Servants of Knowledge
Karnataka Gazette · Government of Karnataka

Karnataka Gazette, Part Part-1, 27 December 2018

Published 27 December 2018

Part
Part-1
Identifier
in.gazette.karnataka_new.2018-12-27.Part-1
Languages
English, Kannada
Published at
Original source ↗

click here for IIIF manifest

ಬೆಂ Ben

ಗಳೂರು, ಗುರು

ngaluru, Thu

ುವಾರ, ಡಿಸೆಂಬ

rsday, Decem

ಬರ್ ೨೭, ೨೦

mber 27, 2018

೧೮ (ಪುಷ್ಯ ೬

8 (Pushya 6, S

೬, ಶಕ ವರ್ಷ ೧

Shaka Varsha

೧೯೪೦)

a 1940)

೫೩

ಸಂಪುಟ ೧೫

3

Volume 153

ಸಂಚಿಕೆ ೫೧

Issue 51

ಭಾಗ ೧

ರಾಜ್ಯ

ಸರ್ಕಾರದ

ುಂತಾದ

ಎಲ್ಲಾ ಇ

ಮುಖ್ಯ ಆದ

ಇಲಾಖೆಗಳಿಗ

ದೇಶಗಳು ಹ

ಗೂ ಸಂಬಂ

ಹಾಗೂ ಸುತ

ಂಧಿಸಿದ ಆದ

ತ್ತೋಲೆ ಮು

ದೇಶಗಳು

ಆಥಿ

ರ್ಥಿಕ ಸಚಿವಾಲ

ಲಯ

ಸುತ್ತೋಲೆ

ಸಂಖ್ಯೆ: ಆ

ಆಇ 6 ಸೇನಿಸೇ 2

018, ಬೆಂಗಳೂರು

ು, ದಿನಾಂಕ: 17/0

09/2018.

ವಿಷಯ

ು: 2018ರ ಪರಿ

ೕಣಿಯು ಜಾರಿಗೆ

ಷ್ಕøತ ವೇತನ ಶ್ರೇ

ಕ್ರಮಗಳನ್ನು ಅನುಸರಿಸುವ ರಾ ಬಂದಿರುವ ಹಿನ್ನೆ

ನ್ನೆಲೆಯಲ್ಲಿ ಕುಟುಂ

ಂಬ ಯೋಜನಾ

ಾಜ್ಯ ಸರ್ಕಾರಿ ನೌಕ

ಕರರಿಗೆ ಉತ್ತೇಜನ ಕುರಿತು ಸ್ಪಷ್ಟೀಕರ ರಣ.

ಉಲ್ಲೇಖ

ದ ಸುತ್ತೋಲೆ ಸಂಖ

ಖ್ಯೆ: ಎಫ್‌ಡಿ 11 ಎ

ಖ: 1. ಸರ್ಕಾರದ 2. ಸರ್ಕಾರದ ದ ಸುತ್ತೋಲೆ ಸಂ ಎಸ್ಆರ್ಎಸ್ 99

9, ದಿನಾಂಕ:14.09

9.1999.

ಖ್ಯೆ: ಆಇ 4 ಸೇನಿ

ಸಣ್ಣ ಕು ುಟುಂಬ ಸೂತ್ರವನ

ನ್ನು ಸರ್ಕಾರಿ ನೌಕ ಕರರಲ್ಲಿ ಉತ್ತೇಜಿಸ ನಿಸೇ 2007, ದಿನಾ

ನಾಂಕ:20.09.200 7.

ಸುವ ಉದ್ದೇಶದಿಂದ

ಸರ್ಕಾರಿ ನೌಕರ ಅಥವಾ ಆತನ ಪತ್ನಿ ಸಂತಾನಹ ಹರಣ ಶಸ್ತ್ರ ಚಿಕಿತ್ಸೆಂ ದ, ಒಂದು ಅಥವ ವಾ ಎರಡು ಜೀವ ವಂತ ಮಕ್ಕಳನ್ನು ಹ ಹೊಂದಿದ ನಂತರ ರ

ಯನ್ನು ಮಾಡಿಸಿಕ

ಬಡ್ತಿಯನ್ನು ವೈಂ ಯಕ್ತಿಕ ವೇತನವಾ

ೂೕಜನೆಯನ್ನು ಸಕ ಕೊಂಡ ಪ್ರಕರಣಗ

ಗಳಲ್ಲಿ ಸರ್ಕಾರಿ ನೌ

ನೌಕರನಿಗೆ ಒಂದು ವಿಶೇಷ ವೇತನ ನ

ರ್ಕಾರಿ ಆದೇಶ ಸ

ಜಾರಿಗೆ ತರಲಾಗಿ

ಗಿದೆ. ಸದರಿ ಆದೆ

ಾಗಿ ನೀಡುವ ಯೊ ದೇಶದ (v)ನೇ ಷ ಷರತ್ತಿನ ಪ್ರಕಾರ, ಈ ಸಂಖ್ಯೆ: ಎಫ್‌ಡಿ 2

27 ಎಸ್ಆರ್ಎಸ್

್ 85, ದಿನಾಂಕ:0

01.10.1985 ರಿಂದ ದ

ಈ ಯೋಜನೆಯ

ವಿಶೇಷ ವೇತನ ಬಡ್ತಿಯ ದರವು

ು ಈ ಸೌಲಭ್ಯವನ

ನ್ನು ವಿಸ್ತರಿಸುವ ಮೇರೆಗೆ ವೈಯಕ್ತಿ ಕ್ತಿಕ ವೇತನ ರೂಪ ಪದಲ್ಲಿ ಮಂಜೂರ ರು ಮಾಡಲಾಗುವ ವ

ದಿನಾಂಕದಂದು

ವೇತನಬಡ್ತಿ ದರ

ರಕ್ಕೆ ಸಮನಾಗಿರತಕ

ಕ್ಕದಾಗಿದ್ದು, ನೌಕರ ರನ ಸಂಪೂರ್ಣ ಸರ್ಕಾರಿ ನೌಕರನ ನು ಪಡೆಯಲು ಅ ಅರ್ಹನಿರುವ ಮು

ುುಂದಿನ ವಾರ್ಷಿಕ ಕ

ಸೇವಾವಧಿಯಲ್ಲಿ

ಮತ್ತು ವೇತನದ

ದಲ್ಲಿನ ಯಾವುದೇ

ೕ ಹೆಚ್ಚಳ ಅಥವ

ವಾ ಉನ್ನತ ಹು ್ಲ ಈ ಬಡ್ತಿಯ ದ ದರವು ಖಾಯಂ ಆಗಿ ನಿಗದಿಯಾ ಗತಕ್ಕದ್ದಾಗಿರುತ್ತದೆ.

.

ುದ್ದೆಗೆ ಮುಂಬಡ್ತಿ

ತಿಳಿಸಲಾಗಿದೆ.

ಕ:01.07.2017 ರಿ ಂದ ದಿನಾಂಕ:31. 03.2018ರ ಅವದಿ ್ತ ಇತ್ಯಾದಿ ಯಾ ಾವುದೇ ಕಾರಣದಿ

ದಿಂದಾಗಿ ಬದಲಾ ಾಗತಕ್ಕುದ್ದಲ್ಲವೆಂದು

ು

ಧಿಯಲ್ಲಿ ಮಿತ ಕು

ದಿನಾಂಕ

ಯೋಜನೆಯಡಿಂ ಯಲ್ಲಿ ವೈಯಕ್ತಿಕ ವೇತನ ರೂಪದ ಲ್ಲಿ ನೀಡಲಾಗುವ ುಟುಂಬ ಯೋಜನ ನಾ ಕ್ರಮವನ್ನು ಅ ಅಳವಡಿಸಿಕೊಂಡ ಪ್ರಕರಣಗಳಲ್ಲಿ ಈ

ಈ

ವಿಶೇಷ ವೇತನ

ಪರಿಷ್ಕøತ ವೇತನ ನ ಶ್ರೇಣಿಯ ದರದ ದಲ್ಲಿ ಮಂಜೂರು ಮಾಡಬೇಕೆ? ಎಂ ಬಡ್ತಿಯನ್ನು 20 012ರ ವೇತನ ಶ್ರೇ ೕಣಿಯ ದರದಲ್ಲಿ ಅಥವಾ 2018ರ ರ

ಂಬ ಬಗ್ಗೆ ಸ್ಪಷ್ಟೀಕರ

6ನೇ ವ ವೇತನ ಆಯೋಗದ ದ ಶಿಫಾರಸ್ಸಿನಂತೆ ಜಾರಿಗೆ ಬಂದಿರು ರಣವನ್ನು ಕೋರಲ

ಲಾಗುತ್ತಿದೆ.

ುವ ವೇತನ ಶ್ರೇಣ

ಶ್ರೇಣಿಗಳ ಪರಿಷ್ಕ ್ಕರಣೆಯ ಆರ್ಥಿಕ ಸೌಲಭ್ಯವು 1ನೇ ಏಪ್ರಿಲ್, 2018 ಣಿಗಳು 01.07.201

17 ರಿಂದ ಕಾಲ್ಪನಿ ಕವಾಗಿ ಜಾರಿಗೆ ಬ ಬಂದಿದ್ದು, ವೇತನ ನ

ರಿಂದ ಲಭ್ಯವಾಗ

ಅವಧಿಗೆ ಪರಿಷ್ಕø øತ ಶ್ರೇಣಿಯಲ್ಲಿನ ವೇತನ ನಿಗಧಿಯಿ

ುಂದಾಗಿ ಅಥವಾ ಗುತ್ತದೆ. ಅಲ್ಲದೆ, ದಿ

ದಿನಾಂಕ:01.07.20

017 ರಿಂದ 31.03 3.2018 ರವರೆಗಿನ ನ

ಪುನರ್ ನಿಗಧಿ¬

ಬಾಕಿಗೆ ಯಾವುದ ದೇ ಸರ್ಕಾರಿ ನೌಕ ಕರನು ಅರ್ಹನಾಗಿ

ಗಿರುವುದಿಲ್ಲ.

