Servants of Knowledge
Karnataka Gazette · Government of Karnataka

Karnataka Gazette, Part Part-1, 23 May 2019

Published 23 May 2019

Part
Part-1
Identifier
in.gazette.karnataka_new.2019-05-23.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಮೇ ೨೩, ೨೦೧೯ (ಜ್ಯೇಷ್ಠ ೨, ಶಕ ವರ್ಷ ೧೯೪೧)

Bengaluru, Thursday, May 23, 2019 (Jyeishta 2, Shaka Varsha 1941)

ಸಂಪುಟ ೧೫೪

Volume 154

ಸಂಚಿಕೆ ೨೧

Issue 21

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ : ಇಲಾಖಾ ವಿಚಾರಣೆಗಳಲ್ಲಿ ವಿಚಾರಣಾಧಿಕಾರಿಗಳಾಗಿ ನೇಮಕಗೊಳ್ಳುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ಹಾಗೂ ಸೇವೆಯಲ್ಲಿರುವ ಅಧಿಕಾರಿಗಳಿಗೆ ನೀಡಲಾಗುತ್ತಿರುವ ಸಂಭಾವನೆ ಪರಿಷ್ಕರಣೆ ಬಗ್ಗೆ.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 06 ಸೇಇವಿ 2011, ದಿನಾಂಕ: 28.04.2011

2. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 07 ಸೇಇವಿ 2012, ದಿನಾಂಕ: 03.02.2012.

3. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 45 ಸೇಇವಿ 2014, ದಿನಾಂಕ: 08.01.2015

4. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 29 ಸೇಇವಿ 2017, ದಿನಾಂಕ: 02.02.2019

ಪ್ರಸ್ತಾವನೆ :

ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಗಳು, 1957ರಡಿ ಸರ್ಕಾರಿ ನೌಕರರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯಾಗಿ ನೇಮಕವಾಗುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ಸರ್ಕಾರವು ಮೇಲೆ(1)ರಲ್ಲಿ ಓದಲಾದ ದಿನಾಂಕ: 28.04.2011ರ ಆದೇಶದಲ್ಲಿ ಪ್ರತಿ ವಿಚಾರಣೆಗೆ `. 15,000/-(ಹದಿನೈದು ಸಾವಿರ ರೂಪಾಯಿಗಳು) ಸಂಭಾವನೆಯನ್ನು (ವಾಹನ ಭತ್ಯೆಯೂ ಸೇರಿದಂತೆ) ನಿಗದಿಪಡಿಸಿದೆ. ಮೇಲೆ(3)ರಲ್ಲಿ ಓದಲಾದ ದಿನಾಂಕ: 08.01.2015ರ ಆದೇಶದಲ್ಲಿ ಸದರಿ ಸಂಭಾವನೆಯನ್ನು ಏಕವ್ಯಕ್ತಿ ಆರೋಪಿತರಾಗಿರುವ ಇಲಾಖಾ ವಿಚಾರಣೆ ಪ್ರಕರಣಗಳಿಗೆ ಅನ್ವಯಿಸುವಂತೆ ಮುಂದುವರಿಸಿ, ಜಂಟಿ ಇಲಾಖಾ ವಿಚಾರಣೆಗಳಿಗೆ ಪ್ರತ್ಯೇಕ ಸಂಭಾವನೆ ನಿಗದಿಪಡಿಸಲಾಗಿದೆ. ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಕ ಮಾಡಿದಾಗ ಮತ್ತು ನಿಗದಿಪಡಿಸಿರುವ ಅವಧಿಯಲ್ಲಿಯೇ ವಿಚಾರಣಾ ವರದಿಯನ್ನು ನೀಡುವ ಪ್ರಕರಣಗಳಲ್ಲಿ ಮಾತ್ರ ಅಂತಹ ವಿಚಾರಣಾಧಿಕಾರಿಗಳಿಗೆ ಸರ್ಕಾರವು ಮೇಲೆ (2)ರಲ್ಲಿ ಓದಲಾದ ದಿನಾಂಕ: 03.02.2012ರ ಆದೇಶದಲ್ಲಿ `,5,000/-ಗಳ ಪ್ರೋತ್ಸಾಹಧನ/ಸಂಭಾವನೆಯನ್ನು ನಿಗದಿಪಡಿಸಿದೆ.

ಮೇಲ್ಕಂಡ ಸಂಭಾವನೆಯನ್ನು ಹೆಚ್ಚಳ ಮಾಡಲು ಬೇಡಿಕೆ ಸ್ವೀಕೃತವಾದ ಹಿನ್ನೆಲೆಯಲ್ಲಿ ಸರ್ಕಾರವು ಮೇಲೆ (4)ರಲ್ಲಿ ಓದಲಾದ ದಿನಾಂಕ: 02.02.2019ರ ಆದೇಶದಲ್ಲಿ ಏಕವ್ಯಕ್ತಿ ಆರೋಪಿತರಾಗಿರುವ ಇಲಾಖಾ ವಿಚಾರಣೆ ಪ್ರಕರಣಗಳಲ್ಲಿ ವಿಚಾರಣಾಧಿಕಾರಿಯಾಗಿ ನೇಮಕವಾಗುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ `.16,500/-ಗಳ (ಹದಿನಾರು ಸಾವಿರ ಐದು ನೂರು ರೂಪಾಯಿಗಳು) (ವಾಹನ ಭತ್ಯೆಯು ಸೇರಿದಂತೆ) ಸಂಭಾವನೆಯನ್ನು ಹಾಗೂ ವಿಚಾರಣಾಧಿಕಾರಿಯಾಗಿ ನೇಮಕವಾದ ಮತ್ತು ನಿಗದಿಪಡಿಸಿದ ಅವಧಿಯಲ್ಲಿ ವಿಚಾರಣಾ ವರದಿಯನ್ನು ಸಲ್ಲಿಸಿದ ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳಿಗೆ `.5,500/-ಗಳ(ಐದು ಸಾವಿರ ಐದು ನೂರು ರೂಪಾಯಿಗಳು) ಪ್ರೋತ್ಸಾಹಧನವನ್ನು ನಿಗದಿಪಡಿಸಿದೆ.

ಕರ್ನಾಟಕ ರಾಜ್ಯ ನಿವೃತ್ತ ನ್ಯಾಯಾಧೀಶರ ಅಧಿಕಾರಿಗಳ ಸಂಘವು(ರಿ) ಸರ್ಕಾರಕ್ಕೆ ಮನವಿ ಸಲ್ಲಿಸಿ ಇಲಾಖಾ ವಿಚಾರಣೆ ನಡೆಸಲು ವಿಚಾರಣಾಧಿಕಾರಿಯಾಗಿ ನೇಮಕಗೊಳ್ಳುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ನೀಡಲಾಗುತ್ತಿರುವ ಸಂಚಿತ ಸಂಭಾವನೆಯೊಂದಿಗೆ ದೈನಂದಿನ ವಿಚಾರಣೆಗಾಗಿ ಪ್ರತ್ಯೇಕವಾಗಿ ದಿನಭತ್ಯೆಯನ್ನು ನಿಗದಿಪಡಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಸರ್ಕಾರವು ಪ್ರಕರಣವನ್ನು ಮತ್ತೊಮ್ಮೆ ಪರಿಶೀಲಿಸಿದ ಸಂದರ್ಭದಲ್ಲಿ ಏಕವ್ಯಕ್ತಿಯ ವಿಚಾರಣೆಯು ಸಾಮಾನ್ಯವಾಗಿ ಕನಿಷ್ಠ 5 ರಿಂದ 10 ಅಥವಾ 12 ಸಿಟ್ಟಿಂಗ್‌ಗಳನ್ನು ಹಾಗೂ ಜಂಟಿ ಇಲಾಖಾ ವಿಚಾರಣೆಯು ಕನಿಷ್ಠ 10 ರಿಂದ 15, 20, 25 ಸಿಟ್ಟಿಂಗ್‌ಗಳನ್ನು ಒಳಗೊಂಡಿರುತ್ತವೆ. ಆಪಾದನೆ ಮತ್ತು ಅದರಲ್ಲಿ ಒಳಗೊಂಡಿರುವ ಸಾಕ್ಷಿಗಳು, ಆ ವಿಚಾರಣೆಗೆ ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸುವ ಅಂಶಗಳು ಒಳಗೊಂಡಂತೆ ಪ್ರಕರಣವನ್ನು ಆದ್ಯಂತವಾಗಿ ಅಧ್ಯಯನ ಮಾಡಿ ನಿಷ್ಪಕ್ಷಪಾತವಾಗಿ ವಿಚಾರಣೆ ನಡೆಸಿ ವರದಿಯನ್ನು ಸಲ್ಲಿಸಲು ಸಮಯ ಮತ್ತು

(೩೯೯)೪೦೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೩, ೨೦೧೯ ಭಾಗ ೧ ಪರಿಶ್ರಮದ ಅಗತ್ಯತೆ ಇರುತ್ತದೆ. ಇಂತಹ ಕೆಲಸಕ್ಕೆ ನ್ಯಾಯಯುತ ಹಾಗೂ ಸಮಂಜಸವಾದ ಮೊತ್ತವನ್ನು ನೀಡಬೇಕೆಂಬ ಅಂಶವನ್ನು ಪರಿಗಣಿಸಿ, ಸರ್ಕಾರವು ವಿಚಾರಣಾಧಿಕಾರಿಗಳಾಗಿ ನೇಮಕವಾಗುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ನಿಗಧಿಪಡಿಸಿದ ಸಂಭಾವನೆ (ಜಂಟಿ ಇಲಾಖಾ ಪ್ರಕರಣಗಳಲ್ಲಿನ ಸಂಭಾವನೆಯು ಸೇರಿದಂತೆ) ಹಾಗೂ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಗಳಾಗಿ ನೇಮಕ ಮಾಡಿದಾಗ ನೀಡಲಾಗುತ್ತಿರುವ ಪ್ರೋತ್ಸಾಧನವನ್ನು ಹೆಚ್ಚಿಸುವುದು ಸೂಕ್ತವೆಂದು ನಿರ್ಧರಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ : ಸಿಆಸುಇ 11 ಸೇಇವಿ 2019, ದಿನಾಂಕ: 24.04.2019

