ಬೆಂಗಳೂರು, ಗುರುವಾರ, ಮೇ ೩೦, ೨೦೧೯ (ಜ್ಯೇಷ್ಠ ೯, ಶಕ ವರ್ಷ ೧೯೪೧)
Bengaluru, Thursday, May 30, 2019 (Jyeishta 9, Shaka Varsha 1941)
ಸಂಪುಟ ೧೫೪
Volume 154
ಸಂಚಿಕೆ ೨೨
Issue 22
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ
ವಿಷಯ : 7ನೇ ಆರ್ಥಿಕ ಗಣತಿ 2019ರ ಕಾರ್ಯಾಚರಣೆಯ ಸಂಯೋಜನೆಗೆ ರಾಜ್ಯ ಮಟ್ಟದಲ್ಲಿ
ಚಾಲನಾ ಸಮಿತಿಯನ್ನು ರಚಿಸುವ ಕುರಿತು.
ಓದಲಾಗಿದೆ : ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಇವರ ಏಕ ಕಡತ
ಸಂಖ್ಯೆ : ಆಸಾಂನಿ/ಎಸ್.ಐ.ಪಿ./ಕೈ/7ಆ.ಗ./3/2019.
ಪ್ರಸ್ತಾವನೆ :-
ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಇವರು ಮೇಲೆ ಓದಲಾದ ಪತ್ರದಲ್ಲಿ ಭಾರತ ಸರ್ಕಾರವು 1977 ರಿಂದ ಆರ್ಥಿಕ ಗಣತಿ ನಿಯಮಿತವಾಗಿ ಕೈಗೊಳ್ಳುತ್ತಿರುವುದಾಗಿ ತಿಳಿಸಿರುತ್ತಾರೆ. ಈಗಾಗಲೇ ಭಾರತ ಸರ್ಕಾರವು 6 ಆರ್ಥಿಕ ಗಣತಿಗಳನ್ನು ಕೈಗೊಂಡಿದೆ. 2019ರಲ್ಲಿ 7ನೇ ಆರ್ಥಿಕ ಗಣತಿಯನ್ನು ಕೈಗೊಳ್ಳಲು ಭಾರತ ಸರ್ಕಾರವು ತೀರ್ಮಾನಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಕ್ಷೇತ್ರ ಕಾರ್ಯಾಚರಣೆಯನ್ನು ಮೇ 2019 ರಿಂದ ಪ್ರಾರಂಭಿಸಿ ಮೂರು ತಿಂಗಳುಗಳ ಕಾಲಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದರ ಮುಖ್ಯ ಉದ್ದೇಶ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿಯನ್ನು ತಯಾರಿಸುವುದಾಗಿದೆ ಎಂದು ಸದರಿ ಪತ್ರದಲ್ಲಿ ತಿಳಿಸಿರುತ್ತಾರೆ.
ಗಣತಿ ಕಾರ್ಯಾಚರಣೆಯು ರಾಜ್ಯದಲ್ಲಿ ಸುಗಮವಾಗಿ ಮತ್ತು ಸುಸೂತ್ರವಾಗಿ ನಡೆಸುವ ಸಲುವಾಗಿ ಮುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ರವರ ನಿರ್ದೇಶನದಂತೆ ರಾಜ್ಯ ಮಟ್ಟದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಚಾಲನಾ ಸಮಿತಿಯನ್ನು ರಚಿಸಲು ಹಾಗೂ ಇದರಲ್ಲಿ ಸಂಬಂಧಿಸಿದ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳನ್ನು ಸದಸ್ಯರುಗಳನ್ನಾಗಿ ಹಾಗೂ ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಇವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನಾಮ ನಿರ್ದೇಶನಗೊಳಿಸಬೇಕೆಂದು ಸದರಿ ಪತ್ರದಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಅದರಂತೆಯೇ ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಪಿಡಿ 01 ಎಸ್ಎಸ್ಎಂ 2019, ದಿನಾಂಕ : 16/04/2019.
ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 7ನೇ ಆರ್ಥಿಕ ಗಣತಿ 2019ರ ಸುಗಮ ಕಾರ್ಯಾಚರಣೆಗಾಗಿ ರಾಜ್ಯ ಮಟ್ಟದಲ್ಲಿ ಈ ಕೆಳಕಂಡ ಉನ್ನತಾಧಿಕಾರಿಗಳನ್ನೊಳಗೊಂಡ ಚಾಲನಾ ಸಮಿತಿಯನ್ನು ರಚಿಸಿ ಆದೇಶಿಸಲು ಸರ್ಕಾರವು ಹರ್ಷಿಸುತ್ತದೆ.
1. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
- ಅಧ್ಯಕ್ಷರು ಕರ್ನಾಟಕ ಸರ್ಕಾರ.
2. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು,
- ಸದಸ್ಯರು e-Governance, ಕರ್ನಾಟಕ ಸರ್ಕಾರ.
3. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
- ಸದಸ್ಯರು ನಗರಾಭಿವೃದ್ಧಿ ಇಲಾಖೆ.
4. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
- ಸದಸ್ಯರು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.
(೪೦೯)೪೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ಭಾಗ ೧ 5. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
- ಸದಸ್ಯರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ.
6. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
- ಸದಸ್ಯರು ಕಂದಾಯ ಇಲಾಖೆ.
7. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
- ಸದಸ್ಯರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
8. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು,
- ಸದಸ್ಯರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಇಲಾಖೆ.
9. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
- ಸದಸ್ಯರು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ.
10. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು,
- ಸದಸ್ಯರು ಆರ್ಥಿಕ ಇಲಾಖೆ (ಆಯವ್ಯಯ ಮತ್ತು ಸಂಪನ್ಮೂಲ).
11. ಉಪ ಮಹಾ ನಿರ್ದೇಶಕರು,
- ಸದಸ್ಯರು ರಾಷ್ಟ್ರೀಯ ಮಾದರಿ ಸಮೀಕ್ಷಾ ಕಛೇರಿ, FOD Region, ಕೇಂದ್ರೀಯ ಸದನ, ಕೋರಮಂಗಲ, ಬೆಂಗಳೂರು.
12. ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ.
- ಸದಸ್ಯರು 13. ಆಯುಕ್ತರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ. - ಸದಸ್ಯರು 14. ಆಯುಕ್ತರು, ಕಾರ್ಮಿಕ ಇಲಾಖೆ.
- ಸದಸ್ಯರು 15. ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು. - ಸದಸ್ಯರು 16. ನಿರ್ದೇಶಕರು,
- ಸದಸ್ಯರು ಕಾರ್ಖಾನೆ ಮತ್ತು ಬಾಯ್ಲರ್ಗಳ ಕಛೇರಿ.
17. ರಾಜ್ಯ ವ್ಯವಸ್ಥಾಪಕರು,
- ಸದಸ್ಯರು CSC e-Governance Service Limited (CSC), ಕರ್ನಾಟಕ ರಾಜ್ಯ, ಬೆಂಗಳೂರು.
18. ನಿರ್ದೇಶಕರು,
- ಸದಸ್ಯ ಕಾರ್ಯದರ್ಶಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ.
ಸಮಿತಿಯ ಕಾರ್ಯಾಚರಣೆ ಈ ಕೆಳಕಂಡಂತಿದೆ :
1. ರಾಜ್ಯದಲ್ಲಿ 7ನೇ ಆರ್ಥಿಕ ಗಣತಿಕ್ಷೇತ್ರ ಕಾರ್ಯಕ್ಕೆ ಸಿದ್ಧತೆ ಮಾಡುವುದು, ಪ್ರಗತಿ ಪರಿಶೀಲನೆ ಮತ್ತು ಅಡಚಣೆಗಳ ನಿವಾರಣೆಗೆ ನಿಯಮಿತವಾಗಿ ಕ್ರಮವಹಿಸುವುದು.
2. ರಾಜ್ಯ ವ್ಯಾಪ್ತಿಯ ಎಲ್ಲಾ ಪ್ರದೇಶದಲ್ಲಿ ಮಾಹಿತಿ ಸಂಗ್ರಹಿಸಿರುವ ಕುರಿತು ಅಸ್ತಿತ್ವದಲ್ಲಿರುವ ಮಾಹಿತಿಯೊಂದಿಗೆ ಖಚಿತಪಡಿಸಿಕೊಳ್ಳುವುದು.
3. ರಾಷ್ಟ್ರಿಯ ಮಾದರಿ ಸಮೀಕ್ಷೆ ಕಛೇರಿಯ ಅಧಿಕಾರಿ/ಸಿಬ್ಬಂದಿಗಳು ಮತ್ತು ರಾಜ್ಯದ ಅಧಿಕಾರಿ/ಸಿಬ್ಬಂದಿಗಳು ನಡೆಸಿದ ಮೇಲ್ವಿಚಾರಣಾ ವರದಿ ಆಧರಿಸಿ ಸಂಗ್ರಹಿಸಿರುವ ಮಾಹಿತಿಯು ಸರಿಯಾಗಿರುವ ಕುರಿತು ವರದಿ ತಯಾರಿಸುವುದು.
4. 7ನೇ ಆರ್ಥಿಕ ಗಣತಿಯಲ್ಲಿ ಸಹಕರಿಸಲು ವ್ಯಾಪಾರ ಸಂಘಗಳು ಮತ್ತು ನಾಗರಿಕರಿಗೆ ತಿಳುವಳಿಕೆ ನೀಡುವುದು.
5. ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿಯಿಂದ ಪಡೆದ feedback ಪರಿಶೀಲನೆ ಹಾಗೂ ಸಮಸ್ಯೆಗಳೇನಾದರೂ ಇದ್ದಲ್ಲಿ ನಿವಾರಿಸುವುದು.
6. ರಾಜ್ಯ ಮಟ್ಟದಲ್ಲಿ ಆರ್ಥಿಕ ಗಣತಿಯ ತಾತ್ಕಾಲಿಕ ಫಲಿತಾಂಶಗಳನ್ನು ಅನುಮೋದಿಸುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ.ಎನ್. ಬಾನೊಳ್ಳಿ
ಸರ್ಕಾರದ ಅಧೀನ ಕಾರ್ಯದರ್ಶಿ(ಎಸ್-5) (ಪ್ರ)
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.
PLANNING, PROGRAMME MONITORING AND STATISTICS SECRETARIAT
Sub : Constitution of State Level Steering Committee to Monitor the Work of
7th Economic Census 2019.
Read : Director, Directorate of Economics and Statisitics Department Single file
No:ಆಸಾಂನಿ/ಎಸ್.ಐ.ಪಿ./ಕೈ/7ನೇ ಆ.ಗ./3/2019.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ೪೧೧ PREAMBLE :The Director, Directorate of Economic and Statistics, in the letter read above, has stated that the Government of India has been conducting the Economic Census periodically since 1977. Already 6 Economic Census have been conducted. Now the Government of India has decided to conduct the 7th Economic Census starting from May 2019 for a period of 3 months in the state. The main objective of this census is to capture the information on all Household Enterprises/Own Account Enterprises run by workers within fixed premises or without fixed premises as well as other public and private establishments in rural and urban areas.
It has also been proposed in the letter read above that, for easy and smooth conduct of Economic Census, it is necessary to constitute a Steering Committee at the State Level under the Chairmanship of The Additional Chief Secretary and Principal Secretaries of the concerned department, as its members and nominating the Director, Directorate of Economic and Statistics as Member Secretary.
The said proposal has been examined. Hence, this order.
Government Order NO:PD 01 SSM 2019, Dated:16 /04/2019
In view of the above, Government is pleased to constitute a State Level Steering Committee for the smooth conduct of 7th Economic Census 2019.
The Committee shall comprise the following members:
1. The Additional Chief Secretary to Government, Government of Karnataka. - Chair Person 2. The Additional Chief Secretary to Government,e-Governance,
- Member Government of Karnataka.
