ಸಂಪುಟ ೧೫೩
Volume 153
೩ ಬೆಂಗಳ
Benga
ಳೂರು, ಗುರುವಾ
aluru, Thursda
ಾರ, ಆಗಸ್ಟ್ ೨೩
ay, August 23,
೩, ೨೦೧೮ (ಭಾ
2018 (Bhadra
ದ್ರಪದ ೧, ಶಕ
apada 1, Shak
ವರ್ಷ ೧೯೪೦)
a Varsha 1940
ಸಂಚಿಕೆ
Issue
ಭಾ ಾಗ ೧
೩೪ 34
) 0)
ರಾಜ್ಯ ಸಕ
ರ್ಕಾರದ ಮ
ದ
ಎಲ್ಲಾ ಇಲಾ
ುುಖ್ಯ ಆದೇಶ
ಲಾಖೆಗಳಿಗೂ
ಶಗಳು ಹಾಗೂ
ಸಂಬಂಧಿಸಿ
ಲೆ ಮುಂತಾದ
ಗಳು
ಆರೊ ೕಗ್ಯ ಮತ್ತು ಕುಟ
ಟುಂಬ ಕಲ್ಯಾಣ ಸ
ೂ ಸುತ್ತೋಲ
ದ ಆದೇಶಗ
ಸಚಿವಾಲಯ
ವಿಷಯ :
ರ್ಟಕ-ಅನುಷ್ಠಾನ ವ
ಮಾರ್ಗಸೂಚಿಯ ಮ
iಾರ್ಪಾಡುಗಳು.
ಆದೇಶ ಸಂಖ್ಯೆ: ಹೆಚ ಚ್.ಎಫ್.ಡಬ್ಲ್ಯೂ 9
91 ಸಿಜಿಇ 2017, ದಿನಾಂಕ : 01.03.
.2018.
ಓದಲಾಗಿದೆ:
ಆರೋಗ್ಯ ಕರ್ನಾ 1. ಸರ್ಕಾರಿ ಆ 2. ಸರ್ಕಾರಿ ಆ ಆದೇಶ ಸಂಖ್ಯೆ: ಹೆಚ ಚ್.ಎಫ್.ಡಬ್ಲ್ಯೂ 9
91 ಸಿಜಿಇ 2017, ದಿನಾಂಕ : 17.04.
.2018.
ಪಿಪೀpಕೆ :
ಟಕದ ಎಲ್ಲಾ ನಿವಾ
ಾಸಿಗಳಿಗೆ ಕೆಲವು ನಿ
ನಿಗದಿತ ವರ್ಗಗಳನ
ನ್ನು ಹೊರತುಪಡಿಸಿ
1. ಕರ್ನಾಟ
ಆರೋ ಗ್ಯ ಕರ್ನಾಟಕ ಎಂ
ಂಬ ಹೊಸ ಯೋ
ೕಜನೆಗೆ ಮೇಲೆ ಉ ಸಿ, ಸಾರ್ವತ್ರಿಕ ಆರೆ ರೋಗ್ಯ ರಕ್ಷಣೆಯನ
ನ್ನು ಒದಗಿಸುವ ಸಲ
ಲುವಾಗಿ
ಉಲ್ಲೇಖಿತ (1) ರಲ್ಲಿ
ನೀಡಲಾ
ಾಗಿದೆ. ಸದರಿ ಆದ ದೇಶದ ಅನುಬಂಧ 1, 2ಎ, 2ಬಿ, 3 ಲ್ಲಿ ಓದಲಾದ ಆದೇ ೕಶದ ಅನ್ವಯ ಆಡ ಡಳಿತಾತ್ಮಕ ಅನುವೆ ಮೋದನೆ
3 ಮತ್ತು 4 ರಲ್ಲಿ
ಸಾಮಾ ಾನ್ಯ ದ್ವಿತೀಯ ಹಂತ ತದ ಆರೋಗ್ಯ ಸೇ ೕವೆಗಳು, ಕ್ಲಿಷ್ಟಕರ ದಿ ಕ್ರಮವಾಗಿ ಅಡಕವ ವಾಗಿರುವ ಪ್ರಾಥವಿ ಮಿಕ ಆರೋಗ್ಯ ಸೇ ೕವೆಗಳು,
ದ್ವಿತೀಯ ಹಂತದ
ೂ ತುರ್ತು ಆರೋಗ ಗ್ಯ ಸೇವೆಗಳನ್ನು ನೀ
ೕಡಿದೆ.
ಜಾರಿಯಲ್ಲಿದ್ದ 7
7 ಯೋಜನೆಗಳಾದ ದ ಯಶಸ್ವಿನಿ ಯೊ ಆರೋಗ್ಯ ಸೇವೆಗಳ ಳು, ತೃತೀಯ ಹಂ ಂತದ ಆರೋಗ್ಯ ಸೆ ೕವೆಗಳು
ೂೕಜನೆ, ವಾಜಪೇ
ಹಾಗೂ 2. ಪ್ರಸ್ತುತ ಯೋಜ ಜನೆ, ಹಿರಿಯ ನಾಗ ಗರಿಕರ ಆರ್.ಎಸ್.ಬಿ ಬಿ.ವೈ ಒಳಗೊಂಡಂ ೕಯಿ ಆರೋಗ್ಯಶ್ರೀ ಯೋಜನೆ, ರಾ
ಾಜೀವ್ ಆರೋಗ್ಯ ಭಾಗ್ಯ
ಂತೆ ರಾಷ್ಟ್ರೀಯ ಸ್ವಾ
ಸ್ವಾಸ್ತ್ಯ ಕಾರ್ಯಕ್ರಮ (ಆ
ಆರ್.ಬಿ.ಎಸ್.ಕೆ), ವ ಮುಖ್ಯಮಂತ್ರಿ ಸಾಂ ಾ್ವಸ್ಥ್ಯ ಭಿಮಾ ಯೊ ೕಜನೆ (ಆರ್.ಎಸ್. ಬಿ.ವೈ), ರಾಷ್ಟ್ರೀಯ
ು ಬಾಲ
ಂತ್ವನ ಹರೀಶ್ ಯೊ
ಕರ್ನಾಟ ಟಕ ಯೋಜನೆಯಲಿ
ಲ್ಲಿ ಸೇರ್ಪಡೆಗೊಂಡಿ ಡಿರುತ್ತವೆ. ಈ ಯೊ ೂೕಜನೆ ಮತ್ತು ಇ
ಇಂದಿರಾ ಸುರಕ್ಷಾ ಯೋಜನೆಗಳು ಆ ಆರೋಗ್ಯ
ೂೕಜನೆಯು 03-0
11 ಸಾ ರ್ವಜನಿಕ ಆಸ್ಪತ್ರೆಗ
ಗಳಲ್ಲಿ ಅನುಷ್ಠಾನದ ಲ್ಲಿರುತ್ತದೆ. ರಾಜ್ಯದ 03-2018 ರಂದು ಪ್ರಾರಂಭಗೊಂಡಿದ
ದ್ದು, ಅಂದಿನಿಂದ ಪ್ರ ಪ್ರಮುಖ
ದಲ್ಲಿ ವಿಧಾನಸಭೆಗೆ
ಸಂಹಿತೆ ಜಾರಿಯಲ್ಲಿ
ಲ್ಲಿದ್ದ ಕಾರಣ ಇನೂ
ೂ್ನ ಹೆಚ್ಚಿನ ಸಾರ್ವಜ ಸಾರ್ವತ್ರಿಕ ಚುನಾ
ನಾವಣೆ ಹಿನ್ನೆಲೆಯಲಿ
ಲ್ಲಿ ಮಾದರಿ ಚುನ ನಾವಣಾ
ಜನಿಕ ಆಸ್ಪತ್ರೆಗಳಲ್ಲಿ
ರಿ ಆದೇಶದಲ್ಲಿ ಒಳ ಳಗೊಂಡ ಅನುಷ್ಠಾ
ಾ್ಠನ ಮಾರ್ಗಸೂಚಿಂ ಯೋಜನೆಯ ವಿಸ್ತ ಸ್ತರಣೆ ತಡೆಹಿಡಿಯ ಲಾಗಿತ್ತು.
ಯು ಆರೋಗ್ಯ ಕ
ನೀತಿ ಸ 3. ಸರ್ಕಾರಿ ಯೋಜ
ಜನೆಗಳಿಗೆ ಪರಿವರ್ತ
ರ್ನಾ ವಿಧಾನಗಳನು
ು್ನ ಒದಗಿಸಿರುತ್ತದೆ.
ರ್ನಾಟಕ ಯೋಜ ನೆಯಲ್ಲಿ ಸೇರ್ಪಡೆ ಗೊಂಡಿರುವ 3 ಪ್ರ ಪ್ರಮುಖ
ರಾಷ್ಟ್ರೀಯ ಸ್ವಾಸ್ಥ
ದಿನಾಂಕ ಕ:31-3-2018 ರ ರವರೆಗೆ ಮುಂದು ುವರೆದಿರುತ್ತದೆ. ಂ ್ಥ್ಯ ಭಿಮಾ ಯೋಜ ಜನೆಯು ಒಂದು ಸ ಸ್ವತಂತ್ರ ಯೋಜನ ನೆಯಾಗಿ
ಯಶಸ್ವಿನಿ ಯೋಜ
ದಿನಾಂಕ ಕ:31.5.2018 ರವ ವರೆಗೆ ಮುಂದುವರ
ರೆದಿರುತ್ತವೆ. ಆ ದಿ ಜನೆ ಮತ್ತು ವಾ
ವಾಜಪೇಯಿ ಆರೊ
ೂೕಗ್ಯಶ್ರೀ ಯೋಜ ಜನೆಗಳು
ದಿನಾಂಕಗಳನ್ನೂ ವಿ
ಯೋಜ ಜನೆಯಲ್ಲಿ ಸೇರ್ಪಡೆ ಡೆಗೊಳ್ಳಬೇಕಿತ್ತು.
4. ಈ ಮ
ುಧ್ಯೆ, ಭಾರತ ಸಕಾ ರ್ರವು ಆರ್.ಎಸ್.
.ಬಿ.ವೈ ಯೋಜನೆಂ ಮೀರಿ ಈ ಮೂ ೂರು ಯೋಜನೆಗಳ ಳು ಆರೋಗ್ಯ ಕನ
ರ್ನಾಟಕ
ಯ ಬದಲಾಗಿ ಅದ
ಮಂತ್ರಿ ರಾಷ್ಟ್ರೀಯ ಸ್ವಾಸ್ಥ ್ಥ್ಯ ಸುರಕ್ಷಾ ಮಿಷನ
ನ್ನ ಭಾಗವಾಗಿ ದರ ಫಲಾನುಭವಿಗ
ಗಳಿಗೆ ಆರೋಗ್ಯ ರ ರಕ್ಷಣೆ ಒದಗಿಸಲು ಪ್ರಧಾನ
ರಾಷ್ಟ್ರೀಯ ಆರೊ
ಘೋಷಿ
ಷಿಸಿದೆ. ಆರೋಗ್ಯ ಕರ್ನಾಟಕ ಯೊ ೂೕಜನೆಯು ರಾಜ ೂೕಗ್ಯ ಭದ್ರತಾ ಯೊ
ೂೕಜನೆ ಎಂಬ ಪ್ರ ಪ್ರಮುಖ ಯೋಜನೆ ನೆಯನ್ನು
ಜ್ಯದ ಎಲ್ಲ ನಿವಾ
ಎನ್.ಹೆ
ಹೆಚ್.ಪಿ.ಎಸ್-ಪಿ.ಎಂ
ಂ.ಆರ್.ಎಸ್.ಎಸ್.ಎ
ಎಂ ಯೋಜನೆಂi ಾಸಿಗಳನ್ನು ಒಳಗೊ ೂಳ್ಳುವ ಬೃಹತ್ ಯೋಜನೆಯಾಗಿ
ಗಿರುತ್ತದೆ,
iುು ಬಡತನ ರೇ
ಒಳಗೊ ೂಳ್ಳಲು ಬಯಸುತ್ತದ
ದೆ. ಆದಾಗ್ಯೂ ಎ
ಎನ್.ಹೆಚ್.ಪಿ.ಎಸ್- ಖೆಗಿಂತ ಕೆಳಗಿನ ಜನಸಂಖ್ಯೆಯ ಉ ಉಪವಿಭಾಗವನ್ನು ಮಾತ್ರ
-ಪಿ.ಎಂ.ಆರ್.ಎಸ್.ಎ
ಹಣ ಒ ಒಳಗೊಳ್ಳುವಿಕೆಯನು
ು್ನ ನಿರೂಪಿಸುತ್ತದೆ. ಈ ಎರಡೂ ಯೊ ಎಸ್.ಎಂ ಯೋಜ ನೆಯು ಕುಟುಂಬವ ವೊಂದಕ್ಕೆ ದೊಡ್ಡ ವ ಮೊತ್ತದ
iೋಜನೆಗಳಲ್ಲಿ ಬಡ
ಯಾವು ುದೇ ವಂತಿಗೆಯನು
ು್ನ ಭರಿಸುವ ಅವ ವಶ್ಯಕತೆ ಇರುವುದಿಲ್ಲ ಡತನ ರೇಖೆಗಿಂತ ಕ ಕೆಳಗಿನ ಕುಟುಂಬಗ ಗಳಿಗೆ ಸೇರಿದ ರೊ ೂೕಗಿಗಳು
ಲ್ಲ. ರಾಜ್ಯದಲ್ಲಿ ಎರ
ಚಿಕಿತ್ಸೆಗ ಳು ಮತ್ತು ಹಣ
ಣಕಾಸಿನ ಒಳಗೊಳ ಳ್ಳುವಿಕೆಯ ಆಧಾರ ರಡೂ ಯೋಜನೆಗ ಗಳನ್ನು ಸಾಮಾನ್ಯ ಒಳಗೊಳ್ಳುವಿಕೆ, ನಿಗಧಿತ
ರದಲ್ಲಿ ಕೋಬ್ರಾಂಡಿ
(೭೨೩) ( ಡಿಂಗ್ ವ್ಯವಸ್ಥೆಯ ಅಡಿಯಲ್ಲಿ ಒಂ ಂದೇ ಯೋಜನೆಂ ಯನ್ನಾಗಿ೭೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ಭಾಗ ೧ ಅನುಷ್ಠಾನಗೊಳಿಸಲು ಭಾರತ ಸರ್ಕಾರದ ಆರೋಗ್ಯ ಸಚಿವಾಲಯದೊಂದಿಗೆ ಚರ್ಚೆಗಳು ನಡೆದಿರುತ್ತವೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಎನ್.ಹೆಚ್.ಪಿ.ಎಸ್-ಪಿ.ಎಂ.ಆರ್.ಎಸ್.ಎಸ್.ಎಂ ಹೊಸ ಯೋಜನೆ ಪ್ರಾರಂಭಗೊಳ್ಳುವವರೆಗೆ ಮತ್ತು ಕೋಬ್ರಾಂಡಿಂಗ್ ವಿಧಾನಗಳನ್ನು ರೂಪಿಸುವವರೆಗೆ ಆರ್.ಎಸ್.ಬಿ.ವೈ ಯೋಜನೆಯನ್ನು ಅದರ ಪ್ರಸ್ತುತ ರೂಪದಲ್ಲಿಯೇ ಮುಂದುವರೆಸಲು ಮಾರ್ಗದರ್ಶನ ನೀಡಿರುತ್ತದೆ.
