Servants of Knowledge
Karnataka Gazette · Government of Karnataka

Karnataka Gazette, Part Part-6, 13 December 2018

Published 13 December 2018

Part
Part-6
Identifier
in.gazette.karnataka_new.2018-12-13.Part-6
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಡಿಸೆಂಬರ್ ೧೩, ೨೦೧೮ (ಮಾರ್ಗಶಿರ ೨೨, ಶಕ ವರ್ಷ ೧೯೪೦)

Bengaluru, Thursday, December 13, 2018 (Margashira 22, Shaka Varsha 1940)

ಸಂಪುಟ ೧೫೩

Volume 153

ಸಂಚಿಕೆ ೪೯

Issue 49

ಭಾಗ ೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ

ಅಂತಿಮ ಅಧಿಸೂಚನೆ

ಸಂಖ್ಯೆ: ಕೆ.ಎಸ್.ಎ/ಸಿ.ಆರ್/22/15-16, ಬೆಂಗಳೂರು, ದಿನಾಂಕ: 31-10-2018.

ಪ್ರಾಥಮಿಕ ಅಧಿಸೂಚನೆ ಸಂಖ್ಯೆ:ಕೆಎಸ್ಎ/ಸಿಆರ್ 22 /15-16 ದಿನಾಂಕ 18-5-2018 ರಲ್ಲಿ ಈ ಕೆಳಕಂಡ ಷೆಡ್ಯೂಲ್‌ನಲ್ಲಿರುವ ಯಲಹಂಕ ತಾಲ್ಲೂಕು, ಯಲಹಂಕ ಹೋಬಳಿ, ಜಾರಕಬಂಡೆ ಕಾವಲ್ ಗ್ರಾಮದ "ಜ್ಯೋತಿ ಬಾಪುಲೆ ಕೊಳಚೆ ಪ್ರದೇಶವನ್ನು" ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973 ರ ಕಲಂ-3 ರ ಅಡಿಯಲ್ಲಿ ಪ್ರಾರಂಭಿಕವಾಗಿ ಕೊಳಚೆ ಪ್ರದೇಶವೆಂದು ಘೋಷಿಸಿದ್ದು, ಸದರಿ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ 21-6-2018 ರ ಸಂಚಿಕೆಯಲ್ಲಿ ಪ್ರಕಟಿಸಿ ಅಂತೆಯೇ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿರುತ್ತದೆ.

ಆಯುಕ್ತರು, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ, ಬೆಂಗಳೂರು ರವರು ಪತ್ರ ಸಂ.ಕಕೊಅಮಂ/ಕಂ-2/ಜ್ಯೋ.ಬಾ/ಆರ್-7/46/13-14/77 ದಿನಾಂಕ 7-9-2018 ರಂತೆ ವರದಿಯನ್ನು ಸಲ್ಲಿಸಿ ಪ್ರಾಥಮಿಕ ಅಧಿಸೂಚನೆಗೆ ಯಾವುದೇ ಆಕ್ಷೇಪಣೆ ಬಂದಿರುವುದಿಲ್ಲವೆಂದು ವರದಿಸಿ, ಸದರಿ ಪ್ರದೇಶವನ್ನು ಅಂತಿಮವಾಗಿ ಕೊಳಚೆ ಪ್ರದೇಶವೆಂದು ಘೋಷಿಸಲು ಕೋರಿರುತ್ತಾರೆ

ಪ್ರಶ್ನಿತ ಕೊಳಚೆ ಪ್ರದೇಶದಲ್ಲಿ ಕುಡಿಯುವ ನೀರು, ದೀಪ, ರಸ್ತೆ, ಚರಂಡಿ ಇತ್ಯಾದಿ ಮೂಲಭೂತ ಸೌಕರ್ಯಗಳಿಲ್ಲದೇ ಅನಾರೋಗ್ಯದ ವಾತಾವರಣದಲ್ಲಿರುವುದರಿಂದ, ಸದರಿ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದು ಅತ್ಯಗತ್ಯವಾಗಿರುತ್ತದೆ. ಆದ್ದರಿಂದ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973 ರ ಕಲಂ-3 ರಡಿಯಲ್ಲಿ ದತ್ತವಾಗಿರುವ ಅಧಿಕಾರದಂತೆ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಅಂತಿಮವಾಗಿ ಕೊಳಚೆ ಪ್ರದೇಶವೆಂದು ಘೋಷಿಸಲಾಗಿದೆ.

-: ಷೆಡ್ಯೂಲ್ :-

ಯಲಹಂಕ ತಾಲ್ಲೂಕು, ಯಲಹಂಕ ಹೋಬಳಿ, ಜಾರಕಬಂಡೆ ಕಾವಲ್ ಗ್ರಾಮದ ಈ ಕೆಳಕಂಡ ಷೆಡ್ಯೂಲ್‌ನಲ್ಲಿರುವ ಒಟ್ಟು 0-15.08 ಗುಂಟೆ