3. The Principal Secretary to Government, Urban Development Department.
- Member 4. The Principal Secretary to Government,
- Member Planning, Programme Monitoring & Statistics Department.
5. The Principal Secretary to Government,
- Member Industries and Commerce Department.
6. The Principal Secretary to Government, Revenue Department.
- Member 7. The Principal Secretary to Government,
- Member Rural Development and Panchayat Raj Department.
- Member 8. The Principal Secretary / Secretary to Government,
Primary & Secondary Education Department.
9. The Principal Secretary to Government,
- Member Department of Information Technology and Bio-Technology.
10. The Principal Secretary to Government,
- Member Finance Department (Budget & Resources).
11. The Deputy Director General,
- Member N.S.S.O. Office, FOD Region, Kendriya Sadana, Koramangala, Bengaluru.
12. The Commissioner,
- Member Commercial Tax Department.
13. The Commissioner,
- Member Industries and Commerce Department.
14. The Commissioner,
- Member Labour Department.
15. The Commissioner,
- Member B.B.M.P. Bengaluru.
16. The Director,
- Member Factories and Boilers Department.
- Member 17. State Manager, CSC e-Governance Service Limited (CSC),
Government of Karnataka, Bengaluru.
18. The Director, Directorate of Economic and Statistics.
- Member Secretary೪೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ಭಾಗ ೧ The functions of the Committee are as follows: 1. Monitor preparedness, progress and hurdles in conduct of 7th EC in the State on regular basis.
2. Ensure complete coverage of the data canvassed through validation against existing databases such as State Business register.
3. Prepare report on data correctness based on supervision carried out by the State/ UT and NSSO (FOD) supervisors.
4. Sensitize the business associations and citizens in general for cooperation.
5. Monitor feedback received from District Level Coordination Committee and resolve issues, if any
6. To approve the provisional results of the Economic Census at State level.
PR. 194
By Order and in the Name of the Governor of Karnataka.
M.N. BANOLLI
SC-10
Under Secretary to Government (S-5) ( I/C)
Planning, Programme Monitoring & Statistics Department.
ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ
ವಿಷಯ : 7ನೇ ಆರ್ಥಿಕ ಗಣತಿ 2019ರ ಕಾರ್ಯಾಚರಣೆಯ ಸಂಯೋಜನೆಗೆ ಜಿಲ್ಲಾ ಮಟ್ಟದಲ್ಲಿ
ಉಸ್ತುವಾರಿ ಸಮಿತಿಗಳನ್ನು ರಚಿಸುವ ಕುರಿತು.
ಓದಲಾಗಿದೆ : ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಇವರ ಏಕ ಕಡತ
ಸಂಖ್ಯೆ:ಆಸಾಂನಿ/ಎಸ್.ಐ.ಪಿ./ಕೈ/7ಆ.ಗ./3/2019.
ಪ್ರಸ್ತಾವನೆ :-
ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಇವರು ಮೇಲೆ ಓದಲಾದ ಪತ್ರದಲ್ಲಿ ಭಾರತ ಸರ್ಕಾರವು 1977 ರಿಂದ ಆರ್ಥಿಕ ಗಣತಿ ನಿಯಮಿತವಾಗಿ ಕೈಗೊಳ್ಳುತ್ತಿರುವುದಾಗಿ ತಿಳಿಸಿರುತ್ತಾರೆ. ಈಗಾಗಲೇ ಭಾರತ ಸರ್ಕಾರವು 6 ಆರ್ಥಿಕ ಗಣತಿಗಳನ್ನು ಕೈಗೊಂಡಿದೆ. 2019ರಲ್ಲಿ 7ನೇ ಆರ್ಥಿಕ ಗಣತಿಯನ್ನು ಕೈಗೊಳ್ಳಲು ಭಾರತ ಸರ್ಕಾರವು ತೀರ್ಮಾನಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಕ್ಷೇತ್ರ ಕಾರ್ಯಾಚರಣೆಯನ್ನು ಮೇ 2019 ರಿಂದ ಪ್ರಾರಂಭಿಸಿ ಮೂರು ತಿಂಗಳುಗಳ ಕಾಲ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದರ ಮುಖ್ಯ ಉದ್ದೇಶ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿಯನ್ನು ತಯಾರಿಸುವುದಾಗಿದೆ ಎಂದು ಸದರಿ ಪತ್ರದಲ್ಲಿ ತಿಳಿಸಿರುತ್ತಾರೆ.
ಗಣತಿ ಕಾರ್ಯಾಚರಣೆಯು ರಾಜ್ಯದಲ್ಲಿ ಸುಗಮವಾಗಿ ಮತ್ತು ಸೂಸೂತ್ರವಾಗಿ ನಡೆಸುವ ಸಲುವಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿಯನ್ನು ರಚಿಸಬೇಕಾಗಿದ್ದು, ಇದರಲ್ಲಿ ಜಿಲ್ಲಾ ಮಟ್ಟದಲ್ಲಿರುವ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸದಸ್ಯರನ್ನಾಗಿ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳನ್ನು ಸದಸ್ಯ ಕಾರ್ಯದರ್ಶಿಗಳನ್ನಾಗಿ ನಿಯೋಜಿಸಬೇಕಾಗಿರುತ್ತದೆಂದು ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಇವರು ಸದರಿ ಪತ್ರದಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಅದರಂತೆಯೇ ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಪಿಡಿ 01 ಎಸ್ಎಸ್ಎಂ 2019, ದಿನಾಂಕ : 16/04/2019.
ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 7ನೇ ಆರ್ಥಿಕ ಗಣತಿ 2019ರ ಸುಗಮ ಕಾರ್ಯಾಚರಣೆಗಾಗಿ ಜಿಲ್ಲಾ ಮಟ್ಟದಲ್ಲಿ ಈ ಕೆಳಕಂಡ ಅಧಿಕಾರಿಗಳನ್ನೊಳಗೊಂಡ ಉಸ್ತುವಾರಿ ಸಮಿತಿಯನ್ನು ರಚಿಸಿ ಆದೇಶಿಸಲು ಸರ್ಕಾರವು ಹರ್ಷಿಸುತ್ತದೆ.
ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ :
1. ಜಿಲ್ಲಾಧಿಕಾರಿಗಳು.
- ಅಧ್ಯಕ್ಷರು 2. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ,
- ಸದಸ್ಯರು ಜಿಲ್ಲಾ ಪಂಚಾಯತ್.
3. ಯೋಜನಾ ನಿರ್ದೇಶಕರು,
- ಸದಸ್ಯರು ನಗರಾಭಿವೃದ್ಧಿ ಕೋಶ,
ಜಿಲ್ಲಾಧಿಕಾರಿಗಳ ಕಛೇರಿ.
4. ಜಿಲ್ಲಾ ಪೋಲೀಸ್ ಅಧೀಕ್ಷಕರು,
- ಸದಸ್ಯರು 5. ಮುಖ್ಯ ಯೋಜನಾಧಿಕಾರಿ,
- ಸದಸ್ಯರು ಜಿಲ್ಲಾ ಪಂಚಾಯತ್.
6. ಜಂಟಿ ನಿರ್ದೇಶಕರು,
- ಸದಸ್ಯರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ೪೧೩7. ಜಂಟಿ ನಿರ್ದೇಶಕರು/ಉಪ ನಿರ್ದೇಶಕರು,
- ಸದಸ್ಯರು ಸಾರ್ವಜನಿಕ ಶಿಕ್ಷಣ ಇಲಾಖೆ.
8. ಜಿಲ್ಲಾ ಮಾಹಿತಿ ಹಾಗೂ ಪ್ರಚಾರ ಇಲಾಖಾಧಿಕಾರಿಗಳು, - ಸದಸ್ಯರು 9. ಜಿಲ್ಲೆಯ ಎಲ್ಲಾ ಉಪ ವಿಭಾಗಾಧಿಕಾರಿಗಳು.
- ಸದಸ್ಯರು 10. ಉಪ ಆಯುಕ್ತರು/ಸಹಾಯಕ ಆಯುಕ್ತರು
- ಸದಸ್ಯರು ವಾಣಿಜ್ಯ ತೆರಿಗೆ ಇಲಾಖೆ.
11. ಜಿಲ್ಲೆಯ ಎಲ್ಲಾ ತಹಶೀಲ್ದಾರರು.
- ಸದಸ್ಯರು 12. ಜಿಲ್ಲಾ ಕಾರ್ಮಿಕ ಅಧಿಕಾರಿಗಳು,
- ಸದಸ್ಯರು ಕಾರ್ಮಿಕ ಇಲಾಖೆ.
13. ಉಪ ನಿರ್ದೇಶಕರು,
- ಸದಸ್ಯರು ಜಿಲ್ಲಾ ಕಾರ್ಖಾನೆ ಮತ್ತು ಬಾಯ್ಲರ್ಗಳ ಕಛೇರಿ.
14. ಆಯುಕ್ತರು/ಮುಖ್ಯಾಧಿಕಾರಿಗಳು/ಕಾರ್ಯನಿರ್ವಾಹಣಾ ಅಧಿಕಾರಿಗಳು
- ಸದಸ್ಯರು ನಗರಸಭೆ/ ಪುರಸಭೆ/ತಾಲ್ಲೂಕು ಪಂಚಾಯತ್.
15. ಜಿಲ್ಲಾ ಉಪ ನೋಂದಣಾಧಿಕಾರಿಗಳು,
- ಸದಸ್ಯರು ಜಿಲ್ಲಾ ಸಹಕಾರ ಸಂಘಗಳ ಕಛೇರಿ.
16. ಜಿಲ್ಲಾ ವ್ಯವಸ್ಥಾಪಕರು,
- ಸದಸ್ಯರು CSC e-Governance Service Limited (CSC), ಜಿಲ್ಲೆ________
17. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು.
- ಸದಸ್ಯ ಕಾರ್ಯದರ್ಶಿ ಸದರಿ ಉಸ್ತುವಾರಿ ಸಮಿತಿಗಳ ಕರ್ತವ್ಯಗಳು:
1. ಜಿಲ್ಲೆಯಲ್ಲಿ 7ನೇ ಆರ್ಥಿಕ ಗಣತಿ ಕ್ಷೇತ್ರ ಕಾರ್ಯಕ್ಕೆ ಸಿದ್ಧತೆ ಮಾಡುವುದು, ಪ್ರಗತಿ ಪರಿಶೀಲನೆ ಮತ್ತು ಅಡಚಣೆಗಳ ನಿವಾರಣೆಗೆ ನಿಯಮಿತವಾಗಿ ಕ್ರಮವಹಿಸುವುದು.
2. ರಾಜ್ಯ ಮಟ್ಟದ ಚಾಲನಾ ಸಮಿತಿಗೆ feedback ನೀಡುವುದು ಹಾಗೂ ಜಿಲ್ಲಾ ಮಟ್ಟದಲ್ಲಿ ರಾಜ್ಯ ಮಟ್ಟದ ಚಾಲನಾ ಸಮಿತಿಯ ಸೂಚನೆ ಹಾಗೂ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು.
3. 7ನೇ ಆರ್ಥಿಕ ಗಣತಿಯ ಕ್ಷೇತ್ರ ಕಾರ್ಯದಲ್ಲಿ CSC-SPV ಯೊಂದಿಗೆ ಸಹಕರಿಸಲು ಸ್ಥಳೀಯ ಆಡಳಿತ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸೂಕ್ತ ಸೂಚನೆ ನೀಡುವುದು.
