Servants of Knowledge
Karnataka Gazette · Government of Karnataka

Karnataka Gazette, Part Part-1, 20 December 2018

Published 20 December 2018

Part
Part-1
Identifier
in.gazette.karnataka_new.2018-12-20.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಡಿಸೆಂಬರ್ ೨೦, ೨೦೧೮ (ಮಾರ್ಗಶಿರ ೨೯, ಶಕ ವರ್ಷ ೧೯೪೦)

Bengaluru, Thursday, December 20, 2018 (Margashira 29, Shaka Varsha 1940)

ಸಂಪುಟ ೧೫೩

Volume 153

ಸಂಚಿಕೆ ೫೦

Issue 50

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಆರ್ಥಿಕ ಸಚಿವಾಲಯ

ವಿಷಯ: ಶ್ರೀಮತಿ ಭಾವನಾ ಭಟ್.ಎಸ್.ಎ ತಹಸಿಲ್ದಾರ್ ಗ್ರೇಡ್-2 (ಪರೀಕ್ಷಾರ್ಥ) ಇವರ ಸೇವೆಯನ್ನು

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಗೆ ಮರಳಿ ಪಡೆಯುವ ಬಗ್ಗೆ.

ಓದಲಾಗಿದೆ: 1) ಸರ್ಕಾರದ ಅಧಿಸೂಚನೆ ಸಂಖ್ಯೆ: ಆರ್‌ಡಿ 314 ಎಎಸ್‌ಡಿ 2017, ದಿನಾಂಕ: 23.09.2017.

2) ಸರ್ಕಾರದ ಅಧಿಸೂಚನೆ ಸಂಖ್ಯೆ: ಆಇ 312 ರಾಲೆಪ 2017, ದಿನಾಂಕ: 04.10.2017..

3) ಅಧಿಕಾರಿಯವರ ಮನವಿ ದಿನಾಂಕ: 19-07-2018.

4) ಪ್ರಧಾನ ನಿರ್ದೇಶಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ರವರ ಪತ್ರ ಸಂ:ಸಿಎಸ್ಎ 958 ಎಸ್‌ಪಿಎಫ್ 2018-2017, ದಿನಾಂಕ: 14-08-2018.

ಪ್ರಸ್ತಾವನೆ :

ಶ್ರೀಮತಿ ಎಸ್.ಎ. ಭಾವನಾ ಭಟ್, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಉಪ ನಿಯಂತ್ರಕರಾಗಿದ್ದ ಇವರು ತಹಸಿಲ್ದಾರ್ ಗ್ರೇಡ್-2 ಹುದ್ದೆಗೆ ಸಮುಚಿತ ಮಾರ್ಗದಲ್ಲಿ ಅರ್ಜಿ ಸಲ್ಲಿಸಿ ಆಯ್ಕೆಗೊಂಡು ಮೇಲೆ ಓದಲಾದ ಕ್ರಮ ಸಂ:(1) ರ ಅಧಿಸೂಚನೆಯಲ್ಲಿ ತಹಸಿಲ್ದಾರ್ ಗ್ರೇಡ್-2 ಹುದ್ದೆಗೆ ನೇಮಕಗೊಂಡಿರುತ್ತಾರೆ. ಮೇಲೆ ಓದಲಾದ ಕ್ರಮ ಸಂ:(2) ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ತಹಸಿಲ್ದಾರ್ ಗ್ರೇಡ್-2 ವೃಂದದ ಗ್ರೂಪ್-ಬಿ ಹುದ್ದೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಕ.ನಾ.ಸೇ.ನಿ ನಿಯಮಗಳ ನಿಯಮ 252-ಬಿ ಪ್ರಕಾರ ದಿ: 04-10-2017 ರನ್ವಯ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಿಂದ ಬಿಡುಗಡೆ ಹೊಂದಿ ಕಂದಾಯ ಇಲಾಖೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂ:(3) ರಲ್ಲಿ ಅಧಿಕಾರಿಯವರು ಮನವಿಯನ್ನು ಸಲ್ಲಿಸಿ ಪ್ರಸ್ತುತ ಅವರು ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಹಿರಿಯ ಉಪ ನಿರ್ದೇಶಕರ ಹುದ್ದೆಗೆ ಹಿಂದಿರುಗಲು ಇಚ್ಚಿಸಿರುತ್ತಾರೆ. ಮೇಲೆ ಓದಲಾದ ಕ್ರಮ ಸಂ:(4) ರಲ್ಲಿ ಪ್ರಧಾನ ನಿರ್ದೇಶಕರು, ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ರವರು ಶ್ರೀಮತಿ ಎಸ್.ಎ. ಭಾವನಾ ಭಟ್, ತಹಸಿಲ್ದಾರ್ ಗ್ರೇಡ್-2 ರವರು ಈ ಹುದ್ದೆಯಲ್ಲಿ ದಿ:07-10-2017 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇನ್ನು ಎರಡು ವರ್ಷ ಪೂರ್ಣಗೊಂಡಿಲ್ಲದ ಕಾರಣ ಸದರಿ ಹುದ್ದೆಯಲ್ಲಿ ಅವರ ಪರೀಕ್ಷಾರ್ಥ ಅವಧಿ ಘೋಷಣೆಯಾಗಿರುವುದಿಲ್ಲ. ಆದಕಾರಣ ಪ್ರಸ್ತುತ ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಅಧಿಕಾರಿಗಳ ಅವಶ್ಯಕತೆ ಇರುವುದರಿಂದ ಶ್ರೀಮತಿ ಎಸ್.ಎ. ಭಾವನಾ ಭಟ್, ತಹಸಿಲ್ದಾರ್ ಗ್ರೇಡ್-2 ರವರ ಸೇವೆಯನ್ನು ಹಿಂಪಡೆಯಬಹುದಾಗಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ. ಕ.ನಾ.ಸೇ.ನಿ ನಿಯಮ 20(ಎಫ್) ರ ಟಿಪ್ಪಣಿ 4 ರನ್ವಯ ಒಂದು ಇಲಾಖೆಯ ಖಾಯಂ ಹುದ್ದೆಯಲ್ಲಿ ಕಾರ್ಯನಿರ್ವಹಿಸಿ ಸರ್ಕಾರದ ಬೇರೊಂದು ಇಲಾಖೆಗೆ ನೇಮಕಾತಿ ಮೇರೆಗೆ ಬಿಡುಗಡೆಗೊಂಡ ನೌಕರರ ಲೀನ್ ಹೊಸ ಹುದ್ದೆಯಲ್ಲಿ ಪರಿವೀಕ್ಷಣಾ ಅವಧಿ ಘೋಷಣೆಯಾಗುವವರೆಗೂ ಹಿಂದಿನ ಇಲಾಖೆಯಲ್ಲಿ ಮುಂದುವರೆಯುತ್ತದೆ. ಅದರಂತೆ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಈ ಮುಂದಿನಂತೆ ಆದೇಶಿಸುತ್ತದೆ.

(೧೦೯೭)೧೦೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೦, ೨೦೧೮ ಭಾಗ ೧

ಸರ್ಕಾರದ ಆದೇಶ ಸಂಖ್ಯೆ : ಆಇ 263 ರಾಲೆಪ 2018, ಬೆಂಗಳೂರು, ದಿನಾಂಕ: 25ನೇ ಅಕ್ಟೋಬರ್ 2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ ಕ.ನಾ.ಸೇ.ನಿ. ನಿಯಮ 20(ಎಫ್) ರ ಟಿಪ್ಪಣಿ 4 ರನ್ವಯ ಶ್ರೀ ಮತಿ ಎಸ್.ಎ. ಭಾವನಾ ಭಟ್, (ಪರೀಕ್ಷಾರ್ಥ) ಪ್ರಸ್ತುತ ತಹಸಿಲ್ದಾರ್ ಗ್ರೇಡ್-2 ರವರ ಸೇವೆಯನ್ನು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಉಪ ನಿಯಂತ್ರಕರು/ಹಿರಿಯ ಉಪ ನಿರ್ದೇಶಕರ ಹುದ್ದೆಗೆ ಮರಳಿ ಪಡೆಯಲಾಗಿದೆ.

PR-493

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಶಶಿಧರ್. ಜಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ. (ಆಡಳಿತ ಮತ್ತು ಮುಂಗಡ)

ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ: ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಕಾಲೇಜು/ಸಂಸ್ಥೆಗಳಲ್ಲಿನ ಸೂಪರ್

ಸ್ಪೆಷಾಲಿಟಿ ಕೋರ್ಸುಗಳ ವಾರ್ಷಿಕ ಶುಲ್ಕ ಹೆಚ್ಚಿಸುವ ಬಗ್ಗೆ.

