Servants of Knowledge
Karnataka Gazette · Government of Karnataka

Karnataka Gazette, Part Part-5, 20 June 2019

Published 20 June 2019

Part
Part-5
Identifier
in.gazette.karnataka_new.2019-06-20.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಜೂನ್ ೨೦, ೨೦೧೯ (ಜ್ಯೇಷ್ಠ ೩೦, ಶಕ ವರ್ಷ ೧೯೪೧)

Bengaluru, Thursday, June 20, 2019 (Jyeishta 30, Shaka Varsha 1941)

ಸಂಚಿಕೆ ೨೫

Issue 25

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಡಾ|| ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು-560 001

ಅಧಿಸೂಚನೆ

ಸಂಖ್ಯೆ: ಕಲೋ/ಸಿಬ್ಬಂದಿ/ನೇನೇ/ಶೀ.ಲಿ/2014-15, ದಿನಾಂಕ: 11.06.2019

ಗ್ರೂಪ್ 'ಸಿ' ವೃಂದದ ಶೀಘ್ರಲಿಪಿಗಾರರ ಹುದ್ದೆಗಾಗಿ ಅಭ್ಯರ್ಥಿಗಳ ನೇಮಕಾತಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 13.07.2019

01. ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಶೀಘ್ರಲಿಪಿಗಾರರ ವೃಂದದಲ್ಲಿ ಖಾಲಿಯಿರುವ ಹುದ್ದೆಗಳನ್ನು ತುಂಬಲು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

02. ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ: 13/07/2019 ಕಛೇರಿ ಸಮಯ 5:30 ಗಂಟೆಯವರೆಗೆ. ತದನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

03. ಅರ್ಜಿ ಸಲ್ಲಿಸುವ ವಿಳಾಸ: ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬಹುಮಹಡಿಗಳ ಕಟ್ಟಡ, ಡಾ|| ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು-560 001.

04. ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಎಲ್ಲಾ ಮಾಹಿತಿಗಳನ್ನು ತುಂಬಿ ಸಲ್ಲಿಸತಕ್ಕದು. ಅಪೂರ್ಣ ಅರ್ಜಿಗಳನ್ನು ಯಾವುದೇ ಕಾರಣ ನೀಡದೆ ತಿರಸ್ಕರಿಸಲಾಗುವುದು. ನಿಗಧಿತ ಅರ್ಜಿ ನಮೂನೆಯನ್ನು ಹೊರತುಪಡಿಸಿ ಬೇರಾವುದೇ ನಮೂನೆಯಲ್ಲಿ ಅರ್ಜಿ ಸಲ್ಲಿಸಿದರೆ ಅವುಗಳನ್ನು ಪರಿಗಣಿಸಲಾಗುವುದಿಲ್ಲ.

05. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ವೆಬ್‌ಸೈಟ್ www.lokayukta.kar.nic.inನ ಮೂಲಕ ಡೌನಲೋಡ್ ಮಾಡಿಕೊಂಡು ಅರ್ಜಿಗಳನ್ನು ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಕೊನೆಯ ದಿನಾಂಕ: 13/07/2019ರ ಸಂಜೆ: 5:30 ಗಂಟೆಯೊಳಗಾಗಿ ಸಲ್ಲಿಸಬೇಕಾಗಿರುತ್ತದೆ.

06. ನೇಮಕಾತಿ ವಿಧಾನ: ಕರ್ನಾಟಕ ಲೋಕಾಯುಕ್ತ ಸಂಸ್ಥೆ, ಬೆಂಗಳೂರು ಇಲ್ಲಿ 'ಸಿ' ವೃಂದದ ಶೀಘ್ರಲಿಪಿಗಾರರು-13, ಹುದ್ದೆಗಳನ್ನು ತುಂಬಲು ಕರ್ನಾಟಕ ಲೋಕಾಯುಕ್ತ (ವೃಂದ, ನೇಮಕಾತಿ ಮತ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಸೇವಾ ಷರತ್ತು) ನಿಯಮಗಳು 1988ರ ಅನುಬಂಧ-'ಎ' ಮತ್ತು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ಹಾಗೂ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 19 ಎಸ್ ಸಿ ಆರ್ 2006, ದಿನಾಂಕ: 14-08-2006 ರನ್ವಯ, ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

07. ಕರ್ನಾಟಕ ಲೋಕಾಯುಕ್ತ (ವೃಂದ, ನೇಮಕಾತಿ ಮತ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಸೇವಾ ಷರತ್ತು) ನಿಯಮಗಳು 1988 ಹಾಗೂ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದಾರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಅರ್ಹತಾ ಪ್ರಮಾಣ ಪತ್ರಗಳ ನೀಡಿಕೆ ಮತ್ತು ನಿಯಮಗಳು 2013 ಮತ್ತು ಆದೇಶ ಸಂಖ್ಯೆ: ಡಿಪಿಎಆರ್ 06 ಪಿಎಲ್ಎಕ್ಸ್ 2012. ದಿನಾಂಕ: 06-11-2013ರನ್ವಯ ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ನೇರನೇಮಕಾತಿಯಿಂದ ತುಂಬಬೇಕಾಗಿರುವ 'ಸಿ' ವೃಂದದ ಶೀಘ್ರಲಿಪಿಗಾರರ ಖಾಲಿ ಹುದ್ದೆಗಳ ವಿವರ:

(೧೦೬೯)೧೦೭೦ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ಭಾಗ ೫

ಕ್ರಮ ಸ ಂಖ್ಯೆ ಹ ುದ್ದೆಯ ಹೆಸರು ವ ೃಂದ ಖಾಲಿ ಹುದ್ದೆಗಳ ಸಂಖ್ಯೆ ವ ೕತನ ಶ್ರೇಣಿ (ರೂ.ಗಳಲ್ಲಿ) ೆ
ಉಳಿಕೆ ಮೂಲ ವ ೃಂದ ಹ ೖದರಾಬಾದ್ - ೆ ಕರ್ನಾಟಕ ವೃಂದ ಒಟ್ಟು
1. ಶೀಘ್ರಲಿಪಿಗಾರರು 'ಸಿ' 12 01 13 ರೂ.27650-650-29600-750-32600-850- 36000-950-39800-1100-46400-1250- 52650 +ಅರ್ಹ ವಿಶೇಷ ಭತ್ಯೆ

08. ಖಾಲಿ ಹುದ್ದೆಗಳ ವರ್ಗೀಕರಣ: ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 08 ಸೆಹಿಮ 95, ದಿನಾಂಕ: 20-6-95 ಮತ್ತು ಸಂಖ್ಯೆ: ಸಿಆಸುಇ 97 ಸೇನನಿ 2002, ದಿನಾಂಕ: 22-11-2002 ಸಂಖ್ಯೆ: ಸಿಆಸುಇ 53 ಸೆನೆನಿ 2007, ದಿನಾಂಕ: 04-01-2008ರ ಪ್ರಕಾರ ಹುದ್ದೆಗಳನ್ನು ಕೆಳಕಂಡಂತೆ ವರ್ಗೀಕರಿಸಲಾಗಿದೆ.

ಸ ವ ುತಳ ಮೀಸಲಾತಿ
ಮೀಸಲಾತಿ ಇತರೆ ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ವ iಾಜಿ ಸ ೖನಿಕ ೆ ಕನ್ನಡ ವ iಾಧ್ಯಮ ಅಭ್ಯರ್ಥಿ ಯೋಜನಾ ನಿರಾಶ್ರಿತ ಅಭ್ಯರ್ಥಿ ಅಂಗವಿಕಲ ಅಭ್ಯರ್ಥಿ ಒಟ್ಟು
ಸಾಮಾನ್ಯ ಅರ್ಹತೆ 01 01 - 01 - - - 03
ಪ ರಿಶಿಷ್ಟ ಜಾತಿ 01 - 01* - - - - 02
ಪ ರಿಶಿಷ್ಟ ಪಂಗಡ - 01 - - - - - 01
ಪ ವ ್ರ ರ್ಗ-I - 01* - - - - - 01
ಪ ವ ್ರ ರ್ಗ-IIಎ - 01* 01* - - - - 02
ಪ ವ ್ರ ರ್ಗ-IIಬಿ +01* 01* - - - - - 01+01
ಪ ವ ್ರ ರ್ಗ-IIIಬಿ - 01 - - - - - 01
ಒಟ್ಟು 02+01 06 02 01 - - - 11+01=12

{(*)ಬ್ಯಾಕ್‌ಲಾಗ್ ಹುದ್ದೆಗಳು. (+*) ಹೈ.ಕ ಸರಿದೂಗಿಸಿರುವ ಹುದ್ದೆ.}

ಸ ವ ುತಳ ಮೀಸಲಾತಿ
ಮೀಸಲಾತಿ ಇತರೆ ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ವ iಾಜಿ ಸ ೖನಿಕ ೆ ಕನ್ನಡ ವ iಾಧ್ಯಮ ಅಭ್ಯರ್ಥಿ ಯೋಜನಾ ನಿರಾಶ್ರಿತ ಅಭ್ಯರ್ಥಿ ಅಂಗವಿಕಲ ಅಭ್ಯರ್ಥಿ ಒಟ್ಟು
ಪ ರಿಶಿಷ್ಟ ಜಾತಿ *01 - - - - - - 01
ಒಟ್ಟು 01 - - - - - - 01

(*ಬ್ಯಾಕ್‌ಲಾಗ್-ಹೈ-ಕ)

09. ಶೈಕ್ಷಣಿಕ ವಿದ್ಯಾರ್ಹತೆ:- ಅಭ್ಯರ್ಥಿಗಳು ಕೆಳಕಂಡ ಹುದ್ದೆಗಳ ಹೆಸರಿನ ಮುಂದೆ ತೋರಿಸಲಾದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರತಕ್ಕದ್ದು. (ಮೂಲ

ಕ್ರಮ ಸಂಖ್ಯೆ ಹ ುದ್ದೆಗಳ ಹೆಸರು ವಿದ್ಯಾರ್ಹತೆ
01 ಶೀಘ್ರಲಿಪಿಗಾರರು 1) ಪ ದ ವಿ ಪೂರ್ವ ಶಿಕ್ಷಣ ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ. 2) ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಪ್ರೌಡ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ. 3) ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಪ್ರೌಡ ದರ್ಜೆ ಶೀಘ ಲಿಪಿ ಪರೀಕ್ಷೆ ್ರ ಉತ್ತೀರ್ಣ ಅಥವಾ ತತ್ಸಮಾನ.

ಸೂಚನೆ: (1) ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯ ಕಮರ್ಷಿಯಲ್ ಪ್ರಾಕ್ಟೀಸ್‌ನ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳ ತೇರ್ಗಡೆಯ ತತ್ಸಮಾನತೆ ಬಗ್ಗೆ ಸರ್ಕಾರದ ಅದೇಶ ಸಂಖ್ಯೆ: ಇಡಿ 174 ಟಿಪಿಇ 2005 ಬೆಂಗಳೂರು, ದಿನಾಂಕ: 09ನೇ ನವೆಂಬರ್ 2006 ರನ್ವಯ ಪರಿಗಣಿಸಲಾಗುವುದು.

(2) ಮೇಲ್ಕಂಡ ಹುದ್ದೆಗಳ ತತ್ಸಮಾನ ವಿದ್ಯಾರ್ಹತೆಯನ್ನು ಸುತ್ತೋಲೆ ಸಂಖ್ಯೆ: ಸಿಆಸುಇ 81 ಸೇವನೆ 2017, ದಿನಾಂಕ: 27/02/2018ರನ್ವಯ, "ಮೂರು ವರ್ಷಗಳ ಡಿಪ್ಲೊಮಾ ಅಥವಾ ಎರಡು ವರ್ಷಗಳ ಐ.ಟಿ.ಐ ಕೋರ್ಸ್ ಅಥವಾ ಎರಡು ವರ್ಷಗಳ ವೃತ್ತಿ ಶಿಕ್ಷಣ ಡಿಪ್ಲೊಮಾ (ಜೆ.ಓ.ಸಿ/ಜೆ.ಓ.ಡಿ.ಸಿ/ಜೆ.ಎಲ್.ಡಿ.ಸಿ) ಅಭ್ಯರ್ಥಿಗಳು ಎನ್.ಐ.ಒ.ಎಸ್. ನ ವತಿಯಿಂದ ನಡೆಸುವ ಒಂದು ಭಾಷಾ ಕೋರ್ಸ್ ಮತ್ತು ಒಂದು ಶೈಕ್ಷಣಿಕ ವಿಷಯದಲ್ಲಿ (ದೂರ ಕಲಿಕೆ ಮಾದರಿಯಲ್ಲಿ) ಅಥವಾ ಪದವಿ ಪೂರ್ವ ಮಂಡಳಿಯು ನಡೆಸುವ ಪರೀಕ್ಷೆಯಲ್ಲಿ ಒಂದು ಭಾಷೆ ಮತ್ತು ಒಂದು ವಿಷಯದಲ್ಲಿ ಉತ್ತೀರ್ಣರಾದಲ್ಲಿ ಮಾತ್ರ ಪಿ.ಯು.ಸಿ.ಗೆ ತತ್ಸಮಾನವೆಂದು" ಪರಿಗಣಿಸಲಾಗುವುದು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ೧೦೭೧

10. ನೇಮಕಾತಿ ಪ್ರಕ್ರಿಯೆ:

* ಗ್ರೂಪ್-'ಸಿ' ವೃಂದ: ಕರ್ನಾಟಕ ಲೋಕಾಯುಕ್ತ (ವೃಂದ, ನೇಮಕಾತಿ ಮತ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಸೇವಾ ಷರತ್ತು) (ತಿದ್ದುಪಡಿ) ನಿಯಮಗಳು 2005ರ ಅನುಬಂಧ-'ಎ' ರಲ್ಲಿ ತಿಳಿಸಿದಂತೆ ಮೇಲ್ಕಂಡ ಹುದ್ದೆಗಳಿಗೆ ನಿಗದಿಪಡಿಸಲಾದ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಮತ್ತು ಮೀಸಲಾತಿ ಆಧಾರದ ಮೇರೆಗೆ ಶ್ರೇಯಾಂಕದಲ್ಲಿರುವ ಅಭ್ಯರ್ಥಿಗಳ ಪೈಕಿ 1:10 ಪ್ರಮಾಣದಲ್ಲಿ ಅರ್ಹತಾ ಪಟ್ಟಿಯನ್ನು ತಯಾರಿಸಿ, ಸದರಿ ಪಟ್ಟಿಯಲ್ಲಿ ಇರುವಂತಹ ಅಭ್ಯರ್ಥಿಗಳಿಗೆ ಈ ಕಛೇರಿಯಿಂದ ಅರ್ಹತಾ ಪರೀಕ್ಷೆ ನಡೆಸಲಾಗುವುದು. ಸದರಿ ಅರ್ಹತಾ ಪರೀಕ್ಷೆಗೆ ನಿಗದಿಪಡಿಸಲಾದ ಗರಿಷ್ಠ 20 ಅಂಕಗಳಿಗೆ ಅಭ್ಯರ್ಥಿಯು ಕನಿಷ್ಠ ಶೇ.50 ರಷ್ಟು ಅಂಕಗಳನ್ನು ಪಡೆದಲ್ಲಿ ಮಾತ್ರ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುವುದು ಮತ್ತು ಕರ್ನಾಟಕ ಲೋಕಾಯುಕ್ತ ವೃಂದ ಮತ್ತು ನೇಮಕಾತಿ ನಿಯಮದ 'ಅಪೆಂಡಿಕ್ಸ್-ಎ' ರ ಪ್ರಕಾರ ಸದರಿ ಅಂಕಗಳನ್ನೂ ಸಹಾ ಅಂತಿಮ ಶ್ರೇಯಾಂಕಕ್ಕೆ ಪರಿಗಣಿಸಲಾಗುವುದು.

ಕ್ರಮ ಸ ಂಖ್ಯೆ ಪ ವರ್ಗ ್ರ ಶುಲ್ಕ
1. ಸಾಮಾನ್ಯ ಅರ್ಹತೆ, ಪ್ರವರ್ಗ-2(ಎ), 2(ಬಿ), 3(ಎ), 3(ಬಿ) ಮತ್ತು ಮಾಜಿ ಸ ೖನಿಕರಿಗೆ. ೆ `. 300
2. ಪ ರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ. ಅರ್ಜಿ ಶುಲ್ಕ ವಿನಾಯಿತಿ ಇರುತ್ತದೆ.

