Servants of Knowledge
Karnataka Gazette · Government of Karnataka

Karnataka Gazette, Part Part-1, 07 February 2019

Published 07 February 2019

Part
Part-1
Identifier
in.gazette.karnataka_new.2019-02-07.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಫೆಬ್ರವರಿ ೭, ೨೦೧೯ (ಮಾಘ ೧೮, ಶಕ ವರ್ಷ ೧೯೪೦)

Bengaluru, Thursday, February 7, 2019 (Magha 18, Shaka Varsha 1940)

ಸಂಪುಟ ೧೫೪

Volume 154

ಸಂಚಿಕೆ ೬

Issue 6

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ

ವಿಷಯ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಸಂಬಂಧಿಸಿದ ಕಡತ ಶೀರ್ಷಿಕೆಯ ಪ್ರಾರಂಭದ

ಶಿರೋನಾಮೆಯನ್ನು ಬದಲಾಯಿಸುವ ಬಗ್ಗೆ.

ಓದಲಾಗಿದೆ: 1) ಅಧಿಸೂಚನೆ ಸಂಖ್ಯೆ : ಡಿಸಿಎ 07 ಎಆರ್‌ಬಿ 2013, ಬೆಂಗಳೂರು, ದಿನಾಂಕ: 23-07-2013.

ಪ್ರಸ್ತಾವನೆ:

ಮೇಲೆ ಓದಲಾದ ಅಧಿಸೂಚನೆ ದಿನಾಂಕ 23.07.013 ರಲ್ಲಿ "ಯುವಜನ ಸೇವಾ ಇಲಾಖೆೆ" ಯನ್ನು 01 ನೇ ಏಪ್ರಿಲ್ 2013 ರಿಂದ ಪೂರ್ವಾನ್ವಯವಾಗುವಂತೆ "ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ" ಎಂದು ಪದನಾಮೀಕರಿಸಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಪ್ರಸ್ತುತ ಉಪಯೋಗಿಸಲ್ಪಡುತ್ತಿರುವ ಕಡತ ಶೀರ್ಷಿಕೆಯ ಪ್ರಾರಂಭದ ಶಿರೋನಾಮೆ ಕನ್ನಡ ಭಾಷೆಯಲ್ಲಿ 'ಯುಸೇಇ" (ಯುವಜನ ಸೇವಾ ಇಲಾಖೆ) ಹಾಗೂ ಆಂಗ್ಲ ಭಾಷೆಯಲ್ಲಿ 'ITY' (information Tourism and Youth Services) ಎಂದಿದ್ದು, ಇದು ಇಲಾಖೆಯನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸುವುದಿಲ್ಲ. ಆದುದರಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯನ್ನು ಸ್ಪಷ್ಟವಾಗಿ ಪ್ರತಿನಿಧಿಸುವಂತೆ ಕಡತ ಶೀರ್ಷಿಕೆಯ ಪ್ರಾರಂಭಿಕ ಶಿರೋನಾಮೆಯನ್ನು ಕನ್ನಡ ಭಾಷೆಯಲ್ಲಿ "ಯುಸಕ್ರೀ" ಎಂದು (ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ) ಹಾಗೂ ಆಂಗ್ಲ ಭಾಷೆಯಲ್ಲಿ "YSD (Youth Empowerment and Sports Department ) ಎಂದು ಬದಲಾಯಿಸಲು ನಿರ್ಣಯಿಸಲಾಗಿದೆ.

ಅದರಂತೆ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಯುಸೇಇ 108 ಸಮನ 2018, ಬೆಂಗಳೂರು, ದಿನಾಂಕ: 16.01.2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಕಡತ ಶೀರ್ಷಿಕೆಯ ಪ್ರಾರಂಭದ ಶಿರೋನಾಮೆಯನ್ನು ದಿನಾಂಕ 01.01.2019 ರಿಂದ ಪೂರ್ವಾನ್ವಯವಾಗಿ ಕನ್ನಡ ಭಾಷೆಯಲ್ಲಿ "ಯುಸಕ್ರೀ" ಎಂದು (ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ) ಹಾಗೂ ಆಂಗ್ಲ ಭಾಷೆಯಲ್ಲಿ "YSD (Youth Empowerment and Sports Department ) ಎಂದು ಬದಲಾವಣೆ ಮಾಡಿ ಆದೇಶಿಸಿದೆ.

ಈ ಆದೇಶವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಆ.ಸು-ತರಬೇತಿ) ಇಲಾಖೆಯ ಟಿಪ್ಪಣಿ ಸಂಖ್ಯೆ: ಸಿಆಸುಇ 208 ಇಆಸು 2018, ದಿನಾಂಕ:

14.12.2018 ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಿದೆ.

PR.28

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಸ್.ಪಿ. ಪಾಟೀಲ

ಸರ್ಕಾರದ ಉಪ ಕಾರ್ಯದರ್ಶಿ,

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ.

(೯೭)೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ಭಾಗ ೧

ಸಹಕಾರ ಸಚಿವಾಲಯ

ವಿಷಯ:

ಬೆಂಗಳೂರು ಸೌತ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಕುಮಾರಸ್ವಾಮಿ ಲೇಔಟ್, ವಿಠ್ಠಲ್‌ನಗರ, ಬೆಂಗಳೂರು-78 ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಕುರಿತು.

ಓದಲಾಗಿದೆ:

1) ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, 3ನೇ ವಲಯ, ಬೆಂಗಳೂರು ರವರ ಪತ್ರ ಸಂಖ್ಯೆ: ಡಿಆರ್‌ಬಿ/03/ಸಂನೋ/24/2018-19, ದಿನಾಂಕ:14.08.2018.

2) ಸರ್ಕಾರದ ನೋಟೀಸ್ ಸಇ 117 ಸಸಂನೋ 2018, ದಿ:29.10.2018.

3) ಶ್ರೀ.ಎಸ್.ಎಲ್.ಎನ್.ಸಿಂಹ, ಕಾರ್ಯದರ್ಶಿಗಳು, ಬೆಂಗಳೂರು ಸೌತ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ರವರ ಲಿಖಿತ ಉತ್ತರ, ದಿನಾಂಕ: 13.11.2018.

ಪ್ರಸ್ತಾವನೆ:

ಮೇಲೆ ಕ್ರಮ ಸಂಖ್ಯೆ(1)ರಲ್ಲಿ ಓದಲಾದ ಪತ್ರದಲ್ಲಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, 3ನೇ ವಲಯ, ಬೆಂಗಳೂರು ಇವರು ಬೆಂಗಳೂರು ಸೌತ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಬೆಂಗಳೂರು-78. ಈ ಕ್ಲಬ್‌ನ ಅಧ್ಯಕ್ಷರಾದ ಶ್ರೀ.ಹರೀಶ್.ಎನ್ ಹಾಗೂ ಕಾರ್ಯದರ್ಶಿಯವರಾದ ಶ್ರೀ.ಎಸ್.ಎಲ್.ಎನ್ ಸಿಂಹ ಇವರ ಮನವಿಯಲ್ಲಿ, ಮಾಜಿ ಅಧ್ಯಕ್ಷರಾದ ಶ್ರೀ.ನರಸಿಂಹಯ್ಯ ಇವರು ಕ್ಲಬ್‌ನ ಪ್ರಭಾರವನ್ನು ವಹಿಸಿಕೊಡದೇ ಅವ್ಯವಹಾರ ನಡೆಸುತ್ತಿರುವುದಾಗಿ ತಿಳಿಸಿ, ನಿರ್ದೇಶಕ ಮಂಡಳಿಯ 12 ಜನ ಸದಸ್ಯರ ರಾಜೀನಾಮೆಯನ್ನು ಸಲ್ಲಿಸಿರುವುದರಿಂದ ಕೂಡಲೇ ಕ್ಲಬ್‌ಗೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಕೋರಿರುತ್ತಾರೆ. ಸದರಿ ದೂರು ಅರ್ಜಿಯ ಕುರಿತು ಸಂಘದ ಮಾಜಿ ಅಧ್ಯಕ್ಷರಿಗೆ, ಹಾಲಿ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಯವರಿಗೆ ನೋಟಿಸ್ ನೀಡಿ ಲಿಖಿತ ಸಮಾಜಾಯಿಷಿಯನ್ನು ಸಲ್ಲಿಸುವಂತೆ ದಿನಾಂಕ:23.07.2018 ರಲ್ಲಿ ತಿಳಿಸಲಾಗಿದ್ದು, ಮಾಜಿ ಅಧ್ಯಕ್ಷರು ಖುದ್ದಾಗಿ ಹಾಜರಾಗಿ 12 ಜನ ನಿರ್ದೇಶಕರು ಸಲ್ಲಿಸಿರುವ ರಾಜೀನಾಮೆಗಳನ್ನು ಒಪ್ಪಿರುವುದಾಗಿ ಈ ಬಗ್ಗೆ ತಕರಾರು ಇರುವುದಿಲ್ಲವೆಂದು ಹೇಳಿಕೆ ನೀಡಿರುತ್ತಾರೆ.

