Servants of Knowledge
Karnataka Gazette · Government of Karnataka

Karnataka Gazette, Part Part-1, 31 January 2019

Published 31 January 2019

Part
Part-1
Identifier
in.gazette.karnataka_new.2019-01-31.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಜನವರಿ ೩೧, ೨೦೧೯ (ಮಾಘ ೧೧, ಶಕ ವರ್ಷ ೧೯೪೦)

Bengaluru, Thursday, January 31, 2019 (Magha 11, Shaka Varsha 1940)

ಸಂಪುಟ ೧೫೪

Volume 154

ಸಂಚಿಕೆ ೫

Issue 5

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ

ವಿಷಯ :

ಕೆ.ಐ.ಎ.ಡಿ.ಬಿ/ಕೆ.ಎಸ್.ಎಸ್.ಐ.ಡಿ.ಸಿ ಗಳಿಂದ ಕೈಗಾರಿಕಾ ಶೆಡ್‌ಗಳು ಹಾಗೂ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಕೆನೆಪದರ ಆದಾಯ ಮಿತಿಯನ್ನು ತೆಗೆದುಹಾಕುವ ಕುರಿತು.

ಓದಲಾಗಿದೆ :

1. ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರ ಪ್ರಸ್ತಾವನೆ ಸಂಖ್ಯೆ:

ಹಿಂವಕನಿ/ಮಾಶಾ/ಸಿ.ಆರ್-03/2018-19, ದಿನಾಂಕ:13/07/2018.

2. ನಿರ್ದೇಶಕರು (ತಾಂತ್ರಿಕ ಕೋಶ), ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಇವರ ಟಿಪ್ಪಣಿ ಸಂಖ್ಯೆ:ಸಿಐ 113 ಎಸ್‌ಪಿಐ 2017, ದಿನಾಂಕ:27/08/2018.

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ಪತ್ರದಲ್ಲಿ ಆಯುಕ್ತರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು, ಸನ್ಮಾನ್ಯ ಮುಖ್ಯಮಂತ್ರಿಗಳು 2018-19ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ:199ರಲ್ಲಿ ಕೆ.ಐ.ಎ.ಡಿ.ಬಿ/ಕೆ.ಎಸ್.ಎಸ್.ಐ.ಡಿ.ಸಿ ಗಳಿಂದ ಕೈಗಾರಿಕಾ ಶೆಡ್‌ಗಳು ಹಾಗೂ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಕೆನೆಪದರ ಆದಾಯ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಘೋಷಿಸಿರುವುದರಿಂದ ಹಾಗೂ ಸರ್ಕಾರದ ಆದೇಶ ಸಂಖ್ಯೆ: ಸಿಐ 113 ಎಸ್‌ಪಿಐ 2017, ಬೆಂಗಳೂರು ದಿನಾಂಕ: 28/12/2017ರಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ)/ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮ (ಕೆ.ಎಸ್.ಎಸ್.ಐ.ಡಿ.ಸಿ) ಸಂಸ್ಥೆಗಳಿಂದ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಗಳಿಗೆ ಮಂಜೂರು/ಹಂಚಿಕೆ ಮಾಡಲಾಗುವ ಪ್ಲಾಟ್/ಶೆಡ್‌ಗಳ ಒಟ್ಟು ಮೊತ್ತದಲ್ಲಿ ಶೇ.25ರಷ್ಟು ರಿಯಾಯಿತಿ ನೀಡಲು ಸರ್ಕಾರವು ತಾತ್ವಿಕ ಅನುಮೋದನೆ (In-principle approval) ನೀಡಲಾಗಿರುವುದರಿಂದ, 'ಕೆ.ಐ.ಎ.ಡಿ.ಬಿ/ಕೆ.ಎಸ್.ಎಸ್.ಐ.ಡಿ.ಸಿ ಗಳಿಂದ ಕೈಗಾರಿಕಾ ಶೆಡ್‌ಗಳು ಹಾಗೂ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಉದ್ದಿಮೆಗಳನ್ನು ಸ್ಥಾಪಿಸಲು ಉತ್ತೇಜನ ನೀಡುವುದು ಅವಶ್ಯಕವಾಗಿದ್ದು', ಸದರಿ ಪ್ರವರ್ಗಗಳಿಗೆ ನಿಗಧಿಪಡಿಸಿರುವ ಕೆನೆಪದರ ಆದಾಯ ಮಿತಿಯನ್ನು ತೆಗೆದುಹಾಕುವ ಬಗ್ಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯೊಂದಿಗೆ ಸಮಾಲೋಚಿಸಿ ಸರ್ಕಾರದ ಆದೇಶ ಹೊರಡಿಸುವಂತೆ ಕೋರಿರುತ್ತಾರೆ.

ಮೇಲೆ (2)ರಲ್ಲಿ ಓದಲಾದ ಪತ್ರದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು "2018-19ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ ಸಂಖ್ಯೆ:199ರಲ್ಲಿ ಕೆ.ಐ.ಎ.ಡಿ.ಬಿ/ ಕೆ.ಎಸ್.ಎಸ್.ಐ.ಡಿ.ಸಿ ಗಳಿಂದ ಕೈಗಾರಿಕಾ ಶೆಡ್‌ಗಳು ಹಾಗೂ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಕೆನೆಪದರ ಆದಾಯ ಮಿತಿಯನ್ನು ತೆಗೆದುಹಾಕಲಾಗುವುದು ಎಂದು ಘೋಷಣೆ ಮಾಡಲಾಗಿದ್ದು, ಸದರಿ ಘೋಷಣೆಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸಹಮತಿ ಇರುತ್ತದೆ" ಎಂದು ತಿಳಿಸಿರುತ್ತದೆ.

ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

(೮೭)೮೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೧, ೨೦೧೯ ಭಾಗ ೧

ಸರ್ಕಾರಿ ಆದೇಶ ಸಂಖ್ಯೆ: ಹಿಂವಕ 215 ಬಿಸಿಎ 2018, ಬೆಂಗಳೂರು, ದಿನಾಂಕ:24.09.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆ.ಐ.ಎ.ಡಿ.ಬಿ)/ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕ ಅಭಿವೃದ್ಧಿ ನಿಗಮ (ಕೆ.ಎಸ್.ಎಸ್.ಐ.ಡಿ.ಸಿ) ಗಳಿಂದ ಕೈಗಾರಿಕಾ ಶೆಡ್‌ಗಳು ಹಾಗೂ ಸಹಾಯಧನ ನೀಡುವ ಕಾರ್ಯಕ್ರಮದಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ನಿಗಧಿಪಡಿಸಿರುವ/ ನಿಗಧಿಪಡಿಸಬಹುದಾದ ಮಾರ್ಗಸೂಚಿಗಳನ್ವಯ ನಿಯಮಾನುಸಾರ ಮತ್ತು ಪಾರದರ್ಶಕತೆಯನ್ವಯ ಅನುಷ್ಠಾನಗೊಳಿಸುವ ಷರತ್ತಿನೊಂದಿಗೆ ಹಿಂದುಳಿದ ವರ್ಗಗಳ ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಕೈಗಾರಿಕಾ ಶೆಡ್‌ಗಳು ಹಾಗೂ ಸಹಾಯಧನ ನೀಡುವ ಕಾರ್ಯಕ್ರಮಗಳಲ್ಲಿ ಕೆನೆಪದರ ಆದಾಯ ಮಿತಿಯನ್ನು ತೆಗೆದುಹಾಕಲಾಗಿದೆ.

ಈ ಆದೇಶವನ್ನು ವಾಣಿಜ್ಯ ಮತ್ತು ಕೈಗಾರಿಕ ಇಲಾಖೆ ಟಿಪ್ಪಣಿ ಸಂಖ್ಯೆ:CI 113 SPI 2017, ದಿನಾಂಕ:27/08/2018, ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ:ಆಇ 602 ವೆಚ್ಚ-3/2018, ದಿ:15.09.2018 ಮತ್ತು ಯೋಜನೆ ಇಲಾಖೆಯ ಟಿಪ್ಪಣಿ ಸಂಖ್ಯೆ: ಪಿಡಿ 126 ಐಎಂಎಂ 2018, ದಿನಾಂಕ:

17/09/2018ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

PR.15

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC.100

ಎಸ್.ಎನ್. ಕಲಾವತಿ

ಸರ್ಕಾರದ ಅಧೀನ ಕಾರ್ಯದರ್ಶಿ-1,

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಹಿಂವಕ 144 ಬಿಸಿಎ 2017 (ಭಾ-1), ಬೆಂಗಳೂರು, ದಿನಾಂಕ: 03-10-2018

ವಿಷಯ :

ಆರ್ಯವೈಶ್ಯ ಜನಾಂಗದ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಪ್ರವೇಶ ಪಡೆಯಲು ಜಾತಿ ದೃಡೀಕರಣ

ಪತ್ರವನ್ನು ಒದಗಿಸುವ ಕುರಿತು.

ಆರ್ಯವೈಶ್ಯ ಜನಾಂಗದ ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನ ಅನುಚ್ಛೇಧ 15 (4) ರಂತೆ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಮತ್ತು ಅನುಚ್ಛೇಧ 16 (4)ರ ಮೇರೆಗೆ ನೇಮಕಾತಿಗಳಲ್ಲಿ ಮೀಸಲಾತಿ ಸೌಲಭ್ಯಗಳನ್ನು ಹೊರತುಪಡಿಸಿ ಶಾಲೆಗಳಲ್ಲಿ ಪ್ರವೇಶ ಪಡೆಯುವ ಉದ್ದೇಶಕ್ಕಾಗಿ ಮಾತ್ರ ಆರ್ಯವೈಶ್ಯ ಜಾತಿಯ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ, ಇದರೊಂದಿಗೆ ಲಗತ್ತಿಸಿರುವ ನಮೂನೆ-'ಜಿ' ಯಲ್ಲಿ ಸಂಬಂಧಪಟ್ಟ ತಹಶೀಲ್ದಾರರುಗಳು ಆರ್ಯವೈಶ್ಯ ಜನಾಂಗದ ವಿದ್ಯಾರ್ಥಿಗಳಿಗೆ ಜಾತಿ ದೃಡೀಕರಣ ಪತ್ರವನ್ನು ನೀಡುವಂತೆ ಆದೇಶಿಸಿದೆ.

ಎಸ್.ಎನ್. ಕಲಾವತಿ

ಸರ್ಕಾರದ ಅಧೀನ ಕಾರ್ಯದರ್ಶಿ-1,

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

(ಆರ್ಯವೈಶ್ಯ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಮಾತ್ರ)

ನಮೂನೆ-ಜಿ

(ಸರ್ಕಾರಿ ಸುತ್ತೋಲೆ ಸಂಖ್ಯೆ: ಹಿಂವಕ 144 ಬಿಸಿಎ 2017 (ಭಾ-1) ದಿ:03-10-2018)

ಆರ್ಯವೈಶ್ಯ ಜನಾಂಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ನೀಡುವ ಪ್ರಮಾಣ ಪತ್ರ್ರ

________________ಗ್ರಾಮ_____________ಪಟ್ಟಣದ_____________ತಾಲ್ಲೂಕು______________ನಗರ_____________ಜಿಲ್ಲೆ ನಿವಾಸಿಯಾದ ಶ್ರೀ/ಶ್ರೀಮತಿ________________________ ಇವರ ಮಗ/ ಮಗಳು/ಪತ್ನಿ/ಪತಿಯಾದ, ಶ್ರೀ/ಶ್ರೀಮತಿ/ ಕುಮಾರಿ___________________________ ಇವರು ಆರ್ಯವೈಶ್ಯ ಜಾತಿಗೆ ಸೇರಿರುತ್ತಾರೆಂದು ಲಭ್ಯವಾದ ದಾಖಲೆಗಳನ್ನು ಪರಿಶೀಲಿಸಿ ಪ್ರಮಾಣೀಕರಿಸಲಾಗಿದೆ. ಈ ಪ್ರಮಾಣ ಪತ್ರವನ್ನು ಶಾಲೆಗಳಲ್ಲಿ ಪ್ರವೇಶ ಪಡೆಯಲು ಮಾತ್ರ ಪ್ರಮಾಣೀಕರಿಸಲಾಗಿದೆ (ಭಾರತ ಸಂವಿಧಾನದ ಅನುಚ್ಛೇದ 15(4) ಮತ್ತು ಅನುಚ್ಛೇದ 16(4)ರಲ್ಲಿ ಹೇಳಿರುವಂತೆ ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ಸೌಲಭ್ಯ ಪಡೆಯಲು ಬಳಸುವಂತಿಲ್ಲ).

