ಬೆಂಗಳೂರು, ಗುರುವಾರ, ನವೆಂಬರ್ ೧, ೨೦೧೮ (ಕಾರ್ತೀಕ ೧೦, ಶಕ ವರ್ಷ ೧೯೪೦)
Bengaluru, Thursday, November 1, 2018 (Karthika 10, Shaka Varsha 1940)
ಸಂಪುಟ ೧೫೩
Volume 153
ಸಂಚಿಕೆ ೪೩
Issue 43
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ನಗರಾಭಿವೃದ್ಧಿ ಸಚಿವಾಲಯ
ವಿಷಯ :- ಡಾ. ಕೆ. ಶಿವರಾಮಕಾರಂತ ಬಡಾವಣೆಯ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.
ಓದಲಾಗಿದೆ :- 1. ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇವರ ಪತ್ರ ಸಂಖ್ಯೆ.
ಬೆಂಅಪ್ರಾ/ಆಯುಕ್ತರು/1157/2007-18, ದಿನಾಂಕ : 18.09.2007
2. ಸರ್ಕಾರದ ಆದೇಶ ಸಂಖ್ಯೆ: ನಅಇ/105/ಬೆಂಭೂಸ್ವಾ/2008 ದಿನಾಂಕ: 03.11.2008.
3. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: BDA/Commr/DC(LA)/SLAO/A5/PR/ 283/2008-09, ದಿನಾಂಕ: 30/12/2008.
4. ಮಾನ್ಯ ಸರ್ವೋಚ್ಛ ನ್ಯಾಯಾಲಯವು ಎಸ್ಎಲ್‌ಪಿ ಸಂಖ್ಯೆ: 10216-10218/2018 (Arising out of Civil Appeal Nos 7661-63/2018) ರಲ್ಲಿ ದಿನಾಂಕ : 03/08/2018 ರಂದು ನೀಡಿರುವ ಆದೇಶ.
5. ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇವರ ಪತ್ರ ಸಂಖ್ಯೆ :
ಬೆಂಅಪ್ರಾ/ಆಯುಕ್ತರು/ಭೂಸ್ವಾಅ/76/2018-19 ದಿನಾಂಕ: 06/10/2018 & 15/10/2018
ಪ್ರಸ್ತಾವನೆ :-
ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ದಿನಾಂಕ:18.09.2007 ರ ಪತ್ರದಲ್ಲಿ ಡಾ. ಕೆ. ಶಿವರಾಮಕಾರಂತ ಬಡಾವಣೆಯ ಯೋಜನೆಗೆ ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಸೋಮಶೆಟ್ಟಿಹಳ್ಳಿ, ಲಕ್ಷ್ಮೀಪುರ, ಗಾಣಿಗರಹಳ್ಳಿ ಮತ್ತು ಹೆಸರಘಟ್ಟ ಹೋಬಳಿಯ ಬ್ಯಾಲಕೆರೆ, ಕಾಳತಮ್ಮನಹಳ್ಳಿ, ಗುಣಿಅಗ್ರಹಾರ, ಕೆಂಪಾಪುರ ಹಾಗೂ ಯಲಹಂಕ ಹೋಬಳಿಯ ಮೇಡಿ ಅಗ್ರಹಾರ, ಆವಲಹಳ್ಳಿ, ವಡೇರಹಳ್ಳಿ, ರಾಮಗೊಂಡನಹಳ್ಳಿ, ಕೆಂಪನಹಳ್ಳಿ, ವೀರಸಾಗರ, ದೊಡ್ಡಬೆಟ್ಟಹಳ್ಳಿ, ಹಾರೋಹಳ್ಳಿ, ಶಾಮರಾಜಪುರ ಮತ್ತು ಜಾರಕಬಂಡೆಕಾವಲ್ ಗ್ರಾಮಗಳಲ್ಲಿನ ವಿವಿಧ ಸರ್ವೆ ನಂಬರ್‌ಗಳ ಒಟ್ಟು 3546 ಎಕರೆ 12 ಗುಂಟೆ ಜಮೀನಿಗೆ ರೂ.1846.00 ಕೋಟಿಗಳ ಅಂದಾಜು ವೆಚ್ಚದಲ್ಲಿ ಭೂಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976 ರ ಕಲಂ 17 ರನ್ವಯ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿನ ಸರ್ಕಾರದ ಆದೇಶ ದಿನಾಂಕ:03.11.2008 ರಲ್ಲಿ ಡಾ. ಕೆ. ಶಿವರಾಮಕಾರಂತ ಬಡಾವಣೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976ರ ಕಲಂ 17ರನ್ವಯ ಪ್ರಾರಂಭಿಕ ಅಧಿಸೂಚನೆಯನ್ನು ಹೊರಡಿಸಲು ಸರ್ಕಾರದ ಅನುಮೋದನೆಯನ್ನು ನೀಡಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3) ರಲ್ಲಿನ ದಿನಾಂಕ 30.12.2008 ರ ಅಧಿಸೂಚನೆಯಲ್ಲಿ ಒಟ್ಟು 17 ಗ್ರಾಮಗಳ ವಿವಿಧ ಸರ್ವೆ ನಂಬರ್‌ಗಳಲ್ಲಿ ಒಟ್ಟು 3546 ಎಕರೆ 12 ಗುಂಟೆ ಜಮೀನುಗಳನ್ನು ಡಾ. ಕೆ. ಶಿವರಾಮಕಾರಂತ ಬಡಾವಣೆಗಾಗಿ ಭೂಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಾರಂಭಿಕ ಅಧಿಸೂಚನೆಯನ್ನು ಹೊರಡಿಸಲಾಗಿರುತ್ತದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ಮೇಲೆ ಓದಲಾದ ಕ್ರಮ ಸಂಖ್ಯೆ (4) ರಲ್ಲಿನ ಎಸ್ಎಲ್‌ಪಿ ಸಂಖ್ಯೆ: 10216-10218/2018 (Arising out of Civil Appeal No.7661-63/2018) ರಲ್ಲಿ ದಿನಾಂಕ: 03/08/2018 ರಂದು ನೀಡಿರುವ ತೀರ್ಪಿನಲ್ಲಿ ಡಾ. ಕೆ. ಶಿವರಾಮಕಾರಂತ ಬಡಾವಣೆಗಾಗಿ ಹೊರಡಿಸಲಾಗಿರುವ ಪ್ರಾರಂಭಿಕ ಅಧಿಸೂಚನೆಯಲ್ಲಿನ ಎಲ್ಲಾ ಜಮೀನುಗಳಿಗೆ ಅಂತಿಮ ಅಧಿಸೂಚನೆಯನ್ನು ಮೂರು ತಿಂಗಳೊಳಗಾಗಿ ಹೊರಡಿಸುವಂತೆ ಆದೇಶಿಸಿರುತ್ತದೆ. ತೀರ್ಪಿನ ಮುಖ್ಯ ಅಂಶವು ಈ ಕೆಳಕಂಡಂತಿದೆ.
