Servants of Knowledge
Karnataka Gazette · Government of Karnataka

Karnataka Gazette, Part Part-1, 25 July 2019

Published 25 July 2019

Part
Part-1
Identifier
in.gazette.karnataka_new.2019-07-25.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಜುಲೈ ೨೫, ೨೦೧೯ (ಶ್ರಾವಣ ೩, ಶಕ ವರ್ಷ ೧೯೪೧)

Bengaluru, Thursday, July 25, 2019 (Shravana 3, Shaka Varsha 1941)

ಸಂಪುಟ ೧೫೪

Volume 154

ಸಂಚಿಕೆ ೩೦

Issue 30

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಸಚಿವಾಲಯ

ವಿಷಯ : ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹೊಸದಾಗಿ ಜಿಲ್ಲಾ ಗ್ರಾಹಕ ವೇದಿಕೆಗಳನ್ನು ಸ್ಥಾಪಿಸುವ ಬಗ್ಗೆ.

ಓದಲಾಗಿದೆ : 1) ಮಾನ್ಯ ಭಾರತ ಸರ್ವೋಚ್ಛ ನ್ಯಾಯಾಲಯದ ರಿಟ್ ಅರ್ಜಿ (ಸಿವಿಲ್) ಸಂಖ್ಯೆ: 1141/88 ಮತ್ತು 742/90,

ದಿನಾಂಕ 05-08-1991.

2) ಸರ್ಕಾರದ ಆದೇಶ ಸಂಖ್ಯೆ: ಕಂಇ 27 ಭೂದಾಪು 2006(ಭಾಗ-3) 03-08-2007 ಮತ್ತು 17-08-2007.

3) ಸರ್ಕಾರದ ಆದೇಶ ಸಂಖ್ಯೆ: ಕಂಇ 27 ಭೂದಾಪು 2006, ದಿನಾಂಕ: 21-08-2007.

4) ರಿಜಿಸ್ಟ್ರಾರ್ ಮತ್ತು ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು, ಇವರ ಪತ್ರ ಸಂಖ್ಯೆ: ಕರಾಆ/ಆಡಳಿತ/18/2003-04, ದಿನಾಂಕ: 22-09-2017.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ(1) ರಲ್ಲಿ, ಮಾನ್ಯ ಭಾರತ ಸರ್ವೋಚ್ಛ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ: 1141/88 ರೊಂದಿಗೆ ರಿಟ್ ಅರ್ಜಿ (ಸಿವಿಲ್) ಸಂಖ್ಯೆ: 742/90 ರಲ್ಲಿ ದಿನಾಂಕ: 05-08-1991 ರಂದು ನೀಡಿರುವ ತೀರ್ಪಿನಲ್ಲಿ ಜಿಲ್ಲೆಯಲ್ಲಿ ಕನಿಷ್ಠ 150 ಪ್ರಕರಣಗಳು ಸರಾಸರಿ 6 ತಿಂಗಳವರೆಗೆ ಮುಂದುವರೆದಲ್ಲಿ ಅಂತಹ ಜಿಲ್ಲೆಯಲ್ಲಿ ಹೊಸದಾಗಿ ಜಿಲ್ಲಾ ವೇದಿಕೆಯನ್ನು ಸ್ಥಾಪಿಸಬಹುದೆಂದು ಸೂಚಿಸಿದೆ.

2. ಮೇಲೆ ಓದಲಾದ ಕ್ರಮ ಸಂಖ್ಯೆ(2) ರಲ್ಲಿ, ಕಂದಾಯ ಇಲಾಖೆಯು ಸರ್ಕಾರದ ಆದೇಶ ಸಂಖ್ಯೆ: ಕಂ.ಇ 27 ಭೂದಾಪು 2006(ಭಾಗ-3), ದಿನಾಂಕ: 03-08-2007 ಮತ್ತು 17-08-2007 ರಂತೆ ದಿನಾಂಕ: 23-08-2007 ರಿಂದ ಅಸ್ತಿತ್ವಕ್ಕೆ ಬರುವಂತೆ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ರಚಿಸಲಾಗಿದೆ.

3. ಮೇಲೆ ಓದಲಾದ ಕ್ರಮ ಸಂಖ್ಯೆ(3) ರಲ್ಲಿ, ಹೊಸದಾಗಿ ರಚಿಸಲಾದ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಡಿಯಲ್ಲಿ ಜಿಲ್ಲಾ ಗ್ರಾಹಕ ವೇದಿಕೆಗಳಿಗೆ ತಲಾ 8 ರಂತೆ ಒಟ್ಟು 16 ಹುದ್ದೆಗಳನ್ನು ಅನುಬಂಧ-I ಮತ್ತು II ರಂತೆ ಮಂಜೂರು ಮಾಡಲಾಗಿರುತ್ತದೆ.

4. ಮೇಲೆ ಓದಲಾದ ಕ್ರಮ ಸಂಖ್ಯೆ(4) ರಲ್ಲಿ, ರಿಜಿಸ್ಟ್ರಾರ್ ಮತ್ತು ಆಡಳಿತಾಧಿಕಾರಿಗಳು, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು, ಇವರು ಗ್ರಾಹಕ ಸಂರಕ್ಷಣಾ ಕಾಯ್ದೆ 1986ರ ಕಲಂ 9 ರಡಿಯಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಜಿಲ್ಲಾ ವೇದಿಕೆಗಳನ್ನು ಸ್ಥಾಪನೆ ಮಾಡಬೇಕಾಗಿರುತ್ತದೆ ಹಾಗೂ ಜಿಲ್ಲಾ ವೇದಿಕೆಗಳಲ್ಲಿ ದಾಖಲಾಗುವ ಪ್ರಕರಣಗಳು ಕಡಿಮೆ ಪ್ರಮಾಣದ ಮೇಲೆ ಸ್ಥಾಪನೆ ಮಾಡಬಾರದೆಂದು ಕಾಯ್ದೆಯಡಿಯಲ್ಲಿ ಸೂಚಿಸಿರುವುದಿಲ್ಲವೆಂದು ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ (ಸಿವಿಲ್) ಸಂಖ್ಯೆ: 1141/88 ಮತ್ತು 742/1990 ಪ್ರಕರಣದಲ್ಲಿ ನೀಡಿರುವ ತೀರ್ಪಿನನ್ವಯ, ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ವೇದಿಕೆಗಳನ್ನು ಸೃಜಿಸುವುದು ಶಾಸನಬದ್ಧ ಯೋಜನೆಯಾಗಿದ್ದು, ಇದರನ್ವಯ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜಿಲ್ಲಾ ವೇದಿಕೆಗಳನ್ನು ಸೃಜಿಸುವಂತೆ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆನಾಸ 34 ಸಲಫ 2015(ಭಾಗ-1), ಬೆಂಗಳೂರು, ದಿನಾಂಕ : 22-05-2019.

ಮೇಲಿನ ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಜಿಲ್ಲಾ ಗ್ರಾಹಕ ವೇದಿಕೆಗಳನ್ನು ಸ್ಥಾಪಿಸಿ ಆದೇಶಿಸಲಾಗಿದೆ.

(೬೦೧)೬೦೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೧ ರಾಮನಗರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಗ್ರಾಹಕ ವೇದಿಕೆಗಳಿಗೆ, ನೆರೆಯ ಜಿಲ್ಲೆಗಳಿಂದ ಅಧ್ಯಕ್ಷರು ಮತ್ತು ಸದಸ್ಯರ ಸೇವೆಯನ್ನು ವಾರದ ಒಂದು ಅಥವಾ ಎರಡು ದಿನಗಳ ಮಟ್ಟಿಗೆ ನಿಯೋಜನೆ ಮೇಲೆ ತೆಗೆದುಕೊಳ್ಳುವುದು.

ಅನುಬಂಧ-I ಮತ್ತು II ರನ್ವಯ ಹುದ್ದೆಗಳನ್ನು ಮಂಜೂರು ಮಾಡಲಾಗಿದ್ದು, ಸದರಿ ಹುದ್ದೆಗಳನ್ನು ತಾತ್ಕಾಲಿಕವಾಗಿ ನೆರೆಯ ಗ್ರಾಹಕ ಜಿಲ್ಲಾ ವೇದಿಕೆಗಳಿಂದ ನಿಯೋಜನೆ ಮೇಲೆ ಪಡೆಯುವುದು.

ರಿಜಿಸ್ಟ್ರಾರ್ ಮತ್ತು ಆಡಳಿತಾಧಿಕಾರಿಗಳು, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು, ಇವರು ಈ ಎರಡು ಜಿಲ್ಲಾ ಗ್ರಾಹಕ ವೇದಿಕೆಗಳ ಸೃಜನೆ, ಕಾರ್ಯಾರಂಭಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 1064 ವೆಚ್ಚ-5/2017, ದಿನಾಂಕ: 03-01-2018 ಮತ್ತು ಟಿಪ್ಪಣಿ ಸಂಖ್ಯೆ: FD 363 EXP-5/2018, ದಿನಾಂಕ: 28-08-2018 ರಲ್ಲಿ ನೀಡಿರುವ ಸಹಮತಿಯೊಂದಿಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-225

ವಿ.ವೆಂಕಟೇಶ್

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),

SC-400

ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು

ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ.

ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಸಚಿವಾಲಯ

ವಿಷಯ: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಒಂದು ಹೆಚ್ಚುವರಿ ಪೀಠವನ್ನು (Bench) ತಾತ್ಕಾಲಿಕವಾಗಿ ಸ್ಥಾಪಿಸುವ ಬಗ್ಗೆ.

