Servants of Knowledge
Karnataka Gazette · Government of Karnataka

Karnataka Gazette, Part Part-1, 28 March 2019

Published 28 March 2019

Part
Part-1
Identifier
in.gazette.karnataka_new.2019-03-28.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಮಾರ್ಚ್ ೨೮, ೨೦೧೯ (ಚೈತ್ರ ೭, ಶಕ ವರ್ಷ ೧೯೪೦)

Bengaluru, Thursday, March 28, 2019 (Chaithra 7, Shaka Varsha 1940)

ಸಂಪುಟ ೧೫೪

Volume 154

ಸಂಚಿಕೆ ೧೩

Issue 13

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಶಿಕ್ಷಣ ಸಚಿವಾಲಯ

ವಿಷಯ : ಎ.ಜೆ. ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ & ಟೆಕ್ನಾಲಜಿ, ಮಂಗಳೂರು ಈ ಸಂಸ್ಥೆಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತು.

ಓದಲಾಗಿದೆ : 1) ಪ್ರಾಂಶುಪಾಲರು, ಎ.ಜೆ. ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮಂಗಳೂರು ರವರ ಪತ್ರ ಸಂಖ್ಯೆ: ಎಜೆಐಇಟಿ/ಎಲ್ಇಟಿ/003/2016-17, ದಿನಾಂಕ: 20.06.2016.

2) ಅಧಿಸೂಚನೆ ಸಂಖ್ಯೆ: ಇಡಿ 131 ಟಿಪಿಇ 2014, ದಿನಾಂಕ: 20.08.2014.

3) ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ರವರ ಪತ್ರ ಸಂಖ್ಯೆ: ಡಿಟಿಇ 10 ಎಸಿಎಂ(1) 2010-11, ದಿನಾಂಕ: 03.04.2017.

4) ಸರ್ಕಾರದ ಪತ್ರ ಸಂಖ್ಯೆ: ಇಡಿ 109 ಟಿಇಸಿ 2016, ದಿನಾಂಕ:10.10.2017.

5) ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇಲಾಖೆ, ರವರ ಪತ್ರ ಸಂಖ್ಯೆ: ಡಿಟಿಇ 10 ಎಸಿಎಂ(1) 2010-11, ದಿನಾಂಕ: 11.07.2018.

ಪ್ರಸ್ತಾವನೆ:-

ಮೇಲೆ ಓದಲಾದ ಕ್ರಮಸಂಖ್ಯೆ (1)ರ ಪತ್ರದಲ್ಲಿ ಎ.ಜೆ. ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮಂಗಳೂರು ಸಂಸ್ಥೆಯ ಆಡಳಿತ ಮಂಡಳಿಯು ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಹೊಂದಿದ್ದು, ಸದರಿ ಆಡಳಿತ ಮಂಡಳಿಯಡಿ ಬರುವ ಎ.ಜೆ. ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮಂಗಳೂರು ಈ ಸಂಸ್ಥೆಗೆ ತುಳು ಭಾಷಾ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮಸಂಖ್ಯೆ (2)ರ ಅಧಿಸೂಚನೆಯಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಡಿ ಬರುವ ಶೈಕ್ಷಣಿಕ ಸಂಸ್ಥೆಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡುವ ಕುರಿತಂತೆ ನಿಯಮಗಳನ್ನು ರಚಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮಸಂಖ್ಯೆ (3)ರ ನಿರ್ದೇಶಕರ ಪತ್ರದಲ್ಲಿ ಎ.ಜೆ. ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮಂಗಳೂರು ಈ ಸಂಸ್ಥೆಯು 2016-17ನೇ ಶೈಕ್ಷಣಿಕ ಸಾಲಿನಿಂದ ಪ್ರಾರಂಭಗೊಂಡಿದ್ದು, ಒಟ್ಟು 5 ಕೋರ್ಸುಗಳು ಅಸ್ತಿತ್ವದಲ್ಲಿರುತ್ತವೆ. ಪ್ರತಿ ಕೋರ್ಸಿಗೆ 60 ಇನ್‌ಟೇಕ್ ಇದ್ದು, ಒಟ್ಟಾರೆ 300 ಇನ್‌ಟೇಕ್ ಹೊಂದಿರುತ್ತದೆ. ಒಟ್ಟು 124 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, ಅದರಲ್ಲಿ ತುಳು ಭಾಷಾ ಅಲ್ಪಸಂಖ್ಯಾತ ಸಮುದಾಯದ 84 ವಿದ್ಯಾರ್ಥಿಗಳು ಪ್ರವೇಶ ಪಡೆದಿರುವುದಾಗಿ ಮಾಹಿತಿ ನೀಡಿ ಸದರಿ ಸಂಸ್ಥೆಗೆ ತುಳು ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮಸಂಖ್ಯೆ (4)ರ ಪತ್ರದಲ್ಲಿ ಮೇಲ್ಕಂಡ ಸಂಸ್ಥೆಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತಂತೆ ದಿನಾಂಕ: 14.07.2017ರಂದು ನಡೆದ ಸಭೆಯಲ್ಲಿ ಚರ್ಚಿಸಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 131 ಟಿಪಿಇ 2014, ದಿನಾಂಕ: 20.08.2014ರಲ್ಲಿ ನಿಗಧಿಪಡಿಸಿರುವಂತೆ ನಮೂನೆ (ಎ), (ಬಿ) ಮತ್ತು (ಸಿ) ಯಲ್ಲಿ ನೀಡಿರುವ ಅಗತ್ಯ ಮಾಹಿತಿಗಳನ್ನು Karnataka Educational Institutions (Recognition of Minority Educational Institutions terms and conditions) (Technical Education) Rules 2014 ರಡಿಯಲ್ಲಿ ಪರಿಶೀಲಿಸಿ ಸಕ್ಷಮ ಪ್ರಾಧಿಕಾರವಾದ

(೨೪೩)೨೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧ ಸರ್ಕಾರ ನಮೂನೆ (ಡಿ)ಯಲ್ಲಿ ಎ.ಜೆ. ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಈ ಕಾಲೇಜಿಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಪ್ರಸ್ತಾವನೆಯನ್ನು ಅಂಗೀಕರಿಸಿರುವ ಪ್ರತಿಯನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ನಿರ್ದೇಶಕರಿಗೆ ಕಳುಹಿಸಲಾಗಿದೆ.

ಮೇಲೆ ಓದಲಾದ ಕ್ರಮಸಂಖ್ಯೆ (5) ರಲ್ಲಿ ನಮೂನೆ (ಡಿ) ಯಲ್ಲಿ ಅಂಗೀಕರಿಸಲಾದ ಪ್ರಸ್ತಾವನೆಯಂತೆ ಎ.ಜೆ. ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮಂಗಳೂರು ಈ ಸಂಸ್ಥೆಗೆ ತುಳು ಭಾಷಾ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡುವ ಬಗ್ಗೆ ಸರ್ಕಾರದ ಆದೇಶ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ಪ್ರಕರಣದಲ್ಲಿ ಒದಗಿ ಬಂದ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿ, ಮೇಲ್ಕಂಡ ಸಂಸ್ಥೆಯು ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 131 ಟಿಪಿಇ 2014, ದಿನಾಂಕ: 20.8.2014ರಲ್ಲಿನ ಷರತ್ತುಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಸದರಿ ಸಂಸ್ಥೆಗೆ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಲು ಸರ್ಕಾರವು ನಿರ್ಣಯಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಇಡಿ 187 ಟಿಇಸಿ 2018, ಬೆಂಗಳೂರು, ದಿನಾಂಕ: 20ನೇ ಫೆಬ್ರವರಿ 2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 131 ಟಿಪಿಇ 2014, ದಿನಾಂಕ: 20.08.2014ರಲ್ಲಿನ ಷರತ್ತುಗಳನ್ನು ಕಡ್ಡಾಯವಾಗಿ ಪೂರೈಸುವ ಷರತ್ತಿಗೊಳಪಟ್ಟು ಎ.ಜೆ. ಇನ್ಸ್‌ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ, ಮಂಗಳೂರು ಈ ಸಂಸ್ಥೆಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ತುಳು ಭಾಷಾ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಿದೆ.

PR-100

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-100

ಮನೋರಮ ಡಿ.ಸಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ತಾಂತ್ರಿಕ)

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವಾಲಯ

ವಿಷಯ:

ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭ

ನಿರ್ಮಾಣಕ್ಕೆ ಕಿರಾಲ್‌ಭೋಗಿ ನಾಟವನ್ನು ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ: ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಇವರ ಪತ್ರ ಸಂಖ್ಯೆ: ಅಪ್ರಮುಅಸಂ (ಅಸಂನಿ)/ಎ5/ಎಂ.ಎಂ.ಜೆ/ಸಿಅರ್-64/2017-18, ದಿನಾಂಕ: 27.01.2018.

ಪ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನಲ್ಲಿನ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭ ನಿರ್ಮಾಣಕ್ಕೆ ಬೇಕಾಗಿರುವ ಒಂದು ಕಿರಾಲ್‌ಬೋಗಿ ಮರವು ಸೂಳ್ಯ ತಾಲ್ಲೂಕು, ಅಮರಪಡ್ನೂರು ಗ್ರಾಮದ ಕುಕ್ಕಜಡ್ಕದ ಬೊಳ್ಳೂರು ಎಂಬಲ್ಲಿನ ಸರ್ವೆ ನಂಬರ್ 47/1 ಸರ್ಕಾರಿ ಸ್ಥಳದಲ್ಲಿ ಗುರುತಿಸಿದ್ದು, ಈ ಮರವನ್ನು ಚಾಲ್ತಿಯಲ್ಲಿರುವ ಮರದ ಮೌಲ್ಯ ಹಾಗೂ ತೆರಿಗೆ ವಸೂಲು ಮಾಡಿ ಮಂಜೂರು ಮಾಡಬಹುದೆಂದು ಸಂಬಂಧಿಸಿದ ದಾಖಲೆಗಳೊಂದಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ಇವರು ಪ್ರಸ್ತಾವನೆ ಸಲ್ಲಿಸಿರುವುದಾಗಿ ತಿಳಿಸುತ್ತಾ. ಪ್ರಸ್ತಾಪಿತ ಕಿರಾಲ್‌ಬೋಗಿ ಮರವು ಸರ್ಕಾರಿ ಜಾಗದಲ್ಲಿದ್ದು, ಸರ್ಕಾರಿ ಮರವಾಗಿರುವುದರಿಂದ ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ, 1976 ರನ್ವಯ, ಮರ ಕಡಿತಲೆ ಅನುಮತಿಯನ್ನು ಕಾರ್ಯವ್ಯಾಪ್ತಿಯ ವೃಕ್ಷ ಅಧಿಕಾರಿ ನೀಡುವ ಷರತ್ತಿಗೊಳಪಡಿಸಿ ಮರವನ್ನು ಸೀನಿಯರೇಜ್ ದರದಲ್ಲಿ ಮಂಜೂರು ಮಾಡುವಂತೆ ಶಿಫಾರಸ್ಸು ಮಾಡಿರುತ್ತಾರೆ.

ಮೇಲ್ಕಂಡ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: 07 ಎಫ್ಎಸ್‌ಡಬ್ಲ್ಯೂ 2018, ಬೆಂಗಳೂರು, ದಿನಾಂಕ: 13.02.2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆ, ಕುಂದಾಪುರ ತಾಲ್ಲೂಕಿನಲ್ಲಿನ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಧ್ವಜಸ್ತಂಭ ನಿರ್ಮಾಣಕ್ಕೆ ಉಡುಪಿ ಜಿಲ್ಲೆ, ಸೂಳ್ಯ ತಾಲ್ಲೂಕು, ಅಮರಪಡ್ನೂರು ಗ್ರಾಮದ ಕುಕ್ಕಜಡ್ಕದ ಬೊಳ್ಳೂರು ಎಂಬಲ್ಲಿನ ಸರ್ವೆ ನಂಬರ್ 47/1ರಲ್ಲಿನ ಸರ್ಕಾರಿ ಸ್ಥಳದಲ್ಲಿ ಗುರುತಿಸಲಾದ ಕಿರಾಲ್‌ಬೋಗಿ ಮರವನ್ನು ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976ರನ್ವಯ, ಮರ ಕಡಿತಲೆಗೆ ಕಾರ್ಯವ್ಯಾಪ್ತಿಯ ವೃಕ್ಷ ಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ಸಹಮತಿ ಪಡೆಯುವ ಹಾಗೂ ಸೀನಿಯರೇಜ್ ದರವನ್ನು ತೆರಿಗೆಗಳೊಂದಿಗೆ ಪಾವತಿಸುವ ಷರತ್ತಿಗೊಳಪಡಿಸಿ ಮಂಜೂರು ಮಾಡಲು ಸರ್ಕಾರವು ಅನುಮತಿಸಿದೆ.

PR-90

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-100

ಬಿ.ಜೆ. ಜ್ವಾಲಾಕುಮಾರಿ

ಸರ್ಕಾರದ ಅಧೀನ ಕಾರ್ಯದರ್ಶಿ,

ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೪೫

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಮಮಇ 467 ಎಸ್‌ಜೆಡಿ 2017, ಬೆಂಗಳೂರು, ದಿನಾಂಕ: 23.11.2018

ಸರ್ಕಾರದ ಆದೇಶ ಸಂಖ್ಯೆ: ಮಮಇ 467 ಎಸ್‌ಜೆಡಿ 2017ರ ದಿನಾಂಕ: 15.11.2018ರಲ್ಲಿನ ಪ್ರಸ್ತಾವನೆಯ ಭಾಗದ 6ನೇ ಪ್ಯಾರಾದ 6ನೇ ಸಾಲಿನಲ್ಲಿ "ಲೆಕ್ಕ ಶೀರ್ಷಿಕೆ 2235-02-102-0-06-059(ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆ) (I.C.P.S)" ಎಂಬುದರ ಬದಲಾಗಿ "ಲೆಕ್ಕ ಶೀರ್ಷಿಕೆ 2235-02-102-0-36-103(ಸಮಗ್ರ ಮಕ್ಕಳ ಸಂರಕ್ಷಣಾ ಯೋಜನೆ) (I.C.P.S)" ಎಂದು ತಿದ್ದುಪಡಿ ಮಾಡಿ ಓದಿಕೊಳ್ಳತಕ್ಕದ್ದು.

PR-91

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-100

ಎಂ. ರಾಜಣ್ಣ

ಸರ್ಕಾರದ ಅಧೀನ ಕಾರ್ಯದರ್ಶಿ - 2 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ.

ಕಂದಾಯ ಸಚಿವಾಲಯ

ವಿಷಯ:

ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಗೆ ಅಗತ್ಯವಿರುವ ಭೂದಾಖಲೆಗಳ ಸಹಾಯಕ ನಿರ್ದೇಶಕರು(ಆಡಳಿತ) ಹುದ್ದೆಗಳನ್ನು ಮುಂದುವರಿಸುವ ಬಗ್ಗೆ.

ಓದಲಾಗಿದೆ: 1. ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಇವರ ಪತ್ರದ ಸಂಖ್ಯೆ:

SSLR/EST/GL/GB-002/13-14 ದಿನಾಂಕ 11.01.2017.

2. ಸರ್ಕಾರದ ಆದೇಶ ಸಂಖ್ಯೆ: ಕಂಇ 20 ಭೂದಾಸ 2002, ದಿನಾಂಕ: 21.04.2005. 3. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 20 ಸೇಇವಿ 2009, ದಿನಾಂಕ: 30.07.2009. 4. ಸರ್ಕಾರದ ಆದೇಶ ಸಂಖ್ಯೆ: ಕಂಇ 109 ಭೂದಾಸ 2009, ದಿನಾಂಕ: 03.10.2009. 5. ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 77 ಭೂದಾಸ 2011, ದಿನಾಂಕ: 20.12.2012. 6. ಸರ್ಕಾರದ ಆದೇಶ ಸಂಖ್ಯೆ: ಕಂಇ 48 ಭೂದಾಸ 2014, ದಿನಾಂಕ: 21.09.2015. 7. ಸರ್ಕಾರದ ಆದೇಶ ಸಂಖ್ಯೆ: ಕಂಇ 07 ಭೂದಾಸೇ(1) 2015, ದಿನಾಂಕ: 26.03.2016.

ಪ್ರಸ್ತಾವನೆ:-

ಮೇಲೆ ಓದಲಾದ (1)ರ ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಇವರ ಪತ್ರದಲ್ಲಿ ಓದ¬ಾದ(2)ರ ಸಾರದ ಆ¡ೇಶದಲಿÐ Ĩ£ಾಂಕಃ 01.05.2005 ĸಂದ ಾĸೆ ಬರುವೆಂ ಭೂ¨ಾಪನ ಇ¬ಾೆಯನುÇ ಕಂ¡ಾಯ ಇ¬ಾೆಯೊಂĨೆ ಾಯವಿಲೀನೊಳಿಸ¬ಾĖ¡ೆ. ಆ ಸಂದಭದಲಿÐ ಭೂ(cid:161)ಾಖ(cid:172)ೆಗಳ ಉಪ Ī¡ೇಶಕರ ಹು(cid:161)ೆ(cid:197)ಗಳನು(cid:199) ĝ¬ಾÐĩಾĸಗಳ ಾಂĦÎಕ ಸ(cid:178)ಾಯಕರು ಎಂದು ಪದ£ಾIJೕಕĸಸಿ (cid:285)(cid:172)ಾ(cid:208) ®ಾÍīÃಯಲಿÐನ ಭೂ(cid:168)ಾಪನ ಇ¬ಾೆಯ ಾಂĦÎಕ ವಿಷಯಗಳ ijೕಲುಸುîಾĸೆ £ೇIJಸ¬ಾĖ¡ೆ. ಅ¡ೇ (cid:312)ೕ(cid:294) ಸ(cid:178)ಾಯಕ Ī¡ೇಶಕರು (ಆಡಳಿತ) ಹು(cid:161)ೆ(cid:197)ಗಳನು(cid:199) ĝ¬ಾÐĩಾĸಗಳ ಕೇĸೆ £ೇIJಸಿ (cid:285)(cid:172)ಾ(cid:208) ®ಾÍīÃಯಲಿÐನ ಆಡಳಿಾತÌಕ ವಿಷಯಗಳಿೆ ಸಂಬಂĩಸಿದೆಂ ಾಂĦÎಕ ಸ(cid:178)ಾಯಕರು (cid:178)ಾಗೂ ಪದ(cid:298)(cid:306)ತ(cid:195) ಉಪ Ī¡ೇಶಕರು ಮತುà ĝ¬ಾÐĩಾĸಗಳಿೆ ಸಹಕĸಸಲು £ೇIJಸ¬ಾĖ¡ೆ.

ಓದ(cid:172)ಾದ (5)ರ ಆ¡ೇಶದಲಿÐ ತಹಶೀ¬ಾÅŝ ರವĸೆ ಪÎಾÍಯೋĝಸಿದ ಭೂ(cid:168)ಾಪನ ವಿಷಯೆ´ ಸಂಬಂĩಸಿದ ಎ(cid:172)ಾ(cid:208) ಅĩಾರವನುÇ ಉಪ ವಿ§ಾಾĩಾĸಗಳ ಕೇĸಯಲಿÐರುವ ಭೂ(cid:161)ಾಖ(cid:172)ೆಗಳ ಸ(cid:178)ಾಯಕ Ī¡ೇಶಕರು (ಾĪ) ರವರುಗಳಿೆ ಪನŝ (cid:177)ಾ(cid:196)(cid:299)ಸ(cid:172)ಾ(cid:278)(cid:161)ೆ. ಇದ(cid:312)ಂ(cid:161)ಾ(cid:278) ಇ¬ಾೆಯ ಾಂĦÎಕ ಮತು(cid:195) ಆಡಳಿಾತÌಕ ಾಯĪವಹೆಯ (cid:307)ೕಲುಸು(cid:195)(cid:174)ಾ(cid:312)ಯನು(cid:199) ಇ¬ಾೆಯ ಅĩಾĸಗಳ ĪವಹಿಸುವಾಂĖ¡ೆ. ಅಲ(cid:208)(cid:161)ೆ ಓದ(cid:172)ಾದ(3)ರ ಸಾರದ ಅĩಸೂಚ£ೆಯಲಿÐ ಕ£ಾಟಕ (cid:163)ಾಗರಕ ±ೇ®ಾ (ವĖೕಕರಣ, (cid:298)ಯಂತ(cid:206)ಣ ಮತು(cid:195) ijೕಲÌನವಿ) Īಯ¨ಾವಳಿಗಳ 1957ರ (cid:298)ಯಮ (10)ರ ಉಪ(cid:298)ಯಮ (1) ರೆಂ (cid:285)(cid:172)ಾ(cid:208) ®ಾÍīÃಯಲಿÐ ಾಯ ĪವಹಿಸುĦÃರುವ 'ಸಿ' ಮತು(cid:195) '(cid:291)' ಗುಂ(cid:299)ನ (cid:163)ೌಕರರನು(cid:199) ಅ¨ಾನĦÃನಲಿÐಡುವ ಅĩಾರವನುÇ (cid:178)ಾಗೂ ಭೂ(cid:168)ಾಪನ ಇ¬ಾೆಯ ಆ¡ೇಶ ಸೆಂÍ: ಸಿಬÊಂĨ(ĝ)ಇತªೆ .35/2011 Ĩ£ಾಂಕ: 05.07.2011 ರೆಂ 'ಸಿ' ಮತು(cid:195) '(cid:291)' ಗುಂ(cid:299)ನ £ೌಕರĸೆ ಸಂಬಂĩಸಿದೆಂ ವಿವಿಧ ಆಡಳಿಾತÌಕ ಅĩಾರಗಳನುÇ ĝ¬ಾÐĩಾĸಗಳ ಾಂĦÎಕ ಸ(cid:178)ಾಯಕರು (cid:178)ಾಗೂ ಪದ(cid:298)(cid:306)ತ(cid:195) ಭೂ(cid:161)ಾಖ(cid:172)ೆಗಳ ಉಪ Ī¡ೇಶಕರುಗಳಿೆ ಪÎಾÍಯೋĝಸ¬ಾĖ¡ೆ.

ĝ¬ಾÐĩಾĸಗಳ ಾಯ (cid:174)ಾ(cid:205)(cid:299)(cid:195)ಯು ಅ(cid:297)ಕ(cid:174)ಾ(cid:278)ದು(cid:197), ĝ¬ಾÐĩಾĸಗಳ ಾಂĦÎಕ ಸ(cid:178)ಾಯಕರು (cid:178)ಾಗೂ ಪದ(cid:298)(cid:306)ತ(cid:195) ಭೂ(cid:161)ಾಖ(cid:172)ೆಗಳ ಉಪ Ī¡ೇಶಕರುಗಳ ಸಾĸ ಜ(cid:306)ೕ(cid:298)ನ ಸಂರčೆ, ಒತು(cid:195)ವ(cid:312) ೆರವ ಮತು(cid:195) ಆಧು(cid:298)ಕ ವಿ¢ಾನದಲಿÐ ಭೂ(cid:168)ಾಪನ ¨ಾಡುವದªೊಂĨೆ ಇ¬ಾೆಯು ಹIJÌೊಳÑವ ಯೋಜ£ಾ ಾಯಗಳ (cid:178)ಾಗೂ ±ಾವಜĪಕರುಗಳ ಅĝ ವಿ¬ೇ®ಾĸ, ಪ(cid:206)ಗ(cid:294) ಪĸಶೀಲ£ೆ, ಸ§ೆಗಳ ಮತು(cid:195) (cid:163)ಾ(cid:205)(cid:169)ಾಲಯ ಪ(cid:206)ಕರಣಗಳ Īವಹೆಯಂತಹ ಪ(cid:206)ಮುಖ ಾಯಗಳಲಿÐ (cid:178)ೆ(cid:283)(cid:185)ನ ಒತ(cid:195)ಡ(cid:296)ಂದ ಾಯ ĪವಹಿಸುĦÃದುÅ, ಆಡಳಿಾತÌಕ ೆಲಸ ಾಯಗಳಲಿÐ ಗುಣಮಟ(cid:190) ಮತು(cid:195)೨೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧ ĪಖರೆಯನುÇ ಾ¤ಾಡುವ ಹಿತದೃಷಿ¾ĵಂದ, ĝ¬ಾÐĩಾĸಗಳಿೆ ಮತುà ĝ¬ಾÐĩಾĸಗಳ ಾಂĦÎಕ ಸ²ಾಯಕರು ²ಾಗೂ ಪದĪIJತà ಭೂ¡ಾಖ¬ೆಗಳ ಉಪ Ī¡ೇಶಕರುಗಳಿೆ ಆಡಳಿಾತÌಕ ವಿಷಯದಲಿÐ (cid:178)ೆ(cid:283)(cid:185)ನ £ೈಪಣÍೆ ²ೊಂĨದ ಸ(cid:178)ಾಯಕ Ī¡ೇಶಕರು(ಆಡಳಿತ) ರವರ ಸಹಾರವ ಅಾÍವಶÍಕ®ಾĖರುತáೆ.[

ಭೂ¨ಾಪನ ¯ಾೆಯಲಿÐ ಆಡಳಿಾತÌಕ ವಿಷಯೆ´ ಸಂಬಂĩಸಿದೆಂ ಪÎಮುಖ®ಾĖ ಈ ೆಳಕಂಡ ೆಲಸ ಾಯಗಳನುÇ Īವಹಿಸ¦ೇĔ¡ೆ.

1. £ೌಕರರು ಕತವͬೋಪ ಎಸĖ¡ಾಗ ಅವರುಗಳ ijೕ¬ೆ ೆ.ಸಿ.ಎ(cid:356). (ಸಿ.ಸಿ.ಎ) Īಯ¨ಾವಳಿ 1957 ರನÒಯ ಶಿಸುà ಕÎಮ ಜರುĖಸಲು.

2. ಗೂ(cid:206)(cid:343) 'ಸಿ' ಮತು(cid:195) '(cid:291)' £ೌಕರĸೆ ಸಂಬಂĩಸಿದೆಂ ಾಲIJĦ ಪ¡ೋನÇĦ, 15 ವಷಗಳ ಸÒಯಾಂಲಿತ ಬ(cid:291)(cid:195), 20 ಮತು(cid:195) 25 ವಷಗಳ ಅ(cid:297)ಕ ®ೇತನ ಬģà ಮತುà ಸÄĖತ ®ೇತನ ಬģÃಗಳ ಪÎಕರಣಗಳಲಿÐ Īಯ¨ಾನು±ಾರ ಪĸಶೀಲಿಸಿ ಮಂಜೂರು ¨ಾಡಲು.

3. ²ೊಸ¡ಾĖ £ೇಮಕೊಂಡ ಗೂÎŗ 'ಸಿ' ಮತು(cid:195) '(cid:291)' £ೌಕರರ ಾಯಂ ಪ®ಾವĩ ęೂೕಷೆ.

4. ಗೂ(cid:206)(cid:343) 'ಸಿ' ವೃಂದದ £ೌಕರರುಗಳಿೆ ಮುಂಬģà Īೕಡುವ ಸಂದಭದಲಿÐ ĝ¬ಾÐ ®ಾÍīÃಯಲಿÐನ ±ೇ®ಾ ¨ಾಹಿĦಯನುÇ ಪೆದು ಸಲಿÐಸಲು.

5. £ೌಕರರ ಾಯĪವಹಾ ವರĨಗಳ Īವಹೆ ಮತುÃ ಸಂರčಾ ಾಯ.

6. ಸಿಬÊಂĨಯ ಸÒ ಇಾº ĪವೃĦÃ, ವಯೋĪವೃĦÃ ಮತುÃ ªಾĝೕ£ಾij ಪÎಕರಣಗಳನುÇ Īಯ¨ಾನು±ಾರ ಪĸಶೀಲಿಸಿ ಮಂģಸಲು.