ಸ್ಥಳ:

ತಹಶೀಲ್ದಾರ್ ದಿನಾಂಕ:

______________ತಾಲ್ಲೂಕು

ಕಛೇರಿಯ ಮೊಹರು (Caste Certificate for Aryavysya Students only)

Form - G

(G.O. No.:BCW 144 BCA 2017 (P-1) Dated:03-10-2018)

CASTE CERTIFICATE FOR ARYAVYSYA COMMUNITY STUDENTS

This is to certify that, Sri/ Smt/ Kumara/ Kumari _____________________________________Son/ Daughter/ Husband/ Wife of________________________________ residing at Village / Town______________________________ Taluk________________ District_________________________ belongs to the Aryavysya caste on verification of available records. This certificate issued only forಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೧, ೨೦೧೯ ೮೯ seeking School admission. (and not to claim Educational or Employment any reservation benefits under Article 15(4) and 16(4) of Constitution of India).

Place:

Tahashildar Date:

__________Taluk

Office seal.

PR.16

ಎಸ್.ಎನ್. ಕಲಾವತಿ

SC.100

ಸರ್ಕಾರದ ಅಧೀನ ಕಾರ್ಯದರ್ಶಿ-1,

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ಹಿಂದುಳಿದ ವರ್ಗಗಳ ಕಲ್ಯಾಣ ಸಚಿವಾಲಯ

ವಿಷಯ:

ಸಾಮಾಜಿಕವಾಗಿ ಮುಂದುವರೆದ ವ್ಯಕ್ತಿಗಳು/ವರ್ಗಗಳನ್ನು (ಕೆನೆಪದರ) ಹಿಂದುಳಿದ ವರ್ಗಗಳ

ಓದಲಾಗಿದೆ:

ಮೀಸಲಾತಿಯಿಂದ ಹೊರತುಪಡಿಸಲು ಕೆನೆಪದರ ನೀತಿಯ ವಾರ್ಷಿಕ ಆದಾಯ ಮಿತಿಯನ್ನು `. 6.00 ಲಕ್ಷಗಳಿಂದ `.8.00 ಲಕ್ಷಗಳಿಗೆ ಹೆಚ್ಚಿಸುವ ಬಗ್ಗೆ. 1. ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ದಿನಾಂಕ:30/3/2002. 2. ಸರ್ಕಾರದ ಆದೇಶ ಸಂಖ್ಯೆ: ಸಕಇ 104 ಬಿಸಿಎ 2011, ದಿನಾಂಕ:06/02/2012. 3. ಸರ್ಕಾರದ ಆದೇಶ ಸಂಖ್ಯೆ: ಸಕಇ 192 ಬಿಸಿಎ 2013, ದಿನಾಂಕ:04/09/2013. 4. ಸರ್ಕಾರದ ಆದೇಶ ಸಂಖ್ಯೆ: ಸಕಇ 148 ಬಿಸಿಎ 2015, ದಿನಾಂಕ:04/06/2015.

5. ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇವರ ಪ್ರಸ್ತಾವನೆ ಸಂಖ್ಯೆ:

ಹಿಂವಕಇ/ಮಾಶಾ/ಸಿ.ಆರ್-89/2017-18, ದಿನಾಂಕ:12/03/2018.

ಪ್ರಸ್ತಾವನೆ :

ಮೇಲೆ (1) ರಲ್ಲಿ ಓದಲಾದ ಆದೇಶದ ಅನುಬಂಧ-II ಅಂಶ-3ರಲ್ಲಿ ಕೆನೆಪದರವನ್ನು ನಿರ್ಣಯಿಸಲು ಹಿಂದುಳಿದ ಪ್ರವರ್ಗ-2'ಎ', 2'ಬಿ', 3'ಎ', ಮತ್ತು 3'ಬಿ' ಗಳಿಗೆ ಅನ್ವಯಿಸುವಂತೆ ವಾರ್ಷಿಕ ಆದಾಯ ಮಿತಿಯನ್ನು `.2.00 ಲಕ್ಷಗಳಿಗೆ ನಿಗಧಿಗೊಳಿಸಲಾಗಿದೆ. ತದನಂತರ ಒಟ್ಟು ವಾರ್ಷಿಕ ಆದಾಯ ಮಿತಿಯನ್ನು (Gross Annual Income) ಮೇಲೆ (2) ರಲ್ಲಿ ಓದಲಾದ ಆದೇಶದಲ್ಲಿ `.2.00 ಲಕ್ಷಗಳಿಂದ `..3.50 ಲಕ್ಷಗಳಿಗೆ ನಿಗಧಿಗೊಳಿಸಿದೆ ಹಾಗೂ ಮೇಲೆ (3) ರಲ್ಲಿ ಓದಲಾದ ಆದೇಶದಲ್ಲಿ `.3.50 ಲಕ್ಷಗಳಿಂದ `.4.50 ಲಕ್ಷಗಳಿಗೆ ಮತ್ತು (4)ರಲ್ಲಿ ಓದಲಾದ ಆದೇಶದಲ್ಲಿ `.4.50 ಲಕ್ಷಗಳಿಂದ `.6.00 ಲಕ್ಷಗಳಿಗೆ ಹೆಚ್ಚಿಸಿ ಆದೇಶಿಸಲಾಗಿದೆ.

ದಿನಾಂಕ:16/02/2018 ರಂದು, ಅಂದಿನ ಸನ್ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ 2018-19ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-194ರಲ್ಲಿ "ಹಿಂದುಳಿದ ವರ್ಗಗಳು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯಲು ಹಾಲಿ ಇರುವ ಕೆನೆಪದರ ಆದಾಯ ಮಿತಿಯನ್ನು `. 6.00 ಲಕ್ಷಗಳಿಂದ 8.00 ಲಕ್ಷಗಳಿಗೆ ಹೆಚ್ಚಿಸಲಾಗುವುದು" ಎಂದು ಘೋಷಿಸಿರುತ್ತಾರೆ. ಅದರಂತೆ ಮೇಲೆ (5)ರಲ್ಲಿ ಓದಲಾದ ಪ್ರಸ್ತಾವನೆಯಲ್ಲಿ ಈ ಬಗ್ಗೆ ಆದೇಶ ಹೊರಡಿಸುವಂತೆ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರು ಸರ್ಕಾರಕ್ಕೆ ಕೋರಿರುತ್ತಾರೆ. ಅದರಂತೆ ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ: ಹಿಂವಕ 304 ಬಿಸಿಎ 2017, ಬೆಂಗಳೂರು, ದಿನಾಂಕ:14.09.2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ದಿನಾಂಕ:30/3/2002 ಅನುಬಂಧ-IIರ ಅಂಶ-3 ರಲ್ಲಿ ಕೆನೆಪದರವನ್ನು ನಿರ್ಣಯಿಸಲು ಹಿಂದುಳಿದ ವರ್ಗಗಳ ಪ್ರವರ್ಗ-2'ಎ', 2'ಬಿ', 3'ಎ', ಮತ್ತು 3'ಬಿ', ಗಳಿಗೆ ಅನ್ವಯಿಸುವಂತೆ ಕೆನೆಪದರಕ್ಕೆ ನಿಗಧಿಪಡಿಸಿರುವ ಅಭ್ಯರ್ಥಿಯ ಮತ್ತು ಅವರ ತಂದೆ-ತಾಯಿ/ಪೋಷಕರ ವಾರ್ಷಿಕ ಒಟ್ಟು ಆದಾಯ ಮಿತಿಯನ್ನು (Gross Annual Income) `. 6.00 ಲಕ್ಷಗಳಿಂದ 8.00 ಲಕ್ಷಗಳಿಗೆ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹೆಚ್ಚಿಸಿ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಕಇ 225 ಬಿಸಿಎ 2000, ದಿನಾಂಕ:30/3/2002ರಲ್ಲಿರುವ ಇತರೆ ಷರತ್ತುಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ.

ಈ ಆದೇಶವನ್ನು ಆರ್ಥಿಕ ಇಲಾಖೆ ಟಿಪ್ಪಣಿ ಸಂಖ್ಯೆ: ಆಇ 441 ವೆಚ್ಚ-3/2018, ದಿನಾಂಕ:02/08/2018 ಮತ್ತು ಯೋಜನೆ ಇಲಾಖೆಯ ಟಿಪ್ಪಣಿ ಸಂಖ್ಯೆ: ಪಿಡಿ 16 ಐಎಂಎಂ 2018, ದಿನಾಂಕ:13/04/2018ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

PR.17

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎಸ್.ಎನ್. ಕಲಾವತಿ

ಸರ್ಕಾರದ ಅಧೀನ ಕಾರ್ಯದರ್ಶಿ-1,

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಚಿಕ್ಕಬಳ್ಳಾಪುರ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪ-1)ಗೆ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ : 1) ಸರ್ಕಾರದ ಅಧಿಸೂಚನೆ ಸಂಖ್ಯೆ ನಅಇ:335:ಟಿಟಿಪಿ:96, ದಿನಾಂಕ: 02-09-1996.

2) ಸರ್ಕಾರದ ಅಧಿಸೂಚನೆ ಸಂಖ್ಯೆ ನಅಇ:61:ಬೆಂರೂಪ್ರಾ:2004, ದಿನಾಂಕ: 08-04-2004.

೯೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೧, ೨೦೧೯ ಭಾಗ ೧

3) ಸರ್ಕಾರದ ಆದೇಶ ಸಂಖ್ಯೆ ನಅಇ:115:ಬೆಂರೂಪ್ರಾ:2008, ದಿನಾಂಕ: 19-09-2008. 4) ತಿದ್ದುಪಡಿ ಆದೇಶ ಸಂಖ್ಯೆ ನಅಇ:288 ಬೆಂರೂಪ್ರಾ 2014, ದಿನಾಂಕ: 06.03.2018.

5) ಆಯುಕ್ತರು, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ ಇವರ ಪತ್ರ ಸಂಖ್ಯೆ: ಚಿನಅಪ್ರಾ/ಸ್ಥ.ಯೋ.ಪ್ರಾ/ತಿದ್ದುಪಡಿ/2014-15/360, ದಿನಾಂಕ:04-09-2017, 25-09-2017 ಮತ್ತು 07-03-2018.

6) ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಇವರ ಪ್ರಸ್ತಾವನೆ ಸಂಖ್ಯೆ:

DTCP-08-MPP-2016-17, ದಿನಾಂಕ: 22.03.2018.

