Servants of Knowledge
Karnataka Gazette · Government of Karnataka

Karnataka Gazette, Part Part-1, 06 September 2018

Published 06 September 2018

Part
Part-1
Identifier
in.gazette.karnataka_new.2018-09-06.Part-1
Languages
English, Kannada
Published at
Original source ↗

click here for IIIF manifest

೧೫, ಶಕ ವರ್ಷ

೫೩

ಸಂಪುಟ ೧೫

3

Volume 153

ಬೆಂಗಳ

Benga

ಳೂರು, ಗುರುವಾ

aluru, Thursd

ವಾರ, ಸೆಪ್ಟೆಂಬರ್

day, Septemb

ರ್ ೬, ೨೦೧೮

ber 6, 2018 (B

(ಭಾದ್ರಪದ ೧

Bhadrapada 1

5, Shaka Vars

ಸಂಚಿಕೆ ೩೬

Issue 36

೧೯೪೦)

sha 1940)

ಭಾಗ ೧

ರಾಜ್ಯ

ಸರ್ಕಾರದ

ುಂತಾದ

ಎಲ್ಲಾ ಇ

ಮುಖ್ಯ ಆದ

ಇಲಾಖೆಗಳಿಗ

ದೇಶಗಳು ಹ

ಗೂ ಸಂಬಂ

ಹಾಗೂ ಸುತ

ಂಧಿಸಿದ ಆದ

ತ್ತೋಲೆ ಮು

ದೇಶಗಳು

ಕಂದ ದಾಯ ಸಚಿವಾಲ

ವಿ ಷಯ : ಶ್ರೀ ಎ ಎಂ.ಮುನಿಯಪ್ಪ, ಅ ಅಟೆಂಡರ್, ಉಪ ಲಯ

ನೋಂದಣಿ ಕಛೆ

ವರದಿಂ ಯ ಮೇಲೆ ದಂಡ ಡನೆಯನ್ನು ವಿಧಿಸು ೕರಿ, ಕೋಲಾರ ಇ ಇವರ ವಿರುದ್ಧದ ಲೋಕಾಯುಕ್ತ ವಿ

ವಿಚಾರಣಾ

ುವ ಕುರಿತು-ಆದೇ

ೕಶ.

ಓದಲಾ

ಲಾಗಿದೆ : 1)

ಮಾನ್ಯ ಉಪ Compt/Uplok/B

ಲೋಕಾಯುಕ್ತರು BD-245 /2009/AR

ಸರ್ಕಾರದ ಆದೇಶ ಶ ಸಂಖ್ಯೆ: ಕಂಇ ಲೋಕಾಯುಕ್ತ, ಬೆಂಗಳೂರು ಇ ವರ ವರದಿ ಸ

ಸಂಖ್ಯೆ :

, ಕರ್ನಾಟಕ ಲ RE-6, ದಿನಾಂಕ: 23-06-2011.

35 ಮುನೋಸೇ(

2) 3)

ಅಪರ ನಿಬಂಧಕರ LOK/INQ/14-A/

ರು, ವಿಚಾರಣೆಗಳ /33/2012/ARE-1

ಳು-10, ಕರ್ನಾಟಕ 10, ದಿನಾಂಕ: 06-

4)

(3) 2011 ದಿನಾಂ ಂಕ : 17-03-20

012.

ಕ ಲೋಕಾಯುಕ್ತ,

, ಬೆಂಗಳೂರು ಇ ಇವರ ವಿಚಾರಣಾ ವರದಿ:

-03-2018.

INQ/14-

ಕರ್ನಾಟಕ ಲೋ

ಮಾನ್ಯ ಉಪ ಲೊ A/33/2012/ARE

ಳೂರು ಇವರ ಶಿ ಶಿಫಾರಸ್ಸು: LOK/I

ಕಾಯುಕ್ತ, ಬೆಂಗ

(೭೬೩)೭೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೬, ೨೦೧೮ ಭಾಗ ೧ ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ಅಪರ ನಿಬಂಧಕರು, ವಿಚಾರಣೆಗಳು-10, ಮಾನ್ಯ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ: 06-03-2018ರಲ್ಲಿ ವಿಚಾರಣಾ ವರದಿಯನ್ನು ಮಾನ್ಯ ಉಪ ಲೋಕಾಯುಕ್ತರಿಗೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಆಪಾದಿತ ನೌಕರರಾದ ಶ್ರೀ ಎಂ.ಮುನಿಯಪ್ಪ ತಂದೆ ಉತ್ತೂರು ಮುನಿಶಾಮಪ್ಪ, ಅಟೆಂಡರ್/ ಪ್ರಭಾರ ಇ.ಸಿ ಕ್ಲರ್ಕ್, ಉಪ ನೋಂದಣಿ ಕಛೇರಿ, ಕೋಲಾರ ಇವರ ವಿರುದ್ಧ ಆರೋಪಿಸಲಾದ ಸರ್ಕಾರದ ಕಾರ್ಯ ನಿರ್ವಹಿಸಲು ಲಂಚ ಪಡೆದು ದುರ್ನಡತೆ ಎಸಗಿರುವ ಆರೋಪವು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು 1966ರ ನಿಯಮ 3(1)(i) ರಿಂದ (iii)ರಡಿ ಸಾಬೀತಾಗಿರುವುದಾಗಿ, ವರದಿ ಸಲ್ಲಿಸಿ, ಸದರಿ ವರದಿಯಲ್ಲಿ ಆಪಾಧಿತರಿಗೆ ಸದರಿಯವರ ನಿವೃತ್ತಿ ವೇತನದಲ್ಲಿ ಶೇ.50%ರಷ್ಟನ್ನು ಶಾಶ್ವತವಾಗಿ ತಡೆಹಿಡಿಯುವ ದಂಡನೆಯನ್ನು ವಿಧಿಸಲು ಮೇಲೆ ಓದಲಾದ ಕ್ರಮ ಸಂಖ್ಯೆ (4)ರಲ್ಲಿ ಮಾನ್ಯ ಉಪಲೋಕಾಯುಕ್ತರವರು ವರದಿಯನ್ನು ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ಸರ್ಕಾರದ ದಿನಾಂಕ: 07-04-2018ರಲ್ಲಿ ಅಪರ ನಿಬಂಧಕರು, ವಿಚಾರಣೆಗಳು-10, ಮಾನ್ಯ ಕರ್ನಾಟಕ ಲೋಕಾಯುಕ್ತ ಇವರ ವರದಿ ಹಾಗೂ ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸಿನ ವರದಿ ಹಿನ್ನೆಲೆಯಲ್ಲಿ, ಏಕೆ ಕ್ರಮ ಕೈಗೊಳ್ಳಬಾರದು ಎಂಬ ಸಮಜಾಯಿಷಿ ಹೇಳಿಕೆ ಸಲ್ಲಿಸಲು ಶ್ರೀ ಎಂ.ಮುನಿಯಪ್ಪ ತಂದೆ ಉತ್ತೂರು ಮುನಿಶಾಮಪ್ಪ, ಅಟೆಂಡರ್/ ಪ್ರಭಾರ ಇ.ಸಿ. ಕ್ಲರ್ಕ್, ಉಪ ನೋಂದಣಿ ಕಛೇರಿ, ಕೋಲಾರ (ಹಾಲಿ ನಿವೃತ್ತ) ಇವರಿಗೆ ಕಾರಣ ಕೇಳುವ ನೊಟೀಸ್‌ನ್ನು ಜಾರಿ ಮಾಡಲಾಗಿದ್ದು, ಸದರಿ ಕಾರಣ ಕೇಳುವ ನೋಟೀಸಿಗೆ ಶ್ರೀ ಎಂ.ಮುನಿಯಪ್ಪ ತಂದೆ ಉತ್ತೂರು ಮುನಿಶಾಮಪ್ಪ, ಅಟೆಂಡರ್/ ಪ್ರಭಾರ ಇ.ಸಿ. ಕ್ಲರ್ಕ್, ಉಪ ನೋಂದಣಿ ಕಛೇರಿ, ಕೋಲಾರ (ಹಾಲಿ ನಿವೃತ್ತ) ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ದಿನಾಂಕ:07-05-2018ರಲ್ಲಿ ಲಿಖಿತ ಹೇಳಿಕೆಯನ್ನು ಸಲ್ಲಿಸಿ, ಮಾನ್ಯ ಉಪ ಲೋಕಾಯುಕ್ತರು ವಿಧಿಸಿರುವ ದಂಡನೆಯು ಲೋಕಾಯುಕ್ತ ವಿಚಾರಣಾ ಪ್ರಕರಣಗಳಲ್ಲಿ ಮಾನ್ಯ ಉಚ್ಛ ನ್ಯಾಯಾಲಯವು ರಿಟ್ ಅಪೀಲು ಸಂಖ್ಯೆ: 8594/2012ರ ಆದೇಶಕ್ಕೆ ವ್ಯತಿರಿಕ್ತವಾದುದ್ದಾಗಿರುತ್ತದೆ. ಲಂಚದ ಆರೋಪ ಸಾಬೀತಾಗಿರುವ ಇನ್ನೊಂದು ಇಲಾಖಾ ವಿಚಾರಣೆಯಲ್ಲಿ ಮಾನ್ಯ ಲೋಕಾಯುಕ್ತರು ಶೇ.20%ರಷ್ಟು ನಿವೃತ್ತಿ ವೇತನವನ್ನು ಕಡಿತಗೊಳಿಸುವ ದಂಡನೆಯನ್ನು ವಿಧಿಸಿರುತ್ತಾರೆ. ಆದರೆ, ತಮ್ಮ ಪ್ರಕರಣದಲ್ಲಿ ಶೇ.50%ರಷ್ಟು ವೇತನವನ್ನು ಕಡಿತಗೊಳಿಸಲು ಶಿಫಾರಸ್ಸು ಮಾಡಿರುವುದು ವ್ಯತಿರಿಕ್ತವಾದ ಆದೇಶವಾಗಿದ್ದು, ಸದರಿ ವಿಚಾರಣಾ ವರದಿಯನ್ನು ತಿರಸ್ಕರಿಸಿ, ಆರೋಪದಿಂದ ದೋಷಮುಕ್ತಗೊಳಿಸುವಂತೆ ಲಿಖಿತ ಹೇಳಿಕೆಯನ್ನು ಸಲ್ಲಿಸಿರುತ್ತಾರೆ.

