Servants of Knowledge
Karnataka Gazette · Government of Karnataka

Karnataka Gazette, Part Part-5, 22 August 2019

Published 22 August 2019

Part
Part-5
Identifier
in.gazette.karnataka_new.2019-08-22.Part-5
Languages
English, Kannada
Published at
Original source ↗

click here for IIIF manifest

ಸಂಪುಟ ೧೫೪

Volume 154

ಬೆಂಗಳೂರು, ಗುರುವಾರ, ಆಗಸ್ಟ್ ೨೨, ೨೦೧೯ (ಶ್ರಾವಣ ೩೧, ಶಕ ವರ್ಷ ೧೯೪೧)

Bengaluru, Thursday, August 22, 2019 (Shravana 31, Shaka Varsha 1941)

ಸಂಚಿಕೆ ೩೪

Issue 34

ಭಾಗ ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಕಂದಾಯ ಇಲಾಖೆ

ಅಧ್ಯಕ್ಷರು, ಆಯ್ಕೆ ಪ್ರಾಧಿಕಾರ ಮತ್ತು ನೇಮಕಾತಿ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳು, ಜಿಲ್ಲಾಧಿಕಾರಿಗಳ ಕಾರ್ಯಾಲಯ,

ಮೈಸೂರು ಜಿಲ್ಲೆ, ಮೈಸೂರು

ಅಧಿಸೂಚನೆ

ಸಂ: MYSDC-EST2/VA (15) /1/2019 E- 70600, ದಿನಾಂಕ: 10/07/2019

ವಿಷಯ: 2019-20ನೇ ಸಾಲಿನಲ್ಲಿ ಮೈಸೂರು ಜಿಲ್ಲಾ ಕಂದಾಯ ಘಟಕದ ತಾಲ್ಲೂಕು ಕಛೇರಿಗಳಲ್ಲಿ ಖಾಲಿ

ಇರುವ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು.

ಉಲ್ಲೇಖ: 1. ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 08 ಸೆಹಿಮ 95 ದಿನಾಂಕ: 20/06/1995.

2. ಸರ್ಕಾರದ ಅಧಿಸೂಚನೆ ಸಂಖ್ಯೆ ಕಂಇ 299 ಬಿಎಸ್‌ಸಿ 2006 ದಿನಾಂಕ: 03/02/2009.

3. ಸರ್ಕಾರದ ಅಧಿಸೂಚನೆ ಸಂಖ್ಯೆ ಕಂಇ 299 ಬಿಎಸ್‌ಸಿ 2006 ದಿನಾಂಕ: 24/07/2009.

4. ಸರ್ಕಾರದ ಆದೇಶ ಸಿಆಸುಇ 128 ಸೆನೆನಿ 2006 ದಿನಾಂಕ: 01/08/2009.

5. ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 53 ಸೆನೆನಿ 2007 ದಿನಾಂಕ: 04/01/2008.

6. ಸರ್ಕಾರದ ಆದೇಶ ಸಂಖ್ಯೆ 666 ಎಎಸ್‌ಡಿ 2012 (ಭಾಗ) ದಿನಾಂಕ: 04/07/2013.

7. ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 3 ಸೆಹಿಮ 2015 ದಿನಾಂಕ: 03/10/2015.

8. ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 143 ಸೆನೆನಿ 2015 ದಿನಾಂಕ: 08/01/2016.

9. ಸರ್ಕಾರದ ಅ.ಸ.ಪತ್ರ ಸಂಖ್ಯೆ 103 ಬಿಎಸ್‌ಸಿ 2016 ದಿನಾಂಕ: 22/07/2016.