ಕ್ರ. ಸ ಂ. ಕೊಳಚೆ ಪ್ರದೇಶದ ಹ ಸ ೆ ರು ಮತ್ತು ಸ್ಥಳ ಕೊಳಚೆ ಪ ದ ್ರ ೕಶದಲ್ಲಿರುವ ೆ ಜಮೀನಿನ ಮಾಲೀಕರ ಹ ಸ ೆ ರು ಸ ವ ರ್ ೆ ನಂ ವಿಸ್ತೀರ್ಣ (ಎ/ಗುಂಟೆ) ಚ ಕ್ಕುಬಂದಿಗಳು
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1 ಜ ೂ್ಯೕತಿಬಾಪುಲೆ ೆ ಕೊಳಚೆ ಪ್ರದೇಶ ಜಾರಕಬಂಡೆ ಕಾವಲ್ ಗ್ರಾಮ, ಬಿ.ಡಿ.ಎ. 10/4 0-11 ಸ ವ ರ್ ೆ ನಂ.104 & ಸ .ನಂ.10/17 ರಲ್ಲಿನ ರಸ್ತೆ ಸ ವ ರ್ ೆ ನಂ.10/18ರ ಖಾಲಿ ಜಾಗ ಗಾರ್ಮೆಂಟ್ಸ್ ಕಾಂಪೌಂಡ್
1. ಸಿ.ಮಹದೇವಮ್ಮ ಬಿನ್ ಮುನಿಯಮ್ಮ 2. ಸಿ.ರಾಧಾಕೃಷ್ಣನ್ 10/18 0-03.08

(೯೧೧)೯೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೩, ೨೦೧೮ ಭಾಗ ೬

ಕ್ರ. ಸ ಂ. ಕೊಳಚೆ ಪ್ರದೇಶದ ಹ ಸ ೆ ರು ಮತ್ತು ಸ್ಥಳ ಯಲಹಂಕ ಹೋಬಳಿ, ಯಲಹಂಕ ತಾಲ್ಲೂಕು ಕೊಳಚೆ ಪ ದ ್ರ ೕಶದಲ್ಲಿರುವ ೆ ಜಮೀನಿನ ಮಾಲೀಕರ ಹ ಸ ೆ ರು ಸ ವ ರ್ ೆ ನಂ ವಿಸ್ತೀರ್ಣ (ಎ/ಗುಂಟೆ) ಚ ಕ್ಕುಬಂದಿಗಳು
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1. ಸಿ.ಮಹದೇವಮ್ಮ ಬಿನ್ ಮುನಿಯಮ್ಮ 2. ಸಿ.ರಾಧಾಕೃಷ್ಣನ್ 10/17 0-01 ಕಾರ್ಖಾನೆಗಳ ಕಾಂಪೌಂಡ್
ಒಟ್ಟು 0-15.08

ಬಿ.ಎಂ. ವಿಜಯ್ ಶಂಕರ್

PR-181 SC-05

ಜಿಲ್ಲಾಧಿಕಾರಿಗಳು

ಬೆಂಗಳೂರು ಜಿಲ್ಲೆ, ಬೆಂಗಳೂರು.

ವಸತಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ವಇ 70 ಕೊಮಂಇ 2018, ಬೆಂಗಳೂರು, ದಿನಾಂಕ: 06-10-2018.

ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಪೂರ್ವ ತಾಲ್ಲೂಕು, ಕೃಷ್ಣರಾಜಪುರಂ ಹೋಬಳಿ, ವಿಜಿನಾಪುರ ಗ್ರಾಮ ಜ್ಯೋತಿಪುರ ಕೊಳಚೆ ಪ್ರದೇಶವನ್ನು ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇವರು ಅಧಿಸೂಚನೆ ಸಂಖ್ಯೆ:ಕೆ.ಎಸ್.ಎ.ಸಿ.ಆರ್/21/1991-92, ದಿನಾಂಕ: 04.06.2013 ರಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ(ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973 (1974ರ ಕರ್ನಾಟಕ ಕಾಯ್ದೆ 33ರಂತೆ) ಕಲಂ-3ರನ್ವಯ ಕೊಳಚೆ ಪ್ರದೇಶವೆಂದು ಘೋಷಿಸಿರುತ್ತಾರೆ.

ಸದರಿ ಕೊಳಚೆ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, ಅಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ಪುರ್ನವಸತಿ ಕಲ್ಪಿಸಲು ಸರ್ಕಾರವು ಉದ್ದೇಶಿಸಿದ್ದು, ಅದಕ್ಕಾಗಿ ಸದರಿ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ(ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ 1973 ಕಲಂ-17 ರಂತೆ ಭೂ-ಸ್ವಾಧೀನ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದ್ದರಿಂದ ಸದರಿ ಪ್ರದೇಶವು ಸಂಬಂಧಿಸಿದವರಿಗೆ/ ಸಾರ್ವಜನಿಕರಿಗೆ/ ಆಸಕ್ತಿಯುಳ್ಳವರಿಗೆ ಈ ಮೂಲಕ ಸೂಚನೆಯನ್ನು ನೀಡಿ, ಸದರಿ ಪ್ರದೇಶವನ್ನು ಭೂ-ಸ್ವಾಧೀನ ಮಾಡಬಾರದೆಂಬುದಕ್ಕೆ ಕಾರಣ/ಆಕ್ಷೇಪಣೆ/ಸಲಹೆ ಮತ್ತು ಮನವಿಗಳಿದ್ದಲ್ಲಿ, ಈ ಪೂರ್ವಭಾವಿ ಅಧಿಸೂಚನೆ ಪ್ರಕಟವಾದ 15 ದಿನಗಳೊಳಗಾಗಿ ಸರ್ಕಾರದ ಕಾರ್ಯದರ್ಶಿಗಳು, ವಸತಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, ಬೆಂಗಳೂರು-01 ಅವರಿಗೆ ಸಲ್ಲಿಸಬಹುದೆಂದು ತಿಳಿಸಿದೆ.

