Servants of Knowledge
Karnataka Gazette · Government of Karnataka

Karnataka Gazette, Part Part-1, 06 June 2019

Published 06 June 2019

Part
Part-1
Identifier
in.gazette.karnataka_new.2019-06-06.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಜೂನ್ ೬, ೨೦೧೯ (ಜ್ಯೇಷ್ಠ ೧೬, ಶಕ ವರ್ಷ ೧೯೪೧)

Bengaluru, Thursday, June 6, 2019 (Jyeishta 16, Shaka Varsha 1941)

ಸಂಪುಟ ೧೫೪

Volume 154

ಸಂಚಿಕೆ ೨೩

Issue 23

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಇಂಧನ ಸಚಿವಾಲಯ

ವಿಷಯ: ಪಾವಗಡ ಸೌರ ಪಾರ್ಕ್ ಸಾಮರ್ಥ್ಯವನ್ನು 2000 ಮೆ.ವ್ಯಾ ನಿಂದ 2050 ಮೆ.ವ್ಯಾಗೆ ಹೆಚ್ಚಿಸುವ ಕುರಿತು. ಓದಲಾಗಿದೆ: 1. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆದೇಶ ಸಂಖ್ಯೆ: CI 234 SPI 2015 ದಿನಾಂಕ: 29.10.2015.

5. ಕಾರ್ಯದರ್ಶಿಗಳು, ಕೆಇಅರ್‌ಸಿ ರವರ ಪತ್ರ ಸಂಖ್ಯೆ: KERC/S/F-62/2018-19/1125 ದಿನಾಂಕ: 30.11.2018. 6. ಕಾರ್ಯದರ್ಶಿಗಳು, ಕೆಇಆರ್‌ಸಿ ರವರ ಪತ್ರ ಸಂಖ್ಯೆ: KERC/S/F-16/18-19/1537 ದಿನಾಂಕ: 06.02.2019.

(೪೨೫)೪೨೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ಭಾಗ ೧ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್ ರವರು ಮೇಲೆ ಓದಲಾದ (7)ರಲ್ಲಿ ಪಾವಗಡ ಸೌರ ಪಾರ್ಕ್‌ನ ಸಾಮರ್ಥ್ಯವನ್ನು 2000 ಮೆ.ವ್ಯಾ ನಿಂದ 2050 ಮೆ.ವ್ಯಾಗೆ ಹೆಚ್ಚಿಸಲು ಸರ್ಕಾರದಿಂದ ಆದೇಶ ಹೊರಡಿಸುವಂತೆ ಕೋರಿರುವುದರಿಂದ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ENERGY/25/VSC/2019-JD-ENERGY SECRETARIAT, ಬೆಂಗಳೂರು, ದಿನಾಂಕ: 16.04.2019.

ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕಿನ ನಾಗಲಮಡಿಕೆ ಹೋಬಳಿ ವ್ಯಾಪ್ತಿಯ ಬಳ್ಳೂರು, ಬಳಸಮುದ್ರ, ಕ್ಯಾತಗಾನಚೆರ್ಲು, ರಾಯಚೆರ್ಲು ಮತ್ತು ತಿರುಮಣಿ ಗ್ರಾಮಗಳ ವ್ಯಾಪ್ತಿಯಲ್ಲಿ 2000 ಮೆ.ವ್ಯಾ ಸಾಮರ್ಥ್ಯದ ಸೌರ ಪಾರ್ಕ್ ಅನುಷ್ಟಾನಕ್ಕೆ ಹಾಲಿ ಗುತ್ತಿಗೆ ಪಡೆದಿರುವ ಹೆಚ್ಚುವರಿ ಜಮೀನುಗಳಲ್ಲಿ, ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತರವರ ಹಾಲಿ ಮೂಲಭೂತ ಸೌಕರ್ಯಗಳನ್ನು ಉಪಯೋಗಿಸಿಕೊಂಡು 2000 ಮೆ.ವ್ಯಾ ಸಾಮರ್ಥ್ಯಕ್ಕೆ ಹೆಚ್ಚುವರಿಯಾಗಿ 50 ಮೆ.ವ್ಯಾ ಸಾಮರ್ಥ್ಯದ ಸೌರ ಯೋಜನೆಗಳನ್ನು ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವತಿಯಿಂದ ಅನುಷ್ಟಾನಗೊಳಿಸಲು ಪಾವಗಡ ಸೌರ ಪಾರ್ಕ್‌ನ ಸಾಮರ್ಥ್ಯವನ್ನು 2000 ಮೆ.ವ್ಯಾ ನಿಂದ 2050 ಮೆ.ವ್ಯಾಗೆ ಹೆಚ್ಚಿಸಿ ಆದೇಶಿಸಿದೆ.

PR-197

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25

ಬಿ.ವಿ. ಶ್ರೀನಿವಾಸಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ

ಇಂಧನ ಇಲಾಖೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ: ಶ್ರೀ ಕೆ. ನಾಗಣ್ಣ, ಆಹಾರ ಸುರಕ್ಷತಾಧಿಕಾರಿ (ನಿಯೋಜನೆ ಮೇಲೆ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರು ಎಸಗಿರುವ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ದಂಡನೆ ವಿಧಿಸುವ ಬಗ್ಗೆ.

ಓದಲಾಗಿದೆ: 1. ಶ್ರೀ ಕೆ. ಶ್ರೀನಿವಾಸ್, ಕಾಟನ್‌ಪೇಟೆ, ಬೆಂಗಳೂರು ಇವರ ದಿನಾಂಕ: 30.06.2009ರ ದೂರು.

2. ಅಪರ ನಿಬಂಧಕರು ವಿಚಾರಣೆಗಳು-10, ಕರ್ನಾಟಕ ಲೋಕಾಯುಕ್ತ ಇವರ ಅರೆ ಸರ್ಕಾರಿ ಪತ್ರ ಸಂಖ್ಯೆ:

Compt/Uplok/BCD/316/2009/ARE-10, ದಿನಾಂಕ: 07.02.2014

3. ಮಾನ್ಯ ಉಪ ಲೋಕಾಯುಕ್ತ, ಕರ್ನಾಟಕ ರಾಜ್ಯ ಇವರ ವಿಚಾರಣಾ ವರದಿ ಸಂಖ್ಯೆ:

4. ಸರ್ಕಾರದ ಆದೇಶ ಸಂಖ್ಯೆ: ನಅಇ 117 ಎಂಎನ್‌ಜಿ 2014, ದಿನಾಂಕ: 21.04.2014

5. ಮಾನ್ಯ ಉಪ ಲೋಕಾಯುಕ್ತ-1 ಕರ್ನಾಟಕ ರಾಜ್ಯ ಬೆಂಗಳೂರು ಇವರ ಆದೇಶ ಸಂಖ್ಯೆ:

6. ಅಪರ ನಿಬಂಧಕರು ವಿಚಾರಣೆಗಳು-1, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವಿಚಾರಣಾ ವರದಿ 7. ಮಾನ್ಯ ಉಪ ಲೋಕಾಯುಕ್ತ-1 ಕರ್ನಾಟಕ ರಾಜ್ಯ, ಬೆಂಗಳೂರು ಇವರ ಶಿಪಾರಸ್ಸು

8. ಸರ್ಕಾರದ 2ನೇ ಕಾರಣ ಕೇಳುವ ನೋಟಿಸ್ ಸಂಖ್ಯೆ: ನಅಇ 117 ಎಂಎನ್‌ಜಿ 2014, ದಿನಾಂಕ: 30.06.2016 9. ಕೆ. ನಾಗಣ್ಣ, ಆಹಾರ ಸುರಕ್ಷತಾಧಿಕಾರಿಗಳು, ಬಿ.ಬಿ.ಎಂ.ಪಿ (ದಕ್ಷಿಣ) ಬಸವನಗುಡಿ ವೃತ್ತ, ಬೆಂಗಳೂರು, ಇವರ ಸಮಜಾಯಿಷಿ ದಿನಾಂಕ: 14.12.2016.

10. ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ), ಇವರ ಪತ್ರ ಸಂಖ್ಯೆ: ನಅಇ 117 ಎಂಎನ್‌ಜಿ 2014, ದಿನಾಂಕ:

23.01.2018.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮಾಂಕ (1)ರಲ್ಲಿ ಶ್ರೀ ಕೆ. ಶ್ರೀನಿವಾಸ್ ನಂ.ಜೆ, 30, ಕಾಟನ್‌ಪೇಟೆ, ಬೆಂಗಳೂರು ಇವರು ಬೆಂಗಳೂರಿನ ಸಗಟು ಹಿಟ್ಟಿನ ಗಿರಣಿ ಮಾಲೀಕರು, ಬೆಣ್ಣೆ ಮತ್ತು ಎಣ್ಣೆ ವ್ಯಾಪಾರಿಗಳು ಕಲಬೆರಕೆ ವಸ್ತುಗಳನ್ನು ಮಾರಾಟ ಮಾಡುತ್ತಿದ್ದು, ಈ ಕಲಬೆರಕೆ ವಸ್ತುಗಳ ಮಾದರಿಗಳನ್ನು ಶ್ರೀ ಕೆ. ನಾಗಣ್ಣ, ಆಹಾರ ನಿರೀಕ್ಷಕರು ಇವರು ಪಡೆದು ವಿಶ್ಲೇಷಕರಿಗೆ ಕಳುಹಿಸಿದಾಗ ಆಹಾರ ಪದಾರ್ಥಗಳು ಕಲಬೆರಕೆ ಆಗಿರುವುದು ಧೃಡಪಟ್ಟಿದ್ದರೂ ಸಹ ಮಾರಾಟಗಾರರ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಮಾರಾಟಗಾರರನ್ನು ಉಳಿಸಿರುತ್ತರೆಂದು ಮಾನ್ಯ ಲೋಕಾಯುಕ್ತರಿಗೆ ದೂರನ್ನು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮಾಂಕ (2)ರ ಅರೆಸರ್ಕಾರಿ ಪತ್ರ ಹಾಗೂ ಕ್ರಮಾಂಕ (3)ರ ಪತ್ರದಲ್ಲಿ ಮಾನ್ಯ ಉಪ ಲೋಕಾಯುಕ್ತ, ಕರ್ನಾಟಕ ರಾಜ್ಯ ಬೆಂಗಳೂರು ರವರು ಶ್ರೀ ಕೆ.ನಾಗಣ್ಣ, ಆಹಾರ ಸುರಕ್ಷತಾಧಿಕಾರಿಗಳು, ಬಿ.ಬಿ.ಎಂ.ಪಿ ಇವರು ಕರ್ನಾಟಕ ನಾಗರೀಕ ಸೇವಾ (ನಡತೆ) ನಿಯಮಗಳು, 1966ರ ಉಪನಿಯಮ 3(1) (ii) & (iii) ಅನ್ನು ಉಲ್ಲಂಘಿಸಿ ಕರ್ತವ್ಯಲೋಪ ಎಸಗಿರುವುದರಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್ 12(3) ರ ವರದಿಯನ್ವಯ ಸದರಿಯವರ ವಿರುದ್ಧ ವಿಚಾರಣೆ ನಡೆಸಲು ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ಉಪ ನಿಯಮ 14-ಎ ರನ್ವಯ ಮಾನ್ಯ ಉಪ ಲೋಕಾಯುಕ್ತ ಕರ್ನಾಟಕ ರಾಜ್ಯ ರವರಿಗೆ ವಹಿಸಲು ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮಾಂಕ (4)ರ ಸರ್ಕಾರಿ ಆದೇಶದಲ್ಲಿ ಶ್ರೀ. ಕೆ. ನಾಗಣ್ಣ, ಆಹಾರ ನೀರಿಕ್ಷಕರು, ಬಿ.ಬಿ.ಎಂ.ಪಿ ಇವರು ಎಸಗಿರುವ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಇವರ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ಉಪ ನಿಯಮ 14-ಎ ರನ್ವಯ ಮಾನ್ಯ ಉಪ ಲೋಕಾಯುಕ್ತ ಕರ್ನಾಟಕ ರಾಜ್ಯ ರವರಿಗೆ ವಹಿಸಿ ಆದೇಶಿಲಾಗಿತ್ತು.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ೪೨೭

ಮೇಲೆ ಓದಲಾದ ಕ್ರಮಾಂಕ(5)ರಲ್ಲಿ ಮಾನ್ಯ ಉಪ ಲೋಕಾಯುಕ್ತ-1 ಬೆಂಗಳೂರು ಇವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ(6)ರಲ್ಲಿ ಅಪರ ನಿಬಂಧಕರು ವಿಚಾರಣೆಗಳು-1, ಕರ್ನಾಟಕ ಲೋಕಾಯುಕ್ತ ಬೆಂಗಳೂರು ಇವರು ಪ್ರಕರಣದ ವಿಚಾರಣೆಯನ್ನು ನಡಿಸಿ, ದಿನಾಂಕ: 09.12.2015ರ ವಿಚಾರಣಾ ವರದಿಯನ್ನು ಮಾನ್ಯ ಉಪ ಲೋಕಾಯುಕ್ತ-1 ಬೆಂಗಳೂರು ರವರಿಗೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮಾಂಕ(7)ರಲ್ಲಿ ಮಾನ್ಯ ಉಪ ಲೋಕಾಯುಕ್ತ-1 ಬೆಂಗಳೂರು ರವರು ವಿಚಾರಣಾಧಿಕಾರಿಗಳ ವಿಚಾರಣಾ ವರದಿಯನ್ನು ಪರಿಶೀಲಿಸಿ, ಇವರು ಎಸಗಿರುವ ಕರ್ತವ್ಯಲೋಪವು ದೃಡಪಟ್ಟಿರುವುದರಿಂದ ಪ್ರಕರಣ ಆರೋಪಿ ಅಧಿಕಾರಿಯಾದ ಶ್ರೀ ಕೆ. ನಾಗಣ್ಣ ಆಹಾರ ನಿರೀಕ್ಷಕರು, ಬಿ.ಬಿ.ಎಂ.ಪಿ ಇವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ಗರಿಷ್ಠ ದಂಡನೆಯನ್ನು ವಿಧಿಸಲು ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ ಕ್ರಮಾಂಕ(8)ರಲ್ಲಿ ಮಾನ್ಯ ಉಪ ಲೋಕಾಯುಕ್ತ-1 ಬೆಂಗಳೂರು ರವರು ಮಾಡಿರುವ ಶಿಫಾರಸ್ಸಿ ಅನ್ವಯ ದಂಡನೆ ವಿಧಿಸುವ ಬಗ್ಗೆ ಪರಿಶೀಲಿಸಲು ಆರೋಪಿತ ಅಧಿಕಾರಿಗೆ 2ನೇ ಕಾರಣ ಕೇಳುವ ನೋಟಿಸನ್ನು ಆಯುಕ್ತರು, ಬಿ.ಬಿ.ಎಂ.ಪಿ ಇವರ ಮೂಲಕ ಜಾರಿ ಮಾಡಿ ಸಮಜಾಯಿಷಿಯನ್ನು ಕೋರಲಾಗಿದೆ.

