Servants of Knowledge
Karnataka Gazette · Government of Karnataka

Karnataka Gazette, Part Part-6, 06 December 2018

Published 06 December 2018

Part
Part-6
Identifier
in.gazette.karnataka_new.2018-12-06.Part-6
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಡಿಸೆಂಬರ್ ೬, ೨೦೧೮ (ಮಾರ್ಗಶಿರ ೧೫, ಶಕ ವರ್ಷ ೧೯೪೦)

Bengaluru, Thursday, December 6, 2018 (Margashira 15, Shaka Varsha 1940)

ಸಂಪುಟ ೧೫೩

Volume 153

ಸಂಚಿಕೆ ೪೮

Issue 48

ಭಾಗ ೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ಪ್ರಿಲಿಮಿನರಿ ಅಧಿಸೂಚನೆ

ಸಂಖ್ಯೆ: ಕೆ.ಎಸ್.ಎ/ಸಿಆರ್/28/2017-18, ಬೆಂಗಳೂರು, ದಿನಾಂಕ: 23-10-2018.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ಮುಖ್ಯರಸ್ತೆ ಸಮೀಪದ ವಿನಾಯಕ ಚಿತ್ರಮಂದಿರದ ಎದುರಿನಲ್ಲಿರುವ ಕೊಳಚೆ ಪ್ರದೇಶದ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶದಲ್ಲಿ 113 ಕುಟುಂಬಗಳು ವಾಸವಾಗಿದ್ದು, ಸದರಿ ಪ್ರದೇಶವು ಮನುಷ್ಯ ವಾಸ ಮಾಡಲು ಯೋಗ್ಯವಲ್ಲದ ಹಾಗೂ ಅನಾರೋಗ್ಯಕರ ಪರಿಸ್ಥಿತಿಯಲ್ಲಿರುತ್ತದೆ, ಕುಡಿಯುವ ನೀರು, ಬೀದಿ ದೀಪ, ಶೌಚಾಲಯ ಮುಂತಾದ ಮೂಲಸೌಲಭ್ಯ ಹಾಗೂ ಪುನರ್-ವಸತಿ ಕಲ್ಪಿಸುವ ಅಗತ್ಯವಿರುವುದರಿಂದ ಮತ್ತು ಈ ಪ್ರದೇಶವು ಕೊಳಚೆ ಪ್ರದೇಶದ ಸ್ಥಿತಿಯಲ್ಲಿರುವುದರಿಂದ, ಈ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಸೆಕ್ಷನ್ 3ರ ಅಡಿಯಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸಲು ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಇವರಿಂದ ಪತ್ರದ ಸಂಖ್ಯೆ:ಕಕೊಅಮ/ಕಂ-2/ಆರ್-8/37/2018-19, ದಿನಾಂಕ: 20-09-2018ರಂತೆ ಪ್ರಸ್ತಾವನೆಯು ಸಲ್ಲಿಸಲ್ಪಟ್ಟಿರುತ್ತದೆ.

ಸರ್ಕಾರದ ಸುತ್ತೋಲೆ ಸಂಖ್ಯೆ:71/ಕೋಮಂಇ/2009, ದಿನಾಂಕ: 24-02-2010ರಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಕಾಯ್ದೆ 1973ರ ಸೆಕ್ಷನ್ 3 ಮತ್ತು 11 ರಡಿಯಲ್ಲಿ ಜಿಲ್ಲಾಧಿಕಾರಿಗಳು, ಕೊಳಚೆ ಪ್ರದೇಶಗಳನ್ನು ಕೊಳಚೆ ಪ್ರದೇಶವೆಂದು ಘೋಷಿಸಿ ಅಧಿಸೂಚನೆ ಹೊರಡಿಸುವ ಮುನ್ನ ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರ ಅನುಮೋದನೆ ಪಡೆಯತಕ್ಕದ್ದೆಂದು ಸೂಚನೆಯಿದ್ದು, ಆ ಪ್ರಕಾರವಾಗಿ ಕೊಳಚೆ ಪ್ರದೇಶಗಳೆಂದು ಘೋಷಣೆ ಮಾಡಬೇಕಾದ ಪ್ರಸ್ತಾವನೆಗಳನ್ನು ಈ ಕಛೇರಿಯಿಂದ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗುತ್ತಿದ್ದು, ತದನಂತರದಲ್ಲಿ ಸರ್ಕಾರದ ಪತ್ರ ಸಂಖ್ಯೆ:ವಇ/71/ಕೊಮಂಇ/2009, ದಿನಾಂಕ:12-07-2010ರ ಪತ್ರದಲ್ಲಿ ಕೊಳಚೆ ಪ್ರದೇಶಗಳೆಂದು ಘೋಷಿಸುವ ಬಗ್ಗೆ ಇನ್ನು ಮುಂದೆ ಸರ್ಕಾರದ ಪೂರ್ವಾನುಮೋದನೆ ಕೋರಿ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುವ ಬದಲು ದಿನಾಂಕ : 02-07-2010ರಲ್ಲಿನ ಸೂಚನೆಯಂತೆ ಮತ್ತು ಹಾಲಿ ಅಸ್ತಿತ್ವದಲ್ಲಿರುವ ನಿಯಮಗಳಡಿಯ ಕಾರ್ಯವಿಧಾನವನ್ನು ಅನುಸರಿಸಿದಂತೆ ಕ್ರಮವಹಿಸಿ, ಅಧಿಸೂಚನೆ ಸಂಖ್ಯೆ:ವಇ/73/ಕೊಮಂಇ/2001, ದಿನಾಂಕ: 26-06-2002ರಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರದತ್ತ ಮಾಡಲಾಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಘೋಷಣೆಗೆ ಕ್ರಮವಹಿಸುವುದು ಎಂದು ಸರ್ಕಾರದಿಂದ ನಿರ್ದೇಶನ ನೀಡಲಾಗಿದೆ.

