Servants of Knowledge
Karnataka Gazette · Government of Karnataka

Karnataka Gazette, Part Part-2, 07 February 2019

Published 07 February 2019

Part
Part-2
Identifier
in.gazette.karnataka_new.2019-02-07.Part-2
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಫೆಬ್ರವರಿ ೭, ೨೦೧೯ (ಮಾಘ ೧೮, ಶಕ ವರ್ಷ ೧೯೪೦)

Bengaluru, Thursday, February 7, 2019 (Magha 18, Shaka Varsha 1940)

ಸಂಚಿಕೆ ೬

Issue 6

ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ: ಅಪಜೀ 90 ಸಿಆರ್ಎಸ್ 2018, ದಿನಾಂಕ: 04.10.2018.

ವಿಷಯ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಸ್ವೀಕೃತಗೊಂಡ ದೂರುಗಳನ್ನು ವಿಲೇವಾರಿ

ಮಾಡುವ ಕುರಿತು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವ ಬಗ್ಗೆ.

ಉಲ್ಲೇಖ: ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಟಿಪ್ಪಣಿ ಸಂಖ್ಯೆ: ಸಿಹೆಚ್ಎಸ್/1062/2018,

ದಿನಾಂಕ: 13-08-2018.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಲ್ಲಿ ದಾಖಲಾದ ಪ್ರಕರಣಗಳ ಕುರಿತು ಇಲಾಖೆಯಿಂದ ಕಳುಹಿಸಬೇಕಾದ ವರದಿಗಳನ್ನು ಪರಾಮರ್ಶಿಸಲು ಹಾಗೂ ದಾಖಲಾದ ಪ್ರಕರಣಗಳ ಬಗ್ಗೆ ಕಾಲಮಿತಿಯೊಳಗೆ ವರದಿಗಳನ್ನು ಕಳುಹಿಸಿಕೊಡುವುದನ್ನು ಖಾತರಿಪಡಿಸಿಕೊಳ್ಳುವ ಜವಾಬ್ದಾರಿಯನ್ನು ನಿರ್ವಹಿಸಲು ಉಲ್ಲೇಖಿತ ಸರ್ಕಾರದ ಟಿಪ್ಪಣಿಯನ್ವಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗೆ ಸಂಬಂಧಿಸಿದಂತೆ ಈ ಕೆಳಕಂಡ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಶ್ರೀ ಕೆ. ಉಮಾಪತಿ,

ಸರ್ಕಾರದ ಅಧೀನ ಕಾರ್ಯದರ್ಶಿ

ಅರಣ್ಯ, (ಸೇವೆಗಳು),

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ,

ರೂ. ನಂ. 437, ಬಹುಮಹಡಿ ಕಟ್ಟಡ,

ಬೆಂಗಳೂರು-560 001.

PR. 27

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC- 200

ಅರ್ಚನ ಎಂ.ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ,

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ,

(ಅರಣ್ಯ-ಸಿ ಮತ್ತು ಸಮನ್ವಯ)

ವಿಧಾನ ಪರಿಷತ್ತು ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕವಿಪ:ಆ-1:141:ವಿಪಮುಸ:ಆಕಾ:2018, ಬೆಂಗಳೂರು, ದಿನಾಂಕ: 09-01-2019.

