Servants of Knowledge
Karnataka Gazette · Government of Karnataka

Karnataka Gazette, Part Part-1, 17 October 2019

Published 17 October 2019

Part
Part-1
Identifier
in.gazette.karnataka_new.2019-10-17.Part-1
Languages
English, Kannada
Published at
Original source ↗

click here for IIIF manifest

ಬೆಂಗಳೂರು, ಗುರುವಾರ, ಅಕ್ಟೋಬರ್ ೧೭, ೨೦೧೯ ಆಶ್ವಯುಜ ೨೫, ಶಕ ವರ್ಷ ೧೯೪೧)

Bengaluru, Thursday, October 17, 2019 Aashwayuja 25, Shaka Varsha 1941)

ಸಂಪುಟ ೧೫೪

Volume 154

ಸಂಚಿಕೆ ೪೧

Issue 41

ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ

ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಸಹಕಾರ ಸಚಿವಾಲಯ

ವಿಷಯ : ಭಾರತಿ ವಿದ್ಯಾವರ್ಧಕ ಸಂಘ, ಚಿಕ್ಕೋಡಿ, ಬೆಳಗಾವಿ, ಈ ಸಂಘಕ್ಕೆ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರದ ಆದೇಶ ಸಂಖ್ಯೆ: ಸಇ 300 ಸಸಂನೋ 2017, ಬೆಂಗಳೂರು, ದಿನಾಂಕ: 16.01.2019.

2) ಸಹಕಾರ ಸಂಘಗಳ ಉಪ ನಿಬಂಧಕರು, ಬೆಳಗಾವಿ ಇವರ ಪತ್ರ ಸಂಖ್ಯೆ: ಡಿಆರ್ಎಲ್/ಎಸ್ಆರ್ಓ/42/84-85/2017-18, ದಿನಾಂಕ: 27-06-2019.

ಪ್ರಸ್ತಾವನೆ:

ಮೇಲೆ ಕ್ರಮ ಸಂಖ್ಯೆ: (01) ರಲ್ಲಿ ಓದಲಾದ ಆದೇಶದಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ) ರನ್ವಯ ಭಾರತಿ ವಿದ್ಯಾವರ್ಧಕ ಸಂಘ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ ಈ ಸಂಘಕ್ಕೆ ದಿನಾಂಕ: 16.01.2019 ರಿಂದ ಮುಂದಿನ 6 ತಿಂಗಳವರೆಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಚಿಕ್ಕೋಡಿ ಉಪ ವಿಭಾಗ, ಚಿಕ್ಕೋಡಿ ಇವರನ್ನು ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿತ್ತು.

ಮೇಲೆ ಕ್ರ.ಸಂ. (2) ರಲ್ಲಿ ಓದಲಾದ ಸಹಕಾರ ಸಂಘಗಳ ಉಪ ನಿಬಂಧಕರು, ಬೆಳಗಾವಿ ಇವರ ಪತ್ರದಲ್ಲಿ ಸರ್ಕಾರದ ಆಡಳಿತಾಧಿಕಾರಿ ನೇಮಕದ ಆದೇಶದ ಸಿಂಧುತ್ವವನ್ನು ಪ್ರಶ್ನಿಸಿ ಮಾನ್ಯ ಉಚ್ಛ ನ್ಯಾಯಾಲಯ ಧಾರವಾಡ ಪೀಠದಲ್ಲಿ ರಿಟ್ ಅರ್ಜಿ ಸಂಖ್ಯೆ:105445/2019 ಪ್ರಕರಣವನ್ನು ದಾಖಲಿಸಿದ್ದು, ಪ್ರಕರಣವು ವಿಚಾರಣೆಗೆ ಬಾಕಿ ಇರುತ್ತದೆಂದು ಸಂಘದ ಆಡಳಿತಾಧಿಕಾರಿಗಳು ಸ್ವಯಂ ಪ್ರಭಾರವಹಿಸಿಕೊಂಡಿದ್ದು, ಸಂಘದ ಆಡಳಿತ ಮಂಡಳಿಯ ಯಾರೊಬ್ಬ ಸದಸ್ಯರಾಗಲೀ ಅಥವಾ ಕಾರ್ಯದರ್ಶಿಯಾಗಲೀ ಆಡಳಿತಾಧಿಕಾರಿಗೆ ಸಂಘದ ದಾಖಲೆ ಮತ್ತು ವ್ಯವಹಾರದ ಕುರಿತು ಯಾವುದೇ ಮಾಹಿತಿ ನೀಡದೇ ಅಸಹಕಾರ ನೀಡಿರುವುದರಿಂದ ಇದುವರೆಗೂ ಸಂಘದಲ್ಲಿನ ಅವ್ಯವಹಾರವನ್ನು ಸರಿಪಡಿಸಿ ಆಡಳಿತ ಮಂಡಳಿಗೆ ಚುನಾವಣೆ ಜರುಗಿಸಿ ಅಧಿಕಾರ ಹಸ್ತಾಂತರಿಸಲು ಸಾಧ್ಯವಾಗಿರುವುದಿಲ್ಲವೆಂದು ತಿಳಿಸಿದ್ದು ಈ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸಲು ಕೋರಿರುತ್ತಾರೆ.

ಮೇಲೆ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಹಾಗೂ ಸಂಘದ ಆಡಳಿತಾಧಿಕಾರಿ ಅವಧಿಯು ದಿನಾಂಕ: 15.07.2019ಕ್ಕೆ ಮುಕ್ತಾಯ ವಾಗಿರುವುದರಿಂದ, ಸಂಘದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ನೂತನ ಚುನಾಯಿತ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಲು ಕಾಲಾವಕಾಶದ ಅವಶ್ಯಕತೆಯಿರುವುದರಿಂದ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 16.07.2019 ರಿಂದ ಮುಂದಿನ ಆರು ತಿಂಗಳ ಅವಧಿಗೆ ಸೂಕ್ತವೆಂದು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಸಇ 300 ಸಸಂನೋ 2017, ಬೆಂಗಳೂರು, ದಿನಾಂಕ: 16.09.2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ) ರನ್ವಯ ಭಾರತಿ ವಿದ್ಯಾವರ್ಧಕ ಸಂಘ, ಚಿಕ್ಕೋಡಿ, ಬೆಳಗಾವಿ ಜಿಲ್ಲೆ ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 16.07.2019 ರಿಂದ ಮುಂದಿನ 6 ತಿಂಗಳವರೆಗೆ ವಿಸ್ತರಿಸಿ ಆದೇಶಿಸಲಾಗಿದೆ. ಈ ಆದೇಶವು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರುತ್ತದೆ.

(೭೫೯)೭೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ಭಾಗ ೧ ಆಡಳಿತಾಧಿಕಾರಿಗಳು ಸದರಿ ಅವಧಿಯೊಳಗಾಗಿ ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವಂತೆ ಸೂಚಿಸಲಾಗಿದೆ.

PR-365

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-20

ಚೇತನ ಎಂ.

ಸರ್ಕಾರದ ಅಧೀನ ಕಾರ್ಯದರ್ಶಿ-3 (ಪ್ರ)

ಸಹಕಾರ ಇಲಾಖೆ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ವಿಷಯ : ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ (NCAP) ಅಡಿಯಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿ ನಿರ್ದಿಷ್ಟ ಕಾರ್ಯಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದ ಚಾಲನಾ ಸಮಿತಿ (Steering Committee), ಉಸ್ತುವಾರಿ ಸಮಿತಿ (Monitoring Committee) ಮತ್ತು ಅನುಷ್ಠಾನ ಸಮಿತಿ (Implementation Committee) ಗಳನ್ನು ರಚಿಸುವ ಬಗ್ಗೆ.

ಓದಲಾಗಿದೆ: 1. ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಅಧಿಕೃತ ಜ್ಞಾಪನ ಸಂ: ಕ್ಯು 16017/41/2019-ಸಿಪಿಎ ದಿನಾಂಕ: 24.06.2019.

2. ದಿನಾಂಕ: 10.06.2019ರಂದು ಜರುಗಿದ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ಕೇಂದ್ರ ಚಾಲನಾ ಸಮಿತಿಯ ಮೊದಲನೇ ಸಭೆಯ ನಡವಳಿಗಳು.

3. ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಜಂಟಿ ಕಾರ್ಯದರ್ಶಿಯವರು ಸರ್ಕಾರ ಮುಖ್ಯ ಕಾರ್ಯದರ್ಶಿಯವರಿಗೆ ಬರೆದಿರುವ ಅರೆ ಸರ್ಕಾರಿ ಪತ್ರ ಸಂಖ್ಯೆ: ಕ್ಯು- 16017/12/2019-ಸಿಪಿಎ, ದಿನಾಂಕ: 24.04.2019.

4. ಸರ್ಕಾರದ ಆದೇಶದ ಸಂಖ್ಯೆ: ಅಪಜೀ 13 ಇಎನ್‌ಜಿ 2018, ದಿನಾಂಕ: 19.09.2018.

5. ಸರ್ಕಾರದ ಆದೇಶದ ಸಂಖ್ಯೆ: ಎಫ್ಇಇ 216 ಇಪಿಸಿ 2018, ದಿನಾಂಕ: 24.11.2018.

ಪ್ರಸ್ತಾವನೆ:

ಮೇಲೆ ಓದಲಾದ (1), (2) ಮತ್ತು (3)ರ ಕೇಂದ್ರ ಸರ್ಕಾರದ ಪತ್ರಗಳಲ್ಲಿ ರಾಜ್ಯದಲ್ಲಿ ವಾಯು ಗುಣಮಟ್ಟ ಸುಧಾರಣೆಗಾಗಿ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ಅಡಿಯಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿ ನಿರ್ದಿಷ್ಟ ಕಾರ್ಯಯೋಜನೆಗಳನ್ನು ಅಂತಿಮಗೊಳಿಸಿ, ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ದೃಷಿಯಿಂದ ಕೆಳಕಂಡಂತೆ ಮೂರು ಸಮಿತಿಗಳನ್ನು ರಚಿಸಲು ಸೂಚಿಸಲಾಗಿದೆ.