ಈ ಹಿನ

ನ್ನೆಲೆಯಲ್ಲಿ, 01.07

7.2017 ರಿಂದ 31 .03.2018ರ ಅವ ಯಿಂದಾಗಿ ವೇತನ ಮತ್ತು ಭತ್ಯೆಗಳ ಮತ್ತು ನಿವೃತ್ತಿ ವ ವೇತನದ ಆರ್ಥಿಕ ಕ

ಧಿಯಲ್ಲಿ ಮಿತ ಕು

ಯೋಜನೆಯಡಿಂ ಯಲ್ಲಿ ವೈಯಕ್ತಿಕ ವೇತನ ರೂಪದ

ದಲ್ಲಿ ನೀಡಲಾಗುವ ುಟುಂಬ ಯೋಜ ನಾ ಕ್ರಮವನ್ನು ಅ ಅಳವಡಿಸಿಕೊಂಡ ಪ್ರಕರಣಗಳಲ್ಲಿ ಈ

ಈ

ವಿಶೇಷ ವೇತನ

ವಾರ್ಷಿಕ ವೇತನ ನ ಬಡ್ತಿಯ ದರದ

ದಲ್ಲಿ ಕಾಲ್ಪನಿಕವಾ

ವಾಗಿ ನಿಗದಿಪಡಿಸತ ನ ಬಡ್ತಿಯನ್ನು 2 018ರ ಪರಿಷ್ಕøತ ವೇತನ ಶ್ರೇಣಿಯ

ುಲ್ಲಿ ಲಭ್ಯವಾಗುವ ವ

ತಕ್ಕದು. ಆದರೆ ಈ

ಆರ್ಥಿಕ ಸೌಲಭ್ಯ

ಬ್ಯವು 1ನೇ ಏಪ್ರಿಲ್

್, 2018 ರಿಂದ ಲಭ್ಯವಾಗುತ್ತದೆ.

ಈ ಯೋಜನೆಯಲಿ

ಲ್ಲಿ ಮಂಜೂರು ಮಾಡುವ ವೈಯ

ುಕ್ತಿಕ ಬಡ್ತಿ ದರದ ದ

ದಿ: 01/07/201

ಯೋಜನಾ ಕ್ರಮ ುಗಳನ್ನು ಅನುಸರಿ ರಿಸುವ ನೌಕರರು ಪರಿಷ್ಕøತ ವೇತನ 17 ರಿಂದ ದಿ:31/

/03/2018 ರವರೆಗಿ

ಗಿನ ಅವಧಿಯಲ್ಲಿ ಸಣ್ಣ ಕುಟುಂಬ

ನ ಶ್ರೇಣಿ 2018ರ

ಪರಿಗಣನೆಗೆ ಅ ಅರ್ಹರಾದರೂ ಸ ಸಹ, ದಿ:01/07/

/2017ರಿಂದ ದಿ:3 ಸಂವಾದಿ ಕಾಲ್ಪನಿ

ನಿಕವಾಗಿ ಹೊಸವ ವೇತನ ಶ್ರೇಣಿ ಸಂ

ಂವಾದಿ ಸೌಲಭ್ಯದ ದ

31/03/2018 ರ

ಪರಿಗಣನೆಯನ್ನು

್ನ ಪೂರ್ವ ಪರಿ

ರಿಷ್ಕøತ ವೇತನ ಶ್ರೇಣಿ 2012 ರವರೆಗಿನ ಅವಧಿ ಗೆ ಸಂಬಂಧಿಸಿದ ದ ಆರ್ಥಿಕ ಸೌ ೌಲಭ್ಯದ ಪಾವತಿ

ತಿ

ಸಂವಾದಿ ಅಂದ

ರೆ 2012ರ ಪ ರಿಷ್ಕøತ ವೇತನ ಶ್ರೇಣಿಗನುಸಾರವ

ವಾಗಿ ಪಡೆಯಲು

ು

(೧೧೦೭)

೧೧೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೭, ೨೦೧೮ ಭಾಗ ೧

ಅರ್ಹರಾಗಿರುವುದಾಗಿದೆ. ಉಳಿದಂತೆ ಈ ಸೌಲಭ್ಯ ಪಡೆಯುವ ನೌಕರರು ದಿನಾಂಕ: 01.10.1985ರ ಎಫ್‌ಡಿ 27 ಎಸ್ಆರ್ಎಸ್ 85ನೇ ಕ್ರಮಾಂಕದ ಆದೇಶದಲ್ಲಿ ನಿಗಧಿಪಡಿಸಿರುವ ಎಲ್ಲಾ ಷರತ್ತುಗಳನ್ನು ಪೂರೈಸಿರಬೇಕೆಂಬುದನ್ನು ಈ ಮೂಲಕ ಸ್ಪಷ್ಟಪಡಿಸಿದೆ.

PR. 503

ಬಿ.ಎಸ್. ಸುವರ್ಣ

SC 50

ಸರ್ಕಾರದ ಅಧೀನ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸೇವೆಗಳು-1).

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯ

ವಿಷಯ: ಮಕ್ಕಳ ಸುರಕ್ಷತೆಗಾಗಿ ಮತ್ತು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಹಾಗೂ

ಮೇಲುಸ್ತುವಾರಿ ಮಾಡಲು ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಪ್ರತ್ಯೇಕ

ನಿರ್ದೇಶನಾಲಯ ಪ್ರಾರಂಭಿಸುವುದಕ್ಕೆ ಸಂಬಂಧಿಸಿದಂತೆ ಹುದ್ದೆಗಳನ್ನು ಸೃಜಿಸುವ ಬಗ್ಗೆ.

ಓದಲಾಗಿದೆ: ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಏಕಕಡತ ಪ್ರಸ್ತಾವನೆ

ಸಂ:ಕರಾಸಮರಸೊ/ ಆಡಳಿತ/ ಪ್ರತ್ಯೇಕ.ನಿ-17/2018-19, ದಿನಾಂಕ: 13.07.2018.

ಪ್ರಸ್ತಾವನೆ:

2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಕ್ಕಳ ಸುರಕ್ಷತೆಯು ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತ್ಯೇಕ ನಿರ್ದೇಶನಾಲಯವನ್ನು ಪ್ರಾರಂಭಿಸಲಾಗುವುದೆಂದು ಘೋಷಿಸಲಾಗಿರುತ್ತದೆ.

ದಿನಾಂಕ:11.08.2017ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆಯನ್ನು ನಿಯಂತ್ರಿಸುವ ಕುರಿತು ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸುವ ದೃಷ್ಟಿಯಿಂದ ರಾಜ್ಯ ಮಟ್ಟದ ಮಾನವ ಅಕ್ರಮ ಸಾಗಾಣಿಕೆ ಸಮನ್ವಯ ಸಮಿತಿ ಸಭೆಯಲ್ಲಿ ಸುಧಾರಣಾ ಸಂಸೆಗಳಲ್ಲಿನ ಸಿಬ್ಬಂದಿ ಇತರೆ ವಿಭಾಗಗಳಲ್ಲಿ ಅಂದರೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸಲು ಆಸಕ್ತಿ ವ್ಯಕ್ತಪಡಿಸುವುದರಿಂದ ಬಾಲಮಂದಿರ ಮತ್ತು ವೀಕ್ಷಣಾಲಯ ಸಂಸ್ಥೆಗಳಲ್ಲಿ ಸಿಬ್ಬಂದಿ ಕೊರತೆ ಉಂಟಾಗುತ್ತಿರುವುದರಿಂದ ಈ ಬಗ್ಗೆ ಸುಧಾರಣಾ ಸಂಸ್ಥೆಗಳ ಸಿಬ್ಬಂದಿ ನೇಮಕಾತಿಗಾಗಿ ಪ್ರತ್ಯೇಕ ನಿಯಮಗಳನ್ನು ರಚಿಸಿದಲ್ಲಿ ಉಪಯುಕ್ತವಾಗುವ ಬಗ್ಗೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿರುತ್ತಾರೆ.

