Servants of Knowledge
Karnataka Gazette · Government of Karnataka

Karnataka Gazette, Part Part-4A, 15 November 2018

Published 15 November 2018

Part
Part-4A
Identifier
in.gazette.karnataka_new.2018-11-15.Part-4A
Languages
English, Kannada
Published at
Original source ↗

click here for IIIF manifest

ಸಂಪುಟ ೧೫೩

Volume 153

ಬೆಂಗಳೂರು, ಗುರುವಾರ, ನವೆಂಬರ್ ೧೫, ೨೦೧೮ (ಕಾರ್ತೀಕ ೨೪, ಶಕ ವರ್ಷ ೧೯೪೦)

Bengaluru, Thursday, November 15, 2018 (Karthika 24, Shaka Varsha 1940)

ಸಂಚಿಕೆ ೪೫

Issue 45

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ಅಧಿನಿಯಮಗಳು ಮತ್ತು ಆಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

HOME SECRETARIAT

NOTIFICATION

No: HD 267 SST 2018, BENGALURU, DATED: 28.09.2018.

In exercise of the powers vested under Sec 21 of Cr.P.C., Government are pleased to appoint the following Officer as

SL. No. Name of the Police Commissionerate Powers currently with Additional Officers appointed as 'Special Executive Magistrate'
1. Bengaluru City • Additional Commissioner of Police(East), Bengaluru City • Additional Commissioner of Police(West), Bengaluru City • Additional Commissioner of Police (Administration), Bengaluru City • Additional Commissioner of Police (Traffic), Bengaluru City • Additional Commissioner of Police(Crime), Bengaluru City • Deputy Commissioner of Police (East), Bengaluru City. • Deputy Commissioner of Police (West), Bengaluru City. • Deputy Commissioner of Police (North), Bengaluru City. • Deputy Commissioner of Police (South), Bengaluru City. • Deputy Commissioner of Police (Central), Bengaluru City. • Deputy Commissioner of Police (South-East), Bengaluru City. • Deputy Commissioner of Police (North-East), Bengaluru City. • Deputy Commissioner of Police (Whitefield), Bengaluru City.
SL. NO. Act & Section Powers currently with Additional Officers on whom to confer these powers Jurisdiction Police Division, Bengaluru City Power Deligated under
1. Powers to make regulation of traffic and for preservation of order in public places etc.,K.P.ActSection 31 • Additional Commissioner of Police (Traffic) No Change Entire City

(೬೫೦೫)೬೫೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೪ಎ

SL. NO. Act & Section Powers currently with Additional Officers on whom to confer these powers Jurisdiction Police Division, Bengaluru City Power Deligated under
2. Sec. 107 CrPC: Security for keeping peace in other cases. S ec.108 CrPC: Security for good behaviour from persons discriminating seditious matters. S ec.109 CrPC: Security for good behaviour from suspected persons. Sec.110 CrPC: Security for good behaviour from habitual offenders. S ec:111 CrPC: Order to be made. • Additional Commissioner of Police(East), Bengaluru City • Additional Commissioner of Police(West), Bengaluru City • Additional Commissioner of Police (Administration), Bengaluru City • Additional Commissioner of Police(Crime), Bengaluru City Deputy Commissioner of Police (East), Bengaluru City. East 21 Cr.PC
Deputy Commissioner of Police (West), Bengaluru City. West
Deputy Commissioner of Police (North), Bengaluru City. North
Deputy Commissioner of Police (South), Bengaluru City. South
Deputy Commissioner of Police (Central), Bengaluru City. Central
Deputy Commissioner of Police (South-East), Bengaluru City. South -East
Deputy Commissioner of Police (North-East), Bengaluru City. North-East
Deputy Commissioner of Police (Whitefield), Bengaluru City. Whitefield
3 Removal of persons about to commit offences. S ec.55 of K.P. Act:- Powers of Commissioner, District Magistrate or the Sub-Divisional Magistrate to pass orders for removal of persons about to commit offences. • Additional Commissioner of Police(East), Bengaluru City • Additional Commissioner of Police(West), Bengaluru City • Additional Commissioner of Police (Administration), Bengaluru City • Additional Commissioner of Police (Traffic), Bengaluru City • Additional Commissioner of Police (Crime), Bengaluru City Deputy Commissioner of Police (East), Bengaluru City. East U/s 55 of K.P.Act
Deputy Commissioner of Police (West), Bengaluru City. West
Deputy Commissioner of Police (North), Bengaluru City. North
Deputy Commissioner of Police (South), Bengaluru City. South
Deputy Commissioner of Police (Central), Bengaluru City. Central
Deputy Commissioner of Police (South-East), Bengaluru City. South -East
Deputy Commissioner of Police (North-East), Bengaluru City. North-East
Deputy Commissioner of Police (Whitefield), Bengaluru City. Whitefield
4. Removal of persons convicted of certain offences etc. Sec.56 of K.P. Act: -Powers of Commissioner, the District Magistrate of any Sub- Divisional Magistrate specially empowered by the Government in this behalf, for passing orders for removal of persons convicted of certain offences. • Additional Commissioner of Police (East), Bengaluru City • Additional Commissioner of Police (West), Bengaluru City • Additional Commissioner of Police (Administration), Bengaluru City • Additional Deputy Commissioner of Police (East), Bengaluru City. East U/s 56 of K.P.Act
Deputy Commissioner of Police (West), Bengaluru City. West
Deputy Commissioner of Police (North), Bengaluru City. North
Deputy Commissioner of Police (South), Bengaluru City. South
Deputy Commissioner of Police (Central), Bengaluru City. Central
Deputy Commissioner of Police (South-East), Bengaluru City. South -East
Commissioner of Police (Traffic), Bengaluru City • Additional Commissioner of Police (Crime), Bengaluru City Deputy Commissioner of Police (North-East), Bengaluru City. North-East
Deputy Commissioner of Police (Whitefield), Bengaluru City. Whitefield
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೦೭

