ಬೆಂಗಳೂರು, ಗುರುವಾರ, ಆಗಸ್ಟ್ ೧೫, ೨೦೧೯ (ಶ್ರಾವಣ ೨೪, ಶಕ ವರ್ಷ ೧೯೪೧)
Bengaluru, Thursday, August 15, 2019 (Shravana 24, Shaka Varsha 1941)
ಸಂಪುಟ ೧೫೪
Volume 154
ಸಂಚಿಕೆ ೩೩
Issue 33
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಶಿಕ್ಷಣ ಸಚಿವಾಲಯ
ವಿಷಯ: ತುಮಕೂರಿನ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟಿರುವ ಶ್ರೀ ಸಿದ್ದಗಂಗಾ ಕಲಾ, ವಾಣಿಜ್ಯ ಸಂಜೆ ಕಾಲೇಜನ್ನು ಹಾಗೂ ಅಲ್ಲಿನ ಬೋಧಕ ಸಿಬ್ಬಂದಿಗಳನ್ನು ವೇತನಾನುದಾನದ ವ್ಯಾಪ್ತಿಗೆ ಒಳಪಡಿಸುವ ಕುರಿತು.
ಓದಲಾಗಿದೆ: 1. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತಾಲಯದ ಪ್ರಸ್ತಾವನೆ ಸಂಖ್ಯೆ:ಕಾಶಿಇ/48/ವೇಅ/2012-13/ನೇವಿ, ದಿನಾಂಕ: 01-02-2013.
2. ಸಚಿವ ಸಂಪುಟದ ಪ್ರಕರಣ ಸಂಖ್ಯೆ: ಸಿ: 228/2013, ದಿನಾಂಕ: 19-03-2013.
3. ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 238 ವೆಚ್ಚ-8/2014, ದಿನಾಂಕ: 01-03-2014.
4. ಸರ್ಕಾರದ ಆದೇಶ ಸಂಖ್ಯೆ: ಇಡಿ 75 ಯುಪಿಸಿ 96, ದಿನಾಂಕ: 20-05-1996.
5. ಪ್ರಾದೇಶಿಕ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು ಇವರ ಪತ್ರ ಸಂಖ್ಯೆ:
ಕಾಶಿಇ/ಪ್ರಾಕಬೆಂ/ಅಂ-1/ ಭಾಗ-2/2016, ದಿನಾಂಕ: 20-07-2017.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಪ್ರಸ್ತಾವನೆಯಲ್ಲಿ ತುಮಕೂರಿನ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟಿರುವ ಶ್ರೀ ಸಿದ್ದಗಂಗಾ ಕಲಾ, ವಾಣಿಜ್ಯ ಸಂಜೆ ಕಾಲೇಜು, ತುಮಕೂರು ಇದು 1966-67ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು, 1986-87ನೇ ಸಾಲಿಗಿಂತ ಮೊದಲೇ ಪ್ರಾರಂಭವಾಗಿರುವುದರಿಂದ ಸದರಿ ಕಾಲೇಜನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಅಲ್ಲದೆ ಸದರಿ ಕಾಲೇಜು ಸ್ವಂತ ಕಟ್ಟಡವನ್ನು ಹೊಂದಿದ್ದು, 660ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸದರಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಸದರಿ ಕಾಲೇಜಿನ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಪುಸ್ತಕಗಳಿರುತ್ತವೆ. ಕಾಲೇಜಿಗೆ ಆಟದ ಮೈದಾನವಿರುತ್ತದೆ. ಒಟ್ಟಾಗಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಾಲೇಜು ಹೊಂದಿರುವುದರಿಂದ ಸದರಿ ಕಾಲೇಜಿನ ಬೋಧಕ/ಬೋಧಕೇತರ ಸಿಬ್ಬಂದಿಗಳನ್ನು ಸರ್ಕಾರದ ಆದೇಶ ಸಂಖ್ಯೆ: ಇಡಿ 146 ಯುಪಿಸಿ 79, ದಿನಾಂಕ: 03-10-1981ರ ಪ್ರಕಾರ ಹುದ್ದೆಗಳನ್ನು ಭರ್ತಿ ಮಾಡಬೇಕಾಗಿರುತ್ತದೆ ಎಂದು ತಿಳಿಸಿರುತ್ತಾರೆ.
ಮೇಲೆ ಓದಲಾದ (2)ರಲ್ಲಿ ದಿನಾಂಕ: 19-03-2013 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಶ್ರೀ ಸಿದ್ದಗಂಗಾ ಕಲಾ, ವಾಣಿಜ್ಯ ಸಂಜೆ ಕಾಲೇಜು, ತುಮಕೂರು ಹಾಗೂ ಸದರಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕ/ಬೋಧಕೇತರ ನೌಕರರುಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಅನುಮೋದನೆ ನೀಡಲಾಗಿದೆ.
(೬೩೭)೬೩೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ಭಾಗ ೧ ಮೇಲೆ ಓದಲಾದ (4)ರ ಸರ್ಕಾರಿ ಆದೇಶದಲ್ಲಿ ದಿನಾಂಕ: 01-06-1992ರ ನಂತರ ಮಾಡಿಕೊಳ್ಳುವ ನೇಮಕಾತಿಗಳಲ್ಲಿ ಯಾವುದೇ ಕಾರಣಕ್ಕೂ ಮೀಸಲಾತಿ ಉಲ್ಲಂಘನೆಯನ್ನು ಮನ್ನಾ ಮಾಡಲು ಅವಕಾಶವಿಲ್ಲ ಮತ್ತು ನೇಮಕಾತಿ ಅನುಮೋದನೆ ಕುರಿತು ಸರ್ಕಾರ ಕಾಲಕಾಲಕ್ಕೆ ಹೊರಡಿಸಿದ ಇತರೆ ಎಲ್ಲಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಲಾಗಿದೆ.
ಮೇಲೆ ಓದಲಾದ(4)ರ ಸರ್ಕಾರದ ಆದೇಶದಂತೆ ಮೇಲೆ ಓದಲಾದ (2)ರ ಸಚಿವ ಸಂಪುಟದ ತೀರ್ಮಾನವನ್ನು ಹಾಗೂ ಮೇಲೆ ಓದಲಾದ (1 & 5)ರ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತಾಲಯದ ಪ್ರಸ್ತಾವನೆ/ಪತ್ರಗಳನ್ನು ಪರಿಶೀಲಿಸಲಾಯಿತು. ಅದರಂತೆ, ಶ್ರೀ ಸಿದ್ದಗಂಗಾ ಕಲಾ, ವಾಣಿಜ್ಯ ಸಂಜೆ ಕಾಲೇಜು, ತುಮಕೂರು ಈ ಕಾಲೇಜಿನಲ್ಲಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ ರುದ್ರೇಶಯ್ಯ ಕೆ.ಜೆ. ದ್ವಿತೀಯ ದರ್ಜೆ ಸಹಾಯಕರು ವೇತನಾನುದಾನಕ್ಕೆ ಒಳಪಡಿಸಲು ಸರ್ಕಾರ ತೀರ್ಮಾನಿಸಿದೆ. ಅದರಂತೆ, ಈ ಕೆಳಕಂಡ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಇಡಿ 42 ಯುಪಿಸಿ 2013, ಬೆಂಗಳೂರು, ದಿನಾಂಕ: 16-07-2019
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಾಮಾನ್ಯ ಆಡಳಿತ ಮಂಡಳಿಗೆ ಸೇರಿದ ಹಾಗೂ ದಿನಾಂಕ: 01-07-1987ಕ್ಕಿಂತ ಪೂರ್ವದಲ್ಲಿ ಪ್ರಾರಂಭಿಸಿ ಇದುವರೆಗೂ ಸತತವಾಗಿ ನಡೆಸುತ್ತಿರುವ ತುಮಕೂರಿನ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟಿರುವ ಶ್ರೀ ಸಿದ್ದಗಂಗಾ ಕಲಾ, ವಾಣಿಜ್ಯ ಸಂಜೆ ಕಾಲೇಜು, ತುಮಕೂರು ಈ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಬೋಧಕೇತರ ಹುದ್ದೆಯನ್ನು ಈ ಕೆಳಕಂಡ ಷರತ್ತಿಗೊಳಪಟ್ಟು ಸರ್ಕಾರದ ವೇತನಾನುದಾನದ ವ್ಯಾಪ್ತಿಗೆ ತರಲಾಗಿದೆ.
ಬೋಧಕರು
| ಕ್ರ. ಸ ಂ. | ವ ೕತನಾನುದಾನಕ್ಕೆ ಒಳಪಡಿಸಿದ ೆ ಬ ೂೕಧಕೇತರರ ಹೆಸರು ೆ | ವ ೕತನಾನುದಾನಕ್ಕೆ ೆ ಒಳಪಡಿಸಿದ ಹುದ್ದೆ | ಪ ರಿಗಣಿಸಲಾದ ಮೀಸಲಾತಿ | ವ ೕತನಾನುದಾನಕ್ಕೆ ಒಳಪಡಿಸಿದ ೆ ಹ ುದ್ದೆಗಳ ಸಂಖ್ಯೆ |
| 1 | ಶಿ ೕ ರುದ್ರೇಶಯ್ಯ ಕೆ.ಜೆ. ್ರ | ದಿ ್ವತೀಯ ದರ್ಜೆ ಸ ಹಾಯಕರು | ಸಾಮಾನ್ಯ | 01 |
ಷರತ್ತುಗಳು:
1) ಸದರಿ ಕಾಲೇಜು ದಿನಾಂಕ: 01-06-1987ರ ಪೂರ್ವದಲ್ಲಿ ಪ್ರಾರಂಭಿಸಿ ವಿಚ್ಛೇದನವಿಲ್ಲದೇ ಸತತವಾಗಿ ನಡೆಯುತ್ತಿರಬೇಕು.
2) ಮೀಸಲಾತಿಯನ್ವಯ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಅಭ್ಯರ್ಥಿಯನ್ನು 6 ತಿಂಗಳ ಒಳಗೆ ನಿಯಮಾನುಸಾರ ನೇಮಕಾತಿ ಮಾಡಿಕೊಂಡು ವೇತನಾನುದಾನಕ್ಕೆ ಒಳಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
3) ಈಗಾಗಲೇ ಆಡಳಿತ ಮಂಡಳಿಯು ನೇಮಕಾತಿ ಮಾಡಿಕೊಂಡಿರುವ ಉಳಿದ ಬೋಧಕೇತರ ನೌಕರರಿಗೆ ಆಡಳಿತ ಮಂಡಳಿಯೇ ವೇತನವನ್ನು ಪಾವತಿ ಮಾಡಬೇಕು.