12. ಅರ್ಜಿ ಶುಲ್ಕ ಪಾವತಿ ವಿಧಾನ:

(ಅ) www.lokayukta.kar.nic.inನ ಮೂಲಕ ಅರ್ಜಿಯನ್ನು ಡೌನಲೋಡ್ ಮಾಡಿಕೊಂಡು ಅರ್ಜಿಗಳನ್ನು ಖುದ್ದಾಗಿ ಅಥವಾ ನೊಂದಾಯಿತ ಅಂಚೆ ಮೂಲಕ ಅರ್ಜಿ ಸಲ್ಲಿಸುವ ಸಮಯದಲ್ಲಿ `.300/- (ಮುನ್ನೂರು ರೂಗಳು ಮಾತ್ರ) ಕ್ರಾಸ್ ಮಾಡಿದ ಡಿ.ಡಿ ಅಥವಾ ಇಂಡಿಯನ್ ಪೋಸ್ಟಲ್ ಆರ್ಡರ್‌ನ್ನು ನಿಬಂಧಕರು, ಕರ್ನಾಟಕ ಲೋಕಾಯುಕ್ತ, ಬೆಂಗಳೂರು. ಇವರ ಹೆಸರಿಗೆ ಸಂದಾಯವಾಗುವಂತೆ ಪಡೆದು ಕಡ್ಡಾಯವಾಗಿ ಲಗತ್ತಿಸತಕ್ಕದ್ದು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ಇರುತ್ತದೆ. (ಡಿ.ಡಿ/ಐ.ಪಿ.ಓ. ಅನ್ನು ಈ ಅಧಿಸೂಚನೆ ಹೊರಡಿಸಿದ ದಿನಾಂಕದ ನಂತರ ಖರೀದಿಸಿರಬೇಕು). ಅಭ್ಯರ್ಥಿಗಳು ಅರ್ಜಿಯೊಂದಿಗೆ ಡಿ.ಡಿ/ಐ.ಪಿ.ಓ. ಲಗತ್ತಿಸಿದಿದ್ದಲ್ಲಿ, ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಈ ಸೌಲಭ್ಯಗಳನ್ನು ಹೊರತುಪಡಿಸಿ ಮನಿ ಆರ್ಡರ್ ಮೂಲಕ ಶುಲ್ಕ ಸ್ವೀಕರಿಸಲಾಗುವುದಿಲ್ಲ. ಶುಲ್ಕವನ್ನು ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳು ಡಿ.ಡಿ/ಐ.ಪಿ.ಓ. ನಕಲು ಪ್ರತಿಯನ್ನು ದಾಖಲಾತಿಗಳ ಪರಿಶೀಲನಾ ಸಮಯದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ ಅಥವಾ ಅದನ್ನು ಇಲಾಖೆಯು ನಡೆಸುವ ಇತರೆ ನೇಮಕಾತಿಗಳಿಗೆ ಹೊಂದಿಸಿಕೊಳ್ಳಲಾಗುವುದಿಲ್ಲ.

(ಆ) ಅಭ್ಯರ್ಥಿಗಳಿಗೆ ನೀಡಿರುವ ಸೂಚನೆಗಳಲ್ಲಿ ಮೀಸಲಾತಿ, ವಿದ್ಯಾರ್ಹತೆ ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಕೆಲಸದ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.

➢ ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭದ ದಿನಾಂಕ:12/06/2019. ➢ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13/07/2019 ಸಂಜೆ:5:30 ಗಂಟೆಯವರೆಗೆ.

13. ಅಭ್ಯರ್ಥಿಯು ಅರ್ಜಿಯನ್ನು ತುಂಬುವಾಗ ತನ್ನನ್ನು ಯಾವ ಮೀಸಲಾತಿ ವೃಂದದಲ್ಲಿ ಪರಿಗಣಿಸಬೇಕೆಂದು ಇಚ್ಚಿಸುವರೋ ಅದನ್ನು ಅರ್ಜಿಯಲ್ಲಿ ಮೀಸಲಿರಿಸಿರುವ ಅಂಕಣದಲ್ಲಿನ ಉಳಿಕೆ ಮೂಲ ವೃಂದ/ಸ್ಥಳೀಯ ವೃಂದವೆಂದು ಸ್ಪಷ್ಟವಾಗಿ ಗುರುತು ಮಾಡತಕ್ಕದು. ನಂತರ ಅರ್ಜಿಯಲ್ಲಿ ಕೋರಿರುವ ಉಳಿಕೆ ಮೂಲ ವೃಂದ/ಸ್ಥಳೀಯ ವೃಂದವನ್ನು ಬದಲಾಯಿಸಿಕೊಳ್ಳುವುದಕ್ಕೆ ಅನುಮತಿಸಲಾಗುವುದಿಲ್ಲ. (ಸ್ಥಳೀಯ ವೃಂದವೆಂದರೆ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾದ ವೃಂದ).

14. ವಯೋಮಿತಿ:-

ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕದಂದು ಎಲ್ಲಾ ಪ್ರವರ್ಗದವರಿಗೆ ಕನಿಷ್ಠ 18 ವರ್ಷವಾಗಿರಬೇಕು ಮತ್ತು ಗರಿಷ್ಠ

ಎ) ಪ.ಜಾ/ಪ.ಪಂ/ಪ್ರ-1 40 ವರ್ಷ
ಬಿ) ಪ್ರವರ್ಗ - II (ಎ), II (ಬಿ), III (ಎ), III (ಬಿ) 38 ವರ್ಷ
ಸಿ) ಸಾಮಾನ್ಯ ಆರ್ಹತೆ 35 ವರ್ಷ

ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಅನುಸಾರ ಈ ಕೆಳಗಿನ ಸಂದರ್ಭಗಳಲ್ಲಿ ಸದರಿ ನಿಯಮಗಳಲ್ಲಿ ನಿಗಧಿಪಡಿಸಿರುವ ಗರಿಷ್ಟ ವಯೋಮಿತಿಯನ್ನು ಕೆಳಗೆ ತಿಳಿಸಿರುವಷ್ಟು ಮಟ್ಟಿಗೆ ಹೆಚ್ಚಿಸಲಾಗುವುದು. ಕನಿಷ್ಟ ಮತ್ತು ಗರಿಷ್ಟ ವಯೋಮಿತಿಯು ಅರ್ಜಿ ಸಲ್ಲಿಸಬೇಕಾದ ದಿನಾಂಕವನ್ನು ಆಧರಿಸಿರುತ್ತದೆ.

(i) ಅಭ್ಯರ್ಥಿಯು, ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಅಥವಾ ಸ್ಥಳೀಯ ಪ್ರಾಧಿಕಾರದಲ್ಲಿ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪನೆಯಾದ ಅಥವಾ ರಾಜ್ಯ ಸರ್ಕಾರದ ಸ್ವಾಮ್ಯ ಅಥವಾ ನಿಯಂತ್ರಣದಲ್ಲಿರುವ ಸ್ಥಳೀಯ ನಿಗಮದಲ್ಲಿ ಹುದ್ದೆ ಹೊಂದಿರುವ ಅಥವಾ ಹಿಂದೆ ಹೊಂದಿದ್ದಲ್ಲಿ ಸೇವೆ ಸಲ್ಲಿಸುತ್ತಿರುವರೋ ಅಥವಾ ಹಿಂದೆ ಸಲ್ಲಿಸಿದ್ದರೋ ಅಷ್ಟು ವರ್ಷಗಳು ಅಥವಾ 10 ವರ್ಷ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು.

(ii) ಅಭ್ಯರ್ಥಿಯು ಮಾಜಿ ಸೈನಿಕನಾಗಿದ್ದಲ್ಲಿ ಅವನು ಸಶಸ್ತ್ರ ದಳದಲ್ಲಿ ಎಷ್ಟು ವರ್ಷ ಸೇವೆ ಸಲ್ಲಿಸಿರುವನೋ ಆ ವರ್ಷಗಳಿಗೆ 03 ವರ್ಷಗಳನ್ನು ಸೇರಿಸಿದರೆ ಎಷ್ಟು ವರ್ಷಗಳು ಆಗುವುದೋ ಅಷ್ಟು ವರ್ಷಗಳು.

೧೦೭೨ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ಭಾಗ ೫

ವಿವರಣೆ: (ಎ) ಮಾಜಿ ಸೈನಿಕ ಎಂದರೆ ಸಶಸ್ತ್ರ ದಳಗಳಾದ ನಿಯಮಿತ ಭೂದಳ, ನೌಕಾದಳ ಮತ್ತು ವಾಯುದಳದಲ್ಲಿ ಯಾವುದೇ ಶ್ರೇಣಿಯಲ್ಲಿ (ಯೋಧ ಅಥವಾ ಯೋಧರಲ್ಲದ ಹುದ್ದೆಗಳಲ್ಲಿ) ಸೇವೆ ಸಲ್ಲಿಸಿದ ವ್ಯಕ್ತಿ, ಆದರೆ ಡಿಫೆನ್ಸ್ ಸೆಕ್ಯೂರಿಟಿ ಕೋರ್, ಜನರಲ್ ರಿಸರ್ವ್ ಇಂಜಿನಿಯರಿಂಗ್ ಫೋರ್ಸ್, ಲೋಕಸಹಾಯಕ ಸೇನಾ ಮತ್ತು ಪ್ಯಾರಾ ಮಿಲಿಟರಿ ದಳದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ ಸೇರ್ಪಡೆಯಾಗುವುದಿಲ್ಲ;

ಮತ್ತು (ಬಿ) ಕೇಂದ್ರ ಸಶಸ್ತ್ರ ದಳಗಳಲ್ಲಿ ಸೇವೆ ಸಲ್ಲಿಸುವಾಗ ಹತರಾದ ಅಥವಾ ಶಾಶ್ವತವಾಗಿ ದೈಹಿಕ ವಿಕಲತೆಹೊಂದಿದ ವ್ಯಕ್ತಿಗಳ ಕುಟುಂಬದವರು (ಸಂದರ್ಭಾನುಸಾರ ಹೆಂಡತಿ ಅಥವಾ ಗಂಡ ಮತ್ತು ಮಕ್ಕಳು ಮತ್ತು ಮಲ ಮಕ್ಕಳು) ಮಾಜಿ ಸೈನಿಕ ಮೀಸಲಾತಿಗೆ ಅರ್ಹರಾಗಿರುತ್ತಾರೆ. ಆದರೆ ಅಂಥಹವರುಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದಿಲ್ಲ.

(ಅ) ಮೇಲ್ಕಂಡ ದಳದ ಸೇನೆಯಿಂದ ನಿವೃತ್ತಿ ಹೊಂದಿದ ನಂತರ ನಿವೃತ್ತಿ ವೇತನ ಪಡೆಯುತ್ತಿರುವ

ಅಥವಾ

(ಆ) ವೈದ್ಯಕೀಯ ಕಾರಣಗಳಿಂದ ಮಿಲಿಟರಿ ಸೇವೆಯಿಂದ ಬಿಡುಗಡೆಯಾದ ಅಥವಾ ವ್ಯಕ್ತಿಯ ಹಿಡಿತಕ್ಕೂ ಮೀರಿದ ಪರಿಸ್ಥಿತಿಗಳಿಂದ ಮತ್ತು ವೈದ್ಯಕೀಯ ಅಥವಾ ಅಸಾಮರ್ಥ್ಯದ ಪಿಂಚಣಿ ಪಡೆದು ಸೇವೆಯಲ್ಲಿ ಬಿಡುಗಡೆಯಾದವನು

ಅಥವಾ

(ಇ) ಸ್ವಂತ ಕೋರಿಕೆ ಹೊರತುಪಡಿಸಿ ಸಿಬ್ಬಂದಿ ಕಡಿತದ ಪರಿಣಾಮದಿಂದ ಅಂತಹ ಸೇನೆಯಿಂದ ಬಿಡುಗಡೆಹೊಂದಿದ ವ್ಯಕ್ತಿ

ಅಥವಾ

(ಈ) ತನ್ನ ಸ್ವಂತ ಕೋರಿಕೆ ಮೇರೆಗೆ ಅಥವಾ ದುರ್ನಡತೆ ಅಥವಾ ಅಸಾಮರ್ಥ್ಯದ ಕಾರಣದಿಂದಾಗಿ ತೆಗೆದುಹಾಕಿರುವ ಅಥವಾ ಕರ್ತವ್ಯದಿಂದ ವಜಾ ಮಾಡಿದ ವ್ಯಕ್ತಿಗಳಿಂದ ಹೊರತುಪಡಿಸಿ ನಿರ್ದಿಷ್ಟ ಅವಧಿಯನ್ನು ಪೂರೈಸಿದ ತರುವಾಯ ಬಿಡುಗಡೆಹೊಂದಿದ ವ್ಯಕ್ತಿ ಮತ್ತು ಗ್ರಾಚ್ಯುಟಿ ಪಡೆಯುತ್ತಿರುವ ವ್ಯಕ್ತಿ ಮತ್ತು ಪ್ರಾಂತೀಯ ಸೇವೆಯ ಈ ಕೆಳಗೆ ಹೆಸರಿಸಿದ ವರ್ಗದ ಸಿಬ್ಬಂದಿಯವರು

(1) ನಿರಂತರ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪಿಂಚಣಿದಾರರು.

(2) ಮಿಲಿಟರಿ ಸೇವೆಯಿಂದಾಗಿ ಉಂಟಾದ ದೈಹಿಕ ಅಸಾಮರ್ಥ್ಯತೆ ಹೊಂದಿ ಬಿಡುಗಡೆಯಾದ ವ್ಯಕ್ತಿ

(3) ಗ್ಯಾಲಂಟ್ರಿ ಪ್ರಶಸ್ತಿ ವಿಜೇತರು.

ಈ ಮೇಲ್ಕಂಡ ವರ್ಗದ ಅಭ್ಯರ್ಥಿಗಳು ಮಾಜಿ ಸೈನಿಕ ಮೀಸಲಾತಿಗೆ ಅರ್ಹರಿರುತ್ತಾರೆ.

ಕೇಂದ್ರ ಸಶಸ್ತ್ರ ದಳದ ಸೇವೆಯಲ್ಲಿ ವ್ಯಕ್ತಿಗಳು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಮಾಜಿ ಸೈನಿಕರ ವರ್ಗದಡಿ ಬರುವ ವ್ಯಕ್ತಿಗೆ ಒಪ್ಪಂದವು ಪೂರ್ಣವಾಗಲು 01 ವರ್ಷಕ್ಕೆ ಮುನ್ನ ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಲು ಹಾಗೂ ಅವರಿಗೆ ಮಾಜಿ ಸೈನಿಕರಿಗೆ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಹೊಂದಲು ಅನುಮತಿ ನೀಡಲಾಗಿದೆ. ಆದರೆ, ಸಮವಸ್ತ್ರವನ್ನು ತ್ಯಜಿಸಲು ಅನುಮತಿ ನೀಡುವವರೆಗೆ ರಾಜ್ಯ ನಾಗರೀಕ ಸೇವೆ ಅಥವಾ ಹುದ್ದೆಗಳಿಗೆ ನೇಮಕ ಹೊಂದುವಂತ್ತಿಲ್ಲ.

iii) ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಅಭ್ಯರ್ಥಿಯಾಗಿದ್ದಲ್ಲಿ, ಅವರು ಸೇವೆ ಸಲ್ಲಿಸಿರುವಷ್ಟು ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

(iv) ಅಭ್ಯರ್ಥಿಯು ಗ್ರಾಮ ಸಮೂಹ ಪರಿಶೀಲಕರಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅವರು ಸೇವೆ ಸಲ್ಲಿಸಿರುವಷ್ಟು ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

(v) ಅಭ್ಯರ್ಥಿಯು ದೈಹಿಕ ಅಂಗವಿಕಲತೆ ಹೊಂದಿರುವ ಸಂದರ್ಭದಲ್ಲಿ 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

(vi) ಅಭ್ಯರ್ಥಿಯು ಜನಗಣತಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದಲ್ಲಿ, ಅವರು ಸೇವೆ ಸಲ್ಲಿಸಿರುವಷ್ಟು ವರ್ಷಗಳು ಅಥವಾ 05 ವರ್ಷಗಳು, ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

(vii) ಅಭ್ಯರ್ಥಿಯು ವಿಧವೆಯಾಗಿರುವ ಸಂದರ್ಭದಲ್ಲಿ 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

(viii) ಅಭ್ಯರ್ಥಿಯು ಜೀತ ಕಾರ್ಮಿಕರಾಗಿದ್ದಲ್ಲಿ, 10 ವರ್ಷಗಳ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

(ಅಭ್ಯರ್ಥಿಗಳ ಜನ್ಮ ದಿನಾಂಕವನ್ನು ಅವರ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆಯ ಪ್ರಮಾಣಪತ್ರದಲ್ಲಿ ನಮೂದಿಸಿರುವಂತೆ

ಪರಿಗಣಿಸಲಾಗುವುದು. ಈ ಹೊರತು ಇತರೆ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ).

15. ಮೀಸಲಾತಿ ಕೋರುವ ಅಭ್ಯರ್ಥಿಗಳು:

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1, 2ಎ, 2ಬಿ, ಮತ್ತು 3ಬಿ ಪ್ರವರ್ಗಗಳ ಅಡಿಯಲ್ಲಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಕರ್ನಾಟಕ ಸರ್ಕಾರವು ನಿಗಧಿಪಡಿಸಿದ ನಮೂನೆ-ಡಿ, ನಮೂನೆ-ಇ ಮತ್ತು ನಮೂನೆ-ಎಫ್ ರಲ್ಲಿ ಸಕ್ಷಮ ಪ್ರಾಧಿಕಾರವು ನೀಡಿರುವ ಪ್ರಮಾಣ ಪತ್ರಗಳನ್ನು ಹೊಂದಿರತಕ್ಕದ್ದು ಹಾಗೂ ಅರ್ಜಿ ಸಲ್ಲಿಸುವ ದಿನಾಂಕದೊಳಗೆ ಪಡೆದಿರಬೇಕು ಹಾಗೂ ಸಿಂಧು ಆಗಿರಬೇಕು.

16. ಗ್ರಾಮೀಣ ಅಭ್ಯರ್ಥಿ:

ಗಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಿರುವ ನಿಯಮಗಳ ರೀತ್ಯಾ 01 ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವವರು ಈ ಮೀಸಲಾತಿಯನ್ನು ಪಡೆಯಲು ಅರ್ಹರು. ಈ ಪ್ರಮಾಣ ಪತ್ರಗಳು ಅರ್ಜಿ ಸಲ್ಲಿಸುವ ದಿನಾಂಕದೊಳಗೆ ಪಡೆದಿರಬೇಕು ಹಾಗೂ ಸಿಂಧು ಆಗಿರಬೇಕು ಮತ್ತು ಪರಿಶೀಲನೆಯ ಸಮಯದಲ್ಲಿ ಹಾಜರುಪಡಿಸತಕ್ಕದ್ದು.

