ಬೆಂಗಳೂರು, ಗುರುವಾರ, ಫೆಬ್ರವರಿ ೨೮, ೨೦೧೯ (ಫಾಲ್ಗುಣ ೯, ಶಕ ವರ್ಷ ೧೯೪೦)
Bengaluru, Thursday, February 28, 2019 (Phalguna 9, Shaka Varsha 1940)
ಸಂಪುಟ ೧೫೪
Volume 154
ಸಂಚಿಕೆ ೯
Issue 9
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಸಹಕಾರ ಸಚಿವಾಲಯ ವಿಷಯ: ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಮಂದಿರ(ರಿ), ಚಿಕ್ಕಪೇಟೆ, ತುಮಕೂರು ಈ
ಸಂಘಕ್ಕೆ ಆಡಳಿತಾಧಿಕಾರಿ ನೇಮಸುವ ಬಗ್ಗೆ.
ಓದಲಾಗಿದೆ: ಸಹಕಾರ ಸಂಘಗಳ ಉಪ ನಿಬಂಧಕರು, ತುಮಕೂರು ಇವರ ಪತ್ರ
ಸಂಖ್ಯೆ: ಡಿಆರ್ಟಿ/ಸಸಂ/46/1984-85/ಸಿ.ಆರ್-26/2018—19, ದಿ: 21-12-2018.
ಪ್ರಸ್ತಾವನೆ :
ಮೇಲೆ ಓದಲಾದ ಸಹಕಾರ ಸಂಘಗಳ ಉಪ ನಿಬಂಧಕರು, ತುಮಕೂರು ಇವರ ಪತ್ರದಲ್ಲಿ, ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಮಂದಿರ(ರಿ), ಚಿಕ್ಕಪೇಟೆ, ತುಮಕೂರು ಸಂಘದ ಸದಸ್ಯರು ಸಲ್ಲಿಸಿರುವ ದೂರು ಅರ್ಜಿ ಹಿನ್ನೆಲೆಯಲ್ಲಿ ಸಂಘದ ವಿರುದ್ಧ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 25 ರಡಿ ತನಿಖೆ ಮಾಡಲು ಕೋರಿದ್ದು, ಈ ಬಗ್ಗೆ ಸಂಘದ ಅಧ್ಯಕ್ಷರು/ಕಾರ್ಯದರ್ಶಿಗೆ ತಿಳುವಳಿಕೆ ಪತ್ರ ನೀಡಿದ್ದು, ಸಂಘದಿಂದ ಯಾವುದೇ ಮಾಹಿತಿ ಸಲ್ಲಿಸಿರುವುದಿಲ್ಲವೆಂದು ಹಾಗೂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ಸಲ್ಲಿಸಿರುವುದಿಲ್ಲವೆಂದು ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಹಿರಿಯ ನಿರೀಕ್ಷಕರಿಗೆ ವರದಿ ನೀಡಲು ಸೂಚಿಸಲಾಗಿದೆ ಎಂದು ತಿಳಿಸಿರುತ್ತಾರೆ.
ಸದರಿಯವರು ವರದಿ ಸಲ್ಲಿಸುತ್ತಾ ಸಂಘದ ಅಧ್ಯಕ್ಷರ ಬಗ್ಗೆ ಅವಿಶ್ವಾಸ ನಿರ್ಣಯ ತಂದಿರುವ ಬಗ್ಗೆ, ಸಂಘಕ್ಕೆ ಹೊಸ ಕಾರ್ಯದರ್ಶಿಯವರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಮತ್ತು ಸಂಘದಲ್ಲಿ ನಗದು ವ್ಯವಹಾರವನ್ನು ನಡೆಸಿರುವ ಬಗ್ಗೆ ನಡವಳಿ ಪುಸ್ತಕವನ್ನು ಹಾಜರುಪಡಿಸಿಲ್ಲವೆಂದು, ಸಂಘದ ಎಲ್ಲಾ ಲೆಕ್ಕಪುಸ್ತಕಗಳು ಸಂಘದ ಅಧ್ಯಕ್ಷರಾದ ಶ್ರೀ ಡಿ.ಎಸ್. ಕುಮಾರ್ ಇವರ ಬಳಿ ಇದ್ದು, ಅಧ್ಯಕ್ಷರು ಸಂಘದ ಕಲಾಪಗಳಲ್ಲಿ ಸರಿಯಾಗಿ ಭಾಗವಹಿಸುತ್ತಿಲ್ಲವೆಂದು, ಸಂಘದ ದಿನನಿತ್ಯದ ಲೆಕ್ಕ ಪುಸ್ತಕಗಳನ್ನು ಪರಿಶೀಲಿಸಿ ವ್ಯವಹಾರಕ್ಕೆ ಅವಶ್ಯಕವಿರುವ ಹಣಕಾಸು ಬಾಬ್ತುಗಳಗೆ ಸಹಿ ಮಾಡುತಿಲ್ಲವೆಂದು ಹಾಗೂ ಸಂಘದ ವತಿಯಿಂದ ನಡೆಯುತ್ತಿರುವ ಮಹಾವೀರ ಭವನ, ಜೈನ ಭವನ, ಮಂದಗಿರಿ, ದಿಗಂಬರ ಜೈನ ದೇವಸ್ಥಾನ ಇವುಗಳಿಂದ ಬರುವ ಆದಾಯವನ್ನು ಸಂಘದ ಬ್ಯಾಂಕ್ ಖಾತೆಗೆ ಜಮಾ ಮಾಡದೆ ನಗದು ವ್ಯವಹಾರವನ್ನು ನಡೆಸುತ್ತಿರುವುದಾಗಿ, ಸಂಘದ ಅಧ್ಯಕ್ಷರು ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿಲ್ಲವೆಂದು ವರದಿ ನೀಡಿರುತ್ತಾರೆ. ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದು, ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಶೂನ್ಯ ಪರಿಸ್ಥಿತಿ ಉಂಟಾಗಿದ್ದು, ವಾರ್ಷಿಕ ಸರ್ವಸದಸ್ಯ ಸಭೆಯನ್ನು ನಡೆಸಲು ಸಂಘವು ವಿಫಲವಾಗಿರುತ್ತದೆಂದು ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಮಂದಿರ(ರಿ), ಚಿಕ್ಕಪೇಟೆ, ತುಮಕೂರು ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುತ್ತಾರೆ.
ಈ ಮೇಲೆ ವಿವರಿಸಿರುವ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಮಂದಿರ(ರಿ), ಚಿಕ್ಕಪೇಟೆ, ತುಮಕೂರು ಸಂಘದಲ್ಲಿನ ಕಾರ್ಯಕಾರಿ ಸಮಿತಿ ಸದಸ್ಯರು ರಾಜೀನಾಮೆ ನೀಡಿ ಶೂನ್ಯ ಪರಿಸ್ಥಿತಿ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಘದ ಹಾಗೂ ಸಂಘದ ವತಿಯಿಂದ ನಡೆಯುತ್ತಿರುವ ಮಂದಿರಗಳ ಹಿತದೃಷ್ಟಿಯಿಂದ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಸಇ 04 ಸಸಂನೋ 2019 ಬೆಂಗಳೂರು, ದಿನಾಂಕ: 23.01.2019
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರನ್ವಯ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥಸ್ವಾಮಿ ಜಿನ ಮಂದಿರ(ರಿ), ಚಿಕ್ಕಪೇಟೆ, ತುಮಕೂರು ಈ ಸಂಘಕ್ಕೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು,
(೧೪೫)೧೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೧ ತುಮಕೂರು ಉಪ ವಿಭಾಗ, ತುಮಕೂರು ಜಿಲ್ಲೆ ಇವರನ್ನು ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಆರು (6) ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.
ಆಡಳಿತಾಧಿಕಾರಿಗಳು ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಸೂಚಿಸಲಾಗಿದೆ.
PR.43
SC.20
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಆರ್. ಸೆಂತಾಮರೈ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ವಿಷಯ: ನ್ಯೂ ಎಜುಕೇಷನ್ ಸೊಸೈಟಿ, ರಾಯಚೂರು, ಈ ಸಂಸ್ಥೆಗೆ ಆಡಳಿತಾಧಿಕಾರಿಯನ್ನು ನೇಮಿಸುವ ಬಗ್ಗೆ.
ಓದಲಾಗಿದೆ : 1) ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, ರಾಯಚೂರು ಜಿಲ್ಲೆ ರಾಯಚೂರು, ರವರ ಪತ್ರ ಸಂಖ್ಯೆ: ಉನಿರಾ/ವಿ-3/ಸಂಘ, ಸಂಸ್ಥೆ/ ನ್ಯೂ.ಎ.ಸೊ 2018-19/ 3668, ದಿನಾಂಕ: 07.02.2018, 25.09.2018 ಮತ್ತು 14.12.2018.
2) ಸರ್ಕಾರದ ನೋಟೀಸ್ ಸಂಖ್ಯೆ: ಸಇ 35 ಸಸಂನೋ 2018, ದಿ: 06.04.2018.
3) ಅಧ್ಯಕ್ಷರು, ನ್ಯೂ ಎಜುಕೇಷನ್ ಸೊಸೈಟಿ, ರಾಯಚೂರು, ಇವರ ಲಿಖಿತ ಉತ್ತರ ದಿನಾಂಕ: 18.12.2018.
ಪ್ರಸ್ತಾವನೆ:
ಮೇಲೆ ಕ್ರಮ ಸಂಖ್ಯೆ(1)ರಲ್ಲಿ ಓದಲಾದ ಪತ್ರದಲ್ಲಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, ರಾಯಚೂರು 'ಇವರು ನ್ಯೂ ಎಜುಕೇಷನ್ ಸೊಸೈಟಿ, ರಾಯಚೂರು, ಇದರ ಕಾರ್ಯದರ್ಶಿ, ಶ್ರೀ ಅಬ್ದುಲ್ ಸಮದ್ ಸಿದ್ದೀಖಿ ಹಾಗೂ ಇತರರು ಸಂಘದ ಅಧ್ಯಕ್ಷರಾದ ಶ್ರೀ ಮಹ್ಮದ್ ಹನೀಫ್ ಖುರೇಷಿ, ಇವರು ಸಂಘದ ಬೈಲಾ ರೀತಿ ಕಾರ್ಯನಿರ್ವಹಿಸದೇ ಸಭೆಗಳನ್ನು ಕರೆಯುವುದು ಮತ್ತು ಆಡಳಿತವನ್ನು ಸರಿಯಾಗಿ ಜರುಗಿಸದೇ ಇರುವ ಕುರಿತು ದೂರು ನೀಡಿದ್ದು, ಈ ಬಗ್ಗೆ ವಿಚಾರಣೆ ಜರುಗಿಸಲಾಗಿ ಸಂಘದ ಬೈಲಾ ಸಂಖ್ಯೆ 7(ಬಿ) ರನ್ವಯ ನಿರ್ದಿಷ್ಟ ಉದ್ದೇಶಗಳಿಗಾಗಿ ವಾರ್ಷಿಕ ಮಹಾಸಭೆಯನ್ನು ಕರೆಯಬೇಕಾಗಿದ್ದು, ಯಾವುದೇ ನಿರ್ದಿಷ್ಟ ಉದ್ದೇಶಗಳಿಲ್ಲದೇ ಸಭೆಯನ್ನು ಸಂಘದ ಹೊರಗಡೆ ಜಾಮಿಯಾ ಮಸ್ಜೀದ್, ಸರಾಫ್ ಬಜಾರ್ನಲ್ಲಿ ಕರೆಯಲಾಗಿದ್ದು, ಇದು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಸರಿಯಾಗಿರುವುದಿಲ್ಲವೆಂದು ಹಾಗೂ ಆಡಳಿತ ಮಂಡಳಿಯಲ್ಲಿ ಹೊಂದಾಣಿಕೆ ಇಲ್ಲದೇ ಶಿಕ್ಷಣ ಸಂಸ್ಥೆಯ ಗುಣಮಟ್ಟವು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿರುತ್ತದೆಂದು, ಈ ಕಾರ್ಯಕಾರಿ ಸಮಿತಿಯಲ್ಲಿ ಎರಡು ಬಣಗಳಿದ್ದು, ಅಧ್ಯಕ್ಷರ ನೇತೃತ್ವದ ಒಂದು ಬಣ ಮತ್ತು ಕಾರ್ಯದರ್ಶಿಯ ನೇತೃತ್ವದ ಒಂದು ಬಣ ಈ ಎರಡು ಬಣಗಳಲ್ಲಿ ವಿವಾದಗಳು ಮುಂದುವರೆದಿದ್ದು, ಯಾವುದೇ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲವೆಂದು, ಸನ್ 2016-17ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇ.12 ರಷ್ಟು ಫಲಿತಾಂಶ ಬಂದಿರುತ್ತದೆಂದು ಹಾಗೂ ಶಾಲೆಯ ಶಿಕ್ಷಕ/ಶಿಕ್ಷಕೇತರ ನೌಕರರ ನೇಮಕಾತಿಯು ಸ್ಥಗಿತಗೊಂಡಿರುತ್ತದೆಂದು, ಈ ಹಿನ್ನೆಲೆಯಲ್ಲಿ ಸಂಘದ ಆಡಳಿತ ಮಂಡಳಿಯನ್ನು ರದ್ದುಗೊಳಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕೆಂದು ಕೋರಿರುತ್ತಾರೆ.
ಮೇಲೆ ಕ್ರಮ ಸಂಖ್ಯೆ(2)ರಲ್ಲಿ ಓದಲಾದ ನೋಟೀಸಿನಲ್ಲಿ ಸಹಕಾರ ಸಂಘಗಳ ಉಪ ನಿಬಂಧಕರು, ರಾಯಚೂರು, ಇವರ ಶಿಫಾರಸ್ಸನ್ನು ಪರಿಗಣಿಸಿ, ನ್ಯೂ ಎಜುಕೇಷನ್ ಸೊಸೈಟಿ, ರಾಯಚೂರು, ಈ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ ನೇಮಿಸಬಾರದೆಂಬ ಬಗ್ಗೆ, ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ, ಸಂಘದ ಅಧ್ಯಕ್ಷರಿಗೆ ತಿಳಿಸಲಾಗಿತ್ತು.