ಪ್ರಸ್ತಾವನೆಯಲ್ಲಿ ತಿಳಿಸಿರುವ ಕಾರಣಗಳ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ)ನಿಯಮಗಳು, 1957ರಡಿ ಕೈಗೊಳ್ಳುವ ಇಲಾಖಾ ವಿಚಾರಣೆಯಲ್ಲಿ ವಿಚಾರಣಾಧಿಕಾರಿಯಾಗಿ ನೇಮಕವಾಗುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ ಮತ್ತು ಸರ್ಕಾರದ ಸೇವೆಯಲ್ಲಿರುವ ಅಧಿಕಾರಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕೆಳಕಂಡ ಸಂಭಾವನೆ (ವಾಹನ ಭತ್ಯೆಯೂ ಸೇರಿದಂತೆ)/ ಪ್ರೋತ್ಸಾಹಧನಗಳನ್ನು

ಕ್ರ.ಸಂ. ವಿಚಾರಣೆ ಸ್ವರೂಪ ಪ ರಿಷ್ಕøತ ಸಂಭಾವನೆ
(1) ವಿಚಾರಣಾಧಿಕಾರಿಯಾಗಿ ನೇಮಕವಾಗುವ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಗೆ
ಅ) ಏಕ ವ್ಯಕ್ತಿ ಆರೋಪಿತರಾಗಿರುವ ಇಲಾಖಾ ವಿಚಾರಣೆಗಳಿಗೆ `. 30,000/- (ಮೂವತ್ತು ಸಾವಿರ ರೂಪಾಯಿಗಳು)
(ಆ) ಇಬ್ಬರಿಂದ ಐದು ಆರೋಪಿತ ವ್ಯಕ್ತಿಗಳಿರುವ ಜಂಟಿ ಇಲಾಖಾ ವಿಚಾರಣೆ ಪ್ರಕರಣಗಳಿಗೆ `. 40,000/- (ನಲವತ್ತು ಸಾವಿರ ರೂಪಾಯಿಗಳು)
(ಇ) ಐದು ಆರೋಪಿತ ವ ್ಯಕ್ತಿಗಳಿಗಿಂತ ಹ ಚಿ ೆ ನ ್ಚ ಆರೋಪಿತ ವ ್ಯಕ್ತಿಗಳಿರುವ ಜಂಟಿ ಇಲಾಖಾ ವಿಚಾರಣಾ ಪ್ರಕರಣಗಳಿಗೆ `. 50,000/- (ಐವತ್ತು ಸಾವಿರ ರೂಪಾಯಿಗಳು)
(2) ವಿಚಾರಣಾಧಿಕಾರಿಯಾಗಿ ನೇಮಕವಾದ ಮತ್ತು ನಿಗಧಿಪಡಿಸಿದ ಅವಧಿಯಲ್ಲಿ ವಿಚಾರಣಾ ವರದಿಯನ್ನು ಸಲ್ಲಿಸಿದ ಸರ್ಕಾರದ ಸ ೕವೆಯಲ್ಲಿರುವ ಅಧಿಕಾರಿಗಳಿಗೆ ೆ `. 11,000/- (ಹನ್ನೊಂದು ಸಾವಿರ ರೂಪಾಯಿಗಳು)

ಈ ಆದೇಶವನ್ನು ಆರ್ಥಿಕ ಇಲಾಖೆಯು (ACS, FD.No.2639) ದಿನಾಂಕ: 02.04.2019ರಂದು ನೀಡಿದ ಸಹಮತಿಯನ್ವಯ ಹೊರಡಿಸಲಾಗಿದೆ.

PR-188

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-100

ಎ.ವಿ.ಶೈಲಜ

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.

(ಸೇವಾ ನಿಯಮಗಳು-2)

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಕೃತ ಜ್ಞಾಪನ

ಸಂಖ್ಯೆ: ಸಿಆಸುಇ 75 ಸೇಇವಿ 2018, ಬೆಂಗಳೂರು, ದಿನಾಂಕ: 15.04.2019

ವಿಷಯ : ಇಲಾಖಾ ವಿಚಾರಣೆಗಳನ್ನು ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ಇತ್ಯರ್ಥಪಡಿಸುವ ಬಗ್ಗೆ ಮರುಸೂಚನೆಗಳು ಉಲ್ಲೇಖ : 1. ಅಧಿಕೃತ ಜ್ಞಾಪನ ಸಂಖ್ಯೆ: ಜಿಎಡಿ (ಒಎಂ) 3 ಸಿಎಆರ್ 57, ದಿನಾಂಕ: 14.12.1957.

2. ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್ 3 ಎಸ್‌ಡಿಇ 94, ದಿನಾಂಕ: 26.02.1994.

3. ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 14 ಸೇಇವಿ 96, ದಿನಾಂಕ: 31.05.1997.

4. ಸುತ್ತೋಲೆ ಸಂಖ್ಯೆ: ಸಿಆಸುಇ 8 ಸೇಇವಿ 94, ದಿನಾಂಕ: 3.11.1997

5. ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 19 ಸೇಇವಿ 2001, ದಿನಾಂಕ: 28.06.2001.

6. ಅಧಿಸೂಚನೆ ಸಂಖ್ಯೆ: ಸಿಆಸುಇ 46 ಸೇಇವಿ 2008, ದಿನಾಂಕ: 11.02.2010.

7. ಸುತ್ತೋಲೆ ಸಂಖ್ಯೆ: ಸಿಆಸುಇ 55 ಕೆಇವಿ 2010, ದಿನಾಂಕ: 20.11.2010.

8. ಸುತ್ತೋಲೆ ಸಂಖ್ಯೆ: ಸಿಆಸುಇ 111 ಸೇಇವಿ 2013, ದಿನಾಂಕ: 22.10.2013

9. ಸುತ್ತೋಲೆ ಸಂಖ್ಯೆ: ಸಿಆಸುಇ 02 ಸೇಇವಿ 2018, ದಿನಾಂಕ: 15.02.2018.

(1) ಸರ್ಕಾರಿ ನೌಕರರ ವಿರುದ್ಧ ಮಾಡಲಾದ ಆರೋಪವು ರುಜುವಾತಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ವಾಸ್ತವಾಂಶ ಕಂಡುಕೊಳ್ಳಲು ಅನುವಾಗುವಂತೆ ರಾಜ್ಯ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ಗಳನ್ನುಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೩, ೨೦೧೯ ೪೦೧ ದಿನಾಂಕ: 10.12.1957ರಂದು ರೂಪಿಸಿದೆ. ಹಾಗೂ ಇದೇ ಸಮಯದಲ್ಲಿ ಉಲ್ಲೇಖ (1) ರಲ್ಲಿನ ದಿನಾಂಕ: 14.12.1957ರ ಅಧಿಕೃತ ಜ್ಞಾಪನದನ್ವಯ ಈ ನಿಯಮಗಳ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದೆ. ತದನಂತರ ಸರ್ಕಾರವು ಅವಶ್ಯಕತೆ ಕಂಡು ಬಂದಾಗಲೆಲ್ಲಾ ಶಿಸ್ತು ಕ್ರಮ ಆರಂಭಿಸಿ-ಅಂತಿಮಗೊಳಿಸುವಲ್ಲಿ ಆಗುತ್ತಿದ್ದ ವಿಳಂಬವನ್ನು ತಡೆಗಟ್ಟಲು ವಿವಿಧ ಹಂತಗಳ ಕಾಲಮಿತಿ ನಿಗದಿಪಡಿಸುವ ಹಾಗೂ ಬಾಕಿ ಇರುವ ಶಿಸ್ತಿನ ಪ್ರಕರಣಗಳ ಪ್ರಗತಿಯನ್ನು ಪುನರ್ ಅವಲೋಕಿಸುವ (Review) ಹಾಗೂ ಉಸ್ತುವಾರಿ (Monitoring) ಮಾಡುವ ಬಗ್ಗೆ ಉಲ್ಲೇಖಿತ ಅಧಿಕೃತ ಜ್ಞಾಪನ/ ಸುತ್ತೋಲೆಗಳನ್ವಯ ಸೂಕ್ತ ಮಾರ್ಗಸೂಚನೆಗಳನ್ನು ನೀಡುತ್ತಾ ಬಂದಿದೆ. ಈ ರೀತಿ ಕಾಲಕಾಲಕ್ಕೆ ಸ್ಪಷ್ಟವಾದ ಹಾಗೂ ನಿರ್ದಿಷ್ಟವಾದ ಸೂಚನೆಗಳನ್ನು/ಮಾರ್ಗಸೂಚನೆಗಳನ್ನು ನೀಡಲಾಗಿದ್ದರೂ ಸಹ ಸಂಬಂಧಿಸಿದ ಶಿಸ್ತು ಪ್ರಾಧಿಕಾರಿಗಳು ಹಲವಾರು ಪ್ರಕರಣಗಳಲ್ಲಿ ಇಂತಹ ಸೂಚನೆಗಳನ್ನು ಪಾಲಿಸದೆ ಇರುವ ಪರಿಣಾಮವಾಗಿ ಶಿಸ್ತು ನಡವಳಿಗಳನ್ನು ಪೂರ್ಣಗೊಳಿಸಲು ಅನಗತ್ಯವಾಗಿ ವಿಳಂಬವಾಗುತ್ತಿರುವ ವಿಷಯವು ಸರ್ಕಾರದ ಗಮನಕ್ಕೆ ಬಂದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದೆ.

(2) ಇಲಾಖಾ ವಿಚಾರಣೆಗಳನ್ನು ಇತ್ಯರ್ಥಪಡಿಸಲು ವಿಳಂಬವಾಗುತ್ತಿರುವುದನ್ನು ತಪ್ಪಿಸಲು ಹಾಗೂ ಲೋಪದೋಷಗಳನ್ನು ನಿವಾರಿಸಲು ಸಂಬಂಧಪಟ್ಟ

ಪ್ರಾಧಿಕಾರಗಳಿಗೆ ಸರ್ಕಾರದಿಂದ ಮತ್ತೊಮ್ಮೆ ಈ ಕೆಳಕಂಡ ಸೂಚನೆಗಳನ್ನು ನೀಡಲಾಗಿದೆ.

