ್ಯೆ: ಆಕುಕ 48 ಐಎಂಎಂ 2018, ದಿನಾಂಕ: 17.04.2018.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದಲ್ಲಿನ ಸರ್ಕಾರದ ಅಧಿಸೂಚನೆಯನ್ನು ಈ ಮೂಲಕ ಜಾರಿಗೊಳಿಸಿದೆ.

ಕ್ರ ಸ ಂ ಅಧಿಕಾರಿಯ ಹೆಸರು ಹಾಗೂ ಕಾರ್ಯ ನಿರ್ವಹಣಾ ಸ್ಥಳ ಶ್ರೀ / ಶ್ರೀಮತಿ ಮುಂಬಡ್ತಿ/ಹಿಂಬಡ್ತಿ ಸ್ಥಳನಿಯುಕ್ತಿಗೊಂಡ ಕಛೇರಿ ಹಾಗೂ ಪದನಾಮ ಪ ಭಾರ ವಹಿಸಿಕೊಡುವ ಹಾಗೂ ವಹಿಸಿಕೊಳ್ಳುವ ್ರ ಬಗ್ಗೆ.
1 2 3 4
1. ಶಂಕರಜ್ಯೋತಿ, ಸಹಾಯಕ ಔಷಧ ನಿಯಂತ್ರಕರು-1, ಬಳ್ಳಾರಿ ವೃತ್ತ, ಬಳ್ಳಾರಿ ಸ ದಸ್ಯ ಕಾರ್ಯದರ್ಶಿ, ಪ ರೀಕ್ಷಾ ಪ್ರಾಧಿಕಾರ ಮಂಡಳಿ, ಬ ಂಗಳೂರು. ೆ ಸದರಿ ಅಧಿಕಾರಿಯವರು ಅವರ ಹಾಲಿ ಹುದ್ದೆಯ ಪ್ರಭಾರವನ್ನು ಶ್ರೀ ಬಿ.ಎನ್. ಬಾಬು, ಸಹಾಯಕ ಔಷಧ ನಿಯಂತ್ರಕರು-2, ಬಳ್ಳಾರಿ ವೃತ್ತ ಇವರಿಗೆ ವಹಿಸಿಕೊಟ್ಟು, ತದನಂತರ ಅಧ್ಯಕ್ಷರು, ಪರೀಕ್ಷಾ ಪ್ರಾಧಿಕಾರ ವ ುಂಡಳಿ, ಬೆಂಗಳೂರು ಮತ್ತು ಪ್ರಾಂಶುಪಾಲರು, ಸರ್ಕಾರಿ ಔಷಧ ವಿಜ್ಞಾನ ವ ುಹಾವಿದ್ಯಾಲಯ, ಬೆಂಗಳೂರು ಇವರಿಂದ, ಸದಸ್ಯ ಕಾರ್ಯದರ್ಶಿ, ಪರೀಕ್ಷಾ ಪ್ರಾಧಿಕಾರ ವ ುಂಡಳಿ, ಬೆಂಗಳೂರು ಹುದ್ದೆಯ ಪ ಭಾರವನ್ನು ವಹಿಸಿಕೊಳ್ಳುವುದು. ್ರ

ಶ್ರೀ ಬಿ.ಎನ್. ಬಾಬು, ಸಹಾಯಕ ಔಷಧ ನಿಯಂತ್ರಕರು-2, ಬಳ್ಳಾರಿ ವೃತ್ತ, ಬಳ್ಳಾರಿ ರವರು ಶ್ರೀ ಶಂಕರಜ್ಯೋತಿ ರವರಿಂದ ಸಹಾಯಕ ಔಷಧ ನಿಯಂತ್ರಕರು-1, ಬಳ್ಳಾರಿ ವೃತ್ತ, ಬಳ್ಳಾರಿ ಹುದ್ದೆಯ ಪ್ರಭಾರವನ್ನು ವಹಿಸಿಕೊಂಡು, ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ತಮ್ಮ ಹಾಲಿ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದಲ್ಲಿ ನಿರ್ವಹಿಸತಕ್ಕದ್ದು.

ಹುದ್ದೆಯ ಪ್ರಭಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಹಿಸಿಕೊಡುವ ಹಾಗೂ ವಹಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಗಿಸತಕ್ಕದ್ದು. ತಮ್ಮ ಬಳಿ ಇರುವ ತನಿಖಾ ಕಡತ, ವಶಪಡಿಸಿಕೊಂಡ ದಾಖಲೆ, ಮುದ್ದೆಮಾಲ್ ಇತ್ಯಾದಿಗಳನ್ನು ಹಸ್ತಾಂತರಿಸಿ, ವರದಿಯನ್ನು ಕೇಂದ್ರ ಕಛೇರಿಗೆ ಸಲ್ಲಿಸುವಂತೆ ಆದೇಶಿಸಿದೆ.

PR. 679

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಕಛೇರಿ ಆದೇಶ ಸಂಖ್ಯೆ: ಔನಿಇ/15/ಸಿಬ್ಬಂದಿ/2018-19, ದಿನಾಂಕ:19.04.2018.

ವಿಷಯ: ಸಿವಿಲ್ ಅಪೀಲ್ ಸಂಖ್ಯೆ: 2368/2011-ಬಿ.ಕೆ. ಪವಿತ್ರ ಮತ್ತು ಇತರರು ವಿರುದ್ಧ ಯೂನಿಯನ್ ಆಫ್

ಇಂಡಿಯ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸುವ ಬಗ್ಗೆ –ಉಪ ಔಷಧ ನಿಯಂತ್ರಕರ ಹುದ್ದೆಗೆ ಮುಂಬಡ್ತಿ/ಹಿಂಬಡ್ತಿ ನೀಡುವ ಕುರಿತು.

ಉಲ್ಲೇಖ: ಸರ್ಕಾರದ ಅಧಿಸೂಚನೆ ಸಂಖ್ಯೆ: ಆಕುಕ 48 ಐಎಂಎಂ 2018, ದಿನಾಂಕ: 17.04.2018.

೩೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ಭಾಗ ೨

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದಲ್ಲಿನ ಸರ್ಕಾರದ ಅಧಿಸೂಚನೆಯನ್ನು ಈ ಮೂಲಕ ಜಾರಿಗೊಳಿಸಿದೆ.

ಕ್ರ ಸ ಂ ಅಧಿಕಾರಿಯ ಹೆಸರು ಹಾಗೂ ಕಾರ್ಯ ನಿರ್ವಹಣಾ ಸ್ಥಳ ಶ್ರೀ / ಶ್ರೀಮತಿ ವ ುುಂಬಡ್ತಿ/ಹಿಂಬಡ್ತಿ ಸ ್ಥಳನಿಯುಕ್ತಿಗೊಂಡ ಕಛೇರಿ ಹಾಗೂ ಪದನಾಮ ಪ ಭಾರ ವಹಿಸಿಕೊಡುವ ಹಾಗೂ ವಹಿಸಿಕೊಳ್ಳುವ ಬಗ್ಗೆ. ್ರ
1 2 3 4
1. ಎಸ್. ಉಮೇಶ್, ಸದಸ್ಯ ಕಾರ್ಯದರ್ಶಿ, ಪರೀಕ್ಷಾ ಪ್ರಾಧಿಕಾರ ಮಂಡಳಿ, ಬೆಂಗಳೂರು. ಸ ಹಾಯಕ ಔಷಧ ನಿಯಂತ್ರಕರು, ಚಾಮರಾಜನಗರ ವ ೃತ್ತ, ಚಾಮರಾಜನಗರ ಸದರಿ ಅಧಿಕಾರಿಯವರು ಅವರ ಹಾಲಿ ಹುದ್ದೆಯ ಪ ಭಾರವನ್ನು ಅಧ್ಯಕ್ಷರು, ಪರೀಕ್ಷಾ ಪ್ರಾಧಿಕಾರ ಮಂಡಳಿ, ್ರ ಬ ಂಗಳೂರು ಮತ್ತು ಪ್ರಾಂಶುಪಾಲರು, ಸರ್ಕಾರಿ ಔಷಧ ೆ ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು ಇವರಿಗೆ ವ ಹಿಸಿಕೊಟ್ಟು, ತದನಂತರ ಶ್ರೀ ಎಸ್. ನಾಗರಾಜ, ಸಹಾಯಕ ಔಷಧ ನಿಯಂತ್ರಕರು, ಮೈಸೂರು ವೃತ ್ತ-1, ವ ೆ ುೖಸೂರು ಇವರಿಂದ, ಸ ದರಿಯವರು ಅಧಿಕ ಪ ಭಾರವಾಗಿ ಹೊಂದಿರುವ ಚಾಮರಾಜನಗರ ವೃತ ್ರ ್ತ ಕಛೇರಿಯ ಸಹಾಯಕ ಔಷಧ ನಿಯಂತ್ರಕರ ಹುದ್ದೆಯ ಪ ಭಾರವನ್ನು ವಹಿಸಿಕೊಳ್ಳುವುದು. ್ರ

ಹುದ್ದೆಯ ಪ್ರಭಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಹಿಸಿಕೊಡುವ ಹಾಗೂ ವಹಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಗಿಸತಕ್ಕದ್ದು. ತಮ್ಮ ಬಳಿ ಇರುವ ತನಿಖಾ ಕಡತ, ವಶಪಡಿಸಿಕೊಂಡ ದಾಖಲೆ, ಮುದ್ದೆಮಾಲ್ ಇತ್ಯಾದಿಗಳನ್ನು ಹಸ್ತಾಂತರಿಸಿ, ವರದಿಯನ್ನು ಕೇಂದ್ರ ಕಛೇರಿಗೆ ಸಲ್ಲಿಸುವಂತೆ ಆದೇಶಿಸಿದೆ. PR. 680

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಜ್ಞಾಪನ

ಸಂಖ್ಯೆ:ಔನಿಇ/665/ಸಿಬ್ಬಂದಿ/2017-18 ಬೆಂಗಳೂರು-560 001, ದಿನಾಂಕ: 20-04-2018.

