Servants of Knowledge
Karnataka Gazette · Government of Karnataka

Karnataka Gazette, Part Part-4A, 28 February 2019

Published 28 February 2019

Part
Part-4A
Identifier
in.gazette.karnataka_new.2019-02-28.Part-4A
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಫೆಬ್ರವರಿ ೨೮, ೨೦೧೯ (ಫಾಲ್ಗುಣ ೯, ಶಕ ವರ್ಷ ೧೯೪೦)

Bengaluru, Thursday, February 28, 2019 (Phalguna 9, Shaka Varsha 1940)

ಸಂಚಿಕೆ ೯

Issue 9

ಭಾಗ ೪ಎ

ರಾಜ್ಯದ ವಿಧೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ರಾಜ್ಯದ

ಅಧಿನಿಯಮಗಳು ಮತ್ತು ಆಧ್ಯಾದೇಶಗಳು, ಕೇಂದ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು

ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ

ನಿಯಮಗಳು ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯವು ಮಾಡಿದ ನಿಯಮಗಳು

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಎನ್ 24 ವಿಎಸ್‌ಸಿ 2019, ಬೆಂಗಳೂರು, ದಿನಾಂಕ: 25-01-2019

ಸೌರ ವಿದ್ಯುತ್‌ನ್ನು ಪ್ರೋತ್ಸಾಹಿಸಲು ಸರ್ಕಾರವು ಅಧಿಸೂಚನೆ ಸಂಖ್ಯೆ: ಇಎನ್ 21 ವಿಎಸ್‌ಸಿ 2014 ದಿನಾಂಕ: 22.05.2014 ಮತ್ತು ತಿದ್ದುಪಡಿ ಸಂಖ್ಯೆ: ಇಎನ್ 49 ವಿಎಸ್‌ಸಿ 2016 ದಿನಾಂಕ: 12.01.2017ರಂತೆ ಸೌರ ನೀತಿ 2014-21 ಅನ್ನು ಜಾರಿಗೊಳಿಸಿರುತ್ತದೆ. ಸದರಿ ನೀತಿಯನ್ವಯ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯು ಸೌರ ನೀತಿಯ ಅನುಷ್ಠಾನಕ್ಕೆ ನೇಮಿತ ಪ್ರತಿನಿಧಿಯಾಗಿರುತ್ತದೆ.

ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತರವರ ಪ್ರಸ್ತಾವನೆ ದಿನಾಂಕ: 02/03.01.2019 ರಂತೆ ಹೊಳೆನರಸೀಪುರ ತಾಲ್ಲೂಕಿನಲ್ಲಿ 15 ಮೆ.ವ್ಯಾ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆ ಸ್ಥಾಪಿಸಲು ಮೆ|| ಹೊಲೆನ್ ಸೋಲಾರ್ ಪ್ರೈ.ಲಿ., ರವರಿಗೆ ಕ್ರೆಡಲ್ ವತಿಯಿಂದ ದಿನಾಂಕ: 08.12.2018 ರಂದು ಹಂಚಿಕೆ ನೀಡಿದ್ದು, ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಮಳಲಿ ಗ್ರಾಮದಲ್ಲಿ 44-29(ಎ-ಗು) ವಿಸ್ತೀರ್ಣದ ಖಾಸಗಿ ಜಮೀನುಗಳನ್ನು ಕರ್ನಾಟಕ ಭೂ ಸುಧಾರಣಾ ಅಧಿನಿಯಮದನ್ವಯ ಶಾಸನಬದ್ಧ ಅನುಮೋದನೆಗಳ ನಂತರ ಕ್ರೆಡಲ್ ಸಂಸ್ಥೆಯು ಗುತ್ತಿಗೆ ಪಡೆದು ಸದರಿ ಜಮೀನುಗಳನ್ನು ಖಾಸಗಿ ಸೌರ ವಿದ್ಯುತ್ ಅಭಿವೃದ್ಧಿದಾರರಿಗೆ ನಿಯಮಾನುಸಾರ ಉಪ ಗುತ್ತಿಗೆ ನೀಡಲು ಕೋರಿರುತ್ತಾರೆ.

ಸರ್ಕಾರದ ಆದೇಶ ಸಂಖ್ಯೆ: ಇಎನ್ 66 ವಿಎಸ್‌ಸಿ 2016 ದಿನಾಂಕ: 05.10.2016 ಮತ್ತು ಕರ್ನಾಟಕ ಭೂಕಂದಾಯ ಅಧಿನಿಯಮ (ತಿದ್ದುಪಡಿ), 2015 (ಕರ್ನಾಟಕ ಅಧಿನಿಯಮ 2015ರ ಸಂಖ್ಯೆ: 31)ರನ್ವಯ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಮಳಲಿ ಗ್ರಾಮದಲ್ಲಿ ಅನುಬಂಧದಲ್ಲಿ ನಮೂದಿಸಿರುವ ಸರ್ವೆ ನಂಬರ್ ಹಾಗೂ ಭೂಮಾಲೀಕರ ಹೆಸರುಗಳನ್ನೊಳಗೊಂಡ 44-29(ಎ-ಗು)ವಿಸ್ತೀರ್ಣದ ಖಾಸಗಿ ಜಮೀನುಗಳಲ್ಲಿ, ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಅಳವಡಿಸುವ ಉದ್ದೇಶದಿಂದ, ಕರ್ನಾಟಕ ಭೂ ಸುಧಾರಣಾ ಅಧಿನಿಯಮದನ್ವಯ ಶಾಸನಬದ್ಧ ಅನುಮೋದನೆಗಳ ನಂತರ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯು ಗುತ್ತಿಗೆ ಆಧಾರದ ಮೇಲೆ ಜಮೀನುಗಳನ್ನು ಪಡೆದು ತರುವಾಯ ಜಮೀನುಗಳನ್ನು ಖಾಸಗಿ ಸೌರ ವಿದ್ಯುತ್ ಅಭಿವೃದ್ಧಿದಾರರಿಗೆ ನಿಯಮಾನುಸಾರ ಉಪ ಗುತ್ತಿಗೆಗೆ ನೀಡಲು ಸರ್ಕಾರ ಅನುಮತಿಸಿದೆ.

ಮುಂದುವರೆದು, ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್ ರವರು ಉಪಗುತ್ತಿಗೆ ನೀಡಲು ಪ್ರಸ್ತಾಪಿಸಿರುವ ಜಮೀನುಗಳ ಮಾಲೀಕತ್ವ/ವಾರಸುದಾರರು, ಸರ್ವೆನಂಬರ್, ಜಮೀನಿನ ವಿಸ್ತೀರ್ಣ ಇತ್ಯಾದಿ ದಾಖಲಾತಿಗಳನ್ನು ಪರಿಶೀಲಿಸಿ, ಖಾತರಿ ಪಡಿಸಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ. ಶ್ರೀನಿವಾಸಯ್ಯ

ಇಂಧನ ಇಲಾಖೆ.

(೯೬೭)೯೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೪ಎ

ಸರ್ಕಾರದ ಅಧಿಸೂಚನೆ ಸಂಖ್ಯೆ: ಇಎನ್ 24 ವಿಎಸ್‌ಸಿ 2019, ದಿನಾಂಕ:25.01.2019ಕ್ಕೆ ಅನುಬಂಧ

ಕ್ರಮ ಸ ಂಖ್ಯೆ ಸ ವ ರ್ ನಂ ೆ ಬ ೂ ಮಾಲೀಕರ ಹೆಸರು ಒಟ್ಟು ವಿಸ್ತೀರ್ಣ (ಎ-ಗು)
1 186/ಪಿ18 ನಂಜುಂಡೇಗೌಡ ಬಿನ್ ಕಂಪೇಗೌಡ & ಇತರರು (ಪೌತಿ ಖಾತೆ) 3-00
2 186/ಪಿ8 ಜವರಯ್ಯ ಬಿನ್ ಚನ್ನಯ್ಯ & ಇತರರು (ಪೌತಿ ಖಾತೆ) 3-00
186
3 186/ಪಿ10 ವ ುಂಜುನಾಥ ಬಿನ್ ರಾಮೇಗೌಡ 1-00
4 186/ಪಿ27 ಲಕ್ಷ್ಮಮ್ಮ ಕೋಂ ರಂಗಸ್ವಾಮಿ 0-20
5 275 ನರಸೇಗೌಡ ಬಿನ್ ದೊಡ್ಡೇಗೌಡ 2-00
6 186/ಪಿ31 ರಾಮಕೃಷ್ಣೇಗೌಡ ಎಮ್.ಎನ್. ಬಿನ್ ಲೇ|| ನರಸೇಗೌಡ 1-00
7 186/ಪಿ15 ಗೌಡೇಗೌಡ ಬಿನ್ ಚಿಕ್ಕೇಗೌಡ 3-00
8 186/ಪಿ3 ಎಸ್.ಎನ್. ಜವರೇಗೌಡ ಬಿನ್ ನಿಂಗೇಗೌಡ 3-00
9 186/ಪಿ9 ರಾಜೇಗೌಡ ಬಿನ್ ಕಾಳೇಗೌಡ 1-10
10 186/ಪಿ33 ಅಣ್ಣೇಗೌಡ ಬಿನ್ ರಂಗೇಗೌಡ 0-33
11 186/ಪಿ13 ನರಸಯ್ಯ ಬಿನ್ ಹುಚ್ಚಯ್ಯ 1-18
12 186/ಪಿ35 ಸ ುಪ್ರಭ ಎಮ್.ಎನ್ ಕೋಂ ನಿಂಗರಾಜು 1-25
13 186/ಪಿ38 ಗಂಧರ್ವೇಗೌಡ ಬಿನ್ ಲೇ|| ಗಿಡ್ಡೇಗೌಡ 3-00
14 186/ಪಿ5 ಅಣ್ಣಾಜಿಗೌಡ ಎಂ.ಎಲ್ ಬಿನ್ ಲಕ್ಕೇಗೌಡ 3-00
15 186/ಪಿ34 ಗೌಡೇಗೌಡ ಬಿನ್ ಲೇ|| ನರಸೇಗೌಡ 2-00
16 186/ಪಿ11 ಸಿದ್ದಮ್ಮ ಕೋಂ ಹಿರಿಹುಚ್ಚಯ್ಯ 1-05
17 186 ಪಾಪಯ್ಯ ಬಿನ್ ಲೇ|| ಕರಿಯಯ್ಯ & ಇತರರು (ಪೌತಿ ಖಾತೆ) 1-00
18 186 ರಾಮೇಗೌಡ ಬಿನ್ ದೊಡ್ಡೇಗೌಡ 1-39
19 186 ಗಂಗಮ್ಮ ಕೋಂ ಸಣ್ಣೇಗೌಡ 0-33
20 186 ಗಿಡ್ಡೇಗೌಡ ಬಿನ್ ಚಿಕ್ಕೇಗೌಡ 1-09
21 186 ಶ ಂಕರ ಎಮ್.ಎಸ್ ಬಿನ್ ಸಣ್ಣೇಗೌಡ 1-25
22 186/ಪಿ19 ಜಯರಾಮ ಬಿನ್ ಅಣ್ಣೇಗೌಡ 3-00
186/ಪಿ20
23 186/ಪಿ30 ಜಗದೀಶ್ ಎಮ್.ಕೆ ಬಿನ್ ಕೃಷ್ಣೇಗೌಡ 1-00
24 186 ನಟೇಶ್ ಕುಮಾರ್ ಬಿನ್ ಪುಟ್ಟಸ್ವಾಮಿಗೌಡ 0-16
25 186/ಪಿ12 ರತ್ನಮ್ಮ ಕೋಂ ಅಣ್ಣಪ್ಪ 1-10
26 186/ಪಿ26 ಸ ುಶೀಲ ಕೋಂ ಸ್ವಾಮಿಗೌಡ 1-26
ಒಟ್ಟು 44-29

PR –56

ಬಿ.ವಿ. ಶ್ರೀನಿವಾಸಯ್ಯ

SC - 25

ಇಂಧನ ಇಲಾಖೆ.

ಇಂಧನ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಎನ್ 23 ವಿಎಸ್‌ಸಿ 2019, ಬೆಂಗಳೂರು, ದಿನಾಂಕ: 24-01-2019.