PR – 807

By Order and in the name of the Governor of Karnataka

K.PADMINIDEVI

SC - 50

Under Secretary to Government,

Home Department [Law & Order]

ಶಿಕ್ಷಣ ಸಚಿವಾಲಯ

ಅಧಿಸೂಚನೆ-I

ಸಂಖ್ಯೆ: ಇಡಿ 317 ಪಿಜಿಸಿ 2012, ಬೆಂಗಳೂರು, ದಿನಾಂಕ: 18-05-2018.

ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ (ಕರ್ನಾಟಕ ಅಧಿನಿಯಮ: 1995ರ 01)ರ 48ನೇ ಪ್ರಕರಣದೊಂದಿಗೆ ಓದಿ, 145ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಅಗತ್ಯ ಪಡಿಸಲಾದಂತೆ, ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕೆಲವು ಶುಲ್ಕಗಳು ಮತ್ತು ದೇಣಿಗೆಗಳ ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2016ರ ಕರಡನ್ನು, ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆ, ದಿನಾಂಕ: 05-10-2016ರ ಭಾಗ-IVಎ ಯಲ್ಲಿ ಅಧಿಸೂಚನೆ-Iರ ಸಂಖ್ಯೆ: ಇಡಿ 317 ಪಿಜಿಸಿ 2012ರ ದಿನಾಂಕ: 05-10-2016ರಲ್ಲಿ ಪ್ರಕಟಿಸಿ, ಅದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಕರ್ನಾಟಕ ರಾಜ್ಯಪತ್ರದಲ್ಲಿ ಅದನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಲಾಗಿತ್ತು.

ಮತ್ತು ಸದರಿ ರಾಜ್ಯಪತ್ರವನ್ನು 05-10-2016ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು.

ಮತ್ತು ಈ ಬಗ್ಗೆ ಸ್ವೀಕೃತವಾದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರವು ಪರಿಗಣಿಸಿದೆ.

ಆದ್ದರಿಂದ, ಈಗ, ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ (ಕರ್ನಾಟಕ ಅಧಿನಿಯಮ ಸಂಖ್ಯೆ: 1995ರ 01) 48ನೇ ಪ್ರಕರಣದೊಂದಿಗೆ ಓದಲಾದಂತೆ, 145ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕೆಲವು ಶುಲ್ಕ ಮತ್ತು ದೇಣಿಗೆಗಳ ನಿಯಂತ್ರಣ) ನಿಯಮಗಳು, 1999ನ್ನು ಮತ್ತಷ್ಟು ತಿದ್ದುಪಡಿ ಮಾಡುವ ಉದ್ದೇಶದಿಂದ, ಈ ಮುಂದಿನ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು

1. ಹೆಸರು ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕೆಲವು ಶುಲ್ಕ ಮತ್ತು ದೇಣಿಗೆಗಳ ನಿಯಂತ್ರಣ) (ತಿದ್ದುಪಡಿ) ನಿಯಮಗಳು, 2018 ಎಂದುಕರೆಯತಕ್ಕದ್ದು.

(2) ಅವು, ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು. 2. 4ನೇ ನಿಯಮದ ಪ್ರತ್ಯಾಯೋಜನೆ:-ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕೆಲವು ಶುಲ್ಕ ಮತ್ತು ದೇಣಿಗೆಗಳ ನಿಯಂತ್ರಣ) ನಿಯಮಗಳು, 1999ರಲ್ಲಿ (ಇದರಲ್ಲಿ ಇನ್ನು ಮುಂದೆ ಸದರಿ ನಿಯಮಗಳು ಎಂದು ಉಲ್ಲೇಖಿಸಲಾಗಿದೆ) 4ನೇ ನಿಯಮಕ್ಕೆ ಬದಲಾಗಿ ಈ ಮುಂದಿನಂತೆ ಪ್ರತ್ಯಾಯೋಜಿಸತಕ್ಕದ್ದು, ಎಂದರೆ:-

"4. ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿನ ಶುಲ್ಕ:- (1) ಪ್ರತಿಯೊಂದು ಅನುದಾನ ರಹಿತ ಶಿಕ್ಷಣ ಸಂಸ್ಥೆಯು ಪ್ರತಿ ಕ್ಯಾಲೆಂಡರ್ ವರ್ಷದ ಡಿಸೆಂಬರ್ 31ರ ಒಳಗಾಗಿ ಮುಂದಿನ ಕ್ಯಾಲೆಂಡರ್ ವರ್ಷದಲ್ಲಿ ಪ್ರಾರಂಭವಾಗುವಂತಹ ಮುಂಬರುವ ಶೈಕ್ಷಣಿಕ ವರ್ಷದ ಶುಲ್ಕದ ಸ್ವರೂಪವನ್ನು, ದಿನಾಂಕ: 31ನೇ ಮಾರ್ಚ್‌ರಂದು ಅಂತ್ಯಗೊಂಡಿರುವ ಹಿಂದಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದ ಅದರ ಹಣಕಾಸಿನ ಲೆಕ್ಕ ಪರಿಶೋಧನಾ ವರದಿಯನ್ನು, ಬೋಧನಾ ಸಂಪನ್ಮೂಲಗಳ ವಿವರಗಳನ್ನು, ಪಬ್ಲಿಕ್ ಪರೀಕ್ಷೆಯಲ್ಲಿನ ಫಲಿತಾಂಶವನ್ನು ಮತ್ತು ನಿಯಮಾನುಸಾರವಾಗಿ ಮಾಡಿದ ಶುಲ್ಕದ ಸ್ವರೂಪದ ನಿರ್ಧರಣೆ ಮತ್ತು ಪಾಲನೆಯನ್ನು ತೋರಿಸುವ ವಿವರ ಪಟ್ಟಿಯನ್ನು ಅಧಿಸೂಚನೆ ಮುಖಾಂತರ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸತಕ್ಕದ್ದು.

