Servants of Knowledge
Karnataka Gazette · Government of Karnataka

Karnataka Gazette, Part Part-2, 18 July 2019

Published 18 July 2019

Part
Part-2
Identifier
in.gazette.karnataka_new.2019-07-18.Part-2
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಜುಲೈ ೧೮, ೨೦೧೯ (ಆಷಾಡ ೨೭, ಶಕ ವರ್ಷ ೧೯೪೧)

Bengaluru, Thursday, July 18, 2019 ( Ashadha 27, Shaka Varsha 1941)

ಸಂಚಿಕೆ ೨೯

Issue 29

ಭಾಗ ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,

ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 15 ಡಿಸಿಇ 2018, ಬೆಂಗಳೂರು, ದಿನಾಂಕ: 21.06.2019

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಆಯ್ಕೆ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸರ್ಕಾರಕ್ಕೆ ಸಲ್ಲಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರ ದಿನಾಂಕ:04-02-2017ರ ಅಧಿಸೂಚನೆ ಸಂಖ್ಯೆ: ಇಡಿ 33 ಡಿಸಿಇ 2017 ರಲ್ಲಿ ಪ್ರಕಟಿಸಿದೆ. ಕನ್ನಡ ವಿಷಯದ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪಟ್ಟಿಗಳಲ್ಲಿ ಗ್ರೂಪ್ 'ಸಿ' (ಮಿಕ್ಕುಳಿದ ವೃಂದ) ಕೋಟಾದ ಆಯ್ಕೆ ಪಟ್ಟಿಯಲ್ಲಿ ಕ್ರಮ ಸಂಖ್ಯೆ:7 ರಲ್ಲಿ ಆಯ್ಕೆಯಾದ ಶ್ರೀ ರವಿಶಂಕರ ಗಡಿಯಪ್ಪನವರ ಇವರ ಆಯ್ಕೆಯನ್ನು ಪ್ರಶ್ನಿಸಿ ಶ್ರೀ ಬಸವಂತಪ್ಪ ಹೊಸಹಳ್ಳಿ ಇವರು ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಿಸಿದ ಅರ್ಜಿ ಸಂಖ್ಯೆ:7741/2017 ರಲ್ಲಿ ಮಾನ್ಯ ನ್ಯಾಯಮಂಡಳಿಯು ದಿನಾಂಕ:20-09-2017 ರಂದು ಶ್ರೀ ರವಿಶಂಕರ ಗಡಿಯಪ್ಪನವರ ಇವರ ಆಯ್ಕೆಯನ್ನು ರದ್ದುಪಡಿಸಿ ಅರ್ಜಿದಾರರ ಹೆಸರನ್ನು ಆಯ್ಕೆ ಪಟ್ಟಿಯಲ್ಲಿ ಸೂಕ್ತ ಸ್ಥಾನದಲ್ಲಿ ಸೇರಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದೆ. ಅದರಂತೆ, ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇವರು ದಿನಾಂಕ:23-03-2019 ರಂದು ಅಧಿಸೂಚನೆ ಸಂಖ್ಯೆ: ED/KEA/ADMN/CR-55/2014-15 ನ್ನು ಹೊರಡಿಸಿ ಶ್ರೀ ಬಸವಂತಪ್ಪ ಹೊಸಹಳ್ಳಿ ಇವರ ಹೆಸರನ್ನು ಕನ್ನಡ ವಿಷಯದ ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪಟ್ಟಿಯಲ್ಲಿ ಗ್ರೂಪ್ 'ಸಿ' (ಮಿಕ್ಕುಳಿದ ವೃಂದ) ಕೋಟಾದ ಆಯ್ಕೆ ಪಟ್ಟಿಯಲ್ಲಿ ಕ್ರಮ ಸಂಖ್ಯೆ:5 ರಲ್ಲಿ ಸೇರಿಸಿ ಪರಿಷ್ಕøತ ಆಯ್ಕೆ ಪಟ್ಟಿಯನ್ನು ಪ್ರಕಟಿಸಿರುತ್ತಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ಕನ್ನಡ ವಿಷಯದ ಗ್ರೂಪ್-ಸಿ ಮಿಕ್ಕುಳಿದ ವೃಂದದ ಪರಿಷ್ಕøತ ಆಯ್ಕೆ ಪಟ್ಟಿಯನ್ನು ಈ ಮೂಲಕ ಪ್ರಕಟಿಸಿದೆ.

