ಬೆಂಗಳೂರು, ಗುರುವಾರ, ಜನವರಿ ೧೭, ೨೦೧೯ (ಪುಷ್ಯ ೨೭, ಶಕ ವರ್ಷ ೧೯೪೦)
Bengaluru, Thursday, January 17, 2019 (Pushya 27, Shaka Varsha 1940)
ಸಂಪುಟ ೧೫೪
Volume 154
ಸಂಚಿಕೆ ೩
Issue 3
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ನಗರಾಭಿವೃದ್ಧಿ ಸಚಿವಾಲಯ
ವಿಷಯ : ಬೆಳ್ಳಂದೂರು ಕೆರೆಯ ಜಲ ಮಾಲಿನ್ಯ ತಡೆಯಲು ಮತ್ತು ಕೆರೆಯನ್ನು ಶುದ್ಧೀಕರಿಸಲು ಅಗತ್ಯವಿರುವುದರಿಂದ "Diversion Channel" ನಿರ್ಮಿಸುವ ಕುರಿತು ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.
ಓದಲಾಗಿದೆ : ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇವರ ಪತ್ರ ಅ.ಸ.ಪತ್ರ ಸಂಖ್ಯೆ:ಬೆಂಅಪ್ರಾ/ಆಯುಕ್ತರು/ಅಸ/ ಟಿ-194/2018-19 ದಿನಾಂಕ:14.09.2018
ಪ್ರಸ್ತಾವನೆ:-
ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಪತ್ರದಲ್ಲಿ ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇವರು ಬೆಳ್ಳಂದೂರು ಕೆರೆಯಲ್ಲಿ ಕಲುಷಿತ ನೀರಿನ ಒಳ ಹರಿವಿನಿಂದ ಉಂಟಾಗುತ್ತಿರುವ ತೊಂದರೆಯನ್ನು ತಡೆಗಟ್ಟಲು ಈಜಿಪುರ ವೈ ಜಂಕ್ಷನ್ ಕಡೆಯಿಂದ ಕೆರೆ ಒಳಗಡೆ ಹೋಗುತ್ತಿರುವ ಕಲುಷಿತ ನೀರನ್ನು ತಡೆಯಲು ಈಜಿಪುರ ವೈ ಜಂಕ್ಷನ್ನಿಂದ ಬೆಳ್ಳಂದೂರು ಕೋಡಿಯವರೆಗೆ ಹಾಗೂ ಅಂಬೇಡ್ಕರ್ ನಗರದ ಕಡೆಯಿಂದ ಕೆರೆ ಒಳಗಡೆ ಹೋಗುತ್ತಿರುವ ಕಲುಷಿತ ನೀರನ್ನು ತಡೆಯಲು ಅಂಬೇಡ್ಕರ್ ನಗರದಿಂದ ಯಮಲೂರು ಕೋಡಿಯವರೆಗೆ "Diversion Channel" ನಿರ್ಮಿಸಲು `.8.50 ಕೋಟಿಗಳ ಅಂದಾಜು ಪಟ್ಟಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಸರ್ಕಾರವು ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ನಅಇ 516 ಬೆಂಭೂಸ್ವಾ 2018, ಬೆಂಗಳೂರು, ದಿನಾಂಕ: 07.12.2018.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಳ್ಳಂದೂರು ಕೆರೆಯಲ್ಲಿ ಕಲುಷಿತ ನೀರಿನ ಒಳ ಹರಿವಿನಿಂದ ಉಂಟಾಗುತ್ತಿರುವ ತೊಂದರೆಯನ್ನು ತಡೆಗಟ್ಟಲು ಈಜಿಪುರ ವೈ ಜಂಕ್ಷನ್ ಕಡೆಯಿಂದ ಕೆರೆ ಒಳಗಡೆ ಹೋಗುತ್ತಿರುವ ಕಲುಷಿತ ನೀರನ್ನು ತಡೆಯಲು ಈಜಿಪುರ ವೈ ಜಂಕ್ಷನ್ನಿಂದ ಬೆಳ್ಳಂದೂರು ಕೋಡಿಯವರೆಗೆ ಹಾಗೂ ಅಂಬೇಡ್ಕರ್ ನಗರದ ಕಡೆಯಿಂದ ಕೆರೆ ಒಳಗಡೆ ಹೋಗುತ್ತಿರುವ ಕಲುಷಿತ ನೀರನ್ನು ತಡೆಯಲು ಅಂಬೇಡ್ಕರ್ ನಗರದಿಂದ ಯಮಲೂರು ಕೋಡಿಯವರೆಗೆ "Diversion Channel" ನಿರ್ಮಿಸುವ ಕಾಮಗಾರಿಯ `. 8.50 ಕೋಟಿಗಳ ಅಂದಾಜು ಪಟ್ಟಿಗೆ ಸರ್ಕಾರದ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಸದರಿ ಕಾಮಗಾರಿಗೆ ತಗಲುವ ಅಂದಾಜು `. 8.50/- ಕೋಟಿಗಳ (ಎಂಟು ಕೋಟಿಯ ಐವತ್ತು ಲಕ್ಷ ರೂಗಳು ಮಾತ್ರ) ವೆಚ್ಚವನ್ನು ಪ್ರಾಧಿಕಾರದಲ್ಲಿ ಲಭ್ಯವಿರುವ ನಿಧಿಯಿಂದ ಕೈಗೊಳ್ಳುವುದು ಮತ್ತು ಸದರಿ ಮೊತ್ತವನ್ನು 2019-20ನೇ ಸಾಲಿನ ಆಯವ್ಯಯದಲ್ಲಿ ಸರ್ಕಾರದಿಂದ ಒದಗಿಸಲಾಗುವುದು.