ಓದಲಾಗಿದೆ:

ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರ ದಿ:10-07-2018ರ ಪತ್ರ ಸಂಖ್ಯೆ: ಡಿಎಂಇ/ಪಿಜಿಎಸ್/19/2018-19.

ಪ್ರಸ್ತಾವನೆ :

ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಕಾಲೇಜು/ಸಂಸ್ಥೆಗಳಲ್ಲಿನ ಸೂಪರ್ ಸ್ಪೆಷಾಲಿಟಿ ಕೋರ್ಸುಗಳಿಗೆ ವಾರ್ಷಿಕ ಶುಲ್ಕವು

ಕ್ರ.ಸಂ. ಕಾಲೇಜಿನ ಹೆಸರು ವಿಷಯ ವಾರ್ಷಿಕ ಶುಲ್ಕ
1 Bangalore Medical College & Research Institute, Bangalore. ಎಲ್ಲಾ ವಿಷಯಗಳಿಗೆ 37,020/-
2 Kidwai Memorial Institute of Oncology, Bangalore ಎಲ್ಲಾ ವಿಷಯಗಳಿಗೆ 1,25,000/-
3 Vijayanagara Institute of Medical Sciences, Bellari Mch. Urology 40680/-
4 Sri Jayadeva Institute of Cardiovasular Sciences & Research, Bangalore DM Cardiology 1,50,000/-
M.Ch Cardio Thorasic Surgery 1,50,000/-
DM Cardiac Anaesthesia 1,01,975/-
5 Institute of Nephro Urology, Bangalore ಎಲ್ಲಾ ವಿಷಯಗಳಿಗೆ 75,000/-
6 Indira Gandhi Institute of Child Health, Bangalore M.Ch in paediatric surgery 37,020/-

ಆದರೆ ಸುಮಾರು ವರ್ಷಗಳಿಂದ ಸರ್ಕಾರಿ ಕಾಲೇಜುಗಳಲ್ಲಿನ ಶುಲ್ಕವು ಪರಿಷ್ಕøತವಾಗಿರುವುದಿಲ್ಲ ಹಾಗೂ ಮೂಲಭೂತ ಸೌಕರ್ಯಗಳ ವೆಚ್ಚ, ಪ್ರಯೋಗಾಲಯ ವೆಚ್ಚ ಮತ್ತು ಸಿಬ್ಬಂದಿ ವೇತನದಲ್ಲಿಯೂ ಸಹ ಭಾರಿ ಹೆಚ್ಚಳ ಕಂಡು ಬಂದಿರುವುದರಿಂದ 2018-19 ನೇ ಸಾಲಿಗೆ ಈ ಕೆಳಗಿನಂತೆ

ಕ್ರ.ಸಂ. ಕಾಲೇಜಿನ ಹೆಸರು ವಿಷಯ ಪ ರಿಷ್ಕøತ ಶುಲ್ಕ (`. ಲಕ್ಷಗಳಲ್ಲಿ)
1 Bangalore Medical College & ResearchInstitute, Bangalore ಎಲ್ಲಾ ವಿಷಯಗಳಿಗೆ 2.00 / Year
2 Kidwai Memorial Institute of Oncology, Bangalore ಎಲ್ಲಾ ವಿಷಯಗಳಿಗೆ 2.00 / Year
3 Vijayanagara Institute of Medical Sciences, Bellari Mch. Urology 2.00 / Year
4 Sri Jayadeva Institute of Cardiovasular Sciences & Research, Bangalore DM Cardiology DM Cardiac Anaesthesia 2.00 / Year
M.Ch Cardio Thorasic Surgery 1.50 / Year
5 Institute of Nephro Urology, Bangalore ಎಲ್ಲಾ ವಿಷಯಗಳಿಗೆ 2.00 / Year
6 Indira Gandhi Institute of Child Health,Bangalore M.Ch in Paediatric surgery 1.50/Year

ವಿಷಯವನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಕಾಲೇಜು/ಸಂಸ್ಥೆಗಳಲ್ಲಿನ ಸೂಪರ್ ಸ್ಪೆಷಾಲಿಟಿ ಕೋರ್ಸುಗಳಿಗೆ ಮೇಲೆ ನಮೂದಿಸಿರುವಂತೆ ವಾರ್ಷಿಕ ಶುಲ್ಕ ನಿಗದಿಪಡಿಸಲು ಸರ್ಕಾರವು ತೀರ್ಮಾನಿಸಿ, ಈ ಕೆಳಗಿನಂತೆ ಆದೇಶವನ್ನು ಹೊರಡಿಸಿದೆ.


  1. Institute of Nephro Urology, Bangalore ಎಲ್ಲಾ ವಿಷಯಗಳಿಗೆ {{^{{FOOTNOTE 75}}}},{{^{{FOOTNOTE 000}}}}/- ↩
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೦, ೨೦೧೮ ೧೦೯೯

ಸರ್ಕಾರಿ ಆದೇಶ ಸಂಖ್ಯೆ : ಆಕುಕ 218 ಆರ್‌ಜಿಯು 2018, ಬೆಂಗಳೂರು ದಿನಾಂಕ 18-07-2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯ ಸರ್ಕಾರಿ ಕಾಲೇಜು/ಸಂಸ್ಥೆಗಳಲ್ಲಿನ

ಕ್ರ.ಸಂ. ಕಾಲೇಜಿನ ಹೆಸರು ವಿಷಯ ವಾರ್ಷಿಕ ಶುಲ್ಕ
1 Bangalore Medical College & Research Institute, Bangalore ಎಲ್ಲಾ ವಿಷಯಗಳಿಗೆ 2.00 / Year
2 Kidwai Memorial Institute of Oncology, Bangalore ಎಲ್ಲಾ ವಿಷಯಗಳಿಗೆ 2.00 / Year
3 Vijayanagara Institute of Medical Sciences, Bellari Mch. Urology 2.00 / Year
4 Sri Jayadeva Institute of Cardiovasular Sciences & Research, Bangalore DM Cardiology DM Cardiac Anaesthesia 2.00 / Year
M.Ch Cardio Thorasic Surgery 1.50 / Year
5 Institute of Nephro Urology, Bangalore ಎಲ್ಲಾ ವಿಷಯಗಳಿಗೆ 2.00 / Year
6 Indira Gandhi Institute of Child Health, Bangalore M.Ch in paediatric surgery 1.50 / Year

PR-498

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC- 25

ಕೆ. ಮುರಳಿ

ಸರ್ಕಾರದ ಅಧೀನ ಕಾರ್ಯದರ್ಶಿ-2,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (ವೈದ್ಯಕೀಯ ಶಿಕ್ಷಣ)

ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ : 2018-19 ನೇ ಸಾಲಿಗೆ ರಾಜ್ಯದಲ್ಲಿನ ಖಾಸಗಿ ಹಾಗೂ ಡೀಮ್ಡ್ ವಿಶ್ವವಿದ್ಯಾಲಯ ವ್ಯಾಪ್ತಿಯ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕ ಕೋರ್ಸುಗಳ ಸೀಟುಗಳ ಪ್ರವೇಶ ಶುಲ್ಕವನ್ನು ಪರಿಷ್ಕರಿಸುವ ಬಗ್ಗೆ.

ಓದಲಾಗಿದೆ :

ರಾಜ್ಯ ಸರ್ಕಾರ ಹಾಗೂ

ಒಕ್ಕೂಟಗಳ ನಡುವೆ ಏರ್ಪಟ್ಟಿರುವ ಪರಸ್ಪರ ಒಡಂಬಡಿಕೆ ದಿ: 06-07-2018.

2018-19 ನೇ ಸಾಲಿನ ಸ್ನಾತಕ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳ ಸೀಟು ಹಂಚಿಕೆ & ಶುಲ್ಕ ನಿಗದಿಗೆ ಸಂಬಂಧಿಸಿದಂತೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳುವ ಸಲುವಾಗಿ ರಾಜ್ಯದ ಖಾಸಗಿ ಕಾಲೇಜುಗಳ ಸಂಘಗಳಾದ Karnataka Professional Colleges Foundation Professional Colleges in Karnataka (AMPCK) ಅಧ್ಯಕ್ಷರು/ಪ್ರತಿನಿಧಿಗಳೊಂದಿಗೆ ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ದಿನಾಂಕ: 18-06-2018 & 04-07-2018 ರಂದು ಸಭೆ ನಡೆಸಿ, ಮೇಲೆ ಓದಲಾದಂತೆ ಪರಸ್ಪರ ಒಡಂಬಡಿಕೆಗಳನ್ನು ಮಾಡಿಕೊಳ್ಳಲಾಗಿದೆ. ಸದರಿ ಪರಸ್ಪರ ಒಡಂಬಡಿಕೆಗಳನ್ವಯ 2018-19 ನೇ ಸಾಲಿಗೆ ಸದರಿ ಸಂಘಗಳ ವ್ಯಾಪ್ತಿಯ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕ ಕೋರ್ಸುಗಳ ಸೀಟುಗಳಿಗೆ ಪ್ರವೇಶ ಶುಲ್ಕದ ವಿವರಗಳು ಈ ಕೆಳಗಿನಂತಿದೆ.

