ಬೆಂಗಳೂರು, ಗುರುವಾರ, ಸೆಪ್ಟೆಂಬರ್ ೫, ೨೦೧೯ (ಭಾದ್ರಪದ ೧೪, ಶಕ ವರ್ಷ ೧೯೪೧)
Bengaluru, Thursday, September 5, 2019 (Bhadrapada 14, Shaka Varsha 1941
ಸಂಪುಟ ೧೫೪
Volume 154
ಸಂಚಿಕೆ ೩೬
Issue 36
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಕಂದಾಯ ಸಚಿವಾಲಯ
ವಿಷಯ : ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣಕ್ಕೆ 2019-20ನೇ ಸಾಲಿನ ಅನುದಾನ
ಬಿಡುಗಡೆ ಮಾಡುವ ಬಗ್ಗೆ.
ಓದಲಾಗಿದೆ : ನಿಬಂಧಕರು, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು ಇವರ ಪತ್ರ
ಸಂಖ್ಯೆ: ಲೆಕ್ಕ-2/ಸಿಆರ್-4/2018-19, ದಿನಾಂಕ: 22-04-2019.
ಪ್ರಸ್ತಾವನೆ:
ಮೇಲೆ ಓದಲಾದ ಪತ್ರದಲ್ಲಿ ನಿಬಂಧಕರು, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ, ಬೆಂಗಳೂರು ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಆರ್ಥಿಕ ಇಲಾಖೆಯ ಅಧಿಕೃತ ಜ್ಞಾಪನ ಸಂಖ್ಯೆ: ಆಇ 18 ಬಿಪಿಇ 2018 ದಿನಾಂಕ 19-03-2019 ಕ್ಕೆ ಸಂಬಂಧಿಸಿದಂತೆ, ದಿನಾಂಕ: 01-04-2019 ರಿಂದ 31-07-2019 (1/3) ರವರೆಗಿನ ಅವಧಿಯ ಲೇಖಾನುದಾನ ವಿಧೇಯಕವನ್ನು ರಾಜ್ಯ ವಿಧಾನ ಮಂಡಲ ಅನುಮೋದಿಸಿ ದಿನಾಂಕ: 27-02-2019ರ ರಾಜ್ಯಪಾಲರ ಒಪ್ಪಿಗೆಯನ್ನು ಪಡೆದು ದಿನಾಂಕ: 01-03-2019 ರ ವಿಶೇಷ ರಾಜ್ಯ ಪತ್ರದಲ್ಲಿ 2019ರ ಕರ್ನಾಟಕ ಅಧಿನಿಯಮ 08 ಎಂದು ಪ್ರಕಟಿಸಿರುವುದರಿಂದ ಅನುಸೂಚಿಯಲ್ಲಿ ಸೂಚಿಸಿರುವಷ್ಟು ಅನುದಾನ ವಿನಿಯೋಗಗಳನ್ನು ಅಧಿಕೃತಗೊಳಿಸಲಾಗಿದ್ದು, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣದ ಮುಖ್ಯ ಲೆಕ್ಕ ಶೀರ್ಷಿಕೆ 2052-00-099-0-01 ರ -002, 003, -004, -011, -020, -014, -021, -034, -041,-051, -052, -053, -180 ಹಾಗೂ -195 ಅಡಿಯಲ್ಲಿನ 1/4 ರಷ್ಟು ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ಕೋರಿರುತ್ತಾರೆ.
ಮೇಲಿನ ಅಂಶಗಳನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ ಈ ಮುಂದಿನಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 03 ಆರ್ಎಂಇ 2019 ಬೆಂಗಳೂರು, ದಿನಾಂಕ: 01ನೇ ಜೂನ್ 2019 ಪ್ರಸ್ತಾವನೆಯಲ್ಲಿನ ವಿವರಗಳ ಹಿನ್ನೆಲೆಯಲ್ಲಿ, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ ಕಛೇರಿಗೆ ಮುಖ್ಯ ಲೆಕ್ಕಶೀರ್ಷಿಕೆ 2052-00-099-0-01 ರಡಿ ಈ ಕೆಳಗೆ ವಿವರಿಸಿರುವ ಉಪಶೀರ್ಷಿಕೆಗಳ ಅಡಿಯಲ್ಲಿ 1/4 ರಷ್ಟು ಅಂದರೆ ರೂ.1,84,50,000.00 ಗಳ (ಒಂದು ಕೋಟಿ ಎಂಬತ್ತ ನಾಲ್ಕು ಲಕ್ಷದ ಐವತ್ತು ಸಾವಿರ ರೂಪಾಯಿಗಳು ಮಾತ್ರ) ಅನುದಾನವನ್ನು, ಉದ್ದೇಶಿತ ಕಾರ್ಯಕ್ಕೆ ವಿನಿಯೋಗವಾಗಿರುವ ಬಗ್ಗೆ ಹಣ ಬಳಕೆ ಪ್ರಮಾಣ ಪತ್ರವನ್ನು ಒದಗಿಸುವ ಷರತ್ತಿಗೊಳಪಟ್ಟು, ಬಿಡುಗಡೆ ಮಾಡಿ ಆದೇಶಿಸಿದೆ.