ಮೇಲೆ ಓದಲಾದ ಕ್ರಮಾಂಕ(9)ರಲ್ಲಿ ಆರೋಪಿತ ಅಧಿಕಾರಿಯಾದ ಶ್ರೀ ಕೆ. ನಾಗಣ್ಣ ಆಹಾರ ನಿರೀಕ್ಷಕರು, ಬಿ.ಬಿ.ಎಂ.ಪಿ, ಬೆಂಗಳೂರು ಇವರು ಹಿಟ್ಟಿನ ಗಿರಣಿ ಮಾಲೀಕರು, ಬೆಣ್ಣೆ ವ್ಯಾಪಾರಿಗಳು ಮತ್ತು ಎಣ್ಣೆ ವ್ಯಾಪಾರಿಗಳು ಇವರಿಂದ ಸಂಶಯಾಸ್ಪದ ಆಹಾರ ಮಾದರಿಯನ್ನು ಪಡೆದು ಸಾರ್ವಜನಿಕ ವಿಶ್ಲೇಷಕರಿಗೆ ಕಳುಹಿಸಲಾಗಿದ್ದು ಸರಿಯಷ್ಟೆ, ಅದರೆ ಕಾರ್ಯವೈಖರಿ ಪ್ರಕಾರ ಈ ಕಲಬೆರಕೆ ಆಹಾರ ಮಾದರಿಗಳನ್ನು ಇಲಾಖೆಯ ಪ್ರಯೋಗ ಶಾಲೆಯಲ್ಲಿ ಪರಿಶೀಲನೆಗಾಗಿ ಸಲ್ಲಿಸಿ ಪ್ರಯೋಗಶಾಲೆಯಲ್ಲಿ ಆಹಾರ ಕಲಬೆರಕೆ ದೃಡಪಟ್ಟಲ್ಲಿ ವರದಿಯನ್ನು ಅವರುಗಳು ನೇರವಾಗಿ ಸಂಬಂಧಪಟ್ಟ ಅಧಿಕಾರಿಗಳಗೆ (Local Health Authority) ಸಲ್ಲಿಸುತ್ತಿದ್ದು, ಈ ವರದಿ ಬಂದ ನಂತರ ಅಧಿಕಾರಿಗಳು ಇಂತಹ ಪ್ರಕರಣಗಳಲ್ಲಿ ಮುಂದಿನ ಕ್ರಮಕೈಗೊಳ್ಳಲು ನಿರ್ದೇಶನವನ್ನು ನೀಡಬೇಕು ಹಾಗೂ ಕ್ರಮಕೈಗೊಳ್ಳಲು ಸೂಕ್ತ ಅಧಿಕಾರವನ್ನು ಕೊಟ್ಟ ಪಕ್ಷದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆಂದು ಹೀಗಾಗಿ ಈ ಪ್ರಕರಣದಲ್ಲಿ ಕಲಬೆರಕೆ ಆಹಾರ ಪ್ರಯೋಗಾಲಯದ ಪರಿಶೀಲನಾ ವರದಿಯ ಬಗ್ಗೆ ಕ್ರಮಕೈಗೊಳ್ಳಲು ಹಾಗೂ ನನ್ನ ಹಂತದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ಯಾವುದೇ ಅಧಿಕಾರವಿಲ್ಲದ್ದರಿಂದ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಮಾರ್ಗದರ್ಶನ ಹಾಗೂ ಅಧಿಕಾರ ನೀಡಿಲ್ಲವಾದ್ದರಿಂದ ಈ ಪ್ರಕರಣದಲ್ಲಿ ಮುಂದಿನ ಕ್ರಮಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂಬ ಅಂಶವನ್ನು ಗಮನಕ್ಕೆ ತರುತ್ತಾ ತಾನು ಯಾವುದೇ ಕರ್ತವ್ಯ ಲೋಪ ಮಾಡಿರುವುದಿಲ್ಲ ಎಂದು ಸಮಜಾಯಿಷಿಯನ್ನು ಸಲ್ಲಿಸಿ, ತನ್ನನ್ನು ಆರೋಪದಿಂದ ಮುಕ್ತಗೊಳಿಸುವಂತೆ ಕೋರಿರುತ್ತಾರೆ.

ಈ ಕುರಿತು ವಿಚಾರಣೆಯಲ್ಲಿ ಈ ಕೆಳಕಂಡ ಅಂಶಗಳು ದೃಡಪಟ್ಟಿರುತ್ತದೆ.

i. Respondent took 40 samples during the year 2008-09 and sent them to the public analyst for examination and report;

ii. The annexure filed by the respondent along with his comments dt.17-01-2014 shows, at SL.No.3 coconut oil sample taken from the shop of N.L.Kumar on 25-04-2008 was found adulterated;

iii. GRB Ghee sample taken from the shop of Heritage Foods India Limited on 30-04-2008 was found adulterated;

iv. Star Refined Soya Bean Oil sample taken from the shop of Omkar Distributors on 30-05-2008 was found adulterated;

v. Rice sample taken from the shop of Annapoorneshwari Rice Traders on 30-05-2008 was found adulterated;

vi. Moong Dal sample taken from the shop of Sunil Mehta on 23-06-2008 was found adulterated;

vii. Wheat flour sample taken from the shop of Dwaraka Upahar on 26-08-2008 was found adulterated;

viii. Toordal sample taken from the shop Rajalakshmi traders on 10-09-2008 was found adulterated;

ix. Paneer sample taken from the shop of Lokesh on 11-06-2008 was found adulterated;

x. Curd sample taken from the shop of Ketty Retail Centre on 28-08-2008 was found adulterated;

xi. Star Maida taken from the shop of Trent Hypermarket on 26-09-2008 was found adulterated;

xii. Dhaniya powder sample taken from the shop of Balar provision stores on 27-09-2008 was found adulterated;

xiii. Lime pickle sample taken from the KBS Fair Price shop on 30-09-2008 was found adulterated;

xiv. Though in the above said 12 cases, sample obtained was found to be adulterated, no criminal prosecution was initiated against the said vendor;

xv. Respondent vide his reply dt. 08-10-2013 though admitted taking of samples referred to above, he has not filed any criminal complaint before the Court as the statement shows 'Nil';

xvi. In the above said 12 cases, though found that the dealer sold adulterated food/products, respondent failed to prosecute them under PFA Act.

In view of the facts stated above and the material on record, reply of the respondent has not been found satisfactory to drop the proceedings.

ಆದ್ದರಿಂದ ಆರೋಪಿತರ ಅವಹಾಲನ್ನು ಒಪ್ಪತಕ್ಕದ್ದಲ್ಲ ಹಾಗೂ ಒಬ್ಬ ಆಹಾರ ಸುರಕ್ಷತಾಧಿಕಾರಿಯಾಗಿದ್ದು, ತನ್ನ ಮೂಲ ಕರ್ತವ್ಯದಿಂದ ನುಣುಚಿಕೊಳ್ಳುವ ಪ್ರಯತ್ನ ಇದಾಗಿದೆ.

ಮೇಲೆ ಓದಲಾದ ಕ್ರಮಾಂಕ(10)ರಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಬಿ.ಬಿ.ಎಂ.ಪಿ), ಬೆಂಗಳೂರು, ಇವರು ಮಾನ್ಯ ಉಪ ಲೋಕಾಯುಕ್ತ-1 ಬೆಂಗಳೂರು ಇವರು ಶಿಫಾರಸ್ಸು ಮಾಡಿರುವಂತೆ ಆರೋಪಿತರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ ಗರಿಷ್ಠ ದಂಡನೆಯನ್ನು ವಿಧಿಸಲು ಮಾನ್ಯ ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನಾ ಸಚಿವರ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿರುತ್ತಾರೆ, ಮಾನ್ಯ ಉಪ೪೨೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ಭಾಗ ೧ ಲೋಕಾಯುಕ್ತರವರಿಂದ ಸ್ವೀಕೃತವಾಗಿರುವ ಕರ್ನಾಟಕ ಲೋಕಾಯುಕ್ತ ಕಾಯ್ದೆ, 1984ರ ಸೆಕ್ಷನ್ 12(3)ರ ವರದಿ, ವಿಚಾರಣಾಧಿಕಾರಿಗಳು ನೀಡಿರುವ ವಿಚಾರಣಾ ವರದಿ ಮಾನ್ಯ ಉಪ ಲೋಕಾಯುಕ್ತ-1 ರವರ ಶಿಫಾರಸ್ಸು ಮತ್ತು ಆರೋಪಿತ ಅಧಿಕಾರಿ ನೀಡಿರುವ ಸಮಜಾಯಿಷಿ ಇವುಗಳನ್ನು ಪರಿಶೀಲಿಗಣಿಸಲಾಗಿದೆ.

ವಿಚಾರಣಾಧಿಕಾರಿಗಳ ವಿಚಾರಣಾ ವರದಿ, ಮಾನ್ಯ ಲೋಕಾಯುಕ್ತರ ಶಿಫಾರಸ್ಸು ಹಾಗೂ ಆರೋಪಿತರು ಸಲ್ಲಿಸಿದ್ದ ಪ್ರತಿ ರಕ್ಷಣಾ ಹೇಳಿಕೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಲಾಗಿದೆ.

ಸರ್ಕಾರದ ಆದೇಶ ಸಂಖ್ಯೆ: ಆಕುಕ 14 ಸಿಜಿಇ 2018, ಬೆಂಗಳೂರು, ದಿನಾಂಕ: 26.04.2019

ಮೇಲೆ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ಕೆ. ನಾಗಣ್ಣ, ಆಹಾರ ನಿರೀಕ್ಷಕರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ದಕ್ಷಿಣ ವಲಯ ಇವರು ನಿಯೋಜನೆ ಮೇಲಿದ್ದು, ಇವರನ್ನು ನಗರಾವೃದ್ಧಿ ಇಲಾಖೆಯ ಪತ್ರ ಸಂಖ್ಯೆ: ನಅಇ 117 ಎಂಎನ್‌ಜಿ 2014, ದಿನಾಂಕ: 23.01.2018ರನ್ವಯ ಇವರ ಸೇವೆಯನ್ನು ಮಾತೃ ಇಲಾಖೆಯಾದ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ, ಬಿ.ಬಿ.ಎಂ.ಪಿ ಆಯುಕ್ತರು ಈ ಕೂಡಲೇ ಸದರಿಯವರನ್ನು ಸೇವೆಯಿಂದ ಬಿಡುಗಡೆಗೊಳಿಸುವುದು, ಆಯುಕ್ತರು, ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶಿಸತಕ್ಕದ್ದು,

ಅಪರ ನಿಬಂಧಕರು ವಿಚಾರಣೆ-1, ಕರ್ನಾಟಕ ಲೋಕಾಯುಕ್ತರವರ ದಿನಾಂಕ: 09.12.2015ರ ವಿಚಾರಣಾ ವರದಿಯನ್ನು ಅನುಸರಿಸಿ ಹಾಗೂ ಮಾನ್ಯ ಉಪಲೋಕಾಯುಕ್ತ-1 ರವರು ದಿನಾಂಕ: 04.01.2016ರಲ್ಲಿ ನೀಡುರುವ ಶಿಫಾರಸ್ಸಿನ ಮೇರೆಗೆ. ಸದರಿಯವರ ಎಸಗಿರುವ ಕರ್ತವ್ಯಲೋಪವು ಲೋಕಾಯುಕ್ತ ವಿಚಾರಣೆಯಲ್ಲಿ ಸಾಬೀತಾಗಿರುವುದರಿಂದ ಸದರಿಯವರು ಕರ್ತವ್ಯಲೋಪ ಹಾಗೂ ದುರ್ವರ್ತನೆಗಾಗಿ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 8(vi)ರ ಪ್ರಕಾರ ಶ್ರೀ ಕೆ. ನಾಗಣ್ಣ ಆಹಾರ ನಿರೀಕ್ಷಕರು (ಆಹಾರ ಸುರಕ್ಷತಾಧಿಕಾರಿ), ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸುವ (Compulsory Retirement from Service) ದಂಡನೆ ವಿಧಿಸಿ ಆದೇಶಿಸಿದೆ.

PR-205

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಜಯಲಕ್ಷ್ಮೀ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

(ಆರೋಗ್ಯ 1 ಮತ್ತು 2)

MINORITY WELFARE, HAJ & WAKF SECRETARIAT

Sub : Extension of the period of the Administrator of the Karnataka State Board of Wakf,

Bengaluru. reg.

Read : 1) G.O. No. MWD 120 WES 2016, Dt:19.08.2016.

2) G.O.No. MWD 120 WES 2016, Dt: 22.02.2017.

3) G.O.No. MWD 120 WES 2016, Dt: 19.08.2017.

4) G.O.No. MWD 120 WES 2016, Dt: 26.04.2018.

5) G.O.No. MWD 120 WES 2016, Dt: 04.09.2018.

Preamble :

The Karnataka State Board of Wakf, Bengaluru which was constituted as per the Government Notification No. MWD 237 WES 2011, dated:-20-08-2011 for a period of five years had expired on 19-08-2016. Due to Amendment to the Karnataka Wakf Rules 1997 and also General Election of Legislative Assembly held recently, the period of Administrator to the Wakf Board has been extended from time to time.

The present term of the Administrator of the Karnataka State Board of Wakf which was extended for a period of Six months from 19.08.2018 vide Government Order read at (5) above has also expired on 04.03.2019.

With a view to re-constitute the regular Wakf Board, Government has appointed the Regional Commissioner, Bengaluru Division Bengaluru vide Government Notification MWD 30 WES 2017 (P) dated: 28.07.2018 as Electoral Registration Officer to elect the four categories of Electoral Rolls as per Section 14(1) (b) (i to iv) of the Wakf (Amendment) Act 2013. The Regional Commissioner, Bengaluru Division and Electoral Registration Officer has completed the process of Election of the Electoral Rolls of four Categories viz., MPs/MLAs/MLCs/Bar Council and Muthawallies on 11-03-2019 and issued declaration of result of Electoral College on 11-03-2019. In the meanwhile election code of conduct of the ensuing Lok Sabha Election has come into force in the State with effect from 10-03-2019.

Apart from the Category of Elected Muslim Members of Electoral College, nomination from the remaining Muslims Members in the Category of Scholars, Social worker and one Officer from the State Government will have to be nominated by Government. In view of the present Election Code of Conduct, the term of the Administrator to the Karnataka State Board of Wakf will have to be extended further for a period of Six months with effect from 05-03-2019 or till the composition of the Regular Wakf Board whichever is earlier.

Hence the Order,ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ೪೨೯ Government Order No: MWD 120 WES 2016, Bengaluru dt:05-04-2019. In view of the above facts, the Government is pleased to extend the term of the appointment of Sri A.B.Ibrahim ias., Managing Director, Karnataka Urban Infrastructure Development and Finance Corporation (KUIDFC) Bengaluru as Administrator of the Karnataka State Board of Wakf with effect from 05-03-2019 for a period of Six months or till the composition of regular Wakf Board, whichever is earlier and until further orders.

PR-180

By Order and in the Name of the Governor of Karnataka, SC-200

S. EJAS PASHA

Under Secretary to Government,(I/c)

Minority Welfare, Haj & Wakf Department.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ವಿಷಯ : ಫಾರ್ಮಸಿ ಕಾಲೇಜು/ ಕೋರ್ಸ್‌ಗಳನ್ನು ಪ್ರಾರಂಭಿಸಲು ಅಥವಾ ಪ್ರವೇಶ ಮಿತಿ ಹೆಚ್ಚಿಸಲು ಸರ್ಕಾರದ ಅನುಮತಿ ನೀಡುವ ಕುರಿತು.