(2) ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಯು (1)ನೇ ಉಪ-ನಿಯಮದ ಅಡಿಯಲ್ಲಿ ನಿರ್ದಿಷ್ಟಪಡಿಸಿದ ರೀತಿಯಲ್ಲಿ ಆ ಸಂಸ್ಥೆಯು ಪ್ರಕಟಿಸಿದ ಶುಲ್ಕದ ಸ್ವರೂಪವನ್ನು ಮೀರದಂತೆ ಶುಲ್ಕವನ್ನು ತೆಗೆದುಕೊಳ್ಳಲು ಅವಕಾಶವಿರತಕ್ಕದ್ದು:

ಪರಂತು, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಅಧಿನಿಯಮ, 2009 (ಕೇಂದ್ರ ಅಧಿನಿಯಮ: 2009ರ 35)ರ 12ನೇ ಪ್ರಕರಣದ

(1)ನೇ ಉಪ-ಪ್ರಕರಣದ (ಸಿ) ಖಂಡದಡಿಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕವನ್ನು ವಸೂಲು ಮಾಡತಕ್ಕದ್ದಲ್ಲ.

(3) ಈ ಬಗ್ಗೆ ರಚಿಸಲಾದ ಯಾವುದೇ ನಿಯಮಗಳಲ್ಲಿ ಏನೇ ಇದ್ದರೂ, ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ ನಿಗದಿ ಇತ್ಯಾದಿ) ನಿಯಮಗಳು, 1995ರ 10ನೇ ನಿಯಮದ (3)ನೇ ಉಪ-ನಿಯಮದ (ಬಿ) ಖಂಡದ (ii)ನೇ ಉಪ-ಖಂಡದ ಅಡಿಯಲ್ಲಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಯು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ವಿಧಿಸುವಂತಹ ಬೋಧನಾ ಶುಲ್ಕವು ಕೆಳಕಂಡ ವಿಧಾನದಲ್ಲಿ ನಿರ್ಧರಿಸಿರುವ ಮೌಲ್ಯವನ್ನು ಮೀರತಕ್ಕದ್ದಲ್ಲ, ಎಂದರೆ:-

೬೫೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೪ಎ

(i) ಮುಂಬರುವ ಶೈಕ್ಷಣಿಕ ವರ್ಷದಲ್ಲಿನ ಒಟ್ಟು ಪ್ರಮಾಣದ ವೆಚ್ಚವನ್ನು ಮಾರ್ಚ್-31 ರಂದು ಕೊನೆಗೊಂಡ ಹಿಂದಿನ ಹಣಕಾಸು ವರ್ಷದಲ್ಲಿ ಹೊರಗುತ್ತಿಗೆ ನೌಕರರು ಒಳಗೊಂಡಂತೆ, ಬೋಧಕ, ಬೋಧಕೇತರ ಸಿಬ್ಬಂದಿಗಳಿಗೆ ಭರಿಸಲಾದ ವಾಸ್ತವಿಕ ವೇತನ ವೆಚ್ಚ, ಜೊತೆಗೆ ಸಾದಿಲ್ವಾರು, ಚಾಲನಾ ಮತ್ತು ನಿರ್ವಹಣಾ ವೆಚ್ಚಗಳು, ಬಾಡಿಗೆ, ಸಾಲ, ಸವಕಳಿ ಇತ್ಯಾದಿಗಳ ಹೆಚ್ಚುವರಿ ಮೊತ್ತ ಹಾಗೂ ಹಿಂದಿನ ಹಣಕಾಸು ವರ್ಷ ಮತ್ತು ಮುಂಬರುವ ಶೈಕ್ಷಣಿಕ ವರ್ಷದ ನಡುವಿನ ಅವಧಿಯಲ್ಲಿ ಹೆಚ್ಚಳವಾಗುವ ಸಂಭಾವ್ಯ ವೆಚ್ಚದ ಆಧಾರದ ಮೇಲೆ ಲೆಕ್ಕ ಹಾಕತಕ್ಕದ್ದು. ವಿವರಣೆ : ಈ ಉಪ-ನಿಯಮದ ಉದ್ದೇಶಕ್ಕಾಗಿ, ವೇತನದ ವೆಚ್ಚವು, ಈ ಕೆಳಕಂಡಂತೆ ಅನ್ವಯವಾಗುವಂತಹ:- (ಎ) ಆಡಳಿತ ಮಂಡಳಿಯು ನೀಡುವಂತಹ ಭವಿಷ್ಯ ನಿಧಿ, ಇಎಸ್ಐ ವಂತಿಗೆ; (ಬಿ) ರಜೆ ನಗದೀಕರಣ ಸೌಲಭ್ಯ, ವೈದ್ಯಕೀಯ ಭತ್ಯೆ, ಸಾರಿಗೆ ಭತ್ಯೆ ಮತ್ತು ಸಂಸ್ಥೆಯ ಸಿಬ್ಬಂದಿಗೆ ನೀಡುವಂತಹ ಮತ್ತಿತರ ಭತ್ಯೆ ಯಾವುದಾದರೂ ಇದ್ದರೆ, ಅಂತಹ ಇತರ ಭತ್ಯೆ; ಮತ್ತು

