Servants of Knowledge
Karnataka Gazette · Government of Karnataka

Karnataka Gazette, Part Part-1, 01 August 2019

Published 01 August 2019

Part
Part-1
Identifier
in.gazette.karnataka_new.2019-08-01.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಆಗಸ್ಟ್ ೧, ೨೦೧೯ (ಶ್ರಾವಣ ೧೦, ಶಕ ವರ್ಷ ೧೯೪೧)

Bengaluru, Thursday, August 1, 2019 (Shravana 10, Shaka Varsha 1941)

ಸಂಪುಟ ೧೫೪

Volume 154

ಸಂಚಿಕೆ ೩೧

Issue 31

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಸಹಕಾರ ಸಚಿವಾಲಯ

ವಿಷಯ : ಬಿ.ಹೆಚ್.ಇ.ಎಲ್. ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್, ಬೆಂಗಳೂರು ಈ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡುವ ಬಗ್ಗೆ.

ಓದಲಾಗಿದೆ: 1. ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಪತ್ರ ಸಂಖ್ಯೆ: ಅನಿ(ಬ&ಮಾ)(ಸಂಸಂ)/2/35/2018-19, ದಿನಾಂಕ:27.08.2018.

2. ಸರ್ಕಾರದ ನೋಟೀಸ್ ಸಂಖ್ಯೆ: ಸಇ 129 ಸಸಂನೋ 2018, ದಿನಾಂಕ: 22.09.2019. 3. ಕಾರ್ಯದರ್ಶಿ, ಬಿ.ಹೆಚ್.ಇ.ಎಲ್. ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್, ಬೆಂಗಳೂರು ಇವರ

ಲಿಖಿತ ಉತ್ತರ ದಿನಾಂಕ:09.11.2018

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ಪತ್ರದಲ್ಲಿ ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರ ಪತ್ರದಲ್ಲಿ ಬಿ.ಹೆಚ್.ಇ.ಎಲ್. ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್, ನಂ.150, ಮೆಟ್ರೊ ಲೇಔಟ್, ನಾಯಂಡಹಳ್ಳಿ, ಮೈಸೂರು ರಸ್ತೆ, ಬೆಂಗಳೂರು-39 ಈ ಸಂಘದ ವಿರುದ್ಧ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರ ಕಲಂ 25 ರನ್ವಯ ವಿಚಾರಣೆ ನಡೆಸಿದ್ದು, ಸದರಿ ವಿಚಾರಣೆಯಲ್ಲಿ ಸಂಘವು 2014-15 ಮತ್ತು 2015-16ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ನಡೆಸದೇ ಇರುವುದು ನೋಂದಣಿ ಕಾಯ್ದೆ ಕಲಂ-11 ಮತ್ತು ಉಪ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ ಹಾಗೂ ಸದರಿ ಸಾಲುಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸದಿರುವುದು ಕಲಂ-13 ರ ಉಲ್ಲಂಘನೆಯಾಗಿರುತ್ತದೆಂದು, ದಿನಾಂಕ:20.12.2008 ರಿಂದ 31.03.2016 ರವರೆಗಿನ ಲೆಕ್ಕಪತ್ರಗಳನ್ನು ಮತ್ತು 2013-14ನೇ ಸಾಲಿನ ಕಾರ್ಯಕಾರಿ ಸಮಿತಿ ಪಟ್ಟಿಯನ್ನು ಸಕ್ಷಮ ಪ್ರಾಧಿಕಾರದ ಮುಂದೆ ದಾಖಲು ಮಾಡಿ ದಿನಾಂಕ:13.02.2014 ರಂದು ಪಡೆದುಕೊಂಡಿರುವ ಸ್ವೀಕೃತಿ ಪತ್ರವನ್ನು ಲಗತ್ತಿಸಿ ಅದರೊಂದಿಗೆ ಸಲ್ಲಿಸಿದ ಲೆಕ್ಕಪತ್ರದ ದಾಖಲೆಗಳು ನೈಜವಾಗಿರುವುದಿಲ್ಲವೆಂದು, ಸಂಘದಲ್ಲಿ ಸದಸ್ಯರುಗಳಿಂದ ಸದಸ್ಯತ್ವ ಶುಲ್ಕ ಮತ್ತು ರೂ.4.00 ಕೋಟಿ ಅಪಾರ್ಟ್‌ಮೆಂಟ್ ನಿರ್ಮಾಣಕ್ಕಾಗಿ ವಸೂಲು ಮಾಡಿದ್ದು, ಕಟ್ಟಡ ನಿರ್ಮಿಸದೇ ಅವ್ಯವಹಾರ ಮಾಡಿದ್ದು, ಈ ಬಗ್ಗೆ ಲೆಕ್ಕಪರಿಶೋಧನೆ ವರದಿಯಲ್ಲಿ ಯಾವುದೇ ವಿವರಗಳು ನಮೂದಾಗದಿರುವುದರಿಂದ ಆರೋಪ ಸಾಬೀತಾಗಿರುತ್ತದೆಂದು ಮತ್ತು ಸಂಘದ ಕಾರ್ಯದರ್ಶಿ, ಶ್ರೀ ಮಹದೇವಪ್ಪ ಮತ್ತು ಇತರರು 2009 ಮತ್ತು 2011 ರಲ್ಲಿ ರಾಜೀನಾಮೆ ಸಲ್ಲಿಸಿದ್ದರೂ ಇವರ ಹೆಸರುಗಳನ್ನು ದುರುಪಯೋಗಪಡಿಸಿಕೊಂಡು ವಾರ್ಷಿಕ ಮಹಾಸಭೆಯಲ್ಲಿ ಹಾಜರಾಗಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿದ್ದು ಈ ಮೇಲ್ಕಂಡ ಆರೋಪಗಳು ಸಾಬೀತಾಗಿರುವುದಾಗಿ ತಿಳಿಸುತ್ತಾ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಸಂಘಗಳ ನೋಂದಣಾಧಿಕಾರಿಗಳು, 4ನೇ ವಲಯ, ಬೆಂಗಳೂರು ಇವರು ಕೋರಿದ್ದು, ಸಂಘವು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ಹಾಗೂ ಸಂಘಗಳ ಉಪ ನಿಯಮಗಳನ್ವಯ ಕಾರ್ಯ ನಿರ್ವಹಿಸದೇ ಅವ್ಯವಹಾರ ನಡೆಸಿರುವುದು ಕಲಂ 25 ರ ವಿಚಾರಣೆಯಲ್ಲಿ ಸಾಬೀತಾಗಿರುವುದರಿಂದ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಲು ಕೋರಿ ಪ್ರಸ್ತಾವೆ ಸಲ್ಲಿಸಿರುತ್ತಾರೆ.

