Servants of Knowledge
Karnataka Gazette · Government of Karnataka

Karnataka Gazette, Part Part-1, 09 May 2019

Published 09 May 2019

Part
Part-1
Identifier
in.gazette.karnataka_new.2019-05-09.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಮೇ ೯, ೨೦೧೯ (ವೈಶಾಖ ೧೯, ಶಕ ವರ್ಷ ೧೯೪೧)

Bengaluru, Thursday, May 9, 2019 (Vaishakha 19, Shaka Varsha 1941)

ಸಂಪುಟ ೧೫೪

Volume 154

ಸಂಚಿಕೆ ೧೯

Issue 19

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಂದಾಯ ಸಚಿವಾಲಯ

ವಿಷಯ : ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣಕ್ಕೆ 2018-19ನೇ ಸಾಲಿನ ಬಾಕಿ ಅನುದಾನ ಬಿಡುಗಡೆ ಮಾಡುವ ಬಗ್ಗೆ.

ಓದಲಾಗಿದೆ : 1) ನಿಬಂಧಕರು, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು ಇವರ ಪತ್ರ ಸಂಖ್ಯೆ :

ಲೆಕ್ಕ-2/ಸಿಆರ್-7/2017-18, ದಿನಾಂಕ : 05-02-2019.

2) ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 17 ಆರ್ಎಂಇ 2018, ದಿನಾಂಕ : 22-05-2018 ಹಾಗೂ 26-10-2018.

ಪ್ರಸ್ತಾವನೆ:

ಮೇಲೆ ಓದಲಾದ (1) ಪತ್ರದಲ್ಲಿ ನಿಬಂಧಕರು, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಮೇಲೆ ಓದಲಾದ (2)ರ ಸರ್ಕಾರದ ಆದೇಶ ದಿನಾಂಕ : 22-05-2018 ಹಾಗೂ 26-10-2018 ರನ್ವಯ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದ ಮುಖ್ಯ ಲೆಕ್ಕ ಶೀರ್ಷಿಕೆ 2052-00-099-0-01ರ ಉಪ ಶೀರ್ಷಿಕೆ 195 - ಸಾರಿಗೆ ವೆಚ್ಚಗಳಡಿಯಲ್ಲಿ ಒಟ್ಟು ಅನುದಾನ ರೂ. 23.00 ಲಕ್ಷಗಳ ಪೈಕಿ ರೂ. 11.50 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಒಟ್ಟು ರೂ. 9.54 ಲಕ್ಷಗಳು ಬಳಕೆಯಾಗಿರುತ್ತದೆ, ಉಪ ಶೀರ್ಷಿಕೆ 041 - ಪ್ರಯಾಣ ವೆಚ್ಚಗಳಡಿಯಲ್ಲಿ ಒಟ್ಟು ಅನುದಾನ ರೂ. 7.00 ಲಕ್ಷಗಳ ಪೈಕಿ ರೂ. 3.50 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಒಟ್ಟು ರೂ. 3.22 ಲಕ್ಷಗಳು ಬಳಕೆಯಾಗಿರುತ್ತದೆ, ಹಾಗೂ ಉಪ ಶೀರ್ಷಿಕೆ 021 – ವೈದ್ಯಕೀಯ ವಚ್ಚ ಮರುಪಾವತಿಯಡಿಯಲ್ಲಿ ಒಟ್ಟು ಅನುದಾನ ರೂ. 15.00 ಲಕ್ಷಗಳ ಪೈಕಿ ರೂ. 7.5 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ಒಟ್ಟು ರೂ. 6.84 ಲಕ್ಷಗಳು ಬಳಕೆಯಾಗಿರುತ್ತದೆ. ಮುಂದುವರೆದು ಸರ್ಕಾರದ ಆದೇಶ ಸಂಖ್ಯೆ : ಎಫ್‌ಡಿ 04 ಟಿಎಫ್‌ಪಿ 2018, ದಿನಾಂಕ : 22-07-2018ರ ಕಂಡಿಕೆ 09ರನ್ವಯ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದ ಮುಖ್ಯ ಲೆಕ್ಕ ಶೀರ್ಷಿಕೆ ಪ್ರಸ್ತಾವನೆಯಲ್ಲಿ ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ. ಆರ್‌ಡಿ 17 ಆರ್ಎಂಇ 2018 ಬೆಂಗಳೂರು, ದಿನಾಂಕ 06ನೇ ಮಾರ್ಚ್ 2019.

ಪ್ರಸ್ತಾವನೆಯಲ್ಲಿನ ವಿವರಗಳ ಹಿನ್ನೆಲೆಯಲ್ಲಿ, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ ಕಛೇರಿಗೆ ಮುಖ್ಯ ಲೆಕ್ಕಶೀರ್ಷಿಕೆ 2052-00-099-0-01 ರಡಿ ಒದಗಿಸಲಾಗಿರುವ ಅನುದಾನದ ಪೈಕಿ ಈ ಕೆಳಗೆ ವಿವರಿಸಿರುವ ಉಪ ಶೀರ್ಷಿಕೆಗಳ ಅಡಿಯಲ್ಲಿ ಬಾಕಿ ಉಳಿದಿರುವ ಶೇಖಡ 50% ರಷ್ಟು ಅಂದರೆ ರೂ.

22.50 ಲಕ್ಷಗಳ (ಇಪ್ಪತ್ತೆರಡು ಲಕ್ಷದ ಐವತ್ತು ಸಾವಿರ ರೂಪಾಯಿಗಳು ಮಾತ್ರ) ಅನುದಾನವನ್ನು ಬಿಡುಗಡೆಗೊಳಿಸಿ ಆದೇಶಿಸಿದೆ.