ವಿಷಯ: ಶ್ರೀ ರೇಣುಪ್ರಸಾದ್ ಎಂ.ಯು, ಔಷಧ ಪರಿವೀಕ್ಷಕರು-3, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ

ಗಳಿಕೆ ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ಉಲ್ಲೇಖ: ಶ್ರೀ ರೇಣುಪ್ರಸಾದ್ ಎಂ.ಯು, ಔಷಧ ಪರಿವೀಕ್ಷಕರು-3 ಇವರ ಮನವಿ ಪತ್ರ ದಿನಾಂಕ: 17.03.2018.

ಮೇಲಿನ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖಿತ ಮನವಿಯ ಮೇರೆಗೆ, ಶ್ರೀ ರೇಣುಪ್ರಸಾದ್ ಎಂ.ಯು, ಔಷಧ ಪರಿವೀಕ್ಷಕರು-3, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ದಿನಾಂಕ: 21.04.2018 ರಿಂದ 02.06.2018ರವರೆಗೆ 43 ದಿನಗಳ ಗಳಿಕೆ ರಜೆಯನ್ನು ಮಹಾಲೇಖಪಾಲರ ರಜೆ ಲಭ್ಯತೆ ನಿರೀಕ್ಷೆಯ ಮೇರೆಗೆ ಉಪಯೋಗಿಸಿಕೊಂಡು ರಜೆಯಲ್ಲಿ ತೆರಳಲುಅನುಮತಿಸಿದೆ.

ಸದರಿ ಅಧಿಕಾರಿಯವರು ರಜೆಯ ಮೇಲೆ ತೆರಳುವ ಮುನ್ನ ಅವರು ಹೊಂದಿರುವ ಕೇಂದ್ರ ಕಛೇರಿಯ ಔಷಧ ಪರಿವೀಕ್ಷಕರು-3 ಹುದ್ದೆಯ ಪ್ರಭಾರವನ್ನು ಶ್ರೀ ಮನೋಹರ ಕೆ.ವಿ., ಔಷಧ ಪರಿವೀಕ್ಷಕರು-3, ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬೆಂಗಳೂರು ವೃತ್ತ-2, ಬೆಂಗಳೂರು ಇವರಿಗೆ ವಹಿಸಿಕೊಡಲು ಈ ಮೂಲಕ ಆದೇಶಿಸಿದೆ.

ಶ್ರೀ ಮನೋಹರ ಕೆ.ವಿ., ಔಷಧ ಪರಿವೀಕ್ಷಕರು-3, ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬೆಂಗಳೂರು ವೃತ್ತ-2, ಬೆಂಗಳೂರು ಇವರು ಶ್ರೀ ರೇಣುಪ್ರಸಾದ್ ಎಂ.ಯು ರವರಿಂದ ಔಷಧ ಪರಿವೀಕ್ಷಕರು-3, ಕೇಂದ್ರ ಕಛೇರಿ, ಬೆಂಗಳೂರು ಹುದ್ದೆಯ ಪ್ರಭಾರವನ್ನು ಪಡೆದು, ಅವರ ರಜೆ ಅವಧಿ ಪೂರೈಸುವವರೆಗೆ ತಮ್ಮ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಈ ಮೂಲಕ ನಿರ್ದೇಶಿಸಿದೆ.

PR. 681

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಜ್ಞಾಪನ

ಸಂಖ್ಯೆ:ಔನಿಇ/41/ಸಿಬ್ಬಂದಿ/2018-19 ಬೆಂಗಳೂರು-560 001, ದಿನಾಂಕ: 23-04-2018.

ವಿಷಯ: ಶ್ರೀಮತಿ ವಿಭಾ ಎಲ್., ಔಷಧ ಪರಿವೀಕ್ಷಕರು-7, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ಪರಿವರ್ತಿತ ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ಉಲ್ಲೇಖ: ಶ್ರೀಮತಿ ವಿಭಾ ಎಲ್., ಔಷಧ ಪರಿವೀಕ್ಷಕರು-7 ಇವರ ಮನವಿ ಪತ್ರ ದಿನಾಂಕ: 11.04.2018.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ೩೦೩

ಮೇಲಿನ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖಿತ ಮನವಿಯ ಮೇರೆಗೆ, ಶ್ರೀಮತಿ ವಿಭಾ ಎಲ್., ಔಷಧ ಪರಿವೀಕ್ಷಕರು-7, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ದಿನಾಂಕ: 24.04.2018 ರಿಂದ 13.05.2018ರವರೆಗೆ 20 ದಿನಗಳ ಪರಿವರ್ತಿತ ರಜೆಯನ್ನು ಪ್ರಸೂತಿ ಪೂರ್ವ ವಿಶ್ರಾಂತಿ ನಿಮಿತ್ತ, ಮಹಾಲೇಖಪಾಲರ ರಜೆ ಲಭ್ಯತೆ ನಿರೀಕ್ಷೆಯ ಮೇರೆಗೆ ಉಪಯೋಗಿಸಿಕೊಂಡು ರಜೆಯಲ್ಲಿ ತೆರಳಲು ಅನುಮತಿಸಿದೆ.

ಸದರಿ ಅಧಿಕಾರಿಯವರು ರಜೆಯ ಮೇಲೆ ತೆರಳುವ ಮುನ್ನ ಅವರು ಹೊಂದಿರುವ ಕೇಂದ್ರ ಕಛೇರಿಯ ಔಷಧ ಪರಿವೀಕ್ಷಕರು-6 ಮತ್ತು ಔಷಧ ಪರಿವೀಕ್ಷಕರು-7 ಹುದ್ದೆಗಳ ಪ್ರಭಾರವನ್ನು ಶ್ರೀ ಮನೋಹರ ಕೆ.ವಿ., ಔಷಧ ಪರಿವೀಕ್ಷಕರು-3, ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬೆಂಗಳೂರು ವೃತ್ತ-2, ಬೆಂಗಳೂರು ಇವರಿಗೆ ವಹಿಸಿಕೊಡಲು ಈ ಮೂಲಕ ಆದೇಶಿಸಿದೆ.

ಶ್ರೀ ಮನೋಹರ ಕೆ.ವಿ., ಔಷಧ ಪರಿವೀಕ್ಷಕರು-3, ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬೆಂಗಳೂರು ವೃತ್ತ-2, ಬೆಂಗಳೂರು ಇವರು ಶ್ರೀಮತಿ ವಿಭಾ ಎಲ್., ಔಷಧ ಪರಿವೀಕ್ಷಕರು-7, ಕೇಂದ್ರ ಕಛೇರಿ, ಬೆಂಗಳೂರು ರವರಿಂದ ಔಷಧ ಪರಿವೀಕ್ಷಕರು-6 ಮತ್ತು ಔಷಧ ಪರಿವೀಕ್ಷಕರು-7 ಹುದ್ದೆಗಳ ಪ್ರಭಾರವನ್ನು ಪಡೆದು, ಅವರ ರಜೆ ಅವಧಿ ಪೂರೈಸುವವರೆಗೆ ತಮ್ಮ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಈ ಮೂಲಕ ನಿರ್ದೇಶಿಸಿದೆ.

PR. 682

ಔಷಧ ನಿಯಂತ್ರಕರು

SC. 50

ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ರಾಜ್ಯದ ಔಷಧ ನಿಯಂತ್ರಕರ ಕಛೇರಿ, ಅರಮನೆ ರಸ್ತೆ, ಬೆಂಗಳೂರು-560 001.

ಜ್ಞಾಪನ

ಸಂಖ್ಯೆ:ಔನಿಇ/155/ಸಿಬ್ಬಂದಿ/2018-19 ಬೆಂಗಳೂರು-560 001, ದಿನಾಂಕ: 20-06-2018.

ವಿಷಯ: ಶ್ರೀ ಪಿ. ರಮೇಶ್, ಸಹಾಯಕ ಔಷಧ ನಿಯಂತ್ರಕರು-2, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ಗಳಿಕೆ

ರಜೆಯನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ.

ಉಲ್ಲೇಖ: ಶ್ರೀ ಪಿ. ರಮೇಶ್, ಸಹಾಯಕ ಔಷಧ ನಿಯಂತ್ರಕರು-2 ಇವರ ಮನವಿ ಪತ್ರ ದಿನಾಂಕ: 11.06.2018.

ಮೇಲಿನ ವಿಷಯಕ್ಕೆ ಸಂಬಂಧಿಸಿದ ಉಲ್ಲೇಖಿತ ಮನವಿಯ ಮೇರೆಗೆ, ಶ್ರೀ ಪಿ. ರಮೇಶ್, ಸಹಾಯಕ ಔಷಧ ನಿಯಂತ್ರಕರು-2, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ 21.06.2018 ರಿಂದ 28.06.2018ರವರೆಗೆ ಒಟ್ಟು 08 ದಿನಗಳ ಗಳಿಕೆ ರಜೆಯನ್ನು ಮಹಾಲೇಖಪಾಲರ ರಜೆ ಲಭ್ಯತೆ ನಿರೀಕ್ಷೆಯ ಮೇರೆಗೆ ಉಪಯೋಗಿಸಿಕೊಂಡು ರಜೆಯಲ್ಲಿ ತೆರಳಲು ಅನುಮತಿಸಿದೆ.