ಓದಲಾಗಿದೆ : 1) ರಾಜ್ಯ ಸರ್ಕಾರದ 2017-18ನೇ ಸಾಲಿನ ಆಯವ್ಯಯದಲ್ಲಿನ ಘೋಷಣೆಯಂತೆ.

2) ರಿಜಿಸ್ಟ್ರಾರ್ ಮತ್ತು ಆಡಳಿತಾಧಿಕಾರಿ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು, ಇವರ ಪತ್ರ ಸಂಖ್ಯೆ: ಕರಾಆ/ಆಡಳಿತ/18/2003-04, ದಿನಾಂಕ: 22-09-2017.

ಮೇಲೆ ಓದಲಾದ ಕ್ರಮ ಸಂಖ್ಯೆ(1) ರಲ್ಲಿ, ರಾಜ್ಯ ಸರ್ಕಾರದ 2017-18ನೇ ಸಾಲಿನ ಆಯವ್ಯಯದಲ್ಲಿ "ಹೆಚ್ಚುವರಿ ಗ್ರಾಹಕ ವ್ಯಾಜ್ಯ ಪೀಠಗಳನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಿ ಎಲ್ಲಾ ಬಾಕಿ ಉಳಿದ ವ್ಯಾಜ್ಯಗಳನ್ನು ಶಾಸನಬದ್ಧ 3 ತಿಂಗಳ ಅವಧಿಯೊಳಗೆ ವಿಲೇಗೊಳಿಸಲು ಅನುವು ಮಾಡುವುದು" ಎಂದು ಘೋಷಣೆ ಮಾಡಲಾಗಿರುತ್ತದೆ.

2. ಮೇಲೆ ಓದಲಾದ ಕ್ರಮ ಸಂಖ್ಯೆ(2) ರಲ್ಲಿ, ರಿಜಿಸ್ಟ್ರಾರ್ ಮತ್ತು ಆಡಳಿತಾಧಿಕಾರಿಗಳು, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು, ಇವರು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಸುಮಾರು 9000 ಗಳಷ್ಟು ಪ್ರಕರಣಗಳು ಬಾಕಿಯಿದ್ದು ಹಾಗೂ ರಾಜ್ಯ ಆಯೋಗದಲ್ಲಿ ದಾಖಲಾಗುವ ದೂರುಗಳು ಹಾಗೂ ಮೇಲ್ಮನವಿಗಳು ಹೆಚ್ಚಾಗಿರುವುದರಿಂದ ಗ್ರಾಹಕ ಸಂರಕ್ಷಣಾ ಕಾಯ್ದೆ 1986ರ ಕಲಂ 16ರ ಉಪ ಕಲಂ1-(B-ii) ರಡಿಯಲ್ಲಿ ಪ್ರದತ್ತವಾದ ಅಧಿಕಾರದಡಿಯಲ್ಲಿ ರಾಜ್ಯ ಆಯೋಗದ ಹೆಚ್ಚುವರಿ ಪೀಠವನ್ನು ರಚಿಸಲಾಗಿದ್ದು, ಈ ಹೆಚ್ಚುವರಿ ಪೀಠವು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ರಾಜ್ಯ ಆಯೋಗದಲ್ಲಿರುವ ಪ್ರಕರಣಗಳೊಂದಿಗೆ ಪ್ರತಿನಿತ್ಯ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿದ್ದು, ಈ ಪ್ರಕರಣಗಳನ್ನು ನಿಗದಿತ ಅವಧಿಯಲ್ಲಿ ಇತ್ಯರ್ಥಪಡಿಸುವುದು ಕಷ್ಟಸಾಧ್ಯವಾಗಿರುತ್ತದೆ. ಆದ್ದರಿಂದ ರಾಜ್ಯ ಗ್ರಾಹಕ ಆಯೋಗಕ್ಕೆ ಒಂದು ಹೆಚ್ಚುವರಿ ಬೆಂಚನ್ನು ಖಾಯಂ ಆಗಿ ಸೃಜಿಸುವಂತೆ ಕೋರಿರುತ್ತಾರೆ

ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ಕಾರವು ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆನಾಸ 34 ಸಲಫ 2015(ಭಾಗ-1), ಬೆಂಗಳೂರು, ದಿನಾಂಕ: 22-05-2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ರಾಜ್ಯ ಗ್ರಾಹಕ ಆಯೋಗದಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿ ಇರುವುದನ್ನು ಪರಿಗಣಿಸಿ ಹಾಗೂ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡಲು ಅನುಕೂಲವಾಗುವಂತೆ, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಒಂದು ಹೆಚ್ಚುವರಿ ಪೀಠವನ್ನು(Bench) ತಾತ್ಕಾಲಿಕವಾಗಿ ಈ ಕೆಳಕಂಡ ಹುದ್ದೆಗಳೊಂದಿಗೆ ಒಂದು ವರ್ಷದ ಅವಧಿಗೆ ಸೃಜಿಸಿ ಆದೇಶಿಸಲಾಗಿದೆ.

ಕ್ರ.ಸಂ. ಹ ುದ್ದೆಗಳ ವಿವರ ಹ ುದ್ದೆಗಳ ಸಂಖ್ಯೆ
1 ನ್ಯಾಯಾಂಗ ಸದಸ್ಯರು 01
2 ಮಹಿಳಾ ಸದಸ್ಯರು 01
3 ಬೆಂಚ್ ಕ್ಲರ್ಕ್/ ಪ್ರ.ದ.ಸ 01
4 ಶೀಘ್ರಲಿಪಿಗಾರರು 01
5 ಬೆರಳಚ್ಚುಗಾರರು 01
6 ಗ ೂ್ರಪ್-ಡಿ 01
ಒಟ್ಟು 06
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೬೦೩

ರಿಜಿಸ್ಟ್ರಾರ್ ಮತ್ತು ಆಡಳಿತಾಧಿಕಾರಿಗಳು, ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಬೆಂಗಳೂರು, ಇವರು ರಾಜ್ಯ ಗ್ರಾಹಕ ಆಯೋಗದಲ್ಲಿ ಸೃಜಿಸುವ ಹೆಚ್ಚುವರಿ ಪೀಠವನ್ನು(bench) ಕಾರ್ಯಾರಂಭಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 1064 ವೆಚ್ಚ-5/2017, ದಿನಾಂಕ: 03-01-2018 ಮತ್ತು ಟಿಪ್ಪಣಿ ಸಂಖ್ಯೆ: FD 363 EXP-5/2018, ದಿನಾಂಕ: 28-08-2018 ರಲ್ಲಿ ನೀಡಿರುವ ಸಹಮತಿಯೊಂದಿಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ವಿ. ವೆಂಕಟೇಶ್

PR-226

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),

SC-100

ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು

ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ.

ಸಹಕಾರ ಸಚಿವಾಲಯ

ಕರ್ನಾಟಕ ರಾಜ್ಯ ಪಾರ್ಮಾಸಿಸ್ಟ್‌ರ ಕ್ಷೇಮಾಭಿವೃದ್ಧಿ ಸಂಘ, ಮಂಡ್ಯ ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಬಗ್ಗೆ.

ವಿಷಯ :

ಓದಲಾಗಿದೆ: 1. ಸಹಕಾರ ಸಂಘಗಳ ಉಪ ನಿಬಂಧಕರು, ಮಂಡ್ಯ ಇವರ ಪತ್ರ ಸಂಖ್ಯೆ: ಡಿ.ಆರ್.ವೈ/ಎಸ್.ಒ.ಆರ್./06/2009-10/2016-17 ದಿನಾಂಕ : 21.12.2018 ಮತ್ತು 01.06.2019

2. ಸರ್ಕಾರದ ನೋಟೀಸ್ ಸಂಖ್ಯೆ: ಸಇ 12, ಸಸಂನೋ 2019, ದಿನಾಂಕ : 31.01.2019. 3. ಅಧ್ಯಕ್ಷರು/ಕಾರ್ಯದರ್ಶಿ ಕರ್ನಾಟಕ ರಾಜ್ಯ ಪಾರ್ಮಾಸಿಸ್ಟ್‌ರ ಕ್ಷೇಮಾಭಿವೃದ್ಧಿ ಸಂಘ, ಮಂಡ್ಯ ಈ ಸಂಘ ಇವರ ಲಿಖಿತ ಉತ್ತರ ದಿನಾಂಕ : 06.03.2019

ಪ್ರಸ್ತಾವನೆ :