(೯೧೧)೯೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೮ ಭಾಗ ೧
"The State Government and the BDA are further directed to proceed with the acquisition of the
aforementioned lands without excluding land from acquisition and submit a report to this Court the steps taken by
them in this regard within a period of three months from today"
ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (5) ರಲ್ಲಿನ ಪತ್ರಗಳಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ದಿನಾಂಕ 03.08.2018 ರಂದು ನೀಡಿರುವ ಆದೇಶದನ್ವಯ ಪ್ರಾಧಿಕಾರದ ಸಭೆಯ ದಿನಾಂಕ 07.09.2018 ರಲ್ಲಿ ವಿಷಯ ಸಂಖ್ಯೆ. 115/2018 ರಲ್ಲಿ ಒಟ್ಟು 17 ಗ್ರಾಮಗಳ 3546 ಎಕರೆ 12 ಗುಂಟೆ ಜಮೀನಿಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸುವಂತೆ ಕೋರಲು ನಿರ್ಣಯಿಸಲಾಗಿರುವುದಾಗಿ ತಿಳಿಸಿ, ಅದರಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976 ಕಲಂ 19(1) ರಡಿ ಅಂತಿಮ ಅಧಿಸೂಚನೆಯನ್ನು ಹೊರಡಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಸದರಿ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 3546 ಎಕರೆ 12 ಗುಂಟೆ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ರೂ.9,482,70,43,500/- ಗಳನ್ನು ಪಾವತಿಸಬೇಕಾಗುತ್ತದೆ ಮತ್ತು ಈ ಬಡಾವಣೆಯ ಅಭಿವೃದ್ಧಿಗಾಗಿ ತಗಲುವ ಒಟ್ಟು ವೆಚ್ಚವು ರೂ.13,833/- ಕೋಟಿಗಳಾಗುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ ಭೂಮಾಲೀಕರು 40:60 ರ ಅನುಪಾತದಲ್ಲಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾದ ನಿವೇಶನಗಳ ಬದಲಾಗಿ ನಗದು ಪರಿಹಾರವನ್ನು ಪಡೆಯಲು ಇಚ್ಛೆ ವ್ಯಕ್ತಪಡಿಸಿದ್ದಲ್ಲಿ ಅಂತಹ ಸಂದರ್ಭದಲ್ಲಿ ಪ್ರಾಧಿಕಾರವು ಭೂಪರಿಹಾರವನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿ ಸದರಿ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ 1976 ರ ಕಲಂ 18(3) ರಡಿಯಲ್ಲಿ ಯೋಜನಾ ಮಂಜೂರಾತಿಯನ್ನು ನೀಡುವಂತೆ ಕೋರಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಾಧಿಕಾರದ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಲಾಗಿದೆ.
ಸರ್ಕಾರಿ ಆದೇಶ ಸಂಖ್ಯೆ : ನಅಇ 553 ಬೆಂಭೂಸ್ವಾ 2018, ಬೆಂಗಳೂರು. ದಿನಾಂಕ: 29.10.2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಡಾ. ಕೆ. ಶಿವರಾಮಕಾರಂತ ಬಡಾವಣೆಯನ್ನು 3546 ಎಕರೆ 12 ಗುಂಟೆ ಜಮೀನನ್ನು ಭೂಸ್ವಾಧೀನಪಡಿಸಿಕೊಂಡು ಅಂದಾಜು ವೆಚ್ಚ ರೂ.13,833.00 ಕೋಟಿಗಳಲ್ಲಿ ನಿರ್ಮಿಸುವ ಯೋಜನೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾಯ್ದೆ, 1976ರ ಕಲಂ 18(3) ರಡಿಯಲ್ಲಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ.
1. ಸರ್ಕಾರದಿಂದ ಯಾವುದೇ ಹಣಕಾಸು ನೆರವನ್ನು ಅಪೇಕ್ಷಿಸದೇ ಈ ಯೋಜನೆಯ ಸಂಪೂರ್ಣ ವೆಚ್ಚವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು
ತನ್ನ ಸಂಪನ್ಮೂಲಗಳಿಂದಲೇ ಭರಿಸತಕ್ಕದ್ದು;
2. ಪ್ರಸ್ತುತ ಯೋಜನೆಗೆ ಪ್ರಾಧಿಕಾರವು ಪಡೆಯಬಹುದಾದ ಯಾವುದೇ ಸಾಲಗಳಿಗೆ ಸರ್ಕಾರವು ಖಾತರಿಯನ್ನು ನೀಡುವುದಿಲ್ಲ ಮತ್ತು ಸದರಿ
ಸಾಲವನ್ನು ತೀರಿಸುವ ಹೊಣೆ ಪ್ರಾಧಿಕಾರದ್ದಾಗಿರುತ್ತದೆ;
3. ಪ್ರಸ್ತುತ ಯೋಜನೆಗೆ ಸಂಬಂಧಿಸಿದಂತೆ ಪ್ರಾಧಿಕಾರವು ಮಾಡಿಕೊಳ್ಳುವ ಯಾವುದೇ ವ್ಯವಹಾರಗಳಿಗೆ ಸರ್ಕಾರವು ಭಾಗಿಯಾಗುವುದಿಲ್ಲ.
4. ಪ್ರಸ್ತುತ ಯೋಜನೆಗೆ ಸಂಬಂಧಿಸಿದಂತೆ ಭೂಉಪಯೋಗ ಬದಲಾವಣೆ ಮಾಡಿಕೊಳ್ಳುವುದಾದಲ್ಲಿ ಅದಕ್ಕೆ ಸರ್ಕಾರದ ಪೂರ್ವಾನುಮತಿಯನ್ನು
ಪಡೆಯತಕ್ಕದ್ದು;
5. ವಲಯ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಹಾಗೂ ಅಗತ್ಯಗಳನ್ನು ಪೂರೈಸತಕ್ಕದ್ದು.
PR – 466
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 500
ಕೆ.ಎಸ್. ಜಗದೀಶರೆಡ್ಡಿ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ.
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ : ಕಂಇ 76 ಮುಆಬಿ 2018, ಬೆಂಗಳೂರು, ದಿನಾಂಕ : 24-09-2018.
ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ (1997)ರ ಕಲಂ 23(ಬಿ)ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, "ಕೊಪ್ಪಳ ಜಿಲ್ಲೆ, ಗಂಗಾವತಿ ತಾಲ್ಲೂಕು, ಚಿಕ್ಕರಾಂಪುರ (ಆನೆಗುಂದಿ) ಗ್ರಾಮದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯ ಸ್ವಾಮಿ ದೇವಾಲಯ" ವನ್ನು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಗೆ ಸೇರ್ಪಡಿಸಿ ಆದೇಶಿಸಿದೆ.
PR – 454
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25
ಬಿ.ಎಸ್. ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ. (ಮುಜರಾಯಿ)
ಕಂದಾಯ ಸಚಿವಾಲಯ
ತಿದ್ದುಪಡಿ ಆದೇಶ
ಸಂಖ್ಯೆ : ಕಂಇ 54 ಭೂಸ್ವಾಳ 2014, ಬೆಂಗಳೂರು, ದಿನಾಂಕ : 13-08-2018.
