Servants of Knowledge
Karnataka Gazette · Government of Karnataka

Karnataka Gazette, Part Part-2, 17 January 2019

Published 17 January 2019

Part
Part-2
Identifier
in.gazette.karnataka_new.2019-01-17.Part-2
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಜನವರಿ ೧೭, ೨೦೧೯ (ಪುಷ್ಯ ೨೭, ಶಕ ವರ್ಷ ೧೯೪೦)

Bengaluru, Thursday, January 17, 2019 (Pushya 27, Shaka Varsha 1940)

ಸಂಚಿಕೆ ೩

Issue 3

ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

PERSONNEL AND ADMINISTRATIVE REFORMS SECRETARIAT

NOTIFICATION

No. DPAR 67 SeVuNya 2018, Bengaluru, Dated: 24.12.2018.

I, Vajubhai Vala, Governor of Karnataka, in exercise of the powers conferred on me, under Article 233 of the Constitution of India, hereby appoint the following 30 District Judges filling up under 65% category of the existing vacancies in the cadre of District Judges by promotion on the basis of seniority cum-merit under the Karnataka Judicial Service (Recruitment) Rules, 2004 and amended

Sl.No. Names Shriyuths /Smts :
(1) (2)
1 K. Narayana Prasad
2 S. Nataraj
3 Venkatesh R Hulgi
4 J.P. Archana
5 Srinivasa Suvarna
6 Chandrashekara. P.S.
7 K. Kathyayani
8 Jaishankar
9 Shankara Mallappa Jalawadi
10 N. Sunil Kumar Singh
11 D.P. Kumara Swamy
12 P.G. Cheluva Murthy
13 Kiran Kini
14 Dinesh Hegde
15 Latha
16 Mohamed Mujeer Ulla, C.G.
17 Virupakshaiah H.M
18 Pushpavathi V
19 Sayeedunnisa
20 Mallanagouda.

(೨೫)

೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೭, ೨೦೧೯ ಭಾಗ ೨
Sl.No. Names Shriyuths /Smts :
(1) (2)
21 Chandrashekhar Dundappa Karoshi
22 Praseela Kumari G.S
23 E. Rajeeva Gowda
24 Kengabalaiah
25 Mallikarjun
26 Shivakumara B.
27 Jinaralkar Babasahib Lagamappa
28 S. Nirmala Devi
29 Selva Kumar C.
30 Suvarna Kubbanna Mirji

Sd/-

Governor of Karnataka

PR. 01

S.D. SUNANDA

Under Secretary to Government,

Department of Personnel and Administrative Reforms (Services-3)

ಸಹಕಾರ ಚುನಾವಣಾ ಪ್ರಾಧಿಕಾರ

ಆಯುಕ್ತರ ಕಛೇರಿ, 3ನೇ ಮಹಡಿ, ಟಿ.ಟಿ.ಎಂ.ಸಿ. ಕಟ್ಟಡ "ಎ" ಬ್ಲಾಕ್, ಶಾಂತಿನಗರ ಬೆಂಗಳೂರು-27

ಅಧಿಸೂಚನೆ

ಸಂಖ್ಯೆ: ಸಚುಪ್ರಾ/ಪ್ರಾ.ಸಂ.ಚು/43/2018, ದಿನಾಂಕ: 03-10-2018.

ವಿಷಯ : ದಿನಾಂಕ: 01-01-2019 ರಿಂದ 31-12-2019 ರವರೆಗೆ ಅವಧಿ ಮುಗಿಯಲಿರುವ ಪ್ರಾಥಮಿಕ ಹಂತದ ಸಹಕಾರ ಸಂಘಗಳ ಮತ್ತು ಸಹಕಾರಿಗಳ ಆಡಳಿತ ಮಂಡಳಿಗೆ ಚುನಾವಣೆ ಹಾಗೂ ತತ್ಪರಿಣಾಮದ ಪದಾಧಿಕಾರಿಗಳ ಚುನಾವಣೆಗಳನ್ನು ನಡೆಸುವ ಕುರಿತು.

ಉಲ್ಲೇಖ : 1. ಸಹಕಾರ ಚುನಾವಣಾ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: ಸಚುಪ್ರಾ/ಚುನಾವಣೆ/06/2017, ದಿನಾಂಕ: 01-08-2017.

2. ತಿದ್ದುಪಡಿ ಅಧಿಸೂಚನೆ ಸಂಖ್ಯೆ: ಸಚುಪ್ರಾ/ ಚುನಾವಣೆ/ ಜನವರಿ- ಡಿಸೆಂಬರ್/06/2017 ದಿನಾಂಕ: 10.10.2017. 3. ಸಹಕಾರ ಚುನಾವಣಾ ಪ್ರಾಧಿಕಾರದ ಆದೇಶ ಸಂಖ್ಯೆ: ಸಚುಪ್ರಾ/ಪ್ರಾ.ಸಂ.ಚು/43/2018, ದಿನಾಂಕ: 29.09.2018 ದಿನಾಂಕ: 01.01.2018 ರಿಂದ 31.12.2018 ರವರೆಗೆ ಅವಧಿ ಮುಗಿಯಲಿರುವ ಎಲ್ಲಾ ರೀತಿಯ ಪ್ರಾಥಮಿಕ ಹಂತದ ಸಹಕಾರ ಸಂಘಗಳ ಮತ್ತು ಸಹಕಾರಿಗಳ ಆಡಳಿತ ಮಂಡಳಿಗೆ ಚುನಾವಣೆ ಹಾಗೂ ತತ್ಪರಿಣಾಮದ ಪದಾಧಿಕಾರಿಗಳ ಚುನಾವಣೆಗಳನ್ನು ನಡೆಸಲು ಉಲ್ಲೇಖ (1) ಹಾಗೂ (2)ರ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ದಿನಾಂಕ: 01.01.2019 ರಿಂದ 31.12.2019 ರವರೆಗೆ ಅವಧಿ ಮುಗಿಯಲಿರುವ ಪ್ರಾಥಮಿಕ ಹಂತದ ಸಹಕಾರ ಸಂಘಗಳ/ಸಹಕಾರಿಗಳ ಆಡಳಿತ ಮಂಡಳಿಗಳಿಗೆ ಉಲ್ಲೇಖ (3)ರಂತೆ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.