ಈ ಮೂಲಕ ಪ್ರಕಟಿಸಲಾದ ಆಯ್ಕೆ ಪಟ್ಟಿಯು ಹಾಗೂ ಅದರನ್ವಯ ಕೈಗೊಳ್ಳುವ ನೇಮಕಾತಿ ಪ್ರಕ್ರಿಯೆಯು, ನೇಮಕಾತಿಗಳಿಗೆ ಸಂಬಂಧಿಸಿದಂತೆ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿರುವ ಅಧಿನಿಯಮಗಳು / ಆದೇಶಗಳು / ಅಧಿಸೂಚನೆಗಳು / ಸುತ್ತೋಲೆಗಳಲ್ಲಿನ ಷರತ್ತು, ನಿಬಂಧನೆಗಳಿಗೆ ಒಳಪಟ್ಟಿರುತ್ತದೆ ಹಾಗೂ ಈ ಬಗ್ಗೆ ಮಾನ್ಯ ಸಕ್ಷಮ ನ್ಯಾಯಾಲಯಗಳು ನೀಡುವ / ನೀಡಿರುವ ತೀರ್ಪುಗಳಿಗೆ / ಆದೇಶಗಳಿಗೆ ಒಳಪಟ್ಟಿರುತ್ತದೆ.

ಆಯ್ಕೆ ಪಟ್ಟಿಯ ಕೊನೆಯಲ್ಲಿ ನಮೂದಿಸಿರುವ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಆಗುವ ಅಂತಿಮ ತೀರ್ಮಾನದ ಪಾಲನೆಯ ಷರತ್ತಿಗೆ ಈ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಅಭ್ಯರ್ಥಿತನವು ಒಳಪಟ್ಟಿರುತ್ತದೆ.

ಈ ಮೂಲಕ ಪ್ರಕಟಿಸಲಾದ ಪರಿಷ್ಕøತ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಪೂರ್ವಚರಿತ್ರೆಯು ತೃಪ್ತಿಕರವಾಗಿರುವ ಕುರಿತಂತೆ ಮತ್ತು ಇತರೆ ಅವಶ್ಯಕವೆನಿಸುವ ಅಗತ್ಯ ವಿಚಾರಣೆ / ತಪಾಸಣೆಯ ನಂತರ ಅಭ್ಯರ್ಥಿತನವು ತೃಪ್ತಿಕರವಾಗಿದೆ ಎಂದು ನೇಮಕಾತಿ ಪ್ರಾಧಿಕಾರ ತೀರ್ಮಾನಿಸಿದಲ್ಲಿ ಮಾತ್ರ ಅಭ್ಯರ್ಥಿಗಳು ನೇಮಕಾತಿ ಆದೇಶಕ್ಕೆ ಅರ್ಹರಾಗುತ್ತಾರೆಯೇ ಹೊರತು, ಅಂತಿಮ ಆಯ್ಕೆ ಪಟ್ಟಿಯಲ್ಲಿ ಹೆಸರು ನಮೂದಾಗಿದೆ ಎಂಬ ಕಾರಣದಿಂದಾಗಿ ಅಭ್ಯರ್ಥಿಯು ಯಾವುದೇ ಹಕ್ಕನ್ನು ಹೊಂದಿದಂತಾಗುವುದಿಲ್ಲ.

