ಬೆಂಗಳೂರು, ಗುರುವಾರ, ಮಾರ್ಚ್ ೧೪, ೨೦೧೯ (ಫಾಲ್ಗುಣ ೨೩, ಶಕ ವರ್ಷ ೧೯೪೦)
Bengaluru, Thursday, March 14, 2019 (Phalguna 23, Shaka Varsha 1940)
ಸಂಪುಟ ೧೫೪
Volume 154
ಸಂಚಿಕೆ ೧೧
Issue 11
ಭಾಗ ೬
ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,
ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ
ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ
ವಾಣಿಜ್ಯ ಸಂಕೀರ್ಣ, 100 ಅಡಿ ರಸ್ತೆ, ವಿನೋಬನಗರ, ಶಿವಮೊಗ್ಗ-577 204
ಸಾರ್ವಜನಿಕ ಪ್ರಕಟಣೆ
ನಂ. ಶಿನಪ್ರಾ/ಯೋ/ಇತರೆ/2018-19, ದಿನಾಂಕ: 28-01-2019
ವಿಷಯ: ಶಿವಮೊಗ್ಗ-ಭದ್ರಾವತಿ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪ್ರ-II)
2031 ಯನ್ನು ಪರಿಷ್ಕರಿಸಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ
ಕಾಯ್ದೆ 1961ರ ಕಲಂ.10. ರಡಿಯಲ್ಲಿ ಪ್ರಕಟಣೆ
. ಶಿವಮೊಗ್ಗ ನಗರವು, ಅಮೃತಯೋಜನೆಯಲ್ಲಿ ಸೇರ್ಪಡೆಗೊಂಡಿರುವುದರಿಂದ ಸರ್ಕಾರದ ಮಾರ್ಗಸೂಚಿಯಂತೆ ಅಮೃತಯೋಜನೆಯಡಿಯಲ್ಲಿ ಆಯ್ಕೆಗೊಂಡ ನಗರಗಳ ಮಹಾಯೋಜನೆಯು GIS ಆಧಾರಿತ ಮಹಾಯೋಜನೆಯಾಗಬೇಕಿರುತ್ತದೆ. ಹಾಗಾಗಿ, ಶಿವಮೊಗ್ಗ-ಭದ್ರಾವತಿ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಯನ್ನು GIS Formate ನಲ್ಲಿ ಪರಿಷ್ಕರಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ.10 ರನ್ವಯ ಪ್ರಚಲಿತ ಮಹಾಯೋಜನೆಯನ್ನು GIS Formate ನಲ್ಲಿ ಪರಿಷ್ಕರಿಸುವ ಇಂಗಿತವನ್ನು ಈ ಮೂಲಕ ಸಾರ್ವಜನಿಕವಾಗಿ ಪ್ರಕಟಿಸಲಾಗಿದೆ.
ಶಿವಮೊಗ್ಗ-ಭದ್ರಾವತಿ ಸ್ಥಳಿಯ ಯೋಜನಾ ಪ್ರದೇಶದ ಮಹಾಯೋಜನೆಯನ್ನು ಈ ಸಂಬಂಧವಾಗಿ ಪರಿಸ್ಕರಿಸುವ ಕುರಿತಾಗಿ ಸಲಹೆ ಸೂಚನೆಗಳನ್ನು ನೀಡಲು ಇಚ್ಛಿಸುವ ಸಾರ್ವಜನಿಕರು ಈ ಪ್ರಕಟಣೆಗೊಂಡ ದಿನಾಂಕದಿಂದ 60 ದಿವಸಗಳವರೆಗೆ ತಮ್ಮ ಸಲಹೆ ಸೂಚನೆಗಳನ್ನು ಲಿಖಿತ ರೂಪದಲ್ಲಿ ಆಯುಕ್ತರು, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ, ವಿನೋಬನಗರ, ಶಿವಮೊಗ್ಗ ಈ ಕಾರ್ಯಾಲಯಕ್ಕೆ ಸಲ್ಲಿಸಬಹುದು. ಸಾರ್ವಜನಿಕರ ವೀಕ್ಷಣೆಗಾಗಿ ಶಿವಮೊಗ್ಗ-ಭದ್ರಾವತಿ ಸ್ಥಳೀಯ ಯೋಜನಾ ಪ್ರದೇಶದ ನಕ್ಷೆಯನ್ನು ಕಛೇರಿಯ ಯೋಜನಾ ಶಾಖೆಯಲ್ಲಿ ಲಭ್ಯವಿದ್ದು, ಕಛೇರಿ ಸಮಯದಲ್ಲಿ ಸಾರ್ವಜನಿಕರು ವೀಕ್ಷಿಸಬಹುದು.