ರಾಜ್ಯದಲ್ಲಿನ ಖಾಸಗಿ ವೈದ್ಯಕೀಯ / ದಂತ ವೈದ್ಯಕೀಯ ಕಾಲೇಜುಗಳಲ್ಲಿನ (KPCF/KRLMPCA/AMPCK) ವೈದ್ಯಕೀಯ (MBBS) / ದಂತ ವೈದ್ಯಕೀಯ

(BDS) ಸೀಟುಗಳಿಗೆ ಪಾವತಿಸಬೇಕಾದ ಶುಲ್ಕದ ವಿವರ:


  1. Kidwai Memorial Institute of Oncology, Bangalore ಎಲ್ಲಾ ವಿಷಯಗಳಿಗೆ {{^{{FOOTNOTE 2}}}}.{{^{{FOOTNOTE 00}}}} / Year KPCF, KRLMPCA & AMPCK (KPCF), Karnataka Religious and Linguistic Minority Professional Colleges Association (KRLMPCA) & Association of Minority ↩
ಸ ಂಖ್ಯೆ ಕೋರ್ಸುಗಳ ವಿವರ KPCF/KRLMPCA/AMPCK ಅಭ್ಯರ್ಥಿಗಳಿಗೆ KEA ಮೂಲಕ ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ
ಹಿಂದಿನ ಶುಲ್ಕ (2017-18) ಪ ರಿಷ್ಕøತ ಶುಲ್ಕ (2018-19) ಹಿಂದಿನ ಶುಲ್ಕ (2017-18) ಪ ರಿಷ್ಕøತ ಶುಲ್ಕ (2018-19)
ಅ) ಎಂಬಿಬಿಎಸ್ 6,32,500 6,83,100 77,000 97,350
ಆ) ಬಿಡಿಎಸ್ 4,29,000 4,63,320 49,500 63,030
೧೧೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೦, ೨೦೧೮ ಭಾಗ ೧

ಡೀಮ್ಡ್ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರುವ ವೈದ್ಯಕೀಯ & ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳೂ ಸಹ KPCF/KRLMPCA/AMPCK ವ್ಯಾಪ್ತಿಯ ಕಾಲೇಜುಗಳಲ್ಲಿನ ಸ್ನಾತಕ ಕೋರ್ಸುಗಳ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಶುಲ್ಕವನ್ನೇ ಪಾವತಿಸತಕ್ಕದ್ದೆಂದು ನಿರ್ಣಯ ಕೈಗೊಳ್ಳಲಾಗಿದೆ.

ಮುಂದುವರೆದು, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಬೆಂಗಳೂರು ಸಂಸ್ಥೆಯು ಖಾಸಗಿ ಕೋಟಾದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹಂಚಿಕೆ ಮಾಡಲು ಬಿಟ್ಟುಕೊಟ್ಟಿರುವ ಸೀಟುಗಳಿಗೆ `. 5,57,980/- ಗಳ ಶುಲ್ಕವನ್ನು ನಿಗದಿಪಡಿಸಲು ತೀರ್ಮಾನಿಸಲಾಗಿದೆ ವಿಷಯವನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿದ ನಂತರ, ರಾಜ್ಯದಲ್ಲಿನ ಖಾಸಗಿ ಕಾಲೇಜುಗಳ ಸಂಘಗಳಾದ KPCF/KRLMPCA/AMPCK ವ್ಯಾಪ್ತಿಯ ವೈದ್ಯಕೀಯ/ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕ ಕೋರ್ಸುಗಳ ಸೀಟುಗಳ ಪ್ರವೇಶ ಶುಲ್ಕವನ್ನು 2018-19 ನೇ ಸಾಲಿಗೆ ಮೇಲೆ ಪ್ರಸ್ತಾಪಿಸಿರುವಂತೆ ಪರಿಷ್ಕರಿಸಲು ಸರ್ಕಾರವು ತೀರ್ಮಾನಿಸಿ, ಈ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 168 ಆರ್‌ಜಿಯು 2018, ಬೆಂಗಳೂರು, ದಿನಾಂಕ: 07-07-2018.

ರಾಜ್ಯದಲ್ಲಿನ ಖಾಸಗಿ ಕಾಲೇಜುಗಳ ಸಂಘಗಳಾದ KPCF/KRLMPCA/AMPCK ವ್ಯಾಪ್ತಿಯ ವೈದ್ಯಕೀಯ/ದಂತ ವೈದ್ಯಕೀಯ ಸ್ನಾತಕ ಕೋರ್ಸುಗಳ ಸೀಟುಗಳ ಪ್ರವೇಶ ಶುಲ್ಕವನ್ನು 2018-19 ನೇ ಸಾಲಿಗೆ ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸಲಾಗಿದೆ.

ರಾಜ್ಯದಲ್ಲಿನ ಖಾಸಗಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳಲ್ಲಿನ (KPCF/KRLMPCA/AMPCK) ವೈದ್ಯಕೀಯ (MBBS) / ದಂತ ವೈದ್ಯಕೀಯ

(BDS) ಸೀಟುಗಳಿಗೆ ಪಾವತಿಸಬೇಕಾದ ಶುಲ್ಕದ ವಿವರ:

ಸ ಂಖ್ಯೆ ಕೋರ್ಸುಗಳ ವಿವರ KPCF/KRLMPCA/AMPCK ಅಭ್ಯರ್ಥಿಗಳಿಗೆ KEA ಮೂಲಕ ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ
ಹಿಂದಿನ ಶುಲ್ಕ (2017-18) ಪ ರಿಷ್ಕøತ ಶುಲ್ಕ (2018-19) ಹಿಂದಿನ ಶುಲ್ಕ (2017-18) ಪ ರಿಷ್ಕøತ ಶುಲ್ಕ (2018-19)
ಅ) ಎಂಬಿಬಿಎಸ್ 6,32,500 6,83,100 77,000 97,350
ಆ) ಬಿಡಿಎಸ್ 4,29,000 4,63,320 49,500 63,030

ಮುಂದುವರೆದು, ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು, ಬೆಂಗಳೂರು ಸಂಸ್ಥೆಯು ಖಾಸಗಿ ಕೋಟಾದಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಹಂಚಿಕೆ ಮಾಡುವ ಸೀಟುಗಳಿಗೆ ರೂ. 5,57,980/- ಗಳ ಶುಲ್ಕವನ್ನು ನಿಗದಿಪಡಿಸಿ ಆದೇಶಿಸಿದೆ.

ಡೀಮ್ಡ್ ವಿಶ್ವವಿದ್ಯಾಲಯಗಳ ವ್ಯಾಪ್ತಿಯಲ್ಲಿ ಬರುವ ವೈದ್ಯಕೀಯ & ದಂತ ವೈದ್ಯಕೀಯ ಕಾಲೇಜುಗಳಲ್ಲಿನ ಸ್ನಾತಕ ಕೋರ್ಸುಗಳ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳೂ ಸಹ KPCF/KRLMPCA/AMPCK ವ್ಯಾಪ್ತಿಯ ಕಾಲೇಜುಗಳಲ್ಲಿನ ಸ್ನಾತಕ ಕೋರ್ಸುಗಳ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸರ್ಕಾರಿ ಕೋಟಾದಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿಪಡಿಸಿರುವ ಶುಲ್ಕವನ್ನೇ ಪಾವತಿಸತಕ್ಕದ್ದು.

