ಸಂಪುಟ ೧೫೪
Volume 154
ಬೆಂಗಳೂರು, ಗುರುವಾರ, ಆಗಸ್ಟ್ ೧೫, ೨೦೧೯ (ಶ್ರಾವಣ ೨೪, ಶಕ ವರ್ಷ ೧೯೪೧)
Bengaluru, Thursday, August 15, 2019 (Shravana 24, Shaka Varsha 1941)
ಸಂಚಿಕೆ ೩೩
Issue 33
ಭಾಗ ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಗಳು,
ಕರ್ನಾಟಕ ಉಚ್ಛ ನ್ಯಾಯಾಲಯದ ಅಧಿಸೂಚನೆಗಳು
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಅಪಜೀ 24 ಎಫ್‌ಪಿಸಿ 2019, ಬೆಂಗಳೂರು, ದಿನಾಂಕ: 20.06.2019
ಶ್ರೀ ಟಿ. ವೆಂಕಟರಮಣಯ್ಯ, ಮಾನ್ಯ ವಿಧಾನಸಭಾ ಸದಸ್ಯರು, ನಂ.52, ಅಪ್ಪಕರನಹಳ್ಳಿ, ಹುಲಿಕಂಟೆ ಅಂಚೆ, ದೊಡ್ಡಬೆಳವಂಗಲ ಹೋಬಳಿ, ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇವರನ್ನು ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಅಧ್ಯಕ್ಷರಾಗಿ ನೇಮಿಸಿ ಹೊರಡಿಸಲಾಗಿದ್ದ ಅಧಿಸೂಚನೆ ಸಂಖ್ಯೆ: ಅಪಜೀ 20 ಎಫ್‌ಪಿಸಿ 2019, ದಿನಾಂಕ: 07.03.2019 ಅನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.
PR - 893
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಆರ್. ರಮೇಶ್
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ), ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.(ಅರಣ್ಯ-ಎ)
ಕೃಷಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕೃಇ 32 ಕೃಇಕ 2019, ಬೆಂಗಳೂರು, ದಿನಾಂಕ: 16.05.2019
ಬೀಜಗಳ (ನಿಯಂತ್ರಣ) ಆದೇಶದ, 1983ರ ಅಧಿನಿಯಮದ ಅಧ್ಯಾಯ-11 ರಲ್ಲಿ ನೀಡಿರುವ ಅಧಿಕಾರದನ್ವಯ ಹಾಗೂ ಈ ಹಿಂದೆ ಹೊರಡಿಸಿರುವ ಅಧಿಸೂಚನೆ ಸಂಖ್ಯೆ: AHD/201/AMS/95 ದಿನಾಂಕ: 29-09-1995 ನ್ನು ಹಿಂಪಡೆಯುತ್ತಾ, ಕರ್ನಾಟಕ ಸರ್ಕಾರವು ಬಿತ್ತನೆ ಬೀಜಗಳ ಪರವಾನಗಿ ನೀಡುವ ಪ್ರಾಧಿಕಾರವನ್ನು ಈ ಕೆಳಗಿನ ಕೋಷ್ಟಕದಲ್ಲಿ ತಿಳಿಸಿದಂತೆ ಕಾಲಂ (2) ರಲ್ಲಿ ನಮೂದಿಸಿರುವ ಅಧಿಕಾರಗಳನ್ನು ಕಾಲಂ (3) ರಲ್ಲಿ ಸೂಚಿಸಿದ ಕಾರ್ಯವ್ಯಾಪ್ತಿಗೆ
| ಕ್ರ. ಸಂ. | ಬಿತ್ತನೆ ಬೀಜ ಪರವಾನಗಿ ಪ್ರಾಧಿಕಾರ | ಕಾರ್ಯ ನಿರ್ವಹಿಸುವ ವ್ಯಾಪ್ತಿ |
| (1) | (2) | (3) |
| 1 | ಅಪರ ಕೃಷಿ ನಿರ್ದೇಶಕರು (ಸಾವಯವ ಕೃಷಿ) | ಕರ್ನಾಟಕ ರಾಜ್ಯಾದ್ಯಂತ |
| 2 | ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು | ಸಂಬಂಧಪಟ್ಟ ಜಿಲ್ಲಾ ಮಟ್ಟಕ್ಕೆ ಸೀಮಿತಗೊಳಿಸಿ. |
PR – 894
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 100
ಬಿ.ಎಸ್. ನಾಗರತ್ನಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ,
ಕೃಷಿ ಇಲಾಖೆ.(ಯೋಜನೆ)
(೪೧೩)
೪೧೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ಭಾಗ ೨ AGRICULTURE SECRETARIATNOTIFICATION
NO: AGD/32/ACT/2019, BENGALURU, DATED: 16.05.2019
In exercise of the powers conferred by Clause-11 of the Seeds (Control) Order, 1983 and in suppression of Notification No. AHD 201 AMS 95 dated: 29-09-1995, the Government of Karnataka hereby appoints the officers specified in column (2) of the table below, to be the Licensing Authority for the purpose of the said order in respect of the area as specified in the corresponding entries in column (3) thereof.