4. 7ನೇ ಆರ್ಥಿಕ ಗಣತಿಯ ವಾರ್ಡ್/ ಗ್ರಾಮಗಳ ಆಡಳಿತಾತ್ಮಕ ಕ್ಷೇತ್ರ ನಕ್ಷೆಗಳನ್ನು ಒದಗಿಸುವುದು ಮತ್ತು ಕ್ಷೇತ್ರ ಕಾರ್ಯದಲ್ಲಿ ಸಹಾಯ ಮಾಡಲು ಸಂಬಂಧಿಸಿದವರಿಗೆ ಸೂಚನೆ ನೀಡುವುದು.
5. ಜಿಲ್ಲಾ ಮಟ್ಟದ ತಾತ್ಕಾಲಿಕ ಫಲಿತಾಂಶವನ್ನು ಅನುಮೋದಿಸುವುದು ಹಾಗೂ ಪ್ರಸಾರ ಮಾಡುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ.ಎನ್. ಬಾನೊಳ್ಳಿ
ಸರ್ಕಾರದ ಅಧೀನ ಕಾರ್ಯದರ್ಶಿ(ಎಸ್-5) (ಪ್ರ)
ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.
PLANNING, PROGRAMME MONITORING AND STATISTICS SECRETARIAT
Sub : Constitution of Monitoring Committee at District level to monitor the work of 7th Economic
Census 2019.
Read : Director, Directorate of Economics and Statisitics Department Single file No: ಆಸಾಂನಿ/ಎಸ್.ಐ.ಪಿ./ಕೈ/7ನೇ ಆ.ಗ./3/2019.
PREAMBLE :
The Director,Directorate of Economic and Statistics, in the letter read above, has stated that the Government of India has been conducting the Economic Census periodically since 1977. Already 6 Economic Census have been conducted. Now the Government of India has decided to conduct the 7th Economic Census starting from May 2019 for a period of 3 months in the state. The main objective of this census is to capture the information on all Household Enterprises/ Own Account Enterprises run by workers within fixed premises or without fixed premises as well as other public and private establishments in rural and urban areas.
೪೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ಭಾಗ ೧ It has also been proposed in the letter read above that, for easy and smooth conduct of Economic Census, it is necessary toconstitute a Monitoring Committee at the District Level under the Chairmanship of The Deputy Commissioner and District level Officers of different departments as Members and nominating District Statistical Officers as the Member Secretary.
The said proposal has been examined. Hence, this order.
Government Order NO:PD 01 SSM 2019, Dated:16 /04/2019
In view of the above, Government is pleased to constitute the following District Level Monitoring Committee for the smooth conduct of 7th Economic Census 2019.
The Committee shall comprise the following members:
1. The Deputy Commissioner.
- Chair Person
- Member
2. The Chief Executive Officer, Zilla Panchayat.
3. The Project Director
- Member
Urban Development Section, D.C. Office.
4. The District Superintendent of Police.
- Member
- Member
5. The Chief Planning Officer Zilla Panchayat.
6. The Joint Director,
- Member
Industries and Commerce Department.
7. The Joint Director/Deputy Director, Public Instruction Department. - Member
- Member
8. The District Information and Publicity Officer.
9. All The Revenue Assistant Commissioners.
- Member
- Member
10. The Deputy Commissioner/ Assistant Commissioner,
Commercial Tax Department.
11. All Tahsildars of the District.
- Member
12. The Labour Officer, District Labour Office.
- Member
- Member
13. Deputy Director, District Factories & Boilers Department.
14. The Commissioner/ Chief Officers/ Executive Officers of CMC/TMC/TP. - Member
15. The Deputy Registrar of Co-operative Societies.
- Member
16. District Manager, CSC e-Governance Service Limited (CSC). - Member
17. The District Statistical Officer.
- Member Secretary The functions of the Committee are as follows:
1. Monitor preparedness, progress and hurdles in conduct of 7th EC in the District on regular basis.
2. To provide feedback the State Level Co-ordination Committee to perform its roles and functions effectively at the district level.
3. Sensitize/ direct the local law and order agencies, local government functionaries at Panchayat/ ward level for cooperation in smooth conduct of Economic Census.
4. Facilitate providing administrative unit maps of wards/ villages for fieldwork of Economic Census.
5. To approve and disseminate the provisional district level results of the Economic Census.
P.R. 196
By Order and in the Name of the Governor of Karnataka.
M.N. BANOLLI
SC-10
Under Secretary to Government (S-5) ( I/C)
Planning, Programme Monitoring & Statistics Department.
ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಸಚಿವಾಲಯ
ವಿಷಯ : 7ನೇ ಆರ್ಥಿಕ ಗಣತಿ 2019ರ ಕಾರ್ಯಾಚರಣೆಯ ಸಂಯೋಜನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಇತರೆ ಮಹಾನಗರ ಪಾಲಿಕೆಗಳ ಉಸ್ತುವಾರಿ ಸಮಿತಿಗಳನ್ನು ರಚಿಸುವ ಕುರಿತು.
ಓದಲಾಗಿದೆ : ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಇವರ ಏಕ ಕಡತ ಸಂಖ್ಯೆ:
ಆಸಾಂನಿ/ಎಸ್.ಐ.ಪಿ./ಕೈ/7 ಆ.ಗ./3/2019.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ೪೧೫ಪ್ರಸ್ತಾವನೆ :-
ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಇವರು ಮೇಲೆ ಓದಲಾದ ಪತ್ರದಲ್ಲಿ ಭಾರತ ಸರ್ಕಾರವು 1977 ರಿಂದ ಆರ್ಥಿಕ ಗಣತಿ ನಿಯಮಿತವಾಗಿ ಕೈಗೊಳ್ಳುತ್ತಿರುವುದಾಗಿ ತಿಳಿಸಿರುತ್ತಾರೆ. ಈಗಾಗಲೇ ಭಾರತ ಸರ್ಕಾರವು 6 ಆರ್ಥಿಕ ಗಣತಿಗಳನ್ನು ಕೈಗೊಂಡಿದೆ. 2019ರಲ್ಲಿ 7ನೇ ಆರ್ಥಿಕ ಗಣತಿಯನ್ನು ಕೈಗೊಳ್ಳಲು ಭಾರತ ಸರ್ಕಾರವು ತೀರ್ಮಾನಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ ಕ್ಷೇತ್ರ ಕಾರ್ಯಾಚರಣೆಯನ್ನು ಮೇ 2019 ರಿಂದ ಪ್ರಾರಂಭಿಸಿ ಮೂರು ತಿಂಗಳುಗಳ ಕಾಲ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಇದರ ಮುಖ್ಯ ಉದ್ದೇಶ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿರುವ ಸಂಘಟಿತ ಹಾಗೂ ಅಸಂಘಟಿತ ವಿಭಾಗಗಳ ವಿವಿಧ ಆರ್ಥಿಕ ಚಟುವಟಿಕೆಗಳನ್ನು ಹೊಂದಿರುವ ಉದ್ಯಮಗಳ ಪಟ್ಟಿಯನ್ನು ತಯಾರಿಸುವುದಾಗಿದೆ ಎಂದು ಸದರಿ ಪತ್ರದಲ್ಲಿ ತಿಳಿಸಿರುತ್ತಾರೆ.
ನಗರ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳು ಅಧಿಕವಾಗಿರುವ ಕಾರಣ, ಗಣತಿ ಕಾರ್ಯವು ಸುಗಮವಾಗಿ ಮತ್ತು ಸೂಸೂತ್ರವಾಗಿ ನಡೆಸುವ ಸಲುವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿಯನ್ನು ಹಾಗೂ ವಿಭಾಗ ಮಟ್ಟದಲ್ಲಿ ಹೆಚ್ಚುವರಿ/ವಿಶೇಷ/ಜಂಟಿ ಆಯುಕ್ತರ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿಯನ್ನು ರಚಿಸಿ ಆದೇಶ ಹೊರಡಿಸಬೇಕೆಂದು ನಿರ್ದೇಶಕರು, ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಇವರು ಸದರಿ ಪತ್ರದಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಅದರಂತೆಯೇ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಪಿಡಿ 01 ಎಸ್ಎಸ್ಎಂ 2019, ದಿನಾಂಕ : 16/04/2019.
ಮೇಲ್ಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 7ನೇ ಆರ್ಥಿಕ ಗಣತಿ 2019ರ ಸುಗಮ ಕಾರ್ಯಾಚರಣೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ರಾಜ್ಯದ ಇತರೆ ಮಹಾನಗರ ಪಾಲಿಕೆ ಮಟ್ಟದಲ್ಲಿ ಈ ಕೆಳಕಂಡ ಉನ್ನತಾಧಿಕಾರಿಗಳನ್ನೊಳಗೊಂಡ ಉಸ್ತುವಾರಿ ಸಮಿತಿಯನ್ನು ರಚಿಸಿ ಆದೇಶಿಸಲು ಸರ್ಕಾರವು ಹರ್ಷಿಸುತ್ತದೆ.
1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಉಸ್ತುವಾರಿ ಸಮಿತಿ :
1. ಆಯುಕ್ತರು,
- ಅಧ್ಯಕ್ಷರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ
2. ಆಯುಕ್ತರು,
- ಸದಸ್ಯರು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.
3. ವಿಶೇಷ ಆಯುಕ್ತರು,
- ಸದಸ್ಯರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ.
4. ಜಂಟಿ ಆಯುಕ್ತರು (8 ವಿಭಾಗಗಳು)/ ಬೆಂಗಳೂರು ನಗರ ಪಾಲಿಕೆ ಉಪ ವಲಯ. - ಸದಸ್ಯರು 5. ಅಪರ ಪೋಲೀಸ್ ಆಯುಕ್ತರು, ಬೆಂಗಳೂರು.
- ಸದಸ್ಯರು 6. ಜಂಟಿ ಆಯುಕ್ತರು/ಉಪ ಆಯುಕ್ತರು/ ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು. - ಸದಸ್ಯರು
- ಸದಸ್ಯರು 7. ನೋಡಲ್ ಅಧಿಕಾರಿ 7ನೇ ಆರ್ಥಿಕ ಗಣತಿ, ಆರ್ಥಿಕ ಮತ್ತು ಸಾಂಖ್ಯಿಕ
ನಿರ್ದೇಶನಾಲಯ, ಬೆಂಗಳೂರು.
8. ಜಂಟಿ ನಿರ್ದೇಶಕರು,
- ಸದಸ್ಯರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ.
9. ಜಂಟಿ ನಿರ್ದೇಶಕರು/ ಉಪ ನಿರ್ದೇಶಕರು
- ಸದಸ್ಯರು ಸಾರ್ವಜನಿಕ ಶಿಕ್ಷಣ ಇಲಾಖೆ.
10. ಜಂಟಿ ನಿರ್ದೇಶಕರು
- ಸದಸ್ಯರು ಮಾಹಿತಿ ಹಾಗೂ ಪ್ರಚಾರ ಇಲಾಖೆ, ಬೆಂಗಳೂರು.
11. ಉಪ ಆಯುಕ್ತರು,
- ಸದಸ್ಯರು ಕಾರ್ಮಿಕ ಇಲಾಖೆ, ಬೆಂಗಳೂರು.
12. ಜಂಟಿ ನಿರ್ದೇಶಕರು,
- ಸದಸ್ಯರು ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಬೆಂಗಳೂರು.
13. ಮುಖ್ಯಯೋಜನಾ ಅಧಿಕಾರಿಗಳು,
- ಸದಸ್ಯರು ಜಿಲ್ಲಾ ಪಂಚಾಯತ್, ಬೆಂಗಳೂರು ನಗರ ಜಿಲ್ಲೆ.
14. ರಾಜ್ಯ ವ್ಯವಸ್ಥಾಪಕರು,
- ಸದಸ್ಯರು CSC e-Governance Service Limited (CSC), ಕರ್ನಾಟಕ ರಾಜ್ಯ, ಬೆಂಗಳೂರು.