ಮಕ್ಕಳ ಸುರಕ್ಷತೆಯ ಸಲುವಾಗಿ ಪ್ರತ್ಯೇಕ ನಿರ್ದೇಶನಾಲಯವನ್ನು ಪ್ರಾರಂಭಿಸಲು ಪ್ರಸ್ತುತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಬರುವ ಈ ಕೆಳಕಂಡ ಕಾರ್ಯಕ್ರಮಗಳನ್ನು ಹೊಸ ನಿರ್ದೇಶನಾಲಯದಡಿ ತರಬಹುದಾಗಿದೆ ಎಂದು ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಪ ್ರ ಸ ು್ತತ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಇರುವ ಕಾರ್ಯಕ್ರಮಗಳು
ಕ .ಸಂ ್ರ ಕಾರ್ಯಕ್ರಮದ ವಿವರ ಹ ುದ್ದೆಗಳು ಅನುದಾನ 2017-18 (ರೂ. ಕೋಟಿಗಳಲ್ಲಿ) ಅನುದಾನ 2018-19 (ರೂ. ಕೋಟಿಗಳಲ್ಲಿ)
1 ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿ 378 116.62 68.11
2 ಬಾಲಮಂದಿರಗಳು/ ವೀಕ್ಷಣಾಲಯಗಳು/ ಅನುಪಾಲನಾ ಗೃಹ ಐ.ಸಿ.ಪಿ.ಎಸ್ ನಲ್ಲಿ ವಿಲೀನಗೊಂಡಿದೆ
3 ಬಾಲ್ಯ ವಿವಾಹ ನಿಷೇಧ ಕೋಶ ಅಧಿನಿಯಮ 7 1.50 1.50
4 ದತ್ತು ಕೋಶ 4 ಐ.ಸಿ.ಪಿ.ಎಸ್ ನಲ್ಲಿ ವಿಲೀನಗೊಂಡಿದೆ
5 ಅಪರಾಧಿಗಳ ಪರಿವೀಕ್ಷಣಾ ಅಧಿನಿಯಮ 62 02.00 02.00
6 ವಿಶೇಷ ಪಾಲನಾ ಯೋಜನೆ ಐ.ಸಿ.ಪಿ.ಎಸ್ ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. 15.00 15.00
7 ಅನಾಥ ಮಕ್ಕಳ ಖಚಿತ ಆದಾಯ ಯೋಜನೆ 00.25 00.01
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೭, ೨೦೧೮ ೧೧೦೯

ಮೊದಲನೇ ಹಂತದಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ನಿರ್ದೇಶಕರು ಮತ್ತು ಇತರೆ ಹೆಚ್ಚುವರಿ 160 ಹುದ್ದೆಗಳನ್ನು ಸೃಜಿಸಲು ಪ್ರಸ್ತಾಪಿಸಿದ್ದು, ಸದರಿ ಪ್ರಸ್ತಾವನೆಗೆ ಅಗತ್ಯವಿರುವ ಹೆಚ್ಚುವರಿ ಹಣವನ್ನು ಪೂರ್ಣವಾಗಿ ರಾಜ್ಯ ಸರ್ಕಾರದಿಂದ ಭರಿಸಬೇಕಿದೆ. ಇದನ್ನು ಹೊಸ ಲೆಕ್ಕ ಶೀರ್ಷಿಕೆ 2235-02-102-0-37 ಅಡಿಯಲ್ಲಿ ಹೆಚ್ಚುವರಿಯಾಗಿ ರೂ. 754.25 ಲಕ್ಷ ಒದಗಿಸುವಂತೆ ನಿರ್ದೇಶಕರು ಕೋರಿರುತ್ತಾರೆ.

ಘೋಷಣೆಯಂತೆ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಸಮರ್ಪಕ ಅನುಷ್ಠಾನಕ್ಕೆ ಅನುಬಂಧದಲ್ಲಿ ವಿವರಿಸಲಾದಂತೆ ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸಿ ಹಾಗೂ ಅನುದಾನದ ವೆಚ್ಚದ ಬಗ್ಗೆ ವಿವರ ನೀಡಿ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಯೋಜನೆಗಳ ಅನುಷ್ಠಾನಕ್ಕೆ ಅವಶ್ಯಕವಿರುವ ಅನುದಾನ ರೂ. 754.25 ಲಕ್ಷಗಳನ್ನು ಲೆಕ್ಕಶೀರ್ಷಿಕೆ: 2235-02-102-0-37 ಹೆಚ್ಚುವರಿಯಾಗಿ ಒದಗಿಸಲು ಹಾಗೂ ಕಾರ್ಯಕ್ರಮ ಅನುಷ್ಠಾನಗೊಳಿಸಲು ಮಂಜೂರಾತಿ ನೀಡುವಂತೆ ಮೇಲೆ ಓದಲಾದ ಏಕ ಕಡತದಲ್ಲಿ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. 2018-19ನೇ ಸಾಲಿನ ಫೆಬ್ರವರಿ ಆಯವ್ಯಯ ಭಾಷಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ ಸಂಬಂಧಿಸಿದಂತೆ ಭಾಷಣದ ಕಂಡಿಕೆ ಹಾಗೂ ಆಯವ್ಯಯ ಭಾಷಣದಲ್ಲಿ ಘೋಷಣೆ ಕ್ರಮ ಸಂಖ್ಯೆ:147ರಲ್ಲಿ ಮಕ್ಕಳ ಸುರಕ್ಷತೆಯು ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ನಿರ್ದೇಶನಾಲಯವನ್ನು ಪ್ರಾರಂಭಿಸಲಿದ್ದು, ಈ ಯೋಜನೆಗಾಗಿ ಲೆಕ್ಕ ಶೀರ್ಷಿಕೆ 2235-02-102-0-06-059 (ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆ) (ICPS) ರಡಿ ಒದಗಿಸಿರುವ ಅನುದಾನದಿಂದ ಭರಿಸಿಕೊಳ್ಳುವ ಷರತ್ತಿಗೊಳಪಟ್ಟು ಸಹಮತಿ ನೀಡಿದೆ.

ಮೇಲಿನ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಮಮಇ 467 ಎಸ್‌ಜೆಡಿ 2017, ಬೆಂಗಳೂರು, ದಿನಾಂಕ: 15.11.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಣೆಯಂತೆ, ಮಕ್ಕಳ ಸುರಕ್ಷತೆಗಾಗಿ ಮತ್ತು ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಹಾಗೂ ಮೇಲುಸ್ತುವಾರಿ ಮಾಡಲು ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಪ್ರತ್ಯೇಕ

ಕ ್ರ .ಸಂ. ಹ ುದ್ದೆಯ ಪದನಾಮ ಮತ್ತು ವೇತನ ಶ್ರೇಣಿ ಸ ೃಜಿಸಲಾದ ಹುದ್ದೆಗಳ ಸಂಖ್ಯೆ
1 ನಿರ್ದೇಶಕರು (ಐಸಿಪಿಎಸ್) ಸಮಗ್ರ ಮಕ್ಕಳ ರಕ್ಷಣಾ ಯೋಜನೆ (ಭಾರತೀಯ ಆಡಳಿತ ಸೇವೆಯ ಹಿರಿಯ /ಕಿರಿಯ ವೇತನ ಶ್ರೇಣಿ) 1
2 ಆಪ್ತ ಸಹಾಯಕರು (ರೂ. 27,650-52,650) 1
3 ಗ ೂ ಪ್ 'ಡಿ' ್ರ (ರೂ. 17,000-28,950) 1
4 ವಾಹನ ಚಾಲಕರು (ರೂ. 21,400-42,000) 1
ಒಟ್ಟು 4

ಉಳಿದ ಎಲ್ಲಾ ಇತರ ಹುದ್ದೆಗಳನ್ನು ಹೊಸದಾಗಿ ಸೃಜಿಸುವ ಬದಲು ಈಗಾಗಲೇ ಐ.ಸಿ.ಪಿ.ಎಸ್. ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಮರು ವಿನ್ಯಾಸದೊಂದಿಗೆ ಕಾರ್ಯಗತಗೊಳಿಸಲು ತಿಳಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 423 ವೆಚ್ಚ-10/2018, ದಿನಾಂಕ:10.08.2018 ಕ್ರಮ ಸಂಖ್ಯೆ: 2ರಲ್ಲಿ ಮತ್ತು ಟಿಪ್ಪಣಿ ಸಂಖ್ಯೆ: ಆಇ 578 ವೆಚ್ಚ-10 2018, ದಿನಾಂಕ:10.10.2018ರಲ್ಲಿ ನೀಡಲಾದ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

PR - 504

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ರಾಜಣ್ಣ

ಸರ್ಕಾರದ ಅಧೀನ ಕಾರ್ಯದರ್ಶಿ-2,

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ

ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.

೧೧೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೭, ೨೦೧೮ ಭಾಗ ೧

ಸಮಾಜ ಕಲ್ಯಾಣ ಸಚಿವಾಲಯ

ವಿಷಯ: ಶ್ರೀ ಬಿ.ಬಸವರಾಜ ಇವರ ಸೇವೆಯನ್ನು ಪರಿಶಿಷ್ಟ ವರ್ಗಗಳ

ಕಲ್ಯಾಣ ಇಲಾಖೆಯಲ್ಲಿ ವಿಲೀನಗೊಳಿಸುವ ಕುರಿತು.

ಓದಲಾಗಿದೆ: 1. ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಇವರ ಏಕ ಕಡತ

ಸಂಖ್ಯೆ: ಪವಕನಿ: ಸಿಬ್ಬಂದಿ-1: ಸಿಆರ್:92/ 2017-18, ದಿ:14.02.2018.

2. ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರ ಪತ್ರ ಸಂಖ್ಯೆ: ಸಕನಿ/

ಸಿಬ್ಬಂದಿ-3/ ಸಿಆರ್-60/2017-18, ದಿನಾಂಕ:14.03.2018.

ಪ್ರಸ್ತಾವನೆ:

ಶ್ರೀ ಬಿ.ಬಸವರಾಜ, ಕ್ಲರ್ಕ್ ಕಂ ಟೈಪಿಸ್ಟ್, ಸಮಾಜ ಕಲ್ಯಾಣ ಇಲಾಖೆ ಇವರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿ, ದಾವಣಗೆರೆ ಜಿಲ್ಲೆ ಇಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಿಲೀನ ಹೊಂದಲು ಇಚ್ಚಿಸಿರುತ್ತಾರೆ. ಇಲಾಖೆಯಲ್ಲಿ ಈ ಹುದ್ದೆಯು ಮಂಜೂರಾಗದ ಕಾರಣ ಸಮಾನಾಂತರ ಹುದ್ದೆಯಾದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ವಿಲೀನಗೊಳಿಸುವಂತೆ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರು ಮೇಲೆ ಓದಲಾದ ಕ್ರಮ ಸಂಖ್ಯೆ(1)ರ ದಿನಾಂಕ:14.02.2018ರ ಏಕ ಕಡತದಲ್ಲಿ ಕೋರಿರುತ್ತಾರೆ.