2019ನೇ ಸಾಲಿನಲ್ಲಿ ಬರುವ ಚುನಾವಣೆಗಳು ಈ ಹಿಂದೆ 2014ರಲ್ಲಿ ನಡೆದ ಚುನಾವಣೆಗಳಿಗೆ ಸಂಬಂಧಿಸಿದ ಪ್ರಾಥಮಿಕ ಸಹಕಾರ ಸಂಘಗಳು/ ಸಹಕಾರಿಗಳು, ಹೊಸದಾಗಿ ನೊಂದಣಿಯಾದ ಪ್ರಾಥಮಿಕ ಸಹಕಾರ ಸಂಘಗಳು/ ಸಹಕಾರಿಗಳು ಹಾಗೂ ಆಕಸ್ಮಿಕವಾಗಿ ನಿರ್ದೇಶಕರ ಮಂಡಲಿಯಲ್ಲಿ ಸೃಷ್ಟಿಯಾದ ಖಾಲಿ ಹುದ್ದೆಗಳಿಗೆ ಸಂಬಂಧಿಸಿದಂತೆ ಇರುತ್ತದೆ. 2014ರಲ್ಲಿ ನಡೆದ ಪ್ರಾಥಮಿಕ ಸಹಕಾರ ಸಂಘಗಳು/ಸಹಕಾರಿಗಳಿಗೆ ಸಂಬಂಧಿಸಿದಂತೆ ಚುನಾವಣೆಗಳ ದಿನಾಂಕವನ್ನು ಆಯಾ ಜಿಲ್ಲೆಯ ಚುನಾವಣಾಧಿಕಾರಿಗಳ ಇ-ಮೇಲ್‌ಗೆ ಕಳುಹಿಸಲಾಗಿದೆ ಮತ್ತು ಪ್ರಾಧಿಕಾರದ ವೆಬ್‌ಸೈಟ್ www.ceckar.in ನಲ್ಲಿ upload ಮಾಡಲಾಗಿದೆ. ಈ ವಿವರಗಳನ್ನು ಗಮನಿಸಿದಾಗ, ಬಹಳಷ್ಟು ಪ್ರಾಥಮಿಕ ಸಹಕಾರ ಸಂಘಗಳ/ ಸಹಕಾರಿಗಳ ಚುನಾವಣೆಗಳು ಜನವರಿ, ಫೆಬ್ರವರಿ-2019 ರಲ್ಲಿ ಬರುವುದರಿಂದ ಚುನಾವಣಾಧಿಕಾರಿಗಳು ಕೂಡಲೇ ಪ್ರಾಥಮಿಕ ಸಹಕಾರ ಸಂಘ / ಸಹಕಾರಿಗಳಿಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳತಕ್ಕದ್ದು. ಇ-ಮೇಲ್ ಮುಖಾಂತರ ಕಳುಹಿಸಿರುವ ಸಹಕಾರ ಸಂಘಗಳ/ಸಹಕಾರಿಗಳ ಪಟ್ಟಿಯಲ್ಲಿ ಒಂದು ಪಕ್ಷ ಚುನಾವಣೆ ನಡೆಯಬೇಕಾದ ಯಾವುದಾದರೂ ಪ್ರಾಥಮಿಕ ಸಹಕಾರ ಸಂಘಗಳ / ಸಹಕಾರಿಗಳ ಹೆಸರು ಅಥವಾ ನಡೆಯಬೇಕಾದ ಚುನಾವಣೆಯ ದಿನಾಂಕದಲ್ಲಿ ಅಥವಾ ಸಹಕಾರ ಸಂಘಗಳ/ಸಹಕಾರಿಗಳ ಕಾರ್ಯವ್ಯಾಪ್ತಿಯಲ್ಲಿ ವ್ಯತ್ಯಾಸ ಇದ್ದಲ್ಲಿ ಕರ್ನಾಟಕ ಸಹಕಾರ ಸಂಘಗಳ ನಿಯಮಗಳು, 1960ರ ನಿಯಮ 13(ಡಿ)ರಂತೆ ಕೂಡಲೇ ಕ್ರಮ ಕೈಗೊಂಡು ಪ್ರಾಧಿಕಾರಕ್ಕೆ ವರದಿ ಮಾಡಿ ಅನುಮೋದನೆ ಪಡೆದು ಚುನಾವಣೆ ನಡೆಸಲು ಕ್ರಮ ಕೈಗೊಳ್ಳತಕ್ಕದ್ದು.

ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ, 1959ರ ಕಲಂ 39ಎ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ, 1997ರ ಕಲಂ 26ರಂತೆ ಹಾಲಿ ಪದಾಧಿಕಾರಿಗಳ ಅವಧಿ ಮುಗಿಯುವ ಮುನ್ನ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆಯನ್ನು ನಡೆಸುವುದು ಕಾನೂನು ಪ್ರಕಾರ ಕಡ್ಡಾಯವಾಗಿರುತ್ತದೆ. ಆದ್ದರಿಂದ ಇ-ಮೇಲ್ ಮುಖಾಂತರ ಕಳುಹಿಸಿರುವ ಪಟ್ಟಿಯಂತೆ ಪದಾಧಿಕಾರಿಗಳ ಅವಧಿ ಮುಗಿಯುವ ದಿನಾಂಕದ ಒಂದು ತಿಂಗಳು ಮುಂಚಿತವಾಗಿ ಚುನಾವಣೆಗಳನ್ನು ನಡೆಸಲು ಕ್ರಮ ಕೈಗೊಳ್ಳತಕ್ಕದ್ದು.

ಇ-ಮೇಲ್ ಮುಖಾಂತರ ಕಳುಹಿಸಿರುವ ಪಟ್ಟಿಯಲ್ಲಿ ಚುನಾವಣೆಗೆ ಬಾಕಿ ಇದ್ದು, ಬಿಟ್ಟಿರುವ ಸಹಕಾರ ಸಂಘಗಳ/ಸಹಕಾರಿಗಳ ವಿವರವನ್ನು ನಮೂದಿಸುವುದು ಮತ್ತು ಸಹಕಾರ ಸಂಘ/ಸಹಕಾರಿಗಳಿಗೆ 2019 ರಲ್ಲಿ ಚುನಾವಣೆ ಆಗುವ ದಿನಾಂಕವನ್ನು ನಮೂದಿಸಿ ಎರಡು ಹಂತದಲ್ಲಿ ಅಂದರೆ ಮಾರ್ಚ್-2019 ಮತ್ತು ಡಿಸೆಂಬರ್-2019ರ ಒಳಗೆ ಭರ್ತಿ ಮಾಡಿ ವಾಪಸ್ಸು ಈ ಕಛೇರಿಗೆ ಇ-ಮೇಲ್ ಮುಖಾಂತರ ಕಳುಹಿಸುವುದು.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೭, ೨೦೧೯ ೨೭

ಚುನಾವಣಾಧಿಕಾರಿಗಳು/ರಿಟರ್ನಿಂಗ್ ಅಧಿಕಾರಿಗಳು ಚುನಾವಣೆ ನಡೆಸುವ ಸಂಬಂಧ ವಿವಿಧ ಹಂತಗಳಲ್ಲಿ ನಿಯಮಾನುಸಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಅಧಿಸೂಚನೆಗೆ ಲಗತ್ತಿಸಿರುವ ಚೆಕ್‌ಲಿಸ್ಟ್‌ನ (ಅನುಬಂಧ-01)ರ ಸೂಚನೆಗಳನ್ನು ತಪ್ಪದೇ ಅನುಸರಿಸತಕ್ಕದ್ದು.

ಚುನಾವಣೆ ನಡೆಸಿದ ಕೂಡಲೆ ಪ್ರತಿ ಸಂಘದ/ಸಹಕಾರಿಯ ಆಡಳಿತ ಮಂಡಳಿ ಚುನಾವಣಾ ಫಲಿತಾಂಶ ಮತ್ತು ಪದಾಧಿಕಾರಿಗಳ ಫಲಿತಾಂಶಗಳನ್ನು ಚುನಾವಣಾಧಿಕಾರಿಗಳು ಪ್ರಾಧಿಕಾರಕ್ಕೆ ತಕ್ಷಣವೇ ವರದಿ ಮಾಡತಕ್ಕದ್ದು.

ಕರ್ನಾಟಕ ಸಹಕಾರ ಸಂಘಗಳ ನಿಯಮಗಳು, 1960ರ ನಿಯಮ, 13ಇ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು, 2004ರ ನಿಯಮ, 5ಸಿ ರಂತೆ ಪ್ರಾಧಿಕಾರದಿಂದ ನೇಮಕಾತಿಮಾಡಲ್ಪಟ್ಟ ಚುನಾವಣಾಧಿಕಾರಿಗಳು ಎಲ್ಲಾ ರೀತಿಯ ಪ್ರಾಥಮಿಕ ಹಂತದ ಸಹಕಾರ ಸಂಘಗಳ/ಸಹಕಾರಿಗಳ ಆಡಳಿತ ಮಂಡಲಿಗಳ ಸಾಮಾನ್ಯ ಚುನಾವಣೆ ಮತ್ತು ಪದಾಧಿಕಾರಿಗಳ ಚುನಾವಣೆ, ಹೊಸದಾಗಿ ನೋಂದಣಿಯಾದ, ಆಕಸ್ಮಿಕವಾಗಿ ತೆರವಾದ ಮತ್ತು ಆಡಳಿತಾಧಿಕಾರಿ /ವಿಶೇಷಾಧಿಕಾರಿ ನೇಮಕಗೊಂಡ ಸಹಕಾರ ಸಂಘಗಳ/ಸಹಕಾರಿಗಳ ಚುನಾವಣೆಗಳನ್ನು ನಡೆಸಲು ಚುನಾವಣಾಧಿಕಾರಿಯು ರಿಟರ್ನಿಂಗ್ ಅಧಿಕಾರಿ ಮತ್ತು ಅಗತ್ಯವಿರುವಂತೆ ಒಬ್ಬ ಅಥವಾ ಹೆಚ್ಚು ಮಂದಿ ಸಹಾಯಕ ರಿಟರ್ನಿಂಗ್ ಅಧಿಕಾರಿಗಳನ್ನು randomization ಮುಖಾಂತರ ನೇಮಕಾತಿ ಮಾಡತಕ್ಕದ್ದು.