4) ಪ್ರಸ್ತಾಪಿತ ಕಾಲೇಜು ಸಂಜೆ ಕಾಲೇಜು ಎಂದು ತಿಳಿಸಿರುವುದರಿಂದ ಸಂಬಂಧಪಟ್ಟ ಅನುದಾನಿತ ಸಂಹಿತೆಯನ್ನು ಪಾಲಿಸಿರಬೇಕು.
5) ನೇಮಕಾತಿಯಲ್ಲಿ ನೇಮಕಾತಿ ನಿಯಮಗಳು ಹಾಗೂ ಮೀಸಲಾತಿ ಪಾಲನೆಯ ಬಗ್ಗೆ ಸರ್ಕಾರವು ಹೊರಡಿಸಿರುವ ಹಾಗೂ ಆಗಿಂದಾಗ್ಗೆ ಹೊರಡಿಸುವ ಸೂಚನೆಗಳನ್ನು ಪಾಲನೆ ಮಾಡುವುದಾಗಿ ಸಂಬಂಧಪಟ್ಟ ಆಡಳಿತ ಮಂಡಳಿಯಿಂದ ಸ್ಟಾಂಪ್ ಪೇಪರ್ನಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಬೇಕು.
6) ಬೋಧಕೇತರ ಹುದ್ದೆಗಳು ಅನುದಾನ ಸಂಹಿತೆ ಹಾಗೂ ನಿಗದಿತ ಸಿಬ್ಬಂದಿ ರೂಪಿಕೆ ಪ್ರಕಾರ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.
ಬೋಧಕೇತರ ಹುದ್ದೆಗಳ ವಿದ್ಯಾರ್ಹತೆ ಇರುವುದನ್ನೂ ಸಹ ಖಚಿತಪಡಿಸಿಕೊಳ್ಳಬೇಕು.
7) ಹುದ್ದೆಗಳನ್ನು ವೇತನಾನುದಾನಕ್ಕೆ ಒಳಪಡಿಸುವ ಮುನ್ನ ಸಂಬಂಧಿಸಿದ ಕಾಲೇಜು ಶಿಕ್ಷಣ ಇಲಾಖೆಯಿಂದ ಪೂರ್ವಾನುಮತಿ ಪಡೆದಿರಬೇಕು.
ಕಾಲೇಜು ಶಿಕ್ಷಣ ಆಯುಕ್ತರು ದಾಖಲೆಗಳನ್ನು ಪರಿಶೀಲಿಸಿ ಹುದ್ದೆ ಯಾವ ವರ್ಗಕ್ಕೆ ಮೀಸಲಾಗಿತ್ತು. ನೇಮಕ ಮಾಡಿರುವ ಅಭ್ಯರ್ಥಿ ಅದೇ ವರ್ಗಕ್ಕೆ ಸೇರಿದವರೇ ಎಂಬುದನ್ನು ದೃಡೀಕರಿಸಬೇಕು.
8) ಮೀಸಲಾತಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಸಂಖ್ಯೆ: ಇಡಿ 227 ಎಸ್ಇಪಿ 94, ದಿನಾಂಕ: 21-04-1995 ಹಾಗೂ ಕಾಲಕಾಲಕ್ಕೆ ಹೊರಡಿಸಿರುವ ಆದೇಶಗಳು ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರನ್ನು ಒಂದು ಯೂನಿಟ್ ಎಂದು ಪರಿಗಣಿಸಿ, ಸಿಆಸುಇ ಆದೇಶ ಸಂಖ್ಯೆ: ಸಿಆಸುಇ 8 ಸೆಹಿಮ 95, ದಿನಾಂಕ: 20-06-1995 ರಲ್ಲಿ ನಿಗದಿಪಡಿಸಿದ 100 ಬಿಂದುಗಳ ರೋಸ್ಟರ್ ಪ್ರಕಾರ ಮೀಸಲಾತಿ ಪಾಲಿಸಿರಬೇಕು. ಇದರ ಜೊತೆಗೆ ದಿನಾಂಕ: 01-06-1992ರ ನಂತರದ ಎಲ್ಲಾ ನೇಮಕಾತಿಗಳಲ್ಲಿ ಮೀಸಲಾತಿ ಪಾಲನೆಯಾಗಿರುವ ಬಗ್ಗೆಯೂ ಸಹ ಪರಿಶೀಲಿಸಿ ದೃಡಪಡಿಸಿಕೊಳ್ಳುವುದು. ಅನಂತರವೇ ವೇತನಾನುದಾನ ನೀಡಬೇಕು.
9) ಈ ಕಾಲೇಜಿಗೆ ಸಂಬಂಧಿಸಿದಂತೆ ನೇಮಕವಾಗಿರುವ ಬೋಧಕ / ಬೋಧಕೇತರ ಹುದ್ದೆಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅಥವಾ ಇತರೆಡೆಗಳಲ್ಲಿ ಯಾವುದೇ ವಿವಾದ ಇರುವುದಿಲ್ಲ ಎಂಬುದನ್ನು ದೃಡಪಡಿಸಿಕೊಳ್ಳುವುದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ೬೩೯10) ಮೇಲಿನಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ದೃಡೀಕರಿಸಿ ಕ್ರಮವಹಿಸಿದ ನಂತರದ ದಿನಾಂಕದಿಂದ ವೇತನಾನುದಾನ ಜಾರಿಗೊಳಿಸುವುದು.
ಯಾವುದೇ ಕಾರಣಕ್ಕೂ ಅನುದಾನರಹಿತ ಹಿಂದಿನ ಸೇವಾವಧಿಯನ್ನು ರಜೆ, ಪಿಂಚಣಿಗೆ ಪರಿಗಣಿಸಬಾರದು.
11) ಸದರಿ ಕಾಲೇಜಿನ ಬೋಧಕೇತರ ಸಿಬ್ಬಂದಿಯನ್ನು ವೇತನಾನುದಾನಕ್ಕೆ ಒಳಪಡಿಸಿ ತಗಲುವ ವೆಚ್ಚವನ್ನು ಕಾಲೇಜು ಶಿಕ್ಷಣ ಇಲಾಖೆಗೆ ಒದಗಿಸಿದ ಯೋಜನಾ ಅನುದಾನದ ಮಿತಿಯಲ್ಲಿಯೇ ಭರಿಸಬೇಕು.
12) ಸಿಬ್ಬಂದಿಯ ಸೇವಾ ಭದ್ರತೆಯನ್ನು ಒದಗಿಸುವ ಬಗ್ಗೆ ಹೆಚ್.ಆರ್.ಎಂ.ಎಸ್ ನಲ್ಲಿ ಅಳವಡಿಸಬೇಕು.
13) ಆರ್ಥಿಕ / ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಎಲ್ಲಾ ಷರತ್ತುಗಳು/ನಿಯಮಗಳು/ ಅನುದಾನ ಸಂಹಿತೆಯಲ್ಲಿ ನಿಗದಿಪಡಿಸಿರುವ ಷರತ್ತುಗಳನ್ನು ಪಾಲಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.
14) The Karnataka Educational Institutions (Recruitment terms and conditions etc.,) Rules 1999 ಅನುಬಂಧ-II ರಲ್ಲಿ benefits not available for service rendered during the un-aided period for purpose of fixation of pay, leave and pension or any other service benefits by the Government. ಈ ನಿಯಮಗಳನ್ವಯ ಅನುದಾನರಹಿತ ಅವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಪಿಂಚಣಿ, ವೇತನ ಬಾಕಿ ಅಥವಾ ಇನ್ನಾವುದೇ ಸೇವಾ ಸೌಲಭ್ಯಗಳಿಗೆ ಪರಿಗಣಿಸಲಾಗುವುದಿಲ್ಲ ಎಂಬ ಷರತ್ತಿಗೆ ಬದ್ಧನಾಗಿರುತ್ತೇನೆಂದು ವೇತನಾನುದಾನಕ್ಕೆ ಒಳಪಡುವ ಬೋಧಕ ನೌಕರರಿಂದ `.100/-ರ ಸ್ಟಾಂಪ್ ಪೇಪರ್ನಲ್ಲಿ ಮುಚ್ಚಳಿಕೆ ಪತ್ರವನ್ನು ಕಾಲೇಜು ಶಿಕ್ಷಣ ಇಲಾಖೆಯು ಬರೆಸಿಕೊಂಡು ನಂತರವೇ ವೇತನಾನುದಾನ ಬಿಡುಗಡೆ ಮಾಡಲು ಕ್ರಮವಹಿಸಬೇಕು.
15) ಒಂದು ವೇಳೆ ಈ ಆದೇಶದಲ್ಲಿ ವೇತನಾನುದಾನಕ್ಕೆ ಒಳಪಟ್ಟ ಯಾವುದೇ ಬೋಧಕೇತರರುಗಳ ಪೈಕಿ ನಿಯಮಾನುಸಾರ ಯಾವುದೇ ಅನರ್ಹತೆ ಕಂಡು ಬಂದಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ, ವೇತನಾನುದಾನವನ್ನು ಹಿಂಪಡೆಯುವ ಷರತ್ತಿಗೊಳಪಟ್ಟಿದೆ.
16) ವೇತನಾನುದಾನದ ವ್ಯಾಪ್ತಿಗೆ ಒಳಪಟ್ಟಂತಹ ಮೇಲ್ಕಂಡ ಬೋಧಕೇತರರ ವೇತನವನ್ನು ಕಾಲೇಜು ಶಿಕ್ಷಣ ಇಲಾಖೆಯು ಷರತ್ತುಗಳನ್ನು ಪೂರೈಸಿರುವುದನ್ನು ಖಚಿತಪಡಿಸಿ ಚಾಲನಾದೇಶ ಹೊರಡಿಸಿದ ದಿನಾಂಕದಿಂದ ವೇತನ ಶ್ರೇಣಿಯ ಕನಿಷ್ಠ ಮೂಲ ವೇತನವನ್ನು ನಿಗದಿಪಡಿಸಬೇಕು.
17) ಇನ್ನು ಮುಂದೆ ಭವಿಷ್ಯಾನುಸಾರ ಭರ್ತಿ ಮಾಡಬೇಕಾಗಿರುವ ಹುದ್ದೆಗಳಿಗೆ ಸಕ್ಷಮ ಅಧಿಕಾರಿಯಿಂದ ಪೂರ್ವಾನುಮತಿ ಪಡೆಯದೇ ಮಾಡತಕ್ಕದ್ದಲ್ಲ.
