ಬೆಂಗಳೂ
Beng
ೂರು, ಗುರುವಾ
galuru, Thurs
ರ, ಅಕ್ಟೋಬರ್
day, October
್ ೧೧, ೨೦೧೮
r 11, 2018 (Aa
೮ (ಆಶ್ವಯುಜ
ashwayuja 19
೧೯, ಶಕ ವಷ
9, Shaka Vars
ರ್ಷ ೧೯೪೦)
sha 1940)
೫೩
ಸಂಪುಟ ೧೫
3
Volume 153
ಸಂಚಿಕೆ ೪೧
Issue 41
ಭಾಗ ೧
ರಾಜ್ಯ
ಸರ್ಕಾರದ
ುಂತಾದ
ಎಲ್ಲಾ ಇ
ಮುಖ್ಯ ಆದ
ಇಲಾಖೆಗಳಿಗ
ದೇಶಗಳು ಹ
ಗೂ ಸಂಬಂ
ಹಾಗೂ ಸುತ
ಂಧಿಸಿದ ಆದ
ತ್ತೋಲೆ ಮು
ದೇಶಗಳು
ಕಂದ ದಾಯ ಸಚಿವಾಲ ಲಯ
ಸೇರ್ಪಡೆ ಆದೇಶ
ಶ
ಸಂಖ್ಯೆ : ಆರ್ಡಿ
ಡಿ 31 ಎಲ್ಜಿಸಿ
2018, ಬೆಂಗಳೂ
ೂರು, ದಿನಾಂಕ :
12-09-2018
ಮೆ. ವಿಶ್ ವಿಂಡ್ ಕಂ ಂಪನಿ, ಬೆಂಗಳೂರ ರು, ಇವರಿಗೆ ದಾವ
8.
ವಣಗೆರೆ ಜಿಲ್ಲೆ, ಜ
ಪವನ್ ವಿದ್ಯುತ್
್ ಯೋಜನೆಗಾಗಿ ಒಟ್ಟು 67-00 ಎಕರೆ ಜಮೀನ ಗಳೂರು ತಾಲ್ಲೂಕಿ ಕಿನ ಕೆಲವು ಗ್ರಾಮ ುಗಳ ವಿವಿಧ ಸವೆ
ರ್ವೆ ನಂಬರ್ಗಳಲ್ಲಿ
ಲ್ಲಿ
ನನ್ನು ಮಂಜೂರು
ು ಮಾಡಿ ಹೊರ ಡಿಸಿರುವ ಸರ್ಕಾರ ರದ ಆದೇಶ ಸಂ
ಂಖ್ಯೆ: ಆರ್ಡಿ 48
8
| ಕ .ಸಂ ್ರ | ಜಿಲ್ಲೆ ಮತ್ತು ತಾಲ ಲ್ಲೂಕು | ಗ್ರಾಮದ ಹೆಸರು | ಆರ್.ಟಿ ಟಿ.ಸಿ ಯಂತೆ ದಾಖಲಾ ಾದ ಜಮೀನಿನ ವಿವರ | ಸರ್ವೆ ನ ಂಬರ್ | ವ ುಂಜೂರು ು ಮಾಡಿರುವ ವಿಸ್ತಿ ಸ್ತೀರ್ಣ ಎಕರೆ-ಸೆ ಸೆಂಟ್ಸ್ ನಲ್ಲಿ |
| 1 | ದಾವಣಗೆರೆ ಜಿಲ್ಲೆ, ಜ ದಾ ಜಗಳೂರು ತಾಲ್ಲೂಕು ು | ಹನುಮಂತಾಪುರ | ಖರಾಬ್ ್ ಗೋಮಾಳ | 37 | 9 .40 |
| 2 | ರಂಗಾಪುರ | ಖರಾಬ್ ್ ಗೋಮಾಳ | 36/ಪಿ/1/ಪಿ2 | .97 | |
| 3 | ರಂಗಾಪುರ | ಖರಾಬ್ ್ ಗೋಮಾಳ | 47/1 | 3 1 -37 - | |
| 4 | ತಮಲೀಹಳ್ಳಿ | ಹುಲ್ಲುಬ ಬನ್ನಿ ಖರಾಬ್ | .37 | ||
| 5 | ತಮಲೀಹಳ್ಳಿ | ಹುಲ್ಲುಬ ಬನ್ನಿ ಖರಾಬ್ | 7 9 | 0 1 .05 . | |
| 6 | ತಮಲೀಹಳ್ಳಿ | ಹುಲ್ಲುಬ ಬನ್ನಿ ಖರಾಬ್ | 10 | .40 | |
| 7 | ಹೊಸಕೆರೆ | ಲಿಲಾವ ವ ು ಖರಾಬ್ | 51 | .07 4 0 6 | |
| 8 | ಹೊಸಕೆರೆ | ಹುಲ್ಲುಬ ಬನ್ನಿ ಖರಾಬ್ | 52 | .00 | |
| 9 | ಹೊಸಕೆರೆ | ಲಿಲಾವ ವ ು ಖರಾಬ್ | 63/ಪಿ/1/ಪಿ2 | .91 | |
| 10 | ಕೆಚ್ಚನಹಳ್ಳಿ | ಲಿಲಾವ ವ ು ಖರಾಬ್ | 19 | .34 | |
| 11 | ಕೆಚ್ಚನಹಳ್ಳಿ | ಲಿಲಾವ ವ ು ಖರಾಬ್ | 20/1/ಪಿ1 | 0.13 | |
| 12 | ಮೆರಿಕಟ್ಟೆ | ಹುಲ್ಲುಬ ಬನ್ನಿ ಖರಾಬ್ | 28/1/ಪಿ1 | 7.21 1 7 0 7 2 2 | |
| 13 | ಗೌಡಗೊಂಡನಹಳ್ಳಿ ಳ್ಳಿ | ಹುಲ್ಲುಬ ಬನ್ನಿ ಖರಾಬ್ | 54 | .00 | |
| 14 | ಗ ಗ ಗೌಡಗೊಂಡನಹಳ್ಳಿ ಳ್ಳಿ | ಹುಲ್ಲುಬ ಬನ್ನಿ ಖರಾಬ್ | 55 | .38 |
(೮೬೫)೮೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ಭಾಗ ೧
| ಕ ್ರ .ಸಂ | ಜಿಲ್ಲೆ ಮತ್ತು ತಾಲ್ಲೂಕು | ಗ್ರಾಮದ ಹೆಸರು | ಆರ್.ಟಿ.ಸಿ ಯಂತೆ ದಾಖಲಾದ ಜಮೀನಿನ ವಿವರ | ಸರ್ವೆ ನ ಂಬರ್ | ವ ುಂಜೂರು ಮಾಡಿರುವ ವಿಸ್ತೀರ್ಣ ಎಕರೆ-ಸೆಂಟ್ಸ್ ನಲ್ಲಿ |
| 15 | ವೀರವ್ವನಾಗ್ತಿ ಹಳ್ಳಿ | ಶ ೆ ೕಂದಿವನ | 26 | 8.20 | |
| 16 | ವೀರವ್ವನಾಗ್ತಿ ಹಳ್ಳಿ | ಶ ೆ ೕಂದಿವನ | 27 | 11.20 | |
| ಒಟ್ಟು | 67-00 |
ಉಳಿದಂತೆ ಸದರಿ ಆದೇಶದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.
PR - 435
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25
ಎಂ.ಇ. ಚನ್ನಬಸವರಾಜ
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ. (ಭೂ.ಮಂಜೂರಾತಿ-3)
ಶಿಕ್ಷಣ ಸಚಿವಾಲಯ
ಸೇರ್ಪಡೆ ಆದೇಶ
ಸಂಖ್ಯೆ : ಇಡಿ 173 ಟಿಇಸಿ 2018, ಬೆಂಗಳೂರು, ದಿನಾಂಕ : 17-09-2018.
ಸರ್ಕಾರದ ಆದೇಶ ಸಂಖ್ಯೆ : ಇಡಿ 158 ಟಿಇಸಿ 2018, ದಿನಾಂಕ : 29-06-2018ರ ಆದೇಶದಲ್ಲಿ 2018-19ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿಗಳಾದ ಎಂ.ಬಿ.ಎ / ಎಂ.ಸಿ.ಎ/ಎಂ.ಇ/ಎಂ.ಟೆಕ್ ಕೋರ್ಸುಗಳಿಗೆ ಸೀಟು ಹಂಚಿಕೆ, ಶುಲ್ಕ ನಿಗಧಿ ಮತ್ತು ಪ್ರವೇಶ ಪರೀಕ್ಷೆ ಪ್ರಕ್ರಿಯೆ ಕೈಗೊಳ್ಳುವ ಕುರಿತು ಹೊರಡಿಸಿರುವ ಆದೇಶ ಭಾಗದ 'ಇತರೆ ಸಾಮಾನ್ಯ ವಿಷಯಗಳು' ವಿಭಾಗದ ಕ್ರಮಸಂಖ್ಯೆ 5 ರಲ್ಲಿ ATMA (AIMS Test for Management Admissions) ಅರ್ಹತಾ ಪರೀಕ್ಷೆಯನ್ನು ಸಹ ಪರಿಗಣಿಸಲು ಸೇರ್ಪಡೆಗೊಳಿಸಿ ಆದೇಶಿಸಿದೆ.
PR - 436
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 200
ಎಸ್. ವೆಂಕಟೇಶ್
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ)
HIGHER EDUCATION SECRETARIAT
Subject : Designating Executive Director, Karnataka Examination Authority as Non Treasury Pay and Accounts Officer (PAO) and DDO for effecting NPS Deductions.
Read : 1) Government Order No: FD(Spl) 04PET2012. Dated : 31.03.2006
2) Government Order No : FD (Spl) 219 PEN 2012, Dated : 30.01.2014
3) Letter No : ED/KEA/Accounts/CR-01/18-19, Dated : 26-05-2018 of the Executive Director, KEA, Bengaluru.
PREAMBLE :
In the Government Order read at Sl.No. (1) above the Finance Department has ordered to introduce NPS for the Government Employees appointed on or after 01.04.2006.
In the Government Order read at Sl.No. (2) above Finance Department has directed to initiate NPS with respect to Government servants working on deputations various Boards/ Corporations/Societies/Aided Institution/Universities/State Autonomous bodies coming under various department of State Government.
In the letter read at Sl.No.(3) above the Executive Director, Karnataka Examination Authority has requested to Nominate the Executive Director as Non Treasury Pay and Accounts Officer (PAO) and DDO and communicate to NPS Cell, Directorate of Treasury for allotment of Non Treasury Pay and Accounts Officer (PAO) and DDO Code.
After examining the proposal of the Executive Director, Karnataka Examination Authority, The Government has decided to designate Non Treasury Pay and Accounts Officer (PAO) and DDO for Karnataka Examination Authority constituted under the Co-operative Society ACT in the State . Hence the following Order.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ೮೬೭ GOVERNMENT ORDER NO: ED 189 TEC 2018 BENGALURU, DATED : 15TH SEPTEMBER 2018As Explained in the preamble the Executive Director, Karnataka Examination Authority, Bengaluru has been designated as Non Treasury Pay and Accounts Officer (PAO) and DDO to enable deduction for the State Government employees who have joined service on or after 01.04.2006 and are on deputation to the Karnataka Examination Authority.
PR – 437
BY ORDER AND IN THE NAME OF GOVERNOR OF KARNATAKA
S. VENKATESH
SC - 100
UNDER SECRETARY TO GOVERNMENT,
HIGHER EDUCATION DEPARTMENT
(TECHNICAL)
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ವಿಷಯ : ವಿಜ್ಞಾನ ಮತ್ತು ಇಂಜಿನಿಯರಿಂಗ್ನ ಪಿ.ಹೆಚ್.ಡಿ. ಸಂಶೋಧಕರಿಗೆ ಡಿ.ಎಸ್.ಟಿ. ಶಿಷ್ಯವೇತನವನ್ನು ಒದಗಿಸುವ ಬಗ್ಗೆ.
ಓದಲಾಗಿದೆ : 1) 2018-19ನೇ ಸಾಲಿನ ಆಯವ್ಯಯ ಭಾಷಣದ ಖಂಡಿಕೆ-376.
2) ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ:ಯೋಇ/05/ಜಶಉ/2018 ದಿ.23.03.2018.
3) ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 134 ವೆಚ್ಚ-2/2018 ದಿ.07.08.2018.
4) ಸರ್ಕಾರಿ ಆದೇಶ ಸಂಖ್ಯೆ. ವಿಯಇ 94 ವಿತ್ರಮ 2018, ದಿನಾಂಕ 10.04.2018.
ಪ್ರಸ್ತಾವನೆ :
`. ಒದಗಿಸಲಾಗುವುದು' ಎಂದು ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಿಂದ ಘೋಷಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2) ಮತ್ತು (3)ರ ಟಿಪ್ಪಣಿಗಳಲ್ಲಿ ಯೋಜನಾ ಮತ್ತು ಆರ್ಥಿಕ ಇಲಾಖೆಗಳು ವಿಜ್ಞಾನ ಮತ್ತು ಇಂಜಿನಿಯರಿಂಗ್ನ ಪಿ.ಹೆಚ್.ಡಿ. ಸಂಶೋಧಕರಿಗೆ ಡಿ.ಎಸ್.ಟಿ. ಶಿಷ್ಯವೇತನವನ್ನು ಒದಗಿಸುವ ಸಲುವಾಗಿ `.1.00 ಕೋಟಿಗಳನ್ನು ಪ್ರಸಕ್ತ ಸಾಲಿನ ಲೆಕ್ಕಶೀರ್ಷಿಕೆ 3425-60-200- 0-16(059) ರಡಿ ಒದಗಿಸಿರುವ ಅನುದಾನದಿಂದ ಭರಿಸುವಂತೆ ಸೂಚಿಸಿ ಸಹಮತಿ ನೀಡಿರುತ್ತವೆ.
ಮೇಲೆ ಓದಲಾದ ಕ್ರಮಸಂಖ್ಯೆ (4)ರ ಆದೇಶದಲ್ಲಿ 2018-19ನೇ ಸಾಲಿನ ಆಯವ್ಯಯದ ಲೆಕ್ಕಶೀರ್ಷಿಕೆ 3425-60-200-0-16(059) ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳ ಇತರೆ ಖರ್ಚುಗಳಡಿಯಲ್ಲಿ `.2800.00 ಲಕ್ಷಗಳನ್ನು ಒದಗಿಸಲಾಗಿದ್ದು, ಈ ಮೊತ್ತದಲ್ಲಿ ಸದರಿ ಯೋಜನೆಯ ಅನುಷ್ಠಾನಕ್ಕಾಗಿ ಒಟ್ಟು `.100.00 ಲಕ್ಷಗಳನ್ನು ಕಾಯ್ದಿರಿಸಿ ಸದರಿ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ನಿರ್ಧರಿಸಿ, ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ವಿಯಇ 74 ವಿತ್ರಮ 2018, ಬೆಂಗಳೂರು ದಿನಾಂಕ: 18-08-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ವಿಜ್ಞಾನ ಮತ್ತು ಇಂಜಿನಿಯರಿಂಗ್ನ ಪಿ.ಹೆಚ್.ಡಿ. ಸಂಶೋಧಕರಿಗೆ ಡಿ.ಎಸ್.ಟಿ.
ಶಿಷ್ಯವೇತನಕ್ಕಾಗಿ `.1.00 ಕೋಟಿಗಳ ಅನುದಾನವನ್ನು 2018-19ನೇ ಸಾಲಿನ ಆಯವ್ಯಯದ ಲೆಕ್ಕಶೀರ್ಷಿಕೆ 3425-60-200-0-16(059) ವಿಜ್ಞಾನ ಮತ್ತು ತಂತ್ರಜ್ಞಾನ ಯೋಜನೆಗಳ ಇತರೆ ಖರ್ಚುಗಳಡಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ.ಆಇ 134 ವೆಚ್ಚ-2/2018, ದಿನಾಂಕ: 07-08-2018 ಹಾಗೂ ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ:ಯೋಇ/05/ಜಶಉ/2018, ದಿನಾಂಕ: 23-03-2018ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಿದೆ.
PR – 412
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25
ಎಸ್.ನಾಗರಾಜಪ್ಪ
ಸರ್ಕಾರದ ಉಪ ಕಾರ್ಯದರ್ಶಿ,
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ,
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,
(ವಿಜ್ಞಾನ ಮತ್ತು ತಂತ್ರಜ್ಞಾನ)
ಸಂಸದೀಯ ವ್ಯವಹಾರಗಳ ಸಚಿವಾಲಯ
ವಿಷಯ : ಕರ್ನಾಟಕ ಸರ್ಕಾರ ಸಚಿವಾಲಯದ ಸಂಸದೀಯ ವ್ಯವಹಾರಗಳ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿ ಬರುವ ಭಾಷಾಂತರ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಮುಖ್ಯ ಜಾಗೃತ ಅಧಿಕಾರಿ (Chief Vigilance Officer) ಯನ್ನು ನೇಮಿಸುವ ಬಗ್ಗೆ.
೮೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ಭಾಗ ೧ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 14 ಸೇಲೋಯು 2016, ದಿನಾಂಕ: 14.03.2016 2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 88 ಸೇಲೋಯು 2016, ದಿನಾಂಕ: 22.06.2016 3. ಸರ್ಕಾರದ ಆದೇಶ ಸಂಖ್ಯೆ: ಸಂವ್ಯಶಾಇ 116 ಆಡಳಿತ 2016 (2), ದಿನಾಂಕ: 12.07.2016 4. ನಿರ್ದೇಶಕರು, ಭಾಷಾಂತರ ನಿರ್ದೇಶನಾಲಯ ಇವರ ಪತ್ರ ಸಂಖ್ಯೆ: ಭಾನಿ 52 ಆಡಳಿತ/ಮುಜಾಅ/ನೇಮಕ/20 ದಿ: ದಿ: 11.06.2018
ಪ್ರಸ್ತಾವನೆ :
ಮೇಲೆ ಕ್ರಮ ಸಂಖ್ಯೆ: (1) ರಲ್ಲಿ ಓದಲಾದ ದಿನಾಂಕ: 14.03.2016ರ ಆದೇಶದನ್ವಯ, ರಾಜ್ಯದಲ್ಲಿ ಭ್ರಷ್ಟಾಚಾರ ತಡೆ ಅಧಿನಿಯಮ, 1988ನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಸ್ವತಂತ್ರವಾಗಿ ತನಿಖೆ ನಡೆಸಲು ಒಂದು ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳವನ್ನು (Anti Corruption Bureau) ಸೃಜಿಸಲಾಗಿದೆ.
ಮೇಲೆ ಕ್ರಮ ಸಂಖ್ಯೆ: (2) ರಲ್ಲಿ ಓದಲಾದ ದಿನಾಂಕ: 22.06.2016 ಆದೇಶದಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ಸೃಜಿಸಿ ಹೊರಡಿಸಿರುವ ದಿನಾಂಕ: 14.03.2016ರ ಸರ್ಕಾರದ ಆದೇಶದಲ್ಲಿನ ಆದೇಶ ಭಾಗದ ಕಂಡಿಕೆ 7ರನ್ವಯ ಸರ್ಕಾರದ ಪ್ರತಿಯೊಂದೂ ಇಲಾಖೆ ಮತ್ತು ಇಂಜಿನಿಯರಿಂಗ್ ಇಲಾಖೆಯನ್ನೊಳಗೊಂಡಂತೆ ನಿರ್ದೇಶನಾಲಯ/ಆಯುಕ್ತಾಲಯ, ಕ್ಷೇತ್ರ ಇಲಾಖೆ, ಸಾರ್ವಜನಿಕ ಉದ್ದಿಮೆಗಳು, ಸರ್ಕಾರದಿಂದ ಸ್ಥಾಪಿತವಾದ ನಿಗಮ/ ಮಂಡಳಿಗಳು ಮತ್ತು ವಿಧಾನ ಮಂಡಲದ ಅಧಿನಿಯಮದಡಿ ಸ್ಥಾಪಿತವಾಗಿರುವ ಸ್ಥಳಿಯ ಸಂಸ್ಥೆಗಳು ಹಾಗೂ ಎಲ್ಲಾ ಶಾಸನಬದ್ಧ ಸಂಸ್ಥೆಗಳಲ್ಲಿ ಜಾಗೃತ ಕೋಶಗಳನ್ನು ಚಾಲನೆಗೊಳಿಸುವ ನಿಟ್ಟಿನಲ್ಲಿ ಕಾರ್ಯವಿಧಾನ/ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ.
ದಿನಾಂಕ: 22.06.2016ರ ಆದೇಶದ ಆದೇಶ ಭಾಗದ ಕಂಡಿಕೆ 1(2) ರಲ್ಲಿ ಸರ್ಕಾರದ ಪ್ರತಿಯೊಂದು ಕ್ಷೇತ್ರ ಇಲಾಖೆ ಮತ್ತು ಇಂಜಿನಿಯರಿಂಗ್ ಇಲಾಖೆಯನ್ನೊಳಗೊಂಡಂತೆ ನಿರ್ದೇಶನಾಲಯ/ಆಯುಕ್ತಾಲಯ, ಸಾರ್ವಜನಿಕ ಉದ್ಧಿಮೆಗಳು, ಸರ್ಕಾರದಿಂದ ಸ್ಥಾಪಿತವಾದ ನಿಗಮ/ಮಂಡಳಿಗಳು ಮತ್ತು ವಿಧಾನಮಂಡಲದ ಅಧಿನಿಯಮದಡಿ ಸ್ಥಾಪಿತವಾಗಿರುವ ಸ್ಥಳೀಯ ಸಂಸ್ಥೆಗಳು ಹಾಗೂ ಎಲ್ಲಾ ಶಾಸನಬದ್ಧ ಸಂಸ್ಥೆಗಳ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಒಂದು ಜಾಗೃತ ಕೋಶ ಇರತಕ್ಕದ್ದೆಂದು ಹಾಗೂ ಆಯಾ ಇಲಾಖೆ/ಸಂಸ್ಥೆಗಳ ಮುಖ್ಯಸ್ಥರ ನಂತರದ ಅಧಿಕಾರಿಯನ್ನು (Office next in seniority) ಸದರಿ ಜಾಗೃತ ಕೋಶದ ಮುಖ್ಯ ಜಾಗೃತ ಅಧಿಕಾರಿ (Chief Vigilance Officer) ರವರನ್ನು ನೇಮಿಸಲು ಆದೇಶಿಸಲಾಗಿರುತ್ತದೆ.
ಮೇಲೆ ಕ್ರಮ ಸಂಖ್ಯೆ: (3) ರಲ್ಲಿ ಓದಲಾದ ದಿನಾಂಕ: 12.07.2016ರ ಆದೇಶದಲ್ಲಿ ಭಾಷಾಂತರ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ, ಶ್ರೀ ಎಂ.