➢ ಗಾಮೀಣ ಮೀಸಲಾತಿ ಕೋರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, 2ಬಿ, 3ಬಿ, ವರ್ಗಗಳಿಗೆ ಸೇರಿದ ಅಭ್ಯರ್ಥಿಗಳು ನಮೂನೆ-2ರಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರವನ್ನು ಅರ್ಜಿ ಸಲ್ಲಿಸುವ ದಿನಾಂಕದೊಳಗೆ ಪಡೆದಿರಬೇಕು ಹಾಗೂ ಸಿಂಧು ಆಗಿರಬೇಕು ಮತ್ತು ಮೂಲ ದಾಖಲಾತಿ ಪರಿಶೀಲನೆಗೆ ತಪ್ಪದೇ ಹಾಜರುಪಡಿಸತಕ್ಕದ್ದು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ೧೦೭೩

17. ಮಾಜಿ ಸೈನಿಕ ಅಭ್ಯರ್ಥಿಗಳು

ಈ ಮೀಸಲಾತಿ ಕೋರುವ ಅಭ್ಯರ್ಥಿಗಳು ಮಿಲಿಟಿರಿ ಸೇವೆಯಿಂದ ಬಿಡುಗಡೆ ಮಾಡಲಾದ ಅಥವಾ ವಿಮುಕ್ತಿಗೊಳಿಸಿದ ಪ್ರಮಾಣಪತ್ರವನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪಡೆದಿರಬೇಕು ಹಾಗೂ ಸಿಂಧು ಆಗಿರಬೇಕು.

 ಟಿಪ್ಪಣಿ: ಮಾಜಿ ಸೈನಿಕ ಮೀಸಲಾತಿ ಕೋರುವ ಅಭ್ಯರ್ಥಿಗಳು ನಿಯಮಾನುಸಾರ ಆ ಮೀಸಲಾತಿಗೆ ಅರ್ಹರೇ ಎಂಬುದನ್ನು ಹತ್ತಿರದ ಜಿಲ್ಲಾ ಸೈನಿಕ ಬೋರ್ಡ್‌ನಿಂದ ತಿಳಿದುಕೊಂಡು ಮೀಸಲಾತಿಯನ್ನು ಕೋರುವುದು.

18. ಅನುಚ್ಛೇಧ 371(ಜೆ) ರಂತೆ ಹೈದಾರಾಬಾದ್-ಕರ್ನಾಟಕ ಪ್ರದೇಶಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮೀಸಲಾತಿ:

ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದಾರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) (ಅರ್ಹತಾ ಪ್ರಮಾಣ ಪತ್ರಗಳ ನೀಡಿಕೆ) ನಿಯಮಗಳು 2013ಕ್ಕೆ ಸಂಬಂಧಿಸಿದಂತೆ ನೇರ ನೇಮಕಾತಿಯಲ್ಲಿ ಸ್ಥಳೀಯ ವ್ಯಕ್ತಿಯೆಂಬ ಮೀಸಲಾತಿಯನ್ನು ಕೋರುವವರು ಸದರಿ ನಿಯಮದಲ್ಲಿ ಗೊತ್ತುಪಡಿಸಿದಂತೆ ಅರ್ಜಿ ಸಲ್ಲಿಸಿದ ದಿನಾಂಕದಂದು ಅಥವಾ ಅದಕ್ಕೂ ಮುಂಚಿತವಾಗಿಯೇ ಪ್ರಮಾಣ ಪತ್ರವನ್ನು ಸಕ್ಷಮ ಪ್ರಾಧಿಕಾರವಾದ ಸಂಬಂಧಪಟ್ಟ ಉಪ-ವಿಭಾಗದ ಸಹಾಯಕ ಆಯುಕ್ತರವರಿಂದ ಸಹಿ, ಮೊಹರು ಮತ್ತು ಜಾರಿ ಮಾಡಿದ ದಿನಾಂಕದೊಂದಿಗೆ ಪಡೆದಿಟ್ಟುಕೊಂಡಿರತಕ್ಕದ್ದು. ಈ ನಮೂನೆಯನ್ನು ಹೊರತುಪಡಿಸಿ ಇತರೆ ಯಾವುದೇ ನಮೂನೆಗಳಲ್ಲಿ ಪಡೆಯಲಾದ ಅರ್ಹತಾ ಪ್ರಮಾಣಪತ್ರವನ್ನು ತಿರಸ್ಕರಿಸಲಾಗುವುದು. ನಿಗಧಿಪಡಿಸಿದ ನಮೂನೆಯಲ್ಲಿ ಅರ್ಜಿ ಸಲ್ಲಿಸುವ ದಿನಾಂಕದೊಳಗೆ ಪಡೆದಿರಬೇಕು ಪಡೆದಿರಬೇಕು ಹಾಗೂ ಸಿಂಧು ಆಗಿರಬೇಕು.

19. ಸರ್ಕಾರಿ ಸೇವೆಯಲ್ಲಿರುವ ನೌಕರರಿಗೆ

ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಂದ ಅರ್ಜಿ ಸಲ್ಲಿಸುವ ದಿನಾಂಕದೊಳಗೆ ನಿರಾಕ್ಷೇಪಣಾ ಪ್ರಮಾಣಪತ್ರ ಪಡೆದಿಟ್ಟುಕೊಂಡು ಸಲ್ಲಿಸತಕ್ಕದ್ದು.

20. ಅರ್ಹತಾ ಷರತ್ತುಗಳು:

01 ಭಾರತೀಯ ನಾಗರೀಕನಾಗಿರತಕ್ಕದ್ದು ಹಾಗೂ ಆಧಾರ್ ಸಂಖ್ಯೆಯನ್ನು ಹೊಂದಿರಬೇಕು. 02 ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯರನ್ನು ಹೊಂದಿರುವ ಪುರುಷ ಅಭ್ಯರ್ಥಿ ಮತ್ತು ಈಗಾಗಲೇ ಇನ್ನೊಬ್ಬ ಹೆಂಡತಿಯಿರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ನೇಮಕಾತಿಗೆ ಅರ್ಹರಾಗುವುದಿಲ್ಲ.

ಅಭ್ಯರ್ಥಿಯು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವವಿರುವ ಯಾವುದೇ ದೈಹಿಕ ನ್ಯೂನ್ಯತೆಯಿಂದ ಮುಕ್ತರಾಗಿರಬೇಕು.

03 ದೈಹಿಕವಾಗಿ ಅನರ್ಹರಾಗಿದ್ದಾರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ರಾಜ್ಯ ಸರ್ಕಾರವು ಕಾಯ್ದಿರಿಸಿಕೊಂಡಿದೆ ಮತ್ತು ಸರ್ಕಾರದ ವಿವೇಚನೆಯು ಯಾವುದೇ ವಿಧದಲ್ಲೂ ಈ ನಿಯಮಗಳ ಮೂಲಕ ಸೀಮಿತವಾಗಿರುವುದಿಲ್ಲ.

21. ವಿಶೇಷ ಸೂಚನೆಗಳು

 ಅಭ್ಯರ್ಥಿಗಳು ವಿದ್ಯಾರ್ಹತೆ/ಅಂಕಪಟ್ಟಿ/ಯಾವುದೇ ಮೀಸಲಾತಿ ಕೋರಬಯಸುವವರು ಎಲ್ಲಾ ಪ್ರಮಾಣ ಪತ್ರಗಳ ಪ್ರತಿಗಳನ್ನು ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಅರ್ಜಿಯೊಂದಿಗೆ ಸಲ್ಲಿಸತಕ್ಕದು, ನಿಗದಿಪಡಿಸಿದ ಅವಧಿಯ ನಂತರ ಬಂದಂತಹ ಅರ್ಜಿ ಮತ್ತು ಯಾವುದೇ ದಾಖಲಾತಿಗಳನ್ನು ಪರಿಗಣಿಸಲಾಗುವುದಿಲ್ಲ.

 ಅರ್ಜಿಯಲ್ಲಿ ಸಂಪರ್ಕದ ಉದ್ದೇಶಕ್ಕಾಗಿ ಸಂಬಂಧಿಸಿದಂತೆ ಕೊಟ್ಟಿರುವ ಸೂಕ್ತ ಕಾಲಂಗಳನ್ನು ತುಂಬುವಾಗ ಇ-ಮೇಲ್ ಐ.ಡಿ.ಯನ್ನು ಸರಿಯಾಗಿ ನಮೂದಿಸತಕ್ಕದ್ದು. ಸರಿಯಾದ ಮಾಹಿತಿ ಒದಗಿಸದೇ ಇ-ಮೇಲ್ ಸಂದೇಶ ಬರದಿದ್ದಲ್ಲಿ ಪ್ರಾಧಿಕಾರ ಹೊಣೆಯಾಗುವುದಿಲ್ಲ.

 ಅಭ್ಯರ್ಥಿಗಳ ಅಪೂರ್ಣವಾಗಿರುವ, ಅರ್ಜಿಗಳನ್ನು ತಿರಸ್ಕರಿಸಲಾಗುವುದು.

 ಅಭ್ಯರ್ಥಿಯು ತಮ್ಮ ಮಾಹಿತಿಗಾಗಿ ಭರ್ತಿಮಾಡಿ ಸಲ್ಲಿಸಿದ ಅರ್ಜಿಯ ಒಂದು ಫೋಟೋ ಪ್ರತಿಯನ್ನು ಕಡ್ಡಾಯವಾಗಿ ತಮ್ಮೊಂದಿಗೆ ಇಟ್ಟುಕೊಳ್ಳಲು ಸೂಚಿಸಿದೆ.

 ನೇಮಕಾತಿಯು ತಾತ್ಕಾಲಿಕವಾಗಿದ್ದು, ಆಯ್ಕೆಯಾಗಿ ನೇಮಕಗೊಂಡ ಅಭ್ಯರ್ಥಿಗಳು 2 ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಬೇಕಾಗುತ್ತದೆ.

 ಆಯ್ಕೆಯಾದ ಅಭ್ಯರ್ಥಿಗಳನ್ನು ಈ ಸಂಸ್ಥೆಯ ಯಾವುದೇ ಶಾಖಾ ಕಚೇರಿಗಳಿಗೆ ಕೂಡ ನೇಮಕ/ವರ್ಗಾವಣೆ ಮಾಡಬಹುದಾಗಿದೆ.

ದಿನಾಂಕ:31-3-2006ರಲ್ಲಿ ತಿಳಿಸಿದಂತೆ ಕಾಂಟ್ರಿಬ್ಯೂಟರಿ ಪಿಂಚಣಿ ಸ್ಕೀಂಗೆ ವಂತಿಗೆ ನೀಡಬೇಕಾಗುತ್ತದೆ.

 ಕೆ.ಸಿ.ಎಸ್. (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ಪ್ರಕಾರ ಅಥವಾ ಇನ್ನಾವುದೇ ನಿಯಮಗಳ ಪ್ರಕಾರ ಅಭ್ಯರ್ಥಿಯು ಅನರ್ಹರಾಗಿದ್ದಲ್ಲಿ ನೇಮಕಾತಿಗೆ ಅರ್ಹರಾಗುವುದಿಲ್ಲ.

 ದಾಖಲೆಗಳ ಪರಿಶೀಲನಾ ಸಂದರ್ಭದಲ್ಲಿ ಅಭ್ಯರ್ಥಿಯು ಅರ್ಜಿಯಲ್ಲಿ ಒದಗಿಸಿರುವ ಮಾಹಿತಿಯು ಸುಳ್ಳೆಂದು ಕಂಡು ಬಂದಲ್ಲಿ ಅಭ್ಯರ್ಥಿತನ ರದ್ದಾಗುತ್ತದೆ ಒಂದು ವೇಳೆ ಅವರು ಆಯ್ಕೆಯಾಗಿ ನೇಮಕಾತಿಯಾಗಿದ್ದರೂ ಸಹಾ ಮತ್ತು ಅವರ ವಿರುದ್ಧ ತಪ್ಪು ಮಾಹಿತಿಯನ್ನು ಒದಗಿಸಿರುವದಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ವ್ಯವಹರಣೆಯನ್ನು ಜರುಗಿಸಲಾಗುವುದು ಮತ್ತು ಹುದ್ದೆಯಿಂದ ವಜಾಗೊಳಿಸಲಾಗುವುದು.

೧೦೭೪ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ಭಾಗ ೫

 ಅಭ್ಯರ್ಥಿಯು ಜನ್ಮ ದಿನಾಂಕವನ್ನು ನಮೂದಿಸಿರುವ ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯ ಪ್ರಮಾಣ ಪತ್ರವನ್ನು ಪರಿಶೀಲನೆ ಸಮಯದಲ್ಲಿ ಹಾಜರುಪಡಿಸತಕ್ಕದ್ದು.

 ಅಭ್ಯರ್ಥಿಯು ಸ್ವಯಂ ದೃಡೀಕೃತ ಛಾಯಾಪ್ರತಿಗಳ ಗುಚ್ಚದೊಂದಿಗೆ ಎಲ್ಲಾ ಮೂಲ ಯೋಗ್ಯತಾ ಪತ್ರಗಳನ್ನು ಅಂದರೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/10ನೇ ತರಗತಿ, ಪದವಿ ಪೂರ್ವ ಶಿಕ್ಷಣದ ಅಂಕಪಟ್ಟಿ, ಶೀಘ್ರಲಿಪಿ ಪರೀಕ್ಷೆ, ಬೆರಳಚ್ಚು ಪರೀಕ್ಷೆಗಳ ಅಂಕಪಟ್ಟಿಗಳು, ಜಾತಿ ಪ್ರಮಾಣ ಪತ್ರಗಳು ಯಾವುದೇ ಮೀಸಲಾತಿ ಕ್ಲೇಮ್ ಮಾಡುವ ಪ್ರಮಾಣ ಪತ್ರಗಳು ಮತ್ತು ಮೂರು ನಡತೆ ಪ್ರಮಾಣ ಪತ್ರಗಳನ್ನು (ಒಂದು ನಡತೆ ಪ್ರಮಾಣ ಪತ್ರವನ್ನು ಅಂತಿಮವಾಗಿ ವ್ಯಾಸಂಗ ಮಾಡಿದ ಶಿಕ್ಷಣ ಸಂಸ್ಥೆಯಿಂದಲೂ, ಇನ್ನೆರಡು ನಡತೆ ಪ್ರಮಾಣ ಪತ್ರಗಳನ್ನು ಗೌರವಾನ್ವಿತ ವ್ಯಕ್ತಿಗಳಿಂದಲೂ ಪಡೆದು) ಪರಿಶೀಲನಾ ಸಮಯದಲ್ಲಿ ಹಾಜರುಪಡಿಸತಕ್ಕದ್ದು.

 "ಸಿ" ವೃಂದದ 1:10 ಪಟ್ಟಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಆರ್ಹತಾ ಪರೀಕ್ಷೆಯನ್ನು ಈ ಸಂಸ್ಥೆಯ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ನಡೆಸಲಾಗುವುದು. ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಗೆ ಸಮಯಕ್ಕೆ ಸರಿಯಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗತಕ್ಕದ್ದು. 1:10 ಸೂಕ್ತ ಅಭ್ಯರ್ಥಿಗಳು ಲಭ್ಯವಾಗದಿದ್ದಲ್ಲಿ ಮುಂದಿನ ಶ್ರೇಯಾಂಕದ ಅಭ್ಯರ್ಥಿಗಳನ್ನು ಪರಿಗಣಿಸುವ ಹಕ್ಕನ್ನು ನೇಮಕಾತಿ ಪ್ರಾಧಿಕಾರ ಹೊಂದಿರುತ್ತದೆ.

 ಈ ಪ್ರಕಟಣೆ ಹೊರಡಿಸಿದ ನಂತರ ಅಂತಿಮ ಆಯ್ಕೆ ಪಟ್ಟಿ ಆಗುವವರೆಗೆ, ಶೀಘ್ರಲಿಪಿಗಾರರ ಹುದ್ದೆಗಳು ಖಾಲಿಯಾದಲ್ಲಿ ಸರ್ಕಾರದ ಅನುಮತಿಗೊಳಪಟ್ಟು ಅವುಗಳನ್ನು ಇದೇ ಪ್ರಕಟಣೆಯ ಪ್ರಕಾರ ತುಂಬುವ ಹಕ್ಕನ್ನು ಕಾಯ್ದಿರಿಸಲಾಗಿದೆ.

 ಅಭ್ಯರ್ಥಿಗಳು ಒಂದು ಹುದ್ದೆಗೆ ಒಂದೇ ಅರ್ಜಿ ಸಲ್ಲಿಸತಕ್ಕದು. ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿದಲ್ಲಿ, ಅಂತಹ ಅರ್ಜಿಗಳನ್ನು ಯಾವುದೇ ಮುನ್ಸೂಚನೆಯಿಲ್ಲದೇ ತಿರಸ್ಕರಿಸಲಾಗುವುದು. (ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಅಭ್ಯರ್ಥಿಗಳು ಮಾತ್ರ ಉಳಿಕೆ ಮೂಲ ವೃಂದದಲ್ಲಿ ಪರಿಗಣಿಸಲು ಬಯಸಿದಲ್ಲಿ ಮಾತ್ರ ಪ್ರತ್ಯೇಕ ಅರ್ಜಿ ಸಲ್ಲಿಸಿ, ಉಳಿಕೆ ಮೂಲವೃಂದದಲ್ಲಿ ಆಯ್ಕೆಯಾದಲ್ಲಿ, ಹೈದರಾಬಾದ್-ಕರ್ನಾಟಕ ಸ್ಥಳೀಯ ವೃಂದದ ಜೇಷ್ಠತೆಯಲ್ಲಿ ಪರಿಗಣಿಸುವುದಿಲ್ಲ).