18) ನೇರ ನೇಮಕಾತಿ, ಬಡ್ತಿ ಮತ್ತು ವಿದ್ಯಾರ್ಥಿಗಳ ಪ್ರವೇಶದ ವಿಷಯದಲ್ಲಿ ಕಾಲಕಾಲಕ್ಕೆ ಹೊರಡಿಸುವ ಸರ್ಕಾರದ ನಿಯಮಗಳು/ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
19) ಸದರಿ ಕಾಲೇಜಿನಲ್ಲಿ ಇನ್ನು ಮುಂದೆ ನೌಕರರ ರಾಜೀನಾಮೆ, ನಿವೃತ್ತಿ ಮತ್ತು ನಿಧನದಿಂದ ತೆರವಾದ ಬೋಧಕ/ಬೋಧಕೇತರ ಹುದ್ದೆಗಳನ್ನು ತುಂಬುವಾಗ ಸರ್ಕಾರದ ಪೂರ್ವಾನುಮತಿ ಪಡೆಯುವುದು ಮತ್ತು ಸರ್ಕಾರದ ಮೀಸಲಾತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
20) ಅನುಮೋದಿತ ಹುದ್ದೆಗಳಿಗೆ ವೇತನಾನುದಾನ ಬಿಡುಗಡೆ ಮಾಡುವ ಮುನ್ನ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ, ವಿದ್ಯಾರ್ಹತೆ ಮತ್ತಿತರ ಷರತ್ತುಗಳನ್ನು ಪೂರೈಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
21) ಸದರಿ ಕಾಲೇಜಿನಲ್ಲಿ ವೇತನಾನುದಾನಕ್ಕೆ ಒಳಪಡಿಸಲಾಗಿರುವಂತಹ ಬೋಧಕೇತರರ ವೇತನವನ್ನು ಪ್ರಥಮ 5 ವರ್ಷಗಳ ಅವಧಿಗೆ ಇಲಾಖೆಗೆ ನಿಗದಿಪಡಿಸಲಾದ ಯೋಜನೆ ಹಂಚಿಕೆಯಲ್ಲಿಯೇ ವೆಚ್ಚ ಭರಿಸಬೇಕು.
22) ಆಡಳಿತ ಮಂಡಳಿಯವರು ಒಪ್ಪಂದದಲ್ಲಿನ ಹಾಗೂ ಮೇಲೆ ಹೇಳಲಾದ ಎಲ್ಲಾ ಅಥವಾ ಯಾವುದೇ ಒಂದು ಷರತ್ತು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದರೆ ಅಥವಾ ತಪ್ಪು ಲೆಕ್ಕ ಪತ್ರಗಳನ್ನು ಅಥವಾ ತಪ್ಪು ದಾಖಲೆಗಳನ್ನು ಒದಗಿಸಿದರೆ ಅಥವಾ ತಪ್ಪು ಮಾಹಿತಿಗಳನ್ನು ನೀಡಿದರೆ ಅಥವಾ ಯಾವುದೇ ಮೋಸ ಎಸಗಿರುವುದು ಕಂಡು ಬಂದಲ್ಲಿ ಸರ್ಕಾರವು ಆಡಳಿತ ಮಂಡಳಿಗೆ ಅಥವಾ ಸಿಬ್ಬಂದಿಗೆ ಈ ಕರಾರಿನ ಮೇರೆಗೆ ಈಗಾಗಲೇ ನೀಡಲಾದ ಪೂರ್ಣ ಅಥವಾ ಭಾಗಶಃ ಅನುದಾನವನ್ನು ಮುಂದುವರೆಸದಿರುವ ಅಥವಾ ತಡೆಹಿಡಿಯುವ ಹಾಗೂ ಈ ಕರಾರಿನ ಮೇರೆಗೆ ಸರ್ಕಾರಕ್ಕೆ ಬಾಕಿ ಎಂದು ಕಂಡು ಬಂದ ಮೊಬಲಗನ್ನು ಆಡಳಿತ ಮಂಡಳಿಯಿಂದ ವಸೂಲು ಮಾಡುವ ಅಧಿಕಾರವನ್ನು ಹೊಂದಿರುತ್ತದೆ.
23) ಆಡಳಿತ ಮಂಡಳಿಯು ಈ ಆದೇಶದ ಪ್ರಕಾರ (Document Sheet) ದಲ್ಲಿ ನೋಟರಿಯವರ ಮುಂದೆ ಪ್ರಮಾಣೀಕರಿಸಿದ ಕರಾರು ಪತ್ರವನ್ನು ನೀಡತಕ್ಕದ್ದು. ಈ ಕರಾರು ಪತ್ರವನ್ನು ನೀಡಿದ ನಂತರವೇ ಅನುದಾನ ಪಾವತಿ ಮಾಡಲು ಕ್ರಮ ತೆಗೆದುಕೊಳ್ಳಬೇಕು.
24) ಈ ಮೇಲ್ಕಂಡ ಷರತ್ತುಗಳನ್ನು ಪೂರೈಸಿರುವ ಕುರಿತು ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ರವರು ಖಚಿತಪಡಿಸಿಕೊಂಡ ನಂತರವೇ ಆಯಾ ವರ್ಷದ ವೇತನಾನುದಾನ ಮತ್ತು ಸದರಿ ಬೋಧಕೇತರ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡತಕ್ಕದ್ದು. ನ್ಯೂನತೆಗಳು ಕಂಡು ಬಂದಲ್ಲಿ ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆರವರು ಜವಾಬ್ದಾರರಾಗಿರುತ್ತಾರೆ.
೬೪೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ಭಾಗ ೧ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 238 ವೆಚ್ಚ-8/2014, ದಿನಾಂಕ: 01-03-2014ರಲ್ಲಿ ನೀಡಿರುವ ಷರತ್ತು ಹಾಗೂ ಸಹಮತಿಯನ್ವಯ ಹೊರಡಿಸಲಾಗಿದೆ.
PR-291
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಕೆ. ಶಿವಲಿಂಗಯ್ಯ
ಸರ್ಕಾರದ ಅಧೀನ ಕಾರ್ಯದರ್ಶಿ
ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ)
ಶಿಕ್ಷಣ ಸಚಿವಾಲಯ
ವಿಷಯ: ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಆಡಳಿತ ಮಂಡಳಿಯವರು ನಡೆಸುತ್ತಿರುವ ಹೆಬ್ಬೂರು ಮಹಾವಿದ್ಯಾಲಯ ಕಲಾ ಮತ್ತು ವಾಣಿಜ್ಯ ಕಾಲೇಜು, ಭದ್ರಾವತಿ, ಈ ಕಾಲೇಜನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ.
ಓದಲಾಗಿದೆ: 1) ಸರ್ಕಾರಿ ಅಧಿಸೂಚನೆ ಸಂಖ್ಯೆ: ಇಡಿ 551 ಯುಪಿಸಿ 99, ದಿನಾಂಕ: 07-08-2003.
2) ಸರ್ಕಾರಿ ಅಧಿಸೂಚನೆ ಸಂಖ್ಯೆ: ಇಡಿ 30 ಯುಪಿಸಿ 2008, ದಿನಾಂಕ: 13-05-2009 &
05-10-2009
3) ಕಾಲೇಜು ಶಿಕ್ಷಣ ಆಯುಕ್ತರ ಪತ್ರ ಸಂಖ್ಯೆ:ಕಾಶಿಇ/64/ಪಜಾ.ಪಪಂ/ಶಿವಿ/ವೇಅನು/2013-14/ನೇಪಾವಿ-2, ದಿನಾಂಕ: 03.09.2016
4) ಸರ್ಕಾರಿ ಆದೇಶ ಸಂಖ್ಯೆ: ಇಡಿ 112 ಯುಪಿಸಿ 2015, ದಿನಾಂಕ: 20/02/2017.
5) ಪ್ರಾದೇಶಿಕ ಜಂಟಿ ನಿರ್ದೇಶಕರ ಪತ್ರ ಸಂಖ್ಯೆ: ಪ್ರಾಕಾಶಿ:ಕಾಶಿಇ:108: ವೇಅ:2012-13,
ದಿನಾಂಕ: 18/05/2016 ಮತ್ತು 31/01/2019.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಸರ್ಕಾರಿ ಅಧಿಸೂಚನೆಯನ್ವಯ ರಚಿಸಲಾದ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಕಾಲೇಜು ಶಿಕ್ಷಣ) ನಿಯಮಗಳು 2003ರ ನಿಯಮ 8(1)ರನ್ವಯ ದಿನಾಂಕ: 01-06-1987ರ ನಂತರ ಪ್ರಾರಂಭಿಸಲಾದ ಯಾವುದೇ ಖಾಸಗಿ ಪದವಿ ಕಾಲೇಜುಗಳು ಮತ್ತು ವಿಷಯಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಲು ಅವಕಾಶವಿರುವುದಿಲ್ಲ.