ನಾರಾಯಣಸ್ವಾಮಿ, ಸಹಾಯಕ ನಿರ್ದೇಶಕರು ಇವರನ್ನು ಮುಖ್ಯ ಜಾಗೃತ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ಮೇಲೆ ಕ್ರಮ ಸಂಖ್ಯೆ: (4) ರಲ್ಲಿ ಓದಲಾದ ಪತ್ರದಲ್ಲಿ ಭಾಷಾಂತರ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಶ್ರೀ ಎಂ. ನಾರಾಯಣ ಸ್ವಾಮಿ, ಸಹಾಯಕ ನಿರ್ದೇಶಕರು ಇವರನ್ನು ಮುಖ್ಯ ಜಾಗೃತ ಅಧಿಕಾರಿಯನ್ನಾಗಿ ನೇಮಿಸಿರುವುದನ್ನು ರದ್ದುಗೊಳಿಸಿ, ಅವರ ಸ್ಥಾನಕ್ಕೆ ಶ್ರೀ ಭಕ್ತರಾಜ್ ಪಾಟೀಲ್, ಉಪ ನಿರ್ದೇಶಕರು ಇವರನ್ನು ಭಾಷಾಂತರ ನಿರ್ದೇಶನಾಲಯದ ಮುಖ್ಯ ಜಾಗೃತ ಅಧಿಕಾರಿಯನ್ನು ನೇಮಿಸುವಂತೆ ನಿರ್ದೇಶಕರು, ಭಾಷಾಂತರ ನಿರ್ದೇಶನಾಲಯ ಇವರು ಕೋರಿರುತ್ತಾರೆ.
ಆದ್ದರಿಂದ, ಈ ಆದೇಶ.
ಸರ್ಕಾರಿ ಆದೇಶ ಸಂಖ್ಯೆ: ಸಂವ್ಯಶಾಇ 62 ಆಡಳಿತ 2017, ಬೆಂಗಳೂರು, ದಿನಾಂಕ: 04.07.2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಂಸದೀಯ ವ್ಯವಹಾರಗಳ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿ ಬರುವ ಭಾಷಾಂತರ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಶ್ರೀ ಭಕ್ತರಾಜಪಾಟೀಲ್, ಉಪನಿರ್ದೇಶಕರು ಇವರನ್ನು ಮುಖ್ಯ ಜಾಗೃತ ಅಧಿಕಾರಿ (Chief Vigilance Officer) ಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.
PR – 413
ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ಮತ್ತು ಅವರ ಹೆಸರಿನಲ್ಲಿ,
ಜಿ. ಶ್ರೀಧರ್
ಸರ್ಕಾರದ ಕಾರ್ಯದರ್ಶಿ (ಪ್ರ),
ಸಂಸದೀಯ ವ್ಯವಹಾರಗಳ ಇಲಾಖೆ.
ಸಂಸದೀಯ ವ್ಯವಹಾರಗಳ ಸಚಿವಾಲಯ
ವಿಷಯ : ಕರ್ನಾಟಕ ಸರ್ಕಾರ ಸಚಿವಾಲಯದ ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿ ಮುಖ್ಯ ಜಾಗೃತ ಅಧಿಕಾರಿ (Chief Vigilance Officer) ಯನ್ನು ನೇಮಿಸುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 14 ಸೇಲೋಯು 2016, ದಿನಾಂಕ: 14.03.2016 2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 88 ಸೇಲೋಯು 2016, ದಿನಾಂಕ: 22.06.2016 3. ಸರ್ಕಾರದ ಆದೇಶ ಸಂಖ್ಯೆ: ಸಂವ್ಯಶಾಇ 116 ಆಡಳಿತ 2016, ದಿನಾಂಕ: 03.11.2016 4. ಕಾರ್ಯದರ್ಶಿಯವರ ಟಿಪ್ಪಣಿ ದಿನಾಂಕ : 02.07.2018
ಪ್ರಸ್ತಾವನೆ :
ಮೇಲೆ ಕ್ರಮ ಸಂಖ್ಯೆ: (1) ರಲ್ಲಿ ಓದಲಾದ ದಿನಾಂಕ: 14.03.2016ರ ಆದೇಶದನ್ವಯ, ರಾಜ್ಯದಲ್ಲಿ ಭ್ರಷ್ಟಾಚಾರ ತಡೆ ಅಧಿನಿಯಮ, 1988ನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಹಾಗೂ ಸ್ವತಂತ್ರವಾಗಿ ತನಿಖೆ ನಡೆಸಲು ಒಂದು ಪ್ರತ್ಯೇಕ ಭ್ರಷ್ಟಾಚಾರ ನಿಗ್ರಹ ದಳವನ್ನು (Anti Corruption Bureau) ಸೃಜಿಸಲಾಗಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ೮೬೯ಮೇಲೆ ಕ್ರಮ ಸಂಖ್ಯೆ: (2) ರಲ್ಲಿ ಓದಲಾದ ದಿನಾಂಕ: 22.06.2016 ಆದೇಶದಲ್ಲಿ ಭ್ರಷ್ಟಾಚಾರ ನಿಗ್ರಹ ದಳವನ್ನು ಸೃಜಿಸಿ ಹೊರಡಿಸಿರುವ ದಿನಾಂಕ: 14.03.2016ರ ಸರ್ಕಾರದ ಆದೇಶದಲ್ಲಿನ ಆದೇಶ ಭಾಗದ ಕಂಡಿಕೆ 7 ರನ್ವಯ ಸರ್ಕಾರದ ಪ್ರತಿಯೊಂದು ಇಲಾಖೆ ಮತ್ತು ಇಂಜಿನಿಯರಿಂಗ್ ಇಲಾಖೆಯನ್ನೊಳಗೊಂಡಂತೆ ನಿರ್ದೇಶನಾಲಯ/ಆಯುಕ್ತಾಲಯ, ಕ್ಷೇತ್ರ ಇಲಾಖೆ, ಸಾರ್ವಜನಿಕ ಉದ್ದಿಮೆಗಳು, ಸರ್ಕಾರದಿಂದ ಸ್ಥಾಪಿತವಾದ ನಿಗಮ/ ಮಂಡಳಿಗಳು ಮತ್ತು ವಿಧಾನ ಮಂಡಲದ ಅಧಿನಿಯಮದಡಿ ಸ್ಥಾಪಿತವಾಗಿರುವ ಸ್ಥಳಿಯ ಸಂಸ್ಥೆಗಳು ಹಾಗೂ ಎಲ್ಲಾ ಶಾಸನಬದ್ಧ ಸಂಸ್ಥೆಗಳಲ್ಲಿ ಜಾಗೃತ ಕೋಶಗಳನ್ನು ಚಾಲನೆಗೊಳಿಸುವ ನಿಟ್ಟಿನಲ್ಲಿ ಕಾರ್ಯವಿಧಾನ/ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ.
ದಿನಾಂಕ: 22.06.2016ರ ಸರ್ಕಾರಿ ಆದೇಶದ ಆದೇಶ ಭಾಗದ ಕಂಡಿಕೆ 1(1) ರಲ್ಲಿ ಕರ್ನಾಟಕ ಸರ್ಕಾರದ ಸಚಿವಾಲಯದ ಎಲ್ಲಾ ಇಲಾಖೆಗಳಲ್ಲಿ ಒಂದು ಜಾಗೃತ ಕೋಶ ಇರತಕ್ಕದ್ದೆಂದೂ ಹಾಗೂ ಆಯಾ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಗಳ ನಂತರದ ಅಧಿಕಾರಿಯನ್ನು (Office next in seniority) ಸದರಿ ಜಾಗೃತ ಕೋಶದ ಮುಖ್ಯ ಜಾಗೃತ ಅಧಿಕಾರಿ (Chief Vigilance Officer) ಯನ್ನಾಗಿ ನೇಮಿಸಲು ಆದೇಶಿಸಲಾಗಿರುತ್ತದೆ.
ಮೇಲೆ ಕ್ರಮ ಸಂಖ್ಯೆ: (3) ರಲ್ಲಿ ಓದಲಾದ ದಿನಾಂಕ: 03.11.2016ರ ಆದೇಶದಲ್ಲಿ ಸಂಸದೀಯ ವ್ಯವಹಾರಗಳ ಇಲಾಖೆಯಲ್ಲಿ ಅಪರ ಪ್ರಾರೂಪಕಾರ ಮತ್ತು ಪದನಿಮಿತ್ತ ಅಪರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಜಿ. ಶ್ರೀಧರ ಇವರನ್ನು ಮುಖ್ಯ ಜಾಗೃತ ಅಧಿಕಾರಿಯನ್ನಾಗಿ ನೇಮಿಸಲಾಗಿತ್ತು.
ಮೇಲೆ ಕ್ರಮ ಸಂಖ್ಯೆ: (4) ರಲ್ಲಿ ಓದಲಾದ ಟಿಪ್ಪಣಿಯಲ್ಲಿ ಶ್ರೀ ಜಿ. ಶ್ರೀಧರ್, ಅಪರ ಪ್ರಾರೂಪಕಾರ ಮತ್ತು ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿ ಇವರನ್ನು ಮುಖ್ಯ ಜಾಗೃತ ಅಧಿಕಾರಿಯನ್ನಾಗಿ ನೇಮಿಸಿರುವುದನ್ನು ರದ್ದುಗೊಳಿಸಿ, ಅವರ ಸ್ಥಾನಕ್ಕೆ ಶ್ರೀಮತಿ ಬಿ.ಜಿ. ಶ್ಯಾಮಲ, ಅಪರ ಪ್ರಾರೂಪಕಾರ ಮತ್ತು ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿ ಇವರನ್ನು ಸಂಸದೀಯ ವ್ಯವಹಾರಗಳ ಇಲಾಖೆಯ ಮುಖ್ಯ ಜಾಗೃತ ಅಧಿಕಾರಿಯಾಗಿ ನೇಮಿಸುವಂತೆ ಸರ್ಕಾರದ ಕಾರ್ಯದರ್ಶಿಯವರು ಸೂಚಿಸಿರುತ್ತಾರೆ.
ಆದ್ದರಿಂದ, ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಸಂವ್ಯಶಾಇ 62 ಆಡಳಿತ 2017, ಬೆಂಗಳೂರು, ದಿನಾಂಕ: 25.07.2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರದ ಸಚಿವಾಲಯದ ಸಂಸದೀಯ ವ್ಯವಹಾರಗಳ ಇಲಾಖೆಗೆ ಸಂಬಂಧಿಸಿದಂತೆ ಶ್ರೀಮತಿ ಬಿ.ಜಿ. ಶ್ಯಾಮಲ, ಅಪರ ಪ್ರಾರೂಪಕಾರ ಮತ್ತು ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿ – ಇವರನ್ನು ಮುಖ್ಯ ಜಾಗೃತ ಅಧಿಕಾರಿ (Chief Vigilance Officer) ಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.
PR – 414
ಕರ್ನಾಟಕ ರಾಜ್ಯಪಾಲರ ಆದೇಶದ ಮೇರೆಗೆ ಮತ್ತು ಅವರ ಹೆಸರಿನಲ್ಲಿ,
ಜಿ. ಶ್ರೀಧರ್
ಸರ್ಕಾರದ ಕಾರ್ಯದರ್ಶಿ (ಪ್ರ)
ಸಂಸದೀಯ ವ್ಯವಹಾರಗಳ ಇಲಾಖೆ.
ಕಂದಾಯ ಸಚಿವಾಲಯ
ವಿಷಯ : ಶ್ರೀ ಡಿ.ಶಿವಕುಮಾರ್, ಉಪ ನೋಂದಣಾಧಿಕಾರಿ, ನೆಲಮಂಗಲ ಇವರ ವಿರುದ್ಧದ ಇಲಾಖಾ ವಿಚಾರಣೆ ಕುರಿತಾದ ಆದೇಶ.
ಓದಲಾಗಿದೆ : 1) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವರದಿ ಸಂಖ್ಯೆ:ಕಂಪ್ಲೆಂಟ್/ ಉಪಲೋಕ್/ಬಿಡಿ/3707/2014/ಸನಿಕಾಸ-2, ದಿನಾಂಕ: 21-09-2016.
2) ಸರ್ಕಾರದ ಆದೇಶ ಸಂಖ್ಯೆ: ಕಂಇ 62 ಮುನೋಸೇ(2) 2016 ದಿನಾಂಕ:18-11-2016.
3) ಅಪರ ನಿಬಂಧಕರು, ವಿಚಾರಣೆಗಳು-9, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವಿಚಾರಣಾ ವರದಿ: UPLOK-2/DE/728/2016/ARE-9 ದಿನಾಂಕ: 08-05-2018.
4) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಶಿಫಾರಸ್ಸು: UPLOK-2/DE/728/2016/ARE-9 ದಿನಾಂಕ: 10-05-2018.
ಪ್ರಸ್ತಾವನೆ : -
ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿ ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ದಿನಾಂಕ:
21-09-2016ರ ವರದಿಯಲ್ಲಿ, ಶ್ರೀ ಡಿ.ಶಿವಕುಮಾರ್, ಉಪ ನೋಂದಣಾಧಿಕಾರಿ, ನೆಲಮಂಗಲ ಇವರ ವಿರುದ್ಧ ಶ್ರೀ ವಿಜಯ್ ಕುಮಾರ್ ಹೆಚ್, ಸೋಂಪುರ, ನೆಲಮಂಗಲ ತಾಲ್ಲೂಕು ಇವರು ನೆಲಮಂಗಲ ತಾಲ್ಲೂಕು, ತ್ಯಾಮಗೊಂಡ್ಲು ಹೋಬಳಿ, ಕುಲುವನಹಳ್ಳಿ ಗ್ರಾಮದ ಸರ್ವೇ ನಂ.12/3 ರಲ್ಲಿ 1 ಎಕರೆ 12 ಗುಂಟೆ ಜಮೀನಿನ ಬಗ್ಗೆ ಸೀನಿಯರ್ ಸಿವಿಲ್ ಜಡ್ಜ್, ನೆಲಮಂಗಲ ನ್ಯಾಯಾಲಯವು ಓ.ಎಸ್.ನಂ.546/14ಕ್ಕೆ ತಾತ್ಕಾಲಿಕ ತಡೆಯಾಜ್ಞೆಯನ್ನು ಜಾರಿಗೊಳಿಸಿರುತ್ತದೆ ಎಂಬುದಾಗಿ ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ನೆಲಮಂಗಲ ರವರಿಗೆ ಲಿಖಿತವಾಗಿ ದೂರನ್ನು ನೀಡಿದ್ದು, ಸದರಿ ಕಛೇರಿಯ ಕಂಪ್ಲೇಂಟ್ ಪುಸ್ತಕದಲ್ಲಿ ಈ ವಿಷಯವನ್ನು ನಮೂದಿಸಿದೆ ಹಾಗೂ ಪಹಣಿಯ ಕಾಲಂ 11 ರಲ್ಲಿ RA(ನ) 136/13-14 ದಿನಾಂಕ :
19-08-2013 ರಂತೆ ಕೋರ್ಟ್ ಸ್ಟೇ ಎಂದು ದಾಖಲಾಗಿದ್ದರೂ ಸಹ ನೆಲಮಂಗಲದ ಉಪ ನೋಂದಣಾಧಿಕಾರಿ, ಶ್ರೀ ಡಿ.ಶಿವಕುಮಾರ್ರವರು ಬೇರೆಯವರಿಂದ ಹಣ ಪಡೆದು ದಿನಾಂಕ: 20-10-2014ರಂದು ಕ್ರಯದ ಕರಾರು ಪತ್ರ ನೋಂದಣಿ ಮಾಡಿರುತ್ತಾರೆ ಮತ್ತು ಇ-ಖಾತೆ ಇದ್ದರೆ ಮಾತ್ರ ನೋಂದಣಿ ಮಾಡಬೇಕೆಂಬ ಸರ್ಕಾರ ಆದೇಶವಿದ್ದರೂ ಅಕ್ರಮವಾಗಿ ಕಂದಾಯ ನಿವೇಶನಗಳನ್ನು ನೋಂದಣಿ ಮಾಡಿರುತ್ತಾರೆ ಎಂಬುದಾಗಿ ಸಲ್ಲಿಸಿದ್ದ ದೂರಿನ ಕುರಿತು ವಿಚಾರಣೆ ನಡೆಸಲಾಗಿ, ಶ್ರೀ ಡಿ.ಶಿವಕುಮಾರ್, ಉಪ ನೋಂದಣಾಧಿಕಾರಿ, ನೆಲಮಂಗಲ ರವರು ಸಾರ್ವಜನಿಕ ನೌಕರರಾಗಿ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ನಿಷ್ಠೆ ಇಲ್ಲದೆ, ಕರ್ತವ್ಯಲೋಪ ಎಸಗಿ, ಸರ್ಕಾರಿ ನೌಕರರಿಗೆ ತರವಲ್ಲದ ರೀತಿ ನಡೆದುಕೊಂಡಿರುವುದು ಹಾಗೂ ದುರ್ನಡತೆ ಎಸಗಿರುವುದು೮೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ಭಾಗ ೧ ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿಗಳು, 1966ರ ನಿಯಮ 3(1)(i)&(ii)ರನ್ವಯ ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 12(3) ರನ್ವಯ ಸದರಿಯವರ ವಿರುದ್ಧ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 14(ಎ)ರಡಿಯಲ್ಲಿ, ಇಲಾಖಾ ವಿಚಾರಣೆ ನಡೆಸಲು ಮಾನ್ಯ ಉಪ ಲೋಕಾಯುಕ್ತರಿಗೆ ವಹಿಸುವಂತೆ ಕೋರಿದ್ದರು.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ:18-11-2016ರ ಆದೇಶದಲ್ಲಿ, ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಕೋರಿಕೆಯನ್ವಯ ಪ್ರಕರಣದ ಸತ್ಯಾಸತ್ಯತೆ ಕುರಿತು, ಶ್ರೀ ಡಿ. ಶಿವಕುಮಾರ್, ಉಪ ನೋಂದಣಾಧಿಕಾರಿ, ನೆಲಮಂಗಲ ಇವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು, 1957ರ ನಿಯಮ 14(ಎ)ರನ್ವಯ ಇಲಾಖಾ ವಿಚಾರಣೆಯನ್ನು ನಡೆಸಲು ಪ್ರಕರಣವನ್ನು ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ರವರಿಗೆ ವಹಿಸಿ ಸರ್ಕಾರವು ಆದೇಶಿಸಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ದಿನಾಂಕ: 08-05-2018ರ ವಿಚಾರಣಾ ವರದಿಯಲ್ಲಿ ವಿಚಾರಣಾಧಿಕಾರಿಗಳು ಶ್ರೀ ಡಿ. ಶಿವಕುಮಾರ್, ಉಪ ನೋಂದಣಾಧಿಕಾರಿ, ನೆಲಮಂಗಲ ಇವರ ವಿರುದ್ಧದ ಆರೋಪವು ಸಾಬೀತಾಗಿರುವುದಿಲ್ಲ ಎಂಬುದಾಗಿ ವಿಚಾರಣಾ ವರದಿಯನ್ನು ಮಾನ್ಯ ಉಪ ಲೋಕಾಯುಕ್ತರಿಗೆ ಸಲ್ಲಿಸಿದ್ದು, ಸದರಿ ವಿಚಾರಣಾ ವರದಿಯ ಆಧಾರದ ಮೇಲೆ ಶ್ರೀ ಡಿ. ಶಿವಕುಮಾರ್, ಉಪ ನೋಂದಣಾಧಿಕಾರಿ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಸದರಿಯವರ ವಿರುದ್ಧದ ಆರೋಪವನ್ನು ಸಾಬೀತುಪಡಿಸಲು ವಿಫಲವಾಗಿದ್ದು, ಸದರಿಯವರನ್ನು ಆರೋಪಮುಕ್ತಗೊಳಿಸುವಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ದಿನಾಂಕ: 10-05-2018ರ ವರದಿಯಲ್ಲಿ ಶಿಫಾರಸ್ಸು ಮಾಡಿರುತ್ತಾರೆ.
ವಿಚಾರಣಾಧಿಕಾರಿಗಳು, ವಿಚಾರಣೆಗಳು-9, ಮಾನ್ಯ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವಿಚಾರಣಾ ವರದಿ ಹಾಗೂ ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಶಿಫಾರಸ್ಸನ್ನು ಅಂಗೀಕರಿಸಿ, ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 17 ಮುನೋಸೇ(2) 2018 ಬೆಂಗಳೂರು, ದಿನಾಂಕ: 21-07-2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ಡಿ. ಶಿವಕುಮಾರ್, ಉಪ ನೋಂದಣಾಧಿಕಾರಿ, ನೆಲಮಂಗಲ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಲಿ ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ದೊಡ್ಡಬಳ್ಳಾಪುರ ಇವರ ವಿರುದ್ಧದ ಆರೋಪವು ಸಾಬೀತಾಗದೇ ಇರುವುದರಿಂದ, ಆರೋಪದಿಂದ ಮುಕ್ತರನ್ನಾಗಿ ಆದೇಶಿಸಿದೆ.
PR – 415
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಮುರಳೀಧರ ಎಸ್. ತಳ್ಳಿಕೇರಿ
ಪೀಠಾಧಿಕಾರಿ,
ಕಂದಾಯ ಇಲಾಖೆ,
(ನೋಂದಣಿ ಮತ್ತು ಮುದ್ರಾಂಕ)
ಕಂದಾಯ ಸಚಿವಾಲಯ
ವಿಷಯ : ಶ್ರೀ ಎಸ್.ಎಂ.ಹೇಮೇಶ, ಉಪ ನೋಂದಣಾಧಿಕಾರಿ, ಬೀದರ್ ಇವರ ವಿರುದ್ಧದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ದಂಡನೆ ವಿಧಿಸುವ ಕುರಿತು-ಆದೇಶ.
ಓದಲಾಗಿದೆ : 1) ಮಾನ್ಯ ಉಪ ಲೋಕಾಯುಕ್ತರು-1, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವರದಿ
ಸಂಖ್ಯೆ: Compt/Uplok/GLB -5312/2013/DRE-3, ದಿನಾಂಕ: 22-07-2016.
2) ಸರ್ಕಾರದ ಆದೇಶ ಸಂಖ್ಯೆ: ಕಂಇ 50 ಮುನೋಸೇ(2) 2016 ದಿನಾಂಕ: 01-10-2016.