ಪ್ರಸ್ತಾವನೆ :-

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಅಧಿಸೂಚನೆಯಲ್ಲಿ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿ ಚಿಕ್ಕಬಳ್ಳಾಪುರ ಪಟ್ಟಣದ ಪುರಸಭೆ ವ್ಯಾಪ್ತಿಯನ್ನೇ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಿ ಪುರಸಭೆಯೇ ಯೋಜನಾ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿರುತ್ತದೆ. ಮೇಲೆ ಓದಲಾದ ಕ್ರಮ ಸಂಖ್ಯೆ: (2)ರ ಅಧಿಸೂಚನೆಯಲ್ಲಿ ಚಿಕ್ಕಬಳ್ಳಾಪುರ ಸ್ಥಳೀಯ ಯೋಜನಾ ಪ್ರದೇಶದ ಸ್ಥೂಲಾಭಿವೃದ್ಧಿ ಯೋಜನೆಗೆ ಸರ್ಕಾರದ ಅಂತಿಮ ಅನುಮೋದನೆ ನೀಡಿದ್ದು, ಮೇಲೆ ಓದಲಾದ ಕ್ರಮ ಸಂಖ್ಯೆ: (3)ರ ಆದೇಶದಲ್ಲಿ ಪರಿಷ್ಕøತ ಸ್ಥಳೀಯ ಯೋಜನಾ ಪ್ರದೇಶ ಘೋಷಣೆಯಾಗಿರುತ್ತದೆ. ಮೇಲೆ ಓದಲಾದ ಕ್ರಮ ಸಂಖ್ಯೆ: (4)ರ ತಿದ್ದುಪಡಿಯಲ್ಲಿ, ಮೇಲೆ ಓದಲಾದ ಕ್ರಮ ಸಂಖ್ಯೆ: (3)ರ ಆದೇಶದಲ್ಲಿನ ಚಿಕ್ಕಬಳ್ಳಾಪುರ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯ ನ್ಯೂನತೆಗಳನ್ನು ಸರಿಪಡಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ(5) ರ ಪತ್ರಗಳಲ್ಲಿ ಆಯುಕ್ತರು, ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ ಇವರು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 9(1) ರನ್ವಯ ಚಿಕ್ಕಬಳ್ಳಾಪುರ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ (ತಾತ್ಕಾಲಿಕ) ಯನ್ನು ಸಿದ್ಧಪಡಿಸಿ, ಸದರಿ ಕಾಯ್ದೆಯ ಕಲಂ 13(1) ರನ್ವಯ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆಯನ್ನು ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ರವರ ಮುಖಾಂತರ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮಸಂಖ್ಯೆ (6)ರ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಪ್ರಸ್ತಾವನೆಯಲ್ಲಿ, ಚಿಕ್ಕಬಳ್ಳಾಪುರ ನಗರದ ಜನಸಂಖ್ಯೆಯು 2011ರಲ್ಲಿ 87,898 ಇದ್ದು, 2031ಕ್ಕೆ ಸುಮಾರು 1,50,000 ಆಗಬಹುದೆಂದು ಅಂದಾಜಿಸಿ ಮಹಾಯೋಜನೆ ತಯಾರಿಸಿದ್ದು, ಪರಿಷ್ಕøತ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು 17928.65 ಹೆಕ್ಟೇರ್ ವಿಸ್ತೀರ್ಣದಲ್ಲಿ 4357.30 ಹೆಕ್ಟೇರ್ ಪ್ರದೇಶವನ್ನು ನಗರೀಕರಣ ಎಲ್ಲೆಯೆಂದು ಪ್ರಸ್ತಾಪಿಸಿ ಯೋಜನೆಯನ್ನು ರೂಪಿಸಲಾಗಿದೆ. ಚಿಕ್ಕಬಳ್ಳಾಪುರ ನಗರದ ಜನಸಂಖ್ಯೆ, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ, ಹಾಲಿ ಬೆಳವಣಿಗೆಯ ಗತಿ, ರಸ್ತೆಗಳ ಹಾಲಿ ಪರಿಚಲನೆ ವ್ಯವಸ್ಥೆಯ ಸಮಸ್ಯೆಗಳನ್ನು ವಿಶ್ಲೇಷಿಸಿ ಯೋಜನಾ ತತ್ವಗಳಿಗನುಗುಣವಾಗಿ ಹಾಗೂ ಮಹಾಯೋಜನೆ ತಯಾರಿಕೆ ಬಗ್ಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 9 ರಿಂದ 12 ರವರೆಗೆ ನಿಗದಿಪಡಿಸಿರುವ ಅಂಶಗಳನ್ನು ಪರಿಗಣಿಸಿ ನಗರದ ಮುಂದಿನ ಬೆಳವಣಿಗೆಗೆ, ವಿವಿಧ ಉಪಯೋಗಗಳಿಗೆ ಬೇಕಾಗಬಹುದಾದ ಭೂಮಿಯನ್ನು ಈ ಕೆಳಗಿನಂತೆ ಕಾಯ್ದಿರಿಸಿ ಮಹಾಯೋಜನೆ ತಯಾರಿಸಲಾಗಿದೆ. ಪಟ್ಟಣದ ಯೋಜಿತ ಬೆಳವಣಿಗೆಗಾಗಿ ಪ್ರಸ್ತಾಪಿಸಿರುವ 4357.30 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 2328.81 ಹೆಕ್ಟೇರ್(ಶೇ.53.44), ವಾಣಿಜ್ಯಕ್ಕಾಗಿ 148.57 ಹೆಕ್ಟೇರ್(ಶೇ.3.41), ಕೈಗಾರಿಕೆಗಾಗಿ 344.26 ಹೆಕ್ಟೇರ್(ಶೇ.7.90), ಸಾರ್ವಜನಿಕ/ಅರೆ ಸಾರ್ವಜನಿಕ ಉಪಯೋಗಕ್ಕೆ 257.06 ಹೆಕ್ಟೇರ್(ಶೇ.5.90), ಸಾರ್ವಜನಿಕ ಉಪಯುಕ್ತತೆಗಾಗಿ 12.08 ಹೆಕ್ಟೇರ್(ಶೇ.0.28), ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 464.37 ಹೆಕ್ಟೇರ್(ಶೇ.10.66) ಹಾಗೂ ಸಾರಿಗೆ/ ಸಂಪರ್ಕ ವಲಯಕ್ಕೆ 802.15 ಹೆಕ್ಟೇರ್ (ಶೇ.18.41) ಪ್ರದೇಶವನ್ನು ಮೀಸಲಿಟ್ಟು ಭೂ ಉಪಯೋಗವನ್ನು ನಿಗದಿಪಡಿಸಲಾಗಿದೆ.

ಆದರೆ, ಹಾಲಿ ಅಭಿವೃದ್ಧಿಗೊಂಡಿರುವ ನಗರದ ಹೃದಯ ಭಾಗದಲ್ಲಿನ ಚಿಕ್ಕಬಳ್ಳಾಪುರ ತಾಲ್ಲೂಕು, ಕಂದವಾರ ಅಮಾನಿಕೆರೆ ಗ್ರಾಮದ ವಿವಿಧ ಸ.ನಂ ಗಳನ್ನು ಕಂದವಾರ ಅಮಾನಿಕೆರೆಯ ಪೂರ್ವಭಾಗದಲ್ಲಿ ಉದ್ಯಾನವನ/ ಬಯಲು ಜಾಗೆಗಾಗಿ ಕಾಯ್ದಿರಿಸಿರುವುದು ಯಾವುದೇ ಯೋಜನಾ ತತ್ವಗಳಿಗೆ ಅನುಗುಣವಾಗಿರುವುದು ಕಂಡುಬರುವುದಿಲ್ಲವಾದ್ದರಿಂದ, ಕಂದವಾರ ಅಮಾನಿಕೆರೆ ಕೆರೆಯ ಗಡಿಗೆ ಹೊಂದಿಕೊಂಡಂತೆ 100ಮೀ ಅಂತರದಷ್ಟು ಬಫರ್/ ಉದ್ಯಾನವನ/ ಬಯಲುಜಾಗೆಯನ್ನು ಕಾಯ್ದಿರಿಸಿ ಉಳಿದ ಸ.ನಂ ಜಮೀನುಗಳನ್ನು ವಸತಿ ಉದ್ದೇಶಕ್ಕಾಗಿ ಮತ್ತು ಕಂದವಾರ ಗ್ರಾಮದ ಸ.ನಂ:158, 159, 160, 161, 162, 163, 164, 178 ರ ಜಮೀನುಗಳ ಭಾಗಶಃ ಪ್ರದೇಶವನ್ನು ಉದ್ಯಾನವನ/ ಬಯಲುಜಾಗಕ್ಕೆ ಕಾಯ್ದಿರಿಸಿರುವುದನ್ನು ವಸತಿ ಉದ್ದೇಶಕ್ಕಾಗಿ ಮತ್ತು ಕಂದವಾರ ಅಮಾನಿಕೆರೆಯ ವಾಯುವ್ಯ ದಿಕ್ಕಿನಲ್ಲಿ ಕಂದವಾರ ಅಮಾನಿಕೆರೆಗೆ ಹೊಂದಿಕೊಂಡಂತೆ ಉದ್ಯಾನವನ/ ಬಯಲು ಜಾಗಕ್ಕೆ ಕಾಯ್ದಿರಿಸಿರುವುದನ್ನು ಕೆರೆಯ ಗಡಿಗೆ ಹೊಂದಿಕೊಂಡಂತೆ 100ಮೀ ಅಂತರದಷ್ಟು ಬಫರ್/ ಉದ್ಯಾನವನ/ ಬಯಲು ಜಾಗೆಯನ್ನು ಕಾಯ್ದಿರಿಸಿ ಉಳಿದ ಸ.ನಂ. ಜಮೀನುಗಳನ್ನು ವಸತಿ ಉದ್ದೇಶಕ್ಕಾಗಿ ಮಹಾಯೋಜನೆಯನ್ನು ಅಂತಿಮ ಅನುಮೋದನೆಗಾಗಿ ಸಲ್ಲಿಸುವಾಗ ಕಾಯ್ದಿರಿಸುವ ನಿಬಂಧನೆ ವಿಧಿಸಿ ಮಹಾಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1) ರನ್ವಯ ತಾತ್ಕಾಲಿಕ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 67 ಬೆಂರೂಪ್ರಾ 2018, ಬೆಂಗಳೂರು, ದಿನಾಂಕ :09.01.2019.

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕಂದವಾರ ಅಮಾನಿಕೆರೆ ಗ್ರಾಮದ ಕಂದವಾರ ಅಮಾನಿಕೆರೆಯ ಪೂರ್ವಭಾಗದಲ್ಲಿ ಉದ್ಯಾನವನ/ ಬಯಲು ಜಾಗೆಗಾಗಿ ಕಾಯ್ದಿರಿಸಿರುವುದನ್ನು ಕಂದವಾರ ಅಮಾನಿಕೆರೆ ಕೆರೆಯ ಗಡಿಗೆ ಹೊಂದಿಕೊಂಡಂತೆ 100ಮೀ ಅಂತರದಷ್ಟು ಬಫರ್/ ಉದ್ಯಾನವನ / ಬಯಲು ಜಾಗೆಯನ್ನು ಕಾಯ್ದಿರಿಸಿ ಉಳಿದ ಸ.ನಂ. ಜಮೀನುಗಳನ್ನು ವಸತಿ ಉದ್ದೇಶಕ್ಕಾಗಿ ಮತ್ತು ಕಂದವಾರ ಗ್ರಾಮದ ಸ.ನಂ:158, 159, 160, 161, 162, 163, 164, 178ರ ಜಮೀನುಗಳ ಭಾಗಶಃ ಪ್ರದೇಶವನ್ನು ಉದ್ಯಾನವನ/ ಬಯಲು ಜಾಗಕ್ಕೆ ಕಾಯ್ದಿರಿಸಿರುವುದನ್ನು ವಸತಿ ಉದ್ದೇಶಕ್ಕಾಗಿ ಮತ್ತು ಕಂದವಾರ ಅಮಾನಿಕೆರೆಯ ವಾಯುವ್ಯ ದಿಕ್ಕಿನಲ್ಲಿ ಕಂದವಾರ ಅಮಾನಿಕೆರೆಗೆ ಹೊಂದಿಕೊಂಡಂತೆ ಉದ್ಯಾನವನ/ ಬಯಲು ಜಾಗಕ್ಕೆ ಕಾಯ್ದಿರಿಸಿರುವುದನ್ನು ಕೆರೆಯ ಗಡಿಗೆ ಹೊಂದಿಕೊಂಡಂತೆ 100ಮೀ ಅಂತರದಷ್ಟು ಬಫರ್/ ಉದ್ಯಾನವನ/ ಬಯಲು ಜಾಗೆಯನ್ನು ಕಾಯ್ದಿರಿಸಿ ಉಳಿದ ಸ.ನಂ. ಜಮೀನುಗಳನ್ನು ವಸತಿ ಉದ್ದೇಶಕ್ಕಾಗಿ ಮಹಾಯೋಜನೆಯನ್ನು ಅಂತಿಮ ಅನುಮೋದನೆಗಾಗಿ ಸಲ್ಲಿಸುವಾಗ ಕಾಯ್ದಿರಿಸುವ ನಿಬಂಧನೆಗಳಿಗೊಳಪಟ್ಟು, ಚಿಕ್ಕಬಳ್ಳಾಪುರ ಸ್ಥಳೀಯಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೧, ೨೦೧೯ ೯೧ ಯೋಜನಾ ಪ್ರದೇಶಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1)ರನ್ವಯ ಮಹಾಯೋಜನೆ (ಪ-1)ಗೆ ಸರ್ಕಾರದ ತಾತ್ಕಾಲಿಕ ಅನುಮೋದನೆಯನ್ನು ನೀಡಲಾಗಿದೆ. ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.