REVISED SELECTION LIST

SUBJECT : Kannada(01)

Sl No APP ID REG NO CANDIDATE NAME SCORE DOB Category Reservation Allot Categ
1 FG511418 M3068 MURTHI I R 193 05-07-1982 GM K Group-C GM
2 FG516576 B4446 RATHNAMALA 174 23-08-1972 2A W R K Group-C GM/W

(೩೯೩)

೩೯೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೮, ೨೦೧೯ ಭಾಗ ೨
Sl No APP ID REG NO CANDIDATE NAME SCORE DOB Category Reservation Allot Categ
3 FG701330 M3506 RAGHAVENDRA M V 170 25-05-1984 3A R K Group-C GM/RL
4 FG500572 D2786 SHIVANAND CHANDAKE 166 08-06-1974 2A K Group-C GM
5 FG506924 D3564 BASAVANTAPPA HOSAHALLI 162 20-04-1979 2A K Group-C 2A
6 FG511417 M3264 PRASANNA 162 01-06-1980 3A R K Group-C GM/RL
7 FG508191 S1964 GEETHA M S 160 17-04-1973 GM W Group-C GM/W
8 FG507743 S2328 PUSHPALATHA R 132 21-03-1981 C1 W K Group-C C1
9 FG513000 B4071 NANDINI C S 127 19-03-1979 2A W Group-C 2A/W
10 FG507182 B3531 SUKANYA T L 114 22-07-1979 SC W Group-C SC/W
11 FG509389 S2348 PREMAKUMARI P 109 15-07-1980 SC W Group-C SC

1. This Selection List and further recruitment process is subject to relevant Government rules / orders / notifications /

circulars / Honble court/s orders regulating the conditions of recruitment from time to time.

2. The Selection of all the Candidates is subject to final orders of Honble High Court and Honble KAT in A.No. '3027-3031,

5303-5313/2015, 3190-3265/2015, 4482-4490/2015, 4514-4517/2015, 4534-4536/2015, 4538-4543/2015, 4559-4564/2015, 4574-

4576/2015, 5428-5441/2015, 5448/2015' as noted and other relevant cases.

PR.1135

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

SC.100

ಕೆ. ಶಿವಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 270 ಡಿಸಿಇ 2018, ಬೆಂಗಳೂರು, ದಿನಾಂಕ: 08.07.2019

ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಆಯ್ಕೆ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸರ್ಕಾರಕ್ಕೆ ಸಲ್ಲಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 33 ಡಿಸಿಇ 2017, ದಿನಾಂಕ:04-02-2017 ರಲ್ಲಿ ಪ್ರಕಟಿಸಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014 ರ ನಿಯಮ 9ರ ಉಪ-ನಿಯಮ (2) ಮತ್ತು (3) ರ ಅನುಸಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತೆಯ ದೃಡೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ಪೂರ್ಣಗೊಂಡಿರುವ ಈ ಕೆಳಕಂಡ ಅಭ್ಯರ್ಥಿಯನ್ನು ಸರ್ಕಾರವು ವೇತನ ಶ್ರೇಣಿ ರೂ.15600-39100+6000(ಎಜಿಪಿ) (ಯುಜಿಸಿ ವೇತನ ಶ್ರೇಣಿ) ರಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಿಸಿದೆ.

ವಿಷಯ: ನಿರ್ವಹಣಾಶಾಸ್ತ್ರ

ಕ್ರಮ ಸಂಖ್ಯೆ ದಿನಾಂಕ:04-02-2017ರ ಆಯ್ಕೆ ಪಟ್ಟಿಯಲ್ಲಿನ ಕ್ರಮ ಸಂಖ್ಯೆ ಹ ಸರು ೆ ಜನ್ಮ ದಿನಾಂಕ ಪ್ರವರ್ಗ
1 84 ANITHA K M 03-05-1986 3B/W

ಈ ಅಧಿಸೂಚನೆಯ ಪ್ರತಿಯನ್ನು ಮೇಲೆ ನಮೂದಿಸಿರುವ ಅಭ್ಯರ್ಥಿಯ ಖಾಯಂ ವಿಳಾಸಕ್ಕೆ ಪ್ರತ್ಯೇಕವಾಗಿ ನೊಂದಣಿ ಅಂಚೆಯ ಮೂಲಕ ರವಾನಿಸಲು ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ಕ್ರಮವಹಿಸುವುದು.