3) ಅಪರ ನಿಬಂಧಕರು, ವಿಚಾರಣೆಗಳು-8, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವಿಚಾರಣಾ ವರದಿ: Uplok-1/DE-446/2016/ARE-8 ದಿನಾಂಕ: 20-03-2018.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ೮೭೧ನೋಂದಣಾಧಿಕಾರಿಗಳು, ಬೀದರ ರವರು ತಡೆ ಹಿಡಿದಿದ್ದು, ಸದರಿ ತಡೆ ಹಿಡಿದಿದ್ದ ನೋಂದಣಿಯನ್ನು ಬಿಡುಗಡೆ ಮಾಡಲು ಸುಮಾರು ವರ್ಷಗಳಿಂದ ಮನವಿಯನ್ನು ಸಲ್ಲಿಸಿ ಸುಮಾರು 9 ವರ್ಷ ಕಳೆದರೂ ದಸ್ತಾವೇಜು ಸಂಖ್ಯೆ: 242/2004-05 ದಿನಾಂಕ: 27-10-2004ನ್ನು ಇದುವರೆವಿಗೂ ಬಿಡುಗಡೆ ಮಾಡಿರುವುದಿಲ್ಲ ಹಾಗೂ ಮುದ್ರಾಂಕ ಉಪ ಆಯುಕ್ತರು ಹಾಗೂ ಜಿಲ್ಲಾ ನೋಂದಣಾಧಿಕಾರಿಗಳು, ಬೀದರ ರವರು ದಿನಾಂಕ: 03-01-2012ರಲ್ಲಿ ಆದೇಶವನ್ನು ಹೊರಡಿಸಿ `.1,35,000/-ಗಳಿಗೆ ನೋಂದಣಿ ಮಾಡಿಸಿದ್ದ ದಸ್ತಾವೇಜು ಅಪಮೌಲ್ಯವಾಗಿರುವುದಿಲ್ಲ. ಸದರಿ ದಸ್ತಾವೇಜನ್ನು ಪಕ್ಷಗಾರರಿಗೆ ಹಿಂದಿರುಗಿಸಲು ಆದೇಶಿಸಿದ್ದರೂ, ದಸ್ತಾವೇಜನ್ನು ಬಿಡುಗಡೆ ಮಾಡಿರುವುದಿಲ್ಲ ಎಂಬುದಾಗಿ ಸಲ್ಲಿಸಿದ್ದ ದೂರಿನ ಕುರಿತು ವಿಚಾರಣೆ ನಡೆಸಿದ್ದು, ಸದರಿ ನೌಕರರಾದ ಶ್ರೀ ಎಸ್.ಎಂ. ಹೇಮೇಶ, ಉಪ ನೋಂದಣಾಧಿಕಾರಿ, ಬೀದರ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ, ನಿಷ್ಠತೆಯಲ್ಲಿ ಕರ್ತವ್ಯ ಲೋಪವೆಸಗಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿ ನಡೆದುಕೊಂಡ ಕಾರಣ, ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 12(3)ರನ್ವಯ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 14(ಎ)ರಡಿಯಲ್ಲಿ ಸದರಿ ನೌಕರರ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ, ವಿಚಾರಣೆ ನಡೆಸಲು ಮಾನ್ಯ ಉಪ ಲೋಕಾಯುಕ್ತಕ್ಕೆ ವಹಿಸುವಂತೆ ಕೋರಿದ್ದರು.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ: 01-10-2016ರ ಆದೇಶದಲ್ಲಿ, ಶ್ರೀ ಎಸ್.ಎಂ.ಹೇಮೇಶ, ಉಪ ನೋಂದಣಾಧಿಕಾರಿ, ಬೀದರ ಇವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ, ಸತ್ಯಾಸತ್ಯತೆಯನ್ನು ತಿಳಿಯಲು ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 14(ಎ)ರನ್ವಯ, ಇಲಾಖಾ ವಿಚಾರಣೆಯನ್ನು ನಡೆಸಲು ಮಾನ್ಯ ಉಪ ಲೋಕಾಯುಕ್ತ-1, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರಿಗೆ ವಹಿಸಿ ಸರ್ಕಾರವು ಆದೇಶಿಸಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ಅಪರ ನಿಬಂಧಕರು, ವಿಚಾರಣೆಗಳು-8, ಮಾನ್ಯ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಪ್ರಕರಣಕ್ಕೆ ಸಂಬಂಧಿಸಿದಂತೆ, ದಿನಾಂಕ: 20-03-2018ರಲ್ಲಿ ವಿಚಾರಣಾ ವರದಿಯನ್ನು ಮಾನ್ಯ ಉಪ ಲೋಕಾಯುಕ್ತರಿಗೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಆಪಾದಿತ ನೌಕರರಾದ ಶ್ರೀ ಎಸ್.ಎಂ.ಹೇಮೇಶ, ಉಪ ನೋಂದಣಾಧಿಕಾರಿ, ಬೀದರ ಇವರ ವಿರುದ್ಧ ಆರೋಪಿಸಲಾದ, ಸರ್ಕಾರದ ಕಾರ್ಯ ನಿರ್ವಹಣೆಯಲ್ಲಿ ದುರ್ನಡತೆ ಎಸಗಿರುವ ಆರೋಪವು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಾವಳಿಗಳು 1966ರ ನಿಯಮ 3(1)(i) ರಿಂದ (iii)ರಡಿ ಸಾಬೀತಾಗಿರುವುದಾಗಿ, ವರದಿ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಆಪಾಧಿತರಿಗೆ ಸದರಿಯವರಿಗೆ ನಾಲ್ಕು(4) ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತ ಪರಿಣಾಮ ಬೀರುವಂತೆ ತಡೆಹಿಡಿಯಲು ಹಾಗೂ ಸದರಿ ನೌಕರರು ಬಡ್ತಿಗೆ ಅರ್ಹರಾದ ದಿನದಿಂದ ನಾಲ್ಕು(4) ವರ್ಷಗಳ ಅವಧಿಗೆ ಅವರ ಮುಂಬಡ್ತಿಯನ್ನು ತಡೆಹಿಡಿಯುವ ದಂಡನೆಯನ್ನು ವಿಧಿಸಲು ಮೇಲೆ ಓದಲಾದ ಕ್ರಮ ಸಂಖ್ಯೆ (4)ರಲ್ಲಿ ಮಾನ್ಯ ಉಪ ಲೋಕಾಯುಕ್ತರು-1 ರವರು ಶಿಫಾರಸ್ಸು ಮಾಡಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ದಿನಾಂಕ: 04-04-2018ರ ಸರ್ಕಾರದ ಕಾರಣ ಕೇಳುವ ನೋಟೀಸಿನಲ್ಲಿ ಅಪರ ನಿಬಂಧಕರು, ವಿಚಾರಣೆಗಳು-8, ಕರ್ನಾಟಕ ಲೋಕಾಯುಕ್ತ ರವರ ವರದಿ ಹಾಗೂ ಮಾನ್ಯ ಉಪ ಲೋಕಾಯುಕ್ತರು-1, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ರವರ ಶಿಫಾರಸ್ಸು ವರದಿಯನ್ವಯ, ತಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂಬುದಕ್ಕೆ ಹೇಳಿಕೆಯನ್ನು ಸಲ್ಲಿಸುವಂತೆ ಶ್ರೀ ಎಸ್.ಎಂ. ಹೇಮೇಶ, ಉಪ ನೋಂದಣಾಧಿಕಾರಿ, ಬೀದರ ಇವರಿಗೆ ಕಾರಣ ಕೇಳುವ ನೊಟೀಸ್ನ್ನು ಜಾರಿ ಮಾಡಲಾಗಿದ್ದು, ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ದಿನಾಂಕ:
28-04-2018 ರಲ್ಲಿ ಸದರಿಯವರು ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿ ದಿನಾಂಕ: 04-04-2018ರ ಸರ್ಕಾರದ ಎರಡನೇ ಕಾರಣ ಕೇಳುವ ನೋಟೀಸಿಗೆ ಹೇಳಿಕೆಯನ್ನು ಸಲ್ಲಿಸುವುದಕ್ಕೆ ಸಂಬಂಧಿಸಿದಂತೆ ಎರಡು ತಿಂಗಳುಗಳ ಕಾಲವಕಾಶವನ್ನು ನೀಡುವಂತೆ ಕೋರಿರುತ್ತಾರೆ. ಸದರಿ ಕೋರಿಕೆಗೆ ಸಂಬಂಧಿಸಿದಂತೆ ಮೇಲೆ ಓದಲಾದ ಕ್ರಮ ಸಂಖ್ಯೆ (7)ರ ದಿನಾಂಕ: 24-05-2018ರ ಸರ್ಕಾರದ ಪತ್ರದಲ್ಲಿ ಹೇಳಿಕೆಯನ್ನು ಸಲ್ಲಿಸಲು ದಿನಾಂಕ: 31-05-2018ರವರೆಗೆ ಕಾಲವಕಾಶವನ್ನು ನೀಡಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ(5)ರ ಕಾರಣ ಕೇಳುವ ನೋಟೀಸಿಗೆ ಶ್ರೀ ಎಸ್.ಎಂ. ಹೇಮೇಶ, ಹಿಂದಿನ ಉಪ ನೋಂದಣಾಧಿಕಾರಿ, ಬೀದರ ಹಾಲಿ ಉಪ ನೋಂದಣಾಧಿಕಾರಿ, ಕಡೂರು ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (8)ರ ದಿನಾಂಕ: 04-06-2018ರಲ್ಲಿ ತಮ್ಮ ಹೇಳಿಕೆಯನ್ನು ಸಲ್ಲಿಸಿ, ನಾನು ಉಪ ನೋಂದಣಿ ಕಛೇರಿ ಬೀದರ ಇಲ್ಲಿ ಉಪ ನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಶ್ರೀ ಸೈಯದ ಶಾಹ ವಸೀವುಲ್ಲಾ ಹುಸೇನಿ, ಬೀದರ ಇವರು ಶ್ರೀ ಹನುಮಂತ ತಂದೆ ರಾಣೋಜಿ ಮತ್ತು ಶ್ರೀ ಗೋರಖ ತಂದೆ ರಾಣೋಜಿ ಗೋಡಿ ಇವರಿಂದ ಅಲೀಯಾಬಾದ್ ಗ್ರಾಮದ ಸರ್ವೆ ನಂ.58/2ರಲ್ಲಿನ 10-ಎಕರೆ 7-ಗುಂಟೆ ಪೈಕಿ 10.1/2 ಗುಂಟೆ ಜಮೀನನ್ನು ಖರೀದಿಸಿ ನೋಂದಣಿಗಾಗಿ ದಿನಾಂಕ: 27-10-2004ರಲ್ಲಿ ಹಾಜರುಪಡಿಸಿರುತ್ತಾರೆ.
ಸದರಿ ಸ್ವತ್ತು ಅಪಮೌಲ್ಯವಾಗಿದೆ ಎಂಬುದಾಗಿ ಹಿಂದಿನ ಉಪ ನೋಂದಣಾಧಿಕಾರಿಗಳು ಜಿಲ್ಲಾ ನೋಂದಣಾಧಿಕಾರಿಗಳಿಗೆ ರವಾನಿಸಿದ್ದರು. ಸದರಿ ಸಂದರ್ಭದಲ್ಲಿ 11ಇ ಸರ್ವೆ ನಕ್ಷೆ ಕಡ್ಡಾಯವಾಗಿರಲಿಲ್ಲ. ಜಿಲ್ಲಾ ನೋಂದಣಾಧಿಕಾರಿಗಳು ಅಪಮೌಲ್ಯವಾಗಿರಲಿಲ್ಲವೆಂದು ತಿಳಿಸಿ ಪ್ರಕರಣವನ್ನು ಮುಕ್ತಾಯಗೊಳಿಸಿರುತ್ತಾರೆ. ದೂರುದಾರರಾದ ಶ್ರೀ ಸೈಯದ ಶಾಹ ವಸೀವುಲ್ಲಾ ಹುಸೇನಿ, ಬೀದರ ಇವರು ಮಾನ್ಯ ಉಪ ಲೋಕಾಯುಕ್ತರು ಬೀದರಗೆ ಬೇಟಿ ನೀಡಿದ ಸಂದರ್ಭ ನನ್ನ ಹೆಸರನ್ನು ಉಲ್ಲೇಖಿಸದೇ ಸದರಿ ಸ್ವತ್ತಿನ ದಸ್ತನ್ನು ಮರಳಿಸಲು ಉಪ ನೋಂದಣಾಧಿಕಾರಿಗಳಿಗೆ ಸೂಚಿಸಲು ದೂರನ್ನು ನೀಡಿದ್ದು, ದಿನಾಂಕ: 27-10-2004 ರಿಂದ 09-07-2013ರವರೆಗೆ ಬೀದರ ಉಪ ನೋಂದಣಿ ಕಛೇರಿಯಲ್ಲಿ ಅನೇಕ ಉಪ ನೋಂದಣಾಧಿಕಾರಿಗಳು ಕರ್ತವ್ಯ ನಿರ್ವಹಿಸಿರುತ್ತಾರೆ. ನಾನು ಪ್ರಭಾರ ವಹಿಸಿಕೊಂಡ ನಂತರ ಸದರಿ ದಸ್ತನ್ನು ರಿಲೀಸ್ ಮಾಡಲು ಡಾಟಾ ಬೇಸ್ಗೆ ಹಾಕಿದಾಗ 11ಇ ನಕ್ಷೆಯನ್ನು ಹಾಜರು ಪಡಿಸಲು ಸೂಚಿಸಿರುತ್ತದೆ. ಸದರಿ ಸಂದರ್ಭ 11ಇ ನಕ್ಷೆ ಇಲ್ಲದೇ ದಸ್ತನ್ನು ನೋಂದಾಯಿಸಲು ಅವಕಾಶವಿರುವುದಿಲ್ಲ. ಈ ಕುರಿತಂತೆ ಭೂಮಿ ತಂತ್ರಾಂಶದಿಂದ ಮಾಹಿತಿ ಪಡೆಯಲು ನೋಂದಾಯಿಸುವ ಕುರಿತು ನೋಂದಣಿ ಮಹಾಪರಿವೀಕ್ಷಕರಿಗೆ ಮನವಿ ಸಲ್ಲಿಸಿದ್ದು, ನೋಂದಣಿ ಮಹಾಪರಿವೀಕ್ಷಕರು ನಿಯಮಾನುಸಾರ ನೋಂದಾಯಿಸಲು ಅನುಮತಿ ನೀಡಿರುತ್ತಾರೆ. ಅದರಂತೆ, ಸ್ವತ್ತನ್ನು ನೋಂದಾಯಿಸಿ, ದೂರುದಾರರಿಗೆ ಮರಳಿಸಿ ಸ್ವೀಕೃತಿ ಪಡೆಯಲಾಗಿರುತ್ತದೆ.
ನೋಂದಣಿ ಕಾಯ್ದೆ 1908ರ ಕಲಂ 72ನ್ನು ಉಲ್ಲಂಘಿಸಿರುವ ಬಗ್ಗೆ ಆರೋಪ ಪಟ್ಟಿ ಸಲ್ಲಿಸಿದ್ದು, ನೋಂದಣಿಯನ್ನು ನಿರಾಕರಿಸಿದಲ್ಲಿ ಪಕ್ಷಕಾರರು 30 ದಿನಗಳೊಳಗಾಗಿ ಜಿಲ್ಲಾ ನೋಂದಣಾಧಿಕಾರಿಗಳಿಗೆ ಅಪೀಲು ಸಲ್ಲಿಸಬೇಕು. ಅಪೀಲನ್ನು ತೀರ್ಮಾನ ಮಾಡಿ ನೋಂದಣಿ ಮಾಡಲು ಆದೇಶಿಸಿದಲ್ಲಿ ನೋಂದಾಯಿಸಲು ಅವಕಾಶವಿದ್ದು, ನೋಂದಣಿಗೂ ನಿರಾಕರಣೆಗೂ ಸಂಬಂಧವಿರುವುದಿಲ್ಲ. ಆದ್ದರಿಂದ, ಕಲಂ 72ರ ನಿರ್ದೇಶನ ಸದರಿ ಪ್ರಕರಣದಲ್ಲಿ ಅನ್ವಯವಾಗುವುದಿಲ್ಲ. ಸದರಿ ಸ್ವತ್ತು ಅಪಮೌಲ್ಯವಾಗಿರುವುದಿಲ್ಲವೆಂದು ಆದೇಶವಾಗಿರುತ್ತದೆ. ಆದುದರಿಂದ, ಸದರಿ ಆರೋಪ ಪಟ್ಟಿಯು ಕಾನೂನು ಬಾಹಿರವಾಗಿರುತ್ತದೆ. ಸದರಿ ಸಂದರ್ಭದಲ್ಲಿ ಶ್ರೀ ಎಂ.ಎ.ಹಸೀಬ್ ರವರು ಉಪ ನೋಂದಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಸದರಿ ಪ್ರಕರಣದಲ್ಲಿ ಆರೋಪಿಸಲಾಗಿರುವ ಘಟನೆಗಳು ಸದರಿ ಕಛೇರಿಗೆ ನಾನು ಹಾಜರಾಗುವ ಮುನ್ನವೇ ನಡೆದಿರುತ್ತದೆ. ಆದ್ದರಿಂದ, ಈ ಹಿಂದೇ ಕಾರ್ಯ ನಿರ್ವಹಿಸಿದ್ದ ಉಪ ನೋಂದಣಾಧಿಕಾರಿಗಳೇ ಜವಬ್ದಾರರಾಗಿರುತ್ತಾರೆ.
೮೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ಭಾಗ ೧ದಸ್ತನ್ನು ನೋಂದಾಯಿಸಿದ ದಿನವೇ ದೂರುದಾರರು ಲೋಕಾಯುಕ್ತರಿಗೆ ಸಲ್ಲಿಸಿದ ದೂರನ್ನು ಹಿಂಪಡೆದು ಪ್ರಕರಣವನ್ನು ಮುಕ್ತಾಯಗೊಳಿ-ಸುವಂತೆ ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ನೋಂದಣಾಧಿಕಾರಿಗಳ ವಿರುದ್ಧದ ವಿಚಾರಣೆಯನ್ನು ಕೈಬಿಟ್ಟು ಹಿಂದಿನ ಉಪ ನೋಂದಣಾಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವಂತೆ ಕೋರಿರುತ್ತಾರೆ. ಆದಾಗ್ಯೂ, ಮಾನ್ಯ ಉಪ ಲೋಕಾಯುಕ್ತರು ನನ್ನ ಹೇಳಿಕೆಯನ್ನು ಪಡೆಯದೇ ಆರೋಪ ಸಾಬೀತಾಗಿರುವುದಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಕಾನೂನು ಬಾಹಿರವಾಗಿರುತ್ತದೆ ಹಾಗೂ ಯಾವುದೇ ದೂರು ಇಲ್ಲದೇ ಇದ್ದರೂ ಸಹ ವಿಚಾರಣೆಯನ್ನು ನಡೆಸಿರುವುದು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 8594/2012 (ಎಸ್-ಆರ್ಇಎಸ್)ರಲ್ಲಿ ನೀಡಿರುವ ಆದೇಶದ ಉಲ್ಲಂಘನೆಯಾಗಿರುತ್ತದೆ. ಆದುದರಿಂದ, ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸನ್ನು ತಿರಸ್ಕರಿಸಿ ಪ್ರಕರಣದಿಂದ ಖುಲಾಸೆಗೊಳಿಸುವಂತೆ ಕೋರಿರುತ್ತಾರೆ.
ಸದರಿ ಆಪಾದಿತ ನೌಕರರ ಸಮಜಾಯಿಷಿಯನ್ನು ಪರಿಶೀಲಿಸಲಾಗಿ, ಈಗಾಗಲೇ ಲೋಕಾಯುಕ್ತರ ವಿಚಾರಣೆಯ ವೇಳೆ ಸಲ್ಲಿಸಿದ್ದ ಮನವಿಯಲ್ಲಿನ ಹೇಳಿಕೆಯನ್ನೆ ಲಿಖಿತ ಹೇಳಿಕೆಯನ್ನಾಗಿ ಸಲ್ಲಿಸಿರುವುದರಿಂದ, ಸದರಿ ಸಮಜಾಯಿಷಿಯಲ್ಲಿ ಪರಿಗಣನಾರ್ಹವಾದ ಹೊಸ ಅಂಶಗಳು ಕಂಡು ಬಂದಿರುವುದಿಲ್ಲ.
ಆಪಾದಿತರು ಸರ್ಕಾರಿ ನೌಕರರಾಗಿ ಸರ್ಕಾರದ ಕೆಲಸದ ನಿರ್ವಹಣೆಯಲ್ಲಿ ಕರ್ತವ್ಯ ನಿಷ್ಟರಾಗಿರದೆ ಮತ್ತು ಪ್ರಮಾಣಿಕತೆ ಹೊಂದದೆ, ದುರ್ನಡತೆ ಎಸಗಿರುವ ಆರೋಪವು ದೃಡಪಟ್ಟಿರುವುದರಿಂದ, ಮಾನ್ಯ ಉಪ ಲೋಕಾಯುಕ್ತರು-1 ಇವರ ಶಿಫಾರಸ್ಸನ್ನು ಅಂಗೀಕರಿಸಲು ನಿರ್ಣಯಿಸಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 8(iii) & (iiia) ರನ್ವಯ, ದಂಡನೆಯನ್ನು ವಿಧಿಸಲು ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 08 ಮುನೋಸೇ(2) 2018 ಬೆಂಗಳೂರು, ದಿನಾಂಕ: 03-08-2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ಎಸ್.ಎಂ.ಹೇಮೇಶ, ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ಬೀದರ ಹಾಲಿ ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ಕಡೂರು ಇವರು ಸರ್ಕಾರಿ ಕೆಲಸದ ನಿರ್ವಹಣೆಯಲ್ಲಿ ನಿಷ್ಠೆಯನ್ನು ತೋರದೇ ಅವಿಧೇಯತೆ ಮತ್ತು ಕರ್ತವ್ಯ ನಿರ್ಲಕ್ಷತೆ, ದುರ್ನಡತೆಯನ್ನು ತೋರ್ಪಡಿಸಿರುವುದರಿಂದಾಗಿ, ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಾಮಾವಳಿಗಳು 1966ರ ನಿಯಮ 3(1)(i) ರಿಂದ (iii)ನ್ನು ಉಲ್ಲಂಘಿಸಿರುವ, ಆರೋಪವು ಸಾಬೀತಾಗಿರುವುದರಿಂದ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಾವಳಿಗಳು 1957ರ ನಿಯಮ 8(iii)&(iiia)ರನ್ವಯ ನಾಲ್ಕು(4) ವಾರ್ಷಿಕ ವೇತನ ಬಡ್ತಿಗಳನ್ನು ಸಂಚಿತ ಪರಿಣಾಮ ಬೀರುವಂತೆ ತಡೆಹಿಡಿಯಲು ಹಾಗೂ ಸದರಿ ನೌಕರರು ಬಡ್ತಿಗೆ ಅರ್ಹರಾದ ದಿನದಿಂದ ನಾಲ್ಕು (4) ವರ್ಷಗಳ ಅವಧಿಗೆ ಇವರ ಮುಂಬಡ್ತಿಯನ್ನು ತಡೆಹಿಡಿಯುವ ದಂಡನೆಯನ್ನು ವಿಧಿಸಿ ಆದೇಶಿಸಿದೆ.
PR – 416
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಮುರಳೀಧರ ಎಸ್.ತಳ್ಳಿಕೇರಿ
ಪೀಠಾಧಿಕಾರಿ,
ಕಂದಾಯ ಇಲಾಖೆ.
(ನೋಂದಣಿ ಮತ್ತು ಮುದ್ರಾಂಕ)
ಕಂದಾಯ ಸಚಿವಾಲಯ
ವಿಷಯ : ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ಅರಕಲಗೂಡು ಗ್ರಾಮದ ಸ.ನಂ.240 ರಲ್ಲಿ 13-00 ಎಕರೆ ಗೋಮಾಳ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನ ರಹಿತರಿಗೆ ನಿವೇಶನ ಹಂಚಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತಕ್ಕೆ ಉಚಿತವಾಗಿ ಮಂಜೂರು ಮಾಡುವ ಬಗ್ಗೆ.
ಓದಲಾಗಿದೆ : ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರ ಪತ್ರ ಸಂಖ್ಯೆ: ಆರ್ಸಿ:71:ಎಲ್ಎನ್ಡಿ(2)/2017-18 ದಿನಾಂಕ 06-03-2018.
ಪ್ರಸ್ತಾವನೆ :
ಮೇಲೆ ಓದಲಾದ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು, ಕಸಬಾ ಹೋಬಳಿ, ಅರಕಲಗೂಡು ಗ್ರಾಮದ ಸ.ನಂ.240 ರಲ್ಲಿ 13-00 ಎಕರೆ ಗೋಮಾಳ ಜಮೀನನ್ನು ಅರಕಲಗೂಡು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಡತನ ರೇಖೆಗಿಂತ ಕೆಳಗಿರುವ ನಿವೇಶನ ರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಲು ಜಮೀನು ಕಾಯ್ದಿರಿಸುವ ಕುರಿತು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಅರಕಲಗೂಡು ಗ್ರಾಮದ ಸ.ನಂ.240 ರಲ್ಲಿ ಪಹಣಿ ಪತ್ರಿಕೆ ಪ್ರಕಾರ 37-09 ಎಕರೆ ಜಮೀನು "ಗೋಮಾಳ" ಎಂದು ವರ್ಗೀಕರಣಗೊಂಡಿರುತ್ತದೆ.