| Sl. No. | Designation of the Officer | Area |
| (1) | (2) | (3) |
| 1 | Additional Director of Agriculture (Organic Farming) | Through out the State |
| 2 | District Joint Directors of Agriculture | Within their respective District Jurisdiction. |
PR – 895
BY ORDER AND IN NAME OF GOVERNOR OF KARNATAKA
B.S. NAGARATHNAMMA
SC - 100
Under Secretary to Governm ent
Agriculture Department. (Planning)
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 05 ಬಿಎಂಆರ್ 2019, ಬೆಂಗಳೂರು, ದಿನಾಂಕ: 20.06.2019
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4-ಸಿ(3)(i) ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಹರೀಶ್ ಬಿನ್ ಎಂ. ಸುಬ್ಬಯ್ಯ, ದೊಡ್ಡ ಹಾಗಡೆ ಗ್ರಾಮ, ಬ್ಯಾಗಡದೇನಹಳ್ಳಿ ಅಂಚೆ, ಆನೇಕಲ್ ತಾಲ್ಲೂಕು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಆನೇಕಲ್ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶಿಸಿದೆ.
PR – 896
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50
ಕೆ.ಎಸ್. ಜಗದೀಶರೆಡ್ಡಿ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 15 ಬಿಎಂಆರ್ 2019, ಬೆಂಗಳೂರು, ದಿನಾಂಕ: 25.06.2019
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್., ಮಾನ್ಯ ವಿಧಾನಸಭಾ ಸದಸ್ಯರು, ದೇವನಹಳ್ಳಿ ವಿಧಾನಸಭಾ ಕ್ಷೇತ್ರ, ಇವರ ಅಧಿಕಾರಾವಧಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಸಿ)(3)(i)ರ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮತ್ತು ಕರ್ನಾಟಕ ಯೋಜನಾ ಪ್ರಾಧಿಕಾರಗಳ ನಿಯಮಗಳು, 1965ರ ನಿಯಮ 5(a) ಅನ್ನು ಸಡಿಲಿಸಿ ಶ್ರೀ ನಿಸರ್ಗ ನಾರಾಯಣಸ್ವಾಮಿ ಎಲ್.ಎನ್., ಮಾನ್ಯ ವಿಧಾನಸಭಾ ಸದಸ್ಯರು, ದೇವನಹಳ್ಳಿ, ವಿಧಾನಸಭಾ ಕ್ಷೇತ್ರ ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪನಗರ ವರ್ತುಲ ರಸ್ತೆ (ಎಸ್.ಟಿ.ಆರ್.ಆರ್) ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನೇಮಕ ಮಾಡಿ ಆದೇಶಿಸಿದೆ.
PR – 897
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50
ಕೆ.ಎಸ್. ಜಗದೀಶರೆಡ್ಡಿ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ೪೧೫ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ನಅಇ 16 ಬಿಎಂಆರ್ 2019, ಬೆಂಗಳೂರು, ದಿನಾಂಕ: 25.06.2019
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4(ಸಿ)(3)(i)ರ ಅಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮತ್ತು ಕರ್ನಾಟಕ ಯೋಜನಾ ಪ್ರಾಧಿಕಾರಗಳ ನಿಯಮಗಳು, 1965ರ ನಿಯಮ 5(a) ಅನ್ನು ಸಡಿಲಿಸಿ ಶ್ರೀ ಟಿ. ವೆಂಕಟರಮಣಯ್ಯ, ಮಾನ್ಯ ವಿಧಾನಸಭಾ ಸದಸ್ಯರು, ದೊಡ್ಡಬಳ್ಳಾಪುರ, ವಿಧಾನಸಭಾ ಕ್ಷೇತ್ರ ಇವರನ್ನು ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನೇಮಕ ಮಾಡಿ ಆದೇಶಿಸಿದೆ.
PR – 898
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC - 50
ಕೆ.ಎಸ್. ಜಗದೀಶರೆಡ್ಡಿ
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ಧಿ ಇಲಾಖೆ.
OFFICE OF THE CITY CIVIL COURT, BENGALURU
NOTIFICATION
NO: ADM-I (E) 1598/2019, BENGALURU, DATED: 27.06.2019
Sri Deepak K.M., Software Technician, City Civil Court, Bengaluru, is permitted to surrender earned leave for 15 days from 13.07.2019 for the encashment benefit for the calenday year 2019.
He shall be paid pay and allowances admissible for the period of leave so surrendered at the rate of 1/30th of the m onthly pay and allowances for each day of leave surrendered as per the provisions contained in G.O. No. FD 3 SRS 95, dated: 27.3.1995 and G.O. No. FD SRS 2000 dated: 26.12.2000 and addendum dated: 28.3.2001 to that G.O. and G.O. No. FD 8 SENISE 2015 Dt: 10.12.2015.
PR – 1109
BY ORDER OF THE PRL. CITY CIVIL & SESSIONS JUDGE
REGISTRAR,
CITY CIVIL COURT,
BENGALURU.