PD 04
ಆಯುಕ್ತರು
ಅಧ್ಯಕ್ಷರು
SC.05
ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ, ಹಾಗೂ
ಪ್ರಾಧಿಕಾರ, ಶಿವಮೊಗ್ಗ
ಜಿಲ್ಲಾಧಿಕಾರಿಗಳು, ಶಿವಮೊಗ್ಗ
ನಗರಸಭಾ ಕಾರ್ಯಾಲಯ, ಚಳ್ಳಕೆರೆ.
ಪ್ರ ಕ ಟ ಣೆ
ಸಂಖ್ಯೆ: ನ.ಯೋ.ಪ್ರಾ.ಚಳ್ಳಕೆರೆ/ಮ.ಯೋ.ಪ.-II/2018-19, ದಿನಾಂಕ: 21/02/2019
(ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಕಲಂ 10 ರನ್ವಯ)
R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೧೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೪, ೨೦೧೯ ಭಾಗ ೬ ಅನುಮೋದಿಸಲಾಗಿದ್ದು, 10 ವರ್ಷಗಳು ಆಗುತ್ತಿರುವುದರಿಂದ ಮಹಾ ಯೋಜನೆ (ಪರಿಷ್ಕøತ-II) ತಾತ್ಕಾಲಿಕ ತಯಾರಿಸಿ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಬೇಕಾಗಿರುವುದರಿಂದ ಯಾವುದಾದರೂ ಸಲಹೆ ಸೂಚನೆಗಳಿದ್ದಲ್ಲಿ ಈ ಪ್ರಕಟಣೆಯ ದಿನಾಂಕದಿಂದ 60 ದಿನಗಳ ಒಳಗಾಗಿ ಪೌರಾಯುಕ್ತರು/ಸದಸ್ಯ ಕಾರ್ಯದರ್ಶಿಗಳು, ನಗರಸಭೆ ಯೋಜನಾ ಪ್ರಾಧಿಕಾರ, ಚಳ್ಳಕೆರೆ ಇವರಿಗೆ ಖುದ್ದಾಗಿ ಆಗಲಿ/ ನೋಂದಾಯಿತ ಅಂಚೆ ಮೂಲಕವಾಗಿಯಾಗಲೀ ಸಲ್ಲಿಸಲು ತಿಳಿಸಲಾಗಿದೆ.
PD – 5 ಆಡಳಿತಾಧಿಕಾರಿಗಳು
SC - 05 ನಗರಸಭೆ ಚಳ್ಳಕೆರೆ
ಪೌರಾಯುಕ್ತರು,
ನಗರಸಭೆ ಚಳ್ಳಕೆರೆ.
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಂಇ 17 ಭೂಸ್ವಾಚ 2018, ಬೆಂಗಳೂರು, ದಿನಾಂಕ: 11.02.2019.
