ಸಂಪುಟ ೧೫೩
Volume 153
ಬೆಂಗಳೂರು, ಗುರುವಾರ, ನವೆಂಬರ್ ೧೫, ೨೦೧೮ (ಕಾರ್ತೀಕ ೨೪, ಶಕ ವರ್ಷ ೧೯೪೦)
Bengaluru, Thursday, November 15, 2018 (Karthika 24, Shaka Varsha 1940)
ಸಂಚಿಕೆ ೪೫
Issue 45
ಭಾಗ ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
IN THE COURT OF THE CITY CIVIL JUDGE AT MAYOHALL, BENGALURU
P & SC No. 25057 of 2018
In the matter of the debts and goods of Late Smt. Kausalya Atmaram, Intestate
BETWEEN :-
1. PRABHA ANANTHRAM,
Daughter of late Smt. Kausalya Atmaram
Aged about 70 years
No. 9, Nandidoorg Road, Benson Town,
Bengaluru – 560 046
2. PRADEEP ATMARAM
Son of late Smt. Kausalya Atmaram
Aged about 64 years
No. 9, Nandidoorg Road, Benson Town,
Bengaluru – 560 046 … PETITIONERS
AND
NIL … RESPONDENTS
NOTICE
Whereas the above named Petitioners have made a petition before this Hon'ble Court (CCH - 73) U/s. 370, 371 and 372 of the Indian Succession Act 1925, praying for grant of Succession Certificate in respect of the Schedule Property declaring that the Petitioners herein are the only heirs of the Late Smt. Kausalya Atmaram.
Interested parties are hereby called up on to appear in this court in person or by a pleader duly instructed on the 30th day of November, 2018 at 11:00 a.m. before Court Hall No. 73 in forenoon to show cause against the Petition, failing which the case will be heard and determined ex-parte.
SCHEDULE
| SHARES AND SECURITIES | ||||||
| Sl. No. | Company Name | Nature of Security | No. of Securities | Certificate No. | Distinctive Nos | Folio No. |
| 1. | Tata Engineering And Locomotive Company Limited | Debentures | Forty | Certificate Nos. 197291 To 197294 | 4190004 To 4190043 | EK1023881 |
| 3. | Century Textiles And Industries Limited | Shares | Sixty | Certificate Nos. 620417 To 620418 | 54364411 To 54364470 | KA0523 |
(೧೯೨೭)೧೯೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೫
| Sl. No. | Company Name | Nature of Security | No. of Securities | Certificate No. | Distinctive Nos | Folio No. |
| 4. | Century Textiles And Industries Limited | Shares | Thirty | Certificate Nos. 120419 To 120421 | 7841631 To 7841660 | KA0523 |
| 5. | Balmer Lawrie & Co. Ltd | Shares | Sixty | Certificate Nos. 029603 To 029604 | (B): 12159990 To 12160049(B). | 002183 |
| 6. | Balmer Lawrie & Co. Ltd | Shares | One-Hundred and Ten | Certificate Nos. 0005337 To 0005339 | 03272801 To 03272910 | 002183 |
| 7. | Balmer Lawrie & Co. Ltd | Shares | Fifty | Certificate Nos. 059649 | 15693007 To 15693056 | 002183 |
| 8. | Balmer Lawrie & Co. Ltd | Equity Shares fully credited as Bonus Shares | One Hundred and Seventy Two | Certificate Nos. 86419 | 16812493 To 16812664 | 002183 |
Shares of Tata Motors Limited
Account details:
Account holder: Kausalya Atmaram
| Sl. No. | Particulars | No. of shares |
| 1. | Tata Motors Ltd. | 1440 |
Date: 26.10.2018
Given under my hand and the seal of the court
PD - 55
BY ORDER OF THE COURT
ASST. REGISTRAR,
SC - 05
CITY CIVIL COURT, MAYOHALL,
BENGALURU
IN THE COURT OF THE HON'BLE CITY CIVIL JUDGE, MAYOHALL,
AT BENGALURU (CCH-21)
P & SC.No. 25004/18
IN THE MATTER OF LAST WILL AND TESTAMENT OF SMT.MAMTAZ SHAIK.
BETWEEN
Sri.SHAIKH HUSSAIN,
SON OF Yasin Hussain Shaikh,
Aged about 66 years,
No.14, Sultanji Gunta Road, A.M.Road, Shivajinagar,
Bengaluru 560 037
Petitioners
-V/S-
And
Nil
Respondent
PUBLIC NOTICE
Whereas, the above name Petitioner has filed the above petition under memorandum of petition under Section 372 of the Indian Succession Act in the matter of asset of Smt.MAMTAZ SHAIK, deceased in respect of SCHEDULE ASSETS.
It is hereby notify that any person/s having any claim over the same, they may appear before this Hon'ble Court and submit their objections on 01-12-2018 at 11.00 AM without fail, failing which the petition will be heard and determined ex-parte.
SCHEDULE ASSETS
Amount deposited in D.C.B.Savings Account at D.C.B, Bank (Development Credit Bank Ltd.,) M.G.Road, Branch, Bangalore, and also office at MUMBAI, vide No.WAI Unit No.G-2, CITI Park, Ranandani Business Park, Powai, MUMBAI-400076, Maharashtra vide current A/c No.00210100036865 and Savings Bank A/c No.03825200070364 customer care No.3281, 1322 stands in the name of late Mamtaz Shaik and pass under such other suitable order/s deems fit to grant in the circumstances of the case, in the ends of justice and equity.
Given under my hand and seal of this Court on this 27th day of October 2018.
By Order of the Court
Assistant Registrar
PD - 56
City Civil Court Mayohall Unit
SC - 05
Bengaluruಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೧೯೨೯
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ
ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು - 560 009
ಅಧಿಸೂಚನೆ
No. KSAT/EST(1)/REC-DRV/22/2018, DATED: 30-10-2018
1) ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಕಛೇರಿಯಲ್ಲಿ ಪ್ರಸ್ತುತ ಖಾಲಿ ಇರುವ ಉಳಿದ ಮೂಲ ವೃಂದದ ಒಂದು ವಾಹನ ಚಾಲಕ ಹುದ್ದೆಗೆ ಕರ್ನಾಟಕ ಆಡಳಿತ ನ್ಯಾಯಮಂಡಳಿ (ನೇಮಕಾತಿ) ನಿಯಮಗಳು, 1993 ಹಾಗೂ ಅದರಡಿಯಲ್ಲಿ ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವಂತೆ ಮತ್ತು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 3 ರನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗಧಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ :-
2) ಹುದ್ದೆಯ ವರ್ಗೀಕರಣದ ವಿವರ (ಉಳಿದ ಮೂಲ ವೃಂದ):-
| ಕ್ರ.ಸಂ. | ಮೀಸಲಾತಿ ವಿವರ | ಹ ುದ್ದೆಯ ಸಂಖ್ಯೆ |
| 1 | ಸಾಮಾನ್ಯ ಅರ್ಹತೆ (ಇತರೆ) | 1 |
3) ವೇತನ ಶ್ರೇಣಿ: ರೂ. 21400-500-22400-550-24600-600-27000-650-29600-750-32600-850-36000-950-39800-1100-
42000.
4) ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಅಧಿಕೃತ ವೆಬ್‌ಸೈಟ್ www.ksat.kar.nic.in ನಲ್ಲಿ ನೀಡಲಾಗಿರುವ ಅಧಿಸೂಚನೆಯನ್ನು ನೋಡುವುದು.
5) ಶೈಕ್ಷಣಿಕ ವಿದ್ಯಾರ್ಹತೆ: 1. 7ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು
2. ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆದಿರುವ ಚಾಲ್ತಿಯಲ್ಲಿರುವ ಲಘು/ಭಾರಿ ವಾಹನ ಚಾಲನ ಪರವಾನಗಿಯನ್ನು
ಹೊಂದಿರಬೇಕು.
6) ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 17-12-2018 ಆಗಿರುತ್ತದೆ.
1. ಅರ್ಜಿ ನಮೂನೆಯನ್ನು ನೇರವಾಗಿ ಪಡೆಯಲು ಇಚ್ಚೆಯುಳ್ಳ ಅಭ್ಯರ್ಥಿಗಳು ಅರ್ಜಿ ನಮೂನೆ ಶುಲ್ಕ ರೂ. 50/-ನ್ನು ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-560 009, ಇವರಿಗೆ ಸಂದಾಯವಾಗುವಂತೆ ಐಪಿಒ/ಡಿಡಿ ಮೂಲಕ ಅಥವಾ ಈ ಕಛೇರಿಯ ಲೆಕ್ಕಪತ್ರ ಶಾಖೆಯಲ್ಲಿ ಹಣವನ್ನು ಪಾವತಿಸಿ ನಿಗದಿತ ಅರ್ಜಿ ನಮೂನೆಯನ್ನು ಪಡೆಯಬಹುದು.
ಅಲ್ಲದೇ ಅಂಚೆ ಮೂಲಕ ಅರ್ಜಿಗಳನ್ನು ಪಡೆಯಲು ಅಪೇಕ್ಷಿಸುವ ಅಭ್ಯರ್ಥಿಗಳು ರೂ.50/- ಮೌಲ್ಯದ ಅಂಚೆಚೀಟಿ ಅಂಟಿಸಿರುವ ಸ್ವ ವಿಳಾಸದ 20x30 ಸೆ.ಮೀ. ಅಳತೆಯುಳ್ಳ ಲಕೋಟೆಯೊಡನೆ ಅರ್ಜಿ ನಮೂನೆ ಶುಲ್ಕ ರೂ.50/- ನ್ನು ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-560 009, ಇವರಿಗೆ ಸಂದಾಯವಾಗುವಂತೆ ಐ.ಪಿ.ಒ/ಡಿ.ಡಿ. ಮೂಲಕ ಪಾವತಿಸಿ ದಿನಾಂಕ: 07-12-2018 ರೊಳಗೆ ಸದರಿ ಸ್ವ ವಿಳಾಸದ ಲಕೋಟೆಯನ್ನು ಮೇಲ್ಕಂಡ ಕಛೇರಿಗೆ ಕಳುಹಿಸಿ ಪಡೆಯಬಹುದಾಗಿದೆ.
ಸೂಚನೆ:-
(1) ದಿನಾಂಕ: 08-12-2018 ಸೇರಿದಂತೆ ನಂತರ ಅಂಚೆ ಮೂಲಕ ಅರ್ಜಿ ಕೋರಿ ಬರುವ ಯಾವುದೇ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
(2) ಭರ್ತಿ ಮಾಡಿದ ಅರ್ಜಿಗಳನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-560 009 ಇಲ್ಲಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.
(3) ಭರ್ತಿ ಮಾಡಿದ ಅರ್ಜಿಗಳನ್ನು ಅಂಚೆ ಮೂಲಕ ಸಲ್ಲಿಸಬಯಸುವ ಅಭ್ಯರ್ಥಿಗಳು ವಿಲೇಖನಾಧಿಕಾರಿ, ವಾಹನ ಚಾಲಕ ಹುದ್ದೆಯ ನೇಮಕಾತಿ ಪ್ರಾಧಿಕಾರ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-560 009 ಇವರಿಗೆ ಮಾತ್ರ ಸಲ್ಲಿಸತಕ್ಕದ್ದು.
(4) ಅರ್ಜಿ ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಮತ್ತು ನಿಗದಿತ ಸಮಯದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
7) ನಿಗದಿತ ಶುಲ್ಕ:- ಶುಲ್ಕ ಪಾವತಿ ಮಾಡುವ ವಿವರ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿಸಿದೆ. ಇತರೆ ಪ್ರವರ್ಗದ ಅಭ್ಯರ್ಥಿಗಳು ಶುಲ್ಕ ರೂ.150/- (ಒಂದುನೂರ ಐವತ್ತು ರೂಪಾಯಿಗಳು) ಗಳನ್ನು ಐಪಿಒ/ಡಿಡಿ ಮೂಲಕ ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-560 009 ಇವರ ಪದನಾಮಕ್ಕೆ ಸಂದಾಯವಾಗುವಂತೆ ಪಡೆದು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.