(೩೯೩)೩೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೯, ೨೦೧೯ ಭಾಗ ೧

ಕ್ರ. ಸ ಂ. ವ ುುಖ್ಯ ಲೆಕ್ಕ ಶೀರ್ಷಿಕೆ 2052-00-099-0-01ರ ಉಪ ಶೀರ್ಷಿಕೆ 2018-19 ಅನುದಾನ (ರೂ. ಲಕ್ಷಗಳಲ್ಲಿ) ಸ ರ್ಕಾರದ ಆದೇಶ ಸಂಖ್ಯೆ : ಆರ್‌ಡಿ 17 ಆರ್ಎಂಇ 2018 ಬೆಂಗಳೂರು, ದಿನಾಂಕ : 22-05-2018 ಹಾಗೂ 26-10-2018 ಬಿಡುಗಡೆಗೊಳಿಸಿರುವ ಶ ೕ. ½ ೆ (50%) ಅನುದಾನ (ರೂ. ಲಕ್ಷಗಳಲ್ಲಿ) ಬಳಸಿಕೊಂಡಿರುವ ಅನುದಾನ (ರೂ.ಲಕ್ಷಗಳಲ್ಲಿ) ಬಿಡುಗಡೆಗೊಳಿಸಬೇಕಾದ ಶ ೕ. 50% ಅನುದಾನ ೆ (ರೂ. ಲಕ್ಷಗಳಲ್ಲಿ)
1 195-ಸಾರಿಗೆ ವೆಚ್ಚ 23-00 11-50 9-54 11-50
2 041-ಪ್ರಯಾಣ ವೆಚ್ಚ 7-00 3-50 3-22 3-50
3 021-ವೈದ್ಯಕೀಯ ವೆಚ್ಚ ವ ುರುಪಾವತಿ 15-00 7-50 6-84 7-50
ಒಟ್ಟು 45-00 22-50 19-60 22-50

1. ಈ ಪ್ರಸ್ತಾವನೆಯನ್ನು ಕರ್ನಾಟಕ (ಸಾರ್ವಜನಿಕ) ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಕರ್ನಾಟಕ ಸಾರ್ವಜನಿಕ ಪಾರದರ್ಶಕತೆ ನಿಯಮಗಳು, 2000 ರಲ್ಲಿ ನಿಗದಿಪಡಿಸಿರುವ ಕಾರ್ಯ ವಿಧಾನವನ್ನು ಪಾಲಿಸಿ ಕ್ರಮ ಕೈಗೊಳ್ಳತಕ್ಕದ್ದು.

3. ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ : ಎಫ್‌ಡಿ 04 ಟಿಎಫ್‌ಪಿ 2018, ದಿನಾಂಕ : 08-01-2019 ರನ್ವಯ ಇಲಾಖಾ ಕಾರ್ಯದರ್ಶಿಗಳಿಗೆ ಪ್ರದತ್ತವಾದ ಅಧಿಕಾರದನ್ವಯ ಹೊರಡಿಸಲಾಗಿದೆ.

PR – 174

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಉಷಾ ಎಸ್.

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಕೆ.ಎ.ಟಿ. ಮತ್ತು ಬಾ.ನಿ)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ : ಆಯುಷ್ ಕಾಲೇಜು/ಕೋರ್ಸ್‌ಗಳನ್ನು ಪ್ರಾರಂಭಿಸಲು ಅಥವಾ ಪ್ರವೇಶ ಮಿತಿ ಹೆಚ್ಚಿಸಲು ಅರ್ಜಿ ಸಲ್ಲಿಕೆ ಮತ್ತು ಮುಂದಿನ ಕ್ರಮದ ಬಗ್ಗೆ ಕಾಲನಿಗದಿ (Calender of Events) ಹಾಗೂ ಈ ಬಗ್ಗೆ ನಿರಾಕ್ಷೇಪಣಾ ಪ್ರಮಾಣ ಪತ್ರ ಒದಗಿಸುವ ಕುರಿತು ಪರಿಶೀಲಿಸಲು ಉನ್ನತ ಮಟ್ಟದ ಸಮಿತಿ ರಚಿಸುವ ಬಗ್ಗೆ.

ಓದಲಾಗಿದೆ : 1) ದಿನಾಂಕ : 12-02-2019 ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿ.

ಪ್ರಸ್ತಾವನೆ:

ಆಯುಷ್ ಮತ್ತು ಫಾರ್ಮಸಿ ಕೋರ್ಸ್‌ಗಳನ್ನು ಹೊಸದಾಗಿ ಪ್ರಾರಂಭಿಸುವ/ಪ್ರವೇಶ ಮಿತಿ ಹೆಚ್ಚಿಸುವ ಕುರಿತು ರಾಜ್ಯ ಸರ್ಕಾರದ ನಿರಾಕ್ಷೇಪಣಾ ಪ್ರಮಾಣ ಪತ್ರ/ಅನುಮತಿ ನೀಡುವ ವಿಧಾನವನ್ನು ಸ್ಟ್ರೀಮ್‌ಲೈನ್‌ಗೊಳಿಸುವ ಕುರಿತು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ದಿನಾಂಕ : 12-02-2019 ರಂದು ಸಭೆ ನಡೆಸಲಾಗಿದೆ. ಸದರಿ ಸಭೆಯಲ್ಲಿ, ಆಯುಷ್/ಫಾರ್ಮಸಿ ಕೋರ್ಸ್‌ಗಳನ್ನು ಪ್ರಾರಂಭಿಸಲು/ಪ್ರವೇಶ ಮಿತಿ ಹೆಚ್ಚಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಪ್ರತಿ ಶೈಕ್ಷಣಿಕ ಸಾಲಿನಲ್ಲಿ ಭಾರತ ಸರ್ಕಾರದ ಆಯುಷ್ ಮಂತ್ರಾಲಯ/ಪಿಸಿಐ ನಿಗದಿಪಡಿಸಿರುವ ಕಾಲಮಿತಿ ಮೀರಿದ ಅನಂತರ ಕಾನ್ಸೆಂಟ್ ಆಫ್ ಅಫಿಲಿಯೇಷನ್ ನೀಡುತ್ತಿರುವುದನ್ನು ಗಮನಿಸಿ, ವಿವರವಾಗಿ ಚರ್ಚಿಸಿದೆ. ಸದರಿ ಸಭೆಯ ಮೇಲೆ ಓದಲಾದ ನಡವಳಿಯಲ್ಲಿ ಆಯುಷ್ ಕೋರ್ಸ್‌ಗಳನ್ನು ಹೊಸದಾಗಿ ಪ್ರಾರಂಭಿಸಲು ಅಥವಾ ಪ್ರವೇಶ ಮಿತಿ ಹೆಚ್ಚಿಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕಾನ್ಸೆಂಟ್ ಆಫ್ ಅಫಿಲಿಯೇಷನ್ ಪಡೆದು ಅರ್ಜಿ ಸಲ್ಲಿಸಲು ಮತ್ತು ಸದರಿ ಅರ್ಜಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಾರ್ವಜನಿಕ/ಶೈಕ್ಷಣಿಕ ಹಿತದೃಷ್ಟಿಯಿಂದ ಕಾಲನಿಗದಿ (ಕ್ಯಾಲೆಂಡರ್ ಆಫ್ ಈವೆಂಟ್ಸ್) ಮಾಡಲು ಹಾಗೂ ಸದರಿ ಕೋರ್ಸ್‌ಗಳಿಗೆ ರಾಜ್ಯ ಸರ್ಕಾರದಿಂದ ಒದಗಿಸಬೇಕಾದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ನೀಡುವ/ನೀಡದಿರುವ ಬಗ್ಗೆ ನಿರ್ಧರಿಸಲು ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ರಚಿಸಲು ನಿರ್ಣಯಿಸಲಾಗಿದೆ. ಅದರಂತೆ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ಆಕುಕ 100 ಪಿಟಿಡಿ 2019, ಬೆಂಗಳೂರು, ದಿನಾಂಕ : 23-03-2019