(ಸಿ) ದುರ್ಬಲ ವರ್ಗಗಳಿಗೆ ನೀಡುವಂತಹ ರಿಯಾಯಿತಿಗಳು ಅಥವಾ ಶೈಕ್ಷಣಿಕ ಅಥವಾ ಪಠ್ಯೇತರ ಚಟುವಟಿಕೆಗಳ ಸುಧಾರಣೆಗೆ

ಸಂಬಂಧಿಸಿದಂತಹ ಇತರ ಯಾವುದೇ ವಿಶೇಷ ಚಟುವಟಿಕೆಯನ್ನು ಒಳಗೊಂಡಿರತಕ್ಕದ್ದು.

(ii) ಹೆಚ್ಚುವರಿ ಮೊತ್ತವು, ಖಂಡ (1)ರಲ್ಲಿ ಉಲ್ಲೇಖಿಸುವ ಮಾರ್ಚ್-31 ರಂದು ಕೊನೆಗೊಂಡ ಹಿಂದಿನ ಹಣಕಾಸು ವರ್ಷದಲ್ಲಿನ ವಾಸ್ತವಿಕ ವೇತನ ವೆಚ್ಚದ ಮೇಲೆ ಕೆಳಗಿನ ಕೋಷ್ಟಕದ ಅಂಕಣ (2)ರಲ್ಲಿ ನಿರ್ದಿಷ್ಟಪಡಿಸಿದ ಸಂಸ್ಥೆಯು ಭೌಗೋಳಿಕ ಸ್ಥಳದ ಆಧಾರದ ಮೇಲೆ ಸದರಿ ಕೋಷ್ಟಕ ಅಂಕಣ (3)ರಲ್ಲಿ ನಿರ್ದಿಷ್ಟ ಪಡಿಸಿರುವಂಥ ಶೇಕಡಾವಾರನ್ನು ಅನ್ವಯಿಸಿದಾಗ ಬರುವ ಮೊತ್ತಕ್ಕಿಂತ ಅಧಿಕವಾಗಿರತಕ್ಕದ್ದಲ್ಲ.

ಕ್ರಮ ಸ ಂಖ್ಯೆ ಸ ಂಸ್ಥೆಯು ಇರುವಂತಹ ಭೌಗೋಳಿಕ ಸ್ಥಳ ಮತ್ತು ಪ್ರದೇಶಗಳು ವಾಸ್ತವಿಕ ವೇತನದ ವೆಚ್ಚದ ಮೇಲೆ ಹೆಚ್ಚುವರಿ ಮೊತ್ತದ ಶೇಕಡಾವಾರು ಪ್ರಮಾಣ
(1) (2) (3)
1. ಗ್ರಾಮ ಪಂಚಾಯಿತಿ/ ಪಟ್ಟಣ ಪಂಚಾಯಿತಿ/ ಪುರಸಭೆ ಶ ೕಕಡಾ ಎಪ್ಪತ್ತು ೆ
2. ನಗರಸಭೆ ಶ ೕಕಡಾ ಎಂಭತ್ತು ೆ
3. ಬಿ.ಬಿ.ಎಂ.ಪಿಯನ್ನು ಹೊರತುಪಡಿಸಿ ಇತರೆ ನಗರ ಪಾಲಿಕೆಗಳು ಶ ೕಕಡಾ ತೊಂಭತ್ತು ೆ
4. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಶ ೕಕಡಾ ನೂರು ೆ

(iii)(3)ನೇ ಉಪ-ನಿಯಮದ(i)ನೇ ಮತ್ತು(ii)ನೇ ಖಂಡದ ಅಡಿಯಲ್ಲಿನ ಪ್ರಮಾಣಕ ಒಟ್ಟಾರೆ ವೆಚ್ಚ (ಎನ್‌ಟಿಇ)ವನ್ನು:-

(ಎ) ಬೋಧಕ ಚಟುವಟಿಕೆಗಳಿಗೆ ಪೂರಕವಾದ ಪುನರಾವರ್ತಕ ವೆಚ್ಚದ ಉದ್ದೇಶಕ್ಕಾಗಿ 6ನೇ ನಿಯಮದ (3)ನೇ ಉಪ-ನಿಯಮದ ಮೇರೆಗೆ

ಸ್ವೀಕರಿಸಲಾದ ಯಾವುದೇ ಮೊತ್ತ;

(ಬಿ) ಮಾರ್ಚ್ 31ರಂದು ಕೊನೆಗೊಂಡಿರುವಂತಹ ಹಿಂದಿನ ಆರ್ಥಿಕ ವರ್ಷದ ಅವಧಿಯಲ್ಲಿ, 10ನೇ ನಿಯಮದ (3)ನೇ ಉಪ-ನಿಯಮದ(ಎ)

ಖಂಡದ (ii) ಉಪ-ಖಂಡದ ಮೇರೆಗೆ ಪಡೆದ ನಿಶ್ಚಿತ ಅವಧಿ ಶುಲ್ಕ; ಮತ್ತು

(ಸಿ) ಮಾರ್ಚ್ 31ರಂದು ಕೊನೆಗೊಂಡಿರುವಂತಹ ಹಿಂದಿನ ಶೈಕ್ಷಣಿಕ ವರ್ಷದ ಅವಧಿಯಲ್ಲಿ, 10ನೇ ನಿಯಮದ (3)ನೇ ಉಪ-ನಿಯಮದ(ಸಿ)

ಖಂಡದ ಮೇರೆಗೆ ಪಡೆದುಕೊಂಡ ವಿಶೇಷ ಅಭಿವೃದ್ಧಿ ಶುಲ್ಕ.