ಸದರಿ ಅಧಿಕಾರಿಯವರು ರಜೆಯ ಮೇಲೆ ತೆರಳುವ ಮುನ್ನ ಅವರು ಹೊಂದಿರುವ ಕೇಂದ್ರ ಕಛೇರಿಯ ಸಹಾಯಕ ಔಷಧ ನಿಯಂತ್ರಕರ ಹುದ್ದೆಯ ಪ್ರಭಾರವನ್ನು ಶ್ರೀ ಎಸ್. ವೆಂಕಟೇಶ್, ಸಹಾಯಕ ಔಷಧ ನಿಯಂತ್ರಕರು-1, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ವಹಿಸಿಕೊಡಲು ಈ ಮೂಲಕ ಆದೇಶಿಸಿದೆ.

ಶ್ರೀ ಎಸ್. ವೆಂಕಟೇಶ್, ಸಹಾಯಕ ಔಷಧ ನಿಯಂತ್ರಕರು-1, ಕೇಂದ್ರ ಕಛೇರಿ, ಬೆಂಗಳೂರು ಇವರು ಶ್ರೀ ಪಿ.ರಮೇಶ್ ಇವರಿಂದ ಸಹಾಯಕ ಔಷಧ ನಿಯಂತ್ರಕರು-2, ಕೇಂದ್ರ ಕಛೇರಿ, ಬೆಂಗಳೂರು ಹುದ್ದೆಯ ಪ್ರಭಾರವನ್ನು ಪಡೆದು, ಅವರ ರಜೆ ಅವಧಿ ಪೂರೈಸುವವರೆಗೆ ತಮ್ಮ ಹುದ್ದೆಯ ಕರ್ತವ್ಯಗಳೊಂದಿಗೆ ಹೆಚ್ಚುವರಿಯಾಗಿ ಹಾಗೂ ಸಮವರ್ತಿ ಪ್ರಭಾರದ ಮೇರೆಗೆ ನಿರ್ವಹಿಸಲು ಈ ಮೂಲಕ ನಿರ್ದೇಶಿಸಿದೆ.

PR. 683

ಅಪರ ಔಷಧ ನಿಯಂತ್ರಕರು

SC. 50

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಾರಿಇ 71 ಸಾಸಂಇ 2018, ಬೆಂಗಳೂರು, ದಿನಾಂಕ: 29.06.2018

ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ, 1950ರ ಕಲಂ 5 (2) ಮತ್ತು 5(9) ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಮಾವಳಿಗಳು, 1961 ರ ನಿಯಮ 3(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವರು, ಇವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ನಿರ್ದೇಶಕ ಮಂಡಳಿಯ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ.

PR - 631

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಕೆ. ಬೀರೇಶ್

ಸರ್ಕಾರದ ಉಪ ಕಾರ್ಯದರ್ಶಿ,

ಸಾರಿಗೆ ಇಲಾಖೆ.

೩೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ಭಾಗ ೨

ಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಾರಿಇ 71 ಸಾಸಂಇ 2018, ಬೆಂಗಳೂರು, ದಿನಾಂಕ: 02.07.2018

ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ ನ Article of Association ನ ಪರಿಚ್ಛೇಧ 8 ಮತ್ತು 17 ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಡಿ.ಸಿ.ತಮ್ಮಣ್ಣ, ಸಾರಿಗೆ ಸಚಿವರು, ಇವರನ್ನು ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಮಂಡಳಿಯ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ.

PR - 632

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಕೆ. ಬೀರೇಶ್

ಸರ್ಕಾರದ ಉಪ ಕಾರ್ಯದರ್ಶಿ,

ಸಾರಿಗೆ ಇಲಾಖೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ 13 ಎಚ್ಎಸ್ಎಚ್ 2016, ಬೆಂಗಳೂರು, ದಿನಾಂಕ: 29.06.2018

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಹಿರಿಯ ತಜ್ಞರು/ಉಪ ಮುಖ್ಯ ವೈದ್ಯಾಧಿಕಾರಿಗಳಿಗೆ ರೂ.74400-1900-83900-2200-97100-2500-109600 ವೇತನ ಶ್ರೇಣಿಯಲ್ಲಿ ಜಂಟಿ ನಿರ್ದೇಶಕರ ಹುದ್ದೆಗೆ ಪದೋನ್ನತಿ ನೀಡಿ ಈ ತಕ್ಷಣದಿಂದಲೇ

ಕ್ರ. ಸಂ. ಹಿರಿಯ ತಜ್ಞರು/ಉಪ ಮುಖ್ಯ ವೈದ್ಯಾಧಿಕಾರಿ ಹ ಸರು ಹಾಗೂ ಕಾರ್ಯ ನಿರ್ವಹಿಸುತ್ತಿರುವ ಸ್ಥಳ ೆ ವ ುುಂಬಡ್ತಿ ನೀಡಿ ನೇಮಿಸಲಾದ ಹುದ್ದೆ ಮತ್ತು ಸ್ಥಳ
01. ಡಾ|| ಮಂಜುಳ.ಎಂ. ವ ೖದ್ಯಕೀಯ ಅಧೀಕ್ಷಕರು, ಹೆಚ್.ಎಸ್.ಐ.ಎಸ್.ಘೋಷಾ ಆಸ್ಪತ್ರೆ, ೆ ಬ ಂಗಳೂರು. ೆ ಕ್ಷಯ (ಲೇಡಿ ವಿಲ್ಲಿಂಗ್ಡನ್ ರಾಜ್ಯ ಕ್ಷಯರೋಗ ಕೇಂದ್ರ, ಬೆಂಗಳೂರು)
02. ಡಾ|| ಚವ್ಹಾಣ್ ಸುನಿಲ್.ಡಿ. ಉಪ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಬ ಂಗಳೂರು. ೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, (ಕುಷ್ಠ ಮತ್ತು ಮಾನಸಿಕ ಆರೋಗ್ಯ), ಬೆಂಗಳೂರು.
03. ಡಾ|| ದಮಯಂತಿ ಕೃಷ್ಣಮೋಹನ್ ಹಿರಿಯ ತಜ್ಞರು, ಸ ಮುದಾಯ ಆರೋಗ್ಯ ಕೇಂದ್ರ, ಬ್ರಹ್ಮಾವರ, ಉಡುಪಿ. ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ, ಮಂಗಳೂರು, ದ.ಕ.ಜಿಲ್ಲೆ.
04. ಡಾ|| ಸಂಪಂಗಿ ರಾಮಯ್ಯ ಅರವಳಿಕೆ ತಜ್ಞರು, ಕೆ.ಸಿ.ಜನರಲ್ ಆಸ್ಪತ್ರೆ, ಬೆಂಗಳೂರು. ಸಾರ್ವಜನಿಕ ಆರೋಗ್ಯ ಸಂಸ್ಥೆ, ಬೆಂಗಳೂರು.
05. ಡಾ|| ಮುನಿರಾಜು.ಕೆ.ಎಂ. ಹಿರಿಯ ತಜ್ಞರು, ಸಾರ್ವಜನಿಕ ಆಸ್ಪತ್ರೆ, ಜಯನಗರ, ಬೆಂಗಳೂರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, (ಐ.ಇ.ಸಿ), ಬೆಂಗಳೂರು.
06. ಡಾ|| ರಮೇಶ್ ಬಾಬು.ಎನ್. ಜಿಲ್ಲಾ ಆಕುಕ ಅಧಿಕಾರಿ, ಬೆಂಗಳೂರು ನಗರ ಜಿಲ್ಲೆ. ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ, ಬೆಂಗಳೂರು.
07. ಡಾ|| ಬೆಣಚಿನ ಮರಡಿ.ಆರ್.ಎಸ್. ಸಾರ್ವಜನಿಕ ಆಸ್ಪತ್ರೆ, ಗೋಕಾಕ, ಬೆಳಗಾವಿ ಜಿಲ್ಲೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, (ಹೆಚ್ & ಪಿ ಮತ್ತು ಹೆಚ್.ಇ.ಟಿ), ಬೆಂಗಳೂರು.
08. ಡಾ|| ಭೀಮನಗೌಡ ಎಸ್.ಪಾಟೀಲ್ ಹಿರಿಯ ತಜ್ಞರು, ಜಿಲ್ಲಾ ಆಸ್ಪತ್ರೆ, ತುಮಕೂರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯ, (ಎನ್.ಸಿ.ಡಿ.)
09. ಡಾ|| ಗಂಜ್ಯಾಳ್ ದಿಲೀಪ್ ಕುಮಾರ್ ಆರ್.ಸಿ.ಹೆಚ್.ಅಧಿಕಾರಿ, ಬಾಗಲಕೋಟೆ ಜಿಲ್ಲೆ. ಸರ್ಕಾರಿ ಆಸ್ಪತ್ರೆ, ಜಯನಗರ, ಬೆಂಗಳೂರು.
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ೩೦೫

ಸದರಿ ಅಧಿಕಾರಿಗಳು ನೇಮಿಸಲಾದ ಸ್ಥಳದಲ್ಲಿ ಕೂಡಲೇ ಕಾರ್ಯವರದಿ ಮಾಡಿಕೊಂಡು ಸರ್ಕಾರವನ್ನು ಒಳಗೊಂಡಂತೆ ಸಂಬಂಧ ಪಟ್ಟವರೆಲ್ಲರಿಗೂ ಪ್ರಭಾರ ವರ್ಗಾವಣೆ ಪತ್ರವನ್ನು (ಸಿ.ಟಿ.ಸಿ) ಸಲ್ಲಿಸತಕ್ಕದ್ದು.