ಈ ಬಗ್ಗೆ ಪರಿಶೀಲಿಸಲಾಗಿ ಬೆಂಗಳೂರು ಸೌತ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್‌ನ ಕಾರ್ಯಕಾರಿ ಸಮಿತಿಯಲ್ಲಿ ಕೋರಂ ಕೊರತೆಯಿರುವುದು ದಾಖಲಾತಿಗಳಿಂದ ಸಾಬೀತಾಗಿರುವುದರಿಂದ ಕ್ಲಬ್‌ಗೆ ಆಡಳಿತಾಧಿಕಾರಿ ನೇಮಿಸುವಂತೆ ಸಹಕಾರ ಸಂಘಗಳ ಉಪ ನಿಬಂಧಕರು, 3ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರು ಸರ್ಕಾರವನ್ನು ಕೋರಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ(2)ರಲ್ಲಿ ಓದಲಾದ ನೋಟಿಸಿನಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರು, 3ನೇ ವಲಯ ಬೆಂಗಳೂರು ಇವರ ಶಿಫಾರಸ್ಸನ್ನು ಪರಿಗಣಿಸಿ ಬೆಂಗಳೂರು ಸೌತ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಬೆಂಗಳೂರು-78 ಈ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ ನೇಮಿಸಬಾರದೆಂಬ ಬಗ್ಗೆ, ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ, ಸಂಘದ ಅಧ್ಯಕ್ಷರು/ಕಾರ್ಯದರ್ಶಿ ಇವರಿಗೆ ತಿಳಿಸಲಾಗಿತ್ತು.

ಮೇಲೆ ಕ್ರಮ ಸಂಖ್ಯೆ(3)ರಲ್ಲಿ ಓದಲಾದ ಕಾರ್ಯದರ್ಶಿ, ಬೆಂಗಳೂರು ಸೌತ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಬೆಂಗಳೂರು-78, ಇವರ ಪತ್ರದಲ್ಲಿ ಮಾಜಿ ಅಧ್ಯಕ್ಷರಾದ ಶ್ರೀ.ಎಂ.ನರಸಿಂಹಯ್ಯ ಇವರ ಕ್ಲಬ್‌ನ ನಿಯಮವನ್ನು ಉಲ್ಲಂಘಿಸಿ ಅವ್ಯವಹಾರ ಮಾಡುತ್ತಿದ್ದರಿಂದ ಸದರಿಯವರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಿ ಶ್ರೀ.ಹರೀಶ್.ಎನ್ ಎಂಬುವವರನ್ನು ಕ್ಲಬ್‌ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು ಸದರಿಯವರಿಗೆ ಇದುವರೆಗೂ ಪ್ರಭಾರ ವಹಿಸಿಕೊಟ್ಟಿರುವುದಿಲ್ಲವೆಂದು, ಆದ್ದರಿಂದ ಕೂಡಲೇ ಕ್ಲಬ್‌ಗೆ ಆಡಳಿತಾಧಿಕಾರಿ ನೇಮಿಸಬೇಕೆಂದು ಕೋರಿರುತ್ತಾರೆ.

ಮೇಲ್ಕಂಡ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಬೆಂಗಳೂರು ಸೌತ್ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಬೆಂಗಳೂರು-78, ಈ ಸಂಘದ ಕಾರ್ಯಕಾರಿ ಸಮಿತಿಯ 12 ಜನ ಸದಸ್ಯರು ರಾಜೀನಾಮೆ ನೀಡಿದ್ದು, ಕಾರ್ಯಕಾರಿ ಸಮಿತಿಯಲ್ಲಿ ಕೋರಂ ಕೊರತೆಯಿರುವುದರಿಂದ ಹಾಗೂ ಕ್ಲಬ್‌ನ ಮಾಜಿ ಅಧ್ಯಕ್ಷರು ನಿಯಮಗಳಿಗೆ ವಿರುದ್ಧವಾಗಿ ಅವ್ಯವಹಾರವನ್ನು ನಡೆಸುತ್ತಿರುವುದರಿಂದ ಸದರಿ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

-: ಆದೇಶ :-

ಸರ್ಕಾರದ ಆದೇಶ ಸಂಖ್ಯೆ: ಸಇ 117 ಸಸಂನೋ 2018, ಬೆಂಗಳೂರು, ದಿನಾಂಕ: 14.01.2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960ರ ಕಲಂ 27(ಎ) ರಲ್ಲಿ ಪ್ರದತ್ತವಾದ ಬೆಂಗಳೂರು-78 ಈ ಸಂಘಕ್ಕೆ ಸಹಕಾರ ಸಂಘಗಳ ಉಪ ನಿಬಂಧಕರು, 3ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರನ್ನು, ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.

ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಸಂಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

PR.21

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC.20

ಆರ್. ಸೆಂತಾಮರೈ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ೯೯

ಸಹಕಾರ ಸಚಿವಾಲಯ

ವಿಷಯ: ಭಾರತಿ ವಿದ್ಯಾವರ್ಧಕ ಸಂಘ, ಚಿಕ್ಕೋಡಿ, ಬೆಳಗಾವಿ, ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಬಗ್ಗೆ.

ಓದಲಾಗಿದೆ:

1) ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಪತ್ರ ಸಂಖ್ಯೆ: ಅನಿ

(ಬ&ಮ)/ಸಂಸಂ/1/ 173/2017-18, ದಿನಾಂಕ:20-12-2017.

2) ಸರ್ಕಾರದ ನೋಟೀಸ್ ಸಂಖ್ಯೆ: ಸಇ 300 ಸಸಂನೋ 2017, ದಿನಾಂಕ: 16-01-2018.

3) ಶ್ರೀ ಎಸ್.ಎಂ. ಪಾಮದಿನಿ, ಅಧ್ಯಕ್ಷರು, ಭಾರತಿ ವಿದ್ಯಾವರ್ಧಕ ಸಂಘ, ಬೆಳಗಾವಿ ಇವರ ಪತ್ರ ಸಂಖ್ಯೆ:ಭಾ.ವಿ.ಸಂ./ಆ.ನೇ.ಆ.ಕು/ 01/2017-18, ದಿನಾಂಕ:31-01-2018.

ಪ್ರಸ್ತಾವನೆ:

ಮೇಲೆ ಕ್ರಮ ಸಂಖ್ಯೆ: (01)ರಲ್ಲಿ ಓದಲಾದ ಪತ್ರದಲ್ಲಿ, ಭಾರತಿ ವಿದ್ಯಾವರ್ಧಕ ಸಂಘ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ, ಈ ಸಂಘದ ವಿರುದ್ಧದ ಆರೋಪಗಳ ಬಗ್ಗೆ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ಕಲಂ 25ರಡಿ ಜರುಗಿದ ಶಾಸನಬದ್ಧ ವಿಚಾರಣೆಯಲ್ಲಿ, ಸಕಾರಣವಿಲ್ಲದೇ 17 ಪರಿಶಿಷ್ಠ ಜಾತಿ ಸದಸ್ಯರುಗಳನ್ನು ತೆಗೆದು ಹಾಕಿರುವುದು, ಸಂಸ್ಥೆಯ ಸದಸ್ಯರಾದ ಶ್ರೀ ಆರ್.ಎಸ್. ನಿಡೋಣಿಯವರು 2012ರಲ್ಲಿ ಮೃತರಾಗಿದ್ದರೂ 2011-12 ರಿಂದ 2013-14 ನೇ ಸಾಲಿನ ಅವಧಿಗೆ ಆಡಳಿತ ಮಂಡಳಿಯ ಯಾದಿಗೆ ಅವರ ಹೆಸರನ್ನು ಸೇರಿಸಿ ಅನುಮೋದನೆ ಪಡೆದಿರುವುದು ಹಾಗೂ ಸಂಸ್ಥೆಯಲ್ಲಿ ಹಣದ ದುರ್ಬಳಕೆ ಮಾಡಿರುವುದು ದೃಡಪಟ್ಟಿರುವುದರಿಂದ ಹಾಗೂ ಸಂಘಕ್ಕೆ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ 1960ರ ನಿಯಮ 8 (5) ರಡಿ ಕ್ರಮ ಜರುಗಿಸುವಂತೆ ಸಹಕಾರ ಸಂಘಗಳ ಉಪ ನಿಬಂಧಕರು, ಬೆಳಗಾವಿ ಜಿಲ್ಲೆ ಇವರ ದಿನಾಂಕ:21-10-2017 ರ ಪತ್ರದಲ್ಲಿ ತಿಳಿಸಿದ್ದರೂ, ಸಂಘವು ಯಾವುದೇ ಕ್ರಮ ಜರುಗಿಸಿರುವುದಿಲ್ಲವಾದ್ದರಿಂದ ಭಾರತಿ ವಿದ್ಯಾವರ್ಧಕ ಸಂಘ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವಂತೆ ಸಹಕಾರ ಸಂಘಗಳ ನಿಬಂಧಕರು ಕೋರಿರುತ್ತಾರೆ.