ಮೇಲೆ (2)ರಲ್ಲಿ ಓದಲಾದ ಸರ್ಕಾರದ ನೊಟೀಸಿನಲ್ಲಿ, ಬಿ.ಹೆಚ್.ಇ.ಎಲ್. ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್, ಬೆಂಗಳೂರು ಈ ಸಂಘದ ವಿರುದ್ಧ ಸಹಕಾರ ಸಂಘಗಳ ನಿಬಂಧಕರು, ಬೆಂಗಳೂರು ಇವರು ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವೆಯನ್ನು ಪರಿಗಣಿಸಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ ನೇಮಕ ಮಾಡಬಾರದೆಂದು ಲಿಖಿತ ಹೇಳಿಕೆ ಸಲ್ಲಿಸುವಂತೆ ಸಂಘದ ಅಧ್ಯಕ್ಷರು/ಕಾರ್ಯದರ್ಶಿಯವರಿಗೆ ತಿಳಿಸಲಾಗಿತ್ತು.

(೬೧೧)೬೧೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧, ೨೦೧೯ ಭಾಗ ೧ ಮೇಲೆ (3)ರಲ್ಲಿ ಓದಲಾದ ಲಿಖಿತ ಉತ್ತರದಲ್ಲಿ ಅಧ್ಯಕ್ಷರು, ಬಿ.ಹೆಚ್.ಇ.ಎಲ್. ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್, ಬೆಂಗಳೂರು ಇವರ ಲಿಖಿತ ಉತ್ತರದಲ್ಲಿ ಶ್ರೀ ಪುಟ್ಟೇಗೌಡ ಮತ್ತು ಶ್ರೀ ವಿಶ್ವನಾಥ್ ಇವರು 2013 ರಲ್ಲಿ ನಡೆದ ಚುನಾವಣೆಯಲ್ಲಿ ಚುನಾಯಿತರಾಗದ ಕಾರಣ ಸಮಸ್ಯೆಗಳನ್ನು ಹುಟ್ಟುಹಾಕಿ ಚುನಾವಣೆಯನ್ನು ರದ್ದುಗೊಳಿಸಬೇಕೆಂದು ಕೋರಿ ಓ.ಎಸ್.ನಂ.2030/2014 ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸಿದ್ದು ಇದರಿಂದಾಗಿ ಸಾಮಾನ್ಯ ಸಭೆಯನ್ನು ನಡೆಸಲು ಸಾಧ್ಯವಾಗಿರುವುದಿಲ್ಲವೆಂದು ಹಾಗೂ ಶ್ರೀ ಪುಟ್ಟೇಗೌಡ ಮತ್ತು ಶ್ರೀ ವಿಶ್ವನಾಥ್ ಇವರು ಸಂಘದ ವಿರುದ್ಧ ಕಡು ಹಗೆತನದ ಕಾರಣ ಜಿಲ್ಲಾ ನೋಂದಣಾಧಿಕಾರಿಗಳಿಗೆ ಕಲಂ 25 ರಡಿ ವಿಚಾರಣೆ ನಡೆಸಲು ಕೋರಿ ಮನವಿ ಸಲ್ಲಿಸಿದ್ದು, ನೋಂದಣಾಧಿಕಾರಿಗಳು ಪ್ರಕರಣದ ವಿಚಾರಣೆಯನ್ನು ಜರೂರಾಗಿ ಕೈಗೊಳ್ಳದೇ ಅಂತಿಮವಾಗಿ ದಿನಾಂಕ:21.04.2018 ರಂದು ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದು, ಇದನ್ನು ಪ್ರಶ್ನಿಸಿ ಉಚ್ಛ ನ್ಯಾಯಾಲಯದಲ್ಲಿ ರಿ.ಅ.ಸಂ.: 24288/2018 ಪ್ರಕರಣವನ್ನು ದಾಖಲಿಸಲಾಗಿರುತ್ತದೆ. ಸಂಘವು 370 ಸದಸ್ಯರಿಂದ ಸುಮಾರು ರೂ.4.00 ಕೋಟಿ ಸದಸ್ಯತ್ವ ಶುಲ್ಕ ವಸೂಲಿ ಮಾಡಿದ್ದು, ಈ ಕುರಿತು ಸಲ್ಲಿಸಲಾಗಿರುವ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿರುವುದಿಲ್ಲವೆಂದು, ಸದರಿ ಮೊತ್ತವನ್ನು ಪ್ರಥಮ್ ಬಿಲ್ಡರ್ಸ್ ಇವರಿಗೆ ನೀಡಿದ್ದು, ಸಂಘದ ಸದಸ್ಯರು ಮತ್ತು ಬಿಲ್ಡರ್ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿದೆಯೆಂದು ಹಾಗೂ ಶ್ರೀ ಎಂ.ಸಿ.ಮಹದೇವಪ್ಪ ಮತ್ತು ಇತರರು ಕಾರ್ಯ ನಿರ್ವಾಹಕ ಮಂಡಳಿಗೆ ಮಾತ್ರ ರಾಜೀನಾಮೆ ನೀಡಿದ್ದು, ಸದಸ್ಯರಾಗಿ ಅಲ್ಲವೆಂದು ಸ್ಪಷ್ಠೀಕರಿಸಿದ್ದರೂ ಈ ಬಗ್ಗೆ ನೋಂದಣಾಧಿಕಾರಿಯವರು ಸರಿಯಾಗಿ ಪರಿಶೀಲಿಸಿರುವುದಿಲ್ಲವೆಂದು, ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಕ್ರಮವನ್ನು ಕೈಬಿಡಬೇಕೆಂದು ಕೋರಿರುತ್ತಾರೆ.

ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗಿ ಸಂಘದ ಕಾರ್ಯಕಾರಿ ಸಮಿತಿ ವಿರುದ್ಧ ಕರ್ನಾಟಕ ಸಂಘದ ನೋಂದಣಿ ಕಾಯ್ದೆ 1960 ರ ಕಲಂ 25 ರಡಿ ಕೈಗೊಂಡ ಶಾಸನಬದ್ಧ ವಿಚಾರಣೆಯಲ್ಲಿ ಆರೋಪಗಳನ್ನು ಸಮರ್ಥಿಸಿಕೊಳ್ಳಲು ಸಂಘಕ್ಕೆ ಮುಕ್ತ ಅವಕಾಶವನ್ನು ನೀಡಲಾಗಿದ್ದರೂ ದಾಖಲೆಗಳನ್ನು ಹಾಜರು ಪಡಿಸದೇ ಸತತವಾಗಿ ಗೈರುಹಾಜರಾಗಿ ಉತ್ತರ ಸಲ್ಲಿಸಲು ವಿಫಲವಾಗಿರುತ್ತದೆ. ನೊಟೀಸಿಗೆ ಸಲ್ಲಿಸಿರುವ ಲಿಖಿತ ಉತ್ತರ ಮತ್ತು ದಾಖಲೆಗಳು ಸಮರ್ಪಕವಾಗಿರುವುದಿಲ್ಲ. ಆದ್ದರಿಂದ ಸಂಘದ ಮತ್ತು ಸದಸ್ಯರ ಹಿತದೃಷ್ಟಿಯಿಂದ ಸಂಘದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ನಿಷ್ಪಕ್ಷಪಾತ ಮತ್ತು ಪಾರದರ್ಶಕ ಚುನಾವಣೆಯನ್ನು ನಿಯಮಾನುಸಾರ ನಡೆಸಲು ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತವಾಗಿರುವುದನ್ನು ಮನಗಂಡು ಆಡಳಿತಾಧಿಕಾರಿ ನೇಮಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಇ 129 ಸಸಂನೋ 2018, ಬೆಂಗಳೂರು, ದಿನಾಂಕ:19.06.2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರನ್ವಯ ಬಿ.ಹೆಚ್.ಇ.ಎಲ್. ಎಂಪ್ಲಾಯಿಸ್ ವೆಲ್‌ಫೇರ್ ಅಸೋಸಿಯೇಷನ್, ನಂ.150, ಮೆಟ್ರೊ ಲೇಔಟ್, ನಾಯಂಡಹಳ್ಳಿ, ಮೈಸೂರು ರಸ್ತೆ, ಬೆಂಗಳೂರು-39 ಈ ಸಂಘಕ್ಕೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು, 1ನೇ ವಲಯ, ಬೆಂಗಳೂರು ಇವರನ್ನು ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.

ಆಡಳಿತಾಧಿಕಾರಿಯು ಕೂಡಲೇ ಸಂಘದ ಪ್ರಭಾರವನ್ನು ವಹಿಸಿಕೊಂಡು, ಸಂಘದಲ್ಲಿನ ನ್ಯೂನ್ಯತೆಗಳನ್ನು ನಿಯಮಾನುಸಾರ ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಆದೇಶಿಸಲಾಗಿದೆ.

PR-257

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ಆರ್. ಸೆಂತಾಮರೈ ಸರ್ಕಾರದ ಅಧೀನ ಕಾರ್ಯದರ್ಶಿ, ಸಹಕಾರ ಇಲಾಖೆ.

ಕಂದಾಯ ಸಚಿವಾಲಯ

ವಿಷಯ : ಮೈಸೂರು ನಗರದ ನಂಜರಾಜ ಬಹದ್ದೂರ್ ಛತ್ರಕ್ಕೆ ಸೇರಿದ ಜಾಗವನ್ನು ಕಿಂಗ್ಸ್ ಕೋರ್ಟ್ ಹೋಟೆಲ್

ಉದ್ಯಮಕ್ಕಾಗಿ ನೀಡಿರುವ ಗುತ್ತಿಗೆ ಅವಧಿಯನ್ನು ನವೀಕರಿಸುವ ಕುರಿತು.

ಓದಲಾಗಿದೆ: ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರ ಸಂಖ್ಯೆ:ಎಡಿಎಂ 3ಎ ಎಲ್ಎನ್‌ಡಿ 114/2017-18,

ದಿನಾಂಕ:13-11-2018.

ಪ್ರಸ್ತಾವನೆ:

ಮೇಲೆ ಓದಲಾದ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಮೈಸೂರು ನಗರದ ನಂಜರಾಜ ಬಹದ್ದೂರ್ ಟ್ರಸ್ಟ್‌ನವರು 1975ರಲ್ಲಿ ಬಹಿರಂಗ ಹರಾಜಿನ ಮೂಲಕ ಛತ್ರಕ್ಕೆ ಸೇರಿದ 174*200 ಅಡಿ ಜಾಗವನ್ನು ಶ್ರೀ ಎಲ್. ವಿವೇಕಾನಂದ ಇವರಿಗೆ ನೆಲಬಾಡಿಗೆ ಗುತ್ತಿಗೆ ಆಧಾರದ ಮೇಲೆ 44 ವರ್ಷಗಳ ಅವಧಿಗೆ, ಮಾಸಿಕ `. 3,000/- ಗಳಿಗೆ ಗುತ್ತಿಗೆ ನೀಡಿರುತ್ತಾರೆ. ಪ್ರಸ್ತಾಪಿತ ಜಾಗದಲ್ಲಿ ಗುತ್ತಿಗೆದಾರರು ಕಿಂಗ್ಸ್ ಕೋರ್ಟ್ ಹೋಟೆಲ್‌ನ್ನು ನಿರ್ಮಿಸಿ ಉದ್ಯಮ ನಡೆಸುತ್ತಿದ್ದು, ಸದರಿ ಗುತ್ತಿಗೆ ಅವಧಿಯು ದಿ:31-03-2019ಕ್ಕೆ ಮುಕ್ತಾಯವಾಗಿರುತ್ತದೆ. ಸದರಿ ಗುತ್ತಿಗೆ ಅವಧಿಯು ಮುಕ್ತಾಯವಾಗಿರುವುದರಿಂದ ಛತ್ರಕ್ಕೆ ನಷ್ಟವಾಗುತ್ತಿದ್ದು, ಗುತ್ತಿಗೆ ಅವಧಿಯನ್ನು ಮುಂದುವರೆಸದೆ ಛತ್ರದ ವಶಕ್ಕೆ ಪಡೆದು ಆದಾಯದ ಹೆಚ್ಚಳಕ್ಕೆ ಕ್ರಮ ವಹಿಸುವಂತೆ ಛತ್ರದ ವ್ಯವಸ್ಥಾಪನಾ ಸಮಿತಿಯು ನಿರ್ಣಯಿಸಿದ್ದು, ಅದರನ್ವಯ ಕ್ರಮವಹಿಸಿ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ನಿಯಮಗಳು 2002ರ ನಿಯಮ 30 ರನ್ವಯ ಕ್ರಮವಹಿಸಲು ಅನುಮತಿ ನೀಡುವಂತೆ ಆಯುಕ್ತರು ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಆಯುಕ್ತರು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿ, ಮೈಸೂರು ನಗರದ ವಿನೋಬ ರಸ್ತೆಯಲ್ಲಿರುವ ಶ್ರೀ ನಂಜರಾಜ ಬಹದ್ದೂರ್ ಛತ್ರವು ಧಾರ್ಮಿಕ ದತ್ತಿ ಇಲಾಖೆಯ ಅಧಿಸೂಚಿತ ಸಂಸ್ಥೆಯಾಗಿರುತ್ತದೆ. ಶ್ರೀಮಾನ್ ನಂಜರಾಜ ಬಹೂದ್ದೂರ್ ರವರು ಮಹಾರಾಜರ ಸೇನಾಪತಿಯಾಗಿ ಸೇವೆ ಸಲ್ಲಿಸಿ ಪ್ರಸ್ತಾಪಿತ ಜಾಗವನ್ನು ಬಳುವಳಿಯಾಗಿ ಪಡೆದುಕೊಂಡರು. ಅವರು ಪ್ರವಾಸಿಗರಿಗಾಗಿ ಹೋಟೆಲ್‌ಗಳೇ ಇಲ್ಲದ ಕಾಲದಲ್ಲಿ 130 ವರ್ಷದ ಹಿಂದೆ ಛತ್ರವನ್ನು ಕಟ್ಟಿಸಿದರು. ಇಡೀ ಮೈಸೂರಿನಲ್ಲಿ ಯಾವುದೇ ಛತ್ರವಿಲ್ಲದಿದ್ದಾಗ, ಈ ಛತ್ರವು ಪ್ರವಾಸಿಗರಿಗೆ ಕೇಂದ್ರ ಬಿಂದುವಾಗಿತ್ತು. ಪ್ರಸ್ತುತ ಈ ಸಂಸ್ಥೆಗೆ ಸೇರಿದ ಒಟ್ಟು 9-20 ಎಕರೆ ಗುಂಟೆ ಜಾಗವಿರುತ್ತದೆ.

ಹಿಂದೆ ನಂಜರಾಜ ಬಹದ್ದೂರ್ ಟ್ರಸ್ಟ್‌ರವರಿಂದ 9-20 ಎಕರೆ ಗುಂಟೆ ಆಸ್ತಿಗಳ ಆಡಳಿತ ನಿರ್ವಹಣೆ ಮಾಡಲಾಗುತ್ತಿತ್ತು. ಆ ನಂತರ ಇದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುತ್ತದೆ. ಪ್ರಸ್ತಾಪಿತ ಛತ್ರದ ಜಾಗದಲ್ಲಿ ಸಾರ್ವಜನಿಕ ಉದ್ದೇಶಗಳಿಗಾಗಿ ಪೆಟ್ರೋಲ್ ಬಂಕ್, ಮಹಾರಾಣಿ ಕಲಾ ಕಾಲೇಜಿಗೆ ಹೆಚ್ಚುವರಿ ವಿದ್ಯಾರ್ಥಿ ನಿಲಯ ನಿರ್ಮಿಸಲು, ಕಿಂಗ್ಸ್ ಕೋರ್ಟ್ ಹೋಟೆಲ್ ನಡೆಸಲು ಮುಂತಾದ ಉದ್ದೇಶಗಳಿಗಾಗಿ ಜಾಗವನ್ನು ಗುತ್ತಿಗೆಗೆ ನೀಡಲಾಗಿರುತ್ತದೆ. ಸದರಿ ಛತ್ರದ ಜಾಗದಲ್ಲಿ ಗುತ್ತಿಗೆ ನೀಡಲಾಗಿದ್ದ ಅವಧಿಯಲ್ಲಿ ಮೈಸೂರಿನಲ್ಲಿ ಬಹಳಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧, ೨೦೧೯ ೬೧೩ ಕಡಿಮೆ ಹೋಟೆಲ್‌ಗಳಿದ್ದವು. ಇಂತಹ ಅವಧಿಯಲ್ಲಿ ನಂಜರಾಜ ಬಹದ್ದೂರ್ ಟ್ರಸ್ಟ್ ನವರು ಕಿಂಗ್ಸ್ ಕೋರ್ಟ್ ಹೋಟೆಲ್‌ನ ಉದ್ಯಮಕ್ಕಾಗಿ 174*200 ಅಡಿ ಜಾಗವನ್ನು ಬಹಿರಂಗ ಹರಾಜಿನ ಮುಖಾಂತರ ಗುತ್ತಿಗೆ ನೀಡಲು ತೀರ್ಮಾನಿಸಿ ಹರಾಜಿಗೆ ಒಳಪಡಿಸಿದ್ದು, ಈ ಹರಾಜಿನಲ್ಲಿ ಅತ್ಯಂತ ಹೆಚ್ಚು ಬಿಡ್ಡು ದರ ನಮೂದಿಸಿದ ಶ್ರೀ ಎಲ್. ವಿವೇಕಾನಂದ ಇವರಿಗೆ ನೆಲಬಾಡಿಗೆ ಗುತ್ತಿಗೆ ಆಧಾರದ ಮೇಲೆ 44 ವರ್ಷಗಳ ಅವಧಿಗೆ ಮಾಸಿಕ `.3,000/- ಗಳಿಗೆ 1975ರಲ್ಲಿ ಗುತ್ತಿಗೆ ನೀಡಿರುತ್ತಾರೆ.