ಆ ಪೈಕಿ ವಿವಿಧ ಉದ್ದೇಶಗಳಿಗೆ ವಿಲೇ ಆಗಿದ್ದು, ಬಾಕಿ 13-00 ಎಕರೆ ಜಮೀನು ಖುಲ್ಲಾ ಇರುತ್ತದೆ ಹಾಗೂ ಸದರಿ ಜಮೀನು ಪಟ್ಟಣ ಪಂಚಾಯಿತಿಯಿಂದ 2.5 ಕಿ.ಮೀ. ಅಂತರದಲ್ಲಿದ್ದು, ಎಲ್ಲಾ ಋುಣಭಾರಗಳಿಂದ ಮುಕ್ತವಾಗಿರುತ್ತದೆ ಎಂದು ವರದಿಯಲ್ಲಿ ತಿಳಿಸಿರುತ್ತಾರೆ. ಮುಂದುವರೆದು, ಅರಕಲಗೂಡು ಗ್ರಾಮದಲ್ಲಿ 1726 ಜಾನುವಾರುಗಳಿದ್ದು, ಸದರಿ ಗ್ರಾಮದ ಜಾನುವಾರುಗಳಿಗನುಗುಣವಾಗಿ ಸರ್ಕಾರಿ ಗೋಮಾಳದ ಜಮೀನು ಲಭ್ಯವಿರುವುದಿಲ್ಲ. ಆದರೆ, ಅರಕಲಗೂಡು ಗ್ರಾಮದ ಅಕ್ಕಪಕ್ಕದ ಗ್ರಾಮಗಳಲ್ಲಿ ಲಭ್ಯವಿರುವ ಗೋಮಾಳ ಜಮೀನನ್ನು ಜಾನುವಾರುಗಳ ಮೇವಿಗಾಗಿ ಉಪಯೋಗಿಸಲಾಗುತ್ತಿದೆ ಎಂದು ವರದಿ ಮಾಡುತ್ತಾ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71ರಂತೆ ಕಾಯ್ದಿರಿಸಲು ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ೮೭೩ಸರ್ಕಾರದ ಆದೇಶ ಸಂಖ್ಯೆ : ಆರ್ಡಿ 11 ಎಲ್ಜಿಹೆಚ್ 2018, ಬೆಂಗಳೂರು, ದಿನಾಂಕ: 02.07.2018
ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ಅರಕಲಗೂಡು ಗ್ರಾಮದ ಸ.ನಂ.240 ರಲ್ಲಿ 13-00 ಎಕರೆ ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)(i)ರನ್ವಯ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಅರಕಲಗೂಡು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನಿವೇಶನ ರಹಿತರಿಗೆ ನಿವೇಶನ ಹಂಚುವ ಉದ್ದೇಶಕ್ಕಾಗಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22-ಎ(3)(iii)ರನ್ವಯ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತಕ್ಕೆ ಉಚಿತವಾಗಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮಂಜೂರು ಮಾಡಿದೆ.
ಷರತ್ತುಗಳು :-
1) ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 2) ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.
3) ಮಂಜೂರಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಾಗಿದ್ದಲ್ಲಿ ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೇ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.
4) ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು. 5) ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.
6) ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶ ತನ್ನಷ್ಟಕ್ಕೆ ತಾನೇ ರದ್ದಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.
PR – 417
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-20
ವಿಮಲಮ್ಮ ಸಿ.
ಪೀಠಾಧಿಕಾರಿ,
ಕಂದಾಯ ಇಲಾಖೆ. (ಭೂ.ಮಂ-2)
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ವಿಷಯ :- ಸರ್ಕಾರದ ವತಿಯಿಂದ ಆಯೋಜಿಸಲ್ಪಡುವ ಅಧಿಕೃತ ಸಭೆ-ಸಮಾರಂಭಗಳಲ್ಲಿ ಮತ್ತು ಸರ್ಕಾರಿ ಕಛೇರಿಗಳಲ್ಲಿ ಏಕ ಕಾಲಿಕ ಬಳಕೆ (Single use) ಪ್ಲಾಸ್ಟಿಕ್ ನೀರಿನ ಬಾಟಲ್ಗಳ ಬಳಕೆ/ ಸರಬರಾಜನ್ನು ನಿಷೇಧಿಸುವ ಬಗ್ಗೆ.
ಓದಲಾಗಿದೆ :- ಸರ್ಕಾರಿ ಅಧಿಸೂಚನೆ ಸಂಖ್ಯೆ: ಅಪಜೀ 17 ಇಪಿಸಿ 2012, ದಿನಾಂಕ: 11.03.2016.
ಪ್ರಸ್ತಾವನೆ :-
ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗಳು ಹಾಗೂ ದೈನಂದಿನ ಬಳಕೆಯಲ್ಲಿರುವ ಇತರೆ ಪ್ಲಾಸ್ಟಿಕ್ ವಸ್ತುಗಳು ಅಲ್ಪಾವಧಿ ಹಾಗೂ ದೀರ್ಘಾವಧಿಯಲ್ಲಿ ಪರಿಸರಕ್ಕೆ ಹಾನಿಯನ್ನು ಮತ್ತು ಆರೋಗ್ಯಕ್ಕೆ ಅಪಾಯವನ್ನು ಉಂಟುಮಾಡಲು ಕಾರಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಮೇಲೆ ಓದಲಾದ (1)ರ ಸರ್ಕಾರಿ ಅಧಿಸೂಚನೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ನಿಯಂತ್ರಣಕ್ಕಾಗಿ ಈಗಾಗಲೇ ಪ್ಲಾಸ್ಟಿಕ್ ಕ್ಯಾರಿಬ್ಯಾಗ್, ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ಚಮಚ ಮತ್ತು ಊಟದ ಮೇಜಿನ ಮೇಲೆ ಹರಡುವ ಪ್ಲಾಸ್ಟಿಕ್ ಹಾಳೆಗಳು ಮತ್ತಿತರ ವಸ್ತುಗಳ ತಯಾರಿಕೆ ಮಾರಾಟ, ದಾಸ್ತಾನು ಮತ್ತು ಉಪಯೋಗವನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಈ ನಿಷೇಧವು ಸಾಮಗ್ರಿಗಳ ಪ್ಯಾಕೇಜಿಂಗ್ ಮಾಡುವ ಸಂದರ್ಭದಲ್ಲಿ ಅವಿಭಾಜ್ಯವಾಗಿ (Integral part of package) ಬರುವ ಪ್ಲಾಸ್ಟಿಕ್ಗಳನ್ನು ಹೊರತುಪಡಿಸಿರುವುದರಿಂದ ಏಕ ಕಾಲಿಕ ಬಳಕೆ ಪ್ಲಾಸ್ಟಿಕ್ ನೀರಿನ ಬಾಟಲಿಗಳಿಗೆ (Single use packaged water bottles) ಅನ್ವಯವಾಗುವುದಿಲ್ಲ.
ಇಂತಹ ಬಾಟಲ್ಗಳ ಮೇಲೆ ನಿರ್ಬಂಧವಿಲ್ಲದ್ದರಿಂದ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ನೀರಿನ ಬಾಟಲ್ಗಳ ಬಳಕೆ ಯಥೇಚ್ಛವಾಗಿದ್ದು ಬಳಸಿದ ಪ್ಲಾಸ್ಟಿಕ್ ನೀರಿನ ಬಾಟಲುಗಳು ಎಲ್ಲೆಂದರಲ್ಲಿ ಎಸೆಯಲ್ಪಡುವುದರಿಂದ ಘನ ತ್ಯಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ಸೇರಿ ಹಲವಾರು ಪರಿಸರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟು ಮಾಡುವುದರ ಜೊತೆಗೆ, ನಗರ ಪ್ರದೇಶಗಳಲ್ಲಿ ಅಹಿತಕರ ದೃಶ್ಯ ಸೃಷ್ಟಿಯಾಗುತ್ತಿರುತ್ತದೆ. ಇದಲ್ಲದೆ, ಸರ್ಕಾರದ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸರಬರಾಜಾಗುವ ನೀರು ಹಲವಾರು ಸಂದರ್ಭಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಾತ್ರ ಬಳಕೆಯಾಗಿ ಹೆಚ್ಚಿನ ಪ್ರಮಾಣದ ನೀರು ವ್ಯರ್ಥವಾಗುತ್ತಿದೆ ಮತ್ತು ಇಂತಹ ನೀರಿನ ಬಾಟಲಿಗಳನ್ನು ಖರೀದಿಸುವುದರಿಂದ ರಾಜ್ಯದ ಬೊಕ್ಕಸಕ್ಕೆ ದುಬಾರಿ ಖರ್ಚು ಸಹ ಆಗುತ್ತಿರುತ್ತದೆ.
ಈ ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಹಾಗೂ ಸರ್ಕಾರಿ ಸ್ವಾಮ್ಯದ ಎಲ್ಲಾ ಸಂಸ್ಥೆಗಳಿಂದ ಆಯೋಜಿಸುವ ಸಭೆ- ಸಮಾರಂಭಗಳಲ್ಲಿ ಮತ್ತು ಸರ್ಕಾರಿ. ಕಛೇರಿಗಳಲ್ಲಿ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿಗಳಲ್ಲಿ (Single use packaged water bottles) ಪ್ಯಾಕ್ ಮಾಡಿದ ನೀರು ಸರಬರಾಜು/ ಬಳಕೆ ಮಾಡುವುದನ್ನು ನಿಷೇಧಿಸಿ, ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು ಶುಚಿತ್ವ ರೀತಿಯಲ್ಲಿ ಗ್ಲಾಸ್, ಸ್ಟೀಲ್, ಪೇಪರ್ ಮತ್ತಿತರ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ಸರಬರಾಜು ಮಾಡುವುದನ್ನು ಉತ್ತೇಜಿಸುವುದು ಅಗತ್ಯವೆಂದು ತೀರ್ಮಾನಿಸಲಾಗಿದೆ.
ಅದರಂತೆ ಈ ಕೆಳಕಂಡ ಆದೇಶ.
೮೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ಭಾಗ ೧ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 83 ರಾಸವಿ 2018, ಬೆಂಗಳೂರು, ದಿನಾಂಕ: 05.09.2018
ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವ- ವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ- ಸಮಾರಂಭಗಳಲ್ಲಿ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್ನ (Single use packaged watyer bottles) ನೀರಿನ ಬಳಕೆ/ಸರಬರಾಜು ಮಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದೆ. ಇಂತಹ ಸಭೆ-ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ ರೀತಿಯಲ್ಲಿ ಗ್ಲಾಸ್, ಸ್ಟೀಲ್, ಪೇಪರ್ ಮತ್ತಿತರ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸತಕ್ಕದ್ದು ಹಾಗೂ ಈ ಆದೇಶಕ್ಕೆ ಲಗತ್ತಿಸಿದ ಅನುಬಂಧ-1 ರಲ್ಲಿರಿಸಿರುವಂತೆೆ ಸೂಕ್ತ ಸಾಮೂಹಿಕ ಕುಡಿಯುವ ನೀರು ವಿತರಣಾ ವ್ಯವಸ್ಥೆಯನ್ನು (Common drinking Water dispensing system) ಏರ್ಪಡಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಎಸ್. ರೋಹಿಣಿ
ಸರ್ಕಾರದ ಅಧೀನ ಕಾರ್ಯದರ್ಶಿ
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. (ರಾಜಕೀಯ) ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 83 ರಾಸವಿ 2018, ದಿನಾಂಕ: 05.09.2018ರ ಅನುಬಂಧ -1
1. ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂಧ ಅನುದಾನ ಪಡೆಯುವಂತಹ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ ಸಮಾರಂಭ, ಕಾರ್ಯಾಗಾರ, ಸೆಮಿನಾರ್, ಇತ್ಯಾದಿಗಳಲ್ಲಿ 20 ಲೀಟರ್ ಅಥವಾ ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಕ್ಯಾನ್ಗಳಲ್ಲಿ ಶುದ್ಧೀಕರಿಸಿದ ಕುಡಿಯುವ ನೀರಿನ ವಿತರಣಾ ವ್ಯವಸ್ಥೆಯನ್ನು ಏರ್ಪಡಿಸತಕ್ಕದ್ದು.
2. ಕಚೇರಿಗಳಲ್ಲಿ ಸಾಮಾನ್ಯವಾಗಿ ಆಗಾಗ್ಗೆ ಸಭೆ-ಸಮಾರಂಭಗಳು ಏರ್ಪಡುವ ಸಮಿತಿ ಕೊಠಡಿಗಳು, ಕಾನ್ಫರೆನ್ಸ್ ಹಾಲ್ಗಳು ಇತ್ಯಾದಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಜಾಲತಾಣ https:/ /gem.gov.in /ರಲ್ಲಿ ಅನುಮೋದಿಸಲ್ಪಟ್ಟಿರುವ ಅಥವಾ ರಾಜ್ಯ ಸರ್ಕಾರದಿಂದ ಅಂಗೀಕರಿಸಲ್ಪಟ್ಟಿರುವ ಸಂಸ್ಥೆಗಳಿಂದ ಖರೀದಿಸಿದ RO ಮತ್ತು ನೀರು ಶುದ್ಧೀಕರಣ ಘಟಕಗಳನ್ನು ಅನುಸ್ಥಾಪಿಸಿ, ಗಾಜಿನ ಲೋಟ ಅಥವಾ ಸ್ಟೀಲ್ ಲೋಟ ಅಥವಾ ಪೇಪರ್ ಲೋಟ ಅಥವಾ ಇತರೆ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ನೀರು ಕುಡಿಯುವುದಕ್ಕೆ ವ್ಯವಸ್ಥೆ ಮಾಡುವುದು.
3. ಎಲ್ಲಾ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಸಂಸ್ಥೆಗಳ ಕಛೇರಿಗಳಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರು ಸರಬರಾಜಿಗಾಗಿ ಕೇಂದ್ರ ಸರ್ಕಾರದ ಜಾಲತಾಣ https:/ /gem.gov.in ರಲ್ಲಿ ಅನುಮೋದಿಸಲ್ಪಟ್ಟಿರುವ ಸಂಸ್ಥೆಗಳಿಂದ ಖರೀದಿಸಿದ ಅಥವಾ ಯಾವುದಾದರೂ ಉತ್ತಮ RO ಶುದ್ಧ ನೀರಿನ ಘಟಕಗಳನ್ನು ವ್ಯವಸ್ಥಾಪನೆಗೊಳಿಸುವುದು.
PR. 424
ಕೆ.ಎಸ್. ರೋಹಿಣಿ
ಸರ್ಕಾರದ ಅಧೀನ ಕಾರ್ಯದರ್ಶಿ
SC. 100
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. (ರಾಜಕೀಯ)
ಕಂದಾಯ ಸಚಿವಾಲಯ
ವಿಷಯ :- ದೇವಸ್ಥಾನ ಮತ್ತು ಇತರೆ ಧಾರ್ಮಿಕ ಸಂಸ್ಥೆಗಳಿಗೆ 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೊಷಿಸಿರುವಂತೆ ವರ್ಷಾಸನ ಮೊತ್ತವನ್ನು ಕನಿಷ್ಠ `.48,000/- ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸುವ ಬಗ್ಗೆ.
ಓದಲಾಗಿದೆ :- 1. ಸರ್ಕಾರದ ಆದೇಶ ಸಂಖ್ಯೆ: ಕಂಇ 141 ಮುಅಬಿ 2006 ದಿನಾಂಕ: 15.11.2006. 2. ಆರ್ಥಿಕ ಇಲಾಖೆಯ ಸಂಖ್ಯೆ: ಅಇ 590 ವೆಚ್ಚ-7/2018 ದಿನಾಂಕ: 18.08.2018. 3. ಯೋಜನಾ ಇಲಾಖೆಯ ಸಂಖ್ಯೆ: ಪಿಡಿ 27 ಪಿಎಫ್ಓ 2018 ದಿನಾಂಕ: 26.07.2018. 4. ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುಅಬಿ 2018 ದಿನಾಂಕ: 29.05.2018. 5. ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ: ಎಸಿಟಿ 3 ಸಿಆರ್ 18 2007-08
ದಿನಾಂಕ: 19.04.2018.
ಪ್ರಸ್ತಾವನೆ :-
ಮೇಲೆ ಓದಲಾದ (1)ರ ಆದೇಶದಲ್ಲಿ ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರನ್ವಯ ದೇವಸ್ಥಾನಗಳು ಮತ್ತು ಇತರೆ ಧಾರ್ಮಿಕ ಸಂಸ್ಥೆಗಳಿಗೆ ನಿಗಧಿಪಡಿಸಿರುವ ವರ್ಷಾಸನವನ್ನು ಮೂರು ಪಟ್ಟು ಹೆಚ್ಚಿಸಿ, ಮಂಜೂರು ಮಾಡಲು 2006-07ನೇ ಸಾಲಿನಿಂದ ಜಾರಿಗೆ ಬರುವಂತೆ ಅನುಮತಿ ನೀಡಿ ಆದೇಶಿಸಲಾಗಿತ್ತು.
ಮೇಲೆ ಓದಲಾದ (2) ಮತ್ತು (3) ರಲ್ಲಿ ಆರ್ಥಿಕ ಮತ್ತು ಯೋಜನಾ ಇಲಾಖೆಗಳು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರನ್ವಯ ಬಾಧಿತರಾದ 4,110 ಅರ್ಹ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಇನಾಂ ರದ್ದಿಯಾತಿ ಅಧಿನಿಯಮದ ಪ್ರಕಾರ ಕನಿಷ್ಠ ವರ್ಷಾಸನ ಮೊತ್ತವನ್ನು ವಾರ್ಷಿಕವಾಗಿ `.48,000/-ಗಳಿಗೆ ಸಂದಾಯ ಮಾಡುವಂತೆ ಸಹಮತಿ ನೀಡಲಾಗಿರುತ್ತದೆ.
ಮೇಲೆ ಓದಲಾದ (4)ರ ಆದೇಶದಲ್ಲಿ 2018-19ನೇ ಸಾಲಿನ ಆಯವ್ಯಯದಲ್ಲಿ ಲೆಕ್ಕ ಶೀರ್ಷಿಕೆ 2506-00-101-4-01 ಇನಾಂ ಅಲ್ಲದ ಭೂಮಿಗಳಿಗೆ ಪರಿಹಾರ 103 ಸಹಾಯಾನುದಾನ ಸಾಮಾನ್ಯ ಇದರಡಿ ಒದಗಿಸಿರುವ `.2129.00 ಲಕ್ಷಗಳ ವರ್ಷಾಸನ ಅನುದಾನದಲ್ಲಿ `.25.00 ಲಕ್ಷಗಳನ್ನು ಬಿಡುಗಡೆ ಮಾಡಿ ಆದೇಶಿಸಲಾಗಿರುತ್ತದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ೮೭೫ಮೇಲೆ ಓದಲಾದ (5)ರ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯಲ್ಲಿ, 2018-19ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ: 318 ರಲ್ಲಿ ಸನ್ಮಾನ್ಯ ಮುಖ್ಯಮಂತ್ರಿಯವರು ಕರ್ನಾಟಕ ಭೂಸುಧಾರಣಾ ಅಧಿನಿಯಮ 1961ರಿಂದ ಬಾಧಿತರಾದ 4,110 ಅರ್ಹ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಇನಾಂ ರದ್ದಿಯಾತಿ ಅಧಿನಿಯಮದ ಪ್ರಕಾರ ಪ್ರತಿ ವರ್ಷ ಸಂದಾಯ ಮಾಡಬೇಕಾದ ತಸ್ತೀಕ್ ಮೊತ್ತವನ್ನು 48,000/- `.ಗಳಿಗೆ ಅನುಗುಣವಾಗಿ ವರ್ಷಾಸನ (ವಾರ್ಷಿಕವಾಗಿ) ಸಂದಾಯ ಮಾಡಲು `.20.00 ಕೋಟಿಗಳನ್ನು ಒದಗಿಸಲಾಗುವುದು ಎಂದು ಘೋಷಿಸಿರುವಂತೆ, ರಾಜ್ಯದಲ್ಲಿನ ದೇವಸ್ಥಾನಗಳು ಮತ್ತು ಇತರೆ ಧಾರ್ಮಿಕ ಸಂಸ್ಥೆಗಳು ಹೊಂದಿದ್ದ ನಾನ್ ಇನಾಂ ಜಮೀನುಗಳು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರನ್ವಯ ಸರ್ಕಾರದಲ್ಲಿ ವಿಹಿತವಾಗಿರುವುದಕ್ಕೆ ಪರಿಹಾರಾರ್ಧವಾಗಿ ಪಾವತಿಸುತ್ತಿರುವ ವರ್ಷಾಸನ ಮೊತ್ತವನ್ನು 2018-19ನೇ ಸಾಲಿನಿಂದ ಜಾರಿಗೆ ಬರುವಂತೆ `.47,999/- ಕ್ಕಿಂತ ಕಡಿಮೆ ವರ್ಷಾಸನ ನಿಗದಿಯಾಗಿರುವ/ ನಿಗದಿಯಾಗುವ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಕನಿಷ್ಠ ವರ್ಷಾಸನ ಮೊತ್ತವನ್ನು ವಾರ್ಷಿಕವಾಗಿ `.48,000/- ಗಳಿಗೆ ಹೆಚ್ಚಿಸಿ ನಿಗಧಿಪಡಿಸಿ ಮಂಜೂರು ಮಾಡಲು ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಕಂಇ 89 ಮುಅಬಿ 2018, ಬೆಂಗಳೂರು, ದಿನಾಂಕ: 06 ನೇ ಸೆಪ್ಟೆಂಬರ್ 2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ದೇವಸ್ಥಾನಗಳು ಮತ್ತು ಇತರೇ ಧಾರ್ಮಿಕ ಸಂಸ್ಥೆಗಳು ಹೊಂದಿದ್ದ ನಾನ್ ಇನಾಂ ಜಮೀನುಗಳು ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರನ್ವಯ ಸರ್ಕಾರದಲ್ಲಿ ವಿಹಿತವಾಗಿರುವುದಕ್ಕೆ ಪರಿಹಾರಾರ್ಥವಾಗಿ 4110 ಅರ್ಹ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಪಾವತಿಸುತ್ತಿರುವ ವರ್ಷಾಸನ ಮೊತ್ತವನ್ನು 2018-19ನೇ ಸಾಲಿನಿಂದ ಜಾರಿಗೆ ಬರುವಂತೆ ಕನಿಷ್ಠ ವರ್ಷಾಸನ ಮೊತ್ತವನ್ನು ವಾರ್ಷಿಕವಾಗಿ `.48,000/-ಗಳಿಗೆ ಹೆಚ್ಚಿಸಿ ನಿಗಧಿಪಡಿಸಿ ಮಂಜೂರು ಮಾಡಿ ಆದೇಶಿಸಿದೆ.