ಸದರಿ ಆಪಾದಿತ ನೌಕರರ ಸಮಜಾಯಿಷಿಯನ್ನು ಪರಿಶೀಲಿಸಲಾಗಿ, ಈಗಾಗಲೇ ಲೋಕಾಯುಕ್ತರ ವಿಚಾರಣೆಯಲ್ಲಿ ಸಲ್ಲಿಸಿರುವ ಹೇಳಿಕೆಯನ್ನೆ ಸಲ್ಲಿಸಿರುವುದರಿಂದ ಸದರಿ ಸಮಜಾಯಿಷಿಯಲ್ಲಿ ಯಾವುದೇ ಪರಿಗಣನಾರ್ಹವಾದ ಹೊಸ ಅಂಶಗಳು ಕಂಡು ಬಂದಿರುವುದಿಲ್ಲ. ಆಪಾದಿತರು ಸರ್ಕಾರಿ ನೌಕರರಾಗಿ ಸರ್ಕಾರದ ಕೆಲಸದ ನಿರ್ವಹಣೆಯಲ್ಲಿ ಕರ್ತವ್ಯ ನಿಷ್ಟರಾಗಿರದೆ ಮತ್ತು ಪ್ರಮಾಣಿಕತೆ ಹೊಂದದೆ, ದುರ್ನಡತೆ ಎಸಗಿರುವ ಆರೋಪವು ದೃಡಪಟ್ಟಿರುತ್ತದೆ. ಆದ್ದರಿಂದ ಪ್ರಸ್ತುತ ಸದರಿ ನೌಕರನು ಸರ್ಕಾರಿ ಸೇವೆಯಿಂದ ನಿವೃತ್ತರಾಗಿರುವುದರಿಂದ, ಮೇಲೆ ಓದಲಾದ ಕ್ರಮ ಸಂಖ್ಯೆ (4)ರಲ್ಲಿ ಮಾನ್ಯ ಉಪ ಲೋಕಾಯುಕ್ತರವರು ಸಲ್ಲಿಸಿರುವ ಶಿಫಾರಸ್ಸಿನನ್ವಯ ನಿವೃತ್ತಿ ವೇತನದ ಶೇ.50%ರಷ್ಟನ್ನು ಶಾಶ್ವತವಾಗಿ ತಡೆಹಿಡಿಯುವಂತೆ ದಂಡನೆಯನ್ನು ವಿಧಿಸಲು, ಕರ್ನಾಟಕ ಲೋಕಸೇವಾ ಆಯೋಗವು ಮೇಲೆ ಓದಲಾದ ಕ್ರಮ ಸಂಖ್ಯೆ(7)ರ ದಿನಾಂಕ: 28-06-2017ರಲ್ಲಿ ನೀಡಿರುವ ಅಭಿಪ್ರಾಯದನ್ವಯ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು, 1958ರ ನಿಯಮ 214(1)(ಎ)ರನ್ವಯ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 17 ಮುನೋಸೇ(3) 2018, ಬೆಂಗಳೂರು, ದಿನಾಂಕ: 09-07-2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ಎಂ.ಮುನಿಯಪ್ಪ ತಂದೆ ಉತ್ತೂರು ಮುನಿಶಾಮಪ್ಪ, ಅಂದಿನ ಅಟೆಂಡರ್/ಪ್ರಭಾರ ಇ.ಸಿ. ಕ್ಲರ್ಕ್, ಉಪ ನೋಂದಣಿ ಕಛೇರಿ, ಕೋಲಾರ, ಕೋಲಾರ ಜಿಲ್ಲೆ (ಹಾಲಿ ನಿವೃತ್ತ) ಇವರು ಸರ್ಕಾರಿ ಕೆಲಸ ನಿರ್ವಹಿಸುವ ಸಲುವಾಗಿ ಲಂಚ ಸ್ವೀಕರಿಸಿರುವುದು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಾಮಾವಳಿಗಳು, 1966ರ ನಿಯಮ 3(1)(i) ರಿಂದ (iii)ನ್ನು ಉಲ್ಲಂಘಿಸಿ, ದುರ್ನಡತೆ ಎಸಗಿರುವ ಆರೋಪವು ಸಾಬೀತಾಗಿರುವುದರಿಂದ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು, 1958ರ ನಿಯಮ 214(1)(ಎ)ರನ್ವಯ ಸದರಿಯವರ ನಿವೃತ್ತಿ ವೇತನದಲ್ಲಿ ಶೇ.50%ರಷ್ಟನ್ನು ಶಾಶ್ವತವಾಗಿ ತಡೆಹಿಡಿಯುವ ದಂಡನೆಯನ್ನು ವಿಧಿಸಿ ಆದೇಶಿಸಿದೆ.

PR – 368

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಮುರಳೀಧರ ಎಸ್.ತಳ್ಳಿಕೇರಿ

ಪೀಠಾಧಿಕಾರಿ,

ಕಂದಾಯ ಇಲಾಖೆ,

(ನೋಂದಣಿ ಮತ್ತು ಮುದ್ರಾಂಕ)

ಕಂದಾಯ ಸಚಿವಾಲಯ

ವಿಷಯ : ಶ್ರೀ ಕೆ.ಟಿ.ಶ್ರೀನಿವಾಸಮೂರ್ತಿ, ದ್ವೀತಿಯ ದರ್ಜೆ ಸಹಾಯಕ (ಪ್ರಭಾರ ಉಪ ನೋಂದಣಾಧಿಕಾರಿ, ಬಸವನಗುಡಿ (ಜಿಗಣಿ), ಆನೇಕಲ್ ತಾಲ್ಲೂಕು) ಇವರ ವಿರುದ್ಧದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ದಂಡನೆ ವಿಧಿಸುವ ಕುರಿತು-ಆದೇಶ. ಓದಲಾಗಿದೆ : 1) ಮಾನ್ಯ ಉಪ ಲೋಕಾಯುಕ್ತರು-1, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವರದಿ ಸಂಖ್ಯೆ :

Compt/Uplok/BCD/2998/2015/DRE-2, ದಿನಾಂಕ: 19/24-05-2016.

2) ಸರ್ಕಾರದ ಆದೇಶ ಸಂಖ್ಯೆ: ಕಂಇ 34 ಮುನೋಸೇ (3) 2016, ದಿನಾಂಕ: 16-08-2016. 3) ಅಪರ ನಿಬಂಧಕರು, ವಿಚಾರಣೆಗಳು-8, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವಿಚಾರಣಾ ವರದಿ:

Uplok-1/DE-322/2016/ARE-8, ದಿನಾಂಕ: 23-01-2018.

322/2016/ARE-8, ದಿನಾಂಕ: 25-01-2018.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೬, ೨೦೧೮ ೭೬೫