ಕ್ರಮ ಸ ಂ. ಕೊಳಚೆ ಪ್ರದೇಶದ ಹೆಸರು ವ ುತ್ತು ಸ್ಥಳ ಬ ೂಮಾಲೀಕರ ಹ ಸ ೆ ರು ಶಿ ೕ/ ಶ್ರೀಮತಿ ್ರ ಸ ವ ರ್ ನಂ. ೆ ವಿಸ್ತೀರ್ಣ ಎ-ಗುಂ ಚ ಕ್ಕುಬಂದಿ ೆ
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1 ಜ ೂ್ಯೕತಿಪುರ ೆ ಕೊಳಚೆ ಪ್ರದೇಶ, ವಿಜಿನಾಪುರ ಗ್ರಾಮ, ಕೃಷ್ಣರಾಜಪುರಂ ಹೋಬಳಿ, ಬ ಂಗಳೂರು ಪೂರ್ವ ೆ ತಾಲ್ಲೂಕು ಶಿ ೕಮತಿ ್ರ ಎಂ. ನಾಗರತ್ನಮ್ಮ ಕೋಂ ಕೆ.ಹರಿ ಮತ್ತು ಬಿನ್ ಮುನಿಯಪ್ಪ 83 1-36 ಖಾಸಗಿ ವ ುನೆ ರಸ್ತೆ ರೈಲ್ವೆ ರಸ್ತೆ ಖಾಸಗಿ ರಸ್ತೆ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR-182 SC-50

ವೆಂಕಟೇಶ್ ಎಸ್

ಸರ್ಕಾರದ ಅಧೀನ ಕಾರ್ಯದರ್ಶಿ-2

ವಸತಿ ಇಲಾಖೆ.

ವಸತಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ವಇ 69 ಕೊಮಂಇ 2018, ಬೆಂಗಳೂರು, ದಿನಾಂಕ: 06-10-2018.

ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಬೆಂಗಳೂರು ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೆಂಕಟರಮಣ ಹಟ್ಸ್ ಕೊಳಚೆ ಪ್ರದೇಶವನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ಹೆಚ್‌ಯುಡಿ 63 ಎಂಸಿಎಸ್ 77, ದಿನಾಂಕ: 28.09.1979/ 05.10.1979ರಲ್ಲಿ ಕರ್ನಾಟಕ ಕೊಳಚೆಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೩, ೨೦೧೮ ೯೧೩ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973 (1974ರ ಕರ್ನಾಟಕ ಕಾಯ್ದೆ 33ರಂತೆ) ಕಲಂ-11ರನ್ವಯ ಕೊಳಚೆ ಪ್ರದೇಶವೆಂದು ಘೋಷಿಸಲಾಗಿದೆ.

ಸದರಿ ಕೊಳಚೆ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, ಅಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ಪುರ್ನವಸತಿ ಕಲ್ಪಿಸಲು ಸರ್ಕಾರವು ಉದ್ದೇಶಿಸಿದ್ದು, ಅದಕ್ಕಾಗಿ ಸದರಿ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ(ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ 1973 ಕಲಂ-17 ರಂತೆ ಭೂ-ಸ್ವಾಧೀನ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದ್ದರಿಂದ ಸದರಿ ಪ್ರದೇಶವು ಸಂಬಂಧಿಸಿದವರಿಗೆ/ ಸಾರ್ವಜನಿಕರಿಗೆ/ ಆಸಕ್ತಿಯುಳ್ಳವರಿಗೆ ಈ ಮೂಲಕ ಸೂಚನೆಯನ್ನು ನೀಡಿ, ಸದರಿ ಪ್ರದೇಶವನ್ನು ಭೂ-ಸ್ವಾಧೀನ ಮಾಡಬಾರದೆಂಬುದಕ್ಕೆ ಕಾರಣ/ಆಕ್ಷೇಪಣೆ/ಸಲಹೆ ಮತ್ತು ಮನವಿಗಳಿದ್ದಲ್ಲಿ, ಈ ಪೂರ್ವಭಾವಿ ಅಧಿಸೂಚನೆ ಪ್ರಕಟವಾದ 15 ದಿನಗಳೊಳಗಾಗಿ ಸರ್ಕಾರದ ಕಾರ್ಯದರ್ಶಿಗಳು, ವಸತಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, ಬೆಂಗಳೂರು-01 ಅವರಿಗೆ ಸಲ್ಲಿಸಬಹುದೆಂದು ತಿಳಿಸಿದೆ.