ಪ್ರಸ್ತಾಪಿತ ಜಾಗವನ್ನು ಗುತ್ತಿಗೆ ಪಡೆದ ಶ್ರೀ ಎಲ್.ವಿವೇಕಾನಂದ ಇವರು ಹೋಟೆಲ್ ಉಧ್ಯಮ ನಡೆಸಲು ಮೈಸೂರು ಮಹಾನಗರ ಪಾಲಿಕೆಯವರಿಂದ ನಕ್ಷೆಗೆ ಅನುಮೋದನೆ ಪಡೆದು, ಕಿಂಗ್ಸ್ ಕೋರ್ಟ್ 3 ಸ್ಟಾರ್ ಹೋಟೆಲನ್ನು ನಡೆಸುತ್ತಿದ್ದಾರೆ. ಹೀಗೆ ಹೋಟೆಲ್ ಉದ್ಯಮದ ಗುತ್ತಿಗೆ ಅವಧಿಯು ದಿನಾಂಕ:31-03-2019ಕ್ಕೆ ಮುಕ್ತಾಯಗೊಂಡಿರುತ್ತದೆ. ಸದರಿ ಸಂಸ್ಥೆಗೆ ನೀಡಿದ್ದ ನೆಲಬಾಡಿಗೆ ಗುತ್ತಿಗೆ ಅವಧಿಯು ಮುಕ್ತಾಯವಾಗಿರುವುದರಿಂದ ಪುನಃ ಸದರಿ ಜಾಗದ ಗುತ್ತಿಗೆ ಅವಧಿಯನ್ನು ಶ್ರೀ ಎಲ್.ವಿವೇಕಾನಂದ, ಗುತ್ತಿಗೆದಾರರು ಇವರು ಕಿಂಗ್ಸ್ ಕೋರ್ಟ್ ಹೋಟೆಲ್ ಉದ್ಯಮಕ್ಕಾಗಿ ನಂಜರಾಜ ಬಹದ್ದೂರ್ ಛತ್ರಕ್ಕೆ ಸೇರಿದ 174*200 ಅಡಿ ಜಾಗವನ್ನು ಮುಂದಿನ 44 ವರ್ಷಗಳ ಅವಧಿಗೆ ಸಂಸ್ಥೆಯ ಪ್ರತಿ ವರ್ಷದ ಒಟ್ಟು ವಾರ್ಷಿಕ ಆದಾಯದಲ್ಲಿ ಶೇ.2 ರಷ್ಟನ್ನು ವಾರ್ಷಿಕವಾಗಿ ಬಾಡಿಗೆ ಪಾವತಿಸುವ ಷರತ್ತಿನ ಮೇಲೆ ಗುತ್ತಿಗೆ ನೀಡುವಂತೆ ಕೋರಿರುತ್ತಾರೆ.

ಆದರೆ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ನಿಯಮ 30 ಹಾಗೂ 31 ರನ್ವಯ ಅಧಿಸೂಚಿತ ಸಂಸ್ಥೆಗೆ ಸೇರಿದ ಸ್ಥಿರ ಸ್ವತ್ತಿನ ಯಾವುದೇ ಗುತ್ತಿಗೆಯನ್ನು ಸಾರ್ವಜನಿಕ ಹರಾಜಿನ ಮೂಲಕ ಗರಿಷ್ಠ 30 ವರ್ಷಗಳವರೆಗೆ ಗುತ್ತಿಗೆ ನೀಡಲು ಮಾತ್ರ ಅವಕಾಶವಿರುತ್ತದೆ.

ಪ್ರಸ್ತಾಪಿತ ಜಾಗವನ್ನು ಶ್ರೀ ಎಲ್.ವಿವೇಕಾನಂದ, ಗುತ್ತಿಗೆದಾರರು ಕಿಂಗ್ಸ್ ಕೋರ್ಟ್ ಹೋಟೆಲ್ ಉದ್ಯಮಕ್ಕಾಗಿ ನಂಜರಾಜ ಬಹದ್ದೂರ್ ಛತ್ರಕ್ಕೆ ಸೇರಿದ 174*200 ಅಡಿ ಜಾಗವನ್ನು ಗುತ್ತಿಗೆ ಪಡೆದ ಅವಧಿಯಲ್ಲಿ ನಿರುಪಯುಕ್ತ ಜಾಗವಾಗಿತ್ತು. ಆದರೆ ಈ ಜಾಗದಲ್ಲಿ ಗುತ್ತಿಗೆದಾರರು ಅಪಾರ ಮೊತ್ತದ ಹಣವನ್ನು ಖರ್ಚುಮಾಡಿ ಹೋಟೆಲ್‌ನ್ನು ಸ್ಥಾಪಿಸಿರುವುದು ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿದೆ. ಅಲ್ಲದೆ ಈ ಪ್ರಕರಣವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಜಾರಿಗೆ ಬರುವ ಪೂರ್ವದಲ್ಲೇ ಗುತ್ತಿಗೆ ನೀಡಲಾಗಿರುವ ಪ್ರಕರಣವಾಗಿರುತ್ತದೆ.

ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಕುರಿತು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 15 ಮುಆಬಿ 2018, ಬೆಂಗಳೂರು; ದಿನಾಂಕ: 15ನೇ ಜೂನ್, 2019.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ:06-06-2019ರಂದು ನಡೆದ ಸಚಿವ ಸಂಪುಟದ ನಿರ್ಣಯದನ್ವಯ, ಮೈಸೂರು ನಗರದ ನಂಜರಾಜ ಬಹದ್ದೂರ್ ಛತ್ರಕ್ಕೆ ಸೇರಿದ 174 * 200 ಅಡಿ ಜಾಗದಲ್ಲಿ ಶ್ರೀ ಎಲ್. ವಿವೇಕಾನಂದ, ಗುತ್ತಿಗೆದಾರರು ಇವರಿಗೆ ಕಿಂಗ್ಸ್ ಕೋರ್ಟ್ ಹೋಟೆಲ್ ಉದ್ಯಮಕ್ಕಾಗಿ ನೀಡಲಾಗಿದ್ದ ಗುತ್ತಿಗೆ ಅವಧಿಯನ್ನು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ನಿಯಮಗಳು 2002ರ ನಿಯಮ 30 ಮತ್ತು 31 ಕ್ಕೆ ವಿನಾಯಿತಿ ನೀಡಿ, ಛತ್ರಕ್ಕೆ ಸೇರಿದ 174 * 200 ಅಡಿ ಜಾಗವನ್ನು ಕಿಂಗ್ಸ್ ಕೋರ್ಟ್ ಹೋಟೆಲ್‌ನ ಒಟ್ಟು ವಾರ್ಷಿಕ ವಹಿವಾಟಿನ ಶೇ.5 ರಷ್ಟು ಮೊತ್ತವನ್ನು (5% of Annual Turnover) ವಾರ್ಷಿಕ ಗುತ್ತಿಗೆ ದರವಾಗಿ ನಿಗದಿಪಡಿಸಿ, ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಮುಂದಿನ 30 ವರ್ಷಗಳ ಅವಧಿಗೆ ಗುತ್ತಿಗೆಯನ್ನು ಮುಂದುವರೆಸಿ ಆದೇಶಿಸಿದೆ.

ಷರತ್ತುಗಳು

1) ಗುತ್ತಿಗೆಗೆ ನೀಡಿದ ಸ್ವತ್ತನ್ನು, ಗುತ್ತಿಗೆಗೆ ನೀಡಲಾಗಿರುವ ಉದ್ದೇಶಕ್ಕಾಗಿ ಮಾತ್ರವೇ ಬಳಸತಕ್ಕದ್ದು; 2) ಕಟ್ಟಡವನ್ನು ತನ್ನ ಸ್ವಂತ ಖರ್ಚಿನಲ್ಲಿ ವರ್ಷಕ್ಕೊಮ್ಮೆ ದುರಸ್ಥಿಗೊಳಿಸಿ ಶುಚಿಯಾಗಿ ಮತ್ತು ಅಚ್ಚುಕಟ್ಟಾಗಿ ಇಡುವುದು ಗುತ್ತಿಗೆದಾರನ ಜವಾಬ್ದಾರಿಯಾಗಿರತಕ್ಕದ್ದು. ಗುತ್ತಿಗೆದಾರನ್ನು ಗುತ್ತಿಗೆ ನವೀಕರಿಸಲು ಇಚ್ಚಿಸಿದರೆ, ಗುತ್ತಿಗೆ ಅವಧಿಯು ಪೂರ್ಣಗೊಳ್ಳುವುದಕ್ಕೆ ಮೂರು ತಿಂಗಳು ಮುಂಚಿತವಾಗಿ ಮಂಜೂರು ಮಾಡಿದ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸತಕ್ಕದ್ದು;

3) ಗುತ್ತಿಗೆ ಅವಧಿಯು ಮುಗಿದ ತರುವಾಯ, ಗುತ್ತಿಗೆದಾರನು ಗುತ್ತಿಗೆಗೆ ಪಡೆದ ಸ್ವತ್ತನ್ನು ಕಟ್ಟಡದೊಂದಿಗೆ ಕೂಡಲೇ ಸಂಸ್ಥೆಗೆ ವಾಪಸು ಕೊಡಲು ಬದ್ಧನಾಗಿರತಕ್ಕದ್ದು ಮತ್ತು ಅವನು ಸಂಸ್ಥೆಯಿಂದ ಯಾವುದೇ ರೀತಿಯ ನಷ್ಟ ಪರಿಹಾರವನ್ನು ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದಲ್ಲ;

4) ಗುತ್ತಿಗೆಯ ಯಾವುದೇ ನಿಬಂಧನೆಗಳು ಮತ್ತು ಷರತ್ತುಗಳ ಉಲ್ಲಂಘನೆಯು, ಗುತ್ತಿಗೆಯನ್ನು ಕೊನೆಗೊಳಿಸತಕ್ಕದ್ದು. ಗುತ್ತಿಗೆಯನ್ನು ಕೊನೆಗೊಳಿಸಿದ ಮೇಲೆ ಗುತ್ತಿಗೆದಾರನು, ಸಂಸ್ಥೆಗೆ ಸ್ವತ್ತನ್ನು ಹಿಂದಿರುಗಿಸಲು ಅಥವಾ ವಾಪಸು ಕೊಡಲು ತಪ್ಪಿದರೆ, ಸಹಾಯಕ ಆಯುಕ್ತರು ಕರ್ನಾಟಕ ಸಾರ್ವಜನಿಕ ಆವರಣಗಳ (ಅನಧಿಕೃತ ಅಧಿಬೋಗದಾರರನ್ನು ಹೊರಹಾಕುವ)ಅಧಿನಿಯಮ, 1974ರ ಉಪಬಂಧಗಳ ಅಡಿಯಲ್ಲಿ ಅಂಥ ಗುತ್ತಿಗೆದಾರನ ವಿರುದ್ಧ ವ್ಯವಹರಣೆಗಳನ್ನು ಪ್ರಾರಂಭಿಸತಕ್ಕದ್ದು;