ಸದರಿ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಯು ಈ ಆದೇಶ ತಲುಪಿದ 15 (ಹದಿನೈದು) ದಿನಗಳೊಳಗೆ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಭವನ, 2ನೇ ಮಹಡಿ, ಅರಮನೆ ರಸ್ತೆ, ಬೆಂಗಳೂರು ಇವರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು. ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ನಿಯಮಾನುಸಾರ ಜ್ಯೇಷ್ಠತೆಯ ಆಧಾರದ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಿ ಅಭ್ಯರ್ಥಿಗೆ ಸ್ಥಳನಿಯುಕ್ತಿ ಆದೇಶವನ್ನು ನೀಡುವುದು.

ಸರ್ಕಾರದ ಪೂರ್ವಾನುಮತಿ ಪಡೆಯದೆ ನಿಗಧಿತ ಅವಧಿಯೊಳಗೆ ವರದಿ ಮಾಡಿಕೊಳ್ಳಲು ವಿಫಲರಾಗುವ ಅಭ್ಯರ್ಥಿಯ ನೇಮಕಾತಿ ಆದೇಶವು ತಾನಾಗಿಯೇ ಅನೂರ್ಜಿತವಾಗುತ್ತದೆ.

ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೮, ೨೦೧೯ ೩೯೫

ಷರತ್ತುಗಳು:

1. ಇದು ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಮಾಡಿರುವ ನೇರ ನೇಮಕಾತಿಯಾಗಿರುವುದರಿಂದ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014 ರ ನಿಯಮ 9ರ ಉಪ-ನಿಯಮ (2) ಮತ್ತು (3) ರೊಂದಿಗೆ ಓದಿಕೊಂಡಂತೆ ಕರ್ನಾಟಕ ಸರ್ಕಾರಿ ನೌಕರರ (ಜ್ಯೇಷ್ಠತೆ) ನಿಯಮಗಳು, 1957 ರ ನಿಯಮ 5ರ ಅನುಸಾರ ಈ ನೇಮಕಾತಿಯ ಸಂದರ್ಭದಲ್ಲಿ ದಿನಾಂಕ:04-02-2017 ರ ಅಧಿಸೂಚನೆಯಲ್ಲಿ ಸರ್ಕಾರ ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿನ ಜ್ಯೇಷ್ಠತೆಯು ಅಂತಿಮವಾಗಿರುತ್ತದೆ.

2. ದಿನಾಂಕ:04-02-2017 ರ ಆಯ್ಕೆ ಪಟ್ಟಿಯಲ್ಲಿನ ಇನ್ನುಳಿದ ಅರ್ಹ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ತೃಪ್ತಿಕರವಾಗಿ ಪೂರ್ಣಗೊಂಡ ನಂತರ ಪ್ರತ್ಯೇಕ ನೇಮಕಾತಿ ಆದೇಶ ಹೊರಡಿಸಲಾಗುವುದು. ಅಂತಹ ಅಭ್ಯರ್ಥಿಗಳ ಅರ್ಹತೆ / ಜ್ಯೇಷ್ಠತೆಗೆ ಯಾವುದೇ ಬಾಧೆಯಾಗುವುದಿಲ್ಲ. ಯಾವುದೇ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನಾಧರಿಸಿ ಜ್ಯೇಷ್ಠತೆಯನ್ನು ಕ್ಲೇಮ್ ಮಾಡುವ ಹಕ್ಕುಳ್ಳವನಾಗಿರುವುದಿಲ್ಲ.

3. ನೇಮಕಗೊಂಡ ಅಭ್ಯರ್ಥಿಯು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನ ಪ್ರಾಂಶುಪಾಲರ ಸಮಕ್ಷಮದಲ್ಲಿ ಕಾರ್ಯವರದಿ ಮಾಡಿಕೊಳ್ಳುವ ಸಮಯದಲ್ಲಿ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಮೂಲ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು. ಅಭ್ಯರ್ಥಿಗಳ ನೇಮಕಾತಿ ಮತ್ತು ಸ್ಥಳನಿಯುಕ್ತಿ ಅವರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ನಿಯಮಾನುಸಾರ ಎಲ್ಲಾ ಮಾನದಂಡಗಳನ್ನು ತೃಪ್ತಿಕರವಾಗಿ ಪಾಲಿಸಿರುವ ಷರತ್ತಿಗೊಳಪಟ್ಟಿದೆ.