ಓದಲಾಗಿದೆ : ಸರ್ಕಾರದ ಆದೇಶ ಸಂಖ್ಯೆ:ಆಕುಕ 75 ಪಿಟಿಡಿ 2018, ದಿನಾಂಕ: 30.01.2019.

ಪ್ರಸ್ತಾವನೆ :

ಮೇಲೆ ಓದಲಾದ ಸರ್ಕಾರದ ಆದೇಶದಲ್ಲಿ, ರಾಜ್ಯದಲ್ಲಿನ ವಿವಿಧ ಫಾರ್ಮಸಿ ಕೋರ್ಸ್‌ಗಳನ್ನು ಪ್ರಾರಂಭಿಸಲು/ಪ್ರವೇಶಮಿತಿ ಹೆಚ್ಚಿಸಲು ಅನುಮತಿ ನೀಡುವ ಕುರಿತಂತೆ ಅರ್ಜಿ ಸ್ವೀಕಾರ ಮತ್ತು ಪ್ರಕ್ರಿಯೆ ಬಗ್ಗೆ ಕಾಲನಿಗದಿ ಹಾಗೂ ಫಾರ್ಮಸಿ ಶಿಕ್ಷಣ ಸಂಸ್ಥೆಗಳು ಸಲ್ಲಿಸಬೇಕಾದ ಅರ್ಜಿ ನಮೂನೆ, ಪರಿಶೀಲನಾ ಪಟ್ಟಿ ಮತ್ತು ಪರಿವೀಕ್ಷಣಾ ನಮೂನೆ ಹಾಗೂ ಬೋಧಕ ಹುದ್ದೆಗಳ ಶೈಕ್ಷಣಿಕ ಅರ್ಹತೆ ಕುರಿತು ಮಾನದಂಡಗಳನ್ನು ರಚಿಸಿದೆ.

ಪ್ರಸ್ತುತ ಸರ್ಕಾರವು ಫಾರ್ಮಸಿ ಕಾಲೇಜು/ ಕೋರ್ಸ್‌ಗಳನ್ನು ಪ್ರಾರಂಭಿಸಲು ಅಥವಾ ಪ್ರವೇಶ ಮಿತಿ ಹೆಚ್ಚಿಸಲು ಸರ್ಕಾರದ ಅನುಮತಿ ನೀಡುವ ಬಗ್ಗೆ ನಿರ್ಧರಿಸಿ, ಶಿಫಾರಸು ಮಾಡಲು ಸಮಿತಿಯನ್ನು ರಚಿಸಲು ನಿರ್ಧರಿಸಿದೆ. ಅದರಂತೆ ಈ ಆದೇಶ

ಸರ್ಕಾರಿ ಆದೇಶ ಸಂಖ್ಯೆ: ಆಕುಕ 225 ಪಿಟಿಡಿ 2018, ಬೆಂಗಳೂರು ದಿನಾಂಕ : 03.04.2019.

ಮೇಲೆ ಓದಲಾದ ಪ್ರಸ್ತಾವನೆಯ ಹಿನ್ನೆಲೆಯಲ್ಲಿ, ಸರ್ಕಾರವು, ಫಾರ್ಮಸಿ ಕಾಲೇಜು/ ಕೋರ್ಸ್‌ಗಳನ್ನು ಪ್ರಾರಂಭಿಸಲು ಅಥವಾ ಪ್ರವೇಶ ಮಿತಿ ಹೆಚ್ಚಿಸಲು ಸರ್ಕಾರದ ಅನುಮತಿ ನೀಡುವ ಬಗ್ಗೆ ನಿರ್ಧರಿಸಿ, ಶಿಫಾರಸು ಮಾಡಲು ಈ ಕೆಳಗಿನ ಅಧಿಕಾರಿಗಳನ್ನೊಳಗೊಂಡಂತೆ ಸಮಿತಿಯನ್ನು ರಚಿಸಿ

ಕ್ರ.ಸಂ ಹ ುದ್ದೆ/ಪದನಾಮ ಸ್ಥಾನ
1 ಸ ರ್ಕಾರದ ಪ್ರಧಾನ ಕಾರ್ಯದರ್ಶಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಅಧ್ಯಕ್ಷರು
2 ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು. ಸ ದ ಸ ್ಯರು
3 ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು. ಸ ದ ಸ ್ಯರು
4 ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ. ಸ ದ ಸ ್ಯ ಕಾರ್ಯದರ್ಶಿ
5 ಪ್ರಾಚಾರ್ಯರು, ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಬೆಂಗಳೂರು. ಸ ದ ಸ ್ಯರು
6 ಆಂತರಿಕ ಆರ್ಥಿಕ ಸಲಹೆಗಾರರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಸ ದ ಸ ್ಯರು
7 ಸ ಂಬಂಧಿಸಿದ ಸರ್ಕಾರದ ಉಪ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಸ ದ ಸ ್ಯರು.

PR-181

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-50

ಬಿ. ಕಮಲಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.

(ಭಾ.ವೈ.ಪ ಮತ್ತು ಸಮನ್ವಯ)

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ವಿಷಯ : ದೊಡ್ಡಬಳ್ಳಾಪುರ ತಾಲ್ಲೂಕು, ಮಧುರೆ ಹೋಬಳಿ ಕೋಡಿಹಳ್ಳಿ ಗ್ರಾಮದ ಸರ್ವೇ ಸಂಖ್ಯೆ: 101ರ 45 ಎಕರೆ ವಿಸ್ತೀರ್ಣವುಳ್ಳ ಜಮೀನಿನ ಪೈಕಿ 10 ಎಕರೆ ಭೂಮಿಯನ್ನು ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ರವರಿಗೆ ಭೋಗ್ಯ/ಗುತ್ತಿಗೆ ಆಧಾರದಲ್ಲಿ ಒದಗಿಸುವ ಬಗ್ಗೆ ಷರತ್ತು ಹಾಗೂ ನಿಬಂಧನೆಗಳನ್ನು ವಿಧಿಸುವ ಕುರಿತು.

ಓದಲಾಗಿದೆ : 1) ಸರ್ಕಾರದ ಆದೇಶ ಸಂಖ್ಯೆ: ಪಸಂಮೀ 05 ಅಮಭೂ 2005, ದಿನಾಂಕ: 26-03-2018.

2) ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರ ಪತ್ರ ಸಂಖ್ಯೆ:ಆಪಸಂ/ ಕ್ಷೇತ್ರ/ ಚಿತ್ರನಗರಿ/ ವಿವ-33/ 2012-13, ದಿನಾಂಕ: 05-02-2019.

೪೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ಭಾಗ ೧

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1) ರಲ್ಲಿ ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ (ನೃತ್ಯ ಗ್ರಾಮ), ಹೆಸರಘಟ್ಟ ಇವರಿಗೆ ಈಗಾಗಲೇ ಉಪಗುತ್ತಿಗೆ ಅವಧಿ ಆಧಾರದ ಮೇಲೆ ನೀಡಲಾದ ಹತ್ತು ಎಕರೆ ಜಮೀನಿನ ಗುತ್ತಿಗೆ ಅವಧಿಯನ್ನು ಮೂವತ್ತು ವರ್ಷಗಳ ಅವಧಿಗೆ ವಾರ್ಷಿಕ ಪ್ರತಿ ಎಕರೆಗೆ ರೂ. 10,000/- ದಂತೆ ನಿಗದಿಪಡಿಸಿ ಪ್ರತ್ಯೇಕ ಷರತ್ತು ಹಾಗೂ ನಿಬಂಧನೆಗಳನ್ನು ಹೊರಡಿಸುವ ಆಧಾರದ ಮೇಲೆ ಮುಂದುವರೆಸಿ ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರಲ್ಲಿ ಆಯುಕ್ತರು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಇವರು ದೊಡ್ಡಬಳ್ಳಾಪುರ ತಾಲ್ಲೂಕು, ಮಧುರೆ ಹೋಬಳಿ ಕೋಡಿಹಳ್ಳಿ ಗ್ರಾಮದ ಸರ್ವೇ ಸಂಖ್ಯೆ:101ರ 45 ಎಕರೆ ವಿಸ್ತೀರ್ಣವುಳ್ಳ ಜಮೀನಿನ ಪೈಕಿ 10 ಎಕರೆ ಭೂಮಿಯನ್ನು ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಹೆಸರಘಟ್ಟರವರಿಗೆ ಉಪಗುತ್ತಿಗೆ ಆಧಾರದ ಮೇಲೆ ನೀಡಲಾದ 10 ಎಕರೆ ಜಮೀನಿಗೆ ಗುತ್ತಿಗೆ ಅವಧಿಯನ್ನು 30 ವರ್ಷಗಳ ಅವಧಿಗೆ ವಾರ್ಷಿಕ ಪ್ರತಿ ಎಕರೆಗೆ 10,000/- ದಂತೆ ನಿಗಧಿಪಡಿಸಿದ್ದು, ಈ ಕುರಿತು ವಿಧಿಸಬಹುದಾದ ಷರತ್ತು ಮತ್ತು ನಿಬಂಧನೆಗಳನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಈ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿದ ಸರ್ಕಾರವು, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಇವರು ದೊಡ್ಡಬಳ್ಳಾಪುರ ತಾಲ್ಲೂಕು, ಮಧುರೆ ಹೋಬಳಿ ಕೋಡಿಹಳ್ಳಿ ಗ್ರಾಮದ ಸರ್ವೇ ಸಂಖ್ಯೆ: 101ರ 45 ಎಕರೆ ವಿಸ್ತೀರ್ಣವುಳ್ಳ ಜಮೀನಿನ ಪೈಕಿ 10 ಎಕರೆ ಭೂಮಿಯನ್ನು ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಹೆಸರಘಟ್ಟರವರಿಗೆ ಉಪಗುತ್ತಿಗೆ ಆಧಾರದ ಮೇಲೆ ನೀಡಲಾದ 10 ಎಕರೆ ಜಮೀನಿಗೆ ಗುತ್ತಿಗೆ ಅವಧಿಯನ್ನು 30 ವರ್ಷಗಳ ಅವಧಿಗೆ ವಾರ್ಷಿಕ ಪ್ರತಿ ಎಕರೆಗೆ 10,000/- ದಂತೆ ನೀಡುವುದಕ್ಕೆ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಲು ತೀರ್ಮಾನಿಸಿದೆ.

ಅದರಂತೆ, ಈ ಕೆಳಕಂಡ ಆದೇಶ.

ಸರ್ಕಾರಿ ಆದೇಶ ಸಂಖ್ಯೆ : ಪಸಂಮೀ 05 ಅಮಭೂ 2005, ಬೆಂಗಳೂರು, ದಿನಾಂಕ: 05-04-2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಇವರು ದೊಡ್ಡಬಳ್ಳಾಪುರ ತಾಲ್ಲೂಕು, ಮಧುರೆ ಹೋಬಳಿ ಕೋಡಿಹಳ್ಳಿ ಗ್ರಾಮದ ಸರ್ವೇ ಸಂಖ್ಯೆ101ರ 45 ಎಕರೆ ವಿಸ್ತೀರ್ಣವುಳ್ಳ ಜಮೀನಿನ ಪೈಕಿ 10 ಎಕರೆ ಭೂಮಿಯನ್ನು ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಹೆಸರಘಟ್ಟರವರಿಗೆ ಉಪಗುತ್ತಿಗೆ ಆಧಾರದ ಮೇಲೆ ನೀಡಲಾದ 10 ಎಕರೆ ಜಮೀನಿಗೆ ಗುತ್ತಿಗೆ ಅವಧಿಯನ್ನು 30 ವರ್ಷಗಳ ಅವಧಿಗೆ ವಾರ್ಷಿಕ ಪ್ರತಿ ಎಕರೆಗೆ 10,000/- ದಂತೆ ನೀಡುವುದಕ್ಕೆ ಈ ಕೆಳಕಂಡ ಷರತ್ತು ಮತ್ತು ನಿಬಂಧನೆಗಳನ್ನು ವಿಧಿಸಿ ಆದೇಶಿಸಲಾಗಿದೆ.

1. ಜಮೀನಿನ ಗುತ್ತಿಗೆಯು ದಿನಾಂಕ: 20-11-2017 ರಿಂದ ಅನ್ವಯವಾಗುವಂತೆ 30 ವರ್ಷಗಳ ಅವಧಿಗೆ ಮಾತ್ರ ಅನ್ವಯವಾಗುತ್ತದೆ.

2. ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆಯವರು ಈ ಆದೇಶ ಹೊರಡಿಸಿದ 30 ದಿನಗಳೊಳಗಾಗಿ ಆಯುಕ್ತರು, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ, ಬೆಂಗಳೂರು ಇವರೊಡನೆ ನೊಂದಾಯಿತ ಜಮೀನು ಗುತ್ತಿಗೆ ಕರಾರು ಪತ್ರ ಮಾಡಿಕೊಳ್ಳತಕ್ಕದ್ದು.

3. ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆಯವರು ಸದರಿ ಜಮೀನನ್ನು ಭಾರತೀಯ ನೃತ್ಯಗಳ ಅಭಿವೃದ್ಧಿಗಾಗಿ ಮಾತ್ರ ಉಪಯೋಗಿಸುವುದು ಮತ್ತು ಬೇರೆ ಯಾವುದೇ ಉದ್ದೇಶಗಳಿಗೆ ಉಪಯೋಗಿಸತಕ್ಕದ್ದಲ್ಲ.

4. ವಾರ್ಷಿಕ ಬಾಡಿಗೆ ಮೊತ್ತ ಪ್ರತಿ ಎಕರೆ ಜಮೀನಿಗೆ ರೂ. 10.000/- ಗಳನ್ನು ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರು ಪ್ರತಿ ವರ್ಷ ಏಪ್ರಿಲ್ ಮಾಹೆಯಲ್ಲಿ ಮುಂಗಡವಾಗಿ ಪಾವತಿಸುವುದು. ತಪ್ಪಿದ್ದಲ್ಲಿ ಪ್ರತಿ ಮಾಹೆ ವಿಳಂಬಕ್ಕೆ 24% ದಂಡ ವಿಧಿಸಲಾಗುವುದು ಮತ್ತು ಒಂದು ವೇಳೆ ಮೂರು ತಿಂಗಳುಗಳಿಗಿಂತ ಹೆಚ್ಚಿಗೆ ವಿಳಂಬವಾದಲ್ಲಿ ಒಂದು ತಿಂಗಳು ನೋಟೀಸ್‌ನೊಂದಿಗೆ ಗುತ್ತಿಗೆಯನ್ನು ರದ್ದುಪಡಿಸಲಾಗುವುದು.

5. ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆಯವರು ಹಿಂದಿನ ಕರ್ನಾಟಕ ಚಲನಚಿತ್ರ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ನೀಡಬೇಕಾಗಿರುವ ಎಲ್ಲ ಬಾಕಿ ಹಣವನ್ನು ಉಪನಿರ್ದೇಶಕರು, ಜಾನುವಾರು ಸಂವರ್ಧನಾ ಕ್ಷೇತ್ರ ಹೆಸರಘಟ್ಟ, ಬೆಂಗಳೂರು-89 ಇವರ ಮೂಲಕ ಪಶುಪಾಲನಾ ಇಲಾಖೆಗೆ ಗುತ್ತಿಗೆ ಕರಾರು ಪತ್ರ ನೊಂದಾಯಿಸುವ ಪೂರ್ವದಲ್ಲಿ ಪಾವತಿಸಿಬೇಕು ಬೇ ಬಾಕಿ ದೃಡೀಕರಣ ಪತ್ರ ಪಡೆಯುವುದು.

6. ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರು ಗುತ್ತಿಗೆ ಪಡೆದಿರುವ ಜಮೀನನ್ನು ಅಥವಾ ಸಂಸ್ಥೆಯ ಉದ್ದೇಶ ಈಡೇರಿಸಲು ಆವರಣ/ಪ್ರದೇಶದಲ್ಲಿ ನಿರ್ಮಿಸಿರುವ ಯಾವುದೇ ಕಟ್ಟಡ ವಸಾಹತುಗಳನ್ನಾಗಲಿ, ಪೂರ್ಣವಾಗಿಯಾಗಲಿ ಅಥವಾ ಭಾಗಶಃವಾಗಿಯಾಗಲಿ ಯಾರಿಗೂ ವರ್ಗಾವಣೆ ಮಾಡುವುದಾಗಲಿ, ಉಪ-ಗುತ್ತಿಗೆ ನೀಡುವುದಾಗಲಿ ಅಥವಾ ಪರಭಾರೆ ಮಾಡುವುದಾಗಲಿ ಮಾಡಬಾರದು. ಒಂದು ವೇಳೆ ವರ್ಗಾವಣೆ/ಉಪ ಗುತ್ತಿಗೆ ಮಾಡಿದ್ದಲ್ಲಿ ಗುತ್ತಿಗೆಯ ಷರತ್ತುಗಳನ್ನು ಉಲ್ಲಂಘಿಸಿದ ಕಾರಣ ತಂತಾನೆ ರದ್ದಾಗುವುದು.

7. ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರು ಸದರಿ ಆವರಣ/ಪ್ರದೇಶದಲ್ಲಿ ಈವರೆಗೆ ನಿರ್ಮಿಸಿರುವ ಎಲ್ಲಾ ಕಟ್ಟಡ ವಸಾಹತುಗಳ ಮತ್ತು ಶಾಶ್ವತ/ಅರೆ ಶಾಶ್ವತ ಮೂಲ ಸೌಕರ್ಯಗಳ ವಿವರಗಳನ್ನು ಗುತ್ತಿಗೆ ಕರಾರು ಪತ್ರ ನೊಂದಣಿ ಮಾಡುವ ಪೂರ್ವದಲ್ಲಿ ಉಪನಿರ್ದೇಶಕರು, ಜಾನುವಾರು ಸಂವರ್ಧನಾ ಕ್ಷೇತ್ರ, ಹೆಸರಘಟ್ಟ ಇವರ ಮೂಲಕ ಇಲಾಖೆಗೆ ಸಲ್ಲಿಸುವುದು. ಓಡಿಸ್ಸಿ ಡ್ಯಾನ್ಸ್ ಸೆಂಟರ್ ಯಾವುದೇ ಹೊಸ ಶಾಶ್ವತ /ಅರೆ ಶಾಶ್ವತ ಮೂಲ ಸೌಕರ್ಯ/ಕಟ್ಟಡಗಳನ್ನು ನಿರ್ಮಿಸುವ ಪೂರ್ವದಲ್ಲಿ ಈ ಇಲಾಖೆಯ ಪೂರ್ವಾನುಮತಿ ಪಡೆಯತಕ್ಕದ್ದು.

8. ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರು ಜಮೀನಿನ ಆವರಣ/ಪ್ರದೇಶವನ್ನು ಸ್ವಚ್ಛವಾಗಿ ಹಾಗೂ ಸುವ್ಯವಸ್ಥೆಯಲ್ಲಿ ಇಡತಕ್ಕದ್ದು ಮತ್ತು ಪಶು ಸಂಗೋಪನಾ ಇಲಾಖೆಯ ಲಿಖಿತ ಪೂರ್ವಾನುಮತಿ ಇಲ್ಲದೆ ಹೊಸ ಕಟ್ಟಡ/ವಸಾಹತುಗಳನ್ನು ನಿರ್ಮಿಸುವುದಾಗಲಿ ಅಥವಾ ಭೂ ಅಭಿವೃದ್ಧಿ ಪಡಿಸುವುದಾಗಲಿ ಮಾಡಕೂಡದು.

9. ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರು ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಪಶುಪಾಲನಾ ಇಲಾಖೆಯ ಕ್ಷೇತ್ರಗಳಲ್ಲಿನ ಜಾನುವಾರುಗಳ ಜೈವಿಕ ಸಂರಕ್ಷಣೆ ತತ್ವಗಳಿಗೆ ಧಕ್ಕೆ ಉಂಟು ಮಾಡುವ ಯಾವುದೇ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಾರದು.

10. ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರು ಯಾವುದೇ ಸಭೆ/ ಉತ್ಸವ / ಸಮಾರಂಭ/ ಇನ್ನಿತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯುವುದರ ಜೊತೆಗೆ ಜಾನುವಾರುಗಳ ಜೈವಿಕ-ಸಂರಕ್ಷಣೆ ಹಿತದೃಷ್ಟಿಯಿಂದ ಪಶು ಸಂಗೋಪನಾ ಇಲಾಖೆಯ ಪೂರ್ವಾನುಮತಿ ತೆಗೆದುಕೊಳ್ಳುವುದು.

11. ಪಶುಪಾಲನಾ ಇಲಾಖೆಯ ನಿಯೋಜಿತ ಅಧಿಕಾರಿಗಳು ಗುತ್ತಿಗೆ ನೀಡಿರುವ ಪ್ರದೇಶದಲ್ಲಿ ಪ್ರವೇಶಿಸಿ ಗುತ್ತಿಗೆ ಒಪ್ಪಂದದ ಯಾವುದೇ ಷರತ್ತು ಮತ್ತು ನಿಬಂಧನೆಗಳ ಉಲ್ಲಂಘನೆ ಆಗಿರಬಹುದಾದ ಕುರಿತು ಪರಿಶೀಲನೆ ನಡೆಸಲು ಹಕ್ಕುಳ್ಳವರಾಗಿರುತ್ತಾರೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ೪೩೧

12. ಸರ್ಕಾರವು 30 ವರ್ಷಗಳ ಗುತ್ತಿಗೆ ಅವಧಿಯ ಯಾವುದೇ ಹಂತದಲ್ಲಿ 30 ದಿನಗಳ ನೋಟಿಸ್ ನೀಡುವ ಮೂಲಕ ಸಾರ್ವಜನಿಕ ಹಿತದೃಷ್ಟಿಯಲ್ಲಿ ಗುತ್ತಿಗೆಯನ್ನು ರದ್ದುಪಡಿಸುವ ಹಕ್ಕನ್ನು ಕಾಯ್ದಿರಿಸಿದೆ.

13. ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರಿಂದ ಈ ಒಪ್ಪಂದದಲ್ಲಿ ಅಳವಡಿಸಿರುವ ಯಾವುದೇ ಷರತ್ತು ಮತ್ತು ನಿಭಂದನೆಗಳನ್ನು ಉಲ್ಲಂಘನೆ ಆದಲ್ಲಿ ಪಶು ಸಂಗೋಪನಾ ಇಲಾಖೆಯು 30 ದಿನಗಳ ನೋಟಿಸ್ ನೀಡುವ ಮೂಲಕ ಗುತ್ತಿಗೆಯನ್ನು ರದ್ದುಗೊಳಿಸಿ ಮುಕ್ತಾಯಗೊಳಿಸಲಾಗುವುದು.

14. ಗುತ್ತಿಗೆ ಅವಧಿಯ ಸಾಮಾನ್ಯ ಮುಕ್ತಾಯದ ನಂತರ ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರು ಸಲ್ಲಿಸುವ ಗುತ್ತಿಗೆ ನವೀಕರಣ ಮನವಿಯ ಮೇರೆಗೆ ಗುತ್ತಿಗೆ ನವೀಕರಣ ಮಾಡುವ ಹಕ್ಕನ್ನು ಸರ್ಕಾರವು ಕಾಯ್ದಿರಿಸಿದೆ.

15. ಗುತ್ತಿಗೆ ಅವಧಿಯು ಸಾಮಾನ್ಯವಾಗಿ ಮುಕ್ತಾಯವಾದ ನಂತರ ಅಥವಾ ಬೇರೆ ರೀತಿಯಲ್ಲಿ ಮುಕ್ತಾಯವಾದ ತರುವಾಯ ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರು ಗುತ್ತಿಗೆ ಜಮೀನಿನಲ್ಲಿ ನಿರ್ಮಿಸಿರುವ ಎಲ್ಲಾ ಕಟ್ಟಡ ವಸಾಹತುಗಳನ್ನು ಮತ್ತು ಮೂಲಭೂತ ಸೌಕರ್ಯಗಳನ್ನು ಅವುಗಳಲ್ಲಿರುವ ಚರಾಸ್ತಿಗಳನ್ನು ಖಾಲಿ ಮಾಡುವ ಮೂಲಕ 30 ದಿನಗಳೊಳಗಾಗಿ ಎಲ್ಲಾ ಋುಣಗಳಿಂದ ಮುಕ್ತವಾಗಿ ಸರ್ಕಾರದ ಸ್ವಾಧೀನಕ್ಕೆ ನೀಡತಕ್ಕದ್ದು ಮತ್ತು ಎಲ್ಲಾ ಅಂತಹ ಪ್ರಸಂಗಗಳಲ್ಲಿ ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರು ಯಾವುದೇ ಪರಿಹಾರಕ್ಕೆ ಅರ್ಹರಾಗುವುದಿಲ್ಲ.

16. ಗುತ್ತಿಗೆ ಅವಧಿ ಸಾಮಾನ್ಯವಾಗಿ ಅಥವಾ ಬೇರೆ ರೀತಿಯಿಂದ ಮುಕ್ತಾಯದ ನಂತರ ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರು ಗುತ್ತಿಗೆ ಜಮೀನನ್ನು ಅದರಲ್ಲಿ ನಿರ್ಮಿಸಿರುವ ಕಟ್ಟಡ ವಸಾಹತುಗಳನ್ನು ಮತ್ತು ಎಲ್ಲಾ ಮೂಲಭೂತ ಸೌಕರ್ಯಗಳನ್ನು 30 ದಿನಗಳಲ್ಲಿ ಸರ್ಕಾರದ ಸ್ವಾಧೀನಕ್ಕೆ ನೀಡಲು ವಿಫಲವಾದಲ್ಲಿ ಆಯುಕ್ತರು, ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ಇವರು ಯಾವುದೇ ನೋಟಿಸ್ ನೀಡದೇ ಸದರಿ ಜಮೀನನ್ನು ಅದರಲ್ಲಿರುವ ಎಲ್ಲಾ ಕಟ್ಟಡ ಹಾಗೂ ಮೂಲಭೂತ ಸೌಕರ್ಯಗಳೊಂದಿಗೆ ಪಶು ಸಂಗೋಪನಾ ಇಲಾಖೆಯ ಸ್ವಾಧೀನಕ್ಕೆ ಪಡೆದುಕೊಳ್ಳಲು ಹಕ್ಕುಳ್ಳವರಾಗಿರುತ್ತಾರೆ. ಅಂತಹ ಪ್ರಸಂಗದಲ್ಲಿ ಓಡಿಸ್ಸಿ ಡ್ಯಾನ್ಸ್ ಸೆಂಟರ್ ಟ್ರಸ್ಟ್ ಸಂಸ್ಥೆರವರ ಚರಾಸ್ತಿಗಳಿಗೆ ಯಾವುದೇ ನಷ್ಟ/ಹಾನಿ ಆದಲ್ಲಿ ಅಥವಾ ಅವುಗಳ ಲೆಕ್ಕಕ್ಕೆ ಸರ್ಕಾರವಾಗಲಿ ಅಥವಾ ಇಲಾಖೆಯಾಗಲಿ ಅಥವಾ ಅಧಿಕಾರಿಗಳಾಗಲಿ ಯಾವುದೇ ರೀತಿಯಲ್ಲಿ ಜವಾಬ್ದಾರ ಆಗುವುದಿಲ್ಲ.

17. ಸದರಿ ಕರಾರು ಒಪ್ಪಂದಕ್ಕೆ ಸಂಬಂಧಿಸಿದಂತೆ, ಉದ್ಭವಿಸುವ ಯಾವುದೇ ವಿವಾದಗಳು ಪ್ರದೇಶ ವ್ಯಾಪ್ತಿಯ ಯುಕ್ತ ನ್ಯಾಯಾಧೀಕರಣಕ್ಕೆ ಮಾತ್ರ ಸಂಬಂಧಿಸಿರುತ್ತದೆ.

PR-182

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-100

ಟಿ. ಹನುಮಂತೇಗೌಡ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ.

(ಪಶುಸಂಗೋಪನೆ)

ನಗರಾಭಿವೃದ್ಧಿ ಸಚಿವಾಲಯ

ವಿಷಯ : ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ಪ್ರಸ್ತಾಪಿಸಿರುವ ಕೂಸನೂರ ಗ್ರಾಮದ ಸರ್ವೆ ನಂ.123(ಅ), 123(ಆ), 128/1, 128/2, 129, 130/1, 130/2, 130/3, 131/1, 131/2, 131/3, 131/4, 131/5, 131/8, 131/10, 131/11 ಮತ್ತು 131/12ರ ಒಟ್ಟು ವಿಸ್ತೀರ್ಣ 88 ಎಕರೆ 31 ಗುಂಟೆ ಜಮೀನಿನಲ್ಲಿ ವಸತಿ ಯೋಜನೆ ಕೈಗೊಳ್ಳಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 18(3) ರನ್ವಯ ರೂ.94.80 ಕೋಟಿಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಬಗ್ಗೆ.

ಓದಲಾಗಿದೆ : 1) ಆಯುಕ್ತರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಪತ್ರ ಸಂಖ್ಯೆ: ನಪ್ರಾಕ/ಭೂಸ್ವಾ/4/2014-15, ದಿನಾಂಕ: 16-04-2016.

2) ಸರ್ಕಾರದ ಪತ್ರ ಸಂಖ್ಯೆ: ನಅಇ 2 ಗುಅಪ್ರಾ 2016, ದಿನಾಂಕ: 14-12-2016.

3) ಆಯುಕ್ತರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಇವರ ಪತ್ರ ಸಂಖ್ಯೆ:ನಪ್ರಾಕ/ತಾಂತ್ರಿಕ/ಕುಸನೂರ/ ನೂ.ಯೋಜನೆ/ 2016-17, ದಿನಾಂಕ: 22-05-2017.

4) ಆಯುಕ್ತರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಇವರ ಪತ್ರ ಸಂಖ್ಯೆ:ನಪ್ರಾಕ/ಭೂಸ್ವಾ/4/2014-15/ 1465, ದಿನಾಂಕ: 19-07-2018.