7. ಪ(cid:206)(cid:169)ಾಣ (cid:174)ೆಚ(cid:185), ®ೈದÍĔೕಯ ®ೆಚ¹ ಮತುÃ ±ಾĨ¬ಾÒರು ®ೆಚ¹ಗಳ ijೕಲುಸಹಿ ಇಾÍĨ.

8. ¨ಾಸಿಕ, ೆȨಾಸಿಕ, ಅಧ ®ಾಷಿಕ ಮತುà ®ಾಷಿಕ ĪಯತಾಲಿೆಗಳನುÇ ಸಲಿÐಸುವದು.

9. ಆģō ವರĨಗಳ Īವಹೆ.

10. ಉಾÎಣ ¯ಾೆೆ ಸಂಬಂĩಸಿದೆಂ (cid:174)ಾಹನ, ಗಣಕಯಂತ(cid:206), ೆªಾŃÕ ಯಂತ(cid:206)ಗಳ Īವಹೆ ಮತು(cid:195) ¬ೇಖನ (cid:177)ಾ(cid:168)ಾ(cid:278)(cid:206), ಾಂĦÎಕ ನಮೂ(cid:163)ೆಗಳ ಸರಬ(cid:170)ಾಜು.

11. ಇ-ೆಂಡŝ ಮುಾಂತರ ²ೊರಗುĦÃೆ (cid:307)ೕ(cid:172)ೆ (cid:166)ಾಂದುಜ(cid:174)ಾನರನು(cid:199) ೆೆದುೊಳÑವದು ಮತು(cid:195) ಭೂ(cid:168)ಾಪನ ಉಪಕರಣಗಳನು(cid:199) ಖĸೕĨಸುವದು ²ಾಗೂ ಇಾÍĨಗಳ ಬೆ¶.

12. ಪರ®ಾನĖ ಭೂ¨ಾಪಕರ ಪರ®ಾನĖ ನವೀಕರಣ.

13. ಭೂ¡ಾಖ¬ೆಗಳ ±ಾ´ñĪಂŅ ಪÎಗĦ ಪĸಶೀಲ£ೆ.

14. ಾಲೂÐಕು ಕೇĸಗಳಿೆ §ೇġ (cid:168)ಾ(cid:291) ಆಡಳಿಾತÌಕ ವಿಷಯಗಳಿೆ ಸಂಬಂĩಸಿದೆಂ ಮತು(cid:195) ಭೂ(cid:161)ಾಖ(cid:172)ೆಗಳ ನಕಲು ಪ(cid:206)(cid:294)ಗಳ ವಿತರೆĵಂದ ವಸೂ(cid:172)ಾಗು(cid:294)(cid:195)ರುವ ಹಣವನು(cid:199) ಸಂಬಂĩಸಿದ (cid:172)ೆಕ(cid:180) ಶೀಷಿೆಗಳಿೆ ಆĖಂ¡ಾÅೆ¶ ಜij©ಾಗುĦÃರುವ ಬೆ¶ ತ¤ಾಸೆ ೈೊಂಡು Ī¡ೇಶನ Īೕಡುವದು ಮತುÃ ಇತªೆ ಾಯಗಳ.

ಈ (cid:307)ೕಲ(cid:180)ಂಡ ಾರಣಗಳಿಂದ ĝ¬ೆÐಯಲಿÐ ĝ¬ಾÐĩಾĸಗಳ ಾಂĦÎಕ ಸ(cid:178)ಾಯಕರು (cid:178)ಾಗೂ ಪದ(cid:298)(cid:306)ತ(cid:195) ಭೂ(cid:161)ಾಖ(cid:172)ೆಗಳ ಉಪ Ī¡ೇಶಕರ ಹು(cid:161)ೆ(cid:197)ಯು ಾಂĦÎಕ ವಿಷಯೆ´ ಸಂಬಂĩಸಿದೆಂ ಎಷು(cid:190) ಅವಶ(cid:205)ಕ(cid:364)ೕ, ಸ(cid:178)ಾಯಕ Ī¡ೇಶಕರು (ಆಡಳಿತ) ಹು(cid:161)ೆ(cid:197)ಯು ಆಡಳಿಾತÌಕ ವಿಷಯೆ´ ಸಂಬಂĩಸಿದೆಂ ಅ(cid:176)ೆ(cid:190)ೕ ಮುಖ(cid:205)(cid:174)ಾ(cid:278)ರುತ(cid:195)(cid:161)ೆ ಎಂಬುವದನುÇ ಮನಗಂಡು, ಓದ(cid:172)ಾದ(4)ರ ಆ¡ೇಶದಲಿÐ ಭೂ(cid:161)ಾಖ(cid:172)ೆಗಳ ಸ(cid:178)ಾಯಕ Ī¡ೇಶಕರು(ಆಡಳಿತ) ಹು(cid:161)ೆ(cid:197)ಯನು(cid:199) ಭೂ(cid:161)ಾಖ(cid:172)ೆಗಳ ಸ(cid:178)ಾಯಕ Ī¡ೇಶಕರು(ಾĪ) ಹು(cid:161)ೆ(cid:197)ಯ(cid:163)ಾ(cid:199)(cid:278) ಪದ£ಾIJೕಕĸಸಿದÅನುÇ ಓದ(cid:172)ಾದ (6)ರ ಸಾರದ ಆ¡ೇಶದಲಿÐ ಹಿಂಪೆದು, ಸ(cid:178)ಾಯಕ Ī¡ೇಶಕರು(ಆಡಳಿತ) ವೃಂದವನು(cid:199) ಯ ಾವಾÃĖ ಮುಂದುವªೆಸಿತು. ಆದ(cid:170)ೆ ಓದ¬ಾದ (7)ರ ಸಾರದ ಆ¡ೇಶದಲಿÐ ಾಲಿ ಇದ(cid:197) 19 ಹು(cid:161)ೆ(cid:197)ಗಳನು(cid:199) ಆದÍīಸಿೊಂಡು ಭೂ(cid:161)ಾಖ(cid:172)ೆಗಳ ಸ(cid:178)ಾಯಕ Ī¡ೇಶಕರು (ಾ.(cid:298)) ವೃಂದದ ಹು(cid:161)ೆ(cid:197)ಗಳನು(cid:199) ಸೃ(cid:285)ಸ(cid:172)ಾ(cid:278)(cid:161)ೆ. ಈ ಕ(cid:206)ಮ(cid:296)ಂದ (cid:285)(cid:172)ಾ(cid:208) ®ಾÍīÃಯಲಿÐನ ಭೂ(cid:168)ಾಪನ ¯ಾೆಯ ಆಡಳಿಾತÌಕ ೆಲಸ ಾಯಗಳ ಕುಂ(cid:290)ತ(cid:174)ಾ(cid:278) ಸಮ±ೆÍಗಳ ಉಲÊಣೊಳÑĦîೆ. ಈ ಾರಣಗಳ ಹಿ£ೆǬೆಯಲಿÐ ಸ(cid:178)ಾಯಕ Ī¡ೇಶಕರು (ಆಡಳಿತ) ಹು(cid:161)ೆ(cid:197)ಯನು(cid:199) ಮುಂದುವ(cid:170)ೆಸಲು (cid:178)ಾಗೂ ಾಲಿ ಇರುವ ಹು(cid:161)ೆ(cid:197)ಗಳನು(cid:199) ಭĦ (cid:168)ಾಡಲು ೋರುĦÃರುವ ಒತ(cid:195)ಡ (cid:178)ೆಚು(cid:185)(cid:294)(cid:195)(cid:161)ೆ. ಆದ(cid:197)(cid:312)ಂದ ±ಾವಜĪಕ (cid:178)ಾಗೂ ಆಡಳಿಾತÌಕ ಹಿತದೃಷಿ¾ĵಂದ ಸ(cid:178)ಾಯಕ Ī¡ೇಶಕರು(ಆಡಳಿತ) ಹು(cid:161)ೆ(cid:197)ಗಳನು(cid:199) ಮುಂದುವªೆಸುವದು ಆಡಳಿತ ದೃಷಿ¾ĵಂದ ಅĪ®ಾಯ®ಾĖ ಅವಶÍವಿರುವದĸಂದ, ಸ(cid:178)ಾಯಕ Ī¡ೇಶಕರು(ಆಡಳಿತ) ವೃಂದದ 19 ಹು(cid:161)ೆ(cid:197)ಗಳನು(cid:199) ಆದÍīಸಿೊಂģರುವದನುÇ ²ೊರģಸಿರುವ ಆ¡ೇಶವನುÇ ಹಿಂಪೆದು ಸ(cid:178)ಾಯಕ Ī¡ೇಶಕರು(ಆಡಳಿತ) ವೃಂದದ 19 ಹು(cid:161)ೆ(cid:197)ಗಳನು(cid:199) ಮುಂದುವªೆಸಿ, ಈ ಹು(cid:161)ೆ(cid:197)ಗಳ ಬದಲಿೆ ಈ ೆಳಕಂಡ ಹು(cid:161)ೆ(cid:197)ಗಳನು(cid:199) ಆದÍīಸಿೊಳѦೇಾĖ ಸಾರವನುÇ ೋĸ¡ಾŪೆ.

ಕÎ.ಸಂ. ಪದ£ಾಮ ಹು¡ೆÅಗಳ ಸೆಂÍ ®ೇತನ ¯ೆÎೕĥ ರೂ.ಗಳಲಿÐ
1 ಆŘ ±ೆō īÎಂಟŝ 1 12500-24000
2 ಸ²ಾಯಕ ಮುದÎಣ Īವಹೆಾರ 1 12500-24000
3 ಅಸಿಸ¾ಂō ಆŘ ±ೆō ¤ೆÐೕō ijೕಕŝ 1 12500-24000
4 ಸ²ಾಯಕ ಆŘ ±ೆō īÎಂಟŝ 1 11600-21000
5 ¦ೈಂಡŝ 1 11600-21000
6 ಜijೕ¡ಾŝ 1 11000-19000
7 ದ¥ೇ¡ಾŝ 6 11000-19000
8 ದಫÃŝ ಬಂŔ 24 11000-19000
9 ²ೆಲÈŝ 1 9600-14550
ಒಟು¾ 37
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೪೭

ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಇವರ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 14 ಭೂದಾಸೇ(1) 2017, ಬೆಂಗಳೂರು, ದಿನಾಂಕ:05.01.2018

ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ಆದೇಶ ಸಂಖ್ಯೆ: ಕಂಇ 07 ಭೂದಾಸೇ(1) 2015 ದಿನಾಂಕ: 26.03.2016 ರಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ 19 ಸಹಾಯಕ ನಿರ್ದೇಶಕರು(ಆಡಳಿತ), ಹುದ್ದೆಗಳನ್ನು ಮಾತ್ರ ರದ್ದುಗೊಳಿಸಿರುವುದನ್ನು ಪುನರ್ ಸ್ಥಾಪಿಸಿ ಆದೇಶಿಸಲಾಗಿದೆ. ಈ ಆದೇಶವು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಆಫ್ ಸೆಟ್ ಪ್ರಿಂಟರ್(01), ಸಹಾಯಕ ಮುದ್ರಣ ನಿರ್ವಹಣೆಗಾರ(01), ಅಸಿಸ್ಟೆಂಟ್ ಆಫ್ ಸೆಟ್ ಪ್ಲೇಟ್ ಮೇಕರ್ (01), ಸಹಾಯಕ ಆಫ್ ಸೆಟ್ ಪ್ರಿಂಟರ್ (01), ಬೈಂಡರ್ (01), ಜಮೇದಾರ್ (01) ದಫೇದಾರ್ (06) ದಪ್ತರ ಬಂದ್(24) ಮತ್ತು ಹೆಲ್ಪರ್ (01) ಒಟ್ಟು 37 ಹುದ್ದೆಗಳನ್ನು ರದ್ದುಗೊಳಿಸುವ ಷರತ್ತುಗೊಳಪಟ್ಟಿರುತ್ತದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ದಿನಾಂಕ: 07.09.2017 ರ ಟಿಪ್ಪಣಿ ಸಂಖ್ಯೆ: ಆಇ 325 ವೆಚ್ಚ 7/2017 ರಲ್ಲಿ ನೀಡಿರುವ ಸಹಮತಿಯಂತೆ ಹೊರಡಿಸಿದೆ.

PR-93

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-100

ಸಿ.ಪುಟ್ಟನಂಜಯ್ಯ

ಸರ್ಕಾರದ ಅದೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂಮಾಪನ) KARNATAKA GOVERNOR'S SECRETARIAT

Raj Bhavan, Bengaluru

NOTIFICATION

No. GS 02 KNM 2018, Dated : 20-02-2019

WHEREAS, the tenure of Dr. Mallika S. Ghanti, Vice-Chancellor, Kannada University, Hampi, came to an end on the afternoon of 08-09-2018.

WHEREAS, Dr. Mallika S. Ghanti, Vice-Chancellor, Kannada University, Hampi, was directed to continue in office for a period of four (4) months under Section 13(3)(a) of the Kannada University Act, 1991 vide Notification of even number dated: 07-09-2018.

WHEREAS, Dr. Mallika S. Ghanti, Vice-Chancellor, Kannada University, Hampi, was directed to continue in office for a period of one (1) month vide Notification dated 08-01-2019 and also for a further period of one month vide Notification dated: 08.02.2019.

WHEREAS, the Search Committee constituted by the State Government under Section 13(2) of the Kannada University Act, 1991, for selection of Vice-Chancellor to the University has submitted its panel to the State Government and same is forwarded by the State Government to the Chancellor with its recommendation.

WHEREAS the recommendation of the State Government has been considered.

೨೪೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧

NOW, THEREFORE, I, VAJUBHAI VALA, Governor of Karnataka and Chancellor of Kannada University, Hampi, in exercise of the powers conferred on me by Section 13(1) of the Kannada University Act, 1991, hereby appoint Prof. Ramesh S.C., Professor, Department of Folklore Studies, Kannada University, Hampi, as the Vice-Chancellor, Kannada University, Hampi, for a period of three (03) years with effect from the date of assumption of office or till he attains the age of 65 years, whichever is earlier.

Sd/-

PR-94

(VAJUBHAI VALA)

SC-20

Governor of Karnataka and Chancellor of Universities

Prathibha D. Habbu

Under Secretary to Governor (HH)

ಕಂದಾಯ ಸಚಿವಾಲಯ

ವಿಷಯ: ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಕಸಬಾ ಹೋಬಳಿ, ಚಿನ್ನಸಂದ್ರ ಗ್ರಾಮದ ಸ.ನಂ.17ರಲ್ಲಿ 15-00 ಎಕರೆ ಸರ್ಕಾರಿ ಜಮೀನನ್ನು ಚಿಂತಾಮಣಿಯಲ್ಲಿ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ಕಟ್ಟಡ ಮತ್ತು ಸಿಬ್ಬಂದಿ ವಸತಿ ಗೃಹಗಳನ್ನು ನಿರ್ಮಿಸುವ ಉದ್ದೇಶಕ್ಕಾಗಿ ಕಾಯ್ದಿರಿಸುವ ಕುರಿತು.

ಓದಲಾಗಿದೆ: 1. ಪ್ರಿನ್ಸಿಪಾಲ್ ಡಿಸ್ಟ್ರೀಕ್ಟ್ & ಸೆಷನ್ ಜಡ್ಜ್, ಚಿಕ್ಕಬಳ್ಳಾಪುರ ಇವರ ಮನವಿ ದಿನಾಂಕ: 28/03/2016.

2. ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲೆ ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ/ಸಿಆರ್/16/2016-17, ದಿನಾಂಕ:10/04/2018.

3. ರಿಜಿಸ್ಟ್ರಾರ್, ಮಾನ್ಯ ಉಚ್ಛ ನ್ಯಾಯಾಲಯ, ಬೆಂಗಳೂರು ಇವರ ಪತ್ರ ದಿನಾಂಕ: 02/06/2018.

ಪ್ರಸ್ತಾವನೆ:

ಮೇಲೆ ಕ್ರ.ಸಂ. (1)ರಲ್ಲಿ ಓದಲಾದ ಪ್ರಿನ್ಸಿಪಾಲ್ ಡಿಸ್ಟ್ರೀಕ್ಟ್ & ಸೆಷನ್ ಜಡ್ಜ್, ಚಿಕ್ಕಬಳ್ಳಾಪುರ ಇವರು ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರಿಗೆ ಸಲ್ಲಿಸಿರುವ ಪತ್ರದಲ್ಲಿ ಚಿಂತಾಮಣಿಯಲ್ಲಿ ಹೊಸದಾಗಿ ನ್ಯಾಯಾಲಯ ಕಟ್ಟಡ ನಿರ್ಮಿಸಲು ಉದ್ದೇಶಿಸಿದ್ದು, ಅದಕ್ಕೆ ಅಗತ್ಯವಾದ ಜಮೀನು ಹಂಚಿಕೆ ಮಾಡುವಂತೆ ಕೋರಿದ್ದಾರೆ.

ಮೇಲೆ ಕ್ರ.ಸಂ. (2) ರಲ್ಲಿ ಓದಲಾದ ಜಿಲ್ಲಾಧಿಕಾರಿಗಳ ಪ್ರಸ್ತಾವನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಚಿನ್ನಸಂದ್ರ ಗ್ರಾಮದ ಸ.ನಂ.17ರಲ್ಲಿ 40-00 ಎಕರೆ ಸರ್ಕಾರಿ ಖರಾಬು ಜಮೀನನ್ನು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಟ್ಟಡ ಹಾಗೂ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕಾಗಿ ಮಂಜೂರು ಮಾಡುವಂತೆ ರಿಜಿಸ್ಟ್ರಾರ್, ಮಾನ್ಯ ಉಚ್ಛ ನ್ಯಾಯಾಲಯ, ಬೆಂಗಳೂರು ಇವರ ಕೋರಿಕೆ ಮೇರೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ ಕ್ರ.ಸಂ. (3)ರಲ್ಲಿ ಓದಲಾದ ಪತ್ರದಲ್ಲಿ ಪ್ರಸ್ತಾಪಿತ ಉದ್ದೇಶಕ್ಕೆ 15-00 ಎಕರೆ ಜಮೀನನ್ನು ಮಂಜೂರು ಮಾಡುವಂತೆ ಕೋರಿರುತ್ತಾರೆ.

ಕೋರಿಕೆಯಂತೆ ಪ್ರಸ್ತಾವನೆಯನ್ನು ಪರಿಷ್ಕರಿಸಿ, ಚಿನ್ನಸಂದ್ರ ಗ್ರಾಮದ ಸ.ನಂ.17ರಲ್ಲಿ 40-00 ಎಕರೆ ಜಮೀನಿನ ಬದಲಿಗೆ 15-00 ಎಕರೆ ಸರ್ಕಾರಿ ಖರಾಬು ಜಮೀನನ್ನು ಪ್ರಸ್ತಾಪಿತ ಉದ್ದೇಶಕ್ಕೆ ಮಂಜೂರು ಮಾಡುವ ಕುರಿತು ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ ಜಿಲ್ಲೆ ಇವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಚಿನ್ನಸಂದ್ರ ಗ್ರಾಮದ ಸ.ನಂ.17ರ ಜಮೀನು ಪಹಣಿಯಂತೆ 127-16 ಎಕರೆ/ಗುಂಟೆ 'ಸರ್ಕಾರಿ ಖರಾಬು ಪೈಕಿ' ಎಂಬುದಾಗಿ ವರ್ಗೀಕರಣಗೊಂಡಿದ್ದು, ಆಕಾರ್‌ಬಂದ್‌ನಂತೆ 'ಬಿ-ಖರಾಬು' ಎಂದು ನಮೂದಾಗಿರುತ್ತದೆ. ಸದರಿ ಜಮೀನನ್ನು ಮಂಜೂರಾತಿಗೆ ಪರಿಗಣಿಸುವ ಮುನ್ನಾ ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 68(1) ಮತ್ತು 68(5) ರಡಿ ಪ್ರಕ್ರಿಯೆ ನಡೆಸಿ, ಕಾಯ್ದಿರಿಸಲು ಪ್ರಸ್ತಾಪಿಸಲಾಗಿದೆ.

ಮುಂದುವರೆದು, ಸದರಿ ಜಮೀನು ಚಿಂತಾಮಣಿ ನಗರದಿಂದ ಐದು ಕಿ.ಮೀ. ವ್ಯಾಪ್ತಿಯೊಳಗೆ ಬರುತ್ತದೆ ಹಾಗೂ ಸಾಗುವಳಿ ಮುಕ್ತವಾಗಿರುತ್ತದೆ ಹಾಗೂ ಈ ಜಮೀನಿನ ಮೇಲೆ ಹೆಚ್ಚುವರಿ ವಿದ್ಯುತ್ ತಂತಿಗಳು ಹಾದುಹೋಗಿರುವುದಿಲ್ಲವೆಂದು ಹಾಗೂ ಈ ಜಮೀನಿಗೆ ರಸ್ತೆ ಸಂಪರ್ಕವಿರುವುದಾಗಿ ಜಿಲ್ಲಾಧಿಕಾರಿಗಳು ವರದಿ ಮಾಡಿರುತ್ತಾರೆ. ಮುಂದುವರೆದು, ಚಿನ್ನಸಂದ್ರ ಗ್ರಾಮದಲ್ಲಿ ಒಟ್ಟು 552 ಜಾನುವಾರುಗಳಿದ್ದು, ಇವುಗಳು ಮೇವಿಗಾಗಿ ಗ್ರಾಮದ ವಿವಿಧ ಇತರೆ ಸರ್ವೆ ನಂಬರುಗಳಲ್ಲಿನ ಗೋಮಾಳದ ಜಮೀನನ್ನು ಉಪಯೋಗಿಸಿಕೊಳ್ಳಲಾಗುತ್ತಿದೆಯೆಂದು ವರದಿಯಲ್ಲಿ ತಿಳಿಸಿರುತ್ತಾರೆ.

ಜಿಲ್ಲಾಧಿಕಾರಿಗಳ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ. ಆರ್‌ಡಿ 81 ಎಲ್‌ಜಿಕೆ 2016, ಬೆಂಗಳೂರು ದಿನಾಂಕ: 08/02/2019.

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲ್ಲೂಕು, ಕಸಬಾ ಹೋಬಳಿ, ಚಿನ್ನಸಂದ್ರ ಗ್ರಾಮದ ಸ.ನಂ.17ರಲ್ಲಿ 15-00 ಎಕರೆ ಸರ್ಕಾರಿ ಖರಾಬು ಜಮೀನನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 68ರಡಿಯಲ್ಲಿ ಪ್ರಕ್ರಿಯೆ ನಡೆಸಿದ ನಂತರ ಚಿಂತಾಮಣಿಯಲ್ಲಿ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಕಟ್ಟಡ ಮತ್ತು ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣದ ಉದ್ದೇಶಕ್ಕಾಗಿ ಕಾಯ್ದಿರಿಸಿ ಸರ್ಕಾರವು ಆದೇಶಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೪೯

1. ಕಾಯ್ದಿರಿಸಲಾದ ಜಮೀನನ್ನು ಯಾವ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು.

2. ಕಾಯ್ದಿರಿಸಲಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ ಹಾಗೂ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

3. ಕಾಯ್ದಿರಿಸಲಾದ ಜಮೀನು ನ್ಯಾಯಾಲಯಕ್ಕೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.

4. ಕಾಯ್ದಿರಿಸಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು ಹಾಗೂ ವಾಣಿಜ್ಯ ಉದ್ದೇಶಕ್ಕೆ ಬಳಸತಕ್ಕದ್ದಲ್ಲ.

5. ಕಾಯ್ದಿರಿಸಲಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

6. ಕಾಯ್ದಿರಿಸಿದ ಜಮೀನಿನ ಸುತ್ತಲೂ ಮರಗಳನ್ನು ಬೆಳೆಸುವುದು ಹಾಗೂ ಜಮೀನಿನ ಸುತ್ತಲೂ ಕಾಂಪೌಂಡ್ ನಿರ್ಮಿಸತಕ್ಕದ್ದು.

7. ಸದರಿ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮಗಳಿಗೆ ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ನಿಯಮಾನುಸಾರ ಯಾವುದೇ ಪರಿಹಾರ ನೀಡದೆ ಕಾಯ್ದಿರಿಸಿರುವುದನ್ನು ರದ್ದುಗೊಳಿಸಲಾಗುವುದು.

PR-96

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಎಸ್.ಎಲ್.ಮಹಾಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂಮಂಜೂರಾತಿ-1)

ಕಾನೂನು ಸಚಿವಾಲಯ

ವಿಷಯ: 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನಂತೆ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಖಾಸಗಿ ಅನುದಾನಿತ ಕಾನೂನು ಕಾಲೇಜುಗಳ ಸಿಬ್ಬಂದಿಗಳಿಗೆ 2018ರ ಪರಿಷ್ಕøತ ರಾಜ್ಯ ವೇತನ ಶ್ರೇಣಿಯನ್ನು ನಿಗದಿಪಡಿಸುವ ಕುರಿತು.

ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ: ಆಇ 6 ಎಸ್ಆರ್‌ಪಿ 2018, ದಿನಾಂಕ: 01.03.2018.

2) ಸರ್ಕಾರದ ಆದೇಶ ಸಂಖ್ಯೆ: ಎಫ್‌ಡಿ 06 ಎಸ್ಆರ್‌ಪಿ 2018, ದಿನಾಂಕ: 19.04.2018.

3) ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರ ಪತ್ರ ಸಂಖ್ಯೆ: ಕಾಶಿಇ/39/ಸುತ್ತೋಲೆ/

2018-19/ಸೇವಿ, ದಿನಾಂಕ: 29.08.2018.

ಪ್ರಸ್ತಾವನೆ:

2018ರ 6ನೇ ಪರಿಷ್ಕøತ ವೇತನ ಶ್ರೇಣಿಗಳನ್ನು ಮೇಲೆ ಓದಲಾದ (1) ಮತ್ತು (2)ರ ಸರ್ಕಾರದ ಆದೇಶಗಳಲ್ಲಿ ಸರ್ಕಾರಿ ನೌಕರರಿಗೆ ಮಂಜೂರು ಮಾಡಲಾಗಿದ್ದು, (2)ರಲ್ಲಿ ಓದಲಾದ ಸರ್ಕಾರದ ಆದೇಶದ ಕಂಡಿಕೆ: 12 ಮತ್ತು 12.01 ರಲ್ಲಿ ಈ ಕೆಳಕಂಡಂತೆ ನಮೂದಿಸಲಾಗಿದೆ.

"12. ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ಮತ್ತು ವಿಶ್ವವಿದ್ಯಾನಿಲಯಗಳ

ಬೋಧಕೇತರ ಸಿಬ್ಬಂದಿಗಳಿಗೆ ಪರಿಷ್ಕøತ ವೇತನ ಶ್ರೇಣಿಗಳ ಸೌಲಭ್ಯಗಳನ್ನು ವಿಸ್ತರಿಸುವ ಬಗ್ಗೆ.

12.1 ಈ ಮೇಲಿನ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ

ಮತ್ತು ವಿಶ್ವವಿದ್ಯಾನಿಲಯಗಳ ಬೋಧಕೇತರ ಸಿಬ್ಬಂದಿಗಳಿಗೆ ವಿಸ್ತರಿಸಲಾಗಿದೆ. ಈ ಕುರಿತು ಆದೇಶಗಳನ್ನು

ಸಂಬಂಧಪಟ್ಟ ಆಡಳಿತ ಇಲಾಖೆಗಳು ಪ್ರತ್ಯೇಕವಾಗಿ ಹೊರಡಿಸುತ್ತವೆ".

ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ದಿನಾಂಕ: 29.08.2018ರ ಪತ್ರದಲ್ಲಿ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ ಇವರು ರಾಜ್ಯ ಸರ್ಕಾರದಿಂದ ವೇತನಾನುದಾನ ಪಡೆಯುವ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಖಾಸಗಿ ಅನುದಾನಿತ ಕಾನೂನು ಕಾಲೇಜುಗಳ ಸಿಬ್ಬಂದಿಗಳಿಗೆ 2018ರ ಪರಿಷ್ಕøತ ರಾಜ್ಯ ವೇತನ ಶ್ರೇಣಿಯನ್ನು ವಿಸ್ತರಿಸುವಂತೆ ಕೋರಿರುತ್ತಾರೆ.

ಪ್ರಸ್ತಾವನೆಯಲ್ಲಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ

ಸರ್ಕಾರಿ ಆದೇಶ ಸಂಖ್ಯೆ: ಲಾ 86 ಕೆಎಲ್ಎಂ 2018, ಬೆಂಗಳೂರು, ದಿನಾಂಕ: 05.02.2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ವೇತನಾನುದಾನ ಪಡೆಯುವ ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಖಾಸಗಿ ಅನುದಾನಿತ ಕಾನೂನು ಕಾಲೇಜುಗಳ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯ ವೇತನ ಶ್ರೇಣಿಯಲ್ಲಿರುವ ಸಿಬ್ಬಂದಿಗಳಿಗೆ ಸರ್ಕಾರದ ಆದೇಶ೨೫೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧ ಸಂಖ್ಯೆ: ಎಫ್‌ಡಿ 06 ಎಸ್ಆರ್‌ಪಿ 2018, ದಿನಾಂಕ: 19.04.2018ರಲ್ಲಿ ಹೊರಡಿಸಿರುವ ಕರ್ನಾಟಕ ನಾಗರಿಕ ಸೇವಾ (ಪರಿಷ್ಕøತ ವೇತನ) ನಿಯಮಗಳು, 2018 ಹಾಗೂ ಸಂಬಂಧಿತ ಸರ್ಕಾರದ ಆದೇಶಗಳನ್ನು ವಿಸ್ತರಿಸಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.

PR-97

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-100

ಕೆ. ಸಾವಿತ್ರಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ

ಕಾನೂನು ಇಲಾಖೆ (ಮಾನವ ಹಕ್ಕುಗಳು)

ಶಿಕ್ಷಣ ಸಚಿವಾಲಯ

ವಿಷಯ: ವಿಕಲಚೇತನ ಮಕ್ಕಳ ಶಿಕ್ಷಣ ಹಾಗೂ ಇತರೆ ವಿಷಯಗಳನ್ನು ನೋಡಿಕೊಳ್ಳಲು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆಯಲ್ಲಿನ ಉಪನಿರ್ದೇಶಕರುಗಳ ಕಛೇರಿಗಳಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವ ಬಗ್ಗೆ.

ಓದಲಾಗಿದೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಇವರ ಏಕ ಕಡತ

ಪ್ರಸ್ತಾವನೆ :-

ಮೇಲೆ ಓದಲಾದ ವಿಕಲಚೇತನರ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಕಲಂ-31ರನ್ವಯ 06 ರಿಂದ 18ರ ವಯೋಮಾನದ ಎಲ್ಲಾ ವಿಕಲಚೇತನ ಮಕ್ಕಳಿಗೆ, ಅವರ ಆಯ್ಕೆ ಆಧರಿಸಿ ಹತ್ತಿರದ ಶಾಲೆಗಳಲ್ಲಿ ಅಥವಾ ವಿಶೇಷ ಶಾಲೆಗಳಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸಬೇಕಾಗಿದ್ದು, ಪ್ರಕರಣ-16ರ ಅನುಸಾರ ಸರ್ಕಾರ ಹಾಗೂ ಸ್ಥಳೀಯ ಪ್ರಾಧಿಕಾರಿಗಳು ತಮ್ಮಿಂದ ಅನುದಾನ ಪಡೆಯುತ್ತಿರುವ ಅಥವಾ ಮಾನ್ಯತೆ ಪಡೆದ ಎಲ್ಲಾ ಶಿಕ್ಷಣ ಸಂಸ್ಥೆಗಳು ವಿಕಲಚೇತನ ಮಕ್ಕಳಿಗೆ ಸಮನ್ವಯ ಶಿಕ್ಷಣವನ್ನು ಒದಗಿಸುವಂತೆ ಪ್ರಯತ್ನಿಸಬೇಕಾಗಿರುತ್ತದೆ. ವಿಕಲಚೇತನ ಮಕ್ಕಳಿಗೆ ಯಾವುದೇ ಭೇದ ಭಾವ ಮಾಡದೇ ಶಿಕ್ಷಣ, ಕ್ರೀಡೆ ಹಾಗೂ ಮನರಂಜನೆ ಚಟುವಟಿಕೆಗಳಲ್ಲಿ ಇತರ ಮಕ್ಕಳ ಜೊತೆ ಸಮಾನ ಅವಕಾಶ ಒದಗಿಸುವುದು. ವೈಯಕ್ತಿಕ ಅವಶ್ಯಕತೆಗನುಗುಣವಾಗಿ ಅಗತ್ಯವಿರುವ ತಂಗುವಿಕೆ/ವಸತಿ ವ್ಯವಸ್ಥೆ ಕಲ್ಪಿಸುವುದು/ಕಟ್ಟಡಗಳನ್ನು ವಿಕಲಚೇತನರ ಸುಗಮ ಪ್ರವೇಶಕ್ಕೆ ಅನುಕೂಲವಾಗುವಂತೆ ನಿರ್ಮಿಸುವುದು / ಮಾರ್ಪಡಿಸುವುದು, ಸಾರಿಗೆ ವ್ಯವಸ್ಥೆ, ಅವರುಗಳ ಅವಶ್ಯಕತೆಗನುಗುಣವಾಗಿ ಸಂಜ್ಞಾ ಭಾಷೆಯಂತಹ ಸಂವಹನ ಹಾಗೂ ಬ್ರೈಲ್‌ನಂತಹ ವ್ಯವಸ್ಥೆಗಳನ್ನು ಕಲ್ಪಿಸುವುದರೊಂದಿಗೆ ವಿಕಲಚೇತನ ಮಕ್ಕಳೂ ಕೂಡ ಇತರರಂತೆ ವಿದ್ಯಾಭ್ಯಾಸವನ್ನು ಸುಗಮವಾಗಿ ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗಿರುತ್ತದೆಂದು ಹಾಗೂ ವಿಕಲಚೇತನ ವ್ಯಕ್ತಿಗಳ ಹಕ್ಕುಗಳ ನಿಯಮಗಳು-2017ರ ನಿಯಮ-7ರ ಅನುಸಾರ ವಿಕಲಚೇತನ ಮಕ್ಕಳಿಗೆ ಶಾಲಾ ಪ್ರವೇಶಾತಿ ಹಾಗೂ ಶಾಲೆಗಳಲ್ಲಿ ಅವರಿಗೆ ಒದಗಿಸಬೇಕಾದ ಸೌಲಭ್ಯಗಳು ಸೇರಿದಂತೆ ವಿಕಲಚೇತನ ಮಕ್ಕಳ ಉಸ್ತುವಾರಿಗಾಗಿ ಎಲ್ಲಾ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಕಛೇರಿಗಳಲ್ಲಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕಾಗಿರುತ್ತದೆ.

ವಿಲಕಚೇತನ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ-2016ರ ಕಲಂ-31 ಮತ್ತು 16 ಉಧೃತ ಭಾಗ ಈ ಕೆಳಕಂಡಂತಿದೆ.

1) Notwithstanding anything contained in the Rights of Children to Free and Compulsory Education Act, 2009, every child with benchmark disability between the age of six to eighteen years shall have the right to free to free Education in a neighbourhood school, or in special, of his choice.

2) The appropriate Government and local authorities shall ensure that every child with benchmark disability has access to free Education in an appropriate environment till he attains the age of eighteen years.

The appropriate Government and the local authorities shall endeavour that all Educational institutions funded of recognized by them proved inclusive Education to the children with disabilities and towards that end shall

1) Admit them without discrimination and provide Education and opportunities for sports and recreation activities equally with others:

2) Make building, campus and various facilities accessible:

3) Provide reasonable accommodation according to the individual's requirements:

4) Provide necessary support individualised or otherwise in environment that maximize academic and social development consistent with the goal of full inclusion:

5) ensure that the Education to persons who are blind or deaf of both is imparted in the most appropriate languages and modes and means of communication:

6) detect specific learning disabilities in children at the earliest and take suitable pedagogical and other measures to overcome them:

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೫೧

7) Monitor participation, progress in terms attainment leves and completion of Education in respect of every student with disability:

8) provide transportation facilities to the children with disabilities and also the attendant of the children with disabilities having high support needs.

RPWD Act-2016 ಆಧರಿಸಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯ, ಭಾರತ ಸರ್ಕಾರವು ರೂಪಿಸಿರುವ ನಿಯಮಾವಳಿಯ ಕಲಂ-07ರ ಉಧೃತ ಭಾಗ ಈ ಕೆಳಕಂಡಂತಿರುತ್ತದೆ.

There shall be a nodal officer in the District Education Officer to deal with all matters relating to admission of children with disabilities and the facilities to be provided to them in schools in accordance with the provisions of sections 16 and 31 of the Act:

ವಿಕಲಚೇತನ ಮಕ್ಕಳ ಶಿಕ್ಷಣ ಹಾಗೂ ಇತರೆ ವಿಷಯಗಳನ್ನು ನೋಡಿಕೊಳ್ಳಲು ಒಬ್ಬ ನೋಡಲ್ ಅಧಿಕಾರಿಯನ್ನು ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಪ್ರತಿಯೊಂದು ಉಪನಿರ್ದೇಶಕರುಗಳ ಕಛೇರಿಗಳಲ್ಲಿ ಉಪಯೋಜನಾ ಸಮನ್ವಯಾಧಿಕಾರಿ (ಡಿವೈಪಿಸಿ) ಹಾಗೂ ಎಸ್.ಎಸ್.ಎ ಇವರನ್ನು ಒಬ್ಬ ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಳ್ಳಲು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಇಡಿ 227 ಎಸ್ಓಹೆಚ್ 2018, ಬೆಂಗಳೂರು, ದಿನಾಂಕ: 30ನೇ ಜನವರಿ 2019

ಈ ಮೇಲಿನ ಅಂಶಗಳ ಹಿನ್ನಲೆಯಲ್ಲಿ ವಿಕಲಚೇತನರ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಕಲಂ-31ರನ್ವಯ ಹಾಗೂ Rights of person with disabilities (RPWD) Act-2016ರಲ್ಲಿ ಸಬಲೀಕರಣ ಮಂತ್ರಾಲಯ, ಭಾರತ ಸರ್ಕಾರವು ರೂಪಿಸಿರುವ ನಿಯಮಾವಳಿಯ ಕಲಂ-07ರಂತೆ ವಿಕಲಚೇತನ ಮಕ್ಕಳ ಶಿಕ್ಷಣ ಹಾಗೂ ಇತರೆ ವಿಷಯಗಳನ್ನು ನೋಡಿಕೊಳ್ಳಲು ಪ್ರಾಥಮಿಕ ಮತ್ತು ಪ್ರೌಡಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಉಪನಿರ್ದೇಶಕರುಗಳ ಕಛೇರಿಗಳಲ್ಲಿ ಉಪಯೋಜನಾ ಸಮನ್ವಯಾಧಿಕಾರಿ ಡಿವೈಪಿಸಿ / ಎಸ್.ಎಸ್.ಎ ಸರ್ವ ಶಿಕ್ಷಣ ಅಭಿಯಾನ ಇವರುಗಳನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಕ ಮಾಡಿಕೊಳ್ಳಲು ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ.

PR-98

SC-100

ವಿ.ಟಿ.ರಾಜ್ಯಶ್ರೀ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ. [ಪ್ರೌಡಶಿಕ್ಷಣ]

ಶಿಕ್ಷಣ ಸಚಿವಾಲಯ

ತಿದ್ದುಪಡಿ ಅಧಿಸೂಚನೆ

ಸಂಖ್ಯೆ: ಇಡಿ 35 ರಾಯುಸೇ 2016, ಬೆಂಗಳೂರು, ದಿನಾಂಕ:31/01/2019

ಸರ್ಕಾರದ ಆದೇಶ ಸಂಖ್ಯೆ: ಇಡಿ 40 ರಾಯುಸೇ 2014, ದಿನಾಂಕ: 02.09.2015ರ ಅಧಿಸೂಚನೆಯ ಅನುಸೂಚಿ-1ರಲ್ಲಿನ ರಾಜ್ಯ ಮಟ್ಟದ ಸ್ಥಳೀಯ ವೃಂದ ಭಾಗದಲ್ಲಿನ ಕೋಷ್ಠಕದ ಬದಲಾಗಿ ಈ ಕೆಳಕಂಡ ಕೋಷ್ಠಕದಂತೆ ತಿದ್ದಿ ಓದಿಕೊಳ್ಳತಕ್ಕದ್ದು.

ಕ್ರ.ಸಂ ಹ ುದ್ದೆ ವ ೕತನ ಶ್ರೇಣಿ ೆ (`.ಗಳಲ್ಲಿ) ರಾಜ್ಯ ಮಟ್ಟದ ಕಛೇರಿಗಳಲ್ಲಿ ವ ುಂಜೂರಾದ ವ ೃಂದ ಬಲ ನೇರ ನೇಮಕಾತಿ ವ ುುಂಬಡ್ತಿ ನಿಯೋಜನೆ ರಾಜ್ಯ ಮಟ್ಟದ ಸ್ಥಳೀಯ ವೃಂದದಲ್ಲಿ ಹ ೖದ್ರಾಬಾದ್ ಕರ್ನಾಟಕ ಪ್ರದೇಶದವರಿಗಾಗಿ ೆ ಗುರುತಿಸಲಾದ ಶೇ.08 ರಷ್ಟು ಹುದ್ದೆಗಳು
ನೇರ ನೇಮಕಾತಿ ವ ುುಂಬಡ್ತಿ ನಿಯೋಜನೆ ಒಟ್ಟು
1 2 3 4 5 6 7 8 9 10 11
1 ಆಡಳಿತಾಧಿಕಾರಿ 28100-50100 01 - - 01 - - - -
2 ಲ ಕ್ಕಾಧಿಕಾರಿ ೆ 28100-50100 01 - 01 - - - - -
3 ಪ ತ್ರಾಂಕಿತ ಸ ಹಾಯಕರು 21600-40050 03 - ಶ ೕ.100 ೆ ವ ುುಂಬಡ್ತಿ 03 - - 01 - 01
4 ಲ ೆ ಕ್ಕ ಅಧೀಕ್ಷಕರು 20000-36300 01 - 01 - - - -
5 ಅಧೀಕ್ಷಕರು 20000-36300 12 12 - - 01 - 01
6 ಪ ಥ ್ರ ವ ು ದರ್ಜೆ ಸ ಹಾಯಕರು 14550-26700 33 50% 50% - 02 01 03
17 16
7 ದಿ ್ವತೀಯ ದರ್ಜೆ ಸ ಹಾಯಕರು 11600-21000 45 67% 33% - 03 01 - 04
30 15
8 ಶೀಘ್ರಲಿಪಿಗಾರರು 14550-26700 02 - 100% - - 01 01
- 02
9 ಬ ರಳಚ್ಚುಗಾರರು ೆ 11600-21000 02 100% - - 01 - - 01
02 -
10 ಚಾಲಕರು 11600-21000 28 - 100% - - 03 - 03
- 28
11 ಜವಾನರು 9600-14500 19 100% - - 02 - - 02
19 -
12 ಲಸ್ಕರ್ 9600-14500 39 100% - - 04 - - 04
39
13 ಚೌಕಿದಾರ್ 9600-14500 11 100% - - 01 - - 01
11
14 ಸ್ವೀಪರ್ 9600-14500 02 100% - - 01 - - 01
02 -
15 ಬ ೂೕಟ್ ೆ ಕೀಪರ್ 9600-14500 01 100% - - - - -
01 -
16 ಎ.ಎಂ.ಐ 20000-36300 02 100% - - 01 - - 01
02 -
17 ಎಸ್.ಎಂ.ಐ 20000-36300 01 100% - - - - - -
01
ಒಟ್ಟು (ಬಿ+ಸಿ+ಡಿ) ಹ ುದ್ದೆಗಳು 203 124 78 01 15 8 23
೨೫೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧

ಹಾಗೆಯೇ ಸದರಿ ಅಧಿಸೂಚನೆಯ ಅನುಸೂಚಿ-3ರಲ್ಲಿನ ರಾಜ್ಯ ವ್ಯಾಪಿ ಸ್ಥಳೀಯ ವೃಂದ ಭಾಗದಲ್ಲಿನ ಕೋಷ್ಠಕದ ಬದಲಾಗಿ ಈ ಕೆಳಕಂಡ

ಕ್ರ.ಸಂ ವ ರ್ಗ/ಹುದ್ದೆ ಹ ುದ್ದೆಗಳ ವಿವರ ಒಟ್ಟಾರೆ ವ ೃಂದ ಬಲ 7+8 ಪ್ರಾದೇಶಿಕ ಸ್ಥಳೀಯ ವ ೃಂದದಲ್ಲಿ ಗುರುತಿಸಲಾದ ಹ ುದ್ದೆಗಳ ಸಂಖ್ಯೆ ರಾಜ್ಯ ಮಟ್ಟದ ಸ್ಥಳೀಯ ವ ೃಂದದಲ್ಲಿ ಗುರುತಿಸಲಾದ ಹ ುದ್ದೆಗಳ ಸಂಖ್ಯೆ ರಾಜ್ಯವ್ಯಾಪಿ ಸ್ಥಳೀಯ ವ ೃಂದ 5+6 ಉಳಿದ ಮೂಲ ವ ೃಂದ
1 2 3 4 5 6 7 8
1 'ಎ' ಆಡಳಿತಾಧಿಕಾರಿ 01 - - - 01
2 ಲ ಕ್ಕಾಧಿಕಾರಿ ೆ 01 - - - 01
3 'ಬಿ' ಪ ತ್ರಾಂಕಿತ ಸ ಹಾಯಕರು 07 - 01 01 06
4 'ಸಿ' ಲ ಕ್ಕಾಧೀಕ್ಷಕರು ೆ 01 - - - 01
5 ಅಧೀಕ್ಷಕರು 43 02 01 03 40
6 ಶೀಘ್ರಲಿಪಿಗಾರರು 02 - 01 01 01
7 ಪ ಥ ್ರ ವ ು ದರ್ಜೆ ಸ ಹಾಯಕರು 101 08 03 11 90
8 ದಿ ್ವತೀಯ ದರ್ಜೆ ಸ ಹಾಯಕರು 173 12 04 16 157
9 ಬ ರಳಚ್ಚುಗಾರರು ೆ 02 - 01 01 01
10 ಚಾಲಕ 99 08 03 11 88
11 ಎ.ಎಂ.ಐ 06 - 01 01 05
12 ಎಸ್.ಎಂ.ಐ 05 - - - 05
13 'ಡಿ' ಜವಾನರು 58 04 02 06 52
14 ಲಸ್ಕರ್ 174 07 04 11 163
15 ಚೌಕಿದಾರ 44 03 01 04 40
16 ಬೋಟ್ ಕೀಪರ್ 05 - - - 05
17 ಸ್ವೀಪರ್ 11 - 01 01 10
ಒಟ್ಟು 733 44 23 67 666
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೫೩

PR-99

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ.

SC-200

ಕೆ.ಶಿವಲಿಂಗಯ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಉನ್ನತ ಶಿಕ್ಷಣ ಇಲಾಖೆ.

(ಕಾಲೇಜು ಶಿಕ್ಷಣ ಮತ್ತು ಎನ್.ಸಿ.ಸಿ)

ಶಿಕ್ಷಣ ಸಚಿವಾಲಯ

ವಿಷಯ: 2011 ರ ಕರ್ನಾಟಕ ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸುಗಳ ನೌಕರರನ್ನು ವಿಲೀನಗೊಳಿಸುವ ಅಧಿನಿಯಮದ ಉಪಬಂಧಗಳಲ್ಲಿ ನಿಗಧಿಪಡಿಸಿರುವ ಅವಧಿಯನ್ನು ವಿಸ್ತರಿಸುವ ಬಗ್ಗೆ. ಓದಲಾಗಿದೆ: 1) ಅಧಿಸೂಚನೆ ಸಂಖ್ಯೆ:ಸಂವ್ಯಶಾಇ 22 ಶಾಸನ 2011. ದಿನಾಂಕ: 06-04-2011. 2) ಸರ್ಕಾರದ ಆದೇಶ ಸಂಖ್ಯೆ: ಇಡಿ 48 ಟಿವಿಇ 2012. ದಿನಾಂಕ: 27/08/2012. 3) ಸರ್ಕಾರದ ಆದೇಶ ಸಂಖ್ಯೆ: ಇಡಿ 161 ಟಿವಿಇ 2013. ದಿನಾಂಕ: 08/10/2013. 4) ಸರ್ಕಾರದ ಆದೇಶ ಸಂಖ್ಯೆ: ಇಡಿ 161 ಟಿವಿಇ 2013. ದಿನಾಂಕ: 25/06/2014. 5) ಸರ್ಕಾರದ ಆದೇಶ ಸಂಖ್ಯೆ: ಇಡಿ 48 ಟಿವಿಇ 2015. ದಿನಾಂಕ: 12/05/2015. 6) ಸರ್ಕಾರದ ಆದೇಶ ಸಂಖ್ಯೆ: ಇಡಿ 117 ಟಿವಿಇ 2015. ದಿನಾಂಕ: 15/10/2015. 7) ಸರ್ಕಾರದ ಆದೇಶ ಸಂಖ್ಯೆ: ಇಡಿ 117 ಟಿವಿಇ 2015. ದಿನಾಂಕ: 07/04/2016. 8) ಸರ್ಕಾರದ ಆದೇಶ ಸಂಖ್ಯೆ: ಇಡಿ 117 ಟಿವಿಇ 2015. ದಿನಾಂಕ: 28/09/2016. 9) ಸರ್ಕಾರದ ಆದೇಶ ಸಂಖ್ಯೆ: ಇಡಿ 30 ಟಿವಿಇ 2017. ದಿನಾಂಕ: 31/03/2017. 10) ಸರ್ಕಾರದ ಆದೇಶ ಸಂಖ್ಯೆ:ಇಡಿ 30 ಟಿವಿಇ 2017. ದಿನಾಂಕ: 04/10/2017. 11) ಸರ್ಕಾರದ ಆದೇಶ ಸಂಖ್ಯೆ:ಇಡಿ 16 ಟಿವಿಇ 2018. ದಿನಾಂಕ: 01/08/2018. 12) ನಿರ್ದೇಶಕರು, ವೃತ್ತಿ ಶಿಕ್ಷಣ ಇಲಾಖೆ, ಬೆಂಗಳೂರು ರವರ ಪತ್ರ ಸಂಖ್ಯೆ:ವೃಶಿನಿ/2018-19,

ದಿನಾಂಕ: 03.11.2018.

ಪ್ರಸ್ತಾವನೆ:

ಮೇಲೆ (1) ರಲ್ಲಿ ಓದಲಾದ ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯದಲ್ಲಿನ ಪದವಿಪೂರ್ವ ಶಿಕ್ಷಣದಲ್ಲಿರುವ ವೃತ್ತಿ ಆಧಾರಿತ ಕೋರ್ಸುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸುಗಳ ನೌಕರರನ್ನು ವಿಲೀನಗೊಳಿಸುವುದಕ್ಕೆ ಸಂಬಂಧಿಸಿದಂತೆ, ಉಪಬಂಧ ಕಲ್ಪಿಸಿ ಅಧಿನಿಯಮ ಹೊರಡಿಸಲಾಗಿದೆ. ಸದರಿ ಅಧಿನಿಯಮದ 4ನೇ ಪ್ರಕರಣದ (4)ನೇ ಉಪ ಪ್ರಕರಣದಲ್ಲಿ ಅಧಿನಿಯಮದ ಪ್ರಾರಂಭದ ದಿನಾಂಕದಿಂದ ಒಂದು ವರ್ಷದ ಒಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದ್ದು, ಸದರಿ ಅಧಿನಿಯಮದ ಅವಧಿಯು ದಿನಾಂಕ: 05-04-2012ಕ್ಕೆ ಅಂತ್ಯಗೊಂಡಿದ್ದು, ಮೇಲೆ (11)ರಲ್ಲಿ ಓದಲಾದ ಆದೇಶದಲ್ಲಿ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ದಿನಾಂಕ: 01/04/2018 ರಿಂದ ದಿನಾಂಕ:

30/09/2018ರವರೆಗೆ ಕಾಲಾವಧಿಯನ್ನು ವಿಸ್ತರಿಸಿ ಆದೇಶಿಸಲಾಗಿತ್ತು. ಮೇಲೆ (12)ರ ದಿನಾಂಕ: 03/11/2018ರ ನಿರ್ದೇಶಕರು, ವೃತ್ತಿ ಶಿಕ್ಷಣ ಇಲಾಖೆ, ಬೆಂಗಳೂರು ರವರ ಪತ್ರದಲ್ಲಿ ಸರ್ಕಾರದ ಆದೇಶ ಸಂಖ್ಯೆ: ಇಡಿ 16 ಟಿವಿಇ 2018, ದಿನಾಂಕ: 01/08/2018ರಲ್ಲಿ ಜೆ.ಓ.ಸಿ ಅರೆಕಾಲಿಕ ಸಿಬ್ಬಂದಿ ವಿಲೀನ೨೫೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧ ಪ್ರಕ್ರಿಯೆಯನ್ನು ಸಂಪೂರ್ಣಗೊಳಿಸಲು ದಿನಾಂಕ: 30.09.2018ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ವಿಲೀನಕ್ಕೆ ಬಾಕಿ ಉಳಿದಿರುವ 123 ಸಿಬ್ಬಂದಿಯ ವಿಲೀನ ಪ್ರಕ್ರಿಯೆ ಪೂರ್ಣವಾಗದ ಕಾರಣ ವಿಧೇಯಕದ ಅನುಷ್ಠಾನದ ಕಾಲಾವಧಿಯನ್ನು ವಿಸ್ತರಿಸುವಂತೆ ಕೋರಿರುತ್ತಾರೆ.

ಅದರಂತೆ ಪರಿಶೀಲಿಸಿದ್ದು, ಜೆ.ಓ.ಸಿ ಸಿಬ್ಬಂದಿಗಳ ವಿಲೀನ ಪ್ರಕ್ರಿಯೆಯು ಬಾಕಿ ಇರುವುದರಿಂದ ಸದರಿ ವಿಲೀನಗೊಳಿಸುವ ಅವಧಿಯನ್ನು ವಿಸ್ತರಿಸಲು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಇಡಿ 16 ಟಿವಿಇ 2018, ಬೆಂಗಳೂರು, ದಿನಾಂಕ: 25/02/2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, 2011 ರ ಕರ್ನಾಟಕ ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸುಗಳ ನೌಕರರನ್ನು ವಿಲೀನಗೊಳಿಸುವ ಅಧಿನಿಯಮದ ಉಪಬಂಧ 4(4)ರ ಪ್ರಕಾರ ಬಾಕಿ ಉಳಿದಿರುವ ಜೆ.ಓ.ಸಿ ಸಿಬ್ಬಂದಿಯನ್ನು ವಿಲೀನಗೊಳಿಸುವ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿರುವುದರಿಂದ, ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ದಿನಾಂಕ: 01-10-2018 ರಿಂದ 31-03-2019ರವರೆಗೆ ಕಾಲಾವಧಿಯನ್ನು ವಿಸ್ತರಿಸಿ ಆದೇಶಿಸಿದೆ.