ಹಾಗೂ 2018-19ನೇ ಸಾಲಿನ ಲೆಕ್ಕ ಶೀರ್ಷಿಕೆ ಧಾರ್ಮಿಕ ಛತ್ರಗಳು ಮತ್ತು ಇತರೆ ಸಂಸ್ಥೆಗಳಿಗೆ ವರ್ಷಾಸನ 2506-00-101-4-01 ಇನಾಂ ಅಲ್ಲದ ಭೂಮಿಗಳಿಗೆ ಪರಿಹಾರ-103-ಸಹಾಯಾನುದಾನ ಸಾಮಾನ್ಯರಡಿ ಒದಗಿಸಿರುವ `.2129.00 ಲಕ್ಷಗಳ ಅನುದಾನವನ್ನು ಒದಗಿಸಲಾಗಿದ್ದು, ಮೊದಲನೇ ಹಾಗೂ ಎರಡನೇ ಕಂತಿನ ಒಟ್ಟು `.1064.50 ಲಕ್ಷಗಳ ಅನುದಾನದಲ್ಲಿ ಈಗಾಗಲೇ ಸರ್ಕಾರದ ಆದೇಶ ಸಂಖ್ಯೆ: ಕಂಇ 79 ಮುಅಬಿ 2018 ದಿನಾಂಕ:29.05.2018 ರಲ್ಲಿ `.25.00 ಲಕ್ಷಗಳನ್ನು ಬಿಡುಗಡೆ ಮಾಡಿ ಆದೇಶಿಸಲಾಗಿದ್ದು, ಒಟ್ಟು ಉಳಿಕೆ ಮೊತ್ತ `.1039.50 ಲಕ್ಷಗಳನ್ನು (ಒಂದು ಸಾವಿರದ ಮುವತ್ತೊಂಬತ್ತು ಲಕ್ಷದ ಐವತ್ತು ಸಾವಿರ ರೂಪಾಯಿಗಳು ಮಾತ್ರ) ಗಳನ್ನು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರಿಗೆ ಬಿಡುಗಡೆ ಮಾಡಿ ಆದೇಶಿಸಲಾಗಿದೆ.
ಸದರಿ ಮೊತ್ತವನ್ನು "ಧಾರ್ಮಿಕ ಛತ್ರಗಳು ಮತ್ತು ಇತರೆ ಸಂಸ್ಥೆಗಳಿಗೆ ವರ್ಷಾಸನ ಲೆಕ್ಕ ಶೀರ್ಷಿಕೆ 2506-00-101-4-01 ಇನಾಂ ಅಲ್ಲದ ಭೂಮಿಗಳಿಗೆ
ಪರಿಹಾರ (103) ಸಹಾಯಾನುದಾನದ ಸಾಮಾನ್ಯ" ಇದರಡಿಯಲ್ಲಿ 2018-19ನೇ ಸಾಲಿನ ಆಯವ್ಯಯದಲ್ಲಿ ಒದಗಿಸಿರುವ ಅನುದಾನದಲ್ಲಿ ಭರಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ : ಆಇ 590 ವೆಚ್ಚ-7/2018 ದಿನಾಂಕ: 18.08.2018 ಮತ್ತು ಯೋಜನಾ ಇಲಾಖೆಯ ಟಿಪ್ಪಣಿ ಸಂಖ್ಯೆ : ಪಿಡಿ 27 ಪಿಎಫ್ಓ 2018 ದಿನಾಂಕ :26.07.2018 ರಲ್ಲಿ ನೀಡಿರುವ ಸಹಮತಿಗಳನ್ವಯ ಹೊರಡಿಸಲಾಗಿದೆ.
PR. 425
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಎಸ್. ನಾಗರತ್ನಮ್ಮ
SC. 25
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ. (ಮುಜರಾಯಿ)
ಕಂದಾಯ ಸಚಿವಾಲಯ
ವಿಷಯ : ಶ್ರೀ ವ್ಯಾಸರಾಜ ಮಠದ (ಸೋಸಲೆ), ಆಡಳಿತಗಾರರ ಅಧಿಕಾರವನ್ನು ಹಿಂಪಡೆಯುವ ಬಗ್ಗೆ. ಉಲ್ಲೇಖ : (1) ಸರ್ಕಾರದ ಆದೇಶ ಸಂಖ್ಯೆ: ಕಂಇ 67 ಮುದಾಪ್ರ 2002 ದಿನಾಂಕ: 26.05.2012.
(2) ಸರ್ಕಾರದ ಆದೇಶ ಸಂಖ್ಯೆ: ಕಂಈ 34 ಮುಸೇವಿ 2014 ದಿನಾಂಕ: 24.05.2014. (3) ಸರ್ಕಾರದ ಆದೇಶ ಸಂಖ್ಯೆ: ಕಂಇ 34 ಮುಸೇವಿ 2014 ದಿನಾಂಕ: 21.05.2015. (4) ಸರ್ಕಾರದ ಆದೇಶ ಸಂಖ್ಯೆ: ಕಂಇ 34 ಮುಸೇವಿ 2014 (ಭಾ) ದಿನಾಂಕ: 17.05.2016. (5) ಸರ್ಕಾರದ ಆದೇಶ ಸಂಖ್ಯೆ: ಕಂಇ 34 ಮುಸೇವಿ 2014 (ಭಾ) ದಿನಾಂಕ: 17.05.2017. (6) ಆಡಳಿತಗಾರರು, ಶ್ರೀ ವ್ಯಾಸರಾಜ ಮಠ (ಸೋಸಲೆ) ಬೆಂಗಳೂರು ಇವರ ಪತ್ರ ಸಂಖ್ಯೆ:
ಎಡಿಎಂ/228/ಎಸ್.ವಿ.ಎಂ/2012 ದಿನಾಂಕ: 21.05.2018.
ಪ್ರಸ್ತಾವನೆ :-
ಮೇಲೆ ಓದಲಾದ (1)ರ ಸರ್ಕಾರದ ಆದೇಶದಲ್ಲಿ ಶ್ರೀ ವ್ಯಾಸರಾಜ ಮಠ (ಸೋಸಲೆ) ದ ಸಮಸ್ತ ಆಸ್ತಿಗಳನ್ನು ಅಂದರೆ ಚರ/ಸ್ಥಿರ ಲೆಕ್ಕ ಪತ್ರ, ದಾಖಲೆ, ಹಣಕಾಸು ಹಾಗೂ ದೇಶದ ವಿವಿಧ ಭಾಗಗಳಲ್ಲಿರುವ ಶ್ರೀ ಮಠದ ಶಾಖೆಗಳ ಆಡಳಿತವನ್ನು ವಶಕ್ಕೆ ತೆಗೆದುಕೊಂಡು ಆಡಳಿತ ನಿರ್ವಹಣೆ ನಡೆಸಲು ಆಡಳಿತಗಾರರನ್ನು ನೇಮಿಸಲು ಸರ್ಕಾರವು ನಿರ್ಧರಿಸಿ ಶ್ರೀ ಕೆ. ಜೈರಾಜ್, ಭಾ.ಆ.ಸೇ (ನಿವೃತ್ತ) ಅಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು ಇವರನ್ನು ಆಡಳಿತಗಾರರನ್ನಾಗಿ ನೇಮಕ ಮಾಡಿ ಆದೇಶಿಸಲಾಗಿತ್ತು. ಇದರ ಜೊತೆಗೆ ಸರ್ಕಾರವು ಆಡಳಿತಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಲು ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಶ್ರೀ ಎಂ.ಎನ್. ವೆಂಕಟಾಚಲಯ್ಯ, ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎಸ್.ಆರ್.ವೆಂಕಟೇಶಮೂರ್ತಿ ಹಾಗೂ ಇತರರ ಗಣ್ಯರನ್ನೊಳಗೊಂಡಂತೆ ಒಂದು ಸಲಹಾ ಸಮಿತಿಯನ್ನು ರಚಿಸಿತ್ತು. ಅದರಂತೆ, ಮೇಲೆ ಓದಲಾದ (1)ರ ಸರ್ಕಾರದ ಆದೇಶದನ್ವಯ ಆಡಳಿತಗಾರರು ದಿನಾಂಕ:26.05.2012 ರಂದು ಶ್ರೀ ಮಠದ ಅಧಿಕಾರವನ್ನು ವಹಿಸಿಕೊಂಡಿರುತ್ತಾರೆ.
೮೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ಭಾಗ ೧ನಂತರ ಸದರಿ ಆಡಳಿತಗಾರರ ಅಧಿಕಾರದ ಅವಧಿಯನ್ನು ಸರ್ಕಾರವು ಉಲ್ಲೇಖ (2) (3) (4) ಹಾಗೂ (5)ರಲ್ಲಿ ಓದಲಾದ ಸರ್ಕಾರದ ಆದೇಶಗಳನ್ವಯ ಕಾಲಕಾಲಕ್ಕೆ ಮುಂದುವರೆಸಿ ಆದೇಶಿಸಲಾಗಿತ್ತು. ಸದರಿ ಆಡಳಿತಗಾರರ ಅಧಿಕಾರದ ಅವಧಿಯು ದಿನಾಂಕ:25.05.2018ರವರೆಗೆ ಚಾಲನೆಯಲ್ಲಿದ್ದಿತು.
ಮೇಲೆ ಓದಲಾದ (6) ರಲ್ಲಿ ಆಡಳಿತಗಾರರು ಶ್ರೀ ವ್ಯಾಸರಾಜ ಮಠ (ಸೋಸಲೆ) ಬೆಂಗಳೂರು ಇವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಇತ್ತೀಚಿನ ಬೆಳವಣಿಗೆಯಲ್ಲಿ ಜುಲೈ 2017ರಂದು ಶ್ರೀ ವಿದ್ಯಾ ಮನೋಹರ ತೀರ್ಥ, ಪೀಠಾಧಿಪತಿ, ಶ್ರೀ ವ್ಯಾಸರಾಜ ಮಠ (ಸೋಸಲೆ) ಇವರು ಪೀಠತ್ಯಾಗ ಮಾಡಿ ದಿನಾಂಕ: 02.07.2017ರಂದು ತಿರುಮಕೂಡಲಿನಲ್ಲಿ ನಡೆದ ಸಮಾರಂಭದಲ್ಲಿ ಡಾ|| ಡಿ. ಪ್ರಹ್ಲಾದಚಾರ್ಯ ರವರಿಗೆ ಪೀಠವನ್ನು ಹಸ್ತಾಂತರಿಸಿರುತ್ತಾರೆ.
ಅದರನ್ವಯ ಡಾ|| ಡಿ. ಪ್ರಹ್ಲಾದಾಚಾರ್ಯರು ಶ್ರೀಮಠದ 41 ನೇ ಪೀಠಾಧಿಪತಿಗಳಾಗಿ, ಶ್ರೀ ವಿದ್ಯಾ ಶ್ರೀಶತೀರ್ಥರ ಹೆಸರಿನಲ್ಲಿ ಪೀಠಾರೋಹಣ ಮಾಡಿರುತ್ತಾರೆ.
ಆಡಳಿತಗಾರರ ಅವಧಿಯಲ್ಲಿ ಶ್ರೀ ಮಠವು ಅವ್ಯವಸ್ಥೆಗಳಿಂದ ವಿಮುಕ್ತಗೊಂಡು ಈಗ ಅತ್ಯುತ್ತಮ ಹಣಕಾಸು ನಿರ್ವಹಣೆ, ಗಣಕೀಕೃತ ಲೆಕ್ಕ ಪತ್ರ ನಿರ್ವಹಣೆ, ನುರಿತ ಚಾರ್ಟೆಡ್ ಅಕೌಂಟೆಂಟ್ ಮತ್ತು ಆಂತರಿಕ ಲೆಕ್ಕ ಪರಿಶೋಧಕರಿಂದ ಲೆಕ್ಕ ಪತ್ರ ತಪಾಸಣೆ ಹಾಗೂ ವೆಚ್ಚಗಳ ಕುರಿತು ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರದ ಆದೇಶದನ್ವಯ ಸತತವಾಗಿ 6 ವರ್ಷಗಳ ಕಾಲ ಆಡಳಿತಗಾರರಾಗಿ ಶ್ರೀ ಮಠದಲ್ಲಿ ಕರ್ತವ್ಯ ನಿರ್ವಹಿಸಿ ಅತ್ಯುತ್ತಮ ಕ್ರಮಗಳನ್ನು ಕೈಗೊಂಡಿದ್ದು, ಆಡಳಿತದ ಅವಧಿಯು ದಿನಾಂಕ: 25.05.2018ರಂದು ಮುಕ್ತಾಯಗೊಂಡಿರುವುದರಿಂದ, ಪೀಠಾಧಿಪತಿಗಳಿಗೆ ಸದರಿ ಮಠದ ಅಧಿಕಾರವನ್ನು ಹಸ್ತಾಂತರಿಸಿರುವುದಾಗಿ ವರದಿ ಮಾಡಿರುತ್ತಾರೆ.
ಆಡಳಿತಗಾರರಾದ ಶ್ರೀ ಕೆ. ಜೈರಾಜ್, ಇವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಪರಿಶೀಲಿಸಲಾಗಿ, ಈ ಮೊದಲು ಸದರಿಯವರನ್ನು ಸರ್ಕಾರದ ಅನುಮೋದನೆ ಪಡೆದು ಆಡಳಿತಗಾರರನ್ನಾಗಿ ನೇಮಕ ಮಾಡಿ ಆದೇಶಿಸಿದ್ದರ ಮೇರೆಗೆ ಶ್ರೀ ಕೆ. ಜೈರಾಜ್ ಇವರು ಆಡಳಿತಗಾರರಾಗಿ ದಿನಾಂಕ: 26.05.2012 ರಂದು ಅಧಿಕಾರ ವಹಿಸಿಕೊಂಡಿದ್ದು, ಆಡಳಿತವನ್ನು ಶ್ರೀ ವಿದ್ಯಾ ಶ್ರೀಶತೀರ್ಥರಿಗೆ ಹಸ್ತಾಂತರಿಸುವ ಪೂರ್ವದಲ್ಲಿ ಸರ್ಕಾರದ ಪೂರ್ವಾನುಮೋದನೆ ಪಡೆದಿರುವುದಿಲ್ಲ.
ಸರ್ಕಾರದ ಆದೇಶ ಸಂಖ್ಯೆ: ಕಂಇ 34 ಮುಸೇವಿ 2014, ಬೆಂಗಳೂರು: ದಿನಾಂಕ: 06ನೇ ಸೆಪ್ಟೆಂಬರ್.2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ವ್ಯಾಸರಾಜ ಮಠದ ಆಡಳಿತಗಾರರಾಗಿ ಶ್ರೀ ಕೆ. ಜೈರಾಜ್, ಭಾ.ಆ.ಸೇ. (ನಿವೃತ್ತ) ಇವರು ಸರ್ಕಾರದ ಆದೇಶಗಳನ್ವಯ ದಿನಾಂಕ: 26.05.2012ರಿಂದ 25.05.2018ರವರೆಗೆ 6 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದು, ಮಠದ ಆಡಳಿತವನ್ನು ಪೀಠಾಧಿಪತಿಗಳಿಗೆ ವಹಿಸಿರುವುದಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿರುವುದರಿಂದ ಸದರಿಯವರ ಆಡಳಿತಾಧಿಕಾರದ ಅವಧಿ ದಿನಾಂಕ:25.05.2018ಕ್ಕೆ ಮುಕ್ತಾಯಗೊಂಡಿರುತ್ತದೆ.
PR. 426
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಎಸ್. ನಾಗರತ್ನಮ್ಮ
SC. 25
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ. (ಮುಜರಾಯಿ)
ಕಂದಾಯ ಸಚಿವಾಲಯ
ವಿಷಯ :- 2018-19ನೇ ಸಾಲಿನಲ್ಲಿ ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದ ವತಿಯಿಂದ ಧನಸಹಾಯ ನೀಡುವ ಕುರಿತು ಮಾರ್ಗಸೂಚಿಯನ್ನು ಹೊರಡಿಸುವ ಬಗ್ಗೆ.
ಓದಲಾಗಿದೆ :- (1) ಸರ್ಕಾರದ ಆದೇಶ ಸಂಖ್ಯೆ:ಕಂಇ 179 ಮುಅಬಿ 2014 ದಿನಾಂಕ: 07-11-2014 (2) ಸರ್ಕಾರದ ಆದೇಶ ಸಂಖ್ಯೆ:ಕಂಇ 91 ಮುಅಬಿ 2016 ದಿನಾಂಕ: 25-10-2016. (3) ಸರ್ಕಾರದ ಆದೇಶ ಸಂಖ್ಯೆ: ಕಂಇ 70 ಮುಅಬಿ 2017 ದಿನಾಂಕ: 20-09-2017. (4) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ: ಚಾರ್ಧಾಮ್ ಮಾನಸ ಸರೋವರ/ಸಿಆರ್/01/2018-19 ದಿನಾಂಕ: 05-06-2018.
ಪ್ರಸ್ತಾವನೆ :-
ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ 2014-15ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ ಚಾರ್ಧಾಮ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಧನ ಸಹಾಯ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿತ್ತು ಹಾಗೂ ಸದರಿ ಯೋಜನೆಗೆ ಸಂಬಂಧಿಸಿದಂತೆ ಮಾರ್ಗಸೂಚಿಯನ್ನು ಸಹ ಹೊರಡಿಸಲಾಗಿತ್ತು.
ಮೇಲೆ (2)ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಮೇಲೆ ಓದಲಾದ (1)ರ ಆದೇಶದಲ್ಲಿನ ಮಾರ್ಗಸೂಚಿಯನ್ನು ಹಿಂಪಡೆದು ಪರಿಷ್ಕøತ ಮಾರ್ಗಸೂಚಿಯನ್ನು ಹೊರಡಿಸಲಾಗಿತ್ತು.
ಮೇಲೆ (3) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಮೇಲೆ ಓದಲಾದ (2)ರ ಆದೇಶದಲ್ಲಿನ ಮಾರ್ಗಸೂಚಿಯನ್ನು ಹಿಂಪಡೆದು ಪರಿಷ್ಕøತ ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ.
ಮೇಲೆ (4)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ 2018-19ನೇ ಸಾಲಿಗೆ ಕೈಲಾಸ ಮಾನಸ ಸರೋವರ ಹಾಗೂ ಚಾರ್ಧಾಮ್ ಯಾತ್ರೆಗಳ ಯಾತ್ರಾರ್ಥಿಗಳಿಗೆ ಧನ ಸಹಾಯ ನೀಡುವ ಯೋಜನೆಯಡಿ ಆಯವ್ಯಯದಲ್ಲಿ `.646.00 ಲಕ್ಷಗಳನ್ನು ಒದಗಿಸಲಾಗಿದ್ದು, ಸದರಿ ಅನುದಾನದಲ್ಲಿ `.346.00 ಲಕ್ಷಗಳ ಅನುದಾನವನ್ನು 2018-19 ಸಾಲಿನಲ್ಲಿ ಚಾರ್ಧಾಮ್ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗಾಗಿ ವಿನಿಯೋಗಿಸಲು ಅನುಮತಿ ನೀಡುವಂತೆ ಹಾಗೂ 2018-19ನೇ ಸಾಲಿನ ಆಯವ್ಯಯದಲ್ಲಿ ಮಂಜೂರಾಗಿರುವ ಅನುದಾನಕ್ಕನುಗುಣವಾಗಿ ಫಲಾನುಭವಿಗಳಗೆ ಧನ ಸಹಾಯವನ್ನು ಪಾವತಿಸಲು ಮಾರ್ಗಸೂಚಿ ಹೊರಡಿಸುವಂತೆ ಕೋರಿರುತ್ತಾರೆ.
ಅದರಂತೆ ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ೮೭೭ಸರ್ಕಾರಿ ಆದೇಶ ಸಂಖ್ಯೆ:ಕಂಇ 101 ಮುಅಬಿ 2018, ಬೆಂಗಳೂರು, ದಿನಾಂಕ: 05 ನೇ ಸೆಪ್ಟೆಂಬರ್, 2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2018-19ನೇ ಸಾಲಿನ ಲೆಕ್ಕ ಶೀರ್ಷಿಕೆ 2250-00-103-5-08 ಮಾನಸ ಸರೋವರ ಯಾತ್ರಾರ್ಥಿಗಳಿಗೆ ನೆರವು 100 ಧನ ಸಹಾಯ/ಪರಿಹಾರ ಯೋಜನೆಯಡಿ ಒದಗಿಸಿರುವ `.646.00 ಲಕ್ಷಗಳ ಅನುದಾನದಲ್ಲಿ `.346.00 ಲಕ್ಷಗಳ ಅನುದಾನವನ್ನು ಚಾರ್ಧಾಮ್ ಯಾತ್ರಾರ್ಥಿಗಳಿಗೆ ಹಣ ವಿನಿಯೋಗಿಸಲು ಅನುಮತಿ ನೀಡಿದೆ ಹಾಗೂ ಈ ಹಿಂದೆ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ:ಕಂಇ 70 ಮುಅಬಿ 2017 ದಿನಾಂಕ: 20-09-2017ರ ಮಾರ್ಗಸೂಚಿಯನ್ನು ಹಿಂಪಡೆದು 2018-19ನೇ ಸಾಲಿಗೆ ಅನ್ವಯವಾಗುವಂತೆ ಪರಿಷ್ಕøತ ಮಾರ್ಗಸೂಚಿಗಳನ್ನು ಹೊರಡಿಸಿ ಆದೇಶಿಸಲಾಗಿದೆ. ಪರಿಷ್ಕøತ ಮಾರ್ಗಸೂಚಿಯನ್ನು ಅನುಬಂಧದಲ್ಲಿ ಲಗತ್ತಿಸಿದೆ.
ಈ ಮಾರ್ಗಸೂಚಿಗಳನ್ನು ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನಸಹಾಯ ನೀಡುವ ಅನುಷ್ಠಾನಕ್ಕಾಗಿ ಅನುಸರಿಸುವಂತೆ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ.ಎಸ್. ನಾಗರತ್ನಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಮುಜರಾಯಿ) ಸರ್ಕಾರಿ ಆದೇಶ ಸಂಖ್ಯೆ: ಕಂಇ 101 ಮುಅಬಿ 2018, ಬೆಂಗಳೂರು, ದಿನಾಂಕ: 05 ನೇ ಸೆಪ್ಟೆಂಬರ್, 2018ರ
ಮಾರ್ಗಸೂಚಿ
ಅನುಬಂಧ
ಕರ್ನಾಟಕ ರಾಜ್ಯದ ವತಿಯಿಂದ ಚಾರ್ಧಾಮ್ (ಬದರಿನಾಥ್, ಕೇದಾರನಾಥ್, ಗಂಗೋತ್ರಿ ಮತ್ತು ಯಮುನೋತ್ರಿ) ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನಸಹಾಯ ಪಾವತಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳು.
1. 2018-19ನೇ ಸಾಲಿನಲ್ಲಿ ಕರ್ನಾಟಕದಿಂದ ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಗರಿಷ್ಠ `.20,000/-ರಂತೆ ಧನ ಸಹಾಯವನ್ನು ನೀಡಲಾಗುವುದು.
2. ಚಾರ್ಧಾಮ್ ಯಾತ್ರಾರ್ಥಿಗಳು ನಾಲ್ಕು ಪುಣ್ಯ ಕ್ಷೇತ್ರಗಳ (ಬದರಿನಾಥ್, ಕೇದಾರ್ನಾಥ್, ಗಂಗೋತ್ರಿ, ಯಮುನೋತ್ರಿ) ದರ್ಶನವನ್ನು ಪೂರೈಸಿರುವ ಬಗ್ಗೆ ಉತ್ತರಖಾಂಡ ಪ್ರವಾಸೋದ್ಯಮ ಮಂಡಳಿ ನೀಡುವ (Tourist/ Pilgrim Registration & Tracking Access Card) ಪಿಲಿಗ್ರೀಮ್ ಕಾರ್ಡ್ನ್ನು ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು.
3. ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. 4. ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿರುವ ಬಗ್ಗೆ ಈ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸತಕ್ಕದ್ದು.
I. ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನೀಡಿರುವ "ಗುರುತಿನ ಚೀಟಿ" (Voter ID) ಹಾಗೂ "ಆಧಾರ್ ಗುರುತಿನ ಚೀಟಿ" II. ಎರಡು ಭಾವಚಿತ್ರ.
5. ಈ ಯಾತ್ರೆಯು ಏಪ್ರಿಲ್ ಮಾಹೆಯಲ್ಲಿ ಪ್ರಾರಂಭವಾಗಿ ನವಂಬರ್ 10ರಂದು ಅಂತಿಮ ಚರಣದ ಯಾತ್ರೆಯು ಮುಕ್ತಾಯಗೊಳ್ಳಲಿದ್ದು ನವೆಂಬರ್ 30ರ ಅವಧಿಯೊಳಗಾಗಿ ಎಲ್ಲಾ ಅಗತ್ಯ ದಾಖಲೆಗಳನ್ನು ಆನ್ಲೈನ್/ ಮುದ್ದಾಂ ಮೂಲಕ ಸಲ್ಲಿಸತಕ್ಕದ್ದು. ನಂತರ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
6. ಕರ್ನಾಟಕ ರಾಜ್ಯದಿಂದ ನಾಲ್ಕು ಪುಣ್ಯ ಕ್ಷೇತ್ರಗಳ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳು ಆಯಾ ಆರ್ಥಿಕ ವರ್ಷದ ಮೊದಲ ದಿನಕ್ಕೆ ಅನ್ವಯಿಸುವಂತೆ ಏಪ್ರಿಲ್ 1ಕ್ಕೆ 45 ವರ್ಷಗಳ ಮೇಲ್ಪಟ್ಟವರಾಗಿರತಕ್ಕದ್ದು, 45 ವರ್ಷ ವಯಸ್ಸಿನ ಕೆಳಗಿನವರ ಅರ್ಜಿಗಳನ್ನು ಪರಿಗಣಿಸ -ಲಾಗುವುದಿಲ್ಲ, 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ವಯಸ್ಸಿಗೆ ಸಂಬಂಧಿಸಿದ ಸೂಕ್ತ ದಾಖಲೆಯನ್ನು ಹಾಜರುಪಡಿಸುವುದು. 7. ಯಾತ್ರಾರ್ಥಿಗಳು ಸಹಾಯ ಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ, ಈ ಬಗ್ಗೆ ಯಾತ್ರಾರ್ಥಿಗಳು `.20/-ಗಳ ಛಾಪಾ ಕಾಗದದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ದೃಡೀಕರಣ ನೀಡತಕ್ಕದ್ದು.
8. ನಿಗದಿತ ಅವಧಿಯಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ಪರಿಶೀಲಿಸಿ ಎಲ್ಲಾ ಅರ್ಹ ಅರ್ಜಿದಾರರ ಹೆಸರುಗಳನ್ನು ಲಾಟರಿ ಮುಖಾಂತರ ಅನುದಾನಕ್ಕನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಹಾಯ ಧನವನ್ನು ಆರ್.ಟಿ.ಜಿ.ಎಸ್ ಮೂಲಕ ನೀಡಲಾಗುವುದು.
ಸದರಿ ಲಾಟರಿಯನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಿಕ ಸದಸ್ಯರು, ಕೇಂದ್ರ ಸ್ಥಾನಿಕ ಸಹಾಯಕರು ಹಾಗೂ ಪ್ರವರ್ಗ 'ಎ' ದೇವಾಲಯದ ಮೂರು ಜನ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ 05 ಜನ ಸದಸ್ಯರ ಸಮಿತಿಯ ಸಮಕ್ಷಮದಲ್ಲಿ ಪೂರ್ಣವಾಗಿ ವೀಡಿಯೋ ಚಿತ್ರೀಕರಣದೊಂದಿಗೆ ಮಾಡುವುದು.
9. ಕರ್ನಾಟಕ ರಾಜ್ಯದಲ್ಲಿರುವ ಕೇಂದ್ರ/ ರಾಜ್ಯ ಸರ್ಕಾರಿ ನೌಕರರು ಸಹ ಈ ಸೌಲಭ್ಯವನ್ನು ಪಡೆಯಲು ಅರ್ಹರಾಗಿರುತ್ತಾರೆ.
10. ಚಾರ್ಧಾಮ್ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಒಟ್ಟಾರೆ ಯೋಜನೆಯ ಬಗ್ಗೆ ಪ್ರಕಟಣೆ ನೀಡಿ ನಿರ್ದಿಷ್ಠ ಸಂಖ್ಯೆಯ ಫಲಾನುಭವಿಗಳಿಗೆ ಮಾತ್ರ ಸಹಾಯ ಧನ ನೀಡುವ ಬಗ್ಗೆ ಸಾರ್ವಜನಿಕರಿಗೆ ಸೂಚನೆ ನೀಡಿ ಅರ್ಜಿಗಳನ್ನು ಆಹ್ವಾನಿಸಿ ಅನುದಾನದ ಲಭ್ಯತೆಯ ಮೇರೆಗೆ ಮಾತ್ರ ಧನ ಸಹಾಯ ನೀಡತಕ್ಕದ್ದು.
PR. 427
ಬಿ.ಎಸ್. ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ
SC. 25
ಕಂದಾಯ ಇಲಾಖೆ. (ಮುಜರಾಯಿ)೮೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ಭಾಗ ೧
ಕಂದಾಯ ಸಚಿವಾಲಯ
ವಿಷಯ :- 2018-19ನೇ ಸಾಲಿನಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಸರ್ಕಾರದ ವತಿಯಿಂದ ಧನಸಹಾಯ ನೀಡುವ ಕುರಿತು ಮಾರ್ಗಸೂಚಿಯನ್ನು ಹೊರಡಿಸುವ ಬಗ್ಗೆ. ಓದಲಾಗಿದೆ :- 1. ಸರ್ಕಾರದ ಆದೇಶ ಸಂಖ್ಯೆ: ಕಂಇ 01 ಮುಅಬಿ 2006 ದಿನಾಂಕ: 03-06-2006 2. ಸರ್ಕಾರದ ಆದೇಶ ಸಂಖ್ಯೆ: ಕಂಇ 107 ಮುಅಬಿ 2010 ದಿನಾಂಕ: 02-07-2010 3. ಸರ್ಕಾರದ ಆದೇಶ ಸಂಖ್ಯೆ: ಕಂಇ 72 ಮುಅಬಿ 2017 ದಿನಾಂಕ: 11.10.2017. 4. ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ: ಚಾರ್ಧಾಮ್ ಮಾನಸ ಸರೋವರ/ಸಿಆರ್/01/2018-19 ದಿನಾಂಕ: 05.06.2018.
ಪ್ರಸ್ತಾವನೆ :-
ಮೇಲೆ (1)ರಲ್ಲಿ ಓದಲಾದ ಸರ್ಕಾರದ ಆದೇಶ ದಿನಾಂಕ: 03.06.2006ರಲ್ಲಿ ಕರ್ನಾಟಕ ಸರ್ಕಾರವು 2006-07ನೇ ಸಾಲಿನಲ್ಲಿ ಆಯವ್ಯಯ ಭಾಷಣದಲ್ಲಿ ಪ್ರಕಟಿಸಿರುವಂತೆ ಕೈಲಾಸ ಮಾನಸ ಸರೋವರ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ತಲಾ `.25,000.00ಗಳ ಧನ ಸಹಾಯ ಮಂಜೂರು ಮಾಡಲು ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ.
ಮೇಲೆ (2)ರಲ್ಲಿ ಓದಲಾದ ಸರ್ಕಾರದ ಆದೇಶ ದಿನಾಂಕ: 02.07.2010ರಲ್ಲಿ ಕೈಲಾಸ ಮಾನಸ ಸರೋವರ ಯೋಜನೆಯಡಿ ಕರ್ನಾಟಕದಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಪ್ರತಿ ಯಾತ್ರಿಕರಿಗೆ ಸರ್ಕಾರವು ನೀಡುತ್ತಿರುವ ಧನ ಸಹಾಯ `.25.000.00ಗಳನ್ನು `.30,000.00ಗಳಿಗೆ ಹೆಚ್ಚಿಸಿ ಆದೇಶ ಹೊರಡಿಸಲಾಗಿರುತ್ತದೆ.
ಮೇಲೆ (3) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ ಈ ಹಿಂದೆ ಹೊರಡಿಸಲಾಗಿದ್ದ ಮೇಲೆ ಓದಲಾದ (2)ರ ಆದೇಶದಲ್ಲಿನ ಮಾರ್ಗಸೂಚಿಯನ್ನು ಹಿಂಪಡೆದು ಪರಿಷ್ಕøತ ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ.
ಮೇಲೆ (4)ರಲ್ಲಿ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ 2018-19ನೇ ಸಾಲಿಗೆ ಕೈಲಾಸ ಮಾನಸ ಸರೋವರ ಹಾಗೂ ಚಾರ್ಧಾಮ್ ಯಾತ್ರೆಗಳ ಯಾತ್ರಾರ್ಥಿಗಳಿಗೆ ಧನ ಸಹಾಯ ನೀಡುವ ಯೋಜನೆಯಡಿ ಆಯವ್ಯಯದಲ್ಲಿ `.646.00 ಲಕ್ಷಗಳನ್ನು ಒದಗಿಸಲಾಗಿದ್ದು, ಸದರಿ ಅನುದಾನದಲ್ಲಿ `.300.00 ಲಕ್ಷಗಳ ಅನುದಾನವನ್ನು 2018-19 ಸಾಲಿನಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗಾಗಿ ವಿನಿಯೋಗಿಸಲು ಅನುಮತಿ ನೀಡುವಂತೆ ಹಾಗೂ 2018-19ನೇ ಸಾಲಿನ ಆಯವ್ಯಯದಲ್ಲಿ ಮಂಜೂರಾಗಿರುವ ಅನುದಾನಕ್ಕನುಗುಣವಾಗಿ ಫಲಾನುಭವಿಗಳಗೆ ಧನಸಹಾಯವನ್ನು ಪಾವತಿಸಲು ಮಾರ್ಗಸೂಚಿ ಹೊರಡಿಸುವಂತೆ ಕೋರಿರುತ್ತಾರೆ.
ಅದರಂತೆ. ಆಯುಕ್ತರ ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ:ಕಂಇ 102 ಮುಅಬಿ 2018, ಬೆಂಗಳೂರು, ದಿನಾಂಕ: 05 ನೇ ಸೆಪ್ಟೆಂಬರ್, 2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2018-19ನೇ ಸಾಲಿನ ಲೆಕ್ಕ ಶೀರ್ಷಿಕೆ 2250-00-103-5-08 ಮಾನಸ ಸರೋವರ ಯಾತ್ರಾರ್ಥಿಗಳಿಗೆ ನೆರವು 100 ಧನ ಸಹಾಯ/ಪರಿಹಾರ ಯೋಜನೆಯಡಿ ಒದಗಿಸಿರುವ `.646.00 ಲಕ್ಷಗಳ ಅನುದಾನದಲ್ಲಿ `.300.00 ಲಕ್ಷಗಳ ಅನುದಾನವನ್ನು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ವಿನಿಯೋಗಿಸಲು ಅನುಮತಿ ನೀಡಿದೆ ಹಾಗೂ ಈ ಹಿಂದೆ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ:ಕಂಇ 72 ಮುಅಬಿ 2017 ದಿನಾಂಕ: 11-10-2017ರ ಮಾರ್ಗಸೂಚಿಯನ್ನು ಹಿಂಪಡೆದು 2018-19ನೇ ಸಾಲಿಗೆ ಅನ್ವಯವಾಗುವಂತೆ ಪರಿಷ್ಕøತ ಮಾರ್ಗಸೂಚಿಗಳನ್ನು ಹೊರಡಿಸಿ ಆದೇಶಿಸಲಾಗಿದೆ. ಪರಿಷ್ಕøತ ಮಾರ್ಗಸೂಚಿಯನ್ನು ಅನುಬಂಧದಲ್ಲಿ ಲಗತ್ತಿಸಿದೆ.
ಈ ಮಾರ್ಗಸೂಚಿಗಳನ್ನು ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನಸಹಾಯ ನೀಡುವ ಅನುಷ್ಠಾನಕ್ಕಾಗಿ ಅನುಸರಿಸುವಂತೆ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಎಸ್. ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ. (ಮುಜರಾಯಿ) ಸರ್ಕಾರಿ ಆದೇಶ ಸಂಖ್ಯೆ: ಕಂಇ 102 ಮುಅಬಿ 2018, ಬೆಂಗಳೂರು,
ದಿನಾಂಕ: 05 ನೇ ಸೆಪ್ಟೆಂಬರ್, 2018ರ
ಮಾರ್ಗಸೂಚಿ
ಅನುಬಂಧ
2018-19 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ವತಿಯಿಂದ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳುವ ಯಾತ್ರಾರ್ಥಿಗಳಿಗೆ ಧನಸಹಾಯ
ಪಾವತಿಸಲು ಅನುಸರಿಸಬೇಕಾದ ಮಾರ್ಗಸೂಚಿಗಳು.
1. 2018-19ನೇ ಸಾಲಿನಲ್ಲಿ ಕರ್ನಾಟಕದಿಂದ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವ ಯಾತ್ರಾರ್ಥಿಗಳಿಗೆೆ ಗರಿಷ್ಠ `.30,000/-ರಂತೆ ಧನ ಸಹಾಯವನ್ನು ನೀಡಲಾಗುವುದು.
2. ಕರ್ನಾಟಕದ ಖಾಯಂ ನಿವಾಸಿಗಳು ಮಾತ್ರ ಈ ಧನ ಸಹಾಯ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಈ ಉದ್ದೇಶಕ್ಕಾಗಿ ಪಾಸ್ಪೋರ್ಟ್ ನಲ್ಲಿ ನಮೂದಿಸಲಾಗಿರುವ ವಿಳಾಸವನ್ನು ಪರಿಗಣಿಸಲಾಗುವುದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ೮೭೯3. 2018-19ನೇ ಸಾಲಿನಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಧನ ಸಹಾಯ ಪಡೆಯಲು ಇಚ್ಛಿಸಿದ್ದಲ್ಲಿ, ದಿನಾಂಕ:
30.11.2018ರ ಅವಧಿಯೊಳಗಾಗಿ ಎಲ್ಲಾ ಅಗತ್ಯ ದಾಖಲೆಗಳನ್ನು ಆನ್ಲೈನ್/ಮುದ್ದಾಂ ಮೂಲಕ ಅರ್ಜಿಯನ್ನು ಸಲ್ಲಿಸತಕ್ಕದು. ನಿಗಧಿತ ಅವಧಿ ಪೂರ್ಣಗೊಂಡ ನಂತರ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
4. ಯಾತ್ರಾರ್ಥಿಗಳು ಕರ್ನಾಟಕದ ಖಾಯಂ ನಿವಾಸಿಗಳಾಗಿರುವ ಬಗ್ಗೆ ಈ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸತಕ್ಕದ್ದು. I ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನೀಡಿರುವ "ಗುರುತಿನ ಚೀಟಿ" (Voter ID) ಹಾಗೂ "ಆಧಾರ್ ಗುರುತಿನ ಚೀಟಿ" ii. ಎರಡು ಭಾವಚಿತ್ರ.
5. ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಆಯೋಜಿಸಿದ ಮಾರ್ಗವಾಗಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳು ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ನೀಡುವ ಪ್ರಮಾಣ ಪತ್ರ ಹಾಗೂ ಗ್ರೂಪ್ ವೀಸಾ, ಪಾಸ್ಪೋರ್ಟ್ನ ಮುಖಪ್ರತಿ ಹಾಗೂ ವಿಳಾಸ ಮತ್ತು ಮುದ್ರಿತ ಸೀಲಿನ ಕಲರ್ ಜೆóರಾಕ್ಸ್ ಪ್ರತಿಗಳನ್ನು ಒದಗಿಸತಕ್ಕದ್ದು.
6. ನೇಪಾಳ ಮಾರ್ಗವಾಗಿ ಹೋಗಿಬಂದವರಿಗೆ ಚೀನಾ ಸರ್ಕಾರದ ಉದ್ದಿಮೆಯಾದ ಸಿ.ಐ.ಪಿ.ಎಸ್.ಸಿ. (China India Pligrim Service Center) ಲಾಸಾ, ಟಿಬೆಟ್-ಚೀನಾ ನೀಡುವ ಪ್ರಮಾಣ ಪತ್ರ ಹಾಗೂ ಪಾಸ್ ಪೋರ್ಟ್ನಲ್ಲಿ ಚೀನಾ ಸರ್ಕಾರದ ಮುದ್ರೆ ಹೊಂದಿರತಕ್ಕದ್ದು. (ಪಾಸ್ ಪೋಟ್ ರ್ನ ಮುಖಪ್ರತಿ ಹಾಗೂ ವಿಳಾಸ ಮತ್ತು ಮುದ್ರಿತ ಸೀಲಿನ ಕಲರ್ ಜೆರಾಕ್ಸ್ ಪ್ರತಿ) ಹಾಗೂ ಈ ಸಂಬಂಧ ಚೀನಾ ಸರ್ಕಾರ ನೀಡಿದ ವೀಸಾ (ಗ್ರೂಪ್ ವೀಸಾ) ಪ್ರತಿಯನ್ನು ಒದಗಿಸತಕ್ಕದ್ದು.
7. ಯಾತ್ರೆಯನ್ನು ಕೈಗೊಳ್ಳುವ ಬಗ್ಗೆ ಭಾರತ ಸರ್ಕಾರಕ್ಕೆ ಅರ್ಜಿ ಸಲ್ಲಿಸುವ ಮತ್ತು ಸದರಿ ಅರ್ಜಿಯ ಬಗ್ಗೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ತಗಲುವ ಸಂಪೂರ್ಣ ವೆಚ್ಚವನ್ನು ಹಾಗೂ ಚೀನಾ ದೇಶಕ್ಕೆ ಪಾವತಿಸಬೇಕಾಗಿರುವ ಮೊತ್ತವನ್ನು ಸಂಬಂಧಪಟ್ಟ ಯಾತ್ರಿಕರೇ ಭರಿಸತಕ್ಕದ್ದು. ಆಯ್ಕೆಯಾದ ನಂತರ ಪ್ರವಾಸದ ಇತರೆ ವೆಚ್ಚಗಳ ಸಂಬಂಧ ಗರಿಷ್ಠ `.30.000/-ಗಳ ಸಹಾಯಧನವನ್ನು ನೀಡಲಾಗುವುದು.
8. ಯಾತ್ರಾರ್ಥಿಗಳು ಸಹಾಯ ಧನವನ್ನು ಒಂದು ಬಾರಿ ಪಡೆದ ನಂತರದಲ್ಲಿ ಅದೇ ವ್ಯಕ್ತಿಗೆ ಎರಡನೇ ಬಾರಿ ಅನುದಾನ ನೀಡಲು ಪರಿಗಣಿಸಲಾಗುವುದಿಲ್ಲ, ಈ ಬಗ್ಗೆ ಯಾತ್ರಾರ್ಥಿಗಳು `.20/-ಗಳ ಛಾಪಾ ಕಾಗದದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ದೃಡೀಕರಣ ನೀಡತಕ್ಕದ್ದು.
9. ನಿಗದಿತ ಅವಧಿಯಲ್ಲಿ ಸ್ವೀಕರಿಸಿದ ಎಲ್ಲಾ ಅರ್ಹ ಅರ್ಜಿದಾರರ ಹೆಸರುಗಳನ್ನು ಪರಿಶೀಲಿಸಿ ಅರ್ಜಿಗಳ ಸಂಖ್ಯೆಯು 1000 ಕ್ಕಿಂತ ಕಡಿಮೆ ಇದ್ದಲ್ಲಿ, ಎಲ್ಲಾ ಅರ್ಹ ಫಲಾನುಭವಿಗಳಿಗೆ ಸಹಾಯ ಧನ ವಿತರಿಸುವುದು, ಅರ್ಜಿಗಳ ಸಂಖ್ಯೆ 1000ಕ್ಕಿಂತ ಹೆಚ್ಚಾದಲ್ಲಿ, ಲಾಟರಿ ಮುಖಾಂತರ ಅನುದಾನಕ್ಕನುಗುಣವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಹಾಯ ಧನವನ್ನು ಆರ್.ಟಿ.ಜಿ.ಎಸ್ ಮೂಲಕ ನೀಡಲಾಗುವುದು. ಸದರಿ ಲಾಟರಿಯನ್ನು ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಿಕ ಸದಸ್ಯರು, ಕೇಂದ್ರ ಸ್ಥಾನಿಕ ಸಹಾಯಕರು ಹಾಗೂ ಪ್ರವರ್ಗ 'ಎ' ದೇವಾಲಯದ ಮೂರು ಜನ ಕಾರ್ಯನಿರ್ವಾಹಕ ಅಧಿಕಾರಿಗಳನ್ನೊಳಗೊಂಡ 05 ಜನ ಸದಸ್ಯರ ಸಮಿತಿಯ ಸಮಕ್ಷಮದಲ್ಲಿ ಪೂರ್ಣವಾಗಿ ವೀಡಿಯೋ ಚಿತ್ರೀಕರಣದೊಂದಿಗೆ ಮಾಡುವುದು.
10. ಸಹಾಯಾನುದಾನ ಕೋರಿ ಬಂದಂತಹ ಅರ್ಜಿಗಳನ್ನು ಧಾರ್ಮಿಕ ದತ್ತಿ ಆಯುಕ್ತರು ಸ್ವೀಕರಿಸಿ ಪರಿಶೀಲಿಸಿ, ಅನುದಾನ ಮಂಜೂರು ಮಾಡಲು ಕ್ರಮ ಕೈಗೊಳ್ಳುವುದು.
PR.428
ಬಿ.ಎಸ್. ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ
SC.25
ಕಂದಾಯ ಇಲಾಖೆ. (ಮುಜರಾಯಿ)
ಒಳಾಡಳಿತ ಸಚಿವಾಲಯ
ವಿಷಯ : ದಿನಾಂಕ : 10/06/2008 ರಂದು ಹಾವೇರಿಯಲ್ಲಿ ನಡೆದ ಗೋಲಿಬಾರ್ನಲ್ಲಿ ಮೃತಪಟ್ಟ ಶ್ರೀ ಸಿದ್ದಲಿಂಗಪ್ಪ ಚೂರಿ ಇವರ ಮಕ್ಕಳ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಭರಿಸುವ ಕುರಿತು.
ಓದಲಾಗಿದೆ : 1) ದಿನಾಂಕ: 12/06/2008ರ ಸಚಿವ ಸಂಪುಟ ನಿರ್ಣಯದ ಅಂಶ-3.
2) ಸರ್ಕಾರದ ಆದೇಶ ಸಂಖ್ಯೆ: ಹೆಚ್ಡಿ 370 ಎಸ್ಎಸ್ಟಿ 2008. ಬೆಂಗಳೂರು, ದಿನಾಂಕ 16/6/2008.
3) ಜಿಲ್ಲಾಧಿಕಾರಿಗಳು, ಹಾವೇರಿ ಜಿಲ್ಲೆ ಇವರ ಪತ್ರ ಸಂಖ್ಯೆ: ಡಿಸಿ-ಹೆಚ್ಎವಿ-14014(24)/5/2016- ಹೆಚ್ಎವಿ.ಎಂ.ಎಜಿ-ಹೆಚ್ಎವಿಇಆರ್ಐ-ಡಿಸಿ, ದಿನಾಂಕ 23.08.2018.