(೧೨೨೯)೧೨೩೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೨, ೨೦೧೯ ಭಾಗ ೫ 04 ಒಟ್ಟು ಹೊಸ ಹುದ್ದೆಗಳ ಸಂಖ್ಯೆ : 70 ಹುದ್ದೆಗಳು

06 ಹುದ್ದೆಯ ಮೀಸಲಾತಿ ವರ್ಗೀಕರಣ : ಮೈಸೂರು ಜಿಲ್ಲಾ ಕಂದಾಯ ಘಟಕದಲ್ಲಿ ಖಾಲಿ ಇರುವ ಗ್ರಾಮಲೆಕ್ಕಿಗರ

ಹುದ್ದೆಗಳು – 65 + 05 = 70 (ಬ್ಯಾಕ್‌ಲಾಗ್ ಹುದ್ದೆಗಳು ಸೇರಿ)

ಕ್ರ. ಸಂ. ವರ್ಗೀಕರಣ ಪ.ಜಾ ಪ .ಪಂ ಹಿಂಬಾಕಿ (ವ-1) ವ ರ್ಗ ಹಿಂಬಾಕಿ (ವ-2ಎ) ವ ರ್ಗ 2ಎ ವ -2ಬಿ ಹಿಂಬಾಕಿ (ವ-3ಎ) ವ ರ್ಗ 3ಎ ವ ರ್ಗ 3ಬಿ ಸಾ. ಅ ಒಟ್ಟು
1 ಸಾಮಾನ್ಯ 2 0 0 0 0 2 0 0 0 2 5 11
2 ಮಹಿಳೆ 3 0 0 0 1 3 1 1 1 1 12 23
3 ಗ್ರಾಮೀಣ 2 1 0 1 0 2 1 0 1 0 8 16
4 ಮಾಜಿ ಸೈನಿಕ 1 0 0 0 2 1 0 0 0 1 4 9
5 ಕನ್ನಡ ಮಾಧ್ಯಮ 0 1 1 0 0 0 0 0 0 0 1 3
6 ಯೋಜನಾ ನಿರಾಶ್ರಿತ 1 0 0 1 0 1 1 0 1 0 1 6
7 ಅಂಗವಿಕಲ 0 0 0 0 0 0 0 0 0 0 2 2
ಒಟ್ಟು 9 2 1 2 3 9 3 1 3 4 33 70

* ರೋಸ್ಟರ್ ಬಿಂದು (Vertical) ಃ 60 ರಿಂದ ಪ್ರಾರಂಭಿಸಲಾಗಿದೆ

* ಅಂಗವಿಕಲ ಮೀಸಲಾತಿ ಅಂದರೆ

➢ ಸಾಮಾನ್ಯ ಅಭ್ಯರ್ಥಿ – 1) ಮಾನಸಿಕ ಅಸ್ವಸ್ಥತೆ / ಬುದ್ಧಿಮಾಂಧ್ಯತೆ/ ಕುಷ್ಠರೋಗದಿಂದ

ನಿವಾರಣೆಯಾದವರು (Mentally ill / Mental Retardation/ Leprosy Cured)

➢ ಸಾಮಾನ್ಯ ಅಭ್ಯರ್ಥಿ – 2) ದೃಷ್ಠಿಮಾಂದ್ಯತೆ (Blindness/ Low vision)

08 ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 29/07/2019

09 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28/08/2019ರಂದು (ಸಂಜೆ 5-30 ಗಂಟೆವರೆಗೆ)

10 ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಹತೆ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ಸಿಬಿಎಸ್ಇ ಅಥವಾ

ಐಸಿಎಸ್ಇ ಇವರು ನಡೆಸುವ 12 ನೇ ತರಗತಿ ಪರೀಕ್ಷೆಯಲ್ಲಿ

ತೇರ್ಗಡೆಯಾಗಿರತಕ್ಕದ್ದು. ಈ ವಿದ್ಯಾರ್ಹತೆಯನ್ನು ಅಧಿಸೂಚನೆ ಹೊರಡಿಸುವ

ದಿನಾಂಕಕ್ಕೆ ಮುಂಚಿತವಾಗಿ ಹೊಂದಿರತಕ್ಕದ್ದು.