ಚಿತ್ರದುರ್ಗ ಜಿಲ್ಲೆ, ಹೊಸದುರ್ಗ ತಾಲ್ಲೂಕಿನ ಕಸಬಾ ಹೋಬಳಿ, ಚಿಕ್ಕಯಗಟಿ ಗ್ರಾಮದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ವಿವಿಧ ಸರ್ವೆ ನಂಬರ್‌ಗಳಲ್ಲಿ 0-32 ಗುಂಟೆ ಜಮೀನು ಭೂಸ್ವಾಧೀನಪಡಿಸಿಕೊಳ್ಳುವ ಸಂಬಂಧ ಹೊಸ ಭೂಸ್ವಾಧೀನ ಕಾಯ್ದೆ 2013ರನ್ವಯ ಕಲಂ 11(1)ರಡಿಯಲ್ಲಿ ಪ್ರಾಥಮಿಕ ಅಧಿಸೂಚನೆಯನ್ನು ಕ್ರಮಾಂಕ:ವಿಭೂಸ್ವಾ/ಭಮೇಯೋ/ಸಿಆರ್-5/2016-17, ದಿನಾಂಕ: 03.03.2017ರಲ್ಲಿ ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ ಇವರು ಹೊರಡಿಸಿರುತ್ತಾರೆ. ಸದರಿ ಆದೇಶವು ಕರ್ನಾಟಕ ರಾಜ್ಯ ಪತ್ರದಲ್ಲಿ ದಿನಾಂಕ: 27.04.2017 ರಂದು ಪ್ರಕಟವಾಗಿದ್ದು, ಪ್ರಾಥಮಿಕ ಅಧಿಸೂಚನೆಯನ್ನು ಗ್ರಾಮ ಛಾವಡಿಯಲ್ಲಿ ದಿನಾಂಕ: 05.05.2017 ರಂದು ಪ್ರಚುರಪಡಿಸಲಾಗಿರುತ್ತದೆ. ಪ್ರಾಥಮಿಕ ಅಧಿಸೂಚನೆಯನ್ನು ಗ್ರಾಮ ಛಾವಡಿಯಲ್ಲಿ ಪ್ರಚುರಪಡಿಸಿದ ದಿನಾಂಕದಿಂದ ಒಂದು ವರ್ಷದೊಳಗಾಗಿ ಅಂದರೆ, ದಿನಾಂಕ: 05.04.2018ರೊಳಗಾಗಿ ಕಲಂ 19(1) ಮತ್ತು 19(2)ರ ಅಧಿಸೂಚನೆಗೆ ಸರ್ಕಾರದಿಂದ ಅನುಮೋದನೆ ಪಡೆಯಬೇಕಾಗಿತ್ತು. ಆದರೆ ಕಾರ್ಯಪಾಲಕ ಅಭಿಯಂತರರು, ಭದ್ರಾ ಮೇಲ್ದಂಡೆ ಯೋಜನೆ, ಹೊಸದುರ್ಗ ಇವರು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಯುಕ್ತ ಮೋಜಿಣಿ ನಡೆಸಿ, ವರದಿ ಸಲ್ಲಿಸಿದ್ದು, ತಹಶೀಲ್ದಾರ್ ಹೊಸದುರ್ಗ ಇವರು ಈ ಭೂಸ್ವಾಧೀನದಿಂದ ಬಾಧಿತರಾಗುವ ಕುಟುಂಬಗಳ ಸಮೀಕ್ಷೆ ನಡೆಸಿ, ಪುನರ್‌ವಸತಿ ಮತ್ತು ಪುನರ್ ನಿರ್ಮಾಣ ವ್ಯವಸ್ಥೆಗೆ ಕುರಿತಂತೆ, ಶೇಕಡ 50ಕ್ಕಿಂತ ಹೆಚ್ಚಿನ ಜಮೀನು ಕಳೆದುಕೊಳ್ಳುವ ರೈತರ ಬಾಬ್ತು ಭೂಹಿಡುವಳಿ ದೃಡೀಕರಣ ಬಾಕಿ ಇರುತ್ತದೆ. ಸದರಿ ಯೋಜನೆಯ ಕಲಂ 45ರನ್ವಯ ಜಿಲ್ಲಾ ಮಟ್ಟದ ಯೋಜನಾ ಸಮಿತಿ ಜಿಲ್ಲಾಧಿಕಾರಿ, ಚಿತ್ರದುರ್ಗ ಇವರಿಗೆ ದಿನಾಂಕ: 29.01.2018 ರಂದು ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ಬಾಕಿ ಇರುತ್ತದೆ. ಸದರಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಕಲಂ 18(3)ರಡಿ ಆರ್ & ಆರ್ ವ್ಯಾಪ್ತಿಯ ಕರಡು ಯಾದಿಯನ್ನು ತಯಾರಿಸಿ, 19(2)ರಡಿ ಅನುಮೋದನೆ ಪಡೆದು, ರಾಜ್ಯ ಪತ್ರ ಹಾಗೂ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸುವ ಕ್ರಮ ದಿನಾಂಕ: 27.04.2018 ರೊಳಗಾಗಿ ಪೂರ್ಣಗೊಳಬೇಕಿರುತ್ತದೆ. ಅಲ್ಲದೆ ರಾಜ್ಯ ಚುನಾವಣಾ ನಿಮಿತ್ತ ವಿಶೇಷವಾಗಿ ಕಂದಾಯ ಇಲಾಖೆಯ ಸಿಬ್ಬಂದಿ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗುವುದರಿಂದ, ದಿನಾಂಕ: 27.04.2018 ರಿಂದ 06 ತಿಂಗಳ ವರೆಗೆ ಕಲಂ 19(7)ರಡಿ ವಿಸ್ತರಣೆ ಮಾಡಲು ಕೋರಿರುತ್ತಾರೆ. ಅದರಂತೆ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂ 17 ಭೂಸ್ವಾಚ 2018, ದಿನಾಂಕ: 25.05.2018ರಲ್ಲಿ ದಿ: 04.05.2018ರಿಂದ 03.08.2018ರ ವರೆಗೆ ತದನಂತರ ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂ 17 ಭೂಸ್ವಾಚ 2018, ದಿನಾಂಕ: 19.09.2018 ರಲ್ಲಿ ದಿನಾಂಕ: 04.08.2018 ರಿಂದ 03.11.2018 ರವರೆಗೆ ಕಾಲಾವಕಾಶ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ವಿಶೇಷ ಭೂಸ್ವಾಧೀನಾಧಿಕಾರಿ, ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗರವರು ಪತ್ರ ದಿನಾಂಕ: 20.11.2018 ರಲ್ಲಿ ಭದ್ರಾ ಮೇಲ್ದಂಡೆ ಯೋಜನೆ, ಚಿತ್ರದುರ್ಗ ಶಾಖಾ ಕಾಲುವೆ ನಿರ್ಮಾಣಕ್ಕಾಗಿ ಹೊಸದುರ್ಗ ತಾಲ್ಲೂಕು ಕಸಬಾ ಹೋಬಳಿ, ಚಿಕ್ಕಯಗಟಿ ಗ್ರಾಮದ 0-32 ಗುಂಟೆ ಜಮೀನು ಭೂಸ್ವಾಧೀನ ಪ್ರಕರಣ ಕುರಿತಂತೆ ಕಾಯ್ದೆಯ ಕಲಂ 16(2)ರಡಿ ಸಲ್ಲಿಸಲಾದ ಪುನರ್ ವಸತಿ ಪುನರ್ ವ್ಯವಸ್ಥೆ ಕರಡುಯಾದಿಯು ಆಕ್ಷೇಪಣೆಯೊಂದಿಗೆ ಹಿಂದಿರುಗಿಸಲಾಗಿದೆ. ಸದರಿ ಆಕ್ಷೇಪಣೆಗಳಿಗೆ ದಾಖಲೆ ಒದಗಿಸಬೇಕಾದ ಕಾರಣ ಕಾಲಾವಧಿ ವಿಸ್ತರಣೆ ಅಗತ್ಯವಾಗಿರುತ್ತದೆ. ಆದಕಾರಣ, ದಿನಾಂಕ: 04.11.2018 ರಿಂದ 4 ತಿಂಗಳು ಕಾಲಾವಧಿ ವಿಸ್ತರಿಸಲು ಕೋರಿಕೆ ಸಲ್ಲಿಸಿರುತ್ತಾರೆ.
ಭದ್ರಾ ಮೇಲ್ದಂಡೆ ಯೋಜನೆ ಇವರ ದಿನಾಂಕ: 20.11.2018ರ ಪತ್ರದಲ್ಲಿ ತಿಳಿಸಿರುವ ಕಾರಣಗಳ ಹಿನ್ನಲೆಯಲ್ಲಿ ಹಾಗೂ ಈ ಯೋಜನೆಯು ಸಾರ್ವಜನಿಕ ಹಿತಾಸಕ್ತಿಯನ್ನು ಒಳಗೊಂಡಿರುವುದರಿಂದ, "ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು, ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ-2013"ರ ಕಲಂ 25ರಡಿ ಸರ್ಕಾರವು ಪದತ್ತವಾದ ಅಧಿಕಾರವನ್ನು ಚಲಾಯಿಸಿ, ಪ್ರಕರಣದಲ್ಲಿ 19(7)ರಡಿ ಅಂತಿಮ ಅಧಿಸೂಚನೆ ಹೊರಡಿಸಲು ದಿನಾಂಕ: 04.11.2018 ರಿಂದ 31.03.2019 ರವರೆಗೆ ಕಾಲಾವಕಾಶ ವಿಸ್ತರಿಸಿ ಆದೇಶಿಸಿದೆ.
PR –25
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,