೧೯೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೫8) ವಯೋಮಿತಿ:
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಮತ್ತು ಈ
| ಸಾಮಾನ್ಯ ವರ್ಗ | 35 ವರ್ಷಗಳು |
| ಪ .ಜಾ/ಪ.ಪಂ/ಪ್ರವರ್ಗ-1 | 40 ವರ್ಷಗಳು |
| ಪ ವ ್ರ ರ್ಗ 2ಎ, 2ಬಿ, 3ಎ, 3ಬಿ | 38 ವರ್ಷಗಳು |
ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 6 ರಂತೆ ವಯೋಮಿತಿಯನ್ನು ಅದರಲ್ಲಿ ತಿಳಿಸಿರುವ ಮಟ್ಟಿಗೆ ಸಂಬಂಧಪಟ್ಟ ದಾಖಲೆ ಒದಗಿಸಿದಲ್ಲಿ ಹೆಚ್ಚಿಸಲಾಗುವುದು/ಸಡಿಲಿಸಲಾಗುವುದು.
9) ಈ ಕೆಳಗಿನ ಸಂದರ್ಭಗಳಲ್ಲಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕೆಳಗೆ ತಿಳಿಸಿರುವಷ್ಟರ ಮಟ್ಟಿಗೆ ಹೆಚ್ಚಿಸಲಾಗುವುದು/ಸಡಿಲಿಸಲಾಗುವುದು :-
(ಅ) ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಅಧಿನಿಯಮದ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿದ್ದರೆ ಅಥವಾ ಹಿಂದೆ ಹೊಂದಿದ್ದಲ್ಲಿ ಗರಿಷ್ಠ ವಯೋಮಿತಿಯನ್ನು ಅವನು/ಅವಳು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 10 ವರ್ಷಗಳ ಅವಧಿ ಇದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
(ಆ) ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ ಅವನು ಕೇಂದ್ರ ಸಶಸ್ತ್ರ ದಳದಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಅಷ್ಟು ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳು. (ಈ ಉಪ ಕಂಡಿಕೆಗೆ ಸಂಬಂಧಿಸಿದ ವಿವರಣೆಗಳಿಗೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 2 ಮತ್ತು 9 ರನ್ವಯ ಅರ್ಥೈಸಿಕೊಳ್ಳುವುದು).
(ಇ) ಅಭ್ಯರ್ಥಿಗಳು ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್‌ಸಿಸಿ) ನಲ್ಲಿ ಪೂರ್ಣಕಾಲಿಕ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರುವ ವ್ಯಕ್ತಿಯಾಗಿದ್ದರೆ ಅಂಥಹ ಕ್ಯಾಡೆಟ್ ಪರಿವೀಕ್ಷಕನಾಗಿ ಅವನು ಸೇವೆ ಸಲ್ಲಿಸಿದಷ್ಟು ವರ್ಷಗಳು.
(ಈ) ಅಭ್ಯರ್ಥಿಯು ರಾಜ್ಯ ಸರ್ಕಾರದಿಂದ ಪುರಸ್ಕøತವಾದ ಗ್ರಾಮೀಣ ಔದ್ಯಮೀಕರಣ ಯೋಜನೆಯ ಮೇರೆಗೆ ನೇಮಕಗೊಂಡ ಗ್ರಾಮ ಸಮೂಹ ಪರಿಶೀಲಕನಾಗಿ ಪ್ರಸ್ತುತ ಕೆಲಸ ಮಾಡುತ್ತಿದ್ದರೆ ಅಥವಾ ಈ ಹಿಂದೆ ಗ್ರಾಮ ಸಮೂಹ ಪರಿಶೀಲಿಕನಾಗಿ ಕೆಲಸ ನಿರ್ವಹಿಸಿದ ಪಕ್ಷದಲ್ಲಿ ಅವನು/ಅವಳು ಅಂತಹ ಗ್ರಾಮ ಪರಿಶೀಲಕನಾಗಿ ಸೇವೆ ಸಲ್ಲಿಸಿದಷ್ಟು ವರ್ಷಗಳು.
(ಉ) ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ್ದರೆ ಅಥವಾ ಹಿಂದೆ ಹೊಂದಿದ್ದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅವನು/ಅವಳು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವರೋ ಅಥವಾ ಈ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 5 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
(ಊ) ಅಭ್ಯರ್ಥಿಯು ವಿಧವೆಯಾಗಿದ್ದಲ್ಲಿ 10 ವರ್ಷಗಳು
(ಋು) ಅಭ್ಯರ್ಥಿಯು ಜೀತ ಕಾರ್ಮಿಕನಾಗಿದ್ದ ಪಕ್ಷದಲ್ಲಿ 10 ವರ್ಷಗಳು
ಉಪಕಂಡಿಕೆ 8(ಅ) ರ ಮೇರೆಗೆ ವಯೋಮಿತಿಯ ಸಡಿಲಿಕೆಯನ್ನು ಕೋರುವ ಅಭ್ಯರ್ಥಿಯು ಜೀತ ಕಾರ್ಮಿಕನಾಗಿದ್ದು, ಸದರಿ ಅಧಿನಿಯಮ ಅಥವಾ 1957ರ ಕರ್ನಾಟಕ ಜೀತ ಕಾರ್ಮಿಕ ಪದ್ಧತಿ ರದ್ದತಿ ನಿಯಮದ ಮೇರೆಗೆ ಜೀತ ಸಾಲವನ್ನು ಸಂದಾಯ ಮಾಡುವ ಹೊಣೆಯಿಂದ ಬಿಡುಗಡೆಯಾಗಿದ್ದಾನೆಂಬ ಪ್ರಮಾಣ ಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ರಿಂದ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.
10) ಜಾತಿ ಮೀಸಲಾತಿ ಪ್ರಮಾಣ ಪತ್ರಗಳು:
• ಪ.ಜಾ/ಪ.ಪಂ. ಅಭ್ಯರ್ಥಿಗಳು ನಮೂನೆ 'ಡಿ' ಯಲ್ಲಿ
• ಪ್ರವರ್ಗ-1 ರ ಅಭ್ಯರ್ಥಿಗಳು ನಮೂನೆ 'ಇ' ಯಲ್ಲಿ ಹಾಗೂ
• 2ಎ, 2ಬಿ, 3ಎ, 3ಬಿ ಆಭ್ಯರ್ಥಿಗಳು ನಮೂನೆ 'ಎಫ್' ನಲ್ಲಿ
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ, ಚಾಲ್ತಿಯಲ್ಲಿರುವ ನಮೂನೆಯಲ್ಲಿ, ಸಂಬಂಧಿಸಿದ ತಹಶೀಲ್ದಾರ್‌ರವರಿಂದ ಪಡೆದ ಇತ್ತೀಚಿನ ಅಥವಾ ನಿರ್ದಿಷ್ಟಪಡಿಸಿದ ಅವಧಿಯೊಳಗಿರುವ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.
11) ಅರ್ಹತಾ ಷರತ್ತುಗಳು:-
ಅ) ಭಾರತೀಯ ನಾಗರಿಕನಾಗಿರತಕ್ಕದ್ದು.
ಆ) ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತವಾಗಿರಬೇಕು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೧೯೩೧ಇ) ದೈಹಿಕವಾಗಿ ಅನರ್ಹರಾಗಿದ್ದಾರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಕಾಯ್ದಿರಿಸಿಕೊಂಡಿದೆ ಮತ್ತು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ವಿವೇಚನೆಯು ಯಾವುದೇ ವಿಧದಲ್ಲೂ ಈ ನಿಯಮಗಳ ಮೂಲಕ ಸೀಮಿತವಾಗಿರುವುದಿಲ್ಲ.
ಈ) ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಜೀವಂತ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದ ಪೂರ್ವಾನುಮತಿ ಇಲ್ಲದೆ ನೇಮಕಾತಿಗೆ ಅರ್ಹರಾಗುವುದಿಲ್ಲ.
ಉ) ನಿಗದಿತ ಶೈಕ್ಷಣಿಕ ಅರ್ಹತೆಯ ಜೊತೆಗೆ ಈ ಮೇಲ್ಕಂಡ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ.
12) ಪ್ರಮುಖವಾದ ಸೂಚನೆಗಳು:
ಅಭ್ಯರ್ಥಿಗಳು ಕೆಳಕಂಡ ಪ್ರಮಾಣ ಪತ್ರಗಳ ಒಂದೊಂದು ಛಾಯಾ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು ಅರ್ಜಿಯೊಂದಿಗೆ ಲಗತ್ತಿಸಿದ ದಾಖಲಾತಿಗಳ ಬಗ್ಗೆ ಸ್ವೀಕೃತಿ ಪತ್ರದಲ್ಲಿ (check list) (ದ್ವಿಪ್ರತಿಯಲ್ಲಿ) ನೀಡಲಾಗಿರುವ ಕ್ರಮ ಸಂಖೈಗಳ ಪಕ್ಕದಲ್ಲಿರುವ ಜಾಗದಲ್ಲಿ "Enclosed" ಎಂಬುದಾಗಿಯೂ ಹಾಗೂ ಕೇಳಿರುವ ಯಾವುದೇ ಪ್ರಮಾಣ ಪತ್ರವನ್ನು ಲಗತ್ತಿಸದೇ ಇದ್ದಲ್ಲಿ "Not Enclosed" ಎಂಬುದಾಗಿಯೂ ಸ್ಪಷ್ಟವಾಗಿ ಬರೆಯತಕ್ಕದ್ದು.
1) ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳು
2) ಜನ್ಮ ದಿನಾಂಕವನ್ನು ನಮೂದಿಸಿರುವ 7ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ / ವರ್ಗಾವಣೆ ಪತ್ರ/ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉಧೃತಭಾಗ.
3) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ-3ಬಿ ಗಳ ಮೀಸಲಾತಿ ಪ್ರಮಾಣ ಪತ್ರಗಳು ಪ್ರಸ್ತುತ ಚಾಲ್ತಿಯಲ್ಲಿರುವ ಅಥವಾ ನಿಗದಿತ ಅವಧಿಯೊಳಗಿರುವ ಡಿ, ಇ, ಎಫ್ ನಮೂನೆಗಳಲ್ಲಿ (ಮೀಸಲಾತಿ ಕೋರಿದ್ದಲ್ಲಿ)
4) ವಿಧವೆಯಾದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.
5) ಜನಗಣತಿ ಕಾರ್ಯದಲ್ಲಿ ಕೆಲಸ ಮಾಡಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.
6) ಜೀತಮುಕ್ತಿಯ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.
7) ಈ ಅಧಿಸೂಚನೆಯನ್ವಯ ನೇಮಕಾತಿಯಾಗಿ ಕಾರ್ಯನಿರ್ವಹಿಸುವ ನೌಕರರಿಗೆ ಎನ್.ಪಿ.ಎಸ್. ಪಿಂಚಣಿ ಸೌಲಭ್ಯ ಅನ್ವಯವಾಗುತ್ತದೆ.
(ಮೇಲಿನ ಕ್ರಮ ಸಂಖ್ಯೆ 3ರ ಈ ಪ್ರಮಾಣ ಪತ್ರಗಳ ನಮೂನೆಗಳನ್ನು ಅರ್ಜಿಯೊಡನೆ ಲಗತ್ತಿಸಿದೆ)
13) ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯೊಡನೆ ಪತ್ರ ವ್ಯವಹಾರ:
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಅಭ್ಯರ್ಥಿಯ ವಿಚಾರದಲ್ಲಿ ಅಭ್ಯರ್ಥಿಗಳೊಂದಿಗೆ ಯಾವುದೇ ರೀತಿಯ ಪತ್ರ ವ್ಯವಹಾರವನ್ನು ನಡೆಸುವುದಿಲ್ಲ. ವಿಳಾಸ ಬದಲಾವಣೆ ಇದ್ದಲ್ಲಿ ಅಭ್ಯರ್ಥಿಗಳು ಲಿಖಿತ ಮನವಿಯ ಮೂಲಕ ಮಂಡಳಿಯ ಗಮನಕ್ಕೆ ತರತಕ್ಕದ್ದು. ಈ ವಿಳಾಸ ಬದಲಾವಣೆಯನ್ನು ಪರಿಗಣಿಸಲು ಮಂಡಳಿಯು ಪ್ರಯತ್ನಿಸುವುದು. ಆದಾಗ್ಯೂ ಈ ವಿಚಾರದಲ್ಲಿ ಮಂಡಳಿಯು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಎಚ್ಚರ ವಹಿಸತಕ್ಕದ್ದು.