(1) ಅತ್ಯಂತ ಮುಖ್ಯವಾಗಿ ಉಲ್ಲೇಖ(8)ರಲ್ಲಿನ ಸುತ್ತೋಲೆಯ ಸೂಚನೆಗಳಂತೆ ಪ್ರಾರಂಭದಲ್ಲಿ ವಿಚಾರಣೆ ದಾಖಲೆಗಳನ್ನು ಪರಿಶೀಲಿಸತಕ್ಕದ್ದು ಹಾಗೂ ಲಘು ದಂಡನೆಯನ್ನು ವಿಧಿಸಬಹುದಾದ ಪ್ರಕರಣಗಳಲ್ಲಿ ನಿಯಮ 12ರಡಿ ಪ್ರಾರಂಭಿಸಬಹುದಾದ ಶಿಸ್ತು ನಡವಳಿಗಳನ್ನು ಕpಣ ದಂಡನೆಯನ್ನು ವಿಧಿಸಬಹುದಾದ ನಿಯಮ 11ರಡಿ ಯಾಂತ್ರಿಕವಾಗಿ ಪ್ರಾರಂಭಿಸುವುದನ್ನು ತಪ್ಪಿಸತಕ್ಕದ್ದು. ಇದನ್ನು ಪಾಲಿಸಿದ್ದಲ್ಲಿ ಬಹುತೇಕ ಇಲಾಖಾ ವಿಚಾರಣೆಗಳು ಶೀಘ್ರವಾಗಿ ಇತ್ಯರ್ಥಪಡಿಸಲು ಸಾಧ್ಯವಾಗುತ್ತಿದೆ.

(2) ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 9(2)ರಡಿ ನಿರ್ದಿಷ್ಟಪಡಿಸಲಾದ ಶಿಸ್ತುಪ್ರಾಧಿಕಾರಿಗಳು, ಸದರಿ ನಿಯಮಗಳ ನಿಯಮ 10ಎ(2) ಹಾಗೂ 11ನೇ ನಿಯಮದ ಉಪ ನಿಯಮ (21)(ಎ)ರಲ್ಲಿನ ಅವಕಾಶವನ್ನು ಉಪಯೋಗಿಸಿಕೊಂಡು ನಿಯಮ 12ರಡಿ ಲಘು ದಂಡನೆಗಳನ್ನು ವಿಧಿಸುವಂತಹ ಪ್ರಕರಣಗಳಷ್ಟೇ ಅಲ್ಲದೆ, ನಿಯಮ 11ರಡಿ ಬರುವಂತಹ ಪ್ರಕರಣಗಳಲ್ಲಿಯೂ ಕೂಡ ಸರ್ಕಾರದ ಸಚಿವಾಲಯದ ಆಡಳಿತ ಇಲಾಖೆಯೊಂದಿಗೆ ಅನಗತ್ಯ ಪತ್ರ ವ್ಯವಹಾರ ಮಾಡುವುದನ್ನು ತಪ್ಪಿಸಿ ಅವರ ಮಟ್ಟದಲ್ಲಿಯೇ ಶಿಸ್ತುನಡವಳಿಗಳನ್ನು ತ್ವರಿತವಾಗಿ ಪ್ರಾರಂಭಿಸಲು ಕ್ರಮ ಕೈಗೊಳ್ಳತಕ್ಕದ್ದು, ಕpಣ ದಂಡನೆ ವಿಧಿಸಬೇಕಾದ ಪ್ರಕರಣಗಳಲ್ಲಿ ಮಾತ್ರ ಅಂತಹ ದಂಡನೆಗಳನ್ನು ವಿಧಿಸಲು ಅಧಿಕಾರ ಹೊಂದಿದ ಶಿಸ್ತುಪ್ರಾಧಿಕಾರಕ್ಕೆ ಇಲಾಖಾ ವಿಚಾರಣೆಯ ದಾಖಲೆಗಳನ್ನು ಕಳುಹಿಸತಕ್ಕದ್ದು. ಸರ್ಕಾರಿ ನೌಕರನನ್ನು ರಾಜ್ಯ ಸರ್ಕಾರದ ಒಂದು ಸರ್ಕಾರಿ ಇಲಾಖೆಯಿಂದ ಇನ್ನೊಂದು ಸರ್ಕಾರಿ ಇಲಾಖೆಗೆ ಪ್ರತಿ ನಿಯೋಜನೆ(deputed) ಮೇಲೆ ನೇಮಕ ಮಾಡಿದ ಪ್ರಾಧಿಕಾರಿಯು ಮೇಲ್ಕಂಡ ನಿಯಮಗಳ ನಿಯಮ 9(2ಎ), 10ಎ(2) ಮತ್ತು 11(21)(ಎ)ರಲ್ಲಿನ ಅವಕಾಶಗಳನ್ನು ಸಮಯೋಚಿತವಾಗಿ ಬಳಸಿಕೊಳ್ಳತಕ್ಕದ್ದು.

(3) ಉಲ್ಲೇಖ(6)ರಲ್ಲಿನ ದಿನಾಂಕ: 11.02.2010ರ ಅಧಿಸೂಚನೆಯನ್ವಯ ರಾಜ್ಯ ಸರ್ಕಾರದ ಸಮೂಹ 'ಬಿ' ಹುದ್ದೆಗಳಿಗೆ ಸಂಬಂಧಿಸಿದಂತೆ(ತಹಶೀಲ್ದಾರ್ ಗ್ರೇಡ್-2 ಹುದ್ದೆಗಳನ್ನು ಹೊರತುಪಡಿಸಿ) ಇಲಾಖಾ ಮುಖ್ಯಸ್ಥರನ್ನು ನೇಮಕಾತಿ ಪ್ರಾಧಿಕಾರಗಳಾಗಿ ನಿರ್ದಿಷ್ಟಪಡಿಸಲಾಗಿರುವುದರಿಂದ ಇಲಾಖಾ ಮುಖ್ಯಸ್ಥರು ಸಮೂಹ 'ಬಿ' ಅಧಿಕಾರಿಗಳಿಗೆ ಸಂಬಂಧಿಸಿದಂತೆ (ತಹಶೀಲ್ದಾರ್ ಗ್ರೇಡ್-2 ಅಧಿಕಾರಿಗಳನ್ನು ಹೊರತುಪಡಿಸಿ) ಕರ್ನಾಟಕ ಸರ್ಕಾರ ಸಚಿವಾಲಯದ ಆಡಳಿತ ಇಲಾಖೆಗಳೊಂದಿಗೆ ಅನಗತ್ಯ ಪತ್ರ ವ್ಯವಹಾರ ಮಾಡುವುದನ್ನು ತಪ್ಪಿಸಿ, ಅವರ ಮಟ್ಟದಲ್ಲಿಯೇ ಶಿಸ್ತುನಡವಳಿಗಳನ್ನು ಪ್ರಾರಂಭಿಸಿದಲ್ಲಿ, ಶಿಸ್ತುನಡವಳಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುವಾಗುತ್ತದೆ. ಒಂದು ವೇಳೆ ಅಂತಹ ಅಧಿಕಾರಿಯನ್ನು ಸಮೂಹ 'ಬಿ' ಹುದ್ದೆಗೆ ಸರ್ಕಾರ ನೇಮಕಾತಿ ಮಾಡಿದ್ದರೆ, ಕpಣ ದಂಡನೆಗಳನ್ನು ವಿಧಿಸಬೇಕಾದ ಸಂದರ್ಭ ಒದಗಿಬಂದಲ್ಲಿ ಕರ್ನಾಟಕ ನಾಗರಿಕ ಸೇವಾ(ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 11(21)(ಎ)ರಂತೆ ವಿಚಾರಣಾ ದಾಖಲೆಗಳನ್ನು ಕೂಡಲೇ ಸರ್ಕಾರಕ್ಕೆ ಕಳುಹಿಸತಕ್ಕದ್ದು.

(4) ಉಲ್ಲೇಖ(7)ರಲ್ಲಿನ ಸುತ್ತೋಲೆಯಲ್ಲಿ ನಿಗದಿಪಡಿಸಲಾದ 'Check List' ನಂತೆ ಶಿಸ್ತುಪ್ರಾಧಿಕಾರವು ಪ್ರಕರಣಕ್ಕೆ ಸಂಬಂಧಿಸಿದ ಪರಿಪೂರ್ಣ ಮಾಹಿತಿ/ದಾಖಲೆಗಳನ್ನು ಸಂಗ್ರಹಿಸತಕ್ಕದ್ದು.

(5) ಉಲ್ಲೇಖ(2)ರಲ್ಲಿನ ಅಧಿಕೃತ ಜ್ಞಾಪನದಲ್ಲಿ ತಿಳಿಸಿರುವಂತೆ ಅನಧಿಕೃತವಾಗಿ ಗೈರುಹಾಜರಾದ ನೌಕರರ ಪ್ರಕರಣಗಳಲ್ಲಿ ಕಾಲ ವಿಳಂಬ ಮಾಡದೇ ಕ್ರಮ ಕೈಗೊಳ್ಳತಕ್ಕದ್ದು.