PR- 11

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC- 250

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ : ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನೀಡುವ ಬಗ್ಗೆ.

ಪ್ರಸ್ತಾವನೆ :-

ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡುವ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಮಧ್ಯೆ ಉದ್ಬವಿಸಬಹುದಾದ ಸಮಸ್ಯೆಗಳ ಬಗ್ಗೆ ಸಮನ್ವಯ ಸಾಧಿಸುತ್ತಾರೆ. ಅದಲ್ಲದೇ, ಅವರ ಅಧೀನದಲ್ಲಿ ಬರುವ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಮೇಲುಸ್ತುವಾರಿ ಹಾಗೂ ತಪಾಸಣೆ ಮಾಡುತ್ತಾರೆ.

ಆದರೆ, ತಾಲ್ಲೂಕು ಮಟ್ಟದಲ್ಲಿ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಲು ಹಿರಿಯ ಅಧಿಕಾರಿಯು ಇರುವುದಿಲ್ಲ. ತಾಲ್ಲೂಕು ಮಟ್ಟದಲ್ಲಿ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ನಗರ ಸಭೆ / ಪುರಸಭೆ ನಗರ ಪಾಲಿಕೆಗಳ ಮುಖ್ಯಾಧಿಕಾರಿ/ ಆಯುಕ್ತರು, ತಹಸೀಲ್ದಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ಕ್ಷೇತ್ರ ಶಿಕ್ಷಣಾಧಿಕಾರಿ ಮುಂತಾದ ಅಧಿಕಾರಿಗಳು ಸಮಾನ ಶ್ರೇಣಿಯ ಅಧಿಕಾರಿಗಳಾಗಿರುವುದರಿಂದ ಅವರ ನಡುವೆ ಉದ್ಬವಿಸಬಹುದಾದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿ ಅಥವಾ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತರಬೇಕಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಸಮನ್ವಯದ ಕೊರತೆಯಿಂದಾಗಿ ಸಮಸ್ಯೆಯ ಇತ್ಯರ್ಥವು ವಿಳಂಬವಾಗುತ್ತದೆ.

ಈ ಹಿನ್ನೆಲೆಯಲ್ಲಿ ತಾಲ್ಲೂಕು ಮಟ್ಟದಲ್ಲಿ ಉದ್ಬವಿಸಬಹುದಾದ ಸಮಸ್ಯೆಗಳು ಹಾಗೂ ತಾಲ್ಲೂಕು ಮಟ್ಟದಲ್ಲಿ ವಿವಿಧ ಅಧಿಕಾರಿಗಳ ನಡುವೆ ಸಮನ್ವಯ ಸಾಧಿಸಲು, ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ, ಕಾಮಗಾರಿಗಳ ಪ್ರಗತಿ ತೀವ್ರಗೊಳಿಸುವ ಕುರಿತು ಸೂಚನೆ ನೀಡಲು, ಗುಣಮಟ್ಟವನ್ನು ಕಾಯ್ದುಕೊಳ್ಳಲು ಮತ್ತು ತಪಾಸಣೆ ಮಾಡಲು ಕಂದಾಯ ಉಪ ವಿಭಾಗಾಧಿಕಾರಿಗಳಿಗೆ ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳ ಮಧ್ಯೆ ಸಮನ್ವಯ ಸಾಧಿಸಿ, ಸಮಸ್ಯೆ ಇತ್ಯರ್ಥಪಡಿಸುವ ಅಧಿಕಾರ ನೀಡುವುದು ಸೂಕ್ತವಾಗಿದೆ.

ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಕೆಳಕಂಡಂತೆ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 278 ಆಸೇಇ 2018, ಬೆಂಗಳೂರು, ದಿನಾಂಕ: 03.01.2019.

ಕಂದಾಯ ಉಪ ವಿಭಾಗದ ಉಪ ವಿಭಾಗಾಧಿಕಾರಿಗಳಿಗೆ ತಮ್ಮ ವ್ಯಾಪ್ತಿಯ ತಾಲ್ಲೂಕುಗಳಲ್ಲಿ ಈ ಕೆಳಕಂಡ ಕರ್ತವ್ಯಗಳನ್ನು ನಿರ್ವಹಿಸಲು ಆದೇಶಿಸಿದೆ:

1. ತಾಲ್ಲೂಕು ಮಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಟಾನದ ಸಮಯದಲ್ಲಿ ಉದ್ಬವಿಸಬಹುದಾದ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ವಿವಿಧ ಇಲಾಖೆಗಳ ಅಧಿಕಾರಿಗಳ (ಉದಾ: ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ, ನಗರ ಸಭೆ/ ಪುರಸಭೆ ನಗರ ಪಾಲಿಕೆಗಳ ಮುಖ್ಯಾಧಿಕಾರಿ/ ಆಯುಕ್ತರು, ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು ಇತ್ಯಾದಿ) ನಡುವೆ ಸಮನ್ವಯ ಸಭೆಯನ್ನು ಕನಿಷ್ಠ ತಿಂಗಳಿಗೊಮ್ಮೆ ನಡೆಸುವುದು.

2. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಜಾರಿಯಾಗುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ /ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸುವುದು.

3. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ/ ಯೋಜನೆಗಳ ಪ್ರಗತಿ ತೀವ್ರಗೊಳಿಸಲು ಮತ್ತು ಗುಣಮಟ್ಟ ಕಾಪಾಡಲು, ತಪಾಸಣೆ ಮತ್ತು ಮೇಲುಸ್ತುವಾರಿ ಮಾಡುವುದು.

PR- 12

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC- 100

ಪಿ.ವಿ. ಶ್ರೀನಿವಾಸನ್

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿ.ಆ.ಸು.ಇಲಾಖೆ. (ಸೇವೆಗಳು-2).

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ : ತಾಯಿ ಮತ್ತು ಮಕ್ಕಳ ಆಸ್ಪತ್ರೆ ವಿಭಾಗಗಳಿಗೆ ಅಗತ್ಯ ಮಾನವ ಸಂಪನ್ಮೂಲಗಳನ್ನು ಒದಗಿಸಲು ಅನುಮತಿ ನೀಡುವ ಬಗ್ಗೆ.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ.ಆಕುಕ 134 ಎಫ್‌ಪಿಆರ್ 2016, ದಿನಾಂಕ: 18.11.2016.

2) ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರವರ ಪತ್ರ ಸಂಖ್ಯೆ.ಜೆಡಿಪಿ/ಆಪ್ತ/52/2016-17, ದಿನಾಂಕ: 25.02.2017.

೯೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೧, ೨೦೧೯ ಭಾಗ ೧

ಪ್ರಸ್ತಾವನೆ:-

ಮೇಲೆ ಓದಲಾದ ಕ್ರಮ ಸಂಖ್ಯೆ.(1)ರ ಸರ್ಕಾರದ ಆದೇಶದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ನಬಾರ್ಡ್ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ 20 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳ ಪೈಕಿ 08 ಆಸ್ಪತ್ರೆಗಳಿಗೆ ಅಗತ್ಯವಿರುವ ಒಟ್ಟು 271 ಹುದ್ದೆಗಳನ್ನು ಸೃಜಿಸಲು ಅನುಮತಿ ನೀಡಿ ಆದೇಶಿಸಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ.(2)ರ ಪತ್ರದಲ್ಲಿ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳುರವರು ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ನಬಾರ್ಡ್ ಯೋಜನೆಯಡಿ ನಿರ್ಮಾಣಗೊಳ್ಳುತ್ತಿರುವ 20 ತಾಯಿ ಮತ್ತು ಮಕ್ಕಳ ವಿಭಾಗದ ಆಸ್ಪತ್ರೆಗಳಲ್ಲಿನ ಹುದ್ದೆಗಳ ಮಂಜೂರಾತಿಗಾಗಿ ಪ್ರಸ್ತಾಪಿಸಲಾಗಿತ್ತು, ಆದರೆ, ಸರ್ಕಾರದಿಂದ 08 ತಾಯಿ ಮತ್ತು ಮಕ್ಕಳ ಆಸ್ಪತೆ ವಿಭಾಗಗಳ ಆಸ್ಪತ್ರೆಗಳು ಹಾಗೂ ಅವುಗಳಿಗೆ ಸಂಬಂಧಿಸಿದಂತೆ ಒಟ್ಟು 271 ಹುದ್ದೆಗಳನ್ನು ಮಾತ್ರ ಮಂಜೂರು ಮಾಡಲಾಗಿರುತ್ತದೆ. ಬಾಕಿ ಉಳಿದಂತೆ ಈ ಕೆಳಕಂಡ 12 ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ಅವಶ್ಯಕವಿರುವ ವಿವಿಧ ವೃಂದದ 637 ಹುದ್ದೆಗಳ ಮಂಜೂರು ಮಾಡಲು ಬೇಕಾದ ಸಿಬ್ಬಂದಿಗಳಿಗೆ ಆವರ್ತಕ ವೆಚ್ಚಗಳಿಗೆ ತಗಲುವ ವಿವರವನ್ನು ಕ್ರೂಡೀಕರಿಸಿ, ಸದರಿ ಆಸ್ಪತ್ರೆಗಳಿಗೆ ಅವಶ್ಯಕ ಹುದ್ದೆಗಳನ್ನು ಮಂಜೂರು ಮಾಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಕ್ರ. ಸ ಂ ಆಸ್ಪತ್ರೆಯ ಹೆಸರು ಮತ್ತು ಜಿಲ್ಲೆ ಹಾಸಿಗೆಯ ಸಾಮರ್ಥ್ಯ ಯೋಜನೆ ಹೆಸರು
1 ಸಾರ್ವಜನಿಕ ಆಸ್ಪತ್ರೆ ದೊಡ್ಡಬಳ್ಳಾಪುರ,ಬೆಂಗಳೂರು (ಗ್ರಾಮಾಂತರ) ಜಿಲ್ಲೆ 100 ನಬಾರ್ಡ್ ಯೋಜನೆ
2 ಜಿಲ್ಲಾ ಆಸ್ಪತ್ರೆ, ಬಾಗಲಕೋಟೆ ಜಿಲ್ಲೆ 100
3 ಜಿಲ್ಲಾ ಆಸ್ಪತ್ರೆ, ವಿಜಯಪುರ, ವಿಜಯಪುರ ಜಿಲ್ಲೆ. 100
4 ಜಿಲ್ಲಾ ಆಸ್ಪತ್ರೆ, ಗದಗ, ಗದಗ ಜಿಲ್ಲೆ. 100
5 ಸಾರ್ವಜನಿಕ ಆಸ್ಪತ್ರೆ ಗೌರಿಬಿದನೂರು, ಚಿಕ್ಕಬಳ್ಳಾಪುರ ಜಿಲ್ಲೆ 100 ರಾಷ್ಟ್ರೀಯ ಆರೋಗ್ಯ ಅಭಿಯಾನ
6 ಜಿಲ್ಲಾ ಆಸ್ಪತ್ರೆ, ಯಾದಗಿರಿ ಜಿಲ್ಲೆ. 60
7 ಸಾರ್ವಜನಿಕ ಆಸ್ಪತ್ರೆ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ 60
8 ಸ ವ ುುದಾಯ ಆರೋಗ್ಯ ಕೇಂದ್ರ, ದಾಂಡೇಲಿ, ಉತ್ತರ ಕನ್ನಡ ಜಿಲ್ಲೆ. 60 ನಬಾರ್ಡ್ ಯೋಜನೆ
9 ಸಾರ್ವಜನಿಕ ಆಸ್ಪತ್ರೆ, ಗುಂಡ್ಲುಪೇಟೆ, ಚಾಮರಾಜನಗರ ಜಿಲ್ಲೆ. 60
10 ಸಾರ್ವಜನಿಕ ಆಸ್ಪತ್ರೆ, ಕೆ.ಆರ್. ನಗರ, ಮೈಸೂರು ಜಿಲ್ಲೆ. 30 ರಾಷ್ಟ್ರೀಯ ಆರೋಗ್ಯ ಅಭಿಯಾನ
11 ಸಾರ್ವಜನಿಕ ಆಸ್ಪತ್ರೆ, ನಂಜನಗೂಡು, ಮೈಸೂರು ಜಿಲ್ಲೆ. 30
12 ಸಾರ್ವಜನಿಕ ಆಸ್ಪತ್ರೆ, ಹೊಳೆನರಸೀಪುರ, ಹಾಸನ ಜಿಲ್ಲೆ. 30 ನಬಾರ್ಡ್ ಯೋಜನೆ

ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ರವರ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ

ಸರ್ಕಾರದ ಆದೇಶ ಸಂಖ್ಯೆ: ಆಕುಕ 131 ಹೆಚ್ಎಸ್ಎಂ 2017, ಬೆಂಗಳೂರು, ದಿನಾಂಕ: 01-12-2018

ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಆರೋಗ್ಯ ಅಭಿಯಾನ ಮತ್ತು ನಬಾರ್ಡ್ ಯೋಜನೆಯಡಿ ನಿರ್ಮಾಣಗೊಂಡಿರುವ 20 ತಾಯಿ ಮತ್ತು ಮಕ್ಕಳ ವಿಭಾಗದ ಆಸ್ಪತ್ರೆಗಳ ಪೈಕಿ 12 ತಾಯಿ ಮಕ್ಕಳ ಆಸ್ಪತ್ರೆಗಳಿಗೆ ಈ ಆದೇಶದೊಂದಿಗೆ ಲಗತ್ತಿಸಲಾದ ಅನುಬಂಧದಲ್ಲಿ ನಮೂದಿಸಿರುವ ಅಗತ್ಯವಾದ 355 ವಿವಿಧ ವೃಂದದ ಹುದ್ದೆಗಳನ್ನು ಸೃಜಿಸಿ ಭರ್ತಿ ಮಾಡಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.

ಕಿರಿಯ ಫಾರ್ಮಾಸಿಸ್ಟ್, ಕಿರಿಯ ಪ್ರಯೋಗಶಾಲಾ ತಂತ್ರಜ್ಞರು, ಡಾಟಾ ಎಂಟ್ರಿ ಆಪರೇಟರ್, ಗ್ರೂಪ್-ಡಿ ಮತ್ತು ಸ್ವೀಪರ್ / ಗಾರ್ಡ್ ವೃಂದದ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲು ಸರ್ಕಾರವು ಆದೇಶಿಸಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 603 ವೆಚ್ಚ-5/2018, ದಿನಾಂಕ: 29/11/2018 ರಲ್ಲಿ ನೀಡಿರುವ ಸಹಮತಿ ಮೇರೆಗೆ ಹೊರಡಿಸಲಾಗಿದೆ.

PR- 18

SC- 50

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಯ. ಶಿವಶಂಕರ್ ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. (ಸೇವೆಗಳು)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ: ಶ್ರೀಮತಿ ಗೀತಾಕುಮಾರಿ ದಾಸ್, ಉಪ ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ, ಕೇಂದ್ರ ಕಛೇರಿ, ಬೆಂಗಳೂರು ಇವರನ್ನು ಇಲಾಖಾ ವಿಚಾರಣೆ ಬಾಕಿಯಿರಿಸಿ, ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸುವ ಬಗ್ಗೆ ಆದೇಶ.

ಓದಲಾಗಿದೆ: 1. ಔನಿಇ/51/ವೈ.ವಿ./2017-18, ದಿನಾಂಕ: 09.01.2019.

2. ಪತ್ರ ಸಂಖ್ಯೆ: ಔನಿಇ/66/ಸಿಬ್ಬಂದಿ/2018-19, ದಿನಾಂಕ: 09.01.2019.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೧, ೨೦೧೯ ೯೩

ಪ್ರಸ್ತಾವನೆ :-

ಮೇಲೆ ಓದಲಾದ ಕ್ರ.ಸಂ. (1) ಮತ್ತು (2)ರ ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ ಇವರ ಪ್ರಸ್ತಾವನೆಗಳಲ್ಲಿ ಶ್ರೀಮತಿ ಗೀತಾಕುಮಾರಿ ದಾಸ್, ಉಪ ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ, ಕೇಂದ್ರ ಕಛೇರಿ, ಬೆಂಗಳೂರು ಇವರಿಗೆ ಮೆ|| ಬಯೋಕಾರ್ನ್ ಲಿಮಿಟೆಡ್ ಸಂಸ್ಥೆಯ ಕಡತಗಳನ್ನು ಪರಿಷ್ಕರಣೆ ಮಾಡಿ ಮಂಡಿಸಲು ಇಲಾಖಾ ಮುಖ್ಯಸ್ಥರಾದ ಔಷಧ ನಿಯಂತ್ರಕರು ಮೌಖಿಕವಾಗಿ ಹಲವುಬಾರಿ ಸೂಚಿಸಿದರೂ, ಕಡತಗಳನ್ನು ಪರಿಶೀಲನೆ ಮಾಡಿ ಮೇಲಧಿಕಾರಿಗಳಿಗೆ ಸಲ್ಲಿಸದಿರುವುದರಿಂದ, ಸಂಸ್ಥೆಯ ಪ್ರತಿನಿಧಿಗಳ ಹಸ್ತಕ್ಷೇಪಕ್ಕೆ ಇಲಾಖೆಯನ್ನು ಗೊಂದಲಕ್ಕೆ ಸೀಲುಕಿಸಲು ಕಾರಣ ಕರ್ತರಾಗಿರುವುದನ್ನು ಗಮನಿಸಿ, ಸೂಚನಾ ಪತ್ರ ಹೊರಡಿಸಿದರೂ ಸಹ ಯಾವುದೇ ಜವಾಬು ನೀಡದೇ ಕಡತಗಳನ್ನು ಪರಿಶೀಲಿಸಿ ಮಂಡಿಸದೇ ವಿಫಲರಾಗಿರುವುದು ಮತ್ತು ಇನ್ನಿತರ ಔಷಧ ಸಂಶೋಧನೆ /ತಯಾರಿಕಾ /ರಫ್ತು ಅನುಮತಿಗೆ ಸಂಬಂಧಿಸಿದಂತೆ, ವಿವಿಧ ಸಂಸ್ಥೆಗಳ ಪ್ರಸ್ತಾವನೆಗಳನ್ನು ಶೀಘ್ರವಾಗಿ ಪರಿಶೀಲನೆ ಮಾಡದೆ, ವಿಳಂಬ ನೀತಿ ಅನುಸರಿಸಿ, ಬೇಜವಾಬ್ದಾರಿತನ ತೋರಿರುವುದು ಹಾಗೂ ಸರ್ಕಾರಿ ಕೆಲಸದ ಬಗ್ಗೆ ಮನೋಭಾವ, ಜವಾಬ್ದಾರಿ ವಹಿಸಿಕೊಳ್ಳುವ ಇಚ್ಛೆ ಹಾಗೂ ತೀರ್ಮಾನ ಕೈಗೊಳ್ಳುವ ಸಾಮರ್ಥ್ಯದ ಕೊರತೆಯ ಈ ದುರ್ವತನೆಗಳಿಂದ ಸರ್ಕಾರದ ಉದ್ಯಮ ಸ್ನೇಹಿ ಆಡಳಿತ ನೀತಿಗೆ ಧಕ್ಕೆ ಉಂಟಾಗಲು ಕಾರಣ ಕರ್ತರಾಗಿರುವುದು ಮತ್ತು M/s. Acebright (India) Pharma Pvt. Ltd, Bangalore-100 ಸಂಸ್ಥೆಯ ಟೆಸ್ಟ್ ಲೆಸೆನ್ಸ್ ನ್ನು ನಮೂನೆ-29ರಡಿ ಮಂಜೂರುಗೊಳಿಸುವ ಪ್ರಸ್ತಾವನೆಗಳನ್ನು ಪರಿಶೀಲಿಸಿ, ತಮ್ಮ ಶಿಫಾರಸಿನೊಂದಿಗೆ ಮೇಲಧಿಕಾರಿಗಳಿಗೆ ಸಲ್ಲಿಸಲು ಸುಮಾರು 03-ತಿಂಗಳು ಕಡತವನ್ನು ಪರಿಶೀಲಿಸದೆ, ವಿಳಂಬ ಮಾಡಿರುವ ಬಗ್ಗೆ ಸಂಸ್ಥೆಯ ಪ್ರತಿನಿಧಿಗಳು ದೂರು ನೀಡಿದ್ದು, ಈ ರೀತಿ ದೂರು ನೀಡಲು ಆಸ್ಪದ ಕಲ್ಪಿಸಿರುವ ಈ ಅಧಿಕಾರಿಯವರ ದುರ್ನಡತೆ ಮತ್ತು ಬೇಜವಾಬ್ದಾರಿತನದ ವರ್ತನೆ ಮರುಕಳಿಸದಂತೆ ಎಚ್ಚರಿಕೆ ನೀಡಿ ಸದರಿಯವರ ವಿರುದ್ಧ ಸಿ.ಸಿ.ಎ.

ನಿಯಮಗಳನ್ವಯ ಸೂಕ್ತ ಕ್ರಮ ಜರುಗಿಸುವಂತೆ ಕೋರಿರುತ್ತಾರೆ.