ರಾಜ್ಯದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಆಡಳಿತ ಮಂಡಳಿಗಳು ದಿನಾಂಕ: 01-06-1987 ರಿಂದ ದಿನಾಂಕ: 31-03-1995ರ ಅವಧಿಯಲ್ಲಿ ಪ್ರಾರಂಭಿಸಿ ಸತತವಾಗಿ ನಡೆಸಲಾಗುತ್ತಿರುವ ಕಾಲೇಜುಗಳು ಮತ್ತು ಕೋರ್ಸ್ಗಳನ್ನು ವೇತನಾನುದಾನಕ್ಕೆ ಒಳಪಡಿಸಲು ಸರ್ಕಾರ ತೀರ್ಮಾನಿಸಿ ಈ ಕುರಿತು ನಿಯಮಗಳನ್ನು ರಚಿಸಲು ದಿನಾಂಕ: 18-02-2009ರಂದು ಜರುಗಿದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಆಡಳಿತ ಮಂಡಳಿಯಿಂದ ನಡೆಸಲ್ಪಡುತ್ತಿರುವ ಖಾಸಗಿ ಪದವಿ ಕಾಲೇಜುಗಳಿಗೆ ಸಂಬಂಧಿಸಿದಂತೆ ಮಾತ್ರ ಮೇಲೆ ಹೇಳಿದ ನಿಯಮ 8ಕ್ಕೆ ಸೂಕ್ತ ಸೇರ್ಪಡೆ ಮಾಡಿ ದಿನಾಂಕ: 01-06-1987 ರಿಂದ 31-03-1995ರ ಅವಧಿಯಲ್ಲಿ ಪ್ರಾರಂಭಿಸಲ್ಪಟ್ಟ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರು ನಡೆಸುತ್ತಿರುವ ಪ್ರಥಮ ದರ್ಜೆ ಕಾಲೇಜುಗಳನ್ನು ವೇತನಾನುದಾನಕ್ಕೊಳಪಡಿಸಲು ಓದಲಾದ (2)ರ ದಿನಾಂಕ: 13-05-2009ರ ಅಧಿಸೂಚನೆಯಲ್ಲಿ ಸೂಕ್ತ ತಿದ್ದುಪಡಿ ಮಾಡಿ ಅವಕಾಶ ಕಲ್ಪಿಸಲಾಗಿದೆ. ಅದರಂತೆ ದಿನಾಂಕ: 05-10-2009 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಡಳಿತ ಮಂಡಳಿಗಳಿಗೆ ಸೇರಿದ ಶಿಕ್ಷಣ ಸಂಸ್ಥೆಗಳ ವತಿಯಿಂದ ದಿನಾಂಕ: 01-06-1987 ರಿಂದ 31-03-1995ರ ಅವಧಿಯಲ್ಲಿ ಪ್ರಾರಂಭಿಸಿ ಕೆಲವು ಮಾನದಂಡಗಳನ್ನು ನಿಗಧಿಪಡಿಸಿ ವೇತನಾನುದಾನಕ್ಕೆ ಒಳಪಡಿಸಲು ಆದೇಶ ಹೊರಡಿಸಲಾಗಿದೆ. ಉಲ್ಲೇಖ (3)ರ ಪ್ರಸ್ತಾವನೆಯಲ್ಲಿ ಕಾಲೇಜು ಶಿಕ್ಷಣ ಆಯುಕ್ತರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಆಡಳಿತ ಮಂಡಳಿಯವರು ನಡೆಸುತ್ತಿರುವ ಹೆಬ್ಬೂರು ಮಹಾವಿದ್ಯಾಲಯ ಕಲಾ ಮತ್ತು ವಾಣಿಜ್ಯ ಕಾಲೇಜು, ಭದ್ರಾವತಿ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬೋಧಕರು ಹಾಗೂ ಬೋಧಕೇತರ ನೌಕರರುಗಳಲ್ಲಿ ನಿಯಮಾನುಸಾರ ಅರ್ಹರಿರುವ ಬೋಧಕರು ಹಾಗೂ ಬೋಧಕೇತರ ನೌಕರರನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿ, ಅರ್ಹ ಹಾಗೂ ಅರ್ಹರಲ್ಲದ ನೌಕರರ ಮಾಹಿತಿಯನ್ನು ನೀಡಿರುತ್ತಾರೆ.
ಮೇಲೆ ಓದಲಾದ (4)ರ ಸರ್ಕಾರಿ ಆದೇಶದಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಆಡಳಿತ ಮಂಡಳಿಯವರು ನಡೆಸುತ್ತಿರುವ ಹೆಬ್ಬೂರು ಮಹಾವಿದ್ಯಾಲಯ ಕಲಾ ಮತ್ತು ವಾಣಿಜ್ಯ ಕಾಲೇಜನ್ನು ಹಾಗೂ ಸದರಿ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅರ್ಹ 04 ಬೋಧಕರು ಹಾಗೂ 04 ಬೋಧಕೇತರರನ್ನು ಷರತ್ತುಗಳನ್ನು ವಿಧಿಸಿ ವೇತನಾನುದಾನಕ್ಕೆ ಒಳಪಡಿಸಲಾಗಿದೆ.
ಮೇಲೆ ಓದಲಾದ (5)ರ ಪತ್ರಗಳಲ್ಲಿ ಸದರಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ. ಪಾಲಾಕ್ಷ ಕೆ.ಆರ್ ಇವರ ಹುದ್ದೆಯನ್ನು ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ಮಾಹಿತಿ ನೀಡಿರುತ್ತಾರೆ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ೬೪೧ಮೇಲ್ಕಂಡಂತೆ ಪ್ರಸ್ತಾವನೆಯನ್ನು ಪರಿಶೀಲಿಸಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಆಡಳಿತ ಮಂಡಳಿಯವರು ನಡೆಸುತ್ತಿರುವ ಹೆಬ್ಬೂರು ಮಹಾವಿದ್ಯಾಲಯ ಕಲಾ ಮತ್ತು ವಾಣಿಜ್ಯ ಕಾಲೇಜು, ಭದ್ರಾವತಿ, ಈ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀ. ಪಾಲಾಕ್ಷ ಕೆ.ಆರ್., ಇವರ ಹುದ್ದೆಯನ್ನು ವೇತನಾನುದಾನದ ವ್ಯಾಪ್ತಿಗೆ ಒಳಪಡಲು ಸರ್ಕಾರ ತೀರ್ಮಾನಿಸಿದೆ.
ಅದರಂತೆ, ಈ ಕೆಳಕಂಡಂತೆ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಇಡಿ 112 ಯುಪಿಸಿ 2015, ಬೆಂಗಳೂರು, ದಿನಾಂಕ: 17ನೇ ಜುಲೈ 2019
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಆಡಳಿತ ಮಂಡಳಿಯವರು ನಡೆಸುತ್ತಿರುವ ಹೆಬ್ಬೂರು ಮಹಾವಿದ್ಯಾಲಯ ಕಲಾ ಮತ್ತು ವಾಣಿಜ್ಯ ಕಾಲೇಜು, ಭದ್ರಾವತಿ, ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಕಂಡ ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ಈ ಆದೇಶ ಹೊರಡಿಸಿದ ದಿನಾಂಕದಿಂದ ಜಾರಿಗೆ ಬರುವಂತೆ ಆರ್ಥಿಕ ಸೌಲಭ್ಯದೊಂದಿಗೆ ವೇತನಾನುದಾನದ ವ್ಯಾಪ್ತಿಗೆ ತರಲಾಗಿದೆ.
| ಕ್ರ. ಸಂ. | ವ ೕತನಾನುದಾನಕ್ಕೆ ಒಳಪಡಿಸಿದ ಬೋಧಕರ ೆ ಹ ಸ ೆ ರು | ವ ೕತನಾನುದಾನಕ್ಕೆ ಒಳಪಡಿಸಿದ ಹುದ್ದೆ ೆ ವಿಷಯ |
| 1 | ಪಾಲಾಕ್ಷ ಕೆ.ಆರ್., | ಕನ್ನಡ ಸಹಾಯಕ ಪ್ರಾಧ್ಯಾಪಕರು |
ಷರತ್ತುಗಳು:
1. ಸದರಿ ಬೋಧಕರ ಹುದ್ದೆಯು ಅನುದಾನ ಸಂಹಿತೆ ಹಾಗೂ ನಿಗಧಿತ ಸಿಬ್ಬಂದಿ ಮಾದರಿ ಪ್ರಕಾರ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ಬೋಧಕರ ಹುದ್ದೆಯ ವಿದ್ಯಾರ್ಹತೆಯು ನಿಯಮಾನುಸಾರ ಇರುವುದನ್ನು ಖಚಿತಪಡಿಸಿಕೊಳ್ಳಬೇಕು.
2. ಒಂದು ವೇಳೆ ಅನುದಾನರಹಿತವಾಗಿ ಪೂರ್ವಾನುಮತಿ ಪಡೆಯದಿದ್ದರೆ ಈಗ ಸದರಿ ಹುದ್ದೆ ನೇಮಕಾತಿ ಬಗ್ಗೆ ಅಂದರೆ ಅನುದಾನ ಸಂಹಿತೆ ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ವಿದ್ಯಾರ್ಹತೆ ವಯೋಮಿತಿ ಹಾಗೂ ನೇಮಕಾತಿ ನಿಯಮಗಳನ್ನು ಪಾಲಿಸಿದ ಬಗ್ಗೆ ದೃಡೀಕರಿಸಿ ಅನುದಾನರಹಿತವಾಗಿ ಅನುಮೋದಿಸಿರಬೇಕು. ನಂತರವೇ ಕಾಲೇಜಿನಿಂದ ನೇಮಕ ಮಾಡಿರುವ ಅಭ್ಯರ್ಥಿಯ ನೇಮಕಾತಿಗೆ ವೇತನಾನುದಾನ ಸಹಿತ ಅನುಮೋದನೆ ನೀಡಬೇಕು.
3. ಸದರಿ ಕನ್ನಡ ಸಹಾಯಕ ಪ್ರಾಧ್ಯಾಪಕ/ಉಪನ್ಯಾಸಕರಿಗೆ ನಿಗಧಿತ/ಸಾಕಷ್ಟು ಬೋಧನಾ ಕಾರ್ಯಭಾರ ಇಲ್ಲದಿದ್ದಲ್ಲಿ, ಸರ್ಕಾರಿ ಆದೇಶ ಸಂಖ್ಯೆ: ಇಡಿ 76 ಟಿಪಿಯು 2012, ದಿನಾಂಕ: 23/01/2017ರಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಹೊರಡಿಸಿರುವ ಸುತ್ತೋಲೆಯಲ್ಲಿನ ಷರತ್ತು (i) ಮತ್ತು (ii) ರಲ್ಲಿ ತಿಳಿಸಿರುವಂತೆ ಕೊರತೆ ಇರುವ ಕಾರ್ಯಭಾರವನ್ನು ಇತರೆ ಅನುದಾನಿತ ಪದವಿ ಕಾಲೇಜಿನಲ್ಲಿ ಕಡ್ಡಾಯವಾಗಿ ನಿರ್ವಹಿಸುವುದು ಹಾಗೂ ಕೊರತೆ ಕಾರ್ಯಭಾರವನ್ನು ಸರಿದೂಗಿಸುವ ಸಂಬಂಧ ಶಿವಮೊಗ್ಗದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಮಹಿಳಾ ಕಾಲೇಜಿನ ಆಡಳಿತ ಮಂಡಳಿಯಿಂದ ಸದರಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುವವರೆಗೆ ಅನುದಾನಿತ ಕನ್ನಡ ಉಪನ್ಯಾಸಕರ ಹುದ್ದೆಯನ್ನು ತುಂಬಿಕೊಳ್ಳುವುದಿಲ್ಲವೆಂದು ಠರಾವು ಸಮ್ಮತಿ ಸೂಚಕ ಪತ್ರ / ಮುಚ್ಚಳಿಕೆ ಪತ್ರವನ್ನು ನೀಡಿರುವುದರಿಂದ ನಿಯಮಾನುಸಾರ ವೇತನಾನುದಾನ ಬಿಡುಗಡೆ ಮಾಡತಕ್ಕದ್ದು.