4. ಈ ನೇಮಕಾತಿಯು ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ಅಭ್ಯರ್ಥಿಯು ತೃಪ್ತಿಕರವಾಗಿ ಪೂರೈಸುವ ಷರತ್ತಿಗೊಳಪಟ್ಟಿರುತ್ತದೆ.

5. ಅಭ್ಯರ್ಥಿಯು ಪರೀಕ್ಷಾರ್ಥ ಅವಧಿಯಲ್ಲಿ ಅಕೌಂಟ್ಸ್ ಹೈಯರ್ ಹಾಗೂ ಜನರಲ್ ಲಾ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ನಿಯಮಾನುಸಾರ ಕಡ್ಡಾಯ ಕನ್ನಡ ಭಾಷಾ ಹಾಗೂ ಇತರೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.

6. ನೇಮಕಗೊಂಡ ಅಭ್ಯರ್ಥಿಗಳಿಗಾಗಿ ಕೈಗೊಳ್ಳಲಾಗುವ ಫೌಂಡೇಶನ್ ಕೋರ್ಸ್‌ಗೆ (ಬುನಾದಿ ತರಬೇತಿ) ಹಾಜರಾಗುವುದು ಕಡ್ಡಾಯವಾಗಿರುತ್ತದೆ.

7. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅವಶ್ಯಕತೆ ಇರುವ ಓರಿಯಂಟೇಷನ್ ಮತ್ತು ರೆಫ್ರೆಶರ್ ಕೋರ್ಸ್ ತರಬೇತಿಯನ್ನು ಪೂರೈಸತಕ್ಕದ್ದು. 8. ಅಭ್ಯರ್ಥಿಯು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ನಿಯಮಾನುಸಾರದ ವೇತನ, ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುತ್ತಾರೆ.

9. ಅಭ್ಯರ್ಥಿಯು ಕಾರ್ಯವರದಿ ಮಾಡಿಕೊಳ್ಳಲು ಹಾಗೂ ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಯಾವುದೇ ಪ್ರಯಾಣ ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುವುದಿಲ್ಲ.

10. ಮೇಲೆ ನಮೂದಿಸಿರುವ ಅಭ್ಯಥಿಯು ದಿನಾಂಕ:01-04-2006ರ ನಂತರ ಸರ್ಕಾರಿ ಸೇವೆಗೆ ಸೇರಿರುವುದರಿಂದ ಅವರು ನಿಯಮಾನುಸಾರ ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.

11. ಪರೀಕ್ಷಾರ್ಥ ಅವಧಿಯಲ್ಲಿ ಯಾವುದೇ ವರ್ಗಾವಣೆಗೆ ಅವಕಾಶವಿರುವುದಿಲ್ಲ. 12. ಸದರಿ ನೇಮಕಾತಿ ಅಧಿಸೂಚನೆಯು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಎಲ್ಲಾ ಪೀಠಗಳಲ್ಲಿ ಹಾಗೂ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಾಗಿರುವ ರಿಟ್ ಅರ್ಜಿ / ಅರ್ಜಿಗಳಲ್ಲಿ ಮಾನ್ಯ ನ್ಯಾಯಾಲಯಗಳು ನೀಡುವ ಅಂತಿಮ ತೀರ್ಪಿನ ಪಾಲನೆಗೆ ಒಳಪಟ್ಟಿರುತ್ತದೆ.