ಪ್ರಸ್ತಾವನೆ :
ಮೇಲೆ ಓದಲಾದ (1) ರ ದಿನಾಂಕ: 12-06-2008ರ ಸಚಿವ ಸಂಪುಟ ನಿರ್ಣಯದ ಅಂಶ-3, ಮತ್ತು ಮೇಲೆ ಓದಲಾದ (2)ರ ಸರ್ಕಾರದ ಆದೇಶದಲ್ಲಿ ದಿನಾಂಕ:10/06/2008 ರಂದು ಹಾವೇರಿಯಲ್ಲಿ ನಡೆದ ಗೋಲೀಬಾರ್ನಲ್ಲಿ ಮೃತಪಟ್ಟ ಶ್ರೀ ಸಿದ್ದಲಿಂಗಪ್ಪ ಚೂರಿ ಇವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಪ್ಪತ್ತ ಮೂರು ಮಾತ್ರ) ಗಳನ್ನು ಮುರಪಾವತಿ ಮಾಡುವಂತೆ ಕೋರಿರುತ್ತಾರೆ. ಪ್ರಸ್ತಾವನೆಯಲ್ಲಿನ ಕೋರಿಕೆಯನ್ನು ಕೂಲಂಕಷವಾಗಿ ಪರಿಗಣಿಸಿ, ಸರ್ಕಾರವು ಈ ಕೆಳಕಂಡಂತೆೆ ಆದೇಶಿಸಿದೆ.
೮೮೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ಭಾಗ ೧ಸರ್ಕಾರಿ ಆದೇಶ ಸಂಖ್ಯೆ: ಹೆಚ್ಡಿ 7 ಪಿಸಿಇ 2018, ಬೆಂಗಳೂರು ದಿನಾಂಕ: 18.09.2018.
ಶ್ರೀಮತಿ ಕುಸುಮಾ ಕೋಂ. ಸಿದ್ದಲಿಂಗಪ್ಪ ಚೂರಿರವರ ಮಕ್ಕಳಾದ ಕು|| ಕಾವ್ಯ ಎಸ್. ಚೂರಿ ಇವರ 10ನೇ ತರಗತಿ ವಿದ್ಯಾಭ್ಯಾಸಕ್ಕಾಗಿ 2017-18 ರಲ್ಲಿ ಮತ್ತು ಶ್ರೀ ಕಿರಣ ಎಸ್. ಚೂರಿ ಇವರ ಇಂಜಿನಿಯರಿಂಗ್ 3 ಮತ್ತು 4ನೇ ಸೆಮಿಸ್ಟರ್ ವಿದ್ಯಾಭ್ಯಾಸಕ್ಕಾಗಿ 2017-18 ರಲ್ಲಿ ತಗುಲಿರುವ ಒಟ್ಟು ವೆಚ್ಚ `.2,46. 823/- (ರೂಪಾಯಿ ಎರಡು ಲಕ್ಷದ ನಲವತ್ತಾರು ಸಾವಿರದ ಎಂಟುನೂರ ಇಪ್ಪತ್ತ ಮೂರು ಮಾತ್ರ) ಗಳನ್ನು ಜಿಲ್ಲಾಧಿಕಾರಿಗಳು, ಹಾವೇರಿ ಜಿಲ್ಲೆ ಇವರ ಮುಖಾಂತರ ಬಿಡುಗಡೆಗೊಳಿಸಲು ಆದೇಶಿಸಿದೆ. ಈ ಅನುದಾನವನ್ನು ಲೆಕ್ಕ ಶೀರ್ಷಿಕೆ "2235-60-200-3-01-100" ರಡಿಯಲ್ಲಿ ಭರಿಸತಕ್ಕದ್ದು.
ಈ ಅನುದಾನವನ್ನು ಶ್ರೀ ಸಿದ್ದಲಿಂಗಪ್ಪ ಚೂರಿ ಇವರ ಪತ್ನಿಯಾದ ಶ್ರೀಮತಿ ಕುಸುಮಾ ಕೋಂ. ಸಿದ್ದಲಿಂಗಪ್ಪ ಚೂರಿಯವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮಾತ್ರ ಉಪಯೋಗಿಸಿಕೊಳ್ಳುವುದು.
PR. 429
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.25
ಕೆ. ಪದ್ಮಿನಿದೇವಿ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಕಾನೂನು ಮತ್ತು ಸುವ್ಯವಸ್ಥೆ)
ಕಂದಾಯ ಸಚಿವಾಲಯ
ವಿಷಯ : ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕು, ಸಿದ್ದಮ್ಮನಹಳ್ಳಿ ಗ್ರಾಮದ ಸ.ನಂ.40ರಲ್ಲಿ ಪವನ್ ವಿದ್ಯುತ್ ಘಟಕ ಸ್ಥಾಪನೆಗಾಗಿ ಮೆ.ಬಳ್ಳಾರಿ ವಿಂಡ್ ಪವರ್ ಪ್ರೈ. ಲಿಮಿಟೆಡ್, ಬೆಂಗಳೂರು ಇವರಿಗೆ ಗುತ್ತಿಗೆಗೆ ನೀಡಿರುವ 0-09 ಗುಂಟೆ ಜಮೀನಿನ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಕುರಿತು.
ಓದಲಾಗಿದೆ : ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗ, ಬೆಂಗಳೂರು ಇವರ ಪತ್ರ ಸಂಖ್ಯೆ:
ಎಲ್ಎನ್ಡಿ/ಸಿಆರ್/99/2017-18, ದಿನಾಂಕ: 22-03-2018.
ಪ್ರಸ್ತಾವನೆ :
ಮೇಲೆ ಓದಲಾದ ದಿನಾಂಕ: 22-03-2018ರ ಪತ್ರದಲ್ಲಿ, ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕು, ಸಿದ್ದಮ್ಮನಹಳ್ಳಿ ಗ್ರಾಮದ ಸ.ನಂ.40ರಲ್ಲಿ ಪವನ್ ವಿದ್ಯುತ್ ಘಟಕ ಸ್ಥಾಪನೆಗಾಗಿ ಮೆ.ಬಳ್ಳಾರಿ ವಿಂಡ್ ಪವರ್ ಪ್ರೈ.ಲಿಮಿಟೆಡ್ ಇವರಿಗೆ ಗುತ್ತಿಗೆಗೆ ನೀಡಿರುವ 0-09 ಗುಂಟೆ ಜಮೀನಿನ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಕುರಿತು ಪ್ರಸ್ತಾಪಿಸಿರುತ್ತಾರೆ.
ಜಿಲ್ಲಾಧಿಕಾರಿ, ದಾವಣಗೆರೆ ಜಿಲ್ಲೆ ಇವರು ದಿನಾಂಕ: 27-01-2018ರಂದು ಸಲ್ಲಿಸಿರುವ ವರದಿಯಂತೆ ಪ್ರಸ್ತಾಪಿತ ಜಗಳೂರು ತಾಲ್ಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದ ಸ.ನಂ.40ರಲ್ಲಿ 0-09 ಗುಂಟೆ ಜಮೀನು ಪಹಣಿ ಪತ್ರಿಕೆ ಪ್ರಕಾರ 'ಸರ್ಕಾರಿ ಗೋಮಾಳ' ಎಂದು ದಾಖಲಾಗಿರುತ್ತದೆ. ಆಕಾರ್ ಬಂದ್ನಲ್ಲಿ 'ಬಿ' ಖರಾಬು ಎಂಬುದಾಗಿ ವರ್ಗೀಕೃತಗೊಂಡಿರುತ್ತದೆ. ಮೆ.ಬಳ್ಳಾರಿ ವಿಂಡ್ ಪವರ್ ಪ್ರೈ.ಲಿಮಿಟೆಡ್, ಬೆಂಗಳೂರು ಕಂಪನಿಯು ಜಗಳೂರು ತಾಲ್ಲೂಕಿನ ಅಣಬೂರು ಗ್ರಾಮದ ಸ.ನಂ.131ರಲ್ಲಿನ 499-09 ಎಕರೆ ಅರಣ್ಯ ಜಮೀನಿನಲ್ಲಿ 21-708 ಹೆಕ್ಟೇರ್ ಪ್ರದೇಶದಲ್ಲಿ ಗಾಳಿಯಂತ್ರಗಳನ್ನು ಅಳವಡಿಸಿ, 16.50 ಮೆ.ವ್ಯಾಟ್ ವಿದ್ಯುತ್ ಉತ್ಪಾದಿಸಲು 30 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಪಡೆದಿದ್ದು, ಈ ಪ್ರದೇಶದಲ್ಲಿ ಉತ್ಪಾದಿಸುವ ವಿದ್ಯುತ್ ಅನ್ನು ಹಿರೇಮಲ್ಲನಹೊಳೆ ಗ್ರಾಮದಲ್ಲಿರುವ ಕೆ.ಪಿ.ಟಿ.ಸಿ.ಎಲ್ ಸಬ್ ಸ್ಟೇಷನ್ಗೆ ಸರಬರಾಜು ಮಾಡಲು ಸದರಿ ಜಮೀನಿನಲ್ಲಿ 33 ಕೆ.ವಿ ಸಾಮರ್ಥ್ಯದ 7 ಕಂಬಗಳನ್ನು ಹಾಗೂ 33 ಕೆ.ವಿ ಸಾಮರ್ಥ್ಯದ ಒಂದು ಸ್ಥಾವರವನ್ನು ಸ್ಥಾಪಿಸಲು ಸಿದ್ದಮ್ಮನಹಳ್ಳಿ ಗ್ರಾಮದ ಸ.ನಂ.40ರಲ್ಲಿನ 0-09 ಗುಂಟೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 19(1)(ಡಿ) ಮತ್ತು 19(3)(ಬಿ) ರನ್ವಯ ವಾರ್ಷಿಕ ಗುತ್ತಿಗೆ `.1000/-ಗಳನ್ನು ನಿಗಧಿಪಡಿಸಿ, 5 ವರ್ಷಗಳ ಅವಧಿಗೆ ಸದರಿ ಕಂಪನಿಯವರಿಗೆ ಆದೇಶ ಸಂಖ್ಯೆ: ಎಲ್ಎನ್ಡಿ/ಸಿಆರ್/412/2010-11, ದಿನಾಂಕ:25-04-2012 ರನ್ವಯ ಪ್ರಸ್ತಾಪಿತ ಜಮೀನನ್ನು ಗುತ್ತಿಗೆಗೆ ನೀಡಿದ್ದು ಗುತ್ತಿಗೆ ಅವಧಿಯನ್ನು 30 ವರ್ಷಗಳ ಅವಧಿಗೆ ವಿಸ್ತರಿಸಬಹುದೆಂಬ ಅಭಿಪ್ರಾಯದೊಂದಿಗೆ ವರದಿಯನ್ನು ಸಲ್ಲಿಸಿರುತ್ತಾರೆ.
ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ದಿನಾಂಕ: 23-02-2018ರಂದು ಸರ್ಕಾರಕ್ಕೆ ಸಲ್ಲಿಸಿರುವ ಪತ್ರದಲ್ಲಿ, ಸರ್ಕಾರದ ಸುತ್ತೋಲೆ ಸಂಖ್ಯೆ: ಆರ್ಡಿ 78 ಎಲ್ಜಿಪಿ 2009, ದಿನಾಂಕ: 04-01-2011 ರನ್ವಯ ಹಾಗೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 19(3)(ಎ) ರಂತೆ ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕು, ಸಿದ್ದಮ್ಮನಹಳ್ಳಿ ಗ್ರಾಮದ ಸ.ನಂ.40ರಲ್ಲಿ ಪವನ್ ವಿದ್ಯುತ್ ಯೋಜನೆಗಾಗಿ ಮೆ.ಬಳ್ಳಾರಿ ವಿಂಡ್ ಪವರ್ ಪ್ರೈ.ಲಿಮಿಟೆಡ್, ಬೆಂಗಳೂರು, ಇವರಿಗೆ ಈಗಾಗಲೇ ಗುತ್ತಿಗೆಗೆ ನೀಡಿರುವ 0-09 ಗುಂಟೆ ಜಮೀನಿನ ಗುತ್ತಿಗೆ ಅವಧಿಯನ್ನು ವಿಸ್ತರಿಸಬಹುದಾಗಿದೆ ಎಂಬ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 24 ಎಲ್ಜಿಸಿ 2018, ಬೆಂಗಳೂರು, ದಿನಾಂಕ: 05-09-2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕು, ಸಿದ್ದಮ್ಮನಹಳ್ಳಿ ಗ್ರಾಮದ ಸ.ನಂ.40ರಲ್ಲಿ ಮೆ.ಬಳ್ಳಾರಿ ವಿಂಡ್ ಪವರ್ ಪ್ರೈ. ಲಿಮಿಟೆಡ್, ಬೆಂಗಳೂರು ಇವರಿಗೆ ಪವನ್ ವಿದ್ಯುತ್ ಘಟಕ ಸ್ಥಾಪನೆಗಾಗಿ, ಗುತ್ತಿಗೆಗೆ ನೀಡಲಾಗಿರುವ 0-09 ಗುಂಟೆ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4)ರನ್ವಯ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ಎ(1)(i)(1) ರಂತೆ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ.10ರಷ್ಟು ಗುತ್ತಿಗೆ ದರ ಹಾಗೂ ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ, 2 ವರ್ಷಗಳಿಗೊಮ್ಮೆ ಶೇ.10ರಷ್ಟು ಗುತ್ತಿಗೆ ದರ ಹೆಚ್ಚಿಸುವ ಹಾಗೂ ಈ ಕೆಳಕಂಡ ಷರತ್ತುಗಳಿಗೊಳಪಟ್ಟು, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 19(3)(ಬಿ) ರನ್ವಯ ಸದರಿ ಜಮೀನಿನ ಗುತ್ತಿಗೆ ಅವಧಿಯನ್ನು ದಿನಾಂಕ: 26-04-2017 ರಿಂದ ಅನ್ವಯವಾಗುವಂತೆ 25 ವರ್ಷಗಳ ಅವಧಿಗೆ ವಿಸ್ತರಿಸಿ ಆದೇಶಿಸಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ೮೮೧ಷರತ್ತುಗಳು :
1. ಗುತ್ತಿಗೆ ಆದೇಶದಲ್ಲಿ, ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ /ಮಾರ್ಗಸೂಚಿ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. 2. ಉದ್ದೇಶಿತ ಜಮೀನನ್ನು ಯಾವ ಉದ್ದೇಶಕ್ಕಾಗಿ ಗುತ್ತಿಗೆಗೆ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು. 3. ಪ್ರಸ್ತಾಪಿತ ಜಮೀನು ಸಂಸ್ಥೆಗೆ ಅವಶ್ಯವಿಲ್ಲದಿದ್ದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು. 4. ಗುತ್ತಿಗೆಗೆ ಪಡೆದ ಜಮೀನನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 5. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು. 6. ಗುತ್ತಿಗೆಗೆ ನೀಡಿರುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದ ದಾವೆಗಳು ದಾಖಲಾಗಿದ್ದಲ್ಲಿ, ಈ ಗುತ್ತಿಗೆಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
7. ಸದರಿ ಜಮೀನಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪಡೆದುಕೊಳ್ಳತಕ್ಕದ್ದು.
8. ಗುತ್ತಿಗೆಗೆ ನೀಡಲಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೆ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.
9. ಗುತ್ತಿಗೆ ಆಧಾರದ ಮೇಲೆ ನೀಡಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ ಇತರೆ ರೀತಿಯ ಪರಭಾರೆ ಮಾಡತಕ್ಕದ್ದಲ್ಲ.
10. ಸದರಿ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.
11. ಜಿಲ್ಲಾಧಿಕಾರಿಗಳು ಗುತ್ತಿಗೆಗೆ ನೀಡಲಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.
PR. 430
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.50
ಎಂ.ಇ. ಚನ್ನಬಸವರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಮಂಜೂರಾತಿ-3)
ಕಂದಾಯ ಸಚಿವಾಲಯ
ವಿಷಯ : ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ಕೆಲವು ಗ್ರಾಮಗಳ ವಿವಿಧ ಸರ್ವೆ ನಂಬರ್ಗಳಲ್ಲಿ ಮೆ.ಅಕ್ಸಿಯಾನ ವಿಂಡ್ ಎನರ್ಜಿ ಪ್ರೈ.ಲಿಮಿಟೆಡ್ (Acciona Wind Energy Private Limited), ಬೆಂಗಳೂರು ಇವರಿಗೆ
ಪವನ್ ವಿದ್ಯುತ್ ಘಟಕ ಸ್ಥಾಪನೆಗಾಗಿ 0-28 ಗುಂಟೆ ಜಮೀನಿನ ಗುತ್ತಿಗೆ ಅವಧಿಯನ್ನು ವಿಸ್ತರಿಸುವ
ಕುರಿತು.
ಓದಲಾಗಿದೆ : ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರ ಪತ್ರ ಸಂಖ್ಯೆ:ಎಲ್ಎನ್ಡಿ/ ಸಿಆರ್/98/2017-18, ದಿನಾಂಕ: 22-03-2018.
ಪ್ರಸ್ತಾವನೆ :
ಮೇಲೆ ಓದಲಾದ ದಿನಾಂಕ: 22-03-2018ರ ಪತ್ರದಲ್ಲಿ, ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ವಿವಿಧ ಗ್ರಾಮಗಳ ಸರ್ವೆ ನಂಬರ್ಗಳಲ್ಲಿ ಪವನ್ ವಿದ್ಯುತ್ ಯೋಜನೆಗಾಗಿ ಮೆ.ಅಕ್ಸಿಯಾನ ವಿಂಡ್ ಎನರ್ಜಿ ಪ್ರೈ.ಲಿ (Acciona Wind Energy Private Limited), ಬೆಂಗಳೂರು ಇವರಿಗೆ ಗುತ್ತಿಗೆಗೆ ನೀಡಲಾದ ಜಮೀನಿನ ಗುತ್ತಿಗೆ ಅವಧಿಯನ್ನು ವಿಸ್ತರಿಸುವ ಕುರಿತು ಪ್ರಸ್ತಾಪಿಸಿರುತ್ತಾರೆ.
ಜಿಲ್ಲಾಧಿಕಾರಿ, ದಾವಣಗೆರೆ ಜಿಲ್ಲೆ ಇವರು ದಿನಾಂಕ: 25-01-2018 ರಂದು ಸಲ್ಲಿಸಿರುವ ವರದಿಯಂತೆ ಮೆ.ಅಕ್ಸಿಯಾನ ವಿಂಡ್ ಎನರ್ಜಿ ಪ್ರೈ.ಲಿ, ಬೆಂಗಳೂರು ಇವರಿಗೆ ಪವನ್ ವಿದ್ಯುತ್ ಯೋಜನೆಯಡಿ ಅಣಬೂರು ಗ್ರಾಮದ ಸ.ನಂ.131ರಲ್ಲಿ 16-50 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಸರ್ಕಾರದಿಂದ ಅನುಮತಿ ದೊರೆತಿದ್ದು, ಸದರಿ ಪ್ರದೇಶದಲ್ಲಿ ಉತ್ಪಾದಿಸಿದ ವಿದ್ಯುತ್ನ್ನು ಕೆ.ಪಿ.ಟಿ.ಸಿ.ಎಲ್ಗೆ ಸರಬರಾಜು ಮಾಡಲು ಕಂಪನಿಯು ಹಿರೇಮಲ್ಲನಹೊಳೆ, ಬಡಬಾಡನಹಳ್ಳಿ, ಭರಮಸಮುದ್ರ ಮತ್ತು ಬೊಮ್ಮಕ್ಕನಹಳ್ಳಿ ಗ್ರಾಮಗಳಲ್ಲಿ ಒಟ್ಟು 0-28 ಗುಂಟೆ ಸರ್ಕಾರಿ ಜಮೀನುಗಳಲ್ಲಿ ಅನುಮತಿ ಪಡೆಯದೇ ವಿದ್ಯುತ್ ಕಂಬಗಳನ್ನು ಅಳವಡಿಸಿರುವುದರಿಂದ `.1000/-ಗಳ ದಂಡ ಹಾಗೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 19(1)(ಡಿ) ಮತ್ತು 19(3)(ಬಿ) ರನ್ವಯ ವಾರ್ಷಿಕ ಗುತ್ತಿಗೆ `..2000/- ಗಳನ್ನು ನಿಗಧಿಪಡಿಸಿ, ಸದರಿ ಕಂಪನಿಯವರು 33 ಕೆ.ವಿ ಸಾಮರ್ಥ್ಯದ 28 ಕಂಬಗಳನ್ನು ಹಾಗೂ 33 ಕೆ.ವಿ ಸಾಮರ್ಥ್ಯದ ಒಂದು ಸ್ಥಾವರವನ್ನು ಅಳವಡಿಸಿರುವ ಪ್ರದೇಶವನ್ನು 5 ವರ್ಷಗಳ ಅವಧಿಗೆ ಮೆ.ಅಕ್ಸಿಯಾನ ವಿಂಡ್ ಎನರ್ಜಿ ಪ್ರೈ.ಲಿ, ಬೆಂಗಳೂರು ಇವರಿಗೆ ಗುತ್ತಿಗೆಗೆ ನೀಡಿದ್ದು, ಸದರಿ ಕಂಪನಿಗೆ ಈಗಾಗಲೇ ಗುತ್ತಿಗೆಗೆ ನೀಡಿರುವ ಒಟ್ಟು 0-28 ಗುಂಟೆ ಜಮೀನಿನ ಗುತ್ತಿಗೆ ಅವಧಿಯನ್ನು 30 ವರ್ಷಗಳ ಅವಧಿಗೆ ವಿಸ್ತರಿಸಬಹುದೆಂಬ ಅಭಿಪ್ರಾಯದೊಂದಿಗೆ ವರದಿಯನ್ನು ಸಲ್ಲಿಸಿರುತ್ತಾರೆ.