ಮೇಲಿನ ಪ್ರಸ್ತಾವನೆಗಳನ್ನು ಕೂಲಂಕುಶವಾಗಿ ಪರಿಶೀಲಿಸಲಾಗಿದೆ. ಶ್ರೀಮತಿ. ಗೀತಾಕುಮಾರಿ ದಾಸ್ ಇವರು ದಿನಾಂಕ: 31.07.2017 ರಿಂದ ಉಪ ಔಷಧ ನಿಯಂತ್ರಕರ ಹುದ್ದೆಗೆ ಬಡ್ತಿ ಹೊಂದಿ ಕೇಂದ್ರ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಆಡಳಿತ ನಿರ್ವಹಣೆಯಲ್ಲಿನ ಸರ್ಕಾರಿ ಕೆಲಸದ ಬಗ್ಗೆ ತೋರುತ್ತಿರುವ ನಿರ್ಲಕ್ಷತೆ, ಬೇಜವಾಬ್ದಾರಿ ಮನೋಭಾವನೆ ಹಾಗೂ ಕಡತಗಳ ನಿರ್ವಹಣೆಯಲ್ಲಿ ತೆಗೆದುಕೊಳ್ಳುವ ನಿರ್ಣಯದ ಸಾಮರ್ಥ್ಯದ ಕೊರತೆಯಿಂದಾಗಿ, ವಿವಿಧ ಔಷಧ ತಯಾರಿಕಾ ಕಂಪನಿಗಳ ಸಂಶೋಧನೆ, ತಯಾರಿಕೆ ಮತ್ತು ರಫ್ತು ಅನುಮತಿಗೆ ಬಾಕಿ ಇರುವ 23-ಕಡತಗಳು ಸುಮಾರು 01-ತಿಂಗಳಿನಿಂದ 03-ತಿಂಗಳವರೆಗೆ ತನ್ನ ಸುಪರ್ದಿಯಲ್ಲಿಟ್ಟುಕೊಂಡು ವಿಳಂಬ ನೀತಿಯನ್ನು ಅನುಸರಿಸುತ್ತಿರುವುದು ಮತ್ತು ಕಡತಗಳ ನಿರ್ವಹಣೆಯಲ್ಲಿ ಸರ್ಕಾರಿ ಕೆಲಸದಲ್ಲಿ ತೋರುತ್ತಿರುವ ದೋರಣೆ /ಕರ್ತವ್ಯಲೋಪ /ಬೇಜವಾಬ್ದಾರಿತನ ಹಾಗೂ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿನ ವರ್ತನೆಯಿಂದ ಸಾರ್ವಜನಿಕರ ಆರೋಪಕ್ಕೆ ಗುರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುವುದರ ಹಿನ್ನೆಲೆಯಲ್ಲಿ ಶ್ರೀಮತಿ. ಗೀತಾಕುಮಾರಿ ದಾಸ್, ಉಪ ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ, ಕೇಂದ್ರ ಕಛೇರಿ, ಬೆಂಗಳೂರು ಇವರ ಆಪಾದನೆ /ಆರೋಪಗಳ ಸತ್ಯಾಸತ್ಯತೆ ಅರಿಯಲು ಇಲಾಖಾ ವಿಚಾರಣೆಯನ್ನು ಕ.ನಾ.ಸೇ (ಸಿಸಿಎ) ನಿಯಮಾವಳಿ 1957ರ ನಿಯಮ 11ರಡಿ ಜರುಗಿಸುವುದು ಸೂಕ್ತವೆಂದು ಸರ್ಕಾರವು ನಿರ್ಧರಿಸಿ, ಕೂಡಲೇ ಸದರಿಯವರನ್ನು ಇಲಾಖಾ ವಿಚಾರಣೆ ಬಾಕಿಯಿರಿಸಿ, ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲು ಈ ಕೆಳಗಿನಂತೆ ಆದೇಶ ಹೊರಡಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಆಕುಕ 11 ಐಎಂಎಂ 2019, ಬೆಂಗಳೂರು, ದಿನಾಂಕ: 14.01.2019.

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ನಾಗರೀಕ ಸೇವಾ (ಸಿಸಿಎ) ನಿಯಮಾವಳಿ 1957ರ ನಿಯಮ 10(1)(ಡಿ) ರನ್ವಯ ಶ್ರೀಮತಿ ಗೀತಾಕುಮಾರಿ ದಾಸ್, ಉಪ ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ, ಕೇಂದ್ರ ಕಛೇರಿ, ಬೆಂಗಳೂರು ಇವರನ್ನು ಇಲಾಖಾ ವಿಚಾರಣೆ ಬಾಕಿಯಿರಿಸಿ, ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸರ್ಕಾರಿ ಸೇವೆಯಿಂದ ಅಮಾನತ್ತುಗೊಳಿಸಲಾಗಿದೆ.

ಮೇಲಿನ ಅಧಿಕಾರಿಗಳು ಪೂರ್ವಾನುಮತಿಯಿಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಹಾಗೂ ಅಮಾನತ್ತಿನ ಅವಧಿಯಲ್ಲಿ ನಿಯಮಾನುಸಾರ ಜೀವನಾಂಶ ಭತ್ಯೆ ಪಡೆಯಲು ಅರ್ಹರಿರುತ್ತಾರೆ.

PR- 19

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC- 50

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

(ಭಾವೈಪ & ಸಮನ್ವಯ)

ಕಂದಾಯ ಸಚಿವಾಲಯ

ವಿಷಯ :- ಬೆಂಗಳೂರು ದಕ್ಷಿಣ ತಾಲ್ಲೂಕು, ವಸಂತಪುರ ಗ್ರಾಮದ ಶ್ರೀ ವಸಂತವಲ್ಲಭರಾಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಮಾರಮ್ಮ ದೇವಾಲಯದ ಆಡಳಿತವನ್ನು ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯದ ವ್ಯಾಪ್ತಿಗೆ ಒಳಪಡಿಸುವ ಕುರಿತು.

ಓದಲಾಗಿದೆ :- ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ : ಸಿಬ್ಬಂದಿ 1 ಸಿಆರ್ 76/2018-19, ದಿನಾಂಕ : 23-11-2018.

ಪ್ರಸ್ತಾವನೆ:-

ಮೇಲೆ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಬೆಂಗಳೂರು ದಕ್ಷಿಣ ತಾಲ್ಲೂಕು, ವಸಂತಪುರ ಗ್ರಾಮದ ಶ್ರೀ ವಸಂತವಲ್ಲಭರಾಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಮಾರಮ್ಮ ದೇವಾಲಯದ ಆಡಳಿತವನ್ನು ಶ್ರೀ ವಸಂತ ವಲ್ಲಭರಾಯ ಸ್ವಾಮಿ ಮತ್ತು ಸಮೂಹ ದೇವಾಲಯದ ಆಡಳಿತ ವ್ಯಾಪ್ತಿಗೆ ಒಳಪಡಿಸುವಂತೆ ದಿನಾಂಕ:07-09-2018ರಂದು ನಡೆದ ವ್ಯವಸ್ಥಾಪನಾ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಗಿರುತ್ತದೆ. ಅದರಂತೆ ಪ್ರಸ್ತಾಪಿತ ದೇವಸ್ಥಾನವನ್ನು ಶ್ರೀ ವಸಂತವಲ್ಲಭರಾಯಸ್ವಾಮಿ ದೇವಾಲಯದ ಆಡಳಿತ ವ್ಯಾಪ್ತಿಗೆ ಒಳಪಡಿಸಿ, ಸದರಿ ದೇವಾಲಯದ ಸೇವಾರ್ಥ/ಹುಂಡಿ, ಸಿಬ್ಬಂದಿ ನಿರ್ವಹಣೆ ಮತ್ತು ಪೂಜಾ ಕೈಂಕರ್ಯಗಳ ನಿರ್ವಹಣೆಯನ್ನು ನಿರ್ವಹಿಸಲು ಶ್ರೀ ವಸಂತವಲ್ಲಭರಾಯ ಸ್ವಾಮಿ೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೧, ೨೦೧೯ ಭಾಗ ೧ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲು ಅಪರ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಶ್ರೀ ಮಾರಮ್ಮ ದೇವಾಲಯವು, ಶ್ರೀ ವಸಂತ ವಲ್ಲಭರಾಯ ಸ್ವಾಮಿ ದೇವಾಲಯದ ಆವರಣದ ಒಳಗೆ ಇರುವುದಾಗಿ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆಯ ಭೂ ಮಾಪಕರು ನಕ್ಷೆ ಸಹಿತ ವರದಿಯನ್ನು ಸಲ್ಲಿಸಿರುತ್ತಾರೆ.

ಅಪರ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರ ಪ್ರಸ್ತಾವನೆ ಹಾಗೂ ಭೂ ಮಾಪಕರು ನೀಡಿರುವ ನಕ್ಷೆಯ ಆಧಾರದ ಮೇಲೆ ಬೆಂಗಳೂರು ದಕ್ಷಿಣ ತಾಲ್ಲೂಕು, ವಸಂತಪುರ ಗ್ರಾಮದ ಶ್ರೀ ವಸಂತವಲ್ಲಭರಾಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಮಾರಮ್ಮ ದೇವಾಲಯವನ್ನು ಶ್ರೀ ವಸಂತವಲ್ಲಭರಾಯ ಸ್ವಾಮಿ ದೇವಾಲಯದ ಆಡಳಿತ ವ್ಯಾಪ್ತಿಗೆ ಒಳಪಡಿಸಿ ಸದರಿ ದೇವಾಲಯದ ಸೇವಾರ್ಥ/ ಹುಂಡಿ, ಸಿಬ್ಬಂದಿ ನಿರ್ವಹಣೆ ಮತ್ತು ಪೂಜಾ ಕೈಂಕರ್ಯಗಳ ನಿರ್ವಹಣೆಯನ್ನು ನಿರ್ವಹಿಸಲು ಶ್ರೀ ವಸಂತವಲ್ಲಭರಾಯ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ವ್ಯಾಪ್ತಿಗೆ ಒಳಪಡಿಸಿ ಆದೇಶ ಹೊರಡಿಸಲು ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರು ಕೋರಿರುತ್ತಾರೆ.

ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ:ಕಂಇ 102 ಮುಆಬಿ 2018, ಬೆಂಗಳೂರು; ದಿನಾಂಕ: 31 ನೇ ಡಿಸೆಂಬರ್, 2018.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಬೆಂಗಳೂರು ದಕ್ಷಿಣ ತಾಲ್ಲೂಕು, ವಸಂತಪುರ ಗ್ರಾಮದ ಶ್ರೀ ವಸಂತವಲ್ಲಭರಾಯ ಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀ ಮಾರಮ್ಮ ದೇವಾಲಯವನ್ನು ಶ್ರೀ ವಸಂತವಲ್ಲಭರಾಯ ಸ್ವಾಮಿ ದೇವಾಲಯದ ಆಡಳಿತ ವ್ಯಾಪ್ತಿಗೆ ಒಳಪಡಿಸಿ ಸದರಿ ದೇವಾಲಯದ ಸೇವಾರ್ಥ/ ಹುಂಡಿ, ಸಿಬ್ಬಂದಿ ನಿರ್ವಹಣೆ ಮತ್ತು ಪೂಜಾ ಕೈಂಕರ್ಯಗಳ ನಿರ್ವಹಣೆಯನ್ನು ನಿರ್ವಹಿಸಲು ಶ್ರೀ ವಸಂತವಲ್ಲಭರಾಯ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳ ವ್ಯಾಪ್ತಿಗೆ ಒಳಪಡಿಸಿ ಆದೇಶಿಸಿದೆ ಹಾಗೂ ದೇವಾಲಯದ ವ್ಯಾಪ್ತಿಗೆ ಮತ್ತು ಸಮೂಹ ದೇವಾಲಯಗಳಿಗೆ ಸೇರಿದ ಸಮಸ್ತ ಸ್ವತ್ತುಗಳ ಕುರಿತು ಪರಿಶೀಲಿಸಿ ಇಲಾಖಾ ವ್ಯಾಪ್ತಿಗೆ ಪಡೆದುಕೊಳ್ಳಲು ಕ್ರಮ ವಹಿಸುವಂತೆ ಆದೇಶಿಸಿದೆ.

PR- 20

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC- 25

ಎಂ. ತಿಪ್ಪೀರಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಕಂದಾಯ ಇಲಾಖೆ. (ಮುಜರಾಯಿ)

ಕಂದಾಯ ಸಚಿವಾಲಯ

ವಿಷಯ : ಚಿಕ್ಕಮಗಳೂರು ತಾಲ್ಲೂಕು, ಖಾಂಡ್ಯ ಹೋಬಳಿ, ದೇವದಾನ ಗ್ರಾಮದ ಸ.ನಂ. 279 ರಲ್ಲಿ 18-00 ಎಕರೆ ಜಮೀನನ್ನು ಶ್ರೀ ಆದಮಾರು ಮಠ ವಿದ್ಯಾಸಂಸ್ಥೆಗೆ ಗುತ್ತಿಗೆ ನೀಡಿರುವುದನ್ನು ಖಾಯಂ ಆಗಿ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ : 1) ಕಾರ್ಯದರ್ಶಿ, ಪೂರ್ಣಪ್ರಜ್ಞಾ ಎಜುಕೇಶನ್ ಸೆಂಟರ್, ಸಂಗಮೇಶ್ವರಪೇಟೆ, ಚಿಕ್ಕಮಗಳೂರು ಇವರ ದಿನಾಂಕ : 20-06-2013ರ ಪತ್ರ.

2) ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರ ಪತ್ರ ಸಂಖ್ಯೆ :

ಆರ್‌ಸಿ.117.ಎಲ್ಎನ್‌ಡಿ(2)2015, ದಿನಾಂಕ : 08-06-2017.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಪತ್ರದಲ್ಲಿ ಕಾರ್ಯದರ್ಶಿ, ಪೂರ್ಣಪ್ರಜ್ಞಾ ಎಜುಕೇಶನ್ ಸೆಂಟರ್, ಸಂಗಮೇಶ್ವರ ಪೇಟೆ ಚಿಕ್ಕಮಗಳೂರು ಇವರು ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ತಾಲ್ಲೂಕು, ಖಾಂಡ್ಯ ಹೋಬಳಿ, ದೇವದಾನ ಗ್ರಾಮದ ಸ.ನಂ. 279 ರಲ್ಲಿ 18-00 ಎಕರೆ ಜಮೀನನ್ನು ವೃತ್ತಿ ಶಿಕ್ಷಣ ತರಬೇತಿ ಚಟುವಟಿಕೆಗಳಿಗಾಗಿ ದಿನಾಂಕ : 26-12-1982 ರಂದು 30 ವರ್ಷಗಳ ಅವಧಿಗೆ ಗುತ್ತಿಗೆ ಮೇಲೆ ಮಂಜೂರು ಮಾಡಲಾಗಿರುವಂತೆ ನಿಬಂಧನೆಗಳನ್ನು ಪಾಲಿಸಿ, ಶಿಕ್ಷಣ ತರಬೇತಿ ಸಂಸ್ಥೆಯನ್ನು ಆರಂಭಿಸಿ, ಅದಕ್ಕೆ ಬೇಕಾದ ಕಟ್ಟಡಗಳು, ಆಟದ ಮೈದಾನಗಳು, ಸಿಬ್ಬಂದಿ ವಸತಿ ಗೃಹಗಳು, ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಸದರಿ ಗುತ್ತಿಗೆ ಅವಧಿಯು ಮುಗಿಯುವ ಮುನ್ನವೇ, ಗುತ್ತಿಗೆ ಅವಧಿಯನ್ನು ನವೀಕರಿಸಲು ಮನವಿ ಸಲ್ಲಿಸಿದ್ದು, ಜಿಲ್ಲಾಧಿಕಾರಿ, ಚಿಕ್ಕಮಗಳೂರು ಇವರ ಆದೇಶ ಸಂಖ್ಯೆ : ಎಂ.4.ಎಲ್ಎನ್‌ಡಿಸಿ.ಆರ್.42/2012-13, ದಿನಾಂಕ :

22-01-2013 ರಂತೆ ಮುಂದಿನ ಐದು ವರ್ಷಗಳ ಅವಧಿಗೆ ಗುತ್ತಿಗೆ ಅವಧಿಯು ನವೀಕರಣಗೊಂಡಿರುತ್ತದೆ. ಮಂಜೂರಾಗಿರುವ 18-00 ಎಕರೆ ಜಮೀನನ್ನು ಸಾರ್ವಜನಿಕರಿಗೆ ಉತ್ತಮ ಮಟ್ಟದ ವೃತ್ತಿ ಶಿಕ್ಷಣ ನೀಡುವುದಕ್ಕಾಗಿ ಮಾತ್ರ ಬಳಸಲಾಗುತ್ತಿದೆ. ಶಾಲಾವನ, ಅಂತರ್ಜಲ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಯನ್ನು ನಿರ್ವಹಿಸಲಾಗುತ್ತಿದೆ, ಐದು ವರ್ಷಗಳ ಗುತ್ತಿಗೆ ಅವಧಿಗೆ ನವೀಕರಣಗೊಂಡ ನಂತರ ಎಕರೆ ಒಂದಕ್ಕೆ `. 8,200/- ರಂತೆ ಒಟ್ಟು 18-00 ಎಕರೆಗೆ `.1,47,600/- ಗಳನ್ನು ಪಾವತಿಸಲಾಗಿದೆ. ಈ ಮೊತ್ತವನ್ನು ಪ್ರತಿ ವರ್ಷವೂ ಪಾವತಿಸಬೇಕಾಗಿರುವುದರಿಂದ ಅದರ ಹೊರೆಯನ್ನು ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿಗಳು ಪ್ರತಿ ವರ್ಷವೂ ಭರಿಸಬೇಕಾಗಿರುತ್ತದೆ. ಆದುದರಿಂದ, ಗುತ್ತಿಗೆ ಆಧಾರದ ಮೇಲೆ ನೀಡಿರುವ ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ತಾಲ್ಲೂಕು, ಖಾಂಡ್ಯ ಹೋಬಳಿ, ದೇವದಾನ ಗ್ರಾಮದ ಸ.ನಂ. 279 ರಲ್ಲಿ 18-00 ಎಕರೆ ಜಮೀನನ್ನು ಆದಮಾರು ಮಠ ಶಿಕ್ಷಣ ಸಂಸ್ಥೆ, ಉಡುಪಿ, ಸಂಗಮೇಶ್ವರ ಪೇಟೆ ಇವರಿಗೆ ಖಾಯಂ ಆಗಿ ಮಂಜೂರು ಮಾಡುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರು ಚಿಕ್ಕಮಗಳೂರು ತಾಲ್ಲೂಕು, ಖಾಂಡ್ಯ ಹೋಬಳಿ, ದೇವದಾನ ಗ್ರಾಮದ ಸ.ನಂ. 279 ರಲ್ಲಿ 18-00 ಎಕರೆ ಜಮೀನನ್ನು ಜಿಲ್ಲಾದಿಕಾರಿಗಳ ಕಛೇರಿಯ ಆದೇಶ ಸಂಖ್ಯೆ : ಎಂ4 ಎಲ್ಎನ್‌ಡಿ.ಸಿಆರ್.26/82-83, ದಿನಾಂಕ : 26-12-1982 ರನ್ವಯ ಶ್ರೀ ಆದಮಾರು ಮಠ ಶಿಕ್ಷಣ ಸಂಸ್ಥೆ, ಉಡುಪಿ ಇವರಿಗೆ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ ಸ್ಥಾಪನೆಗಾಗಿ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಮಂಜೂರು ಮಾಡಲಾಗಿರುತ್ತದೆ. ತದನಂತರ ಜಿಲ್ಲಾಧಿಕಾರಿಗಳ ಕಛೇರಿಯ ಆದೇಶ ಸಂಖ್ಯೆ : ಎಂ4.ಎಲ್ಎನ್‌ಡಿ.ಸಿಆರ್.42/12-13, ದಿನಾಂಕ : 22-01-2013 ರಲ್ಲಿ ದಿನಾಂಕ : 26-12-2012 ರಿಂದ ಮುಂದಿನ ಐದು ವರ್ಷಗಳ ಅವಧಿಗೆ ಗುತ್ತಿಗೆಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೧, ೨೦೧೯ ೯೫ ಅವಧಿಯನ್ನು ವಿಸ್ತರಿಸಲಾಗಿದೆ. ಗುತ್ತಿಗೆ ನೀಡಲಾಗಿರುವ ಜಮೀನಿನಲ್ಲಿ ಸದರಿ ವಿದ್ಯಾಸಂಸ್ಥೆಯ ವತಿಯಿಂದ ವೃತ್ತಿ ಶಿಕ್ಷಣ ತರಬೇತಿ ಹಾಗೂ ಶಿಕ್ಷಣ ಚಟುವಟಿಕೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ, ಶಾಲಾ ಕೊಠಡಿಗಳು, ಕ್ರೀಡಾ ಮೈದಾನ ಇತ್ಯಾದಿ ಪೂರಕ ಕಟ್ಟಡಗಳನ್ನು ನಿರ್ಮಾಣ ಮಾಡಿರುತ್ತಾರೆ. ಸದರಿ ಸಂಸ್ಥೆಯು ಶಾಲೆಗಳನ್ನು ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾನ್ಯತೆ ಪಡೆದಿರುತ್ತದೆ. ಸಂಸ್ಥೆಯು ಮಾರ್ಚ್ 2011 ರಿಂದ ಮಾರ್ಚ್ 2015 ರವರೆಗಿನ ಬ್ಯಾಲೆನ್ಸ್ ಶೀಟ್‌ಗಳನ್ನು ಸಲ್ಲಿಸಿರುತ್ತದೆ. ಉದ್ದೇಶಿತ ಜಮೀನು ಗೋಮಾಳ ಜಮೀನಾಗಿದ್ದು, ಸದರಿ ಗ್ರಾಮದಲ್ಲಿ 2002 ಜಾನುವಾರುಗಳಿದ್ದು, ಒಟ್ಟು 3503.24 ಎಕರೆ ಗೋಮಾಳ ಜಮೀನಿದ್ದು, ಜಾನುವಾರುಗಳ ಸಂಖ್ಯೆಗಳಿಗೆ ಅನುಗುಣವಾಗಿ ಅವಶ್ಯಕತೆಗಿಂತ ಹೆಚ್ಚಿನ ಪ್ರಮಾಣದ ಗೋಮಾಳ ಲಭ್ಯವಿರುತ್ತದೆ. ಉಪನೋಂದಣಾಧಿಕಾರಿಯವರಿಂದ ಪಡೆದ ಅಂಕಿ ಅಂಶಗಳಂತೆ ಸದರಿ ಪ್ರದೇಶದ ಖುಷ್ಕಿ ಜಮೀನಿನ ಸರಾಸರಿ ಮಾರುಕಟ್ಟೆ ಬೆಲೆಯು ಎಕರೆ ಒಂದಕ್ಕೆ `.1,38,000/-. ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 107ರ ಪ್ರಕಾರ ಭೂ ಪರಿವರ್ತನಾ ಶುಲ್ಕ ಎಕರೆ ಒಂದಕ್ಕೆ `.21,780/- ಸೇರಿ ಎಕರೆ ಒಂದಕ್ಕೆ `.1,59,780/- ಆಗಿರುತ್ತದೆ, ಪ್ರಸ್ತಾಪಿತ ಪ್ರದೇಶವು, ನಗರ ಸಭೆ ವ್ಯಾಪ್ತಿಯಿಂದ 60 ಕಿ.ಮೀ. ದೂರದಲ್ಲಿರುವ ಗ್ರಾಮೀಣ ಪ್ರದೇಶವಾಗಿರುವುದರಿಂದ, ಗುತ್ತಿಗೆ ನೀಡಿರುವ ಜಮೀನನ್ನು ಮಂಜೂರಾತಿ ಮಾಡಬಹುದಾಗಿದ್ದು, ಕರ್ನಾಟಕ ಭೂ ಮಂಜೂರಾತಿ (ತಿದ್ದುಪಡಿ) ನಿಯಮಗಳು, 2015ರ ನಿಯಮ 22ಎ(2) ಅನ್ವಯಿಸುವುದಿಲ್ಲವೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ ಎಂದು ವರದಿ ಮಾಡುತ್ತಾ, ಚಿಕ್ಕಮಗಳೂರು ತಾಲ್ಲೂಕು, ಖಾಂಡ್ಯ ಹೋಬಳಿ, ದೇವದಾನ ಗ್ರಾಮದ ಸ.ನಂ. 279ರಲ್ಲಿ 18-00 ಎಕರೆ ಪ್ರದೇಶವನ್ನು ಶ್ರೀ ಆದಮಾರು ಮಠ ವಿದ್ಯಾಸಂಸ್ಥೆ (ರಿ), ಉಡುಪಿ, ಸಂಗಮೇಶ್ವರಪೇಟೆ ಇವರಿಗೆ ಗುತ್ತಿಗೆ ನೀಡಿರುವುದನ್ನು ಮಂಜೂರು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 12 ಎಲ್‌ಜಿಯು 2014, ಬೆಂಗಳೂರು, ದಿನಾಂಕ : 31-12-2018.