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಹೆಚ್‌ಡಿ 21 ಪಿಆರ್ಇ 2017, ಬೆಂಗಳೂರು, ದಿನಾಂಕ: 26.06.2019
ಕಾರಾಗೃಹ ಇಲಾಖೆಯ ಈ ಕೆಳಕಂಡ ಮುಖ್ಯ ಅಧೀಕ್ಷಕರುಗಳಿಗೆ ವೇತನ ಶ್ರೇಣಿ ರೂ. 74,400-ರೂ. 1,09,600ರ ಕಾರಾಗೃಹಗಳ ಉಪ ಮಹಾನಿರೀಕ್ಷಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಾಪನ್ನ ಮುಂಬಡ್ತಿಯನ್ನು ನೀಡಿ ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ
| ಕ್ರಮ. ಸಂ | ಮುಖ್ಯ ಅಧೀಕ್ಷಕರುಗಳ ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ | ಕಾರಾಗೃಹಗಳ ಉಪ ಮಹಾನಿರೀಕ್ಷಕರ ಹುದ್ದೆಗೆ ವ ುುಂಬಡ್ತಿ ನೀಡಿ ಸ್ಥಳನಿಯುಕ್ತಿಗೊಳಿಸಲಾದ ಸ್ಥಳ |
| 1. | ಶಿ ೕ ಪಿ.ವಿ.ಆನಂದರೆಡ್ಡಿ, ್ರ ಕೇಂದ್ರ ಕಛೇರಿ, ಬೆಂಗಳೂರು. | ಕೇಂದ್ರ ಸ್ಥಾನ, ಬೆಂಗಳೂರು |
| 2. | ಶಿ ೕ ಎಂ.ಸೋಮಶೇಖರ್, ್ರ ಕೇಂದ್ರ ಕಾರಾಗೃಹ, ಬೆಂಗಳೂರು. | ಉತ್ತರ ವಲಯ, ಬೆಳಗಾವಿ |
| 3. | ಶಿ ೕ ಟಿ.ಪಿ.ಶೇಷ, ್ರ ಕೇಂದ್ರ ಕಾರಾಗೃಹ, ಬೆಳಗಾವಿ. | ದ ಕಿ ಣ ವಲಯ, ಬೆಂಗಳೂರು ್ಷ |
"ಈ ಮುಂಬಡ್ತಿಗಳು ಮತ್ತು ಸ್ಥಳ ನಿಯುಕ್ತಿಗಳು ಯಾವುದೇ ನ್ಯಾಯಾಲಯಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ."
PR - 1138
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 50
ಟಿ.ಸಾಕಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),
ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ)೪೧೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ಭಾಗ ೨
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಹೆಚ್‌ಡಿ 23 ಪಿಆರ್ಇ 2017, ಬೆಂಗಳೂರು, ದಿನಾಂಕ: 26.06.2019
ಭಾಗ - 1
ಕಾರಾಗೃಹ ಇಲಾಖೆಯ ಈ ಕೆಳಕಂಡ ಅಧೀಕ್ಷಕರುಗಳಿಗೆ ವೇತನ ಶ್ರೇಣಿ ರೂ.67,550-ರೂ.1,04,600ರ ಮುಖ್ಯ ಅಧೀಕ್ಷಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಾಪನ್ನ ಮುಂಬಡ್ತಿಯನ್ನು ನೀಡಿ ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಸ್ಥಳಗಳಿಗೆ ಮುಂದಿನ ಆದೇಶದವರೆಗೆ ನಿಯುಕ್ತಿಗೊಳಿಸಿದೆ:
| ಕ್ರಮ ಸಂಖ್ಯೆ | ಅಧೀಕ್ಷಕರುಗಳ ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ | ವ ುುಖ್ಯ ಅಧೀಕ್ಷಕ ಹುದ್ದೆಗೆ ಮುಂಬಡ್ತಿ ನೀಡಿ ಸ ್ಥಳನಿಯುಕ್ತಿಗೊಳಿಸಲಾದ ಸ್ಥಳ |
| 1. | ಶ್ರೀಮತಿ ಕೆ.ಸಿ. ದಿವ್ಯಶ್ರೀ ಕೇಂದ್ರ ಕಾರಾಗೃಹ, ಶಿವಮೊಗ್ಗ | ಕೇಂದ್ರ ಕಾರಾಗೃಹ, ಮೈಸೂರು |
| 2. | ಶ್ರೀ ವಿ.ಶೇಷುಮೂರ್ತಿ ಕೇಂದ್ರ ಕಾರಾಗೃಹ, ಮೈಸೂರು | ಕೇಂದ್ರ ಕಾರಾಗೃಹ, ಬೆಂಗಳೂರು |
| 3. | ಶ್ರೀ ಪಿ.ಎಸ್.ರಮೇಶ್, ಕೇಂದ್ರ ಕಾರಾಗೃಹ, ಬೆಂಗಳೂರು | ಕೇಂದ್ರ ಕಾರಾಗೃಹ, ಕಲಬುರಗಿ |
| 4. | ಶ್ರೀ ಪಿ.ರಂಗನಾಥ್, ಕೇಂದ್ರ ಕಾರಾಗೃಹ, ಬಳ್ಳಾರಿ | ಕೇಂದ್ರ ಕಾರಾಗೃಹ, ಶಿವಮೊಗ್ಗ |
ಭಾಗ-2
ಶ್ರೀ ಕೃಷ್ಣಕುಮಾರ್, ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ, ಕಲಬುರಗಿ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ, ಬೆಳಗಾವಿ, ಈ ಹುದ್ದೆಗೆ ವರ್ಗಾಯಿಸಿದೆ.
