ಬೆಂಗಳೂರು, ಗುರುವಾರ, ನವೆಂಬರ್ ೭, ೨೦೧೯ (ಕಾರ್ತೀಕ ೧೬, ಶಕ ವರ್ಷ ೧೯೪೧)
Bengaluru, Thursday, November 7, 2019 ( Karthika 16, Shaka Varsha 1941)
ಸಂಪುಟ ೧೫೪
Volume 154
ಸಂಚಿಕೆ ೪೪
Issue 44
ಭಾಗ ೬
ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,
ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ
ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು
ಕಂದಾಯ ಇಲಾಖೆ
ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು
ಕೊಳಚೆ ಪ್ರದೇಶ ಸ್ಥಳಾಂತರಿಕೆ ಉದ್ದೇಶದ ಅಧಿಸೂಚನೆ
(ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಕಲಂ.11ರಡಿ)
ಸಂಖ್ಯೆ : ಕೆ.ಎಸ್.ಎ/ಸಿಆರ್/29/2019-20, ಬೆಂಗಳೂರು, ದಿನಾಂಕ : 05.09.2019
ಬೆಂಗಳೂರು ನಗರ, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ, ಸಿದ್ದಯ್ಯ ರಸ್ತೆ ಪಾದಚಾರಿ ಮತ್ತು ಮೋರಿ ಮೇಲೆ 18 ಹಾಗೂ 50 ಕುಟುಂಬಗಳು ವಾಸಿಸುತ್ತಿರುವ ಕೊಳಚೆ ಪ್ರದೇಶ ಅತ್ಯಂತ ಅನಾರೋಗ್ಯ ಮತ್ತು ಮಾಲಿನ್ಯದಿಂದ ಕೂಡಿದ್ದು, ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಚರಂಡಿ, ರಸ್ತೆ, ಶೌಚಾಲಯ ಇತ್ಯಾದಿಗಳಿಂದ ವಂಚಿತವಾಗಿರುತ್ತದೆ. ಈ ಪ್ರದೇಶವನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ನಂ.2ನೇ ಉಪ ವಿಭಾಗ ರವರು ದಿನಾಂಕ: 21-01-2019ರಂದು ಸ್ಥಳ ತನಿಖೆ ಮಾಡಿದ್ದು, ಸ್ಥಳ ತನಿಖಾ ಸಮಯದಲ್ಲಿ ಬಿ.ಬಿ.ಎಂ.ಪಿ. ವಾರ್ಡ್ ಕಛೇರಿ ಪಕ್ಕ ಹಾಗೂ ದೊಡ್ಡಮೋರಿ ಮೇಲೆ ನಿವಾಸಿಗಳು ವಾಸವಾಗಿರುತ್ತಾರೆ. ಪ್ರಯುಕ್ತ, ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಕಲಂ.11ರಡಿ ಕೊಳಚೆ ಪ್ರದೇಶದ ಸ್ಥಳಾಂತರಿಸುವಿಕೆಯ ಉದ್ದೇಶಕ್ಕಾಗಿ ಅಧಿಸೂಚನೆ ಹೊರಡಿಸಲು ಕೋರಿ ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ರವರು ಪತ್ರದ ಸಂಖ್ಯೆ:ಕಕೊಅಮ/ಕಂ-1/ಆರ್-1/54/2014-15/85, ದಿನಾಂಕ: 24-07-2019ರ ಪತ್ರದಲ್ಲಿ ದಾಖಲೆಗಳೊಂದಿಗೆ ವರದಿಯನ್ನು ಸಲ್ಲಿಸಿರುತ್ತಾರೆ.
ಮೇಲ್ಕಂಡ ಅಂಶಗಳ ಹಿನ್ನೆಲೆಯಲ್ಲಿ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಕಲಂ.11ರಡಿ ಜಿಲ್ಲಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ ಕೇವಲ ಸ್ಥಳಾಂತರಿಸುವ ಉದ್ದೇಶಕ್ಕೆ ಕೊಳಚೆ ಪ್ರದೇಶವೆಂದು ಈ ಮೂಲಕ ಘೋಷಿಸಲಾಗಿದೆ.
ಮೇಲ್ಕಂಡ ಈ ಕ್ರಮದ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಜಿಲ್ಲಾಧಿಕಾರಿಗಳ ಕಛೇರಿ, ಬೆಂಗಳೂರು ನಗರ ಜಿಲ್ಲೆ ಹಾಗೂ ಆಯುಕ್ತರು, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ, ಶೇಷಾದ್ರಿಪುರ, ಬೆಂಗಳೂರು-560 020 ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 (ಹದಿನೈದು) ದಿವಸಗಳ ಕಾಲಾವಕಾಶ ನೀಡಲಾಗಿದೆ. ನಂತರ ಬಂದ R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೭೬೦ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೭, ೨೦೧೯ ಭಾಗ ೬
| ಕ್ರ. ಸಂ. | ಕೊಳಚೆ ಪ್ರದೇಶದ ಹ ಸರು ಮತ್ತು ಸ್ಥಳ ೆ | ಕೊಳಚೆ ಪ ದೇಶದ ್ರ ವ iಾಲೀಕತ್ವದ ವಿವರ | ಸ.ನಂ. | ವಿಸ್ತೀರ್ಣ [ಎ/ಗುಂಟೆ] | ಚ ಕ್ಕುಬಂದಿಗಳು | |||
| ಪೂರ್ವ | ಪಶ್ಚಿಮ | ಉತ್ತರ | ದ ಕ್ಷಿಣ | |||||
| 1 | ಸಿದ್ದಯ್ಯ ನಗರದ ಹಳೆ ಬಿ.ಬಿ.ಎಂ.ಪಿ. ಕಛೇರಿಯ ಪಾದಚಾರಿ ವ iಾರ್ಗದ ಮೇಲಿನ ಪ ದೇಶ ್ರ | ಬಿ.ಬಿ.ಎಂ.ಪಿ | ವ ೂೕರಿ & ೆ ಪಾದಚಾರಿ ವ iಾರ್ಗದ ಮೇಲೆ ಇರುವುದರಿಂದ ಸಿಟಿಎಸ್ ನಂಬರ್ ಇರುವುದಿಲ್ಲ | 0-05 | ಬಿ.ಬಿ.ಎಂ.ಪಿ. ಹಳೇ ಕಛೇರಿ & ಚ ರ ಂಡಿ | ರ ಸ್ತೆ | ಸಿದ್ದಯ್ಯ ರಸ್ತೆ ಮತ್ತು ಬಿ.ಬಿ.ಎಂ.ಪಿ. ಹಳೇ ಕಛೇರಿ. | ರ ಸ್ತೆ |
PR-186
ಜಿ.ಎನ್.ಶಿವಮೂರ್ತಿ
SC-25
ಜಿಲ್ಲಾಧಿಕಾರಿಗಳು,
ಬೆಂಗಳೂರು ಜಿಲ್ಲೆ, ಬೆಂಗಳೂರು.
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು-59.