ಕ್ರ ಸ ಂ ಕೊಳಚೆ ಪ ದ ್ರ ೕಶದ ೆ ಹ ಸ ೆ ರು ಅಧಿಸೂಚನೆ ಯಂತೆ ಸ ವ ರ್ ೆ ನಂಬರ್ ಅಧಿಸೂಚನೆ ಯಂತೆ ವ iಾಲಿಕತ್ವ ನಗರ ವ iಾಪನ ದಾಖಲೆ ಯಂತೆ ಸಿ.ಟಿ.ಎಸ್. ನಂಬರ್ ನಗರ ಮಾಪನ ದಾಖಲೆಯಂತೆ ವ iಾಲಿಕತ್ವ ವಿಸ್ತೀರ್ಣ (ಚ.ಮೀ) ಚ ಕ್ಕುಬಂದಿ ೆ
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1 ವ ಂಕಟರಮಣ ೆ ಕೊಳಚೆ ಪ್ರದೇಶ 64 ಮತ್ತು 65 ಶಿ ೕಮತಿ ್ರ ನರಸುಬಾಯಿ ಕೋಂ ಶಿ ೕನಿವಾಸ ್ರ ರಾವ್ 2592 1.ಶ್ರೀಮತಿ ನರಸುಬಾಯಿ ಕೋಂ ಶ್ರೀನಿವಾಸ ರಾವ್ 2. ಬಿ.ವಿ.ಸುಬ್ಬರಾವ್ 3.ಬಿ.ವಿ. ನಾರಾಯಣ ರಾವ್ (ಜೆ ಟೆನ್ಯೂರ್) 7771.00 ಸಿಟಿ.ಎಸ್ ನಂ.2547, 2545, 2544, 2541, 2540 ವ ುತ್ತು ರಸ್ತೆ ಸಿ ಟಿ.ಎಸ್ ನಂ.2593 ರ ಉಳಿಕೆ ಸಿಟಿ.ಎಸ್ ನಂ.2593 ರ ಉಳಿಕೆ ಸಿಟಿ.ಎಸ್ ನಂ.2593 ರ ಉಳಿಕೆ ವ ುತ್ತು ಸಿ.ಟಿ.ಎಸ್. ನಂ.2592ರ ಉಳಿಕೆ
2593 ಶಿ ೕಮಾಧವ ಕೃಷ್ಣ ್ರ 1374.00
ಘ ೂೕಷಿತ ಪ್ರದೇಶದ ಒಟ್ಟು ವಿಸ್ತೀರ್ಣ ೆ 9145.00 (2-10 (ಎ-ಗುಂ)

ಷರಾ: ಜೆ. ಟೆನ್ಯೂರ್ (ಮಾಲಿಕತ್ವವು ನಗರಮಾಪನ ದಾಖಲೆಯಾದ ವಿಚಾರಣಾ ವಹಿಯಲ್ಲಿ ನಮೂದಾಗಿದ್ದು ದೃಡೀಕರಣವಾಗಿರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR-183 SC-50

ವೆಂಕಟೇಶ್ ಎಸ್

ಸರ್ಕಾರದ ಅಧೀನ ಕಾರ್ಯದರ್ಶಿ-2

ವಸತಿ ಇಲಾಖೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ

ಕೊಳಚೆ ಪ್ರದೇಶ ಸ್ಥಳಾಂತರಿಕೆ ಉದ್ದೇಶದ ಅಧಿಸೂಚನೆ

(ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಕಲಂ.11 ರಡಿ)

ಸಂಖ್ಯೆ: ಕೆ.ಎಸ್.ಎ/ಸಿಆರ್/18/2017-18, ಬೆಂಗಳೂರು, ದಿನಾಂಕ: 03-11-2018.

ಬೆಂಗಳೂರು ನಗರ, ಮಹದೇವಪುರ ವಿಧಾನಸಭಾ ಕ್ಷೇತ್ರದ "ಬಾಬು ಜಗಜೀವನರಾಮ್" ಕೊಳಚೆ ಪ್ರದೇಶವನ್ನು ಈ ಕೆಳಕಂಡ ಷೆಡ್ಯೂಲ್‌ನಲ್ಲಿ ವಿವರಿಸಿರುವ ಪ್ರದೇಶದಲ್ಲಿ 131 ಕುಟುಂಬಗಳು ವಾಸಿಸುತ್ತಿರುವ ಕೊಳಚೆ ಪ್ರದೇಶ ಅತ್ಯಂತ ಅನಾರೋಗ್ಯ ಮತ್ತು ಮಾಲಿನ್ಯದಿಂದ ಕೂಡಿದ್ದು, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಚರಂಡಿ, ರಸ್ತೆ, ಶೌಚಾಲಯ ಇತ್ಯಾದಿಗಳಿಂದ ವಂಚಿತವಾಗಿರುತ್ತದೆ. ಈ ಪ್ರದೇಶವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯಪಾಲಕ ಅಭಿಯಂತರರು ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರು ನಂ.2ನೇ ಉಪ ವಿಭಾಗ ರವರು ದಿನಾಂಕ: 22-02-2018ರಂದು ಸ್ಥಳ ತನಿಖೆ ಮಾಡಿದ್ದು, ಸ್ಥಳ ತನಿಖಾ ಸಮಯದಲ್ಲಿ 0-36 ಗುಂಟೆ ಪ್ರದೇಶದಲ್ಲಿ ಈ ಕುಟುಂಬಗಳು ಗುಡಿಸಲುಗಳಲ್ಲಿ ವಾಸಿಸುತ್ತಿದ್ದು, ಸದರಿ ಕೊಳಚೆ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಕಲಂ.11ರಡಿ ಕೊಳಚೆ ಪ್ರದೇಶದ ಸ್ಥಳಾಂತರಿಸುವಿಕೆಯ ಉದ್ದೇಶಕ್ಕಾಗಿ ಅಧಿಸೂಚನೆ ಹೊರಡಿಸಲು ಕೋರಿ ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ೯೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೩, ೨೦೧೮ ಭಾಗ ೬ ಮಂಡಳಿ ರವರು ಪತ್ರದ ಸಂಖ್ಯೆ:ಕಕೊಅಮ/ಕಂ-1/26/2017-18/255, ದಿನಾಂಕ: 28-09-2018ರ ಪತ್ರದಲ್ಲಿ ದಾಖಲೆಗಳೊಂದಿಗೆ ವರದಿಯನ್ನು ಸಲ್ಲಿಸಿರುತ್ತಾರೆ.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಕಲಂ.11ರಡಿ ಜಿಲ್ಲಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ ಕೇವಲ ಸ್ಥಳಾಂತರಿಸುವ ಉದ್ದೇಶಕ್ಕೆ ಕೊಳಚೆ ಪ್ರದೇಶವೆಂದು ಈ ಮೂಲಕ ಘೋಷಿಸಲಾಗಿದೆ.