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿ ಮಾನ್ಯ ಉಪ ಲೋಕಾಯುಕ್ತರು-1, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ದಿನಾಂಕ: 19/24-05-2016ರ ವರದಿಯಲ್ಲಿ, ಶ್ರೀ ಗೋವಿಂದಪ್ಪ ಇವರು ಸರ್ವೆ ನಂ.3/1 ವೀರಸಂದ್ರ ಹಳ್ಳಿ, ಅತ್ತಿಬೆಲೆ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು ಈ ಜಮೀನಿನ ಮಾರಾಟದ ಕ್ರಯದ ಕರಾರು ಮುಕ್ತವಾಗಿದ್ದು, ಜಿ.ಪಿ.ಎ. ರದ್ದುಪಡಿಸಿದ್ದರೂ ಸಹ, ಸದರಿ ಸ್ವತ್ತನ್ನು ನೋಂದಣಿ ಮಾಡಿಕೊಟ್ಟಿರುವ ಬಗ್ಗೆ ಸಲ್ಲಿಸಿದ ದೂರಿನ ಕುರಿತು ವಿಚಾರಣೆ ನಡೆಸಿದ್ದು, ಸದರಿ ನೌಕರರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ, ನಿಷ್ಠೆಯಲ್ಲಿ ಕರ್ತವ್ಯ ಲೋಪವೆಸಗಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿ ನಡೆದುಕೊಂಡಿದ್ದು, ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 12(3)ರನ್ವಯ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 14(ಎ)ರಡಿಯಲ್ಲಿ ಸದರಿ ನೌಕರರ ವಿರುದ್ಧ ವಿಚಾರಣೆ ನಡೆಸಲು ಮಾನ್ಯ ಉಪ ಲೋಕಾಯುಕ್ತಕ್ಕೆ ವಹಿಸುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ:16-08-2016ರ ಆದೇಶದಲ್ಲಿ, ಶ್ರೀ ಕೆ.ಟಿ.ಶ್ರೀನಿವಾಸಮೂರ್ತಿ, ದ್ವೀತಿಯ ದರ್ಜೆ ಸಹಾಯಕ (ಪ್ರಭಾರ ಉಪ ನೋಂದಣಾಧಿಕಾರಿ, ಬಸವನಗುಡಿ, ಜಿಗಣಿ) ಇವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ, ಸತ್ಯಾಸತ್ಯತೆಯನ್ನು ತಿಳಿಯಲು ಪ್ರಕರಣವನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ)ರನ್ವಯ ವಿಚಾರಣೆಯನ್ನು ನಡೆಸಲು ಮಾನ್ಯ ಉಪ ಲೋಕಾಯುಕ್ತ-1, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರಿಗೆ ವಹಿಸಿ ಸರ್ಕಾರವು ಆದೇಶಿಸಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ಅಪರ ನಿಬಂಧಕರು, ವಿಚಾರಣೆಗಳು-8, ಮಾನ್ಯ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ: 23-01-2018ರಲ್ಲಿ ವಿಚಾರಣಾ ವರದಿಯನ್ನು ಮಾನ್ಯ ಉಪ ಲೋಕಾಯುಕ್ತರಿಗೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಆಪಾದಿತ ನೌಕರರಾದ ಶ್ರೀ ಕೆ.ಟಿ.ಶ್ರೀನಿವಾಸಮೂರ್ತಿ, ದ್ವೀತಿಯ ದರ್ಜೆ ಸಹಾಯಕ (ಪ್ರಭಾರ ಉಪ ನೋಂದಣಾಧಿಕಾರಿ, ಬಸವನಗುಡಿ, ಜಿಗಣಿ) ಇವರ ವಿರುದ್ಧ ಆರೋಪಿಸಲಾದ, ಸರ್ಕಾರದ ಕಾರ್ಯ ನಿರ್ವಹಣೆಯಲ್ಲಿ ದುರ್ನಡತೆ ಎಸಗಿರುವ ಆರೋಪವು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು 1966ರ ನಿಯಮ 3(1)(i) ರಿಂದ (iii)ರಡಿ ಸಾಬೀತಾಗಿರುವುದಾಗಿ, ವರದಿ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಆಪಾಧಿತರಿಗೆ ಸದರಿಯವರಿಗೆ ನಾಲ್ಕು (4) ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತ ಪರಿಣಾಮ ಬೀರುವಂತೆ ತಡೆಹಿಡಿಯಲು ಹಾಗೂ ಸದರಿ ನೌಕರರು ಬಡ್ತಿಗೆ ಅರ್ಹರಾದ ದಿನದಿಂದ ನಾಲ್ಕು ವರ್ಷಗಳ ಅವಧಿಗೆ ಅವರ ಮುಂಬಡ್ತಿಯನ್ನು ತಡೆಹಿಡಿಯುವ ದಂಡನೆಯನ್ನು ವಿಧಿಸಲು ಮೇಲೆ ಓದಲಾದ ಕ್ರಮ ಸಂಖ್ಯೆ (4)ರಲ್ಲಿ ಮಾನ್ಯ ಉಪ ಲೋಕಾಯುಕ್ತರು-1 ರವರು ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ದಿನಾಂಕ: 09-02-2018ರ ಸರ್ಕಾರದ ಕಾರಣ ಕೇಳುವ ನೋಟೀಸಿನಲ್ಲಿ ಅಪರ ನಿಬಂಧಕರು, ವಿಚಾರಣೆಗಳು-8, ಕರ್ನಾಟಕ ಲೋಕಾಯುಕ್ತ ರವರ ವರದಿ ಹಾಗೂ ಮಾನ್ಯ ಉಪ ಲೋಕಾಯುಕ್ತರು-1, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ರವರ ಶಿಫಾರಸ್ಸು ವರದಿಯನ್ವಯ, ಏಕೆ ಕ್ರಮ ಕೈಗೊಳ್ಳಬಾರದು ಎಂಬುದಾಗಿ ಹೇಳಿಕೆಯನ್ನು ಸಲ್ಲಿಸುವಂತೆ ಶ್ರೀ ಕೆ.ಟಿ.ಶ್ರೀನಿವಾಸಮೂರ್ತಿ, ದ್ವೀತಿಯ ದರ್ಜೆ ಸಹಾಯಕ (ಪ್ರಭಾರ ಉಪ ನೋಂದಣಾಧಿಕಾರಿ, ಬಸವನಗುಡಿ, ಜಿಗಣಿ) ಇವರಿಗೆ ಕಾರಣ ಕೇಳುವ ನೊಟೀಸ್‌ನ್ನು ಜಾರಿ ಮಾಡಲಾಗಿದ್ದು, ಸದರಿ ಕಾರಣ ಕೇಳುವ ನೋಟೀಸಿಗೆ ಶ್ರೀ ಕೆ.ಟಿ.ಶ್ರೀನಿವಾಸಮೂರ್ತಿ, ದ್ವೀತಿಯ ದರ್ಜೆ ಸಹಾಯಕ (ಪ್ರಭಾರ ಉಪ ನೋಂದಣಾಧಿಕಾರಿ) ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ದಿನಾಂಕ: 10-04-2018ರಲ್ಲಿ ತಮ್ಮ ಹೇಳಿಕೆಯನ್ನು ಸಲ್ಲಿಸಿ, ಜಿಗಣಿ ಉಪ ನೋಂದಣಿ ಕಛೇರಿಯಲ್ಲಿ ಪ್ರಭಾರ ಉಪನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭ ದಿನಾಂಕ: 22-04-2015ರಂದು ವೀರಸಂದ್ರ ಗ್ರಾಮದ ಖುಷ್ಕಿ ಜಮೀನನ್ನು ಶ್ರೀ ಕನಕಪ್ಪ ಮತ್ತು ಶ್ರೀ ಗೋವಿಂದಪ್ಪ ಇವರು ಶ್ರೀ ಎನ್.ಎಸ್.ಆನಂದ ಮತ್ತು ಶ್ರೀ ಎನ್.ಎಸ್.ನರೇಂದ್ರ ಇವರಿಗೆ ಕ್ರಯ ದಸ್ತು 420/2015-16ನ್ನು ನೋಂದಾಯಿಸಿದ್ದಾರೆ. ಈ ಪೈಕಿ ಶ್ರೀ ಕನಕಪ್ಪನವರದು ಯಾವುದೇ ತಕರಾರು ಇರುವುದಿಲ್ಲ. ಆದರೆ, ಶ್ರೀ ಗೋವಿಂದಪ್ಪ ಇವರು ಮಾನ್ಯ ಉಪ ಲೋಕಾಯುಕ್ತರಿಗೆ ದಿನಾಂಕ: 29-07-2015ರಂದು ನನ್ನ ಮೇಲೆ ಪಕ್ಷಕಾರರೊಡನೆ ಶಾಮೀಲಾಗಿ ನೋಂದಾಯಿಸಿದ್ದಾರೆಂದು ಸುಳ್ಳು ಆರೋಪ ಮಾಡಿರುತ್ತಾರೆ. ಶ್ರೀ ಗೋವಿಂದಪ್ಪ ಇವರು ಶ್ರೀ ಎನ್.ಎಸ್.ಆನಂದ ಮತ್ತು ಶ್ರೀ ಎನ್.ಎಸ್.ನರೇಂದ್ರ ಇವರಿಗೆ ನೋಟರೀಕರಿಸಿ ಜಿಪಿಎ ಮಾಡಿದ್ದು, ಜಿಪಿಎ ರದ್ದಾದ ಬಗ್ಗೆ ಪಕ್ಷಕಾರರಿಂದ ದೂರುದಾರರಿಂದ ಮತ್ತು ನ್ಯಾಯಾಲಯದ ಆದೇಶದಿಂದ ದಸ್ತು ಸಂಖ್ಯೆ ರದ್ದಾದ ಬಗ್ಗೆ ತಿಳಿದು ಬಂದಿರುವುದಿಲ್ಲ. ಒಂದು ವೇಳೆ ರದ್ದಾದರು ಜಿಪಿಎ ನೋಂದಾಯಿಸಿರುವ ಕ್ರಮವು ಸರಿಯಾಗಿದೆ. ದಸ್ತನ್ನು ನೋಂದಾಯಿಸುವಾಗ ಬರೆದುಕೊಡುವವರು ಮತ್ತು ಬರೆಸಿಕೊಳ್ಳುವವರು ಉಪ ನೋಂದಣಾಧಿಕಾರಿ ಮುಂದೆ ಖುದ್ದಾಗಿ ಹಾಜರಾಗಿ ಹೆಬ್ಬೆಟ್ಟು ಮುದ್ರೆ, ಸಹಿ, ಪೋಟೋ ಹಾಕಿದ ನಂತರ ಕ್ರಯ ಕರಾರು ರದ್ದುಪಡಿಸಿ ನೋಂದಾಯಿಸಬಹುದು. ಒಂದು ವೇಳೆ ನೋಂದಣಿ ರದ್ದಾದರೆ ಕರ್ನಾಟಕ ನೋಂದಣಿ ನಿಯಮಾವಳಿ 1965ರ ನಿಯಮ 123ರ ನಿರ್ದೇಶನದಂತೆ ಇಂಡೆಕ್ಸ್‌ನಲ್ಲಿ ನೋಂದಾಯಿಸಿ ರದ್ದು ಷರಾವನ್ನು ಉಪ ನೋಂದಣಾಧಿಕಾರಿ ಸಹಿಯೊಂದಿಗೆ ದಾಖಲಿಸಬೇಕಾಗುತ್ತದೆ ಹಾಗೂ ಕೆ.ಐ.ಎ.ಡಿ.ಬಿ ಯಿಂದ ಭೂಸ್ವಾಧೀನ ಹಾಗೂ ರದ್ದು ಪ್ರಕ್ರಿಯೆಯು ಉಪ ನೋಂದಣಾಧಿಕಾರಿಗೆ ಸಂಬಂಧಿಸಿರುವುದಿಲ್ಲ.

ಜಿಪಿಎ ನೋಂದಣಿಯ ಕುರಿತು ನೋಂದಣಿ ಕಾಯ್ದೆ 1908ರ ಕಲಂ 17ರಂತೆ ಕಡ್ಡಾಯವಾಗಿರುವ ವಿಷಯವು ವಿಚಾರಣಾಧಿಕಾರಿ, ಮಂಡನಾಧಿಕಾರಿ ಮತ್ತು ಉಪ ಲೋಕಾಯುಕ್ತರಿಗೆ ತಿಳಿದಿರುವುದಿಲ್ಲ. ಈ ಕುರಿತು ವಿಚಾರಣಾ ವೇಳೆಯಲ್ಲಿ ಗಮನಕ್ಕೆ ತಂದು ಪಾಟೀ ಸವಾಲು ಹಾಕಿರುತ್ತೇನೆ.

ಜಿಪಿಎ ಕರಾರುಗಳು ದಿನಾಂಕ:24-09-2001ರ ಹಿಂದೆ ಬರೆದುಕೊಟ್ಟಿದ್ದಲ್ಲಿ ಅವುಗಳ ನೋಂದಣಿ ಕಡ್ಡಾಯವಲ್ಲ. ಆದ್ದರಿಂದ, ನೋಂದಣಿ ಕಾಯ್ದೆ 1908ರ ಕಲಂ 47ರಲ್ಲಿ ಯಾವುದೇ ದಸ್ತು ಬರೆದುಕೊಟ್ಟ ದಿನಾಂಕದಿಂದ ಜಾರಿಗೆ ಬರುತ್ತದೆ. ಸದರಿ ಪ್ರಕರಣದಲ್ಲಿ, ಹಲವಾರು ಜನರಿಂದ ಕ್ರಯದಾರರು ಜಮೀನು ಖರೀದಿಸಿದ್ದು, ಈ ಪೈಕಿ ಗೋವಿಂದಪ್ಪ ಇವರು ಮಾತ್ರ ದುರಾಸೆಯಿಂದ ಕ್ರಯಪತ್ರ ಬರೆದುಕೊಡದೆ ತಕರಾರು ತೆಗೆದಿರುತ್ತಾರೆ. ನನ್ನ ಮುಂದೆ ದಸ್ತು ಬರೆದುಕೊಟ್ಟು, ಬರೆದದ್ದನ್ನು ಒಪ್ಪಿಕೊಂಡು ಗುರುತಿನ ಸಾಕ್ಷಿದಾರರು ಗುರುತಿಸಿದಾಗ ದಸ್ತನ್ನು ನೋಂದಾಯಿಸಲೇಬೇಕಾಗುತ್ತದೆ. ನೋಂದಣಿ ಕಾಯ್ದೆ ಮತ್ತು ಆಸ್ತಿ ವರ್ಗಾವಣೆ ಕಾಯ್ದೆಯಲ್ಲಿ ಆಸ್ತಿಯನ್ನು ತನಗೆ ವರ್ಗಾಯಿಸಿಕೊಳ್ಳುವ ಆರೋಪವು ಸುಳ್ಳಾಗಿರುತ್ತದೆ. ಜಿಪಿಎ ಮತ್ತು ನೋಂದಾಯಿತ ಕರಾರು ರದ್ದಾದ ಬಗ್ಗೆ ಈವರೆವಿಗೂ ನನಗೆ ಮಾಹಿತಿ ಇರುವುದಿಲ್ಲ ಹಾಗೂ ಪ್ರಶ್ನಿಸುವ ಅಧಿಕಾರವು ಇರುವುದಿಲ್ಲ. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಬಹುದಾಗಿರುತ್ತದೆ ಮತ್ತು ನೋಂದಣಿಯನ್ನು ನಿರಾಕರಿಸಲು ಅವಕಾಶವಿಲ್ಲ. ನೋಂದಣಿ ಕಾಯ್ದೆ ಮತ್ತು ನಿಯಮಾವಳಿಯನ್ವಯ ಮುದ್ರಾಂಕ ಶುಲ್ಕ ಪಾವತಿಸಿದ್ದಲ್ಲಿ ದಸ್ತನ್ನು ನೋಂದಾಯಿಸಬೇಕಾಗಿರುತ್ತದೆ. ಕರ್ನಾಟಕ ಲೋಕಾಯುಕ್ತವು ಇಂತಹದೇ ಹಿಂದಿನ ಪ್ರಕರಣದಲ್ಲಿ ದಸ್ತಿನ ರದ್ದಿಯಾತಿ ನೋಂದಣಿಯನ್ನು ರದ್ದು ಮಾಡಿರುತ್ತದೆ. ಪ್ರಶ್ನಿತ ಸದರಿ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲೇ ತೀರ್ಮಾನವಾಗಬೇಕಾಗಿರುತ್ತದೆ. ಆದುದರಿಂದ, ನನ್ನ ವಿರುದ್ಧದ ಆರೋಪವು ಸುಳ್ಳು. ಕರ್ನಾಟಕ ನಾಗರಿಕ ಸೇವಾ (ಸಿಸಿಎ) ನಿಯಮಾವಳಿಗಳು 1957ರ ನಿಯಮ 8 (iii-a)ರ ಪ್ರಕಾರ ವಿಧಿಸಿರುವ ದಂಡನೆಯು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ: 8594/2012ರ ತೀರ್ಪಿಗೆ ವಿರೋಧವಾದದ್ದಾಗಿರುವುದರಿಂದ, ಸದರಿ ಆರೋಪದಿಂದ ದೋಷಮುಕ್ತಗೊಳಿಸಿ ನಿರ್ದೋಶಿ ಎಂದು ಪರಿಗಣಿಸುವಂತೆ ಲಿಖಿತ ಹೇಳಿಕೆಯನ್ನು ಸಲ್ಲಿಸಿರುತ್ತಾರೆ.