PR - 633

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25

ಯ.ಶಿವಶಂಕರ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು)

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಪಸಂಮೀ 15 ಕಕುಮ 2016, ಬೆಂಗಳೂರು, ದಿನಾಂಕ: 29.06.2018

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಬೈಲಾ 15 (1)ರ ಮೇರೆಗೆ ರಾಜ್ಯ ಸರ್ಕಾರದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಎಂ.ಮಂಜುನಾಥ ನಾಯ್ಕ್, ಸರ್ಕಾರದ ಕಾರ್ಯದರ್ಶಿ, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಇವರನ್ನು ನಿಗಮದ ನಿರ್ದೇಶಕ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದ ಸರ್ಕಾರದ ಅಧಿಸೂಚನೆ ಸಂಖ್ಯೆ: ಪಸಂಮೀ 15 ಕಕುಮ 2016, ದಿನಾಂಕ: 05.06.2018 ನ್ನು ರದ್ದುಪಡಿಸಿ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಬೈಲಾ 15 (1)ರ ಮೇರೆಗೆ ರಾಜ್ಯ ಸರ್ಕಾರದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸದರಿ ನಿಗಮದ ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ಮಾನ್ಯ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವರಾದ ಶ್ರೀ ವೆಂಕಟರಾವ್ ನಾಡಗೌಡ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಹನುಮಂತೇಗೌಡ

PR - 634

ಸರ್ಕಾರದ ಅಧೀನ ಕಾರ್ಯದರ್ಶಿ,

SC - 50

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ,

(ಪಶುಸಂಗೋಪನೆ).

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 06 ಜಿಆರ್‌ಸಿ 2015(1), ಬೆಂಗಳೂರು, ದಿನಾಂಕ : 05-06-2018.

ಹಣಕಾಸು ಸಂಸ್ಥೆಯಾದ ಮೆ: ಅಗ್ರಿ ಗೋಲ್ಡ್ ಫಾರ್ಮ ಎಸ್ಟೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅಗ್ರಿ ಗೋಲ್ಡ್ ಕನ್‌ಸ್ಟ್ರಕ್ಷನ್ಸ್, ಡ್ರೀಮ್‌ಲ್ಯಾಂಡ್ ವೆನ್ಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಸಹವರ್ತಿ ಕಂಪನಿಗಳು/ ಸಂಸ್ಥೆಗಳು ವಂಚಕ ವಹಿವಾಟುಗಳಲ್ಲಿ ತೊಡಗಿದ್ದು, ಅವುಗಳ ಠೇವಣಿದಾರರರಿಗೆ ಠೇವಣಿಗಳನ್ನು ಹಿಂದುರುಗಿಸುವಲ್ಲಿ ವಿಫಲರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಸರ್ಕಾರವು, ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004 (ಕರ್ನಾಟಕ ಅಧಿನಿಯಮ 30, 2005) ರ ಅಡಿಯಲ್ಲಿ ನಿರ್ದಿಷ್ಠಪಡಿಸಿರುವ ಉಪ ಬಂಧಗಳಿಗೆ ಅನುಸಾರವಾಗಿ ಕ್ರಮ ಜರುಗಿಸಲು ನಿರ್ಧರಿಸಿದೆ.

ಸದರಿ ಕಂಪನಿಗಳಿಗೆ ಸೇರಿದ ಸ್ವತ್ತುಗಳು ವಿವಿಧ ಜಿಲ್ಲೆಗಳಲ್ಲಿ ವಿಸ್ತರಿಸುವುದು ಮತ್ತು ಅವುಗಳ ಠೇವಣಿದಾರರು ಕರ್ನಾಟಕ ರಾಜ್ಯದೆಲ್ಲೆಡೆ, ಬಹುಶ:

ಇತರ ರಾಜ್ಯಗಳಲ್ಲಿಯೂ ಹರಡಿರುವುದು ವರದಿಯಾಗಿದೆ. ಇಂತಹ ಪ್ರಕರಣ ಪುನರಾವರ್ತನೆಯನ್ನು ತಡೆಯುವ ಸಲುವಾಗಿ ಎಲ್ಲಾ ಠೇವಣಿದಾರರಿಂದ ಕ್ಲೇಮುಗಳನ್ನು ಆಹ್ವಾನಿಸುವುದಕ್ಕೆ ಮತ್ತು ಮೆ: ಅಗ್ರಿ ಗೋಲ್ಡ್ ಫಾರ್ಮ ಎಸ್ಟೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅಗ್ರಿ ಗೋಲ್ಡ್ ಕನ್‌ಸ್ಟ್ರಕ್ಷನ್ಸ್, ಡ್ರೀಮ್‌ಲ್ಯಾಂಡ್ ವೆನ್ಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಸಹವರ್ತಿ ಕಂಪನಿಗಳು/ ಸಂಸ್ಥೆಗಳಿಗೆ ಸೇರಿದ ಸ್ವತ್ತುಗಳನ್ನು ಜಪ್ತಿ ಮಾಡುವುದಕ್ಕೆ ಒಬ್ಬರು ಸಕ್ಷಮ ಪ್ರಾಧಿಕಾರಿಯ ಅಧಿಕೃತಗೊಳಿಸುವುದು ಅವಶ್ಯಕವಾಗಿದೆ.

ಆದ್ದರಿಂದ, ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004 (ಕರ್ನಾಟಕ ಅಧಿನಿಯಮ 30, 2005) ರ ಪ್ರಕರಣ 5(1)ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸಹಾಯಕ ಆಯುಕ್ತರು, ರಾಮನಗರ ಉಪ ವಿಭಾಗ, ರಾಮನಗರ ಜಿಲ್ಲೆ, ಇವರನ್ನು ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸುವ ದೃಷ್ಠಿಯಿಂದ ಮೆ: ಅಗ್ರಿ ಗೋಲ್ಡ್ ಫಾರ್ಮ ಎಸ್ಟೇಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಅಗ್ರಿ ಗೋಲ್ಡ್ ಕನ್‌ಸ್ಟ್ರಕ್ಷನ್ಸ್, ಡ್ರೀಮ್‌ಲ್ಯಾಂಡ್ ವೆನ್ಚರ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರ ಸಹವರ್ತಿ ಕಂಪನಿಗಳು/ ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ತಕ್ಷಣದಿಂದ ಜಾರಿಗೆ ಬರುವಂತೆ ಸಕ್ಷಮ ಪ್ರಾಧಿಕಾರಿಯನ್ನಾಗಿ ಈ ಮೂಲಕ ನೇಮಿಸಲಾಗಿದೆ.

PR - 643

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಕೆ.ಆರ್. ರವಿಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ವಿಶೇಷ ಕೋಶ)೩೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ಭಾಗ ೨

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 02 ಜಿಆರ್‌ಸಿ 2015, ಬೆಂಗಳೂರು, ದಿನಾಂಕ : 05-06-2018.

ಹಣಕಾಸು ಸಂಸ್ಥೆಯಾದ ಮೆ: ಶ್ರೀ ಶಕ್ತಿ ಸೌಹಾರ್ದ ಸಹಕಾರಿ ಲಿ., & ಶ್ರೀ ಎ.ಎನ್.ಕುಮಾರ್, ಪ್ರೆಸಿಡೆಂಟ್ ಆಫ್ ಕುಮಾರ್ ಲಾಗಿಸ್ಟಿಕ್ ಕಂಪನಿ/ಸಂಸ್ಥೆಗಳು ವಂಚಕ ವಹಿವಾಟುಗಳಲ್ಲಿ ತೊಡಗಿದ್ದು, ಅವುಗಳ ಠೇವಣಿದಾರರರಿಗೆ ಠೇವಣಿಗಳನ್ನು ಹಿಂದುರುಗಿಸುವಲ್ಲಿ ವಿಫಲರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹಾಗಾಗಿ ಸರ್ಕಾರವು, ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004 (ಕರ್ನಾಟಕ ಅಧಿನಿಯಮ 30, 2005) ರ ಅಡಿಯಲ್ಲಿ ನಿರ್ದಿಷ್ಠಪಡಿಸಿರುವ ಉಪ ಬಂಧಗಳಿಗೆ ಅನುಸಾರವಾಗಿ ಕ್ರಮ ಜರುಗಿಸಲು ನಿರ್ಧರಿಸಿದೆ.

ಸದರಿ ಕಂಪನಿಗಳಿಗೆ ಸೇರಿದ ಸ್ವತ್ತುಗಳು ವಿವಿಧ ಜಿಲ್ಲೆಗಳಲ್ಲಿ ವಿಸ್ತರಿಸುವುದು ಮತ್ತು ಅವುಗಳ ಠೇವಣಿದಾರರು ಕರ್ನಾಟಕ ರಾಜ್ಯದೆಲ್ಲೆಡೆ, ಬಹುಶ:

ಇತರ ರಾಜ್ಯಗಳಲ್ಲಿಯೂ ಹರಡಿರುವುದು ವರದಿಯಾಗಿದೆ. ಇಂತಹ ಪ್ರಕರಣ ಪುನರಾವರ್ತನೆಯನ್ನು ತಡೆಯುವ ಸಲುವಾಗಿ ಎಲ್ಲಾ ಠೇವಣಿದಾರರಿಂದ ಕ್ಲೇಮುಗಳನ್ನು ಆಹ್ವಾನಿಸುವುದಕ್ಕೆ ಮತ್ತು ಮೆ: ಶ್ರೀ ಶಕ್ತಿ ಸೌಹಾರ್ದ ಸಹಕಾರಿ ಲಿ., & ಶ್ರೀ ಎ.ಎನ್.ಕುಮಾರ್, ಪ್ರೆಸಿಡೆಂಟ್ ಆಫ್ ಕುಮಾರ್ ಲಾಗಿಸ್ಟಿಕ್ ಕಂಪನಿಗಳು/ಸಂಸ್ಥೆಗಳಿಗೆ ಸೇರಿದ ಸ್ವತ್ತುಗಳನ್ನು ಜಪ್ತಿ ಮಾಡುವುದಕ್ಕೆ ಒಬ್ಬರು ಸಕ್ಷಮ ಪ್ರಾಧಿಕಾರಿಯ ಅಧಿಕೃತಗೊಳಿಸುವುದು ಅವಶ್ಯಕವಾಗಿದೆ.

