Servants of Knowledge
Karnataka Gazette · Government of Karnataka

Karnataka Gazette, Part Part-6, 07 February 2019

Published 07 February 2019

Part
Part-6
Identifier
in.gazette.karnataka_new.2019-02-07.Part-6
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಫೆಬ್ರವರಿ ೭, ೨೦೧೯ (ಮಾಘ ೧೮, ಶಕ ವರ್ಷ ೧೯೪೦)

Bengaluru, Thursday, February 7, 2019 (Magha 18, Shaka Varsha 1940)

ಸಂಪುಟ ೧೫೪

Volume 154

ಸಂಚಿಕೆ ೬

Issue 6

ಭಾಗ ೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ 02 ಭೂಸ್ವಾಚ 2018, ಬೆಂಗಳೂರು, ದಿನಾಂಕ:05.01.2019.

ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕು, ಮಾಡದಕೆರೆ ಹೋಬಳಿ, ಕಂಚಿಹಳ್ಳಿ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಿಗೆ ಸೇರಿದ 41-31 ಎಕರೆ ಜಮೀನು ಭೂಸ್ವಾಧೀನಪಡಿಸಲು ಭೂಸ್ವಾಧೀನ ಕಾಯ್ದೆ ಕಲಂ 11 (1) ರಡಿಯಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿಯವರ ಪ್ರಾಥಮಿಕ ಅಧಿಸೂಚನೆ ಸಂಖ್ಯೆ: ವಿಭೂಸ್ವಾ/ಭ್ರಮೇಯೋ/ಸಿಆರ್-2/2017-18, ದಿನಾಂಕ:29.06.2017 ರಲ್ಲಿ ಹೊರಡಿಸಿರುತ್ತಾರೆ. ಸದರಿ ಅಧಿಸೂಚನೆ ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ: 17.08.2017 ರಂದು ಪ್ರಕಟವಾಗಿದ್ದು, ಗ್ರಾಮ ಛಾವಡಿಯಲ್ಲಿ ದಿನಾಂಕ:

01.09.2017 ರಂದು ಪ್ರಚುರಪಡಿಸಲಾಗಿದೆ. ಪ್ರಾಥಮಿಕ ಅಧಿಸೂಚನೆಯನ್ನು ಗ್ರಾಮ ಛಾವಡಿಯಲ್ಲಿ ಪ್ರಚುರಪಡಿಸಿದ ದಿನಾಂಕದಿಂದ ಒಂದು ವರ್ಷದೊಳಗಾಗಿ ಅಂದರೆ, ದಿನಾಂಕ: 30.08.2018ರೊಳಗಾಗಿ ಕಲಂ 19 (1) ಮತ್ತು 19 (2)ರ ಅಧಿಸೂಚನೆಗೆ ಅನುಮೋದನೆ ಪಡೆಯಬೇಕಾಗಿತ್ತು. ಆದರೆ ವಿಶೇಷ ಭೂಸ್ವಾಧೀನಾಧಿಕಾರಿ, ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗ ಇವರು ಪತ್ರ ದಿನಾಂಕ: 26.07.2018 ರಲ್ಲಿ ಕಾರ್ಯಪಾಲಕ ಅಭಿಯಂತರರು, ಭದ್ರಾ ಮೇಲ್ದಂಡೆ ಯೋಜನೆ, ಹಿರಿಯೂರು ಕ್ಯಾಂಪ್ ಚಿತ್ರದುರ್ಗ ರವರು ಭೂಸ್ವಾಧೀನಪಡಿಸಿಕೊಳ್ಳಬೇಕಾದ ಜಮೀನುಗಳಿಗೆ ಪಕ್ಕ ಪೋಡಿಯಾಗಬೇಕಾಗಿದ್ದು, ಇಲಾಖೆಯ ಅಧಿಕಾರಿಗಳು ವಿಧಾನಸಭಾ ಚುನಾವಣೆ ತೊಡಗಿದ್ದ ಕಾರಣ, ಸಂಯುಕ್ತ ಮೋಜಿಣಿ ಹಾಗೂ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ಸಮೀಕ್ಷೆ ನಡೆಸಲು ವಿಳಂಬವಾದ ಕಾರಣ ಹಾಗೂ ನೂತನ ವಿಧಾನಸಭಾ ಸದಸ್ಯರೊಂದಿಗೆ ಚರ್ಚಿಸಿ, ಸಮಿತಿ ರಚನೆಗೆ ಪ್ರಸ್ತಾವನೆ ಪಡೆದು ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದೆ. ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಕಲಂ 16 (2) ರಡಿ ಅನುಮೋದನೆ ಪಡೆದು ನಂತರ ಕಲಂ 19 (1) ರ ಅಂತಿಮ ಅಧಿಸೂಚನೆಗೆ ಪ್ರಸ್ತಾವನೆ ಸಲ್ಲಿಸಬೇಕಾಗಿರುತ್ತದೆ. ಈ ಕಾರಣದಿಂದ ಕಾಯ್ದೆಯ ಕಲಂ 19 (7) ರಡಿ ದಿನಾಂಕ: 17.08.2018 ರಿಂದ ಅನ್ವಯಿಸುವಂತೆ 06 ತಿಂಗಳು ಕಾಲಾವಕಾಶ ವಿಸ್ತರಿಸುವಂತೆ ಕೋರಿದ್ದು, ಅದರಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 02 ಭೂಸ್ವಾಚ 2018, ದಿನಾಂಕ: 07.09.2018 ರಲ್ಲಿ ದಿನಾಂಕ: 01.09.2018 ರಿಂದ 31.10.2018ರ ವರೆಗೆ ಕಾಲಾವಕಾಶ ವಿಸ್ತರಿಸಿ ಆದೇಶ ಹೊರಡಿಸಲಾಗಿತ್ತು. ವಿಶೇಷ ಭೂಸ್ವಾಧೀನಾಧಿಕಾರಿ, ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗ ರವರ ಪತ್ರ ದಿನಾಂಕ: 26.10.2018 ರಲ್ಲಿ ಪ್ರಕರಣದಲ್ಲಿ ಪುನರ್‌ವಸತಿ ಮತ್ತು ಪುನರ್ ವ್ಯವಸ್ಥೆಯ ಸಭೆ ಅಪರ ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ, ಪುನರ್‌ವಸತಿ ಮತ್ತು ಪುನರ್ ವ್ಯವಸ್ಥೆ ರವರ ಅಧ್ಯಕ್ಷತೆಯಲ್ಲಿ ನಡೆಸಲಾಗಿದ್ದು, ಮುಂದಿನ ಕ್ರಮ ವಹಿಸಲಾಗುತ್ತಿದೆ. ಅದರನ್ವಯ ಕಲಂ 16(2)ರ ಕರಡು ಯಾದಿಗೆ ಕಲಂ 17 (2) ರಡಿ ಅನುಮೋದನೆ ಪಡೆದ ನಂತರ ಕಲಂ 19(1) ಮತ್ತು 19(2)ರ ಅಂತಿಮ ಅಧಿಸೂಚನೆಗೆ ಅನುಮೋದನೆ ಪಡೆಯಲು ಕಾಲಾವಕಾಶ ಅವಶ್ಯವಿರುತ್ತದೆ. ಆದುದರಿಂದ, ದಿನಾಂಕ: 01.11.2018 ರಿಂದ 03 ತಿಂಗಳ ಕಾಲಾವಕಾಶ ವಿಸ್ತರಿಸಲು ಕೋರಿಕೆ ಸಲ್ಲಿಸಿರುತ್ತಾರೆ.

(೭೩) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೭, ೨೦೧೯ ಭಾಗ ೬ ವಿಶೇಷ ಭೂಸ್ವಾಧೀನಾಧಿಕಾರಿ, ಭದ್ರಾ ಮೇಲ್ದಂಡೆ ಯೋಜನೆ ಇವರು ದಿನಾಂಕ:26.10.2018ರ ಪತ್ರದಲ್ಲಿ ತಿಳಿಸಿರುವ ಕಾರಣಗಳ ಹಿನ್ನಲೆಯಲ್ಲಿ

ಹಾಗೂ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವುದರಿಂದ, "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 19 (7) ರಡಿ ಸರ್ಕಾರವು ಪದತ್ತವಾದ ಅಧಿಕಾರವನ್ನು ಚಲಾಯಿಸಿ, ಪ್ರಕರಣದಲ್ಲಿ 19 (1) ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 01.11.2018 ರಿಂದ 31.01.2019 ರವರೆಗೆ ಅಂದರೆ ಮೂರು ತಿಂಗಳುಗಳಿಗೆ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ.

PR 07

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC.25

ಉಮಾದೇವಿ.ಆರ್

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂಸ್ವಾಧೀನ-2) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 07 February 2019. Indian Gazettes, https://egazette.servantsofknowledge.in/details/in.gazette.karnataka_new.2019-02-07.Part-6/. Archive identifier in.gazette.karnataka_new.2019-02-07.Part-6.