೭೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೬, ೨೦೧೮ ಭಾಗ ೧

ಸದರಿ ಆಪಾದಿತ ನೌಕರರ ಸಮಜಾಯಿಷಿಯನ್ನು ಪರಿಶೀಲಿಸಲಾಗಿ, ಈಗಾಗಲೇ ಲೋಕಾಯುಕ್ತರ ವಿಚಾರಣೆಯಲ್ಲಿ ಸಲ್ಲಿಸಿರುವ ಹೇಳಿಕೆಯನ್ನೆ ಸಲ್ಲಿಸಿರುವುದರಿಂದ ಸದರಿ ಸಮಜಾಯಿಷಿಯಲ್ಲಿ ಯಾವುದೇ ಪರಿಗಣನಾರ್ಹವಾದ ಹೊಸ ಅಂಶಗಳು ಕಂಡು ಬಂದಿರುವುದಿಲ್ಲ. ಆಪಾದಿತರು ಸರ್ಕಾರಿ ನೌಕರರಾಗಿ ಸರ್ಕಾರದ ಕೆಲಸದ ನಿರ್ವಹಣೆಯಲ್ಲಿ ಕರ್ತವ್ಯ ನಿಷ್ಠರಾಗಿರದೆ ಮತ್ತು ಪ್ರಮಾಣಿಕತೆ ಹೊಂದದೆ, ದುರ್ನಡತೆ ಎಸಗಿರುವ ಆರೋಪವು ದೃಡಪಟ್ಟಿರುವುದರಿಂದ, ಮಾನ್ಯ ಉಪ ಲೋಕಾಯುಕ್ತರು-1 ಇವರ ಶಿಫಾರಸ್ಸನ್ನು ಅಂಗೀಕರಿಸಲು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 8(iii)ರಂತೆ ದಂಡನೆಯನ್ನು ವಿಧಿಸಿ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 03 ಮುನೋಸೇ (3) 2018,

ಬೆಂಗಳೂರು, ದಿನಾಂಕ: 07-07-2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ಕೆ.ಟಿ.ಶ್ರೀನಿವಾಸಮೂರ್ತಿ, ಪ್ರಭಾರ ಉಪ ನೋಂದಣಾಧಿಕಾರಿ, ಬಸವನಗುಡಿ (ಜಿಗಣಿ), ಆನೇಕಲ್ ತಾಲ್ಲೂಕು, ಹಾಲಿ ದ್ವೀತಿಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಜಿಗಣಿ ಇವರು ಸರ್ಕಾರಿ ಕೆಲಸ ನಿರ್ವಹಿಸುವ ಸಲುವಾಗಿ ಲಂಚ ಸ್ವೀಕರಿಸಿರುವುದು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಾಮಾವಳಿಗಳು 1966ರ ನಿಯಮ 3(1)(i) ರಿಂದ (iii)ನ್ನು ಉಲ್ಲಂಘಿಸಿ, ದುರ್ನಡತೆ ಎಸಗಿರುವ ಆರೋಪವು ಸಾಬೀತಾಗಿರುವುದರಿಂದ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 8 (iii) & (iiia)ರನ್ವಯ ನಾಲ್ಕು(4) ವಾರ್ಷಿಕ ವೇತನ ಬಡ್ತಿಯನ್ನು ಸಂಚಿತ ಪರಿಣಾಮ ಬೀರುವಂತೆ ತಡೆಹಿಡಿಯಲು ಹಾಗೂ ಸದರಿ ನೌಕರರು ಬಡ್ತಿಗೆ ಅರ್ಹರಾದ ದಿನದಿಂದ ನಾಲ್ಕು (4) ವರ್ಷಗಳ ಅವಧಿಗೆ ಅವರ ಮುಂಬಡ್ತಿಯನ್ನು ತಡೆಹಿಡಿಯುವ ದಂಡನೆಯನ್ನು ವಿಧಿಸಿ ಆದೇಶಿಸಿದೆ.

PR – 369

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಮುರಳೀಧರ ಎಸ್.ತಳ್ಳಿಕೇರಿ

ಪೀಠಾಧಿಕಾರಿ,

ಕಂದಾಯ ಇಲಾಖೆ,

(ನೋಂದಣಿ ಮತ್ತು ಮುದ್ರಾಂಕ)

ಕಂದಾಯ ಸಚಿವಾಲಯ

ವಿಷಯ : ಶ್ರೀ ಹೆಚ್.ಎಸ್.ಗಾಂಧಿ, ಉಪ ನೋಂದಣಾಧಿಕಾರಿ ಇವರ ವಿರುದ್ಧದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ದಂಡನೆ ವಿಧಿಸುವ ಕುರಿತು-ಆದೇಶ.

ಓದಲಾಗಿದೆ : 1) ಮಾನ್ಯ ಉಪ ಲೋಕಾಯುಕ್ತರು-2, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವರದಿ ಸಂಖ್ಯೆ: Compt/ Uplok/MYS-422/2014/DRE-1, ದಿನಾಂಕ: 28-04-2014.

2) ಸರ್ಕಾರದ ಆದೇಶ ಸಂಖ್ಯೆ: ಕಂಇ 18 ಮುನೋಸೇ(2) 2014, ದಿನಾಂಕ: 12-06-2014. 3) ಅಪರ ನಿಬಂಧಕರು, ವಿಚಾರಣೆಗಳು-3, ಕರ್ನಾಟಕ ಲೋಕಾಯುಕ್ತ ಇವರ ವಿಚಾರಣಾ ವರದಿ: LOK/INQ/14- 4) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಶಿಫಾರಸ್ಸು: LOK/INQ/14- 5) ಸರ್ಕಾರದ ಕಾರಣ ಕೇಳುವ ನೊಟೀಸ್ ಸಂಖ್ಯೆ: ಕಂಇ 52 ಮುನೋಸೇ(2) 2017, ದಿನಾಂಕ: 10-01-2018. 6) ಶ್ರೀ ಹೆಚ್.ಎಸ್.ಗಾಂಧಿ, ಉಪ ನೋಂದಣಾಧಿಕಾರಿ, ಚನ್ನಗಿರಿ ಹಾಲಿ ನಿವೃತ್ತ ಇವರ ಲಿಖಿತ ಹೇಳಿಕೆ ದಿನಾಂಕ: 08-02-2018.