ಮೇಲ್ಕಂಡ ವಿದ್ಯಾರ್ಹತೆಯನ್ನು ಹೊರತುಪಡಿಸಿ ಇನ್ನಿತರ ಯಾವುದೇ ತತ್ಸಮಾನ

ವಿದ್ಯಾರ್ಹತೆಗಳನ್ನು ಹಾಗೂ ಮುಕ್ತ ವಿಶ್ವ ವಿದ್ಯಾಲಯದಿಂದ ಪಡೆದ

ವಿದ್ಯಾರ್ಹತೆಯನ್ನು ಈ ಹುದ್ದೆಗೆ ಪರಿಗಣಿಸಲಾಗುವುದಿಲ್ಲ

ಕಂಪ್ಯೂಟರ್ ಜ್ಞಾನ ಹೊಂದಿರತಕ್ಕದ್ದು.

11 ಹುದ್ದೆಗೆ ನಿಗಧಿಪಡಿಸಿರುವ ವೇತನ ಶ್ರೇಣಿ : ರೂಃ21400-500-22400-550-24600-600-27000-650-29600-

750-32600-850-36000-950-39800-1100-42000

ಕ್ರಮ ಸಂಖ್ಯೆ ಮೀಸಲಾತಿ ವರ್ಗ ವಯೋಮಿತಿ
01 ಸಾಮಾನ್ಯ 18 ರಿಂದ 35 ವರ್ಷ
02 ಪ ವರ್ಗ-2ಎ, 2ಬಿ, 3ಎ, 3ಬಿ ್ರ 18 ರಿಂದ 38 ವರ್ಷ
03 ಪ ವರ್ಗ-1, ಪ.ಜಾ, ಪ.ಪಂ ್ರ 18 ರಿಂದ 40 ವರ್ಷ
ಕ್ರಮ ಸಂಖ್ಯೆ ಮೀಸಲಾತಿ ವರ್ಗ ಶುಲ್ಕ ಪಾವತಿಸುವ ವಿಧಾನ
01 ಪ ರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ ರೂಃ 25/- ಆನ್‌ಲೈನ್ / ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ಚಲನ್ ಹಾಗೂ
02 ಇತರೆ ಹಿಂದುಳಿದ ವರ್ಗಗಳು (CAT-1, 2A, 2B, 3A, 3B) ರ ೂಃ 150/- ಇತ್ಯಾದಿಗಳ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ಗೆ ಆನ್‌ಲೈನ್ ಮೂಲಕ ಜಮಾ ಮಾಡತಕ್ಕದ್ದು.
03 ಇತರೆ ಅಭ್ಯರ್ಥಿಗಳು ರೂಃ 300/-
04 ಬ್ಯಾಂಕ್ ಶುಲ್ಕ ಪ್ರತ್ಯೇಕ
ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೨, ೨೦೧೯ ೧೨೩೧

14 ಹುದ್ದೆಯ ಆಯ್ಕೆ ವಿಧಾನ : ಅಭ್ಯರ್ಥಿಯು ದ್ವಿತೀಯ ಪಿಯುಸಿ / ಸಿಬಿಎಸ್ಇ / ಐಸಿಎಸ್ಇ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ

ಶೇಕಡಾವಾರು ಮೆರಿಟ್ ಆಧಾರದಲ್ಲಿ ಮೀಸಲಾತಿಗೆ ಅನುಗುಣವಾಗಿ ಸರ್ಕಾರದ ಅಧಿಸೂಚನೆ ಸಂಖ್ಯೆ ಆರ್‌ಡಿ

299 ಬಿಎಸ್‌ಸಿ 2009 ದಿನಾಂಕಃ 03-02-2009 ರನ್ವಯ ಆಯ್ಕೆ ಮಾಡಲಾಗುವುದು.