(6) ಆರೋಪಿತ ಸರ್ಕಾರಿ ನೌಕರರನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆ, ಭ್ರಷ್ಟಾಚಾರ ನಿಗ್ರಹ ದಳ ಅಥವಾ ಇತರೆ ಕಾನೂನಿನ ಉಪಬಂಧಗಳ ಅಡಿಯಲ್ಲಿ ತನಿಖೆ ನಡೆಸಲು ಅಧಿಕೃತವಾದ ತನಿಖಾ ಸಂಸ್ಥೆ ನ್ಯಾಯಾಲಯಗಳಲ್ಲಿ ಅಭಿಯೋಜಿನೆಗೊಳಪಡಿಸಲು ವಶಪಡಿಸಿಕೊಂಡ ದಾಖಲೆಗಳ ಆಧಾರದ ಮೇಲೆ ಶಿಸ್ತುಪ್ರಾಧಿಕಾರವು ಸಮನಾಂತರವಾಗಿ ಶಿಸ್ತುನಡವಳಿಗಳನ್ನು ನಡೆಸಲು ಉದ್ದೇಶಿಸಿದಲ್ಲಿ, ದೋಷಾರೋಪಣಾ ಪಟ್ಟಿಯನ್ನು ತಯಾರಿಸುವ ಹಂತದಲ್ಲಿಯೇ ಅದಕ್ಕಾಗಿ ಅಗತ್ಯವಿರುವ ದಾಖಲೆಗಳ ಸ್ಪಷ್ಟವಾದ ದೃಡೀಕೃತ ಪ್ರತಿಗಳನ್ನು ಸಂಬಂಧಿಸಿದ ತನಿಖಾ ಸಂಸ್ಥೆಯಿಂದ ಪಡೆಯತಕ್ಕದ್ದು ಮತ್ತು ಪ್ರಕರಣಕ್ಕೆ ಅನ್ವಯವಾಗುವ ನಿಯಮ/ಸೂಚನೆಗಳ ಪ್ರತಿಗಳನ್ನು ಸಹ ಹೊಂದಿರತಕ್ಕದ್ದು. ಸಂಬಂಧಪಟ್ಟ ತನಿಖಾ ಸಂಸ್ಥೆಗಳು ಶಿಸ್ತುಪ್ರಾಧಿಕಾರಕ್ಕೆ ದೃಡೀಕೃತ ದಾಖಲೆಗಳನ್ನು ಒದಗಿಸಲು ಸಹಕರಿಸತಕ್ಕದ್ದು.

೪೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೩, ೨೦೧೯ ಭಾಗ ೧

(7) ದೋಷಾರೋಪಣಾ ಪಟ್ಟಿಯನ್ನು ಹೊರಡಿಸಿ ಆರೋಪಿತ ಸರ್ಕಾರಿ ನೌಕರನ ರಕ್ಷಣಾ ಹೇಳಿಕೆಯನ್ನು ಪಡೆದ ನಂತರ ವಿಚಾರಣೆ ನಡೆಸಬೇಕೆಂದು ಶಿಸ್ತುಪ್ರಾಧಿಕಾರ ನಿರ್ಧರಿಸಿದಲ್ಲಿ, ಒಂದು ತಿಂಗಳೊಳಗಾಗಿ ವಿಚಾರಣಾಧಿಕಾರಿ ಮತ್ತು ಮಂಡನಾಧಿಕಾರಿಯನ್ನು ಏಕಕಾಲದಲ್ಲಿ ನೇಮಿಸಿ ಆದೇಶಿಸತಕ್ಕದ್ದು

(8) ಸಾಧ್ಯವಾದಷ್ಟು ಮಟ್ಟಿಗೆ ಆರೋಪಿತ ಸರ್ಕಾರಿ ನೌಕರನು ಕರ್ತವ್ಯ ನಿರ್ವಹಿಸುತ್ತಿರುವ ಕಛೇರಿ ಇರುವ ಸ್ಥಳದಲ್ಲೇ/ಕೇಂದ್ರಸ್ಥಾನದಲ್ಲೇ ಇರುವ ನಿವೃತ್ತ ಜಿಲ್ಲಾ ನ್ಯಾಯಾಧೀಶರು/ಸೇವೆಯಲ್ಲಿರುವ ಅಧಿಕಾರಿಗಳನ್ನು ವಿಚಾರಣಾಧಿಕಾರಿಯನ್ನಾಗಿ ನೇಮಕ ಮಾಡುವುದು.

(9) ಒಂದಕ್ಕಿಂತ ಹೆಚ್ಚು ಸರ್ಕಾರಿ ನೌಕರರು ಆರೋಪಿತರಾಗಿರುವ ಪ್ರಕರಣಗಳಲ್ಲಿ ಒಬ್ಬರೇ ವಿಚಾರಣಾಧಿಕಾರಿಯನ್ನು ಹಾಗೂ ಮಂಡನಾಧಿಕಾರಿಯನ್ನು ನೇಮಿಸತಕ್ಕದ್ದು.

(10) ವಿಚಾರಣೆಗೆ ಅಗತ್ಯವಾದ ಎಲ್ಲಾ ನಿಯಮಗಳು, ವಿನಿಯಮಗಳು, ಸೂಚನೆಗಳು ಹಾಗೂ ಆರೋಪ ಪಟ್ಟಿಯಲ್ಲಿ ಹೆಸರಿಸಲಾದ ಪೂರಕ ದಾಖಲೆಗಳು ಇತ್ಯಾದಿಗಳ ಪ್ರತಿಗಳನ್ನು ಮಂಡನಾಧಿಕಾರಿಯು ವಿಚಾರಣಾ ಪೂರ್ವದಲ್ಲಿಯೇ ಸಿದ್ಧವಾಗಿಟ್ಟುಕೊಳ್ಳತಕ್ಕದ್ದು ಸರ್ಕಾರದ ಎಲ್ಲಾ ಇಲಾಖೆ/ಸಂಸ್ಥೆಗಳು ಅವುಗಳ ವ್ಯಾಪ್ತಿಯಲ್ಲಿ ಬರುವ ನಿಯಮಗಳು, ವಿನಿಯಮಗಳು, ಸೂಚನೆಗಳು ಇತ್ಯಾದಿಗಳನ್ನು ಜಾಲತಾಣಗಳಲ್ಲಿ (website) ಲಭ್ಯಪಡಿಸತಕ್ಕದ್ದು.

(11) ವಿಚಾರಣಾಧಿಕಾರಿಯು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ದಾಖಲೆಗಳನ್ನು ಹೊಂದಿರುವ ಅಧಿಕಾರಿಗಳಿಗೆ ಕಾಲಮಿತಿಯನ್ನು ನಿಗದಿಪಡಿಸತಕ್ಕದ್ದು ಮತ್ತು ಆ ದಾಖಲೆಗಳನ್ನು ನಿಗದಿತ ಕಾಲಮಿತಿಯೊಳಗೆ ಒದಗಿಸಲು ವಿಫಲರಾದವರು ವಿಳಂಬಕ್ಕೆ ಹೊಣೆಗಾರರಾಗುತ್ತಾರೆಂದು ಸೂಚಿಸತಕ್ಕದ್ದು.

(12) ವಿಚಾರಣಾಧಿಕಾರಿಯು ಸಾಧ್ಯವಾದಷ್ಟು ಮಟ್ಟಿಗೆ, ವಿಚಾರಣೆಯನ್ನು ದಿನನಿತ್ಯ ನಡೆಸುವುದು, ಆಪಾದಿತ ನೌಕರರಿಗೆ ಹಾಗೂ ಎಲ್ಲಾ ಸಾಕ್ಷಿದಾರರಿಗೆ ಹಾಜರಾಗಲು ಸೂಚಿಸತಕ್ಕದ್ದು ಹಾಗೂ ಅವರನ್ನು ಏಕಕಾಲದಲ್ಲಿ, ಪ್ರತ್ಯೇಕ ತಂಡಗಳಲ್ಲಿ ವಿಚಾರಣೆ ನಡೆಸತಕ್ಕದ್ದು.

ಆದರೆ, ಸಾಕ್ಷಿದಾರರು ಹಾಜರಾಗಲು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಯನ್ನು ಮುಂದೂಡತಕ್ಕದ್ದಲ್ಲ.

(13) ವಿಚಾರಣಾಧಿಕಾರಿಯು ವಿಚಾರಣೆಗೆ ಹಾಜರಾಗುವಂತೆ ಸಾಕ್ಷಿದಾರರಿಗೆ ಆಜ್ಞೆಯನ್ನು ಹೊರಡಿಸಿದಾಗ, ಸಾಕ್ಷಿದಾರರು ಅದನ್ನು ಪಾಲಿಸದೇ ಇದ್ದಲ್ಲಿ, THE KARNATAKA DEPARTMENTAL INQUIRIES(ENFORCEMENT OF ATTENDANCES OF WITNESSES AND PRODUCTION OF DOCUMENTS AND MISCELLANEOUS PROVISIONS) ACT, 1981(ಕರ್ನಾಟಕ ಇಲಾಖಾ ವಿಚಾರಣೆಗಳ(ಸಾಕ್ಷಿದಾರರ ಹಾಜರಾತಿ ಮತ್ತು ದಸ್ತಾವೇಜುಗಳ ಹಾಜರುಪಡಿಸುವಿಕೆಯನ್ನು ಒತ್ತಾಯಪಡಿಸುವ) ಅಧಿನಿಯಮ, 1981)ರಡಿ ಅಗತ್ಯ ಕ್ರಮ ಕೈಗೊಳ್ಳತಕ್ಕದ್ದು, ಸರ್ಕಾರಿ ಸೇವೆಯಲ್ಲಿರುವ ಹಾಗೂ ಅಧಿಕೃತ ಸಾಕ್ಷಿ ಎಂದು ಹೆಸರಿಸಲ್ಪಟ್ಟ ಅಧಿಕಾರಿ/ನೌಕರರು ಆರೋಪಿತ ಅಧಿಕಾರಿ/ನೌಕರ ತನಗಿಂತ ಕಿರಿಯ ಅಥವಾ ಹಿರಿಯ ಎನ್ನುವುದನ್ನು ಪರಿಗಣಿಸದೇ, ವಿಚಾರಣಾಧಿಕಾರಿಯ ಮುಂದೆ ಹಾಜರಾಗಿ ಸಾಕ್ಷ್ಯ ನೀಡತಕ್ಕದ್ದು. ಸಾಕ್ಷ್ಯ ನೀಡಲು ಹಾಜರಾಗದಿದ್ದರೆ ಅಂತಹ ನೌಕರನ ವಿರುದ್ಧ ಸಂಬಂಧಪಟ್ಟ ಶಿಸ್ತುಪ್ರಾಧಿಕಾರ ಶಿಸ್ತುಕ್ರಮ ತೆಗೆದುಕೊಳ್ಳತಕ್ಕದ್ದು.