ಮೇಲ್ಕಂಡ ಈ ಕ್ರಮದ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಶೇಷಾದ್ರಿಪುರ, ಬೆಂಗಳೂರು-560 020 ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 (ಹದಿನೈದು) ದಿವಸಗಳ ಕಾಲಾವಕಾಶ ನೀಡಲಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಕ್ರ. ಸ ಂ ಕೊಳಚೆ ಪ್ರದೇಶದ ಹ ಸ ೆ ರು ಮತ್ತು ಸ್ಥಳ ಕೊಳಚೆ ಪ್ರದೇಶದ ವ iಾಲೀಕತ್ವದ ವಿವರ ಸ . ನಂ. ವಿಸ್ತೀರ್ಣ [ಎ/ ಗುಂಟೆ] ಚ ಕ್ಕುಬಂದಿಗಳು
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1 ಬ ಂಗಳೂರು ೆ ಪ ೂರ್ವತಾಲ್ಲೂಕು, ಕೆ.ಆರ್.ಪುರ ಹೋಬಳಿ, ದ ೂಡ್ಡನೆಕ್ಕುಂದಿ ಗ್ರಾಮದ ೆ ಬಾಬು ಜಗಜೀವನರಾಮ್ ನಗರ ಕೊಳಚೆ ಪ್ರದೇಶ 1) ಸೇಲಂ ರೈಲ್ವೆ 2) ಮುನಿಶಾಮಪ್ಪ ಬಿನ್ ಕದಿರಪ್ಪ 3) ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 3 0-16 ಸ .ನಂ.3 ಮತ್ತು ಸ .ನಂ.25/4ರ ಉಳಿಕೆ ಜಮೀನು. ಸ .ನಂ.25/1 ಮತ್ತು ಸ .ನಂ.25/2ರ ಜಮೀನು. ಸ .ನಂ. 25/4ರ ಉಳಿಕೆ ಜಮೀನು. ಸ .ನಂ.3ರ ಉಳಿಕೆ ಜಮೀನು.
ಎನ್.ಪ್ರಕಾಶ್ ಬಿನ್ ಲೇಟ್ ನಾರಾಯಣರೆಡ್ಡಿ 25/4 0-20
ಒಟ್ಟು 0-36

PR-184

ಬಿ.ಎಂ. ವಿಜಯ್ ಶಂಕರ್

SC-05

ಜಿಲ್ಲಾಧಿಕಾರಿಗಳು

ಬೆಂಗಳೂರು ಜಿಲ್ಲೆ, ಬೆಂಗಳೂರು.

ವಸತಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ವಇ 68 ಕೊಮಂಇ 2018, ಬೆಂಗಳೂರು, ದಿನಾಂಕ: 22-11-2018.

ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಬೆಂಗಳೂರು ನಗರದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾರುತಿ ಸೇವಾನಗರ ವಾರ್ಡಿನ ಮುನಿನಾರಾಯಣಪ್ಪ ಗಾರ್ಡನ್ ಕೊಳಚೆ ಪ್ರದೇಶವನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಎಚ್‌ಯುಡಿ/68/ಎಂಸಿಎಸ್/78, ದಿನಾಂಕ:

21-12-1981 ರಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973 (1974ರ ಕರ್ನಾಟಕ ಕಾಯ್ದೆ 33ರಂತೆ) ರ ಕಲಂ-3 ರನ್ವಯ ಕೊಳಚೆ ಪ್ರದೇಶವೆಂದು ಘೋಷಿಸಲಾಗಿರುತ್ತದೆ.