15 ಹುದ್ದೆಗೆ ಆಯ್ಕೆ ಮಾಡಲು ನಿಬಂಧನೆಗಳು :

1. ಅರ್ಹ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಮಾತ್ರ ಅರ್ಜಿ ಸಲ್ಲಿಸುವುದು. ಕಂಪ್ಯೂಟರ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅರ್ಜಿಯನ್ನು ಭರ್ತಿ ಮಾಡಿದ ತರುವಾಯ ಅಭ್ಯರ್ಥಿಯು ವೆಬ್‌ಸೈಟ್‌ನಲ್ಲಿರುವ "ಎಸ್‌ಬಿಐ ಕಲೆಕ್ಟ್" ಲಿಂಕ್ ಮುಖಾಂತರ ಅರ್ಜಿ ಶುಲ್ಕ ಪಾವತಿಸಿವುದು.

2. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಎಸ್‌ಬಿಐ ಬ್ಯಾಂಕ್‌ನಲ್ಲಿ ದಿನಾಂಕಃ 28/08/2019 ರಂದು ಪಾವತಿಸಲು ಅಂತಿಮ ದಿನಾಂಕವಾಗಿರುತ್ತದೆ. ತದನಂತರ ಅರ್ಜಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ.

www.mysore.nic.in ಆನ್‌ಲೈನ್ ಅರ್ಜಿ ದಿನಾಂಕಃ 29/07/2019 ರಿಂದ ಲಭ್ಯವಿರುತ್ತದೆ ಮತ್ತು ದಿನಾಂಕ: 28/08/2019 ರ ಸಂಜೆ 5-30 ಗಂಟೆವರೆಗೆ ಮಾತ್ರ ಲಭ್ಯವಾಗುವುದು. ಆನ್‌ಲೈನ್ (Online) ಹೊರತುಪಡಿಸಿ ಇತರೆ ಯಾವುದೇ ವಿಧದಲ್ಲಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಯಾವುದೇ ಮುನ್ಸೂಚನೆ ನೀಡದೇ ವಿಲೇ ಇಡಲಾಗುವುದು.

4. ಅಭ್ಯರ್ಥಿಯು ಎಲ್ಲಾ ಪ್ರಮಾಣ ಪತ್ರಗಳನ್ನು ಮತ್ತು ಅಂಕಪಟ್ಟಿಗಳನ್ನು ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನಾಂಕಕ್ಕೆ ಮುಂಚಿತವಾಗಿ ಹೊಂದಿರತಕ್ಕದ್ದು.

5. ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಇಲಾಖಾ ಮುಖ್ಯಸ್ಥರು ನೀಡಿರುವ ನಿರಾಪೇಕ್ಷಣಾ ಪತ್ರವನ್ನು ಹೊಂದಿರತಕ್ಕದ್ದು.

6. ಅಭ್ಯರ್ಥಿಯ ಜನ್ಮ ದಿನಾಂಕವನ್ನು ಎಸ್ಎಸ್ಎಲ್‌ಸಿ ಅಂಕಪಟ್ಟಿಯ ಆಧಾರದ ಮೇಲೆ ಸಲ್ಲಿಸತಕ್ಕದ್ದು

7. ಮಾಜಿ ಸೈನಿಕ ಮೀಸಲಾತಿ ಹುದ್ದೆಗೆ ಸಂಬಂಧಿಸಿದಂತೆ, ಸೈನಿಕ ಸೇವೆಯಿಂದ ಬಿಡುಗಡೆ ಹೊಂದಿರುವ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು ಹಾಗೂ ಮಾಜಿ ಸೈನಿಕರ ಕುಟುಂಬದ ಅಭ್ಯರ್ಥಿಗಳ ಮೀಸಲಾತಿ ಕೋರ ಬಯಸುವ ಅಭ್ಯರ್ಥಿಗಳು ಭಾರತ ದೇಶದ ಒಕ್ಕೂಟ ಸಶಸ್ತ್ರ ದಳದಲ್ಲಿ ಸೇವೆ ಸಲ್ಲಿಸಿರುತ್ತಿರುವಾಗ ಮರಣ ಹೊಂದಿದ ಅಥವಾ ಶಾಶ್ವತವಾಗಿ ಅಂಗಹೀನರಾದ ವ್ಯಕ್ತಿಗಳ ಕುಟುಂಬದ ಸದಸ್ಯರು ಎಂಬ ಬಗ್ಗೆ ಸಕ್ಷಮ ಮಿಲಿಟರಿ ಅಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆದಿರಬೇಕು. ಈ ಪ್ರಮಾಣ ಪತ್ರವನ್ನು ಪರಿಶೀಲನಾ ದಿನಾಂಕದಂದು ಕಡ್ಡಾಯವಾಗಿ ಹಾಜರುಪಡಿಸುವುದು.