PR.1136

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

SC.100

ಕೆ. ಶಿವಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 270 ಡಿಸಿಇ 2018, ಬೆಂಗಳೂರು, ದಿನಾಂಕ: 08.07.2019

ಕಾಲೇಜು ಶಿಕ್ಷಣ ಇಲಾಖೆಯ ಆಡಳಿತ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ವಿವಿಧ ವಿಷಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಗೆ ಆಯ್ಕೆ ಪ್ರಾಧಿಕಾರವಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸರ್ಕಾರಕ್ಕೆ ಸಲ್ಲಿಸಿದ ಅಂತಿಮ ಆಯ್ಕೆ ಪಟ್ಟಿಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 270 ಡಿಸಿಇ 2018, ದಿನಾಂಕ:16-02-2019 ರಲ್ಲಿ ಪ್ರಕಟಿಸಿದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014 ರ ನಿಯಮ 9ರ ಉಪ-ನಿಯಮ (2) ಮತ್ತು (3) ರ ಅನುಸಾರ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತೆಯ ದೃಡೀಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ಪೂರ್ಣಗೊಂಡಿರುವ ಈ ಕೆಳಕಂಡ ಅಭ್ಯರ್ಥಿಯನ್ನು ಸರ್ಕಾರವು ವೇತನ ಶ್ರೇಣಿ ರೂ.15600-39100+6000 (ಎಜಿಪಿ)(ಯುಜಿಸಿ ವೇತನ ಶ್ರೇಣಿ) ರಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನೇಮಿಸಿದೆ.

ವಿಷಯ: ಅಪರಾಧಶಾಸ್ತ್ರ

ಕ್ರಮ ಸಂಖ್ಯೆ ದಿನಾಂಕ:04-02-2017ರ ಆಯ್ಕೆ ಪಟ್ಟಿಯಲ್ಲಿನ ಕ್ರಮ ಸಂಖ್ಯೆ ಹ ಸರು ೆ ಜನ್ಮ ದಿನಾಂಕ ಪ್ರವರ್ಗ
1 2 RAVIKANTH LAMANI 20-07-1981 GM

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೩೯೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೧೮, ೨೦೧೯ ಭಾಗ ೨

ಈ ಅಧಿಸೂಚನೆಯ ಪ್ರತಿಯನ್ನು ಮೇಲೆ ನಮೂದಿಸಿರುವ ಅಭ್ಯರ್ಥಿಯ ಖಾಯಂ ವಿಳಾಸಕ್ಕೆ ಪ್ರತ್ಯೇಕವಾಗಿ ನೊಂದಣಿ ಅಂಚೆಯ ಮೂಲಕ ರವಾನಿಸಲು ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ಕ್ರಮವಹಿಸುವುದು.

ಸದರಿ ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಯು ಈ ಆದೇಶ ತಲುಪಿದ 15 (ಹದಿನೈದು) ದಿನಗಳೊಳಗೆ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ, ತಾಂತ್ರಿಕ ಶಿಕ್ಷಣ ಭವನ, 2ನೇ ಮಹಡಿ, ಅರಮನೆ ರಸ್ತೆ, ಬೆಂಗಳೂರು ಇವರಲ್ಲಿ ವರದಿ ಮಾಡಿಕೊಳ್ಳತಕ್ಕದ್ದು. ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ಇವರು ನಿಯಮಾನುಸಾರ ಜ್ಯೇಷ್ಠತೆಯ ಆಧಾರದ ಮೇಲೆ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಿ ಅಭ್ಯರ್ಥಿಗೆ ಸ್ಥಳನಿಯುಕ್ತಿ ಆದೇಶವನ್ನು ನೀಡುವುದು.

ಸರ್ಕಾರದ ಪೂರ್ವಾನುಮತಿ ಪಡೆಯದೆ ನಿಗಧಿತ ಅವಧಿಯೊಳಗೆ ವರದಿ ಮಾಡಿಕೊಳ್ಳಲು ವಿಫಲರಾಗುವ ಅಭ್ಯರ್ಥಿಯ ನೇಮಕಾತಿ ಆದೇಶವು ತಾನಾಗಿಯೇ ಅನೂರ್ಜಿತವಾಗುತ್ತದೆ.