ಆದ್ದರಿಂದ, ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004 (ಕರ್ನಾಟಕ ಅಧಿನಿಯಮ 30, 2005) ರ ಪ್ರಕರಣ 5ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸಹಾಯಕ ಆಯುಕ್ತರು, ಬೆಂಗಳೂರು ಉತ್ತರ ಉಪ ವಿಭಾಗ, ಬೆಂಗಳೂರು ಜಿಲ್ಲೆ ಇವರನ್ನು ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸುವ ದೃಷ್ಠಿಯಿಂದ ಸಕ್ಷಮ ಪ್ರಾಧಿಕಾರಿಯನ್ನಾಗಿ ಈ ಮೂಲಕ ನೇಮಿಸಲಾಗಿದೆ.

ಸಕ್ಷಮ ಪ್ರಾಧಿಕಾರಿಯು ಸರ್ಕಾರದ ಪರವಾಗಿ ಈ ಅಧಿನಿಯಮದ ಪ್ರಕರಣ 3ನ್ನು ಒಳಗೊಂಡಂತೆ ಉಪಬಂಧಗಳ ಅಡಿಯಲ್ಲಿ ಯುಕ್ತ ಕ್ರಮ ಕೈಗೊಳ್ಳುವುದಕ್ಕಾಗಿ ಮೆ: ಶ್ರೀ ಶಕ್ತಿ ಸೌಹಾರ್ದ ಸಹಕಾರಿ ಲಿ., & ಶ್ರೀ ಎ.ಎನ್.ಕುಮಾರ್, ಪ್ರೆಸಿಡೆಂಟ್ ಆಫ್ ಕುಮಾರ್ ಲಾಗಿಸ್ಟಿಕ್ ಕಂಪನಿಗಳು/ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ತಕ್ಷಣ ಜಾರಿಗೆ ಬರುವಂತೆ ಮೇಲೆ ಹೇಳಿರುವ ಉದ್ದೇಶವನ್ನು ಕಾರ್ಯಗತಗೊಳಿಸಲು ಅಗತ್ಯವಾಗಿರುವಂತಹ ಎಲ್ಲಾ ಅಧಿಕಾರಗಳನ್ನು ಹೊಂದಿರತಕ್ಕದ್ದು.

PR - 644

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಕೆ.ಆರ್. ರವಿಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ವಿಶೇಷ ಕೋಶ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 12 ಜಿಆರ್‌ಸಿ 2015, ಬೆಂಗಳೂರು, ದಿನಾಂಕ : 05-06-2018.

ಹಣಕಾಸು ಸಂಸ್ಥೆಯಾದ ಮೆ: ಲ್ಯಾನ್ಸರ್ ಫೈನಾನ್ಸ್ ಕಂಪನಿ ಪ್ರೈವೇಟ್ ಲಿ., ಮತ್ತು ಇತರ ಸಹವರ್ತಿ ಕಂಪನಿಗಳು/ ಸಂಸ್ಥೆಗಳು ವಂಚಕ ವಹಿವಾಟುಗಳಲ್ಲಿ ತೊಡಗಿದ್ದು, ಅವುಗಳ ಠೇವಣಿದಾರರರಿಗೆ ಠೇವಣಿಗಳನ್ನು ಹಿಂದುರುಗಿಸುವಲ್ಲಿ ವಿಫಲರಾಗಿರುವುದು ಸರ್ಕಾರದ ಗಮನಕ್ಕೆ ಬಂದಿದೆ.

ಹಾಗಾಗಿ ಸರ್ಕಾರವು, ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004 (ಕರ್ನಾಟಕ ಅಧಿನಿಯಮ 30, 2005) ರ ಅಡಿಯಲ್ಲಿ ನಿರ್ದಿಷ್ಠಪಡಿಸಿರುವ ಉಪ ಬಂಧಗಳಿಗೆ ಅನುಸಾರವಾಗಿ ಕ್ರಮ ಜರುಗಿಸಲು ನಿರ್ಧರಿಸಿದೆ.

ಸದರಿ ಕಂಪನಿಗಳಿಗೆ ಸೇರಿದ ಸ್ವತ್ತುಗಳು ವಿವಿಧ ಜಿಲ್ಲೆಗಳಲ್ಲಿ ವಿಸ್ತರಿಸುವುದು ಮತ್ತು ಅವುಗಳ ಠೇವಣಿದಾರರು ಕರ್ನಾಟಕ ರಾಜ್ಯದೆಲ್ಲೆಡೆ, ಬಹುಶ:

ಇತರ ರಾಜ್ಯಗಳಲ್ಲಿಯೂ ಹರಡಿರುವುದು ವರದಿಯಾಗಿದೆ. ಇಂತಹ ಪ್ರಕರಣ ಪುನರಾವರ್ತನೆಯನ್ನು ತಡೆಯುವ ಸಲುವಾಗಿ ಎಲ್ಲಾ ಠೇವಣಿದಾರರಿಂದ ಕ್ಲೇಮುಗಳನ್ನು ಆಹ್ವಾನಿಸುವುದಕ್ಕೆ ಮತ್ತು ಮೆ: ಲ್ಯಾನ್ಸರ್ ಫೈನಾನ್ಸ್ ಕಂಪನಿ ಪ್ರೈವೇಟ್ ಲಿ., ಮತ್ತು ಇತರ ಸಹವರ್ತಿ ಕಂಪನಿಗಳು/ಸಂಸ್ಥೆಗಳಿಗೆ ಸೇರಿದ ಸ್ವತ್ತುಗಳನ್ನು ಜಪ್ತಿ ಮಾಡುವುದಕ್ಕೆ ಒಬ್ಬರು ಸಕ್ಷಮ ಪ್ರಾಧಿಕಾರಿಯ ಅಧಿಕೃತಗೊಳಿಸುವುದು ಅವಶ್ಯಕವಾಗಿದೆ.

ಆದ್ದರಿಂದ, ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಅಧಿನಿಯಮ, 2004 (ಕರ್ನಾಟಕ ಅಧಿನಿಯಮ 30, 2005) ರ ಪ್ರಕರಣ 5ರ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಸಹಾಯಕ ಆಯುಕ್ತರು, ಮೈಸೂರು ಉಪ ವಿಭಾಗ, ಮೈಸೂರು ಜಿಲ್ಲೆ ಇವರನ್ನು ಈ ಅಧಿನಿಯಮದ ಉದ್ದೇಶಗಳನ್ನು ಕಾರ್ಯಗತಗೊಳಿಸುವ ದೃಷ್ಠಿಯಿಂದ ಸಕ್ಷಮ ಪ್ರಾಧಿಕಾರಿಯನ್ನಾಗಿ ಈ ಮೂಲಕ ನೇಮಿಸಲಾಗಿದೆ.

ಸಕ್ಷಮ ಪ್ರಾಧಿಕಾರಿಯು ಸರ್ಕಾರದ ಪರವಾಗಿ ಈ ಅಧಿನಿಯಮದ ಪ್ರಕರಣ 3ನ್ನು ಒಳಗೊಂಡಂತೆ ಉಪಬಂಧಗಳ ಅಡಿಯಲ್ಲಿ ಯುಕ್ತ ಕ್ರಮ ಕೈಗೊಳ್ಳುವುದಕ್ಕಾಗಿ ಮೆ: ಲ್ಯಾನ್ಸರ್ ಫೈನಾನ್ಸ್ ಕಂಪನಿ ಪ್ರೈವೇಟ್ ಲಿ., ಮತ್ತು ಇತರ ಸಹವರ್ತಿ ಕಂಪನಿಗಳು/ಸಂಸ್ಥೆಗಳಿಗೆ ಸಂಬಂಧಪಟ್ಟಂತೆ ತಕ್ಷಣ ಜಾರಿಗೆ ಬರುವಂತೆ ಮೇಲೆ ಹೇಳಿರುವ ಉದ್ದೇಶವನ್ನು ಕಾರ್ಯಗತಗೊಳಿಸಲು ಅಗತ್ಯವಾಗಿರುವಂತಹ ಎಲ್ಲಾ ಅಧಿಕಾರಗಳನ್ನು ಹೊಂದಿರತಕ್ಕದ್ದು.

PR - 645

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಕೆ.ಆರ್. ರವಿಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ವಿಶೇಷ ಕೋಶ)ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ೩೦೭

ಉನ್ನತ ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 128 ಡಿಸಿಇ 2017 (14) ಬೆಂಗಳೂರು, ದಿನಾಂಕ: 21-03-2018.

ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಆಯ್ಕೆ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸರ್ಕಾರಕ್ಕೆ ಸಲ್ಲಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರ ದಿನಾಂಕ:04-02-2017ರ ಅಧಿಸೂಚನೆ ಸಂಖ್ಯೆ: ಇಡಿ 33 ಡಿಸಿಇ 2017 ರಲ್ಲಿ ಪ್ರಕಟಿಸಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014 ರ ನಿಯಮ 9ರ ಉಪ-ನಿಯಮ (2) ಮತ್ತು (3) ರ ಅನುಸಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತೆಯ ದೃಡೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ಪೂರ್ಣಗೊಂಡಿರುವ ಈ ಕೆಳಕಂಡ ಅಭ್ಯರ್ಥಿಗಳನ್ನು ಸರ್ಕಾರವು ವೇತನ ಶ್ರೇಣಿ `. 15600-39100+6000 (ಎಜಿಪಿ) (ಯುಜಿಸಿ ವೇತನ ಶ್ರೇಣಿ) ರಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಿಸಿದೆ.