ಸದರಿ ಆದೇಶವನ್ನು ಆರ್ಥಿಕ ಇಲಾಖೆಯ ಸಂಖ್ಯೆ: FD 638 Exp-9/2018, ದಿನಾಂಕ: 09.11.2018 ರ ಸಹಮತಿಯನ್ವಯ ಹೊರಡಿಸಲಾಗಿದೆ.
PR-526
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50
ಕೆ.ಎಸ್. ಜಗದೀಶರೆಡ್ಡಿ
(೩೭)೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೭, ೨೦೧೯ ಭಾಗ ೧
ಸಹಕಾರ ಸಚಿವಾಲಯ
ವಿಷಯ : 2018-19 ನೇ ಸಾಲಿಗೆ ಬೀದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಡಿಸಿಸಿ ಬ್ಯಾಂಕುಗಳು ಮತ್ತು ಪಟ್ಟಣ ಸಹಕಾರ ಬ್ಯಾಂಕುಗಳ ಮೂಲಕ ಬ್ಯಾಂಕಿಂಗ್ ಸೇವೆ ಮತ್ತು ಸಾಲದ ವ್ಯವಸ್ಥೆ ಕಲ್ಪಿಸಲು 'ಬಡವರ ಬಂಧು' ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ.
ಓದಲಾಗಿದೆ : ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ: ಆರ್ಸಿಎಸ್/ಸಿಆರ್ಡಿ/ಸಿಎಬಿ-1/30/2018-19, ದಿನಾಂಕ: 05.09.2018.
ಪ್ರಸ್ತಾವನೆ:-
2018-19 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ 45ರಲ್ಲಿ ರಾಜ್ಯದ 5 ನಗರ ಪ್ರದೇಶಗಳಲ್ಲಿ ಬೀದಿ ವ್ಯಾಪಾರಿಗಳು / ಸಣ್ಣ ವ್ಯಾಪಾರಿಗಳಿಗೆ ಕಿರು ಹಣಕಾಸು ಸಾಲ (Micro Finance) ಸೌಲಭ್ಯ ಒದಗಿಸಲು 'ಬಡವರ ಬಂಧು' ಸಂಚಾರಿ ಸೇವೆಯನ್ನು ಪ್ರಾರಂಭಿಸಲು ಯೋಜನೆ ಘೋಷಿಸಲಾಗಿದೆ.
ಮೇಲೆ ಓದಲಾದ ಪ್ರಸ್ತಾವೆಯಲ್ಲಿ ಸಹಕಾರ ಸಂಘಗಳ ನಿಬಂಧಕರು ಈ ಯೋಜನೆಯನ್ನು ದಿನಾಂಕ: 04.09.2018 ರಂದು ಮಾನ್ಯ ಸಹಕಾರ ಸಚಿವರು ಬೀದಿ ವ್ಯಾಪಾರಿಗಳೊಂದಿಗೆ ನಡೆಸಿದ ಸಂವಾದವನ್ನು ಆಧರಿಸಿ, ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ ಪರಿಷ್ಕರಿಸಿ 5 ನಗರಗಳಿಗೆ ಬದಲಾಗಿ ರಾಜ್ಯಾದ್ಯಂತ ಎಲ್ಲಾ ನಗರ ಪ್ರದೇಶಗಳಿಗೆ ವಿಸ್ತರಿಸಲು ಮತ್ತು ಶೂನ್ಯ ಬಡ್ಡಿದರದಲ್ಲಿ ಸಾಲಗಳನ್ನು ವಿತರಿಸುವ ಯೋಜನೆಗೆ ಷರತ್ತುಗಳಿಗೊಳಪಟ್ಟು ಅನುಮೋದನೆಯನ್ನು ನೀಡುವಂತೆ ಕೋರಿರುತ್ತಾರೆ.
