ಬೆಂಗಳೂರು, ಗುರುವಾರ, ಅಕ್ಟೋಬರ್ ೩೧, ೨೦೧೯ (ಕಾರ್ತೀಕ ೯, ಶಕ ವರ್ಷ ೧೯೪೧)
Bengaluru, Thursday, October 31, 2019 ( Karthika 9, Shaka Varsha 1941)
ಸಂಪುಟ ೧೫೪
Volume 154
ಸಂಚಿಕೆ ೪೩
Issue 43
ಭಾಗ ೧
ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಸುತ್ತೋಲೆ
ಸಂಖ್ಯೆ : ಸಿಆಸುಇ 21 ಸೇಇವಿ 2019, ಬೆಂಗಳೂರು, ದಿನಾಂಕ : 03-10-2019.
ವಿಷಯ: ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧದ ಅನಾಮಧೇಯ (anonymous) ದೂರುಗಳ ಬಗ್ಗೆ ಕ್ರಮ.
ಉಲ್ಲೇಖ: 1. ಸುತ್ತೋಲೆ ಸಂಖ್ಯೆ : ಜಿಎಡಿ 113 ಒಒಎಂ 62, ದಿನಾಂಕ : 26-10-1962.
2. ಭಾರತ ಸರ್ಕಾರದ ಡಿ.ಓ.ಪಿ.ಟಿ ಅಧಿಕೃತ ಜ್ಞಾಪನ ಸಂಖ್ಯೆ : 104/76/2011-AVD.1,
ದಿನಾಂಕ : 18-10-2013.
1. ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧ ಸ್ವೀಕೃತವಾಗುವ ಅನಾಮಧೇಯ ದೂರುಗಳ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಉಲ್ಲೇಖಿತ/ಸುತ್ತೋಲೆಯಲ್ಲಿ ಕೆಲವು ಸೂಚನೆಗಳನ್ನು ನೀಡಲಾಗಿದೆ. ಇಂತಹ ದೂರುಗಳು ಕೆಲವು ಸಂದರ್ಭಗಳಲ್ಲಿ ವೈಯಕ್ತಿಕ ದ್ವೇಷ, ಅಸೂಯೆ ಅಥವಾ ಪೂರ್ವಗ್ರಹ ಪೀಡಿತವಾಗಿರುತ್ತವೆ. ಅಲ್ಲದೇ, ದೂರುಗಳಿಗೆ ಪೂರಕವಾದ ಮಾಹಿತಿ/ದಾಖಲೆಗಳನ್ನು ಸಾಮಾನ್ಯವಾಗಿ ಲಭ್ಯಪಡಿಸಿರುವುದಿಲ್ಲ.
ಇಂತಹ ದೂರುಗಳಿಂದಾಗಿ ಸರ್ಕಾರಿ ಅಧಿಕಾರಿ/ನೌಕರರ ದೈನಂದಿನ ಕೆಲಸ ಕಾರ್ಯಗಳಲ್ಲಿ ಹಸ್ತಕ್ಷೇಪ ಉಂಟಾಗುವುದಲ್ಲದೇ ದಕ್ಷ ಹಾಗೂ ಪ್ರಾಮಾಣಿಕ ನೌಕರರ ವಿಶ್ವಾಸರ್ಹತೆಗೆ, ಧಕ್ಕೆ ಉಂಟಾಗುತ್ತದೆ ಹಾಗೂ ಅವರು ಮುಕ್ತ ಮತ್ತು ನಿರ್ಭೀತರಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ.
2. ಮಾನ್ಯ ಮುಖ್ಯಮಂತ್ರಿಯವರು ದಿನಾಂಕ : 04-08-2019ರ ಟಿಪ್ಪಣಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ಈ ಸಂಬಂಧ ನೀಡಿರುವ ಮನವಿಯನ್ನು ಪರಿಗಣಿಸಿ, ಕೇಂದ್ರ ಸರ್ಕಾರದ ಮಾದರಿಯಂತೆಯೇ ರಾಜ್ಯದಲ್ಲಿ ಸರ್ಕಾರಿ ನೌಕರರ ವಿರುದ್ಧ ಅನಾಮಧೇಯ ದೂರು/ಪತ್ರಗಳ ಆಧಾರದ ಮೇಲೆ ತನಿಖೆಗೆ ಒಳಪಡಸದೆ, ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ಮಾತ್ರ ತನಿಖೆಗೆ ಪರಿಗಣಿಸಲು ಆದೇಶ ಹೊರಡಿಸುವಂತೆ ಸೂಚಿಸಿರುತ್ತಾರೆ.
3. ಮೇಲ್ಕಾಣಿಸಿದ ಅಂಶಗಳ ಹಾಗೂ ಭಾರತ ಸರ್ಕಾರದ ಉಲ್ಲೇಖ-2ರ ಅಧಿಕೃತ ಜ್ಞಾಪನದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿ/ನೌಕರರ ವಿರುದ್ಧ ಸ್ವೀಕೃತವಾಗುವ ಅನಾಮಧೇಯ ಅರ್ಜಿಗಳ ಆಧಾರದ ಮೇಲೆ ಪ್ರಕರಣವನ್ನು ತನಿಖೆಗೆ/ವಿಚಾರಣೆಗೆ ಒಳಪಡಿಸದೇ ಅಂತಹ ದೂರು ಅರ್ಜಿಗಳನ್ನು ಕಡತಗೊಳಿಸಬೇಕೆಂದು ಸೂಚಿಸಿದೆ.
4. ಪೂರ್ಣ ವಿಳಾಸ ಸಹಿತವಿರುವ ದೂರುಗಳನ್ನು ಮಾತ್ರ ತನಿಖೆಗೆ/ವಿಚಾರಣೆಗೆ ಪರಿಗಣಿಸಲು ಸಚಿವಾಲಯದ ಎಲ್ಲಾ ಕಾರ್ಯದರ್ಶಿಗಳಿಗೆ ಹಾಗೂ ಇಲಾಖಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಈ ಅಂಶವನ್ನು ಸಂಬಂಧಪಟ್ಟ ಇಲಾಖೆಗಳು ತಮ್ಮ ಅಧೀನ ಕಛೇರಿಗಳಿಗೆ ತಿಳಿಸಲು ಅಗತ್ಯ ಕ್ರಮವಹಿಸುವಂತೆ ಸೂಚಿಸಲಾಗಿದೆ.
ತ.ಮ. ವಿಜಯ ಭಾಸ್ಕರ್
PR-386
ಸರ್ಕಾರದ ಮುಖ್ಯ ಕಾರ್ಯದರ್ಶಿ
(೭೬೯)೭೭೦ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ಭಾಗ ೧
ಆರ್ಥಿಕ ಸಚಿವಾಲಯ
ವಿಷಯ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಉನ್ನತ ಶಿಕ್ಷಣ
ವ್ಯಾಸಂಗಕ್ಕೆ ನಿಯೋಜಿಸುವ ಅಧಿಕಾರವನ್ನು ಪ್ರತ್ಯಾಯೋಜಿಸುವ ಬಗ್ಗೆ.
ಓದಲಾಗಿದೆ : ಸರ್ಕಾರಿ ಆದೇಶ ಸಂಖ್ಯೆ : ಎಫ್.ಡಿ 04 ಟಿ.ಎಫ್.ಪಿ 2001, ದಿನಾಂಕ ; 27-06-2001.
ಪ್ರಸ್ತಾವನೆ :
ಮೇಲೆ ಓದಲಾದ (1)ರ ಸರ್ಕಾರಿ ಆದೇಶದಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 61ರಡಿ ಭಾರತದೊಳಗೆ ನಡೆಯುವ ತರಬೇತಿ ಅಥವಾ ವ್ಯಾಸಂಗಕ್ಕೆ ನಿಯೋಜಿಸುವ ವಿಶೇಷ ಅಧಿಕಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಿಗೆ ವಿಶೇಷ ಅಧಿಕಾರವನ್ನು ಪ್ರತ್ಯಾಯೋಜಿಸಲಾಗಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಇವರ ಅಧ್ಯಕ್ಷತೆಯಲ್ಲಿ ದಿನಾಂಕ ; 05-04-2019ರಂದು ಜರುಗಿದ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರಿ ವೈದ್ಯರುಗಳನ್ನು ಕರ್ನಾಟಕ ನಾಗರೀಕ ಸೇವಾ ನಿಯಮ 61ರ ಪರಿಶಿಷ್ಟ-lIಎ l ರಲ್ಲಿನ ಷರತ್ತನ್ನು ಸಡಿಲಿಸಿ ಪರಿವೀಕ್ಷಣಾವಧಿ ಪೂರೈಸಿದ ವೈದ್ಯರುಗಳನ್ನು ಉನ್ನತ ವ್ಯಾಸಂಗಕ್ಕೆ ಪ್ರತಿನಿಯೋಜಿಸುವ ಅಧಿಕಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸುವ ಬಗ್ಗೆ ನಿರ್ಣಯಿಸಲಾಯಿತು. ಈ ಕೆಳಕಂಡಂತೆ ಆದೇಶ :
ಸರ್ಕಾರಿ ಆದೇಶ ಸಂಖ್ಯೆ: ಎಫ್.ಡಿ 02 ಸನತಿ 2019. ಬೆಂಗಳೂರು, ದಿನಾಂಕ : 07.06.2019.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರಿ ವೈದ್ಯರುಗಳನ್ನು ಕರ್ನಾಟಕ ನಾಗರೀಕ ಸೇವಾ ನಿಯಮ 61ರ ಪರಿಶಿಷ್ಟ-lIಎ lರಲ್ಲಿನ ಷರತ್ತನ್ನು ಸಡಿಲಿಸಿ, ಈ ಕೆಳಕಂಡ ಷರತ್ತಿಗೊಳಪಟ್ಟು ಪರಿವೀಕ್ಷಣಾವಧಿ ಪೂರೈಸಿದ ವೈದ್ಯರುಗಳನ್ನು ಉನ್ನತ ಶಿಕ್ಷಣ ವ್ಯಾಸಂಗಕ್ಕೆ ನಿಯೋಜಿಸುವ ಅಧಿಕಾರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳಿಗೆ ಪ್ರತ್ಯಾಯೋಜಿಸಲಾಗಿದೆ.
1. ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ಪರಿಶಿಷ್ಟ-lIಎ ರಲ್ಲಿ ತಿಳಿಸಿದಂತೆ ನಮೂನೆ 19 ರಲ್ಲಿ ಕೆಳಕಂಡ ಅಂಶಗಳನ್ನು ಒಳಗೊಂಡ ಒಂದು ಬಂಧಪತ್ರವನ್ನು ಹಾಗೂ ಸೇವಾನಿರತ ಕೋಟಾದ ವೈದ್ಯರುಗಳಿಗೆ ಅನ್ವಯವಾಗುವ Karnataka Conduct of Entrance Test for Selection and admission to post graduate Medical and Dental Degree and Diploma Courses Rules 2006 ಮತ್ತು ತಿದ್ದುಪಡಿ ನಿಯಮ 2011 ರಲ್ಲಿನ ಅಂಶಗಳನ್ನೊಳಗೊಂಡ ಪೆನಾಲ್ಟಿ ಬಾಂಡ್ ಸಲ್ಲಿಸತಕ್ಕದ್ದು.