PR-499

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC- 25

ಕೆ.ಮುರಳಿ

ಸರ್ಕಾರದ ಅಧೀನ ಕಾರ್ಯದರ್ಶಿ-2,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (ವೈದ್ಯಕೀಯ ಶಿಕ್ಷಣ)

ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಓದಲಾಗಿದೆ:

ವಿಷಯ: ಸ್ನಾತಕೋತ್ತರ ಪದವಿ ಡಿಪ್ಲೊಮಾ ವ್ಯಾಸಂಗ ಪೂರ್ಣಗೊಳಿಸಿ, ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಂದ ಪ್ರಮಾಣಪತ್ರ ಪಡೆದು ಮೂಲ ದಾಖಲಾತಿಗಳನ್ನು ನೀಡುವ ಬಗ್ಗೆ. 1) ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರ ಪತ್ರ ಸಂಖ್ಯೆ: ಡಿಎಂಇ/ಪಿಜಿಎಸ್/358/2018-19, ದಿ: 10-07-2018.

2) ನಿರ್ದೇಶಕರು ಹಾಗೂ ಡೀನ್, ಬೆಂಗಳೂರು ವೈದ್ಯಕೀಯ ಕಾಲೇಜು & ಸಂಶೋಧನಾ

ಸಂಸ್ಥೆ, ಬೆಂಗಳೂರು ಇವರ ಪತ್ರ ಸಂಖ್ಯೆ: ಬೆಂವೈವಿ/ಸ್ನಾವಿ/71/2018-19, ದಿ: 17-07-2018.

ಪ್ರಸ್ತಾವನೆ :

ರಾಜ್ಯದಲ್ಲಿ ಸ್ನಾತಕೋತ್ತರ ಪದವಿ & ಡಿಪ್ಲೊಮಾ ವ್ಯಾಸಂಗ ಪೂರ್ಣಗೊಳಿಸುವ ವಿದ್ಯಾರ್ಥಿಗಳು ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಅಧಿನಿಯಮ, 2012 & ತಿದ್ದುಪಡಿ ಅಧಿನಿಯಮ, 2017 ರನ್ವಯ 01 ವರ್ಷದ ಕಡ್ಡಾಯ ಸೇವೆ ಮಾಡಬೇಕಾಗಿರುತ್ತದೆ.

ಮೇಲೆ ಓದಲಾದ (1) ರ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಪತ್ರದಲ್ಲಿ ಸ್ನಾತಕೋತ್ತರ ಪದವಿ & ಡಿಪ್ಲೊಮಾ ವ್ಯಾಸಂಗ ಪೂರ್ಣಗೊಳಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋಗಲು ಇಚ್ಚಿಸುವ ವಿದ್ಯಾರ್ಥಿಗಳಿಗೆ 30 ಲಕ್ಷಗಳ ಬ್ಯಾಂಕ್ ಗ್ಯಾರಂಟಿಯನ್ನು ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯಕ್ಕೆ ಕೊಟ್ಟು 01 ವರ್ಷದ ಕಡ್ಡಾಯ ಸೇವೆ ಮಾಡಿದ ನಂತರ ಸದರಿ ಬ್ಯಾಂಕ್ ಗ್ಯಾರಂಟಿಯನ್ನು ಹಿಂಪಡೆಯಬಹುದೆಂದು ತಿಳಿಸಲಾಗಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೦, ೨೦೧೮ ೧೧೦೧

ಮುಂದುವರೆದು, 2015-16 ನೇ ಸಾಲಿನಲ್ಲಿ ಸ್ನಾತಕೋತ್ತರ ಪದವಿ ಕೋರ್ಸುಗಳಿಗೆ ಹಾಗೂ 2016-17 ನೇ ಸಾಲಿನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸಿಗೆ ಪ್ರವೇಶಾತಿ ಹೊಂದಿದ ವಿದ್ಯಾರ್ಥಿಗಳು ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಪೂರ್ಣಗೊಳ್ಳಲಿದ್ದು, ಸದರಿ ವಿದ್ಯಾರ್ಥಿಗಳಿಗೆ ಹಾಗೂ ಮುಂಬರುವ ವರ್ಷಗಳಲ್ಲಿ ವ್ಯಾಸಂಗ ಪೂರ್ಣಗೊಳಿಸುವ ಸ್ನಾತಕೋತ್ತರ ಪದವಿ, ಡಿಪ್ಲೊಮಾ & ಸೂಪರ್ ಸ್ಪೆಷಾಲಿಟಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದಲ್ಲಿ ಕೆಲವು ನಿಬಂಧನೆಗಳನ್ನು ಪ್ರಮಾಣ ಪತ್ರದಲ್ಲಿ ಪ್ರಮಾಣೀಕರಿಸಿ, ಅವರಿಂದ ಪಡೆಯಬಹುದಾದ ಅಫಿಡವಿಟ್ ಅನ್ನು ಲಗತ್ತಿಸಿ ಕಳುಹಿಸುತ್ತಾ, ಸದರಿ ಅಫಿಡವಿಟ್ ಅನ್ನು ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರ ಕಛೇರಿಗೆ ಸಲ್ಲಿಸಿ, ಮೂಲ ದಾಖಲಾತಿಗಳನ್ನು ನೀಡುವ ಬಗ್ಗೆ ಸರ್ಕಾರದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.

ಆದ್ದರಿಂದ ವಿಷಯವನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿದ್ದು, 2017-18 ನೇ ಸಾಲಿನಲ್ಲಿ ಹಾಗೂ ಮುಂಬರುವ ವರ್ಷಗಳಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೊಮಾ & ಸೂಪರ್ ಸ್ಪೆಷಾಲಿಟಿ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಿದಲ್ಲಿ ಕೆಲವು ನಿಬಂಧನೆಗಳನ್ನು ಪ್ರಮಾಣ ಪತ್ರದಲ್ಲಿ ಪ್ರಮಾಣೀಕರಿಸಿ, ಅವರಿಂದ ಪಡೆಯಬಹುದಾದ ಅಫಿಡವಿಟ್ ಅನ್ನು ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರ ಕಛೇರಿಗೆ ಸಲ್ಲಿಸಿದ ನಂತರ ಸಂಬಂಧಪಟ್ಟ ಸಂಸ್ಥೆಗಳು ಮೂಲ ದಾಖಲಾತಿಗಳನ್ನು ವಿದ್ಯಾರ್ಥಿಗಳಿಗೆ ನೀಡಲು ಸರ್ಕಾರವು ತೀರ್ಮಾನಿಸಿ, ಈ ಕೆಳಗಿನಂತೆ ಆದೇಶವನ್ನು ಹೊರಡಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 223 ಆರ್‌ಜಿಯು 2018, ಬೆಂಗಳೂರು, ದಿ: 18-07-2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2017-18 ನೇ ಸಾಲಿನಲ್ಲಿ ಹಾಗೂ ಮುಂಬರುವ ವರ್ಷಗಳಲ್ಲಿ ಸ್ನಾತಕೋತ್ತರ ಪದವಿ, ಡಿಪ್ಲೊಮಾ & ಸೂಪರ್ ಸ್ಪೆಷಾಲಿಟಿ ವ್ಯಾಸಂಗವನ್ನು ಪೂರ್ಣಗೊಳಿಸಿ, ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಂದ ಈ ಆದೇಶದೊಂದಿಗೆ ಲಗತ್ತಿಸಿರುವ ನಮೂನೆಯಲ್ಲಿ ಪ್ರಮಾಣೀಕರಿಸಿದ ಅಫಿಡವಿಟ್ ಅನ್ನು ನಿರ್ದೇಶಕರು, ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು ಇವರು ಪಡೆದು ಮೂಲ ದಾಖಲಾತಿಗಳನ್ನು ನೀಡಲು ಸಂಬಂಧಪಟ್ಟ ವೈದ್ಯಕೀಯ ಕಾಲೇಜುಗಳಿಗೆ ನಿರ್ದೇಶನ ನೀಡಲು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ಮುರಳಿ

ಸರ್ಕಾರದ ಅಧೀನ ಕಾರ್ಯದರ್ಶಿ-2,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.(ವೈದ್ಯಕೀಯ ಶಿಕ್ಷಣ)

AFFIDAVIT

(20/- Stamp paper)

I Dr.________ aged about ______ years, S/o._______________________, Residing at__________________________ Karnataka, do here by solemnly affirm and state on oath as follows:-

1. I State that I am a doctor, I have completed _________________(Subject), from ………………………………………….

institute, Karnataka, affiliated to Rajiv Gandhi University of Health Science, Karnataka.

2. I State that I am swearing to this affidavit pursuant to the order dated 12.07.2018 passed in W.P. No. 29161/2018 by the Hon'ble High court of Karnataka at Bangalore, wherein the Bangalore Medical College and Research Institute is directed to return all the Original documents subject to me filling an affidavit before the Bangalore Medical College and Research Centre as has been submitted in W.P. No. 40566/2015 and W.P. No. 25391/2016, here this affidavit.