ಅದರಂತೆ ಆರ್.ಎಸ್.ಬಿ.ವೈ ಯೋಜನೆಯನ್ನು ಪ್ರಸ್ತುತ ವಿಮಾ ಮಾದರಿಯಲ್ಲಿಯೇ ದಿನಾಂಕ:31.08.2018 ರವರೆಗೆ ಮುಂದುವರೆಸಲು ಮೇಲೆ ಉಲ್ಲೇಖಿತ ಸರ್ಕಾರಿ ಆದೇಶ (2) ರಲ್ಲಿ ಓದಲಾದಂತೆ ಆಡಳಿತಾತ್ಮಕ ಅನುಮೋದನೆಯನ್ನು ನೀಡಿರುತ್ತದೆ.
5. ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಪ್ರಮುಖ ಹನ್ನೊಂದು ಆಸ್ಪತ್ರೆಗಳಲ್ಲಿ ಫಲಾನುಭವಿಗಳ ನೋಂದಣಿಗಾಗಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಅಭಿವೃದ್ಧಿ ಪಡಿಸಲಾಗಿದೆ ಹಾಗೂ ಅಳವಡಿಸಲಾಗಿದೆ. ಮೂರು ಅಥವಾ ನಾಲ್ಕು ತಿಂಗಳಲ್ಲಿ ಇತರ ಪ್ರಮುಖ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ನಂತರದಲ್ಲಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಲ್ಲಿ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಆದ್ದರಿಂದ ಈ ಮಧ್ಯಂತರ ಅವಧಿಯಲ್ಲಿ ರೋಗಿಗಳನ್ನು ಗುರುತಿಸಲು ಒಂದು ಯಾಂತ್ರಿಕ ವ್ಯವಸ್ಥೆಯನ್ನು ಒದಗಿಸುವುದು ಅವಶ್ಯವಿರುತ್ತದೆ.
6. ಖಾಸಗಿ ಪೂರೈಕೆದಾರರಿಂದ ಸೇವೆಗಳನ್ನು ಪಡೆದುಕೊಳ್ಳುವುದಕ್ಕಿಂತ ಮೊದಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಲಭ್ಯವಿರುವ ಸಾಮರ್ಥ್ಯಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಆರೋಗ್ಯ ಕರ್ನಾಟಕ ಯೋಜನೆಯನ್ನು ರೂಪಿಸಲಾಗಿದೆ. ಅದರಂತೆ ಮೇಲಿನ ಸರ್ಕಾರಿ ಆದೇಶ (1) ರಲ್ಲಿ ಓದಲಾದ ಅನುಬಂಧ 1 ಮತ್ತು 2ಎ ರಲ್ಲಿ ಪಟ್ಟಿ ಮಾಡಿರುವ ಪ್ರಾಥಮಿಕ ಆರೋಗ್ಯ ಸೇವೆಗಳು ಮತ್ತು ಎಲ್ಲಾ ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆಗಳನ್ನು ಆದೇಶದ ಕಂಡಿಕೆ 32 ಮತ್ತು 33 ರ ಪ್ರಕಾರ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ಒದಗಿಸಲಾಗುವುದು. ಅನುಬಂಧ 2ಬಿ ಮತ್ತು 3 ರಲ್ಲಿ ಪಟ್ಟಿ ಮಾಡಲಾದ ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಚಿಕಿತ್ಸೆಗಳನ್ನು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಅಥವಾ ಆದೇಶದ ಕಂಡಿಕೆ 34 ರಿಂದ 37 ರಂತೆ ಸಾರ್ವಜನಿಕ ಆಸ್ಪತ್ರೆಗಳ ರೆಫರಲ್ ಪಡೆದು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಒದಗಿಸಬಹುದಾಗಿದೆ. ತುರ್ತು ಸಂದರ್ಭದ ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಅವಶ್ಯಕತೆ ಇರುವುದಿಲ್ಲ.
7. ಮೇಲಿನ ಸರ್ಕಾರಿ ಆದೇಶ (1) ರಲ್ಲಿ ಓದಲಾದಂತೆ ರೆಫರಲ್ ವ್ಯವಸ್ಥೆಯನ್ನು ನಿರ್ವಹಿಸಲು ಆದೇಶದ ಕಂಡಿಕೆ 21 ರಿಂದ 26 ಮತ್ತು 63 ರಿಂದ 65 ರಲ್ಲಿ ರೆಫರಲ್ ವ್ಯವಸ್ಥೆ ಮತ್ತು ಮಾಹಿತಿ ತಂತ್ರಜ್ಞಾನ ಸ್ಥಾಪನೆಯನ್ನು ಒದಗಿಸುತ್ತದೆ. ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ರೆಫರಲ್ ವ್ಯವಸ್ಥೆಯನ್ನು ನಿರ್ವಹಿಸಲು ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಇನ್ನೂ ಅಭಿವೃದ್ಧಿ ಪಡಿಸಬೇಕಿರುತ್ತದೆ.
8. ಮೇಲಿನ ಸರ್ಕಾರಿ ಆದೇಶ (1) ರಲ್ಲಿ ಓದಲಾದಂತೆ ಅನುಬಂಧ 6 ರಲ್ಲಿ ಆರೋಗ್ಯ ಕರ್ನಾಟಕ ಯೋಜನೆಯನ್ನು ಅನುಷ್ಠಾನಗೊಳಿಸಲು ಖಾಸಗಿ ಆಸ್ಪತ್ರೆಗಳನ್ನು ನೋಂದಾವಣೆ ಮಾಡಲು ನಿಯಮ/ರೂಡಿಗಳನ್ನು ಸೂಚಿಸುತ್ತದೆ. ಆದೇಶದ ಕಂಡಿಕೆ 42 ರಲ್ಲಿ ಪ್ರಸ್ತುತ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ನೊಂದಿಗೆ ಅಥವಾ ಯಶಸ್ವಿನಿ ಟ್ರಸ್ಟ್ನೊಂದಿಗೆ, ಅಥವಾ ಆರ್.ಎಸ್.ಬಿ.ವೈ ವಿಮಾ ಸಂಸ್ಥೆಗಳೊಂದಿಗೆ ನೋಂದಾಯಿತವಾಗಿರುವ ಆಸ್ಪತ್ರೆಗಳು ಅನುಬಂಧ 6 ರಲ್ಲಿ ಸೂಚಿಸಿರುವ ನಿಯಮಗಳು/ರೂಡಿಗಳನ್ನು 6 ತಿಂಗಳ ಒಳಗೆ ಪೂರೈಸುವ ನಿಬಂಧನೆಗೆ ಒಳಪಟ್ಟು ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಆ ಸಂಖ್ಯೆಯ ಆಸ್ಪತ್ರೆಗಳು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಭಾಗವಹಿಸಲು ಆಯ್ಕೆ ವ್ಯಕ್ತಪಡಿಸಿರುತ್ತವೆ. ಆದರೆ ಸೂಚಿಸಲಾದ ನೋಂದಾವಣೆ ಅವಶ್ಯಕತೆಗಳನ್ನು ಪೂರೈಸಲು ಸಮಯಾವಕಾಶವನ್ನು ಕೋರಿರುತ್ತವೆ. ಮುಂದುವರೆದು, ಆರೋಗ್ಯ ಕರ್ನಾಟಕ ಮತ್ತು ಎನ್.ಹೆಚ್.ಪಿ.ಎಸ್-ಪಿ.ಎಂ.ಆರ್.ಎಸ್.ಎಸ್.ಎಂ ಯೋಜನೆಗಳನ್ನು ರಾಜ್ಯದಲ್ಲಿ ಒಂದೇ ಯೋಜನೆಯಾಗಿ ಅನುಷ್ಠಾನಗೊಳಿಸಲು ನಿರೀಕ್ಷಿಸಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ನೋಂದಾವಣೆ ಅವಶ್ಯಕತೆಗಳನ್ನು ಒಗ್ಗೂಡಿಸುವ ಅವಶ್ಯಕತೆಯಿರುತ್ತದೆ.
9. ಮೇಲಿನ ಕಡ್ಡಾಯ ಅಂಶಗಳನ್ನು ಪರಿಗಣಿಸಿ ಮೇಲಿನ ಉಲ್ಲೇಖಿತ (1) ರಲ್ಲಿ ಓದಲಾದ ಆದೇಶದ ಪರಿವರ್ತನಾ ವಿಧಾನಗಳ ಮಾರ್ಗಸೂಚಿಯಲ್ಲಿ ಭಾಗಶಃ ಮಾರ್ಪಾಡುಗಳನ್ನು ಒದಗಿಸಲು ಈ ಕೆಳಕಂಡ ಆದೇಶವನ್ನು ಮಾಡಲಾಗಿದೆ.
ಸರ್ಕಾರಿ ಆದೇಶ ಸಂಖ್ಯೆ: ಆಕುಕ 91 ಸಿಜಿಇ 2017(ಭಾ-1), ದಿನಾಂಕ: 01.06.2018, ಬೆಂಗಳೂರು.
ವ್ಯಾಪ್ತಿ
1. ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಸುರಕ್ಷಾ ಯೋಜನೆಯನ್ನು ಹೊರತುಪಡಿಸಿ, ಪ್ರಸ್ತಾವನೆಯ ಕಂಡಿಕೆ 2ರಲ್ಲಿ ಪಟ್ಟಿಮಾಡಲಾಗಿರುವ ಎಲ್ಲಾ ಯೋಜನೆಗಳನ್ನು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ.
2. ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಯು ದಿನಾಂಕ: 31.08.2018ರ ವರೆಗೆ ಪ್ರಸ್ತುತ ಜಾರಿಯಲ್ಲಿರುವ ವ್ಯವಸ್ಥೆಗಳಡಿಯಲ್ಲಿಯೇ ಆರೋಗ್ಯ ವಿಮಾ ಕಂಪನಿಗಳ ಮೂಲಕ ಮುಂದುವರೆಯುತ್ತದೆ.
ರೋಗಿಗಳ ಗುರುತಿಸುವಿಕೆ
3. ಪ್ರಸ್ತುತ ಇರುವ ವ್ಯವಸ್ಥೆಗಳಂತೆ ಹನ್ನೊಂದು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೋಗಿಗಳ ನೋಂದಣಿ ಮತ್ತು ಆರೋಗ್ಯ ಕಾರ್ಡ್ ವಿತರಣೆಯನ್ನು ಮುಂದುವರೆಸಲಾಗುತ್ತದೆ. ಮುಂದಿನ ನಾಲ್ಕು ತಿಂಗಳಲ್ಲಿ ಈ ಪ್ರಕ್ರಿಯೆಗಳನ್ನು ಪ್ರಮುಖ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ತಾಲ್ಲೂಕು ಸಾರ್ವಜನಿಕ ಸಂಸ್ಥೆಗಳಲ್ಲಿ ಜಾರಿಗೊಳಿಸಲಾಗುವುದು.
4. ಒಂದೊಮ್ಮೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಅವಶ್ಯವಿರುವ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯನ್ನು ಹೊಂದಿಲ್ಲದಿದ್ದಲ್ಲಿ, ಪಡಿತರ ಚೀಟಿಯನ್ನು ರೋಗಿಯ ಗುರುತಿನ ಚೀಟಿಯಾಗಿ ಬಳಸಿಕೊಳ್ಳಬಹುದಾಗಿದೆ. ಪಡಿತರ ಸಂಖ್ಯೆಯನ್ನು ರೋಗಿಯ ಮಧ್ಯಂತರ ಗುರುತಿನ ಸಂಖ್ಯೆಯನ್ನಾಗಿ ಬಳಸಬಹುದಾಗಿದೆ. ಈ ವ್ಯವಸ್ಥೆಯು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಮಾಹಿತಿ ತಂತ್ರಜ್ಞಾನ ನೋಂದಣಿ ವ್ಯವಸ್ಥೆಯನ್ನು ಅಳವಡಿಸುವ ಸಮಯದವರೆಗೆ ಇರುತ್ತದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ೭೨೫ರೋಗಿಗಳಿಗೆ ಚಿಕಿತ್ಸಾ ಆಯ್ಕೆಗಳು
ಆರ್.ಎಸ್.ಬಿ.ವೈ ಚಿಕಿತ್ಸೆಗಳು
5. ಆರ್.ಎಸ್.ಬಿ.ವೈ ಕಾರ್ಡ್ ಹೊಂದಿರುವ ರೋಗಿಗಳು ಸದರಿ ಕಾರ್ಡನ್ನು ಹಾಜರುಪಡಿಸಿ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಅಥವಾ ತಾವು ಇಚ್ಚಿಸುವ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಯಾವುದೇ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ರೆಫರಲ್ ಇಲ್ಲದೆ ಚಿಕಿತ್ಸೆ ಪಡೆಯಬಹುದು.