8. ಅಂಗವಿಕಲ ಮೀಸಲಾತಿ ಪಡೆಯಲಿಚ್ಛಿಸುವ ಅಭ್ಯರ್ಥಿಗಳು ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 115 ನೇನನಿ 2005 ದಿನಾಂಕಃ 19-11-2005 ರಲ್ಲಿ ನಿಗಧಿಪಡಿಸಿರುವ ನಮೂನೆಯಲ್ಲಿ ಅಂಗವಿಕಲತೆಯ ಬಗ್ಗೆ ಸಂಬಂಧಪಟ್ಟ ಜಿಲ್ಲಾ ಮಟ್ಟದ ವೈದ್ಯಕೀಯ ಮಂಡಳಿಯು ನೀಡುವ ಪ್ರಮಾಣ ಪತ್ರವನ್ನು ಹೊಂದಿರತಕ್ಕದ್ದು.

9. ಸರ್ಕಾರದ ಅಧಿಸೂಚನೆ ಸಂಖ್ಯೆ ಡಿಪಿಎಆರ್ 52 ಎಸ್ಆರ್ಆರ್ 99 ದಿನಾಂಕಃ 29-11-2002 ಮತ್ತು ಸರ್ಕಾರದ ಸುತ್ತೋಲೆ ಸಂಖ್ಯೆ ಕಂಇ 100 ಬಿಎಸ್‌ಸಿ 2011 ದಿನಾಂಕ : 29-06-2012 ರಲ್ಲಿ ಗ್ರಾಮಲೆಕ್ಕಿಗರ ಹುದ್ದೆಗೆ ಆಯ್ಕೆ ಮಾಡಲು ಗುರುತಿಸಿರುವ ಅಂಗವಿಕಲತೆಯಾದ೧೨೩೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೨, ೨೦೧೯ ಭಾಗ ೫ 11. ಕನ್ನಡ ಮಾಧ್ಯಮ ಮತ್ತು ಗ್ರಾಮೀಣ ಮೀಸಲಾತಿಯಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ : 13-02-2001 ರ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 8 ಸೇನನಿ 2001 ರಲ್ಲಿ ನಿಗಧಿಪಡಿಸಿರುವ ನಮೂನೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲು ಸಹಿಯನ್ನು ಪಡೆದು ಪ್ರಮಾಣ ಪತ್ರ ಹೊಂದಿರತಕ್ಕದ್ದು.

12. ಇಬ್ಬರು ಗಣ್ಯ ವ್ಯಕ್ತಿಗಳಿಂದ ಅಥವಾ ಪತ್ರಾಂಕಿತ ಅಧಿಕಾರಿಗಳಿಂದ ಪಡೆದ ನಡತೆ ಪ್ರಮಾಣ ಪತ್ರ ಹೊಂದಿರತಕ್ಕದ್ದು.

13. ಯೋಜನೆಗಳಿಂದ ನಿರ್ವಸಿತರಾದ ಕುಟುಂಬದ ಅಭ್ಯರ್ಥಿಗಳಿಗೆ ಮೀಸಲಿರಿಸಿದ ಹುದ್ದೆಗಳನ್ನು ಕ್ಲೈಮ್ ಮಾಡುವ ಅಭ್ಯರ್ಥಿಗಳು ಸಂಬಂಧಿಸಿದ ತಹಸೀಲ್ದಾರ್ ರವರು ನೀಡಿದ ಪ್ರಮಾಣ ಪತ್ರವನ್ನು ಪರಿಶೀಲನಾ ದಿನಾಂಕದಂದು ಹಾಜರುಪಡಿಸುವುದು.