ಭಾಗ-3
ಸರ್ಕಾರದ ಆದೇಶ ಸಂಖ್ಯೆ: ಹೆಚ್‌ಡಿ 08 ಪಿಆರ್ಇ 2019, ದಿನಾಂಕ:11.02.2019ರನ್ವಯ ಮುಖ್ಯ ಅಧೀಕ್ಷಕರು, ಕೇಂದ್ರ ಕಾರಾಗೃಹ ಮೈಸೂರು ಹುದ್ದೆಯನ್ನು ತಾತ್ಕಾಲಿಕವಾಗಿ ಕಾರಾಗೃಹಗಳ ಪ್ರಧಾನ ಕಛೇರಿಗೆ ವರ್ಗಾಯಿಸಿ ಸ್ಥಳಾಂತರಿಸಿದ್ದು, ಈ ಹುದ್ದೆಯನ್ನು ಮೈಸೂರು ಕೇಂದ್ರ ಕಾರಾಗೃಹಕ್ಕೆ ಮರುಸ್ಥಳಾಂತರಗೊಳಿಸಿದೆ.
"ಈ ಮುಂಬಡ್ತಿಗಳು ಮತ್ತು ಸ್ಥಳ ನಿಯುಕ್ತಿಗಳು ಯಾವುದೇ ನ್ಯಾಯಾಲಯಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ."
PR - 1139
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 50
ಟಿ.ಸಾಕಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),
ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ)
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಹೆಚ್‌ಡಿ 77 ಪಿಆರ್ಇ 2018, ಬೆಂಗಳೂರು, ದಿನಾಂಕ: 26.06.2019
ಭಾಗ-1
ಕಾರಾಗೃಹ ಇಲಾಖೆಯ ಈ ಕೆಳಕಂಡ ಸಹಾಯಕ ಅಧೀಕ್ಷಕರುಗಳಿಗೆ ವೇತನ ಶ್ರೇಣಿ ರೂ.52,650-ರೂ.97,100ರ ಅಧೀಕ್ಷಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಾಪನ್ನ ಮುಂಬಡ್ತಿಯನ್ನು ನೀಡಿ ಅವರುಗಳ ಹೆಸರುಗಳ ಮುಂದೆ ನಮೂದಿಸಿರುವ ಸ್ಥಳಗಳಿಗೆ ಮುಂದಿನ ಆದೇಶದವರೆಗೆ ನಿಯುಕ್ತಿಗೊಳಿಸಿದೆ:
ಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ೪೧೭| ಕ್ರಮ. ಸಂ | ಸಹಾಯಕ ಅಧೀಕ್ಷಕರುಗಳ ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ | ಅಧೀಕ್ಷಕರ ಹುದ್ದೆಗೆ ಮುಂಬಡ್ತಿ ನೀಡಿ ಸ್ಥಳನಿಯುಕ್ತಿಗೊಳಿಸಲಾದ ಸ್ಥಳ |
| 1. | ಶ್ರೀ ಮಹೇಶ್ ಕುಮಾರ್ ಎಸ್.ಜಿಗಣಿ ಪಿ.ಟಿ.ಐ., ಮೈಸೂರು | ಪಿ.ಟಿ.ಐ. ಮೈಸೂರು |
| 2. | ಶ್ರೀ ಕೆ.ಸುರೇಶ್, ಪ ಧಾನ ಕಛೇರಿ, ಬೆಂಗಳೂರು ್ರ | ಜಿಲ್ಲಾ ಕಾರಾಗೃಹ, ಮಂಗಳೂರು |
| 3. | ಶ್ರೀ ಸುಂದರ್, ಕೇಂದ್ರ ಕಾರಾಗೃಹ, ಬೆಂಗಳೂರು | ಕೇಂದ್ರ ಕಾರಾಗೃಹ, ವಿಜಯಪುರ |
| 4. | ಶ್ರೀಮತಿ ಲತಾ ಆರ್. ವ ುಹಿಳಾ ಕೇಂದ್ರ ಕಾರಾಗೃಹ, ಶಿವಮೊಗ್ಗ | ಕೇಂದ್ರ ಕಾರಾಗೃಹ, ಬೆಂಗಳೂರು |
| 5. | ಶ್ರೀ ಇಮಾಮ್ ಸಾಬ್ ಮ್ಯಾಗೇರಿ ಕೇಂದ್ರ ಕಾರಾಗೃಹ, ಧಾರವಾಡ | ಕೇಂದ್ರ ಕಾರಾಗೃಹ, ಕಲಬುರಗಿ |
| 6. | ಶ್ರೀ ಸಿ.ಈ.ತಿಮ್ಮಯ್ಯ, ಜಿಲ್ಲಾ ಕಾರಾಗೃಹ, ತುಮಕೂರು | ಕೇಂದ್ರ ಕಾರಾಗೃಹ, ಮೈಸೂರು |
ಭಾಗ-2
ಕಾರಾಗೃಹ ಇಲಾಖೆಯ ಸಹಾಯಕ ಅಧೀಕ್ಷಕರ ಹೈದ್ರಾಬಾದ್-ಕರ್ನಾಟಕ ಪ್ರದೇಶ ಸ್ಥಳೀಯ ವೃಂದದ ಜೇಷ್ಠತಾ ಪಟ್ಟಿಯನ್ವಯ ಕ್ರಮ ಸಂಖ್ಯೆ (1)ರಲ್ಲಿನ ಶ್ರೀ ಮಲ್ಲಿಕಾರ್ಜುನ.ಬಿ., ಇವರಿಗೆ ವೇತನ ಶ್ರೇಣಿ ರೂ.52,650-ರೂ.97,100ರ ಅಧೀಕ್ಷಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಾಪನ್ನ ಮುಂಬಡ್ತಿಯನ್ನು ನೀಡಿ, ಕೇಂದ್ರ ಕಾರಾಗೃಹ, ಬಳ್ಳಾರಿಗೆ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿದೆ.