(ಅ) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿನ ರಾಜ್ಯ ಮಟ್ಟದ ಚಾಲನಾ ಸಮಿತಿ

(Steering Committee)

(ಆ) ರಾಜ್ಯ ಸರ್ಕಾರದ ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ (Monitoring Committee)

(ಇ) ನಗರ ಮಟ್ಟದಲ್ಲಿ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಥವಾ ಸಂಬಂಧಪಟ್ಟ ನಗರಗಳ ನಗರಸಭೆಗಳ ಆಯುಕ್ತರ ಅಧ್ಯಕ್ಷತೆಯಲ್ಲಿ ಅನುಷ್ಠಾನ ಸಮಿತಿ (Implementation Committee)

ಮೇಲೆ (4)ರಲ್ಲಿ ಓದಲಾದ ಸರ್ಕಾರದ ಆದೇಶದ ಮೂಲಕ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳ ಮುಖ್ಯಸ್ಥರು / ಪ್ರತಿನಿಧಿಗಳನ್ನೊಳಗೊಂಡ ಕಾರ್ಯಪಡೆಯನ್ನು (Task Force) ರಚಿಸಲಾಗಿದೆ. ಮುಂದುವರೆದು, ಮಾನ್ಯ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ, ನವದೆಹಲಿರವರು ಮೂಲ ಅರ್ಜಿ ಸಂಖ್ಯೆ:681/2018ರ ಮೇಲೆ ದಿನಾಂಕ: 08.10.2018ರಂದು ಹೊರಡಿಸಿರುವ ನಿರ್ದೇಶನದ ಅನುಸಾರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿರುವ ಮಾನದಂಡಗಳನ್ನು ಸಾಧಿಸದ ನಗರಗಳಲ್ಲಿನ ವಾಯಗುಣಮಟ್ಟ ಸುಧಾರಣೆಗಾಗಿ ಕಾರ್ಯಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುವ ದೃಷ್ಟಿಯಿಂದ ಮೇಲೆ (5)ರಲ್ಲಿ ಓದಲಾದ ಸರ್ಕಾರದ ಆದೇಶದ ಅನುಸಾರ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪರಿಸರ ಮತ್ತು ಜೀವಿಶಾಸ್ತ್ರ), ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ಒಂದು "ವಾಯುಗುಣಮಟ್ಟ ಮೇಲ್ವಿಚಾರಣಾ ಸಮಿತಿ"ಯನ್ನು ರಚಿಸಲಾಗಿದೆ.

ಮೇಲೆ (4) ರಲ್ಲಿ ಓದಲಾದ ಸರ್ಕಾರದ ಆದೇಶದ ಅನುಸಾರ ರಚಿಸಲ್ಪಟ್ಟಿರುವ ಕಾರ್ಯಪಡೆಯ ಸ್ವರೂಪ, ಉದ್ದೇಶ ಮತ್ತು ಕಾರ್ಯಭಾರಗಳು ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ರಾಜ್ಯ ಮಟ್ಟದ ಚಾಲನಾ ಸಮಿತಿಯ ಸ್ವರೂಪ, ಉದ್ದೇಶ ಮತ್ತು ಕಾರ್ಯಭಾರಗಳು ಒಂದೇ ಆಗಿರುವುದನ್ನು ಗಮನಿಸಲಾಗಿದೆ. ಆದುದರಿಂದ, ಮೇಲೆ (4) ರಲ್ಲಿ ಓದಲಾದ ಸರ್ಕಾರದ ಆದೇಶಾನುಸಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳವರ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ಸಮಿತಿಯನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಸೂಚನೆಯಂತೆ ರಾಜ್ಯ ಮಟ್ಟದ ಚಾಲನಾ ಸಮಿತಿ ಎಂದು ಗುರುತಿಸಿ ಚಾಲನಾ ಸಮಿತಿಯ ಜವಾಬ್ದಾರಿಯನ್ನು ಸದರಿ ಸಮಿತಿಗೆ ವಹಿಸುವ ಬಗ್ಗೆ ಪರಿಗಣಿಸಲಾಗಿದೆ.

ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ೭೬೧

ಮೇಲೆ (5) ರಲ್ಲಿ ಓದಲಾದ ಸರ್ಕಾರದ ಆದೇಶದ ಅನುಸಾರ ರಚಿಸಲ್ಪಟ್ಟಿರುವ ವಾಯುಗುಣಮಟ್ಟ ಮೇಲ್ವಿಚಾರಣಾ ಸಮಿತಿಯ ಸ್ವರೂಪ, ಉದ್ದೇಶ ಮತ್ತು ಕಾರ್ಯಭಾರಗಳು ಕೇಂದ್ರ ಸರ್ಕಾರವು ಪ್ರಸ್ತಾಪಿಸಿರುವ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯ ಸ್ವರೂಪ, ಉದ್ದೇಶ ಮತ್ತು ಕಾರ್ಯಭಾರಗಳು ಒಂದೇ ಆಗಿರುವುದನ್ನು ಗಮನಿಸಲಾಗಿದೆ. ಆದುದರಿಂದ, ಮೇಲೆ (5) ರಲ್ಲಿ ಓದಲಾದ ಸರ್ಕಾರದ ಆದೇಶಾನುಸಾರ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪರಿಸರ ಮತ್ತು ಜೀವಿಶಾಸ್ತ್ರ), ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ, ಕರ್ನಾಟಕ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ಸಮಿತಿಯನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯದ ಸೂಚನೆಯಂತೆ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿ ಎಂದು ಗುರುತಿಸಿ ಉಸ್ತುವಾರಿ ಸಮಿತಿಯ ಜವಾಬ್ದಾರಿಯನ್ನು ಸದರಿ ಸಮಿತಿಗೆ ವಹಿಸುವ ಬಗ್ಗೆ ಪರಿಗಣಿಸಲಾಗಿದೆ.

ಅಲ್ಲದೆ, ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ರಾಜ್ಯದ ಬೆಂಗಳೂರು, ದಾವಣಗೆರೆ, ಗುಲ್ಬರ್ಗಾ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ಅನುಷ್ಠಾನದ ಉದ್ದೇಶಕ್ಕಾಗಿ ಜಿಲ್ಲಾಧಿಕಾರಿಗಳು ಅಥವಾ ಸಂಬಂಧಪಟ್ಟ ನಗರಗಳ ನಗರಸಭೆ ಆಯುಕ್ತರ ಅಧ್ಯಕ್ಷತೆಯಲ್ಲಿ ನಗರ ಮಟ್ಟದ ಅನುಷ್ಠಾನ ಸಮಿತಿಗಳನ್ನು ರಚಿಸುವ ಬಗ್ಗೆ ಪ್ರಸ್ತಾಪಿಸಿರುತ್ತದೆ.

ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸಲಾಗಿದ್ದು, ಈ ಮೇಲ್ಕಂಡ ಎಲ್ಲಾ ನಗರಗಳಿಗೆ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ

ಕ್ರಮ ಸಂಖ್ಯೆ ಅಧಿಕಾರಿ ಮತ್ತು ಇಲಾಖೆ ಪ ದನಾಮ
1. ಸ ಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಧ್ಯಕ್ಷರು
2. ಆಯುಕ್ತರು, ಸಂಬಂಧಪಟ್ಟ ಮಹಾನಗರಪಾಲಿಕೆ ಸದಸ್ಯರು
3. ಸ ಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸದಸ್ಯರು
4. ಸಾರಿಗೆ ಇಲಾಖೆಯ ಸಂಬಂಧಪಟ್ಟ ಜಿಲ್ಲೆಯ ಸಾರಿಗೆ ಅಧಿಕಾರಿ ಸದಸ್ಯರು
5. ಸ ಂಬಂಧಪಟ್ಟ ಜಿಲ್ಲೆಯ ಪರಿಸರ ಅಧಿಕಾರಿ ಸದಸ್ಯ ಸಮಾವೇಶಕರು

ಅದರಂತೆ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಅಪಜೀ 72 ಇಪಿಸಿ 2018, ಬೆಂಗಳೂರು, ದಿನಾಂಕ: 28.08.2019

ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಕೆಳಕಂಡಂತೆ ಆದೇಶಿಸಲಾಗಿದೆ.

I. ಸರ್ಕಾರದ ಆದೇಶದ ಸಂಖ್ಯೆ: ಅಪಜೀ 13 ಇಎನ್‌ಜಿ 2018, ದಿನಾಂಕ:19.09.2018ರ ಅನುಸಾರ ಸರ್ಕಾರದ ಮುಖ್ಯ ಕಾರ್ಯದರ್ಶಿಗಳವರ ಅಧ್ಯಕ್ಷತೆಯಲ್ಲಿ ಪುನರ್ ರಚಿಸಲ್ಪಟ್ಟಿರುವ ಅನುಬಂಧ-1 ರಲ್ಲಿನ ವಾಯು ಮಾಲಿನ್ಯ ನಿಯಂತ್ರಣ ಕಾರ್ಯಪಡೆಯು ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ರಾಜ್ಯ ಮಟ್ಟದ ಚಾಲನಾ ಸಮಿತಿಯಾಗಿಯೂ ಕಾರ್ಯನಿರ್ವಹಿಸತಕ್ಕದ್ದು ಹಾಗೂ ಹಾಲಿ ಇರುವ ಕರ್ತವ್ಯ ಮತ್ತು ಹೊಣೆಗಾರಿಕೆಗಳ ಜೊತೆಗೆ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು.

II. ಸರ್ಕಾರದ ಆದೇಶದ ಸಂಖ್ಯೆ: ಎಫ್ಇಇ 216 ಇಪಿಸಿ 2018, ದಿನಾಂಕ: 24.11.2018 ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಪರಿಸರ ಮತ್ತು ಜೀವಿಶಾಸ್ತ್ರ), ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ಅನುಬಂಧ-2 ರಲ್ಲಿನ ವಾಯು ಗುಣಮಟ್ಟ ಮೇಲ್ವಿಚಾರಣಾ ಸಮಿತಿಯು ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ರಾಜ್ಯ ಮಟ್ಟದ ಉಸ್ತುವಾರಿ ಸಮಿತಿಯಾಗಿಯೂ ಕಾರ್ಯನಿರ್ವಹಿಸತಕ್ಕದ್ದು ಹಾಗೂ ಹಾಲಿ ಇರುವ ಕರ್ತವ್ಯ ಮತ್ತು ಹೊಣೆಗಾರಿಕೆಗಳ ಜೊತೆಗೆ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು.