ಮೇಲೆ ಕ್ರಮ ಸಂಖ್ಯೆ: (2) ರಲ್ಲಿ ಓದಲಾದ ನೋಟೀಸಿನಲ್ಲಿ ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಶಿಫಾರಸ್ಸನ್ನು ಪರಿಗಣಿಸಿ, ಭಾರತಿ ವಿದ್ಯಾವರ್ಧಕ ಸಂಘ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ, ಈ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ ನೇಮಿಸಬಾರದೆಂಬ ಬಗ್ಗೆ, ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ, ಸಂಘದ ಅಧ್ಯಕ್ಷರು/ಕಾರ್ಯದರ್ಶಿ ಇವರಿಗೆ ತಿಳಿಸಲಾಗಿತ್ತು.

ಮೇಲೆ ಕ್ರ.ಸಂ. (3) ರಲ್ಲಿ ಓದಲಾದ ಸಂಘದ ಅಧ್ಯಕ್ಷರು ಭಾರತಿ ವಿದ್ಯಾವರ್ಧಕ ಸಂಘ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ ಇವರು ಸಲ್ಲಿಸಿರುವ ಲಿಖಿತ ಉತ್ತರದಲ್ಲಿ 17 ಜನರು ಸಂಘದ ಕಾರ್ಯಚಟುವಟಿಕೆಗಳಲ್ಲಿ ತೀವ್ರ ಅನಾಸಕ್ತಿ ಹೊಂದಿದ್ದರಿಂದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸಂಘದ ಸದಸ್ಯತ್ವದಿಂದ ಕಡಿಮೆ ಮಾಡಲಾಗಿದ್ದು, ನಂತರ ದಿನಾಂಕ:20.06.2004 ರಂದು ನಡೆದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಇದನ್ನು ಅನುಮೋದಿಸಲಾಗಿದೆಯೆಂದು ಸದರಿ 17 ಜನರ ಪೈಕಿ 7 ಜನರು ಈಗಾಗಲೇ ನಿಧನರಾಗಿದ್ದು ಅವರಿಗೆ ಮರಳಿ ಸದಸ್ಯತ್ವ ಕೊಡಿಸುವುದು ಸಾಧ್ಯವಿಲ್ಲವೆಂದು ತಿಳಿಸಿರುತ್ತಾರೆ.

ಶ್ರೀ ಆರ್.ಎಸ್. ನಿಡೋಣಿ ಇವರು ದಿನಾಂಕ:18.01.2012 ರಲ್ಲಿ ಮೃತರಾದ ನಂತರ ಅವರ ಸ್ಥಾನದಲ್ಲಿ ಬೇರೊಬ್ಬರನ್ನು ಮುಂದಿನ ಅವಧಿಗೆ ಆಯ್ಕೆ ಮಾಡಲಾಗಿದ್ದು ಈ ಬಗ್ಗೆ ದಿನಾಂಕ: 12.11.2017 ರ ಆಡಳಿತ ಮಂಡಳಿ ನಡವಳಿಯಲ್ಲಿ ವಿವರಿಸಲಾಗಿದೆಯೆಂದು ಆದರೆ ವಿಚಾರಣಾಧಿಕಾರಿಗಳು ಏಕಪಕ್ಷೀಯವಾಗಿ ವರದಿ ಸಲ್ಲಿಸಿರುತ್ತಾರೆ. ಸಂಘದಲ್ಲಿ ಹಣ ದುರ್ಬಳಕೆ ಮಾಡಿರುವ ಬಗ್ಗೆ ಆಪಾದಿಸಿದ್ದು, ವಾಸ್ತವದಲ್ಲಿ ಈ ಮೊತ್ತವನ್ನು ಸಂಸ್ಥೆಯ ಸ್ಕೂಲ್ ಆಫ್ ನರ್ಸಿಂಗ್‌ನ ಮೂಲಭೂತ ಸೌಕರ್ಯಗಳಿಗೆ ಬಳಸಲಾಗಿದೆಯೆಂದು ಈ ಬಗ್ಗೆ ವೋಚರ್‌ಗಳನ್ನು ಪರಿಶೀಲಿಸದೇ ವಿಚಾರಣಾಧಿಕಾರಿಗಳು ವರದಿ ಸಲ್ಲಿಸಿರುತ್ತಾರೆಂದು ತಿಳಿಸುತ್ತಾ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬಾರದೆಂದು ಕೋರಿರುತ್ತಾರೆ.

ಸಂಘದ ಅಧ್ಯಕ್ಷರು ಸಲ್ಲಿಸಿರುವ ಲಿಖಿತ ಉತ್ತರವನ್ನು ದಾಖಲೆಗಳೊಂದಿಗೆ ಪರಶೀಲಿಸಲಾಗಿ, 17 ಜನ ಸದಸ್ಯರನ್ನು ಸಂಘದ ಸದಸ್ಯತ್ವದಿಂದ ಕಡಿಮೆಗೊಳಿಸುವ ಮೊದಲು ಸದರಿ ಸದಸ್ಯರಿಗೆ ನೋಟೀಸ್ ನೀಡಿ, ಅವರಿಂದ ಸೂಕ್ತ ಸಮಜಾಯಿಷಿ ಪಡೆದು ಪರಿಶೀಲಿಸದೇ ಸದಸ್ಯತ್ವ ಕಡಿಮೆ ಮಾಡಿರುವ ಕ್ರಮವು ನಿಯಮ ಬಾಹಿರವಾಗಿರುತ್ತದೆ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಆರ್.ಎಸ್. ನಿಡೋಣಿ ಇವರು ದಿನಾಂಕ:12.01.2012 ರಂದು ಮೃತರಾಗಿದ್ದರೂ 2013-14ನೇ ಸಾಲಿನ ಆಡಳಿತ ಮಂಡಳಿಯ ಪಟ್ಟಿಯಲ್ಲಿ ಸದರಿಯವರ ಹೆಸರನ್ನು ಸೇರಿಸಿ ಇಲಾಖಾ ಅನುಮತಿ ಪಡೆದಿರುವುದು ದಾಖಲೆಗಳಿಂದ ಕಂಡುಬಂದಿರುತ್ತದೆ. ಕಾಲೇಜು ವಿದ್ಯಾರ್ಥಿಗಳಿಂದ ಹೆಚ್ಚಿನ ಹಣವನ್ನು ಪಡೆದು, ಖಾತೆ ಸಂಖ್ಯೆ:25753, ವಿಜಯ ಬ್ಯಾಂಕ್, ಚಿಕ್ಕೋಡಿ ಇಲ್ಲಿ ಜಮಾ ಮಾಡಿಕೊಂಡು ಆ ಹಣವನ್ನು ಸ್ವಂತ ಹೆಸರಿನಲ್ಲಿ ಡ್ರಾ ಮಾಡಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಂಘದ ಅಧ್ಯಕ್ಷರ ಮನವಿಯನ್ನು ಪರಿಗಣಿಸಲು ಬರುವುದಿಲ್ಲ. ಆದ್ದರಿಂದ ಸಂಘದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ನೂತನ ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಲು ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

-: ಆದೇಶ :-

ಸರ್ಕಾರದ ಆದೇಶ ಸಂಖ್ಯೆ: ಸಇ 300 ಸಸಂನೋ 2017 ಬೆಂಗಳೂರು, ದಿನಾಂಕ: 16.01.2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ) ರನ್ವಯ ಭಾರತಿ ವಿದ್ಯಾವರ್ಧಕ ಸಂಘ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ ಈ ಸಂಘಕ್ಕೆ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳವರೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿಕ್ಕೋಡಿ ಉಪ ವಿಭಾಗ, ಚಿಕ್ಕೋಡಿ ಇವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.