ಮೇಲೆ ಕ್ರಮ ಸಂಖ್ಯೆ(3)ರಲ್ಲಿ ಓದಲಾದ ಅಧ್ಯಕ್ಷರು, ನ್ಯೂ ಎಜುಕೇಷನ್ ಸೊಸೈಟಿ, ರಾಯಚೂರು ಇವರ ಲಿಖಿತ ಉತ್ತರದಲ್ಲಿ ಸಂಘದ ಕಾರ್ಯದರ್ಶಿಯು ಸಾಮಾನ್ಯ ಸಭೆಯನ್ನು ದಿನಾಂಕ: 04.11.2018 ರಂದು ನಡೆಸಿ ಸಂಘಕ್ಕೆ ಚುನಾವಣೆ ನಡೆಸಲು ತೀರ್ಮಾನಿಸಿದ್ದು, ಅದರಂತೆ ದಿನಾಂಕ: 30.12.2018 ರಂದು ಚುನಾವಣಾಧಿಕಾರಿಯಾಗಿ ಶ್ರೀ ತಾರೀಖ್ ಹುಸೇನ್ ರಜ್ವಿ ಇವರನ್ನು ನೇಮಿಸಿಕೊಂಡಿದ್ದು, ಚುನಾವಣಾ ಕಾರ್ಯಗಳು ಪ್ರಗತಿಯಲ್ಲಿರುತ್ತವೆಂದು ಸಾಮಾನ್ಯ ಸಭೆಗೆ ಚುನಾವಣೆಯನ್ನು ನಡೆಸಲು ಪರಮಾಧಿಕಾರವಿದ್ದು, ಅದರಂತೆ ಚುನಾವಣೆ ಜರುಗಿಸಲಾಗುತ್ತಿದ್ದು, ಈ ಸಂದರ್ಭದಲ್ಲಿ ಆಡಳಿತಾಧಿಕಾರಿಯನ್ನು ಸಂಘಕ್ಕೆ ನೇಮಿಸುವ ಅವಶ್ಯಕತೆಯಿಲ್ಲವೆಂದು ತಿಳಿಸುತ್ತಾ ಚುನಾವಣೆ ನಡೆಸಲು ಸಹಕರಿಸಬೇಕೆಂದು ಕೋರಿರುತ್ತಾರೆ.
ಮೇಲ್ಕಂಡ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, ಸಂಘದ ವಿರುದ್ಧದ ಆರೋಪಗಳ ಕುರಿತು ಯಾವುದೇ ದಾಖಲೆಗಳೊಂದಿಗೆ ಸರಿಯಾದ ಸಮಜಾಯಿಷಿಯನ್ನು ಅಧ್ಯಕ್ಷರು ನೀಡಿರುವುದಿಲ್ಲ. ಸಂಘದಲ್ಲಿ 2 ಬಣಗಳಿದ್ದು, ವಿವಾದಗಳಿಂದ ಕೂಡಿದ್ದರೂ, ಸಂಘಕ್ಕೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುತ್ತಿರುವುದು ಸೂಕ್ತವಾಗಿರುವುದಿಲ್ಲ. ಸಂಘದ ಅಧ್ಯಕ್ಷರು ಸಂಘದ ಬೈಲಾ ರೀತಿ ಕಾರ್ಯನಿರ್ವಹಿಸದೇ ಸಭೆಗಳನ್ನು ಕರೆಯುವುದು ಮತ್ತು ಆಡಳಿತವನ್ನು ಸರಿಯಾಗಿ ಜರುಗಿಸದೇ ಬೈಲಾ ಸಂಖ್ಯೆ 7(ಬಿ) ಯನ್ನು ಉಲ್ಲಂಘಿಸಿರುವುದು ಹಾಗೂ ಸಂಘದ ಉಪ ನಿಯಮಗಳ ಪ್ರಕಾರ ಅಧ್ಯಕ್ಷರು ನಿರ್ವಹಿಸಬೇಕಾದ ಕರ್ತವ್ಯಗಳನ್ನು ನಿರ್ವಹಿಸಿಲ್ಲದಿರುವುದು, ಕಾರ್ಯದರ್ಶಿಯ ಕರ್ತವ್ಯಗಳನ್ನು ಅಧ್ಯಕ್ಷರು ನಿರ್ವಹಿಸಿರುವುದು, ಈ ಕಾರ್ಯಕಾರಿ ಸಮಿತಿಯಲ್ಲಿ ಎರಡು ಬಣಗಳಿದ್ದು, ವಿವಾದಗಳು ಮುಂದುವರೆದಿರುವುದರಿಂದ, ಯಾವುದೇ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿಲ್ಲವಾದ ಕಾರಣ, ಆಡಳಿತ ಮಂಡಳಿಯ ಒಳಜಗಳಗಳಿಂದ ಸೊಸೈಟಿಯ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಸಂಘದ ಹಾಗೂ ಸಂಘದ ವತಿಯಿಂದ ನಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಯ ಹಿತದೃಷ್ಟಿಯಿಂದ ನ್ಯೂ ಎಜುಕೇಷನ್ ಸೊಸೈಟಿ, ರಾಯಚೂರು, ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಸಇ 35 ಸಸಂನೋ 2018, ಬೆಂಗಳೂರು, ದಿನಾಂಕ: 02.02.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ-1960ರ ಕಲಂ 27(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ನ್ಯೂ ಎಜುಕೇಷನ್ ಸೊಸೈಟಿ ರಿ., ಟಿಪ್ಪು ಸುಲ್ತಾನ್ ರಸ್ತೆ, ರಾಯಚೂರು-584 101, ಈ ಸಂಘಕ್ಕೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ರಾಯಚೂರು ಉಪ ವಿಭಾಗ, ರಾಯಚೂರು ಇವರನ್ನು, ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೧೪೭ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಸಂಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಸೂಚಿಸಿದೆ.
PR-62
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-20
ಆರ್. ಸೆಂತಾಮರೈ
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ವಿಷಯ: ಹಟ್ಟಿ ಚಿನ್ನದ ಗಣಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಸಂಘ ನಿ., ಹಟ್ಟಿಕ್ಯಾಂಪ್, ಲಿಂಗಸುಗೂರು, ರಾಯಚೂರು ಜಿಲ್ಲೆ, ಈ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವ ಬಗ್ಗೆ.
ಓದಲಾಗಿದೆ : ,1) ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, ರಾಯಚೂರು ಜಿಲ್ಲೆ, ರಾಯಚೂರು ರವರ ಪತ್ರ ಸಂಖ್ಯೆ: ಉನಿರಾ/ವಿ-3/ಸಂಘ, ಸಂಸ್ಥೆ/2018-19/3586, ದಿನಾಂಕ: 19.03.2018.
2) ಸರ್ಕಾರದ ನೋಟೀಸ್ ಸಂಖ್ಯೆ: ಸಇ 54 ಸಸಂನೋ 2018, ದಿ: 25.05.2018.
3) ಪ್ರಧಾನ ಕಾರ್ಯದರ್ಶಿ, ಹಟ್ಟಿ ಚಿನ್ನದ ಗಣಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಸಂಘ ನಿ., ರಾಯಚೂರು, ಇವರ ಲಿಖಿತ ಉತ್ತರ ದಿನಾಂಕ: 16.08.2018.
ಪ್ರಸ್ತಾವನೆ:
ಮೇಲೆ ಕ್ರಮ ಸಂಖ್ಯೆ(1)ರಲ್ಲಿ ಓದಲಾದ ಪತ್ರದಲ್ಲಿ ಸಂಘಗಳ ಜಿಲ್ಲಾ ನೋಂದಣಾಧಿಕಾರಿಗಳು, ರಾಯಚೂರು ಜಿಲ್ಲೆ, ರಾಯಚೂರು, ಇವರು ಸಂಘದ ವಿರುದ್ಧ ಶ್ರೀ ಆನಂದ್ ಮತ್ತು ಇತರ 185 ಸದಸ್ಯರು ಸಲ್ಲಿಸಿರುವ ದೂರು ಅರ್ಜಿಯ ವಿಚಾರಣೆ ಜರುಗಿಸಿದ್ದು, ವಿಚಾರಣೆಯಲ್ಲಿ ಸದಸ್ಯರ ಗಮನಕ್ಕೆ ಬಾರದೇ ವಾರ್ಷಿಕ ಮಹಾ ಸಭೆಯನ್ನು ಜರುಗಿಸಿದ್ದು, ಇದು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960 ರ ಕಲಂ 11(4) ರ ಉಲ್ಲಂಘನೆಯಾಗಿರುತ್ತದೆಂದು, ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ 1598 ಕಾರ್ಮಿಕರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ್ದು, ಕೇವಲ 220 ಕಾರ್ಮಿಕರನ್ನು ಮಾತ್ರ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿದ್ದು, ಉಳಿದವರಿಗೆ ಹೊಸ ಸದಸ್ಯತ್ವ ಹೊಂದಲು ಸದಸ್ಯತ್ವ ನೀಡದೇ ಇರುವುದು ಕಂಡುಬಂದಿರುತ್ತದೆಂದು, ಸಂಘದ ಅಧ್ಯಕ್ಷರು/ಕಾರ್ಯದರ್ಶಿಗಳು ಸಂಘದ ಕಾರ್ಯಾಲಯವನ್ನು ಬಹುತೇಕ ದಿನಗಳಲ್ಲಿ ತೆರೆಯದೇ ಮುಚ್ಚಿರುತ್ತಾರೆಂದು, ಸಂಘಕ್ಕೆ ನೀಡಲಾದ ಗಣಕಯಂತ್ರಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿರುವುದಿಲ್ಲವೆಂದು, ಸಾಮಾನ್ಯ ಸಭೆಯನ್ನು ನಿಯಮದ ಪ್ರಕಾರ ಜರುಗಿಸಿರುವುಲ್ಲವೆಂದು ಈ ಹಿನ್ನೆಲೆಯಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960ರ ಪ್ರಕಾರ ಹಾಗೂ ಸಂಘದ ಬೈಲಾ ನಿಯಮಗಳನ್ವಯ ಸಂಘವು ಕಾರ್ಯಚಟುವಟಿಕೆಗಳನ್ನು ನಡೆಸದೇ ಇರುವುದರಿಂದ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಬೇಕೆಂದು ಸಹಕಾರ ಸಂಘಗಳ ಉಪ ನಿಬಂಧಕರು, ರಾಯಚೂರು ಜಿಲ್ಲೆ, ಇವರು ಸರ್ಕಾರವನ್ನು ಕೋರಿರುತ್ತಾರೆ.
ಮೇಲೆ ಕ್ರಮ ಸಂಖ್ಯೆ(2)ರಲ್ಲಿ ಓದಲಾದ ನೋಟಿಸಿನಲ್ಲಿ, ಸಹಕಾರ ಸಂಘಗಳ ಉಪ ನಿಬಂಧಕರು, ರಾಯಚೂರು ಜಿಲ್ಲೆ, ಇವರ ಕೋರಿಕೆಯನ್ನು ಪರಿಗಣಿಸಿ ಹಟ್ಟಿ ಚಿನ್ನದ ಗಣಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಸಂಘ ನಿ., ರಾಯಚೂರು ಈ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ?
ನೇಮಿಸಬಾರದೆಂಬ ಬಗ್ಗೆ, ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ, ಸಂಘದ ಅಧ್ಯಕ್ಷರು/ಕಾರ್ಯದರ್ಶಿ ಇವರಿಗೆ ತಿಳಿಸಲಾಗಿತ್ತು.
ಮೇಲೆ ಕ್ರಮ ಸಂಖ್ಯೆ(3)ರಲ್ಲಿ ಓದಲಾದ ಪ್ರಧಾನ ಕಾರ್ಯದರ್ಶಿ, ಹಟ್ಟಿ ಚಿನ್ನದ ಗಣಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಸಂಘ ನಿ., ರಾಯಚೂರು ಇವರ ಲಿಖಿತ ಉತ್ತರದಲ್ಲಿ ಸಂಘದ 2015 ರಿಂದ 2017 ರವರೆಗಿನ ಲೆಕ್ಕಪತ್ರದ ಆಡಿಟ್ ವರದಿ, ಸಾಮಾನ್ಯ ಸಭೆಯ ಪತ್ರ ಹಾಗೂ ಇನ್ನಿತರ ದಾಖಲಾತಿಗಳನ್ನು ಉಪ ನಿಬಂಧಕರಿಗೆ ನೀಡಲಾಗಿರುತ್ತದೆಂದು 2017ರ ಸಂಘದ ನವೀಕರಣವನ್ನು ಉಪ ನಿಬಂಧಕರೇ ಮಾಡಿಕೊಟ್ಟಿರುತ್ತಾರೆಂದು, ಸಂಘವು ಹಟ್ಟಿ ಚಿನ್ನದ ಗಣಿಯ ಆಡಳಿತ ಮಂಡಳಿಯ ಕಾರ್ಮಿಕರ ಮಕ್ಕಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡುತ್ತಿರುತ್ತದೆಂದು, ಸಂಘದ ಅಭಿವೃದ್ಧಿಯನ್ನು ಸಂಘದ ಸದಸ್ಯರಲ್ಲದವರು ಸಹಿಸದೇ ಆರೋಪ ಮಾಡಿದ್ದು, ಆರೋಪಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಒದಗಿಸಿದೇ ಇದ್ದರೂ ಏಕ ಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡು ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಸರಿಯಲ್ಲವೆಂದು, ಸಂಘವು ಬೈಲಾ ಪ್ರಕಾರ ನಿಯಮಗಳನ್ನು ಪಾಲಿಸಿದ್ದು, ಕಾನೂನು ಉಲ್ಲಂಘನೆ ಮಾಡಿರುವುದಿಲ್ಲವೆಂದು, ಆದ್ದರಿಂದ ಸಂಘವು ಸುಗಮವಾಗಿ ನಡೆಯಲು ಸಹಕಾರ ನೀಡಬೇಕೆಂದು ಕೋರಿರುತ್ತಾರೆ.