5) ಗುತ್ತಿಗೆ ಅವಧಿಯು ಮುಕ್ತಾಯವಾದ ತಕ್ಷಣವೇ, ಗುತ್ತಿಗೆದಾರನು ಗುತ್ತಿಗೆ ಪಡೆದ ಸ್ವತ್ತಿನ ಸ್ವಾಧೀನತೆಯನ್ನು ಆಧ್ಯರ್ಪಣೆ ಮಾಡಲು ವಿಫಲನಾದಲ್ಲಿ, ಆವರಣಗಳ ಬಳಕೆಗಾಗಿ ಮತ್ತು ಅನಧಿಕೃತ ಸ್ವಾಧೀನಾನುಭವದ ನಷ್ಟವನ್ನು ತುಂಬಿಕೊಡಲು ಹೊಣೆಗಾರನಾಗಿರತಕ್ಕದ್ದು. ಮೊದಲನೇ ತ್ರೈಮಾಸಿಕದವರೆಗೆ (ಮೂರು ತಿಂಗಳುಗಳು) ಪ್ರತಿ ತಿಂಗಳಿಗೆ ತುಂಬಿಕೊಡಬೇಕಾದ ನಷ್ಟವು ಗುತ್ತಿಗೆ ಅವಧಿಯು ಮುಕ್ತಾಯವಾಗುವುದಕ್ಕೆ ನಿಕಟಪೂರ್ವದಲ್ಲಿ ಸಂದಾಯ ಮಾಡಿದ ಮಾಸಿಕ ಬಾಡಿಗೆಯ ಮೊಬಲಗಿನ ಎರಡರಷ್ಟು ದರದಲ್ಲಿ ಇರತಕ್ಕದ್ದು. ಅದಾದ ತರುವಾಯ, ನಷ್ಟವು ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಸಂದಾಯ ಮಾಡಿದ ನಷ್ಟದ ಎರಡರಷ್ಟು ಹೆಚ್ಚಾಗತಕ್ಕದ್ದು. ಸ್ವತ್ತಿನ ಸ್ವಾಧೀನತೆಯನ್ನು ಆಧ್ಯರ್ಪಣೆ ಮಾಡುವವರೆಗೂ ಮೇಲೆ ಹೇಳಿದ ನಷ್ಟವು ಸಂದಾಯವಾಗತಕ್ಕದ್ದು;

6) ನಂಜರಾಜ ಬಹದ್ದೂರ್ ಛತ್ರದ ವ್ಯವಸ್ಥಾಪಕರು ಗುತ್ತಿಗೆದಾರರೊಂದಿಗೆ ಮೇಲಿನ ಆದೇಶದನ್ವಯ ಕರಾರು ಪತ್ರ ಮಾಡಿಕೊಂಡು ಸರ್ಕಾರಕ್ಕೆ ವರದಿ ಸಲ್ಲಿಸತಕ್ಕದ್ದು.

PR-258

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-25

ಎಂ. ತಿಪ್ಪೀರಮ್ಮ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಮುಜರಾಯಿ) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297೬೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧, ೨೦೧೯ ಭಾಗ ೧ ಕಂದಾಯ ಸಚಿವಾಲಯ ವಿಷಯ : ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ – 1997 ಮತ್ತು (ತಿದ್ದುಪಡಿ) ನಿಯಮಗಳು ಅನ್ವಯ ರಾಜ್ಯ ಧಾರ್ಮಿಕ ಪರಿಷತ್ತನ್ನು ರಚನೆ ಮಾಡುವ ಕುರಿತು.

ಓದಲಾಗಿದೆ: (1) ಸರ್ಕಾರದ ಆದೇಶ ಸಂಖ್ಯೆ: ಕಂಇ 28 ಮುಇವಿ 2014, ದಿನಾಂಕ:28.04.2015.

(2) ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ:ಎಡಿಎಂ/08/ಸಿಆರ್/53/2014-15, ದಿನಾಂಕ:02.05.2019.

ಪ್ರಸ್ತಾವನೆ:

ಮೇಲೆ ಓದಲಾದ (1) ರಲ್ಲಿನ ಸರ್ಕಾರದ ಆದೇಶದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಕ ಮಾಡುವ ಕುರಿತು ಲಭ್ಯವಿರುವ ಸದಸ್ಯರ ಮಾಹಿತಿಯೊಂದಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ. ಈಗಾಗಲೇ ಮೇಲೆ ಓದಲಾದ (1) ರ ಸರ್ಕಾರದ ಆದೇಶದಲ್ಲಿ, ರಾಜ್ಯ ಧಾರ್ಮಿಕ ಪರಿಷತ್ತಿನ ಅಧಿಕಾರ ಅಧೀಕಾರೇತರ ನಾಮನಿರ್ದೇಶಿತ ಮಹನೀಯರುಗಳನ್ನು 04 ವರ್ಷದ ಅವಧಿಗೆ ನಾಮನಿರ್ದೇಶನ ಮಾಡಿ ಆದೇಶಿಸಲಾಗಿತ್ತು.

ಮೇಲೆ ಓದಲಾದ (2) ರಲ್ಲಿನ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪತ್ರದಲ್ಲಿ ಸರ್ಕಾರದ ಆದೇಶ ಸಂಖ್ಯೆ:ಕಂಇ 28 ಮುಇವಿ 2014 ದಿನಾಂಕ:28.04.2015ರ ಆದೇಶದಲ್ಲಿ ರಾಜ್ಯ ಧಾರ್ಮಿಕ ಪರಿಷತ್ತಿಗೆ ಅಧಿಕಾರ/ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರುಗಳನ್ನು 4 ವರ್ಷಗಳ ಅವಧಿಗೆ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿರುತ್ತದೆ. ಅದರನ್ವಯ ರಾಜ್ಯ ಧಾರ್ಮಿಕ ಪರಿಷತ್ತಿನ ಅವಧಿಯು ದಿನಾಂಕ:27.04.2019 ಕ್ಕೆ ಮುಕ್ತಾಯವಾಗಿರುತ್ತದೆ. ರಾಜ್ಯ ಧಾರ್ಮಿಕ ಪರಿಷತ್ತಿನ ಅನುಪಸ್ಥಿತಿಯಲ್ಲಿ ಅಧಿಸೂಚಿತ ಸಂಸ್ಥೆಗಳಿಗೆ ವ್ಯವಸ್ಥಾಪನಾ ಸಮಿತಿಯನ್ನು ರಚಿಸಲು, ಆಡಳಿತಾಧಿಕಾರಿಗಳನ್ನು ನೇಮಿಸಲು ಹಾಗೂ ಕೆಲವು ಪ್ರಮುಖ ನಿರ್ಧಾರವನ್ನು ಕಾಯ್ದೆಯನುಸಾರ ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಹಲವು ಪ್ರಕರಣಗಳಲ್ಲಿ ಮಾನ್ಯ ಉಚ್ಛ ನ್ಯಾಯಾಲಯವು ರಾಜ್ಯ ಧಾರ್ಮಿಕ ಪರಿಷತ್ತಿಗೆ ತೀರ್ಮಾನ ಕೈಗೊಳ್ಳಲು ನಿರ್ದೇಶನ ನೀಡಿರುತ್ತದೆ. ಈಗಾಗಲೇ ಹಲವಾರು ಪ್ರಕರಣಗಳು ರಾಜ್ಯ ಧಾರ್ಮಿಕ ಪರಿಷತ್ತಿನ ನ್ಯಾಯಾಧಿಕರಣದ ಮುಂದೆ ಇತ್ಯರ್ಥಕ್ಕೆ ಬಾಕಿ ಇರುತ್ತವೆ. ಆದ್ದರಿಂದ ಪರಿಷತ್ತಿನ ನ್ಯಾಯಿಕ ಸದಸ್ಯರನ್ನೊಳಗೊಂಡಂತೆ ರಾಜ್ಯ ಧಾರ್ಮಿಕ ಪರಿಷತ್ತು ಅಗತ್ಯವಿರುತ್ತದೆ. ಈ ಹಿನ್ನೆಲೆಯಲ್ಲಿ ಸುಗಮ ಆಡಳಿತದ ಹಿತದೃಷ್ಠಿಯಿಂದ ನ್ಯಾಯಿಕ ಸದಸ್ಯರನ್ನೊಳಗೊಂಡಂತೆ ರಾಜ್ಯ ಧಾರ್ಮಿಕ ಪರಿಷತ್ತನ್ನು ರಚಿಸುವ ಕುರಿತು ಸರ್ಕಾರದ ಆದೇಶ ಕೋರಿರುತ್ತಾರೆ.

ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ ಇವರ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ:ಕಂಇ 71 ಮುಸೇವಿ 2019, ಬೆಂಗಳೂರು, ದಿನಾಂಕ: 19ನೇ ಜೂನ್, 2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997 ಮತ್ತು ತಿದ್ದುಪಡಿ ಅಧಿನಿಯಮಗಳ ಕಲಂ 20ರನ್ವಯ ಈ ಕೆಳಕಂಡಂತೆ ಅಧಿಕಾರ/ಅಧಿಕಾರೇತರ ನಾಮ ನಿರ್ದೇಶಿತ ಮಹನೀಯರುಗಳನ್ನೊಳ ಗೊಂಡಂತೆ ಪಾರ್ಶ್ವವಾಗಿ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಾಲ್ಕು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇದರಲ್ಲಿ ಯಾವುದು ಮೊದಲೋ ಅಲ್ಲಿಯವರೆವಿಗೆ ನೇಮಿಸಿ ಆದೇಶಿಸಿದೆ :-

1. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಪ್ರಭಾರದಲ್ಲಿರುವ ಸಚಿವರು ಅಧ್ಯಕ್ಷರು
2. ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಪ್ರಭಾರದಲ್ಲಿರುವ ಸರ್ಕಾರದ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಗಳು ಉಪಾಧ್ಯಕ್ಷರು
3. ಆಯುಕ್ತರು, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ಪ ದನಿಮಿತ್ತ ಕಾರ್ಯದರ್ಶಿಗಳು
4. ಅಧಿಕಾರೇತರ ನಾಮ ನಿರ್ದೇಶಿತ ಸದಸ್ಯರು 1) ಶಿ ೕ ಮಹಿಪಾಲ್ ದೇಸಾಯಿ, ಜಿಲ್ಲಾ ನಿವೃತ್ತ ನ್ಯಾಯಾಧೀಶರು, ನಂ.1444, ಸಾಯಿ ನಿವಾಸ್, ್ರ 1ನೇ ಮುಖ್ಯರಸ್ತೆ, 1ನೇ ಅಡ್ಡ ರಸ್ತೆ, ನ್ಯಾಯಾಂಗ ಬಡಾವಣೆ, ಜಿ.ಕೆ.ವಿ.ಕೆ. ಅಂಚೆ, ಬಳ್ಳಾರಿ ರಸ್ತೆ, ಬ ಂಗಳೂರು–560 065 ೆ ನ್ಯಾಯಿಕ ಸದಸ್ಯರು (ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಹೊಸದಾಗಿ ನ್ಯಾಯಿಕ ಸದಸ್ಯರನ್ನು ನೇಮಕ ಮಾಡುವವರೆಗೆ ಇವರನ್ನೇ ಮುಂದುವರೆಸಲಾಗಿದೆ).

SC-25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ. ತಿಪ್ಪೀರಮ್ಮ ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ಮುಜರಾಯಿ)

ಸಹಕಾರ ಸಚಿವಾಲಯ

ತಿದ್ದುಪಡಿ ಆದೇಶ

ಸಂಖ್ಯೆ: ಸಇ 28 ಸಸಂನೋ 2019, ಬೆಂಗಳೂರು, ದಿನಾಂಕ: 26.06.2019

ಸರ್ಕಾರದ ಆದೇಶ ಸಂಖ್ಯೆ: ಸಇ 28 ಸಸಂನೋ 2019, ದಿನಾಂಕ: 14.06.2019ರ ಆದೇಶ ಭಾಗದ ಮೂರು ಮತ್ತು ನಾಲ್ಕನೇ ಸಾಲಿನಲ್ಲಿರುವ "ಸಹಕಾರ ಸಂಘಗಳ ಸಹಾಯಕ ನಿಬಂಧಕರು, 1ನೇ ವಲಯ, ಬೆಂಗಳೂರು" ಎಂಬುದರ ಬದಲಾಗಿ, "ಸಹಕಾರ ಸಂಘಗಳ ಸಹಾಯಕ ನಿಬಂಧಕರು, 2ನೇ ವಲಯ, ಬೆಂಗಳೂರು" ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಇನ್ನುಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

PR-260

SC-25

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಬಿ.ಎಸ್. ಹರೀಶ್ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ, ಸಹಕಾರ ಇಲಾಖೆ

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 01 August 2019. Indian Gazettes, https://egazette.servantsofknowledge.in/details/in.gazette.karnataka_new.2019-08-01.Part-1/. Archive identifier in.gazette.karnataka_new.2019-08-01.Part-1.