ಆಡಳಿತಾಧಿಕಾರಿಗಳು ಸದರಿ ಅವಧಿಯೊಳಗಾಗಿ ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

PR.25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC.20

ಆರ್. ಸೆಂತಾಮರೈ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

೧೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ಭಾಗ ೧

ಸಹಕಾರ ಸಚಿವಾಲಯ

ವಿಷಯ: ಶ್ರೀನಗರ ಅಸೋಸಿಯೇಷನ್, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸುವ ಬಗ್ಗೆ.

ಓದಲಾಗಿದೆ:

1) ಸರ್ಕಾರದ ಆದೇಶ ಸಂಖ್ಯೆ : ಸಇ 275 ಸಸಂನೋ 2017 ಬೆಂಗಳೂರು, ದಿನಾಂಕ: 14-05-2018.

2) ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, 2ನೇ ವಲಯ, ಬೆಂಗಳೂರು ನಗರ ಜಿಲ್ಲೆ, ಇವರ ಪತ್ರ ಸಂ: ಡಿಆರ್/ಬಿ2/ಎಸ್ಒಆರ್/ಆ/ 03/2018-19, ದಿನಾಂಕ: 27.11.2018.

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ ಶ್ರೀನಗರ ಅಸೋಸಿಯೇಷನ್, ಬೆಂಗಳೂರು ಈ ಸಂಘಕ್ಕೆ ಶ್ರೀ ಸದಾನಂದ, ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, 2ನೇ ವಲಯ ಬೆಂಗಳೂರು, ಇವರನ್ನು ದಿನಾಂಕ: 14.05.2018 ರಿಂದ ಮುಂದಿನ 6 ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಲಾಗಿತ್ತು.

ಮೇಲೆ (2) ರಲ್ಲಿ ಓದಲಾದ ಸಹಕಾರ ಸಂಘಗಳ ಉಪ ನಿಬಂಧಕರು, 2ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರ ಪತ್ರದಲ್ಲಿ ಸರ್ಕಾರದ ದಿನಾಂಕ: 14.05.2018 ರ ಆದೇಶದನ್ವಯ ಸಂಘದ ಆಡಳಿತಾಧಿಕಾರಿಯಾಗಿ ದಿನಾಂಕ: 24.5.2018 ರಂದು ಪ್ರಭಾರ ವಹಿಸಿಕೊಂಡಿದ್ದು, ಸಂಘದ ವಿರುದ್ಧದ ಆರೋಪಗಳ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯಲು ಶಾಸನಬದ್ಧ ವಿಚಾರಣೆ ನಡೆಸಲು ವಿಚಾರಣಾಧಿಕಾರಿ ನೇಮಿಸಲಾಗಿರುತ್ತದೆಂದು ಅಲ್ಲದೇ ಈ ಹಿಂದೆ ದಿನಾಂಕ: 24.09.2017 ರಂದು ನಿಗಧಿಯಾಗಿದ್ದ ಆಡಳಿತ ಮಂಡಳಿ ಚುನಾವಣೆಯನ್ನು ಪ್ರಶ್ನಿಸಿ ಓ.ಎಸ್.ನಂ.6422/2017 ರ ಪ್ರಕರಣವು ಇತ್ಯರ್ಥಕ್ಕೆ ಬಾಕಿ ಇರುತ್ತದೆಂದು ಈ ಹಿನ್ನೆಲೆಯಲ್ಲಿ ದಿನಾಂಕ: 14.11.2018 ರಿಂದ ದಿನಾಂಕ: 10.11.2019 ರವರೆಗೆ ಒಂದು ವರ್ಷದ ಅವಧಿಗೆ ಆಡಳಿತಾಧಿಕಾರಿ ಅವಧಿ ವಿಸ್ತಿರಸಲು ಕೋರಿರುತ್ತಾರೆ.

ಮೇಲ್ಕಂಡ ಅಂಶಗಳನ್ನು ಕೂಲಕಂಷವಾಗಿ ಪರಿಶೀಲಿಸಿ, ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, 2ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರ ಕೋರಿಕೆಯನ್ನು ಪರಿಗಣಿಸಿ, ಶ್ರೀನಗರ ಅಸೋಸಿಯೇಷನ್, ಬೆಂಗಳೂರು ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ ಈ ಆದೇಶ.

-: ಆದೇಶ :-

ಸರ್ಕಾರದ ಆದೇಶ ಸಂಖ್ಯೆ: ಸಇ 275 ಸಸಂನೋ 2017 ಬೆಂಗಳೂರು, ದಿನಾಂಕ: 16.01.2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ) ರಲ್ಲಿ ಪ್ರದತ್ತವಾದ ಅಧಿಕಾರಿವನ್ನು ಚಲಾಯಿಸಿ, ಶ್ರೀನಗರ ಅಸೋಸಿಯೇಷನ್, ಶ್ರೀನಗರ, ಬೆಂಗಳೂರು-85 ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 14.11.2018 ರಿಂದ ಮುಂದಿನ 6 ತಿಂಗಳ ಅವಧಿಗೆ ವಿಸ್ತರಿಸಲಾಗಿದೆ.

ಆಡಳಿತಾಧಿಕಾರಿಯು ಸದರಿ ಅವಧಿಯಲ್ಲಿ ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಸಂಘಕ್ಕೆ ಚುನಾವಣೆಯನ್ನು ನಡೆಸಿ, ನೂತನ ಚುನಾಯಿತ ಮಂಡಳಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಸೂಚಿಸಿದೆ.

PR.26

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC.20

ಆರ್. ಸೆಂತಾಮರೈ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

ಸಹಕಾರ ಸಚಿವಾಲಯ

ವಿಷಯ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಡೈರಿ ಆವರಣದಲ್ಲಿ ನೂತನ ಮೆಗಾ ಡೈರಿ

ಯೋಜನೆಗೆ ಅನುಮೋದನೆ ನೀಡುವ ಕುರಿತು.

ಓದಲಾಗಿದೆ:

ಸಹಕಾರ ಸಂಘಗಳ ನಿಬಂಧಕರು ಇವರ ಪತ್ರ ಸಂಖ್ಯೆ: ಅನಿ/ಡಿಎವೈ-4/58/2018-19

ದಿನಾಂಕ: 15-12-2018.

ಪ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ನೂತನ ಮೆಗಾ ಡೈರಿ ಸ್ಥಾಪಿಸುವ ಕುರಿತು ನಿಬಂಧಕರು ಪ್ರಸ್ತಾವನೆ ಸಲ್ಲಿಸಿರುತ್ತರೆ. ದಿನಾಂಕ: 18.09.2018 ರಂದು ನಡೆದ ಒಕ್ಕೂಟದ ಆಡಳಿತ ಮಂಡಳಿಯ ಸಭೆಯಲ್ಲಿ ಕೂಲಂಕುಷವಾಗಿ ಚರ್ಚಿಸಿ, ಕೋಲಾರ- ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಹಾಲಿನ ಶೇಖರಣೆ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಒಕ್ಕೂಟದಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಡೈರಿಯು ನಿರ್ಮಾಣವಾಗಿ ಸುಮಾರು 24 ವರ್ಷಗಳು ಕಳೆದಿದ್ದು, ಯಂತ್ರೋಪಕರಣಗಳ ಕಾರ್ಯಕ್ಷಮತೆ ಕ್ಷೀಣಿಸುತ್ತಿದ್ದು, ಹಾಲಿ ಡೈರಿಯನ್ನು 4 ಲಕ್ಷ ಲೀಟರ್ ಸಾಮರ್ಥ್ಯಕ್ಕೆ ವಿಸ್ತರಿಸಿದ್ದರೂ ಸಹ ಪ್ರಸ್ತುತ ದಿನವಹಿ ಅಂದಾಜು 6 ಲಕ್ಷ ಲೀಟರ್ ಹಾಲನ್ನು ಸಂಸ್ಕರಣೆ ಮಾಡುತ್ತಿದ್ದು, ಇದರಿಂದಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕಷ್ಟಸಾಧ್ಯವಾಗುತ್ತಿರುವ ಕಾರಣ ಆಧುನಿಕ ತಂತ್ರಜ್ಞಾನವುಳ್ಳ 10 ಲಕ್ಷ ಲೀಟರ್ ಸಾಮರ್ಥ್ಯದ `.130.00 ಕೋಟಿ ಅಂದಾಜಿನ ಮೆಗಾ ಡೈರಿಯನ್ನು ಸ್ತಾಪಿಸುವ ಯೋಜನೆಯನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ೧೦೧