ಮೇಲ್ಕಂಡ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ ಹಟ್ಟಿ ಚಿನ್ನದ ಗಣಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಸಂಘ ನಿ., ರಾಯಚೂರು, ಈ ಸಂಘದ ಅಧ್ಯಕ್ಷರು, ಸಂಘದ ಸಾಮಾನ್ಯ ಸಭೆ ನಡೆಸುವುದಾಗಿ ಸದಸ್ಯರಿಗೆ ಯಾವುದೇ ನೋಟೀಸ್ ನೀಡದೇ ಸಭೆ ನಡೆಸಿರುವುದು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960 ರ ಕಲಂ 11(4)ರ ಉಲ್ಲಂಘನೆಯಾಗಿರುತ್ತದೆ. ಹೊಸ ಸದಸ್ಯತ್ವ ಹೊಂದಲು ಆಕಾಂಕ್ಷಿಗಳಿದ್ದರೂ ಸದಸ್ಯತ್ವ ನೀಡದಿರುವುದು, ಸಂಘದ ಕಾರ್ಯಾಲಯವನ್ನು ತಿಂಗಳಿನ ಬಹುತೇಕ ದಿನ ತೆಗೆಯದಿರುವುದು ಮತ್ತು ಸಂಘಕ್ಕೆ ವಿತರಿಸಿರುವ ಕಂಪ್ಯೂಟರ್ಗಳು ಸರಿಯಾಗಿ ನಿರ್ವಹಣೆ ಮಾಡದಿರುವುದು, ಸಾಮಾನ್ಯ ಸಭೆಯನ್ನು ನಿಯಮದ ಪ್ರಕಾರ ಜರುಗದೇ, ಸುಮಾರು 8-10 ಜನ ಸೇರಿ ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದೇವೆಂದು ಕಂಪನಿಗೆ ಸಲ್ಲಿಸಿರುವುದು ಹಾಗೂ ಸಂಘದಲ್ಲಿನ ವ್ಯಾಜ್ಯವು ನಿರಂತರವಾಗಿರುವುದರಿಂದ, ಸಂಘವು ತನ್ನ ಉದ್ದೇಶಗಳಿಗನುಸಾರವಾಗಿ ಕಾರ್ಯನಿರ್ವಹಿಸಲು ವಿಫಲವಾಗಿರುವುದರಿಂದ, ಸಂಘದ ಹಿತದೃಷ್ಟಿಯಿಂದ ಸದರಿ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರವು ತೀರ್ಮಾನಿಸಿದೆ.
ಆದ್ದರಿಂದ, ಈ ಆದೇಶ.
೧೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೧ಸರ್ಕಾರದ ಆದೇಶ ಸಂಖ್ಯೆ: ಸಇ 54 ಸಸಂನೋ 2018, ಬೆಂಗಳೂರು, ದಿನಾಂಕ: 02.02.2019.
ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಹಟ್ಟಿ ಚಿನ್ನದ ಗಣಿಯ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಸಂಘ ನಿ., ಜತ್ತಿ ಕಾಲೋನಿ, 27/1, ಹಟ್ಟಿಕ್ಯಾಂಪ್ – 584 115, ಲಿಂಗಸುಗೂರು ತಾಲ್ಲೂಕು, ರಾಯಚೂರು ಜಿಲ್ಲೆ, ಈ ಸಂಘಕ್ಕೆ ಸಹಕಾರ ಅಭಿವೃದ್ಧಿ ಅಧಿಕಾರಿ, ಲಿಂಗಸುಗೂರು ತಾಲ್ಲೂಕು, ರಾಯಚೂರು ಜಿಲ್ಲೆ ಇವರನ್ನು, ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.
ಆಡಳಿತಾಧಿಕಾರಿಗಳು ಸದರಿ ಅವಧಿಯಲ್ಲಿ ಸಂಸ್ಥೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಸೂಚಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-63
ಆರ್. ಸೆಂತಾಮರೈ
SC-20
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ತಿದ್ದುಪಡಿ ಆದೇಶ
ಸಂಖ್ಯೆ: ಸಿಒ 72 ಸಿಸಿಬಿ 2018, ಬೆಂಗಳೂರು, ದಿನಾಂಕ: 31-01-2019.
ಸರ್ಕಾರದ ಆದೇಶ ಸಂಖ್ಯೆ: ಸಿಒ 72 ಸಿಸಿಬಿ 2018ರ ದಿನಾಂಕ: 29-01-2019ರ ಆದೇಶದಲ್ಲಿ ಪ್ರಸ್ತಾವನೆಯ ಪ್ಯಾರ (1) ಮತ್ತು (3) ರಲ್ಲಿ ದಿನಾಂಕ: 31-02-2018ರ ಬದಲಾಗಿ ದಿನಾಂಕ: 31-03-2018 ಎಂದು ತಿದ್ದಿ ಓದಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-64
ಆರ್. ಸೆಂತಾಮರೈ
SC-25
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ವಿಷಯ: 2018-19ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿ ಲ್ಯಾಂಪ್ಸ್ ಸಹಕಾರ ಸಂಘಗಳಿಗೆ
ಮಾರುಕಟ್ಟೆ ಮೂಲಭೂತ ಸೌಕರ್ಯಗಳ ಸ್ಥಾಪನೆಗೆ ಅನುದಾನ ಮಂಜೂರು ಮಾಡುವ
ಯೋಜನೆಯಡಿಯಲ್ಲಿ ನಿಗಧಿಯಾಗಿರುವ ಮೊತ್ತದ ಪೈಕಿ ಎರಡನೇ ಕಂತಿನ ಅನುದಾನ ಬಿಡುಗಡೆ
ಮಾಡುವ ಬಗ್ಗೆ.
ಓದಲಾಗಿದೆ: 01. ಸರ್ಕಾರದ ಆದೇಶ ಸಂಖ್ಯೆ: ಸಿಒ 51 ಸಂಮಾಸ 2018, ದಿನಾಂಕ: 27.12.2018. 02. ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಪತ್ರ ಸಂಖ್ಯೆ:
ಓಟಿಎಸ್-2/03/ಪಿಎಲ್ಎನ್/ಲ್ಯಾಂಪ್ಸ್/2018-2019, ದಿನಾಂಕ: 19.01.2019.
******
ಪ್ರಸ್ತಾವನೆ :
2018-19ನೇ ಸಾಲಿನ ಲ್ಯಾಂಪ್ಸ್ ಸಹಕಾರ ಸಂಘಗಳಿಗೆ ಮಾರುಕಟ್ಟೆ ಮೂಲಭೂತ ಸೌಕರ್ಯಗಳ ಸ್ಥಾಪನೆಗೆ ಸಹಾಯಧನವನ್ನು ಮಂಜೂರು ಮಾಡುವ ಯೋಜನೆಯಡಿಯಲ್ಲಿ ಲೆಕ್ಕ ಶೀರ್ಷಿಕೆ 2425-00-108-0-39-423 ರಡಿ `.70.00 ಲಕ್ಷಗಳ ಆಯವ್ಯಯ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಮೇಲೆ ಓದಲಾದ (1) ಸರ್ಕಾರದ ಆದೇಶದಲ್ಲಿ, ಒದಗಿಸಿರುವ `.70.00 ಲಕ್ಷಗಳ ಪೈಕಿ ಮೊದಲನೇ ಕಂತಾಗಿ `.50.00 ಲಕ್ಷಗಳನ್ನು ಬಿಡುಗಡೆಗೊಳಿಸಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ (2) ರ ಪ್ರಸ್ತಾವನೆಯಲ್ಲಿ, ಲ್ಯಾಂಪ್ಸ್ ಮುತ್ತತ್ತಿ ಸಂಘಕ್ಕೆ ಕಟ್ಟಡ ನಿರ್ಮಾಣ ಹಾಗೂ ವ್ಯಾಪಾರ ಮಳಿಗೆಯನ್ನು ನಿರ್ಮಾಣ ಮಾಡಲು `.10.00 ಲಕ್ಷಗಳನ್ನು ಮಂಜೂರು ಮಾಡುವಂತೆ ಸಹಕಾರ ಸಂಘಗಳ ನಿಬಂಧಕರು ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಒ 51 ಸಂಮಾಸ 2018. ಬೆಂಗಳೂರು, ದಿನಾಂಕ: 31.01.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2018-19ನೇ ಸಾಲಿನಲ್ಲಿ ಗಿರಿಜನ ಉಪಯೋಜನೆಯಡಿ ಲ್ಯಾಂಪ್ಸ್ ಸಹಕಾರ ಸಂಘಗಳಿಗೆ ಮಾರುಕಟ್ಟೆ ಮೂಲಭೂತ ಸೌಕರ್ಯಗಳ ಸ್ಥಾಪನೆಗೆ ಲೆಕ್ಕ ಶೀರ್ಷಿಕೆ 2425-00-108-0-39-423 ರಡಿ ಸಹಾಯಧನವನ್ನು ಮಂಜೂರು ಮಾಡುವ ಯೋಜನೆಯಡಿ ಗಿರಿಜನ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರ ಸಂಘ ನಿ., (ಲ್ಯಾಂಪ್ಸ್) ಮುತ್ತತ್ತಿ, ಹಲಗೂರು ಹೋಬಳಿ, ಮಳವಳ್ಳಿ ತಾಲ್ಲೂಕು, ಮಂಡ್ಯ ಜಿಲ್ಲೆ, ಈ ಲ್ಯಾಂಪ್ಸ್ ಸಹಕಾರ ಸಂಘಕ್ಕೆ `.10.00 ಲಕ್ಷಗಳ ಅನುದಾನವನ್ನು ಎರಡನೆಯ ಕಂತಿನಲ್ಲಿ ಬಿಡುಗಡೆಗೊಳಿಸಿ ಆದೇಶಿಸಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೧೪೯ಮಂಜೂರು ಮಾಡಿದ ಅನುದಾನವನ್ನು (ಲ್ಯಾಂಪ್ಸ್) ಮುತ್ತತ್ತಿ, ಸಹಕಾರ ಸಂಘದ ವತಿಯಿಂದ ಹಣ ಸಂದಾಯ ರಸೀದಿ (payee receipt) ಪಡೆದು ಸಂಬಂಧಿಸಿದ ಸಹಕಾರ ಸಂಘಗಳ ಉಪನಿಬಂಧಕರು, ಮಂಡ್ಯ ಜಿಲೆ,್ಲ ಮಂಡ್ಯ, ಇವರಿಂದ ಮೇಲು ರುಜು (counter sign) ಪಡೆದು ಸದರಿ ಅನುದಾನದ ಮೊತ್ತವನ್ನು ಪಾವತಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಡ್ಯ ಉಪವಿಭಾಗ, ಇವರಿಗೆ ಅಧಿಕಾರ ನೀಡಲಾಗಿದೆ.
ಈ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಸಮರ್ಪಕವಾಗಿ ಉಪಯೋಗಿಸಿಕೊಂಡ ಬಗ್ಗೆ ಹಣ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್ಡಿ 02 ಟಿಎಫ್ಪಿ 2018, ದಿನಾಂಕ: 03.04.2018 ರನ್ವಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಲಾಗಿರುವ ಅಧಿಕಾರದನ್ವಯ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR.61
ಎಂ. ವೆಂಕಟಸ್ವಾಮಿ
SC.25
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಉಪ ಕಾರ್ಯದರ್ಶಿ,
ಸಹಕಾರ ಇಲಾಖೆ.
ಕಾರ್ಮಿಕ ಸಚಿವಾಲಯ
ಸೇರ್ಪಡೆ ಆದೇಶ
ಸಂಖ್ಯೆ: ಕಾಇ 467 ಎಲ್ಇಟಿ 2017, ಬೆಂಗಳೂರು. ದಿನಾಂಕ: 01.02.2019
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ವತಿಯಿಂದ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಮಾರ್ಚ್ 1 ರಂದು "ಕಾರ್ಮಿಕರ ಸಮ್ಮಾನ ದಿನ" ಆಚರಣೆ ಮಾಡಲು ಹಾಗೂ ಅಸಂಘಟಿತ ವಲಯದಲ್ಲಿ ವಿಶೇಷ ಸಾಧನೆ ಮಾಡಿರುವ ಕಾರ್ಮಿಕರನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ "ಕಾರ್ಮಿಕರ ಸಮ್ಮಾನ ಪ್ರಶಸ್ತಿ" ಗಳನ್ನು ಆಯೋಜಿಸಿ ವಿತರಿಸಲು ಸರ್ಕಾರವು ಅನುಮೋದನೆ ನೀಡಿರುವ ಸರ್ಕಾರದ ಆದೇಶ ಸಂಖ್ಯೆ: ಕಾಇ 467 ಎಲ್ಇಟಿ 2017 ದಿನಾಂಕ: 24.09.2018 ರ ಆದೇಶದಲ್ಲಿನ ಪುಟ ಸಂಖ್ಯೆ-3ರ ಆಯ್ಕೆಯ ವಿಧಾನದ ಖಂಡಿಕೆಯಲ್ಲಿ ಉಭಯ ಮಂಡಳಿಗಳಿಂದ ರಚಿಸಲಾಗಿರುವ ಜಿಲ್ಲಾ ಮಟ್ಟದ ತ್ರಿಪಕ್ಷೀಯ ನಿರ್ವಹಣಾ ಸಮಿತಿಯಲ್ಲಿ ಕ್ರಮ ಸಂಖ್ಯೆ-10 ರಲ್ಲಿ ಅಸಂಘಟಿತ ಕಾರ್ಮಿಕ ಸಂಘಟನೆಗಳ ಇಬ್ಬರು ಪ್ರತಿನಿಧಿಗಳನ್ನು ಜಿಲ್ಲಾಧಿಕಾರಿಗಳಿಂದ ನೇಮಕ ಮಾಡಬೇಕಾಗಿದೆ. ಇಂತಹ ಸದಸ್ಯರನ್ನು ನೇಮಕ ಮಾಡುವ ಸಂದರ್ಭದಲ್ಲಿ "ಒಬ್ಬ ಪ್ರತಿನಿಧಿಯು ಕೇಂದ್ರ ಮಟ್ಟದ ಅಸಂಘಟಿತ ಕಾರ್ಮಿಕ ವಲಯದ ಸಂಘಟನೆಯನ್ನು ಪ್ರತಿನಿಧಿಸುತ್ತಿರಬೇಕು" ಎಂಬುದಾಗಿ ವಿಧಿಸಿರುವ ಷರತ್ತನ್ನು ಸೇರ್ಪಡಿಸಿ ಓದಿಕೊಳ್ಳತಕ್ಕದ್ದು.
PR.47
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC.50
ಎಲ್.ಎಸ್. ಶ್ರೀಕಂಠಬಾಬು
ಸರ್ಕಾರದ ಉಪ ಕಾರ್ಯದರ್ಶಿ,
ಕಾರ್ಮಿಕ ಇಲಾಖೆ.
LABOUR SECRETARIAT
Sub: Nomination of Non-Treasury PAO and DDO to deduct NPS contribution
of State Government Service working on deputation in KB&OWWB
Ref: 1. Government Order No: FD(SPL)/219 PEN 2012 Dated: 30-01-2014.