ಆರ್.ಎಸ್.ಬಿ.ವೈ ಚಿಕಿತ್ಸೆಗಳ ಪ್ಯಾಕೇಜ್ ಪಟ್ಟಿಯನ್ನು ಈ ಆದೇಶದೊಂದಿಗೆ ಅನುಬಂಧದಲ್ಲಿ ಲಗತ್ತಿಸಿದೆ.
6. ಆರ್.ಎಸ್.ಬಿ.ವೈ ಕಾರ್ಡ್ ಹೊಂದಿರುವ ರೋಗಿಗಳು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ರೀತಿಯ ಚಿಕಿತ್ಸೆ ಪಡೆಯುವಾಗ ಕಾರ್ಡನ್ನು ಹಾಜರು ಪಡಿಸುವಂತೆ ಉತ್ತೇಜಿಸಬೇಕು.
ಪ್ರಾಥಮಿಕ ಆರೋಗ್ಯ ಆರೈಕೆ ಸೇವೆಗಳು ಮತ್ತು ಸಾಮಾನ್ಯ ದ್ವಿತೀಯ ಆರೋಗ್ಯ ಆರೈಕೆ ಚಿಕಿತ್ಸೆಗಳು
7. ಮೇಲೆ ಉಲ್ಲೇಖ (1)ರಲ್ಲಿ ಓದಲಾದ ಆದೇಶದ ಅನುಬಂಧ 1 ಮತ್ತು 2ಎ ರಲ್ಲಿ ಪಟ್ಟಿಮಾಡಲಾದ ಎಲ್ಲ ಪ್ರಾಥಮಿಕ ಆರೋಗ್ಯ ಚಿಕಿತ್ಸೆ ಅಥವಾ ಸಾಮಾನ್ಯ ದ್ವಿತೀಯ ಆರೋಗ್ಯ ಚಿಕಿತ್ಸೆಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿಯೇ ಪಡೆದುಕೊಳ್ಳಬೇಕು. ಇದಕ್ಕೆ ಪಡಿತರ ಚೀಟಿ ಅಥವಾ ಬೇರೆ ಯಾವುದೇ ಗುರುತಿನ ಚೀಟಿ ಹಾಜರು ಪಡಿಸುವ ಅವಶ್ಯಕತೆ ಇರುವುದಿಲ್ಲ.
ಕ್ಲಿಷ್ಟಕರ ದ್ವಿತೀಯ ಮತ್ತು ತೃತೀಯ ಆರೋಗ್ಯ ಚಿಕಿತ್ಸೆಗಳು
8. ಮೇಲೆ ಉಲ್ಲೇಖಿತ (1)ರಲ್ಲಿ ಓದಲಾದ ಆದೇಶದ ಅನುಬಂಧ 2ಬಿ ಮತ್ತು 3 ರಲ್ಲಿ ಪಟ್ಟಿ ಮಾಡಲಾದ ದ್ವಿತೀಯ ಹಂತದ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಚಿಕಿತ್ಸೆಗಳನ್ನು ಅವಶ್ಯಕ ವೈದ್ಯಕೀಯ ಸಾಮರ್ಥ್ಯಗಳಿಗನುಗುಣವಾಗಿ ಆ ಜಿಲ್ಲೆಯ ರೋಗಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು
9. ಒಂದು ವೇಳೆ ಸದರಿ ಚಿಕಿತ್ಸೆಗಳಿಗೆ ಬೇಕಾದ ಅವಶ್ಯಕ ವೈದ್ಯಕೀಯ ಸಾಮರ್ಥ್ಯ ಆ ಜಿಲ್ಲೆಯ ಆಸ್ಪತ್ರೆಯಲ್ಲಿ ಲಭ್ಯವಿಲ್ಲದಿದ್ದ ಪಕ್ಷದಲಿ,್ಲ ರೋಗಿಯು ಜಿಲ್ಲಾ ಅಥವಾ ತಾಲ್ಲೂಕು ಆಸ್ಪತ್ರೆಯಲ್ಲಿ ರೆಫರಲ್ ಪಡೆದುಕೊಂಡು ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
10. ಮೇಲೆ ಉಲ್ಲೇಖಿತ (1)ರಲ್ಲಿ ಓದಲಾದ ಆದೇಶದ ಕಂಡಿಕೆ 9(i) ರಲ್ಲಿ ವಿವರಿಸಿರುವಂತೆ "ಅರ್ಹತಾ ರೋಗಿಯು" ಪಡಿತರ ಚೀಟಿಯನ್ನು ಹಾಜರುಪಡಿಸಿ ರೆಫರಲ್ ಪಡೆದುಕೊಳ್ಳಬಹುದು. ಅಂತಹ ಅರ್ಹತಾ ರೋಗಿಗಳು ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಜರು ಪಡಿಸುವ ಅವಶ್ಯಕತೆ ಇರುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯ ರೆಫರಲ್ ಅಧಿಕೃತ/ಅಧಿಕಾರವನ್ನು ಪಡೆದುಕೊಂಡು ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.
11. ಮೇಲೆ ಉಲ್ಲೇಖಿತ (1)ರಲ್ಲಿ ಓದಲಾದ ಆದೇಶದ ಕಂಡಿಕೆ 9(ii) ರಲ್ಲಿ ವಿವರಿಸಿರುವಂತೆ "ಸಾಮಾನ್ಯ ರೋಗಿಯು" ಆಧಾರ್ ಕಾರ್ಡ್ ಹಾಜರುಪಡಿಸಿ ರೆಫರಲ್ ಪಡೆದುಕೊಳ್ಳಬಹುದು. ಅಂತಹ "ಸಾಮಾನ್ಯ ರೋಗಿಗಳು" ತಮ್ಮ ಆಧಾರ್ ಕಾರ್ಡ್ ಹಾಜರು ಪಡಿಸುವ ಅವಶ್ಯಕತೆ ಇರುತ್ತದೆ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಯ ರೆಫರಲ್ ಅಧಿಕೃತ/ಅಧಿಕಾರವನ್ನು ಪಡೆದುಕೊಂಡು ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರದಿಂದ ಒದಗಿಸಲಾಗುವ ಶೇ.30 ರಷ್ಟು ಪ್ಯಾಕೇಜ್ ದರಗಳ ಅನ್ವಯ ಸಹ-ಪಾವತಿ ಆಧಾರದಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.
ತುರ್ತು ಚಿಕಿತ್ಸೆಗಳು :
12. ಮೇಲೆ ಉಲ್ಲೇಖಿತ (1)ರಲ್ಲಿ ಓದಲಾದ ಆದೇಶದ ಅನುಬಂಧ 4 ರಲ್ಲಿ ಪಟ್ಟಿ ಮಾಡಲಾದ ಎಲ್ಲಾ ತುರ್ತು ಚಿಕಿತ್ಸೆಗಳನ್ನು ಅರ್ಹತಾ ರೋಗಿಯು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿ ಯಾವುದೇ ರೆಫರಲ್ ಇಲ್ಲದೇ ಚಿಕಿತ್ಸೆ ಪಡೆಯಬಹುದಾಗಿದೆ.
13. ಸಾಮಾನ್ಯ ರೋಗಿಗಳಿಗೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗಳ ಸೌಲಭ್ಯವನ್ನು ನೀಡಲು ಈ ಹಂತದಲ್ಲಿ ಅನುಮೋದಿಸಿರುವುದಿಲ್ಲ.
ರೆಫರಲ್ ವ್ಯವಸ್ಥೆ :
14. ಮಾಹಿತಿ ತಂತ್ರಜ್ಞಾನ ಆಧಾರಿತ ರೆಫರಲ್ ವ್ಯವಸ್ಥೆಯ ವಿಧಾನಗಳನ್ನು ಜಾರಿಗೊಳಿಸುವವರೆಗೆ ಜಿಲ್ಲೆ ಮತ್ತು ತಾಲ್ಲೂಕು ಹಂತದ ಎಲ್ಲಾ ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಕಡ್ಡಾಯವಾಗಿ ಮ್ಯಾನ್ಯುಯಲ್ ರೆಫರಲ್ ವಿಧಾನವನ್ನು ಅಳವಡಿಸಿಕೊಳ್ಳುವುದು. ಪ್ರತಿಯೊಂದು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ರೆಫರಲ್ ಅಧಿಕೃತ/ಅಧಿಕಾರವನ್ನು ನೀಡಲು ನೋಡಲ್ ವೈದ್ಯರನ್ನು ಗೊತ್ತುಪಡಿಸತಕ್ಕದ್ದು.
15. ಸಂಬಂಧಿಸಿದ ತಜ್ಞ ವೈದ್ಯರು, ರೋಗಿಯ ತಪಾಸಣೆ ಹಾಗೂ ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಲಭ್ಯವಿರುವ ರೋಗ ನಿರ್ಣಯ ಪರೀಕ್ಷೆಗಳ ಫಲಿತಾಂಶದ ಆಧಾರದಲ್ಲಿ ಮುಂದಿನ ಚಿಕಿತ್ಸೆಗೆ ಸಂಬಂಧಿಸಿದ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ಅಥವಾ ಕ್ಲಿಷ್ಟಕರ ದ್ವಿತೀಯ ಅಥವಾ ತೃತೀಯ ಹಂತದ ಚಿಕಿತ್ಸೆಗಳಿಗೆ ವೈದ್ಯಕೀಯ ಸಾಮರ್ಥ್ಯಗಳು ಲಭ್ಯವಿಲ್ಲದಿದ್ದಲ್ಲಿ, ಜಿಲ್ಲಾ ಮಟ್ಟದ ಸಾರ್ವಜನಿಕ ಆರೋಗ್ಯ ಸಂಸ್ಥೆಗೆ ರೆಫರಲ್ ಶಿಫಾರಸ್ಸು ಮಾಡಬಹುದು. ಈ ಶಿಫಾರಸ್ಸುಗಳನ್ನು ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರವರು ರೂಪಿಸಿದ ನಮೂನೆಯಲ್ಲಿ ದಾಖಲಿಸತಕ್ಕದ್ದು.
16. ತಜ್ಞ ವೈದ್ಯರು ಮಾಡುವ ಶಿಫಾರಸ್ಸುಗಳು ರೆಫರಲ್ಗಳನ್ನು ಸ್ವೀಕರಿಸುವ ಅಧಿಕಾರವಿರುವ ನೋಡಲ್ ವೈದ್ಯರಿಂದ ದೃಡೀಕರಿಸಬೇಕು. ನಂತರ, ದೃಡೀಕರಿಸಿದ ಮೂಲ ಪ್ರತಿಯ ನಮೂನೆಯನ್ನು ರೋಗಿಗೆ ನೀಡತಕ್ಕದ್ದು ಮತ್ತು ಒಂದು ಪ್ರತಿಯನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಯಲ್ಲಿ ಉಳಿಸಿಕೊಳ್ಳತಕ್ಕದ್ದು. ಶಿಫಾರಸ್ಸು ಮಾಡಲಾದ ವಿವರಗಳನ್ನು ಎಸ್.ಎ.ಎಸ್.ಟಿ ಪೋರ್ಟಲ್ನಲ್ಲಿ ಅಪ್ಲೋಡ್ ಮಾಡತಕ್ಕದ್ದು.
೭೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ಭಾಗ ೧17. ರೋಗಿಗಳ ಮಾಹಿತಿಗಾಗಿ ಅದೇ ಜಿಲ್ಲೆಯಲ್ಲಿನ, ಪಕ್ಕದ ಜಿಲ್ಲೆಗಳ ಅಥವಾ ಬೆಂಗಳೂರಿನ ಮತ್ತು ಇತರ ಹತ್ತಿರದ ಪ್ರಮುಖ ನಗರಗಳಲ್ಲಿನ ನೋಂದಾಯಿತ ಖಾಸಗಿ ಆಸ್ಪತ್ರೆಗಳ ವಿವರಗಳನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಪ್ರಮುಖವಾಗಿ ಪ್ರದರ್ಶಿಸತಕ್ಕದ್ದು.
ಖಾಸಗಿ ಆಸ್ಪತ್ರೆಗಳ ನೋಂದಾವಣೆ
18. ಪ್ರಸ್ತುತ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಥವಾ ಯಶಸ್ವಿನಿ ಟ್ರಸ್ಟ್ ಅಥವಾ ಆರ್.ಎಸ್.ಬಿ.ವೈ ವಿಮಾ ಕಂಪನಿಯೊಂದಿಗೆ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳು ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಭಾಗವಹಿಸುವ ಕುರಿತು ಒಪ್ಪಿಗೆ ಪತ್ರ ನೀಡಿದಲ್ಲಿ ಹಾಗೂ ಮೇಲೆ ಉಲ್ಲೇಖಿತ (1)ರಲ್ಲಿ ಓದಲಾದ ಆದೇಶದ ಅನುಬಂಧ-6 ರಲ್ಲಿ ನಿಗದಿಪಡಿಸಿದ ನಿಯಮಗಳನ್ನು ನಿಗದಿತ ಸಮಯ ಮಿತಿಯೊಳಗೆ ಪೂರೈಸಿದಲ್ಲಿ ತಾತ್ಕಾಲಿಕ ನೋಂದಾವಣಿಯನ್ನು ನೀಡಲಾಗುವುದು. ಆ ಎಲ್ಲಾ ಆಸ್ಪತ್ರೆಗಳು ತಾತ್ಕಾಲಿಕ ನೋಂದಣಿ ಸೌಲಭ್ಯವನ್ನು ದಿನಾಂಕ:30-06-2018ರ ಒಳಗೆ ಪಡೆಯಬಹುದು.