ಪ್ರಸ್ತಾವೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಒ 147 ಸಿಎಲ್ಎಸ್ 2018(ಭಾಗ-1), ಬೆಂಗಳೂರು, ದಿನಾಂಕ: 09.11.2018
ರಾಜ್ಯದ ನಗರ ಪ್ರದೇಶಗಳಲ್ಲಿನ ನೋಂದಾಯಿತ ಬೀದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಡಿಸಿಸಿ ಬ್ಯಾಂಕುಗಳು, ಮಹಿಳಾ ಸಹಕಾರಿ ಬ್ಯಾಂಕುಗಳು ಮತ್ತು ಪಟ್ಟಣ ಸಹಕಾರ ಬ್ಯಾಂಕುಗಳ ಮೂಲಕ ಶೂನ್ಯ ಬಡ್ಡಿದರ ಅನ್ವಯವಾಗುವಂತೆ ಕಿರು ಸಾಲವನ್ನು (Micro Finance) ವಾರ್ಷಿಕ 50,000 ಫಲಾನುಭವಿಗಳಿಗೆ ಮಿತಿಗೊಳಿಸಿ ವಿತರಿಸಲು ಕೆಳಕಂಡ ಷರತ್ತಿಗೊಳಪಟ್ಟು ಆದೇಶ ಹೊರಡಿಸಲಾಗಿರುತ್ತದೆ.
ಷರತ್ತುಗಳು :
| ನಗರ ಪ್ರದೇಶಗಳು | ಪ ತೀ ಪ್ರದೇಶದ ಫಲಾನುಭವಿಗಳು ್ರ |
| ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ | 5000 |
| ವ ುಹಾ ನಗರ ಸಭೆಯ ವ್ಯಾಪ್ತಿ | 3000 |
| ಜಿಲ್ಲಾ ನಗರ ಪ್ರದೇಶಗಳ ವ್ಯಾಪ್ತಿ | 1000 |
2. ಕೆಳಕಂಡ ನೋಂದಾಯಿತ ಬೀದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಈ ಯೋಜನೆ ಅನ್ವಯವಾಗುತ್ತದೆ.
➢ ರಸ್ತೆ ಬದಿಯಲ್ಲಿ ತಳ್ಳು ಬಂಡಿ ಅಥವಾ ಮೋಟಾರು ವಾಹನದಲ್ಲಿ ಪಾನೀಯ, ತಿಂಡಿ, ಊಟ, ಸಿಹಿ ಪದಾರ್ಥ, ಮುಂತಾದ ಹೋಟೆಲ್ ಸೇವೆಯನ್ನು ಒದಗಿಸುವ ಬೀದಿ ವ್ಯಾಪಾರಿಗಳು.
➢ ರಸ್ತೆಗಳಲ್ಲಿ ಮನೆಮನೆಗಳಿಗೆ ತಳ್ಳು ಬಂಡಿ ಅಥವಾ ಮೋಟಾರು ವಾಹನದಲ್ಲಿ ತರಕಾರಿ, ಹೂ, ಹಣ್ಣು, ಕಾಯಿ ಮಾರುವವರು ಮತ್ತು ರಸ್ತೆ ಬದಿಯ ಬುಟ್ಟಿ ವ್ಯಾಪಾರಿಗಳು.
➢ ಪಾದರಕ್ಷೆಗಳು, ಚರ್ಮ ಉತ್ಪನ್ನಗಳ ರಿಪೇರಿ ಮಾರಾಟ ಇತ್ಯಾದಿ ಕೆಲಸಗಳಲ್ಲಿ ತೊಡಗಿರುವ ಬೀದಿ ವ್ಯಾಪಾರಿಗಳು.
➢ ಆಟದ ಸಾಮಾನುಗಳು, ಇತರೆ ಗೃಹಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು.
➢ ರಸ್ತೆ ಬದಿಯಲ್ಲಿ ಸ್ವಚ್ಚತೆಯನ್ನು ಹಾಳು ಮಾಡುವ ಮತ್ತು ಪರಿಸರಕ್ಕೆ ಹಾನಿಯಾಗುವ ವಸ್ತುಗಳನ್ನು ಉಪಯೋಗಿಸುವ ಸಣ್ಣ ವ್ಯಾಪಾರಿಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ.
➢ ಬಿಪಿಎಲ್ ಕಾರ್ಡ್ ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.