ಸಹಕಾರ ಸಂಘಗಳ/ಸಹಕಾರಿಗಳ ಚುನಾವಣೆ ನಡೆಸುವ ಸಂಬಂಧ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ / ನಿಯಮಗಳು ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ/ನಿಯಮಗಳು ಹಾಗೂ ಸಹಕಾರ ಸಂಘಗಳ/ಸಹಕಾರಿಗಳ ಬೈಲಾಗಳಿಗೆ ಅನುಗುಣವಾಗಿ ಸರಿಯಾದ ಮತದಾರರ ಪಟ್ಟಿಯನ್ನು ತಯಾರಿಸಲು ಮತ್ತು ಚುನಾವಣೆಯನ್ನು ನಿಯಮಾನುಸಾರ, ನಿಷ್ಪಕ್ಷಪಾತವಾಗಿ ಮತ್ತು ಪಾರದರ್ಶಕವಾಗಿ ಸಕಾಲಕ್ಕೆ ನಡೆಸುವ ಬಗ್ಗೆ ಸಹಕಾರ ಸಂಘಗಳ/ಸಹಕಾರಿಗಳ ಆಡಳಿತ ಮಂಡಲಿಗಳು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ / ನಿಯಮಗಳಂತೆ ಮತ್ತು ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ/ನಿಯಮಗಳಂತೆ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳಿಗೆ ಮತ್ತು ರಿಟರ್ನಿಂಗ್ ಅಧಿಕಾರಿಗಳಿಗೆ ಅಗತ್ಯ ದಾಖಲಾತಿಗಳನ್ನು ಹಾಜರುಪಡಿಸಿ, ಮಾಹಿತಿಗಳನ್ನು ಒದಗಿಸುವ ಮುಖಾಂತರ ಚುನಾವಣೆಗಳನ್ನು ಸುಗಮವಾಗಿ ಸರಳ ರೀತಿಯಲ್ಲಿ ನಡೆಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು.

ಮುಖ್ಯವಾಗಿ, ಚುನಾವಣಾಧಿಕಾರಿಗಳು ಈ ಕೆಳಕಂಡಂತೆ ಪ್ರಾಧಿಕಾರಕ್ಕೆ ಮಾಹಿತಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ತಪ್ಪಿದಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ಸಹಕಾರ ಇಲಾಖೆ ಇವರಿಗೆ ವರದಿ ಮಾಡುವುದರೊಂದಿಗೆ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 39(ಐ) ರಂತೆ ಕ್ರಮವಿಡಲಾಗುವುದು.

1 ಪದಾವಧಿಯು ಮುಕ್ತಾಯವಾಗುವ 120 ದಿನಗಳ ಪೂರ್ವದಲ್ಲಿ ಪ್ರಾಧಿಕಾರವು ನೀಡಿರುವ 13ಡಿ ನಮೂನೆಯಲ್ಲಿ ಹಾಗೂ 7ಎ ರಿಂದ 7ಡಿ ವರೆಗಿನ ಮಾಹಿತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವುದು.

2 ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರ ನಿಯಮ 13-ಡಿ(3)ರ ರೀತ್ಯಾ ಚುನಾವಣಾ ದಿನಾಂಕಕ್ಕೆ 50 ದಿನಗಳ ಪೂರ್ವದಲ್ಲಿ ಹೊರಡಿಸತಕ್ಕ ಕರಡು ಮತದಾರರ ಪಟ್ಟಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವುದು.

3 ಚುನಾವಣಾ ದಿನಾಂಕಕ್ಕೆ 15 ದಿನಗಳ ಪೂರ್ವದಲ್ಲಿ ಹೊರಡಿಸತಕ್ಕ ಅಂತಿಮ ಮತದಾರರ ಪಟ್ಟಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವುದು.

4 ಸಹಕಾರ ಸಂಘಗಳ/ಸಹಕಾರಿಗಳ ಕಾರ್ಯವ್ಯಾಪ್ತಿಗನುಗುಣವಾಗಿ ರಿಟರ್ನಿಂಗ್ ಅಧಿಕಾರಿಗಳನ್ನು randomization ಮುಖಾಂತರ ನೇಮಿಸುವುದು ಮತ್ತು ಆದೇಶದ ಪ್ರತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವುದು.

5 ಚುನಾವಣೆ ಮುಕ್ತಾಯವಾದ ಕೂಡಲೇ ಚುನಾವಣಾ ಫಲಿತಾಂಶದ ಪ್ರತಿಗಳನ್ನು ಹಾಗೂ ನಮೂನೆ-8ಎ ರಿಂದ 8ಡಿ ವರೆಗಿನ ಮಾಹಿತಿಯನ್ನು ಪ್ರಾಧಿಕಾರಕ್ಕೆ ಸಲ್ಲಿಸುವುದು.