ಮೇಲೆ (1)ರಲ್ಲಿ ಓದಲಾದ ಸಹಕಾರ ಸಂಘಗಳ ಉಪ ನಿಬಂಧಕರ ಪತ್ರಗಳಲ್ಲಿ ಕರ್ನಾಟಕ ರಾಜ್ಯ ಪಾರ್ಮಾಸಿಸ್ಟ್‌ರ ಕ್ಷೇಮಾಭಿವೃದ್ಧಿ ಸಂಘ, ಮಂಡ್ಯ ಈ ಸಂಘವು ನೋಂದಣಿಯಾದಾಗಿನಿಂದಲೂ ಅಂದರೆ 2009-10 ರಿಂದ 2016-15 ರವರೆಗೆ ಸಂಘದ ವಾರ್ಷಿಕ ಪತ್ರಗಳನ್ನು ಫೈಲ್ ಮಾಡದೇ ಇರುವುದರಿಂದ ಸಂಘಕ್ಕೆ ನೋಟೀಸ್ ನೀಡಿದರೂ, ಲೆಕ್ಕ ಪತ್ರಗಳನ್ನು ನಿಗಧಿತ ಕಾಲಾವಧಿಯೊಳಗೆ ಫೈಲ್ ಮಾಡಿರುವುದಿಲ್ಲ. ಸಂಘದ ನೋಂದಾಯಿತ ಧ್ಯೇಯೋದ್ದೇಶಗಳನ್ನು ಅವಲೋಕಿಸಲಾಗಿದ್ದು, ಸಂಘದ ಧ್ಯೇಯೋದ್ದೇಶದ ಕ್ರ.ಸಂ. 7ರಲ್ಲಿ ವಸತಿ ಬಡಾವಣೆಯನ್ನು ರಚಿಸಿ ಸದಸ್ಯರಿಗೆ ಉನ್ನತ ಮಟ್ಟದ ಮೂಲಭೂತ ಸೌಕರ್ಯವುಳ್ಳ ವಸತಿ ನಿವೇಶನಗಳನ್ನು, ಮನೆಗಳನ್ನು ನೀಡುವುದು ಎಂದಿದ್ದು ಇದು ಕಲಂ-3 ರಡಿಯಲ್ಲಿ ವ್ಯಾಪ್ತಿಗೊಳಪಡದೇ ಸ್ಪಷ್ಟವಾಗಿ ಉಲ್ಲಂಘನೆಯಾಗಿರುತ್ತದೆ. ಇದನ್ನು ಸಂಘದ ಕಾರ್ಯದರ್ಶಿಯವರು ಒಪ್ಪಿಕೊಂಡಿರುತ್ತಾರೆ. ಆದರೆ ಪ್ರಕರಣ 11, 12 ಮತ್ತು 13 ರಡಿ ತಿಳಿಸಿರುವ ಅಂಶಗಳನ್ನು ಸಮಪರ್ಕವಾಗಿ ಪಾಲನೆ ಮಾಡಲು ವಿಫಲವಾಗಿದ್ದು, ಸಾಕಷ್ಟು ತಿಳುವಳಿಕೆ ನೀಡಿದ್ದರೂ ಸಂಘದ ಪದಾಧಿಕಾರಿಗಳು 2009-10 ರಿಂದ 2017-18 ನೇ ಸಾಲುಗಳ ಕಾರ್ಯಕಾರಿ ಮಂಡಳಿ, ವಾರ್ಷಿಕ ಮಹಾಸಭೆ ಹಾಗೂ ಲೆಕ್ಕಪತ್ರಗಳನ್ನು ಫೈಲು ಮಾಡಲು ವಿಫಲವಾಗಿರುವುದರಿಂದ ಸಂಸ್ಥೆಯ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಕೋರಿರುತ್ತಾರೆ.

ಮೇಲೆ (2)ರಲ್ಲಿ ಓದಲಾದ ಸರ್ಕಾರದ ನೋಟೀಸಿನಲ್ಲಿ ಕರ್ನಾಟಕ ರಾಜ್ಯ ಪಾರ್ಮಾಸಿಸ್ಟ್‌ರ ಕ್ಷೇಮಾಭಿವೃದ್ಧಿ ಸಂಘ, ಮಂಡ್ಯ ಈ ಸಂಘದ ವಿರುದ್ಧ ಸಹಕಾರ ಸಂಘದ ಉಪ ನಿಬಂಧಕರು, ಮಂಡ್ಯ ಇವರು ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ಪರಿಗಣಿಸಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ ನೇಮಕ ಮಾಡಬಾರದೆಂದು ಲಿಖಿತ ಹೇಳಿಕೆ ಸಲ್ಲಿಸುವಂತೆ ಸಂಘದ ಅಧ್ಯಕ್ಷರು/ಕಾರ್ಯದರ್ಶಿಯವರಿಗೆ ತಿಳಿಸಲಾಗಿತ್ತು.

ಮೇಲೆ (3)ರಲ್ಲಿ ಓದಲಾದ ಲಿಖಿತ ಉತ್ತರದಲ್ಲಿ ಅಧ್ಯಕ್ಷರು, ಕರ್ನಾಟಕ ರಾಜ್ಯ ಪಾರ್ಮಾಸಿಸ್ಟ್‌ರ ಕ್ಷೇಮಾಭಿವೃದ್ಧಿ ಸಂಘ, ಮಂಡ್ಯ ಇವರು ಸಂಘದ ಏಳಿಗೆಯನ್ನು ಸಹಿಸದೇ ಸಂಘದ ವಿರುದ್ಧ ಸುಳ್ಳು ಮಾಹಿತಿ ದೂರನ್ನು ಸಲ್ಲಿಸಿದ್ದು, ಈ ದೂರಿನ ಮೇಲೆ ಸಹಕಾರ ಸಂಘಗಳ ಉಪ ನಿಬಂಧಕರು, ಮಂಡ್ಯ ಇವರು ಹೊರಡಿಸಿದ ನೋಟೀಸಿನ ವಿರುದ್ಧ ರಿ.ಅ.ಸಂ.:24266/18 ಪ್ರಕರಣವನ್ನು ದಾಖಲಿಸಿದ್ದು, ಪ್ರಕರಣವು ಇತ್ಯರ್ಥಕ್ಕೆ ಬಾಕಿ ಇರುತ್ತದೆಂದು ಸಂಘವು ನೋಂದಣಿ ಕಾಯ್ದೆ ಕಲಂ 11, 12 ಮತ್ತು 13 ರನ್ವಯ ಕರ್ತವ್ಯ ನಿರ್ವಹಿಸುತ್ತಿದ್ದು, ಸದರಿ ಕಲಂಗಳನ್ನು ಉಲ್ಲಂಘಿಸಿರುವುದಿಲ್ಲವೆಂದು ಹಾಗೂ ಸಂಘದಲ್ಲಿ ಉಂಟಾಗಿರುವ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಯಾವುದೇ ಅವಕಾಶ ನೀಡಿರುವುದಿಲ್ಲವೆಂದು, ಸದಸ್ಯರಿಗೆ ತೊಂದರೆಯಾಗದಂತೆ ಸಂಘದ ಧ್ಯೇಯೋದ್ದೇಶಗಳಿಗನುಗುಣವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸಂಘದ ಸದಸ್ಯರಿಗೆ ಅನುಕೂಲವಾಗುವ ರೀತಿಯಲ್ಲಿ ವಸತಿ ನಿರ್ಮಿಸಿಕೊಳ್ಳಲು ನಿವೇಶನ ನಿರ್ಮಾಣವಾಗುವಂತಹ ಇತರೇ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿರುತ್ತದೆಂದು ತಿಳಿಸುತ್ತಾ ಆಡಳಿತಾಧಿಕಾರಿ ನೇಮಕ ಮಾಡಬಾರದೆಂದು ವಿನಂತಿಸಿರುತ್ತಾರೆ.

ಮೇಲ್ಕಂಡ ಅಂಶಗಳನ್ನು ಪರಿಶೀಲಿಸಲಾಗಿ ಕರ್ನಾಟಕ ರಾಜ್ಯ ಪಾರ್ಮಾಸಿಸ್ಟ್‌ರ ಕ್ಷೇಮಾಭಿವೃದ್ಧಿ ಸಂಘ, ಮಂಡ್ಯ ಈ ಸಂಘವು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರ ಕಲಂ 3 ಕ್ಕೆ ವಿರುದ್ಧವಾಗಿ ಸಂಘದ ಧ್ಯೇಯೋದ್ದೇಶವನ್ನು ಹೊಂದಿದ್ದು ಸದರಿ ನಿಯಮವನ್ನು ಉಲ್ಲಂಘಿಸಲಾಗಿರುತ್ತದೆ ಹಾಗೂ ಕಲಂ 11, 12 ಹಾಗೂ 13 ರಡಿ ತಿಳಿಸಿರುವ ಅಂಶಗಳನ್ನು ನಿಯಮಿತವಾಗಿ ಪಾಲನೆ ಮಾಡಲು ವಿಫಲವಾಗಿದ್ದು ಈ ಬಗ್ಗೆ ಸಂಘಕ್ಕೆ ಅವಕಾಶ ನೀಡಿದ್ದರೂ ಸಂಘದ ಪದಾಧಿಕಾರಿಗಳು 2009-10 ರಿಂದ 2017-18 ನೇ ಸಾಲುಗಳ ಕಾರ್ಯಕಾರಿ ಮಂಡಳಿ, ವಾರ್ಷಿಕ ಮಹಾಸಭೆ ಹಾಗೂ ಲೆಕ್ಕಪತ್ರಗಳನ್ನು ಫೈಲು ಮಾಡಿರುವುದಿಲ್ಲ. ಆದ್ದರಿಂದ ಸಂಸ್ಥೆಯ ಹಿತದೃಷ್ಟಿಯಿಂದ ಸಂಘದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ನಿಸ್ಪಕ್ಷಪಾತ ಮತ್ತು ಪಾರದರ್ಶಕ ಚುನಾವಣೆಯನ್ನು ನಿಯಮಾನುಸಾರ ನಡೆಸಲು ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತವಾಗಿರುವುದನ್ನು ಮನಗಂಡು ಸಂಘ ಹಾಗೂ ಸದಸ್ಯರ ಹಿತದೃಷ್ಟಿಯಿಂದ ಆಡಳಿತಾಧಿಕಾರಿ ನೇಮಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

೬೦೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೧

-: ಆದೇಶ :-

ಸರ್ಕಾರದ ಆದೇಶ ಸಂಖ್ಯೆ: ಸಇ 12 ಸಸಂನೋ 2019 ಬೆಂಗಳೂರು, ದಿನಾಂಕ:12.07.2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರನ್ವಯ ಕರ್ನಾಟಕ ರಾಜ್ಯ ಪಾರ್ಮಾಸಿಸ್ಟ್‌ರ ಕ್ಷೇಮಾಭಿವೃದ್ಧಿ ಸಂಘ, ಎಂ.ವಿ.ಜಿ. ಕಾಂಪ್ಲೆಕ್ಸ್, 2ನೇ ಕ್ರಾಸ್, ಅಶೋಕನಗರ, ಬೆಂಗಳೂರು-ಮೈಸೂರು ರಸ್ತೆ, ಮಂಡ್ಯ ಈ ಸಂಘಕ್ಕೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಮಂಡ್ಯ ಉಪ ವಿಭಾಗ, ಮಂಡ್ಯ ಇವರನ್ನು, ಈ ಆದೇಶವು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಅವಧಿಗೆ ಅಥವಾ ಆಡಳಿತಾಧಿಕಾರಿಯವರು ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ ಹೊಸ ಆಡಳಿತ ಮಂಡಳಿಗೆ ಅಧಿಕಾರ ವಹಿಸಿಕೊಡುವವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.