3. ಈ ಯೋಜನೆಯಲ್ಲಿ ಸಹಕಾರ ಬ್ಯಾಂಕುಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ನಗರ ಪ್ರದೇಶಗಳಲ್ಲಿ ನಿಗದಿಪಡಿಸಿದ ಗುರಿಗೆ ತಕ್ಕಂತೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಿ ಸಾಲ ವಿತರಿಸಲು ಕ್ರಮವಹಿಸತಕ್ಕದ್ದು.
4. ಈ ಯೋಜನೆಯಲ್ಲಿನ ಫಲಾನುಭವಿಗಳು ಗುರುತಿಸಲು ಸಹಕಾರ ಬ್ಯಾಂಕುಗಳು ತಮ್ಮ ಸಿಬ್ಬಂದಿ ಅಥವಾ ಬ್ಯಾಂಕಿನ ಪ್ರತಿನಿಧಿಗಳನ್ನು ಬೀದಿ ವ್ಯಾಪಾರಿಗಳು ಹೆಚ್ಚಿಗೆ ಇರುವ ಎಪಿಎಂಸಿ ಮಾರುಕಟ್ಟೆ/ ತರಕಾರಿ ಮಾರುಕಟ್ಟೆ ಅಥವಾ ಹಣ್ಣು ಮಾರುಕಟ್ಟೆ ಹಾಗೂ ಇತರೇ ನಿಗದಿತ ಪ್ರದೇಶಗಳಲ್ಲಿ ಮೊಬೈಲ್ ವ್ಯಾನ್ ಅಥವಾ ಇತರೇ ಸಾರಿಗೆ ವಾಹನದೊಂದಿಗೆ ಹಾಜರಿರಲು ವ್ಯವಸ್ಥೆ ಕಲ್ಪಿಸತಕ್ಕದ್ದು. ಸಂಬಂಧಿಸಿದ ಮಾರುಕಟ್ಟೆ ಮಂಡಳಿಗಳು/ಸ್ಥಳೀಯ ಸಂಸ್ಥೆಗಳು ಮೊಬೈಲ್ ಬ್ಯಾಂಕ್ಗೆ ಸ್ಥಳಾವಕಾಶ ನೀಡಲು ಸೂಕ್ತ ವ್ಯವಸ್ಥೆ ಕಲ್ಪಿಸತಕ್ಕದ್ದು.
5. ಪ್ರತಿ ನಗರ ಪ್ರದೇಶದಲ್ಲಿ ಒಂದು ಸಹಕಾರ ಬ್ಯಾಂಕಿನ ಮೂಲಕ ಮಾತ್ರ ಸಾಲ ವಿತರಿಸಬೇಕಿದ್ದು, ಪ್ರತೀ ನಗರ ಪ್ರದೇಶಕ್ಕೆ ಸಹಕಾರ ಬ್ಯಾಂಕನ್ನು (ಡಿಸಿಸಿ ಬ್ಯಾಂಕು, ಅರ್ಬನ್ ಬ್ಯಾಂಕ್, ಮಹಿಳಾ ಬ್ಯಾಂಕನ್ನು) ಮತ್ತು ಮೊಬೈಲ್ ಘಟಕದ ಸ್ಥಳವನ್ನು ಗುರುತಿಸಲು ಈ ಕೆಳಕಂಡ ಜಿಲ್ಲಾ ಮಟ್ಟದ ಸಮಿತಿಯನ್ನು ನೇಮಿಸಲಾಗಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೭, ೨೦೧೯ ೩೯1. ಡಿಸಿಸಿ ಬ್ಯಾಂಕಿನ ಅಧ್ಯಕ್ಷರು- ಸಮಿತಿಯ ಅಧ್ಯಕ್ಷರು 2. ಜಿಲ್ಲೆಯ ಕೇಂದ್ರದಲ್ಲಿರುವ ಅರ್ಬನ್ ಬ್ಯಾಂಕ್ ನ ಅಧ್ಯಕ್ಷರು-ಸದಸ್ಯರು 3. ಜಿಲ್ಲಾ ಮಟ್ಟದ ಸಹಕಾರ ಸಂಘಗಳ ಉಪ ನಿಬಂಧಕರು-ಸದಸ್ಯರು 4. ಡಿಸಿಸಿ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು-ಸದಸ್ಯ ಕಾರ್ಯದರ್ಶಿ
ಸದರಿ ಸಮಿತಿಯು ಆಗಿಂದ್ದಾಗೆ ಸಭೆ ಸೇರಿ ಪ್ರತೀ ನಗರ ಪ್ರದೇಶಕ್ಕೆ ಒಂದು ಸಹಕಾರ ಬ್ಯಾಂಕನ್ನು ಮತ್ತು ಮೊಬೈಲ್ ಬ್ಯಾಂಕಿಂಗ್ ಘಟಕದ ಸ್ಥಳಗಳನ್ನು ಗುರುತಿಸಿ ಸಂಬಂಧಿಸಿದ ಸಹಕಾರ ಬ್ಯಾಂಕುಗಳಿಗೆ ಒದಗಿಸಬೇಕು.