PR-1358

ಡಾ.ಎನ್.ಎಸ್. ಚನ್ನಪ್ಪಗೌಡ

ಆಯುಕ್ತರು,

ಸಹಕಾರ ಚುನಾವಣಾ ಪ್ರಾಧಿಕಾರ,

ಸಹಕಾರ ಚುನಾವಣಾ ಪ್ರಾಧಿಕಾರ

ಆಯುಕ್ತರ ಕಛೇರಿ, ಟಿ.ಟಿ.ಎಂ.ಸಿ ಕಟ್ಟಡ, 3ನೇ ಮಹಡಿ, 'ಎ' ಬ್ಲಾಕ್, ಕೆ.ಹೆಚ್.ರಸ್ತೆ, ಶಾಂತಿನಗರ, ಬೆಂಗಳೂರು-27

ವಿಷಯ: ದಿನಾಂಕ: 01.01.2019 ರಿಂದ 31.12.2019ರ ವರೆಗೆ ಪದಾವಧಿ ಮುಗಿಯಲಿರುವ ಎಲ್ಲಾ ರೀತಿಯ ಮಾಧ್ಯಮಿಕ ಸಹಕಾರ ಸಂಘಗಳ/ ಸಹಕಾರಿಗಳ ಆಡಳಿತ ಮಂಡಲಿ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳನ್ನು ನೇಮಕಾತಿ ಮಾಡುವ ಬಗ್ಗೆ. ಉಲ್ಲೇಖ: 1. ಸರ್ಕಾರದ ಅಧಿಸೂಚನೆ ಸಂಖ್ಯೆ: ವ್ಯಾಶಾಇ/58/ಶಾಸನ/2014, ದಿನಾಂಕ: 06.09.2014 ಮತ್ತು ಸಂಖ್ಯೆ: ಸಿಒ 226 ಸಿಎಲ್ಎಂ 2014 ದಿನಾಂಕ: 06.06.2015.

2. (ಸರ್ಕಾರದ ಪತ್ರ ಸಂಖ್ಯೆ:ಸಿಒ 217 ಸಿಎಲ್ಎಂ 2015, ದಿನಾಂಕ: 7.12.2015)/ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ: ಆರ್ಎಸ್ಆರ್/ಎಕ್ಸ್ಎಂಸಿ/ಚು.ಅ.ನೇ/124/2015-16, ದಿನಾಂಕ: 08.12.2015.

3. ಸಹಕಾರ ಚುನಾವಣಾ ಪ್ರಾಧಿಕಾರದ ಆದೇಶ ಸಂಖ್ಯೆ; ಸಚುಪ್ರಾ/ಚುಆನೇ/ಮಾಧ್ಯಮಿಕ/09/2017, ದಿನಾಂಕ:20.11.2017.

ಪ್ರಸ್ತಾವನೆ:-

ಪ್ರಾಧಿಕಾರವು ಉಲ್ಲೇಖ(3)ರ ಆದೇಶದಲ್ಲಿ 2018ನೇ ಸಾಲಿನಲ್ಲಿ ಮಾಧ್ಯಮಿಕ ಸಹಕಾರ ಸಂಘಗಳಿಗೆ/ಸಹಕಾರಿಗಳಿಗೆ ನಡೆಯುವ ಆಡಳಿತ ಮಂಡಲಿ ಸಾಮಾನ್ಯ ಚುನಾವಣೆ ಮತ್ತು ತತ್ಪರಿಣಾಮದ ಪದಾಧಿಕಾರಿಗಳ ಚುನಾವಣೆಗಳನ್ನು ನಡೆಸಲು ಚುನಾವಣಾಧಿಕಾರಿಗಳನ್ನು ನೇಮಕ ಮಾಡಲಾಗಿದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ ಪ್ರಕರಣ 39 ಎ ಮತ್ತು ಪ್ರಕರಣ 39ಎಎ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ಅಧಿನಿಯಮ 1997ರ ಪ್ರಕರಣ 26 ಮತ್ತು 26ಎ ರಂತೆ ಸಹಕಾರ ಸಂಘಗಳ /ಸಹಕಾರಿಗಳ ಆಡಳಿತ ಮಂಡಲಿಯ ಸದಸ್ಯರ, ಸಾಮಾನ್ಯ, ಖಾಲಿಬಿದ್ದ ಸ್ಥಾನ ಮತ್ತು ಹೊಸದಾಗಿ ನೋಂದಣಿಯಾದ ಸಹಕಾರ ಸಂಘಗಳಿಗೆ/ಸಹಕಾರಿಗಳಿಗೆ ಚುನಾವಣೆಗಳನ್ನು, ತತ್ಪರಿಣಾಮದ ಪದಾಧಿಕಾರಿಗಳ ಚುನಾವಣೆಗಳನ್ನು, ನಾಲ್ಕು ಹಂತಗಳಲ್ಲಿ ನಡೆಸತಕ್ಕದ್ದಾಗಿರುತ್ತದೆ. ಅದೇ ರೀತಿಯಲ್ಲಿ ಪ್ರಕರಣ 39ಎ(2) (ಬಿ) ರಂತೆ ಎರಡನೇ ಹಂತದಲ್ಲಿ ಮಾಧ್ಯಮಿಕ ಸಹಕಾರ ಸಂಘಗಳಿಗೆ/ ಸಹಕಾರಿಗಳಿಗೆ ಸಂಬಂಧಪಟ್ಟಂತೆ ಸಾಮಾನ್ಯ ಚುನಾವಣೆ ಹಾಗೂ ಪದಾಧಿಕಾರಿಗಳ ಚುನಾವಣೆಯನ್ನು ಸಹಕಾರ ಚುನಾವಣಾ ಪ್ರಾಧಿಕಾರದ ಅಧೀಕ್ಷಣೆಯಲ್ಲಿ ನಡೆಸತಕ್ಕದ್ದಾಗಿರುತ್ತದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೧೭, ೨೦೧೯ ಭಾಗ ೨