III. ರಾಜ್ಯದ ಬೆಂಗಳೂರು, ದಾವಣಗೆರೆ, ಗುಲ್ಬರ್ಗಾ ಮತ್ತು ಹುಬ್ಬಳ್ಳಿ-ಧಾರವಾಡ ನಗರಗಳಿಗೆ ಸಂಬಂಧಪಟ್ಟಂತೆ ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ಅನುಷ್ಠಾನದ ಉದ್ದೇಶಕ್ಕಾಗಿ ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೆಳಕಂಡಂತೆ ನಗರ ಮಟ್ಟದ ಅನುಷ್ಠಾನ ಸಮಿತಿಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರಚಿಸಲಾಗಿದೆ.

ಕ್ರಮ ಸ ಂಖ್ಯೆ ಅಧಿಕಾರಿ ಮತ್ತು ಇಲಾಖೆ ಪ ದನಾಮ
1. ಸ ಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಧ್ಯಕ್ಷರು
2. ಆಯುಕ್ತರು, ಸಂಬಂಧಪಟ್ಟ ಮಹಾನಗರಪಾಲಿಕೆ ಸದಸ್ಯರು
3. ಸ ಂಬಂಧಪಟ್ಟ ಜಿಲ್ಲೆಯ ಉಪ ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸದಸ್ಯರು
4. ಸಾರಿಗೆ ಇಲಾಖೆಯ ಸಂಬಂಧಪಟ್ಟ ಜಿಲ್ಲೆಯ ಸಾರಿಗೆ ಅಧಿಕಾರಿ ಸದಸ್ಯರು
5. ಸ ಂಬಂಧಪಟ್ಟ ಜಿಲ್ಲೆಯ ಪರಿಸರ ಅಧಿಕಾರಿ ಸದಸ್ಯ ಸಮಾವೇಶಕರು
೭೬೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ಭಾಗ ೧

ಈ ಎಲ್ಲಾ ಸಮಿತಿಗಳ ರಚನೆಯು ತಕ್ಷಣದಿಂದಲೇ ಜಾರಿಗೆ ಬರುವಂತೆ ರಚನೆಗೊಂಡಿದ್ದು, ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ (NCAP) ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕಾರ್ಯಪ್ರವೃತ್ತರಾಗತಕ್ಕದ್ದೆಂದು ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಾಲಚಂದಿರಾಮ ಗೋ. ಹುಣಶಾಳ

ಸರ್ಕಾರದ ಅಧೀನ ಕಾರ್ಯದರ್ಶಿ.

(ಪರಿಸರ ಮತ್ತು ಜೀವಿಶಾಸ್ತ್ರ)

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

ಅನುಬಂಧ -1

(ಸರ್ಕಾರದ ಆದೇಶ ಸಂಖ್ಯೆ: ಅಪಜೀ 72 ಇಪಿಸಿ 2018, ಬೆಂಗಳೂರು, ದಿನಾಂಕ: 28.08.2019)

ಸರ್ಕಾರದ ಆದೇಶದ ಸಂಖ್ಯೆ: ಅಪಜೀ 13 ಇಎನ್‌ಜಿ 2018, ದಿನಾಂಕ: 19.09.2018ರಲ್ಲಿ

ಪುನರ್ ರಚಿಸಲ್ಪಟ್ಟಿರುವ ವಾಯು ಮಾಲಿನ್ಯ ನಿಯಂತ್ರಣ ಕಾರ್ಯಪಡೆ ಹಾಗೂ

ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ರಾಜ್ಯ ಮಟ್ಟದ ಚಾಲನಾ ಸಮಿತಿ

1. ವ ುುಖ್ಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ಅಧ್ಯಕ್ಷರು
2. ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸ ದಸ್ಯರು
3. ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಒಳಾಡಳಿತ ಇಲಾಖೆ ಸ ದಸ್ಯರು
4. ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ ದಸ್ಯರು
5. ಸ ರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ನ ಗ ರಾಭಿವೃದ್ಧಿ ಇಲಾಖೆ ಸ ದಸ್ಯರು
6. ಸ ರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಸಾರಿಗೆ ಇಲಾಖೆ ಸ ದಸ್ಯರು
7. ಸ ರ್ಕಾರದ ಪ್ರಧಾನ ಕಾರ್ಯದರ್ಶಿಗಳು, (ಜೀವಿಪರಿಸ್ಥಿತಿ ಮತ್ತು ಪರಿಸರ), ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಸ ದಸ್ಯರು
8. ಆಯುಕ್ತರು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ ದಸ್ಯರು
9. ಆಯುಕ್ತರು, ನ ಗ ರ ಭೂ ಸಾರಿಗೆ ನಿರ್ದೇಶನಾಲಯ, ಬಿ.ಎಂ.ಟಿ.ಸಿ, ಟಿ.ಟಿ.ಎಂ.ಸಿ 'ಬಿ' ಬ್ಲಾಕ್, 4ನೇ ಮಹಡಿ, ಶಾಂತಿನಗರ, ಕೆ.ಹೆಚ್ ರಸ್ತೆ, ಬ ಂಗಳೂರು- 560 027. ೆ ಸ ದಸ್ಯರು
10. ಆಯುಕ್ತರು, ಸಾರಿಗೆ ಮತ್ತು ರಸ್ತೆ ಸುರಕ್ಷತೆ, 1ನೇ ಮಹಡಿ, 'ಎ' ಬ್ಲಾಕ್, ಟಿಟಿಎಂಸಿ ಕಟ್ಟಡ, ಶಾಂತಿನಗರ, ಬೆಂಗಳೂರು -560 027 ಸ ದಸ್ಯರು
11. ಜನರಲ್ ಮ್ಯಾನೇಜರ್ & ಸ್ಟೇಟ್ ಲೆವೆಲ್ ಕೋ-ಆರ್ಡಿನೇಟರ್ (ಕರ್ನಾಟಕ), ಇಂಡಿಯನ್ ಆಯಿಲ್ ಕಾರ್ಪೋರೇಷನ್, ನ ಂ.29, ಪಿ, ಕಾಳಿಂಗರಾವ್ ರಸ್ತೆ, ಬ ಂಗಳೂರು-560 027. ೆ ಸ ದಸ್ಯರು
12. ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌ನ (GAIL GAS Ltd.,) ನ ಪ್ರತಿನಿಧಿ ಎಸ್-44, 3ನೇ ಮಹಡಿ, ಎಂ.ಎಸ್ ಕಾಂಪ್ಲೆಕ್ಸ್, ನ ೂ್ಯ ಬಿಇಎಲ್ ರೋಡ್, ಬೆಂಗಳೂರು, 560 054. ಸದಸ್ಯರು
13. ಸೆಂಟರ್ ಫಾರ್ ಸ್ಟಡಿ ಆಫ್ ಸೈನ್ಸ್, ಟೆಕ್ನಾಲಜಿ & ಪಾಲಿಸಿ (C-STEP), ನ ಪ್ರತಿನಿಧಿ ನಂ.18, 10ನೇ ಕ್ರಾಸ್, ಮಯೂರ ಸ್ಟ್ರೀಟ್, ಪಾಪಣ್ಣ ಲೇಔಟ್, ನಾಗಶೆಟ್ಟಿಹಳ್ಳಿ, ಆರ್.ಎಂ.ವಿ, 2ನೇ ಹಂತ, ಬೆಂಗಳೂರು-560 094. ಸದಸ್ಯರು
14. ದಿ ಎನರ್ಜಿ & ರಿಸೋರ್ಸ್ ಇನ್‌ಸ್ಟಿಟ್ಯೂಟ್ (TERI) ನ ಪ್ರತಿನಿಧಿ, 4ನೇ ಮುಖ್ಯ ರಸ್ತೆ, ದೊಮ್ಮಲೂರು, 2ನೇ ಹಂತ, ಬ ಂಗಳೂರು- 560 071 ೆ ಸದಸ್ಯರು
15. ಅಧ್ಯಕ್ಷರು, Centre for Infrastructure, Sustainable Transportation and Urban Planning (CISTUP) ಬ ಾರತೀಯ ವಿಜ್ಞಾನ ಸಂಸ್ಥೆ, ಮಲ್ಲೇಶ್ವರಂ, ಬ ಂಗಳೂರು ೆ ಸದಸ್ಯರು
16. ಅಧ್ಯಕ್ಷರು, ಕರ್ನಾಟಕ ಲಾರಿ ಮಾಲೀಕರು ಒಕ್ಕೂಟ / ಸಂಘ, ನ ಂ.165, 15ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-560 018. ಸದಸ್ಯರು
17. ಅಧ್ಯಕ್ಷರು, ದಕ್ಷಿಣ ರಾಜ್ಯದ ಸರಕು ವಾಹನಗಳ ಮಾಲೀಕರ ಒಕ್ಕೂಟ, ನಂ.13, 1ನೇ ಮಹಡಿ, ವಿಜಯ ಕಾಂಪ್ಲೆಕ್ಸ್, ಶಿವಗಂಗಾ ಮಠ, ಚಾಮರಾಜಪೇಟೆ, ಬ ಂಗಳೂರು-560 018. ೆ ಸದಸ್ಯರು
18. ಸ ದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ನ ಂ.49, ಪರಿಸರ ಭವನ, ಚರ್ಚ್ ಸ್ಟ್ರೀಟ್, ಬ ಂಗಳೂರು. ೆ ಸದಸ್ಯರು - ಸಂಚಾಲಕರು
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ೭೬೩

ಬಾಲಚಂದಿರಾಮ ಗೋ. ಹುಣಶಾಳ

ಸರ್ಕಾರದ ಅಧೀನ ಕಾರ್ಯದರ್ಶಿ,

(ಪರಿಸರ ಮತ್ತು ಜೀವಿಶಾಸ್ತ್ರ)

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

೭೬೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ಭಾಗ ೧

ಅನುಬಂಧ - 2

(ಸರ್ಕಾರದ ಆದೇಶ ಸಂಖ್ಯೆ: ಅಪಜೀ 72 ಇಪಿಸಿ 2018, ಬೆಂಗಳೂರು, ದಿನಾಂಕ: 28.08.2019)

ಸರ್ಕಾರದ ಆದೇಶದ ಸಂಖ್ಯೆ: ಎಫ್ಇಇ 216 ಇಪಿಸಿ 2018, ದಿನಾಂಕ: 24.11.2018ರಲ್ಲಿ ರಚಿಸಲ್ಪಟ್ಟಿರುವ

1. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು (ಜೀವಿಪರಿಸ್ಥಿತಿ ಮತ್ತು ಪರಿಸರ),ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆ ಅಧ್ಯಕ್ಷರು
2. ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು, ಸಾರಿಗೆ ಇಲಾಖೆ ಸದಸ್ಯರು
3. ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಮತ್ತು ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ. ಸದಸ್ಯರು
4. ನಿರ್ದೇಶಕರು, ಪೌರಾಡಳಿತ ನಿರ್ದೇಶನಾಲಯ ಸದಸ್ಯರು
5. ಆಯುಕ್ತರು, ಕೃಷಿ ಇಲಾಖೆ ಸದಸ್ಯರು
6. ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ-ಸಂಚಾಲಕರು

PR-366

ಬಾಲಚಂದಿರಾಮ ಗೋ. ಹುಣಶಾಳ

SC-100

ಸರ್ಕಾರದ ಅಧೀನ ಕಾರ್ಯದರ್ಶಿ,

(ಪರಿಸರ ಮತ್ತು ಜೀವಿಶಾಸ್ತ್ರ)

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

MINORITY WELFARE, HAJ & WAKF SECRETARIAT

Sub : Extension of the period of the Administrator of the Karnataka State Board of Wakf, Bengaluru. reg.