 ಮೇಲ್ಕಂಡ ಹುದ್ದೆಗಳಿಗೆ ಸಂಬಂಧಿಸಿದಂತೆ ಅರ್ಜಿಯನ್ನು ಸಲ್ಲಿಸುವಾಗ ಅಭ್ಯರ್ಥಿಯು ಮೇಲೆ ಸೂಚಿಸಲಾದಂತಹ ತನ್ನ ವಿದ್ಯಾರ್ಹತೆ ಹಾಗೂ ಇತರೇ ಮಾನದಂಡಗಳನ್ನು ಪೂರ್ಣಗೊಳಿಸಲಾಗಿದೆಯೆಂದು ಹಾಗೂ ತಾನು ಒದಗಿಸಿರುವ ಎಲ್ಲಾ ವಿವರಗಳು ಎಲ್ಲಾ ಆಯಾಮಗಳಲ್ಲಿಯೂ ಸರಿಯಾಗಿವೆ ಎಂದು ಖಚಿತ ಪಡಿಸತಕ್ಕದ್ದು. ನೇಮಕಾತಿಯ ಯಾವುದೇ ಹಂತದಲ್ಲಿ, ಅಭ್ಯರ್ಥಿಯು ವಿದ್ಯಾರ್ಹತೆಯ ಮಾನದಂಡಗಳನ್ನು ಪೂರ್ಣಗೊಳಿಸಿಲ್ಲವೆಂದು ಹಾಗೂ/ಅಥವಾ ಆತ/ಆಕೆ ಯಾವುದೇ ಪ್ರಮುಖ ವಾಸ್ತವಾಂಶಗಳನ್ನು ಮರೆಮಾಚಿರುತ್ತಾನೆ/ಳೆ, ತಿರುಚಿರುತ್ತಾನೆ/ಳೆ, ಮೊಟುಕುಗೊಳಿಸಿರುತ್ತಾನೆ/ಳೆಂದು ಕಂಡುಬಂದ ಸಂದರ್ಭದಲ್ಲಿ ಆತನ/ಆಕೆಯ ಅಭ್ಯರ್ಥಿಕೆಯನ್ನು ರದ್ದುಗೊಳಿಸಲಾಗುವುದು. ಈ ಯಾವುದೇ ನ್ಯೂನ್ಯತೆಗಳು ನೇಮಕಾತಿಯ ನಂತರ ಕಂಡುಬಂದರೂ ಸಹ ಮತ್ತು ತಪ್ಪಾದ, ಅಪೂರ್ಣವಾದ ಅಥವಾ ಸರಿಯಿಲ್ಲದ ಮಾಹಿತಿಯನ್ನು ಒದಗಿಸುವುದು ಅನರ್ಹತೆಗೆ ಕಾರಣವಾಗುವುದು ಮಾತ್ರವಷ್ಟೆ ಅಲ್ಲದೇ, ಕ್ರಿಮಿನಲ್ ಪ್ರಾಸಿಕ್ಯೂಷನ್‌ಗೂ ಸಹ ಅವಕಾಶಮಾಡಿಕೊಡುತ್ತದೆ.

ನಿಬಂಧಕರು,

ಕರ್ನಾಟಕ ಲೋಕಾಯುಕ್ತ,

ಬೆಂಗಳೂರು.

(ಪ.ಜಾ/ಪ.ಪಂ ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ – ಡಿ

(ನಿಯಮ 3ಎ (2) (3) ನೋಡಿ)

ಅನುಸೂಚಿತ ಜಾತಿ ಅಥವಾ ಅನುಸೂಚಿತ ಬುಡಕಟ್ಟುಗಳಿಗೆ (ಪ.ಜಾ /ಪ.ಪಂ) ಸೇರಿದ ಅಭ್ಯರ್ಥಿಗಳಿಗೆ ನೀಡುವ ಪ್ರಮಾಣ ಪತ್ರಗಳ ನಮೂನೆ

ಪ್ರಮಾಣ ಪತ್ರ

................................................................. ರಾಜ್ಯದ / ಕೇಂದ್ರಾಡಳಿತ ಪ್ರದೇಶದ * .........................ಜಿಲ್ಲೆಯ/ವಿಭಾಗದ

................................................................... ಗ್ರಾಮ / ಪಟ್ಟಣದ * ನಿವಾಸಿಯಾದ ಶ್ರೀ/ಶ್ರೀಮತಿ...................... ಎಂಬುವವರ ಮಗ/ಮಗಳಾದ ಶ್ರೀ / ಶ್ರೀಮತಿ .................................................. ಇವರು ಅನುಸೂಚಿತ ಜಾತಿ / ಅನುಸೂಚಿತ ಬುಡಕಟ್ಟು * ಎಂದು ಮಾನ್ಯ ಮಾಡಲಾಗಿರುವ ಜಾತಿ / ಬುಡಕಟ್ಟಿಗೆ * ಸೇರಿರುತ್ತಾರೆಂದು ಪ್ರಮಾಣಿಕರಿಸಿದೆ.

* ಸಂವಿಧಾನ (ಅನುಸೂಚಿತ ಜಾತಿಗಳು) ಆದೇಶ, 1950

* ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) ಆದೇಶ, 1950

* ಸಂವಿಧಾನ (ಅನುಸೂಚಿತ ಜಾತಿ) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1950

* ಸಂವಿಧಾನ (ಅನುಸೂಚಿತ ಬುಡಕಟ್ಟುಗಳು) (ಕೇಂದ್ರಾಡಳಿತ ಪ್ರದೇಶಗಳು) ಆದೇಶ, 1951

(ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಪಟ್ಟಿ (ಮಾರ್ಪಾಡು) ಆದೇಶ 1956, ಮುಂಬಯಿ ರಾಜ್ಯ ಪುನರ್ ರಚನಾ ಅಧಿನಿಯಮ, 1960, ಪಂಜಾಬ್ ರಾಜ್ಯ ಪುನರ್ ರಚನಾ ಅಧಿನಿಯಮ, 1966, ಹಿಮಾಚಲ ಪ್ರದೇಶ ರಾಜ್ಯ ಅಧಿನಿಯಮ, 1970 ಮತ್ತು ಈಶಾನ್ಯ ಪ್ರದೇಶಗಳ (ಪುನರ್ ರಚನಾ ಅಧಿನಿಯಮ, 1971ರ ಮೂಲಕ ತಿದ್ದುಪಡಿಯಾದಂತೆ).

* ಸಂವಿಧಾನ (ಜಮ್ಮು ಮತ್ತು ಕಾಶ್ಮೀರ) ಅನುಸೂಚಿತ ಜಾತಿಗಳ ಆದೇಶ, 1956ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ೧೦೭೫ * ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ (ತಿದ್ದುಪಡಿ) ಅಧಿನಿಯಮ, 1976ರ ಮೂಲಕ ತಿದ್ದುಪಡಿಯಾದಂತೆ ಸಂವಿದಾನ (ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ) ಅನುಸೂಚಿತ ಬುಡಕಟ್ಟುಗಳ ಆದೇಶ, 1959.

* ಸಂವಿಧಾನ (ದಾದರ್ ಮತ್ತು ನಗರ ಹವೇಲಿ) ಅನುಸೂಚಿತ ಜಾತಿಗಳ ಆದೇಶ, 1962

* ಸಂವಿಧಾನ (ಪಾಂಡಿಚೇರಿ) ಅನುಸೂಚಿತ ಜಾತಿಗಳ ಆದೇಶ, 1964

* ಸಂವಿಧಾನ (ಅನುಸೂಚಿತ ಬುಡಕಟ್ಟುಗಳ) (ಉತ್ತರ ಪ್ರದೇಶ) ಆದೇಶ, 1967

* ಸಂವಿಧಾನ (ಗೋವಾ, ದಮನ್ ಮತ್ತು ದೀವ್) ಅನುಸೂಚಿತ ಜಾತಿ / ಬುಡಕಟ್ಟುಗಳ ಆದೇಶ 1988

* ಸಂವಿಧಾನ (ನಾಗಾಲ್ಯಾಂಡ್) ಅನುಸೂಚಿತ ಬುಡಕಟ್ಟುಗಳ ಆದೇಶ

2. ಶ್ರೀ / ಶ್ರೀಮತಿ / ಕುಮಾರಿ* ............................ ಮತ್ತು/ಅಥವಾ ಅವನ* / ಅವಳ* ಕುಟುಂಬವು .................................... ರಾಜ್ಯ / ಕೇಂದ್ರಾಡಳಿತ ಪ್ರದೇಶದ ................................ ಜಿಲ್ಲಾ / ವಿಭಾಗದ ........................... ಗ್ರಾಮ / ಪಟ್ಟಣದ ಸಾಮಾನ್ಯ ನಿವಾಸಿ (ಗಳು)

ಸಹಿ

ತಹಶೀಲ್ದಾರರು

ಸ್ಥಳ : ಪದನಾಮ

ದಿನಾಂಕ : ಕಛೇರಿಯ ಮೊಹರಿನೊಂದಿಗೆ

ರಾಜ್ಯ/ಕೇಂದ್ರಾಡಳಿತ ಪ್ರದೇಶ*

ಅನ್ವಯವಾಗದಿರುವ ಪದಗಳನ್ನು ದಯವಿಟ್ಟು ಬಿಟ್ಟು ಬಿಡಿ / ಹೊಡೆದು ಹಾಕಿ

ಸೂಚನೆ: ಇಲ್ಲಿ ಉಪಯೋಗಿಸಿದ "ಸಾಮಾನ್ಯ ನಿವಾಸಿಗಳು" ಎಂಬ ಪದಾವಳಿಯು ಪ್ರಜಾ ಪ್ರಾತಿನಿಧ್ಯ ಅಧಿನಿಯಮ, 1950ರ 20ನೇ ಪ್ರಕರಣದಲ್ಲಿರುವ ಅರ್ಥವನ್ನೇ ಹೊಂದಿರುತ್ತದೆ.

ಭಾರತ ಸರ್ಕಾರದ ಪತ್ರ ಸಂಖ್ಯೆ. ಬಿಸಿ 12028 / 2/ 76-ಎಸ್‌ಸಿಟಿ-1 ಗೃಹ ಮಂತ್ರಾಲಯದ ಅನುಸಾರವಾಗಿ, ಅಂಥ ಪ್ರಮಾಣ ಪತ್ರಗಳನ್ನು ನೀಡಲು ಸಕ್ಷಮವಾಗಿರುವುದಕ್ಕಾಗಿ, ಭಾರತ ಸರ್ಕಾರದ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ) ಪತ್ರ ಸಂಖ್ಯೆ 13.02.74 ಇಎಸ್‌ಟಿ (ಎಸ್‌ಸಿಟಿ) ದಿನಾಂಕ 5ನೇ ಆಗಸ್ಟ್ 1975ರಲ್ಲಿ ನಮೂದಿಸಿದ ಪ್ರಾಧಿಕಾರಿಯು, ರಾಷ್ಟ್ರಪತಿಗಳು ಸಂಬಂಧಪಟ್ಟ ಆದೇಶದ ಅಧಿಸೂಚನೆಯನ್ನು ಹೊರಡಿಸಿದ ಸಮಯದಲ್ಲಿ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ವ್ಯಕ್ತಿಯು, ತನ್ನ ಖಾಯಂ ವಾಸಸ್ಥಳವನ್ನು ಹೊಂದಿದ್ದ ಸ್ಥಳಕ್ಕೆ ಸೇರಿದವರೊಬ್ಬರಾಗಿರತಕ್ಕದ್ದು. ಅದೇ ರೀತಿಯಲ್ಲಿ, ಒಂದು ತಾಲ್ಲೂಕಿನ ರೆವಿನ್ಯೂ ಪ್ರಾಧಿಕಾರಿಯು ಇನ್ನೊಂದು ತಾಲ್ಲೂಕಿಗೆ ಸೇರಿದ ವ್ಯಕ್ತಿಗಳಿಗೆ ಸಂಬಂಧಪಟ್ಟ ಪ್ರಮಾಣ ಪತ್ರವನ್ನು ನೀಡಲು ಸಕ್ಷಮ ಪ್ರಾಧಿಕಾರಿಯಾಗುವುದಿಲ್ಲ.

(ಪ್ರವರ್ಗ – 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ)

ನಮೂನೆ – ಇ

(ನಿಯಮ 3ಎ (2) (3) ನೋಡಿ)

ಹಿಂದುಳಿದ ವರ್ಗಗಳಿಗೆ (ಪ್ರ.ವರ್ಗ-1) ಸೇರಿದ ಅಭ್ಯರ್ಥಿಗೆ ನೀಡುವ ಪ್ರಮಾಣ ಪತ್ರ

.................................................... ಗ್ರಾಮ / ಪಟ್ಟಣದ / ನಗರ ನಿವಾಸಿಯಾದ ಶ್ರೀ/ಶ್ರೀಮತಿ ..................... ಇವರ ಮಗ / ಮಗಳು / ಪತ್ನಿ /ಪತಿಯಾದ ಶ್ರೀ / ಶ್ರೀಮತಿ .................................................................. ಇವರು ಹಿಂದುಳಿದ ವರ್ಗಗಳ (ಪ್ರವರ್ಗ) .................................... ಜಾತಿಯ .............................................. ಉಪ ಜಾತಿಗೆ ಸೇರಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.

ಸ್ಥಳ : ತಹಶೀಲ್ದಾರರು ದಿನಾಂಕ : ............................ ತಾಲ್ಲೂಕು

ಕಛೇರಿಯ ಮೊಹರು (ಪ್ರವರ್ಗ – 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ ಮಾತ್ರ) ನಮೂನೆ – ಎಫ್

(ನಿಯಮ 3ಎ (2) (3)ನ್ನು ನೋಡಿ)

ಹಿಂದುಳಿದ ವರ್ಗಗಳಿಗೆ (2ಎ, 2ಬಿ, 3ಎ, 3ಬಿ) ಸೇರಿದ ಅಭ್ಯರ್ಥಿಗಳಿಗೆ ನೀಡುವ ಆದಾಯ ಮತ್ತು

ಜಾತಿ ಪ್ರಮಾಣ ಪತ್ರ

.....................................................ರಲ್ಲಿ ವಾಸವಾಗಿರುವ ಶ್ರೀ / ಶ್ರೀಮತಿ .................................................. ಇವರ ಮಗ / ಮಗಳು / ಪತಿ / ಪತ್ನಿಯಾದ ಶ್ರೀ/ಶ್ರೀಮತಿ/ಕುಮಾರಿ ................................ ಇವರು ಮತ್ತು ಆತನ / ಅವಳ ತಂದೆ / ತಾಯಿ / ಪೋಷಕರು/ಪತ್ನಿ/ಪತಿಯು, ಸರ್ಕಾರಿ ಆದೇಶಗಳ ಸಂಖ್ಯೆ. ಎಸ್‌ಡಬ್ಲ್ಯೂಡಿ 225 ಬಿಸಿಎ 2000, ದಿನಾಂಕ 30.03.2002ರಲ್ಲಿ ನಿರ್ದಿಷ್ಟ ಪಡಿಸಿದ ಮೇಲುಸ್ತರದ (ಕ್ರಿಮಿ ಲೇಯರ್) ವ್ಯಾಪ್ತಿಯಲ್ಲಿ ಬರುವುದಿಲ್ಲವೆಂದು :

೧೦೭೬ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ಭಾಗ ೫

ಅಭ್ಯರ್ಥಿಯಾಗಲಿ ಅಥವಾ ಆತನ / ಆಕೆಯ ತಂದೆ ತಾಯಿ/ಪೋಷಕರಾಗಲಿ / ಪತ್ನಿ / ಪತಿಯಾಗಲಿ, ಸರ್ಕಾರದ ಸೇವೆಯಲ್ಲಿ 1ನೇ ದರ್ಜೆಯ ಅಥವಾ 2ನೇ ದರ್ಜೆಯ ಅಧಿಕಾರಿಯಾಗಿಲ್ಲವೆಂದು :

ಅಥವಾ

ಸಾರ್ವಜನಿಕ ವಲಯ ಉದ್ಯಮದಲ್ಲಿ ತತ್ಸಮಾನವಾದ ಹುದ್ದೆಯನ್ನು ಹೊಂದಿರುವುದಿಲ್ಲ :

ಅಥವಾ

ಖಾಸಗಿ ನಿಯೋಜಕರ ಕೈಕೆಳಗೆ, 2ನೇ ದರ್ಜೆಯ ಅಧಿಕಾರಿಯ ಸಂಬಳಕ್ಕಿಂತ (ವೇತನ ಶ್ರೇಣಿ `. 11400-21600/- ಪ್ರಾರಂಬಿಕ ಹಂತ) ಕಡಿಮೆಯಲ್ಲದ ಸಂಬಳವನ್ನು ಪಡೆಯುವ ನೌಕರನಾಗಿಲ್ಲವೆಂದು

ಅಥವಾ

ಆತನ/ಆಕೆಯ ತಂದೆ ತಾಯಿ/ಪೋಷಕರು/ಪತ್ನಿ/ಪತಿಯ ಆದಾಯವು ಎರಡು ಲಕ್ಷ ಮೀರುವುದಿಲ್ಲವೆಂದು :

ಅಥವಾ

ಕರ್ನಾಟಕ ಭೂ ಸುಧಾರಣಾ ಅಧಿನಿಯಮ 1961ರಲ್ಲಿ ನಿಗದಿಪಡಿಸಿರುವಂತೆ ಆತನ/ಆಕೆಯ ತಂದೆ ತಾಯಿ/ ಪೋಷಕರು/ಪತ್ನಿ/ಪತಿಯು ಮಾರಾಟ ತೆರಿಗೆದಾರನಲ್ಲ ಅಥವಾ ಆತನ/ಆಕೆಯ ತಂದೆ ತಾಯಿ/ಪೋಷಕ/ಪತ್ನಿ/ ಪತಿಯು ಅಥವಾ ಇವರಿಬ್ಬರೂ 10 ಯುನಿಟ್‌ಗಿಂತ ಹೆಚ್ಚಿನ ಕೃಷಿ ಭೂಮಿ ಅಥವಾ 25 ಎಕರೆಗಳಿಗಿಂತ ಹೆಚ್ಚಿನ ಪ್ಲಾಂಟೇಶನ್ ಭೂಮಿಯನ್ನು ಹೊಂದಿರುವುದಿಲ್ಲವೆಂದು ಪ್ರಮಾಣಿಕರಿಸಲಾಗಿದೆ. ಸರ್ಕಾರಿ ಆದೇಶ ಸಂಖ್ಯೆ. ಎಸ್‌ಡಬ್ಲ್ಯೂಡಿ 225 ಬಿಸಿಎ 2000, ದಿನಾಂಕ 30.03.2002ರ ಅನ್ವಯ ಶ್ರೀ/ಶ್ರೀಮತಿ/ಕುಮಾರಿ.................................. ಇವರು ........................................ ಜಾತಿಗೆ .......................................... ಸೇರಿದ ಉಪಜಾತಿಯವರಾಗಿದ್ದು ಸರ್ಕಾರಿ ಆದೇಶ ಸಂಖ್ಯೆ. ಎಸ್‌ಡಬ್ಲ್ಯೂಡಿ 225 ಬಿಸಿಎ 2000, ದಿನಾಂಕ 30.03.2002ರ ಅನ್ವಯ ಹಿಂದುಳಿದ ವರ್ಗಗಳ ಪ್ರವರ್ಗ .................................. (2ಎ, 2ಬಿ, 3ಎ, 3ಬಿ) ಸೇರಿರುತ್ತಾರೆ.