ಮೇಲೆ ಓದಲಾದ ಪ್ರಸ್ತಾವನೆಯ ಹಿನ್ನೆಲೆಯಲ್ಲಿ, ಸರ್ಕಾರವು, ಆಯುಷ್ ಕೋರ್ಸ್‌ಗಳನ್ನು ಹೊಸದಾಗಿ ಪ್ರಾರಂಭಿಸಲು/ಪ್ರವೇಶ ಮಿತಿ ಹೆಚ್ಚಿಸಲು ಇಚ್ಛಿಸುವ ಸಂಸ್ಥೆಗಳು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಕಾನ್ಸೆಂಟ್ ಆಫ್ ಅಫಿಲಿಯೇಷನ್ ಪಡೆದು ಅರ್ಜಿ ಸಲ್ಲಿಸಲು ಮತ್ತು ಸದರಿ ಅರ್ಜಿಗಳ ಮೇಲೆ ಕ್ರಮ ಕುರಿತು ಹಾಗೂ ಸದರಿ ಸಂಸ್ಥೆಗಳಿಗೆ ರಾಜ್ಯ ಸರ್ಕಾರದಿಂದ ಒದಗಿಸಬೇಕಾದ ನಿರಾಕ್ಷೇಪಣಾ ಪ್ರಮಾಣ ಪತ್ರ ನೀಡುವ ಬಗ್ಗೆ ನಿರ್ಧರಿಸಿ ಶಿಫಾರಸ್ಸು ಮಾಡಲು ಈ ಕೆಳಗಿನಂತೆ ಕಾಲನಿಗದಿ ಹಾಗೂ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿ ಆದೇಶಿಸಿದೆ.

ಅರ್ಜಿ ಸಲ್ಲಿಕೆ/ಪ್ರಕ್ರಿಯೆ ಕಾಲನಿಗದಿ (Calender of Events) :

ಕ್ರ.ಸಂ. ವಿವರ ನಿಗದಿಪಡಿಸಿದ ದಿನಾಂಕ (ಪ್ರತಿ ವರ್ಷ) ಷರಾ
01 ನಿರಾಕ್ಷೇಪಣಾ ಪ್ರಮಾಣ ಪತ್ರ/ಅನುಮತಿಗಾಗಿ ಅರ್ಜಿ ಸ ಲಿ ಸ ್ಲ ಲು ವ ುೕ 01 ರಿಂದ 10ನೇ ತಾರೀಖಿನವರೆಗೆ ೆ ಆಯುಷ್ ಇಲಾಖೆಯ ಹಂತದಲ್ಲಿ
02 ಸ ಂಸ್ಥೆಗಳ ಪರಿವೀಕ್ಷಣೆ ಮತ್ತು ಪ್ರಸ್ತಾವನೆ/ವರದಿಯನ್ನು ಸ ರ್ಕಾರಕ್ಕೆ ಸಲ್ಲಿಸಲು ವ ುೕ 16 ರಿಂದ 31ನೇ ತಾರೀಖಿನವರೆಗೆ ೆ
03 ಪ ಸ್ತಾವನೆ/ವರದಿಯ ಮೇಲೆ ಕ್ರಮಕ್ಕಾಗಿ ಸಮಿತಿಯ ಸಭೆ ್ರ ವ ುತ್ತು ಶಿಫಾರಸ್ಸು ಮಾಡಲು ಜೂನ್ 01 ರಿಂದ 15ನೇ ತಾರೀಖಿನವರೆಗೆ ಸ ರ್ಕಾರದ ಹಂತದಲ್ಲಿ
04 ಶಿಫಾರಸ್ಸಿನ ವ ುೕಲೆ ೆ ನಿರಾಕ್ಷೇಪಣಾ ಪ ವ ್ರ iಾಣ ಪ ತ /ಅನುಮತಿ ನೀಡಲು ್ರ ಜೂನ್ ತಿಂಗಳ 16ನೇ ತಾರೀಖಿನ ಅನಂತರ
ಸ ೂಚನೆ : ಕೊನೆಯ ದಿನಾಂಕದ ಬಳಿಕ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೯, ೨೦೧೯ ೩೯೫

ಆಯುಷ್ ಇಲಾಖೆಯಿಂದ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆ/ವರದಿಯನ್ನು ಪರಿಶೀಲಿಸಿ ಸದರಿ ಸಂಸ್ಥೆಗಳಿಗೆ ನಿರಾಕ್ಷೇಪಣಾ ಪ್ರಮಾಣ ಪತ್ರ/ಅನುಮತಿ

ಕ್ರ.ಸಂ. ಹ ುದ್ದೆ/ಪದನಾಮ ಸ್ಥಾನ
01 ಸ ರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧ್ಯಕ್ಷರು
02 ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಸ ದ ಸ ್ಯರು
03 ಆಯುಕ್ತರು, ಆಯುಷ್ ಇಲಾಖೆ ಸ ದ ಸ ್ಯರು
04 ಪ್ರಾಚಾರ್ಯರು ಸ ರ್ಕಾರಿ ಆಯುರ್ವೇದ/ಹೋಮಿಯೋಪಥಿ/ಯುನಾನಿ ವೈದ್ಯಕೀಯ ಮಹಾವಿದ್ಯಾಲಯ, ಬ ಂಗಳೂರು ೆ ಸ ರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯ, ಮೈಸೂರು (ಆಯಾ ಪದ್ಧತಿಯ ಅರ್ಜಿಗಳಿಗೆ ಸಂಬಂಧಪಟ್ಟಂತೆ) ಸ ದ ಸ ್ಯರು
05 ಜಂಟಿ ನಿರ್ದೇಶಕರು (ವೈ.ಶಿ) ಆಯುಷ್ ಇಲಾಖೆ ಸ ದ ಸ ್ಯ ಕಾರ್ಯದರ್ಶಿ