15. ಜಂಟಿ ನಿರ್ದೇಶಕರು (ಸಾಂಖ್ಯಿಕ),
- ಸದಸ್ಯ ಕಾರ್ಯದರ್ಶಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು.
೪೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ಭಾಗ ೧2. ಬೆಳಗಾವಿ, ಬಳ್ಳಾರಿ, ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಕಲಬುರ್ಗಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ವಿಜಯಪುರ ಮಹಾನಗರ
ಪಾಲಿಕೆಗಳ ಉಸ್ತುವಾರಿ ಸಮಿತಿ :
1. ಆಯುಕ್ತರು,
- ಅಧ್ಯಕ್ಷರು
ಮಹಾನಗರ ಪಾಲಿಕೆ.
2. ಉಪ/ಸಹಾಯಕ ಆಯುಕ್ತರು,
- ಸದಸ್ಯರು
ವಾಣಿಜ್ಯ ತೆರಿಗೆ ಇಲಾಖೆ, ಸಂಬಂಧಿಸಿದ ಜಿಲ್ಲೆ.
3. ಜಂಟಿ ನಿರ್ದೇಶಕರು,
- ಸದಸ್ಯರು
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಸಂಬಂಧಿಸಿದ ಜಿಲ್ಲೆ.
4. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು.
- ಸದಸ್ಯರು
5. ಉಪ ನಿರ್ದೇಶಕರು,
- ಸದಸ್ಯರು
ಸಾರ್ವಜನಿಕ ಶಿಕ್ಷಣ ಇಲಾಖೆ, ಸಂಬಂಧಿಸಿದ ಜಿಲ್ಲೆ.
6. ಉಪ ನಿರ್ದೇಶಕರು,
- ಸದಸ್ಯರು
ಕಾರ್ಖಾನೆ ಹಾಗೂ ಬಾಯ್ಲರುಗಳ ಇಲಾಖೆ, ಸಂಬಂಧಿಸಿದ ಜಿಲ್ಲೆ.
7. ಸಹಾಯಕ ನಿರ್ದೇಶಕರು ,
- ಸದಸ್ಯರು
ಮಾಹಿತಿ ಮತ್ತು ಪ್ರಚಾರ ಇಲಾಖೆ, ಸಂಬಂಧಿಸಿದ ಜಿಲ್ಲೆ.
8. ಜಿಲ್ಲಾ ಕಾರ್ಮಿಕ ಅಧಿಕಾರಿಗಳು,
- ಸದಸ್ಯರು
ಕಾರ್ಮಿಕ ಇಲಾಖೆ, ಸಂಬಂಧಿಸಿದ ಜಿಲ್ಲೆ.
9. ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ,
- ಸದಸ್ಯರು
ಜಿಲ್ಲಾ ಪಂಚಾಯತ್, ಸಂಬಂಧಿಸಿದ ಜಿಲ್ಲೆ.
10. ಜಿಲ್ಲಾ ವ್ಯವಸ್ಥಾಪಕರು,
- ಸದಸ್ಯರು
CSC e-Governance Service Limited (CSC), ಜಿಲ್ಲೆ________
11. ವ್ಯವಸ್ಥಾಪಕರು/ ಶಿರಸ್ತೆದಾರರು,
- ಸದಸ್ಯ ಕಾರ್ಯದರ್ಶಿ ಮಹಾನಗರ ಪಾಲಿಕೆ.
ಸಮಿತಿಯ ಕಾರ್ಯಾಚರಣೆ ಈ ಕೆಳಕಂಡಂತಿದೆ :
1. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 7ನೇ ಆರ್ಥಿಕ ಗಣತಿ ಕ್ಷೇತ್ರ ಕಾರ್ಯಕ್ಕೆ ಸಿದ್ದತೆ ಮಾಡುವುದು, ಪ್ರಗತಿ ಪರಿಶೀಲನೆ ಮತ್ತು ಅಡಚಣೆಗಳ ನಿವಾರಣೆಗೆ ನಿಯಮಿತವಾಗಿ ಕ್ರಮವಹಿಸುವುದು.
2. ರಾಜ್ಯ ಮಟ್ಟದ ಚಾಲನಾ ಸಮಿತಿಗೆ feedback ನೀಡುವುದು ಹಾಗೂ ಮಹಾನಗರ ಪಾಲಕೆ ಮಟ್ಟದಲ್ಲಿ ಚಾಲನಾ ಸಮಿತಿಯ ಸೂಚನೆ ಹಾಗೂ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದು.
3. 7ನೇ ಆರ್ಥಿಕ ಗಣತಿಕ್ಷೇತ್ರ ಕಾರ್ಯದಲ್ಲಿ CSC-SPV ಯೊಂದಿಗೆ ಸಹಕರಿಸಲು ವಲಯ/ವಾರ್ಡ್ ಮಟ್ಟದ ಸಿಬ್ಬಂದಿಗಳಿಗೆ ಸೂಕ್ತ ಸೂಚನೆ ನೀಡುವುದು.
4. 7ನೇ ಆರ್ಥಿಕ ಗಣತಿಯ ವಾರ್ಡ್ಗಳ ಆಡಳಿತಾತ್ಮಕ ಕ್ಷೇತ್ರ ನಕ್ಷೆಗಳನ್ನು ಒದಗಿಸುವುದು.
5. ಮಹಾನಗರ ಪಾಲಿಕೆ ಮಟ್ಟದ ತಾತ್ಕಾಲಿಕ ಫಲಿತಾಂಶವನ್ನು ಅನುಮೋದಿಸುವುದು ಹಾಗೂ ಪ್ರಸಾರ ಮಾಡುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
ಎಂ.ಎನ್. ಬಾನೊಳ್ಳಿ
ಸರ್ಕಾರದ ಅಧೀನ ಕಾರ್ಯದರ್ಶಿ(ಎಸ್-5) (ಪ್ರ)
ಯೋಜನೆ, ಕಾರ್ಯಕ್ರಮ, ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.
PLANNING, PROGRAMME MONITORING AND STATISTICS SECRETARIAT
Sub : Constitution of Monitoring Committee at Bruhat Bengaluru Mahanagara Palike and other Muncipal corporations level to monitor the work of 7th Economic Census 2019.
Read : Director, Directorate of Economics and Statisitics Department Single file No: ಆಸಾಂನಿ/ಎಸ್.ಐ.ಪಿ./ಕೈ/7ನೇ ಆ.ಗ./3/2019.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ೪೧೭ PREAMBLE :The Director,Directorate of Economic and Statistics, in the letter read above, has stated that the Government of India has been conducting the Economic Census periodically since 1977. Already 6 Economic Census have been conducted. Now the Government of India has decided to conduct the 7th Economic Census starting from May 2019 for a period of 3 months in the state. The main objective of this census is to capture the information on all Household Enterprises/ Own Account Enterprises run by workers within fixed premises or without fixed premises as well as other public and private establishments in rural and urban areas.
It has also been proposed in the letter read above that, since the establishments are concentrated in city areas, for easy and smooth conduct of Economic Census, it is necessary to constitute a Monitoring Committee at Bruhat Bengaluru Mahanagara Palike at State Level under the Chairmanship of The Commissioner, B.B.M.P., Bengaluru and Monitoring Committee at other Muncipal Corporations level under the Chairmanship of the Commissioner at District level.
The said proposal has been examined. Hence, this order.
Government Order NO : PD 01 SSM 2019, dated : 16/04/2019
In view of the above, Government is pleased to constitute a District Level Monitoring Committee for the smooth conduct of 7th Economic Census 2019.
1. Bruhat Bengaluru Mahanagara Palike Monitoring Committee :
1. The Commissioner, BBMP, Bengaluru.
- Chair Person 2. The Commissioner, BDA, Bengaluru.
- Member 3. The Special Commissioner, BBMP, Bengaluru.
- Member 4. The Joint Commissioners (8 Zone)
- Member 5. The Additional Commissioners of Police, Bengaluru
- Member 6. The Joint/ Deputy Commissioner of Commercial Tax, Bengaluru.
Member 7. Nodal Officer, 7th Economic Census, Directorate of Economic and Statistics, Bengaluru. - Member 8. The Joint Director, Industries and Commerce Department
- Member 9. The Joint Director/Deputy Director, Public Instruction Department.
- Member 10. The Joint Director, Department of Information and Publicity, Bengaluru.
Member 11. The Deputy Commissioners, Labour Department, Bengaluru.
- Member 12. The Joint Director, Factories & Boilers Department, Bengaluru.
- Member 13. The Chief Planning Officer, Zilla Panchayat, Bengaluru Urban.
- Member 14. State Manager, CSC e-Governance Service Limited (CSC), Government of Karnataka, Bengaluru. - Member 15. The Joint Director (Statistical) B.B.M.P., Bengaluru.
- Member Secretary 2. The Monitoring Committee for Belagavi, Bellari, Hubli- Dharwad, Davanagere, Kalaburgi, Mangaluru, Mysuru, Shivamogga, Tumakuru, Vijayapura Muncipal Corporations :
1. The Commissioner, Muncipal Corporation.
- Chair person 2. The Deputy/ Assistant Commissioner,
- Member Commercial Tax Department, concerned District.
3. The Joint Director,
- Member Industries and Commerce Department, concerned District.
4. District Statistical Officer.
- Member 5. The Deputy Director, Public Instruction Department, concerned District.
- Member 6. The Deputy Director, Factories and Boilers Department, concerned District.
- Member 7. The Assistant Director, Department of Information and Publicity, concerned District. - Member 8. The District Labour Officer, Labour Department, concerned District.
- Member 9. The Project Appraisal and Evaluation Officer,
- Member Zilla Panchayat, concerned District.
10. District Manager, CSC e-Governance Service Limited (CSC).
- Member 11. The Manager/ Shiresthedar, District Muncipal Corporation.
- Member Secretary The functions of the Committee are as follows:
1. Monitor preparedness, progress and hurdles in conduct of 7th EC in the District on regular basis.
೪೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ಭಾಗ ೧ 2. To provide feedback the State Level Co-ordination Committee to perform its roles and functions effectively at the district level.3. Sensitize/ direct the local law and order agencies, Zonal/ward functionaries at Panchayat/ ward level for cooperation in smooth conduct of Economic Census.
4. Facilitate providing administrative unit maps of wards/ villages for fieldwork of Economic Census.
5. To approve and disseminate the provisional district level results of the Economic Census.
P.R. 195
By Order and in the Name of the Governor of Karnataka.
M.N. BANOLLI
SC-10
Under Secretary to Government (S-5) ( I/C)
Planning, Programme Monitoring & Statistics Department.
ನಗರಾಭಿವೃದ್ಧಿ ಸಚಿವಾಲಯ
ವಿಷಯ : ಹುಬ್ಬಳ್ಳಿ-ಧಾರವಾಡ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ(ಪ-II)ಗೆ ಸರ್ಕಾರದ ಅಂತಿಮ ಅನುಮೋದನೆ ನೀಡುವ ಬಗ್ಗೆ.
ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ:ನಅಇ 167 ಬೆಮಪ್ರಾ 2016, ದಿನಾಂಕ 10.01.2017.
2) ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರ ರವರ ಪತ್ರ ಸಂಖ್ಯೆ:ಹು.ಧಾ.ನ.ಪ್ರಾ.ಯೋ.ವಿ/ ಮ.ಯೋ. ಪ – II/2017-18/6399, ದಿನಾಂಕ 20.03.2018, 24.07.2018 ಮತ್ತು 04.08.2018. 3) ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ದಿ ಪ್ರಾಧಿಕಾರ ರವರ ಪತ್ರ ಸಂಖ್ಯೆ:ಹು.ಧಾ.ನ.ಪ್ರಾ.ಯೋ.ವಿ/ ಮ.ಯೋ. ಪ –2/2018-19/1602, ದಿನಾಂಕ 18.08.2018.
4) ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಏಕ ಕಡತ ಸಂಖ್ಯೆ: DTCP-2-MPP-2016-17, ದಿನಾಂಕ 24.08.2018 ರಲ್ಲಿ ನೀಡಿರುವ ಅಭಿಪ್ರಾಯ.
ಪ್ರಸ್ತಾವನೆ :
ಮೇಲೆ ಓದಲಾದ (1) ರ ಸರ್ಕಾರಿ ಆದೇಶದಲ್ಲಿ ಹುಬ್ಬಳ್ಳಿ-ಧಾರವಾಡ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ (ಪ-2)ಗೆ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ.
ಮೇಲೆ ಓದಲಾದ (2) ಹಾಗೂ (3)ರ ಪತ್ರಗಳಲ್ಲಿ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು ಹುಬ್ಬಳ್ಳಿ-ಧಾರವಾಡ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ತಯಾರಿಸಿರುವ ಮಹಾಯೋಜನೆ ಕುರಿತು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(1)(2) ರನ್ವಯ ಅಗತ್ಯ ಕ್ರಮ ಜರುಗಿಸಿ ಮಹಾಯೋಜನೆಯ ನಕ್ಷೆಗಳನ್ನು ಹಾಗೂ ವರದಿಯನ್ನು ತಯಾರಿಸಿ ಸರ್ಕಾರದ ಅಂತಿಮ ಅನುಮೋದನೆ ಪಡೆಯಲು ಪ್ರಸ್ತಾವನೆಯನ್ನು ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರಿಗೆ ಸಲ್ಲಿಸಲಾಗಿದೆ.
ಮೇಲೆ ಓದಲಾದ (4) ರ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಕಛೇರಿಯ ಏಕ ಕಡತದಲ್ಲಿ, ಹುಬ್ಬಳ್ಳಿ-ಧಾರವಾಡ ನಗರದ ಸ್ಥಳೀಯ ಯೋಜನಾ ಪ್ರದೇಶ ವ್ಯಾಪ್ತಿಯ ಜನಸಂಖ್ಯೆಯು 2011ರ ಜನಗಣತಿಯಂತೆ 9,60,914 ಇದ್ದು ಮುಂದಿನ ಯೋಜನಾ ಅವಧಿ 2031ರ ವೇಳೆಗೆ 22,00,000 ಆಗಬಹುದೆಂದು ಅಂದಾಜಿಸಿ ಮಹಾಯೋಜನೆಯನ್ನು ತಯಾರಿಸಲಾಗಿದೆ. ಹುಬ್ಬಳ್ಳಿ-ಧಾರವಾಡ ಸ್ಥಳೀಯ ಯೋಜನಾ ಪ್ರದೇಶದ 40208 ಹೆಕ್ಟೇರ್ ಪ್ರದೇಶದಲ್ಲಿ 22238.32 ಹೆಕ್ಟೇರ್ ಪ್ರದೇಶವನ್ನು ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ ಮಹಾಯೋಜನೆಯನ್ನು ರೂಪಿಸಲಾಗಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ.12 ರಲ್ಲಿ ನಿಗದಿಪಡಿಸಿರುವ ಅಂಶಗಳನ್ನು ಪರಿಗಣಿಸಿ ನಗರಗಳ ಮುಂದಿನ ಯೋಜಿತ ಬೆಳವಣಿಗೆಗಾಗಿ ವಿವಿಧ ಭೂ ಉಪಯೋಗಗಳಿಗಾಗಿ ಈ ಕೆಳಗಿನಂತೆ ವಿಸ್ತೀರ್ಣವನ್ನು ಪ್ರಸ್ತಾಪಿಸಲಾಗಿದೆ.
ಪಟ್ಟಣದ ಯೋಜಿತ ಬೆಳವಣಿಗೆಗಾಗಿ 22238.32 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 8965.73 ಹೆಕ್ಟೇರ್(ಶೇ.40.32), ವಾಣಿಜ್ಯಕ್ಕಾಗಿ 1718.83 ಹೆಕ್ಟೇರ್(ಶೇ.7.73), ಕೈಗಾರಿಕೆಗಾಗಿ 3172.28 ಹೆಕ್ಟೇರ್(ಶೇ.14.26), ಸಾರ್ವಜನಿಕ/ ಅರೆ ಸಾರ್ವಜನಿಕ ಉಪಯೋಗಕ್ಕೆ 2122.90 ಹೆಕ್ಟೇರ್(ಶೇ.9.55), ಉದ್ಯಾನವನ ಮತ್ತು ಬಯಲು ಜಾಗ ಹಾಗೂ ಬರಿಯಲ್ ಗ್ರೌಂಡ್ಗಾಗಿ 1462.45 ಹೆಕ್ಟೇರ್(ಶೇ.6.58), ಸಾರ್ವಜನಿಕ ಉಪಯುಕ್ತತೆಗಾಗಿ 86.00 ಹೆಕ್ಟೇರ್(ಶೇ.0.39) ಹಾಗೂ ಸಾರಿಗೆ/ ಸಂಪರ್ಕ ವಲಯಕ್ಕೆ 4710.13 ಹೆಕ್ಟೇರ್(ಶೇ.21.17) ಪ್ರದೇಶವನ್ನು ನಿಗಧಿಪಡಿಸಲಾಗಿದೆ. ಸದರಿ ನಗರೀಕರಣ ಪ್ರದೇಶದಲ್ಲಿ 734.59 ಹೆಕ್ಟೇರ್ ಪ್ರದೇಶವು ಜಲಾವೃತವಾಗಿದ್ದು, ಸದರಿ ಪ್ರದೇಶವನ್ನು ಭೂ ವಿಶ್ಲೇಷಣೆಗೆ ಪರಿಗಣಿಸಿರುವುದಿಲ್ಲ. ಮಹಾಯೋಜನೆ(ಪ-II) ಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆ(ಪ-II)ಗೆ ಕೆಲವು ಅಂಶಗಳಿಗೆ ಷರತ್ತುಗಳನ್ನು ವಿಧಿಸಿ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 13(3) ರನ್ವಯ ಅಂತಿಮ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ನಅಇ 182 ಬೆಮಪ್ರಾ 2018, ಬೆಂಗಳೂರು, ದಿನಾಂಕ 08.03.2019.
ಮೇಲ್ಕಂಡಂತೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆ (ಪ-II)ಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ.13(3)ರನ್ವಯ ಈ ಕೆಳಕಂಡ ಷರತ್ತುಗೊಳಪಟ್ಟು ಸರ್ಕಾರದ ಅಂತಿಮ ಅನುಮೋದನೆಯನ್ನು ನೀಡಿದೆ. ಮಹಾ ಯೋಜನೆ(ಪ-II)ಗೆ ಅಂತಿಮ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ೪೧೯ಷರತ್ತುಗಳು :
(1) ಲಕಮನಹಳ್ಳಿ ಗ್ರಾಮದ ಸ.ನಂ:58ಯು ರ ನಿವೇಶನ ಸಂಖ್ಯೆ:3ನ್ನು ಮಹಾಯೋಜನೆ (ಪ-2) ಯಲ್ಲಿ ಕಾರ್ಟೋಗ್ರಾಫಿಕಲ್ ಎರರ್ನಿಂದ ಉದ್ಯಾನವನವೆಂದು ಗುರುತಿಸಿರುವುದನ್ನು ವಸತಿಗೆ ಪರಿಗಣಿಸುವುದು.
(2) ಬಮ್ಮಾಪುರ ಗ್ರಾಮದ ಸ.ನಂ.77, ಸರ್ಕಾರದಿಂದ ತಾತ್ಕಾಲಿಕ ಅನುಮೋದನೆಗೊಂಡ ಮಹಾಯೋಜನೆ(ಪ-II) ರಲ್ಲಿ ನಗರೀಕರಣ ವ್ಯಾಪ್ತಿಯೊಳಗೆ ಇರುವುದಿಲ್ಲ. ಆದರೆ ಪ್ರಸ್ತುತ ಅಂತಿಮ ಅನುಮೋದನೆಗಾಗಿ ಸಲ್ಲಿಸಿರುವ ಮಹಾಯೋಜನೆ(ಪ-II)ಯ ಪ್ರಸ್ತಾವನೆಯಲ್ಲಿ ನಗರೀಕರಣ ವ್ಯಾಪ್ತಿಯೊಳಗೆ ಸೇರಿಸಲಾಗಿದ್ದು, ಸದರಿ ಪ್ರದೇಶವನ್ನು ಅಂತಿಮ ಮಹಾಯೋಜನೆ(ಪ-II)ಯಲ್ಲಿ ನಗರೀಕರಣ ಎಲ್ಲೆಯಿಂದ ಹೊರತುಪಡಿಸಲಾಗಿದೆ.
(3) ಉಣಕಲ್ ಗ್ರಾಮದ ಸ.ನಂ.387/3 ಮತ್ತು 387/4ರ ಜಮೀನುಗಳು ವ್ಯವಸಾಯ ವಲಯದಲ್ಲಿದ್ದು, ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಭೂ ಉಪಯೋಗ ಬದಲಾವಣೆ ಪ್ರಸ್ತಾವನೆಯನ್ನು ಸರ್ಕಾರದ ಪತ್ರ ಸಂಖ್ಯೆ: ನಅಇ 19 ಬೆಮಪ್ರಾ 2016, ದಿನಾಂಕ 21.04.2018 ರ ಪತ್ರದಲ್ಲಿ ತಿರಸ್ಕರಿಸಿರುತ್ತದೆ. ಆದಾಗ್ಯೂ ಪ್ರಾಧಿಕಾರವು ನಗರೀಕರಣ ವ್ಯಾಪ್ತಿಯ ಎಲ್ಲೆಯನ್ನು ಮೀರಿ ಸದರಿ ಪ್ರದೇಶವನ್ನು ವಸತಿಗಾಗಿ ನಿಗದಿಪಡಿಸಿದ್ದು, ನಗರೀಕರಣ ಎಲ್ಲೆಯಿಂದ ದೂರವಿರುವ ಪ್ರದೇಶವು ಒಂಟಿ ಬೆಳವಣಿಗೆಯಾಗುವ ಹಿನ್ನೆಲೆಯಲ್ಲಿ ಯೋಜನಾ ದೃಷ್ಟಿಯಿಂದ ಪರಿಗಣಿಸುವುದು ಸೂಕ್ತವಿರುವುದಿಲ್ಲ. ಆದುದರಿಂದ ಸದರಿ ಪ್ರದೇಶವನ್ನು ಅಂತಿಮ ಮಹಾಯೋಜನೆಯಲ್ಲಿ ವ್ಯವಸಾಯ ವಲಯದಲ್ಲಿ ಕಾಯ್ದಿರಿಸಿದೆ.
(4) ವಲಯ ನಿಯಮಾವಳಿ ಅಂತಿಮದಲ್ಲಿ ಟೇಬಲ್ ನಂ.10.1 ರಲ್ಲಿ Exterior minimum Setbacks for buildings (except Industrial) up to 15.0 m height for Residentail / Commercial use ಎಂದು ಅಳವಡಿಸಿಕೊಂಡಿರುವುದನ್ನು ತೆಗೆದುಹಾಗಿ ತಾತ್ಕಾಲಿಕ ಅನುಮೋದಿತ ವಲಯ ನಿಯಮಾವಳಿಯಂತೆಯೇ Exterior minimum Setbacks for buildings (except Industrial) up to 11.5 m in height and plot size upto 4000 Sq.m for Residentail / Commercial use ಎಂದು ಪರಿಗಣಿಸುವುದು.