2. Letter No. CWB/ADM/NPS/CR-01/2018-19 Dated: 09-01-2019.
PREAMBLE:-
The Finance Department vide Government Order read at above (1) has issued an Order to follow the working procedure while deducting the NPS contribution of the State Government servants belonging to the NPS, working on deputation in Boards, Corporation and others Services, In this connection Non-Treasury PAO and DDO officers are nominated to implement the procedure for deduction of NPS contribution.
In the letter read at above (2) the Secretary, karnataka Building and Others Constructions Workers Welfare Board has stated that, there is no suitable system in the Karnataka Building and Others Constructions Workers Welfare Board to execute the deduction of NPS (New Pension Scheme) contribution of the state Government Employees belonging to the New Pension Scheme working on deputation In karnataka Building and Others Constructions Workers Welfare Board. Therefore it is proposed to nominate the Secretary, karnataka Building and Others Constructions Workers Welfare Board as the Non-Treasury PAO and DDO to implement the procedure for deductions of NPS contribution of the State Government Employees belonging to the New Pension Scheme working on deputation in Karnataka Building and Others Constructions Workers Welfare Board.
೧೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೧After careful examination of the above proposal the Government is here by pass the following Order.
GOVERNMENT ORDER NO.LD 18 LET 2019, BENGALURU, DATED : 04-02-2019.
The Secretary, karnataka Building and others Constructions Workers Welfare Board has been nominated as the Non-Treasury PAO and DDO to deduct NPS contribution of the State Government Employees working on deputation in karnataka Building and Others Constructions Workers Welfare Board, with immediate effect and until further order and directed to take action as per the Government Order No: FD (SPL) /219 PEN 2012 Dated: 30-01-2014.
PR.48
By Order and in the Name of the Governor of karnataka,
G.M. SIDDARAJU
SC.100
Under Secretary to Government,
Labour department.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ವಿಷಯ: ಇಲಾಖಾ ವಿಚಾರಣೆಗಳಲ್ಲಿ ವಿಚಾರಣಾಧಿಕಾರಿಗಳಾಗಿ ನೇಮಕಗೊಳ್ಳುವ ನಿವೃತ್ತ ಜಿಲ್ಲಾ
ನ್ಯಾಯಾಧೀಶರಿಗೆ ಹಾಗೂ ಸೇವೆಯಲ್ಲಿರುವ ಅಧಿಕಾರಿಗಳಿಗೆ ನೀಡಲಾಗುತ್ತಿರುವ
ಸಂಭಾವನೆ ಮೊತ್ತ ಪರಿಷ್ಕರಣೆ ಬಗ್ಗೆ.
ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 06 ಸೇಇವಿ 2011, ದಿನಾಂಕ: 28.04.2011. 2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 07 ಸೇಇವಿ 2012, ದಿನಾಂಕ: 03.02.2012. 3. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 45 ಸೇಇವಿ 2014, ದಿನಾಂಕ: 08.01.2015.
ಪ್ರಸ್ತಾವನೆ:
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರಡಿ ಸರ್ಕಾರಿ ನೌಕರರ ವಿರುದ್ಧ ಇಲಾಖಾ ಇಲಾಖಾ ವಿಚಾರಣೆ ಪ್ರಕರಣಗಳಿಗೆ ಅನ್ವಯಿಸುವಂತೆ ಮುಂದುವರಿಸಿ, ಜಂಟಿ ಇಲಾಖಾ ವಿಚಾರಣೆಗಳಿಗೆ ಪ್ರತ್ಯೇಕ ಸಂಭಾವನೆ ನಿಗದಿಪಡಿಸಲಾಗಿದೆ.
ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರಡಿ ಸರ್ಕಾರಿ ನೌಕರರ ವಿರುದ್ಧ ಜರಗಿಸುವ ಇಲಾಖಾ ವಿಚಾರಣೆಗಳಲ್ಲಿ ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಕ ಮಾಡಿದಾಗ ಮತ್ತು ನಿಗದಿಪಡಿಸಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶರು, ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಗಳಾಗಿ ನೇಮಕವಾಗುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ಪ್ರಸ್ತುತ ಇರುವ ಸಂಭಾವನೆಯು 2011 ರಲ್ಲಿ ನಿಗದಿಪಡಿಸಿರುವುದಾಗಿ ತಿಳಿಸಿ, ಈ ಸಂಭಾವನೆಯನ್ನು ಹೆಚ್ಚಳ ಮಾಡಲು ಬೇಡಿಕೆ ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ ವಿಚಾರಣಾಧಿಕಾರಿಗಳಾಗಿ ನೇಮಕವಾಗುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ನಿಗದಿಪಡಿಸಿದ ಸಂಭಾವನೆ ಜೊತೆಗೆ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳಿಗೆ ನೀಡಲಾಗುತ್ತಿರುವ ಪ್ರೋತ್ಸಾಹಧನವನ್ನು ಸಹ ಹೆಚ್ಚಿಸುವ ಬಗ್ಗೆ ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 29 ಸೇಇವಿ 2017, ದಿನಾಂಕ: 02.02.2019.
ಪ್ರಸ್ತಾವನೆಯಲ್ಲಿ ತಿಳಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರಡಿ ಮಾಡುವ ಇಲಾಖಾ ವಿಚಾರಣೆಯಲ್ಲಿ ವಿಚಾರಣಾಧಿಕಾರಿಯಾಗಿ ನೇಮಕವಾಗುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ಮತ್ತು ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕೆಳಕಂಡ ಸಂಭಾವನೆ/ಪ್ರೋತ್ಸಾಹಧನಗಳನ್ನು ನಿಗದಿಪಡಿಸಲಾಗಿದೆ.
(1) ಏಕವ್ಯಕ್ತಿ ಆರೋಪಿತರಾಗಿರುವ ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ವಿಚಾರಣಾಧಿಕಾರಿಯಾಗಿ ನೇಮಕವಾಗುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ `.16,500/- ಗಳು (ಹದಿನಾರು ಸಾವಿರ ಐದು ನೂರು ರೂಪಾಯಿಗಳು) (ವಾಹನ ಭತ್ಯೆಯು ಸೇರಿದಂತೆ)
(2) ವಿಚಾರಣಾಧಿಕಾರಿಯಾಗಿ ನೇಮಕವಾದ ಮತ್ತು ನಿಗದಿಪಡಿಸಿದ ಅವಧಿಯಲ್ಲಿ ವಿಚಾರಣಾ ವರದಿಯನ್ನು ಸಲ್ಲಿಸಿದ ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳಿಗೆ `.5,500/-(ಐದು ಸಾವಿರ ಐದು ನೂರು ರೂಪಾಯಿಗಳು)
ಈ ಆದೇಶವನ್ನು ಆರ್ಥಿಕ ಇಲಾಖೆಯು ದಿನಾಂಕ: 24.09.2018 ರ ಟಿಪ್ಪಣಿ ಸಂಖ್ಯೆ: ಆಇ 738 ಸೇ-1/2018 ಮತ್ತು ದಿನಾಂಕ: 17.12.2018ರ ಟಿಪ್ಪಣಿ ಸಂಖ್ಯೆ: ಆಇ 996 ಸೇ-1/2018ರಲ್ಲಿ ನೀಡಿದ ಸಹಮತಿಯನ್ವಯ ಹೊರಡಿಸಲಾಗಿದೆ.
PR.49
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC.100
ಎ.ವಿ. ಶೈಲಜ
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.
(ಸೇವಾ ನಿಯಮಗಳು-2)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೧೫೧
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ವಿಷಯ: ಮೊಬೈಲ್ ಒನ್ ಯೋಜನೆಯನ್ನು ನಿರ್ದೇಶಕರು, ಇಡಿಸಿಎಸ್ ನಿರ್ದೇಶನಾಲಯಕ್ಕೆ
ವರ್ಗಾಯಿಸುವ ಬಗ್ಗೆ.
ಓದಲಾಗಿದೆ: 1. ಸರ್ಕಾರದ ಆದೇಶ ಸಂ: ಸಿಆಸುಇ 06 ಯೋಜನೆ 2013 ದಿನಾಂಕ: 13.12.2013.
2. ಕಛೇರಿ ಆದೇಶ ಸಂ. ಸಿಆಸುಇ (ಇ-ಆ)125 ಅಮುಕಾ 2018 ದಿನಾಂಕ: 21.04.2018
ಪ್ರಸ್ತಾವನೆ:
ಕರ್ನಾಟಕದ ನಾಗರೀಕರಿಗೆ ಯಾವಾಗ ಬೇಕಾದರೂ, ಎಲ್ಲಿಯಾದರೂ ಮತ್ತು ಯಾವುದೇ ಉಪಕರಣದ {(Any-time, Any-where and Any- How (any device)} ಮೂಲಕ ಸೇವೆಗಳನ್ನು ನೀಡಲು ಏಕೀಕೃತ ಮೊಬೈಲ್ ಸೇವೆ ನೀಡುವ ವೇದಿಕೆಯನ್ನು (Unified Mobile Service Delivery Plat form) ಸೃಜಿಸುವ ಸಂಬಂಧ ಮೇಲೆ (1) ರಲ್ಲಿ, ಓದಲಾದ ದಿನಾಂಕ: 13.12.2013ರ ಸರ್ಕಾರಿ ಆದೇಶವನ್ನು ಹೊರಡಿಸಲಾಗಿದೆ. ಮುಂದುವರೆದು ಮೇಲೆ (2) ರಲ್ಲಿ ಓದಲಾದ ದಿನಾಂಕ: 21.04.2018ರ ಕಛೇರಿ ಆದೇಶದನ್ವಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ, ಸಿಆಸುಇ (ಇ-ಆಡಳಿತ) ಇವರು ಮೊಬೈಲ್ ಒನ್ ಯೋಜನೆಯ ಉಸ್ತುವಾರಿಯನ್ನು ನಿರ್ದೇಶಕರು, ಇಡಿಸಿಎಸ್ ನಿರ್ದೇಶನಾಲಯ ಇವರಿಗೆ ನೀಡಿರುತ್ತಾರೆ.
ಪ್ರಸ್ತುತ ಮೊಬೈಲ್ ಒನ್ ಯೋಜನೆಯನ್ನು ಇ-ಆಡಳಿತ ಕೇಂದ್ರದಿಂದ ಇಡಿಸಿಎಸ್ ನಿರ್ದೇಶನಾಲಯಕ್ಕೆ ವರ್ಗಾಯಿಸುವಂತೆ ಕಡತ ಸಂಖ್ಯೆ: CEG/16/MGOV/2017 ರಲ್ಲಿ ಪ್ರಸ್ತಾವನೆ ಸ್ವೀಕೃತವಾಗಿರುತ್ತದೆ. ಸದರಿ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದ್ದು, ಅದರಂತೆ ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 136 ಇಆಇ 2018 ಬೆಂಗಳೂರು, ದಿನಾಂಕ: 10ನೇ ಡಿಸೆಂಬರ್ 2018.
ಪ್ರಸ್ತಾವನೆಯಲ್ಲಿ, ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಮೊಬೈಲ್ ಒನ್ ಯೋಜನೆಯನ್ನು, ಇ-ಆಡಳಿತ ಕೇಂದ್ರದಿಂದ ನಿರ್ದೇಶಕರು, ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್ ನಿರ್ದೇಶನಾಲಯ) ಇವರಿಗೆ ವರ್ಗಾಯಿಸಿ ಸರ್ಕಾರವು ಆದೇಶಿಸಿದೆ.
PR. 50
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC.200
ಆರ್. ಶಾಂತಿ
ಪೀಠಾಧಿಕಾರಿ-2,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.
(ಇ-ಆಡಳಿತ)
ಕಂದಾಯ ಸಚಿವಾಲಯ
ವಿಷಯ: ಚಿಕ್ಕಮಗಳೂರು ಜಿಲ್ಲೆ/ತಾಲ್ಲೂಕು ಕೆಸವಿನಮನೆ ಗ್ರಾಮದ ಲ್ಯಾಂಡ್ಬ್ಯಾಂಕ್ನಲ್ಲಿರುವ ಸರ್ಕಾರಿ ಜಮೀನನ್ನು ಶಿವಮೊಗ್ಗ ಜಿಲ್ಲಾ ಸಿಂಗನಮನೆ ಮೀಸಲು ಅರಣ್ಯದಿಂದ ಕುವೆಂಪು ವಿಶ್ವ ವಿದ್ಯಾನಿಲಯಕ್ಕಾಗಿ ಬಿಡುಗಡೆ ಮಾಡಿರುವ ಅರಣ್ಯ ಜಮೀನಿನ ಬದಲಿಗೆ ಅರಣ್ಯ ಇಲಾಖೆಗೆ ವರ್ಗಾಯಿಸುವ ಬಗ್ಗೆ.
ಓದಲಾಗಿದೆ: ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರ ಪತ್ರ
ಸಂಖ್ಯೆ:ಎಲ್ಎನ್ಡಿ:ಸಿಆರ್:70/2009-10, ದಿನಾಂಕ:25.09.2009.
ಪ್ರಸ್ತಾವನೆ:
ಶಿವಮೊಗ್ಗ ಜಿಲ್ಲೆ, ಸಿಂಗನಮನೆ ಮೀಸಲು ಅರಣ್ಯ ಪ್ರದೇಶದಲ್ಲಿ 230 ಎಕರೆ ಮೀಸಲು ಅರಣ್ಯ ಜಮೀನನ್ನು ಕುವೆಂಪು ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಗುತ್ತಿಗೆ ನೀಡಿದ್ದು, ಗುತ್ತಿಗೆ ಅವಧಿಯು ಗತಿಸಿದ್ದು ವಿಸ್ತರಣೆಗಾಗಿ ಕೇಂದ್ರ ಸರ್ಕಾರದ ಅನುಮತಿ ಕೋರಿ ಅರಣ್ಯ ಸಂರಕ್ಷಣಾಕಾಯ್ದೆ 1980ರ ಪ್ರಕಾರ ಪ್ರಸ್ತಾವನೆ ಸಲ್ಲಿಸಿರುವುದರಿಂದ ನಿಯಮ/ಕಾಯ್ದೆ ಪ್ರಕಾರ ಅರಣ್ಯೇತರ ಉದ್ದೇಶಕ್ಕೆ ಬಿಡುಗಡೆ ಮಾಡಿರುವ ಅರಣ್ಯ ಜಮೀನಿನ ಬದಲಿಗೆ ರಾಜ್ಯ ಸರ್ಕಾರದ ವತಿಯಿಂದ ಅರಣ್ಯ ಇಲಾಖೆಯ ಕೋರಿಕೆಯಂತೆ 383.80 ಹೆಕ್ಟೇರ್ ಅರಣ್ಯೇತರ ಪ್ರದೇಶವನ್ನು ಭದ್ರಾ ಅಭಯಾರಣ್ಯಕ್ಕೆ ಸೇರಿಸಲು ಕ್ರಮ 301-27 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿಯವರ ದಿನಾಂಕ 26-05-2009ರ ಆದೇಶ ಸಂ: ಎಂ4.ಎಲ್ಎನ್ಡಿ.ಸಿಆರ್: 195/2007-08 ರಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಉಳಿದ 648-38 ಎಕರೆ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಡುಗಡೆ ಮಾಡಬೇಕಾಗಿರುತ್ತದೆ.