ಮುಂದುವರೆದು, ಒಕ್ಕೂಟವು ಮೆಗಾ ಡೈರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಡಿಐಡಿಎಫ್ ನಿಂದ `.40.00 ಕೋಟಿ ಸಾಲ ಮತ್ತು ಮೂಲಭೂತ ಸೌಕರ್ಯ ನಿಧಿಯಿಂದ ಪ್ರತಿ ವರ್ಷ `.30.00 ಕೋಟಿಗಳಂತೆ ಮೂರು ವರ್ಷಗಳಲ್ಲಿ `.90.00 ಕೋಟಿ ಸೇರಿ ಒಟ್ಟು `.130.00 ಕೋಟಿಗಳನ್ನು ಉದ್ದೇಶಿತ ಮೆಗಾ ಡೈರಿ ಯೋಜನೆಗೆ ಬಳಸಿಕೊಳ್ಳುವುದಾಗಿ ತಿಳಿಸಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಒ 152 ಸಿಸಿಬಿ 2018 ಬೆಂಗಳೂರು, ದಿನಾಂಕ: 10.01.2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಕೋಲಾರ ಈ ಒಕ್ಕೂಟವು ಡೈರಿ ಆವರಣದಲ್ಲಿ ಅತ್ಯಾಧುನಿಕ ತಂತ್ರಜ್ಞಾನದ 10.00 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿಯನ್ನು `.130.00 ಕೋಟಿಗಳ ಮೊತ್ತದಲ್ಲಿ ನಿರ್ಮಾಣ ಮಾಡಲು ಈ ಕೆಳಕಂಡ ಷರತ್ತಿಗಳಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಷರತ್ತುಗಳು:

1. ಉದ್ದೇಶಿತ ಕಾಮಗಾರಿಯನ್ನು ಸಹಕಾರ ಸಂಘಗಳ ನಿಬಂಧಕರು, ಕರ್ನಾಟಕ ರಾಜ್ಯ ಬೆಂಗಳೂರು ರವರ ಸುತ್ತೋಲೆ ಸಂಖ್ಯೆ 232 ರ ದಿನಾಂಕ: 10-01-2013 ಮತ್ತು ಮಾರ್ಪಾಡು ಸುತ್ತೋಲೆ ದಿನಾಂಕ: 22-07-2013 ರಲ್ಲಿ ವಿವರಿಸಿರುವಂತೆ ನಿಯಮಾನುಸಾರ ಕ್ರಮ ಕೈಗೊಳ್ಳತಕ್ಕದ್ದು.

2. ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ಕಾಮಗಾರಿಯನ್ನು ಕೈಗೊಳ್ಳತಕ್ಕದ್ದು. 3. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ನಂತರವೇ ಗುತ್ತಿಗೆದಾರರಿಗೆ ಅಂತಿಮ ಬಿಲ್ಲನ್ನು ಪಾವತಿಸತಕ್ಕದ್ದು. 4. ಸದರಿ ಕಾಮಗಾರಿಯನ್ನು ಅಂದಾಜು ಪಟ್ಟಿಯಂತೆ `.130.00 ಕೋಟಿಗಳ ಮಿತಿಗೊಳಪಟ್ಟು ಪೂರ್ಣಗೊಳಿಸತಕ್ಕದ್ದು ಹಾಗೂ ಟೆಂಡರ್ ಪ್ರಕ್ರಿಯೆ ಬಗ್ಗೆ ರಾಜ್ಯವ್ಯಾಪ್ತಿ ಪ್ರಚಲಿತವಿರುವ ಕನ್ನಡ ಹಾಗೂ ಇಂಗ್ಲೀಷ್ ದಿನಪತ್ರಿಕೆಯಲ್ಲಿ ವ್ಯಾಪಕ ಪ್ರಚಾರ ನೀಡತಕ್ಕದ್ದು.

5. ಸದರಿ ಕಾಮಗಾರಿಯನ್ನು ಕರ್ನಾಟಕ ಪಾರದರ್ಶಕ ಕಾಯ್ದೆ 1999 ಹಾಗೂ ನಿಯಮ 2000 ಅಡಿಯಲ್ಲಿ ಬರುವ ಎಲ್ಲಾ ಷರತ್ತುಗಳನ್ನು ಚಾಚೂ ತಪ್ಪದೇ ಪಾಲಿಸತಕ್ಕದ್ದು.

6. ಉದ್ದೇಶಿತ ಕಾಮಗಾರಿಯಲ್ಲಿ ಅವ್ಯವಹಾರ/ನ್ಯೂನತೆ ಕಂಡುಬಂದರೆ ಆಡಳಿತ ಮಂಡಳಿಯನ್ನು ಸಂಪೂರ್ಣ ಜವಾಬ್ದಾರರನ್ನಾಗಿ ಮಾಡಲಾಗುವುದು. 7. ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ಇ-ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳತಕ್ಕದ್ದು ಹಾಗೂ ಇಲಾಖೆಯ ಸಹಕಾರ ಸಂಘಗಳ ಜಂಟಿ ನಿಬಂಧಕರು, ಬೆಂಗಳೂರು ಪ್ರಾಂತ, ಬೆಂಗಳೂರು ರವರ ಸಮಕ್ಷಮದಲ್ಲಿ ಟೆಂಡರ್ ಪ್ರಕಿಯೆಗೆ ಕ್ರಮವಿಡತಕ್ಕದ್ದು.

8. ಸದರಿ ಉದ್ದೇಶಕ್ಕೆ ಆಡಳಿತ ಮಂಡಳಿಯ ಉಪಸಮಿತಿ ರಚಿಸಿ, ಕಾಲಕಾಲಕ್ಕೆ ಪ್ರಗತಿ ಪರಿಶೀಲಿಸಿ, ಆಡಳಿತ ಮಂಡಳಿಗೆ ವರದಿ ನೀಡುವುದು. 9. ಈ ಯೋಜನೆಗೆ ಡಿಐಡಿಎಫ್‌ನಿಂದ ಸಾಲ ಪಡೆಯಬೇಕಾದಲ್ಲಿ ಸರ್ಕಾರದ ಪೂರ್ವಾನುಮತಿ ಪಡೆಯತಕ್ಕದ್ದು.

PR.27

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC.20

ಆರ್. ಸೆಂತಾಮರೈ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಹಕಾರ ಇಲಾಖೆ.

COMMERCE AND INDUSTRIES SECRETARIAT

Sub : Appointment of Chairman for sector Vision Groups / PMU formed under 'Compete with China' Program.

1) Government Order No. CI 130 SPI 2018, dt. 10.08.2018.

Read :

2) Government Order No. CI 130 SPI 2018(P1), dt. 06.10.2018.

3) Government Order No. CI 130 SPI 2018 (P2), dt. 19.11.2018

4) Government Order No. CI 130 SPI 2018 (P1), dt. 22.11.2018

5) Letter from Commissioner for Industrial Development and Director of Industries and Commerce, Bengaluru No.I&C/L&M/P&P/CWC/EO/2/2018-19, dated. 15.12.2018.

PREAMBLE:

Government of Karnataka in the Budget Speech 2018-19 (July) has proposed to implement 'Compete with China' program with the objective of increasing the production capacity of industries of the State by creating Industrial Clusters for producing specific category of goods in identified districts of the State. It is also proposed to constitute cluster wise Vision Groups(VGs)/ Program Mission Units (PMUs) under the leadership of successful entrepreneurs of the State. Also District Level Consultative Committee under the Chairmanship of concerned District in-charge Minister and State Level Steering Committee under the Chairmanship of Hon'ble Chief Minister are proposed.

In the Government Order read at (1) above, Government has accorded in-principal approval for constitution of 9 Vision Groups/Program Mission Units to give suggestions on the implementation modalities for the respective cluster under 'Compete with China' Program.

In the Government Order read at (2) and (3) above, Chairman for Vision Groups of Integrated Circuit Board (ICB), Toys and Mechanized Toys, Textiles, Solar Power Equipments and Agricultural Implements sectors have been appointed.

೧೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ಭಾಗ ೧ In the Government Order read at (4) above, Government has accorded approval for constitute a State Level Steering Committee

under the Chairmanship of Hon'ble Chief Minister and Vice Chairman of Hon'ble Minister for Large and Mega Industries and District Level Consultative Committee under the Chairmanship of concerned district In-Charge Minister.