7) ಕರ್ನಾಟಕ ಲೋಕಸೇವಾ ಆಯೋಗದ ಪತ್ರ ಸಂಖ್ಯೆ: ಪಿಎಸ್‌ಸಿ 276 ಸಿಎನ್ಎಸ್ 2016, ದಿನಾಂಕ:28-6-2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿ ಮಾನ್ಯ ಉಪ ಲೋಕಾಯುಕ್ತರು-2, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ದಿನಾಂಕ: 28-04-2014ರ ವರದಿಯಲ್ಲಿ, ಶ್ರೀ ಹೆಚ್.ಎಸ್.ಗಾಂಧಿ, ಉಪ ನೋಂದಣಾಧಿಕಾರಿ, ಚನ್ನಗಿರಿ ಇವರ ವಿರುದ್ಧ ಸದರಿಯವರು ಅವರು ಈ ಹಿಂದೆ ಚಿಕ್ಕಮಗಳೂರು, ಉಪ ನೋಂದಣಿ ಕಛೇರಿಯಲ್ಲಿ ಉಪ ನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶ್ರೀ ಇ.ವಿ.ವಿನಯ, ಪೊಲೀಸ್ ಇನ್ಸ್‌ಪೆಕ್ಟರ್, ಕರ್ನಾಟಕ ಲೋಕಾಯುಕ್ತ ಚಿಕ್ಕಮಗಳೂರು ರವರು ದಿನಾಂಕ: 14-12-2012 ರಂದು ಚಿಕ್ಕಮಗಳೂರು ತಾಲ್ಲೂಕಿನ ಉಪ ನೋಂದಣಾಧಿಕಾರಿಗಳ ಕಛೇರಿಯ ಒಳಗೆ ಪಂಚ ಸಾಕ್ಷಿದಾರರು ಮತ್ತು ಸಿಬ್ಬಂದಿಯವರುಗಳು ಹೋಗಿ ಸಾರ್ವಜನಿಕರಂತೆ ಉಪ ನೋಂದಣಾಧಿಕಾರಿಯವರ ಹತ್ತಿರ ನಿಂತಿದ್ದಾಗ ಶ್ರೀಮತಿ ಫರೀದಾ ಖಾತೂನ್ ರವರ ಗಂಡನ ಸ್ನೇಹಿತನಾದ ಅಬ್ದುಲ್ ಖಾದರ್ ರವರು ಶ್ರೀಮತಿ ಫರೀದಾ ಖಾತೂನ್ ರವರ ಖಾಲಿ ನಿವೇಶನವನ್ನು ನೋಂದಣಿ ಮಾಡಿಸಿದ ನಂತರ ಪತ್ರಗಳಿಗೆ ಸಹಿ ಮಾಡಿಕೊಡುವಂತೆ ಕೇಳಿದಾಗ ರೂ. 3,000/- ಲಂಚದ ಹಣವನ್ನು ಒತ್ತಾಯ ಪೂರ್ವಕವಾಗಿ ಪಡೆದುಕೊಳ್ಳುತ್ತಿರುವಾಗ ಸಿಕ್ಕಿಬಿದ್ದಿರುತ್ತಾರೆ. 1ನೇ ಆರೋಪಿಯು ತನ್ನ ಸಂಬಂಧಿಕರಾದ 2ನೇ ಆರೋಪಿಯನ್ನು ಇಲಾಖೆಯ ಯಾವುದೇ ಅಧಿಕೃತ ಆದೇಶವಿಲ್ಲದೆ ಚಿಕ್ಕಮಗಳೂರು ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಕೆಲಸ ಮಾಡಿಸುತ್ತಿದ್ದು, 2ನೇ ಆರೋಪಿಯಿಂದ ನೋಂದಣಿ, ಕ್ಯಾಶ್ ಬಾಕ್ಸ್‌ನಲ್ಲಿ ಒಟ್ಟು ರೂ. 34,175/-ಗಳು ಇದ್ದು, ಅದರಲ್ಲಿ ರೂ. 12,224/-ಗಳು ಕಡಿಮೆ ಇರುತ್ತದೆ. ಸದರಿ ನಗದು ತಾಳೆಯಾಗದೆ ಇರುವ ಬಗ್ಗೆ ಉಪ ನೋಂದಣಾಧಿಕಾರಿಗಳಾದ ಶ್ರೀ ಹೆಚ್.ಎಸ್.ಗಾಂಧಿಯವರಲ್ಲಿ ತನಿಖಾಧಿಕಾರಿಗಳು ಪ್ರಶ್ನಿಸಿದಾಗ ಸಮಂಜಸವಾದ ಉತ್ತರವನ್ನು ನೀಡಿರುವುದಿಲ್ಲ. ಅಕ್ರಮವಾಗಿ ಸಂಗ್ರಹಣೆಯಾದ ಲಂಚದ ಹಣ ಎಂಬುದಾಗಿ ತಿಳಿದು ಬಂದಿರುತ್ತದೆ. 1ನೇ ಆರೋಪಿಯು 4ನೇ ಆರೋಪಿಯನ್ನು ಇಲಾಖೆಯ ಯಾವುದೇ ಅಧಿಕೃತ ಆದೇಶವಿಲ್ಲದೇ ಚಿಕ್ಕಮಗಳೂರು ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಇ.ಸಿ.ಯನ್ನು ಕೊಡುವ ಕರ್ತವ್ಯಕ್ಕೆ ನೇಮಕ ಮಾಡಿಕೊಂಡಿದ್ದು, 4ನೇ ಆರೋಪಿಯು ಇ.ಸಿ. ಕೊಡುವ ನೆಪದಲ್ಲಿ ಕಛೇರಿಗೆ ಬಂದಂತಹ ಸಾರ್ವಜನಿಕರಿಂದ ಅಕ್ರಮವಾಗಿ ಲಂಚವನ್ನು ಪಡೆಯುತ್ತಿರುವುದಾಗಿ ತಿಳಿದು ಬಂದಿದ್ದು, ಸದರಿಯವರ ವಿರುದ್ಧದ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡು ಬರುತ್ತಿರುವುದರಿಂದ ಮಾನ್ಯ ಲೋಕಾಯುಕ್ತರ ಶಿಫಾರಸ್ಸಿನಂತೆ ಆರೋಪಿತರ ವಿರುದ್ಧ ವಿಚಾರಣೆ ನಡೆಸಲುಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೬, ೨೦೧೮ ೭೬೭ ಪ್ರಕರಣವನ್ನು ಕೆ.ಸಿ.ಎಸ್ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ)ರನ್ವಯ ಲೋಕಾಯುಕ್ತರಿಗೆ ವಹಿಸುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ: 12-06-2014ರ ಆದೇಶದಲ್ಲಿ, ಶ್ರೀ ಹೆಚ್.ಎಸ್.ಗಾಂಧಿ, ಉಪ ನೋಂದಣಾಧಿಕಾರಿ, ಚನ್ನಗಿರಿ ಇವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯಾಸತ್ಯತೆಯನ್ನು ತಿಳಿಯಲು ಪ್ರಕರಣವನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ)ರನ್ವಯ ವಿಚಾರಣೆಯನ್ನು ನಡೆಸಲು ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಇವರಿಗೆ ವಹಿಸಿ ಸರ್ಕಾರವು ಆದೇಶಿಸಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ಅಪರ ನಿಬಂಧಕರು, ವಿಚಾರಣೆಗಳು-3, ಮಾನ್ಯ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ:20-11-2017ರಲ್ಲಿ ವಿಚಾರಣಾ ವರದಿಯನ್ನು ಮಾನ್ಯ ಉಪ ಲೋಕಾಯುಕ್ತರಿಗೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಆಪಾದಿತ ನೌಕರರಾದ ಶ್ರೀ ಹೆಚ್.ಎಸ್.ಗಾಂಧಿ, ಉಪ ನೋಂದಣಾಧಿಕಾರಿ, ಚನ್ನಗಿರಿ ಇವರ ವಿರುದ್ಧ ಆರೋಪಿಸಲಾದ ಸರ್ಕಾರದ ಕಾರ್ಯ ನಿರ್ವಹಣೆಗೆ ಲಂಚ ಪಡೆದು ದುರ್ನಡತೆ ಎಸಗಿರುವ ಆರೋಪವು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿಗಳು 1966ರ ನಿಯಮ 3(1)(i) ರಿಂದ (iii)ರಡಿ ಸಾಬೀತಾಗಿರುವುದಾಗಿ, ವರದಿ ಸಲ್ಲಿಸಿದ್ದು, ಸದರಿ ವರದಿಯ ಆಧಾರದ ಮೇಲೆ ಆಪಾಧಿತರಿಗೆ ದಂಡನೆಯಾಗಿ ಸದರಿಯವರು ಹಾಲಿ ನಿವೃತ್ತರಾಗಿರುವುದರಿಂದ, ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214(1)(ಎ) ರನ್ವಯ ಸದರಿಯವರ ನಿವೃತ್ತಿ ವೇತನದಲ್ಲಿ ಶೇ.25% ರಷ್ಟನ್ನು ತಡೆಹಿಡಿಯುವ ದಂಡನೆಯನ್ನು ವಿಧಿಸುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ದಿನಾಂಕ:22/29-11-2017ರಲ್ಲಿ ಮಾನ್ಯ ಉಪ ಲೋಕಾಯುಕ್ತರು ಇವರು ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ದಿನಾಂಕ:10-01-2018ರ ಸರ್ಕಾರದ ಕಾರಣ ಕೇಳುವ ನೋಟೀಸಿನಲ್ಲಿ ಅಪರ ನಿಬಂಧಕರು, ವಿಚಾರಣೆಗಳು-3, ಕರ್ನಾಟಕ ಲೋಕಾಯುಕ್ತ ಇವರ ವರದಿ ಹಾಗೂ ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಇವರ ಶಿಫಾರಸ್ಸು ವರದಿಯ ಹಿನ್ನೆಲೆಯಲ್ಲಿ, ಏಕೆ ಕ್ರಮ ಕೈಗೊಳ್ಳಬಾರದು ಎಂಬುದಾಗಿ ಹೇಳಿಕೆಯನ್ನು ಸಲ್ಲಿಸುವಂತೆ ಶ್ರೀ ಹೆಚ್.ಎಸ್.ಗಾಂಧಿ, ಉಪ ನೋಂದಣಾಧಿಕಾರಿ, ಚನ್ನಗಿರಿ (ಹಾಲಿ ನಿವೃತ್ತ) ಇವರಿಗೆ ಕಾರಣ ಕೇಳುವ ನೊಟೀಸ್‌ನ್ನು ಜಾರಿ ಮಾಡಲಾಗಿದ್ದು, ಸದರಿ ಕಾರಣ ಕೇಳುವ ನೋಟೀಸಿಗೆ ಶ್ರೀ ಹೆಚ್.ಎಸ್.ಗಾಂಧಿ, ಉಪ ನೋಂದಣಾಧಿಕಾರಿ, ಚನ್ನಗಿರಿ (ಹಾಲಿ ನಿವೃತ್ತ) ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ದಿನಾಂಕ:08-02-2018ರಲ್ಲಿ ತಮ್ಮ ಹೇಳಿಕೆಯನ್ನು ಸಲ್ಲಿಸಿದ್ದು, ತಮ್ಮ ಹೇಳಿಕೆಯಲ್ಲಿ, ಮಾನ್ಯ ಲೋಕಾಯುಕ್ತರವರು ನಮ್ಮ ಕಛೇರಿಯ ಮೇಲೆ ದಾಳಿ ನಡೆಸಲು ಸಾರ್ವಜನಿಕರಿಂದ ಯಾವುದೇ ಲಿಖಿತ ಹಾಗೂ ಮೌಖಿಕ ದೂರುಗಳು ಇರುವುದಿಲ್ಲ. ದಾಳಿಯ ಸಂದರ್ಭ ಕಛೇರಿಯಲ್ಲಿ, ಸರ್ಕಾರದ ಹಣ ಹೊರತುಪಡಿಸಿ ಬೇರೆ ಯಾವುದೇ ಹಣ ಇರುವುದಿಲ್ಲ. ಆದರೂ ಸಹ ಮಾನ್ಯ ಲೋಕಾಯುಕ್ತ ರವರು ಚಿಕ್ಕಮಗಳೂರು ಜಿಲ್ಲಾ ನ್ಯಾಯಾಲಯದಲ್ಲಿ ನನ್ನ ವಿರುದ್ಧ ದಾವೆಯನ್ನು ಹೂಡಿರುತ್ತಾರೆ.