ಷರತ್ತುಗಳು:

1. ಇದು ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಮಾಡಿರುವ ನೇರ ನೇಮಕಾತಿಯಾಗಿರುವುದರಿಂದ ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ನೇಮಕಾತಿ) (ವಿಶೇಷ) ನಿಯಮಗಳು, 2014 ರ ನಿಯಮ 9ರ ಉಪ-ನಿಯಮ (2) ಮತ್ತು (3) ರೊಂದಿಗೆ ಓದಿಕೊಂಡಂತೆ ಕರ್ನಾಟಕ ಸರ್ಕಾರಿ ನೌಕರರ (ಜ್ಯೇಷ್ಠತೆ) ನಿಯಮಗಳು, 1957 ರ ನಿಯಮ 5ರ ಅನುಸಾರ ಈ ನೇಮಕಾತಿಯ ಸಂದರ್ಭದಲ್ಲಿ ದಿನಾಂಕ:04-02-2017 ರ ಅಧಿಸೂಚನೆಯಲ್ಲಿ ಸರ್ಕಾರ ಪ್ರಕಟಿಸಿರುವ ಆಯ್ಕೆ ಪಟ್ಟಿಯಲ್ಲಿನ ಜ್ಯೇಷ್ಠತೆಯು ಅಂತಿಮವಾಗಿರುತ್ತದೆ.

2. ದಿನಾಂಕ:04-02-2017 ರ ಆಯ್ಕೆ ಪಟ್ಟಿಯಲ್ಲಿನ ಇನ್ನುಳಿದ ಅರ್ಹ ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಅಗತ್ಯ ವಿಚಾರಣೆಗಳು ತೃಪ್ತಿಕರವಾಗಿ ಪೂರ್ಣಗೊಂಡ ನಂತರ ಪ್ರತ್ಯೇಕ ನೇಮಕಾತಿ ಆದೇಶ ಹೊರಡಿಸಲಾಗುವುದು. ಅಂತಹ ಅಭ್ಯರ್ಥಿಗಳ ಅರ್ಹತೆ / ಜ್ಯೇಷ್ಠತೆಗೆ ಯಾವುದೇ ಬಾಧೆಯಾಗುವುದಿಲ್ಲ. ಯಾವುದೇ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ ದಿನಾಂಕವನ್ನಾಧರಿಸಿ ಜ್ಯೇಷ್ಠತೆಯನ್ನು ಕ್ಲೇಮ್ ಮಾಡುವ ಹಕ್ಕುಳ್ಳವನಾಗಿರುವುದಿಲ್ಲ.

3. ನೇಮಕಗೊಂಡ ಅಭ್ಯರ್ಥಿಯು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನ ಪ್ರಾಂಶುಪಾಲರ ಸಮಕ್ಷಮದಲ್ಲಿ ಕಾರ್ಯವರದಿ ಮಾಡಿಕೊಳ್ಳುವ ಸಮಯದಲ್ಲಿ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಮೂಲ ದಾಖಲೆಗಳನ್ನು ಹಾಜರುಪಡಿಸತಕ್ಕದ್ದು. ಅಭ್ಯರ್ಥಿಗಳ ನೇಮಕಾತಿ ಮತ್ತು ಸ್ಥಳನಿಯುಕ್ತಿ ಅವರ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ನಿಯಮಾನುಸಾರ ಎಲ್ಲಾ ಮಾನದಂಡಗಳನ್ನು ತೃಪ್ತಿಕರವಾಗಿ ಪಾಲಿಸಿರುವ ಷರತ್ತಿಗೊಳಪಟ್ಟಿದೆ.

4. ಈ ನೇಮಕಾತಿಯು ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷಗಳ ಪರೀಕ್ಷಾರ್ಥ ಅವಧಿಯನ್ನು ಅಭ್ಯರ್ಥಿಯು ತೃಪ್ತಿಕರವಾಗಿ ಪೂರೈಸುವ ಷರತ್ತಿಗೊಳಪಟ್ಟಿರುತ್ತದೆ.