ಮೇಲೆ ಓದಲಾದ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ ಮೈಸೂರು ರವರು ಶಿವಮೊಗ್ಗ ಜಿಲ್ಲೆ, ಸಿಂಗನಮನೆ ಮೀಸಲು ಅರಣ್ಯ ಪ್ರದೇಶದಲ್ಲಿ 230 ಎಕರೆ ಮೀಸಲು ಅರಣ್ಯ ಜಮೀನನ್ನು ಕುವೆಂಪು ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಗುತ್ತಿಗೆ ನೀಡಿದ್ದು, ಅದರ ಬದಲಿಗೆ ಕೇಂದ್ರ ಸರ್ಕಾರದ ಇಂಡಿಯನ್ ಬೋರ್ಡ್ ಫಾರ್ ವೈಲ್ಡ್ ಲೈಫ್ ರವರು ವಿಧಿಸಿರುವ ಷರತ್ತುಗಳಂತೆ ಮತ್ತು ಅರಣ್ಯ ಇಲಾಖೆಯ ಕೋರಿಕೆಯಂತೆ ಅರಣ್ಯ ಇಲಾಖೆಗೆ 383.80 ಹೆಕ್ಟೇರ್ ಬದಲಿ ಸರ್ಕಾರಿ ಜಮೀನನ್ನು ನೀಡಬೇಕಾಗಿದ್ದು, ಅರಣ್ಯೇತರ ಉದ್ದೇಶಕ್ಕೆ ಬಿಡುಗಡೆ ಮಾಡಿರುವ ಅರಣ್ಯ ಜಮೀನಿನ ಬದಲಿಗೆ ಭದ್ರಾ ಅಭಯಾರಣ್ಯದ ಗಡಿ ಪ್ರದೇಶದಲ್ಲಿರುವ ಕೆಸವಿನಮನೆ ಮತ್ತು ತಿಗಡ ಗ್ರಾಮದ ಸರ್ಕಾರಿ ಜಮೀನನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುವ ಸಂಬಂಧ ಈಗಾಗಲೇ ಕೆಸವಿನ ಮನೆ ಗ್ರಾಮದ ಸ.ನಂ.40, 46, 49 ಮತ್ತು ತಿಗಡ ಗ್ರಾಮದ ಸ.ನಂ.13ರ ಒಟ್ಟು 301-27 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿಯವರ ದಿನಾಂಕ 26.05.2009 ರ ಆದೇಶ ಸಂ:ಎಂ4.ಎಲ್ಎನ್ಡಿ.ಸಿಆರ್:195/2007-08 ರಲ್ಲಿ ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಉಳಿದಂತೆ ಚಿಕ್ಕಮಗಳೂರು ತಾಲ್ಲೂಕು ಕೆಸವಿನಮನೆ ಗ್ರಾಮದ ಸ.ನಂ.38ಪಿ, 39, 40ಪಿ1, 45, 46, 49ರಲ್ಲಿನ ಒಟ್ಟು 648-38 ಎಕರೆ ಭೂಮಿಯನ್ನು ಲ್ಯಾಂಡ್ ಬ್ಯಾಂಕ್ ನಿಂದ ಬಿಡುಗಡೆ ಮಾಡಿ ಅರಣ್ಯ ಇಲಾಖೆಗೆ ವರ್ಗಾಯಿಸಲು ಆದೇಶ ನೀಡುವಂತೆ ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
೧೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೧ಸರ್ಕಾರದ ಆದೇಶ ಸಂಖ್ಯೆ:ಆರ್ಡಿ 84 ಎಲ್ಜಿಯು 2009, ಬೆಂಗಳೂರು, ದಿನಾಂಕ:25.01.2019
ಕುವೆಂಪು ವಿಶ್ವವಿದ್ಯಾನಿಲಯ ಸ್ಥಾಪಿಸಲು ಭದ್ರ ವನ್ಯ ಜೀವಿ ವಿಭಾಗಕ್ಕೆ ಸೇರಿದ ಸಿಂಗನಮನೆ ಕಿರು ಅರಣ್ಯದಲ್ಲಿನ 230.00 ಎಕರೆ ಮೀಸಲು ಅರಣ್ಯ ಜಮೀನನ್ನು ಅರಣ್ಯ ಇಲಾಖೆಯಿಂದ ಪಡೆದಿರುವುದಕ್ಕೆ ಬದಲಾಗಿ ಕೇಂದ್ರ ಸರ್ಕಾರದ ಇಂಡಿಯನ್ ಬೋರ್ಡ್ ಫಾರ್ ವೈಲ್ಡ್ ಲೈಫ್ ರವರು ವಿಧಿಸಿರುವ ಸ.ನಂ.38ಪಿ, 39, 40ಪಿ1, 45, 46, 49ರಲ್ಲಿನ ಒಟ್ಟು 648-38 ಎಕರೆ ಭೂಮಿಯನ್ನು ಲ್ಯಾಂಡ್ ಬ್ಯಾಂಕ್ನಿಂದ ಬಿಡುಗಡೆ ಮಾಡಿ ಈ ಕೆಳಕಂಡ ಷರತ್ತಿಗೊಳಪಟ್ಟು ಅರಣ್ಯ ಇಲಾಖೆಗೆ ವರ್ಗಾಯಿಸಲು ಸರ್ಕಾರವು ಮಂಜೂರಾತಿ ನೀಡಿದೆ.
ಷರತ್ತುಗಳು:
1. ಅರಣ್ಯ ಇಲಾಖೆಗೆ 648-38 ಎಕರೆ/ಗುಂಟೆ ಜಮೀನನ್ನು ವರ್ಗಾಯಿಸುವಾಗ ಜಿಲ್ಲಾಧಿಕಾರಿಯವರು ಸರ್ವೆ ನಂಬರ್ ಮತ್ತು ವಿಸ್ತೀರ್ಣವನ್ನು ಸ್ಪಷ್ಟವಾಗಿ ನಮೂದಿಸತಕ್ಕದ್ದು.
2. ಅರಣ್ಯ ಇಲಾಖೆಗೆ ವರ್ಗಾವಣೆಗೊಂಡ ಜಮೀನು, ಅರಣ್ಯ ಇಲಾಖೆಗೆ ಅವಶ್ಯಕತೆ ಇಲ್ಲದೆ ಇದ್ದಲ್ಲಿ, ಅದನ್ನು ಮರಳಿ ಕಂದಾಯ ಇಲಾಖೆಗೆ ವಾಪಸ್ಸು ಪಡೆಯತಕ್ಕದ್ದು.
3. ವರ್ಗಾವಣೆಯಾದ ಜಮೀನನ್ನು ಅರಣ್ಯ ಇಲಾಖೆಯು ಅರಣ್ಯೀಕರಣ ಉದ್ದೇಶಕ್ಕಾಗಿ ಮಾತ್ರ ಉಪಯೋಗಿಸತಕ್ಕದ್ದು.
4. ಈ ಮೇಲ್ಕಂಡ ಷರತ್ತುಗಳೊಂದಿಗೆ ಸರ್ಕಾರದಿಂದ ಅನ್ವಯವಾಗುವ ಎಲ್ಲಾ ಕಾಯ್ದೆ, ಕಾನೂನು ಹಾಗೂ ಷರತ್ತು ಮತ್ತು ನಿಬಂಧನೆಗಳಿಗೊಳಪಡಿಸತಕ್ಕದ್ದು.
PR. 51
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.25
ವಿಮಲಮ್ಮ.ಸಿ
ಪೀಠಾಧಿಕಾರಿ, ಕಂದಾಯ ಇಲಾಖೆ (ಭೂ ಮಂಜೂರಾತಿ-2)
ಆರ್ಥಿಕ ಸಚಿವಾಲಯ
ವಿಷಯ: ಸರ್ಕಾರಿ ನೌಕರರಿಗೆ ಮಂಜೂರು ಮಾಡುತ್ತಿರುವ ಹಬ್ಬದ ಮುಂಗಡದ ಮೊತ್ತವನ್ನು ಪರಿಷ್ಕರಿಸುವ ಬಗ್ಗೆ.
ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: ಆಇ 6 ಮಕಮು 2012 ದಿ: 18.06.2012.
2. ಸರ್ಕಾರದ ಆದೇಶ ಸಂಖ್ಯೆ: ಆಇ 6 ಎಸ್.ಆರ್.ಪಿ. 2018 ದಿ: 1.03.2018.
ಪ್ರಸ್ತಾವನೆ:
ಮೇಲೆ ಕ್ರಮ ಸಂ(1) ರಲ್ಲಿ ಓದಲಾದ ದಿನಾಂಕ: 18.06.2012ರ ಸರ್ಕಾರಿ ಆದೇಶದಲ್ಲಿ ಅಧಿಕಾರಿಗಳ ವೇತನ ಸಮಿತಿಯು ಶಿಫಾರಸ್ಸು ಮಾಡಿರುವಂತೆ ರಾಜ್ಯ ಸರ್ಕಾರಿ ನೌಕರರುಗಳಿಗೆ ಮಂಜೂರು ಮಾಡಬಹುದಾದ ವಿವಿಧ ಮುಂಗಡಗಳ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಅದರಲ್ಲಿ ರಾಜ್ಯ ಉದ್ಯೋಗಿ ವೃಂದದಲ್ಲಿ ಖಾಯಂ ಆಗಿ ಸೇರ್ಪಡೆಯಾಗಿರುವ ಅಖಿಲ ಭಾರತ ಸೇವಾ ಅಧಿಕಾರಿಗಳು ಒಳಗೊಂಡಂತೆ ಒಬ್ಬ ಖಾಯಂ ಸರ್ಕಾರಿ ನೌಕರನಿಗೆ ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿಗೆ `.5,000/-ಗಳ ಬಡ್ಡಿ ರಹಿತ ಹಬ್ಬದ ಮುಂಗಡವನ್ನು ಮಂಜೂರು ಮಾಡಲಾಗಿತ್ತು.
6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನನ್ವಯ ವೇತನ ಮತ್ತು ಭತ್ಯೆಗಳ ಶಿಫಾರಸ್ಸನ್ನು ಒಪ್ಪಿ ಮೇಲೆ ಕ್ರ.ಸಂ. (2) ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರುಗಳಿಗೆ ದಿ:1.04.2018 ರಿಂದ ಜಾರಿಗೆ ಬರುವಂತೆ ವೇತನವನ್ನು ಪರಿಷ್ಕರಿಸಿ ಆದೇಶಿಸಿದೆ. 6ನೇ ರಾಜ್ಯ ವೇತನ ಆಯೋಗದ 1ನೇ ಸಂಪುಟದ ವರದಿಯಲ್ಲಿ ರಾಜ್ಯ ಸರ್ಕಾರಿ ನೌಕರರುಗಳಿಗೆ ಮಂಜೂರು ಮಾಡುತ್ತಿರುವ ಹಬ್ಬದ ಮುಂಗಡವನ್ನು ಪರಿಷ್ಕರಿಸಿದ್ದು, ಚಾಲ್ತಿಯಲ್ಲಿರುವ ಇತರೆ ವಿವಿಧ ಮುಂಗಡಗಳನ್ನು ಬದಲಾವಣೆ ಇಲ್ಲದಂತೆ ಮುಂದುವರೆಸುವಂತೆ ಶಿಫಾರಸ್ಸು ಮಾಡಿದೆ. ಅದರಂತೆ ಸರ್ಕಾರವು ಈ ಮುಂದಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆಇ 19 ಮಕಮು 2018 ಬೆಂಗಳೂರು, ದಿನಾಂಕ: 11.01.2019
ಪ್ರಸ್ತಾವನೆಯಲ್ಲಿ ತಿಳಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರಿ ಆದೇಶ ಸಂ: ಆಇ 6 ಮಕಮು 2012 ದಿನಾಂಕ: 18.06.2012 ರಲ್ಲಿ ಚಾಲ್ತಿಯಲ್ಲಿರುವ ಇತರೇ ಭತ್ಯೆಗಳನ್ನು ಬದಲಾವಣೆ ಇಲ್ಲದಂತೆ ಮುಂದುವರೆಸಿ ರಾಜ್ಯ ಸಿವಿಲ್ ಸೇವಾ ವೃಂದದಲ್ಲಿ ಖಾಯಂ ಆಗಿ ಸೇರ್ಪಡೆಯಾಗಿರುವ ಅಖಿಲ ಭಾರತ ಸೇವೆಯ ಅಧಿಕಾರಿಗಳು ಸೇರಿದಂತೆ ಒಬ್ಬ ಖಾಯಂ ಸರ್ಕಾರಿ ನೌಕರನಿಗೆ ಒಂದು ಆರ್ಥಿಕ ವರ್ಷದಲ್ಲಿ ಒಂದು ಬಾರಿಗೆ ಮಾತ್ರ ಪ್ರಸ್ತುತ ಮಂಜೂರು ಮಾಡಲಾಗುತ್ತಿರುವ ಬಡ್ಡಿ ರಹಿತ ಹಬ್ಬದ ಮುಂಗಡವನ್ನು `.5,000/- ಗಳಿಂದ `.10,000/- ಗಳಿಗೆ ಹೆಚ್ಚಿಸಿ ಆದೇಶಿಸಿದೆ.