| ಕ್ರ. ಸಂ. | ಮುಖ್ಯ ಲೆಕ್ಕ ಶೀರ್ಷಿಕೆ 2052-00-099-0-01 ರ ಉಪಶೀರ್ಷಿಕೆ | 2019-20 ಅನುದಾನ (ಲಕ್ಷಗಳಲ್ಲಿ) | ಬಿಡುಗಡೆಗೊಳಿಸಬೇಕಾದ ಶೇ. 25 ಅನುದಾನ (ರೂ.ಗಳಲ್ಲಿ) |
| 1 | 002-ವೇತನ ಅಧಿಕಾರಿಗಳು | 138-00 | 34,50,000.00 |
| 2 | 003-ವೇತನ ಸಿಬ್ಬಂದಿಗಳು | 260-00 | 65,00,000.00 |
| 3 | 004-ತಾತ್ಕಾಲಿಕ ಪರಿಹಾರ | 10-00 | 2,50,000.00 |
| 4 | 011-ತುಟ್ಟಿ ಭತ್ಯೆ | 95-00 | 23,75,000.00 |
| 5 | 020-ವೈದ್ಯಕೀಯ ಭತ್ಯೆ | 2-00 | 50,000.00 |
| 6 | 014-ಇತರೆ ಭತ್ಯೆ | 99-00 | 24,75,000.00 |
(೬೬೧)೬೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೫, ೨೦೧೯ ಭಾಗ ೧
| ಕ್ರ. ಸಂ. | ವ ುುಖ್ಯ ಲೆಕ್ಕ ಶೀರ್ಷಿಕೆ 2052-00-099-0-01 ರ ಉಪಶೀರ್ಷಿಕೆ | 2019-20 ಅನುದಾನ (ಲಕ್ಷಗಳಲ್ಲಿ) | ಬಿಡುಗಡೆಗೊಳಿಸಬೇಕಾದ ಶೇ. 25 ಅನುದಾನ (ರೂ.ಗಳಲ್ಲಿ) |
| 7 | 021-ವೈದ್ಯಕೀಯ ವೆಚ್ಚ ಮರುಪಾವತಿ | 15-00 | 3,75,000.00 |
| 8 | 034-ಗುತ್ತಿಗೆ / ಹೊರಗುತ್ತಿಗೆ | 47-00 | 11,75,000.00 |
| 9 | 041-ಪ್ರಯಾಣ ವೆಚ್ಚ | 7-00 | 1,75,000.00 |
| 10 | 051-ಸಾಮಾನ್ಯ ವೆಚ್ಚ | 23-00 | 5,75,000.00 |
| 11 | 052- ದೂರವಾಣಿ ವೆಚ್ಚ | 5-00 | 1,25,000.00 |
| 12 | 053-ಪೀಠೋಪಕರಣ ಹಾಗೂ ಜೋಡಣಾ ಸಾಮಾಗ್ರಿಗಳು | 3-00 | 75,000.00 |
| 13 | 180-ಯಂತ್ರೋಪಕರಣ ಹಾಗೂ ಸಾಧನ ಸಾಮಾಗ್ರಿಗಳು | 11-00 | 2,75,000.00 |
| 14 | 195-ಸಾರಿಗೆ ವೆಚ್ಚ | 23-00 | 5,75,000.00 |
| ಒಟ್ಟು = | 738.00 | 1,84,50,000.00 |
ಈ ಪ್ರಸ್ತಾವನೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಕರ್ನಾಟಕ ಸಾರ್ವಜನಿಕ ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್ಡಿ 01 ಟಿಎಫ್ಪಿ 2019, ದಿನಾಂಕ: 03-04-2019 ರನ್ವಯ ಇಲಾಖಾ ಕಾರ್ಯದರ್ಶಿಗಳಿಗೆ ಪ್ರದತ್ತವಾದ ಅಧಿಕಾರದನ್ವಯ ಹೊರಡಿಸಲಾಗಿದೆ.
PR- 321
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ರೇವಪ್ಪ ಎಂ. ಪಾಟೀಲ್
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),
ಕಂದಾಯ ಇಲಾಖೆ. (ಕೆ.ಎ.ಟಿ. ಮತ್ತು ಬಾ.ನಿ.)
ಕಂದಾಯ ಸಚಿವಾಲಯ
ವಿಷಯ : ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣಕ್ಕೆ 2019-20ನೇ ಸಾಲಿನ ಅನುದಾನ ಬಿಡುಗಡೆ ಮಾಡುವ ಬಗ್ಗೆ.
ಪ್ರಸ್ತಾವನೆ:
ಕಂದಾಯ ಇಲಾಖೆಯ ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣಕ್ಕೆ 2019-20ನೇ ಸಾಲಿನ ಆಯವ್ಯಯದಲ್ಲಿ ಅಧಿಕಾರಿಗಳ ವೇತನ, ಸಿಬ್ಬಂದಿ ವೇತನ, ತುಟ್ಟಿ ಭತ್ಯೆ ಹಾಗೂ ಇತರೆ ವೆಚ್ಚಗಳಿಗಾಗಿ ಮುಖ್ಯ ಲೆಕ್ಕಶೀರ್ಷಿಕೆ 2052-00-099-0-01 ರಡಿ ಒಟ್ಟು ರೂ.738.00 ಲಕ್ಷಗಳ ಅನುದಾನವನ್ನು ಒದಗಿಸಲಾಗಿದೆ. ಅದರನ್ವಯ ಸದರಿ ಅನುದಾನವನ್ನು ಬಿಡುಗಡೆಗೊಳಿಸುವ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 03 ಆರ್ಎಂಇ 2019 ಬೆಂಗಳೂರು, ದಿನಾಂಕ: 01ನೇ ಜೂನ್ 2019 ಪ್ರಸ್ತಾವನೆಯಲ್ಲಿನ ವಿವರಗಳ ಹಿನ್ನೆಲೆಯಲ್ಲಿ, ಕರ್ನಾಟಕ ಮೇಲ್ಮನವಿ ನ್ಯಾಯಾಧಿಕರಣ ಕಛೇರಿಗೆ ಮುಖ್ಯ ಲೆಕ್ಕಶೀರ್ಷಿಕೆ 2052-00-099-0-01 ರಡಿ ಒಟ್ಟು ರೂ.738.00 ಲಕ್ಷ (ಏಳುನೂರ ಮೂವತ್ತೆಂಟು ಲಕ್ಷ ರೂಪಾಯಿಗಳು ಮಾತ್ರ) ಅನುದಾನವನ್ನು ಬಿಡುಗಡೆ ಮಾಡಿ ಆದೇಶಿಸಿದೆ.