Now, based on the inputs from the members of the respective Vision Groups through the cluster Nodal Officers, the Commissioner for Industrial Development and Director for Industries and Commerce vide his letter dt. 15.12.2018 proposed to appoint Chairman for Sports and Fitness Goods, Mobile Phone Components and Assembly, Tiles, Sanitarywares & Bathroom fittings and LED Lights Vision Groups / PMUs as detailed below:

Sl.No. Vision Group/PMU Name, Designation & Company
1 Sports and Fitness Goods Dr.S.Subramanya, IAS (Retd), Economic Advisor to Hon'ble Chief Minister of Karnataka.
2 Mobile Phone Components and Assembly Sri. A.Gururaj, Managing Director, Wistron Infocomm Manufacturing India Private Limited
3 Tiles, Sanitarywares & Bathroom fittings Sri. P.N.Trivedi, President-Corporate Affairs & Industrial Relations, Prism Johnson Limited
4 LED Lights Sri. K.V.Harinarayanan,CEO, Lighting Technologies India Private Limited.

The proposal has been examined in the Government in all the aspects and hence the following order.

GOVERNMENT ORDER NO.CI 130 SPI 2018, BENGALURU, DATED 27.12.2018

In the circumstances as explained in the Preamble, in continuation to the Government Order No. CI 130 SPI 2018, dated: 19.11.2018, the Government is pleased to appoint the following members as Chairman of the Sector Vision Groups as mentioned

Sl.No. Vision Group/PMU Name, Designation & Company
1 Sports and Fitness Goods Dr.S.Subramanya, IAS (Retd), Economic Advisor to Hon'ble Chief Minister of Karnataka.
2 Mobile Phone Components and Assembly Sri. A.Gururaj, Managing Director, Wistron Infocomm Manufacturing India Private Limited
3 Tiles, Sanitarywares & Bathroom fittings Sri. P.N.Trivedi, President-Corporate Affairs & Industrial Relations, Prism Johnson Limited
4 LED Lights Sri. K.V.Harinarayanan,CEO, Lighting Technologies India Private Limited.

PR - 10

By Order and in the name of the Governor of Karnataka, SC - 25

NAGARATHNAMMA G.

Desk Officer (Technical Cell)

Commerce & Industries Department.

ಆರ್ಥಿಕ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಆಇ(ವಿಶೇಷ)/101/ಪಿಇಎನ್/2018, ಬೆಂಗಳೂರು, ದಿನಾಂಕ:08-12-2018.

ವಿಷಯ : ಪಿಂಚಣಿ ಪ್ರಕರಣಗಳನ್ನು ನಿಗಧಿತ ಕಾಲಾವಧಿಯೊಳಗೆ ಚುರುಕಾಗಿ ಮತ್ತು ತ್ವರಿತವಾಗಿ ಇತ್ಯರ್ಥಗೊಳಿಸುವ ಬಗ್ಗೆ.

1. ಸರ್ಕಾರಿ ನೌಕರನು ಚಾಲ್ತಿಯಲ್ಲಿರುವ ನಿವೃತ್ತಿ ವೇತನ ಪಾವತಿ ಆದೇಶ (Pension Payment Order) ವಿಲ್ಲದೆ ವಯೋನಿವೃತ್ತಿ ಹೊಂದಬಾರದೆಂಬುದು ಸರ್ಕಾರದ ಘೋಷಿತ ನೀತಿಯಾಗಿದೆ.

2. ಆದಾಗ್ಯೂ, ಸರ್ಕಾರಿ ನೌಕರರ ಮತ್ತು ಅಧಿಕಾರಿಗಳ ನಿವೃತ್ತಿ ವೇತನ ಪ್ರಕರಣಗಳನ್ನು ನಿಗಧಿತ ಕಾಲಾವಧಿಯೊಳಗೆ ಇತ್ಯರ್ಥಗೊಳಿಸದೆ ತೀರಾ ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳು ಸರ್ಕಾರದ ಗಮನಕ್ಕೆ ಬಂದಿವೆ. ನಿಗಧಿತ ಕಾಲಾವಧಿಯೊಳಗೆ ಮಹಾಲೇಖಪಾಲರಿಗೆ ಕಳುಹಿಸುವ ಮಹತ್ವವನ್ನು ತಿಳಿಯದಿರುವುದು ಎದ್ದು ಕಾಣುತ್ತದೆ. ಆದುದರಿಂದ, ಸದರಿ ಸೂಚನೆಗಳನ್ನು ಮತ್ತೊಮ್ಮೆ ಒತ್ತಿಹೇಳುವ ಅವಶ್ಯಕತೆ ಇದೆಯೆಂದು ಸರ್ಕಾರವು ಮನಗಂಡಿದೆ.

3. ಆದಕಾರಣ, ಇನ್ನು ಮುಂದೆ ವಯೋನಿವೃತ್ತಿ ಹೊಂದಲಿರುವ ಸರ್ಕಾರಿ ನೌಕರರ ನಿವೃತ್ತಿ ವೇತನ ದಾಖಲೆಗಳನ್ನು 12 ತಿಂಗಳು ಮುಂಚಿತವಾಗಿ (ಪಸ್ತುತ ಅನುಸರಿಸುತ್ತಿರುವ 6 ತಿಂಗಳ ಅವಧಿಯ ರೂಡಿಗತ ಪದ್ದತಿಯನ್ನು ಮಾರ್ಪಡಿಸಿ) ತಯಾರಿಸಲು ಪ್ರಾರಂಭಿಸಿ, ಹಾಗೆ ತಯಾರಿಸಿದ ಸಂಪೂರ್ಣ ದಾಖಲೆಗಳನ್ನು ವಯೋ ನಿವೃತ್ತಿಗೆ ಕನಿಷ್ಠ 03 ತಿಂಗಳ ಮುಂಚಿತವಾಗಿ ಮಹಾಲೇಖಪಾಲರಿಗೆ ಕಡ್ಡಾಯವಾಗಿ ಕಳುಹಿಸುವ ಮತ್ತು ವಯೋನಿವೃತ್ತಿ ಹೊಂದಲಿರುವ ಪತ್ರಾಂಕಿತ ಸರ್ಕಾರಿ ಅಧಿಕಾರಿಗಳ ಸಂಬಂಧದಲ್ಲಿ ನಮೂನೆ 7-ಎ ರಲ್ಲಿ ಅವಶ್ಯಕ ಮಾಹಿತಿಯನ್ನು,ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ೧೦೩ ಮಂಜೂರಾತಿಯೊಂದಿಗೆ, ವಯೋನಿವೃತ್ತಿಯ ದಿನಾಂಕಕ್ಕೆ ಒಂದು ತಿಂಗಳ ಮುಂಚಿತವಾಗಿ ಮಹಾಲೇಖಪಾಲರಿಗೆ ಕಡ್ಡಾಯವಾಗಿ ಕಳುಹಿಸುವ ನಿದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದೆಂದು ಈ ಮೂಲಕ ಸೂಚಿಸಲಾಗಿದೆ.

4. ಮೇಲಿನ ಸೂಚನೆಗಳನ್ನು ಕಛೇರಿ ಮುಖ್ಯಸ್ಥರ ಗಮನಕ್ಕೆ ತಕ್ಷಣವೇ ತರುತ್ತಾ, ಅವುಗಳನ್ನು ಚಾಚುತಪ್ಪದೆ ಪಾಲಿಸುವಂತೆ ನಿರ್ದೇಶನ ನೀಡಲು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿ/ಪ್ರಾಧನ ಕಾರ್ಯದರ್ಶಿ/ಕಾರ್ಯದರ್ಶಿಗಳನ್ನು ಮತ್ತು ಇಲಾಖಾ ಮುಖ್ಯಸ್ಥರನ್ನು ಕೋರಲಾಗಿದೆ. 5. ನಿವೃತ್ತಿ ವೇತನವನ್ನು ತಡವಾಗಿ ಪಾವತಿಸಿದಲ್ಲಿ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಹಾಗೆ ಪಾವತಿಸಬೇಕಾದ ಬಡ್ಡಿಯನ್ನು ವಿಳಂಬಕ್ಕೆ ಕಾರಣರಾದಂತಹ ನಿವೃತ್ತಿ ವೇತನ ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರದಿಂದ ಅಥವಾ ಸಂಬಂಧಪಟ್ಟ ನೌಕರರಿಂದ ವಸೂಲಿ ಮಾಡಬೇಕಾಗುತ್ತದೆ. ಅಲ್ಲದೆ, ಅಂತಹ ವಿಳಂಬಕ್ಕೆ ಕಾರಣರಾದಂತಹ ಅಧಿಕಾರಿ ಮತ್ತು ನೌಕರರು ಶಿಸ್ತು ಕ್ರಮಕ್ಕೂ ಬದ್ಧರಾಗುತ್ತಾರೆಂಬ ಅಂಶಗಳನ್ನು ಗಮನದಲ್ಲಿರಿಸಿಕೊಳ್ಳತಕ್ಕದೆಂದು ಒತ್ತಿ ಹೇಳಲಾಗಿದೆ.