-ಇವುಗಳ ಒಟ್ಟು ಮೊತ್ತದಿಂದ ಕಳೆದು ಬರುವ ಮೊತ್ತವನ್ನು ಆಧರಿಸಿ ಮುಂಬರುವ ಶೈಕ್ಷಣಿಕ ವರ್ಷದ ಪ್ರಮಾಣಿತ ನಿವ್ವಳ ವೆಚ್ಚವನ್ನು

(ಎನ್ಎನ್ಇ) ಲೆಕ್ಕ ಹಾಕತಕ್ಕದ್ದು.

(iv) ಉಪ-ನಿಯಮ(1)ರಡಿಯಲ್ಲಿ ಪ್ರಕಟಿಸಲಾದ ಶುಲ್ಕದ ಸ್ವರೂಪದ ಅನುಸಾರ, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕುಗಳ ಅಧಿನಿಯಮ, 2009 (ಕೇಂದ್ರ ಅಧಿನಿಯಮ ಸಂಖ್ಯೆ:2009ರ 35)ರ 12ನೇ ಪ್ರಕರಣದ (1)ನೇ ಉಪ-ಪ್ರಕರಣದ (ಸಿ) ಬಾಬ್ತುವಿನ ಮೇರೆಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಹೊರತು ಪಡಿಸಿ, ಎಲ್ಲಾ ವಿದ್ಯಾರ್ಥಿಗಳಿಂದ ವಸೂಲಿ ಮಾಡಲು ಉದ್ದೇಶಿಸಿರುವ ಬೋಧನಾ ಶುಲ್ಕವು (3)ನೇ ಉಪ-ನಿಯಮದ(iii) ಬಾಬ್ತುವಿನ ಅಡಿಯಲ್ಲಿ ಲೆಕ್ಕ ಹಾಕಿದ ಪ್ರಮಾಣಿಕ ನಿವ್ವಳ ವೆಚ್ಚವನ್ನು (ಎನ್ಎನ್ಇ) ಮೀರತಕ್ಕದ್ದಲ್ಲ:

ಪರಂತು, ಈ ಉಪ-ನಿಯಮದ ಉದ್ದೇಶಗಳಿಗಾಗಿ ವಿದ್ಯಾರ್ಥಿಗಳ ಒಟ್ಟು ಸಂಖ್ಯೆಯು, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕುಗಳ ಅಧಿನಿಯಮ, 2009 (ಕೇಂದ್ರ ಅಧಿನಿಯಮ, ಸಂಖ್ಯೆ: 2009ರ 35)ರ 12ನೇ ಪ್ರಕರಣದ (1)ನೇ ಉಪ-ಪ್ರಕರಣದ (ಸಿ) ಖಂಡದ ಮೇರೆಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಮೇ, 31ರಂದು ಕೊನೆಗೊಂಡ ಹಿಂದಿನ ಶೈಕ್ಷಣಿಕ ವರ್ಷದ ಸಂಸ್ಥೆಯ ಹಾಜರಾತಿ ಪುಸ್ತಕದಲ್ಲಿದ್ದ ವಿದ್ಯಾರ್ಥಿಗಳ ಗರಿಷ್ಠ ಒಟ್ಟು ಸಂಖ್ಯೆಯಾಗಿರತಕ್ಕದ್ದು.

(v) ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕುಗಳ ಅಧಿನಿಯಮ, 2009ರ (ಕೇಂದ್ರ ಅಧಿನಿಯಮ ಸಂಖ್ಯೆ: 2009ರ 35) 12ನೇ ಪ್ರಕರಣದ (1)ನೇ ಉಪ-ಪ್ರಕರಣದ (ಸಿ) ಖಂಡದ ಮೇರೆಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಒಟ್ಟಾರೆ ಎಲ್ಲಾ ವಿದ್ಯಾರ್ಥಿಗಳಿಂದ ಪಡೆಯಲು ಉದ್ದೇಶಿಸಿರುವ ಒಟ್ಟು ಬೋಧನಾ ಶುಲ್ಕವು ಪ್ರಸ್ತುತ ಶೈಕ್ಷಣಿಕ ವರ್ಷದ ಅವಧಿಯಲ್ಲಿ ವಿಧಿಸಿರುವ ಒಟ್ಟು ಬೋಧನಾ ಶುಲ್ಕದ ಮೊತ್ತಕ್ಕಿಂತ ಶೇಕಡಾ ಹದಿನೈದನ್ನು ಮೀರತಕ್ಕದ್ದಲ್ಲ.