ಚಿಕ್ಕಮಗಳೂರು ತಾಲ್ಲೂಕು, ಖಾಂಡ್ಯ ಹೋಬಳಿ, ದೇವದಾನ ಗ್ರಾಮದ ಸ.ನಂ. 279 ರಲ್ಲಿ 18-00 ಎಕರೆ ಜಮೀನನ್ನು ಶ್ರೀ ಆದಮಾರು ಮಠ ವಿದ್ಯಾಸಂಸ್ಥೆಗೆ ಈಗಾಗಲೇ ಗುತ್ತಿಗೆ ನೀಡಿರುವುದನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22-ಎ(1)(i)(2) ರನ್ವಯ ಪ್ರಚಲಿತ ಮಾರುಕಟ್ಟೆ ದರ ಮತ್ತು ನಿಯಮಾನುಸಾರ ಇತರೆ ಶಾಸನಬದ್ಧ ಶುಲ್ಕವನ್ನು ವಿಧಿಸಿ, ಈ ಕೆಳಕಂಡ ಷರತ್ತುಗೊಳಪಟ್ಟು ಖಾಯಂ ಆಗಿ ಮಂಜೂರು ಮಾಡಿದೆ.

ಷರತ್ತುಗಳು :-

1. ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿಯೇ ಉಪಯೋಗಿಸತಕ್ಕದ್ದು. 2. ಮಂಜೂರಾತಿ ಆದೇಶದಲ್ಲಿ ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. 3. ಮಂಜೂರಾದ ಜಮೀನನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 4. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು. 5. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡತಕ್ಕದ್ದಲ್ಲ.

6. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು. 7. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

8. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶವನ್ನು ನಿಯಮಾನುಸಾರ ರದ್ದುಗೊಳಿಸಲಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರ ವಶಕ್ಕೆ ಪಡೆಯಲಾಗುವುದು.

9. ಜಿಲ್ಲಾಧಿಕಾರಿಗಳು, ಮಂಜೂರಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನನು ವಿಧಿಸಬಹುದಾಗಿದೆ.

PR – 13

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25

ವಿಮಲಮ್ಮ ಸಿ.

ಪೀಠಾಧಿಕಾರಿ,

ಕಂದಾಯ ಇಲಾಖೆ. (ಭೂ ಮಂಜೂರಾತಿ-2)

ಕಂದಾಯ ಸಚಿವಾಲಯ

ವಿಷಯ : ಉತ್ತರ ಕನ್ನಡ ಜಿಲ್ಲೆ, ಕಾರವಾರ ತಾಲ್ಲೂಕಿನ ಚಿತ್ತಾಕುಲಾ ಗ್ರಾಮದ ಸ.ನಂ. 1144ಅ ಕ್ಷೇತ್ರ 11-34-0 ಗೋಮಾಳ ಜಮೀನನ್ನು ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬೆಂಗಳೂರು ಇವರಿಗೆ ಗುತ್ತಿಗೆ ಆಧಾರದ ಮೇಲೆ 30 ವರ್ಷಗಳ ಅವಧಿಗೆ ನೀಡಲಾದ ಆದೇಶದಲ್ಲಿನ ಷರತ್ತುಗಳ ಪೈಕಿ ಮೂರು ಷರತ್ತುಗಳನ್ನು ಕೈ ಬಿಡುವ ಬಗ್ಗೆ.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 26 ಎಲ್‌ಜಿ ಎನ್ 2018, ದಿನಾಂಕ : 14-03-2018.

2) ಅಧ್ಯಕ್ಷರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಇವರ ಪತ್ರ ಸಂಖ್ಯೆ : 6/ಕೆಎಸ್‌ಸಿಎ/ಸಿಇಒ/ ಕಾರವಾರ/2018, ದಿನಾಂಕ : 20-06-2018.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ದಿನಾಂಕ : 14-03-2018ರ ಸರ್ಕಾರಿ ಆದೇಶದಲ್ಲಿ ಉತ್ತರ ಕನ್ನಡ ಜಿಲ್ಲೆ, ಕಾರವಾರ ತಾಲ್ಲೂಕು, ಚಿತ್ತಾಕುಲಾ ಗ್ರಾಮದ ಸ.ನಂ. 1144ಅ ಕ್ಷೇತ್ರ 11.34 ಎಕರೆ ಗೋಮಾಳ ಜಮೀನನ್ನು ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಕೆಲವೊಂದು ಷರತ್ತಿಗೊಳಪಟ್ಟು ಕ್ರಿಕೆಟ್ ಕ್ರೀಡಾಂಗಣ ನಿರ್ಮಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬೆಂಗಳೂರು ಇವರಿಗೆ 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿರುತ್ತದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜನವರಿ ೩೧, ೨೦೧೯ ಭಾಗ ೧

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ : 27-03-2018 ಮತ್ತು 20-06-2018ರ ಪತ್ರದಲ್ಲಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬೆಂಗಳೂರು ಇವರು ಉತ್ತರ ಕನ್ನಡ ಜಿಲ್ಲೆ, ಕಾರವಾರ ತಾಲ್ಲೂಕಿನ ಚಿತ್ತಾಕುಲಾ ಗ್ರಾಮದ ಸ.ನಂ. 1144ಅ ಕ್ಷೇತ್ರ 11-34 ಎಕರೆ ಗೋಮಾಳ ಜಮೀನನ್ನು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬೆಂಗಳೂರು ಇವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿರುವ ಮೇಲೆ ಕ್ರ.ಸಂ.(1)ರಲ್ಲಿ ಓದಲಾದ ಆದೇಶ ದಿನಾಂಕ : 14-03-2018ರಲ್ಲಿ ವಿಧಿಸಿರುವ ಷರತ್ತುಗಳ ಪೈಕಿ ಮೊದಲ ಮೂರು ಷರತ್ತುಗಳಾದ 1) ಸ್ಥಳೀಯ ಕ್ರೀಡಾಪಟುಗಳಿಗೆ ರಿಯಾಯಿತಿ ದರದಲ್ಲಿ ಕ್ರೀಡಾಂಗಣ ಬಳಸಿಕೊಳ್ಳಲು ನೀಡುವುದು 2) ಸರ್ಕಾರಿ ಕ್ರೀಡಾ ವಸತಿ ನಿಲಯಗಳ ಕ್ರೀಡಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾಂಗಣ ಒದಗಿಸುವುದು 3) ಸಮಿತಿಯಲ್ಲಿ ಜಿಲ್ಲಾಧಿಕಾರಿಯವರನ್ನು ಅಧ್ಯಕ್ಷರನ್ನಾಗಿ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಲ್ಲಾ ಪಂಚಾಯತ್, ಉತ್ತರ ಕನ್ನಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉತ್ತರ ಕನ್ನಡ, ಕಾರವಾರ ಇವರನ್ನು ಸದಸ್ಯರನ್ನಾಗಿ ನೇಮಿಸುವುದು ಸೇರಿದೆ. ಈ ಬಗ್ಗೆ ಲೀಸ್ ಡೀಡ್‌ನಲ್ಲಿ ಅಳವಡಿಸಿಕೊಳ್ಳಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೆಮೊರಾಂಡಂ ಮತ್ತು ನಿಯಮಗಳಲ್ಲಿ ಅವಕಾಶವಿಲ್ಲದಿರುವುದರಿಂದ ಸದರಿ ಮೂರು ಷರತ್ತುಗಳನ್ನು ಸರ್ಕಾರಿ ಆದೇಶದಿಂದ ಕೈಬಿಡುವಂತೆ ಕೋರಿರುತ್ತಾರೆ.

ಅಧ್ಯಕ್ಷರು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬೆಂಗಳೂರು ಇವರು ಪತ್ರದಲ್ಲಿ ಕೋರಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದೆ. ಹಾಗೂ ಈ ಹಿಂದೆ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಹೊದ್ದೂರಿನಲ್ಲಿ ದಿನಾಂಕ : 31-12-2015ರ ಸರ್ಕಾರದ ಆದೇಶದಲ್ಲಿ ಕ್ರಿಕೆಟ್ ಕ್ರೀಡಾಂಗಣಕ್ಕಾಗಿ ಸರ್ಕಾರಿ ಜಮೀನು ಗುತ್ತಿಗೆ ನೀಡಲಾಗಿದ್ದು, ಸದರಿ ಆದೇಶದಲ್ಲಿ ಕೈಬಿಡಲು ಕೋರಲಾಗಿರುವ ಷರತ್ತುಗಳನ್ನು ವಿಧಿಸಿಲ್ಲವಾದ್ದರಿಂದ ಸದರಿ ಕೋರಿಕೆಯನ್ನು ಪರಿಶೀಲಿಸಿ ಸರ್ಕಾರದ ಹಂತದಲ್ಲಿ ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 15 ಎಲ್‌ಜಿಎನ್ 2018, ಬೆಂಗಳೂರು, ದಿನಾಂಕ : 28-12-2018.

ಸ.ನಂ. 1144ಅ ಕ್ಷೇತ್ರ 11-34-0 ಎಕರೆ ಗೋಮಾಳ ಜಮೀನನ್ನು ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕಾಗಿ 30 ವರ್ಷಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಬೆಂಗಳೂರು ಇವರಿಗೆ ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 26 ಎಲ್‌ಜಿಎನ್ 2018, ದಿನಾಂಕ : 14-03-2018ರಲ್ಲಿ ಗುತ್ತಿಗೆ ಆಧಾರದ ಮೇಲೆ ನೀಡಲು ವಿಧಿಸಿರುವ 12 ಷರತ್ತುಗಳ ಪೈಕಿ ಮೊದಲ ಮೂರು ಷರತ್ತುಗಳಾದ 1) ಸ್ಥಳೀಯ ಕ್ರೀಡಾಪಟುಗಳಿಗೆ ರಿಯಾಯಿತಿ ದರದಲ್ಲಿ ಕ್ರೀಡಾಂಗಣ ಬಳಸಿಕೊಳ್ಳಲು ಅನುಮತಿ ನೀಡುವುದು 2) ಸರ್ಕಾರಿ ಕ್ರೀಡಾ ವಸತಿ ನಿಲಯಗಳ ಕ್ರೀಡಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡಾಂಗಣ ಒದಗಿಸುವುದು 3) ಸಮಿತಿಯಲ್ಲಿ ಜಿಲ್ಲಾಧಿಕಾರಿಯವರನ್ನು ಅಧ್ಯಕ್ಷರನ್ನಾಗಿ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪಂಚಾಯತ್, ಉತ್ತರ ಕನ್ನಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಉತ್ತರ ಕನ್ನಡ, ಕಾರವಾರ ಮತ್ತು ಮಾನ್ಯ ಶಾಸಕರು, ಕಾರವಾರ-ಅಂಕೋಲ ವಿಧಾನಸಭಾ ಕ್ಷೇತ್ರ ಇವರುಗಳನ್ನು ಸದಸ್ಯರನ್ನಾಗಿ ನೇಮಿಸುವುದು, ಇವುಗಳನ್ನು ತೆಗೆದುಹಾಕಿ ಸರ್ಕಾರವು ಆದೇಶಿಸಿದೆ.

ಉಳಿದಂತೆ ಸರ್ಕಾರದ ಆದೇಶ ಸಂಖ್ಯೆ : ಆರ್‌ಡಿ 26 ಎಲ್‌ಜಿಎನ್ 2018, ದಿನಾಂಕ : 14-03-2018ರ ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

PR – 14

SC - 25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ವಿಮಲಮ್ಮ ಸಿ. ಪೀಠಾಧಿಕಾರಿ, ಕಂದಾಯ ಇಲಾಖೆ. (ಭೂ ಮಂಜೂರಾತಿ-2) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 31 January 2019. Indian Gazettes, https://egazette.servantsofknowledge.in/details/in.gazette.karnataka_new.2019-01-31.Part-1/. Archive identifier in.gazette.karnataka_new.2019-01-31.Part-1.