2. ಸ್ನಾತಕೋತ್ತರ ವ್ಯಾಸಂಗದ ನಂತರ ಕನಿಷ್ಠ 10 ವರ್ಷಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುವುದಾಗಿ ಬಾಂಡ್ ಮೇಲೆ ಸಹಿ ಮಾಡಿ ಸಲ್ಲಿಸುವುದು ಹಾಗೂ ಈ ಅವಧಿಯಲ್ಲಿ ಸ್ವಯಂ ನಿವೃತ್ತಿಗಾಗಿ ಅಥವಾ ಅನ್ಯ ಇಲಾಖೆ/ಮಂಡಳಿ/ನಿಗಮಗಳಿಗೆ (ವೈದ್ಯಕೀಯ ಶಿಕ್ಷಣ ಇಲಾಖೆ ಸೇರಿದಂತೆ) ನಿಯೋಜನೆ ಮೇಲೆ ಕಳುಹಿಸುವಂತೆ ಕೋರಿಕೆ ಸಲ್ಲಿಸಲು ಅವಕಾಶವಿರುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, PR-265
ಜಿ.ಬಿ. ಹೇಮಣ್ಣ
ಸರ್ಕಾರದ ಉಪ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಸೇವೆಗಳು-1)
ಆರ್ಥಿಕ ಸಚಿವಾಲಯ
ಸುತ್ತೋಲೆ
ಸಂಖ್ಯೆ : ಆಇ 02 ಸನಿತಿ 2018, ಬೆಂಗಳೂರು, ದಿನಾಂಕ : 27-05-2019
ವಿಷಯ : ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247(ಎ) ರನ್ವಯ ಪಿಂಚಣಿ ಉದ್ದೇಶಕ್ಕಾಗಿ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಬಗ್ಗೆ.
ಉಲ್ಲೇಖ : 1) ಸರ್ಕಾರದ ಅಧಿಸೂಚನೆ ಸಂಖ್ಯೆ : ಎಫ್ಡಿ 01 ಎಸ್ಆರ್ಎ 2004, ದಿನಾಂಕ : 04-11-2004.
2) ಸರ್ಕಾರದ ಅಧಿಸೂಚನೆ ಸಂಖ್ಯೆ : ಆಇ 04 ಎಸ್ಆರ್ಎ 2010, ದಿನಾಂಕ : 15-02-2012. 3) ಸರ್ಕಾರದ ಆದೇಶ ಸಂಖ್ಯೆ : ಆಇ 09 ಎಸ್ಆರ್ಎ 2012, ದಿನಾಂಕ : 08-09-2016. 4) ಸರ್ಕಾರದ ಆದೇಶ ಸಂಖ್ಯೆ : ಆಇ 04 ಎಸ್ಆರ್ಎ 2016, ದಿನಾಂಕ : 10-04-2017. 5) ಸರ್ಕಾರದ ಆದೇಶ ಸಂಖ್ಯೆ : ಆಇ 09 ಸನಿತಿ 2018, ದಿನಾಂಕ : 05-11-2018.
ಸರ್ಕಾರದ ಆದೇಶ ಸಂಖ್ಯೆ : ಆಇ 09 ಸನಿತಿ 2018, ದಿನಾಂಕ : 05-11-2018 ರನ್ವಯ ಕ.ನಾ.ಸೇ.ನಿ. ನಿಯಮ 247-ಎರ ಸೌಲಭ್ಯವನ್ನು ಅರ್ಹ ಪ್ರಕರಣಗಳಲ್ಲಿ ಮಂಜೂರು ಮಾಡುವ ಕುರಿತಾದ ಅಧಿಕಾರವನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರುಗಳಿಗೆ ಪ್ರತ್ಯಾಯೋಜಿಸಲಾಗಿದೆ.
ಕ.ನಾ.ಸೇ.ನಿ.ನಿಯಮ 247-ಎ ರನ್ವಯದ ಅಧಿಕ ಅರ್ಹತಾದಾಯಕ ಸೇವಾ ಪರಿಗಣನೆಯ ಸೌಲಭ್ಯದ ಮಂಜೂರಾತಿಯನ್ನು ಸರ್ಕಾರಿ ನೌಕರನ ಜನ್ಮ ದಿನಾಂಕ, ಆತನು ಸರ್ಕಾರಿ ಸೇವೆಗೆ ನೇಮಕಗೊಂಡ ದಿನಾಂಕದಂದು ಆತನ ಪೂರ್ಣ ವಯಸ್ಸು, ನಿವೃತ್ತಿ ದಿನಾಂಕ ಹಾಗೂ ಕ.ನಾ.ಸೇ.ನಿ.ನಿಯಮ 6 ರಲ್ಲಿನ ಅವಕಾಶಗಳಿಗೊಳಪಟ್ಟು ಸರ್ಕಾರಿ ನೌಕರನು ನಿವೃತ್ತಿ ಹೊಂದಿದ/ಹೊಂದುವ ಆಯಾ ದಿನಾಂಕಗಳಂದು ಜಾರಿಯಲ್ಲಿದ್ದ ಗರಿಷ್ಠ ಅಧಿಕ ಅರ್ಹತಾದಾಯಕ ಸೇವಾ ಪರಿಗಣನೆಯ ನಿಬಂಧನೆಗೊಳಪಟ್ಟು ಪರಿಶೀಲಿಸತಕ್ಕದ್ದು.
ಈ ಸನ್ನಿವೇಶದಲ್ಲಿ ಕ.ನಾ.ಸೇ.ನಿ. ನಿಯಮ 247-ಎಗೆ ಸಂಬಂಧಪಟ್ಟಂತೆ ವಿವಿಧ ದಿನಾಂಕಗಳಲ್ಲಿ ಹಲವು ತಿದ್ದುಪಡಿಗಳನ್ನು ತರಲಾಗಿದ್ದು, ಇದರಿಂದಾಗಿ ವಿವಿಧ ಕಾಲದಲ್ಲಿ ಜಾರಿಯಲ್ಲಿದ್ದ ಗರಿಷ್ಠ ಅರ್ಹತಾದಾಯಕ ಸೇವೆಯ ಅವಕಾಶ ಇತ್ಯಾದಿ ಅಂಶಗಳನ್ನೊಳಗೊಂಡಂತೆ ವಿವಿಧ ಇಲಾಖಾ ಮುಖ್ಯಸ್ಥರು ಸ್ಪಷ್ಟೀಕರಣ ಕೋರಿರುವ ಈ ಸನ್ನಿವೇಶದಲ್ಲಿ ಈ ಕೆಳಕಂಡ ಮಾರ್ಗಸೂಚಿಯನ್ನು ಸರ್ಕಾರವು ಹೊರಡಿಸಿದೆ :-
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ೭೭೧1. ಪ್ರಾರಂಭದಲ್ಲಿ, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247(ಎ) ರನ್ವಯ ಪಿಂಚಣಿ ಉದ್ದೇಶಕ್ಕಾಗಿ ಪರಿಗಣಿಸಬಹುದಾದ ಅರ್ಹತಾದಾಯಕ ಸೇವೆಯ ಗರಿಷ್ಠ ಮಿತಿಯನ್ನು ಎಂಟು ವರ್ಷಗಳಿಗೆ ನಿಗಧಿಪಡಿಸಲಾಗಿತ್ತು. ನಂತರ, ಸದರಿ ನಿಯಮಕ್ಕೆ ಉಲ್ಲೇಖಿತ (1)ರ ಅಧಿಸೂಚನೆಯಲ್ಲಿ ತಿದ್ದುಪಡಿ ತಂದು, ದಿನಾಂಕ : 09-11-2004 ರಿಂದ ಅನ್ವಯವಾಗುವಂತೆ ಪಿಂಚಣಿ ಉದ್ದೇಶಕ್ಕೆ ಪರಿಗಣಿಸಬಹುದಾದ ಅಧಿಕ ಅರ್ಹತಾದಾಯಕ ಸೇವೆಯ ಗರಿಷ್ಠ ಮಿತಿಯನ್ನು ನಾಲ್ಕು ವರ್ಷಗಳಿಗೆ ನಿಗಧಿಪಡಿಸಲಾಗಿತ್ತು. ತದನಂತರ, ಪುನಃ ಸದರಿ ನಿಯಮಕ್ಕೆ ಉಲ್ಲೇಖಿತ (2)ರ ಅಧಿಸೂಚನೆಯಲ್ಲಿ ಸಮಗ್ರವಾಗಿ ತಿದ್ದುಪಡಿ ತಂದು, ದಿನಾಂಕ : 15-02-2012ರಿಂದ ಅನ್ವಯವಾಗುವಂತೆ ನೇರ ನೇಮಕಾತಿ ಪ್ರಕರಣಗಳಿಗೆ ಮಾತ್ರ ಸೀಮಿತಗೊಳಿಸಿ ಪಿಂಚಣಿ ಉದ್ದೇಶಕ್ಕೆ ಪರಿಗಣಿಸಬಹುದಾದ ಅರ್ಹತಾದಾಯಕ ಸೇವೆಯ ಗರಿಷ್ಠ ಮಿತಿಯನ್ನು ಎರಡು ವರ್ಷಗಳಿಗೆ ನಿಗಧಿಪಡಿಸಲಾಗಿರುತ್ತದೆ.
2. ಮುಂದುವರೆದು, ನ್ಯಾಯಾಲಯಗಳ ತೀರ್ಪುಗಳ ಹಿನ್ನಲೆಯಲ್ಲಿ, ಪ್ರಾರಂಭದಲ್ಲಿ ದಿನಗೂಲಿ ಅಥವಾ ಮಿತವೇತನ ಪದವೀಧರರಾಗಿ ಸೇವೆ ಸಲ್ಲಿಸಿ ತದನಂತರ ಸೇವೆಯಲ್ಲಿ ಕ್ರಮಬದ್ಧಗೊಳಿಸಲಾದ ನೌಕರರ ಪ್ರಕರಣಗಳು ಹಾಗೂ ದಿನಾಂಕ : 14-02-2012ರ ಪೂರ್ವದಲ್ಲಿ ನಿವೃತ್ತರಾದ ಎಲ್ಲಾ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ನಿವೃತ್ತಿ ಸಮಯದಲ್ಲಿ ಜಾರಿಯಲ್ಲಿದ್ದ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247(ಎ) ರಲ್ಲಿನ ಅವಕಾಶದನ್ವಯ ಪಿಂಚಣಿ ಉದ್ದೇಶಕ್ಕಾಗಿ ಅಧಿಕ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಪ್ರಕರಣಗಳನ್ನು ಆಡಳಿತ ಇಲಾಖೆಯ ಸಂಬಂಧಪಟ್ಟ ಎಲ್ಲಾ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ನಿಯಮಾನುಸಾರ ಪರಿಶೀಲಿಸಿ, ಅರ್ಹ ಪ್ರಕರಣಗಳಲ್ಲಿ ಸೂಕ್ತ ಆದೇಶ ಹೊರಡಿಸಲು ಉಲ್ಲೇಖ (3) ರ ಆದೇಶದನ್ವಯ ಆಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಯವರಿಗೆ ಅಧಿಕಾರ ಪ್ರತ್ಯಾಯೋಜಿಸಲಾಗಿರುತ್ತದೆ.