(vi) ಮೇಲಿನ (iv)ನೇ ಮತ್ತು (v)ನೇ ಖಂಡದ ಅನುಪಾಲನೆಗೊಳಪಟ್ಟು, ಖಾಸಗಿ ಅನುದಾನರಹಿತ ಶೈಕ್ಷಣಿಕ ಸಂಸ್ಥೆಯು, ವಿವಿಧ ತರಗತಿಗಳಿಗೆ ವಿಭಿನ್ನ ದರದ ಬೋಧನಾ ಶುಲ್ಕವನ್ನು ವಿಧಿಸುವ ಆಯ್ಕೆಯನ್ನು ಮಾಡಿಕೊಳ್ಳುವ ಸಡಿಲಿಕೆಯನ್ನು ಹೊಂದಿರತಕ್ಕದ್ದು.

(4) ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಯು ಬೋಧನಾ ಶುಲ್ಕದೊಂದಿಗೆ, 10ನೇ ನಿಯಮದ (3)ನೇ ಉಪ-ನಿಯಮದ (ಎ) ಖಂಡದ(ii) ನೇ ಉಪ-ಖಂಡದ ಮೇರೆಗೆ ಬೋಧನಾ ಶುಲ್ಕದ ಶೇಕಡಾ 10ರಷ್ಟನ್ನು ಮೀರದಂತೆ ಅವಧಿ ಶುಲ್ಕವನ್ನೂ ಸಹ ವಿಧಿಸಬಹುದು. ಅಂಥ ಅವಧಿ ಶುಲ್ಕವು ಎಲ್ಲಾ ಸಹ-ಪಠ್ಯ ಚಟುವಟಿಕೆಗಳು, ಪರೀಕ್ಷಾ ಶುಲ್ಕ, ಪ್ರಯೋಗಾಲಯ ಶುಲ್ಕ, ಕ್ರೀಡಾ ಶುಲ್ಕ, ಸಾಂಸ್ಕøತಿಕ ಕಾರ್ಯಕ್ರಮಗಳ ಶುಲ್ಕ, ನಿಯಮಿತ ಬೋಧನೆಗೆ ಪೂರಕವಾಗಿರುವಂತಹ ಚಟುವಟಿಕೆಗಳಿಗೆ ಮತ್ತು ಅಧಿಸೂಚನೆಯಲ್ಲಿ ನಿರ್ದಿಷ್ಟ ಪಡಿಸಿದ ಇತರ ಯಾವುದೇ ಚಟುವಟಿಕೆಗೆ ಸಂಬಂಧಿಸಿದ ಶುಲ್ಕಗಳನ್ನು ಒಳಗೊಳ್ಳುತ್ತದೆ.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೦೯

(5) (1)ನೇ ಉಪ-ನಿಯಮದ ಮೇರೆಗೆ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಯು ಪ್ರಕಟಿಸಿರುವುದು ಏನೇ ಇದ್ದರೂ, ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಯು ಅಧಿಸೂಚನೆಯ ಮೂಲಕ ನಿರ್ದಿಷ್ಟ ಪಡಿಸಲಾದ ರೀತಿಯಲ್ಲಿ ಆ ಸಂಸ್ಥೆಯ ಹಣಕಾಸು ಮತ್ತು ಶುಲ್ಕದ ಲೆಕ್ಕವನ್ನು ವಿಶೇಷ ಲೆಕ್ಕ ಪರಿಶೋಧನೆಗೆ ಒಳಪಡಿಸತಕ್ಕದ್ದು".

3. 6ನೇ ನಿಯಮದ ತಿದ್ದುಪಡಿ:- ಸದರಿ ನಿಯಮಗಳ 6ನೇ ನಿಯಮದ (1)ನೇ ಉಪ-ನಿಯಮದ ಕೋಷ್ಟಕದಲ್ಲಿ "25-00" ಎಂಬ ಸಂಖ್ಯೆಯು ಬರುವೆಡೆಗಳಲ್ಲೆಲ್ಲಾ "50-00"ಎಂಬ ಸಂಖ್ಯೆಯನ್ನು ಪ್ರತ್ಯಾಯೋಜಿಸತಕ್ಕದ್ದು.

4. 7ನೇ ಹೊಸ ನಿಯಮದ ಸೇರ್ಪಡೆ:-ಸದರಿ ನಿಯಮಗಳ 6ನೇ ನಿಯಮದ ತರುವಾಯ, ಈ ಕೆಳಕಂಡ ನಿಯಮವನ್ನು ಸೇರಿಸತಕ್ಕದ್ದು, ಎಂದರೆ:- "7. ಉಲ್ಲಂಘನೆಗೆ ದಂಡ:-ಈ ನಿಯಮಗಳ ಅಥವಾ ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮದ ನಿಗದಿ ಇತ್ಯಾದಿ) ನಿಯಮಗಳು, 1995ರ ಯಾವುದೇ ಉಪ ಬಂಧಗಳನ್ನು ಉಲ್ಲಂಘನೆಗಾಗಿ, ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು, ಕರ್ನಾಟಕ ಶಿಕ್ಷಣ ಅಧಿನಿಯಮ, 1983 (ಕರ್ನಾಟಕ ಅಧಿನಿಯಮ ಸಂಖ್ಯೆ: 1995ರ 1)1ರ 39ನೇ ಪ್ರಕರಣದ ಮೇರೆಗೆ ಮಾನ್ಯತೆಯನ್ನು ರದ್ದುಪಡಿಸುವ ಕ್ರಮ ತೆಗೆದುಕೊಳ್ಳುವುದರೊಂದಿಗೆ, ಕರ್ನಾಟಕ ಶಿಕ್ಷಣ ಸಂಸ್ಥೆಗಳ/ (ಕ್ಯಾಪಿಟೇಶನ್ ಶುಲ್ಕ ನಿಷೇಧ) ಅಧಿನಿಯಮ, 1984ರ 7ನೇ ಪ್ರಕರಣದಲ್ಲಿ ನಿರ್ದಿಷ್ಟ ಪಡಿಸಿರುವಂತಹ ದಂಡನೆಗಳಿಗೆ ಮತ್ತು ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕುಗಳ ಅಧಿನಿಯಮ, 2009ರ (ಕೇಂದ್ರ ಅಧಿನಿಯಮ ಸಂಖ್ಯೆ: 2009ರ 35) 13ನೇ ಪ್ರಕರಣದ (2)ನೇ ಉಪ-ಪ್ರಕರಣದ (ಎ) ಖಂಡದ ಮೇರೆಗೆ ನಿರ್ದಿಷ್ಟಪಡಿಸಿರುವ ಜುಲ್ಮಾನೆಗೆ ಗುರಿಯಾಗತಕ್ಕದ್ದು".