19. ತಾತ್ಕಾಲಿಕ ನೋಂದಾವಣಿ ಪಡೆದ ಸಂಬಂದಪಟ್ಟ ಆಸ್ಪತ್ರೆಗಳು ನಾರ್ಮ್ಸ್ ಪೂರೈಸಿದ ಬಗ್ಗೆ ಅಥವಾ ಕೋರಿಕೆ ಸಲ್ಲಿಸಿದ ಬಗ್ಗೆ ಪೂರಕ ದಾಖಲೆಗಳ ಸಹಿತ ಔಪಚಾರಿಕ ಅರ್ಜಿಯನ್ನು ಶಾಸನಬದ್ಧ ಅನುಮೋದನೆಯನ್ನು ಪಡೆಯಲು ಸೂಕ್ತ ಪ್ರಾಧಿಕಾರಕ್ಕೆ ವಿಧಿಯುಕ್ತ ಕೋರಿಕೆಯನ್ನು ಸಲ್ಲಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ.
20. ದಿನಾಂಕ : 30.6.2018ರ ನಂತರ, ಪ್ರಸ್ತುತ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಥವಾ ಯಶಸ್ವಿನಿ ಟ್ರಸ್ಟ್ ಅಥವಾ ಆರ್.ಎಸ್.ಬಿ.ವೈ ವಿಮಾ ಕಂಪನಿಗಳೊಂದಿಗೆ ನೋಂದಾಯಿತವಾಗಿರುವ ಖಾಸಗಿ ಆಸ್ಪತ್ರೆಗಳೂ ಕೂಡ ತಾತ್ಕಾಲಿಕ ನೋಂದಾವಣೆಯನ್ನು ಪಡೆಯಬಹುದಾಗಿದ್ದು, ನಾರ್ಮ್ಸ್ಗಳನ್ನು ಅನುಸರಿಸಿದ ಬಗ್ಗೆ ಸಂಬಂಧಪಟ್ಟ ಪೂರಕ ದಾಖಲೆಗಳೊಂದಿಗೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಶಾಸನಬದ್ಧ ಅನುಮೋದನೆಗಾಗಿ ಪಡೆದ ಸ್ವೀಕೃತಿ ದಾಖಲೆಗಳೊಂದಿಗೆ ಔಪಚಾರಿಕ ಅರ್ಜಿ ಸಲ್ಲಿಸಬೇಕೆ ಹೊರತು ಒಪ್ಪಿಗೆ ಪತ್ರದ ಆಧಾರದ ಮೇಲೆ ಸಲ್ಲಿಸತಕ್ಕದಲ್ಲ.
21. ಆರೋಗ್ಯ ಕರ್ನಾಟಕ ಯೋಜನೆಯ ಅನುಷ್ಠಾನಕ್ಕೆ ಅಪೇಕ್ಷೆ ಪಡುವ ಹೊಸ ಆಸ್ಪತ್ರೆಗಳು "ಆನ್ಲೈನ್ ನೋಂದಾವಣಿ ಅರ್ಜಿ" ಯನ್ನು ಸಲ್ಲಿಸುವ ಮೂಲಕ ಯಾವುದೇ ಸಮಯದಲ್ಲಿ ತಾತ್ಕಾಲಿಕ ನೋಂದಾವಣೆ ಪಡೆಯುವ ಅವಕಾಶವನ್ನು ಎಸ್.ಎ.ಎಸ್.ಟಿ ಪೋರ್ಟಲ್ನಲ್ಲಿ ಲಭ್ಯವಿರುತ್ತದೆ.
ಅಂತಹ ಆಸ್ಪತ್ರೆಗಳು ಅರ್ಜಿ ಜೊತೆಯಲ್ಲಿಯೇ ಅಗತ್ಯವಾದ ಪೂರಕ ದಾಖಲೆಗಳಾದ ಕೆ.ಪಿ.ಎಂ.ಇ ನೋಂದಣಿ, ಎ.ಇ.ಆರ್.ಬಿ ಅನುಮತಿ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಮಾಣೀಕರಣ ಪತ್ರ ಲಗತ್ತಿಸಬೇಕಾದ್ದು ಅವಶ್ಯಕ.
22. ಇಂತಹ ಔಪಚಾರಿಕ ಅರ್ಜಿಯನ್ನು ಪೂರಕ ದಾಖಲೆಗಳೊಂದಿಗೆ ಸಲ್ಲಿಸಿದ ನಂತರ ಎಸ್.ಎ.ಎಸ್.ಟಿ.ಯ ನೋಂದಾವಣೆ ಸಮಿತಿಯು ಪರಿಶೀಲಿಸಿ, ನಿಯಮಗಳನ್ನು ಭಾಗಶಃ ಅನುಸರಿಸಿದ್ದಲ್ಲ್ಲಿ ತಾತ್ಕಾಲಿಕ ನೋಂದಾವಣಿ ನವೀಕರಣವನ್ನು ಒಂದು ವರ್ಷದ ಅವಧಿಯವರೆಗೆ ಅಥವಾ ಎಲ್ಲಾ ನಿಯಮಗಳನ್ನು ಪೂರ್ಣವಾಗಿ ಪೂರೈಸಿದ್ದಲ್ಲಿ, ಪೂರ್ಣ ನೋಂದಾವಣೆ ಪ್ರಕಾರ ಮೂರು ವರ್ಷಗಳ ನೊಂದಾವಣೆಗೆ ಪರಿಗಣಿಸಲಾಗುತ್ತದೆ. ಮೂರು ವರ್ಷಗಳ ನಂತರ ಮತ್ತೆ ನೋಂದಾವಣಿಯನ್ನು ನವೀಕರಿಸತಕ್ಕದ್ದು.
23. ಸೂಚಿಸಲಾದ ಏಜೆನ್ಸಿಗಳಿಂದ ಎನ್.ಎ.ಬಿ.ಹೆಚ್ ಪ್ರವೇಶ ಹಂತ ಪ್ರಮಾಣೀಕರಣ ಮತ್ತು ಅಗ್ನಿಶಾಮಕ ಸುರಕ್ಷತಾ ಸಲಹಾ ಯೋಜನೆಗೆ ಸಂಬಂಧಿಸಿದ ಮಾನದಂಡಗಳ ಅವಶ್ಯಕತೆಗಳನ್ನು ಪೂರ್ಣಗೊಳಿಸುವುದಕ್ಕಾಗಿ, ಒಂದು ವರ್ಷ ಕಾಲಾವಕಾಶ ನೀಡಲಾಗಿದೆ.
24. ಕೆ.ಪಿ.ಎಂ.ಇ. ನವೀಕರಣ, ಎ.ಇ.ಆರ್.ಬಿ. ಅನುಮತಿ, ಮಾಲಿನ್ಯ ನಿಯಂತ್ರಣ, ಅಗತ್ಯತೆಗಳನ್ನು ಪೂರೈಸಲು 6 ತಿಂಗಳ ಅವಧಿಯವರೆಗೆ ಕಾಲಾವಕಾಶ ನೀಡಲಾಗಿದೆ.
25. ನೋಂದಾವಣೆ ಸಮಿತಿಯ ನಿರ್ಧಾರದ ಆಧಾರದ ಮೇರೆಗೆ ಎಸ್.ಎ.ಎಸ್.ಟಿ ಮತ್ತು ಸಂಬಂಧಿತ ಆಸ್ಪತ್ರೆಗಳ ನಡುವೆ ನೋಂದಾವಣೆ ಸ್ಥಿತಿಯ ಪ್ರಕಾರ, ಎರಡೂ ಸಂಸ್ಥೆಗಳ ಹಕ್ಕು ಮತ್ತು ಬಾಧ್ಯತೆಗಳ ವ್ಯಾಖ್ಯಾನಗಳನ್ನು ಒಳಗೊಂಡ ಒಡಂಬಡಿಕೆ (MoU)ಗೆ ಸಹಿ ಮಾಡುವುದು.
26. ಔಪಚಾರಿಕವಾಗಿ ಅರ್ಜಿ ಸಲ್ಲಿಸಿದ ತಾತ್ಕಾಲಿಕ ನೋಂದಾಯಿತ ಆಸ್ಪತ್ರೆಯು 3 ತಿಂಗಳ ಅವಧಿಯಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿಯ ಒಪ್ಪಿಗೆ ಪತ್ರದ ಆಧಾರದ ಮೇಲೆ ತಾತ್ಕಾಲಿಕ ನೋಂದಾವಣೆಯ ನಿಗಧಿತ ಸಮಯದೊಳಗೆ ನಿಯಮಗಳಿಗೆ ಅನುಸರಣೆ ಸಲ್ಲಿಸದಿದ್ದಲ್ಲಿ, ಅಥವಾ ನಿರ್ಣಯಿಸಿದ ದಿನಾಂಕದ ಒಳಗೆ ನಿಯಮಗಳಿಗೆ ಅನುಸರಣೆಯನ್ನು ಸಲ್ಲಿಸದಿದ್ದಲ್ಲಿ, ಮೇಲಿನ ಕಂಡಿಕೆ 23 ಮತ್ತು 24ರಂತೆ ಔಪಚಾರಿಕ ಅರ್ಜಿ ದಿನಾಂಕದಿಂದ ತಾತ್ಕಾಲಿಕ ನೋಂದಾವಣೆಯನ್ನು ರದ್ದುಪಡಿಸಲಾಗುವುದು.
27. ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸೆಗಳ ನೋಂದಾವಣೆಗಾಗಿ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯವನ್ನು ಕನಿಷ್ಟ 10 ಕ್ಕೆ ಕಡಿಮೆಗೊಳಿಸಲಾಗಿದೆ.
28. ನೋಂದಾವಣೆ ಅಥವಾ ನವೀಕರಣಕ್ಕಾಗಿ ಒಂದು ಸಲದ ಪ್ರಕ್ರಿಯಾ ಶುಲ್ಕಗಳು ಈ ಕೆಳಕಂಡಂತಿರುತ್ತದೆ:
I. ಕ್ಲಿಷ್ಟಕರ ದ್ವಿತೀಯ ಹಂತದ ಚಿಕಿತ್ಸೆ ಒದಗಿಸುವ ಖಾಸಗಿ ಆಸ್ಪತ್ರೆಗಳ ನೊಂದಾವಣೆಗಾಗಿ `. 10,000/-(ಹತ್ತು ಸಾವಿರ) ಮಾತ್ರ.
II. ತೃತೀಯ ಹಂತದ ಚಿಕಿತ್ಸೆ ಒದಗಿಸುವ ಖಾಸಗಿ ಆಸ್ಪತ್ರೆಗಳ ನೊಂದಾವಣೆಗಾಗಿ `. 20,000/-(ಇಪ್ಪತ್ತು ಸಾವಿರ) ಮಾತ್ರ.
III. ತುರ್ತು ಚಿಕಿತ್ಸೆ ಒದಗಿಸುವ ಖಾಸಗಿ ಆಸ್ಪತ್ರೆಗಳ ನೊಂದಾವಣೆಗಾಗಿ `. 10,000/-(ಹತ್ತು ಸಾವಿರ) ಮಾತ್ರ.
IV. ಕ್ಲಿಷ್ಟಕರ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸೆಗಳೂ ಸೇರಿ ಎಲ್ಲ ಮೂರು ಹಂತದ ಚಿಕಿತ್ಸೆ ಒದಗಿಸುವ ಖಾಸಗಿ ಆಸ್ಪತ್ರೆಗಳಿಗೆ `.20,000/- (ಇಪ್ಪತ್ತು ಸಾವಿರ) ಮಾತ್ರ.
ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಗೆ ಯಾವುದೇ ನೋಂದಾವಣೆ ಶುಲ್ಕ ಇರುವುದಿಲ್ಲ.
ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಅವಕಾಶ
29. ಆರ್.ಎಸ್.ಬಿ.ವೈ ಯೋಜನೆಯಡಿ ನೋಂದಾವಣಿಯಾದ ಖಾಸಗಿ ಆಸ್ಪತ್ರೆಗಳು ದಿನಾಂಕ: 31.08.2018 ರವರಗೆ ಆರ್.ಎಸ್.ಬಿ.ವೈ ಕಾರ್ಡ್ ಹೊಂದಿರುವ ರೋಗಿಗಳಿಗೆ ಚಿಕಿತ್ಸೆಯನ್ನು ಒದಗಿಸಬಹುದು ಮತ್ತು ಸಂಬಂಧಪಟ್ಟ ವಿಮಾ ಕಂಪನಿಯಿಂದ ಮರುಪಾವತಿ ಪಡೆಯಬಹುದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ೭೨೭30. ಆರ್.ಎಸ್.ಬಿ.ವೈ ಮತ್ತು ಆರೋಗ್ಯ ಕರ್ನಾಟಕದಡಿ ನೋಂದಾವಣಿಯಾದ ಆಸ್ಪತ್ರೆಗಳು ಫಲಾನುಭವಿಯು ಆರ್.ಎಸ್.ಬಿ.ವೈ ಕಾರ್ಡ್ ಹೊಂದಿರುವರೇ ಎಂದು ಪರಿಶೀಲಿಸಬೇಕು. ಫಲಾನುಭವಿಯು ಆರ್.ಎಸ್.ಬಿ.ವೈ ಕಾರ್ಡ್ ಹೊಂದಿದ್ದಲ್ಲಿ ರೋಗಿಗೆ ಆರ್.ಎಸ್.ಬಿ.ವೈ ಯೋಜನೆಯಡಿ ಚಿಕಿತ್ಸೆಯನ್ನು ಒದಗಿಸಬೇಕು, ಆರೋಗ್ಯ ಕರ್ನಾಟಕದಡಿ ಒದಗಿಸಬಾರದು. ಇಂತಹ ಚಿಕಿತ್ಸೆಗಾಗಿ ಹಣ ಮರುಪಾವತಿಯನ್ನು ಸಂಬಂಧಪಟ್ಟ ವಿಮಾ ಕಂಪನಿಗೆ ಕಳುಹಿಸಬೇಕು. ಅಂತಹ ರೋಗಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ರೆಫರಲ್ ನಮೂನೆ ಅಗತ್ಯವಿರುವುದಿಲ್ಲ.