4. ಈ ಕಾಲೇಜಿಗೆ ಸಂಬಂಧಿಸಿದಂತೆ ನೇಮಕವಾಗಿರುವ ಬೋಧಕ ಹುದ್ದೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವುದೇ ವಿವಾದ ಇರುವುದಿಲ್ಲ ಎಂಬುದನ್ನು ದೃಡಪಡಿಸಿಕೊಳ್ಳಬೇಕು.
5. ಮೇಲಿನಂತೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ದೃಡೀಕರಿಸಿ ಕ್ರಮವಹಿಸಿದ ನಂತರ ವೇತನಾನುದಾನ ಜಾರಿಗೊಳಿಸುವುದು. ಯಾವುದೇ ಕಾರಣಕ್ಕೂ ಹಿಂದಿನ ಸೇವಾವಧಿಯನ್ನು ರಜೆ, ಪಿಂಚಣಿಗೆ ಪರಿಗಣಿಸಬಾರದು.
6. ಈ ಬೋಧಕ ಸಿಬ್ಬಂದಿಯನ್ನು ವೇತನಾನುದಾನಕ್ಕೆ ಒಳಪಡಿಸಿ ತಗಲುವ ವೆಚ್ಚವನ್ನು ಇಲಾಖೆಗೆ ಒದಗಿಸಿದ ಯೋಜನಾ ಅನುದಾನದ ಮಿತಿಯಲ್ಲಿಯೇ ಭರಿಸಬೇಕು.
7. ಸಿಬ್ಬಂದಿಯ ಸೇವಾ ಭದ್ರತೆಯನ್ನು ಒದಗಿಸುವ ಬಗ್ಗೆ ಹೆಚ್.ಆರ್.ಎಂ.ಎಸ್ ನಲ್ಲಿ ಅಳವಡಿಸಬೇಕು.
8. ಆರ್ಥಿಕ / ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಎಲ್ಲಾ ಷರತ್ತುಗಳು/ನಿಯಮಗಳು/ ಅನುದಾನ ಸಂಹಿತೆಯಲ್ಲಿ ನಿಗದಿಪಡಿಸಿರುವ ಷರತ್ತುಗಳನ್ನು ಪಾಲಿಸಿರುವುದನ್ನು ಖಚಿತಪಡಿಸಿಕೊಳ್ಳಬೇಕು.
9. The Karnataka Educational Institutions (Recruitment terms and conditions etc.,) Rules 1999 ಅನುಬಂಧ-II ರಲ್ಲಿ benefits not available for service rendered during the un-aided period for purpose of fixation of pay, leave and pension or any other service benefits by the Government. ಈ ನಿಯಮಗಳನ್ವಯ ಉಪನ್ಯಾಸಕರು ಅನುದಾನರಹಿತ ಅವಧಿಯಲ್ಲಿ ಸಲ್ಲಿಸಿದ ಸೇವೆಯನ್ನು ಯಾವುದೇ ಸೇವಾ ಸೌಲಭ್ಯಗಳಿಗೆ ಪರಿಗಣಿಸಲಾಗುವುದಿಲ್ಲ ಎಂಬ ಷರತ್ತಿಗೆ ಬದ್ಧನಾಗಿರುತ್ತೇನೆಂದು ವೇತನಾನುದಾನಕ್ಕೆ ಒಳಪಡುವ ಬೋಧಕ ಮತ್ತು ಬೋಧಕೇತರ ನೌಕರರಿಂದ `.50/-ರ ಸ್ಟಾಂಪ್ ಪೇಪರ್ನಲ್ಲಿ ಮುಚ್ಚಳಿಕೆ ಪತ್ರವನ್ನು ಸಂಬಂಧಿಸಿದ ಸಕ್ಷಮ ಪ್ರಾಧಿಕಾರವು ಬರೆಸಿಕೊಂಡು ನಂತರವೇ ವೇತನಾನುದಾನಕ್ಕೆ ಒಳಪಡಿಸುವ ಬಗ್ಗೆ ಕ್ರಮವಹಿಸಲು ಆದೇಶಿಸಬೇಕು.
೬೪೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ಭಾಗ ೧10. ಒಂದು ವೇಳೆ ಈ ಆದೇಶದಲ್ಲಿ ವೇತನಾನುದಾನಕ್ಕೆ ಒಳಪಟ್ಟ ಬೋಧಕರ ಪೈಕಿ ಯಾವುದೇ ಅನರ್ಹತೆ ಕಂಡು ಬಂದಲ್ಲಿ ಯಾವುದೇ ಮುನ್ಸೂಚನೆಯಿಲ್ಲದೆ, ವೇತನಾನುದಾನವನ್ನು ಹಿಂಪಡೆಯುವ ಷರತ್ತಿಗೊಳಪಟ್ಟಿದೆ.
11. ವೇತನಾನುದಾನ ವ್ಯಾಪ್ತಿಗೆ ತರಲಾದ ಬೋಧಕರ ಕಾರ್ಯಭಾರದಲ್ಲಿ ಕೊರತೆ ಉದ್ಭವಿಸಿದ ಪಕ್ಷದಲ್ಲಿ ಅವರನ್ನು ಕಾರ್ಯಭಾರ ಇರುವಂತಹ ಅನುದಾನಿತ ಕಾಲೇಜು/ಸರ್ಕಾರಿ ಕಾಲೇಜುಗಳ ಕಾರ್ಯಭಾರದ ಎದುರಾಗಿ ನಿಯೋಜನೆ ಮೇಲೆ ಮರು ಹಂಚಿಕೆ ಮಾಡುವ ಷರತ್ತಿಗೊಳಪಟ್ಟಿದೆ.
12. ಇನ್ನು ಮುಂದೆ ಭವಿಷ್ಯಾನುಸಾರ ಭರ್ತಿ ಮಾಡಬೇಕಾಗಿರುವ ಹುದ್ದೆಗಳಿಗೆ ಸಕ್ಷಮ ಅಧಿಕಾರಿಯಿಂದ ಪೂರ್ವಾನುಮತಿ ಪಡೆಯದೇ ಮಾಡತಕ್ಕದ್ದಲ್ಲ.
13. ವೇತನಾನುದಾನದ ವ್ಯಾಪ್ತಿಗೆ ಒಳಪಟ್ಟಂತಹ ಮೇಲ್ಕಂಡ ಉಪನ್ಯಾಸಕರ ವೇತನವನ್ನು ಆದೇಶ ಹೊರಡಿಸಿದ ದಿನಾಂಕದಿಂದ ಯು.ಜಿ.ಸಿ. ವೇತನ ಶ್ರೇಣಿಯ ಕನಿಷ್ಠ ಮೂಲ ವೇತನದಲ್ಲಿ ನಿಗಧಿಪಡಿಸತಕ್ಕದ್ದು.
14. ಸದರಿ ಕಾಲೇಜಿನಲ್ಲಿ ವೇತನಾನುದಾನಕ್ಕೆ ಒಳಪಡಿಸಲಾಗಿರುವಂತಹ ಬೋಧಕರ ವೇತನವನ್ನು ಪ್ರಥಮ 5 ವರ್ಷಗಳ ಅವಧಿಗೆ ಇಲಾಖೆಗೆ ನಿಗದಿಪಡಿಸಲಾದ ಯೋಜನೆ ಹಂಚಿಕೆಯಲ್ಲಿಯೇ ವೆಚ್ಚ ಭರಿಸಬೇಕು.
15. ಈ ಮೇಲ್ಕಂಡ ಷರತ್ತುಗಳನ್ನು ಪೂರೈಸಿರುವ ಕುರಿತು ಆಯುಕ್ತರು, ಕಾಲೇಜು ಶಿಕ್ಷಣ ಇಲಾಖೆ ರವರು ಸಂಬಂಧಪಟ್ಟ ಜಂಟಿ ನಿರ್ದೇಶಕರಿಂದ ವರದಿ ಪಡೆದು, ದೃಡೀಕರಿಸಿದ ನಂತರವೇ ಆಯಾ ವರ್ಷದ ವೇತನಾನುದಾನ ಮತ್ತು ಸದರಿ ಬೋಧಕ / ಬೋಧಕೇತರ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡತಕ್ಕದ್ದು. ನ್ಯೂನತೆಗಳು ಕಂಡು ಬಂದಲ್ಲಿ ಆಯುಕ್ತರು ಮತ್ತು ಸಂಬಂಧಪಟ್ಟ ಪ್ರಾದೇಶಿಕ ಜಂಟಿ ನಿರ್ದೇಶಕರು, ಕಾಲೇಜು ಶಿಕ್ಷಣ ಇಲಾಖೆ ರವರು ಜವಾಬ್ದಾರರಾಗಿರುತ್ತಾರೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 706 ವೆಚ್ಚ-8/2018, ದಿನಾಂಕ: 27-10-2018 ರ ಸಹಮತಿಯನ್ವಯ, ಇನ್ನಿತರ ನಿಯಮಗಳು ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಕಾಲೇಜು ಶಿಕ್ಷಣ) ನಿಯಮಗಳು 2003 ರನ್ವಯ ಹೊರಡಿಸಲಾಗಿದೆ.
PR-292
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಶಿವಲಿಂಗಯ್ಯ
SC-100
ಸರ್ಕಾರದ ಅಧೀನ ಕಾರ್ಯದರ್ಶಿ,
ಶಿಕ್ಷಣ ಇಲಾಖೆ (ಕಾಲೇಜು ಶಿಕ್ಷಣ) FOREST, ECOLOGY AND ENVIRONMENT SECRETARIAT
Sub : Renewal of lease for 0.98 hectare of forest land in F.Sy.No. 70A of Sirsi village diverted for burial ground and other facilities in favour of Vidya Nagar Rudrabhoomi Development Samiti - Reg.
Read: 1. Letter No A5(2)GFL/CR-09/2013-14, Dated:15-09-2017 of the Principal Chief Conservator of Forests (Head of Forest Force), Bengaluru.
2. Letter No. FEE 95 FLL 2017, Dated: 31-10-2017 of the Government of Karnataka.
3. Letter No. FCA/11.2/207/KAR/MISC/1143, Dated: 29-11-2017of the Ministry of Environment, Forests and Climate Change, Government of India.