6. ನೋಂದಾಯಿತ ಬೀದಿ ಬದಿ ವ್ಯಾಪಾರಿಗಳು/ ಸಣ್ಣ ವ್ಯಾಪಾರಿಗಳು ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ಗಳನ್ನು ಮತ್ತು ತಾವು ವ್ಯಾಪಾರ ನಡೆಸುತ್ತಿರುವ ಸ್ಥಳದ ಪೋಟೋ ಮತ್ತು ಸ್ಥಳೀಯ ಸಂಸ್ಥೆಗಳು ಗುರುತಿನ ಚೀಟಿ ನೀಡಿದಲ್ಲಿ, ಡಿಸಿಸಿ ಬ್ಯಾಂಕುಗಳು/ಇತರೆ ಬ್ಯಾಂಕುಗಳು ನಿಗಧಿಪಡಿಸಿದ ಅರ್ಜಿಯನ್ನು ಆಯಾ ಬ್ಯಾಂಕಿನ ಮೊಬೈಲ್ ಘಟಕ ಅಥವಾ ಶಾಖೆಗೆ ಸಲ್ಲಿಸತಕ್ಕದ್ದು. ಡಿಸಿಸಿ ಬ್ಯಾಂಕುಗಳು ಮೇಲೆ ನಿಗದಿತ ಗುರಿ ತಲುಪುವವರೆಗೆ ಫಲಾನುಭವಿಗಳ ಶೂನ್ಯ ಬ್ಯಾಲೆನ್ಸ್ ಉಳಿತಾಯ ಖಾತೆಯನ್ನು (ಬೇಸಿಕ್ ಸೇವಿಂಗ್ ಬ್ಯಾಂಕ್ ಅಕೌಂಟ್) ತೆರೆಯತಕ್ಕದ್ದು.
7. ನಂತರ ಫಲಾನುಭವಿಗಳಿಗೆ ಸಾಲದ ಖಾತೆಯನ್ನು ತೆರೆದು ಅವರ ವ್ಯಾಪಾರವನ್ನು ಅವಲಂಬಿಸಿ `.2000 ದಿಂದ `.10,000 ಗಳ ಸಾಲದ ಮಿತಿಯನ್ನು ನಿಗದಿಪಡಿಸಿ ಸಾಲ ವಿತರಿಸತಕ್ಕದ್ದು. ಹಂತ ಹಂತವಾಗಿ ಸಾಲವನ್ನು ರೂಪೇ ಕ್ರೆಡಿಟ್ ಕಾರ್ಡ್ ಮೂಲಕ ವಿತರಿಸಲು ಕ್ರಮವಿಡತಕ್ಕದ್ದು.
8. ಈ ಸಾಲವು ಕ್ಯಾಷ್ಕ್ರೆಡಿಟ್ ರೂಪದಲ್ಲಿದ್ದು, ಸಾಲದ ಮರುಪಾವತಿ ಅವಧಿಯು ಮೂರು ತಿಂಗಳು ಇರುತ್ತದೆ. ಈ ಅವಧಿಯಲ್ಲಿ ಸಾಲದ ಮಿತಿಗೊಳಪಟ್ಟು ಎಷ್ಟು ಬಾರಿಯಾದರೂ ಹಣವನ್ನು ಡ್ರಾ ಮಾಡಬಹುದು ಅಥವಾ ಜಮಾ ಮಾಡಬಹುದು. ಮೂರು ತಿಂಗಳ ಅವಧಿಗೆ ಬ್ಯಾಂಕುಗಳು ಶೂನ್ಯ ಬಡ್ಡಿಯನ್ನು ಆಕರಿಸಬೇಕು, ದೈನಂದಿನ ಚಾಲ್ತಿ ಬ್ಯಾಲೆನ್ಸ್ ಆಧಾರವಾಗಿ ಸರ್ಕಾರದಿಂದ ತ್ರೈಮಾಸಿಕವಾಗಿ ಶೇ.10ರ ಬಡ್ಡಿ ಸಹಾಯಧನವನ್ನು ಒದಗಿಸಲಾಗುವುದು. ಪ್ರತೀ ಮೂರು ತಿಂಗಳಿಗೆ ಸಾಲವನ್ನು ಪೂರ್ತಿಯಾಗಿ ಮರುಪಾವತಿಸಿದಲ್ಲಿ ನಂತರ ಪುನಃ ಸಾಲವನ್ನು ನವೀಕರಿಸಬಹುದು ಅಥವಾ ಶೇ.10 ರಷ್ಟು ಹೆಚ್ಚಿಗೆ ಮಾಡಿ ಮಿತಿಯನ್ನು `.15,000 ಕ್ಕೆ ಮೀರದಂತೆ ನಿಗಧಿಪಡಿಸಬಹುದು.