(14) ವಿಚಾರಣಾಧಿಕಾರಿಯು ಸಾಧ್ಯವಾದಷ್ಟು ಮಟ್ಟಿಗೆ ಸಾಕ್ಷಿದಾರರು ಸಾಕ್ಷಿ ಹೇಳುವ ಸಂದರ್ಭದಲ್ಲಿ ವಾದಕಾಲೀನ ದಾಖಲೆಗಳನ್ನು (interlocutory documents) ಹೆಚ್ಚುವರಿ ದಾಖಲಾತಿಗಳಿಗಾಗಿ ಮಂಡನಾಧಿಕಾರಿ ಅಥವಾ ಪ್ರತಿವಾದಿಗಳ ಪರವಾಗಿ ಸಲ್ಲಿಸಲು ಅನುಮತಿಸತಕ್ಕದ್ದಲ್ಲ.

(15) ವಿಚಾರಣೆಗಾಗಿ ಸಾಕ್ಷಿದಾರರು ಹಾಜರಾಗಲು ವಿಫಲರಾದಲ್ಲಿ ಅಥವಾ ಮಂಡನಾಧಿಕಾರಿ/ಪ್ರತಿವಾದಿಗಳು ದಾಖಲೆಗಳನ್ನು ಮಂಡಿಸುವಲ್ಲಿ ಅಥವಾ ಸಾಕ್ಷಿದಾರರನ್ನು ಹಾಜರುಪಡಿಸುವಲ್ಲಿ ಸಹಕರಿಸದೇ ಇದ್ದಲ್ಲಿ, ವಿಚಾರಣಾಧಿಕಾರಿಯು ಅವರಿಗೆ ಯುಕ್ತ ಅವಕಾಶವನ್ನು ನೀಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಿರುವ ದಾಖಲೆಗಳು, ವಾಸ್ತವಾಂಶಗಳು ಮತ್ತು ಸಾಕ್ಷಿದಾರರ ಹೇಳಿಕೆ ಇತ್ಯಾದಿಯ ಆಧಾರದ ಮೇಲೆ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 11(20)ರನ್ವಯ ಏಕಪಕ್ಷೀಯವಾಗಿ (ex-parte) ತನ್ನ ವರದಿಯನ್ನು ನೀಡಬಹುದು.

(16) ಇಲಾಖಾ ವಿಚಾರಣೆ ಪ್ರಾರಂಭಿಸಿ, ನಡೆಸಿ ಅಂತಿಮಗೊಳಿಸುವ ಸಂದರ್ಭದಲ್ಲಿ ಆಪಾದಿತ ನೌಕರನಿಗೆ ಯಾವುದೇ ಆದೇಶ/ ನೋಟಿಸ್‌ಗಳನ್ನು ಉಲ್ಲೇಖ (4)ರಲ್ಲಿನ ಸೂಚನೆಗಳಂತೆ ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ನಿಯಮ 28ಎರಲ್ಲಿ ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸತಕ್ಕದ್ದು. ಅನಿವಾರ್ಯವೆನಿಸಿದಲ್ಲಿ ಮೇಲ್ಕಂಡ ನಿಯಮಗಳ ನಿಯಮ 14ರಲ್ಲಿನ ಅವಕಾಶಗಳಡಿ ವಿಶೇಷ ಕಾರ್ಯವಿಧಾನವನ್ನು ಅನುಸರಿಸಬಹುದು.

(3) ಮೇಲೆ ನೀಡಲಾಗಿರುವ ಸೂಚನೆಗಳನ್ನು ಎಲ್ಲಾ ನೇಮಕಾತಿ ಪ್ರಾಧಿಕಾರಗಳು/ಶಿಸ್ತುಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

PR-189

ತ.ಮ. ವಿಜಯ್ ಭಾಸ್ಕರ್

SC-100

ಸರ್ಕಾರದ ಮುಖ್ಯ ಕಾರ್ಯದರ್ಶಿಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೩, ೨೦೧೯ ೪೦೩

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಸುತ್ತೋಲೆ

ಸಂಖ್ಯೆ: ಸಿಆಸುಇ 614 ಸೆನೆನಿ 2018, ಬೆಂಗಳೂರು, ದಿನಾಂಕ: 16.04.2019

ವಿಷಯ : ಅಂಗವಿಕಲ ಅಭ್ಯರ್ಥಿಗಳಿಗೆ ವಿತರಿಸುವ ಅಂಗವಿಕಲ ಪ್ರಮಾಣಪತ್ರಗಳನ್ನು ವಿತರಿಸುವಾಗ ವೈದ್ಯಾಧಿಕಾರಿಗಳು ಅನುಸರಿಸಬೇಕಾದ ಮಾರ್ಗಸೂಚಿಗಳು

ಉಲ್ಲೇಖ : ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 115 ಸೆನೆನಿ 2005, ದಿನಾಂಕ: 19/11/2005

1. ದಿನಾಂಕ: 19/11/2005ರ ಅಧಿಕೃತ ಜ್ಞಾಪನ ಸಂಖ್ಯೆ: ಸಿಆಸುಇ 115 ಸೆನೆನಿ 2005 ರಲ್ಲಿ ರಾಜ್ಯ ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಮೀಸಲಾಗಿರುವ ಹುದ್ದೆಗಳಿಗೆ ಅಂಗವಿಕಲ ಅಭ್ಯರ್ಥಿಗಳನ್ನು ಪರಿಗಣಿಸಲು ವೈದ್ಯಕೀಯ ಪ್ರಮಾಣ ಪತ್ರವನ್ನು ನಿಗಧಿಪಡಿಸಲಾಗಿರುತ್ತದೆ.

2. ಈ ಅಧಿಕೃತ ಜ್ಞಾಪನದಲ್ಲಿ ನಿಗದಿಪಡಿಸಿದ್ದ ವೈದ್ಯಕೀಯ ಪ್ರಮಾಣ ಪತ್ರದಂತೆ ಸಂಬಂಧಪಟ್ಟ ವೈದ್ಯಾಧಿಕಾರಿಗಳು / ವೈದ್ಯಕೀಯ ಮಂಡಳಿಗಳು ವಿತರಿಸುವ ಅಂಗವಿಕಲ ಪ್ರಮಾಣಪತ್ರಗಳಲ್ಲಿ ಅಂಗವಿಕಲತೆಯ ಸ್ವರೂಪ ಮತ್ತು ಪ್ರಮಾಣವನ್ನು ಸ್ಪಷ್ಟವಾಗಿ ನಮೂದಿಸದೇ ಅಂಗವಿಕಲ ಪ್ರಮಾಣ ಪತ್ರಗಳನ್ನು ವಿತರಿಸುತ್ತಿರುವುದರಿಂದಾಗಿ ಅರ್ಹ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲು ಕಷ್ಟವಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.

3. ಈ ಹಿನ್ನೆಲೆಯಲ್ಲಿ ಅಂಗವಿಕಲ ಅಭ್ಯರ್ಥಿಗಳಿಗೆ ನೇಮಕಾತಿ ಸಂಬಂಧ ವೈದ್ಯಕೀಯ ಪ್ರಮಾಣಪತ್ರಗಳನ್ನು ವಿತರಿಸುವಾಗ ಕೆಳಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಎಲ್ಲಾ ವೈದ್ಯಾಧಿಕಾರಿಗಳು / ವೈದ್ಯಕೀಯ ಮಂಡಳಿಗಳಿಗೆ ಸೂಚಿಸಲಾಗಿದೆ:

ಅ) ಕರ್ನಾಟಕ ನಾಗರಿಕ ಸೇವಾ ಹುದ್ದೆಗಳ ನೇಮಕಾತಿ ಸಂಬಂಧ ವಿತರಿಸುವ ಅಂಗವಿಕಲ ಪ್ರಮಾಣ ಪತ್ರಗಳಲ್ಲಿ ಅಂಗವಿಕಲತೆಯ ಸ್ವರೂಪ ಮತ್ತು ಪ್ರಮಾಣ ಹಾಗೂ ಶಾಶ್ವತ ಅಂಗವಿಕಲತೆಯೇ ಅಥವಾ ಗುಣಮುಖವಾಗುವ ಅಂಗವಿಕಲತೆಯೇ ಎಂಬ ಬಗ್ಗೆ ಸ್ಪಷ್ಟವಾಗಿ ನಮೂದಿಸುವುದು.

ಆ) ವೈದ್ಯಕೀಯ ಪ್ರಮಾಣ ಪತ್ರಗಳನ್ನು ಕೆಲವು ನಿರ್ದಿಷ್ಠ ಅಂಗವಿಕಲತೆಗಳಿಗೆ ಯಂತ್ರಗಳ ಮೂಲಕ ತಪಾಸಣೆ ಮಾಡಿ ನೀಡಬೇಕಾಗುತ್ತದೆ.

ಅಂತಹ ಪ್ರಕರಣಗಳಲ್ಲಿ ಯಂತ್ರೋಪಕರಣಗಳ ಮೂಲಕ ಅಂಗವೈಕಲ್ಯತೆ ಪ್ರಮಾಣ ಖಚಿತಪಡಿಸಿಕೊಂಡ ನಂತರವೇ ನಿಖರವಾದ ಕಾರಣಗಳನ್ನು ನಮೂದಿಸತಕ್ಕದ್ದು.

ಇ) ಈ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರದಿಂದ ಪ್ರಾಧೀಕರಿಸಲ್ಪಟ್ಟ ವೈದ್ಯಕೀಯ ಪ್ರಾಧಿಕಾರ ಗಣಕೀಕೃತ ವೈದ್ಯಕೀಯ ಪ್ರಮಾಣಪತ್ರಗಳನ್ನು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರಂತೆ ಕಡ್ಡಾಯವಾಗಿ ವಿತರಿಸಲು ಕ್ರಮವಹಿಸುವುದು. ಈ ರೀತಿ ಪ್ರಮಾಣ ಪತ್ರವನ್ನು ವಿತರಿಸುವಾಗ ಈ ಪ್ರಮಾಣ ಪತ್ರಗಳಲ್ಲಿ ಅಂಗವೈಕಲ್ಯತೆಯು "ಶಾಶ್ವತ ಅಂಗವಿಕಲತೆ" ಅಥವಾ "ತಾತ್ಕಾಲಿಕ ಅಂಗವಿಕಲತೆ" ಇವೆರಡರಲ್ಲಿ ಯಾವುದು ಅನ್ವಯಿಸುವುದೋ ಅದನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. ತಾತ್ಕಾಲಿಕ ಅಂಗವಿಕಲತೆ ಹೊಂದಿರುವವರು ಉದ್ಯೋಗದಲ್ಲಿ ಮೀಸಲಾತಿ ಹೊಂದಲು ಅರ್ಹರಿರುವುದಿಲ್ಲ.