31. ಆರೋಗ್ಯ ಕರ್ನಾಟಕದಡಿ ನೋಂದಾವಣಿಯಾದ ಖಾಸಗಿ ಆಸ್ಪತ್ರೆಗಳು ಮೇಲೆ ಉಲ್ಲೇಖಿತ (1)ರಲ್ಲಿ ಓದಲಾದ ಆದೇಶದ ಅನುಬಂಧ-2ಬಿ ಮತ್ತು 3 ರಲ್ಲಿ ಪಟ್ಟಿ ಮಾಡಲಾದ ಕ್ಲಿಷ್ಟಕರ ಹಾಗೂ ತೃತೀಯ ಹಂತದ ಚಿಕಿತ್ಸೆಯನ್ನು ಜಿಲ್ಲಾ ಮಟ್ಟ ಹಾಗೂ ತಾಲ್ಲೂಕು ಮಟ್ಟದ ಪಿ.ಎಚ್.ಐ ಯಿಂದ ಅಧಿಕೃತ ರೆಫರಲ್ ಪಡೆದಿರುವ ರೋಗಿಗಳಿಗೆ ಮಾತ್ರ ಒದಗಿಸುವುದು. ಮೇಲೆ ಉಲ್ಲೇಖಿತ (1)ರಲ್ಲಿ ಓದಲಾದ ಆದೇಶದ ಅನುಬಂಧ 4 ರಲ್ಲಿ ಪಟ್ಟಿ ಮಾಡಲಾದ ತುರ್ತು ಆರೋಗ್ಯ ಚಿಕಿತ್ಸೆಗಳಿಗೆ, ಅಂತಹ ರೆಫರಲ್ ಅಗತ್ಯವಿರುವುದಿಲ್ಲ.
32. 'ಅರ್ಹತಾ ರೋಗಿ' ಗೆ ಕ್ಲಿಷ್ಟಕರ ಹಾಗೂ ತೃತೀಯ ಹಂತದ ಚಿಕಿತ್ಸೆಯನ್ನು ಒದಗಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪೋರ್ಟ್ಲ್ನಲ್ಲಿ pre-authorization ಸಲ್ಲಿಸಲು ಪಡಿತರ ಕಾರ್ಡ್, ಆಧಾರ್ ಕಾರ್ಡ್ ಮತ್ತು ಅಧಿಕೃತ ರೆಫರಲ್ ಅನ್ನು ಅಪ್ಲೋಡ್ ಮಾಡತಕ್ಕದ್ದು. ಪಡಿತರ ಕಾರ್ಡ್ನಂತೆ ಫಲಾನುಭವಿಯು ಅರ್ಹತಾ ಕುಟುಂಬಕ್ಕೆ ಸೇರಿದ್ದಾರೆಯೇ? ಎಂದು ಆಸ್ಪತ್ರೆಯವರು ಪರಿಶೀಲಿಸತಕ್ಕದ್ದು.
33. 'ಸಾಮಾನ್ಯ ರೋಗಿ'ಗೆ ಕ್ಲಿಷ್ಟಕರ ಹಾಗೂ ತೃತೀಯ ಹಂತದ ಚಿಕಿತ್ಸೆಯನ್ನು ಒದಗಿಸಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಪೋರ್ಟ್ಲ್ನಲ್ಲಿ pre-authorization ಸಲ್ಲಿಸಲು ಆಧಾರ್ ಕಾರ್ಡ್ ಮತ್ತು ರೆಫರಲ್ ಟಿಪ್ಪಣಿ ಅಪ್ಲೋಡ್ ಮಾಡತಕ್ಕದ್ದು. ಆಧಾರ್ ಕಾರ್ಡ್ನಂತೆ ಫಲಾನುಭವಿಯು ಕರ್ನಾಟಕದ ನಿವಾಸಿಯೇ? ಎಂದು ಆಸ್ಪತ್ರೆಯವರು ಪರಿಶೀಲಿಸತಕ್ಕದ್ದು.
34. ಅರ್ಹತಾ ರೋಗಿಗೆ ತುರ್ತು ಚಿಕಿತ್ಸೆ ಒದಗಿಸಿದ ನಂತರ, ಮರುಪಾವತಿಗೆ ಪಡಿತರ ಕಾರ್ಡ್ ಮತ್ತು ಆಧಾರ್ ಕಾರ್ಡ್ ಪ್ರತಿಗಳನ್ನು ಮರುಪಾವತಿಗೆ ಸಲ್ಲಿಸುವುದು.
35. ಮೇಲಿನ ಕಂಡಿಕೆ 29 ರಿಂದ 34 ರ ಅಡಿಯಲ್ಲಿ, ರೋಗಿಗಳಿಗೆ ಸಂಬಂಧಿಸಿದ ಅವರ ಗುರುತನ್ನು UIDAI ನಿಂದ ಪರಿಶೀಲಿಸಲು ಹಾಗೂ ಎಸ್.ಎ.ಎಸ್.ಟಿ ಪೋರ್ಟ್ಲ್ನಲ್ಲಿ ಅಪ್ಲೋಡ್ ಮಾಡಲು ರೋಗಿಯಿಂದ ಒಪ್ಪಿಗೆ ಪತ್ರ ಪಡೆದುಕೊಳ್ಳತಕ್ಕದ್ದು.
36. "ಸಾಮಾನ್ಯ ರೋಗಿ"ಗಳಿಗೆ ತುರ್ತು ಚಿಕಿತ್ಸೆಗಳ ಸೌಲಭ್ಯವು ಖಾಸಗಿ ಆಸ್ಪತ್ರೆಗಳಲ್ಲಿ ಪ್ರಸ್ತುತ ಈ ಹಂತದಲ್ಲಿ ಲಭ್ಯವಿರುವುದಿಲ್ಲ. ಆರೋಗ್ಯ ಕರ್ನಾಟಕ ಯೋಜನೆಯಲ್ಲಿ "ಸಾಮಾನ್ಯ ರೋಗಿ"ಗಳಿಗೆ ಸದರಿ ಸೌಲಭ್ಯವನ್ನು ಖಾಸಗಿ ಆಸ್ಪತ್ರೆಗಳಲ್ಲಿ ನೀಡಲು ಪೂರ್ಣ ಪ್ರಮಾಣದ ನೋಂದಾವಣೆ ವ್ಯವಸ್ಥೆಯನ್ನು ಸ್ಥಾಪಿಸಿದ ನಂತರ ಪ್ರಾರಂಭಿಸಲಾಗುವುದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 373 ವೆಚ್ಚ-5/2018, ದಿನಾಂಕ: 31.05.2018 ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ.
PR.339
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.150
ಪದ್ಮ. ವಿ
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1&2)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ : ರಾಜ್ಯದ ಖಾಸಗಿ ಕಾಲೇಜುಗಳಲ್ಲಿನ ಸ್ನಾತಕ ವೈದ್ಯಕೀಯ/ದಂತ ವೈದ್ಯಕೀಯ ಎನ್.ಆರ್.ಐ/ಆಡಳಿತ ಮಂಡಳಿ ಕೋಟಾದ ಸೀಟುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಬ್ಯಾಂಕ್ ಗ್ಯಾರಂಟಿ ಪಡೆಯುವ ಬಗ್ಗೆ.
ಓದಲಾಗಿದೆ :
ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರ ದಿನಾಂಕ : 02-07-2018 ರ ಪತ್ರ ಸಂಖ್ಯೆ : ಡಿಎಂಇ/ಎಂಸಿಎಸ್/11/2018-19.
ಪ್ರಸ್ತಾವನೆ :
ಮೇಲೆ ಓದಲಾದ ಪತ್ರದಲ್ಲಿ 2018-19 ನೇ ಸಾಲಿಗೆ ರಾಜ್ಯದ ಖಾಸಗಿ ಕಾಲೇಜುಗಳಲ್ಲಿನ ಸ್ನಾತಕ ವೈದ್ಯಕೀಯ & ದಂತ ವೈದ್ಯಕೀಯ ಎನ್.ಆರ್.ಐ/ಆಡಳಿತ ಮಂಡಳಿ ಕೋಟಾದ ಶೇ. 20 ರಷ್ಟು ಸೀಟುಗಳಿಗೆ ಪ್ರವೇಶಾತಿ ಹೊಂದುವ ಅಭ್ಯರ್ಥಿಗಳಿಂದ ಮೊದಲನೇ ವರ್ಷದ ಶುಲ್ಕವನ್ನು ಪ್ರವೇಶಾತಿ ಸಂದರ್ಭದಲ್ಲಿ ಸಂಗ್ರಹಿಸುವಂತೆ ಹಾಗೂ ಇನ್ನುಳಿದ ಮೂರುವರೆ ವರ್ಷಗಳ ಶುಲ್ಕಕ್ಕೆ ಸಂಬಂಧಿಸಿದಂತೆ ಆಯಾ ಸಂಸ್ಥೆಗಳ ಹೆಸರಿನಲ್ಲಿಯೇ ಬ್ಯಾಂಕ್ ಗ್ಯಾರಂಟಿ ಪಡೆಯಲು ಕ್ರಮವಹಿಸುವಂತೆ ಹಾಗೂ ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಚುರಪಡಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಲು ಸರ್ಕಾರದಿಂದ ಆದೇಶವನ್ನು ನೀಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರು ಕೋರಿರುತ್ತಾರೆ.
ಆದ್ದರಿಂದ ವಿಷಯವನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ, 2018-19 ನೇ ಸಾಲಿಗೆ ರಾಜ್ಯದ ಖಾಸಗಿ ಕಾಲೇಜುಗಳಲ್ಲಿನ ಸ್ನಾತಕ ವೈದ್ಯಕೀಯ & ದಂತ ವೈದ್ಯಕೀಯ ಎನ್.ಆರ್.ಐ/ಆಡಳಿತ ಮಂಡಳಿ ಕೋಟಾದ ಶೇ. 20 ರಷ್ಟು ಸೀಟುಗಳಿಗೆ ಪ್ರವೇಶಾತಿ ಹೊಂದುವ ಅಭ್ಯರ್ಥಿಗಳಿಂದ ಮೊದಲನೇ ವರ್ಷದ ಶುಲ್ಕವನ್ನು ಪ್ರವೇಶಾತಿ ಸಂದರ್ಭದಲ್ಲಿ ಸಂಗ್ರಹಿಸಲು ಹಾಗೂ ಇನ್ನುಳಿದ ಮೂರುವರೆ ವರ್ಷಗಳ ಶುಲ್ಕಕ್ಕೆ ಸಂಬಂಧಿಸಿದಂತೆ ಆಯಾ ಸಂಸ್ಥೆಗಳ ಹೆಸರಿನಲ್ಲಿಯೇ ಬ್ಯಾಂಕ್ ಗ್ಯಾರಂಟಿ ಪಡೆಯಲು ಸರ್ಕಾರವು ತೀರ್ಮಾನಿಸಿ, ಈ ಕೆಳಗಿನಂತೆ ಆದೇಶವನ್ನು ಹೊರಡಿಸಿದೆ.
೭೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ಭಾಗ ೧ಸರ್ಕಾರದ ಆದೇಶ ಸಂಖ್ಯೆ: ಆಕುಕ 206 ಆರ್ಜಿಯು 2018, ಬೆಂಗಳೂರು, ದಿ: 04-07-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2018-19 ನೇ ಸಾಲಿಗೆ ರಾಜ್ಯದ ಖಾಸಗಿ ಕಾಲೇಜುಗಳಲ್ಲಿನ ಸ್ನಾತಕ ವೈದ್ಯಕೀಯ & ದಂತ ವೈದ್ಯಕೀಯ ಎನ್.ಆರ್.ಐ/ಆಡಳಿತ ಮಂಡಳಿ ಕೋಟಾದ ಶೇ. 20 ರಷ್ಟು ಸೀಟುಗಳಿಗೆ ಪ್ರವೇಶಾತಿ ಹೊಂದುವ ಅಭ್ಯರ್ಥಿಗಳಿಂದ ಮೊದಲನೇ ವರ್ಷದ ಶುಲ್ಕವನ್ನು ಪ್ರವೇಶಾತಿ ಸಂದರ್ಭದಲ್ಲಿ ಸಂಗ್ರಹಿಸಲು ಹಾಗೂ ಇನ್ನುಳಿದ ಮೂರುವರೆ ವರ್ಷಗಳ ಶುಲ್ಕಕ್ಕೆ ಸಂಬಂಧಿಸಿದಂತೆ ಆಯಾ ಸಂಸ್ಥೆಗಳ ಹೆಸರಿನಲ್ಲಿಯೇ ಬ್ಯಾಂಕ್ ಗ್ಯಾರಂಟಿ ಪಡೆಯಲು ಆದೇಶಿಸಿದೆ.
ಮುಂದುವರೆದು, ಬ್ಯಾಂಕ್ ಗ್ಯಾರಂಟಿಯನ್ನು ಪಡೆಯಲು ಇಚ್ಚಿಸದ ಕಾಲೇಜುಗಳಿಗೆ ಸಂಬಂಧಿಸಿದಂತೆ ಆಯಾ ಕಾಲೇಜುಗಳು ಈ ಬಗ್ಗೆ ನಿರ್ಣಯ ಕೈಗೊಳ್ಳತಕ್ಕದ್ದು.