PR- 23

ತ.ಮ. ವಿಜಯ್ ಭಾಸ್ಕರ್

SC- 05

ಸರ್ಕಾರದ ಮುಖ್ಯ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಸಿಆಸುಇ 76 ಸೇಇವಿ 2018, ಬೆಂಗಳೂರು, ದಿನಾಂಕ: 21-01-2019.

ವಿಷಯ : ಸರ್ಕಾರಿ ಅಧಿಕಾರಿ/ನೌಕರರುಗಳ ವಿರುದ್ಧ ಶಿಸ್ತುಕ್ರಮ/ಇಲಾಖಾ ವಿಚಾರಣೆಯ ಅವಶ್ಯಕ ಪರಿಪೂರ್ಣ ಪ್ರಸ್ತಾವನೆಗಳನ್ನು ವಿಳಂಬವಿಲ್ಲದೇ ಸಲ್ಲಿಸುವ ಬಗ್ಗೆ ಮರು ಸೂಚನೆಗಳು. ಉಲ್ಲೇಖ : (1) ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್ 41 ಎಸ್‌ಡಿಇ 83, ದಿನಾಂಕ: 16.08.1983. (2) ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್ 33 ಎಸ್‌ಡಿಇ 83, ದಿನಾಂಕ: 24.05.1984. (3) ಸುತ್ತೋಲೆ ಸಂಖ್ಯೆ: ಸಿಆಸುಇ 7 ಸೇಇವಿ 96, ದಿನಾಂಕ: 04.07.1996. (4) ಸುತ್ತೋಲೆ ಸಂಖ್ಯೆ: ಸಿಆಸುಇ 04 ಸೇಇವಿ 96, ದಿನಾಂಕ: 28.08.1996. (5) ಸುತ್ತೋಲೆ ಸಂಖ್ಯೆ: ಸಿಆಸುಇ 09 ಸೇಇವಿ 98, ದಿನಾಂಕ: 03.08.1998. (6) ಸುತ್ತೋಲೆ ಸಂಖ್ಯೆ: ಸಿಆಸುಇ 47 ಸೇಇವಿ 2001, ದಿನಾಂಕ: 23.03.2002. (7) ಸುತ್ತೋಲೆ ಸಂಖ್ಯೆ: ಸಿಆಸುಇ 07 ಸೇಇವಿ 2003, ದಿನಾಂಕ: 12.05.2003. (8) ಸುತ್ತೋಲೆ ಸಂಖ್ಯೆ: ಸಿಆಸುಇ 1 ಸೇಇವಿ 2005, ದಿನಾಂಕ: 09.02.2005.

ಸರ್ಕಾರಿ ನೌಕರನು ಸೇವೆಯಲ್ಲಿದ್ದಾಗ ಅವನ ಮೇಲೆ ಹೂಡಿದ ಯಾವುದೇ ಇಲಾಖಾ ತನಿಖೆಗಳ ಬಗ್ಗೆ ಅವನು ಸೇವೆಯಿಂದ ನಿವೃತ್ತಿಯಾದ ನಂತರ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214(2)(ಬಿ)ರ ಉಪಬಂಧಗಳಿಗೆ ಒಳಪಟ್ಟು ಇಲಾಖಾ ವಿಚಾರಣೆಯನ್ನು ಆರಂಭಿಸುವ ಮತ್ತು ಸೇವೆಯಲ್ಲಿದ್ದಾಗ ಅವನ ವಿರುದ್ಧ ಆರಂಭಿಸಿರುವ ಇಲಾಖಾ ವಿಚಾರಣೆಯನ್ನು ನಿಯಮ 214(2)(ಎ)ರ ಉಪಬಂಧಗಳಿಗೆ ಒಳಪಟ್ಟು ಮುಂದುವರೆಸುವ ಅವಕಾಶವಿದೆ. ಇದರ ಹೊರತಾಗಿ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಗಳು, 1957ರಲ್ಲಿರುವ ನಿಯಮಗಳ ಪ್ರಕಾರ ಹೊಸದಾಗಿ ಇಲಾಖಾ ವಿಚಾರಣೆ ಪ್ರಾರಂಭಿಸುವುದಕ್ಕೆ ಮತ್ತು ಪ್ರಾರಂಭಿಸಿರುವ ಇಲಾಖಾ ವಿಚಾರಣೆಯನ್ನು ಮುಂದುವರೆಸುವುದಕ್ಕೆ ಅವಕಾಶವಿರುವುದಿಲ್ಲ. ಕಾರಣ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ಅಂತಹ ನಿವೃತ್ತ ನೌಕರರಿಗೆ ಅನ್ವಯಿಸುವುದಿಲ್ಲ. ಸರ್ಕಾರಿ ನೌಕರನು ನಿವೃತ್ತಿಯಾದ ನಂತರ ಅವನ ಮೇಲೆ ಹೂಡಲಾಗಿದ್ದ ಇಲಾಖಾ ತನಿಖೆಗಳನ್ನು ಸರ್ಕಾರಕ್ಕೆ ಆರ್ಥಿಕ ಹಾನಿ ಉಂಟಾಗಿಲ್ಲವೆಂಬ ಕಾರಣ ನೀಡಿ ಅವುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವ ಪ್ರಸ್ತಾವನೆಗಳು ಸರ್ಕಾರದ ಮುಂದೆ ಬಂದ ಸಂದರ್ಭದಲ್ಲಿ ಸರ್ಕಾರವು ಆ ಬಗ್ಗೆ ಪರಿಶೀಲಿಸಿ, ಉಲ್ಲೇಖ(1) ಮತ್ತು (2)ರ ಅಧಿಕೃತ ಜ್ಞಾಪನಗಳಲ್ಲಿ ನಿವೃತ್ತಿ ಆಗುವಂತಹ ಸರ್ಕಾರಿ ನೌಕರರ ಮೇಲೆ ಹೂಡಲಾಗಿರುವ ಇಲಾಖಾ ತನಿಖೆಗಳನ್ನು ಅವರು ನಿವೃತ್ತಿ ಆಗುವುದಕ್ಕೆ ಮುಂಚೆ ಇತ್ಯರ್ಥ ಮಾಡುವ ಕುರಿತು ಸೂಚನೆಗಳನ್ನು ನೀಡಿದೆ.