3. ದಿನಾಂಕ : 15-02-2012 ರಿಂದ ತಿದ್ದಪಡಿಯಾದ ಕ.ನಾ.ಸೇ.ನಿ. ನಿಯಮ 247(ಎ) ರ ಅವಕಾಶಗಳನ್ವಯ, ಈ ನಿಯಮಗಳ ಸೌಲಭ್ಯವು ನೇರ ನೇಮಕಾತಿ ಹೊಂದಿದ ನೌಕರರಿಗೆ ಅನ್ವಯವಾಗುತ್ತಿದ್ದು, ದಿನಗೂಲಿ/ಮಿತವೇತನ ಪದವೀಧರರಾಗಿ ಕಾರ್ಯನಿರ್ವಹಿಸಿ ನಂತರ ಸರ್ಕಾರಿ ಸೇವೆಯಲ್ಲಿ ಸಕ್ರಮಗೊಂಡ ಸರ್ಕಾರಿ ನೌಕರರಿಗೆ ಅನ್ವಯವಾಗುವುದಿಲ್ಲವೆಂಬ ನಿಬಂಧನೆಯಿದ್ದರೂ, ನ್ಯಾಯಾಲಯಗಳ ತೀರ್ಪುಗಳ ಹಿನ್ನೆಲೆಯಲ್ಲಿ ಪ್ರಾರಂಭದಲ್ಲಿ ದಿನಗೂಲಿ ಅಥವಾ ಮಿತವೇತನ ಪದವೀಧರರಾಗಿ ಸೇವೆ ಸಲ್ಲಿಸಿ ತದನಂತರ ಸೇವೆಯಲ್ಲಿ ಕ್ರಮಬದ್ಧಗೊಳಿಸಲಾದ ಪ್ರಕರಣಗಳನ್ನು ಒಳಗೊಂಡು ದಿನಾಂಕ :
15-02-2012ರ ನಂತರ ನಿವೃತ್ತರಾದ ಇತರೆ ಎಲ್ಲಾ ಸರ್ಕಾರಿ ನೌಕರರ ಪ್ರಕರಣಗಳಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 6ರ ಅವಕಾಶಗಳಿಗೊಳಪಟ್ಟು ಪಿಂಚಣಿ ಉದ್ದೇಶಕ್ಕಾಗಿ ಗರಿಷ್ಠ 2 ವರ್ಷಗಳ ಅಧಿಕ ಅರ್ಹತಾದಾಯಕ ಸೇವೆಯನ್ನು ಪರಿಗಣಿಸಲು ಉಲ್ಲೇಖ (4)ರ ಆದೇಶದಲ್ಲಿ ಅನುಮತಿಸಲಾಗಿದೆ ಹಾಗೂ ನಿಯಮ 247ಎ ರಲ್ಲಿನ ಅವಕಾಶಗಳನ್ವಯ ಪಿಂಚಣಿ ಉದ್ದೇಶಕ್ಕಾಗಿ ಅಧಿಕ ಅರ್ಹತಾದಾಯಕ ಸೇವೆಯನ್ನು ಪರಿಗಣಿಸುವ ಪ್ರಕರಣಗಳನ್ನು ಆಡಳಿತ ಇಲಾಖೆಯು ಸಂಬಂಧಪಟ್ಟ ಎಲ್ಲಾ ಅಗತ್ಯ ಮಾಹಿತಿ/ದಾಖಲೆಗಳೊಂದಿಗೆ ನಿಯಮಾನುಸಾರ ಪರಿಶೀಲಿಸಿ, ಅರ್ಹ ಪ್ರಕರಣಗಳಲ್ಲಿ ಸೂಕ್ತ ಆದೇಶ ಹೊರಡಿಸುವಲ್ಲಿನ ಅಧಿಕಾರ ಪ್ರತ್ಯಾಯೋಜನೆಯು ಆಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಗಳು/ಕಾರ್ಯದರ್ಶಿಯವರಿಗೆ ಮುಂದುವರೆಸಲಾಗಿದೆ.
4. ಉಲ್ಲೇಖ(5)ರ ಆದೇಶದಂತೆ, ಈ ಕುರಿತಾದ ಅಧಿಕಾರ ಪ್ರತ್ಯಾಯೋಜನೆಯನ್ನು ಸಂಬಂಧಪಟ್ಟ ಇಲಾಖಾ ಮುಖ್ಯಸ್ಥರಿಗೆ ನೀಡಲಾಗಿದ್ದು, ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 247ಎ ರನ್ವಯ ಪರಿಗಣಿಸಬಹುದಾದ ಗರಿಷ್ಠ ಅಧಿಕ ಅರ್ಹತಾದಾಯಕ ಸೇವೆಯನ್ನು, ಸಂದರ್ಭಾನುಸಾರ ಸರ್ಕಾರಿ ನೌಕರರು 30 ವರ್ಷಗಳ ತರುವಾಯದಲ್ಲಿ ಹುದ್ದೆಗೆ ನೇಮಕ ಹೊಂದಿದ/ಸಕ್ರಮಗೊಂಡ ದಿನಾಂಕದಂದು ಸರ್ಕಾರಿ ನೌಕರರಿಗೆ ಆಗುವ ಪೂರ್ಣ ವಯಸ್ಸನ್ನು ಪರಿಗಣಿಸಿಕೊಂಡು ಹಾಗೂ ಸರ್ಕಾರಿ ನೌಕರನ ನಿವೃತ್ತಿ ಸಮಯದಲ್ಲಿ ಜಾರಿಯಲ್ಲಿರುವ ನಿಯಮ 247-ಎ ರಲ್ಲಿನ ಗರಿಷ್ಠ ಅವಧಿಯ ನಿರ್ಬಂಧವನ್ನು ಗಮನದಲ್ಲಿರಿಸಿ ಮಂಜೂರು ಮಾಡತಕ್ಕದ್ದು.
5. ಅಧಿಕ ಅರ್ಹತಾದಾಯಕ ಸೇವೆಯ ಗರಿಷ್ಠ ಅವಧಿಗೆ ಸಂಬಂಧಿಸಿದಂತೆ, ಕಾಲಕಾಲಕ್ಕೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ
| ಕ್ರಮ ಸ ಂಖ್ಯೆ | ಸ ರ್ಕಾರಿ ನೌಕರನ ನಿವೃತ್ತಿ ದಿನಾಂಕದ ಅವಧಿ | ಕೆಸಿಎಸ್ಆರ್ ನಿಯಮ 247-ಎ ರನ ಯ ್ವ ಪ ರಿಗಣಿಸಬಹುದಾದ ಅಧಿಕ ಅರ್ಹತಾದಾಯಕ ಸೇವೆಯ ಗರಿಷ್ಠ ಅವಧಿ |
| 1 | ದಿನಾಂಕ : 01-01-1971 ರಿಂದ ದಿನಾಂಕ : 08-11-2004ರ ಅವಧಿಯಲ್ಲಿ ನಿವೃತ್ತಿ ಹೊಂದಿರುವ ಪ್ರಕರಣಗಳು | ಗ ರಿಷ್ಠ 08 ವರ್ಷಗಳು |
| 2 | ದಿನಾಂಕ : 09-11-2004 ರಿಂದ ದಿನಾಂಕ : 14-02-2012ರ ಅವಧಿಯಲ್ಲಿ ನಿವೃತ್ತಿ ಹೊಂದಿರುವ ಪ್ರಕರಣಗಳು | ಗ ರಿಷ್ಠ 04 ವರ್ಷಗಳು |
| 3 | ದಿನಾಂಕ : 15-02-2012 ಮತ್ತು ಅದರ ನಂತರ ನಿವೃತ್ತಿ ಹೊಂದಿರುವ/ಹೊಂದುವ ಪ್ರಕರಣಗಳು | ಗ ರಿಷ್ಠ 02 ವರ್ಷಗಳು |
ಬಿ.ಎಸ್. ಸುವರ್ಣ
PR-266
ಸರ್ಕಾರದ ಅಧೀನ ಕಾರ್ಯದರ್ಶಿ,
ಆರ್ಥಿಕ ಇಲಾಖೆ. (ಸೇವೆಗಳು-1)
ಒಳಾಡಳಿತ ಸಚಿವಾಲಯ
ವಿಷಯ : ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪೋಲಿಸ್ ಠಾಣೆ ಮೊಕದ್ದಮೆ ಸಂ:101/2017 (ಸಿ.ಸಿ.ನಂ.794/2017) ಭಾ.ಧಂ.ಸಂ ಕಲಂ 143, 147, 427, 504, 506 ರೆ.ವಿ.149 ಜೊತೆಗೆ ಪ್ರಿವೆನ್ಷ್ಸನ್ ಆಫ್ ಡ್ಯಾಮೇಜೆಸ್ ಟು ಪಬ್ಲಿಕ್ ಪ್ರಾಪರ್ಟಿ ಆಕ್ಟ್ 1984 ಕಲಂ 3ರಡಿ ದಾಖಲಾದ ಪ್ರಕರಣವನ್ನು ಅಭಿಯೋಜನೆಯಿಂದ ಹಿಂಪಡೆಯುವ ಬಗ್ಗೆ.
೭೭೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ಭಾಗ ೧ಪ್ರಸ್ತಾವನೆ:
ದಿನಾಂಕ:17.07.2017ರಂದು ಮಧ್ಯಾಹ್ನ 2-00 ಗಂಟೆಯ ಸಮಯದಲ್ಲಿ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ರವರ ಕಛೇರಿಯಲ್ಲಿ ಆರೋಪಿತರುಗಳು ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸಮಾನ ಉದ್ದೇಶದಿಂದ ಏಕಾಏಕಿ ತಹಶೀಲ್ದಾರ್ ಕಛೇರಿಗೆ ಅವರಿಲ್ಲದ ಸಮಯದಲ್ಲಿ ಕಛೇರಿಗೆ ನುಗ್ಗಿ ಪಹಣೆಯನ್ನು ಕೊಡುವ ವಿಚಾರದಲ್ಲಿ ತಹಶೀಲ್ದಾರ್ರವರ ಕುರಿತು ಅವಾಚ್ಯ ಶಬ್ದಗಳಿಂದ ಕೂಗಾಡಿಕೊಂಡು ಬೈದು ಅವನು ಕಛೇರಿಯಲ್ಲಿ ಇದ್ದಿದ್ದರೆ ಒಂದು ಗತಿ ಕಾಣಿಸುತ್ತಿದ್ದೆವು ಎಂದು ಕೊಲೆ ಬೆದರಿಕೆಯನ್ನು ಹಾಕಿ, ಕಛೇರಿಯ ತಹಶೀಲ್ದಾರ್ ರವರ ಛೇಂಬರ್ನ ಸ್ಲೈಡ್ ಡೋರ್, ಟಪಾಲು ವಿಭಾಗದ ಡೋರ್ ಹಾಗೂ ಕಾರಿಡಾರ್ ನಲ್ಲಿದ್ದ ಸಾರ್ವಜನಿಕರು ಕುಳಿತುಕೊಳ್ಳಲು ಹಾಕಿದ ಕುರ್ಚಿಗಳನ್ನು ಹೊಡೆದುಹಾಕಿ ತಹಶೀಲ್ದಾರ್ರವರ ನಾಮಫಲಕವನ್ನು ಒಡೆದು ಹಾಳು ಮಾಡಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟು ಮಾಡಿ `.50,000/- ಸರ್ಕಾರಕ್ಕೆ ನಷ್ಟವುಂಟು ಮಾಡಿರುತ್ತಾರೆ ಎಂದು ಆರೋಪಿತರ ವಿರುದ್ಧ ಮೇಲ್ಕಾಣಿಸಿದ ಕಲಂಗಳಡಿ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಆರೋಪಿತರ ವಿರುದ್ಧ ಹೂಡಿರುವ ಈ ಮೊಕದ್ದಮೆಯನ್ನು ಅಭಿಯೋಜನೆಯಿಂದ ಹಿಂಪಡೆಯುವ ಪ್ರಸ್ತಾವನೆಯನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರಿ ಆದೇಶ ಸಂಖ್ಯೆ: ಒಇ 96 ಮೊಹಿಬ 2018, ಬೆಂಗಳೂರು, ದಿನಾಂಕ: 06-09-2019
ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪೋಲಿಸ್ ಠಾಣೆ ಮೊಕದ್ದಮೆ ಸಂ:101/2017 (ಸಿ.ಸಿ.ನಂ.794/2017) ಪ್ರಕರಣವನ್ನು ಸಿ.ಆರ್.ಪಿ.ಸಿ ಕಲಂ 321 ರೀತ್ಯಾ ಅಭಿಯೋಜನೆಯಿಂದ ಹಿಂಪಡೆಯಲು ಸರ್ಕಾರದ ಮಂಜೂರಾತಿಯನ್ನು ನೀಡಿದೆ.