ಸದರಿ ಕೊಳಚೆ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, ಅಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ಪುರ್ನವಸತಿ ಕಲ್ಪಿಸಲು ಸರ್ಕಾರವು ಉದ್ದೇಶಿಸಿದ್ದು, ಅದಕ್ಕಾಗಿ ಸದರಿ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973 ರ ಕಲಂ-17 ರಂತೆ ಭೂ-ಸ್ವಾಧೀನ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದ್ದರಿಂದ, ಸದರಿ ಪ್ರದೇಶವನ್ನು ಏತಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಬಾರದು ಎಂಬ ಬಗ್ಗೆ ಪ್ರದೇಶಕ್ಕೆ ಸಂಬಂಧಿಸಿದವರಿಗೆ / ಸಾರ್ವಜನಿಕರಿಗೆ / ಆಸಕ್ತಿಯುಳ್ಳವರಿಗೆ ಈ ಮೂಲಕ ಕಲಂ-17 ರಡಿ ಈ ಸೂಚನೆಯನ್ನು ನೀಡಲಾಗಿದೆ.

ಸದರಿ ಪ್ರದೇಶವನ್ನು ಯಾವ ಸಕಾರಣಗಳಿಂದಾಗಿ ಭೂಸ್ವಾಧೀನ ಪಡಿಸಿಕೊಳ್ಳಬಾರದು ಎಂಬುದಕ್ಕೆ ಕಾರಣ / ಆಕ್ಷೇಪಣೆ / ಸಲಹೆ ಮತ್ತು ಮನವಿಗಳಿದ್ದಲ್ಲಿ, ಈ ಅಧಿಸೂಚನೆ ಪ್ರಕಟವಾದ 15 ದಿನಗಳೊಳಗಾಗಿ ಸರ್ಕಾರದ ಕಾರ್ಯದರ್ಶಿಗಳು, ವಸತಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, ಬೆಂಗಳೂರು-01 ಅವರಿಗೆ ಲಿಖಿತವಾಗಿ ಸಲ್ಲಿಸಬಹುದೆಂದು ತಿಳಿಸಿದೆ.

ಭಾಗ ೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೩, ೨೦೧೮ ೯೧೫
ಕ್ರಮ ಸ ಂ. ಕೊಳಚೆ ಪ ದ ್ರ ೕಶದ ೆ ಹ ಸ ೆ ರು ವ ುತ್ತು ಸ್ಥಳ ಬ ೂಮಾಲೀಕರ ಹೆಸರು ಶಿ ೕ/ ಶ್ರೀಮತಿ ್ರ ಸ ವ ರ್ ನಂ. ೆ ವಿಸ್ತೀರ್ಣ ಎ-ಗುಂ ಚ ಕ್ಕುಬಂದಿ ೆ
ಅಧಿಸೂಚನೆಯಂತೆ ರೆವಿನ್ಯೂ ದಾಖಲೆಯಂತೆ ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1 ಕೊಳಚೆ ಪ್ರದೇಶ, ುುನಿನಾರಾಯಣಪ್ಪ ಗಾರ್ಡನ್ ವ ುುನಿನಾರಾಯಣಪ್ಪ ಪಿಳ್ಳನಂಜಪ್ಪ ಬಿನ್ ವ ುುನಿನಾರಾಯಣಪ್ಪ ವ ರ್ ನಂ.133/1 ೆ ವ ೂಡ್ಡಗುಂಟೆ ಗ್ರಾಮ ೆ ಸ ದ 0-19 .ನಂ.133/1ರ ಉಳಿಕೆ ಸ ಲಾ.ಹಿ.ನಂ.133/2ರ ಉಳಿಕೆ .ನಂ.133/1ರ ಉಳಿಕೆ ಸ ರಸ್ತೆ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR-185 SC-50

ವೆಂಕಟೇಶ್ ಎಸ್

ಸರ್ಕಾರದ ಅಧೀನ ಕಾರ್ಯದರ್ಶಿ-2

ವಸತಿ ಇಲಾಖೆ.

ವಸತಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ವಇ 135 ಕೊಮಂಇ 2018, ಬೆಂಗಳೂರು, ದಿನಾಂಕ: 16-11-2018.

ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಯಲ್ಲಾಪುರ ಗ್ರಾಮದ ರಿ ಸರ್ವೆ ನಂ.5 ಹಾಗೂ ಸಿ.ಟಿ.ಎಸ್.ನಂ.3191 ರಿಂದ 3240 ರಲ್ಲಿನ ವಾಳ್ವೇಕರ ಹಕ್ಕಲ್ ಕೊಳಚೆ ಪ್ರದೇಶವನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಎಚ್‌ಯುಡಿ 110 ಎಂಸಿಎಸ್ 77, ದಿನಾಂಕ: 30-09-1977 ರಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973 (1974ರ ಕರ್ನಾಟಕ ಕಾಯ್ದೆ 33ರಂತೆ) ರ ಕಲಂ-3 ರನ್ವಯ ಕೊಳಚೆ ಪ್ರದೇಶವೆಂದು ಘೋಷಿಸಲಾಗಿದೆ.