Read: 1) G.O. No. MWD 120 WES 2016, dt: 19.08.2016. 2) G.O.No. MWD 120 WES 2016, dt: 22.02.2017.

3) G.O.No. MWD 120 WES 2016, dt: 19.08.2017.

4) G.O.No. MWD 120 WES 2016, dt: 26.04.2018.

5) G.O.No. MWD 120 WES 2016, dt: 04.09.2018.

6) G.O.No. MWD 120 WES 2016, dt: 05.04.2019.

Preamble:

The Karnataka State Board of Wakf, Bengaluru which was constituted as per the Government Notification No. MWD 237 WES 2011, dated: 20-08-2011 for a period of five years had expired on 19-08-2016. Due to Amendment to the Karnataka Wakf Rules 1997, General Election of Loka Sabha held recently and also due to change of Government, the period of Administrator of the Wakf Board has been extended from time to time.

The present term of the Administrator of the Karnataka State Board of Wakf which was extended for a period of Six months from 05.03.2019 vide Government Order read at (6) above will also expire on 04.09.2019.

For the re-constitution of the regular Wakf Board, the Regional Commissioner, Bengaluru Division, Bengaluru was appointed as Returning Officer. He has completed the process of Election of Electoral College and declared result on 11-03-2019. The process of nominating the Category of the nomination of Members have also been completed recently. However due to change of Government and Circular instruction of Hon'ble Chief Minister and Chief Secretary to Government of Karnataka, the Wakf Board could not be re- constituted so far. However opinion of the Law Department has been sought in this regard and the opinion of the Law Department is awaited.

In view of the above facts, the term of the Administrator of the Wakf Board will have to be extended for a further period of Six month with effect from 05-09-2019 or till the composition of the Wakf Board whichever is earlier.

Hence the Order,

Government Order No: MWD 120 WES 2016, Bengaluru dt: 13-09-2019

In view of the above facts, the Government is pleased to extend the term of the appointment of Sri A.B.Ibrahim IAS., Secretary to Government, Minority Welfare Haj and Wakf Department, Bengaluru as Administrator of the Karnataka State Board of Wakf,ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ೭೬೫ Bengaluru with effect from 05-09-2019 for a period of Six months or till the composition of regular Wakf Board, whichever is earlier and until further orders.

PR-367

By Order and in the Nam e of the Governor of Karnataka SC-200

AKRAM BHASHA

Minority Welfare, Haj & Wakf Department.

ಸಹಕಾರ ಸಚಿವಾಲಯ

ವಿಷಯ : ಬೆಂಗಳೂರು ತಮಿಳ್ ಸಂಘಂ, ಬೆಂಗಳೂರು ಈ ಸಂಘ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸುವ ಬಗ್ಗೆ. ಓದಲಾಗಿದೆ: 1. ಸರ್ಕಾರದ ಆದೇಶ ಸಂಖ್ಯೆ: ಸಇ 136 ಸಸಂನೋ 2018, ಬೆಂಗಳೂರು ದಿನಾಂಕ: 14.03.2019 2. ಸರ್ಕಾರದ ಆದೇಶ ಸಂಖ್ಯೆ: ಸಇ 136 ಸಸಂನೋ 2018, ಬೆಂಗಳೂರು ದಿನಾಂಕ: 11.07.2019 3. ಆಡಳಿತಾಧಿಕಾರಿ, ಬೆಂಗಳೂರು ತಮಿಳ್ ಸಂಘಂ, ಬೆಂಗಳೂರು ಇವರ ಪತ್ರ ಸಂಖ್ಯೆ:ಬಿಟಿಎಸ್/ಆಡಳಿತಾಧಿಕಾರಿ/

2019-20, ದಿನಾಂಕ: 13.09.2019

ಪ್ರಸ್ತಾವನೆ:

ಮೇಲೆ (1)ರಲ್ಲಿ ಓದಲಾದ ಆದೇಶದಲ್ಲಿ ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರನ್ವಯ ದಿ ಬೆಂಗಳೂರು ತಮಿಳ್ ಸಂಘಂ, ನಂ.59, ಅಣ್ಣಸ್ವಾಮಿ ಮೊದಲಿಯಾರ್ ಸಾಲೈ ರಸ್ತೆ, ಬೆಂಗಳೂರು-42 ಈ ಸಂಘಕ್ಕೆ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು, 4ನೇ ವಲಯ, ಬೆಂಗಳೂರು ನಗರ ಜಿಲ್ಲೆ ಇವರನ್ನು ದಿನಾಂಕ: 14.03.2019 ರಿಂದ ಜಾರಿಗೆ ಬರುವಂತೆ ಮುಂದಿನ 6 ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿತ್ತು.

ಮೇಲೆ (2)ರಲ್ಲಿ ಓದಲಾದ ಆದೇಶದಲ್ಲಿ ದಿ ಬೆಂಗಳೂರು ತಮಿಳ್ ಸಂಘಂ, ನಂ.59, ಅಣ್ಣಸ್ವಾಮಿ ಮೊದಲಿಯಾರ್ ಸಾಲೈ ರಸ್ತೆ, ಬೆಂಗಳೂರು-42 ಈ ಸಂಘಕ್ಕೆ ಸರ್ಕಾರದ ದಿನಾಂಕ: 14.03.2019 ರ ಆದೇಶದಲ್ಲಿ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದ್ದ ಸಹಕಾರ ಸಂಘಗಳ ಉಪ ನಿಬಂಧಕರು ಹಾಗೂ ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು, 4ನೇ ವಲಯ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಇವರನ್ನು ಬದಲಾಯಿಸಿ ಡಾ||ಅಶ್ವತ್, ಐ.ಎ.ಎಸ್.

(ನಿವೃತ್ತ) ನಂ.2, 60 ಅಡಿ ರಸ್ತೆ, ಸಿಟಿ ವಿನಾಯಕ ಲೇಔಟ್, ಸಂಜಯನಗರ, ಬೆಂಗಳೂರು-560 094 ಇವರನ್ನು, ಈ ಆದೇಶವು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುವಂತೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಲಾಗಿತ್ತು.

ಮೇಲೆ (3)ರಲ್ಲಿ ಓದಲಾದ ಪತ್ರದಲ್ಲಿ ಮಾನ್ಯ ಉಚ್ಛ ನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ:13937/2019 ಪ್ರಕರಣದ ದಿನಾಂಕ: 20.06.2019ರ ತೀರ್ಪಿನಲ್ಲಿ ಆಡಳಿತಾಧಿಕಾರಿ, ಬೆಂಗಳೂರು ತಮಿಳ್ ಸಂಘ ಇವರು ಸಂಘದ ವಿಚಾರಣೆಯನ್ನು ಹಾಗೂ ಚುನಾವಣೆಯನ್ನು ಮಾನ್ಯ ನ್ಯಾಯಾಲಯವು ಆದೇಶ ಹೊರಡಿಸಿದ ದಿನಾಂಕದಿಂದ ಮೂರು ತಿಂಗಳೊಳಗಾಗಿ ನಿಯಮಾನುಸಾರ ನಡೆಸಲು ತಿಳಿಸಿರುವಂತೆ ಕ್ರಮಕೈಗೊಳ್ಳಲಾಗುತ್ತಿದ್ದು, ಚುನಾವಣೆ ನಡೆಸಲು ಕನಿಷ್ಠ ಆರು ತಿಂಗಳು ಕಾಲಾವಕಾಶ ಬೇಕಾಗಿರುವುದರಿಂದ ಆಡಳಿತಾಧಿಕಾರಿ ಅವಧಿಯನ್ನು ಮುಂದಿನ ಆರು ತಿಂಗಳ ಅವಧಿಗೆ ವಿಸ್ತರಿಸಬೇಕೆಂದು ಕೋರಿರುತ್ತಾರೆ.

ಮೇಲ್ಕಂಡ ಅಂಶಗಳನ್ನು ಪರಿಶೀಲಿಸಲಾಗಿ ಬೆಂಗಳೂರು ದಿ ಬೆಂಗಳೂರು ತಮಿಳ್ ಸಂಘಂ, ನಂ.59, ಅಣ್ಣಸ್ವಾಮಿ ಮೊದಲಿಯಾರ್ ಸಾಲೈ ರಸ್ತೆ, ಬೆಂಗಳೂರು-42 ಈ ಸಂಘದ ಆಡಳಿತಾಧಿಕಾರಿ ಅವಧಿಯು ದಿನಾಂಕ: 13.09.2019 ಕ್ಕೆ ಮುಕ್ತಾಯವಾಗಿರುವುದರಿಂದ ಸಂಘದಲ್ಲಿನ ಲೋಪದೋಷಗಳನ್ನು ಸರಿಪಡಿಸಿ ಸಂಘಕ್ಕೆ ಗೌ.ಉಚ್ಛ ನ್ಯಾಯಾಲಯದ ಆದೇಶದನ್ವಯ ನಿಯಮಾನುಸಾರ ಚುನಾವಣೆ ನಡೆಸಲು ಕಾಲಾವಕಾಶದ ಅಗತ್ಯತೆ ಇರುವುದರಿಂದ ಸಂಘದ ಆಡಳಿತಾಧಿಕಾರಿ ಅವಧಿಯನ್ನು ವಿಸ್ತರಿಸಲು ಸರ್ಕಾರವು ತೀರ್ಮಾನಿಸಿದೆ. ಆದ್ದರಿಂದ, ಈ ಆದೇಶ.