ಈ ಆದೇಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ನಲ್ಲಿ ಪ್ರಚುರಪಡಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸೂಚಿಸಿದೆ.
PR.359
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಮುರಳಿ
SC.25
ಸರ್ಕಾರದ ಅಧೀನ ಕಾರ್ಯದರ್ಶಿ-2,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ವೈದ್ಯಕೀಯ ಶಿಕ್ಷಣ).
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ : 2018-19ನೇ ಶೈಕ್ಷಣಿಕ ಸಾಲಿನಿಂದ ಡಿಪ್ಲೋಮಾ ಇನ್ ಫಾರ್ಮಸಿ ಕೋರ್ಸ್ನ ಪ್ರವೇಶಕ್ಕಾಗಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆ ಪ್ರಕ್ರಿಯೆ ನಡೆಸುವ ಬಗ್ಗೆ.
ಓದಲಾಗಿದೆ :
ಅಪರ ಔಷಧ ನಿಯಂತ್ರಕರು, ರಾಜ್ಯ ಔಷಧ ನಿಯಂತ್ರಣ ಇಲಾಖೆ ಇವರ ಪ್ರಸ್ತಾವನೆ
ಸಂಖ್ಯೆ:ಔನಿಇ/45/ಯೋಜನೆ/2017-18, ದಿನಾಂಕ:29.06.2018.
ಪ್ರಸ್ತಾವನೆ :
ಮೇಲೆ ಓದಲಾದ ಪ್ರಸ್ತಾವನೆಯಲ್ಲಿ, ಅಪರ ಔಷಧ ನಿಯಂತ್ರಕರು, ರಾಜ್ಯ ಔಷಧ ನಿಯಂತ್ರಣ ಇಲಾಖೆ, ಬೆಂಗಳೂರು ಇವರು, ಡಿಪ್ಲೋಮಾ ಇನ್ ಫಾರ್ಮಸಿ ವೃತ್ತಿಪರ ಶಿಕ್ಷಣ ಹೊಂದಲು ಬಯಸುವ ರಾಜ್ಯದ ವಿದ್ಯಾರ್ಥಿಗಳಿಗೆ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳಲು ಹಾಗೂ ಸೀಟು ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ತರುವ ಸಲುವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸರ್ಕಾರಿ ಕೋಟಾ ಸೀಟುಗಳನ್ನು ನಿಗದಿಪಡಿಸಲು ತೀರ್ಮಾನಿಸಿದೆ. ಭಾರತೀಯ ಫಾರ್ಮಸಿ ಪರಿಷತ್ತಿನ ಎಜುಕೇಷನ್ ರೆಗ್ಯುಲೇಷನ್ಸ್ 1991ರ ಚಾಪ್ಟರ್-2ರಲ್ಲಿ ಡಿಪ್ಲೋಮಾ ಇನ್ ಫಾರ್ಮಸಿ ಶಿಕ್ಷಣ ಹೊಂದಲು ಕನಿಷ್ಟ ವಿದ್ಯಾರ್ಹತೆಯನ್ನು ನಿಗದಿಪಡಿಸಿದೆ. ಪ್ರಸ್ತುತ ಮುಂದುವರೆದು, ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದ 60 ಸೀಟುಗಳ ಪ್ರವೇಶ ಪ್ರಕ್ರಿಯೆಯನ್ನು ಆಯ್ಕೆ ಸಮಿತಿ ನಿರ್ವಹಿಸುತ್ತಿದ್ದು, ಪ್ರಸ್ತುತ ರಾಜ್ಯದಲ್ಲಿ 10+2 ನಂತರದ ವೃತ್ತಿಪರ ಶಿಕ್ಷಣ ಪ್ರವೇಶ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿ.ಇ.ಟಿ. ಮೂಲಕ ನಿರ್ವಹಿಸುತ್ತಿದೆ. ರಾಜ್ಯದಲ್ಲಿ 143 ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪರಸ್ಪರ ಒಪ್ಪಂದದ ಮೂಲಕ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಅಂದಾಜು 1000 ಡಿ.ಫಾರ್ಮಸಿ ಸೀಟುಗಳು ಲಭ್ಯವಾಗುತ್ತವೆ. ಡಿ.ಫಾರ್ಮಸಿ ಶಿಕ್ಷಣವನ್ನು ಜಾರಿಗೊಳಿಸುತ್ತಿರುವ ಔಷಧ ನಿಯಂತ್ರಣ ಇಲಾಖೆಯ ಪರೀಕ್ಷಾ ಪ್ರಾಧಿಕಾರ ಮಂಡಳಿಯಲ್ಲಿ ಮಾನವ ಸಂಪನ್ಮೂಲ ಹಾಗೂ ಮೂಲ ಸೌಕರ್ಯದ ಕೊರತೆಯಿರುವುದರಿಂದ, ಪ್ರಸಕ್ತ ಸಾಲಿನಿಂದ ಡಿಪ್ಲೋಮಾ ಇನ್ ಫಾರ್ಮಸಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಿರ್ವಹಿಸಲು ಸೂಚಿಸಿ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ಅಪರ ಔಷಧ ನಿಯಂತ್ರಕರ ಪ್ರಸ್ತಾವನೆ ಮತ್ತು ಲಭ್ಯವಿರುವ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರವು, 2018-19ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದಲ್ಲಿನ ಖಾಸಗಿ ಫಾರ್ಮಸಿ ಕಾಲೇಜುಗಳಲ್ಲಿಯು ಸಹ ಸರ್ಕಾರಿ ಕೋಟಾ ಸೀಟುಗಳನ್ನು ಪಡೆದಿರುವುದರಿಂದ, ಈ ಸೀಟುಗಳಿಗೆ ಪರೀಕ್ಷಾ ಪ್ರಾಧಿಕಾರ ಮಂಡಳಿಯಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು/ಪ್ರವೇಶ ಪ್ರಕ್ರಿಯೆ ನಡೆಸಲು ಮಾನವ ಸಂಪನ್ಮೂಲ ಮತ್ತು ಅಗತ್ಯ ಮೂಲಸೌಕರ್ಯಗಳು ಇಲ್ಲದಿರುವುದರಿಂದ, 10+2 ಶಿಕ್ಷಣದ ಅನಂತರದ ಇತರ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ನಡೆಸುತ್ತಿರುವಂತೆಯೇ ಡಿ.ಫಾರ್ಮಸಿ ಕೋರ್ಸಿಗು ಸಹ 2018-19ನೇ ಶೈಕ್ಷಣಿಕ ಸಾಲಿನಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮುಖಾಂತರ ಆಯ್ಕೆ ಪ್ರಕ್ರಿಯೆ ನಡೆಸಲು ನಿರ್ಧರಿಸಿದೆ. ಆದುದರಿಂದ ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ:ಆಕುಕ 119 ಪಿಟಿಡಿ 2018 (ಭಾಗ-1), ಬೆಂಗಳೂರು, ದಿನಾಂಕ:03.07.2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2018-19ನೇ ಶೈಕ್ಷಣಿಕ ಸಾಲಿನಿಂದ ಡಿಪ್ಲೋಮಾ ಇನ್ ಫಾರ್ಮಸಿ ಕೋರ್ಸ್ನ ಸರ್ಕಾರಿ ಕೋಟಾ ಸೀಟುಗಳಿಗೆ ಭಾರತೀಯ ಫಾರ್ಮಸಿ ಪರಿಷತ್ತಿನ ಎಜುಕೇಷನ್ ರೆಗ್ಯುಲೇಷನ್ಸ್ 1991ರ ಪ್ರಕಾರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿ ಆದೇಶಿಸಿದೆ.
PR.360
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಕಮಲಮ್ಮ
ಸರ್ಕಾರದ ಅದೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಭಾರತೀಯ ವೈದ್ಯ ಪದ್ಧತಿ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ೭೨೯ INFORMATION TECHNOLOGY, BIOTECHNOLOGY AND SCIENCE & TECHNOLOGY SECRETARIAT Sub: Drafting policies / regulations regarding adoption of disruptive technologies / business models.
Read: Government Order No: ITD 27 PRM 2015, Dated:27.11.2015.
PREAMBLE :
The emergence of new technologies and business models is changing the face of many product and service markets in India and globally. In many cases, these innovations are already challenging and disrupting incumbents and such technological progress and innovation looks set to accelerate as we move towards a digital world. Many of these innovations raise significant regulatory questions, such as - Is regulation holding back or facilitating this innovation? How can regulators adapt to these changes? What are the examples of best practices to date? How can regulators better reflect the interests of start-up companies/ industries that haven't even been created yet?
Regulators need to adopt a pro-innovation culture. Rather than a pernicious dynamic of 'box ticking', regulators should design regulatory processes which mirror the growth phases of start-ups as far as possible, aligning regulatory requirements with the different stages in a start-up's life-span as it seeks to raise capital. To make a disruptive technology usable, safe, accessible to all and within the laws of the land, many stakeholders have to come to an agreement with it. Some of the largest stakeholders in this process are – the Government, the Targeted User Group, sector specialists, industry body/associations working in relevant sectors and the groups affected by the disruption.
Government has the responsibility to ensure interests of all the stakeholders are largely met when such a disruption arises in the society. The decisions made by the relevant Government bodies has major impacts on the lives of many including the founder of the disruptive idea, the possible beneficiaries, citizens and markets. The Department of IT, BT & ST in its continued efforts to promote the culture of Innovation & Startup ecosystem in the State, would like to outline a process for it to draft policies/regulations to enhance adoption of disruptive technologies/ business models.
| Technology | Key Partners | Engagement | Enablement |
| AI & Data Science | KBITS and NASSCOM | Stakeholder consultation meeting Detailed Project proposal with Financials | CoE for Artificial Intelligence and Robotics |
| MI & Robotics | IITB | Artificial Intelligence and Robotics (CAIR) Centre Visit Detailed Project proposal and Financials | CoE for Machine Intelligence and Robotics |
| AVGC | KBITS along with ABAI | Round table with Industry Detailed Project proposal and Financials | CoE for Animation, Visual Effects, Gaming and Comics |
| Cyber Security | KBITS along with 16 other partners | Workshop, Consultation meetings with stakeholders Framework document | CoE for cyber security |
| Blockchain | IEEE - EY | Consultation meetings Hackathon Conclave International | Roadmap for Blockchain in Government in Karnataka Pilots |
• CoE for Design Sense to promote design driven innovation in emerging tech sectors.
• Karnataka Innovation Authority - to encourage cross domain innovations, under the Chairmanship of Hon'ble Chief Minister with the authority for setting up of Regulatory Sandbox data sand boxes.
Hence the Order.
GOVERNMENT ORDER NO: ITD 13 PRM 2018 (II), BENGALURU; DATED:26.04.2018.
In view of the above, Department of IT, BT & ST, Government of Karnataka will follow the below mechanism to draft policies / regulations regarding adoption of disruptive technologies / business models:-
I. Technology Selection & Prioritization – As part of the annual Strategy and vision, the Department along with its core Vision groups, Karnataka Innovation Authority & Startup Cell shall identify the technologies that it intends to prioritize for the year for support & promotion.
II. Consultations – The department shall hold recurring consultations with Industry Associations, Academia, Startups, and all relevant stakeholders to identify & draft regulations that should be introduced considering long term impact of specific technology / business model.
III. Technology Specific Frameworks – Post consultations, review and feedback from various groups on the prioritized technologies and corresponding regulations, the Department shall identify the action required for every specific Technology or sub Technology :-
೭೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ಭಾಗ ೧ a. Policy to encompassing a wide spectrum of possible interventions to accelerate or enable the developmentaltrajectory and diffusion of a new / disruptive technology.
b. Whitepaper / Roadmap providing thought leadership, vision and technology adoption roadmap in collaboration with Industry experts and Subject Matter Experts.
c. Centres of Excellence as a team, shared facility, entity that provides incubation, best practices, research, support and/or training in focus areas for sustained engagement with technology by Academics Industry and Startups.
d. Curated Tech Community Events to bring in Industry Experts, VCs, Startups, Academia together to ideate on the Technology, share best practices, identify & share challenges with best fit solutions etc,. along with creating a networking platform for all groups to benefit from each other.
e. Hackathons to engage with enthusiastic tech developers and designers to solve challenges in a unique manner.
By Order and in the Name of the Governor of Karnataka, PR.361
M.L. SESHANNA
Under Secretary to Government,
Department of Information Technology,
Biotechnology and Science & Technology.
(Science & Technology)
INFORMATION TECHNOLOGY, BIOTECHNOLOGY AND SCIENCE & TECHNOLOGY SECRETARIAT
Sub: Incentives provided to Angel Investors to boost the Startup Ecosystem of Karnataka
Read: Government Order No. ITD 27 PRM 2015, Dated: 27.11.2015.
PREAMBLE :
Karnataka Startup Policy was launched in 2015 with a vision to create a world-class startup ecosystem in the State through Strategic Investment and Policy Interventions leveraging the robust innovation climate in Bengaluru. Karnataka is home to thousands of Startups and is one of the top Innovation hubs in the world. The Government of Karnataka is keen to capitalize on this culture of innovation, knowledge creation and technology-driven processes in the State and continues to add a multitude of Government enabled Initiatives to support Entrepreneurs.
For any budding entrepreneur, access to capital is one of the most critical factors to success. The Government needs to have a broad-based Programme to ease the flow of equity capital and credit to entrepreneurs and startups. Government of Karnataka sanctions grants for seed funding through its 'Idea2PoC Scheme' and has Venture Funds to help startups scale up. The Department now intends to take a step further and give incentives to Angels to further boost the ecosystem.
Hence, the Order.
GOVERNMENT ORDER NO: ITD 13 PRM 2018 (I), BENGALURU; DATED: 26.04.2018.
In view of the above, Department of IT, BT and S&T, Government of Karnataka has decided to incentivize Angel Investors in the State with the following benefits :-
• Connect: Opportunity for Angel Investors to register on the Startup Portal of the State and seamlessly connect with the entire startup ecosystem of the State.