ಈ) ವೈದ್ಯಕೀಯ ಪ್ರಮಾಣಪತ್ರಗಳಲ್ಲಿ ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ ಸೇರಿದಂತೆ ಅಭ್ಯರ್ಥಿಯ ಹೆಸರು, ವಯಸ್ಸು, ತಂದೆ/ಗಂಡ/ಪೋಷಕರ ವಿವರ ಸೇರಿದಂತೆ ವಿಳಾಸವನ್ನು ಸ್ಪಷ್ಠವಾಗಿ ನಮೂದಿಸುವುದು.

ಉ) ಗಣಕೀಕೃತ ಪ್ರಮಾಣ ಪತ್ರದಲ್ಲಿ ವೈದ್ಯಾಧಿಕಾರಿಗಳ ಸಹಿ, ಹೆಸರು ಹಾಗೂ ಸಂಪೂರ್ಣ ವಿಳಾಸದ ವಿವರದೊಂದಿಗಿನ ಮೊಹರನ್ನು ಮುದ್ರಿಸಿ ವಿತರಿಸುವುದು.

4. ಕೇಂದ್ರ ಸರ್ಕಾರವು ಅಂಗವಿಕಲತೆ ಪ್ರಮಾಣ ಪತ್ರವನ್ನು ವಿತರಿಸಲು "ಅಂಗವಿಕಲರ ವಿಶಿಷ್ಠ ಗುರುತಿನ ಚೀಟಿ" ಯೋಜನೆಯನ್ನು (Unique Disability Identity Card) 2018ರಲ್ಲಿ www.swavalambancard.gov.in ಜಾಲತಾಣದ ಮೂಲಕ ಜಾರಿಗೆ ತಂದಿರುತ್ತದೆ. ಈ ಯೋಜನೆಗೆ ಸಂಬಂಧಿಸಿದಂತೆ 21 ಅಂಗವಿಕಲತೆಗೆ ಸರ್ಕಾರದಿಂದ ಅಧಿಕೃತವಾಗಿ ವೈದ್ಯಕೀಯ ಪ್ರಾಧಿಕಾರಿಗಳನ್ನು ನೇಮಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹೊಸದಾಗಿ ವೈದ್ಯಕೀಯ ಪ್ರಾಧಿಕಾರಿಗಳು ನೇಮಕವಾದ ನಂತರ, ಅಂತಹ ವೈದ್ಯಕೀಯ ಪ್ರಾಧಿಕಾರಿಗಳು ಈ ಹೊಸ ಯೋಜನೆಯನ್ನು ಅಳವಡಿಸಿಕೊಂಡು ಅಂಗವಿಕಲ ವೈದ್ಯಕೀಯ ಪ್ರಮಾಣ ಪತ್ರಗಳನ್ನು ವಿತರಿಸುವ ಪ್ರಕ್ರಿಯೆ ಪ್ರಾರಂಭವಾದ ನಂತರ, ಹಾಲಿ ಚಾಲ್ತಿಯಲ್ಲಿರುವ ಅಂಗವಿಕಲತೆ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಯೋಜನೆಯನ್ನು ರದ್ದುಪಡಿಸಲಾಗುವುದು. ಈಗಾಗಲೇ ಅಂಗವಿಕಲತೆ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರುವ ವ್ಯಕ್ತಿಗಳು ಸಹಾ ಕಡ್ಡಾಯವಾಗಿ "ವಿಶಿಷ್ಠ ಗುರುತಿನ ಚೀಟಿ ಯೋಜನೆ" ಅಡಿಯಲ್ಲಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವ್ಯಾಪಕ ಪ್ರಚಾರ ನೀಡುವುದು.

5. ಮೇಲ್ಕಂಡ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು.

PR-190

ತ.ಮ. ವಿಜಯ್ ಭಾಸ್ಕರ್

SC-100

ಸರ್ಕಾರದ ಮುಖ್ಯ ಕಾರ್ಯದರ್ಶಿ

FINANCE SECRETARIAT

Sub: Establishment of Consumer Welfare Fund under the Karnataka Goods and Services Tax Act and Rules – reg. Read: 1) Letter No.CCW.CR.16/2018-19, Dated 08/03/2019 of the Commissioner of Commercial Taxes, Bengaluru೪೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೩, ೨೦೧೯ ಭಾಗ ೧ 2) Letter No.Depoist-II/D2/2018-19/284 Dated 21/03/2019 of the Accounts Officer/Deposits, O/o the Accountant General (A & E), Karnataka, Bengaluru.

PREAMBLE :

The Karnataka Goods and Services Tax Act has been implemented w.e.f 01/07/2017 and Section 57 of the said Act, specifies to constitute Consumer Welfare Fund which includes the following credits.

(a) The amount which is not payable to any Taxpayer explained under the circumstances provided under Sub.Section (8) of the Section 54 read with sub.section (4) of the said Act.

(b) Any income from investment of the amount credited to the Fund; and

(c) Such other money received by it like the amount relating to any reduction in rate of Tax on any supply of goods and services or the benefit of input tax credit has not been passed on to the recipient by way of commensurate reduction in the price under the Anti-profiteering provision of Section 171 of the KGST Act, 2017 read with Rule 133 of the KGST Rules, 2017.

Accordingly, the Commissioner of Commercial Taxes in the letter read at (1) above, has requested the Government to establish Consumer Welfare Fund under a specific Head of Account in order to credit the above said amount and to enable to operate the same from the authorities under the Karnataka Goods and Services Tax Act, whenever warranted.

The Accountant General vide letter read at (2) above, has allotted Head of Account "8229-00-200-0-65" for accounting the transactions related to Consumer Welfare Fund under Reserve Fund not bearing interest category.

Hence the following order:

GOVERNMENT ORDER NO: FD 12 CSL 2019, BENGALURU, DATED 10th April 2019

1. In view of the above, sanction is accorded for establishment of "Consumer Welfare Fund" in the public account of the State with Head of Account "8229-00-200-0-65" Development and Welfare funds – other Development and Welfare Funds – Consumer Welfare Fund, as required under Section 57 of the Karnataka Goods and Services Tax Act, 2017".

2. The above fund shall be operated by the Commissioner of Commercial Taxes, Karnataka, Bengaluru.

3. The expenditure to be met out of the fund shall be provided either in budget estimates or in supplementary estimates every year.

4. All sums credited to the fund shall be utilized by the Government for the welfare of the consumer in such manner as prescribed under Karnataka Goods and Services rules, 2017.

5. Any amount having been credited to the fund, ordered or directed as payable to any claimant by orders of the proper officer, appellate authority or appellate tribunal or court shall be paid from the fund.

6. Any utilisation of amount from Consumer Welfare Fund under sub.section (1) of Section 58 shall be made by debiting the Consumer Welfare Fund Account and crediting to the account to which the amount is transferred for utilization i.e., Goods and Services Tax Head of Account, Karnataka SGST (0006).

7. The accounting adjustments to be carried out in respect of the Consumer Welfare Fund is detailed below.

A. Revenue Receipts:

The receipts accounted initially under 0006-00-101-1-01 - Tax Collections under Consumer Welfare Fund under KGST Act during the Financial Year ,will eventually be transferred to the Consumer Welfare Fund Account (i.e., 8229-00-200-0-65") by debiting 2043-00-797-0-01-261 – Transfer to Consumer Welfare Fund under KGST Act - inter Account Transfers and crediting the Consumer Welfare Fund HOA - 8229-00-200 -0-65.

B. Revenue Expenditure:

Payments to the claimants shall be made by debiting 2043-00-800-0-13-066 - Refunds under Consumer Welfare Fund under KGST Act. The expenditure so incurred shall be accounted through adjustments by reconciling with Budget Provision under the HOA 2043-00-902-0-01-261-Deduct amount met from Consumer Welfare Fund under KGST Act and by debiting the Fund Head with the reconciled amount.

The above adjustments relating to Reserve Fund shall be carried out one time at the end of every Financial year through Book adjustment order.

PR-191

By order and in the Name of the Governor of Karnataka, SC-50

NETRAPRABHA M. DHAYAPULE

Under Secretary to Government (I/c),

Finance Department (CT-1).

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೩, ೨೦೧೯ ೪೦೫

ಆರ್ಥಿಕ ಸಚಿವಾಲಯ

ವಿಷಯ : ತುಟ್ಟಿಭತ್ಯೆಯ ದರಗಳ ಪರಿಷ್ಕರಣೆ.

ಉಲ್ಲೇಖ : 1. ದಿನಾಂಕ: 19.04.2018ರ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 6 ಎಸ್ಆರ್‌ಪಿ 2018 2. ದಿನಾಂಕ: 18.06.2018ರ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 12 ಎಸ್ಆರ್‌ಪಿ 2018

3. ದಿನಾಂಕ: 10.07.2018ರ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 14 ಎಸ್ಆರ್‌ಪಿ 2018

4. ದಿನಾಂಕ: 12.10.2018ರ ಸರ್ಕಾರಿ ಆದೇಶ ಸಂಖ್ಯೆ: ಎಫ್‌ಡಿ 21 ಎಸ್ಆರ್‌ಪಿ 2018

ಸರ್ಕಾರಿ ಆದೇಶ ಸಂಖ್ಯೆ: ಆಇ 1 ಎಸ್ಆರ್‌ಪಿ 2019, ಬೆಂಗಳೂರು, ದಿನಾಂಕ: 28ನೇ ಮಾರ್ಚ್ 2019.

ರಾಜ್ಯ ಸರ್ಕಾರಿ ನೌಕರರುಗಳಿಗೆ 2018ರ ಪರಿಷ್ಕøತ ವೇತನ ಶ್ರೇಣಿಗಳಲ್ಲಿ 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯ ದರವನ್ನು ಮೂಲ ವೇತನದ ಶೇಕಡ 3.75 ರಿಂದ ಶೇಕಡ 6.50ಕ್ಕೆ ಹೆಚ್ಚಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ.