ಈ ಪ್ರಸ್ತಾವನೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ನಿಯಮಗಳು, 2000 ರಲ್ಲಿ ನಿಗದಿಪಡಿಸಿರುವ ಕಾರ್ಯ ವಿಧಾನವನ್ನು ಪಾಲಿಸಿ ಕ್ರಮ ಕೈಗೊಳ್ಳತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್ಡಿ 01 ಟಿಎಫ್ಪಿ 2019, ದಿನಾಂಕ: 03-04-2019 ರನ್ವಯ ಇಲಾಖಾ ಕಾರ್ಯದರ್ಶಿಗಳಿಗೆ ಪ್ರದತ್ತವಾದ ಅಧಿಕಾರದನ್ವಯ ಹೊರಡಿಸಲಾಗಿದೆ.
PR- 322
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ರೇವಪ್ಪ ಎಂ. ಪಾಟೀಲ್
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),
ಕಂದಾಯ ಇಲಾಖೆ. (ಕೆ.ಎ.ಟಿ. ಮತ್ತು ಬಾ.ನಿ.)
ಕಂದಾಯ ಸಚಿವಾಲಯ
ವಿಷಯ : ಶ್ರೀಮತಿ ಸಿ.ರೂಪಾಬಾಯಿ, ಪ್ರಥಮ ದರ್ಜೆ ರಾಜಸ್ವ ನಿರೀಕ್ಷಕರು, ಬಾಡಿಗೆ ನಿಯಂತ್ರಣಾಧಿಕಾರಿಗಳ ಕಛೇರಿ, ಬೆಂಗಳೂರು ಉತ್ತರ ವಲಯ, ಬೆಂಗಳೂರು ಇವರ ವೈದ್ಯಕೀಯ ವೆಚ್ಚ ಮರುಪಾವತಿ ಹಾಗೂ Kidney Transplantation ಶಸ್ತ್ರ ಚಿಕಿತ್ಸೆಗಾಗಿ ಮುಂಗಡ ಮಂಜೂರಾತಿ ಬಗ್ಗೆ.
ಓದಲಾಗಿದೆ : ಅಪರ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು ಇವರ ಪತ್ರ ಸಂಖ್ಯೆ: ಎ.ಸಿ.ಟಿ ಸಿಆರ್(1):04/2017-18, ದಿನಾಂಕ: 23-03-2019.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೫, ೨೦೧೯ ೬೬೩ಪ್ರಸ್ತಾವನೆ:
ಮೇಲೆ ಓದಲಾದ ಪತ್ರದಲ್ಲಿ ಅಪರ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಶ್ರೀಮತಿ ಸಿ.ರೂಪಾಬಾಯಿ, ಪ್ರಥಮ ದರ್ಜೆ ಸಹಾಯಕರು ಇವರು ಬಾಡಿಗೆ ನಿಯಂತ್ರಣಾಧಿಕಾರಿಗಳ ಕಛೇರಿ, ಬೆಂಗಳೂರು ಉತ್ತರ ವಲಯ, ಬೆಂಗಳೂರು ಇಲ್ಲಿ ಕರ್ತ್ಯವ ನಿರ್ವಹಿಸುತ್ತಿದ್ದು ಇವರಿಗೆ Kidney Transplantion ಶಸ್ತ್ರ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆ, ಬೆಂಗಳೂರು ರವರ ಅಂದಾಜು ಪತ್ರದ ಪ್ರಕಾರ ರೂ.10,47,000/- ವೆಚ್ಚವಾಗುವುದರಿಂದ ಮುಂಗಡ ಮಂಜೂರು ಮಾಡಬೇಕೆಂದು ಕೋರಿದ್ದು, ಅದರಂತೆ ಸರ್ಕಾರದ ಆದೇಶ ಸಂಖ್ಯೆ ಎಂ.ಡಿ.ಎ/ಸನಿ/(ವೈ)41/09-10, ದಿನಾಂಕ: 17-03-2010 ರಂತೆ ಶಸ್ತ್ರ ಚಿಕಿತ್ಸೆಗೆ ಶೇಕಡ 80% ರಷ್ಟು ಅಂದರೆ ರೂ.8,37,600/-(ಎಂಟು ಲಕ್ಷದ ಮೂವತ್ತೇಳು ಸಾವಿರದ ಆರು ನೂರು ರೂಪಾಯಿಗಳು) ಮುಂಗಡವಾಗಿ ಮಂಜೂರು ಮಾಡಿ ಅಪರ ಜಿಲ್ಲಾಧಿಕಾರಿಗಳು, ಬೆಂಗಳೂರು ನಗರ ಜಿಲ್ಲೆ ಇವರು ಆದೇಶಿಸಿರುತ್ತಾರೆ. ಆದರೆ ಬಾಡಿಗೆ ನಿಯಂತ್ರಣಾಧಿಕಾರಿಗಳ ಕಛೇರಿಗೆ ವೈದ್ಯಕೀಯ ವೆಚ್ಚಕ್ಕಾಗಿ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಈ ಸಂಬಂಧ ಶ್ರೀಮತಿ ರೂಪಾಬಾಯಿ, ಪ್ರಥಮ ದರ್ಜೆ ಸಹಾಯಕ ರವರಿಗೆ ಏಪ್ರಿಲ್ ಮೊದಲನೇ ವಾರದಲ್ಲಿ Kidney Transplantion ಶಸ್ತ್ರ ಚಿಕಿತ್ಸೆ ಮಾಡಿಸುತ್ತಿರುವುದರಿಂದ ಮತ್ತು ಇನ್ನಿತರೆ ವೈದ್ಯಕೀಯ ಬಿಲ್ಲುಗಳು ಬಾಕಿ ಇರುವುದರಿಂದ ಬಾಡಿಗೆ ನಿಯಂತ್ರಣಾಧಿಕಾರಿಗಳ ಲೆಕ್ಕ ಶೀರ್ಷಿಕೆ 2070-00-112- 0-01(021) (ಡಿಡಿಓ-0200ಆರ್ಡಿ0013)ಗೆ ಒಟ್ಟು ರೂ.15,00,000-00 (ಹದಿನೈದು ಲಕ್ಷ ರೂಪಾಯಿಗಳು ಮಾತ್ರ) ಅನುದಾನವನ್ನು ಬಿಡುಗಡೆ ಮಾಡುವಂತೆ ಕೋರಿರುವುದನ್ನು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 11 ಆರ್ಎಂಇ 2019 ಬೆಂಗಳೂರು, ದಿನಾಂಕ: 30ನೇ ಮೇ 2019
ಪ್ರಸ್ತಾವನೆಯಲ್ಲಿನ ವಿವರಗಳ ಹಿನ್ನೆಲೆಯಲ್ಲಿ, ಶ್ರೀಮತಿ ರೂಪಾಬಾಯಿ, ಪ್ರಥಮ ದರ್ಜೆ ರಾಜಸ್ವ ನಿರೀಕ್ಷಕರು ಇವರ Kidney Transplantion ಶಸ್ತ್ರ ಚಿಕಿತ್ಸೆಗಾಗಿ ರೂ. 10,47,000/-ಗಳನ್ನು ಅಂದಾಜಿಸಿದ್ದು, ಇದರಲ್ಲಿ ಶೇಕಡ 80% ರಷ್ಷನ್ನು ಮಾತ್ರ ಮುಂಗಡವಾಗಿ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿದ್ದು, ರೂ. 8,37,600/-ಗಳನ್ನು ಬಿಡುಗಡೆ ಮಾಡಬಹುದಾಗಿರುತ್ತದೆ. ಆದರೆ, ಲೆಕ್ಕ ಶೀರ್ಷಿಕೆ 2070-00-112-0-01-(021) ರಲ್ಲಿ ಕೇವಲ ರೂ. 3,00,000/-ಗಳನ್ನು ಮಾತ್ರ ಬಿಡುಗಡೆ ಮಾಡಲು ಅವಕಾಶವಿದ್ದು, ಉಳಿದ ರೂ. 5,37,600/-ಗಳನ್ನು ಕಂದಾಯ ಇಲಾಖೆಯ ಲೆಕ್ಕಶೀರ್ಷಿಕೆ 2053-00-093-0-01-014 (Vacant Post Provision) ರಡಿಯಲ್ಲಿ ಒದಗಿಸಿರುವ ರೂ. 1579.00 ಲಕ್ಷಗಳ ಅನುದಾನದಲ್ಲಿ ಲೇಖಾನುಧಾನದ ಮಿತಿಯಂತೆ ರೂ.394.75 ಲಕ್ಷಗಳನ್ನು ವೆಚ್ಚ ಮಾಡಲು ಅವಕಾಶವಿರುತ್ತದೆ. ಆದ್ದರಿಂದ, ಸದರಿ ಲೆಕ್ಕಶೀರ್ಷಿಕೆಯಲ್ಲಿ ರೂ. 5,37,600.00ಗಳನ್ನು ವೆಚ್ಚ ಮಾಡದೆ ಇರುವ ಷರತ್ತಿಗೊಳಪಟ್ಟು ಲೆಕ್ಕ ಶೀರ್ಷಿಕೆ 2070-00-112-0-01-(021) ರಡಿಯಲ್ಲಿ ರೂ. 3,00,000/- + ರೂ. 5,37,600/- ಒಟ್ಟಾರೆ ರೂ. 8,37,600/- (ಎಂಟು ಲಕ್ಷದ ಮೂವತ್ತೇಳು ಸಾವಿರದ ಆರು ನೂರು ರೂಪಾಯಿಗಳು ಮಾತ್ರ) ಗಳನ್ನು ವೈದ್ಯಕೀಯ ವೆಚ್ಚ ಪಾವತಿಸಲು ಬಿಡುಗಡೆ ಮಾಡಿ ಆದೇಶಿಸಿದೆ.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 432 ವೆಚ್ಚ-7/2019, ದಿನಾಂಕ: 15-05-2019 ರನ್ವಯ ಹೊರಡಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ರೇವಪ್ಪ ಎಂ. ಪಾಟೀಲ್
PR- 323
ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),
ಕಂದಾಯ ಇಲಾಖೆ. (ಕೆ.ಎ.ಟಿ. ಮತ್ತು ಬಾ.ನಿ.)