3. I am aware of Karnataka Compulsory Service training by candidates completed medical courses act, 2012 (hereinafter, the "impugned Act") and the amendments there to together with rules passed there under by the Karnataka state legislature.

4. I state that the Honorable High Court, Karnataka, Bangalore vide its order dated: 06-10-2015 in W.P. No. 40566/2015 and Connected matters as stayed the operation of the impugned act and also all the further proceedings, orders, action, notification including the rules etc., pursuant the said act.

5. I further submit that, the Hon'ble High Court of Karnataka vide its order dated: 28-04-2016, in W.P. No. 25391/2016, has directed the concerned universities to issue appropriate degrees to the eligible candidates. Further, the Hon'ble court has directed the Karnataka Medical Council, to brand registration certificates to the eligible doctors/ students. Subject to the result of the aforementioned writ petition, contingent upon the said candidates / Doctors, filing an affidavit before the Karnataka Medical Council that they will abide by the order, which may be passed in W.P. No. 40566/2015. And conducted matters without demur i.e. to comply with the Provisional of the impugned Act (Karnataka Act No. 26 of 2015) in the event of failure in the aforementioned writ petition.

6. I further submit that, certain writ petitions are filed before Honorable High Court of Karnataka and there is an order of stay on further proceeding subject to the condition that candidate have to file an undertaking through affidavit that in case writ petitions were to be dismissed that they have to bound by the conditions of the Act.

7. I submit that I will be bound by the provisions of the Act, amendment of 11 July 2017, in case the writ petitions were to be dismissed by Honorable High Court of Karnataka.

8. I am aware as per the amendments to the Act 11 July (The Karnataka Service Training by the candidates completed Medical course Act 2017) that I am entitled to temporary registration.

೧೧೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೦, ೨೦೧೮ ಭಾಗ ೧ 9. I am aware that I am not eligible for permanent in registration Karnataka Medical Council until I complete one year

Compulsory Service after I graduate from my super specialty course.

10. I state that I am liable to pay fine of `.30 lakhs (Thirty lakhs rupees only) if any violation the amended act.

Verification

This is to verify that the contents of this Affidavit are true to the best of my Knowledge, information and belief.

Verified at Bangalore on this ________day of July 2018.

Deponent

Sworn to Before Me

Place: Bengaluru

Date:

Medical: Reg. No______________

Mobile. No.___________________

Email.ID____________________

Aadhar No.__________________

Witness parents: 1.

2.

Identified Me

Advocate

PR-500

SC- 25

ಕಂದಾಯ ಸಚಿವಾಲಯ

ಸೇರ್ಪಡೆ ಆದೇಶ

ಸಂಖ್ಯೆ: ಕಂಇ 54 ಮುಸೇವಿ 2017, ಬೆಂಗಳೂರು, ದಿನಾಂಕ: 07.11.2018.

ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 54 ಮುಸೇವಿ 2017, ದಿನಾಂಕ:06.07.2018ರಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯದ ನೌಕರರ ವೇತನ ಶ್ರೇಣಿ ಕುರಿತು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು, 2002ರ ನಿಯಮ 8ಕ್ಕೆ ತಿದ್ದುಪಡಿ ತರುವ ಸಂಬಂಧ ಅಧ್ಯಯನ ಮಾಡಿ, ಚರ್ಚಿಸಿ ನಿಯಮ 8ಕ್ಕೆ ಸೂಕ್ತ ತಿದ್ದುಪಡಿ ಮಾಡಲು ಕರಡು ನಿಯಮದ ಪ್ರಸ್ತಾವನೆ ಸಲ್ಲಿಸಲು ಆಯುಕ್ತರ ಅಧ್ಯಕ್ಷತೆಯಲ್ಲಿ ಕೆಲವೊಂದು ಅಂಶಗಳ ಹಾಗೂ ಸಮಿತಿಯ ಗಮನಕ್ಕೆ ಬರುವಂತಹ ಇನ್ನಿತರೇ ಲೋಪ-ದೋಷಗಳ ಕುರಿತು ಚರ್ಚಿಸಿ, ಒಂದು ತಿಂಗಳೊಳಗಾಗಿ ಪ್ರಸ್ತಾವನೆಯನ್ನು ಸಲ್ಲಿಸುವಂತೆ 07 ಜನ ಅಧಿಕಾರಿಗಳನ್ನೊಳಗೊಂಡಂತೆ ಸಮಿತಿ ರಚಿಸಿ ಆದೇಶಿಸಲಾಗಿರುತ್ತದೆ.

ಸರ್ಕಾರದಿಂದ ರಚಿಸಲಾಗಿರುವ ಸಮಿತಿಗೆ ಆಯಾಯ ವಲಯದ ಮಾಹಿತಿ ಸಂಗ್ರಹಿಸಲು ಅನುಕೂಲವಾಗುವಂತೆ ವಿಷಯ ಪರಿಣತಿ ಹೊಂದಿರುವ ಈ ಕೆಳಕಂಡ ಅಧಿಕಾರಿಗಳನ್ನು ಸದರಿ ಸಮಿತಿಗೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ.

1. ಶಿ ೕ ಹೆಚ್.ಎಂ. ಕುಮಾರಸ್ವಾಮಿ, ಕಾರ್ಯನಿರ್ವಾಹಕ ಅಧಿಕಾರಿ, ್ರ ಶಿ ೕ ಶ್ರೀಕಂಠೇಶ್ವರಸ್ವಾಮಿ ದೇವಾಲಯ, ನಂಜನಗೂಡು, ಮೈಸೂರು ಜಿಲ್ಲೆ ್ರ ಸ ದ ಸ ್ಯರು
2. ಶಿ ೕ ಸೈದಪ್ಪ ಚಂದಪ್ಪ ಕೊಟಾರಗಸ್ತಿ, ಕಾರ್ಯನಿರ್ವಾಹಕ ಅಧಿಕಾರಿ. ್ರ ಶಿ ೕ ರೇಣುಕಾ ಯಲ್ಲಮ್ಮ ದೇವಿ ದೇವಾಲಯ, ಸವದತ್ತಿ ತಾಲ್ಲೂಕು, ಬೆಳಗಾವಿ ಜಿಲ್ಲೆ ್ರ ಸ ದ ಸ ್ಯರು

PR-494

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ.ಎಸ್. ನಾಗರತ್ನಮ್ಮ

SC-25

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 84 ಮುಆಬಿ 2018, ಬೆಂಗಳೂರು, ದಿನಾಂಕ: 09-11-2018.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ, 1997ರ ಕಲಂ 23(ಸಿ)ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, "ದಕ್ಷಿಣ ಕನ್ನಡ ಜಿಲ್ಲೆ, ಬಟ್ಟಾಳ ತಾಲ್ಲೂಕು, ಸರಪಾಡಿ ಗ್ರಾಮದ ಶ್ರೀ ಶರಭೇಶ್ವರ ದೇವಸ್ಥಾನ" ವನ್ನು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಗಳ ಪಟ್ಟಿಗೆ ಸೇರ್ಪಡೆಗೊಳಿಸಿ ಆದೇಶಿಸಿದೆ.

PR-495

SC-25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಬಿ.ಎಸ್. ನಾಗರತ್ನಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ. (ಮುಜರಾಯಿ)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೦, ೨೦೧೮ ೧೧೦೩ REVENUE SECRETARIAT Sub : Withdrawing the services of the Administrator from Sri Vyasaraja Mutt (Sosale).

Reference : (1) Government Order No.RD 67 MUDAPRA 2002, dated:26.05.2012

(2) Government Order No.RD 34 MUSEVI 2014, dated:24.05.2014

(3) Government Order No.RD 34 MUSEVI 2014, dated:21.05.2015

(4) Government Order No.RD 34 MUSEVI 2014 (P), dated:17.05.2016

(5) Government Order No.RD 34 MUSEVI 2014 (P), dated:17.05.2017

(6) The Administrator, Sri Vyasaraja Mutt (Sosale) Bangalore Letter No. ADM/22/SVM/2012 dated:21.05.2018

PREAMBLE :

The Government of Karnataka had decided and ordered to take over the management and properties with all assets, both moveable and immovable, records, accounts, funds of Sri Vyasaraja Mutt (Sosale) and all its attendant branches located in various parts of the Country vide order at reference (1) above and had appointed Sri K.Jairaj, IAS., (now Retd.), the then Additional Chief Secretary to Government of Karnataka, as Administrator. The Government of Karnataka had also appointed an Advisory Committee of eminent personalities consisting of Justice M.N.Venkatachalaiah, former Chief Justice of India, Hon'ble Justice S.R.Venkatesha Murthy, former Judge, High Court of Karnataka and others to guide the Administrator in day to day affairs of the Mutt. The Administrator accordingly took charge of the affairs of the Mutt on 26.5.2012 vide reference (1) above. Subsequently, the term of the Administrator was extended from time to time vide reference (2) (3) (4) & (5) above and the last extension was up to 25.5.2018.