4. Letter No.A5(2)GFL/CR-09/2013-14, Dated: 01-01-2019 of the Additional Principal Chief Conservator of Forests (Forest Conservation) and Nodal Office (FCA) Bengaluru.
5. Letter No. FEE 95 FLL 2017, Dated: 22-02-2019 of the Government of Karnataka.
6. Letter No. FCA/11.2/207/KAR/MISC/390, Dated: 07-06-2019 of the Ministry of Environment, Forests and Climate Change, Government of India.
Preamble:
The Principal Chief Conservator of Forests (Head of Forest Force), Bengaluru vide letter read at (1) above has submitted the proposal to obtain the approval under Section-2 of the Forest (conservation) Act, 1980 for renewal of lease for 0.98 hectare of forest land in F.Sy.No. 70A of Sirsi village diverted for burial ground and other facilities in favour of Vidya Nagar Rudrabhoomi Development Samiti.
This proposal was sent to the Ministry of Environment, Forests and Climate Change, Government of India vide letter read at (2) above, by the Government of Karnataka with a recommendation to accord Stage-I approval under the Forest (Conservation) Act, 1980.
The Government of India vide its letter read at (3) above has conveyed in-principle approval (Stage-I) for renewal of lease by stipulating certain conditions.
Further, the Additional Principal Chief Conservator of Forests (Forest Conservation) and Nodal Office (FCA) Bengaluru vide his letter read at (4) above has sent proposal with the compliance report to Government of Karnataka, and requested to accord Stage-IIಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ೬೪೩ approval and the same was forwarded to the Ministry of Environment, Forests and Climate Change, Government of India with a recommendation to accord Stage – II approval under Section-2 of the Forest (Conservation), Act-1980 vide letter read at (5) above.
The Ministry of Environment, Forests and Climate Change, Regional Office (Southern Zone), Government of India have accorded Stage-II approval under section 2 of the Forest (Conservation) Act, 1980 vide its letter read at (6) above by imposing certain conditions.
The proposal has been examined in detail and hence the order.
Government Order No.FEE 95 FLL 2017, Bengaluru, Dated: 04-07-2019
In the circumstances as explained in the preamble above, Government is pleased to accord approval (Stage-II) under section 2 of the Forest (Conservation) Act, 1980 for renewal of lease for 0.98 hectare of forest land in F.Sy.No. 70A of Sirsi village diverted for burial ground and other facilities in favour of Vidya Nagar Rudrabhoomi Development Samiti for a period of 20 years w.e.f. 09-01-2012 subject to the following conditions.
1. The legal status of forest land shall remain unchanged.
2. The demarcation of the proposed forest area shall be carried out by erecting 4 feet cement concrete pillars duly numbered at an interval of 20 meters connected with barbed wire fencing at the cost of User Agency.
3. The Additional amount of the Net Present Value (NPV) of the diverted forest land if any, becoming due after revision of the same by the Hon'ble Supreme Court of India in future, shall be charged by the State Government from the User Agency and the same shall be transferred to the designated Adhoc CAMPA Account.
4. The layout plan of the proposal shall not be changed without prior approval of Central Government.
5. The total forest area utilized for the project shall not exceed 0.98 hectares. The Forest land shall be used only for the purpose for which it is diverted.
6. The forest land proposed to be diverted shall under no circumstances be transferred to any other agencies., department or person without prior approval of Government of India.
7. Any other condition that the Ministry of Environment, Forests and Climate may stipulate from time to time in the interest of conservation, protection and development of Forest and Wildlife.
8. Violation of any of these conditions will amount to violation of Forest (Conservation) Act, 1980 and action would be taken as per the MoEF&CC Guideline F.No. 11-42/2017-FC, dated: 29-01-2018.
9. The Principal Chief Conservator of Forests (Head of Forest Force) and user agency shall comply the provisions of the all Acts, Rules, Regulations, Guidelines, NGT order and Hon'ble Court Order (s) pertaining to this project, if any, for the time being in force, as applicable to the project.
PR-262
By Order and in the Name of the Governor of Karnataka SC-100
Archana M.S.
Under Secretary to Government
Forest, Ecology and Environment Department (Forest-C)
ಕಂದಾಯ ಸಚಿವಾಲಯ
ವಿಷಯ : ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು, ಹುತ್ತೂರು ಹೋಬಳಿ, ಹೊಳಲಿ ಗ್ರಾಮದ ಸ.ನಂ.103 ರಲ್ಲಿ 16-00 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಷನ್ ಬೆಂಗಳೂರು ಇವರಿಗೆ ಗುತ್ತಿಗೆ ಆಧಾರದ ಮೇಲೆ ನೀಡಿರುವ ಬಗ್ಗೆ-ಪರಿಷ್ಕøತ ಆದೇಶ.
ಓದಲಾಗಿದೆ: 1) ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ ಇವರ ಪತ್ರ ಸಂಖ್ಯೆ: ಎಲ್ಎನ್ಡಿ/ಸಿಆರ್/137/2016-17 ದಿನಾಂಕ: 15.02.2018.
2) ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ, ಕೋಲಾರ ಇವರ ಪತ್ರ ಸಂಖ್ಯೆ: ಎಲ್ಎನ್ಡಿ:ಸಿಆರ್.104/2016-17 ದಿನಾಂಕ: 25.11.2016.
3) ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 24 ಎಲ್ಜಿಕೆ 2018, ದಿನಾಂಕ: 25/06/2018. 4) ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ, ಕೋಲಾರ ಇವರ ಪತ್ರ ಸಂಖ್ಯೆ: ಎಲ್ಎನ್ಡಿ:ಸಿಆರ್.104/2016-17 ದಿನಾಂಕ: 10/10/2018.
5) ಸರ್ಕಾರದ ತಿದ್ದುಪಡಿ ಆದೇಶ ಸಂಖ್ಯೆ: ಆರ್ಡಿ 265 ಎಲ್ಜಿಬಿ 2018, ದಿನಾಂಕ: 04/06/2019.
೬೪೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ಭಾಗ ೧ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ (1) ರ ದಿನಾಂಕ: 15.02.2018 ರ ಪತ್ರದಲ್ಲಿ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರು ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು, ಹುತ್ತೂರು ಹೋಬಳಿ, ಹೊಳಲಿ ಗ್ರಾಮದ ಸ.ನಂ.103 ರಲ್ಲಿ ವಿಸ್ತೀರ್ಣ 16-00 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಷನ್ ಬೆಂಗಳೂರು ಇವರಿಗೆ ಕ್ರೀಡಾಭಿವೃದ್ಧಿ ದೃಷ್ಟಿಯಿಂದ ಗುತ್ತಿಗೆ ಆಧಾರದ ಮೇಲೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ದಿನಾಂಕ: 25.11.2016ರಂದು ಸಲ್ಲಿಸಿರುವ ಪತ್ರದಲ್ಲಿ ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ ಇವರು ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು, ಹುತ್ತೂರು ಹೋಬಳಿ, ಹೊಳಲಿ ಗ್ರಾಮದ ಸ.ನಂ.103 ರಲ್ಲಿ ಪಹಣಿ ಪತ್ರಿಕೆ ಪ್ರಕಾರ 524-32 ಎಕರೆ/ಗುಂಟೆ ಗೋಮಾಳ ಜಮೀನು ಇರುತ್ತದೆ ಎಂದು ವರದಿ ಮಾಡಿರುತ್ತಾರೆ. ಆ ಪೈಕಿ 20-00 ಎಕರೆ ಜಮೀನು ಖರಾಬು ಆಗಿದ್ದು, 504-32 ಎಕರೆ ಉಳಿಕೆ ಜಮೀನಿನಲ್ಲಿ ವಿವಿಧ ಉದ್ದೇಶಗಳಿಗೆ ಜಮೀನನ್ನು ಮಂಜೂರು ಮಾಡಿದ್ದು, ಉಳಿಕೆ 464-32 ಎಕರೆ/ಗುಂಟೆ ಖಾಲಿ ಜಮೀನಿರುತ್ತದೆ. ಗ್ರಾಮದಲ್ಲಿ ಒಟ್ಟು 396 ಜಾನುವಾರುಗಳಿದ್ದು, ಸದರಿ ಜಾನುವಾರುಗಳಿಗೆ 119-00 ವಿಸ್ತೀರ್ಣವನ್ನು ಕಾಯ್ದಿರಿಸಲಾಗಿದ್ದು, ಜಾನುವಾರುಗಳಿಗೆ ಗೋಮಾಳ ಜಮೀನಿನ ಕೊರತೆ ಇರುವುದಿಲ್ಲವೆಂದು ವರದಿ ಮಾಡಿರುತ್ತಾರೆ.
ಮುಂದುವರೆದು, ತಹಶೀಲ್ದಾರ್, ಕೋಲಾರ ತಾಲ್ಲೂಕು ಇವರು ಸಲ್ಲಿಸಿರುವ ಸ್ಥಳ ತನಿಖಾ ವರದಿಯಲ್ಲಿ ಕೋಲಾರ ತಾಲ್ಲೂಕಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಷನ್, ಬೆಂಗಳೂರು ಇವರು ಗುತ್ತಿಗೆ ಆಧಾರದ ಮೇಲೆ ನೀಡುವಂತೆ ಕೋರಿರುವ ಜಮೀನು ಅನಧಿಕೃತ ಸಾಗುವಳಿಯಿಂದ ಮುಕ್ತವಾಗಿರುವುದಾಗಿ, ಯಾವುದೇ ವ್ಯಕ್ತಿ ಸಂಘ ಸಂಸ್ಥೆಗೆ ಈ ಜಮೀನನ್ನು ಮಂಜೂರು ಮಾಡಿರುವುದಿಲ್ಲ, ಜಮೀನಿನ ಅಕ್ಕಪಕ್ಕದಲ್ಲಿ ರೈಲ್ವೆ ಸಂಪರ್ಕ ರಸ್ತೆ ಹಾದು ಹೋಗಿರುವುದಿಲ್ಲ, ಈ ಜಮೀನಿನ ಬಗ್ಗೆ ಯಾವುದೇ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದಿಲ್ಲವೆಂದು, ಗ್ರಾಮಸ್ಥರ ತಂಟೆ ತಕರಾರು ಇರುವುದಿಲ್ಲವೆಂದು ವರದಿ ಮಾಡಿರುತ್ತಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಷನ್, ಬೆಂಗಳೂರು ಇದು ಒಂದು ನೋಂದಾಯಿತ ಸಂಸ್ಥೆಯಾಗಿದ್ದು, ನಿಯಮಾನುಸಾರ 5 ವರ್ಷಗಳ ಆಡಿಟ್ ವರದಿಗಳನ್ನು ಸಲ್ಲಿಸಿದೆ. ರಾಜ್ಯದ ಕ್ರೀಡಾ ಅಭಿವೃದ್ಧಿ ದೃಷ್ಟಿಯಿಂದ ಸೂಕ್ತ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡುವಂತೆ ಸಂಸ್ಥೆಯು ಕೋರಿರುತ್ತದೆ.