2003 ಮತ್ತು 2009ನೇ ಸಾಲಿನ ಕರ್ನಾಟಕ ವಿಧಾನ ಪರಿಷತ್ತಿನ ನೇಮಕಾತಿ ಮತ್ತು ಸೇವಾ ಷರತ್ತುಗಳ ನಿಯಮಾವಳಿಗಳ ನಿಯಮ 7 (i) ಮತ್ತು (iii)ರ ಪ್ರಕಾರ ಶ್ರೀ ಎಸ್.ಪಿ. ದೇಸಾಯಿ, ಉಪ ಪ್ರಧಾನ ವ್ಯವಸ್ಥಾಪಕರು (ನಿವೃತ್ತ), ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ, ಇವರನ್ನು ದಿನಾಂಕ: 02.07.2018ರ ಪೂರ್ವಹ್ನದಿಂದ ಜಾರಿಗೆ ಬರುವಂತೆ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರು ಇವರ ಸೇವೆಯನ್ನು (೩೭)೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ಭಾಗ ೨ ಇಚ್ಛಿಸುವವರೆಗೆ ಅಥವಾ ಹಾಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರ ಅಧಿಕಾರಾವಧಿ ಮುಗಿಯುವವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರಗೆ ಗುತ್ತಿಗೆ ಆಧಾರದ ಮೇಲೆ ವಿಧಾನ ಪರಿಷತ್ತಿನ ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರ ಆಪ್ತ ಕಾರ್ಯದರ್ಶಿಯಾಗಿ ನೇಮಕ

ಮಾಡಲಾಗಿದೆ.

ಸದರಿಯವರ ವೇತನವನ್ನು ಹಾಗೂ ನಿಬಂಧನೆ ಮತ್ತು ಷರತ್ತುಗಳನ್ನು ಆರ್ಥಿಕ ಇಲಾಖೆಯ ಅಭಿಪ್ರಾಯ ಬಂದ ನಂತರ ನಿಗಧಿ ಪಡಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

PR. 19

ಮಾನ್ಯ ವಿಶೇಷ ಮಂಡಳಿಯ ಆದೇಶಾನುಸಾರ,

ಎನ್. ಜಯಂತಿ

ಅಧೀನ ಕಾರ್ಯದರ್ಶಿ(ಪ್ರ),

ಕರ್ನಾಟಕ ವಿಧಾನ ಪರಿಷತ್ತು.

ಕಾನೂನು ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 5 ಎಲ್‌ಸಿಎಲ್ 2018, ಬೆಂಗಳೂರು, ದಿನಾಂಕ: 08-01-2019.

ನೋಟರಿ ಅಧಿನಿಯಮ, 1952 ಹಾಗೂ ನೋಟರಿ ನಿಯಮಾವಳಿ, 1956 ನಿಯಮ 8(1)ಅನ್ನು ನಿಯಮ 8(4)ರೊಡನೆ ಓದಿಕೊಂಡಂತೆ ಪ್ರದತ್ತವಾದ ಅಧಿಕಾರದನ್ವಯ ಶ್ರೀ ಎಂ.ಎಲ್.ಸುರೇಶ, ವಕೀಲರು, ಮದ್ದಿಕಯಾಚಮಾನಹಳ್ಳಿ, ಮಡುವಿನಕೋಡಿ ಅಂಚೆ, ಬೂಕನಕೆರೆ ಹೋಬಳಿ, ಕೃಷ್ಣರಾಜಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ ಇವರನ್ನು ನೋಟರಿ ವೃತ್ತಿ ಪ್ರಮಾಣ ಪತ್ರ ನೀಡಲಾಗುವ ದಿನಾಂಕದಿಂದ ಜಾರಿಗೆ ಬರುವಂತೆ 05 (ಐದು) ವರ್ಷಗಳ ಅವಧಿಗೆ ಕೃಷ್ಣರಾಜಪೇಟೆ ಕಂದಾಯ ತಾಲ್ಲೂಕಿನಲ್ಲಿ ಹೆಚ್ಚುವರಿಯಾಗಿ ಸೃಜಿಸಿರುವ ನೋಟರಿ ಹುದ್ದೆಗೆ ನೇಮಿಸಲಾಗಿದೆ.