5) ಸರ್ಕಾರದ ಆದೇಶ ಸಂಖ್ಯೆ: ನಅಇ 135 ಗುಅಪ್ರಾ 2017, ದಿನಾಂಕ: 17-08-2017.

6) ಆಯುಕ್ತರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಇವರ ಪತ್ರ ಸಂಖ್ಯೆ: ನಪ್ರಾಕ/ಭೂಸ್ವಾ/4/2014-15, ದಿನಾಂಕ: 24-02-2018.

7) ಆಯುಕ್ತರು, ಕಲಬುರಗಿ ನಗರಾಭಿವೃದ್ಧಿ, ಪ್ರಾಧಿಕಾರ ಇವರ ಪತ್ರ ಸಂಖ್ಯೆ:ನಪ್ರಾಕ/ತಾಂತ್ರಿಕ/ಕುಸನೂರ/ ನೂ.ಯೋಜನೆ/2016-17/1053, ದಿನಾಂಕ: 14-12-2018.

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ದಿನಾಂಕ: 16-04-2016ರ ಪತ್ರದಲ್ಲಿ ಆಯುಕ್ತರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಇವರು ಕುಸನೂರು ಗ್ರಾಮದ ಸರ್ವೆ ನಂ.123(ಅ), 123(ಆ), 128/1, 128/2, 129, 130/1, 130/2, 130/3, 131/1, 131/2, 131/3, 131/4, 131/5, 131/8, 131/10, 131/11 ಮತ್ತು 131/12ರ ಒಟ್ಟು 90 ಎಕರೆ 17 ಗುಂಟೆ ಜಮೀನಿನಲ್ಲಿ ವಸತಿ ಯೋಜನೆಯನ್ನು ಕೈಗೊಳ್ಳಲು ಪ್ರಸ್ತಾಪಿಸಿ, ಸದರಿ ಯೋಜನೆಯನ್ನು ಕೈಗೊಳ್ಳಲು ಕರ್ನಾಟಕ೪೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ಭಾಗ ೧ ನಗರಾಭಿವೃದ್ಧಿ ಯೋಜನೆಗಳ ಕಾಯ್ದೆ, 1987ರ ಕಲಂ 15(1)(ಬಿ) ರನ್ವಯ ಸರ್ಕಾರದ ಪೂರ್ವಾನುಮೋದನೆಯನ್ನು ಕೋರಿರುತ್ತಾರೆ. ಅದರಂತೆ ಮೇಲೆ (2)ರಲ್ಲಿ ಓದಲಾದ ದಿನಾಂಕ: 14-12-2016ರ ಸರ್ಕಾರದ ಪತ್ರದಲ್ಲಿ ಪ್ರಸ್ತಾಪಿತ ಯೋಜನೆಯನ್ನು ಕೈಗೊಳ್ಳಲು ಕೆಲವು ಷರತ್ತುಗಳನ್ನು ವಿಧಿಸಿ ಸರ್ಕಾರದ ಪೂರ್ವಾನುಮೋದನೆಯನ್ನು ನೀಡಲಾಗಿದೆ.

ಅದರಂತೆ ಮೇಲೆ (3) & (4)ರಲ್ಲಿ ಓದಲಾದ ದಿನಾಂಕ: 22-05-2017 ಮತ್ತು 19-01-2018ರ ಪತ್ರಗಳಲ್ಲಿ ಆಯುಕ್ತರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಇವರು ಪ್ರಸ್ತಾಪಿತ ವಸತಿ ಯೋಜನೆ ಕೈಗೊಳ್ಳಲು ಯೋಜನಾ ವರದಿಯನ್ನು ಸಲ್ಲಿಸಿ, ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ದಿನಾಂಕ: 04-01-2018 ರಂದು ಭೂ ಬೆಲೆ ನಿರ್ಧರಣಾ ಸಲಹಾ ಸಮಿತಿಯ ತೀರ್ಮಾನದಂತೆ ಭೂಸ್ವಾಧೀನ ವೆಚ್ಚ ಪ್ರತಿ ಎಕರೆಗೆ ರೂ. 49 ಲಕ್ಷಗಳಂತೆ ಒಟ್ಟು ಭೂಸ್ವಾಧೀನ ವೆಚ್ಚ ರೂ. 4430.83 ಲಕ್ಷಗಳು ಮತ್ತು ಅಭಿವೃದ್ಧಿ ವೆಚ್ಚ ರೂ. 4810.00 ಲಕ್ಷಗಳೆಂದು ಪ್ರಸ್ತಾಪಿಸಿ, ಯೋಜನೆಯನ್ನು ಕೈಗೊಳ್ಳುವ ಬಗ್ಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 17 ರನ್ವಯ ಪ್ರಾಧಿಕಾರವು ಕ್ರಮ ಜರುಗಿಸಿದ ನಂತರ ಕಲಂ 18(3) ರನ್ವಯ ಸರ್ಕಾರದ ಅಂತಿಮ ಅನುಮೋದನೆ ಕೋರಿರುತ್ತಾರೆ.

ಮುಂದುವರೆದು, ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಕಲಬುರಗಿ ಇವರು ಪ್ರತ್ಯೇಕ ಪ್ರಸ್ತಾವನೆ ಸಲ್ಲಿಸಿ, ಸದರಿ ಯೋಜನೆಯನ್ನು ಕೈಗೊಳ್ಳಲು ಪ್ರಸ್ತಾಪಿತ ಯೋಜನೆಯ ಜಮೀನುಗಳನ್ನು ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆಗೆ ಅನುಮೋದನೆ ಕೋರಿರುತ್ತಾರೆ. ಸದರಿ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿ ಮೇಲೆ (5)ರಲ್ಲಿ ಓದಲಾದ ದಿನಾಂಕ: 17-08-2017 ರ ಆದೇಶದಲ್ಲಿ 90 ಎಕರೆ 17 ಗುಂಟೆ ಪೈಕಿ 1 ಎಕರೆ 26 ಗುಂಟೆ ಬಿ-ಖರಾಬು ಹೊರತು ಪಡಿಸಿ ಉಳಿದ 88 ಎಕರೆ 31 ಗುಂಟೆ ಜಮೀನನ್ನು ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಉಪಯೋಗ ಬದಲಾವಣೆ ಮಾಡಲು ಕೆಲವು ಷರತ್ತುಗಳಿಗೊಳಪಡಿಸಿ ಅನುಮೋದನೆ ನೀಡಲಾಗಿದೆ.

ಮೇಲೆ (6) ಮತ್ತು (7) ರಲ್ಲಿ, ಓದಲಾದ ದಿನಾಂಕ: 24-02-2018 ಮತ್ತು 14-12-2018ರ ಪತ್ರಗಳಲ್ಲಿ ಪ್ರಾಧಿಕಾರದ ಆಯುಕ್ತರು ಈ ಯೋಜನೆ ಸಂಬಂಧ ಬೇಡಿಕೆ ಸಮೀಕ್ಷೆ ನಡೆಸಲಾಗಿದ್ದು, 1466 ಪ್ರಸ್ತಾಪಿತ ನಿವೇಶನಗಳಿಗೆ 12001 ಸಾರ್ವಜನಿಕರಿಂದ ಅರ್ಜಿಗಳು ಬಂದಿರುವುದಾಗಿ ಹಾಗೂ ಪ್ರತಿ ಅರ್ಜಿಗೆ ರೂ.25ರಂತೆ ರೂ.30,00,025/- ಗಳನ್ನು ಸಂಗ್ರಹಿಸಲಾಗಿರುತ್ತದೆ ಹಾಗೂ ಪ್ರಸ್ತಾವಿತ ಯೋಜನೆಗೆ ಬಂಡವಾಳ ಕ್ರೋಡೀಕರಿಸಲು ಈ ಕೆಳಕಂಡಂತೆ

1 ಪ್ರಾಧಿಕಾರದಲ್ಲಿ ಹಾಲಿ ಇರುವ ಸಾಮಾನ್ಯ ನಿಧಿಯಲ್ಲಿ (ಸಾಮಾನ್ಯ ನಿಧಿಯಲ್ಲಿನ ಮೊತ್ತ ರೂ. 40,86 ಕೋಟಿಗಳು) ಶೇ. 70% ರಷ್ಟು ಮೊತ್ತ. `. 28.00 ಕೋಟಿ
2 ಸ ದ ರಿ ಯೋಜನೆಯಲ್ಲಿಯ ನಿವೇಶನಗಳ ಹಂಚಿಕೆಗಾಗಿ ಅರ್ಜಿಗಳನ್ನು ಕರೆದು ಮುಂಗಡ ಠೇವಣಿ ಸ್ವೀಕೃತಿ ಅಂದಾಜು (ಒಟ್ಟು ನಿವೇಶನಗಳ 03 ಪಟ್ಟು ಅರ್ಜಿಗಳನ್ನು ನಿರೀಕ್ಷಿಸಲಾಗಿದೆ) `. 24.26 ಕೋಟಿ
3 ಪ್ರಾಧಿಕಾರದಲ್ಲಿ ಹಂಚಿಕೆಗಾಗಿ ಲಭ್ಯವಿರುವ ನಿವೇಶನಗಳ ಹಂಚಿಕೆಯಿಂದ ಸ್ವೀಕೃತವಾಗಬಹುದಾದ ಅಂದಾಜು ವ ೂತ್ತ (ಅಟಲ ಬಿಹಾರಿ ವಾಜಪೇಯಿ ಹಾಗೂ ಮಾದರಸನಹಳ್ಳಿ (ಎಂ.ಎಸ್.ಕೆ. ಮಿಲ್ ಹಂತ-2) ವಸತಿ ೆ ಬಡಾವಣೆಗಳು). `. 40.00 ಕೋಟಿ
4 ಪ್ರಾಧಿಕಾರದಿಂದ ಲಭ್ಯವಿರುವ ವ ುೂಲೆ, ವಾಣಿಜ್ಯ, ಬಿಡಿ ನಿವೇಶನಗಳನ್ನು ಹರಾಜು ವ ುೂಲಕ ವಿಲೇವಾರಿಯಿಂದ ಸ್ವೀಕೃತವಾಗುವ ಮೊತ್ತ. `. 57.83 ಕೋಟಿ
5 ಪ್ರಾಧಿಕಾರದಲ್ಲಿ ಲಭ್ಯವಿರುವ ಸಿ.ಎ. ನಿವೇಶನಗಳ ಹಂಚಿಕೆಯಿಂದ ಸ್ವೀಕೃತವಾಗುವ ಮೊತ್ತ. `. 15.00 ಕೋಟಿ
ಒಟ್ಟು `. 165.29 ಕೋಟಿ

ಮೇಲಿನ ವಸತಿ ಯೋಜನೆಯ ವಸತಿ ವಿನ್ಯಾಸ ನಕ್ಷೆಗೆ ನಗರ ಮತ್ತು ಗ್ರಾಮಾಂತರ ನಿರ್ದೇಶಕರು ಅನುಮೋದನೆ ನೀಡಿದ್ದು, ಸದರಿ ಪ್ರಸ್ತಾವನೆಗೆ ಕರ್ನಾಟಕ ನಗರಾಭಿವೃದ್ಧಿ ಕಾಯ್ದೆ, 1987ರ ಕಲಂ 18(3) ರನ್ವಯ ಆಡಳಿತಾತ್ಮಕ ಅನುಮೋದನೆ ನೀಡಬಹುದೆಂದು ಸಹ ಅಭಿಪ್ರಾಯಿಸಿರುತ್ತಾರೆ.

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ನಅಇ 02 ಗುಅಪ್ರಾ 2016, ಬೆಂಗಳೂರು, ದಿನಾಂಕ: 24-01-2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರವು ಪ್ರಸ್ತಾಪಿಸಿರುವ ಕೂಸನೂರ ಗ್ರಾಮದ ಸರ್ವೆ ನಂ.123(ಅ), 123(ಆ), 128/1, 128/2, 129, 130/1, 130/2, 130/3, 131/1, 131/2, 131/3, 131/4, 131/5, 131/8, 131/10, 131/11 ಮತ್ತು 131/12ರ ಒಟ್ಟು ವಿಸ್ತೀರ್ಣ 90 ಎಕರೆ 17 ಗುಂಟೆ ಜಮೀನಿನ ಪೈಕಿ 1 ಎಕರೆ 26 ಗುಂಟೆ ಬಿ-ಖರಾಬು ಹೊರತುಪಡಿಸಿ ಉಳಿದ 88 ಎಕರೆ 31 ಗುಂಟೆ ಜಮೀನಿನಲ್ಲಿ ರೂ. 94.80 ಕೋಟಿಗಳ ಅಂದಾಜು ವೆಚ್ಚದಲ್ಲಿ ವಸತಿ ಯೋಜನೆ ಕೈಗೊಳ್ಳಲು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ, 1987ರ ಕಲಂ 18(3)ರಡಿ ಈ ಕೆಳಕಂಡ ಷರತ್ತಿಗೊಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಿದೆ.

1. ಸದರಿ ವಸತಿ ಯೋಜನೆಯ ರೂ. 94.80 ಕೋಟಿಗಳ ಅಂದಾಜು ವೆಚ್ಚದಲ್ಲಿ ಸದರಿ ಯೋಜನೆಯಲ್ಲಿ ಒಳಗೊಂಡಿರುವ 1 ಎಕರೆ 26 ಗುಂಟೆ ಬಿ-ಖರಾಬು ಜಮೀನಿನ ಖರೀದಿ ವೆಚ್ಚ ಹಾಗೂ ಅಭಿವೃದ್ಧಿ ವೆಚ್ಚವನ್ನು ಸದರಿ ಯೋಜನಾ ವೆಚ್ಚದಿಂದ ಕಡಿತಗೊಳಿಸುವುದು.

2. ಪ್ರಾಧಿಕಾರದಿಂದ ಕನಿಷ್ಠ ಶೇ. 15 ರಷ್ಟು ನಗದು ಹೂಡಿಕೆ. 3. ನಿವೇಶನ ಹಂಚಿಕೆ ನಿಯಮಗಳನ್ವಯ ನಿವೇಶನಗಳನ್ನು ಮುಂಚಿತವಾಗಿ ಹಂಚಿಕೆ ಮಾಡತಕ್ಕದ್ದು. 4. ನಿವೇಶನ ಹಂಚಿಕೆ ನಿಯಮಗಳನ್ವಯ ನಿವೇಶ ಹಂಚಿಕೆದಾರರಿಂದ ಹಣವನ್ನು ಭರಿಸಿಕೊಳ್ಳತಕ್ಕದ್ದು. 5. ಮೇಲೆ (2) ಮತ್ತು (4)ರಲ್ಲಿ ತಿಳಿಸಿರುವ ಸಂಪನ್ಮೂಲದಿಂದ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವುದು. ಸಾಲ ಪಡೆಯತಕ್ಕದ್ದಲ್ಲ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ೪೩೩

6. ಪ್ರಾಧಿಕಾರದ ಶೇ.15 ರ ಮೊತ್ತವು ಅಕ್ರಮ-ಸಕ್ರಮ, ಕೆರೆ ಪುನರುಜ್ಜೀವನ, ಉದ್ಯಾನವನ ವಿನಾಯಿತಿ ಶುಲ್ಕದಂತಹ ನಿರ್ದಿಷ್ಟ ಉದ್ದೇಶಗಳಿಗಾಗಿ ಮೀಸಲಿರಿಸಿದ ಹಣವನ್ನು ಹೊರತುಪಡಿಸಿರಬೇಕು.