ಮೇಲೆ ಕ್ರಮಾಂಕ (2)ರಲ್ಲಿ ಓದಲಾದ ದಿನಾಂಕ:14.03.2018ರ ಪತ್ರದಲ್ಲಿ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಇವರು ಶ್ರೀ ಬಿ.ಬಸವರಾಜ, ಕ್ಲರ್ಕ್ ಕಂ ಟೈಪಿಸ್ಟ್, ಸಮಾಜ ಕಲ್ಯಾಣ ಇಲಾಖೆ ಇವರ ಸೇವೆಯನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ವಿಲೀನಗೊಳಿಸುವ ಬಗ್ಗೆ ಮುಂದಿನ ಕ್ರಮವಹಿಸುವಂತೆ ಕೋರಿರುತ್ತಾರೆ.

ಮೇಲಿನ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಸಕಇ 65 ಪವಯೋ 2018, ಬೆಂಗಳೂರು ದಿನಾಂಕ:23.11.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಶ್ರೀ ಬಿ.ಬಸವರಾಜ, ಕ್ಲರ್ಕ್ ಕಂ ಟೈಪಿಸ್ಟ್, ಸಮಾಜ ಕಲ್ಯಾಣ ಇಲಾಖೆ ಇವರನ್ನು ಕರ್ನಾಟಕ ನಾಗರಿಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 16(ಎ)ರ ಮೇರೆಗೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ (ವೇತನ ಶ್ರೇಣಿ ರೂ. 21,400-42,000/-) ಕೆಳಕಂಡ ಷರತ್ತುಗಳಿಗೊಳಪಟ್ಟು ಖಾಯಂ ವರ್ಗಾವಣೆ ಮೂಲಕ ನೇರ ನೇಮಕಾತಿಗೆ ಮೀಸಲಿರಿಸಿರುವ ಹುದ್ದೆಯಲ್ಲಿ ಶಾಶ್ವತವಾಗಿ ವರ್ಗಾವಣೆ ಮೂಲಕ ನೇಮಿಸಿ ಆದೇಶಿಸಿದೆ.

ಷರತ್ತುಗಳು:-

1. ಸಂಬಂಧಪಟ್ಟ ನೌಕರರು ಸಕ್ರಮವಾಗಿ ನೇಮಕ ಮಾಡಿಕೊಂಡಿರಬೇಕು ಹಾಗೂ ಅವರು ತಮ್ಮ ಮಾತೃ ಇಲಾಖೆಯಲ್ಲಿ ಪರಿವೀಕ್ಷಣಾ ಅವಧಿ/ಸ್ಥಾನಪನ್ನ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರಬೇಕು.

2. ಸಂಬಂಧಪಟ್ಟ ನೌಕರರು ಮಾತೃ ಇಲಾಖೆಯ ಹುದ್ದೆಯಲ್ಲಿ ಹೊಂದಿರುವ ವೇತನ ಶ್ರೇಣಿ ಮತ್ತು ಖಾಯಂ ವರ್ಗಾವಣೆ ಮೂಲಕ ನೇಮಿಸಲು ಉದ್ದೇಶಿಸಿರುವ ಹುದ್ದೆಯ ವೇತನ ಶ್ರೇಣಿಗಳು ಸಮ ವೇತನ ಶ್ರೇಣಿಗಳಾಗಿರಬೇಕು.

3. ಸಂಬಂಧಪಟ್ಟ ನೌಕರರು ವರ್ಗಾವಣೆ ಮೂಲಕ ನೇಮಿಸಲು ಉದ್ದೇಶಿಸಿರುವ ಹುದ್ದೆಗೆ ನಿಗಧಿಪಡಿಸಿರಬಹುದಾದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕು. ಒಂದು ವೇಳೆ ನಿರ್ದಿಷ್ಟಪಡಿಸಲಾದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗದಿದ್ದಲ್ಲಿ ಮುಂದಿನ 2 ವರ್ಷಗಳ ಒಳಗೆ ಉತ್ತೀರ್ಣರಾಗತಕ್ಕದ್ದು.

4. ಇವರಿಗೆ ಸೇವಾ ಜೇಷ್ಠತೆಯನ್ನು ಕರ್ನಾಟಕ ಸರ್ಕಾರಿ ನೌಕರರ ಜೇಷ್ಠತೆ ನಿಯಮಗಳು, 1957ರ ನಿಯಮ 6 ರ 1ನೇ ಪರಂತುಕದನ್ವಯ ನಿಗಧಿಗೊಳಿಸತಕ್ಕದ್ದು.

5. ನೌಕರರ ಸೇವಾ ಅವಧಿಯಲ್ಲಿ ಒಮ್ಮೆ ಮಾತ್ರ ವರ್ಗಾವಣೆ ಮೂಲಕ ವಿಲೀನಗೊಳಿಸಲು ಅವಕಾಶ ಇರತಕ್ಕದ್ದು.

6. ನೌಕರರು ವರ್ಗಾವಣೆ ಭತ್ಯೆ ಪಡೆಯಲು ಅರ್ಹರಿರುವುದಿಲ್ಲ.

ಮೇಲ್ಕಂಡ ಎಲ್ಲಾ ಷರತ್ತುಗಳನ್ನು ಪೂರೈಸುವ ಮುಚ್ಚಳಿಕೆಯ ಪ್ರಮಾಣ ಪತ್ರವನ್ನು ನೌಕರರಿಂದ ಬಾಂಡ್ ಪೇಪರ್‌ನಲ್ಲಿ ನಿರ್ದೇಶಕರು, ಪರಿಶಿಷ್ಟ ವರ್ಗಗಳ ಕಲ್ಯಾಣ ನಿರ್ದೇಶನಾಲಯ, ಇವರು ಪಡೆಯತಕ್ಕದ್ದು.

PR - 505

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ರಾಜಶ್ರೀ ಹೆಚ್.ಕುಲಕರ್ಣಿ,

ಸರ್ಕಾರದ ಅಧೀನ ಕಾರ್ಯದರ್ಶಿ-2,

ಸಮಾಜ ಕಲ್ಯಾಣ ಇಲಾಖೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೭, ೨೦೧೮ ೧೧೧೧

ಇಂಧನ ಸಚಿವಾಲಯ

ವಿಷಯ: ವಿಕೇಂದ್ರಿಕೃತ ವಿದ್ಯುತ್ ಉತ್ಪಾದನೆ ಯೋಜನೆಯಡಿ 43 ತಾಲ್ಲೂಕುಗಳಲ್ಲಿ ತಲಾ 20 ಮೆ.ವ್ಯಾ ಗಳಂತೆ 860 ಮೆ.ವ್ಯಾ ಸಾಮರ್ಥ್ಯದ ಸೌರ ಯೋಜನೆಗಳನ್ನು ಅನುಷ್ಟಾನಗೊಳಿಸುವ ಯೋಜನೆಯಡಿ ಬಾಕಿ ಉಳಿದಿರುವ 200 ಮೆ.ವ್ಯಾ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಯಡಿ ವಿದ್ಯುತ್ ಹಂಚಿಕೆ ಬಗ್ಗೆ.

ಓದಲಾಗಿದೆ: 1. ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್ ರವರ ಪತ್ರ ಸಂಖ್ಯೆ: KREDL/07/SG/ 200MW/533- A/2018-19/5468 ದಿನಾಂಕ:03.08.2018.

ದಿನಾಂಕ:07.12.2017.

ಪ್ರಸ್ತಾವನೆ:

ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ (ಕೆಆರ್ಇಡಿಎಲ್) ಮುಖಾಂತರ ವಿಕೇಂದ್ರಿಕೃತ ವಿದ್ಯುತ್ ಉತ್ಪಾದನೆ ಯೋಜನೆಯಡಿ ರಾಜ್ಯದ 43 ತಾಲ್ಲೂಕುಗಳಲ್ಲಿ ತಲಾ 20 ಮೆ.ವ್ಯಾ ಗಳಂತೆ 860 ಮೆ.ವ್ಯಾ ಸಾಮರ್ಥ್ಯದ ಸೌರ ಯೋಜನೆಗಳನ್ನು ಅನುಷ್ಟಾನಗೊಳಿಸಲು ಮೇಲೆ ಓದಲಾದ (2)ರಲ್ಲಿ ಟೆಂಡರ್ ಕರೆಯಲಾಗಿತ್ತು. 43 ತಾಲ್ಲೂಕುಗಳ ಪೈಕಿ 33 ತಾಲ್ಲೂಕುಗಳಲ್ಲಿ ಹಂಚಿಕೆ ನೀಡಿರುವ ಸೌರ ಯೋಜನೆಗಳ ಅನುಷ್ಟಾನ ಕಾರ್ಯ ಪ್ರಗತಿಯಲ್ಲಿದೆ. ಬಾಕಿ ಉಳಿದಿರುವ 10 ತಾಲ್ಲೂಕುಗಳಲ್ಲಿ 200 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ತನ್ನು 25 ವರ್ಷಗಳ ಅವಧಿಗೆ ವಿದ್ಯುತ್ ಖರೀದಿ ಒಪ್ಪಂದವನ್ನು ಮಾಡಿಕೊಂಡು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯಿಂದ ಖರೀದಿಸುವಂತೆ ಸರ್ಕಾರ ನಿರ್ಧರಿಸಿದೆ.