ಆಡಳಿತಾಧಿಕಾರಿಗಳು ಕೂಡಲೇ ಸಂಘದ ಪ್ರಭಾರವನ್ನು ವಹಿಸಿಕೊಂಡು, ಪ್ರಸ್ತಾವನೆಯಲ್ಲಿ ತಿಳಿಸಲಾದ ಸಂಘದ ಎಲ್ಲಾ ನ್ಯೂನ್ಯತೆಗಳನ್ನು ನಿಯಮಾನುಸಾರ ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ನಿಗಧಿತ ಅವಧಿಯೊಳಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಸೂಚಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-275

ಆರ್. ಸೆಂತಾಮರೈ

SC-25

ಸರ್ಕಾರದ ಉಪ ಕಾರ್ಯದರ್ಶಿ

ಸಹಕಾರ ಇಲಾಖೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ 54 ಎಂಎಂಸಿ 2011 (ಭಾಗ), ಬೆಂಗಳೂರು, ದಿನಾಂಕ: 13.05.2019

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಯ ದಂತ ವೈದ್ಯಾಧಿಕಾರಿಗಳ ಸೇವೆಯನ್ನು ಸರ್ಕಾರಿ ದಂತ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು ಇಲ್ಲಿ ಶಾಶ್ವತವಾಗಿ ವಿಲೀನಗೊಳಿಸಲಾದ ಸರ್ಕಾರದ ಆದೇಶ ಸಂಖ್ಯೆ: ಆಕುಕ 182 ಎಂಎಂಸಿ 2009, ದಿನಾಂಕ: 27.07.2010 ಕ್ಕೆ ಹೊರಡಿಸಲಾದ ಸೇರ್ಪಡೆ ಆದೇಶ ಸಂಖ್ಯೆ: ಆಕುಕ 54 ಎಂಎಂಸಿ 2011, ದಿನಾಂಕ: 27.04.2011 ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಮುರಳಿ

PR-216

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

(ವೈದ್ಯಕೀಯ ಶಿಕ್ಷಣ)

ಆರ್ಥಿಕ ಸಚಿವಾಲಯ

ವಿಷಯ: ಪೊಲೀಸ್ ಇಲಾಖೆಯ ಪೊಲೀಸ್ ಪೇದೆಗಳಿಗೆ ಮಂಜೂರು ಮಾಡಿರುವ ಕಷ್ಟ ಪರಿಹಾರ

ಭತ್ಯೆಯನ್ನು (Hardship Allowance) ಪರಿಷ್ಕರಿಸುವ ಬಗ್ಗೆ.

ಓದಲಾಗಿದೆ:

1. ಸರ್ಕಾರದ ಆದೇಶ ಸಂಖ್ಯೆ: ಆಇ 47 ಎಸ್ಆರ್‌ಪಿ 2016(III), ದಿನಾಂಕ: 21.11.2016

2. ಸರ್ಕಾರದ ಆದೇಶ ಸಂಖ್ಯೆ: ಆಇ 24 ಎಸ್ಆರ್‌ಪಿ 2018(XI), ದಿನಾಂಕ: 19.01.2019

ಪ್ರಸ್ತಾವನೆ:-

ಮೇಲೆ ಕ್ರಮ ಸಂಖ್ಯೆ (1)ರಲ್ಲಿ ಓದಲಾದ ದಿನಾಂಕ: 21.11.2016ರ ಸರ್ಕಾರದ ಆದೇಶದಲ್ಲಿ ಪೊಲೀಸ್ ಪೇದೆಗಳಿಗೆ ಮಾಸಿಕ `.1000/-ಗಳ ಕಷ್ಟ ಪರಿಹಾರ ಭತ್ಯೆಯನ್ನು (Hardship Allowance) ಮಂಜೂರು ಮಾಡಲಾಗಿರುತ್ತದೆ.

ಮೇಲೆ ಕ್ರಮ ಸಂಖ್ಯೆ (2)ರಲ್ಲಿ ಓದಲಾದ ದಿನಾಂಕ: 19.01.2019ರ ಸರ್ಕಾರದ ಆದೇಶದಲ್ಲಿ 6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸಿನ ಮೇರೆಗೆ ಪೊಲೀಸ್ ಇಲಾಖೆಯ ಪೊಲೀಸ್ ಪೇದೆಗಳಿಗೆ ಮಂಜೂರು ಮಾಡಿರುವ ಮಾಸಿಕ `.1000/-ಗಳ ಕಷ್ಟ ಪರಿಹಾರ ಭತ್ಯೆಯನ್ನು ಮುಂದುವರಿಸಲಾಗಿರುತ್ತದೆ.

2019-20ರ ಆಯವ್ಯಯ ಭಾಷಣದಲ್ಲಿ ಒಳಾಡಳಿತ ಇಲಾಖೆಯ ಪೊಲೀಸ್ ಪೇದೆಗಳಿಗೆ ನೀಡಲಾಗುವ ಕಷ್ಟ ಪರಿಹಾರ ಭತ್ಯೆಯನ್ನು `.1000/- ಗಳಿಂದ `.2000/-ಗಳಿಗೆ ಹೆಚ್ಚಿಸುವ ಬಗ್ಗೆ ಘೋಷಿಸಲಾಗಿರುತ್ತದೆ.

ಅದರಂತೆ ಈ ಕೆಳಕಂಡ ಆದೇಶವನ್ನು ಹೊರಡಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಆಇ 6 ಎಸ್ಆರ್‌ಪಿ 2019, ಬೆಂಗಳೂರು, ದಿನಾಂಕ: 19 ಜೂನ್ 2019

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೬೦೫

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪೊಲೀಸ್ ಇಲಾಖೆಯ 'ಪೊಲೀಸ್ ಪೇದೆ'ಗಳಿಗೆ ಮಂಜೂರು ಮಾಡಿರುವ ಕಷ್ಟ ಪರಿಹಾರ ಭತ್ಯೆಯನ್ನು (Hardship Allowance) ಮಾಸಿಕ `.1000/-ಗಳಿಂದ ಮಾಸಿಕ `.2000/-ಗಳಿಗೆ ಪರಿಷ್ಕರಿಸಿ ಆದೇಶಿಸಲು ಸರ್ಕಾರವು ಹರ್ಷಿಸುತ್ತದೆ.

ಈ ಆದೇಶವು 1ನೇ ಜುಲೈ 2019 ರಿಂದ ಜಾರಿಗೆ ಬರುತ್ತದೆ.

PR-250

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-50

ಡಿ.ಎಸ್.ಜೋಗೋಜೆ

ಸರ್ಕಾರದ ಉಪ ಕಾರ್ಯದರ್ಶಿ,

ಆರ್ಥಿಕ ಇಲಾಖೆ (ಸೇವೆಗಳು-2)

FINANCE SECRETARIAT

ADDENDUM

No: FD 24 SRP 2018(XI), BENGALURU, DATED: 15.06.2019.

In Annexure to the Governm ent Order No: FD 24 SRP 2018(XI) Dated: 11.01.2019, after Sl.No:35, the following shall be

36 Rate of Special allowances admissible to AYUSH Doctors similar to that of Special allowance admissible to Medical Officers and Dentists of Health & Family Welfare Department are shown below;
Service Ayush Doctors with BAMS/BUMS/BHMS/ BNYS qualification Ayush Doctors with Post Graduate Degree
1 0 to 6 years 21,000 42,000
2 6 to 13 years 22,000 43,700
3 13 to 20 years 23,000 44,800
4 More than 20 years 23,000 44,800

continue to apply.

PR-251

By Order and in the name of the Governor of Karnataka SC-50

D.S. JOGOJE

Deputy Secretary to Government

Finance Department (Services-2)

LABOUR SECRETARIAT

Sub : Implem entation of Action Point no.33 under Ease of Doing Business; Business Reform Action

Plan 2019- regarding.

Ref : Proceedings of the review meeting held on 25/4/2019 under the Chairmanship of Chief Secretary, Governm ent of Karnataka.

PREAMBLE:

The Department for Prom otion of Industry and Internal Trade (DPIIT), Ministry of Commerce and Industry, Govt of India released the Business Reform Action Plan (BRAP) 2018, which consists of 80 recommendations for reforms on regulatory processes, policies, practices and procedures spread across 12 reform areas.