ಸರ್ಕಾರದ ಆದೇಶ ಸಂಖ್ಯೆ: ಸಇ 136 ಸಸಂನೋ 2018, ಬೆಂಗಳೂರು, ದಿನಾಂಕ: 19.09.2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27(ಎ)(5) ರನ್ವಯ ದಿ ಬೆಂಗಳೂರು ತಮಿಳ್ ಸಂಘಂ, ನಂ.59, ಅಣ್ಣಸ್ವಾಮಿ ಮೊದಲಿಯಾರ್ ಸಾಲೈ ರಸ್ತೆ, ಬೆಂಗಳೂರು-42 ಈ ಸಂಘದ ಆಡಳಿತಾಧಿಕಾರಿ ಅವಧಿಯನ್ನು ದಿನಾಂಕ: 14.09.2019 ರಿಂದ ಮುಂದಿನ ಆರು ತಿಂಗಳ ಅವಧಿಗೆ ಅಥವಾ ಆಡಳಿತಾಧಿಕಾರಿಗಳು ಸಂಘದ ಚುನಾವಣೆ ನಡೆಸಿ ನೂತನ ಕಾರ್ಯಕಾರಿ ಮಂಡಳಿಗೆ ಅಧಿಕಾರ ಹಸ್ತಾಂತರಿಸುವವರೆಗೆ ಇವುಗಳಲ್ಲಿ ಯಾವುದು ಮೊದಲೊ ಅಲ್ಲಿಯವರೆಗೆ ವಿಸ್ತರಿಸಿ ಆದೇಶಿಸಿದೆ.

ರಿಟ್ ಅರ್ಜಿ ಸಂಖ್ಯೆ: ಅರ್ಜಿ ಸಂ.: 13937/2019 ಪ್ರಕರಣದ ದಿನಾಂಕ: 20.06.2019 ರ ಆದೇಶದನ್ವಯ ಸಂಘದ ವಿರುದ್ಧದ ಆರೋಪಗಳ ಬಗ್ಗೆ ನಿಯಮಾನುಸಾರ ವಿಚಾರಣೆ ನಡೆಸಲು ಕ್ರಮಕೈಗೊಳ್ಳುವಂತೆ ಹಾಗೂ ಸಂಘದ ಚುನಾವಣೆಯನ್ನು ನಿಗಧಿತ ಅವಧಿಯೊಳಗೆ ನಡೆಸಿ ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಸೂಚಿಸಲಾಗಿದೆ.

PR-368

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-20

ಚೇತನ ಎಂ.

ಸರ್ಕಾರದ ಅಧೀನ ಕಾರ್ಯದರ್ಶಿ-3(ಪ್ರ),

ಸಹಕಾರ ಇಲಾಖೆ.

೭೬೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ಭಾಗ ೧

ಕಂದಾಯ ಸಚಿವಾಲಯ

ವಿಷಯ: ನಿರ್ದೇಶಕರು, ಸೌಂದರ್ಯ ಟೆಕ್ಸ್ ಟೈಲ್ಸ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109 ರಡಿ ಕೈಗಾರಿಕಾ ಉದ್ದೇಶಕ್ಕೆ ಅನುಮತಿ ಪಡೆದು ಆನೇಕಲ್ ತಾಲ್ಲೂಕ್, ಕಸಬಾ ಹೋಬಳಿ, ಮಡಿವಾಳ ಗ್ರಾಮದ ಸ.ನಂ 170ರಲ್ಲಿ ಖರೀದಿಸಿದ 2.15 ಎ/ಗುಂ ಜಮೀನನ್ನು ವಸತಿ ಉದ್ದೇಶಕ್ಕೆ ಭೂ ಬದಲಾವಣೆೆ ಮಾಡಲು ಕೋರಿರುವ ಬಗ್ಗೆ.

ಓದಲಾಗಿದೆ: 1. ಜಿಲ್ಲಾಧಿಕಾರಿ, ಬೆಂಗಳೂರು ಜಿಲ್ಲೆ, ಬೆಂಗಳೂರು ರವರ ಪತ್ರ

ಸಂಖ್ಯೆ: ಎಲ್ಆರ್ಎಫ್/ಸಿಆರ್/66/2002-2003, ದಿನಾಂಕ: 26.02.2003.

2. ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 45 ಎಲ್ಆರ್ಎಂ 2003, ದಿನಾಂಕ: 9ನೇ ಜೂನ್ 2003 3. ಜಿಲ್ಲಾಧಿಕಾರಿ, ಬೆಂಗಳೂರು ಜಿಲ್ಲೆ, ಬೆಂಗಳೂರು ರವರ ಪತ್ರ

ಸಂಖ್ಯೆ: ಎಲ್ಆರ್ಎಫ್(ಎ)(109)ಸಿಆರ್/08/14-15, ದಿನಾಂಕ: 04-8-2017.

4. ಕಾರಣ ಕೇಳುವ ನೋಟಿಸು ಸಂಖ್ಯೆ: ಕಂಇ 38 ಎಲ್ಆರ್ಎಂ 2017, ದಿನಾಂಕ: 01.01.2018. 5. ನಿರ್ದೇಶಕರು, ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೊಸೆಸಿಂಗ್ ಪ್ರೈ.ಲಿ, ಬೆಂಗಳೂರು ರವರ ಪತ್ರ

ದಿನಾಂಕ: 05.03.2018.

6. ಜಿಲ್ಲಾಧಿಕಾರಿ, ಬೆಂಗಳೂರು ಜಿಲ್ಲೆ ರವರ ಪತ್ರ ಸಂಖ್ಯೆ: ಎಲ್ಆರ್ಎಫ್/ಸಿಆರ್-08/05-06,

ದಿನಾಂಕ: 12.12.2005.

7. ಅಧಿಸೂಚನೆ ಸಂಖ್ಯೆ: ಆರ್‌ಡಿ 38 ಎಲ್ಆರ್ಎಂ 2017, ದಿನಾಂಕ: 25.09.2018. 8. ಮಾನ್ಯ ಉಚ್ಛ ನ್ಯಾಯಾಲಯ ಬೆಂಗಳೂರು ರಿಟ್ ಅರ್ಜಿ ಸಂಖ್ಯೆ: 39009/2018, ದಿನಾಂಕ: 14.9.2018 ರ ನ್ಯಾಯಾಲಯದ ಆದೇಶ. ಮತ್ತು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 47596/2018ನ್ನು ದಾಖಲಿಸಿದ್ದು, ಸದರಿ ಪ್ರಕರಣದ ಮಧ್ಯಂತರ ಆದೇಶ ದಿನಾಂಕ: 15-11-2018 ರ ಆದೇಶ.

ಮೇಲೆ ಓದಲಾದ ಉಲ್ಲೇಖಿತ (1) ರ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು ರವರ ಪತ್ರದಲ್ಲಿ ನಿರ್ದೇಶಕರು, ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೊಸೆಸಿಂಗ್ ಪ್ರೈ.ಲಿ, ಬೆಂಗಳೂರು ರವರು ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ, ಮಡಿವಾಳ ಗ್ರಾಮದ ಸರ್ವೆ ನಂಬರ್ 170 ರಲ್ಲಿ 2-15 ಎಕರೆ, ಸರ್ವೆ ನಂಬರ್ 171/2ಎ ರಲ್ಲಿ 1-03 ಎಕರೆ ಮತ್ತು ಸರ್ವೆ ನಂಬರ್ 171/2ಬಿ ರಲ್ಲಿ 1-05 ಎಕರೆ ಒಟ್ಟು 4-23 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು ಮಾಡಿದ ಬೇಡಿಕೆ ಮತ್ತು 15ಎ ಮತ್ತು 15 ಎಎ ಗಳಲ್ಲಿ ನೀಡಿದ ಮಾಹಿತಿ ಅನುಸರಿಸಿ ಜಿಲ್ಲಾಧಿಕಾರಿಗಳು, ಬೆಂಗಳೂರು ರವರು ಮೇಲಿನ ಸರ್ವೆ ನಂಬರುಗಳಲ್ಲಿ ಒಟ್ಟು 4-23 ಎಕರೆ ಜಮೀನನ್ನು ಖರೀದಿಸಲು ಸದರಿ ಸಂಸ್ಥೆಗೆ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಕಲಂ 109(1) (i) ರಡಿಯಲ್ಲಿ ವಿನಾಯಿತಿ ನೀಡಲು ಶಿಫಾರಸ್ಸು ಮಾಡಿರುತ್ತಾರೆ.

ಮೇಲೆ ಓದಲಾದ (2) ರ ಅಧಿಸೂಚನೆಯಲ್ಲಿ ಜಿಲ್ಲಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ, ಸರ್ಕಾರವು ಪರಿಶೀಲಿಸಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961ರ ಕಲಂ 109((1) (i) ರ ಪ್ರಕಾರ ಕೈಗಾರಿಕಾ ಉದ್ದೇಶಕ್ಕಾಗಿ 20 ಯೂನಿಟ್‌ವರೆಗೆ ಜಮೀನನ್ನು ಹೊಂದಲು ಅವಕಾಶ ಕಲ್ಪಿಸಿದೆ. ಈ ಪ್ರಸ್ತಾವನೆ ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ಕಾಯ್ದೆ 1995 ರ ಕಲಂ 109(1) (i) ಮತ್ತು ಕರ್ನಾಟಕ ಭೂ ಸುಧಾರಣೆ (ತಿದ್ದುಪಡಿ) ನಿಯಮ 1966 ರ ನಿಯಮ 38ಬಿ (1)(ಎ) ಮತ್ತು (ಬಿ) ರಲ್ಲಿನ ಷರತ್ತುಗಳನ್ನು ಪೂರೈಸಿದ್ದು, ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961 ರ ಕಲಂ 63, 79ಎ, 79ಬಿ ಅಥವಾ 80 ಕ್ಕೆ ವಿನಾಯಿತಿ ನೀಡಿ ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ, ಮಡಿವಾಳ ಗ್ರಾಮದ ಸರ್ವೆ ನಂಬರ್ 170 ರಲ್ಲಿ 2-15 ಎಕರೆ, ಸರ್ವೇ ನಂಬರ್ 171/2ಎ ರಲ್ಲಿ 1-03 ಎಕರೆ ಮತ್ತು ಸರ್ವೇ ನಂಬರ್ 171/ಬಿ ರಲ್ಲಿ 1-05 ಎಕರೆ ಒಟ್ಟು 4-23 ಎಕರೆ ಜಮೀನನ್ನು ಮೆ: ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ರವರಿಗೆ ಕೈಗಾರಿಕಾ ಉದ್ದೇಶಕ್ಕಾಗಿ ಕರ್ನಾಟಕ ಭೂಸುಧಾರಣಾ ಕಾಯ್ದೆ 1961 ರ ಕಲಂ (1) (i) ರಡಿಯಲ್ಲಿ ಸರ್ಕಾರದ ಅನುಮತಿ ನೀಡಲಾಗಿದೆ.