ಸದರಿ ದಾವೆಯ ಆಧಾರದ ಮೇಲೆ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಇವರು ನನ್ನನ್ನು ಅಮಾನತ್ತು ಮಾಡಿರುತ್ತಾರೆ ಹಾಗೂ ನನ್ನ ಮನವಿಯ ಮೇರೆಗೆ ಪುನರ್ ನೇಮಕ ಮಾಡಿರುತ್ತಾರೆ. ಜಿಲ್ಲಾ ನ್ಯಾಯಾಲಯ ಚಿಕ್ಕಮಗಳೂರು ನ್ಯಾಯಾಲಯವು ದಾವೆಯ ವಿಚಾರಣೆ ನಡೆಸಿ, ನನ್ನನ್ನು ನಿರ್ದೋಷಿ ಎಂದು ತೀರ್ಪು ನೀಡಿರುತ್ತದೆ ಹಾಗೂ ದಾವೆಗೆ ಅರ್ಹವಲ್ಲದ ಕೇಸನ್ನು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಾದ ಕ್ರಮವಲ್ಲವೆಂದು ಮತ್ತು ದಾಖಲೆಗಳನ್ನು ಹಾಜರುಪಡಿಸಲು ಲೋಕಾಯುಕ್ತ ಇನ್ಸ್‌ಪೆಕ್ಟರ್ ರವರು ವಿಫಲರಾಗಿರುವುದರಿಂದ, ನನ್ನನ್ನು ನಿರಪರಾಧಿ ಎಂದು ತೀರ್ಪು ನೀಡಿರುತ್ತದೆ. ಆದರೆ, ಮಾನ್ಯ ಲೋಕಾಯುಕ್ತರು ದಾಳಿ ನಡೆಸಿದಾಗ ರೂ.9,224/-ಗಳು ಕಡಿಮೆ ಇದೆ ಎಂದು ದೂರಿನಲ್ಲಿ ಪ್ರಸ್ತಾಪಿಸಿರುತ್ತಾರೆ. ಸದರಿ ಹಣವನ್ನು ದಿನಾಂಕ: 29-12-2012ರಂದು ಖಜಾನೆಗೆ ಇರಸಾಲು ಮಾಡಲಾಗಿರುತ್ತದೆ. ನಾನು ಯಾವುದೇ ಅಪರಾಧವನ್ನು ಮಾಡಿರುವುದಿಲ್ಲ ಎಂಬುದಾಗಿ ಹೇಳಿಕೆಯನ್ನು ಸಲ್ಲಿಸಿ, ನಾನು ಯಾವುದೇ ತಪ್ಪು ಮಾಡಿರುವುದಿಲ್ಲವಾದುದರಿಂದ, ಆರೋಪ ಮುಕ್ತಗೊಳಿಸುವಂತೆ ಹಾಗೂ ಪಿಂಚಣಿ ಹಣವನ್ನು ಕಡಿತ ಮಾಡಬಾರದಾಗಿ ಕೋರಿ ಲಿಖಿತ ಹೇಳಿಕೆಯನ್ನು ಸಲ್ಲಿಸಿರುತ್ತಾರೆ.

ಸದರಿ ಆಪಾದಿತ ನೌಕರರ ಸಮಜಾಯಿಷಿಯನ್ನು ಪರಿಶೀಲಿಸಿದ ಸರ್ಕಾರವು ಆಪಾದಿತರು ಸರ್ಕಾರಿ ನೌಕರರಾಗಿ ಸರ್ಕಾರದ ಕೆಲಸದ ನಿರ್ವಹಣೆಯಲ್ಲಿ ಕರ್ತವ್ಯ ನಿಷ್ಟರಾಗಿರದೆ ಮತ್ತು ಪ್ರಮಾಣಿಕತೆ ಹೊಂದದೆ, ದುರ್ನಡತೆ ಎಸಗಿರುವ ಆರೋಪವು ಮಾನ್ಯ ಲೋಕಾಯುಕ್ತ ವಿಚಾರಣೆಯಿಂದ ದೃಡಪಟ್ಟಿರುವ ಹಿನ್ನೆಲೆಯಲ್ಲಿ, ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಇವರ ಶಿಫಾರಸ್ಸನ್ನು ಅಂಗೀಕರಿಸಿ ಹಾಗೂ ಮೇಲೆ ಓದಲಾದ ಕ್ರಮ ಸಂಖ್ಯೆ(7)ರ ದಿನಾಂಕ: 28-06-2017ರಲ್ಲಿನ ಪತ್ರದನ್ವಯ ಕರ್ನಾಟಕ ಲೋಕಸೇವಾ ಆಯೋಗವು ನೀಡಿರುವ ಅಭಿಪ್ರಾಯದಂತೆ ಸರ್ಕಾರದ ಹಂತದಲ್ಲಿ ತೀರ್ಮಾನ ತೆಗೆದುಕೊಂಡು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 52 ಮುನೋಸೇ(2) 2017, ಬೆಂಗಳೂರು, ದಿನಾಂಕ : 09-07-2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ಹೆಚ್.ಎಸ್.ಗಾಂಧಿ, ಉಪ ನೋಂದಣಾಧಿಕಾರಿ, ಚನ್ನಗಿರಿ (ಹಾಲಿ ನಿವೃತ್ತ) ಇವರು ಸರ್ಕಾರಿ ಕೆಲಸ ನಿರ್ವಹಿಸುವ ಸಲುವಾಗಿ ಲಂಚ ಸ್ವೀಕರಿಸಿರುವುದು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಾಮಾವಳಿಗಳು 1966ರ ನಿಯಮ 3(1)(i) ರಿಂದ (iii)ನ್ನು ಉಲ್ಲಂಘಿಸಿ, ದುರ್ನಡತೆ ಎಸಗಿರುವ ಆರೋಪವು ಸಾಬೀತಾಗಿರುವುದರಿಂದ, ಸದರಿಯವರಿಗೆ ದಂಡನೆಯಾಗಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 214(1)(ಎ)ರನ್ವಯ ಸದರಿಯವರ ನಿವೃತ್ತ ಪಿಂಚಣಿಯಲ್ಲಿ ಶೇ.25% ರಷ್ಟನ್ನು ತಡೆಹಿಡಿಯುವ ದಂಡನೆಯನ್ನು ವಿಧಿಸಿ ಆದೇಶಿಸಿದೆ.

PR – 370

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಮುರಳೀಧರ ಎಸ್.ತಳ್ಳಿಕೇರಿ

ಪೀಠಾಧಿಕಾರಿ,

ಕಂದಾಯ ಇಲಾಖೆ,

(ನೋಂದಣಿ ಮತ್ತು ಮುದ್ರಾಂಕ)೭೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೬, ೨೦೧೮ ಭಾಗ ೧

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ವಿಷಯ : ಮಾನ್ಯ ಗಣಿ ಮತ್ತು ಭೂವಿಜ್ಞಾನ ಸಚಿವರು, ಸರ್ಕಾರದ ಕಾರ್ಯದರ್ಶಿಗಳು (ಎಂಎಸ್ಎಂಇ ಮತ್ತು ಗಣಿ) ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಗಣಿ ಶಾಖೆಯ ಇತರೆ ಅಧಿಕಾರಿಗಳಿಗೆ ಅಧಿಕಾರ ಪ್ರತ್ಯಾಯೋಜಿಸುವ ಬಗ್ಗೆ.

ಪ್ರಸ್ತಾವನೆ :

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಗಣಿ ಶಾಖೆಗೆ ಸಂಬಂಧಿಸಿದ ಕಡತ ಮತ್ತು ಪತ್ರಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಮಾನ್ಯ ಗಣಿ ಮತ್ತು ಭೂವಿಜ್ಞಾನ ಸಚಿವರು, ಸರ್ಕಾರದ ಕಾರ್ಯದರ್ಶಿಗಳು (ಎಂಎಸ್ಎಂಇ ಮತ್ತು ಗಣಿ) ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಗಣಿ ಶಾಖೆಯ ಇತರೆ ಅಧಿಕಾರಿಗಳಿಗೆ ಕೆಲವು ಅಧಿಕಾರಗಳನ್ನು ಹಂಚಿಕೆ ಮಾಡುವುದು ಅವಶ್ಯಕವಾಗಿದೆ.

ಆದುದರಿಂದ ಕರ್ನಾಟಕ ಸರ್ಕಾರದ (ವ್ಯವಹಾರಗಳ ಹಂಚಿಕೆ) ನಿಯಮಗಳು, 1977ರ ನಿಯಮ 6(2)ರ ಅನುಸಾರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಗಣಿ ಶಾಖೆಯಲ್ಲಿನ ಗಣಿ ಮತ್ತು ಭೂವಿಜ್ಞಾನ ಪ್ರಸ್ತಾಪ / ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಮಾನ್ಯ ಗಣಿ ಮತ್ತು ಭೂವಿಜ್ಞಾನ ಸಚಿವರು, ಸರ್ಕಾರದ ಕಾರ್ಯದರ್ಶಿಗಳು (ಎಂಎಸ್ಎಂಇ ಮತ್ತು ಗಣಿ) ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಗಣಿ ಶಾಖೆಯ ಇತರೆ ಅಧಿಕಾರಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಲು ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ವಾಕೈ 121 ಎಂಜಿಎಸ್ 2018, ಬೆಂಗಳೂರು, ದಿನಾಂಕ: 26.06.2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ (ವ್ಯವಹಾರಗಳ ಹಂಚಿಕೆ) ನಿಯಮಗಳು, 1977ರ ನಿಯಮ 6(2)ರ ಅನುಸಾರ ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧ – 1, 2, 3 ಮತ್ತು 4 ರನ್ವಯ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಗಣಿ ಶಾಖೆಯಲ್ಲಿನ ಗಣಿ ಮತ್ತು ಭೂವಿಜ್ಞಾನ ಪ್ರಸ್ತಾಪ / ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಮಾನ್ಯ ಗಣಿ ಮತ್ತು ಭೂವಿಜ್ಞಾನ ಸಚಿವರು, ಸರ್ಕಾರದ ಕಾರ್ಯದರ್ಶಿಗಳು (ಎಂಎಸ್ಎಂಇ ಮತ್ತು ಗಣಿ) ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಗಣಿ ಶಾಖೆಯ ಇತರೆ ಅಧಿಕಾರಿಗಳಿಗೆ ಕೆಳಕಂಡಂತೆ ಅಧಿಕಾರವನ್ನು ಪ್ರತ್ಯಾಯೋಜಿಸಿ ಈ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಲಾಗಿದೆ.

1. ಅನುಬಂಧ-1ರಲ್ಲಿ ನಮೂದಿಸಿರುವ ಕಡತಗಳನ್ನು ಮಾನ್ಯ ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ ಸಲ್ಲಿಸುವುದು. 2. ಅನುಬಂಧ-2 ರಿಂದ 4 ರವರೆಗಿನ ಕಡತಗಳನ್ನು ವಿಲೇ ಮಾಡಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು (ಎಂಎಸ್ಎಂಇ ಮತ್ತು ಗಣಿ), ಉಪ ಕಾರ್ಯದರ್ಶಿಗಳು (ಗಣಿ) ಮತ್ತು ಅಧೀನ ಕಾರ್ಯದರ್ಶಿಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿದೆ. ಈ ಅಧಿಕಾರಗಳನ್ನು ನಿಯಮಗಳಂತೆ ಅಗತ್ಯವಿದ್ದಲ್ಲಿ, ಇತರೆ ಇಲಾಖೆಗಳ ಸಮಾಲೋಚನೆ ಅಥವಾ ಅನುಮೋದನೆ ಪಡೆದು ನಿರ್ಧರಿಸುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ರಾಜೇಂದರ್ ಕುಮಾರ್ ಕಟಾರಿಯ ಸರ್ಕಾರದ ಕಾರ್ಯದರ್ಶಿ, (ಎಂಎಸ್ಎಂಇ ಮತ್ತು ಗಣಿ) ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

ಸರ್ಕಾರದ ಆದೇಶ ಸಂಖ್ಯೆ: ವಾಕೈ 121 ಎಂಜಿಎಸ್ 2018, ಬೆಂಗಳೂರು, ದಿನಾಂಕ : 26/06/2018

ಅನುಬಂಧ-1

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಗಣಿ ಮತ್ತು ಭೂವಿಜ್ಞಾನ ಸಚಿವರಿಗೆ ಸಲ್ಲಿಸಬೇಕಾದ ಕಡತಗಳು

1) ಎಂಎಂಡಿಆರ್ ಕಾಯ್ದೆ, 1957: ಮುಖ್ಯ ಖನಿಜಗಳ ಗಣಿ ಗುತ್ತಿಗೆ ಮಂಜೂರಾತಿ, ಡೀಮ್ಡ್ ವಿಸ್ತರಣೆ 2) ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿಗಳು, 1994: 31 ಉಪ ಖನಿಜಗಳು (ನಿರ್ದಿಷ್ಟ ಪಡಿಸಿದ) ಹಾಗೂ ನಿರ್ದಿಷ್ಟ ಪಡಿಸದ (ಕಲ್ಲುಗಣಿ, ಮರಳು, ಎಂ-ಸ್ಯಾಂಡ್) ಗಣಿ ಗುತ್ತಿಗೆ / ಲೈಸೆನ್ಸ್ ಮಂಜೂರಾತಿ, ನವೀಕರಣ, ಇತರೆ ಪ್ರಕರಣಗಳು.