ಕರ್ನಾಟಕ ಸಹಕಾರ ಸಂಘಗಳ ನಿಯಮಗಳು, 1960ರ (2015 ತಿದ್ದುಪಡಿ) ನಿಯಮ-13ಡಿ ಹಾಗೂ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು, 2004ರ (2015ನೇ ತಿದ್ದುಪಡಿ) ನಿಯಮ -5ಬಿ(3)ಗಳಂತೆ ಚುನಾವಣಾಧಿಕಾರಿಯು ಕೂಲಂಕುಷ ಪರಿಶೀಲನೆಯ ನಂತರ, ಆಡಳಿತ ಮಂಡಲಿಗಳ ಪದಾವಧಿಯು ಮುಕ್ತಾಯವಾಗುವ ದಿನಾಂಕದ ಕನಿಷ್ಟ 120 ದಿನಗಳ ಪೂರ್ವದಲ್ಲಿ ಈ ಕೆಳಕಂಡ ವಿವರಗಳನ್ನೊಳಗೊಂಡ, ಚುನಾವಣೆಗಳು ಸನ್ನಿಹಿತವಾಗಿರುವ ಎಲ್ಲಾ ರೀತಿಯ ಮಾಧ್ಯಮಿಕ ಸಹಕಾರ ಸಂಘಗಳ/ಸಹಕಾರಿಗಳ ದೃಡೀಕೃತ ಮಾಹಿತಿಯನ್ನು ನಮೂನೆ 13ಡಿ(1)ರಂತೆ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ಕಳುಹಿಸತಕ್ಕದ್ದಾಗಿದೆ.

1. ಸಹಕಾರ ಸಂಘದ/ಸಹಕಾರಿಯ ಹೆಸರು ಮತ್ತು ವಿಳಾಸ. 2. ಆಡಳಿತ ಮಂಡಲಿಗೆ ಆಯ್ಕೆಯಾಗಬೇಕಾಗಿರುವ ಚುನಾಯಿತ ನಿರ್ದೇಶಕರ ಸಂಖ್ಯೆ. 3. ಆಡಳಿತ ಮಂಡಲಿ ಪದಾವಧಿಯು ಮುಕ್ತಾಯವಾಗುವ ದಿನಾಂಕ. 4. ಚುನಾವಣಾ ಪ್ರಾಧಿಕಾರಕ್ಕೆ ಅವಶ್ಯವಿರುವ ಇತರೆ ಮಾಹಿತಿಗಳು.

ಅದರಂತೆ, ದಿನಾಂಕ:01/01/2019 ರಿಂದ ದಿನಾಂಕ:31/12/2019ರವರೆಗೆ ಆಡಳಿತ ಮಂಡಲಿ ಪದಾವಧಿ ಮುಕ್ತಾಯವಾಗಲಿರುವ ಮಾಧ್ಯಮಿಕ ಸಹಕಾರ ಸಂಘಗಳ/ಸಹಕಾರಿಗಳ ಆಡಳಿತ ಮಂಡಲಿಯ ಸದಸ್ಯರ, ಸಾಮಾನ್ಯ, ಖಾಲಿಬಿದ್ದ ಸ್ಥಾನ ಮತ್ತು ಹೊಸದಾಗಿ ನೋಂದಣಿಯಾದ ಸಹಕಾರ ಸಂಘಗಳಿಗೆ/ಸಹಕಾರಿಗಳಿಗೆ ಚುನಾವಣೆ ಮತ್ತು ತತ್ಪರಿಣಾಮದ ಪದಾಧಿಕಾರಿಗಳ ಚುನಾವಣೆ ನಡೆಸಲು ನಿಯಮಾನುಸಾರ ಮತದಾರರ ಪಟ್ಟಿ ತಯಾರಿಸಲು ಚುನಾವಣಾ ಪ್ರಾಧಿಕಾರವು ಚುನಾವಣಾ ಪೂರ್ವ ಸಿದ್ಧತಾ ಕಾರ್ಯವನ್ನು ಆರು ತಿಂಗಳ ಪೂರ್ವದಲ್ಲಿ ಪ್ರಾರಂಭಿಸಬೇಕಾಗಿರುತ್ತದೆ. ಆದಕಾರಣ ಚುನಾವಣಾಧಿಕಾರಿಗಳು ಮೇಲಿನ ಕಂಡಿಕೆಯಲ್ಲಿ ವಿವರಿಸಿರುವ 13ಡಿ(1)ರ ಮಾಹಿತಿಯನ್ನು ಚುನಾವಣಾ ಪ್ರಾಧಿಕಾರಕ್ಕೆ ಸಕಾಲಕ್ಕೆ ತಪ್ಪದೇ ಸಲ್ಲಿಸತಕ್ಕದ್ದಾಗಿರುತ್ತದೆ.