ಮೇಲೆ ಓದಲಾದ ಉಲ್ಲೇಖ(3) ರ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ರವರ ಪತ್ರ ಸಂಖ್ಯೆ: ಎಲ್ಆರ್ಎಫ್(ಎ)(109)ಸಿಆರ್/08/14-15 ದಿನಾಂಕ: 04-8-2017 ರ ಪತ್ರದಲ್ಲಿ ಮೆ:ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೋಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಇವರಿಗೆ ಬೆಂಗಳೂರು ಜಿಲ್ಲೆ, ಆನೇಕಲ್ ತಾಲೂಕ್, ಕಸಬಾ ಹೋಬಳಿ, ಮಡಿವಾಳ ಗ್ರಾಮದ ಸ.ನಂ 170ರಲ್ಲಿ 2-15 ಎಕರೆ, ಸ.ನಂ 171/2ಎ ರಲ್ಲಿ 1-03 ಎಕರೆ ಮತು ಸ.ನಂ. 171/2ಬಿ ರಲ್ಲಿ 1-05 ಎಕರೆ ಒಟ್ಟು 4-23 ಎಕರೆ ಜಮೀನನ್ನು ಆಧಿಸೂಚನೆ ಸಂಖ್ಯೆ:ಕಂಇ 45 ಎಲ್ಆರ್ಎಂ 2003, ದಿನಾಂಕ: 09-06-2003 ರನ್ವಯ ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಲು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ(1)(i)ರಡಿಯಲ್ಲಿ ಅನುಮತಿಯನ್ನು ನೀಡಲಾಗಿತ್ತು. ಸದರಿ ಜಮೀನಿನಲ್ಲಿ ಈವರೆವಿಗೂ ಯಾವುದೇ ಕೈಗಾರಿಕಾ ಚಟುವಟಿಕೆಯನ್ನು ಕೈಗೊಳ್ಳದೇ ಇರುವುದರಿಂದ ಈಗಾಗಲೇ ನೀಡಿರುವ ಅನುಮತಿಯನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109(1)(ಬಿ) ರಂತೆ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 24 ಶಾಸನ 2014 ದಿನಾಂಕ:28-8-2014 ರಂತೆ ಮುಂದಿನ ಕ್ರಮ ಕೈಗೊಳ್ಳುವಂತೆ ಶಿಪಾರಸ್ಸು ಮಾಡಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಉಲ್ಲೇಖ (4) ರ ಕಾರಣ ಕೇಳುವ ನೋಟೀಸ್ ರಲ್ಲಿ ಸದರಿ ಜಮೀನನ್ನು ಪಡೆದ ಉದ್ದೇಶಕ್ಕೆ ಬಳಸದೇ ಷರತ್ತುಗಳನ್ನು ಉಲ್ಲಂಘಿಸಿರುವ ಬಗ್ಗೆ ಮೆ.ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಇವರಿಗೆ ಹೊರಡಿಸಲಾಗಿತ್ತು.

ಮೇಲೆ ಓದಲಾದ ಉಲ್ಲೇಖ(5) ರಲ್ಲಿ ನಿರ್ದೇಶಕರು, ಮೆ. ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೊಸೆಸಿಂಗ್ ಪ್ರೈವೇಟ್ ಲಿಮಿಟೆಡ್ ಇವರು ದಿನಾಂಕ:

05-03-2018ರ ಪತ್ರದಲ್ಲಿ ಕಾರಣ ಕೇಳುವ ನೋಟೀಸಿಗೆ ಉತ್ತರಿಸುತ್ತಾ, ಅಧಿಸೂಚನೆ ಸಂಖ್ಯೆ: ಕಂಇ 45 ಎಲ್ಆರ್ಎಂ 2003, ದಿನಾಂಕ:09-06-2003 ರನ್ವಯ ಆನೇಕಲ್ ತಾಲೂಕ್, ಕಸಬಾ ಹೋಬಳಿ, ಮಡಿವಾಳ ಗ್ರಾಮದ ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟು 4.23 ಎಕರೆ ಜಮೀನನ್ನು ಕೈಗಾರಿಕಾಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ೭೬೭ ಉದ್ದೇಶಕ್ಕಾಗಿ ಖರೀದಿಸಲು ಸರ್ಕಾರದ ಅನುಮತಿ ನೀಡಲಾಗಿದ್ದು, ಅದರಲ್ಲಿ 2.15 ಎಕರೆ ಜಮೀನನ್ನು ಮಾತ್ರ ಖರೀದಿಸಲು ಸಾಧ್ಯವಾಗಿದ್ದು, ಉಳಿಕೆ ಜಮೀನುಗಳನ್ನು ಸಂಸ್ಥೆಯು ಅನುಭವಿಸಿದ ಆರ್ಥಿಕ ನಷ್ಟದಿಂದಲೂ ಹಾಗು ಟೆಕ್ಸ್‌ಟೈಲ್ಸ್ ಕಾರ್ಖಾನೆಗೆ ಅವಶ್ಯವಿರುವ ಯಂತ್ರೋಪಕರಣಗಳ ಬೆಲೆಯು ಸಹ ಹೆಚ್ಚಾಗಿದ್ದು, ಕಾರ್ಖಾನೆಯನ್ನು ಸ್ಥಾಪಿಸಲು ಸಾಧ್ಯವಿಲ್ಲವೆಂದು ಗೊತ್ತಾದ ತಕ್ಷಣವೇ ಈಗಾಗಲೇ ಖರೀದಿಸಿದ್ದ 2.15 ಎಕರೆ ಜಮೀನಿನ ಭೂ ಬಳಕೆಯನ್ನು ಕೈಗಾರಿಕೆ ಉದ್ದೇಶದಿಂದ ವಸತಿ ಉದ್ದೇಶಕ್ಕಾಗಿ ಬದಲಾಯಿಸುವಂತೆ ಸಕ್ಷಮ ಪ್ರಾಧಿಕಾರಗಳಿಗೆ ದಿನಾಂಕ: 16.12.2004 ಮತ್ತು ದಿನಾಂಕ: 18-4-2005 ರಂದು ಮನವಿಯನ್ನು ಸಲ್ಲಿಸಿದ್ದೆವು. ಪ್ರಸ್ತಾಪಿತ ಜಮೀನುಗಳಲ್ಲಿ ಕೈಗಾರಿಕೆಯನ್ನು ಸ್ಥಾಪಿಸುವುದಕ್ಕೆ ಸ್ಥಳೀಯರ ವಿರೋಧ ಇರುವುದರಿಂದ ಮತ್ತು ಸದರಿ ಜಮೀನುಗಳ ಸುತ್ತಮುತ್ತಲಿನ ಜಮೀನುಗಳು ವಾಸಸ್ಥಳಕ್ಕೆ ಭೂ ಪರಿವರ್ತನೆಯಾಗಿರುವುದರಿಂದ, ಕೈಗಾರಿಕೆ ಸ್ಥಾಪಿಸಲು ಸಾಧ್ಯವಾಗುವುದಿಲ್ಲವಾದ್ದರಿಂದ ಪ್ರಸ್ತಾಪಿತ 2.15 ಎಕರೆ ಜಮೀನನ್ನು ಕ.ಭೂ.ಸು.ಕಾಯ್ದೆ 1961 ಕಲಂ 109(2)(ii)ರನ್ವಯ ಉನ್ನತಾಧಿಕಾರಸ್ಥ ಸಮಿತಿಯ ಮುಂದೆ ಮಂಡಿಸಿ ಭೂ ಬಳಕೆಯನ್ನು ಬದಲಾವಣೆ ಮಾಡಿಕೊಡುವಂತೆ ಕೋರಿರುತ್ತಾರೆ.