ಕಂದಾಯ ಸಚಿವಾಲಯ
ತಿದ್ದುಪಡಿ
ಸಂಖ್ಯೆ: ಆರ್ಡಿ 5 ಎಲ್ಜಿಸಿ 2019, ಬೆಂಗಳೂರು, ದಿನಾಂಕ: 02-07-2019
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 24 ಎಲ್ಜಿಸಿ 2018, ದಿನಾಂಕ: 05-09-2018ರ ಆದೇಶದ ವಿಷಯ, ಪ್ರಸ್ತಾವನೆ ಹಾಗೂ ಆದೇಶದ ಭಾಗದಲ್ಲಿ ಇರುವ 'ಮೆ: ಬಳ್ಳಾರಿ ವಿಂಡ್ ಪವರ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು' ಎಂಬುದಕ್ಕೆ ಬದಲಾಗಿ 'ಮೆ: ಅಕ್ಸಿಯಾನ್ ವಿಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್' ಬೆಂಗಳೂರು ಎಂದು ತಿದ್ದಿ ಓದಿಕೊಳ್ಳತಕ್ಕದ್ದು. ಉಳದಂತೆ ಸದರಿ ಆದೇಶದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-281
ಎಂ.ಇ. ಚನ್ನಬಸವರಾಜ
SC-50
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ (ಭೂ ಮಂಜೂರಾತಿ-3)
ಕಂದಾಯ ಸಚಿವಾಲಯ
ವಿಷಯ: ಶ್ರೀ ಎ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ ಇವರನ್ನು ನೋಂದಣಿ ಮತ್ತು ಮುದ್ರಾಂಕ
ಇಲಾಖೆಯಲ್ಲಿ ವಿಲೀನಗೊಳಿಸುವ ಬಗ್ಗೆ.
ಓದಲಾಗಿದೆ : 1) ಸರ್ಕಾರದ ಪತ್ರ ಸಂಖ್ಯೆ: ಕಂಇ 30 ಮುನೊಸೇ(2) 2017, ದಿನಾಂಕ: 31-07-2017.
2) ಕಾರ್ಮಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಕಾಇ 12 ಎಲ್ಟಿಇ 2017, ದಿನಾಂಕ: 07-09-2017.
3) ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಇವರ ಪತ್ರ ಸಂಖ್ಯೆ: ಸಿಬ್ಬಂದಿ-3-135/2017-18
ದಿನಾಂಕ: 31-01-2018.
೬೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೫, ೨೦೧೯ ಭಾಗ ೧ಪ್ರಸ್ತಾವನೆ:
ಶ್ರೀ ಎ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ ಇವರನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ವಿಲೀನಗೊಳಿಸುವಂತೆ ಕೋರಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರದ ಪತ್ರದಲ್ಲಿ, ಸದರಿಯವರ ಸೇವೆಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ವಿಲೀನಗೊಳಿಸುವ ಕುರಿತು ಅಭಿಪ್ರಾಯ ನೀಡುವಂತೆ ಕಾರ್ಮಿಕ ಇಲಾಖೆಯನ್ನು ಕೋರಲಾಗಿತ್ತು.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಅನಧಿಕೃತ ಟಿಪ್ಪಣಿಯಲ್ಲಿ ಶ್ರೀ ಎ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ ಇವರು ಸಕ್ರಮವಾಗಿ ನೇಮಕ ಹೊಂದಿ ಪ್ರಸ್ತುತ ಹಿರಿಯ ಕಾರ್ಮಿಕ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಸದರಿಯವರ ಸೇವೆಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ವಿಲೀನಗೊಳಿಸಲು ಕಾರ್ಮಿಕ ಇಲಾಖೆಯು ಸಹಮತಿಯನ್ನು ನೀಡಿರುತ್ತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ: (3)ರ ಪತ್ರದಲ್ಲಿ, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ನೋಂದಣಿ ಕಾಯ್ದೆ, ಮುದ್ರಾಂಕ ಕಾಯ್ದೆ ಮತ್ತು ಇದರಡಿಯಲ್ಲಿ ರಚಿಸಲಾದ ನಿಯಮಗಳು ಹಾಗೂ ಇನ್ನಿತರೆ ಕಾನೂನುಗಳಂತೆ ಕಾರ್ಯನಿರ್ವಹಿಸಬೇಕಾಗಿದ್ದು, ಇವೆಲ್ಲಾ ಕೆಲಸ ಕಾರ್ಯಗಳು ಅರೆ-ನ್ಯಾಯಿಕ ಸ್ವರೂಪದ್ದಾಗಿರುತ್ತವೆ. ಅಲ್ಲದೆ ಈ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಂತೆ ಸದರಿ ಹುದ್ದೆಗೆ ನಿಗದಿಪಡಿಸಿದ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಬೇಕಾಗಿದ್ದು, ಶ್ರೀ ಎ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ ಇವರನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ನಿಯೋಜನೆ ಮೇಲೆ ಪಡೆಯುವ/ ವಿಲೀನಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರದ ಹಂತದಲ್ಲಿ ಕ್ರಮ ವಹಿಸಬೇಕಾಗಿರುತ್ತದೆ ಎಂದು ಅಭಿಪ್ರಾಯ ನೀಡಿರುತ್ತಾರೆ.