ಕರ್ನಾಟಕ ಸಹಕಾರ ಸಂಘಗಳ ನಿಯಮಗಳು, 1960ರ (2015ರ ತಿದ್ದುಪಡಿ) ನಿಯಮ 2(ಐ-1) ಮತ್ತು ನಿಯಮ 13ಬಿಬಿ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು, 2004 ರ(2015ರ ತಿದ್ದುಪಡಿ) ನಿಯಮ 2(ಜಿ-2)ಗಳಂತೆ, ಚುನಾವಣಾಧಿಕಾರಿಗಳಾಗಿ ಎರಡನೇ ಹಂತದ ಮಾಧ್ಯಮಿಕ ಸಹಕಾರ ಸಂಘಗಳ/ಸಹಕಾರಿಗಳ ಆಡಳಿತ ಮಂಡಲಿಯ ಸದಸ್ಯರ, ಸಾಮಾನ್ಯ, ಖಾಲಿಬಿದ್ದ ಸ್ಥಾನ ಮತ್ತು ಹೊಸದಾಗಿ ನೋಂದಣಿಯಾದ ಸಹಕಾರ ಸಂಘಗಳು/ಸಹಕಾರಿಗಳ ಚುನಾವಣೆಯನ್ನು ನಡೆಸಲು ಚುನಾವಣಾಧಿಕಾರಿಗಳನ್ನು ನೇಮಕಾತಿ ಮಾಡಿ ಈ ಕೆಳಕಂಡ ಆದೇಶ ಹೊರಡಿಸಲಾಗಿದೆ.

ಆದೇಶ

ಸಂಖ್ಯೆ: ಸಚುಪ್ರಾ/ಚು.ಆ.ನೇ/ಮಾಧ್ಯಮಿಕ/44/2018, ದಿನಾಂಕ: 04.10.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಹಕಾರ ಸಂಘಗಳ ನಿಯಮಗಳು, 1960ರ (2015ರ ತಿದ್ದುಪಡಿ) ನಿಯಮ, 2(ಐ-1) ಮತ್ತು ನಿಯಮ, 13ಬಿಬಿ ರಂತೆ ಹಾಗೂ ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು, 2004ರ (2015ರ ತಿದ್ದುಪಡಿ) ನಿಯಮ 2(ಜಿ-2)ರಂತೆ ಸಹಕಾರ ಚುನಾವಣಾ ಪ್ರಾಧಿಕಾರಕ್ಕೆ ದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಡಾ||ಎನ್.ಎಸ್. ಚನ್ನಪ್ಪಗೌಡ, ಆಯುಕ್ತರು ಸಹಕಾರ ಚುನಾವಣಾ ಪ್ರಾಧಿಕಾರ, ಬೆಂಗಳೂರು ಆದ ನಾನು, ರಾಜ್ಯದ ನಾಲ್ಕು ಪ್ರಾಂತಗಳ ಪ್ರಾಂತೀಯ ಜಂಟಿ ನಿಬಂಧಕರನ್ನು ಅವರ ಕಾರ್ಯವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಧ್ಯಮಿಕ ಸಹಕಾರ ಸಂಘಗಳಿಗೆ/ಸಹಕಾರಿಗಳಿಗೆ ದಿನಾಂಕ: 01.01.2019 ರಿಂದ 31.12.2019ರ ಅವಧಿಯಲ್ಲಿ ನಡೆಯುವ ಆಡಳಿತ ಮಂಡಲಿ ಸಾಮಾನ್ಯ ಚುನಾವಣೆ ಮತ್ತು ತತ್ಪರಿಣಾಮದ ಪದಾಧಿಕಾರಿಗಳ ಚುನಾವಣೆಗಳನ್ನು ನಡೆಸಲು ಚುನಾವಣಾಧಿಕಾರಿಗಳನ್ನಾಗಿ ನೇಮಕಾತಿ ಮಾಡಿ ಮುಂದಿನ ಆದೇಶದವರೆಗೆ ನೇಮಿಸಿರುತ್ತೇನೆ.

ಚುನಾವಣಾಧಿಕಾರಿಗಳು ಮಾಧ್ಯಮಿಕ ಸಹಕಾರ ಸಂಘಗಳ/ ಸಹಕಾರಿಗಳ ಪಟ್ಟಿಯನ್ನು ಮತ್ತು ರಿಟರ್ನಿಂಗ್ ಅಧಿಕಾರಿಗಳನ್ನಾಗಿ ನೇಮಿಸಲು ಮೂವರು ಸೂಕ್ತ ಹೆಸರುಗಳನ್ನು ಪ್ರಾಧಿಕಾರಕ್ಕೆ ಕಳುಹಿಸಿ ಪ್ರಾಧಿಕಾರದಿಂದ ರಿಟರ್ನಿಂಗ್ ಅಧಿಕಾರಿ ನೇಮಕಾತಿ ಆದೇಶ ಪಡೆಯತಕ್ಕದ್ದು.