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ವಿ. ನಾಗೇಶ ರಾವ್

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಪ್ರಾಥಮಿಕ).

ಶಿಕ್ಷಣ ಸಚಿವಾಲಯ

ಅಧಿಸೂಚನೆ-II

ಸಂಖ್ಯೆ: ಇಡಿ 317 ಪಿಜಿಸಿ 2012, ಬೆಂಗಳೂರು, ದಿನಾಂಕ: 18-05-2018.

ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ (ಕರ್ನಾಟಕ ಅಧಿನಿಯಮ ಸಂಖ್ಯೆ: 1995ರ 01)ರ 145ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಅಗತ್ಯ ಪಡಿಸಲಾದಂತೆ, ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ ನಿಗದಿ ಇತ್ಯಾದಿ) (ತಿದ್ದುಪಡಿ) ನಿಯಮಗಳು, 2016ರ ಕರಡನ್ನು, ಕರ್ನಾಟಕ ರಾಜ್ಯಪತ್ರದ ವಿಶೇಷ ಸಂಚಿಕೆ ದಿನಾಂಕ: 05-10-2016ರ ಭಾಗ-IVಎ ಸಂಖ್ಯೆ: 1153ರಲ್ಲಿ ಅಧಿಸೂಚನೆ-IIರ ಸಂಖ್ಯೆ: ಇಡಿ 317 ಪಿಜಿಸಿ 2012ರ ದಿನಾಂಕ: 05-10-2016ರಲ್ಲಿ ಪ್ರಕಟಿಸಿ, ಅದರಿಂದ ಬಾಧಿತರಾಗಬಹುದಾದ ಎಲ್ಲಾ ವ್ಯಕ್ತಿಗಳಿಂದ ಸರ್ಕಾರಿ ರಾಜ್ಯಪತ್ರದಲ್ಲಿ ಅದನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳ ಒಳಗಾಗಿ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಲಾಗಿತ್ತು.

ಮತ್ತು ಸದರಿ ರಾಜ್ಯಪತ್ರವನ್ನು 05-10-2016 ರಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿತ್ತು.

ಮತ್ತು ಸಾರ್ವಜನಿಕರಿಂದ ಸ್ವೀಕರಿಸಿದ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಸರ್ಕಾರವು ಪರಿಗಣಿಸಿದೆ.

ಆದ್ದರಿಂದ, ಈಗ, ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ (ಕರ್ನಾಟಕ ಅಧಿನಿಯಮ ಸಂಖ್ಯೆ: 1995ರ 01)ರ 145ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು, ಈ ಮೂಲಕ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ ನಿಗದಿ ಇತ್ಯಾದಿ) ನಿಯಮಗಳು, 1995ನ್ನು ಮತ್ತಷ್ಟು ತಿದ್ದುಪಡಿಗಳನ್ನು ಮಾಡಲು ಈ ಕೆಳಕಂಡ ನಿಯಮಗಳನ್ನು ರಚಿಸುತ್ತದೆ, ಎಂದರೆ:-

ನಿಯಮಗಳು 1. ಹೆಸರು ಮತ್ತು ಪ್ರಾರಂಭ:- (1) ಈ ನಿಯಮಗಳನ್ನು ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ ನಿಗದಿ ಇತ್ಯಾದಿ) (ತಿದ್ದುಪಡಿ) ನಿಯಮಗಳು, 2018 ಎಂದು ಕರೆಯತಕ್ಕದ್ದು.

(2) ಅವು, ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.

2. 10ನೇ ನಿಯಮದ ತಿದ್ದುಪಡಿ:-ಕರ್ನಾಟಕ ಶಿಕ್ಷಣ ಸಂಸ್ಥೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮ ನಿಗದಿ ಇತ್ಯಾದಿ) ನಿಯಮಗಳು, 1995ರ 10ನೇ ನಿಯಮದಲ್ಲಿನ (3)ನೇ ಉಪ-ನಿಯಮದ (ಸಿ) ಖಂಡದಲ್ಲಿ:-

(i) (ii)ನೇ ಬಾಬ್ತಿನಲ್ಲಿ "ಪ್ರತಿವರ್ಷ 600/- ರೂಪಾಯಿಗಳು" ಎಂಬ ಅಕ್ಷರಗಳು, ಅಂಕಿಗಳು ಮತ್ತು ಪದಗಳ ಬದಲಾಗಿ "ಪ್ರತಿ ವರ್ಷ ಎರಡು ಸಾವಿರದ ಐದು ನೂರು ರೂಪಾಯಿಗಳು" ಎಂಬ ಪದಗಳನ್ನು ಪ್ರತ್ಯಾಯೋಜಿಸತಕ್ಕದ್ದು.