ಸರ್ಕಾರದ ಆದೇಶ ಸಂಖ್ಯೆ: ಕಂಇ 54 ಭೂಸ್ವಾಳ 2014, ದಿನಾಂಕ: 31-05-2016ರ ಆದೇಶದ ಮೊದಲನೇ ಕಂಡಿಕೆಯ ಬದಲಾಗಿ ಈ ಕೆಳಕಂಡಂತೆ ತಿದ್ದಿಕೊಂಡು ಓದಿಕೊಳ್ಳತಕ್ಕದ್ದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೮ ೯೧೩ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ವಸತಿ, ಸ್ಮಶಾನ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಉಪ ವಿದ್ಯುತ್ ಕೇಂದ್ರಗಳ ನಿರ್ಮಾಣ, ಒಳಚರಂಡಿ, ರಸ್ತೆ ನಿರ್ಮಾಣ ಮತ್ತು ಅಗಲೀಕರಣ, ಬಂದರು ವಿಮಾನ ನಿಲ್ದಾಣ ಹಾಗೂ ಇನ್ನಿತರ ಸಾರ್ವಜನಿಕ ಉಪಯುಕ್ತತೆಯುಳ್ಳ ಸರ್ಕಾರದ ಯೋಜನೆಗಳಿಗೆ ಗರಿಷ್ಠ 100 ಎಕರೆಗೆ ಮೀರದಂತೆ ಹಾಗೂ 'ರೈಲ್ವೆ ಇಲಾಖೆಯ ರೇಖೀಯ ಯೋಜನೆಗಳಿಗೆ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ 100 ಎಕರೆಯನ್ನು ಪ್ರತಿ ಯೋಜನೆಗೆ ಪ್ರತಿ ಜಿಲ್ಲೆಗೆ ನೇರ ಖರೀದಿ ಮೂಲಕ ಭೂ ಕೋರಿಕೆ ಇಲಾಖೆ/ಫಲಾನುಭವಿ ಸಂಸ್ಥೆಗಳು ಖಾಸಗಿ ಜಮೀನನ್ನು ಭೂಮಾಲೀಕರಿಂದ ಕೆಳಕಂಡ ಮಾನದಂಡ/ಮಾರ್ಗಸೂಚಿಗಳನ್ನು ಅನುಸರಿಸಿ ಖರೀದಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.
ಮುಂದುವರೆದಂತೆ ದಿನಾಂಕ: 31-05-2016ರ ಆದೇಶದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
PR – 455
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50
ಎಂ. ಸತೀಶ್ ಕುಮಾರ್, ಕ.ಆ.ಸೇ. (ಹಿ.ಶ್ರೇ.) ಸರ್ಕಾರದ ಉಪ ಕಾರ್ಯದರ್ಶಿ
ಕಂದಾಯ ಇಲಾಖೆ. (ಭೂಸ್ವಾಧೀನ)
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ತಿದ್ದುಪಡಿ
ಸಂಖ್ಯೆ : ಸಿಆಸುಇ 30 ಈಕಾಅ 2018, ಬೆಂಗಳೂರು, ದಿನಾಂಕ : 22-09-2018.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 30 ಈಕಾಅ 2018, ದಿನಾಂಕ: 25-08-2018ರ ಆದೇಶ ಭಾಗದಲ್ಲಿನ ನೌಕರರ ಸಂಘದ ಪ್ರತಿನಿಧಿಗಳು ಶೀರ್ಷಿಕೆಯ ಕ್ರಮ ಸಂಖ್ಯೆ:7 ರಲ್ಲಿ "ಅಧ್ಯಕ್ಷರು, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ, ಬಹುಮಹಡಿ ಕಟ್ಟಡ, ಬೆಂಗಳೂರು" ಎಂದಿರುವುದನ್ನು "ಶ್ರೀ ಪಿ. ಗುರುಸ್ವಾಮಿ, ಅಧ್ಯಕ್ಷರು, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ, ಬಹುಮಹಡಿ ಕಟ್ಟಡ, ಬೆಂಗಳೂರು" ಎಂದು ತಿದ್ದಿ ಓದಿಕೊಳ್ಳತಕ್ಕದ್ದು, ಉಳಿದಂತೆ ಸದರಿ ಆದೇಶದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.
PR – 456
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಉಷಾ ಎಸ್
ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.
(ಆಸು-ಕಾರ್ಯಾಧ್ಯಯನ)
ಸಹಕಾರ ಸಚಿವಾಲಯ
ಸರ್ಕಾರದ ಆದೇಶ ಸಂಖ್ಯೆ : ಸಇ 101 ಸಸಂನೋ 2016, ಬೆಂಗಳೂರು, ದಿನಾಂಕ : 22-09-2018.
ವಿಷಯ : ಬಳ್ಳಾರಿ ಜಿಲ್ಲಾ ಭೋವಿ (ವಡ್ಡರ) ಸಂಘ, ಬಳ್ಳಾರಿ, ಈ ಸಂಘಕ್ಕೆ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸುವ ಬಗ್ಗೆ.
ಓದಲಾಗಿದೆ : 1) ಸರ್ಕಾರದ ಆದೇಶ ಸಂ: ಸಇ 101 ಸಸಂನೋ 2016, ದಿನಾಂಕ: 03-07-2017.
2) ಸರ್ಕಾರದ ಆದೇಶ ಸಂ: ಸಇ 101 ಸಸಂನೋ 2016, ದಿನಾಂಕ: 17-11-2017.
3) ಸಹಕಾರ ಸಂಘಗಳ ಉಪ ನಿಬಂಧಕರು, ಬಳ್ಳಾರಿ ಇವರ ಪತ್ರ ಸಂ: ಉನಿಬ/ಸಂಘ-ಸಂಸ್ಥೆ/01/1916-17/1600, ದಿನಾಂಕ: 09-07-2018.
ಪ್ರಸ್ತಾವನೆ :
ಮೇಲೆ ಕ್ರಮ ಸಂಖ್ಯೆ: (1)ರಲ್ಲಿ ಓದಲಾದ ಆದೇಶದಲ್ಲಿ, ಬಳ್ಳಾರಿ ಜಿಲ್ಲಾ ಭೋವಿ (ವಡ್ಡರ) ಸಂಘ, ಬಳ್ಳಾರಿ ಈ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ)ರನ್ವಯ ದಿ: 03-07-2017 ರಿಂದ ಮುಂದಿನ 6 ತಿಂಗಳ ಅವಧಿಗೆ ಸಹಕಾರ ಸಂಘಗಳ ಉಪ ನಿಬಂಧಕರು, ಬಳ್ಳಾರಿ ಇವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿತ್ತು.
ಮೇಲೆ ಕ್ರಮ ಸಂಖ್ಯೆ: (2)ರಲ್ಲಿ ಓದಲಾದ ಆದೇಶದಲ್ಲಿ ಸದರಿ ಸಂಘದ ಆಡಳಿತಾಧಿಕಾರಿಯನ್ನು ಬದಲಾಯಿಸಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಬಳ್ಳಾರಿ ಉಪ ವಿಭಾಗ, ಬಳ್ಳಾರಿ ಇವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿತ್ತು.
ಮೇಲೆ ಕ್ರಮ ಸಂಖ್ಯೆ: (3)ರಲ್ಲಿ ಓದಲಾದ ಪತ್ರದಲ್ಲಿ, ಸಂಘಗಳ ನೋಂದಣಾಧಿಕಾರಿಗಳು, ಬಳ್ಳಾರಿ ಇವರು ಬಳ್ಳಾರಿ ಜಿಲ್ಲಾ ಭೋವಿ (ವಡ್ಡರ) ಸಂಘದ ಆಡಳಿತಾಧಿಕಾರಿ ಅವಧಿಯನ್ನು ಇನ್ನೂ 6 ತಿಂಗಳವರೆಗೆ ವಿಸ್ತರಿಸಬೇಕೆಂದು ಕೋರಿರುತ್ತಾರೆ.
ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿ, ಬಳ್ಳಾರಿ ಜಿಲ್ಲಾ ಭೋವಿ (ವಡ್ಡರ) ಸಂಘ, ಬಳ್ಳಾರಿ ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿ: 03-01-2018 ರಿಂದ ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.
ಆದೇಶ
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಬಳ್ಳಾರಿ ಜಿಲ್ಲಾ ಭೋವಿ (ವಡ್ಡರ) ಸಂಘ, ಬಳ್ಳಾರಿ ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿ: 03-01-2018 ರಿಂದ ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.
PR – 457
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್. ಸೆಂತಾಮರೈ ಸರ್ಕಾರದ ಅಧೀನ ಕಾರ್ಯದರ್ಶಿ-3 ಸಹಕಾರ ಇಲಾಖೆ.
೯೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೮ ಭಾಗ ೧ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ವಿಷಯ : Centre for Cellular and Molecular Platforms (C-CAMP) ನಲ್ಲಿ ಅಗ್ರಿ-ಇನ್ನೋವೇಷನ್‌ಗಾಗಿ ಉತ್ಕøಷ್ಟತಾ ಕೇಂದ್ರ (Centre of Excellence)ದ ಸ್ಥಾಪನೆ ಬಗ್ಗೆ.
ಓದಲಾಗಿದೆ : (1) ಸಿಇಓ & ನಿರ್ದೇಶಕರು, C-CAMP ರವರ ದಿನಾಂಕ: 11.12.2017ರ ಪ್ರಸ್ತಾವನೆ.
(2) ಕೃಷಿ ಇಲಾಖೆಯವರ ಅ.ಟಿ.ಸಂ. ಕೃಇ 20 ಕೃಉಇ 2018, ದಿನಾಂಕ: 06.03.2018ರ ಅನಧಿಕೃತ ಟಿಪ್ಪಣಿ.
ಪ್ರಸ್ತಾವನೆ :
ಆರ್ಥಿಕ ವರ್ಷ 2018-19ರ ಆಯವ್ಯಯ ಭಾಷಣದಲ್ಲಿ ಈ ಕೆಳಕಂಡಂತೆ ಒಂದು ಘೋಷಣೆಯನ್ನು ಮಾಡಲಾಗಿದೆ :-
"370. ಕೃಷಿ ವಲಯದಲ್ಲಿ ವಿಶ್ವಾಸಪೂರ್ವಕ ನವೀನ ಆವಿಷ್ಕಾರಗಳನ್ನು ಉತ್ತೇಜಿಸುವ ಹಾಗೂ ಘೋಷಿಸುವ ಸಲುವಾಗಿ ಕೇಂದ್ರ ಸರ್ಕಾರದ ಸಂಸ್ಥೆಯಾದ Centre for Cellular and Molecular Platforms (C-CAMP) ನ ಸಹಯೋಗದೊಂದಿಗೆ ಅಗ್ರಿ-ಇನ್ನೋವೇಷನ್ ಕೇಂದ್ರವೊಂದನ್ನು ಸ್ಥಾಪಿಸಲಾಗುವುದು". 2] ಕೃಷಿ ಕ್ಷೇತ್ರದಲ್ಲಿ ನವೀನ ಅವಿಷ್ಕಾರಗಳಿಗಾಗಿ (ಅಗ್ರಿ-ಇನ್ನೋವೇಷನ್) ಒಂದು ಉತ್ಕøಷ್ಟತಾ ಕೇಂದ್ರ (CoE)ವನ್ನು ಸ್ಥಾಪಿಸುವ ಸಲುವಾಗಿ C-CAMP) ಸಂಸ್ಥೆಯು ಮೇಲೆ ಓದಲಾದ (1)ರಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಿದೆ. C-CAMP ಸಂಸ್ಥೆಯು ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಒಂದು ಉಪಕ್ರಮವಾಗಿದ್ದು, ಬೆಂಗಳೂರು ಲೈಫ್ ಸೈನ್ಸಸ್ ಕ್ಲಸ್ಟರ್‌ನ ಒಂದು ಪ್ರಮುಖ ಅಂಗವಾಗಿದೆ. ಜೀವವಿಜ್ಞಾನಗಳ ಕ್ಷೇತ್ರದಲ್ಲಿ ಭಾರತದಲ್ಲಿ ತಂತ್ರಜ್ಞಾನ ಆಧಾರಿತ ನವೀನ ಆವಿಷ್ಕಾರಗಳಿಗಾಗಿ C-CAMP ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನೆಲೆಯಾಗಿದೆ. ಪ್ರಾರಂಭದ ದಿನದಿಂದಲೂ C-CAMP ಸಂಸ್ಥೆಯು ಜೀವವಿಜ್ಞಾನ ಕುರಿತು ಅತ್ಯಾಧುನಿಕ ಸಂಶೋಧನೆ ಮತ್ತು ಉದ್ಯಮಶೀಲತೆಗಳಿಗಾಗಿ ಮಾರ್ಗ ಕಲ್ಪಿಸಿಕೊಡುವ ವೇದಿಕೆಯಾಗಿದೆ.
3] C-CAMP ನಲ್ಲಿಯೇ ಸ್ಥಾಪಿಸಬೇಕಿರುವ ಪ್ರಸ್ತಾವಿತ ಉತ್ಕøಷ್ಟತಾ ಕೇಂದ್ರವು ಬೆಳೆ ರೋಗಗಳು, ಬರ ಸಮಸ್ಯೆಗಳು, ಕೀಟನಾಶಕ ಸಮಸ್ಯೆಗಳು, ಡೈರಿ ಸಮಸ್ಯೆಗಳೇ ಮುಂತಾದ ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳಲ್ಲಿ ಅತ್ಯಾಧುನಿಕ ನವೀನ ಅವಿಷ್ಕಾರಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಬ್-ಅಂಡ್-ಸ್ಪೋಕ್ (ಮೂಲಕೇಂದ್ರ ಮತ್ತು ಅವುಗಳ ಶಾಖೆಗಳ) ಮಾದರಿಯನ್ನು ನಿರ್ಮಿಸಲು ಬೆಂಗಳೂರಿನ ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯಗಳೊಂದಿಗೆ ಹಾಗೂ ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದೊಂದಿಗೆ, ಜೊತೆಗೆ ಬೆಂಗಳೂರು ಬಯೋ-ಇನ್ನೋವೇಷನ್ ಕೇಂದ್ರ (ಬಿ.ಬಿ.ಸಿ) ಮುಂತಾದ ಪರಿಪೋಷಣಾ ಕೇಂದ್ರಗಳೊಂದಿಗೂ ಸಹಭಾಗಿತ್ವ ಹೊಂದಲಿದೆ. ಸದರಿ ಕೇಂದ್ರವನ್ನು ಸ್ಥಾಪಿಸಿ ಕಾರ್ಯಾಚರಣೆಯಲ್ಲಿಡಲು ರಾಜ್ಯ ಸರ್ಕಾರದಿಂದ ರೂ. 15.00 ಕೋಟಿಗಳ ಆರ್ಥಿಕ ಬೆಂಬಲವನ್ನು C-CAMP ಕೋರಿದೆ. ಕೃಷಿ ವಲಯದಲ್ಲಿ ಡೀಪ್-ಸೈನ್ಸ್ ತಂತ್ರಜ್ಞಾನದಿಂದ ಪ್ರೇರಿತವಾದ ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಮೂಲಕ ನವೀನ ಅವಿಷ್ಕಾರಕ್ಕೆ ಮಾರ್ಗ ಕಲ್ಪಿಸಿದಂತಾಗಿ, ಕೃಷಿ ಕ್ಷೇತ್ರದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯಾಗುವಂತಾಗುವ ಗುರಿಯನ್ನು ಉತ್ಕøಷ್ಟತಾ ಕೇಂದ್ರವು ಹೊಂದಿದೆ.