As a part of Ease of Doing Business in the Karnataka State and in compliance to the Business Reform Action Plan 2018 issued by the Government of India, implementation of Action Point 33 was proposed pertaining to Department of Factories, Boilers, Industrial Safety and Health, which recommends " to introduce a provision for allowing the validity of license under Factories Act to be 10 years or more. The same shall be applicable for renewed licenses also". In this connection a review meeting with regard to the implem entation of reforms under Ease of Doing Business- BRAP 2019 was convened on 25/4/2019 under the Chairmanship of Chief Secretary, Governm ent of Karnataka.

In the proceedings read above status of implementation of Action Point 33 is reviewed and it has been suggested that the department consider issuing a Government Order/Executive Order/Notification in this regard so that timely implementation of the reform can be ensured.

After careful examination of the above proposal the Government hereby pass the following order.

GOVERNMENT ORDER NO: LD 40 KaBaNi 2018 (P-1)/2, BENGALURU, DATED:11/06/2019

೬೦೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೧ Government of Karnataka hereby orders to grant or renew a license under Rule 5(2) of Karnataka Factories Rules, 1969

for a period of ten years or more on payment of fees specified in Rule 5(1).

By order and in the Name of the Governor of Karnataka PR- 252

A.N. RADHAMANI

SC- 50

Under Secretary to Government

Labour Department

(Factories and Boilers)

LABOUR SECRETARIAT

Sub : Implementation of Action Point no.36 under Ease of Doing Business; Business Reform Action

Plan 2019 - regarding.

Ref : Proceedings of the review meeting held on 25/4/2019 under the Chairmanship of Chief Secretary of Karnataka, Government of Karnataka.

PREAMBLE:

The Department for Prom otion of Industry and Internal Trade (DPIIT), Ministry of Commerce and Industry, Govt of India released the Business Reform Action Plan (BRAP) 2018 which consists of 80 recommendations for reforms on regulatory processes, policies, practices and procedures spread across 12 reform areas.

As a part of Ease of Doing Business in the Karnataka State and in compliance to the Business Reform Action Plan 2018 issued by the Government of India, implementation of Action Point 36 was proposed pertaining to Department of Factories, Boilers, Industrial Safety and Health, which recommends to " Introduce a provision for third party certification for boilers during use under Section 34(3) of the Boilers Act, 1923 by authorizing Boiler Operation Engineer having the following qualification :

1. Graduate in Mechanical/Production/Power Plant/Metallurgical engineering from a recognized institution and 2. Minimum 5 years of experience in the field related to boilers

In this connection a review meeting with regard to the implem entation of reforms under Ease of Doing Business- BRAP 2019 was convened on 25/4/2019 under the Chairmanship of Chief Secretary, Government of Karnataka.

In the proceedings read above the Commissioner for Industries and Commerce informed that DPIIT has shared the format in this regard. Further, in the draft notification, the department has mentioned certain conditions such as permanent employment of Boiler Operation Engineer with the applicant owner, submission of third party inspection report to department etc which may be re-examined in addition, Department has to include Metallurgical engineering as a qualification for third party certification of boilers. In this regard while reviewing the status it is suggested to the department to re-examine the proposal and consider issuing a Government Order/Executive Order/Notification in this regard so that timely implementation of the reform can be ensured.

After careful examination of the above proposal the Government hereby pass the following order.

GOVERNMENT ORDER NO: LD 40 KaBaNi 2018 (P-1)/1, BENGALURU, DATED: 11/06/2019

Governm ent of Karnataka hereby allows third party certification for boilers during use under Section 34(3) of the Boilers Act, 1923 by authorizing Boiler Operation Engineer having the following qualifications:

1. Graduate in Mechanical/Production/Power Plant/Metallurgical engineering from a recognized institution and, 2. Minimum 5 years of experience in the field related to boilers.

subject to the conditions as specified in the Annexure enclosed to this order.

By order and in the Name of the Governor of Karnataka

A.N. RADHAMANI

Under Secretary to Government

Labour Department

(Factories and Boilers)

Annexure

Governm ent hereby provide an opportunity for third party certification for boilers during use under Section 34(3) of the Boilers Act, 1923 subject to the following conditions, namely :-

(1) When a certificate for use of boiler ceases to be in force, the owner of the boiler may engage a "Boiler Engineer"for carrying out the inspection of boiler and issue " the Annual certificate from Boiler Engineer"as given below:

"Annual Certificate from Boiler Engineer"

a) Registry number of Boiler/Economizer

b) Type of Boiler

c) Boiler Ratingಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೬೦೭ d) Place and year of manufacture e) Details of repairs

f) Hydraulically tested on to Kg/Cm2

g) Nam e, address, Telephone No., Mobile No. and e-mail address of boiler owner:

A. Address where Boiler/Economizer is installed

B. Name, address, Telephone No. Mobile No. and e mail address of "Boiler Engineer"

C. Certificate of "Boiler Engineer":

I have inspected the above boiler/economiser on at the request of the boiler owner as required under order no. dated of Government of Karnataka and I hereby Certify that the boiler/economiser is fit to operate for use at a pressure of for a further period of 12 months i.e., from to

Signature of the Boiler Engineer Signature of the Boiler Owner

BOE Certificate Number

(2) Boiler Engineer shall be a person : -

(i) Who is a graduate in Mechanical or Production or Power Plant or Metallurgical Engineering from a recognized institution

(ii) Holds a certificate of proficiency as Boiler Operation Engineer qualified under the Boiler Operation Engineers Rule 2011

(3) "Annual certificate from Boiler Engineer" shall be submitted by the owner of boiler to the Director of Boilers or Chief Inspector of Boilers on line or any other method for the purpose of record.

(4) It will be responsibility of the owner of the boiler to run and maintain it as per provisions of the Boilers Act, 1923 and regulations and rules framed under the Act and owner shall also be responsible for any violations also be responsible for any violation of the provisions.

(5) The "Boiler Engineer" shall follow the provision of the Boilers Act, 1923, rules and regulations framed there under and shall be liable and responsible for any act or omission committed against the provision of said Act, rules and regulations (6) Boiler owner can either engage "Boiler Engineer" as per this order or competent person as per Indian Boiler Regulations, 1950 for inspection and certification of boilers in use.

A.N. RADHAMANI

PR- 253

Under Secretary to Government

SC- 50

Labour Department

(Factories and Boilers)

ಕಂದಾಯ ಸಚಿವಾಲಯ

ವಿಷಯ : ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ದೊಡ್ಡಹುಣಸೂರು ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಿರುವ 2.00 ಎಕರೆ ಮತ್ತು ಮಲ್ಟಿ ಸ್ಪೆಷಾಲಿಟಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ನಿರ್ಮಾಣದ ಉದ್ದೇಶಕ್ಕಾಗಿ ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ 4.05 ಎಕರೆ ಒಟ್ಟು 6.05 ಎಕರೆ ತೋಟಗಾರಿಕೆ ಇಲಾಖೆಯ ಜಮೀನಿನ ಬದಲಾಗಿ ಧರ್ಮಪುರ ಗ್ರಾಮದ ಸ.ನಂ.155ರಲ್ಲಿ 63.36 ಎಕರೆ ಗೋಮಾಳ ಜಮೀನನ್ನು ತೋಟಗಾರಿಕಾ ಇಲಾಖೆಗೆ ಕಾಯ್ದಿರಿಸುವ ಬಗ್ಗೆ.

ಓದಲಾಗಿದೆ: ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ ರವರ ಪತ್ರ ಸಂಖ್ಯೆ: MYSDC/LND2/HUNS/518/2017 (E-29890)

ದಿನಾಂಕ:20.12.2018

ಪ್ರಸ್ತಾವನೆ:

ಜಿಲ್ಲಾಧಿಕಾರಿ, ಮೈಸೂರು ಜಿಲ್ಲೆ, ಮೈಸೂರು ಇವರು ದಿನಾಂಕ:20.12.2018ರ ಪತ್ರದಲ್ಲಿ ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ಧರ್ಮಪುರ ಗ್ರಾಮದ ಸ.ನಂ.155ರಲ್ಲಿ 63.36 ಎಕರೆ ಗೋಮಾಳ ಜಮೀನು ಲಭ್ಯವಿದ್ದು, ತೋಟಗಾರಿಕೆ ಇಲಾಖೆಗೆ ಸೇರಿದ ಸ.ನಂ.100/2ಎ ರಲ್ಲಿ 4.00 ಎಕರೆ ಮತ್ತು 100/2ಬಿ ರಲ್ಲಿ 0.05 ಗುಂಟೆ ಒಟ್ಟು 4.05 ಎಕರೆ ಜಮೀನನ್ನು ಮಲ್ಟಿ ಸ್ಪೆಷಾಲಿಟಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕಾಗಿ ಆರೋಗ್ಯ ಇಲಾಖೆಗೆ ಹಾಗೂ ದೊಡ್ಡಹುಣಸೂರು ಗ್ರಾಮದ ಸ.ನಂ.94/2ರಲ್ಲಿ 0.29 ಗುಂಟೆ, ಸ.ನಂ.94/3ರಲ್ಲಿ 1.07 ಎಕರೆ/ಗುಂಟೆ ಹಾಗೂ ಸ.ನಂ.97/1ರಲ್ಲಿ 0.04 ಗುಂಟೆ ಒಟ್ಟು 2.00 ಎಕರೆ ಜಮೀನಿನಲ್ಲಿ ಈಗಾಗಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಡಿ.ದೇವರಾಜ ಅರಸು ಭವನ ನಿರ್ಮಾಣವಾಗಿರುವ ಪ್ರದೇಶಕ್ಕೆ ಪರ್ಯಾಯವಾಗಿ ಧರ್ಮಪುರ ಗ್ರಾಮದ ಸ.ನಂ155ರಲ್ಲಿ 63.36 ಎಕರೆ ಗೋಮಾಳ ಜಮೀನನ್ನು ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 71ರಡಿ ತೋಟಗಾರಿಕೆ ಇಲಾಖೆಗೆ ಮೇವು ಬೆಳೆಯಲು ಮಾತ್ರ ಉಪಯೋಗಿಸುವ ಷರತ್ತು ವಿಧಿಸಿ ಕಾಯ್ದಿರಿಸುವ ಬಗ್ಗೆ ನಿರ್ದೇಶನ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಜರುಗಿದ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜನ್ಸಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹುಣಸೂರು ತಾಲ್ಲೂಕು, ಧರ್ಮಪುರ ಗ್ರಾಮದ ಸ.ನಂ.155ರಲ್ಲಿ 70.00 ಎಕರೆ ಜಮೀನನ್ನು ಸಂಬಂಧಪಟ್ಟ ಪ್ರಾಧಿಕಾರದ ಸಮ್ಮತಿ ಪಡೆದು ಕಂದಾಯ ದಾಖಲಾತಿಗಳೊಂದಿಗೆ ತೋಟಗಾರಿಕೆ ಇಲಾಖೆಗೆ ವರ್ಗಾಯಿಸಲು ನಿರ್ಣಯಿಸಲಾಗಿರುತ್ತದೆ.