3) KSMCL (MML) / HGML ಗೆ ಸಂಬಂಧಿಸಿದ ಪ್ರಮುಖ ನೀತಿಯ ವಿಷಯಗಳು (Policy Matters). 4) KMERC (ಕರ್ನಾಟಕ ಗಣಿ ಪ್ರಭಾವಿತ ಪರಿಸರ ಪುನಶ್ಚೇತನ ನಿಗಮ)ದ ಕಾರ್ಯನೀತಿಗೆ ಸಂಬಂಧಿಸಿದ ವಿಷಯಗಳು (Policy Matters). 5) DMF and PMKKKY: ಕ್ರಿಯಾ ಯೋಜನೆ, ಸದಸ್ಯರ ನಾಮ ನಿರ್ದೇಶನ ಇತ್ಯಾದಿ. 6) CBI, SIT, CID, ಲೋಕಾಯುಕ್ತ, ಎಸಿಬಿ ಪ್ರಕರಣಗಳಲ್ಲಿ ಕಾರ್ಯನೀತಿಗೆ ಸಂಬಂಧಿಸಿದ ವಿಷಯಗಳು (Policy Matters). 7) ಸಚಿವ ಸಂಪುಟ ವಿಷಯಗಳು. 8) ಕೇಂದ್ರ / ರಾಜ್ಯ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು – NMDC, VISL / SAIL, KIOCL ಗಣಿ ಗುತ್ತಿಗೆ ಮಂಜೂರಾತಿ ಮತ್ತು ನವೀಕರಣ. 9) ರಾಜ್ಯ ವಿಧಾನ ಮಂಡಲದ ಅಧಿವೇಶನ: ಪ್ರಶ್ನೆಗಳು, ಗಮನ ಸೆಳೆಯುವ ಸೂಚನೆಗಳು, ನಿಲುವಳಿಗಳು ಇತ್ಯಾದಿ. 10) ಕಾರ್ಯನೀತಿಯ ಪ್ರಶ್ನೆಯನ್ನು ಒಳಗೊಂಡ ಪ್ರಸ್ತಾಪಗಳು. 11) ಭಾರತ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಸ್ತಾಪಗಳು ಅಥವಾ ರಾಜ್ಯದ ಟೀಕೆ/ಟಿಪ್ಪಣಿ/ಅಭಿಪ್ರಾಯಗಳು 12) ಅಧಿನಿಯಮಗಳು ಮತ್ತು ನಿಯಮಾವಳಿಗಳಿಗೆ ಮತ್ತು ಶಾಸನ ಬದ್ದ ಅಧಿಸೂಚನೆಗಳಿಗೆ ತಿದ್ದುಪಡಿಗಳು. 13) ಸಮಿತಿಗಳು, ಸಲಹಾ ಸಮಿತಿಗಳು ಇತ್ಯಾದಿಗಳ ರಚನೆ. 14) ಮಂಡಳಿ ಮತ್ತು ನಿಗಮಗಳು: ಆಡಳಿತ ಮಂಡಳಿಗಳಿಗೆ ನಿರ್ದೇಶಕರ ನೇಮಕಾತಿ. 15) ಅಖಿಲ ಭಾರತ ಸೇವೆ/ ಕರ್ನಾಟಕ ಆಡಳಿತ ಸೇವೆಯ/ ರಾಜ್ಯ ಸರ್ಕಾರದ ಇತರೆ ಸೇವೆಗಳ (ಎ ಮತ್ತು ಬಿ ಗುಂಪಿನ) ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಮತ್ತು ಪತ್ರಾಂಕಿತ ಹುದ್ದೆಗಳಿಗೆ ಮೊದಲ ನೇಮಕಾತಿಯನ್ನು ಹೊರತುಪಡಿಸಿ ಮರುಸ್ಥಳ ನಿಯುಕ್ತಿಗೊಳಿಸುವುದು (re-posting), ಪದೋನ್ನತಿ, ನಿಯೋಜನೆಗಳು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೬, ೨೦೧೮ ೭೬೯

16) ಗಣಿ ಮತ್ತು ಭೂವಿಜ್ಞಾನ ಇಲಾಖೆಯ (ಗ್ರೂಪ್ ಎ ಮತ್ತು ಬಿ) ಸೇವಾ ವಿಷಯಗಳು - ನೇಮಕಾತಿ, ಪದೋನ್ನತಿ, ಶಿಸ್ತು ಪ್ರಕರಣ, ವರ್ಗಾವಣೆಗಳು. ಇತ್ಯಾದಿ.

17) ಪ್ರಾಮುಖ್ಯವಾದ ವಿಷಯವಾಗಿದ್ದು, ಸಚಿವರ ಆದೇಶಗಳ ಅಗತ್ಯತೆ ಇದೆಯೆಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಕಾರ್ಯದರ್ಶಿಯವರು ಪರಿಗಣಿಸುವ ಇತರೆ ಎಲ್ಲಾ ಪ್ರಸ್ತಾಪಗಳು.

ರಾಜೇಂದರ್ ಕುಮಾರ್ ಕಟಾರಿಯ ಸರ್ಕಾರದ ಕಾರ್ಯದರ್ಶಿ (ಎಂಎಸ್ಎಂಇ ಮತ್ತು ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಸರ್ಕಾರದ ಆದೇಶ ಸಂಖ್ಯೆ: ವಾಕೈ 121 ಎಂಜಿಎಸ್ 2018, ಬೆಂಗಳೂರು, ದಿನಾಂಕ : 26/06/2018

ಅನುಬಂಧ-2

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರು ನಿರ್ಧರಿಸಬಹುದಾದ ಪ್ರಸ್ತಾಪಗಳು

1) ಮಾನ್ಯ ಸರ್ವೋಚ್ಚ ನ್ಯಾಯಾಲಯ / ಉಚ್ಚ ನ್ಯಾಯಾಲಯದಲ್ಲಿನ ರಿಟ್ ಅರ್ಜಿಗಳು, ಎಸ್.ಎಲ್.ಪಿ, ಅಪೀಲುಗಳು, ಐ.ಎ, ಕರ್ನಾಟಕ ಮೇಲ್ಮನವಿ ಪ್ರಾಧಿಕಾರ, ರಾಷ್ಟ್ರೀಯ ಹಸಿರು ಪೀಠ, ನ್ಯಾಯಾಂಗ ನಿಂದನಾ ಅರ್ಜಿಗಳು: ಸರ್ಕಾರಿ ವಕೀಲರನ್ನು ನೇಮಕ ಮಾಡುವುದು, ಅವರ ಬಿಲ್ ಪಾವತಿ.

2) ಪರಿಷ್ಕರಣಾ ಅರ್ಜಿಗಳ ವಿಚಾರಣೆ, ವಿಧಾನ ಮಂಡಲದ ವಿವಿಧ ಸಮಿತಿಗಳಿಗೆ ಉತ್ತರ ಒದಗಿಸುವುದು. 3) State Empowered Committee ಗೆ ಸಂಬಂಧಿಸಿದ ವಿಷಯಗಳು. 4) CEC (Central Empowered Committee) ಗೆ ಸಂಬಂಧಿಸಿದ ವಿಷಯಗಳು. 5) NMET (National Mineral Exploration Trust) ಗೆ ಸಂಬಂಧಿಸಿದ ವಿಷಯಗಳು. 6) ಖನಿಜಾನ್ವೇಷಣೆಗೆ ಸಂಬಂಧಿಸಿದಂತೆ MECL (Mineral Exploration Corporation Ltd) / (GSI) Geological Survey of India/ Other PSU's ವಿಷಯಗಳು.

7) ಕೇಂದ್ರ / ರಾಜ್ಯ ಮಾನವ ಹಕ್ಕುಗಳ ಆಯೋಗದ ಪ್ರಕರಣಗಳು. 8) ಕೇಂದ್ರ / ರಾಜ್ಯ ಮಾಹಿತಿ ಹಕ್ಕುಗಳ ಆಯೋಗದ ಪ್ರಕರಣಗಳು. 9) ರಾಜ್ಯ ಟೆಂಡರ್ ಬುಲೆಟಿನ್: ಇ-ಟೆಂಡರ್ ನೋಟಿಫಿಕೇಷನ್ ಹಾಗೂ 4(ಜಿ) ವಿನಾಯಿತಿ ಪ್ರಕರಣಗಳು. 10) ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ / ನೌಕರರ ಸೇವಾ ವಿಷಯಗಳು – ರಜೆ / ರಜೆ ನಗದೀಕರಣ / ಪ್ರಭಾರ ಭತ್ಯೆ, ವಿದೇಶ ಪ್ರಯಾಣ ಅನುಮತಿ, ವೈದ್ಯಕೀಯ, ಇತರೆ ವಿಷಯಗಳು.