9. ಪ್ರತೀ ದಿನವೂ ಫಲಾನುಭವಿಗಳ ಇಚ್ಚೆಯ/ಅನುಕೂಲಕ್ಕೆ ತಕ್ಕಂತೆ ಪಿಗ್ಮಿ ಮೊತ್ತವನ್ನು ಮತ್ತು ಸಾಲದ ಮೊತ್ತವನ್ನು ಪಡೆದು ಫಲಾನುಭವಿಗಳ ಉಳಿತಾಯ ಖಾತೆಗೆ ಅಥವಾ ಸಾಲದ ಖಾತೆಗೆ ಜಮೆ ನೀಡತಕ್ಕದ್ದು. ಉಳಿತಾಯ ಖಾತೆಗೆ ದೈನಂದಿನ ಬ್ಯಾಲ್ನ್ಸ್ಗೆ ಶೇ.4ರ ಬಡ್ಡಿಯನ್ನು ಸಂಬಂಧಪಟ್ಟ ಬ್ಯಾಂಕುಗಳು ನೀಡತಕ್ಕದ್ದು ಮತ್ತು ಯಾವುದೇ ಪಿಗ್ಮಿ ಶುಲ್ಕ ವಸೂಲು ಮಾಡಬಾರದು. ಸರ್ಕಾರದಿಂದ ಸಾಲದ ಖಾತೆಯ ದೈನಂದಿನ ಚಾಲ್ತಿ ಹೊರಬಾಕಿ ಮೊತ್ತಕ್ಕೆ ಶೇ.1ರ ಹೆಚ್ಚಿನ ಪ್ರೋತ್ಸಾಹ ಧನವನ್ನು ನೀಡಲಾಗುವುದು. ಉಳಿತಾಯ ಖಾತೆಯ ಬ್ಯಾಲೆನ್ಸ್ ಮೊತ್ತವನ್ನು ಸಾಲದ ಖಾತೆಗೆ ಸುಸ್ತಿಯಾದಲ್ಲಿ ಜಮಾ ಪಡೆಯಬಹುದು.
10. ಈ ಯೋಜನೆಯು ದಿನಾಂಕ: 01.04.2018 ರಿಂದು 31.03.2019ವರೆಗೆ ಜಾರಿಯಲ್ಲಿರುತ್ತದೆ.
11. ಸಹಕಾರ ಬ್ಯಾಂಕುಗಳು ದೈನಂದಿನ ಚಾಲ್ತಿ ಹೊರಬಾಕಿ ಆಧಾರದಲ್ಲಿ ಮೇಲಿನ ಬಡ್ಡಿ ಸಹಾಯಧನದ ಮತ್ತು ಪ್ರೋತ್ಸಾಹಧನ ಬಿಲ್ಲುಗಳನ್ನು ಸಹಕಾರ ಸಂಘಗಳ ಉಪ ನಿಬಂಧಕರಿಂದ ದೃಡೀಕರಣ ಪಡೆದು ಅಪೆಕ್ಸ್ ಬ್ಯಾಂಕಿನ ಮೂಲಕ ಸಹಕಾರ ಸಂಘಗಳ ನಿಬಂಧಕರಿಗೆ ಸಲ್ಲಿಸಿ ಅನುದಾನ ಪಡೆಯುವುದು. ಸಹಕಾರ ಸಂಘಗಳ ಉಪ ನಿಬಂಧಕರು ಕನಿಷ್ಟ 50 ಫಲಾನುಭವಿಗಳ ಮಿತಿಗೊಳಪಟ್ಟು ಶೇ. 10ರಷ್ಟು ಖಾತೆಗಳು ನೈಜವಾಗಿರುವುದನ್ನು ಖಚಿತಪಡಿಸಿಕೊಂಡು ಬಿಲ್ಲುಗಳಿಗೆ ದೃಡೀಕರಿಸುವುದು.
12. ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕಾಲಕಾಲಕ್ಕೆ ಸರ್ಕಾರ ಮತ್ತು ಸಹಕಾರ ಸಂಘಗಳ ನಿಬಂಧಕರು ನೀಡಿದ ಸೂಚನೆಗಳನ್ನು ಸಹಕಾರ ಸಂಸ್ಥೆಗಳು ಪಾಲಿಸತಕ್ಕದ್ದು.