2. ಸರ್ಕಾರದ ಮತ್ತು ಜಿಲ್ಲಾ ಪಂಚಾಯತ್‌ಗಳ ಪೂರ್ಣಾವಧಿ ನೌಕರರಿಗೆ, ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ವರ್ಕ್‌ಚಾರ್ಜ್ ನೌಕರರಿಗೆ ಹಾಗೂ ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಕಾಲಿಕ ವೇತನ ಶ್ರೇಣಿಗಳಲ್ಲಿರುವ ಪೂರ್ಣಾವಧಿ ನೌಕರರುಗಳಿಗೆ ಈ ಆದೇಶ ಅನ್ವಯಿಸುತ್ತದೆ.

3. ತುಟ್ಟಿಭತ್ಯೆಯ ಉದ್ದೇಶಕ್ಕಾಗಿ "ಮೂಲ ವೇತನ" ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ ವೇತನ ಶ್ರೇಣಿಯಲ್ಲಿ ಪಡೆಯುತ್ತಿರುವ ವೇತನ ಮತ್ತು ಅದರಲ್ಲಿ,

(ಅ) ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಸ್ಥಗಿತ ವೇತನ ಬಡ್ತಿಯನ್ನು ನೀಡಲಾಗಿದ್ದರೆ, ಆ ಸ್ಥಗಿತ ವೇತನ ಬಡ್ತಿ,

(ಆ) 2018ರ ಕರ್ನಾಟಕ ನಾಗರಿಕ ಸೇವಾ (ಪರಿಷ್ಕøತ ವೇತನ) ನಿಯಮಗಳ ನಿಯಮ 3(ಸಿ)ಯನ್ನು ಓದಿಕೊಂಡು 7ನೇ ನಿಯಮದ (3)ನೇ ಉಪನಿಯಮದ ಮೇರೆಗೆ ಅವನಿಗೆ ನೀಡಲಾದ ವೈಯಕ್ತಿಕ ವೇತನ ಯಾವುದಾದರೂ ಇದ್ದರೆ, ಆ ವೈಯಕ್ತಿಕ ವೇತನ, (ಇ) ವೇತನ ಶ್ರೇಣಿಯ ಗರಿಷ್ಠಕ್ಕಿಂತ ಹೆಚ್ಚಾಗಿ ಅವನಿಗೆ ಮಂಜೂರು ಮಾಡಲಾಗಿರುವ ಹೆಚ್ಚುವರಿ ವೇತನ ಬಡ್ತಿ ಯಾವುದಾದರೂ ಇದ್ದಲ್ಲಿ, ಅವುಗಳು ಸೇರುತ್ತವೆ.

4. ಮೂಲ ವೇತನಕ್ಕೆ ಮೇಲೆ ಸೂಚಿಸಿರುವುದನ್ನು ಹೊರತುಪಡಿಸಿ ಇತರೆ ಯಾವುದೇ ಉಪಲಬ್ಧಗಳನ್ನು ಸೇರಿಸತಕ್ಕದ್ದಲ್ಲ.

5. ರಾಜ್ಯ ಸರ್ಕಾರದ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಮತ್ತು ರಾಜ್ಯದ ಸಂಚಿತ ನಿಧಿಯಿಂದ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಪಡೆಯುತ್ತಿರುವಂತಹ ಅನುದಾನಿತ ಶಿಕ್ಷಣ ಸಂಸ್ಥೆಗಳ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರವನ್ನು ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಶೇಕಡ 3.75 ರಿಂದ ಶೇಕಡ 6.50ಕ್ಕೆ ಹೆಚ್ಚಿಸಿ ದಿನಾಂಕ 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲು ಸಹ ಸರ್ಕಾರವು ಹರ್ಷಿಸುತ್ತದೆ.

6. 2006ರ ಪರಿಷ್ಕøತ ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ಹಾಗೂ ದಿನಾಂಕ 01.01.2016ರ ಪೂರ್ವದಲ್ಲಿ ನಿವೃತ್ತರಾದ ಪಿಂಚಣಿದಾರರಿಗೆ ಈ ಆದೇಶಗಳು ಅನ್ವಯಿಸುತ್ತವೆೆ.

7. 2006ರ ಪರಿಷ್ಕøತ ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ಹಾಗೂ ದಿನಾಂಕ 01.01.2016ರ ನಂತರದಲ್ಲಿ ನಿವೃತ್ತರಾದ ಪಿಂಚಣಿದಾರರಿಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು.

8. ಯುಜಿಸಿ/ಎಐಸಿಟಿಇ/ಐಸಿಎಆರ್/ಎನ್‌ಜೆಪಿಸಿ ವೇತನ ಶ್ರೇಣಿಗಳಲ್ಲಿ ಹಾಲಿ ವೇತನ ಪಡೆಯುತ್ತಿರುವ ನೌಕರರಿಗೆ ಮತ್ತು ಎನ್‌ಜೆಪಿಸಿ ಪಿಂಚಣಿದಾರರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು.

9. ಈ ಆದೇಶದ ಮೇರೆಗೆ ಲಭ್ಯವಿರುವ ತುಟ್ಟಿಭತ್ಯೆಯನ್ನು ನಗದಾಗಿ ಪಾವತಿ ಮಾಡುವುದು.

10. ತುಟ್ಟಿಭತ್ಯೆ ಬಾಕಿ ಮೊತ್ತವನ್ನು, 2019ರ ಮಾರ್ಚ್ ಮಾಹೆಯ ವೇತನ ಬಟವಾಡೆಗೂ ಮೊದಲು ಪಾವತಿ ಮಾಡತಕ್ಕದ್ದಲ್ಲ.

11. ತುಟ್ಟಿಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು.

12. ತುಟ್ಟಿಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಸ್. ಜೋಗೋಜೆ

ಸರ್ಕಾರದ ಉಪ ಕಾರ್ಯದರ್ಶಿ,

ಆರ್ಥಿಕ ಇಲಾಖೆ. (ಸೇವೆಗಳು-2).

೪೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೩, ೨೦೧೯ ಭಾಗ ೧

FINANCE SECRETARIAT

Sub : Revision of the rates of Dearness Allowance-reg.

Read : (1) G.O. No. FD 06 SRP 2018 Dated: 19.04.2018

(2) G.O. No. FD 12 SRP 2018 Dated: 18.06.2018

(3) G.O. No. FD 14 SRP 2018 Dated: 10.07.2018

(4) G.O. No. FD 21 SRP 2018 Dated: 12.10.2018

GOVERNMENT ORDER NO. FD 1 SRP 2019, BENGALURU, DATED 28TH MARCH 2019.

Government are pleased to enhance the rates of Dearness Allowance payable to the State Government Employees in the 2018 Revised Pay Scales from the existing 3.75% to 6.50% of Basic Pay with effect from 1st January 2019.

2. These orders will apply to the full time Government Employees, Employees of Zilla Panchayats, Work Charged Employees on regular time scales of pay, full time Employees of Aided Educational Institutions and Universities who are on regular time scales of pay.

3. For the purpose of this order, the term 'Basic Pay' means, pay drawn by a Government Employee in the scale of pay applicable to the post held by him and includes:

a. Stagnation increment, if any, granted to him above the maximum of the scale of pay;

b. Personal Pay, if any, granted to him under sub-rule (3) of Rule 7 read with Rule 3(c) of the Karnataka Civil Services (Revised Pay) Rules, 2018;

c. Additional increment, if any, granted to him above the maximum of the scale of pay.

4. Basic Pay shall not include any emoluments other than those specified above.

5. Government are also pleased to enhance the rates of Dearness Allowance from the existing 3.75% to 6.50% of the Basic Pension/Family Pension with effect from 1st January 2019 to the State Government Pensioners/Family Pensioners as well as Pensioners/Family Pensioners of the Aided Educational Institutions whose Pension/Family Pension is paid out of the Consolidated Fund of the State.

6. These orders are also applicable to retired teachers who were on 2006 revised UGC/AICTE/ICAR scales of pay and who retired prior to 01.01.2016.

7. Separate orders will be issued in respect of pensioners who were on 2006 revised UGC/AICTE/ICAR scales of pay and retired on or after 01.01.2016.

8. Separate orders will be issued in respect of Employees on UGC/AICTE/ICAR/NJPC scales of pay and also in respect of NJPC Pensioners.

9. The increase in Dearness Allowance admissible under this order is payable in cash.

10. The payment of arrears of Dearness Allowance shall not be made before the date of disbursement of salary for the month of March 2019.

11. The payment on account of Dearness Allowance involving fractions of 50 paise and above shall be rounded off to the next rupee and fractions less than 50 paise shall be ignored.

12. The Dearness Allowance will be shown as a distinct element of remuneration and will not be treated as pay for any purpose.

PR-192

By order and in the Name of the Governor of Karnataka,

D.S. JOGOJE

SC-50

Deputy Secretary to Government,

Finance Department (Services-2).

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೩, ೨೦೧೯ ೪೦೭

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಮಾನ್ಯ ನ್ಯಾಯಮೂರ್ತಿ ಹೆಚ್.ಎಸ್. ಕೆಂಪಣ್ಣ, ನಿವೃತ್ತ ಮಾನ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಇವರು ವಿಚಾರಣಾ ಆಯೋಗದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದ ಅವಧಿಗೆ ಪರಿಷ್ಕøತ ವೇತನ ವ್ಯತ್ಯಾಸ ಮೊತ್ತವನ್ನು ಪಾವತಿಸುವ ಕುರಿತು.

ಓದಲಾಗಿದೆ : 1. ಸರ್ಕಾರದ ಅಧಿಸೂಚನೆ ಸಂ.ನಅಇ 619 ಬೆಂಭೂಸ್ವಾ 2014 ದಿನಾಂಕ: 16.8.2014.

2. ಸರ್ಕಾರದ ಆದೇಶ ಸಂ. ನಅಇ 840 ಬೆಂಭೂಸ್ವಾ 2014 (1) ದಿನಾಂಕ: 29.01.2015.