ಸ್ಥಳ : ತಹಶೀಲ್ದಾರರು ದಿನಾಂಕ : ............................ ತಾಲ್ಲೂಕು

ಕಛೇರಿಯ ಮೊಹರು

ಅನುಬಂಧ- 1

ಜನರಲ್ ಮೆರಿಟ್ ಅಭ್ಯರ್ಥಿಗಳು ಮೇಲುಸ್ತರಕ್ಕೆ ಸೇರಿಲ್ಲವೆಂದು, ದೃಡೀಕರಿಸಿ ಗ್ರಾಮೀಣ

ಮೀಸಲಾತಿಯನ್ನು ಕೋರಲು ಸಲ್ಲಿಸಬೇಕಾದ ಪ್ರಮಾಣ ಪತ್ರ

(ಜನರಲ್ ಮೆರಿಟ್ ಅಭ್ಯರ್ಥಿಗಳು ಭರ್ತಿ ಮಾಡಬೇಕಾದ ನಮೂನೆ)

ಇವರಿಗೆ:

ತಹಶೀಲ್ದಾರರು,

..................... ತಾಲ್ಲೂಕು,

..................... ಜಿಲ್ಲೆ.

ಮಾನ್ಯರೆ,

ಶ್ರೀ / ಶ್ರೀಮತಿ ....................................................... ಎಂಬುವವರ ಮಗ/ಮಗಳು/ಪತಿ/ಪತ್ನಿ.............................. ಆದ ನಾನು ಮೇಲುಸ್ತರದಲ್ಲಿ (Creamy Layer) ಬರುವುದಿಲ್ಲವೆಂದು ನೇರ ನೇಮಕಾತಿಯಲ್ಲಿ ಗ್ರಾಮೀಣ ಅಭ್ಯರ್ಥಿ ಮೀಸಲಾತಿಯನ್ನು ಪಡೆಯುವುದಕ್ಕಾಗಿ ಪ್ರಮಾಣ ಪತ್ರವನ್ನು ಪಡೆಯಲು ತಮ್ಮಲ್ಲಿ ಈ ಕೆಳಕಂಡ ಮಾಹಿತಿಗಳನ್ನು ಒದಗಿಸುತ್ತಾ ಕೋರುತ್ತೇನೆ.

1. ಅಭ್ಯರ್ಥಿಯ ಹೆಸರು ಮತ್ತು ಉದ್ಯೋಗ :

2. ಅಭ್ಯರ್ಥಿಯ ಸ್ವಂತ ಸ್ಥಳ ಗ್ರಾಮ :

ತಾಲ್ಲೂಕು :

ಜಿಲ್ಲೆ :

3. ಅಭ್ಯರ್ಥಿಯು ಹುಟ್ಟಿದ ದಿನಾಂಕ ವಯಸ್ಸು ಮತ್ತು ಹುಟ್ಟಿದ ಸ್ಥಳ :

4. ಅಭ್ಯರ್ಥಿಯ ತಂದೆ/ತಾಯಿ/ಪೋಷಕರ ಪತಿಯ/ಪತ್ನಿಯ ಹೆಸರು ಮತ್ತು ಉದ್ಯೋಗ:

(ಉದ್ಯೋಗವು ಸರ್ಕಾರಿ/ಅರೆ ಸರ್ಕಾರಿ/ಸಾರ್ವಜನಿಕ ಉದ್ಯಮ/ಖಾಸಗಿ)

5. ಅಭ್ಯರ್ಥಿಯ ಪ್ರಸ್ತುತ ವಿಳಾಸ :

(ಸ್ಪಷ್ಟವಾಗಿ ನಮೂದಿಸುವುದು)

6. ಅಭ್ಯರ್ಥಿಯ ಖಾಯಂ ವಿಳಾಸ :

7. ಅಭ್ಯರ್ಥಿಯ ಶಾಲಾ ಶಿಕ್ಷಣದ ವ್ಯಾಸಂಗ ಮಾಡಿದ ಶಾಲೆಗಳ ವಿವರಗಳು

ಪ್ರಾಥಮಿಕ

ಮಾಧ್ಯಮಿಕ

ಪ್ರೌಡಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ೧೦೭೭ 8. ಅಭ್ಯರ್ಥಿಯ ಹಾಗೂ ಅಭ್ಯರ್ಥಿಯ ತಂದೆ/ತಾಯಿ/ಪೋಷಕರ (ತಂದೆ/ತಾಯಿ ಜೀವಂತವಿಲ್ಲದಿದ್ದರೆ) ಇವರ ಒಟ್ಟು ವಾರ್ಷಿಕ

ಆದಾಯ ಎಲ್ಲಾ ಮೂಲಗಳಿಂದ :

1) ವೇತನ ಶ್ರೇಣಿ

2) ಜಮೀನಿನ ವಿವರ

3) ಇತರ ಮೂಲಗಳು

9. ಆದಾಯ ತೆರಿಗೆ ಪಾವತಿದಾರರೇ ?

10. ಸಂಪತ್ತು ತೆರಿಗೆ ಪಾವತಿದಾರರೇ ?

11. ಮಾರಾಟ ತೆರಿಗೆ ಪಾವತಿದಾರರೇ ?

ಪ್ರಮಾಣೀಕೃತ ಘೋಷಣೆ

ಈ ಮೇಲೆ ನನ್ನಿಂದ ಒದಗಿಸಿದ ಮಾಹಿತಿ/ವಿವರಣೆಯು ನಾನು ತಿಳಿದಿರುವಷ್ಟರ ಮಟ್ಟಿಗೆ ಸತ್ಯವೆಂದು ಶ್ರದ್ಧಾಪೂರ್ವಕವಾಗಿ ದೃಡೀಕರಿಸುತ್ತೇನೆ ಮತ್ತು ಘೋಷಿಸುತ್ತೇನೆ.

ಸ್ಥಳ : ತಮ್ಮ ವಿಧೇಯ

ದಿನಾಂಕ : (ಅಭ್ಯರ್ಥಿಯ ಸಹಿ)

ಮೇಲೆ ಒದಗಿಸಲಾದ ಮಾಹಿತಿಗಳು ಸತ್ಯವಾಗಿರುತ್ತದೆ ಎಂದು ಪ್ರಮಾಣೀಕರಿಸುತ್ತಾ ಈ ಮಾಹಿತಿಗಳು ಅಸತ್ಯವೆಂದು ದೃಡಪಟ್ಟಲ್ಲಿ ಅಪರಾಧ ವಿಚಾರಣೆಗೆ ಬದ್ಧನಾಗಿರುತ್ತೇನೆ.

ಸ್ಥಳ : ತಂದೆ/ತಾಯಿ/ಪೋಷಕರ ಸಹಿ ದಿನಾಂಕ : (ತಂದೆ/ತಾಯಿ ಜೀವಂತವಿಲ್ಲದಿದ್ದರೆ)

(ಹೆಂಡತಿ/ಗಂಡ/ಇವರ ಸಹಿ)

ಸ್ಥಳೀಯ ಇಬ್ಬರು ಸಾಕ್ಷಿದಾರರು

ಅಭ್ಯರ್ಥಿಯ ಮತ್ತು ಅವರ ತಂದೆ/ತಾಯಿ/ಪೋಷಕರು/ಪತಿ/ಪತ್ನಿ ಇವರನ್ನು ಹಾಗೂ ಇವರ ಸಹಿಯನ್ನು ಗುರುತಿಸುತ್ತೇವೆ.

ಸಾಕ್ಷಿದಾರರ ಸಹಿ 1)

(ಪೂರ್ಣ ವಿಳಾಸದೊಂದಿಗೆ) 2)

ಪರಿಶೀಲನಾ ಪ್ರಮಾಣ ಪತ್ರ

1. ಶ್ರೀ/ಶ್ರೀಮತಿ................................................................................ ಎಂಬುವವರ ಮಗ/ಮಗಳು/ಪತಿ/ಪತ್ನಿ/ಶ್ರೀ/

ಶ್ರೀಮತಿ/ಕುಮಾರಿ................................. ಎಂಬುವವರು ಕರ್ನಾಟಕ ರಾಜ್ಯದ .................................. ಜಿಲ್ಲೆಯ ವಿಭಾಗ .............................

ಗ್ರಾಮ/ಪಟ್ಟಣ/ನಗರದಲ್ಲಿ ಸಾಮಾನ್ಯ ನಿವಾಸಿಯಾಗಿದ್ದಾರೆ ಮತ್ತು ಇವರು ಜನರಲ್ ಮೆರಿಟ್ ವರ್ಗಕ್ಕೆ ಸೇರಿದವರಾಗಿರುತ್ತಾರೆ.

2. ಶ್ರೀ/ಶ್ರೀಮತಿ/ಕುಮಾರಿ .......................................................... ಇವರ ತಂದೆ/ತಾಯಿ/ಪೋಷಕರು ಸರ್ಕಾರಿ ಆದೇಶ ಸಂಖ್ಯೆ. ಎಸ್‌ಡಬ್ಲ್ಯೂಡಿ 251 ಬಿಸಿಎ 94, ಬೆಂಗಳೂರು, ದಿನಾಂಕ 31.01.1995 ರನ್ವಯ ಜನರಲ್ ಮೆರಿಟ್ ವರ್ಗದ ಮೇಲುಸ್ತರದಲ್ಲಿ (Creamy Layer) ಬರುವುದಿಲ್ಲವೆಂದು ಪ್ರಮಾಣೀಕರಿಸಲಾಗಿದೆ.

ಸ್ಥಳ : ತಹಶೀಲ್ದಾರರು

ದಿನಾಂಕ : ......................... ತಾಲ್ಲೂಕು

ಕಛೇರಿಯ ಮೊಹರು

ಸೂಚನೆ-1: ಇದರಲ್ಲಿ ಉಪಯೋಗಿಸಲಾದ "ಸಾಮಾನ್ಯ ನಿವಾಸಿ" ಎಂಬ ಪದವು 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ 20ನೇ ಅನುಚ್ಛೇದದಲ್ಲಿನ ಅರ್ಥವನ್ನು ಹೊಂದಿರುತ್ತದೆ.

ಸೂಚನೆ-2: ಪರಿಶೀಲನಾ ಪ್ರಮಾಣ ಪತ್ರ ನೀಡುವ ಅಧಿಕೃತ ಅಧಿಕಾರಿಯು ಸರ್ಕಾರಿ ಆದೇಶ ಸಂಖ್ಯೆ ಎಸ್‌ಡಬ್ಲ್ಯೂಡಿ 251 ಬಿಸಿಎ 94, ಬೆಂಗಳೂರು, ದಿನಾಂಕ 31.01.1995 ರನ್ವಯ ಮೇಲುಸ್ತರ (Creamy Layer) ದವರನ್ನು ಗುರುತಿಸಲು ನಿಗದಿಪಡಿಸಲಾಗಿರುವ ಅಂಶಗಳನ್ನು ವಿವರವಾಗಿ ಖಚಿತಪಡಿಸಿಕೊಂಡ ನಂತರವೇ ಪ್ರಮಾಣ ಪತ್ರ ನೀಡತಕ್ಕದ್ದು.

ನಮೂನೆ-2

ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ

ಶ್ರೀ / ಶ್ರೀಮತಿ .......................................................................... ರವರ ಮಗ/ ಮಗಳು/ ಪತ್ನಿ/ ಶ್ರೀ/ ಶ್ರೀಮತಿ/ ಕುಮಾರಿ ..........................................

ಜಿಲ್ಲೆ .............................. ತಾಲ್ಲೂಕು ........................... ಗ್ರಾಮದಲ್ಲಿ ..........................ವಾಸವಾಗಿರುವ ಇವರು ಒಂದನೇ ತರಗತಿಯಿಂದ .................................. ತರಗತಿಯವರೆಗೆ ............................................. ಜಿಲ್ಲೆ .............................. ತಾಲ್ಲೂಕು ................................ ಪಟ್ಟಣ ................................................. ಶಾಲೆಯಲ್ಲಿ ವ್ಯಾಸಂಗ ಮಾಡಿ .....................ವರ್ಷ ನಡೆದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಈ ಶಾಲೆಯು೧೦೭೮ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ಭಾಗ ೫ ಅಭ್ಯರ್ಥಿಯು ವ್ಯಾಸಂಗ ಮಾಡಿದ ಅವಧಿಯಲ್ಲಿ ಕರ್ನಾಟಕದ ಪೌರ ನಿಗಮಗಳ ಅಧಿನಿಯಮ, 1976 ಅಥವಾ ಕರ್ನಾಟಕ ಪೌರ ಸಭೆಗಳ ಅಧಿನಿಯಮ, 1964ರ ಅಡಿಯಲ್ಲಿ ನಿರ್ದಿಷ್ಟ ಪಡಿಸಿದ ಒಂದು ದೊಡ್ಡ ನಗರ ಪ್ರದೇಶ, ಸಣ್ಣ ನಗರ ಪ್ರದೇಶ ಅಥವಾ ಪರಿವರ್ತನೆ ಹಂತದಲ್ಲಿರುವ ಪ್ರದೇಶಗಳ ಹೊರತಾದ ಪ್ರದೇಶದಲ್ಲಿತ್ತು.

ಸ್ಥಳ : ಮುಖ್ಯೋಪಾಧ್ಯಾಯರ ಸಹಿ

ದಿನಾಂಕ : ಮತ್ತು ಸಂಸ್ಥೆಯ ಪೂರ್ಣ ವಿಳಾಸವುಳ್ಳ ಮೊಹರು

ಮೇಲುರುಜು

ಕ್ಷೇತ್ರ ಶಿಕ್ಷಣಾಧಿಕಾರಿ

----------------------------------------------------------------------------------------------

ರಾಜ್ಯ ಸರ್ಕಾರಿ/ ಕೇಂದ್ರ ಸರ್ಕಾರಿ ನೌಕರರು ಒದಗಿಸಬೇಕಾದ ಪ್ರಮಾಣ ಪತ್ರ

ಶ್ರೀ/ಶ್ರೀಮತಿ .............................. ರವರು ರಾಜ್ಯ/ಕೇಂದ್ರ ಸರ್ಕಾರದಲ್ಲಿ ................................................. (ಪದನಾಮ) ...........................................................ಇಲಾಖೆಯಲ್ಲಿ ಖಾಯಂ / ತಾತ್ಕಾಲಿಕ ಹುದ್ದೆಯನ್ನು ದಿನಾಂಕ ........................ ರಿಂದ ................................ ರವರೆಗೆ ಹೊಂದಿರುವರು. ಈ ಹುದ್ದೆಗೆ ಇವರು ನೇಮಕಾತಿ ನಿಯಮಗಳಡಿ ಆಯ್ಕೆಯಾಗಿದ್ದು. ಸದರಿ ಹುದ್ದೆಗೆ ಅರ್ಜಿ ಸಲ್ಲಿಸಲು ಅವರಿಗೆ ಅನುಮತಿ ನೀಡಲಾಗಿದೆ.

ಸ್ಥಳ : ನೇಮಕಾತಿ ಪ್ರಾಧಿಕಾರದ ಸಹಿ/ ದಿನಾಂಕ: ಇಲಾಖೆಯ ಹೆಸರು ಮತ್ತು ಮೊಹರುನೊಂದಿಗೆ CERTIFICATE TO BE FURNISHED BY THE STATE / CENTRAL GOVT. SERVANTS Certified that Sri / Smt ……………………………………………………………………… holds a permanent / temporary post under the State / Central Govt. as …………………………….. (Designation) in the Dept. of ……………………… from ………………………………. having been appointed therein under the rules of recruitment. He / She is permited to apply for the said post.