ದಿನಾಂಕ: 21.10.1994ರ ಸರ್ಕಾರಿ ಆದೇಶ ಸಂ: ಆಇ 48 ಮಕಮು 1994 ರಲ್ಲಿ ಮುಂಗಡಗಳನ್ನು ಮಂಜೂರು ಮಾಡಲು ಅನುಸರಿಸಲಾಗುತ್ತಿರುವ ಷರತ್ತು ಮತ್ತು ನಿಬಂಧನೆಗಳು ಮುಂದುವರೆದು ಅನ್ವಯಿಸುತ್ತದೆ.
PR. 52
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ಶಶಿಧರ್
ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೧೫೩ WATER RESOURCES SECRETARIAT SUB : APPROVAL TO THE EXTRA FINANCIAL IMPLICATIONS / COST VARIATIONS UNDER DAM REHABILITATION AND IMPROVEMENT PROJECT (DRIP) WORKS BEING IMPLEMENTED WITH LOAN ASSISTANCE FROM THE WORLD BANK (with respect to Almatti Dam) – Reg.
| (`. in lakhs) | ||||||
| Sl No | Name of Dam | Name of Package | Name of Contractor | Agreement Amount | EFI amount as submitted by dam authorities | % w.r.t Contract Price |
| 1 | Almatti Dam | PACKAGE-I | M/s Ferro Concrete Construction India Pvt Ltd, Indore, MP | 2207.00 | 766.96 | 34.75% ABOVE |
PR.53
By Order and in the Name of the Governor of karnataka,
B HARINARAYAN,
SC.150
Under Secretary to Government,
Water Resources Department(Tech-5).
ಸಹಕಾರ ಸಚಿವಾಲಯ
ವಿಷಯ: ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಚಾಮರಾಜನಗರ ಈ ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡುವ ಬಗ್ಗೆ.
ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: ಸಿಒ 43 ಸಿಸಿಬಿ 2018, ದಿನಾಂಕ: 26.03.2018.
2. ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ: ಅನಿ/ಡಿಎವೈ-3/19/ಡಿಸಿಎಸ್/2018-19, ದಿನಾಂಕ: 02.06.2018.
ಪ್ರಸ್ತಾವನೆ:
ಓದಲಾದ (1) ರ ಸರ್ಕಾರದ ಆದೇಶದಲ್ಲಿ ಒಕ್ಕೂಟಕ್ಕೆ staff rationalization committee ಅನ್ವಯ 2020 ಸಾಲಿನವರೆವಿಗೆ ಒಟ್ಟು 301 ಹುದ್ದೆಗಳು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಖಾಲಿ ಇರುವ ಹುದ್ದೆಗಳಲ್ಲಿ 72 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ತೀರ್ಮಾನಿಸಿ, ದಿನಾಂಕ: 31.02.2018 ರಂದು ನಡೆದ ಒಕ್ಕೂಟದ ನೇಮಕಾತಿ ಸಮಿತಿ ನಿರ್ಣಯಿಸಿ ಅಂದೇ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಸ್ಥಿರೀಕರಿಸಿರುತ್ತಾರೆ.
ಮೇಲೆ ಓದಲಾದ (2) ರ ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವೆಯಲ್ಲಿ, 72 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಒಕ್ಕೂಟವು ಕೋರಿರುವುದಾಗಿ ತಿಳಿಸಿ ಅನುಮತಿಸಲು ಶಿಫಾರಸ್ಸು ಮಾಡಿರುತ್ತಾರೆ. ಕೆ.ಎಂ.ಎಫ್ ಸಹ ಈ ಪ್ರಸ್ತಾವನೆಗೆ ಸಹಮತಿಸಿರುತ್ತಾರೆ.
ಪ್ರಸ್ತುತ, ಒಕ್ಕೂಟದ ವ್ಯಾಪಾರ ವಹಿವಾಟು, ಹಾಲು ಶೇಖರಣೆ, ಮಾರುಕಟ್ಟೆ, ಸಂಸ್ಕರಣೆ ಮತ್ತು ವಿಸ್ತರಣಾ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಮತ್ತು ಯೋಜನೆಗಳನ್ನು ವಿಸ್ತರಿಸಲು ಸಿಬ್ಬಂದಿಗಳ ಅವಶ್ಯವಿರುವುದರಿಂದ ದಿ:31.02.2018 ರಂದು ನಡೆದ ಒಕ್ಕೂಟದ ತಜ್ಞರ ಕೂಟ ಸಮಿತಿ ಸಭೆ ಮತ್ತು ಆಡಳಿತ ಮಂಡಳಿ ಸಮಿತಿ ಸಭೆಯಲ್ಲಿ 72 ಹುದ್ದೆಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
ಪರಿಶೀಲಿಸಲಾಗಿ, ಒಕ್ಕೂಟವು ಒದಗಿಸಿರುವ ಮಾಹಿತಿಯಂತೆ ಕಳೆದ 03 ವರ್ಷಗಳಲ್ಲಿ ಒಕ್ಕೂಟವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನಿವ್ವಳ ಲಾಭದಲ್ಲಿದ್ದು ಆರ್ಥಿಕ ಪರಿಸ್ಥಿತಿ ಕೆಳಕಂಡಂತಿರುತ್ತದೆ.
| ಕ್ರ.ಸಂ | ವಿವರ | 2015-16 (ಆಡಿಟೆಡ್) | 2016-17 (ಆಡಿಟೆಡ್) | 2017-18 (ತಾತ್ಕಾಲಿಕ) |
| 1 | ವ್ಯಾಪಾರ ವಹಿವಾಟು | 317.65 | 362.70 | 382.58 |
| 2 | ಸಿಬ್ಬಂದಿ ವೆಚ್ಚ | 8.48 | 10.61 | 11.02 |
| 3 | ವ ಹಿವಾಟಿಗೆ ಸಿಬ್ಬಂದಿ ವೆಚ್ಚದ ಶೇಕಡ ಪ್ರಮಾಣ | 2.67 | 2.93 | 2.88 |
| 4 | ನಿವ್ವಳ ಲಾಭ | 2.59 | 3.85 | 1.61 |
2017-18 ರ ಅಂತ್ಯಕ್ಕೆ ಸಿಬ್ಬಂದಿ ವೆಚ್ಚವು `.11.02 ಕೋಟಿ ಇದ್ದು, ಇದು ವಾರ್ಷಿಕ ವಹಿವಾಟು `.382.58 ಕೋಟಿಗಳಿಗೆ ಶೇಕಡ 2.88 ಆಗಲಿದೆ. ಪ್ರಸ್ತುತ ಕೋರಿರುವಂತೆ 72 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಂಡಲ್ಲಿ ಹೆಚ್ಚುವರಿ ವಾರ್ಷಿಕ ವೆಚ್ಚ `.2.27 ಕೋಟಿ ಆಗಲಿದ್ದು, ಈ ವೆಚ್ಚವು ಸೇರಿ ಸಿಬ್ಬಂದಿ ವೆಚ್ಚವು `.13.29 ಕೋಟಿ ಆಗಲಿದ್ದು, ಇದು ವಹಿವಾಟು `.382.58 ಕೋಟಿಗೆ ಶೇ.3.47 ಆಗಲಿದೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸಹಕಾರ ಸಂಘಗಳ ನಿಯಮಾವಳಿ 1960 ನಿಯಮ 17 ರನ್ವಯ ಒಕ್ಕೂಟವು ಕೋರಿರುವಂತೆ 72 ಹುದ್ದೆಗಳನ್ನು ಮಂಜೂರು ಮಾಡಲು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ:ಸಿಒ 72 ಸಿಸಿಬಿ 2018, ಬೆಂಗಳೂರು, ದಿನಾಂಕ: 29.01.2019
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಚಾಮರಾಜನಗರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಚಾಮರಾಜನಗರ ಇದಕ್ಕೆ ಸಹಕಾರ ಸಂಘಗಳ ನಿಯಮಾವಳಿ 1960 ನಿಯಮ 17 ರನ್ವಯ ಅನುಬಂಧದಲ್ಲಿರುವ 72 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲು ಈ ಕೆಳಕಂಡ ಷರತ್ತಿಗಳಿಗೊಳಪಟ್ಟು ಮಂಜೂರಾತಿ ನೀಡಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೧೫೫ಷರತ್ತುಗಳು:-
1. ನೇಮಕಾತಿಯಲ್ಲಿ ಸರ್ಕಾರದ ಆದೇಶ ಸಂಖ್ಯೆ. ಸಿಒ:166:ಸಿಎಲ್ಎಂ:2012 ದಿನಾಂಕ:22-08-2013 ರಲ್ಲಿ ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವುದು.
2. ಪರಿಷ್ಕøತ ಸಿಬ್ಬಂದಿ ಹುದ್ದೆ ವೃಂದ ಬಲವಾರು ನೇಮಕಾತಿಗೆ ವಿಧಿ ವಿಧಾನವನ್ನು ನಿಯಮಾನುಸಾರ ಅಳವಡಿಸಿಕೊಂಡು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಒಕ್ಕೂಟದ ಸಿಬ್ಬಂದಿ ಸೇವಾ ನಿಯಮಗಳಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳತಕ್ಕದ್ದು.
3. ಒಕ್ಕೂಟದ ವಹಿವಾಟನ್ನು ಗಣನೀಯವಾಗಿ ಹೆಚ್ಚಿಸಿ, ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವ ಮೂಲಕ ಒಕ್ಕೂಟದ ಸಿಬ್ಬಂದಿ ವೆಚ್ಚವು ವಾರ್ಷಿಕ ವಹಿವಾಟಿಗೆ ಶೇ.3 ಕ್ಕಿಂತ ಹೆಚ್ಚಾಗದಂತೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳತಕ್ಕದ್ದು.
4. ಖಾಲಿ ಹುದ್ದೆಗಳನ್ನು ಭರ್ತಿ ಮಾಡುವಾಗ ಕರ್ನಾಟಕ ಸಹಕಾರ ಸಂಘಗಳ ನಿಯಮ 1960 ರ ನಿಯಮ 17 & 18 ರಲ್ಲಿನ ಅವಕಾಶಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
5. ನೇಮಕಾತಿಯಲ್ಲಿ ಪ್ರಚಲಿತದಲ್ಲಿರುವ ಮೀಸಲಾತಿ ನಿಯಮಗಳನ್ನು ಪಾಲಿಸತಕ್ಕದ್ದು.
6. ಸಾಧ್ಯವಾದಷ್ಟು ಮಟ್ಟಿಗೆ ಸೂಪರ್ ನ್ಯೂಮರರಿ (ಸಂಖ್ಯಾತಿರಿಕ್ತ) ಹುದ್ದೆಗಳನ್ನು ಈಗ ಅನುಮೋದಿಸಿರುವ ಪರಿಷ್ಕøತ ವೃಂದ ಬಲದಲ್ಲಿ ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್. ಸೆಂತಾಮರೈ
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಚಾಮರಾಜನಗರ
ಸರ್ಕಾರದ ಆದೇಶ ಸಂಖ್ಯೆ: ಸಿಒ 72 ಸಿಸಿಬಿ 2018, ದಿ:29.01.2019 ರ ಆದೇಶದ
| ಕ್ರ.ಸಂ | ಹ ುದ್ದೆಗಳು | ವ ೕತನ ಶ್ರೇಣಿ (`..ಗಳಲ್ಲಿ) ೆ | ಬ ರ್ತಿ ಮಾಡಲು ಉದ್ದೇಶಿಸಿರುವ ಹ ುದ್ದೆಗಳ ಸಂಖ್ಯೆ |
| 1 | ಸ ಹಾಯಕ ವ್ಯವಸ್ಥಾಪಕರು (ಎ.ಹೆಚ್ & ಎ.ಐ.) | 28100-50100 | 6 |
| 2 | ಸ ಹಾಯಕ ವ್ಯವಸ್ಥಾಪಕರು (ವಿತ್ತ) | 28100-50100 | 1 |
| 3 | ಸ ಹಾಯಕ ವ್ಯವಸ್ಥಾಪಕರು (ಅಭಿಯಂತರ) | 28100-50100 | 1 |
| 4 | ಆಡಳಿತಾಧಿಕಾರಿ /ಕಾರ್ಮಿಕಾಧಿಕಾರಿ/ಸಾರ್ವಜನಿಕ ಸಂಪರ್ಕ ಅಧಿಕಾರಿ/ಕೈಗಾರಿಕೆ ಸಂಪರ್ಕ ಅಧಿಕಾರಿ | 22800-43200 | 1 |
| 5 | ಉಗ್ರಾಣಾಧಿಕಾರಿ | 22800-43200 | 1 |
| 6 | ಎಂ.ಐ.ಎಸ್./ಸಿಸ್ಟಂ ಆಫೀಸರ್ | 22800-43200 | 1 |
| 7 | ತಾಂತ್ರಿಕ ಅಧಿಕಾರಿ (ಡಿ.ಟಿ) | 22800-43200 | 3 |
| 8 | ತಾಂತ್ರಿಕ ಅಧಿಕಾರಿ (ಇಂಜಿ) | 22800-43200 | 2 |
| 9 | ತಾಂತ್ರಿಕ ಅಧಿಕಾರಿ (ಗುಣ ನಿಯಂತ್ರಣ) | 22800-43200 | 2 |
| 10 | ಕೃಷಿ ಅಧಿಕಾರಿ | 22800-43200 | 2 |
| 11 | ವಿಸ್ತರಣಾಧಿಕಾರಿ ದರ್ಜೆ-3 | 17650-32000 | 8 |
| 12 | ಸ ಕ್ಯುರಿಟಿ ಸೂಪರ್ ವೈಸರ್/ಸಂಯೋಜಕರು ಭದ್ರತೆ ದರ್ಜೆ-2, ೆ | 17650-32000 | 1 |
| 13 | ಆಡಳಿತ ಸಹಾಯಕ ದರ್ಜೆ -2 | 14550-26700 | 3 |
| 14 | ಲ ಕ್ಕ ಸಹಾಯಕ ದರ್ಜೆ -2 ೆ | 14550-26700 | 4 |
| 15 | ವ iಾರುಕಟ್ಟೆ ಸಹಾಯಕ ದರ್ಜೆ-2 | 14550-26700 | 2 |
| 16 | ಕೆಮಿಸ್ಟ್ ದರ್ಜೆ-2 | 14550-26700 | 4 |
| 17 | ಜೂನಿಯರ್ ಸಿಸ್ಟಂ ಆಫೀಸರ್ | 14550-26700 | 3 |
| 18 | ಬ ದ ತಾ ರಕ್ಷಕರು/ ಕೋ-ಆರ್ಡಿನೇಟರ್ ಪ್ರೊಟಕ್ಷನ್ ದರ್ಜೆ -2, ್ರ | 14550-26700 | 5 |
| 19 | ಕಿರಿಯ ತಾಂತ್ರಿಕರು /ಬಾಯ್ಲರ್ ಅಟೆಂಡರ್, | 11600-21000 | 20 |
| 20 | ಚಾಲಕರು | 11600-21000 | 2 |
| ಒಟ್ಟು | 72 |
PR.54
(ಆರ್. ಸೆಂತಾಮರೈ)
SC.25
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
ಸಹಕಾರ ಸಚಿವಾಲಯ
ವಿಷಯ: ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಶಿವಮೊಗ್ಗ ಇದರಲ್ಲಿ ಖಾಲಿ
ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು
ಅನುಮತಿ ನೀಡುವ ಕುರಿತು.