(ii) (ಸಿ) ಖಂಡದ ತರುವಾಯ, ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು. ಎಂದರೆ:-

"ಪರಂತು, ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕುಗಳ ಅಧಿನಿಯಮ, 2009ರ (ಕೇಂದ್ರ ಅಧಿನಿಯಮ ಸಂಖ್ಯೆ: 2009ರ 35)ರ 12ನೇ ಪ್ರಕರಣದ (1)ನೇ ಉಪ-ಪ್ರಕರಣದ (ಸಿ) ಖಂಡದ ಅಡಿಯಲ್ಲಿನ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಂದ ವಿಶೇಷ ಅಭಿವೃದ್ಧಿ ಶುಲ್ಕವನ್ನು ಪಡೆಯತಕ್ಕದ್ದಲ್ಲ".

PR – 808

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ವಿ. ನಾಗೇಶ ರಾವ್

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಪ್ರಾಥಮಿಕ).

೬೫೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮ ೧೦೦೧

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 37 ಇಆಇ 2017 ಬೆಂಗಳೂರು, ದಿನಾಂಕ: 18ನೇ ಡಿಸೆಂಬರ್ 2017

ವಿಷಯ: ಮಾಹಿತಿ ಹಕ್ಕು ಅಧಿನಿಯಮ 2005 (ಕೇಂದ್ರ ಅಧಿನಿಯಮ ಸಂಖ್ಯೆ: 22/2005)ರ ಕಲಂ 4 ಮತ್ತು 5ರ ಪಾಲನೆಯ ಬಗ್ಗೆ ಮಾಹಿತಿ ನೀಡುವ ಕುರಿತು.

ಮಾಹಿತಿ ಹಕ್ಕು ಅಧಿನಿಯಮ 2005 (ಕೇಂದ್ರ ಅಧಿನಿಯಮ ಸಂಖ್ಯೆ: 22/2005)ರ ಕಲಂ 4 ಮತ್ತು 5ರಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮದ ವಿವರಗಳನ್ನು ಈ ಅಧಿಸೂಚನೆಗೆ ಲಗತ್ತಿಸಿರುವ ಅನುಬಂಧದಲ್ಲಿರುವಂತೆ ಸಾರ್ವಜನಿಕರ ಮಾಹಿತಿಗಾಗಿ ಈ ಮೂಲಕ ಪ್ರಕಟಿಸಲಾಗಿದೆ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ವೀರಭದ್ರ

ಪೀಠಾಧಿಕಾರಿ-1

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಶಿಕ್ಷಣ ಇಲಾಖೆ.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೧೧ ೬೫೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೧೩ ೬೫೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೧೫ ೬೫೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೧೭ ೬೫೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ

Organisation Chart of DPAR (e-Governance)

DPAR (e-Governance)

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೧೯ ೬೫೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೨೧ ೬೫೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೨೩ ೬೫೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೨೫ ೬೫೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೨೭

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ: ಸಿಆಸುಇ 121 ಇಆಇ 2009, ಬೆಂಗಳೂರು, ದಿನಾಂಕ: 26ನೇ ಆಗಸ್ಟ್ 2009.

ಜಿ.ಎಸ್. ಪ್ರಸನ್ನಕುಮಾರ್

ಪೀಠಾಧಿಕಾರಿ-1, (ಇ-ಆಡಳಿತ), (ಅಧಿಕ ಪ್ರಭಾರ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ೬೫೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೪ಎ ಭಾಗ ೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೨೯ ೬೫೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೪ಎ ಭಾಗ ೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೩೧ ೬೫೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೪ಎ ಭಾಗ ೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೩೩ ೬೫೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೩೫

ಅನುಬಂಧ-4ಎ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ತಿದ್ದೋಲೆ

ಸಂಖ್ಯೆ: ಸಿಆಸುಇ 121 ಇಆಇ 2009, ಬೆಂಗಳೂರು, ದಿನಾಂಕ: 3ನೇ ಅಕ್ಟೋಬರ್ 2009.

೬೫೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ

ಅನುಬಂಧ-4ಬಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ: ಸಿಆಸುಇ 17 ಇಆಇ 2012 (ಭಾಗ-1), ಬೆಂಗಳೂರು, ದಿನಾಂಕ: 26ನೇ ನವೆಂಬರ್ 2012.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೩೭ ೬೫೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೬೫೩೯

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297೬೫೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫ , ೨೦೧೮ ಭಾಗ ೪ಎ

ಭಾಗ ೪ಎ ಕ ರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೯, ೨೦೧೮

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ವೀರಭದ್ರ

ವೀರಭದ್ರ

ಪೀಠಾಧಿಕಾರಿ-2,

PR-400

ಪೀಠಾಧಿಕಾರಿ-1

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ

SC-100

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

ಶಿಕ್ಷಣ ಇಲಾಖೆ.

(ಇ-ಆಡಳಿತ),

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 15 November 2018. Indian Gazettes, https://egazette.servantsofknowledge.in/details/in.gazette.karnataka_new.2018-11-15.Part-4A/. Archive identifier in.gazette.karnataka_new.2018-11-15.Part-4A.