200 ಮೆ.ವ್ಯಾ. ವಿದ್ಯುತ್ ಖರೀದಿ ಒಪ್ಪಂದದಿಂದ ಖರೀದಿಸುವ ವಿದ್ಯುತ್‌ನ ಖರೀದಿ ವೆಚ್ಚವನ್ನು ಪ್ರತೀ ವರ್ಷ ಬೆಸ್ಕಾಂ ಸಂಸ್ಥೆಯು ಭರಿಸಿ, ನಂತರ ವಿದ್ಯುತ್ ಹೊಂದಾಣಿಕೆ (Energy Balancing) ಸಮಯದಲ್ಲಿ ಸರ್ಕಾರದ ನಿರ್ದೇಶನದಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೂ ಸರ್ಕಾರ ಹಂಚಿಕೆ ಮಾಡಿ, ಅದರಂತೆ ಖರೀದಿ ವೆಚ್ಚ ಭರಿಸಲು ಪ್ರಸ್ತಾಪಿಸಿದೆ. ಅದರಂತೆ ಪ್ರಸ್ತುತ ಆದೇಶ:

ಸರ್ಕಾರಿ ಆದೇಶ ಸಂಖ್ಯೆ: ಇಎನ್ 234 ವಿಎಸ್‌ಸಿ 2018, ಬೆಂಗಳೂರು, ದಿನಾಂಕ:20.11.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ರಾಜ್ಯದ 43 ತಾಲ್ಲೂಕುಗಳಲ್ಲಿ ತಲಾ 20 ಮೆ.ವ್ಯಾ ಗಳಂತೆ 860 ಮೆ.ವ್ಯಾ ಸಾಮರ್ಥ್ಯದ ಸೌರ ಯೋಜನೆಗಳನ್ನು ಅನುಷ್ಟಾನಗೊಳಿಸುವ ಯೋಜನೆಯಡಿ 10 ತಾಲ್ಲೂಕುಗಳಲ್ಲಿ ಬಾಕಿ ಉಳಿದಿರುವ 200 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳಿಂದ ಉತ್ಪಾದಿಸಲಾಗುವ ವಿದ್ಯುತ್ ಖರೀದಿಗಾಗಿ ವಿದ್ಯುತ್ ಖರೀದಿ ಒಪ್ಪಂದವನ್ನು ಬೆಸ್ಕಾಂ ಸಂಸ್ಥೆಯು ಮಾಡಿಕೊಳ್ಳಲು ಮತ್ತು ಸದರಿ ಯೋಜನೆಗಳಿಂದ ಬೆಸ್ಕಾಂ PR - 506

SC- 50

ಇಂಧನ ಸಚಿವಾಲಯ

150MW/809-E/2018-19/5467 ದಿನಾಂಕ: 03.08.2018.

2. ಕ್ರೆಡಲ್ ಟೆಂಡರ್ ಅಧಿಸೂಚನೆ ಸಂಖ್ಯೆ: KREDL/07/SG/1200MW/

Pavagada Park/809/2017-18/Re-call, ದಿನಾಂಕ:22.02.2018.

೧೧೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೭, ೨೦೧೮ ಭಾಗ ೧

150 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ ಖರೀದಿ ಒಪ್ಪಂದದಿಂದ ಖರೀದಿಸುವ ವಿದ್ಯುತ್‌ನ ಖರೀದಿ ವೆಚ್ಚವನ್ನು ಪ್ರತೀ ವರ್ಷ ಬೆಸ್ಕಾಂ ಸಂಸ್ಥೆಯು ಭರಿಸಿ, ನಂತರ ವಿದ್ಯುತ್ ಹೊಂದಾಣಿಕೆ (Energy Balancing) ಸಮಯದಲ್ಲಿ ಸರ್ಕಾರದ ನಿರ್ದೇಶನದಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೂ ಸರ್ಕಾರ ಹಂಚಿಕೆ ಮಾಡಿ, ಅದರಂತೆ ಖರೀದಿ ವೆಚ್ಚ ಭರಿಸಲು ಪ್ರಸ್ತಾಪಿಸಿದೆ. ಅದರಂತೆ ಪ್ರಸ್ತುತ ಆದೇಶ:

ಸರ್ಕಾರಿ ಆದೇಶ ಸಂಖ್ಯೆ: ಇಎನ್ 233 ವಿಎಸ್‌ಸಿ 2018, ಬೆಂಗಳೂರು, ದಿನಾಂಕ: 20.11.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಪಾವಗಡ ಸೌರ ಪಾರ್ಕಿನಲ್ಲಿ ಕೆಆರ್ಇಡಿಎಲ್ ವತಿಯಿಂದ ಅನುಷ್ಟಾನಗೊಳಿಸುತ್ತಿರುವ 1200 ಮೆ.ವ್ಯಾ. ಸಾಮರ್ಥ್ಯದ ಸೌರ ಯೋಜನೆಗಳಲ್ಲಿ ಬಾಕಿ ಉಳಿದಿರುವ 150 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳಿಂದ ಉತ್ಪಾದಿಸಲಾಗುವ ವಿದ್ಯುತ್ ಖರೀದಿಗಾಗಿ ವಿದ್ಯುತ್ ಖರೀದಿ ಒಪ್ಪಂದವನ್ನು ಬೆಸ್ಕಾಂ ಸಂಸ್ಥೆಯು ಮಾಡಿಕೊಳ್ಳಲು ಮತ್ತು ಸದರಿ ಯೋಜನೆಗಳಿಂದ ಬೆಸ್ಕಾಂ ಸಂಸ್ಥೆಯು ಖರೀದಿಸಿದ ವಿದ್ಯುತ್‌ನ ಖರೀದಿ ವೆಚ್ಚವನ್ನು ಬೆಸ್ಕಾಂ ಸಂಸ್ಥೆಯು ಭರಿಸಿ, ನಂತರ ಪ್ರತೀ ವರ್ಷದ ವಿದ್ಯುತ್ ಹೊಂದಾಣಿಕೆ (Energy Balancing) ಸಮಯದಲ್ಲಿ ಸರ್ಕಾರದ ನಿರ್ದೇಶನದಂತೆ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳೂ ವಿದ್ಯುತ್ ಖರೀದಿ ವೆಚ್ಚ ಭರಿಸಲು ಆದೇಶಿಸಿದೆ.

PR - 507

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ಬಿ.ವಿ.ಶ್ರೀನಿವಾಸಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಇಂಧನ ಇಲಾಖೆ.

ಸಹಕಾರ ಸಚಿವಾಲಯ

ಸರ್ಕಾರದ ಆದೇಶ ಸಂಖ್ಯೆ: ಸಇ 49 ಸಸಂನೋ 2016, ಬೆಂಗಳೂರು, ದಿನಾಂಕ: 11.12.2018.

ವಿಷಯ:- ಕುಂಬಾರರ ಸಂಘ(ರಿ.), ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸುವ ಬಗ್ಗೆ.

ಓದಲಾಗಿದೆ:- 1) ಸರ್ಕಾರದ ಆದೇಶ ಸಂಖ್ಯೆ: ಸಇ 49 ಸಸಂನೋ 2017, ದಿನಾಂಕ: 27.01.2017.

2) ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳು, 2ನೇ ವಲಯ,

ಬೆಂಗಳೂರು ನಗರ ಜಿಲ್ಲೆ ಇವರ ಪತ್ರ ಸಂಖ್ಯೆ: ಡಿಆರ್‌ಬಿ/2/ಎಸ್ಒಆರ್5/2016-17, ದಿನಾಂಕ: 24.09.2017.

ಪ್ರಸ್ತಾವನೆ:-

ಮೇಲೆ ಕ್ರಮ ಸಂಖ್ಯೆ: (01)ರಲ್ಲಿ ಓದಲಾದ ಆದೇಶದಲ್ಲಿ ಕುಂಬಾರರ ಸಂಘ(ರಿ.), ಕಲಾಸಿಪಾಳ್ಯ, ಬೆಂಗಳೂರು ಈ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ(1)(ಬಿ) ರನ್ವಯ ಸಹಕಾರ ಸಂಘಗಳ ಉಪ ನಿಬಂಧಕರು, 2ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರನ್ನು ದಿನಾಂಕ: 27.01.2017 ರಿಂದ 6 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿತ್ತು.

ಮೇಲೆ ಕ್ರಮ ಸಂಖ್ಯೆ: (02)ರಲ್ಲಿ ಓದಲಾದ ಪತ್ರದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿಗಳು, 2ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರು ಕುಂಬಾರರ ಸಂಘ (ರಿ.), ಬೆಂಗಳೂರು ಈ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಿರುವ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಗೌ:: ಉಚ್ಚ ನ್ಯಾಯಾಲಯದಲ್ಲಿ ರಿ.ಅರ್ಜಿ ಸಂ: 4975-4977/2017 ನ್ನು ದಾಖಲಿಸಿದ್ದು, ಸದರಿ ಪ್ರಕರಣವು ವಿಚಾರಣೆಯ ಹಂತದಲ್ಲಿದ್ದು, ಈ ಅರ್ಜಿ ಸಂಬಂಧ ದಿನಾಂಕ 01.02.2017ರ ಮಧ್ಯಂತರ ಆದೇಶದಲ್ಲಿ "Issue notice to respondent No-5 that shall be intrim stay impugned order subject to the administrator not yet having assumed charge" ಎಂದು ಆದೇಶಿಸಲಾಗಿರುತ್ತದೆ. ಈ ಬಗ್ಗೆ ಸಂಘದ ಆಡಳಿತಾಧಿಕಾರಿ ಹುದ್ದೆಯ ಸ್ವಯಂ ಪ್ರಭಾರ ವಹಿಸಿಕೊಂಡಿರುವ ಅಂಶವನ್ನು ಗೌ.ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದು ಸದರಿ ಪ್ರಕರಣವು ಇತ್ಯರ್ಥಕ್ಕೆ ಬಾಕಿ ಉಳಿದಿದ್ದು, ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ 26.06.2017 ರಿಂದ ಪೂರ್ವಾನ್ವಯವಾಗುವಂತೆ ವಿಸ್ತರಿಸಲು ಕೋರಿರುತ್ತಾರೆ.