3. ಮಾನ್ಯ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್. ಕೆಂಪಣ್ಣ ಇವರು ದಿನಾಂಕ: 08.12.2018 ರಂದು ಸಲ್ಲಿಸಿರುವ ಮನವಿ.

ಪ್ರಸ್ತಾವನೆ :

/ ಭೂಸ್ವಾಧೀನದಿಂದ ಹೊರತುಪಡಿಸಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಆಗಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಹೆಚ್.ಎಸ್. ಕೆಂಪಣ್ಣ ವಿಚಾರಣಾ ಆಯೋಗವನ್ನು ರಚಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಆದೇಶದಲ್ಲಿ ನಿವೃತ್ತ ನ್ಯಾಯಮೂರ್ತಿ ಹೆಚ್.ಎಸ್. ಕೆಂಪಣ್ಣ ಇವರ ವೇತನವನ್ನು ಮಾಸಿಕ ರೂ. 80,000/- ಎಂದು ನಿಗಧಿಪಡಿಸಲಾಗಿತ್ತು ಹಾಗೂ ಸದರಿ ವೇತನದಲ್ಲಿ ಸದರಿಯವರು ಪಡೆಯುತ್ತಿರುವ ಪಿಂಚಣಿ ಹಣವನ್ನು ಕಡಿತಗೊಳಿಸುವಂತೆ ಹಾಗೂ ಮಾನ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಲಭ್ಯವಾಗುವ ಎಲ್ಲಾ ಭತ್ಯೆಗಳನ್ನು ಮೂಲ ವೇತನ ರೂ. 80,000/- ಗಳ ಮೇಲೆ ಸದರಿಯವರಿಗೆ ನೀಡುವಂತೆ ಆದೇಶಿಸಲಾಗಿತ್ತು. ಅದರಂತೆ ಸದರಿಯವರು ವಿಚಾರಣಾ ಆಯೋಗದ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ ಅವಧಿಗೆ ವೇತನವನ್ನು ಸರ್ಕಾರದಿಂದ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ದಿನಾಂಕ: 08.12.2018 ರ ಪತ್ರದಲ್ಲಿ ಮಾನ್ಯ ನ್ಯಾಯಮೂರ್ತಿ ಹೆಚ್.ಎಸ್.ಕೆಂಪಣ್ಣ, ನಿವೃತ್ತ ಮಾನ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಇವರು ಮಾನ್ಯ ಉಚ್ಛ ನ್ಯಾಯಾಲಯದ ಹಾಗೂ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳ ವೇತನ ಮತ್ತು ಪಿಂಚಿಣಿಗಳನ್ನು ದಿನಾಂಕ: 01.01.2016 ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿರುವುದರಿಂದ ಅದರನ್ವಯ ಸದರಿಯವರು ದಿನಾಂಕ: 01.01.2016 ರಿಂದ ಜಾರಿಗೆ ಬರುವಂತೆ ರೂ. 2,25,000/- ಗಳ ವೇತನಕ್ಕೆ ಅರ್ಹರಾಗುವುದರಿಂದ ಹಾಗೂ ಅದರಂತೆ ಮಹಾಲೇಖಪಾಲರು, ಕರ್ನಾಟಕ ಇವರು ಸದರಿಯವರ ಪಿಂಚಣಿಯನ್ನು ಮಾಸಿಕ ರೂ. 1,12,500/-ಕ್ಕೆ ನಿಗಧಿಪಡಿಸಿರುವುದರಿಂದ, ವಿಚಾರಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ದಿನಾಂಕ: 01.01.2016 ರಿಂದ 31.08.2017 ರ ಅವಧಿಗೆ ಪರಿಷ್ಕøತ ವೇತನದನ್ವಯ ವೇತನ ನಿಗಧಿಪಡಿಸಿ ನೀಡಬೇಕಾದ ವ್ಯತ್ಯಾಸ ಮೊತ್ತ ರೂ. 7,47,340/- ಗಳನ್ನು ಪಾವತಿ ಮಾಡುವಂತೆ ಕೋರಿರುತ್ತಾರೆ.

ಈ ಬಗ್ಗೆ ಆರ್ಥಿಕ ಇಲಾಖೆಯು ಲೆಕ್ಕ ಶೀರ್ಷಿಕೆ "2070-00-105-0-02-059 (ಯೋಜನೇತರ) ಇತರೆ ವಿಚಾರಣಾ ಆಯೋಗ" ರಡಿಯಲ್ಲಿ 2019-20ನೇ ಸಾಲಿನಲ್ಲಿ ರೂ. 100.00 ಲಕ್ಷಗಳನ್ನು ಒದಗಿಸಲಾಗಿದ್ದು, ನಿವೃತ್ತ ನ್ಯಾಯಮೂರ್ತಿ ಶ್ರೀ ಹೆಚ್.ಎಸ್. ಕೆಂಪಣ್ಣ ಇವರಿಗೆ ಪರಿಷ್ಕøತ ಶ್ರೇಣಿಯನ್ವಯ ವೇತನ ಮೊತ್ತ ರೂ. 7,47,340.00 ಗಳನ್ನು ಪಾವತಿಸುವ ಬಗ್ಗೆ ಸಿ.ಆ.ಸು ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸಿರುತ್ತದೆ.

ಸಿಆಸು ಇಲಾಖೆಯು ಲೆೆಕ್ಕ ಶೀರ್ಷಿಕೆ "2070-00-105-0-02-059 (ಯೋಜನೇತರ) ಇತರೆ ವಿಚಾರಣಾ ಆಯೋಗ" ರಡಿಯಲ್ಲಿ ಮಾನ್ಯ ನ್ಯಾಯಮೂರ್ತಿ ಶ್ರೀ ಹೆಚ್.ಎಸ್. ಕೆಂಪಣ್ಣ ಇವರ ಕರ್ತವ್ಯದ ಅವಧಿಯಲ್ಲಿ ಪಾವತಿಸಬೇಕದ ಪರಿಷ್ಕøತ ಶ್ರೇಣಿಯ ಮೊತ್ತ ರೂ. 7,47,340.00 ಗಳನ್ನು ನಗರಾಭಿವೃದ್ಧಿ ಇಲಾಖೆಗೆ ಬಿಡುಗಡೆ ಮಾಡಬೇಕಾದರೆ ನಗರಾಭಿವೃದ್ಧಿ ಇಲಾಖೆಯಲ್ಲಿ ಖಜಾನೆ-2 ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಡಿ.ಡಿ.ಒ ಸಂಖ್ಯೆ, ಹೆಸರು ಮತ್ತು ಪದನಾಮದ ವಿವರಗಳನ್ನು ನೀಡಿದ್ದಲ್ಲಿ ಡಿ.ಡಿ.ಒ ಗೆ ಸದರಿ ಮೊತ್ತವನ್ನು ವರ್ಗಾವಣೆ ಮಾಡಬಹುದಾಗಿದೆ ಎಂದು ಮತ್ತು ಇದರೊಂದಿಗೆ ಮಾನ್ಯ ನ್ಯಾಯಮೂರ್ತಿ ಶ್ರೀ ಹೆಚ್.ಎಸ್. ಕೆಂಪಣ್ಣ ಇವರ ವೇತನ ವ್ಯತ್ಯಾಸದ ಮೊತ್ತವನ್ನು ಮಂಜೂರು ಮಾಡುವ ಆದೇಶದ ಪ್ರತಿಯನ್ನು ಸಲ್ಲಿಸುವಂತೆ ತಿಳಿಸಿರುತ್ತದೆ.

ಮೇಲ್ಕಂಡ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ ನಅಇ 92 ಬೆಂಭೂಸ್ವಾ 2019, ದಿನಾಂಕ: 24.04.2019.

ಮಾನ್ಯ ನ್ಯಾಯಮೂರ್ತಿ ಶ್ರೀ ಹೆಚ್.ಎಸ್. ಕೆಂಪಣ್ಣ, ನಿವೃತ್ತ ಮಾನ್ಯ ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಇವರು ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ಭೂಸ್ವಾಧೀನದಿಂದ ಕೈಬಿಟ್ಟಿರುವ / ಭೂಸ್ವಾಧೀನದಿಂದ ಹೊರತುಪಡಿಸಿರುವ ಜಮೀನುಗಳಿಗೆ ಸಂಬಂಧಿಸಿದಂತೆ ಆಗಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ವಿಚಾರಣಾ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ದಿನಾಂಕ: 01.01.2016 ರಿಂದ 31.08.2017 ರ ಅವಧಿಗೆ ಪರಿಷೃತ ವೇತನ ಶ್ರೇಣಿಯನ್ವಯ ವೇತನ ವ್ಯತ್ಯಾಸ ಮೊತ್ತ ರೂ. 7,47,340.00 ಗಳನ್ನು ಬಿಡುಗಡೆ ಮಾಡಲು ಸರ್ಕಾರದ ಮಂಜೂರಾತಿ ನೀಡಿ ಆದೇಶಿಸಿದೆ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೨೩, ೨೦೧೯ ಭಾಗ ೧

ಸದರಿ ಮೊತ್ತವನ್ನು 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಲೆೆಕ್ಕ ಶೀರ್ಷಿಕೆ "2070-00-105-0-02-059 (ಯೋಜನೇತರ) ಇತರೆ ವಿಚಾರಣಾ ಆಯೋಗ" ರಡಿಯಲ್ಲಿ ಒದಗಿಸಿರುವ ರೂ.1.00 ಕೋಟಿ ಅನುದಾನದಿಂದ ಮೇಲ್ಕಂಡ ಮೊತ್ತವನ್ನು ಬಿಡುಗಡೆ ಮಾಡಲು ಹಾಗೂ ಸದರಿಯವರಿಗೆ ಪಾವತಿಸಲು ಸಿಆಸು ಇಲಾಖೆಯು ಕ್ರಮವಹಿಸುವುದು.

PR-201

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ಕೆ.ಎಸ್. ಜಗದೀಶರೆಡ್ಡಿ

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 23 May 2019. Indian Gazettes, https://egazette.servantsofknowledge.in/details/in.gazette.karnataka_new.2019-05-23.Part-1/. Archive identifier in.gazette.karnataka_new.2019-05-23.Part-1.