ನಿರ್ದೇಶಕರು, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ಇವರು ಈ ಪ್ರಕರಣವನ್ನು ಸಂಬಂಧಪಟ್ಟ ನ್ಯಾಯಾಲಯದಿಂದ ಹಿಂಪಡೆಯಲು ಅಗತ್ಯವಾದ ಅರ್ಜಿಯನ್ನು ಸಲ್ಲಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವುದು.
PR-375
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-50
ಬಿ.ಎಸ್. ಶ್ರೀನಿವಾಸ
ಸರ್ಕಾರದ ಉಪ ಕಾರ್ಯದರ್ಶಿ,
ಒಳಾಡಳಿತ ಇಲಾಖೆ. (ಅಪರಾಧಗಳು, ಸೆರೆಮನೆ & ಸಿನಿಮಾ)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ ವಿಷಯ : ಪ್ರಾದೇಶಿಕ ನಿರ್ದೇಶಕರು (ಪರಿಸರ) ಮಂಗಳೂರು, ಉಡುಪಿ ಮತ್ತು ಕಾರವಾರ ಕಛೇರಿಗಳಿಗೆ GIS ಇಂಜಿನಿಯರ್/ ಸರ್ವೇಯರ್ ಹುದ್ದೆಯನ್ನು ಸೃಜಿಸುವ ಬಗ್ಗೆ.
ಓದಲಾಗಿದೆ : 1. ಸರ್ಕಾರದ ಆದೇಶ ಸಂಖ್ಯೆ: ಅಪಜೀ 117 ಇಪಿಸಿ 2011, ದಿನಾಂಕ: 04.06.2013.
2. ಪ್ರಾದೇಶಿಕ ನಿರ್ದೇಶಕರು (ಪರಿಸರ), ಉಡುಪಿ ಇವರ ಪತ್ರ ಸಂಖ್ಯೆ: ಪ್ರಾನಿಪ/ವಿವ/ಹೊ.ಸಿ/2018-19/303,
ದಿನಾಂಕ: 12.10.2018.
3. ಪ್ರಾದೇಶಿಕ ನಿರ್ದೇಶಕರು (ಪರಿಸರ), ಮಂಗಳೂರು ಇವರ ಪತ್ರ ಸಂಖ್ಯೆ: ಸಿಆರ್ ರhುಡ್.ಹೊ.ಸಿ./2018-19, ದಿನಾಂಕ: 12.10.2018.
4. ಪ್ರಾದೇಶಿಕ ನಿರ್ದೇಶಕರು (ಪರಿಸರ), ಕಾರವಾರ ಇವರ ಪತ್ರ ಸಂಖ್ಯೆ: ಪ್ರಾನಿಪ/ಕನಿವ/ಸಿ-1/2018-19/667, ದಿನಾಂಕ: 25.10.2018.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಸರ್ಕಾರದ ಆದೇಶದಲ್ಲಿ ಪ್ರಾದೇಶಿಕ ನಿರ್ದೇಶಕರು (ಪರಿಸರ) ಮಂಗಳೂರು, ಉಡುಪಿ ಮತ್ತು ಕಾರವಾರ ಕಛೇರಿಗಳಿಗೆ ತಲಾ ಒಂದರಂತೆ ಸೃಜನೆಯಿಲ್ಲದ (without creation of post) ಸರ್ವೇಯರ್ (ಗ್ರೇಡ್-1), ಡ್ರಾಫ್ಟ್ ಮನ್, ಪ್ರಥಮ ದರ್ಜೆ ಸಹಾಯಕರು, ದ್ವಿತೀಯ ದರ್ಜೆ ಸಹಾಯಕರು ಹಾಗೂ ಅಟೆಂಡರ್ ಹುದ್ದೆಗಳ ಸೇವೆಯನ್ನು ಬಾಹ್ಯ ಮೂಲದಿಂದ ಪಡೆಯುವಂತೆ ಪ್ರಾದೇಶಿಕ ನಿರ್ದೇಶಕರು (ಪರಿಸರ) ರವರುಗಳಿಗೆ ಆದೇಶಿಸಿ ಆದೇಶವನ್ನು ಹೊರಡಿಸಲಾಗಿದೆ.
ಪ್ರಾದೇಶಿಕ ನಿರ್ದೇಶಕರು (ಪರಿಸರ) ಮಂಗಳೂರು, ಉಡುಪಿ ಮತ್ತು ಕಾರವಾರ ಇವರು ಮೇಲೆ ಓದಲಾದ (2), (3) ಮತ್ತು (4) ರ ಪತ್ರಗಳಲ್ಲಿ, ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ 2011 ರಂತೆ CZMP ನಕ್ಷೆಯು ಅನುಮೋದನೆಗೊಂಡಿದ್ದು, ಸದರಿ ನಕ್ಷೆಯಲ್ಲಿ "Geo referenced" ಗ್ರಾಮ ನಕ್ಷೆಗಳನ್ನು ಅಳವಡಿಸಿ ಅದರ ಮೇಲೆ ಕರಾವಳಿ ನಿಯಂತ್ರಣ ವಲಯ ನಕ್ಷೆಗಳನ್ನು ಅಳವಡಿಸಲಾಗಿರುತ್ತದೆ. ಅಲ್ಲದೆ, CRZ ಸ್ಥಳ ಪರಿಶೀಲನೆಗಾಗಿ "GIS" ತಂತ್ರಾಂಶವನ್ನು ಉಪಯೋಗಿಸಲಾಗುತ್ತಿದೆ. ಕರಾವಳಿ ನಿಯಂತ್ರಣ ವಲಯದಲ್ಲಿ ಬರುವ ಯೋಜನೆಗಳಿಗೆ ಯೋಜನಾ ಪ್ರವರ್ತಕರು ಯೋಜನಾ ಸ್ಥಳವನ್ನು ಗುರುತಿಸಿದ ಕರಾವಳಿ ನಿಯಂತ್ರಣ ವಲಯ ನಿರ್ವಹಣಾ ನಕ್ಷೆಯನ್ನು ಕೇಂದ್ರ ಸರ್ಕಾರವು ಅನುಮೋದಿಸಿರುವ ಸಂಸ್ಥೆಗಳಿಂದ ತಯಾರಿಸಿ ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರಗಳನ್ನು ಪಡೆಯಬೇಕಾಗಿರುತ್ತದೆ. ಆದರೆ, ಈ ನಕ್ಷೆಗಳನ್ನು ತಾಂತ್ರಿಕವಾಗಿ ಪರಿಶೀಲಿಸಲು ಹಾಗೂ ಕರಾವಳಿ ನಿಯಂತ್ರಣ ವಲಯ ಸ್ಥಳ ಪರಿಶೀಲನೆ ಸಮಯದಲ್ಲಿ ಓರ್ವ ನುರಿತ GIS ತಂತ್ರಜ್ಞರ ಅವಶ್ಯಕತೆ ಇರುತ್ತದೆ. ಇಲ್ಲವಾದಲ್ಲಿ ಪ್ರಾದೇಶಿಕ ನಿರ್ದೇಶಕರು (ಪರಿಸರ) ರವರಿಗೆ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಯಂತೆ ಪ್ರಸ್ತಾವನೆಯನ್ನು ಪರಿಶೀಲಿಸುವುದು ಕ್ಲಿಷ್ಟಕರವಾಗುತ್ತವೆ ಎಂದು ತಿಳಿಸಿರುತ್ತಾರೆ.
ಆದ್ದರಿಂದ ಈಗಾಗಲೇ, ಪ್ರಾದೇಶಿಕ ನಿರ್ದೇಶಕರು (ಪರಿಸರ) ಮಂಗಳೂರು, ಉಡುಪಿ ಮತ್ತು ಕಾರವಾರ ಕಛೇರಿಗಳಿಗೆ ಮಂಜೂರಾಗಿರುವ ಹೊರಗುತ್ತಿಗೆ ಸರ್ವೇಯರ್ ಹುದ್ದೆಯನ್ನು "GIS ಇಂಜಿನಿಯರ್ ಹಾಗೂ ಸರ್ವೇಯರ್" ಎಂದು ಉನ್ನತೀಕರಿಸಿ ಹುದ್ದೆಯನ್ನು ` 25,000/- ಗಳ ವೇತನಕ್ಕೆ ನಿಗದಿಪಡಿಸಿ ಮಂಜೂರಾತಿ ನೀಡಬೇಕಾಗಿ ಅಥವಾ "GIS ಇಂಜಿನಿಯರ್" ಎಂದು ಹೊಸ ಹುದ್ದೆಯನ್ನು ಸೃಜಿಸುವಂತೆ ಹಾಗೂ ಪ್ರಾದೇಶಿಕಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ೭೭೩ ನಿರ್ದೇಶಕರು (ಪರಿಸರ) ಮಂಗಳೂರು, ಉಡುಪಿ ಮತ್ತು ಕಾರವಾರ ಕಛೇರಿಗಳಿಗೆ ಸಂಬಂಧಪಟ್ಟ ಲೆಕ್ಕ ಶೀರ್ಷಿಕೆಯ "3435-60-800-0-03" ರ (ಯೋಜನೆ) ಉಪ ಶೀರ್ಷಿಕೆ-034 ಗುತ್ತಿಗೆ/ ಹೊರಗುತ್ತಿಗೆ ರ ವೆಚ್ಚದಲ್ಲಿ ಭರಿಸಲು ಮಂಜೂರು ಮಾಡುವಂತೆ ಕೋರಿರುತ್ತಾರೆ.
ಸದರಿ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಸಹಮತಿಯನ್ನು ಕೋರಲಾಗಿರುತ್ತದೆ. ಪ್ರಾದೇಶಿಕ ನಿರ್ದೇಶಕರು (ಪರಿಸರ) ಕಾರವಾರ, ಉಡುಪಿ ಮತ್ತು ಮಂಗಳೂರು ಇವರ ಕಛೇರಿಗಳಲ್ಲಿ ಪ್ರತಿ ಕಛೇರಿಗೆ ತಲಾ ಒಂದು ಹುದ್ದೆಯಂತೆ ಒಟ್ಟಾರೆಯಾಗಿ 3 ಸರ್ವೇಯರ್ ಗ್ರೇಡ್-1 ಹುದ್ದೆಗಳನ್ನು ಈ ಹಿಂದೆ ಬಾಹ್ಯ ಮೂಲಗಳಿಂದ ಪಡೆಯಲು ನೀಡಲಾದ ಅನುಮತಿಗೆ ಬದಲಾಗಿ 3 GIS ಇಂಜಿನಿಯರ್ ಕಮ್ ಸರ್ವೇಯರ್ ಹುದ್ದೆಗಳನ್ನು ಹುದ್ದೆ ಸೃಜನೆ ಇಲ್ಲದೆ ಮಾಸಿಕ ` 25,000/- ಗಳ ಮಿತಿಯೊಳಗೆ ಬಾಹ್ಯ ಮೂಲಗಳಿಂದ ಪಡೆಯಲು ಆರ್ಥಿಕ ಇಲಾಖೆಯು ಸಹಮತಿಯನ್ನು ನೀಡಿರುತ್ತದೆ.