PR-185
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-50
ನಾಗರಾಜ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ವಿಷಯ : ದಾವಣಗೆರೆ ಜಿಲ್ಲೆ, ಹೊನ್ನಾಳಿ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆಗೆ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ.
ಓದಲಾಗಿದೆ: 1) ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 59 ಬೆಂರೂಪ್ರಾ 2011, ದಿನಾಂಕ: 07.05.2011.
2) ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ ಯೋಜನಾ ಪ್ರಾಧಿಕಾರ, ಹೊನ್ನಾಳಿ ಇವರ ಪತ್ರಗಳ ಸಂಖ್ಯೆ a) ಹೊಪಪಂ/ಮ.ಯೋ/ಸಿಆರ್/05/2016-17, ದಿನಾಂಕ: 25.02.2017.
b) ಹೊಪಪಂ/ಮ.ಯೋ/2017-18, ದಿನಾಂಕ: 03.04.2018.
3) ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಇವರ ಪ್ರಸ್ತಾವನೆಗಳ ಸಂಖ್ಯೆ: DTCP-3- MPP-2017-18, ದಿನಾಂಕ 10.08.2017 ಮತ್ತು 18.09.2018.
ಪ್ರಸ್ತಾವನೆ :
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರದ ಅಧಿಸೂಚನೆಯಲ್ಲಿ, ಹೊನ್ನಾಳಿ ಪಟ್ಟಣಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯನ್ನು ವಿಸ್ತರಿಸಿ, ಸ್ಥಳೀಯ ಯೋಜನಾ ಪ್ರದೇಶವೆಂದು ಘೊಷಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪತ್ರಗಳಲ್ಲಿ, ಮುಖ್ಯಾಧಿಕಾರಿ, ಪಟ್ಟಣ ಪಂಚಾಯಿತಿ ಯೋಜನಾ ಪ್ರಾಧಿಕಾರ, ಹೊನ್ನಾಳಿ ಇವರು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 9(1) ರನ್ವಯ ಹೊನ್ನಾಳಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ (ತಾತ್ಕಾಲಿಕ) ಯನ್ನು ಸಿದ್ಧಪಡಿಸಿ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಮುಖಾಂತರ ಸರ್ಕಾರದ ಅನಮೋದನೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಇವರ ಪ್ರಸ್ತಾವನೆಗಳಲ್ಲಿ, ಹೊನ್ನಾಳಿ ನಗರದ ಜನಸಂಖ್ಯೆಯು 2031ರಲ್ಲಿ 28,000 ಗಳಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಿ ಮಹಾಯೋಜನೆಯನ್ನು ತಯಾರಿಸಲಾಗಿದೆ. ಹೊನ್ನಾಳಿ ಸ್ಥಳಿಯ ಯೋಜನಾ ಪ್ರದೇಶದ ಒಟ್ಟು 285.00 ಹೆಕ್ಟೇರ್ ಪ್ರದೇಶವನ್ನು ನಗರದ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ, ಮಹಾಯೋಜನೆಯನ್ನು ರೂಪಿಸಲಾಗಿದೆ. ನಗರದ ಮುಂದಿನ ಯೋಜಿತ ಬೆಳವಣಿಗೆಗೆ ಪ್ರಸ್ತಾಪಿಸಿರುವ 285.00 ಹೆಕ್ಟೇರ್ ಪ್ರದೇಶದಲ್ಲಿ ವಸತಿಗಾಗಿ 154.28 ಹೆಕ್ಟೇರ್ (ಶೇ. 55.17), ವಾಣಿಜ್ಯಕ್ಕಾಗಿ 18.80 ಹೆಕ್ಟೇರ್ (ಶೇ.6.72), ಕೈಗಾರಿಕೆಗಾಗಿ 9.53 ಹೆಕ್ಟೇರ್ (ಶೇ.3.41), ಸಾರ್ವಜನಿಕ/ಅರೆ ಸಾರ್ವಜನಿಕ ಉಪಯೋಗಕ್ಕೆ 20.27 ಹೆಕ್ಟೇರ್ (ಶೇ.7.23), ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 28.88 ಹೆಕ್ಟೇರ್ (ಶೇ.10.33) ಹಾಗೂ ಸಾರ್ವಜನಿಕ ಉಪಯುಕ್ತತೆಗಾಗಿ 0.30 ಹೆಕ್ಟೇರ್ (ಶೇ.0.11) ಹಾಗೂ ಸಾರಿಗೆ/ಸಂಪರ್ಕ ವಲಯಕ್ಕೆ 47.64 ಹೆಕ್ಟೇರ್ (ಶೇ.17.03) ಪ್ರದೇಶವನ್ನು ಕಾಯ್ದಿರಿಸಿದ್ದು, ಸದರಿ ನಗರೀಕರಣ ಪ್ರದೇಶದಲ್ಲಿ ಜಲಾವೃತ ಪ್ರದೇಶ 5.35 ಹೆಕ್ಟೇರ್ ನೀರಿನಿಂದ ಆವೃತ್ತವಾಗಿದ್ದು, ಸದರಿ ಪ್ರದೇಶವನ್ನು ಭೂ ವಿಶ್ಲೇಷಣೆಯಲ್ಲಿ ಪರಿಗಣಿಸಿರುವುದಿಲ್ಲ.
ಮಹಾಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಕಲಂ 13(1)ರನ್ವಯ ತಾತ್ಕಾಲಿಕ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
೪೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ಭಾಗ ೧ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ನಅಇ 205 ಬೆಂರೂಪ್ರಾ 2017, ಬೆಂಗಳೂರು, ದಿನಾಂಕ: 07.03.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಾವಣಗೆರೆ ಜಿಲ್ಲೆ, ಹೊನ್ನಾಳಿ ಪಟ್ಟಣದ ಸ್ಥಳಿಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1)ರನ್ವಯ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ. ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.
PR-186
SC-50
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ವಿಷಯ : ತುಮಕೂರು ಜಿಲ್ಲೆ, ಮಧುಗಿರಿ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ(ಪ-1)ಗೆ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ.
ಓದಲಾಗಿದೆ: 1) ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 112 ಬೆಂರೂಪ್ರಾ 2006, ದಿನಾಂಕ: 01.01.2010.
2) ಸದಸ್ಯ ಕಾರ್ಯದರ್ಶಿ ಮತ್ತು ಮುಖ್ಯಾಧಿಕಾರಿ, ಪುರಸಭೆ ಯೋಜನಾ ಪ್ರಾಧಿಕಾರ, ಮಧುಗಿರಿ ಇವರ ಪತ್ರಗಳ ಸಂಖ್ಯೆ
a) ಮ.ಸ್ಥ.ಯೋ.ಪ್ರಾ/ಮ.ಯೋ/246/2016-17, ದಿನಾಂಕ: 09.01.2017.
b) ಮ.ಸ್ಥ.ಯೋ.ಪ್ರಾ/ಇತರೆ/285/2017-18, ದಿನಾಂಕ: 08.06.2017.
c) ಮ.ಸ್ಥ.ಯೋ.ಪ್ರಾ/ಮ.ಯೋನೆ/2017-18, ದಿನಾಂಕ: 19.10.2017 ಮತ್ತು 23.07.2018.
3) ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಇವರ ಪ್ರಸ್ತಾವನೆಗಳ ಸಂಖ್ಯೆ: DTCP-14-
MPP-2016-17, ದಿನಾಂಕ: 08.12.2017 ಮತ್ತು 25.10.2018.
ಪ್ರಸ್ತಾವನೆ :
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರದ ಅಧಿಸೂಚನೆಯಲ್ಲಿ, ಮಧುಗಿರಿ ಪಟ್ಟಣಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಿ ಪುರಸಭೆಯೇ ಯೋಜನಾ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುವಂತೆ ಘೋಷಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪತ್ರಗಳಲ್ಲಿ, ಸದಸ್ಯ ಕಾರ್ಯದರ್ಶಿ ಮತ್ತು ಮುಖ್ಯಾಧಿಕಾರಿ, ಸ್ಥಳೀಯ ಯೋಜನಾ ಪ್ರಾಧಿಕಾರ, ಮಧುಗಿರಿ ಇವರು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 9(1)ರನ್ವಯ ಮಧುಗಿರಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ (ಪ-1) (ತಾತ್ಕಾಲಿಕ) ಯನ್ನು ಸಿದ್ಧಪಡಿಸಿ, ಸರ್ಕಾರದ ಅನುಮೋದನೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಇವರ ಪ್ರಸ್ತಾವನೆಗಳಲ್ಲಿ, ಮಧುಗಿರಿ ಪಟ್ಟಣದ ಜನಸಂಖ್ಯೆಯು 2031ರಲ್ಲಿ 44,800 ಗಳಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಿ ಮಹಾಯೋಜನೆಯನ್ನು ತಯಾರಿಸಲಾಗಿದೆ. ಮಧುಗಿರಿ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು 640.00 ಹೆಕ್ಟೇರ್ ಪ್ರದೇಶದ ಪೈಕಿ 530.07 ಹೆಕ್ಟೇರ್ ಪ್ರದೇಶವನ್ನು ನಗರ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ, ಮಹಾಯೋಜನೆಯನ್ನು ರೂಪಿಸಲಾಗಿದೆ. ನಗರದ ಮುಂದಿನ ಯೋಜಿತ ಬೆಳವಣಿಗೆಗೆ ಪ್ರಸ್ತಾಪಿಸಿರುವ 530.07 ಹೆಕ್ಟೇರ್ ಪ್ರದೇಶದಲ್ಲಿ, ವಸತಿಗಾಗಿ 302.76 ಹೆಕ್ಟೇರ್ (ಶೇ.57.12), ವಾಣಿಜ್ಯಕ್ಕಾಗಿ 28.05 ಹೆಕ್ಟೇರ್ (ಶೇ.5.29), ಕೈಗಾರಿಕೆಗಾಗಿ 14.25 ಹೆಕ್ಟೇರ್ (ಶೇ.2.69), ಸಾರ್ವಜನಿಕ/ಅರೆ ಸಾರ್ವಜನಿಕ ಉಪಯೋಗಕ್ಕೆ 34.68 ಹೆಕ್ಟೇರ್ (ಶೇ.6.54) ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 47.77 ಹೆಕ್ಟೇರ್ (ಶೇ.9.01) ಸಾರ್ವಜನಿಕ ಉಪಯುಕ್ತತೆಗಾಗಿ 8.30 ಹೆಕ್ಟೇರ್ (ಶೇ.1.57) ಹಾಗೂ ಸಾರಿಗೆ/ಸಂಪರ್ಕ ವಲಯಕ್ಕೆ 94.26 ಹೆಕ್ಟೇರ್ (ಶೇ.17.78) ಪ್ರದೇಶವನ್ನು ಕಾಯ್ದಿರಿಸಿದ್ದು, ನಗರೀಕರಣ ಪ್ರದೇಶದಲ್ಲಿ 13.31 ಹೆಕ್ಟೇರ್ ಜಲಾವೃತ್ತ ಪ್ರದೇಶ ಪ್ರದೇಶವಾಗಿದ್ದು, ಸದರಿ ಪ್ರದೇಶವನ್ನು ಭೂ ವಿಶ್ಲೇಷಣೆಯಲ್ಲಿ ಪರಿಗಣಿಸಿರುವುದಿಲ್ಲ. ಮಹಾಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1) ರನ್ವಯ ತಾತ್ಕಾಲಿಕ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ನಅಇ 276 ಬೆಂರೂಪ್ರಾ 2017, ಬೆಂಗಳೂರು, ದಿನಾಂಕ: 08.03.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆ, ಮಧುಗಿರಿ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆೆ(ಪ-1)ಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1)ರನ್ವಯ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ. ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.