ಮೇಲ್ಕಂಡ ಅಂಶಗಳನ್ನು ಪರಿಶೀಲಿಸಿ, ಕುಂಬಾರರ ಸಂಘ, ಕಲಾಸಿಪಾಳ್ಯ, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು 27.07.2017 ರಿಂದ 26.01.2018 ರವರೆಗೆ ಮತ್ತು ದಿನಾಂಕ 27.01.2018 ರಿಂದ 26.07.2018 ರವರೆಗೆ ಹಾಗೂ 27.07.2018 ರಿಂದ 26.01.2019 ರವರೆಗೆ ವಿಸ್ತರಿಸಲು, ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ) ರನ್ವಯ ಕುಂಬಾರರ ಸಂಘ, ಕಲಾಸಿಪಾಳ್ಯ, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು 27.07.2017 ರಿಂದ 26.01.2018 ರವರೆಗೆ ಮತ್ತು ದಿನಾಂಕ 27.01.2018 ರಿಂದ 26.07.2018 ರವರೆಗೆ ಹಾಗೂ 27.07.2018 ರಿಂದ 26.01.2019 ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೭, ೨೦೧೮ ೧೧೧೩

ಈ ಅವಧಿಯನ್ನು ಕೊನೆಯಬಾರಿಗೆ ವಿಸ್ತರಿಸುತ್ತಾ, ಆಡಳಿತಾಧಿಕಾರಿಗಳು ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.

PR-520

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-20

ಆರ್. ಸೆಂತಾಮರೈ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

ಸಹಕಾರ ಸಚಿವಾಲಯ

ಸರ್ಕಾರದ ಆದೇಶ ಸಂಖ್ಯೆ: ಸಇ 11 ಸಸಂನೋ 2016, ಬೆಂಗಳೂರು, ದಿನಾಂಕ: 11/12/2018.

ವಿಷಯ:- ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸುವ ಬಗ್ಗೆ.

ಓದಲಾಗಿದೆ:- 1) ಸರ್ಕಾರದ ಆದೇಶ ಸಂ: ಸಇ 11 ಸಸಂನೋ 2016, ದಿನಾಂಕ: 14.07.2016.

2) ಸರ್ಕಾರದ ಆದೇಶ ಸಂ: ಸಇ 11 ಸಸಂನೋ 2016, ದಿನಾಂಕ: 02.02.2017.

3) ಸರ್ಕಾರದ ಆದೇಶ ಸಂ: ಸಇ 11 ಸಸಂನೋ 2016, ದಿನಾಂಕ: 19.05.2017.

4) ಸರ್ಕಾರದ ಆದೇಶ ಸಂ: ಸಇ 11 ಸಸಂನೋ 2016, ದಿನಾಂಕ: 15.11.2017

5) ಸರ್ಕಾರದ ಆದೇಶ ಸಂ: ಸಇ 11 ಸಸಂನೋ 2016, ದಿನಾಂಕ: 28.06.2018.

6) ಸಹಕಾರ ಸಂಘಗಳ ಉಪ ನಿಬಂಧಕರು, 2ನೇ ವಲಯ, ಬೆಂಗಳೂರು, ಇವರ ಪತ್ರ ಸಂ:ಡಿಆರ್‌ಬಿ-2:ಎಸ್ಒಆರ್.01/ಚುನಾವಣೆ/2018-19, ದಿನಾಂಕ: 03.10.2018.

ಪ್ರಸ್ತಾವನೆ:-

ಮೇಲೆ ಓದಲಾದ ಕ್ರಮ ಸಂಖ್ಯೆ: (1)ರ ಆದೇಶದಲ್ಲಿ ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು ಈ ಸಂಘದಲ್ಲಿ ವಿವಾದ ಇರುವುದರಿಂದ ಆಡಳಿತ ಮಂಡಳಿಯ ಚುನಾವಣಾ ಪ್ರಕ್ರಿಯೆಯನ್ನು ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಸೂಚಿಸಿ ಸದರಿ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ)ರನ್ವಯ ಸಹಕಾರ ಸಂಘಗಳ ಉಪ ನಿಬಂಧಕರು, ಎರಡನೇ ವಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 6 ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿತ್ತು.

ಮೇಲೆ ಕ್ರಮ ಸಂಖ್ಯೆ: (2)ರಲ್ಲಿ ಓದಲಾದ ಆದೇಶದಲ್ಲಿ ಸದರಿ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ 14.01.2017 ರಿಂದ ಮೂರು ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ: (3)ರಲ್ಲಿ ಓದಲಾದ ಆದೇಶದಲ್ಲಿ ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ 14.04.2017 ರಿಂದ ಆರು ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರ.ಸಂ. (4) ರಲ್ಲಿ ಓದಲಾದ ಆದೇಶದಲ್ಲಿ ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ 14.10.2017 ರಿಂದ ಆರು ತಿಂಗಳ ಅವಧಿಗೆ ವಿಸ್ತರಿಸಿ ಆದೇಶಿಸಲಾಗಿರುತ್ತದೆ.

ಮೇಲೆ ಕ್ರ.ಸಂ. (5) ರಲ್ಲಿ ಓದಲಾದ ಆದೇಶದಲ್ಲಿ ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ಪುನಃ ದಿನಾಂಕ 15.04.2018 ರಿಂದ ಆರು ತಿಂಗಳ ಅವಧಿಗೆ ವಿಸ್ತರಿಸಲಾಗಿರುತ್ತದೆ.

ಮೇಲೆ ಕ್ರ.ಸಂ. (6) ರಲ್ಲಿ ಓದಲಾದ ಪತ್ರದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರು, ಎರಡನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 20542/2017 ಹಾಗೂ ಸಂಖ್ಯೆ:22487/17ನ್ನು ದಾಖಲಿಸಿದ್ದು, ಚುನಾವಣೆಗೆ ತಡೆಯಾಜ್ಞೆ ನೀಡಿರುವುದರಿಂದ ಹಾಗೂ ಈ ಎರಡು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದರಿಂದ ಸಂಸ್ಥೆ ಆಡಳಿತಾಧಿಕಾರಿಯ ಅವಧಿಯನ್ನು ದಿನಾಂಕ 15.10.2018 ರಿಂದ ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಬೇಕಾಗಿ ಕೋರಿರುತ್ತಾರೆ.

ಮೇಲ್ಕಂಡ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆಡಳಿತಾಧಿಕಾರಿ, ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರು, 2ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರ ಕೋರಿಕೆಯನ್ವಯ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960ರ ಕಲಂ 27(ಎ)೧೧೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೭, ೨೦೧೮ ಭಾಗ ೧ ರನ್ವಯ ಪ್ರಜಾ ಸಂಸ್ಥೆ, ರಾಣಾಸಿಂಗ್ ಪೇಟೆ ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 15.10.2018 ರಿಂದ ಆರು ತಿಂಗಳ ಅವಧಿಗೆ ಅವಧಿಗೆ ವಿಸ್ತರಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪ್ರಜಾ ಸಂಸ್ಥೆ, ರಾಣಾ ಸಿಂಗ್ ಪೇಟೆ, ಬೆಂಗಳೂರು, ಈ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ 15.10.2018 ರಿಂದ ಆರು ತಿಂಗಳ ಅವಧಿಗೆ ಮುಂದುವರೆಸಲಾಗಿದೆ.

ಆಡಳಿತಾಧಿಕಾರಿಯು ಸದರಿ ಅವಧಿಯಲ್ಲಿ ಸಂಘಕ್ಕೆ ಚುನಾವಣೆಯನ್ನು ನಡೆಸಿ, ನೂತನ ಚುನಾಯಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಸೂಚಿಸಿದೆ.

PR - 521

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 20

ಆರ್. ಸೆಂತಾಮರೈ

ಸರ್ಕಾರದ ಅಧೀನ ಕಾರ್ಯದರ್ಶಿ-3

ಸಹಕಾರ ಇಲಾಖೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯನಾಗರಿಕರ ಸಬಲೀಕರಣ ಸಚಿವಾಲಯ

ವಿಷಯ :

2018-19ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಲಾದ ಮುಖ್ಯಮಂತ್ರಿ ಮಾತೃಶ್ರೀ

ಯೋಜನೆಯನ್ನು ಜಾರಿಗೊಳಿಸಲು ಆಡಳಿತಾತ್ಮಕ ಮಂಜೂರಾತಿ ನೀಡುವ ಬಗ್ಗೆ.

ಓದಲಾಗಿದೆ :

1. ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಏಕ ಕಡತ

ಸಂ : ಮಮಅಇ/ಐಸಿಡಿ/ಸಿಎಂಎಂಎಸ್/01/2018-19, ದಿನಾಂಕ : 13.07.2018

2. ಸಚಿವ ಸಂಪುಟ ಟಿಪ್ಪಣಿ ಸಂಖ್ಯೆ:ಸಿ:572/2018, ದಿನಾಂಕ : 20.09.2018

ಪ್ರಸ್ತಾವನೆ :

2018-19ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ:91 ರಲ್ಲಿ ಈ ಕೆಳಕಂಡಂತೆ ಹೊಸ ಯೋಜನೆಯನ್ನು ಘೋಷಿಸಲಾಗಿದೆ.