7. ಮೇಲೆ (2), (3) ಮತ್ತು (4) ರಲ್ಲಿ ತಿಳಿಸಿರುವಂತೆ ಕ್ರಮ ಜರುಗಿಸದ ಹೊರತು. ಯಾವುದೇ ಕಾಮಗಾರಿಯನ್ನು ಕೈಗೊಳ್ಳತಕ್ಕದ್ದಲ್ಲ.

ಮುಂದುವರೆದು, ಈ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಕಲಬುರಗಿ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಮೇಲ್ವಿಚಾರಣೆ ಮಾಡಲು ಈ ಕೆಳಕಂಡ ಸಮಿತಿಯನ್ನು ಸಹ ರಚಿಸಿ ಆದೇಶಿಸಿದೆ.

1. ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರು – ಅಧ್ಯಕ್ಷರು 2. ಅಧ್ಯಕ್ಷರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ಕಲಬುರಗಿ - ಸದಸ್ಯರು 3. ಜಿಲ್ಲಾಧಿಕಾರಿ, ಕಲಬುರಗಿ ಜಿಲ್ಲೆ, ಕಲಬುರಗಿ - ಸದಸ್ಯರು 4. ಆಯುಕ್ತರು, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ, ಕಲಬುರಗಿ - ಸದಸ್ಯ ಕಾರ್ಯದರ್ಶಿ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ ಆಇ 186 ವೆಚ್ಚ-9/2018, ದಿನಾಂಕ: 03-03-2018ರಲ್ಲಿ ನೀಡಿರುವ ಸಹಮತಿ ಮೇರೆಗೆ ಹಾಗೂ ದಿನಾಂಕ: 10-01-2019 ರಂದು ನಡೆದ ಸಚಿವ ಸಂಪುಟ ಸಭೆಯ ವಿಷಯ ಸಂಖ್ಯೆ: ಸಿ.753/2018 ರಲ್ಲಿ ನೀಡಿದ ಅನುಮೋದನೆಯಂತೆ ಹೊರಡಿಸಲಾಗಿದೆ.

PR-184

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-50

ನಾಗರಾಜ

ಸರ್ಕಾರದ ಅಧೀನ ಕಾರ್ಯದರ್ಶಿ,

ನಗರಾಭಿವೃದ್ಧಿ ಇಲಾಖೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ವಿಷಯ : ಕರ್ನಾಟಕ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ "ಎ" ವೃಂದದ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಯನ್ನು ಆನ್ ಲೈನ್ ನಲ್ಲಿ ದಾಖಲಿಸುವ ಬಗ್ಗೆ.

ಓದಲಾಗಿದೆ : ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 113 ಸೇವನೆ 2018, ದಿನಾಂಕ: 08-03-2019.

ಪ್ರಸ್ತಾವನೆ :

ಕರ್ನಾಟಕ ಸರ್ಕಾರದಲ್ಲಿ ಅಂದಾಜು 16,000 ಗ್ರೂಪ್-ಎ ಅಧಿಕಾರಿಗಳು ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಈ ಅಧಿಕಾರಿಗಳ ಕಾರ್ಯನಿರ್ವಹಣಾ ವರದಿಗಳ ಮೌಲ್ಯಮಾಪನವನ್ನು ಹಸ್ತಚಾಲಿತ ವ್ಯವಸ್ಥೆಯಲ್ಲಿ (manual system) ಮಾಡಲಾಗುತ್ತಿದೆ. ಮೌಲ್ಯಮಾಪನ ನಮೂನೆಗಳು ಮತ್ತು ಕರ್ನಾಟಕ ನಾಗರಿಕ ಸೇವಾ (ಕಾರ್ಯನಿರ್ವಹಣಾ ವರದಿಗಳು) ನಿಯಮಗಳು 2000 ಹಾಗೂ ಸದರಿ ನಿಯಮಗಳಿಗೆ ಕಾಲಕಾಲಕ್ಕೆ ಮಾಡಿದ ತಿದ್ದುಪಡಿಗಳು ಮತ್ತು ಈ ನಿಟ್ಟಿನಲ್ಲಿ ಹೊರಡಿಸಿದ ಸುತ್ತೋಲೆಗಳಲ್ಲಿ ನಿಗಧಿಪಡಿಸಲಾಗಿದೆ.

ಪ್ರಸ್ತುತ ಹಸ್ತಚಾಲಿತ ವ್ಯವಸ್ಥೆಯಲ್ಲಿ (manual system) ಅಧಿಕಾರಿಗಳ ಕಾರ್ಯನಿರ್ವಹಣಾ ವರದಿಗಳ ಮೌಲ್ಯಮಾಪನ ನಿಗಧಿತ ಸಮಯಲ್ಲಿ ಆಗದೇ ಇರುವುದನ್ನು ಸರ್ಕಾರ ಗಮನಿಸಿದೆ. ಕಾರ್ಯನಿರ್ವಹಣಾ ವರದಿಗಳ ಮೌಲ್ಯಮಾಪನವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕರ್ನಾಟಕ ನಾಗರಿಕ ಸೇವಾ (ಕಾರ್ಯನಿರ್ವಹಣಾ ವರದಿಗಳು) ನಿಯಮಗಳು 2000ರ ನಿಯಮಗಳಿಗೆ ಮೇಲೆ ಓದಲಾದ ಅಧಿಸೂಚನೆಯಲ್ಲಿ ಸರ್ಕಾರವು ತಿದ್ದುಪಡಿ ತಂದಿರುತ್ತದೆ.

ಸರ್ಕಾರದ ವಿವಿಧ ಇಲಾಖೆಗಳ ಗ್ರೂಪ್-ಎ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಈ ಸಾಲಿನಿಂದ ಅಂದರೆ 2018-19ನೇ ಸಾಲಿನಿಂದ ಕಾರ್ಯನಿರ್ವಹಣಾ ವರದಿಗಳನ್ನು ಭರ್ತಿ ಮಾಡುವ ಪ್ರಕ್ರಿಯೆಯನ್ನು ಆನ್ ಲೈನ್ ನಲ್ಲಿ ದಾಖಲಿಸುವುದನ್ನು ಕಡ್ಡಾಯಗೊಳಿಸಿದೆ. ಆದ್ದರಿಂದ ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 09 ಕತವ 2018, ಬೆಂಗಳೂರು, ದಿನಾಂಕ: 05-04-2019.

ರಾಜ್ಯ ಸರ್ಕಾರದ 'ಗ್ರೂಪ್-ಎ' ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣಾ ವರದಿಗಳನ್ನು 2018-19ನೇ ಸಾಲಿನ ಕಾರ್ಯನಿರ್ವಹಣಾ ವರದಿಗಳನ್ನು ಒಳಗೊಂಡು ಇನ್ನು ಮುಂದೆ ಇ-ಪರ್ಫಾಮೆನ್ಸ್ ರಿಪೋರ್ಟಿಂಗ್ ಸಿಸ್ಟಮ್ (e-PRS e-Performance Reporting System) ನ ಮೂಲಕ ನಿರ್ವಹಿಸತಕ್ಕದ್ದು. ಇದು 2018-19ರ ಸಾಲಿನ ಕಾರ್ಯನಿರ್ವಹಣಾ ವರದಿಗಳಿಗೂ ಅನ್ವಯಿಸಲಿದೆ.

ಆನ್ ಲೈನ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಲು ಸಚಿವಾಲಯದ ಇಲಾಖೆಗಳು ಈ ಕೆಳಗೆ ನಮೂದಿಸಿದ ಕ್ರಮಗಳನ್ನು ಕೈಗೊಳ್ಳತಕದ್ದು.

1) ಸರ್ಕಾರದ ವಿವಿಧ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು / ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳು ಗ್ರೂಪ್-ಎ ಅಧಿಕಾರಿಗಳ ಕಾರ್ಯನಿರ್ವಹಣಾ ವರದಿಗಳ ಅಭಿರಕ್ಷಕರಾಗಿರುತ್ತಾರೆ (Custodian) ಮತ್ತು ತಮ್ಮ ಅಧೀನಕ್ಕೊಳಪಡುವ ಇಲಾಖೆಯ ಗ್ರೂಪ್-ಎ ಅಧಿಕಾರಿಗಳ ಕಾರ್ಯನಿರ್ವಹಣಾ ವರದಿಗಳು ಪ್ರಕ್ರಿಯೆಯನ್ನು ಪ್ರಾರಂಭಗೊಳಿಸಲು ಮತ್ತು ಮೇಲ್ವಚಾರಣೆ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.

2) ಪ್ರತಿ ಇಲಾಖೆಯಲ್ಲೂ ಸರ್ಕಾರದ ಉಪ ಕಾರ್ಯದರ್ಶಿ ಹಾಗೂ ಅದಕ್ಕೂ ಮೇಲ್ಪಟ್ಟ ಅಧಿಕಾರಿಯೊಬ್ಬರನ್ನು ಕಾರ್ಯನಿರ್ವಹಣಾ ವರದಿಗಳ ಪರ್ಯಾಯ ರಕ್ಷಕವೆಂದು (Alternate custodian) ಗುರುತಿಸಕ್ಕದ್ದು.

3) ಪ್ರತಿ ಇಲಾಖೆಯು ತನ್ನ ಅಧೀನದಲ್ಲಿ ಬರುವ ಇಲಾಖೆಗಳಲ್ಲಿನ ಅಧಿಕಾರಿಗಳಿಗೆ e-PRS ಬಗ್ಗೆ ತರಬೇರಿಯನ್ನು ನೀಡಲು ಸೂಕ್ತ ಮಾಸ್ಟರ್ ಟ್ರೈನರ್ ಗಳನ್ನು ಗುರುತಿಸುವುದು. ಇದರಿಂದಾಗಿ e-PRS ಅನ್ನು ಸೂಕ್ತ ರೀತಿಯಲ್ಲಿ ಜಾರಿಗೆ ತರಲು ಸಹಾಯಕವಾಗುತ್ತದೆ.

4) ಪ್ರತಿಯೊಂದು ಇಲಾಖೆಯು ತಮ್ಮ ಇಲಾಖೆಯ ಗ್ರೂಪ್-ಎ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಣಾ ವರದಿ ಮಾಡುವ ಪ್ರಾಧಿಕಾರ, ಪರಿಶೀಲನಾ ಹಾಗೂ ಅಂಗೀಕರಿಸುವ ಪ್ರಾಧಿಕಾರಿಗಳನ್ನು ಗುರುತಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳತಕ್ಕದ್ದು.

೪೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ಭಾಗ ೧

5) ಕಾರ್ಯನಿರ್ವಹಣಾ ವರದಿಗಳ ಅಭಿರಕ್ಷಕರು e-PRS ರಲ್ಲಿ ತಮ್ಮ ಇಲಾಖೆಯ ಗ್ರೂಪ್-ಎ ಅಧಿಕಾರಿಗಳ ಮಾಹಿತಿಯನ್ನು ದಾಖಲಿಸಲು ಸೂಕ್ತವಾದ ಅಧಿಕಾರಿ/ ನೌಕರರನ್ನು PAR-Manager ಆಗಿ ಗುರುತಿಸತಕ್ಕದ್ದು.

6) ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳನ್ವಯ ಪ್ರಕಾರ ಕಾರ್ಯನಿರ್ವಹಣಾ ವರದಿಗಳನ್ನು ಯಾವ ಅಧಿಕಾರಿ, ಯಾರಿಗೆ ಸಲ್ಲಿಸಬೇಕು ಎಂಬ ನಿರ್ಧಿಷ್ಟ ಚಾನಲ್ ಅನ್ನು e-PRS ನಲ್ಲಿ ನಿಗಧಿಪಡಿಸುವ ಜವಾಬ್ದಾರಿಯನ್ನು PAR-Manager ಹೊಂದಿರುತ್ತಾರೆ.

7) e-PRS ಗೆ ಸಂಬಂಧಿಸಿದಂತೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಇ-ಆಡಳಿತ) ವಿಭಾಗವು ಅಧಿಕಾರಿಗಳಿಗೆ e-mail ID ಗಳನ್ನು ಸೃಜಿಸುವುದು, ಇ-ಸಹಿ ಸೌಲಭ್ಯ ಕಲ್ಪಿಸುವುದು ಹಾಗೂ ತರಬೇತಿ ನೀಡತಕ್ಕದ್ದು.

8) ಯಾವುದೇ ಇಲಾಖೆಯು ಗ್ರೂಪ್-ಎ ಅಧಿಕಾರಿಗಳಿಗೆ ಸಂಬಂಧಿಸಿದಂತೆ 2018-19ರ ಸಾಲಿನ ಕಾರ್ಯನಿರ್ವಹಣಾ ವರದಿಗಳ ಭೌತಿಕವಾಗಿ (Manual) ಸಲ್ಲಿಸಿದ ವರದಿಗಳನ್ನು ಅಂಗೀಕರಿಸತಕ್ಕದ್ದಲ್ಲ.

9) ಪ್ರಸಕ್ತ ಸಾಲಿನಿಂದ E-PRS ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿರುವುದರಿಂದ ಆಡಳಿತಾತ್ಮಕ ಕಾರಣಗಳಿಂದ ಕರ್ನಾಟಕ ನಾಗರಿಕ ಸೇವಾ (ಕಾರ್ಯನಿರ್ವಹಣಾ ವರದಿಗಳು) ನಿಯಮಗಳು 2000 ರಲ್ಲಿ ನಿಗಧಿಪಡಿಸಿರುವ ಕಾಲಮಿತಿಯನ್ನು ಸಡಿಲಗೊಳಿಸಿ, 2018-19ನೇ ಸಾಲಿಗೆ ಮಾತ್ರ ಸೀಮಿತಗೊಳಿಸಿ ಅನುಬಂಧದಲ್ಲಿರುವಂತೆ ಪರಿಷ್ಕøತ ವೇಳಾಪಟ್ಟಿಯನ್ನು ನಿಗದಿಪಡಿಸಲಾಗಿದೆ.

ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು/ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಅವರ ಆಡಳಿತ ವ್ಯಾಪ್ತಿಗೊಳಪಡುವ ಇಲಾಖೆಗಳಿಗೆ ಈ ಆದೇಶವನ್ನು ಪಾಲಿಸಲು ಸೂಕ್ತ ಸೂಚನೆಗಳನ್ನು ನೀಡತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ರವೀಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.