4] ಮೇಲೆ ಓದಲಾದ (2)ರಲ್ಲಿ ಕೃಷಿ ಇಲಾಖೆಯವರಿಂದ ಅಭಿಪ್ರಾಯವನ್ನು ಒದಗಿಸಿ 'Proposal for establishment of Centre of Excellance for Agri-Innovation at C-CAMP ವಿಷಯಕ್ಕೆ ಸಂಬಂಧಿಸಿದಂತೆ, 2017-18ನೇ ಸಾಲಿನಲ್ಲಿ ಕೃಷಿ ಇಲಾಖೆಯ ವಿವಿಧ ಯೋಜನೆಗಳಡಿ ಉಳಿತಾಯವಾಗುವ ಅನುದಾನದಲ್ಲಿ ರೂ. 10.00 ಕೋಟಿಗಳನ್ನು ನೀಡಲು ಕೃಷಿ ಇಲಾಖೆಯು ಉದ್ದೇಶಿಸಿದ್ದು, ಪುನರ್ ವಿನಿಯೋಗ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆಯ ಸಹಮತಿಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗುವುದೆಂಬ ಮಾಹಿತಿಯನ್ನು ಮಾ.ತಂ., ಜೈ.ತಂ. ಇಲಾಖೆಯ ಅವಗಾಹನೆಗೆ ತರಲಾಗಿದೆ' ಎಂದು ತಿಳಿಸಿರುತ್ತಾರೆ. 5] ರಾಜ್ಯ ಸರ್ಕಾರದ ಕೃಷಿ ಇಲಾಖೆಯಿಂದ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಿಂದ ಆರ್ಥಿಕ ಸಂಪನ್ಮೂಲಗಳನ್ನು ಸೇರ್ಪಡೆಗೊಳಿಸಿ ಉತ್ಕøಷ್ಟತಾ ಕೇಂದ್ರವನ್ನು ಸ್ಥಾಪಿಸಲು ಪ್ರಸ್ತಾವಿಸಲಾಗಿದೆ. ಆವರ್ತನಾರಹಿತ/ಬಂಡವಾಳ ವೆಚ್ಚವಾಗಿ 5 ವರ್ಷಗಳ ಅವಧಿಗೆ ರೂ. 3 ಕೋಟಿಗಳಷ್ಟು ಹಾಗೂ ಆವರ್ತ/ಚಾಲನಾ ವೆಚ್ಚವಾಗಿ 5 ವರ್ಷಗಳ ಅವಧಿಯಲ್ಲಿ ರೂ. 12.00 ಕೋಟಿಗಳಷ್ಟನ್ನು ತೊಡಗಿಸಲು ಪ್ರಸ್ತಾವನೆಯಿದೆ. C-CAMP ರವರು ರಾಜ್ಯ ಸರ್ಕಾರದಿಂದ ಬಯಸಿರುವ 5 ವರ್ಷಗಳ ಅವಧಿಗೆ ಒಟ್ಟು ಆರ್ಥಿಕ ಬೆಂಬಲವು ರೂ. 15.00 ಕೋಟಿಗಳಾಗಿವೆ.
ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಿಂದ ರೂ. 5.00 ಕೋಟಿಗಳ ಬೆಂಬಲವನ್ನು ಒದಗಿಸಲಾಗುವುದು ಮತ್ತು ಕೃಷಿ ಇಲಾಖೆಯು ರೂ. 10.00 ಕೋಟಿಗಳಷ್ಟನ್ನು ಒದಗಿಸಲು ಪರಿಗಣಿಸಬಹುದಾಗಿದೆ. ಪ್ರಸ್ತಾವಿತ ಉತ್ಕøಷ್ಟತಾ ಕೇಂದ್ರದ ಐದು ವರ್ಷಗಳ ಅವಧಿಯಲ್ಲಿನ ಬಂಡವಾಳ ವೆಚ್ಚ ಹಾಗೂ ಚಾಲನಾ ವೆಚ್ಚಗಳು ಈ ಕೆಳಕಂಡಂತಿವೆ :-
| 1ನೇ ವರ್ಷ | 2ನೇ ವರ್ಷ | 3ನೇ ವರ್ಷ | 4ನೇ ವರ್ಷ | 5ನೇ ವರ್ಷ | ಒಟ್ಟು | |
| ಬಂಡವಾಳ ವೆಚ್ಚ | 200.00 | 39.00 | 37.00 | 12.00 | 12.00 | 300.00 |
| ಚಾಲನಾ ವೆಚ್ಚ | 688.80 | 115.16 | 123.45 | 132.57 | 142.58 | 1202.56 |
| ಒಟ್ಟು | 888.80 | 154.16 | 160.45 | 144.57 | 154.58 | 1502.56 |
ವೆಚ್ಚಗಳ ವಿವರವನ್ನು ಅನುಬಂಧದಲ್ಲಿರಿಸಲಾಗಿದೆ.
6] ಅದರಂತೆ ಈ ಕೆಳಕಂಡ ಆದೇಶ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೮ ೯೧೫ಸರ್ಕಾರಿ ಆದೇಶ ಸಂಖ್ಯೆ: ಐಟಿಡಿ 261 ಎಡಿಎಂ 2017, ಬೆಂಗಳೂರು, ದಿನಾಂಕ: 13.08.2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರಿನ Centre for Cellular and Molecular Platforms (C-CAMP) ನಲ್ಲಿ 5 ವರ್ಷಗಳ ಅವಧಿಗೆ ರೂ. 15.00 ಕೋಟಿಗಳ (ಹದಿನೈದು ಕೋಟಿ ರೂಪಾಯಿಗಳು ಮಾತ್ರ) ಅಂದಾಜು ವೆಚ್ಚದಲ್ಲಿ, ಕೃಷಿ ಇಲಾಖೆಯಿಂದ ರೂ. 10.00 ಕೋಟಿಗಳು ಹಾಗೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ರೂ. 5.00 ಕೋಟಿಗಳಷ್ಟು ಬೆಂಬಲವನ್ನು ಒದಗಿಸಿ, ಅಗ್ರಿ-ಇನ್ನೋವೇಷನ್‌ಗಾಗಿ ಉತ್ಕøಷ್ಟತಾ ಕೇಂದ್ರ (Centre of Excellence) ವನ್ನು ಸ್ಥಾಪಿಸಲು ಸರ್ಕಾರವು ಅನುಮೋದಿಸಿರುತ್ತದೆ.