ಅಭ್ಯರ್ಥಿಗಳು ಮಂಡಳಿಯೊಡನೆ ಸಂಪರ್ಕಿಸಬೇಕಾದ ಸಂದರ್ಭದಲ್ಲಿ ತಮ್ಮ ಮನವಿಯು ಕೆಳಕಂಡ ಮಾಹಿತಿಗಳನ್ನು ಒಳಗೊಂಡಿರಬೇಕು.:-
ಅ) ಅಭ್ಯರ್ಥಿಯ ಪೂರ್ಣ ಹೆಸರು (ಬಿಡಿ ಅಕ್ಷರಗಳಲ್ಲಿ)
ಆ) ಹುದ್ದೆಯ ಹೆಸರು
ಇ) ಅರ್ಜಿಯಲ್ಲಿ ನಮೂದಿಸಿರುವ ಅಂಚೆ ವಿಳಾಸ
14) ಇತರೆ ಸೂಚನೆಗಳು:
1) ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಅದನ್ನು ಮಡಚುವುದಾಗಲಿ, ಹರಿಯುವುದಾಗಲಿ ಮಾಡದೆ ಹಾಳಾಗದಂತೆ ಎಚ್ಚರ ವಹಿಸತಕ್ಕದ್ದು.
2) ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭರ್ತಿ ಮಾಡಿ ಸಲ್ಲಿಸಿದ ಅರ್ಜಿಯ ಒಂದು ಛಾಯಾ ಪ್ರತಿಯನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಸೂಚಿಸಿದೆ.
3) ಸೇವೆಯಲ್ಲಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಅವರುಗಳ ನೇಮಕಾತಿ ಪ್ರಾಧಿಕಾರಿಗಳಿಂದ ದೃಡೀಕರಿಸಿ ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಸಲ್ಲಿಸತಕ್ಕದ್ದು. ಕೊನೆಯ ದಿನಾಂಕದ ನಂತರ ಸ್ವೀಕರಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
4) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು.
೧೯೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೫5) ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದವರೆವಿಗೂ ನಿರೀಕ್ಷಿಸದೆ ಮುಂಚಿತವಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
6) ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸತಕ್ಕದು.
15) ದುರ್ನಡತೆ :
ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿರುವನೆಂದು ಅಥವಾ ಅವನ/ಅವಳ ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು ಕಂಡುಬಂದಲ್ಲಿ ಅವನು/ಅವಳು ಸ್ವತ: ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ, ಹುದ್ದೆಯ ಆಯ್ಕೆಯಿಂದ ಅಂತವರ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು.
16) ಆಯ್ಕೆ ವಿಧಾನ:
1. ಕರ್ನಾಟಕ ಆಡಳಿತ ನ್ಯಾಯಮಂಡಳಿ (ನೇಮಕಾತಿ) ನಿಯಮಗಳು, 1993 ಹಾಗೂ ಅದರಡಿಯಲ್ಲಿ ಕಾಲ ಕಾಲಕ್ಕೆ ತಿದ್ದುಪಡಿಯಾದಂತೆ ಮತ್ತು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರ ನಿಯಮ (3)ರ ಪ್ರಕಾರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಸಂದರ್ಶನವು ಗರಿಷ್ಟ 50 ಅಂಕಗಳನ್ನು ಒಳಗೊಂಡಿರುತ್ತದೆ. ಹಾಗೂ ಸದರಿ ಆಯ್ಕೆಯು ಸರ್ಕಾರದ ಆದೇಶ ದಿನಾಂಕ 28ನೇ ಮೇ 1994 ರನ್ವಯ ಪೊಲೀಸ್ ವಾಹನ ಚಾಲನ ಮತ್ತು ನಿರ್ವಹಣಾ ಶಾಖೆಯು ನಡೆಸುವ ವಾಹನ ಚಾಲನ ಪರೀಕ್ಷೆಗೆ ಒಳಪಟ್ಟಿರುತ್ತದೆ.
2. ಸಂಬಂಧಿಸಿದ ಉದ್ಯೋಗ ವಿನಿಮಯ ಕಛೇರಿಯಿಂದಲೂ ಸಹ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ತರಿಸಿಕೊಳ್ಳಲಾಗುವುದು.
3. ಅಭ್ಯರ್ಥಿಯು ಅರ್ಜಿಯಲ್ಲಿ ತಪ್ಪು ಅಥವಾ ಸುಳ್ಳು ಹೇಳಿಕೆಗಳನ್ನು ನೀಡಿದಲ್ಲಿ ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿದಲ್ಲಿ ಅಥವಾ ನೇಮಕಾತಿ ಉದ್ದೇಶಗಳಿಗಾಗಿ ಅನುಚಿತ ಮಾರ್ಗವನ್ನು ಅನುಸರಿಸಿದಲ್ಲಿ ಆಯ್ಕೆಗೆ ಅನರ್ಹನಾಗುವನು/ಅನರ್ಹಳಾಗುವಳು.
4. ಭರ್ತಿ ಮಾಡಿದ ಅರ್ಜಿಗಳನ್ನು ವಿಲೇಖನಾಧಿಕಾರಿ, ವಾಹನ ಚಾಲಕ ಹುದ್ದೆಯ ನೇಮಕಾತಿ ಪ್ರಾಧಿಕಾರ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-09 ಇವರಿಗೆ ಸಲ್ಲಿಸುವಾಗ, "ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-09." (Registrar, K.S.A.T., 7th Floor, Kandaya Bhavana, K.G.Road, Bengaluru-09) ಇವರಿಗೆ ಪಾವತಿಯಾಗುವಂತೆ ಪಡೆದ ರೂ. 150-00ರ ಅಂಚೆ ಆದೇಶ/ಡಿಡಿ ಹಾಗೂ ಮೀಸಲಾತಿ ಪ್ರಮಾಣ ಪತ್ರ, ಜನ್ಮ ದಿನಾಂಕದ ಬಗೆಗಿನ ದಾಖಲೆ, ವಿದ್ಯಾರ್ಹತೆಯ ಬಗೆಗಿನ ಜೆರಾಕ್ಸ್ ಪ್ರತಿ ಹಾಗೂ ಇತ್ತೀಚಿನ ಭಾವಚಿತ್ರದೊಂದಿಗೆ ದಿನಾಂಕ:
17-12-2018ರ ಸಂಜೆ 5-30 ಗಂಟೆ ಒಳಗಾಗಿ ಸಲ್ಲಿಸತಕ್ಕದ್ದು.
ಅಧ್ಯಕ್ಷರು ಮತ್ತು ನೇಮಕಾತಿ ಪ್ರಾಧಿಕಾರದ ಆದೇಶದ ಮೇರೆಗೆ,
ನಾರಾಯಣ
ವಿಲೇಖನಾಧಿಕಾರಿ
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ,
ಬೆಂಗಳೂರು.
ಅನುಬಂಧ-1
(ಪ.ಜಾ. /ಪ.ಪಂ. ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ – ಡಿ
(ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ
ನಿಯಮ 3ಎ (2)(3) ನ್ನು ನೋಡಿ)
ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರಗಳ ನಮೂನೆ.
ಪ್ರಮಾಣ ಪತ್ರ
------------- ರಾಜ್ಯದ / ಕೇಂದ್ರಾಡಳಿತ ಪ್ರದೇಶದ * ----------- ಜಿಲ್ಲೆಯ / ವಿಭಾಗದ ------------------- ಗ್ರಾಮ/ಪಟ್ಟಣದ * ನಿವಾಸಿಯಾದ ಶ್ರೀ / ಶ್ರೀಮತಿ ------------ಎಂಬುವವರ ಮಗ/ಮಗಳಾದ ಶ್ರೀ/ ಶ್ರೀಮತಿ -------------- ಇವರು ಅನುಸೂಚಿತ ಜಾತಿ/ಅನುಸೂಚಿತ ಬುಡಕಟ್ಟು * ಎಂದು ಮಾನ್ಯ ಮಾಡಲಾಗಿರುವ ಜಾತಿ/ಬುಡಕಟ್ಟಿಗೆ * ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.
• ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950
• ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) ಆದೇಶ, 1950
• ಸಂವಿಧಾನ (ಅನುಸೂಚಿತ ಜಾತಿ)(ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1950ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೧೯೩೩ • ಸಂವಿಧಾನ (ಅನುಸೂಚಿತ ಬುಡಕಟ್ಟುಗಳು)(ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951
(ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956, ಮುಂಬಯಿ ರಾಜ್ಯ ಪುನರ್ ರಚನಾ ಅಧಿನಿಯಮ, 1960, ಪಂಜಾಬ್ ರಾಜ್ಯ ಪುನರ್ ರಚನಾ ಅಧಿನಿಯಮ, 1966, ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ 1970 ಮತ್ತು ಈಶಾನ್ಯ ಪ್ರದೇಶಗಳ (ಪುನರ್ ರಚನಾ ಅಧಿನಿಯಮ, 1971ರ ಮೂಲ ತಿದ್ದುಪಡಿಯಾದಂತೆ).
• ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ, 1956
• ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುಪಡಿ) ಅಧಿನಿಯಮ, 1976ರ ಮೂಲಕ ತಿದ್ದುಪಡಿಯಾದಂತೆ ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ) ಅನುಸೂಚಿತ ಬುಡಕಟ್ಟುಗಳ ಆದೇಶ, 1959.
• ಸಂವಿಧಾನ (ದಾದರ್ ಮತ್ತು ನಾಗರ ಹವೇಲಿ) ಅನುಸೂಚಿತ ಜಾತಿಗಳ ಆದೇಶ, 1962 • ಸಂವಿಧಾನ (ಪಾಂಡಿಚೇರಿ) ಅನುಸೂಚಿತ ಜಾತಿಗಳ ಆದೇಶ, 1964 • ಸಂವಿಧಾನ (ಅನುಸೂಚಿತ ಬುಡಕಟ್ಟುಗಳ) (ಉತ್ತರ ಪ್ರದೇಶ) ಆದೇಶ, 1967 • ಸಂವಿಧಾನ (ಗೋವಾ, ದಮನ್ ಮತ್ತು ದೀವ್) ಅನುಸೂಚಿತ ಜಾತಿ/ಬುಡಕಟ್ಟುಗಳ ಆದೇಶ, 1988 • ಸಂವಿಧಾನ (ನಾಗಾಲ್ಯಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ.
ಶ್ರೀ / ಶ್ರೀಮತಿ/ಕುಮಾರಿ * ----------------- ಮತ್ತು / ಅಥವಾ ಅವನ */ಅವಳ * ಕುಟುಂಬವು -------- ರಾಜ್ಯ/ ಕೇಂದ್ರಾಡಳಿತ . .
. . . . . . . . . . .ಪ್ರದೇಶದ ------------ ಜಿಲ್ಲಾ / ವಿಭಾಗದ * ---------- ಗ್ರಾಮ / ಪಟ್ಟಣದ ಸಾಮಾನ್ಯ ನಿವಾಸಿ (ಗಳು).
ಸಹಿ:--------
ತಹಸೀಲ್ದಾರರು----------
ಸ್ಥಳ :
ದಿನಾಂಕ: ಪದನಾಮ ಕಛೇರಿಯ ಮೊಹರಿನೊಂದಿಗೆ
ರಾಜ್ಯ / ಕೇಂದ್ರಾಡಳಿತ ಪ್ರದೇಶ *
* ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟುಬಿಡಿ/ ಹೊಡೆದು ಹಾಕಿ.
ಸೂಚನೆ: ಇಲ್ಲಿ ಉಪಯೋಗಿಸಿದ "ಸಾಮಾನ್ಯ ನಿವಾಸಿಗಳು" ಎಂಬ ಪದಾವಳಿಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950ರ 20ನೇ ಪ್ರಕರಣದಲ್ಲಿರುವ ಅರ್ಥವನ್ನೇ ಹೊಂದಿರುತ್ತದೆ.
ಭಾರತ ಸರ್ಕಾರದ ಪತ್ರ ಸಂಖೈ: ಬಿಸಿ 12028/2/76 ಎಸ್‌ಸಿಟಿ -1 ಗೃಹಮಂತ್ರಾಲಯ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕ್ಕಾಗಿ, ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಪತ್ರ ಸಂಖೈ: 13-2-74 ಇಎಸ್‌ಟಿ (ಎಸ್‌ಸಿಟಿ) ದಿನಾಂಕ:05-08-1975ರಲ್ಲಿ ನಮೂದಿಸಿದ ಪ್ರಾಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಅದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸ ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು ಅದೇ ರೀತಿಯಲ್ಲಿ, ಒಂದು ತಾಲ್ಲೂಕಿನ ರೆವಿನ್ಯೂ ಪ್ರಾಧಿಕಾರಿಯು ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪ್ರಾಧಿಕಾರಿಯಾಗುವುದಿಲ್ಲ.
(ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ – ಇ
(ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ
ನಿಯಮ 3ಎ (2)(3) ನ್ನು ನೋಡಿ)
ಹಿಂದುಳಿದ ವರ್ಗಗಳಿಗೆ (ಪ್ರವರ್ಗ-1) ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರ
------------------------------------------ ಗ್ರಾಮ / ಪಟ್ಟಣದ / ನಗರ ನಿವಾಸಿಯಾದ ಶ್ರೀ / ಶ್ರೀಮತಿ -------
------------------------------- ಇವರ ಮಗ / ಮಗಳು / ಪತಿ / ಪತ್ನಿಯಾದ ಶ್ರೀ / ಶ್ರೀಮತಿ -----------------------
-------------------- ಇವರು ಹಿಂದುಳಿದ ವರ್ಗಗಳ (ಪ್ರವರ್ಗ) --------------------------------ಜಾತಿಯ ---------
---------------- ಉಪಜಾತಿಗೆ ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.
ತಹಸೀಲ್ದಾರರು
ಸ್ಥಳ :
ದಿನಾಂಕ : --------- ತಾಲ್ಲೂಕು
ಕಛೇರಿಯ ಮೊಹರು.
೧೯೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೫(ಪ್ರವರ್ಗ-2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ-ಎಫ್
(ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ
ನಿಯಮ 3ಎ (2)(3) ನ್ನು ನೋಡಿ)
ಪ್ರವರ್ಗ-1ರ ಹೊರತಾಗಿ, ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ............................... ರಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ ............................... ಇವರ ಮಗ / ಮಗಳು / ಪತಿ / ಪತ್ನಿಯಾದ, ಶ್ರೀ / ಶ್ರೀಮತಿ / ಕುಮಾರಿ ...............................
ಇವರು ಮತ್ತು ಆತನ / ಅವಳ ತಂದೆ ತಾಯಿ / ಪೋಷಕರು / ಪತ್ನಿ / ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ / ಎಸ್ ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30-03-2002 ರಲ್ಲಿ ನಿರ್ದಿಷ್ಟಪಡಿಸಿದ ಮೇಲುಸ್ತರದ (ಕ್ರೀಮಿ ಲೇಯರ್) ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು :
ಅಭ್ಯರ್ಥಿಯಾಗಲಿ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕರಾಗಲಿ / ಪತ್ನಿ / ಪತಿಯಾಗಲಿ, ಸರ್ಕಾರದ ಸೇವೆಯಲ್ಲಿ 1ನೇ ದರ್ಜೆಯ ಅಥವಾ 2ನೇ ದರ್ಜೆಯ ಅಧಿಕಾರಿ-ಯಾಗಿಲ್ಲವೆಂದು:
ಅಥವಾ
ಸಾರ್ವಜನಿಕ ವಲಯ ಉದ್ಯಮದಲ್ಲಿ ತತ್ಸಮಾನದ ಹುದ್ದೆಯನ್ನು ಹೊಂದಿರುವುದಿಲ್ಲ.
ಅಥವಾ
ಖಾಸಗಿ ನಿಯೋಜಕರ ಕೈ ಕೆಳಗೆ, 2ನೇ ದರ್ಜೆಯ ಅಧಿಕಾರಿಯ ಸಂಬಳಕ್ಕಿಂತ (ವೇತನ ಶ್ರೇಣಿ ರೂ.6000/- - 12000/- ಪ್ರಾರಂಭಿಕ ಹಂತ) ಕಡಿಮೆಯಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲವೆಂದು:
ಅಥವಾ
ಆತನ/ಆಕೆಯ ತಂದೆ ತಾಯಿ / ಪೋಷಕರು/ಪತ್ನಿ/ಪತಿಯ ಆದಾಯವೂ ಎರಡು ಲಕ್ಷ ಮೀರಿರುವುದಿಲ್ಲವೆಂದು:
ಅಥವಾ
ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961 ರಲ್ಲಿ ನಿಗದಿಪಡಿಸಿರುವಂತೆ ಆತನ/ಆಕೆಯ ತಂದೆ ತಾಯಿ / ಪೋಷಕರು / ಪತ್ನಿ / ಪತಿಯು ಮಾರಾಟ ತೆರಿಗೆದಾರನಲ್ಲ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕ / ಪತ್ನಿ / ಪತಿಯು ಅಥವಾ ಇವರಿಬ್ಬರೂ 10 ಯೂನಿಟ್‌ಗಿಂತ ಹೆಚ್ಚಿನ ಕೃಷಿ ಭೂಮಿ ಅಥವಾ 25 ಎಕರೆಗಳಿಗಿಂತ ಹೆಚ್ಚಿನ ಪ್ಲಾಂಟೇಷನ್ ಭೂಮಿಯನ್ನು ಹೊಂದಿರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ ಎಸ್‌ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30-03-2002ರ ಅನ್ವಯ ಶ್ರೀ / ಶ್ರೀಮತಿ / ಕುಮಾರಿ ............................... ಇವರು ...............................
ಜಾತಿಗೆ ............................... ಸೇರಿದ ಉಪಜಾತಿಯವರಾಗಿದ್ದು, ಸರ್ಕಾರಿ ಆದೇಶ ಸಂಖ್ಯೆ ಎಸ್‌ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30-03-2002ರ ಅನ್ವಯ ಹಿಂದುಳಿದ ವರ್ಗಗಳ ಪ್ರವರ್ಗ ............................... (2ಎ, 2ಬಿ, 3ಎ, 3ಬಿ)ಕ್ಕೆ ಸೇರಿರುತ್ತಾರೆ.
ಸ್ಥಳ: ತಹಸೀಲ್ದಾರರು
ದಿನಾಂಕ: ............................... ತಾಲ್ಲೂಕು, ಕಛೇರಿಯ ಮೂಹರು.
ಸೂಚನೆ 1) ಸರ್ಕಾರದ ಆದೇಶ ಸಂಖ್ಯೆ: ಹಿಂವಕ 304 ಬಿಸಿಎ 2017, ದಿನಾಂಕ: 14-09-2018ರಂತೆ ಹಿಂದುಳಿದ ವರ್ಗಗಳ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿಗಳಿಗೆ ಅನ್ವಯಿಸುವಂತೆ ಕೆನೆಪದರಕ್ಕೆ ನಿಗದಿಪಡಿಸಿರುವ ಅಭ್ಯರ್ಥಿಯ ಮತ್ತು ಅವರ ತಂದೆ-ತಾಯಿ, ಪೋಷಕರ ವಾರ್ಷಿಕ ಒಟ್ಟು ಆದಾಯ ಮಿತಿಯನ್ನು (Gross Annual Income) 6.00 ಲಕ್ಷಗಳಿಂದ 8.00 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಆದುದರಿಂದ, ಮೀಸಲಾತಿ ಪ್ರಮಾಣ ಪತ್ರವನ್ನು ನೀಡುವ ಅಧಿಕೃತ ಅಧಿಕಾರಿಯು ದಿನಾಂಕ: 14-09-2018ರ ಸರ್ಕಾರಿ ಆದೇಶದಲ್ಲಿನ ಅಂಶಗಳನ್ನು ವಿವರವಾಗಿ ಖಚಿತಪಡಿಸಿಕೊಂಡ ನಂತರವೇ ನೀಡತಕ್ಕದ್ದು.
2) ಈ ಮೇಲೆ ಹೇಳಲಾದ ಸರ್ಕಾರಿ ಆದೇಶದಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಸದರಿ ಮೀಸಲಾತಿಗಳನ್ನು ಕ್ಲೇಮು ಮಾಡುವ ಅಭ್ಯರ್ಥಿಗಳು ಅದರಂತೆ ಜಾತಿ/ಮೀಸಲಾತಿ ಪ್ರಮಾಣ ಪತ್ರಗಳನ್ನು ಮಾಡಿಸಲು ಸೂಚಿಸಿದೆ.
PR - 188
ನಾರಾಯಣ
SC - 100
ವಿಲೇಖನಾಧಿಕಾರಿ
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ,
ಬೆಂಗಳೂರು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೧೯೩೫ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ
ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು - 560 009
ಅಧಿಸೂಚನೆ
No. KSAT/EST(1)/RECT/DAL-WTN/45/2018, DATED: 31-10-2018
1) ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಕಛೇರಿಯಲ್ಲಿ ಪ್ರಸ್ತುತ ಖಾಲಿ ಇರುವ (ಉಳಿದ ಮೂಲ ವೃಂದ ಮತ್ತು ಸ್ಥಳೀಯ ವೃಂದ) ಸಮೂಹ "ಡಿ" ಗೆ ಸೇರಿದ ಕೆಳಕಂಡ ದಲಾಯತ್ ಮತ್ತು ವಾಚ್‌ಮನ್ ಹುದ್ದೆಗಳಿಗೆ ನೇಮಕಾತಿಯನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ನೇಮಕಾತಿ) ನಿಯಮಗಳು, 1993 ಮತ್ತು ಅದರಡಿ ಕಾಲಕಾಲಕ್ಕೆ ತಿದ್ದುಪಡಿ ಮಾಡಿರುವಂತೆ ಮತ್ತು ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 3 ರನ್ವಯ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ನಿಗದಿಪಡಿಸಿರುವ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ :-
2) ಹುದ್ದೆಗಳ ವಿವರ:-
(I) ಉಳಿದ ಮೂಲ ವೃಂದದ ದಲಾಯತ್ ಮತ್ತು ವಾಚ್‌ಮನ್ ಹುದ್ದೆಗಳು :-
| ಕ್ರ.ಸಂ. | ಮೀಸಲಾತಿ ವಿವರ | ಹ ುದ್ದೆಗಳ ಸಂಖ್ಯೆ |
| 1 | ಸಾಮಾನ್ಯ ಅರ್ಹತೆ (ಮಹಿಳೆ) | 1 |
| 2 | ಪ ವ ್ರ ರ್ಗ-2ಎ (ಮಹಿಳೆ) | 1 |
| ಕ್ರ.ಸಂ. | ಮೀಸಲಾತಿ ವಿವರ | ಹ ುದ್ದೆಯ ಸಂಖ್ಯೆ |
| 1 | ಸಾಮಾನ್ಯ ಅರ್ಹತೆ (ಇತರೆ) | 1 |
(II) ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ (ಸ್ಥಳೀಯ ವೃಂದ) ಮೀಸಲಿರಿಸಿದ ದಲಾಯತ್ ಹುದ್ದೆಗಳು
| ಕ್ರ.ಸಂ. | ಮೀಸಲಾತಿ ವಿವರ | ಖಾಲಿ ಹುದ್ದೆಗಳ ಸಂಖ್ಯೆ |
| 1 | ಸಾಮಾನ್ಯ ಅರ್ಹತೆ (ಮಹಿಳೆ) | 1 |
| 2 | ಪ ವ ್ರ ರ್ಗ-1 (ಇತರೆ) | 1 |
3) ವೇತನ ಶ್ರೇಣಿ: ರೂ. 17000-400-18600-450-20400-500-22400-550-24600-600-
27000-650-28950.
4) ಪ್ರಮುಖ ಸೂಚನೆ:-
ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರುವ ಅಭ್ಯರ್ಥಿಗಳು ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್
www.ksat.kar.nic.in ನಲ್ಲಿ ನೀಡಲಾಗಿರುವ ಅಧಿಸೂಚನೆಯನ್ನು ನೋಡುವುದು.
5) ಶೈಕ್ಷಣಿಕ ವಿದ್ಯಾರ್ಹತೆ: 4ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆ.
6) ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ: 21-12-2018 ಆಗಿರುತ್ತದೆ.
(ಅ) ಅರ್ಜಿ ನಮೂನೆ ಪಡೆಯಲು ಇಚ್ಚೆಯುಳ್ಳ ಅಭ್ಯರ್ಥಿಗಳು ರೂ.50/-ನ್ನು ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-560 009 ಇವರಿಗೆ ಸಂದಾಯವಾಗುವಂತೆ ಐಪಿಒ/ಡಿಡಿ ಮೂಲಕ ಪಾವತಿಸಿ ನಿಗದಿತ ಶುಲ್ಕ ರೂ.50/- ನ್ನು ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಕಛೇರಿಗೆ ಕಳುಹಿಸಿ ಪಡೆಯಬಹುದಾಗಿದೆ.