ಈ ಆದೇಶವನ್ನು ಯೋಜನಾ ಇಲಾಖೆಯ ಟಿಪ್ಪಣಿಯ ಸಂಖ್ಯೆ: ಪಿಡಿ 31 ಎಫ್ಆರ್ಓ 2018, ದಿನಾಂಕ: 10.08.2018 ಹಾಗೂ ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 196 ವೆಚ್ಚ-2/2018 ದಿನಾಂಕ: 30.10.2018 ಮತ್ತು ಆಇ, ಅಮುಕಾ ಸಂಖ್ಯೆ: 6925, ದಿನಾಂಕ: 09.11.2018ರಂದು ನೀಡಿರುವ ಸಹಮತಿಯೊಂದಿಗೆ ಹೊರಡಿಸಲಾಗಿದೆ.
PR-529
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-20
ಎಂ. ವೆಂಕಟಸ್ವಾಮಿ
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಉಪ ಕಾರ್ಯದರ್ಶಿ, ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ವಿಷಯ : ರಾಜ್ಯದ ರೈತರು ಸಹಕಾರ ಸಂಘ/ಬ್ಯಾಂಕುಗಳಿಂದ ಪಡೆದಿರುವ ಅಲ್ಪಾವಧಿ ಕೃಷಿ ಸಾಲ ಮನ್ನಾ ಯೋಜನೆಯನ್ನು ಅನುಷ್ಟಾನಗೊಳಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಿಒ 163 ಸಿಎಲ್ಎಸ್ 2018, ದಿನಾಂಕ: 14.08.2018 ಮತ್ತು ತಿದ್ದುಪಡಿ ಆದೇಶ ದಿನಾಂಕ: 22.09.2018.
2. ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 164 ಭೂದಾಸ 2018, ದಿನಾಂಕ: 22.09.2018. 3. ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 164 ಭೂದಾಸ 2018, ದಿನಾಂಕ: 29.10.2018. 4. ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ: ಆರ್ಸಿಎಸ್/ಸಿಆರ್ಡಿ/ಸಿಎಬಿ-1/33/2018-19, ದಿನಾಂಕ: 03.12.2018.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೭, ೨೦೧೯ ಭಾಗ ೧ಪ್ರಸ್ತಾವನೆ:-
ಮೇಲೆ ಓದಲಾದ (1)ರ ಆದೇಶದಲ್ಲಿ ರಾಜ್ಯದ ರೈತರು ಸಹಕಾರ ಸಂಸ್ಥೆಗಳು / ಬ್ಯಾಂಕುಗಳು ಪಡೆದಿರುವ `.1,00,000 ಗಳವರೆಗಿನ ಅಲ್ಪಾವಧಿ ಬೆಳೆ ಸಾಲವನ್ನು ಮನ್ನಾ ಮಾಡಿ ಆದೇಶ ಹೊರಡಿಸಲಾಗಿದೆ.
ಮೇಲೆ ಓದಲಾದ (2)ರ ಆದೇಶದಲ್ಲಿ ಸಾಲ ಮನ್ನಾ ಯೋಜನೆಯ ಸಮರ್ಪಕ ಅನುಷ್ಟಾನ ಮತ್ತು ಮೇಲ್ವಿಚಾರಣೆಗಾಗಿ ಆಯುಕ್ತರು, ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ವಿಶೇಷ ಕೋಶವನ್ನು ರಚಿಸಲಾಗಿರುತ್ತದೆ. ಸಾಲ ಮನ್ನಾ ಸಂಚಾಲನಾ ಸಮಿತಿ ದಿನಾಂಕ: 14.09.2018 ಮತ್ತು 17.10.2018ರಂದು ನಡೆದ ಸಭೆಗಳಲ್ಲಿ ಸಾಲ ಮನ್ನಾ ಯೋಜನೆ ಸಮರ್ಪಕ ಅನುಷ್ಟಾನಗೊಳಿಸಲು ಜಿಲ್ಲಾ ಮತ್ತು ತಾಲ್ಲೂಕು ಮಟ್ಟಗಳಲ್ಲಿ ಕ್ರಮವಾಗಿ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ರ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲು ತೀರ್ಮಾನಿಸಲಾಗಿದೆ.
ಮೇಲೆ ಓದಲಾದ (3)ರ ಆದೇಶದಲ್ಲಿ ವಾಣಿಜ್ಯ ಬ್ಯಾಂಕ್ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳ ಸಾಲ ಮನ್ನಾ ಯೋಜನೆ ಅನುಷ್ಟಾನಗೊಳಿಸಲು ಜಿಲ್ಲಾ ಅನುಷ್ಟಾನ ಸಮಿತಿ ಮತ್ತು ತಾಲ್ಲೂಕು ಮಟ್ಟದ ಅನುಷ್ಟಾನ ಸಮಿತಿಯನ್ನು ರಚಿಸಲಾಗಿರುತ್ತದೆ.