ಶ್ರೀ ಎ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ ಇವರ ಸೇವೆಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ವಿಲೀನಗೊಳಿಸಲು ಕಾರ್ಮಿಕ ಇಲಾಖೆಯು ಸಹಮತಿ ನೀಡಿರುವುದನ್ನು ಹಾಗೂ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು ನೀಡಿರುವ ಅಭಿಪ್ರಾಯದ ಹಿನ್ನೆಲೆಯಲ್ಲಿ ಪರಿಶೀಲಿಸಿ, ಶ್ರೀ ಎ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ ಇವರನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 16(ಎ)(ii)ರನ್ವಯ ಷರತ್ತುಗಳೊಂದಿಗೆ ವರ್ಗಾವಣೆ ಮೂಲಕ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿ ಹುದ್ದೆಗೆ ವಿಲೀನಗೊಳಿಸಲು ಪರಿಶೀಲಿಸಿ, ಸರ್ಕಾರವು ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ತೀರ್ಮಾನಿಸಿ ಈ ಪ್ರಕರಣವನ್ನು ಉಳಿದ ಪ್ರಕರಣಗಳಿಗೆ ಪೂರ್ವ ನಿರ್ದಶನವನ್ನಾಗಿ ಪರಿಭಾವಿಸದೇ ಸರ್ಕಾರವು ಈ ಕೆಳಕಂಡಂತೆ ತೀರ್ಮಾನಿಸಿ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಕಂಇ 30 ಮುನೋಸೇ(2) 2017, ಬೆಂಗಳೂರು, ದಿನಾಂಕ: 06-06-2019
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಶ್ರೀ ಎ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಲಾಖೆ ಇವರನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977ರ ನಿಯಮ 16(ಎ)(ii)ರನ್ವಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಉಪ ನೋಂದಣಾಧಿಕಾರಿ ಹುದ್ದೆಗೆ ಈ ಕೆಳಕಂಡ ಷರತ್ತುಗಳೊಂದಿಗೆ ವರ್ಗಾವಣೆ ಮೂಲಕ ವಿಲೀನಗೊಳಿಸಿದೆ ಹಾಗೂ ಇದನ್ನು ಪೂರ್ವ ನಿದರ್ಶನವಾಗಿ ಪರಿಗಣಿಸತಕ್ಕದಲ್ಲವೆಂದು ತಿಳಿಸಿ ಆದೇಶಿಸಿದೆ.
1) ಕರ್ನಾಟಕ ನಾಗರಿಕ ಸೇವೆ (ಸೇವೆಗಳು ಮತ್ತು ಕನ್ನಡ ಭಾಷೆ ಪರೀಕ್ಷೆ) ನಿಯಮ 1974 ರಂತೆ ಒಂದು ವರ್ಷದ ಅವಧಿಯಲ್ಲಿ ಹುದ್ದೆಗೆ ನಿಗಧಿಪಡಿಸುವ ಎಲ್ಲಾ ಪರೀಕ್ಷೆಗಳನ್ನು ಪಾಸು ಮಾಡುವುದು.
2) ಕರ್ನಾಟಕ ನಾಗರೀಕ ಸೇವಾ (ಜೇಷ್ಠತೆ) ನಿಯಮಗಳು 1957 ರ ನಿಯಮ 6(ಎ) ರಂತೆ ಇವರ ಜೇಷ್ಠತೆಯನ್ನು ಹುದ್ದೆಗೆ ವಿಲೀನಗೊಳಿಸಿದ ದಿನಾಂಕದಿಂದ ಜೇಷ್ಠತಾ ಪಟ್ಟಿಯಲ್ಲಿ ಕೊನೆಯ ಸ್ಥಾನ ನಿಗಧಿಪಡಿಸುವುದು.
3) ವರ್ಗಾವಣೆ ಭತ್ಯೆ ಪಡೆಯಲು ಅರ್ಹರಿರುವುದಿಲ್ಲ.
4) ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು 1977 ರನ್ವಯ ವರ್ಗಾವಣೆ ಮೂಲಕ ನೇಮಕಾತಿಯನ್ನು ನೌಕರರ ಸೇವಾವಧಿಯಲ್ಲಿ ಒಮ್ಮೆ ಮಾತ್ರ ಪರಿಗಣಿಸುವುದು.
PR-282
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ರೂಪ.ಪಿ
ಪೀಠಾಧಿಕಾರಿ,
ಕಂದಾಯ ಇಲಾಖೆ,
(ನೋಂದಣಿ ಮತ್ತು ಮುದ್ರಾಂಕ)
HOME SECRETARIAT
Sub: Appointment of Chairman to the State Police Complaints Authority - Reg
Read: 1) The Karnataka Police (Amendment) Act, 2012 issued vide Special Gazette dated : 09.08.2012
2) Notification No. HD 208 PoSaEe 2012 dated: 04.09.2012
3) Government Order No. HD 165 PoSiAa 2016 dated :19.09.2016
4) Government Order No. HD 165 PoSiAa 2016 dated :17.10.2017
5) Letter No. RPS.50/2011 dated :27.03.2019 of the Registrar General, High Court of Karnataka,
Bengaluruಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೫, ೨೦೧೯ ೬೬೫ PREAMBLE: In the Special Gazette read at (1) above, State Governm ent has amended the Karnataka Police Act, 1963 (Karnataka Act No. 4 of 1964) and made suitable amendment to Section 20 of the Act to constitute the State Police Complaints Authority under Section 20C.