(ಆಡಳಿತ ಸುಧಾರಣೆ ತಪಾಸಣೆ)

ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 09 ಕತವ 2018,

ಕ್ರಮ ಸಂಖ್ಯೆ ಕ್ರಮಗಳು ನಿಗಧಿತ ಅವಧಿ
1 ಪ ರ್ಯಾಯ ರಕ್ಷಕರನ್ನು (Alternate custodian ) ಗುರುತಿಸುವುದು/ EMD & PAR Managers / ಮಾಸ್ಟರ್ ಟ್ರೈನರ್ಸ್ ಮತ್ತು ವಿವಿಧ ಹಂತದ ಅಧಿಕಾರಿಗಳಿಗೆ ತರಬೇತಿ ನೀಡುವುದು. [ಕ್ರಮ: ಸಂಬಂಧಪಟ್ಟ ಸಚಿವಾಲಯದ ಇಲಾಖೆಗಳು ಮತ್ತು ಸಿಆಸುಇ (ಇ-ಆಡಳಿತ)] 30ನೇ ಮೇ 2019
2 E-PRS ನಲ್ಲಿ ಕಾರ್ಯನಿರ್ವಹಣಾ ವರದಿಗಳನ್ನು ಸೃಜಿಸುವುದು. 30ನೇ ಜೂನ್ 2019
3 ಸ ಂಬಂಧಪಟ್ಟ ಅಧಿಕಾರಿಗಳು ತಮ್ಮ ಸ್ವಯಂ ಮೌಲ್ಯಮಾಪನವನ್ನು ಕಾರ್ಯನಿರ್ವಹಣಾ ವ ರದಿಯಲ್ಲಿ ದಾಖಲಿಸುವುದು. 31ನೇ ಜುಲೈ 2019
4 ವ ರದಿ ಮಾಡುವ ಪ್ರಾಧಿಕಾರಿಗಳಿಂದ ಕಾರ್ಯನಿರ್ವಹಣಾ ವರದಿಗಳಲ್ಲಿ ಅನಿಸಿಕೆಗಳ ದಾಖಲಾತಿ. 31ನೇ ಆಗಸ್ಟ್ 2019
5 ಪ ರಿಶೀಲನಾ ಪ್ರಾಧಿಕಾರಿಯಿಂದ ಕಾರ್ಯನಿರ್ವಹಣಾ ವರದಿಗಳಲ್ಲಿ ಅನಿಸಿಕೆಗಳ ದಾಖಲಾತಿ. 30ನೇ ಸೆಪ್ಟೆಂಬರ್ 2019
6 ಅಂಗೀಕರಿಸುವ ಪ್ರಾಧಿಕಾರಿಯಿಂದ ಕಾರ್ಯನಿರ್ವಹಣಾ ವರದಿಗಳಲ್ಲಿ ಅನಿಸಿಕೆಗಳ ದಾಖಲಾತಿ 31ನೇ ಡಿಸೆಂಬರ್ 2019

PR-200

ಕೆ. ರವೀಂದ್ರ

SC-1000

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ.

(ಆಡಳಿತ ಸುಧಾರಣೆ ತಪಾಸಣೆ)

ಕಂದಾಯ ಸಚಿವಾಲಯ

ವಿಷಯ : ಶ್ರೀ ಎಂ.ಗುಲಾಂಬಕಾಷ್, ನಿವೃತ್ತ ಉಪ ನೋಂದಣಾಧಿಕಾರಿ ಮತ್ತು ಶ್ರೀ ಮಹೇಶ್ ಉತ್ತಂಗಿ, ದ್ವೀತಿಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಸಂಡೂರು ಇವರುಗಳ ವಿರುದ್ಧದ ಇಲಾಖಾ ವಿಚಾರಣಾ ವರದಿಯ ಮೇಲೆ ದಂಡನೆ ವಿಧಿಸುವ ಕುರಿತು-ಆದೇಶ.

ಓದಲಾಗಿದೆ: 1) ಮಾನ್ಯ ಉಪ ಲೋಕಾಯುಕ್ತರು-1, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವರದಿ Compt/Uplok/ GLB /121/2012/DRE-5, ದಿನಾಂಕ: 16-07-2012.


  1. ಸರ್ಕಾರದ ಆದೇಶ ಸಂಖ್ಯೆ: ಕಂಇ 50 ಮುನೋಸೇ(2) 2012, ದಿನಾಂಕ: 27-08-2012. ↩
  2. ಅಪರ ನಿಬಂಧಕರು, ವಿಚಾರಣೆಗಳು-4, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವಿಚಾರಣಾ ವರದಿ: LOK/ARE-{{^{{FOOTNOTE 4}}}}/ENQ/{{^{{FOOTNOTE 349}}}}/{{^{{FOOTNOTE 2012}}}}, ದಿನಾಂಕ: 29-07-2017. ↩
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ೪೩೫

4) ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಶಿಫಾರಸ್ಸು ಪತ್ರ ಸಂಖ್ಯೆ:

LOK/ARE-4/ENQ/349/2012, ದಿನಾಂಕ: 31-07-2017.

5) ಕಾರಣ ಕೇಳುವ ನೊಟೀಸ್: ಕಂಇ 15 ಮುನೋಸೇ(2) 2016, ದಿನಾಂಕ: 11-09-2017.

6) ಶ್ರೀ ಎಂ.ಗುಲಾಂಬಕಾಷ್, ನಿವೃತ್ತ ಉಪನೋಂದಣಾಧಿಕಾರಿ ಇವರ ಲಿಖಿತ ಹೇಳೀಕೆ, ದಿನಾಂಕ: 07-11-2017.

7) ಶ್ರೀ ಮಹೇಶ್ ಉತ್ತಂಗಿ, ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಸಂಡೂರು ಇವರ ಮನವಿ, ದಿನಾಂಕ: 09-11-2017.

8) ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠವು ರಿಟ್ ಅರ್ಜಿ ಸಂಖ್ಯೆ: 111493

/2017(ಜಿಎಂ ಕೆಎಲ್ಎ)ರಲ್ಲಿ ದಿನಾಂಕ: 07-03-2018ರ ಆದೇಶ.

9) ಸರ್ಕಾರದ ಪತ್ರ ಸಂಖ್ಯೆ: ಕಂಇ 15 ಮುನೋಸೇ(2) 2016, ದಿನಾಂಕ: 17-09-2018.

10) ಕರ್ನಾಟಕ ಲೋಕಸೇವಾ ಆಯೋಗದ ಪತ್ರ ಸಂಖ್ಯೆ: ಪಿಎಸ್‌ಸಿ 178 ಸಿಎನ್ಎಸ್ 2018, ದಿನಾಂಕ: 04-12-2018.

ಪ್ರಸ್ತಾವನೆ :

ಮೇಲೆ ಓದಲಾದ ಕ್ರಮ ಸಂಖ್ಯೆ (1)ರಲ್ಲಿನ ಮಾನ್ಯ ಉಪ ಲೋಕಾಯುಕ್ತರು-1, ಕರ್ನಾಟಕ ಲೋಕಾಯುಕ್ತ ಇವರು ಫಿರ್ಯಾದುದಾರರಾದ ಶ್ರೀ ಬಸವರಾಜ ಬಿನ್ ಆರ್.ನಾಗಪ್ಪ, ವಕೀಲರು, ಸಂಡೂರು, ಬಳ್ಳಾರಿ ಇವರು ಸರ್ವೆ ನಂ.73/4, 73/3, ದೌಲತಪುರ್ ಗ್ರಾಮ, ಸಂಡೂರು ತಾಲ್ಲೂಕು ಈ ಜಮೀನಿಗೆ ಸಂಬಂಧಿಸಿದಂತೆ ದಿನಾಂಕ: 09-12-2010ರಂದು ಶ್ರೀಮತಿ ಗೌಲರ್ ನಾಗಮ್ಮ ಮತ್ತು ಶ್ರೀ ಗೌಲರ್ ಮಹಾಲಿಂಗಪ್ಪ ರವರಿಂದ ಖರೀದಿಸಿ, ಸದರಿ ಜಮೀನನ್ನು ಸಂಡೂರು ಉಪ ನೋಂದಣಿ ಕಛೇರಿಯಲ್ಲಿ ಸೇಲ್ ಡೀಡ್ ಮಾಡಿಸಿದ್ದು, ಸದರಿ ಸೇಲ್ ಡೀಡ್‌ನ ಮೂಲ ದಾಖಲಾತಿಗಳನ್ನು ಪಡೆಯಲು ಹೋದಾಗ ಶ್ರೀ ಗುಲಾಂಬಕಾಷ್ ರವರು ಲಂಚದ ಹಣವನ್ನು ಕೊಡುವಂತೆ ಒತ್ತಾಯಿಸಿದ್ದು, ಲಂಚದ ಹಣವನ್ನು ನೀಡಲು ಇಷ್ಟವಿಲ್ಲದ ಫಿರ್ಯಾದುದಾರರು ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಬಳ್ಳಾರಿ ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲಾಗಿ, ಆರೋಪಿತರು ದುರ್ನಡತೆ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ, ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984ರ ಕಲಂ 12(3)ರಡಿ ಪ್ರಾಥಮಿಕ ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದು, ಈ ಕುರಿತು ಕಲಂ 12(4)ರಡಿ ಸಕ್ಷಮ ಪ್ರಾಧಿಕಾರವಾದ ಸರ್ಕಾರವು ಸೂಕ್ತ ನಿರ್ಣಯ ಕೈಗೊಳ್ಳುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2)ರಲ್ಲಿನ ಸರ್ಕಾರದ ಆದೇಶದಲ್ಲಿ ಉಪ ಲೋಕಾಯುಕ್ತರು ಕಲಂ12(3)ರಡಿ ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿ, ಸದರಿ ನೌಕರರುಗಳ ವಿರುದ್ಧದ ಆರೋಪವು ಮೇಲ್ನೋಟಕ್ಕೆ ಸಾಬೀತಾಗಿರುವುದಾಗಿ ಕಂಡುಬಂದಿರುವುದರಿಂದ, ಇವರುಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಪ್ರಕರಣವನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 14-ಎ ರಡಿ ಪ್ರಕರಣವನ್ನು ಇಲಾಖಾ ವಿಚಾರಣೆಗಾಗಿ ಉಪ ಲೋಕಾಯುಕ್ತರು-1 ಇವರಿಗೆ ವಹಿಸಿ ಆದೇಶಿಸಲಾಗಿತ್ತು.

ಮೇಲೆ ಓದಲಾದ ಕ್ರಮ ಸಂಖ್ಯೆ (3)ರ ಪತ್ರದಲ್ಲಿ ಅಪರ ನಿಬಂಧಕರು, ವಿಚಾರಣೆಗಳು-4, ಕರ್ನಾಟಕ ಲೋಕಾಯುಕ್ತ ಇವರು ವಿಚಾರಣಾ ವರದಿಯನ್ನು ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಇವರಿಗೆ ಸಲ್ಲಿಸಿದ್ದು, ಸದರಿ ವರದಿಯಲ್ಲಿ ಆಪಾದಿತ 1ನೇ ಎದುರುದಾರರಾದ ಶ್ರೀ ಎಂ.ಗುಲಾಂಬಕಾಷ್, ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ಸಂಡೂರು ಇವರ ವಿರುದ್ಧದ ಲಂಚ ಬೇಡಿಕೆ ಹಾಗೂ ಸ್ವೀಕರಿಸಿದ ಆರೋಪವು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಾವಳಿಗಳು 1966ರ ನಿಯಮ 3(1)(i) ರಿಂದ (iii)ರನ್ವಯ ರುಜುವಾತ್ತಾಗಿರುವುದಾಗಿ ಮತ್ತು ಆಪಾದಿತ 2ನೇ ಎದುರುದಾರರಾದ ಶ್ರೀ ಮಹೇಶ್ ಉತ್ತಂಗಿ, ದ್ವೀತಿಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಸಂಡೂರು ಇವರ ವಿರುದ್ಧ ಆರೋಪಿಸಲಾದ ಲಂಚ ಬೇಡಿಕೆ ಹಾಗೂ ಸ್ವೀಕರಿಸಿದ ಆರೋಪವು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು 1966ರ ನಿಯಮ 3(1)(i) ರಿಂದ (iii)ರ ಪ್ರಕಾರ ದುರ್ನಡತೆ ಎಸಗಿರುವುದು ಸಾಬೀತಾಗಿರುವುದಿಲ್ಲ ಎಂಬುದಾಗಿ ವಿಚಾರಣಾ ವರದಿಯನ್ನು ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4)ರಲ್ಲಿ ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರು ಸರ್ಕಾರಕ್ಕೆ ಸಲ್ಲಿಸಿರುವ ಶಿಫಾರಸ್ಸಿನ ವರದಿಯಲ್ಲಿ, ವಿಚಾರಣಾಧಿಕಾರಿಗಳ ವಿಚಾರಣಾ ವರದಿಯನ್ವಯ ಆಪಾದಿತರಿಗೆ ಈ ಕೆಳಕಂಡಂತೆ ದಂಡನೆಯನ್ನು ವಿಧಿಸುವಂತೆ ಶಿಫರಸ್ಸು ಮಾಡಿರುತ್ತಾರೆ.

1ನೇ ಎದುರುದಾರರಾದ ಶ್ರೀ ಎಂ.ಗುಲಾಂಬಕಾಷ್, ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ಸಂಡೂರು ಹಾಲಿ ನಿವೃತ್ತ ಇವರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ, ನಿಯಮ 214(1)(ಎ)ರನ್ವಯ ಸದರಿಯವರ ನಿವೃತ್ತಿ ವೇತನದಲ್ಲಿ ಶೇ.25% ರಷ್ಟನ್ನು ಶಾಶ್ವತವಾಗಿ ತಡೆಹಿಡಿಯುವ ದಂಡನೆ;

ಹಾಗೂ

2ನೇ ಎದುರುದಾರರಾದ ಶ್ರೀ ಮಹೇಶ್ ಉತ್ತಂಗಿ, ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಸಂಡೂರು ಹಾಲಿ ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಹಗರಿಬೊಮ್ಮಹನಳ್ಳಿ ಇವರನ್ನು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೋಲ್ಮನವಿ) ನಿಯಮಾವಳಿಗಳು 1957ರ ನಿಯಮ 8(Viii)ರ ಪ್ರಕಾರ ಸರ್ಕಾರದ ಸೇವೆಯಿಂದ ವಜಾಗೊಳಿಸುವ ದಂಡನೆ.