11) ಆಯವ್ಯಯ ಹಂಚಿಕೆ, ಅನುದಾನ ಬಿಡುಗಡೆ 12) ಮಹಾಲೇಖಪಾಲರ ಆಡಿಟ್ ವರದಿ, ಆಕ್ಷೇಪಣೆಗಳು 13) ರಾಜ್ಯ ವಿಧಾನ ಮಂಡಲದ ಮುಂದೆ ಬರುವ ಪ್ರಸ್ತಾಪಗಳು 14) ಭಾರತ ಸರ್ಕಾರ ಮತ್ತು ಇತರೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಸ್ತಾಪಗಳು. 15) ನ್ಯಾಯಾಲಯ ಪ್ರಕರಣಗಳಲ್ಲಿ ಸರ್ಕಾರಿ ವಕೀಲರನ್ನು ನೇಮಿಸಲು ಕಳುಹಿಸಬಹುದಾದ ಪ್ರಸ್ತಾವನೆಗಳು 16) ಸಚಿವ ಸಂಪುಟದ ತೀರ್ಮಾನಗಳನ್ನು ಅನುಷ್ಠಾನಗೊಳಿಸುವುದು. 17) ಗಣಿ ಮತ್ತು ಭೂವಿಜ್ಞಾನ ಇಲಾಖೆಯ (ಗ್ರೂಪ್ ಎ ಮತ್ತು ಬಿ ವೃಂದದ ಅಧಿಕಾರಿಗಳನ್ನು ಹೊರತುಪಡಿಸಿ) ಇತರೆ ನೌಕರರ ಸೇವಾ ವಿಷಯಗಳು - ನೇಮಕಾತಿ, ಪದೋನ್ನತಿ, ವರ್ಗಾವಣೆ, ಶಿಸ್ತು ಪ್ರಕರಣ ಇತ್ಯಾದಿ.

ರಾಜೇಂದರ್ ಕುಮಾರ್ ಕಟಾರಿಯ ಸರ್ಕಾರದ ಕಾರ್ಯದರ್ಶಿ (ಎಂಎಸ್ಎಂಇ ಮತ್ತು ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

ಸರ್ಕಾರದ ಆದೇಶ ಸಂಖ್ಯೆ: ವಾಕೈ 121 ಎಂಜಿಎಸ್ 2018, ಬೆಂಗಳೂರು, ದಿನಾಂಕ: 26/06/2018

ಅನುಬಂಧ-3

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ (ಗಣಿ) ಯವರು ನಿರ್ಧರಿಸಬಹುದಾದ ಪ್ರಸ್ತಾಪಗಳು

1) ಉನ್ನತ ಅಧಿಕಾರಿಗಳು ನೀಡಿದ ಅಂತಿಮ ಆದೇಶಗಳಂತೆ ಸರ್ಕಾರದ ಕರಡು ಅಧಿಸೂಚನೆ/ಆದೇಶ/ ಪತ್ರಗಳನ್ನು ಅನುಮೋದಿಸುವುದು. 2) ಆಯವ್ಯಯದಲ್ಲಿ ಅನುದಾನ ಒದಗಿಸಿದ್ದಲ್ಲಿ, ವೆಚ್ಚ ಮಾಡಲು ಮಂಜೂರಾತಿ ನೀಡಬಹುದಾದ ಸಾಮಾನ್ಯ ಪ್ರಸ್ತಾಪಗಳನ್ನು ಆಂತರಿಕ ಆರ್ಥಿಕ ಸಲಹೆಗಾರರಿಗೆ ಕಳುಹಿಸುವುದು.

3) ಅಭಿಪ್ರಾಯ ವ್ಯಕ್ತಪಡಿಸಿದ ಪ್ರಸ್ತಾಪಗಳಲ್ಲಿ ಇಲಾಖಾ ಮುಖ್ಯಸ್ಥರಿಗೆ ಮತ್ತು ಇತರೆ ಅಧಿಕಾರಿಗಳಿಗೆ ಹೆಚ್ಚುವರಿ ಮಾಹಿತಿಗಾಗಿ ಕೋರುವುದು.

ರಾಜೇಂದರ್ ಕುಮಾರ್ ಕಟಾರಿಯ ಸರ್ಕಾರದ ಕಾರ್ಯದರ್ಶಿ (ಎಂಎಸ್ಎಂಇ ಮತ್ತು ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೭೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೬, ೨೦೧೮ ಭಾಗ ೧

ಸರ್ಕಾರದ ಆದೇಶ ಸಂಖ್ಯೆ : ವಾಕೈ 121 ಎಂಜಿಎಸ್ 2018, ಬೆಂಗಳೂರು, ದಿನಾಂಕ: 26/06/2018

ಅನುಬಂಧ-4

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ (ಗಣಿ) ಯವರು ನಿರ್ಧರಿಸಬಹುದಾದ ಪ್ರಸ್ತಾಪಗಳು

1) ಉನ್ನತ ಅಧಿಕಾರಿಗಳು ನೀಡಿದ ಅಂತಿಮ ಆದೇಶಗಳಂತೆ ಸರ್ಕಾರದ ಆದೇಶಗಳು, ನೆನಪೋಲೆಗಳು ಮತ್ತು ಪತ್ರಗಳನ್ನು ಹೊರಡಿಸುವುದು. 2) ಸಚಿವಾಲಯದ ಹೊರಗಿನ ಇಲಾಖಾ ಮುಖ್ಯಸ್ಥರುಗಳಿಗೆ ಅರೆ ಸರ್ಕಾರಿ ಪತ್ರ/ಸರ್ಕಾರಿ ಪತ್ರ/ಜ್ಞಾಪನಗಳನ್ನು ಹೊರಡಿಸುವುದು ಮತ್ತು ಸಚಿವಾಲಯದ ಇತರೆ ಇಲಾಖೆಗಳಲ್ಲಿನ ಅದೇ ಹುದ್ದೆಗಳಲ್ಲಿರುವವರಿಗೆ ಅನಧಿಕೃತ ಟಿಪ್ಪಣಿ ಹೊರಡಿಸುವುದು.

3) ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಗಳ ಮೇಲೆ ಇಲಾಖಾ ಮುಖ್ಯಸ್ಥರುಗಳಿಂದ/ಅಧಿಕಾರಿಗಳಿಂದ ವರದಿಗಳನ್ನು ಕೋರುವುದು 4) ಕರ್ನಾಟಕ ನಾಗರಿಕ ಸೇವಾ ನಿಯಮಗಳ ನಿಯಮ 198ರಡಿ ರಜಾ ನಗದೀಕರಣ ಮಂಜೂರಾತಿ.

PR-372 ರಾಜೇಂದರ್ ಕುಮಾರ್ ಕಟಾರಿಯ SC-50 ಸರ್ಕಾರದ ಕಾರ್ಯದರ್ಶಿ

(ಎಂಎಸ್ಎಂಇ ಮತ್ತು ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ವಿಷಯ : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಸಂಬಂಧ ಉನ್ನತಾಧಿಕಾರಿಗಳ ಸಮಿತಿ ರಚಿಸುವ ಕುರಿತು.

ಓದಲಾಗಿದೆ :-

ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ದಿನಾಂಕ : 12.03.2018 ಮತ್ತು 13.03.2018 ರಂದು ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡುವ ಕುರಿತಂತೆ ನಡೆದ ಸಭೆಯ ನಡವಳಿಗಳು.

ಪ್ರಸ್ತಾವನೆ :-

2011-12 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯಮಂತ್ರಿಯವರು ಸರ್ಕಾರದ ಇಲಾಖೆಗಳನ್ನು ಪುನರ್ ರಚನೆ ಮಾಡುವ ವ್ಯವಸ್ಥೆ ಸಂಬಂಧ ಸಿದ್ಧವಾಗಿರುವ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಿ, ಸದರಿ ಸಮಿತಿಯ ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿರುತ್ತಾರೆ.

ಮೇಲೆ ಓದಲಾದ ಪತ್ರದಲ್ಲಿ ಸರ್ಕಾರದ ಕಾರ್ಯದರ್ಶಿಗಳು (ಎಂ.ಎಸ್.ಎಂ.ಇ ಮತ್ತು ಗಣಿ) ಇವರು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ತಿದ್ದುಪಡಿ ಮಾಡುವ ಕುರಿತು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು 1993 ರಲ್ಲಿ ರಚಿಸಲಾಗಿದ್ದು, ಇಂದಿನ ದಿನಗಳಿಗೆ ಅನುಗುಣವಾಗಿ ಸೂಕ್ತ ಬದಲಾವಣೆಗಳನ್ನು ತರಬೇಕಾಗಿರುವುದರಿಂದ ತಿದ್ದುಪಡಿ ಪ್ರಸ್ತಾವನೆಯನ್ನು ಸಲ್ಲಿಸಲು ಉಪ ಸಮಿತಿಯನ್ನು ರಚಿಸುವುದು ಅತ್ಯವಶ್ಯವಾಗಿದೆ ಎಂದು ತಿಳಿಸಿರುತ್ತಾರೆ.

ಮೇಲ್ಕಂಡ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಸರ್ಕಾರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿ ಬರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಸಂಬಂಧ ಪ್ರಸ್ತಾವನೆಯನ್ನು ಸಲ್ಲಿಸಲು ಹಾಗೂ ಸಲಹೆ ಸೂಚನೆಗಳನ್ನು ನೀಡಲು ಆಯುಕ್ತರು/ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಉಪ ಸಮಿತಿ ಒಂದನ್ನು ರಚಿಸಲು ತೀರ್ಮಾನಿಸಿದೆ. ಆದ್ದರಿಂದ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಿಐ 49 ಎಂಜಿಎಸ್ 2018, ಬೆಂಗಳೂರು, ದಿನಾಂಕ: 05-06-2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿ ಬರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡುವ ಸಂಬಂಧ ಉನ್ನತಾಧಿಕಾರಿಗಳ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ಪ್ರಸ್ತಾವನೆ ಸಲ್ಲಿಸಲು ಹಾಗೂ ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಲು ಅನುವಾಗುವಂತೆ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ಉಪ ಸಮಿತಿಯೊಂದನ್ನು ರಚಿಸಲಾಗಿದೆ.

1 ನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು ಅಧ್ಯಕ್ಷರು
2 ಜಂಟಿ ಆಯುಕ್ತರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು ಸದಸ್ಯರು
3 ಸರ್ಕಾರದ ಉಪ ಕಾರ್ಯದರ್ಶಿ (ಗಣಿ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ಬೆಂಗಳೂರು ಸದಸ್ಯರು
4 ಉಪ ನಿರ್ದೇಶಕರು/ಹಿರಿಯ ಭೂವಿಜ್ಞಾನಿ ವೃಂದದ ಅಧಿಕಾರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು (ನಿರ್ದೇಶಕರಿಂದ ಅನುಮೋದಿಸಲ್ಪಟ್ಟ) ಸದಸ್ಯರು
5 ಉಪ ನಿರ್ದೇಶಕರು (ಆಡಳಿತ), ಗಣಿ ಮತ್ತು ಭೂವಿಜ್ಞಾನ ಇಲಾಖೆ, ಬೆಂಗಳೂರು ಸದಸ್ಯ ಕಾರ್ಯದರ್ಶಿ

PR-373

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಹೆಚ್.ಕೆ. ಸುರೇಶ್ ಬಾಬು

ಸರ್ಕಾರದ ಅಧೀನ ಕಾರ್ಯದರ್ಶಿ (ಗಣಿ-2)

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 06 September 2018. Indian Gazettes, https://egazette.servantsofknowledge.in/details/in.gazette.karnataka_new.2018-09-06.Part-1/. Archive identifier in.gazette.karnataka_new.2018-09-06.Part-1.