ಸೌರ ವಿದ್ಯುತ್‌ನ್ನು ಪ್ರೋತ್ಸಾಹಿಸಲು ಸರ್ಕಾರವು ಅಧಿಸೂಚನೆ ಸಂಖ್ಯೆ: ಇಎನ್ 21 ವಿಎಸ್‌ಸಿ 2014 ದಿನಾಂಕ: 22.05.2014 ಮತ್ತು ತಿದ್ದುಪಡಿ ಸಂಖ್ಯೆ: ಇಎನ್ 49 ವಿಎಸ್‌ಸಿ 2016 ದಿನಾಂಕ: 12.01.2017ರಂತೆ ಸೌರ ನೀತಿ 2014-21 ಅನ್ನು ಜಾರಿಗೊಳಿಸಿರುತ್ತದೆ. ಸದರಿ ನೀತಿಯನ್ವಯ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯು ಸೌರ ನೀತಿಯ ಅನುಷ್ಠಾನಕ್ಕೆ ನೇಮಿತ ಪ್ರತಿನಿಧಿಯಾಗಿರುತ್ತದೆ.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೯೬೯

ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತರವರ ಪ್ರಸ್ತಾವನೆ ದಿ:02.01.2019 ರಂತೆ ಹೊಳೆನರಸೀಪುರ ತಾಲ್ಲೂಕಿನಲ್ಲಿ 05 ಮೆ.ವ್ಯಾ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆ ಸ್ಥಾಪಿಸಲು ಮೆ|| ಮಾಕ್ಸ್ ಪ್ಲಾಂಕ್ ಸೋಲಾರ್ ಫಾರ್ಮ್ಸ್ ಪ್ರೈ.ಲಿ., ರವರಿಗೆ ಕ್ರೆಡಲ್ ವತಿಯಿಂದ ದಿನಾಂಕ: 08.02.2018ರಂದು ಹಂಚಿಕೆ ನೀಡಿದ್ದು, ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಮಳಲಿ ಗ್ರಾಮದಲ್ಲಿ 29-24(ಎ-ಗು) ವಿಸ್ತೀರ್ಣದ ಖಾಸಗಿ ಜಮೀನುಗಳನ್ನು ಕರ್ನಾಟಕ ಭೂ ಸುಧಾರಣಾ ಅಧಿನಿಯಮದನ್ವಯ ಶಾಸನಬದ್ಧ ಅನುಮೋದನೆಗಳ ನಂತರ ಕ್ರೆಡಲ್ ಸಂಸ್ಥೆಯು ಗುತ್ತಿಗೆ ಪಡೆದು ಸದರಿ ಜಮೀನುಗಳನ್ನು ಖಾಸಗಿ ಸೌರ ವಿದ್ಯುತ್ ಅಭಿವೃದ್ಧಿದಾರರಿಗೆ ನಿಯಮಾನುಸಾರ ಉಪ ಗುತ್ತಿಗೆ ನೀಡುವ ಸಂಬಂಧ ಕೋರಿರುತ್ತಾರೆ.

ಸರ್ಕಾರದ ಆದೇಶ ಸಂಖ್ಯೆ: ಇಎನ್ 66 ವಿಎಸ್‌ಸಿ 2016 ದಿನಾಂಕ: 05.10.2016 ಮತ್ತು ಕರ್ನಾಟಕ ಭೂಕಂದಾಯ ಅಧಿನಿಯಮ (ತಿದ್ದುಪಡಿ), 2015 (ಕರ್ನಾಟಕ ಅಧಿನಿಯಮ 2015ರ ಸಂಖ್ಯೆ: 31) ರನ್ವಯ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಮಳಲಿ ಗ್ರಾಮದಲ್ಲಿ ಅನುಬಂಧದಲ್ಲಿ ನಮೂದಿಸಿರುವ ಸರ್ವೆ ನಂಬರ್ ಹಾಗೂ ಭೂಮಾಲೀಕರ ಹೆಸರುಗಳನ್ನೊಳಗೊಂಡ 29-24(ಎ-ಗು)ವಿಸ್ತೀರ್ಣದ ಖಾಸಗಿ ಜಮೀನುಗಳಲ್ಲಿ, ಸೌರ ವಿದ್ಯುತ್ ಉತ್ಪಾದನಾ ಘಟಕಗಳನ್ನು ಅಳವಡಿಸುವ ಉದ್ದೇಶದಿಂದ, ಕರ್ನಾಟಕ ಭೂ ಸುಧಾರಣಾ ಅಧಿನಿಯಮದನ್ವಯ ಶಾಸನಬದ್ಧ ಅನುಮೋದನೆಗಳ ನಂತರ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ ಸಂಸ್ಥೆಯು ಗುತ್ತಿಗೆ ಆಧಾರದ ಮೇಲೆ ಜಮೀನುಗಳನ್ನು ಪಡೆದು ತರುವಾಯ ಜಮೀನುಗಳನ್ನು ಖಾಸಗಿ ಸೌರ ವಿದ್ಯುತ್ ಅಭಿವೃದ್ಧಿದಾರರಿಗೆ ನಿಯಮಾನುಸಾರ ಉಪ ಗುತ್ತಿಗೆಗೆ ನೀಡಲು ಸರ್ಕಾರ ಅನುಮತಿಸಿದೆ.

ಮುಂದುವರೆದು, ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್‌ರವರು ಉಪಗುತ್ತಿಗೆ ನೀಡಲು ಪ್ರಸ್ತಾಪಿಸಿರುವ ಜಮೀನುಗಳ ಮಾಲೀಕತ್ವ/ವಾರಸುದಾರರು, ಸರ್ವೆನಂಬರ್, ಜಮೀನಿನ ವಿಸ್ತೀರ್ಣ ಇತ್ಯಾದಿ ದಾಖಲಾತಿಗಳನ್ನು ಪರಿಶೀಲಿಸಿ, ಖಾತರಿಪಡಿಸಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ.ವಿ. ಶ್ರೀನಿವಾಸಯ್ಯ

ಇಂಧನ ಇಲಾಖೆ.

ಸರ್ಕಾರದ ಅಧಿಸೂಚನೆ ಸಂಖ್ಯೆ: ಇಎನ್ 23 ವಿಎಸ್‌ಸಿ 2019, ದಿನಾಂಕ:24.01.2019ಕ್ಕೆ ಅನುಬಂಧ

ಹೋಬಳಿ- ಹಳೇಕೋಟೆ, ಗ್ರ್ರಾಮ- ಮಳಲಿ, ತಾಲ್ಲೂಕು-ಹೊಳೆನರಸೀಪುರ, ಜಿಲ್ಲೆ-ಹಾಸನ

ಕ್ರಮ ಸ ಂಖ್ಯೆ ಸ ವ ರ್ ನಂ ೆ ಬ ೂ ಮಾಲೀಕರ ಹೆಸರು ಒಟ್ಟು ವಿಸ್ತೀರ್ಣ (ಎ-ಗು-ಆ) ಅ ಖರಾಬು ಬ ಖರಾಬು ಉಳಿಕೆ ಒಟ್ಟು ವಿಸ್ತೀರ್ಣ (ಎ-ಗು-ಆ)
1 283 ರಾಮೇಗೌಡ ಬಿನ್ ಗಿಡ್ಡೇಗೌಡ 1-29 - - 1-29
2 283 ದ ೂಡ್ಡೇಗೌಡ ಎಮ್.ಜಿ. ಬಿನ್ ಗಿಡ್ಡೇಗೌಡ ೆ 2-00 - - 2-00
3 284/1 ವ ುಂಜುಳ ಕೋಂ ರಾಮೇಗೌಡ 2-02-08 00-05 - 1-37-08
4 284/2 ವ ನಿತಾ ಕೋಂ ಸುರೇಶ್ 1-37-08 - - 1-37-08
5 185/ಪಿ ಪ ುಟ್ಟಲಕ್ಷ್ಮಮ್ಮ ಕೋಂ ಲೇ|| ಲಕ್ಷ್ಮೇಗೌಡ 1-00 - - 1-00
6 185/ಪಿ ವ ುಂಜೇಗೌಡ ಬಿನ್ ಶಾಂತೇಗೌಡ 1-00 - - 1-00
7 185/ಪಿ ನಿಂಗಮ್ಮ ಕೋಂ ಲೇ|| ದೊಡ್ಡೇಗೌಡ (ಪೌತಿ) & ಇತರರು 1-00 - - 1-00
8 185/ಪಿ ಶಿವಣ್ಣ ಬಿನ್ ಲೇ|| ಮರಿಕಲ್ಲೇಗೌಡ 1-20 - - 1-20
9 185/ಪಿ ನರಸೇಗೌಡ ಬಿನ್ ಹುಚ್ಚೇಗೌಡ 3-00 - - 3-00
10 185/ಪಿ ಹಲಗಮ್ಮ ಕೋಂ ಲೇ|| ನಿಂಗೇಗೌಡ (ಪೌತಿ) & ಇತರರು 3-00 - - 3-00
11 185/ಪಿ ಜ ೖಲ್ಉದ್ದೀನ್ ಬಿನ್ ಮಹಮದ್ ಇಸ್ಮಾಯಿಲ್ & ೆ ಇತರರು (ಪೌತಿ) 3-00 - - 3-00
12 185/ಪಿ10 ಕೃಷ್ಣೇಗೌಡ ಬಿನ್ ಲೇಟ್ ಹುಚ್ಚೇಗೌಡ 1-20 - - 1-20
ನಂಜೇಗೌಡ ಬಿನ್ ಗೌಡೇಗೌಡ 1-20 - - 1-20
13 185/ಪಿ ದ ೕವರಾಜ ಬಿನ್ ನಂಜೇಗೌಡ ೆ 3-00 - - 3-00
14 185/ಪಿ9 ವ ುಂಜುಳ ಕೋಂ ಮಂಜೇಗೌಡ 1-20 - - 1-20
15 185/ಪಿ ಲಕ್ಷ್ಮಮ್ಮ ಕೋಂ ಸಣ್ಣೇಗೌಡ ಮತು ್ತಇತರರು (ಪೌತಿ) 1-00 - - 1-00
ಒಟ್ಟು 29-29 00-05 - 29-24

PR –57

ಬಿ.ವಿ. ಶ್ರೀನಿವಾಸಯ್ಯ

SC - 25

ಇಂಧನ ಇಲಾಖೆ.

೯೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೪ಎ

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಡಿ 72 ಎಲ್ಐಬಿ 2018, ಬೆಂಗಳೂರು, ದಿನಾಂಕ : 12-10-2018.

ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳ ಕಾಯ್ದೆ, 1965ರ 10ನೇ ಅಧಿನಿಯಮ ಪ್ರಕರಣ 17 ರಲ್ಲಿನ ಪ್ರದತ್ತವಾದ ಅಧಿಕಾರದನ್ವಯ ರಾಣೆಬೆನ್ನೂರು ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ 17(1)ಎ ರಿಂದ (ಹೆಚ್) ಮತ್ತು 17(2) ಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಸದಸ್ಯರನ್ನು ನಾಮಕರಣ ಮಾಡಿ ಆದೇಶಿಸಿದೆ.