ಯೋಜನೆಗೆ ತಗಲುವ ಬಂಡವಾಳ ವೆಚ್ಚ ಹಾಗೂ ಚಾಲನಾ ವೆಚ್ಚವನ್ನು ಒಳಗೊಂಡಂತೆ ಅಂದಾಜು ಯೋಜನಾ ವೆಚ್ಚದ ವಿವರವನ್ನು ಅನುಬಂಧದಲ್ಲಿ ನೀಡಲಾಗಿದೆ.
2] ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 52 ವೆಚ್ಚ – 2/2018, ದಿನಾಂಕ: 21.03.2018 ಹಾಗೂ ಪ್ರಕರಣ ಸಂಖ್ಯೆ: ಸಿ:447/2018;
ದಿನಾಂಕ: 02.08.2018ರಲ್ಲಿ ಸಚಿವ ಸಂಪುಟ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಸಿದ್ರಾಮಪ್ಪ ಹ ತಳವಾರ
ಸರ್ಕಾರದ ಅಧೀನ ಕಾರ್ಯದರ್ಶಿ
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ
ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ.
ಸರ್ಕಾರಿ ಆದೇಶ ಸಂಖ್ಯೆ : ಐಟಿಡಿ 261 ಎಡಿಎಂ 2017, ಬೆಂಗಳೂರು, ದಿನಾಂಕ : 13.08.2018ಕ್ಕೆ ಅನುಬಂಧ ವಿಷಯ: Centre for Cellular and Molecular Platforms (C-CAMP) ನಲ್ಲಿ ಅಗ್ರಿ-ಇನ್ನೋವೇಷನ್‌ಗಾಗಿ ಉತ್ಕøಷ್ಟತಾ ಕೇಂದ್ರ (Centre of Excellence)ದ ಸ್ಥಾಪನೆ ಬಗ್ಗೆ.
ಅಗ್ರಿ-ಇನ್ನೋವೇಷನ್‌ಗಾಗಿ ಉತ್ಕøಷ್ಟತಾ ಕೇಂದ್ರಕ್ಕಾಗಿ C-CAMPರವರ ವರ್ಷಾನುವರ್ಷದ ಅಂದಾಜು ಪಟ್ಟಿ.
| ಕ್ರ. ಸ ಂ. | ವ ಚ್ಚದ ವಿಷಯ ೆ | 1ನೇ ವರ್ಷ | 2ನೇ ವರ್ಷ | 3ನೇ ವರ್ಷ | 4ನೇ ವರ್ಷ | 5ನೇ ವರ್ಷ | ಒಟ್ಟು |
| ಎ | ಆವರ್ತವಲ್ಲದ ವೆಚ್ಚ | ||||||
| 1 | ನವೀಕರಣ/ಮುಡಿಪಿಟ್ಟ ಸ ್ಥಳದಲ್ಲಿ ಸ ರಂಜಾಮುಗಳಿಂದ ಸ ಜ್ಜಗೊಳಿಸುವಿಕೆ | 40.00 | 10.00 | 10.00 | 10.00 | 10.00 | 80.00 |
| 2 | ಪ ವ ್ರ ುುಖ ಪ್ರದೇಶದ ಉಪಕರಣಗಳು | 150.00 | 25.00 | 25.00 | ಶ ೂನ್ಯ | ಶ ೂನ್ಯ | 200.00 |
| 3 | ಅತ್ಯಾಧುನಿಕ ಸಂವಹನ ಜಾಲವನ್ನು ಒಳಗೊಂಡಂತೆ ಕಛೇರಿಯ ಉಪಕರಣಗಳು | 10.00 | 4.00 | 2.00 | 2.00 | 2.00 | 20.00 |
| ಒಟ್ಟು – ಎ | 200.00 | 39.00 | 37.00 | 12.00 | 12.00 | 300.00 | |
| ಬಿ | ಆವರ್ತಗೊಳ್ಳುವ ವೆಚ್ಚ | ||||||
| 1 | ವ iಾನವ ಶಕ್ತಿ | 42.00 | 46.20 | 50.82 | 55.90 | 61.49 | 256.41 |
| 2 | ಪ ಯಾಣ ್ರ | 5.00 | 5.50 | 6.05 | 6.66 | 7.32 | 30.53 |
| 3 | ಬಳಕೆ ಮತ್ತು ನಿರ್ವಹಣೆ | 10.00 | 11.00 | 12.10 | 13.31 | 14.64 | 61.05 |
| 4 | ವ iಾರ್ಕೆಟಿಂಗ್, ಪ್ರಾಯೋಜನೆ ಮತ್ತು ಪ ಚಾರ ್ರ | 5.00 | 5.50 | 6.05 | 6.66 | 7.32 | 30.53 |
| 5 | ತ ೂಡಗಿಸಿಕೊಂಡವರಿಗೆ ೆ ಪ ಲ ೆ ೂೕಷಿಪ್ ೆ (Immersion Fellowship) | 90.00 | ಶ ೂನ್ಯ | ಶ ೂನ್ಯ | ಶ ೂನ್ಯ | ಶ ೂನ್ಯ | 90.00 |
| 6 | Immersion Fellow ಗೆ ಪ ಯಾಣ ಭತ್ಯೆ/ತುಟ್ಟಿ ್ರ ಬ ತ ್ಯ (ಪ್ರತಿ ೆ ತ ೂಡಗಿಕೊಂಡ ೆ ಪ ಲ ೆ ೂೕವಿಗೆ ತಿಂಗಳಿಗೆ ೆ ರೂ. 1.5 ಲಕ್ಷದಂತೆ | 180.00 | ಶ ೂನ್ಯ | ಶ ೂನ್ಯ | ಶ ೂನ್ಯ | ಶ ೂನ್ಯ | 180.00 |
| 7 | Seed Funding | 300.00 | 30.00 | 30.00 | 30.00 | 30.00 | 420.00 |
| 8 | ಸ ಂಪರ್ಕಜಾಲ ಮತ್ತು ತ ರಬೇತಿ ಕಾರ್ಯಕ್ರಮಗಳು | 8.00 | 8.80 | 9.68 | 10.65 | 11.71 | 48.84 |
| 9 | ಪ ರಿಕರಗಳು, ಮುದ್ರಣ, ಪ ಕಟಣೆಗಳು, ್ರ ಪ ುಸ್ತಕಗಳು, ನಿಯತಕಾಲಿಕೆಗಳು, ಇತ್ಯಾದಿಗಳನ್ನು ಒಳಗೊಂಡಂತೆ ಇತರ ಆಡಳಿತ ವೆಚ್ಚಗಳು | 32.00 | 5.35 | 5.74 | 6.16 | 6.62 | 55.87 |
| 10 | ಇತರೆ ಮತ್ತು ಸಾದಿಲ್ವಾರುಗಳು | 16.80 | 2.81 | 3.01 | 3.23 | 3.48 | 29.33 |
| ಒಟ್ಟು (ಬಿ) | 688.80 | 115.16 | 123.45 | 132.57 | 142.58 | 1,202.56 | |
| ಒಟ್ಟು (ಎ+ಬಿ) | 888.80 | 154.16 | 160.45 | 144.57 | 154.58 | 1,502.56 |
ಕಡತ ಸಂಖ್ಯೆ: ಐಟಿಡಿ 261 ಎಡಿಎಂ 2017
PR – 399
ಸಿದ್ರಾಮಪ್ಪ ಹ ತಳವಾರ
SC - 200
ಸರ್ಕಾರದ ಅಧೀನ ಕಾರ್ಯದರ್ಶಿ
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ
ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ.