ಸದರಿ ಪ್ರಸ್ತಾವನೆಯನ್ನು ಪರಿಶೀಲಿಸಿ, ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಅಪಜೀ 137 ಇಎನ್ವಿ 2018, ಬೆಂಗಳೂರು, ದಿನಾಂಕ: 19-08-2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಪ್ರಾದೇಶಿಕ ನಿರ್ದೇಶಕರು (ಪರಿಸರ) ಕಾರವಾರ, ಉಡುಪಿ ಮತ್ತು ಮಂಗಳೂರು ಇವರ ಕಛೇರಿಗಳಲ್ಲಿ ಪ್ರತಿ ಕಛೇರಿಗೆ ತಲಾ ಒಂದು ಹುದ್ದೆಯಂತೆ ಒಟ್ಟಾರೆಯಾಗಿ 3 ಸರ್ವೇಯರ್ ಗ್ರೇಡ್-1 ಹುದ್ದೆಗಳನ್ನು ಈ ಹಿಂದೆ ಬಾಹ್ಯ ಮೂಲಗಳಿಂದ ಪಡೆಯಲು ನೀಡಲಾದ ಅನುಮತಿಗೆ ಬದಲಾಗಿ ಮೂರು "GIS ಇಂಜಿನಿಯರ್ ಕಮ್ ಸರ್ವೇಯರ್" ಹುದ್ದೆಯನ್ನು ಹುದ್ದೆ ಸೃಜನೆ ಇಲ್ಲದೆ ಮಾಸಿಕ `. 25,000/- ಗಳ ಮಿತಿಯೊಳಗೆ ಬಾಹ್ಯ ಮೂಲಗಳಿಂದ ಪಡೆಯಲು ಸರ್ಕಾರವು ಅನುಮತಿಸಿ ಆದೇಶಿಸಿದೆ.
ಪ್ರಾದೇಶಿಕ ನಿರ್ದೇಶಕರು (ಪರಿಸರ) ಕಾರವಾರ, ಉಡುಪಿ ಮತ್ತು ಮಂಗಳೂರು ಇವರ ಕಛೇರಿಗಳಿಗೆ ನಿಗಧಿಯಾಗಿರುವ ಲೆಕ್ಕ ಶೀರ್ಷಿಕೆಯ "3435-60-800-0-03"ರ (ಯೋಜನೆ) ಉಪ ಶೀರ್ಷಿಕೆ-034 ಗುತ್ತಿಗೆ/ಹೊರಗುತ್ತಿಗೆ ಅಡಿಯಲ್ಲಿ ಬಾಹ್ಯ ಮೂಲದ ಸಿಬ್ಬಂದಿಯ ವೇತನವನ್ನು ಭರಿಸತಕ್ಕದ್ದು.
ಈ ಆದೇಶವನ್ನು ಟಿಪ್ಪಣಿ ಸಂಖ್ಯೆ: ಆಇ 741 ವೆಚ್ಚ-5/2018, ದಿನಾಂಕ: 20.07.2019 ರಲ್ಲಿ ಆರ್ಥಿಕ ಇಲಾಖೆಯು ನೀಡಿದ ಸಹಮತಿಯನ್ವಯ ಹೊರಡಿಸಲಾಗಿದೆ.
PR-376
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-100
ಬಾಲಚಂದಿರಾಮ ಗೋ ಹುಣಶಾಳ
ಸರ್ಕಾರದ ಅಧೀನ ಕಾರ್ಯದರ್ಶಿ,
(ಪರಿಸರ ಮತ್ತು ಜೀವಿಶಾಸ್ತ್ರ)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ
ವಿಷಯ : ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರದಿಂದ ನೀಡಲಾಗುವ ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರಗಳ ಪ್ರಸ್ತಾವನೆಗಳಿಗೆ ವಿಧಿಸಲಾಗುವ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಹೆಚ್ಚಿಸುವ ಬಗ್ಗೆ.
ಓದಲಾಗಿದೆ : 1. ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯದ ಅಧಿಸೂಚನೆ ಸಂಖ್ಯೆ: ಎಸ್.ಓ.19(ಇ), ದಿನಾಂಕ: 06.01.2011.
2. ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಮಂತ್ರಾಲಯದ ಅಧಿಸೂಚನೆ ಸಂಖ್ಯೆ: ಎಸ್.ಓ.679(ಇ), ದಿನಾಂಕ: 01.03.2017.
3. ಸರ್ಕಾರದ ಆದೇಶ ಸಂಖ್ಯೆ: ಅಪಜೀ 1062 ಸಿಆರ್ರhುಡ್ 2014, ದಿನಾಂಕ: 16.01.2015. 4. ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರದ 26ನೇ ಸಭಾ ನಡವಳಿಯ ದಿನಾಂಕ: 07.03.2019.
ಪ್ರಸ್ತಾವನೆ:
ಕಡಲತೀರ ವಲಯದ ಸಂರಕ್ಷಣೆಯ ದೃಷ್ಟಿಯಿಂದ ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಮಂತ್ರಾಲಯವು ಪರಿಸರ (ಸಂರಕ್ಷಣಾ) ಕಾಯಿದೆ, 1986ರ ಅಡಿಯಲ್ಲಿ ಮೇಲೆ ಓದಲಾದ (1) ರಲ್ಲಿ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆ, 2011ನ್ನು ಹೊರಡಿಸಿರುತ್ತದೆ. ಈ ಅಧಿಸೂಚನೆಯ ಅಂಶಗಳ ಅನುಪಾಲನೆಯನ್ನು ಖಾತ್ರಿ ಪಡಿಸಿಕೊಳ್ಳುವುದಕ್ಕಾಗಿ ಮೇಲೆ ಓದಲಾದ (2) ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರವನ್ನು ರಚಿಸಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಮಂತ್ರಾಲಯವು ಅಧಿಸೂಚನೆಯನ್ನು ಹೊರಡಿಸಿರುತ್ತದೆ.
ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರದಿಂದ ಉಡುಪಿ, ಮಂಗಳೂರು ಮತ್ತು ಕಾರವಾರ ಜಿಲ್ಲೆಗಳ ಕಡಲ ತೀರ ಪ್ರದೇಶಗಳಲ್ಲಿ ಅಭಿವೃದ್ದಿ ಕಾಮಗಾರಿಗಳಿಗೆ ಸಂಬಂಧಿಸಿದ ಹಾಗೇ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ಬರುವ ವಿವಿಧ ಚಟುವಟಿಕೆಗಳಿಗೆ ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರವನ್ನು ನೀಡುವಂತೆ ಸಲ್ಲಿಸಲ್ಪಡುವ ಪ್ರಸ್ತಾವನೆಗಳ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಮೇಲೆ ಓದಲಾದ (3) ರ ಸರ್ಕಾರಿ ಆದೇಶದಲ್ಲಿ ನಿಗದಿಪಡಿಸಲಾಗಿತ್ತು.
ಹಾಲಿ ಇರುವ ಅರ್ಜಿ ಪರಿಶೀಲನಾ ಶುಲ್ಕವನ್ನು ಪರಿಷ್ಕರಿಸುವ ಅಗತ್ಯತೆ ಕುರಿತು ಮೇಲೆ ಓದಲಾದ (4) ರಲ್ಲಿ ದಿನಾಂಕ: 07.03.2019 ರಂದು ನಡೆದ ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರದ 26ನೇ ಸಭೆಯ ಕಂಡಿಕೆ ಸಂಖ್ಯೆ: 26.10.1 ರಲ್ಲಿ ಚರ್ಚಿಸಲಾಗಿದ್ದು, ಕರ್ನಾಟಕ೭೭೪ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ಭಾಗ ೧ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ವಿವಿಧ ವಸತಿ ಹಾಗೂ ವಸತಿಯೇತರ ಕಟ್ಟಡಗಳು ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರ ಕೋರಿ ಬರುವ ಅರ್ಜಿಗಳಿಗೆ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಈ ಕೆಳಕಂಡಂತೆ ಪರಿಷ್ಕರಿಸುವ ಕುರಿತು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಿರುತ್ತದೆ.
1. ವಸತಿ ಘಟಕಗಳು:
| ಹಾಲಿಇರುವ ಪರಿಷ್ಕರಣಾ ಶುಲ್ಕ | ಉದ್ದೇಶಿತ ಪರಿಷ್ಕರಣಾ ಶುಲ್ಕ | |||
| ಕ್ರ.ಸಂ. | ಕಟ್ಟಡದ ವಿಸ್ತೀರ್ಣ ಚದರ ಅಡಿಯಲ್ಲಿ (Plinth Area) | ವ ಸತಿ ಘಟಕಗಳ ಪರಿಶೀಲನಾ/ನಿರ್ವಹಣಾ ಶುಲ್ಕ (ರೂ.ಗಳಲ್ಲಿ) | ಕಟ್ಟಡದ ವಿಸ್ತೀರ್ಣ (ಚ.ಅಡಿ) ಎಲ್ಲಾ ಮಹಡಿಗಳು ಸೇರಿ | ವ ಸತಿ ಘಟಕಗಳ ಪ ರಿಶೀಲನಾ ಶುಲ್ಕ (ರೂ. ಗಳಲ್ಲಿ) |
| 1 | 1000 ಚದರ ಅಡಿವರೆಗೆ | 100.00 | 1000 ಚ.ಅಡಿವರೆಗೆ | 200 |
| 2 | 1000 ಚದರ ಅಡಿ ಮೇಲೆ | 500.00 | 1001-3000 | 500 |
| 3 | 3001-6000 | 1,000 | ||
| 4 | 6001-9000 | 2,000 | ||
| 5 | 9001-12000 | 5,000 | ||
| 6 | 12001-16000 | 10,000 | ||
| 7 | 16001-20000 | 25,000 | ||
| 8 | >20000 | 50,000 |
2. ವಾಣಿಜ್ಯ ಘಟಕಗಳು:
| ಹಾಲಿಇರುವ ಪರಿಷ್ಕರಣಾ ಶುಲ್ಕ | ಉದ್ದೇಶಿತ ಪರಿಷ್ಕರಣಾ ಶುಲ್ಕ | |||
| ಕ್ರ.ಸಂ. | ಬಂಡವಾಳ ವೆಚ್ಚ (ವಾಣಿಜ್ಯ ಯೋಜನೆಗಳು) | ವಾಣಿಜ್ಯ ಘಟಕಗಳ ಪರಿಶೀಲನಾ/ನಿರ್ವಹಣಾ ಶುಲ್ಕ (ರೂ.ಗಳಲ್ಲಿ) | ವಾಣಿಜ್ಯ ಘಟಕಗಳು (ಬಂಡವಾಳ ವೆಚ್ಚ) | ಅರ್ಜಿ ಪರಿಶೀಲನಾ ಶ ುಲ್ಕ (ರೂ. ಗಳಲ್ಲಿ) |
| 1 | `. 1 ಕೋಟಿ ವರೆಗೆ | `. 50,000.00 | `. 25 ಲಕ್ಷವರೆಗೆ | `. 25,000 |
| 2 | `.. 1 ಕೋಟಿಯಿಂದ 5 ಕೋಟಿವರೆಗೆ | `.1 ಲಕ್ಷ | `. 25 ಲಕ್ಷದಿಂದ–`.50 ಲಕ್ಷವರೆಗೆ | `. 50,000 |
| 3 | `. 5 ಕೋಟಿಯಿಂದ 50 ಕೊಟಿವರೆಗೆ | `.2 ಲಕ್ಷ | `. 50 ಲಕ್ಷದಿಂದ–`. 1 ಕೋಟಿವರೆಗೆ | `. 1,00,000 |
| 4 | `.. 50 ಕೋಟಿಯಿಂದ 100 ಕೊಟಿವರೆಗೆ | `.5 ಲಕ್ಷ | `. 1 ಕೋಟಿಯಿಂದ –`. 5 ಕೋಟಿವರೆಗೆ | `. .2 ಲಕ್ಷ |
| 5 | `. 100 ಕೋಟಿ ಮೇಲೆ | `. 10 ಲಕ್ಷ | `. 5 ಕೋಟಿಯಿಂದ –`. 25 ಕೋಟಿವರೆಗೆ `. 4 ಲಕ್ಷ | |
| 6 | `. 25 ಕೋಟಿಯಿಂದ–`. 50 ಕೋಟಿವರೆಗೆ | `. 6 ಲಕ್ಷ | ||
| 7 | `. 50 ಕೋಟಿಯಿಂದ –`. 100 ಕೋಟಿವರೆಗೆ | `. 7 ಲಕ್ಷ | ||
| 8 | `. 100 ಕೋಟಿಯಿಂದ –`. 200 ಕೋಟಿವರೆಗೆ | `. 12 ಲಕ್ಷ | ||
| 9 | `. 200 ಕೋಟಿ ಮೇಲೆ | `. 15 ಲಕ್ಷ |
ಪ್ರಾಧಿಕಾರದ ನಿರ್ಣಯದಂತೆ, ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರದಿಂದ ನೀಡಲಾಗುವ ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರಗಳ (CRZ Clearance) ಪ್ರಸ್ತಾವನೆಗಳಿಗೆ ವಿಧಿಸಲಾಗುವ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಹೆಚ್ಚಿಸುವ ಬಗ್ಗೆ ಆರ್ಥಿಕ ಇಲಾಖೆಯ ಸಹಮತಿಯನ್ನು ಕೋರಲಾಗಿತ್ತು. ಸದರಿ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಸಹಮತಿ ನೀಡಿರುತ್ತದೆ. ಅದರಂತೆ ಈ ಕೆಳಕಂಡ ಆದೇಶ.
ಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ೭೭೫ಸರ್ಕಾರಿ ಆದೇಶ ಸಂಖ್ಯೆ. ಅಪಜೀ 212 ಸಿಆರ್ರhುಡ್ 2018 (ಭಾಗ-1) ಬೆಂಗಳೂರು, ದಿನಾಂಕ: 19.08.2019.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಮಾನ ಬದಲಾವಣೆ ಮಂತ್ರಾಲಯದ ಅಧಿಸೂಚನೆ ಸಂಖ್ಯೆ: ಎಸ್.ಓ.19(ಇ), ದಿನಾಂಕ: 06.01.2011 ರಂತೆ ಹೊರಡಿಸಲಾಗಿರುವ ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಯಂತೆ ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣಾ ಪ್ರಾಧಿಕಾರದಿಂದ ವಿವಿಧ ವಸತಿ ಹಾಗೂ ವಸತಿಯೇತರ ಕಟ್ಟಡಗಳು ಹಾಗೂ ಕೈಗಾರಿಕೆಗಳ ಸ್ಥಾಪನೆಗೆ ಕರಾವಳಿ ನಿಯಂತ್ರಣ ವಲಯ ನಿರಾಕ್ಷೇಪಣಾ ಪತ್ರವನ್ನು ಪಡೆಯುವ ಪ್ರಸ್ತಾವನೆಗಳಿಗೆ ಈ ಕೆಳಕಂಡಂತೆ ಅರ್ಜಿ ಪರಿಷ್ಕರಣಾ ಶುಲ್ಕವನ್ನು ಪರಿಷ್ಕರಿಸಿ ಆದೇಶಿಸಿದೆ.
1. ವಸತಿ ಘಟಕಗಳು:
| ಹಾಲಿಇರುವ ಪರಿಷ್ಕರಣಾ ಶುಲ್ಕ | ಉದ್ದೇಶಿತ ಪರಿಷ್ಕರಣಾ ಶುಲ್ಕ | |||
| ಕ್ರ.ಸಂ. | ಕಟ್ಟಡದ ವಿಸ್ತೀರ್ಣ ಚದರ ಅಡಿಯಲ್ಲಿ (Plinth Area) | ವ ಸತಿ ಘಟಕಗಳ ಪರಿಶೀಲನಾ/ನಿರ್ವಹಣಾ ಶುಲ್ಕ (ರೂ.ಗಳಲ್ಲಿ) | ಕಟ್ಟಡದ ವಿಸ್ತೀರ್ಣ (ಚ.ಅಡಿ) ಎಲ್ಲಾ ಮಹಡಿಗಳು ಸೇರಿ | ವ ಸತಿ ಘಟಕಗಳ ಪ ರಿಶೀಲನಾ ಶುಲ್ಕ (ರೂ. ಗಳಲ್ಲಿ) |
| 1 | 1000 ಚದರ ಅಡಿವರೆಗೆ | 100.00 | 1000 ಚ.ಅಡಿವರೆಗೆ | 200 |
| 2 | 1000 ಚದರ ಅಡಿ ಮೇಲೆ | 500.00 | 1001-3000 | 500 |
| 3 | 3001-6000 | 1,000 | ||
| 4 | 6001-9000 | 2,000 | ||
| 5 | 9001-12000 | 5,000 | ||
| 6 | 12001-16000 | 10,000 | ||
| 7 | 16001-20000 | 25,000 | ||
| 8 | >20000 | 50,000 |
2. ವಾಣಿಜ್ಯ ಘಟಕಗಳು:
| ಹಾಲಿಇರುವ ಪರಿಷ್ಕರಣಾ ಶುಲ್ಕ | ಉದ್ದೇಶಿತ ಪರಿಷ್ಕರಣಾ ಶುಲ್ಕ | |||
| ಕ್ರ.ಸಂ. | ಬಂಡವಾಳ ವೆಚ್ಚ (ವಾಣಿಜ್ಯ ಯೋಜನೆಗಳು) | ವಾಣಿಜ್ಯ ಘಟಕಗಳ ಪರಿಶೀಲನಾ/ನಿರ್ವಹಣಾ ಶುಲ್ಕ (ರೂ.ಗಳಲ್ಲಿ) | ವಾಣಿಜ್ಯ ಘಟಕಗಳು (ಬಂಡವಾಳ ವೆಚ್ಚ) | ಅರ್ಜಿ ಪರಿಶೀಲನಾ ಶುಲ್ಕ (ರೂ. ಗಳಲ್ಲಿ) |
| 1 | `. 1 ಕೋಟಿ ವರೆಗೆ | `.50,000.00 | `.25 ಲಕ್ಷವರೆಗೆ | `. 25,000 |
| 2 | `. 1 ಕೋಟಿಯಿಂದ 5 ಕೋಟಿವರೆಗೆ | `. 1 ಲಕ್ಷ | `. 25 ಲಕ್ಷದಿಂದ –`.50 ಲಕ್ಷವರೆಗೆ | `. 50,000 |
| 3 | `. 5 ಕೋಟಿಯಿಂದ 50 ಕೊಟಿವರೆಗೆ | `. 2 ಲಕ್ಷ | `.50 ಲಕ್ಷದಿಂದ–`. 1 ಕೋಟಿವರೆಗೆ | `. 1,00,000 |
| 4 | `. 50 ಕೋಟಿಯಿಂದ 100 ಕೊಟಿವರೆಗೆ | `. 5 ಲಕ್ಷ | `.1 ಕೋಟಿಯಿಂದ –`. 5 ಕೋಟಿವರೆಗೆ | `. 2 ಲಕ್ಷ |
| 5 | `. 100 ಕೋಟಿ ಮೇಲೆ | `. 10 ಲಕ್ಷ | `. ಕೋಟಿಯಿಂದ –`.25 ಕೋಟಿವರೆಗೆ `. 4 ಲಕ್ಷ | |
| 6 | `.25 ಕೋಟಿಯಿಂದ –`.50 ಕೋಟಿವರೆಗೆ | `. 6 ಲಕ್ಷ | ||
| 7 | `.50 ಕೋಟಿಯಿಂದ –`. 100 ಕೋಟಿವರೆಗೆ | `. 7 ಲಕ್ಷ | ||
| 8 | `. 100 ಕೋಟಿಯಿಂದ –`. 200 ಕೋಟಿವರೆಗೆ | `. 12 ಲಕ್ಷ | ||
| 9 | `. 200 ಕೋಟಿ ಮೇಲೆ | `. 15 ಲಕ್ಷ |
ಪ್ರಸ್ತಾಪಿತ ಶುಲ್ಕವನ್ನು ಲೆಕ್ಕ ಶೀರ್ಷಿಕೆ: "0406-02-800-0-02 Fees Under Coastal Zone Management" ಅಡಿಯಲ್ಲಿ ಸಂದಾಯ ಮಾಡುವಂತೆ ಆದೇಶಿಸಿದೆ.
೭೭೬ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ಭಾಗ ೧ಸರ್ಕಾರದ ಆದೇಶ ಸಂಖ್ಯೆ: ಅಪಜೀ 1062 ಸಿಆರ್ರhುಡ್ 2014, ದಿನಾಂಕ: 16.01.2015 ರ ಆದೇಶವನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.
ಸದರಿ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 693 ವೆಚ್ಚ-5/2014, ದಿನಾಂಕ: 17.12.2014 ಹಾಗೂ ಟಿಪ್ಪಣಿ ಸಂಖ್ಯೆ: ಆಇ 592 ವೆಚ್ಚ-5/2019, ದಿನಾಂಕ: 29.07.2019 ರಲ್ಲಿನ ಸಹಮತಿಯೊಂದಿಗೆ ಹೊರಡಿಸಲಾಗಿದೆ.
PR-377
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-250
ಬಾಲಚಂದಿರಾಮ ಗೋ ಹುಣಶಾಳ
ಸರ್ಕಾರದ ಅಧೀನ ಕಾರ್ಯದರ್ಶಿ,
(ಪರಿಸರ ಮತ್ತು ಜೀವಿಶಾಸ್ತ್ರ)
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.
ಕಂದಾಯ ಸಚಿವಾಲಯ
ತಿದ್ದೋಲೆ
ಸಂಖ್ಯೆ: ಕಂಇ 30 ಮುಆಬಿ 2019, ಬೆಂಗಳೂರು, ದಿನಾಂಕ: 30-09-2019
ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳನ್ನು ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಿ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿರುವ ಸರ್ಕಾರದ ಅಧಿಸೂಚನೆ ಸಂಖ್ಯೆ:ಕಂಇ 87 ಮುಆಬಿ 2012 ದಿನಾಂಕ:29-09-2012ರಲ್ಲಿ ಬೆಂಗಳೂರು ಗ್ರ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ಅಧಿಸೂಚಿತ ಸಂಸ್ಥೆಗಳ ಪಟ್ಟಿಯಲ್ಲಿ ಪುಟ ಸಂಖ್ಯೆ:52, ಕ್ರಮ ಸಂಖ್ಯೆ: 64ರಲ್ಲಿ "ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು, ಭೀಮಸಂಧ್ರ-ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ" ಎಂದಿರುವುದನ್ನು "ಬೆಂಗಳೂರು ಗ್ರ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕು, ಚೀಮಸಂದ್ರ- ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.