ಸದರಿ ಕೊಳಚೆ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, ಅಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ಪುರ್ನವಸತಿ ಕಲ್ಪಿಸಲು ಸರ್ಕಾರವು ಉದ್ದೇಶಿಸಿದ್ದು, ಅದಕ್ಕಾಗಿ ಸದರಿ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973 ರ ಕಲಂ-17 ರಂತೆ ಭೂ-ಸ್ವಾಧೀನ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದ್ದರಿಂದ, ಸದರಿ ಪ್ರದೇಶವನ್ನು ಏತಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಬಾರದು ಎಂಬ ಬಗ್ಗೆ ಪ್ರದೇಶಕ್ಕೆ ಸಂಬಂಧಿಸಿದವರಿಗೆ / ಸಾರ್ವಜನಿಕರಿಗೆ / ಆಸಕ್ತಿಯುಳ್ಳವರಿಗೆ ಈ ಮೂಲಕ ಕಲಂ-17 ರಡಿ ಈ ಸೂಚನೆಯನ್ನು ನೀಡಲಾಗಿದೆ.

ಸದರಿ ಪ್ರದೇಶವನ್ನು ಯಾವ ಸಕಾರಣಗಳಿಂದಾಗಿ ಭೂಸ್ವಾಧೀನ ಪಡಿಸಿಕೊಳ್ಳಬಾರದು ಎಂಬುದಕ್ಕೆ ಕಾರಣ / ಆಕ್ಷೇಪಣೆ / ಸಲಹೆ ಮತ್ತು ಮನವಿಗಳಿದ್ದಲ್ಲಿ, ಈ ಅಧಿಸೂಚನೆ ಪ್ರಕಟವಾದ 15 ದಿನಗಳೊಳಗಾಗಿ ಸರ್ಕಾರದ ಕಾರ್ಯದರ್ಶಿಗಳು, ವಸತಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, ಬೆಂಗಳೂರು-01 ಅವರಿಗೆ ಲಿಖಿತವಾಗಿ ಸಲ್ಲಿಸಬಹುದೆಂದು ತಿಳಿಸಿದೆ

ಕ್ರಮ ಸಂ. ಕೊಳಚೆ ಪ್ರದೇಶದ ಹ ಸ ೆ ರು ಮತ್ತು ಸ ್ಥಳ ಬ ೂಮಾಲೀಕರ ಹ ಸ ೆ ರು ಶಿ ೕ/ ಶ್ರೀಮತಿ ್ರ ರಿ.ಸರ್ವೆ ನಂ. ವಿಸ್ತೀರ್ಣ ಎ-ಗುಂ ಚ ಕ್ಕುಬಂದಿ ೆ
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1 ೕಶ, ೆ ದ ್ರ ಪ ಯಲ್ಲಾಪುರ ಗ್ರಾಮ ವಾಳ್ವೇಕರ ಹಕ್ಕಲಕೊಳಚೆ ುತ್ತು ಇತರರು ವ ೕ ಅಲ್ಲಾಭಕ್ಷ ಬಿನ್ ್ರ ಶಿ ಖಾಜಾಸಾಬ ಲಕ್ಕಡಹಾರೆ 3191 ರಿಂದ 3240 05 ಮತ್ತು ಸಿಟಿಎಸ್.ನಂ. 2-26 ರ್ ನಂ.6 ೆ ವ ಯಲ್ಲಾಪುರ ಸ ರಾಷ್ಟ್ರೀಯ ಹೆದ್ದಾರಿ-04 ಪಾಟೀಲ ಗಲ್ಲಿ ರಾಷ್ಟ್ರೀಯ ಹೆದ್ದಾರಿ-04

PR-186

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ವೆಂಕಟೇಶ್ ಎಸ್

ಸರ್ಕಾರದ ಅಧೀನ ಕಾರ್ಯದರ್ಶಿ-2

ವಸತಿ ಇಲಾಖೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೯೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೧೩, ೨೦೧೮ ಭಾಗ ೬

ವಸತಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ವಇ 134 ಕೊಮಂಇ 2018, ಬೆಂಗಳೂರು, ದಿನಾಂಕ: 16-11-2018.

ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ಹುಬ್ಬಳ್ಳಿ ನಗರದ ಅಯೋಧ್ಯ ಗ್ರಾಮ ನೇಕಾರ ನಗರ ಕೊಳಚೆ ಪ್ರದೇಶವನ್ನು ವಿಭಾಗಾಧಿಕಾರಿಗಳು, ಬೆಳಗಾವಿ ವಿಭಾಗ, ಬೆಳಗಾವಿ ಇವರು ಅಧಿಸೂಚನೆ ಸಂಖ್ಯೆ: ಎಂಯುಎನ್.

ಬಿಜಿಎಂ.ಸಿಆರ್.152/89-90, ದಿನಾಂಕ: 20-05-1992 ರಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973 (1974ರ ಕರ್ನಾಟಕ ಕಾಯ್ದೆ 33 ರಂತೆ)ರ ಕಲಂ-3 ಮತ್ತು ಸರ್ಕಾರದ ಅಧಿಸೂಚನೆ ಸಂಖ್ಯೆ: ಹೆಚ್‌ಯುಡಿ 49 ಎಂಸಿಎಸ್ 85, ದಿನಾಂಕ: 17-04-1986 ರಲ್ಲಿ ಪ್ರಾಪ್ತವಾದ ಅಧಿಕಾರದನ್ವಯ ಕೊಳಚೆ ಪ್ರದೇಶವೆಂದು ಘೋಷಿಸಿರುತ್ತಾರೆ.