ವಿಷಯ: ನಿರ್ವಹಣಶಾಸ್ತ್ರ

ಕ್ರಮ ಸಂಖ್ಯೆ ದಿನಾಂಕ: 04-02-2017ರ ಆಯ್ಕೆ ಪಟ್ಟಿಯಲ್ಲಿನ ಕ್ರಮ ಸಂಖ್ಯೆ ಹೆಸರು ಜನ್ಮ ದಿನಾಂಕ ಪ್ರವರ್ಗ
1 17 SUMANA 20-05-1987 GM / W

ಈ ಅಧಿಸೂಚನೆಯ ಪ್ರತಿಯನ್ನು ಮೇಲೆ ನಮೂದಿಸಿರುವ ಅಭ್ಯರ್ಥಿಗಳ ಖಾಯಂ ವಿಳಾಸಕ್ಕೆ ಪ್ರತ್ಯೇಕವಾಗಿ ನೋಂದಣಿ ಅಂಚೆಯ ಮೂಲಕ ರವಾನಿಸಲು ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ಕ್ರಮವಹಿಸುವುದು.

ಸದರಿ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳು ಈ ಆದೇಶ ತಲುಪಿದ 15 (ಹದಿನೈದು) ದಿನಗಳೊಳಗೆ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಭವನ, 2ನೇ ಮಹಡಿ, ಅರಮನೆ ರಸ್ತೆ, ಬೆಂಗಳೂರು ಇವರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು. ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ನಿಯಮಾನುಸಾರ ಜ್ಯೇಷ್ಠತೆಯ ಆಧಾರದ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಿ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿ ಆದೇಶವನ್ನು ನೀಡುವುದು. 2017-18ನೇ ಶೈಕ್ಷಣಿಕ ವರ್ಷವು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2014ರ ವಿಶೇಷ ನೇಮಕಾತಿ ನಿಯಮಗಳ ಅನುಸಾರ ಅಗತ್ಯ ವಿಚಾರಣೆಗಳು ತೃಪ್ತಿಕರವಾಗಿ ಪೂರ್ಣಗೊಂಡ ಮೇಲಿನ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿದೆ.

ಸರ್ಕಾರದ ಪೂರ್ವಾನುಮತಿ ಪಡೆಯದೆ ನಿಗಧಿತ ಅವಧಿಯೊಳಗೆ ವರದಿ ಮಾಡಿಕೊಳ್ಳಲು ವಿಫಲರಾಗುವ ಅಭ್ಯರ್ಥಿಯ ನೇಮಕಾತಿ ಆದೇಶವು ತಾನಾಗಿಯೇ ಅನೂರ್ಜಿತವಾಗುತ್ತದೆ.

ಷರತ್ತುಗಳು:

1. ಇದು ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಮಾಡಿರುವ ನೇರ ನೇಮಕಾತಿಯಾಗಿರುವುದರಿಂದ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014 ರ ನಿಯಮ 9ರ ಉಪ-ನಿಯಮ (2) ಮತ್ತು (3) ರೊಂದಿಗೆ ಓದಿಕೊಂಡಂತೆ ಕರ್ನಾಟಕ ಸರ್ಕಾರಿ ನೌಕರರ (ಜ್ಯೇಷ್ಠತೆ) ನಿಯಮಗಳು, 1957 ರ ನಿಯಮ 5ರ ಅನುಸಾರ ಈ ನೇಮಕಾತಿಯ ಸಂದರ್ಭದಲ್ಲಿ ದಿನಾಂಕ:04-02-2017 ರ ಅಧಿಸೂಚನೆಯಲ್ಲಿ ಸರ್ಕಾರ ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿನ ಜ್ಯೇಷ್ಠತೆಯು ಅಂತಿಮವಾಗಿರುತ್ತದೆ.

2. ದಿನಾಂಕ:04-02-2017 ರ ಆಯ್ಕೆ ಪಟ್ಟಿಯಲ್ಲಿನ ಇನ್ನುಳಿದ ಅರ್ಹ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ತೃಪ್ತಿಕರವಾಗಿ ಪೂರ್ಣಗೊಂಡ ನಂತರ ಪ್ರತ್ಯೇಕ ನೇಮಕಾತಿ ಆದೇಶ ಹೊರಡಿಸಲಾಗುವುದು. ಅಂತಹ ಅಭ್ಯರ್ಥಿಗಳ ಅರ್ಹತೆ / ಜ್ಯೇಷ್ಠತೆಗೆ ಯಾವುದೇ ಬಾಧೆಯಾಗುವುದಿಲ್ಲ. ಯಾವುದೇ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನಾಧರಿಸಿ ಜ್ಯೇಷ್ಠತೆಯನ್ನು ಕ್ಲೇಮ್ ಮಾಡುವ ಹಕ್ಕುಳ್ಳವನಾಗಿರುವುದಿಲ್ಲ.

3. ನೇಮಕಗೊಂಡ ಅಭ್ಯರ್ಥಿಗಳು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನ ಪ್ರಾಂಶುಪಾಲರ ಸಮಕ್ಷಮದಲ್ಲಿ ಕಾರ್ಯವರದಿ ಮಾಡಿಕೊಳ್ಳುವ ಸಮಯದಲ್ಲಿ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಮೂಲ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು.

4. ಈ ನೇಮಕಾತಿಯು ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ಅಭ್ಯರ್ಥಿಯು ತೃಪ್ತಿಕರವಾಗಿ ಪೂರೈಸುವ ಷರತ್ತಿಗೊಳಪಟ್ಟಿರುತ್ತದೆ.

5. ಅಭ್ಯರ್ಥಿಯು ಪರೀಕ್ಷಾರ್ಥ ಅವಧಿಯಲ್ಲಿ ಅಕೌಂಟ್ಸ್ ಹೈಯರ್ ಹಾಗೂ ಜನರಲ್ ಲಾ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ನಿಯಮಾನುಸಾರ ಕಡ್ಡಾಯ ಕನ್ನಡ ಭಾಷಾ ಹಾಗೂ ಇತರೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.

6. ನೇಮಕಗೊಂಡ ಅಭ್ಯರ್ಥಿಗಳಿಗಾಗಿ ಕೈಗೊಳ್ಳಲಾಗುವ ಫೌಂಡೇಶನ್ ಕೋರ್ಸ್‌ಗೆ (ಬುನಾದಿ ತರಬೇತಿ) ಹಾಜರಾಗುವುದು ಕಡ್ಡಾಯವಾಗಿರುತ್ತದೆ. 7. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅವಶ್ಯಕತೆ ಇರುವ ಓರಿಯಂಟೇಷನ್ ಮತ್ತು ರೆಫ್ರೆಶರ್ ಕೋರ್ಸ್ ತರಬೇತಿಯನ್ನು ಪೂರೈಸತಕ್ಕದ್ದು.

8. ಅಭ್ಯರ್ಥಿಯು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ನಿಯಮಾನುಸಾರದ ವೇತನ, ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುತ್ತಾರೆ.

9. ಅಭ್ಯರ್ಥಿಗಳು ಕಾರ್ಯವರದಿ ಮಾಡಿಕೊಳ್ಳಲು ಹಾಗೂ ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಯಾವುದೇ ಪ್ರಯಾಣ ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುವುದಿಲ್ಲ.

೩೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ಭಾಗ ೨

10. ಮೇಲೆ ನಮೂದಿಸಿರುವ ಅಭ್ಯಥಿಗಳು ದಿನಾಂಕ:01-04-2006ರ ನಂತರ ಸರ್ಕಾರಿ ಸೇವೆಗೆ ಸೇರಿರುವುದರಿಂದ ಅವರು ನಿಯಮಾನುಸಾರ ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.

11. ಪರೀಕ್ಷಾರ್ಥ ಅವಧಿಯಲ್ಲಿ ಯಾವುದೇ ವರ್ಗಾವಣೆಗೆ ಅವಕಾಶವಿರುವುದಿಲ್ಲ. 12. ಸದರಿ ನೇಮಕಾತಿ ಅಧಿಸೂಚನೆಯು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಎಲ್ಲಾ ಪೀಠಗಳಲ್ಲಿ ಹಾಗೂ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಾಗಿರುವ ರಿಟ್ ಅರ್ಜಿ / ಅರ್ಜಿಗಳಲ್ಲಿ ಮಾನ್ಯ ನ್ಯಾಯಾಲಯಗಳು ನೀಡುವ ಅಂತಿಮ ತೀರ್ಪಿನ ಪಾಲನೆಗೆ ಒಳಪಟ್ಟಿರುತ್ತದೆ.

PR. 635

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC. 50

ಕೆ. ಶಿವಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ

ಉನ್ನತ ಶಿಕ್ಷಣ ಇಲಾಖೆ.(ಕಾಲೇಜು ಶಿಕ್ಷಣ)

ಉನ್ನತ ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 128 ಡಿಸಿಇ 2017 (22) ಬೆಂಗಳೂರು, ದಿನಾಂಕ: 21-03-2018.

ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಆಯ್ಕೆ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸರ್ಕಾರಕ್ಕೆ ಸಲ್ಲಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರ ದಿನಾಂಕ:04-02-2017ರ ಅಧಿಸೂಚನೆ ಸಂಖ್ಯೆ: ಇಡಿ 33 ಡಿಸಿಇ 2017 ರಲ್ಲಿ ಪ್ರಕಟಿಸಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014 ರ ನಿಯಮ 9ರ ಉಪ-ನಿಯಮ (2) ಮತ್ತು (3) ರ ಅನುಸಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತೆಯ ದೃಡೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ಪೂರ್ಣಗೊಂಡಿರುವ ಈ ಕೆಳಕಂಡ ಅಭ್ಯರ್ಥಿಗಳನ್ನು ಸರ್ಕಾರವು ವೇತನ ಶ್ರೇಣಿ `.15600-39100+6000 (ಎಜಿಪಿ) (ಯುಜಿಸಿ ವೇತನ ಶ್ರೇಣಿ) ರಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಿಸಿದೆ.