In the Notification dated : 04.09.2012 read at (2) above, Government has constituted the State Police Complaints Authority and the District Police Complaints Authorities for the purpose of exercising such functions and discharging such duties as may be assigned to it, by or under Section 20C and 20D of the Karnataka Police Act, 1963 (Karnataka Act 4 of 1964).
In the Government Order dated: 19.09.2016 read at (3) above in pursuance of the section 20C of the Karnataka Police (Amendment) Act, 2012 the Government of Karnataka has appointed Hon'ble Justice (Retd) A.S. Pachhapure, former Judge of the High Court of Karnataka as Chairman of the State Police Complaints Authority. As per the section 20C (3) every non-official member of the State Police Complaints Authority shall hold office for a period of three years.
Hon'ble Justice (Retd) Sri A.S. Pachhapure, Chairman, State Police Complaints Authrority submitted his resignation to the post of Chairman, State Police Complaints Authority vide letter dated: 07.08.2017 citing his personal reasons. Accordingly vide Governm ent Order dated : 17.10.2017 read at (4) above, Government has accepted the resignation of Hon'ble Justice (Retd) Sri A.S. Pachhapure, Chairman, State Police Complaints Authrority with effect from 08.08.2017.
As per the provisions of the Act, panel of names of retired Hon'ble High Court Judges was sought from the Registrar General, High Court of Karnataka. Accordingly vide letter read at (5) above, the Registrar General, High Court of Karnataka sent panel of names of retired High Court Judges as recommended by the Hon'ble Chief Justice of High Court of Karnataka.
After examining the same Government of Karnataka is pleased to pass the following order.
Government Order No. HD 61 POSIAA 2019, Bengaluru Dated: 17.07.2019
In view of the circumstances explained above and in pursuance of section 20C of the Karnataka Police (Amendment) Act, 2012 Government is pleased to appoint Hon'ble Shri Justice C. R. Kumarswamy, former Judge of High Court of Karnataka as the Chairman of the State Police Complaints Authority.
The terms and conditions of the Chairman, State Police Complaints Authority will be issued separately.
By Order and in the nam e of the Governor of Karnataka PR-283
Pampanagouda Melseeme
SC-100
Under Secretary to Government
Home Department (Police Services-B)
ನಗರಾಭಿವೃದ್ಧಿ ಸಚಿವಾಲಯ
ವಿಷಯ: ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶದ ಮಹಾಯೋಜನೆ
(ತಾತ್ಕಾಲಿಕ)ಗೆ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡುವ ಬಗ್ಗೆ.
ಓದಲಾಗಿದೆ:
1. ಸರ್ಕಾರದ ಅಧಿಸೂಚನೆ ಸಂಖ್ಯೆ ನಅಇ 179 ಬೆಂರೂಪ್ರಾ 2012, ದಿನಾಂಕ : 26.09.2012. 2. ಸದಸ್ಯ ಕಾರ್ಯದರ್ಶಿ ಮತ್ತು ಮುಖ್ಯಾಧಿಕಾರಿ, ಚಿಕ್ಕನಾಯಕನಹಳ್ಳಿ ಪುರಸಭೆ ಯೋಜನಾ
ಪ್ರಾಧಿಕಾರ ಇವರ ಪತ್ರಗಳ ಸಂಖ್ಯೆ ಪು.ಚಿ. ಮ.ಯೋ.ನ.ತಾ:ವಿವ:01/2016-17/585, ದಿನಾಂಕ
23.02.2017 ಮತ್ತು 27.11.2018.
3. ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು ಇವರ ಪ್ರಸ್ತಾವನೆಗಳ
ಸಂಖ್ಯೆ DTCP-4-MPP-2017-18, ದಿನಾಂಕ 27.03.2018 ಮತ್ತು 18.01.2019.
ಪ್ರಸ್ತಾವನೆ:
ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ಸರ್ಕಾರದ ಅಧಿಸೂಚನೆಯಲ್ಲಿ, ಚಿಕ್ಕನಾಯಕನಹಳ್ಳಿ ಪಟ್ಟಣದ ಪುರಸಭೆ ವ್ಯಾಪ್ತಿಯನ್ನೇ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆಯಡಿ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಿ ಪುರಸಭೆಯೇ ಯೋಜನಾ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುವಂತೆ ಘೋಷಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ಪತ್ರಗಳಲ್ಲಿ, ಸದಸ್ಯ ಕಾರ್ಯದರ್ಶಿ ಮತ್ತು ಮುಖ್ಯಾಧಿಕಾರಿ, ಚಿಕ್ಕನಾಯಕನಹಳ್ಳಿ ಪುರಸಭೆ ಯೋಜನಾ ಪ್ರಾಧಿಕಾರ, ಇವರು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 9(1)ರನ್ವಯ ಚಿಕ್ಕನಾಯಕನಹಳ್ಳಿ ಸ್ಥಳೀಯ ಯೋಜನಾ ಪ್ರದೇಶಕ್ಕೆ ಮಹಾಯೋಜನೆ (ತಾತ್ಕಾಲಿಕ) ಯನ್ನು ಸಿದ್ಧಪಡಿಸಿ, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರ ಮುಖಾಂತರ ಸರ್ಕಾರದ ಅನುಮೋದನೆಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3)ರಲ್ಲಿ ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಇವರ ಪ್ರಸ್ತಾವನೆಯಲ್ಲಿ, ಚಿಕ್ಕನಾಯಕನಹಳ್ಳಿ ಪಟ್ಟಣದ ಜನಸಂಖ್ಯೆಯು 2031ರಲ್ಲಿ 31,500 ರಷ್ಟು ಬೆಳವಣಿಗೆಯಾಗುವುದಾಗಿ ಅಂದಾಜಿಸಿ R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೬೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಸೆಪ್ಟೆಂಬರ್ ೫, ೨೦೧೯ ಭಾಗ ೧ಮಹಾಯೋಜನೆಯನ್ನು ತಯಾರಿಸಲಾಗಿದೆ. ಚಿಕ್ಕನಾಯಕನಹಳ್ಳಿ ಸ್ಥಳೀಯ ಯೋಜನಾ ಪ್ರದೇಶದ ಒಟ್ಟು 873.00 ಹೆಕ್ಟೇರ್ ಪ್ರದೇಶದ ಪೈಕಿ 652.26 ಹೆಕ್ಟೇರ್ ಪ್ರದೇಶವನ್ನು ನಗರ ಅಭಿವೃದ್ಧಿಗಾಗಿ ನಗರೀಕರಣದ ಎಲ್ಲೆಯೆಂದು ಪ್ರಸ್ತಾಪಿಸಿ, ಮಹಾಯೋಜನೆಯನ್ನು ರೂಪಿಸಲಾಗಿದೆ. ನಗರದ ಮುಂದಿನ ಯೋಜಿತ ಬೆಳವಣಿಗೆಗೆ ಪ್ರಸ್ತಾಪಿಸಿರುವ 652.26 ಹೆಕ್ಟೇರ್ ಪ್ರದೇಶದಲ್ಲಿ, ವಸತಿಗಾಗಿ 377.00 ಹೆಕ್ಟೇರ್ (ಶೇ.57.80), ವಾಣಿಜ್ಯಕ್ಕಾಗಿ 36.12 ಹೆಕ್ಟೇರ್ (ಶೇ.5.54), ಕೈಗಾರಿಕೆಗಾಗಿ 28.90 ಹೆಕ್ಟೇರ್ (ಶೇ.4.43), ಸಾರ್ವಜನಿಕ/ಅರೆ ಸಾರ್ವಜನಿಕ ಉಪಯೋಗಕ್ಕೆ 33.24 ಹೆಕ್ಟೇರ್ (ಶೇ.5.10) ಉದ್ಯಾನವನ ಮತ್ತು ಬಯಲು ಜಾಗಕ್ಕಾಗಿ 51.64 ಹೆಕ್ಟೇರ್ (ಶೇ.7.92) ಸಾರ್ವಜನಿಕ ಉಪಯುಕ್ತತೆಗಾಗಿ 0.56 ಹೆಕ್ಟೇರ್ (ಶೇ.0.09) ಹಾಗೂ ಸಾರಿಗೆ/ಸಂಪರ್ಕ ವಲಯಕ್ಕೆ 124.80 ಹೆಕ್ಟೇರ್ (ಶೇ.19.12) ಪ್ರದೇಶವನ್ನು ಕಾಯ್ದಿರಿಸಿದ್ದು, ನಗರೀಕರಣ ಪ್ರದೇಶದಲ್ಲಿ 25.45 ಹೆಕ್ಟೇರ್ ಪ್ರದೇಶವು ಜಲಾವೃತ್ತ ಪ್ರದೇಶವಾಗಿದ್ದು, ಸದರಿ ಪ್ರದೇಶವನ್ನು ಭೂ ವಿಶ್ಲೇಷಣೆಯಲ್ಲಿ ಪರಿಗಣಿಸಿರುವುದಿಲ್ಲ. ಮಹಾಯೋಜನೆಯನ್ನು ಅನುಷ್ಠಾನಕ್ಕೆ ತರಲು ಅಗತ್ಯವಿರುವ ವಲಯ ನಿಯಮಾವಳಿಗಳನ್ನು ರೂಪಿಸಲಾಗಿದ್ದು, ಸದರಿ ಮಹಾಯೋಜನೆಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1)ರನ್ವಯ ತಾತ್ಕಾಲಿಕ ಅನುಮೋದನೆ ನೀಡಲು ಶಿಫಾರಸ್ಸು ಮಾಡಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುತ್ತಾರೆ.
ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ; ನಅಇ 111 ಬೆಂರೂಪ್ರ್ರಾ 2018, ಬೆಂಗಳೂರು, ದಿನಾಂಕ : 15.06.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ಪಟ್ಟಣದ ಸ್ಥಳೀಯ ಯೋಜನಾ ಪ್ರದೇಶಕ್ಕೆ ರೂಪಿಸಿರುವ ಮಹಾಯೋಜನೆ (ತಾತ್ಕಾಲಿಕ)ಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961ರ ಪ್ರಕರಣ 13(1) ರನ್ವಯ ಸರ್ಕಾರದ ತಾತ್ಕಾಲಿಕ ಅನುಮೋದನೆ ನೀಡಲಾಗಿದೆ. ಮಹಾಯೋಜನೆಗೆ ತಾತ್ಕಾಲಿಕ ಅನುಮೋದನೆ ನೀಡಿದ ಗುರುತಾಗಿ ವರದಿ ಹಾಗೂ ನಕ್ಷೆಗಳ ಮೇಲೆ ಸರ್ಕಾರದ ಮುದ್ರೆಯನ್ನು ಹಾಕಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, PR-284
ನಾಗರಾಜ
SC-250
ಸರ್ಕಾರದ ಅಧೀನ ಕಾರ್ಯದರ್ಶಿ,
ನಗರಾಭಿವೃದ್ದಿ ಇಲಾಖೆ.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.