PR-175

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಟಿ. ಕಮಲಮ್ಮ

SC-50

ಸರ್ಕಾರದ ಅಧೀನ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾ.ವೈ.ಪ. ಮತ್ತು ಸಮನ್ವಯ)

ತೋಟಗಾರಿಕೆ ಮತ್ತು ರೇಷ್ಮೆ ಸಚಿವಾಲಯ

ವಿಷಯ : ರೇಷ್ಮೆ ನಿರ್ದೇಶನಾಲಯದಲ್ಲಿ ಅಗತ್ಯವಿರುವ ಸಂಗ್ರಹಣೆಗಳಿಗೆ ಇ-ಟೆಂಡರ್ ಕರೆಯಲು ವಿವಿಧ ಪ್ರಾಧಿಕಾರಗಳನ್ನು ರಚಿಸುವ ಕುರಿತು.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ : ತೋಇ 12 ರೇಕೃವಿ 2015, ದಿನಾಂಕ : 26-10-2018.

2) ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು ಇವರ ಪತ್ರ ಸಂಖ್ಯೆ :

ರೇನಿ/ಇಸಂಗ್ರಹ/ಟೆಂಡರ್ ಸಮಿತಿ/15/2014-15, ದಿನಾಂಕ : 16-11-2018.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ : (1)ರ ದಿನಾಂಕ : 26-10-2018ರ ಆದೇಶದಲ್ಲಿ ರೇಷ್ಮೆ ನಿರ್ದೇಶನಾಲಯದಲ್ಲಿ ಅಗತ್ಯವಿರುವ ಸಂಗ್ರಹಣೆಗಳಿಗೆ ಇ-ಟೆಂಡರ್ ಕರೆಯಲು ವಿವಿಧ ಪ್ರಾಧಿಕಾರಗಳನ್ನು ರಚಿಸಿ ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ : (2)ರ ದಿನಾಂಕ 16-11-2018ರ ಪತ್ರದಲ್ಲಿ ಸರ್ಕಾರದ ಆದೇಶ ಸಂಖ್ಯೆ : ತೋಇ 12 ರೇಕೃವಿ 2015, ದಿನಾಂಕ : 26-10-2018ರಲ್ಲಿ ರೂ. 1.00 ಕೋಟಿವರೆಗಿನ ಮೌಲ್ಯದ ಸಂಗ್ರಹಣೆಗಾಗಿ ಟೆಂಡರ್‌ನ್ನು ಅಂಗೀಕರಿಸುವ ಪ್ರಾಧಿಕಾರವನ್ನು ರಚಿಸಲಾಗಿರುತ್ತದೆ.

ಆದರೆ, ರೇಷ್ಮೆ ನಿರ್ದೇಶನಾಲಯದಲ್ಲಿ ಅವಶ್ಯವಿರುವ ಸಂಗ್ರಹಣೆಗಳಿಗೆ ಸಂಬಂಧಿಸಿದಂತೆ ರೇಷ್ಮೆ ಹೆಚ್ಚುವರಿ ನಿರ್ದೇಶಕರು (ತಾಂತ್ರಿಕ), ರೇಷ್ಮೆ ನಿರ್ದೇಶನಾಲಯ ಇವರು ಟೆಂಡರ್ ಆಹ್ವಾನಿಸುವ ಪ್ರಾಧಿಕಾರ ಮತ್ತು ಟೆಂಡರ್ ಪರಿಶೀಲನಾ ಮತ್ತು ಮೌಲ್ಯಮಾಪನ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಟೆಂಡರ್‌ಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ಇವರ ಅಧ್ಯಕ್ಷತೆಯಲ್ಲಿ ಜರುಗುತ್ತಿರುವ ಹಿನ್ನೆಲೆಯಲ್ಲಿ ರೂ. 1.00 ಕೋಟಿವರೆಗಿನ ಮೌಲ್ಯದ ಸಂಗ್ರಹಣೆಗಳ ಅಂಗೀಕಾರಕ್ಕಾಗಿ ಸರ್ಕಾರದ ಆದೇಶ ದಿನಾಂಕ : 26-10-2018ರಲ್ಲಿ ರಚಿಸಿರುವ ಪ್ರಾಧಿಕಾರದಲ್ಲಿ ಹೆಚ್ಚುವರಿ ನಿರ್ದೇಶಕರು (ಆಡಳಿತ) ಇವರ ಬದಲಿಗೆ ರೇಷ್ಮೆ ಹೆಚ್ಚುವರಿ ನಿರ್ದೇಶಕರು (ತಾಂತ್ರಿಕ) ಇವರನ್ನು ಸದಸ್ಯರನ್ನಾಗಿ ಬದಲಾಯಿಸಿ, ಈ ಕೆಳಕಂಡಂತೆ ಪರಿಷ್ಕರಿಸಿ ಸರ್ಕಾರದ ಆದೇಶವನ್ನು ಹೊರಡಿಸುವಂತೆ ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು ಕೋರಿರುತ್ತಾರೆ.

೩೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೯, ೨೦೧೯ ಭಾಗ ೧
1. ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು ರೇಷ್ಮೆ ನಿರ್ದೇಶನಾಲಯ, ಬೆಂಗಳೂರು ಅಧ್ಯಕ್ಷರು
2. ರೇಷ್ಮೆ ಹೆಚ್ಚುವರಿ ನಿರ್ದೇಶಕರು (ತಾಂತ್ರಿಕ), ರೇಷ್ಮೆ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
3. ವ ುುಖ್ಯ ಲೆಕ್ಕಾಧಿಕಾರಿಗಳು, ರೇಷ್ಮೆ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
4. ರೇಷ್ಮೆ ಜಂಟಿ ನಿರ್ದೇಶಕರು, ಗೂಡು ಮಾರುಕಟ್ಟೆ & ಗೂಡಿನ ನಂತರದ ಚಟುವಟಿಕೆ ವಿಭಾಗ, ರೇಷ್ಮೆ ನಿರ್ದೇಶನಾಲಯ ಸ ದ ಸ ್ಯ ಸಮಾವೇಶಕರು

ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, ರೂ. 1.00 ಕೋಟಿವರೆಗಿನ ಮೌಲ್ಯದ ಸಂಗ್ರಹಣೆಗಾಗಿ ಟೆಂಡರ್ ಅಂಗೀಕರಿಸುವ ಪ್ರಾಧಿಕಾರವನ್ನು ಪರಿಷ್ಕರಿಸಿ ಪುನರ್ ರಚಿಸಲು ಸರ್ಕಾರವು ನಿರ್ಧರಿಸಿರುವ ಕಾರಣ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ : ತೋಇ 12 ರೇಕೃವಿ 2015, ಬೆಂಗಳೂರು, ದಿನಾಂಕ : 16-02-2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರೂ. 1.00 ಕೋಟಿವರೆಗಿನ ಮೌಲ್ಯದ ಸಂಗ್ರಹಣೆಗಾಗಿ ಟೆಂಡರ್ ಅಂಗೀಕರಿಸುವ

1. ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು ರೇಷ್ಮೆ ನಿರ್ದೇಶನಾಲಯ, ಬೆಂಗಳೂರು ಅಧ್ಯಕ್ಷರು
2. ರೇಷ್ಮೆ ಹೆಚ್ಚುವರಿ ನಿರ್ದೇಶಕರು (ತಾಂತ್ರಿಕ), ರೇಷ್ಮೆ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
3. ವ ುುಖ್ಯ ಲೆಕ್ಕಾಧಿಕಾರಿಗಳು, ರೇಷ್ಮೆ ನಿರ್ದೇಶನಾಲಯ, ಬೆಂಗಳೂರು ಸ ದ ಸ ್ಯರು
4. ರೇಷ್ಮೆ ಜಂಟಿ ನಿರ್ದೇಶಕರು, ಗೂಡು ಮಾರುಕಟ್ಟೆ & ಗೂಡಿನ ನಂತರದ ಚಟುವಟಿಕೆ ವಿಭಾಗ, ರೇಷ್ಮೆ ನಿರ್ದೇಶನಾಲಯ ಸ ದ ಸ ್ಯ ಸಮಾವೇಶಕರು

PR-176

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಬಿ. ವಿಜಯಕುಮಾರ್

ಸರ್ಕಾರದ ಅಧೀನ ಕಾರ್ಯದರ್ಶಿ

ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ (ರೇಷ್ಮೆ).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಸಿಆಸುಇ 23 ಸೇನಿಡಿ 2018, ಬೆಂಗಳೂರು, ದಿನಾಂಕ: 23-04-2019.

ವಿಷಯ: ರಾಜ್ಯ ಸಿವಿಲ್ ಸೇವೆಗಳಲ್ಲಿನ ಸಾಮಾನ್ಯ ವೃಂದಗಳಾದ (common cadres) ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಸಹಾಯಕ, ಕಿರಿಯ ಸಹಾಯಕ, ಶೀಘ್ರಲಿಪಿಗಾರ, ಬೆರಳಚ್ಚುಗಾರ ಮತ್ತು ಗ್ರೂಪ್-ಡಿ ವೃಂದಗಳಿಗೆ ಸಾಮಾನ್ಯ ನಿಯಮಗಳು ಅಳವಡಿಸಲು ಹಾಗೂ ಆಯಾ ಇಲಾಖೆಗಳಲ್ಲಿನ ಇತರೆ ವೃಂದಗಳಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲು ಪ್ರಸ್ತಾವನೆಗಳನ್ನು ತುಂಡುತುಂಡಾಗಿ (piecemeal) ಸರ್ಕಾರಕ್ಕೆ ಸಲ್ಲಿಸಬಾರದೆಂಬ ಬಗ್ಗೆ ಸೂಚನೆ.

ಉಲ್ಲೇಖ: 1. ದಿನಾಂಕ 08-10-2004ರ ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 97 ಎಸ್ಆರ್‌ಡಿ 2004,

2. ದಿನಾಂಕ 03.11.2011ರ ಸುತ್ತೋಲೆ ಸಂಖ್ಯೆ.ಸಿಆಸುಇ 130 ಸೇನಿಇ 2011.

1. ರಾಜ್ಯ ಸಿವಿಲ್ ಸೇವೆಗಳಲ್ಲಿನ ಸಾಮಾನ್ಯ ವೃಂದಗಳಾದ (common cadres) ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಸಹಾಯಕ, ಕಿರಿಯ ಸಹಾಯಕ, ಶೀಘ್ರಲಿಪಿಗಾರ, ಬೆರಳಚ್ಚುಗಾರ ಮತ್ತು ಗ್ರೂಪ್-ಡಿ ವೃಂದಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಪಟ್ಟಿಯಲ್ಲಿ ನಮೂದಿಸಿದ ವಿವಿಧ ನಿಯಮಗಳನ್ವಯ ಏಕರೂಪದ ನೇಮಕಾತಿ ವಿಧಾನ, ವಿದ್ಯಾರ್ಹತೆಯನ್ನು ಮತ್ತು ದ್ವಿತೀಯ ದರ್ಜೆ ಸಹಾಯಕ/ಕಿರಿಯ ಸಹಾಯಕ ವೃಂದಗಳಿಗೆ ಸಂಬಂಧಿಸಿದಂತೆ ಏಕರೂಪದ ವಿದ್ಯಾರ್ಹತೆ ಮತ್ತು ನೇಮಕಾತಿ ವಿಧಾನದ ಜೊತೆಗೆ ನೇರ ನೇಮಕಾತಿ ಮತ್ತು ಬಡ್ತಿಯ ಅನುಪಾತವನ್ನು ಸಹ ನಿಗದಿಪಡಿಸಲಾಗಿದೆ. (Uniform quota between direct recruits and promotees in respect of the cadres of Junior Assistants/Second Division Assistants has been prescribed in addition to educational qualification and method of recruitment):