ಪ ಕರಣ ್ರ ಸ ದ ಸ ್ಯರು
17(1)(ಎ) ವ ುುನಿಸಿಪಲ್ ಕಾರ್ಪೋರೇಷನ್ನಿನ ಮೇಯರ್‌ರವರು ಅಥವಾ ನಗರ ಪಾಲಿಕೆ ಸಭೆಯ ಅಥವಾ ನಗರದ ಬೇರೆ ನಗರ ಪಾಲಿಕೆ ಸಂಸ್ಥೆಯವರು ಪ್ರಾಧಿಕಾರ ವರ್ಗದ ಅಧಿಕಾರ ಪ ಯುಕ್ತ ಸಭಾಪತಿಯಾಗಿರತಕ್ಕದ್ದು. ್ರ ಅಧ್ಯಕ್ಷರು, ನಗರ ಸಭೆ, ರಾಣೆಬೆನ್ನೂರು
17(1)(ಬಿ) ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ್ತ (ಎಕ್ಸ್-ಅಫಿಷಿಯೋ) ನೇಮಕ ಮಾಡಲ್ಪಟ್ಟ ನಗರದ ಮೊದಲ ದರ್ಜೆ ಕಾಲೇಜು ಒಂದರ ಪ್ರಿನ್ಸಿಪಾಲರು, ಇವರು ಪ್ರಾಧಿಕಾರ ವರ್ಗದ ಉಪ ಸಭಾಪತಿಯಾಗಿ (ವೈಸ್-ಛೇರ್ಮನ್‌ರಾಗಿ) ಇರತಕ್ಕದ್ದು. ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಣೆಬೆನ್ನೂರು.
17(1)(ಸಿ) ನಗರದ ನಗರಪಾಲಿಕೆ ನಿಗಮದಿಂದ (ಮುನಿಸಿಪಲ್ ಕಾರ್ಪೋರೇಷನ್) ನಗರ ಪಾಲಿಕೆ ಸ ಬ ಯಿಂದ ಆಥವಾ ಇತರ ನಗರಪಾಲಿಕೆ ಸಂಸ್ಥೆಯಿಂದ ಅದರ ಸದಸ್ಯರುಗಳ ಪೈಕಿಯಿಂದ ೆ ಚ ುನಾಯಿಸಲ್ಪಡುವ ಇಬ್ಬರು ವ್ಯಕ್ತಿಗಳು. 1. ಶಿ ೕ ಪ್ರಕಾಶ ಜೈನ, ಸದಸ್ಯರು, ್ರ ನಗರ ಸಭೆ ರಾಣೆಬೆನ್ನೂರು. 2. ಶ್ರೀ ಪುಟ್ಟಪ್ಪಮರಿಯಮ್ಮನವರ, ಸ ದ ಸ ್ಯರು ನಗರ ಸಭೆ ರಾಣೆಬೆನ್ನೂರು.
17(1)(ಡಿ) ನಗರ ಸಹಾಯ ಪೋಷಿತ ಪುಸ್ತಕ ಭಂಡಾರಗಳ ಸಂಬಂಧವಾದ ಆಡಳಿತ ಸಂಸ್ಥೆಗಳ, ಸ ದ ಸ ್ಯರುಗಳ, ರಾಜ್ಯ ಸರ್ಕಾರದವರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಒಬ್ಬ ವ್ಯಕ್ತಿ. ಅಸ್ತಿತ್ವದಲ್ಲಿರುವುದಿಲ್ಲ.
17(1)(ಇ) ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ್ತ ನಾಮ ನಿರ್ದೇಶನ ಮಾಡಲ್ಪಟ್ಟ, ನಗರದಲ್ಲಿನ ಒಂದು ಹೈಸ್ಕೂಲಿನ ಮುಖ್ಯೋಪಾಧ್ಯಾಯರು. ವ ುುಖ್ಯೋಪಾಧ್ಯಾಯರು, ಸರ್ಕಾರಿ ಪ್ರೌಡ ಶಾಲೆ, ಮಾರುತಿನಗರ, ರಾಣೆಬೆನ್ನೂರು.
17(1)(ಎಫ್) ವ ೆ ುೖಸೂರು ಪುಸ್ತಕ ಭಂಡಾರ ಸಂಘದ ನಗರ ಶಾಖೆ ಯಾವುದಾದರೂ ಇದ್ದರೆ, ಅದರ ಸ ಮಿತಿಯಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಒಬ್ಬ ವ್ಯಕ್ತಿ. ಅಸ್ತಿತ್ವದಲ್ಲಿರುವುದಿಲ್ಲ.
17(1)(ಜಿ) ನಗರದಲ್ಲಿ ಅಧಿಕಾರ ವ್ಯಾಪ್ತಿಯ, ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ್ತ ನಾಮ ನಿರ್ದೇಶನ ಮಾಡಲ್ಪಟ್ಟ ವಿದ್ಯಾಭ್ಯಾಸ ಇಲಾಖೆಯ ಸಭಾಧಿಕಾರಿ. ಕ್ಷೇತ್ರ ಶಿಕ್ಷಣಾಧಿಕಾರಿ, ರಾಣೆಬೆನ್ನೂರು.
17(1)(ಹೆಚ್) ಸಾಮಾನ್ಯವಾಗಿ ನಗರದಲ್ಲೇ ವಾಸವಾಗಿರುವ ವ್ಯಕ್ತಿಗಳ ಪೈಕಿ ರಾಜ್ಯ ಸರ್ಕಾರದವರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಇಬ್ಬರು ವ್ಯಕ್ತಿಗಳು ಇರತಕ್ಕದ್ದು. 1. ಡಾ: ಗಣೇಶ ದೇವಗಿರಿಮಠ, ಉಮಾಶಂಕರ್ ನಗರ, ರಾಣೆಬೆನ್ನೂರು. 2. ಶ್ರೀಮತಿ ರತ್ನಮ್ಮ ನಗರ ಸಭೆ ಸ ದ ಸ ್ಯರು, ರಾಣೆಬೆನ್ನೂರು.
17(2) ನಗರದ ಮುಖ್ಯ ಪುಸ್ತಕ ಭಂಡಾರಾಧಿಕಾರಿಯು ನಗರದ ಪುಸ್ತಕ ಭಂಡಾರ ಪ್ರಾಧಿಕಾರ ವ ರ್ಗದ ಮತ್ತು ಸದರಿ ಪ್ರಾಧಿಕಾರ ವರ್ಗದ ಸಮಿತಿಗಳ ಅಧಿಕಾರ ಪ್ರಯುಕ್ತ ಕಾರ್ಯದರ್ಶಿಯಾಗಿರತಕ್ಕದ್ದು. ವ ುುಖ್ಯ ಗ್ರಂಥಾಲಯಾಧಿಕಾರಿ ನಗರ ಕೇಂದ್ರ ಗ್ರಂಥಾಲಯ ರಾಣೆಬೆನ್ನೂರು.

PR-41

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಶೇಖರ ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ), ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ.(ಸಾಮಾನ್ಯ).

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಡಿ 99 ಎಲ್ಐಬಿ 2018, ಬೆಂಗಳೂರು, ದಿನಾಂಕ : 30-10-2018.

ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳ ಕಾಯ್ದೆ 1965ರ 10ನೇ ಅಧಿನಿಯಮ ಪ್ರಕರಣ 17 ರಲ್ಲಿನ ಪ್ರದತ್ತವಾದ ಅಧಿಕಾರದನ್ವಯ ರಾಯಚೂರು ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ 17(1)ಎ ರಿಂದ (ಹೆಚ್) ಮತ್ತು 17(2) ಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಸದಸ್ಯರನ್ನು ನಾಮಕರಣ ಮಾಡಿ ಆದೇಶಿಸಿದೆ.

ಪ ಕರಣ ್ರ ಸ ದ ಸ ್ಯರು
17(1)(ಎ) ವ ುುನಿಸಿಪಲ್ ಕಾರ್ಪೋರೇಷನ್ನಿನ ಮೇಯರ್‌ರವರು ಅಥವಾ ನಗರ ಪಾಲಿಕೆ ಸಭೆಯ ಅಥವಾ ನಗರದ ಬೇರೆ ನಗರ ಪಾಲಿಕೆ ಸಂಸ್ಥೆಯವರು ಪ್ರಾಧಿಕಾರ ವರ್ಗದ ಅಧಿಕಾರ ಪ್ರಯುಕ್ತ ಸಭಾಪತಿಯಾಗಿರತಕ್ಕದ್ದು; ಅಧ್ಯಕ್ಷರು, ರಾಯಚೂರು ನಗರ ಸಭೆ, ರಾಯಚೂರು, ಪ ದ ನಿಮಿತ್ತ ಅಧ್ಯಕ್ಷರು, ರಾಯಚೂರು ನಗರ ಕೇಂದ್ರ ಗ್ರಂಥಾಲಯ ಪ್ರಾಧಿಕಾರ, ರಾಯಚೂರು
17(1)(ಬಿ) ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ್ತ (ಎಕ್ಸ್-ಅಫಿಷಿಯೋ) ನೇಮಕ ಮಾಡಲ್ಪಟ್ಟ ನಗರದ ಮೊದಲ ದರ್ಜೆ ಕಾಲೇಜು ಒಂದರ ಪಿ ನ್ಸಿಪಾಲರು, ಇವರು ಪ್ರಾಧಿಕಾರ ವರ್ಗದ ಉಪ ಸಭಾಪತಿಯಾಗಿ ್ರ (ವೈಸ್-ಛೇರ್ಮನರಾಗಿ) ಇರತಕ್ಕದ್ದು; ಪ್ರಾಂಶುಪಾಲರು, ಜಿ.ಎಫ್.ಜಿ.ಸಿ, ರಾಯಚೂರು.
17(1)(ಸಿ) ನಗರದ ನಗರ ಪಾಲಿಕೆ ನಿಗಮದಿಂದ (ಮುನಿಸಿಪಲ್ ಕಾರ್ಪೋರೇಷನ್), ನಗರ ಪಾಲಿಕೆ ಸಭೆಯಿಂದ ಅಥವಾ ಇತರ ನಗರಪಾಲಿಕೆ ಸಂಸ್ಥೆಯಿಂದ ಅದರ ಸದಸ್ಯರುಗಳ ಪೈಕಿಯಿಂದ ಚುನಾಯಿಸಲ್ಪಡುವ ಇಬ್ಬರ ವ್ಯಕ್ತಿಗಳು; 1. ಮಾನ್ಯ ಶ್ರೀ ಜಯಣ್ಣ, ಉಪಾಧ್ಯಕ್ಷರು, (ಸದಸ್ಯರು) ನಗರಸಭೆ, ರಾಯಚೂರು. 2. ಮಾನ್ಯ ಶ್ರೀ ಇಲ್ಲೂರು ಗೋಪಾಲಯ್ಯ (ಸದಸ್ಯರು) ನಗರ ಸಭೆ, ರಾಯಚೂರು.
17(1)(ಡಿ) ನಗರ ಸಹಾಯ ಪೋಷಿತ ಪುಸ್ತಕ ಭಂಡಾರಗಳ ಸಂಬಂಧವಾದ ಆಡಳಿತ ಸ ಂಸ್ಥೆಗಳ ಸದಸ್ಯರುಗಳ ರಾಜ್ಯ ಸರ್ಕಾರದವರಿಂದ ನಾಮ ನಿರ್ದೇಶನ ವ iಾಡಲ್ಪಟ್ಟ ಒಬ್ಬ ವ್ಯಕ್ತಿ - ಅಸ್ತಿತ್ವದಲ್ಲಿರುವುದಿಲ್ಲ -
17(1)(ಇ) ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ್ತ ನಾಮ ನಿರ್ದೇಶನ ವ iಾಡಲ್ಪಟ್ಟ ನಗರದಲ್ಲಿನ ಒಂದು ಹೈಸ್ಕೂಲಿನ ಮುಖ್ಯೋಪಾಧ್ಯಾಯರು; ಶಿ ೕ ಬಸಪ್ಪ ಗದ್ದಿ, ಮುಖ್ಯ ಗುರುಗಳು, ್ರ ಸ ರ್ಕಾರಿ ಪ್ರೌಡ ಶಾಲೆ, ಸಿಂಗನೋಡಿ, ರಾಯಚೂರು.
17(1)(ಎಫ್) ವ ುೖಸೂರು ಪುಸ್ತಕ ಭಂಡಾರ ಸಂಘದ ನಗರ ಶಾಖೆ ಯಾವುದಾದರೂ ೆ ಇದ್ದರೆ, ಅದರ ಸಮಿತಿಯಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಒಬ್ಬ ವ್ಯಕ್ತಿ; - ಅಸ್ತಿತ್ವದಲ್ಲಿರುವುದಿಲ್ಲ -
17(1)(ಜಿ) ನಗರದಲ್ಲಿ ಅಧಿಕಾರ ವ್ಯಾಪ್ತಿಯ ರಾಜ್ಯ ಸರ್ಕಾರದವರಿಂದ ಅಧಿಕಾರ ಪ ಯುಕ್ತ ನಾಮ ನಿರ್ದೇಶನ ಮಾಡಲ್ಪಟ್ಟ ವಿದ್ಯಾಭ್ಯಾಸ ಇಲಾಖೆಯ ್ರ ಸ ಬ ಾಧಿಕಾರಿ; ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಯಚೂರು.
17(1)(ಹೆಚ್) ಸಾಮಾನ್ಯವಾಗಿ ನಗರದಲ್ಲೇ ವಾಸವಾಗಿರುವ ವ್ಯಕ್ತಿಗಳ ಪೈಕಿ ರಾಜ್ಯ ಸ ರ್ಕಾರದವರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಇಬ್ಬರು ವ್ಯಕ್ತಿಗಳು ಇರತಕ್ಕದ್ದು. 1. ಮಾನ್ಯ ಶ್ರೀ ಎ.ಎ.ಸುಧೀರ, ಐ.ಡಿ.ಎನ್.ಎಮ್.ಟಿ.ಲೇಔಟ್, ರಾಯಚೂರು. 2. ಮಾನ್ಯ ಶ್ರೀ ಸೈಯ್ಯದ ಹಪೀಜುಲ್, ಬಷೀರ ಬಾಗ ಕಾಲೋನಿ, ಐ.ಬಿ.ರೋಡ್, ರಾಯಚೂರು.
17(2) ನಗರದ ಮುಖ್ಯ ಪುಸ್ತಕ ಭಂಡಾರಾಧಿಕಾರಿಯು, ನಗರದ ಪುಸ್ತಕ ಭಂಡಾರ ಪ್ರಾಧಿಕಾರ ವರ್ಗದ ಮತ್ತು ಸದರಿ ಪ್ರಧಿಕಾರ ವರ್ಗದ ಸಮಿತಿಗಳ ಅಧಿಕಾರ ಪ ಯುಕ್ತ ಕಾರ್ಯದರ್ಶಿಯಾಗಿರತಕ್ಕದ್ದು. ್ರ ವ ುುಖ್ಯ ಗ್ರಂಥಾಲಯಾಧಿಕಾರಿ ನಗರ ಕೇಂದ್ರ ಗ್ರಂಥಾಲಯ, ರಾಯಚೂರು.
ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೯೭೧

PR-42

SC-400

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಶೇಖರ ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ), ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ(ಸಾಮಾನ್ಯ).