ಸದರಿ ಕೊಳಚೆ ಪ್ರದೇಶವನ್ನು ಅಭಿವೃದ್ಧಿಗೊಳಿಸಿ, ಅಲ್ಲಿ ವಾಸಿಸುವ ಕೊಳಚೆ ನಿವಾಸಿಗಳಿಗೆ ಪುರ್ನವಸತಿ ಕಲ್ಪಿಸಲು ಸರ್ಕಾರವು ಉದ್ದೇಶಿಸಿದ್ದು, ಅದಕ್ಕಾಗಿ ಸದರಿ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973 ರ ಕಲಂ-17 ರಂತೆ ಭೂ-ಸ್ವಾಧೀನ ಪಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಸರ್ಕಾರವು ಮನಗಂಡಿದೆ. ಆದ್ದರಿಂದ, ಸದರಿ ಪ್ರದೇಶವನ್ನು ಏತಕ್ಕೆ ಭೂ ಸ್ವಾಧೀನಪಡಿಸಿಕೊಳ್ಳಬಾರದು ಎಂಬ ಬಗ್ಗೆ ಪ್ರದೇಶಕ್ಕೆ ಸಂಬಂಧಿಸಿದವರಿಗೆ / ಸಾರ್ವಜನಿಕರಿಗೆ / ಆಸಕ್ತಿಯುಳ್ಳವರಿಗೆ ಈ ಮೂಲಕ ಕಲಂ-17 ರಡಿ ಈ ಸೂಚನೆಯನ್ನು ನೀಡಲಾಗಿದೆ.

ಸದರಿ ಪ್ರದೇಶವನ್ನು ಯಾವ ಸಕಾರಣಗಳಿಂದಾಗಿ ಭೂಸ್ವಾಧೀನ ಪಡಿಸಿಕೊಳ್ಳಬಾರದು ಎಂಬುದಕ್ಕೆ ಕಾರಣ / ಆಕ್ಷೇಪಣೆ / ಸಲಹೆ ಮತ್ತು ಮನವಿಗಳಿದ್ದಲ್ಲಿ, ಈ ಅಧಿಸೂಚನೆ ಪ್ರಕಟವಾದ 15 ದಿನಗಳೊಳಗಾಗಿ ಸರ್ಕಾರದ ಕಾರ್ಯದರ್ಶಿಗಳು, ವಸತಿ ಇಲಾಖೆ, ಕರ್ನಾಟಕ ಸರ್ಕಾರದ ಸಚಿವಾಲಯ, ವಿಕಾಸಸೌಧ, ಬೆಂಗಳೂರು-01 ಅವರಿಗೆ ಲಿಖಿತವಾಗಿ ಸಲ್ಲಿಸಬಹುದೆಂದು ತಿಳಿಸಿದೆ.

ಕ್ರಮ ಸ ಂ. ಕೊಳಚೆ ಪ ದ ್ರ ೕಶದ ಹೆಸರು ೆ ವ ುತ್ತು ಸ್ಥಳ ಬ ೂಮಾಲೀಕರ ಹ ಸ ೆ ರು ಶಿ ೕ/ ಶ್ರೀಮತಿ ್ರ ರಿ. ಸರ್ವೆ ನಂ. ವಿಸ್ತೀರ್ಣ (ಎ-ಗುಂ-ಆ) ಚ ಕ್ಕುಬಂದಿ ೆ
ಪ ೂರ್ವ ಪ ಶಿ ವ ್ಚ ು ಉತ್ತರ ದ ಕಿ ಣ ್ಷ
1 ಗ್ರಾಮ ನೇಕಾರನಗರ ಕೊಳಚೆ ಪ್ರದೇಶ, ಅಯೋಧ್ಯ 1) ಶ್ರೀ ತಳವಾರ ಹನಮಂತಪ್ಪ ನಿಂಗಪ್ಪ 37/3ಎ 6-32-4 ರಿ.ಸ.ನಂ.38 ಅಗ್ರಹಾರ ತಿಮ್ಮಸಾಗರ ಗ್ರಾಮದ ಹದ್ದು ರಿ.ಸ.ನಂ.37/2ಬಿ ರಿ.ಸ.ನಂ. 37/3ಬಿ, 39 ರೋಡ್
2) ಶ್ರೀಮತಿ ತಳವಾರ ಫಕೀರವ್ವಾ ಕೋಂ ಮಲ್ಲೇಶಪ್ಪಾ 37/2ಬಿ 1-26-08 ರಿ.ಸ.ನಂ.38 ಅಗ್ರಹಾರ ತಿಮ್ಮಸಾಗರ ಗ್ರಾಮದ ಹದ್ದು ರಿ.ಸ.ನಂ.37 2ಎ ರಿ.ಸ.ನಂ. 37/3ಎ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ PR-187 SC-50

ವೆಂಕಟೇಶ್ ಎಸ್

ಸರ್ಕಾರದ ಅಧೀನ ಕಾರ್ಯದರ್ಶಿ-2

ವಸತಿ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 13 December 2018. Indian Gazettes, https://egazette.servantsofknowledge.in/details/in.gazette.karnataka_new.2018-12-13.Part-6/. Archive identifier in.gazette.karnataka_new.2018-12-13.Part-6.