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೯, ೨೦೧೯ ೩೯೭
ಕ್ರ.ಸಂ. ಸಾಮಾನ್ಯ ವೃಂದಗಳು ಅನ್ವಯವಾಗುವ ನಿಯಮಗಳು ಕಾಲಂ 2 ರಲ್ಲಿ ನಮೂದಿಸಿದ ವೃಂದಗಳಿಗೆ ಸಂಬಂಧಿಸಿದಂತೆ, ಕಾಲಂ 3 ರಲ್ಲಿ ನಮೂದಿಸಿದ ನಿಯಮಗಳಲ್ಲಿನ ಅಂಶಗಳು
1 2 3 4
1 ಪ ಥ ್ರ ವ ು ದರ್ಜೆ ಸಹಾಯಕ, ದಿ ್ವತೀಯ ದರ್ಜೆ ಸಹಾಯಕ, ಸ ಹಾಯಕ ಮತ್ತು ಕಿರಿಯ ಸ ಹಾಯಕ ವೃಂದಗಳು. Karnataka Civil Services (Recruitment to the Ministerial Posts) Rules, 1978. 1. ದ್ವಿತೀಯ ದರ್ಜೆ ಸಹಾಯಕ ಮತ್ತು ಕಿರಿಯ ಸಹಾಯಕ ವ ೃಂದಗಳಿಗೆ ಸ ಂಬಂಧಿಸಿದಂತೆ: ವಿದ್ಯಾರ್ಹತೆ ವ ುತ್ತು ನೇಮಕಾತಿ ವಿಧಾನದ ಜೊತೆಗೆ ನೇರ ನೇಮಕಾತಿ ಮತ್ತು ಬಡ್ತಿಯ ಅನುಪಾತ. 2. ಪ್ರಥಮ ದರ್ಜೆ ಸಹಾಯಕ ಮತ್ತು ಸಹಾಯಕ ವೃಂದಗಳಿಗೆ ಸ ಂಬಂಧಿಸಿದಂತೆ: ನೇಮಕಾತಿ ವಿಧಾನ ವ ುತ್ತು ವಿದ್ಯಾರ್ಹತೆ. (ನೇರ ನೇಮಕಾತಿ ಮತ್ತು ಬಡ್ತಿಯ ಅನುಪಾತವನ್ನು ನಿಗದಿಪಡಿಸಿರುವುದಿಲ್ಲ) ಬಡ್ತಿಗೆ ಕನಿಷ್ಠ ಸ ೕವಾರ್ಹತೆ ನಿಗದಿಪಡಿಸಿಲ್ಲ. ೆ
2 ಶೀಘ್ರಲಿಪಿಗಾರ ಮತ್ತು ಬ ರಳಚ್ಚುಗಾರರ ವೃಂದಗಳು ೆ Karnataka Civil Services (Recruitment to the posts of Stenographers and Typists) Rules, 1983. ಶೀಘ್ರಲಿಪಿಗಾರ ಮತ್ತು ಬೆರಳಚ್ಚುಗಾರ ವೃಂದಗಳಿಗೆ ಸ ಂಬಂಧಿಸಿದಂತೆ: ನೇಮಕಾತಿ ವಿಧಾನ ಮತ್ತು ವಿದ್ಯಾರ್ಹತೆ. ಶೀಘ್ರಲಿಪಿಗಾರರ ವ ೃಂದಕ್ಕೆ ಸಂಬಂಧಿಸಿದಂತೆ ಬಡ್ತಿಗಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. (ನೇರ ನೇಮಕಾತಿ ಮತ್ತು ಬಡ್ತಿಯ ಅನುಪಾತವನ್ನು ನಿಗದಿಪಡಿಸಿರುವುದಿಲ್ಲ) ಹಾಗೂ ಬಡ್ತಿಗೆ ಕನಿಷ್ಠ ಸೇವಾರ್ಹತೆ ನಿಗದಿಪಡಿಸಿಲ್ಲ.
3 ಗ್ರೂಪ್-ಡಿ ವೃಂದಗಳು Karnataka Civil Services (General Recruitment) Rules, 1977 and the Karnataka Civil Services (Direct Recruitment By Competitive Examinations and Selection) (General) Rules, 2006. ಗ್ರೂಪ್-ಡಿ ವೃಂದಗಳಿಗೆ ಸಂಬಂಧಿಸಿದಂತೆ: ನೇಮಕಾತಿ ವಿಧಾನ ಮತ್ತು ವಿದ್ಯಾರ್ಹತೆ. (ಇದು lowest entry level post ಆಗಿರುವುದರಿಂದ, ಇದಕ್ಕೆ ಬಡ್ತಿಯ ಅನುಪಾತ ಅನ್ವಯವಾಗುವುದಿಲ್ಲ) ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿದೆ.
4 ವಾಹನ ಚಾಲಕ ವೃಂದಗಳು Rule 10 of the Karnataka Civil Services (Direct Recruitment By Competitive Examinations and Selection) (General) Rules, 2006. ವಾಹನ ಚಾಲಕ ವೃಂದಗಳಿಗೆ ಸಂಬಂಧಿಸಿದಂತೆ: ನೇರ ನೇಮಕಾತಿ ವಿಧಾನ ಮಾತ್ರ. (ವಾಹನ ಚಾಲಕರ ವಿವಿಧ ವ ೃಂದಗಳಿಗೆ ನೇರ ನೇಮಕಾತಿಗಾಗಿ ಸ ಂಬಂಧಿಸಿದಂತೆ ಎಲ್ಲಾ ಇಲಾಖೆ / ಸ ೕವೆಗಳಿಗೆ ೆ ಅನ್ವಯವಾಗುವ ಏಕ ರೂಪದ ವಿದ್ಯಾರ್ಹತೆಯನ್ನು ನಿಗದಿಪಡಿಸಿರುವುದಿಲ್ಲ.) ಯಾವ ಇಲಾಖೆಗೆ ನೇಮಕಾತಿ ವಿಧಾನವನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿಲ್ಲವೋ ಅಲ್ಲಿ ಈ ನಿಯಮಗಳು ಅನ್ವಯಿಸುತ್ತದೆ.