14. ಅಭ್ಯರ್ಥಿಯು ಭಾರತೀಯ ನಾಗರೀಕನಾಗಿರತಕ್ಕದ್ದು,

15. ಅಭ್ಯರ್ಥಿಯು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು. ಅವರ ನೇಮಕಾತಿಯ ಕರ್ತವ್ಯಗಳ ದಕ್ಷ ನಿರ್ವಹಣೆಗೆ ಆತಂಕವನ್ನುಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತರಾಗಿರಬೇಕು.

16. ಹುದ್ದೆಗೆ ನಿಗಧಿಪಡಿಸಿರುವ ವಿದ್ಯಾರ್ಹತೆಯನ್ನು ಅಧಿಸೂಚನೆ ಹೊರಡಿಸುವ ದಿನಾಂಕಕ್ಕೆ ಮುಂಚಿತವಾಗಿ ಅಭ್ಯರ್ಥಿಯು ಹೊಂದಿರಬೇಕು, ಅಭ್ಯರ್ಥಿಯು ಗಣಕ ಯಂತ್ರಗಳ ಬಗ್ಗೆ ತಿಳುವಳಿಕೆ ಇರುವ ಬಗ್ಗೆ ದೃಡೀಕೃತ ಪ್ರಮಾಣ ಪತ್ರ ಹೊಂದಿರತಕ್ಕದ್ದು ಹಾಗೂ ಬೇಸಿಕ್ ಕಂಪ್ಯೂಟರ್ ಜ್ಞಾನ ಹೊಂದಿರತಕ್ಕದ್ದು.

17. ನೇಮಕಾತಿ ಪ್ರಕ್ರಿಯೆ ಪ್ರಾರಂಭದ ದಿನಾಂಕದಿಂದ ನೇಮಕಾತಿ ಆದೇಶ ಹೊರಡಿಸುವವರೆಗೆ ಅಭ್ಯರ್ಥಿಗಳಿಗೆ ಯಾವುದೇ ಪತ್ರ ವ್ಯವಹಾರವನ್ನು ಮಾಡಲಾಗುವುದಿಲ್ಲ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ (Online) ಮಾಹಿತಿಯನ್ನು ಪಡೆದು ಮೂಲ ದಾಖಲಾತಿಗಳ ಪರಿಶೀಲನೆಗೆ ಹಾಜರಾಗತಕ್ಕದ್ದು.

18. ನಿಗಧಿತ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದಲ್ಲಿ ಮೀಸಲಾತಿಗನುಗುಣವಾಗಿ ಪರಿಶೀಲನಾ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. ಪರಿಶೀಲನಾ ಪಟ್ಟಿಯಲ್ಲಿನ ಅಭ್ಯರ್ಥಿಗಳು ನಿಗಧಿತ ದಿನಾಂಕದಂದು ಮೂಲ ದಾಖಲಾತಿಗಳ ಪರಿಶೀಲನೆಗಾಗಿ ಹಾಜರಾಗಬೇಕಾಗುತ್ತದೆ.

19. ನಿಗಧಿತ ದಿನಾಂಕದಂದು ದಾಖಲಾತಿಗಳ ಪರಿಶೀಲನೆಗೆ ಹಾಜರಾಗದೇ ಇರುವ ಅಭ್ಯರ್ಥಿಗಳು ಅನರ್ಹಗೊಳ್ಳುತ್ತಾರೆ ಮತ್ತು ಪರಿಶೀಲನಾ ಪಟ್ಟಿಯ ಅಭ್ಯರ್ಥಿಗಳಿಗೆ ಯಾವುದೇ ಪ್ರತ್ಯೇಕ ಸೂಚನಾ ಪತ್ರವನ್ನು ಕಾರ್ಯಾಲಯದಿಂದ ಕಳುಹಿಸುವುದಿಲ್ಲ.