In his letter vide reference (6) above, the Administrator, has sent a report to the Government that, in a recent development, in July 2017, Sri Vidya Manohara Thirtha, the Peetadhipathi of Sri Vyasaraja Mutt (Sosale) had relinquished the Peeta of Sri Vyasaraja Mutt (Sosale) and in a function held at Tirumakoodalu on 2.7.2017 he handed over the Peeta to one Dr.D.Prahladachar, who ascended the Peeta as 41st Peetadhipathi of the Mutt by name Sri Vidya ShreeshaThirthaSwamiji.

During the Administrator's regime, the Mutt system was streamlined with proper financial management, computerized accounting, vigorous internal and external audit, careful development of resources and expenditure control. It is reported that, after a 6 year term as Administrator of Sri Vyasaraja Mutt (Sosale), he has handed over the charge to the Peetadhipathi, Sri Vidya ShreeshaThirtharu upon conclusion of the term on 25.5.2018.

The proposal sent by Sri K.Jairaj, Administrator, to the Government has been examined and noted that, after approval of the Government, Sri K Jairaj was appointed as the Administrator and he has took over the charge as Administrator on 26.5.2012. It is observed that, while handing over the administrative charge to Sri Vidya ShreeshaThirtharu, he has not obtained the prior approval of the Government:

Government Order No.RD 34 MUSEVI 2014, Bengaluru, dated:06.09.2018

In view of the circumstances explained and as per the orders of the Government Sri K.Jairaj, IAS. (Retd.)served as Administrator of Sri Vyasaraja Mutt (Sosale) from 26.5.2012 to 25.5.2018 for a period of 6 years and has reported that he has handed over the charges to the Peetadhipathi, Sri Vyasaraja Mutt (Sosale) and as such the term of the Administrator comes to an end on 25.5.2018.

PR-496

By Order and in the name of the Governor of Karnataka,

B.S. Nagarathnamma

SC-25

Under Secretary to Government

Revenue Department (Muzarai)

ಕಂದಾಯ ಸಚಿವಾಲಯ

ವಿಷಯ:- ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲ್ಲೂಕು, ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯವನ್ನು ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು, ಶ್ರೀ ರಾಮಚಂದ್ರಾಪುರ ಮಠದ ವಶಕ್ಕೆ ಹಿಂದಿರುಗಿಸುವ ಕುರಿತು.

ಓದಲಾಗಿದೆ:- (1) ಸರ್ಕಾರದ ಆದೇಶ ಸಂಖ್ಯೆ:ಕಂಇ 77 ಮುಸೇವಿ 2003 ದಿನಾಂಕ:30.04.2003 (2) ಸರ್ಕಾರದ ಆದೇಶ ಸಂಖ್ಯೆ:ಕಂಇ 56 ಮುಆಬಿ 2008 ದಿನಾಂಕ:12.08.2008

(3) ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾದ ರಿಟ್ ಅರ್ಜಿ ಸಂಖ್ಯೆ:30609/2008ರಲ್ಲಿ

ದಿನಾಂಕ:10.08.2018ರಂದು ನೀಡಿರುವ ತೀರ್ಪು

(4) ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಎಸ್.ಎಲ್.ಪಿ.ಸಂಖ್ಯೆ:24015-24020/2018 ರಲ್ಲಿ

ದಿನಾಂಕ:07.09.2018ರಂದು ನೀಡಿರುವ ತೀರ್ಪು

(5) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ:ಎಡಿಎಂ/08/ಸಿಆರ್/40/2018-19,

ದಿನಾಂಕ:10.09.2018 ಮತ್ತು 11.09.2018.

೧೧೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೦, ೨೦೧೮ ಭಾಗ ೧

(6) ಮಾನ್ಯ ಅಡ್ವೋಕೇಟ್ ಜನರಲ್ ಇವರ ಸಂಖ್ಯೆ:105/ಎಜಿಪಿ/ 2018-19, ದಿನಾಂಕ:18.09.2018ರಂದು

ನೀಡಿರುವ ಅಭಿಪ್ರಾಯ.

(7) ಸರ್ಕಾರದ ಆದೇಶ ಸಂಖ್ಯೆ:ಕಂಇ 78 ಮುಆಬಿ 2018 ದಿನಾಂಕ:18.09.2018

(8) ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ನಿಂದನಾ ಅರ್ಜಿ ಸಂಖ್ಯೆ:1904-1909/2018ರಲ್ಲಿ ದಿನಾಂಕ:01.11.2018ರಂದು ನೀಡಿರುವ ತೀರ್ಪು

(9) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ:ಎಡಿಎಂ/08/ಸಿಆರ್/40/2018-19,

ದಿನಾಂಕ:02.11.2018

ಪ್ರಸ್ತಾವನೆ :-

ಮೇಲೆ ಓದಲಾದ (1)ರಲ್ಲಿ ಸರ್ಕಾರದ ಅಧಿಸೂಚನೆ ದಿನಾಂಕ:30.04.2003ರಲ್ಲಿ ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲ್ಲೂಕು, ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯವನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯ ಪುಟ ಸಂಖ್ಯೆ:734 ಕ್ರಮ ಸಂಖ್ಯೆ:92ರಲ್ಲಿ ಪ್ರಕಟಗೊಂಡಿರುತ್ತದೆ.

ಮೇಲೆ ಓದಲಾದ (2)ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಸೆಕ್ಷನ್ 1(4)(i) ರ ಪ್ರಕಾರ "ಒಂದು ಮಠಕ್ಕೆ ಅಥವಾ ಅದಕ್ಕೆ ಸೇರಿದ ಒಂದು ದೇವಸ್ಥಾನಕ್ಕೆ ಈ ಕಾಯ್ದೆಯು ಅನ್ವಯಿಸತಕ್ಕದ್ದಲ್ಲ" ಎಂದಿರುವುದರಿಂದ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 77 ಮುಸೇವಿ 2003 ದಿನಾಂಕ:30.4.2003 ರಲ್ಲಿನ ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲ್ಲೂಕಿನ ಅಧಿಸೂಚಿತ ಸಂಸ್ಥೆಗಳ ಪಟ್ಟಿಯ ಪುಟ ಸಂಖ್ಯೆ 734 ಕ್ರಮ ಸಂಖ್ಯೆ 92 ರಲ್ಲಿನ ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲ್ಲೂಕು, ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನ ಮತ್ತು ಅದರ ಪರಿವಾರ ದೇವರುಗಳ ದೇವಸ್ಥಾನಗಳನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಿಂದ ಹೊರತುಪಡಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ (3)ರಲ್ಲಿ ಸರ್ಕಾರದ ದಿನಾಂಕ:12.08.2008ರ ಆದೇಶವನ್ನು ಪ್ರಶ್ನಿಸಿ, ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕರು, ಭಕ್ತಾದಿಗಳು ಹಾಗೂ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಆಡಳಿತವನ್ನು ಬಿ,ಪಿ,ಟಿ. ಕಾಯ್ದೆಯಡಿಯಲ್ಲಿ ನಿರ್ವಹಿಸುತ್ತಿದ್ದ ಮೊಕ್ತೇಸರರ ವಾರಸುದಾರರು ಮಾನ್ಯ ಉಚ್ಛ ನ್ಯಾಯಾಲಯದಲ್ಲಿ ಹಲವಾರು ರಿಟ್ ಅರ್ಜಿಗಳನ್ನು (ರಿಟ್ ಅರ್ಜಿ ಸಂ:30609/2008 ಹಾಗೂ ಇತರ ರಿಟ್ ಅರ್ಜಿಗಳು) ದಾಖಲ್ಮಾಡಿದ್ದು, ಸದರಿ ರಿಟ್ ಅರ್ಜಿಗಳನ್ನು ಒಟ್ಟುಗೂಡಿಸಿ, ಮಾನ್ಯ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ದಿನಾಂಕ:10.08.2018ರಂದು ಇತ್ಯರ್ಥ ಪಡಿಸಿ ಸರ್ಕಾರದ ಪ್ರಶ್ನಿತ ಆದೇಶ ದಿನಾಂಕ:12.08.2008 ಅನ್ನು ರದ್ದುಪಡಿಸಿರುತ್ತದೆ ಹಾಗೂ ಪ್ರಶ್ನಿತ ಸದರಿ ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ ಜಿಲ್ಲಾಧಿಕಾರಿ, ಉತ್ತರ ಕನ್ನಡ ಜಿಲ್ಲೆ ಇವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಉಪ ವಿಭಾಗಾಧಿಕಾರಿ, ಕುಮಟ ಉಪವಿಭಾಗ ಇವರುಗಳನ್ನೊಳಗೊಂಡ ಮೇಲ್ವಿಚಾರಣಾ (Overseenig Committe) ಸಮಿತಿಯನ್ನು ರಚಿಸಿರುತ್ತದೆ ಹಾಗೂ ಸದರಿ ಸಮಿತಿಗೆ ದೇವಸ್ಥಾನದ ಉಪಾಧಿವಂತ ಮಂಡಳಿಯಿಂದ ಇಬ್ಬರು ಸದಸ್ಯರನ್ನು ಜಿಲ್ಲಾಧಿಕಾರಿಯವರು ಸರ್ಕಾರದ ಸಮಾಲೋಚನೆಯೊಂದಿಗೆ ನಾಮ ನಿರ್ದೇಶನ ಮಾಡುವಂತೆ ಹಾಗೂ ಇಬ್ಬರು ಗಣ್ಯವ್ಯಕ್ತಿಗಳು/ ವಿದ್ವಾಂಸರುಗಳನ್ನು ಸರ್ಕಾರವು ಉಸ್ತುವಾರಿ ಸಮಿತಿಗೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡುವಂತೆ ನಿರ್ದೇಶನ ನೀಡಿರುತ್ತದೆ ಹಾಗೂ ಸದರಿ ಮೇಲ್ಚಿಚಾರಣಾ ಸಮಿತಿಗೆ ಸಲಹೆಗಾರರನ್ನಾಗಿ ಮಾನ್ಯ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಬಿ.ಎನ್. ಶ್ರೀಕೃಷ್ಣ ರವರನ್ನು ನೇಮಕ ಮಾಡಿರುತ್ತದೆ.