"ಈ ಮುಂಬಡ್ತಿಗಳು ಮತ್ತು ಸ್ಥಳ ನಿಯುಕ್ತಿಗಳು ಯಾವುದೇ ನ್ಯಾಯಾಲಯಗಳ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ."
PR - 1140
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಟಿ.ಸಾಕಮ್ಮ
SC - 50
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ),
ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ)
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಸೇರ್ಪಡೆ ಆದೇಶ
ಸಂಖ್ಯೆ: ಆಕುಕ 614 ಎಚ್ಎಸ್ಎಚ್ 2016, ಬೆಂಗಳೂರು, ದಿನಾಂಕ: 01.07.2019
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯಲ್ಲಿನ ಅಪರ ನಿರ್ದೇಶಕರ ಹುದ್ದೆಗೆ ಪೂರ್ವಾನ್ವಯ ಪದೋನ್ನತಿ ನೀಡಿರುವ ಆದೇಶ ಸಂಖ್ಯೆ: ಆಕುಕ 614 ಎಚ್ಎಸ್ಎಚ್ 2016, ದಿನಾಂಕ: 04.12.2018ರ ನಾಲ್ಕನೇ ಸಾಲಿನಲ್ಲಿರುವ "ಅಪರ ನಿರ್ದೇಶಕರು, ಆರ್.ಸಿ.ಹೆಚ್. ಇವರುಗಳಿಗೆ" ಎಂಬ ಪದಗಳ ನಂತರ "ವೇತನ ಶ್ರೇಣಿ ರೂ. 82000-1900-83900-2200-97100-2500-112100-2800-117700 ರಲ್ಲಿ" ಎಂದು ಸೇರಿಸಿ ಓದಿಕೊಳ್ಳತಕ್ಕದ್ದು.
PR - 1141
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 20
ಯ.ಶಿವಶಂಕರ
ಸರ್ಕಾರದ ಅಧೀನ ಕಾರ್ಯದರ್ಶಿ,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು).
೪೧೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ಭಾಗ ೨ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಕುಕ 208 ಪಿಟಿಡಿ 2016, ಬೆಂಗಳೂರು, ದಿನಾಂಕ: 05.02.2019
ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ/01/ಆರ್‌ಟಿಬಿ-2/2016, ದಿನಾಂಕ: 17.12.2016 ರನ್ವಯ ಆಯ್ಕೆಗೊಂಡಿರುವ ಈ ಕೆಳಕಂಡ ಅಭ್ಯರ್ಥಿಗಳು ಆಯುಷ್ ಇಲಾಖೆಯ ಆಡಳಿತ ನಿಯಂತ್ರಣಕ್ಕೊಳಪಡುವ ಸರ್ಕಾರಿ ಆಯುರ್ವೇದ/ಹೋಮಿಯೋಪತಿ /ಯುನಾನಿ ವೈದ್ಯಕೀಯ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು(ಆಯುರ್ವೇದ) ವೃಂದದ ವೇತನ ಶ್ರೇಣಿ ರೂ. 37400-67000+ಎಜಿಪಿ-10,000 ರ ಹುದ್ದೆಗಳಿಗೆ ಅವರುಗಳ ಹೆಸರಿನ ಮುಂದೆ ಕಲಂ 6 ರಲ್ಲಿ ನಮೂದಿಸಿರುವ ಸ್ಥಳಕ್ಕೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.