PR-101

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-100

ಶೇಖರ

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ)

ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಇಲಾಖೆ (ಸಾಮಾನ್ಯ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ :- ಸಕಾಲ ಯೋಜನೆಯಡಿ ಹೊಸ ಸೇವೆಗಳನ್ನು ಸೇರಿಸುವ/ಈಗಾಗಲೇ ಸೇರ್ಪಡೆಯಾದ ಸೇವೆಗಳನ್ನು ತೆಗೆದು ಹಾಕುವ/ತಿದ್ದುಪಡಿ ತರುವ ಕುರಿತಂತೆ ನಿರ್ಣಯ ಕೈಗೊಳ್ಳಲು ಸಮಿತಿ ರಚಿಸುವ ಬಗ್ಗೆ.

ಓದಲಾಗಿದೆ:- 1) ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಆಸುಇ 28 ಇಕಾಅ 2012, ದಿ: 28.03.2012.

2) ಕಡತ ಸಂಖ್ಯೆ: ಸಿಆಸುಇ 119 ಇಕಾಅ 2012ರಲ್ಲಿನ ಸಚಿವ ಸಂಪುಟ ಪ್ರಕರಣ ಸಂಖ್ಯೆ:

ಸಿ/516/2012ರಲ್ಲಿನ ಅನುಮೋದನೆ ಹಾಗೂ ಖಂಡಿಕೆ ಸಂಖ್ಯೆ: 100.

ಪ್ರಸ್ತಾವನೆ:

ಮೇಲೆ (1) ರಲ್ಲಿ ಓದಲಾದ ಸರ್ಕಾರದ ಅಧಿಸೂಚನೆಯಲ್ಲಿ ಕರ್ನಾಟಕ ರಾಜ್ಯದ ವಿವಿಧ ಇಲಾಖೆಗಳ ಹಲವಾರು ನಾಗರಿಕ ಸೇವೆಗಳನ್ನು ರಾಜ್ಯದ ದಿ: 02.04.2012ರಿಂದ ರಾಜ್ಯಾದ್ಯಂತ ಅನುಷ್ಠಾನಗೊಳಿಸಲಾಗಿದೆ. ಅದರಂತೆ, ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು (ತಿದ್ದುಪಡಿ) ಅಧಿನಿಯಮ, 2014 ಜಾರಿಯಲ್ಲಿದೆ. ಈ ಅಧಿನಿಯಮದಡಿ ಕರ್ನಾಟಕ ಸಕಾಲ ಸೇವೆಗಳ ನಿಯಮಗಳು, 2012ನ್ನು ರಚಿಸಲಾಗಿದೆ. ಈ ಅಧಿನಿಯಮದ ಕಲಂ 4ರಡಿ ಅಧಿಸೂಚನೆಯ ಮೂಲಕ ಸೇವೆಗಳನ್ನು ಸೇರ್ಪಡೆ ಮಾಡಲು, ಅನುಸೂಚಿಯಲ್ಲಿನ ನಮೂದುಗಳನ್ನು ತಿದ್ದುಪಡಿ ಮಾಡಲು ಅಥವಾ ವ್ಯತ್ಯಾಸಗೊಳಿಸಲು ಅವಕಾಶ ಕಳಿಸಲಾಗಿದೆ.

ಮೇಲೆ (2) ರಲ್ಲಿ ಓದಲಾದ ಪ್ರಕರಣದಲ್ಲಿನ ಸಚಿವ ಸಂಪುಟದ ನಿರ್ಣಯದಲ್ಲಿ ಹೆಚ್ಚುವರಿ ಸೇವೆಗಳನ್ನು ಸೇರ್ಪಡೆ ಮಾಡುವ ಕುರಿತು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಚಿವ ಸಂಪುಟವು ಮಾನ್ಯ ಮುಖ್ಯ ಮಂತ್ರಿಗಳಿಗೆ ಅಧಿಕಾರ ನೀಡಿರುತ್ತದೆ ಹಾಗೂ ಕಡತದ ಖಂಡಿಕೆ 100 ರಲ್ಲಿ ಇದೇ ಅಧಿಕಾರವನ್ನು ಮಾನ್ಯ ಮುಖ್ಯ ಮಂತ್ರಿಗಳು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿ.ಆ.ಸು.ಇಲಾಖೆ (ಇ-ಆಡಳಿತ) ಹಾಗೂ ಮಿಷನ್ ನಿರ್ದೇಶಕರು, ಸಕಾಲ ಮಿಷನ್ ಇವರಿಗೆ ನೀಡಿರುತ್ತಾರೆ.

ತದನಂತರ ಸೇರ್ಪಡೆ ಮಾಡುವ/ ತೆಗೆದುಹಾಕುವ/ ಬದಲಾವಣೆ ತರುವ ಪ್ರಸ್ತಾವನೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಮಿಷನ್ ನಿರ್ದೇಶಕರು, `ಸಕಾಲ ಮಿಷನ್' ಇವರ ಅನುಮೋದನೆ ಮೇರೆಗೆ ಪರಿಗಣಿಸಲಾಗಿದೆ.

ಸಕಾಲ ಯೋಜನೆಯಡಿ ಸೇವೆಗಳನ್ನು ಸೇರ್ಪಡೆ ಮಾಡುವ/ ತೆಗೆದುಹಾಕುವ / ಬದಲಾವಣೆ ತರುವ ಪ್ರಸ್ತಾವನೆಗಳಿಗೆ ಸಂಬಂಧಪಟ್ಟ ಇಲಾಖಾ ಸಚಿವರ ಅನುಮೋದನೆಯನ್ನು ಪಡೆಯುವ ಪದ್ಧತಿಯು 2016 ರಿಂದ ಚಾಲ್ತಿಯಲ್ಲಿದೆ, ಆದರೆ, ಸಂಬಂಧಿತ ಸಚಿವರ ಅನುಮೋದನೆ ಪಡೆಯಬೇಕೆಂದು ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು (ತಿದ್ದುಪಡಿ) ಅಧಿನಿಯಮ, 2014 ಮತ್ತು ಕರ್ನಾಟಕ ಸಕಾಲ ಸೇವೆಗಳ ನಿಯಮಗಳು, 2012 ರಲ್ಲಿ ನಿಗದಿಪಡಿಸಲಾಗಿಲ್ಲ. ಮೇಲಿನ ಪ್ರಕ್ರಿಯೆಯು ಪ್ರಮುಖ ನೀತಿಗಳಲ್ಲಿ ಯಾವುದೇ ಬದಲಾವಣೆಯನ್ನು ಹೊಂದಿಲ್ಲದ ಕಾರಣ ಪ್ರಸ್ತಾವನೆಯನ್ನು ಸಂಬಂಧಿತ ಸಚಿವರಿಗೆ ಕಳುಹಿಸುವುದರಿಂದ ಸಚಿವರ ಅಮೂಲ್ಯವಾದ ಸಮಯ ವ್ಯರ್ಥವಾಗುತ್ತಿರುವುದನ್ನು ಗಮನಿಸಲಾಗಿದೆ.

ಈ ಅಂಶಗಳ ಆಧಾರ ಸಕಾಲ ಯೋಜನೆಯಡಿ ಹೊಸ ಸೇವೆಗಳನ್ನು ಸೇರಿಸುವ/ ಈಗಾಗಲೇ ಸೇರ್ಪಡೆಯಾದ ಸೇವೆಗಳನ್ನು ತೆಗೆದು ಹಾಕುವ/ತಿದ್ದುಪಡಿ ತರುವ ಕುರಿತಂತೆ ನಿರ್ಣಯ ಕೈಗೊಳ್ಳಲು ಸಮಿತಿ ರಚಿಸುವುದು ಅಗತ್ಯವಾಗಿದೆ. ಈ ಅಗತ್ಯತೆಯನ್ನು ಪರಿಗಣಿಸಿರುವ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 20 ನಾಸೇಖಾ 2019, ಬೆಂಗಳೂರು, ದಿನಾಂಕ: 06.03.2019.

ಮೇಲೆ ವಿವರಿಸಿದ ಅಂಶಗಳ ಹಿನ್ನೆಲೆಯಲ್ಲಿ, ಸಕಾಲ ಯೋಜನೆಯಡಿ ಹೊಸ ಸೇವೆಗಳನ್ನು ಸೇರಿಸುವ/ಈಗಾಗಲೇ ಸೇರ್ಪಡೆಯಾದ ಸೇವೆಗಳನ್ನು ತೆಗೆದು ಹಾಕುವ / ತಿದ್ದುಪಡಿ ತರುವ ಕುರಿತಂತೆ ನಿರ್ಣಯ ಕೈಗೊಳ್ಳಲು ಈ ಕೆಳಗಿನಂತೆ ಸಮಿತಿ ರಚಿಸಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೫೫
1 ಸ ರ್ಕಾರದ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರು
2 ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಆಸು ಇಲಾಖೆ (ಇ-ಆಡಳಿತ) ಮತ್ತು ಮಿಷನ್ ನಿರ್ದೇಶಕರು, ಸಕಾಲ ಮಿಷನ್ ಸ ದ ಸ ್ಯ ಕಾರ್ಯದರ್ಶಿಗಳು
3 ಸ ಂಬಂಧಿತ ಆಡಳಿತ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು / ಪ ದ ್ರ ಾನ ಕಾರ್ಯದರ್ಶಿಗಳು / ಕಾರ್ಯದರ್ಶಿಗಳು ಸ ದ ಸ ್ಯರು
4 ವ iಾನ್ಯ ಮುಖ್ಯ ಮಂತ್ರಿಯವರ ಪ್ರಧಾನ ಕಾರ್ಯದರ್ಶಿಗಳು ಸ ದ ಸ ್ಯರು

PR-108

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-250

ಕೆ. ಮಥಾಯಿ

ಆಡಳಿತಾಧಿಕಾರಿ,

ಸಕಾಲ ಮಿಷನ್,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ. (ಇ-ಆಡಳಿತ)

ಸಹಕಾರ ಸಚಿವಾಲಯ

ವಿಷಯ :- ವಿಶ್ವವಿದ್ಯಾಲಯ ವಿದ್ಯಾ ಸಂಸ್ಥೆ, ಹೊಸಮನೆ ಬಡಾವಣೆ, ಚಿಕ್ಕಮಗಳೂರು ಜಿಲ್ಲೆ

ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡುವ ಬಗ್ಗೆ.

ಓದಲಾಗಿದೆ:- 1) ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಪತ್ರ ಸಂಖ್ಯೆ:

ಅನಿ(ಬ&ಮಾ) ಸಂ.ಸಂ.-1/37/2018-19, ದಿನಾಂಕ:31.10.2018.

2) ಸರ್ಕಾರದ ನೋಟಿಸ್ ಸಂಖ್ಯೆ: ಸಇ 147 ಸಸಂನೋ 2018,

ದಿ:04.01.2019.

3) ಕಾರ್ಯದರ್ಶಿ, ವಿಶ್ವವಿದ್ಯಾಲಯ ವಿದ್ಯಾಸಂಸ್ಥೆ, ಚಿಕ್ಕಮಗಳೂರು, ಇವರ

ಲಿಖಿತ ಉತ್ತರ ದಿನಾಂಕ:08.02.2018.

ಪ್ರಸ್ತಾವನೆ:

ಮೇಲೆ (1) ರಲ್ಲಿ ಓದಲಾದ ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಪತ್ರದಲ್ಲಿ, ವಿಶ್ವವಿದ್ಯಾಲಯ ವಿದ್ಯಾ ಸಂಸ್ಥೆ, ಹೊಸಮನೆ ಬಡಾವಣೆ, ಚಿಕ್ಕಮಗಳೂರು ಜಿಲ್ಲೆ, ಈ ಸಂಘದ ವಿರುದ್ಧದ ದೂರಿನ ಹಿನ್ನೆಲ್ಲೆಯಲ್ಲಿ ಕರ್ನಾಟಕ ಸಂಘಗಳ ನೊಂದಣಿ ಕಾಯ್ದೆ, 1960ರ ಕಲಂ 25 ರಡಿ ತನಿಖೆ ನಡೆಸಿದ್ದು, ವಿಚಾರಣೆಯಲ್ಲಿ ಸರ್ಕಾರದ ನಿಯಮದಂತೆ ದಾಖಲಾತಿ ಶುಲ್ಕ ಪಡೆಯದೆ ಅಧಿಕ ಶುಲ್ಕ ಪಡೆದಿರುವ ಬಗ್ಗೆ, ಶಾಲೆಯಲ್ಲಿದ್ದ 2 ಬಸ್ಸ್‌ಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡಿರುವ ಬಗ್ಗೆ, ಶಾಲೆಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸದೆ ಫಲಿತಾಂಶ ಕುಂಟಿತವಾಗಿರುವ ಬಗ್ಗೆ ಹಾಗೂ ಶಾಲೆಯ ಶಿಕ್ಷಕ, ಸಿಬ್ಬಂದಿ ವರ್ಗದವರು ಹಾಗೂ ಆಡಳಿತಮಂಡಳಿ ನಡುವೆ ನಿರಂತರ ಭಿನ್ನಾಭಿಪ್ರಾಯವಿದ್ದು, ಈ ಆಡಳಿತಾತ್ಮಕ ಮತ್ತು ಶಾಸನಾತ್ಮಕ ನೂನ್ಯತೆಗಳು ಸಂಘದಲ್ಲಿ ಕಂಡುಬಂದಿರುವುದರಿಂದ, ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕಮಾಡಬೇಕೆಂದು ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ (2) ರಲ್ಲಿ ಓದಲಾದ ನೋಟಿಸಿನಲ್ಲಿ ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಶಿಫಾರಸ್ಸನ್ನು ಪರಿಗಣಿಸಿ ವಿಶ್ವವಿದ್ಯಾಲಯ ವಿದ್ಯಾ ಸಂಸ್ಥೆ, ಹೊಸಮನೆ ಬಡಾವಣೆ, ಚಿಕ್ಕಮಗಳೂರು ಜಿಲ್ಲೆ, ಈ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ ನೇಮಿಸಬಾರದೆಂಬ ಬಗ್ಗೆ, ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ ಸಂಘದ ಅಧ್ಯಕ್ಷರು/ಕಾರ್ಯದರ್ಶಿ ಇವರಿಗೆ ತಿಳಿಸಲಾಗಿತ್ತು.

ಮೇಲೆ ಕ್ರಮ ಸಂಖ್ಯೆ(3)ರಲ್ಲಿ ಓದಲಾದ ಕಾರ್ಯದರ್ಶಿ, ವಿಶ್ವವಿದ್ಯಾಲಯ ವಿದ್ಯಾ ಸಂಸ್ಥೆ, ಹೊಸಮನೆ ಬಡಾವಣೆ, ಚಿಕ್ಕಮಗಳೂರು ಜಿಲ್ಲೆ, ಇವರ ಲಿಖಿತ ಉತ್ತರದಲ್ಲಿ 2018-19 ನೇ ಸಾಲಿನಲ್ಲಿ ಕಟ್ಟಡದ ನಿರ್ಮಾಣ, ಶಾಲಾ ಅಭಿವೃದ್ಧಿ, ನೀರಿನ ಸೌಕರ್ಯ ಇತ್ಯಾದಿ ಅಭಿವೃದ್ಧಿ ಕಾರ್ಯಗಳಲ್ಲಿ ಪೋಷಕರು ಸ್ವಯಂಪ್ರೇರಿತವಾಗಿ ನೀಡಿದ್ದ ಕೊಡುಗೆಯನ್ನು ಪಡೆಯಲಾಗಿದ್ದು, ವರ್ಷಕ್ಕೆ 6,000 ಶುಲ್ಕ ನಿಗದಿಮಾಡಿರಲಿಲ್ಲವೆಂದು ಹಾಗೂ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಇತರೇ ಶಿಕ್ಷಕರು ಸಂಸ್ಥೆಗೆ ಕೆಟ್ಟ ಹೆಸರು ತರಲು ಪೋಷಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸಿದ್ದರಿಂದ ಸ್ವಯಂಪ್ರೇರಿತವಾಗಿ ನೀಡಿದ್ದ ಕೊಡುಗೆಯನ್ನು ಅವರವರಿಗೇ ಹಿಂತಿರುಗಿಸಲಾಗಿದ್ದು ಪ್ರಸಕ್ತ ಸಾಲಿನಲ್ಲಿ ಸಂಪೂರ್ಣವಾಗಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು, ಸಂಸ್ಥೆಯ ಎರಡೂ ಬಸ್‌ಗಳು ನಷ್ಟದಿಂದ ನಡೆಯುತ್ತಿದ್ದು ಒಂದು ಬಸ್ ಶಾಲಾ ಮುಖ್ಯ ಶಿಕ್ಷಕರ ಹೆಸರಿನಲ್ಲಿದ್ದು ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ಮುಖ್ಯೋಪಧ್ಯಾಯರೇ ಮಾರಾಟ ಮಾಡಿದ್ದು ಬಂದ ಹಣವನ್ನು ಸಂಸ್ಥೆಯ ಹೆಸರಿಗೆ ಜಮಾ ಮಾಡಲಾಗಿರುತ್ತದೆಂದು ಹಾಗೂ ಎರಡನೆಯ ಬಸ್ 15 ವರ್ಷ ಹಳೆಯದಾಗಿದ್ದು ವ್ಯಾಲಿಡಿಟಿ ಮತ್ತು ಎಫ್‌ಸಿಗಳ ವಾಯ್ದೆ ಮುಗಿದಿರುವುದರಿಂದ ಆಡಳಿತ ಮಂಡಳಿಯೇ ಮಾರಾಟ ಮಾಡಿದ್ದು, ದಿನಾಂಕ:30.09.2018 ರಂದು ನಡೆದ ಸರ್ವಸದಸ್ಯರ ಸಭೆಯು ಬಸ್ ಮಾರಾಟ ಮಾಡಿರುವುದನ್ನು ಪರಿಶೀಲಿಸಿ ಒಪ್ಪಿರುತ್ತದೆ ಎಂದು, ಶಾಲೆಯ ಅಭಿವೃದ್ಧಿಯ ಬಗ್ಗೆ ಸಂಘದಿಂದ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದರೂ ಶಿಕ್ಷಕರ ಅಸಹಾಕಾರದಿಂದ ಜಾರಿ ಮಾಡಲು ಸಾಧ್ಯವಾಗುತ್ತಿಲ್ಲವೆಂದು, ಈ ಶಾಲೆಯಲ್ಲಿ ಈಗ ಕಾರ್ಯನಿರ್ವಹಿಸುತ್ತಿರುವ 10 ಜನ ಶಿಕ್ಷಕರ ಪೈಕಿ 6 ಜನ ಶಿಕ್ಷಕರು ಬೇರೆ ಬೇರೆ ಕಡೆ ಮುಚ್ಚಲಾದ ಶಾಲೆಗಳಿಂದ, ಹೆಚ್ಚುವರಿಯಾಗಿ, ವರ್ಗಾವಣೆಯಾಗಿ ಬಂದವರಾಗಿದ್ದು, ಇವರ ಕಾರ್ಯನಿರ್ವಹಣೆಯ ವೈಖರಿಯಿಂದಲೇ ಹಿಂದಿನ ಶಾಲೆಗಳು ಮುಚ್ಚಿಹೋಗಿದ್ದು, ಉತ್ತಮವಾಗಿದ್ದ ಶಾಲಾ ಫಲಿತಾಂಶ ಕುಸಿಯುತ್ತಾ ಬಂದಿದ್ದು ಈಗ ಶೇ.41 ಕ್ಕೆ ಕುಗ್ಗಿರುತ್ತದೆ ಎಂದು, ಈ ಸಂಸ್ಥೆ ಪ್ರಾರಂಭವಾದಾಗಿನಿಂದ ಶಿಕ್ಷಕ ವರ್ಗ ಮತ್ತು ಆಡಳಿತ ಮಂಡಳಿ ಮಧ್ಯೆ ಯಾವುದೇ ವಿವಾದವಿರುವುದಿಲ್ಲ. ಇತ್ತೀಚೆಗೆ ಶಿಕ್ಷಕರುಗಳ ಅಸಹಾಕಾರದಿಂದ ಶಾಲೆಗೆ ತೊಂದರೆಯಾದರೂ ಶಿಕ್ಷಕರಿಗೆ ಇಲಾಖಾ ವಿಚಾರಣೆ ಮಾಡಿರುವುದಿಲ್ಲ ಮತ್ತು ವಾರ್ಷಿಕ ವೇತನ ಬಡ್ತಿ ನಿಲ್ಲಿಸಿರುವುದಿಲ್ಲ. ಅವರ ಕ್ಷೇಮಾಭಿವೃದ್ಧಿಯನ್ನು ಆಡಳಿತ ಮಂಡಳಿಯು ಗಮನಿಸಿಕೊಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಶಿಕ್ಷಕ ಮಂಡಳಿ ಮತ್ತು ಆಡಳಿತ ಮಂಡಳಿ ನಡುವೆ ಭಿನ್ನಾಭಿಪ್ರಾಯವಿದೆಯೆಂಬ ವರದಿಯು ಸತ್ಯಕ್ಕೆ ದೂರವಾಗಿದ್ದು, ಆಡಳಿತಾಧಿಕಾರಿಯನ್ನು ನೇಮಿಸಬಾರದೆಂದು ಕೋರಿರುತ್ತಾರೆ,೨೫೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧ ಮೇಲಿನ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿ ಆಡಳಿತ ಮಂಡಳಿಯವರು ವಿದ್ಯಾರ್ಥಿ/ ಪೋಷಕರಿಂದ ನಿಯಮಬಾಹಿರವಾಗಿ ಹಣ ಪಡೆದಿರುವುದು ಕಂಡುಬಂದಿರುತ್ತದೆ ಹಾಗೂ ಸಂಘದ ಆಡಳಿತಮಂಡಳಿಯವರು ವಿದ್ಯಾ ಸಂಸ್ಥೆಯನ್ನು ನಿಯಮಾನುಸಾರ ನಡೆಸದೆ ಇರುವುದು, ಶಿಕ್ಷಕರು ಮತ್ತು ಸಿಬ್ಬಂದಿಗಳು ಕರ್ತವ್ಯಲೋಪ ಎಸಗಿರುವುದು ಕಂಡುಬಂದ್ದಿದ್ದು, ಆಡಳಿತಮಂಡಳಿ ಮತ್ತು ಶಿಕ್ಷಕರ ನಡುವೆ ತೀವ್ರ ಭಿನ್ನಾಭಿಪ್ರಾಯ ಇರುವುದರಿಂದ ವಿದ್ಯಾ ಸಂಸ್ಥೆಯ ಹಾಗೂ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವುದು ಸೂಕ್ತವೆಂದು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಇ 147 ಸಸಂನೋ 2018, ಬೆಂಗಳೂರು, ದಿನಾಂಕ: 01.03.2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960ರ ಕಲಂ 27-ಎ ರನ್ವಯ ವಿಶ್ವವಿದ್ಯಾಲಯ ವಿದ್ಯಾ ಸಂಸ್ಥೆ, ಹೊಸಮನೆ ಬಡಾವಣೆ, ಚಿಕ್ಕಮಗಳೂರು ಜಿಲ್ಲೆ, ಈ ಸಂಘಕ್ಕೆ ಸಹಕಾರ ಸಂಘಗಳ ಉಪ ನಿಬಂಧಕರು, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು ಇವರನ್ನು ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಆರು (6) ತಿಂಗಳ ಅವಧಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಿದೆ.

ಆಡಳಿತಾಧಿಕಾರಿಗಳು ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ನಿಗದಿತ ಅವಧಿಯೊಳಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಸೂಚಿಸಲಾಗಿದೆ.

PR-109

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-20

ಬಿ.ಎಸ್.ಹರೀಶ್

ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ

ಸರ್ಕಾರದ ಜಂಟಿ ಕಾರ್ಯದರ್ಶಿ,

ಸಹಕಾರ ಇಲಾಖೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ :- ಕೊಪ್ಪಳ, ಚಾಮರಾಜನಗರ ಮತ್ತು ದಾವಣಗೆರೆ ಜಿಲ್ಲೆಗೆ ಮಂಜೂರಾಗಿರುವ

ಸಹಾಯಕ ಕೀಟಶಾಸ್ತ್ರಜ್ಞ ಹುದ್ದೆಗಳನ್ನು ಸ್ಥಳಾಂತರಿಸುವ ಬಗ್ಗೆ.

ಓದಲಾಗಿದೆ :- ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ರವರ

ಪತ್ರ ಸಂಖ್ಯೆ: ಹೆಚ್.ಎಸ್.ಪಿ.(1)/113/2018-19, ದಿನಾಂಕ: 16/02/2019.

ಪ್ರಸ್ತಾವನೆ :-

ಮೇಲೆ ಓದಲಾದ ಪತ್ರದಲ್ಲಿ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ರವರು ರಾಜ್ಯದಲ್ಲಿ ಸಾಂಕ್ರಾಮಿಕ ರೋಗಗಳ ಮೇಲ್ವಿಚಾರಣೆ ಹಾಗೂ ತಡೆಗಟ್ಟುವ ಜವಾಬ್ದಾರಿ ಕೀಟಶಾಸ್ತ್ರಜ್ಞರದ್ದಾಗಿದೆ. ಆದರೆ ಹೊಸದಾಗಿ ರಚನೆಯಾಗಿರುವ ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮತ್ತು ಸಾಗರ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರುವ ಮಂಗನ ಖಾಯಿಲೆ ತಡೆಗಟ್ಟಲು ಕಾರ್ಯನಿರ್ವಹಿಸುತ್ತಿರುವ ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಶಾಲೆ (ವಿಡಿಎಲ್), ಶಿವಮೊಗ್ಗ ಜಿಲ್ಲೆ, ಇಲ್ಲಿ ಸಹಾಯಕ ಕೀಟಶಾಸ್ತ್ರಜ್ಞರ ಹುದ್ದೆಗಳು ಮಂಜೂರಾಗಿರುವುದಿಲ್ಲ. ಹೀಗಾಗಿ ರಾಜ್ಯದ ಕೊಪ್ಪಳ, ಚಾಮರಾಜನಗರ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮಂಜೂರಾಗಿರುವ ಸಹಾಯಕ ಕೀಟಶಾಸ್ತ್ರಜ್ಞರ ಹುದ್ದೆಗಳ ಪೈಕಿ ತಲಾ ಒಂದು ಹುದ್ದೆಯನ್ನು ರಾಮನಗರ, ಚಿಕ್ಕಬಳ್ಳಾಪುರ ಮತ್ತು ಸಾಗರ ತಾಲ್ಲೂಕಿಗೆ ಸ್ಥಳಾಂತರ ಮಾಡಲು ಮಾನ್ಯ ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ನಿರ್ದೇಶಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೊಪ್ಪಳ, ಚಾಮರಾಜನಗರ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮಂಜೂರಾಗಿರುವ ತಲಾ 2 ಸಹಾಯಕ ಕೀಟಶಾಸ್ತ್ರಜ್ಞರ ಹುದ್ದೆಗಳ ಪೈಕಿ ತಲಾ ಒಂದು ಖಾಲಿ ಹುದ್ದೆಯನ್ನು ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿಗೆ ಹಾಗೂ ಶಿವಮೊಗ್ಗ ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಶಾಲೆ (ವಿಡಿಎಲ್) ಇಲ್ಲಿಗೆ ಅಗತ್ಯವಿರುವುದರಿಂದ ಲೆಕ್ಕಶೀರ್ಷಿಕೆ ಸಂಖ್ಯೆ:- 2210- 00-102-0-31 ರೊಂದಿಗೆ ಸ್ಥಳಾಂತರಿಸಲು ಅನುಮತಿಸುತ್ತಾ, ಸದರಿ ಹುದ್ದೆಗಳನ್ನು ಸ್ಥಳಾಂತರಿಸಿದಲ್ಲಿ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲವೆಂಬ ಅಭಿಪ್ರಾಯದೊಂದಿಗೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಬೆಂಗಳೂರು, ರವರ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ:-

ಸರ್ಕಾರದ ಆದೇಶ ಸಂಖ್ಯೆ: ಆಕುಕ 30 ಹೆಚ್ಎಸ್ಎಮ್2019, ಬೆಂಗಳೂರು, ದಿನಾಂಕ: 06/03/2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕೊಪ್ಪಳ, ಚಾಮರಾಜನಗರ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಮಂಜೂರಾಗಿರುವ ತಲಾ 2 ಸಹಾಯಕ ಕೀಟಶಾಸ್ತ್ರಜ್ಞರ ಹುದ್ದೆಗಳ ಪೈಕಿ ತಲಾ ಒಂದು ಖಾಲಿ ಹುದ್ದೆಯನ್ನು ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಛೇರಿಗೆ ಹಾಗೂ ಶಿವಮೊಗ್ಗ ಪರಿಮಾಣು ಕ್ರಿಮಿ ಪರಿಶೋಧನಾ ಪ್ರಯೋಗಶಾಲೆ (ವಿಡಿಎಲ್) ಇಲ್ಲಿಗೆ ಲೆಕ್ಕಶೀರ್ಷಿಕೆ:-

2210-00-102-0-31 ರೊಂದಿಗೆ ಸ್ಥಳಾಂತರಿಸಲು ಸರ್ಕಾರವು ಮಂಜೂರಾತಿ ನೀಡಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್‌ಡಿ 01 ಟಿಎಫ್‌ಪಿ 96, ದಿನಾಂಕ: 10/07/1996ರ ಕ್ರಮಸಂಖ್ಯೆ: 53ರಲ್ಲಿ ಆಡಳಿತ ಇಲಾಖೆಯ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಲಾಗಿದೆ.