ಮುಂದುವರೆದು ಸದರಿ ಅಂತಿಮ ತೀರ್ಪಿನ ಘೋಷಣೆ ನಂತರ ಮಾನ್ಯ ಉಚ್ಚ ನ್ಯಾಯಾಲಯವು ಈ ಕೆಳಗಿನಂತೆ ಮಧ್ಯಂತರ ಆದೇಶವನ್ನು ನೀಡಿರುತ್ತದೆ:-

"After pronouncement of order, learned Senior Counsel appearing for respondents sought stay of the order passed by this

Court.

The same has, however, been opposed by the learned Senior Counsel as well as other Counsel appearing for the

petitioners.

Although, we have directed that the arrangement by way of Constitution of a Committee known as "Overseeing

Committee" be made forthwith, having regard to the submissions made by learned Senior Counsel for the Petitioners,

we direct that the arrangement with regard to constitution of Overseeing Committee would take effect from 10th September,

2018."

ಮೇಲೆ ಓದಲಾದ (4)ರಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ ದಿನಾಂಕ:10.08.2018ರ ತೀರ್ಪಿನ ವಿರುದ್ದ ಶ್ರೀ ರಾಮಚಂದ್ರಪುರ ಮಠದವರು ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಿಸಿರುವ ಎಸ್.ಎಲ್.ಪಿ. ಸಂಖ್ಯೆ:24015-20/2018 ರಲ್ಲಿ ದಿನಾಂಕ:07.09.2018ರಂದು ಈ ಕೆಳಕಂಡಂತೆ ಮಧ್ಯಂತರ ಆದೇಶವನ್ನು ನೀಡಲಾಗಿರುತ್ತದೆ;-

"Issue notice, fixing a returnable date within eight weeks."

The interim order passed by the High Court on 10.08.2018 after pronouncement of the final judgment shall continue,

in the meantime."

ಮೇಲೆ ಓದಲಾದ (5)ರಲ್ಲಿ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರಗಳಲ್ಲಿ, ಪ್ರಸ್ತಾಪಿತ ದೇವಾಲಯವನ್ನು ಶ್ರೀ ರಾಮಚಂದ್ರಾಪುರ ಮಠದ ವತಿಯಿಂದ ಸರ್ಕಾರದ ವಶಕ್ಕೆ ಹಿಂಪಡೆಯುವ ಕುರಿತು ಮಾನ್ಯ ಉಚ್ಛ ನ್ಯಾಯಾಲಯದ ದಿನಾಂಕ:10.08.2018ರ ಅಂತಿಮ ತೀರ್ಪಿನ ಘೋಷಣೆಯ ನಂತರ ನೀಡಿರುವ ಮಧ್ಯಂತರ ಆದೇಶ ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯ ನೀಡಿರುವ ದಿನಾಂಕ:07.09.2018ರ ಮಧ್ಯಂತರ ಆದೇಶದ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಕ್ರಮದ ಕುರಿತು ಕೆಲವೊಂದು ಅಂಶಗಳ ಬಗ್ಗೆ ಮಾನ್ಯ ಅಡ್ವೋಕೇಟ್ ಜನರಲ್ ಇವರಿಂದ ಕಾನೂನು ಅಭಿಪ್ರಾಯವನ್ನು ಪಡೆದು ಸರ್ಕಾರದ ಸೂಕ್ತ ನಿರ್ದೇಶನವನ್ನು ನೀಡುವಂತೆ ಕೋರಿರುತ್ತಾರೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೦, ೨೦೧೮ ೧೧೦೫

ಮೇಲೆ ಓದಲಾದ (6)ರಲ್ಲಿ ಮಾನ್ಯ ಅಡ್ವೋಕೇಟ್ ಜನರಲ್ ಇವರು ಈ ಕೆಳಕಂಡಂತೆ ಅಭಿಪ್ರಾಯವನ್ನು ನೀಡಿರುತ್ತಾರೆ:-

"The High Court of Karnataka as per its order dated:10.08.2018 passed in Writ Petition No.30609/2008 and connected Writ Petition has quashed the Government Order dated:12.08.2008 whereby the management of Gokarna temple was transferred to Sri Ramachandrapura Mutt and has further held that Gokarna Temple shall continue to be included in the list of notified institutions as per Section 23 of the Hindu Religious & Charitable Endowment Act, 1997. The High Court has directed constitution of a Committee to be known as 'Overseeing Committee' under the Chairmanship of the Deputy Commissioner, Uttara Kannada District and has directed that the Committee shall ensure that the traditions of the temple are maintained, amenities and facilities are provided to the devotees and the Upadivantas/ Archaks are accredited.

On 10.08.2018 after the above order was passed, on an application filed by the Respondents, the Hon'ble High Court directed that the arrangements with regard to the constitution of the overseeing committee would take effect from 10th September, 2018. The Hon'ble High Court also directed to the Deputy Commissioner of U.K. district, to make an inventory of all the movable and immovable assets within a period of two weeks from the date of the said order.

The Respondents in the Writ Petition filed a Special Leave Petition before the Hon'ble Supreme Court of India.

The Supreme Court has not stayed the order passed by the High Court. Per contra the Supreme Court by its order dated: 07.09.2018 has directed that the interim order passed by the High Court on 10.08.2018 shall continue. The resultant position is that the interim order of the High Court dated:10.08.2018 holds the field. As per the said interim order the Overseeing Committee is to take effect from 10.09.2018, meaning thereby that the Overseeing Committee shall ensure that the traditions of the temple are maintained, amenities and facilities are provided to the devotees and the Upadivantas / Archaks are accredited. This order of the High Court has to be implemented."