ಮೇಲೇ ಓದಲಾದ ಕ್ರಮ ಸಂಖ್ಯೆ (5)ರಲ್ಲಿ ಆರೋಪಿ ಅಧಿಕಾರಿ/ನೌಕರರಿಗೆ ಮಾನ್ಯ ಉಪ ಲೋಕಾಯುಕ್ತರು, ಶಿಫಾರಸ್ಸಿನನ್ವಯ ಏಕೆ? ಕ್ರಮ ಕೈಗೊಳ್ಳಬಾರದು ಎಂಬ ಕುರಿತು ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ ಎರಡನೇ ಕಾರಣ ಕೇಳುವ ನೊಟೀಸ್‌ನ್ನು ಜಾರಿ ಮಾಡಲಾಗಿತ್ತು,

ಅದರನ್ವಯ ಈ ಪ್ರಕರಣದಲ್ಲಿನ ಒಂದನೇ ಎದುರುದಾರರಾದ ಆಪಾದಿತ ಅಧಿಕಾರಿ ಶ್ರೀ ಗುಲಾಂಬಕಾಷ್, ನಿವೃತ್ತ ಉಪ ನೋಂದಣಾಧಿಕಾರಿ ಇವರು ಮೇಲೆ ಓದಲಾದ ಕ್ರಮ ಸಂಖ್ಯೆ (6)ರಲ್ಲಿ ಲಿಖಿತ ಹೇಳಿಕೆಯನ್ನು ಸಲ್ಲಿಸಿದ್ದು, ಸದರಿ ಲಿಖಿತ ಹೇಳಿಕೆಯಲ್ಲಿ ಸರ್ಕಾರದ ಕರ್ತವ್ಯ ನಿರ್ವಹಿಸಲು ಯಾವುದೇ ಲಂಚಕ್ಕಾಗಿ ಬೇಡಿಕೆ ಇಟ್ಟಿರುವುದಿಲ್ಲ, ಸದರಿ ಪ್ರಕರಣದಲ್ಲಿ ನನ್ನ ತಪ್ಪು ಇರುವುದಿಲ್ಲ ಎಂಬುದಾಗಿ ಹಾಗೂ ಸದರಿ ಪ್ರಕರಣದಿಂದ ನನ್ನನ್ನು ಕೈಬಿಡುವಂತೆ ಹೇಳಿಕೆಯನ್ನು ಸಲ್ಲಿಸಿರುತ್ತಾರೆ. ಆದರೆ, ಸದರಿಯವರು ಈಗಾಗಲೇ ಲೋಕಾಯುಕ್ತರ ವಿಚಾರಣೆಯಲ್ಲಿ ಸಲ್ಲಿಸಿರುವ ಹೇಳಿಕೆಯನ್ನೇ ಸಲ್ಲಿಸಿರುವುದರಿಂದ, ಸದರಿ ಸಮಜಾಯಿಷಿಯಲ್ಲಿ ಯಾವುದೇ ಪರಿಗಣನಾರ್ಹವಾದ ಹೊಸ ಅಂಶಗಳು ಕಂಡುಬಂದಿರುವುದಿಲ್ಲ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪೩೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೬, ೨೦೧೯ ಭಾಗ ೧

ಮೇಲೆ ಓದಲಾದ ಕ್ರಮ ಸಂಖ್ಯೆ (7)ರಲ್ಲಿ ಈ ಪ್ರಕರಣದಲ್ಲಿ ಆಪಾದಿತ ನೌಕರ 2ನೇ ಎದುರುದಾರರಾದ ಶ್ರೀ ಮಹೇಶ್ ಉತ್ತಂಗಿ, ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಸಂಡೂರು ಹಾಲಿ ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಹಗರಿಬೊಮ್ಮನಹಳ್ಳಿ ಇವರು ಕಾರಣ ಕೇಳುವ ನೊಟೀಸ್‌ಗೆ ಹೇಳಿಕೆಯನ್ನು ಸಲ್ಲಿಸಲು 2 ತಿಂಗಳ ಕಾಲಾವಕಾಶ ನೀಡಬೇಕೆಂದು ಕೋರಿರುತ್ತಾರೆ. ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸಿನಲ್ಲಿ ಸದರಿ ನೌಕರರನ್ನು ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸುವಂತೆ ಶಿಫಾರಸ್ಸು ಮಾಡಲಾಗಿರುತ್ತದೆ. ಆದರೆ, 2ನೇ ಎದುರುದಾರರಾದ ಶ್ರೀ ಮಹೇಶ್ ಉತ್ತಂಗಿ ದ್ವೀತಿಯ ದರ್ಜೆ ಸಹಾಯಕ ಇವರು ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸಿನ ವಿರುದ್ಧ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ, ಧಾರವಾಡ ಪೀಠ ಇಲ್ಲಿ ರೀಟ್ ಅರ್ಜಿ ಸಂಖ್ಯೆ: 111493/2017ನ್ನು ದಾಖಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮ ಸಂಖ್ಯೆ (8)ರಲ್ಲಿನ ಪ್ರಕರಣದಲ್ಲಿ ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠವು ಈ ಪ್ರಕರಣದ ಕುರಿತು ದಿನಾಂಕ: 07-03-2018ರಂದು ನೀಡಿರುವ ತೀರ್ಪಿನಲ್ಲಿ 'ವಿಚಾರಣಾಧಿಕಾರಿಗಳು 2ನೇ ಎದುರುದಾರರ ವಿರುದ್ಧದ ಆರೋಪಗಳ ಕುರಿತು ಸಾಬೀತು ಮಾಡುವಲ್ಲಿ ಅಸಮರ್ಥವಾಗಿರುತ್ತದೆ ಎಂಬುದಾಗಿ ಉಲ್ಲೇಖಿಸುತ್ತಾ, ಉಪ ಲೋಕಾಯುಕ್ತರು ತಮ್ಮ ಶಿಫಾರಸ್ಸು ವರದಿಯಲ್ಲಿ 2ನೇ ಎದುರುದಾರರಿಗೆ ಸರ್ಕಾರದ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸುವಂತೆ ತಪ್ಪು ಅಭಿಪ್ರಾಯದಿಂದಾಗಿ ಶಿಫಾರಸ್ಸು ಮಾಡಿರುವುದು ಹಾಗೂ ವಿಚಾರಣಾ ವರದಿಯನ್ನು ಪರಿಶೀಲಿಸದೇ 2ನೇ ಎದುರುದಾರರಿಗೆ ಸರ್ಕಾರದ ಸೇವೆಯಿಂದ ವಜಾಗೊಳಿಸುವ ದಂಡನೆಯನ್ನು ವಿಧಿಸಲು ಶಿಫಾರಸ್ಸು ಮಾಡಿರುವುದು ಹಾಗೂ ಈ ಶಿಫಾರಸ್ಸಿನ ಕುರಿತು ಲಿಖಿತ ಹೇಳಿಕೆಯನ್ನು ಸಲ್ಲಿಸುವಂತೆ ದಿನಾಂಕ: 31-03-2017ರಂದು ಜಾರಿಗೊಳಿಸಲಾಗಿರುವ ಕಾರಣ ಕೇಳುವ ನೊಟೀಸ್ ಉರ್ಜಿತವಾದುದ್ದಲ್ಲ ಹಾಗೂ ಸಮರ್ಥನೀಯವಾದುದ್ದಾಗಿರುವುದಿಲ್ಲ ಎಂಬುದಾಗಿ ಅಭಿಪ್ರಾಯಿಸಿ 2ನೇ ಎದುರುದಾರರಾದ ಶ್ರೀ ಮಹೇಶ್ ಉತ್ತಂಗಿ, ದ್ವೀತಿಯ ದರ್ಜೆ ಸಹಾಯಕ ಇವರ ವಿರುದ್ಧದ ಉಪ ಲೋಕಾಯುಕ್ತರ ದಿನಾಂಕ: 31-07-2017ರ ಶೀಫಾರಸ್ಸು ವರದಿಯನ್ನು ತಳ್ಳಿಹಾಕಿರುತ್ತದೆ'.

ಮೇಲೆ ಓದಲಾದ ಕ್ರಮ ಸಂಖ್ಯೆ (9)ರಲ್ಲಿನ ಸರ್ಕಾರದ ಪತ್ರದಲ್ಲಿ, ಶ್ರೀ ಗುಲಾಂಬಕಾಷ್, ಉಪ ನೋಂದಣಾಧಿಕಾರಿ ಹಾಲಿ ನಿವೃತ್ತ ಇವರಿಗೆ ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ ಇವರ ಶಿಫಾರಸ್ಸಿನನ್ವಯ ಸದರಿಯವರ ನಿವೃತ್ತ ವೇತನದಲ್ಲಿ ಶೇ.25% ರಷ್ಟು ಮೊತ್ತವನ್ನು ನಿರಂತರವಾಗಿ (Perpectually) ತಡೆಹಿಡಿಯುವ ದಂಡನೆಯನ್ನು ವಿಧಿಸಲು ಕರ್ನಾಟಕ ಲೋಕಸೇವಾ ಆಯೋಗದ ಸಹಮತಿಯನ್ನು ಕೋರಲಾಗಿ, ಕರ್ನಾಟಕ ಲೋಕಸೇವಾ ಆಯೋಗವು ಮೇಲೆ ಓದಲಾದ ಕ್ರಮ ಸಂಖ್ಯೆ (10)ರಲ್ಲಿ ಸದರಿ ನಿವೃತ್ತ ನೌಕರರಿಗೆ ನಿವೃತ್ತ ವೇತನದಲ್ಲಿ ಶೇ.25% ರಷ್ಟು ಮೊತ್ತವನ್ನು ನಿರಂತರವಾಗಿ (Perpectually) ತಡೆಹಿಡಿಯುವ ದಂಡನೆಯನ್ನು ವಿಧಿಸಲು ಸಹಮತಿಯನ್ನು ನೀಡಿರುತ್ತದೆ.

ವಿಚಾರಣಾಧಿಕಾರಿಗಳು, ವಿಚಾರಣೆಗಳು-4, ಮಾನ್ಯ ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ವಿಚಾರಣಾ ವರದಿ ಮತ್ತು ಮಾನ್ಯ ಉಪ ಲೋಕಾಯುಕ್ತರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು ಇವರ ಶಿಫಾರಸ್ಸನ್ನು ಪರಿಶೀಲಿಸಿ ಹಾಗೂ ಸದರಿ ಪ್ರಕರಣದಲ್ಲಿ ಶ್ರೀ ಮಹೇಶ್ ಉತ್ತಂಗಿ, ದ್ವಿತೀಯ ದರ್ಜೆ ಸಹಾಯಕ ಇವರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠ ಇಲ್ಲಿ ದಾಖಲಿಸಿದ್ದ ರಿಟ್ ಅರ್ಜಿ ಸಂಖ್ಯೆ: 111493/2017ರ ಪ್ರಕರಣದಲ್ಲಿ ದಿನಾಂಕ: 07-03-2018ರಲ್ಲಿ ನೀಡಿರುವ ಆದೇಶವನ್ನು ಪರಿಗಣಿಸಿ, ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 15 ಮುನೋಸೇ(3) 2016, ಬೆಂಗಳೂರು, ದಿನಾಂಕ: 08-03-2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ, ಶ್ರೀ ಎಂ.ಗುಲಾಂಬಕಾಷ್, ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ಸಂಡೂರು ಹಾಲಿ ನಿವೃತ್ತ ಇವರು ಈ ಹಿಂದೆ ಕರ್ತವ್ಯದಲ್ಲಿದ್ದ ಅವಧಿಯಲ್ಲಿ ಸರ್ಕಾರಿ ಕೆಲಸ ನಿರ್ವಹಿಸುವ ಸಲುವಾಗಿ ಸದರಿ ಅಧಿಕಾರಿಯು `.5,000/-ಗಳ ಲಂಚದ ಬೇಡಿಕೆ ಇಟ್ಟಿರುವುದು ಹಾಗೂ ಈ ಬಗ್ಗೆ ದಿನಾಂಕ: 15-12-2010ರಂದು ಇವರು ಲೋಕಾಯುಕ್ತ ಪೋಲಿಸರಿಗೆ ಸಿಕ್ಕಿಬಿದ್ದು, ಈ ಕುರಿತು ನಡೆದ ಇಲಾಖಾ ವಿಚಾರಣೆಯಲ್ಲಿ ಧೃಡಪಟ್ಟಿರುವ ಹಿನ್ನೆಲೆಯಲ್ಲಿ, ಒಂದನೇ ಎದುರುದಾರರ ವಿರುದ್ದದ ಆರೋಪವು ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಾಮಾವಳಿಗಳು, 1966ರ ನಿಯಮ 3(1)(i)ರಿಂದ(iii)ನ್ನು ಉಲ್ಲಂಘಿಸಿ, ದುರ್ನಡತೆ ಎಸಗಿರುವುದು ಸಾಬೀತಾಗಿರುವುದರಿಂದ, ಶ್ರೀ ಎಂ.ಗುಲಾಂಬಕಾಷ್, ಉಪ ನೋಂದಣಾಧಿಕಾರಿ, ಉಪ ನೋಂದಣಿ ಕಛೇರಿ, ಸಂಡೂರು ಹಾಲಿ ನಿವೃತ್ತ ಇವರಿಗೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳ, ನಿಯಮ 214(1)(ಎ)ನ್ನು ರನ್ವಯ ಸದರಿಯವರ ನಿವೃತ್ತಿ ವೇತನದಲ್ಲಿ ಶೇ.25% ರಷ್ಟನ್ನು ನಿರಂತರವಾಗಿ (Perpectually) ತಡೆಹಿಡಿಯುವ ದಂಡನೆ ವಿಧಿಸಿ ಆದೇಶಿಸಿದೆ.

ಮುಂದುವರೆದು, ಈ ಪ್ರಕರಣದಲ್ಲಿನ ಮತ್ತೊಬ್ಬ ಆಪಾದಿತ 2ನೇ ಎದುರುದಾರರಾದ ಶ್ರೀ ಮಹೇಶ್ ಉತ್ತಂಗಿ, ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಸಂಡೂರು ಹಾಲಿ ದ್ವಿತೀಯ ದರ್ಜೆ ಸಹಾಯಕ, ಉಪ ನೋಂದಣಿ ಕಛೇರಿ, ಹಗರಿಬೊಮ್ಮನಹಳ್ಳಿ ಇವರು ಮಾನ್ಯ ಉಪ ಲೋಕಾಯುಕ್ತರ ಶಿಫಾರಸ್ಸಿನ ವರದಿಯನ್ನು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ, ಧಾರವಾಡ ಪೀಠ ಇಲ್ಲಿ ದಾಖಲಿಸಿದ್ದ ರಿಟ್ ಅರ್ಜಿ ಸಂಖ್ಯೆ: 111493/2017ರ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ದಿನಾಂಕ: 07-03-2018ರಂದು ನೀಡಿರುವ ತೀರ್ಪಿನಲ್ಲಿ ಮಾನ್ಯ ಉಪ ಲೋಕಾಯುಕ್ತರ ದಿನಾಂಕ: 31-07-2017ರಲ್ಲಿನ ಶಿಫಾರಸ್ಸಿನ ವರದಿಯನ್ನು ತಳ್ಳಿಹಾಕಿರುವುದರಿಂದ, (Set aside) ಸದರಿ ನೌಕರರನ್ನು ಆರೋಪದಿಂದ ದೋಷ ಮುಕ್ತಗೊಳಿಸಿ ಆದೇಶಿಸಿದೆ.

ಸದರಿ ನೌಕರರಿಗೆ ನಿಯಮಾನುಸಾರ ತಡೆಹಿಡಿಯಲಾಗಿರುವ ವೇತನ ಬಡ್ತಿ ಹಾಗೂ ಇತರೆ ಸೌಲಭ್ಯಗಳನ್ನು ಮಂಜೂರು ಮಾಡತಕ್ಕದ್ದು.

PR-206

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಪಿ. ಹೇಮಂತರಾಜು

ಪೀಠಾಧಿಕಾರಿ,

ಕಂದಾಯ ಇಲಾಖೆ.

(ನೋಂದಣಿ ಮತ್ತು ಮುದ್ರಾಂಕ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 06 June 2019. Indian Gazettes, https://egazette.servantsofknowledge.in/details/in.gazette.karnataka_new.2019-06-06.Part-1/. Archive identifier in.gazette.karnataka_new.2019-06-06.Part-1.