ವಿಷಯ: ಗೃಹವಿಜ್ಞಾನ

ಕ್ರಮ ಸಂಖ್ಯೆ ದಿನಾಂಕ: 04-02-2017ರ ಆಯ್ಕೆ ಪಟ್ಟಿಯಲ್ಲಿನ ಕ್ರಮ ಸಂಖ್ಯೆ ಹ ಸರು ೆ ಜನ್ಮ ದಿನಾಂಕ ಪ ವರ್ಗ ್ರ
1 3 NATARAJ A DURGANNAVAR 21-04-1991 ST

ಈ ಅಧಿಸೂಚನೆಯ ಪ್ರತಿಯನ್ನು ಮೇಲೆ ನಮೂದಿಸಿರುವ ಅಭ್ಯರ್ಥಿಗಳ ಖಾಯಂ ವಿಳಾಸಕ್ಕೆ ಪ್ರತ್ಯೇಕವಾಗಿ ನೋಂದಣಿ ಅಂಚೆಯ ಮೂಲಕ ರವಾನಿಸಲು ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ಕ್ರಮವಹಿಸುವುದು.

ಸದರಿ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳು ಈ ಆದೇಶ ತಲುಪಿದ 15 (ಹದಿನೈದು) ದಿನಗಳೊಳಗೆ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಭವನ, 2ನೇ ಮಹಡಿ, ಅರಮನೆ ರಸ್ತೆ, ಬೆಂಗಳೂರು ಇವರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು. ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ನಿಯಮಾನುಸಾರ ಜ್ಯೇಷ್ಠತೆಯ ಆಧಾರದ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಿ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿ ಆದೇಶವನ್ನು ನೀಡುವುದು. 2017-18ನೇ ಶೈಕ್ಷಣಿಕ ವರ್ಷವು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2014ರ ವಿಶೇಷ ನೇಮಕಾತಿ ನಿಯಮಗಳ ಅನುಸಾರ ಅಗತ್ಯ ವಿಚಾರಣೆಗಳು ತೃಪ್ತಿಕರವಾಗಿ ಪೂರ್ಣಗೊಂಡ ಮೇಲಿನ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿದೆ.

ಸರ್ಕಾರದ ಪೂರ್ವಾನುಮತಿ ಪಡೆಯದೆ ನಿಗಧಿತ ಅವಧಿಯೊಳಗೆ ವರದಿ ಮಾಡಿಕೊಳ್ಳಲು ವಿಫಲರಾಗುವ ಅಭ್ಯರ್ಥಿಯ ನೇಮಕಾತಿ ಆದೇಶವು ತಾನಾಗಿಯೇ ಅನೂರ್ಜಿತವಾಗುತ್ತದೆ.

ಷರತ್ತುಗಳು:

1. ಇದು ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಮಾಡಿರುವ ನೇರ ನೇಮಕಾತಿಯಾಗಿರುವುದರಿಂದ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014 ರ ನಿಯಮ 9ರ ಉಪ-ನಿಯಮ (2) ಮತ್ತು (3) ರೊಂದಿಗೆ ಓದಿಕೊಂಡಂತೆ ಕರ್ನಾಟಕ ಸರ್ಕಾರಿ ನೌಕರರ (ಜ್ಯೇಷ್ಠತೆ) ನಿಯಮಗಳು, 1957 ರ ನಿಯಮ 5ರ ಅನುಸಾರ ಈ ನೇಮಕಾತಿಯ ಸಂದರ್ಭದಲ್ಲಿ ದಿನಾಂಕ:04-02-2017 ರ ಅಧಿಸೂಚನೆಯಲ್ಲಿ ಸರ್ಕಾರ ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿನ ಜ್ಯೇಷ್ಠತೆಯು ಅಂತಿಮವಾಗಿರುತ್ತದೆ.

2. ದಿನಾಂಕ:04-02-2017 ರ ಆಯ್ಕೆ ಪಟ್ಟಿಯಲ್ಲಿನ ಇನ್ನುಳಿದ ಅರ್ಹ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ತೃಪ್ತಿಕರವಾಗಿ ಪೂರ್ಣಗೊಂಡ ನಂತರ ಪ್ರತ್ಯೇಕ ನೇಮಕಾತಿ ಆದೇಶ ಹೊರಡಿಸಲಾಗುವುದು. ಅಂತಹ ಅಭ್ಯರ್ಥಿಗಳ ಅರ್ಹತೆ / ಜ್ಯೇಷ್ಠತೆಗೆ ಯಾವುದೇ ಬಾಧೆಯಾಗುವುದಿಲ್ಲ. ಯಾವುದೇ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನಾಧರಿಸಿ ಜ್ಯೇಷ್ಠತೆಯನ್ನು ಕ್ಲೇಮ್ ಮಾಡುವ ಹಕ್ಕುಳ್ಳವನಾಗಿರುವುದಿಲ್ಲ.

3. ನೇಮಕಗೊಂಡ ಅಭ್ಯರ್ಥಿಗಳು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನ ಪ್ರಾಂಶುಪಾಲರ ಸಮಕ್ಷಮದಲ್ಲಿ ಕಾರ್ಯವರದಿ ಮಾಡಿಕೊಳ್ಳುವ ಸಮಯದಲ್ಲಿ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಮೂಲ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ೩೦೯

4. ಈ ನೇಮಕಾತಿಯು ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ಅಭ್ಯರ್ಥಿಯು ತೃಪ್ತಿಕರವಾಗಿ ಪೂರೈಸುವ ಷರತ್ತಿಗೊಳಪಟ್ಟಿರುತ್ತದೆ.

5. ಅಭ್ಯರ್ಥಿಯು ಪರೀಕ್ಷಾರ್ಥ ಅವಧಿಯಲ್ಲಿ ಅಕೌಂಟ್ಸ್ ಹೈಯರ್ ಹಾಗೂ ಜನರಲ್ ಲಾ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ನಿಯಮಾನುಸಾರ ಕಡ್ಡಾಯ ಕನ್ನಡ ಭಾಷಾ ಹಾಗೂ ಇತರೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.

6. ನೇಮಕಗೊಂಡ ಅಭ್ಯರ್ಥಿಗಳಿಗಾಗಿ ಕೈಗೊಳ್ಳಲಾಗುವ ಫೌಂಡೇಶನ್ ಕೋರ್ಸ್‌ಗೆ (ಬುನಾದಿ ತರಬೇತಿ) ಹಾಜರಾಗುವುದು ಕಡ್ಡಾಯವಾಗಿರುತ್ತದೆ. 7. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅವಶ್ಯಕತೆ ಇರುವ ಓರಿಯಂಟೇಷನ್ ಮತ್ತು ರೆಫ್ರೆಶರ್ ಕೋರ್ಸ್ ತರಬೇತಿಯನ್ನು ಪೂರೈಸತಕ್ಕದ್ದು. 8. ಅಭ್ಯರ್ಥಿಯು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ನಿಯಮಾನುಸಾರದ ವೇತನ, ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುತ್ತಾರೆ.

9. ಅಭ್ಯರ್ಥಿಗಳು ಕಾರ್ಯವರದಿ ಮಾಡಿಕೊಳ್ಳಲು ಹಾಗೂ ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಯಾವುದೇ ಪ್ರಯಾಣ ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುವುದಿಲ್ಲ.

10. ಮೇಲೆ ನಮೂದಿಸಿರುವ ಅಭ್ಯಥಿಗಳು ದಿನಾಂಕ:01-04-2006ರ ನಂತರ ಸರ್ಕಾರಿ ಸೇವೆಗೆ ಸೇರಿರುವುದರಿಂದ ಅವರು ನಿಯಮಾನುಸಾರ ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.

11. ಪರೀಕ್ಷಾರ್ಥ ಅವಧಿಯಲ್ಲಿ ಯಾವುದೇ ವರ್ಗಾವಣೆಗೆ ಅವಕಾಶವಿರುವುದಿಲ್ಲ.

12. ಸದರಿ ನೇಮಕಾತಿ ಅಧಿಸೂಚನೆಯು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಎಲ್ಲಾ ಪೀಠಗಳಲ್ಲಿ ಹಾಗೂ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಾಗಿರುವ ರಿಟ್ ಅರ್ಜಿ / ಅರ್ಜಿಗಳಲ್ಲಿ ಮಾನ್ಯ ನ್ಯಾಯಾಲಯಗಳು ನೀಡುವ ಅಂತಿಮ ತೀರ್ಪಿನ ಪಾಲನೆಗೆ ಒಳಪಟ್ಟಿರುತ್ತದೆ.

PR. 636

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC. 50

ಕೆ. ಶಿವಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದಶಿ,

ಉನ್ನತ ಶಿಕ್ಷಣ ಇಲಾಖೆ.(ಕಾಲೇಜು ಶಿಕ್ಷಣ)

ಉನ್ನತ ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 128 ಡಿಸಿಇ 2017 (1) ಬೆಂಗಳೂರು, ದಿನಾಂಕ: 21-03-2018.

ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಆಯ್ಕೆ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸರ್ಕಾರಕ್ಕೆ ಸಲ್ಲಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರ ದಿನಾಂಕ: 04-02-2017ರ ಅಧಿಸೂಚನೆ ಸಂಖ್ಯೆ: ಇಡಿ 33 ಡಿಸಿಇ 2017 ರಲ್ಲಿ ಪ್ರಕಟಿಸಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014 ರ ನಿಯಮ 9ರ ಉಪ-ನಿಯಮ (2) ಮತ್ತು (3) ರ ಅನುಸಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತೆಯ ದೃಡೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ಪೂರ್ಣಗೊಂಡಿರುವ ಈ ಕೆಳಕಂಡ ಅಭ್ಯರ್ಥಿಗಳನ್ನು ಸರ್ಕಾರವು ವೇತನ ಶ್ರೇಣಿ `. 15600-39100+6000 (ಎಜಿಪಿ) (ಯುಜಿಸಿ ವೇತನ ಶ್ರೇಣಿ) ರಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಿಸಿದೆ.

ವಿಷಯ: ಕನ್ನಡ

ಕ್ರಮ ಸಂಖ್ಯೆ ದಿನಾಂಕ: 04-02-2017ರ ಆಯ್ಕೆ ಪಟ್ಟಿಯಲ್ಲಿನ ಕ್ರಮ ಸಂಖ್ಯೆ ಹ ಸ ೆ ರು ಜನ್ಮ ದಿನಾಂಕ ಪ್ರವರ್ಗ
1 147 SUNILKUMAR H S 22-05-1986 3B

ಈ ಅಧಿಸೂಚನೆಯ ಪ್ರತಿಯನ್ನು ಮೇಲೆ ನಮೂದಿಸಿರುವ ಅಭ್ಯರ್ಥಿಗಳ ಖಾಯಂ ವಿಳಾಸಕ್ಕೆ ಪ್ರತ್ಯೇಕವಾಗಿ ನೋಂದಣಿ ಅಂಚೆಯ ಮೂಲಕ ರವಾನಿಸಲು ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ಕ್ರಮವಹಿಸುವುದು.

ಸದರಿ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳು ಈ ಆದೇಶ ತಲುಪಿದ 15 (ಹದಿನೈದು) ದಿನಗಳೊಳಗೆ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಭವನ, 2ನೇ ಮಹಡಿ, ಅರಮನೆ ರಸ್ತೆ, ಬೆಂಗಳೂರು ಇವರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು. ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ನಿಯಮಾನುಸಾರ ಜ್ಯೇಷ್ಠತೆಯ ಆಧಾರದ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಿ ಅಭ್ಯರ್ಥಿಗಳಿಗೆ ಸ್ಥಳನಿಯುಕ್ತಿ ಆದೇಶವನ್ನು ನೀಡುವುದು. 2017-18ನೇ ಶೈಕ್ಷಣಿಕ ವರ್ಷವು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2014ರ ವಿಶೇಷ ನೇಮಕಾತಿ ನಿಯಮಗಳ ಅನುಸಾರ ಅಗತ್ಯ ವಿಚಾರಣೆಗಳು ತೃಪ್ತಿಕರವಾಗಿ ಪೂರ್ಣಗೊಂಡ ಮೇಲಿನ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿದೆ.

ಸರ್ಕಾರದ ಪೂರ್ವಾನುಮತಿ ಪಡೆಯದೆ ನಿಗಧಿತ ಅವಧಿಯೊಳಗೆ ವರದಿ ಮಾಡಿಕೊಳ್ಳಲು ವಿಫಲರಾಗುವ ಅಭ್ಯರ್ಥಿಯ ನೇಮಕಾತಿ ಆದೇಶವು ತಾನಾಗಿಯೇ ಅನೂರ್ಜಿತವಾಗುತ್ತದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೩೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ಭಾಗ ೨

ಷರತ್ತುಗಳು:

1. ಇದು ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಮಾಡಿರುವ ನೇರ ನೇಮಕಾತಿಯಾಗಿರುವುದರಿಂದ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014 ರ ನಿಯಮ 9ರ ಉಪ-ನಿಯಮ (2) ಮತ್ತು (3) ರೊಂದಿಗೆ ಓದಿಕೊಂಡಂತೆ ಕರ್ನಾಟಕ ಸರ್ಕಾರಿ ನೌಕರರ (ಜ್ಯೇಷ್ಠತೆ) ನಿಯಮಗಳು, 1957 ರ ನಿಯಮ 5ರ ಅನುಸಾರ ಈ ನೇಮಕಾತಿಯ ಸಂದರ್ಭದಲ್ಲಿ ದಿನಾಂಕ:04-02-2017 ರ ಅಧಿಸೂಚನೆಯಲ್ಲಿ ಸರ್ಕಾರ ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿನ ಜ್ಯೇಷ್ಠತೆಯು ಅಂತಿಮವಾಗಿರುತ್ತದೆ.

2. ದಿನಾಂಕ:04-02-2017 ರ ಆಯ್ಕೆ ಪಟ್ಟಿಯಲ್ಲಿನ ಇನ್ನುಳಿದ ಅರ್ಹ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ತೃಪ್ತಿಕರವಾಗಿ ಪೂರ್ಣಗೊಂಡ ನಂತರ ಪ್ರತ್ಯೇಕ ನೇಮಕಾತಿ ಆದೇಶ ಹೊರಡಿಸಲಾಗುವುದು. ಅಂತಹ ಅಭ್ಯರ್ಥಿಗಳ ಅರ್ಹತೆ / ಜ್ಯೇಷ್ಠತೆಗೆ ಯಾವುದೇ ಬಾಧೆಯಾಗುವುದಿಲ್ಲ. ಯಾವುದೇ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನಾಧರಿಸಿ ಜ್ಯೇಷ್ಠತೆಯನ್ನು ಕ್ಲೇಮ್ ಮಾಡುವ ಹಕ್ಕುಳ್ಳವನಾಗಿರುವುದಿಲ್ಲ.

3. ನೇಮಕಗೊಂಡ ಅಭ್ಯರ್ಥಿಗಳು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನ ಪ್ರಾಂಶುಪಾಲರ ಸಮಕ್ಷಮದಲ್ಲಿ ಕಾರ್ಯವರದಿ ಮಾಡಿಕೊಳ್ಳುವ ಸಮಯದಲ್ಲಿ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಮೂಲ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು.

4. ಈ ನೇಮಕಾತಿಯು ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ಅಭ್ಯರ್ಥಿಯು ತೃಪ್ತಿಕರವಾಗಿ ಪೂರೈಸುವ ಷರತ್ತಿಗೊಳಪಟ್ಟಿರುತ್ತದೆ.

5. ಅಭ್ಯರ್ಥಿಯು ಪರೀಕ್ಷಾರ್ಥ ಅವಧಿಯಲ್ಲಿ ಅಕೌಂಟ್ಸ್ ಹೈಯರ್ ಹಾಗೂ ಜನರಲ್ ಲಾ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ನಿಯಮಾನುಸಾರ ಕಡ್ಡಾಯ ಕನ್ನಡ ಭಾಷಾ ಹಾಗೂ ಇತರೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.

6. ನೇಮಕಗೊಂಡ ಅಭ್ಯರ್ಥಿಗಳಿಗಾಗಿ ಕೈಗೊಳ್ಳಲಾಗುವ ಫೌಂಡೇಶನ್ ಕೋರ್ಸ್‌ಗೆ (ಬುನಾದಿ ತರಬೇತಿ) ಹಾಜರಾಗುವುದು ಕಡ್ಡಾಯವಾಗಿರುತ್ತದೆ. 7. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅವಶ್ಯಕತೆ ಇರುವ ಓರಿಯಂಟೇಷನ್ ಮತ್ತು ರೆಫ್ರೆಶರ್ ಕೋರ್ಸ್ ತರಬೇತಿಯನ್ನು ಪೂರೈಸತಕ್ಕದ್ದು.

8. ಅಭ್ಯರ್ಥಿಯು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ನಿಯಮಾನುಸಾರದ ವೇತನ, ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುತ್ತಾರೆ.

9. ಅಭ್ಯರ್ಥಿಗಳು ಕಾರ್ಯವರದಿ ಮಾಡಿಕೊಳ್ಳಲು ಹಾಗೂ ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಯಾವುದೇ ಪ್ರಯಾಣ ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುವುದಿಲ್ಲ.

10. ಮೇಲೆ ನಮೂದಿಸಿರುವ ಅಭ್ಯಥಿಗಳು ದಿನಾಂಕ:01-04-2006ರ ನಂತರ ಸರ್ಕಾರಿ ಸೇವೆಗೆ ಸೇರಿರುವುದರಿಂದ ಅವರು ನಿಯಮಾನುಸಾರ ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.

11. ಪರೀಕ್ಷಾರ್ಥ ಅವಧಿಯಲ್ಲಿ ಯಾವುದೇ ವರ್ಗಾವಣೆಗೆ ಅವಕಾಶವಿರುವುದಿಲ್ಲ. 12. ಸದರಿ ನೇಮಕಾತಿ ಅಧಿಸೂಚನೆಯು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ಎಲ್ಲಾ ಪೀಠಗಳಲ್ಲಿ ಹಾಗೂ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಾಗಿರುವ ರಿಟ್ ಅರ್ಜಿ / ಅರ್ಜಿಗಳಲ್ಲಿ ಮಾನ್ಯ ನ್ಯಾಯಾಲಯಗಳು ನೀಡುವ ಅಂತಿಮ ತೀರ್ಪಿನ ಪಾಲನೆಗೆ ಒಳಪಟ್ಟಿರುತ್ತದೆ.

PR. 637

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

SC. 50

ಕೆ. ಶಿವಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ

ಉನ್ನತ ಶಿಕ್ಷಣ ಇಲಾಖೆ.(ಕಾಲೇಜು ಶಿಕ್ಷಣ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 09 August 2018. Indian Gazettes, https://egazette.servantsofknowledge.in/details/in.gazette.karnataka_new.2018-08-09.Part-2/. Archive identifier in.gazette.karnataka_new.2018-08-09.Part-2.