ಅದರನ್ವಯ ಓದಲಾದ (7)ರಲ್ಲಿ ಸರ್ಕಾರದ ಆದೇಶದಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ದಿನಾಂಕ:10.08.2018ರ ತೀರ್ಪಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡದೆ ಇರುವುದರಿಂದ, ಮಾನ್ಯ ಉಚ್ಚ ನ್ಯಾಯಾಲಯದ ದಿನಾಂಕ:10.08.2018ರ ಅಂತಿಮ ತೀರ್ಪು ಮತ್ತು ಕರ್ನಾಟಕದ ಮಾನ್ಯ ಅಡ್ವೋಕೇಟ್ ಜನರಲ್ ಇವರು ನೀಡಿರುವ ಅಭಿಪ್ರಾಯದಂತೆ, ಮಾನ್ಯ ಉಚ್ಚ ನ್ಯಾಯಾಲಯವು ನೇಮಿಸಿರುವ ಮೇಲ್ವಿಚಾರಣಾ ಸಮಿತಿಯು (Overseeing Committee) ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲ್ಲೂಕು, ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯ ಮತ್ತು ಅದರ ಪರಿವಾರ ದೇವರುಗಳ ದೇವಾಲಯಗಳ ಸಂಪೂರ್ಣ ಆಡಳಿತವನ್ನು ಸಮಸ್ತ ಚರ-ಸ್ಥಿರ ಆಸ್ತಿಗಳೊಂದಿಗೆ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು, ಶ್ರೀ ರಾಮಚಂದ್ರಾಪುರ ಮಠದಿಂದ ಕೂಡಲೇ ಸರ್ಕಾರದ ವಶಕ್ಕೆ ಪಡೆದು ಆಡಳಿತವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997 ಮತ್ತು ತಿದ್ದುಪಡಿ ಅಧಿನಿಯಮ 2011ರ ನಿಯಮಗಳಡಿ ನಿರ್ವಹಿಸಲು ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ (8)ರಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ನಿಂದನಾ ಅರ್ಜಿ ಸಂಖ್ಯೆ:1904-1909/2018ರ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ:01.11.2018ರಂದು 'After hearing the counsel for the parties, the Court directed that all the documents/ ornaments have to be handed over to the temple/ mutt even taken over by the Executive Officer. All process should be over by MONDAY, 5th November, 2018' ಎಂದು ತೀರ್ಪು ನೀಡಿರುತ್ತದೆ.

ಮೇಲೆ ಓದಲಾದ (9)ರಲ್ಲಿ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲ್ಲೂಕು, ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದ ಆಡಳಿತಕ್ಕೆ ಸಂಬಂಧಿಸಿದಂತೆ ಇದುವರೆವಿಗೆ ಆಗಿರುವ ಘಟನಾವಳಿಗಳನ್ವಯ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ:02.09.2018 ಮತ್ತು 03.10.2018ರ ಮಧ್ಯಂತರ ಆದೇಶಗಳನ್ವಯ ಯಾವ ರೀತಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂಬ ಬಗ್ಗೆ ಸರ್ಕಾರದಿಂದ ಸ್ಪಷ್ಟೀಕರಣ ಕೋರಿ, ಮಾನ್ಯ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ ಮಧ್ಯಾವಧಿ ಅರ್ಜಿ ಹಾಗೂ ಮಧ್ಯಂತರ ಆದೇಶಗಳನ್ನು ಪಾಲಿಸಿಲ್ಲವೆಂದು, ಶ್ರೀ ರಾಮಚಂದ್ರಾಪುರ ಮಠದವರು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲು ಮಾಡಿದ ನಿಂದನಾ ಪ್ರಕರಣ ಸಂಖ್ಯೆ:1904-1909/2018ರ ಮೇಲೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ: 01.11.2018ರಂದು ವಿಚಾರಣೆ ನಡೆಸಿ, ಉಭಯ ಪಕ್ಷಕಾರರ ಪರ ವಕೀಲರ ವಾದವನ್ನು ಆಲಿಸಿ, ನೀಡಿರುವ ಆದೇಶದಲ್ಲಿ ಈಗಾಗಲೇ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯವರು ಪಡೆದುಕೊಂಡಿರುವ ಎಲ್ಲಾ ಆಭರಣಗಳು, ದಾಖಲೆಗಳು ಹಾಗೂ ಎಲ್ಲಾ ಸ್ವತ್ತುಗಳನ್ನು ದಿನಾಂಕ:05.11.2018ರೊಳಗಾಗಿ ಅರ್ಜಿದಾರ ಮಠಕ್ಕೆ ಹಸ್ತಾಂತರಿಸುವಂತೆ ನಿರ್ದೇಶನ ನೀಡಿದ್ದು, ನಿಂದನಾ ಪ್ರಕರಣವನ್ನು ಬಾಕಿ ಇರಿಸಿರುವುದಾಗಿ ತೀರ್ಪನ್ನು ನೀಡಿರುತ್ತದೆ. ಆದುದರಿಂದ ದಿನಾಂಕ: 01.11.2018ರ ಮಧ್ಯಂತರ ಆದೇಶದ ರೀತ್ಯಾ ದಿನಾಂಕ: 05.11.2018ರೊಳಗಾಗಿ ಕ್ರಮ ವಹಿಸಬೇಕಾಗಿರುವುದರಿಂದ ಈ ವಿಚಾರದ ಬಗ್ಗೆ ತ್ವರಿತವಾಗಿ ಮುಂದಿನ ಕ್ರಮ ವಹಿಸುವ ಕುರಿತು ಸರ್ಕಾರದ ನಿರ್ದೇಶನವನ್ನು ನೀಡುವಂತೆ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ಕೋರಿರುತ್ತಾರೆ.

ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 78 ಮುಆಬಿ 2018; ಬೆಂಗಳೂರು, ದಿನಾಂಕ: 02ನೇ ನವೆಂಬರ್ 2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮಾನ್ಯ ಉಚ್ಚ ನ್ಯಾಯಾಲಯದ ದಿನಾಂಕ:10.08.2018ರ ತೀರ್ಪಿಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡದೆ ಇರುವುದರಿಂದ, ಮಾನ್ಯ ಉಚ್ಚ ನ್ಯಾಯಾಲಯದ ದಿನಾಂಕ:10.08.2018ರ ಅಂತಿಮ ತೀರ್ಪು ಮತ್ತು ಕರ್ನಾಟಕದ ಮಾನ್ಯ ಅಡ್ವೋಕೇಟ್ ಜನರಲ್ ಇವರು ನೀಡಿರುವ ಅಭಿಪ್ರಾಯದಂತೆ, ಮಾನ್ಯ ಉಚ್ಚ ನ್ಯಾಯಾಲಯವು ನೇಮಿಸಿರುವ ಮೇಲ್ವಿಚಾರಣಾ ಸಮಿತಿಯು (Overseeing Committee) ಉತ್ತರ ಕನ್ನಡ ಜಿಲ್ಲೆ, ಕುಮಟಾ ತಾಲ್ಲೂಕು, ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯ ಮತ್ತು ಅದರ ಪರಿವಾರ R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೧೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೦, ೨೦೧೮ ಭಾಗ ೧

ದೇವರುಗಳ ದೇವಾಲಯಗಳ ಸಂಪೂರ್ಣ ಆಡಳಿತವನ್ನು ಸಮಸ್ತ ಚರ-ಸ್ಥಿರ ಆಸ್ತಿಗಳೊಂದಿಗೆ ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲ್ಲೂಕು, ಶ್ರೀ ರಾಮಚಂದ್ರಾಪುರ ಮಠದಿಂದ ಕೂಡಲೇ ಸರ್ಕಾರದ ವಶಕ್ಕೆ ಪಡೆದು ಆಡಳಿತವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ 1997 ಮತ್ತು ತಿದ್ದುಪಡಿ ಅಧಿನಿಯಮ 2011ರ ನಿಯಮಗಳಡಿ ನಿರ್ವಹಿಸಲು ಆದೇಶಿಸಲಾಗಿದ್ದ ಸರ್ಕಾರದ ಆದೇಶ ಸಂಖ್ಯೆ:ಕಂಇ 78 ಮುಆಬಿ 2018 ದಿನಾಂಕ:18.09.2018ರ ಆದೇಶವನ್ನು ಹಿಂಪಡೆಯಲಾಗಿದೆ ಹಾಗೂ ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ:01.11.2018ರ ನಿರ್ದೇಶನದನ್ವಯ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯವರು ಪಡೆದುಕೊಂಡಿರುವ ಎಲ್ಲಾ ಆಭರಣಗಳು/ ದಾಖಲೆಗಳು ಮತ್ತು ಎಲ್ಲಾ ಸ್ವತ್ತುಗಳನ್ನು ಶ್ರೀ ರಾಮಚಂದ್ರಾಪುರ ಮಠದ ವಶಕ್ಕೆ ಹಸ್ತಾಂತರಿಸುವಂತೆ ಆದೇಶಿಸಿದೆ.

PR-497

ಕರ್ನಾಟಕ ರಾಜ್ಯಪಾಲರ ಆಜ್ಞಾನುನುಸಾರ ಮತ್ತು ಅವರ ಹೆಸರಿನಲ್ಲಿ, SC-25

ಬಿ.ಎಸ್. ನಾಗರತ್ನಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ. (ಮುಜರಾಯಿ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 20 December 2018. Indian Gazettes, https://egazette.servantsofknowledge.in/details/in.gazette.karnataka_new.2018-12-20.Part-1/. Archive identifier in.gazette.karnataka_new.2018-12-20.Part-1.