Place : Signature of the appointing authority

Date : of the department / with name and seal.

ಅನುಬಂಧ-ಎ

ಅರ್ಹತಾ ಪ್ರಮಾಣ ಪತ್ರ

(ಅನುಚ್ಛೇದ 371(ಜೆ) ಮೇರೆಗೆ)

(3)(3)ನೇ ನಿಯಮ ನೋಡಿ)

(ಪ್ರಮಾಣ ಪತ್ರ ನೀಡಲು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮಗಳು 2013)

ಶ್ರೀ/ಶ್ರೀಮತಿ_____________________________________________________ರವರು____________________________ರವರ ಮಗ/ಹೆಂಡತಿಯಾಗಿದ್ದು, ಇವರು ಕರ್ನಾಟಕ ರಾಜ್ಯದ ____________ ಜಿಲ್ಲೆಯ ________________ ತಾಲ್ಲೂಕಿನ ________________________________ ಗ್ರಾಮ/ಪಟ್ಟಣದ ಸ್ಥಳೀಯ ವ್ಯಕ್ತಿಯಾಗಿದ್ದಾರೆ.

ಸ್ಥಳ:___________________ ಹೆಸರು___________________.____________

ದಿನಾಂಕ:_______________ ಅಸಿಸ್ಟೆಂಟ್ ಕಮೀಷನರ್_____________________

----------------------------ಉಪ ವಿಭಾಗ

_____________________ಜಿಲ್ಲೆ.

ಅನುಬಂಧ-ಬಿ

ವಾಸಸ್ಥಳ ಪ್ರಮಾಣ ಪತ್ರ

ಅರ್ಹತಾ ಪ್ರಮಾಣ ಪತ್ರ

(ಅನುಚ್ಛೇದ 371(ಜೆ) ಮೇರೆಗೆ)

(ನಿಯಮ 4 (ಬಿ) (2) (iii) ನೋಡಿ)

(ಪ್ರಮಾಣ ಪತ್ರ ನೀಡಲು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮಗಳು 2013)

ಶ್ರೀ/ಶ್ರೀಮತಿ_________________________________________ರವರು________________________ರವರ ಮಗ/ಹೆಂಡತಿಯಾಗಿದ್ದು, ಇವರು____________________ಜಿಲ್ಲೆಯ_____________ ತಾಲ್ಲೂಕಿನ _______________________ಗ್ರಾಮ/ಪಟ್ಟಣದ ಈ ಕೆಳಕಂಡ ವಿಳಾಸದಲ್ಲಿ ಕೆಳಗೆ ಸೂಚಿಸಿರುವ ಅವಧಿಯಲ್ಲಿ ವಾಸವಿರುತ್ತಾರೆಂದು ಪ್ರಮಾಣೀಕರಿಸಲಾಗಿದೆ.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ೧೦೭೯
ಕ್ರ.ಸಂ ವಿಳಾಸ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ಸಾಕ್ಷ್ಯ ವಿವರ (ಆಧಾರವಾಗಿಟ್ಟುಕೊಂಡಿರುವ ಸಾಕ್ಷ್ಯದ ಎಲ್ಲಾ ಪ್ರಮಾಣೀಕೃತ ಪ ತಿಗಳನ್ನು ಲಗತ್ತಿಸಿ) ್ರ
1
2
3
4
5
6

ಸಾಕ್ಷ್ಯದಲ್ಲಿ ಹೇಳಲಾದ ಎಲ್ಲಾ ಲಗತ್ತುಗಳನ್ನು ಕೋಷ್ಟಕದಲ್ಲಿ ಸಂಕ್ಷಿಪ್ತವಾಗಿ ಅಳವಡಿಸಿ

ಸ್ಥಳ: ------------- ಹೆಸರು ------------

ದಿನಾಂಕ: ---------- ತಹಸೀಲ್ದಾರ್ --------

------------ತಾಲ್ಲೂಕು ------------ಜಿಲ್ಲೆ

ಅನುಬಂಧ-ಸಿ

ವ್ಯಾಸಂಗ ಪ್ರಮಾಣ ಪತ್ರ

ಅರ್ಹತಾ ಪ್ರಮಾಣ ಪತ್ರ

(ಅನುಚ್ಛೇದ 371(ಜೆ) ಮೇರೆಗೆ)

(ನಿಯಮ 4 (ಸಿ) (2) (ii) ನೋಡಿ)

(ಪ್ರಮಾಣ ಪತ್ರ ನೀಡಲು ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ನಿಯಮಗಳು 2013)

ಶ್ರೀ/ಶ್ರೀಮತಿ__________________________________________ರವರು____________________ರವರ ಮಗ/ಹೆಂಡತಿಯಾಗಿದ್ದು, ಇವರು ______________ಜಿಲ್ಲೆಯ ________________ ತಾಲ್ಲೂಕಿನ_______________________________________ ಕಾಲೇಜು/ಶಾಲೆಯಲ್ಲಿ ಈ

ಕ್ರ.ಸಂ ತ ರಗತಿ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ದಾಖಲೆಯ ಉಲ್ಲೇಖ
ಕ್ರ.ಸಂ ತ ರಗತಿ/ ಪರೀಕ್ಷೆ/ ಹಂತದ ಹೆಸರು ವ ರ್ಷ ಉತ್ತೀರ್ಣ/ಅನುತ್ತೀರ್ಣ

ಸ್ಥಳ: ------------- ಹೆಸರು ------------

ದಿನಾಂಕ: ---------- ಸಂಸ್ಥೆಯ ಮುಖ್ಯಸ್ಥರು

ಪ್ರಮಾಣ ಪತ್ರ

ಮೇಲೆ ನೀಡಲಾದ ಪ್ರಮಾಣಪತ್ರವು ಲಭ್ಯವಿರುವ ದಾಖಲೆಯ ಪ್ರಕಾರ ಸತ್ಯವಾಗಿದೆ ಎಂಬುದನ್ನು ನಾನು ಸ್ವತಃ ಮನವರಿಕೆ ಮಾಡಿಕೊಂಡಿದೇನೆಂದು ಪ್ರಮಾಣೀಕರಿಸುತೇನೆ.

ಸ್ಥಳ: ------------- ಹೆಸರು ----------------

ದಿನಾಂಕ: ---------- ಕ್ಷೇತ್ರ ಶಿಕ್ಷಣಾಧಿಕಾರಿ --------

---------------ತಾಲ್ಲೂಕು

________________ಜಿಲ್ಲೆ

PR - 172

SC - 50

೧೦೮೦ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ಭಾಗ ೫ IN THE COURT OF CITY CIVIL JUDGE AT BENGALURU –CCH-22

P& SC 25078 / 2018

BETWEEN:

Mr. SANDANASSAMY ACHILLE FORTUNE

S/o. Late. Marie Joseph Gaston Caillard and Late Marie Therese Caillard

Aged about 68 years,

Residing at 88/2, Coles Road Cross,

Frazer Town, Bengaluru – 560 005

………..PETITIONER

AND:

1. Mr. JOSEPH AROQUIANADIN CHARLES JULOT

S/o. Late. Marie Joseph Gaston Caillard and

Late Marie Therese Caillard

Aged about 72 years,

Residing at No.15, Impasse Brunet D'Aillan,

33750, Camarsac, France.

Email id: [email protected]

2. Mrs JOSEPHINE BEATRICE EULALIE

D/o. Late. Marie Joseph Gaston Caillard and

Late Marie Therese Caillard

W/o. Late. Apollo Prathap,

Aged about 70 years,

Residing at No. 7, Pottery Road, Richards Town,

Bengaluru – 560 005 Email Id: [email protected]

3. Mrs CAROLINE RACHEL LILIANE

D/o. Late. Marie Joseph Gaston Caillard and

Late Marie Therese Caillard

Aged about 65 years,

Residing at No.12, Boulevard,

du General Leclerc, 92110 Clichy, France

Email Id: [email protected]

4. Mrs DJODI CHANTAL ROSETTE.

D/o. Late. Marie Joseph Gaston Caillard and

Late Marie Therese Caillard

W/o. Late.Mohammed Shakil Vakil,

Aged about 63 years,

Residing at No.7/1, Pottery Road,

Richards Town, Bengaluru – 560 005

Email Id: [email protected] ………..RESPONDENTS

PUBLIC NOTICE

Whereas, the Petitioner above named has filed a Petition U/S. 276 of the Indian Succession Act, seeking Probate in respect of the Will dated 12-12-2001 executed by Mrs.Marie Therese Caillard @ G.TH.Caillard.

If anyone has got any claim over the same may appear before Additional City Civil Judge, CCH-22, Mayohall, Bengaluru on 6- 7-2019 at 11.a.m. or represent through their Counsel in respect of their claim, otherwise the matter will be heard and determined ex- parte.

SCHEDULE "A" PROPERTY

All that piece and parcel of the Property being a house and all movable assets contained in it situated at No.75, (old No.39) , Laporte Street, Pondicherry measuring 305 Sq Meters

SCHEDULE "B" PROPERTY

All that piece and parcel of the immovable property and all movable assets contained in it situated at No 7, (Old No 9) Pottery Road, Richards Town, Bengaluru 560 005 and bounded on theಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ ಜೂನ್ ೨೦, ೨೦೧೯ ೧೦೮೧ East by : John Armstrong Road West by : Conservancy Lane

North by : Private Property

South by : Pottery Road

Mesuring

on the East 66 feet

On the West 62 Feet

On the North 120 Feet

On the South 92 feet

SCHEDULE "C" PROPERTY

Two Bank accounts in UCO Bank, Pondicherry, bearing Account No.00590100006026 and another being UCO Bank, Frazer Town, Bengaluru with Account No. 06240100000015. The total sum standing in the two accounts is in a sum of `. 4,51,000/- Given under my hand and seal of this Court this 6th day of June 2019.

PD-18

By Order of the Court

Deputy Registrar

SC.05

City Civil Court,

MayoHall Unit, Bengaluru.

IN THE COURT OF THE LXXII ADDITIONAL CITY CIVIL AND SESSIONS JUDGE,

MAYO HALL UNIT, AT BENGALURU

(CCH-73)

P & S C No. 25023 / 2019

Between:

Sri. Nataraj

Aged about 60 years,

S/o. Late Marsingh,

No.163, SSM Road, 1st Cross, Murphy Town,

Halasuru, Bengaluru North,

Bengaluru-560 008.

-- Petitioner

And:

Nil

-- Respondent

PUBLIC NOTICE

Notice is hereby given that a petition has been made to this Court under Section 276 and 372 of the Indian Succession Act, 1925 for the grant of probate and succession certificate in respect of the success or assets of the deceased Smt.Vishalakshmi@Vishalashmamma and who died on 26.04.1999 at Bengaluru by executing a Will dated 30.10.1998.

Be it know that no caveat has been entered and the said petition is posted for hearing on 12-07-19 at 11 O' Clock.

Any persons claiming to have any interest may appear before the Court on the above mentioned day either in persons or through a pleader before grant of Probate and Succession Certificate in favour of the petitioner.

SCHEDULE

All that piece and parcel of the property bearing No.163, SSM Road, 1st Cross, Murphy Town, Halasuru, Bengaluru North, Bengaluru-560 008, Measuring 40x30, totally measuring 1200 sq.ft., consisting two bed room house with all basic amenities and bounded on

East by : House No.164

West by : Road

North by : House No.188

South by : Road

Given under my hand and seal of the Court on this the 3rd day of June 2019.

By Order of the Court

PD-19

Deputy Registrar

City Civil Court,

SC-05

Mayo Hall Unit, Bengaluru.

೧೦೮೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ಭಾಗ ೫

ಅಧ್ಯಕ್ಷರು, ಗ್ರಾಮಲೆಕ್ಕಿಗರ ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಯವರ ಕಾರ್ಯಾಲಯ, ಹಾಸನ ಜಿಲ್ಲೆ, ಹಾಸನ.

ಸಂಖ್ಯೆ: ಗ್ರಾ.ಲೆ.ಸಿಬ್ಬಂದಿ-26/2019-2020 ದಿನಾಂಕ: 15-06-2019.

ಅಧಿಸೂಚನೆ

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಹಾಸನ ಜಿಲ್ಲಾ ಘಟಕದಲ್ಲಿ ಬರುವ ತಾಲ್ಲೂಕುಗಳಲ್ಲಿ 2018 ನೇ ಸಾಲಿನ ನೇಮಕಾತಿ ಪ್ರಕ್ರಿಯೆಯ ನಂತರ ವಯೋನಿವೃತ್ತಿ, ರಾಜೀನಾಮೆ, ಮುಂಬಡ್ತಿ, ವರ್ಗಾವಣೆ ಇನ್ನಿತರ ಕಾರಣಗಳಿಂದ ತೆರವಾಗಿರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು, ಕರ್ನಾಟಕ ಸಾಮಾನ್ಯ ಸೇವೆಗಳು (ರೆವಿನ್ಯೂ ಸಬೊರ್ಡಿನೇಟ್ ಬ್ರಾಂಚ್) (ಕೇಡರ್ ಅಂಡ್ ರೆಕ್ರ್ಯೂಟ್‌ಮೆಂಟ್) (ತಿದ್ದುಪಡಿ) ನಿಯಮಗಳು 2008 ಮತ್ತು 2009 ರನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಸರ್ಕಾರದ ಆದೇಶಗಳಲ್ಲಿ ಅನುಮೋದನೆ ನೀಡಿರುತ್ತಾರೆ. ಅದರಂತೆ ಗ್ರಾಮಲೆಕ್ಕಿಗರ ಖಾಲಿ ಹುದ್ದೆಗಳನ್ನು ನೇರನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರಗಳು ಈ ಕೆಳಗಿನಂತಿವೆ :

1. ಹುದ್ದೆ ಹಾಗೂ ಸಂಖ್ಯೆ : ಗ್ರಾಮಲೆಕ್ಕಿಗರು, ಒಟ್ಟು ಹುದ್ದೆಗಳು : 21

2. ಹುದ್ದೆಗಳ ವರ್ಗೀಕರಣ :

21 ಹುದ್ದೆಗಳ ವಿವರ – ನೇರನೇಮಕಾತಿ ರೋಸ್ಟರ್ ಕ್ರಮಾಂಕ: 23 ರಿಂದ 43 ರವರೆಗೆ.
ಕ್ರ.ಸಂ. ವ ರ್ಗೀಕರಣದ ವಿವರ iಾಜಿ ೖನಿಕರು ೆ ವ ಸ ಅಭ್ಯರ್ಥಿ ಅಂಗವಿಕಲ ಅಭ್ಯರ್ಥಿ ಸಾಮಾನ್ಯ ನಿರಾಶ್ರಿತರು ಯೋಜನಾ iಾಧ್ಯಮ ಕನ್ನಡ ಅಭ್ಯರ್ಥಿ ವ ಅಭ್ಯರ್ಥಿ ಗ್ರ್ರಾಮೀಣ ುಹಿಳಾ ವ ಅಭ್ಯರ್ಥಿ ಒಟ್ಟು ುತಲ ವ ಸ ಬಿಂದುವಿನ ಕ್ರಮಸಂಖ್ಯೆ ಮೀಸಲಾತಿ ಪ್ರಾರಂಭಿಸುವ
1 ಸಾಮಾನ್ಯ 1 0 2 1 1 2 3 10 12-ಮಹಿಳಾ ಅಭ್ಯರ್ಥಿ
2 ಪ ರಿಶಿಷ್ಠ ಜಾತಿ 0 1- ಚಲನವಲನ ವ ೖಕಲ್ಯ ೆ 1 0 0 1 1 4 4-ಅಂಗವಿಕಲ ಅಭ್ಯರ್ಥಿ
3 ಪ ರಿಶಿಷ್ಠ ಪಂಗಡ 0 0 0 0 1 0 0 1 14-ಕನ್ನಡ ವ iಾಧ್ಯಮ ಅಭ್ಯರ್ಥಿ
4 ಪ ವ ್ರ ರ್ಗ-I 0 0 0 0 0 0 1 1 18-ಮಹಿಳಾ ಅಭ್ಯರ್ಥಿ
5 ಪ ವ ್ರ ರ್ಗ-IIA 0 1- ಚಲನವಲನ ವ ೖಕಲ್ಯ ೆ 0 0 0 1 1 3 4-ಅಂಗವಿಕಲ ಅಭ್ಯರ್ಥಿ
6 ಪ ವ ್ರ ರ್ಗ-IIB 0 0 0 0 0 0 1 1 18-ಮಹಿಳಾ ಅಭ್ಯರ್ಥಿ
7 ಪ ವ ್ರ ರ್ಗ-IIIA 0 0 0 0 0 0 0 0 -
8 ಪ ವ ್ರ ರ್ಗ-IIIB 0 0 0 0 0 0 1 1 2-ಮಹಿಳಾ ಅಭ್ಯರ್ಥಿ
ಒಟ್ಟು 1 2 3 1 2 4 8 21

3. ವೇತನ ಶ್ರೇಣಿ :

21400-500-22400-550-24600-600-27000-650-29600-750-32600-850-36000-950-39800-1100-42000 4. ಶೈಕ್ಷಣಿಕ ವಿದ್ಯಾರ್ಹತೆ :

CBSE(Central Board of ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಇವರು ನಡೆಸುವ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಅಥವಾ

Secondary Education, New Delhi) ಅಥವಾ ICSE (Indian Certificate of Secondary Education, New Delhi)

ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ಜೆ.ಓ.ಸಿ./ಐ.ಟಿ.ಐ. ಹಾಗೂ ಇತರೆ ತತ್ಸಮಾನ ಪರೀಕ್ಷೆಗಳು ಹಾಗೂ ಮುಕ್ತ ವಿಶ್ವವಿದ್ಯಾಲಯಗಳಿಂದ ಪಡೆದಿರುವ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಅಂಗೀಕರಿಸಲಾಗುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದೆ. ಅಂತಹ ಅರ್ಜಿಗಳನ್ನು ಸಲ್ಲಿಸಿದಲ್ಲಿ ಯಾವುದೇ ಮುನ್ಸೂಚನೆಯನ್ನು ನೀಡದೆ ತಿರಸ್ಕರಿಸಲಾಗುವುದು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ೧೦೮೩

5. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

(Online)

ಅಂತರ್ಜಾಲದ ಮೂಲಕ

ಅರ್ಜಿಗಳನ್ನು ದಿನಾಂಕ: 17-06-2019 ರಿಂದ ಸಲ್ಲಿಸಬಹುದಾಗಿದ್ದು, ಕೊನೆಯ ದಿನಾಂಕ: 01-07-2019 ಆಗಿರುತ್ತದೆ. ಬ್ಯಾಂಕಿನಲ್ಲಿ ನಿಗದಿತ ಅರ್ಜಿ ಶುಲ್ಕ ಪಾವತಿಸಿ ಚಲನ್‌ನ್ನು ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ: 02-07-2019 ಆಗಿರುತ್ತದೆ. ನಿಗದಿತ ದಿನಾಂಕದ (01-07-2019) ನಂತರ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ.