2. ಮೇಲಿನ ಪಟ್ಟಿಯಲ್ಲ್ಲ್ಲಿ ನಮೂದಿಸಿದ ನಿಯಮಗಳ ವ್ಯಾಪ್ತಿಯಲ್ಲಿ ಬರುವ ಸದರಿ ಸಾಮಾನ್ಯ ವೃಂದಗಳಿಗೆ (common cadres) ಸಂಬಂಧಿಸಿದಂತೆ ಆ

ನಿಯಮಗಳಲ್ಲಿನ ಉಪಬಂಧಗಳು ಆಯಾಯ ಇಲಾಖೆ / ಸೇವೆಯ ನೇಮಕಾತಿ ನಿಯಮಗಳ ಮೇಲೆ ಅದರಲ್ಲಿ ನಿಗದಿಪಡಿಸಿರುವಷ್ಟರ ಮಟ್ಟಿಗೆ

ಅಧ್ಯಾರೋಹಿ ಪರಿಣಾಮ (overriding effect) ಹೊಂದಿರುತ್ತವೆ. ಅಂದರೆ, ಸದರಿ ಸಾಮಾನ್ಯ ನಿಯಮಗಳಲ್ಲಿನ ಉಪಬಂಧಗಳಿಗೆ ವ್ಯತಿರಿಕ್ತವಾಗಿ

ಆಯಾ ಇಲಾಖೆ / ಸೇವೆಯ ನೇಮಕಾತಿ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಅದು ಅನ್ವಯವಾಗುವುದಿಲ್ಲ ಹಾಗೂ ಅದರ ಬದಲು ಮೇಲಿನ

ಪಟ್ಟಿಯಲ್ಲಿ ಉಲ್ಲೇಖಿಸಿದ ನಿಯಮಗಳಲ್ಲಿನ ಸಂಬಂಧಿಸಿದ ಉಪಬಂಧಗಳು ಅನ್ವಯವಾಗುತ್ತವೆ.

3. ಸದರಿ ಸಾಮಾನ್ಯ ವೃಂದಗಳಿಗೆ ಸಂಬಂಧಿಸಿದ ಮೇಲ್ಕಂಡ ನಿಯಮಗಳಲ್ಲಿ ನಿಗದಿಪಡಿಸದೇ ಇರುವ ಅಂಶಗಳನ್ನು ಸಹ ಮೇಲಿನ ಪಟ್ಟಿಯಲ್ಲಿ ನಮೂದಿಸಲಾಗಿದೆ. ಆದುದರಿಂದ, ಈ ರೀತಿ ನಿಗದಿಪಡಿಸದೇ ಇರುವ ಸದರಿ ಅಂಶಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯ / ಸೇವೆಯ ನೇಮಕಾತಿ ನಿಯಮಗಳಲ್ಲಿ ಸೂಕ್ತ ಉಪಬಂಧಗಳನ್ನು ಕಲ್ಪಿಸುವುದು ಅನಿವಾರ್ಯವಾಗಿದೆ.

4. ಮೇಲಿನ ಪಟ್ಟಿಯಲ್ಲ್ಲ್ಲಿ ನಮೂದಿಸಿದ ಸಾಮಾನ್ಯ ವೃಂದಗಳು (common cadres) ಹಾಗೂ ಆಯಾ ಇಲಾಖೆಗಳಲ್ಲಿನ ಇತರೆ ವೃಂದಗಳಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲು ಪ್ರಸ್ತಾವನೆಗಳನ್ನು ತುಂಡುತುಂಡಾಗಿ (piecemeal) ಸಲ್ಲಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದಾಗಿ, ವೃಂದ ಪರಿಶೀಲನಾ ಸಮಿತಿಗಳು, ಸರ್ಕಾರದ ಇಲಾಖೆಗಳು ಹಾಗೂ ಸಚಿವ ಸಂಪುಟದ ಮೇಲೆ ತಪ್ಪಿಸಬಹುದಾದ (avoidable) ಕಾರ್ಯಭಾರದ ಹೊರೆ ಅನಾವಶ್ಯಕವಾಗಿ ಬೀಳುತ್ತದೆ. ಆದುದರಿಂದ, ಅದನ್ನು ತಪ್ಪಿಸಲು ಮೇಲೆ 1ರಲ್ಲಿ ಉಲ್ಲೇಖಿಸಿದ ದಿನಾಂಕ: 08.10.2004ರ ಸರ್ಕಾರದ ಆದೇಶ ಮತ್ತು ಮೇಲೆ 2ರಲ್ಲಿ ಉಲ್ಲೇಖಿಸಿದ ದಿನಾಂಕ:03.11.2011ರ ಸುತ್ತೋಲೆಗಳನ್ವಯ ಈ ಕೆಳಕಂಡಂತೆ ಕ್ರಮ ತೆಗೆದುಕೊಳ್ಳತಕ್ಕದ್ದೆಂದು ಈ ಮೂಲಕ ಸೂಚಿಸಿದೆ:-

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೩೯೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೯, ೨೦೧೯ ಭಾಗ ೧

(i) ವೃಂದ ಮತ್ತು ನೇಮಕಾತಿ ನಿಯಮಗಳನ್ನು ಇನ್ನೂ ರೂಪಿಸದೇ ಇರುವ ಇಲಾಖೆಗಳು ಅಂತಹ

ನಿಯಮಗಳನ್ನು ತ್ವರಿತವಾಗಿ ರೂಪಿಸಲು ಕ್ರಮ ತೆಗೆದುಕೊಳ್ಳತಕ್ಕದ್ದು. ಆ ರೀತಿ ಹೊಸ ನಿಯಮಗಳನ್ನು

ರೂಪಿಸುವ ಸಂದರ್ಭದಲ್ಲಿ, ಸದರಿ ಸಾಮಾನ್ಯ ವೃಂದಗಳಿಗೆ ಸಂಬಂಧಿಸಿದ ಮೇಲ್ಕಂಡ ನಿಯಮಗಳಲ್ಲಿನ

ಹಾಗೂ ಕಂಡಿಕೆ 3ರಲ್ಲಿನ ಅಂಶಗಳ ಕುರಿತಂತೆ ಹಾಗೂ ಆಯಾ ಇಲಾಖೆಯ / ಸೇವೆಯ ಇತರೆ ವೃಂದಗಳಿಗೆ

ಸಂಬಂಧಿಸಿದಂತೆ ಉಪಬಂಧಗಳನ್ನು ಆ ರೀತಿ ಹೊಸದಾಗಿ ರೂಪಿಸುವ ನಿಯಮಗಳಲ್ಲಿ ಅಳವಡಿಸಿ,

ನಿಯಮಗಳನ್ನು ರೂಪಿಸಬಹುದಾಗಿದೆ.