PR-378
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಕೆ.ಪಿ.ಹೇಮಂತರಾಜು
ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರ)
ಕಂದಾಯ ಇಲಾಖೆ. (ಮುಜರಾಯಿ)
ಸಹಕಾರ ಸಚಿವಾಲಯ ವಿಷಯ : 'ಕ್ರಿಸ್ತು ಸೇವಾ ಸಮಾಜ' – ಅನಾಥಾಶ್ರಮ ಓಲ್ಡ್ ಸಿಮೆಟ್ರಿ ರಸ್ತೆ, ಟಾಸ್ಕರ್ ಟೌನ್, ಶಿವಾಜಿನಗರ, ಬೆಂಗಳೂರು – 51 ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸುವ ಬಗ್ಗೆ
ಓದಲಾಗಿದೆ : 1. ಸಹಕಾರ ಸಂಘಗಳ ಉಪ ನಿಬಂಧಕರು, 4ನೇ ವಲಯ, ಬೆಂಗಳೂರು ಇವರ ಪತ್ರ ಸಂಖ್ಯೆ: ಡಿಆರ್ಬಿ-
4/ಎಸ್.ಒ.ಆರ್./ಕಲಂ-25/35/2016-17, ದಿನಾಂಕ:08.01.2019
2. ಸರ್ಕಾರದ ನೋಟೀಸ್ ಸಂಖ್ಯೆ: ಸಇ 11, ಸಸಂನೋ 2019, ದಿನಾಂಕ:06.02.2019, 22.05.2019.
3. ಅಧ್ಯಕ್ಷರು/ಕಾರ್ಯದರ್ಶಿ 'ಕ್ರಿಸ್ತು ಸೇವಾ ಸಮಾಜ' – ಅನಾಥಾಶ್ರಮ ಓಲ್ಡ್ ಸಿಮೆಟ್ರಿ ರಸ್ತೆ, ಟಾಸ್ಕರ್ ಟೌನ್,
ಶಿವಾಜಿನಗರ, ಬೆಂಗಳೂರು ಇವರ ಲಿಖಿತ ಉತ್ತರ ದಿನಾಂಕ:31.07.2019.
ಪ್ರಸ್ತಾವನೆ:
ಮೇಲೆ (1)ರಲ್ಲಿ ಓದಲಾದ ಸಹಕಾರ ಸಂಘಗಳ ಉಪ ನಿಬಂಧಕರು, 4ನೇ ವಲಯ, ಬೆಂಗಳೂರು ಇವರ ಪತ್ರದಲ್ಲಿ 'ಕ್ರಿಸ್ತು ಸೇವಾ ಸಮಾಜ' ಈ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಜಾನ್ ಸುರೇಶ್ ಮತ್ತು ಇತರರು ಸಂಘದ ಅಧ್ಯಕ್ಷರಾದ ಶ್ರೀ ಫ್ರಾನ್ಸಿಸ್ ಜಾಕ್ಸನ್ ಮತ್ತು ಶ್ರೀಮತಿ ಸುಲೋಚನ ಜಾಕ್ಸನ್ ಇವರ ವಿರುದ್ಧ ಮಾನವ ಹಕ್ಕುಗಳ ಆಯೋಗದಲ್ಲಿ ಸಲ್ಲಿಸಿರುವ ದೂರು ಅರ್ಜಿ ಸಂಬಂಧ ಆಯೋಗವು ಹೆಚ್.ಆರ್.ಸಿ.
ಸಂಖ್ಯೆ:3579/10/01/2015 ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಈ ಬಗ್ಗೆ ಸಂಘದ ವಿರುದ್ಧ ಕ್ರಮವಿಡುವಂತೆ ದಿನಾಂಕ: 24.08.2016 ರಲ್ಲಿ ಆದೇಶಿಸಿದ್ದು, ಅದರಂತೆ ಸಂಘದ ಕೆಲವೊಂದು ನಿಯಮ ಬಾಹಿರ ನಡವಳಿಕೆ ಇತ್ಯಾದಿ ಕುರಿತು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರ ಕಲಂ 25 ರನ್ವಯ ವಿಚಾರಣೆ ನಡೆಸಲು ಆದೇಶಿಸಲಾಗಿದ್ದು, ಸಂಘದ ಅಧ್ಯಕ್ಷರಿಗೆ ವಿಚಾರಣೆಗೆ ಹಾಜರಾಗುವಂತೆ ಸ್ವೀಕೃತಿ ಅಂಚೆ ಮುಖಾಂತರ ನೋಟೀಸ್ ನೀಡಿದ್ದು, ನೋಟೀಸ್ ಸ್ವೀಕರಿಸದೇ 'Not claimed' ಎಂಬ ಷರಾದೊಂದಿಗೆ ಅಂಚೆ ಲಕೋಟೆಗಳು ವಾಪಸ್ಸಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಸರ್ಕಾರವನ್ನು ಕೋರಿರುತ್ತಾರೆ.
ಮೇಲೆ (2)ರಲ್ಲಿ ಓದಲಾದ ಸರ್ಕಾರದ ನೋಟೀಸಿನಲ್ಲಿ 'ಕ್ರಿಸ್ತು ಸೇವಾ ಸಮಾಜ' ಈ ಸಂಘದ ವಿರುದ್ಧ ಸಹಕಾರ ಸಂಘದ ಉಪ ನಿಬಂಧಕರು, 4ನೇ ವಲಯ, ಬೆಂಗಳೂರು ಇವರು ಆಡಳಿತಾಧಿಕಾರಿಯನ್ನು ನೇಮಕ ಮಾಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದನ್ನು ಪರಿಗಣಿಸಿ ಸಂಘಕ್ಕೆ ಆಡಳಿತಾಧಿಕಾರಿಯನ್ನು ಏಕೆ ನೇಮಕ ಮಾಡಬಾರದೆಂದು ಲಿಖಿತ ಹೇಳಿಕೆ ಸಲ್ಲಿಸುವಂತೆ ಸಂಘದ ಅಧ್ಯಕ್ಷರು/ಕಾರ್ಯದರ್ಶಿಯವರಿಗೆ ತಿಳಿಸಲಾಗಿತ್ತು.
ಮೇಲೆ (3)ರಲ್ಲಿ ಓದಲಾದ ಅಧ್ಯಕ್ಷರು, 'ಕ್ರಿಸ್ತು ಸೇವಾ ಸಮಾಜ' – ಅನಾಥಾಶ್ರಮ ಓಲ್ಡ್ ಸಿಮೆಟ್ರಿ ರಸ್ತೆ, ಟಾಸ್ಕರ್ ಟೌನ್, ಶಿವಾಜಿನಗರ, ಬೆಂಗಳೂರು ಇವರ ಲಿಖಿತ ಉತ್ತರದಲ್ಲಿ ಸಂಘದ ವಿರುದ್ಧದ ಆರೋಪಗಳಲ್ಲಿ ತಿಳಿಸಿರುವಂತೆ ಯಾವುದೇ ಜಾಲತಾಣಗಳನ್ನು ಸೃಷ್ಟಿಸಿರುವುದಿಲ್ಲ ಮತ್ತು ಹೊರದೇಶಗಳಿಂದ ದೇಣಿಗೆಯನ್ನು ಪಡೆದಿರುವುದಿಲ್ಲವೆಂದು, ಈ ಬಗ್ಗೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದು, ಈ ಆರೋಪವನ್ನು ತಿರಸ್ಕರಿಸಬೇಕೆಂದು, ಹೊರದೇಶಗಳಿಂದ ಯಾವುದೇ ತರಹದ ದೇಣಿಗೆಯನ್ನು ಸಂಗ್ರಹಿಸಿರುವುದಿಲ್ಲವಾದ್ದರಿಂದ ಈ ಬಗ್ಗೆ ಲೆಕ್ಕಪತ್ರಗಳನ್ನು ನಿರ್ವಹಿಸುವ ಪ್ರಶ್ನೆ ಉದ್ಭವಿಸುವುದಿಲ್ಲವೆಂದು, ಕಾರ್ಯಕಾರಿ ಸಮಿತಿ ಚುನಾವಣೆ ನಡೆಸದೇ ಇರುವುದು ವಾಸ್ತವಾಂಶಕ್ಕೆ ದೂರವಾದ ಅಂಶವಾಗಿದ್ದು, ಕಳೆದ 18 ವರ್ಷಗಳಿಂದ ಕಾರ್ಯಕಾರಿ ಸಮಿತಿ ಚುನಾವಣೆ ಮತ್ತುಭಾಗ ೧ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ೭೭೭ ವಾರ್ಷಿಕ ಮಹಾಸಭೆಗಳನ್ನು ನಡೆಸಲಾಗಿದ್ದು ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಸಹಕಾರ ಸಂಘಗಳ ಉಪ ನಿಬಂಧಕರಿಗೆ ಸಲ್ಲಿಸಲಾಗಿದೆಯೆಂದು ಮತ್ತು ಆಶ್ರಮದ ನಿವಾಸಿಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದು ಅರ್ಜಿದಾರರು ದೂರಿರುವಂತೆ ಯಾವುದೇ ರೀತಿಯ ಕಿರುಕುಳ ನೀಡುತ್ತಿಲ್ಲವೆಂದು, ಆಶ್ರಮದ ಕಟ್ಟಡವು ಸುಸ್ಥಿತಿಯಲ್ಲಿದ್ದು ಇದರ ನಿರ್ವಹಣೆಯನ್ನು ಆಗಿಂದ್ದಾಗೆ ಮಾಡಲಾಗುತ್ತಿದೆಯೆಂದು, ಅರ್ಜಿದಾರರು ಇಲ್ಲಸಲ್ಲದ ಆರೋಪ ಮಾಡಿ ನಮ್ಮ ತೇಜೋವಧೆ ಮಾಡುವುದು ಅವರ ಉದ್ದೇಶವಾಗಿರುವುದರಿಂದ ಈ ಸುಳ್ಳು ಆರೋಪಗಳನ್ನು ಮಾಡಿದ್ದು, ಈ ಆರೋಪಗಳನ್ನು ತಿರಸ್ಕರಿಸಬೇಕೆಂದು ಹಾಗೂ ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಬಾರದೆಂದು ಕೋರಿರುತ್ತಾರೆ.
ಮೇಲ್ಕಂಡ ಅಂಶಗಳನ್ನು ಪರಿಶೀಲಿಸಲಾಗಿ ಸಂಘದ ಅಧ್ಯಕ್ಷರು ನೋಟೀಸ್ಗೆ ಸಲ್ಲಿಸಿರುವ ಲಿಖಿತ ಉತ್ತರಕ್ಕೆ ಆಧಾರವಾಗಿ ಯಾವುದೇ ದಾಖಲೆಗಳನ್ನು ನೀಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸಂಘದಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಿ ನಿಸ್ಪಕ್ಷಪಾತ ಮತ್ತು ಪಾರದರ್ಶಕವಾಗಿ ನಿಯಮಾನುಸಾರ ಚುನಾವಣೆ ನಡೆಸಿ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸುವ ಕುರಿತು ಕ್ರಮಕೈಗೊಳ್ಳಲು ಹಾಗೂ ಸಂಘದ ಹಿತದೃಷ್ಟಿಯಿಂದ 'ಕ್ರಿಸ್ತು ಸೇವಾ ಸಮಾಜ' – ಅನಾಥಾಶ್ರಮ ಓಲ್ಡ್ ಸಿಮೆಟ್ರಿ ರಸ್ತೆ, ಟಾಸ್ಕರ್ ಟೌನ್, ಶಿವಾಜಿನಗರ, ಬೆಂಗಳೂರು-51 ಈ ಸಂಘಕ್ಕೆ ಆಡಳಿತಾಧಿಕಾರಿ ನೇಮಿಸಲು ಸರ್ಕಾರವು ತೀರ್ಮಾನಿಸಿದೆ.
ಆದ್ದರಿಂದ, ಈ ಆದೇಶ.