PR-187
SC-250
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನಾಗರಾಜ ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ೪೨೧ಗೃಹ ಸಚಿವಾಲಯ
ವಿಷಯ : ನಿರ್ಭಯ ಯೋಜನೆಯಡಿ Safe City Project ಅನ್ನು ಅನುಷ್ಠಾನಗೊಳಿಸಲು ಹಾಗೂ ಇದರ ಉಸ್ತುವಾರಿಗಾಗಿ ರಾಜ್ಯಮಟ್ಟದ ಉನ್ನತ ಸಮಿತಿಯನ್ನು ರಚಿಸುವ ಬಗ್ಗೆ.
ಓದಲಾಗಿದೆ : 1) ನಿರ್ಭಯ ಯೋಜನೆಯಡಿ Safe City Project ಗಾಗಿ ಕೇಂದ್ರ ಗೃಹ ಮಂತ್ರಾಲಯ (ಮಹಿಳಾ ಸುರಕ್ಷಾ ವಿಭಾಗ) ಹೊರಡಿಸಿರುವ ಮಾರ್ಗಸೂಚಿ.
2) ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಇವರ ಪತ್ರ ಸಂಖ್ಯೆ :
ಎಸ್ಟಿಎಸ್(3)/ಎಂಓಡಿ/18/2013-14(ಭಾಗ-11), ದಿನಾಂಕ : 05-04-2019.
ಪ್ರಸ್ತಾವನೆ :
ನಿರ್ಭಯ ಯೋಜನೆಯಡಿ ಕೇಂದ್ರ ಗೃಹ ಮಂತ್ರಾಲಯವು, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಸಹಯೋಗದೊಂದಿಗೆ "ಬೆಂಗಳೂರು ನಗರವನ್ನು ಸುರಕ್ಷತಾ ನಗರ" ಎಂದು ಪರಿಗಣಿಸಿ ಈ ಯೋಜನೆಗಾಗಿ ರೂ. 667.00 ಕೋಟಿಗೆ ಮಂಜೂರಾತಿ ನೀಡಿದೆ. ಮೊದಲಿಗೆ ಪ್ರಸಕ್ತ ಆರ್ಥಿಕ ಸಾಲಿಗೆ ಕೇಂದ್ರ ಗೃಹ ಮಂತ್ರಾಲಯವು ತನ್ನ ಪಾಲಿನ ರೂ. 167.26 ಕೋಟಿ (ಶೇಕಡ 60 ರಷ್ಟು) ಬಿಡುಗಡೆ ಮಾಡಿದ್ದು ಹಾಗೂ ರಾಜ್ಯ ಸರ್ಕಾರದ ಪಾಲಾದ ರೂ. 112.07 ಕೋಟಿ (ಶೇಕಡ 40 ರಷ್ಟು) ಬಿಡುಗಡೆಗೊಳಿಸಲು ಕ್ರಮಕೈಗೊಂಡಿದೆ.
ನಿರ್ಭಯ ಯೋಜನೆಯಡಿ Safe City Project ಗಾಗಿ ಕೇಂದ್ರ ಗೃಹ ಮಂತ್ರಾಲಯ (ಮಹಿಳಾ ಸುರಕ್ಷಾ ವಿಭಾಗ) ಹೊರಡಿಸಿರುವ ಮಾರ್ಗಸೂಚಿಯನ್ವಯ ಈ ಯೋಜನೆಯ ಉಸ್ತುವಾರಿ ಹಾಗೂ ಅನುಷ್ಠಾನಕ್ಕಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ, ಸರ್ಕಾರದ ಕಾರ್ಯದರ್ಶಿ, ಗೃಹ ಇಲಾಖೆ, ಪೊಲೀಸ್ ಆಯುಕ್ತರು, ಬೆಂಗಳೂರು ನಗರ, ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಂಬಂಧಪಟ್ಟ ನೋಡಲ್ ಇಲಾಖೆಗಳ ಪ್ರತಿನಿಧಿಗಳನ್ನು ಒಳಗೊಂಡಂತೆ ರಾಜ್ಯಮಟ್ಟದ ಉನ್ನತ ಸಮಿತಿ (State Level Apex Committee) ಯನ್ನು ರಚಿಸಬೇಕಾಗಿರುತ್ತದೆ. ಅಲ್ಲದೆ, ಈ ಸಮಿತಿಯಲ್ಲಿ ಕೇಂದ್ರ ಗೃಹ ಮಂತ್ರಾಲಯ ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಪ್ರತಿನಿಧಿಗಳು ಇರಬೇಕಾಗುತ್ತದೆಂದು ಸೂಚಿಸಲಾಗಿದೆ.
ಅದರಂತೆ, ಸರ್ಕಾರವು ಮೇಲ್ಕಂಡ ಅಂಶಗಳನ್ನು ಪರಿಗಣಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಹೆಚ್ಡಿ 500 ಎಸ್ಎಸ್ಟಿ 2017. ಬೆಂಗಳೂರು, ದಿನಾಂಕ: 20.04.2019.
ಸರ್ಕಾರವು ನಿರ್ಭಯ ಯೋಜನೆಯಡಿ Safe City Project ಅನ್ನು ಅನುಷ್ಠಾನಗೊಳಿಸಲು ಹಾಗೂ ಇದರ ಉಸ್ತುವಾರಿಗಾಗಿ ಈ ಕೆಳಕಂಡಂತೆ
| 1 | ಸ ರ್ಕಾರದ ಮುಖ್ಯ ಕಾರ್ಯದರ್ಶಿ | ಅಧ್ಯಕ್ಷರು |
| 2 | ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ | ಸ ದ ಸ ್ಯರು |
| 3 | ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ | ಸ ದ ಸ ್ಯರು |
| 4 | ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ | ಸ ದ ಸ ್ಯರು |
| 5 | ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ | ಸ ದ ಸ ್ಯರು |
| 6 | ವ ುಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರು, ಬೆಂಗಳೂರು | ಸ ದ ಸ ್ಯರು |
| 7 | ಪ ೂಲೀಸ್ ಆಯುಕ್ತರು, ಬೆಂಗಳೂರು ನಗರ ೆ | ಸ ದ ಸ ್ಯರು |
| 8 | ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು | ಸ ದ ಸ ್ಯರು |
| 9 | ಕೇಂದ್ರ ಗೃಹ ಮಂತ್ರಾಲಯದ ಪ್ರತಿನಿಧಿ | ಸ ದ ಸ ್ಯರು |
| 10 | ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಂತ್ರಾಲಯದ ಪ್ರತಿನಿಧಿ | ಸ ದ ಸ ್ಯರು |
| 11 | ಅಪರ ಪೊಲೀಸ್ ಆಯುಕ್ತರು (ಆಡಳಿತ), ಬೆಂಗಳೂರು ನಗರ | ಸ ದ ಸ ್ಯ ಕಾರ್ಯದರ್ಶಿ |
ಮೇಲ್ಕಂಡ ಸಮಿತಿಯು ನಗರ ಸುರಕ್ಷಾ ಯೋಜನೆಯ (Safe City Project) ಅನುಷ್ಠಾನ ಹಾಗೂ ಉಸ್ತುವಾರಿ ಕುರಿತು ಪ್ರತೀ ತಿಂಗಳು ಸಭೆ ನಡೆಸಿ, ಸದರಿ ಮಾಹಿತಿಯನ್ನು ಕೇಂದ್ರ ಗೃಹಮಂತ್ರಾಲಯ ಹಾಗೂ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದೊಂದಿಗೆ ಹಂಚಿಕೊಳ್ಳುವುದು.
ಕೇಂದ್ರ ಗೃಹ ಮಂತ್ರಾಲಯವು ನಗರ ಸುರಕ್ಷಾ ಯೋಜನೆ ಅನುಷ್ಠಾನ ಹಾಗೂ ಮೇಲ್ವಿಚಾರಣೆ ಕುರಿತಂತೆ ಸ್ಥಾಪಿಸಿರುವ Portal ನಲ್ಲಿ ಯೋಜನೆಯ ಪ್ರಗತಿ ವಿವರಗಳನ್ನು Upload ಮಾಡುವುದು.
PR-202
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಪದ್ಮಿನಿದೇವಿ
SC-100
ಸರ್ಕಾರದ ಅಧೀನ ಕಾರ್ಯದರ್ಶಿ,
ಗೃಹ ಇಲಾಖೆ. (ಕಾನೂನು & ಸುವ್ಯವಸ್ಥೆ)೪೨೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ಭಾಗ ೧
ಆರ್ಥಿಕ ಸಚಿವಾಲಯ
ವಿಷಯ : 2006ರ ಪರಿಷ್ಕøತ ಯುಜಿಸಿ/ಎಐಸಿಟಿಇ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿರುವ ಬೋಧಕ ವರ್ಗದವರು ಮತ್ತು ಎನ್ಜೆಪಿಸಿ ವೇತನ ಶ್ರೇಣಿಯಲ್ಲಿರುವ ನ್ಯಾಯಾಂಗ ಅಧಿಕಾರಿಗಳು/ಎನ್ಜೆಪಿಸಿ ನಿವೃತ್ತಿ ವೇತನದಾರರ ತುಟ್ಟಿ ಭತ್ಯೆಯ ದರಗಳನ್ನು ಪರಿಷ್ಕರಿಸುವ ಕುರಿತು.
ಓದಲಾಗಿದೆ : 1) ಸ.ಆ. ಸಂಖ್ಯೆ : ಎಫ್ಡಿ 10 ಎಸ್ಆರ್ಪಿ 2013, ದಿನಾಂಕ : 20-05-2013.
2) ಸ.ಆ. ಸಂಖ್ಯೆ : ಎಫ್ಡಿ 12 ಎಸ್ಆರ್ಪಿ(II) 2013, ದಿನಾಂಕ : 12-06-2013.
3) ಸ.ಆ. ಸಂಖ್ಯೆ : ಎಫ್ಡಿ 22 ಎಸ್ಆರ್ಪಿ 2013, ದಿನಾಂಕ : 10-10-2013.
4) ಸ.ಆ. ಸಂಖ್ಯೆ : ಎಫ್ಡಿ 07 ಎಸ್ಆರ್ಪಿ 2014, ದಿನಾಂಕ : 11-04-2014.
5) ಸ.ಆ. ಸಂಖ್ಯೆ : ಎಫ್ಡಿ 18 ಎಸ್ಆರ್ಪಿ 2014, ದಿನಾಂಕ : 01-10-2014.
6) ಸ.ಆ. ಸಂಖ್ಯೆ : ಎಫ್ಡಿ 12 ಎಸ್ಆರ್ಪಿ 2015, ದಿನಾಂಕ : 08-05-2015.
7) ಸ.ಆ. ಸಂಖ್ಯೆ : ಎಫ್ಡಿ 19 ಎಸ್ಆರ್ಪಿ 2015, ದಿನಾಂಕ : 08-10-2015.
8) ಸ.ಆ. ಸಂಖ್ಯೆ : ಎಫ್ಡಿ 18 ಎಸ್ಆರ್ಪಿ 2016, ದಿನಾಂಕ : 18-04-2016.
9) ಸ.ಆ. ಸಂಖ್ಯೆ : ಎಫ್ಡಿ 34 ಎಸ್ಆರ್ಪಿ 2016, ದಿನಾಂಕ : 28-10-2016.
10) ಸ.ಆ. ಸಂಖ್ಯೆ : ಎಫ್ಡಿ 19 ಎಸ್ಆರ್ಪಿ 2017, ದಿನಾಂಕ : 04-04-2017.
11) ಸ.ಆ. ಸಂಖ್ಯೆ : ಆಇ 40 ಎಸ್ಆರ್ಪಿ 2017, ದಿನಾಂಕ : 16-10-2017.
12) ಸ.ಆ. ಸಂಖ್ಯೆ : ಆಇ 11 ಎಸ್ಆರ್ಪಿ 2018, ದಿನಾಂಕ : 23-06-2018.
