Servants of Knowledge
Karnataka Gazette · Government of Karnataka

Karnataka Gazette, Part Part-6, 24 January 2019

Published 24 January 2019

Part
Part-6
Identifier
in.gazette.karnataka_new.2019-01-24.Part-6
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಜನವರಿ ೨೪, ೨೦೧೯ (ಮಾಘ ೪, ಶಕ ವರ್ಷ ೧೯೪೦)

Bengaluru, Thursday, January 24, 2019 (Magha 4, Shaka Varsha 1940)

ಸಂಪುಟ ೧೫೪

Volume 154

ಸಂಚಿಕೆ ೪

Issue 4

ಭಾಗ ೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಪುರಸಭಾ ಕಾರ್ಯಾಲಯ, ಹೊಸದುರ್ಗ – 577527, ಜಿಲ್ಲೆ : ಚಿತ್ರದುರ್ಗ

ಕ್ರಮಾಂಕ : ಪುಸಹೊ/ಮಾ.ಪ್ಲಾ.ಇಂ/ಸಿಆರ್-1/2017-18, ದಿನಾಂಕ : 09-01-2019

ಹೊಸದುರ್ಗ ಪುರಸಭೆಯ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ ತಯಾರಿಸುವ ಇಂಗಿತವನ್ನು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ

ಕಾಯ್ದೆ 1961ರ ಕಲಂ 10(1) ರನ್ವಯ ಘೋಷಿಸುವ ಬಗ್ಗೆ.

ಹೊಸದುರ್ಗ ಪುರಸಭೆ ಎಲ್ಲೆಯನ್ನೇ ಸ್ಥಳೀಯ ಯೋಜನಾ ಪ್ರದೇಶವೆಂದು ಸರ್ಕಾರದ ಅಧಿಸೂಚನೆ ಸಂಖ್ಯೆ ನಇ/144/ಬೆಂರೂಪ್ರಾ/2011, ದಿನಾಂಕ : 14-09-2011 ರನ್ವಯ ಅಧಿಸೂಚನೆಯಂತೆ ಘೊಷಿಸಲಾಗಿರುತ್ತದೆ.

ಸಾರ್ವಜನಿಕರ ಗಮನಕ್ಕೆ ಈ ಮೂಲಕ ತಿಳಿಯಪಡಿಸುವುದೇನೆಂದರೆ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 10(1) ರನ್ವಯ ಹೊಸದುರ್ಗ ಪುರಸಭೆಯ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆಯನ್ನು ತಯಾರಿಸಲು ಉದ್ದೇಶಿಸಲಾಗಿರುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಸಲಹೆ-ಸೂಚನೆಗಳನ್ನು ಪುರಸಭೆ ಯೋಜನಾ ಪ್ರಾಧಿಕಾರದ ಹೊಸದುರ್ಗ ಕಛೇರಿಯಲ್ಲಿ ಖುದ್ದಾಗಿ ಆಗಲಿ ಅಥವಾ ನೋಂದಾಯಿತ ಅಂಚೆಯ ಮೂಲಕವಾಗಲಿ ಪ್ರಕಟಣೆಯಾದ ದಿನಾಂಕದಿಂದ 60 ದಿನಗಳೊಳಗಾಗಿ ಸ್ವೀಕರಿಸಲಾಗುತ್ತದೆ. ಅವಧಿಯ ನಂತರ ಬಂದಂತಹ ಯಾವುದೇ ಸಲಹೆ-ಸೂಚನೆಗಳನ್ನು ಸ್ವೀಕರಿಸಲಾಗುವುದಿಲ್ಲ.

PD – 02 ಎ. ಬಿ. ವಿಜಯಕುಮಾರ್ ಮುಖ್ಯಾಧಿಕಾರಿ SC – 05 ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ, ಪುರಸಭೆ, ಹೊಸದುರ್ಗ.

ಪುರಸಭೆ, ಹೊಸದುರ್ಗ.

ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ

ಸಾರ್ವಜನಿಕ ಪ್ರಕಟಣೆ

ಸಂ:ಚಿನಅಪ್ರಾ/ಮಹಾಯೋಜನೆ/ಪ-01/2018-19/509, ದಿನಾಂಕ:10/01/2019.

ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರವು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 ರನ್ವಯ ಚಿಕ್ಕಬಳ್ಳಾಪುರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ(ಪ-1) ತಯಾರಿಸಿ, ನಕ್ಷೆ ಹಾಗೂ ವರದಿಯೊಂದಿಗೆ ಸರ್ಕಾರದ ತಾತ್ಕಾಲಿಕ ಅನುಮೋದನೆಗಾಗಿ ಸಲ್ಲಿಸಲಾದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ.:ನಅಇ 67 ಬೆಂರೂಪ್ರಾ 2018, ಬೆಂಗಳೂರು, ದಿನಾಂಕ: 09.01.2019ರಂದು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13(1)ರನ್ವಯ ಮಹಾಯೋಜನೆ(ಪ-1)ಗೆ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ.

ಸದರಿ ತಾತ್ಕಾಲಿಕ ಅನುಮೋದಿತ ಮಹಾಯೋಜನೆ(ಪ-1) ನಕ್ಷೆ ಹಾಗೂ ವರದಿಯನ್ನು ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಕಛೇರಿಯಲ್ಲಿ ಮತ್ತು ನಗರಸಭೆ ಚಿಕ್ಕಬಳ್ಳಾಪುರ ಇಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಇಡಲಾಗಿದ್ದು, ಸಾರ್ವಜನಿಕರು ತಮ್ಮ ಸಲಹೆ/ಆಕ್ಷೇಪಣೆ/ಸೂಚನೆಗಳು ಏನಾದರು ಇದ್ದಲ್ಲಿ (೫೫) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೨೪, ೨೦೧೯ ಭಾಗ ೬ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆಗೊಂಡ ದಿನಾಂಕದಿಂದ 60 ದಿನಗಳ ಒಳಗಾಗಿ ಖುದ್ದಾಗಿ ಅಥವಾ ನೋಂದಾಯಿತ ಅಂಚೆ ಮೂಲಕ ಆಯುಕ್ತರು, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ, ನಂ.20, ಮೊದಲನೇ ಮಹಡಿ, ಭವಾನಿ ಕೃಪ, ಕೆ.ಎಸ್.ಆರ್.ಟಿ.ಸಿ. ಡಿಪೋ ರಸ್ತೆ, ಚಿಕ್ಕಬಳ್ಳಾಪುರ-562101

ಇವರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ. ಹಾಗೂ 60 ದಿನಗಳ ನಂತರ ಯಾವುದೇ ಸಲಹೆ/ಆಕ್ಷೇಪಣೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಈ ಮೂಲಕ ತಿಳಿಸಲಾಗಿದೆ.

PD-03

ಆಯುಕ್ತರು,

SC-25

ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ,

ಚಿಕ್ಕಬಳ್ಳಾಪುರ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 24 January 2019. Indian Gazettes, https://egazette.servantsofknowledge.in/details/in.gazette.karnataka_new.2019-01-24.Part-6/. Archive identifier in.gazette.karnataka_new.2019-01-24.Part-6.