PR-110

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಯ. ಶಿವಶಂಕರ್

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.(ಸೇವೆಗಳು)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೫೭

ನಗರಾಭಿವೃದ್ಧಿ ಸಚಿವಾಲಯ

ವಿಷಯ: ಕೆ.ಜಿ.ಎಫ್. ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಗೆ (ಪರಿಷ್ಕøತ-1) ಸರ್ಕಾರದ ಅಂತಿಮ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: ನಅಇ 217 ಬೆಂರೂಪ್ರಾ 2015, ದಿನಾಂಕ:07.01.2016.

2. ಆಯುಕ್ತರು, ಕೆ.ಜಿ.ಎಫ್, ನಗರಾಭಿವೃದ್ಧಿ ಪ್ರಾಧಿಕಾರ ಇವರ ಪತ್ರ ಸಂಖ್ಯೆ: ಕೆ.ಜಿ.ಎಫ್/

ನಅಪ್ರಾ/ಮಾಯೋ(ಪ-1)2031/ಅಅ/01/2016-17, ದಿನಾಂಕ: 12.09.2016 ಮತ್ತು 24.01.2017.

3. ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಇವರ ಪ್ರಸ್ತಾವನೆಗಳ ಸಂಖ್ಯೆ: DTCP-03- MPF-2016-17, ದಿನಾಂಕ: 29.09.2016 ಮತ್ತು 04.10.2017.

ಪ್ರಸ್ತಾವನೆ:

ಮೇಲೆ ಓದಲಾದ (1)ರ ಸರ್ಕಾರದ ಆದೇಶದಲ್ಲಿ ಕೆ.ಜಿ.ಎಫ್, ಪಟ್ಟಣ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ.

ಮೇಲೆ ಓದಲಾದ (2)ರ ಪತ್ರಗಳಲ್ಲಿ, ಆಯುಕ್ತರು, ಕೆ.ಜಿ.ಎಫ್, ನಗರಾಭಿವೃದ್ಧಿ ಪ್ರಾಧಿಕಾರ ಇವರು ಕೆ.ಜಿ.ಎಫ್. ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಮಹಾಯೋಜನೆ ಕುರಿತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1)ಮತ್ತು(2) ರನ್ವಯ ಕ್ರಮ ಜರುಗಿಸಿ, ಮಹಾಯೋಜನೆಯ ನಕ್ಷೆಗಳನ್ನು ಹಾಗೂ ವರದಿಯನ್ನು ತಯಾರಿಸಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಇವರ ಮುಖಾಂತರ ಸರ್ಕಾರದ ಅಂತಿಮ ಅನುಮೋದನೆಗೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ (3)ರಲ್ಲಿ, ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ,ಇವರು ಸಲ್ಲಿಸಿರುವ ಪ್ರಸ್ತಾವನೆಗಳಲ್ಲಿ, ಕೆ.ಜಿ.ಎಫ್.

ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯ ಜನಸಂಖ್ಯೆಯು 2011ರ ಜನಗಣತಿಯಂತೆ 2,43,600 ಇದ್ದು ಮುಂದಿನ ಯೋಜನಾ ಅವಧಿ 2031ರ ವೇಳೆಗೆ 3,70,000 ಆಗಬಹುದೆಂದು ಅಂದಾಜಿಸಿ ಮಹಾಯೋಜನೆ (ಪರಿಷ್ಕøತ-1) ಯನ್ನು ತಯಾರಿಸಲಾಗಿದೆ. ಕೆ.ಜಿ.ಎಫ್. ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು 5132.17 ಹೆಕ್ಟೇರ್ ಪ್ರದೇಶವನ್ನು ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ ಮಹಾಯೋಜನೆಯನ್ನು ರೂಪಿಸಲಾಗಿದೆ.

ಪಟ್ಟಣದ ಯೋಜಿತ ಬೆಳವಣಿಗೆಗಾಗಿ ಒಟ್ಟು 5132.17 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 2650.59 ಹೆಕ್ಟೇರ್ (ಶೇ.55.76), ವಾಣಿಜ್ಯಕ್ಕಾಗಿ 252.22 ಹೆಕ್ಟೇರ್ (ಶೇ.5.31), ಕೈಗಾರಿಕೆಗಾಗಿ 448.41 ಹೆಕ್ಟೇರ್ (ಶೇ.9.43), ಸಾರ್ವಜನಿಕ/ಅರೆ ಸಾರ್ವಜನಿಕ ಉಪಯೋಗಕ್ಕೆ 220.92 ಹೆಕ್ಟೇರ್ (ಶೇ.4.65), ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 514.33 ಹೆಕ್ಟೇರ್ (ಶೇ.10.82), ಸಾರ್ವಜನಿಕ ಉಪಯುಕ್ತತೆಗಾಗಿ 36.17 ಹೆಕ್ಟೇರ್ (ಶೇ.0.76) ಹಾಗೂ ಸಾರಿಗೆ/ಸಂಪರ್ಕ ವಲಯಕ್ಕೆ 630.63 ಹೆಕ್ಟೇರ್ (ಶೇ.13.27) ಪ್ರದೇಶವನ್ನು ನಿಗದಿಪಡಿಸಲಾಗಿದೆ. ಸದರಿ ನಗರೀಕರಣ ಪ್ರದೇಶದಲ್ಲಿ 378.90 ಹೆಕ್ಟೇರ್ ಪ್ರದೇಶವು ಜಲಾವೃತ್ತವಾಗಿದ್ದು, ಸದರಿ ಪ್ರದೇಶವನ್ನು ಭೂ ವಿಶ್ಲೇಷಣೆಗೆ ಪರಿಗಣಿಸಿರುವುದಿಲ್ಲ. ಮಹಾಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆ (ಪರಿಷ್ಕøತ-1)ಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(3)ರನ್ವಯ ಅಂತಿಮ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 248 ಬೆಂರೂಪ್ರಾ 2016, ಬೆಂಗಳೂರು, ದಿನಾಂಕ: 02.03.2018.

ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೋಲಾರ ಜಿಲ್ಲೆ, ಕೆ.ಜಿ.ಎಫ್. ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆ (ಪರಿಷ್ಕøತ-1) 2031ಕ್ಕೆ ಈ ಕೆಳಕಂಡ ಷರತ್ತಿಗೊಳಪಟ್ಟು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(3)ರನ್ವಯ ಸರ್ಕಾರದ ಅಂತಿಮ ಅನುಮೋದನೆ ನೀಡಲಾಗಿದೆ. ಮಹಾಯೋಜನೆ (ಪರಿಷ್ಕøತ-1) 2031ಕ್ಕೆ ಅಂತಿಮ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.

ಷರತ್ತು:

ಈ ಆದೇಶದ ದಿನಾಂಕದಿಂದ ಎರಡು ವರ್ಷಗಳವರೆಗೆ ಪ್ರಾಧಿಕಾರವು ಯಾವುದೇ ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತಿಲ್ಲ.

PR-111

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-250

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

೨೫೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧

ನಗರಾಭಿವೃದ್ಧಿ ಸಚಿವಾಲಯ

ವಿಷಯ: ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಗೆ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ: 1. ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 123 ಬೆಂರೂಪ್ರಾ 2011, ದಿನಾಂಕ: 12.09.2011.

2. ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ ಯೋಜನಾ ಪ್ರಾಧಿಕಾರ, ಹೊಳಲ್ಕೆರೆ ಇವರ ಪತ್ರಗಳ ಸಂಖ್ಯೆ:

a) ಕ್ರಮಾಂಕ ಮ.ಯೋ/ಸಿ.ಆರ್-1/2016-17. b) ಮ.ಯೋ.ನ.ವ/ಸಿಆರ್-1/2016-17, ದಿನಾಂಕ: 25.05.2017. c) ಪ.ಪಂ.ಹೊ:ಕಂ.ಶಾ:ಸಿಆರ್:01/2017-18, ದಿನಾಂಕ: 26.03.2018. d) ಮ.ಯೋ.ನ.ವ/ಸಿಆರ್-1/2018-19, ದಿನಾಂಕ: 15.09.2018.

3. ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು, ಇವರ ಪ್ರಸ್ತಾವನೆಗಳ ಸಂಖ್ಯೆ: DTCP-13-MPP-2016-17, ದಿನಾಂಕ: 10.08.2017 ಮತ್ತು 13.11.2018.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರದ ಅಧಿಸೂಚನೆಯಲ್ಲಿ, ಹೊಳಲ್ಕೆರೆ ಪಟ್ಟಣಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯನ್ನು ವಿಸ್ತರಿಸಿ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪತ್ರಗಳಲ್ಲಿ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ ಯೋಜನಾ ಪ್ರಾಧಿಕಾರ, ಹೊಳಲ್ಕೆರೆ ಇವರು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 9(1)ರನ್ವಯ ಹೊಳಲ್ಕೆರೆ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ (ತಾತ್ಕಾಲಿಕ) ಯನ್ನು ಸಿದ್ದಪಡಿಸಿ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಇವರ ಪ್ರಸ್ತಾವನೆಗಳಲ್ಲಿ, ಹೊಳಲ್ಕೆರೆ ಪಟ್ಟಣದ ಜನಸಂಖ್ಯೆಯು 2031ರಲ್ಲಿ 22,000 ಗಳಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಿ ಮಹಾಯೋಜನೆಯನ್ನು ತಯಾರಿಸಲಾಗಿದೆ. ಹೊಳಲ್ಕೆರೆ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು 2640.10 ಹೆಕ್ಟೇರ್ ಪ್ರದೇಶದ ಪೈಕಿ 510.12 ಹೆಕ್ಟೇರ್ ಪ್ರದೇಶವನ್ನು ನಗರ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ, ಮಹಾಯೋಜನೆಯನ್ನು ರೂಪಿಸಲಾಗಿದೆ. ನಗರದ ಮುಂದಿನ ಯೋಜಿತ ಬೆಳವಣಿಗೆಗೆ ಪ್ರಸ್ತಾಪಿಸಿರುವ 510.12 ಹೆಕ್ಟೇರ್ ಪ್ರದೇಶದಲ್ಲಿ, ವಸತಿಗಾಗಿ 310.83 ಹೆಕ್ಟೇರ್ (ಶೇ.63.51), ವಾಣಿಜ್ಯಕ್ಕಾಗಿ 19.90 ಹೆಕ್ಟೇರ್ (ಶೇ.4.06), ಕೈಗಾರಿಕೆಗಾಗಿ 3.17 ಹೆಕ್ಟೇರ್ (ಶೇ.0.65), ಸಾರ್ವಜನಿಕ/ಅರೆ ಸಾರ್ವಜನಿಕ ಉಪಯೋಗಕ್ಕೆ 29.90 ಹೆಕ್ಟೇರ್ (ಶೇ.6.11), ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 37.98 ಹೆಕ್ಟೇರ್ (ಶೇ.7.76), ಸಾರ್ವಜನಿಕ ಉಪಯುಕ್ತತೆಗಾಗಿ 1.61 ಹೆಕ್ಟೇರ್ (ಶೇ.0.33) ಹಾಗೂ ಸಾರಿಗೆ/ಸಂಪರ್ಕ ವಲಯಕ್ಕೆ 86.04 ಹೆಕ್ಟೇರ್ (ಶೇ.17.58) ಪ್ರದೇಶವನ್ನು ಕಾಯ್ದಿರಿಸಿದ್ದು, ನಗರೀಕರಣ ಪ್ರದೇಶದಲ್ಲಿ ಜಲಾವೃತ್ತ ಪ್ರದೇಶ 20.69 ಹೆಕ್ಟೇರ್ ಪ್ರದೇಶವು ನೀರಿನಿಂದ ಆವೃತ್ತವಾಗಿದ್ದು, ಇದನ್ನು ಭೂ ವಿಶ್ಲೇಷಣೆಯಲ್ಲಿ ಪರಿಗಣಿಸಿರುವುದಿಲ್ಲ.

ಮಹಾಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1)ರನ್ವಯ ತಾತ್ಕಾಲಿಕ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 206 ಬೆಂರೂಪ್ರ್ರಾ 2017, ಬೆಂಗಳೂರು, ದಿನಾಂಕ: 26.02.2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಚಿತ್ರದುರ್ಗ ಜಿಲ್ಲೆ, ಹೊಳಲ್ಕೆರೆ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1)ರನ್ವಯ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ. ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.

PR-112

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-250

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 189 ಬೆಂರೂಪ್ರಾ 2018 (ಭಾಗ-9), ಬೆಂಗಳೂರು, ದಿನಾಂಕ: 27.02.2019.

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ: 4-ಸಿ(3)(i) ಮತ್ತು (iv) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಕೆಳಕಂಡವರನ್ನು ಮಾಲೂರು ಯೋಜನಾ ಪ್ರಾಧಿಕಾರದ ಅಧ್ಯಕ್ಷರು / ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ

ಕ್ರಮ ಸಂಖ್ಯೆ ಹ ಸ ೆ ರು ಮತ್ತು ವಿಳಾಸ ಅಧ್ಯಕ್ಷರು /ಸದಸ್ಯರು
1 ಶಿ ೕ ಸಿ.ಪಿ.ವೆಂಕಟೇಶ್ ಬಿನ್ ಸಿ. ಪಾಪಯ್ಯ, ರೈಲ್ವೆ ಫೀಡರ್ ರಸ್ತೆ, ಮಾಲೂರು ್ರ ಟೌನ್, ಕೋಲಾರ ಜಿಲ್ಲೆ. ಅಧ್ಯಕ್ಷರು
2 ಶಿ ೕ ಶಬ್ಬೀರ್ಉಲ್ಲಾ ಎಂ.ಎಂ. ಬಿನ್ ಲೇಟ್ ಎಂ.ಎಂ. ಅಮಾನುಲ್ಲಾ, ಕಾವೇರಿ ್ರ ಪ ುಟ್‌ವೇರ್ಸ್, ಬಸ್ ನಿಲ್ದಾಣ ಹತ್ತಿರ, ಮಾಲೂರು ಟೌನ್, ಕೋಲಾರ ಜಿಲ್ಲೆ. ಸ ದ ಸ ್ಯರು
3 ಶಿ ೕ ಆರ್. ಮಂಜುನಾಥರೆಡ್ಡಿ ಬಿನ್ ರಾಮಸ್ವಾಮಿರೆಡ್ಡಿ, ದೊಡ್ಡ ಕಡತೂರು ್ರ ಗ್ರಾಮ, ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆ. ಸ ದ ಸ ್ಯರು
4 ಶಿ ೕ ್ರ ನಾರಾಯಣಸ್ವಾಮಿ ಬಿನ್ ವ ುುನಿಯಪ್ಪ, ವ ುೖಲಾಂಡಹಳ್ಳಿ ೆ ಗ್ರಾಮ, ವ iಾಲೂರು ತಾಲ್ಲೂಕು, ಕೋಲಾರ ಜಿಲ್ಲೆ. ಸ ದ ಸ ್ಯರು
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೫೯

PR-113

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ಶಿಕ್ಷಣ ಸಚಿವಾಲಯ

ವಿಷಯ :- 2019-20ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಪ್ರವೇಶಾತಿಗೆ ಸಂಬಂಧಿಸಿದಂತೆ ಶುಲ್ಕಗಳನ್ನು ಹಾಗೂ ಸೀಟು ಹಂಚಿಕೆ ಪ್ರಮಾಣವನ್ನು ನಿಗದಿಪಡಿಸುವ ಕುರಿತು.

ಓದಲಾಗಿದೆ :-

1. ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) (ತಿದ್ದುಪಡಿ) ಅಧಿನಿಯಮ, 2015, (2015 ರ ಕರ್ನಾಟಕ ಅಧಿನಿಯಮ ಸಂಖ್ಯೆ 39)

2. ಕರ್ನಾಟಕ ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಸಂಘಟನೆಗಳಾದ KUPECA & KRLMPCA ಗಳೊಂದಿಗೆ ದಿನಾಂಕ: 02/03/2019 ರಂದು ಮಾಡಿಕೊಂಡಿರುವ ಸಮ್ಮತಾಭಿಪ್ರಾಯದ ಒಡಂಬಡಿಕೆ.

ಪ್ರಸ್ತಾವನೆ:-

ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ಕರ್ನಾಟಕ ವೃತ್ತಿ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) (ತಿದ್ದುಪಡಿ) ಅಧಿನಿಯಮ, 2015 (Act No.39 of 2015) ರಲ್ಲಿನ ಪ್ರಕರಣ 4(ಎ) ಮತ್ತು 4(ಬಿ) ರಲ್ಲಿ ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗಧಿಯ ಸಂಬಂಧವಾಗಿ ಸರ್ಕಾರವು, ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ / ಪ್ರತಿನಿಧಿಗಳೊಂದಿಗೆ ಸಮ್ಮತಾಭಿಪ್ರಾಯದ ಒಪ್ಪಂದಕ್ಕೆ / ಒಡಂಬಡಿಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರಂತೆ, ವೃತ್ತಿಪರ ಶಿಕ್ಷಣಕ್ಕೆ ಸಂಬಂಧಿಸಿದಂತೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗಧಿಯ ಸಂಬಂಧವಾಗಿ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ 2019-20 ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸೀಟು ಹಂಚಿಕೆ ಪ್ರಮಾಣ ಮತ್ತು ಶುಲ್ಕ ನಿಗಧಿಯ ಬಗ್ಗೆ ದಿನಾಂಕ: 02-03-2019ರಂದು ಮಾನ್ಯ ಉನ್ನತ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬೋಧನಾ ಶುಲ್ಕ ನಿಗದಿಯ ಬಗ್ಗೆ ಮತ್ತು ಸೀಟು ಹಂಚಿಕೆ ಪ್ರಮಾಣ, ಖಾಸಗಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು, ಇದರ ಮಾರ್ಗೋಪಾಯಗಳು ಇತ್ಯಾದಿಗಳ ಬಗ್ಗೆ ವಿಸ್ತøತವಾಗಿ ಚರ್ಚಿಸಿ, ಸರ್ಕಾರದ ವತಿಯಿಂದ ಕರ್ನಾಟಕ ಸರ್ಕಾರ ಮತ್ತು ಖಾಸಗಿ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಒಕ್ಕೂಟ / ಪ್ರತಿನಿಧಿಗಳಾದ KUPECA and KRLMPCA ಪದಾಧಿಕಾರಿಗಳೊಂದಿಗೆ ಸಮ್ಮತಾಭಿಪ್ರಾಯದ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗಿದೆ.

KUPECA ದೊಂದಿಗೆ ಮಾಡಿಕೊಂಡಿರುವ ಸಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ಎಐಸಿಟಿಇ, ನವದೆಹಲಿ ಇವರಿಂದ ಅನುಮೋದಿತ ಪ್ರವೇಶಾತಿಯಲ್ಲಿ ಶೇ. 45 ರಷ್ಟು ಪ್ರಮಾಣದ ಸೀಟುಗಳನ್ನು ಕುಪೆಕಾ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದು, ಈ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರವೇಶಾತಿ ಮಾಡಬೇಕು. ಶೇ. 30 ರಷ್ಟು ಸೀಟುಗಳನ್ನು ಕಾಮೆಡ್-ಕೆ ಮೂಲಕ ಪ್ರವೇಶಾತಿ ಮಾಡಬೇಕು, ಶೇ. 15 ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಂದ/ ಅನಿವಾಸಿ ಭಾರತೀಯ ಪ್ರಾಯೋಜಕತ್ವದಿಂದ (NRI/NRI Sponsored) ಮತ್ತು ಶೇ. 10 ರಷ್ಟು ಸೀಟುಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮೂಲಕ ಪ್ರವೇಶಾತಿ ಮಾಡಬೇಕು.

ಅದೇ ರೀತಿ, KRLMPCA ಪದಾಧಿಕಾರಿಗಳೊಂದಿಗೆ ಆಗಿರುವ ಸಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ಎಐಸಿಟಿಇ, ನವದೆಹಲಿ ಇವರಿಂದ ಅನುಮೋದಿತ ಪ್ರವೇಶಾತಿಯಲ್ಲಿ ಶೇ. 40 ರಷ್ಟು ಪ್ರಮಾಣದ ಸೀಟುಗಳನ್ನು KRLMPCA ಸರ್ಕಾರಕ್ಕೆ ಬಿಟ್ಟುಕೊಡಲಾಗಿದ್ದು, ಈ ಸೀಟುಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರವೇಶಾತಿ ಮಾಡಬೇಕು. ಶೇ. 30 ರಷ್ಟು ಸೀಟುಗಳನ್ನು KRLMPCA ವತಿಯಿಂದ ಪ್ರವೇಶಾತಿ ಮಾಡಬೇಕು. ಶೇ. 20 ರಷ್ಟು ಸೀಟುಗಳನ್ನು ಅನಿವಾಸಿ ಭಾರತೀಯರಿಂದ/ಅನಿವಾಸಿ ಭಾರತೀಯ ಪ್ರಾಯೋಜಕತ್ವದಿಂದ (NRI/NRI Sponsored) ಮತ್ತು ಶೇ. 10 ರಷ್ಟು ಸೀಟುಗಳನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಮೂಲಕ ಪ್ರವೇಶಾತಿ ಮಾಡಬೇಕು.

೨೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧

KUPECA ಮತ್ತು KRLMPCA ವತಿಯಿಂದ ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಡಲಾಗುವ ಸೀಟುಗಳಿಗೆ ವಾಸ್ತವವಾಗಿ KUPECA ಮತ್ತು KRLMPCA ಗೆ ಸೇರಿದ ಕಾಲೇಜುಗಳು ನಿಗಧಿಪಡಿಸುವ ಬೋಧನಾ ಶುಲ್ಕದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಹಾಗೂ ಇತರೆಯವರಿಗೆ ಈ ಹಿಂದೆ ಸ್ಕಾಲರ್‌ಶಿಪ್, ಫ್ರೀಶಿಪ್ ಕೊಡುಗೆಗಳನ್ನು ನೀಡುವ ಮೂಲಕ KUPECA ಮತ್ತು KRLMPCA ರಿಯಾಯಿತಿಯನ್ನು ವಿಸ್ತರಿಸಿದ್ದು, ಈ ಸಾಲಿನಲ್ಲೂ ಸಹ ಈ ಕೊಡುಗೆಯನ್ನು ವಿಸ್ತರಿಸುವಂತೆ ಹಾಗೂ ಇದನ್ನು ಎನ್ ಆರ್ ಐ ಮತ್ತು ಇತರೆಯವರಿಂದ ಸ್ವೀಕರಿಸಲಾಗುವ ಹೆಚ್ಚುವರಿ ಶುಲ್ಕದಿಂದ ಭರಿಸಬಹುದಾಗಿದೆ ಎಂಬ ರಾಜ್ಯ ಸರ್ಕಾರದ ಮನವಿಯನ್ನು KUPECA ಮತ್ತು KRLMPCA ಗಳು ಪರಿಗಣಿಸಿರುತ್ತವೆ. ಹಾಗೆಯೇ, ಉತ್ಕøಷ್ಟ ಮಟ್ಟದ ಶಿಕ್ಷಣವನ್ನು ನೀಡುವ ಅಗತ್ಯತೆ ಮತ್ತು ಶಿಕ್ಷಣದಲ್ಲಿ ಉತ್ತಮ ಗುಣಮಟ್ಟವನ್ನು ತಲುಪಲು ರಿಯಾಯಿತಿಗಳಿಂದಾಗುವ ಲಾಭವು ಪ್ರವೇಶಾತಿಯಲ್ಲಿ ಪಾತ್ರವಹಿಸುವುದರಿಂದ, ಸಮ್ಮತಾಭಿಪ್ರಾಯದ ಒಡಂಬಡಿಕೆಯನ್ನು ಆಧರಿಸಿ, 2019-20ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಭರಿಸಬೇಕಾದ ಬೋಧನಾ ಶುಲ್ಕ, ವಿಶ್ವವಿದ್ಯಾಲಯದ ಶುಲ್ಕ ಹಾಗೂ ಸೀಟು ಹಂಚಿಕೆ ಪ್ರಮಾಣವನ್ನು ನಿಗಧಿಪಡಿಸಲು ತೀರ್ಮಾನಿಸಿ, ಸರ್ಕಾರವು, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಇಡಿ 211 ಟಿಇಸಿ 2018. ಬೆಂಗಳೂರು, ದಿನಾಂಕ: 8ನೇ ಮಾರ್ಚ್, 2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಸರ್ಕಾರವು, 2019-20ನೇ ಶೈಕ್ಷಣಿಕ ಸಾಲಿಗೆ ಕರ್ನಾಟಕ ರಾಜ್ಯದಲ್ಲಿರುವ ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ಪಾವತಿಸಬೇಕಾದ ಬೋಧನಾ ಶುಲ್ಕ, ವಿಶ್ವವಿದ್ಯಾಲಯ ಶುಲ್ಕ ಮತ್ತು ಸೀಟು ಹಂಚಿಕೆ ಪ್ರಮಾಣವನ್ನು ಅನುಬಂಧದಲ್ಲಿರುವಂತೆ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳಿಗೆ ಒಳಪಟ್ಟು ನಿಗಧಿಪಡಿಸಿ, ಆದೇಶಿಸಲಾಗಿದೆ.