5. ಅಭ್ಯರ್ಥಿಯು ಪರೀಕ್ಷಾರ್ಥ ಅವಧಿಯಲ್ಲಿ ಅಕೌಂಟ್ಸ್ ಹೈಯರ್ ಹಾಗೂ ಜನರಲ್ ಲಾ ಇಲಾಖಾ ಪರೀಕ್ಷೆಗಳಲ್ಲಿ ಹಾಗೂ ನಿಯಮಾನುಸಾರ ಕಡ್ಡಾಯ ಕನ್ನಡ ಭಾಷಾ ಹಾಗೂ ಇತರೆ ಪರೀಕ್ಷೆಗಳಲ್ಲಿ ಉತ್ತೀರ್ಣರಾಗತಕ್ಕದ್ದು.

6. ನೇಮಕಗೊಂಡ ಅಭ್ಯರ್ಥಿಗಳಿಗಾಗಿ ಕೈಗೊಳ್ಳಲಾಗುವ ಫೌಂಡೇಶನ್ ಕೋರ್ಸ್‌ಗೆ (ಬುನಾದಿ ತರಬೇತಿ) ಹಾಜರಾಗುವುದು ಕಡ್ಡಾಯವಾಗಿರುತ್ತದೆ.

7. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅವಶ್ಯಕತೆ ಇರುವ ಓರಿಯಂಟೇಷನ್ ಮತ್ತು ರೆಫ್ರೆಶರ್ ಕೋರ್ಸ್ ತರಬೇತಿಯನ್ನು ಪೂರೈಸತಕ್ಕದ್ದು.

8. ಅಭ್ಯರ್ಥಿಯು ಸ್ಥಳನಿಯುಕ್ತಿಗೊಳಿಸಿದ ಕಾಲೇಜಿನಲ್ಲಿ ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ನಿಯಮಾನುಸಾರದ ವೇತನ, ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುತ್ತಾರೆ.

9. ಅಭ್ಯರ್ಥಿಯು ಕಾರ್ಯವರದಿ ಮಾಡಿಕೊಳ್ಳಲು ಹಾಗೂ ಸ್ಥಳನಿಯುಕ್ತಿಗೊಳಿಸಿದ ಹುದ್ದೆಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಯಾವುದೇ ಪ್ರಯಾಣ ಭತ್ಯೆ ಇತ್ಯಾದಿ ಪಡೆಯಲು ಅರ್ಹರಿರುವುದಿಲ್ಲ.

10. ಮೇಲೆ ನಮೂದಿಸಿರುವ ಅಭ್ಯಥಿಯು ದಿನಾಂಕ:01-04-2006ರ ನಂತರ ಸರ್ಕಾರಿ ಸೇವೆಗೆ ಸೇರಿರುವುದರಿಂದ ಅವರು ನಿಯಮಾನುಸಾರ ಹೊಸ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.

11. ಪರೀಕ್ಷಾರ್ಥ ಅವಧಿಯಲ್ಲಿ ಯಾವುದೇ ವರ್ಗಾವಣೆಗೆ ಅವಕಾಶವಿರುವುದಿಲ್ಲ. 12. ಸದರಿ ನೇಮಕಾತಿ ಅಧಿಸೂಚನೆಯು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಎಲ್ಲಾ ಪೀಠಗಳಲ್ಲಿ ಹಾಗೂ ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ದಾಖಲಾಗಿರುವ ರಿಟ್ ಅರ್ಜಿ / ಅರ್ಜಿಗಳಲ್ಲಿ ಮಾನ್ಯ ನ್ಯಾಯಾಲಯಗಳು ನೀಡುವ ಅಂತಿಮ ತೀರ್ಪಿನ ಪಾಲನೆಗೆ ಒಳಪಟ್ಟಿರುತ್ತದೆ.

PR.1137

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

SC.100

ಕೆ. ಶಿವಲಿಂಗಯ್ಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 18 July 2019. Indian Gazettes, https://egazette.servantsofknowledge.in/details/in.gazette.karnataka_new.2019-07-18.Part-2/. Archive identifier in.gazette.karnataka_new.2019-07-18.Part-2.