೬೦೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೧

ಜಿಲ್ಲಾಧಿಕಾರಿಯವರ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ,

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 03 ಎಲ್‌ಜಿಎಮ್ 2019, ಬೆಂಗಳೂರು ದಿನಾಂಕ: 30/05/2019

ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು, ದೊಡ್ಡಹುಣಸೂರು ಗ್ರಾಮದ ಸ.ನಂ.94/2 ರಲ್ಲಿ 0-29 ಗುಂಟೆ, ಸ.ನಂ.94/3 ರಲ್ಲಿ 1-07 ಎಕರೆ/ಗುಂಟೆ ಹಾಗೂ ಸ.ನಂ.97/1 ರಲ್ಲಿ 0-04 ಗುಂಟೆ ಒಟ್ಟು 2-00 ಎಕರೆ ಜಮೀನು ಡಿ.ದೇವರಾಜ್ ಅರಸ್ ಭವನ ನಿರ್ಮಾಣಕ್ಕಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಮತ್ತು ಸ.ನಂ.100/2ಎ ರಲ್ಲಿ 4-00 ಎಕರೆ ಮತ್ತು 100/2ಬಿ ರಲ್ಲಿ 0-05 ಗುಂಟೆ ಒಟ್ಟು 4-05 ಎಕರೆ ಜಮೀನು ಮಲ್ಟಿ ಸ್ಪೆಷಾಲಿಟಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ನಿರ್ಮಾಣದ ಉದ್ದೇಶಕ್ಕಾಗಿ ಆರೋಗ್ಯ ಇಲಾಖೆಗೆ ವರ್ಗಾಯಿಸುವ ಜಮೀನು ಸೇರಿ ಒಟ್ಟಾರೆ 6-05 ಎಕರೆ ತೋಟಗಾರಿಕೆ ಇಲಾಖೆಯ ಜಮೀನಿಗೆ ಬದಲಾಗಿ ಧರ್ಮಪುರ ಗ್ರಾಮದ ಸ. ನಂ.155ರಲ್ಲಿ 63-36 ಎಕರೆ ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ಅಧಿನಿಯಮ 1966ರ ನಿಯಮ 97(4) ರಂತೆ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ತೋಟಗಾರಿಕೆ ಇಲಾಖೆಗೆ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 71 ರಡಿ ಕಾಯ್ದಿರಿಸಿ ಆದೇಶಿಸಿದೆ.

PR-254

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ವಿಮಲಮ್ಮ. ಸಿ

ಪೀಠಾಧಿಕಾರಿ,

ಕಂದಾಯ ಇಲಾಖೆ.(ಭೂ ಮಂಜೂರಾತಿ-2)

ಕಂದಾಯ ಸಚಿವಾಲಯ

ವಿಷಯ : ವಿಜಯಪುರ ಜಿಲ್ಲೆ, ವಿಜಯಪುರ ನಗರದ ವಾರ್ಡ್ ನಂ.5, ಸಿಟಿಎಸ್ ನಂಬರ್ 605ಎ/1ಎ/1ಎ2 ರಲ್ಲಿ ಬಿ.ಎಲ್.ಡಿ.ಇ ಸಂಸ್ಥೆಯ ವಿ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯಕ್ಕೆ ಗುತ್ತಿಗೆಗೆ ನೀಡಿರುವ 12584 ಚದರ ಯಾರ್ಡ್ ಜಮೀನನ್ನು ಸದರಿ ಸಂಸ್ಥೆಗೆ ಖಾಯಂ ಮಂಜೂರು ಮಾಡುವ ಕುರಿತು.

ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 12 ಎಲ್‌ಜಿಜೆ 2017, ದಿನಾಂಕ: 21-03-2018.

2. ಜಿಲ್ಲಾಧಿಕಾರಿ, ವಿಜಯಪುರ ಜಿಲ್ಲೆ, ಇವರ ಪತ್ರ ಸಂಖ್ಯೆ: ಆರ್‌ಬಿ/ಸಿಟಿಎಸ್/ಸಿಆರ್/101/2018-19,

ದಿನಾಂಕ: 27-02-2019.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮ ಸಂಖ್ಯೆ: (1)ರ ಸರ್ಕಾರದ ಆದೇಶದಲ್ಲಿ ವಿಜಯಪುರ ಜಿಲ್ಲೆ, ವಿಜಯಪುರ ನಗರದ ವಾರ್ಡ್ ನಂ.5, ಸಿ.ಟಿ.ಎಸ್.ನಂ.605/ಎ/1ಎ/1ಎ2 ರಲ್ಲಿ ಬಿ.ಎಲ್.ಡಿ.ಇ ಸಂಸ್ಥೆ, ವಿಜಯಪುರ ಇವರ ಆರ್ಯುವೇದ ಮಹಾವಿದ್ಯಾಲಯಕ್ಕೆ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದ್ದ 12584 ಚದರ ಯಾರ್ಡ್ ಜಮೀನಿನ ಗುತ್ತಿಗೆ ಅವಧಿಯನ್ನು ಮಾರ್ಗಸೂಚಿ ಬೆಲೆಯ ಶೇ.3 ರಷ್ಟು ವಾರ್ಷಿಕ ಗುತ್ತಿಗೆ ದರ ಹಾಗೂ ಪ್ರತಿ 02 ವರ್ಷಗಳಿಗೊಮ್ಮೆ ಶೇ.10 ರಷ್ಟು ಗುತ್ತಿಗೆ ದರವನ್ನು ಹೆಚ್ಚಿಸುವ ಷರತ್ತಿಗೊಳಪಟ್ಟು 60 ವರ್ಷಗಳಿಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ(2)ರ ಪತ್ರದಲ್ಲಿ ಜಿಲ್ಲಾಧಿಕಾರಿ, ವಿಜಯಪುರ ಜಿಲ್ಲೆ, ಇವರು ವಿಜಯಪುರ ನಗರದ ವಾರ್ಡ್ ನಂ.5, ಸಿಟಿಎಸ್ ನಂಬರ್ 605ಎ/1ಎ/1ಎ2ರಲ್ಲಿ 12584 ಚದರ ಯಾರ್ಡ್ ಜಮೀನನ್ನು ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ:ಸಿಎನ್ಎ:59, ದಿನಾಂಕ: 19-03-1962 ರನ್ವಯ 15 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡಲಾಗಿದ್ದು, ಪ್ರತಿ 05 ವರ್ಷಗಳಿಗೆ ಗುತ್ತಿಗೆ ಅವಧಿಯನ್ನು ನವೀಕರಿಸಲಾಗಿದ್ದು, ದಿನಾಂಕ: 25-02-2017ರಂದು ಜಮೀನಿನ ಗುತ್ತಿಗೆ ಅವಧಿಯು ಮುಕ್ತಾಯಗೊಂಡಿರುತ್ತದೆ. ತದನಂತರ ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 12 ಎಲ್‌ಜಿಎಲ್ 2017, ದಿನಾಂಕ: 21-03-2018ರನ್ವಯ ಪ್ರಚಲಿತ ಮಾರ್ಗಸೂಚಿ ಬೆಲೆಯ ಶೇ.3ರಷ್ಟು ಗುತ್ತಿಗೆ ದರ ವಿಧಿಸಿ 60 ವರ್ಷಗಳ ಅವಧಿಗೆ ಗುತ್ತಿಗೆಯನ್ನು ವಿಸ್ತರಿಸಲಾಗಿರುತ್ತದೆ.