2. ತದನಂತರದಲ್ಲಿ ನಿವೃತ್ತಿ ಹೊಂದಿದ ಅಪಾದಿತ ಅಧಿಕಾರಿ ವಿರುದ್ಧ ಇಲಾಖಾ ವಿಚಾರಣೆ ಪ್ರಾರಂಭಿಸಬೇಕಾದ ಪ್ರಕರಣವೊಂದರಲ್ಲಿ ಸಕಾಲದಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 214 (ಬಿ)(ii)ರಲ್ಲಿ ನಿಗದಿಪಡಿಸಿದ ಕಾಲಮಿತಿಯೊಳಗೆ ವಿಚಾರಣೆಯನ್ನು ಪ್ರಾರಂಭಿಸಿಲ್ಲದ ಕಾರಣ ಆಪಾದಿತ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಹೂಡಲು ಅಸಾಧ್ಯವಾದ ಪರಿಸ್ಥಿತಿ ಉಂಟಾದುದಲ್ಲದೇ, ಆರೋಪಿ ಸರ್ಕಾರಿ ನೌಕರರು ನಿವೃತ್ತಿ ಹೊಂದುವ 2-3 ದಿನಗಳ ಮುಂಚೆ ಇಲ್ಲವೇ ಹಿಂದಿನ ದಿನ ಅವರ ದುರ್ನಡತೆಗೆ ಸಂಬಂಧಿಸಿದ ವಿವರಗಳು ನೀಡಿ ಅವರ ಮೇಲೆ ಶಿಸ್ತಿನ ಕ್ರಮ ಆರಂಭಿಸಲು ಇಲಾಖೆಗಳು ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳುಹಿಸುತ್ತಿರುವುದು ಸಹ ಸರ್ಕಾರದ ಗಮನಕ್ಕೆ ಬಂದ ಸಂದರ್ಭದಲ್ಲಿ ಸರ್ಕಾರವು ಉಲ್ಲೇಖ(4)ರ ಸುತ್ತೋಲೆಯಲ್ಲಿ ಸರ್ಕಾರಿ ನೌಕರನ ದುರ್ನಡತೆ ಗಮನಕ್ಕೆ ಬಂದ ತಕ್ಷಣ ಶಿಸ್ತಿನ ಪ್ರಾಧಿಕಾರಕ್ಕೆ ಅದನ್ನು ತಿಳಿಸಬೇಕು. ನಿವೃತ್ತಿ ಹೊಂದಲಿರುವ ನೌಕರರ ಪ್ರಕರಣದಲ್ಲಿ ಶಿಸ್ತಿನ ಪ್ರಾಧಿಕಾರಕ್ಕೆ ಅಂತಹ ಮಾಹಿತಿ ಸರ್ಕಾರಿ ನೌಕರನು ನಿವೃತ್ತಿ ಹೊಂದುವ ಕನಿಷ್ಠ 2 ಅಥವಾ 3 ತಿಂಗಳ ಪೂರ್ವದಲ್ಲಿ ನೀಡಿ, ಕರಡು ದೋಷಾರೋಪಣಾ ಪಟ್ಟಿ ಇತ್ಯಾದಿ, ಸಂಬಂಧಿಸಿದ ಕಾಗದ ಪತ್ರ ಮತ್ತು ದಾಖಲೆಗಳೊಡನೆ ಶಿಸ್ತುಪ್ರಾಧಿಕಾರಿಗಳಿಗೆ ಕಳುಹಿಸುವ ಬಗ್ಗೆ ಮತ್ತು ವಯೋನಿವೃತ್ತಿ ಅಂಚಿನಲ್ಲಿರುವ ಅಂತಹ ಆಪಾದಿತ ಸರ್ಕಾರಿ ನೌಕರರ ನಿವೃತ್ತಿ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸುವ ಬಗ್ಗೆ ಸೂಚನೆಗಳನ್ನು ನೀಡಲಾಗಿದೆ.

ಉಲ್ಲೇಖ(5)ರ ಸುತ್ತೋಲೆಯಲ್ಲಿ ನಿವೃತ್ತಿ ಹೊಂದಲಿರುವ ಅಧಿಕಾರಿಗಳ ವಿರುದ್ಧ ಶಿಸ್ತಿನ ಪ್ರಸ್ತಾವನೆಗಳನ್ನು ಸಂಬಂಧಿಸಿದ ಅಧಿಕಾರಿ ವಯೋ ನಿವೃತ್ತಿ ಹೊಂದುವ

ಕನಿಷ್ಠ ಆರು ತಿಂಗಳ ಮುಂಚೆಯೇ ಕಳುಹಿಸಬೇಕೆಂದು ತಿಳಿಸಲಾಗಿದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ಭಾಗ ೧

3. ಉಲ್ಲೇಖ(8)ರ ಸುತ್ತೋಲೆಯಲ್ಲಿ ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳ ವಿರುದ್ಧ ಶಿಸ್ತು ಪ್ರಕರಣಗಳನ್ನು ಕಳುಹಿಸುವಲ್ಲಿ ಇಲಾಖೆಗಳು ಯಾವುದೇ ವಿಳಂಬವನ್ನು ಮಾಡಬಾರದು, ಹೀಗೆ ಕೊನೆ ಗಳಿಗೆಯಲ್ಲಿ ಪ್ರಸ್ತಾವನೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಳುಹಿಸಿದಲ್ಲಿ ಮತ್ತು ಅಂತಹ ವಿಚಾರಣೆಯು ಕಾಲಮಿತಿಯನ್ನು ಮೀರಿದ್ದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರು/ಅಧಿಕಾರಿಗಳನ್ನು ಗುರುತಿಸಿ ಅವರುಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಲಾಗಿದೆ.

4. ಉಲ್ಲೇಖ(6)ರ ಸುತ್ತೋಲೆಯಲ್ಲ್ಲಿ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮಗಳ ಅಡಿಯಲ್ಲಿ ಆರಂಭಿಸುವ ಪ್ರತಿಯೊಂದು ಪ್ರಕರಣದಲ್ಲಿ ಆಪಾದಿತ ಸರ್ಕಾರಿ ನೌಕರನ ವಯೋ ನಿವೃತ್ತಿ ದಿನಾಂಕ ಸೇರಿದಂತೆ ಇತರೆ ವಿವರಗಳನ್ನು ಸಂಬಂಧಿಸಿದ ದಾಖಲೆಗಳೊಂದಿಗೆ ಯಾವಾಗಲೂ ಇಡತಕ್ಕದ್ದೆಂದು ಹಾಗೂ ಅದನ್ನು ಸಂಬಂಧಿಸಿದ ಪ್ರಾಧಿಕಾರಿಗಳಿಗೆ ಲಭ್ಯಮಾಡತಕ್ಕದ್ದೆಂದು ಹಾಗೂ 5. ಈ ರೀತಿ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ ಮೇಲ್ಕಂಡ ಸೂಚನೆಗಳಿದ್ದಾಗ್ಯೂ ಇತ್ತೀಚೆಗೆ ಆಡಳಿತ ಇಲಾಖೆಯೊಂದು ಆರೋಪಿತ ಸರ್ಕಾರಿ ನೌಕರನ ವಿರುದ್ಧ ಶಿಸ್ತು ಪ್ರಕರಣದ ಪೂರ್ಣ ಪ್ರಸ್ತಾವನೆಯನ್ನು ಶಿಸ್ತುಪ್ರಾಧಿಕಾರಕ್ಕೆ ಆ ಅಧಿಕಾರಿ ನಿವೃತ್ತಿ ಹೊಂದುವ ಒಂದು ವಾರದ ಮುಂಚೆ ಕಳುಹಿಸಿರುವುದರಿಂದ, ಅಂತಹ ಆರೋಪಿತ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲು ಅವಕಾಶವಿಲ್ಲದಂತಾಗಿರುವ ವಿಷಯವು ಸರ್ಕಾರದ ಗಮನಕ್ಕೆ ಬಂದಿದೆ.

(1) ಆದುದರಿಂದ, ನಿವೃತ್ತಿ ಹೊಂದಲಿರುವ ಅಧಿಕಾರಿ/ನೌಕರರ ವಿರುದ್ಧದ ಶಿಸ್ತುಕ್ರಮದ ಪರಿಪೂರ್ಣ ಪ್ರಸ್ತಾವನೆಗಳನ್ನು ಆಡಳಿತ ಇಲಾಖೆಗಳು ಅಂತಹ

ಅಧಿಕಾರಿ/ನೌಕರರು ನಿವೃತ್ತರಾಗುವ ಕನಿಷ್ಠ 30 ದಿನಗಳ ಮುಂಚೆ ಶಿಸ್ತುಪ್ರಾಧಿಕಾರಕ್ಕೆ ಸಲ್ಲಿಸತಕ್ಕದ್ದು.

(2) ಕಡತದ ಕವಚದ ಮೇಲೆ ದಪ್ಪ ಅಕ್ಷರಗಳಲ್ಲಿ ಕೆಂಪು ಶಾಯಿಯಲ್ಲಿ ಆಪಾದಿತ ಸರ್ಕಾರಿ ನೌಕರರ ವಯೋ ನಿವೃತ್ತಿ ದಿನಾಂಕ ನಮೂದಿಸತಕ್ಕದ್ದು.

(3) ಮೇಲಿನ ಕಾಲಮಿತಿ ಮೀರಿದ್ದಾದಲ್ಲಿ ವಿಳಂಬಕ್ಕೆ ಜವಾಬ್ದಾರರಾದ ನೌಕರರ/ಅಧಿಕಾರಿಗಳನ್ನು ಗುರುತಿಸಿ, ಅವರುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸತಕ್ಕದ್ದು.

ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

PR- 24

ಟಿ.ಎಂ. ವಿಜಯ್ ಭಾಸ್ಕರ್

SC- 200

ಸರ್ಕಾರದ ಮುಖ್ಯ ಕಾರ್ಯದರ್ಶಿ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 07 February 2019. Indian Gazettes, https://egazette.servantsofknowledge.in/details/in.gazette.karnataka_new.2019-02-07.Part-1/. Archive identifier in.gazette.karnataka_new.2019-02-07.Part-1.