ಮೇಲೆ ಓದಲಾದ ಉಲ್ಲೇಖ(6) ರಲ್ಲಿ ತಹಸೀಲ್ದಾರ್‌ರವರಿಂದ ವರದಿ ಪಡೆದು ಪರಿಶೀಲಿಸಲಾಗಿ ಅರ್ಜಿತ ಸಂಸ್ಥೆಯು ಸರ್ಕಾರದ ಅನುಮತಿಯಂತೆ ಮಡಿವಾಳ ಗ್ರಾಮದ ಸರ್ವೆ ನಂಬರ್ 170 ರಲ್ಲಿನ 2-15 ಎಕರೆ ಗುಂಟೆ ಜಮೀನನ್ನು ಕ್ರಯಕ್ಕೆ ಪಡೆದಿದ್ದು ಉದ್ದೇಶಿತ ಕೈಗಾರಿಕೆಯನ್ನು ಹಲವಾರು ಕಾರಣಗಳಿಂದ ಪ್ರಾರಂಭಿಸಿರುವುದಿಲ್ಲವಾದ ಕಾರಣ ಸದರಿ ಜಮೀನನ್ನು ಕೈಗಾರಿಕಾ ಉದ್ದೇಶದಿಂದ ವಾಸದ ಉದ್ದೇಶಕ್ಕಾಗಿ ಮಾರ್ಪಡಿಸಲು ಅನುಮತಿ ನೀಡಬಹುದೆಂದು, ಅರ್ಜಿತ ಸಂಸ್ಥೆಯವರಿಗೆ ಭೂಸುಧಾರಣಾ ಕಾಯ್ದೆ 1961 ರ ಕಲಂ 109 ರಡಿಯಲ್ಲಿ ನೀಡಿರುವ ಅನುಮತಿಯನ್ನು ರದ್ದುಗೊಳಿಸಿ ಜಮೀನನ್ನು ಕೈಗಾರಿಕಾ ಉದ್ದೇಶದಿಂದ ವಾಸದ ಉದ್ದೇಶಕ್ಕೆ ಮಾರ್ಪಡಿಸುವ ಬಗ್ಗೆ ವರದಿ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಉಲ್ಲೇಖ(7) ರಲ್ಲಿ ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ ಇವರ ದಿನಾಂಕ:04-08-2017ರ ಪ್ರಸ್ತಾವನೆಯಂತೆ ಮೆ: ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೋಸೆಸಿಂಗ್ ಪ್ರೈ.ಲಿ, ಬೆಂಗಳೂರು ಇವರು ಕೈಗಾರಿಕಾ ಉದ್ದೇಶಕ್ಕಾಗಿ ಖರೀದಿಸಿರುವ ಜಮೀನಿನಲ್ಲಿ ಯಾವುದೇ ಕೈಗಾರಿಕಾ ಚಟುವಟಿಕೆಯನ್ನು ಕೈಗೊಳ್ಳದೇ ಇರುವುದರಿಂದ ಹಾಗೂ ನಿರ್ದೇಶಕರು, ಮೆ: ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೋಸೆಸಿಂಗ್ ಪ್ರೈ.ಲಿ, ಇವರು ಸರ್ಕಾರದಿಂದ ಜಾರಿ ಮಾಡಿದ ಕಾರಣ ಕೇಳುವ ನೋಟೀಸಿಗೆ ನೀಡಿರುವ ಉತ್ತರ ಸಮರ್ಪಕವಾಗಿಲ್ಲದಿರುವುದರಿಂದ, ಸದರಿ ಕಂಪನಿಗೆ ಕೈಗಾರಿಕಾ ಉದ್ದೇಶಕ್ಕಾಗಿ ಜಮೀನು ಖರೀದಿಸಲು ಅನುಮತಿಯನ್ನು ನೀಡಿರುವ ಆಧಿಸೂಚನೆ ಸಂಖ್ಯೆ: ಕಂಇ 45 ಎಲ್ಆರ್ಎಂ 2003 ದಿನಾಂಕ: 09-06-2003ನ್ನು ಹಿಂಪಡೆಯಲಾಗಿದೆ ಹಾಗೂ ಸದರಿ ಅಧಿಸೂಚನೆಯಡಿ ಖರೀದಿಸಿರುವ ಜಮೀನುಗಳನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109(1-ಬಿ) ರಂತೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಸರ್ಕಾರದ ಆದೇಶ ಸಂಖ್ಯೆ: ಆರ್‌ಡಿ 38 ಎಲ್ಆರ್ಎಂ 2017, ಬೆಂಗಳೂರು, ದಿನಾಂಕ:25-09-2018ರಂದು ಮಂಜೂರಾತಿ ನೀಡಿ ಆದೇಶಿಸಿದೆ.

ಮೇಲೆ ಓದಲಾದ ಉಲ್ಲೇಖ(8)ರಲ್ಲಿ ಅರ್ಜಿದಾರರಾದ ಮೆ: ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೋಸೆಸಿಂಗ್ ಪ್ರೈ.ಲಿ, ಬೆಂಗಳೂರು ಇವರು ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿ ರಿಟ್ ಅರ್ಜಿ ಸಂಖ್ಯೆ:39009/2018ನ್ನು ದಾಖಲಿಸಿದ್ದು, ಸದರಿ ಪ್ರಕರಣದ ನ್ಯಾಯಾಲಯದ ಆದೇಶ ದಿನಾಂಕ:14-9-2018ರ ಆದೇಶವು ಸರ್ಕಾರಿ ವಕೀಲರ ಅಭಿಪ್ರಾಯದೊಂದಿಗೆ ಕಂದಾಯ ಇಲಾಖೆಯಲ್ಲಿ ದಿನಾಂಕ:13-12-2018 ರಂದು ಸ್ವೀಕೃತವಾಗಿರುತ್ತದೆ. ಸದರಿ ಆದೇಶದ ಉದೃತ ಭಾಗ ಕೆಳಕಂಡಂತಿದೆ.

"The point as to Whether the amended proviso applies to the petitioner's application. Whether

the application of the petitioner is to be considered as pending as the date of amendment to Section 109

of the Karnataka Land Reforms Act are issues to be considered by the high power committee. The high

power committee shall also look into the applicability of the proviso to Sub-Section (2) of Section 109 of

the Karnataka Land Reforms Act, 1961 while considering and disposing of the petitioner's application"

ಮೆ: ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೋಸೆಸಿಂಗ್ ಪ್ರೈ.ಲಿ, ಬೆಂಗಳೂರು ಇವರು ದಿನಾಂಕ:3-10-2018 ರಂದು ಸಲ್ಲಿಸಿರುವ ಮನವಿಯಲ್ಲಿ ಉನ್ನತಾಧಿಕಾರಸ್ಥ ಸಮಿತಿಯು ತೀರ್ಮಾನ ತೆಗೆದುಕೊಳ್ಳುವವರೆಗೆ ದಿನಾಂಕ:1-1-2018ರ ಕಾರಣ ಕೇಳುವ ನೋಟೀಸಿನ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಮತ್ತು ತಾವು ಖರೀದಿಸಿರುವ ಜಮೀನಿನ ಸುತ್ತಮತ್ತಲಿನ ಜಮೀನುಗಳು ವಾಸದ ಉದ್ದೇಶಕ್ಕೆ ಬದಲಾವಣೆಯಾಗಿದ್ದು ಕಲಂ 109 ರಡಿ ಕೈಗಾರಿಕಾ ಉದ್ದೇಶಕ್ಕೆ ಖರೀದಿಸಲಾದ 2.15 ಎಕರೆ ಜಮೀನನ್ನು ಉನ್ನತಾಧಿಕಾರಸ್ಥ ಸಮಿತಿಯು ವಸತಿ ಉದೇಶಕ್ಕೆ ಭೂ ಬದಲಾವಣೆ ಮಾಡಲು ಮಂಜೂರಾತಿ ನೀಡುವಂತೆ ಕೋರಿರುತ್ತಾರೆ.

ಅರ್ಜಿದಾರರಾದ ಮೆ: ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೋಸೆಸಿಂಗ್ ಪ್ರೈ.ಲಿ, ಬೆಂಗಳೂರು ರವರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 47596/2018ನ್ನು ದಾಖಲಿಸಿದ್ದು, ಸದರಿ ಪ್ರಕರಣದ ಮಧ್ಯಂತರ ಆದೇಶ ದಿನಾಂಕ: 15-11-2018 ರಲ್ಲಿ ಈ ಕೆಳಕಂಡಂತೆ ಆದೇಶಿಸಿರುತ್ತದೆ.

"Heard Learned counsel for the petitioner.

Learned AGA accepts notice on behalf of respondents No.1 to 4.

This Court vide Order dated 14-9-2018 was pleased to direct that the pending application of the

petitioner seeking change of land use to be considered after forming an opinion with regard to the

applicability of the proviso to Sub Section (2) of Section 109 of the Karnataka Land Reforms Act, 1961

which came to be introduced by Act 27 of 2014 w.e.f. 28.08.2014.

It is contended by learned counsel for the petitioner that after the direction issued by this Court,

the first respondent has passed the Orders without taking into consideration the direction issued by this

Court.

Hence, learned AGA is directed to secure instructions with regard to the same on the next date of

hearing.

List this matter on 22.11.2018"

In the meanwhile, the respondent shall not initiate any precipitative action.

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೭೬೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೧೭, ೨೦೧೯ ಭಾಗ ೧

ರಿಟ್ ಅರ್ಜಿ ಸಂಖ್ಯೆ: 39009/2018, ದಿನಾಂಕ: 14.09.2018ರ ಆದೇಶದ ಕುರಿತು ಸರ್ಕಾರಿ ವಕೀಲರು ಸದರಿ ಪ್ರಕರಣದ ಕುರಿತು ದಿನಾಂಕ: 29/30.11.2018ರಂದು ಕೆಳಕಂಡಂತೆ ಅಭಿಪ್ರಾಯ ನೀಡಿರುತ್ತಾರೆ.

"I have perused the certified copy of the Order dated:14.09.2018 by which the writ petition has

been disposed with an observation that, whether the application of the petitioner is to be considered as

pending as the date of amendment to Section 109 of the Karnataka Land Reforms Act are issues to be

considered by the High Power Committee. The High Power Committee shall also look into the

applicability of the proviso to Sub-Section(2) of Section 109 of the Karnataka Land Reforms Act, 1961

while considering and disposing of the petitioner's application. I am of the opinion that it is not a fit case

to proceed further".

ಮಾನ್ಯ ಉಚ್ಛನ್ಯಾಯಾಲಯದ ರಿಟ್ ಅರ್ಜಿ ಸಂಖ್ಯೆ:39009/2018, ದಿನಾಂಕ: 14.09.2018 ರಂದು ನೀಡಿರುವ ತೀರ್ಪು ಮತ್ತು ರಿಟ್ ಅರ್ಜಿ ಸಂಖ್ಯೆ: 47596/2018 ರಲ್ಲಿ ಮಾನ್ಯ ಉಚ್ಛನ್ಯಾಯಾಲಯವ ದಿನಾಂಕ: 15.11.2018 ರಂದು ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಸರ್ಕಾರವು ಕೈಗೊಳ್ಳಬಹುದಾದ ಕ್ರಮದ ಕುರಿತು ಕಾನೂನು ಇಲಾಖೆಯ ಅಭಿಪ್ರಾಯ ಕೋರಲಾಗಿತ್ತು.