ಮುಂದುವರೆದು, ಪ್ರಸ್ತಾಪಿತ ಜಮೀನನ್ನು ಗುತ್ತಿಗೆಗೆ ನೀಡಿರುವುದಕ್ಕೆ ಬದಲಾಗಿ ಸದರಿ ಸಂಸ್ಥೆಗೆ ಖಾಯಂ ಮಂಜೂರು ಮಾಡುವ ಕುರಿತು ಪರಿಶೀಲಿಸಲಾಗಿ, ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 108-ಐ(2)ರ ಪ್ರಕಾರ ಮಹಾನಗರ ಪಾಲಿಕೆಯ ವ್ಯಾಪ್ತಿಯೊಳಗಿನ ಸರ್ಕಾರಿ ಜಮೀನನ್ನು ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಆರ್‌ಡಿ 37 ಎಲ್‌ಜಿಪಿ 2002 ದಿನಾಂಕ: 23-04-2005ರನ್ವಯ ನಗರ ಅಥವಾ ಪಟ್ಟಣ ವ್ಯಾಪ್ತಿಯಲ್ಲಿರುವ ಯಾವುದೇ ಸರ್ಕಾರದ ಜಮೀನನ್ನು ಯಾವುದೇ ವ್ಯಕ್ತಿ ಅಥವಾ ಖಾಸಗಿ ಸಂಘ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿರುವುದಿಲ್ಲ. ಆದಾಗ್ಯೂ ಪ್ರಸ್ತಾಪಿತ ಜಮೀನನ್ನು ಬಿ.ಎಲ್.ಡಿ.ಇ ಸಂಸ್ಥೆಯ ಆರ್ಯುವೇದ ಮಹಾವಿದ್ಯಾಲಯಕ್ಕೆ ಮಂಜೂರು ಮಾಡುವ ಕುರಿತು ಸರ್ಕಾರದ ಹಂತದಲ್ಲಿ ನಿರ್ಧರಿಸಬಹುದಾಗಿದೆ ಎಂಬ ಅಭಿಪ್ರಾಯದೊಂದಿಗೆ ಜಿಲ್ಲಾಧಿಕಾರಿಗಳು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.

ಈ ಹಿನ್ನೆಯಲ್ಲಿ, ಜಿಲ್ಲಾಧಿಕಾರಿಗಳು, ವಿಜಯಪುರ ಜಿಲ್ಲೆ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 17 ಎಲ್‌ಜಿಜೆ 2019, ಬೆಂಗಳೂರು, ದಿನಾಂಕ: 07-06-2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ವಿಜಯಪುರ ಜಿಲ್ಲೆ, ವಿಜಯಪುರ ನಗರದ ವಾರ್ಡ್ ನಂ.5, ಸಿ.ಟಿ.ಎಸ್.ನಂ.605ಎ/1ಎ/1ಎ2 ರಲ್ಲಿ 12584 ಚದರ ಯಾರ್ಡ್ ಜಮೀನನ್ನು ಮಾರ್ಗಸೂಚಿ ಬೆಲೆಯ ಶೇ.3ರಷ್ಟು ವಾರ್ಷಿಕ ಗುತ್ತಿಗೆ ದರ ಹಾಗೂ ಪ್ರತಿ 02 ವರ್ಷಗಳಿಗೊಮ್ಮೆ ಶೇ.10 ರಷ್ಟು ಗುತ್ತಿಗೆ ದರವನ್ನು ಹೆಚ್ಚಿಸುವ ಷರತ್ತಿಗೊಳಪಟ್ಟು 60 ವರ್ಷಗಳ ಅವಧಿಗೆ ಬಿ.ಎಲ್.ಡಿ.ಇ ಸಂಸ್ಥೆ, ವಿಜಯಪುರ ಇವರ ಆರ್ಯುವೇದ ಮಹಾವಿದ್ಯಾಲಯಕ್ಕೆ ಈಗಾಗಲೇ ಗುತ್ತಿಗೆಗೆ ನೀಡಲಾದ ಜಮೀನನ್ನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 27 ರಡಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಪ್ರತಿ ಚದರ ಮೀಟರ್‌ಗೆ ರೂ.125/-ರಂತೆ ದರ ವಿಧಿಸಿ ಹಾಗೂ ಬಾಕಿ ಇರುವ ಗುತ್ತಿಗೆ ಮೊತ್ತವನ್ನು ಸಂಸ್ಥೆಯು ಸರ್ಕಾರಕ್ಕೆ ಪಾವತಿಸುವ ಷರತ್ತಿಗೊಳಪಟ್ಟು ಮತ್ತು ಈ ಕೆಳಕಂಡ ಷರತ್ತುಗೊಳಪಟ್ಟು ಬಿ.ಎಲ್.ಡಿ.ಇ ಸಂಸ್ಥೆಯ ವಿ.ವಿ.ಎಸ್. ಆರ್ಯುವೇದ ಮಹಾವಿದ್ಯಾಲಯ, ವಿಜಯಪುರ ಇವರಿಗೆ ಖಾಯಂ ಮಂಜೂರು ಮಾಡಿ ಆದೇಶಿಸಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ೬೦೯

1. ಉದ್ದೇಶಿತ ಜಮೀನನ್ನು ಯಾವ ಉದ್ದೇಶಕ್ಕಾಗಿ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಉಪಯೋಗಿಸತಕ್ಕದ್ದು. 2. ಪ್ರಸ್ತಾಪಿತ ಜಮೀನು ಸಂಸ್ಥೆಗೆ ಅವಶ್ಯವಿಲ್ಲವಿದ್ದಲ್ಲಿ ಕಂದಾಯ ಇಲಾಖೆಗೆ ಹಿಂತಿರುಗಿಸತಕ್ಕದ್ದು. 3. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ. 4. ಮಂಜೂರಾದ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ನೋಡಿಕೊಳ್ಳತಕ್ಕದ್ದು. 5. ಮಂಜೂರಾದ ಜಮೀನಿನ ಮೇಲೆ ಯಾವುದೇ ನ್ಯಾಯಾಲಯದ ದಾವೆಗಳು ದಾಖಲಾಗಿದ್ದಲ್ಲಿ, ಈ ಮಂಜೂರಾತಿಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ.

6. ಮಂಜೂರು ಮಾಡಲಾದ ಜಮೀನಿನ ಯಾವುದೇ ಭಾಗವು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ, ಸರ್ಕಾರವು ಸದರಿ ಜಮೀನನ್ನು ಪರಿಹಾರ ನೀಡಿದೆ ಹಿಂತೆಗೆದುಕೊಳ್ಳವ ಹಕ್ಕನ್ನು ಹೊಂದಿರುತ್ತದೆ.

7. ಮಂಜೂರು ಮಾಡಲಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಗುತ್ತಿಗೆ/ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ ಇಡುವುದಾಗಲೀ, ವರ್ಗಾವಣೆ ಅಥವಾ ಇತರೆ ಯಾವುದೇ ರೀತಿಯ ಪರಭಾರೆ ಮಾಡತಕ್ಕದ್ದಲ್ಲ.

8. ಮಂಜೂರಾತಿಯಾದ ಜಮೀನು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ, ಈ ಮಂಜೂರಾತಿ ಆದೇಶವನ್ನು ರದ್ದುಪಡಿಸಿ, ಮಂಜೂರಾದ ಜಮೀನನ್ನು ಯಾವುದೇ ಪರಿಹಾರ ನೀಡದೆ ಸರ್ಕಾರದ ವಶಕ್ಕೆ ಪಡೆಯಲಾಗುವುದು.

9. ಜಿಲ್ಲಾಧಿಕಾರಿಗಳು ಮಂಜೂರು ಮಾಡಲಾದ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

PR-255

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-50

ಎಂ.ಇ. ಚನ್ನಬಸವರಾಜ

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ.(ಭೂ ಮಂಜೂರಾತಿ-3)

ಕಂದಾಯ ಸಚಿವಾಲಯ

ವಿಷಯ : ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು, ಕಸಬಾ ಹೋಬಳಿ, ಪಾಪರಾಜನಹಳ್ಳಿ ಗ್ರಾಮದ ಸ.ನಂ.48ರಲ್ಲಿ 3-00 ಎಕರೆ ಸರ್ಕಾರಿ ಖರಾಬು ಜಮೀನನ್ನು ಆದಿಮ ಸಾಂಸ್ಕøತಿಕ ಕೇಂದ್ರ, ಕೋಲಾರ ಇವರಿಗೆ ಸಾಂಸ್ಕøತಿಕ ಚಟುವಟಿಕೆ ನಡೆಸುವ ಉದ್ದೇಶಕ್ಕಾಗಿ ಮಂಜೂರು ಮಾಡುವ ಬಗ್ಗೆ.

ಓದಲಾಗಿದೆ : 1) ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರ ಪತ್ರ ಸಂಖ್ಯೆ: ಎಲ್ಎನ್‌ಡಿ/ಸಿಆರ್/169/2017-18,

ದಿನಾಂಕ: 05/02/2017.

2) ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ ಇವರ ಪತ್ರ ಸಂಖ್ಯೆ.ಎಲ್ಎನ್‌ಡಿ/ಸಿಆರ್/430/2016-17, ದಿ: 18.12.2017

ಪ್ರಸ್ತಾವನೆ:

ಮೇಲೆ ಓದಲಾದ ಕ್ರ.ಸಂ.(1) ದಿನಾಂಕ:05/02/2017ರ ಪ್ರಸ್ತಾವನೆಯಲ್ಲಿ ತಿಳಿಸಿರುವಂತೆ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರು ಕೋಲಾರ ತಾಲ್ಲೂಕು, ಕಸಬಾ ಹೋಬಳಿ, ಪಾಪರಾಜನಹಳ್ಳಿ ಗ್ರಾಮದ ಸ.ನಂ.48ರಲ್ಲಿ ಒಟ್ಟು 449-18 ಎಕರೆ/ಗುಂಟೆ ಜಮೀನು ಇದ್ದು, ಸದರಿ ಜಮೀನು ಮೂಲತಃ ಖರಾಬು ವರ್ಗೀಕರಣದ ಜಮೀನಾಗಿರುತ್ತದೆ. ಸದರಿ ಜಮೀನಿನ ಪೈಕಿ 63-39 ಎಕರೆ/ಗುಂಟೆ ಜಮೀನು ವಿವಿಧ ಉದ್ದೇಶಗಳಿಗೆ ವಿಲೇವಾರಿಯಾಗಿರುತ್ತದೆ. ಪಾಪರಾಜನಹಳ್ಳಿ ಗ್ರಾಮದಲ್ಲಿ 422 ಜಾನುವಾರುಗಳಿದ್ದು, ಸದರಿ ಜಮೀನುಗಳ ಪೈಕಿ ಜಾನುವಾರುಗಳಿಗನುಗುಣವಾಗಿ 126-00 ಎಕರೆ ಗೋಮಾಳದ ಉದ್ದೇಶಕ್ಕೆ ಉಪಯೋಗಿಸಲಾಗುತ್ತಿದ್ದು, ಉಳಿಕೆ 251-00 ಎಕರೆ ಜಮೀನಿನ ಪೈಕಿ ಆದಿಮ ಸಾಂಸ್ಕøತಿಕ ಕೇಂದ್ರ, ಕೋಲಾರ ಇವರಿಗೆ 3-00 ಎಕರೆ ಜಮೀನನ್ನು ಮಂಜೂರು ಮಾಡುವ ಕುರಿತು ಪ್ರಸ್ತಾಪಿಸಿದ್ದಾರೆ.

ಮೇಲೆ ಓದಲಾದ ಕ್ರ.ಸಂ.(2) ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ ಇವರು ದಿನಾಂಕ:18/12/2017ರ ಪತ್ರದಲ್ಲಿ ತಿಳಿಸಿರುವಂತೆ, ಪ್ರಸ್ತಾಪಿತ ಜಮೀನು ನಗರ ವ್ಯಾಪ್ತಿಯಿಂದ 9.5 ಕಿ.ಮೀ. ದೂರದಲ್ಲಿದ್ದು, ಎಲ್ಲಾ ಋುಣಭಾರಗಳಿಂದ ಮುಕ್ತವಾಗಿರುವ ಜಮೀನಾಗಿರುತ್ತದೆಂದು ಹಾಗೂ ಆದಿಮ ಸಾಂಸ್ಕøತಿಕ ಕೇಂದ್ರವು ಒಂದು ಖಾಸಗಿ ಸಂಸ್ಥೆಯಾಗಿದ್ದು, ನಿಯಮಾನುಸಾರ 5 ವರ್ಷಗಳ ಆಡಿಟ್ ವರದಿಯನ್ನು ಸಲ್ಲಿಸಿದೆ. ಸಂಸ್ಥೆಯು ಸಾಂಸ್ಕøತಿಕ ಚಟುವಟಿಕೆ ನಡೆಸುವ ಉದ್ದೇಶಕ್ಕಾಗಿ ಕೋರಿಕೆ ಜಮೀನನ್ನು ಮಂಜೂರು ಮಾಡಲು ಗ್ರಾಮಸ್ಥರ ತಂಟೆ-ತಕರಾರು ಇರುವುದಿಲ್ಲವೆಂದು ವರದಿಯಲ್ಲಿ ತಿಳಿಸಿರುತ್ತಾರೆ.

ಮುಂದುವರೆದು, ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ ಇವರು ಸಲ್ಲಿಸಿರುವ ದಿನಾಂಕ:10/01/2019ರ ಪತ್ರದಲ್ಲಿ ಆದಿಮ ಸಾಂಸ್ಕøತಿಕ ಕೇಂದ್ರವು ಪ್ರಸ್ತುತ ಮಂಜೂರು ಮಾಡಲು ಕೋರಿರುವ 3-00 ಎಕರೆ ಜಮೀನನ್ನು ಕಳೆದ 11 ವರ್ಷಗಳಿಂದ ಅನಧಿಕೃತವಾಗಿ ಉಪಯೋಗಿಸುತ್ತಿದ್ದು, ನಿಯಮಾನುಸಾರ ದಂಡವನ್ನು ವಿಧಿಸಬೇಕಾಗಿರುತ್ತದೆಂದು ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮ, 1964ರ ಕಲಂ 94(1)ರಡಿಯಲ್ಲಿ 1-00 ಎಕರೆ ಜಮೀನಿಗೆ ಒಂದು ವರ್ಷಕ್ಕೆ ರೂ.1,000/-ಗಳಂತೆ 3-00 ಎಕರೆ ಜಮೀನಿಗೆ ರೂ.3,000/-ಗಳಂತೆ ಒಟ್ಟು 33,000/-ಗಳ ದಂಡವನ್ನು ವಿಧಿಸಬೇಕಾಗುತ್ತದೆಂದು ವರದಿಯಲ್ಲಿ ತಿಳಿಸಿದ್ದಾರೆ.

ಅಧ್ಯಕ್ಷರು, ಆದಿಮ ಸಾಂಸ್ಕøತಿಕ ಕೇಂದ್ರ, ಕೋಲಾರ ಇವರು ಸಲ್ಲಿಸಿರುವ ಮನವಿ ದಿನಾಂಕ: 04.03.2017ರಲ್ಲಿ ಕೋಲಾರ ತಾಲ್ಲೂಕು, ಕಸಬಾ ಹೋಬಳಿ, ಪಾಪರಾಜನಹಳ್ಳಿ ಗ್ರಾಮದ ಸ.ನಂ.48ರಲ್ಲಿ 3-00 ಎಕರೆ ಜಮೀನಿನಲ್ಲಿ ಆದಿಮ ಸಾಂಸ್ಕøತಿಕ ಕೇಂದ್ರ ಸ್ಥಾಪಿಸಲಾಗಿದ್ದು, ಸದರಿ ಸಂಸ್ಥೆ ವತಿಯಿಂದ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ನಾಟಕ, ಕವಿಗೋಷ್ಠಿ, ಸಾಹಿತ್ಯಿಕ ಚರ್ಚೆಗಳು ಹಾಗೂ ಸದರಿ ಪ್ರದೇಶದ ಮಕ್ಕಳಿಗೆ ಬೇಸಿಗೆ ಶಿಬಿರ ಮುಂತಾದ ಜನಪರವಾದ ಸಾಂಸ್ಕøತಿಕ ಚಟುವಟಿಕೆಗಳನ್ನು ಕಳೆದ 11 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಸದರಿ ಜಾಗವನ್ನು ಸಂಸ್ಥೆಗೆ ಮಂಜೂರು ಮಾಡುವಂತೆ ಕೋರಿದ್ದಾರೆ.

೬೧೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಜುಲೈ ೨೫, ೨೦೧೯ ಭಾಗ ೧

ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಮತ್ತು ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ ಇವರುಗಳ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ. ಆರ್‌ಡಿ 17 ಎಲ್‌ಜಿಕೆ 2018, ಬೆಂಗಳೂರು, ದಿನಾಂಕ: 06/06/2019

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು, ಕಸಬಾ ಹೋಬಳಿ, ಪಾಪರಾಜನಹಳ್ಳಿ ಗ್ರಾಮದ ಸ.ನಂ.48ರಲ್ಲಿ 3-00 ಎಕರೆ ಸರ್ಕಾರಿ ಖರಾಬು ಜಮೀನನ್ನು ಆದಿಮ ಸಾಂಸ್ಕøತಿಕ ಕೇಂದ್ರ, ಕೋಲಾರ ಇವರಿಗೆ ಸಾಂಸ್ಕøತಿಕ ಚಟುವಟಿಕೆ ನಡೆಸುವ ಉದ್ದೇಶಕ್ಕಾಗಿ ಮಾರುಕಟ್ಟೆ ದರ ಮತ್ತು ದಂಡ ಸೇರಿ ಒಟ್ಟು ರೂ.5.00 ಲಕ್ಷಗಳನ್ನು (ಐದು ಲಕ್ಷ ರೂಪಾಯಿಗಳು) ವಿಧಿಸಿ, ಈ ಕೆಳಕಂಡ ಷರತ್ತುಗೊಳಪಟ್ಟು ಮಂಜೂರು ಮಾಡಿ ಆದೇಶಿಸಿದೆ.

1. ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳ ಅವಧಿಯೊಳಗೆ ಉಪಯೋಗಿಸತಕ್ಕದ್ದು ಹಾಗೂ ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.

2. ಮಂಜೂರಾದ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ ಹಾಗೂ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.

3. ಮಂಜೂರಾದ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು.

4. ಮಂಜೂರಾದ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.

5. ಮಂಜೂರಾದ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಯಾವುದೇ ಪರಿಹಾರ ನೀಡದೆ ಮಂಜೂರಾತಿಯನ್ನು ರದ್ದುಗೊಳಿಸಲಾಗುವುದು.

6. ಜಿಲ್ಲಾಧಿಕಾರಿಗಳು ಮಂಜೂರಾದ ಜಮೀನನ್ನು ಫಲಾನುಭವಿಗಳಿಗೆ/ಇಲಾಖೆಗೆ ಹಸ್ತಾಂತರಿಸುವಾಗ ಮಂಜೂರಾದ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ PR-256

ಎಸ್.ಎಲ್. ಮಹಾಂತೇಗೌಡ

SC-50

ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ.(ಭೂ ಮಂಜೂರಾತಿ-1)

Cite this issue. Karnataka Gazette, Government of Karnataka, 25 July 2019. Indian Gazettes, https://egazette.servantsofknowledge.in/details/in.gazette.karnataka_new.2019-07-25.Part-1/. Archive identifier in.gazette.karnataka_new.2019-07-25.Part-1.