ಮೇಲೆ ಓದಲಾದ (4)ರ ನಿಬಂಧಕರ ಪತ್ರದಲ್ಲಿ ರೈತರು ಸಹಕಾರ ಸಂಸ್ಥೆಗಳು / ಬ್ಯಾಂಕುಗಳು ಪಡೆದಿರುವ ಸಾಲ ಮನ್ನಾ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಲು ಕಂದಾಯ ಇಲಾಖೆಯವರು ರಚಿಸಿರುವಂತೆ ಅದೇ ಸದಸ್ಯರನ್ನು ಒಳಗೊಂಡಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಮಿತಿಯನ್ನು ರಚಿಸಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಒ 204 ಸಿಎಲ್ಎಸ್ 2018, ದಿನಾಂಕ: 07.12.2018
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯದ ರೈತರು ಸಹಕಾರ ಸಂಸ್ಥೆಗಳು / ಬ್ಯಾಂಕುಗಳಿಂದ ಪಡೆದಿರುವ ಬೆಳೆ ಸಾಲ ಮನ್ನಾ ಯೋಜನೆ 2018ನ್ನು ಪರಿಣಾಮಕಾರಿಯಾಗಿ ಹಾಗೂ ಸಮರ್ಪಕವಾಗಿ ಅನುಷ್ಟಾನಗೊಳಿಸಲು ಈ ಕೆಳಕಂಡಂತೆ ಜಿಲ್ಲಾ ಅನುಷ್ಟಾನ ಸಮಿತಿ ಮತ್ತು ತಾಲ್ಲೂಕು ಮಟ್ಟದ ಅನುಷ್ಟಾನ ಸಮಿತಿಯನ್ನು ರಚಿಸಿ ಆದೇಶಿಸಿದೆ.
| 1. | ಸ ಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳು | ಅಧ್ಯಕ್ಷರು |
| 2. | ವ ುುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ | ಸ ದ ಸ ್ಯರು |
| 3. | ಹೆಚ್ಚುವರಿ ಜಿಲ್ಲಾಧಿಕಾರಿಗಳು | ಸ ದ ಸ ್ಯರು |
| 4. | ಉಪವಿಭಾಗಾಧಿಕಾರಿಗಳು, ಕಂದಾಯ ಇಲಾಖೆ | ಸ ದ ಸ ್ಯರು |
| 5. | ಜಂಟಿ/ಉಪನಿರ್ದೇಶಕರು, ಕೃಷಿ ಇಲಾಖೆ | ಸ ದ ಸ ್ಯರು |
| 6. | ಜಂಟಿ/ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ. | ಸ ದ ಸ ್ಯರು |
| 7. | ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರು | ಸ ದ ಸ ್ಯರು |
| 8. | ವ ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ | ಸ ದ ಸ ್ಯ ಕಾರ್ಯದರ್ಶಿ |
| 9. | ಜಿಲ್ಲಾಧಿಕಾರಿಗಳು ನಿರ್ಧರಿಸಬಹುದಾದ ಇತರೆ ಸದಸ್ಯರು ಅಥವಾ ವಿಶೇಷ ಆಹ್ವಾನಿತರು | ಸ ದ ಸ ್ಯರು |
| 1. | ಸ ಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್ | ಅಧ್ಯಕ್ಷರು |
| 2. | ಕಾರ್ಯನಿರ್ವಾಹಣಾಧಿಕಾರಿಗಳು, ತಾಲ್ಲೂಕು ಪಂಚಾಯತ್ | ಸ ದ ಸ ್ಯರು |
| 3. | ಉಪವಿಭಾಗೀಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು | ಸ ದ ಸ ್ಯರು |
| 4. | ಸ ಹಾಯಕ ನಿರ್ದೇಶಕರು, ಕೃಷಿ ಇಲಾಖೆ | ಸ ದ ಸ ್ಯರು |
| 5. | ವ ್ಯವಸ್ಥಾಪಕ ನಿರ್ದೇಶಕರು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಥವಾ ಅವರ ಪ ತಿನಿಧಿ ್ರ | ಸ ದ ಸ ್ಯರು |
| 6. | ತ ಹಶೀಲ್ದಾರರು ನಿರ್ಧರಿಸಬಹುದಾದ ಇತರೆ ಸದಸ್ಯರು ಅಥವಾ ವಿಶೇಷ ಆಹ್ವಾನಿತರು. | ಸ ದ ಸ ್ಯರು |
PR-532
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಎಂ. ವೆಂಕಟಸ್ವಾಮಿ
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.