"ಬಡತನ ರೇಖೆಗಿಂತ ಕೆಳಗಿರುವ ಗರ್ಭಿಣಿ ಮಹಿಳೆಯರಿಗೆ ಮಾಸಿಕ 6,000 ರೂ.ಗಳ ಭತ್ಯೆ ನೀಡುವ ಬಗ್ಗೆ ಘೋಷಿಸಿದೆ. ಪ್ರಸ್ತುತ ರಾಜ್ಯ ಸರ್ಕಾರದ 'ಮಾತೃಪೂರ್ಣ' ಮತ್ತು ಕೇಂದ್ರ ಸರ್ಕಾರದ 'ಮಾತೃವಂದನಾ' ಕಾರ್ಯಕ್ರಮಗಳಲ್ಲಿ ಹಲವು ಸೌಲಭ್ಯಗಳು ದೊರೆಯುತ್ತಿವೆ. ಈ ಸೌಲಭ್ಯಗಳ ಜೊತೆಗೆ 'ಮುಖ್ಯಮಂತ್ರಿ ಮಾತೃಶ್ರೀ ಯೋಜನೆ'ಯನ್ನು ಹೊಸದಾಗಿ ರೂಪಿಸಿದೆ. ಈ ಹೊಸ ಯೋಜನೆಯಡಿ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಹೆರಿಗೆ ಪೂರ್ವದ ಕಡೆಯ 3 ತಿಂಗಳು ಹಾಗೂ ಬಾಣಂತಿಯರಿಗೆ ಹೆರಿಗೆ ನಂತರದ 3 ತಿಂಗಳ ಕಾಲ ಮಾಸಿಕ 1,000 ರೂ.ಗಳನ್ನು ಅವರ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವುದು. ಈ ಮೊತ್ತವನ್ನು ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಹೆಚ್ಚಿಸಲಾಗುವುದು. ಸದರಿ ಯೋಜನೆಯು ಮೊದಲ ಎರಡು ಮಕ್ಕಳಿಗೆ ಅನ್ವಯವಾಗುತ್ತದೆ. ಸದರಿ ಯೋಜನೆಗೆ ರೂ.350.00 ಕೋಟಿಗಳನ್ನು ಮೀಸಲಿಡಲಾಗಿದೆ. 2018ರ ನವೆಂಬರ್ 1 ರಿಂದ ಈ ಯೋಜನೆ ಅನುಷ್ಠಾನಗೊಳ್ಳಲಿದೆ".

ಸದರಿ ಯೋಜನೆಗೆ ಆಡಳಿತಾತ್ಮಕ ಮಂಜೂರಾತಿ ನೀಡುವಂತೆ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಇವರು ಮೇಲೆ ಓದಲಾದ ಕ್ರಮಸಂಖ್ಯೆ (1)ರ ಏಕ ಕಡತದ ಪ್ರಸ್ತಾವನೆಯಲ್ಲಿ ಕೋರಿರುತ್ತಾರೆ.

ಮೇಲ್ಕಂಡ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಮಮಇ 208 ಐಸಿಡಿ 2018, ಬೆಂಗಳೂರು, ದಿನಾಂಕ: 29.10.2018

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2018-19ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಮಾನ್ಯ ಮುಖ್ಯ ಮಂತ್ರಿಗಳು ಘೋಷಿಸಿರುವಂತೆ ಮುಖ್ಯ ಮಂತ್ರಿ ಮಾತೃಶ್ರೀ ಯೋಜನೆಯಡಿ ಬಿಪಿಎಲ್ ಕುಟುಂಬದ ಗರ್ಭಿಣಿಯರಿಗೆ ಮೊದಲ 02 ಜೀವಂತ ಹೆರಿಗೆಯ ಪೂರ್ವದ ಕೊನೆಯ 3 ತಿಂಗಳು ಹಾಗೂ ಬಾಣಂತಿಯರಿಗೆ ಹೆರಿಗೆ ನಂತರದ 3 ತಿಂಗಳ ಕಾಲ ಮಾಸಿಕ ರೂ. 1,000ಗಳನ್ನು (ಒಟ್ಟು ರೂ.6,000/-) ಫಲಾನುಭವಿಗಳ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ಅನುಬಂಧದಲ್ಲಿರುವ ಮಾರ್ಗಸೂಚಿಯನ್ವಯ ಮಂಜೂರಾತಿ ನೀಡಿ ಆದೇಶಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೭, ೨೦೧೮ ೧೧೧೫

ಈ ವೆಚ್ಚವನ್ನು ಲೆಕ್ಕಶೀರ್ಷಿಕೆ 2235-02-103-0-58 ರಡಿಯಲ್ಲಿ ಒದಗಿಸಿರುವ ಅನುದಾನದಿಂದ ಭರಿಸತಕ್ಕದ್ದು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಹೊಸ ಹುದ್ದೆಗಳ ಸೃಜಿಸುವುದನ್ನು ಕೈಬಿಟ್ಟು ಇಲಾಖೆಯಲ್ಲಿರುವ ಸಿಬ್ಬಂದಿಗಳನ್ನೇ ಮರುವಿನ್ಯಾಸ (Re-Deployed) ಮಾಡಿ ಕಾರ್ಯಗತಗೊಳಿಸಲು ಕ್ರಮಕೈಗೊಳ್ಳುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ:428 ವೆಚ್ಚ-10/2018 ದಿನಾಂಕ:28.07.2018 ಮತ್ತು ಯೋಜನಾ ಇಲಾಖೆ ಟಿಪ್ಪಣಿ ಸಂಖ್ಯೆ:ಪಿಡಿ 72 ಐಎಂಎಂ 2018 ದಿನಾಂಕ:31.07.2018 ಹಾಗೂ ಸಚಿವ ಸಂಪುಟ ಟಿಪ್ಪಣಿ ಸಂಖ್ಯೆ: ಸಿ:572/2018 ದಿನಾಂಕ:20.09.2018ರ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಸಂಧ್ಯಾ ಎಲ್. ನಾಯಕ್

ಸರ್ಕಾರದ ಅದೀನ ಕಾರ್ಯದರ್ಶಿ -1

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ

ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.

ಸರ್ಕಾರಿ ಆದೇಶ ಸಂ: ಮಮಇ : 208 : ಐಸಿಡಿ : 2018, ದಿನಾಂಕ : 29.10.2018

ಮುಖ್ಯಮಂತ್ರಿ ಮಾತೃಶ್ರೀ ಯೋಜನೆಯ ಮಾರ್ಗಸೂಚಿ

ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕ ಮತ್ತು ಆರೋಗ್ಯದ ಮಟ್ಟವನ್ನು ಸುಧಾರಿಸಲು ರಾಜ್ಯ ಸರ್ಕಾರವು ಆನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಆದರೂ ಸಹ ಮಹಿಳೆಯರಲ್ಲಿ ಪೌಷ್ಟಿಕಾಂಶದ ಕೊರತೆಯ ಪ್ರತಿಕೂಲ ಪರಿಣಾಮ ಮುಂದುವರೆದಿದೆ. ಮಹಿಳೆಯರಲ್ಲಿ ರಕ್ತ ಹೀನತೆಯು ಕಂಡು ಬಂದಿರುತ್ತದೆ. ಅಪೌಷ್ಟಿಕತೆ ಹೊಂದಿರುವ ಗರ್ಭಿಣಿಯ ಹೆರಿಗೆಯಾದಲ್ಲಿ ಕಡಿಮೆ ತೂಕವುಳ್ಳ ಶಿಶುವಿಗೆ ಜನ್ಮ ನೀಡುವುದು. ಬಹುತೇಕ ಮಕ್ಕಳ ಪೌಷ್ಟಿಕತೆಯ ಕೊರತೆ ಗರ್ಭದಲ್ಲಿರುವಾಗಲೇ ಪ್ರಾರಂಭವಾದಲ್ಲಿ ಅದನ್ನು ಸರಿಪಡಿಸುವುದು ಕಷ್ಟಸಾಧ್ಯವಾಗುತ್ತದೆ.

ಆರ್ಥಿಕ ಮುಗ್ಗಟ್ಟಿನಿಂದಾಗಿ ಹೆಚ್ಚಿನ ಮಹಿಳೆಯರು ಕುಟುಂಬದ ನಿರ್ವಹಣೆಗಾಗಿ ತಮ್ಮ ದುಡಿಮೆಯನ್ನು ಹೆರಿಗೆಯ ಕೊನೆಯ ದಿನಗಳದವರೆಗೆ ಮುಂದುವರೆಸುತ್ತಾರೆ. ನಂತರ ಹೆರಿಗೆಯಾದ ತಕ್ಷಣ ಶರೀರ ಸಮ್ಮತಿಸದಿದ್ದರೂ ದುಡಿಮೆಯನ್ನು ಮುಂದುವರೆಸುತ್ತಾರೆ. ಇದು ತಮ್ಮ ಶರೀರ ಪೂರ್ಣವಾಗಿ ಸುಸ್ಥಿತಿಗೆ ಬರುವುದನ್ನು ತಪ್ಪಿಸುತ್ತದೆ. ಇದಲ್ಲದೆ ಮಗುವು 6 ತಿಂಗಳು ಎದೆ ಹಾಲು ಉಣಿಸುವುದು ಕಷ್ಟಸಾಧ್ಯವಾಗುತ್ತದೆ.

ಮಾತೃಶ್ರೀ ಯೋಜನೆಯ ಉದ್ದೇಶಗಳು

1. ಈ ಯೋಜನೆಯಡಿ ನೀಡುವ ನಗದು ರೂಪದ ಸಹಾಯ ಧನವು ಪ್ರಸವದ ಮೊದಲು ಹಾಗೂ ಪ್ರಸವದ ನಂತರ ಮಹಿಳೆಯು ಸಾಕಷ್ಟು ವಿಶ್ರಾಂತಿ ಪಡೆಯಲು ಅನುಕೂಲವಾಗುತ್ತದೆ.