ಆದ್ದರಿಂದ, ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಕಾಯ್ದೆ 1973ರ ಸೆಕ್ಷನ್ 3ರ ಅಡಿ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ "ಕೊಳಚೆ ಪ್ರದೇಶ"ವೆಂದು ಘೋಷಿಸಲು ಉದ್ದೇಶಿಸಲಾಗಿದೆ.

ಮೇಲ್ಕಂಡ ಈ ಕ್ರಮದ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಶೇಷಾದ್ರಿಪುರ, ಬೆಂಗಳೂರು-560 020 ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 (ಹದಿನೈದು) ದಿವಸಗಳ ಕಾಲಾವಕಾಶ ನೀಡಲಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಷೆಡ್ಯೂಲ್

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ಮುಖ್ಯರಸ್ತೆ ಸಮೀಪದ ವಿನಾಯಕ ಚಿತ್ರಮಂದಿರದ ಎದುರಿನಲ್ಲಿರುವ ಕೊಳಚೆ ಪ್ರದೇಶದ ಚಕ್ಕುಬಂದಿ ಹಾಗೂ ಹದ್ದುಬಸ್ತು ತಃಖ್ತೆ: (೯೦೯) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೯೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೬, ೨೦೧೮ ಭಾಗ ೬
ಕ್ರ. ಸ ಂ. ಕೊಳಚೆ ಪ್ರದೇಶದ ಹೆಸರು ವ ುತ್ತು ಸ್ಥಳ ವ iಾಲೀಕರ ಹ ಸ ೆ ರು [RTC ಯಂತೆ] ಸ ವ ರ್ ೆ ನಂ. ವಿಸ್ತೀರ್ಣ [ಎ/ಗು] ಚ ಕ್ಕುಬಂದಿಗಳು
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1 ಬ ಂಗಳೂರು ದಕ್ಷಿಣ ತಾಲ್ಲೂಕು, ೆ ಉತ್ತರಹಳ್ಳಿ ಹೋಬಳಿ, ಆಲಹಳ್ಳಿ ಗ್ರಾಮದ ಸ.ನಂ.7/1 & ಸ .ನಂ.8/1ರಲ್ಲಿನ ಕೊಳಚೆ ಪ್ರದೇಶ ಬಿ.ಡಿ.ಎ. 7/1 8/1 ಒಟ್ಟು 0-08 0-29 0-37 ಲಾ.ಹಿ.ನಂ. 8/2ರ ಜಮೀನು. ಸ .ನಂ.7/1 ರ ಉಳಿಕೆ ಜಮೀನು. ಕೊತ್ತನೂರು ಗ್ರಾಮದ ಗಡಿ. ಸ .ನಂ.7/1 ಮತ್ತು ಸ .ನಂ.8/1ರ ಉಳಿಕೆ ಜಮೀನು.

PR- 180

ಬಿ.ಎಂ. ವಿಜಯ್ ಶಂಕರ್

SC-05

ಜಿಲ್ಲಾಧಿಕಾರಿಗಳು

ಬೆಂಗಳೂರು ಜಿಲ್ಲೆ, ಬೆಂಗಳೂರು.

ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರ

ಕಲ್ಯಾಣ ನಗರ, ಚಿಕ್ಕಮಗಳೂರು -577102

: ಸಾರ್ವಜನಿಕ ಪ್ರಕಟಣೆ :

ಕ್ರಮ ಸಂಖ್ಯೆ : ನಅಪ್ರಾಚಿಮ : ನಯೋ : ಮ.ಯೋ.ಪ-2 : 2018-19 ದಿನಾಂಕ : 26-10-2018.

ವಿಷಯ : ಚಿಕ್ಕಮಗಳೂರು ನಗರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ ಪರಿಷ್ಕøತ-2 ನ್ನು ಇಂಗಿತವನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಲಂ (10) ರನ್ವಯ ಘೋಷಿಸಿರುವ ಬಗ್ಗೆ.

ಚಿಕ್ಕಮಗಳೂರು ನಗರಕ್ಕೆ ಸರ್ಕಾರವು ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಲಾಗಿದೆ, ಅದರಂತೆ ಚಿಕ್ಕಮಗಳೂರು ನಗರಕ್ಕೆ ಸರ್ಕಾರದ ಅಧಿಸೂಚನೆ ಸಂಖ್ಯೆ ವನಇ: 324 : ಟಿಟಿಪಿ : 92, ದಿನಾಂಕ: 11-12-1996 ರಲ್ಲಿ ವ್ಯಾಪಕಾಭಿವೃದ್ಧಿ ಯೋಜನೆಗೆ (ಮಹಾಯೋಜನೆ) ಅನುಮೋದನೆ ದೊರೆತಿರುತ್ತದೆ. ಸರ್ಕಾರದ ಆದೇಶ ಸಂಖ್ಯೆ. ನಅಇ: 554 : ಮೈಅಪ್ರಾ : 2010 : ಬೆಂಗಳೂರು ದಿನಾಂಕ: 07-12-2010 ರನ್ವಯ ಮಹಾಯೋಜನೆ (ಪರಿಷ್ಕøತ-1) 2021 ಕ್ಕೆ ಅನುಮೋದನೆ ದೊರೆತಿರುತ್ತದೆ.

ಸಾರ್ವಜನಿಕರ ಗಮನಕ್ಕೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ (10) ರನ್ವಯ ಚಿಕ್ಕಮಗಳೂರು ನಗರದ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ ಪರಿಷ್ಕøತ-2ನ್ನು ಸರ್ಕಾರದ ಆದೇಶ ಸಂಖ್ಯೆ : ನಅಇ : 11 : ಟಿಟಿಪಿ: 2018 : ಬೆಂಗಳೂರು, ದಿನಾಂಕ: 01-08-2018 ರನ್ವಯ ಅಮೃತ್ ಯೋಜನೆಯಡಿಯಲ್ಲಿ GIS ಆಧಾರಿತ ಮಹಾಯೋಜನೆಯನ್ನು ತಯಾರಿಸಲು ಉದ್ದೇಶಿಸಲಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸಲಹೆ ಸೂಚನೆಗಳನ್ನು ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಖುದ್ದಾಗಿಯಾಗಲಿ ಅಥವಾ ನೋಂದಾಯಿತ ಅರ್ಜಿಯ ಮೂಲಕವಾಗಲಿ ಪ್ರಕಟಣೆಯಾದ 60 (ಅರವತ್ತು) ದಿನಗಳ ಒಳಗಾಗಿ ಸ್ವೀಕರಿಸಲಾಗುತ್ತದೆ. ಅವಧಿಯ ನಂತರ ಬಂದಂತಹ ಸಲಹೆ ಸೂಚನೆಗಳನ್ನು ಪರಿಗಣಿಸಲಾಗುವುದಿಲ್ಲ.

PD 27

ನಗರ ಯೋಜನಾ ಸದಸ್ಯರು

ಆಯುಕ್ತರು

ಅಧ್ಯಕ್ಷರು

SC-05

ನಗರಾಭಿವೃದ್ಧಿ ಪ್ರಾಧಿಕಾರ

ನಗರಾಭಿವೃದ್ಧಿ ಪ್ರಾಧಿಕಾರ

ನಗರಾಭಿವೃದ್ಧಿ ಪ್ರಾಧಿಕಾರ

ಚಿಕ್ಕಮಗಳೂರು

ಚಿಕ್ಕಮಗಳೂರು

ಚಿಕ್ಕಮಗಳೂರು ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 06 December 2018. Indian Gazettes, https://egazette.servantsofknowledge.in/details/in.gazette.karnataka_new.2018-12-06.Part-6/. Archive identifier in.gazette.karnataka_new.2018-12-06.Part-6.