ಕಾನೂನು ಇಲಾಖೆಯು ದಿನಾಂಕ: 03.04.2019 ರಂದು ಅಭಿಪ್ರಾಯ ನೀಡಿದ್ದು, "ಮಾನ್ಯ ಉಚ್ಛನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 39009/2018 ರಲ್ಲಿ ನೀಡಿರುವ ಆದೇಶವು ಸ್ಪಷ್ಟವಾಗಿದ್ದು, ಸರ್ಕಾರದ ಉನ್ನತಾಧಿಕಾರಸ್ಥ ಸಮಿತಿ ಅರ್ಜಿದಾರರ ಮನವಿಗೆ ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಕಲಂ 109(2) ಅನ್ವಯಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ಸೂಕ್ತ ಆದೇಶ ಹೊರಡಿಸಬೇಕಾಗುತ್ತದೆ. ಒಂದು ಪಕ್ಷ ಸರ್ಕಾರದ ಉನ್ನತಾಧಿಕಾರಸ್ಥ ಸಮಿತಿ ಅರ್ಜಿದಾರರ ಮನವಿಯನ್ನು ಮಾನ್ಯ ಉಚ್ಛನ್ಯಾಯಾಲಯದ ನಿರ್ದೇಶನದನ್ವಯ ಪರಿಗಣಿಸಿದ್ದಲ್ಲಿ, ರಿಟ್ ಅರ್ಜಿ ಸಂಖ್ಯೆ: 39009/2018 ರ ಕುರಿತು ಅನುಸರಿಸಲಾದ ಕ್ರಮವನ್ನು ರಿಟ್ ಅರ್ಜಿ ಸಂಖ್ಯೆ:47596/2018 ರಲ್ಲಿ ಮಾನ್ಯ ಉಚ್ಛನ್ಯಾಯಾಲಯದ ಅವಗಾಹನೆಗೆ ತರುವ ಕುರಿತು ಸರ್ಕಾರಿ ವಕೀಲರಿಗೆ ಸೂಕ್ತ ಮಾಹಿತಿಯನ್ನು ಒದಗಿಸಬಹುದಾಗಿರುತ್ತದೆ'' ಎಂಬ ಅಭಿಪ್ರಾಯವನ್ನು ನೀಡಿರುತ್ತದೆ.

ಕಾನೂನು ಇಲಾಖೆಯ ಅಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರವು ಮಾನ್ಯ ನ್ಯಾಯಾಲಯದ ಆದೇಶದ ಬಗ್ಗೆ ತ್ವರಿತವಾಗಿ ಕ್ರಮವಹಿಸಿ, ಮಾನ್ಯ ಉಚ್ಛನ್ಯಾಯಾಲಯಕ್ಕೆ ಮಾಹಿತಿ ನೀಡಬೇಕಾಗಿರುವುದರಿಂದ, ನ್ಯಾಯಾಂಗ ನಿಂದನೆಗೆ ಅವಕಾಶ ನೀಡದೇ, ಸರ್ಕಾರದ ಮುಖ್ಯಕಾರ್ಯದರ್ಶಿಯವರು ಮುಖ್ಯಸ್ಥರಾಗಿರುವ ಉನ್ನತಾಧಿಕಾರಸ್ಥ ಸಮಿತಿಯ ಮುಂದೆ ಸದರಿ ಪ್ರಕರಣವನ್ನು ತಂದು ಇತ್ಯರ್ಥಗೊಳಿಸಲು ನಿರ್ಧರಿಸಿತು.

ಈ ಹಿನ್ನೆಲೆಯಲ್ಲಿ, ಸರ್ಕಾರದ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ದಿನಾಂಕ: 20.06.2019 ರಂದು ನಡೆದ ಉನ್ನತಾಧಿಕಾರಸ್ಥ ಸಮಿತಿ ಸಭೆಯಲ್ಲಿ ಸದರಿ ಪ್ರಕರಣದ ಕುರಿತು ಸಮಿತಿಯು ಪರಿಶೀಲಿಸಿತು. ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ರ ಕಲಂ 109 ರಡಿ ಕೈಗಾರಿಕಾ ಉದ್ದೇಶಕ್ಕಾಗಿ ಅನುಮತಿ ಪಡೆದು ಖರೀದಿಸಿದ ಆನೇಕಲ್ ತಾಲ್ಲೂಕು, ಕಸಬಾ ಹೋಬಳಿ ಮಡಿವಾಳ ಗ್ರಾಮದ ಸರ್ವೆ ನಂಬರ್ 170 ರಲ್ಲಿನ 2.15 ಎಕರೆ ಜಮೀನನ್ನು ವಸತಿ ಉದ್ದೇಶಕ್ಕಾಗಿ ಬದಲಾವಣೆ ಮಾಡುವ ಪ್ರಸ್ತಾವನೆಯನ್ನು ಸಮಿತಿಯು ಪರಿಶೀಲಿಸಿತು. ಜಂಟಿ ನಿರ್ದೇಶಕರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಇವರು ಗೂಗಲ್ ಮ್ಯಾಪ್, ಗೂಗಲ್ ಅರ್ತಮ್ಯಾಪ್ ಮತ್ತು ಸ್ಕೆಚ್‌ಗಳನ್ನು ಪ್ರದರ್ಶಿಸಿ, ಸಮಿತಿಗೆ ವಿವರಣೆ ಸಲ್ಲಿಸಿದರು. ಸದರಿ ಸಂಸ್ಥೆಯು ಮಾನ್ಯ ಉಚ್ಛನ್ಯಾಯಾಲಯ, ಬೆಂಗಳೂರು ಇಲ್ಲಿ ರಿಟ್ ಅರ್ಜಿ ಸಂಖ್ಯೆ:39009/2018ನ್ನು ದಾಖಲಿಸಿದ್ದು, ಸದರಿ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದ ದಿನಾಂಕ:14.9.2018 ರ ಆದೇಶ ಮತ್ತು ಮಾನ್ಯ ಉಚ್ಛನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 47596/2018 ನ್ನು ದಾಖಲಿಸಿದ್ದು, ಸದರಿ ಪ್ರಕರಣದ ಮಧ್ಯಂತರ ಆದೇಶದ ಕುರಿತು ಉನ್ನತಾಧಿಕಾರಸ್ಥ ಸಮಿತಿಯು ಪರಿಶೀಲಿಸಿತು. ಅಂತಿಮವಾಗಿ ಸದರಿ ಪ್ರಕರಣದ ಬಗ್ಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕಂದಾಯ ಇಲಾಖೆ ಇವರ ಹಂತದಲ್ಲಿಯೇ ಕ್ರಮವಹಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿಗಳು ಸೂಚನೆ ನೀಡಿದರು.

ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರವು ಎಲ್ಲಾ ಅಂಶಗಳನ್ನು ಪರಿಗಣಿಸಿ, ಸದರಿ ಪ್ರಕರಣವನ್ನು ಇತ್ಯರ್ಥಗೊಳಿಸಲು ನಿರ್ಧರಿಸಿ, ಕೆಳಕಂಡಂತೆ ಆದೇಶ ಹೊರಡಿಸಲು ನಿರ್ಧರಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಕಂಇ 38 ಎಲ್ಆರ್ಎಂ 2017, ಬೆಂಗಳೂರು, ದಿನಾಂಕ: 05.10.2019

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರವು ಪರಿಶೀಲಿಸಿ, ಅಧಿಸೂಚನೆಯಡಿ ಖರೀದಿಸಿರುವ ಜಮೀನುಗಳನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ 1961ರ ಕಲಂ 109(1-ಬಿ) ರಂತೆ ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲು ಹೊರಡಿಸಿರುವ ಆದೇಶ ಸಂಖ್ಯೆ: ಆರ್‌ಡಿ 38 ಎಲ್ಆರ್ಎಂ 2017, ದಿನಾಂಕ: 25-09-2018ರ ಆದೇಶವನ್ನು ರದ್ದುಪಡಿಸಿದೆ.

ಹಾಗೂ ಮೆ: ಸೌಂದರ್ಯ ಟೆಕ್ಸ್‌ಟೈಲ್ಸ್ ಪ್ರೋಸೆಸಿಂಗ್ ಪ್ರೈ.ಲಿ, ಬೆಂಗಳೂರು ಸಂಸ್ಥೆಯು ಸರ್ಕಾರದ ಅನುಮತಿಯಂತೆ ಮಡಿವಾಳ ಗ್ರಾಮದ ಸರ್ವೆ ನಂಬರ್ 170 ರಲ್ಲಿನ 2-15 ಎಕರೆ ಗುಂಟೆ ಜಮೀನನ್ನು ಕ್ರಯಕ್ಕೆ ಪಡೆದಿದ್ದು, ಉದ್ದೇಶಿತ ಕೈಗಾರಿಕೆಯನ್ನು ಹಲವಾರು ಕಾರಣಗಳಿಂದ ಪ್ರಾರಂಭಿಸಿರುವುದಿಲ್ಲವಾದ ಕಾರಣ, ಸದರಿ ಜಮೀನನ್ನು ಕೈಗಾರಿಕಾ ಉದ್ದೇಶದಿಂದ ವಸತಿ ಉದ್ದೇಶಕ್ಕಾಗಿ ಮಾರ್ಪಡಿಸಲು ಸರ್ಕಾರವು ಅನುಮತಿ ನೀಡಿ ಆದೇಶಿಸಿದೆ.

ಈ ಆದೇಶವನ್ನು ಸರ್ಕಾರದ ಮುಖ್ಯಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ದಿನಾಂಕ: 20.06.2019 ರಂದು ನಡೆದ ಉನ್ನತಾಧಿಕಾರಸ್ಥ ಸಮಿತಿಯ ಸಭೆಯಲ್ಲಿ, ಕ್ರಮವಹಿಸುವಂತೆ ನೀಡಿದ ನಿರ್ದೇಶನದ ಮೇರೆಗೆ ಹಾಗೂ ನ್ಯಾಯಾಂಗ ನಿಂದನೆಗೆ ಅವಕಾಶ ನೀಡದಂತೆ ಸರ್ಕಾರವು ಪರಿಶೀಲಿಸಿ ಆದೇಶ ಹೊರಡಿಸಿದೆ.

PR-374

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ SC-100

ವಿ.ಪ್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ (ಭೂ ಸುಧಾರಣೆ)

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.

Cite this issue. Karnataka Gazette, Government of Karnataka, 17 October 2019. Indian Gazettes, https://egazette.servantsofknowledge.in/details/in.gazette.karnataka_new.2019-10-17.Part-1/. Archive identifier in.gazette.karnataka_new.2019-10-17.Part-1.