• Interact: For all registered Angel Investors, free entry to all startup and tech events of the State shall be provided to allow them to interact with the startup community. Government shall regularly organize speed dating sessions at its facilities for these investors.
• Evaluate: Government shall prioritize and engage with all registered Angel Investors as judges, mentors, observers across all its pitching sessions, for Elevate 100, Idea2PoC and Grand Challenges, to provide them an opportunity to evaluate pitches by startups.
• Invest: Government may prioritize certain emerging tech sector startups funded by Angel Investors for matching funds.
These benefits are applicable till the validity period of Startup Policy.
By Order and in the Name of the Governor of Karnataka, PR.362
M.L. SESHANNA
Under Secretary to Government,
Department of Information Technology,
Biotechnology and Science & Technology.
(Science & Technology)
(cid:1)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ೭೩೧
ಸಮಾಜ ಕಲ್ಯಾಣ ಸಚಿವಾಲಯ
ತಿದ್ದುಪಡಿ
ಸಂಖ್ಯೆ : ಸಕಇ 446 ಪಕಸೇ 2017, ಬೆಂಗಳೂರು, ದಿನಾಂಕ: 06.07.2018.
ಸರ್ಕಾರದ ಆದೇಶ ಸಂಖ್ಯೆ: ಸಕಇ 446 ಪವಯೋ 2017, ದಿನಾಂಕ: 26.03.018ರ ಆದೇಶ ಭಾಗದಲ್ಲಿ "(ವೇತನ ಶ್ರೇಣಿ `. 14.440-26,700/-)" ಎಂಬುದರ ಬದಲಾಗಿ "(ವೇತನ ಶ್ರೇಣಿ `.14,550-26,700/-)" ಹಾಗೂ ಕಡತದ ಶಿರೋನಾಮೆಯನ್ನು "ಸಕಇ 446 ಪವಯೋ 2017" ಎಂಬುದರ ಬದಲಿಗೆ "ಸಕಇ 446 ಪಕಸೇ 2017" ಎಂದು ತಿದ್ದಿ ಓದಿಕೊಳ್ಳತಕ್ಕದ್ದು, ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.
PR.363
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ರಾಜಶ್ರೀ ಹೆಚ್ ಕುಲಕರ್ಣಿ
SC.50
ಸರ್ಕಾರದ ಅಧೀನ ಕಾರ್ಯದರ್ಶಿ-2, ಸಮಾಜ ಕಲ್ಯಾಣ ಇಲಾಖೆ.
ಕಂದಾಯ ಸಚಿವಾಲಯ
ವಿಷಯ : ಕೊಪ್ಪಳ ತಾಲ್ಲೂಕಿನ ಕೊಪ್ಪಳ ಗ್ರಾಮದ ಸ.ನಂ.626ರಲ್ಲಿನ 13-00 ಎಕರೆ ಸರ್ಕಾರಿ ಗಾಯರಾಣ
ಜಮೀನನ್ನು ಶ್ರೀ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶ್ರೀ ಕೃಷ್ಣದೇವರಾಯ ಸ್ನಾತಕೋತ್ತರ
ಕೇಂದ್ರವನ್ನು ಸ್ಥಾಪಿಸಲು ಮಂಜೂರು ಮಾಡುವ ಕುರಿತು.
ಓದಲಾಗಿದೆ : ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬರುಗಿ ಇವರ ಪತ್ರ ಸಂಖ್ಯೆ :
ಕಂ : ಪ್ರಾಆಕ/ಭೂಮಿ-1/270/2016-17, ದಿನಾಂಕ: 10.01.2017 ಮತ್ತು 23.08.2017.
ಪ್ರಸ್ತಾವನೆ :
ಮೇಲೆ ಓದಲಾದ ಪತ್ರಗಳಲ್ಲಿ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲ್ಲೂಕಿನ ಕೊಪ್ಪಳ ಪಟ್ಟಣದ ಸರ್ಕಾರಿ ಗಾಯರಾಣ ಫೀ ಸ.ನಂ. 626ರಲ್ಲಿನ 517-04 ಎಕರೆ/ಗುಂಟೆ ಜಮೀನಿದ್ದು, ಆರ್.ಟಿ.ಸಿಯ ಕಾಲಂ 9ರಲ್ಲಿ "ಗಾಯರಾಣಫೀ" ಎಂದು ದಾಖಲಾಗಿರುತ್ತದೆ. ಈ ಪೈಕಿ 405-03 ಎ/ಗುಂ ಜಮೀನನ್ನು ಜಿಲ್ಲಾಧಿಕಾರಿ, ರಾಯಚೂರು ಇವರು ತಮ್ಮ ಪತ್ರ ಸಂಖ್ಯೆ:
ಕಂ:ಆರ್ಆರ್ಟಿ/203/93-94, ದಿನಾಂಕ: 13.10.1993ರಂತೆ ಮೈಸೂರು ಗಣಿ ಲಿಮಿಟೆಡ್ ಇವರಿಗೆ ಲೀಜ್ ಆಧಾರದ ಮೇಲೆ ನೀಡಿದ್ದರೂ ಸದರಿಯವರು ಯಾವುದೇ ಕಾರ್ಯವನ್ನು ನಡೆಸಿರುವುದಿಲ್ಲ. ಸದರಿ ಜಮೀನು ಕಲ್ಲುಬಂಡೆ, ಗಿಡಗಂಟೆ ಹಾಗೂ ಹುಲ್ಲು ಬೆಳೆದಿದ್ದು ಖಾಲಿ ಇರುತ್ತದೆ.
ಮುಂದುವರೆದು ಗ್ರಾಮದಲ್ಲಿ ಒಟ್ಟು 2267 ಜಾನುವಾರುಗಳಿದ್ದು, ನಿಯಮಾನುಸಾರ ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಒಟ್ಟು 615-00 ಎಕರೆ ಜಮೀನನ್ನು ಜಾನುವಾರುಗಳ ಮೇವಿಗಾಗಿ ಮೀಸಲಿರಿಸಬೇಕಾಗುತ್ತದೆ. ಅದರಂತೆ ಸ.ನಂ. 626ರಲ್ಲಿ 517-04 ಎಕರೆ, ಸ.ನಂ. 683ರಲ್ಲಿ 0-12 ಗುಂಟೆ ಗಾಯರಾಣ ಜಮೀನಿರುತ್ತದೆ ಹಾಗೂ ಸ.ನಂ. 640ರಲ್ಲಿ 558-24 ಎಕರೆ ಅರಣ್ಯ ಇಲಾಖೆಯ ಲ್ಯಾಂಡ್ ಬ್ಯಾಂಕ್ ಜಮೀನು ಇರುತ್ತದೆ. ಒಟ್ಟಾರೆ ಜಾನುವಾರುಗಳ ಮೇವಿಗಾಗಿ 1076-00 ಎಕರೆ ಜಮೀನು ಲಭ್ಯವಿರುತ್ತದೆ. ಹಾಗೂ ಪ್ರಸ್ತಾಪಿತ ಜಮೀನು ಕೊಪ್ಪಳ ನಗರಕ್ಕೆ 1 ಕಿ.ಮೀ. ಅಂತರದಲ್ಲಿದ್ದು, ಸಮತಟ್ಟಾಗಿರುವುದಾಗಿ ವರದಿ ಮಾಡುತ್ತಾ, ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರಡಿಯಲ್ಲಿ ಗಾಯರಾಣ ಶೀರ್ಷಿಕೆಯಿಂದ ತಗ್ಗಿಸಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 20(ಸಿ)ರನ್ವಯ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ. 50ರಷ್ಟು ದರ ವಿಧಿಸಿ ಶ್ರೀ ಕೃಷ್ಣದೇವರಾಯ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆೆ ಮಂಜೂರು ಮಾಡಲು ಸರ್ಕಾರದ ಪೂರ್ವಾನುಮೋದನೆಯನ್ನು ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ : ಆರ್ಡಿ : 13 : ಎಲ್ಜಿಆರ್ : 2017, ಬೆಂಗಳೂರು, ದಿನಾಂಕ: 05.07.2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, "ಕೊಪ್ಪಳ ಜಿಲ್ಲೆ, ಕೊಪ್ಪಳ ತಾಲ್ಲೂಕಿನ ಕೊಪ್ಪಳ ಗ್ರಾಮದ ಸ.ನಂ. 626ರಲ್ಲಿನ 517-04 ಎಕರೆ/ಗುಂಟೆ ಸರ್ಕಾರಿ ಗಾಯರಾಣ ಫೀ ಜಮೀನಿನ ಪೈಕಿ 13-00 ಎಕರೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರಡಿಯಲ್ಲಿ ಗಾಯರಾಣ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರನ್ವಯ ಸರ್ಕಾರದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 20(1)(ಸಿ) ಅನ್ನು ಸಡಿಲಿಸಿ, ಶ್ರೀ ಕೃಷ್ಣದೇವರಾಯ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗಾಗಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ ಇವರಿಗೆ ಈ ಕೆಳಕಂಡ ಷರತ್ತುಗಳನ್ನು ವಿಧಿಸಿ, ಉಚಿತವಾಗಿ ಮಂಜೂರು ಮಾಡಿ ಆದೇಶಿಸಿದೆ.
ಷರತ್ತುಗಳು :-
(1) ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.
(2) ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.
(3) ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.
(4) ಮಂಜೂರು ಮಾಡಲ್ಪಡುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದಲ್ಲಿ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
೭೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ಭಾಗ ೧(5) ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ / ಉಪಗುತ್ತಿಗೆ ನೀಡುವುದಾಗಲಿ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.
(6)
ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.
(7) ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.
(8) ಜಿಲ್ಲಾಧಿಕಾರಿಗಳು ಜಮೀನನ್ನು ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಸಾಮಾನ್ಯ ಷರತ್ತುಗಳೊಂದಿಗೆ ಪೂರಕವಾದ ಇತರೆ ಷರತ್ತುಗಳನ್ನು ವಿಧಿಸಬಹುದಾಗಿದೆ.
PR.364
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ.ಇ. ಚನ್ನಬಸವರಾಜ
SC.25
ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ. (ಭೂ ಮಂಜೂರಾತಿ-3)
ಕಂದಾಯ ಸಚಿವಾಲಯ
ವಿಷಯ : ಬೆಳಗಾವಿ ಜಿಲ್ಲೆ, ಬೆಳಗಾವಿ ತಾಲ್ಲೂಕು, ಪೀರನವಾಡಿ ಗ್ರಾಮದ ಗಾಯರಾಣ ರಿ.ಸ.ನಂ.21ರಲ್ಲಿ 0-10
ಗುಂಟೆ ಜಮೀನನ್ನು ಕುರುಬರ ಸಮುದಾಯ ಭವನ ನಿರ್ಮಾಣಕ್ಕಾಗಿ ಕರ್ನಾಟಕ ಪ್ರದೇಶ ಕುರುಬರ
ಸಂಘ, ಬೆಂಗಳೂರು ಇವರಿಗೆ ಮಂಜೂರು ಮಾಡುವ ಕುರಿತು.
ಓದಲಾಗಿದೆ : 1. ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ, ಬೆಳಗಾವಿ ಇವರ ಪತ್ರ ಸಂಖ್ಯೆ: ಭೂಮಿ-4:
ಎಲ್ಎನ್ಡಿ/ಸಿಆರ್/40/2017-18, ದಿನಾಂಕ:13-07-2017 ಮತ್ತು ದಿನಾಂಕ:14-07-2018.
2. ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ, ಇವರ ಪತ್ರ ದಿನಾಂಕ:03-07-2017 ಮತ್ತು ದಿನಾಂಕ:22-02-2018.
ಪ್ರಸ್ತಾವನೆ :
ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ ಇವರು ಬೆಳಗಾವಿ ಜಿಲ್ಲೆ, ಬೆಳಗಾವಿ ತಾಲ್ಲೂಕು, ಪೀರನವಾಡಿ ಗ್ರಾಮದ ಗಾಯರಾಣ ರಿ.ಸ.ನಂ.21ರಲ್ಲಿ 0-10 ಗುಂಟೆ ಜಮೀನನ್ನು ಕುರುಬರ ಸಮುದಾಯ ಭವನ ನಿರ್ಮಾಣಕ್ಕಾಗಿ, ಕರ್ನಾಟಕ ಪ್ರದೇಶ ಕುರುಬರ ಸಂಘ, ಬೆಂಗಳೂರು ಇವರಿಗೆ ಮಂಜೂರು ಮಾಡುವ ಕುರಿತು ಪ್ರಸ್ತಾಪಿಸಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ(2)ರ ಪತ್ರಗಳಲ್ಲಿ ಜಿಲ್ಲಾಧಿಕಾರಿಗಳು, ಬೆಳಗಾವಿ ಜಿಲ್ಲೆ ಇವರು ಬೆಳಗಾವಿ ಜಿಲ್ಲೆ, ಬೆಳಗಾವಿ ತಾಲ್ಲೂಕು, ಪೀರನವಾಡಿ ಗ್ರಾಮದ ಗಾಯರಾಣ ರಿ.ಸ.ನಂ.21ರಲ್ಲಿನ ಒಟ್ಟು 12-20 ಎಕರೆ ಜಮೀನು ಮೂಲತಃ ಗಾಯರಾಣ ಜಮೀನಾಗಿದ್ದು, ಹ.ದಾ ನಂ.3260 ದಿನಾಂಕ:
19-03-1976ರ ಪ್ರಕಾರ ಸದರಿ ಜಮೀನನ್ನು "ಆಕಾರ ಪಡ ಸರ್ಕಾರಿ ಗಾಯರಾಣ" ಎಂದು ಪಹಣಿ ಪತ್ರಿಕೆಯಲ್ಲಿ ದಾಖಲಾಗಿರುತ್ತದೆ. ಸದರಿ ಜಮೀನು ಅತಿಕ್ರಮಣದಿಂದ ಮುಕ್ತವಾಗಿದ್ದು, ರಸ್ತೆ ಸಂಪರ್ಕ ಹೊಂದಿರುತ್ತದೆ. ಪ್ರಸ್ತಾಪಿತ ಜಮೀನಿನ ಪೈಕಿ 0-20 ಗುಂಟೆ ಜಮೀನನ್ನು ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಜನಾಂಗದವರ ಸ್ಮಶಾನಕ್ಕಾಗಿ ಹಾಗೂ 2-00 ಎಕರೆ ಜಮೀನನ್ನು ಗಾಂಧಿ ಭವನ ನಿರ್ಮಾಣಕ್ಕಾಗಿ ವಾರ್ತಾ ಮತ್ತು ಸಾರ್ವಜನಿಕರ ಸಂಪರ್ಕ ಇಲಾಖೆಯ ಹೆಸರಿನಲ್ಲಿ ಕಾಯ್ದಿರಿಸಲಾಗಿರುತ್ತದೆ.