20. ಪ್ರಕಟಿಸಿರುವ ಹುದ್ದೆಗಳನ್ನು ಹೆಚ್ಚು ಅಥವಾ ಕಡಿಮೆ ಮಾಡುವ ಹಕ್ಕು ನೇಮಕಾತಿ ಪ್ರಾಧಿಕಾರಕ್ಕೆ ದತ್ತವಾಗಿರುತ್ತದೆ.

21. ಅಧಿಸೂಚನೆ ಪ್ರಕಟಿಸಿದ ದಿನಾಂಕದಿಂದ ಮಾರ್ಚ್ 2017 ರ ಅಂತ್ಯದವರೆಗೆ ಗ್ರಾಮಲೆಕ್ಕಿಗರ ಪದೋನ್ನತಿಯಿಂದ, ಸ್ವಯಂ ನಿವೃತ್ತಿಯಿಂದ, ವಯೋ ನಿವೃತ್ತಿಯಿಂದ ಅಥವಾ ಇನ್ನಾವುದೇ ವಿಧದಲ್ಲಿ ಖಾಲಿಯಾಗುವ ಹುದ್ದೆಗಳನ್ನು ಮೆರಿಟ್ ಆಧಾರದ ಮೇಲೆ ಮೀಸಲಾತಿಗನುಗುಣವಾಗಿ ಸದರಿ ಪಟ್ಟಿಯಿಂದ ನೇಮಕಾತಿ ಮಾಡುವ ಷರತ್ತಿಗೊಳಪಟ್ಟಿರುತ್ತದೆ.

22. ತಪ್ಪು ಮಾಹಿತಿ ಒದಗಿಸಿದ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ ಹಾಗೂ ಅಂತಹ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ತಿರಸ್ಕರಿಸಲಾಗುವುದು.

23. ಅರ್ಜಿಯನ್ನು ಸ್ವೀಕರಿಸಲು ನಿಗಧಿಪಡಿಸಿರುವ ದಿನಾಂಕವು ಸಾರ್ವಜನಿಕ ರಜಾ ದಿನವಾಗಿ ಘೋಷಿಸಲ್ಪಟ್ಟಿದ್ದರೆ ಅಂತಹ ದಿನಾಂಕದ ಮಾರನೇ ದಿನವನ್ನು ಅರ್ಜಿ ಸ್ವೀಕರಿಸಲು ಕೊನೆ ದಿನಾಂಕವಾಗಿರುತ್ತದೆ.

24. ಈ ಅಧಿಸೂಚನೆ ಅನ್ವಯ ನೇಮಕಾತಿ ಹೊಂದುವ ಅಭ್ಯರ್ಥಿಗಳು ಮೈಸೂರು ಜಿಲ್ಲೆಯ ಯಾವುದೇ ತಾಲ್ಲೂಕುಗಳಲ್ಲಾದರೂ ಸೇವೆ ಸಲ್ಲಿಸಲು ಬದ್ಧರಾಗಿರಬೇಕು.

25. ಅಭ್ಯರ್ಥಿಯು ಯಾವುದೇ ಒತ್ತಡ ತಂದಲ್ಲಿ ಅಂತಹ ಅಭ್ಯರ್ಥಿಯ ಬಗ್ಗೆ ಸರ್ಕಾರದ ನಿಯಮದಂತೆ ಕ್ರಮ ಕೈಗೊಳ್ಳಲಾಗುವುದು.

26. ಅರ್ಜಿಯಲ್ಲಿ ಕೇಳಿರುವ ಪೂರ್ಣ ಮಾಹಿತಿಯನ್ನು ಭರ್ತಿ ಮಾಡಿಲ್ಲದೇ ಇರುವ ಅಭ್ಯರ್ಥಿಗಳ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ತಿರಸ್ಕರಿಸಲಾಗುವುದು.