ಸದರಿ ವಕೀಲರು ಲೆಕ್ಕ ಶೀರ್ಷಿಕೆ 0070-ಇತರೆ ಆಡಳಿತಾತ್ಮಕ ಸೇವಗಳು-01-ನ್ಯಾಯ ಪರಿಪಾಲನೆ -501-0-ಇತರೆ ಸ್ವೀಕೃತಿಗಳು-06-ಇತರೆ ಬಾಬ್ತುಗಳಿಗೆ (0070-01-501-0-06) ನೋಟರಿ ನಿಯಮಗಳಲ್ಲಿ ನಿಗಧಿಪಡಿಸಲಾದ `. 2000.00(ಎರಡು ಸಾವಿರ ರೂಪಾಯಿಗಳು ಮಾತ್ರ) ಶುಲ್ಕವನ್ನು ಸರ್ಕಾರಿ ಖಜಾನೆಯಲ್ಲಿ ಜಮೆ ಮಾಡಿ ಅದರ ಮೂಲ ಚಲನ್ ಮತ್ತು ಹುಟ್ಟಿದ ದಿನಾಂಕವನ್ನು ಧೃಡೀಕರಿಸಬಲ್ಲ ದಾಖಲೆಯನ್ನು ಹಾಜರುಪಡಿಸಿದ ನಂತರ ನೋಟರಿ ವೃತ್ತಿ ಪ್ರಮಾಣ ಪತ್ರವನ್ನು ನೀಡಲಾಗುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR. 20

ಆರ್. ಪದ್ಮಾವತಿ

SC. 25

ಸರ್ಕಾರದ ಅಧೀನ ಕಾರ್ಯದರ್ಶಿ,

ಕಾನೂನು ಇಲಾಖೆ (ಆಡಳಿತ-2)

ಕರ್ನಾಟಕ ವಿಧಾನ ಪರಿಷತ್ತು ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಕವಿಪ : ಆ-1:175:ಉಸ:ಆಕಾ:2019, ಬೆಂಗಳೂರು, ದಿನಾಂಕ : 14-01-2019.

ಶ್ರೀ ರೇಣುಕಾ ಮೂರ್ತಿ ಎಸ್.ಜಿ. ಮೀನುಗಾರಿಕೆ ಸಹಾಯಕ ನಿರ್ದೇಶಕರು, (ಶ್ರೇಣಿ-2), ಮೀನುಗಾರಿಕೆ ನಿರ್ದೇಶನಾಲಯ, ಬೆಂಗಳೂರು, ಇವರನ್ನು

ಅವರದೇ ಆದ ವೇತನ ಮತ್ತು ವೇತನ ಶ್ರೇಣಿ ಹಾಗೂ ಜೊತೆಗೆ ಲಭ್ಯವಿರುವ ವಿಶೇಷ ಭತ್ಯೆಯೊಂದಿಗೆ ದಿನಾಂಕ : 01-01-2019 ರಿಂದ ಜಾರಿಗೆ ಬರುವಂತೆ ವಿಧಾನ ಪರಿಷತ್ತಿನ ಮಾನ್ಯ ಉಪ ಸಭಾಪತಿಯವರು ಇವರ ಸೇವೆಯನ್ನು ಇಚ್ಛಿಸುವವರೆಗೆ ಅಥವಾ ಮಾನ್ಯ ಉಪ ಸಭಾಪತಿಯವರ ಅಧಿಕಾರಾವಧಿ ಮುಗಿಯುವವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ವಿಧಾನ ಪರಿಷತ್ತಿನ ಮಾನ್ಯ ಉಪ ಸಭಾಪತಿಯವರ ಆಪ್ತ ಕಾರ್ಯದರ್ಶಿಯಾಗಿ ನಿಯೋಜನೆ ಮೇರೆಗೆ ನೇಮಕ ಮಾಡಲಾಗಿದೆ.

ಮಾನ್ಯ ಸಭಾಪತಿಯವರ ಆದೇಶಾನುಸಾರ, PR -21

ಎನ್. ಜಯಂತಿ

ಅಧೀನ ಕಾರ್ಯದರ್ಶಿ (ಪ್ರ), ಕರ್ನಾಟಕ ವಿಧಾನ ಪರಿಷತ್ತು.

ವಸತಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ವಇ 059 ಕೊಮಂಇ 2018, ಬೆಂಗಳೂರು, ದಿನಾಂಕ: 08-01-2019

ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ, 1973 ರ ಕಲಂ 34 (2) (ಎ) ರನ್ವಯ ಮಾನ್ಯ ವಸತಿ ಸಚಿವರು, ಕರ್ನಾಟಕ ಸರ್ಕಾರ ಇವರನ್ನು ದಿನಾಂಕ: 28-12-2018 ರಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದೆ.

PR. 22

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC. 50

ಎಸ್. ವೆಂಕಟೇಶ್

ಸರ್ಕಾರದ ಅಧೀನ ಕಾರ್ಯದರ್ಶಿ-2

ವಸತಿ ಇಲಾಖೆ.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ೩೯

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 51 ಎಫ್‌ಪಿಸಿ 2018, ಬೆಂಗಳೂರು, ದಿನಾಂಕ: 07.01.2019

ಅಧಿಸೂಚನೆ ಸಂಖ್ಯೆ : ಅಪಜೀ 51 ಎಫ್‌ಪಿಸಿ 2018, ದಿನಾಂಕ: 02-07-2018 ರನ್ವಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ಸಚಿವರ ಅಧಿಕಾರಾವಧಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.

ಶ್ರೀ ಬಿ. ನಾರಾಯಣ ರಾವ್, ಮಾನ್ಯ ವಿಧಾನಸಭಾ ಸದಸ್ಯರು, ನಂ. 30/29, ವಿಠಲರುಕ್ಮಿಣಿ ಮಂದಿರದ ಹತ್ತಿರ, ತ್ರಿಪೂರಾಂತ, ಬಸವಕಲ್ಯಾಣ ತಾಲ್ಲೂಕು, ಬೀದರ್ ಜಿಲ್ಲೆ ಇವರನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರನಾಗಿ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.

PR. 25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 25

ಹೆಚ್.ಎಸ್. ಭಾಗ್ಯಲಕ್ಷ್ಮಿ

ಸರ್ಕಾರದ ಉಪ ಕಾರ್ಯದರ್ಶಿ

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 125 ಸಿಆರ್ಎಸ್ 2018, ಬೆಂಗಳೂರು, ದಿನಾಂಕ: 24.11.2018.

ವಿಷಯ : ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯ ವೃಂದ ಬಲದ ಬಗ್ಗೆ ಮಾಹಿತಿ ಒದಗಿಸಲು

ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವ ಬಗ್ಗೆ.

ಉಲ್ಲೇಖ: ಸರ್ಕಾರದ ಪ್ರಧಾನ ಕಾರ್ಯದರ್ಶಿ (ಆಯವ್ಯಯ ಮತ್ತು ಸಂಪನ್ಮೂಲ), ಆರ್ಥಿಕ ಇಲಾಖೆ

ಇವರ ಅ.ಸ.ಪತ್ರ ಸಂಖ್ಯೆ: ಆಇ 42 ಜಿಐಇ 2018, ದಿನಾಂಕ: 20-10-2018.

ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಮೂದಿಸಿರುವ ವೃಂದಬಲ ಹಾಗೂ ನಂತರ ಹುದ್ದೆಗಳ ಸೃಜನೆ/ರದ್ಧತಿ/ಉನ್ನತೀಕರಣದ ಬಗೆಗಿನ ಸರ್ಕಾರಿ ಆದೇಶಗಳೊಂದಿಗೆ ಪರಿಶೀಲಿಸಿ ಹುದ್ದೆಗಳ ನೈಜತೆಯನ್ನು ದೃಡೀಕರಿಸಲು ಹಾಗೂ ಇಲಾಖೆಯು ಒದಗಿಸುವ ಅಂಕಿ ಅಂಶಗಳನ್ನು ದೃಡೀಕರಿಸಿ ಪೂರ್ಣ ಮಾಹಿತಿಯನ್ನು ಆರ್ಥಿಕ ಇಲಾಖೆಯ ಉಪ ಕಾರ್ಯದರ್ಶಿ (ಆ&ಸಂ) ರವರಿಗೆ ಸಲ್ಲಿಸಲು ಹಾಗೂ ಈ ಅಂಕಿ ಅಂಶಗಳನ್ನು ಆರ್ಥಿಕ ಇಲಾಖೆಯು ಸಿದ್ದಪಡಿಸಿರುವ MODULE ನಲ್ಲಿ ತಾವೇ ದಾಖಲಿಸಿ ಅದರಲ್ಲಿ ಅಳವಡಿಸಿರುವ ಮಾಹಿತಿಯ ನಿಖರತೆಯನ್ನು ಸಹ ದೃಡೀಕರಿಸುವ ಜವಾಬ್ದಾರಿಯನ್ನು ನಿರ್ವಹಿಸಲು ಉಲ್ಲೇಖಿತ ಅರೆ ಸರ್ಕಾರಿ ಪತ್ರದನ್ವಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಗೆ ಸಂಬಂಧಿಸಿದಂತೆ ಈ ಕೆಳಕಂಡ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.

ಶ್ರೀ ಕೆ. ಉಮಾಪತಿ,

ಸರ್ಕಾರದ ಅಧೀನ ಕಾರ್ಯದರ್ಶಿ

ಅರಣ್ಯ (ಸೇವೆಗಳು),

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ,

ರೂಂ. ನಂ. 437, ಬಹುಮಹಡಿ ಕಟ್ಟಡ,

ಬೆಂಗಳೂರು-560 001

ಕಛೇರಿ ದೂರವಾಣಿ ಸಂಖ್ಯೆ:2203-2349

ಮೊಬೈಲ್ ಸಂಖ್ಯೆ: 9686940969

ಇ-ಮೇಲ್ ವಿಳಾಸ: [email protected]

PR. 26

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 20

ಹೆಚ್.ಸಿ. ರಾಜೇಂದ್ರ ಕುಮಾರ್

ಸರ್ಕಾರದ ಉಪ ಕಾರ್ಯದರ್ಶಿ

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

(ಅರಣ್ಯ ಮತ್ತು ಸಮನ್ವಯ) R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ಭಾಗ ೨ OFFICE OF THE DISTRICT & SESSIONS JUDGE, MYSURU.

NOTIFICATION

NO. ADMN/A/21861/2018, DATED: 06.12.2018

Sri.Mohankumar.N.T, Software Technician, District and Sessions Court, Mysuru, is granted Earned Leave for 09 days from 27.11.2018 to 05.12.2018. He met with car accident on 25.11.2018 injured his father and sister admitted to hospital in Channarayapatna to take care of them.

S.K.VANTIGODI

PR – 17

District & Sessions Judge,

Mysuru.

OFFICE OF THE DISTRICT & SESSIONS JUDGE, MYSURU.

NOTIFICATION

NO. ADMN/A/21636/2018, DATED: 03.12.2018

Sri.V.Puttaswamy, Chief Administrative Officer, District and Sessions Court, Mysuru, is permitted to surrender Earned Leave for 15 days from 01.12.2018 to 15.12.2018 (b.d.i.) for the calendar year 2018, out of 300 days of Earned Leave at his credit as per Endorsement No. GE 13 / J5 / 2018-19 / 1286 dated 30.11.2018, issued by the Accountant General (A & E), Karnataka, Bengaluru.

He shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered, as per the provisions contained in Rule 118(2) of K.C.S.Rs.

S.K.VANTIGODI

PR – 18

Prl. District & Sessions Judge,

Mysuru.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 07 February 2019. Indian Gazettes, https://egazette.servantsofknowledge.in/details/in.gazette.karnataka_new.2019-02-07.Part-2/. Archive identifier in.gazette.karnataka_new.2019-02-07.Part-2.