| ಕ್ರ. ಸಂ. | ಹೆಸರು /ಪದನಾಮ ಮತ್ತು ವಿಳಾಸ | ತಜ್ಞತೆ | ಹ ುಟ್ಟಿದ ದಿನಾಂಕ | ಮೀಸಲಾತಿ | ನ ೕಮಕಾತಿ ಮಾಡಿದ ಕಾಲೇಜು ಮತ್ತು ೆ ಸ್ಥಳ |
| ಪ್ರಾಧ್ಯಾಪಕರು (ಆಯುರ್ವೇದ) | |||||
| 01 | ಡಾ|| ವರ್ಷಾ ಕುಲಕರ್ಣಿ ಪ್ರಾಧ್ಯಾಪಕರು (ಆಯುರ್ವೇದ) C/o ವಸಂತ್ ಕುಲಕರ್ಣಿ, ಬನಶ್ರೀ ನಿಲಯ, 8ನೇ ಕ್ರಾಸ್, ಸಿ.ಬಿ.ಎಸ್.ಸಿ. ಸ್ಕೂಲ್ ಹತ್ತಿರ, ವಿದ್ಯಾಗಿರಿ, ಬಾಗಲಕೋಟೆ-587102 | ಪ ಂಚಕರ್ಮ | 22.07.1976 | ಸಾಮಾನ್ಯ | ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು. (ಈ ನೇಮಕಾತಿಯು ಕೆ.ಎ.ಟಿ. ಅರ್ಜಿ ಸಂಖ್ಯೆ: 1247-48/2018 2159-2164/2018, 2821/2018, 7156/2018ರ ಅಂತಿಮ ತೀರ್ಪಿಗೊಳಪಟ್ಟಿರುತ್ತದೆ). |
| 02 | ಡಾ|| ಪ್ರಶಾಂತ್ ಕೇಕುಡ ಟಿ.ಆರ್. ಪ್ರಾಧ್ಯಾಪಕರು (ಆಯುರ್ವೇದ), ವಿನಾಯಕ, ನಂ.86, 2ನೇ ಕ್ರಾಸ್, ಎಲ್.ಐ.ಸಿ. ಆಫೀಸ್ ಹಿಂಭಾಗ, ಕೋಟೆ ರಸ್ತೆ, ಶಿವಮೊಗ್ಗ – 577202 | ಕಿ ಯಾಶರೀರ ್ರ | 08.05.1978 | ಸಾಮಾನ್ಯ | ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ, ಶಿವಮೊಗ್ಗ. (ಈ ನೇಮಕಾತಿಯು ಕೆ.ಎ.ಟಿ. ಅರ್ಜಿ ಸಂಖ್ಯೆ: 2159-2164/2018, ಅಂತಿಮ ತೀರ್ಪಿಗೊಳಪಟ್ಟಿರುತ್ತದೆ). |
| 03 | ಡಾ|| ವಸುಧ ಎ. ಪ್ರಾಧ್ಯಾಪಕರು (ಆಯುರ್ವೇದ), ನಂ.1274, 20ನೇ ಕ್ರಾಸ್, ಡಿ-ಗ್ರೂಪ್ ಲೇಔಟ್, ಶ್ರೀಗಂಧದಕಾವಲ್, ನಾಗರಭಾವಿ, ಬೆಂಗಳೂರು-560091. | ಶ ಲ್ಯತಂತ್ರ | 09.09.1979 | ಸಾಮಾನ್ಯ | ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಬೆಂಗಳೂರು. |
ಈ ನೇಮಕಾತಿಯು ಈ ಕೆಳಕಂಡ ಷರತ್ತುಗಳಿಗೆ ಒಳಪಟ್ಟಿದೆ.
1. ಈ ಉದ್ಯೋಗ ನೀಡಿಕೆಯಲ್ಲಿ ಅಭ್ಯರ್ಥಿಯ ವೈದ್ಯಕೀಯ ಪರೀಕ್ಷೆ, ಪೊಲೀಸ್ ವರದಿ, ಜಾತಿ ಹಾಗೂ ಆದಾಯ ಪತ್ರ, ಅಲ್ಲದೇ ಸರ್ವೋತ್ತಮ ದಾಖಲೆಗಳ ತನಿಖೆಗೆ ಒಳಪಟ್ಟಿರುತ್ತದೆ.
2. ಸದರಿ ನೇಮಕಾತಿಯು ಕರ್ನಾಟಕ ನಾಗರೀಕ ಸೇವಾ (ಪರೀಕ್ಷಾರ್ಥ) ನಿಯಮಾವಳಿ 1971ರ ನಿಯಮ 5 ಮತ್ತು 6ರನ್ವಯ 2 ವರ್ಷಗಳ ಖಾಯಂಪೂರ್ವ ಪರೀಕ್ಷಾರ್ಥ ಸೇವಾ ಅವಧಿಗೆ ಒಳಪಟ್ಟಿರುತ್ತದೆ.
3. ಸದರಿ ಅಭ್ಯರ್ಥಿಗಳ ನೇಮಕಾತಿಯು ಮತ್ತು ಸೇವಾ ಸೌಲಭ್ಯಗಳು ಆಗಿಂದಾಗ್ಗೆ ಜಾರಿಯಲ್ಲಿರುವ ನಿಯಮಗಳು : ಆದೇಶಗಳ ಅಧೀನಕ್ಕೊಳಪಟ್ಟಿರುತ್ತದೆ.
4. ಸದರಿ ನೇಮಕಾತಿಯು ತಾತ್ಕಾಲಿಕವಾಗಿದ್ದು, ತಕ್ಷಣದಿಂದ ಜಾರಿಗೆ ಬರುತ್ತದೆ.
5. ಈ ನೇಮಕಾತಿಯು ಆದೇಶ ತಲುಪಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಗಳು ಆಯುಷ್ ಇಲಾಖೆಯ ಆಯುಕ್ತರ ಕಛೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿ, ಅವರಿಂದ ಚಲನಾದೇóಶವನ್ನು ಪಡೆದು ನಂತರ ನೇಮಕ ಮಾಡಲಾದ ಹುದ್ದೆ ಮತ್ತು ಸ್ಥಳಕ್ಕೆ ತಪ್ಪದೇ ಕರ್ತವ್ಯಕ್ಕೆಭಾಗ ೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ೪೧೯ ಹಾಜರಾಗತಕ್ಕದ್ದು. ನಿಗದಿತ ದಿನಾಂಕದೊಳಗಾಗಿ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ, ನೇಮಕಾತಿಯ ಆದೇಶವನ್ನು ಯಾವುದೇ ಮುನ್ಸೂಚನೆ ಇಲ್ಲದೆ ರದ್ದುಪಡಿಸಲಾಗುವುದು.