ಒಳಾಡಳಿತ ಸಚಿವಾಲಯ
ತಿದ್ದುಪಡಿ ಆದೇಶ
ಸಂ:ಹೆಚ್‌ಡಿ 224 ಎಸ್ಎಸ್‌ಟಿ 2018, ಬೆಂಗಳೂರು, ದಿನಾಂಕ: 09.10.2018.
ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 224 ಎಸ್ಎಸ್‌ಟಿ 2018, ದಿನಾಂಕ: 06.07.2018ರ ಆದೇಶದ ಕ್ರಮ ಸಂಖ್ಯೆ: 01 (ಇ) ರಲ್ಲಿನ ಆಂಪ್ಲಿಫೈಡ್ ಸೌಂಡ್ ಸಿಸ್ಟಂ (ಧ್ವನಿವರ್ಧಕ) ಪರವಾನಗಿಗೆ ಒಂದು ತಿಂಗಳ ಅವಧಿಗೆ ನಿಗದಿಪಡಿಸಲಾಗಿರುವ ಪರವಾನಗಿ ಶುಲ್ಕ ರೂ.4,500/-ರ ಬದಲಿಗೆ ರೂ.450/- ಎಂದು ತಿದ್ದಿ ಓದಿಕೊಳ್ಳತಕ್ಕದ್ದು.
PR. 460
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಪದ್ಮಿನಿದೇವಿ
SC. 25
ಸರ್ಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆ. (ಕಾನೂನು ಮತ್ತು ಸುವ್ಯವಸ್ಥೆ) ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವಾಲಯ
ವಿಷಯ :- 6ನೇ ವೇತನ ಆಯೋಗದ ಶಿಫಾರಸ್ಸಿನನ್ವಯ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ವ್ಯಾಪ್ತಿಯ ಅನುದಾನಿತ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳ ಸಿಬ್ಬಂದಿಗಳಿಗೆ ಪರಿಷ್ಕøತ ವೇತನ ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ.
ಓದಲಾಗಿದೆ :- 1. ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 16 ಎಸ್ಆರ್‌ಪಿ 2018 ದಿನಾಂಕ: 01-03-2018
2. ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 06 ಎಸ್ಆರ್‌ಪಿ 2018 ದಿನಾಂಕ: 19-04-2018
ಪ್ರಸ್ತಾವನೆ :-
6ನೇ ವೇತನ ಆಯೋಗದ ಶಿಫಾರಸ್ಸಿನನ್ವಯ ರಾಜ್ಯ ಸರ್ಕಾರಿ ನೌಕರರಿಗೆ ಪರಿಷ್ಕøತ ವೇತನ ಶ್ರೇಣಿಗಳನ್ನು ಮೇಲೆ ಓದಲಾದ (1) ಮತ್ತು (2) ರ ಸರ್ಕಾರದ ಆದೇಶಗಳಲ್ಲಿ ಮಂಜೂರು ಮಾಡಲಾಗಿದ್ದು, ಓದಲಾದ ಸರ್ಕಾರದ ಆದೇಶಗಳಲ್ಲಿ ಈ ಕೆಳಕಂಡಂತೆ ಆದೇಶಿಸಲಾಗಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೮ ೯೧೭12. ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ಮತ್ತು ವಿಶ್ವ ವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ಪರಿಷ್ಕøತ ವೇತನ ಶ್ರೇಣಿಗಳ ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ.
12.1 ಈ ಮೇಲಿನ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ವಿಸ್ತರಿಸಲಾಗಿದೆ. ಈ ಕುರಿತು ಆದೇಶಗಳನ್ನು ಸಂಬಂಧಪಟ್ಟ ಆಡಳಿತ ಇಲಾಖೆಗಳು ಪ್ರತ್ಯೇಕವಾಗಿ ಹೊರಡಿಸುತ್ತವೆ.
ಪ್ರಸ್ತಾವನೆಯನ್ನು ಪರಿಶೀಲಿಸಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಗೆ ಸಂಬಂಧಿಸಿದಂತೆ ಈ ಕೆಳಗಿನಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಕೌಉಜೀಇ 114 ಕೈತಇ, 2018, ಬೆಂಗಳೂರು, ದಿನಾಂಕ: 24/09/2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಅಡಿಯಲ್ಲಿ ಕೈಗಾರಿಕಾ ವೇತನ ಸಹಾಯಾನುದಾನ ನೀತಿ ಸಂಹಿತೆಗೆ ಒಳಪಟ್ಟು ಸಹಾಯಾನುದಾನವನ್ನು ಪಡೆಯುತ್ತಿರುವ ಖಾಸಗಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳ ರಾಜ್ಯ ವೇತನ ಶ್ರೇಣಿಯಲ್ಲಿರುವ ಸಿಬ್ಬಂದಿ ವರ್ಗದವರಿಗೆ ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 06 ಎಸ್ಆರ್‌ಪಿ 2018 ದಿನಾಂಕ: 01-03-2018 ಮತ್ತು ದಿನಾಂಕ:
19-04-2018 ರಲ್ಲಿ ಹೊರಡಿಸಿರುವ ಕರ್ನಾಟಕ ನಾಗರಿಕ ಸೇವಾ (ಪರಿಷ್ಕøತ ವೇತನ) ನಿಯಮಗಳು 2018 ಹಾಗೂ ಸಂಬಂಧಿತ ಆದೇಶಗಳನ್ನು ವಿಸ್ತರಿಸಲು ಸರ್ಕಾರದ ಮಂಜೂರಾತಿ ನೀಡಿದೆ.
PR. 461
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಈರಣ್ಣ
SC. 500
ಸರ್ಕಾರದ ಅಧೀನ ಕಾರ್ಯದರ್ಶಿ,
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ವಿಷಯ : ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಿ ಗೃಹವೈದ್ಯ ತರಬೇತಿಯನ್ನು ಹೊರರಾಜ್ಯ & ಹೊರದೇಶಗಳಲ್ಲಿ ಪೂರೈಸುತ್ತಿರುವ ಅಭ್ಯರ್ಥಿಗಳಿಗೆ ದಂಡ ವಿಧಿಸುವ ಬಗ್ಗೆ.
ಓದಲಾಗಿದೆ : ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರ ದಿ:24-04-2018 ರ ಪತ್ರ ಸಂಖ್ಯೆ: ವೈಶಿನಿ/ಪಿಜಿಎಸ್/03/2018-19
ಪ್ರಸ್ತಾವನೆ :-
ಕೆ.ಎಲ್.ಇ.-ಬೆಳಗಾವಿ ಹಾಗೂ ಇತರೆ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ, ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿ ಗೃಹವೈದ್ಯ ತರಬೇತಿಗಳನ್ನು ಹೊರರಾಜ್ಯಗಳಲ್ಲಿ ಮತ್ತು ಹೊರದೇಶಗಳಲ್ಲಿ ಪೂರೈಸಿಕೊಂಡು ಬಂದ ನಂತರ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ನೀಡುವಂತೆ ಕೋರುತ್ತಿದ್ದಾರೆ.