ಅರ್ಜಿಗಳನ್ನು ಆನ್‌ಲೈನ್

(Online) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದಾಗಿದೆ. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಯು ಇಲಾಖೆಯ ಅಧಿಕೃತ ವೆಬ್‌ಸೈಟ್

http://hassan.nic.in ತೆರೆದು ಕಂಪ್ಯೂಟರ್ ಪರದೆಯ ಮೇಲೆ ಅರ್ಜಿಯನ್ನು ತುಂಬಬೇಕು. ಅಭ್ಯರ್ಥಿಯು Submit Button ಅನ್ನು ಒತ್ತಿದರೆ ಅರ್ಜಿ ಸಂಖ್ಯೆ (Reference Number)

ಸೃಷ್ಟಿಯಾಗುತ್ತದೆ. ಆನ್‌ಲೈನ್

(Acknowledgement slip)

ಅರ್ಜಿಯನ್ನು ಭರ್ತಿ ಮಾಡಿದ ನಂತರ ಅಭ್ಯರ್ಥಿಗಳು ಸ್ವೀಕೃತಿ ಪತ್ರ

ಮತ್ತು ದ್ವಿಪ್ರತಿ ಚಲನ್ ಅನ್ನು ತೆಗೆದುಕೊಳ್ಳತಕ್ಕದ್ದು, ಕಂಪ್ಯೂಟರ್‌ನಲ್ಲಿ ಮುದ್ರಿಸಿದ ಚಲನ್‌ನಂತೆ ಅರ್ಜಿ ಶುಲ್ಕವನ್ನು ಕಾರ್ಪೊರೇಷನ್ ಬ್ಯಾಂಕ್‌ನ ಯಾವುದಾದರೂ ಶಾಖೆಯಲ್ಲಿ ಪಾವತಿಸಬೇಕು. ಪಾವತಿ ಮಾಡಿದ ಚಲನ್‌ನ ಕೌಂಟರ್ ಫೈಲನ್ನು ಸ್ಕ್ಯಾನ್ ಮಾಡಿ ಇದೇ ವೆಬ್ ಸೈಟಿನಲ್ಲಿ ಚಲನ್ ಸಂಖ್ಯೆ, ದಿನಾಂಕಗಳೊಂದಿಗೆ ಅಪ್‌ಲೋಡ್ ಮಾಡುವುದು. ಅಭ್ಯರ್ಥಿಗಳು ಸ್ವೀಕೃತಿ ಸ್ಲಿಪನ್ನು ಮತ್ತು ಚಲನ್ ಪಾವತಿಯ ಒಂದು ಪ್ರತಿಯನ್ನು ಕಡ್ಡಾಯವಾಗಿ ತಮ್ಮ ಬಳಿ ಇರಿಸಿಕೊಳ್ಳತಕ್ಕದ್ದು. ಇನ್ನೊಂದು ಚಲನ್ ಪ್ರತಿ ಬ್ಯಾಂಕ್ ಬಳಿ ಇರುತ್ತದೆ. ಈ ದಾಖಲೆಗಳನ್ನು ನಿಗದಿಪಡಿಸಿದ ದಿನಾಂಕದಂದು ಹಾಜರುಪಡಿಸತಕ್ಕದ್ದು.

ಪ ರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು ರೂ. 25-00
2ಎ, 2ಬಿ, 3ಎ, 3ಬಿ ವರ್ಗ, ಮಹಿಳಾ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು ರೂ. 150-00
ಸಾಮಾನ್ಯ ವರ್ಗ ರೂ. 300-00

7. ವಯೋಮಿತಿ :

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕ: 01-07-2019 ರಂದು ಈ ಕೆಳಗಿನಂತೆ ವಯೋಮಿತಿ ಹೊಂದಿರತಕ್ಕದ್ದು.

ವ ರ್ಗೀಕರಣದ ವಿವರ ಕನಿಷ್ಠ ಗರಿಷ್ಠ
ಪ .ಜಾ./ಪ.ಪಂ./ಪ್ರ-1 18 40
2ಎ, 2ಬಿ, 3ಎ, 3ಬಿ. 18 38
ಸಾಮಾನ್ಯ ವರ್ಗ 18 35

ಎಸ್.ಎಸ್.ಎಲ್.ಸಿ ಅಥವಾ ವರ್ಗಾವಣೆ ಪ್ರಮಾಣ ಪತ್ರ ಅಥವಾ ಕ್ಯೂಮಿಲೇಟಿವ್ ರೆಕಾರ್ಡ್‌ನಲ್ಲಿ ನಮೂದಿಸಿರುವ ಜನ್ಮ ದಿನಾಂಕವನ್ನು ಆಯ್ಕೆ ಪ್ರಾಧಿಕಾರವು ಪರಿಗಣಿಸುವುದು. ಇತರೆ ಯಾವುದೇ ದಾಖಲೆಗಳನ್ನು ಪರಿಗಣಿಸಲಾಗುವುದಿಲ್ಲ.

ಬಿ) ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ರಾಜ್ಯ ಅಧಿನಿಯಮ ಅಥವಾ ಕೇಂದ್ರ ಅಧಿನಿಯಮದ ಮೂಲಕ ಸ್ಥಾಪಿಸಲಾದ ಅಥವಾ ರಾಜ್ಯ ಅಧಿನಿಯಮದ ಅಥವಾ ಕೇಂದ್ರ ಅಧಿನಿಯಮದ ಅಡಿಯಲ್ಲಿನ ಸರ್ಕಾರದಿಂದ ಸ್ಥಾಪಿತವಾಗಿದ್ದು ಮತ್ತು ಸರ್ಕಾರವು ಒಡೆತನ ಹೊಂದಿರುವ ಅಥವಾ ನಿಯಂತ್ರಣ ಹೊಂದಿರುವ ನಿಗಮದ ಅಡಿಯಲ್ಲಿ ಹುದ್ದೆಯನ್ನು ಧಾರಣ ಮಾಡಿರುವ ಅಥವಾ ಧಾರಣ ಮಾಡಿದ್ದ ಅಭ್ಯರ್ಥಿಯ ಸಂದರ್ಭದಲ್ಲಿ ಆತ ಅಂಥ ಹುದ್ದೆಯನ್ನು ಧಾರಣ ಮಾಡಿರುವುಷ್ಟು ಅಥವಾ ಧಾರಣ ಮಾಡಿದ್ದಷ್ಟು ಅಥವಾ ಹತ್ತು ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ವರ್ಷಗಳು:

ಸಿ) ಮಾಜಿ ಸೈನಿಕನಾಗಿರುವ ಅಭ್ಯರ್ಥಿಯ ಸಂದರ್ಭದಲ್ಲಿ ಮೂರು ವರ್ಷಗಳು ಮತ್ತು ಇದಕ್ಕೆ ಕೇಂದ್ರದ ಸಶಸ್ತ್ರ ಪಡೆಗಳಲ್ಲಿ ಅವನು ಸೇವೆ ಸಲ್ಲಿಸಿರುವಷ್ಟು ವರ್ಷಗಳನ್ನು ಸೇರಿಸಬೇಕು.

ಡಿ) ಅಂಗವಿಕಲನಾಗಿರುವ ಅಭ್ಯರ್ಥಿಯ ಸಂದರ್ಭದಲ್ಲಿ ಹತ್ತು ವರ್ಷಗಳು:

ಇ) ಅಭ್ಯರ್ಥಿ ವಿಧವೆಯಾಗಿರುವಾಗ, ಹತ್ತು ವರ್ಷಗಳು:

ಎಫ್) ಜೀತ ಕಾರ್ಮಿಕನಾಗಿದ್ದ ಅಭ್ಯರ್ಥಿಯ ಸಂದರ್ಭದಲ್ಲಿ ಹತ್ತು ವರ್ಷಗಳು:

ಕರ್ನಾಟಕ ಸರ್ಕಾರಿ ಸೇವಾ (ಸಾಮಾನ್ಯ ನೇಮಕಾತಿ) ನಿಯಮಾವಳಿಗಳು 1977ರ ನಿಯಮ 6 ರಂತೆ ವಯೋಮಿತಿಯನ್ನು ಅದರಲ್ಲಿ ತಿಳಿಸಿರುವ ಮಟ್ಟಿಗೆ ಸಂಬಂಧಪಟ್ಟ ದಾಖಲೆ ಒದಗಿಸಿದಲ್ಲಿ ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುವುದು.

8. ಜಾತಿ ಮೀಸಲಾತಿ ಪ್ರಮಾಣ ಪತ್ರಗಳು :

ಜಾತಿ ಮೀಸಲಾತಿ ಕೋರಬಯಸುವ ಅಭ್ಯರ್ಥಿಗಳು

* ಪ.ಜಾ./ಪ.ಪಂ. ಅಭ್ಯರ್ಥಿಗಳು ನಮೂನೆ 'ಡಿ' ಯಲ್ಲಿ

* ಪ್ರವರ್ಗ-1 ರ ಅಭ್ಯರ್ಥಿಗಳು ನಮೂನೆ 'ಇ' ಯಲ್ಲಿ ಹಾಗೂ

* 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು ನಮೂನೆ 'ಎಫ್' ರಲ್ಲಿ೧೦೮೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ಭಾಗ ೫ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ: 01-07-2019 ರೊಳಗೆ ಸಂಬಂಧಿತ ತಹಸೀಲ್ದಾರ್ ರವರಿಂದ ಚಾಲ್ತಿಯಲ್ಲಿರುವ ನಮೂನೆಯಲ್ಲಿ ಪ್ರಮಾಣ ಪತ್ರವನ್ನು ಪಡೆದು ಪರಿಶೀಲನಾ ದಿನಾಂಕದಂದು ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಹಾಜರುಪಡಿಸುವುದು.

9. ಮಾಜಿ ಸೈನಿಕರ ಕುಟುಂಬದ ಅಭ್ಯರ್ಥಿಗಳು :

ಮಾಜಿ ಸೈನಿಕರು ಅಥವಾ ಮಾಜಿ ಸೈನಿಕರ ಕುಟುಂಬದ ಅಭ್ಯರ್ಥಿಗಳ ಮೀಸಲಾತಿ ಕೋರಬಯಸುವ ಅಭ್ಯರ್ಥಿಗಳು, ಮಾಜಿ ಸೈನಿಕರು (ಭೂ, ನೌಕಾ, ವಾಯುದಳದಲ್ಲಿ ಸೇವೆ ಸಲ್ಲಿಸಿದ ವ್ಯಕ್ತಿ) ಎನ್ನುವ ಬಗ್ಗೆ ಅಥವಾ ಭಾರತ ದೇಶದ ಒಕ್ಕೂಟ ಸಶಸ್ತ್ರ ದಳದಲ್ಲಿ ಸೇವೆ ಸಲ್ಲಿಸಿರುತ್ತಿರುವಾಗ ಮರಣ ಹೊಂದಿದ ಅಥವಾ ಶಾಶ್ವತವಾಗಿ ಅಂಗಹೀನರಾದ ವ್ಯಕ್ತಿಗಳ ಕುಟುಂಬದ ಸದಸ್ಯರು ಎಂಬ ಬಗ್ಗೆ ಸಕ್ಷಮ ಮಿಲಿಟರಿ ಅಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು. ಈ ಪ್ರಮಾಣ ಪತ್ರವನ್ನು ಪರಿಶೀಲನಾ ದಿನಾಂಕದಂದು ಕಡ್ಡಾಯವಾಗಿ ಹಾಜರುಪಡಿಸುವುದು.

10. ಗ್ರಾಮೀಣ ಅಭ್ಯರ್ಥಿ :

ಗ್ರಾಮೀಣ ಮೀಸಲಾತಿಯನ್ನು ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳ ರೀತ್ಯ 1 ರಿಂದ 10 ನೇ ತರಗತಿಯವರೆಗೆ ನಿರಂತರವಾಗಿ ಗ್ರಾಮೀಣ ಮೀಸಲಾತಿಗೆ ಒಳಪಡುವ ಪ್ರದೇಶಗಳಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾಗಿರುವವರು ಈ ಮೀಸಲಾತಿಯನ್ನು ಪಡೆಯಲು ಅರ್ಹರು.

ಗ್ರಾಮೀಣ ಅಭ್ಯರ್ಥಿಗಳಿಗೆಂದು ಮೀಸಲಿರಿಸಿದ್ದ ಹುದ್ದೆಗಳನ್ನು ಕ್ಲೈಮ್ ಮಾಡುವ ಸಾಮಾನ್ಯ ಅರ್ಹತೆಯ ಅಭ್ಯರ್ಥಿಗಳು ನಮೂನೆ-2 ರ ಪ್ರಮಾಣ ಪತ್ರವಲ್ಲದೇ, ಮೇಲುಸ್ಥರಕ್ಕೆ ಸೇರಿಲ್ಲದಿರುವ ಬಗ್ಗೆ ನಮೂನೆ-1 ರಲ್ಲಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಂಬಂಧಿಸಿದ ತಹಸೀಲ್ದಾರ್‌ರವರಿಂದ ಹಾಗೂ ಗ್ರಾಮೀಣ ಮೀಸಲಾತಿ ಕೋರುವ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ, ಪ್ರವರ್ಗ-1, ಪ್ರವರ್ಗ-2ಎ, ಪ್ರವರ್ಗ-2ಬಿ, ಪ್ರವರ್ಗ-3ಎ, ಪ್ರವರ್ಗ-3ಬಿ ಮೀಸಲಾತಿಗೆ ಸೇರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಗ್ರಾಮೀಣ ಮೀಸಲಾತಿಯ ಪ್ರಮಾಣ ಪತ್ರವನ್ನು ನಮೂನೆ-2 ರಲ್ಲಿ ನಿಗದಿತ ಪ್ರಾಧಿಕಾರಿಗಳಿಂದ ಪಡೆದು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಯವರಿಂದ ಮೇಲು ರುಜು ಮತ್ತು ಮೊಹರು ಮಾಡಿಸಿಕೊಂಡು, ಪರಿಶೀಲನಾ ದಿನಾಂಕದಂದು ಕಡ್ಡಾಯವಾಗಿ ತಪ್ಪದೆ ಹಾಜರುಪಡಿಸುವುದು.

11. ಕನ್ನಡ ಮಾಧ್ಯಮ ಅಭ್ಯರ್ಥಿ :

ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆಂದು ಮೀಸಲಿರಿಸಿದ ಹುದ್ದೆಗಳನ್ನು ಕ್ಲೈಮ್ ಮಾಡುವ ಅಭ್ಯರ್ಥಿಗಳು 1ನೇ ತರಗತಿಯಿಂದ 10ನೇ ತರಗತಿಯವರೆಗೆ ನಿರಂತರವಾಗಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಸಂಬಂಧಪಟ್ಟ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಹಾಗೂ ಮೊಹರು ಪಡೆದ ಪ್ರಮಾಣ ಪತ್ರವನ್ನು ಪರಿಶೀಲನಾ ದಿನಾಂಕದಂದು ಹಾಜರುಪಡಿಸುವುದು.

12. ಅಂಗವಿಕಲ ಅಭ್ಯರ್ಥಿ :

ಸರ್ಕಾರದ ಅಧಿಸೂಚನೆ ಸಂಖ್ಯೆ : ಡಿಪಿಎಆರ್ 52 ಎಸ್ಆರ್ಆರ್ 1999, ಬೆಂಗಳೂರು, ದಿನಾಂಕ: 29/11/2002 ಮತ್ತು ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿ.ಪಿ.ಎ.ಆರ್.54ಎಸ್.ಆರ್.ಆರ್. ದಿನಾಂಕ: 23/6/2012 ರನ್ವಯ, ಗ್ರಾಮಲೆಕ್ಕಿಗರ ಹುದ್ದೆಯಲ್ಲಿ ಅಂಗವಿಕಲರ ಮೀಸಲಾತಿಯನ್ನು ಈ ಕೆಳಕಂಡ ವರ್ಗಗಳಿಗೆ ಮಾತ್ರ ಕಲ್ಪಿಸಲಾಗಿದೆ.