೮೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ಭಾಗ ೧ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ದಿನಾಂಕ: 22-03-2018ರಂದು ಸರ್ಕಾರಕ್ಕೆ ಸಲ್ಲಿಸಿರುವ ಪತ್ರದಲ್ಲಿ, ಸರ್ಕಾರದ ಸುತ್ತೋಲೆ ಸಂಖ್ಯೆ: ಆರ್ಡಿ 78 ಎಲ್ಜಿಪಿ 2009, ದಿನಾಂಕ: 04-01-2011 ರನ್ವಯ ಹಾಗೂ ಜಿಲ್ಲಾಧಿಕಾರಿ, ದಾವಣಗೆರೆ ಜಿಲ್ಲೆ ಇವರ ಅಭಿಪ್ರಾಯದಂತೆ, ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಸ.ನಂ.102 ರಲ್ಲಿ 0-02 ಗುಂಟೆ, ಬಡಬಾಡನಹಳ್ಳಿ ಗ್ರಾಮದ ಸ.ನಂ.5ರಲ್ಲಿ 0-02 ಗುಂಟೆ, ಸ.ನಂ.14ರಲ್ಲಿ 0-04 ಗುಂಟೆ, ಸ.ನಂ.37ರಲ್ಲಿ 0-01 ಗುಂಟೆ, ಭರಮಸಮುದ್ರ ಗ್ರಾಮದ ಸ.ನಂ.12ರಲ್ಲಿ 0-01 ಗುಂಟೆ, ಸ.ನಂ.13ರಲ್ಲಿ 0-02 ಗುಂಟೆ ಹಾಗೂ ಬೊಮ್ಮಕ್ಕನಹಳ್ಳಿ ಗ್ರಾಮದ ಸ.ನಂ.31 ರಲ್ಲಿ 0-16 ಗುಂಟೆ ಹೀಗೆ ಒಟ್ಟು 0-28 ಗುಂಟೆ ಜಮೀನನ್ನು ಪವನ್ ವಿದ್ಯುತ್ ಘಟಕ ಸ್ಥಾಪನೆಗಾಗಿ ಮೆ.ಅಕ್ಸಿಯಾನ ವಿಂಡ್ ಎನರ್ಜಿ ಪ್ರೈ.ಲಿ, ಬೆಂಗಳೂರು ಇವರಿಗೆ ಈಗಾಗಲೇ ಗುತ್ತಿಗೆ ನೀಡಲಾದ ಜಮೀನಿನ ಗುತ್ತಿಗೆ ಅವಧಿಯನ್ನು ವಿಸ್ತರಿಸಬಹುದೆಂಬ ಶಿಫಾರಸ್ಸಿನೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 25 ಎಲ್ಜಿಸಿ 2018, ಬೆಂಗಳೂರು, ದಿನಾಂಕ: 05-09-2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಾವಣಗೆರೆ ಜಿಲ್ಲೆ, ಜಗಳೂರು ತಾಲ್ಲೂಕು, ಹಿರೇಮಲ್ಲನಹೊಳೆ ಗ್ರಾಮದ ಸ.ನಂ.102 ರಲ್ಲಿ 0-02 ಗುಂಟೆ, ಬಡಬಾಡನಹಳ್ಳಿ ಗ್ರಾಮದ ಸ.ನಂ.5ರಲ್ಲಿ 0-02 ಗುಂಟೆ, ಸ.ನಂ.14ರಲ್ಲಿ 0-04 ಗುಂಟೆ, ಸ.ನಂ.37ರಲ್ಲಿ 0-01 ಗುಂಟೆ, ಭರಮಸಮುದ್ರ ಗ್ರಾಮದ ಸ.ನಂ.12ರಲ್ಲಿ 0-01 ಗುಂಟೆ, ಸ.ನಂ.13ರಲ್ಲಿ 0-02 ಗುಂಟೆ ಹಾಗೂ ಬೊಮ್ಮಕ್ಕನಹಳ್ಳಿ ಗ್ರಾಮದ ಸ.ನಂ.31 ರಲ್ಲಿ 0-16 ಗುಂಟೆ ಹೀಗೆ ಒಟ್ಟು 0-28 ಗುಂಟೆ ಜಮೀನನ್ನು, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ಎ(1)(i)(1) ರಂತೆ ಪ್ರಚಲಿತ ಮಾರುಕಟ್ಟೆ ಬೆಲೆಯ ಶೇ.10ರಷ್ಟು ಗುತ್ತಿಗೆ ದರ ಹಾಗೂ ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ, 2 ವರ್ಷಗಳಿಗೊಮ್ಮೆ ಶೇ.10 ರಷ್ಟು ಗುತ್ತಿಗೆ ದರ ಹೆಚ್ಚಿಸುವ ಹಾಗೂ ಈ ಕೆಳಕಂಡ ಷರತ್ತುಗಳಿಗೊಳಪಟ್ಟು, ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 19(3)(ಬಿ) ರನ್ವಯ ಪವನ್ ವಿದ್ಯುತ್ ಘಟಕ ಸ್ಥಾಪನೆಗಾಗಿ ಮೆ.ಅಕ್ಸಿಯಾನ ವಿಂಡ್ ಎನರ್ಜಿ ಪ್ರೈ.ಲಿ (Acciona Wind Energy Private Limited), ಬೆಂಗಳೂರು ಇವರಿಗೆ ಗುತ್ತಿಗೆಗೆ ನೀಡಲಾಗಿರುವ ಜಮೀನಿನ ಗುತ್ತಿಗೆ ಅವಧಿಯನ್ನು ದಿನಾಂಕ: 26-06-2018 ರಿಂದ ಅನ್ವಯವಾಗುವಂತೆ 25 ವರ್ಷಗಳ ಅವಧಿಗೆ ವಿಸ್ತರಿಸಿ ಆದೇಶಿಸಿದೆ.
ಷರತ್ತುಗಳು :
1. ಗುತ್ತಿಗೆ ಆದೇಶದಲ್ಲಿ, ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ /ಮಾರ್ಗಸೂಚಿ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.
2. ಉದ್ದೇಶಿತ ಜಮೀನನ್ನು ಯಾವ ಉದ್ದೇಶಕ್ಕಾಗಿ ಗುತ್ತಿಗೆಗೆ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು.
3. ಪ್ರಸ್ತಾಪಿತ ಜಮೀನು ಸಂಸ್ಥೆಗೆ ಅವಶ್ಯವಿಲ್ಲದಿದ್ದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.
4. ಗುತ್ತಿಗೆಗೆ ಪಡೆದ ಜಮೀನನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.
5. ಸದರಿ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು.
6. ಗುತ್ತಿಗೆಗೆ ನೀಡಿರುವ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದ ದಾವೆಗಳು ದಾಖಲಾಗಿದ್ದಲ್ಲಿ, ಈ ಗುತ್ತಿಗೆಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
7. ಸದರಿ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪಡೆದು ಕೊಳ್ಳತಕ್ಕದ್ದು.
8. ಗುತ್ತಿಗೆಗೆ ನೀಡಲಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೆ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.
9. ಗುತ್ತಿಗೆ ಆಧಾರದ ಮೇಲೆ ನೀಡಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ ಇತರೆ ರೀತಿಯ ಪರಭಾರೆ ಮಾಡತಕ್ಕದ್ದಲ್ಲ.
10. ಸದರಿ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.
11. ಜಿಲ್ಲಾಧಿಕಾರಿಗಳು ಗುತ್ತಿಗೆಗೆ ನೀಡಲಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.
PR. 431
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ.ಇ. ಚನ್ನಬಸವರಾಜ
SC.50
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ. (ಭೂಮಂಜೂರಾತಿ-3)
ಇಂಧನ ಸಚಿವಾಲಯ
ವಿಷಯ : 2018-19ನೇ ಸಾಲಿನಲ್ಲಿ ಸೌರಶಕ್ತಿ ಯೋಜನೆಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆ.ಆರ್.ಇ.ಡಿ.ಎಲ್) ವತಿಯಿಂದ ಅನುಷ್ಠಾನಗೊಳಿಸುವ ಕುರಿತು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ೮೮೩ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಇಎನ್ 54 ವಿಎಸ್ಸಿ 2014, ದಿ:28.02.2015.
2. ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: ಇಎನ್ 54 ವಿಎಸ್ಸಿ 2014, ದಿ: 12.08.2015. 3. ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: ಇಎನ್ 64 ವಿಎಸ್ಸಿ 2018, ದಿ: 06.03.2018. 4. ಸರ್ಕಾರದ ಆದೇಶ ಸಂಖ್ಯೆ: ಇಎನ್ 63 ವಿಎಸ್ಸಿ 2018, ದಿನಾಂಕ: 12.06.2018. 5. ಆಯವ್ಯಯ 2018-19 ರಲ್ಲಿ ಸಂಪುಟ-7ರಂತೆ ಇಂಧನ ಇಲಾಖೆಗೆ ಮೀಸಲಿರಿಸಿರುವ ಅನುದಾನದಡಿ.
6. ಕೆ.ಆರ್.ಇ.ಡಿ.ಎಲ್ರವರ ಪತ್ರ ಸಂಖ್ಯೆ: ಕೆ.ಆರ್.ಇ.ಡಿ.ಎಲ್/07/SOG-2/F41/2018/ 5061-62 ದಿನಾಂಕ: 26.07.2018.
ಪ್ರಸ್ತಾವನೆ :
ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಮುಖಾಂತರ ಮೇಲೆ ಓದಲಾದ (1) ಮತ್ತು (2)ರಂತೆ ಅನುಷ್ಠಾನಗೊಳಿಸುತ್ತಿರುವ 5 ಹೆಚ್.ಪಿ ಸಾಮರ್ಥ್ಯದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳ ಯೋಜನೆಯಡಿ ಮೊದಲನೇ ಹಂತದಲ್ಲಿ 1009 ಸಂಖ್ಯೆಯ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳ ಅನುಷ್ಠಾನ ಕಾರ್ಯಕ್ರಮವನ್ನು ರಾಜ್ಯದ ಆಯ್ದ 11 ತಾಲ್ಲೂಕುಗಳಲ್ಲಿ, ಎರಡನೇ ಹಂತದಲ್ಲಿ 1530 ಸಂಖ್ಯೆಯ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು 48 ತಾಲ್ಲೂಕುಗಳಲ್ಲಿ ಮತ್ತು ಮೂರನೇ ಹಂತದಲ್ಲಿ 901 ಸಂಖ್ಯೆಯ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು 32 ತಾಲ್ಲೂಕುಗಳಲ್ಲಿ ಅನುಷ್ಟಾನಗೊಳಿಸಲು ಕ್ರಮ ಕೈಗೊಳ್ಳಲಾಗಿತ್ತು.
ಮೇಲೆ ಓದಲಾದ (3) ರಂತೆ ಹೊಸದಾಗಿ ವಿದ್ಯುತ್ ಸಂಪರ್ಕ ಹೊಂದುವ ಮತ್ತು ಹಾಲಿ ಸಂಪರ್ಕದಲ್ಲಿರುವ ಪಂಪ್ಸೆಟ್ ಸ್ಥಾವರಗಳ ರೈತರಿಗೂ ಅನ್ವಯವಾಗುವಂತೆ ಹಾಗೂ ಹೊಸದಾಗಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವ ಫಲಾನುಭವಿಗಳ ಸ್ಥಾವರಕ್ಕೆ ಗ್ರಿಡ್ ಸಂಪರ್ಕವಿಲ್ಲವೆಂದು ದೃಡೀಕರಿಸುವಂತೆ ಮೇಲೆ ಓದಲಾದ (1)ರಲ್ಲಿದ್ದ ಷರತ್ತನ್ನು ಸಡಿಲಿಸಿ ತಿದ್ದುಪಡಿ ಮಾಡಲಾಗಿದೆ. ಸದರಿ ಯೋಜನೆಯು ವರ್ಷ 2014-15ರಲ್ಲಿ ಪ್ರಾರಂಭಗೊಂಡಿದ್ದರೂ ಕೂಡ ಇದುವರೆವಿಗೂ ಫಲಾನುಭವಿಗಳ ಗುರುತಿಸುವಿಕೆಯಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಯೋಜನೆಯನ್ನು ನಿಗಧಿತ ಸಮಯದೊಳಗೆ ಕಾರ್ಯಗತಗೊಳಿಸಲು ಸಾಧ್ಯವಾಗದೇ, ಸದರಿ ಯೋಜನೆಗೆ ಹಂಚಿಕೆಯಾಗಿರುವ ಕೇಂದ್ರ/ರಾಜ್ಯ ಸರ್ಕಾರದ ಅನುದಾನವನ್ನು ಪೂರ್ಣಮಟ್ಟದಲ್ಲಿ ಬಳಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸುವ ಯೋಜನೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಫಲಾನುಭವಿಗಳನ್ನು ಹೊರತುಪಡಿಸಿ ಬಾಕಿ ಇರುವ ಸೌರ ಪಂಪ್ಸೆಟ್ಗಳನ್ನು ಮೊದಲು ಬಂದವರಿಗೆ ಮೊದಲ ಆಧ್ಯತೆ ಮೇರೆಗೆ ಆನ್ಲೈನ್ ಪ್ರಕ್ರಿಯೆ ಮುಖಾಂತರ ಕ್ರೆಡಲ್ ವತಿಯಿಂದ ನೇರವಾಗಿ ರಾಜ್ಯಾದ್ಯಂತ ಹಂಚಿಕೆ ನೀಡಲು ಕ್ರಮ ಕೈಗೊಳ್ಳುವಂತೆ ಮೇಲೆ ಓದಲಾದ (4) ರಲ್ಲಿ ಆದೇಶಿಸಲಾಗಿದೆ.
ಸದರಿ ಯೋಜನೆಯಡಿ ಜುಲೈ-2018ರ ಅಂತ್ಯದವರೆಗೆ ಮೊದಲನೇ ಹಂತದಲ್ಲಿ 984 ಸಂಖ್ಯೆಯ ಎರಡನೇ ಹಂತದಲ್ಲಿ 394 ಸಂಖ್ಯೆಯ ಹಾಗೂ ಮೂರನೇ ಹಂತದಲ್ಲಿ 38 ಸಂಖ್ಯೆಯ ಪಂಪ್ಸೆಟ್ಗಳನ್ನು ಅಳವಡಿಸಿ ಚಾಲನೆಗೊಳಿಸಲಾಗಿದೆ.
ಪರ್ಯಾಯ ಶಕ್ತಿ ಮೂಲಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮೇಲೆ ಓದಲಾದ (5) ರಂತೆ ಸರ್ಕಾರವು ಇಂಧನ ಇಲಾಖೆಗೆ, 2018-19 ವರ್ಷದ ಆಯವ್ಯಯ ಸಂಪುಟ-7 ಅಭಿಯಾನ ಸಂಖ್ಯೆ: 24ರಡಿಯ ಲೆಕ್ಕ ಶೀರ್ಷಿಕೆ 2801-80-800-1-08ರಲ್ಲಿ ಸೌರಶಕ್ತಿ ಯೋಜನೆಗಳ ಅನುಷ್ಠಾನಕ್ಕೆ ಒಟ್ಟು `.10(ಇತರೆ ಖರ್ಚುಗಳು: `.7.59 ಪರಿಶಿಷ್ಟ ಜಾತಿ ಉಪ ಯೋಜನೆ: `.1.71 ಮತ್ತು ಗಿರಿಜನ ಉಪ ಯೋಜನೆ: `.0.70) ಕೋಟಿಗಳನ್ನು ಮೀಸಲಿರಿಸಿದೆ.
ವರ್ಷ 2018-19ನೇ ಸಾಲಿನ ಆಯವ್ಯಯದಲ್ಲಿ ಮೀಸಲಿರಿಸಿರುವ `.10 ಕೋಟಿಗಳನ್ನು, ಈಗಾಗಲೇ ಕೆ.ಆರ್.ಇ.ಡಿ.ಎಲ್ ವತಿಯಿಂದ ಜಾರಿಯಲ್ಲಿರುವ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸುವ ಯೋಜನೆಯನ್ನು ಮುಂದುವರೆಸಲು `.20.57 ಕೋಟಿ (ರಾಜ್ಯ ಸರ್ಕಾರದ ಅನುದಾನ : `.10ಕೋಟಿ, ಫಲಾನುಭವಿಗಳ ವಂತಿಗೆ: `.5.31 ಕೋಟಿ ಮತ್ತು ಎಂ.ಎನ್.ಆರ್.ಇ. ವಂತಿಗೆ (`.85,000/- ಪ್ರತಿ ಪಂಪ್ಗೆ) : `.5.31 ಕೋಟಿ) ಯೋಜನಾ ವೆಚ್ಚದಲ್ಲಿ ಒಟ್ಟು 625 ಸಂಖ್ಯೆಯ(ಸಾಮಾನ್ಯ: 526, ಪರಿಶಿಷ್ಟ ಜಾತಿ: 70 ಮತ್ತು ಪರಿಶಿಷ್ಟ ಪಂಗಡ: 29) ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸಲು ವ್ಯವಸ್ಥಾಪಕ ನಿರ್ದೇಶಕರು, ಕೆ.ಆರ್.ಇ.ಡಿ.ಎಲ್ರವರು ಮೇಲೆ ಓದಲಾದ (6)ರ ಪತ್ರದಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಈ ಹಿನ್ನಲೆಯಲ್ಲಿ ಇಂಧನ ಇಲಾಖೆಗೆ ಸೌರಶಕ್ತಿ ಯೋಜನೆಗಳಿಗಾಗಿ ಮೀಸಲಿರಿಸಿರುವ `.10 ಕೋಟಿಗಳನ್ನು ಕೆ.ಆರ್.ಇ.ಡಿ.ಎಲ್ ನ ಮುಂದುವರೆದ ಯೋಜನೆಯಾದ ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸುವ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲು ಈ ಕೆಳಗಿನಂತೆ ಆದೇಶಿಸಿದೆ:
ಸರ್ಕಾರಿ ಆದೇಶ ಸಂಖ್ಯೆ: ಇಎನ್ 170 ವಿಎಸ್ಸಿ 2018, ಬೆಂಗಳೂರು, ದಿನಾಂಕ:29.08.2018
2018-19ನೇ ಸಾಲಿನ ಲೆಕ್ಕ ಶೀರ್ಷಿಕೆ 2801-80-800-1-08 ರಂತೆ ಸೌರಶಕ್ತಿ ಯೋಜನೆಗಳ ಅನುಷ್ಠಾನಕ್ಕೆ ಇಂಧನ ಇಲಾಖೆಗೆ ಒದಗಿಸಿರುವ `.10 (ಇತರೆ ಖರ್ಚುಗಳು: `.7.59 ಪರಿಶಿಷ್ಟ ಜಾತಿ ಉಪ ಯೋಜನೆ: `.1.71 ಮತ್ತು ಗಿರಿಜನ ಉಪ ಯೋಜನೆ: `.0.70) ಕೋಟಿಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವತಿಯಿಂದ ಮುಂದುವರೆದ ಯೋಜನೆಯಾಗಿ `.20.57 ಕೋಟಿ (ರಾಜ್ಯ ಸರ್ಕಾರದ ಅನುದಾನ: `..10ಕೋಟಿ, ಫಲಾನುಭವಿಗಳ ವಂತಿಗೆ: `.5.31 ಕೋಟಿ ಮತ್ತು ಎಂ.ಎನ್.ಆರ್.ಇ. ವಂತಿಗೆ (`.85,000/- ಪ್ರತಿ ಪಂಪ್ಗೆ) : `.5.31 ಕೋಟಿ) ಯೋಜನಾ ವೆಚ್ಚದಲ್ಲಿ ಒಟ್ಟು 625 ಸಂಖ್ಯೆಯ(ಸಾಮಾನ್ಯ: 526, ಪರಿಶಿಷ್ಟ ಜಾತಿ: 70 ಮತ್ತು ಪರಿಶಿಷ್ಟ ಪಂಗಡ: 29) ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸುವ ಕ್ರಿಯಾಯೋಜನೆಗೆ ಈ ಕೆಳಕಂಡ ಷರತ್ತು/ನಿಬಂಧನೆಗೊಳಪಡಿಸಿ, ಅನುಮೋದನೆ ನೀಡಿ ಆದೇಶಿಸಿದೆ.
• ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತವು KTPP ಅಧಿನಿಯಮದನ್ವಯ ಮುಂದಿನ ಕ್ರಮ ಜರುಗಿಸುವುದು.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೮೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೧, ೨೦೧೮ ಭಾಗ ೧• ಸೌರಶಕ್ತಿ ಆಧಾರಿತ ಜಾಲಮುಕ್ತ ನೀರಾವರಿ ಪಂಪ್ಸೆಟ್ಗಳನ್ನು ಒದಗಿಸಲು ಫಲಾನುಭವಿಗಳ ಆಯ್ಕೆ ಮತ್ತು ಮಾನದಂಡಗಳ ಕುರಿತು ಮೇಲೆ ಓದಲಾದ (1), (2), (3) ಮತ್ತು (4) ರ ಆದೇಶಗಳಂತೆ ಮುಂದಿನ ಕ್ರಮ ಜರುಗಿಸುವುದು.
PR.432
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ. ಮಂಜಪ್ಪ
SC.50
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ)
ಇಂಧನ ಇಲಾಖೆ
ಸಹಕಾರ ಸಚಿವಾಲಯ
ವಿಷಯ : ಕರ್ನಾಟಕ ದಲಿತ ನೌಕರರ ಒಕ್ಕೂಟ, ಶಿವಮೊಗ್ಗ, ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಇ 108 ಸಸಂನೋ 2016, ಬೆಂಗಳೂರು, ದಿನಾಂಕ: 16.12.2017. 2. ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಪತ್ರ ಸಂ:ಅನಿ (ಬ&ಮಾ)
(ಸಂ.ಸಂ)2/48/2018-19, ದಿ: 20-07-2018.
ಪ್ರಸ್ತಾವನೆ :
ಮೇಲೆ ಕ್ರ.ಸಂ.(1) ರಲ್ಲಿ ಓದಲಾದ ಆದೇಶದಲ್ಲಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಶಿವಮೊಗ್ಗ ಉಪ ವಿಭಾಗ, ಶಿವಮೊಗ್ಗ ಇವರನ್ನು ಕರ್ನಾಟಕ ದಲಿತ ನೌಕರರ ಒಕ್ಕೂಟ, ಶಿವಮೊಗ್ಗ ಈ ಸಂಸ್ಥೆಗೆ ದಿ: 16-12-2017 ರಿಂದ ಮುಂದಿನ 06 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿತ್ತು.
ಮೇಲೆ (2) ರಲ್ಲಿ ಓದಲಾದ ಪತ್ರದಲ್ಲಿ ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರು ಸದರಿ ಸಂಘದ ಆಡಳಿತ ಮಂಡಳಿ44ಯ ಚುನಾವಣೆ ನಡೆಸಲು ಕಾಲಾವಕಾಶದ ಅಗತ್ಯವಿರುವುದರಿಂದ ಹಾಗೂ ಆಡಳಿತಾಧಿಕಾರಿ ಅವಧಿಯು ದಿನಾಂಕ: 14.06.2018ಕ್ಕೆ ಮುಕ್ತಾಯಗೊಂಡಿರುವುದರಿಂದ, ಆಡಳಿತಾಧಿಕಾರಿ ಅವಧಿಯನ್ನು 06 ತಿಂಗಳ ಅವಧಿಗೆ ವಿಸ್ತರಿಸಲು ಸಹಕಾರ ಸಂಘಗಳ ಉಪ ನಿಬಂಧಕರು ಕೋರಿದ್ದು ಅವರ ಕೋರಿಕೆಯಂತೆ ಆಡಳಿತಾಧಿಕಾರಿಯವರ ಅವಧಿಯನ್ನು ದಿ: 15.06.2018 ರಿಂದ ಮುಂದಿನ 06 ತಿಂಗಳ ಅವಧಿಗೆ ವಿಸ್ತರಿಸುವಂತೆ ಕೋರಿರುತ್ತಾರೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಕೋರಿಕೆಯನ್ನು ಪರಿಗಣಿಸಿ, ಕರ್ನಾಟಕ ದಲಿತ ನೌಕರರ ಒಕ್ಕೂಟ, ಶಿವಮೊಗ್ಗ, ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿ: 15-06-2018 ರಿಂದ ಮುಂದಿನ 06 ತಿಂಗಳ ಅವಧಿಗೆ ವಿಸ್ತರಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಸಇ 108 ಸಸಂನೋ 2016, ಬೆಂಗಳೂರು, ದಿನಾಂಕ: 14.09.2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ದಲಿತ ನೌಕರರ ಒಕ್ಕೂಟ, ಶಿವಮೊಗ್ಗ. ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿ: 15.06.2018 ರಿಂದ ಮುಂದಿನ 06 ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಿದೆ.
ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಸಂಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.
PR.433
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಸೆಂತಾಮರೈ
SC.30
ಸರ್ಕಾರದ ಅಧೀನ ಕಾರ್ಯದರ್ಶಿ,
ಸಹಕಾರ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.