ಸೂಚನೆ:-
(1) ದಿನಾಂಕ: 15-12-2018 ಸೇರಿದಂತೆ ನಂತರ ಅಂಚೆ ಮೂಲಕ ಅರ್ಜಿ ಕೋರಿ ಬರುವ ಯಾವುದೇ ಮನವಿಗಳನ್ನು ಪರಿಗಣಿಸಲಾಗುವುದಿಲ್ಲ.
ಬೆಂಗಳೂರು-560 009 ಇಲ್ಲಿ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬಹುದು.
೧೯೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೫(3) ಭರ್ತಿ ಮಾಡಿದ ಅರ್ಜಿಗಳನ್ನು ಅಂಚೆ ಮೂಲಕ ಸಲ್ಲಿಸಬಯಸುವ ಅಭ್ಯರ್ಥಿಗಳು ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-560 009 ಇಲ್ಲಿಗೆ ಮಾತ್ರ ಸಲ್ಲಿಸತಕ್ಕದ್ದು.
(4) ಅರ್ಜಿ ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ ಮತ್ತು ನಿಗದಿತ ಸಮಯದ ನಂತರ ಬರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
7) ನಿಗದಿತ ಶುಲ್ಕ:- ಶುಲ್ಕ ಪಾವತಿ ಮಾಡುವ ವಿವರ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿಸಿದೆ. ಇತರೆ ಅಭ್ಯರ್ಥಿಗಳು ಅರ್ಜಿ ಶುಲ್ಕ ರೂ.150/- (ಒಂದುನೂರ ಐವತ್ತು ರೂಪಾಯಿ) ಐಪಿಒ/ಡಿಡಿ ಮೂಲಕ "ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ,
(Registrar, K.S.A.T., 7th Floor, Kandaya Bhavana, K.G.Road, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-560 009" Bengaluru) ಇವರ ಪದನಾಮಕ್ಕೆ ಸಂದಾಯವಾಗುವಂತೆ ಪಡೆದು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.
8) ವಯೋಮಿತಿ:
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು ಮತ್ತು ಈ ಕೆಳಗಿನ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
| ಸಾಮಾನ್ಯ ವರ್ಗ | 35 ವರ್ಷಗಳು |
| ಪ .ಜಾ/ಪ.ಪಂ/ಪ್ರ-1 | 40 ವರ್ಷಗಳು |
| 2ಎ, 2ಬಿ, 3ಎ, 3ಬಿ | 38 ವರ್ಷಗಳು |
ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 6 ರಂತೆ ವಯೋಮಿತಿಯನ್ನು ಅದರಲ್ಲಿ ತಿಳಿಸಿರುವ ಮಟ್ಟಿಗೆ ಸಂಬಂಧಪಟ್ಟ ದಾಖಲೆ ಒದಗಿಸಿದಲ್ಲಿ ಹೆಚ್ಚಿಸಲಾಗುವುದು/ಸಡಿಲಿಸಲಾಗುವುದು.
9) ಈ ಕೆಳಗಿನ ಸಂದರ್ಭಗಳಲ್ಲಿ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು ಕೆಳಗೆ ತಿಳಿಸಿರುವಷ್ಟರ ಮಟ್ಟಿಗೆ ಹೆಚ್ಚಿಸಲಾಗುವುದು :-
(ಅ) ಅಭ್ಯರ್ಥಿಯು ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಅಧಿನಿಯಮದ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಗೊಂಡು ಕರ್ನಾಟಕ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದಲ್ಲಿ ಗರಿಷ್ಠ ವಯೋಮಿತಿಯನ್ನು ಅವನು/ಅವಳು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 10 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
(ಆ) ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ ಅವನು ಕೇಂದ್ರ ಸಶಸ್ತ್ರ ದಳದಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಅಷ್ಟು ವರ್ಷಗಳಿಗೆ ಮೂರು ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳಾಗುವುದೋ ಅಷ್ಟು ವರ್ಷಗಳು. (ಈ ಉಪ ಕಂಡಿಕೆಗೆ ಸಂಬಂಧಿಸಿದ ವಿವರಣೆಗಳಿಗೆ ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 2 ಮತ್ತು 9ರನ್ವಯ ಅರ್ಥೈಸಿಕೊಳ್ಳುವುದು).
(ಇ) ಅಭ್ಯರ್ಥಿಗಳು ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ (ಎನ್‌ಸಿಸಿ) ನಲ್ಲಿ ಪೂರ್ಣಕಾಲಿಕ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ಬಿಡುಗಡೆಯಾಗಿರುವ ವ್ಯಕ್ತಿಯಾಗಿದ್ದರೆ ಅಂಥ ಕ್ಯಾಡೆಟ್ ಪರಿವೀಕ್ಷಕನಾಗಿ ಅವನು/ಅವಳು ಸೇವೆ ಸಲ್ಲಿಸಿದಷ್ಟು ವರ್ಷಗಳು.
(ಈ) ಅಭ್ಯರ್ಥಿಯು ರಾಜ್ಯ ಸರ್ಕಾರದಿಂದ ಪುರಸ್ಕøತವಾದ ಗ್ರಾಮೀಣ ಔದ್ಯಮೀಕರಣ ಯೋಜನೆಯ ಮೇರೆಗೆ ನೇಮಕಗೊಂಡ ಗ್ರಾಮ ಸಮೂಹ ಪರಿಶೀಲಕನಾಗಿ ಈಗ ಕೆಲಸ ಮಾಡುತ್ತಿದ್ದರೆ ಅಥವಾ ಹಿಂದೆ ಇದ್ದ ಪಕ್ಷದಲ್ಲಿ ಅವನು/ಅವಳು ಅಂತಹ ಗ್ರಾಮ ಪರಿಶೀಲಕನಾಗಿ ಸೇವೆ ಸಲ್ಲಿಸಿದಷ್ಟು ವರ್ಷಗಳು.
(ಉ) ಅಭ್ಯರ್ಥಿಯು ಅಂಗವಿಕಲನಾಗಿದ್ದರೆ 10 ವರ್ಷಗಳು
(ಊ) ಅಭ್ಯರ್ಥಿಯು ಕರ್ನಾಟಕ ರಾಜ್ಯದಲ್ಲಿರುವ ಭಾರತ ಸರ್ಕಾರದ ಜನಗಣತಿ ಸಂಸ್ಥೆಯಲ್ಲಿ ಈಗ ಹುದ್ದೆಯನ್ನು ಹೊಂದಿದ್ದರೆ ಅಥವಾ ಹಿಂದೆ ಹೊಂದಿದ್ದ ಪಕ್ಷದಲ್ಲಿ ಗರಿಷ್ಠ ವಯೋಮಿತಿಯನ್ನು ಅವನು/ಅವಳು ಎಷ್ಟು ವರ್ಷಗಳ ಅವಧಿಗೆ ಆ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಈ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 5 ವರ್ಷಗಳ ಅವಧಿ ಅದರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.
(ಋು) ಅಭ್ಯರ್ಥಿಯು ವಿಧವೆಯಾಗಿದ್ದಲ್ಲಿ 10 ವರ್ಷಗಳು
(ಎ) ಅಭ್ಯರ್ಥಿಯು ಜೀತ ಕಾರ್ಮಿಕನಾಗಿದ್ದ ಪಕ್ಷದಲ್ಲಿ 10 ವರ್ಷಗಳು
ಉಪಕಂಡಿಕೆ 8ರ ಮೇರೆಗೆ ವಯೋಮಿತಿಯ ಸಡಿಲಿಕೆಯನ್ನು ಕೋರುವ ಅಭ್ಯರ್ಥಿಯು ಜೀತ ಕಾರ್ಮಿಕನಾಗಿದ್ದು, ಸದರಿ ಅಧಿನಿಯಮ ಅಥವಾ 1957ರ ಕರ್ನಾಟಕ ಜೀತ ಕಾರ್ಮಿಕ ಪದ್ಧತಿ ರದ್ದತಿ ನಿಯಮದ ಮೇರೆಗೆ ಜೀತ ಸಾಲವನ್ನು ಸಂದಾಯ ಮಾಡುವ ಹೊಣೆಯಿಂದ ಬಿಡುಗಡೆಯಾಗಿದ್ದಾನೆಂದು ಪ್ರಮಾಣ ಪತ್ರವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ರಿಂದ ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೧೯೩೭10) ಜಾತಿ ಮೀಸಲಾತಿ ಪ್ರಮಾಣ ಪತ್ರಗಳು:
ಜಾತಿ ಮೀಸಲಾತಿ ಕೋರಬಯಸುವ
• ಪ.ಜಾ/ಪ.ಪಂ. ಅಭ್ಯರ್ಥಿಗಳು ನಮೂನೆ 'ಡಿ' ಯಲ್ಲಿ
• ಪ್ರವರ್ಗ-1 ರ ಅಭ್ಯರ್ಥಿಗಳು ನಮೂನೆ 'ಇ' ಯಲ್ಲಿ ಹಾಗೂ
• 2ಎ, 2ಬಿ, 3ಎ, 3ಬಿ ಆಭ್ಯರ್ಥಿಗಳು ನಮೂನೆ 'ಎಫ್' ನಲ್ಲಿ
ಸಂಬಂಧಿತ ತಹಶೀಲ್ದಾರ್‌ರವರಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ, ಚಾಲ್ತಿಯಲ್ಲಿರುವ ನಮೂನೆಯಲ್ಲಿ, ಪ್ರಮಾಣ ಪತ್ರವನ್ನು ಪಡೆದು ಅರ್ಜಿಯೊಂದಿಗೆ ಲಗತ್ತಿಸತಕ್ಕದ್ದು.
• ಜನನ ಮತ್ತು ಮರಣಗಳ ನಿಬಂಧಕರಿಂದ ನೀಡಲ್ಪಟ್ಟ ಜನನ ಪ್ರಮಾಣ ಪತ್ರ.
11) ಅರ್ಹತಾ ಷರತ್ತುಗಳು:-
ಅ) ಭಾರತೀಯ ನಾಗರಿಕನಾಗಿರತಕ್ಕದ್ದು
ಆ) ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತವಾಗಿರಬೇಕು.
ಇ) ದೈಹಿಕವಾಗಿ ಅನರ್ಹರಾಗಿದ್ದಾರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಕಾಯ್ದಿರಿಸಿಕೊಂಡಿದೆ ಮತ್ತು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ವಿವೇಚನೆಯು ಯಾವುದೇ ವಿಧದಲ್ಲೂ ಈ ನಿಯಮಗಳ ಮೂಲಕ ಸೀಮಿತವಾಗಿರುವುದಿಲ್ಲ.
ಈ) ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಜೀವಂತ ಹೆಂಡತಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದ ಪೂರ್ವಾನುಮತಿ ಇಲ್ಲದೆ ನೇಮಕಾತಿಗೆ ಅರ್ಹರಾಗುವುದಿಲ್ಲ.
ಉ) ನಿಗದಿತ ಶೈಕ್ಷಣಿಕ ಅರ್ಹತೆಯ ಜೊತೆಗೆ ಈ ಮೇಲ್ಕಂಡ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ.
12) ಪ್ರಮುಖವಾದ ಸೂಚನೆಗಳು:
ಅಭ್ಯರ್ಥಿಗಳು ಕೆಳಕಂಡ ಪ್ರಮಾಣ ಪತ್ರಗಳ ಒಂದೊಂದು ಛಾಯಾ ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು. ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ನಂತರ ಸಲ್ಲಿಸಲಾದ ಯಾವುದೇ ಪ್ರಮಾಣ ಪತ್ರಗಳನ್ನು ಪರಿಗಣಿಸಲಾಗುವುದಿಲ್ಲ. ಅಭ್ಯರ್ಥಿಗಳು
(check list)
ಅರ್ಜಿಯೊಂದಿಗೆ ಲಗತ್ತಿಸಿದ ದಾಖಲಾತಿಗಳ ಬಗ್ಗೆ ಸ್ವೀಕೃತಿ ಪತ್ರದಲ್ಲಿ
(ದ್ವಿಪ್ರತಿಯಲ್ಲಿ) ನೀಡಲಾಗಿರುವ ಕ್ರಮ ಸಂಖೈಗಳ
"Not
ಎಂಬುದಾಗಿಯೂ ಹಾಗೂ ಕೇಳಿರುವ ಯಾವುದೇ ಪ್ರಮಾಣ ಪತ್ರವನ್ನು ಲಗತ್ತಿಸದೇ ಇದ್ದಲ್ಲಿ ಪಕ್ಕದಲ್ಲಿರುವ ಜಾಗದಲ್ಲಿ "Enclosed" Enclosed"
ಎಂಬುದಾಗಿ ಸ್ಪಷ್ಟವಾಗಿ ಬರೆಯತಕ್ಕದ್ದು.
1) ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳು
2) ಜನ್ಮ ದಿನಾಂಕವನ್ನು ನಮೂದಿಸಿರುವ 4ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರ / ವರ್ಗಾವಣೆ ಪತ್ರ/ಜನನ ದಿನಾಂಕವನ್ನು ತೋರಿಸುವ ಸಂಚಿತ ದಾಖಲೆಯ ಉಧೃತಭಾಗ.
3) ಸೈನಿಕ ಸೇವೆಯಿಂದ ಬಿಡುಗಡೆಯಾದ/ಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರ (ಮಾಜಿ ಸೈನಿಕ ಮೀಸಲಾತಿ ಕೋರಿದ್ದಲ್ಲಿ) 4) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ ಮತ್ತು ಪ್ರವರ್ಗ-3ಬಿಗಳ ಮೀಸಲಾತಿ ಪ್ರಮಾಣ ಪತ್ರಗಳು ಪ್ರಸ್ತುತ ಚಾಲ್ತಿಯಲ್ಲಿರುವ ಡಿ, ಇ, ಎಫ್ ನಮೂನೆಗಳಲ್ಲಿ (ಮೀಸಲಾತಿ ಕೋರಿದ್ದಲ್ಲಿ)
5) ಅಂಗವಿಕಲ ಮೀಸಲಾತಿ ಅಭ್ಯರ್ಥಿಯ ಪ್ರಮಾಣ ಪತ್ರ (ಮೀಸಲಾತಿ ಕೋರಿದ್ದಲ್ಲಿ)
6) ವಿಧವೆಯಾದಲ್ಲಿ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.
7) ಜನಗಣತಿ ಕಾರ್ಯದಲ್ಲಿ ಕೆಲಸ ಮಾಡಿರುವ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.
8) ಜೀತಮುಕ್ತಿಯ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣ ಪತ್ರ.
(ಮೇಲಿನ ಕ್ರಮ ಸಂಖ್ಯೆ 3, 4 ಮತ್ತು 5ರ ಪ್ರಮಾಣ ಪತ್ರಗಳ ನಮೂನೆಗಳನ್ನು ಅರ್ಜಿಯೊಡನೆ ಲಗತ್ತಿಸಿದೆ)
13) ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯೊಡನೆ ಪತ್ರ ವ್ಯವಹಾರ
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಅಭ್ಯರ್ಥಿಯ ವಿಚಾರದಲ್ಲಿ ಅಭ್ಯರ್ಥಿಗಳೊಂದಿಗೆ ಯಾವುದೇ ರೀತಿಯ ಪತ್ರ ವ್ಯವಹಾರವನ್ನು ನಡೆಸುವುದಿಲ್ಲ. ವಿಳಾಸ ಬದಲಾವಣೆ ಇದ್ದಲ್ಲಿ ಅಭ್ಯರ್ಥಿಗಳು ಲಿಖಿತ ಮನವಿಯ ಮೂಲಕ ಮಂಡಳಿಯ ಗಮನಕ್ಕೆ ತರತಕ್ಕದ್ದು. ಈ ವಿಳಾಸ೧೯೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೫ ಬದಲಾವಣೆಯನ್ನು ಪರಿಗಣಿಸಲು ಮಂಡಳಿಯು ಪ್ರಯತ್ನಿಸುವುದು. ಆದಾಗ್ಯೂ ಈ ವಿಚಾರದಲ್ಲಿ ಮಂಡಳಿಯು ಯಾವುದೇ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ. ಈ ಬಗ್ಗೆ ಅಭ್ಯರ್ಥಿಗಳು ಎಚ್ಚರ ವಹಿಸತಕ್ಕದ್ದು.
ಅಭ್ಯರ್ಥಿಗಳು ಮಂಡಳಿಯೊಡನೆ ಸಂಪರ್ಕಿಸಬೇಕಾದ ಸಂದರ್ಭದಲ್ಲಿ ಅವರ ಮನವಿಯು ಕೆಳಕಂಡ ಮಾಹಿತಿಗಳನ್ನು ಒಳಗೊಂಡಿರಬೇಕು.:-
ಅ) ಅಭ್ಯರ್ಥಿಯ ಪೂರ್ಣ ಹೆಸರು (ಬಿಡಿ ಅಕ್ಷರಗಳಲ್ಲಿ)
ಆ) ಹುದ್ದೆಯ ಹೆಸರು
ಇ) ಅರ್ಜಿಯಲ್ಲಿ ನಮೂದಿಸಿರುವ ಅಂಚೆ ವಿಳಾಸ
14) ಇತರೆ ಸೂಚನೆಗಳು:
1) ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಅದನ್ನು ಮಡಚುವುದಾಗಲಿ, ಹರಿಯುವುದಾಗಲಿ ಮಾಡದೆ ಹಾಳಾಗದಂತೆ ಎಚ್ಚರ ವಹಿಸತಕ್ಕದ್ದು.
2) ಅಭ್ಯರ್ಥಿಗಳು ತಮ್ಮ ಮಾಹಿತಿಗಾಗಿ ಭರ್ತಿ ಮಾಡಿ ಸಲ್ಲಿಸಿದ ಅರ್ಜಿಯ ಒಂದು ಛಾಯಾ ಪ್ರತಿಯನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಸೂಚಿಸಿದೆ.
3) ಸೇವೆಯಲ್ಲಿರುವ ಅಭ್ಯರ್ಥಿಗಳು ಅರ್ಜಿಗಳನ್ನು ಅವರುಗಳ ನೇಮಕಾತಿ ಪ್ರಾಧಿಕಾರಿಗಳಿಂದ ದೃಡೀಕರಿಸಿ ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಸಲ್ಲಿಸತಕ್ಕದ್ದು. ಕೊನೆಯ ದಿನಾಂಕದ ನಂತರ ಸ್ವೀಕರಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
4) ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕವು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲ್ಪಟ್ಟರೆ ಆ ದಿನಾಂಕದ ಮಾರನೆಯ ಕೆಲಸದ ದಿನವು ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕವಾಗುವುದು.
5) ಅಭ್ಯರ್ಥಿಗಳು ನಿಗದಿತ ಕೊನೆಯ ದಿನಾಂಕದವರೆವಿಗೂ ನಿರೀಕ್ಷಿಸದೆ ಮುಂಚಿತವಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.
6) ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸತಕ್ಕದು.
15) ದುರ್ನಡತೆ :
ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿರುವನೆಂದು ಅಥವಾ ಅವರ ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಬಿಸಿರುವನೆಂದು ಕಂಡುಬಂದಲ್ಲಿ ಅವನು/ಅವಳು ಸ್ವತ: ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ, ಹುದ್ದೆಯ ಆಯ್ಕೆಯಿಂದ ಅಂಥಹವರ ಅಭ್ಯರ್ಥಿತನವನ್ನು ರದ್ದುಪಡಿಸಲಾಗುವುದು.
16) ಆಯ್ಕೆ ವಿಧಾನ:
1. ಕರ್ನಾಟಕ ಆಡಳಿತ ನ್ಯಾಯಮಂಡಳಿ (ನೇಮಕಾತಿ) ನಿಯಮಗಳು, 1993 ಕಾಲ ಕಾಲಕ್ಕೆ ತಿದ್ದುಪಡಿಯಾದಂತೆ ಮತ್ತು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರ ನಿಯಮ (3)ರ ಪ್ರಕಾರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಸಂದರ್ಶನವು ಗರಿಷ್ಟ 50 ಅಂಕಗಳನ್ನು ಒಳಗೊಂಡಿರುತ್ತದೆ.
2. ಅಡಿಗೆಯನ್ನು ಚೆನ್ನಾಗಿ ತಯಾರಿಸಬಲ್ಲ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುವುದು.
3. ಅಭ್ಯರ್ಥಿಯು ಅರ್ಜಿಯಲ್ಲಿ ತಪ್ಪು ಅಥವಾ ಸುಳ್ಳು ಹೇಳಿಕೆಗಳನ್ನು ನೀಡಿದಲ್ಲಿ ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿದಲ್ಲಿ ಅಥವಾ ನೇಮಕಾತಿ ಉದ್ದೇಶಗಳಿಗಾಗಿ ಅನುಚಿತ ಮಾರ್ಗವನ್ನು ಅನುಸರಿಸಿದಲ್ಲಿ ಆಯ್ಕೆಗೆ ಅನರ್ಹರಾಗುವರು.
4. ಭರ್ತಿ ಮಾಡಿದ ಅರ್ಜಿಗಳನ್ನು ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-09 ಇವರಿಗೆ ಸಲ್ಲಿಸುವಾಗ, "ವಿಲೇಖನಾಧಿಕಾರಿ, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ, ಕಂದಾಯ ಭವನ, 7ನೇ ಮಹಡಿ, ಕೆ.ಜಿ.ರಸ್ತೆ, ಬೆಂಗಳೂರು-09." ಇವರಿಗೆ ಪಾವತಿಯಾಗುವಂತೆ ಪಡೆದ ರೂ.150-00 ಅಂಚೆ ಆದೇಶ/ಡಿಡಿ ಹಾಗೂ ಮೀಸಲಾತಿ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿ ಹಾಗೂ ಭಾವಚಿತ್ರದೊಂದಿಗೆ ದಿನಾಂಕ: 21-12-2018 ರ ಸಂಜೆ 5-00 ಗಂಟೆ ಒಳಗಾಗಿ ಸಲ್ಲಿಸತಕ್ಕದ್ದು.
ಅಧ್ಯಕ್ಷರು ಮತ್ತು ನೇಮಕಾತಿ ಪ್ರಾಧಿಕಾರದ ಆದೇಶದ ಮೇರೆಗೆ,
ನಾರಾಯಣ
ವಿಲೇಖನಾಧಿಕಾರಿ
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ,
ಬೆಂಗಳೂರು.
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೧೯೩೯ಅನುಬಂಧ-1
(ಪ.ಜಾ. /ಪ.ಪಂ. ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ – ಡಿ
(ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ
ನಿಯಮ 3ಎ (2)(3) ನ್ನು ನೋಡಿ)
ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರಗಳ ನಮೂನೆ.
ಪ್ರಮಾಣ ಪತ್ರ
------------- ರಾಜ್ಯದ / ಕೇಂದ್ರಾಡಳಿತ ಪ್ರದೇಶದ * ----------- ಜಿಲ್ಲೆಯ / ವಿಭಾಗದ ------------------- ಗ್ರಾಮ/ಪಟ್ಟಣದ * ನಿವಾಸಿಯಾದ ಶ್ರೀ / ಶ್ರೀಮತಿ ------------ಎಂಬುವವರ ಮಗ/ಮಗಳಾದ ಶ್ರೀ/ ಶ್ರೀಮತಿ -------------- ಇವರು ಅನುಸೂಚಿತ ಜಾತಿ/ಅನುಸೂಚಿತ ಬುಡಕಟ್ಟು * ಎಂದು ಮಾನ್ಯ ಮಾಡಲಾಗಿರುವ ಜಾತಿ/ಬುಡಕಟ್ಟಿಗೆ * ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.
• ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950
• ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) ಆದೇಶ, 1950
• ಸಂವಿಧಾನ (ಅನುಸೂಚಿತ ಜಾತಿ)(ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1950
• ಸಂವಿಧಾನ (ಅನುಸೂಚಿತ ಬುಡಕಟ್ಟುಗಳು)(ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951
(ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956, ಮುಂಬಯಿ ರಾಜ್ಯ ಪುನರ್ ರಚನಾ ಅಧಿನಿಯಮ, 1960, ಪಂಜಾಬ್ ರಾಜ್ಯ ಪುನರ್ ರಚನಾ ಅಧಿನಿಯಮ, 1966, ಹಿಮಾಚಲ ರಾಜ್ಯ ಅಧಿನಿಯಮ 1970 ಮತ್ತು ಈಶಾನ್ಯ ಪ್ರದೇಶಗಳ (ಪುನರ್ ರಚನಾ ಅಧಿನಿಯಮ, 1971ರ ಮೂಲಕ ತಿದ್ದುಪಡಿಯಾದಂತೆ).
• ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ, 1956
• ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುಪಡಿ) ಅಧಿನಿಯಮ, 1976ರ ಮೂಲಕ ತಿದ್ದುಪಡಿಯಾದಂತೆ ಸಂವಿಧಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ) ಅನುಸೂಚಿತ ಬುಡಕಟ್ಟುಗಳ ಆದೇಶ, 1959.
• ಸಂವಿಧಾನ (ದಾದರ್ ಮತ್ತು ನಗರ ಹವೇಲಿ) ಅನುಸೂಚಿತ ಜಾತಿಗಳ ಆದೇಶ, 1962
• ಸಂವಿಧಾನ (ಪಾಂಡಿಚೇರಿ) ಅನುಸೂಚಿತ ಜಾತಿಗಳ ಆದೇಶ, 1964
• ಸಂವಿಧಾನ (ಅನುಸೂಚಿತ ಬುಡಕಟ್ಟುಗಳ) (ಉತ್ತರ ಪ್ರದೇಶ) ಆದೇಶ, 1967
• ಸಂವಿಧಾನ (ಗೋವಾ, ದಮನ್ ಮತ್ತು ದೀವ್) ಅನುಸೂಚಿತ ಜಾತಿಬುಡಕಟ್ಟುಗಳ ಆದೇಶ, 1988
• ಸಂವಿಧಾನ (ನಾಗಾಲ್ಯಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ.
ಶ್ರೀ / ಶ್ರೀಮತಿ/ಕುಮಾರಿ * ----------------- ಮತ್ತು / ಅಥವಾ ಅವನ */ಅವಳ * ಕುಟುಂಬವು -------- ರಾಜ್ಯ/ ಕೇಂದ್ರಾಡಳಿತ ಪ್ರದೇಶದ ------------ ಜಿಲ್ಲಾ / ವಿಭಾಗದ * ---------- ಗ್ರಾಮ / ಪಟ್ಟಣದ ಸಾಮಾನ್ಯ ನಿವಾಸಿ (ಗಳು).
ಸಹಿ:--------
ತಹಸೀಲ್ದಾರರು----------
ಸ್ಥಳ :
ದಿನಾಂಕ: ಪದನಾಮ ಕಛೇರಿಯ ಮೊಹರಿನೊಂದಿಗೆ
ರಾಜ್ಯ / ಕೇಂದ್ರಾಡಳಿತ ಪ್ರದೇಶ *
* ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟುಬಿಡಿ/ ಹೊಡೆದು ಹಾಕಿ.
ಸೂಚನೆ: ಇಲ್ಲಿ ಉಪಯೋಗಿಸಿದ "ಸಾಮಾನ್ಯ ನಿವಾಸಿಗಳು" ಎಂಬ ಪದಾವಳಿಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950ರ 20ನೇ ಪ್ರಕರಣದಲ್ಲಿರುವ ಅರ್ಥವನ್ನೇ ಹೊಂದಿರುತ್ತದೆ.
೧೯೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೫ಭಾರತ ಸರ್ಕಾರದ ಪತ್ರ ಸಂಖೈ: ಬಿಸಿ 12028/2/78 ಎಸ್ ಸಿ ಟಿ -1 ಗೃಹಮಂತ್ರಾಲಯದ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕ್ಕಾಗಿ, ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಪತ್ರ ಸಂಖೈ: 13-2-74 ಇಎಸ್‌ಟಿ (ಎಸ್‌ಸಿಟಿ) ದಿನಾಂಕ 5ನೇ ಆಗಸ್ಟ್ 1975ರಲ್ಲಿ ನಮೂದಿಸಿದ ಪ್ರಾಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಆದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸ ಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು. ಅದೇ ರೀತಿಯಲ್ಲಿ, ಒಂದು ತಾಲ್ಲೂಕಿನ ರೆವಿನ್ಯೂ ಪ್ರಾಧಿಕಾರಿಯು ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪ್ರಾಧಿಕಾರಿಯಾಗಿರುವುದಿಲ್ಲ.
(ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ – ಇ
(ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ
ನಿಯಮ 3ಎ (2)(3) ನ್ನು ನೋಡಿ)
ಹಿಂದುಳಿದ ವರ್ಗಗಳಿಗೆ (ಪ್ರವರ್ಗ-1) ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರ
------------------------------------------ ಗ್ರಾಮ / ಪಟ್ಟಣ / ನಗರದ ನಿವಾಸಿಯಾದ ಶ್ರೀ / ಶ್ರೀಮತಿ -------
------------------------------- ಇವರ ಮಗ / ಮಗಳು / ಪತಿ / ಪತ್ನಿಯಾದ ಶ್ರೀ / ಶ್ರೀಮತಿ -----------------------
-------------------- ಇವರು ಹಿಂದುಳಿದ ವರ್ಗಗಳ (ಪ್ರವರ್ಗ-1) --------------------------------ಜಾತಿಯ -------
------------------ ಉಪಜಾತಿಗೆ ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.
ತಹಸೀಲ್ದಾರರು
ಸ್ಥಳ :
ದಿನಾಂಕ --------- ತಾಲ್ಲೂಕು
ಕಛೇರಿಯ ಮೊಹರು.
(ಪ್ರವರ್ಗ-2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)
ನಮೂನೆ-ಎಫ್
(ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ
ನಿಯಮ 3ಎ (2)(3) ನ್ನು ನೋಡಿ)
ಪ್ರವರ್ಗ-1ರ ಹೊರತಾಗಿ, ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ನೀಡುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ............................... ರಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ ............................... ಇವರ ಮಗ / ಮಗಳು / ಪತಿ / ಪತ್ನಿಯಾದ, ಶ್ರೀ / ಶ್ರೀಮತಿ / ಕುಮಾರಿ ...............................
ಇವರು ಮತ್ತು ಆತನ / ಅವಳ ತಂದೆ ತಾಯಿ / ಪೋಷಕರು / ಪತ್ನಿ / ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ / ಎಸ್ ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30-03-2002 ರಲ್ಲಿ ನಿರ್ದಿಷ್ಟಪಡಿಸಿದ ಮೇಲುಸ್ತರದ (ಕ್ರೀಮಿ ಲೇಯರ್) ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು :
ಅಭ್ಯರ್ಥಿಯಾಗಲಿ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕರಾಗಲಿ / ಪತ್ನಿ / ಪತಿಯಾಗಲಿ, ಸರ್ಕಾರದ ಸೇವೆಯಲ್ಲಿ 1ನೇ ದರ್ಜೆಯ ಅಥವಾ 2ನೇ ದರ್ಜೆಯ ಅಧಿಕಾರಿ-ಯಾಗಿಲ್ಲವೆಂದು:
ಅಥವಾ
ಸಾರ್ವಜನಿಕ ವಲಯ ಉದ್ಯಮದಲ್ಲಿ ತತ್ಸಮಾನದ ಹುದ್ದೆಯನ್ನು ಹೊಂದಿರುವುದಿಲ್ಲ.
ಅಥವಾ
ಖಾಸಗಿ ನಿಯೋಜಕರ ಕೈ ಕೆಳಗೆ, 2ನೇ ದರ್ಜೆಯ ಅಧಿಕಾರಿಯ ಸಂಬಳಕ್ಕಿಂತ (ವೇತನ ಶ್ರೇಣಿ ರೂ.6000/- - 12000/- ಪ್ರಾರಂಭಿಕ ಹಂತ) ಕಡಿಮೆಯಿಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲವೆಂದು:
ಅಥವಾ
ಆತನ/ಆಕೆಯ ತಂದೆ ತಾಯಿ / ಪೋಷಕರು/ಪತ್ನಿ/ಪತಿಯ ಆದಾಯವೂ ಎರಡು ಲಕ್ಷ ಮೀರಿರುವುದಿಲ್ಲವೆಂದು:
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೧೯೪೧ಅಥವಾ
ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961 ರಲ್ಲಿ ನಿಗದಿಪಡಿಸಿರುವಂತೆ ಆತನ/ಆಕೆಯ ತಂದೆ ತಾಯಿ / ಪೋಷಕರು / ಪತ್ನಿ / ಪತಿಯು ಮಾರಾಟ ತೆರಿಗೆದಾರನಲ್ಲ ಅಥವಾ ಆತನ / ಆಕೆಯ ತಂದೆ ತಾಯಿ / ಪೋಷಕ / ಪತ್ನಿ / ಪತಿಯು ಅಥವಾ ಇವರಿಬ್ಬರೂ 10 ಯೂನಿಟ್‌ಗಿಂತ ಹೆಚ್ಚಿನ ಕೃಷಿ ಭೂಮಿ ಅಥವಾ 25 ಎಕರೆಗಳಿಗಿಂತ ಹೆಚ್ಚಿನ ಪ್ಲಾಂಟೇಷನ್ ಭೂಮಿಯನ್ನು ಹೊಂದಿರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ ಎಸ್‌ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30-03-2002ರ ಅನ್ವಯ ಶ್ರೀ / ಶ್ರೀಮತಿ / ಕುಮಾರಿ ............................... ಇವರು ...............................
ಜಾತಿಗೆ ............................... ಸೇರಿದ ಉಪಜಾತಿಯವರಾಗಿದ್ದು, ಸರ್ಕಾರಿ ಆದೇಶ ಸಂಖ್ಯೆ ಎಸ್‌ಡಬ್ಲ್ಯೂಡಿ 225 ಬಿಸಿಎ 2000 ದಿನಾಂಕ: 30-03-2002ರ ಅನ್ವಯ ಹಿಂದುಳಿದ ವರ್ಗಗಳ ಪ್ರವರ್ಗ ............................... (2ಎ, 2ಬಿ, 3ಎ, 3ಬಿ) ಸೇರಿರುತ್ತಾರೆ.
ಸ್ಥಳ: ತಹಸೀಲ್ದಾರರು
ದಿನಾಂಕ: ............................... ತಾಲ್ಲೂಕು, ಕಛೇರಿಯ ಮೊಹರು.
ಸೂಚನೆ 1) ಸರ್ಕಾರದ ಆದೇಶ ಸಂಖ್ಯೆ: ಹಿಂವಕ 304 ಬಿಸಿಎ 2017, ದಿನಾಂಕ: 14-09-2018ರಂತೆ ಹಿಂದುಳಿದ ವರ್ಗಗಳ ಪ್ರವರ್ಗ-2ಎ, 2ಬಿ, 3ಎ ಮತ್ತು 3ಬಿ ಮೀಸಲಾತಿಗಳಿಗೆ ಅನ್ವಯಿಸುವಂತೆ ಕೆನೆಪದರಕ್ಕೆ ನಿಗದಿಪಡಿಸಿರುವ ಅಭ್ಯರ್ಥಿಯ ಮತ್ತು ಅವರ ತಂದೆ-ತಾಯಿ, ಪೋಷಕರ ವಾರ್ಷಿಕ ಒಟ್ಟು ಆದಾಯ ಮಿತಿಯನ್ನು (Gross Annual Income) 6.00 ಲಕ್ಷಗಳಿಂದ 8.00 ಲಕ್ಷಗಳಿಗೆ ಹೆಚ್ಚಿಸಲಾಗಿದೆ. ಆದುದರಿಂದ, ಮೀಸಲಾತಿ ಪ್ರಮಾಣ ಪತ್ರವನ್ನು ನೀಡುವ ಅಧಿಕೃತ ಅಧಿಕಾರಿಯು ದಿನಾಂಕ:14-09-2018ರ ಸರ್ಕಾರಿ ಆದೇಶದಲ್ಲಿನ ಅಂಶಗಳನ್ನು ವಿವರವಾಗಿ ಖಚಿತಪಡಿಸಿಕೊಂಡ ನಂತರವೇ ನೀಡತಕ್ಕದ್ದು.
2) ಈ ಮೇಲೆ ಹೇಳಲಾದ ಸರ್ಕಾರಿ ಆದೇಶದಲ್ಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡೇ ಸದರಿ ಮೀಸಲಾತಿಗಳನ್ನು ಕ್ಲೇಮು ಮಾಡುವ ಅಭ್ಯರ್ಥಿಗಳು ಅದರಂತೆ ಜಾತಿ/ಮೀಸಲಾತಿ ಪ್ರಮಾಣ ಪತ್ರಗಳನ್ನು ಮಾಡಿಸಲು ಸೂಚಿಸಿದೆ.