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ : ಇಡಿ 70 ಎಲ್ಐಬಿ 2018, ಬೆಂಗಳೂರು, ದಿನಾಂಕ : 12-10-2018.

ಕರ್ನಾಟಕ ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳ ಕಾಯ್ದೆ 1965ರ 10ನೇ ಅಧಿನಿಯಮ ಪ್ರಕರಣ 17 ರಲ್ಲಿನ ಪ್ರದತ್ತವಾದ ಅಧಿಕಾರದನ್ವಯ ಕೆ.ಜಿ.ಎಫ್. ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ 17(1)ಎ ರಿಂದ (ಹೆಚ್) ಮತ್ತು 17(2) ಕ್ಕೆ ಸಂಬಂಧಿಸಿದಂತೆ ಈ ಕೆಳಕಂಡ ಸದಸ್ಯರನ್ನು ನಾಮಕರಣ ಮಾಡಿ ಆದೇಶಿಸಿದೆ.

ಪ್ರಕರಣ ಸ ದಸ್ಯರು
17(1)(ಎ) ವ ುುನಿಸಿಪಲ್ ಕಾರ್ಪೋರೇಷನ್ನಿನ ಮೇಯರ್‌ರವರು ಅಥವಾ ನಗರ ಪಾಲಿಕೆ ಸ ಬ ಯ ಅಥವಾ ನಗರದ ಬೇರೆ ನಗರ ಪಾಲಿಕೆ ಸಂಸ್ಥೆಯವರು ಪ್ರಾಧಿಕಾರ ವರ್ಗದ ೆ ಅಧಿಕಾರ ಪ್ರಯುಕ್ತ ಸಭಾಪತಿಯಾಗಿರತಕ್ಕದ್ದು. ಅಧ್ಯಕ್ಷರು, ನಗರ ಸಭೆ, ಕೆ.ಜಿ.ಎಫ್.
17(1)(ಬಿ) ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ್ತ (ಎಕ್ಸ್-ಅಫಿಷಿಯೋ) ನೇಮಕ ವ iಾಡಲ್ಪಟ್ಟ ನಗರದ ಮೊದಲ ದರ್ಜೆ ಕಾಲೇಜು ಒಂದರ ಪ್ರಿನ್ಸಿಪಾಲರು, ಇವರು ಪ್ರಾಧಿಕಾರ ವರ್ಗದ ಉಪ ಸಭಾಪತಿಯಾಗಿ (ವೈಸ್-ಛೇರ್ಮನರಾಗಿ) ಇರತಕ್ಕದ್ದು. ಡಾ: ಸಿ.ಕೃಷ್ಣಕುಮಾರ್, ಪ್ರಾಂಶುಪಾಲರು, ಕೆ.ಜಿ.ಎಫ್, ಪ ಥ ್ರ ವ ು ದರ್ಜೆ ಕಾಲೇಜು, ಉರಿಗಾಂ, ಕೆ.ಜಿ.ಎಫ್.
17(1)(ಸಿ) ನಗರದ ನಗರಪಾಲಿಕೆ ನಿಗಮದಿಂದ (ಮುನಿಸಿಪಲ್ ಕಾರ್ಪೋರೇಷನ್) ನಗರ ಪಾಲಿಕೆ ಸಭೆಯಿಂದ ಅಥವಾ ಇತರ ನಗರಪಾಲಿಕೆ ಸಂಸ್ಥೆಯಿಂದ ಅದರ ಸ ದ ಸ ್ಯರುಗಳ ಪೈಕಿಯಿಂದ ಚುನಾಯಿಸಲ್ಪಡುವ ಇಬ್ಬರು ವ್ಯಕ್ತಿಗಳು. 1. ಶ್ರೀ ಎನ್.ನಟರಾಜನ್, ಗಣೇಶ್‌ಪುರಂ, ನಾಚಪಲ್ಲಿ, 1ನೇ ಕ್ರಾಸ್, ಕೆ.ಜಿ.ಎಫ್. 2. ಶ್ರೀ ಸೆಲ್ವ ಕುಮಾರ್ ಎಸ್.ಎಸ್.ಟಿ.ಬ್ಲಾಕ್, ಚಾಂಪಿಯನ್ ರೀಫ್ಸ್, ಕೆ.ಜಿ.ಎಫ್.
17(1)(ಡಿ) ನಗರ ಸಹಾಯ ಪೋಷಿತ ಪುಸ್ತಕ ಭಂಡಾರಗಳ ಸಂಬಂಧವಾದ ಆಡಳಿತ ಸ ಂಸ್ಥೆಗಳ ಸದಸ್ಯರುಗಳ ರಾಜ್ಯ ಸರ್ಕಾರದವರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಒಬ್ಬ ವ್ಯಕ್ತಿ. ಅಸ್ತಿತ್ವದಲ್ಲಿರುವುದಿಲ್ಲ.
17(1)(ಇ) ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ್ತ ನಾಮ ನಿರ್ದೇಶನ ಮಾಡಲ್ಪಟ್ಟ ನಗರದಲ್ಲಿನ ಒಂದು ಹೈಸ್ಕೂಲಿನ ಮುಖ್ಯೋಪಾಧ್ಯಾಯರು. ಶಿ ೕ ಪಾಲ್ ರಮೇಶ್, ್ರ ಸ ಹ ಶಿಕ್ಷಕರು, ಸಂತ ಮರಿಯಮ್ಮ ಪ್ರೌಡಶಾಲೆ, ಚಾಂಪಿಯನ್ ರೀಫ್ಸ್, ಕೆ.ಜಿ.ಎಫ್.
17(1)(ಎಫ್) ವ ುೖಸೂರು ಪುಸ್ತಕ ಭಂಡಾರ ಸಂಘದ ನಗರ ಶಾಖೆ ಯಾವುದಾದರೂ ಇದ್ದರೆ, ೆ ಅದರ ಸಮಿತಿಯಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಒಬ್ಬ ವ್ಯಕ್ತಿ. ಅಸ್ತಿತ್ವದಲ್ಲಿರುವುದಿಲ್ಲ.
17(1)(ಜಿ) ನಗರದಲ್ಲಿ ಅಧಿಕಾರ ವ್ಯಾಪ್ತಿಯ ರಾಜ್ಯ ಸರ್ಕಾರದವರಿಂದ ಅಧಿಕಾರ ಪ್ರಯುಕ್ತ ನಾಮ ನಿರ್ದೇಶನ ಮಾಡಲ್ಪಟ್ಟ ವಿದ್ಯಾಭ್ಯಾಸ ಇಲಾಖೆಯ ಸಭಾಧಿಕಾರಿ. ಶಿ ೕ ತಿಮ್ಮರಾಯಪ್ಪ, ಶಿಕ್ಷಣ ಸಂಯೋಜಕರು, ್ರ ಸಾರ್ವಜನಿಕ ಶಿಕ್ಷಣ ಇಲಾಖೆ, ಕೆ.ಜಿ.ಎಫ್ ವಲಯ, ಕೆ.ಜಿ.ಎಫ್.
17(1)(ಹೆಚ್) ಸಾಮಾನ್ಯವಾಗಿ ನಗರದಲ್ಲೇ ವಾಸವಾಗಿರುವ ವ್ಯಕ್ತಿಗಳ ಪೈಕಿ ರಾಜ್ಯ ಸ ರ್ಕಾರದವರಿಂದ ನಾಮ ನಿರ್ದೇಶನ ಮಾಡಲ್ಪಟ್ಟ ಇಬ್ಬರು ವ್ಯಕ್ತಿಗಳು ಇರತಕ್ಕದ್ದು. 1. ಶ್ರೀ ವೀರ ವೆಂಟಕಪ್ಪ, ಮಾಜಿ ಅಧ್ಯಕ್ಷರು, ಕನ್ನಡ ಸ ಂಘ, #138, 6ನೇ ಕ್ರಾಸ್, ಮಹಾರಾಜ ರಸ್ತೆ, ರಾಬರ್ಟ್‌ಸನ್‌ಪೇಟೆ, ಕೆ.ಜಿ.ಎಫ್. 2. ಶ್ರೀ ವಿ.ಬಿ.ದೇಶಪಾಂಡೆ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, #935, 10ನೇ ಕ್ರಾಸ್, ಪ ೖಪ್ ಲೈನ್, ರಾಬರ್ಟ್‌ಸನ್‌ಪೇಟೇ, ಕೆ.ಜಿ.ಎಫ್. ೆ
17(2) ನಗರದ ಮುಖ್ಯ ಪುಸ್ತಕ ಭಂಡಾರಾಧಿಕಾರಿಯು ನಗರದ ಪುಸ್ತಕ ಭಂಡಾರ ಪ್ರಾಧಿಕಾರ ವರ್ಗದ ಮತ್ತು ಸದರಿ ಪ್ರಾಧಿಕಾರ ವರ್ಗದ ಸಮಿತಿಗಳ ಅಧಿಕಾರ ಪ ಯುಕ್ತ ಕಾರ್ಯದರ್ಶಿ ಯಾಗಿರತಕ್ಕದ್ದು. ್ರ ವ ುುಖ್ಯ ಗ್ರಂಥಾಲಯಾಧಿಕಾರಿ ನಗರ ಕೇಂದ್ರ ಗ್ರಂಥಾಲಯ, ಕೆ.ಜಿ.ಎಫ್.
೯೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೪ಎ

PR-43

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಶೇಖರ

SC-400

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ (ಸಾಮಾನ್ಯ),

LAW SECRETARIAT

NOTIFICATION

NO: LAW 99 KLM 2018, BENGALURU, DATED: 24.01.2019

In exercise of the powers conferred by clause 2(1) (j) and clause 7(1) (f) of the Schedule to the National Law School of India Act, 1986 (Karnataka Act No. 22 of 1986), the Government of Karnataka are pleased to nominate Justice Shri. V. Gopala Gowda, Retired Supreme Court Judge, as Member of the General Council and Executive Council of National Law School of India University, Bengaluru, for a period of 3 Years with immediate effect.

PR-54

By Order and in the name of the Governor of Karnataka

N.C. SRINIVASA

SC-11

Principal Secretary to Government

Law Department.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 159 ಬೆಮಪ್ರಾ 2018, ಬೆಂಗಳೂರು, ದಿನಾಂಕ: 29.12.2018

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ (5) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಬೆಳಗಾವಿ ಜಿಲ್ಲೆ, ಕಿತ್ತೂರು ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಹಾಲಿ ಭೂ ಉಪಯೋಗ ನಿರ್ಧರಣಾ ದಿನಾಂಕವನ್ನು 01.09.2018 ರಿಂದ ಜಾರಿಗೆ ಬರುವಂತೆ ನಿರ್ಧರಿಸಿ ಈ ಮೂಲಕ ಘೋಷಿಸಿದೆ.

PR-62

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ನಾಗರಾಜ

SC-100

ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ಧಿ ಇಲಾಖೆ.

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 228 ಎಲ್‌ಡಬ್ಲ್ಯೂಎ 2018, ಬೆಂಗಳೂರು, ದಿನಾಂಕ: 04-02-2019.