2019-20ನೇ ಸಾಲಿನಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು 04 ವರ್ಷದ ಪದವಿ ಕೋರ್ಸು ಪೂರ್ಣಗೊಳ್ಳುವವರೆಗೂ ವಾರ್ಷಿಕವಾಗಿ ಅನುಬಂಧಲ್ಲಿರುವಂತೆ ಶುಲ್ಕಗಳನ್ನು ಮಾತ್ರ ಪಾವತಿಸತಕ್ಕದ್ದು.

ಷರತ್ತು ಮತ್ತು ನಿಬಂಧನೆಗಳು:

1. ಎಲ್ಲಾ ಸರ್ಕಾರಿ / ವಿಶ್ವವಿದ್ಯಾಲಯದ ಘಟಕ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ (ಅಲ್ಪಸಂಖ್ಯಾತ ಹಾಗೂ ಅಲ್ಪಸಂಖ್ಯಾತವಲ್ಲದ) ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಎ.ಐ.ಸಿ.ಟಿ.ಇ.ಯು ಅನುಮೋದಿಸಿರುವ / ನಿಗಧಿಪಡಿಸಿರುವ ಪ್ರತಿ ಕೋರ್ಸುಗಳ ಒಟ್ಟು ಪ್ರವೇಶ ಮಿತಿಯ ಮೇಲೆ ಶೇ.5 ರಷ್ಟು ಸಂಖ್ಯಾಧಿಕ ಸೀಟುಗಳನ್ನು (Supernumerary Seats (SNQ)) ಯಾವುದೇ ಬೋಧನಾ ಶುಲ್ಕವಿಲ್ಲದೆ (tuition fee waiver schemes) ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ (ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯವು ರೂ.6.00 ಲಕ್ಷದ ಮಿತಿಯೊಳಗಿರಬೇಕು) ಮೆರಿಟ್ ಆಧಾರದ ಮೇಲೆ ಸೀಟುಗಳನ್ನು ಈ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ, ಹಂಚಿಕೆ ಮಾಡುವುದು.

(ಅ) ರಾಜ್ಯ ಸರ್ಕಾರವು ನಿಗದಿಪಡಿಸಿರುವ ಬೋಧನಾ ಶುಲ್ಕವನ್ನು ಸಂಖ್ಯಾಧಿಕ ಸೀಟುಗಳನ್ನು ಪಡೆದ ಫಲಾನುಭವಿಯು ಭರಿಸತಕ್ಕದ್ದಲ್ಲ. ಆದರೆ, ಈ ಅಭ್ಯರ್ಥಿಯು ಕಾಲಕಾಲಕ್ಕೆ ವಿಶ್ವವಿದ್ಯಾಲಯವು ನಿಗಧಿಪಡಿಸುವ ವಿಶ್ವವಿದ್ಯಾಲಯ ಶುಲ್ಕವನ್ನು ಮಾತ್ರ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಪಾವತಿಸತಕ್ಕದ್ದು.

(ಆ) ಇದು ಎಐಸಿಟಿಇ ಯೋಜನೆಯಾಗಿದ್ದು, ಈ ಸಂಖ್ಯಾಧಿಕ ಸೀಟುಗಳ ಹಂಚಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹ ಅಭ್ಯರ್ಥಿಗಳು ಪಡೆದ ರ್ಯಾಂಕ್ ಆಧಾರದ ಮೇಲೆ ಮಾತ್ರ ಭರ್ತಿ ಮಾಡತಕ್ಕದ್ದು.

(ಇ) ಸಂಖ್ಯಾಧಿಕ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಅಂತಹ ಸೀಟುಗಳನ್ನು ಆಡಳಿತ ಮಂಡಳಿ ಕೋಟಾ ಸೀಟುಗಳಾಗಿ ಮತ್ತು ಇತರೆ ಯಾವುದೇ ಕೋಟಾದ ಸೀಟುಗಳನ್ನಾಗಿ ಪರಿವರ್ತಿಸತಕ್ಕದ್ದಲ್ಲ ಹಾಗೂ ಈ ಪ್ರವೇಶಾತಿಗಳಿಗೆ 2ನೇ ವರ್ಷದ ಲ್ಯಾಟರಲ್ ಪ್ರವೇಶಾತಿಗೆ ಪರಿಗಣಿಸತಕ್ಕದ್ದಲ್ಲ.

(ಈ) ಸಂಖ್ಯಾಧಿಕ (SNQ) ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳಿಗೆ ಮತ್ತು ತಾಂತ್ರಿಕ ಶಿಕ್ಷಣ ನಿರ್ದೇಶಕರಿಗೆ ಪೂರ್ಣ ವಿವರಗಳೊಂದಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಲ್ಲಿಸತಕ್ಕದ್ದು.

(ಉ) ಸಂಖ್ಯಾಧಿಕ ಕೋಟಾದಡಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಯಾವುದೇ ಕಾರಣದಿಂದಲೂ ಶಿಕ್ಷಣ ಸಂಸ್ಥೆಗಳ ಹಾಗೂ ಕೋರ್ಸುಗಳ ಬದಲಾವಣೆಗೆ ಅವಕಾಶ ಇರತಕ್ಕದ್ದಲ್ಲ.

(ಊ) ಸಂಖ್ಯಾಧಿಕ ಕೋಟಾದಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳ ಅಂತರಜಾಲದಲ್ಲಿ ಪ್ರಕಟಿಸತಕ್ಕದ್ದು.

2. ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ವಾರ್ಷಿಕ `.15,000/- ಶುಲ್ಕ ಹಾಗೂ ವಿಶ್ವವಿದ್ಯಾಲಯ ಶುಲ್ಕವನ್ನು ಪಾವತಿಸತಕ್ಕದ್ದು.

3. ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ಅನುದಾನಿತ ಕೋರ್ಸುಗಳಲ್ಲಿ ಪ್ರವೇಶಾತಿ ಪಡೆಯುವ ವಿದ್ಯಾರ್ಥಿಗಳು ವಾರ್ಷಿಕ `.15,000/- ಶುಲ್ಕ ಹಾಗೂ ವಿಶ್ವವಿದ್ಯಾಲಯ ಶುಲ್ಕವನ್ನು ಮಾತ್ರ ಪಾವತಿಸತಕ್ಕದ್ದು.

4. ಖಾಸಗಿ ಅನುದಾನಿತ ಕಾಲೇಜುಗಳಲ್ಲಿನ ಅನುದಾನರಹಿತ ಕೋರ್ಸುಗಳಿಗೆ ಮತ್ತು ಅನುದಾನರಹಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಯು, ಒಟ್ಟು ವಾರ್ಷಿಕ ಶುಲ್ಕ `.58,806/- ಅಥವಾ `.65,340/- ಗಳನ್ನು ಮಾತ್ರ ಪಾವತಿಸತಕ್ಕದ್ದು. ಈ ಬಗ್ಗೆ ಸರ್ಕಾರದಿಂದ ಯಾವುದೇ ಸಹಾಯಧನವನ್ನು ನೀಡಲಾಗುವುದಿಲ್ಲ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೬೧

5. ಸಮ್ಮಾತಾಭಿಪ್ರಾಯದ ಒಡಂಬಡಿಕೆಯ ಪ್ರಕಾರ, ಆಡಳಿತ ಮಂಡಳಿ ಕೋಟಾದ ಪ್ರವೇಶಾತಿಗೆ ಸಂಬಂಧಿಸಿದಂತೆ ವೃತ್ತಿಪರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ವಾರ್ಷಿಕ `.1,43,748-00 ಗಳ ಬೋಧನಾ ಶುಲ್ಕ ಅಥವಾ `.2,01,960-00 ಗಳ ಮಿತಿಗೆ ಒಳಪಟ್ಟು ಬೋಧನಾ ಶುಲ್ಕವನ್ನು ನಿಗಧಿಪಡಿಸಬೇಕು. ಬೋಧನಾ ಶುಲ್ಕವನ್ನು `.2,01,960-00 ಗಳ ಗರಿಷ್ಟ ಮಿತಿಗೆ (Upper limit) ನ ಒಳಪಟ್ಟು ಮಾತ್ರ ಪಡೆಯತಕ್ಕದ್ದು. ಈ ಮಿತಿಯನ್ನು ಮೀರತಕ್ಕದ್ದಲ್ಲ ಮತ್ತು ತಾನು ಆಯ್ಕೆ ಮಾಡಿಕೊಂಡಿರುವ ಬೋಧನಾ ಶುಲ್ಕದ ವಿವರಗಳನ್ನು ಸೂಕ್ತವಾಗಿ ಪ್ರಚುರಪಡಿಸಬೇಕು.

6. ಇಂಜಿನಿಯರಿಂಗ್ ಕೋರ್ಸುಗಳಿಗೆ ಸಂಬಂಧಿಸಿದಂತೆ, ಆಡಳಿತ ಮಂಡಳಿಗಳು ವಿವಿಧ ಕೋರ್ಸುಗಳಿಗೆ / ವಿಭಾಗಗಳಿಗೆ ವಿವಿಧ ಬೋಧನಾ ಶುಲ್ಕವನ್ನು ನಿಗಧಿಪಡಿಸಬಹುದು. ಆದರೆ ಈ ಬೋಧನಾ ಶುಲ್ಕವು ಮೇಲೆ ತಿಳಿಸಿರುವ ಗರಿಷ್ಟ ಮಿತಿ (Upper limit) ಒಳಗೆ ಇರಬೇಕು.

7. ಯಾವುದೇ ಖಾಸಗಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯು, ಆಡಳಿತ ಮಂಡಳಿ ಕೋಟಾದ ಪ್ರವೇಶಾತಿಗೆ ವಾರ್ಷಿಕ `.1,43,748-00 ಗಳ ಬೋಧನಾ ಶುಲ್ಕವನ್ನು ಆಯ್ಕೆ ಮಾಡಿಕೊಂಡಲ್ಲಿ, ಆ ಸಂಸ್ಥೆಯಲ್ಲಿನ ಸರ್ಕಾರಿ ಪ್ರಾಯೋಜಿತ ವಿದ್ಯಾರ್ಥಿಗೆ ವಾರ್ಷಿಕ `.65,340-00 ಗಳು ಬೋಧನಾ ಶುಲ್ಕವಾಗಿರುತ್ತದೆ. ಅದೇ ರೀತಿ, ಆಡಳಿತ ಮಂಡಳಿ ಕೋಟದ ಪ್ರವೇಶಾತಿಗೆ ವಾರ್ಷಿಕ `.2,01,960-00 ಗಳ ಬೋಧನಾ ಶುಲ್ಕವನ್ನು ಆಯ್ಕೆ ಮಾಡಿಕೊಂಡಲ್ಲಿ, ಆ ಸಂಸ್ಥೆಯಲ್ಲಿನ ಸರ್ಕಾರಿ ಪ್ರಾಯೋಜಿತ ವಿದ್ಯಾರ್ಥಿಗೆ ವಾರ್ಷಿಕ `.58,806-00 ಗಳು ಬೋಧನಾ ಶುಲ್ಕವಾಗಿರುತ್ತದೆ.

8. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅಂತಿಮ ಸುತ್ತಿನ ಪ್ರವೇಶಾತಿ ಮತ್ತು ಪ್ರವೇಶಾತಿಗಾಗಿ ನಿಗಧಿಪಡಿಸಿದ ಅವಧಿಯ ನಂತರ ಖಾಲಿ ಬೀಳುವ ಸೀಟುಗಳನ್ನು ರಿಕನ್ಸಿಲೇಷನ್ ಮೂಲಕ ಆಯಾಯ ಶಿಕ್ಷಣ ಸಂಸ್ಥೆಗಳಿಗೆ ನೀಡತಕ್ಕದ್ದು. ಖಾಲಿ ಬೀಳುವ ಈ ಸೀಟುಗಳು ವ್ಯರ್ಥವಾಗುವುದನ್ನು ತಪ್ಪಿಸಲು ಈ ಸೀಟುಗಳನ್ನು ಅರ್ಹ ಇತರೆ ಅಭ್ಯರ್ಥಿಗಳಿಂದ ತುಂಬತಕ್ಕದ್ದು.

9. ಸಮ್ಮತಾಭಿಪ್ರಾಯದ ಒಡಂಬಡಿಕೆಯಂತೆ, ಅಲ್ಪಸಂಖ್ಯಾತವಲ್ಲದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗೆ ಒಟ್ಟು ಪ್ರವೇಶಾತಿಯಲ್ಲಿ ಎನ್ ಆರ್ ಐ ಮತ್ತು ಇತರೆ ಕೋಟಾದ ಪ್ರವೇಶಾತಿಗೆ ನಿಗಧಿಯಾಗಿರುವ ಶೇ. 25 (ಎನ್ ಆರ್ ಐ ಶೇ. 15 ಮತ್ತು ಆಡಳಿತ ಮಂಡಳಿ ಶೇ. 10) ರಷ್ಟು ಪ್ರಮಾಣವು ಯಾವುದೇ ಕಾರಣದಿಂದಲೂ ಮೀರತಕ್ಕದ್ದಲ್ಲ. ಅದೇ ರೀತಿ, ಅಲ್ಪಸಂಖ್ಯಾತ ಖಾಸಗಿ ಕಾಲೇಜುಗಳಿಗೆ ಇದೇ ಕೋಟಾದ ಪ್ರವೇಶಾತಿಗೆ ನಿಗಧಿಯಾಗಿರುವ ಶೇ. 30 (ಎನ್ ಆರ್ ಐ ಶೇ. 20 ಮತ್ತು ಆಡಳಿತ ಮಂಡಳಿ ಶೇ. 10) ರಷ್ಟು ಪ್ರಮಾಣವು ಯಾವುದೇ ಕಾರಣದಿಂದಲೂ ಮೀರತಕ್ಕದ್ದಲ್ಲ.

10. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಅಂತಿಮ ಸುತ್ತಿನ ಪ್ರವೇಶಾತಿಯ ನಂತರ ಯಾವುದೇ ಪರಸ್ಪರ ಸೀಟುಗಳ ವರ್ಗಾವಣೆಗೆ ಸರ್ಕಾರದಿಂದಾಗಲಿ / ನಿರ್ದೇಶಕರು, ತಾಂತ್ರಿಕ ಶಿಕ್ಷಣ ಇವರಿಂದಾಗಲಿ / ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದಾಗಲಿ / ಕಾಮೆಡ್-ಕೆ / ಕೆ.ಆರ್.ಎಲ್ ಎಂ.ಪಿ.ಸಿ.ಎ ಗಳಿಂದಾಗಲಿ ಅವಕಾಶ ಇರುವುದಿಲ್ಲ.

11. ಪ್ರವೇಶಾತಿಗಾಗಿ ನಿಗದಿಪಡಿಸಿದ ಅವಧಿಯೊಳಗಾಗಿ ಪ್ರವೇಶಾತಿ ಪಡೆಯಲು ವಿಫಲರಾದ ಅಭ್ಯರ್ಥಿಗಳ ಸೀಟುಗಳು ರದ್ದಾಗುವುದು ಮತ್ತು ಈ ಬಗ್ಗೆ ಶುಲ್ಕ ಮುಟ್ಟುಗೋಲು / ದಂಡ ವಿಧಿಸುವಿಕೆ ಇತ್ಯಾದಿಗಳ ಬಗ್ಗೆ ಇರುವ ನಿಯಮಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ / ಕಾಮೆಡ್-ಕೆ / ಕೆ.ಆರ್ ಎಲ್.ಎಂ.ಪಿ.ಸಿ.ಎ ಗಳು ಕಟ್ಟುನಿಟ್ಟಾಗಿ ಪಾಲಿಸುವುದು.

12. ಹೈದ್ರಾಬಾದ್-ಕರ್ನಾಟಕ ಪ್ರದೇಶದ ವಿದ್ಯಾರ್ಥಿಗಳ ಮೀಸಲಾತಿ ಬಗ್ಗೆ ಸರ್ಕಾರಿ ಆದೇಶಗಳಲ್ಲಿ ಇರುವ ಮಾರ್ಗಸೂಚಿಯನ್ನು ಪಾಲಿಸುವುದು.

13. ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ಕಾರಣಾಂತರಗಳಿಂದ ಒಂದು ವೇಳೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಲ್ಲಿ, ಸದರಿ ವಿದ್ಯಾರ್ಥಿಗಳು ಪ್ರವೇಶಾತಿ ಸಂದರ್ಭದಲ್ಲಿ ಸಂಸ್ಥೆಗೆ ಸಲ್ಲಿಸಲ್ಪಟ್ಟ ಮೂಲ ದಾಖಲೆಗಳನ್ನು ಮತ್ತು ಬೋಧನಾ ಶುಲ್ಕವನ್ನು ತಕ್ಷಣವೇ ಹಿಂದಿರುಗಿಸುವ ಬಗ್ಗೆ ಸಂಸ್ಥೆಗಳು/ಕಾಲೇಜುಗಳು ಕ್ರಮವಹಿಸುವುದು. ಈ ಬಗ್ಗೆ ಕಾಲಕಾಲಕ್ಕೆ ಎಐಸಿಟಿಇ, ನವದೆಹಲಿ ಇವರು ಹೊರಡಿಸಿರುವ ಮಾರ್ಗಸೂಚಿ, ನಿಯಮಗಳನ್ನು ಪಾಲಿಸುವುದು.

14. ಯಾವುದೇ ವೃತ್ತಿಪರ ಸಂಸ್ಥೆಗಳು ವೃತ್ತಿಪರ ಕೋರ್ಸುಗಳಿಗೆ ಕಡ್ಡಾಯವಾಗಿ ಎಐಸಿಟಿಇ, ನವದೆಹಲಿ ಯಿಂದ ಅನುಮೋದನೆಯನ್ನು ಪಡೆಯತಕ್ಕದ್ದು.

ಹಿಂದಿನ ವರ್ಷದಲ್ಲಿ ಸರ್ಕಾರದಿಂದ ಸಂಯೋಜನೆಗೆ ಒಳಪಟ್ಟಿದ್ದಲ್ಲಿ ಮಾತ್ರ ಪ್ರಸ್ತುತ ವರ್ಷದಲ್ಲಿ ಸೀಟು ಮ್ಯಾಟ್ರಿಕ್ಸ್‌ನ್ನು ಪ್ರಚುರ ಪಡಿಸಲಾಗುವುದು.

ಒಂದು ವೇಳೆ ಸಂಯೋಜನೆ ಆದೇಶ ಹೊಂದದಿದ್ದಲ್ಲಿ ಅಂತಹ ಸಂಸ್ಥೆಗಳ ಸೀಟು ಮ್ಯಾಟ್ರಿಕ್ಸ್‌ನ್ನು ಪ್ರಚುರ ಪಡಿಸಲಾಗುವುದಿಲ್ಲ.

15. ಆಡಳಿತ ಮಂಡಳಿ ಕೋಟಾದ ಸೀಟುಗಳನ್ನು ಸರ್ಕಾರಕ್ಕೆ ಒಂದು ವೇಳೆ ಆಡಳಿತ ಮಂಡಳಿಗಳು / ಸಂಸ್ಥೆಗಳು ಅಧ್ಯರ್ಪಿಸಲು ಇಚ್ಛಿಸಿದ್ದಲ್ಲಿ, ಜೂನ್ 30ರೊಳಗಾಗಿ ಕಡ್ಡಾಯವಾಗಿ ಅಧ್ಯರ್ಪಿಸುವುದು, ತದನಂತರದಲ್ಲಿ ಸ್ವೀಕೃತವಾಗುವ ಅಧ್ಯರ್ಪಿತ ಸೀಟುಗಳನ್ನು (Surrender Seats) ಪರಿಗಣಿಸುವುದಿಲ್ಲ.

16. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಹಂಚಿಕೆಗೊಂಡ ಅಭ್ಯರ್ಥಿಗಳನ್ನು ಯಾವುದೇ ಸಂಸ್ಥೆಗಳು ಆಯಾ ಸಂಸ್ಥೆಯಲ್ಲಿನ ಕೋರ್ಸುಗಳಲ್ಲಿ ಕಡಿಮೆ ಪ್ರವೇಶಾತಿ ಇರುವುದಾಗಿ ಪ್ರವೇಶಾತಿಯನ್ನು ನಿರಾಕರಿಸುತ್ತಿದ್ದು, ಅಭ್ಯರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪ್ರವೇಶಾತಿಯನ್ನು ನಿರಾಕರಿಸದಿರುವುದು ಹಾಗೂ ಕಡಿಮೆ ಪ್ರವೇಶಾತಿ ಇರುವ ಕೋರ್ಸುಗಳನ್ನು ಆಯಾ ಸಂಸ್ಥೆಗಳು ಏಪ್ರಿಲ್ 2019ರೊಳಗಾಗಿ ಮುಚ್ಚಲು ಕ್ರಮವಹಿಸುವುದು.

17. 2019-20ನೇ ಶೈಕ್ಷಣಿಕ ಸಾಲಿಗೆ ವೃತ್ತಿಪರ ಇಂಜಿನಿಯರಿಂಗ್ / ಆರ್ಕಿಟೆಕ್ಚರ್ ಕೋರ್ಸುಗಳಿಗೆ ಮೇಲ್ಕಂಡಂತೆ ಪ್ರವೇಶಾತಿ ಪ್ರಕ್ರಿಯೆ ಮತ್ತು ಶುಲ್ಕ ನಿಗಧಿಯು ಈ ಆದೇಶದನ್ವಯವೇ ಅನುಷ್ಟಾನದ ಕ್ರಮ ಜರುಗಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಮನೋರಮ ಡಿ.ಸಿ.

ಸರ್ಕಾರದ ಅಧೀನ ಕಾರ್ಯದರ್ಶಿ,

ಉನ್ನತ ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ).

೨೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧

ಅನುಬಂಧ

ಸರ್ಕಾರದ ಆದೇಶ ಸಂಖ್ಯೆ: ಇಡಿ 211 ಟಿಇಸಿ 2018, ಬೆಂಗಳೂರು, ದಿನಾಂಕ: 08ನೇ ಮಾರ್ಚ್, 2019.

ಸರ್ಕಾರಿ / ವಿಶ್ವವಿದ್ಯಾಲಯ / ಖಾಸಗಿ ಅನುದಾನಿತ / ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ / ಆರ್ಕಿಟೆಕ್ಚರ್ ಕಾಲೇಜುಗಳು

ಕ ೂೕರ್ಸಿನ ೆ ಹೆಸರು ಸರ್ಕಾರಿ ಕಾಲೇಜುಗಳು ವ ುತ್ತು ವಿಶ್ವ ವಿದ್ಯಾಲಯದ ಘ ಟಕ ಕಾಲೇಜುಗಳು (ಶೇ.100 ಸರ್ಕಾರಿ ಸೀಟುಗಳು) ಶ ುಲ್ಕ (ವಿ.ವಿ. ಶ ುಲ್ಕ ಹಾಗೂ ಇತರೆ ಶುಲ್ಕ ಸೇರಿ) ಖಾಸಗಿ ಅನುದಾನಿತ ಕಾಲೇಜುಗಳು ಶುಲ್ಕ (ವಿ.ವಿ. ಹಾಗೂ ಇತರೆ ಶುಲ್ಕ ಸೇರಿ) ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ / ಟೆಕ್ನಾಲಜಿ/ಆರ್ಕಿಟೆಕ್ಚರ್ ಕಾಲೇಜುಗಳಲ್ಲಿನ ಸೀಟುಗಳಿಗೆ ನಿಗಧಿಪಡಿಸಿದ ಶ ುಲ್ಕ (ವಿ.ವಿ. ಹಾಗೂ ಇತರೆ ಶುಲ್ಕ ಸೇರಿ) (ಅಲ್ಪಸಂಖ್ಯಾತವಲ್ಲದ ಸಂಸ್ಥೆಗಳು) ಖಾಸಗಿ ಅನುದಾನರಹಿತ ಇಂಜಿನಿಯರಿಂಗ್ / ಟೆಕ್ನಾಲಜಿ /ಆರ್ಕಿಟೆಕ್ಚರ್ ಕಾಲೇಜುಗಳಲ್ಲಿನ ಸೀಟುಗಳಿಗೆ ನಿಗಿದಿಪಡಿಸಿದ ಶ ುಲ್ಕ (ವಿಶ್ವವಿದ್ಯಾಲಯ ಶುಲ್ಕ ಹಾಗೂ ಇತರೆ ಶುಲ್ಕ) (ಅಲ್ಪಸಂಖ್ಯಾತ ಸಂಸ್ಥೆಗಳು)
ಶ ೕಕಡ 95 ೆ ರ ಷ್ಟು ಸರ್ಕಾರಿ ಸೀಟುಗಳು (ಕರ್ನಾಟಕ ಪ ರೀಕ್ಷೆ ಪ್ರಾಧಿಕಾರದ ವ ುೂಲಕ) ಶ ೕಕಡ 5 ೆ ರ ಷ್ಟು ಆಡಳಿತ ವ ುಂಡಳಿ ಸೀಟುಗಳು ಸರ್ಕಾರಿ ಕ ೂೕಟಾ ೆ Comed- K ಕೋಟಾ ಆಡಳಿತ ವ ುಂಡಳಿ ಕ ೂೕಟಾ ೆ ಸರ್ಕಾರಿ ಕ ೂೕಟಾ ೆ KRLMPCA ಕ ೂೕಟಾ ೆ ಆಡಳಿತ ವ ುಂಡಳಿ ಕ ೂೕಟಾ ೆ
ಶ ೕ.45% ೆ ಸೀಟುಗಳು ಶ ೕ.30% ೆ ಸೀಟುಗಳು ಶ ೕ.25% ೆ ಸೀಟುಗಳು (15+10) ಶ ೕ.40% ೆ ಸೀಟುಗಳು ಶ ೕ.30% ೆ ಸೀಟುಗಳು ಶ ೕ.30% ೆ ಸೀಟುಗಳು (20+10)
ಇಂಜಿನಿಯರಿಂಗ್ / ಆರ್ಕಿಟೆಕ್ಚರ್ `.19090-00 `.19090-00 ು್ಮತಾಭಿಪ್ರಾಯದ ಒಪ್ಪಂದದಲ್ಲಿ ಇರುವಂತೆ ವ ಸ (As per Consensual Agreement 2019-20) ಅಥವಾ 65,340-00 `. 58,806-00 ಮಿತಿಗೊಳಪಟ್ಟು `. 1,43,748-00 ಅಥವಾ 2,01,960-00 ಗಳ ಸಮ್ಮತಾಭಿಪ್ರಾಯದ ಒಪ್ಪಂದದಲ್ಲಿ ಇರುವಂತೆ (As per Consensual Agreement 2019-20) ಅಥವಾ 65,340-00 `. 58,806-00 ಮಿತಿಗೊಳಪಟ್ಟು `. 1,43,748-00 ಅಥವಾ 2,01,960-00 ಗಳ ಸಮ್ಮತಾಭಿಪ್ರಾಯದ ಒಪ್ಪಂದದಲ್ಲಿ ಇರುವಂತೆ (As per Consensual Agreement 2019-20)

• ಶೇ. 5 ರಷ್ಟು ಸಂಖ್ಯಾತಿರಿಕ್ತ ಸೀಟುಗಳಿಗೆ (supernumerary quota) ಪ್ರವೇಶಾತಿ ಪಡೆಯುವ ಅಭ್ಯರ್ಥಿಗಳಿಗೆ ಬೋಧನಾ ಶುಲ್ಕವನ್ನು ಪಾವತಿಸುವುದರಿಂದ ವಿನಾಯ್ತಿ ಇರುತ್ತದೆ.

PR-114

ಮನೋರಮ ಡಿ.ಸಿ.

SC-100

ಸರ್ಕಾರದ ಅಧೀನ ಕಾರ್ಯದರ್ಶಿ,

ಉನ್ನತ ಶಿಕ್ಷಣ ಇಲಾಖೆ (ತಾಂತ್ರಿಕ ಶಿಕ್ಷಣ).

ಕಂದಾಯ ಸಚಿವಾಲಯ

ವಿಷಯ: ಉಡುಪಿ ಜಿಲ್ಲೆ, ಉಡುಪಿ ತಾಲ್ಲೂಕು, ಕುತ್ಪಾಡಿ ಗ್ರಾಮದ ಸ.ನಂ.48/1 ರಲ್ಲಿ 2.70 ಎಕರೆ,

ಸ.ನಂ.56/3 ರಲ್ಲಿ 3.12 ಎಕರೆ, ಸ.ನಂ.56/4 ರಲ್ಲಿ 1.04 ಎಕರೆ, ಸ.ನಂ.56/5 ರಲ್ಲಿ 1.41

ಎಕರೆ, ಸ.ನಂ.57/3ಎ ರಲ್ಲಿ 2.30 ಎಕರೆ ಒಟ್ಟು 10.57 ಎಕರೆ ಜಮೀನನ್ನು ಶ್ರೀ ಧರ್ಮಸ್ಥಳ

ಮಂಜುನಾಥೇಶ್ವರ ಎಜುಕೇಷನ್ ಟ್ರಸ್ಟ್‌ಗೆ ಗುತ್ತಿಗೆ ಆಧಾರದಲ್ಲಿ ನೀಡಿರುವುದನ್ನು ಖಾಯಂ ಆಗಿ

ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ: (1) ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಟ್ರಸ್ಟ್ (ರಿ) ಇವರ

ದಿನಾಂಕ: 29.03.2007ರ ಪತ್ರ.

(2) ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರ ಪತ್ರ ಸಂಖ್ಯೆ:

ಆರ್‌ಸಿ: 61:ಎಲ್ಎನ್‌ಡಿ (1): 2017-18, ದಿನಾಂಕ: 12.02.2018.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೬೩

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮಸಂಖ್ಯೆ (1)ರ ಪತ್ರದಲ್ಲಿ ಕಾರ್ಯದರ್ಶಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆ, ಉಡುಪಿ ಇವರು ದಿನಾಂಕ:29.03.2007 ರಂದು ಸಲ್ಲಿಸಿರುವ ಮನವಿಯಲ್ಲಿ ಉಡುಪಿ ತಾಲ್ಲೂಕು, ಕುತ್ಪಾಡಿ ಗ್ರಾಮದ ವಿವಿಧ ಸ.ನಂ.ಗಳಲ್ಲಿ ಈಗಾಗಲೇ ಗುತ್ತಿಗೆ ಆಧಾರದ ಮೇಲೆ ನೀಡಲಾದ ಒಟ್ಟು 10.67 ಎಕರೆ ಜಮೀನನ್ನು ಖಾಯಂ ಆಗಿ ಮಂಜೂರು ಮಾಡುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಕ್ರಮಸಂಖ್ಯೆ (2)ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು ಇವರು ದಿನಾಂಕ:12.02.2018 ರ ಪತ್ರದಲ್ಲಿ ಉಡುಪಿ ಜಿಲ್ಲೆ, ಉಡುಪಿ ತಾಲ್ಲೂಕು, ಕುತ್ಪಾಡಿ ಗ್ರಾಮದ ಸ.ನಂ.48/1 ರಲ್ಲಿ 2.70 ಎಕರೆ, ಸ.ನಂ.56/3 ರಲ್ಲಿ 3.12 ಎಕರೆ, ಸ.ನಂ.56/4 ರಲ್ಲಿ 1.14 ಎಕರೆ, ಸ.ನಂ.56/5 ರಲ್ಲಿ 1.41 ಎಕರೆ ಮತ್ತು ಸ.ನಂ.57/3ಎ ರಲ್ಲಿ 2.30 ಎಕರೆ ಒಟ್ಟು 10.67 ಎಕರೆ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮ, 1969ರ ನಿಯಮ 21 ರಂತೆ ಜಮೀನಿನ ಒಟ್ಟು ಮೌಲ್ಯ `.10,35,86,000/- (ಹತ್ತು ಕೋಟಿ, ಮೂವತ್ತೈದು ಲಕ್ಷ, ಎಂಬತ್ತಾರು ಸಾವಿರ ರೂಪಾಯಿಗಳು ಮಾತ್ರ) ಹಾಗೂ 2007 ರಿಂದ 2017ರ ರವರೆಗೆ ಗೇಣಿ ಬಾಕಿ ಮೊತ್ತ `.48,22,966/- ಗಳನ್ನು ವಸೂಲಿ ಮಾಡಿ, 2007 ರಿಂದ 2017 ರವರೆಗಿನ ಗುತ್ತಿಗೆ ಅವಧಿಯನ್ನು ಸಕ್ರಮಗೊಳಿಸಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಟ್ರಸ್ಟ್ (ರಿ), ಉಜಿರೆ, ಇವರಿಗೆ ಖಾಯಂ ಮಂಜೂರು ಮಾಡಲು ಜಿಲ್ಲಾಧಿಕಾರಿಯವರು ಪ್ರಸ್ತಾವನೆ ಸಲ್ಲಿಸಿರುತ್ತಾರೆ ಎಂದು ಪ್ರಾದೇಶಿಕ ಆಯುಕ್ತರು ವರದಿ ಮಾಡಿರುತ್ತಾರೆ.

ಮುಂದುವರಿದು, ಆಕಾರ್‌ಬಂದ್ ದಾಖಲೆಯಂತೆ ಸ.ನಂ.56/4 ರಲ್ಲಿ 1.14 ಎಕರೆ ಇದ್ದು, ಆರ್‌ಟಿಸಿ ಯಂತೆ ಸ.ನಂ.56/4ಪಿ1 ರಲ್ಲಿ 1.04 ಎಕರೆ ಜಮೀನು ಸರ್ಕಾರದ ಹೆಸರಿನಲ್ಲಿರುತ್ತದೆ. ಉಳಿದ 0.10 ಎಕರೆ ಜಮೀನು ಶ್ರೀ ಕ್ರಿಸ್ತಿನ ಡಿ'ಸಿಲ್ವ ರವರ ಹೆಸರಿನಲ್ಲಿ ದರ್ಖಾಸ್ತು ಮೂಲಕ ಮಂಜೂರಾತಿಯಾಗಿ ಸ.ನಂ.56/4ಪಿ2 ರಲ್ಲಿ 0.10 ಎಕರೆ ಎಂದು ಪಹಣಿ ದಾಖಲಾಗಿರುತ್ತದೆ ಎಂದು ವರದಿ ಮಾಡಿರುತ್ತಾರೆ.

ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿದ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 25 ಎಲ್‌ಜಿಎ 2018, ಬೆಂಗಳೂರು, ದಿನಾಂಕ: 02.03.2019.

ಉಡುಪಿ ಜಿಲ್ಲೆ, ಉಡುಪಿ ತಾಲ್ಲೂಕು, ಕುತ್ಪಾಡಿ ಗ್ರಾಮದ ಸ.ನಂ.48/1 ರಲ್ಲಿ 2.70 ಎಕರೆ, ಸ.ನಂ.56/3 ರಲ್ಲಿ 3.12 ಎಕರೆ, ಸ.ನಂ.56/4 ರಲ್ಲಿ 1.04 ಎಕರೆ, ಸ.ನಂ.56/5 ರಲ್ಲಿ 1.41 ಎಕರೆ, ಸ.ನಂ.57/3ಎ ರಲ್ಲಿ 2.30 ಎಕರೆ ಒಟ್ಟು 10.57 ಎಕರೆ ಜಮೀನಿನ ಗುತ್ತಿಗೆ ಅವಧಿಯನ್ನು ದಿನಾಂಕ:04.05.2007 ರಿಂದ ಇಲ್ಲಿಯವರೆಗೆ ವಿಸ್ತರಿಸಲು ಹಾಗೂ 04.05.2007 ರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22ಎ(1)(i)(2) ಅನ್ನು ಸೇರ್ಪಡೆ ಮಾಡುವ ದಿನಾಂಕದವರೆಗೆ (09.06.2015 ರವರೆಗೆ) ಜಿಲ್ಲಾಧಿಕಾರಿಯವರು ನಿಗದಿಪಡಿಸಿರುವ ಗುತ್ತಿಗೆ ಮೊತ್ತವನ್ನು ಮತ್ತು 10.06.2015 ರಿಂದ ಇಲ್ಲಿಯವರೆಗೆ ಜಮೀನಿನ ಮಾರುಕಟ್ಟೆ ಬೆಲೆಯ ಶೇಕಡ 10 ರಷ್ಟು ಗುತ್ತಿಗೆ ದರವನ್ನು ನಿಗದಿಪಡಿಸಿ, 2007 ರಿಂದ ಇಲ್ಲಿಯವರೆಗೆ ಪಾವತಿಸಬೇಕಾದ ಗುತ್ತಿಗೆ ಮೊತ್ತಕ್ಕೆ ನಿಯಮಾನುಸಾರ ಬಡ್ಡಿಯನ್ನು ಸಹ ವಿಧಿಸಲು ಮತ್ತು ಸದರಿ 10.57 ಎಕರೆ ಜಮೀನನ್ನು ಮಾರ್ಗಸೂಚಿ ಬೆಲೆಯ ಶೇಕಡ 10 ರಷ್ಟು ದರ ಮತ್ತು ನಿಯಮಾನುಸಾರ ಇತರೆ ಶಾಸನಬದ್ಧ ಶುಲ್ಕವನ್ನು ವಿಧಿಸಿ, ಈ ಕೆಳಕಂಡ ಷರತ್ತಿಗೊಳಪಟ್ಟು ಶೈಕ್ಷಣಿಕ ಉದ್ದೇಶಕ್ಕಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಟ್ರಸ್ಟ್‌ಗೆ ಖಾಯಂ ಆಗಿ ಮಂಜೂರು ಮಾಡಿದೆ.

ಷರತ್ತುಗಳು:

1. ಮಂಜೂರಾದ ಭೂಮಿಯನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿಯೇ ಎರಡು ವರ್ಷಗಳ ಒಳಗಾಗಿ ಉಪಯೋಗಿಸತಕ್ಕದ್ದು.

2. ಮಂಜೂರಾತಿ ಆದೇಶದಲ್ಲಿ ಪ್ರಸ್ತಾಪಿತ ಭೂಮಿಯ ಪ್ರಚಲಿತ ಮಾರುಕಟ್ಟೆ ದರವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. 3. ಮಂಜೂರಾದ ಜಮೀನನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 4. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

5. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡತಕ್ಕದ್ದಲ್ಲ.

6. ಮಂಜೂರಾದ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು.

7. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

8. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ಮಂಜೂರಾತಿ ಆದೇಶವನ್ನು ನಿಯಮಾನುಸಾರ ರದ್ದುಗೊಳಿಸಲಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಮಂಜೂರಾದ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

9. ಜಿಲ್ಲಾಧಿಕಾರಿಗಳು, ಮಂಜೂರಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR-115

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಬಿ. ಸದಾಶಿವ ಪ್ರಭು

ಸರ್ಕಾರದ ಉಪ ಕಾರ್ಯದರ್ಶಿ,

ಕಂದಾಯ ಇಲಾಖೆ (ಭೂ ಮಂಜೂರಾತಿ).

೨೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ:

ಶ್ರೀ ಬಿ.ಕೆ. ಪವಿತ್ರ ಮತ್ತಿತರರು ಪ್ರಕರಣದಲ್ಲಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ನೀಡಿರುವ

ತೀರ್ಪಿನನ್ವಯ ರಾಜ್ಯದ ಎಲ್ಲಾ ಇಲಾಖೆಯ ಎಲ್ಲಾ ವೃಂದದ ಪರಿಷ್ಕøತ ಜ್ಯೇಷ್ಠತಾ ಪಟ್ಟಿಗಳಿಗೆ

ಸಂಬಂಧಿಸಿದಂತೆ ಸ್ವೀಕೃತವಾಗಿರುವ ಮನವಿ/ಆಕ್ಷೇಪಣೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ರಚಿಸಿರುವ

ತಜ್ಞರ ಸಮಿತಿಯ ಸದಸ್ಯರಿಗೆ ಉಪಸ್ಥಿತಿ ಭತ್ಯೆ ಮತ್ತು ಮಾಸಿಕ ವಾಹನ ಭತ್ಯೆಗಳನ್ನು ನಿಗಸಿಪಡಿಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 182 ಸೆನೆನಿ 2011, ದಿನಾಂಕ: 06.05.2017.

2) ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 73 ಎಸ್ಆರ್ಎಸ್ 2018 ದಿನಾಂಕ: 08.08.2018. 3) ಸುತ್ತೋಲೆ ಸಂಖ್ಯೆ: ಸಿಆಸುಇ 73 ಎಸ್ಆರ್ಎಸ್ 2018, ದಿನಾಂಕ: 05.09.2018. 4) ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 73 ಎಸ್ಆರ್ಎಸ್ 2018, ದಿನಾಂಕ: 01.10.2018. 5) ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 73 ಎಸ್ಆರ್ಎಸ್ 2018, ದಿನಾಂಕ: 04.10.2018.

ಪ್ರಸ್ತಾವನೆ:

1. ಮಾನ್ಯ ಸರ್ವೋಚ್ಛ ನ್ಯಾಯಾಲಯವು ಶ್ರೀ ಬಿ.ಕೆ. ಪವಿತ್ರ ಮತ್ತಿತರರು ಪ್ರಕರಣದ ಸಿವಿಲ್ ಅಪೀಲು ಸಂಖ್ಯೆ: 2368/2011ರಲ್ಲಿ ದಿನಾಂಕ:09.02.2017 ರಂದು ನೀಡಿರುವ ತೀರ್ಪನ್ನು ಅನುಷ್ಠಾನಗೊಳಿಸಲು ಮೇಲೆ (1) ರಲ್ಲಿ ಓದಲಾದ ದಿನಾಂಕ: 06.05.2017ರ ಸರ್ಕಾರದ ಆದೇಶದಲ್ಲಿ ವಿವರವಾದ ಮಾರ್ಗಸೂಚಿಗಳನ್ನು ನೀಡಲಾಗಿದೆ.

2. ಈಗಾಗಲೇ ಪ್ರಕಟಿಸಲಾದ ಜ್ಯೇಷ್ಠತಾ ಪಟ್ಟಿಗಳಲ್ಲಿ ನ್ಯೂನ್ಯತೆಗಳು/ಲೋಪಗಳನ್ನು ಸರಿಪಡಿಸುವಂತೆ ಕೋರಿ ನೌಕರರು ಸಲ್ಲಿಸಿರುವ ಆಕ್ಷೇಪಣೆಗಳನ್ನು ನಿಯಮಾನುಸಾರ ದಾಖಲೆಗಳೊಂದಿಗೆ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಸಲಹೆ/ಅಭಿಪ್ರಾಯವನ್ನು ನೀಡಲು 4 ಸದಸ್ಯರನ್ನೊಳಗೊಂಡ ಸಮಾಲೋಚಕರ ಸಮಿತಿಯನ್ನು ರಚಿಸಿ, ಸ್ವೀಕರಿಸಲಾದ ಆಕ್ಷೇಪಣೆಗಳಿಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸಮಾಲೋಚಕರ ಸಮಿತಿಯ ಮುಂದೆ ಮಂಡಿಸಲು ಅನುಸರಿಸಬೇಕಾದ ಕಾರ್ಯವಿಧಾನವನ್ನು ಮೇಲೆ(2) ಮತ್ತು (3)ರಲ್ಲಿ ಓದಲಾದ ಆದೇಶ/ಸುತ್ತೋಲೆಯಲ್ಲಿ ತಿಳಿಸಲಾಗಿದೆ.

4. ಮೇಲೆ (4) ಮತ್ತು (5) ರಲ್ಲಿ ಓದಲಾದ ಸರ್ಕಾರದ ಆದೇಶಗಳಲ್ಲಿ ರಚಿಸಲಾಗಿದ್ದ ಸಮಾಲೋಚಕರ ಸಮಿತಿಗೆ ಹೆಚ್ಚುವರಿ ಸದಸ್ಯರನ್ನು ಮತ್ತು ಸದಸ್ಯ ಕಾರ್ಯದರ್ಶಿಯನ್ನು ನೇಮಿಸಲಾಗಿದೆ.

5. ಮೇಲೆ ಓದಲಾದ ಆದೇಶ/ ಸುತ್ತೋಲೆಗಳನ್ವಯ ನೇಮಿಸಲಾಗಿರುವ ಸಮಾಲೋಚಕರ ಸಮಿತಿಯ ಸದಸ್ಯರುಗಳಿಗೆ ಉಪಸ್ಥಿತಿ ಭತ್ಯೆ ಮತ್ತು ವಾಹನ ಭತ್ಯೆ ನಿಗದಿಪಡಿಸಲು ಸರ್ಕಾರವು ತೀರ್ಮಾನಿಸಿರುತ್ತದೆ. ಆದುದರಿಂದ, ಈ ಕೆಳಕಂಡ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 93 ಎಸ್ಆರ್ಎಸ್ 2018, ಬೆಂಗಳೂರು, ದಿನಾಂಕ: 02-02-2018.

6. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಮೇಲೆ (2) (4) ಮತ್ತು (5)ರಲ್ಲಿ ಓದಲಾದ ಸರ್ಕಾರದ ಆದೇಶಗಳನ್ವಯ ರಚಿಸಲಾದ ಸಮಿತಿಯ ಸದಸ್ಯರುಗಳಿಗೆ ಉಪಸ್ಥಿತಿ ಭತ್ಯೆ ಪ್ರತಿ ಸಭೆಗೆ ರೂ. 2000/- (ಎರಡು ಸಾವಿರ ರೂಪಾಯಿಗಳು ಮಾತ್ರ) ಮಾಸಿಕ ಗರಿಷ್ಠ ರೂ. 20,000/- (ಇಪ್ಪತ್ತು ಸಾವಿರ ರೂಗಳು ಮಾತ್ರ) ಮಿತಿಗೊಳಪಟ್ಟು ಹಾಗೂ ಮಾಸಿಕ ವಾಹನ ಭತ್ಯೆ ರೂ. 4000/- (ನಾಲ್ಕು ಸಾವಿರ ರೂಪಾಯಿಗಳು ಮಾತ್ರ) ಅನ್ನು ಗೌರವ ಸಂಭಾವನೆಯಾಗಿ ನಿಗದಿಪಡಿಸಿ ಆದೇಶಿಸಿದೆ.

7. ಉಪಸ್ಥಿತಿ ಭತ್ಯೆ ಮತ್ತು ವಾಹನ ಭತ್ಯೆಗೆ ತಗಲುವ ವೆಚ್ಚವನ್ನು ಯಾವ ಇಲಾಖೆಗೆ ಸಂಬಂಧಸಿದಂತೆ ಸಭೆ ನಡೆಯುವುದೋ ಆಯಾ ಇಲಾಖೆಗಳ ಸಾಮಾನ್ಯ ವೆಚ್ಚಗಳು-051 ರಡಿ ಮಾರ್ಚ್ 2019ರವರೆಗೆ ಭರಿಸುವಂತೆ ಹಾಗೂ 2019-20ನೇ ಸಾಲಿನ ಆಯವ್ಯಯದಲ್ಲಿ ಆಯಾ ಆಡಳಿತ ಇಲಾಖೆಗಳಲ್ಲಿ ಸಮಿತಿಯ ಸಭೆಗಳ ಆಯೋಜನೆ ಮತ್ತು ನಿರ್ವಹಣೆಗೆ ಭರಿಸಬಹುದಾದಂತಹ 050-ಕಛೇರಿ ವೆಚ್ಚಗಳು ಉಪ ಶೀರ್ಷಿಕೆಯಡಿಯಿಂದ ಭರಿಸುವಂತೆ ತಿಳಿಸಲಾಗಿದೆ.

8. ಈ ಆದೇಶವನ್ನು ಆರ್ಥಿಕ ಇಲಾಖೆಯು ಟಿಪ್ಪಣಿ ಸಂಖ್ಯೆ: ಆಇ 898 ಸೇ-3/2018 ದಿನಾಂಕ: 15.11.2018 ಮತ್ತು ಸಂಖ್ಯೆ: ಆಇ 1268 ವೆಚ್ಚ-12/2018 02.01.2019 ರಲ್ಲಿ ನೀಡಿರುವ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

PR-103

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50

ಗಾಯತ್ರಿ ಎಂ.ಆರ್.

ಸರ್ಕಾರದ ಅಧೀನ ಕಾರ್ಯದರ್ಶಿ-3 (ಪ್ರ),

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ,

(ಸೇವಾ ನಿಯಮಗಳು-ವಿಶೇಷ ಕೋಶ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಸಿಆಸುಇ 93 ಎಸ್ಆರ್ಎಸ್ 2018, ಬೆಂಗಳೂರು, ದಿನಾಂಕ: 18-02-2019

1. ಶ್ರೀ ಬಿ.ಕೆ. ಪವಿತ್ರ ಮತ್ತು ಇತರರು ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ರಾಜ್ಯದ ಎಲ್ಲಾ ಇಲಾಖೆಯ ಎಲ್ಲಾ ವೃಂದದ ಪರಿಷ್ಕøತ ಜ್ಯೇಷ್ಠತಾ ಪಟ್ಟಿಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಮನವಿ/ಆಕ್ಷೇಪಣೆಗಳನ್ನು ಪರಿಶೀಲಿಸಿ ಇತ್ಯರ್ಥಪಡಿಸಲು ರಚಿಸಿರುವ ತಜ್ಞರ ಸಮಿತಿಯ ಸದಸ್ಯರಿಗೆ ಉಪಸ್ಥಿತಿ ಭತ್ಯೆ ಮತ್ತು ಮಾಸಿಕ ವಾಹನ ಭತ್ಯೆಗಳನ್ನು ನಿಗದಿಪಡಿಸಿ ಹೊರಡಿಸಲಾದ ಸಮ ಸಂಖ್ಯೆಯ ದಿನಾಂಕ: 02.02.2018ರ ಆದೇಶದಲ್ಲಿ ಆದೇಶ ಸಂಖ್ಯೆಯ ನಂತರ "ದಿನಾಂಕ: 02.02.2018" ಎಂಬುದರ ಬದಲಾಗಿ "ದಿನಾಂಕ: 02.02.2019" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೬೫

2. ಸದರಿ ಆದೇಶದ "ಕಂಡಿಕೆ ಸಂಖ್ಯೆ 4,5,6,7 ಮತ್ತು 8" ಎಂಬುದರ ಬದಲಾಗಿ ಕ್ರಮವಾಗಿ "3,4,5,6 ಮತ್ತು 7" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

PR-104

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗಾಯತ್ರಿ ಎಂ.ಆರ್.

SC-50

ಸರ್ಕಾರದ ಅಧೀನ ಕಾರ್ಯದರ್ಶಿ-3 (ಪ್ರ),

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವಾ ನಿಯಮಗಳು-ವಿಶೇಷ ಕೋಶ) URBAN DEVELOPMENT SECRETARIAT

CIRCULAR

No. UDD 4 TTP 2019, Bengaluru, dated 01-03-2019.

Sub : Guidelines regarding utilization of funds generated in Urban Development

Authorities under various heads.

To ensure proper financial administration and to effectively utilize the financial resources of the Development Authorities to meet the objective of the KUDA Act and KTCP Act, in exercise of powers conferred under Section 65 of the Karnataka Urban Development Authorities Act, 1987 direction is hereby issued to all Urban Development Authorities constituted under KUDA Act to follow the following guidelines strictly without fail.

The Authorities shall maintain funds separately as directed/explained below and deposit the amount generated to the respective funds as mentioned below and shall utilize strictly for the purpose which it is mentioned in the head of said funds.

I. FUND: General Administration and Master Plan:

1. Source:

i. Section 18 (1) fees and related Rules and guidelines.

ii. Supervision charges

iii. 25% of the Development Fund 2

iv. Interest generated from (i) to (iii) above.

2. Utilisation:

i. General office administration and capacity building.

ii. Office site purchase, building construction and maintenance.

iii. Master Plan preparation and revision including studies and surveys.

iv. Junction improvement schemes.

v. Development of Master Plan roads including land acquisition.

vi. Undertaking the first layout development scheme.

vii. Studies and surveys related to taking up any schemes.

II. FUND: Lake Rejuvenation:

1. Source:

i. Lake rejuvenation cess collected under section 18 (1-A) and related Rules and guidelines.

ii. Interest generated from above (i).

2. Utilisation:

For the purpose of development and rejuvenation of existing water bodies and formation of water bodies, rejuvenation of extinct kalyanis and public wells within the local planning area limits.

III. FUND: Fees collected in lieu of Park and Open Space.

1. Source:

i. Funds collected in lieu of Park and Open Spaces as per Government Notification No. UDD 522 MyAaPra 2005, dated 10.3.2006.

ii. Presently, if any Development Authority is permitted to collect the fees in lieu of Park and Open Space.

iii. Interest generated from (i) and (ii) above

2. Utilisation:

i. For acquiring lands reserved for Park and Open Space in the Master Plan.

IV. FUND: Slum Development

1. Source:

(i) Slum cess collected as per Section 18-A and related Rules and guidelines.

(ii) Interest generated from (i) above.

2. Utilisation:

i. As per Government Order No. UDD 812 MIB 1995, dated 15.06.1996 and Corrigendum No. UDD 912 MIB 1995, dated 08.07.1996, 70% shall be transferred to Slum Board.

ii. Remaining 30% shall be utilized for the improvement of the notified slums in consultation with the slum board and concerned urban local body.

೨೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧ V. FUND: Development Fund 1:

1. Source:

i. Amount generated by allotment of sites in a layout developed by UDAs.

ii. Amount generated by auction of commercial and corner sites in the layout developed by Development Authorities.

iii. Amount generated by allotment/auction of house/plots/units in a group housing scheme (in a vertical development scheme).

iv. Amount generated by allotment of CA sites in the layout developed by the UDA

v. 25% of the Development fund 2

vi. Interest generated from (i) to (v) above.

2. Utilisation:

i. Study and surveys related to taking up layout development scheme.

ii. To take up new layout development schemes including of land acquisition cost and development expenditure iii. To take up new layout development scheme on joint venture with land owners.

iv. To take up Group housing schemes

v. To take up Town Planning Schemes.

vi. Acquisition for areas proposed for park and open spaces reserved in the Master Plan.

vii. Development of parks in a layout developed by Urban Development Authorities (except the parks which are handed over to the Local Authority)

VI. FUND : Development Fund 2:

1. Source:

i. Amount generated by allotment of CA sites of the private layout on lease basis.

ii. Amount generated by rent or lease of commercial complex or any other commercial establishments.

iii. interest generated from (i) and (ii) above.

2. Utilisation

i. Park development within Local Planning area

ii. Any development work relating to providing civic amenities, infrastructure development, street light, Arch, etc. in the local planning area limits of respective Urban Development Authority.

iii. 25% of the amount shall be earmarked for the FUND: General Administration and Master Plan

iv. 25% of the amount shall be earmarked for the Development Fund 1.

It is hereby directed that all the UDAs while preparing their actual estimate of income and expenditure (budget) shall strictly ensure that the above guidelines are adhered to while allotting / taking up of any development work/estimating expenditure and the Commissioner of the concerned Urban Development Authority shall certify that the budget is prepared as per the above guidelines while submitting it for the approval of the Government.

PR-102

NAGARAJ

SC-50

Under Secretary to Government,

Urban Development Department.