(ಹೈದರಾಬಾದ್-ಕರ್ನಾಟಕ ಮೀಸಲಾತಿ ಬಯಸಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳು)
ಅನುಬಂಧ – ಎ
ಅರ್ಹತಾ ಪ್ರಮಾಣ ಪತ್ರ
[ಅನುಚ್ಛೇದ 371 (ಜೆ) ಮೇರೆಗೆ]
(3(3)ನೇ ನಿಯಮ ನೋಡಿ)
[ಪ್ರ್ರಮಾಣ ಪತ್ರ ನೀಡಲು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ – ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮಗಳು, 2013]
ಶ್ರೀ / ಶ್ರೀಮತಿ --------------- ರವರು ------------ ರವರ ಮಗ / ಹೆಂಡತಿಯಾಗಿದ್ದು, ಇವರು ಕರ್ನಾಟಕ ರಾಜ್ಯದ ----
----------- ಜಿಲ್ಲೆಯ -------------- ತಾಲೂ ್ಲಕಿನ ------- ಗ್ರಾಮ / ಪಟ್ಟಣದ ಸ್ಥಳೀಯ ವ್ಯಕ್ತಿಯಾಗಿದ್ದಾರೆ.
ಸ್ಥಳ: ------------------- ಹೆಸರು -------------------
ದಿನಾಂಕ: ----------------- ಅಸಿಸ್ಟೆಂಟ್ ಕಮೀಷನರ್ ----------------
ಉಪವಿಭಾಗ ----------------ಜಿಲ್ಲೆ
ಅನುಬಂಧ - ಬಿ
ವಾಸಸ್ಥಳ ಪ್ರಮಾಣ ಪತ್ರ
(ಅನುಚ್ಛೇದ 371 (ಜೆ) ಮೇರೆಗೆ)
(ನಿಯಮ 4 (ಬಿ) (2) (iii) ನೋಡಿ)
[ಪ್ರಮಾಣ ಪತ್ರಗಳ ನೀಡಿಕೆಗಾಗಿ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮಗಳು, 2013]
ಶ್ರೀ/ ಶ್ರೀಮತಿ -------------- ರವರು ------------- ರವರ ಮಗ / ಹೆಂಡತಿಯಾಗಿದ್ದು, ಇವರು ---------------
ಜಿಲ್ಲೆಯ ------------- ತಾಲೂ ್ಲಕಿನ --------------- ಗ್ರಾಮ / ಪಟ್ಟಣದ ಈ ಕೆಳಕಂಡ ವಿಳಾಸದಲ್ಲಿ ಕೆಳಗೆ ಸೂಚಿಸಿರುವ ಅವಧಿಯಲ್ಲಿ ವಾಸವಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ:
೧೯೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೫| ಕ್ರ ಸಂ | ವಿಳಾಸ | ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ | ಸಾಕ್ಷ್ಯವಿವರ (ಆಧಾರವಾಗಿಟ್ಟುಕೊಂಡಿರುವ ಸಾಕ್ಷ್ಯದ ಎಲ್ಲಾ ಪ್ರಮಾಣೀಕೃತ ಪ ತಿಗಳನ್ನು ಲಗತ್ತಿಸಿ) ್ರ |
| 1 | |||
| 2 | |||
| 3 | |||
| 4 | |||
| 5 | |||
| 6 |
ಸಾಕ್ಷ್ಯದಲ್ಲಿ ಹೇಳಲಾದ ಎಲಾ ್ಲ ಲಗತ್ತುಗಳನ್ನು ಕೋಷ್ಟಕದಲ್ಲಿ ಸಂಕ್ಷಿಪ್ತವಾಗಿ ಅಳವಡಿಸಿ
ಸ್ಥಳ: ------------------- ಹೆಸರು -------------------
ದಿನಾಂಕ: -------------- ತಹಸೀಲ್ದಾರ್ -------------- -
------ತಾಲೂ ್ಲಕು ---------ಜಿಲ್ಲೆ
ಅನುಬಂಧ - ಸಿ
ವ್ಯಾಸಂಗ ಪ್ರಮಾಣ ಪತ್ರ
[ಅನುಚ್ಛೇದ 371 (ಜೆ) ಮೇರೆಗೆ]
(ನಿಯಮ 4 (ಸಿ)(2)(ii) ನೋಡಿ)
[ಪ್ರಮಾಣಪತ್ರಗಳ ನೀಡಿಕೆಗಾಗಿ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮಗಳು, 2013]
ಶ್ರೀ /ಶ್ರೀಮತಿ---------------ರವರು ---------- ರವರ ಮಗ/ ಹೆಂಡತಿಯಾಗಿದ್ದು,ಇವರು ------------- ಜಿಲ್ಲೆಯ ---
------------ ತಾಲ್ಲೂಕಿನ ------------- ಕಾಲೇಜು / ಶಾಲೆಯಲ್ಲಿ ಈ ಕೆಳಗೆ ಸೂಚಿಸಲಾದ ಅವಧಿಯಲ್ಲಿ ವ್ಯಾಸಂಗ ಮಾಡಿರುತ್ತಾರೆಂದು
| ಕ್ರ. ಸಂ | ತ ರಗತಿ / ಹಂತ | ಯಾವ ದಿನಾಂಕದಿಂದ ಯಾವ ದಿನಾಂಕದ ವರೆಗೆ | ದಾಖಲೆಯ ಉಲ್ಲೇಖ |
| ಕ್ರ. ಸಂ | ತ ರಗತಿ / ಪರೀಕ್ಷೆ / ಹಂತದ ಹೆಸರು | ವ ಷ ರ್ | ಅನುತ್ತೀರ್ಣ / ಉತ್ತೀರ್ಣ |
ಸ್ಥಳ: --------------------- ಹೆಸರು: ---------------------
ದಿನಾಂಕ: ---------------- ಸಂಸ್ಥೆಯ ಮುಖ್ಯಸ್ಥರು
ಪ್ರಮಾಣ ಪತ್ರ
ಮೇಲೆ ನೀಡಲಾದ ಪ್ರಮಾಣ ಪತ್ರವು ಲಭ್ಯವಿರುವ ದಾಖಲೆಯ ಪ್ರಕಾರ ಸತ್ಯವಾಗಿದೆ ಎಂಬುದನ್ನು ನಾನು ಸ್ವತಃ ಮನವರಿಕೆ ಮಾಡಿಕೊಂಡಿದ್ದೇನೆಂದು ಪ್ರಮಾಣೀಕರಿಸುತ್ತೇನೆ.
ಸ್ಥಳ: -------------------- ಹೆಸರು: ---------------------
ದಿನಾಂಕ: -------------- ಕ್ಷೇತ್ರ ಶಿಕ್ಷಣಾಧಿಕಾರಿ : ---------- ----
---------ತಾಲೂ ್ಲಕು ----------ಜಿಲ್ಲೆಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ೧೯೪೩
ಅನುಬಂಧ – ಡಿ
ಸ್ವಗ್ರಾಮ ಪ್ರಮಾಣಪತ ್ರ
(Home Town Certificate)
[ಅನುಚ್ಛೇದ 371 (ಜೆ) ಮೇರೆಗೆ] (4 (ಇ) ನಿಯಮ ನೋಡಿ)
[ಪ್ರಮಾಣಪತ್ರಗಳ ನೀಡಿಕೆಗಾಗಿ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮಗಳು, 2013]
ಶ್ರೀ / ಶ್ರೀಮತಿ ----------------- ರವರು ------------------- ರವರ ಮಗ / ಹೆಂಡತಿಯಾಗಿದ್ದು, ಇವರು ಕರ್ನಾಟಕ ರಾಜ್ಯದ ----------------- ಜಿಲ್ಲೆಯ ---------------- ತಾಲೂ ್ಲಕಿನ ------------------ ಗ್ರಾಮ / ಪಟ್ಟಣವನ್ನು ತನ್ನ ಸ್ವಗ್ರಾಮ / ಸ್ಥಳ ಎಂದು ತನ್ನ ಸೇವಾ ಪುಸ್ತಕದಲ್ಲಿ ಘೋಷಿಸಿರುತಾ ್ತರೆ. ಸೇವಾ ಪುಸ್ತಕದಲ್ಲಿರುವ ನಮೂದನ್ನು ನಾನು ಖುದ್ದಾಗಿ ಪರಿಶೀಲಿಸಿದ್ದೇನೆ ಮತ್ತು ಮೇಲಿನ ನಮೂದು 01-01-2013ಕ್ಕೆ ಮುಂಚೆ ಸೇವಾ ಪುಸ್ತಕದಲ್ಲಿ ನಮೂದು ಮಾಡಲಾಗಿತ್ತೆಂದು ಸ್ವತಃ ಮನವರಿಕೆ ಮಾಡಿಕೊಂಡಿರುತ್ತೇನೆ.
ಸ್ಥಳ: ------------------------ ಹೆಸರು: --------------------------
ದಿನಾಂಕ: ---------------- ಪದನಾಮ -----------------
ಕಛೇರಿ -------------
ಇಲಾಖೆ------------
ಅನುಬಂಧ – ಇ
ಸಿಂಧುತ್ವ ಪ್ರಮಾಣ ಪತ್ರ
(ಅನುಚ್ಛೇದ 371 (ಜೆ) ಮೇರೆಗೆ)
(ನಿಯಮ 6(3) ನೋಡಿ)
[ಪ್ರಮಾಣಪತ್ರಗಳ ನೀಡಿಕೆಗಾಗಿ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮಗಳು, 2013]
ಶ್ರೀ / ಶ್ರೀಮತಿ ------------- ರವರು ---------- ರವರ ಮಗ/ಹೆಂಡತಿಯಾಗಿದ್ದು, ಇವರು ಕರ್ನಾಟಕ ರಾಜ್ಯದ ---------
------ ಜಿಲ್ಲೆಯ ----------- ತಾಲ್ಲೂಕಿನ ----- ಗ್ರಾಮ / ಪಟ್ಟಣದ ಸ್ಥಳೀಯ ವ್ಯಕ್ತಿಯಾಗಿರುತ್ತಾರೆ. ನಾವು ಅರ್ಹತಾ ಪ್ರಮಾಣ ಪತ್ರದ ಸರಿತನವನ್ನು ಪರಿಶೀಲಿಸಿದ್ದೇವೆ ಹಾಗೂ ಅದನ್ನು ಮಾನ್ಯ ಮಾಡಿದ್ದೇವೆ.
ಸ್ಥಳ: ------------------- ಹೆಸರು: ----------------
ದಿನಾಂಕ: ---------------- ಜಿಲಾ ್ಲಧಿಕಾರಿ --------- ----
-------- ಜಿಲ್ಲೆ
ಹೆಸರು ------------------------ ಹೆಸರು: -------------------
ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
------------ ಜಿಲ್ಲೆ ಜಿಲ್ಲಾ ಪಂಚಾಯತ್ ---------- ಜಿಲ್ಲೆ R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೧೯೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೧೫, ೨೦೧೮ ಭಾಗ ೫ಕರ್ನಾಟಕ ಸರ್ಕಾರದ ಅಧಿಕೃತ ಜ್ಞಾಪನ ಸಂಖೈ: ಸಿಆಸುಇ 115 ಸೆನೆನಿ 2005, ದಿನಾಂಕ: 19.11.2005
CERTIFICATE FOR THE PERSONS WITH DISABILITIES
This is to certify that Sri/Smt./Kum. _______________ son/wife/daughter of Shri _________________________________ aged _______________ old male/female, Registration No.__________ in a case of ________________________ He/she is physically disabled/visual disabled/speech & hearing disabled and has ______% (percent) permanent (physical impairment, visual impairment, speech & hearing impairment) in relation to his/her __________________
Note: 1. This condition is progressive/non-progressive/likely to improve/not likely to improve.*
2. Re-assessment is not recommended/is recommended after a period of _______________ months/years.*
* Strike out which is not applicable.
(Recently attested
photograph showing
the disability to be
affixed here)
Sd/- Sd/- Sd/- (Doctor) (Doctor) (Doctor)
Countersigned by the
Medical Superintendent CMO/Head
Of Hospital (with seal)
Signature/Thumb impression
of the disabled person
PR - 189
ನಾರಾಯಣ
SC - 500
ವಿಲೇಖನಾಧಿಕಾರಿ
ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ,
ಬೆಂಗಳೂರು.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.