ಸರ್ಕಾರದ ಆದೇಶ ಸಂಖ್ಯೆ: ಸಇ 11 ಸಸಂನೋ 2019 ಬೆಂಗಳೂರು, ದಿನಾಂಕ:03.10.2019
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960ರ ಕಲಂ 27-ಎ ರನ್ವಯ 'ಕ್ರಿಸ್ತು ಸೇವಾ ಸಮಾಜ' – ಅನಾಥಾಶ್ರಮ ಓಲ್ಡ್ ಸಿಮೆಟ್ರಿ ರಸ್ತೆ, ಟಾಸ್ಕರ್ ಟೌನ್, ಶಿವಾಜಿನಗರ, ಬೆಂಗಳೂರು-51 ಈ ಸಂಘಕ್ಕೆ ಸಹಕಾರ ಅಭಿವೃದ್ಧಿ ಅಧಿಕಾರಿ, ಉಪ ನಿಬಂಧಕರ ಕಛೇರಿ, 4ನೇ ವಲಯ, ಬೆಂಗಳೂರು ಇವರನ್ನು, ಈ ಆದೇಶವು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುವಂತೆ ಮುಂದಿನ ಆರು ತಿಂಗಳ ಅವಧಿಗೆ ಆಡಳಿತಾಧಿಕಾರಿಯಾಗಿ ನೇಮಿಸಿ ಆದೇಶಿಸಿದೆ.
ಆಡಳಿತಾಧಿಕಾರಿಗಳು ಕೂಡಲೇ ಸಂಘದ ಪ್ರಭಾರವನ್ನು ವಹಿಸಿಕೊಂಡು, ಸಂಘದ ಎಲ್ಲಾ ನ್ಯೂನ್ಯತೆಗಳನ್ನು ನಿಯಮಾನುಸಾರ ಸರಿಪಡಿಸಿ, ಸಂಘದ ಆಡಳಿತ ಮಂಡಳಿಗೆ ನಿಗಧಿತ ಅವಧಿಯೊಳಗೆ ಚುನಾವಣೆ ನಡೆಸಿ, ಚುನಾಯಿತ ನೂತನ ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿ, ಸರ್ಕಾರಕ್ಕೆ ವರದಿ ನೀಡಲು ಸೂಚಿಸಲಾಗಿದೆ.
PR-379
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, SC-25
ಚೇತನ ಎಂ.
ಸರ್ಕಾರದ ಅಧೀನ ಕಾರ್ಯದರ್ಶಿ-3 (ಪ್ರ),
ಸಹಕಾರ ಇಲಾಖೆ.
ಕಂದಾಯ ಸಚಿವಾಲಯ
ವಿಷಯ : ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣಕ್ಕೆ 2019-20ನೇ ಸಾಲಿನ ಅನುದಾನ ಬಿಡುಗಡೆ
ಮಾಡುವ ಬಗ್ಗೆ.
ಓದಲಾಗಿದೆ: 1. ನಿಬಂಧಕರು, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ, ಬೆಂಗಳೂರು ಇವರ ಪತ್ರ
ಸಂಖ್ಯೆ: ಲೆಕ್ಕ-2/ಸಿಆರ್-4/2018-19, ದಿನಾಂಕ: 14-08-2019.
2. ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 03 ಆರ್ಎಂಇ 2019, ದಿನಾಂಕ: 01-06-2019.
ಪ್ರಸ್ತಾವನೆ:
ಮೇಲೆ ಓದಲಾದ (1)ರ ಪತ್ರದಲ್ಲಿ ನಿಬಂಧಕರು, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ, ಬೆಂಗಳೂರು ಇವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಆರ್ಥಿಕ ಇಲಾಖೆಯ ಅಧಿಕೃತ ಜ್ಞಾಪನ ಸಂಖ್ಯೆ: ಆಇ 18 ಬಿಪಿಇ 2018, ದಿನಾಂಕ: 19-03-2019 ಹಾಗೂ ಸರ್ಕಾರದ ಆದೇಶ ಸಂಖ್ಯೆ: ಎಫ್ಡಿ 01 ಟಿಎಫ್ಟಿ 2019, ದಿನಾಂಕ: 03-04-2019 ರನ್ವಯ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣಕ್ಕೆ ಶೇಡಕ 25% ಅನುದಾನವನ್ನು ಬಿಡುಗಡೆ ಮಾಡಿ ಮೇಲೆ ಓದಲಾದ (2) ರನ್ವಯ ಸರ್ಕಾರವು ಆದೇಶಿಸಿದೆ. ಸರ್ಕಾರದ ಆದೇಶ ಸಂಖ್ಯೆ: ಎಫ್ಡಿ 01 ಟಿಎಫ್ಟಿ 2019, ದಿನಾಂಕ: 04-07-2019 ಹಾಗೂ ಸರ್ಕಾರದ ಸುತ್ತೋಲೆ ಸಂಖ್ಯೆ: ಆಇ 05 ಬಿಪಿಇ 2019, ದಿನಾಂಕ: 01-08-2019 ರನ್ವಯ, 2019-20ನೇ ಸಾಲಿನ ಮೊದಲನೆಯ ಕಂತಿನ ಬಾಕಿ ಹಣ ಬಿಡುಗಡೆಗೆ ಆರ್ಥಿಕ ಅಧಿಕಾರವನ್ನು ಕಂಡಿಕೆ 09 ರಲ್ಲಿ ಪ್ರತ್ಯಾಯೋಜಿಸಿರುವಂತೆ, ಈಗಾಗಲೇ ಶೇಕಡ 1/4 ರಂತೆ ಅನುದಾನ ಬಿಡುಗಡೆ ಮಾಡಿರುವುದರಿಂದ ಬಾಕಿ ಶೇಕಡ 1/4 ರಷ್ಟು ಅಂದರೆ, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದ ಮುಖ್ಯ ಲೆಕ್ಕ ಶೀರ್ಷಿಕೆ 2052-00-099-0-01 ರ-002, 003, -004, -011, -020, -014, -020, -021, -034, -041, -051, -052, -053, -180 ಹಾಗೂ -195 ಅಡಿಯಲ್ಲಿನ ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ಕೋರಿರುತ್ತಾರೆ.
ಮೇಲಿನ ಅಂಶಗಳನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಆರ್ಡಿ 03 ಆರ್ಎಂಇ 2019, ಬೆಂಗಳೂರು, ದಿನಾಂಕ: 25ನೇ ಸೆಪ್ಟಂಬರ್ 2019
ಪ್ರಸ್ತಾವನೆಯಲ್ಲಿನ ವಿವರಗಳ ಹಿನ್ನೆಲೆಯಲ್ಲಿ, ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣ ಕಛೇರಿಗೆ ಮುಖ್ಯ ಲೆಕ್ಕಶೀರ್ಷಿಕೆ 2052-00-099-0-01 ರಡಿ ಈ ಕೆಳಗೆ ವಿವರಿಸಿರುವ ಉಪಶೀರ್ಷಿಕೆಗಳ ಅಡಿಯಲ್ಲಿ 1/4 ರಷ್ಟು ಅಂದರೆ `. 1,84,50,000.00 ಗಳ (ಒಂದು ಕೋಟಿ ಎಂಬತ್ತನಾಲ್ಕು ಲಕ್ಷದ R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೭೭೮ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೩೧, ೨೦೧೯ ಭಾಗ ೧ಐವತ್ತು ಸಾವಿರ ರೂಪಾಯಿಗಳು ಮಾತ್ರ) ಎರಡನೇ ಕಂತಿನ ಅನುದಾನವನ್ನು, ಉದ್ದೇಶಿತ ಕಾರ್ಯಕ್ಕೆ ವಿನಿಯೋಗವಾಗಿರುವ ಬಗ್ಗೆ ಹಣ ಬಳಕೆ ಪ್ರಮಾಣ
| ಕ್ರ ಸಂ | ಮುಖ್ಯ ಲೆಕ್ಕ ಶೀರ್ಷಿಕೆ 2052-00-099-0-01 ರ ಉಪಶೀರ್ಷಿಕೆ | 2019-20 ಅನುದಾನ (ಲಕ್ಷಗಳಲ್ಲಿ) | ಈಗಾಗಲೇ ಬಿಡುಗಡೆಗೊಳಿಸಿರುವ ಶ ೕ. 25 ಅನುದಾನ (ರೂ.ಗಳಲ್ಲಿ) ೆ | ಬಿಡುಗಡೆಗೊಳಿಸಬೇಕಾದ ಶೇ. 25 ಅನುದಾನ (ರೂ.ಗಳಲ್ಲಿ) |
| 1 | 002-ವೇತನ ಅಧಿಕಾರಿಗಳು | 138-00 | 34,50,000.00 | 34,50,000.00 |
| 2 | 003-ವೇತನ ಸಿಬ್ಬಂದಿಗಳು | 260-00 | 65,00,000.00 | 65,00,000.00 |
| 3 | 004-ತಾತ್ಕಾಲಿಕ ಪರಿಹಾರ | 10-00 | 2,50,000.00 | 2,50,000.00 |
| 4 | 011-ತುಟ್ಟಿ ಭತ್ಯೆ | 95-00 | 23,75,000.00 | 23,75,000.00 |
| 5 | 020-ವೈದ್ಯಕೀಯ ಭತ್ಯೆ | 2-00 | 50,000.00 | 50,000.00 |
| 6 | 014-ಇತರೆ ಭತ್ಯೆ | 99-00 | 24,75,000.00 | 24,75,000.00 |
| 7 | 021-ವೈದ್ಯಕೀಯ ವೆಚ್ಚ ಮರುಪಾವತಿ | 15-00 | 3,75,000.00 | 3,75,000.00 |
| 8 | 034-ಗುತ್ತಿಗೆ / ಹೊರಗುತ್ತಿಗೆ | 47-00 | 11,75,000.00 | 11,75,000.00 |
| 9 | 041-ಪ್ರಯಾಣ ವೆಚ್ಚ | 7-00 | 1,75,000.00 | 1,75,000.00 |
| 10 | 051-ಸಾಮಾನ್ಯ ವೆಚ್ಚ | 23-00 | 5,75,000.00 | 5,75,000.00 |
| 11 | 052- ದೂರವಾಣಿ ವೆಚ್ಚ | 5-00 | 1,25,000.00 | 1,25,000.00 |
| 12 | 053-ಪೀಠೋಪಕರಣ ಹಾಗೂ ಜೋಡಣಾ ಸಾಮಾಗ್ರಿಗಳು | 3-00 | 75,000.00 | 75,000.00 |
| 13 | 180-ಯಂತ್ರೋಪಕರಣ ಹಾಗೂ ಸಾಧನ ಸಾಮಾಗ್ರಿಗಳು | 11-00 | 2,75,000.00 | 2,75,000.00 |
| 14 | 195-ಸಾರಿಗೆ ವೆಚ್ಚ | 23-00 | 5,75,000.00 | 5,75,000.00 |
| ಒಟ್ಟು = | 738.00 | 1,84,50,000.00 | 1,84,50,000.00 |
ಈ ಪ್ರಸ್ತಾವನೆಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಕರ್ನಾಟಕ ಸಾರ್ವಜನಿಕ ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್ಡಿ 01 ಟಿಎಫ್ಪಿ 2019, ದಿನಾಂಕ: 03-04-2019 ರನ್ವಯ ಇಲಾಖಾ ಕಾರ್ಯದರ್ಶಿಗಳಿಗೆ ಪ್ರದತ್ತವಾದ ಅಧಿಕಾರದನ್ವಯ ಹೊರಡಿಸಲಾಗಿದೆ.
PR-380
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ರೇವಪ್ಪ ಎಂ. ಪಾಟೀಲ್
ಸರ್ಕಾರದ ಅಧೀನ ಕಾರ್ಯದರ್ಶಿ,
ಕಂದಾಯ ಇಲಾಖೆ.(ಕೆ.ಎ.ಟಿ. ಮತ್ತು ಬಾ.ನಿ.) ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.