13) ಸ.ಆ. ಸಂಖ್ಯೆ : ಆಇ 26 ಎಸ್ಆರ್ಪಿ 2018, ದಿನಾಂಕ : 30-10-2018.
ಸರ್ಕಾರಿ ಆದೇಶ ಸಂಖ್ಯೆ : ಆಇ 2 ಎಸ್ಆರ್ಪಿ 2019, ಬೆಂಗಳೂರು, ದಿನಾಂಕ : 03.05.2019.
2006ರ ಪರಿಷ್ಕøತ ಯುಜಿಸಿ/ಎಐಸಿಟಿಇ ವೇತನ ಶ್ರೇಣಿಗಳಲ್ಲಿರುವ ಬೋಧಕ ಸಿಬ್ಬಂದಿಗಳಿಗೆ ಮತ್ತು ಎನ್ಜೆಪಿಸಿ ವೇತನ ಶ್ರೇಣಿಯಲ್ಲಿರುವ ನ್ಯಾಯಾಂಗ ಅಧಿಕಾರಿಗಳಿಗೆ ಹಾಲಿ ಲಭ್ಯವಿರುವ ತುಟ್ಟಿಭತ್ಯೆಯ ದರವನ್ನು ಮೂಲ ವೇತನದ ಶೇ. 148 ರಿಂದ ಶೇ. 154ಕ್ಕೆ ದಿನಾಂಕ 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಹೆಚ್ಚಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ.
2. ಈ ಆದೇಶದ ಉದ್ದೇಶಗಳಿಗಾಗಿ 'ಮೂಲ ವೇತನ' ಎಂದರೆ ಸರ್ಕಾರಿ ನೌಕರನು ಧಾರಣ ಮಾಡಿರುವ ಹುದ್ದೆಗೆ ಅನ್ವಯವಾಗುವ 2006ರ ಪರಿಷ್ಕøತ ಯುಜಿಸಿ/ಎಐಸಿಟಿಇ ಮತ್ತು ಎನ್ಜೆಪಿಸಿ ವೇತನ ಶ್ರೇಣಿಗಳಲ್ಲಿ ಪಡೆಯುವ ವೇತನ.
3. ಮೂಲ ವೇತನಕ್ಕೆ ಇನ್ಯಾವುದೇ ಉಪಲಬ್ದಗಳನ್ನು ಸೇರಿಸತಕ್ಕದ್ದಲ್ಲ.
4. ಇತ್ತೀಚೆಗೆ ವೇತನ ಶ್ರೇಣಿಗಳನ್ನು ಪರಿಷ್ಕರಿಸಲ್ಪಟ್ಟ ಮತ್ತು 2016ರ ಪರಿಷ್ಕøತ ಯುಜಿಸಿ/ಐಸಿಎಆರ್ ವೇತನ ಶ್ರೇಣಿಗಳಲ್ಲಿರುವ ನೌಕರರಿಗೆ ಈ ಆದೇಶಗಳು ಅನ್ವಯಿಸುವುದಿಲ್ಲ.
5. ಎನ್ಜೆಪಿಸಿ ನಿವೃತ್ತಿ ವೇತನದಾರರು/ಕುಟುಂಬ ನಿವೃತ್ತಿ ವೇತನದಾರರಿಗೆ ಹಾಲಿ ಲಭ್ಯವಿರುವ ತುಟ್ಟಿ ಭತ್ಯೆಯ ದರವನ್ನು ಸಹ ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಶೇ. 148 ರಿಂದ ಶೇ. 154ಕ್ಕೆ ದಿನಾಂಕ 1ನೇ ಜನವರಿ 2019 ರಿಂದ ಜಾರಿಗೆ ಬರುವಂತೆ ಹೆಚ್ಚಿಸಿ ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ.
6. 2006ರ ಪರಿಷ್ಕøತ ಯುಜಿಸಿ/ಎಐಸಿಟಿಇ/ಐಸಿಎಆರ್ ವೇತನ ಶ್ರೇಣಿಗಳಲ್ಲಿ ವೇತನ ಪಡೆಯುತ್ತಿದ್ದ ಹಾಗೂ ದಿನಾಂಕ : 01-01-2016ರ ನಂತರದಲ್ಲಿ ನಿವೃತ್ತರಾದ ನಿವೃತ್ತಿ ವೇತನದಾರರಿಗೆ ಪ್ರತ್ಯೇಕ ಆದೇಶಗಳನ್ನು ಹೊರಡಿಸಲಾಗುವುದು.
7. ಈ ಆದೇಶದ ಮೇರೆಗೆ ಮಂಜೂರಾಗಿರುವ ತುಟ್ಟಿ ಭತ್ಯೆಯನ್ನು ಮುಂದಿನ ಆದೇಶ ಹೊರಡಿಸುವವರೆಗೆ ನಗದಾಗಿ ಪಾವತಿ ಮಾಡಲಾಗುವುದು.
8. ತುಟ್ಟಿ ಭತ್ಯೆಯ ಕಾರಣದಿಂದ ಸಂದಾಯ ಮಾಡಬೇಕಾಗಿರುವ ಐವತ್ತು ಪೈಸೆ ಹಾಗೂ ಅದಕ್ಕಿಂತ ಹೆಚ್ಚಿನ ಭಿನ್ನಾಂಕಗಳನ್ನು ಮುಂದಿನ ರೂಪಾಯಿಗೆ ಪೂರ್ಣಗೊಳಿಸತಕ್ಕದ್ದು ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಭಿನ್ನಾಂಕಗಳನ್ನು ಕಡೆಗಣಿಸತಕ್ಕದ್ದು.
9. ತುಟ್ಟಿ ಭತ್ಯೆಯನ್ನು ಸಂಭಾವನೆಯ ವಿಶಿಷ್ಟ ಅಂಶವಾಗಿ ತೋರಿಸುವುದು ಮತ್ತು ಯಾವುದೇ ಉದ್ದೇಶಕ್ಕಾಗಿ ಇದನ್ನು ವೇತನ ಎಂದು ಪರಿಗಣಿಸಲಾಗುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಉಮಾ ಕೆ.
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಸೇವೆಗಳು-2)ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ೪೨೩ FINANCE SECRETARIAT Sub : Revision of the rates of Dearness Allowance payable to Teaching Staff on 2006 revised UGC/AICTE scales of pay and to Judicial Officers/Pensioners on NJPC scales of pay-reg.
Read : (1) G.O. No. FD 10 SRP 2013, Dated : 20.05.2013.
GOVERNMENT ORDER NO. FD 2 SRP 2019, BENGALURU, DATED 3RD MAY 2019.
SC-50
ಆರ್ಥಿಕ ಸಚಿವಾಲಯ
ವಿಷಯ : ಪ್ರಭಾರ ಭತ್ಯೆ ದರಗಳ ಪರಿಷ್ಕರಣೆಯ ಕುರಿತು.
ಓದಲಾಗಿದೆ : ಸರ್ಕಾರಿ ಆದೇಶ ಸಂಖ್ಯೆ : ಎಫ್ಡಿ 03 ಎಸ್ಆರ್ಎಸ್ 2012, ದಿನಾಂಕ : 14-06-2012.
ಪ್ರಸ್ತಾವನೆ :
ಮೇಲೆ ಓದಲಾದ ಸರ್ಕಾರಿ ಆದೇಶದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32 ಮತ್ತು 68 ರಡಿಯಲ್ಲಿ ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲೀ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆ ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿರಿಸಿದಾಗ ಆ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದ ಶೇಕಡಾ 7.5 ದರ ಪ್ರಭಾರ ಭತ್ಯೆಯನ್ನಾಗಿ ನೀಡುವಲ್ಲಿ ದಿನಾಂಕ : 01-04-2012 ರಿಂದ ಜಾರಿಗೊಳಿಸಿ ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ನೌಕರರು/ಅಧಿಕಾರಿಗಳ ಕೊರತೆಯಿಂದಾಗಿ ಹಲವಾರು ಅಧಿಕಾರಿಗಳು ಒಂದಕ್ಕಿಂತ ಹೆಚ್ಚಿನ ಹುದ್ದೆಗಳಲ್ಲಿ ಅಧಿಕ ಪ್ರಭಾರ/ಸಮವರ್ತಿತ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ರೀತಿ ಹೆಚ್ಚಿನ ಕಾರ್ಯಭಾರದ ಒತ್ತಡದಲ್ಲಿ ಕಾರ್ಯ ನಿರ್ವಹಿಸುತ್ತಿರುವವರಿಗೆ ಪ್ರಸ್ತುತ ನೀಡುತ್ತಿರುವ ಶೇಕಡಾ 7.5 ದರ ಪ್ರಭಾರ ಭತ್ಯೆಯು ಕಡಿಮೆ ಎಂದು ಅಧಿಕಾರಿಗಳಿಂದ ಅಭಿಪ್ರಾಯಗಳು ಕೇಳಿ ಬಂದಿರುತ್ತದೆ. ಇದಲ್ಲದೇ ಈ ಆದೇಶವು 07 R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297೪೨೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಮೇ ೩೦, ೨೦೧೯ ಭಾಗ ೧ ವರ್ಷಗಳಷ್ಟು ಹಿಂದಿನ ಅವಧಿಯಲ್ಲಿ ಪರಿಷ್ಕರಿಸಲ್ಪಟ್ಟಿರುವುದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಭಾರ ಭತ್ಯೆಯ ದರವನ್ನು ಪರಿಷ್ಕರಿಸುವ ಬಗ್ಗೆ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ : ಎಫ್ಡಿ 08 ಎಸ್ಆರ್ಎಸ್ 2018, ಬೆಂಗಳೂರು, ದಿನಾಂಕ : 30.04.2019.
ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32 ಮತ್ತು 68 ರಡಿಯಲ್ಲಿ ಸರ್ಕಾರಿ ನೌಕರರನ್ನು ಸ್ವತಂತ್ರ ಪ್ರಭಾರದಲ್ಲಾಗಲೀ ಅಥವಾ ತಮ್ಮ ಹುದ್ದೆಯ ಕರ್ತವ್ಯದ ಜೊತೆ ಬೇರೊಂದು ಹುದ್ದೆಯ ಹೆಚ್ಚಿನ ಪ್ರಭಾರದಲ್ಲಿರಿಸಿದಾಗ ಆ ಹುದ್ದೆಯ ವೇತನ ಶ್ರೇಣಿಯ ಕನಿಷ್ಠ ಹಂತದಲ್ಲಿ ಮೊದಲ ಮೂರು ತಿಂಗಳವರೆಗೆ ಶೇಕಡಾ 7.5 ದರದಲ್ಲಿ, ಆ ನಂತರದ ಮೂರು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಶೇಕಡಾ 15 ದರದಲ್ಲಿ ಪ್ರಭಾರ ಭತ್ಯೆಯನ್ನು ನಿಗಧಿಪಡಿಸಿ ಆದೇಶಿಸಿದೆ.
ಸದರಿ ಪ್ರಭಾರ ವ್ಯವಸ್ಥೆಯು ಪ್ರಭಾರ ಹೊಂದಿರುವ ಒಂದು ಹುದ್ದೆಗೆ ಮಾತ್ರ ಅನ್ವಯಿಸತಕ್ಕದ್ದು ಮತ್ತು ಸದರಿ ದರಗಳು ಈ ಆದೇಶವನ್ನು ಹೊರಡಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
ಕರ್ನಾಟಕ ನಾಗರೀಕ ಸೇವಾ ನಿಯಮಗಳಿಗೆ ಅವಶ್ಯಕ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು.
PR-204
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಬಿ.ಎಸ್. ಸುವರ್ಣ
SC-50
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಸೇವೆಗಳು-1) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.