ಕರ್ನಾಟಕ ರಾಜ್ಯದಾದ್ಯಂತ "ಬೇಸಾಯ ಮತ್ತು ಸಂಬಂಧಿತ ಕೆಲಸಗಳಲ್ಲಿ ಉದ್ಯೋಗ" ಉದ್ದಿಮೆಯಲ್ಲ್ಲಿ ಯಾವುದೇ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ಈ ಕೆಳಕಂಡ "ಕನಿಷ್ಠ ವೇತನ ಕೋಷ್ಠಕ" ದಲ್ಲಿ ನಿರ್ಧಿಷ್ಟಪಡಿಸಿರುವಂತೆ ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲು ರಾಜ್ಯ ಸರ್ಕಾರವುಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೯೭೩ ಉದ್ದೇಶಿಸಿರುತ್ತದೆ. ಈ ಹಿಂದೆ "ಬೇಸಾಯ" ಉದ್ದಿಮೆಯ ಕೆಲಸದಲ್ಲಿ ತೊಡಗಿರುವ ವಿವಿಧ ವರ್ಗದ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸಿ, ಅಧಿಸೂಚನೆ ಸಂಖ್ಯೆ: ಕಾಇ 30 ಎಲ್ಎಂಡಬ್ಲ್ಯೂ 2012, ದಿನಾಂಕ: 14-05-2013ರಲ್ಲಿ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಪ್ರಸ್ತುತ ಕನಿಷ್ಠ ವೇತನ ಕಾಯ್ದೆ 1948 (ಕೇಂದ್ರ ಕಾಯ್ದೆ ಸಂಖ್ಯೆ: XI) ರ ಕಲಂ 3(1)(ಬಿ) ಮತ್ತು 5(1)(ಬಿ) ರಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕರಡು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ.

ಈ ಕರಡು ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾದ ದಿನಾಂಕದಿಂದ ಎರಡು (2) ತಿಂಗಳ ಅವಧಿಯೊಳಗೆ ಬಾಧಿತರಾಗುವ ವ್ಯಕ್ತಿಗಳಿಂದ / ಉದ್ಯೋಗದಾತರಿಂದ / ಉದ್ಯೋಗಿಗಳಿಂದ / ಸಂಘ ಸಂಸ್ಥೆಗಳಿಂದ / ನಾಗರೀಕರಿಂದ / ತಜ್ಞರಿಂದ ಸಲಹೆಗಳನ್ನು ಹಾಗೂ ಆಕ್ಷೇಪಣೆಗಳನ್ನು ಸರ್ಕಾರದಿಂದ ಸ್ವೀಕರಿಸಲಾಗುವುದು. ತದನಂತರ ಬಂದ ಸಲಹೆಗಳನ್ನು ಹಾಗೂ ಆಕ್ಷೇಪಣೆಗಳನ್ನು ಸರ್ಕಾರವು ಪರಿಗಣಿಸುವುದಿಲ್ಲ. ಈ ಕುರಿತು ಸಲಹೆಗಳು ಹಾಗೂ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ಸಾರ್ವಜನಿಕರು/ ಉದ್ಯೋಗದಾತರು/ ಉದ್ಯೋಗಿಗಳು/ಸಂಘ ಸಂಸ್ಥೆಗಳು/ ಬಾಧಿತರು/ ತಜ್ಞರು/ ನಾಗರೀಕರು ಅವುಗಳನ್ನು ಸರ್ಕಾರದ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ, ಕರ್ನಾಟಕ ಸರ್ಕಾರ, 4ನೇ ಮಹಡಿ, ವಿಕಾಸ ಸೌಧ, ಬೆಂಗಳೂರು-560 001 ಅಥವಾ ಕಾರ್ಮಿಕ ಆಯುಕ್ತರು, ಕಾರ್ಮಿಕ ಭವನ, ಬನ್ನೇರುಘಟ್ಟ ರಸ್ತೆ, ಡೈರಿ ಸರ್ಕಲ್, ಬೆಂಗಳೂರು-560 029.ಇವರಿಗೆ ಸಲ್ಲಿಸಬಹುದಾಗಿರುತ್ತದೆ.

ಕನಿಷ್ಠ ವೇತನ ಕಾಯ್ದೆ 1948ರ ಕಲಂ 3(1)(ಬಿ) ಮತ್ತು 5(1)(ಬಿ) ರಡಿಯಲ್ಲಿ ಪ್ರದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರವು ಈ ಕೆಳಕಂಡ "ಕನಿಷ್ಠ ವೇತನ ಕೋಷ್ಠಕ" ದಲ್ಲಿ ನಿರ್ಧಿಷ್ಟಪಡಿಸಿರುವಂತೆ, ಕರ್ನಾಟಕ ರಾಜ್ಯದಾದ್ಯಂತ ಕನಿಷ್ಠ ವೇತನ ದರಗಳು ಜಾರಿಗೆ ಬರುವಂತೆ ಈ ಮೂಲಕ ಪರಿಷ್ಕರಿಸಲು ಪ್ರಸ್ತಾಪಿಸಿರುತ್ತದೆ.

ಕ್ರ.ಸಂ. ಕೆಲಸದ ವರ್ಗಗಳ ಸ್ವರೂಪಗಳು ಕನಿಷ್ಠ ವೇತನ ದರಗಳು
ಪ ತಿ ದಿನಕ್ಕೆ (ರೂಪಾಯಿಗಳು) ್ರ ಪ ತಿ ತಿಂಗಳಿಗೆ (ರೂಪಾಯಿಗಳು) ್ರ
1 2 3 4
ಅ–ವರ್ಗ
1 ಸ ಸಿ ಕೀಳುವುದು
2 ಅಗೆಯುವುದು `. 375-00 `. 9750-00
3 ಟ್ರ್ಯಾಕ್ಟರ್‌ನಲ್ಲಿ ಉಳುವುದು
4 ಉಳುವುದು
5 ವ ುಣ್ಣಿನ ಹೆಂಟೆ ಹೊಡೆಯುವುದು
6 ಬದು ಕಟ್ಟುವುದು
7 ಬದು ನೇರ ಮಾಡುವುದು ಹಾಗೂ ಸಮ ಮಾಡುವುದು
8 ದಿಂಡು ಕಟ್ಟುವಂತೆ ನೇಗಿಲು ಸಾಲು ಹೊಡೆಯುವುದು
9 ಬ ತ ದ ್ತ ಗದ್ದೆಯಲ್ಲಿ ಭೂಮಿಯನ್ನು ಸಮ ಮಾಡುವುದು
10 ವ ಟ ಲು ಪಾತಿ ಮಾಡುವುದು ್ಟ
11 ಕುಂಟೆ ಅಲುಬೆ ಹೊಡೆಯುವುದು
12 ಪ ದ ರುಗಳಲ್ಲಿ ಕೆಲಸ ಮತ್ತು ಚೆಲ್ಲಿದ ಬೀಜಗಳ ಮೇಲೆ ಮಣ್ಣು ವ ುುಚ್ಚುವುದಕ್ಕೆ ಉಪಯೋಗಿಸುವ ಕುಂಟೆ ಮತ್ತು ಕಾರ್ಯಕ್ಕೆ.
13 ಗೊಬ್ಬರ ಸಾಗಿಸುವುದು
14 ಗೊಬ್ಬರ ಹಾಕುವುದು
15 ರಾಸಾಯನಿಕ ಗೊಬ್ಬರ ಹಾಕುವುದು
16 ಸ ಸಿಯನ್ನು ಕತ್ತರಿಸಿ ಸವರುವುದು, ರಾಸಾಯನಿಕ ಗೊಬ್ಬರ ಮಿಶ್ರಣ `. 375-00 `. 9750-00
17 ಬಿತ್ತುವುದು
18 ನೇರವಾಗಿ ಬಿತ್ತುವುದು
19 ನಾಟಿ ಮಾಡುವುದು
20 ಖುಷ್ಕಿ ಜಮೀನಿನಲ್ಲಿ ನಾಟಿ ಹಾಕುವುದು ಮತ್ತು ಪೈರಿಡುವುದು
21 ವ ುಣ್ಣಿಗೆ ನೀರುಣಿಸುವ ಕೆಲಸಗಳು
22 ಏತದಿಂದ ನೀರೆತ್ತುವುದು ಹಾಗೂ ದೈಹಿಕವಾಗಿ ನೀರೆತ್ತುವುದು
23 ಬ ತ ದ ್ತ ಗದ್ದೆಯಲ್ಲಿ ಕೆಲ ಸಸಿಗಳನ್ನು ಕಿತ್ತು ಹಾಕಿ ವಿರಳ ಮಾಡುವುದು.
24 ಕಬ್ಬು ಸ್ವಚ್ಛ ಮಾಡುವುದು
25 ವ ುಧ್ಯಾವಧಿ ಬೇಸಾಯ
26 ತ ೂರುವುದು
27 ತ ೂೕಟದ ಬೆಳೆಗಳಲ್ಲಿ ಕಬ್ಬಿನ ಮುಸುಕಿನ ಜೋಳ, ಆಲೂಗಡ್ಡೆಗಳ ೆ ಬ ಳ ೆ ಗಳಲ್ಲಿ ಮಣ್ಣನ್ನು ಎರಕುವುದು. ೆ
28 ಸ ಸ ್ಯ ಸಂರಕ್ಷಣಾ ಕೆಲಸಗಳು
29 ಕಬ್ಬನ್ನು ಬೀಳದ ಹಾಗೆ ಕಟ್ಟುವುದು
30 ಕೊಯಿಲು ಅ. ಕೊಯ್ಯುವುದು ಆ. ಬಡಿಯುವುದು ಇ. ತೂರುವುದು
31 ಉತ್ಪಾದನೆ ಹಾಗೂ ಸಾಗಾಣಿಕೆ
32 ಸ ್ವಚ್ಛಗೊಳಿಸುವುದು `. 375-00 `. 9750-00
33 ಹೆಕ್ಕುವುದು
34 ಇತರೆ ಯಾವುದೇ ಸ್ವರೂಪದ ಕೆಲಸಗಳು
35 ಬೀಡಿ ಎಲೆ ಕೀಳುವುದು (ಟೆಂಡು ಲೀವ್ಸ್) ಒಂದು ಕಟ್ಟಿಗೆ 160-00 (ತುಂಡು ದರ) ಲ ಕ್ಕಾಚಾರದನ್ವಯ ೆ
ಆ– ವರ್ಗ
1 ಹಕ್ಕಿ ಪಕ್ಷಿಗಳಿಂದ ಬೆಳೆಯ ಸಂರಕ್ಷಣೆ
2 ಹಕ್ಕಿ ಪಕ್ಷಿಗಳು ಪೈರು ತಿನ್ನದಂತೆ ಓಡಿಸುವುದು
3 ದ ನಗಳನ್ನು ಮೇಯಿಸುವುದು, ದನಗಳ ಮೈ ತೊಳೆಯುವುದು ಹಾಗೂ ಪ ಶ ು ಸಂಗೋಪನೆ
4 ದ ನಕುರಿ ಮತ್ತು ಮೇಕೆ ಮೇಯಿಸುವುದು
5 ಕೋಳಿ ಮತ್ತು ಹಂದಿ ಸಾಕಾಣಿಕೆ
6 ಇತರೆ ಯಾವುದೇ ಸ್ವರೂಪದ ಕೆಲಸಗಳು
ಇ- ವರ್ಗ
1 ಬ ಲ್ಲ ಮಾಡುವುದು ೆ
2 ತ ಂಬಾಕು ಸಂಸ್ಕರಣೆ
3 ಪ ರಾಗಸ್ಪರ್ಷ ಮಾಡುವುದು `. 375-00 `. 9750-00
4 ದ್ರಾಕ್ಷಿ ತೋಟದಲ್ಲಿ ಸವರುವ ಕೆಲಸ
5 ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಒಪ್ಪ ಮತ್ತು ಸರಿಪಡಿಸುವ ಕೆಲಸ ವ iಾಡುವುದು
6 ತ ಂಗು ಮತ್ತು ಅಡಿಕೆ ಕೀಳುವುದು ೆ
7 ತ ಂಗು ಮತ್ತು ಅಡಿಕೆ ಕೊಯಿಲು ಮಾಡುವುದು ೆ
8 ತ ಂಗು ಮತ್ತು ಅಡಿಕೆಯನ್ನು ಸುಲಿಯುವುದು ೆ
9 ಅಡಿಕೆ ಬೇಯಿಸುವುದು
10 ಅಡಿಕೆ ಮತ್ತು ತೆಂಗಿನ ತೋಟದಲ್ಲಿ ಇತರೆ ಕೆಲಸಗಳು
11 ವೀಳ್ಯದೆಲೆ ಮತ್ತು ಮೆಣಸು ಕೊಯ್ಯುವುದು / ಕೀಳುವುದು
12 ಸ ಸಿ (ಪ್ಲಾಂಟ್) ನರ್ಸರಿ ಹಣ್ಣು ಮತ್ತು ಹೂವುಗಳ ಬೇಸಾಯಕ್ಕೆ ಸ ಂಬಂಧಿಸಿದ ಇತರೆ ಕಾರ್ಯಗಳು
13 ಇತರೆ ಯಾವುದೇ ಸ್ವರೂಪದ ಕೆಲಸಗಳು
೯೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೪ಎ