ಓದಲಾಗಿದೆ: ಸಹಕಾರ ಸಂಘಗಳ ನಿಬಂಧಕರ ಪತ್ರ ಸಂಖ್ಯೆ : ಆರ್ಸಿಎಸ್/ಸಿಆರ್ಡಿ/
ಕೆಎಂಸಿ-4:205: 2017-18, ದಿನಾಂಕ: 22-03-2018.
ಪ್ರಸ್ತಾವನೆ:
ಮೇಲೆ ಓದಲಾದ ಸಹಕಾರ ಸಂಘಗಳ ನಿಬಂಧಕರ ಪ್ರಸ್ತಾವೆಯಲ್ಲಿ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಶಿವಮೊಗ್ಗ ಈ ಬ್ಯಾಂಕಿನಲ್ಲಿ ಪ್ರಸ್ತುತ ಸಿಬ್ಬಂದಿ ವೃಂದ ಬಲದಲ್ಲಿ ಒಟ್ಟು 285 ಮಂಜೂರಾದ ವಿವಿಧ ದರ್ಜೆಯ ಹುದ್ದೆಗಳಿದ್ದು, ಉಳಿದ 188 ಹುದ್ದೆಗಳಲ್ಲಿ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಈ ಪೈಕಿ 97 ಖಾಲಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತುತ ಬ್ಯಾಂಕು 28 ಶಾಖೆಗಳನ್ನು ಹೊಂದಿದ್ದು, 05 ನೂತನ ಶಾಖೆಗಳನ್ನು ತೆರೆಯುವ ಬಗ್ಗೆ ಕಾರ್ಯ ಯೋಜನೆಯನ್ನು ರೂಪಿಸಿರುತ್ತದೆ. ಇನ್ನೂ ದಿ: 06.02.2018 ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಒಟ್ಟು ಸಿಬ್ಬಂದಿ ವೃಂದ ಬಲದಲ್ಲಿ ನೇರ ನೇಮಕಾತಿ ಹುದ್ದೆಗಳಾದ ಶೀಘ್ರಲಿಪಿಗಾರರು, ಕಿರಿಯ ಸಹಾಯಕರು, ವಾಹನ ಚಾಲಕರು, ಜಲಗಾರರು ಮತ್ತು ಅಟೆಂಡರ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ತೀರ್ಮಾನಿಸಿರುತ್ತಾರೆ.
ಪ್ರಸ್ತಾವನೆ ಪರಿಶೀಲಿಸಲಾಗಿ, ಬ್ಯಾಂಕಿನಲ್ಲಿ ಒಟ್ಟು ವಾರ್ಷಿಕ ಸಿಬ್ಬಂದಿ ವೆಚ್ಚ `..626.71 ಲಕ್ಷ ಇದ್ದು, ಇದು ದುಡಿಯುವ ಬಂಡವಾಳ `.91599.31 ಲಕ್ಷಕ್ಕೆ ಶೇ.0.68 ಆಗಲಿದ್ದು, ಬ್ಯಾಂಕ್ ಕೋರಿರುವಂತೆ ಹುದ್ದೆಗಳನ್ನು ಮಂಜೂರು ಮಾಡಿದ್ದಲ್ಲಿ, ವಾರ್ಷಿಕ ವೆಚ್ಚ `.342.04 ಲಕ್ಷ ಹೆಚ್ಚುವರಿಯಾಗಿ ವೆಚ್ಚವಾಗುವುದಾಗಿ ಈ ವೆಚ್ಚವೂ ಸೇರಿ ದುಡಿಯುವ ಬಂಡವಾಳಕ್ಕೆ ಸಿಬ್ಬಂದಿ ವೆಚ್ಚವು ಶೇ.1.06 ರಷ್ಟು ಆಗಲಿದೆ.
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಈ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಸಿಒ 58 ಸಿಸಿಬಿ 2018, ಬೆಂಗಳೂರು, ದಿನಾಂಕ: 05.02.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿ., ಶಿವಮೊಗ್ಗ ಈ ಬ್ಯಾಂಕಿಗೆ ಸಹಕಾರ ಸಂಘಗಳ ನಿಯಮಾವಳಿ 1960 ನಿಯಮ 17 ರನ್ವಯ ಕೋರಿರುವಂತೆ 97 ಹುದ್ದೆಗಳ ಪೈಕಿ ಅರ್ಹವಿರುವ ಕೆಳಕಂಡ 84 ಹುದ್ದೆಗಳನ್ನು ನೇರ ನೇಮಕಾತಿ
| ಕ್ರ.ಸಂ | ಹ ುದ್ದೆಯ ಹೆಸರು | ಖಾಲಿ ಇರುವ ಹುದ್ದೆಗಳ ಸಂಖ್ಯೆ |
| 1 | ಶೀಘ್ರಲಿಪಿಗಾರರು | 1 |
| 2 | ಕಿರಿಯ ಸಹಾಯಕರು/ ಕ್ಷೇತ್ರಾಧಿಕಾರಿಗಳು/ ನಗದು ಗುಮಾಸ್ತರು | 59 |
| 3 | ವಾಹನ ಚಾಲಕರು | 1 |
| 4 | ಅಟೆಂಡರ್ | 22 |
| 5 | ಜಲಗಾರರು | 1 |
| ಒಟ್ಟು | 84 |
ಷರತ್ತುಗಳು:
1. ನೇಮಕಾತಿಯಲ್ಲಿ ಸರ್ಕಾರದ ಆದೇಶ ಸಂಖ್ಯೆ. ಸಿಒ:166:ಸಿಎಲ್ಎಂ:2012 ದಿನಾಂಕ:22-08-2013 ರಲ್ಲಿ ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಪಾಲಿಸುವುದು.
2. ಬ್ಯಾಂಕು ಕ್ರಮವಾಗಿ ಬಿಡಿಪಿ ಯೋಜನೆಯನ್ನು ರೂಪಿಸಿಕೊಂಡು ವ್ಯವಹಾರ /ವಹಿವಾಟನ್ನು ಹೆಚ್ಚಿಸಿಕೊಂಡು ಕ್ರೋಡೀಕೃತ ನಷ್ಟವನ್ನು ತೊಡೆದು ಶೇ.2ಕ್ಕೆ ಮೀರದಂತೆ ಕ್ರಮವಿಡತಕ್ಕದ್ದು.
3. ಅಗತ್ಯ ಸಿಬ್ಬಂದಿ ನೇಮಕಾತಿಗೆ ವಿದ್ಯಾರ್ಹತೆ, ನೇಮಕಾತಿ ಕ್ರಮವನ್ನು ಬ್ಯಾಂಕಿನಲ್ಲಿ ಸೇವಾ ನಿಯಮಗಳನ್ನು ರಚಿಸಿ ಅಳವಡಿಸಿಕೊಂಡು ಸೂಕ್ತವಾಗಿ ಉಪನಿಯಮಗಳಲ್ಲಿ ಸೇರಿಸಿಕೊಂಡು ನೇಮಕಾತಿಗೆ ಕ್ರಮವಿಡುವುದು.
PR.56
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.25
ಆರ್. ಸೆಂತಾಮರೈ
ಸರ್ಕಾರದ ಅಧೀನ ಕಾರ್ಯದರ್ಶಿ-3,
ಸಹಕಾರ ಇಲಾಖೆ.
ಕಂದಾಯ ಸಚಿವಾಲಯ
ವಿಷಯ: ಬೆಳಗಾವಿ ನಗರದ ಸಿ.ಟಿ.ಎಸ್.ನಂ. 4807/ಎ/1ಎ ರಲ್ಲಿ ಜಿಲ್ಲಾ ಜಾತ್ಯಾತೀತ
ಜನತಾದಳ(ಎಸ್) ಕಾರ್ಯಾಲಯದ ಕಟ್ಟಡದ ನಿರ್ಮಾಣಕ್ಕಾಗಿ ಗುತ್ತಿಗೆಗೆ ನೀಡಿರುವ
0-36-04 ಆಣೆೆ (39,400 ಚದರ ಅಡಿ) ಜಮೀನನ್ನು ಮಂಜೂರು ಮಾಡುವ
ಕುರಿತು.
ಓದಲಾಗಿದೆ: 1. ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ, ಇವರ ಪತ್ರ ಸಂಖ್ಯೆ:ಕಂಶ/ಸಿಟಿಎಸ್/ಸಿಆರ್-47/
2006-07, ದಿನಾಂಕ:24-07-2018.
2. ಸರ್ಕಾರದ ಪತ್ರ ಸಂಖ್ಯೆ: ಆರ್ಡಿ 44 ಎಲ್ ಜಿಎಲ್ 2006, ದಿ:31-8-2006
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮಾಂಕ (1)ರ ದಿನಾಂಕ: 24-7-2018ರ ಜಿಲ್ಲಾಧಿಕಾರಿ, ಬೆಳಗಾವಿ ಜಿಲ್ಲೆ ಇವರ ಪತ್ರದಲ್ಲಿ, ಬೆಳಗಾವಿ ನಗರದ ಸಿ.ಟಿ.ಎಸ್.ನಂ. 4807/ಎ/1ಎ ರಲ್ಲಿ ಜಿಲ್ಲಾ ಜಾತ್ಯಾತೀತ ಜನತಾದಳ(ಎಸ್) ಕಾರ್ಯಾಲಯದ ಕಟ್ಟಡದ ನಿರ್ಮಾಣಕ್ಕಾಗಿ ಗುತ್ತಿಗೆಗೆ ನೀಡಿರುವ 0-36-04 ಆಣೆೆ (39,400 ಚದರ ಅಡಿ) ಜಮೀನಿಗೆ ನಿಗಧಿಪಡಿಸಿರುವ ಭೂ ಬಾಡಿಗೆಯನ್ನು ಪರಿಷ್ಕರಿಸುವ ಅಥವಾ ಖಾಯಂ ಮಂಜೂರು ಮಾಡುವ ಕುರಿತು ಪ್ರಸ್ತಾಪಿಸಿರುತ್ತಾರೆ.
ಮೇಲೆ ಓದಲಾದ ಕ್ರಮಾಂಕ (2)ರ ದಿನಾಂಕ: 31-8-2006ರ ಪತ್ರದಲ್ಲಿ ಬೆಳಗಾವಿ ಜಿಲ್ಲೆ, ಬೆಳಗಾವಿ ನಗರದ ಸಿ.ಟಿ.ಎಸ್.ನಂ. 4807/ಎ/1ಎ ರಲ್ಲಿ 0-36ಗು-04ಆಣೆೆ (39,400 ಚದರ ಅಡಿ) ಪ್ರದೇಶವನ್ನು ಅಂದಿನ ಮಾರುಕಟ್ಟೆ ದರದ ಶೇಕಡ 10 ರ ದರದಂತೆ ವಾರ್ಷಿಕ `.8 ಲಕ್ಷಗಳ ಭೂ ಬಾಡಿಗೆಯನ್ನು ನಿಗಧಿಪಡಿಸಿ, 30 ವರ್ಷಗಳ ಅವಧಿಗೆ ಬೆಳಗಾವಿ ಜಿಲ್ಲಾ ಜೆಡಿಎಸ್ ಕಾರ್ಯಾಲಯದ ಕಟ್ಟಡದ ನಿರ್ಮಾಣಕ್ಕಾಗಿ ಗುತ್ತಿಗೆಗೆ ನೀಡಲು ಸರ್ಕಾರದ ಪೂರ್ವಾನುಮೋದನೆಯನ್ನು ನೀಡಲಾಗಿರುತ್ತದೆ. ಪ್ರಸ್ತುತ ಸದರಿ ಜಮೀನು ಖಾಲಿ ಇದ್ದು, ಅತಿಕ್ರಮಣದಿಂದ ಮುಕ್ತವಿರುತ್ತದೆ ಹಾಗೂ ಸದರಿ ಪ್ರದೇಶವನ್ನು ಜನತಾದಳ ಪಕ್ಷದ ಕಾರ್ಯ ಚಟುವಟಿಕೆಗಾಗಿ ಉಪಯೋಗಿಸುತ್ತಿದ್ದು, ಸದರಿ ಜಮೀನನ್ನು ಜಿಲ್ಲಾ ಜನತಾದಳ ಪಕ್ಷದ ಕಾರ್ಯಾಲಯದ ಕಟ್ಟಡದ ನಿರ್ಮಾಣಕ್ಕಾಗಿ ಮಂಜೂರು ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮುಂದಿನ ತೀರ್ಮಾನಕ್ಕಾಗಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ ಜಿಲ್ಲಾಧಿಕಾರಿಗಳು, ಬೆಳಗಾವಿ ಜಿಲ್ಲೆ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 25 ಎಲ್ಜಿಎಲ್ 2018, ಬೆಂಗಳೂರು, ದಿನಾಂಕ:10-01-2019
ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಸರ್ಕಾರದ ಪತ್ರ ಸಂಖ್ಯೆ: ಆರ್ಡಿ 44 ಎಲ್ಜಿಎಲ್ 2006, ದಿನಾಂಕ: 31-08-2006ರಲ್ಲಿ ಬೆಳಗಾವಿ ಜಿಲ್ಲೆ, ಬೆಳಗಾವಿ ನಗರದ ಸಿ.ಟಿ.ಎಸ್.ನಂ.4807/ಎ/1ಎ ರಲ್ಲಿ ಬೆಳಗಾವಿ ಜಿಲ್ಲಾ ಜನತಾದಳ (ಜಾತ್ಯಾತೀತ), ಬೆಳಗಾವಿ ಇದರ ಕಾರ್ಯಾಲಯದ ಕಟ್ಟಡದ ನಿರ್ಮಾಣಕ್ಕಾಗಿ 0-36ಗು-04ಆಣೆ (39,400 ಚದರ ಅಡಿ) ಜಾಗವನ್ನು ಗುತ್ತಿಗೆಗೆ ನೀಡಿರುವುದನ್ನು ಹಿಂದಕ್ಕೆ ಪಡೆದು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27 ರನ್ವಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ವಿಸ್ತೀರ್ಣ 0-36ಗು-04ಆಣೆ (39,400 ಚದರ ಅಡಿ) ಜಾಗವನ್ನು ಒಂದು ಚದರ ಅಡಿಗೆ `.200/-ರಂತೆ ದರ ಹಾಗೂ ನಿಯಮಾನುಸಾರ ಇತರೆ ಶುಲ್ಕಗಳನ್ನು ವಿಧಿಸಿ ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಅಧ್ಯಕ್ಷರು, ಬೆಳಗಾವಿ ಜಿಲ್ಲಾ ಜನತಾದಳ (ಜಾತ್ಯಾತೀತ) ಬೆಳಗಾವಿ ಇವರಿಗೆ ಮಂಜೂರು ಮಾಡಿ ಆದೇಶಿಸಿದೆ.