ಮೇಲೆ ಓದಲಾದ ಕ್ರ.ಸಂ.(3) ರ ಆದೇಶದಲ್ಲಿ ಪ್ರಸ್ತಾಪಿತ ಸರ್ಕಾರಿ ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4) ರಡಿಯಲ್ಲಿ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಷನ್ ಬೆಂಗಳೂರು ಇವರಿಗೆ ಕ್ರಿಕೆಟ್ ಸ್ಟೇಡಿಯಂ ಸ್ಥಾಪಿಸಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22-ಎ(1)(i)ರನ್ವಯ ಪ್ರಚಲಿತ ಮಾರುಕಟ್ಟೆ ದರದ ಶೇ.10 ರಷ್ಟು ವಾರ್ಷಿಕ ಗುತ್ತಿಗೆ ದರ ನಿಗಧಿಪಡಿಸಿ, ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಶೇ.10 ರಷ್ಟು ಗುತ್ತಿಗೆ ದರ ಹೆಚ್ಚಿಸುವ ಷರತ್ತಿಗೊಳಪಟ್ಟು 30 ವರ್ಷಗಳ ಅವಧಿಗೆ ಕೆಲವೊಂದು ಷರತ್ತುಗಳೊಂದಿಗೆ ಗುತ್ತಿಗೆ ಆಧಾರದ ಮೇಲೆ ನೀಡಿ ಆದೇಶಿಸಲಾಗಿದೆ.
ಮೇಲೆ ಓದಲಾದ ಕ್ರ.ಸಂ. (4) ರಲ್ಲಿ ಜಿಲ್ಲಾಧಿಕಾರಿ, ಕೋಲಾರ ಜಿಲ್ಲೆ ಇವರು ದಿನಾಂಕ: 10/10/2018ರಂದು ಕಳುಹಿಸಿರುವ ಪ್ರಸ್ತಾವನೆಯಲ್ಲಿ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಇವರು ಕೋರಿರುವಂತೆ ಪುನಃ ಮತ್ತೊಂದು ಮನವಿ ಸಲ್ಲಿಸಿ, ಈಗಾಗಲೇ ಪ್ರಚಲಿತ ಮಾರುಕಟ್ಟೆ ದರದ ಶೇ.10ರಷ್ಟು ವಿಧಿಸಿರುವ ಮೊತ್ತವು ಅಧಿಕವಾಗಿರುವುದರಿಂದ ಗುತ್ತಿಗೆ ದರವನ್ನು ಕಡಿಮೆ ಮಾಡುವಂತೆ ಕೋರಿರುತ್ತಾರೆಂದು ವರದಿ ಮಾಡಿರುತ್ತಾರೆ.
ಅದರನ್ವಯ ಮೇಲೆ ಓದಲಾದ ಕ್ರ.ಸಂ. (5) ರ ತಿದ್ದುಪಡಿ ಆದೇಶದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್, ಬೆಂಗಳೂರು ಇವರಿಗೆ ಕ್ರಿಕೆಟ್ ಸ್ಟೇಡಿಯಂ ಸ್ಥಾಪಿಸಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22-ಎ(1)(i)(6)ರನ್ವಯ ಮಾರ್ಗಸೂಚಿ ದರದ ಶೇ.5ರಷ್ಟನ್ನು ವಾರ್ಷಿಕ ಗುತ್ತಿಗೆ ದರವನ್ನಾಗಿ ವಿಧಿಸಿ ಆದೇಶಿಸಲಾಗಿದೆ.
ಜಿಲ್ಲಾಧಿಕಾರಿಗಳ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಶವಾಗಿ ಮತ್ತೊಮ್ಮೆ ಪರಿಶೀಲಿಸಿ ಈ ಕೆಳಕಂಡಂತೆ ಪರಿಷ್ಕರಿಸಿ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ. ಆರ್ಡಿ 265 ಎಲ್ಜಿಬಿ 2018, ಬೆಂಗಳೂರು ದಿನಾಂಕ: 25/06/2019
ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕು, ಹುತ್ತೂರು ಹೋಬಳಿ, ಹೊಳಲಿ ಗ್ರಾಮದ ಸ.ನಂ.103 ರಲ್ಲಿ ವಿಸ್ತೀರ್ಣ 16-00 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ನಿಯಮ 97(4) ರಡಿಯಲ್ಲಿ ಗೋಮಾಳ ಶೀರ್ಷಿಕೆಯಿಂದ ತಗ್ಗಿಸಿ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಶಿಯೇಷನ್ ಬೆಂಗಳೂರು ಇವರಿಗೆ ಕ್ರಿಕೆಟ್ ಸ್ಟೇಡಿಯಂ ಸ್ಥಾಪಿಸಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮ 22-ಎ(1)(i)(6)ರನ್ವಯ ಮಾರ್ಗಸೂಚಿ ದರದ ಶೇ.5ರಷ್ಟನ್ನು ವಾರ್ಷಿಕ ಗುತ್ತಿಗೆ ದರ ನಿಗಧಿಪಡಿಸಿ, ನಂತರ ಪ್ರತಿ ಎರಡು ವರ್ಷಗಳಿಗೊಮ್ಮೆ ಶೇ.10 ರಷ್ಟು ಗುತ್ತಿಗೆ ದರ ಹೆಚ್ಚಿಸುವ ಷರತ್ತಿಗೊಳಪಟ್ಟು, ಸದರಿ ನಿಯಮ 19(2)(ಇ) ಹಾಗೂ ನಿಯಮ 19(3)(ಬಿ)ರನ್ವಯ 30 ವರ್ಷಗಳ ಅವಧಿಗೆ ಈ ಕೆಳಕಂಡ ಷರತ್ತುಗಳೊಂದಿಗೆ ಗುತ್ತಿಗೆ ಆಧಾರದ ಮೇಲೆ ನೀಡಿ ಪರಿಷ್ಕರಿಸಿ ಆದೇಶಿಸಿದೆ.
1. ಗುತ್ತಿಗೆ ಆಧಾರದಲ್ಲಿ ಮಂಜೂರಾದ ಜಮೀನನ್ನು ಯಾವ ಉದ್ದೇಶಕ್ಕೆ ಮಂಜೂರು ಮಾಡಲಾಗಿದೆಯೋ ಅದೇ ಉದ್ದೇಶಕ್ಕೆ ಎರಡು ವರ್ಷಗಳೊಳಗೆ ಉಪಯೋಗಿಸತಕ್ಕದ್ದು.
2. ಸದರಿ ಭೂಮಿಯನ್ನು ವಿನಾಶಕಾರಿಯಾದ ಅಥವಾ ಖಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ ಹಾಗೂ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.
3. ಸದರಿ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.
4. ಸದರಿ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ಉಪಗುತ್ತಿಗೆಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರೆ ಯಾವುದೇ ರೀತಿಯ ಪರಭಾರೆಯನ್ನು ಮಾಡಬಾರದು. 5. ಸದರಿ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ದವಾಗಿ ಪಡೆಯಬೇಕಾದ ಪರವಾನಗಿಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ೬೪೫6. ಸದರಿ ಜಮೀನು 1969ರ ಕರ್ನಾಟಕ ಭೂ ಮಂಜೂರಾತಿ ನಿಯಮಗಳಿಗೆ ಬದ್ದವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ನಿಯಮಾನುಸಾರ ಯಾವುದೇ ಪರಿಹಾರ ನೀಡದೆ ಮಂಜೂರಾತಿಯನ್ನು ರದ್ದುಗೊಳಿಸಲಾಗುವುದು ಹಾಗೂ ಜಮೀನನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
7. ಜಿಲ್ಲಾಧಿಕಾರಿಗಳು ಗುತ್ತಿಗೆ ಆಧಾರದ ಮೇಲೆ ನೀಡಲಾದ ಜಮೀನನ್ನು ಫಲಾನುಭವಿಗೆ ಹಸ್ತಾಂತರಿಸುವಾಗ ಸದರಿ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಪೂರಕ ಷರತ್ತುಗಳನ್ನು ವಿಧಿಸಬಹುದಾಗಿದೆ.
8. ಪ್ರಮುಖ ಸರ್ಕಾರಿ ಕಾರ್ಯಕ್ರಮಗಳಿಗೆ ಅವಶ್ಯಕತೆ ಇದ್ದಾಗ ಗುತ್ತಿಗೆಗೆ ನೀಡಲಾಗಿರುವ ಜಮೀನನ್ನು / ಕ್ರೀಡಾಂಗಣವನ್ನು ಸರ್ಕಾರಕ್ಕೆ ಬಿಟ್ಟುಕೊಡತಕ್ಕದ್ದು.
ಮುಂದುವರೆದು, ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 24 ಎಲ್ಜಿಕೆ 2018, ದಿನಾಂಕ: 25/06/2018 ಹಾಗೂ ತಿದ್ದುಪಡಿ ಆದೇಶ ಸಂಖ್ಯೆ: ಆರ್ಡಿ 265 ಎಲ್ಜಿಬಿ 2018, ದಿನಾಂಕ:04/06/2019ರ ಆದೇಶಗಳನ್ನು ತಕ್ಷಣ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ.
PR-263
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ SC-50
ಎಸ್.ಎಲ್.ಮಹಾಂತೇಗೌಡ
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಭೂ ಮಂಜೂರಾತಿ-1)
ಒಳಾಡಳಿತ ಸಚಿವಾಲಯ
ವಿಷಯ : ಕಾರಾಗೃಹ ಇಲಾಖೆಯ ಕೆಲವು ಹುದ್ದೆಗಳನ್ನು ಮರು ಪದನಾಮಗೊಳಿಸುವ ಬಗ್ಗೆ.