2. ಗರ್ಭಿಣಿ ಹಾಗೂ ಬಾಣಂತಿಯರ ಪೌಷ್ಟಿಕತೆ ಮತ್ತು ಆರೋಗ್ಯ ಮಟ್ಟ ಉತ್ತಮಗೊಳ್ಳುವುದರಿಂದ ಕಡಿಮೆ ತೂಕವುಳ್ಳ ಶಿಶುವಿನ ಜನನವನ್ನು ಕಡಿಮೆಗೊಳಿಸಬಹುದಾಗಿದೆ.

3. ಸುರಕ್ಷಿತ ಹೆರಿಗೆಗೆ ಸಹಾಯಕವಾಗುತ್ತದೆ.

ಮಾತೃಶ್ರೀ ಯೋಜನೆಯ ನೋಂದಣಿ

1. ಮಾತೃಶ್ರೀ ಯೋಜನೆಯ ಸೌಲಭ್ಯ ಪಡೆಯಲಿರುವ ಅರ್ಹ ಮಹಿಳೆಯು ಅಂಗನವಾಡಿ ಕೇಂದ್ರಗಳಲ್ಲಿ ನೋಂದಣಿಯಾಗಬೇಕಾಗಿರುತ್ತದೆ.

2. ನೋಂದಣಿಯಾಗಲು ಫಲಾನುಭವಿಯು ನಿಗಧಿತ ಅರ್ಜಿಯಲ್ಲಿ ಮಾಹಿತಿಯನ್ನು ದಾಖಲೆಗಳೊಂದಿಗೆ 02 ಬಾರಿ ಅಂಗನವಾಡಿ ಕೇಂದ್ರಗಳಲ್ಲಿ ಸಲ್ಲಿಸಬೇಕು.(ಆಧಾರ್ ಕಾರ್ಡ್ ಪ್ರತಿ, ಆಧಾರ್ ಮಾಹಿತಿ ಉಪಯೋಗಿಸಲು ಸಮ್ಮತಿ ಪತ್ರ ಹಾಗೂ ಬಿಪಿಎಲ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ).

3. ಮೊದಲನೆಯ ಅರ್ಜಿ 07 ತಿಂಗಳ ಗರ್ಭಿಣಿಯಾದಾಗ ಎರಡನೆಯ ಬಾರಿ ಸಾಂಸ್ಥಿಕ ಹೆರಿಗೆಯ ನಂತರ.

ಮಂಜೂರಾತಿ ನೀಡುವ ಅಧಿಕಾರ

ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಈ ಯೋಜನೆಯಡಿ ಆನ್‌ಲೈನ್‌ನಲ್ಲಿ ಮಂಜೂರಾತಿ ನೀಡುವ ಅಧಿಕಾರವನ್ನು ಹೊಂದಿರುತ್ತಾರೆ ಹಾಗೂ ನಿಗಧಿತ ನಗದು ಹಣವನ್ನು ರಾಜ್ಯ ನೋಡಲ್ ಅಧಿಕಾರಿಯ ಅಂಗೀಕಾರವಾದ ಮೇಲೆ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೧೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨೭, ೨೦೧೮ ಭಾಗ ೧

ನಗದು ವರ್ಗಾವಣೆ

ಫಲಾನುಭವಿಗೆ ಮೊತ್ತವನ್ನು ಮಾಹೆಯಾನ ಅವರ ಆಧಾರ ಲಿಂಕ್ಡ್ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುವುದು (DBT).

"ಮುಖ್ಯಮಂತ್ರಿ ಮಾತೃಶ್ರೀ ಕೋಶ"

ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಧಾನ ಕಛೇರಿ, ಜಿಲ್ಲಾ ಕಛೇರಿ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ "ಮುಖ್ಯಮಂತ್ರಿ ಮಾತೃಶ್ರೀ ಕೋಶ" ತೆರೆಯಲಾಗುವುದು.

ನಿಬಂಧನೆಗಳು/ಷರತ್ತುಗಳು :-

1. ಈ ಯೋಜನೆಯು 02 ಹೆರಿಗೆಗೆ ಸೀಮಿತವಾಗಿರುತ್ತದೆ.

2. ಫಲಾನುಭವಿಯು ಬಿ.ಪಿ.ಎಲ್ ಕಾರ್ಡ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು.

3. ಫಲಾನುಭವಿಯು ಆಧಾರ ಕಾರ್ಡ್ ಹೊಂದಿದ್ದು, ಬ್ಯಾಂಕ್ ಖಾತೆ ಆಧಾರ ಲಿಂಕ್ ಆಗಿರಬೇಕು.

4. ಫಲಾನುಭವಿಗಳು ಅಂಗನವಾಡಿ ಕೇಂದ್ರದಲ್ಲಿ ನೋಂದಣಿ ಆಗಿರಬೇಕು.

5. ಈ ಸೌಲಭ್ಯವನ್ನು ನವೆಂಬರ್ 1, 2018 ರಿಂದ ನೀಡಲಾಗುವುದು.

6. ಈ ಸೌಲಭ್ಯವು 1-ಮೇ-2018 (ಎಲ್.ಎಂ.ಪಿ) ರಿಂದ ಗರ್ಭಿಣಿಯಾದ ಮಹಿಳೆಯರಿಗೆ ಅನ್ವಯಿಸುವುದು.

7. ಮೊದಲನೇ ಬಾರಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಗರ್ಭಿಣಿ ಮಹಿಳೆಯು ಕನಿಷ್ಟ 1 ನಿಯಮಿತ ಆರೋಗ್ಯ ತಪಾಸಣೆಗೆ ಒಳಪಟ್ಟಿರಬೇಕು.

8. ಎರಡನೇ ಅರ್ಜಿ ಸಲ್ಲಿಸುವಾಗ ಸಾಂಸ್ಥಿಕ (ಆಸ್ಪತ್ರೆ) ಹೆರಿಗೆ ಹಾಗೂ ಮಗುವಿನ ಜನನ ನಂತರದ 01ನೇ ಸುತ್ತಿನ ಚುಚ್ಚುಮದ್ದು ಆಗಿರಬೇಕು.

9. ಫಲಾನುಭವಿಯು ಕಡ್ಡ್ಡಾಯವಾಗಿ ತಾಯಿ ಕಾರ್ಡ್ ಹೊಂದಿರಬೇಕು.

10. ದಿನಾಂಕ: 1-11-2018 ಕ್ಕೆ 7 ತಿಂಗಳ ಗರ್ಭಿಣಿಯಾಗಿರಬೇಕು. ದಿನಾಂಕ: 1-11-2018ರಿಂದ ಬಾಣಂತಿಯಾಗಿರುವವರು ಸಹ ಈ ಯೋಜನೆಯಡಿ ರೂ. 3000/- ಸಹಾಯಧನ ಪಡೆಯಲು ಅರ್ಹರಿದ್ದು, ಇತರ ಎಲ್ಲಾ ಷರತ್ತುಗಳನ್ನು ಪೂರೈಸಿರಬೇಕು.

11. ಮಾತೃವಂದನಾ / ಜನನಿ ಸುರಕ್ಷಿತ ಯೋಜನೆಯಲ್ಲಿ ಸೌಲಭ್ಯ ಪಡೆದ ಫಲಾನುಭವಿಯು ಕೂಡ ಈ ಯೋಜನಗೆ ಅರ್ಹರಿರುತ್ತಾರೆ.

12. ವಿಧವೆಯರು, ಅವಿವಾಹಿತ ಮಹಿಳೆಯರು ಹಾಗೂ ಪರಿತೆಕ್ತೆಯರು ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ.

ನ ಗ ದ ು ವರ್ಗಾವಣೆ ತಿಂಗಳುಗಳು ರ ೂ. ಷ ರ ತ ು್ತ
ಗರ್ಭಿಣಿಯರು
1 ನೇ ಕಂತು 7 ನೇ ತಿಂಗಳು 1,000/- (ಎ.ಎನ್.ಸಿ) ಪ್ರಸವ ಪೂರ್ವ ಗರ್ಭಿಣಿ ಪರೀಕ್ಷೆ. IFA ಮಾತ್ರೆ ಹಾಗೂ ಟಿಟಿ ಚುಚ್ಚುಮದ್ದು ಪಡೆದಿರಬೇಕು.
2 ನೇ ಕಂತು 8 ನೇ ತಿಂಗಳು 1,000/-
3 ನೇ ಕಂತು 9 ನೇ ತಿಂಗಳು 1,000/-
ಬಾಣಂತಿಯರು
1 ನೇ ಕಂತು 1 ನೇ ತಿಂಗಳು 1,000/- 1) ಸಾಂಸ್ಥಿಕ / ಆಸ್ಪತ್ರೆಗಳಲ್ಲಿ ಹೆರಿಗೆ ಆಗಿರಬೇಕು. 2)ಮಗುವು ಜನನದ ನಂತರದ 1ನೇಸುತ್ತಿನ ಚುಚ್ಚುಮದ್ದುಗಳನ್ನು ಪಡೆದಿರಬೇಕು.
2 ನೇ ಕಂತು 2 ನೇ ತಿಂಗಳು 1,000/-
3 ನೇ ಕಂತು 3 ನೇ ತಿಂಗಳು 1,000/-
ಒಟ್ಟು 6,000/-

PR - 522

ಸಂಧ್ಯಾ ಎಲ್. ನಾಯಕ್

SC - 50

ಸರ್ಕಾರದ ಅದೀನ ಕಾರ್ಯದರ್ಶಿ -1

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ

ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 27 December 2018. Indian Gazettes, https://egazette.servantsofknowledge.in/details/in.gazette.karnataka_new.2018-12-27.Part-1/. Archive identifier in.gazette.karnataka_new.2018-12-27.Part-1.