೧೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೧ಷರತ್ತುಗಳು:
1. ಮಂಜೂರಾತಿ ಆದೇಶದಲ್ಲಿ ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆದರ/ ಮಾರ್ಗಸೂಚಿ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು.
2. ಉದ್ದೇಶಿತ ಜಮೀನನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು.
3. ಪ್ರಸ್ತಾಪಿತ ಜಮೀನು ಸಂಸ್ಥೆಗೆ ಅವಶ್ಯವಿಲ್ಲದಿದ್ದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.
4. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.
5. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು.
6. ಮಂಜೂರಾದ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.
7. ಸದರಿ ಜಮೀನಿನಲ್ಲಿ ಅಭಿವೃದ್ದಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಕಡ್ಡಾಯವಾಗಿ ಪಡೆಯತಕ್ಕದ್ದು.
8. ಮಂಜೂರು ಮಾಡಲಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡದೆ ಹಿಂತೆಗೆದುಕೊಳ್ಳುವ ಹಕ್ಕನ್ನು ಹೊಂದಿರುತ್ತದೆ.
9. ಮಂಜೂರು ಮಾಡಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗುತ್ತಿಗೆ/ ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ ಇಡುವುದಾಗಲೀ, ವರ್ಗಾವಣೆ ಅಥವಾ ಇತರೆ ಯಾವುದೇ ರೀತಿಯ ಪರಭಾರೆ ಮಾಡತಕ್ಕದ್ದಲ್ಲ.
10. ಮಂಜೂರಾತಿಯಾದ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.
11. ಜಿಲ್ಲಾಧಿಕಾರಿಗಳು ಮಂಜೂರು ಮಾಡಲಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.
PR.57
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.25
ಎಂ.ಇ. ಚನ್ನಬಸವರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂಮಂಜೂರಾತಿ-3).
ನಗರಾಭಿವೃದ್ಧಿ ಸಚಿವಾಲಯ
ವಿಷಯ: ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತಾತ್ಕಾಲಿಕವಾಗಿ ಮಂಜೂರಾಗಿರುವ ನಗರ ಯೋಜಕರ ಹುದ್ದೆಯನ್ನು ಒಂದು ವರ್ಷದ ಅವಧಿಗೆ ಮುಂದುವರೆಸುವ ಬಗ್ಗೆ.
ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ : ನಅಇ 320 ಬೆಂರೂಪ್ರಾ 2016, ದಿನಾಂಕ:03.06.2017.
2. ಆಯುಕ್ತರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಇವರ ಪತ್ರಗಳ ಸಂಖ್ಯೆ:
ಟಿಯುಡಿಎ/ ಸಿಬ್ಬಂದಿ/ಸಿ.ಆರ್/36/2018-19, ದಿನಾಂಕ: 21.05.2018 ಮತ್ತು 10.10.2018.
ಪ್ರಸ್ತಾವನೆ:
ಮೇಲೆ ಕ್ರಮ ಸಂಖ್ಯೆ (1) ರಲ್ಲಿ ಓದಲಾದ ಸರ್ಕಾರದ ಆದೇಶದಲ್ಲಿ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತಾತ್ಕಾಲಿಕವಾಗಿ ಮಂಜೂರಾಗಿರುವ ನಗರ ಯೋಜಕರ ಒಂದು ಹುದ್ದೆಯನ್ನು ದಿನಾಂಕ: 07.06.2017 ರಿಂದ ಒಂದು ವರ್ಷದ ಅವಧಿಗೆ ಅನ್ವಯವಾಗುವಂತೆ ಮುಂದುವರೆಸಿ ಆದೇಶಿಸಲಾಗಿರುತ್ತದೆ.
ಮೇಲೆ ಕ್ರಮ ಸಂಖ್ಯೆ (2) ರಲ್ಲಿ ಓದಲಾದ ಆಯುಕ್ತರು, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ತುಮಕೂರುರವರ ಪತ್ರಗಳಲ್ಲಿ, ಪ್ರಾಧಿಕಾರದ ಸಭೆಯ ದಿನಾಂಕ: 03.10.2018ರ ವಿಷಯ ಸಂಖ್ಯೆ: 03 ರಲ್ಲಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತಾತ್ಕಾಲಿಕವಾಗಿ ಮಂಜೂರಾಗಿರುವ ನಗರ ಯೋಜಕರ ಹುದ್ದೆಯನ್ನು ದಿನಾಂಕ07.06.2018 ರಿಂದ 06.06.2019 ರವರೆಗೆ ಮುಂದುವರೆಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿರುವುದರಿಂದ ಅದರಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿರುತ್ತದೆ.
ಈ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೧೫೯ಸರ್ಕಾರದ ಆದೇಶ ಸಂಖ್ಯೆ: ನಅಇ 117 ಬೆಂರೂಪ್ರಾ 2018, ಬೆಂಗಳೂರು, ದಿನಾಂಕ 17.01.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ತಾತ್ಕಾಲಿಕವಾಗಿ ಮಂಜೂರಾಗಿರುವ ನಗರ ಯೋಜಕರ ಹುದ್ದೆಯನ್ನು ದಿನಾಂಕ 07.06.2018 ರಿಂದ ದಿನಾಂಕ: 06.06.2019 ರವರೆಗೆ ಅನ್ವಯವಾಗುವಂತೆ ಸರ್ಕಾರದ ಆದೇಶ ಸಂಖ್ಯೆ ಎಫ್ಡಿ 58 ಎಸ್ಆರ್ಎ79, ದಿನಾಂಕ 27.09.1979 ರಲ್ಲಿನ ಷರತ್ತು ಮತ್ತು ನಿಬಂಧನೆಗಳಿಗೊಳಪಟ್ಟು ಮುಂದುವರೆಸಿ ಆದೇಶಿಸಿದೆ.
ಈ ಆದೇಶವನ್ನು ಆಂತರಿಕ ಆರ್ಥಿಕ ಸಲಹೆಗಾರರ ಹಿಂಬರಹ ಸಂಖ್ಯೆ: ವನಇ 334 ಆಂಆಸ 2018, ದಿನಾಂಕ: 27-11-2018 ರನ್ವಯ ಹೊರಡಿಸಲಾಗಿದೆ.
PR.58
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC.50
ನಾಗರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 189 ಬೆಂರೂಪ್ರಾ 2018 (ಭಾಗ-3) ಬೆಂಗಳೂರು, ದಿನಾಂಕ: 19.01.2019.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ: 4-ಸಿ (3) (i) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಹೆಚ್.ಎಸ್. ಸೋಮೇಶ ಬಿನ್ ಎನ್. ಸೋಮಯ್ಯ, ತ್ಯಾಗರಾಜ ಕಾಲೋನಿ, ಗೌರಿಬಿದನೂರು ಟೌನ್, ಚಿಕ್ಕಬಳ್ಳಾಪುರ ಜಿಲ್ಲೆ ಇವರನ್ನು ಗೌರಿಬಿದನೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕಗೊಳಿಸಿ ಆದೇಶಿಸಿದೆ.
PR. 59
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC. 50
ನಾಗರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ಕಂದಾಯ ಸಚಿವಾಲಯ
ವಿಷಯ: ಹಾಸನ ಜಿಲ್ಲೆ ಹಾಸನ ತಾಲ್ಲೂಕು ಶಾಂತಿಗ್ರಾಮದ ಸ.ನಂ. 488ರಲ್ಲಿ 40.00 ಎಕರೆ
ಗೋಮಾಳ ಜಮೀನನ್ನು ಜಿಲ್ಲಾ ಕಾರಾಗೃಹ ಕಟ್ಟಡ ನಿರ್ಮಾಣಕ್ಕಾಗಿ ಒಳಾಡಳಿತ ಇಲಾಖೆಗೆ
ಕಾಯ್ದಿರಿಸುವ ಬಗ್ಗೆ.
ಓದಲಾಗಿದೆ: ಪ್ರಾದೇಶಿಕ ಆಯುಕ್ತರು ಮೈಸೂರು ರವರ ಪತ್ರ ಸಂಖ್ಯೆ: ಆರ್.ಸಿ. 62/ಎಲ್ಎನ್ಡಿ
(2)/2017-18 ದಿನಾಂಕ:18.09.2018.
ಪ್ರಸ್ತಾವನೆ:
ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಹಾಸನ ಜಿಲ್ಲೆ, ಹಾಸನ ಮತ್ತು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಜಿಲ್ಲಾ ಕಾರಾಗ್ರಹಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸದರಿ ಕಾರಾಗೃಹದ ಬಗ್ಗೆ ಆಕ್ಷೇಪಿಸಿ ಬದಲಿ ಕಾರಾಗೃಹವನ್ನು ನಿರ್ಮಿಸಲು ಸೂಚಿಸಿರುತ್ತಾರೆ.
ಮೇಲೆ ಓದಲಾದ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ರವರ ಪತ್ರದಲ್ಲಿ ಹಾಸನ ಜಿಲ್ಲೆ, ಹಾಸನ ತಾಲ್ಲೂಕು, ಶಾಂತಿಗ್ರಾಮ ಗ್ರಾಮದ ಸ.ನಂ. 488 ರಲ್ಲಿ 90.03 ಎಕರೆ ಗೋಮಾಳ ಜಮೀನಿದ್ದು, 37.00 ಎಕರೆ ಜಮೀನು ಕೇಂದ್ರೀಯ ವಿದ್ಯಾಲಯ ಸ್ಥಾಪನೆಗಾಗಿ ಮಂಜೂರಾಗಿರುತ್ತದೆ.
ಗ್ರಾಮ ಪಂಚಾಯತಿಯ ನಿರ್ಣಯದಂತೆ 5.00 ಎಕರೆ ಜಮೀನನ್ನು ಇತರೆ ಉದ್ದೇಶಕ್ಕೆ ಕಾಯ್ದಿರಿಸಿ ಉಳಿದ ಜಮೀನಿನ ಪೈಕಿ 40.00 ಎಕರೆ ಜಮೀನನ್ನು ಜಿಲ್ಲಾ ಕಾರಾಗೃಹ ಕಟ್ಟಡ ನಿರ್ಮಾಣಕ್ಕಾಗಿ ಕಾಯ್ದಿರಿಸಬಹುದಾಗಿದೆ. ಪ್ರಸ್ತಾಪಿತ ಜಮೀನಿನ ಮಾರ್ಗಸೂಚಿ ಬೆಲೆಯು ಒಟ್ಟು `.76.80 ಲಕ್ಷಗಳಾಗಿರುತ್ತದೆ.
ಸದರಿ ಗ್ರಾಮದಲ್ಲಿ 1359 ಜಾನುವಾರುಗಳಿದ್ದು, ಕರ್ನಾಟಕ ಭೂ ಕಂದಾಯ ನಿಯಮಾವಳಿ 1966ರ ನಿಯಮ 97(1) ರನ್ವಯ 407 ಎಕರೆ ಗೋಮಾಳ ಜಮೀನಿನ ಅವಶ್ಯಕತೆ ಇರುತ್ತದೆ. ಸದರಿ ಗ್ರಾಮದಲ್ಲಿ ಜಾನುವಾರುಗಳ ಸಂಖ್ಯೆಗನುಗುಣವಾಗಿ ಗೋಮಾಳ ಜಮೀನು ಲಭ್ಯವಿರುವುದಿಲ್ಲ. ಆದರೆ ಸಾಕಷ್ಟು ಅರಣ್ಯ ಜಮೀನು ಲಭ್ಯವಿರುವುದರಿಂದ ಹಾಸನ ತಾಲ್ಲೂಕು, ಶಾಂತಿಗ್ರಾಮ ಗ್ರಾಮದ ಸ.ನಂ. 488 ರಲ್ಲಿ 40.00 ಎಕರೆ ಗೋಮಾಳ ಜಮೀನನ್ನು ಜಿಲ್ಲಾ ಕಾರಾಗೃಹ ಕಟ್ಟಡ ನಿರ್ಮಾಣಕ್ಕಾಗಿ ಕಾಯ್ದಿರಿಸುವಂತೆ ಕೋರಿರುತ್ತಾರೆ.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೧೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೧ಪ್ರಾದೇಶಿಕ ಆಯುಕ್ತರ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 34 ಎಲ್ಜಿಹೆಚ್ 2018, ಬೆಂಗಳೂರು ದಿನಾಂಕ: 25/01/2019
ಹಾಸನ ಜಿಲ್ಲೆ, ಹಾಸನ ತಾಲ್ಲೂಕು, ಶಾಂತಿಗ್ರಾಮ ಗ್ರಾಮದ ಸ.ನಂ. 488 ರಲ್ಲಿ 40.00 ಎಕರೆ ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 97 (4) ರಂತೆ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ ಜಿಲ್ಲಾ ಕಾರಾಗೃಹ ಕಟ್ಟಡ ನಿರ್ಮಾಣಕ್ಕಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71 ರನ್ವಯ ಒಳಾಡಳಿತ ಇಲಾಖೆಗೆ ಕಾಯ್ದಿರಿಸಲು ಆದೇಶಿಸಿದೆ.
PR. 60
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC. 20
ವಿಮಲಮ್ಮ.ಸಿ
ಪೀಠಾಧಿಕಾರಿ,
ಕಂದಾಯ ಇಲಾಖೆ. (ಭೂ ಮಂಜೂರಾತಿ-2) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.