ಆರ್ಥಿಕ ಸಚಿವಾಲಯ

ವಿಷಯ : 2019ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಹಾಗೂ ಇತರೆ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ಸಂಬಂಧಿತ ಜಿಲ್ಲಾಧಿಕಾರಿಗಳು ನಿಗದಿ ಪಡಿಸುವ ಸಮಯಕ್ಕೆ ವಿತರಿಸಲು ನಿರ್ದೇಶಕರು ಖಜಾನೆ ಇಲಾಖೆಗೆ ಅನುಮತಿ ನೀಡುವ ಬಗ್ಗೆ.

ಓದಲಾಗಿದೆ : 1. ಸರ್ಕಾರಿ ಆದೇಶ ಸಂಖ್ಯೆ:ಆಇ 43 ಆಖಇ 2018, ದಿ: 27-02-2018.

2. ಕಡತ ಸಂ:ಪಪೂಶಿಇ/ಪರೀಕ್ಷೆ/ಪ.ಗೌ.ಠೇ/2019, ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ.

ಪ್ರಸ್ತಾವನೆ:

ಮೇಲೆ ಓದಲಾದ (1)ರ ಸರ್ಕಾರದ ಆದೇಶದಲ್ಲಿ ಕರ್ನಾಟಕ ಖಜಾನೆ ಸಂಹಿತೆ 18(ಎ)ರಡಿಯ ಅಪವಾದದ ಸೂಚನೆಯನುಸಾರ ಖಜಾನೆಗಳಿಂದ ಒಂದು ಗಂಟೆ ಮುಂಚಿತವಾಗಿ ಪ್ರಶ್ನೆ ಪತ್ರಿಕೆ ಹಾಗೂ ಓ.ಎಂ.ಆರ್ ಶೀಟ್ಸ್ ವಿತರಿಸುವ ನಿಯಮವನ್ನು ಸಡಿಲಿಸಿ ಪರೀಕ್ಷಾ ಪ್ರಾಧಿಕಾರಿಗಳ ಅವಶ್ಯಕತೆ ಹಾಗೂ ಲಿಖಿತ ಕೋರಿಕೆಯನುಸಾರ ಪರಿಶೀಲಿಸಿ ನಿಗದಿತ ಅವಧಿಗಿಂತ ನಾಲ್ಕು ಗಂಟೆ ಹದಿನೈದು ನಿಮಿಷಗಳ ಮುಂಚೆ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಸಂಬಂಧಿಸಿದ ಇತರೆ ಗೌಪ್ಯ ಸಾಮಗ್ರಿಗಳನ್ನು ವಿತರಿಸಲು ಖಜಾನಾಧಿಕಾರಿಗಳಿಗೆ ಸೂಚನೆಗಳನ್ನು ನೀಡುವ ಪ್ರಾಧಿಕಾರವನ್ನು ಖಜಾನೆ ನಿರ್ದೇಶಕರಿಗೆ ನೀಡಲಾಗಿರುತ್ತದೆ.

ಮೇಲೆ ಓದಲಾದ (2)ರ ಆದೇಶದಲ್ಲಿ 2018ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಹಾಗೂ ಪರೀಕ್ಷಾ ದಿನಗಳಂದು ಬೆಳಿಗ್ಗೆ 6.00ಗಂಟೆಗೆ ಖಜಾನೆಯನ್ನು ತೆರೆದು ಜಿಲ್ಲಾ ಕೇಂದ್ರದಿಂದ ಪರೀಕ್ಷಾ ಕೇಂದ್ರಗಳಿಗಿರುವ ದೂರ ಹಾಗೂ ಕ್ರಮಿಸಬೇಕಾದ ರಸ್ತೆಯ ಗುಣಮಟ್ಟವನ್ನಾಧರಿಸಿ ಜಿಲ್ಲಾಧಿಕಾರಿಗಳು ನಿಗದಿಪಡಿಸುವ ಸಮಯಕ್ಕೆ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ವಿತರಿಸಲು ಸರ್ಕಾರದ ಅನುಮೋದನೆ ನೀಡಲಾಗಿತ್ತು. ಮೇಲೆ ಓದಲಾದ ಕ್ರಮ ಸಂ(2)ರಲ್ಲಿ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ರವರು 2018ನೇ ಸಾಲಿನಲ್ಲಿ ನೀಡಲಾದ ಅನುಮತಿಯಂತೆ ಮಾರ್ಚ್ 2019ನೇ ಪರೀಕ್ಷೆಗಳಿಗೂ ಸಮಯವಕಾಶವನ್ನು ಒದಗಿಸಿಕೊಡುವಂತೆ ಖಜಾನೆ ನಿರ್ದೇಶಕರಿಗೆ ಸೂಚಿಸಲು ಆದೇಶ ಹೊರಡಿಸುವಂತೆ ಕೋರಿರುತ್ತಾರೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ೨೬೭

ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಸ್ತಾವನೆಯನ್ನು ಪರಿಶೀಲಿಸಿದ ಸರ್ಕಾರವು ಮುಂದಿನಂತೆ ಆದೇಶಿಸುತ್ತದೆ.

ಸರ್ಕಾರದ ಆದೇಶ ಸಂಖ್ಯೆ: ಆಇ 40 ಆಖಇ 2019, ಬೆಂಗಳೂರು, ದಿನಾಂಕ: 26-02-2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಮಾರ್ಚ್-2019ನೇ ದ್ವಿತೀಯ ಪಿ.ಯು.ಸಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಹಾಗೂ ಇತರೆ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ಸಂಬಂಧಿತ ಜಿಲ್ಲಾಧಿಕಾರಿಗಳು ನಿಗದಿಪಡಿಸುವ ಸಮಯಕ್ಕೆ ವಿತರಿಸಲು, ರಾಜ್ಯದ ಖಜಾನೆಗಳ ಅಭಿರಕ್ಷೆಯಲ್ಲಿ ಇಡಲಾಗುವ ಪ್ರಶ್ನೆ ಪತ್ರಿಕೆಗಳು ಹಾಗೂ ಸಂಬಂಧಿಸಿದ ಇತರೆ ಗೌಪ್ಯ ಸಾಮಗ್ರಿಗಳು ಇತ್ಯಾದಿಗಳನ್ನು ಪರೀಕ್ಷೆ ಪ್ರಾರಂಭವಾಗುವ ನಾಲ್ಕು ಗಂಟೆ ಮುಂಚಿತವಾಗಿ ಖಜಾನೆಯಿಂದ ವಿತರಿಸಬೇಕೆಂಬ ನಿಯಮವನ್ನು ಸಡಿಲಿಸಿ ಪರೀಕ್ಷಾ ಪ್ರಾಧಿಕಾರಿಗಳ ಅವಶ್ಯಕತೆ ಹಾಗೂ ಲಿಖಿತ ಕೋರಿಕೆಯನುಸಾರ ಪರಿಶೀಲಿಸಿ ನಿಗಧಿತ ಅವಧಿಗಿಂತ ನಾಲ್ಕು ಗಂಟೆ ಹದಿನೈದು ನಿಮಿಷ ಮುಂಚೆ ಪ್ರಶ್ನೆಪತ್ರಿಕೆಗಳನ್ನು ಹಾಗೂ ಸಂಬಂಧಿಸಿದ ಇತರೆ ಗೌಪ್ಯ ಸಾಮಾಗ್ರಿಗಳನ್ನು ವಿತರಿಸಲು ಖಜಾನಾಧಿಕಾರಿಗಳಿಗೆ ಸೂಚನೆಗಳನ್ನು ನೀಡುವ ಪ್ರಾಧಿಕಾರವನ್ನು ಖಜಾನೆ ನಿರ್ದೇಶಕರಿಗೆ ನೀಡಲಾಗಿದೆ. ಹಾಗೆಯೇ ಪರೀಕ್ಷಾ ದಿನಗಳಂದು ಬೆಳಿಗ್ಗೆ 6.00 ಗಂಟೆಗೆ ಖಜಾನೆಯನ್ನು ತೆರೆದು ಜಿಲ್ಲಾ ಕೇಂದ್ರದಿಂದ ಪರೀಕ್ಷಾ ಕೇಂದ್ರಗಳಿಗಿರುವ ದೂರ ಹಾಗೂ ಕ್ರಮಿಸಬೇಕಾದ ರಸ್ತೆಯ ಗುಣಮಟ್ಟವನ್ನಾಧರಿಸಿ ಜಿಲ್ಲಾಧಿಕಾರಿಗಳು ನಿಗಧಿಪಡಿಸುವ ಸಮಯಕ್ಕೆ ಪರೀಕ್ಷಾ ಗೌಪ್ಯ ಸಾಮಗ್ರಿಗಳನ್ನು ವಿತರಿಸಲು ಸರ್ಕಾರದ ಅನುಮೋದನೆಯನ್ನು ನೀಡಲಾಗಿದೆ.

PR-105

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಜಿ. ಶಶಿಧರ್

ಸರ್ಕಾರದ ಅಧೀನ ಕಾರ್ಯದರ್ಶಿ ಆರ್ಥಿಕ ಇಲಾಖೆ (ಆಡಳಿತ & ಮುಂಗಡ).

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ವಿಷಯ : ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಡಿ ಬರುವ ಜವಳಿ ಇಲಾಖೆಯ ಕಾರ್ಯಹಂಚಿಕೆಯನ್ನು ಮಾಡುವ ಬಗ್ಗೆ.

ಓದಲಾಗಿದೆ : ಮಾನ್ಯ ಮುಖ್ಯ ಮಂತ್ರಿಯವರ ಟಿಪ್ಪಣಿ ಸಂಖ್ಯೆ:PSCM/114/2019, Dt:23.01.2019.

ಪ್ರಸ್ತಾವನೆ:

ಕೈಮಗ್ಗ ಮತ್ತು ಜವಳಿ ಇಲಾಖೆಯು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ನಿಯಂತ್ರಣಕ್ಕೊಳಪಟ್ಟಿದ್ದು, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಯವರ ನಡುವಿನ ಕೆಲಸದ ಹಂಚಿಕೆಯನ್ನು ಬದಲಾಯಿಸಿ, ಜವಳಿ ವಿಷಯವನ್ನು ಪ್ರಧಾನ ಕಾರ್ಯದರ್ಶಿಯವರ ಬದಲಾಗಿ ಕಾರ್ಯದರ್ಶಿಯವರು ನಿರ್ವಹಿಸಲು ಪರಿಶೀಲಿಸಿ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ವಾಕೈ 35 ಸ್ವೀಮರ 2019, ಬೆಂಗಳೂರು, ದಿನಾಂಕ: 02-03-2019.

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರಿ (ವ್ಯವಹಾರ ಹಂಚಿಕೆ) ನಿಯಮಾವಳಿಗಳು 1977ರ ನಿಯಮ 6(2)ರ ಅನುಸಾರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜವಳಿ ವಿಷಯವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪ್ರಧಾನ ಕಾರ್ಯದರ್ಶಿಯವರ ಬದಲಾಗಿ ಕಾರ್ಯದರ್ಶಿಯವರಿಗೆ ಹಂಚಿಕೆ ಮಾಡಲಾಗಿದೆ. ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧ 1, 2 ಮತ್ತು 3 ರಲ್ಲಿರುವಂತೆ ಅಧಿಕಾರ ಪ್ರತ್ಯಾಯೋಜನೆ ಮಾಡಿ ಆದೇಶಿಸಲಾಗಿದೆ.

(1) ಅನುಬಂಧ-1 ರಲ್ಲಿ ನಮೂದಿಸಿರುವ ಕಡತಗಳನ್ನು ಮಾನ್ಯ ಜವಳಿ ಸಚಿವರಿಗೆ (ಪ್ರಸ್ತುತ ಮಾನ್ಯ ಮುಖ್ಯಮಂತ್ರಿಯವರು) ಸಲ್ಲಿಸುವುದು.

(2) ಅನುಬಂಧ-2 ಮತ್ತು 3ರವರೆಗಿನ ಕಡತಗಳನ್ನು ವಿಲೇ ಮಾಡಲು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿ(ಎಂ.ಎಸ್.ಎಂ.ಇ ಮತ್ತು ಗಣಿ), ನಿರ್ದೇಶಕರು (ತಾಂತ್ರಿಕ ಕೋಶ) ಇವರುಗಳಿಗೆ ಅಧಿಕಾರವನ್ನು ಪ್ರತ್ಯಾಯೋಜಿಸಿದೆ.

ಈ ಅಧಿಕಾರಗಳನ್ನು ನಿಯಮಗಳಂತೆ ಅಗತ್ಯವಿದ್ದಲ್ಲಿ, ಇತರೆ ಇಲಾಖೆಗಳ ಸಮಾಲೋಚನೆ ಅಥವಾ ಅನುಮೋದನೆ ಪಡೆದು ನಿರ್ಧರಿಸುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಉಮಾ ವರದಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

(ಸೇವೆಗಳು ಮತ್ತು ಸಮನ್ವಯ)

ಅನುಬಂಧ-1

ಮಾನ್ಯ ಜವಳಿ ಸಚಿವರಿಗೆ ಸಲ್ಲಿಸಬೇಕಾದ ಪ್ರಕರಣಗಳು

1. ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು 1977ರ ಅನುಸಾರ ಹಾಗೂ ಸ್ಥಾಯಿ ಆದೇಶಗಳ ಪ್ರಕಾರ ಗೌರವಾನ್ವಿತ ರಾಜ್ಯಪಾಲರ/ಸಚಿವ ಸಂಪುಟ/ಸಚಿವ ಸಂಪುಟ ಉಪ ಸಮಿತಿ ಮತ್ತು ಮುಖ್ಯಮಂತ್ರಿಗಳಿಗೆ ಸಲ್ಲಿಸಬೇಕಾದ ಪ್ರಕರಣಗಳು.

2. ಕೈಮಗ್ಗ ಮತ್ತು ಜವಳಿ ಇಲಾಖೆಯ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಅಧಿಕಾರಿಗಳ ನೇಮಕಾತಿ/ಮುಂಬಡ್ತಿ/ವರ್ಗಾವಣೆ/ಸ್ಥಳ ನಿಯುಕ್ತಿ ಪ್ರಕರಣಗಳು.

3. ಕೈಮಗ್ಗ ಮತ್ತು ಜವಳಿ ಇಲಾಖೆಯ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಅಧಿಕಾರಿಗಳಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ ನಿಯಮ 285ರಡಿಯಲ್ಲಿ ಕಡ್ಡಾಯ ನಿವೃತ್ತಿ, ಸ್ವ-ಇಚ್ಛಾ ನಿವೃತ್ತಿ ಹಾಗೂ ರಾಜೀನಾಮೆ ಅಂಗೀಕರಿಸುವ ಪ್ರಕರಣಗಳು.

4. ಕೈಮಗ್ಗ ಮತ್ತು ಜವಳಿ ಇಲಾಖೆಯ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಅಧಿಕಾರಿಗಳನ್ನು ಅಧಿಕೃತವಾಗಿ ವಿದೇಶಕ್ಕೆ ತರಬೇತಿ/ಕಾರ್ಯಾಗಾರ/ಸೆಮಿನಾರ್ ಇತ್ಯಾದಿಗಳಲ್ಲಿ ಭಾಗವಹಿಸಲು ನಿಯೋಜಿಸುವ ಪ್ರಸ್ತಾವನೆಗಳು.

5. ಕೈಮಗ್ಗ ಮತ್ತು ಜವಳಿ ಇಲಾಖೆಯ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಹುದ್ದೆಗಳ ಸೃಜನೆ/ಪದನಾಮ ಬದಲಾವಣೆ ರದ್ದುಪಡಿಸುವ ಪ್ರಕರಣಗಳು.

.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೨೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೨೮, ೨೦೧೯ ಭಾಗ ೧

6. ಕೈಮಗ್ಗ ಮತ್ತು ಜವಳಿ ಇಲಾಖೆಯ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಅಧಿಕಾರಿಗಳ ವಿರುದ್ದ ಶಿಸ್ತು ಪ್ರಕರಣಗಳಲ್ಲಿ ದಂಡನೆ ವಿಧಿಸುವ ಪ್ರಸ್ತಾವನೆಗಳು.

7. ಕೈಮಗ್ಗ ಮತ್ತು ಜವಳಿ ಇಲಾಖೆಯ ವಿಧಾನಮಂಡಲದಲ್ಲಿ ಮಂಡಿಸುವ ಎಲ್ಲಾ ವಿಷಯಗಳ ಪ್ರಕರಣಗಳು. 8. ಕೈಮಗ್ಗ ಮತ್ತು ಜವಳಿ ಇಲಾಖೆಯ ನೀತಿ ನಿರ್ಣಯಗಳ ಕುರಿತಂತೆ ತೀರ್ಮಾನ ಕೈಗೊಳ್ಳುವ ಪ್ರಕರಣಗಳು. 9. ಕೈಮಗ್ಗ ಮತ್ತು ಜವಳಿ ಇಲಾಖೆಯ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಅಧಿಕಾರಿಗಳ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳಲ್ಲಿ ಅಭಿಯೋಜನಾ ಮಂಜೂರಾತಿ ನೀಡುವ ಕುರಿತ ಪ್ರಕರಣಗಳು.

10. ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧಿಕಾರೇತರ ಸದಸ್ಯರಿರುವ ಸಲಹಾ ಸಮಿತಿಗಳನ್ನು/ಸಲಹಾ ಮಂಡಳಿಗಳನ್ನು ರಚಿಸುವ ಕುರಿತಾದ ಪ್ರಕರಣಗಳು.

11. ಕೈಮಗ್ಗ ಮತ್ತು ಜವಳಿ ಇಲಾಖೆಯ ಹೊಸ ಯೋಜನೆಗಳನ್ನು ಪ್ರಾರಂಭಿಸುವ ಕುರಿತ ಪ್ರಸ್ತಾವನೆಗಳು. 12. ಕೈಮಗ್ಗ ಮತ್ತು ಜವಳಿ ಇಲಾಖೆಯ ವಾರ್ಷಿಕ ವರದಿ/ನಿರ್ವಹಣಾ ಮುಂಗಡ ಪತ್ರದ ಅನುಮೋದನೆ. 13. ಕಾರ್ಯದರ್ಶಿಯವರು ವಿಷಯಗಳ ಪ್ರಾಮುಖ್ಯತೆಯನ್ನು ಪರಿಗಣಿಸಿ ಮಾನ್ಯ ಜವಳಿ ಸಚಿವರಿಗೆ ಸಲ್ಲಿಸಬಹುದಾದ ಪ್ರಕರಣಗಳು. 14. ಕೈಮಗ್ಗ ಮತ್ತು ಜವಳಿ ಇಲಾಖೆಯ ಅಧೀನದಲ್ಲಿ ಬರುವ ನಿಗಮ/ಮಂಡಳಿಗಳಾದ KHDC, KSTIDC ಮತ್ತು ಕಾವೇರಿ ಹ್ಯಾಂಡ್‌ಲೂಮ್ಸ್ ಸಂಸ್ಥೆಗಳಿಂದ ಸರ್ಕಾರದ ಯೋಜನೆಗಳನ್ನು ಅನುಷ್ಟಾನಗೊಳಿಸುವ ಸಂಬಂಧ ಪ್ರಮುಖ ನಿರ್ಣಯಗಳ ಬಗ್ಗೆ ಹಾಗೂ ಅಂತಿಮ ತೀರ್ಮಾನಗಳನ್ನು ನೀಡುವ ಬಗ್ಗೆ.

ಅನುಬಂಧ-2

ಕಾರ್ಯದರ್ಶಿಯವರ ಹಂತದಲ್ಲಿ ವಿಲೇಗೊಳಿಸಬಹುದಾದ ಪ್ರಕರಣಗಳು

ಕೈಮಗ್ಗ ಮತ್ತು ಜವಳಿ ಶಾಖೆಗಳಿಗೆ ಸಂಬಂಧಿಸಿದ ವಿಷಯಗಳು:

1. ರಾಜ್ಯಮಟ್ಟದ ಏಕ ಗವಾಕ್ಷಿ ಸಮಿತಿ ಹಾಗೂ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಗಳಲ್ಲಿ ಅನುಮೋದನೆಯಾದ ಯೋಜನೆಗಳ ಸರ್ಕಾರಿ ಆದೇಶ ಹೊರಡಿಸಲು ಅನುಮೋದನೆ.

2. ಕೈಮಗ್ಗ ಮತ್ತು ಜವಳಿ ಇಲಾಖೆಯ ಆಯವ್ಯಯದಲ್ಲಿ ಒದಗಿಸಿರುವ ಅನುದಾನವನ್ನು ಬಿಡುಗಡೆ ಮಾಡಲು ಅನುಮೋದಿಸುವ ಪ್ರಕರಣಗಳು. 3. ಕೈಮಗ್ಗ ಮತ್ತು ಜವಳಿ ಇಲಾಖೆಯ ಹಾಗೂ ಕೆ.ಎಸ್.ಟಿ.ಐ.ಡಿ.ಸಿ / ಕೆ.ಹೆಚ್.ಡಿ.ಸಿ ಗೆ ನಿಯೋಜನೆಗೊಳ್ಳುವ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ವೃಂದದ ಅಧಿಕಾರಿಗಳಿಗೆ ಕಡ್ಡಾಯ ನಿರೀಕ್ಷಣಾವಧಿ ಮಂಜೂರಾತಿಗೆ ಸಂಬಂಧಿಸಿದ ಪ್ರಕರಣಗಳು.

4. ಕಾರ್ಯ ಹಂಚಿಕೆಯಾದ ವಿಷಯಗಳಿಗೆ ಸಂಬಂಧಿಸಿದಂತೆ, ಮಹಾಲೇಖಪಾಲರ ಲೆಕ್ಕ ಪರಿಶೋಧನಾ ಕಂಡಿಕೆಗಳಿಗೆ ಉತ್ತರಗಳು/ವಿಧಾನ ಮಂಡಳದ ವಿವಿಧ ಸಮಿತಿಗಳಿಗೆ ಉತ್ತರ ಒದಗಿಸುವ ಕುರಿತಾದ ಪ್ರಕರಣಗಳು.

5. ಕಾರ್ಯ ಹಂಚಿಕೆಯಾದ ವಿಷಯಗಳಿಗೆ ಸಂಬಂಧಿಸಿದಂತೆ, ಅಧಿಕಾರಿ/ನೌಕರರು ಸಂಸ್ಥೆಯ ಮುಖ್ಯಸ್ಥರ ಆದೇಶದ ವಿರುದ್ಧ ಸಲ್ಲಿಸುವ ಮೇಲ್ಮನವಿಗಳ ವಿಷಯಗಳು.

6. ಕಾರ್ಯ ಹಂಚಿಕೆಯಾದ ವಿಷಯಗಳಿಗೆ ಸಂಬಂಧಿಸಿದ ಮುಖ್ಯಸ್ಥರ ದಿನಚರಿಗಳ ಪುನರ್‌ಲೋಕನೆ. 7. ಕಾರ್ಯ ಹಂಚಿಕೆಯಾದ ವಿಷಯಗಳಿಗೆ ಸಂಬಂಧಿಸಿದಂತೆ, ನ್ಯಾಯಾಲಯ ಪ್ರಕರಣಗಳಲ್ಲಿ ಸರ್ಕಾರಿ ವಕೀಲರು ತಯಾರಿಸಿ ಕಳುಹಿಸುವ ಆಕ್ಷೇಪಣಾ ಹೇಳಿಕೆಗಳಿಗೆ ಅನುಮೋದನೆ ನೀಡುವ ಪ್ರಸ್ತಾವನೆಗಳು.

8. ಕಾರ್ಯ ಹಂಚಿಕೆಯಾದ ವಿಷಯಗಳಿಗೆ ಸಂಬಂಧಿಸಿದ ಸಂಸ್ಥೆಗಳ ಪರಿಶೀಲನಾ ಸಭೆ/ಮಂಡಳಿ ಸಭೆಗಳನ್ನು ನಿಯಮಿತ ಕಾಲದಲ್ಲಿ ನಡೆಸುವುದು. 9. ಕೈಮಗ್ಗ ಮತ್ತು ಜವಳಿ ಇಲಾಖೆಯ ಗ್ರೂಪ್ 'ಎ' ವೃಂದದ ಸೇವಾ ವಿಷಯಗಳು. 10. ಕೈಮಗ್ಗ ಮತ್ತು ಜವಳಿ ಇಲಾಖೆಯ ಗ್ರೂಪ್ 'ಎ' ವೃಂದದ ಅಧಿಕಾರಿಗಳು ಸಲ್ಲಿಸುವ ಆಸ್ತಿ ಮತ್ತು ದಾಯಿತ್ವ ಪಟ್ಟಿಗಳನ್ನು ಪರಿಶೀಲಿಸಿ ಮತ್ತು ಅಂಗೀಕರಿಸುವ ಕುರಿತ ವಿಷಯಗಳು ಹಾಗೂ ಸ್ಥಿರಾಸ್ತಿಗಳ ಅರ್ಜನೆ ಮತ್ತು ವಿಲೇಗೆ ಅನುಮತಿ ನೀಡುವ ಪ್ರಕರಣಗಳು.

ಅನುಬಂಧ-3

ನಿರ್ದೇಶಕರು (ತಾಂತ್ರಿಕ ಕೋಶ), ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಇವರ ಹಂತದಲ್ಲಿ ವಿಲೇಗೊಳಿಸಬಹುದಾದ ಪ್ರಕರಣಗಳು.

(ಅವರಿಗೆ ಹಂಚಿಕೆಯಾಗಿರುವ ವಿಷಯಗಳಲ್ಲಿ) 1. ಪ್ರಸ್ತಾವನೆಗಳನ್ನು ಪರಿಶೀಲಿಸಿ ಅವಶ್ಯವಿರುವ ಹೆಚ್ಚುವರಿ ಮಾಹಿತಿಯನ್ನು ಇಲಾಖಾ ಮುಖ್ಯಸ್ಥರಿಂದ ಪಡೆಯಲು ಕ್ರಮ ವಹಿಸುವ ಪ್ರಕರಣಗಳು. 2. ದೂರು ಅರ್ಜಿಗಳಿಗೆ ಸಂಬಂಧಿಸಿದಂತೆ ಇಲಾಖಾ ಮುಖ್ಯಸ್ಥರಿಂದ ವರದಿ/ಅಭಿಪ್ರಾಯ ಕೋರುವ ವಿಷಯಗಳು. 3. ಮುಂಬಡ್ತಿ/ನಿವೃತ್ತಿ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆ ಬಾಕಿ ಇರುವ ಕುರಿತು ವಸ್ತುಸ್ಥಿತಿಯನ್ನು ಇತರ ಇಲಾಖೆಗಳಿಗೆ ತಿಳಿಸುವ ಪ್ರಕರಣಗಳು. 4. ಸಕ್ಷಮ ಪ್ರಾಧಿಕಾರವು ಕಡತದಲ್ಲಿ ಅನುಮೋದಿಸಿದ ವಿಷಯಗಳ ಕುರಿತು ಕರಡು ಪತ್ರ/ಆದೇಶಗಳ ಅನುಮೋದನೆ. 5. ಕಾರ್ಯದರ್ಶಿಯವರು ಯಾವುದಾದರೂ ವಿಷಯಗಳು ಕುರಿತು ಅಧಿಕಾರವನ್ನು ಡೆಲಿಗೇಟ್ ಮಾಡಿದ್ದಲ್ಲಿ, ಅಂತಹ ವಿಷಯಗಳನ್ನು ನಿರ್ವಹಿಸುವುದು.

PR-106

ಉಮಾ ವರದಯ್ಯ

SC-25

ಸರ್ಕಾರದ ಅಧೀನ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ.

(ಸೇವೆಗಳು ಮತ್ತು ಸಮನ್ವಯ)

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 28 March 2019. Indian Gazettes, https://egazette.servantsofknowledge.in/details/in.gazette.karnataka_new.2019-03-28.Part-1/. Archive identifier in.gazette.karnataka_new.2019-03-28.Part-1.