ಮೇಲ್ಕಂಡ ಕೋಷ್ಟಕದಲ್ಲಿಯ ಪರಿಷ್ಕøತ ಕನಿಷ್ಠ ವೇತನ ದರಗಳನ್ನು ರಾಜ್ಯ ಸರ್ಕಾರವು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ನಿಗಧಿಪಡಿಸಿದ್ದು, ಈ ಎಲ್ಲಾ ಷರತ್ತುಗಳನ್ನು ಯಥಾವತ್ತಾಗಿ ಸಂಬಂಧಿಸಿದ ಉದ್ಯೋಗದಾತರು ಪಾಲಿಸಲು ಬಾದ್ಯಸ್ಥರಿರುತ್ತಾರೆ;

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೯೭೫

1. ಕನಿಷ್ಠ ವೇತನ ಪಾವತಿಸುವ ಶಾಸನಬದ್ಧ ಬಾದ್ಯಸ್ಥಿಕೆ: ಈ ಪರಿಷ್ಕøತ ಕನಿಷ್ಠ ವೇತನ ದರಗಳನ್ನು ಪಾವತಿಸಲು, ಕನಿಷ್ಠ ವೇತನ ಕಾಯ್ದೆ- 1948ರ ಕಲಂ 12 ರನ್ವಯ ಸಂಬಂಧಿಸಿದ ಎಲ್ಲಾ ಉದ್ಯೋಗದಾತರು ಬಾಧ್ಯಸ್ಥರಾಗಿರುತ್ತಾರೆ. ಈ ಕನಿಷ್ಠ ವೇತನ ದರಗಳು ಖುಷ್ಕಿ ಕೃಷಿ, ತರಿ ಬೇಸಾಯ, ನೀರಾವರಿ ಬೇಸಾಯ, ತೋಟಗಾರಿಕೆ, ಪಶುಪಾಲನೆ ಹಾಗೂ ಮಣ್ಣಿನ ಮೂಲಕ ಸಸ್ಯೋತ್ಪನ್ನಗಳನ್ನು ಸೃಜಿಸುವ, ಪೋಷಿಸುವ, ಕೊಯ್ಲು ಮಾಡುವ ಹಾಗೂ ತತ್ಸಂಬಂಧವಾಗಿ ಕೈಗೊಳ್ಳುವ ಎಲ್ಲಾ ಕೆಲಸದ ಸ್ವರೂಪಗಳಿಗೆ ಅನ್ವಯವಾಗುತ್ತವೆ.

2. ವ್ಯತ್ಯಾಸವಾಗುವ ತುಟ್ಟಿಭತ್ಯೆಯ ಲೆಕ್ಕಾಚಾರ ಹಾಗೂ ಪಾವತಿ: ನಿಗಧಿತ ಕನಿಷ್ಠ ವೇತನಕ್ಕನುಗುಣವಾಗಿ ಪಾವತಿಸಬೇಕಾದ ವ್ಯತ್ಯಸ್ಥವಾಗುವ ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ವರ್ಷಕ್ಕೊಮ್ಮೆ ಉದ್ಯೋಗದಾತರು ಮಾಡತಕ್ಕದ್ದು. ಹಿಂದಿನ ಕ್ಯಾಲೆಂಡರ್ ವರ್ಷದ ಹನ್ನೆರಡು (12) ತಿಂಗಳುಗಳ ಗ್ರಾಹಕ ಬೆಲೆ ಸೂಚ್ಯಾಂಕಗಳ ವಾರ್ಷಿಕ ಸರಾಸರಿ ಆಧಾರದ ಮೇಲೆ ಹೆಚ್ಚುವರಿಯಾದ ಅಥವಾ ಕಡಿಮೆಯಾದ ಪ್ರಮಾಣವನ್ನು ಆಧರಿಸಿ ತುಟ್ಟಿಭತ್ಯೆಯನ್ನು ಪ್ರತಿ ವರ್ಷದ ಏಪ್ರಿಲ್ ಮೊದಲನೇ ದಿನಾಂಕದಿಂದ ಅನ್ವಯವಾಗುವಂತೆ ಉದ್ಯೋಗದಾತರು ಪ್ರತಿ ವರ್ಷ ಲೆಕ್ಕಾಚಾರ ಮಾಡಿ ಕಾರ್ಮಿಕರಿಗೆ ಸಂದಾಯ ಮಾಡತಕ್ಕದ್ದು. ಆದುದರಿಂದ ಮೊದಲ ಲೆಕ್ಕಾಚಾರವು ಗ್ರಾಹಕ ಬೆಲೆ ಸೂಚ್ಯಾಂಕದ (ಜನವರಿ 2016 ರಿಂದ ಡಿಸೆಂಬರ್ 2016ರ) ಸರಾಸರಿ ಆಧಾರದ ಮೇಲೆ 2017 ಏಪ್ರಿಲ್ ಒಂದ (1) ನೇ ತಾರೀಖಿನಿಂದ ಜಾರಿಗೆ ಬರುತ್ತದೆ. ಗ್ರಾಹಕ ಬೆಲೆ ಸೂಚ್ಯಾಂಕ 6537 ಅಂಶಗಳಿಗಿಂತ ಹೆಚ್ಚಾಗುವ ಪ್ರತಿ ಅಂಶಕ್ಕೆ ಎಲ್ಲಾ ವರ್ಗದ ಕಾರ್ಮಿಕರಿಗೆ ದಿನ ಒಂದಕ್ಕೆ ನಾಲ್ಕು (4) ಪೈಸೆಯಂತೆ ಈ ಕೆಳಕಂಡ ವಿಧಾನದನ್ವಯ ಲೆಕ್ಕಾಚಾರ ಮಾಡಿ ತುಟ್ಟಿ ಭತ್ಯೆಯನ್ನು ಉದ್ಯೋಗದಾತರು ಪಾವತಿಸತಕ್ಕದ್ದು.

ತುಟ್ಟಿಭತ್ಯೆಯನ್ನು ಲೆಕ್ಕಾಚಾರ ಮಾಡುವ ವಿಧಾನ : ಮಾಸಿಕ ತುಟ್ಟಿಭತ್ಯೆ ಹಾಗೂ ದಿನದ ತುಟ್ಟಿಭತ್ಯೆಯನ್ನು ಕೆಳಕಂಡ ಸೂತ್ರಗಳನ್ವಯ ಕ್ರಮವಾಗಿ ಲೆಕ್ಕಾಚಾರ ಮಾಡತಕ್ಕದ್ದು;

ಅ) ಮಾಸಿಕ ವೇತನವನ್ನು ಪಡೆಯುವವರು:- ಮಾಸಿಕ ವೇತನ ಪಡೆಯುವ ಕಾರ್ಮಿಕರಿಗೆ ಈ ಕೆಳಕಂಡ ಸೂತ್ರದನ್ವಯ ತುಟಿಭತ್ಯೆಯನ್ನು ಲೆಕ್ಕ ಮಾಡತಕ್ಕದ್ದು ಹಾಗೂ ಲೆಕ್ಕಾಚಾರ ಮಾಡಿದಾಗ ಬಂದ ದರವು ಭಿನ್ನಾಂಕವಾಗಿದ್ದಲ್ಲಿ, ಅದನ್ನು ಸಮೀಪದ ರೂಪಾಯಿಗೆ ಪೂರ್ಣಗೊಳಿಸಿ ಪಾವತಿಸತಕ್ಕದ್ದು.

ಮಾಸಿಕ ತುಟ್ಟಿಭತ್ಯೆ = ಪ್ರತಿ ವರ್ಷ ಹೆಚ್ಚಾಗುವ ಅಥವಾ ಕಡಿಮೆಯಾಗುವ ಗ್ರಾಹಕ ಬೆಲೆ ಸೂಚ್ಯಾಂಕದ ಅಂಶಗಳು (ಸಿ.ಪಿ.ಐ) x ತುಟ್ಟಿಭತ್ಯೆಯ ದರ x ಮೂವತ್ತು (30) ದಿನಗಳು

ಆ) ದಿನಗೂಲಿ ವೇತನ ಪಡೆಯುವವರು :- ದಿನಗೂಲಿ ಪಡೆಯುವ ಕಾರ್ಮಿಕರಿಗೆ ಮಾಸಿಕ ಕನಿಷ್ಠ ವೇತನ ದರವನ್ನು ಇಪ್ಪತ್ತಾರು (26) ದಿನಗಳಿಂದ ವಿಭಾಗಿಸಿ, {ನಾಲ್ಕು (4) ವಾರದ ರಜಾ ದಿನಗಳಿಗೆ ವೇತನವನ್ನು ನೀಡುವುದೂ ಸೇರಿದಂತೆ} ಈ ಕೆಳಕಂಡ ಸೂತ್ರದನ್ವಯ ಲೆಕ್ಕ ಮಾಡತಕ್ಕದ್ದು. ಲೆಕ್ಕಾಚಾರ ಮಾಡಿದಾಗ ಬಂದ ದರವು ಭಿನ್ನಾಂಕವಾಗಿದ್ದಲ್ಲಿ, ಅದನ್ನು ಸಮೀಪದ ರೂಪಾಯಿಗೆ ಉದ್ಯೋಗದಾತರು ಪೂರ್ಣಗೊಳಿಸಿ ಅರ್ಹರಾದ ಕಾರ್ಮಿಕರಿಗೆ ಪಾವತಿಸತಕ್ಕದ್ದು.

ದಿನದ ತುಟ್ಟಿಭತ್ಯೆ = ಪ್ರತಿ ವರ್ಷ ಹೆಚ್ಚಾಗುವ ಅಥವಾ ಕಡಿಮೆಯಾಗುವ ಗ್ರಾಹಕ ಬೆಲೆ ಸೂಚ್ಯಾಂಕದ ಅಂಶಗಳು (ಸಿ.ಪಿ.ಐ) x ತುಟ್ಟಿಭತ್ಯೆಯ ದರ x ಮೂವತ್ತು (30) ದಿನಗಳು / ಇಪ್ಪತ್ತಾರು (26)