ಮುಂದುವರೆದು, ಪೀರನವಾಡಿ ಗ್ರಾಮದಲ್ಲಿ ಒಟ್ಟು 8476 ಜಾನುವಾರುಗಳಿದ್ದು, ಮೇವಿಗಾಗಿ ಸಾಕಷ್ಟು ಪ್ರಮಾಣದ ಜಮೀನು ಲಭ್ಯವಿರುತ್ತದೆ. ಅಲ್ಲದೆ ಸದರಿ ಗ್ರಾಮವು ಹಸಿರು ವಲಯದಿಂದ ಕೂಡಿದ್ದು, ಗ್ರಾಮದ ಜನರು ತಮ್ಮ ಜಾನುವಾರುಗಳಿಗೆ ತಮ್ಮ ಜಮೀನುಗಳಲ್ಲಿ ಮೇವಿನ ವ್ಯವಸ್ಥೆ ಮಾಡಿಕೊಂಡಿರುವುದರಿಂದ ಮೇವಿನ ಸಮಸ್ಯೆ ಇರುವುದಿಲ್ಲ. ಪೀರನವಾಡಿ ಗ್ರಾಮದ ರಿ.ಸ.ನಂ.21ರಲ್ಲಿನ ಜಮೀನು ಪೀರನವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತಿದ್ದು, ಸದರಿ ಗ್ರಾಮವು ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಿಂದ 8 ಕಿ.ಮೀ. ಅಂತರದಲ್ಲಿ ಇರುತ್ತದೆಂದು ತಿಳಿಸುತ್ತಾ, ಕುರುಬರ ಸಮುದಾಯ ಭವನಕ್ಕಾಗಿ 0-10 ಗುಂಟೆ ಜಮೀನನ್ನು ಮಂಜೂರು ಮಾಡುವ ಕುರಿತು ವರದಿಯನ್ನು ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ದಿನಾಂಕ:14-07-2018ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಪ್ರಸ್ತಾಪಿಸಿರುವಂತೆ ಸರ್ಕಾರದ ಸುತ್ತೋಲೆ ಸಂಖ್ಯೆ: ಆರ್ಡಿ 83 ಎಲ್ಜಿಪಿ 2006, ದಿನಾಂಕ:05-01-2007 ಮತ್ತು ಅದಕ್ಕೆ ಮುಂದುವರೆದಂತೆ ಹೊರಡಿಸಲಾದ ಸುತ್ತೋಲೆಗಳನ್ವಯ ಗಾಯರಾಣ ಜಮೀನನ್ನು ಯಾವುದೇ ವ್ಯಕ್ತಿ/ಖಾಸಗಿ ಸಂಸ್ಥೆಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲ. ಆದಾಗ್ಯೂ ಹಿಂದುಳಿದ ಕುರುಬ ಸಮುದಾಯದ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗಾಗಿ ಸಮುದಾಯ ಭವನ ನಿರ್ಮಾಣ ಮಾಡಲು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಮಾರ್ಗಸೂಚಿ ದರದಂತೆ ಪ್ರಸ್ತಾಪಿತ ಪೀರನವಾಡಿ ಗ್ರಾಮದ ಗಾಯರಾಣ ರಿ.ಸ.ನಂ.21ರಲ್ಲಿ 0-10 ಗುಂಟೆ ಜಮೀನನ್ನು ಮಂಜೂರು ಮಾಡಬಹುದೆಂದು ಶಿಫಾರಸ್ಸು ಮಾಡಿರುತ್ತಾರೆ.
ಪ್ರಾದೇಶಿಕ ಆಯುಕ್ತರು, ಬೆಳಗಾವಿ ವಿಭಾಗ ಹಾಗೂ ಜಿಲ್ಲಾಧಿಕಾರಿಗಳು, ಬೆಳಗಾವಿ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ೭೩೩ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 54 ಎಲ್ಜಿಎಲ್ 2017, ಬೆಂಗಳೂರು, ದಿನಾಂಕ:04-07-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲೆ, ಬೆಳಗಾವಿ ತಾಲ್ಲೂಕು, ಪೀರನವಾಡಿ ಗ್ರಾಮದ ರಿ.ಸ.ನಂ.21ರಲ್ಲಿ 0-10 ಗುಂಟೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರನ್ವಯ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27ರಡಿ ಪ್ರದತ್ತವಾದ ವಿಶೇಷ ಅಧಿಕಾರವನ್ನು ಚಲಾಯಿಸಿ, ಸದರಿ ನಿಯಮಗಳ ನಿಯಮ22ಎ(2) ಅನ್ನು ಸಡಿಲಿಸಿ, ಪ್ರಚಲಿತ ಮಾರ್ಗಸೂಚಿ ಬೆಲೆಯ ಶೇ.10 ರಷ್ಟು ದರ ಹಾಗೂ ಶಾಸನಬದ್ಧ ಇತರೆ ಶುಲ್ಕಗಳನ್ನು ವಿಧಿಸಿ, ಕರ್ನಾಟಕ ಪ್ರದೇಶ ಕುರುಬರ ಸಂಘ, ಬೆಂಗಳೂರು ಇವರಿಗೆ ಸಮುದಾಯ ಭವನ ನಿರ್ಮಾಣಕ್ಕಾಗಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.
ಷರತ್ತುಗಳು:
1. ಮಂಜೂರಾತಿ ಆದೇಶದಲ್ಲಿ ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ ದರ/ ಮಾರ್ಗಸೂಚಿ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. 2. ಉದ್ದೇಶಿತ ಜಮೀನನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು. 3. ಪ್ರಸ್ತಾಪಿತ ಜಮೀನು ಸಂಸ್ಥೆಗೆ ಅವಶ್ಯವಿಲ್ಲದಿದ್ದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು. 4. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 5. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು. 6. ಮಂಜೂರಾದ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
7. ಸದರಿ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪಡೆಯತಕ್ಕದ್ದು.
8. ಮಂಜೂರು ಮಾಡಲಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೆ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.
9. ಮಂಜೂರು ಮಾಡಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ ಇಡುವುದಾಗಲೀ, ವರ್ಗಾವಣೆ ಅಥವಾ ಇತರೆ ಯಾವುದೇ ರೀತಿಯ ಪರಭಾರೆ ಮಾಡತಕ್ಕದ್ದಲ್ಲ.
10. ಸದರಿ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.
11. ಜಿಲ್ಲಾಧಿಕಾರಿಗಳು ಮಂಜೂರು ಮಾಡಲಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.
PR.365
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ.ಇ. ಚನ್ನಬಸವರಾಜ
SC.25
ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ. (ಭೂ ಮಂಜೂರಾತಿ-3)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ : ಸ್ವಾಧಾರ್ ಗೃಹದ ಮಹಿಳೆಯರಿಗೆ ಆರೋಗ್ಯ ಕರ್ನಾಟಕ ಕಾರ್ಡ್ನ್ನು ವಿತರಿಸುವ ಬಗ್ಗೆ.
ಓದಲಾಗಿದೆ :
1. ಮಾನ್ಯ ಸರ್ವೋಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 659/2007. 2. ಇದೇ ಸಮ ಸಂಖ್ಯೆಯ ಸರ್ಕಾರದ ಆದೇಶ ದಿನಾಂಕ: 01-03-2018 ಮತ್ತು 01-06-2018.
ಪ್ರಸ್ತಾವನೆ :
ಮೇಲೆ ಓದಲಾದ ಕ್ರಮಾಂಕ (1)ರ ಮಾನ್ಯ ಸರ್ವೋಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 659/2007 ರಲ್ಲಿ ಸ್ವಾಧಾರ್ ಗೃಹಗಳಲ್ಲಿ ವಾಸಿಸುತ್ತಿರುವ ಮಹಿಳೆಯರಿಗೆ ಸರ್ಕಾರದಿಂದ ಬೆಂಬಲ ನೀಡುವ ಬಗ್ಗೆ ಪ್ರಸ್ತಾಪಿಸಿದ್ದು, ಸರ್ಕಾರದ ಇಲಾಖೆಗಳು ಸ್ವಾಧಾರ್ ಗೃಹಗಳ ಮಹಿಳೆಯರಿಗೆ ಹಲವು ಸೌಲಭ್ಯಗಳನ್ನು ಒದಗಿಸಬೇಕಾಗಿರುತ್ತದೆ. ಆರೋಗ್ಯ ಮತ್ತ ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ, ಸ್ವಾಧಾರ್ ಗೃಹಗಳ ಮಹಿಳೆಯರಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಬೇಕಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (2)ರ ದಿನಾಂಕ: 01-03-018ರ ಸಮ ಸಂಖ್ಯೆಯ ಸರ್ಕಾರದ ಆದೇಶದಲ್ಲಿ, ರಾಜ್ಯದಲ್ಲಿನ ಎಲ್ಲಾ ಆರೋಗ್ಯ ಯೋಜನೆಗಳನ್ನು ಒಗ್ಗೂಡಿಸಿ, ರಾಜ್ಯದ ಸಮಸ್ತ ನಿವಾಸಿಗಳಿಗೆ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು, ಮಾರ್ಗಸೂಚಿಗಳೊಂದಿಗೆ ಆರೋಗ್ಯ ಕರ್ನಾಟಕ ಯೋಜನೆಯನ್ನು ಜಾರಿಗೆ ತರಲಾಗಿದೆ. ಸದರಿ ಆದೇಶದಲ್ಲಿ, ಆರೋಗ್ಯ ಚಿಕಿತ್ಸೆ ಮತ್ತು ಆರೈಕೆ ಪಡೆದುಕೊಳ್ಳುವ ರೋಗಿಗಳನ್ನು ಈ ಕೆಳಕಂಡಂತೆ ವಿಂಗಡಿಸಲಾಗಿದೆ.
ಅರ್ಹತಾ ರೋಗಿ: ಕರ್ನಾಟಕ ರಾಜ್ಯ ನಿವಾಸಿಯಾಗಿರುವ ಒಬ್ಬ ರೋಗಿಯು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 ರಡಿ "ಅರ್ಹ ಕುಟುಂಬ" ಕ್ಕೆ ಸೇರಿರುವರು ;
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೭೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೩, ೨೦೧೮ ಭಾಗ ೧ಸಾಮಾನ್ಯ ರೋಗಿ: ಕರ್ನಾಟಕ ರಾಜ್ಯದ ನಿವಾಸಿಯಾಗಿದ್ದು, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ, 2013 ರಡಿ "ಅರ್ಹ ಕುಟುಂಬ" ವ್ಯಾಖ್ಯಾನದಡಿ ಸೇರಿಲ್ಲದೇ ಇರುವ ಅಥವಾ ಅರ್ಹ ಕುಟುಂಬಕ್ಕೆ ಸೇರಿದ ಕಾರ್ಡ್ನ್ನು ಒದಗಿಸದೇ ಇರುವವರು;
ದಿ: 01-06-2018ರ ಸಮ ಸಂಖ್ಯೆಯ ಸರ್ಕಾರದ ಆದೇಶದಲ್ಲಿ, ದಿ: 01-03-2018ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಗಳಿಗೆ ಕೆಲವೊಂದು ಬದಲಾವಣೆಗಳನ್ನು ಮಾಡಿ ಪರಿಷ್ಕøತ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದನ್ವಯ, ರಿಟ್ ಅರ್ಜಿಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧ ಅನುಪಾಲನಾ ವರದಿ ನೀಡುವ ಸಂಬಂಧ ಸ್ವಾಧಾರ್ ಗೃಹದ ಮಹಿಳೆಯರಿಗೆ ಆರೋಗ್ಯ ಕರ್ನಾಟಕ ಕಾರ್ಡ್ನ್ನು ವಿತರಿಸಲು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಕುಕ 91 ಸಿಜಿಇ 2017, ಬೆಂಗಳೂರು, ದಿನಾಂಕ: 19.07.2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸ್ವಾಧಾರ್ ಗೃಹಗಳಲ್ಲಿ ವಾಸಿಸುತ್ತಿರುವ ಬಿಪಿಎಲ್ ಕಾರ್ಡ್ ಹೊಂದದೇ ಇರುವ ಮಹಿಳೆಯರನ್ನು ಆರೋಗ್ಯ ಕರ್ನಾಟಕ ಯೋಜನೆಯಡಿಯಲ್ಲಿ "ಅರ್ಹತಾ ರೋಗಿ" ಯೆಂದು ಪರಿಗಣಿಸಿದೆ ಹಾಗೂ ಅವರುಗಳಿಗೆ ಆರೋಗ್ಯ ಕರ್ನಾಟಕ ಕಾರ್ಡ್ಗಳನ್ನು ವಿತರಿಸಲು ಆದೇಶಿಸಿದೆ.
PR.366
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್.ಸಿ. ಹರ್ಷರಾಣಿ
SC.50
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
(ಆರೋಗ್ಯ 1&2)
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.