ಓದಲಾಗಿದೆ: 1) ಕಾರಾಗೃಹ ಇಲಾಖೆಯ ಮುಖ್ಯಸ್ಥರ ಪತ್ರ ಸಂಖ್ಯೆ: ಇ4/ಸಿಆರ್-25/2018-19, ದಿನಾಂಕ: 23/11/2018.
2) ಸರ್ಕಾರದ ಪತ್ರ ಸಂಖ್ಯೆ: ಹೆಚ್ಡಿ 137 ಪಿಆರ್ಇ 2018. ದಿನಾಂಕ: 07/02/2019.
3) ಕಾರಾಗೃಹ ಇಲಾಖೆಯ ಮುಖ್ಯಸ್ಥರ ಪತ್ರ ಸಂಖ್ಯೆ: ಇ4/ಸಿಆರ್-25/2018-19, ದಿನಾಂಕ: 29/03/2019.
ಪ್ರಸ್ತಾವನೆ:
ಮೇಲೆ ಓದಲಾದ(1)ರ ಪತ್ರದಲ್ಲಿ ಕಾರಾಗೃಹ ಇಲಾಖಾ ಮುಖ್ಯಸ್ಥರು ಕಾರಾಗೃಹ ಇಲಾಖೆಯ ಕೆಲವು ಹುದ್ದೆಗಳ ಮತ್ತು ಪೊಲೀಸ್ ಇಲಾಖೆಯ ಹುದ್ದೆಗಳ ವೇತನ ಶ್ರೇಣಿ ಸಮಾನಾಂತರವಾಗಿದ್ದರೂ ಪದನಾಮದಲ್ಲಿ ಬದಲಾವಣೆ ಇರುವುದಲ್ಲದೇ, ನೆರೆಯ ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯದ ಕಾರಾಗೃಹಗಳಲ್ಲಿರುವ ಕಾರ್ಯನಿರ್ವಾಹಕ ವೃಂದದ ಹುದ್ದೆಗಳ ಪದನಾಮದಲ್ಲಿಯೂ ಸಹ ಬದಲಾವಣೆಯಿರುವುದಾಗಿ ಹಾಗೂ ನೆರೆಯ ರಾಜ್ಯದ ಕಾರಾಗೃಹಗಳಲ್ಲಿರುವ ತತ್ಸಮಾನ ವೃಂದದ ಹುದ್ದೆಗಳಂತೆ ಇಲಾಖೆಯ ಕೆಲವು ಹುದ್ದೆಗಳನ್ನು ಮರು ಪದನಾಮಗೊಳಿಸುವುದರಿಂದ, ಹುದ್ದೆಗಳ ಪದನಾಮಗಳು ಒಂದೇ ರೀತಿಯದ್ದಾಗುತ್ತದೆಂದು ತಿಳಿಸುತ್ತ, ಈ ಕೆಳಕಂಡ ಹುದ್ದೆಗಳನ್ನು ಮರುಪದನಾಮಗೊಳಿಸಲು ಆದೇಶ ಹೊರಡಿಸುವಂತೆ ಕೋರಿರುತ್ತಾರೆ.
| ಕ್ರ.ಸಂ. | ಕಾರಾಗೃಹ ಇಲಾಖೆಯಲ್ಲಿನ ಪದನಾಮ ಹಾಗೂ ವೇತನ ಶ್ರೇಣಿ | ಪ ೂಲೀಸ್ ಹಾಗೂ ಹೊರ ರಾಜ್ಯದ ಇನ್ನಿತರೆ ಕಾರಾಗೃಹ ಇಲಾಖೆಗಳಲ್ಲಿನ ೆ ತ ತ ್ಸಮಾನ ಶ್ರೇಣಿ ಮತ್ತು ಪದನಾಮ |
| Executive Staff | ||
| 1. | Assistant Superintendent of Prisons (Rs.40,900-78,200) | Deputy Superintedent of Prisons. (Rs.40,900-78,200) |
| 2. | Chief Warder (Rs.27,650-52,650) | Deputy Jailor (Rs.27,650-52,650) |
| 3. | Driver (Rs.21,400-42,000) | Driver cum Warder (Rs.21,400-42,000) |
| 4. | Warder (Nursing) (Rs.21,400-42,000) | Warder cum Nursing (Rs.21,400-42,000) |
| Ministerial Staff | ||
| 5. | Gazetted Manager (Rs.43,100-83,900) | Administrative Officer (Rs.43,100-83,900) |
| 6. | Manager (Rs.40,900-78,200) | Assistant Administrative Officer (Rs.40,900-78,200) |
| 7. | Senior Typist (Rs. 27,650-52,650) | Senior Computer Operator (Rs.27,650-52,650) |
| 8. | Typist (Rs.21,400-42,000) | Computer Operator (Rs.21,400-42,000) |
| 9. | Attender / Muchi (Rs.17,000-28,950) | Attender (Rs.17,000-28,950) |
| 10. | Sweeper (Rs.17,000-28,950) | Sweeper / Mali (Rs.17,000-28,950) |
| Deputational Staff | ||
| 11. | Assistant Surgeon(Rs.52,650-97,100) | Medical Officer (Rs.52,650-97,100) |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೬೪೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ಭಾಗ ೧ಓದಲಾದ (2) ರಲ್ಲಿ ಹುದ್ದೆಗಳನ್ನು ಮರುಪದನಾಮೀಕರಣಗೊಳಿಸುವ ಸಂಬಂಧ ಕೆಲವೊಂದು ಮಾಹಿತಿಯನ್ನು ಸಲ್ಲಿಸುವಂತೆ ಕೋರಲಾಗಿದ್ದು, ಅದರನ್ವಯ ಇಲಾಖಾ ಮುಖ್ಯಸ್ಥರು ಉದ್ದೇಶಿತ ಲಿಪಿಕ ವೃಂದದ ಮತ್ತು ಪ್ರತಿನಿಯೋಜನೆ ಹುದ್ದೆಗಳು ಖಾಯಂ ಹುದ್ದೆಗಳಾಗಿರುವುದಾಗಿ ಹಾಗೂ ಆಪ್ಕಾ ವೆಲ್ಲೂರಿನ ತರಬೇತಿ ಮತ್ತು ಬೇರೆ ರಾಜ್ಯಗಳ ತರಬೇತಿ ಕಾರ್ಯಾಗಾರಗಳಲ್ಲಿ ರಾಜ್ಯದ ಹುದ್ದೆಯ ಪದನಾಮಗಳು ಬೇರೆ ಬೇರೆಯಿರುವುರಿಂದ ತರಬೇತಿಗೆ ನಿಯೋಜಿಸಲ್ಪಟ್ಟ ಅಧಿಕಾರಿ / ಸಿಬ್ಬಂದಿಗಳ ಪದನಾಮ ಸಂಭೋದಿಸುವಲ್ಲಿ ಉಂಟಾಗುತ್ತಿರುವ ಗೊಂದಲವನ್ನು ನಿವಾರಿಸುವ ಸಲುವಾಗಿ ಎಲ್ಲಾ ರಾಜ್ಯಗಳ ಪದನಾಮಗಳು ಏಕರೂಪದಲ್ಲಿರುವುದು ಸೂಕ್ತವಾಗಿರುತ್ತದೆಂದು ತಿಳಿಸುತ್ತಾ, ಪೊಲೀಸ್ ಹಾಗೂ ಇತರೆ ಇಲಾಖೆಗಳಲ್ಲಿನ ಲಿಪಿಕ ವೃಂದದ ಹುದ್ದೆಗಳಿಗೆ ಒಂದೇ ರೀತಿಯ ತತ್ಸಮಾನದ ಪದನಾಮವಿರುವುದರಿಂದ ಮತ್ತು ಪ್ರಸ್ತುತ ಕಂಪ್ಯೂಟರ್ ಬಳಕೆಯಲ್ಲಿರುವುದರಿಂದ ಕೆಲವು ಹುದ್ದೆಗಳನ್ನು ಹಾಗೂ ಪ್ರತಿ ನಿಯೋಜನೆ ಮೇಲೆ ಬರುವ ವೈದ್ಯಾಧಿಕಾರಿಗಳ ಪದನಾಮಗಳು Assistant surgeon, Surgeon, District Surgeon ಇತ್ಯಾದಿಯಾಗಿರುವುದರಿಂದ ಪದನಾಮವನ್ನು Medical Officer ಎಂಬುದಾಗಿ ಪದನಾಮೀಕರಿಸುವುದು ಸೂಕ್ತವೆಂದು ತಿಳಿಸಿ ಆದೇಶ ಹೊರಡಿಸುವಂತೆ ಓದಲಾದ (3)ರ ಪತ್ರದಲ್ಲಿ ಇಲಾಖಾ ಮುಖ್ಯಸ್ಥರು ಕೋರಿರುತ್ತಾರೆ.
ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಹೆಚ್ಡಿ 137 ಪಿಆರ್ಇ 2018, ಬೆಂಗಳೂರು, ದಿನಾಂಕ: 01.07.2019.
ಪ್ರಸ್ತಾವನೆಯಲ್ಲಿ ವಿವರಿಸಿರುವಂತೆ, ಕಾರಾಗೃಹ ಇಲಾಖೆಯಲ್ಲಿನ ಕೆಳಕಂಡ ಹುದ್ದೆಗಳನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಹುದ್ದೆಯ ಕಾರ್ಯಸ್ವರೂಪ
| Executive Staff | ||
| 1. | Chief Warder (Rs.27,650-52,650) | Assistant Jailor (Rs.27,650-52,650) |
| 2. | Warder (Nursing) (Rs.21,400-42,000) | Warder cum Nursing (Rs.21,400-42,000) |
| Ministerial Staff | ||
| 3. | Gazetted Manager (Rs.43,100-83,900) | Administrative Officer (Rs.43,100-83,900) |
| 4. | Manager (Rs.40,900-78,200) | Assistant Administrative Officer (Rs.40,900-78,200) |
| 5. | Attender / Muchi (Rs.17,000-28,950) | Attender (Rs.17,000-28,950) |
| 6. | Sweeper (Rs.17,000-28,950) | Sweeper / Mali (Rs.17,000-28,950) |
| Deputational Staff | ||
| 7. | Assistant Surgeon (Rs.52,650-97,100) | Medical Officer (Rs.52,650-97,100) |
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 382 ಸೇ-3/2019 ದಿನಾಂಕ: 18/06/2019 ರನ್ವಯ ಹೊರಡಿಸಿದೆ.
PR-264
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-20
ಎಂ.ಆರ್. ಶೋಭಾ
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಸೆರಮನೆ ಮತ್ತು ಸಿನಿಮಾ) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.