3. ಸೇವಾ ಹಿರಿತನ ಪರಿಗಣನೆ ಭತ್ಯೆ : ಈ ಅಧಿಸೂಚನೆ ಜಾರಿಗೆ ಬಂದ ದಿನಾಂಕದಿಂದ ಯಾವುದೇ ಕಾರ್ಮಿಕನು ಓರ್ವ ಉದ್ಯೋಗದಾತರ ಸಂಸ್ಥೆಯಲ್ಲಿ ಅಥವಾ ಮಾಲೀಕರ ಅಧೀನದಲ್ಲಿ ನಿರಂತರ ಹತ್ತು (10) ವರ್ಷಗಳ ಸೇವೆಯನ್ನು ಸಲ್ಲಿಸಿದಲ್ಲಿ, ತನ್ನ ಪೂರ್ಣಗೊಳಿಸಿದ ಪ್ರತಿ ಹತ್ತು ವರ್ಷದ ಮೇಲ್ಪಟ್ಟ ಸೇವೆಗೆ ಅನುಗುಣವಾಗಿ ಆಯಾ ಕಾರ್ಮಿಕ ವರ್ಗಕ್ಕೆ ನಿಗಧಿಪಡಿಸಿರುವ ಒಟ್ಟು ಮಾಸಿಕ ಕನಿಷ್ಠ ಮೂಲ ವೇತನದ ಮೇಲೆ ವರ್ಷವೊಂದರ ಸೇವೆಗೆ ಶೇಕಡಾ ಒಂದ (1) ರಷ್ಟು ಮೊತ್ತವನ್ನು ಸೇವಾ ಹಿರಿತನ ಪರಿಗಣನೆ ಭತ್ಯೆಯನ್ನಾಗಿ ಗರಿಷ್ಠ ಶೇಕಡಾ ಹತ್ತು (10) ರ ಮೇಲ್ಮಿತಿಗೆ ಒಳಪಟ್ಟು ಪಡೆಯಲು ಕಾರ್ಮಿಕರು ಅರ್ಹರಿರುತ್ತಾರೆ. ಪರಂತು ಈ ಅಧಿಸೂಚನೆ ಜಾರಿಗೆ ಬಂದ ದಿನಾಂಕಕ್ಕೆ ಇಪ್ಪತ್ತು (20) ವರ್ಷಕ್ಕಿಂತ ಹೆಚ್ಚಿನ ಸೇವೆಯನ್ನು ಸಲ್ಲಿಸಿದ ಕಾರ್ಮಿಕರಿದ್ದಲ್ಲಿ ಒಂದು ಸಲಕ್ಕೆ ಮಾತ್ರ ಸೇವಾ ಹಿರಿತನ ಮೊತ್ತವನ್ನು ಆಯಾ ಕಾರ್ಮಿಕ ವರ್ಗಕ್ಕೆ ನಿಗಧಿಪಡಿಸಿರುವ ಒಟ್ಟು ಮಾಸಿಕ ಕನಿಷ್ಠ ವೇತನದ ಶೇ 10ರ ಗರಿಷ್ಠಮಿತಿಗೆ ಒಳಪಟ್ಟು ಪಡೆಯಲು ಅರ್ಹರಿರುತ್ತಾರೆ. ಈ ಸೇವಾ ಹಿರಿತನ ಪರಿಗಣನೆ ಭತ್ಯೆಯ ಮೊತ್ತವು ಮೇಲ್ಕಂಡ ಷರತ್ತು ಸಂಖ್ಯೆ 1ರಲ್ಲಿ ವಿಧಿಸಿದ ವ್ಯತ್ಯಾಸವಾಗುವ ತುಟ್ಟಿಭತ್ಯೆಯನ್ನು ಹೊರತುಪಡಿಸಿ, ಮೂಲವೇತನದ ಆಧಾರದಲ್ಲಿ ನಿಗಧಿಪಡಿಸಿದ 'ಸೇವಾ ಹಿರಿತನದ ಪರಿಗಣನೆ ಭತ್ಯೆಯ ಮೊತ್ತ'ವಾಗಿರುತ್ತದೆ.

ವಿವರಣೆ: "ನಿರಂತರ ಸೇವೆಯನ್ನು ಲೆಕ್ಕ ಮಾಡಬೇಕಾದಾಗ ಹಿಂದಿನ ಆರ್ಥಿಕ ವರ್ಷದಲ್ಲಿ, ಸದರಿ ಸಂಸ್ಥೆಯಲ್ಲಿ ಕನಿಷ್ಠ ಎರಡು ನೂರ ನಲವತ್ತು (240) ದಿನಗಳು ಸೇವೆ ಸಲ್ಲಿಸಿದ ಕಾರ್ಮಿಕನು ಸದರಿ ವರ್ಷದಲ್ಲಿ ನಿರಂತರ ಸೇವೆ ಸಲ್ಲಿಸಿರುತ್ತಾನೆಂದು ಉದ್ಯೋಗದಾತರು ಪರಿಗಣಿಸತಕ್ಕದ್ದು" 4. ಮಹಿಳೆಯರಿಗೆ ಸಮಾನ ವೇತನ : ಮಹಿಳೆಯರು ಮತ್ತು ಪುರುಷರು ಒಂದೇ ರೀತಿಯ ಹಾಗೂ ಸಮ ಪ್ರಮಾಣದ ಕೆಲಸವನ್ನು ನಿರ್ವಹಿಸಿದ ಸಂದರ್ಭಗಳಲ್ಲಿ ಉಭಯತ್ರಯರಿಗೂ ಸಮಾನ ದರದ ವೇತನಗಳನ್ನು ಉದ್ಯೋಗದಾತರು ಸಮಾನ ವೇತನ ಕಾಯ್ದೆ-1976ರ ಪ್ರಾವಧಾನಗಳನ್ವಯ ಮಹಿಳಾ ಕಾರ್ಮಿಕರಿಗೆ ಸಂದಾಯ ಮಾಡತಕ್ಕದ್ದು.

5. ಕನಿಷ್ಠ ವೇತನ ಸ್ವೀಕರಿಸುವ ಹಕ್ಕಿನ ರಕ್ಷಣೆ: ತುಂಡು ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ ಎಂಟು (8) ಗಂಟೆಗಳ ಕೆಲಸದ ವೇತನವು ಅದೇ ಸ್ವರೂಪದ (ತರಹದ) ಕೆಲಸ ಮಾಡುವ ಕಾರ್ಮಿಕರ ಒಂದು ದಿನದ ವೇತನಕ್ಕಿಂತ ಕಡಿಮೆ ಇರದಂತೆ ಉದ್ಯೋಗದಾತರು ಕ್ರಮವಹಿಸತಕ್ಕದ್ದು.

6. ದುಡಿಮೆಯ ಅವಧಿಯ ಪ್ರಮಾಣಕ್ಕನುಗುಣವಾಗಿ ಕನಿಷ್ಠ ವೇತನ: ಒಂದು ದಿನದ ಕೆಲಸ ಎಂದರೆ ಎಂಟು (8) ಗಂಟೆಗಳ ಕೆಲಸ ಎಂದು ತಿಳಿಯತಕ್ಕದ್ದು. ಕಾರ್ಮಿಕರನ್ನು ಎಂಟು (8) ಗಂಟೆಗಳಿಗಿಂತ ಕಡಿಮೆ ಅವಧಿಯ ಕೆಲಸಕ್ಕೆ ನೇಮಿಸಿಕೊಂಡರೆ ಅಥವಾ ಕಾರ್ಮಿಕರು ಕೆಲಸ ನಿರ್ವಹಿಸಿದ್ದಲ್ಲಿ, ಅಂತಹ ಕಡಿಮೆ ಅವಧಿಯ ಪ್ರಮಾಣಕ್ಕನುಗುಣವಾಗಿ ಕನಿಷ್ಠ ವೇತನವನ್ನು ಕರ್ನಾಟಕ ಕನಿಷ್ಠ ವೇತನ ನಿಯಮಗಳು, 1958ರ ನಿಯಮ 27 ರನ್ವಯ ಆ ಕೆಲಸದ ವರ್ಗಕ್ಕೆ ನಿಗಧಿಪಡಿಸಿರುವ ದಿನವೊಂದರ ಕನಿಷ್ಠ ವೇತನವನ್ನು ಗಂಟೆಗಳ ಕನಿಷ್ಠ ವೇತನವನ್ನಾಗಿ ಲೆಕ್ಕ ಹಾಕಿ, ಸಂಬಂಧಿಸಿದ ಕಾರ್ಮಿಕರಿಗೆ ಉದ್ಯೋಗದಾತರು ಪಾವತಿಸತಕ್ಕದ್ದು.

7. ಕನಿಷ್ಠ ವೇತನದ ಪಾವತಿಯ ವಿಧಾನ : ನಿಗಧಿತ ಕನಿಷ್ಠ ವೇತನದ ಮೂಲವೇತನ ಹಾಗೂ ತುಟ್ಟಿಭತ್ಯೆ ಲೆಕ್ಕಾಚಾರದಲ್ಲಿ ರೂಪಾಯಿಯ ಭಾಗಾಂಶವು ಬಂದ ಪಕ್ಷದಲ್ಲಿ ಅದನ್ನು ಸಮೀಪದ ಹೆಚ್ಚಿನ ರೂಪಾಯಿಗೆ ಉದ್ಯೋಗದಾತರು ಪೂರ್ಣಗೊಳಿಸಿ, ಕಾರ್ಮಿಕರಿಗೆ ಪಾವತಿಸತಕ್ಕದ್ದು.

8. ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ದರಗಳ ಅನ್ವಯಿಸುವಿಕೆ: ಈ ಅನುಸೂಚಿತ ಉದ್ದಿಮೆಗೆ ಒಳಪಡುವ ಸಂಸ್ಥೆಗಳಲ್ಲಿ ಹೊರಗುತ್ತಿಗೆ ವ್ಯವಸ್ಥೆಯ ಮೂಲಕ ಗುತ್ತಿಗೆ ಕಾರ್ಮಿಕ (ನಿಷೇದ ಮತ್ತು ನಿಯಂತ್ರಣ) ಕಾಯ್ದೆ-1970 ಹಾಗೂ ಇತರೆ ಶಾಸನಬದ್ದ ವ್ಯವಸ್ಥೆಗಳನ್ವಯ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೂ ಕೂಡಾ ಈ ಪರಿಷ್ಕøತ ಕನಿಷ್ಠ ವೇತನ ದರಗಳನ್ನು ಉದ್ಯೋಗದಾತರು ಅನ್ವಯಿಸಿ, ಪಾವತಿಯನ್ನು ಮಾಡತಕ್ಕದ್ದು.

೯೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೪ಎ

9. ಸರ್ಕಾರದ ಯೋಜನೆ / ಕಾರ್ಯಕ್ರಮದಡಿಯಲ್ಲಿ ಹಾಗೂ ಸಾಮಾನ್ಯ ತರಬೇತಿಯ ಅವಧಿಯ ವೇತನ: ಕೇಂದ್ರ ಸರ್ಕಾರ/ ರಾಜ್ಯ ಸರ್ಕಾರ ಯಾವುದೇ ತರಬೇತಿಗಾಗಿ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ರೂಪಿಸಿದ್ದು, ಸದರಿ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಉದ್ಯೋಗದಾತರು ಅನುಷ್ಠಾನಗೊಳಿಸುತ್ತಿದಲ್ಲಿ, ಸದರಿ ಯೋಜನೆಗಳಡಿಯಲ್ಲಿ / ಕಾರ್ಯಕ್ರಮದಡಿಯಲ್ಲಿ ನಿಗಧಿಪಡಿಸಿರುವ ವೇತನವನ್ನು ಉದ್ಯೋಗದಾತರು ತರಬೇತಿ ಪಡೆಯುವವರಿಗೆ ಪಾವತಿಸತಕ್ಕದ್ದು.

10. ರೂಡಿಗತ ಸೌಲಭ್ಯಗಳ ಮುಂದುವರಿಕೆ: ಅಧಿಸೂಚಿತ ಕನಿಷ್ಠ ವೇತನಕ್ಕೆ ಹೆಚ್ಚುವರಿಯಾಗಿ ರೂಡಿ ಮತ್ತು ಪದ್ಧತಿಯನ್ವಯ ವಸ್ತು ರೂಪದಲ್ಲಿ ಯಾವುದೇ ಸಂಭಾವನೆಯನ್ನು ಉದ್ಯೋಗದಾತರಿಂದ ಕಾರ್ಮಿಕರು ಪಡೆಯುತ್ತಿದ್ದಲ್ಲಿ, ಸದರಿ ಹೆಚ್ಚುವರಿ ವಸ್ತು ರೂಪದ ಸಂಭಾವನೆಯನ್ನು ಮುಂದುವರೆಸಲು ಉದ್ಯೋಗದಾತರು ಬಾಧ್ಯಸ್ಥರಾಗಿರುತ್ತಾರೆ.

11. ಕನಿಷ್ಠ ವೇತನ ಮೊತ್ತದ ಕಡ್ಡಾಯ ಪಾವತಿ: ಕರ್ತವ್ಯ ನಿರ್ವಹಿಸಿದ ಕಾರ್ಮಿಕರಿಗೆ ಪಾವತಿ ಮಾಡುವ ಒಟ್ಟು ವೇತನವು, ಈ ಅಧಿಸೂಚನೆಯಲ್ಲಿ ನಿಗಧಿಪಡಿಸಿರುವ ಕನಿಷ್ಠವೇತನ ದರಗಳನ್ನು ಮತ್ತು ಕಾಲಕಾಲಕ್ಕೆ ವ್ಯತ್ಯಾಸವಾಗುವ ತುಟ್ಟಿಭತ್ಯೆಯನ್ನು ಸೇರ್ಪಡಿಸಿದಾಗ ಬರುವ ಮೊತ್ತಕ್ಕೆ ಕಡಿಮೆಯಾಗದಂತೆ ವೇತನವನ್ನು ಕಡ್ಡಾಯವಾಗಿ ಉದ್ಯೋಗದಾತರು ಪಾವತಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-55

ಎಲ್.ಎಸ್. ಶ್ರೀಕಂಠಬಾಬು

SC-200

ಸರ್ಕಾರದ ಉಪ ಕಾರ್ಯದರ್ಶಿ

ಕಾರ್ಮಿಕ ಇಲಾಖೆ.