27. ನೇಮಕಾತಿ ಹೊಂದಿದ ಅಭ್ಯರ್ಥಿಗಳು ಎರಡು (02) ವರ್ಷಗಳ ಪರಿವೀಕ್ಷಣಾ ಅವಧಿಯನ್ನು ಹಾಗೂ ಐದು (05) ವರ್ಷಗಳ ಸೇವೆಯನ್ನು ಮೈಸೂರು ಜಿಲ್ಲೆಯಲ್ಲಿಯೇ ಪೂರೈಸುವುದು ಕಡ್ಡಾಯವಾಗಿರುತ್ತದೆ.

PR- 194

ಅಭಿರಾಮ್ ಜಿ ಶಂಕರ್

SC- 50

ಅಧ್ಯಕ್ಷರು,

ಆಯ್ಕೆ ಪ್ರಾಧಿಕಾರ ಹಾಗೂ ನೇಮಕಾತಿ ಪ್ರಾಧಿಕಾರ,

ಮತ್ತು ಜಿಲ್ಲಾಧಿಕಾರಿ,

ಮೈಸೂರು ಜಿಲ್ಲೆ, ಮೈಸೂರು.

ಭಾಗ ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೨, ೨೦೧೯ ೧೨೩೩

FORM-IV

(See Rule 12)

NOTICE

Dated : 23-06-2018.

IT IS HEREBY NOTIFIED THAT THE UNDERSIGNED HAS CHANGED HIS NAME FROM YALLAPPA BASAPPA MADAR t o YALLAPPA BASAPPA BIDARI.

PD-C/N-66

YALLAPPA BASAPPA MADAR

SC - 10

FORM-IV

(See Rule 12)

NOTICE

Dated : 19-06-2019.

IT IS HEREBY NOTIFIED THAT THE UNDERSIGNED HAS CHANGED HIS NAME FROM BASAPPA SAMAGAR t o BASAPPA INGALE.

PD-C/N-67

BASAPPA SAMAGAR

SC - 10

FORM - I

(See Rule-9)

POLICE DEPARTMENT

Office of the Superintendent of Police, Belagavi

NOTIFICATION

Dated : 15-07-2019.

Sri. SHASHIKANT BHARAMAPPA NAVI. Working as Civil Head Constable B.No. 928, Ankali Police Station, Belagavi Dist. Police Department is permitted to change his nam e to Sri SHASHIKANT BHARAMAPPA KABBUR.

PD C/N-68

Superintendent of Police

Belagavi

SC - 10

FORM - I

(See Rule-9)

EDUCATION DEPARTMENT

Office of the Deputy Director of Public Instructions, Vijayapur.

NOTIFICATION

Dated : 12-07-2019.

Shri. MOHAMMED SHARIF. ISMAIL. BHAL BHAL working as Assistant Teacher in the Office of Block Educational Officer, Sindagi.Under School of G.U.B.H.P.S. KOKATNUR is permitted to change his name to MOHAMMED SHARIF. ISMAIL. KALADAGI.

PD C/N-69

Deputy Director

SC - 10

Public Instructions Department

Vijayapur.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೧೨೩೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಆಗಸ್ಟ್ ೨೨, ೨೦೧೯ ಭಾಗ ೫

FORM-IV

(See Rule 12)

NOTICE

Dated : 20-06-2019.

IT IS HEREBY NOTIFIED THAT THE UNDERSIGNED HAS CHANGED HER; NAME FROM HONNAMMA CHANDRAKANT GAONKAR to HARSHITA SUDHEER NAYAK.

PD-C/N-70

HONNAMMA CHANDRAKANT GAONKAR

SC - 10

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 22 August 2019. Indian Gazettes, https://egazette.servantsofknowledge.in/details/in.gazette.karnataka_new.2019-08-22.Part-5/. Archive identifier in.gazette.karnataka_new.2019-08-22.Part-5.