(ii) ವೃಂದ ಮತ್ತು ನೇಮಕಾತಿ ನಿಯಮಗಳನ್ನು ಈಗಾಗಲೇ ರೂಪಿಸಿ ಜಾರಿ ಮಾಡಿದ ಇಲಾಖೆಗಳು, ಕನಿಷ್ಠ

ಮೂರು ವರ್ಷಗಳಿಗೊಮ್ಮೆ, ಆ ನಿಯಮಗಳನ್ನು ಪುನರಾವಲೋಕಿಸಿ, ವ್ಯಾಪಕವಾದ ಹೊಸ ನಿಯಮಗಳನ್ನು

ತಯಾರಿಸಿ ಜಾರಿಗೆ ತರಲು ಕ್ರಮ ತೆಗೆದುಕೊಳ್ಳತಕ್ಕದ್ದು. ಆ ರೀತಿ ಹೊಸ ನಿಯಮಗಳನ್ನು ರೂಪಿಸುವ ಸಂದರ್ಭದಲ್ಲಿ, ಸದರಿ ಸಾಮಾನ್ಯ ವೃಂದಗಳಿಗೆ ಸಂಬಂಧಿಸಿದ ಮೇಲ್ಕಂಡ ನಿಯಮಗಳಲ್ಲಿನ ಹಾಗೂ ಕಂಡಿಕೆ

3ರಲ್ಲಿನ ಅಂಶಗಳ ಕುರಿತಂತೆ ಹಾಗೂ ಆಯಾ ಇಲಾಖೆಯ / ಸೇವೆಯ ಇತರೆ ವೃಂದಗಳಿಗೆ ಸಂಬಂಧಿಸಿದಂತೆ

ಉಪಬಂಧಗಳನ್ನು ಈಗಾಗಲೇ ಅಳವಡಿಸದೇ ಇದ್ದಲ್ಲಿ ಅದನ್ನು ಅಳವಡಿಸಬಹುದಾಗಿದೆ ಹಾಗೂ ಆಯಾ

ಇಲಾಖೆಯ / ಸೇವೆಯ ನೇಮಕಾತಿ ನಿಯಮಗಳಲ್ಲಿ ಪ್ರಸ್ತುತ ಇರುವ ಉಪಬಂಧಗಳನ್ನು, ಅಗತ್ಯವಿದ್ದಲ್ಲಿ,

ಪರಿಷ್ಕರಿಸಬಹುದಾಗಿದೆ.

(iii) ಮೇಲೆ 2ರಲ್ಲಿ ಉಲ್ಲೇಖಿಸಿದ ದಿನಾಂಕ: 03.11.2011ರ ಸುತ್ತೋಲೆಯ ಮೂಲಕ ಸೂಚಿಸಿದಂತೆ, ಯಾವುದೇ

ನೂತನ ಇಲಾಖೆ ಅಸ್ತಿತ್ವಕ್ಕೆ ಬಂದ ಒಂದು ವರ್ಷದ ಒಳಗಾಗಿ ಕಡ್ಡಾಯವಾಗಿ ವೃಂದ ಮತ್ತು ನೇಮಕಾತಿ

ನಿಯಮಗಳನ್ನು ರೂಪಿಸತಕ್ಕದ್ದು. ಈ ರೀತಿ ಹೊಸ ನಿಯಮಗಳನ್ನು ರೂಪಿಸುವ ಸಂದರ್ಭದಲ್ಲಿ, ಸದರಿ

ಸಾಮಾನ್ಯ ವೃಂದಗಳಿಗೆ ಸಂಬಂಧಿಸಿದ ಮೇಲ್ಕಂಡ ನಿಯಮಗಳಲ್ಲಿನ ಹಾಗೂ ಕಂಡಿಕೆ 3ರಲ್ಲಿನ ಅಂಶಗಳ

ಕುರಿತಂತೆ ಹಾಗೂ ಆಯಾ ಇಲಾಖೆಯ / ಸೇವೆಯ ಇತರೆ ವೃಂದಗಳಿಗೆ ಸಂಬಂಧಿಸಿದಂತೆ ಉಪಬಂಧಗಳನ್ನು

ಆ ರೀತಿ ತಯಾರಿಸುವ ಹೊಸ ನಿಯಮಗಳಲ್ಲಿ ಅಳವಡಿಸಿ, ನಿಯಮಗಳನ್ನು ರೂಪಿಸಬಹುದಾಗಿದೆ.

(iv) ಯಾವುದೇ ಕಾರಣಕ್ಕೂ ಆಯಾ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಪ್ರತ್ಯೇಕ ತುಂಡು ತುಂಡಾದ ತಿದ್ದುಪಡಿಗಳನ್ನು (separate piecemeal amendments) ಮಾಡುವ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದಲ್ಲ;

(v) ಈಗಾಗಲೇ ಇಂತಹ ತುಂಡು ತುಂಡಾದ ತಿದ್ದುಪಡಿಗಳನ್ನು ಮಾಡುವ ಪ್ರಸ್ತಾವನೆಗಳಿದ್ದರೆ ಅವುಗಳನ್ನು ಮಾತ್ರ ಅನುಮೋದನೆಗಾಗಿ ಸಲ್ಲಿಸುವುದು.

ಈ ರೀತಿ ಕ್ರಮ ತೆಗೆದುಕೊಂಡಲ್ಲಿ, ತುಂಡು ತುಂಡಾಗಿ (piecemeal) ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಗಳನ್ನು ಪ್ರಸ್ತಾಪಿಸುವ ವಾಡಿಕೆಯನ್ನು ತಪ್ಪಿಸಿದಂತಾಗುತ್ತದೆ ಹಾಗೂ ಮೇಲೆ ಉಲ್ಲೇಖಿಸಿದ, ತಪ್ಪಿಸಬಹುದಾದ (avoidable) ಕಾರ್ಯಭಾರದ ಹೊರೆಯನ್ನು ಸಹ ತಪ್ಪಿಸಿದಂತಾಗುತ್ತದೆ.

5. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ /ಪ್ರಧಾನ ಕಾರ್ಯದರ್ಶಿ / ಕಾರ್ಯದರ್ಶಿಯವರು ಮೇಲಿನ ಸೂಚನೆಗಳನ್ನು ಅವರವರ ಆಡಳಿತ ವ್ಯಾಪ್ತಿಗೆ ಬರುವ ಇಲಾಖೆಗಳ ಮುಖ್ಯಸ್ಥರ ಗಮನಕ್ಕೆ ತರಲು ಹಾಗೂ ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದೆಂದು ಅವರಿಗೆ ಸೂಚಿಸಲು ಕೋರಿದೆ.

PR-193

ಎ.ವಿ.ಶೈಲಜ

SC-200

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಸೇವಾ ನಿಯಮಗಳು-2).

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 09 May 2019. Indian Gazettes, https://egazette.servantsofknowledge.in/details/in.gazette.karnataka_new.2019-05-09.Part-1/. Archive identifier in.gazette.karnataka_new.2019-05-09.Part-1.