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವಾಲಯ

ತಿದ್ದುಪಡಿ

ಸಂಖ್ಯೆ. ಅಪಜೀ 178 ಅಅಸೇ 2017, ಬೆಂಗಳೂರು, ದಿನಾಂಕ: 17-01-2019.

ದಿನಾಂಕ: 22.04.2014 ರ ಸೇರ್ಪಡೆ ಅಧಿಸೂಚನೆ ಸಂಖ್ಯೆ: ಅಪಜೀ 70 ಅಅಸೇ 2014ರಲ್ಲಿ ಈ ಕೆಳಕಂಡ ಸ್ತಂಭ-3ರಂತೆ ನಮೂದಿಸಿರುವುದನ್ನು

ಕ್ರ. ಸಂ. ಅಧಿಸೂಚನೆಯಲ್ಲಿ ನಮೂದಿಸಿರುವ ದಿನಗೂಲಿ ನೌಕರರ ಹ ಸ ೆ ರು ಮತ್ತು ಕ್ರಮ ಸಂಖ್ಯೆ ಸ ೕರ್ಪಡೆ ಅಧಿಸೂಚನೆಯಲ್ಲಿ ೆ ನಮೂದಿಸಿರುವ ಮಾಹಿತಿ ತಿದ್ದುಪಡಿ ಮಾಡಿದ ಹುದ್ದೆ
1 2 3 4
1 ಶಿ ೕ ಸೀತಾರಾಮ ಹೊಸಬಯ್ಯ ನಾಯ್ಕ ್ರ ಕ್ರಮ ಸಂಖ್ಯೆ: 318 ಕಾವಲುಗಾರ ವಾಹನ ಚಾಲಕ
2 ಶಿ ೕ ಕೃಷ್ಣ ಪರಮೇಶ್ವರ ನಾಯ್ಕ ್ರ ಕ್ರಮ ಸಂಖ್ಯೆ: 319 ಕಾವಲುಗಾರ ವ ೖರ್‌ಲೆಸ್ ಆಪರೇಟರ್ ೆ
3 ಶಿ ೕ ಹೊಸಬು ನಾರಾಯಣ ಗೌಡ ್ರ ಕ್ರಮ ಸಂಖ್ಯೆ: 324 ಕಾವಲುಗಾರ ವ ೖರ್‌ಲೆಸ್ ಆಪರೇಟರ್ ೆ
4 ಶಿ ೕ ಗೋಪಾಲ ಸುಬ್ರಾಯ ನಾಯ್ಕ ್ರ ಕ್ರಮ ಸಂಖ್ಯೆ: 325 ಕಾವಲುಗಾರ ವ ೖರ್‌ಲೆಸ್ ಆಪರೇಟರ್ ೆ
5 ಶಿ ೕ ಕಮಲಾಕರ ಎನ್. ಭಂಡಾರಿ ್ರ ಕ್ರಮ ಸಂಖ್ಯೆ: 407 ಕಾವಲುಗಾರ ವಾಹನ ಚಾಲಕ
6 ಶಿ ೕ ಸುರೇಶ ತಿಮ್ಮಣ್ಣ ನಾಯ್ಕ ್ರ ಕ್ರಮ ಸಂಖ್ಯೆ: 399 ಕಾವಲುಗಾರ ವ ೖರ್‌ಲೆಸ್ ಆಪರೇಟರ್ ೆ
7 ಶಿ ೕ ಕಮಲಾಕರ ಕೆ. ನಾಯ್ಕ ್ರ ಕ್ರಮ ಸಂಖ್ಯೆ: 405 ಕಾವಲುಗಾರ ವ ೖರ್‌ಲೆಸ್ ಆಪರೇಟರ್ ೆ
8 ಶಿ ೕ ಅಶೋಕ ಗಣಪತಿ ನಾಯ್ಕ ್ರ ಕ್ರಮ ಸಂಖ್ಯೆ: 418 ಕಾವಲುಗಾರ ವ ೖರ್‌ಲೆಸ್ ಆಪರೇಟರ್ ೆ
9 ಶಿ ೕ ಅನಂತ ವೆಂಕಪ್ಪ ನಾಯ್ಕ ್ರ ಕ್ರಮ ಸಂಖ್ಯೆ: 360 ಕಾವಲುಗಾರ ವ ೖರ್‌ಲೆಸ್ ಆಪರೇಟರ್ ೆ
10 ಶಿ ೕ ಮಧುಕರ ಪಿ. ಪಟಗಾರ ್ರ ಕ್ರಮ ಸಂಖ್ಯೆ: 337 ಕಾವಲುಗಾರ ವ ೖರ್‌ಲೆಸ್ ಆಪರೇಟರ್ ೆ
11 ಶಿ ೕ ಶ್ರೀಧರ ಪಿ. ನಾಯಕ ್ರ ಕ್ರಮ ಸಂಖ್ಯೆ: 361 ಕಾವಲುಗಾರ ವ ೖರ್‌ಲೆಸ್ ಆಪರೇಟರ್ ೆ

PR-58

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100

ಕೆ. ಉಮಾಪತಿ

ಸರ್ಕಾರದ ಅಧೀನ ಕಾರ್ಯದರ್ಶಿ (ಸೇವೆಗಳು)

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ.

ಭಾಗ ೪ಎ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ೯೭೭

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 72 ಬೆಮಪ್ರಾ 2018, ಬೆಂಗಳೂರು, ದಿನಾಂಕ: 18.01.2019

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ (5) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಉತ್ತರ ಕನ್ನಡ ಜಿಲ್ಲೆ, ಹಳಿಯಾಳ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಹಾಲಿ ಭೂ ಉಪಯೋಗಗಳ ನಿರ್ಧರಣಾ ದಿನಾಂಕವನ್ನು 01.02.2018 ರಿಂದ ಜಾರಿಗೆ ಬರುವಂತೆ ನಿರ್ಧರಿಸಿ ಈ ಮೂಲಕ ಘೋಷಿಸಿದೆ.

PR – 63

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 100

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 88 ಗುಅಪ್ರಾ 2016, ಬೆಂಗಳೂರು, ದಿನಾಂಕ: 31.12.2018

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 5 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಬೀದರ್ ಜಿಲ್ಲೆ, ಔರಾದ್ ತಾಲ್ಲೂಕು, ಔರಾದ್ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಹಾಲಿ ಭೂ ಉಪಯೋಗ ನಿರ್ಧರಣಾ ದಿನಾಂಕವನ್ನು 02.11.2016 ರಿಂದ ಜಾರಿಗೆ ಬರುವಂತೆ ನಿರ್ಧರಿಸಿ ಈ ಮೂಲಕ ಘೋಷಿಸಲಾಗಿದೆ.

PR – 64

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 100

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 61 ಗುಅಪ್ರಾ 2018, ಬೆಂಗಳೂರು, ದಿನಾಂಕ: 29.12.2018.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ (5) ರಡಿ ಪ್ರದತ್ತವದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಕಲಬುರಗಿ ಜಿಲ್ಲೆ, ಸೇಡಂ ಪಟ್ಟಣದ ವಿಸ್ತರಿತ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಹಾಲಿ ಭೂ ಉಪಯೋಗ ನಿರ್ಧರಣಾ ದಿನಾಂಕವನ್ನು 11.12.2017 ರಿಂದ ಜಾರಿಗೆ ಬರುವಂತೆ ನಿರ್ಧರಿಸಿ ಈ ಮೂಲಕ ಘೋಷಿಸಿದೆ.

PR – 65

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 160 ಬೆಮಪ್ರಾ 2018, ಬೆಂಗಳೂರು, ದಿನಾಂಕ: 04.12.2018

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ (5) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಹಾವೇರಿ ಜಿಲ್ಲೆ, ಹಾನಗಲ್ಲ್ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳ ಹಾಲಿ ಭೂ ಉಪಯೋಗಗಳ ನಿರ್ಧರಣಾ ದಿನಾಂಕವನ್ನು 31.08.2017 ರಿಂದ ಜಾರಿಗೆ ಬರುವಂತೆ ನಿರ್ಧರಿಸಿ ಈ ಮೂಲಕ ಘೋಷಿಸಿದೆ.

PR – 66

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC - 100

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೯೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೨೮, ೨೦೧೯ ಭಾಗ ೪ಎ

ಸಂಸದೀಯ ವ್ಯವಹಾರಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಂವ್ಯಶಾಇ 64 ಭಾನಿವಿ 2018, ಬೆಂಗಳೂರು, ದಿನಾಂಕ: 05.02.2019.

ಶ್ರೀ ಎಂ.ಆರ್. ವೆಂಕಟರಮಣ, ಸಹಾಯಕ ನಿರ್ದೇಶಕರು, ಭಾಷಾಂತರ ನಿರ್ದೇಶನಾಲಯ ಇವರು ಸಹಾಯಕ ನಿರ್ದೇಶಕರ ಹುದ್ದೆಯಲ್ಲಿ ದಿನಾಂಕ: 23.02.2017 ರಿಂದ ಇಲ್ಲಿಯವರೆಗಿನ ಸ್ಥಾನಾಪನ್ನಾವಧಿಯನ್ನು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 19(3)(ಸಿ) ಪ್ರಕಾರ ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಸಲಾಗಿದೆ.

PR – 67

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 30

ಹೆಚ್. ರಾಜ್‌ಕುಮಾರ್

ಸಹಾಯಕ ಪ್ರಾರೂಪಕಾರ ಮತ್ತು ಪದನಿಮಿತ್ತ

ಸರ್ಕಾರದ ಉಪ ಕಾರ್ಯದರ್ಶಿ,

ಸಂಸದೀಯ ವ್ಯವಹಾರಗಳ ಇಲಾಖೆ.

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 26 ಎಲ್‌ಜಿಎನ್ 2018, ಬೆಂಗಳೂರು, ದಿನಾಂಕ: 01.02.2019

ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಪ್ರಕರಣ 94ಎ(1) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ

ಕ್ರಮ ಸಂಖ್ಯೆ ಹ ಸ ೆ ರು ಮತ್ತು ವಿಳಾಸ ಮೀಸಲಾತಿ
1. ಶಿ ೕ ಸುಭಾಸ ಎ.ಎಂ ಕೊರ್ವೆಕರ, ಸಾ|| ಸಂಕನಕೊಪ್ಪ, ್ರ ಹಳಿಯಾಳ ತಾಲ್ಲೂಕು (ಅಧ್ಯಕ್ಷರು) ಸಾಮಾನ್ಯ
2. ಶಿ ೕ ಪರಶುರಾಮ ಹನುಮಂತ ಭಂಡಾರಿ, ಸಾ|| ಅರ್ಲವಾಡ, ್ರ ಹಳಿಯಾಳ ತಾಲ್ಲೂಕು (ಸದಸ್ಯರು) ಸಾಮಾನ್ಯ
3. ಶಿ ೕಮತಿ ರೋಹಿಣಿ ಚಂದ್ರಕಾಂತ ವಿರ್ನೋಡಕರ, ್ರ ಸಾ|| ಕ್ಯಾಸಲರಾಕ್, ಜೋಯಿಡಾ ತಾಲ್ಲೂಕು (ಸದಸ್ಯರು) ವ ುಹಿಳೆ
4. ಶಿ ೕ ಹರ್ಷಾ ಮಾದರ, ಇಂದಿರಾನಗರ, ಹಳಿಯಾಳ ್ರ (ಸದಸ್ಯರು) ಪ ರಿಶಿಷ್ಟ ಜಾತಿ
5. ಸ ಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್ ಕಾರ್ಯದರ್ಶಿ

PR – 68

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 25

ವಿಮಲಮ್ಮ.ಸಿ

ಪೀಠಾಧಿಕಾರಿ,

ಕಂದಾಯ ಇಲಾಖೆ (ಭೂ ಮಂಜೂರಾತಿ-2).

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 28 February 2019. Indian Gazettes, https://egazette.servantsofknowledge.in/details/in.gazette.karnataka_new.2019-02-28.Part-4A/. Archive identifier in.gazette.karnataka_new.2019-02-28.Part-4A.