6. ಸದರಿ ಅಭ್ಯರ್ಥಿಗಳು ಸರ್ಕಾರವು ನಿಗದಿಪಡಿಸಿದ ಎ) ಕನ್ನಡ ಭಾಷಾ ಪರೀಕ್ಷೆ, ಬಿ) ಅಕೌಂಟ್ಸ್ ಹೈಯರ್, ಸಿ) ಜನರಲ್ ಲಾ ಭಾಗ-1 ಹಾಗೂ ಸಂಬಂಧಪಟ್ಟ ಇತರೆ ಪರೀಕ್ಷೆಗಳಲ್ಲಿ ಖಾಯಂಪೂರ್ವ ಅವಧಿಯಾದ 2 ವರ್ಷದೊಳಗೆ ತೇರ್ಗಡೆ ಹೊಂದತಕ್ಕದ್ದು.
7. ಸದರಿ ಅಭ್ಯರ್ಥಿಗಳು ನೇಮಕ ಮಾಡಲ್ಪಟ್ಟ ಕೇಂದ್ರ ಸ್ಥಳಗಳಲ್ಲಿಯೇ ವಾಸಿಸತಕ್ಕದ್ದು. ಸದರಿ ಅಭ್ಯರ್ಥಿಗಳಿಗೆ ನೇಮಕಾತಿ ಮಾಡಿದ ಸ್ಥಳಕ್ಕೆ ಸೇರಲು ಯಾವುದೇ ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ನೀಡಲಾಗುವುದಿಲ್ಲ.
8. ಸದರಿ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗುವ ಮೊದಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮೂಲ ದಾಖಲೆಗಳನ್ನು ಅಂದರೆ ಪ್ರಾಧ್ಯಾಪಕರು ಹುದ್ದೆಗೆ ಗೊತ್ತುಪಡಿಸಿರುವ ವಿದ್ಯಾರ್ಹತೆ, ಅಂಕಪಟ್ಟಿ, ಜನ್ಮ ದಿನಾಂಕದ ದಾಖಲೆ ಇತ್ಯಾದಿಗಳನ್ನು ಸಲ್ಲಿಸತಕ್ಕದ್ದು.
9. ಅಭ್ಯರ್ಥಿಯು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರುಪಡಿಸತಕ್ಕದ್ದು.
10. ಸದರಿ ಅಭ್ಯರ್ಥಿಗಳು ವಿದ್ಯಾರ್ಹತೆ, ಜನ್ಮ ದಿನಾಂಕ ಇತ್ಯಾದಿ ಪ್ರಮಾಣ ಪತ್ರಗಳಲ್ಲಿ ತಪ್ಪು ಮಾಹಿತಿ ಒದಗಿಸಿರುವುದು ಕಂಡು ಬಂದಲ್ಲಿ ಅವರ ನೇಮಕಾತಿ ಆದೇಶವನ್ನು ಯಾವುದೇ ಮುನ್ಸೂಚನೆ ಇಲ್ಲದೆ ರದ್ದುಗೊಳಿಸಲಾಗುವುದು ಮತ್ತು ಅಭ್ಯರ್ಥಿಯ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು.
11. ಸದರಿ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾದ ಬಗ್ಗೆ ಸರ್ಕಾರವನ್ನೊಳಗೊಂಡಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಸಿಟಿಸಿಯನ್ನು ಕಳುಹಿಸತಕ್ಕದ್ದು.
12. ಈ ಆದೇಶದನ್ವಯ ಯಾವುದೇ ಅಭ್ಯರ್ಥಿಯು 15 ದಿನಗಳೊಳಗಾಗಿ ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ, ಅಂತಹ ಪ್ರಕರಣವನ್ನು ಕೂಡಲೇ ಆಯುಕ್ತರು, ಆಯುಷ್ ಇಲಾಖೆ ಇವರು ಸರ್ಕಾರದ ಗಮನಕ್ಕೆ ತರತಕ್ಕದ್ದು.
13. ಅಭ್ಯರ್ಥಿಗಳು ತಮ್ಮ ಸೇರುವಿಕೆ ಕಾಲದೊಳಗೆ ಅಂಗೀಕೃತ ವೈದ್ಯಕೀಯ ಮಂಡಳಿಯಿಂದ ತಪಾಸಣೆಗೊಳಪಟ್ಟು, ವೈದ್ಯಕೀಯ ಪ್ರಮಾಣ ಪತ್ರದೊಂದಿಗೆ ಕರ್ತವ್ಯಕ್ಕೆ ಹಾಜರಾಗತಕ್ಕದ್ದು.