(Leprosy cured)

* ಕುಷ್ಟರೋಗದಿಂದ ಗುಣಮುಖರಾದವರು.

(Hearing impaired)

* ಶ್ರವಣ ದೋಷವುಳ್ಳವರು.

(Mentally ill)

* ಮಾನಸಿಕ ಅಸ್ವಸ್ಥತೆ.

(Locomotor disability)

* ಚಲನವಲನ ವೈಕಲ್ಯ.

ಮೇಲಿನ ಸರ್ಕಾರಿ ಆದೇಶದಂತೆ ಈ ಮೇಲಿನ ಅಂಗವಿಕಲತೆಗಳನ್ನು ಹೊರತುಪಡಿಸಿ ಇತರೆ ಅಂಗವಿಕಲತೆವುಳ್ಳ ಅಭ್ಯರ್ಥಿಗಳು ಗ್ರಾಮಲೆಕ್ಕಿಗರ ಹುದ್ದೆಗೆ

ಅಂಗವಿಕಲರ ಮೀಸಲಾತಿಯಡಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977 ರ ನಿಯಮ 9(1-ಎ) ರ ಅನ್ವಯ ರಾಜ್ಯ ಸಿವಿಲ್ ಸೇವೆಯಲ್ಲಿನ ಗ್ರೂಪ್-ಸಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರಿಗೆ ಶೇಕಡಾ 5 ರಷ್ಟು ಸಮತಳ ಮೀಸಲಾತಿ ಕಲ್ಪಿಸಲಾಗಿದೆ. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 128 ಸೆನೆನಿ 2006 ದಿನಾಂಕ: 1/8/2009 ರನ್ವಯ ಮೀಸಲಾತಿ ನೀಡಲಾಗುವುದು. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ : ಸಿಆಸುಇ 115 ಸೆನೆನಿ 2005, ದಿನಾಂಕ: 19/11/2005 ರಲ್ಲಿ ನಿಗದಿ ಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ಪಡೆದುಕೊಂಡಿರತಕ್ಕದ್ದು. ಬೇರೆ ಯಾವುದೇ ನಮೂನೆಗಳಲ್ಲಿ ಪಡೆಯಲಾಗಿರುವ ಪ್ರಮಾಣ ಪತ್ರಗಳನ್ನು ಹಾಗೂ ಗುರುತಿನ ಚೀಟಿಯನ್ನು ಪರಿಗಣಿಸಲಾಗುವುದಿಲ್ಲ. ಈ ಪ್ರಮಾಣ ಪತ್ರದ ನಮೂನೆಯನ್ನು ಲಗತ್ತಿಸಿದೆ. ಈ ಪ್ರಮಾಣ ಪತ್ರವನ್ನು ಪರಿಶೀಲನಾ ದಿನಾಂಕದಂದು ಹಾಜರುಪಡಿಸುವುದು.

13. ಯೋಜನೆಗಳಿಂದ ನಿರಾಶ್ರಿತ ಅಭ್ಯರ್ಥಿ :

ಯೋಜನೆಗಳಿಂದ ನಿರ್ವಸಿತರಾದ ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಕೋರುವ ಅಭ್ಯರ್ಥಿಗಳು ಸಂಬಂಧಿಸಿದ ತಹಸೀಲ್ದಾರ್ ರವರಿಂದ ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 23 ಎಸ್ಆರ್ಆರ್ 99 ದಿನಾಂಕ: 23/11/2000 ರನ್ವಯ ಈ ಮೀಸಲಾತಿಯಡಿಯಲ್ಲಿ ಕ್ಲೈಮು ಮಾಡುವ ಅಭ್ಯರ್ಥಿಗಳು ಸರ್ಕಾರದ ಆದೇಶದ ಸಂಖ್ಯೆ: ಸಿಆಸುಇ 44 ಸೇಸೇನಿ 2001 ದಿನಾಂಕ: 27/07/2001 ರಲ್ಲಿ ತಿಳಿಸಿರುವಂತೆ ನಿಗಧಿತ ನಮೂನೆಯಲ್ಲಿ ಸಲ್ಲಿಸತಕ್ಕದ್ದು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ೧೦೮೫

14. ಸೇವೆಯಲ್ಲಿರುವ ಅಭ್ಯರ್ಥಿ:

ರಾಜ್ಯ/ಕೇಂದ್ರ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಕರ್ನಾಟಕ ನಾಗರೀಕ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977 ನಿಯಮ-11 ರೀತ್ಯಾ ಕಡ್ಡಾಯವಾಗಿ ತಮ್ಮ ಇಲಾಖಾ ಮುಖ್ಯಸ್ಥರಿಂದ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಂಡಿರತಕ್ಕದ್ದು 15. ಆಯ್ಕೆ ವಿಧಾನ :

ಕರ್ನಾಟಕ ಜನರಲ್ ಸರ್ವೀಸಸ್ (ರೆವಿನ್ಯೂ ಸಬೊರ್ಡಿನೇಟ್ ಬ್ರಾಂಚ್) (ಕೇಡರ್ ಅಂಡ್ ರೆಕ್ರ್ಯೂಟ್‌ಮೆಂಟ್) (ತಿದ್ದುಪಡಿ) ನಿಯಮಗಳು 2008 ಮತ್ತು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ಪ್ರಕಾರ ಅಭ್ಯರ್ಥಿಯು ಅವರ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕಗಳ (On Merit) ಆಧಾರದ ಮೇಲೆ ಆಯಾಯ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುತ್ತದೆ.

16. ಅರ್ಹತಾ ಷರತ್ತುಗಳು :

ಅ. ಅರ್ಜಿದಾರರು ಭಾರತೀಯ ನಾಗರೀಕನಾಗಿರತಕ್ಕದ್ದು.

ಆ. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು, ಮತ್ತು ಅವರ ನೇಮಕಾತಿಯು ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತವಾಗಿರಬೇಕು.

ಇ. ದೈಹಿಕವಾಗಿ ಅನರ್ಹರಾಗಿದ್ದಾರೆಂಬುದಾಗಿ ವೈದ್ಯಕೀಯ ಮಂಡಳಿಯ ವರದಿಯ ಮೇಲೆ ಅನರ್ಹರೆಂಬುದಾಗಿ ತಿರಸ್ಕರಿಸುವ ಪೂರ್ಣ ವಿವೇಚನೆಯನ್ನು ನೇಮಕಾತಿ ಸಮಿತಿ ಕಾಯ್ದಿರಿಸಿಕೊಂಡಿದೆ.

ಈ. ಅಭ್ಯರ್ಥಿಯು ಈ ಹಿಂದೆ ಯಾವುದೇ ಸರ್ಕಾರದ ಸೇವೆಯಿಂದ ವಜಾಗೊಂಡಿರಬಾರದು.

ನಿಗದಿತ ಶೈಕ್ಷಣಿಕ ಅರ್ಹತೆಯ ಜೊತೆಗೆ ಈ ಮೇಲ್ಕಂಡ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು, ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುತ್ತಾರೆ.

17. ಪ್ರಮುಖವಾದ ಸೂಚನೆಗಳು :

1. ಅರ್ಜಿ ಸಲ್ಲಿಸುವಾಗ ನಮೂದಿಸಿರುವ ಹಾಗೂ ಮೀಸಲಾತಿ ಕೋರಿರುವ ಪ್ರಮಾಣ ಪತ್ರಗಳು ಅಂದರೆ-

CBSE(Central Board of Secondary Education, New Delhi) • ಹುದ್ದೆಯ ನೇಮಕಾತಿಗಾಗಿ ನಿಗಧಿಪಡಿಸಲಾದ ದ್ವಿತೀಯ ಪಿ.ಯು.ಸಿ. ಅಥವಾ

ICSE (Indian Certificate of Secondary Education, New Delhi)

ಅಥವಾ

ನಡೆಸುವ 12 ನೇ ತರಗತಿ ಪರೀಕ್ಷೆಯ ಅಂಕಪಟ್ಟಿ.

• ಜನ್ಮ ದಿನಾಂಕದ ಸಮರ್ಥನೆಗಾಗಿ ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಅಥವಾ ಕ್ಯುಮೂಲೇಟಿವ್ ದಾಖಲೆ. • ಸೈನಿಕ ಸೇವೆಯಿಂದ ಬಿಡುಗಡೆ ಹೊಂದಿದ/ಮುಕ್ತಿ ಹೊಂದಿದ ಬಗೆಗಿನ ಪ್ರಮಾಣ ಪತ್ರ. • ಸೇವೆಯಲ್ಲಿರುವ ಅಭ್ಯರ್ಥಿಗಳು ಇಲಾಖಾ ಮುಖ್ಯಸ್ಥರಿಂದ ಪಡೆದ ನಿರಾಕ್ಷೇಪಣಾ ಪ್ರಮಾಣ ಪತ್ರ. • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, 2ಎ, 2ಬಿ, 3ಎ, 3ಬಿ ಮೀಸಲಾತಿಯ ಪ್ರಮಾಣ ಪತ್ರಗಳು. • ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ. • ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ. • ಯೋಜನಾ ನಿರಾಶ್ರಿತ ಪ್ರಮಾಣ ಪತ್ರ. • ವಿಧವೆಯರು, ಜೀತ ಕಾರ್ಮಿಕರು ಇವರು ಸಕ್ಷಮ ಪ್ರಾಧಿಕಾರದಿಂದ (ತಹಸೀಲ್ದಾರ್, ಕಾರ್ಮಿಕ ಇಲಾಖೆಯ ಅಧಿಕಾರಿಗಳು) ಪಡೆದ ಪ್ರಮಾಣ ಪತ್ರ.

• ಅಂಗವಿಕಲ ಅಭ್ಯರ್ಥಿಗಳು ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯಿಂದ ಪಡೆದ ಪ್ರಮಾಣ ಪತ್ರ. • ಕಂಪ್ಯೂಟರ್ ಜ್ಞಾನ ಹೊಂದಿರುವ ಬಗ್ಗೆ ಸರ್ಕಾರದಿಂದ ಮಾನ್ಯತೆ ಪಡೆದ ಕಂಪ್ಯೂಟರ್ ಕೇಂದ್ರದಿಂದ ಪಡೆದ ಪ್ರಮಾಣ ಪತ್ರ. • ಅಭ್ಯರ್ಥಿಯು ಸ್ಥಳೀಯ ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ 06 ತಿಂಗಳೊಳಗಿನ ಇತ್ತೀಚಿನ ನಡತೆ ಪ್ರಮಾಣ ಪತ್ರ.

ಮೇಲ್ಕಂಡ ದಾಖಲಾತಿಗಳನ್ನು ನಿಗಧಿಪಡಿಸಿದ ನಮೂನೆಗಳಲ್ಲಿ ಹಾಗೂ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಅರ್ಹತೆಯನ್ನು ಪಡೆದಿರಬೇಕು. ನಿಗಧಿಪಡಿಸಲಾದ ಕೊನೆಯ ದಿನಾಂಕದ ನಂತರ ಪಡೆದ ದಾಖಲಾತಿಗಳು ಅರ್ಹತೆಯನ್ನು ಕಳೆದುಕೊಳ್ಳುತ್ತವೆ.

2. ಮೀಸಲಾತಿ ಇತ್ಯಾದಿಗಳ ಬಗ್ಗೆ ಅಭ್ಯರ್ಥಿಯು ಖಾತ್ರಿ ಪಡಿಸಿಕೊಂಡು ಅರ್ಜಿ ಸಲ್ಲಿಸುವುದು ಅವರ ವೈಯುಕ್ತಿಕ ಜವಾಬ್ದಾರಿಯಾಗಿರುತ್ತದೆ.

3. ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಮುನ್ನೆಚ್ಚರಿಕೆ ವಹಿಸಬೇಕಾಗಿರುತ್ತದೆ. ಒಮ್ಮೆ ಅರ್ಜಿ ಸಲ್ಲಿಸಿ ಚಲನ್ ಪ್ರತಿ ಮುದ್ರಿತಗೊಂಡ ನಂತರ ನಮೂದುಗಳನ್ನು ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.

4. ಒಬ್ಬ ಅಭ್ಯರ್ಥಿ ಒಂದಕ್ಕಿಂತ ಹೆಚ್ಚು ಆನ್‌ಲೈನ್ ಅರ್ಜಿಯನ್ನು ಸಲ್ಲಿಸಿದರೆ ಆ ಅಭ್ಯರ್ಥಿಯು ಶುಲ್ಕವನ್ನು ಪಾವತಿಸಿರುವ ಅರ್ಜಿಯನ್ನು ಆಯ್ಕೆ ಪ್ರಕ್ರಿಯೆಯಲ್ಲಿ ಮುಂದುವರೆಸಲಾಗುವುದು. ಹಾಗೂ ಉಳಿದೆಲ್ಲಾ ಆನ್‌ಲೈನ್ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

5. ಅರ್ಜಿಯಲ್ಲಿ ಅಭ್ಯರ್ಥಿಯು ನೀಡುವ ವಿಳಾಸವೇ ಅಂತಿಮವಾಗಿದ್ದು, ಎಲ್ಲಾ ಪತ್ರವ್ಯವಹಾರಗಳನ್ನು ಅದೇ ವಿಳಾಸಕ್ಕೆ ಕಳುಹಿಸಿಕೊಡಲಾಗುವುದು.

ನಂತರದಲ್ಲಿ ವಿಳಾಸ ಬದಲಾವಣೆ ಬಗ್ಗೆ ಯಾವುದೇ ಪತ್ರವ್ಯವಹಾರವನ್ನು ಪರಿಗಣಿಸಲಾಗುವುದಿಲ್ಲ.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೦೮೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜೂನ್ ೨೦, ೨೦೧೯ ಭಾಗ ೫

6. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಭರ್ತಿ ಮಾಡುವ ಮುನ್ನ ವೆಬ್‌ಸೈಟ್‌ನಲ್ಲಿ ತಿಳಿಸಿರುವ ಸೂಚನೆಗಳನ್ನು ಪಾಲಿಸುವುದು.

7. ಅಭ್ಯರ್ಥಿಯ ಹೆಸರು ಅಂತಿಮ ಆಯ್ಕೆಪಟ್ಟಿಯಲ್ಲಿ ಸೇರ್ಪಡೆಯಾಗಿದೆ ಎಂಬುದರ ಆಧಾರದ ಮೇಲೆ ಅಭ್ಯರ್ಥಿಗೆ ನೇಮಕಾತಿಯ ಹಕ್ಕು ದೊರೆಯುವುದಿಲ್ಲ.

18. ದುರ್ನಡತೆ :

ಒಬ್ಬ ಅಭ್ಯರ್ಥಿಯು ನಕಲಿ ವ್ಯಕ್ತಿಯಾಗಿರುವನೆಂದು ಅಥವಾ ಖೋಟಾ ದಸ್ತಾವೇಜು ಅಥವಾ ತಿದ್ದಲಾದ ದಸ್ತಾವೇಜುಗಳನ್ನು ಸಲ್ಲಿಸಿರುವನೆಂದು ಅಥವಾ ತಪ್ಪು ಅಥವಾ ಸುಳ್ಳು ಹೇಳಿಕೆ ನೀಡಿರುವನೆಂದು ಅಥವಾ ವಾಸ್ತವಿಕ ಮಾಹಿತಿಯನ್ನು ಮರೆಮಾಚಿರುವನೆಂದು ಅಥವಾ ಅವರ ನೇಮಕಾತಿಯ ಸಂಬಂಧದಲ್ಲಿ ಯಾವುದೇ ಇತರ ಅಕ್ರಮ ಮತ್ತು ಅನುಚಿತ ಮಾರ್ಗವನ್ನು ಅವಲಂಭಿಸಿರುವನೆಂದು ಕಂಡು ಬಂದಲ್ಲಿ, ಅವನು/ಅವಳು ಸ್ವತಃ ಕ್ರಿಮಿನಲ್ ವ್ಯವಹರಣೆಗಳಿಗೆ ಮತ್ತು ಶಿಸ್ತು ಕ್ರಮಕ್ಕೆ ಒಳಪಡುವುದಲ್ಲದೆ, ಹುದ್ದೆಯ ಆಯ್ಕೆಯಿಂದ ಅಭ್ಯರ್ಥಿತ್ವವನ್ನು ಅಸಿಂಧುಪಡಿಸಲಾಗುವುದು.

19. ಷರತ್ತು :

ಈ ಅಧಿಸೂಚನೆಯನ್ನು ಯಾವುದೇ ಕಾರಣವನ್ನು ನೀಡದೆ, ಯಾವುದೇ ಸಮಯದಲ್ಲಿ ರದ್ದುಗೊಳಿಸುವ ಅಧಿಕಾರವು ಗ್ರಾಮಲೆಕ್ಕಿಗರ ನೇರನೇಮಕಾತಿ ಆಯ್ಕೆ ಪ್ರಾಧಿಕಾರಕ್ಕೆ ಇರುತ್ತದೆ.

ಅಧ್ಯಕ್ಷರು,

PR- 173

ಗ್ರಾಮಲೆಕ್ಕಿಗರ ನೇರನೇಮಕಾತಿ ಆಯ್ಕೆ ಪ್ರಾಧಿಕಾರ

SC-10

ಮತ್ತು ಜಿಲ್ಲಾಧಿಕಾರಿಗಳು ಹಾಸನ ಜಿಲ್ಲೆ, ಹಾಸನ.

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 20 June 2019. Indian Gazettes, https://egazette.servantsofknowledge.in/details/in.gazette.karnataka_new.2019-06-20.Part-5/. Archive identifier in.gazette.karnataka_new.2019-06-20.Part-5.