ಆದರೆ ಪ್ರಸ್ತುತ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ಗೃಹವೈದ್ಯ ತರಬೇತಿ ಪೂರ್ವದಲ್ಲಿ ಪಡೆಯುವ ಅಭ್ಯರ್ಥಿಗಳಿಗೆ ರಾಜ್ಯದೊಳಗಡೆ ಸದರಿ ತರಬೇತಿಗೆ `.5000/- ನಿಗಧಿತ ಶುಲ್ಕವಾಗಿ ಪಡೆಯಲಾಗುತ್ತಿದೆ. ಹೊರ ದೇಶಗಳಲ್ಲಿ ಎಂ.ಬಿ.ಬಿ.ಎಸ್.ಅನ್ನು ಪೂರೈಸಿ ರಾಜ್ಯದೊಳಗೆ ಸದರಿ ತರಬೇತಿಯನ್ನು ಪಡೆಯಲು `.25,000/- ನಿಗಧಿತ ಶುಲ್ಕವಾಗಿ ಪಡೆಯಲಾಗುತ್ತಿದೆ. ರಾಜ್ಯದಲ್ಲಿ ಡೀಮ್ಡ್ ವೈದ್ಯಕೀಯ ಕಾಲೇಜುಗಳಲ್ಲಿ ಎಂ.ಬಿ.ಬಿ.ಎಸ್ ಅನ್ನು ಪೂರೈಸಿ ಈ ನಿರ್ದೇಶನಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ಪಡೆಯದೆ ಹೊರರಾಜ್ಯಗಳಲ್ಲಿ ಗೃಹವೈದ್ಯ ತರಬೇತಿಯನ್ನು ಪೂರೈಸಿಕೊಂಡ ನಂತರ ಈ ನಿರ್ದೇಶನಾಲಯದಲ್ಲಿ ನಿರಾಕ್ಷೇಪಣಾ ಪತ್ರವನ್ನು ಪಡೆಯಲು ಬರುವ ಅಭ್ಯರ್ಥಿಗಳಿಂದ `.10,000/- ಗಳ ಶುಲ್ಕವನ್ನು ಪಡೆಯಲಾಗುತ್ತಿದೆ.
ಇದರಿಂದಾಗಿ ಕೆ.ಎಂ.ಸಿ-ಮಣಿಪಾಲ್, ಕೆ.ಎಂ.ಸಿ-ಮಂಗಳೂರು, ಮತ್ತು ಕೆ.ಎಲ್.ಇ.-ಬೆಳಗಾವಿಯ ವಿದ್ಯಾರ್ಥಿಗಳು ಈ ರೀತಿಯಾಗಿ ಗೃಹವೈದ್ಯ ತರಬೇತಿಯನ್ನು ಪಡೆದ ನಂತರ ಬಂದು ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿಯನ್ನು ಸಲ್ಲಿಸುತ್ತಿದ್ದು, ಈ ರೀತಿಯ ನಿಯಮ ಉಲ್ಲಂಘನೆ ಮಾಡುವ ವಿದ್ಯಾರ್ಥಿಗಳಿಗೆ ದಂಡದ ಮೊತ್ತವನ್ನು ಕನಿಷ್ಠ ರೂ.50,000/- ಗಳನ್ನು ನಿಗಧಿಪಡಿಸಿದ್ದಲ್ಲಿ, ನಿಯಮ ಉಲ್ಲಂಘನೆಯನ್ನು ತಡೆಯಬಹುದಾಗಿರುತ್ತದೆ.
ಆದ ಕಾರಣ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿ ಗೃಹವೈದ್ಯ ತರಬೇತಿಗಳನ್ನು ಹೊರರಾಜ್ಯಗಳಲ್ಲಿ, ಪೂರೈಸಿಕೊಂಡು ಬಂದ ನಂತರ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ಕೋರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸಲು ಸದರಿ ದಂಡವನ್ನು ನಿಗಧಿಪಡಿಸುವುದು ಅನಿವಾರ್ಯವೆಂಬ ಅಂಶವನ್ನು ಅವಗಾಹನೆಗೆ ತರುತ್ತಾ ಈ ಬಗ್ಗೆ ಸೂಕ್ತ ಸರ್ಕಾರಿ ಆದೇಶವನ್ನು ಹೊರಡಿಸುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶಕರು ಮೇಲೆ ಓದಲಾದ ಪತ್ರದಲ್ಲಿ ಕೋರಿರುತ್ತಾರೆ.
ಆದ್ದರಿಂದ ವಿಷಯವನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಎಂ.ಬಿ.ಬಿ.ಎಸ್. ವ್ಯಾಸಂಗ ಮಾಡಿ ಗೃಹವೈದ್ಯ ತರಬೇತಿಗಳನ್ನು ಹೊರರಾಜ್ಯ & ಹೊರದೇಶಗಳಲ್ಲಿ, ಪೂರೈಸಿಕೊಂಡು ಬಂದ ನಂತರ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ಕೋರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ರಸ್ತುತ ಪಡೆಯುತ್ತಿರುವ ಶುಲ್ಕದ ವೇತನ ಹೆಚ್ಚುವರಿಯಾಗಿ `.50,000/- ಗಳನ್ನು ದಂಡದ ಮೊತ್ತವನ್ನಾಗಿ ನಿಗಧಿಪಡಿಸಲು ಸರ್ಕಾರವು ತೀರ್ಮಾನಿಸಿ, ಈ ಕೆಳಗಿನಂತೆ ಆದೇಶವನ್ನು ಹೊರಡಿಸಿದೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೯೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧, ೨೦೧೮ ಭಾಗ ೧ಸರ್ಕಾರದ ಆದೇಶ ಸಂಖ್ಯೆ: ಆಕುಕ 156 ಆರ್‌ಜಿಯು 2018, ಬೆಂಗಳೂರು, ದಿ: 20-09-2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿ ಗೃಹವೈದ್ಯ ತರಬೇತಿಗಳನ್ನು ಹೊರರಾಜ್ಯ & ಹೊರದೇಶಗಳಲ್ಲಿ ಪೂರೈಸಿಕೊಂಡು ಬಂದ ನಂತರ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದಿಂದ ನಿರಾಕ್ಷೇಪಣಾ ಪತ್ರವನ್ನು ಕೋರುವ ವಿದ್ಯಾರ್ಥಿಗಳಿಗೆ ಪ್ರಸ್ತುತ ಪಡೆಯುತ್ತಿರುವ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ರೂ.50,000/- ಗಳನ್ನು ದಂಡದ ಮೊತ್ತವನ್ನಾಗಿ ನಿಗಧಿಪಡಿಸಿ ಆದೇಶಿಸಿದೆ.
PR. 462
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಮುರಳಿ
SC. 25
ಸರ್ಕಾರದ ಅಧೀನ ಕಾರ್ಯದರ್ಶಿ-2
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (ವೈದ್ಯಕೀಯ ಶಿಕ್ಷಣ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.