ಅಭ್ಯರ್ಥಿಗಳು ತಮ್ಮ ಜೇಷ್ಠತೆಯನ್ನು ಕರ್ನಾಟಕ ಲೋಕಸೇವಾ ಆಯೋಗದವರು ನೀಡಿರುವ ಪಟ್ಟಿಯ ಕ್ರಮಾಂಕದ ಮೇರೆಗೆ ಪಡೆಯುತ್ತಾರೆ.
PR - 1142
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC - 50
ಬಿ.ಕಮಲಮ್ಮ
ಸರ್ಕಾರದ ಅಧೀನ ಕಾರ್ಯದರ್ಶಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
(ಭಾರತೀಯ ವೈದ್ಯಪದ್ಧತಿ & ಸಮನ್ವಯ)
ಒಳಾಡಳಿತ ಸಚಿವಾಲಯ
ಸುತ್ತೋಲೆ
ಸಂಖ್ಯೆ: ಹೆಚ್‌ಡಿ 11 ಸಿಎನ್ಎ 2017, ಬೆಂಗಳೂರು, ದಿನಾಂಕ: 06.07.2019
ವಿಷಯ: ರಾಜ್ಯದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಸ್ವಚ್ಛತೆ, ನೈರ್ಮಲ್ಯತೆ ಹಾಗೂ ತಿಂಡಿ
ತಿನಿಸುಗಳಿಗೆ ಏಕರೀತಿಯ ದರ ನಿಗದಿಪಡಿಸುವ ಬಗ್ಗೆ.
ದಿನಾಂಕ:02.07.2019ರಂದು ನಡೆದ ಕರ್ನಾಟಕ ವಿಧಾನ ಮಂಡಲದ ಅಧೀನ ಶಾಸನ ರಚನಾ ಸಮಿತಿ ಸಭೆಯಲ್ಲಿ ಸಮಿತಿಯ ಶಿಫಾರಸ್ಸಿನಂತೆ ಕರ್ನಾಟಕ ಸರ್ಕಾರವು ಕೆಳಕಂಡ ನಿರ್ದೇಶನಗಳನ್ನು ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆ, 1964ರ ಸೆಕ್ಷನ್-14ರನ್ವಯ ಚಿತ್ರಮಂದಿರಗಳ
ಪರವಾನಗಿ ಪ್ರಾಧಿಕಾರಗಳಿಗೆ ನೀಡಿದೆ:-
(1) ರಾಜ್ಯದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಸ್ವಚ್ಛತೆ, ನೈರ್ಮಲ್ಯತೆಯನ್ನು ಉತ್ತಮ ಮಟ್ಟದಲ್ಲಿ ನಿರ್ವಹಿಸಲು ಸೂಚಿಸತಕ್ಕದ್ದು ಹಾಗೂ ಈ ಬಗ್ಗೆ ಚಿತ್ರಮಂದಿರಗಳನ್ನು ಕಡ್ಡಾಯವಾಗಿ ತ್ರೈಮಾಸಿಕ ತಪಾಸಣೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸತಕ್ಕದ್ದು.
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೪೨೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೧೫, ೨೦೧೯ ಭಾಗ ೨(2) ಮಲ್ಟಿಪ್ಲೆಕ್ಸ್‌ಗಳಲ್ಲಿ ಮಾರಾಟ ಮಾಡುವ ಅವರದೇ ಬ್ರಾಂಡ್‌ನ ತಿಂಡಿ-ತಿನಿಸು ಪಾನೀಯಗಳಿಗೆ ಮಾರುಕಟ್ಟೆ ದರಗಳಿಗೆ ಸಮಾನಾಂತರವಾಗಿ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಏಕರೀತಿಯ ಬೆಲೆ ನಿಗದಿಪಡಿಸುವ ಬಗ್ಗೆ ಹಾಗೂ ಈ ಆಹಾರ ಪದಾರ್ಥಗಳೊಂದಿಗೆ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಕಂಪನಿಗಳ ಕುಡಿಯುವ ನೀರು (ಬಿಸ್ಲೇರಿ, ಕಿನ್ಲೆ ಹಾಗೂ ಇನ್ನಿತರೆ ಬ್ರಾಂಡೆಡ್ ಕಂಪನಿ), ತಿಂಡಿ / ತಿನಿಸು (ಬ್ರಾಂಡೆಡ್ ಕಂಪನಿಗಳ ಬಿಸ್ಕೆಟ್‌ಗಳು, ಚಿಪ್ಸ್) ಮತ್ತು ತಂಪು ಪಾನೀಯಗಳನ್ನು ನಿಗದಿತ ದರಗಳಲ್ಲಿ (M.R.P) ಗ್ರಾಹಕರಿಗೆ ದೊರೆಯುವಂತೆ ವ್ಯವಸ್ಥೆ ಮಾಡಲು ಮಲ್ಟಿಪ್ಲೆಕ್ಸ್‌ಗಳಿಗೆ ಪರವಾನಗಿ ಷರತ್ತಾಗಿ ವಿಧಿಸಿ ಜಾರಿಗೊಳಿಸತಕ್ಕದ್ದು.
PR - 1143
ಎಂ.ಆರ್.ಶೋಭಾ
SC - 50
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ (ಸೆರೆಮನೆ ಮತ್ತು ಸಿನಿಮಾ)
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.