ಚುನಾವಣಾಧಿಕಾರಿಗಳು ಮಾಧ್ಯಮಿಕ ಸಹಕಾರ ಸಂಘಗಳ / ಸಹಕಾರಿಗಳ ಮುಖ್ಯ ಕಾರ್ಯನಿರ್ವಾಹಕರು ಸಲ್ಲಿಸಿದ ಮತದಾರರ ಪಟ್ಟಿಯನ್ನು ಸಂಬಂಧಿಸಿದ ದಾಖಲಾತಿಗಳೊಂದಿಗೆ ಪರಿಶೀಲಿಸಿ ಸಿದ್ದಪಡಿಸಲು ಹಾಗೂ ಮತ ನೀಡುವ ಹಕ್ಕುಳ್ಳ / ಸುಸ್ತಿದಾರರ ಕರಡು ಪಟ್ಟಿಯನ್ನು ಚುನಾವಣಾ ದಿನಾಂಕಕ್ಕೆ ಕನಿಷ್ಟ 50 ದಿನಗಳ ಮುಂಚಿತವಾಗಿ ಪ್ರಕಟಿಸಿ, ಆಕ್ಷೇಪಣೆ ಕರೆಯುವುದು, ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ದಿನಾಂಕಕ್ಕೆ 15 ದಿನಗಳ ಪೂರ್ವದಲ್ಲಿ ಪ್ರಕಟಿಸತಕ್ಕದ್ದು.

ಅಲ್ಲದೆ ಪ್ರತಿ ಮಾಧ್ಯಮಿಕ ಸಹಕಾರ ಸಂಘದ / ಸಹಕಾರಿಯ ಮತ ನೀಡುವ ಹಕ್ಕುಳ್ಳ ಸದಸ್ಯರ ಕರಡು ಪಟ್ಟಿ, ಸುಸ್ತಿದಾರರ ಕರಡು ಪಟ್ಟಿ ಹಾಗೂ ಮತದಾರರ ಹಕ್ಕನ್ನು ಹೊಂದಿರದ ಇತರ ಸದಸ್ಯರ ಕರಡು ಪಟ್ಟಿಗಳನ್ನು ಹಾಗೂ ಮತದಾರರ ಅಂತಿಮ ಪಟ್ಟಿ ಮತ್ತು ಚುನಾವಣಾ ವೇಳಾಪಟ್ಟಿಗಳನ್ನು ಸಂಬಂಧಪಟ್ಟ ಮಾಧ್ಯಮಿಕ ಸಹಕಾರ ಸಂಘದ/ಸಹಕಾರಿಯ ಮತ್ತು ಅದರ ಶಾಖೆಗಳ ಸೂಚನಾಫಲಕಗಳಲ್ಲಿ, ಸಹಕಾರ ಇಲಾಖೆಯ ಸ್ಥಳೀಯ ಕಛೇರಿಯಲ್ಲಿ, ಸಹಕಾರ ಸಂಘದ/ಸಹಕಾರಿಯ ಜಾಲತಾಣದಲ್ಲಿ (ಇದ್ದಲ್ಲಿ) ಹಾಗೂ ಸಹಕಾರ ಸಂಘದ/ಸಹಕಾರಿಯ ಸದಸ್ಯರಿಗೆ ತಲುಪಲು ಅವಕಾಶವಿರುವಂತಹ ಇತರ ಸ್ಥಳಗಳಲ್ಲಿ ಪ್ರಕಟಿಸತಕ್ಕದ್ದು.

ಚುನಾವಣಾಧಿಕಾರಿಗಳು ಅವರ ಕಾರ್ಯವ್ಯಾಪ್ತಿಗೆ ಬರುವಂತಹ ಸಹಕಾರ ಸಂಘಗಳ/ಸಹಕಾರಿಗಳ ಚುನಾವಣೆಯನ್ನು ಮತ್ತು ತತ್ಪರಿಣಾಮದ ಪದಾಧಿಕಾರಿಗಳ ಚುನಾವಣೆಯನ್ನು ಈ ಆದೇಶಕ್ಕೆ ಲಗತ್ತಿಸಿರುವ ಅನುಬಂಧ ಮತ್ತು ಚೆಕ್‌ಲಿಸ್ಟ್‌ನಂತೆ ಹಾಗೂ ಪ್ರಾಧಿಕಾರದಿಂದ ಕಾಲಕಾಲಕ್ಕೆ ನೀಡಲಾದ ಸುತ್ತೋಲೆ/ಅಧಿಸೂಚನೆ/ಮಾರ್ಗಸೂಚಿಗಳು ಹಾಗೂ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959ರ, ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960ರ, ಕರ್ನಾಟಕ ಸೌಹಾರ್ದ ಸಹಕಾರಿ ನಿಯಮಗಳು, 2004ರನ್ವಯ ಹಾಗೂ ಸದರಿ ಅಧಿನಿಯಮ/ನಿಯಮಗಳ ತಿದ್ದುಪಡಿಗಳನ್ನು ಅನುಸರಿಸಿ ಚುನಾವಣೆಗಳನ್ನು ನಿಯಮಾನುಸಾರ, ಪಾರದರ್ಶಕವಾಗಿ ನಿಷ್ಪಕ್ಷಪಾತದಿಂದ ನಡೆಸಲು ಆದೇಶಿಸಿದೆ.

PR-1359

ಡಾII ಎನ್.ಎಸ್. ಚನ್ನಪ್ಪಗೌಡ

ಆಯುಕ್ತರು,

ಸಹಕಾರ ಚುನಾವಣಾ ಪ್ರಾಧಿಕಾರ,

ಬೆಂಗಳೂರು.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 17 January 2019. Indian Gazettes, https://egazette.servantsofknowledge.in/details/in.gazette.karnataka_new.2019-01-17.Part-2/. Archive identifier in.gazette.karnataka_new.2019-01-17.Part-2.